text
stringlengths
0
182k
ಕನ್ನಡ ಚಲನಚಿತ್ರಗಳು ಶತದಿನೋತ್ಸವದ ಕನ್ನಡ ಚಿತ್ರಗಳು ವರ್ಷ೨೦೦೭ ಕನ್ನಡಚಿತ್ರಗಳು ತಾರಾ ಬಳಗ ದರ್ಶನ್ ಅಭಿನಯಶ್ರೀ ಮೈಕೋ ನಾಗರಾಜ್ ಉಮೇಶ ಪುಂಗ ನಂದ ಕಿಶೋರ್ ದಶಾವರ ಚಂದ್ರು ನಂದೇಶ್ ಜಾನ್ ಬಿ.ಜಯಶ್ರೀ ಪಂಚತಾರಾ ಗಣೇಶ್ ಡಾ.ಸುರೇಶ್ ಶರ್ಮಾ ನಿಜವಾದ 23 ಭೂಗತ ದರೋಡೆಕೋರರು ಧ್ವನಿಮುದ್ರಿಕೆ ನಿರ್ಮಾಣ ಎಕ್ಸಕ್ಯೂಸ್ ಮಿಗಿಂತ ಮೊದಲು ನಿರ್ದೇಶಕರಾಗಿ ಪ್ರೇಮ್ ಅವರ ಚೊಚ್ಚಲ ಚಿತ್ರ ಕರಿಯಾ . ದರೋಡೆಕೋರ ಹಿನ್ನೆಲೆಯನ್ನು ಹೊಂದಿರುವ ನಿರ್ದೇಶಕ ಪ್ರೇಮ್ ಮತ್ತು ನಿರ್ಮಾಪಕ ಆನೇಕಲ್ ಬಾಲರಾಜ್ ಚಿತ್ರದಲ್ಲಿ ನಟಿಸಲು 23 ಕ್ರಿಮಿನಲ್ಗಳಿಗೆ ಜಾಮೀನು ನೀಡಿದರು . ಬಾಲರಾಜ್ ಮಹಿಳಾ ದರೋಡೆಕೋರ ಮಾರಿ ಮುತ್ತು ಅವರನ್ನು ಚಿತ್ರದಲ್ಲಿ ನಟಿಸುವಂತೆ ಮನವೊಲಿಸಲು ಪ್ರಯತ್ನಿಸಿದರು . ಆದಾಗ್ಯೂ , ಕೌನ್ಸಿಲರ್ ಆಗಿದ್ದ ಮಾರಿ ಮುತ್ತು ಅವರು ಈ ಪ್ರಸ್ತಾಪವನ್ನು ನಿರಾಕರಿಸಿದರು ಮತ್ತು ಕರಿಯಾ ಚಲನಚಿತ್ರವು ಸಮಾಜದಲ್ಲಿ ಹಿಂಸಾಚಾರವನ್ನು ಸೃಷ್ಟಿಸುತ್ತದೆ ಮತ್ತು ಅದು ಅವರ ಖ್ಯಾತಿಯನ್ನು ಹಾಳುಮಾಡುತ್ತದೆ ಎಂದು ಭಯಪಡುತ್ತದೆ . ಈ ರೌಡಿಗಳನ್ನು ಒಳಗೊಂಡ ಕೆಲವು ದೃಶ್ಯಗಳನ್ನು ಅವರು ಹಿಂದೆ ಕೊಂದ ಅಥವಾ ತಮ್ಮ ಗುರಿಗಳ ಮೇಲೆ ದಾಳಿ ಮಾಡಿದ ಅದೇ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ . ಕ್ರೈಮ್ ಚಿತ್ರದ ಮೂಲಕ ಮೆಜೆಸ್ಟಿಕ್ ಮೂಲಕ ಚೊಚ್ಚಲ ಪ್ರವೇಶ ಮಾಡಿದ ದರ್ಶನ್ ನಾಮಕರಣದ ಪಾತ್ರದಲ್ಲಿ ನಟಿಸಲು ಆಯ್ಕೆಯಾದರು, ನಟಿ ಅನುರಾಧಾ ಅವರ ಪುತ್ರಿ ಅಭಿರಾಮಿ ನಾಯಕಿಯಾಗಿ ನಟಿಸಲು ಸಹಿ ಹಾಕಿದರು. ಗುರುಕಿರಣ್ ಚಿತ್ರದ ಧ್ವನಿಸುರುಳಿ ಮತ್ತು ಸಂಗೀತ ಸಂಯೋಜನೆ ಮಾಡಿದ್ದಾರೆ . ಛಾಯಾಗ್ರಹಣವನ್ನು ಸೀನು ನಿರ್ವಹಿಸಿದ್ದಾರೆ . ಬಿಡುಗಡೆ ಕರಿಯಾ ಅವರು ಬೆಂಗಳೂರಿನಲ್ಲಿರುವ ಸೆನ್ಸಾರ್ ಮಂಡಳಿಯ ಪ್ರಾದೇಶಿಕ ಕಚೇರಿಯಿಂದ 30 ಡಿಸೆಂಬರ್ 2002 ರ ಪ್ರಮಾಣಪತ್ರದೊಂದಿಗೆ ಎ ಪ್ರಮಾಣಪತ್ರವನ್ನು ಪಡೆದರು . ಚಲನಚಿತ್ರವು 3 ಜನವರಿ 2003 ರಂದು ಬಿಡುಗಡೆಯಾಯಿತು . ವಿವಾದ ಚಿತ್ರದಲ್ಲಿ ಅವಳು ನನಗೆ ಸಿಗದಿದ್ದರೇ ಆಸಿಡ್ ಹಾಕುವೆ ಹಾಡೊಂದಿದೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಮಹಿಳೆಯರ ಮೇಲಿನ ಅಪರಾಧಗಳನ್ನು ಪ್ರೋತ್ಸಾಹಿಸುವ ಚಲನಚಿತ್ರಗಳನ್ನು ನಿಷೇಧಿಸುವಂತೆ ಸೆನ್ಸಾರ್ ಮಂಡಳಿಗೆ ಮನವಿ ಮಾಡಿದ್ದಾರೆ . ಉತ್ತರಭಾಗ 2003 ರ ಚಲನಚಿತ್ರಕ್ಕೆ ಸಂಬಂಧಿಸದ ಕರಿಯಾ 2 ನ ಮುಂದುವರಿದ ಭಾಗವು 2017 ರಲ್ಲಿ ಬಿಡುಗಡೆಯಾಯಿತು . ಆದರೆ, ಎರಡೂ ಚಿತ್ರಗಳನ್ನು ಆನೇಕಲ್ ಬಾಲರಾಜು ನಿರ್ಮಿಸಿದ್ದಾರೆ . ಉಲ್ಲೇಖಗಳು
ಸುನಿಲ್ ರಾವ್ ನಾಯಕನಾಗಿ, ರಮ್ಯ ನಾಯಕಿಯಾಗಿ ಅಭಿನಯಿಸಿದ ಪ್ರೇಂ ನಿರ್ದೇಶನದ ಕನ್ನಡ ಚಲನಚಿತ್ರ ಎಕ್ಸ್ಕ್ಯೂಸ್ ಮಿ. ಕನ್ನಡ ಚಲನಚಿತ್ರಗಳು ಶತದಿನೋತ್ಸವದ ಕನ್ನಡ ಚಿತ್ರಗಳು ರಜತಮಹೋತ್ಸವದ ಕನ್ನಡ ಚಿತ್ರಗಳು
ಉಪೇಂದ್ರ (ಸೂಪರ್ ಸ್ಟಾರ್, ರಿಯಲ್ ಸ್ಟಾರ್, ಬುದ್ದಿವಂತ, ಅಭಿಮಾನಿಗಳ ಚಕ್ರವರ್ತಿ, ದೇವರು) ನಿರ್ದೇಶಕ ಹಾಗೂ ನಟ. ಇವರು ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಕುಂದಾಪುರದ ಸಮೀಪದಲ್ಲಿರುವ ಕೋಟೇಶ್ವರದಲ್ಲಿ ಜನಿಸಿದರು. ಇವರು ತಮ್ಮ ಮತ್ತು ಇತರರ ಚಿತ್ರಗಳಿಗೆ ಹಾಡುಗಳನ್ನು ರಚಿಸಿದ್ದಾರೆ. ೧೯೯೨ರಲ್ಲಿ ಬಿಡುಗಡೆಯಾದ ತರ್ಲೆ ನನ್ಮಗ ಚಿತ್ರದ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ. ಇದಕ್ಕೂ ಮು೦ಚೆ ಕಾಶೀನಾಥ್ ಜತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ನಾಯಕನಟರಾಗಿ ಇವರ ಮೊದಲ ಚಿತ್ರ ೧೯೯೮ರಲ್ಲಿ ಬಿಡುಗಡೆಯಾದ ಏ. ಇವರ ಬಾಳಸಂಗಾತಿ ಪ್ರಿಯಾಂಕ ಉಪೇಂದ್ರ. ಇವರಿಗೆ ಇಬ್ಬರು ಮಕ್ಕಳಿದ್ದಾರೆ.ಬಸವನಗುಡಿಯ ಎ.ಪಿ.ಎಸ್ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವಾಗ ನಿರ್ದೇಶನದ ಗೀಳನ್ನು ಅಂಟಿಸಿಕೊಂಡ ಉಪ್ಪಿ ಕನ್ನಡದ ಹೆಸರಾಂತ ನಿರ್ದೇಶಕ ಕಾಶಿನಾಥ ಅವರ ಬಳಿ ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿದರು. 1992ರಲ್ಲಿ ತೆರೆಗೆ ಬಂದ ತರ್ಲೆನನ್ಮಗ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದ ಉಪೇಂದ್ರ ಮುಂದೆ 1993ರಲ್ಲಿ ಶ್ ಎಂಬ ಹಾರರ್ ಚಿತ್ರ ನಿರ್ದೇಶಿಸಿದರು. 1995ರಲ್ಲಿ ಬಿಡುಗಡೆಯಾದ ಶಿವರಾಜಕುಮಾರ್ ಅಭಿನಯದ ಓಂ ಚಿತ್ರ ಇಡೀ ಭಾರತ ಚಿತ್ರರಂಗದಲ್ಲಿಯೇ ಹೊಸ ಸಂಚಲನ ಸೃಷ್ಟಿಸಿತು. ಈ ಚಿತ್ರದಲ್ಲಿ ನಿಜವಾದ ರೌಡಿಗಳು ತಮ್ಮ ಪಾತ್ರಗಳಲ್ಲಿ ಸ್ವತಃ ತಾವೇ ಅಭಿನಯಿಸಿರುವುದು ವಿಶೇಷ. ನಂತರ ಆಪರೇಷನ್ ಅಂತ, ಸ್ವಸ್ತಿಕ್ ಚಿತ್ರಗಳನ್ನು ನಿರ್ದೇಶಿಸಿದರು. 1998ರಲ್ಲಿ ತೆರೆಗೆ ಬಂದ ಎ ಚಿತ್ರವನ್ನು ನಿರ್ದೇಶಿಸಿ ಸ್ವತಃ ತಾವೇ ನಟಿಸಿ, ನಾಯಕನಾಗಿಯೂ ಕನ್ನಡ ಚಿತ್ರರಂಗದಲ್ಲಿ ಪರಿಚಿತರಾದರು. ಮುಂದೆ ತೆರೆಗೆ ಬಂದ ಉಪೇಂದ್ರ ಚಿತ್ರವು ಹಲವಾರು ದಾಖಲೆಗಳನ್ನು ಬರೆಯಿತು. ಇವೆರಡು ಚಿತ್ರಗಳು ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು ಚಿತ್ರರಂಗದಲ್ಲಿಯೂ ಶತದಿನ ಪೂರೈಸಿದವು. ಇಲ್ಲಿಂದ ಮುಂದೆ 10 ವರ್ಷಗಳ ಕಾಲ ನಿರ್ದೇಶನವನ್ನು ಬದಿಗಿಟ್ಟ ಉಪ್ಪಿ, ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದರು. ಮುಂದೆ ಇವರು 2010ರಲ್ಲಿ ನಿರ್ದೇಶಿಸಿದ ಸೂಪರ್ ಮತ್ತು 2015ರಲ್ಲಿ ನಿರ್ದೇಶಿಸಿದ ಉಪ್ಪಿ 2 ಚಿತ್ರಗಳು ಶತದಿನ ಪೂರೈಸಿದವು. 2003ರಲ್ಲಿ ಉಪೇಂದ್ರ ಖ್ಯಾತ ನಟಿ ಪ್ರಿಯಾಂಕ ಅವರನ್ನು ಕೈಹಿಡಿದರು. 2018 ಮಾರ್ಚ್ ನಲ್ಲಿ ಪ್ರಜಾಕೀಯ ಪಕ್ಷ ಸ್ಥಾಪಿಸಿ ರಾಜಕೀಯವಾಗಿಯೂ ಸಕ್ರಿಯವಾಗಿದ್ದಾರೆ. ತಮ್ಮ ವಿಶಿಷ್ಟ ಆಲೋಚನಾ ಲಹರಿಗಳು, ವಿಭಿನ್ನ ನಟನಾ ಶೈಲಿಗಳಿಂದ ಭಿನ್ನವಾಗಿ ನಿಲ್ಲುವ ಇವರು ಕನ್ನಡ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ ಉಪೇಂದ್ರ ನಿರ್ದೇಶನದ ಕನ್ನಡ ಚಿತ್ರಗಳು ಉಪೇಂದ್ರ ಅಭಿನಯಿಸಿರುವ ಕನ್ನಡ ಚಿತ್ರಗಳು ಪ್ರಶಸ್ತಿ ಪುರಸ್ಕಾರಗಳು ಸುವರ್ಣ ಪ್ರಶಸ್ತಿ ೨೦೦೮ ಅನಾಥರು ಚಿತ್ರಕ್ಕೆ
ವೀರಾಸ್ವಾಮಿ ರವಿಚಂದ್ರನ್ ಕನ್ನಡ ಚಿತ್ರರಂಗದಲ್ಲಿ ವಿ.ರವಿಚಂದ್ರನ್ ಎನ್ನುವ ಹೆಸರಿನಲ್ಲಿ ಪ್ರಸಿದ್ಧರು. ಕನ್ನಡ ಚಿತ್ರರಂಗಕ್ಕೆ ಶ್ರೀಮಂತಿಕೆ ಮತ್ತು ಬೆಳ್ಳಿಪರದೆಗೆ ಹೊಸರಂಗು ತಂದ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಅನೇಕ ರೀಮೇಕ್ ಸಿನಿಮಾಗಳನ್ನು ಕನ್ನಡಕ್ಕೆ ತಂದರೂ ಮೂಲಸಿನಿಮಾದ ಛಾಯೆ ಇರದ ತಮ್ಮದೇ ಆದ ಶೈಲಿಯಲ್ಲಿ ಕನ್ನಡ ಸೊಗಡಿನ ಸೂಪರ್ ಹಿಟ್ ಗಳನ್ನು ನೀಡಿದ್ದಾರೆ. ಪರಿವಾರ ರವಿಚಂದ್ರನ್, ಕನ್ನಡದ ಖ್ಯಾತ ನಿರ್ಮಾಪಕರಾದ ಎನ್.ವೀರಾಸ್ವಾಮಿಯವರು ಮಗ. ತಮ್ಮ ತಂದೆ ಸ್ಥಾಪಿಸಿದ ಈಶ್ವರಿ ಸಂಸ್ಥೆಯ ಮೂಲಕ ಅನೇಕ ಉತ್ತಮ ಚಿತ್ರಗಳನ್ನು ನಿರ್ಮಿಸಿದ್ದಾರೆ. ರವಿಚಂದ್ರನ್ ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ ಸಿಪಾಯಿ ಚಿತ್ರದೊಡನೆ ಈಶ್ವರಿ ಸಂಸ್ಥೆ ತನ್ನ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡಿತು. ನಿರ್ದೇಶನ ರವಿಚಂದ್ರನ್ ಒಬ್ಬ ಬಹುಮುಖ ಪ್ರತಿಭೆಯ ನಟ, ಚಿತ್ರ ನಿರ್ಮಾಣ, ನಿರ್ದೇಶನ, ಸಾಹಿತ್ಯ, ಸಂಗೀತ, ಸಂಕಲನ, ಸಂಭಾಷಣೆ ಮುಂತಾದ ಚಿತ್ರರಂಗದ ವಿವಿಧ ಪ್ರಕಾರಗಳಲ್ಲಿ ಕೆಲಸ ಮಾಡಿದ್ದಾರೆ. ತಾಂತ್ರಿಕತೆಯ ಪರಿಪೂರ್ಣ ಜ್ಞಾನ ಹೊಂದಿರುವ ಹಾಗೂ ತಂತ್ರಜ್ಞಾನದ ವಿನೂತನ ರೀತಿಯ ಪ್ರಯೋಗ ಇವರ ನಿರ್ದೇಶನದ ಚಿತ್ರಗಳಲ್ಲಿ ಕಾಣಬಹುದು. ಇವರ ಚಿತ್ರಗಳಲ್ಲಿ ಕಂಡುಬರುವ ಪ್ರಮುಖ ಅಂಶವೆಂದರೆ ಮನಸೂರೆ ಮಾಡುವ ಸಂಗೀತ, ರಂಗುರಂಗಿನ ಸೆಟ್ಟುಗಳು, ಪ್ರತಿಯೊಂದು ಫ಼್ರೇಮಿನಲ್ಲೂ ಹೊಸತನ. ಆಯಾ ಕಾಲಗಟ್ಟಕ್ಕೆ ಅಧುನಿಕ ತಂತ್ರಜ್ಞಾನವನ್ನು ಕನ್ನಡಕ್ಕೆ ತಂದ ಹಿರಿಮೆ ರವಿಚಂದ್ರನ್ ಅವರದು. ವಿದೇಶಗಳಲ್ಲಿ ಹಾಡುಗಳ ಚಿತ್ರಿಕರಣ ಕಾಲ ಪ್ರಾರಂಭವಾದ ಮೇಲೂ ರವಿಚಂದ್ರನ್ ಹಳ್ಳಿಸೊಗಡಿನ ರಾಮಾಚಾರಿ ಸಿನಿಮಾದ ಮೂಲಕ ಹೆಸರಾದರು. ಯಶಸ್ವಿ ಚಿತ್ರಗಳು ಪ್ರೇಮಲೋಕ, ರಣಧೀರ, ಶಾಂತಿ ಕ್ರಾಂತಿ, ಯುಗಪುರುಷ, ಯುದ್ದಕಾಂಡ, ರಾಮಾಚಾರಿ, ಅಂಜದ ಗಂಡು, ಸ್ವಾಭಿಮಾನ, ನಾನು ನನ್ನ ಹೆಂಡ್ತಿ, ಮನೆದೇವ್ರು, ಗೋಪಿಕೃಷ್ಣ, ಬಣ್ಣದಗೆಜ್ಜೆ, ಶ್ರೀರಾಮಚಂದ್ರ, ಆಣ್ಣಯ್ಯ, ಗಡಿಬಿಡಿ ಗಂಡ, ರಸಿಕ, ಕಲಾವಿದ, ಸಿಪಾಯಿ, ಪುಟ್ನಂಜ, ಕನಸುಗಾರ, ಮಾಂಗಲ್ಯಂ ತಂತುನಾನೇನ, ಪ್ರೀತ್ಸೋದ್ ತಪ್ಪಾ, ಯಾರೇ ನೀನು ಚೆಲುವೆ, ನಾನು ನನ್ನ ಹೆಂಡ್ತೀರು, ಓ ನನ್ನ ನಲ್ಲೆ, ಏಕಾಂಗಿ, ಮಲ್ಲ, ರಾಮಕೃಷ್ಣ, ಕೋದಂಡರಾಮ, ಅಹಂ ಪ್ರೇಮಾಸ್ಮಿ, ಸಾಹುಕಾರ, ಹಠವಾದಿ, ಹೂ, ಅಪೂರ್ವ, ಮುಂತಾದ ಜನಪ್ರಿಯ ಚಿತ್ರಗಳನ್ನು ಇವರು ಚಂದನವನಕ್ಕೆ ನೀಡಿದ್ದಾರೆ. ರಾಮಾಚಾರಿ ಚಿತ್ರವು ಆಗಿನ ಕಾಲದಲ್ಲೇ ಕೆನಡಾದ ಓಂಟಾರಿಯೋ ಫ಼್ಹಿಲಂ ಫ಼ೆಸ್ಟಿನಲ್ಲಿ ಪ್ರದರ್ಶನಗೊಂಡಿದ್ದು ಗಮನಾರ್ಹ ಸಂಗತಿ. ರೀಮೇಕ್ ಅಲ್ಲ ರವಿಮೇಕ್ ರೀಮೇಕ್ ಹೇಗೆ ಮಾಡಬೇಕು ಎಂಬುದಕ್ಕೆ ರವಿಚಂದ್ರನ್ ಸಿನಿಮಾಗಳು ನಿಜಕ್ಕೂ ಮಾದರಿಯಾಗಿ ನಿಲ್ಲುತ್ತವೆ. ಹಿಂದಿಯ ಹೀರೋ ಸಿನಿಮಾ ರವಿಚಂದ್ರನ್ ಎಂಬ ಅಪ್ಪಟ ಕಲಾವಿದನ ಕುಂಚದಲ್ಲಿ ರಣಧೀರನಾದಾಗ, ಮೂಲನಿರ್ದೇಶಕರಾದ ಸುಭಾಷ್ ಗಾಯ್ ಅವರೇ ರವಿಚಂದ್ರನ್ ಅವರ ನಿರ್ದೇಶನವನ್ನು ಕೊಂಡಾಡಿದ್ದರು. ಅನ್ಯಭಾಷೆಯ ಸಿನಿಮಾಗಳನ್ನು ಯಥಾವತ್ ಭಟ್ಟಿ ಇಳಿಸದೆ ತಮ್ಮದೇ ಶೈಲಿಯಲ್ಲಿ ಕನ್ನಡೀಕರಣಗೊಳಿಸುವಲ್ಲಿ ಇವರು ನಿಸ್ಸೀಮರು. ಹಾಗಾಗಿ, ರೀಮೇಕ್ ಗಳ ನಡುವೆ ರವಿಮೇಕ್ ಗಳು ವಿಶಿಷ್ಟವಾಗಿ ಎದ್ದುನಿಲ್ಲುತ್ತವೆ. ಕೊಡುಗೆಗಳು ಕನ್ನಡ ಚಿತ್ರರಂಗದ ದೇಸಿದೊರೆ, ನಾದಬ್ರಹ್ಮ ಹಂಸಲೇಖರವರನ್ನು ತಮ್ಮ ಪ್ರೇಮಲೋಕ ಸಿನಿಮಾದ ಮೂಲಕ ಸಂಗೀತ ನಿರ್ದೇಶಕರಾಗಿ ಪರಿಚಯಿಸಿ ಕನ್ನಡ ಗೀತಪರಂಪರೆಯಲ್ಲೊಂದು ಹೊಸ ಸಂಚಲನ ಮೂಡಿಸಿದರು. ಸುಮಾರು ಎರಡು ದಶಕಗಳ ಕಾಲ ರವಿಚಂದ್ರನ್ಹಂಸಲೇಖ ಜೋಡಿ ಚಂದನವನದಲ್ಲಿ ಅತಿ ಯಶಸ್ವಿ ಜೋಡಿಯೆನಿಸಿಕೊಂಡಿತು.ಪ್ರೇಮಲೋಕ, ರಣಧೀರ ಸಿನಿಮಾಗಳ ಆಡಿಯೋ ಕ್ಯಾಸೆಟ್ಟುಗಳು ದಾಖಲೆಯ ಮಾರಾಟ ಕಂಡು ಇತಿಹಾಸ ಬರೆದಿವೆ. ಇಂದಿಗೂ ಎಫ಼್.ಎಮ್ ಹಾಗೂ ಟಿ.ವಿ. ವಾಹಿನಿಗಳಲ್ಲಿ ಇವರ ಹಾಡುಗಳದ್ದೆ ಸಿಂಹಪಾಲು. ಜೂಹಿ ಚಾವ್ಲಾ, ಖುಷ್ಬು, ಮೂನ್ ಮೂನ್ ಸೇನ್, ಮಧುಬಾಲ, ಮೀನಾ, ರೋಜಾ, ಭಾನುಪ್ರಿಯ, ಶಿಲ್ಪಾಶೆಟ್ಟಿ ಮುಂತಾದ ಹೆಸರಾಂತ ಪರಭಾಷಾ ನಾಯಕಿಯರನ್ನು ಕನ್ನಡಕ್ಕೆ ತಂದಿದ್ದು ವಿ.ರವಿಚಂದ್ರನ್. ಪ್ರೇಮಕಥೆಗಳ ಬಹುತೇಕ ಕೋನಗಳನ್ನು ಮುಟ್ಟಿ, ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡ ಹೆಗ್ಗಳಿಕೆ ಇವರದು. ಕನ್ನಡಕ್ಕೆ ದೊಡ್ಡ ಬಜೆಟ್ ಸಿನಿಮಾಗಳ ಮೂಲಕ ದೃಶ್ಯಶ್ರೀಮಂತಿಕೆಯನ್ನು ತಂದು ಕೊಟ್ಟವರು ರವಿಚಂದ್ರನ್. ಹಂಸಲೇಖ ಮಾತ್ರವಲ್ಲದೆ ಎಲ್.ಎನ್.ಶಾಸ್ತ್ರಿ, ಸುಮಾ ಶಾಸ್ತ್ರಿ, ಹರಿಕೃಷ್ಣ, ಗೌತಮ್ ಶ್ರೀವತ್ಸ ಮುಂತಾದ ಸಂಗೀತ ನಿರ್ದೇಶಕರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಜಿ ಎಸ್ ವಿ ಸೀತಾರಾಂ ಅವರು ಇವರ ಬಹುಕಾಲದ ಛಾಯಾಗ್ರಾಹಕರಾಗಿದ್ದಾರೆ. ಚಿತ್ರ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ನಾನು ನನ್ನ ಹೆಂಡ್ತೀರು ಚಿತ್ರದ ಮೂಲಕ ರವಿಚಂದ್ರನ್ ಸಂಗೀತ ನಿರ್ದೇಶಕರಾದರು. ನಂತರ ತೆರೆಕಂಡ ಓ ನನ್ನ ನಲ್ಲೆ, ಏಕಾಂಗಿ, ಮಲ್ಲ, ಹಠವಾದಿ, ಅಪೂರ್ವ ಸೇರಿದಂತೆ ಹದಿನೈದಕ್ಕು ಹೆಚ್ಚು ಚಿತ್ರಗಳಿಗೆ ಇವರ ಸಂಗೀತ ನಿರ್ದೇಶನವಿದೆ. ಚೋರ ಚಿತ್ತಚೋರ ಚಿತ್ರದ ದಿಲ್ಲು ದಿಲ್ಲು ಸೇರಿದಾಗ ಹಾಡು ಇವರು ಬರೆದ ಮೊದಲ ಸಾಹಿತ್ಯ. ರವಿಚಂದ್ರನ್ ಚಿತ್ರಗಳು ಹೆಬ್ಬುಲಿ ಉಲ್ಲೇಖಗಳು ಚಲನಚಿತ್ರ ನಟರು ೧೯೬೧ ಜನನ ಕನ್ನಡ ಚಿತ್ರರಂಗದ ನಟರು ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು
ಉಪೇಂದ್ರ, ೧೯೯೯ರಲ್ಲಿ ತೆರೆ ಕಂಡ ಚಿತ್ರ. ಇದರಲ್ಲಿ ಉಪೇಂದ್ರ, ಪ್ರೇಮಾ, ರವೀನಾ ಟಂಡನ್, ದಾಮಿನಿ ನಟಿಸಿದ್ದಾರೆ. ಮನುಷ್ಯನ ಭಾವನೆಗಳನ್ನು ನಾಯಕ ಹಾಗು ೩ ನಾಯಕಿಯರ ನಡುವಿನ ಸಂಬಂಧದ ಮೂಲಕ ತೋರಿಸುತ್ತದೆ. ಈ ಚಿತ್ರಕ್ಕೆ ೧೯೯೯ರ ಫಿಲ್ಮ್ ಫ಼ೆರ್ ಅತ್ಯುತ್ತಮ ಚಿತ್ರ ಪ್ರಶಸ್ತಿ ಹಾಗು ೧೯೯೯ರ ಫಿಲ್ಮ್ ಫೆರ್ ಅತ್ತ್ಯುತ್ತಮ ನಿರ್ದೇಶಕ ಪ್ರಶಸ್ತಿ ದೊರಕಿದೆ. ಸಾಹಿತ್ಯ ಉಪೇಂದ್ರ ಈ ಚಿತ್ರ ತೆಲುಗಿಗೆ ಡಬ್ ಆಗಿ ಅಲ್ಲಿಯೂ ಸಹ ಯಶಸ್ವಿ ಆಯಿತು. ನಟರ ತಂಡ ಉಪೇಂದ್ರ, ರವೀನಾ ಟಂಡನ್, ಪ್ರೇಮಾ, ಧಾಮಿನಿ (ಎಚ್ಪಿ), ಸರೊಜಮ್ಮ, ರವಿ ತೇಜಾ, ಗುರುಕಿರಣ್, ವಿ ಮನೋಹರ್, ಅರುಣ್ಗೊವಿಲ್, ರಶ್ಮಿ, ದೀಪ್ತಿ, ಭವಾನಿ, ಪುಷ್ಪಾ ಸ್ವಾಮಿ, ಗೀತಾ ಸುರತ್ಕಲ್, ಪ್ರತಿಮಾ ರಾವ್, ಲಿನ್ಸೀ, ಪ್ರೀತಿ, ದೀಪಾ, ಪೂಜಾ, ಜ್ಯೋತಿ, ಸುಧಾ, ಶ್ವೇತಾ, ಶೈಲಾ ಭೂಪಯ್ಯ ಸುಮ, ನಿಶಾ, ಬೇಬಿ ಮಮತ ಶ್ರೀ, ಮಾಸ್ಟರ್ ವಿನಯ್, ಮಾಸ್ಟರ್ ಚೇತನ್, ಮಾಸ್ಟರ್ ವಿನೋದ್, ಹರೀಶ್ ರೈ, ರೇಮಂಡ ಸೊಜಾ, ಜೋಶಿ ಎಮ್ಎ, ಸಾಮ್ರಾಟ್ ರಾಜಾರಾಮ್, ಡಾ ಅಗ್ನಿ ದಿವ್ಯ, ತುಮಕೂರು ಮೋಹನ್, ನಾಗೇಂದ್ರ ಪ್ರಸಾದ್, ರಾಮದಾಸ್, ಮಲ್ಲಿಕಾರ್ಜುನ, ರಾಜಣ್ಣ, ರಾಜೇಂದ್ರ ಯಜಮಾನ್, ಆನಂದ್, ಶ್ರೀರಾಜ್ ಕೊತಾರಿ, ನಾಗ ಭೂಷಣ, ಗುರುಪ್ರಸಾದ್, ಬಿ ಸುರೇಶ್ ಬಾಬು ರಾಮ್ ಕುಮಾರ್, ಸುಧೀಂದ್ರ, ಚಂದ್ರಪ್ರಕಾಶ್, ತಿಮ್ಮೆಗೌಡ, ಪುಟ್ಟ ರಾಜು, ಶಂಕರಪ್ಪ ಮಂಜುನಾಥ ಜೆಎಲ್, ಲೋಕನಾಥ್, ಮುತ್ತು, ಅಪ್ಪು, ಕೋರಮಂಗಲ ಪ್ರಕಾಶ್, ವಿಜಯ ಸಾರಥಿ, ಶಂಕರ್ ಭಟ್ , ಪ್ರಣವ ಮೂರ್ತಿ ಕನ್ನಡ ಚಲನಚಿತ್ರಗಳು ಶತದಿನೋತ್ಸವದ ಕನ್ನಡ ಚಿತ್ರಗಳು ಕನ್ನಡ ಸಿನೆಮಾ ವರ್ಷ೧೯೯೯ ಕನ್ನಡಚಿತ್ರಗಳು
ರಣಧೀರ ೧೯೮೮ ರಲ್ಲಿ ಬಿಡುಗಡೆಯಾದ ಚಿತ್ರ. ರವಿಚಂದ್ರನ್ ನಾಯಕನಟನಾಗಿ ಖುಷ್ಬೂ ನಾಯಕಿಯಾಗಿ ಅಭಿನಯಿಸಿರುವ ಚಿತ್ರ. ಹಂಸಲೇಖ ಚಿತ್ರಕಥೆ, ಸಂಭಾಷಣೆ, ಹಾಡುಗಳನ್ನು ಬರೆದು ಸಂಗೀತವನ್ನೂ ಸಂಯೋಜಿಸಿದ ಈ ಚಿತ್ರದಲ್ಲಿ ಲೋಕೇಶ್, ಮಾ.ಮಂಜುನಾಥ್, ಉಮಾಶ್ರೀ, ಅನಂತನಾಗ್, ಜೈಜಗದೀಶ್, ಸುಧೀರ್, ಶನಿ ಮಹಾದೇವಪ್ಪ, ಜಗ್ಗೇಶ್ ನಟಿಸಿದ್ದಾರೆ. ಅನಂತನಾಗ್, ಮಾ.ಮಂಜುನಾಥ್ ಮತ್ತು ಉಮಾಶ್ರೀಗಳ ಹಾಸ್ಯಭರಿತ ದೃಶ್ಯಗಳು, ಸಂಗೀತ ಮತ್ತು ಆರ್.ಮಧುಸೂದನ್ರ ಚಮತ್ಕಾರಿಕ ಛಾಯಾಗ್ರಹಣ ಇವುಗಳು ಈ ಚಿತ್ರದ ಜನಪ್ರಿಯತೆಗೆ ಕಾರಣವಾದವು. ಕಥೆ ಭೂಗತ ದೊರೆ ಭಾಷಾ ತನ್ನ ಬಂಧನಕ್ಕೆ ಕಾರಣನಾದ ಐ.ಜಿ.ಪಿ ಜಗನ್ನಾಥ್, ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯದಂತೆ, ತನ್ನ ಶಿಷ್ಯ ರೌಡಿ ರಣಧೀರನಿಗೆ ಜೈಲಿನಿಂದಲೇ ಸಂದೇಶ ರವಾನಿಸುತ್ತಾನೆ. ರಣಧೀರ ಜಗನ್ನಾಥ್ ಮನೆಗೆ ತೆರಳಿ ಎಚ್ಚರಿಸಲು ಯತ್ನಿಸಿದಾಗ, ಜಗನ್ನಾಥ್ ನಿರಾಕರಿಸುತ್ತಾನೆ. ರಣಧೀರ ಜಗನ್ನಾಥ್ ಮಗಳು ರಾಧಾಳ ಭಾವಚಿತ್ರ ಕಂಡು, ಆಕೆಯನ್ನು ತನ್ನ ೪ ಮಂದಿ ಸಹಚರರ ಸಹಾಯದಿಂದ, ಕಾಲೇಜು ಪ್ರವಾಸದಿಂದ ಅಪಹರಿಸುತ್ತಾನೆ. ತಾವೆಲ್ಲರೂ ಮಫ಼್ತಿ ಪೋಲೀಸರೆಂದೂ, ರಾಧಾಳನ್ನು ಅಪಾಯದಿಂದ ರಕ್ಷಿಸಲು ತಮ್ಮೊಡನೆ ಚಾರ್ಮುಡಿ ಬೆಟ್ಟದ ತಪ್ಪಲಿನಲ್ಲಿ ಮರೆಯಲ್ಲಿ ಇಟ್ಟಿರುವುದೆಂದು ಸುಳ್ಳು ಹೇಳುತ್ತಾನೆ. ರಾಧಾಳ ಅಣ್ಣ ಇನ್ಸ್ ಪೆಕ್ಟರ್ ಆನಂದ್, ರಣಧೀರನ ಎಚ್ಚರಿಕೆಯ ಪ್ರಕಾರ ರಣಧೀರ ಮಫ಼್ತಿ ಪೋಲೀಸ್ ಎಂದು ಕ್ಯಾಸೆಟ್ ನಲ್ಲಿ ರಾಧಾಳಿಗೆ ಸಂದೇಶ ಕಳಿಸುತ್ತಾನೆ ಮತ್ತು ಹುಡುಕಲು ಸಂಫೂರ್ಣ ಪೋಲೀಸ್ ಪಡೆಯೊಂದಿಗೆ ಹುಡುಕಲು ತೊಡಗುತ್ತಾನೆ. ರಣಧೀರ ಒಬ್ಬ ಪಾತಕಿ ಎಂದು ರಾಧಾಳಿಗೆ ಅರ್ಥವಾಗುವ ಹೊತ್ತಿಗೆ ಅವರಿಬ್ಬರ ಮಧ್ಯೆ ಪ್ರೀತಿ ಅರಳುತ್ತದೆ. ರಾಧಾಳ ಪ್ರೀತಿಗಾಗಿ, ರಣಧೀರ ಪಾತಕ ಲೋಕ ತ್ಯಜಿಸಿ, ಮುರಳಿ ಎಂಬ ಹೊಸಹೆಸರಿನಿಂದ ಪ್ರಾಮಾಣಿಕನಾಗಿ ಬದುಕುವುದಾಗಿ ರಾಧಾಳಿಗೆ ವಚನ ಈಯುವ ಹೊತ್ತಿಗೆ ಆನಂದ್ ರಣಧೀರನನ್ನು ಬಂಧಿಸುತ್ತಾನೆ. ರಾಧಾ ತನ್ನ ಅತ್ತಿಗೆಯ ಬಳಿ ತನ್ನ ಮತ್ತು ರಣಧೀರನ ಪ್ರೀತಿ ಬಗ್ಗೆ ತಿಳಿಸುತ್ತಾಳೆ. ಆನಂದ್, ತನ್ನ ತಂಗಿಗಾಗಿ ನ್ಯಾಯಾಲಯದಲ್ಲಿ ರಣಧೀರನಿಗೆ ಅನುಕೂಲವಾಗುವಂತೆ ಸಾಕ್ಷಿ ಹೇಳುತ್ತಾನೆ. ಮರಣದಂಡನೆಯ ಬದಲು ೨ ವರ್ಷ ಸಾದಾ ಶಿಕ್ಷೆಯನ್ನು ಪಡೆದು ಮರಳುವುದಾಗಿ ರಣಧೀರ, ಆನಂದ್ ನಿಗೆ ಮಾತು ನೀಡುತ್ತಾನೆ. ತನ್ನ ತಂಗಿಯನ್ನು ತಾನೇ ಧಾರೆ ಎರೆಯುವುದಾಗಿ ಹೇಳುವ ಆನಂದ್, ತನ್ನ ಮನೆಗೆಯೇ ಮಾರುವೇಷದಲ್ಲಿ ಬಂದು ರಾಧಾ ಜಿಮ್ಮಿ ಎಂಬ ತನ್ನ ಸ್ನೇಹಿತನನ್ನು ಪ್ರೀತಿ ಮಾಡುತ್ತಿರುವುದಾಗಿಯೂ, ಆತ ೨ ವರ್ಷ ಸಿಂಗಾಪುರದಲ್ಲಿ ವ್ಯವಹಾರ ಮುಗಿಸಿ ಭಾರತಕ್ಕೆ ಮರಳುವವರೆಗೆ, ರಾಧಾಲ ಮದುವೆ ಮಾಡದಂತೆ ತಂದೆ ಜಗನ್ನಾಥ್ ರಿಂದ ಮಾತು ಪಡೆಯುತ್ತಾನೆ. ಜಿಮ್ಮಿ ಆನಂದ್ ನ ಸಹಪಾಠಿ ಮತ್ತು ಕಳ್ಲಸಾಗಣೆಯ ಆರೋಪ ಹೊತ್ತು ಸೀಮ್ಗಾಪುರ ಜೈಲಿನಲ್ಲಿ ಇರುವನು ಮತ್ತು ಎಂದಿಗೂ ಭಾರತಕ್ಕೆ ಬರಲಾರ ಎಂಬುದು ಆನಂದ್ ನ ನಂಬುಗೆ. ಆದರೆ, ಜಿಮ್ಮಿಯನ್ನು ಆಭರಣದ ಆಂಗಡಿಯಲ್ಲಿ ಕಂಡ ಜಗನ್ನಾಥ್ ನ ತಂಗಿ, ಜಿಮ್ಮಿಯನ್ನು ಮನೆಗೆ ಕರೆತರುತ್ತಾಳೆ. ರಾಧಾರ ಅಂದ ಕಂಡ ಜಿಮ್ಮಿ, ಆನಂದ್ ನ ಆಶಯಕ್ಕ್ಕೆ ವಿರುದ್ಧವಾಗಿ ಆಕೆಯನ್ನೇ ವರಿಸಲು ಮತ್ತು ಅದಕ್ಕಾಗಿ ಏನೇ ಮಾಡಲು ಸಿದ್ಧನಾಗುತ್ತಾನೆ. ಸಜೆ ಮುಗಿಸಿ ಹೊರಬಂದ ರಣಧೀರಮುರಳಿಯನ್ನು ಯಮಹಾ ಕಂಪನಿಯಲ್ಲಿ ಉದ್ಯೋಗಿಯಾಗಿಸುತ್ತಾನೆ. ಬೈಕ್ ಸವಾರಿಯಲ್ಲಿ ಪರಿಣತನಾದ ರಣಧೀರ, ಜಿಮ್ಮಿಯ ವಿರುದ್ಧ ವೇಗದ ಬೈಕ್ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದು, ರಾಧಾಳ ಮನಗೆಲ್ಲುತ್ತಾನೆ. ತನ್ನ ಮಿತ್ರನಾದ, ಯಮಹಾ ಕಂಪನಿಯ ಮಾಲೀಕನೊಂದಿಗೆ ಮಾತನಾಡುವ ಜಗನ್ನಾಥ್, ರಣಧೀರನನ್ನು ಕೆಲಸದಿಂದ ವಜಾ ಮಾಡುವಂತೆ ಆಗ್ರಹಿಸುತ್ತಾನೆ. ತನ್ನ ಉದ್ಯೋಗಿಯನ್ನು ಕೆಲಸದಲ್ಲಿ ಇಟ್ಟುಕೊಳ್ಳುವುದು, ತೆಗೆದುಹಾಕುವುದು ನನ್ನ ನಿರ್ಧಾರ ಎಂದು ಜಗನ್ನಾಥ್ ನ ಮಾತನ್ನು ಧಿಕ್ಕರಿಸುವ ಮಾಲೀಕ, ಪರೋಕ್ಷವಾಗಿ ರಾಧಾರಣಧೀರರ ಪ್ರೇಮಕ್ಕೆ ತನ್ನ ಬೆಂಬಲ ಈಯುತ್ತಾನೆ. ತಾನು ಮುರಳಿಯಾಗಿ ಪರಿವರ್ತನೆ ಆಗಿರುವುದಾಗಿಯೂ, ಪ್ರಾಮಾಣಿಕನಾಗಿ ಬದುಕುವುದಾಗಿಯೂ, ತನಗೆ ರಾಧಾಳ ಕೈನೀಡುವಂತೆ ರಣಧೀರ ಜಗನ್ನಾಥ್ ರನ್ನು ಅವರ ಮನೆಗೆಯೇ ಬಂದು ಆಗ್ರಹಿಸುತ್ತಾನೆ. ಜಗನ್ನಾಥ್ ರಣಧೀರನಿಗೆ ಅವಮಾನ್ ಮಾಡಿ ಕಳಿಸುತ್ತಾನೆ. ಜೈಲಿನಿಂದ ಪರಾರಿಯಾಗಿ, ಭಾಷಾ ಜಿಮ್ಮಿಯ ಜೊತೆಗೂಡಿ ರಾಧಾಳನ್ನು ಮತ್ತು ಜಗನ್ನಾಥ್ ನನ್ನು ಅಪಹರಿಸುತ್ತಾನೆ. ಕುಡಿದ ಮತ್ತಿನಲ್ಲಿ ಚಿತ್ತಾಗಿ ಬಿದ್ದಿದ್ದ ರಣಧೀರನ ಮೇಲೆ ಭಾಷಾನ ಸಹಚರರು ಮಾರಣಾಂತಿಕವಾಗಿ ಹಲ್ಲೆ ಮಾಡುತ್ತಾರೆ ಮತ್ತು ಅವನ ಸಹಚರರನ್ನು ಅಪಹರಿಸುತ್ತಾರೆ. ಆನಂದ್ ಮಾರುವೇಷ ಧರಿಸಿ ತನ್ನ ತಂಗಿತಂದೆಯನ್ನು ಉಳಿಸುವ ಯತ್ನದಲ್ಲಿ ವಿಫಲನಾಗುತ್ತಾನೆ. ರಣಧೀರ ಆಸ್ಪತ್ರೆಯಿಂದ ಎದ್ದು ಬಂದು,ಖೂಳರನ್ನೆಲ್ಲಾ ಬಡಿದು, ತನ್ನವರನ್ನೆಲ್ಲಾ ಉಳಿಸಿಕೊಳ್ಳುತ್ತಾನೆ. ಜಗನ್ನಾಥ್ ಸ್ವತಃ ತಾನೇ ರಾಧಾಳ ಕೈಯನ್ನು ರಣಧೀರನಿಗೆ ನೀಡುತ್ತಾನೆ. ಉಲ್ಲೇಖಗಳು ನವೀನ ಅಂಶಗಳು ಅನಂತನಾಗ್ ಮೊದಲ ಬಾರಿಗೆ ಪೋಷಕ ಪಾತ್ರದಲ್ಲಿ, ಹಾಸ್ಯಭರಿತವಾಗಿ ನಟಿಸಿದ್ದು ವಿಶೇಷ. ಮಾ.ಮಂಜುನಾಥ್ ನಟನೆಯ ಜೊತೆಗೆ ೨ ಹಾಡು ಹಾಡಿದ್ದೂ ಅಲ್ಲದೆಯೇ ಸಾಹಸ ದೃಶ್ಯಗಳಲ್ಲಿ ನಟಿಸಿದ್ದು ವಿಶೇಷ. ಸಕಲೇಶಪುರದ ಮತ್ತು ಇತರ ಗುಡ್ಡುಗಾಡು ಪ್ರದೇಶದಲ್ಲಿ ಜ಼ಿಪ್ ಕ್ಯಾಮೆರಾ ಬಳಸಿದ್ದೂ ಮತ್ತು ಕ್ಲೈಮಾಕ್ಸ್ ನಲ್ಲಿ ಹಡಗು ಒಡೆಯುವ ದೃಶ್ಯದ ಚಿತ್ರೀಕರಣಕ್ಕಾಗಿ ಭಾರೀ ವೆಚ್ಚದಲ್ಲಿ ಸೆಟ್ ಹಾಕಿದ್ದು ಹೊಸ ಪ್ರಯೋಗ ನಾಯಕನ ಸಹಚರರ ಹೆಸರು ಸರಿಗಮ ಎಂದು ಇಟ್ಟದ್ದೂ (ಸಂಜು, ರಿಝ್ಝು, ಗಂಪೂ, ಮಂಜೂ), ಪೀಣ್ಯಕೀನ್ಯ ಎಂದು ಅನಂತನಾಗ್ ಮುದುಕನ ಮಾರುವೇಷದಲ್ಲಿ ಕಥೆ ಹೇಳುವುದು, ಇದೇ ಮೊದಲಾಗಿ ಸಂಭಾಷಣೆಯಲ್ಲಿ ಹಂಸಲೇಖ ವಿಭಿನ್ನ ಪ್ರಯೋಗಗಳನ್ನು ಮಾಡಿದರು. ಚಿತ್ರದ ಹಾಡುಗಳ ಜೊತೆಗೆಯೇ, ಸಂಭಾಷಣೆಯ ಕ್ಯಾಸೆಟ್ ಗಳು ಕೂಡಾ ಬಹುವಾಗಿ ಮಾರಾಟವಾಯಿತು. ಕನ್ನಡ ಚಲನಚಿತ್ರಗಳು ವರ್ಷ೧೯೮೮ ಕನ್ನಡಚಿತ್ರಗಳು ಶತದಿನೋತ್ಸವದ ಕನ್ನಡ ಚಿತ್ರಗಳು ರಜತಮಹೋತ್ಸವದ ಕನ್ನಡ ಚಿತ್ರಗಳು
೧೯೮೯ರಲ್ಲಿ ಬಿಡುಗಡೆಯಾದ ಈ ಚಲನಚಿತ್ರ, ಅಪಾರ ಜನಪ್ರಿಯತೆ ಗಳಿಸಿತು. ಬೆಂಗಳೂರಿನ ಸ್ಟೇಟ್ಸ್ ಚಿತ್ರಮಂದಿರದಲ್ಲಿ ಒಂದು ವರ್ಷಕ್ಕೂ ಹೆಚ್ಚಿನ ಕಾಲದ ಸತತ ಪ್ರದರ್ಶನ ಕಂಡ ಸಾಧನೆ ಮಾಡಿದ ಚಿತ್ರ. ರಾಘವೇಂದ್ರ ರಾಜ್ಕುಮಾರ್ ನಾಯಕತ್ವದ ಈ ಚಿತ್ರದ ಮೂಲಕ ಮಾಲಾಶ್ರಿಯವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರವನ್ನು ನಿರ್ದೇಶಿಸಿದವರು: ಎಂ.ಎಸ್. ರಾಜಶೇಖರ್. ಕನ್ನಡ ಚಲನಚಿತ್ರಗಳು ವರ್ಷ೧೯೮೯ ಕನ್ನಡಚಿತ್ರಗಳು ಶತದಿನೋತ್ಸವದ ಕನ್ನಡ ಚಿತ್ರಗಳು ರಜತಮಹೋತ್ಸವದ ಕನ್ನಡ ಚಿತ್ರಗಳು ಸುವರ್ಣಮಹೋತ್ಸವದ ಕನ್ನಡ ಚಿತ್ರಗಳು
ಎಂ ಕೆ ಇಂದಿರ ಅವರು ಕನ್ನಡದ ಹೆಸರಾಂತ ಲೇಖಕಿ, ಕಾದಂಬರಿಗಾರ್ತಿ. ಇವರ ಕಾದಂಬರಿಗಳಲ್ಲಿ ಮಲೆನಾಡಿನ ವರ್ಣನೆ ಸುಂದರವಾಗಿ ಮೂಡಿ ಬಂದಿದೆ. ಎಂ.ಕೆ.ಇಂದಿರಾ ಅವರ ಗೆಜ್ಜೆ ಪೂಜೆ, ಫಣಿಯಮ್ಮ ಮತ್ತು ಪೂರ್ವಾಪರ ಎಂಬ ಕಾದಂಬರಿಗಳು ಚಲನಚಿತ್ರವಾಗಿವೆ. ಫಣಿಯಮ್ಮ ಚಿತ್ರವನ್ನು ನಿರ್ದೇಶಿಸಿದವರು ಶ್ರೀಮತಿ ಪ್ರೇಮಾ ಕಾರಂತ್. ಈ ಚಿತ್ರ ಅನೇಕ ಪ್ರಶಸ್ತಿಗಳನ್ನು ಗಳಿಸಿಕೊಂಡಿತು. ನಟಿ. ಎಲ್. ವಿ.ಶಾರದಾ ಈ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದರು. ಗೆಜ್ಜೆಪೂಜೆ ಕಾದಂಬರಿಯನ್ನು ದಿವಂಗತ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದರು. ಎಂ.ಕೆ.ಇಂದಿರಾ (೧೯೧೭,ಜನೆವರಿ ೫) ಜನನ ಹಾಗೂ ಬಾಲ್ಯ : ತೀರ್ಥಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ತರೀಕೆರೆ ಸೂರ್ಯನಾರಾಯಣರಾವ್ ತಾಯಿ ಬನಶಂಕರಮ್ಮ. ಅನೇಕ ಸುಪ್ರಸಿದ್ಧ ಕನ್ನಡಿಗರು, ಎಂ. ಕೆ. ಇಂದಿರ ರ, ಸಂಬಂಧಿಗಳು. ಸುಪ್ರಸಿದ್ಧ ಶಿಶುಸಾಹಿತಿ, ಹೊಯಿಸಳ, ಇಂದಿರಾರವರ ಸೋದರಮಾವ. ಪ್ರಜಾವಾಣಿಯ ಖ್ಯಾತ ಸಂಪಾದಕರಾಗಿದ್ದ ಟಿ.ಎಸ್.ರಾಮಚಂದ್ರರಾವ್ (ಟಿಎಸ್ಸಾರ್), ಇವರ ತಮ್ಮ. ಜನಪ್ರಿಯಸಾಹಿತಿ, ಹಾಗೂ ಆಕಾಶವಾಣಿ ನಿರ್ದೇಶಕ, ಡಾ. ಎಚ್.ಕೆ.ರಂಗನಾಥ್, ಇವರ ಚಿಕ್ಕಮ್ಮನ ಮಗ. ಶಿಕ್ಷಣ, ಮದುವೆ, ಹಾಗೂ ಬರವಣಿಗೆ ಕನ್ನಡ ಮಾಧ್ಯಮಿಕ ಶಾಲೆಯ ೨ ನೆಯ ತರಗತಿಯವರೆಗೆ ಮಾತ್ರ ಇವರ ಶಿಕ್ಷಣ. ೧೨ನೆಯ ವರ್ಷಕ್ಕೆ ಇವರ ಮದುವೆಯಾಯಿತು. ಇಂದಿರಾರವರು ಬರೆಯಲು ಪ್ರಾರಂಭಿಸಿದ್ದು ೧೯೬೩ರಲ್ಲಿ. ತುಂಗಭದ್ರ ಇವರ ಮೊದಲ ಕೃತಿ. ಕಥೆ, ಕಾದಂಬರಿ, ಪ್ರಹಸನ, ಹರಟೆ,ವ್ಯಕ್ತಿಚಿತ್ರ ಇತ್ಯಾದಿಯಾಗಿ ೬೦ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಸದಾನಂದ, ಫಣಿಯಮ್ಮಈ ಕಾದಂಬರಿಗಳಿಗೆ ಹಾಗು ನವರತ್ನ ಕಥಾಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ೧೯೭೫ರಲ್ಲಿ ಶ್ರೇಷ್ಠ ಲೇಖಕಿ ಹಾಗು ಶ್ರೇಷ್ಠ ಚಿತ್ರಕತೆ ಪ್ರಶಸ್ತಿ ಇವರಿಗೆ ಲಭಿಸಿವೆ. ಇವರ ಅನೇಕ ಕಾದಂಬರಿಗಳು ತೆಲುಗು , ಮಲೆಯಾಳಂ ಹಾಗೂ ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ. ಗೆಜ್ಜೆ ಪೂಜೆ ಚಿತ್ರದ ಚಿತ್ರಕಥೆಗಾಗಿ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರಿಗೆ ಅತ್ಯುತ್ತಮ ಚಿತ್ರಕಥೆಗಾರ ಪ್ರಶಸ್ತಿ ಪ್ರಕಟವಾದಾಗ ಮೂಲ ಕಾದಂಬರಿಕಾರ್ತಿ ಎಂ.ಕೆ.ಇಂದಿರಾ, ಈ ಪ್ರಶಸ್ತಿ ಸಲ್ಲಬೇಕಾಗಿರುವುದು ಮೂಲ ಲೇಖಕಿಗೆ ಎನ್ನುವ ವಾದ ಮಂಡಿಸಿದ್ದರು.ನಮನ ಜೀವನ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು (೧೯೧೭) ಮಲೆನಾಡಿನ ತೀರ್ಥಹಳ್ಳಿಯಲ್ಲಿ. ತಂದೆ ತರೀಕೆರೆ ಸೂರ್ಯನಾರಾಯಣ ತಾಯಿ ಬನಶಂಕರಮ್ಮ.ಮಕ್ಕಳ ಸಾಹಿತ್ಯದ ಪ್ರಸಿದ್ದರಾದ ಹೊಯಿಸಳ, ಇವರ ಸೋದರಮಾವ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು .......ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ ತುಂಗಭದ್ರ.ತುಂಗಭದ್ರೆಯನ್ನು ಮೆಚ್ಚಿಕೊಂಡುಕೀರ್ತಿನಾಥ ಕುರ್ತಕೋಟಿಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ತರಗತಿಗೆ ಪಠ್ಯವಾಗಿತ್ತು.ನಂತರ ಗೆಜ್ಜೆಪೂಜೆ, ಸದಾನಂದ, ನವರತ್ನ.....ಹೀಗೆ ಹಲವಾರು ಅವರ ಲೇಖನಿಯಿಂದ ಹೊರಬಂದವು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಸ್ಥಿತಿ, ವಿಧವಾವಿವಾಹ, ಬಾಲ್ಯವಿವಾಹ, ವಿಧವೆಯ ಗೋಳು, ಜಾತಿ ಪದ್ದತಿ ಇವೆಲ್ಲವೂ ಅವರ ಕಾದಂಬರಿಗಳಲ್ಲಿ ವ್ಯಕ್ತವಾಗುತ್ತಿತ್ತು.ಇವರ ಹಲವಾರು ಕೃತಿಗಳು ಅನ್ಯ ಭಾಷೆಗೂ ಅನುವಾದವಾಗಿದೆ. ಕಾದಂಬರಿಗಳಲ್ಲದೇ ಸುಮಾರು ನೂರೈವತ್ತು ಸಣ್ಣಕಥೆಗಳನ್ನೂ ಬರೆದಿದ್ದಾರೆ.ಇವರು ಒಟ್ಟು ಸುಮಾರು ನಲವತ್ತೊಂಬತ್ತು ಕಾದಂಬರಿಗಳು, ಹನ್ನೊಂದು ಕಥಾಸಂಕಲಗಳನ್ನು ಬರೆದಿದ್ದಾರೆ. ಬಿಂದು ಅರ್ಧಕ್ಕೇ ನಿಂತುಹೋದ ಆತ್ಮಕಥೆ.ಗೆಜ್ಜೆ ಪೂಜೆ ಚಿತ್ರದ ಚಿತ್ರಕಥೆಗಾಗಿ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರಿಗೆ ಅತ್ಯುತ್ತಮ ಚಿತ್ರಕಥೆಗಾರ ಪ್ರಶಸ್ತಿ ಪ್ರಕಟವಾದಾಗ ಮೂಲ ಕಾದಂಬರಿಕಾರ್ತಿ ಎಂ.ಕೆ.ಇಂದಿರಾ ಈ ಪ್ರಶಸ್ತಿ ಸಲ್ಲಬೇಕಾಗಿರುವುದು ಮೂಲ ಲೇಖಕಿಗೆ ಎನ್ನುವ ವಾದ ಮಂಡಿಸಿದ್ದರು.ನಮನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕಾದಂಬರಿಗಳು ಸದಾನಂದ ನವರತ್ನ ಫಣಿಯಮ್ಮ ಚಲನಚಿತ್ರವಾಗಿರುವ ಕಾದಂಬರಿಗಳು ಗೆಜ್ಜೆಪೂಜೆ ಮುಸುಕು ಪೂರ್ವಾಪರ ಗಿರಿಬಾಲೆ ಹೂಬಾಣ ಫಣಿಯಮ್ಮ ಜಾಲ ನೂರೊಂದು ಬಾಗಿಲು ಫಣಿಯಮ್ಮ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ದೊರೆಯಿತು. ಜೊತೆಗೆ ಈ ಕೃತಿಯನ್ನು ತೇಜಸ್ವಿನಿ ನಿರಂಜನ ಆಂಗ್ಲಭಾಷೆಗೆ ಅನುವಾದ ಮಾಡಿದ್ದಾರೆ. ಈ ಅನುವಾದಕ್ಕೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಕಾದಂಬರಿಗಳು ತುಂಗ ಭದ್ರ ತಾಪದಿಂದ ತಂಪಿಗೆ ಹೆಣ್ಣಿನ ಆಕಾಂಕ್ಷೆ ನೂರೊಂದು ಬಾಗಿಲು ಚಿದ್ವಿಲಾಸ ಮನೋಮಂದಿರ ತಪೋವನದಲ್ಲಿ ಕಲಾದರ್ಶಿ ಕೂಚುಭಟ್ಟ ಬ್ರಹ್ಮಚಾರಿ ಸದಾನಂದ ಮಧುವನ ಗೆಜ್ಜೆಪೂಜೆ ಶಾಂತಿಧಾಮ ಗಿರಿಬಾಲೆ ಡಾಕ್ಟರ್ ಮುಸುಕು ಮನತುಂಬಿದ ಮಡದಿ ಮೋಹನಮಾಲೆ ಸುಕಾಂತ ರಸವಾಹಿನಿ ನಾಗವೀಣಾ ಬಿದಿಗೆಚಂದ್ರಮಡೊಂಕು ಆಭರಣ ಮನೆಕೊಟ್ಟುನೋಡು ಕನ್ಯಾಕುಮಾರಿಯಾರಿಗೆ ಜಾತಿಕೆಟ್ಟವಳು ಯಾರುಹಿತವರು? ವರ್ಣಲೀಲೆ ಜಾಲ ಗುಂಡ ಪವಾಡ ಸುಸ್ವಾಗತ ಟುಲೆಟ್ ಚಿತ್ರಭಾರತ ಫಣಿಯಮ್ಮ ಹಸಿವು ಒಂದೇನಿಮಿಷ ಅಗೋಚರ ಸಗೋಚರ ಪೂರ್ವಾಪರ ಹೂಬಾಣ ತಗ್ಗಿನಮನೆಸೀತೆ ಸ್ಫೂರ್ತಿ ಕೂಪ ಕವಲು ಆತ್ಮಸಖಿ ಸೂತ್ರಧಾರಿಣಿ ತಾಳಿದವರು ಹಂಸಗಾನ ವಿಚಿತ್ರಪ್ರೇಮ ಕಥಾ ಸಂಕಲನಗಳು ದಶಾವತಾರ ಅಂಬರದ ಅಪ್ಸರೆ ನವರತ್ನ ನವಜೀವನ ಪೌರ್ಣಿಮೆ ಕಲ್ಪನಾ ವಿಲಾಸ ನಗೆಹರಟೆಗಳು ನಗಬೇಕು ಪ್ರವಾಸ ಕಥನ ಅನುಭವಕುಂಜ ಪ್ರಶಸ್ತಿಪುರಸ್ಕಾರ ಸಾವಿತ್ರಮ್ಮ ದೇಜಗೌ ಪ್ರಶಸ್ತಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸುರಗಿ ಅಭಿನಂದನಾ ಗ್ರಂಥ ಸಮರ್ಪಣೆ ಉಲ್ಲೇಖ ಕನ್ನಡ ಸಾಹಿತ್ಯ ಎಂ.ಕೆ.ಇಂದಿರಾ ಎಂ.ಕೆ.ಇಂದಿರಾ ೧೯೧೭ ಜನನ ಕನ್ನಡ ಲೇಖಕಿಯರು ಕಾದಂಬರಿಕಾರರು
ಈ ಲೇಖನವು ಉಪೇಂದ್ರ ನಿರ್ದೇಶನದ ಕನ್ನಡ ಚಲನಚಿತ್ರ ಓಂ ಬಗ್ಗೆ. ಹಿಂದೂ ಧರ್ಮ ಮತ್ತು ಇನ್ನಿತರ ಧರ್ಮಗಳಲ್ಲಿನ ಪವಿತ್ರ ಮಂತ್ರದ ಬಗ್ಗೆ ಮಾಹಿತಿಗೆ, ಓಂ ನೋಡಿ. ಓಂ, ೧೯೯೫ರಲ್ಲಿ ತೆರೆ ಕಂಡ ಕನ್ನಡ ಚಿತ್ರ. ಇದು ಉಪೇಂದ್ರ ನಿರ್ದೇಶಿಸಿದ್ದು, ಇದರಲ್ಲಿ ಶಿವರಾಜ್ಕುಮಾರ್, ಪ್ರೇಮಾ ಮುಖ್ಯ ಪಾತ್ರ ವಹಿಸಿದ್ದಾರೆ. ಇದರಲ್ಲಿ ವರನಟ ಡಾ.ರಾಜ್ಕುಮಾರ್ ಎರಡು ಹಾಡುಗಳನ್ನು ಹಾಡಿದ್ದಾರೆ. ಈ ಚಿತ್ರವನ್ನು ತೆಲುಗಿನಲ್ಲಿ ಓಂಕಾರಂ ಎಂದು ರೀಮೇಕ್ ಮಾಡಲಾಗಿದೆ. ಉಲ್ಲೇಖಗಳು ಕನ್ನಡ ಚಲನಚಿತ್ರಗಳು ವರ್ಷ೧೯೯೫ ಕನ್ನಡಚಿತ್ರಗಳು ಶತದಿನೋತ್ಸವದ ಕನ್ನಡ ಚಿತ್ರಗಳು ರಜತಮಹೋತ್ಸವದ ಕನ್ನಡ ಚಿತ್ರಗಳು
ಬಡಗೂರು ರಾಮಕೃಷ್ಣ ಪಂತುಲು(೧೯೧೧ ಜುಲೈ ೨೮ ೧೯೭೪ ಅಕ್ಟೋಬರ್ ೮) ಕನ್ನಡ ಚಿತ್ರರಂಗದ ಸುವರ್ಣಯುಗದ ಹರಿಕಾರ,ಬೆಳ್ಳಿತೆರೆಯ ಗಾರುಡಿಗರೆಂದೇ ಪ್ರಸಿದ್ಧಿ. ಜೀವನ ಬಡಗೂರು ರಾಮಕೃಷ್ಣ ಪಂತುಲು ಅವರು ಜನಿಸಿದ್ದು ೧೯೧೧ ಜುಲೈ ೨೮ರಂದು ಕರ್ನಾಟಕಆಂಧ್ರಪ್ರದೇಶದ ಗಡಿಯಲ್ಲಿನ ಬಂಗಾರ ಪೇಟೆಯ ಬಳಿ ಇರುವ ಕುಪ್ಪಂನಿಂದ ಹನ್ನೊಂದು ಕಿಲೋಮೀಟರ್ ದೂರದ ಕುಗ್ರಾಮ ಬಡಗೂರಿನಲ್ಲಿ. ಗಡಿ ಪ್ರದೇಶದಲ್ಲಿರುವ ಈ ಊರಿನಲ್ಲಿ ಕನ್ನಡದಂತೆ ತೆಲುಗು,ತಮಿಳು ಕೂಡ ಮುಖ್ಯ ಭಾಷೆಗಳಾಗಿದ್ದವು.ಬಾಲ್ಯದಿಂದಲೀ ಪಂತುಲು ಅವರಿಗೆ ಮೂರು ಭಾಷೆಗಳ ಒಡನಾಟ ಬರಲು ಕಾರಣವಾಯಿತು.ಪಂತುಲು ಅವರ ತಂದೆ ವೆಂಕಟಾಚಲಯ್ಯನವರಿಗೆ ಕಿರಿಯವರಾದ ಪಂತುಲು ಸೇರಿದಂತೆ ಐವರು ಮಕ್ಕಳು,ಮೂರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು.ಪಂತುಲು ಅವರ ತಂದೆ ಸಂಗೀತ,ಸಾಹಿತ್ಯ ಮತ್ತು ನೃತ್ಯಗಳಲ್ಲಿ ಉತ್ತಮ ಅಭಿರುಚಿ ಪಡೆದಿದ್ದರು.ಆಗಾಗ ಊರಿನಲ್ಲಿ ನಾಟಕಗಳನ್ನು ಆಡಿಸುತಿದ್ದರು.ತಂದೆಯ ಜೊತೆ ಮಗನೂ ಆಗಾಗ ರಂಗ ತರಬೇತಿ ನೋಡಲು ಹೋಗುತ್ತಿದ್ದನು.ಚಂದ್ರಹಾಸನ ಪಾತ್ರ ನೀಡುವ ಮೂಲಕ ತಂದೆಯೇ ಆತನ ರಂಗ ಪ್ರವೇಶಕ್ಕೆ ಕಾರಣಕರ್ತರಾದರು.ರಾಮಕೃಷ್ಣರ ಪ್ರಾಥಮಿಕ ಶಿಕ್ಷಣ ಬಡಗೂರಿನಲ್ಲಿಯೇ ನಡೆದರೂ ಮುಂದಿನ ಶಿಕ್ಷಣಕ್ಕೆ ಅಲ್ಲಿ ಅವಕಾಶ ಇರದ ಕಾರಣ ತಾತನ ಮನೆಯಾದ ಕೋಲಾರದಲ್ಲಿದ್ದು ಎಸ್.ಎಸ್.ಎಲ್.ಸಿ.ವರೆಗಿನ ಶಿಕ್ಷಣ ಪಡೆದರು.ಶಾಲಾ ಜೀವನದಲ್ಲಿಯೂ ಅವರು ನಾಟಕದ ಅಭಿನಯದಲ್ಲಿ ಪ್ರಸಿದ್ದಿ ಪಡೆದಿದ್ದರು. ಪಂತುಲು ಮುಂದೆ ಪ್ರಾಥಮಿಕ ಶಿಕ್ಷಕರಾಗಿ ನೇಮಕಗೊಂಡರು.ಕಲಾವಿದರಾದ ಅವರು ಶಾಲೆಯಲ್ಲಿ ಪಾಠ ಮಾಡಿದ್ದಕ್ಕಿಂತ ಮಕ್ಕಳಿಗೆ ನಾಟಕ ಕಲಿಸಿದ್ದೆ ಹೆಚ್ಚು.ಒಂದುದಿನ ಮಕ್ಕಳಿಗೆ ನಾಟಕ ಕಲಿಸುತ್ತಿರುವಾಗ ವಿದ್ಯಾ ಇಲಾಖೆಯ ಇನ್ಸ್ಪೆಕ್ಟರ್ ಬಂದು ಪಾಠ ಮಾಡುವ ಬದಲು ಮಕ್ಕಳಿಗಾಗಿ ನಾಟಕ ಕಲಿಸುತ್ತಿದ್ದ ಪಂತುಲು ಅವರನ್ನು ಕಂಡು ಕೆಂಡಾಮಂಡಲವಾದರು.ಇದು ಸರಿಯಲ್ಲವೆಂದೂ ಇನ್ನೊಮ್ಮೆ ಹೀಗಾದರೆ ವಜಾಮಾಡುವೆನೆಂದು ನೋಟೀಸ್ ಜಾರಿ ಮಾಡಿದರು.ಇದರಿಂದ ನೊಂದ ಪಂತುಲು ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿ ಕಲೆಯಲ್ಲಿಯೇ ಬದುಕುಕನ್ನು ಅರಸುತ್ತ ಬೆಂಗಳೂರಿಗೆ ಬಂದು ಅವರ ಹಿರಿಯರಾದ ಪಾಪಯ್ಯನವರಿದ್ದ ಮಹಮ್ಮದ್ ಪೀರ್ ಅವರ ಚಂದ್ರ ಕಲಾನಾಟಕ ಮಂಡಳಿಗೆ ಸೇರಿದರು.ಮುಂದೆ ಇವರಿಗೆ ಹೆಚ್ ಎಲ್ ಎನ್ ಸಿಂಹ ಮತ್ತು ಮಹಮದ್ ಪೀರ್ ಗೆಳೆತನ ಬಣ್ಣದಲೋಕದ ನಂಟನ್ನು ತಂದಿತು.ಪಂತುಲು ಅವರ ಮಗ ರವಿಶಂಕರ್ ಕೆಲ ಕಾಲ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದರು,ಮಗಳು ಬಿ.ಆರ್.ವಿಜಯಲಕ್ಷ್ಮಿ ಛಾಯಾಗ್ರಾಹಕಿಯಾಗಿ ಹೆಸರು ಮಾಡಿದ್ದರು. ಚಿತ್ರರಂಗ ೧೯೩೬ರಲ್ಲಿ ಸಂಸಾರ ನೌಕೆ ಚಲನಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು.ರಾಧಾ ರಮಣ ಚಲನಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದರು. ೧೯೫೫ರಲ್ಲಿ ಪ.ನೀಲಕಂಠನ್ ಸಹಯೋಗದೊಂದಿಗೆ ಪದ್ಮಿನಿ ಪಿಕ್ಚರ್ಸ್ ಸಂಸ್ಥೆ ಸ್ಥಾಪಿಸಿ, ಮೊದಲ ತೇದಿ ಎಂಬ ಚಿತ್ರ ನಿರ್ಮಿಸಿದರು. ಎರಡನೆ ಚಿತ್ರ ಶಿವಶರಣೆ ನಂಬೆಕ್ಕ. ೧೯೫೭ರಲ್ಲಿ ಕುತೂಹಲಭರಿತ ರತ್ನಗಿರಿ ರಹಸ್ಯ ಎಂಬ ಚಿತ್ರವನ್ನು ನಿರ್ಮಿಸಿದರು. ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಸಾಹಿತ್ಯ, ಟಿ ಜಿ ಲಿಂಗಪ್ಪ ಅವರ ಸಂಗೀತ ಈ ಚಿತ್ರಕ್ಕೆ ಅಪಾರ ಯಶಸ್ಸನ್ನು ತಂದುಕೊಡುವಲ್ಲಿ ನೆರವಾದವು. ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿಗೆ ರಜತೋತ್ಸವ ಆಚರಿಸಿದ ಸಾಮಾಜಿಕ ಚಿತ್ರವೆಂದು ಖ್ಯಾತಿ ಪಡೆದ ಸ್ಕೂಲ್ ಮಾಸ್ಟರ್ ಚಿತ್ರವನ್ನು ೧೯೫೮ರಲ್ಲಿ ನಿರ್ಮಿಸಿದರು. ಅನಂತರ ಅವರ ಪದ್ಮಿನಿ ಪಿಕ್ಚರ್ಸ್ನಲ್ಲಿ ಕಿತ್ತೂರು ಚೆನ್ನಮ್ಮ, ಮಕ್ಕಳ ರಾಜ್ಯ,ಗಾಳಿ ಗೋಪುರ, ಚಿನ್ನದ ಗೊಂಬೆ, ಎಮ್ಮೆ ತಮ್ಮಣ್ಣ, ಬೀದಿ ಬಸವಣ್ಣ, ಅಮ್ಮ, ಶ್ರೀ ಕೃಷ್ಣದೇವರಾಯ, ಮಾಲತಿ ಮಾಧವ, ಒಂದು ಹೆಣ್ಣಿನ ಕಥೆ ಮುಂತಾದ ಅಮೋಘ ಚಿತ್ರಗಳು ನಿರ್ಮಾಣವಾದವು. ಇವುಗಳಲ್ಲಿ ಸ್ಕೂಲ್ ಮಾಸ್ಟರ್ ಮತ್ತು ಕಿತ್ತೂರು ಚೆನ್ನಮ್ಮ ಚಿತ್ರಗಳು ರಾಷ್ಟ್ರಪ್ರಶಸ್ತಿ ಪಡೆದವು.ಶ್ರೀ ಕೃಷ್ಣದೇವರಾಯ ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ ದೊರಕಿತು.ಇದೇ ಚಿತ್ರದಲ್ಲಿ ಬಿ.ಆರ್.ಪಂತುಲು ಅವರು ನಿರ್ವಹಿಸಿದ ತಿಮ್ಮರಸುವಿನ ಪಾತ್ರಕ್ಕೆ ಶ್ರೇಷ್ಥ ನಟ ಪ್ರಶಸ್ತಿ ದೊರೆಯಿತು.ಶ್ರೀ ಕೃಷ್ಣದೇವರಾಯ ಚಿತ್ರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಬಿ.ಆರ್. ಪಂತುಲು ನಿರಾಕರಿಸಿದ್ದರು. ಅದು ಆ ಸಿನಿಮಾದ ಅತ್ಯುತ್ತಮ ಅಭಿನಯಕ್ಕಾಗಿ ರಾಜ್ಕುಮಾರ್ ಅವರಿಗೆ ನೀಡಬೇಕಿತ್ತು ಎನ್ನುವುದು ಅವರ ವಾದವಾಗಿತ್ತು.ಬಿ.ಆರ್.ಪಂತುಲು ಸುಮಾರು ಇಪ್ಪತ್ತೈದು ವರ್ಷಗಳ ಕಾಲ, ನಾಲ್ಕು ಭಾಷೆಗಳಲ್ಲಿ ಐವತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿ, ಚಿತ್ರೋದ್ಯಮಕ್ಕಾಗಿ ತಮ್ಮನ್ನೇ ತಾವು ತೇದುಕೊಂಡ ಮಹಾಪರುಷ. ಇವರು ಉದ್ಯಮಕ್ಕೆ ಕಾಲಿಟ್ಟಾಗ ಕನ್ನಡ ಚಿತ್ರರಂಗವಿನ್ನೂ ಕುಂಟುತ್ತಿತ್ತು. ಮದ್ರಾಸಿನಿಂದ ತಯಾರಾಗುತ್ತಿದ್ದ ಕನ್ನಡ ಚಿತ್ರಗಳಲ್ಲಿ ಕನ್ನಡತನವನ್ನು ಹುಡುಕಬೇಕಾಗಿತ್ತು. ಇದನ್ನ ಮನಗಂಡ ಪಂತುಲು ತಮಿಳರೊಂದಿಗೇ ಕಲೆತು ಮೊಟ್ಟಮೊದಲಿಗೆ ಮೊದಲ ತೇದಿ ಚಿತ್ರ ನಿರ್ಮಿಸಿದರು. ಇದು ಸರ್ಕಾರಿ ನೌಕರನ ಬದುಕಿನ ಬವಣೆಯ ಸುತ್ತಲಿನದು. ಅಂದಿನ ಸಾಮಾಜಿಕ ಸ್ಥಿತಿಗತಿಯನ್ನು ಪ್ರತಿಬಿಂಬಿಸುವಂಥಾದ್ದು. ಚಿತ್ರ ಹಿಟ್ ಆಯ್ತು. ಧೈರ್ಯ ಬಂತು. ತಮಿಳಿನ ಒಡನಾಟದಲ್ಲಿದ್ದುಕೊಂಡೇ ಕನ್ನಡ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದರು ಇದಿಷ್ಟೇ ಅಲ್ಲದೆ ರಾಜ್ ಕುಮಾರ್, ನರಸಿಂಹರಾಜು, ಚಿ.ಉದಯಶಂಕರ್, ಪುಟ್ಟಣ್ಣ ಕಣಗಾಲ್ ರಂತಹ ಪ್ರತಿಭಾವಂತರನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಟ್ಟವರು. ರಾಜ್ ಕುಮಾರ್ ಗಾಗಿಯೇ ಗಾಳಿಗೋಪುರ, ಸಾಕುಮಗಳು, ಎಮ್ಮೆ ತಮ್ಮಣ್ಣ, ಬೀದಿ ಬಸವಣ್ಣ, ಅಮ್ಮ, ಗಂಡೊಂದು ಹೆಣ್ಣಾರು ಚಿತ್ರಗಳನ್ನು ಮಾಡಿದ ಪಂತುಲು, ನರಸಿಂಹರಾಜು ಅವರಿಗಾಗಿಯೇ ಪ್ರತ್ಯೇಕ ಪಾತ್ರ ಸೃಷ್ಟಿಸಿ ಹಾಸ್ಯದ ಹೊಸ ಟ್ರ್ಯಾಕೊಂದನ್ನು ಅನಿವಾರ್ಯವಾಗಿ ಚಿತ್ರದಲ್ಲಿರುವಂತೆ ನೋಡಿಕೊಂಡವರು. ಹಾಗೆಯೇ ಇವರ ಸರಿಸುಮಾರು ಎಲ್ಲಾ ಚಿತ್ರಗಳಿಗೂ ಟಿ.ಜಿ.ಲಿಂಗಪ್ಪ ಸಂಗೀತ ನಿರ್ದೇಶಕರಾಗಿದ್ದುದು ಒಂದು ವಿಶೇಷವೇ.ನಮನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ೧೯೫೮: ಮೂರನೇ ಅತ್ಯುತ್ತಮ ಚಲನಚಿತ್ರಕ್ಕಾಗಿ ಆಲ್ ಇಂಡಿಯಾ ಸರ್ಟಿಫಿಕೇಟ್ ಆಫ್ ಮೆರಿಟ್ ಸ್ಕೂಲ್ ಮಾಸ್ಟರ್ ೧೯೫೯: ತಮಿಳು ಭಾಷೆಯಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ಮೆರಿಟ್ ಪ್ರಮಾಣಪತ್ರ ವೀರಪಾಂಡಿಯಾ ಕಟ್ಟಬೊಮ್ಮನ್ ೧೯೬೧: ಕನ್ನಡದಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ಮೆರಿಟ್ ಪ್ರಮಾಣಪತ್ರ ಕಿತ್ತೂರು ಚೆನ್ನಮ್ಮ ೧೯೬೧: ತಮಿಳು ಭಾಷೆಯಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರಪತಿಗಳ ಬೆಳ್ಳಿ ಪದಕ ಕಪ್ಪಾಲೋಟಿಯಾ ತಮಿಜಾನ್ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ೧೯೬೯೭೦: ಅತ್ಯುತ್ತಮ ನಟನಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಶ್ರೀ ಕೃಷ್ಣದೇವರಾಯ ಅಂತ್ಯ ಕಾಲೇಜು ರಂಗ ಚಿತ್ರದ ಸಿದ್ಧತೆಯಲ್ಲಿದ್ದಾಗ, ಅಕ್ಟೋಬರ್ ೮, ೧೯೭೪ರಂದು ಬೆಂಗಳೂರಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರು. ಅವರ ಪಟ್ಟ ಶಿಷ್ಯ ಪುಟ್ಟಣ್ಣ ಕಣಗಾಲ್ ಈ ಚಿತ್ರವನ್ನು ಪೂರ್ತಿ ಮಾಡಿ, ಗುರುಕಾಣಿಕೆಯಾಗಿ ಅರ್ಪಿಸಿದರು. ಇದು ಪದ್ಮಿನಿ ಪಿಕ್ಚರ್ಸ್ನ ಕೊನೆಯ ಚಿತ್ರವಾಯಿತು. ಆ ಮೂಲಕ ಭಾರತೀಯ ಚಿತ್ರರಂಗದ ಸುವರ್ಣ ಅಧ್ಯಾಯವೊಂದು ಕೊನೆಗೊಂಡಿತು. ಪುಟ್ಟಣ್ಣ ಕಣಗಾಲರ ಪ್ರಕಾರ ಜನಸಾಮಾನ್ಯರನ್ನು ಚಿತ್ರಮಂದಿರಗಳತ್ತ ತರುವಂತೆ ಕನ್ನಡ ಚಿತ್ರರಂಗಕ್ಕೆ ಭದ್ರ ಬುನಾದಿ ಹಾಕಿದ್ದು ಈ ಬಿ.ಆರ್. ಪಂತುಲು. ಅವರು ಅಭಿನಯನಿರ್ದೇಶನನಿರ್ಮಾಣ ಈ ಮೂರೂ ಕಲೆಗಳನ್ನು ಕರಗತ ಮಾಡಿಕೊಂಡು ಕನ್ನಡ ಚಿತ್ರರಂಗವನ್ನು ಅತ್ಯುತ್ತಮ ಗುಣಮಟ್ಟದ ಚಿತ್ರಗಳಿಂದ ಶ್ರೀಮಂತಗೊಳಿಸಿದ ಕಲಾವಿದ. 1957ರಿಂದ 1972ರವರೆಗೆ ಅವರು ಕನ್ನಡದಲ್ಲಿ ನಿರ್ಮಿಸಿದ ಚಿತ್ರಗಳು ಕನ್ನಡ ಚಿತ್ರರಂಗದತ್ತ ಭಾರತದ ಇಡೀ ಚಿತ್ರರಂಗ ತಿರುಗಿ ನೋಡು ವಂಥ ಇತಿಹಾಸವನ್ನೇ ನಿರ್ಮಿಸಿತು. ಸುಮಾರು 20 ಚಿತ್ರಗಳಲ್ಲಿನ ಶೇಕಡಾ 90ರಷ್ಟು ಚಿತ್ರಗಳಲ್ಲಿ ಡಾ. ರಾಜ್ಕುಮಾರ್ ನಾಯಕನಟ ನಾಗಿ ಅಭಿನಯಿಸಿರುವುದೊಂದು ವಿಶೇಷ. ಜೊತೆಗೆ ಸ್ವತಃ ಬಿ.ಆರ್.ಪಂತುಲುರವರೂ ಒಂದು ಮುಖ್ಯ ಪೋಷಕ ಪಾತ್ರದಲ್ಲಿದ್ದು ತಂದೆಯಂತೆ ಆ ಇಡೀ ಚಿತ್ರದ ಏಳಿಗೆಗೆ ಕಾರಣ ವಾಗುತ್ತಿದ್ದುದು ಆ ಚಿತ್ರಗಳ ಇನ್ನೊಂದು ಸುವಿಶೇಷ. 1955ರಲ್ಲಿ ಪದ್ಮಿನಿ ಪಿಕ್ಚರ್ಸ್ ಲಾಂಛನದಡಿಯಲ್ಲಿ ಪಂತುಲುರವರು ತಮ್ಮ ಚಿತ್ರ ನಿರ್ಮಾಣವನ್ನು ಆರಂಭಿಸಿದರೂ ಅವರು ನಿರ್ಮಿಸಿದ ಚಿತ್ರಗಳನ್ನು ಪಂತುಲು ಚಿತ್ರಗಳುಎಂದು ಕರೆಯುವುದೇ ವಾಡಿಕೆ.ಪಂತುಲುರವರನ್ನು ಬಹಳ ಮುಖ್ಯ ವಾಗಿ ನೆನೆಯಬೇಕಾದುದು ಅವರ ಸ್ಕೂಲ್ ಮಾಸ್ಟರ್ ಚಿತ್ರದ ಧ್ಯಾನದ ಆರಂಭದಿಂದಲೇ.ಸ್ವಾಮಿ ದೇವನೆ ಎಂಬ ಒಂದು ಹಾಡು ಸಾಕು ಪಂತುಲುರವರು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಪ್ರಾತಃ ಸ್ಮರಣೀಯರಾಗಲು.ಪಂತುಲು ಅವರು ಅದ್ಯಾಪಕರಾಗಿದ್ದಾಗ ಬಳಸುತ್ತಿದ್ದ ಸೋಸಲೆ ಅಯ್ಯಾಶಾಸ್ತ್ರಿಗಳ ಆ ಪ್ರಾರ್ಥನಾ ಗೀತೆ ಹೀಗಿದೆ ಸ್ವಾಮಿ ದೇವನೆ ಲೋಕ ಪಾಲನೆ ತೇ ನಮೋಸ್ತುತೇ ಪ್ರೇಮದಿಂದದಿ ನೋಡು ನಮ್ಮನು ತೇ ನಮೋಸ್ತುತೇ ದೇವ ದೇವನೆ ಹಸ್ತ ಪಾದಗಳಿಂದಲೂ ಮನದಿಂದಲೂ ನಾವು ಮಾಡಿದ ಪಾಪವೆಲ್ಲವ ಹೋಗಲಾಡಿಸು ಬೇಗನೇ... ವಿಜಯ ವಿದ್ಯಾರಣ್ಯ ಕಟ್ಟಿದ ಚಾಮುಂಡಾಂಬೆಯ ನಾಡಿನಾ ಮನೆಯ ಮಕ್ಕಳ ಐಕ್ಯಗಾನವ ಲಾಲಿಸೈ ಪರಿಪಾಲಿಸೈ... ಈ ಹಾಡು ನಮ್ಮ ನಿಮ್ಮೆಲ್ಲರ ಪ್ರೈಮರಿ ಶಾಲೆಯ ಮಗ್ಗಿ ಪುಸ್ತಕದ ಮೊದಲ ಪುಟದ ಪ್ರಾರ್ಥನಾ ಗೀತೆ ಯಾಗಿ ಸೇರಿಕೊಂಡು ಸಿನಿಮಾ ಹಾಡೆಂಬ ಪ್ರತ್ಯೇಕತೆಯ ರಿಯಾಯಿತಿಯಿಲ್ಲದೆ ಬಹು ಮುಖ್ಯವಾದ ನಮ್ಮಲ್ಲಿ ಉತ್ಸಾಹ ತರುವ ಪ್ರಾರ್ಥ ನೆಯೇ ಆಗಿ ಹೋಗಿತ್ತು. ಸ್ಕೂಲ್ಮಾಸ್ಟರ್ ಚಿತ್ರದಲ್ಲಿ ಮೇಷ್ಟ್ರರಾಗಿ ಸ್ವತಃ ವಿ.ಆರ್. ಪಂತುಲುರವರ ಮನೋಜ್ಞ ಅಭಿನಯಹಾವಭಾವ, ಮೇಷ್ಟ್ರರ ಹೆಂಡತಿಯಾಗಿ (ನಿಜ ಜೀವನದಲ್ಲಿಯೂ ಹೆಂಡತಿಯಾಗಿದ್ದವರು) ಕಲಾವಿದೆ ಎಂ.ವಿ. ರಾಜಮ್ಮನವರು ಪಂತುಲುವಿಗೆ ತಕ್ಕಂತೆ ಅಭಿನಯಿಸಿದ್ದರು.೨೦೧೧ ಜುಲೈಗೆ ೨೮ಕ್ಕೆ ಕನ್ನಡ ಚಿತ್ರರಂಗ ಕಂಡ ಮರೆಯಬಾರದ ಮಹಾನ್ ನಿರ್ಮಾಪಕ ನಿರ್ದೇಶಕರು ಹುಟ್ಟಿ ೧೦೦ ವರ್ಷಗಳು ತುಂಬುತ್ತವೆ. ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಲೇಬೇಕಾದ ಕನ್ನಡ ಚಿತ್ರರಂಗ ಭೂಮಿಯ ಮುಖ್ಯ ಪರ್ವವಿದು..ಆದ್ದರಿಂದ ಬಿ.ಆರ್. ಪಂತುಲುರವರ ಜನ್ಮ ಶತಮಾನೋತ್ಸವ ವರ್ಷಾಚರಣೆಯ ಸಂಭ್ರಮವಾಗಿ ಕನ್ನಡದ ಕಂದಮ್ಮಗಳು ಅವರ ಸಿನಿಮಾಗಳನ್ನು ವೀಕ್ಷಿಸಿ ಬೆಳೆಯುವಂತಹ ಸದವಕಾಶವನ್ನು ನಮ್ಮ ಫಿಲಂಚೇಂಬರ್ ಹಾಗೂ ಟಿವಿ ಚಾನೆಲ್ಗಳು ಕಲ್ಪಿಸಬೇಕಾಗಿದೆ. ಏಕೆಂದರೆ ಇದು ಕನ್ನಡ ಚಿತ್ರರಂಗದ ಪರಂಪರೆಗೆ ದೊರಕುವ ಜಯ ಹಾಗೂ ಪ್ರಗತಿಯ ದಾರಿ.ನಮನ ದಣಿವಿಲ್ಲದ ಧಣಿ ಬಿ.ಆರ್.ಪಂತುಲು ಕನ್ನಡದ ಮೇರು ನಿರ್ದೇಶಕ, ನಿರ್ಮಾಪಕ, ನಟ ಬಿ.ಆರ್.ಪಂತುಲು ಅವರನ್ನು ಕುರಿತಂತೆ ಲೇಖಕ ಅ.ನಾ.ಪ್ರಹ್ಲಾದರಾವ್ ರಚಿಸಿರುವ ದಣಿವಿಲ್ಲದ ಧಣಿ ಪುಸ್ತಕವನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಪ್ರಕಟಿಸಿದ್ದು. ದಿನಾಂಕ 15.11.206ರಂದುಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಭಾಗದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ . ಖ್ಯಾತ ಕಲಾವಿದೆ ಪದ್ಮಶ್ರಿ ಡಾ. ಭಾರತಿ ವಿಷ್ಣುವರ್ಧನ್ ಪುಸ್ತಕವನ್ನು ಬಿಡುಗಡೆ ಮಾಡಿದರು. ಲೇಖಕ, ಪತ್ರಕರ್ತ ಶ್ರೀ ಜೋಗಿ (ಗಿರೀಶ್ ರಾವ್) ಪುಸ್ತಕ ಕುರಿತು ಮಾತನಾಡಿದರು. ನಿವೃತ್ತ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್, ವಾರ್ತಾ ಇಲಾಖೆಯ ನಿರ್ದೇಶಕ ಎನ್.ಆರ್.ವಿಶುಕುಮಾರ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್ ಬಾಬು, ಶಿಕ್ಷಣ ತಜ್ಞ ವೋಡೆ ಕೃಷ್ಣ ಪಾಲ್ಗೊಂಡಿದ್ದರು. ಬಿ.ಆರ್. ಪಂತುಲು ನಿರ್ದೇಶನದ ಚಿತ್ರಗಳು ಬಿ.ಆರ್.ಪಂತುಲು ನಿರ್ಮಾಣದ ಕನ್ನಡೇತರ ಚಿತ್ರಗಳು ದಾನವೀರ ಕರ್ಣ ಮೊದಲು ತೆಲಗು ಮತ್ತು ನಂತರ ಹಿಂದಿಯಲ್ಲಿ ತಯಾರಾದ ಚಲನಚಿತ್ರ (1965) ಅಮರ್ ಶಹೀದ್ ಮೊದಲು ತಮಿಳು ಮತ್ತು ನಂತರ ಹಿಂದಿಯಲ್ಲಿ ತಯಾರಾದ ಚಲನಚಿತ್ರ (1960) ವೀರ ಪಾಂಡ್ಯ ಕಟ್ಟಬೊಮ್ಮನ್ ತಮಿಳು ಮತ್ತು ನಂತರ ತೆಲಗುವಿನಲ್ಲಿ ತಯಾರಾದ ಚಲನಚಿತ್ರ ದಶಾವತಾರ ಭಾರತದ ಪ್ರಮುಖ ಭಾಷೆಗಳಲ್ಲಿ ತಯಾರಾದ ಚಿತ್ರ ( 1964) ಆಕರಗಳು ಮಾಹಿತಿ ನೆರವು ವಿಜಯ ಕರ್ನಾಟಕದಲ್ಲಿ ಪ್ರಕಟಿತ ಲೇಖನ,ಲೇಖಕರು :ಎನ್.ಎಸ್.ಶ್ರೀಧರ ಮೂರ್ತಿ ಕನ್ನಡ ಚಲನಚಿತ್ರ ನಿರ್ದೇಶಕರು ಕನ್ನಡ ಚಲನಚಿತ್ರ ನಿರ್ಮಾಪಕರು ಕನ್ನಡ ಚಿತ್ರರಂಗದ ನಟರು ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು
ಸಿ. ಎನ್. ಮುಕ್ತಾ (ಏಪ್ರಿಲ್ ೩೦, ೧೯೫೧) ಕನ್ನಡದ ಜನಪ್ರಿಯ ಕಥೆಗಾರ್ತಿಯರಲ್ಲಿ ಒಬ್ಬರೆನಿಸಿದ್ದಾರೆ. ಜೀವನ ಸಾಹಿತ್ಯದ ಪರಿಸರ, ಸಾಹಿತಿಗಳ ವಂಶಕ್ಕೆ ಸೇರಿದ ಸಿ.ಎನ್. ಮುಕ್ತಾ ಚಿತ್ರದುರ್ಗದಲ್ಲಿ 1951ರ ಏಪ್ರಿಲ್ 30ರಂದು ಜನಿಸಿದರು. ತಂದೆ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಸಿ.ಬಿ. ನರಸಿಂಹಮೂರ್ತಿ. ಇವರ ಅಣ್ಣ ರಂಗಭೂಮಿ, ಆಕಾಶವಾಣಿ ನಟರಾಗಿದ್ದ ಸಿ.ಬಿ. ಜಯರಾವ್. ಇವರ ಸೋದರಮಾವ, ಕೆಲವು ನೆನಪುಗಳು ಕರ್ತೃ ನವರತ್ನ ರಾಮರಾವ್. ಮುಕ್ತಾ ಅವರ ತಾಯಿ ಕಮಲಮ್ಮ. ಪ್ರಾರಂಭಿಕ ಶಿಕ್ಷಣವನ್ನು ಹೆಗ್ಗಡದೇವನ ಕೋಟೆ ತಾಲ್ಲೂಕಿನ ಸಂತೆ ಸರಗೂರು ಹಾಗೂ ಕೆ.ಆರ್. ನಗರಗಳಲ್ಲಿ ಪಡೆದ ಮುಕ್ತಾರವರು ಮೈಸೂರಿನ ಮಹಾರಾಣಿ ಕಾಲೇಜಿನಿಂದ ಬಿ.ಎ. ಪದವಿ ಮತ್ತು ಸರಕಾರಿ ಕಾಲೇಜಿನಿಂದ ಬಿ.ಎಡ್. ಪದವಿಗಳನ್ನು ಪಡೆದು, ಪ್ರೌಢಶಾಲಾ ಉಪಾಧ್ಯಾಯಿನಿಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಕಥಾಸಕ್ತಿಯ ಚಿಗುರು ಪ್ರೈಮರಿ ಶಾಲೆಯಲ್ಲಿದ್ದಾಗಲೇ ನೀತಿ ಪಾಠದ ತರಗತಿಯಲ್ಲಿ ಚನ್ನಬಸವಯ್ಯ ಎಂಬ ಮಾಸ್ತರರು ಕಾದಂಬರಿಗಳನ್ನು ತಂದು, ಕಣ್ಣಿಗೆ ಕಟ್ಟುವಂತೆ ರಸವತ್ತಾಗಿ ಮಾಡುತ್ತಿದ್ದ ವರ್ಣನೆಗಳಿಂದ ಪ್ರಭಾವಿತರಾದ ಮುಕ್ತಾ ಅವರಿಗೆ ಸಾಹಿತ್ಯದ ಕಡೆ ಒಲವು ಚಿಗುರ ತೊಡಗಿತು. ಮಾಸ್ತರರಿಂದ ಪಡೆದು ಮೊದಲು ಓದಿದ ಕಾದಂಬರಿ ತ.ರಾ.ಸು. ಅವರ ಚಂದವಳ್ಳಿಯ ತೋಟ. ಹೈಸ್ಕೂಲಿಗೆ ಬಂದಾಗ ಪ್ರೋತ್ಸಾಹ ನೀಡಿದವರು ಕನ್ನಡ ಪಂಡಿತೆ ನಾಗಲಕ್ಷ್ಮಮ್ಮನವರು. ಮುಂದೆ ರವೀಂದ್ರನಾಥ ಠಾಕೂರ್, ಶರಶ್ಚಂದ್ರರ ಕಾದಂಬರಿಗಳ ಅನುವಾದಗಳನ್ನೆಲ್ಲಾ ಓದಿದರು. ಕಾಲೇಜಿನಲ್ಲಿ ಅಧ್ಯಾಪಕಿ ಯಾಗಿದ್ದ ಬಿ.ಎಸ್. ರುಕ್ಕಮ್ಮನವರಿಂದ ಪ್ರೇರಿತರಾಗಿ ಚಿತ್ರದುರ್ಗದ ಇತಿಹಾಸದ ಕಾದಂಬರಿಗಳನ್ನು ಓದಿದರು. ಚಿಕ್ಕ ಹುಡುಗಿಯಾಗಿದ್ದಾಗಲೇ ನವರತ್ನ ರಾಮರಾಯರು ಕೆಲವು ನೆನಪುಗಳು ಪುಸ್ತಕ ಕೊಟ್ಟು ಇವರಲ್ಲಿ ಸಾಹಿತ್ಯಾಭಿಲಾಷೆ ಚಿಗುರುವಂತೆ ಮಾಡಿದ್ದರು. ಕಾದಂಬರಿಗಾರ್ತಿಯಾಗಿ ಹೀಗೆ ಓದುತ್ತಾ ಹೋದಂತೆಲ್ಲಾ ಬರೆಯಬೇಕೆಂಬ ತುಡಿತ ಪ್ರಾರಂಭವಾಗುತ್ತಿದ್ದ ದಿನಗಳಲ್ಲಿ, ಅಕ್ಕ ಪದ್ಮಜಾ ಸುಂದರೇಶ್ ಅವರ ಅನಿರೀಕ್ಷಿತ ಕಾದಂಬರಿಯು ಪ್ರಜಾಮತದಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಾಗ, ಇವರಿಗೂ ಕಾದಂಬರಿ, ಕಥೆಗಳನ್ನು ಏಕೆ ಬರೆಯಬಾರದೆನ್ನಿಸಿ ಬರೆದ ಮೊದಲ ಕಾದಂಬರಿ ಆಶ್ರಯ. ಇದನ್ನು ಪ್ರಜಾಮತ ಪತ್ರಿಕೆಗೆ ಕಳುಹಿಸಿದಾಗ, ಸಂಪಾದಕರಾಗಿದ್ದ ಮ.ನ. ಮೂರ್ತಿಯವರು ಓದಿ, ಪ್ರಶಂಸಿಸಿ ಪ್ರಕಟಿಸಿದರು. ಇದೇ ಸಂದರ್ಭದಲ್ಲಿ ಬರೆದ ಹಲವಾರು ಕಥೆಗಳು ಮಲ್ಲಿಗೆ, ಸುಧಾ ಮುಂತಾದ ವಾರಪತ್ರಿಕೆಗಳಲ್ಲೂ ಪ್ರಕಟವಾಗ ತೊಡಗಿತು. ಪ್ರಕಟಿತ ಕಾದಂಬರಿಗಳು ಅನಾವರಣ, ಅಪರಿಚಿತರು, ಅಸ್ವೀಕೃತರು, ಅನುರಾಗ ತಂದ ಅನುಬಂಧ, ಗೆಲುವಿನ ಹೆಜ್ಜೆ, ಕ್ಷಮಯಾಧರಿತ್ರಿ, ಸುಖದ ಸೋಪಾನಗಳು, ದಡ ಸೇರಿದ ನೌಕೆ, ಜೀವನ ಚಕ್ರ, ಅಮೃತಮಯಿ, ಕುಸುಮ ಕಸ್ತೂರಿ, ದುಂಬಿ ಕೊರೆದ ಹೂವು, ಪ್ರೇಮಾಂಜಲಿ, ವಿಮುಕ್ತಿ, ಪರಿಭ್ರಮಣ ಮುಂತಾದ 75 ಕ್ಕೂ ಹೆಚ್ಚು ಕಾದಂಬರಿಗಳು, ಹತ್ತಾರು ಕಿರುಕಾದಂಬರಿಗಳು ಪ್ರಕಟಗೊಂಡಿದ್ದು ಇವುಗಳಲ್ಲಿ ಹಲವಾರು ಕಾದಂಬರಿಗಳು ಸುಧಾ, ಗೆಳತಿ, ಮಲ್ಲಿಗೆ, ಸಂಯುಕ್ತ ಕರ್ನಾಟಕ, ಮಂಜುವಾಣಿ, ವನಿತಾ, ಮಂಗಳ, ಕರ್ಮವೀರ ಮುಂತಾದ ನಿಯತಕಾಲಿಕಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿವೆ. ಸಣ್ಣ ಕತೆ ಮತ್ತು ಇತರ ಬರಹಗಳು ಮುಕ್ತಾ ಅವರ ಸಣ್ಣ ಕಥೆಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲೆಲ್ಲಾ ಪ್ರಕಟಗೊಂಡಿದ್ದು, ವರ್ತುಲ, ಆವರಣ, ಸುಳಿ, ವೃತ್ತಗಳು, ಆವರ್ತನ, ನಮ್ಮನಮ್ಮೊಳಗೆ, ಮೂರು ಮುಷ್ಠಿಯ ಬದುಕು ಮುಂತಾದ ಕಥಾಸಂಕಲನಗಳಲ್ಲಿ ಸೇರಿವೆ. ಒಂದು ಪ್ರಬಂಧ ಸಾಹಿತ್ಯವಲ್ಲದೆ ಮಕ್ಕಳಿಗಾಗಿ ಮೂರು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇದಲ್ಲದೆ ಹಲವಾರು ಶೈಕ್ಷಣಿಕ ಲೇಖನಗಳನ್ನು ಬರೆದಿದ್ದಾರೆ. ಲೇಖಕಿಯರ ಕಥಾ ಸಂಚಯವನ್ನು ಸಂಪಾದಿಸಿದ್ದಾರೆ. ಸಾಹಿತ್ಯದ ಇತರ ಪ್ರಕಾರಗಳಲ್ಲೂ ಅವರ ಸೇವೆ ಸಂದಿದೆ. ಸಿನಿಮಾ, ದೂರದರ್ಶನಗಳಲ್ಲಿ ಸುಖದಸೋಪಾನ, ಕ್ಷಮಯಾಧರಿತ್ರಿ, ದಡ ಸೇರಿದ ನೌಕೆ, ಜೀವನಚಕ್ರ, ಗೆಲುವಿನ ಹೆಜ್ಜೆ, ಅಮೃತಮಯಿ, ಮೌನರಾಗ, ಮುಂತಾದ ಕಾದಂಬರಿಗಳು ದೂರದರ್ಶನದಲ್ಲಿ ಧಾರಾವಾಹಿಗಳಾಗಿ ಪ್ರಸಾರವಾಗಿದ್ದರೆ ಕಿರುಚಿತ್ರಗಳಾಗಿ ಸೆಳೆತ, ಪಾಲು, ಮುಖವಾಡ, ತಾಯಿಕರುಳು ಕಾದಂಬರಿಗಳು ಪ್ರಸಿದ್ಧಿ ಪಡೆದಿವೆ. ವಿಮುಕ್ತೆ ಮತ್ತು ಮೇಘಮಂದಾರ ಕಾದಂಬರಿಗಳು ದೋಣಿಸಾಗಲಿ (ನಿರ್ದೇಶನರಾಜೇಂದ್ರಸಿಂಗ್ ಬಾಬು) ಮತ್ತು ಮಿಸ್ ಕ್ಯಾಲಿಫೋರ್ನಿಯ (ನಿರ್ದೇಶನಕೋಡ್ಲು ರಾಮಕೃಷ್ಣ) ಎಂಬ ಹೆಸರಿನಿಂದ ಚಲನಚಿತ್ರಗಳಾಗಿವೆ. ಪ್ರಶಸ್ತಿ ಗೌರವಗಳು ಸಾಹಿತ್ಯದ ಎಲ್ಲ ಪ್ರಕಾರಗಳ ಬರವಣಿಗೆಯಲ್ಲಿಯೂ ತೊಡಗಿಸಿ ಕೊಂಡಿದ್ದು ನೂರಾರು ಕೃತಿ ರಚಿಸಿರುವ ಸಿ.ಎನ್. ಮುಕ್ತಾರವರಿಗೆ ಆರ್ಯಭಟ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ತ್ರಿವೇಣಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ಸಂದಿವೆ. ಮಾಹಿತಿ ಆಧಾರ ಕಣಜ ಮತ್ತು ಇತರ ಅಂತರಜಾಲ ತಾಣಗಳು ಸಿ.ಎನ್.ಮುಕ್ತಾ ಸಿ.ಎನ್.ಮುಕ್ತಾ ಲೇಖಕಿಯರು
ಪದ್ಮಾ ಶೆಣೈ ಕನ್ನಡಸಾಹಿತ್ಯ ಲೋಕದಲ್ಲಿ ಒಬ್ಬ ಮೇರು ಲೇಖಕಿ.ವೇದಿಕ್ ಮ್ಯಾಥೆಮೇಟಿಕ್ಸ್ ಬರೆದ ಪ್ರಸಿದ್ದ ವಿದ್ವಾಂಸ ಡಿ.ಬಿ.ರಾಮಚಂದ್ರ ಬಾಳಿಗ ಪದ್ಮಾ ಶೆಣೈ ಅವರ ತಂದೆ. ಮೊದಮೊದಲು ಸಣ್ಣಕಥೆಗಳನ್ನು ಬರೆಯಲು ಆರಂಭಿಸಿದ ಪದ್ಮಾ, ಮದುವೆಯ ನಂತರ ಕಾದಂಬರಿಗಳನ್ನು ಬರೆಯಲು ಆರಂಭಿಸಿದರು. ಅವರ ಮೊದಲ ಕಾದಂಬರಿ ರಸವಿರಸ. ಇದಕ್ಕೆ ಕರ್ನಾಟಕ ರಾಜ್ಯಸರ್ಕಾರದ ಪ್ರಶಸ್ತಿ ದೊರೆಯಿತು. ೧೯೪೮ ರಲ್ಲೇ ಬರೆಯಲಿಕ್ಕೆ ಶುರು ಮಾಡಿದ ಪದ್ಮಾ ಶೆಣೈ, ಕಥೆ ಕಾದಂಬರಿಗಳಲ್ಲದೆ ಮಕ್ಕಳ ಸಾಹಿತ್ಯ, ಜೀವನ ಚರಿತ್ರೆ, ಪ್ರವಾಸ ಕಥನ,ವಿಚಾರ ಸಾಹಿತ್ಯ, ಹೀಗೆ ಹಲವಾರು ಪ್ರಕಾರದಲ್ಲಿ ಸಾಹಿತ್ಯ ಕೃಷಿ ಮಾಡುತ್ತಾ ಬಂದಿದ್ದಾರೆ. ಸಮಾಜದಲ್ಲಿನ ವೈವಿದ್ಯವನ್ನೂ, ವೈಪರಿತ್ಯವನ್ನೂ, ಅತೃಪ್ತಿಗಳನ್ನು ತಮ್ಮ ಕೃತಿಯಲ್ಲಿ ಮೂಡಿಸಿರುವುದಲ್ಲದೆ ಅವುಗಳ ಪರಿಹಾರವನ್ನೂ ಸೂಚಿಸಿದ್ದಾರೆ. ಸಾಮಾಜಿಕ ಸಮಾನತೆ, ಕೌಟುಂಬಿಕ ಸಮಸ್ಯೆಗಳುಸಂಬಂಧಗಳು, ಮಹಿಳಾ ಉನ್ನತಿ, ಹೀಗೆ ಸಮಾಜದ ಬಗ್ಗೆ ಲೇಖಕಿಯರಿಗೆ ಇರುವ ಕಳಕಳಿಯನ್ನು ನ್ಯಾಯವೂ ಸಂದರ್ಭೋಚಿತವಾಗಿದೆ ಎಂದು ಸಾರಿ ಹೇಳಿರುವಂತಿರುತ್ತದೆ ಅವರ ಸಾಹಿತ್ಯ. ಕಾದಂಬರಿಗಳು ರಸವಿರಸ ಸಂಧಿಕಾಲ ಕೊನೆಯ ನಿರ್ಧಾರ ನರನಾರಾಯಣ ಜಯಶ್ರೀ ನಾ ನಿನ್ನ ಧ್ಯಾನದೊಳಿರಲು ಅನುಬಂಧ ಅನಿಶ್ಚಿತ ಅನುಗ್ರಹ ಮರೆಯ ನೆರಳು ಉಯ್ಯಾಲೆ ಕಥಾಸಂಕಲನಗಳು ದೂರದ ಆಸೆ ಹರಿದ ಗಾಳಿಪಟ ನೂಲಿನಂತೆ ಸೀರೆ ನೀಳ್ಗತೆ ಪ್ರಭಾ ಉಷಾ ಸುಧಾ ಜೀವನ ಚರಿತ್ರೆ ಮಹಾ ಸನ್ಯಾಸಿ ಪ್ರವಾಸ ಸಾಹಿತ್ಯ ಅಮೇರಿಕಾ ವಾಸಪ್ರವಾಸ ಮಕ್ಕಳ ಸಾಹಿತ್ಯ ದ್ರುಪದಿ ಸಖೂಬಾಯಿ ಫಿರೋಜ್ ಶಾ ಮೆಹೆತ ಛತ್ರ ಸಾಲ ಆಧ್ಯಾತ್ಮಿಕ ಆನಂದ ಕುಟೀರದ ಮಹಾತ್ಮಾಅಜ್ಜ ಆನಂದೋಪನಿಷತ್ತು ಭಾರತೀಯ ಸ್ತ್ರೀ ಸಂಸ್ಕೃತಿ ಮತ್ತು ಸಮಾಜ ಎಂಬ ವೈಚಾರಿಕ ಗ್ರಂಥವನ್ನೂ ಮತ್ತು ಮಹಾಸನ್ಯಾಸಿ ಎಂಬ ಶಂಕರಾಚಾರ್ಯರ ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಅಮೇರಿಕಾವಾಸ ಪ್ರವಾಸ ಎಂಬುದು ಅವರ ಪ್ರವಾಸ ಕಥನ. ಇವರು ಕೊಂಕಣಿಯಲ್ಲೂ ಸಣ್ಣ ಕಥೆಗಳನ್ನು ಬರೆದಿದ್ದಾರೆ. ಸಾಹಿತಿಗಳು ಲೇಖಕಿಯರು
ಹಠವಾದಿ ೨೪ ಮಾರ್ಚಿ ೨೦೦೬ ರಂದು ಬಿಡುಗಡೆಯಾದ ಕನ್ನಡ ಚಲನಚಿತ್ರ. ವಿ. ರವಿಚಂದ್ರನ್ ನಾಯಕತ್ವದ ಈ ಚಿತ್ರದಲ್ಲಿ ರಾಧಿಕಾ ಅವರು ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ವೈಶಿಷ್ಟ್ಯವೆಂದರೆ, ನಾಯಕ ನಟನಾಗಿ ಅಭಿನಯಿಸುವುದರ ಜೊತೆಗೆ ರವಿಚಂದ್ರನ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ, ಸಂಗೀತ, ಸಾಹಿತ್ಯ, ಸಂಕಲನ, ನಿರ್ದೇಶನದ ಜವಾಬ್ದಾರಿಗಳನ್ನು ಹೊತ್ತಿದ್ದಾರೆ. ಯಾರು ಯಾರು ಎಂಬ ಗೀತೆಗೆ ಶ್ರೀ ಚಂದ್ರು ಅವರು ಸಾಹಿತ್ಯ ಒದಗಿಸಿದ್ದಾರೆ. ಕನ್ನಡ ಚಲನಚಿತ್ರಗಳು ವರ್ಷ೨೦೦೬ ಕನ್ನಡಚಿತ್ರಗಳು
ವಿಜಯದಾಸರು (ಕ್ರಿ.ಶ.೧೬೮೨ ೧೭೫೫) ಕನ್ನಡ ಹರಿದಾಸ ಪಂಥದ ಪ್ರಮುಖರಲ್ಲೊಬ್ಬರು.ಅಸಂಖ್ಯಾತ ಸುಳಾದಿಗಳನ್ನು ಬರೆದಿದ್ದಾರೆ.ಇದರಿಂದ ವಿಜಯ ದಾಸರನ್ನು ಸುಳಾದಿ ದಾಸರೆಂದು ಪ್ರಸಿದ್ಧರಾಗಿದ್ದಾರೆ. ಜೀವನ ರಾಯಚೂರು ಜಿಲ್ಲೆ, ಮಾನ್ವಿ ತಾಲೂಕಿನ ಚೀಕಲಪರವಿಯಲ್ಲಿ ಜನನ. ಮೂಲ ಹೆಸರು ದಾಸಪ್ಪ. ತಂದೆ ಶ್ರೀನಿವಾಸಪ್ಪ ಮತ್ತು ತಾಯಿ ಕೂಸಮ್ಮ. ಕಾಶಿಯಲ್ಲಿ ನಾಲ್ಕು ವರ್ಷ ಸಂಸ್ಕೃತ ವಿದ್ಯಾಭ್ಯಾಸವನ್ನು ಪಡೆಯುತ್ತಾರೆ. ತಮ್ಮ ಹದಿನಾರನೆಯ ವಯಸ್ಸಿನಲ್ಲಿ ಅರಳಮ್ಮ ಎನ್ನುವವರನ್ನು ವಿವಾಹವಾಗಿ ಗೃಹಸ್ಥಾಶ್ರಮ ಸ್ವೀಕಾರ. ಪುರಂದರದಾಸರು ಇವರಿಗೆ ಹರಿದಾಸ ದೀಕ್ಷೆಯನ್ನಿತ್ತು, ವಿಜಯವಿಠಲ ಎಂಬ ಅಂಕಿತವನ್ನು ಕೊಟ್ಟರೆಂದು ಹೇಳಲಾಗುತ್ತದೆ. ಸುಮಾರು ೨೫,೦೦೦ ಸುಳಾದಿಗಳು, ಉಗಾಭೋಗಗಳನ್ನು ವಿಜಯದಾಸರು ರಚಿಸಿದ್ದಾರೆ. ಇವರ ಶಿಷ್ಯರು ಗೋಪಾಲದಾಸರು. ಬೃಂದಾವನ ಆಂಧ್ರಪ್ರದೇಶ ದ ಗುಂತಕಲ್ ಹತ್ತಿರ ಚಿಪ್ಪಗಿರಿಯಲ್ಲಿ ಇವರ ದೇಹ ನಿರ್ಯಾಣ ಸ್ಥಳವಿದ್ದು, ಶ್ರೀ ವಿಜಯದಾಸರ ಕಟ್ಟೆಯೆಂದೇ ಪ್ರಖ್ಯಾತವಾಗಿದೆ. ಪ್ರತಿ ವರ್ಷ ಕಾರ್ತೀಕ ಶುಕ್ಲ ದಶಮಿ ದಿನದಂದು ಆರಾಧನೆ ನಡೆಸಲಾಗುತ್ತದೆ. ಕೀರ್ತನೆಗಳು ೧.ಅಂತರಂಗದ ಕದವು ತೆರೆಯಿತಿಂದುಪ ಎಂತು ಪುಣ್ಯದ ಫಲ ಪ್ರಾಪ್ತಿಯಾಯಿತೊ ಎನಗೆ ಅ.ಪ ೨.ಸದಾ ಎನ್ನ ಹೃದಯದಲ್ಲಿ ವಾಸಮಾಡೊ ಶ್ರೀ ಹರಿಪ ನಾದ ಮೂರ್ತಿ ನಿನ್ನ ಪಾದಮೋದದಿಂದ ಭಾವಿಸುವೆಅ.ಪ ೩.ಪರದೇಶಿ ನೀನು ಸ್ವದೇಶಿ ನಾನು ಪ ಪರಮ ಭಾಗವತರ ಬಾ ಹೋಗಿ ಕೇಳೋಣಅ.ಪ ೪.ನಿನ್ನ ದರುಶನಕೆ ಬಂದವನಲ್ಲವೋ ಮಹಾಪಪುಣ್ಯವಂತರ ದಿವ್ಯ ಚರಣ ನೋಡಲು ಬಂದೆಅ.ಪ ೫.ಎಲ್ಲಿದ್ದರೇನು ಹರಿಗಲ್ಲದವನು ಪ ಸಂತತವು ಜಪಿಸಿದರೆ ಸಲ್ಲುವನೆ ಸದ್ಗತಿಗೆ ಅ.ಪ ೬.ಕಾದನಾ ವತ್ಸವ ಹರಿ ಕಾದನುಪ ವೇದವೇದ್ಯ ಸಾಧುವಿನುತ ರಾಧಿಕಾರಮಣ ಕೃಷ್ಣಅ.ಪ ೭.ಕಲ್ಲಿನಿಂದಲಿ ಸರ್ವಫಲ ಬಾಹುದೊ ಪ ಕಲ್ಲು ಭಜಿಸಿದರೆ ಕೈವಲ್ಯ ತೋರುವುದುಅ.ಪ ದೇವರ ನಾಮಗಳು ವಿಜಯದಾಸರ ಒಂದು ಅಪರೂಪದ ದೇವರನಾಮ ಇಲ್ಲಿದೆ. ವಿಜಯದಾಸರು ತಿರುಪತಿ ಶ್ರೀನಿವಾಸನ ದರ್ಶನಕ್ಕೆಂದು ಹೋದಾಗ, ಅಲ್ಲಿ ದೇವರ ದರ್ಶನ ಸಿಗದೆ ನಿರಾಶರಾಗಿ ಇದನ್ನು ರಚಿಸಿದ್ದು ಎಂದು ಹೇಳಲಾಗುತ್ತದೆ. ನಿಂದಾಸ್ತುತಿ ಗಳ ಪ್ರಕಾರಕ್ಕೆ ಸೇರುವ ರಚನೆಯಿದು ೧.ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಲುಂಬ ಕೊಳಗದಲಿ ಹಣಗಳನು ಅಳೆದು ಕೊಂಬ ಇಲ್ಲ ಕಾಸು ಎಂದು ಸುಳ್ಳು ಮಾತಾಡಿದರೆ ಎಲ್ಲವನು ಕಸುಕೊಂಬ ಕಳ್ಳದೊರೆಗೆ ಜಯ ಮಂಗಳಂ ನಿತ್ಯ ಶುಭ ಮಂಗಳಂ ೨.ತನ್ನ ನೋಡೆನೆಂದು ಮುನ್ನೂರು ಗಾವುದ ಬರಲು ತನ್ನ ಗುಡಿಯ ಪೊಕ್ಕ ಜನರಿಗೆಲ್ಲ ಹೊನ್ನು ಹಣಗಳ ಕಸಿದು ತನ್ನ ದರ್ಶನ ಕೊಡದೆ ಬೆನ್ನೊಡೆಯ ಹೊಯ್ಯಿಸುವ ಅನ್ಯಾಯಕಾರಿಗೆ ಜಯ ಮಂಗಳಂ ನಿತ್ಯ ಶುಭ ಮಂಗಳಂ ೩.ಗಿಡ್ಡ ಹಾರುವನಾಗಿ ಒಡ್ಡಿ ದಾನವ ಬೇಡಿ ದುಡ್ಡು ಕಾಸುಗಳಿಗೆ ಕೈಯ ನೀಡಿ ಅಡ್ಡ ಬಿದ್ದ ಜನರ ವಿಡ್ದೂರಗಳ ಕಳೆದು ದೊಡ್ಡವರ ಮಾಳ್ಪ ಸಿರಿ ವಿಜಯ ವಿಠಲಗೆ ಜಯ ಮಂಗಳಂ ನಿತ್ಯ ಶುಭ ಮಂಗಳಂ. ಉಲ್ಲೇಖಗಳು ಧರ್ಮ ಕನ್ನಡ ಸಾಹಿತ್ಯ ದಾಸ ಸಾಹಿತ್ಯ ಸಾಹಿತಿಗಳು
ಎಸ್. ಜಾನಕಿ (ಏಪ್ರಿಲ್ ೨೩, ೧೯೩೮) ಭಾರತದ ಪ್ರಮುಖ ಚಲನಚಿತ್ರ ಹಿನ್ನೆಲೆ ಗಾಯಕಿ. ತಮಿಳು, ತೆಲುಗು, ಕನ್ನಡ, ಮಲಯಾಳಂ, ಒಡಿಯಾ, ಹಿಂದಿ, ಸಿಂಹಳ, ತುಳು, ಬಡಗ, ಬಂಗಾಳಿ, ಉರ್ದು, ಪಂಜಾಬಿ, ಕೊಂಕಣಿ, ಮರಾಠಿ, ಸಿಂಧಿ ಮುಂತಾದ ೧೭ಕ್ಕೂ ಹೆಚ್ಚಿನ ಭಾರತೀಯ ಭಾಷೆಗಳಲ್ಲಿ ೪೮,೦೦೦ಕ್ಕೂ ಹೆಚ್ಚಿನ ಹಾಡುಗಳನ್ನು ಹಾಡಿ ಜನಜನಿತವಾಗಿದ್ದಾರೆ. ನಾಲ್ಕು ಬಾರಿ ಅತ್ಯುತ್ತಮ ಹಿನ್ನೆಲೆಗಾಯಕಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಜಾನಕಿ, ವಿವಿಧ ರಾಜ್ಯಗಳಿಂದ ೨೮ಕ್ಕೂ ಹೆಚ್ಚಿನ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಹೆಚ್ಚಿನ ಹಾಡುಗಳನ್ನು ಕ್ರಮವಾಗಿ ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಹಾಡಿದ್ದಾರೆ. ಜೀವನ ಎಸ್. ಜಾನಕಿ ಅವರು ೨೩ನೇ ಏಪ್ರಿಲ್ ೧೯೩೮ರ ವರ್ಷದಲ್ಲಿ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೇ ಎಂಬ ಗ್ರಾಮದಲ್ಲಿ ಜನಿಸಿದರು. ತಮ್ಮ ಮೂರನೆಯ ವಯಸ್ಸಿನಲ್ಲಿ, ಪೈಡಿಸ್ವಾಮಿ ಎಂಬವರಲ್ಲಿ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದರು. ೧೯೫೬ರ ವರ್ಷದಲ್ಲಿ ಆಕಾಶವಾಣಿ ನಡೆಸಿದ ಸಂಗೀತ ಸ್ಪರ್ಧೆಯಲ್ಲಿ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರಿಂದ ಬಹುಮಾನ ಸ್ವೀಕರಿಸಿದ ಜಾನಕಿ, ಮುಂದೆ ಚೆನ್ನೈಗೆ ಬಂದು ಸಂದರ್ಶನವೂಂದರಲ್ಲಿ ಲತಾ ಮಂಗೇಶ್ಕರ್ ಅವರ ರಸಿಕ್ ಬಲಮಾ ಎಂಬ ಗೀತೆಯನ್ನು ಹಾಡಿ ಪ್ರಸಿದ್ಧ ಎವಿಎಮ್ ಸಂಸ್ಥೆಯವರ ಕಾಂಟ್ರಾಕ್ಟ್ ಪಡೆದರು. ಹಿನ್ನೆಲೆ ಗಾಯಕಿಯಾಗಿ ಐವತ್ತೊಂಬತ್ತು ವರ್ಷಗಳ ಅವಧಿಯಲ್ಲಿ ಅವರು ೧೭ ಭಾಷೆಗಳಲ್ಲಿ ಸುಮಾರು 48 ಸಾವಿರ ಗೀತೆಗಳನ್ನು ಹಾಡಿದ್ದಾರೆ. ಭಾರತದ ಪ್ರಮುಖ ಭಾಷೆಗಳು ಸೇರಿದಂತೆ ಸಿಂಹಳ, ಜಪಾನಿ, ಲ್ಯಾಟಿನ್, ಅರೇಬಿಕ್ ಒಳಗೊಂಡಂತೆ ಹದಿನೇಳು ಭಾಷೆಗಳಲ್ಲಿ ಹಾಡಿದ ಹೆಗ್ಗಳಿಕೆ ಅವರದು. ಚಲನಚಿತ್ರ ರಂಗದ ಪ್ರಾರಂಭದ ವರ್ಷಗಳು ೧೯೫೭ರಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕ ಟಿ.ಚಲಪತಿ ರಾವ್ ಅವರ ತಮಿಳು ಚಿತ್ರ ವಿಧಿಯಿನ್ ವಿಳಯಾಟ್ಟು ಅವರು ಹಾಡಿದ ಪ್ರಥಮ ಚಿತ್ರ. ಮುಂದೆ ತೆಲುಗಿನ ಚಿತ್ರ ಎಂ.ಎಲ್.ಎ, ಕನ್ನಡದ ಕೃಷ್ಣಗಾರುಡಿ ಇವೆಲ್ಲಾ ಒಂದಾದ ನಂತರ ಒಂದೊಂದರಂತೆ ಹರಿದು ಬರಲು ಪ್ರಾರಂಭವಾದುವು. ಮಲಯಾಳಂ ಚಿತ್ರಗಳಲ್ಲಿ ಕೂಡಾ ಹಾಡಲು ಪ್ರಾರಂಭಿಸಿದರು. ಹೀಗೆ ಅವರು ದಕ್ಷಿಣ ಭಾರತದ ಎಲ್ಲಾ ಪ್ರಧಾನ ಭಾಷೆಗಳ ಗಾಯಕಿಯಾದರು. ಜೊತೆಗೆ ಹಿಂದಿಯನ್ನೊಳಗೊಂಡಂತೆ ಭಾರತದ ಬಹಳಷ್ಟು ಭಾಷೆಗಳಲ್ಲಿ ತಮ್ಮ ಗಾನಮಾಧುರ್ಯದ ಸವಿಯನ್ನು ಬಿತ್ತರಿಸಿದರು. ತಮಿಳಿನಲ್ಲಿ ೧೯೫೮ರ ಸುಮಾರಿನಲ್ಲಿ ಅವರು ಹಾಡಿದ ಸಿಂಗಾರವೇಲನೆ ದೇವ ಎಂಬ ಮಹಾನ್ ನಾದಸ್ವರ ವಿದ್ವಾನ್ ಅರುಣಾಚಲಂ ಅವರ ನಾದ ಸ್ವರ ದೊಂದಿಗೆ ಮೇಳೈಸಿ ಹಾಡಿದ ಗೀತೆ ಪ್ರಾರಂಭದ ವರ್ಷಗಳಲ್ಲೇ ಅವರನ್ನು ಅಪ್ರತಿಮ ಗಾಯಕಿ ಎಂದು ಇಡೀ ದೇಶ ಗುರುತಿಸುವಂತೆ ಮಾಡಿತು. ಕನ್ನಡ ಚಿತ್ರ ಹೇಮಾವತಿಯಲ್ಲಿ ಅವರು ಹಾಡಿರುವ ಶಿವ ಶಿವ ಎನ್ನದ ನಾಲಿಗೆ ಏಕೆ? ಎಂಬ ಅನನ್ಯಗೀತೆಯು ಇಡೀ ಭಾರತ ದೇಶದ ಅತ್ಯಂತ ತ್ರಾಸದಾಯಕ ಗೀತೆ ಎನಿಸಿದೆ. ಜಾನಕಿಯವರು ಈ ಹಾಡು ನನ್ನ ಸಂಗೀತ ಜೀವನದಲ್ಲಿ ಭಯಪಟ್ಟು ಹಾಡಿದ ಹಾಡು, ಮತ್ತೆ ಹಾಡಲೂ ಆಗದ ಹಾಡು ಎಂದು ಹೇಳುತ್ತಾರೆ. ಆ ನಂತರದಲ್ಲಿ ಅವರು ಹಾಡಿರುವ ಗೀತೆಗಳ ಸಂಖ್ಯೆ ೪೦,೦೦೦ವನ್ನು ಮೀರಿದೆ. ನಾನು ಹಾಡುವುದೇ ಇಲ್ಲ ! ಆತನ ಕಾಯಕವದು ಒಮ್ಮೆ ಒಂದು ಸಂದರ್ಶನದಲ್ಲಿ ಅವರೊಂದಿಗೆ ಬಹಳಷ್ಟು ವರ್ಷಗಳವರೆಗೆ ಹಾಡುತ್ತ ಬಂದಿರುವ ಡಾ. ಎಸ್. ಪಿ. ಬಾಲಸುಬ್ರಮಣ್ಯಂ ಹೇಳುತ್ತಿದ್ದರು, ನಮ್ಮ ಜಾನಕಮ್ಮ ಇದ್ದಾರಲ್ಲ ಅವರು ಯಾವುದೇ ಗೀತೆಯನ್ನಾಗಲೀ ಒಂದೇ ಪ್ರಾರಂಭದಲ್ಲಿ ತೆಗೆದುಕೊಳ್ಳುವ ರೀತಿ, ತಮ್ಮ ಉಸಿರನ್ನು ಅತ್ಯಂತ ಆಳವಾಗಿ ಗಾನಲಯದಲ್ಲಿ ಸುಲಲಿತವಾಗಿ ಬೆರೆಸುವ ರೀತಿ ಇದೆಯೆಲ್ಲಾ ಅದೊಂದು ಅಸಾಮಾನ್ಯವಾದ ಸಂಗತಿ. ಹಾಡುವ ಪ್ರಾರಂಭದಲ್ಲಿ ಯಾವುದೇ ಹಮ್ಮು, ಬಿಮ್ಮುಗಳ, ಕೆಮ್ಮಿನ ಸಣ್ಣ ಆಚೆ ಈಚೆಗಿನ ಧ್ವನಿಯನ್ನು ಕೂಡಾ ಅವರು ಎಲ್ಲಿಯೂ ಉಂಟು ಮಾಡುವುದಿಲ್ಲ ಎಂಬ ಪ್ರತೀತಿ ಇದೆ. ಎಸ್. ಜಾನಕಿ ಹೇಳುತ್ತಾರೆ ನಾನು ಯಾವುದೇ ವಿಶೇಷ ತಯಾರಿಯನ್ನಾಗಲೀ ಆರೈಕೆಯನ್ನಾಗಲಿ ನನ್ನ ಧ್ವನಿಗೆ ಮಾಡಿಕೊಳ್ಳುವುದಿಲ್ಲ. ಅವರು ಹೇಳುವ ಮತ್ತೊಂದು ಮಾತು ಅವರ ಎಲ್ಲಾ ಸಾಧನೆಗಳ ಗುಟ್ಟು. ಪರಮಾತ್ಮ ಶ್ರೀಕೃಷ್ಣ ಮತ್ತು ಶಿರಡಿ ಸಾಯಿಬಾಬಾ ಅವರ ಭಕ್ತರಾದ ಆಕೆ ಕೇಳುತ್ತಾರೆ ನಾನು ಹೇಗೆ ಹಾಡುತ್ತೇನೆ ಗೊತ್ತೇ?, ಸತ್ಯ ಹೇಳಬೇಕೆಂದರೆ, ನಾನು ಹಾಡುವುದೇ ಇಲ್ಲ. ಶ್ರೀಕೃಷ್ಣ, ಆ ನನ್ನ ಅಂತರಂಗದ ದೈವನಾದ ಆತನ ಕಾಯಕವದು. ಮನಮೋಹಕ ಗೀತೆಗಳು ಎಸ್. ಜಾನಕಿ ಅವರ ಬಗ್ಗೆ ಹೇಳಬೇಕೆಂದರೆ ಮಹಾಸಾಗರದ ಆಳವನ್ನು ಅರಸ ಹೊರಟಂತೆ. ಅವರ ಹಾಡುಗಳ ಬಗ್ಗೆ ಹೇಳುವಾಗ ಈ ಕ್ಷಣಕ್ಕೆ ಬಂದ ನೆನಪುಗಳನ್ನು ಹೇಳಬಹುದೇ ವಿನಃ ಅವರು ಹಾಡಿರುವ ಶ್ರೇಷ್ಠ ಗೀತೆಗಳ ಒಂದು ಸಣ್ಣ ಅಳತೆಯನ್ನು ಕೂಡಾ ನಾವು ಕ್ರಮಿಸಲಾರೆ ವೇನೋ. ನೋಡು ಬಾ ನೋಡು ಬಾ ನಮ್ಮೂರ, ತಾಯೆ ಬಾರ ಮೊಗವ ತೋರೆ ಕನ್ನಡಿಗರ ಮಾತೆಯೇ, ಯುಗ ಯುಗಾದಿ ಕಳೆದರೂ, ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು, ದೋಣಿ ಸಾಗಲಿ ಮುಂದೆ ಹೋಗಲಿ, ಮೂಡಣ ಮನೆಯ ಮುತ್ತಿನ ನೀರಿನ ಎರಕಾವಾ ಹೊಯ್ದ, ಜಯ ಗೌರಿ ಜಗದೀಶ್ವರೀ, ಆಡೋಣ ಬಾ ಬಾ ಗೋಪಾಲ, ನಂಬಿದೆ ನಿನ್ನ ನಾದ ದೇವತೆಯೇ ಅಭಿಮಾನ ತಳೆದ ತಾಯೆ ಭಾರತಿಯೇ, ಭಾರತ ಭೂಶಿರ ಮಂದಿರ ಸುಂದರಿ, ಶರಣು ವಿರೂಪಾಕ್ಷ ಶಶಿಶೇಖರ, ಜ್ಯೋತಿ ಯಾವ ಜಾತಿಯಮ್ಮ ಜಗದೀಶ್ವರೀ, ಬಾನಲ್ಲೂ ನೀನೆ ಭುವಿಯಲ್ಲೂ ನೀನೆ, ಬಿಸಿಲಾದರೇನು ಮಳೆಯಾದರೇನು, ಪೋಗದಿರೆಲೋ ರಂಗ, ಕರೆಯೇ ಕೋಗಿಲೆ ಮಾಧವನ, ಗಗನವು ಎಲ್ಲೋ ಭೂಮಿಯು ಎಲ್ಲೋ, ಪಂಚಮ ವೇದ ಪ್ರೇಮದ ನಾದ, ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ, ಕಂಗಳು ತುಂಬಿರಲು ಕಂಬನಿ ಧಾರೆ, ತುಂಬಿತು ಮನವಾ ತಂದಿತು ಸುಖವಾ, ಪೂಜಿಸಲೆಂದೇ ಹೂಗಳ ತಂದೆ, ಇಂದು ಎನಗೆ ಗೋವಿಂದ ನಿನ್ನಯ ಪಾದಾರವಿಂದವ, ದೇವರ ಆಟ ಬಲ್ಲವರಾರು, ಹೂವೂಂದು ಬೇಕು ಬಳ್ಳಿಗೆ, ರಾಘವೇಂದ್ರ ನೀ ಮೌನವಾದರೆ ನನ್ನ ಗತಿ ಏನು , ಒಲವಿನ ಗೆಳೆಯನೆ ನಿನಗೆ ಕೈ ಮುಗಿವೆ, ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ, ನಾ ಮೆಚ್ಚಿದ ಹುಡುಗನಿಗೆ ಕಾಣಿಕೆ ತಂದಿರುವೆ , ಮೂಕ ಹಕ್ಕಿಯು ಹಾರುತಿದೆ ಹೀಗೆ ಹೇಳುತ್ತಾ ಹೋಗಬಹುದು. ಅವರು ಹಾಡಿರುವ ಭಕ್ತಿಗೀತೆಗಳು ಅನೇಕವಾಗಿದ್ದು ಗಜಮುಖನೆ ಗಣಪತಿಯೇ , ಮಲೆನಾಡಿನ ಈ ಸೊಬಗಿನ ಐಸಿರಿ ಚೆಲುವಿನ ವರ ಶೃಂಗೇರಿ, ಇವಳೇ ವೀಣಾಪಾಣಿ ಮುಂತಾದ ಹಾಡುಗಳಂತೂ ಎಲ್ಲೆಲ್ಲೂ ಭಕ್ತಿಯಿಂದ ತುಂಬಿ ತುಳುಕಿದೆ. ಡಾ. ಎಸ್.ಜಾನಕಿ ಕಂಠದಲ್ಲಿರುವ ಕೆಲವು ಪ್ರಸಿದ್ಧ ಗೀತೆಗಳು ಕಂಗಳು ತುಂಬಿರಲು ಚಂದನದ ಗೊಂಬೆ ಕರೆಯೆ ಕೋಗಿಲೆ ಮಾಧವನ ನವಜೀವನ ಸುಖದ ಸ್ವಪ್ನಗಾನಾ ಮರೆಯದ ಹಾಡು ಗಗನವು ಎಲ್ಲೋ ಭೂಮಿಯು ಎಲ್ಲೋ ಗೆಜ್ಜೆಪೂಜೆ ನಾ ಮೆಚ್ಚಿದ ಹುಡುಗನಿಗೆ ನಾ ಮೆಚ್ಚಿದ ಹುಡುಗ ಬಂದಾ ಬಂದಾ ಮೇಘರಾಜ ಸಿಪಾಯಿ ಹೂವೂಂದು ಬೇಕು ಬಳ್ಳಿಗೆ ಪಾವನ ಗಂಗಾ ಒಲವಿನ ಗೆಳೆಯನೆ ನಿನಗೆ ನಾನಿರುವುದೇ ನಿನಗಾಗಿ ಅರಳಿದೆ ಮುದುಡಿದ ತಾವರೆ ಅರಳಿದೆ ಮುದುಡಿದ ತಾವರೆ ಅರಳಿತು ಕೇಳಿದ್ದು ಸುಳ್ಳಾಗಬಹುದು ರಾಮ ಲಕ್ಷ್ಮಣ ಏಕೋ ಈ ಕೋಪ ಶಂಕರಾ ಭಕ್ತ ಸಿರಿಯಾಳ ಜ್ಯೋತಿ ಯಾವ ಜಾತಿಯಮ್ಮ ಕಾವೇರಿ ಶಿವ ಶಿವ ಎನ್ನದ ನಾಲಿಗೆಯೇಕೆ ಹೇಮಾವತಿ (ಚಲನಚಿತ್ರ) ಏನನೋ ಕೇಳುತಿದೆ ಗಲಾಟೆ ಸಂಸಾರ ತಾಯಿಯ ತಂದೆಯ ಮಮತೆ ಮಧುರ ಸಂಗಮ ಬಾನಲ್ಲೂ ನೀನೆ ಭುವಿಯಲ್ಲೂ ನೀನೆ ಬಯಲುದಾರಿ ಹೊಸ ಬಾಳು ನಿನ್ನಿಂದ ಆಟೊ ರಾಜ ನನ್ನ ಆಸೆ ಹಣ್ಣಾಗಿ ಆಟೊ ರಾಜ ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿಎಂಬ ಯುಗಳ ಗೀತೆಗಳಲ್ಲಿ ಒಲಿದ ಜೀವ ಜೊತೆಯಲಿರಲು ಬಾಳು ಸುಂದರ ಪಿ.ಬಿ.ಎಸ್ ಅವರೊಂದಿಗೆ ಕನ್ಯಾರತ್ನ ಚಿತ್ರದಲ್ಲಿ ಸುವ್ವಿ ಸುವ್ವಿ ಸುವ್ವಾಲೆ, ಹೊಂಬಿಸಲು ಚಿತ್ರದ ಜೀವ ವೀಣೆ ನೀಡು ಮಿಡಿತದ ಸಂಗೀತ, ಗಂಧದ ಗುಡಿ ಚಿತ್ರದಲ್ಲಿ ಪಿ. ಬಿ. ಶ್ರೀನಿವಾಸ್ ಅವರೊಂದಿಗೆ ಪುಟ್ಟ ಹುಡುಗಿಯಂತೆ ಎಲ್ಲೂ ಹೋಗೋಲ್ಲಾ ಮಾಮ ಎಂದು ಹಾಡುವ ಧಾಟಿ, ದೇವರಗುಡಿಯ ಕಣ್ಣು ಕಣ್ಣು ಒಂದಾಯಿತು, ಮುಗಿಯದ ಕಥೆ ಚಿತ್ರದ ಕಂಗಳು ವಂದನೆ ಹೇಳಿದೆ ಹೃದಯವು ತುಂಬಿ ಹಾಡಿದೆ, ಧರ್ಮಸೆರೆ ಚಿತ್ರದ ಈ ಸಂಭಾಷಣೆ, ಹುಡುಗಾಟದ ಹುಡುಗಿ ಚಿತ್ರದ ಬೆಳ್ಳಿಯ ತೆರೆಯ ಮೋಡದ ಮರೆಯ, ವಾಣಿ ಜಯರಾಂ ಅವರ ಜೊತೆಯಲ್ಲಿ ವಿಜಯವಾಣಿ ಚಿತ್ರದ ಮಧುಮಾಸ ಚಂದ್ರಮ, ರಾಜ್ ಅವರ ಜೊತೆಯಲ್ಲಿ ಶ್ರೀನಿವಾಸ ಕಲ್ಯಾಣದ ನಾನೇ ಭಾಗ್ಯವತಿ ಇಂದು ನಾನೇ ಪುಣ್ಯವತಿ, ಬಂಗಾರದ ಹೂವು ಚಿತ್ರದ ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ ಹೀಗೆ ಅವರ ನೂರಾರು ಸುಂದರ ಸುಶ್ರಾವ್ಯ ಹಾಡುಗಳಿವೆ. ಇತರ ಭಾಷೆಗಳಲ್ಲಿ ಪದಿನಾರು ವಯದಿನಿಲೆ ಚಿತ್ರದ ಸಿಂಧೂರ ಪೂವೆ, ಶಂಕರಾಭರಣಂ ಚಿತ್ರದ ಸಾಮಜವರಗಮನ, ಶಂಕರಾಭರಣಮು ಸಾಗರಸಂಗಮಂ ಚಿತ್ರದ ಬಾಲ ಕನಕಮಯ ಚೇಲ ಸುಜನಪರಿಪಾಲ, ಓಂ ನಮಃ ಶಿವಾಯ ಚಂದ್ರ ಕಳಾಧರ ಸಹೃದಯ ಇವೆಲ್ಲಾ ಸ್ಥಿರವಾಗಿ ನಿಂತಿರುವ ಹಾಡುಗಳು. ವಾದ್ಯ ನಾದದೊಡನೆ ಗಾನ ಮೆಳೈಸಿ ತಮಿಳಿನಲ್ಲಿ ಕರೈಕುರುಚ್ಚಿ ಅರುಣಾಚಲಂ ಅವರ ನಾದಸ್ವರದೊಂದಿಗೆ ತಮ್ಮ ಸ್ವರ ಮೇಳೈಸಿ ಅದ್ಭುತವಾಗಿ ಮೂಡಿಸಿದ ಸಿಂಗಾರವೇಲನೆ ದೇವ ಹಾಡಿನಂತೆ, ಕನ್ನಡದಲ್ಲಿ ಬಿಸ್ಮಿಲ್ಲಾ ಖಾನ್ ಅವರ ಶಹನಾಯ್ ಜೊತೆ ತಮ್ಮ ಗಾನವನ್ನು ಮೇಳೈಸಿ ಹೊರತಂದ ಕರೆದರು ಕೇಳದೆ ಗೀತೆ ಕೂಡಾ ಒಂದು ಅಪೂರ್ವ ಗಾಯನವೇ ಸರಿ. ಇಂತಹದ್ದೇ ರೀತಿಯಲ್ಲಿ ಎಸ್ ಜಾನಕಿ ಅವರು ಎಂ.ಎಸ್. ಗೋಪಾಲಕೃಷ್ಣನ್ ಅವರ ಪಿಟೀಲು ವಾದನ, ನಾಮಗಿರಿ ಪೇಟೆ ಕೃಷ್ಣನ್ ನಾದಸ್ವರ ಮತ್ತು ಹರಿಪ್ರಸಾದ್ ಚೌರಾಸಿಯಾ ಅವರ ವೇಣುವಾದನದ ಜೊತೆ ಕೂಡಾ ತಮ್ಮ ಗಾನ ಮಾಧುರ್ಯವನ್ನು ಮೇಳೈಸಿದ್ದಾರೆ. ತಮ್ಮ ಗಾಯನವನ್ನು ನಿಲ್ಲಿಸುವ ನಿರ್ಧಾರ ಹಿರಿಯ ಗಾಯಕಿ ಎಸ್. ಜಾನಕಿ ಅವರು ತಮ್ಮ ಗಾಯನವನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ. ಮಲಯಾಳದ 10 ಕಲ್ಪನಕಳ್ ಚಿತ್ರದ ಅಮ್ಮಪೂವಿನು ಗೀತೆ ಅವರ ವೃತ್ತಿ ಬದುಕಿನ ಕೊನೆಯ ಹಾಡಾಗಲಿದೆ. 1957ರಲ್ಲಿ ತೆರೆಕಂಡ ತಮಿಳು ಚಿತ್ರ ವಿಧಿಯಿನ್ ವಿಳಯತ್ತು ಚಿತ್ರದ ಮೂಲಕ ಹಿನ್ನೆಲೆ ಗಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ ಜಾನಕಿ ಕನ್ನಡ, ತಮಿಳು, ತೆಲುಗು, ಮಲಯಾಳ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ದನಿಯಾಗಿದ್ದಾರೆ. ನನಗೆ ವಯಸ್ಸಾಯಿತು. ಈವರೆಗೆ ಹಲವು ಭಾಷೆಗಳಲ್ಲಿ ಹಾಡಿದ್ದೇನೆ. ನನಗೀಗ ವಿಶ್ರಾಂತಿ ಬೇಕಿದೆ. ನಾನು ಹಾಡುವುದನ್ನು ಇನ್ನು ನಿಲ್ಲಿಸುತ್ತೇನೆ ಎಂದು 78 ವರ್ಷದ ಜಾನಕಿ ಹೇಳಿದ್ದಾರೆ. ಜಾನಕಿ ಅವರು ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ, 32 ಬಾರಿ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ ಗೌರವಗಳು ಆರು ದಶಕಗಳ ಹಾಡುಗಾರಿಕೆಯ ಸಾಧನೆ ಜಾನಕಿ ಅವರಿಗೆ ಹಲವು ಗೌರವಗಳನ್ನು ತಂದುಕೊಟ್ಟಿದೆ. ನಾಲ್ಕು ರಾಷ್ಟ್ರ ಪ್ರಶಸ್ತಿಗಳು, ಸುಮಾರು ಮೂವತ್ತು ರಾಜ್ಯ ಪ್ರಶಸ್ತಿಗಳು ಅವರ ಗಾಯನಕ್ಕೆ ದೊರೆತಿವೆ. ಮೈಸೂರು ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ಇತ್ತು ಸನ್ಮಾನಿಸಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೨೦೧೪ ಭಾರತ ಸರ್ಕಾರದ ೨೦೧೩ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಎಸ್. ಜಾನಕಿ ಅವರಿಗೆ ಘೋಷಿಸಿದಾಗ, ಪದ್ಮ ಪ್ರಶಸ್ತಿಗಳಲ್ಲಿ ದಕ್ಷಿಣ ಭಾರತೀಯರ ಬಗ್ಗೆ ಅಸಡ್ಡೆ ಇರುವುದನ್ನು ವಿರೋಧಿಸಿ, ಎಸ್.ಜಾನಕಿಯವರು ಈ ಪ್ರಶಸ್ತಿಯನ್ನು ತಿರಸ್ಕರಿಸಿದರು. ಇದನ್ನೂ ನೋಡಿ ಬೆಂಗಳೂರು ಲತಾ ವಾಣಿ ಜಯರಾಂ ಉಲ್ಲೇಖಗಳು ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕಿಯರು ಹಿನ್ನೆಲೆ ಗಾಯಕಿಯರು ಕನ್ನಡ ಚಿತ್ರ ಸಂಗೀತ ೧೯೩೮ ಜನನ ಕನ್ನಡ ಗಾಯಕಿಯರು
ಹೊಯಿಸಳ ಆರಗ ಲಕ್ಷ್ಮಣರಾವ್ ಅವರ ಕಾವ್ಯನಾಮ. ಕನ್ನಡಿಗರ ನೆನಪಿನಂಗಳದಿಂದ ಬಹುಪಾಲು ಮಾಸಿಹೋಗಿರುವ ಮಹನೀಯರಲ್ಲಿ ಆರಗ ಲಕ್ಷ್ಮಣರಾವ್ ಅವರೂ ಒಬ್ಬರು. ಎಳೆಯರಿಗೆ ಪುಸ್ತಕ ಬೊಧಿಸುವ ಹೊಯಿಸಳರ ಕವಿತೆ ಮಕ್ಕಳ ಸಾಹಿತ್ಯಕ್ಕೆ ಹೊಸ ಮೆರಗು ಹೊಸ ತಿರುವು ಕೊಟ್ಟ ಶಕಪುರುಷರು. ಸಣ್ಣ ಚಿಣ್ಣ ಹೊನ್ನ ಹಸುಳೆ ನಮ್ಮ ನಾಡದೇವರು, ಇಂದಿನವರು ಮುಂದೆಬೆಳೆದು ಹಣ್ಣು ಕೊಡುವ ಸಸಿಗಳು....ಹೀಗೆಂದು ಮಕ್ಕಳನ್ನು ದೇವರಿಗೆ ಸಮೀಕರಿಸಿ, ಅವರ ಮಾನಸಿಕ ವಿಕಾಸಕ್ಕೆ ಬದುಕಿನ್ನುದ್ದಕ್ಕೂ ಶ್ರಮಿಸಿದವರು. ಕನ್ನಡದ ಮಕ್ಕಳಿಗಾಗಿ ಅನೇಕ ಕವಿತೆಗಳನ್ನು,, ಸಣ್ಣ ಕಥೆಗಳನ್ನು, ಮತ್ತು ಸ್ವಾರಸ್ಯಪೂರ್ಣ ನಾಟಕಗಳನ್ನು ಬರೆದಿದ್ದಾರೆ. ಸಂತಮ್ಮಣ್ಣ ನನ್ನು ಮರೆಯಲಾದೀತೆ?. ಗಾಂಧೀಜಿಯನ್ನು ಶಿಶುಭಾಶೆಯಲ್ಲಿ ಕೀರ್ತಿಸುವ ತಟ್ಟು ಚಪ್ಪಾಳೆ ಪುಟ್ಟ ಮಗು... ಎಂಬ ಕವಿತೆ ಯಾರಿಗೆ ಗೊತ್ತಿಲ್ಲ? ಅವರ ಕಥೆಗಳಲ್ಲಿ ಬಂದಂತಹ ಅಭ್ಯಂಕು, ಪುಟ್ಟರಸು, ವೀರಕುಮಾರ .....ಇಂತ ನೂರಾರು ಪಾತ್ರಗಳು ಕಳೆದ ಶತಮಾನದ ಪೂರ್ವಾರ್ಧದಲ್ಲಿ ಕನ್ನಡನಾಡಿನ ಮಕ್ಕಳನ್ನು ಸೂರೆಗೊಂಡಿದ್ದವು. ಜೀವನ ಹೊಯಿಸಳ ಎಂಬ ಕಾವ್ಯನಾಮದಿಂದ ಮಕ್ಕಳ ಸಾಹಿತಿ ಎಂದೇ ಪ್ರಖ್ಯಾತರಾಗಿದ್ದ ಅರಗ ಲಕ್ಷ್ಮಣರಾಯರು ಮೇ 7, 1893ರಂದು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ ಜನಿಸಿದರು. ಅವರ ತಂದೆ ಸುಬ್ಬಣ್ಣನವರು ಮತ್ತು ತಾಯಿ ಸುಬ್ಬಮ್ಮನವರು. ಖ್ಯಾತಲೇಖಕಿ ಎಂ. ಕೆ. ಇಂದಿರ, ಇವರ ಸೋದರ ಸಂಬಂಧಿ. ಖ್ಯಾತ ಕನ್ನಡ ಚಲನಚಿತ್ರ ಸಾಹಿತಿ, ನಿರ್ಮಾಪಕ, ನಿರ್ದೇಶಕ, ನಟನಾಟಕಕಾರರಾದ ಸಿ.ವಿ.ಶಿವಶಂಕರ್ ಅವರು ಲಕ್ಷ್ಮಣರಾಯರ ಅಳಿಯ ಲಕ್ಷ್ಮಣರಾಯರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾಭ್ಯಾಸ ನರಸಿಂಹರಾಜಪುರದಲ್ಲಿ ನೆರವೇರಿತು. ಅವರ ಪ್ರೌಢಶಾಲಾ ವ್ಯಾಸಂಗ ಮೈಸೂರಿನಲ್ಲಿ ನಡೆಯಿತು. ಅನಿಬೆಸೆಂಟರು ಮದನಪಲ್ಲಿಯಲ್ಲಿ ಸ್ಥಾಪಿಸಿದ್ದ ನ್ಯಾಷನಲ್ ಕಾಲೇಜಿನಿಂದ ಅವರು ಬಿ. ಎ. ಪದವಿ ಪಡೆದರು. ಕಾಲೇಜಿನಲ್ಲಿದ್ದಾಗಲೇ ಅನಿಬೆಸೆಂಟ್, ಸಿ.ಎಫ್. ಆಂಡ್ರೂಸ್, ಮತ್ತು ಕಸಿನ್ಸ್ ಅವರುಗಳ ಪ್ರಭಾವಕ್ಕೊಳಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ್ದರಿಂದ ವಿದ್ಯಾಭ್ಯಾಸಕ್ಕೆ ತಡೆಯುಂಟಾಯಿತು. ೧೯೧೯ರಲ್ಲಿ ಶಾಂತಿನಿಕೇತನಕ್ಕೆ ತೆರಳಿ ಸುಮಾರು ೨ ವರ್ಷಗಳ ಕಾಲವಿದ್ದು ಬಂದನಂತರ ಇವರ ಬದುಕಿನ ರೀತಿಯೇ ಬದಲಾಯಿತು. ೧೯೨೨ರಲ್ಲಿ ಚನ್ನಪಟ್ಟಣದ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ನೇಮಕಗೊಂಡು ವಿವಿದೆಡೆಗಳಲ್ಲಿ ನಿವೃತ್ತರಾಗುವವರೆವಿಗೂ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಲಕ್ಷ್ಮಣರಾಯರಿಗೆ ಅಧ್ಯಾಪಕ ವೃತ್ತಿ ಬಹಳ ತೃಪ್ತಿ ತಂದುಕೊಟ್ಟ ವೃತ್ತಿಯಾಗಿತ್ತು. ನಿವೃತ್ತಿಯ ನಂತರ ಬೆಂಗಳೂರು ಆಕಾಶವಾಣಿಯಲ್ಲಿ ಮಕ್ಕಳ ಕಾರ್ಯಕ್ರಮ ನಿರ್ವಾಹಕರಾಗಿ ಕೆಲಕಾಲ ಕಾರ್ಯನಿರ್ವಹಿಸಿದ ಅವರು, ಪ್ರಜಾವಾಣಿ ಪತ್ರಿಕೆಯ ಬಾಲಭಾರತಿ ಮಕ್ಕಳ ವಿಭಾಗವನ್ನು ಕೆಲಕಾಲ ನಡೆಸಿ ಮಕ್ಕಳ ಪ್ರೀತಿಯ ಅಣ್ಣಾಜಿಯಾದರು. ಸಾಹಿತ್ಯ ಮಕ್ಕಳು ಹಾಡಿ ನಲಿಯುವಂತಹ ಅನೇಕ ಪದ್ಯಗಳನ್ನು ರಚಿಸಿದ ಲಕ್ಷಣರಾಯರು ಪ್ರಧಾನವಾಗಿ ಮಕ್ಕಳ ಕವಿ ಎನಿಸಿಕೊಂಡವರು. ಹೊಯಿಸಳರ ಮಕ್ಕಳ ಕವಿತೆಗಳ ಭಾಷೆ ತುಂಬಾ ಸರಳ. ಮಕ್ಕಳನ್ನು ಆಕರ್ಷಿಸುವ ಲಯವೈವಿಧ್ಯ, ವಸ್ತುವೈವಿಧ್ಯಗಳಿವೆ. ಅನೇಕ ಕವಿತೆಗಳಲ್ಲಿ ನವಿರಾದ ಹಾಸ್ಯಲೇಪವಿದೆ. ಆದ್ದರಿಂದ ಹೊಯಿಸಳರ ಪದ್ಯಗಳು ಈಗಲೂ ಮುದ್ದು ಪುಟಾಣಿಗಳಿಗೆ ಖುಶಿಕೊಡುವಂತಿದೆ. ಹೊಯಿಸಳರ ಕನ್ನಡ ಪ್ರೇಮವನ್ನು ತಮ್ಮದೇ ರೀತಿಯಲ್ಲಿ ಮುಂದುವರೆಸುವಲ್ಲಿ ಯಶಸ್ವಿಯಾದವರು ಮಕ್ಕಳಿಗಾಗಿಯೇ ನೂರಾರು ಪದ್ಯಗಳು, ಸುಮಾರು ೩೫ ಕಥೆಗಳು ಮತ್ತು ೫ ನಾಟಕಗಳನ್ನು ಅವರು ರಚಿಸಿದರು. ತಿರುಗಮುರುಗ ಎಂಬ ಇವರ ಚೊಚ್ಚಲ ಪದ್ಯ ಪ್ರಬುದ್ಧ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ಏಳುವ ಹೊತ್ತು ಇವರ ಪ್ರಥಮ ಕವನ ಸಂಕಲನ. ನಂತರ ಬಂದದ್ದು ಕಂಕಣ. ಇವರ ಆಯ್ದ ಪದ್ಯಗಳ ಸಂಕಲನ ಬಂದ ಬಂದ ಸಂತಂಮಣ್ಣ. ಕಂಕಣ ಸಂಕಲನದಲ್ಲಿರುವ ಕಾಂಪೌಂಡ್ ಬಂಗ್ಲಿ ಕಂಕಮ್ಮಂಗೆ ಮೂಛೆ ಬಂದಿತ್ತು ಇವರ ಪ್ರಸಿದ್ಧ ಕಥನ ಕವನ. ಇದನ್ನು ಇವರು ಹಲವಾರು ಕಾರ್ಯಕ್ರಮಗಳ ನಡುವಿನ ಬಿಡುವಿನ ಸಮಯಗಳಲ್ಲಿ ಅಭಿನಯಪೂರ್ವಕವಾಗಿ ಹಾಡಿ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಮಗುವಿನ ಕೂಗು, ಚಂದಮಾಮ, ಕೋಲುಕುದುರೆ, ಕೋಗಿಲೆ ಮುಂತಾದವು ಅವರ ಇತರ ಕವನ ಸಂಕಲನಗಳು. ಸಂತಂಮಣ್ಣ, ಚಂದುಮಾಮ, ಒಂದು ಎರಡು ಮೂರು, ಕೋಲು ಕುದುರೆ, ತಟ್ಟುಚಪ್ಪಾಳೆ ಪುಟ್ಟ ಮಗು, ನಂಗೊತ್ತಿಲ್ಲಪ್ಪಾ ಮುಂತಾದವು ಹೊಯಿಸಳರ ಜನಪ್ರಿಯ ಮಕ್ಕಳ ಪದ್ಯಗಳು. ತಾವು ರಚಿಸಿದ್ದಷ್ಟೇ ಅಲ್ಲದೆ ಇತರ ಉತ್ತಮ ಶಿಶು ಸಾಹಿತ್ಯವನ್ನೂ ಆರಿಸಿ ಮಕ್ಕಳಿಗಾಗಿ ಒದಗಿಸಿದ್ದರು. ಹೊಯಿಸಳರು ರಚಿಸಿದ ಮಕ್ಕಳ ಕಥೆಗಳು ಹೂವಿನ ಹಾಸಿಗೆ, ಪುಟ್ಟರಸು, ಪಠಾಕಿ, ಅನ್ಬುಬಾಟ, ಅದಕ್ಕೆ ಆ ಹೆಸರು, ಆನೆ ಇರುವೆ, ಗಂಟೆಗೋಪುರ, ಖೈದಿಗಳ ಕಷ್ಟ, ಪುಟ್ಟ ತಮ್ಮ ಯಾರು, ಪೋರಿ, ಬದುಕುವ ಮಂತ್ರ, ನಿಶ್ಚಲದಾಸ, ಅಭ್ಯಂಕು, ವೀರಕುಮಾರ, ಮಸೀದಿಯನ್ನು ಎಲ್ಲಿ ಕಟ್ಟಿದರು, ಶುಭಾಂಗ, ಬೋರನೆಟ್ಟ ಮೂಲಂಗಿ, ರಾಜನ ಬುದ್ಧಿವಂತಿಕೆ ಮುಂತಾದವುಗಳು. ಆ ಕಾಲದಲ್ಲಿ ಹೊಯಿಸಳರ ಮಕ್ಕಳ ಕತೆಗಳಿಗಾಗಿ ಮಕ್ಕಳಲ್ಲದೆ ದೊಡ್ಡವರೂ ಕಾಯುತ್ತಿದ್ದುದು ವಿಶೇಷ. ಹೊಯಿಸಳರು ದೊಡ್ಡವರಿಗಾಗಿ ಬರೆದ ಕೃತಿಗಳೆಂದರೆ ಕಂಚಿನ ಕನ್ನಡಿ, ಕಂಕಣ, ದಿನಾರಿ, ಹಾಡಿನ ಚಿಲುಮೆ, ಪರಿಷತ್ತಿನ ಲಾವಣ, ಗೆಲುವುಗುರಾಣಿ ಮುಂತಾದವುಗಳು ಹೊಯಿಸಳರು ಮಗು, ಪ್ರಸಾದ, ವಾತಾಪಿ, ಚಂದ್ರಹಾಸ, ಅಗಲಿದ ಮಗಳು, ಮಳ್ಳ ಎಂಬ ೫ ನಾಟಕಗಳನ್ನೂ ಮಕ್ಕಳಿಗಾಗಿ ರಚಿಸಿದ್ದಾರೆ. ಜಗತ್ತಿನ ಮೊದಲಕತೆ ಈಜಪ್ತಿನ ಅನ್ಬುಬಾಟ, ಠಾಕೂರರ ವಸಂತ, ನೆಹರೂರವರ ಮಗಳಿಗೆ ತಂದೆಯ ಓಲೆಗಳು ಮುಂತಾದವು ಇವರ ಮುಖ್ಯ ಅನುವಾದಗಳು. ಹೊಯಿಸಳರು ಮಕ್ಕಳಿಗಾಗಿಯೇ ಕನಕ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರಾದರೂ ಸಾಕಷ್ಟು ಚಂದದಾರರು ದೊರೆಯದೆ ಹಣಕಾಸಿನ ತೊಂದರೆಯಿಂದಾಗಿ ಪ್ರಕಟಣೆಯನ್ನು ನಿಲ್ಲಿಸಬೇಕಾಯಿತು. ಇವರ ಕೃತಿಗಳನ್ನೆಲ್ಲಾ ಪ್ರಕಟಿಸಿದ ಹೆಗ್ಗಳಿಕೆ ಮೈಸೂರಿನ ಕಾವ್ಯಾಲಯ ಪ್ರಕಾಶನಕ್ಕಿದೆ. ವಿದಾಯ ಮಕ್ಕಳ ಸಾಹಿತ್ಯಕ್ಕೆ ಒಂದು ಹೊಸ ಆಯಾಮವನ್ನು ತಂದುಕೊಟ್ಟ ಅಗ್ಗಳಿಕೆಯ ಹೊಯಿಸಳರು ಹೆಸರಿಗಾಗಿ ಹಂಬಲಿಸಿದವರೇ ಅಲ್ಲ. ಜೀವಿತಾವಧಿಯಲ್ಲಿ ಬಹಳಷ್ಟು ಬರೆದು ಹಿರಿಕಿರಿಯರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದ ಅರಗ ಲಕ್ಷ್ಮಣರಾಯರು ೧೯೫೯ರ ಅಕ್ಟೋಬರ್ ೧೦ರಂದು ಈ ಲೋಕವನ್ನಗಲಿದರು. ಹೊಯಿಸಳರ ಕವಿತೆ ಪುಸ್ತಕ ಪುಸ್ತಕ ಮಾತನು ಹೇಳುತಿದೆ ಚಿತ್ತವ ಹತ್ತಿಸಿ ಕೇಳು ಒಳ್ಳೆಯ ಕಡೆಯಲಿ ಇಡು ನನ್ನ ಬೀರೂ ಪೆಟ್ಟಿಗೆ ಬಲು ಚೆನ್ನ ಬೀಳದೆ ಧೂಳು ಇಹಪರಿ ಮೇಲೆ ಬೇರೊಂದಟ್ಟೆಯ ಹೊಂದಿಸು, ಮಗು ಜನಗಳ ಕಾಲಡಿ ಹಾಕದಿರು ಕಿವಿಗಳ ನಿತ್ಯ ಮಡಿಸದಿರು ಹಾಳೆಯ ಮಡಿಸಿ ಬೋರಲು ಇರಿಸಿ ಕಷ್ಟಕೆ ಸಿಕ್ಕಿಸಬೇಡ, ಮಗು ನನ್ನಯ ತಿರುಳು ಕಾಡಿನದು ನನ್ನಯ ಅರಿವು ನಾಡಿನದು ಬೆಂಕಿಲಿ ಬೆಂದು ನೀರಲಿ ನೆಂದು ಯಂತ್ರವ ಹೊಕ್ಕು ಬಂದೆ, ಮಗು ಏನೊಂದಾದರು ಕೇಳು, ಮಗು ಯಾವಾಗೆಂದರೆ ಹೇಳುವೆನು ಬೇಸರವಿಲ್ಲದೆ ಸೇವಿಪೆನಲ್ಲವೆ ನನ್ನೇಕಿನ್ನೂ ನೋಯಿಸುವೆ? ತೂಕಡಿಸುತ್ತಾ ಮುಟ್ಟದಿರು ಅರೆಗಣ್ಣಾಗಿರೆ ತೆರೆಯದಿರು ಕಡ್ಡಿಯ ಸಿಕ್ಕಿ ತಲೆಯಡಿ ಅಡಕಿ ಗೊರಕೆಯ ಹೊಡೆಯದೆ ಇರು ಮಗುವೆ ಮೇಜಿನ ಮೇಲೆ ಚೌಕವಿದೆ ಮೊಗಮೇಲಾಗಿಡು, ಹೂವು ಇಡು ಕೈಗಳ ತೊಳೆದು ಚೌಕದಿ ತೊಡೆದು ಆಮೇಲೆನ್ನನು ಓದು ಮಗು (ಚಂದಮಾಮ ಸಂಕಲನದಿಂದ) ಮಾಹಿತಿ ಕೃಪೆ ಕಣಜ ಮತ್ತು ಮೋಹನ್ ವೆರ್ಣೇಕರ್ ಅವರ ಶತಸಾಹಿತ್ಯ ಪ್ರತಿಭೆ ಹೊರಗಿನ ಕೊಂಡಿ ಚಿಲುಮೆ ಅಂತರ್ಜಾಲ ತಾಣದಲ್ಲಿರುವ ಹೊಯಿಸಳರ ಬರಹಗಳು ಸಾಹಿತಿಗಳು ಶಿಶು ಸಾಹಿತ್ಯ
ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಅಂಬರೀಶ್, ಅಂಬಿಕಾ, ವಜ್ರಮುನಿ, ಮುಖ್ಯಮಂತ್ರಿ ಚಂದ್ರು, ಶಿವರಾಮ, ಸುಧೀರ್, ವಿಶ್ವ ವಿಜೇತ, ಕಾಂಚನಾ ರವರು ಕಾಣಿಸಿಕೊಂಡಿದ್ದರು. ಪ್ರೇಮಾಲಯ ಪಿಕ್ಚರ್ಸ್ನ ಬ್ಯಾನರ್ನಲ್ಲಿ ಈ ಚಿತ್ರ ಮೂಡಿಬಂದಿತ್ತು. ಈ ಚಿತ್ರದ ನಿರ್ಮಾಪಕ ಆರ್ ವೆಂಕಟರಾಮನ್. ಈ ಚಿತ್ರದ ಸಹನಿರ್ಮಾಪಕರು ಬಿ ರಾಮಾನುಜಾಚಾರ್ಯರು ಮತ್ತು ಪಂಡಿತ್. ಈ ಚಿತ್ರದ ನಿರ್ಮಾಣ ವಸ್ಥಾಪಕ ಪ್ರಸನ್ನ, ವಿಶುಕುಮಾರ್, ಮನೊಹರನ್. ವರ್ಷ೧೯೮೫ ಕನ್ನಡಚಿತ್ರಗಳು
ವಾದಿರಾಜರು (ಕ್ರಿ.ಶ. ೧೪೮೦ ೧೬೦೦) ಕನ್ನಡ ಹರಿದಾಸ ಪಂಥದ ಪ್ರಮುಖರಲ್ಲೊಬ್ಬರು.ಇವರು ವ್ಯಾಸರಾಯರ ಪ್ರಮುಖ ಶಿಷ್ಯರಲ್ಲಿ ಸೋದೆಯ ಮಠಾಧಿಪತಿಗಳಾಗಿದ್ದ ವಾದಿರಾಜರೂ ಒಬ್ಬರು.ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಅಪಾರ ಪಾಂಡಿತ್ಯವನ್ನು ಪಡೆದಿದ್ದರು. ಆತನು ಕವಿತೆ ತರ್ಕಬದ್ಧವಾದುದು.ಇವರ ವಾಗ್ವೈಖರಿಯನ್ನು ಮೆಚ್ಚಿದ ವಿಜಯನಗರ ಸಾಮ್ರಾಜ್ಯದ ರಾಜ ಶ್ರೀಕೃಷ್ಣದೇವರಾಯನು ಇವರಿಗೆ ಪ್ರಸಂಗಾಭರಣ ತೀರ್ಥ ಎಂಬ ಬಿರುದನ್ನು ನೀಡಿ ಗೌರವಿಸಿದರು.ಶ್ರೀಹರಿ ಭಕ್ತಿಯನ್ನು ಕೀರ್ತನೆಗಳ ಮೂಲಕ ಜನ ಸಾಮಾನ್ಯರಿಗೆ ತಿಳಿಕನ್ನಡದಲ್ಲಿ ಸರಳವಾಗಿ ಅರ್ಥವಾಗುವಂತೆ ಮಾಡಿದರು.ಅಷ್ಟ ಮಠಗಳಲ್ಲಿ ಈಗ ನಡೆಯುವ ಪರ್ಯಾಯೋತ್ಸವ ಪದ್ಧತಿಯನ್ನು ಪ್ರಾರಂಭಿಸಿದರು. ಜೀವನ ಉಡುಪಿ ಜಿಲ್ಲೆಯಲ್ಲಿರುವ ಹೂವಿನಕೆರೆ ಎಂಬ ಗ್ರಾಮದಲ್ಲಿ ಜನನ. ತಂದೆ ರಾಮಾಚಾರ್ಯ ಮತ್ತು ತಾಯಿ ಸರಸ್ವತಿದೇವಿ. ಪೂರ್ವಾಶ್ರಮದ ಹೆಸರು ಭೂವರಾಹ. ಅವರ ಇಷ್ಟ ದೈವ ಶ್ರೀಹರಿ ಅವರಿಗೆ ಹಯವದನ ಅಥವಾ ಕುದುರೆಯ ರೂಪದಲ್ಲಿ ದರ್ಶನ ಕೊಟ್ಟನಂತೆ.ತಮ್ಮ ಎಂಟನೆಯ ವಯಸ್ಸಿನಲ್ಲಿ ಸನ್ಯಾಸಾಶ್ರಮವನ್ನು ಸ್ವೀಕರಿಸಿದ ವಾದಿರಾಜರ ಸನ್ಯಾಸ ಜೀವನದ ಅವಧಿ ೧೧೨ ವರ್ಷಗಳು. ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನ ಸೋಂದಾ ಕ್ಷೇತ್ರದಲ್ಲಿ ಮಠ ಮತ್ತು ಇವರ ಬೃಂದಾವನವಿದೆ. ಸಾಹಿತ್ಯ ಕೃತಿಗಳು ಕನ್ನಡದಲ್ಲಿ ಹಯವದನ ಎಂಬ ಅಂಕಿತ ನಾಮದಲ್ಲಿ ಅನೇಕ ದೇವರನಾಮಗಳು, ಕೀರ್ತನೆಗಳು, ಸುಳಾದಿ, ಉಗಾಭೋಗ,ವೃತ್ತನಾಮಗಳನ್ನು ರಚಿಸಿದ್ದಾರೆ.ಶಾಸ್ತ್ರೀಯ ಯುಕ್ತಿಗಳನ್ನು ಸಾಹಿತ್ಯ ಮುದ್ರೆಯಿಂದ ಮನಸ್ಸಿಗೆ ನೆಡುವಂತೆ ಸರಳವಾದ ಪ್ರೌಢ ಕನ್ನಡ ನುಡಿಯಲ್ಲಿ ಮುಖ್ಯ ಪ್ರಮೇಯವಾದ ಭಕ್ತಿಯಿಂದ ಶ್ರೀಹರಿಯನ್ನು ಒಲಿಸಿ ಮುಕ್ತಿಯನ್ನು ಪಡೆಯಬೇಕೆಂಬುದನ್ನು ಸಿದ್ಧಾಂತಿಸಿದ್ದಾರೆ. ೧.ವೈಕುಂಠವರ್ಣನೆ ಸಾಂಗತ್ಯ . ೨.ಸ್ವಪ್ನಗದ್ಯ ಭಾಮಿನಿ ಷಟ್ಪದಿ. ೩.ಲಕ್ಷ್ಮಿಯ ಶೋಭಾನೆ ಹಾಡು. ೪.ಕೀಚಕವಧ. ೫.ಕೇಶವನಾಮ. ೫.ಗುಂಡಕ್ರಿಯೆ. ೬.ಭಾರತತಾತ್ಪರ್ಯನಿರ್ಣಯ ಟೀಕೆ ಟೀಕೆ (ಲಾಕ್ಷಾಭರಣಿ). ಕಾವ್ಯಗಳೆ ಆಗಲಿ, ಕೀರ್ತನೆಗಳೆ ಆಗಲಿ, ಅವುಗಳ ತಿರುಳು ಒಂದೇದ್ವೈತ ವೇದಾಂತ ತತ್ವಗಳ ನಿರೂಪಣೆ.ಇವರ ಕನ್ನಡ ಸಾಹಿತ್ಯ ಬಹುಮಟ್ಟಿಗೆ ಶಾಸ್ತ್ರೀಯವಾದುದಾಗಿದೆ. ವಾದಿರಾಜರು ರಚಿಸಿರುವ ಲಕ್ಷೀಶೋಭಾನ ಪದವನ್ನು ಮದುವೆ ಮನೆಯಲ್ಲಿ ಹಾಡಿದರೆ ಮದುಮಕ್ಕಳಿಗೆ ಶುಭವಾಗುತ್ತದೆಂಬ ನಂಬಿಕೆ ಇದೆ. ಲಕ್ಷೀಶೋಭಾನದಲ್ಲಿ ಬರುವ ಈ ಚರಣ ಆದಕ್ಕೆಕಾರಣವಾಗಿರಬಹುದು ಮದುವೆಯ ಮನೆಯಲ್ಲಿ ಈ ಪದವ ಪಾಡಿದರೆ ಮದುಮಕ್ಕಳಿಗೆ ಮುದವಹುದು ವಧುಗಳಿಗೆ ಓಲೆ ಭಾಗ್ಯ ದಿನದಿನಕೆ ಹೆಚ್ಚುವುದು ಮದನನಯ್ಯನ ಕೃಪೆಯಿಂದ. ಕೀರ್ತನೆಗಳು ೧.ತಾಳುವಿಕೆಗಿಂತ ತಪವು ಇಲ್ಲ ಪ ಕೇಳ ಬಲ್ಲವರಿಗೆ ಹೇಳುವೆನು ಸೊಲ್ಲ ಅ.ಪ. ೨.ಹಣವೆ ನಿನ್ನಯ ಗುಣವೇನು ಬಣ್ಣಿಪೆನೊ ಪ ಹಣವಿಲ್ಲದವನೊಬ್ಬ ಹೆಣವೇ ಸರಿ ಕಂಡ್ಯಾ ಅ.ಪ. ೩.ಮಂಡೆ ಬೋಳಾದರೇನು ಮನಶ್ಯುಧ್ಧಿಯಿಲ್ಲವು ಪಕಂಡು ಹಯವದನ ನನ್ನ ಒಲಿಸಿಕೊಂಡು ಧಾನ್ಯ ಅ.ಪ. ೪.ಲಕ್ಷ್ಮೀರಮಣಗೆ ಮಾಡಿದಳು ಉರುಟಾಣಿ ಪ ಇಳೆಯೊಳಗತಿಜಾಣಿ ಸುಂದರ ಫಣಿವೇಣಿ ಅ.ಪ. ಹೊರಗಿನ ಸಂಪರ್ಕಗಳು ಸಮಗ್ರ ದಾಸ ಸಾಹಿತ್ಯ ಉಲ್ಲೇಖ ಕನ್ನಡ ಸಾಹಿತಿಗಳು ದಾಸ ಸಾಹಿತ್ಯ ಹಿಂದೂ ಧರ್ಮ
ಶ್ರೀಪಾದರಾಜರು (೧೩೮೯ ೧೪೮೭) ಕನ್ನಡ ಹರಿದಾಸ ಸಾಹಿತ್ಯದ ಪಿತಾಮಹರು ಶ್ರೀಪಾದರಾಜರು. ಸರಳ ಕನ್ನಡ ಭಾಷೆಯಲ್ಲಿ ಧರ್ಮಗ್ರಂಥಗಳನ್ನು ಪರಿವರ್ತಿಸಬೇಕೆಂಬ ಅಭಿಲಾಷೆ ಇವರಲ್ಲಿ ಉಂಟಾದದು ಅಂದಿನ ಪರಿಸ್ಥಿತಿಯಲ್ಲಿ ಕ್ರಾಂತಿಕಾರಕವೇ ಆಗಿತ್ತು. ಇದಕ್ಕಾಗಿ ಭಾಗವತ ತಂಡವೊಂದನ್ನು ಏರ್ಪಡಿಸಿ ಪೂಜಾಕಾಲದಲ್ಲಿ ವೇದ ಪಾರಾಯಣ ಮಾಡಿದಂತೆ ಭಾಗವತರ ಮೂಲಕ ಕನ್ನಡ ದೇವರನಾಮಗಳನ್ನು ಹಾಡಿಸಿದರು. ಹೀಗೆ ಕನ್ನಡ ಗೀತೆಗಳಿಗೆ ಆಧ್ಯಾತ್ಮಿಕ ತತ್ವಗಳ ಸ್ಥಾನಮಾನವನ್ನು ಕಲ್ಪಸಿದರ ಜೊತೆಗೆ ಅವುಗಳ ಮೂಲಕ ದ್ವೈತ ವೇದಾಂತ ತತ್ವವನ್ನು ಅಚ್ಚಕನ್ನಡದಲ್ಲಿ ಜನ ಸಾಮಾನ್ಯರಿಗೆ ಸರಳವಾಗಿ ಅರ್ಥವಾಗುವಂತೆ ಮಾಡಿದರು. ಜೀವನ ಶ್ರೀಪಾದರಾಜರ ಜನ್ಮ ಸ್ಥಳ ಚನ್ನಪಟ್ಟಣ ತಾಲೂಕಿನಲ್ಲಿ ಅಬ್ಬೂರು. ಮೂಲ ಹೆಸರು ಲಕ್ಷ್ಮೀನಾರಾಯಣ. ತಂದೆಯ ಹೆಸರು ಶೇಷಗಿರಿಯಪ್ಪ. ತಾಯಿ ಗಿರಿಯಮ್ಮ. ಗುರು ಸ್ವರ್ಣವರ್ಣತಿರ್ಥರು. ಇವರನ್ನು ಶಿಷ್ಯನಾದ ವ್ಯಾಸರಾಯರನು ಆದಿಶೇಷನ ಪೋಲ್ವ ಮುನಿ ಎಂದೂ , ಪುರಂದರದಾಸನ ಮಗ ಮಧ್ವಹರಿದಾಸ ವರುಧ್ರುವನ ಅವತಾರ ಎಂದೂ ಸಂಭಾವಿಸಿರುವುದು ಸಾರ್ಥಕವಾಗಿದೆ. ಇವರ ಪ್ರಮುಖ ಶಿಷ್ಯರು ವ್ಯಾಸತೀರ್ಥರು. ಬೃಂದಾವನ ಶ್ರೀಪಾದರಾಜರು ಕರ್ನಾಟಕದ ಕೋಲಾರ ಜಿಲ್ಲೆಯ ಮುಳಬಾಗಿಲು ಎನ್ನುವ ಗ್ರಾಮದಲ್ಲಿ ವಿದ್ಯಾ ಕೇಂದ್ರವನ್ನು ಸ್ಥಾಪಿಸಿದರು. ಇಲ್ಲಿ ಮಠ ಮತ್ತು ಬೃಂದಾವನವಿದೆ. ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ಹರಿಭಕ್ತಿಯ ಹಿರಿಮೆ ಹಾಗೂ ಉತ್ತಮ ಜೀವನ ಮಾಲ್ಯಗಳನ್ನು ಬಿತ್ತರಿಸುವ ನೂರಾರು ಉಗಾಭೋಗ, ಸುಳಾದಿ, ಕೀರ್ತನೆ, ದಂಡಕ, ವೃತ್ತನಾಮಾದಿ ಕೃತಿಗಳನ್ನು ರಚಿಸಿ ದೇವರ ಪೂಜೆಯ ಸಮಯದಲ್ಲಿ ಹಾಡಿದರು. ೧. ಭ್ರಮರಗೀತೆ ೨. ವೇಣುಗೀತೆ ೩. ಗೋಪಿಗೀತೆ ಕೀರ್ತನೆಗಳು ರಂಗವಿಠಲ ಎಂಬ ಅಂಕಿತ ನಾಮದಲ್ಲಿ ಅನೇಕ ದೇವರನಾಮಗಳು, ಕೀರ್ತನೆಗಳನ್ನು ರಚಿಸಿದ್ದಾರೆ. ಇವರ ಜನಪ್ರಿಯವಾಗಿರುವ ಕೀರ್ತನೆಗಳು: ೧.ನಾ ನಿನಗೇನು ಬೇಡುವುದಿಲ್ಲಎನ್ನ. ಹೃದಯ ಕಮಲದೊಳು ನೆಲಸಿರು ಹರಿಯೇಪ ೨.ಯಾರಿಗೆ ಯಾರುಂಟು ಗುರುವಿನ ಸಂಸಾರ. ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೇಪಲ್ಲವಿ ೩.ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದಪ ೪.ಭೂಷಣಕೆ ಭೂಷಣ ಇದು ಭೂಷಣ. ಶೇಷಗಿರಿವಾಸ ಶ್ರೀ ವೆಂಕಟೇಶ್ವರಪ ೫.ಇಟ್ಟಾಂಗೆ ಇರುವೆನೋ ಹರಿಯೇ ನನ್ನ ದೊರೆಯೇ. ಸೃಷ್ಟಿವಂದಿತ ಪಾದಪದುಮ ಶ್ರೀ ಹರಿಯೇಅ.ಪ ೬.ಕಾಡ ಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು ಪ. ಮಹಿಮೆ ಸಾಲದೆ ಮಹಿಮೆ ಸಾಲದೆ ಇಷ್ಱೆ ಮಹಿಮೆ ಸಾಲದೆ ಪ ಅಹಿಶಯನನ ಒಲುಮೆಯಿಂದ ಮಹಿಳೊಮ್ಮೆ ಶ್ರೀಪಾದರಾಯರ ಅ.ಪ ಮುತ್ತಿನ ಕವಚ ಮೇಲ ತುರಾಯಿ ರತ್ನ ಕೆತ್ತಿದ ಕರ್ಣ ಕುಂಡಲ ಕಸ್ತೂರಿ ತಿಲಕ ಶ್ರೀಗಂಧ ಲೇಪನ ವಿಸ್ತಾರದಿಂದ ಮೇರದು ಬರಲು ೧ ಹರಿಗೆ ಸಮರ್ಪಿಸಿದ ನಾನಾ ಪರಿಯ ಶಾಖಂಗಳನ್ನ ಭುಂಜಿಸಿ ನರರು ನಗಲು ಶ್ರೀ ಕೃಷ್ಣನ ಪರಮದಿಂದ ಹುಸಿಯಮಾಡಿದ ೨ ವಿಪ್ರಗೆ ಬ್ರಹ್ಮತ್ಯೆ ದೋಷ ಬರಲು ಕ್ಷಿಪ್ತ ಶಂಖೊದಕದಿ ಕಳೆದು ಅಪ್ರ ಬುದ್ಧರು ದೊಷಿಸೆ ಗೇರೆಣ್ಣೆ ಕಪ್ಪು ಹಸನ ಶುಭ್ರ ಮಾಡಿದ ೩ ಹೊರಗಿನ ಸಂಪರ್ಕಗಳು ಶ್ರೀ ಶ್ರೀಪಾದರಾಜ ಮಠದ ಆಧಿಕಾರಿಕ ಜಾಲಪುಟ ಕರ್ನಾಟಕದಲ್ಲಿ ಹರಿದಾಸರು ಅಧ್ಯಾತ್ಮ ಇತಿಹಾಸ ಹಿಂದೂ ಧರ್ಮ ದಾಸ ಸಾಹಿತ್ಯ ಯೋಗಿಗಳು ಮತ್ತು ಸನ್ಯಾಸಿಗಳು ಹಿಂದೂ ಧರ್ಮದ ಸಂತರು
ಭಾಮಿನೀ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು.ಕುಮಾರವ್ಯಾಸನ ಗದುಗಿನ ಭಾರತವಿರುವುದು ಈ ಛಂದಸ್ಸಿನಲ್ಲಿಯೆ. ಭಾಮಿನೀ ಷಟ್ಪದಿಯ ಪದ್ಯವೊಂದರಲ್ಲಿ ಆರು ಸಾಲುಗಳಿರುತ್ತವೆ. ಮೂರನೆಯ, ಆರನೆಯ ಸಾಲುಗಳಲ್ಲಿ ೭ ಮಾತ್ರೆಗಳ ಮೂರುಗಣಗಳೂ ಹಾಗು ಒಂದು ಗುರು ಇರುತ್ತವೆ. ಮಿಕ್ಕ ಸಾಲುಗಳಲ್ಲಿ ೭ ಮಾತ್ರೆಗಳ ಎರಡು ಗಣಗಳಿರುತ್ತವೆ. ಮತ್ತೊಂದು ಪ್ರಮುಖ ನಿಯಮವೆಂದರೆ, ೭ ಮಾತ್ರೆಗಳ ಗಣಗಳು ಕಡ್ಡಾಯವಾಗಿ ೩೪ ಮಾದರಿಯಲ್ಲಿರಬೇಕು. ಅಂದರೆ ೩ ಮಾತ್ರೆಯ ಗಣದ ನಂತರ ೪ ಮಾತ್ರೆಯ ಗಣವು ಬಂದು, ಒಟ್ಟು ೭ ಮಾತ್ರೆಗಳ ಗಣವಾಗಬೇಕು. ಪದ್ಯವು ಆದಿಪ್ರಾಸದಿಂದ ಕೂಡಿರುತ್ತದೆ. ಉದಾಹರಣೆಯಾಗಿ ಗದುಗಿನ ಭಾರತದ ಈ ಪ್ರಸಿದ್ಧ ಪದ್ಯವನ್ನು ನೋಡಿ: ವೇದಪುರುಷನ ಸುತನ ಸುತನ ಸ ಹೋದರನ ಹೆಮ್ಮಗನ ಮಗನ ತ ಳೋದರಿಯ ಮಾತುಳನ ಮಾವನನತುಳಭುಜಬಲದಿ ಕಾದು ಗೆಲಿದನನಣ್ಣನವ್ವೆಯ ನಾದಿನಿಯ ಜಠರದಲಿ ಜನಿಸಿದ ನಾದಿಮೂರುತಿ ಸಲಹೊ ಗದುಗಿನ ವೀರನಾರಯಣ ಈ ಪದ್ಯವನ್ನು ಗಣಗಳಾಗಿ ವಿಂಗಡಿಸಿದಾಗ ಹೀಗೆ ಕಾಣುವುದು: ವೇದ ಪುರುಷನ ಸುತನ ಸುತನ ಸ ಹೋದರನ ಹೆಮ್ಮಗನ ಮಗನ ತ ಳೋದರಿಯ ಮಾತುಳನ ಮಾವನನತುಳಭುಜಬಲದಿ ಕಾದು ಗೆಲಿದನನಣ್ಣನವ್ವೆಯ ನಾದಿನಿಯ ಜಠರದಲಿ ಜನಿಸಿದ ನಾದಿಮೂರುತಿ ಸಲಹೊ ಗದುಗಿನ ವೀರನಾರಯಣ ಸಂಜ್ಞೆ ಗಣವಿಭಾಗವನ್ನು ತೋರಿಸುತ್ತದೆ. ಪದ್ಯವು ಕೆಳಗಿನಂತೆ ಗಣವಿಂಗಡನೆಯಾಗಿರುವುದನ್ನು ಗಮನಿಸಿ: ೩೪೩೪ ೩೪೩೪ ೩೪೩೪೩೪ ೩೪೩೪ ೩೪೩೪ ೩೪೩೪೩೪ ಮತ್ತೊಂದು ಉದಾಹರಣೆ: ಅಂಬು ಜಾನನೆ ಕೇಳು ತಾಂಡವ ನೆಂಬ ಮುನಿಪಿತೃ ಮಾತೃ ಸೇವಾ ಲಂಬ ಕನುತೊಳ ಲಿದನು ನಾನಾ ತೀರ್ಥ ಯಾತ್ರೆಯ ಲಿ ಅಂಬು ವನುತರ ಲೆಂದು ಪಿತೃಗಳ ಕಂಬಿ ಯನುನೇ ರಿರಿಸಿ ಚರ್ಮದ ತಂಬು ಗೆಯಕೊಂ ಡರಸು ತಿರುಳೈ ದಿದನು ಜೀವನ ವ ನೋಡಿ ಶರ ಕುಸುಮ ಭೋಗ ಭಾಮಿನೀ ಷಟ್ಪದಿ ವಾರ್ಧಕ ಪರಿವರ್ಧಿನೀ ಕನ್ನಡ ವ್ಯಾಕರಣ ಉಲ್ಲೇಖ ಕನ್ನಡ ಸಾಹಿತ್ಯ ಕನ್ನಡ ವ್ಯಾಕರಣ
ಕನ್ನಡ ಚಿತ್ರರಂಗದ ಸಂಗೀತ ಸಾಕಷ್ಟು ಪ್ರಕಾರಗಳನ್ನೊಳಗೊಂಡ ಸಂಗೀತಕ್ರಮ. ಚಿತ್ರದೊಂದಿಗೆ ಬರುವ ಹಿನ್ನೆಲೆ ಸಂಗೀತವಲ್ಲದೆ, ಚಿತ್ರದ ಮಧ್ಯದಲ್ಲಿ ಮೂಡಿಬರುವ ಸಂಗೀತ ಅಂದರೆ ಹಾಡುಗಳು ಕನ್ನಡ ಚಿತ್ರ ಸಂಗೀತವನ್ನು ಒಂದು ಪ್ರಕಾರವಾಗಿ ರೂಪಿಸಿವೆ. ಜನಮನದಲ್ಲಿ ಕನ್ನಡ ಚಿತ್ರಸಂಗೀತಕ್ಕೆ ವಿಶಿಷ್ಟ ಸ್ಥಾನಮಾನಗಳು ಬೆಳೆದು ಬಂದಿವೆ. ಕನ್ನಡ ಚಿತ್ರ ಸಂಗೀತ ಹುಟ್ಟಿಬರುವುದು ಸಂಗೀತ ನಿರ್ದೇಶಕರು, ಹಿನ್ನೆಲೆ ಗಾಯಕರು, ಚಿತ್ರಸಾಹಿತಿಗಳು, ಸಂಗೀತ ವಾದ್ಯಗಾರರು, ಹಿನ್ನೆಲೆ ಸಂಗೀತ ಜೋಡಿಸುವವರು ಇವರೆಲ್ಲರ ಸಹಯೋಗದಿಂದ. ಕಥೆಯ ಮಧ್ಯೆ, ದೃಶ್ಯಗಳ ನಡುವೆ ಪ್ರಸಂಗಕ್ಕೆ ಹೊಂದುವಂತೆ ಮೂಡಿಬರುವ ಅರ್ಥವತ್ತಾದ ಸಂಗೀತ ಇದರ ವಿಶಿಷ್ಟತೆ. ಇತ್ತೀಚಿನ ಚಿತ್ರಗಳಲ್ಲಿ ಪ್ರಾಸಂಗಿಕ ಹಾಡುಗಳ ಬಳಕೆ ಕಡಿಮೆಯಾದರೂ ಚಿತ್ರದ ಮಧ್ಯೆ ಹಾಡುಗಳು, ಸಂಗೀತ ಜೋಡಿಸುವ ಪರಂಪರೆ ನಡೆದು ಬಂದಿದೆ. ಇತಿಹಾಸ ಭಾರತದ ಉಳಿದ ಭಾಷೆಗಳಂತೆಯೇ ಕನ್ನಡ ಚಿತ್ರರಂಗವೂ ಉದಯಿಸಿದ್ದು ರಂಗ ಭೂಮಿಯ ಹಿನ್ನೆಲೆಯಿಂದ, ನಾಟಕಗಳಿಂದ. ಮೊದ ಮೊದಲು ಹೊರಬಂದ ಚಿತ್ರಗಳ ಸಂಗೀತ, ನಾಟಕಗಳಲ್ಲಿ ಜೋಡಣೆಯಾಗುತ್ತಿದ್ದ ಸಂಗೀತದ ಮಟ್ಟು,ಹೋಲಿಕೆಗಳೊಂದಿಗೆ ಜನರನ್ನು ತಲುಪಿತ್ತು. ವರ್ಷಗಳು ಕಳೆದಂತೆ ತಂತ್ರಜ್ಞಾನದಲ್ಲಾದ ಬದಲಾವಣೆಗಳಿಂದ ನಾಟಕಗಳು ಹಾಗೂ ಚಲನಚಿತ್ರಗಳ ನಡುವಣ ಅಂತರ ಹೆಚ್ಚುತ್ತಾ ಹೋಗಿ, ಚಲನಚಿತ್ರ ಸಂಗೀತ ತನ್ನದೇ ಆದ ಛಾಪು ಮೂಡಿಸುತ್ತ ಹೊಸ ಉಪಕ್ರಮವಾಗಿ ಹೊರಹೊಮ್ಮಿತು. ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕರು ಮೊದ ಮೊದಲು ಕನ್ನಡ ಚಲನಚಿತ್ರಗಳಲ್ಲಿ ತಮಿಳು,ತೆಲುಗು ಸಂಗೀತ ನಿರ್ದೇಶಕರನ್ನೇ ಉಪಯೋಗಿಸಿಕೊಳ್ಳಲಾಗುತ್ತಿತ್ತು. ಕನ್ನಡದ ಸಂಗೀತ ನಿರ್ದೇಶಕರು ಯಾರು, ಹೊರಗಿನವರು ಯಾರು ಎಂಬ ವಿಂಗಡನೆಯನ್ನೇ ಮಾಡಲಾಗದಷ್ಟು ಹೊರಗಿನವರು ಬೆರೆತು ಕೆಲಸ ಮಾಡಿದ್ದಾರೆ. ಮೊದ ಮೊದಲು ಬಂದವರಲ್ಲಿ ಘಂಟಸಾಲ,ಸತ್ಯಂ,ಟಿ.ಜಿ.ಲಿಂಗಪ್ಪ ಪ್ರಮುಖರು. ರಾಜನ್ನಾಗೇಂದ್ರ ಜೋಡಿ ಕೂಡ ಮೊದಲು (೧೯೫೦೬೦ರ ದಶಕದಲ್ಲಿ) ಪೌರಾಣಿಕ ಚಿತ್ರಕ್ಕೆ ಸಂಗೀತ ನೀಡಿದ್ದರು. ಆ ನಂತದ ಅವರು ಜನಪ್ರಿಯರಾದದ್ದು ೧೯೭೦ರ ದಶಕದ ತಮ್ಮ ಹೊಸ ಅಲೆಯ ಸಂಗೀತದಿಂದ. ಎಂ.ರಂಗರಾವ್ ಅವರು ಸಾಕ್ಷಾತ್ಕಾರ ಚಿತ್ರದ ಸಂಗೀತದಿಂದ ಗಮನ ಸೆಳೆದರು. ಇವರೆಲ್ಲರಿಗಿಂತ ಜನಪ್ರಿಯತೆಯ ಉತ್ತುಂಗದಲ್ಲಿ ಇದ್ದವರೆಂದರೆ ಜಿ.ಕೆ.ವೆಂಕಟೇಶ್ ಮತ್ತು ವಿಜಯ ಭಾಸ್ಕರ್. ಇವರಿಬ್ಬರು ಸುಮಾರು ೩ ದಶಕಗಳ ಕಾಲ ಉತ್ತುಂಗದಲ್ಲಿಯೇ ಇದ್ದರು. ಇವರಲ್ಲಿ ವಿಜಯ ಭಾಸ್ಕರ್ ಅವರ ವಿಶೇಷತೆ ಎಂದರೆ, ಪುಟ್ಟಣ್ಣ ಕಣಗಾಲ್ ಅವರು ನಿರ್ದೇಶಿಸಿದ ಬಹುತೇಕ ಚಿತ್ರಗಳಿಗೆ ಇವರೇ ಸಂಗೀತ ನೀಡಿದ್ದು. ನಂತರ ಹೊರಗಿನ ಸಂಗೀತ ನಿರ್ದೇಶಕರಿಗೂ ಅವಕಾಶ ನೀಡಲಾಯಿತು.ಇಳಯರಾಜ ಅವರು ಕೂಡ ಹಲವಾರು ಚಿತ್ರಗಳಿಗೆ ಸಂಗೀತ ನೀಡಿದರು. ಸಿ.ಅಶ್ವತ್ಥ್ ಮತ್ತು ಎಲ್.ವೈದ್ಯನಾಥನ್ ಅವರು ಅಶ್ವತ್ಥ್ವೈದಿ ಹೆಸರಿನಲ್ಲಿ ಒಟ್ಟಿಗೆ ಸಂಗೀತ ನೀಡಿದರು . ಹಂಸಲೇಖ ಯುಗ ಇವರೆಲ್ಲರ ನಡುವೆ ಭಾರೀ ಹೊಸ ಅಲೆಯನ್ನು ತಂದ ಸಂಗೀತ ನಿರ್ದೇಶಕರು ಎಂದರೆ ಹಂಸಲೇಖ ಅವರು. ಬಂಡಾಯ ಕವಿ ಗಂಗರಾಜು ಕನ್ನಡಿಗರಿಗೆ ಹಂಸಲೇಖ ಎಂದು ಪರಿಚಯವಾಗಿದ್ದಾರೆ. ವಿ.ರವಿಚಂದ್ರನ್ ಅವರ ಚಿತ್ರಗಳು ಗೆಲ್ಲಲು ಅರ್ಧ ಪಾಲು ಹಂಸಲೇಖ ಅವರ ಸಾಹಿತ್ಯ ಸಂಗೀತವೇ ಕಾರಣ ಎಂಬ ಜನಾಭಿಪ್ರಾಯವಿತ್ತು.. ಹಾಡುಗಳಲ್ಲೆ ಒಂದು ಕಥೆ ಮತ್ತು ಸಂಭಾಷಣೆ ಇರುವಂಥ ಹೊಸ ರೀತಿಯ ಹಾಡುಗಳನ್ನು ಜನರಿಗೆ ನೀಡಿದರು. ಅದಕ್ಕೆ ಉದಾಹರಣೆ ಎಂದರೆ, [[ಪ್ರೇಮಲೋ ಕ]] ಚಿತ್ರದ ನೋಡಮ್ಮ ಹುಡುಗಿ ಕೇಳಮ್ಮ ಸರಿಯಾಗಿ, [[ರಣಧೀ ರ]] ಚಿತ್ರದ ಪ್ರೀತಿ ಮಾಡಬಾರದು, ಮತ್ತು ಶಾಂತಿ ಕ್ರಾಂತಿ ಚಿತ್ರದ ಮಧ್ಯ ರಾತ್ರೀಲಿ ಹಾಡುಗಳು. ಈ ಹಾಡುಗಳಲ್ಲೆ ನೀವು ಒಂದು ಕಥೆಯನ್ನೂ ಗಮನಿಸಬಹುದು. ಇಂತಹ ಪ್ರಯೋಗ ಹಿಂದೆಯೂ ನಡೆದಿತ್ತು. ನಾಗರಹಾವು ಚಿತ್ರದ ಓಬವ್ವನ ಹಾಡು ಒಂದು ಉದಾಹರಣೆ.೧೯೯೦ರ ದಶಕದಲ್ಲಿ ಬಂದ ಬಹಳ ಚಿತ್ರಗಳಿಗೆ ಹಂಸಲೇಖ ಅವರೇ ಸಾಹಿತ್ಯ ಸಂಗೀತ ಒದಗಿಸುತ್ತಿದ್ದರು. ವಿ.ಮನೋಹರ್ ಪ್ರವೇಶ ನಂತರ ಬಂದವರು ವಿ. ಮನೋಹರ್. ಇವರು ಕಾಶೀನಾಥ್ ಕ್ಯಾಂಪ್ ನಿಂದ ಗುರುತಿಸಿಕೊಂಡರೂ ಸಹ ಹತ್ತು ಹಲವಾರು ನಿರ್ದೇಶಕರ ಬಳಿ ದುಡಿದು ತಮ್ಮ ಸಾಮರ್ಥ್ಯವನ್ನು ತೋರಿಸಿದರು. ಕನ್ನಡದಲ್ಲಿ ಮೊದಲಿನಂತೆ ಒಳ್ಳೆಯ ಸಂಗೀತ ನೀಡುವ ಸಂಗೀತ ನಿರ್ದೇಶಕರ ಸಾಲಿಗೆ ಸೇರಿದರು. ಮುಂದಿನ ದಿನಗಳಲ್ಲಿ ಓ ಮಲ್ಲಿಗೆ ಎಂಬ ಚಿತ್ರವನ್ನು ನಿರ್ದೇಶಿಸಿ ಅಲ್ಲೂ ಸೈ ಎನಿಸಿಕೊಂಡರು. ಓ ಮಲ್ಲಿಗೆ ಚಿತ್ರದ ಮಲಗು ಮಲಗು ಚಾರುಲತೆ ಹಾಡಿನಲ್ಲಿ ಹೊಸ ಗಾಯಕ ರಮೇಶ್ಚಂದ್ರ ಅವರನ್ನು ಪರಿಚಯಿಸಿದರು. ಸಾಧು ಕೋಕಿಲ ಮತ್ತು ರಾಜೇಶ್ ರಾಮನಾಥ್ ನಂತರದ ದಿನಗಳಲ್ಲಿ ಸಾಧು ಕೋಕಿಲ ಮತ್ತು ರಾಜೇಶ್ ರಾಮನಾಥ್ ಅವರು ಹೊಸ ಸಂಗೀತ ನಿರ್ದೇಶಕರಾಗಿ ಪರಿಚಯಗೊಂಡರು. ಗುರುಕಿರಣ್ ಚಲನಚಿತ್ರ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಅಲೆಯನ್ನು ಎಬ್ಬಿಸಿದವರು ಎಂದರೆ ಗುರುಕಿರಣ್ಸಂಗೀತ . ಇಂದಿನ ಯುವಜನತೆಗೆ ಅವರ ಹಾಡುಗಳು ಮೆಚ್ಚಿಗೆಯಾದವು.. ನಂತರದ ದಿನಗಳಲ್ಲಿ ಪ್ರೇಮಿ ನಂಬರ್ ಒನ್, ಮಜ್ನು ಚಿತ್ರಗಳಿಗೆ ಸಂಗೀತ ನೀಡಿದರೂ ಅವರನ್ನು ಚಿತ್ರರಂಗದ ಜನತೆ ಗಮನಿಸಲಿಲ್ಲ. ದಿನೇಶ್ ಬಾಬು ನಿರ್ದೇಶನದ ಚಿತ್ರ ಎಂಬ ಯುವಜನರ ಚಿತ್ರದಲ್ಲಿ ನೀಡಿದ ಜಿಂಬೋಲೆ ಹಾಗು ಜಿಂಕೆ ಮರಿ ಓಡ್ತಾಯ್ತೆ ನೋಡ್ಲಾ ಮಗಾ ಹಾಡುಗಳು ಯುವಜನರನ್ನು ಆಕರ್ಷಿಸಿದವು. ಚಿತ್ರರಂಗದ ಜನತೆ ಅವರಲ್ಲಿ ಇದ್ದ ಪ್ರತಿಭೆಯನ್ನು ಗಮನಿಸಿತು. ನಂತರದ ದಿನಗಳಲ್ಲಿ ಚಂದು ತುಂಟಾಟ ಮತ್ತು ಹಲವಾರು ಚಿತ್ರಗಳಿಗೆ ಸಂಗೀತ ನೀಡಿ ಮತ್ತಷ್ಟು ಜನಪ್ರಿಯರಾದರು. ಸಂಗೀತ ನಿರ್ದೇಶನದತ್ತ ನಾಯಕ ನಟ ರವಿಚಂದ್ರನ್ ಈ ಮಧ್ಯೆ ಹಂಸಲೇಖ ಮತ್ತು ರವಿಚಂದ್ರನ್ ಜೋಡಿ ಮುರಿದು ಬಿದ್ದಿತು. ಇದರ ಪರಿಣಾಮವಾಗಿ ಪ್ರೀತ್ಸೋದ್ ತಪ್ಪಾ? ಚಿತ್ರದ ನಂತರ ಮಾಂಗಲ್ಯಂ ತಂತುನಾನೇನಾ ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡಿದರು. ನಂತರ ರವಿಚಂದ್ರನ್ ಅವರೇ ಸಂಗೀತ ನಿರ್ದೇಶನ ಮತ್ತು ಸಾಹಿತ್ಯ ರಚನೆಗೆ ಇಳಿದರು. ಮಲ್ಲ,ಅಹಂ ಪ್ರೇಮಾಸ್ಮಿ,ಅಯ್ಯ,ನೀಲಕಂಠ ಮುಂತಾದ ಚಿತ್ರಗಳಿಗೆ ರವಿಚಂದ್ರನ್ ಸಂಗೀತ ಮತ್ತು ಸಾಹಿತ್ಯ ನೀಡಿದ್ದಾರೆ. ಅನಿವಾಸಿ ಸಂಗೀತ ನಿರ್ದೇಶಕ ಮನೋ ಮೂರ್ತಿ ನಾಗತಿಹಳ್ಳಿ ಚಂದ್ರಶೇಖರ್ ಅವರ ಅಮೆರಿಕ ಅಮೆರಿಕಾ ಚಿತ್ರದ ಮೂಲಕ ಅನಿವಾಸಿ ಭಾರತೀಯ ಮನೋಹರ ಮೂರ್ತಿ ಅವರುಮನೋ ಮೂರ್ತಿಯಾಗಿ ಕನ್ನಡಿಗರಿಗೆ ಪರಿಚಯವಾದರು. ನಂತರದ ದಿನಗಳಲ್ಲಿ ಹಂಸಲೇಖರ ಬಳಿ ಆರ್ಕೆಸ್ಟ್ರಾ ತಂತ್ರಜ್ಞ ಆಗಿದ್ದ ಸ್ಟೀಫನ್ ಅವರನ್ನು ನಾಗತಿಹಳ್ಳಿ ಅವರು ತಮ್ಮ ಪ್ಯಾರಿಸ್ ಪ್ರಣಯ ಚಿತ್ರದ ಮೂಲಕ ಪ್ರಯೋಗ್ ಎಂಬ ಹೆಸರಿನಿಂದ ಪರಿಚಯಿಸಿದರು. ನಂತರ ಗುರುಕಿರಣ್ ಅವರ ಬಳಿ ಗಿಟಾರ್ ವಾದಕರಾಗಿದ್ದ ಆಲ್ವಿನ್ ಫರ್ನಾಂಡಿಸ್ ಅವರು ಕೂಡ ಪ್ರಾಣ ಎಂಬ ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾದರು. ಇತರ ಸಂಗೀತ ನಿರ್ದೇಶಕರು ಇತ್ತೀಚಿಗೆ ಪರಿಚಿತರಾದ ಸಂಗೀತ ನಿರ್ದೇಶಕರು ಎಂದರೆ ಅರ್ಜುನ್ ವಿ.ಹರಿ ಕೃಷ್ಣ ವೆಂಕಟ್ ನಾರಾಯಣ್ ದೇವ ಕಲ್ಯಾಣ್ . ಈ ಪುಟಗಳನ್ನೂ ನೋಡಿ ಕನ್ನಡ ಸಿನೆಮಾ ಕನ್ನಡ ಚಿತ್ರ ಸಂಗೀತ
ಚಂದ್ರಶೇಖರ ಪಾಟೀಲ (೧೮ ಜೂನ್ ೧೯೩೯ ೧೦ ಜನವರಿ ೨೦೨೨) ಅವರು ಕನ್ನಡದ ಸಾಹಿತಿ, ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಕನ್ನಡ ಹೋರಾಟಗಾರ. ಇವರ ಕಾವ್ಯನಾಮ ಚಂಪಾ.. ಇವರು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಜೀವನ ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ ಹೀಗೆ ವಿಭಿನ್ನ ನೆಲೆಗಳ ಚಂದ್ರಶೇಖರ ಪಾಟೀಲರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತೀಮತ್ತೂರಿನಲ್ಲಿ ೧೯೩೯ರ ಜೂನ್ ೧೮ರಂದು. ತಂದೆ ಬಸವರಾಜ ಹಿರೇಗೌಡರು, ತಾಯಿ ಮುರಿಗೆವ್ವ. ಚಂದ್ರಶೇಖರ ಪಾಟೀಲರು ಸಾಹಿತ್ಯ ಲೋಕದಲ್ಲಿ ಚಂಪಾ ಎಂಬ ಹೆಸರಿನಿಂದ ಪ್ರಖ್ಯಾತರು. ಪಾಟೀಲರ ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ ಮತ್ತು ಪ್ರೌಢಶಿಕ್ಷಣ ಧಾರವಾಡದಲ್ಲಿ ನೆರವೇರಿತು. ಅವರ ತಂದೆಯವರಿಗೆ ಇಂಗ್ಲಿಷ್ ಬಗ್ಗೆ ಅಭಿಮಾನವಿದ್ದುದರಿಂದ ಅದರಿಂದ ಪ್ರೇರಿತರಾಗಿ ಇಂಗ್ಲಿಷ್ ಎಂ.ಎ. ಪದವಿ ಗಳಿಸಿದರು. ಇದಲ್ಲದೆ ಬ್ರಿಟಿಷ್ ಕೌನ್ಸಿಲ್ ವಿದ್ಯಾರ್ಥಿವೇತನ ಪಡೆದು ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ಭಾಷಾಶಾಸ್ತ್ರದಲ್ಲಿನ ಸ್ನಾತಕೋತ್ತರ ಪದವಿ ಮತ್ತು ಹೈದರಾಬಾದಿನ ಕೇಂದ್ರೀಯ ಇಂಗ್ಲಿಷ್ ಸಂಸ್ಥೆಯಿಂದ ಇಂಗ್ಲಿಷ್ ಅಧ್ಯಯನದ ಡಿಪ್ಲೊಮ ಪಡೆದರು. ಶಿಕ್ಷಣದ ಪ್ರತಿ ಹಂತದಲ್ಲಿಯೂ ಆಗ್ರ ಶ್ರೇಯಾಂಕ ಗಳಿಸಿದ ಕೀರ್ತಿ ಅವರದ್ದಾಗಿತ್ತು. ಅಧ್ಯಾಪನದ ಜೊತೆಗೆ ಬರಹ ಚಂದ್ರಶೇಖರ ಪಾಟೀಲರು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ ಬೋಧಕ ವೃತ್ತಿ ಆರಂಭಿಸಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಲೇ ತಮ್ಮ ಕಾವ್ಯ ಹಾಗೂ ನಾಟಕಗಳ ಮೂಲಕ ಪ್ರಸಿದ್ಧರಾಗುತ್ತಾ ಬಂದರು. ಅವರು ಹಾವೇರಿಯ ಮುನಿಸಿಪಲ್ ಹೈಸ್ಕೂಲಿನಲ್ಲಿದ್ದಾಗಲೇ ಕವನ ಬರೆಯುವುದರ ಬಗ್ಗೆ ಆಸಕ್ತಿ ಮೂಡಿಸಿಕೊಂಡಿದ್ದರು. ಅರವಿಂದರ ಬಗ್ಗೆ ಭಾವೋದ್ವೇಗದಿಂದ ಮಾತನಾಡುತ್ತಿದ್ದ ಗಂಗಾಧರ ಸವದತ್ತಿ ಮಾಸ್ತರರು, ವ್ಯಂಗ್ಯ ಶೈಲಿಯಲ್ಲಿ ಬದುಕಿನ ಹಾಗೂ ಭಾಷೆಯ ಎಳೆಗಳನ್ನು ಬಿಚ್ಚಿಡುತ್ತಿದ್ದ ಆರ್.ವಿ.ಕುಲಕರ್ಣಿ (ಪ್ರಬಂಧಕಾರರಾದ ರಾ.ಕು.) ಮತ್ತು ಗಣಿತದ ಪ್ರಮೇಯಗಳನ್ನು ಬಿಡಿಸುವ ಮುನ್ನ ಹಿಂದಿನ ರಾತ್ರಿ ಬರೆದಿದ್ದ ಕವನಗಳನ್ನೂ ವಾಚಿಸಲು ಪ್ರಾರಂಭಿಸುತ್ತಿದ್ದ ಪಿ.ಜಿ. ಬಿದರಿಮಠ ಮಾಸ್ತರು ಹೀಗೆ ಹಲವಾರು ಮಂದಿ ಇವರ ಎಳೆ ವಯಸ್ಸಿನಲ್ಲಿಯೇ ಸಾಹಿತ್ಯದ ಪ್ರಭಾವ ಬೀರಿದ್ದರು. ಧಾರವಾಡದ ಕಾಲೇಜಿಗೆ ಬಂದಾಗ ಪ್ರಿನ್ಸಿಪಾಲರಾಗಿದ್ದ ವಿ.ಕೃ. ಗೋಕಾಕರು ನವ್ಯಕಾವ್ಯ ನಿರ್ಮಿತಿಯ ನೇತಾರರಲ್ಲೊಬ್ಬರಾಗಿದ್ದು, ಇವರ ಪ್ರಭಾವಕ್ಕೆ ಒಳಗಾಗಿ ಕವನಗಳನ್ನೂ ಬರೆಯತೊಡಗಿ, ಅವುಗಳಲ್ಲಿ ಹಲವಾರು ಕವನಗಳು ಪ್ರಪಂಚ ಪತ್ರಿಕೆಯಲ್ಲಿ ಪ್ರಕಟಗೊಂಡವು. ಕಾವ್ಯದಲ್ಲಿ ಬೆಳೆದ ಆಸಕ್ತಿಯಿಂದ, ಹಲವಾರು ಮಂದಿ ಉದಯೋನ್ಮುಖರು ಸೇರಿ ಕಮಲ ಮಂಡಲ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಕಮಲ ಮಂಡಲ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಪ್ರಪಂಚ ಪತ್ರಿಕೆಯಲ್ಲಿ ಪ್ರಕಟಗೊಂಡವು. ನಾಟಕ ಕಾವ್ಯಕೃಷಿಯಲ್ಲೇ ತೊಡಗಿಸಿಕೊಂಡಿದ್ದ ಚಂಪಾರವರು ಹಲವಾರು ಸಮಸ್ಯೆಗಳ ಮಿಡಿತಕ್ಕೆ ಒಳಗಾಗಿ ಕಾವ್ಯ ಮಾಧ್ಯಮದಿಂದ ನಾಟಕಮಾಧ್ಯಮವನ್ನೂ ಆಯ್ದುಕೊಂಡು ಹಲವಾರು ನಾಟಕಗಳನ್ನೂ ರಚಿಸಿದ್ದು ಅವುಗಳಲ್ಲಿ ಕೊಡೆಗಳು, ಅಪ್ಪ, ಕುಂಟ ಕುಂಟ ಕುರುವತ್ತಿ, ಗುರ್ತಿನವರು, ಟಿಂಗರ ಬುಡ್ಡಣ್ಣ, ಕತ್ತಲರಾತ್ರಿ, ಗೋಕರ್ಣದ ಗೌಡಸಾನಿ, ಜಗದಂಬೆಯ ಬೀದಿನಾಟಕ, ಬುರಡಿ ಬಾಬನ ವಸ್ತ್ರಾಪಹರಣ ಪವಾಡ, ನಳ ಕವಿಯ ಮಸ್ತಕಾಭಿಷೇಕ, ವಂದಿಮಾಗಧ ಮುಂತಾದವುಗಳು ಪ್ರಖ್ಯಾತವಾಗಿವೆ. ಸಂಪಾದನೆ ಚಂಪಾ ಇವರ ಸಂಪಾದಿತ ಕೃತಿಗಳೆಂದರೆ ಸಂಕ್ರಮಣ ಕಾವ್ಯ, ಗಾಂಧಿ ಗಾಂಧಿ, ಜೂನ್ ೭೫ಮಾರ್ಚ್ ೭೭, ಬಂಡಾಯ ಮತ್ತು ಸಾಹಿತ್ಯ, ನೆಲ್ಸನ್ಮಂಡೇಲಾ, ಕನ್ನಡನಾಡಿಗೊಂದು ಪ್ರಾದೇಶಿಕ ಪಕ್ಷ, ಸಂಕ್ರಮಣ ಸಾಹಿತ್ಯ (೩ ಸಂಪುಟಗಳಲ್ಲಿ), ಗಾಂಧಿ ಎನ್ನುವ ಹೆಸರು ಮುಂತಾದವುಗಳು. ಪಾಟೀಲರ ಇತರ ಕೃತಿಗಳೆಂದರೆ ಬೇಂದ್ರೆನಾ ಕಂಡಂತೆ, ನನಗೆ ಕಂಡಷ್ಟು, ೨೬ ದಿನ ೨೫ ರಾತ್ರಿ, ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ ಮತ್ತು ಇಂಗ್ಲಿಷ್ನಲ್ಲಿ ರಚಿಸಿದ ಕೃತಿ ಮುಂತಾದವು. ಸಂಕ್ರಮಣ1964 ಪೂರ್ಣರೂಪದ ಸಾಹಿತ್ಯ ಪತ್ರಿಕೆಯೊಂದರ ಅವಶ್ಯಕತೆಯನ್ನು ಮನಗಂಡ ಚಂದ್ರಶೇಖರ ಪಾಟೀಲರು ಸಮಾನ ಮನಸ್ಕರೊಡನೆ ಸಮಾಲೋಚಿಸಿ ಗಿರಡ್ಡಿ ಗೋವಿಂದರಾಜ, ಸಿದ್ಧಲಿಂಗ ಪಟ್ಟಣಶೆಟ್ಟಿ, ಇವರುಗಳೊಡನೆ ಸೇರಿ ೧೯೬೪ರಲ್ಲಿ ಪ್ರಾರಂಭಿಸಿದ ಪತ್ರಿಕೆ ಸಂಕ್ರಮಣ. ಈ ಪತ್ರಿಕೆಯು ನವ್ಯದ ಉಚ್ಛ್ರಾಯ ಸ್ಥಿತಿಯಲ್ಲಿ ಪ್ರಾರಂಭವಾಗಿದ್ದು ಎಪ್ಪತ್ತರ ದಶಕದ ನಂತರ ದಲಿತ, ಬಂಡಾಯ ಸಾಹಿತ್ಯ ಚಳವಳಿ ಮುಂತಾದವುಗಳನ್ನು ಒಳಗೊಂಡು ಹಲವಾರು ಯುವ ಬರಹಗಾರರಿಗೆ ವೇದಿಕೆಯನ್ನು ಕಲ್ಪಿಸಿದ ಪತ್ರಿಕೆಯಾಗಿ ಐದು ದಶಕಗಳಿಗೂ ಹೆಚ್ಚು ಕಾಲದಿಂದ ಪ್ರಕಟವಾಗುತ್ತಿದೆ. ಕನ್ನಡ ಹೋರಾಟ ಚಂದ್ರಶೇಖರ ಪಾಟೀಲರು ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎನಿಸಿಕೊಂಡಿರುವ ಧಾರವಾಡದಲ್ಲಿದ್ದಾಗಿನಿಂದಲೂ ಕನ್ನಡ ಪರ ಕಾಳಜಿ ವಹಿಸಿ, ಕನ್ನಡ ಪರ ಹೋರಾಟವನ್ನು ನಡೆಸುತ್ತಾ ಬಂದವರು. ಹಲವಾರು ಸಂಘಟನೆಗಳಲ್ಲಿ ಪ್ರಮುಖ ಪಾತ್ರವಹಿಸಿದವರು. ರಾಜ್ಯ ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿ, ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಧಾರವಾಡ ನಾಟಕ ಕೂಟದ ಕಾರ್ಯದರ್ಶಿಯಾಗಿ, ಮ್ಯಾಳ ನಾಟಕ ಸಂಘದ ಕಾರ್ಯಾಧ್ಯಕ್ಷರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ವಿಶ್ವಚೇತನ ಸಾಂಸ್ಕೃತಿಕ ವೇದಿಕೆಯ ನಿಯೋಜಕರಾಗಿಹೀಗೆ ಹಲವು ಹತ್ತು ಸಂಘಟನೆಗಳಲ್ಲೂ, ಗೋಕಾಕ ಚಳವಳಿ ಮುಂತಾದ ಅನೇಕ ಜನಪರ ಚಳವಳಿಗಳಲ್ಲೂ ತಮನ್ನು ತೊಡಗಿಸಿಕೊಂಡವರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ೨೬ದಿನ ೨೫ರಾತ್ರಿ ಜೈಲುವಾಸವನ್ನನುಭವಿಸಿದರು. ಜವಾಬ್ಧಾರಿಗಳು ಕನ್ನಡಕ್ಕಾಗಿ ದುಡಿಯುತ್ತಿದ್ದ ಚಂದ್ರಶೇಖರ ಪಾಟೀಲರನ್ನು ಕರ್ನಾಟಕ ಸರ್ಕಾರವು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಿಸಿತು. ೧೯೯೬೯೯ರ ಅವಧಿಗೆ ಈ ಜವಾಬ್ಧಾರಿಯನ್ನು ನಿರ್ವಹಿಸುವುದರ ಜೊತೆಗೆ ೨೦೦೪೦೮ ಅವಧಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ಅವರು ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಪರಿಷತ್ತನ್ನು ಪ್ರಬಲ ಹೋರಾಟದ ವೇದಿಕೆಯನ್ನಾಗಿ ರೂಪಿಸಿದ್ದು, ಪುಸ್ತಕ ಮಾರಾಟದ ಮೂಲಕ ಸಣ್ಣ ಪ್ರಮಾಣದ ಪ್ರಕಾಶಕರನ್ನು ಉತ್ತೇಜಿಸಲು ಪುಸ್ತಕ ಸಂತೆಯನ್ನು ಪ್ರತಿ ಶನಿವಾರ ಸಂಜೆ ಏರ್ಪಡಿಸಿದ್ದರ ಜೊತೆಗೆ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು, ಶಿಕ್ಷಣ ಸಮಸ್ಯೆಯನ್ನು ಪರಿಹರಿಸಲು ಉನ್ನತ ಮಟ್ಟದ ಸಮಾಲೋಚನ ಸಭೆಯನ್ನು ಏರ್ಪಡಿಸಿದ್ದು, ಗಡಿನಾಡ ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕಾಗಿ ಅಧ್ಯಕ್ಷರ ಪುಸ್ತಕ ನಿಧಿಯನ್ನು ಪ್ರಾರಂಭಿಸಿದ್ದು, ಕನ್ನಡ ಭಾಷೆಗೂ ಶಾಸ್ತ್ರೀಯ ಸ್ಥಾನಮಾನ ದೊರೆಯುವಂತಾಗಲು ಹೋರಾಟ ನಡೆಸಿದ್ದು, ಪರಿಷತ್ತಿಗೆ ತನ್ನದೇ ಆದ ವೆಬ್ಸೈಟ್, ಅಂತರ್ಜಾಲ ಸೌಲಭ್ಯಗಳು, ಗಣಕ ಸಮ್ಮೇಳನದ ಆಯೋಜನೆ ಮುಂತಾದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದರು. ಪ್ರಶಸ್ತಿ ಗೌರವಗಳು ಕನ್ನಡ ನಾಡುನುಡಿ, ಸಂಸ್ಕೃತಿಯ ರಕ್ಷಣೆಗಾಗಿ ನಿರಂತರ ಹೋರಾಡುತ್ತಾ ಬಂದಿರುವ ಚಂಪಾರವರಿಗೆ ಬಂದಿರುವ ಪ್ರಶಸ್ತಿ ಗೌರವಗಳು ಹಲವಾರು. ಇವುಗಳಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ (1960, 74, 76), ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆ.ವಿ. ಶಂಕರಗೌಡ ರಂಗಭೂಮಿ ಪ್ರಶಸ್ತಿ, ಸಂದೇಶ್ ಮಾಧ್ಯಮ ಪ್ರಶಸ್ತಿ, ಕರುನಾಡ ಭೂಷಣ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಮತ್ತು ಪಂಪ ಪ್ರಶಸ್ತಿ ಮುಂತಾದವುಗಳು ಪ್ರಮುಖವಾಗಿವೆ.2017 ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು 2018 ಸಾಲಿನಲ್ಲಿ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಪ್ರಸಿದ್ಧ ಗೀತೆಗಳು ಚಂಪಾ ಅವರ ಅನೇಕ ಗೀತೆಗಳು ಕರ್ನಾಟಕದ ಪ್ರಸಿದ್ಧ ಗಾಯಕರ ಧ್ವನಿಯಲ್ಲಿ ವೈಭವಿಸಿವೆ. ಸಿ ಅಶ್ವತ್ಥರ ಧ್ವನಿಯಲ್ಲಿ ಮೂಡಿರುವ ಗುಪ್ತಗಾಮಿನಿ ನನ್ನ ಶಾಲ್ಮಲಅತ್ಯಂತ ಜನಪ್ರಿಯವಾದದ್ದು. ವಿನೋದ ಪ್ರವೃತ್ತಿ ಚಂದ್ರಶೇಖರ ಪಾಟೀಲರು ಕನ್ನಡ ಕಾವ್ಯದ ಭೂತ ಭವಿಷ್ಯವ ಬಣ್ಣಿಸಿ ಹೇಳೋ ಗಾಂಪಾ ನಮ್ಮ ಆದಿಕವಿ ಪಂಪಾ, ಗುರುವೇ ನಮ್ಮ ಅಂತ್ಯಕವಿ ಚಂಪಾ ಅಂದು ತಮ್ಮನ್ನೇ ತಾವು ವಿನೋದ ಮಾಡಿಕೊಳ್ಳುತ್ತಾರೆ. ಮಾಹಿತಿ ಕೃಪೆ ಕಣಜ ಉಲ್ಲೇಖಗಳು ಚಂದ್ರಶೇಖರ ಪಾಟೀಲ ಪಂಪ ಪ್ರಶಸ್ತಿ ಪುರಸ್ಕೃತರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಬಸವಶ್ರೀ ಪ್ರಶಸ್ತಿ ಪುರಸ್ಕೃತರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಕನ್ನಡ ಕವಿಗಳು ೨೦೨೨ ನಿಧನ ೧೯೩೯ ಜನನ
ಕನ್ನಡ ನವೋದಯದ ಮುಂಗೋಳಿ ಎಂದು ಪ್ರಸಿದ್ಧರಾದ. ಮುದ್ದಣ (೧೮೭೦೧೯೦೧) ಕನ್ನಡ ಸಾಹಿತ್ಯಲೋಕದಲ್ಲಿ ಮಹಾಕವಿ ಎಂದು ಖ್ಯಾತಿಪಡೆದ ಕವಿಸಾಹಿತಿ. ಮುದ್ದಣ ಅವರ ನಿಜ ನಾಮಧೇಯ ಲಕ್ಷ್ಮೀನಾರಣಪ್ಪ. ಹುಟ್ಟೂರು ನಂದಳಿಕೆಯಾದ್ದರಿಂದ ನಂದಳಿಕೆ ಲಕ್ಷ್ಮೀನಾರಣಪ್ಪ ಎಂಬ ಹೆಸರು ಕೂಡ ಇವರಿಗಿದೆ. ರತ್ನಾವತಿ ಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕ, ಅದ್ಭುತ ರಾಮಾಯಣ ಮತ್ತು ಶ್ರೀ ರಾಮಾಶ್ವಮೇಧ ಮುದ್ದಣ ಅವರು ಬರೆದಿರುವ ಕೆಲವು ಮುಖ್ಯವಾದ ಕೃತಿಗಳು. ಅನಾರೋಗ್ಯ ಮತ್ತು ಬಡತನದಿಂದ ಬಳಲಿದ ಮುದ್ದಣ, ಕಿರಿಯ ವಯಸ್ಸಿಗೆ ಇಹಲೋಕ ಯಾತ್ರೆ ಮುಗಿಸಿದರು. ಕರ್ನಾಟಕದಲ್ಲಿನ ಶಾಲಾ ಕಾಲೇಜುಗಳಲ್ಲಿನ ಕನ್ನಡ ಸಾಹಿತ್ಯ ಪಠ್ಯಗಳಲ್ಲಿ ಮುದ್ದಣನವರ ಪದ್ಯಗದ್ಯಗಳು ಹಾಸು ಹೊಕ್ಕಾಗಿವೆ. ಬಾಲ್ಯ ಲಕ್ಷ್ಮಿನಾರಣಪ್ಪ ೧೮೭೦ರ ಜನವರಿ ೨೪ರಂದು ನಂದಳಿಕೆಯಲ್ಲಿ ಜನಿಸಿದರು.ಇದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿಗೆ ಸೇರಿದ ಒಂದು ಗ್ರಾಮ. ಈತನ ತಂದೆ ತಿಮ್ಮಪ್ಪಯ್ಯ, ತಾಯಿ ಮಹಾಲಕ್ಶ್ಮಿ. ತಂದೆ ಕ್ರಿ. ಶ. ೧೮೩೯ರಲ್ಲಿ ಹುಟ್ಟಿದರೆಂದೂ, ತಾಯಿ ಕ್ರಿ. ಶ. ೧೮೫೪ರಲ್ಲಿ ಹುಟ್ಟಿದರೆಂದೂ ಹೇಳುತ್ತಾರೆ. ಇವರು ಮದುವೆಯಾಗಿ ಸಂಸಾರ ಹೂಡಿ ನಂದಳಿಕೆಯಲ್ಲಿ ನೆಲೆಯಾಗಿ ನಿಂತ ವೇಳೆ ತಿಮ್ಮಪ್ಪಯ್ಯ ಊರ ದೇವಸ್ಥಾನದಲ್ಲಿ ಪಾಟಾಲಳಿಯಾಗಿ ಕೆಲಸದಲ್ಲಿ ಇದ್ದರೆಂದು ಹೇಳುತ್ತಾರೆ. ಗಂಡ ದೇವರ ಊಳಿಗದಲ್ಲಿ ತೊಡಗಿದಂದು ಹೆಂಡತಿ ಗಂಡನ ಸೇವೆ, ದೇವರ ಸೇವೆ, ಮನೆಗೆಲಸಗಳಲ್ಲಿ ನಿರತಳಾಗಿದ್ದಳೆಂದು ಊಹಿಸಬಹುದಾಗಿದೆ. ತಿಮ್ಮಪ್ಪಯ್ಯನವರಿಗೆ ಮೂವತ್ತು ವರ್ಷವೂ, ಮಹಾಲಕ್ಷ್ಮಮ್ಮನವರಿಗೆ ಹದಿನೈದು ವರ್ಷವೂ ವಯಸ್ಸಾಗಿದ್ದಾಗ ಇವರ ಹಿರಿಯಮಗನಾಗಿ ಲಕ್ಶ್ಮೀನಾರಾಯಣನು ಹುಟ್ಟಿದನು. ಈತ ಹುಟ್ಟಿದ್ದು ಶುಕ್ಲ ಸಂರದ ಪುಷ್ಯ ಬಹುಳ ಅಷ್ಟಮಿ ಸೋಮವಾರ. ಮುದ್ದಾಗಿ ಕಾಣುತ್ತಿದ್ದನಾದ್ದರಿಂದ ಆತನನ್ನು ಎಲ್ಲರೂ ಮುದ್ದಣ ಎಂದು ಕರೆಯಲು ಪ್ರಾರಂಭಿಸಿದರು ಎಂದು ತಿಳಿದು ಬಂದಿದೆ. ಹುಡುಗ ಬೆಳೆದು ಬುದ್ಧಿ ತಿಳಿದ ಮೇಲೆ ತನ್ನ ತಾಯಿ ಪ್ರೀತಿಯಿಂದ ಕರೆದ ಹೆಸರನ್ನೇ ತನ್ನ ಕಾವ್ಯ ನಾಮವನ್ನಾಗಿ ಆರಿಸಿಕೊಂಡನು. ಪ್ರಾರಂಭಿಕ ದಿನಗಳು ನಂದಳಿಕೆಯಲ್ಲಿ ಮುರೂರು ಚರಡಪ್ಪನವರು ಸ್ಥಾಪಿಸಿದ ಪಾಠಶಾಲೆಯಲ್ಲಿ ಇವರ ಪ್ರಾಥಮಿಕ ಶಿಕ್ಷಣ ನಡೆಯಿತು. ಉಡುಪಿಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದ ಬಳಿಕ ಬಿಟ್ಟು ಶಿಕ್ಷಕರ ತರಬೇತಿ ಶಾಲೆಗೆ ಸೇರಿದರು. ವ್ಯವಹಾರಕ್ಕೆ ಬೇಕಾಗುವಷ್ಟು ಇಂಗ್ಲಿಷನ್ನು ಮನೆಯಲ್ಲಿಯೇ ಕಲಿಯತೊಡಗಿದರು. ಶಿಕ್ಷಕರ ತರಬೇತಿ ಶಾಲೆಯಲ್ಲಿ ಉತ್ತೀರ್ಣರಾಗುವುದರ ಜೊತೆಗೆ ಯಕ್ಷಗಾನವನ್ನು ರಚಿಸುವ ಸಾಮರ್ಥ್ಯವನ್ನೂ ಪಡೆದರು. ಗಟ್ಟಿ ಮುಟ್ಟಾಗಿ ಕಂಡುಬಂದ ಇವರನ್ನು ಸ್ಕೂಲಿನ ಮುಖ್ಯೋಪಾಧ್ಯಾಯರು ಅಂಗಸಾಧನೆಯಲ್ಲಿ ಹೆಚ್ಚಿನ ಪರಿಶ್ರಮ ಗಳಿಸುವ ಸಲುವಾಗಿ ಮದರಾಸಿಗೆ ಕಳುಹಿಸಿಕೊಟ್ಟರು. ಮದರಾಸಿನಲ್ಲಿ (ಇಂದಿನ ಚೆನ್ನೈ) ಅಂಗಸಾಧನೆಯ ಜೊತೆಗೆ ತಮಿಳು ಮಲೆಯಾಳಿ ಭಾಷಾ ಸಾಹಿತ್ಯಗಳ ಪರಿಚಯವನ್ನೂ ಪ್ರಯತ್ನಿಸಿದಂತೆ ತೋರುತ್ತದೆ. ಶ್ರೀ ಎಚ್. ನಾರಾಯಣ ರಾಯರು, , ಶ್ರೀ ಬೆನಗಲ್ ರಾಮರಾಯರು ಮುಂತಾದವರ ಸಹಾಯದಿಂದ ದ್ರಾವಿಡ ಭಾಷೆಗಳಿಗೆ ಸಂಬಂಧಪಟ್ಟ ಅನೇಕ ಟಿಪ್ಪಣಿಗಳನ್ನು ರಚಿಸಿದ್ದರೆಂದು ಹೇಳುತ್ತಾರೆ. ಮದರಾಸಿನಿಂದ ಹಿಂದಿರುಗಿದ ಮೇಲೆ ಉಡುಪಿಯ ಹೈಸ್ಕೂಲಿನಲ್ಲಿ ಲಕ್ಶ್ಮೀನಾರಾಯಣನಿಗೆ ವ್ಯಾಯಾಮ ಶಿಕ್ಷಕನ ಕೆಲಸ ದೊರೆಯಿತು. ದೈಹಿಕ ಶಿಕ್ಷಕನಾಗಿ ಉಡುಪಿಯಲ್ಲಿ ನೆಲೆಸಿದ್ದು ೧೮೮೯ನೆಯ ಮೇ ತಿಂಗಳಲ್ಲಿ. ಈ ವೃತ್ತಿಯಲ್ಲಿ ಸುಮಾರು ಮೂರು ವರ್ಷಗಳ ಕಾಲ ಇಲ್ಲಿ ಇದ್ದರೆಂದು ತೋರುತ್ತದೆ. ಈ ಅವಧಿಯಲ್ಲಿ ಮಳಲಿ ಸುಬ್ಬರಾಯರೆಂಬ ಅದೇ ಶಾಲೆಯ ಉಪಾಧ್ಯಾಯರ ಪರಿಚಯ ಇವರಿಗಾಯಿತು. ಸುಬ್ಬರಾಯರೂ ಗ್ರಂಥಕರ್ತರು. ಅವರು ತಾವು ರಚಿಸಿದ ಕೃತಿಗಳನ್ನು ಲಕ್ಶ್ಮೀನಾರಾಯಣರಿಗೆ ಓದಲು ಕೊಟ್ಟರು. ತಮ್ಮ ಸ್ವಕೀಯ ಪುಸ್ತಕಭಂಡಾರದ ಗ್ರಂಥಗಳನ್ನೂ ಕೊಟ್ಟರು. ಲಕ್ಶ್ಮೀನಾರಾಯಣರು ಅನೇಕ ಯಕ್ಷಗಾನ ಪ್ರಸಂಗಗಳನ್ನು ಓದಿದರು. ಬಳಿಕ ಸುಬ್ಬರಾಯರ ಮಾರ್ಗದರ್ಶನದಲ್ಲಿ ಲಕ್ಶ್ಮೀನಾರಾಯಣಪ್ಪ ರತ್ನಾವತಿ ಕಲ್ಯಾಣ ಎಂಬ ಕೃತಿಯನ್ನು ರಚಿಸಿದರು. ಮುದ್ದಣ ಉಡುಪಿಯ ಕ್ರಿಶ್ಚ್ಯನ್ ಹೈಸ್ಕೂಲ್ನಲ್ಲಿ ಕೂಡ ಸೇವೆ ಸಲ್ಲಿಸಿದ್ದರು. ಸಾಂಸಾರಿಕ ಜೀವನ ೧೮೯೩ರಲ್ಲಿ ಲಕ್ಷ್ಮಿನಾರಣಪ್ಪರ ವಿವಾಹ ಕಮಲಾಬಾಯಿ ಎಂಬರೊಂದಿಗೆ ನಡೆಯಿತು. ಇವರು ಮೈಸೂರು ಸೀಮೆಯ ಶಿವಮೊಗ್ಗ ಜಿಲ್ಲೆಯ ಕಾಗೇಗೋಡುಮಗ್ಗಿಯವರು. ಅದ್ಭುತ ರಾಮಾಯಣ, ರಾಮಪಟ್ಟಾಭಿಷೇಕ. ರಾಮಾಶ್ವಮೇಧಗಳನ್ನು ಇವರು ಮದುವೆಯ ಬಳಿಕವಷ್ಟೇ ಬರೆದದ್ದು ಎನ್ನಲಾಗಿದೆ. ರಾಮಾಶ್ವಮೇಧದಲ್ಲಿ ಬರುವ ಮುದ್ದಣಮನೋರಮೆಯರ ಸರಸ ಸಂವಾದ ಭಾಗ ರಸಿಕ ಲಕ್ಶ್ಮೀನಾರಾಯಣರ ಸರಸ ಸಂಸಾರ ಚಿತ್ರದ ಒಂದು ಮುಖ ಎನ್ನುತ್ತಾರೆ. ೧೮೯೮ ಇವರಿಗೆಒಬ್ಬ ಮಗ ಹುಟ್ಟಿದನು. ಈತನಿಗೆ ರಾಧಾಕೃಷ್ಣನೆಂದು ಹೆಸರಿಟ್ಟರು. ಕ್ಷಯ ರೋಗ ಮತ್ತು ತೀವ್ರ ಬಡತನದಿಂದ ಅಂತಿಮ ದಿನಗಳನ್ನು ಕಳೆದ ಮುದ್ದಣ, ೩೧ರ ಕಿರಿಯ ವಯಸ್ಸಿನಲ್ಲಿ ೧೫ ಫೆಬ್ರುವರಿ ೧೯೦೧ರಂದು ಮರಣ ಹೊಂದಿದರು. ಬರವಣಿಗೆಗಳು ಮತ್ತು ಕೃತಿಗಳು ಕಿರಿಯ ವಯಸ್ಸಿನಲ್ಲಿಯೇ ಪ್ರತಿಭಾವಂತ ಕವಿಯಾಗಿ ರೂಪುಗೊಂಡಿದ್ದ ಮುದ್ದಣನವರು ನಾಚಿಕೆ ಸ್ವಭಾವದವರೂ ಹಾಗು ಅತ್ಯಂತ ವಿನಯವಂತರೂ ಆಗಿದ್ದರು ಎಂದು ತಿಳಿದು ಬಂದಿದೆ. ಇದೇ ಕಾರಣದಿಂದ ಅವರು ತಮ್ಮ ಅದ್ಭುತ ರಾಮಾಯಣಂ(ಹೊಸಗನ್ನಡ ಗದ್ಯಶೈಲಿ), ಶ್ರೀರಾಮ ಪಟ್ಟಾಭಿಷೇಕಂ (೨೪೨ ಷಟ್ಪದಿ ಶೈಲಿ ಪದ್ಯಗಳು), ಹಾಗೂ ಶ್ರೀ ರಾಮಾಶ್ವಮೇಧಂ (ಮುದ್ದಣನ ಶ್ರೇಷ್ಠ ಕೃತಿಯೆಂದು ವಿಮರ್ಶಕರು ಅಭಿಪ್ರಾಯಪಟ್ಟಿರುವ) ಕೃತಿಗಳನ್ನು ಬೇರೊಬ್ಬರ ಹೆಸರಿನಲ್ಲಿ ಪ್ರಕಾಶನಕ್ಕೆ ಕಳಿಸಿದರು. ಈ ಕೃತಿಗಳು ಪ್ರಾಚೀನ ಸಾಹಿತಿಗಳಿಂದ ರಚಿತವಾದದ್ದೆಂದೂ, ಅವರ ವಂಶಸ್ಥರಿಂದ ತನಗೆ ದೊರೆತದ್ದೆಂದು, ಆ ವಂಶಸ್ಥರ ಬಗ್ಗೆ ಈಗ ಯಾವುದೇ ಮಾಹಿತಿಗಳಿಲ್ಲವೆಂದೂ ಪ್ರಕಾಶಕರಿಗೆ ತಿಳಿಸಿದರು. ಈ ಕೃತಿಗಳನ್ನು ಮೊದಲ ಬಾರಿಗೆ, ೧೮೯೫, ೧೮೯೬ ಮತ್ತು ೧೮೯೯೧೯೦೧ರಲ್ಲಿ, ಮೈಸೂರಿನಲ್ಲಿರುವ ಶ್ರೀ ಎಂ.ಎ.ರಾಮಾನುಜ ಅಯ್ಯಂಗಾರ್ ಮತ್ತು ಶ್ರೀ ಎಸ್.ಜಿ.ನರಸಿಂಹಾಚಾರ್ ಅವರು ಪ್ರಕಾಶಿಸುವ ಕರ್ನಾಟಕ ಕಾವ್ಯ ಮಂಜರಿ ಮತ್ತು ಕರ್ನಾಟಕ ಕಾವ್ಯ ಕಲಾನಿಧಿ ಎಂಬ ಪತ್ರಿಕೆಗಳಲ್ಲಿ ಪ್ರಕಟಿಸಲಾಯಿತು. ಮುದ್ದಣನು ಇದಕ್ಕೆ ಮುಂಚೆಯೇ ಹಲವಾರು ಬಾರಿ ಪ್ರಾಚೀನ ಕೃತಿಗಳನ್ನು ಪ್ರಕಟಣೆಗಾಗಿ ಕಳಿಸಿದ್ದರಿಂದ, ಪ್ರಕಾಶಕರು ಈ ಮೂರೂ ಕೃತಿಗಳೂ ಕೂಡ ಪ್ರಾಚೀನವಾದುವೇ! ಎಂದು ನಂಬಿದರು. ನಂತರ ನಿಜ ವಿಷಯ ಬೆಳಕಿಗೆ ಬಂದದ್ದು, ವರ್ಷ ೧೯೨೯ರಲ್ಲಿ (ಅಂದರೆ, ಮುದ್ದಣನ ಮರಣವಾಗಿ ೨೮ ವರ್ಷಗಳ ನಂತರ) ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘವು ಮುದ್ದಣ ಸ್ಮರಣ ಸಂಚಿಕೆಯನ್ನು ಪ್ರಕಟಿಸಿದರು.ಆ ಸಂದರ್ಭದಲ್ಲಿ, ಮುದ್ದಣನ ಸ್ನೇಹಿತರೂ, ಸಮೀಪವರ್ತಿಗಳೂ ಆಗಿದ್ದ ಪಂಜೆ ಮಂಗೇಶರಾಯರು, ಬೆನೆಗಲ್ ರಾಮರಾವ್, ಹುರಳಿ ಭೀಮರಾವ್ ಮತ್ತು ಮಳಲಿ ಸುಬ್ಬರಾವ್ ಅವರುಗಳು ಮುದ್ದಣನೊಂದಿಗಿನ ತಮ್ಮ ಒಡನಾಟಗಳನ್ನು ಕಲೆಹಾಕಿ, ಈ ಮೂರೂ ಕೃತಿಗಳು ಮುದ್ದಣನಿಂದಲೇ ಸ್ವಯಂರಚಿತ ವಾಗಿರುವುದನ್ನು ಪ್ರತಿಪಾದಿಸಿದರು. ಇವರು ಕನ್ನಡವನ್ನು ಕನ್ನಡ೦ ಕಸ್ತೂರಿಯ೦ತೆ ಎಂದು ಮುಕ್ತ ಕ೦ಠದಿ೦ದ ಹೊಗಳಿದ್ದಾರೆ. ಕಬ್ಬಗರ ಬಲ್ಲಹಂ ಎಂಬ ಬಿರುದೂ ಇವರಿಗಿದೆ. ಸಾಹಿತಿ ಪಂಜೆ ಮಂಗೇಶರಾಯರುರ ಪ್ರಕಾರ ಮುದ್ದಣನವರಿಗಿಂತ ಒಳ್ಳೆಯ ಕವಿ ಬೇರಾರಿಲ್ಲ. ವಿಶೇಷ ಮಾಹಿತಿಗಳು ಮಳಲಿ ಸುಬ್ಬರಾಯರಿಗೆ ಕುಂದಾಪುರಕ್ಕೆ ವರ್ಗವಾದಾಗ ೧೮೯೨ನೆ ಮಾರ್ಚಿನಲ್ಲಿ ಲಕ್ಶ್ಮೀನಾರಾಯಣನೂ ಕಷ್ಟಪಟ್ಟು ಅದೇ ಊರಿಗೆ ವರ್ಗ ಮಾಡಿಸಿಕೊಂಡನು. ಕನ್ನಡಅದ್ಭುತ ರಾಮಾಯಣವೆಂಬ ಗದ್ಯ ಕಾವ್ಯ ಈ ವೇಳೆಗೆ ಪೂರ್ತಿಯಾಯಿತು. ೧೮೯೫ನೆ ಮಾರ್ಚ್ ೨ರಲ್ಲಿ ಲಕ್ಶ್ಮೀನಾರಾಯಣನು ಈ ಕೃತಿಯನ್ನು ಮೈಸೂರಿನ ಕಾವ್ಯಮಂಜರಿ ಸಂಪಾದಕರಿಗೆ ಮುದ್ರಣಕ್ಕಾಗಿ ಕಳುಹಿಸಿಕೊಟ್ಟರು. ೧೮೯೫ನೆ ಜುಲೈ ತಿಂಗಳ ಸಂಚಿಕೆಯಲ್ಲಿ ಮುದ್ರಣ ಪ್ರಾರಂಭವಾಗಿ ಅಕ್ಟೋಬರ್ ತಿಂಗಳ ಸಂಚಿಕೆಯಲ್ಲಿ ಮುಕ್ತಾಯವಾಯಿತು. ಈ ವೇಳೆಗೆ ಲಕ್ಶ್ಮೀನಾರಾಯಣನರಿಗೆ ಬವುಲಾಡಿ ವೆಂಕಟರಮಣ ಹೆಬ್ಬಾರರು ಎಂಬ ವಿದ್ವಾಂಸರೊಬ್ಬರ ಪರಿಚಯವಾಯಿತು. ಈ ಮಹನೀಯರಲ್ಲಿ ಲಕ್ಶ್ಮೀನಾರಾಯಣ ತಾನು ಕನ್ನಡ ಜೈಮಿನಿ ಭಾರತದ ಮಾದರಿಯಲ್ಲಿ ಬರೆಯಲು ತೊಡಗಿದ್ದ ರಾಮಾಶ್ವಮೇಧ ಎಂಬ ದೊಡ್ಡ ಗ್ರಂಥದ ಮೊದಮೊದಲಿನ ಕೆಲವು ಪದ್ಯಗಳನ್ನು ಓದಿ ಹೇಳಿದರಂತೆ. ಹೆಬ್ಬಾರರು ಪದ್ಯಬಂಧದಲ್ಲಿ ಕಾಣ ಬರುವ ರಸಹೀನತೆಯನ್ನು ತೋರಿಸಿಕೊಟ್ಟು ಪ್ರಾಚೀನ ಗ್ರಂಥಗಳಲ್ಲಿ ದೊರೆಯದ ಶಬ್ದರೂಪಗಳಿಗೆ ಆಧಾರಗಳನ್ನು ಕೇಳುತ್ತ ಬಂದರಂತೆ. ಮೂರು ನಾಲ್ಕು ವರ್ಷಗಳು ಕಳೆದ ಮೇಲೆ ಮತ್ತೊಮ್ಮೆ ಲಕ್ಶ್ಮೀನಾರಾಯಣನರು ಹೆಬ್ಬಾರರನ್ನು ಸಂಧಿಸಿದಾಗ ಅವರಿಗೆ ಆ ರಾಮಾಶ್ವಮೇಧದ ಇನ್ನೂಕೆಲವು ಪದ್ಯಗಳನ್ನು ಓದಿದರಂತೆ. ಆಗ ಅವರು ನೀವು ಹೀಗೆ ಬರೆಯುವುದಕ್ಕಿಂತ ಛಂದಸ್ಸಿನ ಗೊಡವೆ ಬಿಟ್ಟು ವಚನ ರೂಪದಲ್ಲಿ ಏಕೆ ಬರೆಯಬಾರದು ಎಂದು ಕೇಳಿದರಂತೆ. ಮತ್ತೆ ಮೂರು ವರ್ಷಗಳ ಮೇಲೆ ಇನ್ನೊಮ್ಮೆ ಸಂಧಿಸಿದಾಗ ಲಕ್ಶ್ಮೀನಾರಾಯಣರು ತನ್ನ ಅಚ್ಚಾದ ಅದ್ಭುತ ರಾಮಾಯಣದ ಪ್ರತಿಯೊಂದನ್ನು ಹೆಬ್ಬಾರರಿಗೆ ಕೊಟ್ಟಾಗ ಅವರು ಓದಿ ನೋಡಿ ಸಂತೋಷಪಟ್ಟರಂತೆ. ಇನ್ನೊಮ್ಮೆ ಸಂಧಿಸಿದಾಗ ರಾಮಪಟ್ಟಾಭಿಷೇಕ ಮುಗಿಯಿತೆಂದೂ ಮುಂದಿನ ಭಾಗವನ್ನು ಗದ್ಯದಲ್ಲಿ ಬರೆಯುವೆನೆಂದೂ ಈ ಕವಿ ಹೆಬ್ಬಾರರಿಗೆ ಹೇಳಿದ್ದರಂತೆ. ಅಲ್ಲದೇ ಪಟ್ಟಾಭಿಷೇಕ ಕಾಲದಲ್ಲಿ ರಾಮನ ಸ್ತುತಿ ಪರವಾದ ಕೆಲವು ಪದ್ಯಗಳನ್ನು ಹೆಬ್ಬಾರರೆ ಕೊಡಬೇಕೆಂದು ಕೇಳಿಕೊಂಡರಂತೆ. ಅದಕ್ಕೆ ಹೆಬ್ಬಾರರು ಒಪ್ಪಿ ಭೂರಮೆ ಭುಜಾಗ್ರದೊಳ್ ಭುಜಮಧ್ಯದೊಳ್ ಎಂಬ ಪದ್ಯವನ್ನು ಆರಂಭಿಸಿ ಇಂತು ಮೃದುಮಧುರವಚನರಚನೆಗಳಂ ಎಂಬ ಪದ್ಯದವರೆಗೆ ನಡುವಣ ೩೩ ಪದ್ಯಗಳನ್ನು ಬರೆದುಕೊಟ್ಟರಂತೆ. ಅಲ್ಲದೇ ಒಟ್ಟಿನಲ್ಲಿ ಕಾವ್ಯವನ್ನು ಒಮ್ಮೆ ಕೈಯಾಡಿಸಿದರಂತೆ. ಹೀಗೆ ಹೆಬ್ಬಾರರ ಸಲಹೆ ಸಹಕಾರಗಳಿಂದ ಲಕ್ಶ್ಮೀನಾರಾಯಣನು ಶ್ರೀರಾಮಪಟ್ಟಾಭಿಷೇಕ ವನ್ನು ಪೂರ್ತಿಗೊಳಿಸಿದನು. ೨೫೯೧೮೯೫ರಲ್ಲಿ ಮಹಾಲಕ್ಶ್ಮಿಯೆಂಬಾಕೆಯಿಂದ ರಚಿತವಾದ ರಾಮಪಟ್ಟಾಭಿಷೇಕ ವೆಂಬ ಷಟ್ಪದಿ ಗ್ರಂಥವು ಸಿಕ್ಕಿದೆ. ಅದರಲ್ಲಿ ಪದ್ಯಗಳು ೨೫೦ರೊಳಗಿವೆ. ಗ್ರಂಥವು ಬಹಳಚೆನ್ನಾಗಿದೆ. ಮುದ್ರಿಸಲು ಯೋಗ್ಯವೆಂದು ಭಾವಿಸುತ್ತೇನೆ ಎಂದು ಕಾವ್ಯಮಂಜರಿಯವರಿಗೆ ಬರೆದರು. ೧೮೯೫ನೆಯನವೆಂಬರ್ ೪೪ನೆ ಸಂಚಿಕೆಯಲ್ಲಿ ಎಂದರೆ ಅದ್ಭುತ್ ರಾಮಾಯಣ ವನ್ನು ಮುಗಿಸಿದ ಸಂಚಿಕೆಯಲ್ಲಿಯೇ ರಾಮಪಟ್ಟಾಭಿಷೇಕವನ್ನು ಆರಂಭ ಮಾಡಿ ೧೮೯೬ನೆಯ ಜನವರಿ ೪೬ನೆಯ ಸಂಚಿಕೆಯಲ್ಲಿ ಮುಗಿಸಿದರು. ರಾಮಪಟ್ಟಾಭಿಷೇಕ ಕಾವ್ಯದಲ್ಲಿ ನಾಂದಿ ಸಂಧಿಯಲ್ಲಿ ಬರುವ ಪ್ರತಿ ಪದ್ಯದ ಅಕ್ಷರವನ್ನು ಜೋಡಿಸುತ್ತ ಹೋದರೆ ಶ್ರೀ ರಾಮಚಂದ್ರಾಯ ನಮಾಮಿ ಎಂದಾಗುತ್ತದೆ. ಈ ಗೂಢರಚನೆಯ ಸ್ವಾರಸ್ಯವನ್ನು ಈತನೇ ಹೆಬ್ಬಾರರಿಗೆ ತೋರಿಸಿ ಕೊಟ್ಟಿದ್ದರಂತೆ. ರಾಮಾಶ್ವಮೇಧ ಎಂದು ಪ್ರಾರಂಭವಾದ ಕೃತಿ ಹೀಗೆರಾಮಪಟ್ಟಾಭಿಷೇಕ ಕಾವ್ಯವಾಗಿ ಬೇರ್ಪಟ್ಟಾಗ ಅದಕ್ಕೆ ಅನುಗುಣವಾಗಿ ಅಲ್ಲಲ್ಲಿ ಪದಗಳ ಬದಲಾವಣೆ ಆಗಬೇಕಾಯಿತು. ಶ್ರೀಕಾಂತನಧ್ವರದಚಾರಿತ್ರ್ಯಮಂ ಎನ್ನುವ ಕಡೆ ಬದಲಾವಣೆಯಾಗದಿದ್ದುದನ್ನು ಹೆಬ್ಬಾರರು ತೋರಿಸಿಕೊಟ್ಟು ಅಭ್ಯುದಯಚಾರಿತ್ರ್ಯಮಂ ಎಂದು ತಿದ್ದಿದರಂತೆ. ಮುಂದೆ ಲಕ್ಶ್ಮೀನಾರಾಯಣನಿಗೆ ಮತ್ತೆ ಉಡುಪಿಗೆ ವರ್ಗವಾದುದರ ಪರಿಣಾಮವಾಗಿ ಹೆಬ್ಬಾರರ ಸಂಪರ್ಕ ಕಡಿಮೆಯಾಗಿ ಬರಬರುತ್ತ ಕಡೆಗೊಮ್ಮೆ ಕಡಿದೇ ಹೋಯಿತೆಂದು ತೋರುತ್ತದೆ. ಪದ್ಯಂ ವಧ್ಯಂ ಗದ್ಯಂ ಹೃದ್ಯಂ ಹೃದ್ಯಮಪ್ಪ ಗದ್ಯದೊಳೆ ಪೇಳ್ವುದು ಎಂದು ಮುಂದೆ ಕವಿ ನಿರ್ಧರಿಸಿದನು. ಹೆಬ್ಬಾರರ ಪ್ರೇರಣೆಯಿಂದ ಈ ನಿರ್ಧಾರಕ್ಕೆ ಬಂದು ಅದರಂತೆ ರಾಮಪಟ್ಟಾಭಿಷೇಕದ ಮುಂದಣ ಕಥೆಯನ್ನು ಶ್ರೀ ರಾಮಾಶ್ವಮೇಧ ಎಂಬ ಹೆಸರಿನಲ್ಲಿ ಗದ್ಯದಲ್ಲಿ ಬರೆಯುತ್ತಾನೆ. ಜೈಮಿನಿ ಭಾರತದ ಹೃದ್ಯವಾದ ಸೀತಾಪರಿತ್ಯಾಗದ ಕಥೆಯನ್ನು ರಾಮನ ಅಶ್ವಮೇಧ ವೃತ್ತಾಂತವನ್ನು ಸುಂದರೆವಾಗಿ ಗದ್ಯದಲ್ಲಿ ಹೇಳಿದನು. ಆ ಕಾದಂಬರಿಯ ಕಥೆಯ ಸಂವಾದ ಸ್ವಾರಸ್ಯವನ್ನು ಗ್ರಹಿಸಿ ಮುದ್ದಣಮನೋರಮೆಯರ ಅಪೂರ್ವವಾದ ಮುದ್ದಣಮನೋರಮೆಯರ ಸರಸ ಸಲ್ಲಾಪವನ್ನು ಕಥೆಯಲ್ಲಿ ಬಳಸಿಕೊಂಡು ಕಥೆ ಹೇಳಿದನು. ಎಡೆ ಎಡೆಯಲ್ಲಿ ಸಕ್ಕದ ಕನ್ನಡ ನಲ್ನುಡಿಯನ್ನು ಮೆರೆಯಲು ತಿರುಳ್ಗನ್ನಡದಲ್ಲಿ ಈ ಕಥೆ ಬರೆದನು. ಈ ಗ್ರಂಥವೂ ಮೈಸೂರಿನ ಕಾವ್ಯಕಲಾನಿಧಿಯವರಿಂದ ೧೯೧೧ರಲ್ಲಿ ಬೆಳಕಿಗೆ ಬಂದಿತು. ಮುದ್ದಣಮನೋರಮೆಯರ ಸರಸ ಸಲ್ಲಾಪ ಸಂವಾದದ ವಾಕ್ಯಗಳು ಜನಪ್ರಿಯವಾದವು. ಎಲ್ಲ ಪತ್ರಿಕೆಗಳೂ ಕೃತಿಯನ್ನು ಕತೃವನ್ನು ಹೊಗಳಿದವು. ಕೆಲವು ಇಂಗ್ಲಿಷ್ ಪತ್ರಿಕೆಗಳು ಈ ಕವಿಯ ಕೃತಿಯನ್ನು ಕೊಂಡಾಡಿದವು. ಗೌರವಗಳು ಮುದ್ದಣ ಜಯಂತಿಯನ್ನು ಪ್ರತಿವರ್ಷ ಮುದ್ದಣನ ಹುಟ್ಟೂರಾದ ನಂದಳಿಕೆಯಲ್ಲಿ ಆಚರಿಸಲಾಗುತ್ತದೆ. ನಂದಳಿಕೆ ಬಾಲಚಂದ್ರರಾವ್ ನೇತೃತ್ವದಲ್ಲಿ ಕವಿ ಮುದ್ದಣ ಸ್ಮಾರಕ ಮಿತ್ರ ಮಂಡಳಿಯನ್ನು ೧೯೭೯ರಲ್ಲಿ ಸ್ಥಾಪಿಸಲಾಯಿತು. ಕವಿ ಮುದ್ದಣ ಸ್ಮಾರಕ ಭವನವನ್ನು ೧೯೮೭ರಲ್ಲಿ ನಿರ್ಮಿಸಲಾಯಿತು. ೧೯೭೯ರಲ್ಲಿ ವರಕವಿ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಸ್ಥಾಪಿಸಲಾಯ್ತು. ಈ ಪ್ರಶಸ್ತಿಯು ಹತ್ತು ಸಾವಿರ ನಗದು ಹಾಗೂ ಸನ್ಮಾನವನ್ನು ಒಳಗೊಂಡಿದೆ. ೨೦೧೭ನೇ ಇಸವಿಯಲ್ಲಿ ಮುದ್ದಣ್ಣನ ನೆನಪಿನಲ್ಲಿ ಭಾರತೀಯ ಅಂಚೆ ಇಲಾಖೆ ರೂ ೫ ಮುಖಬೆಲೆಯ ಒಂದು ಸ್ಟಾಂಪ್ ಜಾರಿಗೊಳಿಸಿತು. ಹೆಚ್ಚಿನ ಓದಿಗೆ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶಮುದ್ದಣ (ನಂದಳಿಕೆ ಲಕ್ಷ್ಮೀನಾರಾಯಣಯ್ಯ) ಮುದ್ದಣನ ಬಗೆಗಿನ ಹೆಚ್ಚಿನ ಮಾಹಿತಿಗೆ ಬೇಲೂರು ರಾಮಮೂರ್ತಿಯವರು ರಚಿಸಿರುವ ಮತ್ತು ಸಪ್ನ ಬುಕ್ ಹೌಸ್ ಪ್ರಕಟಿಸಿರುವ ಮಹಾಕವಿ ಮುದ್ದಣ ಕೃತಿಯನ್ನು ಓದಿ. ಸಾರಾಂಶ:ಹೊಸಗನ್ನಡ ಕಾವ್ಯದ ಮುಂಗೋಳಿಬೇಲೂರು ರಾಮಮೂರ್ತಿ : 24 ಜನವರಿ 2021, ಉಲ್ಲೇಖ ಕನ್ನಡ ಸಾಹಿತ್ಯ ಸಾಹಿತಿಗಳು
ಲಕ್ಷಣ ಛಂದಸ್ಸಿನಲ್ಲಿ ವಾರ್ಧಕ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು. ಮುದ್ದಣ ವಿರಚಿತ ಶ್ರೀರಾಮ ಪಟ್ಟಾಭಿಷೇಕ ಇರುವುದು ವಾರ್ಧಕ ಷಟ್ಪದಿಯಲ್ಲಿಯೇ. ವಾರ್ಧಕ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. ೧(1),೨,೪,೫ನೆಯ ಸಾಲುಗಳು ಸಮನಾಗಿದ್ದು, ೫ ಮಾತ್ರೆಯ ನಾಲ್ಕು ಗಣಗಳಿರುತ್ತವೆ. ೩ ಮತ್ತು ೬ನೆಯ ಪಾದಗಳಲ್ಲಿ ೫ ಮಾತ್ರೆಯ ಆರು ಗಣಗಳಿದ್ದು, ಕೊನೆಯಲ್ಲಿ ಒಂದು ಗುರು ಇರುತ್ತದೆ. ಪದ್ಯವು ಆದಿಪ್ರಾಸದಿಂದ ಕೂಡಿರುತ್ತದೆ.ಇದರಲ್ಲಿ ಪ್ರತಿ ಪಾದದಲ್ಲಿಯೂ ಆರಂಭದ ಒಂದೆರಡನೆಯ ಸ್ವರಗಳ ನಡುವೆ ಒಂದೇ ವಿಧವಾದ ವ್ಯಂಜನವಿರುವುದು. ಇದು ಆದಿ ಪ್ರಾಸ. ಉದಾಹರಣೆ: ಬಲ್ಗಯ್ಯ ನೃಪರಂಜಿ ತಡೆಯದೆರಘೂದ್ವಹನ ಸೊಲ್ಗೇಳಿ ನಮಿಸಲಿಳೆಯೊಳ್ ಚರಿಸುತಧ್ವರದ ನಲ್ಗುದುರೆ ಬಂದು ವಾಲ್ಮೀಕಿಯ ನಿಜಾಶ್ರಮದ ವಿನಿಯೋಗದುಪವನದೊಳು ಪುಲ್ಗಳ ಪಸುರ್ಗೆಳಸಿ ಪೊಕ್ಕಡಾ ತೋಟಗಾ ವಲ್ಗೆ ತನ್ನೊಡನಾಡಿಗಳಕೂಡಿ ಲೀಲೆ ಮಿಗೆ ಬಿಲ್ಗೊಂಡು ನಡೆತಂದವಂ ಕಂಡನರ್ಚಿತ ಸುವಾಜಿಯಂ ವೀರಲವನು ಇದರ ಛಂದಸ್ಸಿನ ಪ್ರಸ್ತಾರ ಬಲ್ಗಯ್ಯ ನೃಪರಂಜಿ ತಡೆಯದೆರ ಘೂದ್ವಹನ ಸೊಲ್ಗೇಳಿ ನಮಿಸಲಿಳೆ ಯೊಳ್ ಚರಿಸು ತಧ್ವರದ ನಲ್ಗುದುರೆ ಬಂದು ವಾ ಲ್ಮೀಕಿಯನಿ ಜಾಶ್ರಮದ ವಿನಿಯೋಗ ದು ಪವನದೊ ಳು ಪುಲ್ಗಳಪ ಸುರ್ಗೆಳಸಿ ಪೊಕ್ಕಡಾ ತೋಟಗಾ ವಲ್ಗೆತ ನ್ನೊಡನಾಡಿ ಗಳಕೂಡಿ ಲೀಲೆಮಿಗೆ ಬಿಲ್ಗೊಂಡು ನಡೆತಂದ ವಂಕಂಡ ನರ್ಚಿತಸು ವಾಜಿಯಂ ವೀರಲವ ನು ಸಂಜ್ಞೆಯು ಗಣವಿಭಾಗವನ್ನು ತೋರಿಸುತ್ತದೆ. ಪದ್ಯವು ಕೆಳಗಿನಂತೆ ಗಣವಿಂಗಡನೆಯಾಗಿರುವುದನ್ನು ಗಮನಿಸಿ: ಮೊದಲ ಸಾಲಿನ ಗಣದ ಲೆಕ್ಕ: ೫೫೫೫ ೫೫೫೫ ೫೫೫೫೫೫ ೫೫೫೫ ೫೫೫೫ ೫೫೫೫೫೫ ನೋಡಿ ಶರ ಕುಸುಮ ಭೋಗ ಭಾಮಿನೀ ವಾರ್ಧಕ ಪರಿವರ್ಧಿನೀ ಕನ್ನಡ ವ್ಯಾಕರಣ ಷಟ್ಪದಿ ಉಲ್ಲೇಖ ಕನ್ನಡ ಸಾಹಿತ್ಯ ಕನ್ನಡ ವ್ಯಾಕರಣ
ಗಣಕಯಂತ್ರದ ಪ್ರಕ್ರಿಯೆಗಳನ್ನು ಹಾಗು ತಂತ್ರಾಂಶಗಳ ಸೂಚನೆಗಳನ್ನು ನಿರ್ವಹಿಸುವ ಗಣಕಯಂತ್ರದ ಬಹುಮುಖ್ಯ ಭಾಗಕ್ಕೆ ಕೇಂದ್ರ ಸಂಸ್ಕರಣ ಘಟಕ ಅಥವಾ ಸಂಸ್ಕಾರಕ ಎಂದು ಕರೆಯುತ್ತಾರೆ. ಸಂಸ್ಕಾರಕ ನಿರ್ಮಿಸುವ ಪ್ರಮುಖ ಸಂಸ್ಥೆಗಳು ಎ.ಎಂ.ಡಿ, ಇಂಟೆಲ್, ಐ.ಬಿ.ಎಂ. ಈ ಸಂಸ್ಥೆಗಳಿಂದ ಇತ್ತೀಚಿನ ವರ್ಷಗಳಲ್ಲಿ ಹೊರಬಂದಿರುವ ಕೆಲವು ಸಂಸ್ಕಾರಕಗಳು ಕೆಳಕಂಡಂತಿವೆ ದೊಡ್ಡ ಪಠ್ಯ ಎ.ಎಂ.ಡಿ ಸಂಸ್ಕಾರಕಗಳು ಎ.ಎಂ.ಡಿ ೬೪ ಕೆ೮ ಅಥ್ಲಾನ್ ಕೆ೭ ಇಂಟೆಲ್ ಸಂಸ್ಕಾರಕಗಳು ಇಂಟೆಲ್ ಕೋರ್ (ಕೋರ್ ಡುಓ) ಪೆಂಟಿಯಂ ೪ ಪೆಂಟಿಯಂ ಎಂ ಸೆಲೆರಾನ್ ಡಿ ಡ್ಯುಯಲ್ ಕೋರ್ ಕೋರ್ ಐ೩ ಕೋರ್ ಐ೫ ಕೋರ್ ಐ೭ ಐ.ಬಿ.ಎಂ ಸಂಸ್ಕಾರಕಗಳು ಪವರ್ ಪಿ.ಸಿ ಜಿ೫ ಪವರ್ ಪಿ.ಸಿ ಜಿ೪ ಡ್ಯುಯಲ್ ಕೋರ್ ಹೆಚ್ಚಿನ ಮಾಹಿತಿಗಾಗಿ :.. ಗಣಕಯಂತ್ರ
ನಾಂದಿ (೧೯೬೪) , ಶ್ರೀಯುತ ಎನ್.ಲಕ್ಶ್ಮಿನಾರಾಯಣ ಅವರು ನಿರ್ದೇಶಿಸಿದ ಒಂದು ಅತ್ಯುತ್ತಮ ಚಲನಚಿತ್ರ. ಶ್ರೀ ಭಾರತಿ ಚಿತ್ರ ಲಾಂಚನದಡಿ ವಾದಿರಾಜ್ ಮತ್ತು ಜವಾಹರ್ ಸಹೋದರರ ನಿರ್ಮಾಣದಲ್ಲಿ ಬಂದ ಚಿತ್ರ. ಕೇವಲ ಮನೋರಂಜನೆಯೊಂದೇ ಚಿತ್ರದ ಗುರಿಯಲ್ಲ, ಅದು ಜನರ ಸಾಮಾಜಿಕ ಆಲೋಚನೆಯ ದೃಷ್ಟಿಕೋನದೆಡೆಗೆ ಕೂಡಾ ಸೆಳೆಯಬೇಕು ಎಂಬುದಕ್ಕೆ ನಾಂದಿ ಒಂದು ಉತ್ತಮ ಉದಾಹರಣೆ. ಕಿವುಡಮೂಗರ ಸಮಸ್ಯೆಯ ಕುರಿತಾದ ಚಿತ್ರ ನಾಂದಿ. ಚಿತ್ರಕಥೆ ಶಾಲಾ ಮಾಸ್ತರರ ಸರಳ ಜೀವನದ ಕಥೆ ನಾಂದಿ. ಮೊದಲ ಹೆರಿಗೆಯ ಸಮಯದಲ್ಲಿ ಪತ್ನಿಯನ್ನು ಕಳೆದುಕೊಳ್ಳುವ ಈತ, ಮರುಮದುವೆಯಾಗುವಾಗ ಉದ್ದೇಶಪೂರ್ವಕವಾಗಿ ಕಿವುಡು ಮೂಗಿಯ ಹುಡುಗಿಯನ್ನು ಮದುವೆಯಾಗುತ್ತಾನೆ. ಅಂತಹ ಯುವತಿಯ ಜೀವನಕ್ಕೆ ಆಸರೆಯಾಗಿ ನಿಲ್ಲುತ್ತಾನೆ. ಶಾಲಾಮಾಸ್ತರನಾಗಿ ಡಾ.ರಾಜ್ ಕುಮಾರ್, ಮೊದಲ ಪತ್ನಿಯಾಗಿ ಕಲ್ಪನಾ ಹಾಗು ಕಿವುಡುಮೂಕ ಹುಡುಗಿಯಾಗಿ ಹರಿಣಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಪ್ರತೀ ಘಟನೆ ಪ್ರತೀ ಪಾತ್ರ ಒಂದು ಸಂದೇಶವನ್ನು ಹೊಂದಿದೆ. ಉದಾಹರಣೆ: ಹತ್ತುಹನ್ನೆರಡು ಮಕ್ಕಳನ್ನು ಪಡೆದು ಕಷ್ಟ ಪಡುವ ಬಾಲಕೃಷ್ಣ ಕುಟುಂಬ ಯೋಜನೆಯ ಬಗ್ಗೆ ಆಗಲೇ ಯೋಚಿಸುವಂತೆ ಮಾಡಿದೆ. ಚಿತ್ರದ ಹಾಡುಗಳು ಚಂದ್ರಮುಖೀ ಪ್ರಾಣಸಖಿ ಚತುರೆ ನೀ ಹೇಳೇ... ಹಾಡೊಂದ ಹಾಡುವೆ ನೀ ಕೇಳು ಮಗುವೇ.... ಉಡುಗೊರೆಯೊಂದಾ ತಂದಾ.... ಲಂಡನ್ ನಲ್ಲಿ ನಡೆದ ಕಾಮನ್ ವೆಲ್ತ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತಗೊಂಡ ಮೊದಲ ಕನ್ನಡ ಚಿತ್ರವೆಂಬ ಹೆಗ್ಗಳಿಕೆ ಈ ಚಿತ್ರದ್ದು. ೧೯೬೪ರ ರಾಷ್ಟ್ರ ಪ್ರಶಸ್ತಿ ಪಟ್ಟಿಯಲ್ಲಿ ನಾಂದಿ ಚಿತ್ರಕ್ಕೆ ಪ್ರಶಸ್ತಿ ಬರಬಹುದೆಂದು ಕನ್ನಡಿಗರು ಕಾತರರಾಗಿದ್ದರು,ಆದರೆ ಆಗಿನ ಆಯ್ಕೆ ಪದ್ದತಿಯ ದೋಷದಿಂದಾಗಿ ನಾಂದಿಗೆ ಪ್ರಶಸ್ತಿ ಬರಲಿಲ್ಲ,ಮೊದಲ ಬಾರಿಗೆ ರಾಷ್ಟ್ರ ಪ್ರಶಸ್ತಿ ಪಟ್ಟಿಯನ್ನು ವಿರೋದಿಸಿ ಸ್ವಯಂ ಪ್ರೇರಣೆಯಿಂದ ಬೆಂಗಳೂರಿನ ಸಿನಿಮಾ ಪ್ರೇಮಿಗಳು ಬೀದಿಗಿಳಿದು ಪ್ರತಿಭಟಿಸಿದರು.ನಮನ ಕನ್ನಡ ಸಿನೆಮಾ ಕನ್ನಡ ಚಲನಚಿತ್ರಗಳು ವರ್ಷ೧೯೬೪ ಕನ್ನಡಚಿತ್ರಗಳುರಾಜಕುಮಾರ್ಚಲನಚಿತ್ರಗಳು
ಸಂಪಿಗೆ ಒಂದು ಹೂವಿನ ಹೆಸರು. ಮ್ಯಾಗ್ನೊಲಿಯೇಸೀ ಕುಟುಂಬಕ್ಕೆ ಸೇರಿದೆ. ತೆಳುಹಳದಿ ಬಣ್ಣದ ಈ ಹೂವು ಸಾಮಾನ್ಯವಾಗಿ ಉದ್ಯಾನಗಳಲ್ಲಿ, ಸಸ್ಯೋದ್ಯಾನಗಳಲ್ಲಿ, ದೇವಸ್ಥಾನದ ಅಂಗಳದಲ್ಲಿ, ಹಾಗೂ ಕೆಲವರ ಮನೆಗಳ ಅಂಗಳದಲ್ಲಿ ಅಥವಾ ಹಿತ್ತಲಲ್ಲಿ ಕಾಣಸಿಗುತ್ತದೆ. ಸಂಸ್ಕೃತದಲ್ಲಿ ಚಂಪಕ ಸುವರ್ಣ, ತೆಲುಗಿನಲ್ಲಿ ಚಂಪಕಮು, ಇಂಗ್ಲಿಷ್ನಲ್ಲಿ ಗೋಲ್ಡನ್ ಚಂಪಕ್ ಎಂದು ಕರೆಸಿಕೊಳ್ಳುವ ಈ ಹೂವಿನ ಸಸ್ಯನಾಮ ಮೈಕೇಲಿಯ ಚಂಪಕ. ೧೭೩೭ ರಲ್ಲಿ ಅಂದಿನ ಪ್ರಸಿದ್ಧ ವಿಜ್ಞಾನಿ ಮೈಕೆಲ್ ಪಿ.ಎ. ಅವರು ಕಂಡುಹಿಡಿದುದರಿಂದ ಈ ಹೆಸರು. ವಿವಿಧ ದೇಶಗಳಲ್ಲಿ ಪ್ರಮುಖವಾಗಿ ಶ್ರೀಲಂಕಾ, ಫಿಲಿಪೈನ್ಸ್, ಜಪಾನ್, ಚೀನಾ, ಇಂಡೋನೇಷ್ಯ, ದಕ್ಷಿಣ ಆಫ್ರೀಕಾದ ದಟ್ಟ ಕಾಡುಗಳಲ್ಲಿ ಸಂಪಿಗೆ ಮರ ಬೇರು ಬಿಟ್ಟಿದೆ. ವರ್ಷದ ಮೇ ಅಥವಾ ಅಕ್ಟೋಬರ್ ತಿಂಗಳಲ್ಲಿ ಹೂ ಬಿಡುವುದು. ಕೆಂಡಸಂಪಿಗೆ ಬಹು ಸುವಾಸನೆಯುಳ್ಳದ್ದು. ಬಿಳಿ, ಬೂದು,ಕಡುಹಳದಿ,ನೀಲ ಹಳದಿ ಹೀಗೆ ಹಲವಾರು ಬಣ್ಣಗಳಲ್ಲಿ ಬಿಡುತ್ತದೆ. ವ್ಯಾಪ್ತಿ ಹಿಮಾಲಯ ತಪ್ಪಲು, ಅಸ್ಸಾಮ್, ಪಶ್ಚಿಮಘಟ್ಟದ ಅರಣ್ಯ ಪ್ರದೇಶಗಳಲ್ಲಿ ಇದರ ವ್ಯಾಪ್ತಿ ಇದೆ. ಸಸ್ಯ ವಿವರಣೆ ಎತ್ತರವಾದ, ನೇರವಾದ ಸ್ತಂಭಾಕೃತಿಯ ಕಾಂಡದ ದೊಡ್ಡ ಪ್ರಮಾಣದ ನಿತ್ಯಹರಿದ್ವರ್ಣದ ಮರ. ನುಣುಪು ತೊಗಟೆ ಎಳೆಬೂದಿ ಬಣ್ಣವಿರುವುದು. ಸುವಾಸನೆಯ ಹೂಗಳಿಗೋಸ್ಕರ, ಅಲ್ಲಲ್ಲಿ ದೇವಾಲಯದ ಆವರಣ, ಉದ್ಯಾನವನಗಳಲ್ಲಿ ಬೆಳೆಸುತ್ತಾರೆ. ಚೌಬೀನೆಯ ಬಿಳಿಮರ ಕಿರಿದಾಗಿದ್ದು ಮಾಸಲು ಬಣ್ಣದ್ದಾಗಿರುತ್ತದೆ. ಕಚ್ಚಾ ಹಳದಿ ಮಿಶ್ರಕಂದು. ಹದಮಾಡಲು ಸುಲಭ. ತಕ್ಕಮಟ್ಟಿಗೆ ಬಲಯುತ ಹಾಗೂ ಬಾಳಿಕೆಯದಾಗಿರುತ್ತದೆ. ಹಗುರ ಕೊಯ್ತಕ್ಕೆ ಮರಗೆಲಸಗಳಿಗೆ ಸುಲಭ. ಸಿದ್ಧಪಡಿಸಿದಾಗ ಹೊಳಪಿನಿಂದ ಕೂಡಿ ಆಕರ್ಷಕವಾಗಿರುತ್ತದೆ. ಉಪಯೋಗಗಳು ಸಂಪಿಗೆ ಮರವನ್ನು ತೇಗದ ಮರದಂತೆ ಉಪಯೋಗಿಸುತ್ತಾರೆ. ವಿಮಾನ, ಹಡಗು ನಿರ್ಮಾಣಕ್ಕೆ, ಮಠಾಧೀಶ್ವರರನ್ನು ಹೊರುವ ಅಡ್ಡಪಲ್ಲಕ್ಕಿ, ಆಟದ ಗೊಂಬೆ, ಬರೆಯುವ ಪೆನ್ಸಿಲ್, ಪೆಟ್ಟಿಗೆ ತಯಾರಿಕೆಗೆ, ದೋಣಿ ತಯಾರಿಕೆಗೆ, ಪ್ಲೈವುಡ್ ಪೀಠೋಪಕರಣಗಳ ತಯಾರಿಕೆಯಲ್ಲೂ ಇದನ್ನು ಬಳಸುತ್ತಾರೆ. ಮರ ರಕ್ಷಕ ಸಂಸ್ಕರಣೆಯಿಂದ ಇದನ್ನು ಹೆಚ್ಚು ಬಗೆಯಲ್ಲಿ ಉಪಯೋಗಿಸಬಹುದು. ಆಯುರ್ವೇದದಲ್ಲಿ ಇದರ ಬೀಜದಿಂದ ಆರೋಗ್ಯಕಾರಿ ತೈಲವನ್ನು ಉತ್ಪಾದಿಸುತ್ತಾರೆ. ಇದರ ಬೀಜದಿಂದ ಮೇಣವನ್ನೂ ತಯಾರಿಸಲಾಗುತ್ತದೆ. ಸಂಪಿಗೆ ಹೂವಿನ ತೈಲದಲ್ಲಿ ಐಸೊಯುಜಿನಾರ್ ಎಂಬ ಅಂಶವಿರುತ್ತದೆ. ಮರದ ತೊಗಟೆಯಲ್ಲಿ ಮೀತೈಲ್ ಆಲ್ಕೋಹಾಲ್, ಟ್ಯಾನಿನ್ ಅಂಶಗಳಿರುತ್ತದೆ. ವಿವಿಧ ರೋಗಗಳಿಗೆ ಇದರ ತೊಗಟೆ, ಹೂವಿನ ಪಕಳೆ, ಬೇರು, ಎಲೆ, ಬೀಜ, ಹಸಿಕಾಯಿಗಳಿಂದ ಒಸರುವ ಹಾಲಿನಿಂದ, ಅಂಟು, ಒಣಗಿದ ಚಕ್ಕೆ ಕಡ್ಡಿಯಿಂದ ಔಷಧಿಯನ್ನು ತಯಾರಿಸುತ್ತಾರೆ. ಸಂಧಿವಾತವಿದ್ದರೆ, ಒಂದು ಕಪ್ ಹರಳೆಣ್ಣೆಯಲ್ಲಿ ಸಂಪಿಗೆಯ ಐದಾರು ಹೂಗಳನ್ನು ಹಾಕಿ ಬೆಚ್ಚಗೆ ಮಾಡಿ ನೋವಿರುವ ಜಾಗಕ್ಕೆ ಸವರಿದರೆ ನೋವು ನಿವಾರಣೆಯಾಗುತ್ತದೆ. ತಲೆಕೂದಲು ಉದುರುತ್ತಿದ್ದರೆ , ಹೊಟ್ಟು ಹೆಚ್ಚಾದರೆ , ನಿಂಬೇಹಣ್ಣಿನ ರಸದಲ್ಲಿ ಸಂಪಿಗೆ ಹೂವುಗಳನ್ನು ರಾತ್ರಿ ಪೂರಾ ನೆನೆಹಾಕಿ ಮುಂಜಾನೆ ಹೂಗಳನ್ನು ಹಿಸುಕಿ ತೆಗೆದು ತಲೆಕೂದಲಿನ ಬುಡಕ್ಕೆ ಹಚ್ಚಬೇಕು. ಉಲ್ಲೇಖಗಳು ಹೊರಗಿನ ಕೊಂಡಿಗಳು , : ಪರಿಸರ ಹೂವುಗಳು ಮರಗಳು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ಎನ್.ಲಕ್ಷ್ಮೀನಾರಾಯಣ್ (ಎನ್ನೆಲ್ )ಕನ್ನಡ ಚಿತ್ರರಂಗದ ಮೇರು ನಿರ್ದೇಶಕರಲ್ಲಿ ಒಬ್ಬರು.ಕನ್ನಡ ಚಿತ್ರರಂಗಕ್ಕೆ ಕಲಾತ್ಮಕತೆಯ ಸ್ಪರ್ಶ ಕೊಟ್ಟು,ಕನ್ನಡ ಚಿತ್ರರಂಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವಲ್ಲಿ ಇವರ ಪಾಲು ದೊಡ್ಡದು. ೧೯೬೪ರಲ್ಲಿ ವಾದಿರಾಜ್ ನಿರ್ಮಾಣದ ನಾಂದಿ ಚಿತ್ರದ ಮೂಲಕ ಕನ್ನಡ ಚಿತ್ರಗಳ ನಿರ್ದೇಶನಕ್ಕೆ ಕಾಲಿಟ್ಟರು. ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಪ್ರತಿಭಾವಂತರ ಕುಟುಂಬದಲ್ಲಿ ಒಬ್ಬರಾಗಿ ಜನಿಸಿದ ಲಕ್ಷ್ಮೀನಾರಾಯಣ್ಗೆ ಬಾಲ್ಯದಿಂದಲೇ ಕಲೆಯ ಸೆಳೆತ ಹೆಚ್ಚು.ಹೀಗಾಗಿ ಚಿಕ್ಕಂದಿನಿಂದಲೇ ಛಾಯಾಗ್ರಹಣ, ಸಿನಿಮಾ ತಾಂತ್ರಿಕತೆಯನ್ನು ಅಭ್ಯಾಸ ಮಾಡಿದರು. ಚಿತ್ರರಂಗ ಪ್ರವೇಶ ಚಿತ್ರರಂಗದಲ್ಲಿದ್ದ ತಮ್ಮ ಸೋದರಮಾವ ಬಿ.ಆರ್.ಕೃಷ್ಣಮೂರ್ತಿಯವರ ಸಹಾಯಕರಾಗಿ ಚಿತ್ರರಂಗ ಪ್ರವೇಶಿಸಿದರು.ಇವರು ಸಹನಿರ್ದೇಶನ ಮಾಡಿದ ಮೊದಲ ಚಿತ್ರ ಶ್ರೀರಾಮ ಪೂಜ.ನಂತರ ಆರ್.ನಾಗೇಂದ್ರರಾಯರ ಸಹ ನಿರ್ದೇಶಕರಾಗಿ ದುಡಿದರು.ಕನ್ನಡ ಚಿತ್ರರಂಗಕ್ಕೆ ಪ್ರಯೋಗಶೀಲತೆಯನ್ನು ಅಳವಡಿಸಬೇಕೆಂಬ ಹಂಬಲದಿಂದ,ಬ್ರಿಟಿಷ್ ಫಿಲಂ ಇನ್ಸ್ಟಿಟ್ಯೂಟ್ ಸೇರಿ ತರಬೇತಿ ಪಡೆದರು.ಇವರ ನಿರ್ದೇಶನದ ಬ್ಲಿಸ್ ಎಂಬ ಮೂಕಿ ಚಿತ್ರ ಸ್ಯಾನ್ಫ್ರಾನ್ಸಿಸ್ಕೋದಲ್ಲಿ ಪ್ರದರ್ಶನ ಕಂಡಿತು. ನಿರ್ದೇಶಿಸಿರುವ ಚಿತ್ರಗಳು ನಾಂದಿ ಉಯ್ಯಾಲೆ ಮುಕ್ತಿ ಅಬಚೂರಿನ ಪೋಸ್ಟಾಫೀಸು ಮುಯ್ಯಿ ಬೆಟ್ಟದ ಹೂವು ಬೆಳಕು ಸಾಧನೆಗಳು ನಾಂದಿ ಚಿತ್ರ ಲಂಡನ್ನಲ್ಲಿ ನಡೆದ ಕಾಮನ್ವೆಲ್ತ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು. ಉಯ್ಯಾಲೆ ಚಿತ್ರ ಫ್ರಾಂಕ್ಫರ್ಟ್ನಲ್ಲಿ ನಡೆದ ಏಷ್ಯನ್ ಚಿತ್ರೋತ್ಸವ ಹಾಗೂ ರಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತು. ಮುಕ್ತಿ ಚಿತ್ರ ವೆನಿಸ್ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು. ಬೆಟ್ಟದ ಹೂವು ಚಿತ್ರ ವಿದೇಶಗಳಲ್ಲಿ ಪ್ರದರ್ಶನಗೊಂಡಿದೆ. ಪ್ರಶಸ್ತಿಪುರಸ್ಕಾರಗಳು ಅಬಚೂರಿನ ಪೋಸ್ಟಾಫೀಸು ಚಿತ್ರಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡರ ಪ್ರಶಸ್ತಿ ದೊರೆತಿದೆ. ಬೆಟ್ಟದ ಹೂವು ಚಿತ್ರಕ್ಕೆ ರಾಷ್ಟ್ರಪತಿಗಳ ರಜತ ಪದಕ ದೊರೆತಿದೆ. ಎನ್ನೆಲ್ ಅವರ ಉಯ್ಯಾಲೆ ಮತ್ತು ಮುಕ್ತಿ ಚಿತ್ರಗಳು ೧೯೬೯೭೦ ರ ದ್ವಿತೀಯ ಅತ್ಯುತ್ತಮ ರಾಜ್ಯ ಚಲನಚಿತ್ರ ಪ್ರಶಶ್ತಿಯನ್ನು ಹಂಚಿಕೊಂಡವು. ಒಬ್ಬ ನಿರ್ದೇಶಕನ ಎರಡು ಚಿತ್ರಗಳು ಒಂದೇ ಪ್ರಶಸ್ತಿಯನ್ನು ಹಂಚಿಕೊಂಡ ಅಪರೂಪದ ದಾಖಲೆ ಮತ್ತೆ ಪುನರಾವರ್ತನೆಯಾಗಲಿಲ್ಲ. ಇತರ ಆಸಕ್ತಿಗಳು ದೇಶವಿದೇಶಗಳಲ್ಲಿನ ಚಲನಚಿತ್ರ ಕ್ಷೇತ್ರದ ಬೆಳವಣಿಗೆಯನ್ನು ಕುತೂಹಲದಿಂದ ಗಮನಿಸುತ್ತಿದ್ದರು.ಚಲನಚಿತ್ರ ಮಾಧ್ಯಮದಲ್ಲಿ ಕ್ಲಾಸಿಕ್ ಅಂಶಗಳನ್ನು ಗುರುತಿಸಿ,ಅದರ ಬೆಳವಣಿಗೆ ಮತ್ತು ಸಂವಹನಕ್ಕೆ ನಿರಂತರ ಶ್ರಮಿಸುತ್ತಿದ್ದರು.ಫಿಲಂ ಸೊಸೈಟಿ ಆಂದೋಲನವನ್ನು ಕರ್ನಾಟಕದಲ್ಲಿ ಶುರು ಮಾಡಿದರು.ಕರ್ನಾಟಕದಲ್ಲಿ ಚಲನಚಿತ್ರೋತ್ಸವಗಳು ಪ್ರಾರಂಭವಾಗಲು ಕಾರಣಕರ್ತರಾದರು.ನಿರ್ದೇಶಕನ ವಿದೇಶಯಾತ್ರೆ ಅವರ ಪ್ರಮುಖ ಕೃತಿ.ಫೆಬ್ರುವರಿ ೧೬, ೧೯೯೧ರಲ್ಲಿ ಅಕಾಲಿಕವಾಗಿ ನಿಧನರಾದರು. ಕನ್ನಡ ಚಲನಚಿತ್ರ ನಿರ್ದೇಶಕರು
ಸತಿ ಸುಲೋಚನ ವರ್ಷ ೧೯೩೪ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿನ ಮೊದಲ ವಾಕ್ಚಿತ್ರ (ಮಾತುಗಳು ಇದ್ದ ಚಿತ್ರ) ಆರ್.ನಾಗೇಂದ್ರರಾಯರು ನಾಯಕನ ಪಾತ್ರದಲ್ಲಿ ನಟಿಸಿ, ಸಂಗೀತ ನಿರ್ದೇಶಿಸಿದ್ದ ಈ ಚಿತ್ರವನ್ನು ನಿರ್ದೇಶಿಸಿದವರು ವೈ.ವಿ.ರಾವ್. ಈ ಚಲನಚಿತ್ರವು ೧೯೩೪ರ ಮಾರ್ಚ್ ೩ರಂದು ಬಿಡುಗಡೆಯಾಗಿ ೬ ವಾರಗಳ ಯಶಸ್ವಿ ಪ್ರದರ್ಶನ ಕಂಡಿತೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ೧೯೦೫ ರಲ್ಲಿ ಆರಂಭವಾದ ಬೆಂಗಳೂರಿನ ಮೊದಲ ಚಿತ್ರಮಂದಿರ ದೊಡ್ಡಣ್ಣಹಾಲ್ (ಪ್ಯಾರಾಮೌಂಟ್) ಚಿತ್ರಮಂದಿರದಲ್ಲೇ ಕನ್ನಡದ ಪ್ರಥಮ ವಾಕ್ಚಿತ್ರ ಸತಿ ಸುಲೋಚನಾ ಬಿಡುಗಡೆಗೊಂಡಿದ್ದು. ಇದು ೧೭೦ ನಿಮಿಷದ ಚಿತ್ರವಾಗಿದ್ದು, ೪೦ ಸಾವಿರ ರೂಪಾಯಿ ವೆಚ್ಚದಲ್ಲಿ ತಯಾರಾದ ಚಿತ್ರ. ಅದರೊಳಗಿನ ಸಿಂಹ ಬರುವ ದೃಶ್ಯ ಕಂಡು ಹಲವು ಮಂದಿ ಚಿತ್ರ ಮಂದಿರದಲ್ಲೇ ಮೂರ್ಛೆ ಹೋಗಿದ್ದರಂತೆ. ಇನ್ನು ಕೆಲವರು ಸಿಂಹ ಬಂದೇ ಬಿಟ್ಟಿತೆಂದು ಹೆದರಿ ಸಿನಿಮಾ ಮಂದಿರದಿಂದ ಕಾಲ್ಕಿತ್ತಿದ್ದರಂತೆ. ಈ ಲೇಖನಗಳನ್ನೂ ನೋಡಿ ವೈ.ವಿ.ರಾವ್ ಆರ್.ನಾಗೇಂದ್ರರಾವ್ ಬೆಳ್ಳಾವೆ ನರಹರಿ ಶಾಸ್ತ್ರಿ ಕನ್ನಡ ಚಲನಚಿತ್ರಗಳು ವರ್ಷ೧೯೩೪ ಕನ್ನಡಚಿತ್ರಗಳು ಚುಟುಕು
ಚಿತ್ರದ ಬಗ್ಗೆ ಭಕ್ತ ಧ್ರುವ ಚಲನ ಚಿತ್ರವು ೧೯೩೪ರಲ್ಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಪಾರ್ಶ್ವನಾಥನ ಆಲ್ಟೆಕರ್ರವರು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ಆಜಂತ ಸ್ಟೂಡಿಯೊ, ಮುಂಬೈನಲ್ಲಿ ಚಿತ್ರಿಸಲಾಗಿದೆ. ಇದೊಂದು ಪೌರಣಿಕ ಕಥೆಯನ್ನು ಹೊಂದಿರುವ ಚಿತ್ರ. ಈ ಚಿತ್ರದಲ್ಲಿ ಧ್ರುವ ಎಂಬ ಹುಡುಗನಲ್ಲಿ ಇರುವ ವಿಷ್ಣುದೇವರ ಮೇಲಿರುವ ಭಕ್ತಿಯ ಬಗ್ಗೆ ತಿಳಿಸುತ್ತದೆ. ಉಲ್ಲೇಖಗಳು ಕನ್ನಡ ಚಲನಚಿತ್ರಗಳು ವರ್ಷ೧೯೩೪ ಕನ್ನಡಚಿತ್ರಗಳು
ವರ್ಷ೧೯೩೫ ಕನ್ನಡಚಿತ್ರಗಳು
ಇದು ಕನ್ನಡ ಚಿತ್ರರಂಗದ ಹಾಗೂ ದಕ್ಷಿಣ ಭಾರತದ ಮೊಟ್ಟ ಮೊದಲ ಸಾಂಸಾರಿಕ ವಾಕ್ಚಿತ್ರ. ಕಥೆ ಅಜ್ಜನ ಆಸೆಗೆ ವಿರುದ್ಧವಾಗಿ ಸರಳಾ ಎನ್ನುವ ವಕೀಲರ ಪುತ್ರಿಯನ್ನು ಮದುವೆಯಾಗುವ ಸುಂದರ್ ಎನ್ನುವ ತರುಣ, ಎರಡೂ ಕುಟುಂಬಗಳ ಅಸಹಕಾರದಿಂದ ಅನುಭವಿಸುವ ಪಡಿಪಾಟಲುಗಳ ಕಥೆ ಚಿತ್ರದ್ದು. ನಾಯಕಿ ಕೊಲೆ ಆರೋಪದಲ್ಲಿ ಸಿಕ್ಕಿಬೀಳುತ್ತಾಳೆ. ಕೊನೆಗೆ ಸತ್ಯ ಹೊರಬಿದ್ದು, ಸಮಸ್ಯೆಗಳ ಸುಳಿಯಿಂದ ಸುಂದರ್ ಹೊರಬಿದ್ದು ಸಿನಿಮಾ ಸುಖಾಂತ್ಯಗೊಳ್ಳುತ್ತದೆ. ಸತ್ಯ ಹೇಳಿದಾಗ ತೊಂದರೆಗಳು ಸಾಮಾನ್ಯ ಎಂಬ ಅಂಶವನ್ನು ಪ್ರತಿಪಾದಿಸುವ ಸಂಸಾರ ನೌಕ ಕನ್ನಡ ಚಿತ್ರರಂಗಕ್ಕೆ ಮಹತ್ವದ ತಿರುವು ಕೊಟ್ಟ ಚಿತ್ರ. ಹಾಗೆಯೇ ದಕ್ಷಿಣ ಭಾರತ ಚಿತ್ರರಂಗದಲ್ಲೂ ಒಂದು ಮೈಲುಗಲ್ಲು. ಪ್ರಥಮ ಕನ್ನಡ ಚಿತ್ರ ತಮಿಳುತೆಲುಗು ಭಾಷೆಗಳಲ್ಲೂ ನಿರ್ಮಾಣಗೊಂಡಿದ್ದು ಮತ್ತೊಂದು ವಿಶೇಷ. ಕನ್ನಡಿಗನೇ ನಿರ್ದೇಶಿಸಿದ ಪ್ರಥಮ ಕನ್ನಡ ಚಿತ್ರವೆಂದೂ ದಾಖಲಾದ ಸಂಸಾರ ನೌಕ ಕನ್ನಡಕ್ಕೆ ಮಾತ್ರವಲ್ಲ ದಕ್ಷಿಣ ಭಾರತದ ಚಿತ್ರೋದ್ಯಮಕ್ಕೆ ಸಾಮಾಜಿಕ ಚಿತ್ರ ಪರಂಪರೆಗೆ ಬುನಾದಿ ಹಾಕಿಕೊಟ್ಟಿತು. ಕನ್ನಡ ಚಿತ್ರರಂಗಕ್ಕೆ ಅನನ್ಯ ಕೊಡುಗೆ ಕೊಟ್ಟ ಬಿ.ಆರ್. ಪಂತುಲು ನಾಯಕರಾಗಿ ಮೊದಲಬಾರಿಗೆ ಕ್ಯಾಮೆರಾ ಎದುರಿಸಿದ ಈ ಚಿತ್ರದಲ್ಲಿ ನಾಯಕಿ ಸರಳಾ ಪಾತ್ರ ವಹಿಸಿದ್ದವರು ಕನ್ನಡದ ಪ್ರಸಿದ್ಧ ನಾಯಕ ನಟಿ ಎಂ.ವಿ. ರಾಜಮ್ಮ. ಈ ಚಿತ್ರದಲ್ಲಿ ಡಿಕ್ಕಿ(ಕನ್ಯಾಕುಮಾರಿ ದೀಕ್ಷಿತ್) ಎಂಬ ಪಾತ್ರ ಮಾಡಿ ಜನಪ್ರಿಯರಾದ ಮಾಧವರಾವ್ ಅವರು ಮುಂದೆ ಡಿಕ್ಕಿ ಮಾಧವರಾವ್ ಎಂದೇ ಖ್ಯಾತಿ ಹೊಂದಿದರು. ಭೂಮಿಕೆ ಸರೋಜಮ್ಮ (ಗಿರಿಜೆ), ಎಂ.ಎಸ್. ಮಾಧವರಾವ್ (ಮಾಧು), ಎಂ. ಮಾಧವರಾವ್ (ಡಿಕ್ಕಿ), ಎಚ್. ಕೃಷ್ಣಮೂರ್ತಿ (ಬ್ಯಾರಿಸ್ಟರ್), ಎಚ್.ಆರ್. ಹನುಮಂತರಾವ್, ಜಿ.ಟಿ. ಬಾಲಕೃಷ್ಣರಾವ್ ಅವರಂತಹ ರಂಗಭೂಮಿ ಪರಿಣಿತರನ್ನ ಚಿತ್ರರಂಗಕ್ಕೆ ತಂದ ನಿರ್ದೇಶಕ ಎಚ್.ಎಲ್.ಎನ್. ಸಿಂಹ ಈ ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಇವರೊಂದಿಗೆ ಹುಣಸೂರು ಕೃಷ್ಣಮೂರ್ತಿ, ಸೋರಟ್ ಅಶ್ವತ್ ಕೂಡ ತಾರಾಗಣದಲ್ಲಿದ್ದರು.ಎಸ್.ಕೆ. ಪದ್ಮಾದೇವಿ ಸಂಸಾರ ನೌಕದಲ್ಲಿ ಸುಶೀಲೆ ಎನ್ನುವ ಪಾತ್ರದಲ್ಲಿ ಅಭಿನಯಿಸಿದ್ದರು. ತಯಾರಿಕೆ ತಂತ್ರಜ್ಞರು ಸಹೋದರ ನಂಜಪ್ಪನವರ ಒತ್ತಾಸೆಯಿಂದ ತಮ್ಮ ದೇವಿ ಫಿಲಂಸ್ ಮೂಲಕ ಸಂಸಾರ ನೌಕವನ್ನು ತಯಾರಿಸಿದ ಕೆ. ರಾಜಗೋಪಾಲ ಚೆಟ್ಟಿಯಾರ್ ನಿರ್ಮಾಣದ ಯಾವುದೇ ಹಂತದಲ್ಲೂ ಗುಣಮಟ್ಟಕ್ಕೆ ರಾಜಿ ಮಾಡಿಕೊಳ್ಳಲಿಲ್ಲ. ಚಿತ್ರ ಚೆನ್ನಾಗಿ ಮೂಡಿ ಬರಬೇಕೆಂದು ಉತ್ತಮ ತಂತ್ರಜ್ಞರನ್ನು ಉಪಯೋಗಿಸಿಕೊಂಡರು. ಈ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಡಿ.ಬಿ. ಚವಾಣ್ ಹಾಗೂ ವಿದೇಶಿ ತಂತ್ರಜ್ಞ ಟಿ. ಟೆಲಂಗ್ ಕೆಲಸ ಮಾಡಿದ್ದರು. ಶರ್ಮ ಬ್ರದರ್ಸ್ ವಾದ್ಯಗೋಷ್ಠಿ ಹಾಗೂ ಎಸ್. ನಾಗರಾಜರಾವ್ ಸಂಗೀತ ಚಿತ್ರಕ್ಕಿತ್ತು. ನಾಯಕನ ದುಃಖದ ಸನ್ನಿವೇಶಗಳಲ್ಲಿ ಹೆಸರಾಂತ ಸಂಗೀತ ವಿದ್ವಾಂಸ ಎಂ.ಎಂ. ದಂಡಪಾಣಿ ದೇಶಿಕರ್ ಅವರು ಕಲ್ಯಾಣಿ ರಾಗದ ಹಾಡುಗಳನ್ನು ಸಂಯೋಜಿಸಿದ್ದರು. ಮಿರುಗುವ ತಾರೆ ಧರೆಗೀಗ ಬಾರೆ... ಸೇರಿದಂತೆ ಹದಿನೇಳಕ್ಕೂ ಹೆಚ್ಚು ಹಾಡುಗಳಿದ್ದ ಈ ಚಿತ್ರಕ್ಕಾಗಿ ಕಾಂಬೋಜಿ, ಮೋಹಿನಿ, ಬೈರವಿ, ಸಾರಂಗ, ಮಧುಮನೆ ಇತ್ಯಾದಿ ರಾಗಗಳು ಬಳಕೆಯಾಗಿದ್ದವು. ಹೆಚ್ಚಿನ ಓದಿಗೆ ಉಲ್ಲೇಖ:ವಿಶೇಷ ಲೇಖನ::ಸಂಸಾರ ನೌಕಲೇ:ಎನ್. ಜಗನ್ನಾಥ ಪ್ರಕಾಶ್26 , 2016 ವರ್ಷ೧೯೩೬ ಕನ್ನಡಚಿತ್ರಗಳು ಕನ್ನಡ ಚಲನಚಿತ್ರಗಳು
ಈ ಲೇಖನ ೧೯೩೬ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ಚಿರಂಜೀವಿ ಬಗ್ಗೆ. ೧೯೭೬ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ಚಿರಂಜೀವಿ ಬಗ್ಗೆ ಮಾಹಿತಿಗೆ ಈ ಲೇಖನವನ್ನು ಓದಿ. ಚಿರಂಜೀವಿ ತೆಲುಗು ಚಿತ್ರನಟನ ಬಗ್ಗೆ ಮಾಹಿತಿಗೆ ಈ ಲೇಖನವನ್ನು ಓದಿ. ವರ್ಷ೧೯೩೬ ಕನ್ನಡಚಿತ್ರಗಳು
ಚಿರಂಜೀವಿ ತೆಲುಗು ಚಿತ್ರರಂಗದ ಹೆಸರಾಂತ ನಾಯಕನಟ. ಇವರು ಕನ್ನಡದಲ್ಲಿ, ರವಿಚಂದ್ರನ್ ನಿರ್ದೇಶನದ ಸಿಪಾಯಿ ಮತ್ತು ಜಿ.ಕೆ. ಭಾರವಿ ನಿರ್ದೇಶನದ ಶ್ರೀ ಮಂಜುನಾಥ ಚಿತ್ರಗಳಲ್ಲಿ ನಟಿಸಿದ್ದಾರೆ. ಚಿರಂಜೀವಿಯವರು ನಟಿಸಿರುವ ಚಲನಚಿತ್ರಗಳು { ! ವರ್ಷ !! ಹೆಸರು !! ಪಾತ್ರ !! ವಿಶೇಷಗಳು 1 ೨೦೦೭ ಶಂಕರ್ ದಾದಾ ಜಿಂದಾಬಾದ್ ಶಂಕರ್ ಪ್ರಸಾದ್ ಸೀಕ್ವೆಲ್ ಚಿತ್ರ 2 ೨೦೦೬ ಸ್ಟಾಲಿನ್ (ಚಲನಚಿತ್ರ) ಸ್ಟಾಲಿನ್ ಸ್ಟೈಲ್ ಚಲನಚಿತ್ರ ನಟರು ತೆಲುಗು ಚಲನಚಿತ್ರ ನಟರು
ಈ ಲೇಖನ ಕನ್ನಡ ಚಲನಚಿತ್ರ ಪುರಂದರದಾಸ ಬಗ್ಗೆ. ಹರಿಭಕ್ತ, ದಾಸಸಾಹಿತ್ಯದ ಪುರಂದರದಾಸರ ಬಗ್ಗೆ ಮಾಹಿತಿಗೆ ಈ ಲೇಖನವನ್ನು(ಪುರಂದರದಾಸರು) ಓದಿ. ಪುರಂದರದಾಸ ೧೯೩೭ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ನಂಜುಂಡಪ್ಪ ನಿರ್ಮಿಸಿದ್ದ, ಬಿ. ಚೌಹಾಣ್ ರವರ ನಿರ್ದೇಶನದ ಈ ಚಿತ್ರದಲ್ಲಿ ಜಿ. ಕೃಷ್ಣಸ್ವಾಮಿ ಅಯ್ಯಂಗಾರ್, ತ್ರಿಪುರಾಂಬ ಮತ್ತು ಜೆ. ಟಿ. ಬಾಲಕೃಷ್ಣರಾವ್ ರವರು ನಟಿಸಿದ್ದರು. ಚಿತ್ರ ಬೆಳ್ಳಾವೆ ನರಹರಿ ಶಾಸ್ತ್ರಿಯವರ ಸಂಗೀತವನ್ನು ಹೊಂದಿತ್ತು. ಹಾಡುಗಳು ಅತಿ ಮುಡಿಲಲ್ಲ್ಲಿ ಬಿರಿದ ಹೂಗಳು ಶಾಂತಿಯೆ ಜೀವನ ಸುಮ ಮಾಲೆ ಕಾಮನು ಕಾಡುವ ವರ್ಷ೧೯೩೭ ಕನ್ನಡಚಿತ್ರಗಳು
ರಾಜಸೂಯ ಯಾಗ ಚಿತ್ರವನ್ನು ೧೯೩೭ರಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಚಿತ್ರವನ್ನು ನಿರ್ದೇಶಿಸಿದವರು ಟಿ.ದ್ವಾರಕನಾಥ್. ಎಸ್.ಆರ್.ವಾಸುದೇವಾ ರಾವ್, ಟಿ.ಕೆ.ರಾಮ ಮುರ್ತಿ, ಕೆ.ಆರ್. ಸೀತಾರಾಮ ಶಾಸ್ತ್ರಿ, ಟಿ.ಜಯಮ್ಮ ಮುಂತದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಹಾಡುಗಳಿಗೆ ಸಂಗೀತವನ್ನು ನೀಡಿರುವವರು ಎಚ್.ಆರ್.ಪದ್ಮನಾಭ ಶಾಸ್ತ್ರಿ. ವರ್ಷ೧೯೩೭ ಕನ್ನಡಚಿತ್ರಗಳು
ಆಲೆಮನೆ ೧೯೮೧ ರಲ್ಲಿ ತೆಗೆದ ಕನ್ನಡ ಚಲನಚಿತ್ರ. ಪ್ರದಾನವರ್ಗದಲ್ಲಿ ಸುರೇಶ್ ಹೆಬ್ಳಿಕರ್, ರೂಪ ಚಕ್ರವರ್ತಿ ನಟಿಸಿದ್ದಾರೆ. ನಟರ ತಂಡ ಸುರೇಶ ಹೆಬ್ಳೀಕರ, ಮೋಹನ್ ಕುಮಾರ್ ರೂಪಾ ಚಕ್ರವರ್ತಿ, ಸುರೇಕ, ಸೀತಾರಾಮ್, ಬಿ ಜಿ ಕಂಭರ್, ಟೊಮೆಟೊ ಸೋಮು, ಸುಂದರ ಮೂರ್ತಿ, ಪ್ರತಿಮಾ, ಮಂಗಲ, ವಸುಧಾ, ಬೇಬಿ ಅನಿತಾ, ಮಾಸ್ಟರ್ ಜಯಾ ಚಂದ್ರ. ಮೋಹನ್ ಕುಮಾರ್ ನಿದರ್ಶನದಲ್ಲಿ ೧೯೮೧ನಲ್ಲಿ ಪ್ರಕಟವಾಯಿತು. ವರ್ಷ೧೯೮೧ ಕನ್ನಡಚಿತ್ರಗಳು
ವೈ.ವಿ.ರಾವ್ ದಕ್ಷಿಣ ಭಾರತದ ಚಲನಚಿತ್ರ ನಿರ್ದೇಶಕರು. ಕನ್ನಡದ ಪ್ರಪ್ರಥಮ ಚಲನಚಿತ್ರ ,ಸತಿ ಸುಲೋಚನ (೧೯೩೪)ವನ್ನು ನಿರ್ದೇಶಿಸಿದವರು. ಇವರ ಪೂರ್ಣ ನಾಮಧೇಯ ಯರಗುದಿಪತಿ ವರದ ರಾವ್. ಮೂಲತ: ವೈ.ವಿ.ರಾವ್ ಅವರು ಆಂಧ್ರಪ್ರದೇಶದ ಯರಗುಡಪಾಟದವರು. ಮುಂಬೈಯಲ್ಲಿ ಹಲವಾರು ಮೂಕಿ ಚಿತ್ರಗಳಲ್ಲಿ ಅಭಿನಯಿಸಿದ್ದರು ನಿರ್ದೇಶನವನ್ನೂ ಮಾಡಿದ್ದರು. ೧೯೩೦ರಲ್ಲಿ ಗುಬ್ಬಿ ವೀರಣ್ಣರವರಿಗಾಗಿ ಹರಿಮಾಯ ಚಿತ್ರವನ್ನು ನಿರ್ದೇಶಿಸಿ ಜೊತೆಗೆ ಅದರಲ್ಲಿ ನಟಿಸಿದ್ದರು. ಕನ್ನಡವಲ್ಲದೆ ತಮಿಳು, ತೆಲುಗು, ಕೊಂಕಣಿ ಹಾಗೂ ಹಿಂದಿ ಭಾಷೆಗಳಲ್ಲಿಯೂ ಪ್ರಪ್ರಥಮವಾಗಿ ಚಲನಚಿತ್ರಗಳನ್ನು ( ) ಮಾಡಿದವರು . ಇವರಿಗೆ ಬಹಳವಾಗಿ ಹೆಸರು ತಂದುಕೊಟ್ಟಂತಹ ಚಿತ್ರ, ತಮಿಳಿನ ಚಿಂತಾಮಣಿ(೧೯೩೭).ಈ ಚಿತ್ರದ ಮೂಲಕ ಸುಪ್ರಸಿದ್ದ ಎಂ.ಕೆ.ತ್ಯಾಗರಾಜ ಭಾಗವತರ್ರನ್ನು ಚಿತ್ರರಂಗಕ್ಕೆ ಪರಿಚಯಿಸಿದರು.ಪಂಚಭಾಷಾ ನಟಿಯಾದ ಜೂಲಿ ಖ್ಯಾತಿಯ ನಟಿ ಲಕ್ಷ್ಮಿ ವೈ.ವಿ.ರಾವ್ ರ ಮಗಳು. ವೈ.ವಿ.ರಾವ್ ಅಭಿನಯಿಸಿರುವ ಕೆಲವು ಮೂಕಿ ಚಿತ್ರಗಳೆಂದರೆ ಗರುಡ ಗರ್ವ ಭಂಗಂ, ಗಜೇಂದ್ರ ಮೋಕ್ಷಂ, ...ಹೀಗೆ ಮುಂತಾದವು. ವೈ.ವಿ.ರಾವ್ ನಿರ್ದೇಶಿಸಿರುವ ಕೆಲವು ಮೂಕಿ ಚಿತ್ರಗಳೆಂದರೆ ಪಾಂಡವ ನಿರ್ವಾಣ(೧೯೩೦), ಪಾಂಡವ ಅಜ್ಞಾತವಾಸ(೧೯೩೦) ಮತ್ತು ಹರಿಮಾಯಾ(೧೯೩೨ ರಲ್ಲಿ ಬೆಂಗಳೂರಿನಲ್ಲಿ ಗುಬ್ಬಿ ವೀರಣ್ಣರಿಂದ ನಿರ್ಮಾಣವಾದ ಚಿತ್ರ. ಎಂ.ವಿ.ರಾಜಮ್ಮ ನಾಯಕಿಯಾಗಿದ್ದರು). ಪೌರಾಣಿಕ ತಮಿಳು ಚಿತ್ರವಾದ ಸಾವಿತ್ರಿಯಲ್ಲಿ ಸುಪ್ರಸಿದ್ದ ಸಂಗೀತಗಾರ್ತಿ ಎಂ.ಎಸ್.ಸುಬ್ಬುಲಕ್ಷ್ಮಿಯವರು ನಾರದನ ಪಾತ್ರ ವಹಿಸಿ ಪ್ರಸಿದ್ದಿಯಾಗಿದ್ದರು. ಇದೇ ಚಿತ್ರದಲ್ಲಿ ಹಿಂದಿ ಚಿತ್ರರಂಗದಲ್ಲಿ ಪ್ರಸಿದ್ದರಾಗಿದ್ದ ಶಾಂತ ಆಪ್ಟೆಯವರು ನಾಯಕಿಯಾಗಿ ಅಭಿನಯಿಸಿದ್ದರು.ನಮನ ವೈ.ವಿ.ರಾವ್ ನಿರ್ದೇಶನದ ಕನ್ನಡ ಚಿತ್ರಗಳು ಸತಿ ಸುಲೋಚನ ಭಾಗ್ಯಚಕ್ರ ನಾಗಾರ್ಜುನ ನಿಧನ ವೈ.ವಿ.ರಾವ್ ಅವರು ೧೯೭೩ ರಲ್ಲಿ ನಿಧನರಾದರು. ನಿರ್ದೇಶಕರು ಕನ್ನಡ ಸಿನೆಮಾ ಕನ್ನಡ ಚಲನಚಿತ್ರ ನಿರ್ದೇಶಕರು ೧೯೭೩ ನಿಧನ ೧೯೦೩ ಜನನ
ವರ್ಷ೧೯೮೧ ಕನ್ನಡಚಿತ್ರಗಳು ಕಾದಂಬರಿ ಆಧಾರಿತ ಕನ್ನಡ ಚಿತ್ರಗಳು
ಚಿತ್ರಗೀತೆಗಳು ನೆರಳನು ಕಾಣದ ಲತೆಯಂತೆ ಎಸ್.ಪಿ.ಬಾಲಸುಬ್ರಮಣ್ಯಂ ಬಂದೆಯ ಬಾಳಿನ ಬೆಳಕಾಗಿ ಎಸ್.ಜಾನಕಿ , ಎಸ್.ಪಿ.ಬಾಲಸುಬ್ರಮಣ್ಯಂ ದೇವರ ಆಟ ಬಲ್ಲವರಾರು ಎಸ್.ಜಾನಕಿ ಆಕಾಶ ನೀರಾಗಲಿ ಆ ಸೂರ್ಯ ತಂಪಾಗಲಿ ಎಸ್.ಜಾನಕಿ , ಎಸ್.ಪಿ.ಬಾಲಸುಬ್ರಮಣ್ಯಂ ವರ್ಷ೧೯೮೧ ಕನ್ನಡಚಿತ್ರಗಳುವಿಷ್ಣುವರ್ಧನ್ ಚಲನಚಿತ್ರಗಳು
ವರ್ಷ೧೯೪೧ ಕನ್ನಡಚಿತ್ರಗಳು
ಪಾರಿಜಾತ ಎನ್ನುವುದು ಒಂದು ಬಗೆಯ ಹೂವು. ಈ ಹೂವನ್ನು ಭಾರತದಲ್ಲಿ ಹೆಚ್ಚಾಗಿ ಕಾಣಬಹುದು. ಪಾರಿಜಾತವನ್ನು ನಿಕ್ಟಾಂತಸ್ ಆರ್ಬೋಟ್ರಿಸ್ಟಿಸ್ ( .) ಎಂದು ವೈಜ್ಞಾನಿಕವಾಗಿ ಕರೆಯುತ್ತಾರೆ. ಸಾಮಾನ್ಯ ಹೆಸರುಗಳು ಕನ್ನಡ ಪಾರಿಜಾತ ಆಂಗ್ಲ ನೈಟ್ ಜಾಸ್ಮಿನ್, ಕೋರಲ್ ಜಾಸ್ಮಿನ್ ಹಿಂದಿ ಹರಸಿಂಗಾರ್, ಷೆಫಾಲಿಕಾ ತಮಿಳು ಮಂಜಪೂ, ಪವಳ ಮಲ್ಲಿಗೈ ತೆಲುಗು ಪಗಡಮಲ್ಲೆ, ಪಾರಿಜಾತಮು ಮಲೆಯಾಳಂ ಪವಿಳಮ್ಮಲ್ಲಿ,ಪಾರಿಜಾತಿಕಂ ಬಂಗಾಲಿ ಷಿಯಲಿ ಒರಿಯಾ ಗಂಗಾ ಷಿಯಲಿ ಮರಾಠಿ ಖುರಸಳಿ,ಪಾರಿಜಾತಕ ಸಂಸ್ಕ್ರತ ಪಾರಿಜಾತ ಪುರಾಣಗಳಲ್ಲಿ ಪಾರಿಜಾತ ಸಮುದ್ರ ಮಥನ ಕಾಲದಲ್ಲಿ ಸುರಭಿ ಮತ್ತು ವಾರಿಣಿಯ ನಂತರ ಜನಿಸಿದ್ದು ಪಾರಿಜಾತ. ಕ್ಷೀರಸಮುದ್ರದಿಂದ ಹುಟ್ಟಿದ ೫ ಕಲ್ಪವೃಕ್ಷಗಳಲ್ಲಿ ಇದೂ ಒಂದು. ಕೃಷ್ಣಾವತಾರ ಕಾಲದಲ್ಲಿ, ಕೃಷ್ಣನು ಪಾರಿಜಾತವನ್ನು ಸ್ವರ್ಗಲೋಕದಿಂದ ತಂದು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟನೆಂಬ ಕಥೆ ಇದೆ. ಕೃಷ್ಣಪರಮಾತ್ಮನಿಗೆ ಪಾರಿಜಾತ ಪುಷ್ಪವನ್ನು ಕಂಡರೆ ಪ್ರಾಣ. ಬೌದ್ಧಮಂದಿರಗಳಲ್ಲೂ ಈ ಹೂಗಳನ್ನು ಉಪಯೋಗಿಸುತ್ತಾರೆ. ಔಷಧೀಯ ಗುಣಗಳು ಜೀರ್ಣಾಂಗಗಳ ತೊಂದರೆಗೆ ಬೀಜದ ಪುಡಿಯನ್ನೂ ಜಾಂಡಿಸ್ ಹಾಗೂ ಮಲಬದ್ಧತೆಯ ತೊಂದರೆಗಳಿಗೆ ಎಲೆಗಳ ರಸವನ್ನು ಔಷಧಿಯಾಗಿ ಉಪಯೋಗಿಸುತ್ತಾರೆ. ವಾತವ್ಯಾಧಿಯಲ್ಲಿ ಇದರ ಕಷಾಯವನ್ನು ಬಳಸುತ್ತಾರೆ. ಕೀಲು ನೋವು, ತಲೆ ಹೊಟ್ಟು, ಮೂಲವ್ಯಾಧಿ, ಚರ್ಮರೋಗ, ನಾನಾರೀತಿಯ ಜ್ವರ, ಯಕೃತ್ತಿನ ರೋಗ, ಕರುಳಿನ ಹುಳು ನಿವಾರಣೆಗೆ ಪಾರಿಜಾತವನ್ನು ಔಷಧಿಯಾಗಿ ಬಳಸುತ್ತಾರೆ. ಸಸ್ಯದ ಗುಣಲಕ್ಷಣ ಅಂದರೆ ರಾತ್ರಿಯಲ್ಲಿ ಅರಳುವ ಹೂ ಎಂದರ್ಥ. ಇದರ ಇನ್ನೊಂದು ಹೆಸರು, , (ಸೊರಗಿದ ಮರ) ವೆಂದು ರಾತ್ರಿಯ ಹೊತ್ತೇ ಪಾರಿಜಾತದ ಹೂಗಳು ಅರಳಿ ಸುಗಂಧವನ್ನು ಹೊರಸೂಸುವುದರಿಂದ, ಟ್ರೀ ಆಫ್ ಸ್ಯಾಡ್ನೆಸ್, ಎನ್ನುವವರೂ ಇದ್ದಾರೆ. ಪಾರಿಜಾತ ಹೂವಿನ ವೃತ್ತಾಂತ ಪಾರಿಜಾತವೆಂಬ ಹೆಸರು ಬರಲು ಕಾರಣವಿದೆ. ಇದರ ಬಗ್ಗೆ ಇರುವ ಒಂದು ಸುಂದರ ಕಥೆಯ ಪ್ರಕಾರ, ಪಾರಿಜಾತವೆಂಬ ಹೆಸರಿನ ರಾಜಕುವರಿಯೊಬ್ಬಳು, ಸೂರ್ಯನನ್ನು ಪ್ರೀತಿಸಿದಳಂತೆ. ಸೂರ್ಯ ಸ್ವಲ್ಪಸಮಯದಲ್ಲೇ ಅವಳನ್ನು ತೊರೆದುಬಿಟ್ಟ. ಪ್ರಿಯಕರನ ವಿರಹವನ್ನು ತಾಳಲಾರದೆ ಆಕೆ ಆತ್ಮಹತ್ಯೆ ಮಾಡಿಕೊಂಡಳಂತೆ. ಅವಳ ದೇಹವನ್ನು ಸುಟ್ಟಬೂದಿಯಿಂದ ಪಾರಿಜಾತದ ಗಿಡವು ಹುಟ್ಟಿತಂತೆ. ಆದ್ದರಿಂದಲೇ ಸೂರ್ಯ ಭಗವಾನನ ಪ್ರಖರ ಕಿರಣಗಳನ್ನು ಇದು ತಡೆದುಕೊಳ್ಳಲಾರದು. ಪಾರಿಜಾತ ಅದಕ್ಕಾಗಿಯೇ ಸೂರ್ಯಕಿರಣಗಳು ಮೂಡುವ ಮೊದಲೇ ಹೂ ಉದುರಿಸಿತ್ತವೆ. ಇಂತಹ ನೋವಿನ ಕಥೆಯಿಂದಾಗಿ ಸೊರಗಿದ ಮರವೆಂಬ ಹೆಸರು ಬಂದಿದೆ. ರಾತ್ರಿ ಅರಳುವ ಹೂವಾದ್ದರಿಂದ ನೈಟ್ ಜ್ಯಾಸ್ಮಿನ್ ಎನ್ನುವ ಹೆಸರೂ ಇದಕ್ಕೆ ಅನ್ವಯಿಸುತ್ತದೆ. ಪಾರಿಜಾತದ ಮರದ ವರ್ಣನೆ ಇದು ಮಧ್ಯಮ ಗಾತ್ರದ ಹೊದರು ಅಥವಾ ಚಿಕ್ಕಮರವೆಂದು ಹೇಳಬಹುದು. ಪಾರಿಜಾತದ ಹೂಗಳನ್ನು ಮಲ್ಲಿಗೆ ಹೂವಿಗೆ ಹೋಲಿಸಬಹುದು. ಆದರೆ ಸುವಾಸನೆಯಲ್ಲಿ ಇವು ಬಹಳ ನಾಜೂಕು. ಗೊಂಚಲಿನ ರೂಪದಲ್ಲಿ ಅರಳುತ್ತವೆ. ೫ ರಿಂದ ೮ ದಳಗಳ ಬಿಳಿಹೂವಿಗೆ, ಹವಳಗೆಂಪಿನನಾಳ ಆಕರ್ಷಕವಾಗಿ ಜೋಡಿಸಲಾಗಿದೆ. ಮನಕ್ಕೆ ಮುದಕೊಡುವ ಹಿತಮಿತವಾದ ಸುಗಂಧ ಪಾರಿಜಾತದ ಕೆಲವು ವಿಶೇಷಶತೆಗಳಲ್ಲೊಂದು. ಕೋಮಲವಾದ ಹೂಗಳನ್ನು ಮುಟ್ಟಿದರೆ ಗಿಡದಿಂದ ಕಳಚಿಕೊಳ್ಳುವ ಸಾಧ್ಯತೆಗಳಿವೆ. ಜುಲೈ ತಿಂಗಳಿನಿಂದ ನವೆಂಬರ್ ಮಾಸದವರೆಗೆ ದಂಡಿಯಾಗಿ ಹೂ ಸುರಿಸುತ್ತವೆ. ಸೂರ್ಯ ಮುಳುಗಿದ ಮೇಲೆ ಅರಳಿದ ಹೂವುಗಳು, ರಾತ್ರಿಯೇ ಉದುರಿ, ಬೆಳಿಗ್ಗೆ ಗಿಡದ ಕೆಳಭಾಗದಲ್ಲಿ, ಹೂವಿನ ಹಾಸಿಗೆಯಂತೆ ಕಾಣಿಸುತ್ತವೆ. ಈ ಹೂವುಗಳನ್ನು ಆಯ್ದು ಮನೆಯಲ್ಲಿಟ್ಟರೆ, ಜೇನಿನಂತಹ ಪರಿಮಳದ ಅನುಭವವಾಗುತ್ತದೆ. ಇದು ಎಲೆ ಉದುರಿಸುವ ಮರ. ಪಾರಿಜಾತದ ಹೂವಿನ ಕಾಲಮುಗಿದ ಮೇಲೆ ಕೊಂಬೆಯನ್ನು ಕತ್ತರಿಸಬೇಕು. ಗಿಡದ ರೆಂಬೆಗಳು ನಾಲ್ಕುಮೂಲೆ, ಎಲೆಗಳ ಆಕಾರ ಹೃದಯವನ್ನು ಹೋಲುತ್ತವೆ. ತುದಿ ಮೊನಚು. ಒರಟಾದ ಎಲೆಗಳು, ಬೂದಿಮಿಶ್ರಿತ ಹಸಿರುಬಣ್ಣ. ಎಲೆತೊಟ್ಟು ಮೋಟಾಗಿರುತ್ತದೆ. ಕೊಂಬೆಗಳು ಸಾಮಾನ್ಯವಾಗಿ ಬಾಗಿರುತ್ತವೆ. ೪ ಮೀಟರ್ ಎತ್ತರ ಬೆಳೆಯುತ್ತವೆ. ಗಿಡ ವಿಶಾಲವಾಗಿ ಹಬ್ಬಿಕೊಂಡು ಎಲ್ಲಾ ಭಾಗದಲ್ಲೂ ಹರಡಿಕೊಂಡಿರುತ್ತದೆ. ಕಾಯಿಗಳು ಗುಂಡಾಗಿರುತ್ತವೆ. ದಕ್ಷಿಣಭಾರತದ ಉದ್ಯಾನವನಗಳಿಗೆ ಬಹಳ ಹಿಂದೆಯೇ ಬಂದಿದೆ. ಮಹಾರಾಷ್ಟದ ಮಣ್ಣು ಹಾಗೂ ಪರಿಸರ ಇದಕ್ಕೆ ಅನುಕೂಲಕರವಾಗಿದೆ. ರಸ್ತೆಯ ಅಕ್ಕ ಪಕ್ಕಗಳಲ್ಲೂ ಇದು ಮಹಾರಾಷ್ಟ್ರದಲ್ಲಿ ಬೆಳೆಯುತ್ತದೆ. ಪಾರಿಜಾತ ಮರ ಹಾಗೂ ಹೂವಿನ ಉಪಯೋಗಗಳು ಸುಗಂಧವನ್ನು ತಯಾರಿಸುತ್ತಾರೆ. ಹೂವಿನ ಕಿತ್ತಳೆಗೆಂಪಿನ ನಾಳವನ್ನು ಬಣ್ಣಕ್ಕಾಗಿ ಉಪಯೋಗಿಸುತ್ತಾರೆ. ಎಲೆಗಳನ್ನು ನಾಟವನ್ನು ಪಾಲಿಷ್ ಮಾಡಲು ಉಪಯೋಗಿಸುತ್ತಾರೆ. ಪಾರಿಜಾತ ಸಹಜವಾಗಿ ಅಸ್ಸಾಮ್ ಈಶಾನ್ಯ ಭಾರತದ ಕಾಡುಗಳಲ್ಲಿ ಬೆಳೆಯುತ್ತದೆ. ಮನೆಯ ಹತ್ತಿರದಲ್ಲಿ ಅಂಗಳದ ಮೂಲೆಯಲ್ಲಿ ಒಂದು ಪಾರಿಜಾತದ ಮರವಿದ್ದರೆ ಸಾಕು ಪ್ರದೇಶದ ಗಾಳಿಯಲ್ಲಿ ನವಿರಾದ ಸುಗಂಧದ ಎಳೆಗಳು ತೇಲಿಬರುವ ಅನುಭವನ್ನು ಸವಿಯುತ್ತೀರಿ. ಉಲ್ಲೇಖ ಹೂವುಗಳು ಪರಿಸರ ಸಸ್ಯಗಳು
ವರ್ಷ೧೯೪೧ ಕನ್ನಡಚಿತ್ರಗಳು
ಜೀವನ ನಾಟಕ ಚಿತ್ರವು ೧೯೪೨ರಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ಮಹಬ್ ಕಾಶ್ಮೀರಿರವರು ನಿರ್ದೇಶಿಸಿದ್ದಾರೆ. ಗುಬ್ಬಿ ವೀರಣ್ಣರವರು ನಿರ್ಮಾಸಿದ್ದಾರೆ. ಈ ಚಿತ್ರದಲ್ಲಿ ವೀರಣ್ಣ ಕೆಂಪರಾಜ್ ನಾಯಕನ ಪಾತ್ರದಲ್ಲಿ ಮತ್ತು ಜಯಮ್ಮ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ. ರಾಮಯ್ಯರ್ ಮತ್ತು ಹಾರ್ಮೋನಿಯಂ ಶೇಷಗಿರಿರಾವ್ರವರು ಈ ಚಿತ್ರದ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ. ಚಿತ್ರದ ನಟನಟಿಯರು ವೀರಣ್ಣ ಕೆಂಪರಾಜ್ ಅರಸ್ ಜಯಮ್ಮ ಶಾಂತಾ ಹುಬ್ಳೀಕರ್ ವರ್ಷ೧೯೪೨ ಕನ್ನಡಚಿತ್ರಗಳು
ವರ್ಷ೧೯೪೨ ಕನ್ನಡಚಿತ್ರಗಳು
ವರ್ಷ೧೯೪೩ ಕನ್ನಡಚಿತ್ರಗಳು
ವರ್ಷ೧೯೪೩ ಕನ್ನಡಚಿತ್ರಗಳು
ವರ್ಷ೧೯೪೪ ಕನ್ನಡಚಿತ್ರಗಳು
ಈ ಚಿತ್ರವನ್ನು ಜ್ಯೋತಿ ಸಿನ್ಹ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎಂ.ವಿ.ರಾಜಮ್ಮ.ಈ ಚಿತ್ರದಲ್ಲಿ ಬರುವ ಪಾತ್ರಗಳು ಬಿ.ಆರ್.ಪಂತುಲು ಎಂ.ವಿ.ರಾಜಮ್ಮ ಜಿ.ವಿ.ಅಯ್ಯರ್, ಬಾಲಕೃಷ್ಣ, ಶ್ರೀನಿವಾಸರಾವ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಪದ್ಮನಾಭ.ಈ ಚಿತ್ರವು ೧೯೪೩ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರವು ಬಾಲಕೃಷ್ಣ ಅವರ ಅಭಿನಯದ ಮೊದಲ ಕನ್ನಡ ಚಿತ್ರ. ವರ್ಷ೧೯೪೩ ಕನ್ನಡಚಿತ್ರಗಳು
ವರ್ಷ೧೯೪೭ ಕನ್ನಡಚಿತ್ರಗಳು
ಕೃಷ್ಣಲೀಲಾ, ಸಿ.ವಿ.ರಾಜು ನಿರ್ದೇಶನ ಮತ್ತು ಡಿ.ಶಂಕರ್ ಸಿಂಗ್ ನಿರ್ಮಾಪಣ ಮಾಡಿರುವ ೧೯೪೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಪಿ.ಕಾಳಿಂಗರಾಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಕೆಂಪರಾಜ ಅರಸ್ ಮತ್ತು ಉಷಾ ಬೆಳ್ಳೂರ್ ಲಲಿತ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪಾತ್ರವರ್ಗ ನಾಯಕ(ರು) ಕೆಂಪರಾಜ ಅರಸ್ ನಾಯಕಿ(ಯರು) ಉಷಾ ಬೆಳ್ಳೂರ್ ಲಲಿತ ರತ್ನಮಾಲ ನಾಗರತ್ನಮ್ಮ ಉಲ್ಲೇಖಗಳು ವರ್ಷ೧೯೪೭ ಕನ್ನಡಚಿತ್ರಗಳು
ವರ್ಷ೧೯೪೭ ಕನ್ನಡಚಿತ್ರಗಳು
ವರ್ಷ೧೯೪೭ ಕನ್ನಡಚಿತ್ರಗಳು
ಭಕ್ತ ರಾಮದಾಸ್, ಕೆಂಪರಾಜ ಅರಸ್ ನಿರ್ದೇಶನ ಮತ್ತು ಡಿ.ಶಂಕರ್ ಸಿಂಗ್ ನಿರ್ಮಾಪಣ ಮಾಡಿರುವ ೧೯೪೮ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಪಿ.ಕಾಳಿಂಗರಾಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಕೆಂಪರಾಜ ಅರಸ್ ಮತ್ತು ಸುಮತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕಥೆ ರಾಮ ಮತ್ತು ಹನುಮಾನ್ ದೇವರ ಭಕ್ತನಾದ ರಾಮದಾಸನ ಕಥೆ. ಪಾತ್ರವರ್ಗ ನಾಯಕ(ರು) ಕೆಂಪರಾಜ ಅರಸ್ ನಾಯಕಿ(ಯರು) ಸುಮತಿ ವಿಮಲನಂದದಾಸ್ ಉಲ್ಲೇಖಗಳು ವರ್ಷ೧೯೪೮ ಕನ್ನಡಚಿತ್ರಗಳು
ಭಕ್ತ ಕುಂಬಾರ ಚಿತ್ರವು ೧೯೪೯ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಬೊಮ್ಮನ್ ಡಿ.ಇರಾನಿನವರು ನಿರ್ದೇಶಿಸಿದ್ದಾರೆ. ಹೊನ್ನಪ್ಪ ಭಾಗವತರ್ರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. ಈ ಚಿತ್ರದಲ್ಲಿ ಸಿ.ಹೊನ್ನಪ್ಪ ಭಾಗವತರ್ ಮತ್ತು ಲಕ್ಷ್ಮಿಬಾಯಿ ನಾಯಕ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ನಟಿಸಿರುವವರು ಸಿ.ಹೊನ್ನಪ್ಪ ಭಾಗವತರ್ ಲಕ್ಷ್ಮಿಬಾಯಿ ವಿಮಲಾನಂದ ದಾಸ್ ಪಂಡರಿ ಬಾಯಿ ಉಲ್ಲೇಖಗಳು ವರ್ಷ೧೯೪೯ ಕನ್ನಡಚಿತ್ರಗಳು
ಹಾಡುಗಳು ಬರ್ತಾಳೆ ಕನಸಿನ ರಾಣಿ ಅನುಪಮಾ ಅನುಪಮಾ ಒಲುಮೆ ಪೂಜೆಗೆಂದು ಕರೆಯ ಕೇಳಿ ಬಂದೆ ವರ್ಷ೧೯೮೧ ಕನ್ನಡಚಿತ್ರಗಳು
ಅವಳಿ ಜವಳಿ, ಎ.ವಿ.ಶೇಷಗಿರರಾವ್ ನಿರ್ದೇಶನ ಮತ್ತು ಪಿ.ಕೃಷ್ಣರಾಜ್ ನಿರ್ಮಾಪಣ ಮಾಡಿರುವ ೧೯೮೧ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀನಾಥ್, ರೇಖಾರಾವ್ ಮತ್ತು ಮಂಜುಳಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪಾತ್ರವರ್ಗ ನಾಯಕ(ರು) ಶ್ರೀನಾಥ್ ನಾಯಕಿ(ಯರು) ರೇಖಾರಾವ್, ಮಂಜುಳಾ ಲೋಕೇಶ್ ಆಶಾಲತ ಚಂದ್ರಶೇಖರ್ (ಕೆನಡಾ ಚಂದ್ರು) ಉಲ್ಲೇಖಗಳು ವರ್ಷ೧೯೮೧ ಕನ್ನಡಚಿತ್ರಗಳು
ಬಾವುಟ ಸಂಕೇತ ಸೂಚಿಸಲು ಅಥವಾ ಸಂವಹನ ಮೂಡಿಸಲು ಬಳಸಲಾಗುವ ಬಟ್ಟೆಯ ತುಂಡು. ಬಾವುಟವನ್ನು ಕಂಬಕ್ಕೆ ಕಟ್ಟಿ ಅಥವಾ ಕೋಲಿಗೆ ಕಟ್ಟಿ ಹಾರಿಸಲಾಗುತ್ತದೆ. ಬಾವುಟಗಳನ್ನು ಮೊದಲು ಸಂಕೇತ ರವಾನಿಸಲು ಬಳಸಲಾಗುತ್ತಿತ್ತು, ಬಾವುಟವನ್ನು ಹಿಡಿದವರ ಗುರುತಿಗಾಗಿ ಬಳಸಲಾಗುತ್ತಿತ್ತು. ಈಗಲೂ ಇದೇ ಬಳಕೆಗಳಲ್ಲಿ ಬಾವುಟಗಳನ್ನು ನಾವು ಕಾಣುತ್ತೇವೆ. ಬಾವುಟಗಳನ್ನು ಸಂದೇಶ ರವಾನಿಸಲು ಅಥವಾ ಜಾಹೀರಾತಿಗಾಗಿ, ಅಥವಾ ಅಲಂಕಾರ ಕಾರ್ಯಗಳಿಗೆ ಕೂಡ ಬಳಸಲಾಗುತ್ತದೆ. ಬಾವುಟಗಳ ಬಗ್ಗೆ ನಡೆಯುವ ಅಧ್ಯಯನವನ್ನು ಆಂಗ್ಲದಲ್ಲಿ ವೆಕ್ಸಿಲ್ಲಾಲಜಿ ಎಂದು ಕರೆಯುತ್ತಾರೆ. ಲ್ಯಾಟಿನ್ ಭಾಷೆಯಲ್ಲಿ ವೆಕ್ಸಿಲ್ಲಮ್ ಎಂದರೆ ಬಾವುಟ ಎಂದರ್ಥ. ಬಾವುಟಗಳು
ಭಾರತದ ರಾಷ್ತ್ರೀಯ ಧ್ವಜದ ಈಗಿನ ಅವತರಣಿಕೆಯನ್ನು ಜುಲೈ ೨೨, ೧೯೪೭ರ ಕಾನ್ಸ್ಟಿಟ್ಯುಯೆಂಟ್ ಅಸ್ಸೆಂಬ್ಲಿ ಸಭೆಯಲ್ಲಿ ಅಂಗೀಕರಿಸಲಾಯಿತು. ಬ್ರಿಟಿಷರಿಂದ ಆಗಸ್ಟ್ ೧೫, ೧೯೪೭ರಲ್ಲಿ ಸ್ವಾತಂತ್ರ್ಯ ಪಡೆಯುವ ಕೆಲವೇ ದಿನಗಳ ಮುಂಚೆ ನಡೆದದ್ದು ಈ ಸಭೆ. ಅಂದಿನಿಂದ ಜನವರಿ ೨೬ ೧೯೫೦ ರವರೆಗೆ ಸ್ವತಂತ್ರ ಭಾರತದ ಸ್ವರಾಜ್ಯಭಾರದ () ಬಾವುಟವಾಗಿಯೂ, ೨೬, ಜನವರಿ, ೧೯೫೦ರಿಂದ ಗಣರಾಜ್ಯ ಭಾರತದ ಬಾವುಟವಾಗಿಯೂ ಸಂದಿದೆ. ಹಿಂದಿ ಭಾಷೆಯಲ್ಲಿ ತಿರಂಗಾ, ಕನ್ನಡದಲ್ಲಿ ತ್ರಿವರ್ಣ ಮೂರು ವರ್ಣಗಳ ಧ್ವಜವೆಂದು ಸೂಚಿಸುವ ಪದಗಳು ಭಾರತದ ಬಾವುಟವನ್ನು ಸೂಚಿಸುವಾಗ ಬಳಕೆಯಲ್ಲಿದೆ. ವಿನ್ಯಾಸ ಮತ್ತು ನಿರ್ಮಾಣ ವಿವರಗಳು ವಿಶೇಷಣಗಳು ನಿರ್ಮಾಣ ಹಾಳೆಗಳು ಬಣ್ಣಗಳು ಭಾರತದ ಧ್ವಜ ಸಂಹಿತೆಯ ಪ್ರಕಾರ, ಭಾರತೀಯ ಧ್ವಜವು ಅಗಲ: ಎತ್ತರ ಆಕಾರ ಅನುಪಾತವನ್ನು ೩:೨ ಹೊಂದಿದೆ. ಧ್ವಜದ ಎಲ್ಲಾ ಮೂರು ಅಡ್ಡ ಬ್ಯಾಂಡ್ಗಳು (ಕೇಸರಿ, ಬಿಳಿ ಮತ್ತು ಹಸಿರು) ಸಮಾನ ಗಾತ್ರದಲ್ಲಿರುತ್ತವೆ. ಅಶೋಕ ಚಕ್ರವು ಇಪ್ಪತ್ನಾಲ್ಕು ಸಮಅಂತರದ ಕಡ್ಡಿಗಳನ್ನು ಹೊಂದಿದೆ. ಕೋಷ್ಟಕದಲ್ಲಿ ನೀಡಲಾದ ಮೌಲ್ಯಗಳು 1931 ಬಣ್ಣದ ಸ್ಥಳಕ್ಕೆ ಅನುಗುಣವಾಗಿರುತ್ತವೆ ಎಂಬುದನ್ನು ಗಮನಿಸಿ. ಬಳಕೆಗಾಗಿ ಅಂದಾಜು ಮೌಲ್ಯಗಳನ್ನು ಹೀಗೆ ತೆಗೆದುಕೊಳ್ಳಬಹುದು: ಕೇಸರಿ 671, ಬಿಳಿ , ಭಾರತ ಹಸಿರು 04638, ನೌಕಾಪಡೆಯ ನೀಲಿ 06038. ಇದಕ್ಕೆ ಹತ್ತಿರವಿರುವ ಪ್ಯಾಂಟೋನ್ ಮೌಲ್ಯಗಳು 165ಸಿ, ಬಿಳಿ, 349ಸಿ ಮತ್ತು 2735 ಸಿ. ತ್ರಿವರ್ಣ ಧ್ವಜದ ವೈಶಿಷ್ಟ್ಯ ತ್ರಿವರ್ಣ ಧ್ವಜ ಅಗಲದುದ್ದಕ್ಕೂ ಮೇಲೆ ಕೇಸರಿ ಬಣ್ಣ, ಮಧ್ಯದಲ್ಲಿ ಬಿಳಿ ಬಣ್ಣ, ಕೊನೆಯಲ್ಲಿ ಹಸಿರು ಬಣ್ಣದ ಪಟ್ಟಿಗಳಿಂದ ಕೂಡಿದೆ. ಬಾವುಟದ ಮಧ್ಯದಲ್ಲಿ ಇಪ್ಪತ್ತುನಾಲ್ಕು ರೇಖೆಗಳುಳ್ಳ ನೀಲಿಯ ಅಶೋಕ ಚಕ್ರವಿದೆ. ದೇಶದ ವಿಭಿನ್ನ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ದ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುವ ದಿವ್ಯ ಸಾಧನವೇ ನಮ್ಮ ರಾಷ್ಟ್ರದ್ವಜ. ಈ ನಮ್ಮ ಸ್ವಾತಂತ್ರ್ಯ ದೇಶದ ಸಂಕೇತವಾಗಿರುವ ರಾಷ್ಟ್ರದ್ವಜದ ಅವಹೇಳನ ರಾಷ್ಟ್ರದ್ರೋಹವಾಗಿರುತ್ತದೆ. ಅದರ ಉಳಿವಿಗಾಗಿ ಬಲಿದಾನವಾಗಲು ಸದಾ ಸಿದ್ದವಾಗಿರುವ ನಾವುಗಳು ಅದರ ಮೇಲಿರುವ ಭಕ್ತಿಯನ್ನೇ ದೇಶಭಕ್ತಿ ಎನ್ನುತ್ತೇವೆ. ಅಂದಿನ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ೧೯೪೭ ಜುಲೈ ೨೨ ರಂದು ಅಸೆಂಬ್ಲಿಯಲ್ಲಿ ನಮ್ಮ ರಾಷ್ಟ್ರ ದ್ವಜವನ್ನು ದೇಶಕ್ಕೆ ಅರ್ಪಿಸಿದರು. ನಮ್ಮ ಸರಕಾರವು ದ್ವಜ ಕೇವಲ ಕೈ ನೇಯ್ಗೆಯಿಂದಲೇ ಸಿದ್ದವಾದ ಶುದ್ಧ ಖಾದಿಯಿಂದಲೇ ಮಾಡಲ್ಪಟ್ಟಿರಬೇಕು. ಅದು ಉಣ್ಣೆಯ ಅಥವಾ ರೇಷ್ಮೆಯ ಇಲ್ಲವೇ ಹತ್ತಿಯದಾದರೂ ಅಡ್ಡಿಯಿಲ್ಲ. ಆದರೆ ಅದು ಕೈ ನೂಲು ಮತ್ತು ಕೈ ನೇಯ್ಗೆಯದೇ ಆಗಿರಬೇಕು. ಕೇಸರಿ ಬಿಳಿ ಹಸಿರು ಬಣ್ಣಗಳ ಅಳತೆ ಸಮ ಪ್ರಮಾಣದಲ್ಲಿ ಇದ್ದು ನೀಲಿಚಕ್ರವು ಹೆಚ್ಚು ಕಡಿಮೆ ಬಿಳಿ ಬಣ್ಣದ ಅಡ್ಡ ಗೆರೆಗಳಷ್ಟಿದ್ದು, ಅದರಲ್ಲಿ ಇಪ್ಪತ್ತ ನಾಲ್ಕು ರೇಖೆಗಳಿವೆ. ದ್ವಜದ ಉದ್ದ ಮತ್ತು ಅಗಲ ೩:೨ ಪ್ರಮಾಣದಲ್ಲಿರ ತಕ್ಕದ್ದು ಎಂದು ತಿಳಿಸಿದೆ. ರಾಷ್ಟ್ರಧ್ವಜ ತಯಾರಿಸುವ ಹಕ್ಕು ಕರ್ನಾಟಕದ ಧಾರವಾಡ ಜಿಲ್ಲೆಯ ಗರಗ ಗ್ರಾಮದಲ್ಲಿ ತಯಾರಿಸಲಾಗುತ್ತದೆ. ಉತ್ತರ ಕರ್ನಾಟಕದಾದ್ಯಂತ ಒಟ್ಟು ೫೨ ಇಂತಹ ಘಟಕಗಳು ರಾಷ್ಟ್ರಧ್ವಜ ನಿರ್ಮಾಣದಲ್ಲಿ ತೊಡಗಿವೆ. ಭಾರತದ ಸಂವಿಧಾನದಲ್ಲಿ ಉಲ್ಲೇಖದಂತೆ ಮತ್ತು ಭಾರತೀಯ ಸ್ಟಾಂಡರ್ಡ್ಸ್ ಬ್ಯೂರೋದ ನಿಯಮಗಳಿಗೆ ತಕ್ಕಂತೆ ರಾಷ್ಟ್ರಧ್ವಜವನ್ನು ಉತ್ಪಾದಿಸಬೇಕು. ಬ್ಯೂರೋದ ಮಾನದಂಡಕ್ಕೆ ತಕ್ಕಂತೆ ಇಲ್ಲದಿದ್ದರೆ ಉತ್ಪನ್ನವೇ ತಿರಸ್ಕೃತವಾಗುತ್ತದೆ. ನಮ್ಮ ಪವಿತ್ರ ಭಾರತಾಂಬೆಯ ಕೀರ್ತಿಯು ಮುಗಿಲೆತ್ತರಕ್ಕೆ ಏರಲಿ, ಎಲ್ಲಕ್ಕಿಂತ ಶ್ರೇಷ್ಠವಾದ ನಮ್ಮ ರಾಷ್ಟ್ರದ ಧ್ಯೇಯೋದ್ದೇಶಗಳು ಎಲ್ಲಕ್ಕಿಂತ ಎತ್ತರದಲ್ಲಿ ರಾರಾಜಿಸಲಿ, ಎಂಬ ಸಂಕೇತವನ್ನು ನಾಲ್ಕು ದಿಕ್ಕುಗಳಿಗೂ ತಿಳಿಯಪಡಿಸುವುದೇ ನಮ್ಮ ರಾಷ್ಟ್ರ ಧ್ವಜವನ್ನು ಮೇಲಕ್ಕೆ ಹಾರಿಸುವ ಉದ್ದೇಶ. ರಾಷ್ಟ್ರ ಧ್ವಜದ ಬಣ್ಣಗಳ ವಿಶೇಷತೆ ಕೇಸರಿ: ಧೈರ್ಯ, ಪರಿತ್ಯಾಗ ಮತ್ತು ದೇಶದ ಒಳಿತಿಗಾಗಿ ನಡೆವ ಬಲಿದಾನಗಳ ಸಂಕೇತವಾಗಿದೆ. ಬಿಳಿಬಣ್ಣ : ಪವಿತ್ರ ಮನಸ್ಸಿನವರೊಂದಿಗೆ ನಿತ್ಯವೂ ಸತ್ಯ ಶಾಂತಿಗಳೊಂದಿಗೆ ನಮ್ಮನ್ನು ಬೆಳಕಿನೆಡೆಗೆ ಕೊಂಡೊಯ್ಯುವ ಸತ್ಯ ಮಾರ್ಗದ ಸಂಕೇತವಾಗಿದೆ. ಹಸಿರು ಬಣ್ಣ : ಪ್ರಕೃತಿಯೊಡನೆ ಮನುಷ್ಯನಿಗಿರಬೇಕಾದ ಅವಿನಾಭಾವ ಸಂಬಂಧವನ್ನು ತಿಳಿಸುತ್ತಾ, ಹಸಿರು ಜೀವರಾಶಿಗಳನ್ನು ಅವಲಂಬಿಸಿರುವ ಮನುಷ್ಯ ಮತ್ತು ಭೂಮಿಯ ಅನೂಹ್ಯ ಬಾಂಧವ್ಯಗಳ ಸಂಕೇತವಾಗಿದೆ. ರಾಷ್ಟ್ರಧ್ವಜವನ್ನು ಹಾರಿಸಿದ ನಂತರ ಜನಗಣ ಮನವನ್ನು ಹಾಡಲೇಬೇಕು . ರಾಷ್ಟ್ರ ಧ್ವಜದ ಬಳಕೆ ಮತ್ತು ಪ್ರದರ್ಶನ ಧ್ವಜದ ಪ್ರದರ್ಶನ ಮತ್ತು ಬಳಕೆಯನ್ನು ಧ್ವಜ ಸಂಹಿತೆ, 2002 (ಧ್ವಜ ಸಂಹಿತೆಯ ಉತ್ತರಾಧಿಕಾರಿ ಭಾರತ, ಮೂಲ ಧ್ವಜ ಸಂಕೇತ) ನಿಂದ ನಿಯಂತ್ರಿಸಲಾಗುತ್ತದೆ ಲಾಂಛಾನಗಳು ಮತ್ತು ಹೆಸರುಗಳು (ಅನುಚಿತ ಬಳಕೆಯ ತಡೆಗಟ್ಟುವಿಕೆ) ಕಾಯ್ದೆ, 1950 ಮತ್ತು ರಾಷ್ಟ್ರೀಯ ಗೌರವ ಕಾಯ್ದೆ, 1971ರ ಅವಮಾನಗಳ ತಡೆಗಟ್ಟುವಿಕೆ. ರಾಷ್ಟ್ರ ಧ್ವಜಕ್ಕೆ ಮಾಡಿದ ಅವಮಾನಗಳು, ಅದರ ಮೇಲೆ ಒಟ್ಟು ಅನಾನುಕೂಲಗಳು ಅಥವಾ ಅಸಮಾಧಾನಗಳು, ಹಾಗೆಯೇ ಧ್ವಜ ಸಂಹಿತೆಯ ನಿಬಂಧನೆಗಳನ್ನು ಉಲ್ಲಂಘಿಸುವ ರೀತಿಯಲ್ಲಿ ಅದನ್ನು ಬಳಸುವುದು ಕಾನೂನಿನ ಮೂಲಕ ಶಿಕ್ಷಾರ್ಹ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ಅಥವಾ ದಂಡ ಅಥವಾ ಎರಡೂ. ದ್ವಜವನ್ನು ಶೀಘ್ರಗತಿಯಲ್ಲಿ ಏರಿಸಬೇಕು ಮತ್ತು ಇಳಿಸುವಾಗ ನಿದಾನಗತಿಯಲ್ಲಿ ಇಳಿಸಬೇಕು. ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದ ತನಕ ಮಾತ್ರ ಹಾರಿಸಬೇಕು. ರಾಷ್ಟ್ರ ದ್ವಜವನ್ನು ಕೆಲವು ಕಡೆ ಎಲ್ಲ ದಿನಗಳಲ್ಲೂ, ಇನ್ನು ಕೆಲವು ಕಡೆ ಕೇವಲ ವಿಶೇಷ ದಿನಗಳಲ್ಲಿ ಮಾತ್ರ ಹಾರಿಸಲಾಗುತ್ತದೆ. ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ಮತ್ತು ಗಾಂಧಿಜಯಂತಿ ಹಾಗೂ ರಾಷ್ಟ್ರೀಯ ವಿಶೇಷ ದಿನಗಳ ಜೊತೆಗೆ ಸರಕಾರದ ನಿರ್ದೇಶನದ ಮೇರೆಗೆ ರಾಷ್ಟ್ರಮಟ್ಟದ ಆಚರಣೆಯ ಸಂದರ್ಭಗಳಲ್ಲಿ ರಾಷ್ಟ್ರದ್ವಜವನ್ನು ಹಾರಿಸಬಹುದು. ದ್ವಜ ಏರಿಸುವಾಗ ದ್ವಜದ ಹಸಿರು ಬಣ್ಣ ಕೆಳಗೆ ಇರುವಂತೆ ಕೇಸರಿ ಬಣ್ಣ ಮೇಲೆ ಇರುವಂತೆ ಹಾರಿಸತಕ್ಕದ್ದು. ರಾಷ್ಟ್ರದ್ವಜವನ್ನು ಉರಿಸುವುದಾಗಲಿ, ಕೆಡಿಸುವುದಾಗಲಿ, ಕಾಲಡಿಯಲ್ಲಿ ಹಾಕುವುದಾಗಲಿ, ಹಾಳುಗೆಡುವುದಾಗಲಿ ಅಥವಾ ಅದಕ್ಕೆ ಯಾವುದೇ ತರಹದ ಅಗೌರವ ತೋರುವ ರೀತಿಯಲ್ಲಿ ನಡೆದು ಕೊಂಡರೆ, ಮಾತು, ಬರಹ ಅಥವಾ ಕೃತ್ಯದ ಮೂಲಕ ಅಗೌರವ ತೋರಿದರೆ ರಾಷ್ಟ್ರೀಯ ಗೌರವದ ಅವಮಾನ ವಿರೋಧಿ ಕಾಯ್ದೆಯಡಿಯಲ್ಲಿ ಶಿಕ್ಷೆಗೆ ಗುರಿ ಪಡಿಸಲಾಗುವುದು. ಹವಾಮಾನದ ವೈಪರೀತ್ಯದಿಂದ ಧ್ವಜವು ಹಾಳಾಗದಂತೆ ಹಾರುತ್ತಿರುವ ದ್ವಜವನ್ನು ಕಾಪಾಡಬೇಕು. ವೇದಿಕೆಯ ಮೇಲೆ ಬಳಸುವಂತಿದ್ದಲ್ಲಿ ಸಭಿಕರ ಎದುರಿಗೆ ನಿಂತು ಭಾಷಣ ಮಾಡುವವರ ಬಲಕ್ಕೆ ಧ್ವಜ ಕೋಲಿನಿಂದ ಅದನ್ನು ಹಾರಿಸತಕ್ಕದು ಸಮ್ಮೇಳನಗಳು ಇತರ ಕಾರ್ಯಕ್ರಮಗಳು ನಡೆಯುವಾಗ ವೇದಿಕೆಯ ಮೇಲಿರುವ ಅಧ್ಯಕ್ಷ ಸ್ಥಾನಕ್ಕಿಂತ ಎತ್ತರದಲ್ಲಿ ನಮ್ಮ ರಾಷ್ಟ್ರದ್ವಜ ಹಾರಾಡತಕ್ಕದ್ದು ಶಾಲೆ ಕಾಲೇಜುಗಳು, ಕ್ರೀಡಾ ಶಿಬಿರಗಳು, ಸ್ಕೌಟ್ಸ್ ಶಿಬಿರಗಳು ನಂತರ ವಿಶೇಷ ಸಂದರ್ಭಗಳಲ್ಲಿ ಮಕ್ಕಳ ಮನಸ್ಸಿನಲ್ಲಿ ವಿಶೇಷ ಗೌರವ ಮೂಡಿಸಲು ರಾಷ್ಟ್ರದ್ವಜ ಹಾರಿಸಬಹುದು. ಉಲ್ಲೇಖಗಳು ಬಾಹ್ಯ ಸಂಪರ್ಕಗಳು ರಾಷ್ಟ್ರಧ್ವಜಕ್ಕೆ ನಮಿಸುವುದು ಕಡ್ಡಾಯವೇ ಧ್ವಜದಲ್ಲಿ ಆದ ಬಹುಮುಖ್ಯ ಪರಿಷ್ಕರಣೆ ಅಂತ ಅಂದರೆ ಅದರ ಮಧ್ಯಭಾಗದಲ್ಲಿ ಅಶೋಕ ಚಕ್ರವನ್ನು ಸೇರಿಸಿದ್ದು. ಬಾವುಟಗಳು
ಇತಿಹಾಸ ಎಂದರೆ ನಮ್ಮ ಭೂತಕಾಲದ ಬಗೆಗಿನ ಮಾಹಿತಿ ಎಂದರ್ಥ (ಸಂಸ್ಕೃತದಲ್ಲಿ ಇತಿಹೀಗೆ ಮತ್ತು ಹಾಸಆದದ್ದು ಎಂಬ ವಿವರಣೆ ಇದೆ). ಸಂಬಂಧಪಟ್ಟ ವಿಷಯಗಳಿಗೆ ಈ ಪದವನ್ನು ನಾಮಪದವನ್ನಾಗಿ ಉಪಯೋಗಿಸಿದಾಗ ಇತಿಹಾಸವು ಮಾನವ, ಕುಟುಂಬ, ಮತ್ತು ಸಮಾಜದ ಮತ್ತು ಜೈವಿಕ ಬದುಕಿನ ಆಗುಹೋಗುಗಳ ದಾಖಲೆಗಳ ವೈಚಾರಿಕ ಚಿಂತನೆಗೆ ಪರಿಭಾಷೆಯಾಗಿ ಬಳಸಲ್ಪಡುತ್ತದೆ. ಬಹುಮಟ್ಟಿನ ಇತಿಹಾಸಕಾರರು ತಮ್ಮ ಅಧ್ಯಯನಗಳಿಗೆ ಬರವಣಿಗೆಯಲ್ಲಿ ದಾಖಲಾಗಿರುವ ಮೂಲಗಳನ್ನು ಆಧಾರವಾಗಿಟ್ಟುಕೊಳ್ಳುತ್ತಾರೆ. ಕೆಲವು ವಿಷಯಗಳಲ್ಲಿ ಐದು ಸಾವಿರ ವರ್ಷಗಳ ಹಿಂದಿನವರೆಗಿನ ಬರವಣಿಗೆಯ ಇತಿಹಾಸವು ಅಸ್ಥಿತ್ವದಲ್ಲಿದೆ . ಇದಕ್ಕೊ ಹಿಂದಿನ ಆಗು ಹೋಗುಗಳಿಗೆ, ಪುರಾತತ್ವ ಸರ್ವೇಕ್ಷಣಾ ಶಾಸ್ತ್ರವನ್ನೂ ಮತ್ತು ಪುರಾತನ ಜೀವಶಾಸ್ತ್ರ ಗಳನ್ನು ಆಧಾರವಾಗಿಟ್ಟುಕೊಳ್ಳುತ್ತಾರೆ. ಆದರೆ ಹಲವಾರು ಸಂಸ್ಕೃತಿಗಳಲ್ಲಿ ಇತಿಹಾಸವನ್ನು ಮೌಖಿಕ ಪರಂಪರೆಯ ಮೂಲಕವೂ ಅಭ್ಯಾಸಮಾಡುತ್ತಾರೆ. ಇತಿಹಾಸದ ವಿಭಾಗಗಳು ಇತಿಹಾಸದ ಅಧ್ಯಯನವನ್ನು ಹಲವು ರೀತಿಗಳಲ್ಲಿ ವಿಂಗಡಿಸಬಹುದಾಗಿದೆ. ಕಾಲಕ್ರಮದ ಮೇಲೆ. ಭೌಗೋಳಿಕ ಪ್ರದೇಶದ ಮೇಲೆ. ದೇಶಗಳ ಮೇಲೆ. ಜನ ಪಂಗಡಗಳ ಮೇಲೆ. ವಿಚಾರದ ಮೇಲೆ. ಐಲೆಗಳು ಇತಿಹಾಸದ ಪರಂಪರೆಇತಿಹಾಸ ( ಗ್ರೀಕ್ನಿಂದ , ಹಿಸ್ಟೋರಿಯಾ , ಇದರರ್ಥ ವಿಚಾರಣೆ ತನಿಖೆಯಿಂದ ಪಡೆದ ಜ್ಞಾನ) ಹಿಂದಿನ ಅಧ್ಯಯನವಾಗಿದೆ. ಬರವಣಿಗೆ ವ್ಯವಸ್ಥೆಗಳ ಆವಿಷ್ಕಾರದ ಹಿಂದಿನ ಘಟನೆಗಳನ್ನು ಇತಿಹಾಸಪೂರ್ವ ಎಂದು ಪರಿಗಣಿಸಲಾಗುತ್ತದೆ . ಇತಿಹಾಸ ಎಂಬುದು ಹಿಂದಿನ ಘಟನೆಗಳ ಜೊತೆಗೆ ಈ ಘಟನೆಗಳ ಸ್ಮರಣೆ, ಆವಿಷ್ಕಾರ, ಸಂಗ್ರಹಣೆ, ಸಂಘಟನೆ, ಪ್ರಸ್ತುತಿ ಮತ್ತು ವ್ಯಾಖ್ಯಾನವನ್ನು ಒಳಗೊಂಡಿರುವ ಒಂದು ಛತ್ರಿ ಪದವಾಗಿದೆ . ಇತಿಹಾಸಕಾರರು ಐತಿಹಾಸಿಕ ಮೂಲಗಳಾದ ಲಿಖಿತ ದಾಖಲೆಗಳು, ಮೌಖಿಕ ಖಾತೆಗಳು, ಕಲೆ ಮತ್ತು ವಸ್ತು ಕಲಾಕೃತಿಗಳು ಮತ್ತು ಪರಿಸರ ಗುರುತುಗಳನ್ನು ಬಳಸಿಕೊಂಡು ಹಿಂದಿನ ಜ್ಞಾನವನ್ನು ಹುಡುಕುತ್ತಾರೆ . ಇತಿಹಾಸದಿಂದ ಕಲಿಯುವಿಕೆ ಭಾರತದ ಇತಿಹಾಸವು ೯,೫೦೦ ವರ್ಷಗಳಿಗೂ ಅಗಾಧವಾದುದು. ಸಿಂಧೂ ನದಿಯ ನಾಗರೀಕತೆಯಿಂದಾಚೆಗೂ ಪ್ರಾರಂಭವಾಗುವ ಭಾರತದ ಇತಿಹಾಸದ ಪಳೆಯುಳಿಕೆಗಳು ೫೦೦೦ ವರ್ಷದ ಕಾಲಗತಿಯವರೆಗೂ ಸಿಗುತ್ತವೆ. ಕರ್ನಾಟಕದ ಇತಿಹಾಸಹಲವು ಮಹಾ ಸಾಮ್ರಾಜ್ಯಗಳು ಹಾಗು ರಾಜವಂಶದವರು ಕರ್ನಾಟಕವನ್ನು ಆಳಿ ಇಲ್ಲಿಯ ಇತಿಹಾಸ, ಸಂಸ್ಕೃತಿ ಹಾಗು ಬೆಳವಣಿಗೆಗೆ ಕಾರಣರಾಗಿದ್ದಾರೆ. ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಎಲ್ಲ ಭಾಗಗಳಲ್ಲೂ ಕಂಡು ಬರುತ್ತದೆ. ಬಂಗಾಳದ ಸೇನ ರಾಜವಂಶ ತಮ್ಮನ್ನು ಕರ್ನಾಟ ಕ್ಷತ್ರಿಯರುಗಳೆಂದು ಕರೆದು ಕೊಳ್ಳುತಿದ್ದರು.ಮಿಥಿಲಯಾ ಕರ್ನಾಟ ಕರು ಇಂದಿನ ಬಿಹಾರದ ಮೇಲೆ ರಾಜ್ಯ ಅಳುತಿದ್ದರು. ಅವರು ಕೂಡ ತಮ್ಮನು ತಾವು ಕರ್ನಾಟವಂಶ ಹಾಗು ಕರ್ನಾಟಕ ಕ್ಷತ್ರಿಯ ರೆಂದು ಕರೆದುಕೊಳ್ಳುತಿದ್ದರು.. ಮಧ್ಯ ಭಾರತದ ಚಿಂದಕ ನಾಗರು, ಕಳಿಂಗದ ಗಂಗರು (ಒಡಿಶಾ), ಮಾನ್ಯಖೇಟದ ರಾಷ್ಟ್ರಕೂಟರು, ವೆಂಗಿ ಚಾಲುಕ್ಯರು ದೇವಗಿರಿಯ ಯಾದವ ವಂಶ ಇವರೆಲ್ಲರೂ ಕನ್ನಡ ಮೂಲದವರೇ ಆದರೂ ಕ್ರಮೇಣ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಿದರು. ಇತಿಹಾಸ ಕಾಲಸೂಚಿ ನೋಡಿ ಭಾರತ ಗಣರಾಜ್ಯದ ಇತಿಹಾಸ ಇತಿಹಾಸ ಉಲ್ಲೇಖ
ಭಾರತದಲ್ಲಿ ಬಳಸಲಾಗುವ ಬಾವುಟಗಳ ಪಟ್ಟಿ ಇಲ್ಲಿದೆ. ರಾಷ್ಟ್ರೀಯ ಧ್ವಜ ರಾಷ್ಟ್ರಪತಿಯ ಧ್ವಜ ಮಿಲಿಟರಿ ಧ್ವಜಗಳು ಐತಿಹಾಸಿಕ ಇತರೆ ಬಾವುಟಗಳು
ವರ್ಷ೧೯೮೧ ಕನ್ನಡಚಿತ್ರಗಳು
ಭಾಗ್ಯವಂತರು ಚಲನಚಿತ್ರವು ೧೯೮೧ರಲ್ಲಿ ಬಿಡುಗಡೆಯಾದ ಚಿತ್ರ. ಇದನ್ನು ನಿರ್ದೇಶಿಸಿದವರು ಬಿ.ಎಸ್.ರಂಗ. ಹಾಡುಗಳು ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ನಗು ಕಂದಾ..ನೀ ನಗು ಕಂದಾ ತಿಳಿದವರೋ ಇಲ್ಲಾ ಮೂಢರೋ? ವಾರ ಬಂತಮ್ಮಾ..ಗುರುವಾರ ಬಂತಮ್ಮಾ ವರ್ಷ೧೯೮೧ ಕನ್ನಡಚಿತ್ರಗಳು ಪುನೀತ್ ರಾಜ್ಕುಮಾರ್ ಚಲನಚಿತ್ರಗಳು
ಶಂಕರನಾಗ್ ನಿರ್ದೇಶನದ ಗೀತ ೧೯೮೧ರಲ್ಲಿ ಬಿಡುಗಡೆಯಾಗಿದೆ. ಹಾಡುಗಳು ಜೊತೆಯಲಿ ಜೊತೆಜೊತೆಯಲಿ ಕೇಳದೆ ನಿಮಗೀಗ ದೂರದಲ್ಲಿ ಯಾರೋ ಹಾಡು ಹೇಳಿದಂತೆ ಸಂತೋಷಕ್ಕೆ ಹಾಡು ಸಂತೋಷಕ್ಕೆ ಏನೇ ಕೇಳು ಕೊಡುವೆ ನಿನಗೆ ನಾನೀಗ ನನ್ನ ಜೀವ ನೀನು ವರ್ಷ೧೯೮೧ ಕನ್ನಡಚಿತ್ರಗಳು
ವರ್ಷ೧೯೮೧ ಕನ್ನಡಚಿತ್ರಗಳು ಕಾದಂಬರಿ ಆಧಾರಿತ ಕನ್ನಡ ಚಿತ್ರಗಳು
ವರ್ಷ೧೯೮೧ ಕನ್ನಡಚಿತ್ರಗಳು
ವರ್ಷ೧೯೮೧ ಕನ್ನಡಚಿತ್ರಗಳು
ಭಾರತಿ 1948 ರಲ್ಲಿ ಆರ್. ಎಂ. ವೀರಭದ್ರಯ್ಯ ನಿರ್ದೇಶಿಸಿದ ಕನ್ನಡ ಚಲನಚಿತ್ರವಾಗಿದೆ. ಇದರಲ್ಲಿ ತಂಗುತುರಿ ಸೂರ್ಯಕುಮಾರಿ, ರಾಜಕುಮಾರಿ, ಸಂಪತ್ (ಅವರ ಮೊದಲ ಚಿತ್ರ) ಮತ್ತು ಎಂ.ವಿ. ಕೃಷ್ಣಸ್ವಾಮಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಮತ್ತು ಹಾಡುಗಳನ್ನು ಎಂ.ನರೇಂದ್ರಬಾಬು ಬರೆದಿದ್ದಾರೆ. ಚಿತ್ರದ ಕಥಾವಸ್ತುವಿನ ಬಗ್ಗೆ, ದಿ ಇಂಡಿಯನ್ ಎಕ್ಸ್ಪ್ರೆಸ್ ಹೀಗೆ ಬರೆದಿದೆ, ಭಾರತದ ಸಮಯಗೌರವದ ಸಂಪ್ರದಾಯಗಳನ್ನು ಮರೆತು, ಕುರುಡಾಗಿ ಪಾಶ್ಚಿಮಾತ್ಯ ನಾಗರಿಕತೆಯನ್ನು ಅನುಸರಿಸುವ ನಮ್ಮ ಆಧುನಿಕ ಮಹಿಳೆಯರಿಗೆ ಮಾರ್ಗದರ್ಶನ ನೀಡುವ ಗುರಿಯನ್ನು ಈ ಕಥೆ ಹೊಂದಿದೆ. ಇದು ಪಾಶ್ಚಾತ್ಯರಿಂದ ಉತ್ತಮವಾದದ್ದನ್ನು ಅರಗಿಸಿಕೊಂಡು ಸ್ಥಳೀಯ ಸಂಸ್ಕೃತಿಯನ್ನು ಉತ್ತೇಜಿಸಲು ಮನವಿ ಮಾಡುತ್ತದೆ. ಪಾತ್ರವರ್ಗ ತಂಗುತುರಿ ಸೂರ್ಯಕುಮಾರಿ ರಾಜಕುಮಾರಿ ಸಂಪತ್ ಎಂವಿ ಕೃಷ್ಣಸ್ವಾಮಿ ಮಾಧವ ರಾವ್ ಉಲ್ಲೇಖಗಳು ಕನ್ನಡ ಚಲನಚಿತ್ರಗಳು
ವರ್ಷ೧೯೪೯ ಕನ್ನಡಚಿತ್ರಗಳು
ವರ್ಷ೧೯೪೯ ಕನ್ನಡಚಿತ್ರಗಳು
ವರ್ಷ೧೯೪೯ ಕನ್ನಡಚಿತ್ರಗಳು
ಸತಿ ತುಳಸಿ, ಎಂ.ವಿ.ಎನ್.ಅಯ್ಯಂಗಾರ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೪೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ನೀಲಮ್ಮ ಕದಂಬಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಮಲಾನಂದ ದಾಸ್ ಮತ್ತು ಸುಶೀಲಾದೇವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕಥೆ ಆದರ್ಶ ಪತ್ನಿಯಾದ ತುಳಸಿ ಕಥೆ. ಪಾತ್ರವರ್ಗ ನಾಯಕ(ರು) ವಿಮಲಾನಂದ ದಾಸ್ ನಾಯಕಿ(ಯರು) ಸುಶೀಲಾದೇವಿ(ತುಳಸಿ) ಉಲ್ಲೇಖಗಳು ವರ್ಷ೧೯೪೯ ಕನ್ನಡಚಿತ್ರಗಳು
ವರ್ಷ೧೯೫೦ ಕನ್ನಡಚಿತ್ರಗಳು
ಈ ಚಿತ್ರದಲ್ಲಿ 12 ಹಾಡುಗಳಿದ್ದವು. 1. ಎಂದೋ ಎಂದೋ ಎಂದೋ ಎಂದೋ ನಿನ್ನ ದರುಶನ (ಮಹಲ್ ಚಿತ್ರದ ಆಯೇಗಾ ಆಯೇಗಾ ಧಾಟಿ) 2. ಏನಿದು ರಮಣಿ ಕನಸೊ 3. ನೀ ಎನ್ನ ಜೀವನ ಜಗನ್ಮೋಹನ (ತೂ ಮೇರಾ ಚಾಂದ್ ಮೈಂ ತೇರೀ ಚಾಂದನೀ ಧಾಟಿ) 4. ಪ್ರೇಮದಿಂದಲಿ ನಾವು ಕೂಡಿ 5. ಜಯ ಜಯ ಗೌರಿ 6. ಕರೆಯುವೆ ನಿನ್ನ (ದಿಲ್ ಕಾ ಲಗಾನಾ ಪ್ಯಾರ್ ಜತಾನಾ ಧಾಟಿ) 7. ಮನದೊಳು ಅತಿ ಚಿಂತೆ 8. ಓಂಕಾರ ಪಂಜರ ಶುಕೀಂ 9. ಬಲು ಮೋಜಿನ ಹುಡುಗಿ 10. ಓ ವಸಂತ ಮಾಸ ಓಡಿ ಬಂದಿದೆ (ಓ ಮುಝೆ ಕಿಸೀಸೆ ಪ್ಯಾರ್ ಹೋಗಯಾ ಧಾಟಿ) 11. ನೀ ಬಳುಕುತ ಬಳಿಗೈತಂದೆ 12. ಕಣಿಯ ಹೇಳಲು ಬಂದೆ ಸೀತಾ ಫೋನ್ ಕಂಪನಿ ಅನೇಕ ಸಲ ಇವುಗಳ ಧ್ವನಿ ಮುದ್ರಿಕೆಗಳನ್ನು ಬಿಡುಗಡೆ ಮಾಡಿತ್ತು. ದುರದೃಷ್ಟವಶಾತ್ ಈಗ ಯಾವುದೂ ಲಭ್ಯವಿಲ್ಲ. ಚಿತ್ರದ ಮೂಲ ಪ್ರತಿ ಅಗ್ನಿ ಆಕಸ್ಮಿಕದಲ್ಲಿ ನಾಶವಾಗಿರುವುದರಿಂದ ವೀಡಿಯೊ ರೂಪದಲ್ಲೂ ನೋಡುವ ಸಾಧ್ಯತೆ ಇಲ್ಲ. ಎಂದೋ ಎಂದೋ ಹಾಡಿನ ಸಾಹಿತ್ಯ ಹೀಗಿತ್ತು. ಎಂದೋ ಎಂದೋ ಎಂದೋ ಎಂದೋ ನಿನ್ನ ದರುಶನ ಎಂದೋ ನೀ ಎನ್ನ ಪ್ರಾಣ ಜ್ಯೋತಿ ನಿನಗಾಗಿ ಎನ್ನ ಪ್ರೀತಿ ನಾ ನಿನ್ನ ಕಾದು ಕುಳಿತೆ ನೀ ಏಕೆ ಎನ್ನ ಮರೆತೆ ಇರುಳೆಲ್ಲ ನಿನ್ನ ಸ್ವಪ್ನ ಹಗಲೆಲ್ಲ ನಿನ್ನ ಧ್ಯಾನ ಹೀಗಾಯ್ತು ಎನ್ನ ಬವಣೆ ನಾ ಬೇರೆ ದಾರಿ ಕಾಣೆ ಇದನ್ನೂ ನೋಡಿ :.%0%2%9%0%2%97%0%2%8%0%3%8%0%2%%0%3%8%0%3%95%0%2%9%0%2%%0%2%8%0%2%%0%2%97%0%3%86%0%2%8%0%3%8%0%2%5%0%2%%0%3%95%0%2%9%0%3%866 ವರ್ಷ೧೯೫೧ ಕನ್ನಡಚಿತ್ರಗಳು
ವರ್ಷ೧೯೫೧ ಕನ್ನಡಚಿತ್ರಗಳು
ವರ್ಷ೧೯೫೧ ಕನ್ನಡಚಿತ್ರಗಳು
೧೯೭೪ರಲ್ಲಿ ಬಿಡುಗಡೆಯಾದ ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದ ಮಾಹಿತಿಗೆ ಈ ಲೇಖನ ನೋಡಿ. ವರ್ಷ೧೯೫೨ ಕನ್ನಡಚಿತ್ರಗಳು ರಾಜಕುಮಾರ್ ಚಲನಚಿತ್ರಗಳುರಾಜಕುಮಾರ್ಚಲನಚಿತ್ರಗಳು
ವರ್ಷ೧೯೫೩ ಕನ್ನಡಚಿತ್ರಗಳು
ವರ್ಷ೧೯೫೩ ಕನ್ನಡಚಿತ್ರಗಳು
ವರ್ಷ೧೯೫೩ ಕನ್ನಡಚಿತ್ರಗಳು
ಈ ಚಿತ್ರವನ್ನು ಹೆಚ್.ಎಲ್.ಎನ್. ಸಿಂಹ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಗುಬ್ಬಿ ವೀರಣ್ಣ..ಈ ಚಿತ್ರದಲ್ಲಿ ಬರುವ ಪಾತ್ರಗಳು ಹೊನ್ನಪ್ಪ ಭಾಗವತರ್, ಪಂಡರೀಬಾಯಿ, ಗುಬ್ಬಿ ವೀರಣ್ಣ, ವೈ.ಎಸ್.ಬಾಲಯ್ಯ, ಬಿ.ಜಯಮ್ಮ, ಕೆ.ಕುಮಾರಿ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಆರ್.ಸುದರ್ಶನಂ.ಈ ಚಿತ್ರದ ಛಾಯಾಗ್ರಹಕರು ಜಿ.ಕೆ.ಮೆಹ್ತಾ. ಈ ಚಿತ್ರವು ೧೯೫೩ ರಲ್ಲಿ ಬಿಡುಗಡೆಯಾಯಿತು ವರ್ಷ೧೯೫೩ ಕನ್ನಡಚಿತ್ರಗಳು
ವರ್ಷ೧೯೫೩ ಕನ್ನಡಚಿತ್ರಗಳು
ವರ್ಷ೧೯೫೩ ಕನ್ನಡಚಿತ್ರಗಳು
ವರ್ಷ೧೯೫೩ ಕನ್ನಡಚಿತ್ರಗಳು
ವರ್ಷ೧೯೫೪ ಕನ್ನಡಚಿತ್ರಗಳು
ಗುಣ ಸಾಗರಿ ಚಿತ್ರದ ಯಶಸ್ಸಿನಿಂದ ಪುಳಕಿತಗೊಂಡ ಗುಬ್ಬಿವೀರಣ್ಣ (ಕರ್ನಾಟಕ ಗುಬ್ಬಿ ಫಿಲಂಸ್) ಬೇಡರ ಕಣ್ಣಪ್ಪ ಚಿತ್ರ ತಯಾರಿಕೆಗೆ ಅಣಿಯಾಗುತ್ತಿದ್ದರು. ಚಿತ್ರದ ನಾಯಕ ಕಣ್ಣಪ್ಪನ ಪಾತ್ರಕ್ಕೆ ಭಕ್ತಿವಿನಯದ, ಗಟ್ಟಿಮುಟ್ಟಾದ, ಸ್ಪುರದ್ರೂಪಿ ಯುವಕನನ್ನು ಹುಡುಕಿಕೊಡಲು ಸಿಂಹರಿಗೆ ಹೇಳಿದ್ದರಂತೆ. ಪಾತ್ರಧಾರಿಯ ಹುಡುಕಾಟದಲ್ಲಿದ್ದ ಸಿಂಹ ಅವರಿಗೆ ಬಸ್ಸಲ್ಲಿ ಸಿಕ್ಕ ರಾಜ್ ಮೇಲೆ ಮನಸ್ಸು ಹರಿಯಿತು. ಮೊದಲೇ ಸ್ನೇಹಿತನ ಪುತ್ರ. ಅಭಿನಯ ಕಣ್ಣಾರೆ ಕಂಡಾಗಿದೆ. ಬಾಕಿ ಉಳಿದದ್ದು ಸ್ಕಿೃೕನ್ ಟೆಸ್ಟ್ ಮಾತ್ರ ಅದಕ್ಕಾಗಿ ರಾಜ್ಗೆ ಮದರಾಸಿಗೆ ಬುಲಾವು ಬಂತು. ರಾಜ್ ಪಾಸಾದರು. ಅಂದಿನ ಮುತ್ತುರಾಜ್, ಸಿಂಹ ಕೃಪೆಯಿಂದ ರಾಜ್ಕುಮಾರ್ ಆದರು. ಬೇಡರ ಕಣ್ಣಪ್ಪ ಚಿತ್ರ ಸೆಟ್ಟೇರಿತು. ಕಾಲಕ್ಕೆ ತಕ್ಕಂತೆ ಮೆಗಾಹಿಟ್ ಆಯಿತು. ಈ ರಾಜಕುಮಾರನನ್ನ ಸ್ಟಾರ್ಪದವಿ ಬೆನ್ನು ಹತ್ತಿತು. ಭಕ್ತಿ, ಸಾಂಸಾರಿಕ, ಸಾಮಾಜಿಕ ಹೀಗೆ 50 ವರ್ಷಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದರು. 1956ರಲ್ಲಿ ಮಹಿಷಾಸುರ ಮರ್ದಿನಿಯ ಮೂಲಕ ಹಿನ್ನಲೆ ಗಾಯಕರೂ ಆದರು. ವರ್ಷ೧೯೫೪ ಕನ್ನಡಚಿತ್ರಗಳುರಾಜಕುಮಾರ್ಚಲನಚಿತ್ರಗಳುರಾಜಕುಮಾರ್ಚಲನಚಿತ್ರಗಳುರಾಜಕುಮಾರ್ಚಲನಚಿತ್ರಗಳು
ವರ್ಷ೧೯೫೪ ಕನ್ನಡಚಿತ್ರಗಳು
ಮುಟ್ಟಿದ್ದೆಲ್ಲ ಚಿನ್ನ , ಡಿ.ಶಂಕರ್ ಸಿಂಗ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೫೪ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಪಿ.ಶ್ಯಾಮಣ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ಬಾಲಕೃಷ್ಣ , ಪ್ರತಿಮಾದೇವಿ ಮತ್ತು ಹರಿಣಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪಾತ್ರವರ್ಗ ನಾಯಕ(ರು) ಬಾಲಕೃಷ್ಣ ನಾಯಕಿ(ಯರು) ಹರಿಣಿ ಪ್ರತಿಮಾದೇವಿ ಟಿ ಆರ್ ನರಸಿಂಹ ರಾಜು ಎಂ ಎಸ್ ಮಾಧವ ರಾವ್ ಉಲ್ಲೇಖಗಳು ವರ್ಷ೧೯೫೪ ಕನ್ನಡಚಿತ್ರಗಳು
ವರ್ಷ೧೯೫೪ ಕನ್ನಡಚಿತ್ರಗಳು ಈ ಚಲನಚಿತ್ರ ರಚಿಸಿದ ಎಂಬ ಕಾದಂಬರಿಯ ಮೇಲೆ ಆಧಾರಿತವಾಗಿದೆ.
ವರ್ಷ೧೯೫೪ ಕನ್ನಡಚಿತ್ರಗಳು
ನಟಶೇಖರ ಚಿತ್ರವು ೧೯೫೪ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಸಿ.ವಿ.ರಾಜುರವರು ಈ ಚಿತ್ರದ ನಿರ್ದೇಶನ ಮತ್ತು ನಿರ್ಮಾಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಕಲ್ಯಾಣ್ ಕುಮಾರ್ರವರು ನಾಯಕ ಪಾತ್ರದಲ್ಲಿ ಮತ್ತು ವಿದ್ಯ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಿ.ಕಾಳಿಂಗರಾಯರವರು ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ. ಚಿತ್ರ್ಲದಲ್ಲಿ ನಟಿಸಿರುವವರು ಕಲ್ಯಾಣ್ ಕುಮಾರ್ ವಿದ್ಯ ಸಂಧ್ಯ ಜಯಶ್ರಿ ಜಿ.ಗೊಗ್ಗು ವರ್ಷ೧೯೫೪ ಕನ್ನಡಚಿತ್ರಗಳು
ವರ್ಷ೧೯೫೪ ಕನ್ನಡಚಿತ್ರಗಳು
ವರ್ಷ೧೯೫೫ ಕನ್ನಡಚಿತ್ರಗಳು
ತೆಲುಗು ಸಾಹಿತ್ಯ ತೆಲುಗು ಭಾಷೆಯಲ್ಲಿನ ಸಾಹಿತ್ಯ. ಇದಕ್ಕೆ ಸುಮಾರು ಒಂದು ಸಾವಿರ ವರ್ಷಗಳ ಚರಿತ್ರೆ ಇದೆ. ಇತಿಹಾಸ ಆರಂಭಿಕ ಇತಿಹಾಸ ೧೧ ನೇ ಶತಮಾನದಲ್ಲಿ ನನ್ನಯ ಬರೆದ ಆಂಧ್ರ ಮಹಾಭಾರತಮು ಅನ್ನು ತೆಲುಗು ಭಾಷೆಯ ಆದಿಕಾವ್ಯ ಎಂದು ಹೇಳುತ್ತಾರೆ. ನನ್ನಯ್ಯನಿಗಿಂತ ಮೊದಲೇ ತೆಲುಗು ಸಾಹಿತ್ಯದ ಪುರಾವೆಗಳು ಇರುವುದಾದರೂ ಬರಹ ರೂಪದ ತೆಲುಗಿಗೆ ಔಪಚಾರಿಕವಾಗಿ ವ್ಯಾಕರಣವೊಂದನ್ನು ರಚಿಸಿದುದಕ್ಕಾಗಿ
ಭಾರತೀಯ ಚಲನಚಿತ್ರ ಹಾಗು ದೂರದರ್ಶನ ಸಂಸ್ಥೆ ಪುಣೆಯಲ್ಲಿದ್ದು ನಮ್ಮ ದೇಶದ ಪ್ರಮುಖವಾದ ಚಲನಚಿತ್ರ ನಿರ್ಮಾಣ ತರಬೇತಿ ಶಾಲೆ. ೧೯೬೦ ರಲ್ಲಿ ಪುಣೆಯಲ್ಲಿದ್ದ ಪ್ರಭಾತ ಸ್ಡುಡೀಯೊ ಪ್ರಾಗಂಣದಲ್ಲಿ ಸ್ಥಾಪಿತವಾಯಿತು. ಯಿಂದ ಎಫ್ ಟಿ ಐ ಐ ಬಂಗಾರದ ಪದಕದೊಂದಿಗೆ ಪದವಿ ಪಡೆದ ಗಿರೀಶ್ ಕಾಸರವಳ್ಳಿಯವರು ತಮ್ಮ ಪದವಿಪ್ರಾಪ್ತಿಗಾಗಿ ಮಾಡಿದ ಚಿತ್ರ ಅವಶೇಷಕ್ಕಾಗಿ ಸಣ್ಣ ಚಿತ್ರ ವಿಭಾಗದಲ್ಲಿ, ಭಾರತದ ರಾಷ್ಟ್ರಪತಿಗಳಿಂದ ರಜತ ಕಮಲ ಪ್ರಶಸ್ತಿಯನ್ನು ಪಡೆದರು. ಪ್ರಮುಖ ವಿಧ್ಯಾರ್ಥಿಗಳು ಅಡೂರ್ ಗೊಪಾಲಕೃಷ್ಣನ್ ಬಾಲು ಮಹೇಂದ್ರ ಡಾನಿ ಡೆನ್ೞಗೊಪ ಜಯ ಬಚ್ಚನ್ ಕೇತನ್ ಮೆಹ್ತ ಮಣಿ ಕೌಲ್ ಮಿಥುನ್ ಚಕ್ರವರ್ತಿ ನಸೀರುದ್ದಿನ್ ಶಾ ನವೀನ್ ನಿಶ್ಕೋಲ್ ಓಮ್ ಪುರಿ ಸಂಜಯ್ ಲೀಲಾ ಬಂಸಾಲಿ ಶಬಾನಾ ಆಝ್ಮಿ ಶಾಜಿ ಎನ್ ಕರುಣ್ ಷತ್ರುಗನ್ ಸಿನ್ಹಾ ಸ್ಮಿತಾ ಪಾಟಿಲ್ ಸುಭಾಷ್ ಘಾಯ್ ವಿದು ವಿನೋದ್ ಚೋಪ್ರ ಪ್ರಮುಖ ಕನ್ನಡಿಗರು ಗಿರೀಶ್ ಕಾಸರವಳ್ಳಿ ಎಚ್. ಎಂ ರಾಮಚಂದ್ರ ಎಸ್. ರಾಮಚಂದ್ರ ಜಿ.ಎಸ್ ಭಾಸ್ಕರ್ ಹೊರಗಿನ ಸಂಪರ್ಕಗಳು ಚಲನಚಿತ್ರ ಶೈಕ್ಷಣಿಕ ಸಂಸ್ಥೆಗಳು
ವರ್ಷ೧೯೫೫ ಕನ್ನಡಚಿತ್ರಗಳು
ಮಹಾಕವಿ ಕಾಳಿದಾಸ, ೧೯೫೫ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಇದು ಕೆ.ಆರ್.ಸೀತಾರಾಮ್ ಶಾಸ್ತ್ರಿಯವರ ನಿರ್ದೇಶನದ ಚೊಚ್ಚಲ ಚಲನಚಿತ್ರ. ೪೫ನೇ ಶತಮಾನದಲ್ಲಿ ಜೀವಿಸಿದ್ದ ಸಂಸ್ಕೃತ ಕವಿ ಮಹಾಕವಿ ಕಾಳಿದಾಸನ ದಂತಕಥೆ ಆಧರಿತ ಈ ಚಿತ್ರದಲ್ಲಿ ಶ್ರೀ ಹೊನ್ನಪ್ಪ ಭಾಗವತರ್ ರವರು ಕಾಳಿದಾಸನ ಪಾತ್ರವನ್ನು ನಿರ್ವಹಿಸಿದ್ದರು. ನರಸಿಂಹರಾಜು,ಬಿ.ರಾಘವೇಂದ್ರ ರಾವ್ ಹಾಗು ಬಿ.ಸರೋಜದೇವಿಯವರು ಈ ಚಿತ್ರದಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಬಿ.ಸರೋಜದೇವಿಯವರ ಚೊಚ್ಚಲ ಚಲನಚಿತ್ರ. ಈ ಚಿತ್ರವನ್ನು ೧೯೬೦ರಲ್ಲಿ, ಅಕ್ಕಿನೇನಿ ನಾಗೇಶ್ವರ್ ರಾವ್ ಅಭಿನಯದಲ್ಲಿ ಮಹಾಕವಿ ಕಾಳಿದಾಸು ಎಂಬ ಹೆಸರಿನಲ್ಲಿ ರಿಮೇಕ್ ಮಾಡಲಾಯಿತು. ೧೯೬೬ರಲ್ಲಿ ಮತ್ತೆ ತಮಿಳಿನಲ್ಲಿ, ಶಿವಾಜಿ ಗಣೆಶನ್ ಅಭಿನಯದ ಮಹಾಕವಿ ಕಾಳಿದಾಸ್ ಎಂಬ ಹೆಸರಿನಲ್ಲಿ ರಿಮೇಕ್ ಗೊಂಡಿತು. ಈ ಚಿತ್ರವು ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಒಂದು ಬಹುಮುಖ್ಯ ಹೆಗ್ಗುರುತು ಎಂದು ಗುರುತಿಸಲ್ಪಟ್ಟಿದೆ. ಕಥೆ ಗುರುವಿನಿಂದ ಶಾಪಗ್ರಸ್ಥನಾದ ಒಬ್ಬ ಶ್ರೀಮಂತ ಅಜ್ಞಾನಿಯು ಹೇಗೆ ಸಂಸ್ಕೃತದ ಒಬ್ಬ ಮಹಾನ್ ಕವಿಯಾಗಿ ಬೆಳೆದ ಎಂಬ ಹಂದರವುಳ್ಳ ಕಥೆ. ಈ ಚಿತ್ರವು ೪೫ನೇ ಶತಮಾನದಲ್ಲಿ ಜೀವಿಸಿದ್ದ ಸಂಸ್ಕೃತದ ಮಹಾಕವಿ ಕಾಳಿದಾಸನ ದಂತಕಥೆಯ ಮೇಲೆ ಅಧಾರಿತವಾಗಿದೆ. ತಾರಾಗಣ ಹೊನ್ನಪ್ಪ ಭಾಗವತರ್ ಬಿ.ರಾಘವೇಂದ್ರ ರಾವ್ ನರಸಿಂಹರಾಜು ಬಿ.ಸರೋಜದೇವಿ ರಾಜಸುಲೋಚನ ಬಿ.ಕೆ.ಈಶ್ವರಪ್ಪ ಪ್ರಶಸ್ತಿಗಳು ೩ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಅತ್ಯುತ್ತಮ ಕನ್ನಡ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ. ಉಲ್ಲೇಖಗಳು ಬಾಹ್ಯ ಕೊಂಡಿಗಳು :..201306061955 ವರ್ಷ೧೯೫೫ ಕನ್ನಡಚಿತ್ರಗಳು
ಮಧ್ಯಮ ವರ್ಗದ, ತಿಂಗಳ ಸಂಬಳದಿಂದ ಸಂಸಾರ ತೂಗಿಸುವ ಮನೆಗಳಲ್ಲಿ ಕಂಡು ಬರುವ ಸರ್ವಕಾಲಿಕ ಸತ್ಯವನ್ನು ಬಹು ಸುಂದರವಾಗಿ ಈ ಹಾಡಿನ ಮೂಲಕ ಚಿ ಸದಾಶಿವಯ್ಯನವರು ತಿಳಿಯಪಡಿಸಿದ್ದಾರೆ. ಈ ಹಾಡಿನ ಸಾಹಿತ್ಯ ಹೀಗಿದೆ ಒಂದರಿಂದ ಇಪ್ಪತ್ತರವರೆಗು ಉಂಡಾಟ ಉಂಡಾಟ ಉಂಡಾಟ ತೇದಿ ಒಂದರಿಂದ ಇಪ್ಪತ್ತರವರೆಗು ಉಂಡಾಟ ಉಂಡಾಟ ಉಂಡಾಟ ಇಪ್ಪತ್ತೊಂದರಿಂದ ಮೂವತ್ತರವರೆಗೆ ಭಂಡಾಟ ಸಂಬಳ ತೇದಿ ಒಂದರಿಂದ ಇಪ್ಪತ್ತರವರೆಗು ಉಂಡಾಟ ಉಂಡಾಟ ಉಂಡಾಟ ತಿರುಪತಿ ತಿಮ್ಮಪ್ಪ ನೀನು ಘಾಟಿ ಸುಬ್ಬಣ್ಣ ನೀನು ಹರಕೆ ಕಾಸು ಕೂಡಿಸುವರು ತೇದಿ ಒಂದಕೆ ತಿರುಪತಿ ತಿಮ್ಮಪ್ಪ ನೀನು ಘಾಟಿ ಸುಬ್ಬಣ್ಣ ನೀನು ಹರಕೆ ಕಾಸು ಕೂಡಿಸುವರು ತೇದಿ ಒಂದಕೆ ಭಕುತಿಯಿಂದ ಕೂಡಿಸಿಟ್ಟ ಗಿಂಡಿಯ ಕುರಿಗಂಡಿಯ ಕೊಂಚ ಅಗಲಿಸುತ್ತ ಆಡಿಸುವರು ಇಪ್ಪತ್ತೊಂದಕೆ ತಿರುಪತಿ ತಿಮ್ಮಪ್ಪ ನೀನು ಘಾಟಿ ಸುಬ್ಬಣ್ಣ ನೀನು ಹರಕೆ ಕಾಸು ಕೂಡಿಸುವರು ತೇದಿ ಒಂದಕೆ ಸಿನೆಮಾ ಡ್ರಾಮಾ ಡ್ಯಾನ್ಸು ಎಂದರೆ ಟಿಕೆಟ್ ಸಿಕ್ಕದು ಒಂದಕೆ ಥೇಟರ್ ಖಾಲಿ ಹೊರಗಡೆ ಗೇಲಿ ತೇದಿ ಇಪ್ಪತ್ತೊಂದಕೆ ಸಿನೆಮಾ ಡ್ರಾಮಾ ಡ್ಯಾನ್ಸು ಎಂದರೆ ಟಿಕೆಟ್ ಸಿಕ್ಕದು ಒಂದಕೆ ಥೇಟರ್ ಖಾಲಿ ಹೊರಗಡೆ ಗೇಲಿ ತೇದಿ ಇಪ್ಪತ್ತೊಂದಕೆ ಬಾಡಿಗೆ ಸೈಕಲೇರಿ ಓಡುತಿಹರು ಒಂದಕೆ ಬಳಲಿ ಬೆಂಡಾಗಿ ಸುಸ್ತಾಗುವರು ಇಪ್ಪತ್ತೊಂದಕೆ ಬಾಡಿಗೆ ಸೈಕಲೇರಿ ಓಡುತಿಹರು ಒಂದಕೆ ಬಳಲಿ ಬೆಂಡಾಗಿ ಸುಸ್ತಾಗುವರು ಇಪ್ಪತ್ತೊಂದಕೆ ಹೆಂಡತಿ ಮಕ್ಕಳೆಲ್ಲ ಕುಣಿದಾಡುವರು ಒಂದಕೆ ಅವರ್ ಕಿತ್ತಾಡಿ ಕೈ ಮಾಡಿ ಗುದ್ದಾಡುವರು ಇಪ್ಪತ್ತೊಂದಕೆ ಗೆಳೆಯರ ಕೂಟವೆಲ್ಲ ಒಂದಕೆ ಬೀದಿ ನಾಯಿ ಸಹ ಮುಟ್ಟದದು ಇಪ್ಪತ್ತೊಂದಕೆ ಗೆಳೆಯರ ಕೂಟವೆಲ್ಲ ಒಂದಕೆ ಬೀದಿ ನಾಯಿ ಸಹ ಮೂಸದದು ಇಪ್ಪತ್ತೊಂದಕೆ ಉಂಡಾಟವೇ ತೇದಿ ಒಂದಕೆ ಖಾಲಿ ಭಂಡಾಟವೇ ಇಪ್ಪತ್ತೊಂದಕೆ ವರ್ಷ೧೯೫೫ ಕನ್ನಡಚಿತ್ರಗಳು
ವರ್ಷ೧೯೫೫ ಕನ್ನಡಚಿತ್ರಗಳು
ವಿಚಿತ್ರ ಪ್ರಪಂಚ, ಬಾಲಗಜಬೇರ್ ನಿರ್ದೇಶನ ಮತ್ತು ಎಸ್.ಎಸ್.ವೈದ್ಯ ನಿರ್ಮಾಪಣ ಮಾಡಿರುವ ೧೯೫೫ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಸ್.ಪುರುಷೋತ್ತಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಇಂದುಶೇಖರ್ ಮತ್ತು ಹರಿಣಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪಾತ್ರವರ್ಗ ನಾಯಕ(ರು) ಇಂದುಶೇಖರ್ ನಾಯಕಿ(ಯರು) ಹರಿಣಿ ಶಾಂತಕುಮಾರ್ ಸೋರಟ್ ಅಶ್ವಥ್ ಉಲ್ಲೇಖಗಳು ವರ್ಷ೧೯೫೫ ಕನ್ನಡಚಿತ್ರಗಳು