input
stringlengths
22
801
target
stringlengths
20
198
ಗಲ್ಫ್ ಸುದ್ದಿಗಳು. . ನಿನ್ನೆ ತಡರಾತ್ರಿ ಯಮನ್ ನ ಹೌತಿ ಬಂಡುಕೋರರು ಸೌದಿ ಅರೇಬಿಯಾದ ವಿವಿಧ ಪ್ರದೇಶಗಳಿಗೆ ಏಳು ಕ್ಷಿಪಣಿ ದಾಳಿ ನಡೆಸಿದ್ದು, ಎಲ್ಲಾ ಕ್ಷಿಪಣಿಗಳನ್ನು ತಡೆಹಿಡಿದು ನಾಶ ಪಡಿಸಲಾಗಿದೆಯೆಂದು ಸೌದಿ ಅರೇಬಿಯಾದ ವಾಯುಪಡೆ ಹೇಳಿದೆ.
ಸೌದಿ ಅರೇಬಿಯಾದ ಮೇಲೆ ಏಳು ಕ್ಷಿಪಣಿ ದಾಳಿ : ಹೌತಿ ಉಗ್ರರ ಕ್ಷಿಪಣಿಗಳನ್ನು ನಾಶಪಡಿಸಿದ ಸೌದಿ ವಾಯುಪಡೆ
ಕರಾವಳಿ ಉಡುಪಿ: ವಲಸೆ ಕಾರ್ಮಿಕರು ಸೇರಿದಂತೆ ಹಲವು ಮಂದಿಗೆ ರಾತ್ರಿ ವೇಳೆ ಹಲ್ಲೆ ನಡೆಸಿ ಸೊತ್ತು ಹಾಗೂ ಹಣವನ್ನು ಸುಲಿಗೆ ಮಾಡುತ್ತಿದ್ದ ಯುವಕರ ತಂಡವೊಂದನ್ನು ಪತ್ತೆ ಹಚ್ಚಿರುವ ಉಡುಪಿ ಪೊಲೀಸರು, ಮಂಗಳೂರು ಹೋಮ್ ಸ್ಟೇ ದಾಳಿಯ ಪ್ರಮುಖ ಆರೋಪಿ ಸಹಿತ ಏಳು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಡುಪಿ ಭಾಗದಲ್ಲಿ ರಾತ್ರಿ ಹೊತ್ತು ಹೊಂಚು ಹಾಕಿ ಲೂಟುವ 7 ಮಂದಿ ಲೂಟಿಕೋರರು ಅಂದರ್
ರಾಜ್ಯ ಸುದ್ದಿಗಳು ಶಿವಮೊಗ್ಗ. . ಲೇಖಕ, ರಾಷ್ಟ್ರೀಯ ಕಾನೂನು ಕಾಲೇಜಿನ ಕನ್ನಡ ಉಪನ್ಯಾಸಕ ಸರ್ಜಾಶಂಕರ್ ಹರಳಿಮಠ ಅವರು "ಕನ್ನಡ ವಿಚಾರ ಸಾಹಿತ್ಯದಲ್ಲಿ ಕನ್ನಡ ಅಸ್ಮಿತೆಯ ಹುಡುಕಾಟದ ನೆಲೆಗಳು" ಎನ್ನುವ ವಿಷಯದ ಮೇಲೆ ನಾಡಿನ ಪ್ರಸಿದ್ಧ ಸಂಸ್ಕøತಿ ಚಿಂತಕರಾದ ಡಾ.
ಸರ್ಜಾಶಂಕರ್ ಹರಳಿಮಠರಿಗೆ ಡಾಕ್ಟರೇಟ್ ಪದವಿ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 14: ಹಲವು ಸಾಮಾಜಿಕ ಉದ್ದೇಶ ಹಾಗೂ ಅಭಿವೃದ್ಧಿಯೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಮೊದಲು ಬಲವೃದ್ಧಿಯೊಂದಿಗೆ ಸಂಘಟಿತ ಧ್ವನಿಯಾಗಿ ಕೆಲಸ ಮಾಡಿದರೆ ಯಶಸ್ಸು ಪಡೆದುಕೊಳ್ಳಲು ಸಾಧ್ಯವೆಂದು ಕನರ್ಾಟಕ ಫೇವಾರ್ಡನ ರಾಜ್ಯಾಧ್ಯಕ್ಷರಾದ ಆಂಜನೇಯ ರೆಡ್ಡಿ ಹೇಳಿದರು.
ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸುವ ಸ್ವಯಂಸೇವಾ ಸಂಸ್ಥೆಗಳಲ್ಲಿ ಸಂಘಟಿತ ಧ್ವನಿ ಮುಖ್ಯ: ರೆಡ್ಡಿ
ಪ್ರಕಟಿಸಲಾಗಿದೆ ನವದೆಹಲಿ, 11 ಪಶ್ಚಿಮಬಂಗಾಳ ವಿಧಾನಸಭೆ ಅನುಮೋದನೆ ನೀಡಿದ್ದ ಮಸೂದೆಯನ್ನು ಅಲ್ಲಿನ ರಾಜ್ಯಪಾಲರು ಹಿಂಪಡೆದುಕೊಂಡಿರುವ ನಿರ್ಧಾರ, ಪೌರತ್ವ ತಿದ್ದುಪಡಿ ಮಸೂದೆ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟು ವಿರೋಧ ಪಕ್ಷಗಳ ಸದಸ್ಯರು ಭಾರೀ ಕೋಲಾಹಲ, ಗದ್ದಲವೇರ್ಪಡಿಸಿದ್ದರಿಂದ ರಾಜ್ಯಸಭೆಯ ಕಲಾಪ ಮಧ್ಯಾಹ್ನ 12 ಗಂಟೆವರೆಗೆ ಮುಂದೂಡಲಾಯಿತು.
ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ ಪೌರತ್ವ ತಿದ್ದುಪಡಿ ಕಾಯ್ದೆ; ಕಲಾಪ ಮುಂದೂಡಿಕೆ
ದಕ್ಷಿಣ ಕನ್ನಡ ದೇರಳಕಟ್ಟೆ. . ಅ:28 : ಎಸ್ ಎಸ್ ಎಫ್ ಕಾನೆಕೆರೆ ಶಾಖೆಯ "ಯವ್ವನ ಮರೆಯಾಗುವ ಮುನ್ನ" ಯುನಿಟ್ ಕಾನ್ಫರೆನ್ಸ್ ಕಾನೆಕೆರೆ ತರ್ಬಿಯತುಲ್ ಇಸ್ಲಾಂ ಮದ್ರಸ ವಠಾರದಲ್ಲಿ ಶಾಖಾಧ್ಯಕ್ಷ ರಫೀಕ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಕಾನೆಕೆರೆ ಯುನಿಟ್ ಕಾನ್ಫೆರೆನ್ಸ್
ಎಫ್ ಡಿ. ಜಿ ಕಟ್ಟೆ ಕೈರಂಗಳ ಶಾಖೆ ಜಂಟಿ ಆಶ್ರಯದಲ್ಲಿ ಜನವರಿ 28 ರಂದು ತಾಜುಲ್ ಉಲಮಾ ನಗರ ಗುಂಡುಕಟ್ಟೆ ರಿಫಾಯಿ ಮಸ್ಜಿದ್ ವಠಾರ ದಲ್ಲಿನ ನೂರುಲ್ ಉಲಮಾ ವೇದಿಕೆಯಲ್ಲಿ ಬ್ರಹತ್ ಸುನ್ನೀ ಸಮ್ಮೇಳನ ಜರುಗಿತು.
ವಿಕೆ ನ್ಯೂಸ್ ಪ್ರತಿನಿಧಿ
ದಕ್ಷಿಣ ಕನ್ನಡ. . : ತನ್ನ ಕುಟುಂಬಕರಿಂದಲೋ, ಸಹಪಾಠಿಗಳಿಂದಲೋ ಕೆಡುಕು ಸಂಭವಿಸಿದ್ದಲ್ಲಿ ಅದನ್ನು ತಿದ್ದಿ ಸರಿಪಡಿಸಲು ಹಿಂಜರಿಯಬಾರದು.
ಪ್ರತಿಯೊಬ್ಬರಿಂದಲೂ ಒಳಿತಿನ ಆಹ್ವಾನವಿರಲಿ-ಹಿಮಮಿ ಉಸ್ತಾದ್
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬಳ್ಳಾರಿ 04: ಜಿಲ್ಲಾ ವಿಕೋಪ ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ಸಹಯೋಗದಲ್ಲಿ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆ ಪರಿಷ್ಕರಣೆ ಹಾಗೂ ವಿಕೋಪ ಮಿತಗೊಳಿಸುವ ಪೂರ್ವ ಸಿದ್ಧತೆ ಹಾಗೂ ಸ್ಪಂದನ ಯೋಜನೆಯ ಕುರಿತ ಕಾರ್ಯಗಾರವನ್ನು ನಗರದ ಗುಗ್ಗರಹಟ್ಟಿಯ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಶುಕ್ರವಾರದಂದು ಹಮ್ಮಿಕೊಳ್ಳಲಾಗಿತ್ತು.
ಬಳ್ಳಾರಿ: ಸ್ಪಂದನ ಯೋಜನೆ ಕಾರ್ಯಗಾರ ಯಶಸ್ವಿ
ಪ್ರಕಟಿಸಲಾಗಿದೆ ಪುಣೆ, ಅ 11: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ದಕ್ಷಿಣ ಆಫ್ರಿಕಾ ವಿರದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ ನಲ್ಲಿ ವೃತ್ತಿ ಜೀವನದ ಏಳನೇ ದ್ವಿಶತಕ ಸಿಡಿಸಿದರು.
ಏಳನೇ ದ್ವಿಶತಕ ಸಿಡಿಸಿ ವಿಶಿಷ್ಠ ದಾಖಲೆ ಬರೆದ ಕಿಂಗ್ ಕೊಹ್ಲಿ
ರಾಷ್ಟ್ರೀಯ ಜೈಪುರ: ಅತ್ತ ವಿಜಯ ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿಯಂಥ ನೂರಾರು ಉದ್ಯಮಿಗಳು ಸಾವಿರಾರು ಕೋಟಿ ರೂ.
ಸಾಲ ಬಾಕಿ ಇದ್ದಿದ್ದು 50 ಪೈಸೆ: ಎಸ್ಬಿಐನಿಂದ ನೋಟಿಸ್ ಜಾರಿ
ಪ್ರಕಟಿಸಲಾಗಿದೆ ನವದೆಹಲಿ, ನ 18 : ಖನಿಜ ಶ್ರೀಮಂತ ಜಾರ್ಖಂಡ್ ರಾಜ್ಯದಲ್ಲಿ ಈ ಬಾರಿ ಮಹಾಮೈತ್ರಿ ಸರಕಾರ ರಚನೆಯಾಗುವುದು ಖಚಿತ ಎಂದು ಜಾರ್ಖಂಡ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಂಜಯ್ ಪಾಸ್ವಾನ್ ಸೋಮವಾರ ಭವಿಷ್ಯ ನುಡಿದಿದ್ದಾರೆ.
ಜಾರ್ಖಂಡ್ ನಲ್ಲಿ ಮಹಾಮೈತ್ರಿ ಸರಕಾರ ರಚನೆ: ಸಂಜಯ್ ಪಾಸ್ವಾನ್
ದಕ್ಷಿಣ ಕನ್ನಡ ಉಳ್ಳಾಲ (ವಿಶ್ವ ಕನ್ನಡಿಗ ನ್ಯೂಸ್ ) : ನೇತಾಜಿ ಸುಭಾಷ್ ಚಂದ್ರ ಭೋಸ್ ಸರಕಾರಿ ಪ್ರೌಢ ಶಾಲೆ ದೇರಳಕಟ್ಟೆ ಇದರ ವಿದ್ಯಾರ್ಥಿ ಮತ್ತು ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಗುರು ವಂದನಾ ಕಾರ್ಯಕ್ರಮ ಈ ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರು ಚಂಚಲಾಕ್ಷಿ ಕಾರ್ಯಕ್ರಮ ಉದ್ಘಾಟಿಸಿದರು.
ದೇರಳಕಟ್ಟೆ ನೇತಾಜಿ ಸುಭಾಷ್ ಚಂದ್ರ ಭೋಸ್ ಸರಕಾರಿ ಪ್ರೌಢ ಶಾಲೆಯ ವಠಾರದಲ್ಲಿ ಗುರು ವಂದನಾ ಕಾರ್ಯಕ್ರಮ
ದಕ್ಷಿಣ ಕನ್ನಡ ಬಂಟ್ಲಾಳ(ವಿಶ್ವಕನ್ನಡಿಗ ನ್ಯೂಸ್): ಬಂಟ್ವಾಳ ತಾಲೂಕು ಇರಾ ಗ್ರಾಮದ ಪರಪ್ಪು ನಾಗರಿಕರ ಬಹುಕಾಲದ ಬೇಡಿಕೆಯಾದ ಮಂಗಳೂರಿನಿಂದ ಪರಪ್ಪುವಿಗೆ ಕೆ. ಎಸ್. ಆರ್. ಟಿ. ಸಿ ಬಸ್ ಸಂಚಾರ ಉದ್ಘಾಟನ ಸಮಾರಂಭವು ಇಂದು ಪರಪ್ಪು ಜಂಕ್ಷನ್ ನಲ್ಲಿ ನಡೆಯಿತು.
ಮಂಗಳೂರು - ಇರಾ-ಪರಪ್ಪು ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ಆರಂಭ
ಪ್ರಕಟಿಸಲಾಗಿದೆ ಲಕ್ನೋ, ಜನವರಿ 22 , ಅಯೋಧ್ಯೆಯಲ್ಲಿ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಕೆಲಸ ಪ್ರಾರಂಭವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ ಬೆನ್ನಲ್ಲೆ ಟ್ರಸ್ಟ್ ರಚನೆ ಈ ತಿಂಗಳಲ್ಲೇ ಘೋಷಣೆಯಾಗುವ ಸಾಧ್ಯತೆ ಇದೆ.
ಮಂದಿರ ನಿರ್ಮಾಣ ; ತಿಂಗಳಲ್ಲೇ ಟ್ರಸ್ಟ್ ರಚನೆ ಘೋಷಣೆ
ಪ್ರಕಟಿಸಲಾಗಿದೆ ವಿದ್ಯಾಥರ್ಿಗಳಿಗೆ ಶೂ ವಿತರಿಸುವಾಗ ಪುರಸಭೆ ಆಧ್ಯಕ್ಷ ಶಶಿಕಾಂತ ಕಾಂಬಳೆ, ಸದಸ್ಯರು ಮುಖ್ಯಾಧ್ಯಾಪಕರು ಇದ್ದರು.
ಉಗಾರ ಖುರ್ದ ಶಾಲೆ ವಿದ್ಯಾಥರ್ಿಗಳಿಗೆ ಶೂ ವಿತರಣೆ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ತಾಳಿಕೋಟೆ 26: ಪಟ್ಟಣದ ಪುರಸಭೆಯ ಚುನಾವಣೆಗೆ ಸಂಬಂದಿಸಿ ಬರಲಿರುವ ದಿ.
ತಾಳಿಕೋಟೆ: ಪುರಸಭೆ ಚುನಾವಣೆ: ಅಣಕು ಮತದಾನ ಪ್ರದರ್ಶನ
ಪ್ರಕಟಿಸಲಾಗಿದೆ ಮುನವಳ್ಳಿ 19: ಮುನವಳ್ಳಿ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕೆಂದು ಆಗ್ರಹಿಸಿ ಡಿ. 18 ರಂದು ಸಾಯಂಕಾಲ 4 ಗಂಟೆಗೆ ಪಟ್ಟಣದ ಪಂಚಲಿಂಗೇಶ್ವರ ಕ್ರಾಸ್ನ ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಮುನವಳ್ಳಿ ತಾಲೂಕು ಕೇಂದ್ರವನ್ನಾಗಿ ಘೋಷಿಸಲು ಆಗ್ರಹಿಸಿ ರಸ್ತೆ ತಡೆ
ಪ್ರಕಟಿಸಲಾಗಿದೆ ನವದೆಹಲಿ, ಫೆ, 19 ಮಣ್ಣು ಆರೋಗ್ಯ ಯೋಜನೆಯ ಮಹತ್ವ , ಮೌಲ್ಯ, ಲಾಭದ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ದೇಶಾದ್ಯಂತ ಇಂದು ಮಣ್ಣು ಆರೋಗ್ಯ ಕಾಡರ್್ ದಿನ ಆಚರಿಸಲಾಗುತ್ತಿದೆ.
ಇಂದು ಮಣ್ಣು ಆರೋಗ್ಯ ಕಾಡರ್್ ದಿನ: ಐದು ವರ್ಷ ತುಂಬಿದ ಯೋಜನೆ -ದೇಶಾದ್ಯಂತ ರೈತ ಜಾಗೃತಿ ಕಾರ್ಯಕ್ರಮ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಶಿರಹಟ್ಟಿ 24: ನಿಸರ್ಗ ಸಂಪತ್ತು ಸಿಕ್ಕಿರುವುದು ನಮಗೆಲ್ಲ ಒಂದು ದೇವರ ವರದಾನ ಮತ್ತು ನಮ್ಮೆಲ್ಲರ ಪುಣ್ಯ, ಅದನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯವಾದದ್ದು ಏಕೆಂದರೆ ನಿಸರ್ಗ ಸಂಪತ್ತನ್ನು ಕಾಪಾಡಿಕೊಂಡರೆ ಮಾತ್ರ ವೇಳೆಗೆ ಸರಿಯಾಗಿ ಮಳೆ ಬರುತ್ತದೆ.
ಭವಿಷ್ಯದಲ್ಲಿ ಸೋಲಾರ್ ಹಾಕಿ ನಿಸರ್ಗ ಸಂಪತ್ತನ್ನು ಕಾಪಾಡಿಕೊಳ್ಳಿರಿ: ಕ್ಷೇತ್ರ ಧರ್ಮಸ್ಥಳದ ಜಿಲ್ಲಾ ಅಧಿಕಾರಿ ಶಿವಾನಂದ
ಪ್ರಕಟಿಸಲಾಗಿದೆ ಚಂಡೀಗಢ, ಆ 22 ಭಾರತದ ಹಾಕಿ ದಂತಕತೆ ಬಲ್ಬೀರ್ ಸಿಂಗ್ ಅವರಿಗೆ ದೇಶದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ 'ಭಾರತ ರತ್ನ' ಗೌರವ ನೀಡಬೇಕೆಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಹಾಕಿ ದಂತೆಕೆತೆಗೆ 'ಭಾರತ ರತ್ನ' ನೀಡುವಂತೆ ಪ್ರಧಾನಿಗೆ ಪತ್ರ
ರಾಜ್ಯ ಸುದ್ದಿಗಳು. . ಕಟ್ಟತ್ತಿಲ ಶಾಖೆ ವತಿಯಿಂದ ಮಹ್ ಳರತುಲ್ ಬದರಿಯ್ಯಾ ಹಾಗೂ ಇಫ್ತಾರ್ ಸಂಗಮ: ದಿನಾಂಕ 25/05/2019 ರ ಸಂಜೆ 4:30 ಸರಿಯಾಗಿ ನಾಸಿರ್ ಲತೀಫಿ ಯವರ ಅಧ್ಯಕ್ಷತೆಯಲ್ಲಿ, *ಶೈಖುನಾ ಇಬ್ರಾಹಿಂ ಫೈಝಿ ಉಸ್ತಾದ್* ನೇತೃತ್ವದಲ್ಲಿ ಮಹ್ಳರತುಲ್ ಬದರಿಯ್ಯ ಮಜ್ಲಿಸ್ ಹಾಗೂ ಇಪ್ತಾರ್ ಸಂಗಮ ಕಟ್ಟತ್ತಿಲ ಜಂಕ್ಷನ್ ನಲ್ಲಿ ನಡೆಯಲಿಕ್ಕಿದೆ.
ಎಸ್ ಎಸ್ ಎಫ್ ಬೃಹತ್ ಇಫ್ತಾರ್ ಸಂಗಮ
ರಾಷ್ಟ್ರೀಯ ದೆಹಲಿ:ಆ,29-ಒಲಿಂಪಿಕ್ಸ್ನಲ್ಲಿ ಹೊಸ ಮೈಲಿಗಲ್ಲು ಸಾಧನೆ ಮಾಡಿದ ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಬಡ ಕುಟುಂಬದ ಹುಟ್ಟಿ ತರಬೇತುದಾರ ಸಲಹೆಯಂತೆ ದಿನಕ್ಕೆ ಎರಡು ಬಾರಿ ಧನದ ಮಾಂಸ ಸೇವನೆಯಿಂದ ಒಲಿಂಪಿಕ್ಸ್ನಲ್ಲಿ 9 ಚಿನ್ನದ ಪದಕ ಗಲ್ಲುವುದ್ದಕ್ಕೆ ಸಾಧ್ಯವಾಯಿತು ಎಂದು ಭಾನುವಾರ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಸಂಸದ ಹಾಗೂ ದಲಿತ ನಾಯಕ ಉದ್ದೀತ್ ರಾಜ್ ಈಗ ಯೂಟರ್ನ್ ಹೊಡೆದಿದ್ದಾರೆ.
ಬೀಫ್ ತಿನ್ನುವ ಉಸೇನ್ ಬೋಲ್ಟ್' ಹೇಳಿಕೆ : ಯುಟರ್ನ್ ಹೊಡೆದ ದೆಹಲಿ ಬಿಜೆಪಿ ಸಂಸದ
ಬೆಂಗಳೂರು ಜು 27: ಅಕ್ರಮ ಗಣಿಗಾರಿಕೆ ವರದಿ ಸೋರಿಕೆಯಾದಂತೆ, ಹೈಕಮಾಂಡ್ ಕಡೆಯಿಂದಲೂ ಸುದ್ದಿ ಲೀಕ್ ಆಗಿದೆ.
ಶಕ್ತಿ ಪ್ರದರ್ಶನಕ್ಕೆ ಮುಂದಾದ ಯಡ್ಡಿ, ಡಿಲ್ಲಿಗೆ ದೌಡು
ಕರ್ನಾಟಕ ಬೆಂಗಳೂರು: ಆಪರೇಷನ್ ಕಮಲದ ಆಡಿಯೋ ಬಿಡುಗಡೆಯಿಂದ ಮುಖಭಂಗಕ್ಕೊಳಗಾಗಿರುವ ಭಾರತೀಯ ಜನತಾ ಪಕ್ಷಕ್ಕೆ ಈಗ ಪ್ರೀತಂ ಗೌಡ ಪ್ರಕರಣವು ಹುಲ್ಲುಕಡ್ಡಿಯ ಆಸರೆ ಒದಗಿಸಿದೆ.
ಹಾಸನ ಶಾಸಕ ಪ್ರೀತಂ ಗೌಡ ಮನೆ ಮೇಲೆ ಕಲ್ಲು ತೂರಾಟ; ಕಾರ್ಯಕರ್ತನಿಗೆ ಗಾಯ: ಕೇಂದ್ರ ಗೃಹ ಸಚವರಿಗೆ ದೂರು: ಬಿ.ಎಸ್.ವೈ
ಕ್ರೀಡೆ ನವದೆಹಲಿ: ಹಾಲಿ ಐಪಿಎಲ್ 2018ರ ಟೂರ್ನಿಯಲ್ಲಿ ಕಳಪೆ ಅಂಪೈರಿಂಗ್ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿರುವ ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಅವರು ತೀರ್ಪು ನೀಡುವಾಗ ಹೆಚ್ಚು ಜಾಗರೂಕರಾಗಿರುವಂತೆ ಅಂಪೈರ್ ಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಕಳಪೆ ಅಂಪೈರಿಂಗ್ ಕುರಿತಂತೆ ಅಸಮಾಧಾನ; ತೀರ್ಪು ನೀಡುವಾಗ ಹೆಚ್ಚು ಜಾಗರೂಕರಾಗಿರಿ: ಅಂಪೈರ್ ಗಳಿಗೆ ರಾಜೀವ್ ಶುಕ್ಲಾ ಎಚ್ಚರಿಕೆ
ಪ್ರಕಟಿಸಲಾಗಿದೆ ಪುಣೆ, ಅ. 13: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ತದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ಇನ್ನಿಂಗ್ಸ್ ಹಾಗೂ 137 ರನ್ ಜಯ ಸಾಧಿಸಿದೆ.
ತಂಡವನ್ನು ಬಲಪಡಿಸುವುದೇ ಏಕೈಕ ಗುರಿ: ವಿರಾಟ್
21ರಂದು ಕೊಪ್ಪಳ ಜಿಲ್ಲೆಯಿಂದ ರಸ್ತೆಯ ಮೂಲಕ ಬಳ್ಳಾರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಎಸ್. ಎಸ್. ಬಿರಾದಾರ್ ತಿಳಿಸಿದ್ದಾರೆ.
ಬಳ್ಳಾರಿ: ಲಕ್ಷ್ಮಣ ಸವದಿ ಪ್ರವಾಸ ಕಾರ್ಯಕ್ರಮ
ಆಚರಿಸಲಾಯಿತು. . ಮಸೀದಿ ಸಮಿತಿಯ ಉಪಾಧ್ಯಕ್ಷರಾದ ಮಹಮದ್ ಕುಂಞ ಮೇಲೆಬೈಲು ದ್ವಜಾರೋಹಣಗೈದರು.
ಸುಳ್ಯ-ಎಲಿಮಲೆ ಮಸೀದಿ ವಠಾರ ದಲ್ಲಿ ಸ್ವಾತಂತ್ರ್ಯೋತ್ಸವ
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಮನುಷ್ಯ ಮನಸ್ಸುಗಳ ನಡುಗೆ ಪ್ರೀತಿ-ವಿಶ್ವಾಸ ವೃದ್ದಿಸಿಕೊಂಡು ಜೀವಿಸಿದಾಗ ಮಾತ್ರ ದೇವರು ನೀಡಿದ ಅತ್ಯುನ್ನತ ಅನುಗ್ರಹವಾಗಿರುವ ಮಾನವ ಜೀವನಕ್ಕೆ ಮೌಲ್ಯ ಬರುತ್ತದೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದರು.
ಮನುಷ್ಯ ಮನಸ್ಸುಗಳ ನಡುವೆ ದ್ವೇಷ ಸೃಷ್ಟಿಸುವ ರಾಜಕೀಯ ಶಾಶ್ವತವಲ್ಲ: ರಮಾನಾಥ ರೈ
ಪ್ರಕಟಿಸಲಾಗಿದೆ ಮೂಡಲಗಿ 06: ಪ್ರಸಕ್ತ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಗಳು ಸಮೀಪಿಸಿದ್ದು, ವಲಯ ವ್ಯಾಪ್ತಿಯಲ್ಲಿ ವಿದ್ಯಾಥರ್ಿಗಳ ಶೈಕ್ಷಣಿಕ ಕಾರ್ಯಚಟುವಟಿಕೆಗಳು ಭರದಿಂದ ಸಾಗಿದೆ.
ಪರೀಕ್ಷಾ ಅಧೀಕ್ಷಕರ ಸಿದ್ಧತಾ ಸಭೆ: ಮುಂಜಾಗೃತ ಕ್ರಮಕ್ಕೆ ಸೂಚನೆ
ದಕ್ಷಿಣ ಕನ್ನಡ ಮಂಗಳೂರು : (ವಿಶ್ವ ಕನ್ನಡಿಗ ನ್ಯೂಸ್) ಟಾರ್ಗೆಟ್ ಗ್ರೂಪ್ನ ಲೀಡರ್ ಇಲಿಯಾಸ್ನನ್ನು ಇಂದು ಬೆಳಿಗ್ಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈಯಲಾಗಿದೆ.
ಮಂಗಳೂರು ಟಾರ್ಗೆಟ್ ಗ್ಯಾಂಗ್ ಲೀಡರ್ ಮರ್ಡರ್
ಪುಂಡಿ ಸೊಪ್ಪಿನ ವೈವಿಧ್ಯಗಳು: ಚಿತ್ರಾನ್ನ ಕಾಬೋಹೈಡ್ರೇಟ್, ಫೈಬರ್, ಪ್ರೊಟೀನ್, ವಿಟಮಿನ್ ಭಂಡಾರವೇ ಇರುವ ಪುಂಡಿ ಸೊಪ್ಪನ್ನು ಬಳಸಿಕೊಂಡು ಮಾಡಬಹುದಾದ ವಿವಿಧ ರುಚಿಕರ ಖಾದ್ಯಗಳ ಪರಿಚಯ ಇಲ್ಲಿ ನೀಡಲಾಗಿದೆ.
ಬ್ಯಾಟಲ್ ಆಫ್ ರಾಯಲ್ ನಲ್ಲಿ ಯಾರಿಗೆ ಜಯ: ದ್ರಾವಿಡ್ ನುಡಿದ ಭವಿಷ್ಯವೇನು
ಪ್ರಕಟಿಸಲಾಗಿದೆ ವಾಷಿಂಗ್ಟನ್, ಜ 30,ಬೋಯಿಂಗ್ 737 ಮ್ಯಾಕ್ಸ್ ಜೆಟ್ ವಿಮಾನದ ಪತನದ ನಂತರ ಕಳೆದ 23 ವರ್ಷಗಳಲ್ಲಿ ಇದೇ ಪ್ರಥಮ ಬಾರಿಗೆ ಕಂಪನಿ ವಾರ್ಷಿಕ ವಹಿವಾಟಿನಲ್ಲಿ ನಷ್ಟ ಎದುರಿಸುತ್ತಿದೆ.
ಬೋಯಿಂಗ್ ವಿಮಾನ ಪತನ ಹಿನ್ನೆಲೆ; ಕಂಪನಿಗೆ ಆರ್ಥಿಕ ನಷ್ಟ
ಪ್ರಕಟಿಸಲಾಗಿದೆ ಗದಗ 18: ಸರಕಾರ ರೂಪಿಸುವ ಎಲ್ಲಾ ಆರೋಗ್ಯ ಕಾರ್ಯಕ್ರಮಗಳು ಗ್ರಾಮೀಣ ಮತ್ತು ಅಲಕ್ಷಿತ ಸಮುದಾಯಗಳನ್ನು ಮುಟ್ಟಬೇಕು ಆ ನಿಟ್ಟನಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಕ್ರಮಗಳನ್ನು ಸಮುದಾಯದ ಬಳಿಕೊಂಡೊಯ್ದು ಜನರ ಮನ ಮುಟ್ಟುವಂತೆ ಸೇವೆಸಲ್ಲಿಸಬೇಕು ಎಂದು ಪ್ರಭಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಧಿಕಾರಿಗಳಾದ ಡಾ.
ಸರಕಾರದ ಆರೋಗ್ಯ ಕಾರ್ಯಕ್ರಮಗಳು ಜನರ ಮನೆ ಬಾಗಿಲು ಮುಟ್ಟಲಿ: ಡಾ. ಹೊನಕೇರಿ
ದಕ್ಷಿಣ ಕನ್ನಡ ಅಧ್ಯಕ್ಷರಾಗಿ ಹಾರಿಸ್ ಅಡ್ಕ, ಪ್ರಧಾನ ಕಾರ್ಯದರ್ಶಿ ಸಾದಿಕ್ ನೀರ್ಪಾಡಿ, ಕೋಶಾಧಿಕಾರಿಯಾಗಿ ಕಾಸಿಮ್ ಉಜ್ರೋಡಿ ಆಯ್ಕೆ ಕುಂಬ್ರ. . : ದಖೀರತುಲ್ ಉಖ್ರಾ ಯಂಗ್ ಮೆನ್ಸ್ ಅಸೋಸಿಯೇಶನ್ ಮೈದಾನಿಮೂಲೆ ಇದರ ವಾರ್ಷಿಕ ಮಹಾಸಭೆ ದಿನಾಂಕ 26.1.2020 ರಂದು ಮಗ್ರಿಬ್ ನಮಾಝಿನ ಬಳಿಕ ಮೈದಾನಿಮೂಲೆ ಮಸೀದಿಯಲ್ಲಿ ಸಯ್ಯಿದ್ ಮುಝಮ್ಮಿಲ್ ತಂಙಳ್ ಕಾಸರಗೋಡು ಇವರ ನೇತೃತ್ವದಲ್ಲಿ ಮೈದಾನಿಮೂಲೆ ಜುಮಾ ಮಸೀದಿ ಅಧ್ಯಕ್ಷ ಯೂಸುಫ್ ಹಾಜಿ ಕೈಕಾರ ಇವರ ಉಪಸ್ಥಿತಿಯಲ್ಲಿ ನಡೆಸಲಾಯಿತು.
ದಖೀರತುಲ್ ಉಖ್ರಾ ಯಂಗ್ ಮೆನ್ಸ್ ಅಸೋಸಿಯೇಶನ್ ಮೈದಾನಿಮೂಲೆ ವಾರ್ಷಿಕ ಸಭೆ
ಎಂ ಫಾರೂಕ್ ಅವರ ಹುಟ್ಟು ಹಬ್ಬವನ್ನು ದ. ಕ ಜಿಲ್ಲಾ ಯುವ ಜನತಾದಳದ ವತಿಯಿಂದ ಇಂದು ಮಂಗಳೂರು ನಗರದ ಭಗಿನಿ ಸಮಾಜದಲ್ಲಿ ಅನಾಥ ಅಶ್ರಮ ಮಕ್ಕಳ ಜೊತೆ ರಾಜ್ಯ ಸಂಘಟನಾ ಕಾರ್ಯದರ್ಶಿ ಫೈಸಲ್ ರೆಹಮಾನ್ ಅವರ ನೇತೃತ್ವದಲ್ಲಿ ನಡೆಯಿತು.
ದ.ಕ ಜಿಲ್ಲಾ ಯುವ ಜನತಾದಳದ ವತಿಯಿಂದ ವಿಧಾನ ಪರಿಷತ್ ಸದಸ್ಯರು, ಉದ್ಯಮಿಗಳಾದ ಬಿಎಂ ಫಾರೂಕ್ ಹುಟ್ಟುಹಬ್ಬ ಆಚರಣೆ
ಪ್ರಕಟಿಸಲಾಗಿದೆ ಧಾರವಾಡ 27: 'ಶಬ್ದ (ಮಾತು), ಅಂಕಿ-ಸಂಖ್ಯೆ ಮತ್ತು ರೇಖಾಚಿತ್ರ ಕಲೆಗಳಲ್ಲಿ ವ್ಯಕ್ತವಾಗುವ ಸಂಕೇತಾರ್ಥಗಳನ್ನು ಗಮನವಿಟ್ಟು ಗುರುತಿಸಿ ಜೀವನದ ಸತ್ಯವನ್ನು ಅಥರ್ೈಸುವ ಕಲ್ಪನೆ, ಪ್ರತಿಭೆ ವರಕವಿ ಬೇಂದ್ರೆಯವರಲ್ಲಿ ಅಗಾಧವಾಗಿತ್ತು.
ನಾದ, ಧ್ವನಿ, ಅರಿವಿನ ಮೇಧಾವಿ ಕವಿ ಬೇಂದ್ರೆ: ಕುಲಕಣರ್ಿ
ಪ್ರಕಟಿಸಲಾಗಿದೆ ಗದಗ 26: ಲೋಕಸಭಾ ಸಾರ್ವತ್ರಿಕ ಚುನಾವಣೆ-2019ರ ಪ್ರಯುಕ್ತ ಮತದಾರರ ಪಟ್ಟಿಯಲ್ಲಿರುವ ಎಲ್ಲ ಮತದಾರರು ತಪ್ಪದೇ ಮತದಾನ ಮಾಡುವಂತೆ ಪ್ರೇರೇಪಿಸಲು ವಿಕಲಚೇತನರಿಂದ ತ್ರಿ ಚಕ್ರ ವಾಹನ ಜಾಥಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ನುಡಿದರು.
ಗದಗ: ಮತದಾರರ ಜಾಗೃತಿಗೆ ತ್ರಿ ಚಕ್ರ ವಾಹನ ಜಾಥಾ ಜಾಗೃತಿ ಕಾರ್ಯಕ್ರಮ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿಕೆ
ಪ್ರಕಟಿಸಲಾಗಿದೆ ಜಮ್ಮು, ಫೆ 13 : ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನ ವಿಧಿ 370 ರದ್ದುಪಡಿಸಿದ ನಂತರ ಅಲ್ಲಿನ ವಸ್ತುಸ್ಥಿತಿ ತಿಳಿಯಲು ಐರೋಪ್ಯ ಒಕ್ಕೂಟ ಹಾಗೂ ಕೊಲ್ಲಿ ರಾಷ್ಟ್ರಗಳ ವಿಶೇಷ ಪ್ರತಿನಿಧಿಗಳ ತಂಡ ಬುಧವಾರ ಶ್ರೀನಗರಕ್ಕೆ ಭೇಟಿ ನೀಡಿತು.
ಶ್ರೀನಗರದಲ್ಲಿ ವಿದೇಶಿ ಪ್ರತಿನಿಧಿಗಳ ತಂಡ
ರಾಜ್ಯ ಸುದ್ದಿಗಳು. . : ಹುಬ್ಬಳ್ಳಿಯ ಕಸಬಾಪೇಟೆಯನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿದ್ದ ಧಾರವಾಡ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಅವರು ವಿರುದ್ಧ ಪೊಲೀಸರು ಶನಿವಾರ ಎಫ್ ಐಆರ್ ದಾಖಲಿಸಿದ್ದಾರೆ.
ಕಸಬಾಪೇಟೆ ಮಿನಿ ಪಾಕಿಸ್ತಾನ ಎಂದ ಪ್ರಹ್ಲಾದ್ ಜೋಶಿ ವಿರುದ್ಧ ಪ್ರಕರಣ ದಾಖಲು
ರಾಷ್ಟ್ರೀಯ ಸುದ್ದಿಗಳು ಮುಂಬೈ. . : ಎಲ್ಗಾರ್ ಪರಿಷದ್ ಗಲಭೆ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಮುಂಬೈ ಹೈಕೋರ್ಟ್ ಸೆಪ್ಟಂಬರ್ 7ಕ್ಕೆ ಮುಂದೂಡಿದೆ.
ಹೋರಾಟಗಾರರ ಬಂಧನ ಕುರಿತು ಸುದ್ದಿಗೋಷ್ಠಿ: ಹೈಕೋರ್ಟ್ ಅಚ್ಚರಿ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಮುದ್ದೇಬಿಹಾಳ 01: ಪದವಿ ವಿದ್ಯಾರ್ಹತೆ ಮತ್ತು ಸೇವಾನುಭವ ಇರುವ ಸೇವಾನಿರತ ಪ್ರಾಥಮಿಕ ಶಾಲಾ ಸಹ ಶಿಕ್ಷಕರನ್ನು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದಕ್ಕೆ ಪದನಾಮಕರಿಸಬೇಕೆಂದು ಆಗ್ರಹಿಸಿ ಶನಿವಾರ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಎದುರಿಗೆ ತಾಲೂಕಿನ ಪ್ರಾಥಮಿಕ ಶಾಲಾ ಸಹ ಶಿಕ್ಷಕರು ಸಾಂಕೇತಿಕ ಧರಣಿ ಸತ್ಯಾಗ್ರಹ ಕೈಗೊಂಡು ಶಿಕ್ಷಣಾಧಿಕಾರಿಗಳಿಗೆ ಬೇಡಿಕೆಯ ಮನವಿಯನ್ನು ಸಲ್ಲಿಸಿದರು.
ಮುದ್ದೇಬಿಹಾಳ : ಪ್ರಾಥಮಿಕ ಶಾಲಾ ಶಿಕ್ಷಕರ ಪದನಾಮಕರಿಸಲು ಮನವಿ
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಮೆಲ್ಕಾರ್ ಎಂ. ಎಚ್. ಮಿಲ್ ಬಳಿಯ ನಿವಾಸಿ ದಿವಂಗತ ಅಬ್ಬು ಬ್ಯಾರಿ ಎಂಬವರ ಪತ್ನಿ ಅತೀಜಮ್ಮ ಯಾನೆ ಅತ್ತಿ (73) ಅವರು ಅಲ್ಪಕಾಲದ ಅನಾರೋಗ್ಯದಿಂದ ಭಾನುವಾರ ತಡ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೆಲ್ಕಾರ್ ನಿವಾಸಿ ಅತೀಜಮ್ಮ ನಿಧನ
ದಕ್ಷಿಣ ಕನ್ನಡ ಮಂಗಳೂರು. . : ಕೋಟೆಕಾರ್ ಹಿದಾಯತ್ ನಗರ ಇಹ್ಸಾನುಲ್ ವಹ್ಹಾಬ್ ಅಲ್ ಮದ್ರಸತುಲ್ ಹಿದಾಯ ಇದರ ಮೇಲಂತಸ್ತಿನ ಉದ್ಘಾಟನೆ ಕಾರ್ಯಕ್ರಮ ಜೂನ್ 21 ಶುಕ್ರವಾರ ಜನಾಬ್ ಉಮರ್ ಮಾಸ್ಟರ್ ಅಧ್ಯಕ್ಷತೆಯಲ್ಲಿ ಸಂಜೆ 4-30ಕ್ಕೆ ಜರಗಿತು ಬಹು ಖಾಝಿ ಪಿ ಎಮ್ ಇಬ್ರಾಹಿಮ್ ಮುಸ್ಲಿಯಾರ್ ಬೇಕಲ್ ಉದ್ಘಾಟನೆಗೈದರು.
ಕೋಟೆಕಾರ್ ಹಿದಾಯತ್ ನಗರ ಇಹ್ಸಾನುಲ್ ವಹ್ಹಾಬ್ ಮದ್ರಸ ಮೇಲಂತಸ್ತು ಉದ್ಘಾಟನೆ
ಕರ್ನಾಟಕ ಮುಂಬೈ: 14 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಜೆಡಿಎಸ್ ಅತೃಪ್ತ ಶಾಸಕ ಎಚ್ ವಿಶ್ವನಾಥ್ ಹೇಳಿದ್ದಾರೆ.
ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಹೋಗುತ್ತೇವೆ: ರೆಬೆಲ್ ಶಾಸಕ ಎಚ್ ವಿಶ್ವನಾಥ್
ರಾಜ್ಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್):-ಕೋಟೆಕಾರ್ ಅಲ್ ಹಿದಾಯ ಜುಮಾ ಮಸ್ಜಿದ್ ಹಿದಾಯತ್ ನಗರ ಪವಿತ್ರ ರಂಝಾನ್ ಮಾಸದ ವಿಶೇಷ ಕೂಟು ಪ್ರಾರ್ಥನೆ ಹಾಗೂ ತೌಬಾ ದಿನಾಂಕ 6-6-2018 ಬುಧವಾರ ಅಸ್ತಮಿಸಿದ ಗುರುವಾರ ರಾತ್ರಿ ತರಾವೀಹ್ ನಮಾಝ್ ಬಳಿಕ ಬಹು ಅಲ್ ಹಾಜ್ ಕೆ ಪಿ ಹುಸೈನ್ ಸಅದಿ ಕೆ ಸಿ ರೋಡ್ ಉಸ್ತಾದರ ನೇತೃತ್ವದಲ್ಲಿ ನಡೆಯಲಿದೆ ಎಂದು ಪ್ರಕಟನೆಯಲ್ಲಿ ಕೋರಲಾಗಿದೆ ಪತ್ರಿಕಾ ಪ್ರತಿನಿಧಿ ವಿಶ್ವ ಕನ್ನಡಿಗ ನ್ಯೂಸ್. *. ಇತ್ತೀಚಿನ ಹೆಡ್ ಲೈನ್ಸ್ ಸುದ್ದಿಗಳು ಗಮನಿಸಿರಿ ದಯವಿಟ್ಟು ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳನ್ನು ಬರೆಯಬೇಡಿ.
ಜೂನ್ 6 ಹಿದಾಯತ್ ನಗರ ;ತೌಬಾ ಹಾಗೂ ಕೂಟು ಪ್ರಾರ್ಥನೆ
ರಾಜ್ಯ ಸುದ್ದಿಗಳು. . ಮಿತ್ತೂರು ಸಿರಾಜುಲ್ ಹುದಾ ಮದರಸದ ಒಂದನೇ ತರಗತಿಯ ಕೋಣೆಯ ಗೋಡೆಗಳ ಮೇಲೆ ರಾಷ್ಚ್ರ ಧ್ವಜ, ಗಿಡ ಮರ, ಹಣ್ಣು ಹಂಪಲು, ಹೂವುಗಳು ಮುಂತಾದ ವಸ್ತುಗಳ ಚಿತ್ರ ಬಿಡಿಸಿ ಅದರಲ್ಲಿ ಕುರ್ಆನ್ ಲಿಪಿಯನ್ನು ಬರೆದು ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಸುವ 'ಸ್ಮಾರ್ಟ್ ಕ್ಲಾಸ್' ಪ್ರಯೋಗವನ್ನು ಮಾಡಲಾಗಿದೆ.
ಮಿತ್ತೂರು ಸಿರಾಜುಲ್ ಹುದಾ ಮದರಸದಲ್ಲಿ 'ಸ್ಮಾರ್ಟ್ ಕ್ಲಾಸ್' ಪ್ರಯೋಗ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಗೋಕಾಕ 28: ಸತೀಶ ಶುಗರ್ಸ ಅವಾಡ್ರ್ಸದ ಪ್ರತಿಭೆಗಳು ರಾಜ್ಯದಾದ್ಯಂತ ತಮ್ಮದೇ ಆದ ಪ್ರತಿಭೆಗಳನ್ನು ತೋರಿಸುತ್ತಿದ್ದು ಚಿತ್ರರಂಗದಲ್ಲಿಯೂ ಸೈ ಎನ್ನುವಂತೆ ಕಾರ್ಯ ಮಾಡುತ್ತಿದ್ದು ಅದಕ್ಕೆ ಉದಾಹರಣೆಯಾಗಿ ಬರುವ ದಿ.
ನಾಳೆ ಮಹಾರಥ ಚಲನಚಿತ್ರ ಬಿಡುಗಡೆ
ವಿದೇಶ ಸುದ್ದಿಗಳು. . ರೋಹಿಂಗ್ಯಾದಲ್ಲಿ ನಡೆದ ಮುಸಲ್ಮಾನರ ದೌರ್ಜನ್ಯದ ಹಿನ್ನೆಲೆಯಲ್ಲಿ ಮ್ಯಾನ್ಮಾರ್ ನ ಕೌನ್ಸಿಲರ್ ಆಂಗ್ ಸಾನ್ ಸೂ ಕಿ ಅವರಿಗೆ ನೀಡಿದ್ದ ಗೌರವ ಪೌರತ್ವವನ್ನು ಕೆನಡಾ ಸರಕಾರವು ಹಿಂಪಡೆದಿದೆ.
ರೋಹಿಂಗ್ಯಾ ಮುಸ್ಲಿಮರ ವಿರುದ್ದಧ ದೌರ್ಜನ್ಯದ ಹಿನ್ನೆಲೆಯಲ್ಲಿ ಆಂಗ್ ಸಾನ್ ಸೂಕಿ ಗೌರವ ಪೌರತ್ವವನ್ನು ಹಿಂಪಡೆದ ಕೆನಡಾ
ಕ್ರೀಡೆ , ಪ್ರಮುಖ ವರದಿಗಳು ಕೋಲ್ಕತ್ತಾ: ಇಂಡಿಯನ್ ಪ್ರೀಮಿಯರ್ ಲೀಗ್ ಟಿ-20 ಕ್ರಿಕೆಟ್ ಲೀಗ್ ಪಂದ್ಯಾವಳಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ಸೋಲನುಭವಿಸಿದೆ.
ರಶೀದ್ ಖಾನ್ ಆಲ್ರೌಂಡ್ ಆಟಕ್ಕೆ ಸೋತು ಶರಣಾದ ಕೆಕೆಆರ್ ! ಫೈನಲ್ ಗೆ ಲಗ್ಗೆ ಇಟ್ಟ ಹೈದರಾಬಾದ್
ರಾಜ್ಯ ಸುದ್ದಿಗಳು ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : ಸ್ವಾಮಿ ವಿವೇಕಾನಂದರು 1893 ಸೆಪ್ಟೆಂಬರ್ 11 ರಂದು ಚಿಕಾಗೋನಲ್ಲಿ ನಡೆದ ಪ್ರಥಮ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಮೊತ್ತಮೊದಲು ಭಾರತದ ಹಿರಿಮೆ ಗರಿಮೆಗಳನ್ನು ಜಗತ್ತಿನಾದ್ಯಂತದ ಪಸರಿಸಿದರು.
ಸ್ವಾಮಿ ವಿವೇಕಾನಂದರ ಐತಿಹಾಸಿಕ ಶಿಕಾಗೋ ಉಪನ್ಯಾಸದ 125ನೇ ವರ್ಷದ ಸಂಭ್ರಮಾಚರಣೆ
ರಾಜ್ಯ ಸುದ್ದಿಗಳು ಸೌದಿಅರೇಬಿಯಾ(ವಿಶ್ವಕನ್ನಡಿಗನ್ಯೂಸ್) : ಅಲ್ ಖಫ್ಜಿ ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ಚಾಪ್ಟರ್ ಅಲ್ ಖಫ್ಜಿ ಘಟಕದ ವತಿಯಿಂದ ಅನಿವಾಸಿ ಭಾರತೀಯರಿಗಾಗಿ ಬೃಹತ್ ಇಪ್ತಾರ್ ಮೀಟ್ ಅಲ್ ಖಪ್ಜೀಯ ಅಲ್ ವಾದಿ ಕೂರಾ ಅಡಿಟೋರಿಯಂನಲ್ಲಿ ನಡೆಯಿತು, ಕಾರ್ಯಕ್ರಮದಲ್ಲಿ ರಂಜಾನ್ ಸಂದೇಶ ಬಗ್ಗೆ ಇಂಡಿಯನ್ ಸೋಶಿಯಲ್ ಫೋರಮ್ ಇದರ ರಾಜ್ಯ ಸಮಿತಿಯ ಸದಸ್ಯರಾದ ಮೀರಾಜ್ ಅಹ್ಮದ್ ಗುಲ್ಬರ್ಗಾ ರಂಝಾನ್ ಸಂದೇಶ ಹಾಗೂ ಭಾರತದ ಪ್ರಸಕ್ತ ಸನ್ನಿವೇಶಗಳ ಬಗ್ಗೆ ಮಾತನಾಡಿದರು.
ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ಚಾಪ್ಟರ್ ಅಲ್ ಖಪ್ಜಿ ವತಿಯಿಂದ ಬೃಹತ್ ಇಪ್ತಾರ್ ಮೀಟ್
ರಾಷ್ಟ್ರೀಯ ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ನಿರ್ದಿಷ್ಟ ದಾಳಿ ಬಗ್ಗೆ ಇರುವ ಮಹತ್ವದ ವಿಡಿಯೊ ದಾಖಲೆಗಳನ್ನು ಸೇನಾಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದ್ದಾರೆ.
ಸರ್ಜಿಕಲ್ ಸ್ಟ್ರೈಕ್: ಸರ್ಕಾರಕ್ಕೆ ಸೇನೆಯಿಂದ ದಾಖಲೆಗಳ ಹಸ್ತಾಂತರ
ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್. . ಚೀನಾ ಅಧ್ಯಕ್ಷರ ಭೇಟಿಯ ಕಾರಣ ಚೆನ್ನೈ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಎರಡನೇ ಸುತ್ತಿನ ಮಾತುಕತೆಗೂ ಮುನ್ನ ಮಾಮಲ್ಲಪುರಂ ಬೀಚ್ ನಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.
ಬೆಳಗ್ಗಿನ ಸಮಯದಲ್ಲಿ ಮಾಮಲ್ಲಪುರಂ ಬೀಚ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಸ್ವಚ್ಛತಾ ಕಾರ್ಯ
ಪ್ರಮುಖ ವರದಿಗಳು , ರಾಷ್ಟ್ರೀಯ ಪಾಟ್ನಾ: ಪಾಟ್ನಾ ರೈಲು ನಿಲ್ದಾಣದಲ್ಲಿ ದೇಶದ ಇತರೆ ರೈಲು ನಿಲ್ದಾಣಗಳಿಗಿಂತಲೂ ಅತಿ ಹೆಚ್ಚು ಉಚಿತ ವೈ ಫೈ ಸವಲತ್ತನ್ನು ಬಳಸಲಾಗುತ್ತಿದ್ದು, ಬಹುತೇಕ ಮಂದಿ ವೈಫೈ ಬಳಸಿ ಅಶ್ಲೀಲ ಜಾಲತಾಣಗಳಿಗಾಗಿ ಜಾಲಾಡಿದ್ದಾರೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಅಶ್ಲೀಲ ಚಿತ್ರ ನೋಡೋಕೆ ಬಳಕೆಯಾಗುತ್ತಿದೆ ಪಾಟ್ನಾ ರೈಲು ನಿಲ್ದಾಣದಲ್ಲಿ ಸಿಗುವ ಉಚಿತ ವೈಫೈ
ಚಿತ್ರ ಜಗತ್ತು (ವಿಶ್ವ ಕನ್ನಡಿಗ ನ್ಯೂಸ್ ): ಮದುವೆಯ ಸಂಭ್ರಮದಲ್ಲಿರುವ ನಟಿ ಪ್ರಿಯಾಂಕಾ ಚೋಪ್ರಾ ಹಾಗು ನಿಕ್ಕಿ ಜೋನ್ಸ್ ಅವರೀಗ ಅಂತರ್ಜಾಲದ ಟ್ರೊಲ್ ಪೇಜ್ ಗಳಿಗೆ ಭರ್ಜರಿ ಆಹಾರವಾಗಿದ್ದಾರೆ.
ಟ್ರೊಲ್ ಪೇಜ್ ಗಳಿಗೆ ಆಹಾರವಾದ ಪ್ರಿಯಾಂಕಾ -ನಿಕ್ಕಿ ಜೋಡಿ
ನವದೆಹಲಿ, ಆಗಸ್ಟ್ 17: ಗಾಂಧಿವಾದಿ ಅಣ್ಣಾ ಹಜಾರೆ ಅವರನ್ನು ಇನ್ನೂ ಬಂಧ ಮುಕ್ತಗೊಳಿಸಲಾಗಿಲ್ಲ.
ಷರತ್ತಿಗೆ ಒಪ್ಪದ ಅಣ್ಣಾಗೆ ಬಿಡುಗಡೆಯ ಭಾಗ್ಯ ಇಲ್ಲ
ರಾಜ್ಯ ಸುದ್ದಿಗಳು. . ದ. ಕ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಫರಂಗಿಪೇಟೆ ಆಸುಪಾಸಿನ ಕುಂಜತ್ಕಳ,ಪುಂಚಮೆ,ಅಮೆಮಾರ್ ಮತ್ತು ಕುಂಪನಮಜಲು ಪರಿಸರದ ತಗ್ಗು ಪ್ರದೇಶಗಳಲ್ಲಿ ನೀರಿನ ಹರಿವು ಜಾಸ್ತಿಯಾದ ಕಾರಣ ಸುಮಾರು 40 ರಷ್ಟು ಮನೆಗಳು ಜಲಾವೃತಗೊಂಡಿದ್ದವು ಈ ಸಂಧರ್ಭದಲ್ಲಿ ಸ್ಥಳೀಯ ನಿವಾಸಿಗಳನ್ನು ಮತ್ತು ಮನೆಯ ಸಾಮಗ್ರಿಗಳನ್ನು ಸ್ಥಳಾಂತರಗೊಳಿಸುವ ಸಲುವಾಗಿ ಎಸ್ಡಿಪಿಐ ಮತ್ತು ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ನೆರೆ ಸಂತ್ರಸ್ತರಿಗೆ ಸಹಾಯಕ ಮಿತ್ರರಾಗಿ ಸೇವೆ ಸಲ್ಲಿಸಿದರು.
ಎಸ್.ಎ.ರಹಿಮಾನ್ ಮಿತ್ತೂರು (ವಿಶ್ವ ಕನ್ನಡಿಗ ನ್ಯೂಸ್
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 14: ಜಿಲ್ಲಾ ಹಡಪದ ಸಮಾಜ ಹಾಗೂ ಕ್ಷೌರಿಕರ ಹಿತ ರಕ್ಷಣೆ ವೇದಿಕೆವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇದೇ ಡಿ. 16ರಂದು ಬೆಂಗಳೂರು ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಹಡಪದ ಸಮಾಜ ಅಧ್ಯಕ್ಷ ಮಂಜುನಾಥ ಹಂದ್ರಾಳ ತಿಳಿಸಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಪ್ರಕಟಿಸಲಾಗಿದೆ ಕಾಂಚೀಪುರಂ(ತಮಿಳುನಾಡು), ಡಿ. 1 - ಪರಿಹಾರ ನೀಡಲು ವಿಫಲವಾಗಿದ್ದಕ್ಕೆ ಎಂಜಿನ್ ಜಪ್ತಿ ಮಾಡಲು ಸ್ಥಳೀಯ ನ್ಯಾಯಾಲಯ ನೀಡಿದ್ದ ಆದೇಶ ಪಾಲಿಸಲು ಮುಂದಾದ ಸಿಬ್ಬಂದಿ ಯತ್ನವನ್ನು ತಿರುಪತಿ-ಪುದುಚೇರಿ ಫಾಸ್ಟ್ ಪ್ಯಾಸೆಂಜರ್ ರೈಲು ವಿಫಲಗೊಳಿಸಿದ ಘಟನೆ ನಡೆದಿದೆ.
ಕೋಟರ್್ ಆದೇಶಕ್ಕೆ ಕ್ಯಾರೆ ಎನ್ನದ ತಿರುಪತಿ-ಪುದುಚೇರಿ ಫಾಸ್ಟ್ ಪ್ಯಾಸೆಂಜರ್ ರೈಲು
ನವದೆಹಲಿ, ಡಿ. 4 : ವಿಲಾಸ್ ರಾವ್ ದೇಶಮುಖ್ ರಾಜೀನಾಮೆಯಿಂದ ಖಾಲಿಯಾಗಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆಯ ಕಸರತ್ತು ಮುಂದುವರೆದಿದೆ.
ಅಶೋಕ್ ಚೌಹಾಣ್ ಮಹಾರಾಷ್ಟ್ರ ಸಿಎಂ
ದಕ್ಷಿಣ ಕನ್ನಡ ತೊಕ್ಕೊಟ್ಟು(ವಿಶ್ವಕನ್ನಡಿಗ ನ್ಯೂಸ್): ಮೊನ್ನೆ ಕಲ್ಲಾಪುವಿನಲ್ಲಿ ನಡೆದ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ವಿಲ್ಸನ್ ಅಲೆನ್ ಫೆರ್ನಾಂಡಿಸ್ ಅವರ ಮೃತದೇಹವನ್ನು ದೇರಳಕಟ್ಟೆಯ ಯೇನಪೋಯ ಮೆಡಿಕಲ್ ಕಾಲೇಜಿನ ಶವಾಗಾರದಲ್ಲಿ ಇಡಲಾಗಿತ್ತು.
ನಿರ್ಲಕ್ಷ್ಯ ವಹಿಸಿ ಮೃತದೇಹ ಕೊಳೆಯುವಂತೆ ಮಾಡಿದ ಯೇನಪೋಯ ಆಸ್ಪತ್ರೆಯ ಮೇಲೆ ಕ್ರಮಕ್ಕೆ ಡಿವೈಎಫ್ಐ ಆಗ್ರಹ
ಪ್ರಕಟಿಸಲಾಗಿದೆ ಮುಂಬೈ, ನ 11: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕೇ ಅಥವಾ ಬೇಡವೇ?
ಮಿತ್ರ ಪಕ್ಷ ಕಾಂಗ್ರೆಸ್ ಜೊತೆ ಚರ್ಚಿಸಿದ ನಂತರವೇ ಅಂತಿಮ ತೀರ್ಮಾನ; ಶರದ್ ಪವಾರ್
ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ಕಾರಾಜೆ-ಪಡ್ಪು ದಾರುಲ್ ಹುದಾ ಜುಮಾ ಮಸೀದಿ ಅಧೀನದಲ್ಲಿ ಶಂಸುಲ್ ಉಲಮಾ ಕ್ರಿಯಾ ಸಮಿತಿಯನ್ನು ಇತ್ತೀಚೆಗೆ ರೂಪೀಕರಿಸಲಾಗಿದ್ದು, ಅಧ್ಯಕ್ಷರಾಗಿ ಅನ್ಸಾರ್ ಅಟೋ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಬ್ಯಾಂಕ್ ಅವರನ್ನು ಅವಿರೋಧವಾಗಿ ಆರಿಸಲಾಯಿತು.
ಕಾರಾಜೆ-ಪಡ್ಪು ಶಂಸುಲ್ ಉಲಮಾ ಕ್ರಿಯಾ ಸಮಿತಿ ಅಧ್ಯಕ್ಷರಾಗಿ ಅನ್ಸಾರ್ ಆಯ್ಕೆ
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : "ಪ್ರಸ್ತುತ ಶಿಕ್ಷಣ ವ್ಯವಸ್ಥೆ ಕಾರ್ಖಾನೆಯ ಮಾದರಿಯನ್ನು ಅನುಸರಿಸುತ್ತಿದ್ದು, ಜೊತೆಗೆ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯ ಉತ್ಪಾದನೆಗಳಾಗುತ್ತಿದ್ದು, ಶಿಕ್ಷಣ ವಲಯ ಈ ಕಾರ್ಖಾನೆಗಳ ಕಾರ್ಮಿಕರಾಗಿದ್ದಾರೆ.
ಪ್ರಸ್ತುತ ಶಿಕ್ಷಣ ವ್ಯವಸ್ಥೆ ಶಿಕ್ಷಣ ವಲಯದಲ್ಲಿ ಹಲವು ಆಯಾಮಗಳ ಸಂಕೀರ್ಣ ಸಮಸ್ಯೆಗಳನ್ನು ಹುಟ್ಟುಹಾಕಿದೆ : ಪ್ರೊ. ಸುಕುಮಾರ್ ಗೌಡ
ದಕ್ಷಿಣ ಕನ್ನಡ. . : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಗುರುಪುರ ಗ್ರಾಮ ಪಂಚಾಯತಿಗೊಳಪಟ್ಟ ಅಡ್ಡೂರಿನ ಕುಚುಗುಡ್ಡೆ ಎಂಬಲ್ಲಿ ಕಳೆದ ಒಂದುವರೆ ತಿಂಗಳಿನಿಂದ ಟೈಪೋಯ್ಡ್ ರೋಗ ಕಾಣೆಸಿಕೊಂಡಿದ್ದು ಸುಮಾರು 12 ಮಂದಿ ಈ ರೋಗಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.
ಅಡ್ಡೂರಿನ ಕುಚುಗುಡ್ಡೆ ಎಂಬಲ್ಲಿ 12 ಮಂದಿಗೆ ಟೈಪೋಯ್ಡ್ : ಶುದ್ದ ನೀರಿಲ್ಲದೆ ಜನರು ಪರದಾಟ
ಪ್ರಕಟಿಸಲಾಗಿದೆ ನವದೆಹಲಿ, ನ. 22 : ರೈಲ್ವೆಯನ್ನು ಖಾಸಗೀಕರಣಗೊಳಿಸಲು ಸಕರ್ಾರ ಪ್ರಯತ್ನಿಸುತ್ತಿದೆ ಎಂಬ ವರದಿಯನ್ನು ತಳ್ಳಿಹಾಕಿರುವ ರೈಲ್ವೆ ಖಾತೆ ಸಚಿವ ಪಿಯೂಶ್ ಗೋಯಲ್ ಶುಕ್ರವಾರ, ಭಾರತೀಯ ರೈಲ್ವೆ ಯಾವಾಗಲೂ ಭಾರತದ ಜನರ ಆಸ್ತಿಯಾಗಿದೆ ಮತ್ತು ಆಸ್ತಿಯಾಗಿಯೇ ಉಳಿಯಲಿದೆ ಎಂದು ಹೇಳಿದ್ದಾರೆ.
ರೈಲ್ವೆಯನ್ನು ಖಾಸಗೀಕರಣಗೊಳಿಸುವ ಯಾವುದೇ ಉದ್ದೇಶವಿಲ್ಲ: ಪಿಯೂಶ್ ಗೋಯಲ್
ಪ್ರಕಟಿಸಲಾಗಿದೆ ಧಾರವಾಡ 01: ಕುಟುಂಬದ ಸದಸ್ಯರ ರಕ್ಷಣೆ ಮತ್ತು ಅವರ ಹಿತಾಸಕ್ತಿಯನ್ನು ರಕ್ಷಿಸುವುದು ಕುಟುಂಬ ಮುಖ್ಯಸ್ಥರ ಹೊಣೆಗಾರಿಕೆಯಾಗಿದೆ.
ಹಿತಾಸಕ್ತಿ ರಕ್ಷಿಸುವುದು ಕುಟುಂಬ ಮುಖ್ಯಸ್ಥರ ಹೊಣೆಗಾರಿಕೆ: ಪಾಟೀಲ
ಚಿಕ್ಕಬಳ್ಳಾಪುರ ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್) ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ)ರೈತ ಘಟಕದ ಶಿಡ್ಲಘಟ್ಟ ತಾಲೂಕು ಅಧ್ಯಕ್ಷರಾಗಿ ದೊಗರನಾಯಕನಹಳ್ಳಿ ಡಿ. ಎಂ. ಮುನಿವೆಂಕಟಪ್ಪ ಅವರನ್ನು ನೇಮಕ ಮಾಡಿ ತಾಲೂಕು ಅಧ್ಯಕ್ಷ ಗಂಜಿಗುಂಟೆ ವಸಂತ್ಕುಮಾರ್ ಆದೇಶ ಹೊರಡಿಸಿದ್ದಾರೆ.
ಶಿಡ್ಲಘಟ್ಟ ಕರವೇ ರೈತ ಘಟಕದ ಅಧ್ಯಕ್ಷರಾಗಿ ಮುನಿವೆಂಕಟಪ್ಪ ನೇಮಕ
ದಕ್ಷಿಣ ಕನ್ನಡ ಕೋಟೆಕಾರ್ (ವಿಶ್ವ ಕನ್ನಡಿಗ ನ್ಯೂಸ್):- ಬಿ. ಸಿ. ರೋಡ್ ಅಲ್ ಮುಬಾರಕ್ ಜುಮಾ ಮಸ್ಜಿದ್ ಇಲ್ಲಿ ಮಾಸಿಕ ನಡೆಸಲ್ಪಡುವ ಧ್ಸಿಕ್ರ್ ಮಜ್ಲಿಸ್ ದಿನಾಂಕ 2-9-2018 ರವಿವಾರ ಮಗ್ರಿಬ್ ನಮಾಝ್ ಬಳಿಕ ಬಹು ಅಲ್ ಹಾಜ್ ಕೆ ಪಿ ಹುಸೈನ್ ಸಅದಿ ಉಸ್ತಾದ್ ರವರ ನೇತೃತ್ವದಲ್ಲಿ ಜರಗಲಿದೆ ಎಂದು ಪ್ರಕಟನೆಯಲ್ಲಿ ಕೋರಲಾಗಿದೆ.
ಸಪ್ಟೆಂಬರ್ 2 ಅಲ್ ಮುಬಾರಕ್ ಜುಮಾ ಮಸ್ಜಿದ್ ಕೆ.ಸಿ ರೋಡ್ ಧ್ಸಿಕ್ರ್ ಮಜ್ಲಿಸ್
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್):- ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ, ಕೇಂದ್ರದ ನರೇಂದ್ರ ಮೋದಿ ಸರಕಾರದ ಜನವಿರೋಧಿ ನೀತಿಯನ್ನು ವಿರೋಧಿಸಿ ಸೆಪ್ಟಂಬರ್ 10ರ ಭಾರತ್ ಬಂದ್ ಗೆ ಬಂದರು ಶ್ರಮಿಕರ ಸಂಘ ಬೆಂಬಲ ವ್ಯಕ್ತಪಡಿಸಿದೆ ಎಂಜು ಬಂದರು ಶ್ರಮಿಕರ ಸಂಘ ಪ್ರಧಾನ ಕಾರ್ಯದರ್ಶಿ ಬಿ. ಕೆ ಇಮ್ತಿಯಾಝ್ ಹೇಳಿದ್ದಾರೆ.
ಸೆ .10 ಭಾರತ್ ಬಂದ್ ಬೆಂಬಲಿಸಿ ಹಳೆ ಬಂದರು ಕಾರ್ಮಿಕರಿಂದ ಮೆರವಣಿಗೆ
ಕರಾವಳಿ ಉಡುಪಿ: ಗುರುವಾರ ನಿಧನರಾದ ಕಾರ್ಕಳದ ಮಾಜಿ ಶಾಸಕ ಗೋಪಾಲ್ ಭಂಡಾರಿ ಅವರಿಗೆ ಶುಕ್ರವಾರ ಕಾರ್ಕಳ ಹೆಬ್ರಿಯ ಸ್ವಗೃಹದ ಜಮೀನಿನಲ್ಲಿ ಸಕಲ ಸರಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.
ಮಾಜಿ ಶಾಸಕ ಗೋಪಾಲ್ ಭಂಡಾರಿ ಅವರಿಗೆ ಸರಕಾರಿ ಗೌರವದೊಂದಿಗೆ ಅಂತಿಮ ವಿದಾಯ
ಬೆಂಗಳೂರು, ಆ. 13:ಕೇಂದ್ರ ಸಚಿವ,ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ವಹಿಸಿಕೊಂಡಿರುವ ಪೃಥ್ವಿರಾಜ್ ಚೌವ್ಹಾಣ್ ಬುಧವಾರ ಬೆಂಗಳೂರಿಗೆ ಆಗಮಿಸಿದ ಕಾರಣ ಹಲವಾರು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಂಗ್ರೆಸ್ ಚಟುವಟಿಕೆಗಳು ಒಮ್ಮೆಲೆ ಗರಿಗೆದರಿಕೊಂಡಿವೆ.
ಚೌಹಾಣ್ ಆಗಮನ; ಕಾಂಗ್ರೆಸ್ ಪಕ್ಷದಲ್ಲಿ ಸಂಚಲ
ಪ್ರಕಟಿಸಲಾಗಿದೆ ಬೆಳಗಾವಿ 24: ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿ.
ಬೆಳಗಾವಿ: ಬೌದ್ಧಿಕ ಆಸ್ತಿ ಸಾಮ್ಯ ಕುರಿತು ಕಾರ್ಯಾಗಾರ
ಟಿಸಿಎಸ್ ಗೆ 15 ಸಾವಿರ ಉದ್ಯೋಗಿಗಳು ಬೇಕಂತೆ ।
ಭಾರತ ದೊಡ್ಡ ಸಾಫ್ಟ್ ವೇರ್ ಕಂಪನಿ
ಕರ್ನಾಟಕ , ಪ್ರಮುಖ ವರದಿಗಳು ಮೈಸೂರು: ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದಲ್ಲಿ ಶಾಸಕ ಸಿ. ಟಿ. ರವಿ ಅವರ ಆಪ್ತ ಪ್ರವೀಣ್ಖಾಂಡ್ಯನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಬಿಜೆಪಿಯವರ ನಿಜ ಬಣ್ಣ ಬಯಲಾಗುತ್ತದೆ ಎಂದುಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪ್ರವೀಣ್ ಖಾಂಡ್ಯನನ್ನು ಬಂಧಿಸಿದರೆ ಬಿಜೆಪಿ ನಿಜ ಬಣ್ಣ ಬಯಲಾಗುತ್ತದೆ : ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಂಬೈ , ರಾಷ್ಟ್ರೀಯ ಮುಂಬೈ: ನಾನು ಬಾಯಿ ತೆರೆದರೆ ಇಡೀ ದೇಶ ಅಲ್ಲಾಡಿ ಹೊದೀತು. . . ' ಕಳೆದ ಒಂದು ತಿಂಗಳ ಹಿಂದೆ ಕುಟುಕು ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ತಲೆದಂಡ ತೆತ್ತಿದ್ದ ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ಏಕ್ನಾಥ್ ಖಡಸೆ ಇಂದು ಇಂಥದೊಂದು ಬಾಂಬ್ ಸಿಡಿಸಿದ್ದಾರೆ.
ನಾನು ಬಾಯ್ಬಿಟ್ಟರೆ ಇಡೀ ದೇಶ ಅಲ್ಲಾಡಿ ಹೋಗುತ್ತೆ: ಬಾಂಬ್ ಸಿಡಿಸಿದ ಬಿಜೆಪಿ ಹಿರಿಯ ನಾಯಕ ಏಕ್ನಾಥ್ ಖಡಸೆ
ದಕ್ಷಿಣ ಕನ್ನಡ ಮಂಗಳೂರು. . : ಮುಖ್ಯವಾಹಿನಿಯಲ್ಲಿ ಎಲ್ಲರೂ ಸಮಾನರಾಗಿ ಬದುಕಲು ವಿಕಲಚೇತನರಿಗೆ ಸರ್ಕಾರ ಸಂಘಸಂಸ್ಥೆಗಳ ಮೂಲಕ ಎಲ್ಲ ನೆರವು ನೀಡುತ್ತಿದ್ದು, ಇಂದು ಈ ಸಂಬಂಧ ಸ್ವೀಕರಿಸಿದ ಮನವಿಗಳನ್ನು ಪರಿಶೀಲಿಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನಗರಾಭಿವೃದ್ಧಿ ಹಾಗೂ ವಸತಿ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ನೀಡಿದರು.
ಸಾಧಕ ವಿಕಲಚೇತನರಿಗೆ ಸನ್ಮಾನ, ಸ್ವಾವಲಂಬಿ ಬದುಕು ರೂಪಿಸಲು ಸರ್ಕಾರದಿಂದ ಎಲ್ಲ ನೆರವು - ಯು ಟಿ ಖಾದರ್
ಕರ್ನಾಟಕ ಬೆಂಗಳೂರು: ಟಿಪ್ಪು ಸುಲ್ತಾನ್ ಅವರನ್ನು ಹಿಟ್ಲರ್'ಗೆ ಹೋಲಿಕೆ ಮಾಡುವ ಮೂಲಕ ಸಾಹಿತಿ ಚಿದಾನಂದ ಮೂರ್ತಿ ಅವರು ಗುರುವಾರ ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ, ಈ ಕುರಿತಂತೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಟಿಪ್ಪುವಿಗೂ ಹಿಟ್ಲರ್ ಗೂ ಯಾವುದೇ ವ್ಯತ್ಯಾಸವಿಲ್ಲ.
ಟಿಪ್ಪುವನ್ನು ಹಿಟ್ಲರ್'ಗೆ ಹೋಲಿಕೆ ಮಾಡಿದ ಚಿದಾನಂದ ಮೂರ್ತಿ
ರಾಷ್ಟ್ರೀಯ ಜಮ್ಮು: ಕಾಶ್ಮೀರ ಹಿಂಸಾಚಾರದಲ್ಲಿ ಭಾಗಿಯಾಗಿರುವವರೊಂದಿಗೆ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಕಾಶ್ಮೀರ ಹಿಂಸಾಚಾರದಲ್ಲಿ ತೊಡಗಿರುವವರು ಸತ್ಯಾಗ್ರಹಿಗಳಲ್ಲ, ಆಕ್ರಮಣಕಾರರು
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕಂಪ್ಲಿ 01: ಆಶ್ರಯ ನಿವೇಶನಗಳಲ್ಲಿ ಅನಧಿಕೃತವಾಗಿ ಅತಿಕ್ರಮಿಸಿದವರನ್ನು ತೆರವುಗೊಳಿಸಬೇಕು ಮತ್ತು ಅನರ್ಹರು ಪಟ್ಟಾಗಳನ್ನು ಪಡೆದುಕೊಂಡಿದ್ದು ಸೂಕ್ತವಾಗಿ ಪರಿಶೀಲನೆ ನಡೆಸಿ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
ಕಂಪ್ಲಿ: ಆಶ್ರಯ ನಿವೇಶನಗಳಲ್ಲಿಅತಿಕ್ರಮಿಸಿದವರನ್ನು ತೆರವುಗೊಳಿಸಿದ ಶಿವನಗೌಡ ರೆಡ್ಡಿ
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಭಾರತ ದೇಶ ಬಾಹ್ಯ ಶಕ್ತಿಗಳಿಂದ ಸ್ವಾತಂತ್ರ್ಯವನ್ನು ಪಡೆದಿದೆಯಾದರೂ, ಆಂತರಿಕವಾಗಿ ಜಾತಿ-ಧರ್ಮಗಳ ಕಪಿಮುಷ್ಠಿಯಲ್ಲಿ ಬಂಧಿಯಾಗಿದೆ ಎಂದು ಸುಜೀರ್ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಎಫ್. ಉಮರ್ ಫಾರೂಕ್ ಫರಂಗಿಪೇಟೆ ವಿಷಾದಿಸಿದರು.
ಬಲಿಷ್ಠ ಭಾರತ ನಿರ್ಮಾಣ ವಿದ್ಯಾರ್ಥಿಗಳಿಂದಲೇ ಪ್ರಾರಂಭವಾಗಬೇಕು : ಉಮರ್ ಫಾರೂಕ್
ಕ್ರೀಡೆ ಮುಂಬಯಿ: ಮುಂಬರುವ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳುವ ಭಾರತೀಯ ಕ್ರಿಕೆಟ್ ತಂಡದ ಸದಸ್ಯರನ್ನು ಇಂದು ಆಯ್ಕೆ ಮಾಡಲಾಗಿದೆ.
ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಕಟ: ಯಾರಿಗೆಲ್ಲ ಅವಕಾಶ ನೀಡಲಾಗಿದೆ ನೋಡಿ
ಪ್ರಕಟಿಸಲಾಗಿದೆ ಹಾವೇರಿ: ಕೈದಿಗಳು ಶಿಕ್ಷೆ ಮುಗಿಸಿ ಹೊರಗೆ ಬಂದಾಗ ಮನಪರಿವರ್ತನೆ ಮಾಡಿಕೊಂಡು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕುಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಸ್. ಎಚ್. ರೇಣುಕಾದೇವಿ ಹೇಳಿದರು.
ಮನಪರಿವರ್ತನೆ ಮಾಡಿಕೊಂಡು ಸತ್ಪ್ರಜೆಗಳಾಗಿ ಬದುಕಿ
ದಕ್ಷಿಣ ಕನ್ನಡ ಕಟ್ಟತ್ತಿಲ(ವಿಶ್ವಕನ್ನಡಿಗ ನ್ಯೂಸ್): ಸುನ್ನೀ ಯುವಜನ ಸಂಘ ಇದರ ಸದಸ್ಯತ್ವ ಅಭಿಯಾನವು ಸಿಸ್ ಕಟ್ಟತ್ತಿಲ ಕಛೇರಿಯಲ್ಲಿ ನಡೆಯಿತು.
ರಾಜ್ಯ SYS ಸದಸ್ಯತ್ವ ಅಭಿಯಾನಕ್ಕೆ ಕಟ್ಟತ್ತಿಲದಲ್ಲಿ ವಿಧ್ಯುಕ್ತ ಚಾಲನೆ
ದಕ್ಷಿಣ ಕನ್ನಡ ಸಾಲೆತ್ತೂರ್ (ವಿಶ್ವ ಕನ್ನಡಿಗ ನ್ಯೂಸ್ ) : ಮಿತ್ತರಾಜೆ ಶಾಖೆಯ ಯೂನಿಟ್ ಸಮ್ಮೇಳನ ಮತ್ತು ಮಹ್ಲರತುಳ್ ಬದ್ರಿಯಾ 28-10-2018 ಆದಿತ್ಯವಾರದಂದು ಪಂಜರಕೋಡಿ ರಿಫಾಯಿಯ್ಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.
ಮಿತ್ತರಾಜೆ ಶಾಖೆಯ ವತಿಯಿಂದ ಯುನಿಟ್ ಕಾನ್ಫರೆನ್ಸ್
ರಾಷ್ಟ್ರೀಯ ಹೈದರಾಬಾದ್: ವಿವಾದಾತ್ಮಕ ತೆಲುಗು ಚಿತ್ರ ವಿಮರ್ಶಕ ಕಾಥಿ ಮಹೇಶ್ನನ್ನು 6 ತಿಂಗಳ ಕಾಲ ಹೈದರಾಬಾದ್ನಿಂದ ಬ್ಯಾನ್ ಮಾಡಲಾಗಿದೆ.
ರಾಮನಿಗೆ ಅವಮಾನ: ಕಾಥಿ ಮಹೇಶ್ 6 ತಿಂಗಳ ಕಾಲ ಹೈದರಾಬಾದ್ನಿಂದ ಬ್ಯಾನ್
ದಕ್ಷಿಣ ಕನ್ನಡ ಕಂಕನಾಡಿ(ವಿಶ್ವಕನ್ನಡಿಗ ನ್ಯೂಸ್): ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಘಟಕದಿಂದ ಅಂಚೆ ಕಛೇರಿಗೆ ಮನವಿಯನ್ನು ನೀಡಲಾಯಿತು.
ಕಂಕನಾಡಿ ಬಿ ಗ್ರಾಮದಲ್ಲಿ ಅಂಚೆ ಕಚೇರಿ ನಿರ್ಮಿಸಲು ಒತ್ತಾಯಿಸಿ ಮನವಿ
ಕರ್ನಾಟಕ ಬೆಂಗಳೂರು, ಜ. ೨೫- ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು.
ಸಚಿವರಿಗೆ ತಲೆದಂಡದ ಎಚ್ಚರಿಕೆ : ಅಭ್ಯರ್ಥಿಗಳ ಗೆಲುವಿಗೆ ಶ್ರಮ- ತಪ್ಪಿದರೆ ಕ್ರಮ-ಸಿದ್ದು ಗುಡುಗು
ಪ್ರಕಟಿಸಲಾಗಿದೆ ಕೊಪ್ಪಳ 04: ಯುವಕರಲ್ಲಿನ ಜಾನಪದ ಸಂಸ್ಕೃತಿಯನ್ನು ಉಳಿಸಲು ಇಂತಹ ಯುವ ಜನ ಮೇಳಗಳು ಸಹಕಾರಿಯಾಗಲಿವೆ ಎಂದು ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಚಂಡೂರು ಹನುಮಂತಗೌಡ ಪಾಟೀಲ ಹೇಳಿದರು.
ಯುವಕರಲ್ಲಿನ ಜಾನಪದ ಸಂಸ್ಕೃತಿಯನ್ನು ಉಳಿಸಲು ಮೇಳಗಳು ಸಹಕಾರಿ: ಹನುಮಂತಗೌಡ
ಕರ್ನಾಟಕ ಬೆಂಗಳೂರು: ಪತಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ನಂತರ ಶವಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಮಲ್ಲೇಶ್ವರಿ (32) ಎಂಬಾಕೆಯನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.
ಪತಿಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿ ಪರಾರಿಯಾಗಿದ್ದ ಪತ್ನಿ ಕೊನೆಗೂ ಪೋಲೀಸರ ಬಲೆಗೆ
ರಾಜ್ಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್ ) ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ನೂತನ ಸಚಿವರಾಗಿ ನಿನ್ನೆ ಪ್ರಮಾಣ ವಚನ ಸ್ವೀಕರಿಸಿದ ಮಂಗಳೂರು ಶಾಸಕರಾದ ಶ್ರೀ ಯು ಟಿ ಖಾದರ್ ರವರನ್ನು ಬೆಂಗಳೂರು ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಆರ್ ಟಿ ನಗರ ಬ್ಲಾಕ್ ಕಾಂಗ್ರೆಸ್ ಮೈನಾರಿಟಿ ಸಂಯೋಜಕರಾದ ಸಾಜಿದ್ ಬರೆಪ್ಪಾಡಿ ಯವರು ಅವರ ಜಯಮಹಲ್ ನಿವಾಸದಲ್ಲಿ ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು.
ಆರ್ ಟಿ ನಗರ ಬ್ಲಾಕ್ ಕಾಂಗ್ರೆಸ್ ಮೈನಾರಿಟಿ ಸಂಯೋಜಕ ಸಾಜಿದ್ ಬರೆಪ್ಪಾಡಿಯವರಿಂದ ನೂತನ ಸಚಿವ ಯು.ಟಿ ಖಾದರ್ ಅವರಿಗೆ ಅಭಿನಂದನೆ
ಮನೋರಂಜನೆ 1966ರಲ್ಲಿ ಮುಂಬೈಯನ್ನು ನಿವಾಸಿಗಳನ್ನು ಬೆಚ್ಚಿ ಬೀಳಿಸಿದ ಹತ್ಯಾಕಥೆಯ ಚಿತ್ರವೊಂದನ್ನು ನಿರ್ದೇಶಕ ಅನುರಾಗ್ ಕಶ್ಯಪ್ ಕೈಗೆತ್ತಿಗೊಳ್ಳಲಿದ್ದಾರೆ.
ಸೈಕೊ ಕಿಲ್ಲರ್ ರಾಮನ್ ಪಾತ್ರದಲ್ಲಿ ನವಾಝುದ್ದೀನ್ ಸಿದ್ದಿಕಿ
ಉಡುಪಿ ಉಡುಪಿ, (ವಿಶ್ವಕನ್ನಡಿಗ ನ್ಯೂಸ್ ) : ಚುನಾವಣ ಆಯೋಗದ ನಿರ್ದೇಶನದಂತೆ, ಮುಂಬರುವ ಸಾರ್ವತ್ರಿಕ ಚುನಾವಣೆ 2019 ಗೆ ಸಂಬಂದಿಸಿದಂತೆ ಮತದಾರರ ಪಟ್ಟಿಗೆ ಸಂಬಂದಿಸಿದ ಮಾಹಿತಿಗಳನ್ನು ಉಡುಪಿ ಜಿಲ್ಲಾ ಮಟ್ಟದಲ್ಲಿ ಸಾರ್ವಜನಿಕರು ಪಡೆಯಲು ಅನುಕೂಲವಾಗುವಂತೆ, ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಾರಂಭಿಸಿರುವ, ಜಿಲ್ಲಾ ಮಟ್ಟದ ಮತದಾರರ ಸಹಾಯವಾಣಿ ಕೇಂದ್ರ( ವೋಟರ್ ಹೆಲ್ಪ್ ಲೈನ್) ವನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉದ್ಘಾಟಿಸಿದರು.
ಜಿಲ್ಲಾಮಟ್ಟದ ಮತದಾರರ ಸಹಾಯವಾಣಿ ಕೇಂದ್ರ ಆರಂಭ
ರಾಜ್ಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್. . ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಮತ್ತೆ ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಇಂದು ಮಂಗಳೂರಿನಲ್ಲಿ ಮತ್ತೊಮ್ಮೆ ಗುಡುಗಿದ್ದಾರೆ.
ಸಿದ್ಧರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಿಯೇ ಹೋಗುತ್ತಾರೆ'-ಜನಾರ್ಧನ ಪೂಜಾರಿ
ಹಳಿತಪ್ಪಿದ ಲೋಕೋಪಯೋಗಿ: ದಿಕ್ಕು ಕಾಣದಂತಾದ ರಾಜ್ಯ ಸರ್ಕಾರ, ಗುತ್ತಿಗೆದಾರರ ಪರಿಸ್ಥಿತಿ ಹರೋಹರ ಬೆಂಗಳೂರು: ಲೋಕೋಪಯೋಗಿ ಇಲಾಖೆಯಲ್ಲಿ ಅಜೀರ್ಣವಾಗುವಷ್ಟು ಕಾಮಗಾರಿಗೆ ಮಂಜೂರಾತಿ ನೀಡಿದ್ದರಿಂದ ಉಂಟಾದ ಆರ್ಥಿಕ ಮುಗ್ಗಟ್ಟನ್ನು ಪರಿಹರಿಸಿಕೊಳ್ಳಲು ಹಣಕಾಸು ಇಲಾಖೆ ಸರ್ಕಾರದ ಕೈಕಟ್ಟಿದೆ.
ಅಮೆರಿಕ-ಚೀನಾ ಟ್ರೇಡ್ ಡೀಲ್ ಅಂತಿಮ ಘಟ್ಟಕ್ಕೆ: ಸೆನ್ಸೆಕ್ಸ್ 428 ಅಂಶ, ನಿಫ್ಟಿ 114.96 ಅಂಶ ಏರಿಕೆ
ಕ್ರೀಡಾ ಸುದ್ದಿಗಳು (ವಿಶ್ವ ಕನ್ನಡಿಗ. . ):ರೋಹಿತ್ ಶತಕ ಹಾಗು ಜಸ್ಪ್ರೀತ್ ಭುಮ್ರ ನಾಲ್ಕು ವಿಕೆಟ್ ಗಳಿಸುವ ಮೂಲಕ ಭಾರತ ಬಾಂಗ್ಲಾ ವಿರುದ್ಧ ಇಂದಿನ ಮಹತ್ವದ ಪಂದ್ಯವನ್ನು 28 ರನ್ಗಳಿಂದ ಗೆದ್ದು ಕೊಂಡಿದೆ ಈ ಗೆಲುವಿನ ಮೂಲಕ ಟೀಮ್ ಇಂಡಿಯಾ ಸೆಮಿಸ್ಗೆ ಅರ್ಹತೆ ಪಡೆದಿದೆ.
ಬಾಂಗ್ಲಾ ಟೈಗರ್ ಗಳನ್ನು ಮನೆಗೆ ಕಳುಹಿಸಿ ಸೆಮಿ ಫೈನಲ್ ತಲುಪಿದ ಟೀಮ್ ಇಂಡಿಯಾ
ರೋಡ್ ಮೇಗಿನ ಪಂಜಲ ರಹ್ಮಾನಿಯ ನಗರ ಇಲ್ಲಿ ಎಸ್. ವೈ. ಎಸ್. ರಹ್ಮಾನಿಯಾ ನಗರ ಮೇಗಿನ ಪಂಜಲ ಇದರ ಮೂರನೇ ವಾರ್ಷಿಕದ ಅಂಗವಾಗಿ ರಜಬ್ ಸಂದೇಶ ರಂಝಾನ್ ಸಿದ್ದತೆ ಹಾಗೂ ಬೃಹತ್ ಬುರ್ದಾ ಮಜ್ಲಿಸ್ ಎಪ್ರಿಲ್ 8 ರವಿವಾರ ಮಗ್ರಿಬ್ ನಮಾಝ್ ಬಳಿಕ ನಡೆಯಲಿದ್ದು, ದುವಾ ನೇತೃತ್ವ ಬಹು ಅಸ್ಸಯ್ಯಿದ್ ಜಲಾಲುದ್ದೀನ್ ಅಲ್ ಬುಖಾರಿ ತಂಙಲ್ ಪೊಸೋಟ್ ವಹಿಸಲಿದ್ದು ಅಧ್ಯಕ್ಷತೆಯನ್ನು ಸೈಯದ್ ಆಬಿದ್ ತಂಙಲ್ ವಹಿಸಲಿದ್ದಾರೆ.
ಮೇಗಿನ ಪಂಜಲದಲ್ಲಿ ಬುರ್ದಾ ಮಜ್ಲಿಸ್
ರಾಷ್ಟ್ರೀಯ ನವದೆಹಲಿ: 2019ರ ಸಾರ್ವತ್ರಿಕ ಚುನಾವಣೆಯ ಮೂರನೇ ಹಂತದ ಚುನಾವಣೆಗೆ ಮತದಾನ ಮಂಗಳವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ.
ಮೂರನೇ ಹಂತದ ಚುನಾವಣೆಗೆ ಮತದಾನ ಆರಂಭ; ಪ್ರಧಾನಿ ಮೋದಿ ಸೇರಿದಂತೆ ಹಲವು ನಾಯಕರಿಂದ ಹಕ್ಕು ಚಲಾವಣೆ