text
stringlengths
4
182k
ಸೈನಿ ಆಗ್ರಾದಲ್ಲಿರುವುದನ್ನು ತಿಳಿದ ವೈದ್ಯನಾಥನ್ ವೈದ್ಯರಿಗೆ ಕರೆ ಮಾಡಿ ತಮಗೆ ಮಾಡಿದ ನೆರವಿಗೆ ಧನ್ಯವಾದ ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಬ್ಯಾಂಕ್ ಸಾಮಾನ್ಯ ಸ್ಟಾಕ್ ಎಕ್ಸ್ಚೇಂಜ್ ಫಿಲ್ಲಿಂಗ್ ಮಾಡಿತ್ತು. ವೈದ್ಯನಾಥನ್ ಅವರು ಐಡಿಎಫ್ಸಿ ಫಸ್ಟ್ ಬ್ಯಾಂಕ್ನಲ್ಲಿದ್ದ ಅವರ ವೈಯಕ್ತಿಕ ಶೇರ್ 1 ಲಕ್ಷದ ಈಕ್ವಿಟಿಯನ್ನು ಅವರ ಹಳೆಯ ಶಾಲೆಯ ಶಿಕ್ಷಕ ಗಾರ್ಡಿಯಲ್ ಸರೂಪ್ ಸೈನಿ ಅವರಿಗೆ ಉಡುಗೊರೆಯಾಗಿ ವಾರ್ಗಯಿಸಿದ್ದಾರೆ ಎಂದು ಬ್ಯಾಂಕ್ ಹೇಳಿತ್ತು. ಈ ಸುದ್ದಿ ಸಿಗುತ್ತಲೇ ವೈದ್ಯನಾಥನ್ಗೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ.</s>
ಉಗಾಂಡಾದ ಕಂಪಾಲಾ ಮೂಲದ ಜೋ ರ್ವಾಮಿರಾಮಾ (48) ಸದ್ಯ ತನ್ನ ಡೆಡ್ಲಿ ಗ್ಯಾಸ್ ಮೂಲಕ ವಿಶ್ವದಲ್ಲಿ ಸುದ್ದಿಯಾಗಿದ್ದಾರೆ. ಇವರು ಹೇಳುವ ಪ್ರಕಾರ, ತನ್ನ ಹೂಸಿನಿಂದಲೇ ಇವರು ಸುಮಾರು ಆರು ಮೈಲು ದೂರದಲ್ಲಿರುವ ಸೊಳ್ಳೆಗಳನ್ನು ಕೊಲ್ಲುತ್ತಾರಂತೆ. ಜೊತೆಗೆ, ಇವರ ಹೂಸಿನ ರಾಸಾಯನಿಕ ಗುಣಲಕ್ಷಣಗಳ ಅಧ್ಯಯನಕ್ಕೆ ಕಂಪನಿಯೊಂದು ಮುಂದಾಗಿದೆಯಂತೆ. ಜೊತೆಗೆ, ಈ ವ್ಯಕ್ತಿಯ ಹೊಟ್ಟೆಯಿಂದ ಹೊರಡುವ ಭಯಾನಕ ಅನಿಲದಿಂದ ಸೊಳ್ಳೆ ನಿವಾರಕವನ್ನು ತಯಾರಿಸಲು ಈ ಕಂಪನಿ ಚಿಂತನೆ ನಡೆಸಿದೆಯಂತೆ. ಇದನ್ನು ಸ್ವತಃ ಈ ವ್ಯಕ್ತಿಯೇ ಹೇಳಿಕೊಂಡಿದ್ದಾರೆ.</s>
ಅಂತಾರಾಷ್ಟ್ರೀಯ ವ್ಯಕ್ತಿಗಳಾ?</s>
ತುಮಕೂರು ನಗರದಲ್ಲಿ ಇನ್ನಿಲ್ಲದಂತೆ ಕಾಡುತ್ತಿರುವ ಹಂದಿಗಳ ಹಾವಳಿಯನ್ನು ನಿರ್ಮೂಲನಗೊಳಿಸಲು ಕೊನೆಗೂ ಜಿಲ್ಲಾಧಿಕಾರಿಗಳಿಂದ ಹಸಿರು ನಿಶಾನೆ ಲಭಿಸಿದೆ. ಇದರೊಂದಿಗೆ ಕಳೆದ ಕೆಲವು ವರ್ಷಗಳಿಂದ ಹಂದಿ ಹಾವಳಿ ತಡೆಗಟ್ಟಲು ದಿನವೂ ಆಗ್ರಹಿಸುತ್ತಿದ್ದ ಮಹಾನಗರ ಪಾಲಿಕೆ ಸದಸ್ಯರುಗಳಿಗೆ ನಿರಾಳತೆ ಮೂಡಿದೆ. ಜೊತೆಗೆ ಹಂದಿ ಹಾವಳಿಯಿಂದ ನರಕಯಾತನೆ ಅನುವಿಸುತ್ತಿದ್ದ ತೆರಿಗೆದಾರ ನಾಗರಿಕರೂ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.</s>
ತಾಲ್ಲೂಕಿನಲ್ಲಿ ನಿರ್ಮಾಣ ಹಂತದಲ್ಲಿರುವ ಡಾ.ಅಂಬೇಡ್ಕರ್ ಭವನ, ಬಾಬು ಜಗಜೀವನರಾಂ, ವಾಲ್ಮೀಕಿ ಭವನಗಳನ್ನು ಹಣದ ಕೊರತೆ ಬರದಂತೆ ಕ್ರಮವಹಿಸಿ ಪೂರ್ಣಗೊಳಿಸುವಂತೆ ತಿಳಿಸಿದರು.</s>
ಸಂಕಷ್ಟದಲ್ಲಿದವರಿಗೆ ವಂಚನೆ: ಬಿಸ್ಲೆಘಾಟ್ನಲ್ಲಿ ರಾತ್ರಿಯಿಡೀ ಜಾಗರಣೆ ಮಾಡಿದ ಪ್ರಯಾಣಿಕರ ಅಸಹಾಯಕತೆ ಲಾಭ ಪಡೆದ ಕೆಲ ಕಿಡಿಗೇಡಿಗಳು 5 ರೂ. ಬಿಸ್ಕತ್ ಪ್ಯಾಕೆಟನ್ನು 25 ರೂ.ಗೆ ಮಾರಾಟ ಮಾಡಿದರೆ ಮತ್ತೊಬ್ಬ ವ್ಯಕ್ತಿ ರಸ್ತೆ ತೆರವು ಕಾರ್ಯಾಚರಣೆ ನಡೆಸುವುದಾಗಿ ಪ್ರಯಾಣಿಕರಿಂದ ಸಾವಿರಾರು ರೂ. ಪಡೆದು ವಂಚಿಸಿದ್ದಾರೆ.</s>
ವಯಸ್ಸು ವ್ಯತ್ಯಾಸ ಇಲ್ಲದೆ ಎಲ್ಲರನ್ನೂ ಕೊರೊನಾ ಆವರಿಸುತ್ತೆ. ಮಧುಮೇಹ, ಹೈಪರ್ ಟೆನ್ಷನ್ ಇರುವವರು, ಕ್ಯಾನ್ಸರ್ ರೋಗಿಗಳು, ವಯಸ್ಸಾದವರು, ರೋಗನಿರೋಧಕ ಶಕ್ತಿ ಕಡಿಮೆ ಉಳ್ಳವರು ಸೋಂಕಿನಿಂದ ಹೆಚ್ಚು ಪರಿಣಾಮಕ್ಕೆ ಒಳಪಡುತ್ತಾರೆ.</s>
ಗುಮ್ಮ.. ಗುಮ್ಮ ..ಗುಮ್ಮ ಬಂದ ಅನ್ನೋ ಬ್ಯಾಕ್ಗ್ರೌಂಡ್ ವಾಯ್ಸ್ ನಡುವೆ ವಿಕ್ರಾಂತ್ ರೋಣ ಸುದೀಪ್, ದೋಣಿ ಏರಿ ಬಂದಿದ್ದಾರೆ. ದಟ್ಟ ಅಡವಿಯ ನಡುವಿನ ನೀರಿನಲ್ಲಿ ಒಂದು ಮಗುವಿನ ಜೊತೆ ವಿಕ್ರಾಂತ್ ರೋಣ ಬರುವ ದೃಶ್ಯವನ್ನ ಚಿತ್ರತಂಡ ಶೂಟ್ ಮಾಡಿದೆ. ನಿಜವಾದ ಕಾಡಿನಲ್ಲೇ ಶೂಟ್ ಮಾಡಿರುವಂತೆ ದೃಶ್ಯ ಮೂಡಿ ಬಂದಿದೆ.</s>
ರಾಜ್ಯದಲ್ಲಿ 900 ಮದ್ಯದಂಗಡಿ (ಎಂಎಸ್ಐಎಲ್ ಮಳಿಗೆ) ಸ್ಥಾಪನೆಗೆ ಸರಕಾರ ಮುಂದಾಗಿದ್ದು, ಇದರ ವಿರುದ್ಧ ಉಡುಪಿಯಿಂದಲೇ ಮಹಿಳಾ ಶಕ್ತಿಯ ಹೋರಾಟಕ್ಕೆ ತಯಾರಿ ನಡೆದಿದೆ.</s>
ರಾಜ್ಯ(ಮಡಿಕೇರಿ) ಜು.18 : ನಗರದ ಮಹದೇವಪೇಟೆ ಮತ್ತು ಮಾರುಕಟ್ಟೆ ರಸ್ತೆಯನ್ನು ಶೀಘ್ರ ದುರಸ್ತಿಪಡಿಸುವಂತೆ ಒತ್ತಾಯಿಸಿ ಮಡಿಕೇರಿಯ ವಿವಿಧ ಸಂಘಟನೆಗಳು ನಗರಸಭೆ ವಿರುದ್ಧ ಪ್ರತಿಭಟನೆ ನಡೆಸಿದವು.</s>
ಪೊದೆ ವಿಭಜನೆಯಿಂದ ಸಂತಾನೋತ್ಪತ್ತಿ ಶರತ್ಕಾಲದಲ್ಲಿ ಅಥವಾ ವಸಂತಕಾಲದಲ್ಲಿ ನಡೆಸಲ್ಪಡುತ್ತದೆ. ಜೆಂಟಿಯನ್ ಕಸಿಗೆ ಸರಿಯಾಗಿ ಪ್ರತಿಕ್ರಿಯಿಸಿರುವುದರಿಂದ, ಅದನ್ನು ಭೂಮಿಯ ಮಣ್ಣಿನೊಂದಿಗೆ ನೆಡಲಾಗುತ್ತದೆ.</s>
ದಿವ್ಯಾ ಕಾರಂತ</s>
ಇವರ ಮುಖ್ಯ ಕರ್ತವ್ಯವೆಂದರೆ ಭಗವಂತನ ಸೃಷ್ಟಿಯ ಮೇಲ್ವಿಚಾರಣೆ ನೋಡಿಕೊಳ್ಳುವುದು, ಸಂರಕ್ಷಣೆ ಮಾಡುವುದು ಮತ್ತು ಭಕ್ತರಿಗೆ ಅಭಯಪ್ರದಾನ ಮಾಡುವುದು. ಇವರು ಸದಾಕಾಲದಲ್ಲೂ ಪಾಪದೇವತೆಯನ್ನು ಪ್ರತಿಭಟಿಸುತ್ತಿರುತ್ತಾರೆ.</s>
ಇನ್ನೂ ಸುಧಾಕರ್ ಸ್ಥಳಕ್ಕೆ ಭೇಟಿ ನೀಡಿ ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.. ಚಿಕ್ಕಬಳ್ಳಾಪುರದ ಕೈ ನಾಯಕರು ಗೂಂಡಾ ಪ್ರವೃತ್ತಿಯುಳ್ಳವರು.. ಹಿರಿಯರಾದ ನಮ್ಮ ತಂದೆ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಇದರಿಂದಲೇ ಗೊತ್ತಾಗುತ್ತದೆ ಅವರ ಪೃವೃತ್ತಿ ಏನು ಎಂದು ಕಿಡಿಕಾರಿದರು.</s>
ಜಮ್ಮು: ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೇನೆ ಮತ್ತೆ ಗುಂಡಿನ ದಾಳಿ ನಡೆಸಿದ್ದು, ಮೂವರು ಭಾರತೀಯ ಯೋಧರಿಗೆ ಸಣ್ಣಪುಟ್ಟ ಗಾಯಗಳಾಗಿವೆ.</s>
1. ಮದುವೆಯಾಗಲು ಸೂಕ್ತ ಸಮಯ ಎಂಬುದು ತಪ್ಪು ಕಲ್ಪನೆ</s>
ಆದರೆ ಅವರಿಗೆ ದೆಹಲಿ ರಾಜಕೀಯ ಕ್ರಮೇಣ ಅರ್ಥವಾಗುತ್ತ ಹೋಯಿತು. ಹೀಗಾಗಿ ಅವರು ಊರು ಸೇರಬೇಕಾಯಿತು. ನನ್ನ ದೃಷ್ಟಿಯಲ್ಲಿ ಅವರು ಊರು ಸೇರುವ ಮೂಲಕ ಮರ್ಯಾದೆ ಉಳಿಸಿಕೊಂಡರು ಎಂದೆನಿಸುತ್ತದೆ. ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನ ವಿಫಲವಾಗಲು ಇಂತಹ ಅನೇಕ ಅಂಶಗಳು ಕಾರಣವಾದವು ಎಂದು ಸೇಡಂ ವಿವರಿಸಿದರು.</s>
ಗುರುವಾರ ಕಾರ್ಯಕ್ರಮವೊಂದು ನಡೆದಾಗ ಆತನನ್ನು ಕರೆದ ಸಚಿವ ವಿಜಯ ಸಹಾ ಅವರು ಕ್ಷೌರ ಮಾಡುವಂತೆ ತಿಳಿಸಿದ್ದರು. ರೋಹಿದಾಸ ಜನರ ಎದುರೇ ಮಾಸ್ಕ್ ಧರಿಸಿ ಸಚಿವರ ತಲೆ ಕೂದಲು ಕಟ್ ಮಾಡಿದ್ದ. ಸಚಿವರು ಸ್ಥಳದಲ್ಲೇ ಆತನಿಗೆ 60 ಸಾವಿರ ರೂ. ನೀಡಿದ್ದಾರೆ.</s>
ಅಪರ ನ್ಯಾಯಾಧೀಶರಾದ ಬಸವರಾಜಪ್ಪ ತುಳಸಪ್ಪ ನಾಯಕ, ಜೆಎಂಎಫ್ಸಿ ಸಿವಿಲ್ ನ್ಯಾಯಾಲಯದ ಕಿರಿಯ ಶ್ರೇಣಿ ನ್ಯಾಯಾಧೀಶರಾದ ಫಾರೂಕ್ಜರೇ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಾದಾಪುರ ರಾಜೇಶ್, ಪ್ರಧಾನ ಕಾರ್ಯದರ್ಶಿ ಕೆ.ಎನ್.ಪಾಂಡು, ಉಪಾಧ್ಯಕ್ಷ ಜಗದೀಶ್, ಹಿರಿಯ ವಕೀಲರಾದ ಕೆ.ಎನ್.ನಾಗರಾಜು, ಎಚ್.ರವಿ, ತಾಲೂಕು ಆರೋಗ್ಯ ಶಿಕ್ಷ ಣಾಧಿಕಾರಿ ಶಿವಮ್ಮ, ಸುಹಾಸಿನಿ ಸೇರಿದಂತೆ ನೂರಾರು ಜನರು ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</s>
ಕಾಜಲ್ ಅಗರ್ವಾಲ್ ದಕ್ಷಿಣ ಭಾರತದ ಖ್ಯಾತ ನಟಿ. ಇವರು ನಟನೆಯಿಂದ ಮಾತ್ರವಲ್ಲ ಇವರ ಸೌಂದರ್ಯವನ್ನು ಕಂಡು ಹಲವರು ಇವರ ಅಭಿಮಾನಿಗಳಾಗಿದ್ದಾರೆ. ನಟಿ ಕಾಜಲ್ ಅಗರ್ವಾಲ್ ಅವರ ಸೌಂದರ್ಯದ ರಹಸ್ಯ</s>
ಸಮೀಪದ ಮದಬಾವಿ ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರ 243 ಜಯಂತೋತ್ಸವದ ಪ್ರಯುಕ್ತ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಮತ್ತು ಹೃದ್ರೋಗ, ನರರೋಗ, ಮೂತ್ರಪಿಂಡದ ಕಲ್ಲು ಹಾಗೂ ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.</s>
ಶಕೀಬ್ ತಂದೆ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಇವರು ಕೆಲಸ ಮಾಡುತ್ತಿದ್ದ ಬ್ಯಾಂಕ್ನಲ್ಲಿ 6 ಮಂದಿಗೆ ಕೊರೋನಾ ದಋಢಪಟ್ಟಿತ್ತು. ಎಚ್ಚರಿಕೆಯಿಂದ ಇದ್ದ ಶಕೀಬ್ ತಂದೆಗೂ ಇದೀಗ ಕೊರೋನಾ ವಕ್ಕರಿಸಿದೆ. ಪೋಷಕರೊಂದಿಗೆ ಶಕೀಬ್ ಸಹೋದರ ಸೋಹಾನ್ ವಾಸವಾಗಿದ್ದಾರೆ. ಸೋಹಾನ್ಗೆ ಯಾವುದೇ ರೋಗ ಲಕ್ಷಣಗಳು ಇಲ್ಲದ ಕಾರಣ ಪರೀಕ್ಷೆ ಮಾಡಿಸಿಲ್ಲ. ಶಕೀಬ್ ಪೋಷಕರು ಢಾಕಾದಲ್ಲಿ ನೆಲೆಸಿದ್ದರೆ, ಶಕೀಬ್, ಪತ್ನಿ ಹಾಗೂ ಇಬ್ಬರು ಮಕ್ಕಳು ಅಮೆರಿಕದಲ್ಲಿ ನೆಲೆಸಿದ್ದಾರೆ.</s>
ಒಲಿಂಪಸ್ನ ಹಲವಾರು ಮೂಲಗಳ ಪ್ರಕಾರ ವಿಭಿನ್ನ ಸಂಖ್ಯೆಯ ದೇವರುಗಳು. ಸಾಮಾನ್ಯವಾಗಿ, ಪ್ರಾಚೀನ ಗ್ರೀಸ್ನ 12 ಪ್ರಮುಖ ದೇವತೆಗಳನ್ನು ಕರೆಯುವುದು ಸಾಂಪ್ರದಾಯಿಕವಾಗಿದೆ. ಅವುಗಳಲ್ಲಿ ಕೆಲವು ಕ್ರಮಾನುಗತವಾಗಿದ್ದವು, ಮತ್ತು ಪ್ರತಿ ದೇವರೂ ಅವರ ನಿರ್ದೇಶನಕ್ಕೆ ಕಾರಣರಾದರು.</s>
ನವದೆಹಲಿ: ಡೆಡ್ಲಿ ಆನ್ಲೈನ್ ಗೇಮ್ ಮೊಮೊಗೆ 12ನೇ ತರಗತಿ ವಿದ್ಯಾರ್ಥಿ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ.</s>
ಅಕ್ಕ ಸಮ್ಮೇಳನ ಮತ್ತು ನಾವಿಕ ಸಮ್ಮೇಳನಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆರ್ಥಿಕ ನೆರವು ನೀಡಲಾಗುತ್ತಿದೆ. ಈ ವರ್ಷ ಅಕ್ಕ ಸಮ್ಮೇಳನಕ್ಕೆ 60 ಲಕ್ಷ ನೀಡಲಾಗಿದೆ ಎಂದರು.</s>
ಜ್ಞಾನವಿಜ್ಞಾನ.</s>
ಲಖನೌ: 2022 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಹುಜನ ಸಮಾಜ ಪಕ್ಷದಿಂದ(ಬಿಎಸ್ಪಿ) ಟಿಕೆಟ್ ಪಡೆಯುವಲ್ಲಿ ವಿಫಲವಾಗಿರುವ ವ್ಯಾಪಾರಿಯೊಬ್ಬ ಗಾಜಿಪುರ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.</s>
ಕೊತ್ತೊಂಬರಿ ಸೊಪ್ಪು (ಚಿಕ್ಕದಾಗಿ ಹೆಚ್ಚಿದ್ದು</s>
ಒಂದು ದೇಶ ಒಂದೇ ಪವರ್ ಗ್ರಿಡ್ ಮೂಲಕ ನಾವು ಎಲ್ಲಾ ರಾಜ್ಯಗಳಿಗೆ ಅಗ್ಗದ ವಿದ್ಯುತ್ ಪೂರೈಸುತ್ತೇವೆ ಎಂದು ಹಣಕಾಸು ಸಚಿವ ಸೀತಾರಾಮನ್ ಘೋಷಿಸಿದ್ದಾರೆ.</s>
ಒಂದು ಹುರಿಯಲು ಪ್ಯಾನ್ನಲ್ಲಿ ಜ್ಯೂಸಿ ಮತ್ತು ಮೃದು ಹಂದಿ ಚಾಪ್ಸ್</s>
6 ಟ್ರೈಸೆಟ್ 2 ಬಾರ್ಬೆಲ್ ಲುಂಗೆಸ್</s>
6. ಮದ್ಯಪಾನದ ಸೇವನೆ ಮೇಲೆ ನಿಯಂತ್ರಣವಿರಲಿ.</s>
ಚಿಂತಾಮಣಿ: ಚಳಿಯಲ್ಲೂ ಬೆವರುವ ನಾಯಕರು</s>
ಒಲಿಂಪಿಕ್ ಆಟಗಳ ಸಂಕೇತವಾದ ಉಂಗುರಗಳೊಂದಿಗೆ ಇದು ಸಾಮ್ಯತೆಯನ್ನು ಹೊಂದಿರುವುದರಿಂದ, 1995ರಲ್ಲಿ ರೋಚೆಸ್ಟರ್, ಚಿಕ್ಕ ದಾವೆಗಳ ನ್ಯಾಯಾಲಯದಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಆಡಿ ಕಂಪನಿಯ ವಿರುದ್ಧ ದಾವೆ ಹೂಡಿತ್ತು. 2009ರಲ್ಲಿ ನಡೆದ ಆಡಿ ಕಂಪನಿಯ ಶತಮಾನೋತ್ಸವ ಸಮಾರಂಭದ ಅಂಗವಾಗಿ, ಅಕ್ಷರ ಮಾದರಿಯನ್ನು ಎಡಭಾಗಕ್ಕೆಜೋಡಣೆಗೊಂಡ ಆಡಿ ಮಾದರಿಗೆ ಬದಲಾಯಿಸುವ, ಮತ್ತು ಅತಿಕ್ರಮಿಸುವ ಉಂಗುರಗಳಿಗಾಗಿರುವ ಛಾಯೆಯ ವಿನ್ಯಾಸವನ್ನು ಮಾರ್ಪಡಿಸುವ ಮೂಲಕ ಕಂಪನಿಯು ಸದರಿ ಚಿಹ್ನೆಯನ್ನು ಪರಿಷ್ಕರಿಸಿತು.</s>
ಚೆನ್ನೈ: 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಗೇರಿದಲ್ಲಿ ತಾನು ನೀಡಿದ ವಾಗ್ದಾನದಂತೆ ನದಿ ಜೋಡಣೆ ಯೋಜನೆ ಕೈಗೆತ್ತಿಕೊಳ್ಳಬೇಕು ಎಂದು ನಟ ಹಾಗೂ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ರಜನೀಕಾಂತ್ ಅವರು ಹೇಳಿದ್ದಾರೆ.</s>
ಆದರೆ ಯಡಿಯೂರಪ್ಪ ಜತೆ ಮುಸುಕಿನ ಗುದ್ದಾಟ ನಡೆಸುತ್ತಿರುವ ಕೆ.ಎಸ್ ಈಶ್ವರಪ್ಪ ಕಾರ್ಯಕಾರಿಣಿಯಿಂದ ದೂರ ಉಳಿದಿದ್ದಾರೆ. ಅವರ ಗೈರಿಗೆ ಕಾರಣ ತಿಳಿದು ಬಂದಿಲ್ಲ.</s>
ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ ಅಥವಾ ಫಾಫ್ ಡು ಪ್ಲೆಸಿಸ್</s>
ಗೋವಾ ಚುನಾವಣೆ : 25 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಶಿವಸೇನೆ ನಿರ್ಧಾರ</s>
ರಾಯಚೂರು: ಜಿಲ್ಲೆಯಲ್ಲಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದ ಸಂಕ್ರಾಂತಿ ಹಬ್ಬ ಈ ಬಾರಿ ಕೋವಿಡ್19 ಕಾರಣಕ್ಕೆ ತುಸು ಮಂಕಾಗಿತ್ತು. ಕೃಷ್ಣಾ, ತುಂಗಭದ್ರಾ ನದಿಗೆ ಪುಣ್ಯಸ್ನಾನಕ್ಕೆ ಬರುತ್ತಿದ್ದ ಜನರ ಸಂಖ್ಯೆಯಲ್ಲೂ ಇಳಿಕೆ ಕಂಡು ಬಂತು. ಹಳ್ಳಿ ಮಾತ್ರವಲ್ಲದೇ ನಗರದಲ್ಲೂ ಹಬ್ಬದ ವಾತಾವರಣ ಮನೆ ಮಾಡಿತ್ತು. ಜಿಲ್ಲೆಯ ಜನ ಹಬ್ಬದ ನಿಮಿತ್ತ ಬೆಳಗ್ಗೆ ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಲಾಗಿತ್ತು.</s>
ಅಧ್ಯಯನ ದಿನದಲ್ಲಿ ಧೂಮಪಾನ ಮಾಡಲು ನಿರಾಕರಿಸು.</s>
ಒಂದೊಮ್ಮೆ ಸರ್ಕಾರ ಮತ್ತು ಸ್ಪೀಕರ್ ಸದನದಲ್ಲಿ ನೀಡಿದ ವಾಗ್ದಾನಕ್ಕೆ ತಕ್ಕಂತೆ ನಡೆದುಕೊಳ್ಳದಿದ್ದರೆ ಆಗ ಕಲಾಪ ನಿಯಮ ಮೀರುತ್ತಿದೆ. ವಿಶ್ವಾಸಮತ ಯಾಚನೆ ಪ್ರಕ್ರಿಯೆ ಮುಗಿಸಲು ಸರ್ಕಾರ ಅನಗತ್ಯವಾಗಿ ಕಾಲಹರಣ ಮಾಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಮೇಲಾಗಿ ಸರ್ಕಾರ ಉಳಿಸಿಕೊಳ್ಳಲು ಶಾಸಕರ ಕುದುರೆ ವ್ಯಾಪಾರದಲ್ಲಿ ಆಡಳಿತ ಪಕ್ಷವೂ ತೊಡಗಿಕೊಂಡಿದೆ ಎಂಬ ಆರೋಪಗಳಿಗೆ ಪುಷ್ಟಿ ಸಿಕ್ಕಂತಾಗುತ್ತದೆ.</s>
ಅದೇ ಕೋಪದಲ್ಲೇ ಗುರುವಾರ ಬೆಳಿಗ್ಗೆ ಲೊಂಜಾ ಮನೆಗೆ ನುಗ್ಗಿದ್ದ ಜೇಮ್ಸ್ ಹಾಗೂ ಆತನ ಸ್ನೇಹಿತರು, ಹಲ್ಲೆ ಮಾಡಿದ್ದರು. ನೀರು ಕಾಯಿಸುವ ಹೀಟರ್ನ ವೈರ್ ಅನ್ನು ಕುತ್ತಿಗೆಗೆ ಬಿಗಿದು, ಹೀಟರ್ನಿಂದ ಮೈ ಸುಟ್ಟಿದ್ದರು. ಬಿಯರ್ ಬಾಟಲ್ನಿಂದ ತಲೆಗೆ ಹೊಡೆದಿದ್ದರು.</s>
ಈ ಅಲರ್ಜಿ ಕೇವಲ ಆಹಾರ ಮತ್ತು ಔಷಧಿಗಳಿಗೆ ಸೀಮಿತವಾಗಿಲ್ಲವೆಂದು ಆಹಾರ ವರ್ಣ ಅಲರ್ಜಿ ಇರುವವರಿಗೆ ತಿಳಿದಿರುವುದು ಮುಖ್ಯ. ಸೋಪ್ಗಳು ಮತ್ತು ಲೋಷನ್ಗಳಂತಹ ಅನೇಕ ವೈಯಕ್ತಿಕ ಆರೈಕೆ ಉತ್ಪನ್ನಗಳು, ಹಾಗೆಯೇ ಐಷಾಡೊ, ಬ್ಲಷ್ ಮತ್ತು ಉಗುರು ಬಣ್ಣಗಳಂತಹ ಸೌಂದರ್ಯವರ್ಧಕಗಳೂ ಸಹ ಇದೇ ರೀತಿಯ ವರ್ಣವನ್ನು ಕೂಡ ಹೊಂದಿರುತ್ತವೆ. ಸ್ವಚ್ಛಗೊಳಿಸುವ ಸರಬರಾಜುಗಳು, ಕ್ರಯೋನ್ಗಳು ಮತ್ತು ಶಾಂಪೂಗಳಂತಹ ಮನೆಯ ಉತ್ಪನ್ನಗಳಿಗೆ ಕೂಡ ಇದೇ ನಿಜ. ಲೇಬಲ್ಗಳನ್ನು ಹೇಗೆ ಓದಬೇಕು ಮತ್ತು ಉತ್ಪನ್ನಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಹೇಗೆ ಎಂಬುವುದರಲ್ಲಿ ಪರಿಚಿತವಾಗಿರುವ ಆಹಾರ ಪದ ಅಲರ್ಜಿ ಇರುವವರಿಗೆ ಬಹಳ ಮುಖ್ಯ.</s>
ಆಕೆಯ ಆರೋಗ್ಯದ ಬಗ್ಗೆ ಮಹಿಳಾ ಗಮನ ಹರಿಸುವುದು ಅವಳನ್ನು ಸಂಭಾವ್ಯ ತೊಡಕುಗಳಿಂದ ರಕ್ಷಿಸುತ್ತದೆ.</s>
ಸುರಪುರ: ಜಗತ್ತಿನ ಅನೇಕ ರಾಷ್ಟ್ರಗಳ ಲಿಖಿತ ಮತ್ತು ಅಲಿಖಿತ ಸಂವಿಧಾನವನ್ನು ಅಭ್ಯಾಸ ಮಾಡಿ ಸುಮಾರು ಎರಡು ವರ್ಷಗಳ ಸತತ ಪರಿಶ್ರಮದಿಂದ ಭಾರತಕ್ಕೆ ಜಗತ್ತು ಮೆಚ್ಚಿದ ಸಂವಿಧಾನ ಬರೆದು ಕೊಟ್ಟ ಡಾ: ಬಾಬಾ ಸಾಹೇಬ್ ಅಂಬೇಡ್ಕರ ಅವರ ದಾದರ್ನ ರಾಜಗೃದ ಮೇಲೆ ದಾಳಿ ಮಾಡಿರುವುದು ಅಕ್ಷ್ಯಮ್ಯ ಕೃತ್ಯವಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಗೋಪಾಲ ತಳವಾರ ಮಾತನಾಡಿದರು.</s>
ಶ್ರೀನಗರ: ಜಮ್ಮುಕಾಶ್ಮೀರದಲ್ಲಿ ಗುರುವಾರ ಹತ್ಯೆಯಾದ ಜೈಷೆ ಮೊಹಮದ್ ಸಂಘಟನೆಯ ಉಗ್ರರು ಸಾಂಬಾ ಸೆಕ್ಟರ್ನಲ್ಲಿ ಅಕ್ರಮವಾಗಿ ಭಾರತದ ಗಡಿಯೊಳಕ್ಕೆ ಪ್ರವೇಶಿಸಲು ಪಾಕಿಸ್ತಾನ ಸೇನೆಯ ರೇಂಜರ್ಸ್ಗಳು ಎಲ್ಲ ರೀತಿಯ ನೆರವು ನೀಡಿದ್ದನ್ನು ಸೇನಾಧಿಕಾರಿಗಳು ಪತ್ತೆ ಮಾಡಿದ್ದಾರೆ.</s>
ಯುಗಾದಿಯಿಂದ ಯುಗಾದಿಯವರೆಗೆ</s>
ಟಿ20 ವಿಶ್ವಕಪ್: ಟೀಮ್ ಇಂಡಿಯಾದ 6ನೇ ಬೌಲರ್ನ ಸಮಸ್ಯೆಗೆ ಸಿಕ್ಕಿತು ಉತ್ತರ!</s>
ಸಾರ್ವಜನಿಕ ಅಧಿಕಾರಿಗಳು ಯ ನಿಯಮಗಳ ಕೃತ್ಯಗಳು: ಅದು ತೆರಿಗೆ ಕಾನೂನಿನಲ್ಲಿ ವಿಧಾನವನ್ನು ಮತ್ತೊಂದು ಅಂಶವು ಪರೀಕ್ಷಿಸಲು ಉಪಯುಕ್ತ. ತೆರಿಗೆ ಕಾನೂನು ವಿಧಾನವನ್ನು ಸಾಮಾನ್ಯವಾಗಿ ಕೆಲವು ಸಂದರ್ಭಗಳಲ್ಲಿ ಫೆಡರಲ್ ಅಥವಾ ಪ್ರಾದೇಶಿಕ ಕಾನೂನುಗಳನ್ನು ಸಲ್ಲಿಸಿದ ಕೇವಲ ನಿಯಂತ್ರಕ ಮೂಲಗಳಿಂದ ಕಾನೂನು ನಿಯಂತ್ರಣದ ವಿಧಾನವಾಗಿ ಹೊಂದಿದೆ ದ್ವಿತೀಯ ಮೂಲಗಳಿಂದ.</s>
ವಿಮಾ ಸೌಲಭ್ಯ: ಕರ್ತವ್ಯದ ವೇಳೆ ಅಚಾ ತುರ್ಯವಾದರೆ ಮೃಗಾಲಯ ಸಿಬ್ಬಂದಿಗೆ ಹಣಕಾಸಿನ ನೆರವು ನೀಡಲು ಅವಕಾಶ ವಾಗುವಂತೆ ಸಿಬ್ಬಂದಿಗಳ ಹೆಸರಿನಲ್ಲೇ ಡಿಸಿಆರ್ಜಿ(ಡೆತ್ ಕಮ್ ರಿಟೇರ್ಡ್ಮೆಂಟ್ ಗ್ರಾಜುಯಿಟಿ) ಪಾಲಿಸಿ ಮಾಡಿಸಲಾಗಿದೆ. ಇದ ರಿಂದಲೇ ಹರೀಶ್ ಕುಟುಂಬಕ್ಕೆ 4ರಿಂದ 6ಲಕ್ಷ ರೂ.ವರೆಗೂ ಪರಿಹಾರ ಧನ ಬರಲಿದೆ ಹಾಗೂ ವಿಮೆಯಿಂದ 1 ಲಕ್ಷ ರೂ. ಬರಲಿದೆ.</s>
ಈ ಅಧ್ಬುತವಾದ ಪುಸ್ತಕವನ್ನು ಓದಿದ ಬಳಿಕ ಜಿನಿವಾದ ಸಮಾಜಕಲ್ಯಾಣ ಸಂಸ್ಥೆಯೊಂದು, ಹೆನ್ರಿ ಡ್ಯೂನಾಂಟ್ನ ಸಂಕಲ್ಪಗಳನ್ನು ಸಾಕಾರಗೊಳಿಸಲು ಸಹಾಯ ಮಾಡಲು ಮುಂದೆ ಬಂದಿತು. 5 ಮಂದಿಯ ಒಂದು ಸಮಿತಿಯನ್ನು ಮಾಡಿ , ಹೆನ್ರಿ ಡ್ಯೂನಾಂಟ್ರವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು. ಈ ಸಮಿತಿಯು ಒಬ್ಬ ಸೇನೆಯ ನಿವೃತ್ತ ಕಮಾಂಡರ್, ಒಬ್ಬ ವೈದ್ಯ, ಒಬ್ಬ ಸಮಾಜ ಸೇವಕ, ಒಬ್ಬ ವ್ಯಾಪಾರಿ, ಹಾಗೂ ಮತ್ತೊಬ್ಬ ನಿವೃತ್ತ ಅಧ್ಯಾಪಕರನ್ನು ಒಳಗೊಂಡಿತ್ತು. ಇವರ ಶ್ರಮದ ಫಲವಾಗಿ 1863, ಅಕ್ಟೋಬರ್ 26 ರಂದು ಜಿನೇವಾದಲ್ಲಿ ಅಂತರಾಷ್ಟೀಯ ಸಮ್ಮೇಳನ ನಡೆದು, 16 ರಾಷ್ಟ್ರಗಳ ವಿವಿಧ ಆಮಂತ್ರಿಕರು ಇದರಲ್ಲಿ ಪಾಲ್ಗೊಂಡಿದ್ದರು. ಗಾಯಗೊಂಡ ಸೈನಿಕರ ಸಹಕಾರ ಸಂಸ್ಥೆ ಎಂಬ ಹೆಸರಿನ ಅಂತರಾಷ್ಟ್ರೀಯ ಸಂಸ್ಥೆಯನ್ನು ಸ್ಥಾಪಿಸಲು ಈ ಸಮ್ಮೇಳನದಲ್ಲಿ ತೀರ್ಮಾನಿಸಲಾಯಿತು. ಮುಂದೆ ಇದೇ ಸಂಸ್ಥೆ ರೆಡ್ ಕ್ರಾಸ್ ಸಂಸ್ಥೆ ಎಂಬ ಹೆಸರಿನಿಂದ ಕರೆಯಲ್ಪಟ್ಟಿತು. ಹೀಗೆ ಒಬ್ಬ ವ್ಯಾಪಾರಿಯಾಗಿದ್ದ ಹೆನ್ರಿ ಡ್ಯೂನಾಂಟ್ ನ ಹೃದಯ ಅಂತಃಕರಣದ ಮತ್ತು ಪರಿಶ್ರಮದ ಫಲವಾಗಿ ಅಂತರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯ ಉಗಮವಾಯಿತು.</s>
ನೀವು ಕೇವಲ ಕುರುಡಾಗಿ ಪ್ರೀತಿಸಬಾರದು, ಆದರೆ ನಿಮ್ಮ ಮಗುವನ್ನು ವ್ಯಕ್ತಿಯಂತೆ ಗೌರವಿಸಬೇಕು. ಇದು ಕೆಲವು ತಾಯಂದಿರಿಗೆ ತುಂಬಾ ಕಷ್ಟ, ಆದರೆ ಕಡ್ಡಾಯವಾಗಿದೆ. ಅವರು ಹೇಗೆ ಚಿಕಿತ್ಸೆ ನೀಡುತ್ತಾರೆಂಬುದನ್ನು ಮಕ್ಕಳು ಚೆನ್ನಾಗಿ ಭಾವಿಸುತ್ತಾರೆ, ಮತ್ತು ಅವಧಿಗೆ ಹೆಚ್ಚಿನ ಕಾಳಜಿಯು ಅವುಗಳನ್ನು ತೂಕವನ್ನು ಪ್ರಾರಂಭಿಸುತ್ತದೆ. ಬದಲಾಗಿ, ನಿಮ್ಮ ಮಗುವಿಗೆ ನಿರ್ದಿಷ್ಟ ಪ್ರಮಾಣದ ಸ್ವಾತಂತ್ರ್ಯವನ್ನು ನೀಡಿ, ಇದರಿಂದ ಅವರು ವಯಸ್ಕರಾಗಲು ಕಲಿಯುತ್ತಾರೆ.</s>
ಕಳೆದ ಎರಡು ವಾರದ ಹಿಂದೆ ಬಿಡುಗಡೆಯಾಗಬೇಕಿದ್ದ ಜಾನ್ ಜಾನಿ ಜಾನಾರ್ಧನ್ ಚಿತ್ರ, ಕಾರಣಾಂತರಗಳಿಂದ ಮುಂದಕ್ಕೆ ಹೋಗಿತ್ತು. ಈಗ ಎರಡು ವಾರದ ನಂತರ ಮತ್ತೆ ಥಿಯೇಟರ್ ಗೆ ಬರುವ ಸಿದ್ದತೆ ಮಾಡಿಕೊಂಡಿದೆ. ಮತ್ತೊಂದೆಡೆ ಜಾನ್ ಜಾನಿ ಜಾನಾರ್ಧನ್ ಸಿನಿಮಾಗೆ ಕಾಂಪಿಟೇಷನ್ ಕೊಡೊದಕ್ಕೆ, ಇನ್ನೊಂದು ದೊಡ್ಡ ಸಿನಿಮಾ ರೆಡಿಯಾಗಿ ನಿಂತಿದೆ.[ಜಾನ್ ಜಾನಿ ಜನಾರ್ಧನ್ ರಿಲೀಸ್ ಡೇಟ್ ಪಕ್ಕಾ ಆಯ್ತು]</s>
ಪದಾರ್ಥಗಳ ಪಟ್ಟಿ ಸರಳವಾದಂತೆ ಈ ಕುಕೀ ಮಾಡುವ ಯೋಜನೆ ಸರಳವಾಗಿದೆ. ನೀವು ಉಪ್ಪು ಹಾಕಿದ ಬಿಸ್ಕಟ್ ತಯಾರಿಸಲು ಯೋಜಿಸುತ್ತಿದ್ದರೆ, ನಂತರ ಸಕ್ಕರೆ, ಸೇರಿಸಬೇಡಿ, ಮತ್ತು ಅದನ್ನು ಒಟ್ಟಿಗೆ ಉತ್ತಮ ಉಪ್ಪು ಉಪ್ಪು ಹಾಕಿ ನಾವು ಹಿಟ್ಟನ್ನು ಬೇಯಿಸಿ ಸಕ್ಕರೆಯೊಂದಿಗೆ ಸಂಯೋಜಿಸುತ್ತೇವೆ. ನಾವು ಉಪ್ಪು ಮತ್ತು ತೈಲವನ್ನು ಜೋಡಿಸಿ, ಮಿಶ್ರಣವನ್ನು ಹಿಟ್ಟು ಮತ್ತು ಸಕ್ಕರೆಗೆ ಸುರಿಯಬೇಕು, ವಿನೆಗರ್ ಅನ್ನು ಸೋಡಾಕ್ಕೆ ಸೇರಿಸಿ ಮತ್ತು ದಪ್ಪ ಹಿಟ್ಟನ್ನು ಬೆರೆಸಿ. ಈ ಹಂತದಲ್ಲಿ ನೀವು ಬೀಜಗಳು, ಚಾಕೊಲೇಟ್ ಅಥವಾ ಒಣಗಿದ ಹಣ್ಣುಗಳನ್ನು ಸೇರಿಸಬಹುದು. ಒಂದು ಧೂಳಿನ ಊಟದಲ್ಲಿ, ಒಂದೆರಡು ನಿಮಿಷಗಳ ಕಾಲ ಹಿಟ್ಟನ್ನು ಬೆರೆಸು, ರೋಲ್ ಮಾಡಿ ಮತ್ತು ಪ್ರತ್ಯೇಕ ಕುಕೀಗಳಾಗಿ ಕತ್ತರಿಸಿ.</s>
[ಬ್ರಾಕೆಟ್ಗಳ ಒಳಗೆ ಪಠ್ಯ]</s>
ಅವರು ನಗರದ ಎಪಿಎಂಸಿಯ ವಿವೇಕಾನಂದ ಸಭಾಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಡಾ.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿ, ಸಸಿಯೊಂದಕ್ಕೆ ನೀರು ಹಾಕಿ ಉದ್ಘಾಟಿಸಿ ಮಾತನಾಡಿದರು.</s>
ತೆರೆಯ ಮೇಲೆ ಬರಲಿರುವ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಚಿತ್ರ ಮೇ 1 ರಂದು ಮುಹೂರ್ತ ಈ ಚಿತ್ರದ ಬಜೆಟ್ ಎಷ್ಟು ಗೊತ್ತೆ? ಮುಹೂರ್ತದ ವೇಳೆ ರೈ ನಿವಾಸದ ಮುಂದೆ ಎಷ್ಟು ಜನ ಸೇರಲಿದ್ದಾರೆ ಗೊತ್ತಾ.?</s>
ಕೆಲವು ವಿಷಯವನ್ನು ತಯಾರಿಸಿ. ನೀವು ಮೊದಲಿಗೆ ನಿಮ್ಮ ಪ್ರೇಕ್ಷಕರಿಂದ ಸಾಕಷ್ಟು ಆಸಕ್ತಿ ಮೂಡಿಸಲು ಸಾಧ್ಯವಾಗುತ್ತದೆ, ಆದರೆ ನೀವು ನಿಯಮಿತವಾಗಿ ಹೊಸ ವಿಷಯವನ್ನು ಸೇರಿಸದಿದ್ದರೆ ಜನರು ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ ಮತ್ತು ಸೈನ್ ಇನ್ ಮಾಡುವುದನ್ನು ನಿಲ್ಲಿಸುತ್ತಾರೆ. ಆದ್ದರಿಂದ, ನಿಮ್ಮ ವೀಡಿಯೊ ಬ್ಲಾಗ್ನೊಂದಿಗೆ ನೀವು ಲೈವ್ ಆಗುವ ಮೊದಲು, ಖಚಿತಪಡಿಸಿಕೊಳ್ಳಿ ಸ್ವಲ್ಪ ಸಮಯದವರೆಗೆ ಮುಂದುವರಿಸುವುದಕ್ಕೆ ಸಾಕಷ್ಟು ವಿಷಯವಿದೆ.</s>
2 ವರ್ಷದೊಳಗೆ ಯೋಜನೆ ಪೂರ್ಣ: ವಾರದೊಳಗೆ ಟೆಂಡರ್ ಆಹ್ವಾನಿಸಿ, ಮೂರು ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ಮುಗಿಸಲಾಗುವುದು. 24 ತಿಂಗಳೊಳಗಾಗಿ ಯೋಜನೆ ಪೂರ್ಣಗೊಳಿಸಿ, ಯೋಜನೆಯ ರೂಪು ರೇಷೆಯಂತೆ ಮನೆಗಳಿಗೆ ನಲ್ಲಿ ಮೂಲಕ ನೀರಿನ ಸಂಪರ್ಕ ಕಲ್ಪಿಸಲಾಗುವುದು. ಒಟ್ಟು 791 ಹಳ್ಳಿಗಳಿಗೆ ಅನುಕೂಲವಾಗುವಂತೆ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸಲಾಗಿದೆ. ಕೆ.ಆರ್.ಪೇಟೆ ತಾಲೂಕಿನ 310ಕ್ಕೂ ಹೆಚ್ಚು ಹಳ್ಳಿಗಳು, ನಾಗಮಂಗಲ ತಾಲೂಕಿನ 391 ಹಳ್ಳಿಗಳು, ಬಿ.ಜಿ.ನಗರ ಹಾಗೂ ಬೆಳ್ಳೂರು ಪಟ್ಟಣ ಪಂಚಾಯತಿ ವ್ಯಾಪ್ತಿ ಹಾಗೂ ಪಾಂಡವಪುರ ತಾಲೂಕಿನ 96 ಹಳ್ಳಿಗಳ ಪ್ರತಿ ಮನೆ ಮನೆಗೆ ನಲ್ಲಿ ಮೂಲಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುವುದು.</s>
ತೆಂಗಿನಕಾಯಿಯನ್ನು ತೋಟದ ಮಾಲೀಕರೇ ಕೀಳಿಸಿ, ಅದನ್ನು ಸುಲಿದು ನಂತರ ಮಾರಾಟ ಮಾಡಬೇಕು. ಈ ಪ್ರಕ್ರಿಯೆ ಹೆಚ್ಚು ಹಣವನ್ನು ವ್ಯಯಿಸುತ್ತದೆ. ಹೀಗಾಗಿ ತೆಂಗಿನಕಾಯಿ ಆಗುವವರೆಗೆ ಬಿಡುವವರ ಸಂಖ್ಯೆಯೂ ಕ್ಷೀಣಿಸಿದೆ. ಇದೆಲ್ಲದರ ಪರಿಣಾಮವೇ ತೆಂಗಿನಕಾಯಿ ಬೆಲೆ ಏರಿಕೆಯಾಗಲು ಕಾರಣ ಎನ್ನಲಾಗುತ್ತಿದೆ.</s>
ಮುತ್ತುಗಳ ಬೈತಿಟ್ಟುಕೊಂಡ ತುಟಿ ಮತ್ತೆ, ನಾನೇ ಕೈಯಾರೆ ತೊಡಿಸಿದ ಮೂಗುತಿ</s>
ಸಫರನ್ಸ್ ನಲ್ಲಿ ವಸತಿ</s>
2. ಶಿರಾದಲ್ಲಿ ತಾತಮೊಮ್ಮಗನ ಮತಬೇಟೆ</s>
ಚಿತ್ರಕಲೆ ಮತ್ತು ಲ್ಯಾಂಡ್ಸ್ಕೇಪ್ ವರ್ಣಚಿತ್ರಗಳ ಕ್ಷೇತ್ರಗಳಲ್ಲಿ ಸಾಕಷ್ಟು ಅನುಭವ ಹೊಂದಿರುವ ವಿದ್ವಾಂಸರು ಕಲಾಕೃತಿಗಳ ಗುಣಮಟ್ಟ, ತಂತ್ರಜ್ಞಾನ, ಶೈಲಿಯನ್ನು ಆಧರಿಸಿ ವಿಜೇತರನ್ನು ಆಯ್ಕೆ ಮಾಡಲಿದ್ದಾರೆ. ಲ್ಯಾಂಡ್ಸ್ಕೇಪ್ ಕಲಾವಿದ ಎನ್. ಕಾಂತರಾಜ್, ವಿಷುಯಲ್ ಆರ್ಟ್ಸ್ ಮಾಸ್ಟರ್ ಹರೀಶ್ ಮಲ್ಲಪ್ಪನವರ್, ಅನೇಕ ಅಂತರರಾಷ್ಟ್ರೀಯ ಚಿತ್ರಕಲಾ ಪ್ರದರ್ಶನ ನೀಡಿರುವ ನಿರುಪಮ್ ಕೊನ್ವಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.</s>
ಬ್ರಿಟನ್ ರಾಜಕುಮಾರ ಜಾರ್ಜ್ ಹತ್ಯೆಗೆ ಐಎಸ್ ಸಂಚು</s>
ಮಳವಳ್ಳಿ : ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಪುರಸಭೆ ಕಚೇರಿಯಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ತಹಸೀಲ್ದಾರ್ ಕಚೇರಿಗೆ ಬಳಿ ಧರಣಿ ನಡೆಸಿದರು. ಬಳಿಕ ಶಿರಸ್ತೇದಾರ್ ಮಹದೇವು ಅವರಿಗೆ ಮನವಿ ಸಲ್ಲಿಸಿದರು. ಸಂಘದ ಮುಖಂಡರಾದ ಶಿವಮಲ್ಲಯ್ಯ, ಪುಟ್ಟಮಾದೇಗೌಡ, ಶುಭವತಿ, ಪ್ರೇಮಮ್ಮ ನೇತೃತ್ವ ವಹಿಸಿದ್ದರು. ಮದ್ದೂರು: ಕರ್ನಾಟಕ ಪ್ರಾಂತ ಕರಷಿ ಕೂಲಿ ಕಾರ್ಮಿಕರ ಸಂಘದ ತಾಲೂಕು ಸಮಿತಿಯ ಪದಾಧಿಕಾರಿಗಳು ಮದ್ದೂರು ಪಟ್ಟಣದಲ್ಲೂ ಪ್ರತಿಭಟನಾ ಮೆರವಣಿಗೆ ನಡೆಸಿದರು.</s>
ಸಾಮಾಜಿಕ ಕಾರ್ಯಕರ್ತ ಎಸ್.ಎಲ್.ರಾಜ್ಕುಮಾರ್, ಬಿಜೆಪಿ ಘಟಕದ ಉಪಾಧ್ಯಕ್ಷ ಲಕ್ಷ್ಮೀರಾಜು ಮಾತನಾಡಿ ದರು. ಪ್ರತಿಭಟನಾ ಸಭೆಯಲ್ಲಿ ಕೆ.ಜೆ.ಜಾನ್, ಶಕ್ತಿ ಕೇಂದ್ರದ ಅಧ್ಯಕ್ಷ ಜಗದೀಶ್ ಹಾಗೂ ಇತರ ಸಂಘಗಳ ಸದಸ್ಯರು, ಕಾರ್ಯಕರ್ತರು ಹಾಜರಿದ್ದರು. ವಿವಿಧ ಭಿತ್ತಿ ಪತ್ರ ಹಿಡಿದು ಪ್ರತಿಭಟನಾಕಾರರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿದರು.</s>
ಪ್ರಿನ್ಸ್ ವಿಲಿಯಂ ಮತ್ತು ಕೇಟ್ ಸೇವೆಗಾಗಿ ಮೂರು ಸ್ತುತಿಗೀತೆಗಳನ್ನು ಆಯ್ಕೆ ಮಾಡಿದರು: ಗೈಡ್ ಮಿ, ಓ ನೀನು ಗ್ರೇಟ್ ರಿಡೀಮರ್, ವಿಲಿಯಂ ವಿಲಿಯಮ್ಸ್ ಬರೆದ ಪದಗಳು, ಪೀಟರ್ ವಿಲಿಯಮ್ಸ್ ಮತ್ತು ಇತರರಿಂದ ಭಾಷಾಂತರಿಸಲಾಗಿದೆ, ಮತ್ತು ಜಾನ್ ಹ್ಯೂಸ್ ಸಂಗೀತ.</s>
ನವದೆಹಲಿ: ಕೋಮುವಾದ, ಲವ್ ಜಿಹಾದ್ ಭೀತಿ ಮತ್ತು ದ್ವೇಷದ ರಾಜಕಾರಣ ಮಾತ್ರ ಬಿಜೆಪಿಯಲ್ಲಿರುವುದು. ಇದು ಯಾವುದೂ ಕೇರಳದಲ್ಲಿ ನಡೆಯುವುದಿಲ್ಲ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಶಶಿ ತರೂರ್ ಹೇಳಿದ್ದಾರೆ. ಭಾನುವಾರ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ತರೂರ್, ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ 88 ವರ್ಷದ ಇ. ಶ್ರೀಧರನ್ ಅವರಿಗೆ ಕೇರಳದ ರಾಜಕೀಯ ಭವಿಷ್ಯ ಬಗ್ಗೆ ಉತ್ತರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಕೇರಳದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದ ತರೂರ್, ನಮ್ಮ ಪಕ್ಷದಲ್ಲಿ ಸಮರ್ಥ ಹಾಗೂ ಅನುಭವಿ ನಾಯಕರಿದ್ದಾರೆ. ಯಾರು ಬೇಕಾದರೂ ಮುಖ್ಯಮಂತ್ರಿ ಸ್ಥಾನವಹಿಸಬಹುದು ಎಂದು ಹೇಳಿದ್ದಾರೆ.</s>
ನಟಿ ಶರೋನ್ ವುಡಿ ಅಲೆನ್ನ ಚಲನಚಿತ್ರ ಮೆಮೊರೀಸ್ ಆಫ್ ಸ್ಟಾರ್ಡಸ್ಟ್ ಚಿತ್ರದಲ್ಲಿ ತನ್ನ ಚೊಚ್ಚಲ ಪ್ರವೇಶವನ್ನು ಮಾಡಿದಳು, ಆದರೆ ಅವರ ಜನಪ್ರಿಯತೆ ನಂತರ ಬಂದಿತು ಬೇಸಿಕ್ ಇನ್ಸ್ಟಿಂಕ್ಟ್ ಚಿತ್ರದ ಬಿಡುಗಡೆಯ ನಂತರ.</s>
ಭಾರತದಂತೆಯೇ ರಾಮಾಯಣವನ್ನು ತನ್ನ ರಾಷ್ಟ್ರೀಯ ಮಹಾಕಾವ್ಯವೆಂದು ಪರಿಗಣಿಸುವ ಮಾರೀಶಸ್ ಜನತೆ ತಮ್ಮ ದೇಶಕ್ಕೆ ಮಾರೀಚದ್ವೀಪವೆಂದು ಹೇಳಿಕೊಳ್ಳುವುದುಂಟು.</s>
ಸರ್ಕಾರದ ಈ ಕ್ರಮಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ದೇಶದ ಬಹುಪಾಲು ಮಂದಿ ಈ ನಿರ್ಧಾರವನ್ನು ಸ್ವಾಗತಿಸುತ್ತಿದ್ದಾರೆ. ಆದರೆ, ಸರ್ಕಾರದ ಈ ಕ್ರಮವನ್ನು ಟೀಕಿಸುವವರ ಪ್ರಮಾಣ ಕೂಡ ಬಲವಾಗಿದೆ. ಹಾಗಾದರೆ, ಕೇಂದ್ರ ಸರ್ಕಾರ ಪ್ರಕಟಿಸಿರುವ ಹೊಸ ಆದೇಶದಲ್ಲಿ ಏನಿದೆ?, ಈ ನಿರ್ಧಾರವನ್ನು ಹಲವರು ಟೀಕಿಸುತ್ತಿರುವುದು ಏಕೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.</s>
ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸುವುದಕ್ಕಾಗಿ ಅನುದಾನಿತ ಮತ್ತು ಸರಕಾರಿ ಪ್ರೌಢ ಶಾಲೆಗಳ ಅವಧಿಯನ್ನು ಹೆಚ್ಚಿಸಿ ಶಿಕ್ಷಣ ಇಲಾಖೆ ನಿರ್ದೇಶನ ನೀಡಿದ್ದು, ಸೋಮವಾರದಿಂದ ಕಾರ್ಯಾರಂಭಿಸಿವೆ.</s>
ನಿತ್ಯವೂ ಸರಳವಾದ ಹಾಗೂ ಪರಿಣಾಮಕಾರಿಯಾದ ರಕ್ಷಣಾ ಮಂತ್ರವನ್ನು ಪಠಿಸಬೇಕು. ಮಂತ್ರವನ್ನು ಪಠಿಸಿದ ಬಳಿಕ ಸ್ವಲ್ಪ ಸಮಯಗಳ ಕಾಲ ಮೌನವಾಗಿ ಕುಳಿತುಕೊಳ್ಳಬೇಕು. ಎರಡು ಅಂಗೈಗಳನ್ನು ಜೋಡಿಸಿ, ಬೊಗಸೆ ಹಿಡಿದಿರುವಂತೆ ಇಟ್ಟುಕೊಳ್ಳಬೇಕು. ನಂತರ</s>
ಸಾರ್ವಜನಿಕರಿಗೆ ಹಾಗೂ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿರುವ ತೊಟ್ಟಿಯನ್ನು ತೆಗೆದು ಶಾಲಾ ಆವರಣ ಗೋಡೆಯ ಒಳ ಭಾಗದಲ್ಲಿ ಅಳವಡಿಸುವಂತೆ ಆಡಳಿತ ಮಂಡಳಿಗೆ ಮನವಿ ಮಾಡಲಾಗಿದೆ. ಆದರೆ, ಆಡಳಿತ ಮಂಡಳಿ ನಮ್ಮ ಮನವಿಗೆ ಸೊಪ್ಪು ಹಾಕಿಲ್ಲ. ಇದರಿಂದಾಗಿ ಆ ಬಳಿಕ ಸಜಿಪನಡು ಗ್ರಾಮ ಪಂಚಾಯತ್ಗೆ ದೂರು ನೀಡಿದ್ದೇವೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಯಲ್ಲಿ ಸಮಸ್ಯೆಯ ಕುರಿತು ತಿಳಿ ಹೇಳಿದ್ದೇವೆ. ಅವರು ನ್ಯಾಯ ಒದಗಿಸುವ ಭರವಸೆ ಕೂಡಾ ನೀಡಿದ್ದರು. ಆದರೆ, ಅದ್ಯಾವುದೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ತೋಡಿಕೊಂಡಿದ್ದಾರೆ.</s>
ಹಂದಿ 0.5 ಕೆಜಿ.</s>
ಹೆಲ್ಮೆಟ್ ವಿರುದ್ಧ ಮೇಲ್ಮನವಿ: ದ್ವಿಚಕ್ರ ವಾಹನಗಳ ಹಿಂಬದಿ ಸವಾರರೂ ಹೆಲ್ಮೆಟ್ ಧರಿಸಬೇಕು ಎಂಬುದು ಸುಪ್ರೀಂ ಕೋರ್ಟ್ನ ಒಳ್ಳೆಯ ಆದೇಶವಲ್ಲ. ಇದರಿಂದ ಒಂದು ಮನೆಯಲ್ಲಿ 23 ಮಕ್ಕಳು ಸಹಿತ ಅನೇಕ ಜನ ಇರುವಾಗ 34 ಹೆಲ್ಮೆಟ್ ಖರೀದಿಸಬೇಕಾಗುತ್ತದೆ. ಬಡವರಿಗೆ ಅನ್ಯಾಯ, ಹೆಣ್ಮಕ್ಕಳ ಮೇಲೆ ದಬ್ಬಾಳಿಕೆ ಮಾಡಿದಂತಾಗುತ್ತದೆ. ಆದೇಶ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ರಾಜ್ಯ ಸರಕಾರ ಸಮಗ್ರ ಮೇಲ್ಮನವಿ ಸಲ್ಲಿಸಲಿ ಎಂದರು.</s>
ಇಲ್ಲಿ ಟೇಲ್ ನ ಮುಖ್ಯ ಪಾತ್ರವು ಕಾಣಿಸಿಕೊಳ್ಳುತ್ತದೆ ಚೆನ್ನಾಗಿ ಮಾಡಲಾಗುತ್ತದೆ. ಪಾಲಕರು ತಮ್ಮ ಮನಸ್ಸನ್ನು ಪ್ರಾರಂಭದಿಂದಲೂ ಅವರಿಗೆ ಕಲಿಸುತ್ತಾರೆ. ತಮ್ಮ ಮಗನನ್ನು ಔತಣಕೂಟಗಳಿಗೆ ಹೋಗಬಾರದು, ಹೆಚ್ಚು ಕುಡಿಯಬೇಡಿ, ಮೂರ್ಖರನ್ನು ಎಚ್ಚರಿಸು, ಪ್ರಲೋಭನಕಾರರನ್ನು ತಪ್ಪಿಸಿ, ಇತರ ಜನರ ವಿಷಯಗಳನ್ನು ತೆಗೆದುಹಾಕಿ, ಮೋಸ ಮಾಡಬೇಡಿ, ಸ್ನೇಹಿತರನ್ನು ಆರಿಸಿ, ಅವರ ವಿಶ್ವಾಸಾರ್ಹತೆ ಮತ್ತು ಭಕ್ತಿಗಳನ್ನು ನೋಡಬೇಡಿ, ಮೆಚ್ಚುಗೆ ಇಲ್ಲ.</s>
ಹತ್ತಿರದ ವಿಮಾನ ನಿಲ್ದಾಣವೆಂದರೆ ಮಂಗಳೂರು ವಿಮಾನ ನಿಲ್ದಾಣ ಹರಿಹರಪುರದಿಂದ ೧೨೦ ಕಿ.ಮೀ ದೂರದಲ್ಲಿದೆ. ಹರಿಹರಪುರದಲ್ಲಿ ನಿಲ್ಲುವ ಬೆಂಗಳೂರಿನಿಂದ ಶೃಂಗೇರಿಗೆ ನೇರ ಬಸ್ಸುಗಳಿವೆ ಮತ್ತು ಸುಗಮಾ ನಿಶ್ಮಿತಾ ಪ್ರಯಾಣಿಸುವ ಖಾಸಗಿ ಬಸ್ ಲಭ್ಯವಿದೆ. ಪ್ರತಿ ೧೫ ನಿಮಿಷದ ಬಸ್ಸುಗಳು ಶಿವಮೊಗ್ಗದಿಂದ ಶೃಂಗೇರಿಗೆ ಲಭ್ಯವಿದೆ, ಶಿವಮೊಗ್ಗವು ಭಾರತದ ಯಾವುದೇ ಸ್ಥಳದಿಂದ ಉತ್ತಮ ಮಾರ್ಗವಾಗಿದೆ, ರಸ್ತೆ ಮತ್ತು ರೈಲು ಸಾರಿಗೆಗೆ ಶಿವಮೊಗ್ಗ ಉತ್ತಮ ಸಂಪರ್ಕ. ಶಿವಮೊಗ್ಗವು ಹತ್ತಿರದ ರೈಲ್ವೆ ನಿಲ್ದಾಣವಾಗಿದ್ದು, ಹರಿಹರಪುರದಿಂದ ೯೦ ಕಿ.ಮೀ ದೂರದಲ್ಲಿದೆ ಮತ್ತು ಕೊಂಕಣ ರೈಲ್ವೆ ಹೊಂದಿರುವ ಉಡುಪಿ ಹರಿಹರಪುರದಿಂದ ೭೫ ಕಿ.ಮೀ ದೂರದಲ್ಲಿದೆ</s>
ಏತನ್ಮಧ್ಯೆ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ಥೋಮರ್, ಪ್ರತಿಭಟನೆಗಳು ರಾಜಕೀಯ ಸಾಧನಗಳಾಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.</s>
ಮುದ್ದು ಮಡದಿಯ ಮುಖ ಸುಕ್ಕು ಗಟ್ಟುವ ಮುಂಚೆಯೆ, ಹುಟ್ಟಿದ್ದ ತಂದೆಗೆ ತಲೆ ಮಗಳಾದ ಯಶೋದಳೆಂಬ ಹೆಣ್ಣುಡುಗಿಯು. ಎದೆ ಮಟ್ಟ ಬೆಳೆದು ಅಣ್ಣಯ್ಯನ ಉಂಡಿಟ್ಟೆಲ್ಲಾ, ಅವನ ಎದೆಯೊಳಗೆ ಒತ್ತುತಾ ಇತ್ತು, ಹಿಟ್ಟು ಒಳಕ್ಕು ಹೋದಂಗಲ್ಲ, ಹೊರಕ್ಕು ಬಂದಂಗಲ್ಲ, ಮೊಳಕೆ ಬಂದಿದ್ದ ಕಡಲೆ ಕಾಯಿ, ಮುಗ್ಗು ಮುಗ್ಗಿಡಿದಿರುವ ಬಳ್ಳಿಗಳ ಮದ್ಯೆ ಮೂಗು ಮುರಿಯುತ್ತಿರುವ ಮೋಹದಾ ದುಡ್ಡು, ಅಣ್ಣಯ್ಯನ ಮಗಳು ಋತುವಾಗಿ ರುಜುವಿಲ್ಲದ ವರ್ಷಗಳು. ಲೋಕದಾ ಕಣ್ಣಿಗೆ ಹೋಕುಳಿಯ ನೀರು ಚಿಮ್ಮುತ್ತಿವೆ. ಅಲ್ಲಲ್ಲಿ ಹೆಣ್ಣೆಂಬ ಎದೆಯ ಮೇಲೆ, ಗಂಡೆಂಬ ಅತ್ಯಾಚಾರಗಳು, ಲೆಕ್ಕಕ್ಕೆ ದಿಕ್ಕು ತಪ್ಪುತ್ತಿರುವ ಈ ಹೊತ್ತಿನೊಳಗೆ, ಮನೆ ಮಠ, ಮಡದಿ ಮಕ್ಕಳೆನ್ನುವ ತಪಸ್ಸಿಗೆ ಬಿದ್ದಿರುವ ಪುರುಷನನ್ನುಡುಕಿ, ಮದುವೆ ಮಾಡ ಬೇಕು. ಅವಳು ಗೋದಿ ಬಣ್ಣದವಳು, ಬೊಂಬೆ ಮುಖದವಳು, ಕಣ್ಣಿ ನಾಳದ ಕಣಿವೆಗಳಲ್ಲಿ ಬಣ್ಣಬಣ್ಣದ ಕನಸುಗಳ ಕುಪ್ಪೆಗಟ್ಟಿರುವವಳು.</s>
ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಿಂದ ಟೊಮೇಟೊ</s>
೪. ವಾರಕ್ಕೆ ೨೩ ಬಾರಿ ಹೀಗೆ ಮಾಡಿ.</s>
ರೈತರು ಅಧಿಕಾರಿಗಳನ್ನು ಸಂಪರ್ಕಿಸಿ, ಮಾಹಿತಿ ಪಡೆಯಬೇಕು.ಈ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಅಧಿಕಾರಿಗಳು ಸಹ ರೈತರಿಗೆ ಯೋಜನೆ ಸೌಲಭ್ಯ ಕುರಿತು ಗ್ರಾಮೀಣ ಭಾಗಕ್ಕೆ ಭೇಟಿ ನೀಡಿ ಮಾಹಿತಿ ಒದಗಿಸಬೇಕು ಎಂದು ಆದೇಶ ನೀಡಿದರು.</s>
ಕೊಡಗಿನ ವಿದ್ಯಾವಂತ ಯುವ ಯುವತಿಯರೆಲ್ಲರೂ ಉದ್ಯೋಗ ನಿಮಿತ್ತ ಬೆಂಗಳುರಿಗೆ ವಲಸೆ ಹೋಗಿದ್ದಾರೆ ಅಷ್ಟೇ ಅಲ್ಲ ವರ್ಷದಿಂದ ವರ್ಷಕ್ಕೆ ಈ ವಲಸೆ ಜಾಸ್ತಿಯಾಗುತ್ತಲೇ ಸಾಗಿದೆ. ಸಾವಿರಾರು ಜನರು ಅಲ್ಲೇ ಬದುಕು ಕಟ್ಟಿಕೊಂಡು ಮನೆ ಮಠ ಮಾಡಿಕೊಂಡಿದ್ದಾರೆ. ಇನ್ನು ಬೆರಳೆಣಿಕೆಯಷ್ಟು ಶ್ರೀಮಂತ ವರ್ಗ ಕೊಡಗಿನಲ್ಲಿ ತೋಟ ಮನೆ ಹೊಂದಿದ್ದು ಬೆಂಗಳೂರಿನಲ್ಲೂ ಮನೆ ಹೊಂದಿದೆ. ಇವರು ವರ್ಷದ ಅರ್ಧ ಸಮಯ ಬೆಂಗಳೂರಿನಲ್ಲೇ ಇರುತ್ತಾರೆ. ಅದರೆ ಈಗ ಬೆಂಗಳೂರಿನಿಂದ ಕೊಡಗಿಗೆ ತದ್ವಿರುದ್ದ ವಲಸೆ ಪರ್ವ ಆರಂಬಗೊಂಡಿದೆ. ಈ ರೀತಿ ಬರುತ್ತಿರುವವರು ತಮ್ಮ ಜತೆಗೇ ಭೀಕರ ಸೋಂಕನ್ನೂ ಹೊತ್ತು ತರುತಿದ್ದಾರೆ. ಇದರಿಂದಾಗಿ ಕೊಡಗಿನಲ್ಲಿ ಸೋಂಕಿತ ಸಂಖ್ಯೆ ಏರಿಕೆಗೆ ಮುಖ್ಯ ಕಾರಣವಾಗಿದೆ.</s>
ಡಿಸೆಂಬರ್ ನಿಂದ ಮಾರ್ಚ್ ವರೆಗಿನ ಮಧ್ಯದ ಅವಧಿಯಲ್ಲಿ ಇಲ್ಲಿ ಜನಸಂದಣಿ ಕಡಿಮೆ ಇರುವುದರಿಂದ ಈ ಸಮಯದಲ್ಲಿ ಭೇಟಿ ಕೊಡುವುದು ಸೂಕ್ತ.</s>
ಬಾಲಕಿಯರ ವಿಭಾಗ: ಹ್ಯಾಂಡ್ ಬಾಲ್, ಥ್ರೊ ಬಾಲ್, ಬ್ಯಾಸ್ಕೆಟ್ ಬಾಲ್, ಯೋಗಾಸನದಲ್ಲಿ ಪ್ರಥಮ ಹಾಗೂ ಶೆಟಲ್ ಬ್ಯಾಡ್ಮಿಂಟನ್, ಚೆಸ್ನಲ್ಲಿ ದ್ವಿತೀಯ ಸ್ಥಾನ.</s>
ಕುಂಬಳೆ: ಕೃಷಿ ಪ್ರಧಾನ ಪ್ರದೇಶವಾದ ಕುಡಾಲು ಮೇರ್ಕಳ ಗ್ರಾಮದ ಸುಬ್ಬಯಕಟ್ಟೆಯಲ್ಲಿ ಶನಿವಾರದಂದು ಜರಗಿದ ಓಣಂ ಕನ್ನಡ ಜಾನಪದ ಉತ್ಸವವು ಕೇರಳ ಕರ್ನಾಟಕ ಉಭಯ ರಾಜ್ಯಗಳ ಗ್ರಾಮೀಣ ಕಲೆಗಳನ್ನು ಅನಾವರಣಗೊಳಿಸಿತು.</s>
ಭಾನುವಾರ ಬಿಹಾರದ ಬೋಧ ಗಯಾದಲ್ಲಿ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳ ನಂತರ ಐಎಂನ ಅಧಿಕೃತ ಟ್ವಿಟರ್ ಖಾತೆ ಎಂದು ಹೇಳಲಾಗಿರುವ ಇಂಡಿಯನ್ ಮುಜಾಹಿದ್ದೀನ್ ತನ್ನ ಪುಟದಲ್ಲಿ, 9 ಧಮಾಕೆ ಹಮ್ನೆ ಕರಾಯೆ (ಒಂಬತ್ತು ಸ್ಫೋಟಗಳನ್ನು ನಾವು ಮಾಡಿದ್ದು) ಎಂದು ಬರೆದುಕೊಂಡಿತ್ತು.</s>
ಮಾರುಕಟ್ಟೆಯಲ್ಲಿ ಸಿಗುವ ವಿವಿಧ ಸಾಮಗ್ರಿಗಳನ್ನು ಬಳಸಿಕೊಂಡು ಸಮಾರಂಭಗಳಿಗೆ ಹೊಂದಿಕೆಯಾಗುವಂತಹ ಲೋಹದ ಆಭರಣಗಳನ್ನು ವಿನ್ಯಾಸ ಮಾಡುತ್ತಾರೆ. ಗಾಜಿನ ಚಿತ್ರಕಲೆ, ಬಟ್ಟೆ ಹೊಲಿಯುವುದು, ಸಾದಾ ಸೀರೆಗಳಿಗೆ ಎಂಬ್ರಾಯಿಡರಿ ಡಿಸೈನ್ ಮಾಡುವುದು, ಹೊಳಪಿನ ಮಣಿಗಳನ್ನು ಬಳಸಿ ಸೀರೆಗೆ ಹೊಸ ಹೊಳಪು ನೀಡುವ ಅವರು, ಅಧಿಕ ಬೆಲೆಯ ಹಳೆಯ ಸೀರೆಗಳಲ್ಲಿ ಲೆಹೆಂಗಾವನ್ನೂ ತಯಾರಿಸುತ್ತಾರೆ. ಇವುಗಳಲ್ಲಿ ಕೆಲವನ್ನು ತರಗತಿಗೆ ಹೋಗಿ ಕಲಿತರೆ, ಮತ್ತೆ ಕೆಲವನ್ನು ಟಿ.ವಿ ಹಾಗೂ ಅಂತರ್ಜಾಲದ ಮೂಲಕ ಕಲಿತಿದ್ದಾರೆ.</s>
ಕೊರೋನಾ ಸೋಂಕು ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾತ್ರಿ ಕರ್ಫೂ ಜಾರಿ ಬಗ್ಗೆ ಇದುವರೆಗೆ ಯಾವುದೇ ರೀತಿಯ ಚರ್ಚೆ ಆಗಿಲ್ಲ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.</s>
ಯಾವುದೇ ರೀತಿಯಲ್ಲೂ ಪಡಿತರ ವಿತರಣೆಯಲ್ಲಿ ಲೋಪವಾಗದಂತೆ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಿಕೊಂಡು ಸಮಸ್ಯೆಗಳಿಗೆ ಆಸ್ಪದ ನೀಡದೆ ಪಡಿತರ ವಿತರಣೆಯನ್ನು ಮಾಡತಕ್ಕದ್ದು.ಹೊರ ಜಿಲ್ಲೆಯ ಪಡಿತರ ಚೀಟಿದಾರರು ದಾಸ್ತಾನು ಇರುವ ಸಮೀಪದ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಪಡೆಯತಕ್ಕದ್ದು.</s>
ನರಹುಲಿಗಳ ಮೇಲೆ ಬೆಚ್ಚಗಿನ ಟೀಬ್ಯಾಗ್ ಗಳನ್ನು 10 ನಿಮಿಷಗಳ ಕಾಲ ಇಡುವುದರಿಂದ ನರಹುಲಿ ನಿಧಾನವಾಗಿ ಕಡಿಮೆಯಾಗುತ್ತದೆ.</s>
ಕಂಚಿನ ಪದಕ ವಿಜೇತ ಸಾಕಿರ್ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಇವರು ಮರ್ಕರ ಟೆಕ್ವಾಂಡೋ ಕ್ಲಬ್ನ ತರಬೇತುದಾರ ಕುಶಾಲ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.</s>
ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಧವನ್ 53 ಎಸೆತಗಳಲ್ಲಿ 28ನೇ ಫಿಫ್ಟಿ ಸಾಧನೆ ಮಾಡಿದರು. 19 ಓವರ್ಗಳಲ್ಲಿ ಭಾರತ 100ರ ಗಡಿ ದಾಟಿತು. ಇದಾದ ಸ್ವಲ್ಪರದಲ್ಲೇ ರೋಹಿತ್ ಸಹ 61 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದು ರೋಹಿತ್ ಬ್ಯಾಟ್ನಿಂದ ಸಿಡಿದ 42ನೇ ಪಿಫ್ಟಿ ಸಾಧನೆಯಾಗಿದೆ.</s>
ಈ ಸಂದರ್ಭದಲ್ಲಿ ವಿದುಷಿ ನಯನಾ ವಿ ರೈ, ಚಾತುರ್ಮಾಸ್ಯ ಮಹೋತ್ಸವ ಸಮಿತಿ ಸಂಚಾಲಕ ಕೆ.ಪ್ರೀತಂ ಪುತ್ತೂರಾಯ, ಅಧ್ಯಕ್ಷ ರಾಜೇಶ್ ಬನ್ನೂರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದಲ್ಲಿ ಖಜಾಂಚಿ ಸೀತಾರಾಮ ಶೆಟ್ಟಿ ಕಂಬಳತ್ತಡ್ಡ ಅಧ್ಯಕ್ಷತೆ ವಹಿಸಿದ್ದರು. ಸಭಾ ಮತ್ತು ಸಾಂಸ್ಕೃತಿಕ ಸಮಿತಿಯ ಉಮೆಶ್ ಎಸ್.ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿಶ್ವಕಲಾನಿಕೇತನ ನೃತ್ಯಕಲಾ ಶಾಲೆ ಪದಡ್ಕ ಸುಳ್ಯಪದವು ಇವರಿಂದ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು.</s>
ಕಾನೂನುಬಾಹಿರವಾಗಿ ಬ್ಯಾನರ್ ಅಳವಡಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹ</s>
ಸಾರ್ವಜನಿಕ ಮಹತ್ವಕ್ಕಾಗಿ ತನಿಖೆ ಅಗತ್ಯವಿದೆ ಎಂದು ಹೇಳಿ ಏಕಸದಸ್ಯ ತನಿಖಾ ಆಯೋಗವನ್ನು ರಚಿಸುವಂತೆ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಾಗಿ ಯುಪಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಕುಮಾರ್ ಅವಸ್ಥಿ ಅಧಿಸೂಚನೆ ಹೊರಡಿಸಿದ್ದಾರೆ .</s>
ಬೆಳಗಾವಿ: ಜಿಲ್ಲೆಯಲ್ಲಿ 3 ಕೊರೊನಾ ಸೋಂಕು ಪಾಸಿಟಿವ್ ಬರ್ತಿದ್ದಂತೆ ಇಂದು ಬೆಳಗಾವಿ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಆಸ್ತ್ರೆಗೆ ಭೇಡಿ ನೀಡಿ ಸೋಂಕಿತರ ಬಗ್ಗೆ ಮಾಹಿತಿ ಕಲೆ ಹಾಕಿದ್ರು. ಹಾಗೂ ಚಿಕಿತ್ಸೆಗೆ ಬೇಕಾದ ಅಗತ್ಯ ವಸ್ತುಗಳ ಕುರಿತು ಮಾಹಿತಿ ಕಲೆ ಹಾಕಿದ್ರು.</s>
ಆಗ ರಾಜ್ ಅಯ್ಯೊ... ಆ ಮಾತು ಹೇಳಬೇಡಿ ಸರ್. ನಾನು ನಾಟಕಗಳಲ್ಲಿ ನಟಿಸುತ್ತಿದ್ದಾಗ ನಿಮ್ಮನ್ನು ಒಮ್ಮೆಯಾದರೂ ನೋಡಿತ್ತೀನೊ, ಇಲ್ಲವೋ ಅಂದುಕೊಂಡಿದ್ದೆ. ನಿಮ್ಮ ಸ್ಥಾನವೇ ಬೇರೆ. ನವರಾತ್ರಿ ಚಿತ್ರದಲ್ಲಿ ನೀವು ಒಂಬತ್ತು ಪಾತ್ರಗಳನ್ನು ಮಾಡಿದ್ದೀರಿ ಅದಕ್ಕಿಂತಲೂ ಬೇರೆ ಚಿತ್ರ ಬೇಕಾ? ನಿಮ್ಮ ಮಾತು ವಾಪಸ್ ತಗೋಳಿ ಎಂದಾಗ ರಾಜ್ಕುಮಾರ್ ಅವರ ಸರಳತೆಗೆ ಶಿವಾಜಿ ಗಣೇಶನ್ ಭಾವುಕರಾಗಿ. ನಾಗಿರೆಡ್ಡಿ ಅವರ ಬಳಿ, ರೆಡ್ಡಿಯವರೇ ರಾಜ್ಕುಮಾರ್ ಅವರಂತಹ ನಟ ಭಾರತದಲ್ಲೇ ಇಲ್ಲ ಎಂದಾಗ ಅಣ್ಣವ್ರೂ ಭಾವುಕರಾಗಿದ್ದರು.</s>