input
stringlengths
22
801
target
stringlengths
20
198
ದಕ್ಷಿಣ ಕನ್ನಡ ಬೆಳ್ಳಾರೆ(ವಿಶ್ವಕನ್ನಡಿಗ ನ್ಯೂಸ್): ದಾರುಲ್ ಹುದಾ ಬೆಳ್ಳಾರೆಯಲ್ಲಿ ಅಕ್ಟೋಬರ್ 23,24 ಮತ್ತು 25 ದಿನಾಂಕಗಳಲ್ಲಿ "ಸಾದಾತ್ ಆಂಡ್ ನೇರ್ಚೆ"ಯು ವಿಜೃಂಭಣೆಯಿಂದ ನಡೆಯಲಿದ್ದು, ಆ ಪ್ರಯುಕ್ತ 313 ಸದಸ್ಯರನ್ನೊಳಗೊಂಡ ಸ್ವಾಗತ ಸಮಿತಿಯನ್ನು ಇತ್ತಿಚೇಗೆ ರಚಿಸಲಾಯಿತು. . ಚಯರ್ ಮ್ಯಾನ್ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ವರ್ಕಿಂಗ್ ಚಯರ್ ಮ್ಯಾನ್ ಉಸ್ಮಾನ್ ಹಾಜಿ ಚೆನ್ನಾರ್, ಜನರಲ್ ಚಯರ್ ಮ್ಯಾನ್ ಅಬ್ದುಲ್ ಲತೀಫ್ ಸಖಾಫಿ ಕಾಂದಪುರಮ್, ಕೋಶಾಧಿಕಾರಿ ಅಬ್ದುಸಮದ್ ಹಾಜಿ ಸುಳ್ಯ,ಪ್ರೋಗ್ರಾಮ್ ಚಯರ್ ಮ್ಯಾನ್ ಅಬ್ಬಾಸ್ ಮಿಸ್ಬಾಹಿ ಮಂಜತ್ತಡ್ಕ, ಪ್ರೋಗ್ರಾಮ್ ಕನ್ವೀನರ್ ಹಾಫಿಲ್ ಅಬ್ದುಲ್ ಸಲಾಂ ನಿಝಾಮಿ ಚೆನ್ನಾರ್,ಪಬ್ಲಿಸಿಟಿ ಚಯರ್ ಮ್ಯಾನ್ ಹಮೀದ್ ಬೀಜಕೊಚ್ಚಿ, ಪಬ್ಲಿಸಿಟಿ ಕನ್ವೀನರ್ ಸಿದ್ದೀಕ್ ಅಹ್ಸನಿ ಸುಂಕದಕಟ್ಟೆ, ಫೈನಾನ್ಸ್ ಚಯರ್ ಮ್ಯಾನ್ ಹಮೀದ್ ಅಲ್ಫಾ ಬೆಳ್ಳಾರೆ, ಫೈನಾನ್ಸ್ ಕನ್ವೀನರ್ ಅಬ್ದುಲ್ಲ ಅಹ್ಸನಿ ಮಾಡನ್ನೂರ್, ರೂಲ್ಸ್ ಏಂಡ್ ರೆಗ್ಯೂಲೇಶನ್ ಚಯರ್ ಮ್ಯಾನ್ ಅಯ್ಯೂಬ್ ತಂಬಿನಮಕ್ಕಿ,ಜನರಲ್ ಕನ್ವೀನರ್ ಅಬ್ದುಲ್ ರಹ್ಮಾನ್ ಎಂ.
ದಾರುಲ್ ಹುದಾ ಹೆಳ್ಳಾರೆ ಸಾದಾತ್ ಆಂಡ್ ನೇರ್ಚೆ : ಸ್ವಾಗತ ಸಮಿತಿ ರಚನೆ
ಕರಾವಳಿ ಮಂಗಳೂರು, ಅ. 6: ಪಣಂಬೂರು ಬೀಚ್ ನಲ್ಲಿ ಬುಧವಾರ ತಾಂತ್ರಿಕ ದೋಷಕ್ಕೆ ಒಳಗಾಗಿ ಸ್ಪೀಡ್ ಬೋಟ್ ಮಗುಚಿ ಬಿದ್ದ ಪರಿಣಾಮ ನೀರುಪಾಲಾಗಿದ್ದ ಎರಡುವರೆ ವರ್ಷ ಪ್ರಾಯದ ಮಗುವಿನ ಮೃತದೇಹ ಗುರುವಾರ ಬೆಳಗ್ಗೆ ಪಣಂಬೂರು ಕಡಲಕಿನಾರೆಯಲ್ಲಿ ಪತ್ತೆಯಾಗಿದೆ.
ಪಣಂಬೂರು ಬೀಚ್ನಲ್ಲಿ ನೀರುಪಾಲಾಗಿದ್ದ ಮಗುವಿನ ಮೃತದೇಹ ಪತ್ತೆ
ಅಂತರಾಷ್ಟ್ರೀಯ ನೈರೋಬಿ: ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಣೆಕಟ್ಟು ಒಡೆದು ಕೆಸರು ಮಿಶ್ರಿತ ನೀರಿನ ಪ್ರವಾಹಕ್ಕೆ ಸಿಲುಕಿ 47 ಜನರು ಮೃತಪಟ್ಟಿದ್ದಾರೆ.
ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ: ಡ್ಯಾಂ ಒಡೆದು 47 ಜನರು ಮೃತ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬೆಳಗಾವಿ 10: ಬೆಂಗಳೂರಿನ ಸಪ್ತಕ ಸಂಗೀತ ಸಂಸ್ಥೆ, ಬೆಳಗಾವಿಯ ಲೋಕಮಾನ್ಯ ಸಂಸ್ಥೆಯ ಸಹಯೋಗದೊಡನೆ ಇಂದಿಲ್ಲಿ ಏರ್ಪಡಿಸಿದ ಸ್ವರಧಾರಾ ಕಾರ್ಯಕ್ರಮದಲ್ಲಿ ಖ್ಯಾತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರರಾದ ಪಂ.
ಬೆಳಗಾವಿ: ಸ್ವರಧಾರೆ ಹರಿಸಿದ ಸಂಗೀತ ಕಾರ್ಯಕ್ರಮ
ದಕ್ಷಿಣ ಕನ್ನಡ ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): :ಶೈಖುನಾ ಪಿ. ಎ ಉಸ್ತಾದರ ಗುರುವರ್ಯರಾದ ಮರ್ಹೂಮ್ ಮಮ್ಮಿಕ್ಕುಟ್ಟಿ ಉಸ್ತಾದರ ಆಂಡ್ ನೇರ್ಚೆ ಕಾರ್ಯಕ್ರಮವೂ ದಿನಾಂಕ 15/9/2019 ಶನಿವಾರ ಹತ್ತಿ ಗಂಟೆಗೆ ಸರಿಯಾಗಿ ಸುರಿಬೈಲ್ ಅಶ್ ಅರಿಯ ಮಸೀದಿಯಲ್ಲಿ ಜರಗಿತು.
ಶೈಖುನಾ ಪಿ ಎ ಉಸ್ತಾದರ ಗುರುವರ್ಯರಾದ ಮರ್ಹೂಂ ಮಮ್ಮಿಕುಟ್ಟಿ ಉಸ್ತಾದರ ಆಂಡ್ ನೇರ್ಚೆ
ದಕ್ಷಿಣ ಕನ್ನಡ ಬೆಳ್ತಂಗಡಿ(ವಿಶ್ವಕನ್ನಡಿಗ ನ್ಯೂಸ್): ಉತ್ತೇಜಕ ಮತ್ತು ವಿನೋಧ ರೀತಿಯಲ್ಲಿ ಗಣಿತ ಪಾಠಗಳನ್ನು ಮಕ್ಕಳಲ್ಲಿ ಅಭ್ಯಸಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಮನ್-ಶರ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕ್ಯಾಂಪಸ್ ನಲ್ಲಿ ಮನ್-ಶರ್ ಗ್ರೂಪ್ ಡೈರೆಕ್ಟರ್ ಸಯ್ಯದ್ ಆಬಿದ್ ಅಸ್ಸಖಾಫ್ ಉಧ್ಘಾಟಿಸಿದರು.
ಗಣಿತ ಪ್ರಪಂಚದೊಳಗೆ ಮನರಂಜನೆಯ ಆಸ್ವಾಧಿಸುವ ಮನ್-ಶರ್ ಮ್ಯಾಥ್-ಮೇನಿಯಾ ಕಾರ್ಯಕ್ರಮ
ರಾಷ್ಟ್ರೀಯ ಸುದ್ದಿಗಳು ಭೋಪಾಲ್. . : ಭಾರತೀಯ ಸಮಾಜವನ್ನು ವೋಟ್ ಬ್ಯಾಂಕ್ ರಾಜಕಾರಣ ಗೆದ್ದಲು ಹುಳುವಿನಂತೆ ಹಾಳು ಮಾಡಿದೆ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದರು.
ವೋಟ್ ಬ್ಯಾಂಕ್ ರಾಜಕಾರಣ ಗೆದ್ದಲು ಹುಳುವಿನಂತೆ ಸಮಾಜವನ್ನು ಹಾಳುಮಾಡಿದೆ: ನರೇಂದ್ರ ಮೋದಿ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ರಾಮದುರ್ಗ,24: ದೇಶದ ಬೆನ್ನೆಲುಬಾದ ರೈತರು ಇಂದು ಸಕಾಲಕ್ಕೆ ಮಳೆಯಾಗದೆ ಸಂಕಷ್ಠದ ಸುಳಿಗೆ ಸಿಲುಕಿದ್ದಾರೆ.
ಕೃಷಿ ಇಲಾಖೆಯ ನೂತನ ಕಟ್ಟಡ ಉದ್ಘಾಟನೆ ಉಭಯ ಸರಕಾರಗಳು ಸಂಕಷ್ಠದಲ್ಲಿರುವ ರೈತರ ನೆರವಿಗೆ ಬರಬೇಕಿದೆ : ಶಾಸಕ ಯಾದವಾಡ
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ಸಜಿಪಮುನ್ನೂರು ಗ್ರಾಮದ ಮಲಾಯಿಬೆಟ್ಟು ಸರಕಾರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಎಸ್ಡಿಎಂಸಿ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಮಲಾಯಿಬೆಟ್ಟು ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಮೋಹಿನಿ ಕರಂದಾಡಿ ಅವರು ಆಯ್ಕೆಯಾಗಿದ್ದಾರೆ.
ಮಲಾಯಿಬೆಟ್ಟು ಶಾಲಾ ಎಸ್ಡಿಎಂಸಿ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಮಲಾಯಿಬೆಟ್ಟು ಆಯ್ಕೆ
ಪ್ರಕಟಿಸಲಾಗಿದೆ ರಾಯಬಾಗ 05: ತಾಲೂಕಿನಲ್ಲಿ ಭೀಕರ ಬರಗಾಲ ಪರಿಸ್ಥಿತಿ ಉಂಟಾಗಿದ್ದರಿಂದ ಜನ ಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಹಾಗೂ ಗ್ರಾ. ಪಂ. ನೋಡಲ್ ಅಧಿಕಾರಿಗಳಿಗೆ ತಾ.
ಜನ ಜಾನುವಾರಗಳಿಗೆ ನೀರಿನ ಸಮಸ್ಯೆಯಾಗದಿರಲಿ: ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾ.ಪಂ.ಅಧ್ಯಕ್ಷೆ ಸುಜಾತಾ ಪಾಟೀಲ ಸೂಚನೆ
ಅಂತರಾಷ್ಟ್ರೀಯ ಲಾಹೋರ್: ಯಾವುದೇ ಸಮಸ್ಯೆಗಳಿಗೆ ಎರಡು ಅಣ್ವಸ್ತ್ರ ರಾಷ್ಟ್ರಗಳ ನಡುವಿನ ಯುದ್ಧದಿಂದ ಪರಿಹಾರವಾಗಲ್ಲ, ಭಾರತದೊಂದಿಗಿನ ಸ್ನೇಹಕ್ಕೆ ಪಾಕಿಸ್ತಾನಿಗರು ಸಿದ್ಧ ಎಂದು ಮಾಜಿ ಕ್ರಿಕೆಟಿಗ, ರಾಜಕಾರಣಿ ಇಮ್ರಾನ್ ಖಾನ್ ಹೇಳಿದ್ದಾರೆ.
ನಾವು ಇಂಡಿಯಾದೊಂದಿಗೆ ಸ್ನೇಹಕ್ಕೆ ಸಿದ್ಧ: ಇಮ್ರಾನ್ ಖಾನ್
ಕರಾವಳಿ , ಕರ್ನಾಟಕ ಸಾಮಾನ್ಯವಾಗಿ ನಮ್ಮ ಮೊಣಕೈ, ಮೊಣಕಾಲು ಅಥವಾ ದೇಹದ ಕೆಲವು ಭಾಗಗಳು ಕಪ್ಪಗಾಗಿ ಅಸಹ್ಯವಾಗಿ ಕಾಣುತ್ತವೆ.
ಮೊಣಕೈ ಹಾಗೂ ಮೊಣಕಾಲಿನ ಗಾಢ ಕಪ್ಪು ಕಲೆ ನಿವಾರಣೆಗೆ ಮನೆಮದ್ದು
ರಾಜ್ಯ ಸುದ್ದಿಗಳು. . ನಾಳಿನ ಚುನಾವಣೆಯಲ್ಲಿ ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ದಕ್ಷಿಣ ಕನ್ನಡ ಜಿಲ್ಲಾಡಳಿತ ವಿಶಿಷ್ಟ ಪ್ರಯತ್ನವನ್ನು ಮಾಡಿದೆ.
ಮತದಾರರನ್ನು ಮತಗಟ್ಟೆಗೆ ಸೆಳೆಯಲು ತುಳುನಾಡಿನಲ್ಲಿ ವಿಶಿಷ್ಟ ಪ್ರಯತ್ನ
ರಾಷ್ಟ್ರೀಯ ಜೈಪುರ: ನನ್ನ 12 ವರ್ಷದ ಪುಟ್ಟ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವಾಗಿದ್ದು, ಬಡವರಾದ ನಮಗೆ ತಾವು ನ್ಯಾಯ ಕೊಡಿಸಬೇಕೆಂದು ಅಪ್ರಾಪ್ತನೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಘಟನೆ ಜೈಪುರದಲ್ಲಿ ನಡೆದಿದೆ.
ಬಡವರಾದ ನಮಗೆ ನ್ಯಾಯ ಕೊಡಿಸಿ: ಸಾಮೂಹಿಕ ಅತ್ಯಾಚಾರಕ್ಕೊಳಗಾದ ಪುಟ್ಟ ಬಾಲಕಿಯ ಸಹೋದರನಿಂದ ಮೋದಿಗೆ ಪತ್ರ
ಪ್ರಕಟಿಸಲಾಗಿದೆ ವಿಜಯವಾಡ: ಮಹತ್ವದ ಬೆಳವಣಿಗೆಯಲ್ಲಿ ಟಿಟಿಡಿ ವಿಶ್ವವಿಖ್ಯಾತ ತಿರುಮಲ ತಿರುಪತಿ ದೇವಸ್ಥಾನವನ್ನು ಆರು ದಿನಗಳ ಕಾಲ ಮುಚ್ಚುವ ತನ್ನ ನಿಧರ್ಾರವನ್ನು ಹಿಂಪಡೆದಿದೆ.
ತಿರುಮಲ ದೇವಸ್ಥಾನ ಬಂದ್ ನಿಧರ್ಾರ ಹಿಂದಕ್ಕೆ
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್):- ಮಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್ ಬಿಜೆಪಿ ಕೊಡುಗೆ ಶೂನ್ಯ.
ಇಬ್ರಾಹಿಂ ಖಲೀಲ್ ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್
ಗದಗ ಗದಗ (ವಿಶ್ವ ಕನ್ನಡಿಗ ನ್ಯೂಸ್)::ನೂತನ ತಾಲೂಕು ಕೇಂದ್ರವಾದ ಗಜೇಂದ್ರಗಡ ಡಿಪೋದವರು ವಿಧಾನಸಭಾ ಚುನಾವಣೆಯ ಪ್ರಯುಕ್ತ ಜಾಗೃತಿ ಮೂಡಿಸುವ ಸಲುವಾಗಿ ೧೨-೦೫-೨೦೧೮ ರಂದು ಚುನಾವಣೆ ಅಂದು ತಪ್ಪದೆ ನಿಮ್ಮ ಮತದಾನ ಹಕ್ಕನ್ನು ಚಲಾಯಿಸಿ ಎಂದು ಬಸ್ ಟಿಕೇಟ್ ನಲ್ಲಿ ಮುದ್ರಿಸಿ ಮತದಾನ ಹಕ್ಕಿನ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿತ್ತು.
ಮತದಾನ ಮುಕ್ತಾಯವಾದರು ಮತದಾನದ ಜಾಗೃತಿ ನಿಂತಿಲ್ಲ
ದಕ್ಷಿಣ ಕನ್ನಡ ಮಂಗಳೂರು ( ವಿಶ್ವ ಕನ್ನಡಿಗ ನ್ಯೂಸ್ ) : ಪಡೀಲ್ ಬಜಾಲ್ ಮುಖ್ಯರಸ್ತೆಯಲ್ಲಿ ಜೆ. ಎಮ್ ರೋಡ್ ನಿಂದ ಪಕ್ಕಲಡ್ಕದ ವರೆಗಿನ ಅರ್ಧ ಕಿಲೋ ಮೀಟರ್ ಅಂತರದ ರಸ್ತೆಯನ್ನು ಕಾಂಕ್ರಟೀಕರಣಗಿಳಿಸಲು ಎರಡು ತಿಂಗಳಿಗಿಂತಲೂ ಅಧಿಕ ಸಮಯ ಪಡೆದು ಜನ ಸಾಮಾನ್ಯರ ಓಡಾಟಕ್ಕೆ ಅಡ್ಡಿಯುಂಟುಮಾಡಿರುವುದನ್ನು ಡಿವೈಎಫ್ಐ ಪಕ್ಕಲಡ್ಕ ಘಟಕ ಖಂಡಿಸುತ್ತದೆ ಹಾಗೂ ನಿಧಾನಗತಿಯ ಕಾಮಗಾರಿಯನ್ನು ವಿರೋಧಿಸುತ್ತದೆ.
ಕಾಮಗಾರಿ ಕೆಲಸ ತ್ವರಿತಗೊಳಿಸಿ ರಸ್ತೆ ನಿರ್ಮಾಣ ಪೂರ್ಣಗೊಳಿಸಲು ಡಿವೈಎಫ್ಐ ಒತ್ತಾಯ
ಪ್ರಕಟಿಸಲಾಗಿದೆ ಹೊಸಪೇಟೆ 25: ಕಮಲಾಪುರದಲ್ಲಿ ರೈತ ಸಂಘದ ನಾಮಫಲಕ ಉದ್ಘಾಟನೆ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ.
ಹೊಸಪೇಟೆ: ರೈತ ಸಂಘದ ನಾಮಫಲಕ ಉದ್ಘಾಟನೆ
ಪ್ರಕಟಿಸಲಾಗಿದೆ ಲೋಕದರ್ಶನ ಸುದ್ದಿ ಕೊಪ್ಪಳ 02: ವೈದ್ಯರ ವೃತ್ತಿಧರ್ಮ ಸೂಜಿಯ ಮೇಲೆ ನಡೆದಂತೆ, ಉತ್ತಮ ಆರೋಗ್ಯವಂತ ಸಮಾಜ ನಿಮರ್ಾಣವಾಗಬೇಕಾದರೆ ವೈದ್ಯರ ಪಾತ್ರ ಬಹಳ ಮಹತ್ವದಾಗಿದೆ, ಒಬ್ಬ ವೈದ್ಯ ರೋಗಿಗಳಿಗೆ ಉತ್ತಮ ಆರೋಗ್ಯವನ್ನು ಸೂಕ್ತ ಮಾರ್ಗದರ್ಶನವನ್ನು ನೀಡಬೇಕಾದರೆ ವೈದ್ಯನ ಮನಸ್ಥಿತಿ ಮೊದಲು ಸರಿಯಾಗಿರಬೇಕು ಎಂದು ಡಾ. ಕೆ. ಜಿ. ಕುಲಕಣರ್ಿ ಹೇಳಿದರು.
ಉತ್ತಮ ಆರೋಗ್ಯವಂತ ಸಮಾಜ ನಿಮರ್ಾಣವಾಗಬೇಕಾದರೆ ವೈದ್ಯರ ಪಾತ್ರ ಬಹಳ ಮಹತ್ವ: ಕುಲಕಣರ್ಿ
ದಕ್ಷಿಣ ಕನ್ನಡ ಮಂಗಳೂರು. . : ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿ, ಕೋಮುಸೌಹಾರ್ದತೆಗೆ, ಮೀನುಗಾರರ ಸಮಸ್ಯೆಗಳ ಪರಿಹಾರಕ್ಕೆ, ನೆಲ, ಜಲ, ಪರಿಸರವನ್ನು ಮುಂದಿನ ತಲೆಮಾರಿಗೆ ಉಳಿಸಲು ಸರ್ವ ಪ್ರಯತ್ನ ಮಾಡುತ್ತೆನೆ.
ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಎಸ್ಡಿಪಿಐ ಗೆ ಮತ ನೀಡಿ : ಮಹಮ್ಮದ್ ಇಲ್ಯಾಸ್
ಗಲ್ಫ್ ಸುದ್ದಿಗಳು (ವಿಶ್ವ ಕನ್ನಡಿಗ. . ): ಕ್ರೈಸ್ಟ್ಚರ್ಚ್ ಮಸೀದಿ ದಾಳಿಯ ಸಂತ್ರಸ್ತರ ಕುಟುಂಬಗಳ 200 ಜನರನ್ನು ಹಜ್ ಆತಿಥ್ಯ ವಹಿಸಲು ಸೌದಿ ಅರೇಬಿಯಾದ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್-ಸೌದ್ ಆದೇಶಿಸಿದ್ದಾರೆ ಎಂದು ಸೌದಿ ಪತ್ರಿಕಾ ಸಂಸ್ಥೆ ಎಸ್ಪಿಎ ಮಂಗಳವಾರ ವರದಿ ಮಾಡಿದೆ.
ಕ್ರೈಸ್ಟ್ಚರ್ಚ್ ದಾಳಿಯ ಸಂತ್ರಸ್ತರಿಗೆ ಹಜ್ ಆತಿಥ್ಯ ವಹಿಸಲು ಆದೇಶ ಹೊರಡಿಸಿದ ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅಲ್-ಸೌದ್
ಕರಾವಳಿ , ಪ್ರಮುಖ ವರದಿಗಳು ಕುಂದಾಪುರ: ಕುಂದಾಪುರ ತಾಲೂಕಿನ ಯಡಾಡಿ-ಮತ್ಯಾಡಿ ಗ್ರಾಮದ ಗುಡ್ಡಟ್ಟು ಎಂಬಲ್ಲಿ ಮತ್ತೊಂದು ಗಂಡು ಚಿರತೆ ಬೋನಿಗೆ ಬಿದ್ದಿದ್ದು ಪರಿಸರದಲ್ಲಿ ಚಿರತೆ ಓಡಾಟ ಹೆಚ್ಚಿದ ಬಗ್ಗೆ ಜನರು ಆತಂಕಗೊಂಡಿದ್ದಾರೆ.
ಕುಂದಾಪುರದ ಗುಡ್ಡಟ್ಟುವಲ್ಲಿ 'ಆಪರೇಶನ್ ಚೀತಾ'- ಮತ್ತೊಂದು ಗಂಡು ಚಿರತೆ ಸೆರೆ
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಪಾಣೆಮಂಗಳೂರು-ಆಲಡ್ಕ ಸಮೀಪದ ಬಂಗ್ಲೆಗುಡ್ಡೆ ಪ್ರವಾಸಿ ಬಾಂಧವರಿಂದ ಲೋಕ ಪ್ರವಾದಿ ಹಝ್ರತ್ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ಅವರ ಜನ್ಮ ಮಾಸದ ಗೌರವಾರ್ಥವಾಗಿ ನ 21 ರಂದು ಗುರುವಾರ ಸಂಜೆ ಬಂಗ್ಲೆಗುಡ್ಡೆಯಲ್ಲಿ ಮೌಲಿದ್ ಪಾರಾಯಣ ಹಾಗೂ ಸಾರ್ವಜನಿಕ ಅನ್ನದಾನ ಕಾರ್ಯಕ್ರಮ ನಡೆಯಲಿದೆ.
ನ 21 ರಂದು ಬಂಗ್ಲೆಗುಡ್ಡೆಯಲ್ಲಿ ಪ್ರವಾಸಿ ಬಾಂಧವರಿಂದ ಮೌಲಿದ್ ಪಾರಾಯಣ ಹಾಗೂ ಸಾರ್ವಜನಿಕ ಅನ್ನದಾನ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬಳ್ಳಾರಿ 17: ಅನ್ಯ ಇಲಾಖೆಗಳ ಕೆಲಸಗಳಿಂದ ಕೈಬಿಡಬೇಕು.
ಬಳ್ಳಾರಿ: ಗ್ರಾಮ ಲೆಕ್ಕಾಧಿಕಾರಿಗಳ ಸಾಂಕೇತಿಕ ಮುಷ್ಕರ
ನವದೆಹಲಿ: ರಾಷ್ಟ್ರದಲ್ಲಿ ಏಪ್ರಿಲ್ ನಿಂದ ವಾಹನಗಳಲ್ಲಿ ಬಿಎಸ್ -6ನೇ ಹಂತದ ಹೊರಸೂಸುವಿಕೆ ಮಾನದಂಡದ ಇಂಧನ ಬಳಕೆ ಕಡ್ಡಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂಧನ ಬೆಲೆ ಅಧಿಕಗೊಳ್ಳಲಿದೆ ಎಂದು ತೈಲ ಕಂಪನಿಗಳು ತಿಳಿಸಿವೆ.
ಬಿಎಸ್ 6ನೇ ಹಂತದ ಇಂಧನದ ಬೆಲೆ ಅಧಿಕ: ಪ್ರತಿ ಲೀಟರ್ ಇಂಧನಕ್ಕೆ 50 ಪೈಸೆಯಿಂದ 1 ರೂ.ಹೆಚ್ಚಳ ಸಂಭವ
ದಕ್ಷಿಣ ಕನ್ನಡ , ವಿಕೆ ನ್ಯೂಸ್ ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕನ್ಝುಲ್ ಉಲಮಾ ಚಿತ್ತಾರಿ ಕೆ ಪಿ ಹಂಝ ಉಸ್ತಾದ್ ರವರ ಪ್ರಥಮ ಆಂಡ್ ಅನುಸ್ಮರಣ ಸಮ್ಮೇಳನದ ಪ್ರಯುಕ್ತ ಬ್ರಹತ್ ಮುತಅಲ್ಲಿಮ್ ಸಂಗಮವು ಇತ್ತೀಚಿಗೆ ತಿಬ್ಲಪದವು ಅಲ್ ಮದೀನಾ ಕಮ್ಯೂನಿಟಿ ಹಾಲ್ ನಲ್ಲಿ ಝೈನುಲ್ ಉಲಮಾ ಮಾಣಿ ಉಸ್ತಾದರ ನೇತೃತ್ವದಲ್ಲಿ ನಡೆಯಿತ್ತು.
ಕೆಎಸ್ಎಂ ಎಲಿಮಲೆ (ವಿಶ್ವ ಕನ್ನಡಿಗ ನ್ಯೂಸ್
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : ವಿಶ್ವವಿದ್ಯಾನಿಲಯದ ಎಪ್ರೀಲ್/ಮೇ 2018ರಲ್ಲಿ ನಡೆದ ವಿವಿದ ಪದವಿ ಕೋರ್ಸುಗಳಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು (ಪಟ್ಟಿ ಲಗತ್ತಿಸಿದೆ) ವಿಶ್ವವಿದ್ಯಾನಿಲಯದಲ್ಲಿ ನಡೆಯಲಿರುವ 37ನೇ ಘಟಿಕೋತ್ಸವದಲ್ಲಿ ಈ ವಿದ್ಯಾರ್ಥಿಗಳು ರ್ಯಾಂಕ್ ಪ್ರಮಾಣ ಪತ್ರ ಪಡೆಯಲು ಅರ್ಹರಾಗಿರುತ್ತಾರೆ.
ಎಪ್ರೀಲ್/ಮೇ 2018ರ ಪದವಿ ಪರೀಕ್ಷೆಗಳ ರ್ಯಾಂಕ್ ಪಟ್ಟಿ ಬಿಡುಗಡೆ ಹಾಗೂ ನವೆಂಬರ್/ಡಿಸೆಂಬರ್ 2018ರ ಪದವಿ ಪರೀಕ್ಷೆಗಳ ಫಲಿತಾಂಶ ಪ್ರಕಟನೆ
ದಕ್ಷಿಣ ಕನ್ನಡ , ವಿಕೆ ನ್ಯೂಸ್ ವಿಟ್ಲ(ವಿಶ್ವಕನ್ನಡಿಗ ನ್ಯೂಸ್): ದ. ಕ ಜಿಲ್ಲಾ (ಈಸ್ಟ್) ಮಿಶನರಿ ವಿಭಾಗದ ನಿರ್ದೇಶನದಂತೆ.
ಸಂವಿಧಾನ ವಿರೋಧಿ ಕಾಯ್ದೆಯ ವಿರುದ್ದ ಟಿಪ್ಪು ನಗರ ಅಲ್ ಮದ್ರಸತುಲ್ ನವವಿಯ ವಿಧ್ಯಾರ್ಥಿಗಳ ಪ್ರತಿಭಟನೆ
ಪ್ರಕಟಿಸಲಾಗಿದೆ ಗದಗ 27: ಪ್ರೇರಣಾ ಕಾರ್ಯಕ್ರಮವು ಸಮಗ್ರ ಶಿಕ್ಷಣ ಅಭಿಯಾನ ಮತ್ತು ಶಿಕ್ಷಣ ಫೌಂಡೇಶನ್ ಸಹಯೋಗದಲ್ಲಿ ನಮ್ಮ ಜಿಲ್ಲೆಯಲ್ಲಿ ಗುಣಾತ್ಮಕ ಶಿಕ್ಷಣವನ್ನು ನೀಡುವಲ್ಲಿ ಸಹಕಾರಿಯಾಗಿದೆ.
ಪ್ರೇರಣಾ ಕಾರ್ಯಕ್ರಮವು ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸಹಕಾರಿ: ರುದ್ರಪ್ಪ
ಪ್ರಕಟಿಸಲಾಗಿದೆ ಲಿನ್ಕಾಲ್ನ್, ಫೆ 10, ಭಾರತ ಎ ಮತ್ತು ನ್ಯೂಜಿಲೆಂಡ್ ಎ ನಡುವಿನ ಎರಡನೇ ಅನಧಿಕೃತ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತು.
ಅಜಿಂಕ್ಯಾ ರಹಾನೆ ಶತಕದ ಆಕರ್ಷಣೆ: ಎರಡನೇ ಟೆಸ್ಟ್ ಪಂದ್ಯ ಡ್ರಾ
ಕರ್ನಾಟಕ ಬೆಂಗಳೂರು: ನಿಷೇಧಿತ ಉಗ್ರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ಕರ್ನಾಟಕ ಮತ್ತು ಕೇರಳ ಮೂಲದ ಯುವಕರ ವಿರುದ್ಧ ಪ್ರಕರಣಗಳನ್ನ ದಾಖಲಿಸಿದೆ.
ಸಿರಿಯಾದಲ್ಲಿ ಭಯೋತ್ಪಾದನಾ ಕೃತ್ಯ: ರಾಜ್ಯದ ಯುವಕರ ವಿರುದ್ಧ ಎನ್ಐಎ ಪ್ರಕರಣ
ಪ್ರಕಟಿಸಲಾಗಿದೆ ನವದೆಹಲಿ, ಆ 16 ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನವದೆಹಲಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಪ್ರಧಾನಿಯನ್ನು ಭೇಟಿಯಾದ ಯಡಿಯೂರಪ್ಪ: ಪರಿಹಾರ ಬಿಡುಗಡೆಯ ವಿಶ್ವಾಸ ವ್ಯಕ್ತಪಡಿಸಿದ ಸಿಎಂ
ರಾಯಚೂರು, ಡಿ. 23 : ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತರು ನೀಡಿರುವ ವರದಿಯೇ ಅಂತಿಮ.
ಲೋಕಾಯುಕ್ತ ವರದಿ ಅಧ್ಯಯನಕ್ಕೆ ಸಮಿತಿ
ನವದೆಹಲಿ, ಅಕ್ಟೋಬರ್ 04: ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ ಸಿ) ಯು 2019ನೇ ಸಾಲಿನ ನೇಮಕಾತಿಯನ್ನು ಮುಂದುವರೆಸಿದ್ದು, ಭೂ ವಿಜ್ಞಾನಿ ಪರೀಕ್ಷೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಯುಪಿಎಸ್ ಸಿ ನೇಮಕಾತಿ 2019: ಜಿಯೋ ವಿಜ್ಞಾನಿ ಪರೀಕ್ಷೆಗೆ ಅರ್ಜಿ ಆಹ್ವಾನ
ಕನ್ನಡ ವಾರ್ತೆಗಳು , ಕರಾವಳಿ ಪುತ್ತೂರು, ಏ. 30: ನಗರದ ರಾಜಧಾನಿ ಜ್ಯುವೆಲರ್ಸ್ ಶೂಟೌಟ್ ಪ್ರಕರಣದ ಪ್ರಧಾನ ಸೂತ್ರಧಾರಿ ಮತ್ತು ವಿದೇಶದಲ್ಲಿರುವ ಭೂಗತ ಪಾತಕಿ ಕಲಿ ಯೋಗೀಶನ ಸಹಚರ ಖಾಲಿಯಾ ರಫೀಕ್ಗೆ ಪುತ್ತೂರು ನ್ಯಾಯಾಲಯ 8 ದಿನಗಳ ಪೊಲೀಸ್ ಕಸ್ಟಡಿ ವಿಧಿಸಿ ಆದೇಶಿಸಿದೆ.
ರಾಜಧಾನಿ ಜ್ಯುವೆಲರ್ಸ್ ಶೂಟೌಟ್ ಪ್ರಕರಣ : ಖಾಲಿಯಾ ರಫೀಕ್ಗೆ 8 ದಿನಗಳ ಪೊಲೀಸ್ ಕಸ್ಟಡಿ
ರಾಷ್ಟ್ರೀಯ ಸುದ್ದಿಗಳು ಲಕ್ನೋ(ವಿಶ್ವಕನ್ನಡಿಗ ನ್ಯೂಸ್): ಪೌರತ್ವ ಕಾನೂನಿನ ತಿದ್ದುಪಡಿಯನ್ನು ವಿರೋಧಿಸಿ ಸಾರ್ವಜನಿಕ ಆಸ್ತಿ ನಾಶ ಮಾಡುವುದನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ.
ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ನಾಗರಿಕರ ಜವಾಬ್ದಾರಿ' - ಪ್ರಧಾನಿ ಮೋದಿ
ರಾಷ್ಟ್ರೀಯ ನವದೆಹಲಿ: ಗೋಮಾಂಸ ನಿಷೇಧವು ಆಯಾ ಪ್ರಾಂತ್ಯದ ಜನರ ನಂಬಿಕೆ ಹಾಗೂ ಮನೋಭಾವಕ್ಕೆ ಸಂಬಂಧಿಸಿದಾಗಿದೆ.
ದೇಶದೆಲ್ಲೆಡೆ ಗೋಮಾಂಸ ನಿಷೇಧ ಇಲ್ಲ: ಅಮಿತ್ ಶಾ
ರವಿ ಪೂಜಾರಿ ಕೇಸುಗಳಿಗೆ ಮರುಜೀವ ಮಂಗಳೂರು/ಉಡುಪಿ: ಪಶ್ಚಿಮ ಆಫ್ರಿಕಾದ ಸೆನೆಗಲ್ನಲ್ಲಿ ಬಂಧಿತನಾಗಿ ಭಾರತಕ್ಕೆ ಹಸ್ತಾಂತರಗೊಳ್ಳಲಿರುವ ಭೂಗತ ಪಾತಕಿ ರವಿ ಪೂಜಾರಿ(58) ಮೂಲತಃ ಮಲ್ಪೆಯ ವಡಬಾಂಡೇಶ್ವರದ ನಿವಾಸಿಯಾಗಿದ್ದು, ಈತನ ವಿರುದ್ಧ ದಕ್ಷಿಣ ಕನ್ನಡ. . . ಪ್ರಯಾಗರಾಜ್ : ಗೆಳತಿಯನ್ನು ಭೇಟಿ ಮಾಡಲು ಆಕೆಯ ಊರಿಗೆ ತೆರಳಿದ ಯುವಕನನ್ನು ಗ್ರಾಮಸ್ಥರು ಹಿಡಿದು ಥಳಿಸಿ, ಆತನಿಂದ ಬಸ್ಕಿ ಹೊಡೆಸಿ ಹಿಂಸಿಸಿರುವ ಘಟನೆ ಉತ್ತರ ಪ್ರದೇಶದ ಮೇಜಾ ಗ್ರಾಮದಲ್ಲಿ ನಡೆದಿದ್ದು, ಯುವಕನ ತಂದೆಗೂ ಗ್ರಾಮಸ್ಥರು ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ.
ಗೆಳತಿಯನ್ನು ಭೇಟಿ ಮಾಡಲು ಆಕೆಯ ಊರಿಗೆ ತೆರಳಿದ ಯುವಕನಿಗೆ ಕಾದಿತ್ತು ಶಾಕ್
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್):-ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಸಮಿತಿಯ ಜುಲೈ ತಿಂಗಳ ಮಾಸಿಕ ಸಭೆಯು ಮಂಗಳೂರಿನ ಪಕ್ಷದ ಜಿಲ್ಲಾ ಕಛೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆರವರ ಅಧ್ಯಕ್ಷತೆಯಲ್ಲಿ ಜರುಗಿತು.
ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಎಸ್.ಡಿ.ಪಿ.ಐ. ನಿರ್ಧಾರ -ಅಥಾವುಲ್ಲಾ ಜೋಕಟ್ಟೆ
ಗಲ್ಫ್ ಸುದ್ದಿಗಳು ದುಬೈ(ವಿಶ್ವಕನ್ನಡಿಗ ನ್ಯೂಸ್): ದುಬೈ ಭೇಟಿಯಲ್ಲಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಬ್ಯಾರಿಸ್ ಚೇಂಬರ್ ಓಫ್ ಕಾಮರ್ಸ್ & ಇಂಡಸ್ಟ್ರೀಸ್ ಮಂಗಳೂರು ಇದರ ಯು ಎ ಇ ಘಟಕದ ಪದಾಧಿಕಾರಿಗಳು ದುಬೈಯ ದಿ ವಿಲ್ಲಾ ದ್ಲಲಿರುವ ಜಾತ್ಯಾತೀತ ಜನತಾ ದಳದ ರಾಷ್ಟ್ರೀಯ ಕಾರ್ಯದರ್ಶಿ ಝಫರುಲ್ಲಾ ಖಾನ್ ರವರ ನಿವಾಸದಲ್ಲಿ ಭೇಟಿಯಾದರು.
ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾದ ಬ್ಯಾರಿಸ್ ಚೇಂಬರ್ ಓಫ್ ಕಾಮರ್ಸ್ & ಇಂಡಸ್ಟ್ರೀಸ್ ಮಂಗಳೂರು ಇದರ ಯು ಎ ಇ ಘಟಕದ ಪದಾಧಿಕಾರಿಗಳು
ಪ್ರಕಟಿಸಲಾಗಿದೆ ನವದೆಹಲಿ, ಮಾ 20: 'ನಾನೂ ಚೌಕಿದಾರ' ಅಭಿಯಾನದ ನೂತನ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಬಿಡುಗಡೆಗೊಳಿಸಿದ್ದು, ತಮ್ಮ ವಿರೋಧಿಗಳು ದೇಶರಕ್ಷಣೆ ಮಾಡುವ ಚೌಕಿದಾರರನ್ನು ಅಪಮಾನಿಸಿದೆ.
ನವದೆಹಲಿ: ನಾನೂ ಚೌಕಿದಾರ' ಹೊಸ ವಿಡಿಯೋ ಬಿಡುಗಡೆಗೊಳಿಸಿದ ಪಿಎಂ ಮೋದಿ
ರಾಜ್ಯ ಸುದ್ದಿಗಳು. . : ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ, ಬೆಂಗಳೂರಿನಲ್ಲಿ ದಿನಾಂಕ : 26-08-2019 ರಿಂದ 31-08-2018ರವರೆಗೆ 06 ದಿನಗಳು ನಡೆದ ಗೃಹರಕ್ಷಕಿಯರ "ನಿಸ್ತಂತು ಚಾಲನಾ ತರಬೇತಿ"ಯಲ್ಲಿ ಬೆಳ್ಳಿ ಪದಕ ಪಡೆದಂತಹ ನಿಶ್ಮಿತಾ ಮೆಟಲ್ ಸಂಖ್ಯೆ 863, ಮಂಗಳೂರು ಘಟಕ ಇವರಿಗೆ ದಿನಾಂಕ 05-09-2019 ರಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಸಮಾದೇಷ್ಟರಾದ ಡಾ: ಮುರಲೀ ಮೋಹನ್ ಚೂಂತಾರುರವರು ಸನ್ಮಾನ ಮಾಡಿ, ನಿಶ್ಮಿತಾರವರು ಈ ಹಿಂದೆಯೂ ಕೂಡ ತರಬೇತಿ ಅಕಾಡೆಮಿ, ಬೆಂಗಳೂರಿನಲ್ಲಿ ನಡೆದ ಪ್ರಥಮ ಚಿಕಿತ್ಸೆ ತರಬೇತಿಯಲ್ಲಿ ಮೂರನೇ ಸ್ಥಾನವನ್ನು ಪಡೆದಿದ್ದು, ನಿಸ್ತಂತು ಚಾಲನಾ ತರಬೇತಿಯಲ್ಲಿ ಬೆಳ್ಳಿಯ ಪದಕ ಪಡೆದು ನಮ್ಮ ಇಲಾಖೆಯ ಗೌರವವನ್ನು ಹೆಚ್ಚಿಸಿರುತ್ತಾರೆ ಎಂದು ನುಡಿದರು.
ನಿಶ್ಮಿತಾ ಇತರ ಗೃಹರಕ್ಷಕರಿಗೆ ಮಾದರಿ - ಡಾ. ಮುರಲೀ ಮೋಹನ್ ಚೂಂತಾರು
ಗಲ್ಫ್ ಸುದ್ದಿಗಳು. . ಕಳೆದ ನಾಲ್ಕು ವರ್ಷ ತಾನು ಬಹ್ರೈನ್ ನ ಸುಡು ಬಿಸಿಲಿನಲ್ಲಿ ಉದ್ಯೋಗ ಮಾಡಿ ಸಂಗ್ರಹಿಸಿಟ್ಟಿದ್ದ ತನ್ನ ದುಡಿಮೆಯ ಹಣ ಪೂರ್ತಿ ಕೊಡಗಿನ ನೆರೆ ಸಂತ್ರಸ್ತರಿಗೆ ನೀಡುವ ಮೂಲಕ ಮಂಗಳೂರು ಮೂಲದ ಯುವಕನೊಬ್ಬ ಮಾದರಿಯಾಗಿದ್ದಾನೆ.
ತನ್ನ ನಾಲ್ಕು ವರ್ಷದ ದುಡಿಮೆಯ ಹಣವನ್ನು ಕೊಡಗಿನ ಸಂತ್ರಸ್ತರಿಗೆ ದಾನ ಮಾಡಿದ ಮಂಗಳೂರು ಮೂಲದ ಬಹರೈನ್ ಉದ್ಯೋಗಿ
ದಕ್ಷಿಣ ಕನ್ನಡ ಬೆಳ್ಳಾರೆ (ವಿಶ್ವ ಕನ್ನಡಿಗ ನ್ಯೂಸ್ ) : ಜ್ಞಾನ ದೀಪ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಗಳಿಗೆ 'ದಾರಿದೀಪ 'ಎರಡು ದಿನಗಳ ಉಚಿತ ತರಗತಿ ದೇವಿ ಹೈಟ್ಸ್ ಬೆಳ್ಳಾರೆ ಯಲ್ಲಿ ಕಾರ್ಯಾಚರಿಸುತ್ತಿರುವ ಬೆಳ್ಳಾರೆ ಯ ಜ್ಞಾನ ದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆ ಯಲ್ಲಿ ನಡೆಯಿತು.
ಬೆಳ್ಳಾರೆಯ ಜ್ಞಾನ ದೀಪದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಗಳಿಗೆ ಉಚಿತ ತರಗತಿ
ೀಶ್ ಪ್ರಭು ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ತಾಲೂಕಿನ ಮೇರಮಜಲು ಗ್ರಾಮ ಪಂಚಾಯತ್ ಸದಸ್ಯ ಯೋಗೀಶ್ ಪ್ರಭು ಹಾಗೂ ಅವರ ಪತ್ನಿ ಶೋಭಾ ಶೆಟ್ಟಿ ಮೇಲೆ ದುಷ್ಕರ್ಮಿಗಳು ಬೆಳ್ಳಂ ಬೆಳಗ್ಗೆ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿ ಮೇರಮಜಲು ಗ್ರಾ.ಪಂ. ಸದಸ್ಯನ ಮೇಲೆ ತಲವಾರು ಬೀಸಿದ ದುಷ್ಕರ್ಮಿಗಳು
ಪ್ರಕಟಿಸಲಾಗಿದೆ ಗದಗ 03: 18 ಯುವಜನರು ಸೇರಿದಂತೆ ಅರ್ಹ ಮತದಾರರೆಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರನ್ನುನೋಂದಾಯಿಸಿ ಯಾವುದೇ ಆಮಿಷಗಳಿಗೆ ಒಳಗಾಗದೇ ಮತದಾನದ ಹಕ್ಕನ್ನು ಚಲಾಯಿಸಿ ಪ್ರಜಾಪ್ರಭುತ್ವ ಸಧೃಡಗೊಳಿಸಲು ಗದಗ ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಕರೇ ನೀಡಿದರು.
ಯುವ ಮತದಾರರ ನೋಂದಣಿ ಜಾಗೃತಿ ಕಾರ್ಯಕ್ರಮ
ಕರಾವಳಿ , ಪ್ರಮುಖ ವರದಿಗಳು ಮಂಗಳೂರು ಜನವರಿ 25 : ಕೃಷಿ ಹಾಗೂ ತೋಟಗಾರಿಕೆಯಲ್ಲಿ ಹೆಚ್ಚಿನ ಜನರು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಹಾಗೂ ಇದಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗಬೇಕು ಎನ್ನುವ ಉದ್ದೇಶದಿಂದ ತೋಟಗಾರಿಕಾ ಇಲಾಖೆ ಯಶಸ್ವಿಯಾದ ಕಾರ್ಯಕ್ರಮ ಆಯೋಜಿಸಿದೆ ಎಂದು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.
ಕೃಷಿ ಹಾಗೂ ತೋಟಗಾರಿಕೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಿ : ಫಲಪುಪ್ಷ ಪ್ರದರ್ಶನ ಉದ್ಘಾಟಿಸಿ ಶಾಸಕ ಕಾಮತ್
ದಕ್ಷಿಣ ಕನ್ನಡ ಪೆರ್ಲಾಪು. . : ಇಲ್ಲಿಗೆ ಸಮೀಪದ ಕೆಮ್ಮಾನ್ ನಚ್ಚಬೊಟ್ಟು ಎಂಬಲ್ಲಿ ಎಸ್ಸೆಸ್ಸೆಫ್ ಹಾಗೂ ಎಸ್ ವೈ ಎಸ್ ಸಂಘಟನೆಯ ವತಿಯಿಂದ ಪರಸರದ ವಿದ್ಯಾರ್ಥಿಗಳಿಗೆ ಕೊಡೆ ಹಾಗೂ ಬ್ಯಾಗ್ ವಿತರಿಸಲಾಯಿತು.
ಕೆಮ್ಮಾನ್ ನಲ್ಲಿ ಕೊಡೆ ಹಾಗೂ ಬ್ಯಾಗ್ ವಿತರಣೆ
ಗಲ್ಫ್ ಸುದ್ದಿಗಳು ದುಬೈ (ವಿಶ್ವ ಕನ್ನಡಿಗ ನ್ಯೂಸ್) : ಕರ್ನಾಟಕ ಕಲ್ಚರಲ್ ಫೌಂಡೇಶನ್. (ಕೆ. ಸಿ. ಎಫ್) ದುಬೈ ಸೌತ್ ಝೋನ್ ವತಿಯಿಂದ ವಿಶ್ವ ಪ್ರವಾದಿ ಮುಹಮ್ಮದ್ ಪೈಗಂಬರ್ ಸ್ವಲ್ಲ ಲ್ಲಾಹು ಅಲೈವಸಲ್ಲಂ ರವರ ಜನ್ಮ ದಿನಾಚರಣೆ ಪ್ರಯುಕ್ತ ಬೃಹತ್ ಮಿಲಾದ್ ಸಮಾವೇಶವು ನವೆಂಬರ್ 15 ರಂದು ಸಂಜೆ ಬರ್ ದುಬೈಯಲ್ಲಿ ನಡೆಯಲಿದೆ.
ನವೆಂಬರ್15 ಕ್ಕೆ ಕೆಸಿಎಫ್ ದುಬೈ ಸೌತ್ ಝೋನ್ ಬೃಹತ್ ಮಿಲಾದ್ ಸಮಾವೇಶ
ರಾಷ್ಟ್ರೀಯ ಸುದ್ದಿಗಳು (ವಿಶ್ವ ಕನ್ನಡಿಗ ನ್ಯೂಸ್,. . ): ಮಿರಾಜ್ 2000 ಯುದ್ಧ ವಿಮಾನ ಪತನಗೊಂಡು ಹುತಾತ್ಮರಾಗಿದ್ದ ಪೈಲೆಟ್ ಸಮೀರ್ ಅಬ್ರೋಲ್ ಅವರ ಪತ್ನಿ ಗರೀಮಾ ಅಬ್ರೋಲ್ ಭಾರತೀಯ ವಾಯು ಸೇನೆ ಗೆ ಸೇರ್ಪಡೆಗೊಳ್ಳಲಿದ್ದಾರೆ.
ಭಾರತೀಯ ವಾಯು ಸೇನೆ ಗೆ ಸೇರಲಿದ್ದಾರೆ ದಿವಂಗತ ಪೈಲೆಟ್ ಸಮೀರ್ ಅಬ್ರೋಲ್ ಪತ್ನಿ
ಬೆಂಗಳೂರು, ಡಿ. 1: ಪರೀಕ್ಷೆ ಬರೆಯಲು ಅನುಮತಿ ನೀಡದ ಕಾರಣ, ಮನನೊಂದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜರಾಜೇಶ್ವರಿ ನಗರದ ಪಟ್ಟಣಗೆರೆಯಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ಪರೀಕ್ಷೆ ಗೊಂದಲ, ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ
ಗಲ್ಫ್ ಸುದ್ದಿಗಳು. . ಸೆಕ್ಟರ್ ಇದರ ಪುನರ್ರಚನೆ ಹಾಗೂ ಮಾಸಿಕ ಸ್ವಲಾತ್ ಮಜ್ಲಿಸ್ ದಿನಾಂಕ 19/04/2019 ರಂ ದು ಬಹು।
ಕೆಸಿಎಫ್ ಕುವೈತ್ ಫರ್ವಾನಿಯಾ ಸೆಕ್ಟರ್ ನೂತನ ಸಾರಥಿಗಳು
ಡಿ ಸೊಪ್ಪಿನ ವೈವಿಧ್ಯಗಳು: ಪುಂಡಿ ಸೊಪ್ಪಿನ ಚಟ್ನಿ ಕಾಬೋಹೈಡ್ರೇಟ್, ಫೈಬರ್, ಪ್ರೊಟೀನ್, ವಿಟಮಿನ್ ಭಂಡಾರವೇ ಇರುವ ಪುಂಡಿ ಸೊಪ್ಪನ್ನು ಬಳಸಿಕೊಂಡು ಮಾಡಬಹುದಾದ ವಿವಿಧ ರುಚಿಕರ ಖಾದ್ಯಗಳ ಪರಿಚಯ ಇಲ್ಲಿ ನೀಡಲಾಗಿದೆ.
ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ; ಬಾಲಿವುಡ್ ನಟಿ ರವಿನಾ ಟಂಡನ್ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು
ಅಧಿವೇಶನಕ್ಕೆ ಅನುಮತಿ ನೀಡಿ, ಎರಡು ದಿನ ಕಾಯಿರಿ ।
ರಾಜ್ಯಪಾಲರ ಅನುಮತಿ ಕೋರಿದ ಯಡಿಯೂರಪ್ಪ
ರಾಜ್ಯಪಾಲರ ವಿರುದ್ಧ ಸಿಎಂ ಗಂಭೀರ ಆರೋಪ!
ಕರ್ನಾಟಕ ರಾಜ್ಯಪಾಲ ಎಚ್ ಆರ್ ಭಾರದ್ವಾಜ್
ರಾಷ್ಟ್ರೀಯ ನವದೆಹಲಿ: ನಷ್ಟದಲ್ಲಿ ನಡೆಯುತ್ತಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪನಿಗಳನ್ನು ಮುಂದಿನ ವರ್ಷ ಮಾರ್ಚ್ ನಲ್ಲಿ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಏರ್ ಇಂಡಿಯಾ, ಭಾರತ್ ಪೆಟ್ರೋಲಿಯಂ ಮಾರಾಟಕ್ಕೆ ನಿರ್ಧಾರ: ನಿರ್ಮಲಾ ಸೀತಾರಾಮನ್
ಮುಹಮ್ಮದ್ ಕಡೇಶ್ವಾಲ್ಯ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಸ್ಮಾಯಿಲ್ ಯು. ಅವರು ನೇಮಕಗೊಂಡಿದ್ದಾರೆ.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಕ್ಕೆ ಆಯ್ಕೆ
ರಾಷ್ಟ್ರೀಯ ಪಠಾಣ್ಕೋಟ್, ಜ. 6- ಪಂಜಾಬ್ನ ಪಠಾಣ್ಕೋಟ್ ವಾಯುನೆಲೆ ಮೇಲಿನ ಪಾಕ್ ಮೂಲದ ಭಯೋತ್ಪಾದಕರ ದಾಳಿ ಹಾಗೂ ಆಫ್ಘಾನಿ ಸ್ಥಾನದ ಮಜರ್-ಇ- ಷರೀಫ್ನಲ್ಲಿರುವ ಭಾರತೀಯ ದೂತಾವಾಸದ ಮೇಲಿನ ದಾಳಿಗಳು ಸಂಸತ್ ಮೇಲಿನ ದಾಳಿಯ ರೂವಾರಿ ಅಫ್ಜಲ್ಗುರು ಗಲ್ಲಿಗೇರಿಸಿದ್ದರ ಪ್ರತೀಕಾರವೇ.
ಪಠಾಣ್ಕೋಟ್ ಉಗ್ರರ ದಾಳಿ ಅಫ್ಜಲ್ ಗುರು ನೇಣಿನ ಪ್ರತಿಕಾರವೇ
ದಕ್ಷಿಣ ಕನ್ನಡ ಮಂಗಳೂರು. . ದಕ್ಷಿಣ ಕನ್ನಡ ಜಲ್ಲಾ ಗೃಹರಕ್ಷಕದಳದ 14 ಘಟಕಗಳ ಘಟಕಾಧಿಕಾರಿಗಳ ಸಭೆ ನಗರದ ಮೇರಿಹಿಲ್ನಲ್ಲಿರುವ ಗೃಹರಕ್ಷಕ ದಳದ ಕಛೇರಿಯಲ್ಲಿ ದಿನಾಂಕ: 23-12-2018ರಂದು ಜರುಗಿತು.
ಗೃಹರಕ್ಷಕ ದಳದ ಘಟಕಾಧಿಕಾರಿಗಳ ಸಭೆ
ಕಾಸರಗೋಡು: ಕಾಸರಗೋಡು-ಕೊಚ್ಚುವೇಲಿ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯನ್ನು ಸಾಕಾರಗೊಳಿಸಲು ತಜ್ಞರ ತಂಡ ಕಾಸರಗೋಡು ಸಹಿತ ವಿವಿಧೆಡೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾಸರಗೋಡು-ಕೊಚ್ಚುವೇಲಿ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗೆ ಸಿದ್ಧತೆ
ದಕ್ಷಿಣ ಕನ್ನಡ ನೆಲ್ಯಾಡಿ. . : ಸುನ್ನೀ ಯುವ ಸಂಘ, ಸುನ್ನೀ ಸ್ಟುಡೆಂಟ್ ಫಡರೇಶನ್ ನೆಲ್ಯಾಡಿ ಇದರ ಆಶ್ರಯದಲ್ಲಿ ಎಪ್ರಿಲ್ ತಿಂಗಳ 15 ರಂದು ಬೃಹತ್ ಸುನ್ನೀ ಮಹಾ ಸಮ್ಮೇಳನ ನಡೆಯಲಿದೆ.
ಎಪ್ರಿಲ್ 15 ನೆಲ್ಯಾಡಿಯಲ್ಲಿ ಸುನ್ನೀ ಸಮ್ಮೇಳನ
ರಾಷ್ಟ್ರೀಯ ಹೊಸದಿಲ್ಲಿ: ರಾಜ್ಯದಲ್ಲಿ ಕ್ಯಾನ್ಸರ್ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ಆತಂಕಕಾರಿ ಸಂಗತಿ 2019ರ ರಾಷ್ಟ್ರೀಯ ಆರೋಗ್ಯ ವಿವರ ವರದಿಯಲ್ಲಿ ಬಯಲಾಗಿದೆ.
ಹೆಚ್ಚುತ್ತಿರುವ ಕ್ಯಾನ್ಸರ್: ರಾಜ್ಯದಲ್ಲಿ ವರ್ಷದಲ್ಲೇ 6 ಪಟ್ಟು ಅಧಿಕ
ತೊಕ್ಕೊಟ್ಟು ಬಸ್ ಸ್ಟಾಂಡ್ ಹತ್ತಿರ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಹಿಡಿಯುವಲ್ಲಿ ಸಹಕರಿಸಿದ ಗ್ರಹರಕ್ಷಕ ಸಿಬ್ಬಂದಿ ಹಮೀದ್ ಪಾವಳ ರವರನ್ನು ಮಂಗಳೂರು ಪೊಲೀಸ್ ಆಯುಕ್ತರಾದ ಸಂದಿಪ್ ಪಾಟೀಲ್. . ಪ್ರಶಂಸನೀಯ ಪತ್ರ ನೀಡಿ ಪ್ರಶಂಶಿಸಿರುತ್ತಾರೆ.
ಹಲ್ಲೆ ನಡೆಸಿದ ಆರೋಪಿಯನ್ನು ಹಿಡಿಯಲು ಸಹಕರಿಸಿದ ಹಮೀದ್ ಪಾವಳ ರವರಿಗೆ ಪೊಲೀಸ್ ಆಯುಕ್ತರಿಂದ ಪ್ರಶಂಷೆ
ರಾಜ್ಯ ಸುದ್ದಿಗಳು ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಸಿದ್ದೀಕಿಯ್ಯಾ ದ ಅ್ ವಾ ದರ್ಸ್ ನ ಉದ್ಘಾಟನೆ ಸಮಾರಂಭ ಶಿವಾಜಿನಗರದ ನೂರ್ ಮಸ್ಜಿದ್ ನಲ್ಲಿ ನಡೆಯಿತು.
ಶಿವಾಜಿನಗರದ ನೂರ್ ಮಸ್ಜಿದ್ ನಲ್ಲಿ ಸಿದ್ದೀಕಿಯ್ಯಾ ದ ಅ್ ವಾ ದರ್ಸ್ ಉದ್ಘಾಟನೆ
ವರ್ಷಕ್ಕೆ ಕಾಲಿಟ್ಟ ವಿಶ್ವ ಕನ್ನಡಿಗ ನ್ಯೂಸ್ ಅಂತರ್ಜಾಲ ಮಾದ್ಯಮಕ್ಕೆ ನನ್ನ ತುಂಬು ಹ್ರದಯದ ಶುಭಾಶಯಗಳು.
ವಿಕೆ ನ್ಯೂಸ್ ಜನರ ಮಾದ್ಯಮವೆಂದೇ ಹೆಸರು ಪಡೆದ ನವ ಮಾದ್ಯಮ - ಮನ್ಸೂರ್ ಬೆಳ್ಳಾರೆ
ನಿವೃತ್ತ ಅಧ್ಯಾಪಕ, ಸಂಪನ್ಮೂಲ ವ್ಯಕ್ತಿ ಕೆ. ಸದಾಶಿವ ಹೊಳ್ಳ ಅವರು ಅಭಿನಯ ಗೀತೆಗಳ ಬಗ್ಗೆ ಮಾಹಿತಿ ನೀಡಿ ಅಭಿನಯ ಕೌಶಲದ ತರಬೇತಿ ನೀಡಿದರು.
ಅಭಿನಯ ಗೀತೆಗಳ ತರಬೇತಿ ಕಾರ್ಯಕ್ರಮ
ದಕ್ಷಿಣ ಕನ್ನಡ ಪ್ರವಾದಿಯವರ ತತ್ವ ಅದರ್ಶಗಳು ಇಂದಿಗೂ ಜಗತ್ತಲ್ಲಿ ಶಾಶ್ವತ - ಸ್ವಾದಿಕ್ ಮುಈನಿ ಅಸ್ಸಖಾಫ್ ಪುತ್ತೂರು(ವಿಶ್ವ ಕನ್ನಡಿಗ ನ್ಯೂಸ್) :ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೇಡರೇಷನ್ (ಎಸ್ಸೆಸ್ಸೆಫ್) ಪುತ್ತೂರು ಡಿವಿಷನ್ ವತಿಯಿಂದ ಕ್ಯೂ ಟೀಂ ಕಾರ್ಯಕರ್ತರ "ಮರ್ಹಬಾ ಯಾ ಶಹ್ರ ರಬೀಅ" ಬೃಹತ್ ಮೀಲಾದ್ ರ್ಯಾಲಿಯು ನ. 2ರಂದು ನಡೆಯಿತು.
ಎಸ್ಸೆಸ್ಸೆಫ್ ಪುತ್ತೂರು ಡಿವಿಷನ್ ಕ್ಯೂ ಟೀಂ ಕಾರ್ಯಕರ್ತರಿಂದ ಬೃಹತ್ ಮೀಲಾದ್ ರ್ಯಾಲಿ
ದಕ್ಷಿಣ ಕನ್ನಡ ಗೂನಡ್ಕ(ವಿಶ್ವಕನ್ನಡಿಗ ನ್ಯೂಸ್): ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಗೂನಡ್ಕ ತೆಕ್ಕಿಲ್ ಆಂಗ್ಲಮಾಧ್ಯಮ ಪ್ರೌಢ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ 24 ವಿದ್ಯಾರ್ಥಿಗಳಲ್ಲಿ 21 ವಿದ್ಯಾರ್ಥಿಗಳು ಪಾಸಾಗಿ ಶೇ.
ಎಸ್ಸೆಸ್ಸೆಲ್ಸಿಯಲ್ಲಿ ತೆಕ್ಕಿಲ್ ಪ್ರೌಢಶಾಲೆ ಗೆ 88.5% ಫಲಿತಾಂಶ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬೆಳಗಾವಿ 26: ನಗರದ ಉದ್ಯಮಬಾಗದಲ್ಲಿರುವ ಕೆ. ಎಲ್. ಇ. ಯ ಎಂ.
ರಚನಾ -2019' ವಿದ್ಯಾಥರ್ಿಗಳಿಗೆ ಕಾರ್ಯಾಗಾರ
ವಿದೇಶ ಸುದ್ದಿಗಳು ನ್ಯೂಯಾರ್ಕ್ (ವಿಶ್ವ ಕನ್ನಡಿಗ ನ್ಯೂಸ್) : ಪರಿಸರಕ್ಕೆ ಸಂಬಂಧಿಸಿದ ಅತ್ಯುನ್ನತ ಪ್ರಶಸ್ತಿಯಾದ ಚಾಂಪಿಯನ್ ಆಫ್ ಅರ್ಥ್ ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿ ಹೆಸರನ್ನು ವಿಶ್ವ ಸಂಸ್ಥೆ ಆಯ್ಕೆ ಮಾಡಿದೆ.
ಪ್ರಧಾನಿ ಮೋದಿಗೆ ವಿಶ್ವಸಂಸ್ಥೆಯಿಂದ ಪ್ರತಿಷ್ಠಿತ `ಚಾಂಪಿಯನ್ ಆಫ್ ಅರ್ಥ್' ಪ್ರಶಸ್ತಿ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬಾಡ್ಯಗಿ11: 12ನೇಯ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತಿಯತೆ, ಮೇಲು-ಕೀಳು, ತಾರತಮ್ಯ, ಅಸ್ಪ್ರುಶ್ಯತೆ, ಮೂಢ ನಂಬಿಕೆಗಳ ವಿರುದ್ಧ ಧ್ವನಿ ಏತ್ತಿದವರಲ್ಲಿ ಮಡಿವಾಳ ಮಾಚಿದೇವರು ಕೂಡಾ ಪ್ರಮುಖರು ಎಂದು ಪುರಸಭೆ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಹೇಳಿದರು.
ಮೂಢ ನಂಬಿಕೆ ವಿರುದ್ಧ ಮಡಿವಾಳ ಮಾಚಿದೇವರು ಧ್ವನಿ ಎತ್ತಿದವರು: ಶೆಟ್ಟರ
ಬೆಂಗಳೂರು, ಜ. 28: ಬ್ಲಾಕ್ ಅಂಡ್ ವೈಟ್ ಜಮಾನಾದಲ್ಲಿ ಅವೆನ್ಯೂ ರಸ್ತೆಯಲ್ಲಿ ಆಗೊಂದು ಈಗೊಂದು ಬಸ್ಸು ಸಂಚರಿಸಿದ್ದು ನಿಜ.
ಅವೆನ್ಯೂ ರಸ್ತೆಯ ವ್ಯಾಪಾರಿಗಳು ಪೊಲೀಸರ ವಿರುದ್ಧ ಕೆಂಡಾಮಂಡಲ
ಕರ್ನಾಟಕ ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ. ಟಿ ರವಿ ಅವರು ನಾಡಧ್ವಜ ವಿರೋಧಿಸಿರುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸಿ.ಟಿ ರವಿ ನಾಡಧ್ವಜ ವಿರೋಧಿಸಿರುವುದು ಸರಿಯಲ್ಲ; ಸಿದ್ದರಾಮಯ್ಯ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಕೊಪ್ಪಳ 26: ಪಕ್ಕದ ಗೋವಾ ರಾಜ್ಯದ ಬಿಚ್ಚೊಲಿಯಂ ನಗರದ ಹೀರಾಬಾಯಿ ಸಭಾಂಗಣದಲ್ಲಿ ಕರ್ಮಭುಮಿ ಕನ್ನಡ ಸಂಘ ಬಿಚ್ಚೊಲಿ, ಗೋವಾ ಮತ್ತು ಕರ್ನಾಟಕ್ ಜಾಗೃತಿ ವೇದಿಕೆ ಬೆಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಹಾ ಬರುವ ಇದೇ ಜೂನ್ 16ರ ರವಿವಾರ 11ನೇ ಬಾರಿಗೆ ಹೊರನಾಡ ಕನ್ನಡ ಸಾಂಸ್ಕೃತಿಕ ಸಮಾವೇಶ ಮತ್ತು ಸಮ್ಮೇಳನ ಜರುಗಲಿದ್ದು, ಸಮ್ಮೇಳದ ಸರ್ವಾಧ್ಯಕ್ಷರಾಗಿ ಕೊಪ್ಪಳ ಜಿಲ್ಲೆಯ ಹಿರಿಯ ಪತ್ರಕರ್ತ ತಾವರಗೇರೆಯ ವಿ. ಆರ್. ತಾಳಿಕೋಟಿ ಆಯ್ಕೆಗೊಂಡಿದ್ದಾರೆ.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಪತ್ರಕರ್ತ ತಾಳಿಕೋಟಿ ಆಯ್ಕೆ
ದಕ್ಷಿಣ ಕನ್ನಡ ಮಂಗಳೂರು ಕೋಟೆಕಾರ್(ವಿಶ್ವಕನ್ನಡಿಗ ನ್ಯೂಸ್): ಅಜ್ಜಿನಡ್ಕ ದಿಂದ ಉಚ್ಚಿಲ ಸಂಪರ್ಕಿಸುವ ಕಾಲು ಸೇತುವೆಯೊಂದು ಅಪಾಯದ ಅಂಚಿನಲ್ಲಿದ್ದು ಪ್ರತಿ ನಿತ್ಯ ಹಲವಾರು ವಿಧ್ಯಾರ್ಥಿಗಳು ,ಜನಸಾಮಾನ್ಯರು ಈ ಕಾಲುಸಂಕದಲ್ಲಿ ಓಡಾಡುತ್ತಿದ್ದು ,ಅಲ್ಲದೆ ಕಳೆದ ಕೆಲವು ವರ್ಷಗಳಿಂದ ಈ ಸಂಕದ ಮೇಲೆ ದ್ವಿಚಕ್ರ ವಾಹನಗಳು ಕೂಡಾ ಓಡಾಡುತ್ತಿದೆ.
ಅಜ್ಜಿನಡ್ಕ ಅಪಾಯಕಾರಿ ಕಾಲುಸಂಕ
ಪ್ರಕಟಿಸಲಾಗಿದೆ ಗದಗ 9 : ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವುದು ಕಾನೂನು ಬಾಹಿರವಾಗಿದ್ದು ಇದನ್ನು ತಡೆಗಟ್ಟಿ ಅಪಘಾತಗಳ ಪ್ರಮಾಣ ಕಡಿಮೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ನಿದರ್ೇಶನ ನೀಡಿದರು.
ಸರಕು ವಾಹನಗಳಲ್ಲಿ ಪ್ರಯಾಣಿಕರ ಸಾಗಣೆ ವಿರುದ್ಧ ಕ್ರಮ
ಪ್ರಕಟಿಸಲಾಗಿದೆ ಬಳ್ಳಾರಿ 26: ವಿಕಲಚೇತನರ ದಿನಾಚರಣೆ ನಿಮಿತ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಅಂಗವಿಕಲರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಕಲಚೇತನರ ಜಿಲ್ಲಾ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಿತು.
ಬಳ್ಳಾರಿ; ವಿಕಲಚೇತನರ ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆ
ದಕ್ಷಿಣ ಕನ್ನಡ ಬಂಟ್ವಾಳ (ವಿಶ್ವ ಕನ್ನಡಿಗ ನ್ಯೂಸ್ ) : ಪೆರುವಾಯಿ ಶಾಖೆಯ ವತಿಯಿಂದ ಇಲ್ಲಿನ ಬದ್ರಿಯಾ ಸ್ಕ್ವೇರ್ ನಲ್ಲಿ ಎಸ್ಸೆಸ್ಸೆಫ್ ಸ್ಥಾಪಕ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣವನ್ನು ಸ್ಥಳೀಯ ಎಸ್. ವೈ. ಎಸ್ ಉಪಾಧ್ಯಕ್ಷರಾದ ಇಸ್ಮಾಯಿಲ್ ಕಾನರವರು ನೇರವೇರಿಸಿ ಕೊಟ್ಟರು.
ಪೆರುವಾಯಿಯಲ್ಲಿ SSF ಸ್ಥಾಪಕ ದಿನಾಚರಣೆಯ ಸಂಭ್ರಮದ ಕಾರ್ಯಕ್ರಮ
ಕನ್ನಡ ಮತ್ತು ಉ. ಕನ್ನಡ ಜಿಲ್ಲೆಗಳಲ್ಲಿ ಅನೇಕ ಸುಂದರ ರಮಣೀಯ ಸ್ಥಳಗಳಿದ್ದು, ಇವುಗಳನ್ನು ಹೆಲಿಕಾಪ್ಟರ್ ಮೂಲಕ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟು, ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸಲು ಹೆಚ್ಚಿನ ಅವಕಾಶಗಳಿದ್ದು, 3 ಜಿಲ್ಲೆಗಳಿಗೆ ಸಂಬಂದಿಸಿದಂತೆ ಉಡುಪಿಯಲ್ಲಿ ಹೆಲಿಟೂರಿಸಂ ಕೇಂದ್ರೀಕೃತವಾಬೇಕು ಎಂದು ಉಡುಪಿ ಶಾಸಕ ರಘುಪತಿ ತಿಳಿಸಿದ್ದಾರೆ.
ಕರಾವಳಿ ಹೆಲಿ ಟೂರಿಸಂ ಉಡುಪಿಯಲ್ಲಿ ಕೇಂದ್ರೀಕೃತವಾಗಲಿ- ರಘುಪತಿ ಭಟ್
ಪ್ರಕಟಿಸಲಾಗಿದೆ ಮುಂಬೈ, ಜ 17, ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 99.41 ಅಂಕ ಏರಿಕೆ ಕಂಡು 42,031.97 ರಲ್ಲಿತ್ತು.
ಸೆನ್ಸೆಕ್ಸ್ 99.41 ಅಂಕ ಏರಿಕೆ
ಪ್ರಕಟಿಸಲಾಗಿದೆ ಬಾಗಲಕೋಟ 15 ರಾಜ್ಯದಲ್ಲಿಯೇ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಆದಿ ಚುಂಚನಗಿರಿ ಮಠದ ಜಗದ್ಗುರುಗಳಾದ ಶ್ರೀ ನಿರ್ಮಲಾನಂದನಾಥ ಶ್ರೀಗಳು ಬಾಗಲಕೋಟ ಜಿಲ್ಲೆಗೆ ಪೊಉರ ಪ್ರವೇಶ ಮಾಡಿದಾಗ ಸೀಮೀಕೇರಿ, ಗದ್ದನಕೇರಿ, ಬಾಗಲಕೋಟ ಭಕ್ತರು ಶ್ರೀಗಳನ್ನು ಅದ್ಧೂರಿಯಾಗಿ ಸ್ವಾಗತಿಸಿ ಅವರ ಆಶೀವರ್ಾದ ಪಡೆದರು.
ಬಾಗಲಕೋಟ ಜಿಲ್ಲೆಗೆ ಪುರಪ್ರವೇಶ ಮಾಡಿದ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳಿಗೆ ಭಕ್ತರಿಂದ ಅದ್ಧೂರಿಯ ಸ್ವಾಗತ
ರಾಜ್ಯ ಸುದ್ದಿಗಳು ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಈಲ್ ಸಖಾಫಿ ಕೊಂಡಂಗೇರಿ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಯನ್ನು ಭೇಟಿಯಾಗಿ ರಾಜ್ಯದ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿದರು.
ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಈಲ್ ಸಖಾಫಿ ಕೊಂಡಂಗೇರಿ ನೇತೃತ್ವದಲ್ಲಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಭೇಟಿ
ರಾಜ್ಯ ಸುದ್ದಿಗಳು , ವಿಶ್ವಕನ್ನಡಿಗ ಸ್ಪೆಷಲ್ಸ್ (ವಿಶ್ವ ಕನ್ನಡಿಗ ನ್ಯೂಸ್ ): "ನೀವು ಸೇವಿಸುವ ಅನ್ನವನ್ನು ಬೇಯಿಸುವ ನೀರು ನಿಮ್ಮ ದುಡಿಮೆಯ ಬೆವರಾಗಿರಬೇಕೇ ಹೊರತು ಬೇರೆಯವರ ಕಣ್ಣೀರಾಗಿರಬಾರದು " ಇದು ಮನುಕುಲದ ಶ್ರೇಷ್ಠ ಯೋಗಿ ಡಾ.
ಕೋಟ್ಯಂತರ ಜನರ ಹಾರೈಕೆಯಿಂದ ಮಾತ್ರ ಒಂದು ಜೀವ 111 ವರುಷ ಲವಲವಿಕೆಯಿಂದ ಬದುಕಲು ಸಾಧ್ಯ(ಶ್ರೀಗಳಿಗೆ ವಿಶ್ವ ಕನ್ನಡಿಗ ನ್ಯೂಸ್ ನಮನ
ಜಿ ಹಾಗೂ ಯು. ಕೆ. ಜಿ. ಮಕ್ಕಳಿಗೆ ಗೌನ್ ತೊಡಿಸಿ ಪದಕ ಮತ್ತು ಪ್ರಮಾಣಪತ್ರ ಪ್ರದಾನ ಮಾಡಿ ಮಾತನಾಡಿದ ಜಿಲ್ಲಾ ಶಿಕ್ಷಣ ಇಲಾಖೆಯ ಅಭಿವೃದ್ಧಿ ಉಪನಿದರ್ೆಶಕ ಹಾಗೂ ಡಯಟ್ ಪ್ರಾಚಾರ್ಯ ಅಬ್ದುಲ್ ವಾಜೀದ್ ಖಾಜಿ ಸಲಹೆ ಮಾಡಿದರು.
ಮಕ್ಕಳ ಪರಿಪೂರ್ಣ ವ್ಯಕ್ತಿತ್ವಕ್ಕೆ ಶ್ರಮಿಸಿ: ಖಾಜಿ
ಪ್ರಕಟಿಸಲಾಗಿದೆ ಚಿಕ್ಕಬಳ್ಳಾಪುರ, ನ 3: ಬೋವಿ ಜನಾಂಗಕ್ಕೆ ಮೀಸಲಾತಿಯಲ್ಲಿ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ.
ಬೋವಿ ಜನಾಂಗಕ್ಕೆ ಅನ್ಯಾಯವಾಗಲು ಬಿಡುವುದಿಲ್ಲ
ದಕ್ಷಿಣ ಕನ್ನಡ , ರಾಜ್ಯ ಸುದ್ದಿಗಳು ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ಕೇಂದ್ರ ಸರಕಾರವು ಜಾರಿಗೆ ತಂದಿರುವ ಕರಾಳ ಮತ್ತು ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಮಂಗಳೂರಿನಲ್ಲಿ ಪ್ರತಿಭಟನಾಕಾರರ ಮೇಲೆ ನಡೆದಿರುವಂತಹ ಪೆÇಲೀಸ್ ದೌರ್ಜನ್ಯ ಖಂಡಿಸಿ ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಸಮೀಪದ ಗುಡ್ಡೆಅಂಗಡಿ ಸಮಸ್ತ ನಾಗರಿಕರು ಗುಡ್ಡೆಅಂಗಡಿ ಜಂಕ್ಷನ್ನಿನಲ್ಲಿ ಭಿತ್ತಿಪತ್ರ ಪ್ರದರ್ಶನ ಮತ್ತು ಪ್ರತಿಭಟನಾ ಸಭೆ ನಡೆಸಿದರು.
ಗುಡ್ಡೆಅಂಗಡಿ ಮೊಹಲ್ಲಾ ವತಿಯಿಂದ ಎನ್.ಆರ್.ಸಿ. ಹಾಗೂ ಸಿಎಎ ಕಾಯ್ದೆ ವಿರೋಧಿಸಿ ಭಿತ್ತಿಪತ್ರ ಪ್ರದರ್ಶನ ಹಾಗೂ ಪ್ರತಿಭಟನೆ
ಕರಾವಳಿ ಮಂಗಳೂರು, ನ. 7: ಸಮಾಜಕ್ಕೆ ವಿಮರ್ಶೆಯ ಅಗತ್ಯ ಇದೆ.
ಐವರು ಸಾಧಕರಿಗೆ ವಿಶ್ವ ಕೊಂಕಣಿ ಪುರಸ್ಕಾರ ಪ್ರದಾನ
ಇಸ್ಲಾಮಾಬಾದ್, ಆಗಸ್ಟ್ 12: ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕದಡಿದ್ದು, ಈದ್ ಆಚರಣೆಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡದೆ, ಕಾಶ್ಮೀರಕ್ಕಾಗಿ ಒಂದಾಗುವಂಥ ಕಾರ್ಯಕ್ರಮ ಬಿತ್ತರಿಸುವಂತೆ ಪಾಕ್ ಮಾಧ್ಯಮಗಳಿಗೆ ಅಲ್ಲಿನ ಸರ್ಕಾರ ಹೇಳಿದೆ.
ಈದ್ ಸಂಭ್ರಮ ಬೇಡ, ಕಾಶ್ಮೀರಕ್ಕಾಗಿ ಹೋರಾಡಿ: ಪಾಕ್ ಸರ್ಕಾರ
ಪ್ರಕಟಿಸಲಾಗಿದೆ ಕೋಲ್ಕತಾ, ನ 05: ದೇಶ ಬಂಧು ಚಿತ್ತರಂಜನ್ ದಾಸ್ ಅವರ 149ನೇ ಜಯಂತಿ ಅಂಗವಾಗಿ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧಂಖರ್ ಅವರು ಗೌರವ ನಮನ ಸಲ್ಲಿಸಿದ್ದಾರೆ ದೇಶಬಂಧು ಚಿತ್ತರಂಜನ್ ದಾಸ್ ಭಾರತದ ಶ್ರೇಷ್ಠ ಪುತ್ರರಲ್ಲಿ ಒಬ್ಬರು, ಭಾರತದ ಸ್ವಾತಂತ್ರ್ಯ ಚಳವಳಿಯ ರಾಜಿಯಾಗದ ನಾಯಕ, ಅವರು ಬಂಗಾಳದ ಪ್ರಮುಖ ರಾಜಕಾರಣಿ, ವಕೀಲರು ಹಾಗೂ ಭಾರತೀಯ ರಾಷ್ಟ್ರೀಯ ಚಳವಳಿಯ ಕಾರ್ಯಕರ್ತರು.
ದೇಶಬಂಧು ಚಿತ್ತರಂಜನ್ ದಾಸ್ ಜಯಂತಿ ಆಚರಣೆ
ಮೈಸೂರು ಮೈಸೂರು (ವಿಶ್ವ ಕನ್ನಡಿಗ ನ್ಯೂಸ್) ಮೈಸೂರು: ಕರ್ನಾಟಕ ರಾಜ್ಯದ ಬಡವರ, ಶೋಷಿತರ, ದಮನಿತರ, ರೈತರ, ವಿದ್ಯಾರ್ಥಿಗಳ, ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗದ ಧ್ವನಿ ವಿಧಾನಸೌಧದೊಳಗೆ ಪ್ರತಿಧ್ವನಿಸಲು ಈ ಬಾರಿ ನರಸಿಂಹರಾಜ ಕ್ಷೇತ್ರದಿಂದ ಅಬ್ದುಲ್ ಮಜೀದ್ ಅವರನ್ನು ಗೆಲ್ಲಿಸುವಂತೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ಹೈಕೋರ್ಟ್ ನ್ಯಾಯವಾದಿ ಡಾ. ಸಿ. ಎಸ್. ದ್ವಾರಕನಾಥ್ಮನವಿ ಮಾಡಿದರು.
ಬಡ ಜನತೆಯ ಧ್ವನಿ ವಿಧಾನಸೌಧದೊಳಗೆ ಪ್ರತಿಧ್ವನಿಸಲು ಅಬ್ದುಲ್ ಮಜೀದ್ರನ್ನು ಗೆಲ್ಲಿಸಿ: ಡಾ. ಸಿ.ಎಸ್ ದ್ವಾರಕನಾಥ್
ದಕ್ಷಿಣ ಕನ್ನಡ. . ಹಿರಿಯ ಪ್ರಾಥಮಿಕ ಶಾಲೆ ನೆಲ್ಲಿಕಾರು ಮೂಡಬಿದ್ರೆ ಯಲ್ಲಿ ಶಾಲೆಯ ಪೋಷಕರ ಸಹಕಾರದಿಂದ ಮಕ್ಕಳಿಗೆ ಸುಮಾರು 20000 ಮೌಲ್ಯದ ಸಮವಸ್ತ್ರ ವಿತರಿಸಲಾಯಿತು.
ಮೂಡಬಿದ್ರೆ; ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಲ್ಲಿಕಾರು ನಲ್ಲಿ ಮಕ್ಕಳಿಗೆ ಪೋಷಕರಿಂದಲೇ ಸಮವಸ್ತ್ರ ವಿತರಣೆ
ಪ್ರಮುಖ ವರದಿಗಳು , ರಾಷ್ಟ್ರೀಯ ಪಾಟ್ಣಾ: ಕಳೆದ ಕೆಲ ವಾರಗಳ ಹಿಂದೆ ಒಬ್ಬ ಮಹಿಳೆ ಮತ್ತು ಆಕೆಯ ಅಳಿಯನ ನಡುವಿನ ಪ್ರೇಮಕಥೆ ಸಾಕಷ್ಟು ಸುದ್ದಿ ಮಾಡಿತ್ತು.
ಅತ್ತೆಯನ್ನೇ ಮದುವೆಯಾದವನಿಗೆ ಪ್ರೇಮದ ಅಮಲು ಇಳಿಯಿತು....ಈಗ ಆಕೆಯ ಮಗಳೇ ಬೇಕೆಂದು ಹಠ ಹಿಡಿದಿದ್ದಾನೆ...ಏನಿದು ಘಟನೆ ಮುಂದೆ ಓದಿ
ರಾಷ್ಟ್ರೀಯ ನವದೆಹಲಿ: ಬಿಜೆಪಿ ಪಕ್ಷದಲ್ಲಿ ಅಟಲ್ ಬಿಹಾರ್ ವಾಜಪೇಯಿ, ಎಲ್. ಕೆ. ಆಡ್ವಾಣಿ ನಂತರ ಮೂರನೇ ಆಧಾರ ಸ್ಥಂಭ ಎಂದು ಪರಿಗಣಿಸಲಾಗುತ್ತಿದ್ದ ಮುರಳಿ ಮನೋಹರ್ ಜೋಷಿ, ಪಕ್ಷದಿಂದ ರಾಷ್ಟ್ರಪತಿ ಅಭ್ಯರ್ಥಿಯಾಗಲು ರಣತಂತ್ರ ಆರಂಭಿಸಿದ್ದಾರೆ.
ಬಿಜೆಪಿಯ ಮುಂದಿನ ರಾಷ್ಟ್ರಪತಿ ಅಭ್ಯರ್ಥಿ ಯಾರು ಗೊತ್ತಾ
ಪ್ರಕಟಿಸಲಾಗಿದೆ ಲೋಕದರ್ಶನ ವರದಿ ಬೆಳಗಾವಿ 18: ಜಿಲ್ಲಾ ಲೇಖಕಿಯರ ವತಿಯಿಂದ ಕನ್ನಡ ಸಾಹಿತ್ಯ ಕ್ಷೇತ್ರದ ಉದಯೋನ್ಮುಖ ಲೇಖಕಿಯರಿಗಾಗಿ ಪ್ರತಿಷ್ಠಿತ ಸಾಹಿತಿಗಳನ್ನು ಆಹ್ವಾನಿಸಿ ಕಾವ್ಯ, ಕಥಾ ಕಮ್ಮಟಗಳನ್ನು ಹಮ್ಮಿಕೊಳ್ಳಾಗುವುದು, ಈ ಸಂಘಟನೆಯು ರಾಜಾದ್ಯಂತ ಛಾಪು ಮೂಡಿಸುತ್ತಿದೆ ಎಂಉ ಅಧ್ಯಕ್ಷೆ ಜ್ಯೋತಿ ಬದಾಮಿ ಹೇಳಿದರು.
ಬೆಳಗಾವಿ: ಸಾಂಸ್ಕೃತಿ, ಸಾಹಿತ್ಯಕ್ಕೆ ಮಹಿಳೆಯರ ಸೇವೆ ಅನನ್ಯ: ಜ್ಯೋತಿ ಬದಾಮಿ
ಬೆಂಗಳೂರು : ವಿಶ್ವ ವಾಣಿಜ್ಯ ಸಂಸ್ಥೆಯ ಒಪ್ಪಂದದ ಲಾಭ ಪಡೆದು ಬಹು ರಾಷ್ಟ್ರೀಯ ಕಂಪನಿಗಳು ಅಭಿವೃದ್ಧಿ ಪಡಿಸಿರುವ ಹೊಸ ತಳಿಯ ಬೀಜಗಳನ್ನು ಮಾರುಕಟ್ಟೆಗೆ ತಂದಿರುವುದನ್ನು ವಿರೋಧಿಸಿ ರೈತರು ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಮ್ಮೂರ ನೆಲಕ್ಕೆ ಎಂಎ-ನ್-ಸಿ-ಗ-ಳ ಬೀಜ ಬೇಡ: ರೈತರ ಪ್ರತಿಭಟನೆ
ಚಿತ್ರ ಜಗತ್ತು (ವಿಶ್ವ ಕನ್ನಡಿಗ ನ್ಯೂಸ್ ): ಬಾಲಿವುಡ್ ನ ಪ್ರತಿಭಾವಂತ ನಟ ಇರ್ಫಾನ್ ಖಾನ್ ರವರಿಗೆ ಬ್ರೈನ್ ಕ್ಯಾನ್ಸರ್ ಎಂದು ತಿಳಿದುಬಂದಿದೆ.
ಬಾಲಿವುಡ್ ನಟ ಇರ್ಫಾನ್ ಖಾನ್ ಗೆ ಬ್ರೈನ್ ಕ್ಯಾನ್ಸರ್
27 ರಂದು ಸಂಜೆ 4 ಗಂಟೆ ರಾಜಭವನದಲ್ಲಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಆ.27 ರಂದು ಕತ್ತಿ ಪ್ರಮಾಣ ವಚನ ಸ್ವೀಕಾರ : ಯಡಿಯೂರಪ
ದಕ್ಷಿಣ ಕನ್ನಡ ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್ ) : ಭಾನುವಾರ ದಿನಾಂಕ 13.01.2019ರಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ 'ಅಂತರಾಷ್ಟ್ರೀಯ ಖಗೋಳೀಯ ಸಂಘಟನೆ' (ಇಂಟರ್ನ್ಯಾಷನಲ್ ಅಸ್ಟ್ರೊನಾಮಿಕಲ್ ಯೂನಿಯನ್ - ಶತಮಾನೋತ್ಸವ ಅಂಗವಾಗಿ ಖಗೋಳಶಾಸ್ತ್ರ ಸಂಬಂಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ಅಂತರಾಷ್ಟ್ರೀಯ ಖಗೋಳೀಯ ಸಂಘಟನೆ ಶತಮಾನೋತ್ಸವ ಕಾರ್ಯಕ್ರಮ
ದಕ್ಷಿಣ ಕನ್ನಡ ಸುಳ್ಯ ( ವಿಶ್ವ ಕನ್ನಡಿಗ ನ್ಯೂಸ್ ) : ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಗಾಂಧಿನಗರ ಶಾಖಾ ವತಿಯಿಂದ ಮರ್ಹೂಂ ಖಲಂದರ್ ಶಾಫಿ ಹಾಗೂ ಸತ್ತಾರ್ ಸಂಗಂ ಸ್ಮರಣಾರ್ಥ ತಹ್ಲೀಲ್, ದುಆ ಮಜ್ಲಿಸ್ ಹಾಗೂ ಇಫ್ತಾರ್ ಸಂಗಮ ಅನ್ಸಾರ್ ಸಭಾ ಭವನದಲ್ಲಿ ನಡೆಯಿತು.
ಖಲಂದರ್ ಶಾಫಿ ಹಾಗೂ ಸತ್ತಾರ್ ಸಂಗಂ ಸುಳ್ಯದ ಯುವ ಜನತೆಗೆ ಮಾದರಿ : ಅಶ್ರಫ್ ಕಾಮಿಲ್ ಸಖಾಫಿ