text
stringlengths 4
182k
|
---|
ಕುದುರೆ ಸವಾರಿ ಎಲ್ಲಾ ಪ್ರಯತ್ನಗಳಲ್ಲಿ ಅದೃಷ್ಟ ಇರುತ್ತದೆ</s> |
ಬೆಂಗಳೂರು, ಡಿ.5 ಬಹುಕೋಟಿ ವಂಚನೆ ಪ್ರಕರಣವಾಗಿರುವ ಐಎಂಎ ಹಗರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ರೋಷನ್ಬೇಗ್ ಅವರಿಗೆ ಸಿಬಿಐ ವಿಶೇಷ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ರೋಷನ್ ಬೇಗ್ ಅವರಿಗೆ ಜಾಮೀನು ನೀಡಬೇಕೆಂದು ವಕೀಲರು ಮಾಡಿದ್ದ ಮನವಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ಪರಿಗಣಿಸಿದೆ.</s> |
ಇನ್ನಿಬ್ಬರು ಮಕ್ಕಳ ಹತ್ಯೆಗೆ ಸಂಚು</s> |
ಆರ್ಥಿಕ ಸಂಕಷ್ಟ ಹಾಗೂ ಅನಕ್ಷರತೆಯಿಂದಾಗಿ ಬಹುಪಾಲು ಕಾರ್ಮಿಕರು, ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದಾರೆ. ಆ ಪೈಕಿ 135 ಮಂದಿ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಇಂಟರ್ನ್ಯಾಷನಲ್ ಜಸ್ಟಿಸ್ ಮಿಷನ್ (ಐಜೆಎಂ) ಸ್ವಯಂ ಸೇವಾ ಸಂಸ್ಥೆಯ ಸದಸ್ಯರು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಿ ಕಾರ್ಮಿಕರಿಗೆ ಜೀತ ಪದ್ಧತಿಯಿಂದ ಮುಕ್ತಿ ಕೊಡಿಸಿದ್ದಾರೆ.</s> |
ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನದ ಡಾ. ಅನಿಲಕುಮಾರ್ ಎಸ್, ತೋಟಗಾರಿಕೆಯ ವಿಜ್ಞಾನಿ ಡಾ. ಜ್ಯೋತಿ ಕಟ್ಟೇಗೌಡರ, ಸಸ್ಯರೋಗ ಸಂರಕ್ಷಣೆ ವಿಜ್ಞಾನಿ ಡಾ. ಡಿ. ಎಸ್. ಅಂಬಿಕಾ, ಡಾ. ಶಶಿಧರ್ ಕೆ.ಆರ್, ಶ್ರೀ. ಉಮೇಶ್ ನಾಯ್ಕ, ಕ್ಷೇತ್ರ ವ್ಯವಸ್ಥಾಪಕರು ಮತ್ತು ಕೆವಿಕೆಯ ಬೋಧಕೇತರ ಸಿಬ್ಬಂದಿಗಳು, ಶ್ರೀ. ಮೋಹನ, ಕ್ಷೇತ್ರ ನಿರ್ವಹಣಾ ಅಧಿಕಾರಿ, ಇಫ್ಕೋ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ 72 ರೈತರು ಮತ್ತು ರೈತ ಮಹಿಳೆಯರು ಭಾಗವಹಿಸಿದ್ದರು.</s> |
ಧಾರವಾಡದಿಂದ ಬೆಳಗಾವಿಗೆ ಆಗಮಿಸುವಾಗ ಸಿಗುವ ಟೋಲ್ ಗೇಟ್ ಒಂದರ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಕಾರು ಚಾಲಕ, ಚಪ್ಪಲಿಯಿಂದ ಹೊಡೆದು ಬುದ್ದಿ ಕಲಿಸುವುದಾಗಿ ಆಕ್ರೋಶ ಹೊರಹಾಕಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.</s> |
ಚಳಿಗಾಲದ ರಜಾದಿನಗಳಲ್ಲಿ ಮಾತ್ರ ಹೃದಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ ಎಂದು ಹಲವು ಅಧ್ಯಯನಗಳು ತೋರಿಸಿವೆ, ಆದರೆ ಅವರು ಸಂಭವಿಸಿದಾಗ ಅವರು ಮಾರಕವಾಗಬಹುದು .</s> |
ನರಗುಂದ ಪಟ್ಟಣದ ನಗರ ಕುಡಿಯುವ ನೀರಿನ ಯೋಜನೆ ಪೈಪ್ಲೈನ್ ಜೋಡಣೆ ಕಾಮಗಾರಿ ಶೇ. 80ರಷ್ಟು ಪೂರ್ಣಗೊಂಡಿದೆ. ಪಟ್ಟಣದ ವಿವಿಧ ಬಡಾವಣೆಗಳ 1500 ಮನೆಗಳಿಗೆ ಅಂದಾಜು 6 ಕಿ.ಮೀ. ನೀರಿನ ಪೈಪ್ಲೈನ್ ಅಳವಡಿಸುವ ಕಾಮಗಾರಿ ಬಾಕಿ ಉಳಿದಿದ್ದು, ಇದಕ್ಕೆ 6 ಕೋಟಿ ರೂ. ವೆಚ್ಚದ ಹೆಚ್ಚುವರಿ ಅನುದಾನ ಬೇಕಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಶಾಸಕರ ಜತೆಗೆ ರ್ಚಚಿಸಲಾಗಿದ್ದು, ಹೆಚ್ಚುವರಿ ಅನುದಾನಕ್ಕೆ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕಿದೆ. ಒಂದು ತಿಂಗಳ ಅವಧಿಯಲ್ಲಿ 247 ಯೋಜನೆಯ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು.</s> |
ರಾಜಕೀಯ ಪಕ್ಷಗಳ ದೌರ್ಬಲ್ಯ</s> |
ನಮ್ಮ ಕನ್ನಡ ಸಾಹಿತ್ಯದಲ್ಲಿ ನವೋದಯ ಎಂಬ ಹಂತವಿರುವುದು ಗೊತ್ತಿದೆಯಷ್ಟೆ. ನವೋದಯ ಪಂಥದ ಒಂದು ಪ್ರಮುಖ ಪ್ರೇರಣೆ ಸ್ವಾತಂತ್ರ್ಯ ಹೋರಾಟ. ನವೋದಯದ ಪ್ರಮುಖ ಕವಿಗಳಾದ ಕುವೆಂಪು, ಬೇಂದ್ರೆ, ಪು.ತಿ.ನ., ಆಧುನಿಕ ರತ್ನತ್ರಯರೆಂದೇ ಪರಿಗಣಿಸಲ್ಪಟ್ಟವರು. ಅವರ ಕಾವ್ಯ ಸೃಷ್ಟಿಯಲ್ಲಿ ಅಡಗಿರುವ ಸ್ವಾತಂತ್ರ್ಯದ ಹಲವು ಪರಿಕಲ್ಪನೆಗಳನ್ನು ನೋಡಿದರೆ ಪ್ರತಿ ಬಾರಿ ನಾವು ಆಚರಿಸುವ ಸ್ವಾತಂತ್ರ್ಯ ದಿನ ಕೇವಲ ಸ್ವಾತಂತ್ರ್ಯ ಯೋಧರನ್ನು ಸ್ಮರಿಸಲು, ಸಂಭ್ರಮಿಸುವುದಕ್ಕೆ ಸೀಮಿತವಾಗಿರಬೇಕಿಲ್ಲ ಎಂಬುದು ಅರಿವಾಗುತ್ತದೆ.</s> |
ಲಾಂಗ್ ಪಾರ್ಕ್</s> |
ತಮ್ಮ ವೈರ್ಲೆಸ್ ಬ್ಲೂಟೂತ್ ಕೀಲಿಮಣೆಗಳನ್ನು ವಿಶೇಷವಾಗಿ ಟ್ಯಾಬ್ಲೆಟ್ಗಳಿಗಾಗಿ ಬಿಡುಗಡೆ ಮಾಡಲು ಅಮೆಜಾನ್ ಪ್ರಯತ್ನಿಸಿತು ಆದರೆ ಅದು ಉತ್ತಮವಾಗಿ ಸ್ವೀಕರಿಸಲಿಲ್ಲ. ಪರಿಣಾಮವಾಗಿ, ಅವರು ಟ್ಯಾಬ್ಲೆಟ್ಗೆ ಕೀಬೋರ್ಡ್ ಅನ್ನು ಸೇರಿಸಲು ಬಯಸಿದರೆ ಅದನ್ನು ನಿಲ್ಲಿಸಲಾಗಿದೆ, ನಾನು ಅಂಕರ್ ಅಲ್ಟ್ರಾ ಕಾಂಪ್ಯಾಕ್ಟ್ ಬ್ಲೂಟೂತ್ ಕೀಲಿಮಣೆಗೆ ಶಿಫಾರಸು ಮಾಡುತ್ತೇವೆ. ಇದು $ 30 ಕ್ಕಿಂತಲೂ ಕಡಿಮೆ ಬೆಲೆಗೆ ಹೊಂದಿಕೊಳ್ಳುವ ಬೆಲೆಯೊಂದಿಗೆ ಅತ್ಯಂತ ಚಿಕ್ಕದಾದ ಕೀಬೋರ್ಡ್ ಆಗಿದ್ದು, ಅದನ್ನು ವಾಸ್ತವವಾಗಿ ಯಾವುದೇ ಬ್ಲೂಟೂತ್ ಹೊಂದಬಲ್ಲ ಟ್ಯಾಬ್ಲೆಟ್, ಸ್ಮಾರ್ಟ್ಫೋನ್ ಅಥವಾ ಕಂಪ್ಯೂಟರ್ನೊಂದಿಗೆ ಬಳಸಬಹುದು. ಇದು ಬಿಳಿ ಅಥವಾ ಕಪ್ಪು ಬಣ್ಣದಲ್ಲಿ ಲಭ್ಯವಿದೆ. ಇನ್ನಷ್ಟು</s> |
ಕಾರ್ಮಿಕರ ವೇತನ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸಿದ ಘನತ್ಯಾಜ್ಯ ಮತ್ತು ಆರೋಗ್ಯ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಎಸ್., ಸುಮಾರು 15,500 ಪೌರಕಾರ್ಮಿಕರಿಗೆ ವೇತನ ಪಾವತಿಸಲಾಗಿದೆ. ಉಳಿದವರಿಗೆ ವೇತನ ಪಾವತಿಸುವ ಬಗ್ಗೆ ರೂಲಿಂಗ್ ನೀಡಿದರೆ ಅದಕ್ಕೆ ಬೇಕಾದ ಕ್ರಮ ಕೈಗೊಳ್ಳುತ್ತೇವೆ. ಹೆಚ್ಚುವರಿಯಾಗಿ ತೆಗೆದುಕೊಂಡ ಕಾರ್ಮಿಕರ ಪಟ್ಟಿಯನ್ನು ಪರಿಶೀಲಿಸಿ ಅವರಿಗೂ ವೇತನ ಪಾವತಿಸಲು ಕ್ರಮ ಕೈಗೊಳ್ಳುತ್ತೇವೆ. ತುರ್ತು ನಿರ್ಧಾರಗಳನ್ನು ಪಾಲಿಕೆ ಸಭೆಯಲ್ಲಿ ಕೈಗೊಂಡು ಅನುಷ್ಠಾನಕ್ಕೆ ತರಲು ಅವಕಾಶವಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. 2ರಿಂದ 3 ದಿನಗಳಲ್ಲಿ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದರು. ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ ಇದ್ದರು.</s> |
ಮನೆ ದೇವರ ದರ್ಶನದ ಬಳಿಕ ಡಿ.ಕೆ.ಶಿವಕುಮಾರ್ ಗಡ್ಡ ತೆಗೆದು ಮತ್ತೆ ತಮ್ಮ ಹಳೆ ಲುಕ್ಗೆ ಬರಲಿದ್ದಾರೆ ಎನ್ನಲಾಗುತ್ತಿದೆ.</s> |
ಘಟನೆ ವಿವರ: ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟ ಬಳಿಯ ಪಾಲಾರ್ ಗೇಟ್ನಲ್ಲಿ ರಕ್ಷಿತ್ ಮತ್ತು ನಂದೀಶ್ ಶುಕ್ರವಾರ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ವಾಹನಗಳನ್ನು ತಡೆಯಲು ಗೇಟ್ ಕೆಳಗೆ ಬಿಡುತ್ತಿದ್ದಂತೆಯೇ ಬೈಕ್ ಸವಾರ ನುಗ್ಗಿದ ಪರಿಣಾಮ ಗೇಟ್ ಬಡಿದು ಬೈಕ್ ಸವಾರರು ಗಾಯಗೊಂಡರು.</s> |
ಅನಾನಸ್ ರಸ</s> |
ಮೈಸೂರು, ಬೆಂಗಳೂರಿನಲ್ಲಿ ವಾಸಿಸುತ್ತಿರುವ ಕೊಡಗಿನ ಜನತೆ ಈ ಮಾರ್ಗದಲ್ಲಿ ಓಡಾಡಲು ಸಾಧ್ಯವಾಗದೆ ಪಿರಿಯಾಪಟ್ಟಣ ಅಥವಾ ನಾಗರಹೊಳೆ ಮಾರ್ಗದಲ್ಲಿ ಸುತ್ತಿ ಬಳಸಿ ಓಡಾಡುತ್ತಿದ್ದಾರೆ. ಇನ್ನು ಸಾರಿಗೆ ಬಸ್ಸಿನಲ್ಲಿ ಬರುವ ಪ್ರಯಾಣಿಕರು ನಿತ್ಯವೂ ಶಾಪ ಹಾಕುತ್ತಿದ್ದಾರೆ. ಬಸ್ ಚಾಲಕರ ಸ್ಥಿತಿಯಂತೂ ಹೇಳುವುದೇ ಬೇಡ.</s> |
ಅಲ್ಲಲ್ಲಿ ಗುಂಪು ಗುಂಪಾಗಿ ಕುಳಿತಿದ್ದ ಆಟೋ ಡ್ರೈವರುಗಳು ಹೊರದೇಶದವನಾದ ನನ್ನನ್ನು ಕಂಡು ತುಕ್ ತುಕ್? ಎಂದು ಕೂಗುತ್ತ ಓಡಿ ಬಂದರು. ಏನೂ ಸ್ಪಷ್ಟ ಕೇಳಲೊಲ್ಲದಂಥ ನುಡಿ. ಅತ್ತ ಚೀನಿ ಭಾಷೆಯೂ ಅಲ್ಲ, ಇತ್ತ ಮಲಯ್ ಭಾಷೆಯಂತೆಯೂ ಕೇಳುವುದಿಲ್ಲ.</s> |
ಇಲ್ಲ, ಹಿರಿಯ ವ್ಯಕ್ತಿಗಳಿಗೆ ಕೋವಿಡ್19 ಸೋಂಕು ತಗಲುವ ಅಪಾಯ ಹೆಚ್ಚು ಎಂದೇನೂ ಇಲ್ಲ. ಇತರರಿಗೆ ಈ ಸೋಂಕಿಗೆ ತುತ್ತಾಗುವ ಅಪಾಯ ಎಷ್ಟಿದೆಯೋ ಅಷ್ಟೇ ಅಪಾಯ ಹಿರಿಯ ವಯಸ್ಕರಿಗೂ ಇದೆ.</s> |
ಬಾ ಸಹೋದರ ಹಿಂದು! ಬಾ ಮುಸಲ್ಮಾನ್! ಬಾ ಬೌದ್ದ ಧರ್ಮದವನೆ! ಬಾ ಕ್ರಿಶ್ಚಿಯನ್! ನಾವೆಲ್ಲಾ ಕಟ್ಟಳೆಗಳನ್ನು ಮೀರಿ ನಡೆಯೋಣ,ಸಣ್ಣತನ,ಸ್ವಾರ್ಥ,ಸುಳ್ಳುಗಳು ಇತ್ಯಾದಿಗಳ ತ್ಯಜಿಸಿ ಎಲ್ಲರನ್ನು ಸಹೋದರ ಎಂದು ಸಂಭೋದಿಸೋಣ. ನಾವಿನ್ನು ಜಗಳಾಡುವುದು ಬೇಡ.</s> |
ಮಂಡ್ಯ ಜಿಲ್ಲೆಯ ನಾಗಮಂಗಲ ಬಳಿಯ ಬೆಳ್ಳೂರು ಕ್ರಾಸ್ನಲ್ಲಿರುವ ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಎಂಎಸ್) 50 ಐಸಿಯು ಹಾಸಿಗೆಗಳು ಸೇರಿದಂತೆ 250 ಹಾಸಿಗೆಗಳನ್ನು ಹೊಂದಿದೆ. ಇದು ನಗರದಿಂದ ಕೇವಲ 100 ಕಿ.ಮೀ ದೂರದಲ್ಲಿದ್ದು ಆಂಬ್ಯುಲೆನ್ಸ್ ಮೂಲಕ ತಲುಪಲು ಒಂದೂವರೆ ಗಂಟೆ ಸಮಯ ತೆಗೆದುಕೊಳ್ಳುತ್ತದೆ, ಹೀಗಾಗಿ</s> |
ಪ್ರವಾಸೋದ್ಯಮ.</s> |
ಪರಿಶೀಲಿಸಿ ಅನುದಾನ ನೀಡಿ: ಯಾವುದೇ ಸಂಘ ಸಂಸ್ಥೆಗಳಾಗಲಿ ನಗರಸಭೆಗೆ ಅನುದಾನಕ್ಕಾಗಿ ಅರ್ಜಿ ಹಾಕಿದಾಗ ಆ ಸಂಘಟನೆ ಸಮಾಜದಲ್ಲಿ ಈವರೆಗೂ ಯಾವ್ಯಾವ ಉತ್ತಮ ಕೆಲಸ ಮಾಡಿದೆ ಎಂಬುದನ್ನು ಪರಿಶೀಲಿಸಿದ ಬಳಿಕವೇ ಅನುದಾನ ನೀಡಿ ಎಂದು ಸದಸ್ಯೆ ಶ್ಯಾಮಲಾ ಒತ್ತಾಯಿಸಿದರೆ, ಖಾಸಗಿ ಶಾಲೆಗಳು ಬಡ ಮಕ್ಕಳಿಗೇನು ಉಚಿತವಾಗಿ ಸೀಟು ಕೊಡುವುದಿಲ್ಲ. ಆದ ಕಾರಣ ಕ್ರೀಡಾಕೂಟ</s> |
ಸಮಾವೇಶಕ್ಕೆ ಅನುಮತಿ, ಒವೈಸಿಗೆ ನಿರ್ಬಂಧ</s> |
ಇದೇ ಸಂದರ್ಭದಲ್ಲಿ 2015ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ.90ಕ್ಕೂ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಪತ್ರಕರ್ತರ ಮಕ್ಕಳಿಗೆ ಸನ್ಮಾನ ಹಾಗೂ ಬಡಮಕ್ಕಳಿಗೆ ಆರ್ಥಿಕ ಸಹಾಯ ನೀಡುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. [ಪಿಯು ಫಲಿತಾಂಶ : ವಿದ್ಯಾರ್ಥಿಗಳ ಯಶಸ್ಸಿನ ಕಥೆ]</s> |
ದಿಗಂಬರ ಜೈನ ಸಮಾಜ ಹಾಗೂ ಚಾತುರ್ಮಾಸ ಸಮಿತಿ ವತಿಯಿಂದ ಶಾಂತಿನಾಥ ಸಾಂಸ್ಕೃತಿಕ ಭವನದಲ್ಲಿ ಬುಧವಾರ ಆಯೋಜಿಸಿದ್ದ ನಿಜಾನಂದ ಸಾಗರ ಮಹಾರಾಜರ 60ನೇ ಜಯಂತಿಯಲ್ಲಿ ಅವರು ಮಾತನಾಡಿದರು.</s> |
ಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಯುವ ಶಿಕ್ಷ ಕರ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿ, ಅಜ್ಞಾನವನ್ನು ದೂರ ಮಾಡಿ ಗುರು ಎಂಬ</s> |
ನ್ಯಾಯಾಲಯದ ಅನುಮತಿ ಪಡೆದು ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ನಗರದ ಎಂಐಎಸ್ಎಲ್ ಹಾಗೂ ಖಾಸಗಿ ಮದ್ಯ ಮಾರಾಟ ಮಳಿಗೆಗಳಲ್ಲಿ ಕಡ್ಡಾಯವಾಗಿ ಸಿ.ಸಿ ಟಿ.ವಿ ಕ್ಯಾಮೆರಾ ಮತ್ತು ಹೆಚ್ಚಿನ ವಿದ್ಯುತ್ ದೀಪಗಳನ್ನು ಅಳವಡಿಸಬೇಕು. ವೀಲಿಂಗ್ ಮಾಡುವ ಬೈಕ್</s> |
ಟೆಲಿಕಾಂ ಕಂಪನಿ ಬಿ ಎಸ್ ಎನ್ ಎಲ್ ತನ್ನ ಮತ್ತೊಂದು ಪ್ರಿಪೇಡ್ ಯೋಜನೆಯನ್ನು ಪರಿಷ್ಕರಿಸಿದೆ. ಕಂಪನಿ 29 ರೂಪಾಯಿ ಪ್ಲಾನ್ ನ ಡೇಟಾ ಹಾಗೂ ಕಾಲಿಂಗ್ ಮಿತಿಯನ್ನು ಪರಿಷ್ಕರಿಸಿದೆ.</s> |
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಚಾಮರಾಜನಗರಕ್ಕೆ ಭೇಟಿ ನೀಡುತ್ತಿರುವಾಗಲೇ ಎನ್.ಮಹೇಶ್ ಅವರ ಫೋಟೋ ಹಾಕಿರುವುದು ಅಚ್ಚರಿ ಉಂಟು ಮಾಡಿದೆ. ಜನಸೇವಕ ಸಮಾವೇಶದಲ್ಲೇ ಮಹೇಶ್ ಬಿಜೆಪಿ ಸೇರುತ್ತಾರ ಎಂದು ಕೆಲವರು ಮಾಧ್ಯಮಗಳಿಗೆ ಕರೆ ಮಾಡಿ ವಿಚಾರಿಸುತ್ತಿದ್ದರು.</s> |
ಅರಣ್ಯ ಪ್ರದೇಶದಲ್ಲಿ ಉಗ್ರರ ಅಡಗು ತಾಣಗಳಿವೆ ಅನ್ನೋ ಮಾಹಿತಿ ಹಿನ್ನೆಲೆ ಸೆಪ್ಟೆಂಬರ್ 27 ರಂದು ಟಾಪರ್ಸ್ ಎಲೈಟ್ ಕಮಾಂಡೋಗಳನ್ನು ಹೆಲಿಕಾಪ್ಟರ್ ಮೂಲಕ ಅರಣ್ಯದಲ್ಲಿ ಇಳಿಸಲಾಗಿತ್ತು. ಈವರೆಗೆ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಮೊದಲ ದಿನ ಓರ್ವ ಉಗ್ರನನ್ನು ಹಾಗೇನೇ ಮೂರನೇ ದಿನ 2ನೇ ಉಗ್ರನನ್ನು ಮಟ್ಟ ಹಾಕಲಾಗಿದೆ ಎಂದು ಗಂದೇರ್ಬಾಲ್ ಎಸ್ಪಿ ಖಲೀಲ್ ಪೋಸ್ವಾಲ್ ತಿಳಿಸಿದ್ದಾರೆ.</s> |
ಆದರೆ 2014ರ ನಂತರದ ಸನ್ನಿವೇಶ ಸಂಪೂರ್ಣ ಭಿನ್ನವಾಗಿದೆ. ಒಂದು ನಿರ್ದಿಷ್ಟ ರಾಜಕೀಯ ನಾಯಕನ ವಿರುದ್ಧವಾದ ಕಾರ್ಟೂನ್ ರಚಿಸಿದರೆ ರಚಿಸಿದಾತನ ವಿರುದ್ಧ ಟ್ರೋಲ್ ಕಾಲಾಳುಗಳು ಮುಗಿಬೀಳುತ್ತಾರೆ. ಆತಂಕದ ವಿಷಯವೆಂದರೆ ಈ ಟ್ರೋಲ್ಗಳನ್ನು ದುಡ್ಡುಕೊಟ್ಟು ಈ ಉದ್ದೇಶಕ್ಕಾಗಿಯೇ ಇಟ್ಟುಕೊಳ್ಳಲಾಗುತ್ತದೆಯಂತೆ! ಇಂಥದಕ್ಕೆ ಮಣಿಯದವರ ಕುಟುಂಬ ಸದಸ್ಯರ ಮೇಲೇ ದೈಹಿಕ ದಾಳಿ ನಡೆಸುವ ಬೆದರಿಕೆ ಹಾಕಲಾಗುತ್ತದೆ. ಇವುಗಳನ್ನೆಲ್ಲ ಎದುರಿಸಿಯೂ ತಾನು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಿಟ್ಟುಕೊಡಲಾರೆ ಎಂದು ಹೇಳಲು ಸಾಕಷ್ಟು ಗಟ್ಟಿಯಾದ ಗುಂಡಿಗೆಯೇ ಬೇಕು. ಆದರೆ ಇಂಥ ಗುಂಡಿಗೆಯವರಿದ್ದರೂ ಅವರಿಗೆ ಮುಕ್ತವಾದ ಕೆಲಸ ಮಾಡಲು ಅವಕಾಶ ನೀಡಬೇಕಾದ ಮಾಧ್ಯಮ ಸಂಸ್ಥೆಗಳಿಗೇ ಧೈರ್ಯದ ಕೊರತೆಯಿರುತ್ತದೆ. ಕಾರ್ಪೊರೇಟ್ ಮಾಧ್ಯಮಗಳ ಈ ಕಾಲಘಟ್ಟದಲ್ಲಿ ಸರಕಾರವನ್ನು ಎದುರುಹಾಕಿಕೊಳ್ಳಲು ಯಾರೂ ತಯಾರಿಲ್ಲ.</s> |
ಅರ್ಧಕ್ಕೂ ಹೆಚ್ಚು ಪ್ರಶ್ನೆಗಳು ಪ್ರಥಮ ಪಿಯುಸಿ ಪಠ್ಯಕ್ರಮವನ್ನು ಆಧರಿಸಿರುವುದರಿಂದ ವಿದ್ಯಾರ್ಥಿಗಳು ಹಿಂದಿನ ವರ್ಷದ ಪಠ್ಯಕ್ರಮವನ್ನು ಪುನರ್ಮನನ ಮಾಡಲೇಬೇಕಾಗುತ್ತದೆ. ಸಿಇಟಿಯಲ್ಲಿ ಇಲ್ಲದ ನೆಗೆಟಿವ್ ಮಾರ್ಕ್ಸ್ ವ್ಯವಸ್ಥೆ ನೀಟ್ನಲ್ಲಿ ಇರುವುದರಿಂದ, ಇಲ್ಲಿ ಉತ್ತರಗಳನ್ನು ಊಹೆ ಮಾಡಿ ಬರೆಯುವಂತಿಲ್ಲ. ಇಂತಹ ಸೂಕ್ಷ್ಮಗಳನ್ನು ಅರಿತರೆ ಪರೀಕ್ಷೆಯನ್ನು ಸುಲಲಿತವಾಗಿ ಎದುರಿಸಬಹುದು.</s> |
ಮೂಡಿಗೆರೆ: ತಂಬಾಕು ಸೇವನೆ ಮಾಡುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ ಎಂದು ಮೂಡಿಗೆರೆ ಪ್ರಧಾನ ಸಿವಿಲ್ ನ್ಯಾಯಾಧೀಶ ಪದ್ಮಪ್ರಸಾದ್ ತಿಳಿಸಿದರು. ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ತಂಬಾಕು ವಿರೋಧಿ ದಿನದ ಅಂಗವಾಗಿ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ವಕೀಲರ ಸಂಘ ಮತ್ತು ಪೊಲೀಸ್ ಇಲಾಖೆ ಶುಕ್ರವಾರ ಏರ್ಪಡಿಸಿದ್ದ ಉಚಿತ ಕಾನೂನು ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.</s> |
ವಾತಾಪಿ ಗಣಪತಿಯನ್ನು ನೆನೆಯುತ್ತಾ ಮುಂದೆ ದರ್ಬಾರ್ ರಾಗವನ್ನು ಆಯ್ದುಕೊಂಡು ಯೋಚನಾ ಕಮಲ ಲೋಚನಾವನ್ನು ಕಲ್ಪನಾಸ್ವರಗಳೊಂದಿಗೆ ಮುಂದಿರಿಸಿದಾಗ ಮುಂದೆ ಬರಲಿರುವ ಕಲ್ಯಾಣಿಯ ಪಂಕಜಲೋಚನ ಅದ್ಭುತ ಎನ್ನಬಹುದಾದ ನಿರ್ವಹಣೆಯ ಕುರುಹು ಯಾರಿಗೂ ಆಗದಿದ್ದುದು ಸಹಜವೇ. ಕಲ್ಯಾಣಿಯ ರಾಗವಿಸ್ತಾರವನ್ನು ದೀರ್ಘವಾಗಿ ಎತ್ತಿಕೊಂಡು ಎಲ್ಲ ಸಾಂಪ್ರದಾಯಿಕ ಸಿದ್ಧ ಸಂಚಾರಗಳೊಂದಿಗೆ ಗೃಹಭೇದವನ್ನೂ ಮಾಡಿ ಮುಂದೆ ಕೃತಿಯ ಪ್ರಸ್ತುತಿಯಾಯಿತು. ಬೃಂದಾವನಎಂಬಲ್ಲಿ ಸಾಹಿತ್ಯ ವಿಸ್ತಾರ ಕೈಗೆತ್ತಿಕೊಂಡು ಎಳೆಎಳೆಯಾಗಿ ಬಿಡಿಸಿದ ವಿಚಾರ ವಿಧಾನ ವಿಶಿಷ್ಟವಾಗಿತ್ತು.</s> |
ಇಂತಹ ಕಿಕ್ಕಿರಿದ ಜಾಗಗಳಲ್ಲಿರುವ ನಿವಾಸಿಗಳ ಒಂದು ಕುಟುಂಬದಲ್ಲಿ ಕನಿಷ್ಟ ಐದಾರು ಸದಸ್ಯರಿರುತ್ತಾರೆ. ಅವರು ಬದುಕುವುದೂ ಒಂದು ಪುಟ್ಟ ಗುಡಿಸಲಿನಂತಹ 1010 ಚ. ಅಡಿಗಳ ಮನೆಗಳಲ್ಲಿ. ಆ ಮನೆಗಳಲ್ಲಿನ ರೂಮುಗಳು ಚಿಕ್ಕದಾಗಿದ್ದು, ಗಾಳಿ ಇಲ್ಲದೆ ಕೊಠಡಿ ಪೂರ್ತಿ ಬಿಸಿಯಾಗುತ್ತದೆ. ಹಾಗಾಗಿ ಜನರು ಬೇರೆ ದಾರಿಯಿಲ್ಲದ ಕಾರಣ ಹೊರಗೆ ಬರುತ್ತಾರೆ. ಶೌಚಾಲಯಗಳು ಸಾರ್ವಜನಿಕವಾಗಿದ್ದು, ನೂರಾರು ಜನರು ಒಂದೋಎರಡೋ ಸಾರ್ವಜನಿಕ ಶೌಚಗಳನ್ನು ಬಳಸುತ್ತಾರೆ. ಅಲ್ಲಿಯ ಹಲವು ಪುರುಷರು ಬೀದಿಯಲ್ಲೇ ಮಲಗುತ್ತಾರೆ. ಇಂತಹ ಜನರಿಗೆ ಈಗ ಕೊರೊನಾ ಸೋಂಕಿನ ಭಯವೂ ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.</s> |
ವಾಷಿಂಗ್ಟನ್: 2011ರಲ್ಲಿ ಅಮೆರಿಕವು ಪಾಕಿಸ್ತಾನದಲ್ಲಿ ನಡೆಸಿದ ದಾಳಿಯಲ್ಲಿ ವಶಪಡಿಸಿಕೊಂಡಿದ್ದ 4.70ಲಕ್ಷ ಹೆಚ್ಚುವರಿ ದಾಖಲೆಗಳನ್ನು ಕೇಂದ್ರೀಯ ತನಿಖಾ ಸಂಸ್ಥೆ (ಸಿಐಎ) ಗುರುವಾರ ಬಿಡುಗಡೆ ಮಾಡಿದೆ. ಈ ದಾಳಿಯಲ್ಲಿ ಅಲ್ಖೈದಾ ಮುಖ್ಯಸ್ಥ ಒಸಾಮ ಬಿನ್ ಲಾಡೆನ್ನ ಹತ್ಯೆಯಾಗಿತ್ತು.</s> |
ಬಾಗಲಕೋಟೆ3, ಬಳ್ಳಾರಿ18, ಬೆಳಗಾವಿ176, ಬೆಂಗಳೂರು ಗ್ರಾಮಾಂತರ59, ಬೆಂಗಳೂರು ನಗರ514, ಬೀದರ್3, ಚಾಮರಾಜ ನಗರ47, ಚಿಕ್ಕಬಳ್ಳಾಪುರ18, ಚಿಕ್ಕಮಗಳೂರು114, ಚಿತ್ರದುರ್ಗ30, ದಕ್ಷಿಣ ಕನ್ನಡ210, ದಾವಣಗೆರೆ28, ಧಾರವಾಡ19, ಗದಗ5, ಹಾಸನ202, ಹಾವೇರಿ9, ಕಲಬುರಗಿ11, ಕೊಡಗು81, ಕೋಲಾರ63, ಕೊಪ್ಪಳ12, ಮಂಡ್ಯ88, ಮೈಸೂರು294, ರಾಯಚೂರು2, ರಾಮನಗರ15, ಶಿವಮೊಗ್ಗ167, ತುಮಕೂರು136, ಉಡುಪಿ148, ಉತ್ತರ ಕನ್ನಡ49, ವಿಜಯಪುರ4, ಯಾದಿಗಿರಿ5.</s> |
ಕೊವಿಡ್ ವಾರಿಯರ್ಸ್ ಎಂದು ನೀವು ಕೊಡುವ ಬಿರುದು ಸನ್ಮಾನಗಳು ವೈದ್ಯರಿಗೆ ಬೇಕಾಗಿಲ್ಲ. ತಾವು ಕಷ್ಟಪಟ್ಟು ಜೀವ ಉಳಿಸಿದ್ದಕ್ಕಾಗಿ ರೋಗಿ ಥ್ಯಾಂಕ್ಸ್ ಹೇಳಬೇಕು ಅಂತಲೂ ಬಯಸುವುದಿಲ್ಲ. ಬಯಸುವುದು ಕನಿಷ್ಟ ಮರ್ಯಾದೆಯನ್ನಷ್ಟೇ. ಅವರು ಎಲ್ಲವನ್ನೂ ನಿಯಂತ್ರಿಸಬಲ್ಲ ದೇವರಲ್ಲ, ಅರಿಷಡ್ವರ್ಗಗಳಿರುವ ಸಾಮಾನ್ಯ ಮನುಷ್ಯರು ಎಂದು ಅರ್ಥ ಮಾಡಿಕೊಂಡರೆ ಸಾಕು.</s> |
ಎಸಿಇಸಿಸಿಯು ನಿರ್ಣಾಯಕ ಆರೈಕೆಗೆ ವಿಶಾಲ ಮತ್ತು ಸಕಾಲಿಕ ಪ್ರವೇಶವನ್ನು ಸಕ್ರಿಯಗೊಳಿಸುತ್ತದೆ ಮತ್ತು ತುರ್ತುಸ್ಥಿತಿ ಮತ್ತು ನಿರ್ಣಾಯಕ ವೈದ್ಯಕೀಯ ಸಂದರ್ಭಗಳಲ್ಲಿ ನಿರ್ವಹಣೆಯ ಪ್ರಮಾಣಿತ ವ್ಯಾಪ್ತಿಯನ್ನು ಮತ್ತು ಚಿಕಿತ್ಸೆಯನ್ನು ಅನುಷ್ಠಾನಗೊಳಿಸಲು ಸಹಾಯ ಮಾಡುತ್ತದೆ.</s> |
ರಾಜ್ಯದಲ್ಲಿರುವ ಕೃಷಿ ಮಾರುಕಟ್ಟೆಗಳ ಅಭಿವೃದ್ಧಿಗಾಗಿ 600 ಕೋಟಿ ಅನುದಾನ ಮಂಜೂರು ಮಾಡಬೇಕು, ಕಳೆದ ವರ್ಷ ಕನಿಷ್ಠ ಬೆಂಬಲಬೆಲೆ ಯೋಜನೆಯಡಿ 13.54 ಲಕ್ಷ ಕ್ವಿಂಟಲ್ ಕಡಲೆ ಖರೀದಿಸಲಾಗಿದ್ದು, ಬಾಕಿ ಇರಿಸಿಕೊಂಡಿರುವ 165 ಕೋಟಿ ಬಿಡುಗಡೆ ಮಾಡಬೇಕು ಎಂದು ಕೇಂದ್ರವನ್ನು ಒತ್ತಾಯಿಸಲಾಗಿದೆ ಎಂದು ಕುಮಾರಸ್ವಾಮಿ ಸುದ್ದಿಗಾರರಿಗೆ ತಿಳಿಸಿದರು.</s> |
ಈ ಸೀರೆಯ ಬಾರ್ಡರ್ ನಲ್ಲಿ ದೇಗುಲಗಳ ಚಿತ್ರಣವಿರುತ್ತದೆ. ಈ ಸೀರೆಗಳು ಸ್ವಲ್ಪ ಶೇಡ್ ಬಣ್ಣದಲ್ಲಿದ್ದು ನೋಡಲು ಅತ್ಯಾಕರ್ಷಕವಾಗಿರುತ್ತದೆ.</s> |
ಮ್ಯಾಗ್ಸೆಸ್ಸೆ ಫೌಂಡೇಶನ್ನಿಂದ 2015ರ ಮ್ಯಾಗ್ಸೆಸ್ಸೆ ಪ್ರಶಸ್ತಿ ಘೋಷಣೆಯಾದ ನಂತರ ಮಾತನಾಡಿದ ಚತುರ್ವೇದಿ, ಭ್ರಷ್ಟಾಚಾರ ಮತ್ತು ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಪ್ರಧಾನಮಂತ್ರಿ ಕಚೇರಿ ಹಿಂದೇಟು ಹಾಕುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸಾಮಾಜಿಕ ಕಾರ್ಯಕರ್ತ ಅಂಶು ಗುಪ್ತಾ ಅವರಿಗೆ ಕೂಡಾ ಮ್ಯಾಗ್ಸೆಸ್ಸೆ ಪ್ರಶಸ್ತಿ ದೊರೆತಿದೆ.</s> |
ಪಾನ್ಬೀಡಾ ಅಂಗಡಿಗಳಲ್ಲೂ ಅವರ ವ್ಯವಹಾರದ ಕುರಿತು ದಾಖಲೆಗಳನ್ನು ನಿರ್ವಹಿಸುತ್ತಾರೆ. ಆದರೆ, ಬಿಬಿಎಂಪಿ ಈ ವಿಚಾರದಲ್ಲಿ ಪಾನ್ ಅಂಗಡಿಗಳಿಗಿಂತಲೂ ಕಳಪೆ. ಜಾಹೀರಾತು ಪ್ರದರ್ಶನದಲ್ಲಿನ ಅಕ್ರಮದ ಕುರಿತು ನ್ಯಾಯಾಲಯ, ಮಾಧ್ಯಮ, ಸಾರ್ವಜನಿಕರು, ಲೋಕಾಯುಕ್ತ ಎಷ್ಟೇ ಗಮನ ಸೆಳೆದರೂ ಪಾಲಿಕೆಯಿಂದ ಯಾವುದೆ ಕೆಲಸ ಆಗಿಲ್ಲ. ಈ ವಿಚಾರದಲ್ಲಿ ಪಾಲಿಕೆ ಸಂಪೂರ್ಣ ಕಿವುಡು ಮತ್ತು ಕುರುಡಾಗಿದೆ. ಬಿಬಿಎಂಪಿ ಜಾಹೀರಾತು ವಿಭಾಗವನ್ನು ನೋಡಿದರೆ ಅವರಿಂದ ಯಾವ ಕ್ರಮವನ್ನೂ ನಿರೀಕ್ಷಿಸಲಾಗದುನ್ಯಾಯಮೂರ್ತಿ ಸುಭಾಷ್ ಬಿ.ಅಡಿ, ಉಪ ಲೋಕಾಯುಕ್ತರು</s> |
ಎಸ್ ಪಿ ಪಿಕ್ಚರ್ಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಚಿತ್ರಕ್ಕೆ ಶೈಲಜಾ ಪ್ರಕಾಶ್ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ರಾಜ್ ಕುಮಾರ್ ಆರ್ ಎಸ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿಬಿನ್ ರವರು ಸಂಗೀತ ನಿರ್ದೇಶಕರಾಗಿದ್ದಾರೆ. ಶಿನೋಬ್ ರವರ ಕ್ಯಾಮರಾ ಕೈಚಳದಿಂದ ವಿಭಿನ್ನವಾಗಿ ಮೂಡಿರುವ ಚಿತ್ರವು ಹೊಸ ಭರವಸೆಯನ್ನು ಮೂಡಿಸಿದೆ.</s> |
ಹುಣಸೂರು ಬಳಿ ಸಿಕ್ಕ 30 ಸಾವಿರ ಸೀರೆಗಳ ಬಗ್ಗೆಯೂ ದೂರು ನೀಡಿದ್ದೇವೆ. ಸೀರೆಗಳ ಮೇಲೆ ಬಿಜೆಪಿ ನಾಯಕ ಯೋಗೇಶ್ವರ್ ಭಾವಚಿತ್ರ ಇದೆ. ಯೋಗೇಶ್ವರ್ ಸೀರೆ ಹಂಚಿಕೆ ಮಾಡಿದ್ದಾರೆ. ಈ ನಗ್ಗೆಯೂ ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದು ಕೂಡಲೇ ಯೋಗೇಶ್ವರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.</s> |
ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 32ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ವಿರುದ್ದ ರಾಜಸ್ಥಾನ್ ರಾಯಲ್ಸ್ ರೋಚಕ ಜಯ ಸಾಧಿಸಿದೆ. ರಾಜಸ್ಥಾನ್ ರಾಯಲ್ಸ್ ನೀಡಿದ 185 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ಗೆ ಅಂತಿಮ ಓವರ್ನಲ್ಲಿ 4 ರನ್ಗಳ ಅವಶ್ಯಕತೆಯಿತ್ತು. ಆದರೆ ಕೊನೆಯ ಓವರ್ನಲ್ಲಿ ಕಾರ್ತಿಕ್ ತ್ಯಾಗಿ 2 ವಿಕೆಟ್ ಹಾಗೂ ಕೇವಲ 1 ರನ್ ನೀಡುವ ಮೂಲಕ ರಾಜಸ್ಥಾನ್ ರಾಯಲ್ಸ್ಗೆ 2 ರನ್ಗಳ ರೋಚಕ ಜಯ ತಂದುಕೊಟ್ಟರು. ಈ ಸೂಪರ್ ಗೆಲುವಿನ ಹೊರತಾಗಿಯೂ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ದಂಡಕ್ಕೆ ಗುರಿಯಾಗಿದ್ದಾರೆ.</s> |
ತಾಲೂಕಿನಲ್ಲಿ ಸುಮಾರು 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾದ ಭತ್ತದ ಕಟಾವು ಪ್ರಾರಂಭವಾಗಿದ್ದು, ಶೇ.40 ರಷ್ಟು ಕೊಯ್ಲು ಮುಗಿದಿದ್ದು, ಶೇ.60ರಷ್ಟು ಕೊಯ್ಲು ನಡೆಯುತ್ತಿದೆ. ರೈತರಿಗೆ ಈ ಬಾರಿ ಒಂದು ಎಕರೆಗೆ ಸರಾಸರಿ 40 ರಿಂದ 50 ಚೀಲ ಇಳುವರಿ ಬರುತ್ತಿದ್ದರೂ ಉತ್ತಮ ಬೆಲೆ ದೊರೆಯುತ್ತಿಲ್ಲ. ಕೇಂದ್ರ ಸರ್ಕಾರವು ಹಿಂಗಾರು ಹಂಗಾಮಿನಲ್ಲಿ ಭತ್ತಕ್ಕೆ ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರ ಪ್ರಾರಂಭಿಸಬೇಕಾಗಿತ್ತು. ಆದರೆ ಕೊರೊನಾ ಎಫೆಕ್ಟ್ ಹಿನ್ನೆಲೆಯಲ್ಲಿ ಈವರೆಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿಲ್ಲ. ಖರೀದಿ ಕೇಂದ್ರವನ್ನು ತೆರೆಯಲು ಅನುಮತಿ ನೀಡಿಲ್ಲ. ಇದರಿಂದಾಗಿ ರೈತರು ವ್ಯಾಪಾರಿಗಳು ನಿಗದಿಪಡಿಸಿದ ಬೆಲೆಗೆ ಭತ್ತ ಮಾರುತ್ತಿದ್ದಾರೆ.</s> |
ವಿಶ್ವವಿದ್ಯಾಲಯಗಳ ವಿಭಾಗದಲ್ಲಿ ಐಐಎಸ್ಸಿ ಬೆಂಗಳೂರು ಮೊದಲನೇ ಸ್ಥಾನವನ್ನು ಪಡೆದುಕೊಂಡಿರೆ, ಜೆಎನ್ಯು ಹಾಗೂ ಬಿಹೆಚ್ಯು ಕ್ರಮವಾಗಿ ಎರಡನೆ ಹಾಗೂ ಮೂರನೇ ಶ್ರೇಯಾಂಕವನ್ನು ಪಡೆದಿವೆ.</s> |
ಓಮನ್ ಚಾಂಡಿಗೆ ಸೋಲಾರ್ ಫಲಕಗಳ ಕಾವು</s> |
ಅಗತ್ಯ ದಾಖಲೆ ನೀಡಿ ಸೌಲಭ್ಯ ಪಡೆಯಿರಿ</s> |
ರೈತರು ಮಾವೋವಾದಿಗಳು ಹಾಗೂ ನಕ್ಸಲಿಯರ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ</s> |
ನಗು, ಭಯದ ಕೂಗು, ಅಪ್ಪುಗೆ, ಉದ್ವಿಗ್ನತೆ, ಕರ್ಮ</s> |
ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.</s> |
ವಿಗ್ರಹದ ಎಡಗೈ ಭಾಗದ ಅವಶೇಷ ಪೊಲೀಸರ ವಶದಲ್ಲಿದೆ. ದಾವಣಗೆರೆಯ ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಈ ಬಗ್ಗೆ ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್ಐ ಉಮೇಶ್ ಕುಮಾರ್ ತಿಳಿಸಿದರು.</s> |
ಕನ್ನಡಮ್ಮ ಸುದ್ದಿಲೋಕಃ ಚನ್ನಮ್ಮ ಕಿತ್ತೂರು</s> |
ಮೈಸೂರು ದಸರಾ ಸಂಭ್ರಮ: ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ</s> |
ಆದರೆ ಸಚಿವರ ಸದರೀ ಉತ್ತರಕ್ಕೆ ಪ್ರತಿಕ್ರಿಯಿಸಿರುವ ಸಂಸದ ರಮೇಶ ಕತ್ತಿ, ಕಳೆದ ಮೂರು ವರ್ಷಗಳಿಂದ ಇದೇ ಬೇಡಿಕೆಗಳನ್ನು ಹಲವಾರು ಬಾರಿ ಮುಂದಿಟ್ಟರೂ ಸಹ ಈ ಬಗ್ಗೆ ಕೇಂದ್ರ ಗಮನಹರಿಸದಿರುವುದು ವಿಷಾದನೀಯ. ಅಲ್ಲದೇ ಈಗಾಗಲೇ ಕೇಂದ್ರ ರೇಲ್ವೆ ಬೋರ್ಡ ಕಳೆದ ಅಕ್ಟೌಬರ 2011ರಲ್ಲಿ ಮುಂಬಯಿ ಸೆಂಟ್ರಲ್ ರೇಲ್ವೆ ವಿಭಾಗಕ್ಕೆ ಮಿರಜಹುಬ್ಬಳ್ಳಿ ನಡುವೆ ಸಂಚರಿಸುವ ರೈಲುಗಳಿಗೆ ಜೋಡಿಸಲು ಹೆಚ್ಚುವರಿಯಾಗಿ 15 ಬೋಗಿಗಳನ್ನು ನೀಡಿದೆ. ಆದರೂ ಸಹ ಅವುಗಳನ್ನು ಈ ರೈಲುಗಳಿಗೆ ಜೋಡಿಸಲಾಗಿಲ್ಲ. ಈ ಕುರಿತು ಮಾಹಿತಿ ನೀಡದೇ ಇರುವ ಬಗ್ಗೆ ಕೇಂದ್ರ ರೇಲ್ವೆಯ ರಾಜ್ಯ ಸಚಿವ ಮುನಿಯಪ್ಪನವರ ಹಾರಿಕೆ ಉತ್ತರಕ್ಕೆ ಆಕ್ಷೇಪಿಸಿದ್ದಾರೆ. ಆದುದರಿಂದ, ಇನ್ನಾದರೂ ಕೇಂದ್ರ ಸಚಿವರು ಅಧಿಕಾರಿಗಳಿಂದ ಸೂಕ್ತ ಮಾಹಿತಿ ಪಡೆದುಕೊಳ್ಳಬೇಕು ಹಾಗೂ ಸದರೀ ರೈಲುಗಳಿಗೆ ತಕ್ಷಣ ಹೆಚ್ಚುವರಿ ಬೋಗಿಗಳನ್ನು ಆದೇಶ ನೀಡಬೇಕೆಂದು ಒತ್ತಾಯಿಸಿದ್ದಾರೆ.</s> |
ಕೊಕೊದ ಇನ್ನೊಂದು ಅಪಾಯವೆಂದರೆ ಅದು ಅಲರ್ಜಿಯನ್ನು ಉಂಟುಮಾಡುತ್ತದೆ. ತಜ್ಞರು ಇದನ್ನು ಹೆಚ್ಚು ಅಲರ್ಜಿ ಉತ್ಪನ್ನಗಳು ಎಂದು ಹೇಳುತ್ತಾರೆ. ಆದ್ದರಿಂದ, ಕೆಲವು ವೈದ್ಯರು ಸಾಮಾನ್ಯವಾಗಿ ಆಹಾರ ಸೇವಿಸುವಾಗ ಕುಡಿಯಲು ಸಲಹೆ ನೀಡುತ್ತಾರೆ, ವಿಶೇಷವಾಗಿ ಬೇಬಿ ಅಥವಾ ತಾಯಿ ಅಲರ್ಜಿಯ ಪ್ರತಿಕ್ರಿಯೆಗಳಿಗೆ ಒಳಗಾಗುತ್ತಾರೆ. ಜಿ.ವಿ.ಯೊಂದಿಗಿನ ಕೋಕೋ ಕುಡಿಯಬಹುದು ಎಂದು ಎಚ್ಚರಿಕೆಯ ಬೆಂಬಲಿಗರಾದ ಇತರ ವೈದ್ಯರು ಇವೆ, ಆದರೆ ಎಚ್ಚರಿಕೆಯಿಂದ.</s> |
ಗೋಪಾಲಗೌಡರು ದನಕಾಯುವ ಕಾಯಕ ದಲ್ಲಿ ತೊಡಗಿದ್ದಾಗ ಒಂದು ದಿನ ಒಂದು ಘಟನೆ ನಡೆಯಿತೆಂದು ಪ್ರತೀತಿ.</s> |
ಕಲಬುರಗಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಮಧ್ಯೆಯೇ ಬುಧವಾರ ಒಂದೇ ದಿನ ಒಟ್ಟು 66 ಜನ ಪೀಡಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.</s> |
ರಾಜಧಾನಿ. ಕಾಂಚಿಪುರಂ</s> |
ಮಧುಮೇಹ ಮೆಲ್ಲಿಟಸ್ನ ಯಾವುದೇ ಹಂತ</s> |
ರಾಮದೇವ್ ವ್ಯಾಪಾರಿ ದಿಗ್ವಿಜಯ ಸಿಂಗ್(ಮೊರಾದಾಬಾದ್ ಉತ್ತರಪ್ರದೇಶ ವರದಿ): ಭ್ರಷ್ಟಾಚಾರದ ವಿರುದ್ಧ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿರುವ ಯೋಗ ಗುರು ರಾಮ್ದೇವ್ ಸನ್ಯಾಸಿಗಿಂತಲೂ ಹೆಚ್ಚಾಗಿ ವ್ಯಾಪಾರಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ ಸಿಂಗ್ ಟೀಕಿಸಿದ್ದಾರೆ.</s> |
ಕ್ಷಣ ಕ್ಷಣದಲ್ಲಿ</s> |
ಇಂದು ನಾನೊಬ್ಬರ ಮನೆಗೆ ಬಂದಿದ್ದೇನೆ. ಅವರ ಮನೆಯ ತೋಟದಲ್ಲಿ ಎತ್ತರದ ಗೊಡೆಯ ಮೇಲೆ ಒಂದು ಸುಂದರವಾದ ಹಿತ್ತಾಳೆಯ ಫಲಕದ ಮೇಲೆ ಮುದ್ದಾಗಿ ಈ ಮಾತನ್ನು ಕೆತ್ತಿದ್ದಾರೆ, ದಯವಿಟ್ಟು ಇಂದೇ ಸಂತೋಷಪಡಿ. ಆ ಸಂತೋಷ ನೀವಂದುಕೊಂಡದ್ದಕ್ಕಿಂತ ದೂರವಿದೆ. ಮೊದಲು ನನಗೆ ಮಾತಿನ ಆರ್ಥವಾಗಲಿಲ್ಲ. ಮನೆಯ ಯಜಮಾನಿ ಅರ್ಥ ವಿವರಿಸಿದಳು. ನಾವು ಸಂತೋಷಪಡುವ ಗಳಿಗೆಗಳನ್ನು ನಾಳೆ, ನಾಡಿದ್ದು ಮುಂದಿನ ತಿಂಗಳು ಎಂದು ಮುಂದೂಡುತ್ತಲೇ ಬರುತ್ತೇವೆ. ಯಾರಿಗೆ ಗೊತ್ತು ಆ ಗಳಿಗೆಗಳು ನಾವಂದುಕೊಂಡದ್ದಕ್ಕಿಂತ ದೂರವಿರಬಹುದು ಅಥವಾ ಬಾರದೆ ಹೋಗಬಹುದು. ಆದ್ದರಿಂದ ತಾವೂ ಸ್ವಲ್ಪ ಹೊರಹೋಗಿ, ವಿಶ್ರಾಂತಿ ತೆಗೆದುಕೊಂಡು ಸಂತೋಷಪಡುವುದು ಒಳ್ಳೆಯದು ಮಾರ್ಗರೆಟ್</s> |
ನಿಮ್ಮ ವೈದ್ಯರು ಬ್ಯಾಕ್ಟೀರಿಯಾ, ವೈರಸ್ ಅಥವಾ ಪರಾವಲಂಬಿಗಳ ಕಾರಣದಿಂದಾಗಿ ಸೋಂಕು ಪರೀಕ್ಷಿಸಲು ಸ್ಟೂಲ್ ಮಾದರಿಯನ್ನು ಬಯಸುತ್ತಾರೆ. ಅವರು ಕೊಲೊನೋಸ್ಕೋಪಿ ಅಥವಾ ಹೊಂದಿಕೊಳ್ಳುವ ಸಿಗ್ಮೋಯ್ಡೋಸ್ಕೋಪಿಗಳಂತಹ ಸ್ಕ್ರೀನಿಂಗ್ ಪರೀಕ್ಷೆಗೆ ಸಹ ನಿಮಗೆ ಕಳುಹಿಸಬಹುದು, ಇವೆರಡೂ ಕಾರ್ಯವಿಧಾನಕ್ಕೆ ಮುಂಚೆಯೇ ಸಂಪೂರ್ಣವಾಗಿ ನಿಮ್ಮ ಬಣ್ಣವನ್ನು ಖಾಲಿ ಮಾಡುವ ಅಗತ್ಯವಿರುತ್ತದೆ. ಇದು ಆಹ್ಲಾದಕರವಲ್ಲ, ಆದರೆ ಅನೇಕ ಜನರು ತಾವು ನಿರೀಕ್ಷಿಸಿದಷ್ಟು ಕೆಟ್ಟದ್ದಲ್ಲ ಎಂದು ವರದಿ ಮಾಡಿದ್ದಾರೆ. ಸಾಧ್ಯವಾದಷ್ಟು ಸ್ಕ್ರೀನಿಂಗ್ ಕುರಿತು ಹೆಚ್ಚಿನ ಮಾಹಿತಿಗಾಗಿ ನಿಮ್ಮ ವೈದ್ಯರನ್ನು ಕೇಳಿ, ನೀವು ತಯಾರಿಸಿದ್ದೀರಿ .</s> |
ಪಬ್ ಜಿ ಆಡಳಿತ ಮಂಡಳಿ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದ್ದು, ಅಕ್ಟೋಬರ್ 30ರಿಂದ ಭಾರತದಲ್ಲಿ ತನ್ನ ಸೇವೆ ನಿಲ್ಲಿಸಿದ್ದೇವೆ ಎಂದು ತಿಳಿಸಿದೆ.</s> |
ಸ್ಮಾರ್ಟ್ ಸಿಟಿ ಯೋಜನೆ ಚುರುಕುಗೊಳಿಸಲು ಒತ್ತಾಯ</s> |
ಹಲವು ವರ್ಷಗಳಿಂದ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ತಂಡದ ಪ್ರಮುಖ ಭಾಗವಾಗಿದ್ದ ಗ್ಲೆನ್ ಮ್ಯಾಕ್ಸ್ವೆಲ್ ಕಳೆದ ಆವೃತ್ತಿಯಲ್ಲಿ ಕಳಪೆ ನಿರ್ವಹಣೆಯಿಂದ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಸರಾಸರಿ 22 ರಂತೆ ರನ್ಗಳಿಸಿದ್ದರು. ಒಟ್ಟಾರೆ 82 ಪಂದ್ಯಗಳಿಂದ 1505 ರನ್ ಪೇರಿಸಿರುವ ಮ್ಯಾಕ್ಸ್ವೆಲ್ ಭಾರಿ ಬೆಲೆಗೆ ಸೇಲಾಗುವ ಸಾಧ್ಯತೆಗಳಿವೆ. ಆರ್ಸಿಬಿ ಹಾಗೂ ಸಿಎಸ್ಕೆ ತಂಡಗಳು ಮ್ಯಾಕ್ಸ್ವೆಲ್ ಕೊಂಡುಕೊಳ್ಳಲು ಆಸಕ್ತಿ ವಹಿಸಿವೆ ಎಂದು ಹೇಳಲಾಗಿದೆ. ಉತ್ತಮ ಫಾರ್ಮ್ನಲ್ಲಿರುವ ಮೊಯಿನ್ ಅಲಿ, ಹಾಗೆಯೇ ಶಕೀಬ್ ಕೂಡ ದೊಡ್ಡ ಮೊತ್ತದ ನಿರೀಕ್ಷೆಯಲ್ಲಿದ್ದಾರೆ.</s> |
ಡಬ್ಲಿನ್ನ ಸೇಂಟ್ ಜೇಮ್ಸ್ ಆಸ್ಪತ್ರೆಯಲ್ಲಿ ಕೈ ಗೊಂಡ ಈ ಅಧ್ಯಯನವನ್ನು ಮಾರ್ಚ್ ಮತ್ತು ಮೇ 2020ರಲ್ಲಿ ಕೋವಿಡ್ ಕಾಯಿಲೆಗೆ ಒಳಗಾದ 153 ರೋಗಿಗಳಲ್ಲ75 ದಿವಸಗಳ ನಂತರ ಕೈಗೊಳ್ಳಲಾಗಿತ್ತು. ಅದರಲ್ಲಿ ಅರ್ಧದಷ್ಟು ರೋಗಿಗಳು ಆಸ್ಪತ್ರೆಗೆ ದಾಖ ಲಾದವರು, ಇನ್ನರ್ಧ ಮನೆಯಲ್ಲಿಯೇ ಚಿಕಿತ್ಸೆ ತೆಗೆದುಕೊಂಡವರು. ಈ ಎರಡೂ ಗುಂಪಿನ ರೋಗಿ ಗಳಲ್ಲಿ ತೀವ್ರತರವಾದ ಸುಸ್ತಿನ ಲಕ್ಷಣಗಳು ಇದ್ದವು. ಈ ಅಧ್ಯಯನದ ಮುಖ್ಯಸ್ಥ ಡಾ.ಲಿಯಾಮ್ ಟೌನ್ ಸೆಂಡ್ ಕೆಲವು ಧನಾತ್ಮಕ ಅಂಶ</s> |
ಶನಿವಾರ ರಾತ್ರಿ ಅಮಿತಾಭ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರಿಗೆ ಕೊರೊನಾ ಸೋಂಕು ದೃಢವಾದ ಬೆನ್ನಲ್ಲೇ ಭಾನುವಾರ (ಜುಲೈ 12) ಅವರ ಕುಟುಂಬದ ಇನ್ನಿಬ್ಬರಿಗೆ ಸೋಂಕು ದೃಢವಾಗಿದೆ. ಅಭಿಷೇಕ್ ಪತ್ನಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಮಗಳು ಆರಾಧ್ಯಾ ಬಚ್ಚನ್ಗೂ ಸೋಂಕು ತಗುಲಿರುವುದು ಖಚಿತಗೊಂಡಿದೆ. ಅಭಿಷೇಕ್ ಬಚ್ಚನ್ ಈ ವಿಚಾರವನ್ನು ಖಚಿತಪಡಿಸಿದ್ದಾರೆ.</s> |
ಬೆಳ್ಳಿ ಪರದೆ ಮೇಲೆ ಯುವ ಪಡೆಗಳೆಲ್ಲ ಸೇರಿಕೊಂಡು ಕಟ್ಟುಕಥೆಯನ್ನು ಹೇಳಲು ಹೊರಟಿದ್ದಾರೆ. ಈ ವಾರ ಚಿತ್ರವು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೊಳ್ಳುತ್ತಿದೆ. ರಾಜ್ ಪ್ರವೀಣ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಕಟ್ಟುಕಥೆ ಚಿತ್ರವು ಕೆಲ ನೈಜ ಘಟನೆಗಳನ್ನು ಒಳಗೊಂಡಂತೆ ಒಂದು ಕ್ರೈಂ ಥ್ರಿಲ್ಲರ್ ಕಥಾನಕವನ್ನು ತೆರೆಮೇಲೆ ಬರುತ್ತಿದೆ. ಹಿರಿಯ ನಟ ರಾಜೇಶ್ ನಟರಂಗ ಈ ಚಿತ್ರದಲ್ಲಿ ಒಬ್ಬ ಕ್ರೈಂ ಪೊ ಲೀಸ್ ಆಫೀಸರ್ ಆಗಿ ಪಾತ್ರ ನಿರ್ವಹಿಸಿದ್ದಾರೆ. ಮೈಸೂರಿನ ಮಹಾಲಕ್ಷ್ಮಿ ಸ್ವೀಟ್ಸ್ನ ಮಹಾದೇವ್ ಇದೇ ಮೊದಲ ಬಾರಿಗೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಸಹನಿರ್ಮಾಪಕಿಯಾಗಿ ಸವಿತಾ ಅವರು ಕೆಲಸ ಮಾಡಿದ್ದಾರೆ.</s> |
ಕನ್ನಡದ ಊರ್ವಿ, ಭೂತಕಾಲ ಸಿನಿಮಾಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.</s> |
ಕೃಷಿ, ಗ್ರಾಮೀಣಾಭಿವೃದ್ಧಿ, ಉದ್ಯೋಗ ಸೃಷ್ಟಿಗಾಗಿ 40,000 ಕೋಟಿ ನೀಡಿದ್ದೇವೆ.</s> |
ಮಗುವಿನ ಮೊದಲ ವರ್ಷದ ಹುಟ್ಟುಹಬ್ಬಕ್ಕೂ ತಂಗಿಯದ್ದೂ ಅದೇ ಪ್ರಶ್ನೆ. ಅಣ್ಣ ಒಂದು ವರ್ಷದಲ್ಲಿ ಒಂದು ದಿನವೂ ಅವರಿಗೆ ರಜೆ ಸಿಗಲಿಲ್ವಂತಾ? ಅಣ್ಣನದ್ದು ಅದೇ ಉತ್ತರ, ಬರ್ತಾರೆ ಕಣಮ್ಮ, ಎಲ್ಲಿಗೆ ಹೋಗ್ತಾರೆ. ನಿನ್ನ ನನ್ನ ನೋಡೋಕೆ ಅಲ್ಲದಿದ್ರೂ ಸಕ್ಕರೆಗೊಂಬೆಯಂಥ ಮಗಳನ್ನು ನೋಡೋಕಾದ್ರೂ ಬಂದೇ ಬರ್ತಾರೆ.</s> |
ಒಂದು ವೇಳೆ ವ್ಯಕ್ತಿ ಈಗಾಗಲೇ ಲಘು ಹೃದಯಾಘಾತವನ್ನು ಹಿಂದೆ ಅನುಭವಿಸಿದ್ದಿದ್ದರೆ ಹೃದಯ ಸ್ತಂಭನದ ಸಾಧ್ಯತೆಯೂ ಇವರಿಗೆ ಹೆಚ್ಚಾಗಿರುತ್ತದೆ. ಲಘು ಹೃದಯಾಘಾತವಾದ ನಂತರದ ಆರು ತಿಂಗಳುಗಳು ಇವರಿಗೆ ಅತ್ಯಂತ ಮುಖ್ಯವಾಗಿದ್ದು ಈ ಅವಧಿಯಲ್ಲಿ ಹೃದಯ ಸ್ತಂಭನವಾಗುವ ಸಾಧ್ಯತೆಯೂ ಗರಿಷ್ಟವಾಗಿರುತ್ತದೆ.</s> |
ಸಂತೋಷ ರಾ. ಬಡಕಂಬಿ ಅಥಣಿ ಕೃಷ್ಣಾ ನದಿ ಸೇರಿದಂತೆ ನೀರಿನ ಎಲ್ಲ ಮೂಲಗಳು ...</s> |
ಆನುವಂಶಿಕತೆಯ ನೋಂದಣಿ ನಲ್ಲಿ</s> |
ಇದು ಹಿಪಾಡ್ನ ಸಹಭಾಗಿತ್ವದಲ್ಲಿದೆ. 10000 ಪವರ್ ಬ್ಯಾಂಕ್ ಬೆಲೆ 799 ಆಗಿದೆ, 20000 ಸಾಮರ್ಥ್ಯದ ರೂಪಾಂತರ 1,499 ಮತ್ತು ಈ ಪವರ್ಬ್ಯಾಂಕ್ ಡಿಸೆಂಬರ್ 23 ರಿಂದ ಚಿಲ್ಲರೆ ವ್ಯಾಪಾರಿಗಳೊಂದಿಗೆ ಲಭ್ಯವಿರುತ್ತದೆ. ಮತ್ತು ಜನವರಿಯಿಂದ ಆಫ್ಲೈನ್ ಅಂಗಡಿಗಳಲ್ಲಿ ಲಭ್ಯವಿರುತ್ತದೆ.</s> |
ಮೊಬೈಲ್ ಫೋನ್ಗೆ ಸುರಕ್ಷತೆ</s> |
ನಗದು ರಹಿತ ವಹಿವಾಟು ಉತ್ತೇಜನಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜಾರಿಗೆ ತಂದಿರುವ ಇಟೋಲ್ ಸಂಗ್ರಹ ವ್ಯವಸ್ಥೆಯೇ ಫಾಸ್ಟಾಗ್. ಈ ಸೌಲಭ್ಯ ಪಡೆಯಲು ವಾಹನ ಮಾಲೀಕರು ಬ್ಯಾಂಕ್ನಲ್ಲಿ ಫಾಸ್ಟಾಗ್ ಪ್ರಿಪೇಯ್ಡ ಖಾತೆ ತೆರೆದು, ಮುಂಗಡ ಹಣ ತುಂಬಬೇಕು. ಬಳಿಕ ವಾಹನದ ಮುಂಭಾಗದ ಗಾಜಿಗೆ ರೇಡಿಯೋ ತರಂಗಾಂತರಗಳನ್ನು ಒಳಗೊಂಡ ಫಾಸ್ಟಾಗ್ ಸ್ಟಿಕ್ಕರ್ ಅಂಟಿಸಲಾಗುವುದು. ಈ ಸ್ಟಿಕ್ಕರ್ ಹೊಂದಿರುವ ವಾಹನ ಟೋಲ್ ಸಮೀಪ ಬಂದ ಕೂಡಲೇ ಅಲ್ಲಿ ಅಳವಡಿಸಿರುವ ಟ್ಯಾಗ್ ರೀಡರ್ ಸಾಧನ ವಾಹನದ ಮೇಲಿನ ಸ್ಟಿಕ್ಕರ್ ಸ್ಕ್ಯಾನ್ ಮಾಡುತ್ತದೆ. ತಕ್ಷಣ ಮಾಲೀಕರ ಖಾತೆಯಿಂದ ಹಣ ಕಡಿತವಾಗಿ, ವಾಹನಗಳ ಸಂಚಾರಕ್ಕೆ ಇರುವ ತಡೆ ತೆರೆದುಕೊಳ್ಳುತ್ತದೆ. ಹಣ ಕಡಿತವಾದ ಸಂದೇಶ ವಾಹನ ಮಾಲೀಕರ ಮೊಬೈಲ್ಗೆ ಹಾಗೂ ಜಮೆಯಾದ ಸಂದೇಶ ಟೊಲ್ ಕೇಂದ್ರಕ್ಕೆ ರವಾನೆಯಾಗುತ್ತದೆ.</s> |
ಮಹಾಮನೆ : ಶ್ರೀ ಶಿವಮೂರ್ತಿ ಮುರುಗ ರಾಜೇಂದ್ರ ಮಹಾಸ್ವಾಮಿಗಳ ಜತೆಯಲ್ಲಿ ಬಸವತತ್ವ ಪ್ರಸಾರದಲ್ಲಿ ನೆರವಾಗುತ್ತಿರುವ ಸಿದ್ಧರಾಮ ಸ್ವಾಮಿಗಳು ಅಮೆರಿಕದಲ್ಲಿ ತಾವು ಹೋದೆಡೆಯಲ್ಲೆಲ್ಲಾ ಮಹಾಮನೆ ಕಾರ್ಯಕ್ರಮ ನಡೆಸಲಿದ್ದಾರೆ. ಅಮೆರಿಕೆಯಲ್ಲಿರುವ ಕುಲ ಬಾಂಧವರನ್ನೆಲ್ಲಾ ಒಂದು ಮನೆಯಲ್ಲಿ ಸೇರಿಸಿ, ಬಸವ ತತ್ವದ ಬಗ್ಗೆ ಸ್ವಾಮಿಗಳು ಉಪನ್ಯಾಸ ನೀಡಲಿದ್ದಾರೆ.</s> |
ಎಲ್ಲವೂ ಸಿದ್ಧವಾದಾಗ, ನೀವು ಹೊಲಿಗೆಗೆ ಮುಂದುವರಿಯಬಹುದು. ಇದನ್ನು ಮಾಡಲು, ರೆಕ್ಕೆಗಳ ಖಾಲಿಗಳಲ್ಲಿ ಗರಿಗಳನ್ನು ಇರಿಸಿ, ಕೆಳಗಿನಿಂದ ಪ್ರಾರಂಭಿಸಿ ಮತ್ತು ಅವುಗಳನ್ನು ಸೇರಿಸು.</s> |
ಕಾಮಾಕ್ಷಿಪಾಳ್ಯ ವ್ಯಾಪ್ತಿಯ ಚಂದನ ಲೇಔಟ್ ನಲ್ಲಿ ಮೂರು ತಿಂಗಳ ಹಿಂದೆಯಷ್ಟೆ ತಂದಿದ್ದ ಹೊಸ ಕಾರನ್ನು ಕದ್ದೊಯ್ದಿದ್ದರು. ಹೊಸ ಕಾರು ಕಳ್ಳತನವಾಗಿದೆ ಎಂದು ಮಾಲೀಕ ಚಂದ್ರೇಗೌಡರಿಂದ ದೂರು ನೀಡಿದ್ದು, ದೂರು ದಾಖಲಿಸಿಕೊಂಡ ಪೊಲೀಸರು ತಮಿಳುನಾಡಿನ ತಿರುಚ್ಚಿಯಲ್ಲಿ ಕಳ್ಳರಿಗೆ ಬಲೆ ಬೀಸಿ ಸೆರೆ ಹಿಡಿದಿದ್ದಾರೆ.</s> |
ಜನತೆಯ ಆಶೋತ್ತರಗಳಿಗೆ ಸ್ಪಂದಿಸದೇ ಉಳಿತಾಯ ಬಜೆಟ್ ಆಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ನಗರ ಸಭೆ ವ್ಯಾಪ್ತಿಯ ಹಳ್ಳಿಗಳ ಏಳ್ಗೆಯತ್ತ ಈವರೆಗೂ ಭರವಸೆ ಮುಂದುವರಿದಿದೆ. ಈ ಬಾರಿ ಬಜೆಟ್ ಗಮನಹರಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.ಶೌಚಾಲಯ ನಿರ್ಮಾಣಕ್ಕೆ, ಅದರಲ್ಲೂ ಮಹಿಳೆಯರಿಗೆ ಶೌಚಾಲಯ ನಿರ್ಮಾಣದ ಪ್ರಸ್ತಾಪ ಗಮನಾರ್ಹ ಸಂಗತಿ. ಇದಕ್ಕಾಗಿ ಇನ್ನೂ ಹೆಚ್ಚಿನ ಅನುದಾನ ಇಡುವುದು ಸೂಕ್ತ. ಖಾಲಿ ಇರುವ ನಿವೇಶನ ಪ್ರದೇಶದಲ್ಲಿ ಆಶ್ರಯ ಯೋಜನೆಡಿ ಹೊಸ ಫಲಾನುಭವಿಗಳಿಗೆ ಮನೆ ಕಟ್ಟಿ ಕೊಡಬೇಕು. ರಾಂಪುರ ಜಲಾಶಯದಿಂದ ನೇರವಾಗಿ ಆಸ್ಕಿಹಾಳ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆಗೆ ಪೈಪ್ ಲೈನ್ ನಿರ್ಮಿಸಬೇಕು ಎಂದು ಸದಸ್ಯ ಸುಭಾಸ್ ಕೋರಿದರು.</s> |
ಇದರ ಜೊತೆಗೆ, ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಈ ಕ್ಯಾಮರಾಗಳಲ್ಲಿರುವ ಫೂಟೇಜ್ಗಳನ್ನು ಸಾಕ್ಷಿಯಾಗಿ ಬಳಸಬಹುದು. ಈ ಕ್ಯಾಮೆರಾಗಳು 100 ಮೀಟರ್ಗಿಂತ ಹೆಚ್ಚು ದೂರದಿಂದ ಫೋಟೋ ಹಾಗೂ ವೀಡಿಯೊಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ.</s> |
ಅಷ್ಟೇ ಅಲ್ಲದೇ ಅಂಬರೀಶ್ ಅವರು ಕೂಡ ನನ್ನ ಬೆಂಬಲಿಸಿದ್ದಾರೆ. ನನ್ನ ಪರ ಪ್ರಚಾರಕ್ಕೆ ಬರುವುದು ಅವರ ಇಚ್ಚೆಗೆ ಬಿಟ್ಟದ್ದು. ನಾನು ಅವರನ್ನು ಕೇಳಿಕೊಂಡಿದ್ದೇನೆ. ಆಗ ಅಂಬರೀಶ್ ದೇವರು ನಿನಗೆ ಒಳ್ಳೆದು ಮಾಡುತ್ತಾನೆ ಹೋಗು ಎಂದಿದ್ದಾರೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.</s> |
ಯಾವ ರೀತಿಯಲ್ಲಿ ಬ್ಯಾಟ್ ಮಾಡಬೇಕು ಎಂಬುದು ರಿಷಭ್ ಪಂತ್ ಗೆ ಗೊತ್ತಿದ್ದು, ಉತ್ತಮ ಬ್ಯಾಟ್ಸ್ ಮನ್ ಆಗಿ ಹೊರಹೊಮ್ಮುತ್ತಾರೆ. ವೀಕ್ಷಕ ವಿವರಣೆ ಕೊಠಡಿಯಲ್ಲಿ ರಿಷಭ್ ಪಂತ್ ಮತ್ತೊಬ್ಬ ಗಿಲ್ ಕ್ರಿಸ್ಟ್ ಎಂದು ಮಾತನಾಡಿರುವುದಾಗಿ ಪಾಟಿಂಗ್ ಸುದ್ದಿಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.</s> |
ಮೈಸೂರು : ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ, ಫೋಟೋ ತೆಗೆದುಕೊಳ್ಳಲು ಹೋಗಿ ಅನೇಕರು ಸಾವನ್ನಪ್ಪಿದ್ದಾರೆ. ಅಂತಹುದೇ ಘಟನೆ ಮೈಸೂರಿನಲ್ಲಿ ನಡೆದಿದೆ. ರೈಲಿನ ಮೇಲೆ ನಿಂತು ಫೋಟೋ ತೆಗೆಸಿಕೊಳ್ಳುವ ವೇಳೆ ವಿದ್ಯುತ್</s> |
ಅಳುವಾಗಲೇ ಚಿರಂಜೀವಿಯಾಗಿಬಿಟ್ಟಿದೆ</s> |
ಆದರೆ ಆರತಿ ಸಿಂಗ್ರ ಈ ಮುಖಭಾವ ಕಂಡ ನೆಟ್ಟಿಗರು ನಟಿಯ ಕಾಲೆಳೆದಿದ್ದಾರೆ. ಕಮೆಂಟ್ದಾರರಲ್ಲಿ ಒಬ್ಬರು ಇಂಜೆಕ್ಷನ್ ಅಂದರೆ ಭಯ ಇರುವ ನೀವು ಟ್ಯಾಟೂ ಹೇಗೆ ಹಾಕಿಸಿಕೊಂಡಿರಿ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಓವರ್ ಆಕ್ಟಿಂಗ್, ನಾಟಕ ಎಂದೆಲ್ಲ ವ್ಯಂಗ್ಯ ಮಾಡಿದ್ದಾರೆ.</s> |
ಏಸರ್ ಲಿಕ್ವಿಡ್ 220 ವಿಮರ್ಶೆ</s> |
ಪ್ರೀಇನ್ಸ್ಟಾಲ್ಡ್ ಸಾಫ್ಟ್ ವೇರ್: ವಿಂಡೋಸ್ 10 ಹೋಮ್, ಎಂಎಸ್ ಆಫೀಸ್ ಹೋಮ್ ಹೋಮ್ & ಸ್ಟುಡೆಂಟ್ 2016 ಬಾಕ್ಸ್ ನಲ್ಲಿ: ಲ್ಯಾಪ್ ಟಾಪ್, ಬ್ಯಾಟರಿ, ಎಸಿ ಅಡಾಪ್ಟರ್</s> |
ಈ ನಿಯಮಾವಳಿಗಳನ್ನು ಮಾನವ ಸಂಪನ್ಮೂಲ ಸಚಿವಾಲಯದ ಜೊತೆಗೆ ವಿನಿಮಯ ಮಾಡಿಕೊಳ್ಳಲಾಗಿದೆ.</s> |
ನಾನೊಬ್ಬನೇ ನೀರು ತಂದಿಲ್ಲ: ನನ್ನನ್ನು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಟೀಕಿಸಿರುವುದು ಮನಸ್ಸಿಗೆ ಬಹಳ ನೋವುಂಟು ತಂದಿದೆ ಎಂದು ರಘುಮೂರ್ತಿ ಹೇಳಿದರು. ಭದ್ರಾ ಮೇಲ್ದಂಡೆ ಯೋಜನೆಯ ಹೋರಾಟದ ಅರಿವಿದೆ. ನಾನೊಬ್ಬನೇ ನೀರು ತಂದಿದ್ದೇನೆ ಎಂದು ಹೇಳಿಲ್ಲ, ಮುಂದೆಯೂ ಹೇಳುವುದಿಲ್ಲ. ಸಂಸದ ಎ.ನಾರಾಯಣಸ್ವಾಮಿ ಆಕ್ಟಿವ್ ಆಗಿ ಈ ಯೋಜನೆಯ ಅನುಷ್ಠಾನಕ್ಕೆ ಓಡಾಡುತ್ತಿದ್ದಾರೆ ಎಂದರು.</s> |
ಅನೇಕ ರಂಗಭೂಮಿ ಹಬ್ಬಗಳು ಮತ್ತು ಸ್ಪರ್ಧೆಗಳು ಚೆಲ್ಯಾಬಿನ್ಸ್ಕ್ ನಡೆಸುವುದು. ಚೇಂಬರ್ ಥಿಯೇಟರ್ ಸಕ್ರಿಯವಾಗಿ ಅವುಗಳನ್ನು ಅನೇಕ ತೊಡಗಿಸಿಕೊಂಡಿದೆ. ಅವರು ಕಂಡುಹಿಡಿದದ್ದು ಮೀರಿ ಆದರೆ, ವ್ಯವಸ್ಥೆ ಮತ್ತು ಕ್ಯಾಮೆರಾಟಾ ಕರೆಯಲ್ಪಡುವ ಒಂದು ವಾರ್ಷಿಕ ಉತ್ಸವವನ್ನು ಹೊಂದಿದೆ. ಇದು 1992 ರಲ್ಲಿ ನಡೆಯಿತು. ಆ ವರ್ಷದಲ್ಲಿ, ಉತ್ಸವ ಚೇಂಬರ್ ಥಿಯೇಟರ್ ಕೇವಲ ಹೇಳಿಕೆ ಪಾಲ್ಗೊಂಡರು. ಹಬ್ಬದ ಕೊನೆಗೊಂಡಿತು ಒಂದು ವಾರ, ಒಳಗೆ, ತಂಡವನ್ನು ಪ್ರೇಕ್ಷಕರು ಹಾಗೂ ವಿಮರ್ಶಕರ ಗಮನವನ್ನು ಆಕರ್ಷಿಸಲು ತಮ್ಮ ಎಲ್ಲ ಭಂಡಾರವನ್ನು ತೋರಿಸಿದರು. ಮತ್ತು ರಂಗಭೂಮಿ ಗಮನಿಸಲಿಲ್ಲ ಹೋಗುವುದಿಲ್ಲ. ಹಲವು ಅಭಿಮಾನಿಗಳು ಈ ಹಬ್ಬವನ್ನು ತಮ್ಮ ಅಧ್ಯಯನಕ್ಕೆ ಪರಿಚಯಿಸಲಾಯಿತು.</s> |
ಮೂಲಕ ಅಧ್ಯಕ್ಷೆಯಾಗಿ ಕಾಂಗ್ರೆಸ್ನ ಜಯಲಕ್ಷ್ಮಿ ಕೃಷ್ಣಮೂರ್ತಿ ಹಾಗೂ ಉಪಾಧ್ಯಕ್ಷೆಯಾಗಿ ಜೈತುನ್ಬಿ ಆಯ್ಕೆಯಾದರು.</s> |
ಒಂದು ವೇಳೆ ಈ ಇಬ್ಬರು ಈ ಸ್ಥಾನವಹಿಸಿಕೊಳ್ಳದಿದ್ದರೆ, ದೇವೇಗೌಡರು ಉತ್ತರ ಕರ್ನಾಟಕದ ಲಿಂಗಾಯತರಿಗೆ ಈ ಸ್ಥಾನವನ್ನು ನೀಡಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿದೆ.</s> |
ನನಗಿರುವ ವಿಶೇಷ ಸಾಮರ್ಥ್ಯ ಅಥವಾ ದೈವಿ ಶಕ್ತಿಯಿಂದ ಇನ್ನೊಬ್ಬರ ಚಹರೆಯಷ್ಟು ನನಗೆ ಗೊತ್ತು ಎನ್ನುವ ಭಾವನೆ ಕಳಚಿಕೊಂಡಷ್ಟು ಉತ್ತಮ</s> |