text
stringlengths 4
182k
|
---|
ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮುಂಬೈ ತಂಡದ ಪರ ಕಣಕ್ಕಿಳಿದ ಪೃಥ್ವಿ, ಅಸ್ಸಾಂ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 39 ಎಸೆತಗಳಲ್ಲಿ 63 ರನ್ ಸಿಡಿಸಿ ತಮ್ಮ ಪುನರಾಗಮನವನ್ನು ಸಂಭ್ರಮದಿಂದ ಆಚರಿಸಿಕೊಂಡರು.</s> |
ಅಕ್ಟೋಬರ್ 25ರಂದು ಚಿದಂಬರಂ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್ ಶೀಟ್ ದಾಖಲಿಸಿತ್ತು.</s> |
ನಾರಿಹಳ್ಳಕ್ಕೆ ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ</s> |
ಸಾರಿಗೆ ನೌಕರರು ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಿದ್ದರು. ಹಲವು ಬಾರಿ ಸಚಿವ ಲಕ್ಷ್ಮಣ ಸವದಿ ನೇತೃತ್ವದಲ್ಲಿ ನಡೆದ ಸಭೆ ವಿಫಲವಾಗಿತ್ತು. ಇದರ ಬೆನ್ನಲ್ಲೇ ಸಾರಿಗೆ ನೌಕರರು ಇಂದಿನಿಂದ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.</s> |
ಎನ್ಡಬ್ಲುಕೆಆರ್ಟಿಸಿ ನೂತನ ಅಧ್ಯಕ್ಷರಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ವಿ.ಎಸ್.ಪಾಟೀಲ್ ಅವರನ್ನು ಬಿಜೆಪಿ ಮುಖಂಡರು ಅಭಿನಂದಿಸಿದರು.</s> |
ಎತ್ತರದ ಆವರಣ ಗೋಡೆ ಇದ್ದರೂ ಯಾರೋ ಬೀಡಿ ಅಥವ ಸಿಗರೇಟನ್ನು ಎಸೆದಿದ್ದರಿಂದ ಬೆಂಕಿ ಕಾಣಿಸಲು ಕಾರಣವಿರಬಹುದು ಎನ್ನಲಾಗಿದೆ. ಆದರೆ ಸ್ಥಳೀಯರ ಪ್ರಕಾರ ಕೇಂದ್ರದ ಹೊರಗೆ ಇದ್ದ ಮೋರಿಯಲ್ಲಿದ್ದ ಕಸಕ್ಕೆ ಬೆಂಕಿ ಕೊಟ್ಟಿದ್ದರಿಂದ ಈ ದುರ್ಘಟನೆ ನಡೆದಿರಬಹುದು. ಸ್ಪಷ್ಟ ಕಾರಣ ಗೊತ್ತಾಗಿಲ್ಲ.</s> |
ಮಲ್ಲಿಕಾರ್ಜುನ ಮನ್ಸೂರರ ಸಂಗೀತಕ್ಕೆ ಮನಸೋತ ಇವರು ಮನ್ಸೂರರ ಬಗ್ಗೆ ಚಿತ್ರ ತಯಾರಿಸುವ ಬಗ್ಗೆ ಭಾರತ ಸರ್ಕಾರದ ವಿದೇಶಾಂಗ ಪ್ರಚಾರ ವಿಭಾಗಕ್ಕೆ ಯೋಜನೆಯೊಂದನ್ನು ಸಲ್ಲಿಸಿದರು. ಈ ಯೋಜನೆಗೆ ತಕ್ಷಣವೇ ರೆಕ್ಕೆ ಸಿಕ್ಕಿದ್ದಿದ್ದರೆ ದಿ ಟ್ರಾವಲರ್ಸ್ ಸಾಂಗ್ ಅಥವಾ ರಸಯಾತ್ರಾ ಸಾಕ್ಷ್ಯಚಿತ್ರದ ಬಣ್ಣವೇ ಬೇರೆಯಾಗಿರುತ್ತಿತ್ತು, ಆದರೆ ಹಾಗಾಗಲಿಲ್ಲ. ಎಲ್ಲ ಕಡತಗಳಂತೆಯೇ ಈ ಕಡತವೂ ಕತ್ತಲ ಕೋಣೆ ಸೇರಿತು. ಮನ್ಸೂರರು ತೀವ್ರ ಕಾಯಿಲೆಗೆ ತುತ್ತಾಗಿ ಹಾಸಿಗೆ ಹಿಡಿದ ಸುದ್ದಿ ಪತ್ರಿಕೆಗಳಲ್ಲಿ ವರದಿಯಾದಾಗಲೇ ಸರ್ಕಾರ ಎಚ್ಚರಗೊಂಡದ್ದು. ತಕ್ಷಣವೇ ಯೋಜನೆಗೆ ಸಮ್ಮತಿ ಸಿಕ್ಕಿತು. ಆದರೆ ನಿರ್ದೇಶಕ ನಂದನ್ ಕುದ್ಯಾಡಿ ಅವರ ಮುಂದೆ ಇದ್ದದ್ದು ಮನ್ಸೂರರ ಕೊನೆಯ ದಿನಗಳು ಮಾತ್ರ.</s> |
ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಸ್ಥಳದಲ್ಲಿದ್ದ 30 ಕ್ಕೂ ಹೆಚ್ಚುಜನ ಪರಾರಿಯಾಗಿದ್ದಾರೆ. ಇನ್ನೂ ಶಿವಮೊಗ್ಗ ತಾಲೂಕಿನ ಹೊಸಹಳ್ಳಿ ಗ್ರಾಮದ ತೋಟವೊಂದರಲ್ಲಿ ಈ ಊಟದ ವ್ಯವಸ್ಥೆ ಮಾಡಲಾಗಿತ್ತು. ...</s> |
ಕೊಳವೆಬಾವಿಗಳಲ್ಲಿ ನೀರು ಕಡಿಮೆ ಆಗುತ್ತಿದೆ. ನೀರು ಮರುಪೂರಣ ಮಾಡುವ ಯೋಜನೆಗೆ ಅಗತ್ಯ ಸಲಕರಣೆಗಳು ಇಲ್ಲ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಗೌಡ ಮರಕಲ್ ಆಗ್ರಹಿಸಿದರು. ಉಪಾಧ್ಯಕ್ಷೆ ಶರಣಮ್ಮ ಸಾಹುಕಾರ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಬಸವರಾಜಪ್ಪ ವೇದಿಕೆಯಲ್ಲಿದ್ದರು. ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.</s> |
ವೈರಲ್ ಆಗಿರುವ ಪೋಸ್ಟರ್</s> |
ಹುಲಿಕಲ್ಲು ನಟರಾಜ್, ಪವಾಡ ಬಯಲು ತಜ್ಞರು</s> |
ಈ ಕುರಿತು ವಿದ್ವಾಂಸರು ಸಂಶೋಧನೆ ನಿರತರಾಗಿದ್ದು, ಬೋಸ್ ಕುರಿತ ಕ್ಷಮಾದಾನ ಅರ್ಜಿಯೊಂದು ಬ್ರಿಟಿಷ್ ಸರಕಾರಕ್ಕೆ ಹೋಗಿತ್ತು ಮತ್ತು ಅದನ್ನು ಬ್ರಿಟಿಷ್ ಆಡಳಿತಗಾರರು ತಳ್ಳಿ ಹಾಕಿದ್ದರು ಎಂಬುದು ಈ ವಿದ್ವಾಂಸರಿಗೆ ದಾಖಲೆಗಳ ಆಧಾರದಲ್ಲಿ ದೊರೆತ ಸುಳಿವು.</s> |
ಆರಂಭಿಕ ಇನ್ನಿಂಗ್ಸ್ ಮುಗಿಸಿರುವ ಕೆಕೆಆರ್ ಎದುರಾಳಿಗೆ 160 ರನ್ ಗುರಿ ನೀಡಿದೆ. ಭುನವೇಶ್ವರ್ ಕುಮಾರ್ ಮತ್ತು ಖಲೀಲ್ ಅಹ್ಮದ್ ಮಾರಕ ಬೌಲಿಂಗ್ ದಾಳಿ ಕೆಕೆಆರ್ ರನ್ ಕದಿಯುವಿಕೆಗೆ ಬ್ರೇಕ್ ಒಡ್ಡಿತು.</s> |
ಈ ಗುಂಪಿನ ಸ್ವಯಂ ಸೇವಕರು ಶುಕ್ರವಾರ ಮತ್ತು ಶನಿವಾರ ಪಾಲಿಕೆಯ ಎಲ್ಲ ವಲಯಗಳಲ್ಲಿ ಕೂಡ ರಸ್ತೆ ಬದಿ, ದೇವಸ್ಥಾನದ ಬಳಿ ಕಂಡ ಹಸಿ ತ್ಯಾಜ್ಯವನ್ನು ಸ್ವಚ್ಛಗೊಳಿಸಿ, ಆ ಕಸವನ್ನು ಸಾವಯವ ತಮ್ಮ ವಾರ್ಡ್ಗಳಲ್ಲಿರುವ ಸಾವಯವ ಗೊಬ್ಬರದ ಗುಂಡಿಯಲ್ಲಿ ಸಂಗ್ರಹಿಸಿದರು.</s> |
ಟಿವಿಗಳಲ್ಲಿ ಬರುವ ಮ್ಯುಸಿಕ್ ರಿಯಾಲಿಟಿ ಶೋಗಳ ಬಗ್ಗೆ ಏನಂತೀರಿ?</s> |
ಭಾರತದ ಬಹುನಿರೀಕ್ಷಿತ ಬಾಹುಬಲಿ 2 ಚಿತ್ರ ಕರ್ನಾಟದಲ್ಲಿ ಬಿಡುಗಡೆಗೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಕನ್ನಡಿಗರನ್ನು ತುಚ್ಛವಾಗಿ ಕಂಡು ಅವಹೇಳನಕಾರಿಯಾಗಿ ಮಾತನಾಡಿದ್ದ ಸತ್ಯರಾಜ್ ಕನ್ನಡಿಗರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಬಾಹುಬಲಿ 2 ಚಿತ್ರ ಕರ್ನಾಟಕದಲ್ಲಿ ಬಿಡುಗಡೆಯಾಗಲು ಬಿಡುವುದಿಲ್ಲ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡ ಪರ ಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಿದ್ದವು. ಇದೀಗ ಕನ್ನಡಿಗರ ಹೋರಾಟಕ್ಕೆ ಮಣಿದಿರುವ ಬಾಹುಬಲಿ ಚಿತ್ರದ ಪಾತ್ರಧಾರಿ ಕಟ್ಟಪ್ಪ ಬಹಿರಂಗವಾಗಿ ಕನ್ನಡಿಗರ ಕ್ಷಮೆಯಾಚಿಸಿದ್ದಾರೆ.</s> |
ಮಾಸ್ಕೋದಲ್ಲಿ ಇಂಟರ್ಸೆಷನ್ ವುಮೆನ್ಸ್ ಮೊನಾಸ್ಟರಿ ಕಟ್ಟಡಗಳು</s> |
ಬ್ಯಾಡಗಿ:ತಾಲೂಕಿನ ಗುಡ್ಡದಮಲ್ಲಾಪುರ ಏತನೀರಾವರಿ ಯೋಜನೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅ.1 ರಂದು ರೆತರಿಗೆ ಸಮರ್ಪಿಸಲಿದ್ದಾರೆ ಎಂದು ರಾಜ್ಯ ಜೈವಿಕ</s> |
ಸ್ವರ್ಣವಲ್ಲಿ ಶ್ರೀಗಳು ಹಾಗೂ ವಾದಿರಾಜ ಮಠದ ಶ್ರೀಗಳ ಉಪಸ್ಥಿತಿಯಲ್ಲಿ ಪಶ್ಚಿಮಘಟ್ಟದ ಸಂಘಸಂಸ್ಥೆಗಳು, ರೈತರು, ಜನಪ್ರತಿನಿಧಿಗಳು, ಮಹಿಳೆಯರು, ಪರಿಸರಪ್ರೇಮಿಗಳು, ವನವಾಸಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.</s> |
ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ಬಹುತೇಕ ಕಡೆ ಬೆಳೆಯಲಾಗುವ ಈ ಹಸಿ ಮುಸುಕಿನ ಜೋಳದ ತೆನೆಗಳು ನೆರೆಯ ಆಂಧ್ರಪ್ರದೇಶಕ್ಕೆ ರಫ್ತಾಗುತ್ತವೆ. ಕೆಂಡದಲ್ಲಿ ಸುಟ್ಟು ಮಾರಾಟ ಮಾಡುವ ಉದ್ದೇಶದಿಂದಲೇ ಈ ಹಸಿ ತೆಗೆಳನ್ನು ಇಲ್ಲಿಂದ ಸಾಗಿಸಲಾಗುತ್ತದೆ. ಇದಕ್ಕಾಗಿಯೇ ಆಂಧ್ರಪ್ರದೇಶದ ಹಿಂದೂಪುರ,ಅನಂತಪುರ, ಹೈದರಾಬಾದ್, ಕಡಪ ಸೇರಿದಂತೆ ಇತರೆ ಜಿಲ್ಲೆಗಳ ವ್ಯಾಪಾರಸ್ಥರು ತಾಲ್ಲೂಕಿನಲ್ಲಿ ಜೋಳದ ಹೊಲಗಳನ್ನು ಖರೀದಿಸುತ್ತಾರೆ. ದುರದೃಷ್ಟವಶಾತ್ ಈ ಬಾರಿ ತೆಲಂಗಾಣ ಹೋರಾಟ ಈ ವ್ಯಾಪಾರದ ಮೇಲೆ ಕರಿ ಮುಸುಕು ಚೆಲ್ಲಿದೆ. ತೆಲಂಗಾಣ ಬಿಸಿ ಏರುವ ಮುನ್ನ ಒಂದು ಎಕರೆ ಪ್ರದೇಶದ ಮುಸುಕಿನ ಜೋಳದ ಬೆಳೆ 45 ರಿಂದ 60 ಸಾವಿರ ರೂಪಾಯಿಗೆ ಮಾರಾಟವಾಗುತಿತ್ತು. ಆದರೆ ಈಗ ಒಂದು ಎಕರೆ ಪ್ರದೇಶದ ಮುಸುಕಿನ ಜೋಳಕ್ಕೆ 20 ಸಾವಿರ ರೂಪಾಯಿಗೆ ಕುಸಿತಗೊಂಡಿದೆ ಎನ್ನುತ್ತಾರೆ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿ ಹಾದ್ರಿಪುರ ಗ್ರಾಮದ ರೈತ ಜಯಣ್ಣ.</s> |
ದರ್ಶನ್ ನಟನೆಯ ಯಜಮಾನ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿರುವ ಠಾಕೂರ್ ಅನೂಪ್ ಸಿಂಗ್, ತಮ್ಮ ಪಾತ್ರಕ್ಕೆ ತಾವೇ ಕನ್ನಡದಲ್ಲಿ ಡಬ್ ಮಾಡಿದ್ದಾರೆ. ಅದಕ್ಕಾಗಿ ಕನ್ನಡವನ್ನು ಕಲಿತಿದ್ದಾರೆ.</s> |
ಪ್ರಧಾನಿ ನರೇಂದ್ರಮೋದಿಯವರು ಉಜ್ವಲ ಯೋಜನೆಯಡಿ ಉಚಿತ ಗ್ಯಾಸ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಆರಂಭಿಸಿದ್ದಾರೆ. ಈ ಯೋಜನೆ ಕಳೆದ 2 ವರ್ಷದಿಂದ ಜಾರಿಯಲ್ಲಿದ್ದು ಈಗಾಗಲೇ ದೇಶಾದ್ಯಂತ ಇದರ ಪ್ರಯೋಜನ ಪಡೆದಿದ್ದಾರೆ, ಕಟ್ಟಿಗೆಯ ಬಳಸಿ ಅಡುಗೆ ಮಡುವ ಸಮಯದಲ್ಲಿ ಹೊಗೆಯಿಂದ ಕಣ್ಣು ಮತ್ತು ಶ್ವಾಸಕೋಶಗಳಿಗೆ ಸಮಸ್ಯೆಯಾಗುತ್ತದೆ, ಸಾಕಷ್ಟು ತಾಯಂದಿರು, ಮಹಿಳೆಯರ ಸಂಕಷ್ಠ ಅರಿತು ಈ ಸೌಲಭ್ಯವನ್ನು ಉಚಿತವಾಗಿ ನೀಡುತ್ತಿದ್ದಾರೆ. ಅಂದು ತಾನು ಮನೆಗೆ ಗ್ಯಾಸ್ ಸಂಪರ್ಕ ಪಡೆಯಲು ಅಂದಿನ ಶಾಸಕರ ಬಳಿ ಲೆಟರ್ ಹಿಡಿದು ತಿಂಗಳು ಗಟ್ಟಲೆ ಕಾದು ಅನಿಲ ಸಂಪರ್ಕ ಪಡೆಯಬೇಕಿತ್ತು, ಅಲ್ಲದೇ ತಾನೂ ಇದಕ್ಕಾಗಿ ಮೂರು ಸಾವಿರ ಲಂಚವನ್ನು ನೀಡುವ ಪರಿಸ್ಥಿತಿಯು ಒದಗಿತ್ತು ಆದರೆ ಇಂದು ಅಂತಹ ಪರಿಸ್ಥಿತಿ ಉಂಟಾಗಲಾರದು ಕೇವಲ ಒಂದು ಸಂದೇಶ ಕಳಿಸಿದರೆ ಗ್ಯಾಸ ನಿಮ್ಮ ಮನೆಗೆ ಮುಂದಿನ ದಿನದಲ್ಲಿ ಬರುವ ವ್ಯವಸ್ಥೆ ಜಾರಿಯಲ್ಲಿದೆ ಎಂದು ಅನುಸರಿಸಬೇಕಾದ ಸುರಕ್ಷತಾ ಕ್ರಮದ ಕುರಿತು ಮಾಹಿತಿ ನೀಡಿದರು. ಶಾಸಕ ಪದವಿ ನೀಡಿರುವುದು ಕ್ಷೇತ್ರದ ಜನತೆ ಅವರ ಸಮಸ್ಯೆ ಆಲಿಸಿ ಪರಿಹಾರ ಸೂಚಿಸುವುದು ನನ್ನ ಕರ್ತವ್ಯ ನಾನು ಅವರ ಸೇವೆ ಮಾಡಲು ಹಿಂಜರಿಯುವುದಿಲ್ಲ ಎಂದು ಭರವಸೆ ನೀಡಿದರು.</s> |
ನಾವು ಸೇವಿಸುತ್ತಿರುವ ಆಹಾರ ವಿಷವಾಗಿ ಪರಿಣಮಿಸುತ್ತಿದೆ.ತಂಬಾಕು ಸೇವನೆಯಿಂದ ಶೇ.90 ಬಾಯಿಯ ಕ್ಯಾನ್ಸರ್ ಬರುತ್ತದೆ. ಈ ಹಿಂದೆ 40ರಿಂದ 60ವರ್ಷ ವಯೋಮಿತಿಯವರಿಗೆ ಬಾಯಿ ಕ್ಯಾನ್ಸರ್ ಬರುತಿತ್ತು. ಆದರೆ, ಇದೀಗ ಯುವಕರಲ್ಲಿ ಸಹ ಕಾಣಿಸಿಕೊಳ್ಳುತ್ತಿದೆ. ಬಾಯಿಯಲ್ಲಿ ಕೆಂಪು ಹಾಗೂ ಬಿಳಿ ಮಚ್ಚೆ, ಉರಿ ಇದರ ಲಕ್ಷಣವಾಗಿದೆ.</s> |
ಕನ್ನಡಿಗರನ್ನು ಕೆಣಕಿದರೆ ಮಲಗಿದ ಸಿಂಹವನ್ನು ಎಚ್ಚರಿಸಿದಂತೆ: ಡಾಮನು ಬಳಿಗಾರ</s> |
ಮಾಲೂರು: ಕೊರೊನಾ ಸೋಂಕು ಹರಡಿರುವ ಪ್ರದೇಶಗಳಿಂದ ಕಚ್ಚಾ ವಸ್ತುಗಳನ್ನು ತರಿಸಲಾಗುತ್ತಿದೆ ಎಂಬ ಕಾರಣಕ್ಕೆ ತಾಲ್ಲೂಕಿನ ಕೂರಂಡಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಹೋಬೆಲ್ ಕಾರ್ಖಾನೆಯಲ್ಲಿ ಕಾರ್ಮಿಕರು ಕೆಲಸಕ್ಕೆ ಗೈರು ಹಾಜರಾದರು.</s> |
ಬೆರಳು ಕತ್ತರಿಸಿದರು</s> |
ಎಲ್ಲಾ ಘಟಕಗಳು ಸಂಪೂರ್ಣವಾಗಿ ಮಿಶ್ರಣವಾಗಿವೆ.</s> |
ಜುಲೈ 27 ರಿಂದ ಆಗಸ್ಟ್ 12ರ ತನಕ ನಡೆಯುವ ವಿಶ್ವದ ಜನಪ್ರಿಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಸುರೇಶ್ ಕಲ್ಮಾಡಿ ಅವರು ಕೋರ್ಟ್ ಅನುಮತಿ ಕೋರಿದ್ದರು. ಶುಕ್ರವಾರ ಕಲ್ಮಾಡಿ ಅರ್ಜಿ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾ. ತಲ್ವಂತ್ ಸಿಂಗ್ ಅವರು ಕಲ್ಮಾಡಿಗೆ ಅನುಮತಿ ನೀಡಿದ್ದಾರೆ. ಈ ಸಂಬಂಧ 10 ಲಕ್ಷ ರುಪಾಯಿ ಬಾಂಡ್ ಹಾಗೂ ಅಷ್ಟೇ ಮೊತ್ತದ ಭದ್ರತೆ ನೀಡಲು ಸೂಚಿಸಿದ್ದಾರೆ.</s> |
ಹೊಸದಿಲ್ಲಿ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯ ರದ್ದಾಗಿರುವ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅದರಂತೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಇದೀಗ ಈ ವಿಷಯದ ಬಗ್ಗೆ ಸದ್ದು ಮಾಡಿದ್ದು, ಕೊರೊನಾ ಸೋಂಕು ತಗುಲಿದರೆ ಎಲ್ಲಿ ಐಪಿಎಲ್ ಟೂರ್ನಿಯಿಂದ ದೂರ ಉಳಿಯಬೇಕಾಗುತ್ತದೋ ಎಂಬ ಕಾರಣಕ್ಕೆ ಮ್ಯಾಂಚೆಸ್ಟರ್ ಪಂದ್ಯವಾಡಲು ಭಾರತೀಯ ಆಟಗಾರರು ನಿರಾಕರಿಸಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ.</s> |
ಶಿವಮೊಗ್ಗ ಲೋಕಸಭೆ ವ್ಯಾಪ್ತಿಯ ಬೈಂದೂರು ವಿಧಾನಸಭೆ ಕ್ಷೇತ್ರದಲ್ಲಿ 18 ನಕ್ಸಲ್ ಸಕ್ರಿಯ ಮತಗಟ್ಟೆಗಳಿದ್ದು ಶೇ. 75.94 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಎಡಮೊಗೆ ಸರಕಾರಿ ಕಿ.ಪ್ರಾ. ಶಾಲೆ ಮತಗಟ್ಟೆಯಲ್ಲಿ ಗರಿಷ್ಠ ಶೇ. 84 ಹಾಗೂ ಹೊಸಂಗಡಿ ಸರಕಾರಿ ಹಿ.ಪ್ರಾ. ಶಾಲಾ(ಉತ್ತರ) ಮತಗಟ್ಟೆಯಲ್ಲಿ ಕನಿಷ್ಠ ಶೇ. 59 ಮತದಾನವಾಗಿದೆ.</s> |
ಅಪರಾಧಗಳಿಗೆ ಇದು ಯಾವುದೇ ಮುಂದೂಡಿಕೆಗೆ ಅಥವಾ ಮಾಡಿದ ಒಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ಶಿಕ್ಷೆ, ಮತ್ತು ವ್ಯಕ್ತಿಯು ಅವನ ವಿಮೋಚನೆಗಾಗಿ ಜೈಲಿನಲ್ಲಿ ಶಿಕ್ಷೆ ಸೇವೆ ಇದೆ</s> |
ವೈದ್ಯಕೀಯ ಪ್ರಮಾಣ ಪತ್ರ ಪಡೆದ ನಂತರವೇ ಕರ್ತವ್ಯಕ್ಕೆ ವರದಿ ಮಾಡಿಸಿಕೊಳ್ಳಬೇಕು. ಎಲ್ಲ ಘಟಕ ಕಾರ್ಯ ಸ್ಥಳದಲ್ಲಿ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವ ಮುನ್ನ ಪ್ರತಿದಿನ ಪ್ರತಿಯೊಬ್ಬ ನೌಕರರನ್ನು ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ಮಾಡಬೇಕು.</s> |
ಸಂಯೋಜನೆಯ ಪರೀಕ್ಷೆ.</s> |
ವಿಮರ್ಶೆ.</s> |
ರವಿ ಗೋರ್ಲಿ, ಶಿವು ಸಂಗನಾಳ ಸ್ಥಳೀಯರು</s> |
ಕನ್ನಡ ವೃತ್ತಿ ರಂಗಭೂಮಿಯ ಅಭಿನಯ ಶಾರದೆ ಎಂದೇ ಖ್ಯಾತರಾಗಿದ್ದ ಎಂ.ವಿ.ರಾಜಮ್ಮ ಜನಿಸಿದ್ದು (೧೦.೦೩.೧೯೨೧ ೦೬.೦೭.೨೦೦೦) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಗ್ದೊಂಡನಹಳ್ಳಿಯಲ್ಲಿ. ತಂದೆ ನಂಜಪ್ಪ, ಜಮೀನ್ದಾರರು. ತಾಯಿ ಸುಬ್ಬಮ್ಮ. ಬಾಲ್ಯದಿಂದಲೇ ಅಭಿನಯದಲ್ಲಿ ಆಸಕ್ತಿ. ಮಹಮದ್ ಪೀರ್ರವರ ಚಂದ್ರಕಲಾ ನಾಟಕ ಮಂಡಳಿಯ ಸಂಸಾರ ನೌಕ, ಗೌತಮಬುದ್ಧ ನಾಟಕಗಳ ಅಭಿನಯದಿಂದ ಜನ ಮೆಚ್ಚುಗೆ ಗಳಿಸಿದರು.</s> |
ಸಮೂಹ ಸಂವಹನ ಎಂಎ ಅತವಾ ಇತರೆ ಸ್ನಾತಕೋತ್ತರ ಪದವಿ ಜತೆಗೆ ಡಿಪ್ಲೊಮ ಸಮೂಹ ಸಂವಹನ ಕೋರ್ಸ್ ಪಾಸ್ ಮಾಡಿರಬೇಕು.</s> |
ನಿಮ್ಮ ಬಿನ್ ತೇವ ಮತ್ತು ನಾರುವಂತೆ ಸಿಕ್ಕಿದರೆ, ಹೆಚ್ಚಿನ ಬ್ರೌನ್ಸ್ ಸೇರಿಸಿ ಮತ್ತು ಸ್ವಲ್ಪ ಕಾಲ ಗ್ರೀನ್ಸ್ನಲ್ಲಿ ಕತ್ತರಿಸಿ. ಇದು ತಿರುವು ನೀಡಿ. ನಿಮ್ಮ ಬಿನ್ ಅಲ್ಲಿ ಕುಳಿತು ಹೋದರೆ, ಒಡೆಯುವಂತಿಲ್ಲ, ಕೆಲವು ಗ್ರೀನ್ಸ್ ಸೇರಿಸಿ, ಅದನ್ನು ತಿರುಗಿಸಿ, ಮತ್ತೆ ಒಡೆಯಲು ಪ್ರಾರಂಭಿಸಬೇಕು. ಕಾಂಪೋಸ್ಟ್ ನಡೆಯುತ್ತದೆ, ನಾವು ಏನನ್ನಾದರೂ ಮಾಡಿದ್ದರೂ. ನಾವು ಎಷ್ಟು ತಾಳ್ಮೆಯಿಂದಿರುತ್ತೇವೆ ಎಂಬುದು ಕೇವಲ ಒಂದು ಪ್ರಶ್ನೆ.</s> |
ಚೌಂಡಾಬಿಕಾ ದೇವಿ, ಶಿವಾಂಜನೇಯ, ಭೂತನಾಥೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ವತಿಯಿಂದ ಬೆಳ್ಳಿಹಬ್ಬದ ಅಂಗವಾಗಿ ನಾಗದೇವತೆಯ ಪ್ರತಿಷ್ಠಾಪನೆ ಹಾಗೂ ಹೋಮ, ನವರಾತ್ರಿ ಅಂಗವಾಗಿ ಚೌಡಾಂಬಿಕಾದೇವಿಗೆ ವಿವಿಧ ವಿಶೇಷ ಪೂಜೆ ಕಾರ್ಯಕ್ರಮ ಹಾಗೂ ಕುಂಭಾಭಿಷೇಕ ಏರ್ಪಡಿಸಲಾಗಿದೆ.</s> |
ಮಾನಸಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ</s> |
ಇಲ್ಲಿಯ ಜಿಲ್ಲಾ ರಂಗಮಂದಿರದಲ್ಲಿ ಬುಧವಾರ ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿದ್ದ ಕೌಶಲ ಅಭಿವೃದ್ಧಿ ಮತ್ತು ತರಬೇತಿ ಮೂಲಕ ಮಹಿಳಾ ಸಬಲೀಕರಣ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.</s> |
ಉತ್ಪಾದನೆ ಕಡಿಮೆಯಾದ ಹಿನ್ನಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಏರಿಕೆಯಾಗಿರುವುದರಿಂದ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.</s> |
ಮತದಾನಕ್ಕೆ ಎರಡು ದಿನಗಳು ಬಾಕಿ ಉಳಿದಿರುವಾಗ ಅಕ್ರಮಗಳು ಹೆಚ್ಚಾಗಿ ನಡೆಯುವ ಸಾಧ್ಯತೆ ಇದೆ. ಆದ್ದರಿಂದ 2000 ಸಂಚಾರಿ ವಿಚಕ್ಷಣದಳ ಮತ್ತು 1400 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.</s> |
ಕವಾಸಕಿ ಝಡ್ಎಕ್ಸ್ 25ಆರ್ ಬೈಕ್ 249 ಸಿಸಿ, ಲಿಕ್ವಿಡ್ಕೂಲ್ಡ್, ಇನ್ಲೈನ್ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಸುಮಾರು 41.4 ಬಿಹೆಚ್ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6 ಸ್ಪೀಡ್ ಗೇರ್ಬಾಕ್ಸ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸ್ಲಿಪ್ಪರ್ ಅಸಿಸ್ಟ್ ಕ್ಲಚ್ ಮತ್ತು ಕ್ವಿಕ್ಶಿಫ್ಟರ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.</s> |
ಸಾಮಾಜಿಕ ಜಾಲ ತಾಣಗಳಲ್ಲಿ ಕ್ರಿಯಾಶೀಲವಾಗಿರುವ ಕನ್ನಡ ಸಿನಿಮಾ ಪ್ರೇಮಿಗಳ ಸಂಘಳು ಭಟ್ಟರ ಚಿತ್ರ ವಾಸ್ತು ಪ್ರಕಾರಕ್ಕೆ ಶುಭ ಹಾರೈಸಿದ್ದಾರೆ.</s> |
ಲಸಿಕೆ ಅಭಿವೃದ್ಧಿಪಡಿಸಿದ ವಿಜ್ಞಾನಿ ಆಂಡ್ರ್ಯೂ ಪೊಲ್ಲಾರ್ಡ್ ಹೇಳಿಕೆ</s> |
ಲಕ್ಸುರಿ ಬಸ್ಸೊಂದು ಎರಡು ಕಾರುಗಳಿಗೆ ಡಿಕ್ಕಿ ಹೊಡೆದು ನಂತರ 20 ಅಡಿ ಕಂದಕಕ್ಕೆ ಉರುಳಿದ ಪರಿಣಾಮ ಈ ಅನಾಹುತ ಸಂಭವಿಸಿದೆ.</s> |
ಗೊಡ್ಡು ರೋಗ: ರೋಗ ಬಂದ ಗಿಡವು ಸಣ್ಣ ಎಲೆಗಳನ್ನು ಹೊಂದಿ ಹೂ ಕಾಯಿಗಳಿಲ್ಲದೆ ಗೊಡ್ಡಾಗಿ ಉಳಿಯುವುದು. ಪ್ರತಿಶತ 510 ರಷ್ಟು ಇಳುವರಿ ಹಾನಿ ಮಾಡುತ್ತದೆ. ರೋಗ ಬಂದ ಗಿಡಗಳನ್ನು ಕಿತ್ತು ನಾಶಪಡಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</s> |
ಈ ಮುದ್ರೆಯು ಪುರುಷನ ಜನನಾಂಗದ ಸಂಕೇತವಾಗಿದೆ ಮತ್ತು ಇದರಿಂದಾಗಿ ಇದು ದೇಹದಲ್ಲಿ ಉಷ್ಣವನ್ನು ಉಂಟುಮಾಡುತ್ತದೆ. ಇದು ಕಾಮಾಸಕ್ತಿಯನ್ನು ಉತ್ತೇಜಿಸುವುದು ಮಾತ್ರವಲ್ಲದೆ ಶೀತಕ್ಕೆ ಸಂಬಂಧಪಟ್ಟ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ.</s> |
ಚಾಲ್ತಿ ಖಾತೆ ಹಾಗೂ ಉಳಿತಾಯ ಖಾತೆಗಳ ಸಂಖ್ಯೆ ಶೇ.18.80 ರಿಂದ ಶೇ.29.03ಗೆ ಏರಿಕೆಯಾಗಿದ್ದು, 201516ರಲ್ಲಿ ಬ್ಯಾಂಕ್ 451 ಕೋಟಿ ರೂ. ಲಾಭ ಗಳಿಕೆಯೊಂದಿಗೆ ಗರಿಷ್ಠ ಮಟ್ಟವನ್ನು ಸಾಧಿಸಿದೆ. ಇವರ ಅವಧಿಯಲ್ಲಿ ಆರಂಭಗೊಂಡ 316 ಶಾಖೆಗಳು ಹೆಚ್ಚುವರಿಯಾಗಿ ಮಾರ್ಚ್ ಅಂತ್ಯದ ವೇಳೆಗೆ 765ಕ್ಕೆ ತಲುಪಿವೆ. ಎಟಿಎಂ ಸಂಖ್ಯೆ 177ರಿಂದ 1,380ಕ್ಕೆ ಏರಿಕೆಯಾಗಿದೆ. 110 ಇಲಾಭಿಗಳು ಸ್ಥಾಪನೆಯಾಗಿದೆ. ಬ್ಯಾಂಕಿನ ಒಟ್ಟು ಸೊತ್ತಿನ ಮೌಲ್ಯ 1,567 ಕೋಟಿ ರೂ. ಗಳಿಂದ 4,769 ಕೋಟಿ ರೂ. ಗೆ ಏರಿಕೆಯಾಗಿದೆ. ಬ್ಯಾಂಕ್ ಈ ಅವಧಿಯಲ್ಲಿ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರವಾಗಿದ್ದು, ಜಯರಾಮ್ ಭಟ್ ಎಂ.ಡಿ.ಯಾಗಿ ತಮ್ಮ ಅವಧಿ ಪೂರ್ಣಗೊಳ್ಳುವ 15 ತಿಂಗಳು ಮುಂಚಿತವಾಗಿ ಹುದ್ದೆಯಿಂದ ತೆರಳಿದ್ದಾರೆ.</s> |
ಈ ವರ್ಷದ ಜನವರಿ ತಿಂಗಳಲ್ಲಿ ಅಪ್ಲಿಕೇಶನ್ನಲ್ಲಿನ ಅಧಿಸೂಚನೆಯ ಮೂಲಕ ವಾಟ್ಸಾಪ್ ತನ್ನ ಸೇವಾ ನಿಯಮಗಳು ಮತ್ತು ಸಾರ್ವಜನಿಕ ನೀತಿಯಲ್ಲಿನ ಬದಲಾವಣೆಗಳ ಬಗ್ಗೆ ಬಳಕೆದಾರರಿಗೆ ತಿಳಿಸಿತ್ತು. ವಾಟ್ಸಾಪ್ ಬಳಕೆಯನ್ನು ಮುಂದುವರಿಸಬೇಕಿದ್ದರೆ ಬಳಕೆದಾರರು ಫೆಬ್ರವರಿ 8ರೊಗಳಗೆ ಕಂಪನಿಯೆ ಹೊಸ ನಿಯಮಗಳಿಗೆ ಒಪ್ಪಿಗೆ ನೀಡಬೇಕೆಂದು ಹೇಳಲಾಗಿತ್ತು. ಆದರೆ, ಕಂಪನಿಯ ಈ ಕ್ರಮಕ್ಕೆ ಎಲ್ಲೆಡೆ ಟೀಕೆ ವ್ಯಕ್ತವಾಯಿತು. ವಾಟ್ಸಾಪ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಫೇಸ್ಬುಕ್ ಬಳಸಿಕೊಳ್ಳಲು ಮುಂದಾಗಿದೆ ಎಂಬ ಆರೋಪ ಕೇಳಿ ಬಂತು. ಈ ಹಿನ್ನೆಲೆಯಲ್ಲಿ ಬಳಕೆದಾರರ ಯಾವುದೇ ವೈಯಕ್ತಿಕ ಮಾಹಿತಿಯನ್ನು ಬಳಸಿಕೊಳ್ಳುವುದಿಲ್ಲ ಎಂದು ಕಂಪನಿ ಸ್ಪಷ್ಟಣೆ ನೀಡಿತು. ಜೊತೆಗೆ, ಅಪ್ಡೇಟ್ ಮಾಡಲು ನೀಡಿದ್ದ ಗಡುವನ್ನು ಮೇ 15ರವರೆಗೂ ಮುಂದೂಡಿತ್ತು.</s> |
ನಾಯಕನಹಟ್ಟಿ: ಕರ್ನಾಟಕ ಹಾಲು ಮಹಾಮಂಡಳಿಯು ರೈತರಿಂದ ರೈತರಿಗೋಸ್ಕರ ಶ್ರಮಿಸುವ ಸಂಸ್ಥೆಯಾಗಿದೆ ಎಂದು ಕೆಎಂಎಫ್ ಮಾರಾಟ ಮಳಿಗೆ ವ್ಯವಸ್ಥಾಪಕ ಜಿ.ಬಿ.ಮಂಜುನಾಥ್ ಹೇಳಿದರು.</s> |
ಉತ್ತರ ವಲಯದ ಬಿಆರ್ಸಿ ಪ್ರಕಾಶ್, ಮಂಜೇಗೌಡ, ಜಯಂತಿ, ಸಾಧಿಕ್ಪಾಶಾ, ಮಹೇಶ್, ಭಾರತಿ ಶಾಸ್ತ್ರಿ ಸಹಿತ ಹಲವರು ಅರ್ಧ ದಿನದ ಕಾರ್ಯಾಗಾರದಲ್ಲಿ ಸಕ್ರಿಯವಾಗಿಯೇ ತೊಡಗಿಸಿಕೊಂಡರು.</s> |
ಡೀಸೆಲ್ ತೆರಿಗೆ ಇಳಿಕೆ ಶೇ.18 ರಿಂದ ಶೇ 16.75ಕ್ಕೆ ಇಳಿಕೆ</s> |
ಸೀಮಿಕೇರಿ, ವೀರಾಪೂರ ಗ್ರಾಮಗಳ ಬಸು</s> |
ಕ್ರಿಸ್ ಗೇಲ್ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಂಗ್ಪುರ್ ರೈಡರ್ಸ್ ಪರ ಆಡುವಾಗ ಢಾಕಾ ಡೈನಮೈಟ್ಸ್ ಎದುರು 18 ಸಿಕ್ಸರ್ ಸಿಡಿಸುವ ಮೂಲಕ ಟಿ20 ಕ್ರಿಕೆಟ್ನ ಇನಿಂಗ್ಸ್ ಒಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ವಿಶ್ವ ದಾಖಲೆ ಬರೆದಿದ್ದರು. ಈ ಪಟ್ಟಿಯಲ್ಲಿ 17 ಸಿಕ್ಸರ್ಗಳೊಂದಿಗೆ ಕ್ರಿಕೆಟ್ ಗೇಲ್ ಎರಡನೇ ಸ್ಥಾನದಲ್ಲಿದ್ದು, ಈ ದಾಖಲೆಯನ್ನು ಪುನಿತ್ ಬಿಷ್ತ್ ಇದೀಗ ಸರಿಗಟ್ಟಿದ್ದಾರೆ.</s> |
ಸಮಾಜದಲ್ಲಿ ಸಾಮಾನ್ಯವಾಗಿ ಕಡೆಗಣಿಸಲ್ಪಟ್ಟು, ನಿತ್ಯ ವಿವಿಧ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುವ ಲಿಂಗತ್ವ ಅಲ್ಪಸಂಖ್ಯಾತರ ಬದುಕಿಗೆ ನೆಲೆ ಕಲ್ಪಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಈ ಹಿನ್ನೆಲೆಯಲ್ಲಿ ನಮ್ಮ ಕಚೇರಿಯಿಂದಲೇ ಈ ಕೆಲಸ ಅಕ್ಷರಶಃ ಜಾರಿಯಾಗಿದ್ದು ಸಂತೋಷ ತಂದಿದೆ. ಇದೊಂದು ಉತ್ತಮ ಆರಂಭವಾಗಿದೆ. ಸೂಕ್ತ ಅವಕಾಶ ಸಿಕ್ಕಿದರೆ, ಅರ್ಹತೆ ಕಲ್ಪಿಸಿದರೆ ಲಿಂಗತ್ವ ಅಲ್ಪಸಂಖ್ಯಾತರು ಸಹ ಎಲ್ಲರಂತೆಯೇ ಉತ್ತಮ ವಾತಾವರಣದಲ್ಲಿ ಚೆನ್ನಾಗಿ ಕೆಲಸ ಮಾಡಬಲ್ಲರು ಎನ್ನುವ ವಿಶ್ವಾಸ ನನಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.</s> |
ವಿಶ್ ರಜಿನಿ ಆಂದೋಲನ ಕಾರ್ಯಕ್ರಮವು ವಿಶಾಲ ಫಾರ್ಮ್ಯಾಟ್ ಕಬಾಲಿ ಫಲಕಗಳ ಮೂಲಕ ವ್ಯಾಪಕ ಪ್ರಚಾರವನ್ನು ತಮಿಳು ನಾಡು ರಾಜ್ಯ ಮತ್ತು ರೇಡಿಯೋಗಳಲ್ಲಿ ಪಡೆಯಲಿದೆ.</s> |
೧೬೯೭ ರಲ್ಲಿ ವಿಲ್ಲೆಮ್ ಡಿ ವ್ಲಾಮಿಂಗ್ ಅವರ ದಂಡಯಾತ್ರೆಯು ಪಶ್ಚಿಮ ಆಸ್ಟ್ರೇಲಿಯಾದ ಸ್ವಾನ್ ನದಿಯನ್ನು ಅನ್ವೇಷಿಸಿದಾಗ ಕಪ್ಪು ಹಂಸಗಳನ್ನು ಯುರೋಪಿಯನ್ನರು ಮೊದಲು ನೋಡಿದರು ಎನ್ನಲಾಗಿದೆ.</s> |
ಬಸವದೀಪ್ ನಾಯಕ ಲಕ್ಕಂದಿನ್ನಿ, ರಂಗನಾಥ ನಾಯಕ ಸೂರಿ ಹುಸೇನಪ್ಪ, ಶರಣಪ್ಪ ನಾಯಕ, ವೆಂಕಟೇಶ ದೊರೆ, ಸುನೀಲ, ಭೀಮೇಶ, ಯಲ್ಲಪ್ಪ ದೊರೆ, ಡಿ.ಯಮನೂರು, ಮಲ್ಲಿಕಾರ್ಜುನ, ಅಂಬು ನಾಯಕ, ಗುಜ್ಜಲ ಗೋಪಾಲ ನಾಯಕ, ನಾಗರಾಜ ನಾಯಕ, ಗೋಪಾಲಕೃಷ್ಣ, ಸಾದುರಂಗಯ್ಯ ಗುಜ್ಜಲ ಬಸವ, ಕೆ.ರಾಘವೇಂದ್ರ ಇದ್ದರು.</s> |
ಶ್ರೀರಾಮ ಸೇನೆಗೆ ನಿಷೇಧವಿಲ್ಲ</s> |
ಸಾವಿರಾರು ಸಂಖ್ಯೆಯಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರು ಹೊರಬರುತ್ತಿರುವುದರಿಂದ ಕೋವಿಡ್ ಸೂಕ್ತ ಮಾರ್ಗಸೂಚಿಗಳನ್ನು ಕಾಪಾಡಿಕೊಳ್ಳುವಂತೆ ಜನರಿಗೆ ಎಚ್ಚರಿಕೆ ನೀಡಿದೆ.</s> |
ಕುರಿ ಮಾಂಸ ಬೆಲೆ ಹೆಚ್ಚಳ: ಈ ವಾರ ಕುರಿ ಮಾಂಸದ ಬೆಲೆ ಕೆ.ಜಿ.ಗೆ 10 ಹೆಚ್ಚಾಗಿದೆ. ಎಳೆಯ ಕುರಿ ಮಾಂಸದ ಬೆಲೆ ಕೆ.ಜಿ 610, ಸಾಧಾರಣ ಮಟನ್ 510ಕ್ಕೆ ಮಾರಾಟವಾಗುತ್ತಿದೆ. ಮೊಟ್ಟೆ ಒಂದಕ್ಕೆ 4 ಹಾಗೂ ಕೋಳಿ ಮಾಂಸ ಕೆ.ಜಿ.ಗೆ 170ರಂತೆ ದರವಿದೆ.</s> |
ಕೆಲಸ ಮಾಡುವ ಜಾಗದಲ್ಲಿ ಸಹೋದ್ಯೋಗಿಯಿಂದ ಕಿರಿಕಿರಿಯಾಗುತ್ತಿದೆ. ಇದನ್ನು ಮೇಲಿನ ಅಧಿಕಾರಿಗಳಿಗೆ ಹೇಳೋಣ ಎಂದರೆ ಭಯ. ಅವರು ನನ್ನ ಮಾತನ್ನು ನಂಬುತ್ತಾರಾ ಎನ್ನಿಸುತ್ತೆ. ಇದನ್ನು ನನ್ನ ಗಂಡನ ಬಳಿಯೂ ಹೇಳಿಕೊಳ್ಳಲು ಮನಸ್ಸಾಗುತ್ತಿಲ್ಲ. ಒಮ್ಮೆ ಅವನಿಗೆ ನೇರವಾಗಿ ನನ್ನ ಜೊತೆಗೆ ಹೀಗೆಲ್ಲಾ ನಡೆದುಕೊಳ್ಳಬೇಡಿ ಎಂದು ಹೇಳಿದರೂ ಅವನ ವರ್ತನೆ ಬದಲಾಗಿಲ್ಲ. ಈಗ ನಾನೇನು ಮಾಡಲಿ? ಏನಾದರೂ ಸಲಹೆ ಇದ್ದರೆ ಕೊಡಿ ಎಂದು ಮಂಜುಳಾ (ಹೆಸರು ಬದಲಿಸಲಾಗಿದೆ) ಬೆಂಗಳೂರು ಕೇಳಿದ ಪ್ರಶ್ನೆಗೆ ಬಂದ ಉತ್ತರಗಳು.</s> |
ನವದೆಹಲಿ: ದೇಶದ ಮೊದಲ ಭಯೋತ್ಪಾದಕ ಹಿಂದು ಎಂದು ಹೇಳುವ ಮೂಲಕ ಬಹುದೊಡ್ಡ ವಿವಾದ ಸೃಷ್ಟಸಿದ್ದ ನಟ, ಮಕ್ಕಳ್ ನೀದಿ ಮೈಯಂ ಪಕ್ಷದ ಸಂಸ್ಥಾಪಕ ಕಮಲ್ಹಾಸನ್ ಈಗ ಹಿಂದು ವಿಚಾರವಾಗಿ ಇನ್ನೊಂದು ಹೇಳಿಕೆ ನೀಡಿದ್ದು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.</s> |
ಸಚಿವರಾದ ಯು.ಟಿ. ಖಾದರ್, ಕೆ.ಜೆ.ಜಾರ್ಜ್, ಡಿ.ಕೆ.ಶಿವಕುಮಾರ್, ಜಯಮಾಲಾ, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಸಚಿವರು ಹೊಸ ಕಾರುಗಳಿಗೆ ಬೇಡಿಕೆ ಸಲ್ಲಿಸಿದ್ದರು. ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಹೊಸ ಕಾರಿಗೆ ಬೇಡಿಕೆ ಸಲ್ಲಿಸಿದ್ದರು ಮತ್ತು 11 ಹೊಸ ಕಾರುಗಳ ಬೇಡಿಕೆಯಲ್ಲಿ ಇದೂ ಸೇರಿತ್ತು ಎನ್ನಲಾಗಿದೆ.</s> |
ರ್ಯಾಪಿಡ್ ಟೆಸ್ಟ್ ನಂತರ ಆಯೋಗದ ವೈದ್ಯಕೀಯ ಪರೀಕ್ಷೆ</s> |
ನೀವು ಗ್ಯಾಜೆಟ್ ಒಂದು ಗಟ್ಟಿಮುಟ್ಟಾದ ಮತ್ತು ಬಾಳಿಕೆ ಮಾಡಲು ಬಯಸಿದರೆ, ನೆಲೆಗೆ ತುಂಡು ಬಳಸಿ.</s> |
ಇಲ್ಲಿ ಸುದ್ದಿಗೋಷ್ಠಿ ನಡೆ ಸಿದ ಸಚಿವರು, ಇದೆಲ್ಲದರ ಮಧ್ಯೆಯೂ ಕೆಲವು ಸವಾಲುಗಳೂ ಎದುರಿಗೇ ಇವೆ. ದೇಶದಲ್ಲಿನ ಹಣದುಬ್ಬರ ಈಗಲೂ ಮೇಲ್ಮಟ್ಟದಲ್ಲಿಯೇ ಇದೆ. ಇದನ್ನು ತಗ್ಗಿ ಸುವ ಸಲುವಾಗಿಯೇ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರ ಕಡಿಮೆ ಮಾಡದೆ ಕಠಿಣ ಕ್ರಮಗಳನ್ನೇ ಈಗಲೂ ಮುಂದುವರಿಸಿದೆ ಎಂದರು.</s> |
ನಂಬಿದರೆ ನಂಬಿ.. ಅಮಾವಾಸ್ಯೆ ದಿನ ಹುಟ್ಟಿದ ಮಹಿಳೆಯರೇ ಈತನ ಟಾರ್ಗೆಟ್!</s> |
ಮಳೆ ಗಾಳಿಗೆ ಹೆದ್ದಾರಿಗೆ ಬಿದ್ದ ಮರ</s> |
ತಾತನ ಬಳಿ ಹರ್ಕ್ಯುಲಸ್ ಸೈಕಲ್ ಇತ್ತು. ಅದರ ಗೀಳು ಅವರಿಗೆ. ಎಲ್ಲಿ ಸೈಕಲ್ ರೇಸ್ ಇದ್ದರೂ ತಪ್ಪದೇ ಹೋಗುತ್ತಿದ್ದರು. ಗೆದ್ದರೆ ಬೆಳ್ಳಿ ಕಪ್ ಸಿಗುತ್ತಿತ್ತು. ಅಂಥ ಹಲವು ಬೆಳ್ಳಿ ಕಪ್ಗಳನ್ನು ಅವರು ಗೆದ್ದು ತಂದು ಮನೆಯಲ್ಲಿ ಜೋಡಿಸಿದ್ದರು. 1938ರಲ್ಲಿ ಅವರು ದೊಡ್ಡ ರೇಸ್ನಲ್ಲಿ ಗೆದ್ದು ಕೀರ್ತಿ ಗಳಿಸಿದ್ದರು.</s> |
ದೇವರ ಉತ್ಸವ ವಿಚಾರವಾಗಿ ಮೂವರಿಂದ ಆತ್ಮಹತ್ಯೆಗೆ ಯತ್ನ</s> |
ನೀವು ಯಾರೊಂದಿಗಾದರೂ ಹಸ್ತಲಾಘವ ಮಾಡುತ್ತಿದ್ದೀರಿ ಎಂದು ಕನಸು ಕಾಣುವುದರಿಂದ ಅದು ಒಂದು ಸನ್ನಿವೇಶಕ್ಕೆ ಹೊಸ ಆರಂಭ ಅಥವಾ ಅಂತ್ಯವನ್ನು ಸೂಚಿಸುತ್ತದೆ. ನೀವು ಒಂದು ಒಪ್ಪಂದಕ್ಕೆ ಬಂದಿದ್ದೀರಿ ಅಥವಾ ಸಮಸ್ಯೆಯ ನಿರ್ಣಯಕ್ಕೆ ಬಂದಿದ್ದೀರಿ. ಕನಸು ನಿಮ್ಮ ಜೀವನದಲ್ಲಿ ಹೊಸತನ್ನು ಸ್ವಾಗತಿಸುವುದೂ ಹೌದು. ನಿರ್ದಿಷ್ಟವಾಗಿ, ನೀವು ಪ್ರಸಿದ್ಧ ಅಥವಾ ಪ್ರಮುಖ ವ್ಯಕ್ತಿಯ ೊಂದಿಗೆ ಹಸ್ತಲಾಘವ ಮಾಡುತ್ತಿದ್ದರೆ, ಆಗ ನೀವು ಇತರರಿಂದ ಉತ್ತಮ ಗೌರವಕ್ಕೆ ಪಾತ್ರರಾಗಿರುವಿರಿ ಎಂದು ಸೂಚಿಸುತ್ತದೆ. ನೀವು ಮಾಡುವ ಕೆಲಸಗಳಲ್ಲಿ ನೀವು ಮುಳುಗಿರುವ ಂತಹ ಒಂದು ವಿಷಯದ ಬಗ್ಗೆ ಕನಸು ಕಾಣುತ್ತಿದ್ದರೆ, ನೀವು ನಿಮ್ಮ ಸುತ್ತಲಿನ ಜನರನ್ನು ಕಡೆಗಣಿಸುತ್ತ, ನಿಮ್ಮ ಸುತ್ತಲಿನ ಜನರ ಮೇಲೆ ಗಮನ ಹರಿಸದೆ ನಿಮ್ಮ ಸ್ವಂತ ವಸ್ತುಗಳ ಮೇಲೆ ಹೆಚ್ಚು ಗಮನ ಹರಿಸುತ್ತೀರಿ ಎಂದರ್ಥ. ನೀವು ಸ್ವಾರ್ಥಿಯಲ್ಲದಿದ್ದರೆ ಮತ್ತು ನಿಮ್ಮ ಸುತ್ತಲಿರುವ ಇತರರ ಬಗ್ಗೆ ಕಾಳಜಿ ವಹಿಸದಿದ್ದರೆ ಖಚಿತಪಡಿಸಿಕೊಳ್ಳಿ. ಹೀರಿಕೊಳ್ಳುವ ಕನಸು ಕಾಣುವುದೂ ಅಭದ್ರತೆಯ ವ್ಯಾಖ್ಯಾನವನ್ನು ಹೊಂದಿರಬಹುದು. ನಾವು ಇರುವ ಸನ್ನಿವೇಶವನ್ನು ನೀವು ಒಪ್ಪಿಕೊಳ್ಳುವುದಿಲ್ಲ, ಅಥವಾ ನಿಮ್ಮ ಸ್ವಂತ ಚರ್ಮದಲ್ಲಿ ಸುರಕ್ಷಿತ ಮತ್ತು ಆರಾಮದಾಯಕ ಭಾವನೆಯನ್ನು ಅನುಭವಿಸುವುದಿಲ್ಲ. ಶಿವಮೊಗ್ಗಬೆಂಗಳೂರು ರೈಲು ಸಂಚಾರ ಸಮಯ ಬದಲು : ಗಮನಿಸಿ ಶಿವಮೊಗ್ಗದಿಂದ ಸಂಚಾರ ಮಾಡುವ ರೈಲಿನ ಸಮಯ ಬದಲಾಗಿದೆ. ಯಶವಂತಪುರದಿಂದ ಶಿವಮೊಗ್ಗ ನಡುವೆ ಸಂಚಾರ ಮಾಡುತ್ತಿದ್ದ ಜನಶತಾಬ್ದಿ ರೈಲು ಸಮಯ ಹಾಗೂ ಹೊರಡುವ ಸ್ಥಳವೂ ಬದಲಾಗಿದೆ. ಶಿವಮೊಗ್ಗ (ಫೆ.01): ಶಿವಮೊಗ್ಗದಿಂದ ಬೆಂಗಳೂರಿನ ಯಶವಂತಪುರಕ್ಕೆ ಸಂಚಾರ ಮಾಡುತ್ತಿದ್ದ ಜನಶತಾಬ್ದಿ ರೈಲು ವೇಳಾಪಟ್ಟಿ ಬದಲಾಗಿದೆ. ಬದಲಾದ ವೇಳಾಪಟ್ಟಿಗೆ ಅನುಗುಣವಾಗಿ ಪ್ರಯಾಣ ಆರಂಭವಾಗಿದೆ. ಇನ್ನು ಮುಂದೆ ಯಶವಂತಪುರ ಬದಲಿಗೆ ಮೆಜೆಸ್ಟಿಕ್ನಿಂದ ಸಂಜೆ 5.15ಕ್ಕೆ ಹೊರಡುತ್ತದೆ. ಪ್ರಯಾಣಿಕರು ಬದಲಾಗಿರುವ ಸಮಯವನ್ನು ಗಮನಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಮನವಿ ಮಾಡಿದ್ದಾರೆ.</s> |
ಹಣ್ಣುಗಳಿಗೆ ನಮ್ಮ ಆಹಾರ ಪದ್ಧತಿಯಲ್ಲಿ ಪ್ರಮುಖವಾದ ಸ್ಥಾನ ನೀಡಲಾಗಿದೆ. ನಿಮ್ಮ ಪ್ರೀತಿಪಾತ್ರರಿಗೆ ಸ್ನೇಹ ಮತ್ತು ವಿಶ್ವಾಸದ ಸಂಕೇತವಾಗಿ ಹಣ್ಣುಗಳನ್ನು ನೀಡಲಾಗುತ್ತದೆ. ಅನಾರೋಗ್ಯಪೀಡಿತರಿಗೆ ಹಣ್ಣುಗಳನ್ನು ವಿತರಿಸಲಾಗುತ್ತದೆ. ಆದರೆ ಈ ಹಣ್ಣುಗಳಲ್ಲಿ ಕೆಲವು ಆಸಕ್ತಿಕರ ವಿಷಯಗಳು ಅಡಗಿವೆ ಎಂಬುದು ಸಾಕಷ್ಟು ಜನರಿಗೆ ತಿಳಿದಿಲ್ಲ. ನೀವು ಈ ಹಿಂದೆ ಕೇಳಿರದ ಅಚ್ಚರಿಪಡುವ ಕೆಲವು ತಮಾಷೆಯ ಸಂಗತಿಗಳು ಹಣ್ಣುಗಳಲ್ಲಿವೆ.</s> |
ಪುತ್ತೂರು: ಶಿವಳ್ಳಿ ಸಂಪದ ಪುತ್ತೂರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇದರ ಸಹಭಾಗಿತ್ವದಲ್ಲಿ ಅರುಣಾಬ್ಜನ ಮಹಾಭಾರತೋ ಎಂಬ ಪಳಂತುಳುವಿನಲ್ಲಿರುವ ಕೃತಿ ವಿಮರ್ಶೆ ಕೊಂಬೆಟ್ಟು ದ್ರಾವಿಡ ಬ್ರಾಹ್ಮಣರ ಬೋರ್ಡಿಂಗ್ನಲ್ಲಿ ಮಾ. 14ರಂದು ಮಧ್ಯಾಹ್ನ ನಡೆಯಲಿದೆ ಎಂದು ಶಿವಳ್ಳಿ ಸಂಪದ ಅಧ್ಯಕ್ಷ ಟಿ.ರಂಗನಾಥ ಉಂಗ್ರುಪುಳಿತ್ತಾಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.</s> |
ಸರಕಾರವು ನೇಮಕಗೊಳಿಸಿದ್ದ ಪರಿಣಿತರ ಸಮಿತಿಯು ಮುಂದಿರಿಸಿದ್ದ 10 ಸಲಹೆಗಳ ಪೈಕಿ ಮೂರನ್ನು ಕಳೆದ ತಿಂಗಳು ನಡೆದಿದ್ದ ಬಿಎಸ್ಎನ್ಎಲ್ ಆಡಳಿತ ಮಂಡಳಿಯ ಸಭೆಯು ಒಪ್ಪಿಕೊಂಡಿದೆ ಎಂದು ಬೆಳವಣಿಗೆಗಳನ್ನು ಹತ್ತಿರದಿಂದ ಬಲ್ಲ ಮೂಲಗಳು ತಿಳಿಸಿವೆ.</s> |
ಎಂಬತ್ತರ ದಶಕದ ಕತೆಯನ್ನು ಸಿನಿಮಾ ಮಾಡುತ್ತಿದ್ದಾರೆ ನಿರ್ದೇಶಕರು. ಹರಿಪ್ರಿಯಾ ನಾಯಕಿಯಾಗಿ ನಟಿಸುತ್ತಿದ್ದರೆ, ರಿಷಭ್ ಶೆಟ್ಟಿ ನಾಯಕ. ಇಬ್ಬರೂ ಹೊಸ ರೀತಿಯ ಪಾತ್ರವನ್ನು ಈ ಸಿನಿಮಾದಲ್ಲಿ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಡೈಲಾಗ್ ಕೂಡ ವಿಭಿನ್ನವಾಗಿವೆ. ಅಲ್ಲದೇ, ನಿರ್ದೇಶಕ ಜಯತೀರ್ಥ ರಂಗಭೂಮಿ ಹಿನ್ನೆಲೆಯಿಂದ ಬಂದವರು. ಸಾಹಿತ್ಯವನ್ನು ಆಳವಾಗಿ ಓದಿಕೊಂಡವರು. ಹಾಗಾಗಿ ಸಹಜವಾಗಿಯೇ ಅವರು ಬರೆಯುವ ಡೈಲಾಗ್ ಬಗ್ಗೆ ಕುತೂಹಲ ಇದ್ದೇ ಇರುತ್ತದೆ. ಓದುಗರಿಗೂ ಅದು ಆನಂದ ನೀಡುತ್ತದೆ. ಆ ಆನಂದ ಸದ್ಯ ಹರಿಪ್ರಿಯಾ ಅವರಿಗೆ ದಕ್ಕಿದೆ.</s> |
ಹೀಗೆ ಲ್ಯಾಬ್ ನಲ್ಲಿ ಸಿದ್ದವಾದ ಸೊಳ್ಳೆಗಳನ್ನು ಇಂಡೋನೇಷ್ಯೇದ ಕೆಲವು ಪ್ರಾಂತ್ಯಗಳಲ್ಲಿ ಬಿಡುಗಡೆ ಮಾಡಲಾಗಿದೆ. ಕಳೆದ ವರ್ಷದ ಡೆಂಘೀ ಪ್ರಕರಣಗಳಿಗೆ ಹೋಲಿಸಿದರೆ, ಇಲ್ಲಿನ ಜನರಲ್ಲಿ ಈ ವರ್ಷ ಡೆಂಘೀ ಕಾಣಿಸಿರುವುದು ಶೇಕಡ 77ರಷ್ಟು ಇಳಿಕೆಯಾಗಿದೆ. ಇನ್ನು ಡೆಂಘೀ ಎಂದು ಆಸ್ಪತ್ರೆ ಸೇರಿರುವವರ ಪ್ರಮಾಣದಲ್ಲಿ ಶೇಕಡ 86ರಷ್ಟು ಇಳಿಕೆ ಕಾಣಿಸಿದೆ. ಇದರಿಂದ ಇಂಡೋನೇಷ್ಯಾದ ಜನ ನಿಟ್ಟುಸಿರು ಬಿಡವಂತಾಗಿದೆ. ಇದೀಗ ವಾಲ್ಬಾಷಿಯ ಬ್ಯಾಕ್ಟೀರಿಯ ಇರುವ ಸೊಳ್ಳೆಗಳಿರುವ ಜಾಗಗಳಲ್ಲಿ ಶೇಕಡ 2.3ರಷ್ಟು ಜನರಲ್ಲಿ ಮಾತ್ರ ಡೆಂಘೀ ಕಾಣಿಸುತ್ತಿದೆ. ಮತ್ತು ವಾಲ್ವಾಷಿಯ ಸೊಳ್ಳೆಗಳು ಇಲ್ಲದಿರುವ ಜಾಗಗಳಲ್ಲಿ ಶೇಕಡ 9.4 ರಷ್ಟು ಜನರಲ್ಲಿ ಡೆಂಘೀ ಕಾಣಿಸುತ್ತಿದೆ.</s> |
ಕುಶಾಲನಗರ ಸಮೀಪದ ಹಾರಂಗಿ ಜಲಾಶಯದಲ್ಲಿ ನೀರಿನ ಒಳ ಹರಿವಿನಲ್ಲಿ ಏರಿಕೆ ಕಂಡು ಬರುತ್ತಿದೆ.</s> |
ಶಾಸಕರ ವೇತನ ಹೆಚ್ಚಳವನ್ನು ಜನರು ವಿರೋಧಿಸಬಹುದು, ಟೀಕೆ ಮಾಡಲೂಬಹುದು. ಆದರೆ, ಎಲ್ಲಾ ಶಾಸಕರೂ ಶ್ರೀಮಂತರೇ ಎಂಬಂತಹ ಭಾವನೆ ತೊರೆದು ನಮ್ಮಂಥವರ ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಂಡರೆ ಯಾರೂ ಕೂಡ ನಮ್ಮನ್ನು ಟೀಕಿಸಲಾರರು. ಆದರೆ ಜನರ ಭಾವನೆಗಳಿಗೆ ನಾನು ಬೆಲೆ ಕೊಡುತ್ತೇನೆ. ಇಡೀ ಶಾಸನ ಸಭೆ ತೆಗೆದುಕೊಂಡ ನಿರ್ಧಾರ ಜನರ ನಿರ್ಧಾರವೇ ಆಗಿರಬೇಕೆಂದು ನಾನೂ ಕೂಡ ನಂಬಿದ್ದೇನೆ. ನನ್ನಂಥ ಶಾಸಕರ ಅಭಿಪ್ರಾಯಕ್ಕೆ ಜನರೂ ಮನ್ನಣೆ ಕೊಡುತ್ತಾರೆ ಎಂಬ ವಿಶ್ವಾಸ ನನ್ನದು ಎಂದು ಶಾಸಕ ಶಿವಳ್ಳಿ ಹೇಳಿದರು.</s> |
ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜನಾರ್ದನ್, ಸೇಫ್ವೀಲ್ ಸಂಸ್ಥೆಯ ಪ್ರವೀಣ್, ಶಿವಪ್ರಸಾದ್, ಕಿರಣ್ ಸುದ್ದಿಗೋಷ್ಠಿಯಲ್ಲಿದ್ದರು.</s> |
ನಿರ್ಮಿಸಲು ಉದ್ದೇಶಿಸಲಾಗಿದ್ದು, ಸರ್ಕಾರದ ಒಪ್ಪಿಗೆಗೆ ಕಾಯಲಾಗುತ್ತಿದೆ ಎಂದರು.</s> |
ಬೆಂಗಳೂರು, ಏಪ್ರಿಲ್ 30: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ(ಸಿಬಿಎಸ್ಇ) ನಡೆಸುವ ಜಾಯಿಂಟ್ ಎಂಟ್ರೆನ್ಸ್ ಎಕ್ಸಾಮಿನೇಷನ್(ಜೆಇಇ) ಪರೀಕ್ಷೆ ಫಲಿತಾಂಶ ಇಂದು ಬೆಳಗ್ಗೆ 11 ಗಂಟೆಗೆ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಸಿಬಿಎಸ್ಇ ನಡೆಸುವ ಜೆಇಇ ಪರೀಕ್ಷೆಯು ಉತ್ತೀರ್ಣೃ ಹೊಂದುವ ವಿದ್ಯಾರ್ಥಿಗಳು ನಾನಾ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯಲಿದ್ದಾರೆ.</s> |
ಜನಸಾಮಾನ್ಯರ ಪ್ರತಿಭಟನೆಗಳಿಗೆ ಸೋಶಿಯಲ್ ಮೀಡಿಯಾ ಹೇಗೆ ಶಕ್ತಿ ತುಂಬುತ್ತಿದೆ ಎನ್ನುವುದನ್ನು ದೇಶದಾದ್ಯಂತ ಸದ್ದು ಮಾಡಿರುವ ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆಯ ಉದಾಹರಣೆಯೊಂದಿಗೆ ನೋಡೋಣ. ರೈತರ ಪ್ರತಿಭಟನೆಯು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಅಪಪ್ರಚಾರದ ಅಬ್ಬರ ಹೆಚ್ಚಾಗಿದ್ದರಿಂದ ಅವರ ಒಗ್ಗಟ್ಟು ಛಿದ್ರಗೊಳ್ಳುವ ಅಪಾಯದಲ್ಲಿತ್ತು. ಅದನ್ನು ಬಹುಬೇಗ ಗುರುತಿಸಿದ ಕಿಸಾನ್ ಏಕತಾ ಮೋರ್ಚಾದ ಪ್ರತಿನಿಧಿಗಳು ಸರ್ಕಾರದೊಂದಿಗೆ ನಡೆಸಿದ ಸಭೆಗಳ ಕಲಾಪವನ್ನು ಫೇಸ್ಬುಕ್ ಲೈವ್ ಮಾಡತೊಡಗಿದರು. ಪ್ರತಿಭಟನೆಗೆ ಸಂಬಂಧಿಸಿದ ಪ್ರತಿಯೊಂದು ವಿವರವನ್ನೂ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳತೊಡಗಿದರು. ಇದರಿಂದ ಸಂಶಯಗೊಂದಲಗಳೆಲ್ಲ ತಾವೇ ತಾವಾಗಿ ದೂರವಾದವು.</s> |
ಇನ್ನೂ ಸಿಕ್ಕಿಲ್ಲ: ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯಾಗಿರುವ ಮುಖ್ಯ ಲೆಕ್ಕಾಧಿಕಾರಿ (ಸಿಎಒ) ವೀರಗೌಡ ಪಾಟೀಲ್ ಅವರು ತಲೆಮರೆಸಿಕೊಂಡಿದ್ದು ಇನ್ನೂ ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದರು.</s> |
ಉತ್ತಮ ಮುಂಗಾರು ನಿರೀಕ್ಷೆ ಸಾಮಾನ್ಯಕ್ಕಿಂತ ಅಧಿಕ ವರ್ಷಧಾರೆ ಸಾಧ್ಯತೆ, ಹವಾಮಾನ ಇಲಾಖೆ ಭವಿಷ್ಯ</s> |
2015ರಿಂದ ಬಂಡೀಪುರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಣಾ ಶ್ವಾನವು ಹಲವು ಪ್ರಮುಖ ಅಪರಾಧ ಪ್ರಕರಣಗಳನ್ನು ಭೇದಿಸಲು ಅಧಿಕಾರಿಗಳಿಗೆ ನೆರವಾಗಿತ್ತು. ನಿವೃತ್ತಿ ಅಂಚಿನಲ್ಲಿದ್ದರೂ, ತನ್ನ ಚುರುಕುತನದಿಂದ ಈಗಲೂ ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳುತ್ತಿದೆ. ಅದು ನಿವೃತ್ತಿಯಾಗುವ ಮುಂಚೆ ಹೊಸದಾಗಿ ಸೇರ್ಪಡೆಗೊಂಡಿರುವ ಮುಧೋಳ ತಳಿಯ ಶ್ವಾನವನ್ನು ಪೂರ್ಣವಾಗಿ ಕಾರ್ಯಾಚರಣೆಗೆ ಸಜ್ಜುಗೊಳಿಸುವ ಗುರಿಯನ್ನು ಬಂಡೀಪುರದ ಅಧಿಕಾರಿಗಳು ಹೊಂದಿದ್ದಾರೆ.</s> |
2019 ರ ಕೆಪಿಎಲ್ ಫೈನಲ್ ಪಂದ್ಯವೇ ಫಿಕ್ಸ್ ಆಗಿತ್ತು..!</s> |
ಧಾರ್ಮಿಕ ಸಂಕೇತವಾಗಿ.</s> |
ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೊದಲು ಪ್ರಧಾನಿ ಮೋದಿ, ಲೋದಿಯ ಸುಲ್ತಾನ್ಪುರದಲ್ಲಿರುವ ಬೇರ್ ಸಾಹೀಬ್ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮೊದಲ ಹಂತವಾಗಿ ಗುರುದ್ವಾರಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಂಜಾಬ್ ಸಿಎಂ ಅಮರಿಂದರ್ ಸಿಂಗ್, ಅಕಾಲಿ ತಖ್ತ್ನ ಗಿಯಾನಿ ಹರ್ಪ್ರೀತ್ ಸಿಂಗ್, ಹರ್ಸಿಮ್ರತ್ ಕೌರ್ ಬಾದಲ್, ಶಿರೋಮನಿ ಅಕಾಲಿ ದಳ ಮುಖ್ಯಸ್ಥ ಸುಖ್ಬೀರ್ ಬಾದಲ್ ಸೇರಿದಂತೆ ಅನೇಕ ಶಾಸಕರು, ಸಂಸದರು ಪ್ರಯಾಣ ಬೆಳೆಸಲಿದ್ದಾರೆ.</s> |
ಜ್ವಲಂತ ಸಮಸ್ಯೆ ಪರಿಹಾರಕ್ಕೆ ಪ್ರತಿಭಟನೆ</s> |
ಪರೀಕ್ಷಾ ಜ್ವರ ಎಂದರೇನು ? ಅದರ ನಿವಾರಣೆ ಹೇಗೆ ?</s> |
ದಿ ಯು. ಅನಂತ ಮಯ್ಯ ಅವರು ಈ ಶಾಲೆಯಲ್ಲಿ ಶಿಕ್ಷಕರಾಗಿದ್ದಾಗ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದರು. ಮೊದಲಿಗೆ ಖಾಸಗಿ ಜಾಗವೊಂದರಲ್ಲಿ ಪುಟ್ಟ ಕೊಠಡಿಯಲ್ಲಿ ಆರಂಭಗೊಂಡ ಈ ಶಾಲೆ ಬಳಿಕ ಮ್ಯಾಕ್ಸಿಂ ಮಿರಾಂದರ್ ಎಂಬುವರ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. 50 ವರ್ಷಗಳ ಹಿಂದೆ ಈಗಿರುವ ಸರಕಾರಿ ಜಾಗದಲ್ಲಿ ಈ ಶಾಲೆಯು ಪಾಠಪ್ರವಚನವನ್ನು ಮುಂದುವರಿಸಿತು. 8090 ರ ದಶಕದಲ್ಲಿ ಒಂದು ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಯಲ್ಲಿ 900 ರಿಂದ 1 ಸಾವಿರ ಮಂದಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದ ಇತಿಹಾಸ ಇದೆ.</s> |
ಬೆಂಗಳೂರು (ಆ.24): ಆನಂದ್ ಸಿಂಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಡಕ್ ಸೂಚನೆ ನೀಡಿದರು. ನಳಿನ್ ಭೇಟಿ ವೇಳೆ ಸೂಚನೆ ನೀಡಿದ್ದು, ನಿಮ್ಮ ಈ ನಡೆಯನ್ನು ಪಕ್ಷ ಸಹಿಸೋದಿಲ್ಲ ಎಂದರು. ನೋಡಿ ನೀವು ಒಳ್ಳೆಯವರು ಇದ್ದೀರಿ. ಮುಂದೆ ಒಳ್ಳೆಯದು ಆಗುತ್ತದೆ. ಈ ರೀತಿ ರಾಜೀನಾಮೆ ಕೊಡ್ತೇನೆ ಎಂದೆಲ್ಲಾ ಸಮಯದಲ್ಲಿ ಮಾತಾಡಬೇಡಿ ಎಂದ ಕಟೀಲ್ ಮಾತು ಮನಮುಟ್ಟಿದಂತಾಗಿದೆ. ಕೊನೆಗೂ ಅಸಮಾಧಾನಗೊಂಡಿದ್ದ ಅವರು ಅಧಿಕಾರ ಸ್ವೀಕಾರ ಮಾಡಿದರು.</s> |
ಭೋಪಾಲ್: ಯಾರಿಗೆ ಯಾರ ಮೇಲೆ ಮನಸ್ಸಾಗುತ್ತದೆ ಎಂಬುದನ್ನು ಕೆಲವೊಮ್ಮೆ ಯಾರಿಗೂ ಊಹೆ ಮಾಡಲು ಆಗುವುದಿಲ್ಲ. ಅಂಥದ್ದೇ ಪ್ರಸಂಗವೊಂದು ಉತ್ತರ ಪ್ರದೇಶದಲ್ಲಿ ಜರುಗಿದ್ದು, ಅಕ್ಕನ ಗಂಡನ ವ್ಯಾಮೋಹಕ್ಕೆ ಒಳಗಾದ ಯುವತಿ, ತನ್ನ ಅಕ್ಕನ ಜತೆ ಹೇಳಿದ ಮಾತುಗಳು ಎಂಥವರನ್ನು ಒಮ್ಮೆ ಹುಬ್ಬೇರಿಸದೇ ಇರದು.</s> |
ಪೊಲೀಸರು ಡಿ.6ರಂದು ಇವರಿಬ್ಬರನ್ನು ಪತ್ತೆ ಹಚ್ಚಿ ಪೋಷಕರ ವಶಕ್ಕೆ ಒಪ್ಪಿಸಿದ್ದರು. ನಂತರ ತೌಫೀಕ್ ರಾಜ್ಯ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ, ಪತ್ನಿ ಸುಹಾನಾ ಆಲಿಯಾಸ್ ಸಹನಾಳನ್ನು ಹುಡುಕಿಕೊಡುವಂತೆ ಅರ್ಜಿ ಸಲ್ಲಿಸಿದ್ದರು.</s> |
ವರ್ಷ ವೆಚ್ಚ (ಕೋಟಿಗಳಲ್ಲಿ)</s> |
ಒಟ್ಟಾರೆಯಾಗಿ ವಿಶ್ವ ಕ್ರಿಕೆಟ್ನಲ್ಲಿ 300 ಟಿ20 ಪಂದ್ಯಗಳನ್ನಾಡಿದ 14ನೇ ಆಟಗಾರ ಎಂಬ ಗೌರವಕ್ಕೆ ಪಾತ್ರವಾಗಲಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೀರಾನ್ ಪೊಲಾರ್ಡ್ 451 ಪಂದ್ಯಗಳನ್ನು ಆಡಿದ್ದಾರೆ.</s> |
ಟಿಪ್ಪರ್ ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಆಟೋ ಚಾಲಕ ಸತೀಶ್ ಸೇರಿದಂತೆ ಐವರು ಮೃತಪಟ್ಟಿದ್ದಾರೆ.</s> |