text
stringlengths
4
182k
ಹಾವೇರಿ: ಬಿಜೆಪಿ ಸರ್ಕಾರದ ಎಲ್ಲಾ ಕರ್ಮಕಾಂಡಗಳಲ್ಲಿ ಬಸವರಾಜ ಬೊಮ್ಮಾಯಿಯವರ ಪಾಲುದಾರಿಕೆ ಇದೆ. ಯಡಿಯೂರಪ್ಪ ಸರ್ಕಾರದಲ್ಲಿ ನಡೆದ ಭ್ರಷ್ಟಾಚಾರ ಒಂದಾ ಎರಡಾ? ಬೊಮ್ಮಾಯಿ ಈಗ ಮುಖ್ಯಮಂತ್ರಿ ಆದ ಕೂಡಲೆ ಹಿಂದೆ ಮಾಡಿದ್ದ ಕರ್ಮಗಳೆಲ್ಲಾ ಹೋಗುತ್ತಾ? ಯಡಿಯೂರಪ್ಪನ್ನ ಜೈಲಿಗೆ ಹಾಕ್ತೀವಿ ಅಂತ ಹೆದರಿಸಿ ಮುಖ್ಯಮಂತ್ರಿ ಹುದ್ದೆ ಇಂದ ಕೆಳಗಿಳಿಸಿದ್ರು, ಪಾಪ ಕಣ್ಣೀರು ಹಾಕ್ತಾ ರಾಜೀನಾಮೆ ಕೊಟ್ಟರು. ಯಡಿಯೂರಪ್ಪ ಕೆಳಗಿಳಿಯೋದನ್ನೇ ಕಾಯ್ತಾ ಇದ್ರು ಬೊಮ್ಮಾಯಿ ಎಂದು ವಿರೋಧಪಕ್ಷ ನಾಯಕ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.</s>
ಈ ಸಂದರ್ಭದಲ್ಲಿ ಜಿಲ್ಲಾ ಅಗ್ನಿಶಾಮಕ ದಳದಿಂದ ರಾಷ್ಟ್ರೀಯ ವಿಪತ್ತು ಪ್ರಾತ್ಯಕ್ಷಿಕತೆ ಬಗ್ಗೆ ನಾಗರೀಕರಲ್ಲಿ ಜಾಗತಿ ಮೂಡಿಸಲಾಯಿತು.</s>
ರಾಮನಗರ: ಕೇಂದ್ರದಿಂದ ಕರ್ನಾಟಕದ ತೆರಿಗೆ ಪಾಲು ಕಡಿತ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ , ರಾಜ್ಯವನ್ನು ದೇವರೇ ಕಾಪಾಡಬೇಕು ಎಂದು ಚನ್ನಪಟ್ಟಣದಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ, ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.</s>
ಈಜುವಿಕೆ ಒಂದು ಕಲೆ. ಕಲಿಯುವವರೆಗೂ ಮಾತ್ರ ಸ್ವಲ್ಪ ಕಷ್ಟ. ನಂತರ ನೀರಿನಲ್ಲಿ ತೇಲಾಡಿದಷ್ಟೇ ಸೊಗಸಾಗಿ ಅತ್ಯುತ್ತಮ ಆರೋಗ್ಯ ಲಾಭಗಳು ನಿಮ್ಮದಾಗುತ್ತವೆ.</s>
3. ಉತ್ತಮ ಆರೋಗ್ಯಕ್ಕಾಗಿ ಉಪವಾಸ</s>
ನ್ಯಾಯವಾದಿ ಎನ್. ಜಯಪ್ರಕಾಶ್ ರೈ ವಂದಿಸಿದರು. ಉಪನ್ಯಾಸಕರಾದ ಸರಿತಾ ಕೆ., ಗುರುರಾಜ್ ಕೆ ಹಾಗೂ ಧನ್ಯಾ ಕಾರ್ಯಕ್ರಮ ನಿರೂಪಿಸಿದರು.</s>
ಸ್ವಾತಂತ್ರ್ಯೋತ್ಸವ ನಮ್ಮಲ್ಲೆಷ್ಟು ದೇಶಭಕ್ತಿಯನ್ನು ಬಡಿದೆಬ್ಬಿಸುತ್ತದೋ, ದೇಶಭಕ್ತಿಯಿಂದ ಎಷ್ಟು ಮಂದಿ ಈ ದಿನವನ್ನು ಆಚರಿಸುತ್ತಾರೋ ಗೊತ್ತಿಲ್ಲ. ಆದರೆ, ಶಾಪಿಂಗ್ಪ್ರಿಯರಿಗೆ ಒಂದು ದಿನದ ರಜೆಯ ಬಾಬತ್ತು ಆಗಿರುವುದಂತೂ ಸತ್ಯ. ಸೋವಿ ದರ ಪ್ರಕಟಿಸಲು ಮಳಿಗೆ ಬ್ರಾಂಡ್ಗಳಿಗೆ ಮತ್ತೊಂದು ನೆಪ ಸಿಕ್ಕಿದೆ...</s>
2 ದಿನ . 2 ಕಪ್ಗಳು ಕೆಫಿರ್ 1% ಕೊಬ್ಬು ಮತ್ತು 400 ಗ್ರಾಂ ಕೊಬ್ಬುಮುಕ್ತ ಕಾಟೇಜ್ ಚೀಸ್</s>
ಕನ್ನಡದ ಬಡ್ಡಿ ಮಗನ್ ಲೈಫು ಚಿತ್ರ ಓಡ್ತಿದೆ. ಸಖತ್ ಆಗಿಯೇ ಓಡ್ತಿದೆ. 2 ನೇ ವಾರವೂ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಕಂಪ್ಲೀಟ್ ಹೊಸಬರೇ ಇರುವ ಈ ಚಿತ್ರವನ್ನ ಮಂಡ್ಯ ಮತ್ತು ಮೈಸೂರು ಜನ ಬೇಜಾನ್ ಇಷ್ಟಪಟ್ಟಿದ್ದಾರೆ. ಗಾಯಕ ನವೀನ್ ಸಜ್ಜು ಹಾಡಿರೋ ಇದೇ ಚಿತ್ರದ ಏನ್ ಚಂದಾನ ತಕೋ ಹಾಡು ಸೂಪರ್ ಡ್ಯೂಪರ್ ಹಿಟ್ ಕೂಡ ಆಗಿದೆ. ಈಗ ಈ ಚಿತ್ರ ಜನರ ಹೃದಯ ಕದ್ದಿದೆ.</s>
2015ರಲ್ಲಿ ಭಾರತದ ಜಿಡಿಪಿಗೆ ಮೊಬೈಲ್ ಫೋನ್ ಇಂಡಸ್ಟ್ರಿ ಕೊಡುಗೆ ಶೇ 6.5ರಷ್ಟು. ಅಂದರೆ 9 ಲಕ್ಷ ಕೋಟಿ ರುಪಾಯಿ. ಇದು 2020ರ ವೇಳೆಗೆ 14 ಲಕ್ಷ ಕೋಟಿ ರುಪಾಯಿ ಆಗಲಿದೆ ಎಂದು ಅಂದಾಜಿಸಲಾಗಿದೆ. ಇಲ್ಲಿ ಮೊಬೈಲ್ ಇಂಡಸ್ಟ್ರಿ ನೇರ ಹಾಗೂ ಪರೋಕ್ಷವಾಗಿ ನೀಡುತ್ತಿರುವ ಕೊಡುಗೆಯ ಮೊತ್ತವನ್ನು ಕೊಡಲಾಗಿದೆ.</s>
ಇಲ್ಲಿನ ಬಸವ ಭವನ ಸಮುದಾಯ ಭವನದಲ್ಲಿ ಸೋಮವಾರ ರಾತ್ರಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</s>
ಮುಂದಿನ ಲೇಖನಮ್ಯಾಗಿ ವಿವಾದ: ಮಾಧುರಿ ದೀಕ್ಷಿತ್ಗೆ ನೋಟಿಸ್</s>
ಕಮಲಾಪುರ, ಹಂಪಿ, ಹೊಸಪೇಟೆ, ಬಳ್ಳಾರಿ, ಹೊಸಮಲಪನಗುಡಿ ಸೇರಿದಂತೆ ಹತ್ತಾರು ಹಳ್ಳಿಗಳ ಮಕ್ಕಳಿಗೆ ಸಾಹಸವೊಂದು ಅಪಾಯಕಾರಿ ಎಂಬುದಕ್ಕಿಂತಲೂ ಅಚ್ಚರಿಯಾಗಿತ್ತು. ಹೀಗಾಗಿ ಅವರ ಮುಖದಲ್ಲಿ ಆತಂಕದ ಬದಲಿಗೆ ಖುಷಿ ಎದ್ದುಕಾಣುತ್ತಿತ್ತು. ಸುಮಾರು 100 ಕ್ಕೂ ಹೆಚ್ಚು ಮಕ್ಕಳು ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಂಡು ರೋಮಾಂಚನ ಅನುಭವಿಸಿದರು.</s>
ಕಲಬುರಗಿ: ಕೈಗಾರಿಕಾ ಸಂಸ್ಥೆಗಳೊಂದಿಗೆ ನಿಕಟ ಸಂಬಂಧ ಕಾಯ್ದುಕೊಳ್ಳಲು ಶರಣಬಸವ ವಿಶ್ವವಿದ್ಯಾಲಯದ ಸಿಬ್ಬಂದಿಗಳಿಗಾಗಿ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್, ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ವಿಭಾಗ ಹಾಗೂ ಬೆಂಗಳೂರಿನ ಸಲ್ಯುಶನ್ಸ್ ಹಮ್ಮಿಕೊಂಡಿರುವ ಕಾರ್ಯಾಗಾರಕ್ಕೆ ವಿವಿಯ...</s>
ಹೀಗಾಗಿ, ರಷ್ಯಾದ ಒಕ್ಕೂಟದ ಅಧ್ಯಕ್ಷ ಹುದ್ದೆಗೆ ಅಭ್ಯರ್ಥಿ. ಸಾಂವಿಧಾನಿಕ ಮತ್ತು ಕಾನೂನು ಸ್ಥಿತಿ ರಾಜ್ಯದ ಮುಖ್ಯಸ್ಥನಾಗಿ ಮೂರು ಮೂಲಭೂತ ಅಗತ್ಯಗಳನ್ನು ಹೊಂದಿಸಲು ಹೇಳಲಾಗುವ:</s>
ಬಿಬಿಎಂಪಿಯ ಐದಕ್ಕೂ ಅಧಿಕ ಪೌರಕಾರ್ಮಿಕರು ಕೋವಿಡ್ಗೆ ಬಲಿಯಾಗಿದ್ದಾರೆ. ಬಿಬಿಎಂಪಿಯು ಕೋವಿಡ್ನಿಂದ ರಕ್ಷಣೆ ಒದಗಿಸುವ ಸುರಕ್ಷತಾ ಪರಿಕರಗಳನ್ನು ಒದಗಿಸುವ ಭರವಸೆ ನೀಡಿದೆ. ಆದರೆ, ಅದು ಇನ್ನೂ ಎಲ್ಲ ವಾರ್ಡ್ಗಳ ಪೌರಕಾರ್ಮಿಕರಿಗೆ ತಲುಪಿಲ್ಲ.</s>
ನಮ್ಮದು ಉತ್ತಮ ನಾಯಕತ್ವ ಹೊಂದಿರುವ ಮತ್ತು ನಮ್ಮ ಎಲ್ಲಾ ಪಾಲುದಾರರನ್ನು ನೋಡಿಕೊಳ್ಳುವ ಮಾದರಿ ಸಂಸ್ಥೆಯಾಗಿರಬೇಕು. ಇಂತಹ ಎಲ್ಲಾ ಉಪಕ್ರಮಗಳ ಬಗ್ಗೆ ನಾನು ನಿಯಮಿತವಾಗಿ ಮಂಡಳಿಯೊಂದಿಗೆ ಚರ್ಚಿಸಿ ಅವರ ಅನುಮೋದನೆಯನ್ನು ಪಡೆದುಕೊಂಡಿದ್ದೇನೆ. ನಮ್ಮ ಪ್ರತಿಯೊಬ್ಬ ಉದ್ಯೋಗಿಯೊಂದಿಗೆ ಹೆಜ್ಜೆ ಹಾಕಲು, ಸಂವಹನ ನಡೆಸಲು ಮತ್ತು ಅನಿಶ್ಚಿತ ಮಾರುಕಟ್ಟೆಯಲ್ಲಿ ಅವರ ಕಳವಳಗಳನ್ನು ಹೋಗಲಾಡಿಸಲು ಇದು ಒಂದು ದೊಡ್ಡ ಅವಕಾಶವೆಂದು ನಾನು ನೋಡುತ್ತೇನೆ. ಪ್ರಬುದ್ಧ ಬ್ರಾಂಡ್ ಆಗಿ ಕೆಲಸಕ್ಕೆ ತೆಗೆದುಕೊಳ್ಳುವಕೈಬಿಡುವುದು ( ) ಏಷ್ಯನ್ ಪೇಂಟ್ಸ್ ಸಂಸ್ಕೃತಿಯಲ್ಲ. ಬದಲಿಗೆ ಉದ್ಯೋಗಿಗಳಿಗೆ ಭರವಸೆ ನೀಡಿದ್ದೇವೆ ಎಂದು ಕಂಪನಿಯ ಸಿಇಒ ಅಮಿತ್ ಸಿಂಗಲ್ ಅಭಿಪ್ರಾಯಪಟ್ಟಿದ್ದಾರೆ.</s>
ಚಿಕ್ಕಮಗಳೂರು, ಮೇ 29 ಜಿಲ್ಲೆಯ ತರೀಕೆರೆ ಪಟ್ಟಣದ 8 ತಿಂಗಳ ಗರ್ಭಿಣಿಯ ಗಂಟಲ ದ್ರವವನ್ನು 5 ಬಾರಿ ಪರೀಕ್ಷೆ ಮಾಡಿದ್ದು, ಕೋವಿಡ್19 ದೃಢಪಟ್ಟಿಲ್ಲ. ಪ್ರಯೋಗಾಲಯದ ಲೋಪದಿಂದ ಮೊದಲ ಬಾರಿ ಪಾಸಿಟಿವ್ ಎಂದು ಬಂದಿತ್ತು.</s>
ಏರ್ ಸ್ಟ್ರೈಕ್ ವಿಚಾರವನ್ನು ಯಾರೂ ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಯಡಿಯೂರಪ್ಪ ಯಾವ ಪದ ಬಳಸಿದ್ದಾರೆ ಗೊತ್ತಿಲ್ಲ. ಯಾರೂ ಕೂಡ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ಚುನಾವಣೆ ಸಿದ್ಧತೆ ಬೂತ್ ಮಟ್ಟದಿಂದ ಕಳೆದ ಎರಡು ಮೂರು ತಿಂಗಳಿಂದ ಆಗುತ್ತಿದೆ. ಮಾರ್ಚ್ 2ರಂದು ಇಡೀ ರಾಜ್ಯಾದ್ಯಂತ ಒಂದೇ ದಿನ ಬೈಕ್ ರ್ಯಾಲಿ ಹಮ್ಮಿಕೊಂಡಿದ್ದೇವೆ. 28 ಸ್ಥಾನದಲ್ಲಿ ಇಪ್ಪತ್ತಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದು ಅವರು ತಿಳಿಸಿದ್ದಾರೆ.</s>
ಉಗ್ರರನ್ನು ಹೀರೋಗಳೆಂದು ಬಣ್ಣಿಸಿದ ಸದ್ದಾಂ ಬಂಟ</s>
ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯು ಆರ್ಥಿಕವಾಗಿ ಹಿಂದುಳಿದವರಿಗೆ 8000 ಕೋಟಿ ರೂ. ವೆಚ್ಚದಲ್ಲಿ ಐದು ಲಕ್ಷ ಮನೆಗಳನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲು ನಿರ್ಧರಿಸಿದೆ. ಇದರ ಜತೆಯಲ್ಲಿ ಶಿವಮೊಗ್ಗಕ್ಕೆ ಆಯುಷ್ ವಿವಿ ಸ್ಥಾಪನೆ, ಕ್ಯಾನ್ಸರ್ ಕೇಂದ್ರ ನಿರ್ಮಾಣದ ಬೃಹತ್ ಕೊಡುಗೆಯನ್ನು ಘೋಷಿಸಲಾಗಿದೆ.</s>
ಬೆಳ್ತಂಗಡಿ: ಪ್ರತಿಯೊಬ್ಬ ಚುನಾಯಿತ ಸದಸ್ಯರು ಅವರ ಕ್ಷೇತ್ರದ ಜನರ ಸಮಸ್ಯೆಗಳನ್ನು ತಿಳಿದುಕೊಂಡು ಪರಿಹರಿಸಲು ಪ್ರಯತ್ನಿಸಬೇಕು. ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಮಾಡದೆ ಎಲ್ಲರೂ ಒಮ್ಮತದಿಂದ ನಡೆಯಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.</s>
2. ಒಡಹುಟ್ಟಿದವರು</s>
ಬೆಂಗಳೂರು: ರಾಜ್ಯದ ಯುವ ಜನತೆಗೆ ಉದ್ಯೋಗಾವಕಾಶ ಒದಗಿಸುವ ದೃಷ್ಟಿಯಿಂದ ಹಮ್ಮಿಕೊಂಡಿರುವ ವರ್ಚುವಲ್ ಉದ್ಯೋಗ ಮೇಳದಲ್ಲಿ ಮೊದಲ ದಿನ ಒಂದು ಸಾವಿರ ಅಭ್ಯರ್ಥಿಗಳು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ.</s>
ಕೆಸರುಮಯ ರಸ್ತೆಯಿಂದಾಗಿ ಕನ್ನಡಕುದ್ರು ವಿನಿಂದ ಪಡಿತರ, ಗ್ರಾ.ಪಂ. ಕಚೇರಿ, ಗ್ರಾಮ ಕರಣಿಕರ ಕಚೇರಿ ಕೆಲಸಕ್ಕೆ, ಪೇಟೆಗೆ ಬರಲು ಇಲ್ಲಿನ ಗ್ರಾಮಸ್ಥರಿಗೆ ಸಮಸ್ಯೆಯಾಗುತ್ತಿತ್ತು. ಈಗ ರಸ್ತೆ ದುರಸ್ತಿಯಾಗಿರುವುದರಿಂದ ಗ್ರಾಮಸ್ಥರಿಗೆ ಸ್ವಲ್ಪ ಮಟ್ಟಿಗೆ ಸಮಸ್ಯೆ ನಿವಾರಣೆಯಾದಂತಾಗಿದೆ.</s>
ಸುದ್ದಿಗಾಗಿ ತೆರಳಿದ್ದ ಪತ್ರಕರ್ತ ಬಸವರಾಜ ಬ್ಯಾಗವಾಟ್ ಅವರನ್ನು ದಾರಿಯಲ್ಲಿ ತಡೆದು ಅವ್ಯಾಚ ಶಬ್ದಗಳಿಂದ ನಿಂದಿಸಿ ಅವರ ಮೇಲೆ ಹಲ್ಲೆ ಮಾಡಿದ ಹನುಮೇಶ ನಾಯಕ ಹಾಗೂ ಇತರ ವ್ಯಕ್ತಿಗಳ ವಿರುದ್ಧ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ತಹಶೀಲ್ದಾರ್ ಶಿವಾನಂದ ಸಾಗರ ಅವರನ್ನು ಆಗ್ರಹಿಸಿದರು.</s>
ವಿಜಯಪುರ: ಪ್ರಧಾನ ಮಂತ್ರಿ ಜನೌಷಧ ಕೇಂದ್ರವನ್ನು ಹಳ್ಳಿಹಳ್ಳಿಗಳಿಗೆ ತೆಗೆದುಕೊಂಡು ಹೋಗಲು ಚಿಂತನೆ ನಡೆದಿದೆ ಎಂದು ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ ಹೇಳಿದರು.</s>
ಗುರುವಾರ ಇಲ್ಲಿನ ತಾಪಮಾನ ಮೈನಸ್ 8.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದರ ಪರಿಣಾಮವಾಗಿ ಕಾಶ್ಮೀರದ ಪ್ರಖ್ಯಾತ ದಾಲ್ ಸರೋವರ ಸಹಿತ ಹಲವು ಜಲಮೂಲಗಳು ಹೆಪ್ಪುಗಟ್ಟಿ ಮಂಜುಗಡ್ಡೆಯಾಗಿವೆ.</s>
ಬೆಂಗಳೂರು, ಡಿ.3: ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣಾ, ಎನ್.ಧರ್ಮಸಿಂಗ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಲು ಅಕ್ರಮ ಗುತ್ತಿಗೆಗಳನ್ನು ನೀಡಿದ್ದು ಇದರಿಂದ ಸರ್ಕಾರ ಬೊಕ್ಕಸಕ್ಕೆ 23.32 ಕೋಟಿ ರೂ. ನಷ್ಟವಾಗಿದೆ. ಆದ್ದರಿಂದ ಈ ಅಕ್ರಮ ಗಣಿ ಗುತ್ತಿಗೆ ನೀಡಿದ ಪ್ರಕರಣದ ವಿಚಾರಣೆ ನಡೆಸಲು ಆದೇಶ ನೀಡಬೇಕು ಎಂದು ಕೋರಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಭ್ರಷ್ಟಾಚಾರ ತಡೆ ವೇದಿಕೆಯ ಅಧ್ಯಕ್ಷರು ನೀಡಿದ ದೂರನ್ನು ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುಧೀಂದ್ರ ರಾವ್ ಅವರು ಈ ಪ್ರಕರಣದ ವಿಚಾರಣೆಗೆ ಸಮ್ಮತಿ ನೀಡಿ ಸಿಆರ್ಪಿಸಿ 156 (3) ಅನ್ವಯ ತನಿಖೆ ಮಾಡಿ ತನಿಖಾ ವರದಿಯನ್ನು ಈ ನ್ಯಾಯಾಲಯಕ್ಕೆ ಮುಂದಿನ ವರ್ಷದ ಜನೆವರಿ 6ರ ಒಳಗಾಗಿ ಸಲ್ಲಿಸಬೇಕೆಂದು ಲೋಕಾಯುಕ್ತ ಎಡಿಜಿಪಿ ಅವರಿಗೆ ಆದೇಶ ನೀಡಿದ್ದಾರೆ.</s>
ಮಂಗಳೂರು: ಸಿಎಂ ಸಿದ್ದರಾಮಯ್ಯ ಮೀನೂಟ ಮಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಮಾಡಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.</s>
ಹೀಗಾಗಿ ಇದೇ ತಿಂಗಳು 25ರ ತನಕ ಮಾತ್ರವೇ ಆನ್ಲೈನ್ ಬುಕ್ಕಿಂಗ್ ಇರಲಿದ್ದು, ತದನಂತರ ಯಾವುದೇ ರೀತಿಯ ಬುಕ್ಕಿಂಗ್ ಸ್ವಿಕರಿಸದಿರಲು ಕ್ಲಾಸಿಕ್ ಲೆಜೆಂಡ್ ಸಂಸ್ಥೆಯು ನಿರ್ಧರಿಸಿದೆ. ಇದರಿಂದ ಇವತ್ತು ಮತ್ತು ನಾಳೆ ಬಿಟ್ಟಲ್ಲಿ ಮುಂದಿನ 9 ತಿಂಗಳ ತನಕ ಬೈಕ್ ಖರೀದಿಗೆ ಯಾವುದೇ ಅವಕಾಶವಿರುದಿಲ್ಲ ಎನ್ನಬಹುದು.</s>
ಕೊರೋನಾ ದ ಈ ಕಾಲಘಟ್ಟದಲ್ಲಿ ನಮ್ಮ ಸೇವೆಯನ್ನು ಗುರುತಿಸಿ, ನಮಗೆ ಪ್ರೊತ್ಸಾಹ ನೀಡಿದ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಗೆ ಪ್ರಭಾರ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಶ್ರೀಮತಿ ಮಮತ ರವರು ಶುಭ ಕೋರಿದರು.</s>
ದಿನನಿತ್ಯ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗುವ ಆಟೋರಿಕ್ಷಾ ಚಾಲಕರು ತಮ್ಮ ಆಟೋರಿಕ್ಷಾಗಳಿಗೆ ಮೀಟರ ಅಳವಡಿಸಿಕೊಂಡು 6 ಮಕ್ಕಳನ್ನು ಮಾತ್ರ ಕರೆದುಕೊಂಡು ಹೋಗಬೇಕು. ಇದು ಸವೋಚ್ಛ ನ್ಯಾಯಾಲಯದ ತೀರ್ಪಾಗಿದ್ದು, ಸಾರ್ವಜನಿಕರು ಹಾಗೂ ಪಾಲಕರು ನಿಯಮ ಪಾಲಿಸಲು ಸಹಕರಿಸಬೇಕು. ಪರ್ಮೀಟ್ ಇಲ್ಲದ ಆಟೋರಿಕ್ಷಾಗಳು ರಸ್ತೆಯ ಮೇಲೆ ಓಡಾಡುವಂತಿಲ್ಲ. ಪರ್ಮಿಟ್ ಇಲ್ಲದೇ ಓಡಾಡುವ ಆಟೋರಿಕ್ಷಾಗಳ ಮಾಹಿತಿಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಅಥವಾ ಪೊಲೀಸ್ ಕಂಟ್ರೌಲ್ ರೂಮ್ಗೆ ಆಟೋ ಚಾಲಕರು ತಿಳಿಸಲು ಮನವಿ ಮಾಡಿದರು. ಈಗಾಗಲೇ 150 ಪರ್ಮಿಟ್ ಇಲ್ಲದ ಆಟೋರಿಕ್ಷಾಗಳ ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ಮೀಟರ್ ಅಳವಡಿಸದೇ ಇರುವ ಆಟೋರಿಕ್ಷಾಗಳನ್ನು ಉಪಯೋಗಿಸದೇ ಇರಲು ಮನವಿ ಮಾಡಿಕೊಂಡ ಜಿಲ್ಲಾಧಿಕಾರಿಗಳು ಅಂತಹ ಆಟೋರಿಕ್ಷಾಗಳ ಮಾಹಿತಿಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಕಂಟ್ರೌಲ್ ರೂಮ್ಗೆ ತಿಳಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಮುಂಜಾಗೃತಾ ಕ್ರಮವಾಗಿ ನಾಳೆಯಿಂದ ನಗರದಲ್ಲಿ ಸಿಟಿ ಬಸ್ಗಳನ್ನು ಹೆಚ್ಚಾಗಿ ಓಡಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.</s>
ಮಾಸದ ನೆನಪೆ ತುಂಬು ಒನಪೆ ದಿನಂಪ್ರತಿಯ ನೂಲು</s>
ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ ಡ್ಯಾನಿಶ್ ಸೇಠ್ ಜೊತೆ ನಟಿ ಐಂದ್ರಿತಾ ರೇ ಭಾಗವಹಿಸಿದರು.</s>
ಅರುಣ್ ಕುಮಾರ್ ನಿರ್ದೇಶನದ ಕೆಟಿಎಂ ಚಿತ್ರದಲ್ಲಿ ದಿಯಾ ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸಿದ್ದು, ಈ ಸಿನಿಮಾದಲ್ಲಿ ಸಂಜನಾ ದಾಸ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದೊಂದು ರೊಮ್ಯಾಂಟಿಕ್ ಚಿತ್ರವಾಗಿದ್ದು, ಮಾಡೆಲ್ ಹಾಗೂ ನಟಿಯಾದ ಸಂಜನಾ ದಾಸ್ ನಾಯಕಿಯಾಗಿ ಮಿಂಚಲಿದ್ದಾರೆ.</s>
ದೇವೇಗೌಡ್ರ ಜತೆ ಮಂಡ್ಯ, ಹಾಸನದ ಜೆಡಿಎಸ್ ಅಭ್ಯರ್ಥಿಗಳು ದಿಲ್ಲಿಗೆ ಹೋಗುವುದು ನಿಶ್ಚಿತ. ಮೈತ್ರಿ ಸರಕಾರಕ್ಕೆ ಯಾವುದೇ ಅಪಾಯವಿಲ್ಲ. ಕೆಲವು ಎಲೆಕ್ಟ್ರಾನಿಕ್ ಮಾಧ್ಯಮದವರು ಅಪಪ್ರಚಾರ ಮಾಡುತ್ತಿದ್ದಾರೆ. ಹೀಗೆ ಪ್ರಸಾರ ಮಾಡುತ್ತಿದ್ದರೆ, ಜನಸಾಮಾನ್ಯರಿಗೆ ಎಲೆಕ್ಟ್ರಾನಿಕ್ ಮಾಧ್ಯಮಗಳ ಬಗ್ಗೆ ಮೂರು ಕಾಸಿನ ಬೆಲೆಯೂ ಸಿಗಲ್ಲ. ನೀವು ಏನೇ ಮಾಡಿದರೂ ನಾವೇ ಗೆಲ್ಲೋದು. ಬರೆದಿಟ್ಟುಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.</s>
ನೆಲದ ಬಾಯ್ಲರ್ ಸರಣಿಯ ವಿಮರ್ಶೆಗಳು ಪ್ರೀಮಿಯಂ 10</s>
ರಮಲ್ಲ, ಸೆ.26: ಆಕ್ರಮಿತ ಪಶ್ಚಿಮ ದಂಡೆಯ ಜೆನಿನ್ ಮತ್ತು ಜೆರುಸಲೇಂ ಪ್ರದೇಶದಲ್ಲಿ ಇಸ್ರೇಲ್ ತಡರಾತ್ರಿ ನಡೆಸಿದ ಸೇನಾ ಕಾರ್ಯಾಚರಣೆ ಮತ್ತು ಆ ಬಳಿಕ ನಡೆದ ಘರ್ಷಣೆಯಲ್ಲಿ ಕನಿಷ್ಟ 4 ಪೆಲೆಸ್ತೀನ್ ನಾಗರಿಕರು ಮೃತಪಟ್ಟಿರುವುದಾಗಿ ವರದಿಯಾಗಿದೆ.</s>
1994ರ ಒಡಿಶಾ ಗ್ರಾಮ ಪಂಚಾಯಿತಿ ಕಾಯ್ದೆ ಪ್ರಕಾರ ಒಡಿಯಾವನ್ನು ಬರೆಯಲು ಮತ್ತು ಮಾತನಾಡಲು ಗೊತ್ತಿಲ್ಲದಿದ್ದರೆ ಆ ವ್ಯಕ್ತಿಯು ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಸ್ಥಾನವನ್ನು ಹೊಂದಲು ಅನರ್ಹನಾಗಿರುತ್ತಾನೆ ಮತ್ತು ಅಂತಹ ವ್ಯಕ್ತಿಯು ಯಾವುದೇ ಹುದ್ದೆಗೆ ಸ್ಪರ್ಧಿಸಲು ಸಾಧ್ಯವಿಲ್ಲ.</s>
ರಾ ಕೋಳಿ ಮೊಟ್ಟೆಯ ತಂತಿಕೂರ್ಚದ ತಾಜಾ ಹಾಲನ್ನು ಮತ್ತು ಕರಗಿಸಿದ ಒಟ್ಟಾಗಿ ತಂತಿಕೂರ್ಚದ ಅಡುಗೆ ಎಣ್ಣೆ. ಪಡೆದ ಸಮೂಹ ಸಮುದ್ರದ ಉಪ್ಪು, ಸೇರಿಸಲಾಗುತ್ತದೆ ನಿಂಬೆ ಸಿಪ್ಪೆ ಮತ್ತು ಗೋಧಿ ಹಿಟ್ಟನ್ನು. ಎಲ್ಲಾ ಪದಾರ್ಥಗಳನ್ನು ಸಮವಸ್ತ್ರವನ್ನು ತನಕ ಕಲಕಿ ಮತ್ತು ಹದಿನೈದು ನಿಮಿಷಗಳ ನಿಲ್ಲಲು ಅವಕಾಶ.</s>
ಇಸ್ರೇಲ್: ಹೆಬ್ಬಾವಿನ ಪ್ರಾಣಕ್ಕೆ ಎರವಾದ ಆಧುನಿಕ ಪೂತನಿ!</s>
ಯಾರನ್ನಾದರೂ ಭೇಟಿಯಾಗಬೇಕಿದ್ದರೆ ವ್ಯಕ್ತಿಯಿಂದ 1 ಮೀಟರ್ ಅಥವಾ 3 ಅಡಿ ಅಂತರ ಕಾಪಾಡಿಕೊಳ್ಳಬೇಕು.</s>
ಪಿಎಚ್ಸಿ ಮಾರ್ಗಸೂಚಿ: ಪ್ರತಿ 3000 ಜನಸಂಖ್ಯೆಗೆ ಒಂದರಂತೆ ಪ್ರಾಥಮಿಕ ಆರೋಗ್ಯ ಕೇಂದ್ರ ಇರಬೇಕು ಎನ್ನುವ ನಿಯಮವಿದೆ. ಐಪಿಎಚ್ಎಸ್ (ಭಾರತೀಯ ಸಾರ್ವಜನಿಕ ಆರೋಗ್ಯ ಗುಣಮಟ್ಟ) ಪಿಎಚ್ಸಿ ಹೊಂದಿರಬೇಕಾದ ಸೌಲಭ್ಯಗಳ ಮಾರ್ಗಸೂಚಿಯನ್ನು ನೀಡಿದೆ. ಮೂಲ ಸೌಲಭ್ಯ, ಮಾನ ಸಂಪನ್ಮೂಲ, ಔಷಧ, ಸಾರಿಗೆ ಸೌಕರ್ಯ ಜೊತೆಗೆ ಖಚಿತ ಉಲ್ಲೇಖಿತ ಸಂಪರ್ಕ, ಲ್ಯಾಂಡ್ರಿ ಸೌಲಭ್ಯ, ಒಳರೋಗಿಗಳಿಗೆ ಆಹಾರ ಸೌಲಭ್ಯ, ತ್ಯಾಜ್ಯ ನಿರ್ವಹಣೆ, ಭರವಸೆಯ ಗುಣಮಟ್ಟ, ಕಾರ್ಯನಿರ್ವಹಣೆಯ ಮೇಲ್ವಿಚಾರಣೆ, ಹೊಣೆಗಾರಿಕೆ, ಕಾನೂನು ಸಮ್ಮತ ಹಾಗೂ ನಿಯಂತ್ರಕ ಅನುಸರಣೆ ಹಲವು ಅಂಶಗಳನ್ನು ಮುಂದಿಟ್ಟಿದೆ. ಜನರಿಗೆ ಪರಿಣಾಮಕಾರಿ ಚಿಕಿತ್ಸೆಯ ದಷ್ಟಿಯಿಂದ ಪಿಎಚ್ಸಿಗಳಲ್ಲಿ ಎ ಮತ್ತು ಬಿ ಎಂದು ವಿಭಾಗ ಮಾಡಿದೆ. ಎವಿಭಾಗದಲ್ಲಿ ಅಗತ್ಯವಾಗಿ ಒಬ್ಬರು ಎಂ.ಬಿ.ಬಿ.ಎಸ್.ವೈದ್ಯರು ಸೇರಿದಂತೆ 13ಜನ ಸಿಬ್ಬಂದಿ ಇರಬೇಕು, ಅಪೇಕ್ಷಣೀಯ ಎನ್ನುವಂತೆ 18ಜನ ಇದ್ದರೆ ಮತ್ತಷ್ಟು ಅನುಕೂಲ. ಇನ್ನೂ ಬಿ ವಿಭಾಗದಲ್ಲಿ ಎಂ.ಬಿ.ಬಿ.ಎಸ್.ವೈದ್ಯರು ಸೇರಿದಂತೆ 14ಜನ ಇರಬೇಕು. ಅಪೇಕ್ಷಣೀಯ ಎನ್ನುವಂತೆ 21ಜನ ಇದ್ದರೆ ಗುಣಮಟ್ಟದ ಚಿಕಿತ್ಸೆಗೆ ಮತ್ತಷ್ಟು ಸಹಕಾರವಾಗುತ್ತದೆ. ತಿಂಗಳಲ್ಲಿ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 30ಕ್ಕಿಂತಲೂ ಹೆಚ್ಚು ಹೆರಿಗೆ ಪ್ರಕರಣಗಳು ಬಂದರೆ ಅಂತಹ ಕೇಂದ್ರಗಳಲ್ಲಿ ಅಗತ್ಯವಾಗಿ ಎಂ.ಬಿ.ಬಿ.ಎಸ್.ಪದವಿ ಪಡೆದ ಮಹಿಳಾ ವೈದ್ಯರನ್ನು ನಿಯೋಜಿಸಲೇಬೇಕು ಎಂದು ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ. ಆದರೆ ಸ್ಥಳೀಯ ಪ್ರ ಾಥಮಿಕ ಆರೋಗ್ಯ ಕೇಂದ್ರದಲ್ಲಿ ಐಪಿಎಚ್ಎಸ್ನ ನಿಯಮಗಳು ಗಾಳಿಗೆ ತೂರಲ್ಪಟ್ಟಿದ್ದು, ಜನಸಾಮಾನ್ಯರಿಗೆ ಚಿಕಿತ್ಸೆ ಗಗನ ಕುಸುಮವಾಗಿ ಮಾರ್ಪಟ್ಟಿದೆ. ಒಬ್ಬ ಎಂ.ಬಿ.ಬಿ.ಎಸ್. ವೈದ್ಯರಿದ್ದು, ಅಗತ್ಯ ಸಿಬ್ಬಂದಿ ಕೊರತೆ ಮತ್ತು ಸರಕಾರದ ಅವೈಜ್ಞಾನಿಕ ಅನುದಾನದಿಂದ ರೋಗಿಗಳು ತೊಂದರೆ ಅನುಭವಿಸುವಂತಾಗಿದೆ.</s>
ಟಚ್ ಬಾರ್ ಮ್ಯಾಕ್ಬುಕ್ ಪ್ರೋ ಕೀಬೋರ್ಡ್ನ ಮೇಲ್ಭಾಗದಲ್ಲಿ ಸಾಂದರ್ಭಿಕ ಮೆಚ್ಚಿನವುಗಳು ಅಥವಾ ಶಾರ್ಟ್ಕಟ್ ಟಚ್ಸ್ಕ್ರೀನ್ ಆಗಿದೆ (ಯೋಚಿಸುವುದು: ಸ್ಟೀರಾಯ್ಡ್ಗಳ ಮೇಲೆ ಟ್ರ್ಯಾಕ್ಪ್ಯಾಡ್). ಇದು ತಂತ್ರಾಂಶ ಅಭಿವೃದ್ಧಿಗಾರರು ನೈಜ ಸಮಯ, ಸೂಕ್ತವಾದ ಉಪಕರಣ ಶಾರ್ಟ್ಕಟ್ಗಳನ್ನು ಬಳಕೆದಾರರಿಗೆ ಅಗತ್ಯವಿರುವ ಸಾಧ್ಯತೆಯ ಆಧಾರದ ಮೇಲೆ ಒದಗಿಸಲು ಅನುಮತಿಸುತ್ತದೆ, ಇದು ನಿಮ್ಮ ಕಾರ್ಯದ ಬದಲಾವಣೆಯಾಗಿ ಬದಲಾಗುತ್ತದೆ ಎಂದರ್ಥ.</s>
ಜೀವನ ಕಾವ್ಯ ಎಂದ ಸುಶ್ಮಿತಾ</s>
ಈ ಕುರಿತು ಸ್ಥಳೀಯ ಪಾಲಿಕೆ ಸದಸ್ಯೆ ಇಂದಿರಮ್ಮ ಅವರಿಗೆ ಮನವಿ ಸಲ್ಲಿಸಿದರೂ, ಪ್ರಯೋಜನವಾಗಿಲ್ಲ. ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.</s>
ತೆಲಂಗಾಣದ ಹೈದರಾಬಾದ್ ನಲ್ಲಿ ಕ್ವಾಲ್ ಕಂ ಸಂಸ್ಥೆ ಸುಮಾರು ಮೂರು ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲು ಸಿದ್ಧತೆ ನಡೆಸಿಕೊಂಡಿದೆ ಎಂದು ತೆಲಂಗಾಣ ಐಟಿ ಸಚಿವ ರಾಮರಾವ್ ಅಧಿಕೃತವಾಗಿ ಘೋಷಿಸಿದ್ದಾರೆ.</s>
ಸ್ಟೈಲಿಶ್ ಡೈರೆಕ್ಟರ್ ಎಂದು ಜನಪ್ರಿಯರಾಗಿರುವ ಇಂದ್ರಜೀತ್ ಲಂಕೇಶ್ ಬಿಟಿಎಂ ಲೇ ಔಟ್ ನಲ್ಲಿ ಮತ ಹಾಕಿದರು.</s>
ಗುಜರಾತ್ ಗೆ ಟ್ರಂಪ್ ಭೇಟಿ ನೀಡುತ್ತಿದ್ದು, ಅಹಮದಾಬಾದ್ನಲ್ಲಿ ರೋಡ್ ಶೋ ಮಾಡಲಿದ್ದಾರೆ. ಇದಾದ ನಂತರ ಸಬರಮತಿ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಟ್ರಂಪ್ ಗೆ ಕೆಂಪು ಹಾಸಿನ ಸ್ವಾಗತ ರೆಡಿಯಾಗುತ್ತಿದೆ.</s>
ದಿನಾಂಕ:12.10.2020 ರಂದು ಪ್ರಸಾರಗೊಂಡ 2 ಅಂಕಣಬರಹಗಳು 1 ಚಷ್ಮಾ ಉತಾರೋ ಫಿರ್ ದೇಖೊ ಯಾರೋ 2.ಎನಿತು ಜನ್ಮದಲಿ ಎನಿತು ಜೀವರಿಗೆ ಎನಿತು ನಾವು ಋಣಿಯೋ!</s>
ಸಂಸ್ಕಾರವನ್ನು ನೀಡಿ ಅವರನ್ನು ಸನ್ಮಾರ್ಗದತ್ತ ನಡೆಸಬೇಕು</s>
7.9 ಸಾವಿರ ಗಳು. ಹೊಂಡುರಾಸ್ನ ದಿನ ಮತ್ತು ರಾತ್ರಿ ಚಿಟ್ಟೆಗಳು</s>
ಸಿಬಿಎಸ್ಇ ನಡೆಸುವ ಪರೀಕ್ಷೆಯ ಇಡೀ ಪ್ರಕ್ರಿಯೆಯನ್ನು ಸಮಿತಿಯು ಕೂಲಂಕಷವಾಗಿ ಪರಿಶೀಲಿಸಲಿದ್ದು ಲೋಪದೋಷ ಪಟ್ಟಿ ಮಾಡಲಿದೆ</s>
ಇಲ್ಲಿನ ಬೆಡ್ ಮೇಲೆ ಮಲಗಿದ ವ್ಯಕ್ತಿಗೆ ಇ.ಸಿ.ಜಿ. ಯಂತ್ರೋಪಕರಣ ಅಳವಡಿಸಿದರೆ ತತ್ಸಂಬಂಧಿ ಮಾಹಿತಿ ಕಂಪ್ಯೂಟರ್ ಪರದೆ ಮೂಲಕ ನೇರ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ರವಾನೆಯಾಗುತ್ತದೆ. ಅಲ್ಲಿಂದ ಕೇವಲ ಹತ್ತೇ ನಿಮಿಷದಲ್ಲಿ ರಿಪೋರ್ಟ್ ಬರುತ್ತದೆ ಎಂದು ವಿವರಣೆ ನೀಡಿದರು.</s>
201920ನೇ ಸಾಲಿನ ಅವಧಿಯಲ್ಲಿ ರೈತರಿಗೆ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿ ದರದಲ್ಲಿ ಗರಿಷ್ಠ 3 ಲಕ್ಷ ರೂ. ವರೆಗೆ ಅಲ್ಪಾವಧಿ ಕೃಷಿ ಸಾಲ ನೀಡುವ ಯೋಜನೆಯನ್ನು ಕೆಲವೊಂದು ಷರತ್ತಿಗೆ ಒಳಪಟ್ಟು ರಾಜ್ಯ ಸಹಕಾರ ಇಲಾಖೆಯು ಮಾ. 30ರಂದು ಆದೇಶ ಹೊರಡಿಸಿತ್ತು.</s>
ಲೋಕಸತ್ತಾ ಪಕ್ಷ ಹಗರಣದ ಬಗ್ಗೆ ಸಿಐಡಿ ನೀಡಿದ ತನಿಖಾ ವರದಿಯನ್ನು ಮೊದಲು ಬಹಿರಂಗಗೊಳಿಸಿತ್ತು. ನಂತರ ಮುಖ್ಯಮಂತ್ರಿಗಳ ಮನೆಯ ಮುಂದೆ ಧರಣಿ, ಮೂರು ದಿನಗಳ ಉಪವಾಸ ಸತ್ಯಾಗ್ರಹ ನಡೆಸಿತು. ಹಗರಣದ ಪ್ರಮುಖ ಆರೋಪಿ ಮತ್ತು ಕೆಪಿಎಸ್ಸಿ ಮಾಜಿ ಅಧ್ಯಕ್ಷರಾದ ಗೋನಾಳ್ ಭೀಮಪ್ಪ ಮನೆ ಮುಂದೆ ಪ್ರತಿಭಟನೆ ನಡೆಸಿತು. ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಹೋರಾಟ ವಿಸ್ತರಿಸಲು ತೀರ್ಮಾನಿಸಲಾಗಿದೆ.</s>
ತಯಾರಿಸಲು ಸುಲಭವಾದ ಕ್ಯಾರಟ್ ಅಥವಾ ಗಜ್ಜರಿ ಮತ್ತು ಶುಂಠಿ ರಸದ ಸೇವನೆಯು ಹಲವಾರು ಆರೋಗ್ಯಲಾಭಗಳನ್ನು ನೀಡುತ್ತದೆ. ನಾಲ್ಕು ಕ್ಯಾರಟ್ಗಳು ಮತ್ತು ಅರ್ಧ ಇಂಚು ಶುಂಠಿಯಿಂದ ತಯಾರಿಸಿದ ರಸವು 200ಕ್ಕಿಂತಲೂ ಕಡಿಮೆ ಕ್ಯಾಲರಿಗಳನ್ನು ಒಳಗೊಂಡಿರುತ್ತದೆ. ಈ ಅದ್ಭುತ ಪೇಯವು ನೀಡುವ ಆರೋಗ್ಯಲಾಭಗಳ ಕುರಿತು ಮಾಹಿತಿಯಿಲ್ಲಿದೆ......</s>
ಕಡಿಮೆ ಫಲಿತಾಂಶ ಪಡೆದುಕೊಂಡಿರುವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಎಂದು ಹೇಳಿದರು.</s>
ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಮೇ 16 ರಂದು ನಡೆಯುವ ಸಮಾರಂಭದಲ್ಲಿ ಅನುಪಮಾ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಲೇಖಕಿಯರ ಸಂಘದ ಅಧ್ಯಕ್ಷೆ ಉಷಾ ಪಿ.ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 10 ಸಾವಿರ ರುಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಅನುಪಮಾ ಪ್ರಶಸ್ತಿ ಒಳಗೊಂಡಿದೆ.</s>
2016ರಲ್ಲಿ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದ ನಂತರ ಪಕ್ಕದ ರಾಜ್ಯ ಮಣಿಪುರದ ಮೇಲೆ ಕೇಸರಿ ಪಡೆ ಕಣ್ಣಿಟ್ಟಿತು. ಆಗಿನಿಂದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹಾಗೂ ಶರ್ಮಾ ಇಬ್ಬರೂ ಸೇರಿ ಮಣಿಪುರದಲ್ಲಿ ಪಕ್ಷಕ್ಕೆ ಅದ್ಭುತ ಎನಿಸುವಂಥ ಫಲಿತಾಂಶ ತಂದುಕೊಟ್ಟಿದ್ದಾರೆ.[ಮಣಿಪುರದಲ್ಲೂ ಗದ್ದುಗೆ ಹಿಡಿಯಲಿದೆ ಕಮಲ ಪಕ್ಷ]</s>
ಸೈಬರ್ ದಾಳಿ: ಪೋಲಂಡ್ ಏರ್ಲೈನ್ಸ್ ಸಂಚಾರ ಸ್ಥಗಿತ</s>
ವಿಶ್ರಾಂತಿ ಪರೀಕ್ಷೆಯ ಸಮಯದಲ್ಲಿ, 60% ರಷ್ಟು ಇಸಿಜಿ ಸಾಮಾನ್ಯವಾಗಿದೆ, ಆದರೆ ಸಾಮಾನ್ಯವಾಗಿ ಹಲ್ಲುಗಳು ಕಂಡುಬರುತ್ತವೆ, ಇದು ವರ್ಗಾವಣೆಗೊಂಡ ಹೃದಯಾಘಾತವನ್ನು ಸೂಚಿಸುತ್ತದೆ, ಜೊತೆಗೆ ಹಲ್ಲಿನ ಟಿ ಮತ್ತು ಎಸ್ಟಿ ವಿಭಾಗದಲ್ಲಿ ಬದಲಾವಣೆಗಳನ್ನು ಸೂಚಿಸುತ್ತದೆ.</s>
ಮಧ್ಯಾಹ್ನ ಭೇಟಿ ನೀಡಿದ ಅವರು ದೇವರಿಗೆ ಒಂದೂ ಕಾಲು ರೂಪಾಯಿ ಹರಕೆ ಸಲ್ಲಿಸಿ ತಮ್ಮ ಮಗನಿಗೆ ಒದಗಿರುವ ಎಲ್ಲ ಕಂಟಕಗಳನ್ನು ದೂರ ಮಾಡಲು ದೇವ ರನ್ನು ಪ್ರಾರ್ಥಿಸಿದರು ಎನ್ನಲಾಗಿದೆ.</s>
ಕೋವಿಡ್19 ಸೋಂಕು ಹರಡುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ), ಚೆಂಡಿಗೆ ಉಗುಳು ಹಚ್ಚುವುದನ್ನು ನಿಷೇಧಿಸಿದೆ. ಇದೇ ಕಾರಣಕ್ಕೆ ಬೆನ್ ಸ್ಟೋಕ್ಸ್ ಉಗುಳು ಹಚ್ಚಿದ ಬಳಿಕ ಸ್ಯಾನಿಟೈಝರ್ ಬಳಸಿ ಚೆಂಡನ್ನು ಸ್ವಚ್ಚಗೊಳಿಸಲಾಯಿತು. ಬಳಿಕ ಐಯಾನ್ ಮಾರ್ಗನ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿರುವ ಜೋಸ್ ಬಟ್ಲರ್ಗೆ ಅಂಪೈರ್ ಎಚ್ಚರಿಕೆ ನೀಡಿದ್ದಾರೆ. ಇಂಥದ್ದೇ ತಪ್ಪು ಮರುಕಳಿಸಿದರೆ ರನ್ ಪೆನಾಲ್ಟಿ ಬೀಳಲಿದೆ ಎಂದು ತಿಳಿಸಿಕೊಟ್ಟಿದ್ದಾರೆ.</s>
ಏಷ್ಯಾಕಪ್ನಲ್ಲಿ ಪ್ರಶಸ್ತಿ ಜಯಿಸಿರುವ ಶ್ರೀಲಂಕಾ ತಂಡ ಬಲಿಷ್ಠವಾಗಿದೆ. ಯುವ ಆಟಗಾರ ದಿನೇಶ್ ಚಂಡಿಮಾಲ್ ಮುನ್ನಡೆಸುತ್ತಿರುವ ತಂಡದಲ್ಲಿ ಮಾಹೇಲ ಜಯವರ್ಧನೆ ಮತ್ತು ಕುಮಾರ ಸಂಗಕ್ಕಾರ ಅವರಂತಹ ಅನುಭವಿ ಆಟಗಾರರಿದ್ದಾರೆ. ಆದ್ದರಿಂದ ಲಂಕಾ ತಂಡ ಭಾರತಕ್ಕೆ ಪ್ರಬಲ ಸವಾಲು ಒಡ್ಡುವುದು ಖಚಿತ.</s>
ಸಚಿವ ಪ್ರಮೋದರಿಂದ ನಿವೇಶನ ರಹಿತ 679 ಮಂದಿಗೆ ಉಚಿತ ನಿವೇಶನ</s>
ಸಮಾಜದವರು ಯಾರು ಧೃತಿಗೆಡಬಾರದು. ಯಾರೂ ಸಹ ಬೇಸರ ಮಾಡಿಕೊಳ್ಳಬಾರದು. ಆದಷ್ಟು ಬೇಗ ಅನ್ಯಾಯವನ್ನು ಸರಿಪಡಿಸುವ ವಿಶ್ವಾಸವಿದೆ ಎಂದು ಸಮಾಧಾನ ಪಡಿಸಿದ್ದಾರೆ.</s>
ಪ್ರಕರಣವೊಂದರಲ್ಲಿ ಈತನನ್ನು ಹಿಡಿಯಲು ಮುಂದಾದಾಗ, ಹೈದರಾಬಾದ್ಗೆ ತೆರಳಿ ತಲೆಮರೆಸಿಕೊಂಡಿದ್ದ. ಬಸವರಾಜ್ನನ್ನು ಹೈದರಾಬಾದ್ನಲ್ಲಿ ಬಂಧಿಸಿ, ಬೆಂಗಳೂರಿಗೆ ಕರೆತರಲಾಗಿದೆ ಎಂದೂ ಹೇಳಿದರು. ಆರೋಪಿ ವಿರುದ್ಧ ಬಿಡದಿ, ಕೊಡಿಗೇಹಳ್ಳಿ, ಸಿ.ಕೆ. ಅಚ್ಚುಕಟ್ಟು, ವಿಜಯನಗರ, ಗಿರಿನಗರ, ಕಾಮಾಕ್ಷಿಪಾಳ್ಯ, ವಿಜಯನಗರ, ಹೈದರಾಬಾದ್, ತಮಿಳುನಾಡಿನ ಹೊಸೂರು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.</s>
ಈ ಕುರಿತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೊಸದಿಲ್ಲಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.</s>
ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ತಾಕೋಡೆ ಮನೆಯೊಂದರಲ್ಲಿ ವಿದ್ಯುತ್ ಕಡಿತಗೊಳಿಸಲು ಬಂಧನ ಮೆಸ್ಕಾಂ ಸಿಬ್ಬಂದಿಗೆ ಗ್ರಾಹಕನೊಬ್ಬ ಹಲ್ಲೆ ನಡೆಸಿದ್ದು, ಪ್ರಕರಣ ಸಂಬಂಧಪಟ್ಟಂತೆ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.</s>
ನಾವು ಬ್ಲ್ಯಾಕ್ಮೇಲ್ಗೆ ಬಗ್ಗುವುದಿಲ್ಲ: ಟ್ರಂಪ್ ಗೆ ಫೆಲೆಸ್ತೀನ್ ನ ನಾಯಕಿ ಹನನ್ ತಿರುಗೇಟು</s>
ಉತ್ತರ ಕನ್ನಡಕ್ಕೆ ಪ್ರವಾಸೋದ್ಯಮ ಪ್ರಮುಖ ಆದಾಯ ಮೂಲಗಳಲ್ಲೊಂದು. ಈ ಹಿನ್ನೆಲೆಯಲ್ಲಿ ಹೊರ ಜಿಲ್ಲೆಯಿಂದ ಬರುವ ಪ್ರವಾಸಿಗರ ಜೊತೆ ಕಠಿಣ ಧೋರಣೆ ತಾಳುವುದು ಕಷ್ಟಕರ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ವಹಿಸಲು ಮುಂದಾಗಿದೆ.</s>
ಡಾ.ಶ್ರೀಕಾಂತ ಮೈತ್ರಿ ಮಾತನಾಡಿ, ಸ್ಪುಟ್ನಿಕ್ ಲಸಿಕೆಯು ಉಳಿದ ಎಲ್ಲ ಲಸಿಕೆಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಪಡೆದ 21 ದಿನಗಳಲ್ಲಿ ದೇಹದಲ್ಲಿ ಶೇ. 99ರಷ್ಟು ಪ್ರತಿಕಾಯ ಶಕ್ತಿ ಬಲವರ್ಧನೆ ಆಗುತ್ತದೆ. ಇಡೀ ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ಪ್ರಮಾಣದ ಅಡ್ಡಪರಿಣಾಮಗಳು ವರದಿ ಆಗಿರುವುದು ಸ್ಪುಟ್ನಿಕ್ ಲಸಿಕೆಯ ವಿಶೇಷತೆಯಾಗಿದೆ ಎಂದು ಹೇಳಿದರು.</s>
ಕೂದಲಿನ ಸಾಂದ್ರತೆಯನ್ನು ಹೆಚ್ಚಿಸುವುದು ಸಾಧ್ಯವೇ?</s>
ಮತ್ತೆ ಕಠಿಣ ನಿರ್ಬಂಧದ ಸಾಧ್ಯತೆ</s>
ಇದರ ಜೊತೆಗೆ, ಪೀಠೋಪಕರಣಗಳ ಆಂತರಿಕ ಸ್ಟಫಿಂಗ್ ಅನ್ನು ಅಧ್ಯಯನ ಮಾಡುವುದು ಮುಖ್ಯ. ಎಲ್ಲಾ ಬಾತ್ರೂಮ್ ಬಿಡಿಭಾಗಗಳನ್ನು ಶೇಖರಿಸಿಡಲು ಕಪಾಟಿನಲ್ಲಿ ಮತ್ತು ಪೆಟ್ಟಿಗೆಗಳು ಸಾಕಾಗಿದ್ದರೆ, ಅಂತಹ ಲಾಕರ್ ಅನ್ನು ತೆಗೆದುಕೊಳ್ಳಬೇಕು.</s>
ಉಗಿ ಕೊಠಡಿಗಳಿಗೆ ಗಾಜಿನ ಬಾಗಿಲುಗಳ ಪ್ರಯೋಜನಗಳು</s>
ಮನುಷ್ಯ ಭೂಮಿಗೆ ಬಂದಮೇಲೆ ಬದುಕಲು ಒಂದು ಜೀವಿತದ ಹಕ್ಕನ್ನು ನಾವು ಕೇಳ್ತಿದೀವಿ. ನಮ್ಮ ಉಪಜೀವನಕ್ಕಾಗಿ ಭೂಮಿ ಮತ್ತು ಇರಲಿಕ್ಕೆ ಮನೆ ಕೇಳ್ತಿದೀವಿ. ಸ್ವಾತಂತ್ರ ಹೋರಾಟಗಾರರಿಗೆ ಈ ಕನಸಿತ್ತು ತುಂಡು ಭೂಮಿಗೆ ಜನರು ಹೇಗೆ ಅವಲಂಬಿಸಿದ್ದಾರೆ ಎಂದು. ಅರಣ್ಯದ ಕಟ್ಟಿಗೆ, ದನಕ್ಕೆ ಮೇವು, ಒಲೆಗೆ ಕಟ್ಟಿಗೆ ಇವೆಲ್ಲವೂ ಒಂದಕ್ಕೊಂದು ಸಂಬಂಧವಿದೆ. ಬಡಜನರ ಗೌರವಯುತ ಜೀವನಕ್ಕೆ ನಾವು ಆಸ್ಪದ ಕೊಡಬೇಕು. ಬೇಜಾವಬ್ದಾರಿತನದ ಅನೈತಿಕ ಸಂಪತ್ತಿನ ಶೇಖರಣೆಗೆ ಜನಪ್ರತಿನಿಧಿಗಳು ಮುಂದಾಗಬಾರದು.</s>
ಮಹಾರಾಷ್ಟ್ರ, ಹರ್ಯಾಣ ವಿಧಾನಸಭೆಗೆ ಮತದಾನ ಆರಂಭ</s>
ಕುವೆಂಪುನಗರ ಬಸ್ ಡಿಪೋ: ಮೈಸೂರಿನ ಕುವೆಂಪುನಗರ ಬಸ್ ಡಿಪೋ ಬಳಿ ಪಾಲಿಕೆ ಸದಸ್ಯ ಜಗದೀಶ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬಸ್ಗಳ ಸಂಚಾರಕ್ಕೆ ಅಡ್ಡಿಪಡಿಸಿದರು. ಡಿಪೋ ಗೇಟ್ ಬಳಿ ಕುಳಿತು ಧರಣ ಆರಂಭಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.</s>
ಆಲಿಯಾ ಭಟ್ ಯಾರನ್ನು ಮದುವೆಯಾಗ್ತಾಳೆ ಗೊತ್ತಾ?</s>
ಎರಡೂ ಲಸಿಕೆಗಳು ವಿರುದ್ಧ ರಕ್ಷಿಸುತ್ತವೆ ಮತ್ತು ಸಾಮಾನ್ಯವಾಗಿ ಆರೋಗ್ಯ ವಿಮೆ ಅಥವಾ ಮೆಡಿಕೇರ್ನಿಂದ ಆವರಿಸಲ್ಪಡುತ್ತವೆ. ಆದಾಗ್ಯೂ, ಹಲವು ಕಾರಣಗಳಿಗಾಗಿ ಸಿಂ ಸಿ ಯನ್ನು ಹೆಚ್ಚಿನ ಜನರಿಗೆ ಜೋಸ್ಟಾಕ್ಸ್ಗೆ ಆದ್ಯತೆ ನೀಡುವಂತೆ ಚಿತ್ರಿಸಲಾಗಿದೆ. ಇಲ್ಲಿ ಎರಡು ಲಸಿಕೆಗಳು ಹೇಗೆ ಹೋಲಿಕೆ ಮಾಡುತ್ತವೆ:</s>
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯ ಸರ್ಕಾರದ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ನಕಲು ಮಾಡುತ್ತಿದೆ ಎಂದು ದೂರಿದ್ದಾರೆ.</s>
ಇತ್ತಿಚೆಗೆ ನಡೆದ ತಾಲೂಕಾ ಪಂಚಾಯತ ಸಭೆಯಲ್ಲಿ ತಾ.ಪಂ ಸದಸ್ಯ ವಿಕ್ರಂ ಬಣಗೆ ಅವರು ಹೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದೊಂಕೊಂಡಿದ್ದು ಮತ್ತೊಂದು ಉದಾಹಣೆಯಾಗಿದೆ. ಹಿರೇಕೊಡಿ ಗ್ರಾಮ ಪಂಚಾಯತ ವ್ಯಾಪ್ತಿಯ ರೈತ ಕಲ್ಲೋಳಿ ಎಂಬುವರು ಹೊಸ ಟಿಸಿ ಅಳವಡಿಸಿಕೊಂಡಬೇಕೆಂದು ಹೆಸ್ಕಾಂ ಕಛೇರಿಗೆ ಮನವಿ ಸಲ್ಲಿಸಿ ಸಂಬಂಧ ಪಟ್ಟ ಹಣ ನೀಡಿ ರಸಿದಿ ಪಡೆದರೂ ಇಲ್ಲಿವರೆಗೆ ಆ ರೈತನಿಗೆ ಟಿಸಿ ಅಳವಡಿಸಿಕೊಟ್ಟಿಲ್ಲ ಎಂದರೆ ಇಲ್ಲಿನ ಲಂಚ ಕರ್ಮಕಾಂಡ ಎಷ್ಟು ಎಂಬುದು ಸ್ಪಷ್ಟವಾಗುತ್ತೆ.</s>
ಬೆಂಗಳೂರು: ಸಾರ್ವಜನಿಕರು ಕೊರೊನಾ ವೈರಸ್ ಭೀತಿಯಲ್ಲಿರುವುದರಿಂದ ಅದನ್ನು ಸದುಪಯೋಗಪಡಿಸಿಕೊಂಡು ನಕಲಿ ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಹ್ಯಾಂಡ್ ರಬ್ಗಳನ್ನು ಸಿದ್ಧಪಡಿಸುತ್ತಿದ್ದ ಜಾಲವನ್ನು ಸಿಸಿಬಿ ಭೇದಿಸಿದೆ. ಈ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, 56 ಲಕ್ಷ ರೂ. ಬೆಲೆಬಾಳುವ ನಕಲಿ ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಹ್ಯಾಂಡ್ ರಬ್ಗಳನ್ನು ವಶಪಡಿಸಿಕೊಳ್ಳಲಾಗಿದೆ.</s>
ಆಗಾಗ ಸೋಪ್ ಹಚ್ಚಿ ಕೈಗಳನ್ನು ತೊಳೆಯುತ್ತಿರಿ.</s>
ಬಾಸ್ಕೆಟ್ ಬಾಲ್ ಲೆಜೆಂಡ್ ಕೋಬಿ ಬ್ರ್ಯಾಂಟ್ ಸಾವು, ಅವರ ಅಭಿಮಾನಿಗಳಲ್ಲಿ ತೀವ್ರ ನೋವು ತರಿಸಿದೆ. ಈ ದಿಗ್ಗಜ ಬಾಸ್ಕೆಟ್ಬಾಲ್ ಆಟಗಾರನ ಅನಿರೀಕ್ಷಿತ ಸಾವಿನಿಂದ ಇಡೀ ಜಗತ್ತೇ, ಶೋಕಾಚರಣೆಯಲ್ಲಿ ಮುಳುಗಿದೆ. ಮತ್ತೊಂದೆಡೆ ಕೋಬ್ ಬ್ರ್ಯಾಂಟ್ ಸಾವಿನ ಕುರಿತು ಭವಿಷ್ಯ ನುಡಿದಿದ್ದ ಟ್ವೀಟ್, ಇದೀಗ ಫುಲ್ ವೈರಲ್ ಆಗ್ತಿದೆ.</s>
ಮೇಲಿನ ಮುಖ, ಕುತ್ತಿಗೆ ಮತ್ತು ದೇಹದ ಭಾಗಗಳನ್ನು ಗೋಚರಿಸುವ ತಿರುಳಿರುವ ರಚನೆ</s>
ಪರಿಣಾಮವಾಗಿ ಉಂಟಾಗುವ ದ್ರವ್ಯರಾಶಿಯನ್ನು ಮಿಶ್ರಣ ಮತ್ತು ಸುರಿಯುವ ಹಿಟ್ಟಿನೊಳಗೆ ಚೆನ್ನಾಗಿ ಮಿಶ್ರಮಾಡಿ ಮತ್ತು ಸುರಿಯಿರಿ, ನಂತರ ಅದು ಮತ್ತೊಮ್ಮೆ ಬೆರೆಸಲಾಗುತ್ತದೆ ಮತ್ತು ತರಬೇತಿಗಾಗಿ 30 ನಿಮಿಷಗಳ ಕಾಲ ಬಿಡಲಾಗುತ್ತದೆ. ಬಲವಾದ ಫೋಮ್ಗೆ ಮತ್ತು ಪ್ರೋತ್ಸಾಹಕ ಬಲವಾದ ಫೋಮ್ನಿಂದ ಮೇಲಕ್ಕೆ ಮೇಲಿರುವ ಬೆಳಕಿನ ಚಲನೆಯಿಂದ ನಾವು ಅದರ ಡಫ್ ಅನ್ನು ಪರಿಚಯಿಸುತ್ತೇವೆ, ಅದರ ರಚನೆಯನ್ನು ಹಾನಿ ಮಾಡದಿರಲು ಪ್ರಯತ್ನಿಸುತ್ತೇವೆ. ಸರಿ, ಅಷ್ಟೇ ಅಲ್ಲ, ಬೇಕಿಂಗ್ ಬೀಜಗಳಿಗೆ ಹಿಟ್ಟನ್ನು ತಯಾರಿಸಲಾಗುತ್ತದೆ, ಇದು ಸುವರ್ಣ ಕಂದು ಬಣ್ಣಕ್ಕೆ ಉತ್ತಮವಾದ ಬಿಸಿಮಾಡಿದ ದೋಸೆ ಕಬ್ಬಿಣವನ್ನು ತಯಾರಿಸಲು ಮಾತ್ರ ಉಳಿದಿದೆ.</s>
ಸಲ್ಮಾನ್ ಸಾಹೇಬರು ತಮ್ಮ ಸೂಟ್ಕೇಸ್ ಎತ್ತಿಕೊಂಡು ಚೊಂಯ್ಗುಡುವ ರಸ್ತೆಯಲ್ಲಿ ಮುಂದೆ ಸಾಗುತ್ತಿದ್ದರು. ಉಳಿದ ದಾರಿಹೋಕರಂತೆ ತಾನೂ ಜೇಬಿನಲ್ಲಿದ್ದ ಕರವಸ್ತ್ರವನ್ನು ತಲೆಗೆ ಕಟ್ಟಿಕೊಳ್ಳಬೇಕು, ಬೈರಾಸ್ ತೆಗೆದು ಮುಖಕ್ಕೆ ಸುತ್ತಿಕೊಳ್ಳಬೇಕು ಎಂದು ಅವರಿಗೂ ಅನ್ನಿಸುತ್ತಿತ್ತು. ಆದರೆ ಇದರಿಂದುಂಟಾಗಬಲ್ಲ ಅನನುಕೂಲವನ್ನು ನೆನೆದು ಆ ಗೊಡವೆಗೆ ಹೋಗಲಿಲ್ಲ. ಇವೆಲ್ಲಕ್ಕಿಂತ ಮುಖ್ಯವಾಗಿ ಮಿಶ್ರೀಲಾಲನ ಮನೆ ತಲುಪುವ ಆತುರ ಅವರಲ್ಲಿತ್ತು. ರಿಕ್ಷಾ ಸಿಕ್ಕಿರಲಿಲ್ಲ. ಸ್ಟೇಶನ್ನಿಂದ ಅವನ ಮನೆ ಅಷ್ಟೇನೂ ದೂರದಲ್ಲಿಲ್ಲ ಎಂದು ತಮ್ಮ ಮನಸ್ಸಿಗೆ ತಾವೇ ಸಮಾಧಾನ ಹೇಳಿಕೊಂಡರು. ಅದೂ ಅಲ್ಲದೆ ತುಂಬಾ ಹತ್ತಿರದಲ್ಲಿದೆ ಎಂದು ಹೇಳಿದ್ದೂ ಮಿಶ್ರೀಲಾಲನೇ.</s>
ಅಂಗಗಳು, ಪೃಷ್ಠದ ಮತ್ತು ಕೀಲುಗಳ ಸುತ್ತಲೂ ಸಣ್ಣ ನೇರಳೆ ಕಲೆಗಳ ನೋಟ. ಒತ್ತುವ ಸಂದರ್ಭದಲ್ಲಿ, ರಾಶ್ ಕಣ್ಮರೆಯಾಗುವುದಿಲ್ಲ</s>
ತೆಲಂಗಾಣ ಹೈಕೋರ್ಟ್ನ ಮುಖ್ಯ ನ್ಯಾ. ಹಿಮಾ ಕೋಹ್ಲಿ ಮತ್ತು ಗುಜರಾತ್ ಹೈಕೋರ್ಟ್ನ ಐದನೇ ಹಿರಿಯ ನ್ಯಾ. ಬೆಲಾ ಎಂ.ತ್ರಿವೇದಿ ಸುಪ್ರೀಂಗೆ ಪದೋನ್ನತಿ ಪಡೆದ ಇತರೆ ಇಬ್ಬರು ಮಹಿಳಾ ನ್ಯಾಯಮೂರ್ತಿಗಳು. ಇವರ ಜತೆಗೆ ಕೇರಳ ಹೈಕೋರ್ಟ್ ನ್ಯಾ.ಸಿ.ಟಿ.ರವಿಕುಮಾರ್ ಮತ್ತು ಮದ್ರಾಸ್ ಹೈಕೋರ್ಟ್ ನ್ಯಾ. ಎಂ.ಎ.ಸುಂದ್ರೇಶ್ ಸುಪ್ರೀಂಕೋರ್ಟ್ಗೆ ಪದೋನ್ನತಿ ಪಡೆದಿದ್ದಾರೆ. ಹಿರಿಯ ವಕೀಲ ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್.ನರಸಿಂಹ ಅವರು ಉನ್ನತ ಹುದ್ದೆಗೆ ಅವಕಾಶ ಪಡೆದಿದ್ದಾರೆ.</s>
ಟೊಯೊಟಾ ಆಡಳಿತ ಮಂಡಳಿ ಈಗಾಗಲೇ ಅಸಿಶ್ತಿನ ಹೆಸರಿನಲ್ಲಿ 74 ಮಂದಿ ಕಾರ್ಮಿಕರನ್ನು ಅಮಾನತು ಮಾಡಿದೆ. ಹಾಗಾಗಿ ಕಾರ್ಮಿಕರು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ಮುಂದುವರೆಸಿದ್ದಾರೆ. ಇದರ ಅಂಗವಾಗಿ ಇವತ್ತು ಟೊಯೊಟಾ ಕಾರ್ಮಿಕರು, ಕಾಂಗ್ರೆಸ್ ನಾಯಕರಾದ ಸಂಸದ ಡಿ.ಕೆ.ಸುರೇಶ್, ಮಾಜಿ ಸಚಿವ ಚಲುವರಾಯಸ್ವಾಮಿ, ನರೇಂದ್ರಸ್ವಾಮಿ, ಮಾಜಿ ಶಾಸಕರಾದ ಎಚ್.ಸಿ.ಬಾಲಕೃಷ್ಣ, ರಾಜು ಹಾಗೂ ಕನ್ನಡಪರ ಹಾಗೂ ರೈತ ಮುಖಂಡರು ಸೇರಿದಂತೆ ಕಾರ್ಮಿಕರ ಕುಟುಂಬದವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.</s>
ದ.ರಾ.ಬೇಂದ್ರೆಯವರಿಗೆ ಒಬ್ಬ ತಾಯಿ ಅವಳೇ ಅಂಬಿಕೆ. ಆದರೆ ಕವಿ ಅಂಬಿಕಾತನಯದತ್ತನಿಗೆ ಐದು ತಾಯಂದಿರು. ವಿಶ್ವಮಾತೆ, ಭೂಮಿತಾಯಿ, ಭರತಮಾತೆ, ಕನ್ನಡತಾಯಿ, ಮತ್ತೆ ಜನ್ಮಕೊಟ್ಟ ತಾಯಿ ಅಂಬಿಕೆ. ವಿಶ್ವಮಾತೆಯ ಕೀರ್ತಿ, ಭೂಮಿತಾಯಿಯ ಮೂರ್ತಿ, ಭರತಮಾತೆಯ ಜ್ಯೋತಿ, ಕನ್ನಡ ತಾಯಿಯ ಗಂಧಯುಕ್ತ ಗಾಳಿ, ತಾಯಿ ಅಂಬಿಕೆಯ ಜೀವಂತ ಮಮತೆ ಇವರಾಗಿದ್ದಾರೆ. ಈ ವರಕವಿ ಅಂಬಿಕಾತನಯದತ್ತ ವಿಶ್ವದೊಳನುಡಿಯಾಗಿ ಕನ್ನಡಿಸುತ್ತಿದ್ದಾನೆ, ಅದರ ಫಲ ಕನ್ನಡದ ಅದ್ಭುತ ಕಾವ್ಯ, ಅದೇ ಬೇಂದ್ರೆ ಕಾವ್ಯ.</s>
ಕಮಲ ಹಾಸನ್, ಖ್ಯಾತ ನಟ</s>
ಕಾಮಗಾರಿಗಳು ಕೈಗೊಂಡಿದ್ದರೆ ಗುಣಮಟ್ಟದ ಕಾಮಗಾರಿಗಳು ಅನುಷ್ಠಾನಗೊಳಿಸಬೇಕು ಎಂದು ಸೂಚನೆ ನೀಡಿದರು.</s>
ಈ ವಾಹನದ ಗರಿಷ್ಠ ವೇಗ ನೀರಿನ ಮೇಲೆ 7 ಎಂಪಿಹೆಚ್ ಹಾಗೂ ರಸ್ತೆಯ ಮೇಲೆ 70 ಎಂಪಿಹೆಚ್ ಆಗಿರುವ ಕಾರಣಕ್ಕೆ ಈ ಕಾರಿಗೆ 770 ಎಂದು ಹೆಸರಿಡಲಾಗಿದೆ. ಆಂಫಿಕಾರ್ ಮಾಡೆಲ್ 770 ಕ್ಯಾಬ್ರಿಯೊಲೆಟ್ ಕಾರ್ ಅನ್ನು 1961 ರಿಂದ 1968 ರವರೆಗೆ ಉತ್ಪಾದಿಸಲಾಗುತ್ತಿತ್ತು.</s>
ದೇಶದ ಶೈಲಿಯಲ್ಲಿರುವ ಉಡುಪನ್ನು ಚಿತ್ರವು ಸುಲಭ ಮತ್ತು ಪ್ರಣಯದ ಅರ್ಥವನ್ನು ನೀಡುತ್ತದೆ.</s>
ಬಾಂಬೆ ಹೈ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ ಪೊಲೀಸ್ ಅಧಿಕಾರಿ ಪರಮ್ ಬೀರ್ ಸಿಂಗ್</s>