text
stringlengths
0
182k
(ಆಗಸ್ಟ್ ೨೯, ೧೯೫೮೨೦೦೯) ಅಮರಿಕಾದ ಪಾಪ್ ಶೈಲಿಯ ಮಹಾರಾಜ ಎಂದೇ ಪ್ರಸಿದ್ಧರು. ಜಗತ್ತಿನ ಮೂಲೆಮೂಲೆಗಳಲ್ಲೂ ಜನಪ್ರಿಯರಾಗಿರುವ ಪಾಪ್ ಸಂಗೀತ, ಬ್ರೇಕ್ ಡ್ಯಾನ್ಸ್ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ತಂದು, ಪಾಪ್ ಸಂಗೀತ ಅದ ಆಸ್ತಿಯಂತಿರುವ, ಪ್ರಾಣಿಪ್ರಿಯರೂ ಆದ ಮೈಕಲ್ ಜ್ಯಾಕ್ಸನ್ ಎಮ್. ಜೆ ಅವರ ಸಂಗೀತದ ಕೊಡುಗೆ ಅನನ್ಯವಾಗಿದೆ. ಚಿಕ್ಕ ವಯಸ್ಸಿನಲ್ಲೇ ಅತ್ಯಂತ ಪ್ರತಿಭಾನ್ವಿತರಾಗಿದ್ದ ಜಾಕ್ಸನ್ ತಮ್ಮ ಹರೆಯದ ವಯಸ್ಸಿಗೇ ಜಗತ್ಪ್ರಸಿದ್ಧರಾದರು. ಥ್ರಿಲರ್, ಡೇಂಜರಸ್, ಹಿಸ್ಟರಿ, ಇನ್ ವಿನ್ಸಿಬಲ್, ಬ್ಲಡ್ ಆನ್ ದ ಡಾನ್ಸ್ ಫ್ಲೋರ್ ಇವರ ಸಂಗೀತ ಸುರುಳಿಗಳಲ್ಲಿ ಪ್ರಮುಖವಾಗಿವೆ. ವಾಂಟ್ ಯು ಬ್ಯಾಕ್ , ಅತಿ ಕಿರಿಯ ವಯಸ್ಸಿನಲ್ಲಿ ಮನ್ನಣೆ ತಂದ ಆಲ್ಬಮ್, ಆಫ ದಿ ವಾಲ್, ಅವರ ಸಂಗೀತಾಭಿಮಾನಿಗಳ ಹೃದಯದಲ್ಲಿ ತರಂಗಗಳನ್ನೆಬ್ಬಿಸಿತು. ಎಮ್. ಜೆ ರವರ ಜನನ ಹಾಗೂ ಬಾಲ್ಯ ವಿಶ್ವದ ಪಾಪ್ ಸಂಗೀತ, ಬ್ರೇಕ್ ಡ್ಯಾನ್ಸ್, ರಸಿಕರ ಜಾದೂಗಾರನೆಂದು ಪ್ರಸಿದ್ಧರಾಗಿರುವ ಜ್ಯಾಕ್ಸನ್ ಅಮೇರಿಕಾದ ಇಂಡಿಯಾನಾ ರಾಜ್ಯದ ಗ್ಯಾರಿ ಪಟ್ಟಣದಲ್ಲಿ ಸಂಗೀತ ಪ್ರಿಯ ಕುಟುಂಬವೊಂದರಲ್ಲಿ ಜನಿಸಿದರು. ಉಕ್ಕಿನ ಕಾರ್ಖಾನೆಯಲ್ಲಿ ಕೆಲಸಮಾಡುವ ಕಾರ್ಮಿಕ ಜೋಯ್ ಜಾಕ್ಸನ್, ಮತ್ತು ಆವರ ಪತ್ನಿ ಕ್ಯಾಥರಿನ್ರ ೯ ಮಂದಿ ಮಕ್ಕಳಲ್ಲಿ ೭ ನೇ ಮಗುವಾಗಿ ಆಗಸ್ಟ್ ೨೯, ೧೯೫೮ ರಲ್ಲಿ ಜನಿಸಿದರು. ಬಾಲ್ಯದಲ್ಲಿ ಜಗತ್ತಿಗೆ ಅವರು ಕೇವಲ ಒಬ್ಬ ಆಫ್ರಿಕನ್ ಅಮೆರಿಕನ್ ಹುಡುಗ ನಂತೆ ಕಂಡರು. ೧೯೮೪ ನಂತರ ಅವರಲ್ಲಾದ ಅದ್ಭುತಬದಲಾವಣೆಯನ್ನು ಗುರುತಿಸಲು, ಅವರ ಹತ್ತಿರದ ಸಂಬಂಧಿಗಳಿಗೂ, ಕುಟುಂಬದ ಸದಸ್ಯರಿಗೂ ತೊಡಕಾಗಿತ್ತು. ಅವರ ಸಂಗೀತಾಭಿಮಾನಿಗಳು ಕರೆದಾಗ ಬಂದು ಅವರಿಗೆ ಬೇಕಾದ ಹಾಡುಗಳನ್ನು ಹಾಡಿಕುಣಿದು ಅವರಮನಸ್ಸನ್ನು ರಂಜಿಸಿ ಮೆರೆದ, ಪಾಪ್ ಸಂಗೀತ ಸಾಮ್ರಾಟನ, ೧೪ ನಿಮಿಷಗಳ ಕಿರುಚಿತ್ರ, ಮೂನ್ ವಾಕ್, ಅಪಾರ ಜನಪ್ರಿಯತೆಯನ್ನು ಪಡೆಯಿತು. ಬ್ರೇಕ್ ಡ್ಯಾನ್ಸ್ ಹಾಗೂ ಮೂನ್ ವಾಕ್ ಗಳಿಗೆ ನಿಜವಾದ ಬೆಲೆಸಿಕ್ಕಿದ್ದು, ಜ್ಯಾಕ್ಸನ್ ರಿಂದಲೇ. ಜಗತ್ತನ್ನೇ ತಲ್ಲಣ ಗೊಳಿದುವ ಅದ್ಭುತ ಪ್ರತಿಭಾವಂತ. ೧೯೭೮ ರಲ್ಲಿ, ಜಾಕ್ಸನ್ ದ ವಿಜ್, ಸಿನಿಮಾ ಅವತರಣಿಕೆಯಲ್ಲಿ ಕಾಣಿಸಿಕೊಂಡರು. ಎಲ್ಲರೂ ಗಮನಿಸಬೇಕಾದ ಪ್ರಮುಖ ಸಂಗತಿ ಎಂದರೆ, ಮೈಕಲ್ ಜ್ಯಾಕ್ಸನ್ ತನ್ನ ಬಾಲ್ಯದಲ್ಲಿ, ಅಡುಗೆಮನೆಯಲ್ಲಿ ತನ್ನ ಅಮ್ಮ ಪಾತ್ರೆಗಳನ್ನು ಜೋಡಿಸುವಾಗ ತಪ್ಪಿ ಪಾತ್ರೆಗಳು ಕೆಳಗೆ ಬಿದ್ದರೆ, ಆ ಶಬ್ದಕ್ಕೆ ಜಾಕ್ಸನ್ ಕುಣಿತವನ್ನು ಹಾಕುತ್ತಿದ್ದರು. ಮೈಕಲ್ ಜ್ಯಾಕ್ಸನ್ (ಎಮ್. ಜೆ) ಮ್ಯೂಸಿಕ್ ತಂಡ ಜಾಕ್ಸನ್, ತಮ್ಮ ಸೋದರರ ಜೊತೆಸೇರಿ ಒಂದು ಜ್ಯಾಕ್ಸನ್ ಬ್ರದರ್ಸ್ ಎಂಬ ತಂಡವನ್ನು ಕಟ್ಟಿಕೊಂಡು ತಮ್ಮ ವೃತ್ತಿಜೀವನವನ್ನು ಶುರುಮಾಡಿದರು. ಮೊದಲು ಪುಟ್ಟದಾಗಿ ಪ್ರಾರಂಭಿಸಿದ ಬ್ರೇಕ್ ಡ್ಯಾನ್ಸ್ ಪಾಪ್ ಸಂಗೀತ ಮತ್ತು ಅವುಗಳಲ್ಲಿ ಹೊಸ ಆವಿಷ್ಕಾರಗಳನ್ನು ತಮ್ಮ ಜೀವನದಲ್ಲಿ ಯಶಸ್ಸಿನ ನಡಿಗೆಯನ್ನು ಆರಂಭಿಸಿದರು. ಅವರ ಥ್ರಿಲ್ಲರ್ ಆಲ್ಬಮ್ , ೧೯೮೨ ರಲ್ಲಿ, ಪೆಪ್ಸಿ ಕಂ. ಗಾಗಿ ಜಾಹಿರಾತಿಗೆ, ನಟಿಸಿದಾಗ, ಕೂದಲಿಗೆ ಬೆಂಕಿ ತಗುಲಿ, ಗಂಭೀರವಾದ ಗಾಯವಾಗಿತ್ತು. ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ ೨೮ ಬಾರಿ ಅಮೆರಿಕನ್ ರೆಕಾರ್ಡಿಂಗ್ ಅಸೋಸಿಯೇಷನ್ ಮೂಲಕ, ೨೮ ಬಾರಿ ಯಶಸ್ಸಿನ ಪ್ರಮಾಣಪತ್ರಗಳನ್ನು ಹಾಸಲುಮಾಡಿದೆ. ಎಲ್ಲಾ ಸಮಯದಲ್ಲೂ ಅತ್ಯಂತ ಹೆಚ್ಚು ಮಾರಾಟವಾದ ಹೆಸರುಮಾಡಿದೆ. ವೃತ್ತಿಯ ಕೆಲವು ಸಮಸ್ಯೆಗಳಿಂದಾಗಿ ಅವರು, ತಮ್ಮ ಸೋದರರಿಂದ ಕೆಲಕಾಲ ದೂರವಿದ್ದರು. ಮತ್ತೆ ತಮ್ಮ ಸೋದರರನ್ನು ಮರುವಿಲೀನಗೊಳಿಸಿದ್ದು, ಅವರ ಥ್ರಿಲ್ಲರ್ ಆಲ್ಬಮ್, ಅದರ ಯಶಸ್ಸಿನಿಂದ ವಿಶ್ವದಾದ್ಯಂತ ಓಡಾಡಿದಾಗ. ೨೦೦೧ ರಲ್ಲಿ ೩೦ ಮಿಲಿಯನ್ ಡಾಲರ್ ಖರ್ಚಿನಿಂದ ತಯಾರುಮಾಡಿದ ಆಲ್ಬಮ್, ಇನ್ವಿನ್ಸಿಬಲ್ ನಿರೀಕ್ಷಿಸಿದಷ್ಟು ಯಶಸ್ಸು ಕಾಣಲಿಲ್ಲ. ಹೀಗೆ ಜ್ಯಾಕ್ಸನ್ ಗಳಿಸಿದ್ದು ಎಷ್ಟೋ, ಕಳೆದುಕೊಂಡಿದ್ದೂ ವಿಪರೀತ. ೧೯೮೮ ರಲ್ಲಿ ಕ್ಯಾಲಿಫೋರ್ನಿಯದ ಲಾಸ್ ಒಲಿವೋಸ್, ನಲ್ಲಿ ೨,೬೦೦ ಎಕರೆ ಜಮೀನನ್ನು ೧೭ ಮಿ ಡಾಲರ್ ಕೊಟ್ಟು ಖರೀದಿಸಿದರು. ಅದಕ್ಕೆ ಮತ್ತೆ, ೩೫ ಮಿಲಿಯನ್ ಡಾಲರ್ ವ್ಯಯಮಾಡಿ, ವಿಶಾಲವಾದ ಪಾರ್ಕ್, ಪ್ರಾಣಿಸಂಗ್ರಹಾಲಯ, ೫೦ ಆಸನಗಳ ಥಿಯೇಟರ್, ನಿರ್ಮಿಸಿದ್ದರು. ಇದು ನಂತರ ನೆವರ್ ಲ್ಯಾಂಡ್ ರ್ಯಾಂಚ್ ಎಂದು ಹೆಸರಾಯಿತು. ತಮ್ಮ ಜೀವನ ಶೈಲಿಗೆ, ಹಾಗೂ ಪ್ರಸಿದ್ಧಿಗೆ, ಅಪಾರ ಹಣ ಖರ್ಚುಮಾಡುತ್ತಿದ್ದರು. ಅದಕ್ಕಾಗಿ ಬೇರೆಬೇರೆ ಮೂಲಗಳಿಂದ ಹಣವನ್ನು ಸಾಲಪಡೆದಿದ್ದರು. ೨ ಬಾರಿ ರಾಕ್ ಅಂಡ್ ರೋಲ್ ಹಾಲ್ ಆಫ್ ಫೇಮ್, ಗೆ ಸೇರ್ಪಡೆಯಾಗಿದ್ದರು. ಪಾಪ್ ಮ್ಯೂಸಿಕ್,ಬ್ರೇಕ್ ಡ್ಯಾನ್ಸ್, ಹಾಗೂ ಹೈಟೆಕ್ ಮ್ಯೂಸಿಕ್ ಕಾರ್ಯಕ್ರಮಗಳು ೧೯೯೬ ರಲ್ಲಿ ಮುಂಬೈಗೆ ಬಂದಿದ್ದರು. ವಿಮಾನನಿಲ್ದಾಣದಿಂದ ಉಪನಗರ ಅಂಧೇರಿಯ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ವರೆಗೆ ಭಾರತೀಯ ಸಂಸ್ಕೃತಿಯಂತೆ ಮಾಡಿದ ಸ್ವಾಗತ ಅವರಿಗೆ ಬಹಳವಾಗಿ ಹಿಡಿಸಿತಂತೆ. ಪ್ರೇಕ್ಷಕರು, ಅವರನ್ನು ಉಪಗ್ರಹ ನೌಕೆಯ ಮೂಲಕ ವೇದಿಕೆಯಮೇಲೆ ಥಟ್ಟನೆ ಕಾಣಿಸಿಕೊಂಡಾಗ ಯವುದೋ ಮಾಯಾಲೋಕದಲ್ಲಿ ವಿಹರಿಸುತ್ತಿರುವಂತೆ ಭಾಸವಾಗಿತ್ತಂತೆ. ಶೋಷಿತ ಮಕ್ಕಳಿಗಾಗಿ ತಾವು ಇಳಿದುಕೊಂಡಿದ್ದ ಒಬೆರಾಯ್ ಹೋಟೆಲ್ ನಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡು, ಮೈಕ್ ಇಲ್ಲದೆ, ಹಾಡಿದ, ಮ್ಯೂಸಿಕ್ ನೀಡದೆ ಮಕ್ಕಳೊಡನೆ ಕುಣಿದು ಕುಪ್ಪಳಿಸಿ, ಮಕ್ಕಳಿಗೆ ಉಡುಗೊರೆಗಳನ್ನು ನೀಡಿದ ಸಹಜ ಅಭಿನಯ ಇತಿಹಾಸ ಸೃಷ್ಟಿಸಿದರು. ವಾರ್ಷಿಕ ಆದಾಯ, ೭೫೦ ಮಿ. ಡಾ. ಪಾಪ್ ಸಂಗೀತದಿಂದಲೇ ೫೦ ಮಿ. ಡಾ. ಆದರೆ ಮರಣಕ್ಕೆ ಮೊದಲು ಸುಮಾರು ೫೦೦ ಮಿ.ಡಾ. ಸಾಲವನ್ನು ಬಿಟ್ಟುಹೋಗಿರುವುದು ಎಲ್ಲರ ಹುಬ್ಬು ಏರಿಸಿದೆ. ತನ್ನ ಪ್ರಚಾರಕ್ಕಾಗಿ ಮಾಡುತ್ತಿದ್ದ ಹಣ ಅತಿಯಾಗಿತ್ತು. ೧೯೮೦ ರಿಂದ ಅಂದಾಜು ೪೦೦ಕ್ಕು ಹೆಚ್ಚು ಮಿಲಿಯನ್ ಪೌಂಡ್ ಗಳ ಆದಾಯ ಹೊಂದಿದ್ದರು. ಕಾನೂನು ಸಂಘರ್ಷಗಳಿಗಾಗಿ ವ್ಯಯ. ಮ್ಯೂಸಿಕ್ ವಲಯದಲ್ಲಿ ಮಾಡಿಕೊಂಡ ಒಪ್ಪಂದಗಳು ಹಾಗೂ ಹಣಗಳಿಕೆ ಬ್ರೇಕ್ ಡ್ಯಾನ್ಸ್ ಮತ್ತು ಪಾಪ್ ಡ್ಯಾನ್ಸ್ ಕಾರ್ಯಕ್ರಮಗಳನ್ನು ತಮ್ಮ ಜೀವನದ ವೆಂದು ೪೦ ವರ್ಷಗಳ ಸಾರ್ವಜನಿಕರ ಪ್ರೀತ್ಯಾದರಗಳಿಗೆ, ಯಶಸ್ಸಿನ ಪ್ರತೀಕ. ೧೯೮೫ ರಲ್ಲಿ ಬೀಟ್ ಲೆಸ್ ಸಾಂಗ್, ಗಳ ಪ್ರಕಾರ ಹಕ್ಕನ್ನು ೪೭.೫ ಪೌಂಡ್ ಗಳಿಗೆ ಖರೀದಿಸಿದ್ದರು. ಸೋನಿ ಮ್ಯೂಸಿಕ್ ಸಂಸ್ಥೆಯ ಜೊತೆಗೆ ಮಾಡಿಕೊಂಡ ಒಪ್ಪಂದ ಪಾಲುಗಾರಿಕೆ ವ್ಯವಹಾರ, ಮ್ಯೂಸಿಕ್ ಕ್ಷೇತ್ರದಲ್ಲಿ ಅತ್ಯಂತ ದೊಡ್ಡದಾಗಿತ್ತು. ಅವರ ಯೆಸ್ಟರ್ ಡೇ ಮತ್ತು ಲೆಟ್ ಇಟ್ ಬಿ ಸಾಂಗ್ಸ್ ಅತಿ ಬೇಡಿಕೆಯ ಹಾಡುಗಳು. ಅವರಿಂದಾಗಿ ಪಾಪ್ ಸಂಗೀತ, ಆಧುನಿಕ ಸಂಗೀತದ ಒಂದು ವಿಶೇಶಭಾಗವೆಂಬ ಭಾವನೆಯನ್ನು ಅವರ ಕೇಳುಗರಲ್ಲಿ ಮೂಡಿಸಿ ಹೈಟೆಕ್ ಸಂಗೀತ, ವನ್ನಾಗಿ ಪರಿವರ್ತಿಸಿದ ಶ್ರೇಯಸ್ಸು ಅವರದು. ಅತಿ ಚಿಕ್ಕ ವಯಸ್ಸಿನಲ್ಲಿ ಅವರಿಗೆ ಕೀರ್ತಿತಂದ ಆಲ್ಬಮ್ ಗಳು, ವಾಂಟ್ ಯು ಬ್ಯಾಕ್ ಮತ್ತು ಆಫ ದ ವಾಲ್ ಮೊಟ್ಟಮೊದಲನೆಯವು. ೮ ತಿಂಗಳಕಾಲ ಜನರೆಲ್ಲರ ಬಾಯಿನಲ್ಲಿ ಆಡುತ್ತಿತ್ತು. ನಂಬರ್ ೧ ಎಂದು ಹೆಸರುಮಾಡಿದವು. ತಮ್ಮ ೧೯೭೦ ರಲ್ಲಿ ೧೩ ನೇ ವಯಸ್ಸಿನಲ್ಲೇ ವೃತ್ತಿಜೀವನ ಆರಂಭ. ಏಳಿಗೆಯಲ್ಲಿ ಸೋದರರ ಪರಿಶ್ರಮವೂ ಇತ್ತು. ಐಷಾರಾಮಿ ಬದುಕನ್ನು ಸಾಗಿಸಲು ಇಚ್ಛಿಸಿದ ವ್ಯಕ್ತಿ. ಅದಕ್ಕಾಗಿ ಮಿಲಿಯಗಟ್ಟಲೆ ವ್ಯವಹಾರ ನಡೆಸಿ, ಅದರಲ್ಲಿ ಸಿದ್ಧಿಸಿಗಲಿಲ್ಲ. ನೆವೆರ್ ಲನ್ದ್ ಎಸ್ಟೇಟ್ ಗೆ ಅಪಾರ ಹಣ ಖರ್ಚುಮಾಡಿದ್ದರು. ಅವರ ಸಾಧನೆಗೆ ವಿಶ್ವದಾದ್ಯಂತ ಸಿಕ್ಕ ಮನ್ನಣೆ, ಗೌರವಗಳು ಅಪಾರ. ಆರೋಗ್ಯವನ್ನು ನಿರ್ಲಕ್ಷಿಸಿ, ಡ್ರಗ್ಸ್ವ್ಯಸನಕ್ಕೆ ಬಲಿಯಾದರು ಜೀವಮಾನ ಸಾಧನೆಯ ಅತ್ಯಂತ ಮಹತ್ವದ ಮ್ಯೂಸಿಕ್ ಆಲ್ಬಂಗಳು ಬಿಲ್ಲೀ ಜಾನ್ , ರಾಕ್ ಮ್ಯೂಸಿಕ್ ಕ್ಷೇತ್ರದಲ್ಲಿ ಎಮ್ ಜೆ ಅವರಿಗೆ ದಕ್ಕಿದ ಪ್ರಶಸ್ತಿಗಳು ಎಮ್. ಜೆ ಯವರಿಗೆ ಪ್ರತಿಷ್ಠಿತ, ೧೩ ಗ್ರಾಮೀ ಅವಾರ್ಡ್ ಗಳು ಬಂದಿವೆ. ೧೯೯೩ ರ ಫೆಬ್ರವರಿ, ೨೪ ರಂದು, ಪಾಪ್ ಸಂಗೀತದ ಸಾಧನೆಗಾಗಿ, ಲಾಸ್ ಎಂಜಲೀಸ್ ನಗರದಲ್ಲಿ ನಡೆದ, ೩೫ ನೇ ಗ್ರಾಮ್ಮೀ ಪ್ರಶಸ್ತಿ ವಿತರಣಾ ಸಮಾರಂಭ, ದಲ್ಲಿ ಅತ್ಯುತ್ತಮ ಗೌರವಾದಿಗಳನ್ನು ನೀಡಿ ಸತ್ಕರಿಸಿದ್ದರು. ವೃತ್ತಿಜೀವನದ ಅಗತ್ಯತೆಗಳು ಮೈಕಲ್ ಜಾನ್ಸನ್ ಕಂಡಂತೆ ಅವರದೇ ಆದ ಕೆಲವು ಶೈಲಿಯ ಜೀವನಕ್ರಮವನ್ನು ಅವರು ಆರಿಸಿಕೊಂಡು ಅದನ್ನು ಪೋಶಿಸುತ್ತಿದ್ದರು. ತಮ್ಮ ವಾಸ್ತವ್ಯದ ಕೊಠಡಿಯ ತಾಪಮಾನ ಗರಿಷ್ಟತಾಪಮಾನದ ಮಿತಿಯಲ್ಲಿರಬೇಕು. ತಮಗೆ ಸರಿಕಂಡ ಕೇಶವಿನ್ಯಾಸವನ್ನು ಅವರು ಬಳಸುತ್ತಿದ್ದರು. ೧೯೭೯ ರಲ್ಲಿ ನಡೆಸಿದ ಸಂಗೀತ ಕಾರ್ಯಕ್ರಮದಲ್ಲಿ ಮೂಗಿಗೆ ಪೆಟ್ಟುಬಿದ್ದು, ಶಸ್ತ್ರಚಿಕಿತ್ಸೆ ಮಾಡಿ ಸರಿಪಡಿಸಬೇಕಾಯಿತು. ಆದರೆ ಉಸಿರಾಟದ ತೊಂದರೆ ಆಗಾಗ ಕಾಣಿಸಿಕೊಳ್ಳುತ್ತಿತ್ತು. ಅತಾರಾಷ್ಟ್ರೀಯಮಟ್ಟದ ಸಂಗೀತಗಾರನಾದರೂ ದೈಹಿಕವಾಗಿ ಅವರು ಬೆಳೆಯಲು ಸಾಧ್ಯವಾಗದೆ ಹೋಯಿತು. ಅದಕ್ಕೆ ಕಾರಣಗಳು ಹಲವಾರು. ಪ್ರತಿ ಹೋಟೆಲ್ ಗೆ ಹೋದಾಗಲೂ, ಒಂದು ಕನ್ನಡಿಯನ್ನು ಅಳವಡಿಸಲು ಸಿಬ್ಬಂದಿವರ್ಗಕ್ಕೆ ತಿಳಿಸುತ್ತಿದ್ದರು. ನಿರ್ಗಮಿಸುವ ಮೊದಲು, ತಲೆದಿಂಬು ಮತ್ತು ಕನ್ನಡಿಯಮೇಲೆ ಹಸ್ತಾಕ್ಶರವನ್ನು ಬಿಟ್ಟುಹೋಗುತ್ತಿದ್ದರು. ಆ ಪದಾರ್ಥಗಳನ್ನು ಹರಾಜುಮಾಡಿ ಅದರಿಂದ ಬಂದ ಹಣವನ್ನು ಚ್ಯಾರಿಟಿಗಾಗಿ ವಿನಿಯೋಗಿಸುತ್ತಿದ್ದರು. ಜಾ ರ ಮೆಚ್ಚಿನ ತಿಂಡಿ, ಮಸಾಲದೋಸೆ, ಮತ್ತು ಮಾಂಸಾಷಾರದಲ್ಲಿ ಚಿಕನ್ ಟಿಕ್ಕ. ಪ್ಲಾಸ್ಟಿಕ್ ಸರ್ಜರಿ ಮತ್ತು ವಿಭಿನ್ನ ರೀತಿಯ ತಲೆಕೂದಲಿನ ವಿನ್ಯಾಸಕ್ಕಾಗಿ ಗೆಳೆಯರ ಟೀಕೆಗಳಿಗೆ ಗುರಿಯಾಗಿದ್ದರು. ವಿವಾದಗಳು, ಅಪಪ್ರಚಾರ ಅವರಿಗೆ ಚೆನ್ನಾಗಿ ಅಭ್ಯಾಸವಾಗಿತ್ತು. ತಲೆಗೆ ಹಚ್ಚಿಕೊಳ್ಳುತ್ತಿರಲಿಲ್ಲ. ಕೆಲವೊಮ್ಮೆ ತಮ್ಮ ಉಪಹಾರಕ್ಕಾಗಿ ಅವರೇ ಸ್ವತಃ ದೋಸೆ ತಯಾರಿಸುತ್ತಿದ್ದರಂತೆ. ಲೈಂಗಿಕ ದೌರ್ಜನ್ಯದ ಅಪಾದನೆ, ಮತ್ತು ಹಲವಾರು ಅಪವಾದಗಳು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕ, ಆರೋಪಮಾಡಿದ. ಮದ್ಯಕುಡಿಸಿ, ಆತನಮೇಲೆ ಅನೇಕಬಾರಿ ದೌರ್ಜನ್ಯಮಾಡಿದನೆಂದು ದೂರುಕೊಟ್ಟ. ಆತನ ಸೋದರನೂ ಅದನ್ನು ಅನುಮೋದಿಸಿ ಕೋರ್ಟಿನಲ್ಲಿ ಸಾಕ್ಷ್ಯನುಡಿದಿದ್ದ. ವಿವಾದ ಹೊಸ ತಿರುವನ್ನು ಪಡೆದುಕೊಂಡು, ಸುಮಾರು ೧೫ ವಾರಗಳ ವಿಚಾರಣೆಯ ನಂತರ, ಸಾಂದರ್ಭಿಕ ಸಾಕ್ಷ್ಯದ ಕೊರೆತೆಯಿಂದಾಗಿ, ಜ್ಯಾಕ್ಸನ್ ರನ್ನು ದೋಷಮುಕ್ತಮಾಡಿತ್ತು. ಅನೇಕಬಾರಿ ಜನಪ್ರಿಯತೆ ಕುಸಿದುಹೋಗಿ ಅವರು ಮುಕ್ತರಾಗಿ ಮತ್ತೆ ಹೊರಗೆ ಬರುವತನಕ, ಅಮೆರಿಕ ಬಿಟ್ಟು ಬೆಹ್ರೆನ್ ಗೆ ಹೋಗಿದ್ದರು. ಅಲ್ಲಿನ ದೊರೆಯ ಮಗ, ಶೇಖ್ ಅಬ್ದುಲ್ಲಾರವರ ಪ್ರೋತ್ಸಾಹ, ಸಹಾಯದಿಂದ ತಮ್ಮ ಮೊದಲಿನ ಸ್ಥಿತಿಯನ್ನು ಪಡೆದರು. ವಿವಾದದ ಸಂಕಷ್ಟದ ಸಮಯದಲ್ಲೂ ಅವರ ಸಂಗೀತಾರಾಗಿದ್ದರು ಅಭಿಮಾನಿಗಳು ಸಮರ್ಥಿಸಿದ್ದರಿಂದ ತಮ್ಮ ಖ್ಯಾತಿಯನ್ನು ಜ್ಯಾಕ್ಸನ್ ಕೊನೆಯಗಳಿಗೆಯ ವರೆಗೂ ಕಾಪಾಡಿಕೊಳ್ಳಲು ಅವಕಾಶವಾಯಿತು. ಮೈಕೆಲ್ ಜಾಕ್ಸನ್ ರವರ ವೈವಾಹಿಕ ಜೀವನ ಪ್ರವೇಶಿಸಿದ್ದು, ೧೯೯೪ ರಲ್ಲಿ. ಗುಪ್ತಸಂಬಂಧವೆಂದು ಮೀಡಿಯಾಗಳು ವರದಿಮಾಡಿವೆ. ಅಮೆರಿಕದ ದಿವಂಗತ, ಖ್ಯಾತ ಪಾಪ್ ಸಿಂಗರ್, ಎಲ್ವಿಸ್ ಪ್ರಿಸ್ಲೆಯವರ ಪುತ್ರಿ, ಲಿಸಾಮೇರಿ ಪ್ರಿಸ್ಲೆ ಯವರನ್ನು ಮದುವೆಯಾಗಿ ೩ ವರ್ಷಗಳ ಬಳಿಕ ವಿವಾಹ ವಿಚ್ಛೇದಮಾಡಿಕೊಂಡಿದ್ದರು. ೧೯೯೬ ರಲ್ಲಿ, ನವೆಂಬರ್ ೧೩ ನೇ ತಾರೀಖು, ಡೆಬ್ಬಿ ರೋವೆ, ಎಂಬಾಕೆಯೊಡನೆ ವಿವಾಹ. ೧೯೯೯ ರಲ್ಲಿ ವಿಚ್ಛೇದನ. ಆಕೆಯ ಇಬ್ಬರು ಮಕ್ಕಳಾದ ಪ್ರಿನ್ಸ್ ಮತ್ತು ಪ್ಯಾರಿಸ್ ಕ್ಯಾಥರಿನ್, ಜಾನ್ಸನ್ ರವರ ಸುಪರ್ದಿಗೆ ಒಪ್ಪಿಸಿದ್ದಳು. ಜ್ಯಾಕ್ಸನ್ ರ ತಾಯಿಯವರು ಆ ಮಕ್ಕಳನ್ನು ಪಾಲಿಸುವ ಜವಾಬ್ದಾರಿಯನ್ನು ಹೊತ್ತುಕೊಂಡರು. ಅತಿ ಶೀಘ್ರ ಮರಣ ಅವರು ಲಾಸ್ ಎಂಜಲೀಸ್ ನಗರದ ಆಸ್ಪತ್ರೆಯೊಂದರಲ್ಲಿ ಹೃದಯಾಘಾತದಿಂದ ಜೂನ್ ೨೫,೨೦೦೯ ರಂದು ಮರಣಹೊಂದಿದರು. ಕೇವಲ ೫೦ ವರ್ಷದ ಪ್ರಾಯದಲ್ಲಿ ವಿಶ್ವದ ಯುವಜನರನ್ನು ಕುಣಿಸಿ ಸಂಭ್ರಮಿಸಿದ ಪಾಪ್ ಹಾಡುಗಾರ ಎಮ್. ಜೆ, ವಿಶ್ವದಿಂದ ಕಣ್ಮರೆಯಾದರು. ಸಂಗೀತಗಾರರು ಪಾಶ್ಚಾತ್ಯ ಸಂಗೀತಗಾರರು ಪಾಪ್ ಶೈಲಿಯ ಸಂಗೀತಗಾರರು ವಿಕಿ ಇಲರ್ನಿಂಗ್ನಲ್ಲಿ ವಿಸ್ತರಿಸಿದ ಲೇಖನ
ಜಾರ್ಜ್ ಹ್ಯಾರಿಸನ್ (ಫೆ ೨೪, ೧೯೪೩ ನ ೨೯ ೨೦೦೧) ಬ್ರಿಟನ್ನಿನ ಬೀಟಲ್ಸ್ ಸಂಗೀತ ಮಂಡಳಿಯ ಪ್ರಮುಖ ಸಂಗೀತಗಾರರು, ಅಲ್ಲದೆ ಒಬ್ಬ ಶ್ರೇಷ್ಠ ಗಿಟಾರಿಸ್ಟ್, ಗೀತ ರಚನಕಾರ, ಮತ್ತು ಚಿತ್ರ ನಿರ್ಮಾಪಕರು. ಬೀಟಲ್ಸ್ ನ ಖ್ಯಾತಿಯ ಉತ್ತುಂಗದಲ್ಲಿ ಇವರು ಹಿಂದೂ ಧರ್ಮ ಮತ್ತು ಭಾರತೀಯ ಸಂಗೀತ ದೆಡೆಗೆ ಆಕರ್ಷಿತರಾದರು. ಅವರು ಭಾರತ ಸಂಗೀತಗಾರ ರವಿ ಶಂಕರ್ರವರ ಸಹಾಯದಿಂದ, ಲೈವ್ ಏಡ್ ನಂತರ ಬಾಂಗ್ಲಾದೇಶನಲ್ಲಿ ೧೯೭೧ ಸಂಗೀತ ಕಾರ್ಯಕ್ರಮ ಆಯೋಜಿಸಲಾಯಿತು. ಸಂಗೀತ ಮತ್ತು ಚಲನಚಿತ್ರ ನಿರ್ಮಾಪಕನಾಗಿ, ಹ್ಯಾರಿಸನ್ ೧೯೭೪ ರಲ್ಲಿ ಡಾರ್ಕ್ ಹಾರ್ಸ್ ರೆಕಾರ್ಡ್ಸ್ ಸಂಸ್ಥಾಪಿಸಿದರು ಮತ್ತು ೧೯೭೮ ರಲ್ಲಿ ಹ್ಯಾಂಡ್ಮೇಡ್ ಫಿಲ್ಮ್ಸ್ ಸಹ ಸಂಸ್ಥಾಪಿಸಿದರು. ಇದರ ಮೊದಲು ಬೀಟಲ್ಸ್ ಆಪಲ್ ಧ್ವನಿಮುದ್ರಣಕ್ಕೆ ನಿರ್ಮಾಣ ಮಾಡಿಸಿದ್ದರು. ಸಂಗೀತಗಾರರು ಪಾಶ್ಚಾತ್ಯ ಸಂಗೀತಗಾರರು ರಾಕ್ ಶೈಲಿಯ ಸಂಗೀತಗಾರರು ಪಾಪ್ ಶೈಲಿಯ ಸಂಗೀತಗಾರರು ವಾದ್ಯ ಸಂಗೀತಗಾರರು ಗಿಟಾರ್ ವಾದಕರು
ಎ.ಎ. ಕೃಷ್ಣಸ್ವಾಮಿ ಅಯ್ಯಂಗಾರ್ (೧೮೯೨೧೯೫೩) ಭಾರತದ ಒಬ್ಬ ಗಣಿತಜ್ಞ. ಕೇರಳದಲ್ಲಿಜನಿಸಿದ ಇವರು ಅಲ್ಲಿಯೇ ವಿದ್ಯಾಭ್ಯಾಸ ಪಡೆದು ಅಧ್ಯಾಪಕರಾಗಿದ್ದರು. ೧೯೧೮ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಗಣಿತ ಶಾಸ್ತ್ರದ ಪ್ರಾದ್ಯಾಪಕರಾಗಿ ಸೇರಿ ೧೯೪೭ರಲ್ಲಿ ನಿವೃತ್ತರಾದರು. ಇವರು ಗಣಿತ ಶಾಸ್ತ್ರದ ಮೇಲೆ ಹಲವಾರು ಲೇಖನಗಳನ್ನು ರಚಿಸಿದ್ದಾರೆ.ಹೆಸರಾಂತ ಕನ್ನಡ ಸಾಹಿತಿ ಎ.ಕೆ.ರಾಮಾನುಜನ್ ರವರು ಇವರ ಸುಪುತ್ರರಾಗಿದ್ದಾರೆ. ಬಾಹ್ಯ ಸಂಪರ್ಕಗಳು ಗಣಿತ ಭಾರತದ ಗಣಿತಜ್ಞರು
ಶ್ರೀರಾಮ ಶಂಕರ ಅಭಯಂಕರ (ಜನನ ೧೯೩೦) ಸಿಂಗ್ಯುಲಾರಿಟಿ ಥಿಯರಿ ಯ ಮೇಲಿನ ಅಪಾರ ಕೊಡುಗೆಗಳಿಂದ ಪ್ರಖ್ಯಾತರಾಗಿದ್ದಾರೆ. ಅಮೇರಿಕಾದ ಪುರ್ಡ್ಯು ವಿಶ್ವವಿದ್ಯಾನಿಲಯದಲ್ಲಿ ಪ್ರಶಸ್ತಿ ವಿಜೇತ ಅಧ್ಹ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಮೇರಿಕದ ಖ್ಯಾತ ಹಾರ್ವರ್ಡ್ ವಿದ್ಯಾನಿಲಯ ದಲ್ಲಿ ತಮ್ಮ ಸಂಶೋಧನೆಯನ್ನು ಪೂರ್ಣಗೊಳಿಸಿ ಡಾಕ್ಟ್ರರೇಟ್ ಪದವಿಯನ್ನು ಗಳಿಸಿದ್ದಾರೆ. ಗಣಿತ ಭಾರತದ ಗಣಿತಜ್ಞರು
ಗುಬ್ಬಿ ವೀರಣ್ಣ ಕನ್ನಡ ನಾಡು ಕಂಡ ಅತಿ ಶ್ರೇಷ್ಠ ರಂಗಕರ್ಮಿಗಳೊಲೊಬ್ಬರು. ನಟ, ನಿರ್ಮಾಪಕ, ನಿರ್ದೇಶಕ ಮತ್ತು ನಾಟಕ ಮಂಡಳಿಯ ವ್ಯವಸ್ಥಾಪಕರಾಗಿದ್ದ ವೀರಣ್ಣನವರು ಅನೇಕ ಕಲಾವಿದರಿಗೆ ಉದ್ಯೋಗವಕಾಶ ಕಲ್ಪಿಸಿ, ಹಲವಾರು ಹೊಸ ರಂಗ ಪ್ರಯೋಗಳನ್ನು ಮಾಡಿ ಹಾಗು ಹಲವಾರು ರಂಗಮಂದಿರಗಳನ್ನು ಕಟ್ಟಿಸಿ, ಕನ್ನಡ ಹಾಗು ಕನ್ನಡ ರಂಗಭೂಮಿಯನ್ನು ಸಲುಹಿದ ಕರ್ಮಜೀವಿ. ಒಂದು ಕಾಲದಲ್ಲಿ ಮೆನೆಮಾತಾಗಿದ್ದ ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ವ್ಯವಸ್ಥಾಪಕರಾಗಿದ್ದ ವೀರಣ್ಣನವರು, ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ರಂಗಭೂಮಿಯ ಎಳಿಗೆಗಾಗಿ ನಿರಂತರವಾಗಿ ದುಡಿದವರು. ಜೀವನ ೧೮೯೦ರಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ಗ್ರಾಮದಲ್ಲಿ(ಈಗ ತಾಲೂಕು ಕೇಂದ್ರ) ವೀರಣ್ಣನವರು ರುದ್ರಾಂಬೆ ಹಾಗು ಹಂಪಣ್ಣ ದಂಪತಿಗಳ ಮೂರನೆ ಮಗುವಾಗಿ ಜನಿಸಿದರು. ತಮ್ಮ ೬ನೆ ವಯಸ್ಸಿನಲ್ಲಿಯೆ(೧೮೯೬) ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಮಂಡಳಿಯ ಮೂಲಕ ಬಾಲ ಕಲಾವಿದನಾಗಿ ರಂಗಭೂಮಿಗೆ ಪಾದಾರ್ಪಣೆ ಮಾಡಿದ ವೀರಣ್ಣ, ಕೆಲ ವರ್ಷಗಳ ನಂತರ ಸ್ತ್ರೀ ಪಾತ್ರಕ್ಕೆ ಬಡ್ತಿ ಪಡೆದರು. ಯೌವ್ವನಾವಸ್ಠೆ ತಲುಪುತಿದ್ದಂತೆ ಧ್ವನಿ ಬದಲಾದ ಕಾರಣ ವೀರಣ್ಣನವರು ಸ್ತ್ರೀ ಪಾತ್ರಗಳನ್ನು ತ್ಯಜಿಸಿ ಕೆವಲ ಗಂಡು ಪಾತ್ರಗಳನ್ನು ಮಾತ್ರ ಹಾಕತೊಡಗಿದರು. ಅಂದಿನ ರಂಗಭೂಮಿಯ ನಟರಿಗೆ ಅಗತ್ಯ ಕಲೆಗಳಾದ ಹಾಡುಗಾರಿಕೆ, ತಬಲಾ, ಪಿಟೀಲು, ಇತ್ಯಾದಿಗಳನ್ನು ಕೂಡ ವೀರಣ್ಣ ಕಲಿತರು. ಹಾಸ್ಯ ಪಾತ್ರಗಳಲ್ಲಿ ಮಿಂಚುತಿದ್ದ ವೀರಣ್ಣನವರನ್ನು ೧೯೧೨ರಲ್ಲಿ ಮೈಸೂರಿನ ಜನತೆ ಚಿನ್ನದ ಪದಕವನ್ನಿತ್ತು ಗೌರವಿಸಿತು. ದಕ್ಷಿಣ ಭಾರತದ ಹಲವಾರು ನಗರಗಳ ಪ್ರವಾಸ ಮಾಡಿ ಯಶಸ್ವಿ ಪ್ರದರ್ಶನಗಳನು ನೀಡುತ್ತ ಪ್ರಸಿದ್ದಿಗೆ ಬಂದರು ವೀರಣ್ಣ. ೧೯೨೧ರಲ್ಲಿ ಬೆಂಗಳೂರಿನಲ್ಲಿ ಕನ್ನಡ ನಾಟಕಗಳ ಪಿತಾಮಹ ಎಂದು ನಾಮಾಂಕಿತರಾಗಿದ್ದ ಟಿ.ಪಿ.ಕೈಲಾಸಂ ವೀರಣ್ಣನವರ ಪ್ರದರ್ಶನ ಮೆಚ್ಚಿ ಕೈಗಡಿಯಾರವನ್ನು ನೀಡಿ ಸನ್ಮಾನಿಸಿದರು. ೧೯೨೩ರಲ್ಲಿ ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರು ವೀರಣ್ಣನವರ ನಾಟಕಗಳನ್ನು ನೋಡಿ ಹಾಗು ಅವರ ಆಭಿನಯ ಮೆಚ್ಚಿ ವರ್ಸಟೈಲ್ ಕಮೇಡಿಯನ್ ಎಂಬ ಬಿರುದು ನೀಡಿ ಸನ್ಮಾನಿಸಿದರು. ಮುಂದಿನ ಪೀಳಿಗೆ ರಂಗಕಲೆಯನ್ನು ಇನ್ನು ಎತ್ತರಕ್ಕೆ ಕೊಂಡೋಯ್ಯಲಿ ಎಂಬ ಆಸೆ ಹೊತ್ತ ವೀರಣ್ಣನವರು ೧೯೨೫ರಲ್ಲಿ ೧೪ ವರ್ಷದೊಳಗಿನ ಹುಡುಗರಿಗೆ ನಾಟಕ ತರಬೇತಿ ನೀಡಿ ಬಾಲಕ ವಿವರ್ಧಿನಿ ಎಂಬ ಸಂಘ ಸ್ಥಾಪಿಸಿದರು. ೧೯೨೬ರಲ್ಲಿ, ಕನ್ನಡ ರಂಗಭೂಮಿಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಾಟಕದಲ್ಲಿ ವಿದ್ಯುತ್ ದೀಪ ಬಳಸಿದ ಕೀರ್ತಿ ವೀರಣ್ಣನವರಿಗೆ ಸಂದಾಯವಾಗುತ್ತದೆ. ೧೯೨೬ರಲ್ಲಿ ಖ್ಯಾತ ಲೇಖಕ ದೇವುಡು ನರಸಿಂಹ ಶಾಸ್ತ್ರಿಯವರ ಸಹಕಾರದೊಂದಿಗೆ ಹರಿಮಯ, ಹಿಸ್ ಲವ್ ಅಫೈರ್ ಮತ್ತು ಕಳ್ಳರ ಕೂಟ ಎಂಬ ಮೂರು ಚಲನ ಚಿತ್ರಗಳನ್ನು ವೀರಣ್ಣ ನಿರ್ಮಿಸಿದರು. ವೀರಣ್ಣ ೧೯೩೪ರ ಡಿಸೆಂಬರ್ ೩೧ರೊಂದು ಬೆಂಗಳೂರಿನಲ್ಲಿ ಕುರುಕ್ಷೇತ್ರ ಎಂಬ ಅಭೂತಪೂರ್ವ ನಾಟಕ ಪ್ರದರ್ಶಿಸಿದರು. ವೈಭವಪೇರಿತ ಈ ನಾಟಕದಲ್ಲಿ ಜೀವಂತ ಆನೆ ಕುದುರೆಗಳನ್ನು ಬಳಸಲಾಗಿತ್ತು. ಆಗಿನಕಾಲದಲ್ಲಿ ಈ ನಾಟಕ ಬಹಳ ಜನಪ್ರಿಯವಾಗಿತ್ತು. ೧೯೩೫ರಲ್ಲಿ ವೀರಣ್ಣನವರು ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಸಾಗರ್ ಟಾಕೀಸ್ ಎಂಬ ಚಿತ್ರಮಂದಿರ ಸ್ಥಾಪಿಸಿದರು. ಹೀಗೆ ರಂಗಭೂಮಿ ಹಾಗು ಚಿತ್ರರಂಗಕ್ಕೆ ಕಾಣಿಕೆ ನೀಡುತ್ತಾ ಬಂದಿದ್ದ ವೀರಣ್ಣನವರಿಗೆ ೧೯೪೨ರ ಮೈಸೂರು ದಸರಾ ಉತ್ಸವದಲ್ಲಿ ಮಹಾರಾಜರಾದ ಜಯಚಾಮರಾಜ ಒಡೆಯರ್ ನಾಟಕ ರತ್ನ ಎಂಬ ಬಿರುದು ನೀಡಿ ಸನ್ಮಾನಿಸಿದರು. ೧೯೪೩ರಲ್ಲಿ ಬೆಂಗಳೂರಿನ ಗಾಂಧಿನಗರದಲ್ಲಿ ವೀರಣ್ಣನವರು ಗುಬ್ಬಿ ಥಿಯೆಟರ್ ಎಂಬ ರಂಗಮಂದಿರ ಪ್ರಾರಂಭಿಸಿದರು. ತಮ್ಮ ಸುಕೃತ್ಯಗಳಿಂದಾಗಿ ವೀರಣ್ಣನವರು ಕೇಂದ್ರ ಸರ್ಕಾರದ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿಯನ್ನು(೧೯೫೫) ಹಾಗೂ ಪದ್ಮಶ್ರೀ ಪ್ರಶಸ್ತಿಯನ್ನು(೧೯೭೨) ಕೂಡಾ ಪಡೆದರು. ಕನ್ನಡ ರಂಗಭೂಮಿಗೆ ಅಪೂರ್ವ ಕಾಣಿಕೆಯಿತ್ತ ಗುಬ್ಬಿ ವೀರಣ್ಣನವರು ಅಕ್ಟೊಬರ್ ೧೮ ೧೯೭೨ರೊಂದು ತಮ್ಮ ಕೊನೆಯುಸಿರೆಳೆದರು.ಪ್ರಸಿದ್ದ ನಟಿ ಬಿ.ಜಯಮ್ಮನವರು ಗುಬ್ಬಿ ವೀರಣ್ಣನವರ ಪತ್ನಿಯಾಗಿದ್ದರು.ನಮನ ವೀರಣ್ಣನವರು ನಿರ್ಮಿಸಿದಅಭಿನಯಿಸಿದ ಕೆಲವು ನಾಟಕಗಳು ಹಾಗು ಚಿತ್ರಗಳು ನಾಟಕಗಳು ಸದಾರಮೆ ಕುರುಕ್ಷೇತ್ರ ಜೀವನ ನಾಟಕ ದಶಾವತಾರ ಪ್ರಭಾಮಣಿ ವಿಜಯ ಕಬೀರ್ ಗುಲೇಬಕಾವಲಿ ಅಣ್ಣ ತಮ್ಮ ಲವ ಕುಶ ಚಿತ್ರಗಳು ಹರಿಮಯ ಹಿಸ್ ಲವ್ ಅಫೈರ್ ಕಳ್ಳರ ಕೂಟ ಜೀವನ ನಾಟಕ ಹೇಮರೆಡ್ಡಿ ಮಲ್ಲಮ್ಮ ಗುಣಸಾಗರಿ ಪ್ರಶಸ್ತಿಗಳು ನಾಟಕ ರತ್ನ ವರ್ಸಟೈಲ್ ಕಮೇಡಿಯನ್ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಪದ್ಮಶ್ರೀ ಮೈಸೂರು ವಿಶ್ವವಿದ್ಯಾಲಯದ ಡಿ. ಲಿಟ್ ಕರ್ಣಾಟಕಾಂಧ್ರ ನಾಟಕ ಸಾರ್ವಭೌಮ ರಂಗಭೂಮಿ ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಕನ್ನಡ ಚಲನಚಿತ್ರ ನಿರ್ಮಾಪಕರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು
ಪಂಚತಂತ್ರ ಕಥೆಗಳ ಮೂಲ ಭಾರತ.ಕವಿತೆ ಹಾಗೂ ಗದ್ಯದಲ್ಲಿ ಮೂಲತಃ ಭಾರತೀಯ ಪ್ರಾಣಿಗಳ ಕಥೆಗಳ ಮೇಲೆ ಆಧಾರಿತ ಒಂದು ಸಂಗ್ರಹವೇ, ಪಂಚತಂತ್ರ( )ಐದು ಮೂಲತತ್ವಗಳುಕ್ರಿಸ್ತ ಪೂರ್ವ 3ನೇ ಶತಮಾನದಲ್ಲಿ ರಚಿಸಲ್ಪಟ್ಟಿದೆಯೆಂದು ಕೆಲವು ವಿದ್ವಾಂಸರು ನಂಬುವ, ಮೂಲ ಸಂಸ್ಕೃತ ಗ್ರಂಥ, ವಿಷ್ಣು ಶರ್ಮರಿಗೆ ಆ ಕೀರ್ತಿಯು ಸಲ್ಲುತ್ತದೆ. ಆದಾಗ್ಯೂ, ನಾವು ಊಹಿಸಲೂ ಸಾಧ್ಯವಾದಷ್ಟು ಹಳೆಯದಾದ ಪ್ರಾಣಿಗಳ ಸಣ್ಣ ನೀತಿಯ ಕಥೆಗಳನ್ನು ಒಳಗೊಂಡಿರುವ, ಪುರಾತನ ಮೌಖಿಕ ಪರಂಪರೆಗಳ ಮೇಲೆ ಅದು ಆಧರಿಸಲ್ಪಟ್ಟಿದೆ. ಅದು ಖಂಡಿತವಾಗಿಯೂ ಭಾರತದ ಅತ್ಯಂತ ಹೆಚ್ಚು ಬಾರಿ ಮತ್ತೆ ಮತ್ತೆ ಭಾಷಾಂತರಿಸಲ್ಪಟ್ಟಿರುವ ಸಾಹಿತ್ಯಿಕ ಉತ್ಪನ್ನ ಹಾಗೂ ಹೇಳಬೇಕೆಂದರೆ ಇವುಗಳು ವಿಶ್ವದಲ್ಲೇ ಅತ್ಯಂತ ಹೆಚ್ಚು ವಿಶಾಲವಾಗಿ ತಿಳಿದಿರುವ ಕಥೆಯ ಸಂಗ್ರಹಗಳಲ್ಲೊಂದು. ಉದ್ಧರಿಸಬೇಕೆಂದರೆ : ಅದು ಹೀಗೆ ಅನೇಕ ಸಂಸ್ಕೃತಿಗಳಲ್ಲಿ ಹಲವಾರು ಹೆಸರುಗಳನ್ನು ಹೊಂದಿದೆ. ಭಾರತದಲ್ಲಿಯೇ, ಸಂಸ್ಕೃತದ ತಂತ್ರಖ್ಯಾಯಿಕ ವನ್ನು ಒಳಗೊಂಡಂತೆ, ಅದು ಕಡೇಪಕ್ಷ 25 ಪರಿಷ್ಕೃತ ಗ್ರಂಥಗಳನ್ನು ಹೊಂದಿದೆ ಹಾಗೂ ಹಿತೋಪದೇಶಕ್ಕೆ ಸ್ಪೂರ್ತಿಯಾಯಿತು. ಅದು ಕ್ರಿಸ್ತ ಶಕ 570 ರಲ್ಲಿ ಬೋರ್ಜುಯಾ ರಿಂದ ಪಹಲ್ವಿ ಗೆ ಬಾಷಾಂತರಿಸಲ್ಪಟ್ಟಿತು. ಇದು ಸಿರಿಯಾಕ್ ಭಾಷೆಯ ಅನುವಾದಕ್ಕೆ ಕಲಿಲಾಗ್ ಮತ್ತು ದಮ್ನಾಗ್ ಎಂದು ಮೂಲವಾಯಿತು ಹಾಗೂ ಕ್ರಿಸ್ತ ಶಕ 750 ರಲ್ಲಿ ಪರ್ಷಿಯಾದ ವಿದ್ವಾಂಸ ಅಬ್ದುಲ್ಲಾ ಇಬ್ನ್ ಅಲ್ಮುಕ್ವಫಾ ರಿಂದ ಕಲಿಲಾಹ್ ವ ದಿಮ್ನಾಹ್ ಎಂದು ಅರಬ್ಬೀ ಭಾಷೆಗೆ ತರ್ಜುಮೆಗೊಂಡಿತು. ಒಂದು ಪರ್ಷಿಯನ್ ಆವೃತ್ತಿಯು 12 ನೇ ಶತಮಾನದಿಂದ ಕಲಿಲ ಮತ್ತು ದಿಮ್ನ ಎಂದು ಹೆಸರಾಗಿದೆ. ಕಲಿಲೆಹ್ ಒ ದೆನ್ಮೆಹ್ ಅಥವಾ ಅನ್ವರ್ಇ ಸೊಹೆಯ್ಲಿ ಎಂಬ ಇತರ ಹೆಸರುಗಳೂ ಸೇರಿವೆ, (ದಿ ಲೈಟ್ಸ್ ಆಫ್ ಕ್ಯನೊಪಸ್) ಅಥವಾ ದಿ ಫೇಬಲ್ಸ್ ಆಫ್ ಬಿದ್ಪಯ್ (ಅಥವಾ ವಿವಿಧ ಯುರೋಪಿಯನ್ ಭಾಷೆಗಳಲ್ಲಿ ಪಿಲ್ಪಯ್) ಅಥವಾ ದಿ ಮಾರಲ್ ಫಿಲಾಸೊಫಿ ಆಫ್ ದೊನಿ (ಇಂಗ್ಲೀಷ್ 1570). ಹುರುಳು ಪಂಚತಂತ್ರವು ಬಣ್ಣಬಣ್ಣದ ಸಣ್ಣ ನೀತಿ ಕಥೆಗಳ ಒಂದು ಅನ್ಯೊನ್ಯವಾಗಿ ಹೆಣೆಯಲ್ಪಟ್ಟ ಸರಣಿಯಾಗಿದೆ, ಅವುಗಳಲ್ಲಿ ಅನೇಕ ಕಥೆಗಳು ಪ್ರಾಣಿಗಳು ಪ್ರದರ್ಶಿಸುತ್ತಿರುವ ಒಂದೇ ಪಡಿಯಚ್ಚಿನ ಪ್ರಾಣಿಗಳನ್ನು ಒಳಗೊಂಡಿವೆ. ಅದರದ್ದೇ ಮೂಲ ವೃತ್ತಾಂತದ ಪ್ರಕಾರ, ಮೂರು ಮುಗ್ಧ ರಾಜಕುಮಾರರ ಪ್ರಯೋಜನಕ್ಕಾಗಿ, ನೀತಿಯ ಕೇಂದ್ರ ಹಿಂದೂ ಮೂಲ ತತ್ವವನ್ನು ಅದು ವಿವರಿಸುತ್ತದೆ. ಯಾವಾಗಲೂ ನೀತಿ ಯನ್ನು ಅನುವಾದಿಸಲು ಕಠಿಣವಾದರೆ, ಅದು ಹೆಚ್ಚು ಕಡಿಮೆ ದೂರದೃಷ್ಟಿಯ ಪ್ರಾಪಂಚಿಕ ನಡವಳಿಕೆ, ಅಥವಾ ಜೀವನದ ಪರಿಜ್ಞಾನದ ವರ್ತನೆ ಎಂದಾಗುತ್ತದೆ. ಒಂದು ಚಿಕ್ಕ ಪರಿಚಯವೂ ಅಲ್ಲದೆ ಜೊತೆಗೆ, ರಾಜಕುಮಾರರಿಗೆ ಗ್ರಂಥದ ಉಳಿದ ಕಥನಗಳನ್ನು ವಿವರಿಸಿ ತಿಳಿಸುತ್ತಿರುವಂತೆ, ಲೇಖಕರಾದ, ವಿಷ್ಣು ಶರ್ಮರನ್ನು ಪರಿಚಯಿಸಲಾಗಿದೆ ಅದು ಐದು ಭಾಗಗಳನ್ನು ಒಳಗೊಂಡಿದೆ. ಪ್ರತಿ ಭಾಗವು ಕಥೆಯ ಚೌಕಟ್ಟೆಂದು ಕರೆಯಲ್ಪಡುವ, ಮುಖ್ಯ ಕಥೆಯನ್ನು ಹೊಂದಿದೆ, ಒಂದು ಪಾತ್ರವು ಮತ್ತೊಂದಕ್ಕೆ ಕಥನವನ್ನು ತಿಳಿಸುತ್ತಿರುವಂತೆ, ಅದರಲ್ಲಿ ಮುಂದುವರಿಯುವ ಬೇರೆ ಅನೇಕ ಕಥೆಗಳನ್ನು ಕ್ರಮೇಣವಾಗಿ ಹೊಂದಿದೆ. ಸಾಮಾನ್ಯವಾಗಿ ಈ ಕಥನಗಳು ಮುಂದುವರಿದು ಒಳಗೊಂಡಂತಹ ಕಥೆಗಳನ್ನು ಹೊಂದಿವೆ. ಈ ರೀತಿಯಾಗಿ ವೃತ್ತಾಂತಗಳು, ಕೆಲವು ವೇಳೆ ಆಳವಾದ ಮೂರು ಅಥವಾ ನಾಲ್ಕು ಕಥನಗಳು, ಒಂದು ವೃತ್ತಾಂತವು ಮತ್ತೊಂದರಲ್ಲಿ ಪ್ರಾರಂಭವಾಗುತ್ತಾ, ಅನುಕ್ರಮವಾದ ರಷಿಯಾದ ಗೊಂಬೆಗಳಂತೆ ಕಾರ್ಯನಿರ್ವಹಿಸುತ್ತವೆ. ಈ ಕಥೆಗಳೂ ಅಲ್ಲದೆ, ತಮ್ಮ ಉದ್ದೇಶವನ್ನು ಮನದಟ್ಟು ಮಾಡಿಸಲು ಪಾತ್ರಗಳೂ ಸಹ ವಿವಿಧ ಸಂಕ್ಷೇಪೋಕ್ತಿಯ ಪದ್ಯಗಳನ್ನು ಉದ್ಧರಿಸುತ್ತವೆ. ಆ ಐದು ಪುಸ್ತಕಗಳನ್ನು ಈ ರೀತಿ ಕರೆಯಲಾಗಿದೆ: ಮಿತ್ರಭೇದ : ಮಿತ್ರರ ಅಗಲಿಕೆ (ಸಿಂಹ ಹಾಗೂ ಕೋಣ) ಮಿತ್ರಲಾಭ ಅಥವಾ ಮಿತ್ರಸಂಪ್ರಾಪ್ತಿ : ಮಿತ್ರರನ್ನು ಸಂಪಾದಿಸುವುದು (ಪಾರಿವಾಳ, ಕಾಗೆ, ಇಲಿ, ಆಮೆ ಮತ್ತು ಜಿಂಕೆ) ಕಾಕೊಲುಕೀಯಮ್ : ಕಾಗೆಗಳ ಹಾಗೂ ಗೂಬೆಗಳ (ಯುದ್ಧ ಹಾಗೂ ಶಾಂತಿ) ಲಬ್ಧಪ್ರಣಾಶನಮ್ : ಲಾಭದ ನಷ್ಟ (ಕೋತಿ ಮತ್ತು ಮೊಸಳೆ) ಅಪರೀಕ್ಷಿತಕಾರಕಮ್ : ಸರಿಯಾಗಿಆಲೋಚಿಸದ ಕೆಲಸ ದುಡುಕಿನ ಕೃತ್ಯಗಳು (ಬ್ರಾಹ್ಮಣ ಹಾಗೂ ಮುಂಗಸಿ) ಭಾರತೀಯ ಆವೃತ್ತಿ ೧. ಮಿತ್ರಭೇದ:ಮಿತ್ರರ ಅಗಲಿಕೆ. ಮೊದಲನೆಯ ಪುಸ್ತಕದಲ್ಲಿ, ಕಾಡಿನ ರಾಜನಾದ ಸಿಂಹ (ಪಿಂಗಳಕ) ಹಾಗೂ ಒಂದು ಎತ್ತು (ಸಂಜೀವಕ)ಗಳ ಮಧ್ಯೆ ಗೆಳೆತನವು ಬೆಳೆಯುತ್ತದೆ. ಸಿಂಹ ರಾಜನನ್ನು ಹಿಂಬಾಲಿಸಿಕೊಂಡಿರುವಂತಹ ಎರಡು ನರಿಗಳು ಕರಟಕ (ಭಯಂಕರವಾಗಿ ಕೂಗುವ) ಮತ್ತು ದಮನಕ (ವಿಜೇತ)ರು. ದಮನಕನು ಹೊಟ್ಟೆಕಿಚ್ಚಿನಿಂದ, ಕರಟಕನ ಬುದ್ಧಿವಾದದ ವಿರುದ್ಧವಾಗಿ, ಸಿಂಹ ಹಾಗೂ ಎತ್ತುಗಳ ಮಧ್ಯದ ಗೆಳೆತನವನ್ನು ಮುರಿಯುತ್ತದೆ. ಅದು ಸುಮಾರು ಮೂವತ್ತು ಕಥೆಗಳನ್ನು ಹೊಂದಿದ್ದು, ಸಾಮಾನ್ಯವಾಗಿ ಎಲ್ಲವೂ ಎರಡು ನರಿಗಳಿಂದ ಹೇಳಲ್ಪಟ್ಟಿವೆ ಮತ್ತು ಗ್ರಂಥದ ಗಾತ್ರದ ಹೆಚ್ಚು ಕಡಿಮೆ ಶೇಕಡಾ 45 ರಷ್ಟು ಭಾಗವನ್ನು ಹೊಂದಿದ್ದು, ಐದು ಪುಸ್ತಕಗಳಲ್ಲಿ ಅತ್ಯಂತ ದೊಡ್ಡದಾಗಿದೆ. ೨.ಮಿತ್ರಸಂಪ್ರಾಪ್ತಿ: ಮಿತ್ರರ ಸಂಪಾದನೆ. ಕಪೋತ (ಅಥವಾ ಪಾರಿವಾಳ) ಮತ್ತು ಅದರ ಸ್ನೇಹಿತರನ್ನು ಮುಕ್ತಗೊಳಿಸಲು ಇಲಿಯು ಮಾಡಿದ ಉಪಕಾರವನ್ನು ನೋಡಿದ ಮೇಲೆ, ಅದರ ಮೂಲ ಆಕ್ಷೇಪಣೆಗಳಿದ್ದಾಗ್ಯೂ ಇಲಿಯ ಸ್ನೇಹ ಬೆಳೆಸಲು ನಿರ್ಧರಿಸಿದ ಕಾಗೆಯ ಕಥೆಯನ್ನು ಇದು ತಿಳಿಸುತ್ತದೆ. ಆಮೆ ಹಾಗೂ ಜಿಂಕೆಯ ಮರಿಯನ್ನು ಸೇರಿಸಿಕೊಳ್ಳಲು ಈ ಸ್ನೇಹತನವು ಬೆಳೆಯುತ್ತಾ ಹೋದಂತೆ ಕಥಾವಸ್ತುವು ವಿಸ್ತರಿಸುತ್ತದೆ. ಅವುಗಳು ಅದು ಬಲೆಗೆ ಬಿದ್ದಾಗ ಜಿಂಕೆಯ ಮರಿಯನ್ನು ಉಳಿಸಲು ಎಲ್ಲರೂ ಸೇರಿ ಕೆಲಸ ಮಾಡುತ್ತವೆ ಹಾಗೂ ನಂತರ ತನಗೆ ತಾನೇ ಬಲೆಯಲ್ಲಿ ಬಿದ್ದ ಆಮೆಯನ್ನು ಉಳಿಸಲು ಅವು ಒಟ್ಟಾಗಿ ಕೆಲಸ ಮಾಡುತ್ತವೆ. ಇದು ಒಟ್ಟು ಪೂರ್ಣ ಗಾತ್ರದ ಸುಮಾರು ಶೇಕಡಾ 22 ರಷ್ಟು ಆಗುತ್ತದೆ. ೩.ಕಾಕೋಲುಕಿಯಮ್: ಕಾಗೆಗಳು ಮತ್ತು ಗೂಬೆಗಳ ಕಾಗೆಗಳು ಮತ್ತು ಗೂಬೆಗಳ ನಡುವಿನ ಒಂದು ಕದನವನ್ನು ತಿಳಿಸುತ್ತದೆ. ಶತೃಗಳಾದ ಗೂಬೆಯ ಗುಂಪಿಗೆ ಪ್ರವೇಶ ಪಡೆಯಲು ತನ್ನ ಸ್ವಂತ ತಂಡದಿಂದಲೇ ಬಹಿಷ್ಕೃತನಾದಂತೆ ಕಾಗೆಗಳಲ್ಲೊಂದು ಸೋಗುಹಾಕುತ್ತದೆ ಮತ್ತು ಆ ರೀತಿ ಮಾಡಿ ಪ್ರವೇಶ ಪಡೆದು ಅವರ ಗುಟ್ಟುಗಳು ಹಾಗೂ ಅವರ ಭೇದ್ಯತೆಗಳನ್ನು ಕಲಿಯುತ್ತದೆ ಗೂಬೆಗಳು ವಾಸವಾಗಿದ್ದ ಗುಹೆಗೆ ಎಲ್ಲಾ ಒಳಹೋಗುವ ಮಾರ್ಗಗಳಲ್ಲಿ ಬೆಂಕಿಹಚ್ಚುವಂತೆ ತನ್ನ ಕಾಗೆಗಳ ಗುಂಪಿಗೆ ಅದು ನಂತರ ಆಜ್ಞಾಪಿಸಿ ಅವುಗಳು ಉಸಿರುಕಟ್ಟಿ ಸಾಯುವಂತೆ ಮಾಡುತ್ತದೆ. ಇದು ಒಟ್ಟು ಗಾತ್ರದ ಸುಮಾರು ಶೇಕಡಾ 26 ರಷ್ಟಿದೆ. ೪.ಲಬ್ಧಪ್ರಣಾಶಮ್: ಲಾಭಗಳ ನಷ್ಟ. ಈ ಕಥೆಯು ಕೋತಿ ಹಾಗೂ ಮೊಸಳೆಯ ಮಧ್ಯದ ಕೃತ್ರಿಮವಾಗಿ ರಚಿಸಿದ ಒಟ್ಟಿಗೆ ಜೀವಿಸುವ ಸಂಬಂಧದ ಜೊತೆ ನಡೆಯುತ್ತದೆ. ತನ್ನ ಪತ್ನಿಯನ್ನು ಗುಣಪಡಿಸಲು ಕೋತಿಯ ಹೃದಯವನ್ನು ಪಡೆಯಲು ಪಿತೂರಿ ಮಾಡಿ ಮೊಸಳೆಯು ಆ ಸಂಬಂಧವನ್ನು ಅಪಾಯಕ್ಕೆ ಗುರಿಮಾಡುತ್ತದೆ ಕೋತಿಯು ಇದರ ಬಗ್ಗೆ ತಿಳಿದು ಆ ಕಠೋರ ಅದೃಷ್ಟವನ್ನು ನಿವಾರಿಸಿಕೊಳ್ಳುತ್ತದೆ. ೫.ಅಪರೀಕ್ಷಿತಕಾರಕಮ್: ದುಡುಕಿನ ಕೆಲಸ. ಒಬ್ಬ ಬ್ರಾಹ್ಮಣನು ತನ್ನ ಸ್ನೇಹಿತನಾದ ಒಂದು ಮುಂಗುಸಿಯ ಹತ್ತಿರ ತನ್ನ ಮಗುವನ್ನು ಬಿಟ್ಟು ಹೋಗುತ್ತಾನೆ, ಮತ್ತು ಹಿಂದಿರುಗಿದ ಮೇಲೆ ಮುಂಗುಸಿಯ ಬಾಯಿಯಲ್ಲಿ ರಕ್ತವನ್ನು ನೋಡಿದವನೇ, ಅದನ್ನು ಕೊಲ್ಲುತ್ತಾನೆ. ಅವನು ನಂತರ ನಿಜವಾಗಿಯೂ ಒಂದು ಹಾವಿನಿಂದ ತನ್ನ ಮಗುವನ್ನು ಮುಂಗುಸಿಯು ರಕ್ಷಿಸಿರುವುದನ್ನು ನೋಡುತ್ತಾನೆ. ಅರಬ್ಬೀ ಅವತರಣಿಕೆಗಳು ಇಬ್ನ್ ಅಲ್ಮುಕ್ವಫನು ಪಂಚತಂತ್ರ ವನ್ನು ಮಧ್ಯ ಪರ್ಷಿಯಾದಿಂದ ಕಲಿಲ ವ ದಿಮ್ನ ಎಂದು ಅನುವಾದಿಸಿದರು ಹಾಗೂ ಇದು ಅರಬ್ಬಿ ಸಾಹಿತ್ಯಕ ಗದ್ಯದ ಮೊದಲ ಅತ್ಯುತ್ತಮ ಕೃತಿ ಎಂದು ಪರಿಗಣಿತವಾಗಿದೆ. ಸಂಸ್ಕೃತದ ಅವತರಣಿಕೆಯು ಅರಬ್ಬಿ ಭಾಷೆಗೆ ಪಹ್ಲವಿ ಮುಖಾಂತರ ನೂರಾರು ವರ್ಷಗಳು ವಲಸೆ ಹೋಗುವ ವೇಳೆಗೆ, ಕೆಲವು ಮುಖ್ಯವಾದ ವ್ಯತ್ಯಾಸಗಳು ಉದ್ಭವಿಸಿದವು. ಮೊದಲ ಪುಸ್ತಕದ ಪರಿಚಯ ಹಾಗೂ ಕಥೆಯ ಚೌಕಟ್ಟು ಬದಲಾಯಿಸಿತು. ಎರಡೂ ನರಿಗಳ ಹೆಸರುಗಳು ಕಲಿಲ ಮತ್ತು ದಿಮ್ನ ಎಂದು ಮಾಂತ್ರಿಕವಾಗಿ ರೂಪಾಂತರಿಸಲ್ಪಟ್ಟವು. ಹಾಗಯೇ, ಬಹುಶಃ ಮೊದಲ ವಿಭಾಗದ ಗಾತ್ರದ ಕಾರಣ, ಅಥವಾ ಸಂಸ್ಕೃತ ಪದ ಪಂಚತಂತ್ರವು ಹಿಂದು ಕಲ್ಪನೆಯಾಗಿ ಜೋರಾಷ್ಟ್ರಿಯನ್ ಪಹ್ಲವಿಯಲ್ಲಿ ಸುಲಭವಾದ ಸಮಾನಾರ್ಥವುಳ್ಳದ್ದು ಸಿಗದ ಕಾರಣ, ಅವರ ಹೆಸರುಗಳು (ಕಲಿಲ ಮತ್ತು ದಿಮ್ನ ) ಸಂಪೂರ್ಣ ಗ್ರಂಥಕ್ಕೆ ವೈಶಿಷ್ಟ್ಯಪೂರ್ಣ ಉತ್ಕೃಷ್ಟ ಹೆಸರಾಯಿತು. ಮೊದಲ ಪರಿಚ್ಛೇದದ ನಂತರ ಇಬ್ನ್ ಅಲ್ಮುಕ್ವಫರಿಂದ ಒಂದು ಹೊಸ ಅಧ್ಯಾಯವು ಒಳಸೇರಿಸಲ್ಪಟ್ಟಿತು, ಹಾಗೂ ಮೊದಲ ಅಧ್ಯಾಯದ ನಂತರ ಹಾಗೂ ಮೊದಲ ಅಧ್ಯಾಯದಲ್ಲಿ ಪ್ರಸ್ತಾಪಿಸಲ್ಪಟ್ಟ ಷಾನಜೆಬೆಹ್ ಕೋಣದ ಸಾವಿಗೆ ಉದ್ದೇಶಪೂರ್ವಕವಾಗಿ ಕಾರಣವಾಯಿತೆಂದು ಅದು ಸಂಶಯಕ್ಕೊಳಪಟ್ಟ ನಂತರ ನರಿ ದಿಮ್ನನ ನ್ಯಾಯವಿಚಾರಣೆಯನ್ನು ತಿಳಿಸುತ್ತದೆ. ಹುಲಿ ಮತ್ತು ಚಿರತೆಯು ಮುಂದೆ ಬಂದು ದಿಮ್ನನನ್ನು ಆಪಾದಿಸುವವರೆಗೂ ವಿಚಾರಣೆಯು ಲಾಭವಿಲ್ಲದೆ 2 ದಿನಗಳ ವರೆಗೆ ನಡೆಯುತ್ತದೆ. ಅದು ಆನಂತರ ವಿಶ್ರಾಂತಿ ಪಡೆಯಿತು. ಕೆಲವು ಪ್ರಾಣಿಗಳ ಹೆಸರನ್ನು ಬದಲಾಯಿಸಲಾಗಿದೆ. ನಾಲ್ಕನೆಯ ಅಧ್ಯಾಯದಲ್ಲಿ ಮೊಸಳೆಯ ಹೆಸರನ್ನು ಅಲ್ಘಲಿಮ್ ಎಂದೂ, ಮುಂಗುಸಿಯನ್ನು ವಿಯಸೆಲ್ ಎಂದೂ ಹಾಗೂ ಬ್ರಾಹ್ಮಣನು ಸನ್ಯಾಸಿಯಾಗಿ ಬದಲಾಗುತ್ತಾರೆ. ಪ್ರತಿ ಪರಿಚ್ಛೇದಕ್ಕೂ ನೀತಿ ಕಥೆಗಳನ್ನು ಸೇರಿಸಲಾಗಿದೆ: ಯಾರೊಬ್ಬರೂ ಬೇರೆಯವರನ್ನು ಸುಳ್ಳಾಗಿ ಆಪಾದಿಸಬಾರದು ಮತ್ತು ಗೆಳೆತನವನ್ನು ಸಂರಕ್ಷಿಸಲು ಹೋರಾಡಬೇಕು. (ಸೇರಿಸಲ್ಪಟ್ಟ ಅಧ್ಯಾಯ) ಇಂದಲ್ಲ ನಾಳೆಯಾದರೂ ಸತ್ಯವು ಹೊರಬರಲೇ ಬೇಕು. ಗೆಳೆಯರು ಜೀವನದ ಒಂದು ಅವಿಭಾಜ್ಯ ಅಂಗ. ಪಶುತರಹದ ಶಕ್ತಿಗಿಂತ ಮಾನಸಿಕ ದೃಢತೆ ಹಾಗೂ ಮೋಸಮಾಡದೇ ಇರುವುದು ಶ್ರೇಷ್ಠ ತರಹ. ಯಾರೊಬ್ಬರೂ ಮಿತ್ರರನ್ನು ವಂಚಿಸಬಾರದು ಮತ್ತು ಎಲ್ಲಾ ಸಮಯದಲ್ಲೂ ಜಾಗರೂಕರಾಗಿ ನಿಂತಿರಬೇಕು. ಯಾರೂ ನ್ಯಾಯ ತೀರ್ಮಾನ ತೆಗೆದುಕೊಳ್ಳುವಾಗ ಆತುರರಾಗಿರಭಾರದು. ಪಂಚತಂತ್ರ ಕಥೆಗಳು ಬೇರೆ ನೀತಿಕಥೆಗಳ ಜೊತೆ ಸಂಬಂಧ ಪಂಚತಂತ್ರ ಮತ್ತು ಇಸೋಪನ ನೀತಿ ಕಥೆಗಳಲ್ಲಿ ಅನೇಕ ಚಿಕ್ಕ ಕಥೆಗಳ ನಡುವೆ ಒಂದು ಭದ್ರವಾದ ಹೋಲಿಕೆ ಕಾಣಿಸುತ್ತದೆ. ಚಿರತೆಯ ಚರ್ಮದಲ್ಲಿ ಕತ್ತೆ ಹಾಗೂ ಹೃದಯ ಮತ್ತು ಕಿವಿಗಳಿಲ್ಲದ ಕತ್ತೆ ಉದಾಹರಣೆಗಳಾಗಿವೆ. ಮುರಿದ ಕೊಡವು ಇಸೊಪನ ಹಾಲು ಮಾರುವಳು ಹಾಗೂ ಅವಳ ಬಕೇಟು ಇದಕ್ಕೆ ಸಮನಾಗಿದೆ ಹಾಗೂ ಬಂಗಾರ ಕೊಡುವ ಹಾವು ಇಸೊಪನ ಮನುಷ್ಯ ಮತ್ತು ಹಾವಿನ ಕಥೆಗೆ ಸಾದೃಷ್ಯವಾಗಿದೆ. ಆಮೆ ಮತ್ತು ಬಾತು ಕೋಳಿಗಳು ಹಾಗೂ ಹುಲಿ, ಬ್ರಾಹ್ಮಣ ಮತ್ತು ನರಿಗಳು, ಇವುಗಳು ಇತರೆ ಪ್ರಖ್ಯಾತವಾದ ಕಥೆಗಳು. ಇದೇ ರೀತಿಯ ಪ್ರಾಣಿಗಳನ್ನೊಳಗೊಂಡ ನೀತಿ ಕಥೆಗಳು ವಿಶ್ವದ ಬಹುತೇಕ ಸಂಸ್ಕೃತಿಗಳಲ್ಲಿ ದೊರಕುತ್ತವೆ, ಆದರೆ ಕೆಲವು ಪ್ರಾಚೀನ ಕಥೆಗಾರರು ಭಾರತವನ್ನು ಪ್ರಧಾನ ಆಕರವೆಂದು ನೋಡುತ್ತಾರೆ. ವಿಶ್ವದ ನೀತಿ ಕಥೆಗಳ ಸಾಹಿತ್ಯದ ಮುಖ್ಯ ಮೂಲವೆಂದೂ ಸಹ ಅದು ಪರಿಗಣಿತವಾಗಿದೆ. ತನ್ನ ಎರಡನೆಯ ಅದ್ಭುತ ನೀತಿ ಕಥೆಗಳಿಗೆ ಪರಿಚಯದಲ್ಲಿ ಕೃತಿಗೆ ತನ್ನ ಉಪಕೃತ್ಯತೆಯನ್ನು ಫ್ರೆಂಚ್ ನೀತಿ ಕಥೆಗಾರ ಜೀನ್ ಡೆ ಲ ಫಾಂಟೈನ್ ಪ್ರಖ್ಯಾತವಾಗಿ ಒಪ್ಪಿಕೊಂಡಿದ್ದಾರೆ: ಸಾರ್ವಜನಿಕರಿಗೆ ನಾನು ಪ್ರಸ್ತುತ ಪಡಿಸುತ್ತಿರುವ ನೀತಿ ಕಥೆಗಳ ಎರಡನೆಯ ಪುಸ್ತಕವಿದು ... ಒಬ್ಬ ಭಾರತೀಯ ಸನ್ಯಾಸಿ ಪಿಲ್ಪೆ ಯಿಂದ ಅತ್ಯಂತ ಹೆಚ್ಚು ಭಾಗವು ಪ್ರಚೋದಿಸಲ್ಪಟ್ಟಿದ್ದೇನೆ ಎಂದು ನಾನು ಒಪ್ಪಿಕೊಳ್ಳಲೇಬೇಕು. ಅದು ಅರೇಬಿಯನ್ ನೈಟ್ಸ್, ಸಿಂದ್ ಬಾದ್ ಮತ್ತು ಅನೇಕ ಪಾಶ್ಚಿಮಾತ್ಯ ವಿಹಾರದ ಮಕ್ಕಳ ಶಿಶುಗೀತೆಗಳು ಹಾಗೂ ಜಾನಪದ ಹಾಡುಗಳಲ್ಲಿನ ಅನೇಕ ಕಥೆಗಳಿಗೂ ಸಹ ಆಕರವಾಗಿದೆ. ಆಕರಗಳು ಹಾಗೂ ಕೆಲಸ ಭಾರತೀಯ ಪರಂಪರೆಯಲ್ಲಿ, ಪಂಚತಂತ್ರವು ಒಂದು ಆಗಿದೆ. ನೀತಿ ಯನ್ನು ಸುಮಾರಾಗಿ ಜೀವನದ ಜ್ಞಾನಪ್ರದ ವರ್ತನೆಯೆಂದು ಅನುವಾದಿಸಬಹುದು ಹಾಗೂ ಒಂದು ಶಾಸ್ತ್ರ ವು ತಾಂತ್ರಿಕ ಅಥವ ವೈಜ್ಞಾನಿಕ ಮೀಮಾಂಸೆ ಎಂದಾಗುತ್ತದೆ ಹೀಗೆ ಅದು ರಾಜಕೀಯ ವಿಜ್ಞಾನ ಮತ್ತು ಮನವೀಯ ವರ್ತನೆಯ ಮೇಲಿನ ಒಂದು ಪ್ರಬಂಧ ಗ್ರಂಥ. ಅದರ ಸಾಹಿತ್ಯಕ ಆಕರಗಳು ಹೀಗಿವೆ ವಿಶೇಷ ಅನುಭವ ಹೊಂದಿರುವ ಕಥೆ ಹೇಳುವ ರಾಜಕೀಯ ವಿಜ್ಞಾನ ಹಾಗೂ ಜಾನಪದ ಮತ್ತು ಸಾಹಿತ್ಯಕ ಪರಂಪರೆಯ ಪ್ರಬುದ್ಧ ನಂಬಿಕೆ. ಅವುಗಳನ್ನು ವ್ಯಾಪಕವಾಗಿ ಉಲ್ಲೇಖಿಸುತ್ತಾ, ಹೆಚ್ಚಿನದನ್ನು ಧರ್ಮ ಮತ್ತು ಅರ್ಥ ಶಾಸ್ತ್ರ ಗಳಿಂದ ಆರಿಸಲಾಗಿದೆ. ಪುರುಷರ ಪ್ರಪಂಚದಲ್ಲಿ ಜೀವನದಿಂದ ಸಾಧ್ಯವಾದಷ್ಟು ಅತ್ಯಂತ ಉನ್ನತ ಸಂತೋಷವನ್ನು ಹೇಗೆ ಜಯಿಸುವುದೆಂಬ ಆಗ್ರಹದ ಪ್ರಶ್ನೆಯ ಉತ್ತರಕ್ಕೆ ನೀತಿ ಯು ಒಂದು ಶ್ಲಾಘನೀಯ ಪ್ರಯತ್ನವನ್ನು ಪ್ರತಿನಿಧಿಸುತ್ತದೆ ಎಂದು ಗ್ರಂಥದಿಂದ ಅವುಗಳನ್ನು ವ್ಯಾಪಕವಾಗಿ ಉಲ್ಲೇಖಿಸುತ್ತಲೂ ಸಹ ವಿವರಿಸಲ್ಪಟ್ಟಿದೆ ಹಾಗೂ ಸುರಕ್ಷತೆ, ಅಭ್ಯುದಯ, ದೃಢ ಸಂಕಲ್ಪದ ಕಾರ್ಯ, ಗೆಳೆತನ ಹಾಗೂ ಶ್ರೇಷ್ಠ ಅಧ್ಯಯನವು ಸಂತೋಷವನ್ನು ಉತ್ಪನ್ನ ಮಾಡಲು ಹೇಗೆ ಸೇರಿಸಲ್ಪಟ್ಟಿದೆಯೆಂದರೆ ಅದರಲ್ಲಿ ಒಂದು ಜೀವನವು, ಮಾನವನ ಶಕ್ತಿಗಳ ಸಾಮರಸ್ಯವಾದ ಬೆಳವಣಿಗೆಯೇ ನೀತಿ ಯಾಗಿದೆ. ಕ್ರಿಸ್ತ ಪೂರ್ವ 400 ರ ಸುಮಾರಿಗೆ ಅವರು ನಿರ್ವಾಣ ಹೊಂದುವ ಮೊದಲು ಐತಿಹಾಸಿಕ ಬುದ್ಧರಿಂದ ಖಚಿತವಾಗಿ ಪ್ರಸ್ತಾಪಿಸಲ್ಪಟ್ಟ ಬುದ್ಧನ ಜಾತಕ ಕಥೆಗಳ ಜೊತೆ ಅನೇಕ ಕಥೆಗಳು ಸಾಮಾನ್ಯವಾಗಿ ಪಂಚತಂತ್ರವು ಹಂಚಿಕೊಳ್ಳುತ್ತದೆ, ಆದರೆ ಬುದ್ಧರು ಕಥನಗಳನ್ನು ಕಂಡು ಹಿಡಿಯಲಿಲ್ಲವೆಂಬುದು ಸ್ಪಷ್ಟವಾಗಿದೆ. [...] ಪಂಚತಂತ್ರದ ಲೇಖಕರು ಜಾತಕ ಕಥೆಗಳು ಅಥವಾ ಮಹಾಭಾರತ ದಿಂದ ಆಖ್ಯಾಯಿಕೆಗಳನ್ನು ಎರವಲು ಪಡೆದರೆ ಇಲ್ಲವೇ ಪುರಾತನ ಭಾರತದ, ಮೌಖಿಕ ಮತ್ತು ಸಹಿತ್ಯಕವೆರಡನ್ನೂ, ಕಥೆಗಳ ಸಾಮಾನ್ಯ ಭಂಡಾರಗಳಿಗೆ ಅವರು ಮೆಲ್ಲನೆ ತಟ್ಟುತ್ತಿದ್ದರೆ ಅಥವಾ ಇಲ್ಲವೆ ಎಂಬುದು ಸ್ವಲ್ಪ ಸಂದಿಗ್ಧವಾಗಿದೆ. ನಿರ್ಧಾರಾತ್ಮಕ ಪುರಾವೆಯಿಲ್ಲದಿದ್ದಾಗ್ಯೂ, ಪುರಾತನ ಜಾನಪದ ಪರಂಪರೆಗಳ ಮೇಲೆ ಅವು ಆಧಾರಿತವಾಗಿವೆ ಎಂದು ಅನೇಕ ವಿದ್ವಾಂಸರು ನಂಬುತ್ತಾರೆ. ಡಬ್ಲು. ನಾರ್ಮನ್ ಬ್ರೌನ್ ಈ ಸಂಗತಿಯನ್ನು ಚರ್ಚಿಸಿದರು ಹಾಗೂ ಆಧುನಿಕ ಭಾರತದಲ್ಲಿ, ಅನೇಕ ಜಾನಪದ ಕಥೆಗಳು ಸಾಹಿತ್ಯಕ ಆಕರಗಳಿಂದ ಅನುಕರಣ ಮಾಡಲ್ಪಟ್ಟಿವೆಯೆಂದು ತಿಳಿದರು ಮತ್ತು ಅವು ತದ್ವಿರುದ್ಧವಾಗಲ್ಲ. ಪಂಚತಂತ್ರದ ಬಗ್ಗೆ ಮೊಟ್ಟ ಮೊದಲ ಪಾಶ್ಚಿಮಾತ್ಯ ವಿದ್ವಾಂಸರಲ್ಲೊಬ್ಬರಾದ ಡಾ. ಜೋಹನ್ನೆಸ್ ಹೆರ್ಟೆಲ್ ರವರು, ಈ ಗ್ರಂಥವನ್ನು ಒಂದು ಮ್ಯಚಿಯವೆಲ್ಲಿಯನ್ ಪಾತ್ರವನ್ನು ಹೊಂದಿರುವಂತೆ ಅವಲೋಕಿಸಿದರು. ಹಾಗೆಯೇ, ಕಥೆಗಳ ಹಾಗೆಂದು ಕರೆಯಲಾಗುವ ನೀತಿಗಳು ನೈತಿಕತೆಯ ಮೇಲೆ ಯಾವುದೇ ಪರಣಾಮ ಹೊಂದಿಲ್ಲವೆಂದು ಎಡ್ಗರ್ಟನ್ ಗಮನಿಸಿದರು ಅವು ಅನೀತಿಯ ಮತ್ತು ಕೆಲವು ವೇಳೆ ನೀತಿಗೆಟ್ಟವುಗಳು. ಜೀವನದ ಕಾರ್ಯಗಳಲ್ಲಿ ಹಾಗೂ ವಿಶೇಷವಾಗಿ ರಾಜಕೀಯದ, ಸರ್ಕಾರದ, ವ್ಯವಹಾರ ಕುಶಲತೆ ಮತ್ತು ವ್ಯಾವಹಾರಿಕ ಬುದ್ಧಿವಂತಿಕೆಯನ್ನು ಅವು ವೈಭವೀಕರಿಸುತ್ತವೆ. ಇತರೆ ವಿದ್ವಾಂಸರು ಇದು ಏಕಪಕ್ಷೀಯವೆಂದು ಈ ಸಲಹೆಯನ್ನು ತಳ್ಳಿಹಾಕುತ್ತಾರೆ ಮತ್ತು ಕಲಿಸಲು ಅಥವಾ ಸರಿಯಾದ ನೀತಿ ವರ್ತನೆ ಎಂದೂ ಸಹ ಈ ಕಥೆಗಳನ್ನು ಅವಲೋಕಿಸುತ್ತಾರೆ. ಹಾಗೆಯೇ : ಒಲಿವೆಲ್ಲೆ ಗಮನಿಸಿದಂತೆ: ಉದಾಹರಣೆಗೆ, ಮೊದಲ ಚೌಕಟ್ಟಿನ ಕಥೆಯಲ್ಲಿ, ಜಯಶಾಲಿಯಾಗಿದ್ದು ದುಷ್ಟ ದಮನಕ (ಗೆದ್ದವನು) ಮತ್ತು ಅದರ ಒಳ್ಳೆಯ ಸಹೋದರ ಕರಟಕನಲ್ಲ. ವಾಸ್ತವವಾಗಿ, ಅದರ ದೃಢವಾದ ಪಶ್ಚಿಮದ ಕಡೆಗೆ ವಲಸೆಯು ಕಲಿಲ ಮತ್ತು ದಿಮ್ನ ಭಾಗ ಒಂದರಲ್ಲಿ ಕೆಟ್ಟಜಯಶೀಲತೆಯ ಕೆಲಸ ಸಾಧಿಸುವ ವಿಷಯ, ಮತ್ತೆ ಮತ್ತೆ ಜ್ಯೂಗಳು, ಕ್ರಿಶ್ಚಿಯನ್ನರು ಹಾಗೂ ಮುಸ್ಲಿಮ್ ಧಾರ್ಮಿಕ ಮುಖಂಡರನ್ನು ಕೋಪಗೊಳಿಸಿತು ನಿಶ್ಚಯವಾಗಿಯೂ, ಕೊನೆಗೆ ಇಬ್ನ್ ಅಲ್ಮುಕ್ವಫ ಎಚ್ಚರಿಕೆಯಿಂದ ತನ್ನ ಉತ್ಕೃಷ್ಟ ಕೃತಿಯ ಭಾಗ ಒಂದರ ಕೊನೆಯಲ್ಲಿ ಒಂದು ಸಂಪೂರ್ಣ ಹೆಚ್ಚುವರಿ ಅಧ್ಯಾಯವನ್ನು ಒಳಸೇರಿಸಿದನು (ತನ್ನ ಸ್ವಂತ ಪ್ರಕ್ಷುಬ್ಧ ಕಾಲದಲ್ಲಿ ಶಕ್ತಿಶಾಲಿ ಧಾರ್ಮಿಕ ಮತಾಂಧರನ್ನು ಸಮಾಧಾನಗೊಳಿಸಲು ನಿಸ್ಸಂದೇಹವಾಗಿ ಆಶಿಸುತ್ತಾ) ದಿಮ್ನನನ್ನು ಜೈಲಿನಲ್ಲಿ ನ್ಯಾಯವಿಚಾರಣೆಗೆ ಒಳಪಡಿಸಿ ಮತ್ತು ಕೊನೆಗೆ ಮರಣದಂಡನೆ ವಿಧಿಸಿದರು. ಮೊದಲಇಸ್ಲಾಂ ಧರ್ಮದ ಮೂಲದ, ಪಂಚತಂತ್ರ ವು ಅಂತಹ ಯಾವುದೇ ಸ್ವಮತಾಭಿಮಾನದ ನೀತಿಯನ್ನು ಉಪದೇಶಿಸುವುದನ್ನು ಹೊಂದಿಲ್ಲ. 1888 ರಲ್ಲಿ ಜೋಸೆಫ್ ಜೇಕಬ್ ರವರು ಗಮನಿಸಿದಂತೆ, ... ಒಬ್ಬರು ಅದರ ಬಗ್ಗೆ ಯೋಚಿಸಿದಾಗ ಅದನ್ನು ಪ್ರಸ್ತಾಪಿಸದಂತೆಯೇ ಅದರ ನೀತಿಯನ್ನು ಸಣ್ಣ ನೀತಿ ಕಥೆಯು ಅದೇ ಇರುವ ಕಾರಣವನ್ನು ಸೂಚಿಸುವುದಾಗಿದೆ. ಅಡ್ಡಸಾಂಸ್ಕೃತಿಕ ವಲಸೆಗಳು ಆರನೆಯ ಶತಮಾನದಿಂದ ವರ್ತಮಾನದವರೆಗೆ ಈ ಗ್ರಂಥವು ಅನೇಕ ಬೇರೆ ಬೇರೆ ಅವತರಣಿಕೆಗಳು ಹಾಗೂ ಅನುವಾದಗಳಿಗೆ ಒಳಪಟ್ಟು ಬದಲಾವಣೆಗೊಂಡಿದೆ. 570 ರಲ್ಲಿ ಬೋರ್ಜುಯಾ ರಿಂದ ಪರದೇಶದ ಭಾಷೆಗೆ ಮೂಲ ಭಾರತೀಯ ಅವತರಣಿಕೆಯು ಮೊದಲು ಅನುವಾದಿಸಲ್ಪಟ್ಟಿತು, ನಂತರ 750 ರಲ್ಲಿ ಅರಬ್ಬಿ ಭಾಷೆಗೆ, ಹಾಗೂ ಇದು ಇತರ ಎಲ್ಲಾ ಯುರೋಪಿಯನ್ ಭಾಷೆಯ ಅವತರಣಿಕೆಗೆ ಆಕರವಾಯಿತು. ಮೊದಲಿನ ಮಿಶ್ರಸಾಂಸ್ಕೃತಿಕ ವಲಸೆಗಳು ಸುಮಾರು ಕ್ರಿಸ್ತ ಪೂರ್ವ 200 ರ ಸುತ್ತ ಮುತ್ತ ಮೂಲವಾಗಿ ಬರೆಯಲ್ಪಟ್ಟಿದ್ದರೂ, ಕ್ರಿಸ್ತ 1 ನೆಯ ಶತಮಾನದೊಳಗೆ ಪಂಚತಂತ್ರ ವು ತನ್ನ ಪ್ರಚಲಿತ ಸಾಹಿತ್ಯಕ ರೂಪವೆಂದು ಅಂದಾಜುಮಾಡಲ್ಪಟ್ಟಿದೆ. ಕ್ರಿಸ್ತ ಶಕ 1000 ವರ್ಷದ ಮುಂಚಿನ ಯಾವುದೇ ಸಂಸ್ಕೃತ ಗ್ರಂಥಗಳು ಜೀವಂತವಾಗಿ ಉಳಿದಿಲ್ಲ. ಭಾರತೀಯ ಪರಂಪರೆಯ ಪ್ರಕಾರ, ಒಬ್ಬ ಸನ್ಯಾಸಿ, ಪಂಡಿತ ವಿಷ್ಣು ಶರ್ಮ ರಿಂದ ಅದು ಬರೆಯಲ್ಪಟ್ಟಿತು. ವಿಶ್ವ ಸಾಹಿತ್ಯಕ್ಕೆ ಅತ್ಯಂತ ಪ್ರಭಾವಶಾಲಿ ಸಂಸ್ಕೃತದ ಕೊಡುಗೆಗಳಲ್ಲಿ ಒಂದಾದ ಇದು ತೀರ್ಥಯಾತ್ರೆಯಲ್ಲಿದ್ದ ಬೌದ್ಧ ಸನ್ಯಾಸಿಗಳಿಂದ, ಅದು (ಬಹುಶಃ ಮೌಖಿಕ ಮತ್ತು ಸಾಹಿತ್ಯಕ ಆಕಾರಗಳೆರಡರಲ್ಲೂ) ಉತ್ತರದಿಂದ ಟಿಬೆಟ್ ಹಾಗೂ ಚೀನಾಕ್ಕೆ ಮತ್ತು ಪೂರ್ವದಿಂದ ಆಗ್ನೇಯ ಏಷಿಯಾಕ್ಕೆ ರಫ್ತಾಯಿತು. ಟಿಬೆಟಿಯನ್ನರ, ಚೈನಾದವರ, ಮಂಗೋಲಿಯನ್ನರ, ಜಾವಾ ಹಾಗೂ ಲಾವೋ ದವರ ಉತ್ಪನ್ನಗಳನ್ನು ಒಳಗೊಂಡು, ಇವುಗಳು ಎಲ್ಲಾ ಆಗ್ನೇಯ ದೇಶಗಳಲ್ಲಿನ ಭಾಷಾಂತರಗಳಿಗೆ ದಾರಿ ಮಾಡಿಕೊಟ್ಟಿತು. ಭಾರತದಿಂದ ಈ ಗ್ರಂಥವನ್ನು ಬೋರ್ಜುಯ್ ಹೇಗೆ ತಂದರು ಕರಿರಕ್ ಉದ್ ದಮನಕ್ ಅಥವಾ ಕಲಿಲೆ ವ ದೆಮ್ನೆ ಎಂದು ಸಾಹಿತ್ಯಕವಾಗಿ ಅನುವಾದವಾಗಿ, ಮಧ್ಯ ಪರ್ಷಿಯಾ ಭಾಷೆಗೆ ಸಂಸ್ಕೃತದಿಂದ ಅದನ್ನು ಅವೆರ ಪ್ರಸಿದ್ಧ ವೈದ್ಯನಾದ ಬೋರ್ಜುಯ್ ಅನುವಾದಿಸಿದಾಗ, ಕ್ರಿಸ್ತ ಶಕ 570 ರ ಸುತ್ತಮುತ್ತ ಖುಸ್ರು ಅನುಶಿರವನ್ ರ ಸಸ್ಸಾನಿಡ್ ಪ್ರಾಂತದ ಆಳ್ವಿಕೆಯ ಅವಧಿಯಲ್ಲಿ, ಪಂಚತಂತ್ರ ವು ಪಶ್ಚಿಮಾಭಿಮುಖವಾಗಿಯೂ ಸಹ ವಲಸೆ ಹೋಯಿತು. ಶಾಹ ನಾಮಾ ದಲ್ಲಿ ಹೇಳಿದ ಒಂದು ಕಥನದ ಪ್ರಕಾರ, (ರಾಜರುಗಳ ಗ್ರಂಥ , ಪರ್ಷಿಯಾ ದಲ್ಲಿ ಹತ್ತನೆಯ ಶತಮಾನದ ಕೊನೆಯ ಹೊತ್ತಿಗೆ ಫಿರೊಡೌಸಿಯಿಂದ ಬರೆಯಲ್ಪಟ್ಟ ರಾಷ್ಟ್ರೀಯ ಪುರಾಣ) ಒಂದು ಮಿಶ್ರಣಕ್ಕೆ ಬೆರೆಸಿ ಹಾಗೂ ಒಂದು ಶವದ ಮೇಲೆ ಪ್ರೋಕ್ಷಿಸಿದಾಗ ಅದು ತಕ್ಷಣವೇ ಪುನಃ ಜೀವ ಪಡೆಯುತ್ತದೆ ಎಂದು ತಾನು ಒಂದು ಪರ್ವತೀಯ ಔಷಧೀಯ ಸಸ್ಯದ ಬಗ್ಗೆ ಓದಿದ್ದನ್ನು ಹುಡುಕಿಕೊಂಡು ಹಿಂದೂಸ್ತಾನಕ್ಕೆ ಒಂದು ಚಿಕ್ಕ ಪ್ರವಾಸ ಮಾಡಲು ಬೋರ್ಜುಯ್ ತನ್ನ ರಾಜರ ಅಪ್ಪಣೆಯನ್ನು ಕೋರಿದರು. ಅವರು ಅಲ್ಲಿಗೆ ತಲುಪಿದಾಗ, ಅವರು ಆ ಸಸ್ಯವನ್ನು ಕಾಣಲಿಲ್ಲ, ಮತ್ತು ಬದಲಿಗೆ ಒಬ್ಬ ಬುದ್ಧಿವಂತ ಸನ್ಯಾಸಿಯಿಂದ ಒಂದು ವಿಭಿನ್ನ ಅರ್ಥ ವಿವರಣೆ ತಿಳಿಸಲ್ಪಟ್ಟರು. ಆ ಸಸ್ಯವೇ ವಿಜ್ಞಾನಿ ವಿಜ್ಞಾನವೇ ಪರ್ವತ, ಶಾಶ್ವತವಾಗಿ ಜನಸ್ತೋಮದಿಂದ ಬಹು ದೂರವಾಗಿ ಸಿಗುವಂತಹದಲ್ಲ. ಜ್ಞಾನವಿಲ್ಲದ ಮನುಷ್ಯನೇ ಶವ, ಏಕೆಂದರೆ ಶಿಕ್ಷಣ ಪಡೆಯದಂತಹ ವ್ಯಕ್ತಿಯು ಎಲ್ಲೆಲ್ಲಿಯೂ ಶವದಂತೆ. ಜ್ಞಾನದ ಮುಖಾಂತರ ವ್ಯಕ್ತಿಯು ಪುನಃ ಜೀವಕಳೆ ಪಡೆಯುತ್ತಾನೆ. ಆ ಸನ್ಯಾಸಿಯು ಕಲಿಲ ಗ್ರಂಥವನ್ನು ಸೂಚಿಸುತ್ತಾರೆ, ಹಾಗೂ ಕೆಲವು ಪಂಡಿತರ ಸಹಾಯದಿಂದ ಆ ಪುಸ್ತಕವನ್ನು ಓದಿ ಅನುವಾದಿಸಲು ಅವರು ತಮ್ಮ ರಾಜರ ಒಪ್ಪಿಗೆಯನ್ನು ಪಡೆದರು. ಇಬ್ನ್ ಅಲ್ಮುಕ್ವಫ ರಿಂದ ಬರೆಯಲ್ಪಟ್ಟ ಅರಬ್ಬಿ ಉತ್ಕೃಷ್ಟ ಗ್ರಂಥ ಕ್ರಿಸ್ತ ಶಕ 570 ರಲ್ಲಿ ಬೋರ್ಜುಯ್ ರ ಪಹ್ಲವಿ ಅನುವಾದ (ಕಲಿಲೆ ವ ದಿಮ್ನೆ , ಈಗ ಕಳೆದು ಹೋಗಿದೆ) ಸಿರಿಯಾದ ಭಾಷೆಗೆ ತಕ್ಷಣ ತರ್ಜುಮೆಗೊಂಡಿತು ಮತ್ತು ಕಲಿಲ ವ ದಿಮ್ನ ಎಂಬ ಅರೆಬಿಕ್ ತಲೆಬರಹದಿಂದ, ಕ್ರಿಸ್ತ ಶಕ 750 ರ ಸುತ್ತಮುತ್ತ ಇಬ್ನ್ ಅಲ್ಮುಕ್ವಫ ರಿಂದ ಅರೆಬಿಕ್ ಭಾಷೆಗೆ ಸುಮಾರು ಎರಡು ಶತಮಾನಗಳ ನಂತರ ಭಾಷಾಂತರವಾಯಿತು. ಪರ್ಷಿಯಾದ ಮೇಲೆ ಮುಸ್ಲಿಂ ಆಕ್ರಮಣದ ನಂತರ (ಇರಾನ್), ಇಬ್ನ್ ಅಲ್ಮುಕ್ವಫ ರ ಅವತರಣಿಕೆಯು (ಈಗ ಇಸ್ಲಾಂ ಪೂರ್ವದ ಸಂಸ್ಕೃತ ಮೂಲದಿಂದ ಎರಡೂ ಭಾಷೆಗಳನ್ನು ತೆಗೆಯಲಾಗಿದೆ) ವಿಶ್ವ ಸಾಹಿತ್ಯವನ್ನು ಸಮೃದ್ಧಗೊಳಿಸುತ್ತಿರುವ ತಿರುಗುಗೂಟದಂತೆ ಜೀವದಿಂದುಳಿದಿರುವ ಗ್ರಂಥವಾಗಿ ಹೊರಹೊಮ್ಮಿದೆ. ಇಬ್ನ್ ಅಲ್ಮುಕ್ವಫ ರ ಕೃತಿಯನ್ನು ಅತ್ಯಂತ ಶ್ರೇಷ್ಠ ಅರೇಬಿಕ್ ಗದ್ಯ ಶೈಲಿಯ ಒಂದು ಮಾದರಿಯಾಗಿ ಪರಿಗಣಿತವಾಗಿದೆ ಹಾಗೂ ಅರೆಬಿಕ್ ಸಾಹಿತ್ಯದ ಗದ್ಯದ ಮೊದಲನೆಯ ಅನುಪಮ ಗ್ರಂಥವೆಂದು ಎಣಿಸಲ್ಪಟ್ಟಿದೆ. ಇಬ್ನ್ ಅಲ್ಮುಕ್ವಫ ರ ಎರಡನೆಯ ವಿಭಾಗದ ಅನುವಾದವು ಮಿತ್ರ ಲಾಭ ದ (ಗೆಳೆಯರ ಲಾಭ) ಸಂಸ್ಕೃತ ತತ್ವದ ವಿವರಣೆಯು ಬ್ರದರೆನ್ ಆಫ್ ಪ್ಯೂರಿಟಿ (ಇಖ್ವಾನ್ ಅಲ್ಸಫ )ಗೆ ಒಂದು ಗೂಡಿಸುವ ಆಧಾರವಾಯಿತೆಂದು ಕೆಲವು ವಿದ್ವಾಂಸರು ನಂಬುತ್ತಾರೆ ಅಸಾಧಾರಣ ಸಾಹಿತ್ಯಕ ಪ್ರಯತ್ನ, ಎನಸೈಕ್ಲೊಪಿಡಿಯಾ ಆಫ್ ದಿ ಬ್ರದರೆನ್ ಆಫ್ ಸಿನ್ಸೆರಿಟಿ ಯು ಭಾರತೀಯ, ಪರ್ಷಿಯಾ ಹಾಗೂ ಗ್ರೀಕ್ ಜ್ಞಾನವನ್ನು ಹೆಸರಿಲ್ಲದ ಕ್ರಿಸ್ತ ಶಕ ಒಂಬತ್ತನೆ ಶತಮಾನದ ಅರಬ್ ವಿಶ್ವಕೋಶ ಲೇಖಕರು ನಿಯಮಕ್ಕೊಳಪಡಿಸಿದರು. ಗೋಲ್ಡಜಿಹೆರ್ ರಿಂದ ಮಾಡಲ್ಪಟ್ಟ ಸಲಹೆ, ಫಿಲಿಪ್ ಕೆ. ಹಿಟ್ಟಿಯವರಿಂದ ನಂತರ ಬರೆಯಲ್ಪಟ್ಟ ಹಿಸ್ಟರಿ ಆಫ್ ದಿ ಅರಬ್ಸ್ ನಲ್ಲಿ ಬಹುಶಃ ಕಲಿಲಹ್ ವದಿಮ್ನಹ್ ನಲ್ಲಿ ಮರಕುಟಿಕದಂತಹ ಪರಿವಾಳದ ಕಥೆಯಿಂದ ಇರಬಹುದೆಂದು ಭಾವಿಸಿ ಆರಿಸಲ್ಪಟ್ಟಿದೆ, ಅದರಲ್ಲಿ ಬೇಟೆಗಾರನ ಬಲೆಗಳಿಂದ ಪರಸ್ಪರ ಪ್ರಾಮಾಣಿಕ ಗೆಳೆಯರಂತೆ ನಟಿಸಿ (ಇಖ್ವಾನ್ ಅಲ್ಸಫ ) ಪ್ರಾಣಿಗಳ ಒಂದು ಗುಂಪು ತಪ್ಪಿಸಿಕೊಂಡ ರೀತಿಗೆ ಸಂಬಂಧಿಸಿದಂತೆ ಪ್ರಸ್ತಾಪಿಸಲಾಗಿದೆ. ಈ ಕಥೆಯು ಒಂದು ಉದಾಹರಣೆಯಾಗಿ ಪ್ರಸ್ತಾಪಿಸಲ್ಪಟ್ಟು, ನೀತಿ ಶಾಸ್ತ್ರದ ಅವರ ವ್ಯವಸ್ಥೆಯ ಒಂದು ನಿರ್ಣಾಯಕ ಭಾಗವಾದ ರಿಸಾಲಾ (ಮೀಮಾಂಸೆ) ದಲ್ಲಿ ಪರಸ್ಪರ ಸಹಾಯದ ಬಗ್ಗೆ ಸಹೋದರರು ಮಾತನಾಡಿದಾಗ ಒಂದು ಆದರ್ಶದಂತೆ ಈ ಕಥೆಯು ತಿಳಿಸಲ್ಪಟ್ಟಿದೆ. ಯುರೋಪಿನ ಉಳಿದ ಭಾಗಗಳಿಗೆ ಹರಡುವಿಕೆ ಪಂಚತಂತ್ರದ ಸುಮಾರು ಎಲ್ಲಾ ಪೂರ್ವಆಧುನಿಕ ಯುರೋಪಿಯನ್ ಅನುವಾದಗಳು ಈ ಅರೇಬಿಕ್ ಅವತರಣಿಕೆಯಿಂದಲೇ ಉದ್ಭವಿಸಿದವು. ಅರೆಬಿಕ್ ನಿಂದ ಅದು 10 ನೆಯ ಅಥವಾ 11 ನೆಯ ಶತಮಾನದಲ್ಲಿ ಸಿರಿಯಾ ಭಾಷೆಗೆ, 1080 ರಲ್ಲಿ ಗ್ರೀಕ್ ಗೆ, 1121 ರಲ್ಲಿ ಅಬುಲ್ ಮಾಅಲಿ ನಸ್ರ್ ಅಲ್ಲಾಹ್ ಮುಂಶಿ ಯಿಂದ ಆಧುನಿಕ ಪರ್ಷಿಯಾಕ್ಕೆ ಮತ್ತು 1252 ರಲ್ಲಿ ಸ್ಪೇನ್ ಭಾಷೆಗೆ (ಹಳೆಯ ಕ್ಯಾಸ್ಟಿಲಿಯನ್, ಕಲೈಲ ಇ ದಿಮ್ನ ) ಪುನಃ ಭಾಷಾಂತರಿಸಲ್ಪಟ್ಟಿತು. ಬಹುಶಃ ಅತ್ಯಂತ ಪ್ರಮುಖವಾಗಿ, 12 ನೆಯ ಶತಮಾನದಲ್ಲಿ ರಬ್ಬಿ ಜೊಯ್ಲ್ ರಿಂದ ಹಿಬ್ರೂ ಭಾಷೆಗೆ ಅದು ಅನುವಾದಿಸಲ್ಪಟ್ಟಿತು. ಈ ಹಿಬ್ರೂ ಅವತರಣಿಕೆಯು ಡೈರೆಕ್ಟೋರಿಯಮ್ ಹ್ಯೂಮನ್ ವಿಟೇಯ್ ಅಥವಾ ಡೈರೆಕ್ಟರಿ ಆಫ್ ಹ್ಯೂಮನ್ ಲೈಫ್ ಎಂದು ಜಾನ್ ಆಫ್ ಕಪುವ ರಿಂದ ಲ್ಯಾಟಿನ್ ಭಾಷೆಗೆ ಭಾಷಾಂತರವಾಗಿ, 1480 ರಲ್ಲಿ ಮುದ್ರಿಸಲ್ಪಟ್ಟಿತು, ಹಾಗೂ ಅತ್ಯಂತ ಹೆಚ್ಚು ಯುರೋಪಿಯನ್ ಭಾಷಾ ಅವತರಣಿಕೆಗಳಿಗೆ ಆಕರವಾಯಿತು ಪಂಚತಂತ್ರದ ಜರ್ಮನ್ ಭಾಷಾಂತರ, ದಸ್ ಡೆರ್ ಬುಚ್ ಬೆಯ್ಸೆಪೈಲೆ 1483 ರಲ್ಲಿ ಮುದ್ರಿತವಾಯಿತು, ಬೈಬಲ್ ನಂತರ ಗ್ಯುಟೆನ್ಬರಗ್ ರ ಮುದ್ರಣಾಲಯದಿಂದ ಮುದ್ರಿಸಲ್ಪಟ್ಟ ಅತ್ಯಂತ ಮೊದಲಿನ ಗ್ರಂಥಗಳಲ್ಲೊಂದಾಗಿ ಪರಿಗಣಿತವಾಯಿತು. ಲ್ಯಾಟಿನ್ ಅವತರಣಿಕೆಯು 1552 ರಲ್ಲಿ ಆಂಟೊನಿಯೊ ಫ್ರಾನ್ಸಿಸ್ಕೊ ದೊನಿಯಿಂದ ಇಟಾಲಿಯನ್ ಭಾಷೆಗೆ ಅನುವಾದಿಸಲ್ಪಟ್ಟಿತು. ಈ ಅನುವಾದವು 1570 ರಲ್ಲಿ, ಮೊದಲನೆಯ ಇಂಗ್ಲೀಷ್ ಭಾಷಾಂತರಕ್ಕೆ ಆಧಾರವಾಯಿತು: ಸರ್ ಥಾಮಸ್ ನಾರ್ಥ ರಿಂದ ದಿ ಫೇಬಲ್ಸ್ ಆಫ್ ಬಿಡ್ಪಾಯ್ ಎಂದು ಎಲಿಜಬತ್ ಕಾಲದ ಇಂಗ್ಲೀಷ್ ಗೆ ಅನುವಾದಿಸಿದರು: ದಿ ಮಾರಲ್ ಫಿಲಾಸಫಿ ಆಫ್ ದೊನಿ (1888 ರಲ್ಲಿ ಜೋಸೆಫ್ ಜೆಕಬ್ಸ್ ರಿಂದ ಪುನಃ ಮುದ್ರಣವಾಯಿತು). ಭಾರತೀಯ ಸನ್ಯಾಸಿ ಪಿಲ್ಪೆ ಆಧಾರದ ಮೇಲೆ, 1679 ರಲ್ಲಿ ಲ ಫಾಂಟೈನ್ ರು ದಿ ಫೇಬಲ್ಸ್ ಆಫ್ ಬಿಡ್ಪಾಯ್ ಪ್ರಕಟಿಸಿದರು. ಆಧುನಿಕ ಯುಗ ತುಲನಾತ್ಮಕ ಸಾಹಿತ್ಯದ ಕ್ಷೇತ್ರದಲ್ಲಿ ಮೂಲ ಪ್ರವರ್ತಕನಾದ, ಥಿಯಡೊರ್ ಬೆನ್ಫಿ ಯ ಅಧ್ಯಯನಗಳಿಗೆ ಪಂಚತಂತ್ರವು ಆಧಾರವಾಗಿ ಸೇವೆ ಸಲ್ಲಿಸಿತು. ಹರ್ಟೆಲ್ ರ ಗ್ರಂಥದಲ್ಲಿ , , , ಮತ್ತು ಅತ್ಯುನ್ನತ ಸ್ಥಿತಿಗೇರುತ್ತಾ ಪಂಚತಂತ್ರದ ಇತಿಹಾಸವನ್ನು ಸುತ್ತುವರಿದಂತಹ ಕೆಲವು ಗೊಂದಲಗಳನ್ನು ಅವರ ಪ್ರಯತ್ನಗಳು ಸ್ಪಷ್ಟಪಡಿಸಲಾರಂಭಿಸಿದವು. ಹರ್ಟೆಲ್ ಭಾರತದಲ್ಲಿ ಅನೇಕ ಪರಿಷ್ಕೃತ ಗ್ರಂಥಗಳನ್ನು, ಅದರಲ್ಲೂ ವಿಶೇಷವಾಗಿ ದೊರಕಿರುವ ಅತ್ಯಂತ ಹಳೆಯ ಸಂಸ್ಕೃತ ಪರಿಷ್ಕೃತ ಗ್ರಂಥ ತಂತ್ರಖ್ಯಾಯಿಕ ವನ್ನು ಕ್ರಿಸ್ತ ಶಕ 1199 ರಲ್ಲಿ ಜೈನ ಸನ್ಯಾಸಿ ಪೂರ್ಣಭದ್ರರಿಂದ ಹಾಗೆಂದು ಕರೆಯಲಾಗುವ ಉತ್ತರ ಪಶ್ಚಿಮದ ಕೌಟುಂಬಿಕ ಸಂಸ್ಕೃತ ಕೃತಿಯನ್ನು ಕಡೆಯ ಪಕ್ಷ ಮೂರು ಹೆಚ್ಚು ಮೊದಲನೆಯದಾದ ಅವತರಣಿಕೆಗಳನ್ನು ಸೇರಿಸಿ ಮತ್ತೆ ಕ್ರಮಪಡಿಸಿದರು. ಅವೆಲ್ಲವೂ ಹಿಂದಿರುಗಿ ಹೋದವು ಎಂದು ಊಹಿಸಿಕೊಳ್ಳಲೇ ಬೇಕಾದಂತಹ ಕಳೆದುಹೋದ ಸಂಸ್ಕೃತ ಗ್ರಂಥಕ್ಕೆ ಉಪಯೋಗಕರವಾದ ಸಾಕ್ಷಿಯನ್ನು ಒದಗಿಸಲು ಕಂಡಂತಹ ಎಲ್ಲಾ ಗ್ರಂಥಗಳ ಒಂದು ಸೂಕ್ಷ್ಮ ಅಧ್ಯಯನವನ್ನು ಎಡ್ಗರ್ಟನ್ ಕೈಗೊಂಡರು ಮತ್ತು ತಾನು ಮೂಲ ಸಂಸ್ಕೃತ ಪಂಚತಂತ್ರವನ್ನು ಪುನರ್ರಚಿಸಿದೆನೆಂದು ನಂಬಿದರು ಈ ಅವತರಣಿಕೆಯು ದಕ್ಷಿಣದ ಕೌಟುಂಬಿಕ ಗ್ರಂಥವೆಂದು ತಿಳಿಯಲಾಗಿದೆ. ಆಧುನಿಕ ಅನುವಾದಗಳೊಳಗೆ ಗದ್ಯಕ್ಕೆ ಗದ್ಯ ಹಾಗೂ ಶಿಶು ಗೀತೆಗಳಿಗೆ ಪದ್ಯವಾಗಿ ಭಾಷಾಂತರಿಸಿದ, ಆರ್ಥರ್ ಡಬ್ಲು. ರೈಡರ್ ರ ಅನುವಾದವು, ಜನಪ್ರಿಯವಾಗಿ ಉಳಿದಿವೆ. ಚಂದ್ರ ರಾಜನ್ ರ ಅನುವಾದ (ವಾಯುವ್ಯದ ಗ್ರಂಥವನ್ನು ಆಧರಿಸಿದ) ಪೆಂಗ್ವಿನ್ ನಿಂದ (1993), ಮತ್ತು ಆಕ್ಸಫರ್ಡ್ ಯೂನಿವರ್ಸಿಟಿ ಪ್ರೆಸ್ (1997) ರಿಂದ ಪ್ಯಾಟ್ರಿಕ್ ಓಲಿವಿಲ್ಲೆಯ ಅನುವಾದವು (ದಕ್ಷಿಣದ ಗ್ರಂಥವನ್ನು ಆಧರಿಸಿದ) 1990 ರ ದಶಕದಲ್ಲಿ ಪಂಚತಂತ್ರದ ಎರಡು ಇಂಗ್ಲೀಷ್ ಅವತರಣಿಕೆಗಳು ಪ್ರಕಟಿಸಲ್ಪಟ್ಟವು. ಓಲಿವಿಲ್ಲೆಯ ಭಾಷಾಂತರವು 2006 ರಲ್ಲಿ ಕ್ಲೆ ಸಂಸ್ಕೃತ ಲೈಬ್ರರಿಯಿಂದ ಪುನಪ್ರಕಟಿಸಲ್ಪಟ್ಟಿತು. ಉಮ್ಯಾಡ್ ನ ರಾಜವಂಶವನ್ನು ಪರಾಭವಗೊಳಿಸಿದ ರಕ್ತಪಿಪಾಸು ಅಬ್ಬಾಸಿಡ್ ರ ಕಾಲದಲ್ಲಿ ಬಾಗ್ದಾದಿನಲ್ಲಿ ತಮ್ಮ ಅನುಪಮ ಕೃತಿಯನ್ನು ರಚಿಸುವಾಗ ಇಬ್ನ್ ಅಲ್ಮುಕ್ವಫರ ಸ್ವತಃ ಐತಿಹಾಸಿಕ ವಾತಾವರಣವು ಇತ್ತೀಚೆಗೆ, ಬಹುಸಂಸ್ಕೃತಿಯ ಕುವೈತ್ ನ ನಾಟಕಕಾರ ಸುಲೈಮಾನ್ ಅಲ್ಬಾಸ್ಸಮ್ ರಿಂದ ಸಹನೆಯುಳ್ಳ ಶೇಕ್ಸಪಿಯರ್ ಗೆ ಸಂಬಂಧಿಸಿದ ನಾಟಕದ ವಿಷಯವಾಯಿತು (ಸುಮಾರು ಗೊಂದಲಮಯವಾಗಿ, ಶಿರೋನಾಮೆಯೂ ಸಹ). ಇಬ್ನ್ ಅಲ್ಮುಕ್ವಫ ರ ಜೀವನ ಚರಿತ್ರೆಯ ಹಿನ್ನಲೆಯು ಇರಾಕಿನಲ್ಲಿ ಇಂದಿನ ಏರುತ್ತಿರುವ ರಕ್ತಪಿಪಾಸುತನದ ವಿವರಣಾತ್ಮಕ ಲಕ್ಷಣರೂಪಕವಾಗಿ ಉಪಯೋಗವಾಗುತ್ತಿದೆ ಸ್ಪಷ್ಟವಾದ ಗುಡ್ಡಗಾಡು, ಧಾರ್ಮಿಕ ಹಾಗೂ ರಾಜಕೀಯ ಸಮಾಂನಾತರಗಳನ್ನೊಳಗೊಂಡ, ಸಮಾನತೆಗಳ ವೈವಿಧ್ಯದ ಮೇಲೆ ನಾಗರೀಕತೆಗಳಿಗೆ ಮತ್ತೊಮ್ಮೆ ಒಂದು ಐತಿಹಾಸಿಕ ಸುಳಿಯಾಯಿತು. ಐದು ಪಂಚತಂತ್ರ ಕೃತಿಗಳ ಮೊದಲೆರಡರ ಮತ್ತೆ ಹೇಳುವ 1980 ರ ರ್ಯಾಮ್ಸೆ ವುಡ್ ರಿಗೆ ಅವರ ಪರಿಚಯದಲ್ಲಿ ಕಾದಂಬರಿಗಾರ್ತಿ ಡೋರಿಸ್ ಲೆಸ್ಸಿಂಗ್ ಬರೆಯುತ್ತಾರೆ, ಇವನ್ನೂ ಗಮನಿಸಿ ಅರ್ಥಶಾಸ್ತ್ರ ಕಥಾ (ಕಥೆ ಹೇಳುವ ವಿಧಾನ) ಕಥಾಸರಿತ್ಸಾಗರ ಟಿಪ್ಪಣಿಗಳು ಆವೃತ್ತಿಗಳು ಮತ್ತು ಅನುವಾದಗಳು (ಅನುಕ್ರಮವಾಗಿ ಹೊಂದಿಸಲಾಗಿದೆ.) ಸಂಸ್ಕೃತ ಗ್ರಂಥಗಳು ವಿಮರ್ಶಾತ್ಮಕ ಆವೃತ್ತಿಗಳು ಇತರೆ , ಗೂಗಲ್ ಪುಸ್ತಕಗಳು ಇಂಗ್ಲೀಷ್ ನಲ್ಲಿನ ಭಾಷಾಂತರಗಳು ಗೂಗಲ್ ಪುಸ್ತಕಗಳು ಗೂಗಲ್ ಪುಸ್ತಕಗಳು (ಸಿಲ್ವೆಸ್ಟ್ರೆ ಡಿ ಸ್ಟಾಸಿ ಅವರ ಪ್ರಾಯಾಸದ 1816 ರ ಬೇರೆ ಬೇರೆ ಅರೆಬಿಕ್ ಹಸ್ತಪ್ರತಿಗಳ ಸಂಗ್ರಹದಿಂದ ಭಾಷಾಂತರಿಸಲಾಗಿದೆ) ಆನ್ ಲೈನ್ ನಲ್ಲಿ ಸಹ ಇದೆ ಭಾಷಾಂತೆರದಲ್ಲಿ ಪರ್ಷಿಯನ್ ಸಾಹಿತ್ಯ , ಫಿಲೂ ಪ್ರೆಸ್, ಆಮಸ್ಟರ್ ಡ್ಯಾಂ ರಿಂದ 1970 ರಲ್ಲಿ ಪುನಃ ಮುದ್ರಣವಾಯಿತು ಗೂಗಲ್ ಪುಸ್ತಕಗಳು (ಸರ್ ಥಾಮಸ್ ನಾರ್ಥರಿಂದ ದಿ ಮಾರಲ್ ಫಿಲಾಸಫಿ ಆಫ್ ದೊನಿ ಯಿಂದ ಪ್ರೇರೇಪಿಸಲ್ಪಟ್ಟು ಪ್ರಕಟಿಸಿದ್ದು, 1570) ಟೇಲ್ಸ್ ವಿಥ್ ಇನ್ ಟೇಲ್ಸ್ ಪಿಲ್ಪಯ್ ನ ನೀತಿ ಕಥೆಗಳಿಂದ ಮಾರ್ಪಡಿಸಿದ್ದು, ಸರ್ ಆರ್ಥರ್ ಎನ್. ವೊಲ್ಲಸ್ಟನ್, ಜಾನ್ ಮುರ್ರೆ, ಲಂಡನ್ 1909 (1956 ರಲ್ಲಿ ಪುನಃ ಪ್ರಕಟಿಸಲ್ಪಟ್ಟಿತು, 1964 ರಲ್ಲಿ ಪುನರ್ಮದ್ರಣ ಹಾಗೂ ಜೈಕೊ ಪಬ್ಲಿಷಿಂಗ್ ಹೌಸ್ ರಿಂದ, ಬಾಂಬೆ, 1949) (ಹರ್ಟೆಲ್ ರ ವಾಯುವ್ಯ ಕೌಟುಂಬಿಕ ಸಂಸ್ಕೃತ ಗ್ರಂಥದ ಆಧಾರದ ಮೇಲೆ ಅನುವಾದ.) (ಪುನಃ ಮುದ್ರಣ: 1995) (ಇದೂ ಸಹ ವಾಯುವ್ಯ ಕೌಟುಂಬಿಕ ಗ್ರಂಥದಿಂದ.) (ಎಡ್ಗರ್ಟನ್ ರ ದಕ್ಷಿಣ ಕೌಟುಂಬಿಕ ಸಂಸ್ಕೃತ ಗ್ರಂಥದ ಆಧಾರದ ಮೇಲೆ ಭಾಷಾಂತರಿಸಲಾಗಿದೆ.) (ಚಂದ್ರ ರಾಜನ್ ಮತ್ತು ಪಾಟ್ರಿಕ್ ಓಲಿವಿಲ್ಲೆ ರಿಂದ ಮುಂಚೆ ಪ್ರಸ್ತಾವಿಸಿದ್ದಕ್ಕೆ ಪರಾಮರ್ಶೆಯ ಸಹಿತ ಒಂದು ಸಂಸ್ಕೃತ ಗ್ರಂಥದಿಂದ ಸುಲಭ ಸಾಧ್ಯವಾದ ಜನಪ್ರಿಯ ಮೂಲವಾಗಿ ಸಂಶೋಧಿಸಿದ ವಿಷಯ ಸಂಗ್ರಹಣೆ.) ಹೆಚ್ಚಿನ ಓದಿಗಾಗಿ <ವಿಭಾಗ ಶ್ರೇಣಿಆಕರಗಳುಚಿಕ್ಕ ಶೈಲಿ> ಎನ್. ಎಮ್. ಪೆನ್ಜರ್ (1924), ಸೋಮದೇವರ ಕಥಾ ಸರಿತ್ಸಾಗರದ (ಅಥವಾ ಓಷನ್ ಆಫ್ ಸ್ಟ್ರೀಮ್ಸ್ ಆಫ್ ಸ್ಟೋರಿ) ಸಿ.ಹೆಚ್. ಟವ್ನೆ ರ ಅನುವಾದದಲ್ಲಿ, ದಿ ಓಷನ್ ಆಫ್ ಸ್ಟೋರಿ : ಸಂಪುಟ ( ನ), ಪರಿಶಿಷ್ಟ 1: ಪುಟ. 207242 ಬುರ್ಜೊಯ್ ರ ಇಂಡಿಯಾದ ಪ್ರವಾಸ ಮತ್ತು ಕಲಿಲಹ್ ವ ದಿಮ್ನಹ್ ಪುಸ್ತಕದ ಆಕರ ಗೂಗಲ್ ಪುಸ್ತಕಗಳು, ಫ್ರಾಂಕೊಯ್ಸ್ ಡಿ ಬ್ಲೊಯ್ಸ್, ರಾಯಲ್ ಏಷಿಯಾಟಿಕ್ ಸೊಸೈಟಿ, ಲಂಡನ್, 1990 ಆನ್ ಕಲಿಲ ವ ದಿಮ್ನ ಮತ್ತು ಪರ್ಷಿಯನ್ ನ್ಯಾಷನಲ್ ಫೇರಿ ಟೇಲ್ಸ್ ಟ್ರಾಂಸೋಕ್ಷಿಯನಾ.ಕಾಂ, ಡಾ. ಪವೆಲ್ ಬಶಾರಿನ್ (ಮಾಸ್ಕೊ), ಟ್ರಾಂಸೋಕ್ಷಿಯನಾ 12, 2007 ದಿ ಪಾಸ್ಟ್ ವಿ ಶೇರ್ ದಿ ನಿಯರ್ ಈಸ್ಟ್ರನ್ ಆಂನ್ಸಿಸ್ಟರಿ ಆಫ್ ವೆಸ್ಟ್ರನ್ ಫೋಕ್ ಲಿಟರೇಚರ್ , ಇ. ಎಲ್. ರನೆಲಘ್, ಕ್ವಾಟ್ರೆಟ್ ಬುಕ್ಸ್, ಹೊರೈಜನ್ ಪ್ರೆಸ್, ನ್ಯೂಯಾರ್ಕ್, 1979 ಅರೇಬಿಯನ್ ನೈಟ್ಸ್ ಕಥೆಗಳಲ್ಲಿ ಅದರ ಕಥೆಗಳು ಹಾಗೂ ಕಥೆ ಹೇಳುವವರಿಂದ ಮೊರೊಕ್ಕೊ ದ ಬಗ್ಗ ಒಂದು ಹುಡುಕಾಟ ತಾಹಿರ್ ಶಾಹ್ ರಿಂದ, ಡಬಲ್ ದೇ, 2008. ಪೂರ್ವ ಮತ್ತು ಪಶ್ಚಿಮವನ್ನು ಸೇರಿಸುವ ಸೇತುವೆಯಂತೆ ಕಥೆ ಹೇಳುವ ಪುರಾತನ ಜೀವಂತ ಪರಂಪರೆಯನ್ನು ಪರಿಶೋಧಿಸುವಂತಹ ಒಂದು ಪುಸ್ತಕವಾಗಿದೆ, ಆದಾಗ್ಯೂ ಸಮಕಾಲೀನ ಮೊರೊಕ್ಕೊ ದೇಶದ ಸಂಸ್ಕೃತಿಯಲ್ಲಿ ಅತಿ ಹೆಚ್ಚು ಪೂರ್ಣವ್ಯಾಪ್ತಿಯಾಗುವಂತೆ ತೂಗಾಡುವ ಹಂತಗಳಲ್ಲಿ ಜೀವದಿಂದುಳಿದಿರುವಂತೆ ಭಾಸವಾಗುತ್ತದೆ. ಅಮೆಜಾನ್.ಕೊ.ಯುಕೆ ಇಬ್ನ್ ಅಲ್ಮುಕ್ವಫ, ಅಬ್ದುಲ್ಲಹ್. ಕಲಿಲಹ್ ಎಟ್ ದಿಮ್ನಹ್ . ಸಂಪಾದಕರು. ಪಿ. ಲೂಯಿಸ್ ಚಿಯ್ಕೊ. 3 ನೇ ಆವೃತ್ತಿ. ಬೈರೂತ್: ಇಮಪ್ರೈಮರಿ ಕ್ಯಾಥೋಲಿಕ್, 1947. ಇಬ್ನ್ ಅಲ್ಮುಕ್ವಫ, ಅಬ್ದುಲ್ಲಾಹ್. ಕಲಿಲ ಇ ದಿಮ್ನ . (ಸಂಪಾದಕರು) ಜುಅನ್ ಮ್ಯಾನುಎಲ್ ಚಖೊ ಬ್ಲೆಕ್ವ ಮತ್ತು ಮರಿಯಾ ಜೀಸಸ್ ಲಕರ್ರ. ಮಾಡ್ರಿಡ್: ಎಡಿಟೋರಿಯಲ್ ಕಾಸ್ಟಾಲಿಯ, 1984. ಕೆಲ್ಲರ್, ಜಾನ್ ಈಸ್ಟನ್, ಮತ್ತು ರಾಬರ್ಟ್ ವೈಟ್ ಲಿಂಕರ್. ಎಲ್ ಲಿಬ್ರೊ ಡಿ ಕಲಿಲ ಇ ಡಿಗ್ನ ಮಾಡ್ರಿಡ್ ಕಾಂನ್ಸೆಜೊ ಸುಪೀರಿಯರ್ ಡಿ ಇನವೆಸ್ಟಿಗೆಸಿಯೊನೆಸ್ ಸೆಂಟಿಫಿಕಾಸ್, 1967. ಲಥಾಮ್, ಜೆ.ಡಿ. ಇಬ್ನ್ ಅಲ್ಮುಕ್ವಫ ಮತ್ತು ಅರ್ಲಿ ಅಬ್ಬಾಸಿಡ್ ಪ್ರೊಸ್. ಅಬ್ಬಾಸಿಡ್ ಬೆಲ್ಲೆಸ್ಲೆಟರ್ಸ್ . (ಸಂಪಾದಕರು) ಜೂಲಿಯ ಆಸ್ಟಿಯನೆ, ಎಟ್ ಅಲ್. ಕೇಂಬ್ರಿಡ್ಜ್: ಕೇಂಬ್ರಿಡ್ಜ್ ಯುಪಿ, 1989. 4877. ಪಾರ್ಕರ್, ಮಾರ್ಗರೆಟ್. ದಿ ಡಿಡಾಕ್ಟಿಕ್ ಸ್ಟಕ್ಚರ್ ಮತ್ತು ಕಂಟೆಂಟ್ ಆಫ್ ಎಲ್ ಲಿಬ್ರೊ ಡಿ ಕಲಿಲ ಇ ದಿಗ್ನ ಮಿಯಾಮಿ, ಎಫ್ ಎಲ್: ಎಡಿಸಿಯೊನ್ಸ್ ಯುನಿವರ್ಸಲ್, 1978. ಫೆನ್ಜೊಲ್, ಪೆಡ್ರೊ. ಲಾಸ್ ಟ್ರಡೂಶಿಯೊನ್ಸ್ ಡೆಲ್ ಕಲಿಲ ಇ ದಿಮ್ನ. ಮಾಡ್ರಿಡ್,: ಇಮಪ್ರ. ಡಿ ರಮೋನ ವೆಲಾಸ್ಕೊ, ವಿಉಡ ಡಿ ಪಿ. ಪೆರೆಜ,, 19 ವಾಕ್ಸ್, ಡೇವಿಡ್ ಎ.ದಿ ಪರ್ಫಾಮೇಟಿವಿಟಿ ಆಫ್ ಇಬ್ನ್ ಅಲ್ಮುಕ್ವಫ ಸ್ ಕಲಿಲ ವದಿಮ್ನ ಮತ್ತು ಅಲ್ಮುಕಾಮತ್ ಅಲ್ಲುಜುಮಿಯ್ಯ ಆಫ್ ಅಲ್ಸರಕ್ವಸ್ತಿ. ಜರ್ನಲ್ ಆಫ್ ಅರೆಬಿಕ್ ಲಿಟರೇಚರ್ 34.12 (2003): 17889. ಬಾಹ್ಯ ಕೊಂಡಿಗಳು ಪಂಚತಂತ್ರ ದ ವಲಸೆಯ ಇತಿಹಾಸ ಭಾರತದಿಂದ ಪಂಚತಂತ್ರ ದ ಪಶ್ಚಿಮಾಭಿಮುಖದ ವಲಸೆಯ ಬಗ್ಗೆ 2009 ರ ಲಂಡನ್ನಿನ ವಿಡಿಯೊ ಚಿತ್ರ ಸಹಿತ ವರ್ಣನಾತ್ಮಕ ಭಾಷಣ ಕಲಿಲ ಮತ್ತು ದಿಮ್ನ ಫೇಬಲ್ಸ್ ಆಫ್ ಫ್ರೆಂಡ್ ಶಿಪ್ ಆಂಡ್ ಬಿಟ್ರೇಯಲ್ ಬಗ್ಗೆ ವುಡ್ ಅವರ 2008 ರ ಅಪ್ ಡೇಟ್ ಮಾಡಿದ ಉದ್ಧರಣ ಇಂಗ್ಲೀಷಿನಲ್ಲಿ ಪಂಚತಂತ್ರದ ಕಥೆಗಳು ಪಂಚತಂತ್ರದಿಂದ ಕಥೆಗಳು ಪಂಚತಂತ್ರದ ನೀತಿ ಕಥೆಗಳು ಮೌಖಿಕ ಪರಂಪರೆ ಕಥೆ ಹೇಳುವ ವಿಧಾನ ಸಂಸ್ಕೃತ ಗ್ರಂಥಗಳು ಭಾರತದ ಸಾಹಿತ್ಯ ಪರ್ಷಿಯನ್ ಸಾಹಿತ್ಯ ಅರೆಬಿಕ್ ಸಾಹಿತ್ಯ ಸಾಹಿತ್ಯದ ಇತಿಹಾಸ ಮಾನವೀಕೃತ ಪಾತ್ರಗಳನ್ನು ಹೊಂದಿರುವ ಸಾಹಿತ್ಯ ಸಣ್ಣ ನೀತಿ ಕಥೆಗಳು ಭಾರತೀಯ ಜಾನಪದ ಸಾಹಿತ್ಯ ಸಾಹಿತ್ಯ
ಈ ಲೇಖನವು ಪಿಯಾನೋ ಸಂಗೀತವಾದ್ಯದ ಬಗ್ಗೆ ಮಾಹಿತಿ ನೀಡುತ್ತದೆ, ಪಿಯಾನೋ ಸಂಗೀತಶೈಲಿಯ ಮಾಹಿತಿಗೆ ಪಿಯಾನೋ ಸಂಗೀತಶೈಲಿಗೆ ಭೇಟಿಕೊಡಿ ಪಿಯಾನೋ ಕೀಲಿಮಣೆಗಳನ್ನು ಹೊಂದಿದ ದೊಡ್ಡ ಸಂಗೀತವಾದ್ಯ. ಪಿಯಾನೋ ಎಂದರೆ, ಪಿಯಾನೋ ಫೋರ್ಟೆ ಎಂಬ ಇಟಾಲಿಯನ್ಪದದ ಮೃದು ಶಬ್ದ ಎಂಬರ್ಥ ಕೊಡುವ ಪದ. ಭಾರತದಲ್ಲಿ ಪ್ರಸಿದ್ಧವಾದ ಹಾರ್ಮೋನಿಯಂನಂತೆ ಇದರ ಕೀಲಿಗಳನ್ನು ಲಯಬದ್ದವಾಗಿ ಒತ್ತುವ ಮೂಲಕ ಸಂಗೀತ ರಚನೆ ಮಾಡಬಹುದು. ಪಿಯಾನೋವನ್ನು ಇಟಲಿದೇಶದ ಫ್ಲಾರೆನ್ಸ್ ನಗರದ ಬಾರ್ತಲೋಮ್ಯು ಕ್ರಿಸ್ಟೋಫರಿಯವರು ಕಂಡು ಹಿಡಿದರು. ನಿಖರವಾದ ಸಮಯವು ತಿಳಿದಿಲ್ಲವಾದರೂ ೧೭೦೦ ನೆಯ ಸುಮಾರಿಗೆ ಇದರ ಅವಿಷ್ಕಾರವಾಯಿತೆಂದು ಇತಿಹಾಸಕಾರರು ಹೇಳುತ್ತಾರೆ. ಬಾಹ್ಯ ಸಂಪರ್ಕಗಳು , , , , ಸಂಗೀತ ವಾದ್ಯಗಳು
ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ೧೯೧೫ ಸುಮಾರಿಗೆ ಕರ್ನಾಟಕ ಸಾಹಿತ್ಯ ಪರಿಷತ್ತು ಸ್ಥಾಪನೆಯಾಯಿತು.ಆಗ ಮೈಸೂರು ಅರಸರಾಗಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ ೧೯೩೫ರಲ್ಲಿ ಈ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತು ಎಂದು ಬದಲಾಯಿಸಿದರು.ಇದು ಕನ್ನಡ ಪುಸ್ತಕ ಪ್ರಕಟಣೆ, ಕನ್ನಡ ನಾಡುನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಂಸ್ಥೆ. ಈ ಸಂಸ್ಥೆ ಕರ್ನಾಟಕದಾದ್ಯಂತ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸುತ್ತದೆ. ಕನ್ನಡ ಸಾಹಿತ್ಯವನ್ನು ನಾಡಿನ ಮೂಲೆ ಮೂಲೆಗಳಲ್ಲಿ ಹಬ್ಬಿಸಲು ಈ ಹಿಂದೆ ಸಾಧ್ಯವಾಗಿಸಿದೆ. ಈ ಸಂಸ್ಥೆಯ ಈಗಿನ ಅಧ್ಯಕ್ಷರಾಗಿ ಡಾ. ಮಹೇಶ್ ಜೋಷಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳ ಪಟ್ಟಿ ೧೯೧೫ ರಿಂದ ೧೯೪೦ ರವರೆಗೆ ಕಸಾಪ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗುತ್ತಿತ್ತು. ಬಳಿಕ ಚುನಾವಣಾ ಪದ್ಧತಿ ಜಾರಿಗೆ ಬಂದಿತು. ಶ್ರೀ ಎಚ್. ವಿ. ನಂಜುಂಡಯ್ಯ ೧೯೧೫೧೯೨೦ ಸರ್. ಎಂ. ಕಾಂತರಾಜ ಅರಸ್ ೧೯೨೦೧೯೨೩ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಬಹದ್ದೂರ್ ೧೯೨೪ ೧೯೪೦ ಶ್ರೀ ಜಯಚಾಮರಾಜ ಒಡೆಯರ್ ಬಹದ್ದೂರ್ ೧೯೪೦೧೯೪೦ ಶ್ರೀ ಬಸವಪ್ರಭು ರಾಜಾ ಲಖಮನಗೌಡ ಸರದೇಸಾಯಿ ಬಹದ್ದೂರ್ ೧೯೪೧೧೯೪೬ ಶ್ರೀ ಲೋಕೂರ್ ನಾರಾಯಣರಾವ್ ಸ್ವಾಮಿರಾವ್ ೮೬೧೯೪೭ ರಿಂದ ೨೯೧೨೧೯೪೭ ಶ್ರೀ ತಿರುಮಲೆ ತಾತಾಚಾರ್ಯ ಶರ್ಮ ೨೯೧೨೧೯೪೭ ರಿಂದ ೬೩೧೯೪೯ ಶ್ರೀ ರೆವರೆಂಡ್ ಉತ್ತಂಗಿ ಚೆನ್ನಪ್ಪ ೬೩೧೯೪೯ ರಿಂದ ೧೭೧೨೧೯೫೦ ಶ್ರೀ ಎಂ. ಆರ್. ಶ್ರೀನಿವಾಸಮೂರ್ತಿ ೧೭೧೨೧೯೫೦ ರಿಂದ ೧೬೯೧೯೫೩ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ೩೦೯೧೯೫೩ ರಿಂದ ೯೫೧೯೫೪ ಪ್ರೊ. ಎ. ಎನ್. ಮೂರ್ತಿರಾವ್ ೯೫೧೯೫೪ ರಿಂದ೧೭೫೧೯೫೬ ಶ್ರೀ ಬಿ. ಶಿವಮೂರ್ತಿ ಶಾಸ್ತ್ರಿ ೧೭೫೧೯೫೬ ರಿಂದ ೨೫೧೦೧೯೬೪ ಪ್ರೊ. ಜಿ. ವೆಂಕಟಸುಬ್ಬಯ್ಯ ೨೫೧೦೧೯೬೪ ರಿಂದ ೧೧೬೧೯೬೯ ಶ್ರೀ ಜಿ. ನಾರಾಯಣ ೧೧೬೧೯೬೯ ರಿಂದ ೨೩೭೧೯೭೮ ಡಾ. ಹಂಪ ನಾಗರಾಜಯ್ಯ ೨೩೭೧೯೭೮ ರಿಂದ ೧೯೨೧೯೮೬ ಹೆಚ್. ಬಿ. ಜ್ವಾಲನಯ್ಯ ೧೯೨೧೯೮೬ ರಿಂದ ೧೧೧೧೯೮ ಪ್ರೊ. ಜಿ. ಎಸ್. ಸಿದ್ದಲಿಂಗಯ್ಯ ೭೨೨೧೯೮೯ ರಿಂದ ೧೪೫೧೯೯೨ ಶ್ರೀ ಗೊ. ರು. ಚನ್ನಬಸಪ್ಪ ೧೪೫೧೯೯೨ ರಿಂದ ೨೨೬೧೯೯೫ ಡಾ. ಸಾ. ಶಿ. ಮರುಳಯ್ಯ ೨೨೬೧೯೯೫ ರಿಂದ ೧೦೭೧೯೯೮ ಶ್ರೀ ಎನ್. ಬಸವಾರಾಧ್ಯ ೧೦೭೧೯೯೮ ರಿಂದ ೧೧೭೨೦೦೧ ಶ್ರೀ ಹರಿಕೃಷ್ಣ ಪುನರೂರು ೧೧೭೨೦೦೧ ರಿಂದ ೨೧೧೨೦೦೪ ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) ೨೧೧೨೦೦೪ ರಿಂದ ೩೦೪೨೦೦೮ ಡಾ. ನಲ್ಲೂರು ಪ್ರಸಾದ್ ಆರ್. ಕೆ ೨೭೮೨೦೦೮ ರಿಂದ ೨೭೨೨೦೧೨ ಪುಂಡಲೀಕ ಹಾಲಂಬಿ ೦೩೦೫೨೦೧೨ ರಿಂದ ೨೦೧೫ ಡಾ. ಮನು ಬಳಿಗಾರ್ ೦೩೦೩೨೦೧೬ ರಿಂದ ಹಾಲಿ ಅಧ್ಯಕ್ಷ ಡಾ. ಮಹೇಶ್ ಜೋಷಿ ೨೨೧೧೨೦೨೧ ರಿಂದ ೨೧೧೧೨೦೨೬ ಕನ್ನಡ ಸಾಹಿತ್ಯ ಸಮ್ಮೇಳನಗಳು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಕನ್ನಡ ಸಾಹಿತ್ಯ ಲೋಕದ ದಿಗ್ಗಜರು,ಸಾಹಿತ್ಯಾಸಕ್ತರು,ಕನ್ನಡ ಅಭಿಮಾನಿಗಳು ಬೃಹತ್ ಸಂಖ್ಯೆಯಲ್ಲಿ ಒಂದೆಡೆ ಸೇರಿ,ಪ್ರಚಲಿತ ಸಾಹಿತ್ಯದ ಸ್ಥಿತಿಗತಿಗಳನ್ನು ಚರ್ಚಿಸುವಂತಹ ಬಹುದೊಡ್ಡ ವೇದಿಕೆಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಪ್ರತಿ ವರ್ಷ ನಾಡಿನ ಬೇರೆ ಬೇರೆ ಸ್ಥಳಗಳಲ್ಲಿ ೩ ಅಥವಾ ೪ ದಿನಗಳ ಕಾಲ ಏರ್ಪಾಡಾಗುವ ಸಾಹಿತ್ಯ ಸಮ್ಮೇಳನದಲ್ಲಿ ವಿಚಾರ ಗೋಷ್ಠಿಗಳು,ಕವಿ ಗೋಷ್ಠಿಗಳು,ಸಂವಾದಗಳು,ಸಾಂಸ್ಕೃತಿಕ ಕಾರ್ಯಕ್ರಮಗಳು ಉನ್ನತ ಮಟ್ಟದಲ್ಲಿ ನಡೆಯುತ್ತವೆ. ನೃಪತುಂಗ ಸಾಹಿತ್ಯ ಪ್ರಶಸ್ತಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೃಪತುಂಗ ಸಾಹಿತ್ಯ ಪ್ರಶಸ್ತಿ ಇಂದು ಬಹಳ ಜನರಿಗೆ ನೃಪತುಂಗ ಪ್ರಶಸ್ತಿ ದೊರೆತಿದೆ ನಿಧಿಗಳು ಕನ್ನಡ ನಿಧಿ (ಶತಮಾನದ ಹೊಸ್ತಿಲಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದಿಷ್ಟು ಹಣಕಾಸು ಕ್ರೋಢಿಕರಿಸಬೇಕು. ಆ ಮೂಲಕ ಕನ್ನಡ ತಾಯಿಯ ಸೇವೆಯನ್ನು ವ್ಯಾಪಕಗೊಳಿಸಬೇಕೆಂಬ ನಿಟ್ಟಿನಲ್ಲಿ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಡಾ. ನಲ್ಲೂರು ಪ್ರಸಾದ್ ಆರ್.ಕೆ. ಅವರು ಕನ್ನಡ ನಿಧಿ ಎಂಬ ವಿನೂತನ ಯೋಜನೆಯನ್ನು ಪ್ರಾರಂಭಿಸಿದರು. ಈ ನಿಧಿಗೆ ಹತ್ತು ರೂಪಾಯಿಯಿಂದ ಗರಿಷ್ಠ ಎಷ್ಟು ಬೇಕೆಂದರೂ ಉದಾರವಾಗಿ ದೇಣಿಗೆ ನೀಡಬಹುದು).ಈ ದೇಣಿಗೆ ತೆರಿಗೆ ವಿನಾಯಿತಿಯನ್ನೂ ಪಡೆದಿದೆ.ಈ ಹಣವನ್ನು ಬ್ಯಾಂಕಿನ ಖಾತೆಗೆ ಜಮಾ ಮಾಡಿ ಮೂಲಧನವನ್ನು ಯಾವುದೇ ಸಂದರ್ಭದಲ್ಲಿ ಬಳಸದಂತೆ ಹಾಗೂ ಆ ಹಣದಿಂದ ಬಡ್ಡಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಅದರಲ್ಲೂ ಜಿಲ್ಲಾ,ತಾಲೂಕು ಮತ್ತು ಹೋಬಳಿ ಮಟ್ಟದವರೆಗೂ ವಿಸ್ತರಿಸಲಾಗುತ್ತಿದೆ.ಕನ್ನಡ ನಿಧಿ ಯೋಜನೆ ಆರಂಭಗೊಂಡ ತಕ್ಷಣವೇ ಎಲ್ಲ ಕನ್ನಡಿಗರೂ ತಮ್ಮ ಉದಾರ ಹಸ್ತವನ್ನು ಚಾಚಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಶ್ರೀ ಟಿ.ಎ.ನಾರಾಯಣಗೌಡ ಕನ್ನಡ ನಿಧಿಗೆ ೫೦,೦೦೦ ರೂ.ನೀಡುವ ಮೂಲಕ ಈ ಯೋಜನೆಗೆ ಚಾಲನೆ ನೀಡಿದ್ದಾರೆ.ಅದೇ ರೀತಿ ಮಾಜಿ ಶಾಸಕಿ ಹಾಗೂ ಪ್ರಸಿದ್ಧ ವಕೀಲರಾದ ಶ್ರೀಮತಿ ಪ್ರಮೀಳಾ ನೇಸರ್ಗಿ ೧,೦೦,೦೦೧ ರೂ.ನೀಡುವ ಮೂಲಕ ಕನ್ನಡ ಕೈಂಕರ್ಯದಲ್ಲಿ ತಾವೂ ತೊಡಗಿಸಿಕೊಂಡಿದ್ದಾರೆ. ಅನೇಕ ಕನ್ನಡಿಗರು ಹಾಗೂ ಸಂಘ ಸಂಸ್ಥೆಗಳು ನಿಧಿಗೆ ತಮ್ಮ ಕಾಣಿಕೆ ನೀಡುತ್ತಿದ್ದಾರೆ. ಕನ್ನಡ ನಿಧಿಗೆ ದೇಣಿಗೆ ನೀಡುವ ಆಸಕ್ತಿಯುಳ್ಳವರು ಬೆಂಗಳೂರಿನ ಸಿಂಡಿಕೇಟ್ ಬ್ಯಾಂಕ್ ಚಾಮರಾಜಪೇಟೆ ಶಾಖೆಯ ಖಾತೆ ಸಂಖ್ಯೆ ೨೦೧೫೬೬೭೭ ಇಲ್ಲಿಗೆ ನೇರವಾಗಿ ಹಣವನ್ನು ಜಮಾ ಮಾಡಿ ಚಲನ್ ಪ್ರತಿಯನ್ನು ಪರಿಷತ್ತಿಗೆ ಕಳುಹಿಸಿದರೆ ಅಂತಹ ಉದಾರಿಗಳಿಗೆ (೧೦೦೦ ರೂ.ಗಿಂತ ಮೇಲ್ಪಟ್ಟ)ಕನ್ನಡ ಮಾನಧನರುಎಂಬ ಅಭಿನಂದನಾ ಪತ್ರವನ್ನು ಪರಿಷತ್ತು ನೀಡಿ ಗೌರವಿಸಲಿದೆ.ಈ ನಿಧಿಗೆ ನೀಡುವ ಹಣಕ್ಕೆ ೮೦ ಜಿ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಇರುತ್ತದೆ. ದತ್ತಿನಿಧಿ ( ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳಿಗೆ ಸಂಬಂಧಿಸಿದಂತೆ ಪ್ರಶಸ್ತಿ ನೀಡಲು ಹಾಗೂ ಕಾರ್ಯಕ್ರಮಗಳನ್ನು ನಡೆಸಲು ಮತ್ತು ಸ್ಪರ್ಧೆಗಳನ್ನು ಏರ್ಪಡಿಸಲು ಅನೇಕ ಸಾಹಿತ್ಯಾಭಿಮಾನಿ ದಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿಗಳನ್ನು ಸ್ಥಾಪಿಸಿದ್ದಾರೆ).ಈ ಮೂಲನಿಧಿಯನ್ನು ಶಾಶ್ವತ ಠೇವಣಿಯಾಗಿಟ್ಟು ಅದರಿಂದ ಬರುವ ಬಡ್ಡಿ ಹಣದಲ್ಲಿ ಪ್ರತಿವರ್ಷ ಕಾರ್ಯಕ್ರಮಗಳನ್ನು ದಾನಿಗಳ ಅಪೇಕ್ಷೆಯಂತೆ ನಡೆಸಿಕೊಂಡು ಬರಲಾಗುತ್ತಿದೆ.ಈಗ ಇಂತಹ ೮೫೦ ದತ್ತಿನಿಧಿಗಳಿವೆ. ಉಪನ್ಯಾಸ, ಸಾಹಿತ್ಯಕ ಸ್ಪರ್ಧೆ, ಗ್ರಂಥಭಂಡಾರಕ್ಕೆ ಪುಸ್ತಕ ಖರೀದಿ, ಪುಸ್ತಕ ಪ್ರಕಟಣೆ, ಬಹುಮಾನ, ಪ್ರಶಸ್ತಿ ನೀಡಿಕೆ ಇತ್ಯಾದಿ ಆಶಯಗಳನ್ನು ತಿಳಿಸಿದ ದತ್ತಿನಿಧಿಗಳಿವೆ.( ಚಾವುಂಡರಾಯ ಪ್ರಶಸ್ತಿ, ಬಿ. ಸರೋಜಾದೇವಿ ಪ್ರಶಸ್ತಿ, ಹಾ.ಮಾ.ನಾ ಪ್ರಶಸ್ತಿ, ಭಾರತೀಸುತ ಪ್ರಶಸ್ತಿ ಇತ್ಯಾದಿ ಸಾಹಿತ್ಯಕ ಪ್ರಶಸ್ತಿಗಳನ್ನು ಪ್ರತಿವರ್ಷ ಆಯ್ದ ಹಿರಿಯ ನೆರವಾಗುತ್ತದೆ) ಶಿಕ್ಷಣ ಸಾಹಿತ್ಯ ಪರೀಕ್ಷೆಗಳು ೧೯೪೦ನೇ ಇಸವಿಯಿಂದ ಪ್ರಾರಂಭವಾಗಿರುವ ಸಾಹಿತ್ಯ ಪರೀಕ್ಷೆಗಳು ಪರಿಷತ್ತಿನ ಜನಪ್ರಿಯ ಕಾರ್ಯ ಚಟುವಟಿಕೆಗಳಲ್ಲಿ ಒಂದು. ಕನ್ನಡ ಸಾಹಿತ್ಯಸಂಸ್ಕೃತಿಯ ತಿಳಿವಳಿಕೆನೀಡುವ ಕನ್ನಡ ಕಾವ, ಜಾಣ, ರತ್ನ ಪರೀಕ್ಷೆಗಳನ್ನು ಪ್ರತಿ ವರ್ಷ ನಡೆಸಿಕೊಂಡು ಬರುವುದರ ಜೊತೆಗೆ ಹೊಸದಾಗಿ ಕನ್ನಡ ಕಲಿಯುವ ಆಸಕ್ತರಿಗಾಗಿ ಕನ್ನಡ ಪ್ರವೇಶವೆಂಬ ಪರೀಕ್ಷೆಯನ್ನು ಏರ್ಪಡಿಸುತ್ತಿದೆ. ಪರೀಕ್ಷೆಗಳು ಸರ್ಕಾರದಿಂದ ಅಂಗೀಕಾರ ಪಡೆದಿರುತ್ತವೆ. ಇದುವರೆಗೆ ಒಂದು ಲಕ್ಷಕ್ಕೂ ಹೆಚ್ಚು ಜನ ಸಾಹಿತ್ಯ ಪರೀಕ್ಷೆಗಳ ಪ್ರಯೋಜನ ಪಡೆದಿದ್ದಾರೆ. ಎಂ.ಫಿಲ್ ಮತ್ತು ಪಿ.ಹೆಚ್.ಡಿ ಕನ್ನಡ ಎಂ.ಫಿಲ್ ಮತ್ತು ಪಿ.ಹೆಚ್.ಡಿ ಕನ್ನಡ ವಿಶ್ವವಿದ್ಯಾಲಯ, ಹಂಪಿಯು ೨೦೧೧ನೇ ಸಾಲಿನಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕನ್ನಡ ಎಂ.ಫಿಲ್ ಮತ್ತು ಪಿ.ಹೆಚ್.ಡಿ ಪದವಿಗಳಿಗೆ ಮಾನ್ಯತೆ ನೀಡಿದೆ. ಶಾಸನಶಾಸ್ತ್ರ ಮತ್ತು ಜಾನಪದ ಡಿಪ್ಲೋಮಾ ತರಗತಿಗಳು ಶಾಸನಶಾಸ್ತ್ರ ಮತ್ತು ಜಾನಪದ ಡಿಪ್ಲೋಮಾ ತರಗತಿಗಳು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುತ್ತಿವೆ. ಇದು ೯ ತಿಂಗಳ ಕೋರ್ಸ್ ಆಗಿದ್ದು, ಹೆಚ್ಚಿನ ಮಾಹಿತಿಗಾಗಿ ಪರಿಷತ್ತನ್ನು ಸಂಪರ್ಕಿಸುವುದು. ಕನ್ನಡದ ಅಕಾಡಮಿಗಳು ವೆಬ್ಸೈಟ್ ಕನ್ನಡ ಸಾಹಿತ್ಯ ಪರಿಷತ್ತಿನ ಅಧಿಕೃತ ಜಾಲತಾಣ: ಓದಿ ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಿ ಬೆಳೆಸಿದ ಮಹನೀಯರು, (ಲೇ: ಎಸ್.ವಿ. ಶ್ರೀನಿವಾಸರಾವ್) ಹೊರಗಿನ ಸಂಪರ್ಕಗಳು ಕಸಾಪ 24ನೇ ಅಧ್ಯಕ್ಷರಾಗಿ ಪುಂಡಲೀಕ ಹಾಲಂಬಿ ಒನ್ ಇಂಡಿಯಾ ಕನ್ನಡ ಮೇ ೨, ೨೦೧೨] ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗದ್ದಲ, ಗಲಾಟೆ ಪ್ರಜಾವಾಣಿ ಸೆಪ್ಟೆಂಬರ್ ೨೬, ೨೦೦೫ ಕನ್ನಡ ವಿಶ್ವವಿದ್ಯಾಲಯ ಇಜ್ಞಾನ,ಟಿ.ಜಿ.ಶ್ರೀನಿಧಿ, ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯ : ವಿಶ್ವಾಸಾರ್ಹತೆ ಹೆಚ್ಚಿಸಿಕೊಂಡ ಕಸಾಪಬೇಳೂರು ಸುದರ್ಶನ ಪರಿಷತ್ತು ಕರ್ನಾಟಕ
ಸುಧಾ ವಾರಪತ್ರಿಕೆಯು ಕನ್ನಡದ ಹಳೆಯ ವಾರ ಪತ್ರಿಕೆಗಳಲ್ಲೊಂದು. ಬೆಂಗಳೂರಿನ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಸಮೂಹದಿಂದ ಪ್ರಕಾಶಿತವಾಗುತ್ತಿದೆ. ಇದು ೧೯೬೫ ರಲ್ಲಿ ಆರಂಭವಾಯಿತು. ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ ದಿನಪತ್ರಿಕೆಗಳನ್ನು ಪ್ರಕಟಿಸುತ್ತಿದ್ದ ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವಿಷಯ ವೈವಿಧ್ಯವನ್ನು ಒಳಗೊಂಡ, ಮೋಹಕ ಮುದ್ರಣ, ವಿನ್ಯಾಸಗಳಿದ್ದ ಸುಧಾ ವಾರಪತ್ರಿಕೆಯನ್ನು ಆರಂಭಿಸಿದಾಗ ಕನ್ನಡ ಸಾಪ್ತಾಹಿಕಗಳ ಇತಿಹಾಸದಲ್ಲಿ ಹೊಸಶಕೆ ಆರಂಭವಾಯಿತೆಂದೇ ಹೇಳಬೇಕು. ಸಂಪಾದಕರು ಪ್ರಜಾವಾಣಿಯ ಸುದ್ದಿಸಂಪಾದಕರಾಗಿದ್ದ ಇ. ಆರ್. ಸೇತೂರಾಂ ಮೊದಲ ಸಂಪಾದಕರು. ಪ್ರಜಾವಾಣಿ, ಸಾಪ್ತಾಹಿಕ ಪುರವಣಿ ಸಂಪಾದಕ ಎಂ. ಬಿ. ಸಿಂಗ್. (ನೋಡಿ ಸಿಂಗ್,ಎಂಬಿ) ಸಹಸಂಪಾದಕರು. 1980ರಲ್ಲಿ ಎಂ.ಬಿ.ಸಿಂಗ್ ಸುಧಾದ ಸಂಪಾದಕರಾದರು. ಎಂ.ಬಿ.ಸಿಂಗ್ ನಂತರ ಪ್ರಿಂಟರ್ಸ್ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರಾದ ಕೆ.ಎನ್.ಹರಿಕುಮಾರ್ ಸಂಪಾದಕರಾದರು. ಅವರ ನಂತರ ಕೆ.ಎನ್. ಶಾಂತಕುಮಾರ್ ಸಂಪಾದಕರಾದರು. ಈ ಪತ್ರಿಕೆಯ ಈಗಿನ ಸಂಪಾದಕರಾಗಿ ಶ್ರೀ ಕೆ.ಎನ್ .ತಿಲಕಕುಮಾರ್ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೆಯ ವಸ್ತು, ವೈವಿಧ್ಯ ಮತ್ತು ವಿಶೇಷಗಳು ಪತ್ರಿಕೆಯ ಗುರಿ: ಮನೆಮಂದಿಗೆಲ್ಲಾ, ಮನೋರಂಜನೆ ಮನೋವಿಕಾಸ, ಈ ಕೌಟುಂಬಿಕ ಪತ್ರಿಕೆಯ ಆಕಾರ ಡೆಮಿ 14 ಆಕಾರ. ಮಹಿಳೆಯರು ಸರಾಗವಾಗಿ ತಮ್ಮ ಹೆಗಲಚೀಲದಲ್ಲಿ ಇಟ್ಟುಕೊಳ್ಳಬಹದಾದ ಆಕಾರ. ಖ್ಯಾತ ಕಲಾವಿದ ಅಪ್ಪುಕುಟ್ಟನ್ ಆಚಾರಿ ಅವರ ಕಲಾಕೃತಿಯನ್ನೇ ಮುಖ ಪುಟವನ್ನಾಗಿ ಮಾಡಿಕೊಂಡ ಸುಧಾದ ಮೊದಲ ಸಂಚಿಕೆ ಪ್ರಕಟವಾದದ್ದು. ಸಾಮಾನ್ಯವಾಗಿ ಆ ಕಾಲದ ಸಾಪ್ತಾಹಿಕಗಳಲ್ಲಿ ವಾರ ಪತ್ರಿಕೆಗಳ ಮುಖ್ಯ ಫಲಗಳಲ್ಲಿ ರಾರಾಜಿಸುತ್ತಿದ್ದ ಸಿನಿಮಾ ತಾರೆಯರ ಚಿತ್ರ. ಆದರೆ ಸುಧಾ ಮುಖಪುಟದಲ್ಲಿ ನಾಡಿನ ಕಲಾವಿದರ ಚಿತ್ರಕಲಾಕೃತಿಗಳನ್ನು ಪ್ರಕಟಿಸಿತು, ಅದು ಚಲನಚಿತ್ರವನ್ನು ತಿರಸ್ಕರಿಸಲಿಲ್ಲ. ಅದಕ್ಕೂ ಪ್ರಾಮಖ್ಯ ನೀಡಿತು. ಖ್ಯಾತ ಕಲಾವಿದರು, ಸಾಹಿತಿಗಳನ್ನು ಸುಧಾ ತನ್ನ ಅಂಕಣಕಾರರನ್ನಾಗಿ ಆಹ್ವಾನಿಸಿ, ಅವರಿಂದ ನಿರಂತರವಾಗಿ ಬರೆಸಿತು. ಪ್ರಸಿದ್ಧ ಸಾಹಿತಿಗಳಾದ ಜೆ.ಪಿ. ರಾಜರತ್ನಂ ಮತ್ತು ಬೀಚಿ ಮೊದಲಾದವರು ಸುಧಾ ವಾರಪತ್ರಿಕೆಯೊಂದಿಗೆ ನಿಕಟ ಬಾಂಧವ್ಯ ಕೊನೆಗೊಂಡದ್ದು ಅವರ ಕಣ್ಮರೆಯಿಂದಲೇ. ರಾಜರತ್ನಂ ಅವರ ವಿಚಾರರಶ್ಮಿ ಅಂಕಣ ಅವರ ಪಾಂಡಿತ್ಯ, ಬರಹದ ಮೋಹಕ ಶೈಲಿಗಳಿಂದ ಅತ್ಯಂತ ಜನಪ್ರಿಯವಾಯಿತು. ಇದಲ್ಲದೆ, ಮಕ್ಕಳಿಗಾಗಿ ನೂರಾರು ಕಥೆಗಳನ್ನು ಅವರು ಸುಧಾದಲ್ಲಿ ಬರೆದರು. ಓದುಗರಿಂದ ಬಂದ ಪ್ರಶ್ನೆಗಳಿಗೆ ಉತ್ತರ ನೀಡುವ ನೀವು ಕೇಳಿದಿರಿ? ಅಂಕಣದಲ್ಲಿ ಖ್ಯಾತ ಸಾಹಿತಿ ಬೀಚಿ ಉತ್ತರಭೂಪ ಅಂಕಿತದಲ್ಲಿ ಅವರು ಉತ್ತರಿಸುತ್ತಿದ್ದು, ಅದು ಅತ್ಯಂತ ಅಚ್ಚುಮೆಚ್ಚಿನ ಅಂಕಣವಾಗಿ ಪ್ರಸಿದ್ಧವಾಯಿತು. ಸುಧಾ ವಾರಪತ್ರಿಕೆಯಲ್ಲಿ ಎಚ್ಚೆಸ್ಕೆಯವರ ಅಂಕಣಗಳು. ಕನ್ನಡ ಪತ್ರಿಕೋದ್ಯಮದಲ್ಲೇ ಒಂದು ಅಪೂರ್ವ ಸಾಧನೆ ಮತ್ತು ದಾಖಲೆ. ಮೊದಲು ವಾರದ ವ್ಯಕ್ತಿ ಮತ್ತು ಅನಂತರ ವ್ಯಕ್ತಿ ವಿಷಯ ಅಂಕಣಗಳಲ್ಲಿ ಅವರು ಜಗತ್ತಿನ ಹಲವು ಜನರನ್ನು ಪರಿಚಯಸಿದ್ದಾರೆ. ಸಮದರ್ಶಿ ಹೆಸರಿನಲ್ಲಿ ಮೊದಲು ವಾರದಿಂದ ವಾರಕ್ಕೆ ಮತ್ತು ನಂತರ ಸುದ್ದಿಯ ಹಿನ್ನಲೆ ಅಂಕಣಗಳಲ್ಲಿ ಜಗತ್ತಿನ ಪ್ರತಿಯೊಂದು ಪ್ರಮುಖ ವಿದ್ಯಮಾನವನ್ನೂ ಅವರು ವಿಶ್ಲೇಷಿಸಿದ್ದಾರೆ. ಎಚ್ಚೆಸ್ಕೆ ಅವರ ಅಚ್ಚುಕಟ್ಟು ಬರವಣಿಗೆ ಪತ್ರಕರ್ತರಿಗೊಂದು ಮಾದರಿ. ಹಿರಿಯ ಲೇಖಕರಿಗೆ ಮನ್ನಣೆ ನೀಡಿದ ಸುಧಾ, ಹೊಸ ಪೀಳಿಗೆಯ ಬರಹಗಾರರಿಗೆ ಪ್ರೋತ್ಸಾಹ ಮಾರ್ಗದರ್ಶನ ನೀಡಿತು. ಸೇತೂರಾಮ್ ಅವರು ಸುಧಾದ ಸಂಪಾದಕರಾಗಿದ್ದಷ್ಟು ಕಾಲ ಬರೆದ ಸಂಪಾದಕೀಯಗಳು ಹಲವು ವಿಷಯಗಳ ಬಗ್ಗೆ ಕನ್ನಡಿ ಹಿಡಿದಿವೆ. ಬೆಳಕು ಚೆಲ್ಲಿವೆ. ಚಿತ್ರಮಯ ಜ್ಞಾನಕೋಶ, ಚಲನಚಿತ್ರರಂಗಭೂಮಿಯ ಕಲಾವಿದರ ಆತ್ಮಕಥನವಾದ ಬಣ್ಣದ ಬದುಕು ಲೇಖನ ಮಾಲಿಕೆ ವೈದ್ಯಕೀಯ ಲೇಖನಗಳು, ವನ್ಯಜೀವನ, ಪ್ರವಾಸ, ಇತಿಹಾಸ ಕುರಿತ ಲೇಖನಗಳು ಪ್ರಸಿದ್ಧ ಲೇಖಕರ ವೈವಿಧ್ಯಮಯ ಬರಹಗಳು. ಖ್ಯಾತ ಸಾಹಿತಿಗಳ ಕಥೆಗಳು ಮತ್ತು ಕಾದಂಬರಿ ಧಾರವಾಹಿಗಳು ಮುಂತಾದವುಗಳಿಂದ ಸುಧಾ ಕನ್ನಡ ಓದುಗ ಸಮೂಹದಲ್ಲಿ ಉನ್ನತ ಸ್ಥಾನವನ್ನು ಪಡೆಯಿತು. ಸದಭಿರುಚಿಯ ಕುಟುಂಬ ಪತ್ರಿಕೆಯಾಗಿ ಬೆಳೆಯಿತು. ಒಳ್ಳೆಯ ಸಾಹಿತ್ಯ ಸೃಷ್ಟಿಗೆ ನೆರವಾಗುವ ದೃಷ್ಟಿಯಿಂದ ಸುಧಾ ಯುಗಾದಿ ಕಾದಂಬರಿ ಸ್ಪರ್ಧೆಯನ್ನು ಆರಂಭಿಸಿತು 15 ಸಾವಿರ ರೂಪಾಯಿ ಮೌಲ್ಯದ ಬಹುಮಾನಗಳಿದ್ದ ಈ ಸ್ಪರ್ಧೆ ಕೆಲವು ಕಾರಣಗಳಿಂದ ನಿಂತುಹೋಯಿತು. ಸುಧಾ ಈವರೆಗೆ ಸುಮಾರು 150 ಕ್ಕೂ ಹೆಚ್ಚು ಕಾದಂಬರಿಗಳನ್ನು ಧಾರಾವಾಹಿಯಾಗಿ ಪ್ರಕಟಿಸಿದೆ, ಹಲವು ಚಲನಚಿತ್ರಗಳಾಗಿವೆ. ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಹಾಗೆ ಸುಧಾದ ಯುಗಾದಿ ವಿಶೇಷಾಂಕ ಸಾಹಿತ್ಯ ಸಂಸ್ಕ್ರತಿ, ಸಮಾಜಗಳನ್ನು ಕುರಿತ ಪ್ರಬುದ್ಧ ಬರಹಗಳ ಸಂಕಲನವಾಗಿ ಜನಪ್ರಿಯವಾಗಿದೆ. ಯುಗಾದಿ ವಿಶೇಷಾಂಕದೊಂದಿಗೆ ಪ್ರತಿವರ್ಷ ಒಂದು ಪುಸ್ತಕವನ್ನು ಓದುಗರಿಗೆ ಉಚಿತವಾಗಿ ನೀಡುವ ರೂಢಿಯೂ ಇದೆ. 1980ರಲ್ಲಿ ಎಂ.ಬಿ.ಸಿಂಗ್ ಸುಧಾದ ಸಂಪಾದಕರಾದ ನಂತರ ಸುಧಾದ ವಿನ್ಯಾಸ ಮಾರ್ಪಾಡಾಗಿ ಇನ್ನಷ್ಟು ಅಂಕಣಗಳು ಸೇರ್ಪಡೆಯಾದವು. ಕನ್ನಡ ಸಾಪ್ತಾಹಿಕಗಳಲ್ಲಿ ಮೊದಲ ಬಾರಿಗೆ ಮುಖಪುಟ ಲೇಖನಗಳ ಸಂಪ್ರದಾಯ ಆರಂಭವಾಗಿ ಪ್ರತಿವಾರವೂ ಒಂದು ವಿಷಯವನ್ನು ಕುರಿತ ವಿಶ್ಲೇಷಣೆ ಪರಿಚಯ ಲೇಖನ ಓದುಗರಿಗೆ ಲಭ್ಯವಾಯಿತು. ಕಲೆ, ಸಂಗೀತ, ಸಾಹಿತ್ಯ, ರಾಜಕೀಯ, ಇತಿಹಾಸ, ಸಮಾಜ, ನಾಡುನುಡಿ, ಜಗತ್ತಿನ ವಿದ್ಯಮಾನಗಳನ್ನು ಕುರಿತ, ಓದುಗರ ತಿಳಿವಳಿಕೆಯ ದಿಗಂತವನ್ನು ವಿಸ್ತರಿಸುವ, ಹಲವು ಅಮೂಲ್ಯ ಲೇಖನಗಳು ಸುಧಾದಲ್ಲಿ ಪ್ರಕಟವಾಗಿ ಪ್ರಸಿದ್ಧವಾಗಿವೆ. ಸುಧಾದಲ್ಲಿ ವರ್ಣಪುಟಗಳಲ್ಲಿ ಪ್ರಕಟವಾದ ಫೋಟೋ ಕಾಮಿಕ್ಸ್ ಕನ್ನಡ ಪತ್ರಿಕೋದ್ಯಮದಲ್ಲೇ ಪ್ರಥಮ ಸಾಹಸ. ಹಿಂದಿನ ಸಂಪಾದಕರು ನಾಗೇಶ ಹೆಗಡೆ ಹೊರಗಿನ ಸಂಪರ್ಕಗಳು ಸುಧಾ ವಾರಪತ್ರಿಕೆಯ ಅಂತರ್ಜಾಲ ತಾಣ ಕನ್ನಡ ವಾರಪತ್ರಿಕೆಗಳು ಪತ್ರಿಕೋದ್ಯಮ
ಹಾಯ್ ಬೆಂಗಳೂರ್ ಕನ್ನಡದ ಕಪ್ಪು ಸುಂದರಿ ಎಂದೇ ಪ್ರಚಲಿತದಲ್ಲಿರುವ ಕನ್ನಡ ವಾರಪತ್ರಿಕೆ.ಕನ್ನಡದ ಪ್ರತಿಭಾವಂತ ಲೇಖಕ ಹಾಗೂ ಪ್ರಭಾವಿ ಪತ್ರಕರ್ತರಾದ ರವಿ ಬೆಳಗೆರೆ ಯವರ ಸಾರಥ್ಯದಲ್ಲಿ ಮುನ್ನೆಡೆಯುತ್ತಿದೆ. ಸ್ಥಾಪನೆ ೧೯೯೫ರಲ್ಲಿ ಬೆಂಗಳೂರಿನ ಪದ್ಮನಾಭ ನಗರದಲ್ಲಿನ ಕಛೆರಿಯಲ್ಲಿ ರವಿ ಬೆಳಗೆರೆಯವರ ಸಾರಥ್ಯದಲ್ಲಿ ಹಾಗೂ ಆರ್.ಟಿ.ವಿಠಲಮೂರ್ತಿ, ರಾ.ಸೊಮನಾಥ,ಜೋಗಿ ಮತ್ತು ಇ.ಹೆಚ್.ಸಂಗಮದೇವರವರುಗಳ ಸಮಕ್ಷಮದಲ್ಲಿ ಪ್ರಕಟಗೊಂಡಿತು. ಸಾರ ಸಂಗ್ರಹ ಲವ್ ಲವಿಕೆ. ಬಾಟಮ್ ಐಟಂ. ಖಾಸ್ ಬಾತ್. ಪತ್ರಿಕಾ ಲೋಕದಲ್ಲೇ ಸಂಚಲನ ಮೂಡಿಸಿ ಐದು ವರ್ಷಗಳವರೆಗು ಹೆಚ್ಚು ಪ್ರಕಟವಾಗಿದ್ದು ಪಾಪಿಗಳ ಲೋಕದಲ್ಲಿ ,ಇದರ ಪ್ರಮುಖ ವಿಷಯ ಪಾತಕ ಲೋಕದ ಸುದ್ದಿಯಾಗಿತ್ತು. ಇತರೆ ಸಾರ ಸಂಗ್ರಹಗಳು ಹಗರಣಗಳು. ವ್ಯವಹಾರಗಳು. ರಾಜಕೀಯ ಹಿನ್ನೆಲೆಗಳು. ಕೊಲೆ. ಅಪರಾಧ. ಹೀಗೆ ಮುಂತಾದುವುಗಳನ್ನು ಸಮಾಜದ ಕಣ್ಣಿಗೆ ಅತಿ ಸೂಕ್ಷ್ಮವಾಗಿ ಪರಿಚಯಿಸಿದ ಹಿಗ್ಗಳಿಕೆ ಈ ಪತ್ರಿಕೆಯಾಗಿದೆ ಈ ಎಲ್ಲಾ ಸಾರಸಂಗ್ರಹ ಲೇಖನಗಳನ್ನು ಹೊರೆತು ಪಡೆಸಿ ಮನೋವಿಜ್ಣಾನ ಕ್ಷೇತ್ರ, ಕ್ರೀಡೆ, ವಿಜ್ಣಾನ ಮತ್ತು ಸಿನೆಮಾ ಕ್ಷೇತ್ರಗಳನ್ನು ಒಳಗೊಂಡ ವಾರ ಪತ್ರಿಕೆಯಾಗಿದೆ. ಮಾರುಕಟ್ಟೆಯ ಜಾಹಿರಾತುಗಳಿಲ್ಲದೇ ಪ್ರಕಾಶಿತವಾಗುತ್ತಿರುವ ಕನ್ನಡ ಪತ್ರಿಕೆಗಳಲ್ಲೊಂದು. ಕನ್ನಡ ವಾರಪತ್ರಿಕೆಗಳು
ಕನ್ನಡದ ಪತ್ರಿಕಾ ರಂಗದಲ್ಲಿ ಕ್ರಾಂತಿ ಮಾಡಿದ ಪತ್ರಿಕೆಗಳಲ್ಲೊಂದು. ಬೆಂಗಳೂರಿನ ಬಸವನಗುಡಿಯಿಂದ ಪ್ರಕಾಶಿಸಲ್ಪಡುತ್ತಿದೆ. ಕನ್ನಡದ ಪ್ರಮುಖ ಕತೆಗಾರ ಮತ್ತು ಸಿನಿಮಾ ನಿರ್ದೇಶಕರಾದ ಪಿ.ಲಂಕೇಶ್ ಅವರು ಇದರ ಸ್ಥಾಪಕ ಸಂಪಾದಕರು. ಜಾಹೀರಾತುಗಳಿಲ್ಲದೆಯೇ ಪ್ರತಿ ವಾರ ಪ್ರಕಟವಾಗುತ್ತಿರುವುದು ಇದರ ಹೆಗ್ಗಳಿಕೆ. ಈಗ ಕನ್ನಡ ಚಲನಚಿತ್ರ ನಿರ್ದೇಶಕರೂ ಆಗಿರುವ ಲಂಕೇಶ್ ಅವರ ಪುತ್ರ ಇಂದ್ರಜಿತ್ ಲಂಕೇಶ್ ಈ ಪತ್ರಿಕೆಯ ಪ್ರಕಾಶಕರಾಗಿದ್ದಾರೆ. ಜಾಣ ಜಾಣೆಯರ ಪತ್ರಿಕೆ ಎಂಬುದು ಈ ಪತ್ರಿಕೆಯ ಮುಖಪುಟದಲ್ಲಿನ ತಲೆಬರಹ. ಕನ್ನಡ ವಾರಪತ್ರಿಕೆಗಳು ಪತ್ರಿಕೋದ್ಯಮ
ಕನ್ನಡಪ್ರಭ ಭಾರತದ ಅತ್ಯಂತ ದೊಡ್ಡ ಪತ್ರಿಕಾ ಸಮೂಹವನ್ನು ನಿರ್ವಹಿಸುತ್ತಿರುವ ಇಂಡಿಯನ್ ಎಕ್ಸ್ಪ್ರೆಸ್ ಸಂಸ್ಥೆಯ ಅಂಗವಾಗಿ 4 ನವೆಂಬರ್ 1967ರಂದು ಬೆಂಗಳೂರಿನಿಂದ ಆರಂಭವಾದ ಕನ್ನಡ ದಿನಪತ್ರಿಕೆ ಕನ್ನಡಪ್ರಭ. ಇದು ಕನ್ನಡದ ಪ್ರಮುಖ ದಿನ ಪತ್ರಿಕೆಗಳಲ್ಲೊಂದು. ಖ್ಯಾತ ಇಂಡಿಯನ್ ಎಕ್ಸ್ಪ್ರೆಸ್ ಬಳಗದಿಂದ ಪ್ರಕಾಶಿತವಾಗುತ್ತಿದೆ. ಬೆಂಗಳೂರು, ಮಂಗಳೂರು , ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ ಮತ್ತು ಗುಲ್ಬರ್ಗ ನಗರಗಳಿಂದ ಮೂರು ಆವೃತ್ತಿಗಳನ್ನು ಪ್ರಕಟಿಸಲಾಗುತ್ತಿದೆ. ಪ್ರಸ್ತುತ ಟಿ ವಿ ವಾರ್ತಾ ವಾಹಿನಿ ಸುವರ್ಣ ನ್ಯೂಸ್ ಮಾಲಿಕರಾದ ಸಂಸದ ರಾಜೀವ್ ಚಂದ್ರಶೇಖರ್ ಕನ್ನಡಪ್ರಭ ಪತ್ರಿಕೆ ಮಾಲೀಕರು. ಕನ್ನಡ ಸಾಹಿತ್ಯ ಹಾಗೂ ಚಲನಚಿತ್ರ ರಂಗಕ್ಕೆ ಕನ್ನಡಪ್ರಭ ಪತ್ರಿಕೆ ನೀಡಿರುವ ಕೊಡುಗೆ ನೀಡಿದೆ. ಧ್ಯೇಯೋದ್ದೇಶಗಳು ಪ್ರಥಮ ಸಂಚಿಕೆಯಲ್ಲಿ ತನ್ನ ಧ್ಯೇಯೋದ್ದೇಶಗಳನ್ನು ಕುರಿತು ಪತ್ರಿಕೆ ಹೀಗೆಂದು ಹೇಳಿದೆ : ನಾವು ಯಾವ ಪಕ್ಷಕ್ಕೂ ಸೇರಿದವರಲ್ಲ. ಜನ ಸಾಮಾನ್ಯರ ಬದುಕನ್ನು ಹಸನುಗೊಳಿಸಲು ಪ್ರಯತ್ನಪಡುವ ಎಲ್ಲರೊಡನೆಯೂ ನಾವು ಸಹಕರಿಸುತ್ತೇವೆ. ಜನಸಾಮಾನ್ಯರ ಯೋಗಕ್ಷೇಮ ಪಾಲನೆಯಲ್ಲಿ ನಿರತರಾಗಿರುವವರೆಲ್ಲರ ಜತೆಯಲ್ಲೂ ಶ್ರಮಿಸುತ್ತೇವೆ. ಇದಕ್ಕಿಂತ ಹಿರಿದಾದ, ಶ್ರೇಯಸ್ಕರವಾದ ನಾಡ ಸೇವೆಯಿಲ್ಲ. ಇದೇ ಪ್ರಜಾಧರ್ಮ...... ಒಟ್ಟಿನ ಒಳಿತಿಗಾಗಿ ವ್ಯಕ್ತಿಯ ಹಿತವನ್ನಾಗಲಿ, ವ್ಯಕ್ತಿಯ ಹಿತಕ್ಕಾಗಿ ಒಟ್ಟಿನ ಒಳಿತನ್ನಾಗಲಿ ಕಡೆಗಾಣಲು ನಾವು ಒಪ್ಪೆವು. ಒಂದರಿಂದ ಮತ್ತೊಂದು ಸಾಧನೆಯಾಗಬೇಕು. ಒಂದು ಮತ್ತೊಂದಕ್ಕೆ ದಾರಿಯಾಗಬೇಕು. ಈ ಸಮಷ್ಟಿ ವೃಷ್ಟಿಗಳ ಸಮರಸವನ್ನು ಎತ್ತಿಹಿಡಿಯಲು ನಾವು ಉದ್ಯುಕ್ತರಾಗುತ್ತೇವೆ....... ವೈಶಿಷ್ಟ್ಯಗಳು ಇಂಗ್ಲಿಷ್ ಪತ್ರಿಕೆಯೊಂದನ್ನು ಪ್ರಕಟಿಸುವ ಸಂಸ್ಥೆಯೇ ಈ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರೂ ಇದು ಇಂಗ್ಲಿಷ್ ಪತ್ರಿಕೆಯ ಅನುಕರಣವಲ್ಲ. ಕನ್ನಡ ಜನತೆಯ ಪ್ರತಿನಿಧಿಯಾಗಿ ಸ್ವತಂತ್ರ್ಯ ಧೋರಣೆಗಳನ್ನುಳ್ಳ ಪತ್ರಿಕೆಯಿದು. ಪತ್ರಿಕೆಗಳ ಪ್ರಥಮ ಲಕ್ಷ್ಯವಾದ ಸುದ್ದಿ ವಿತರಣೆಯಲ್ಲಿ ಈ ಪತ್ರಿಕೆಗೆ ವ್ಯಾಪಕವಾದ ಸುದ್ದಿ ಮೂಲಗಳಿವೆ. ರಾಜ್ಯದ ಹಾಗೂ ದೇಶ ವಿದೇಶಗಳ ಸುದ್ದಿ ಸಂಗ್ರಹದಲ್ಲಿ ಮಾಮೂಲಿ ಸುದ್ದಿ ಸಂಗ್ರಹ ಸಂಸ್ಥೆಗಳ ಜೊತೆಗೆ, ಪ್ರಪಂಚದಾದ್ಯಂತ ವ್ಯಾಪಕವಾದ ಎಕ್ಸ್ಪ್ರೆಸ್ ನ್ಯೂಸ್ ಸರ್ವಿಸಿನ ವಿಶೇಷ ವ್ಯವಸ್ಥೆಯೂ ಈ ಪತ್ರಿಕೆಗಿದೆ. ಸುದ್ದಿ ಹಾಗೂ ಅಭಿಪ್ರಾಯ ಪ್ರಕಟಣೆಯಲ್ಲಿ ಸ್ವತಂತ್ರ ನಿಲವು ತಳೆದು ತನ್ನದೇ ಆದ ವಿಚಾರ ವೈಶಿಷ್ಟ್ಯವನ್ನು ಇದು ಕಾಪಾಡಿಕೊಂಡಿದೆ. ವಾಚಕೋಪಯುಕ್ತವಾದ ಹಲವು ವೈಶಿಷ್ಟ್ಯಪುರ್ಣ ಪ್ರಯೋಗಗಳನ್ನೂ ಕನ್ನಡ ಪ್ರಭ ನಡೆಸಿದೆ. ಓದುಗರಲ್ಲಿ ವಾಚನಾಭಿರುಚಿಯನ್ನು ಬೆಳೆಸುವ ಹಾಗೂ ಮನೋರಂಜನೆಯನ್ನು ಒದಗಿಸುವ ಸಲುವಾಗಿ ದೈನಿಕ ಧಾರಾವಾಹಿ ಕಾದಂಬರಿಯನ್ನು ಮೊತ್ತಮೊದಲು ಆರಂಭಿಸಿದ ಪತ್ರಿಕೆಯಿದು. ದೈನಿಕ ಧಾರಾವಾಹಿಯನ್ನು ಪ್ರಕಟಿಸುವ ಏಕೈಕ ದಿನಪತ್ರಿಕೆ ಎಂಬ ಹೆಗ್ಗಳಿಕೆ ಇಂದಿಗೂ ಕನ್ನಡಪ್ರಭದ್ದೇ. ಸಿನಿಮಾ ಪುರವಣಿ, ಚಿತ್ರಪ್ರಭ, ವಾಣಿಜ್ಯ ಪುರವಣಿ, ವಿತ್ತಪ್ರಭ, ಮಹಿಳೆಯರಿಗಾಗಿ ಮಹಿಳಾಪ್ರಭ ಮೊದಲು ಆರಂಭಿಸಿದ್ದು ಕನ್ನಡಪ್ರಭ. ಮಹಿಳಾಪ್ರಭ ಈಗ ಪ್ರಕಟವಾಗುತ್ತಿಲ್ಲ ವಾದರೂ ಕ್ರೀಡಾ ಪ್ರಭ, ಜ್ಯೋತಿಷ್ಯಪ್ರಭ, ಕರ್ನಾಟಕ ಕನ್ನಡಿ, ಉದ್ಯೋಗ ಪ್ರಭ, ಕಾಲೇಜುರಂಗ ದಂಥ ವಿಶೇಷ ಪುಟಗಳು ಈಗಲೂ ಓದುಗರಿಗೆ ಜ್ಞಾನ, ರಂಜನೆ ಒದಗಿಸುತ್ತವೆ. ಚಿತ್ರಪ್ರಭ, ಸಾಪ್ತಾಹಿಕ ಪ್ರಭ, ಚಿತ್ರೋದ್ಯಮ ಹಾಗೂ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದ ಪುರವಣಿಗಳು. ಕಥಾಸ್ಪರ್ಧೆಗಳನ್ನು ಏರ್ಪಡಿಸುವ ಮೊದಲ ಪತ್ರಿಕೆ ಕನ್ನಡಪ್ರಭವಲ್ಲವಾದರೂ ಅತಿ ಹೆಚ್ಚು ಮೊತ್ತದ (10,000ರೂ.ಗಳ) ಬಹುಮಾನ ನೀಡುವ ಮೊದಲ ಪತ್ರಿಕೆಯಾಯಿತು. ಇದಕ್ಕಿಂತಲೂ ಹೆಚ್ಚು ಮೊತ್ತದ ಬಹುಮಾನ ನೀಡುವ ಪತ್ರಿಕೆಗಳು ಇವೆ. ವರ್ಷದ ವ್ಯಕ್ತಿಕನ್ನಡ ಪ್ರಭ ಅತ್ಯಂತ ಪ್ರತಿಷ್ಠಿತ ಆಯ್ಕೆ. 2005ರಿಂದ ಆರಂಭವಾದ ವರ್ಷದ ವ್ಯಕ್ತಿ ಒಂದು ಲಕ್ಷ ರೂಪಾಯಿ ಪ್ರಶಸ್ತಿ ಮೊತ್ತವನ್ನು ಹೊಂದಿದೆ. ದೀಪಾವಳಿಗೋ ದೀಪಾವಳಿ ಸಂಚಿಕೆ, ಆರೋಗ್ಯ, ವಿದ್ಯಾಕುಸುಮ ವಿಶೇಷ ಸಂಚಿಕೆಗಳನ್ನು ಹೊರತರುತ್ತಿದೆ. ಸಂಪಾದಕೀಯ ವಿಭಾಗ ಸಂಪುರ್ಣ ಗಣಕೀಕರಣಗೊಂಡು ಆಧುನಿಕ ಪತ್ರಿಕೋದ್ಯಮದ ಜತೆಗೆ ಹೆಜ್ಜೆ ಹಾಕುತ್ತಿದೆ. ಬೆಂಗಳೂರು, ಬೆಳಗಾಂ, ಶಿವಮೊಗ್ಗ ಮತ್ತು ಮಂಗಳೂರು ಕೇಂದ್ರಗಳಿಂದ ಪತ್ರಿಕೆ ಪ್ರಕಟವಾಗುತ್ತಿದ್ದು, ಒಟ್ಟು 20 ಆವೃತ್ತಿಗಳನ್ನು ಹೊಂದಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪುರ್ಣಕಾಲಿಕ ವರದಿಗಾರರನ್ನೂ 200ಕ್ಕೂ ಹೆಚ್ಚು ಮಂದಿ ಅರೆಕಾಲಿಕ ವರದಿಗಾರರನ್ನೂ (ಗ್ರಾಮಾಂತರ ಮಟ್ಟದಲ್ಲಿ) ಹೊಂದಿದೆ. ತಾಜಾ ಸುದ್ದಿಯನ್ನು ನೀಡುವುದರ ಜತೆಗೆ ಪುಟವಿನ್ಯಾಸಕ್ಕೂ ಹೆಚ್ಚು ಲಕ್ಷ್ಯ ಕೊಡುತ್ತಿದೆ. ರಾಜ್ಯದ ಸುದ್ದಿಗಳಿಗೆ ಮಹತ್ತ್ವ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಸುದ್ದಿಗಳೂ ಅವುಗಳ ಮಹತ್ತ್ವಕ್ಕನುಗುಣವಾಗಿ (ಸ್ಥಳೀಯ ಓದುಗರ ದೃಷ್ಟಿಯಿಂದ) ಸ್ಥಾನ ಪಡೆಯುತ್ತವೆ. ಸಂಪಾದಕರುಗಳು ಮೊದಲು ವಿ.ಎನ್.ಸುಬ್ಬರಾವ್ ಅವರು ಕನ್ನಡಪ್ರಭ ಪತ್ರಿಕೆಗೆ ಆರಂಭ ದಿನಗಳಲ್ಲಿ ರೂಪುರೇಷೆ ಕೊಟ್ಟವರು. ಕನ್ನಡಪ್ರಭ ಪತ್ರಿಕೆಗೆ ಮೊದಲು ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದು ಎನ್.ಎಸ್.ಸೀತಾರಾಮ ಶಾಸ್ತ್ರಿ. ಅವರು ಜನಪ್ರಗತಿ ಸಾಹಿತ್ಯ ಪತ್ರಿಕೆಯ ಸಂಪಾದಕ ಹಾಗೂ ಮೈಸೂರು ಜರ್ನಲಿಸ್ಟ್ಸ್ ಅಸೋಸಿಯೇಷನ್ನ ಸ್ಥಾಪಕ ಸದಸ್ಯರಲ್ಲೊಬ್ಬರಾಗಿದ್ದರು. ಅನಂತರ ಕೆ.ಎಸ್. ರಾಮಕೃಷ್ಣಮೂರ್ತಿ, ಖಾದ್ರಿ ಶಾಮಣ್ಣ, ವೈ.ಎನ್. ಕೃಷ್ಣಮೂರ್ತಿ, ಕೆ. ಸತ್ಯನಾರಾಯಣ, ವೆಂಕಟನಾರಾಯಣ ಪತ್ರಿಕೆಯ ಸಂಪಾದಕರಾಗಿದ್ದರು. ಹೊರಗಿನ ಸಂಪರ್ಕಗಳು ಕನ್ನಡಪ್ರಭ ಅಂತರ್ಜಾಲ ಆವೃತ್ತಿ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಕನ್ನಡ ದಿನಪತ್ರಿಕೆಗಳು ಪತ್ರಿಕೋದ್ಯಮ
ಸಂಯುಕ್ತ ಕರ್ನಾಟಕ ಹುಬ್ಬಳ್ಳಿ, ಬೆಂಗಳೂರು, ಕಲ್ಬುರ್ಗಿ, ದಾವಣಗೆರೆ ಹಾಗೂ ಮಂಗಳೂರು ಕೇಂದ್ರಗಳಿಂದ ಪ್ರಕಾಶಿತವಾಗುತ್ತಿರುವ ಒಂದು ಪ್ರಮುಖ ಹಾಗೂ ಅತ್ಯಂತ ಹಳೆಯ ಕನ್ನಡ ದಿನಪತ್ರಿಕೆ. ಆರಂಭ ಸ್ವಾತಂತ್ರ್ಯ ಹೋರಾಟಕ್ಕಾಗಿ ಪತ್ರಿಕೆಗಳ ಒಗ್ಗೂಡುವಿಕೆ ಕರ್ಮವೀರ ನಡೆಸುತ್ತಿದ್ದ ರಂಗನಾಥ ದಿವಾಕರ ಮತ್ತು ಮಿತ್ರರಿಗೆ ದಿನಪತ್ರಿಕೆಯೊಂದನ್ನು ಆರಂಭಿಸುವ ಇಚ್ಛೆಯಿತ್ತು. ದತ್ತೋಪಂತ ಬೆಳವಿ,ನಾರಾಯಣರಾವ್ ಜೋಷಿ,ದಾತಾರ ಬಳವಂತರಾವ್,ಗೋಖಲೆ ಕೇಶವರಾವ್ ಮುಂತಾದ ಪ್ರಮುಖ ರಾಷ್ಟ್ರಾಭಿಮಾನಿಗಳು ದಿವಾಕರರೊಂದಿಗೆ ಸೇರಿ ಬಾಗಲಕೋಟೆಯ ಕನ್ನಡಿಗ, ಬೆಳಗಾವಿಯ ಅರುಣೋದಯ ಮುಂತಾದ ಕೆಲವು ಪತ್ರಿಕೆಗಳನ್ನು ಒಗ್ಗೂಡಿಸಿ ೧೯೩೩ರಲ್ಲಿ ಸಂಯುಕ್ತ ಕರ್ನಾಟಕ ವಾರಪತ್ರಿಕೆಯನ್ನು ಬೆಳಗಾವಿಯಲ್ಲಿ ಆರಂಭಿಸಿದರು. ಕಾಂಗ್ರೆಸ್ನ ಬೆಳಗಾವಿ ಅಧಿವೇಶನದ ನಂತರ ಕೆಲದಿನಗಳಲ್ಲಿ ಹುಬ್ಬಳ್ಳಿಯಿಂದ ವಿ.ಬಿ.ಪುರಾಣಿಕರ ಸಂಪಾದಕತ್ವದಲ್ಲಿ ಆರಂಭವಾದ ಹೊಸ ರಾಷ್ಟ್ರೀಯ ದಿನಪತ್ರಿಕೆ ಲೋಕಮತ. ನಾರಾಯಣರಾವ್ ಕಲ್ಲೆ, ಮಾಜಿ ಮಂತ್ರಿ ಕಲ್ಲನಗೌಡ ಪಾಟೀಲರು ಸಂಪಾದಕೀಯ ವರ್ಗದಲ್ಲಿದ್ದ ಪತ್ರಿಕೆ ಶೀಘ್ರವೇ ಜನಪ್ರಿಯತೆ ಗಳಿಸಿತು. ಹುಬ್ಬಳ್ಳಿಗೆ ಪ್ರವೇಶ ಲೋಕ ಶಿಕ್ಷಣ ಟ್ರಸ್ಟ್ ಇದನ್ನು ಕಂಡು ಬೆಳಗಾವಿಯಿಂದ ಪ್ರಕಟವಾಗುತ್ತಿದ್ದ ಸಂಯುಕ್ತ ಕರ್ನಾಟಕವು ಹುಬ್ಬಳ್ಳಿಗೆ ಬಂತು. ರಂಗನಾಥ ದಿವಾಕರ ಧರ್ಮದರ್ಶಿತ್ವದಲ್ಲಿ, ಮೊಹರೆ ಹಣಮಂತರಾಯರ ಸಂಪಾದಕತ್ವದಲ್ಲಿ ಪತ್ರಿಕೆ ಅಭಿವೃದ್ಧಿಯಾಯಿತು. ೧೯೩೪ರಿಂದ ಕಾಲು ಶತಮಾನ, ಅಂದರೆ ಪತ್ರಿಕೆಯನ್ನು ಲೋಕ ಶಿಕ್ಷಣ ಟ್ರಸ್ಟ್ ವಹಿಸಿಕೊಂಡ ನಂತರವೂ ಸಂಪಾದಕರಾಗಿದ್ದು ಪತ್ರಿಕೆಯನ್ನು ಬೆಳೆಸಿಕೊಂಡು ಬಂದರು. ಬಾಗಲಕೋಟೆಯ ಪುರೋಹಿತ ಬಂಧುಗಳು ರಂಗನಾಥ ದಿವಾಕರರಿಗೆ ಬೆಂಬಲವಾಗಿ ನಿಂತರು. ಹಿರಿಯರಾದ ತಮ್ಮಣ್ಣಾಚಾರ್ಯ ಪುರೋಹಿತರು ಪತ್ರಿಕೆಯ ವ್ಯವಸ್ಥಾಪಕರಾದರು. ಕಿರಿಯರಾದ ಹ.ರಾ.ಪುರೋಹಿತರು ಸಂಪಾದಕೀಯ ಮಂಡಲಿಯ ಹಿರಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ನಾರಾಯಣರಾವ್ ಕಲ್ಲೆ ರಂಗನಾಥ ದಿವಾಕರರ ಆಪ್ತ ಸಂಪಾದಕೀಯ ಸಲಹೆಗಾರರಾಗಿ ಕೆಲ ವರ್ಷ ಕಾರ್ಯನಿರ್ವಹಿಸಿದರು. ಸಂಯುಕ್ತ ಕರ್ನಾಟಕ ಪತ್ರಿಕೆಯ ಧ್ಯೇಯೋದ್ದೇಶಗಳು ಸ್ವತಂತ್ರ ಭಾರತ ಹಾಗೂ ಏಕತಂತ್ರ ಕರ್ನಾಟಕ. 1956ರ ಹೊತ್ತಿಗೆ ಇವೆರಡೂ ಉದ್ದಿಶ್ಯಗಳು ಸಂಪೂರ್ಣವಾಗಿ ಈಡೇರಿದ್ದವು. ರಂಗನಾಥ ದಿವಾಕರ ಬಿಹಾರದ ರಾಜ್ಯಪಾಲರಾಗಿದ್ದರು. ಈ ಸಮಯದಲ್ಲಿ ಅವರಿಗೊಂದು ಕನಸು ಹುಟ್ಟಿತು. ಕೇವಲ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿರುವ ಪತ್ರಿಕೆ ಇಡೀ ಮೈಸೂರು ರಾಜ್ಯವನ್ನು ತಲುಪುತ್ತಿಲ್ಲ. ಇಡೀ ರಾಜ್ಯದಲ್ಲಿ ಜನಜಾಗೃತಿ ಮೂಡಿಸಬೇಕೆಂದರೆ ರಾಜಧಾನಿಯಾದ ಬೆಂಗಳೂರಿನಿಂದಲೂ ಒಂದು ಆವೃತ್ತಿಯನ್ನು ತರಬೇಕು. ಈ ಕೆಲಸಕ್ಕೆ ಹುಬ್ಬಳ್ಳಿಯಲ್ಲಿ ವ್ಯವಸ್ಥಾಪನೆಯ ಹೊಣೆ ಹೊತ್ತಿದ್ದ ಎಂ.ಎಚ್.ಕೌಜಲಗಿ ಅವರನ್ನು ದಿವಾಕರ ಅವರು ನಿಯೋಜಿಸಿದರು. ಬೆಂಗಳೂರು ಮುದ್ರಣ ದ್ವಿತೀಯ ಮಹಾಯುದ್ಧ ಸಮಯದಲ್ಲಿ ಸಂಜಯ ಎನ್ನುವ ಸ್ವಂತ ವಾರಪತ್ರಿಕೆಯನ್ನು ಪ್ರಕಟಿಸಲೆಂದು ಸಂಕದ ಹುಬ್ಬಳ್ಳಿ ಕಚೇರಿಯನ್ನು ತೊರೆದಿದ್ದ ಕೆ.ಶಾಮರಾವ್ ಅವರನ್ನು ಬೆಂಗಳೂರು ಮುದ್ರಣದ ಕೆಲಸಕ್ಕೆಂದು ಮತ್ತೆ ಕರೆಯಲಾಯಿತು. ಎರಡು ಕೇಂದ್ರಗಳಲ್ಲಿ ಒಂದೇ ಪತ್ರಿಕೆಯ ಆವೃತ್ತಿಗಳನ್ನು ಹೊರತರುವ ಪ್ರಯೋಗ ಕನ್ನಡ ಪತ್ರಿಕೋದ್ಯಮಕ್ಕೆ ಅಂದು ಹೊಸತಾಗಿತ್ತು. ಕಚೇರಿ ಸ್ವಂತ ಕಚೇರಿಯೊಂದು ಬೆಂಗಳೂರಿನಲ್ಲಿರದ ಕಾರಣ, ಶಾಮರಾವ್ ಅವರ ಮನೆಯಲ್ಲಿಯೇ ಟೆಲಿಪ್ರಿಂಟರ್ ಯಂತ್ರವನ್ನು ಜೋಡಿಸಲಾಯಿತು. ಕನ್ನಡ ಲಿಪಿಯಲ್ಲಿ ಟೈಪ್ ಮಾಡುವ ಸೌಲಭ್ಯವಿಲ್ಲದಿದ್ದ ಕಾರಣ, ಇಂಗ್ಲಿಷ್ ಲಿಪಿಯಲ್ಲಿಯೇ ಕನ್ನಡ ಪದಗಳನ್ನು ಟೈಪ್ ಮಾಡಿ ಹುಬ್ಬಳ್ಳಿಗೆ ವರದಿಗಳನ್ನು ಕಳುಹಿಸುವ ಕೆಲಸ ಆರಂಭವಾಯಿತು. ಬಹುಮುದ್ರಣ ಆವೃತ್ತಿಗಳಿದ್ದ ಹಿಂದೂ ಮತ್ತು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗಳ ಮದ್ರಾಸ್ ಕಚೇರಿಗಳಲ್ಲಿ ಕೌಜಲಗಿ ಹಾಗೂ ಶಾಮರಾವ್ ಟೆಲಿಪ್ರಿಂಟರ್ ವ್ಯವಸ್ಥೆಯ ಬಳಕೆಯ ಬಗ್ಗೆ ತರಬೇತಿ ಪಡೆದರು. ಸಿಬ್ಬಂದಿ ನೇಮಕ ಸಂಕದ ಬೆಂಗಳೂರು ಆವೃತ್ತಿಯ ಬುನಾದಿ ಹಾಕುವ ಸಮಯದಲ್ಲಿಯೇ ತಾಯಿನಾಡು ಪತ್ರಿಕೆಯ ಮಾಲಿಕತ್ವ ಸ್ವಾತಂತ್ರ್ಯ ಹೋರಾಟಗಾರ ಪಿ.ಆರ್.ರಾಮಯ್ಯನವರಿಂದ ಎಂಜಿನಿಯರಿಂಗ್ ಕಂಟ್ರ್ಯಾಕ್ಟರ್ ಎಂ.ಎಸ್.ರಾಮಯ್ಯನವರಿಗೆ ಹಸ್ತಾಂತರವಾಯಿತು (1958). ಪತ್ರಿಕೋದ್ಯೋಗದಲ್ಲಿ ಮೌಲ್ಯಗಳನ್ನು ಎತ್ತಿ ಹಿಡಿದ ಪಿ.ಆರ್.ರಾಮಯ್ಯನವರ ಮಾರ್ಗದರ್ಶನದಲ್ಲಿ ಕೆಲಸ ಮಾಡಿದವರು ಸಂಕದ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳುವರೆಂಬ ನಂಬಿಕೆ ಸಂಪಾದಕ ಮೊಹರೆ ಹಣಮಂತರಾಯ ಅವರದಾಗಿತ್ತು. ತಾಯಿನಾಡು ಪತ್ರಿಕೆಯ ಅನುಭವಿ ಪತ್ರಕರ್ತರನ್ನು ಸಂಕದ ಬೆಂಗಳೂರು ಆವೃತ್ತಿಗೆ ನೇಮಕ ಮಾಡಿಕೊಳ್ಳುವ ನಿರ್ಧಾರವಾಯಿತು. ಜತೆಗೆ ಸಂಪೂರ್ಣ ಹುಬ್ಬಳ್ಳಿಯದಾಗಿದ್ದ ಸಂಕವನ್ನು ಹಳೆಯ ಮೈಸೂರು ಜನರಿಗೆ ಪರಿಚಯಿಸುವ ಕಾರ್ಯಕ್ಕೆ ತಾಯಿನಾಡು ಪತ್ರಕರ್ತರು ಸೂಕ್ತ ಎಂಬ ಚಿಂತನೆಯೂ ಇತ್ತು. ಕಾದಂಬರಿಕಾರ, ಗ್ರಾಮಾಯಣ ಖ್ಯಾತಿಯ ರಾವಬಹಾದ್ದೂರ (ಆರ್.ಬಿ.ಕುಲಕರ್ಣಿ) ಅವರನ್ನು ಬೆಂಗಳೂರು ಆವೃತ್ತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. ತಾಯಿನಾಡು ಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕ, ಸಂಪಾದಕೀಯ ಬರಹಗಾರ ಹಾಗೂ ಸಂಪಾದಕರ ನಂತರದ ಸ್ಥಾನದಲ್ಲಿದ್ದ ಹೆಚ್.ಆರ್.ನಾಗೇಶರಾವ್ 1958ರ ಆಗಸ್ಟ್ ತಿಂಗಳಿನಲ್ಲಿ ಸಂಕವನ್ನು ಸೇರಿದರು. ನಂತರ ತಾಯಿನಾಡು ಪತ್ರಿಕೆಯ ಹಿರಿಯ ಹುದ್ದೆಗಳಲ್ಲಿದ್ದ ಕೆ.ಅನಂತಸುಬ್ಬರಾವ್ ಹಾಗೂ ಎಸ್.ವ್ಯಾಸರಾವ್ ಸಂಕ ಸೇರಿದರು. ಇವರೆಲ್ಲರಿಗೂ ಮುಂಚೆ ತಾಯಿನಾಡುವಿನಲ್ಲಿ ವ್ಯವಸ್ಥಾಪಕರಾಗಿದ್ದ ಕೆ.ಆರ್.ವೆಂಕಟಾಚಲಪತಿಯವರು ಎಂ.ಎಚ್.ಕೌಜಲಗಿಯವರ ಜತೆಗೂಡಿದ್ದರು. ವಿಶ್ವ ಕರ್ನಾಟಕದಿಂದ ಕವಿ ಅರ್ಚಕ ವೆಂಕಟೇಶ, ಕತೆಗಾರ ಭಾರತೀಪ್ರಿಯ (ಎಸ್.ವೆಂಕಟರಾವ್), ಶ್ರೀನಿವಾಸ ತುಪ್ಪ ಸಂಪಾದಕ ಮಂಡಲಿ ಸೇರಿದರು. ನಂತರ ಯುವ ಬರಹಗಾರರಾಗಿದ್ದ ಮತ್ತೂರು ಕೃಷ್ಣಮೂರ್ತಿ ಅವರ ನೇಮಕವಾಯಿತು. ಪ್ರಜಾವಾಣಿ ಬಿಟ್ಟು ಎಂ.ಎಸ್.ರಾಮಯ್ಯನವರ ತಾಯಿನಾಡು ಸಮೂಹದ ಗೋಕುಲ ವಾರಪತ್ರಿಕೆಯ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣ ಹಾಗೂ ಜನಪ್ರಗತಿ ಸಂಪಾದಕರಾಗಿದ್ದ ಬಿ.ಶ್ರೀನಿವಾಸಮೂರ್ತಿ ಸಂಕಕ್ಕೆ ಬಂದರು. ಕಲೆಸಾಹಿತ್ಯಸಂಸ್ಕೃತಿ ಪುಟಪುರವಣಿಗಳನ್ನು ನೋಡಿಕೊಳ್ಳಲು ಮಾ.ನಾ.ಚೌಡಪ್ಪನವರ ನೇಮಕವಾಯಿತು. 1959ರ ಜನವರಿ 26ರಂದು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಬೆಂಗಳೂರು ಆವೃತ್ತಿಯನ್ನು ಮೈಸೂರು ರಾಜ್ಯದ ರಾಜ್ಯಪಾಲರಾಗಿದ್ದ ಮಾಜಿ ಮೈಸೂರು ಮಹಾರಾಜ ಜಯಚಾಮರಾಜೆಂದ್ರ ಒಡೆಯರ್ ಅವರು ಉದ್ಘಾಟಿಸಿದರು. ಅದರ ಹಿಂದಿನ ದಿನವೇ ಒಡೆಯರ್ ಅವರಿಂದ ಪತ್ರಿಕೆಯ ಕಚೇರಿ ಹಾಗೂ ಮುದ್ರಣಾಲಯದ ಉದ್ಘಾಟನೆಯಾಯಿತು. ಮುಂದೆ ಹುಬ್ಬಳ್ಳಿ ಕಚೇರಿಯಲ್ಲಿದ್ದ ಸುರೇಂದ್ರ ದಾನಿ ಬೆಂಗಳೂರಿಗೆ ವರ್ಗಾವಣೆಗೊಂಡರು. ನರಸಿಂಹ ಜೋಶಿ ಬೆಂಗಳೂರು ಕಚೇರಿಯಲ್ಲಿ ವೃತ್ತಿಜೀವನವನ್ನು ಆರಂಭಿಸಿದರು. ಹೊಸ ಪ್ರಯೋಗ ಹೊಸತನವನ್ನು ಮೈಗೂಡಿಸಿಕೊಂಡಿದ್ದ ಸಂಕದ ಬೆಂಗಳೂರು ಮುದ್ರಣ ಆರಂಭದ ವರ್ಷದಲ್ಲೇ ಪ್ರಯೋಗವೊಂದನ್ನು ನಡೆಸಿ ಯಶಸ್ವಿಯಾಯಿತು. ಎಸ್.ಎಸ್.ಎಲ್.ಸಿ. ಪರೀಕ್ಷೆಯ ಫಲಿತಾಂಶಗಳನ್ನು ಉಳಿದೆಲ್ಲ ಪತ್ರಿಕೆಗಳಿಗಿಂತಲೂ ಮೊದಲು ವಿದ್ಯಾರ್ಥಿಗಳಿಗೆ ತಲುಪಿಸುವ ಹೊಸ ಪ್ರಯೋಗವದು. ಸಾಮಾನ್ಯವಾಗಿ ಫಲಿತಾಂಶಗಳು ಅಧಿಕೃತವಾಗಿ ಪ್ರಕಟಗೊಳ್ಳುತ್ತಿದ್ದದ್ದು ಬೆಳಗ್ಗೆ 9 ಗಂಟೆಗೆ. ಪತ್ರಿಕೆಗಳು ಮುಂಜಾನೆ 6 ಗಂಟೆಗೇ ಜನರನ್ನು ತಲುಪುತ್ತಿದ್ದ ಕಾರಣ, ಫಲಿತಾಂಶ ಮರುದಿನದ ಸಂಚಿಕೆಯಲ್ಲಿ ಪ್ರಕಟವಾಗುತ್ತಿದ್ದವು. ಪರೀಕ್ಷಾ ಫಲಿತಾಂಶದ ಅಚ್ಚು ಜೋಡಣೆಗೆ ಅನುವು ಮಾಡಿಕೊಡಲು ವಿದ್ಯಾ ಇಲಾಖೆಯು ಒಂದು ದಿನ ಮುಂಚಿತವಾಗಿಯೇ ಪತ್ರಿಕಾ ಕಚೇರಿಗಳಿಗೆ ಫಲಿತಾಂಶ ಪಟ್ಟಿಯನ್ನು ಕೊಡುತ್ತಿತ್ತು. ಅದು ಬಂದ ಕೂಡಲೇ ಸಂಪಾದಕೀಯ ತಂಡವು ಪ್ರತ್ಯೇಕವಾಗಿ ಹನ್ನೆರಡು ಗಂಟೆಗಳ ಕಾಲ ಸತತವಾಗಿ ಕೂತು ಫಲಿತಾಂಶವನ್ನು ಕಂಪೋಸ್ ಮಾಡಿ, ಎರಡೆರಡು ಬಾರಿ ಪ್ರೂಫ್ ನೋಡಿ, ಮುದ್ರಣಕ್ಕೆ ಅಣಿ ಮಾಡಿತು. ಯಾವ ತಪ್ಪೂ ಇಲ್ಲದ ಎಸ್.ಎಸ್.ಎಲ್.ಸಿ. ಫಲಿತಾಂಶದ ಸಂಕ ವಿಶೇಷ ಪುರವಣಿಯನ್ನು ವಿದ್ಯಾ ಇಲಾಖೆ ಅಧಿಕೃತವಾಗಿ ಫಲಿತಾಂಶ ಪ್ರಕಟ ಮಾಡುತ್ತಿದ್ದ ಕಬ್ಬನ್ ಪಾರ್ಕ್ನ ವಿಕ್ಟರಿ ಹಾಲ್ನ ಮುಂದೆಯೇ 9ಗಂಟೆಯ ಹೊತ್ತಿಗ ಸಹಸ್ರಾರು ಪ್ರತಿಗಳನ್ನು ಉಚಿತವಾಗಿ ಹಂಚಲಾಯಿತು. ಪರವೂರಿನ ಎಲ್ಲ ಏಜೆಂಟರಿಗೂ ಬೆಳಗ್ಗೆ 9 ಗಂಟೆಯ ಹೊತ್ತಿಗೇ ಪತ್ರಿಕೆಯ ಪ್ರತಿಗಳನ್ನು ತಲುಪುವ ಹಾಗೆ ಮಾಡಿ, ಇಡೀ ರಾಜ್ಯಕ್ಕೆ ಏಕಕಾಲದಲ್ಲಿ ಫಲಿತಾಂಶ ಸೇರುವಂತೆ ನೋಡಿಕೊಳ್ಳಲಾಯಿತು. ಮೈಸೂರು ರಾಜ್ಯದಲ್ಲಿ ಇಂಥ ಸಾಹಸ ಮಾಡಿದ ಮೊದಲ ಪತ್ರಿಕೆಯೆಂಬ ಹೆಗ್ಗಳಿಕೆ ಸಂಕದ್ದಾಯಿತು. ಪಿ.ರಾಮಣ್ಣ, ವಿ.ಆರ್.ಶ್ಯಾಮ್ (ಇಂದಿರಾತನಯ), ಜಿ.ಎಸ್.ಸದಾಶಿವ, ಜಿ.ಎನ್.ರಂಗನಾಥರಾವ್, ಖಾದ್ರಿ ಎಸ್.ಅಚ್ಯುತನ್, ಕೆ.ಎಸ್.ನಾಗಭೂಷಣಂ, ಸೂ.ರಮಾಕಾಂತ, ಜಯರಾಮ ಅಡಿಗರಂಥ ಸಾಹಿತ್ಯಪ್ರೇಮಿ ಉಪಸಂಪಾದಕರು, ಪ್ರಹ್ಲಾದ ಕುಳಲಿ, ಕೆ.ರಾಜಾರಾವ್, ಎನ್.ಅರ್ಜುನದೇವ, ಸಿ.ಟಿ.ಜೋಶಿ, ಕೆ.ಜಯತೀರ್ಥರಾವ್, ಶೇಷಚಂದ್ರಿಕರಂಥ ವರದಿಗಾರರು ಸಂಕದ ಮುನ್ನಡೆಗೆ ಶ್ರಮಿಸಿದರು. ಕ್ರೀಡಾಪುಟ ನೋಡಿಕೊಳ್ಳಲು ಎಸ್.ದೇವನಾಥ್, ಪಿ.ಸಿ.ಅಪ್ಪಾಜಿ, ಎಂ.ಎ.ಪೊನ್ನಪ್ಪ ಜತೆಗೂಡಿದರು. ಶ್ಯಾಮಸುಂದರ ಕುಲಕರ್ಣಿ ಸಿನಿಮಾ ಪುಟಗಳ ಉಸ್ತುವಾರಿ ವಹಿಸಿಕೊಂಡರು. ಅತಿ ಶೀಘ್ರದಲ್ಲೇ ಸಂಕ ಅತ್ಯಧಿಕ ಪ್ರಸಾರದ ಕನ್ನಡ ದಿನಪತ್ರಿಕೆಯ ಸ್ಥಾನ ಪಡೆಯಿತು. ಲೋಕ ಶಿಕ್ಷಣ ಟ್ರಸ್ಟ್ ಮಾರಾಟ ಬದಲಾದ ಸಂಪಾದಕೀಯ ಮಂಡಳಿ ಆ ಯಶಸ್ಸಿನ ಹಿನ್ನೆಲೆಯಲ್ಲಿ ಲೋಕ ಶಿಕ್ಷಣ ಟ್ರಸ್ಟ್ನ ಧರ್ಮದರ್ಶಿಯಾಗಿದ್ದ ರಂಗನಾಥ ದಿವಾಕರ ಅವರು ತಮ್ಮ ಮಗ ಅನಂತ ದಿವಾಕರ ಅವರಿಗೆ ಆಡಳಿತ ಚುಕ್ಕಾಣಿ ನೀಡಿದರು. ಖಾಸಗಿ ಆಸ್ತಿಯಂತೆ ಟ್ರಸ್ಟ್ ನ ಆಡಳಿತ ನಡೆಯಲಾರಂಭಿಸಿತು. ಆಡಳಿತದೊಂದಿಗೆ ಸಂಪಾದಕೀಯ ಮಂಡಳಿಯೊಂದಿಗಿನ ಸಾಮರಸ್ಯ ಕಡಿಮೆಯಾಗಲಾರಂಭಿಸಿತು. ಇಂಡಿಯನ್ ಎಕ್ಸ್ಪ್ರೆಸ್ ಸಮೂಹದ ಕನ್ನಡಪ್ರಭ ದಿನಪತ್ರಿಕೆಯೂ ಪ್ರಜಾವಾಣಿಯೊಂದಿಗೆ ಸಂಯುಕ್ತ ಕರ್ನಾಟಕಕ್ಕೆ ತೀವ್ರ ಪೈಪೋಟಿ ನೀಡಲಾರಂಭಿಸಿತು. ನುರಿತ ಹಾಗೂ ಅನುಭವಿ ಪತ್ರಕರ್ತರು ಸಂಕ ದಾಟಿ ಇತರ ಪತ್ರಿಕೆಗಳತ್ತ ದಾರಿ ಹುಡುಕಿಕೊಂಡರು. ರಂಗನಾಥ ದಿವಾಕರ ಅವರಿಗೆ ತಮ್ಮ ಕನಸು ಭಗ್ನವಾದಂತೆನಿಸಿ ಅಕ್ಟೋಬರ್ 1974ರಲ್ಲಿ ಪತ್ರಿಕಾ ಸಮೂಹವನ್ನು ಮುಖ್ಯ ಮಂತ್ರಿ ಡಿ.ದೇವರಾಜ ಅರಸು ಅವರ ಆಪ್ತರಾಗಿದ್ದ ಸಚಿವ ಎಂ.ವೈ.ಘೋರ್ಪಡೆ ಅವರ ಕರ್ನಾಟಕ ಪತ್ರಿಕಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಮಾರಾಟ ಮಾಡಿದರು. ಪ್ರಜಾವಾಣಿಗೆ ಹಿಂದಿರುಗಿ ಸುದ್ದಿ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣ ಸಂಕದ ಹೊಸ ಪ್ರಧಾನ ಸಂಪಾದಕರಾಗಿ ನಿಯುಕ್ತಿಗೊಂಡರು. ಜತೆಗೆ ಪ್ರಜಾವಾಣಿಯ ಪ್ರಧಾನ ವರದಿಗಾರರಾಗಿದ್ದ ಎಸ್.ವಿ.ಜಯಶೀಲರಾವ್ ಸಹ ಸಂಪಾದಕರಾಗಿ ಸೇರ್ಪಡೆಯಾದರು. ಪ್ರಜಾವಾಣಿಯ ಹಿರಿಯ ವರದಿಗಾರರಾಗಿದ್ದ ಕೆ.ಜನಾರ್ದನ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ಜತೆಗೂಡಿದರು. ಸಹಾಯಕ ಸಂಪಾದಕ ಹಾಗೂ ಪ್ರಧಾನ ವರದಿಗಾರರಾಗಿದ್ದ ಕೆ.ಶಾಮರಾವ್ ಸಂಕವನ್ನು ತೊರೆಯುವಂತಾಯಿತು. ಸಹಾಯಕ ಸಂಪಾದಕರಾಗಿದ್ದ ಸುರೇಂದ್ರ ದಾನಿ ಹುಬ್ಬಳ್ಳಿಗೆ ಮರಳಿದರು. ಹೆಚ್.ಆರ್.ನಾಗೇಶರಾವ್ ಸುದ್ದಿ ಸಂಪಾದಕರ ಸ್ಥಾನದಲ್ಲಿಯೇ ಮುಂದುವರಿದರು. ಟ್ರಸ್ಟ್ನ ಆಸ್ತಿಯನ್ನು ಖಾಸಗಿ ಸೊತ್ತಿನಂತೆ ಪರಭಾರೆ ಮಾಡಿದ್ದು ಸರಿಯಲ್ಲವೆಂದು ಕೆ.ಶಾಮರಾವ್ ಧಾರವಾಡ ಜಿಲ್ಲಾ ನ್ಯಾಯಾಲಯದ ಮೊರೆ ಹೊಕ್ಕರು. ಕರ್ಮವೀರಕ್ಕೆ ಹೊಸರೂಪವನ್ನು ಕೊಡಲಾಯಿತು. ಜಿ.ಪಿ.ಬಸವರಾಜು, ಗೋಪಾಲ ವಾಜಪೇಯಿ, ಗಂಗಾಧರ ಮೊದಲಿಯಾರ್, ಆರ್.ನರಸಿಂಹ, ಸರಜೂ ಕಾಟ್ಕರ, ಎನ್.ಗಾಯತ್ರಿದೇವಿ ಮೊದಲಾದ ನವ ಪೀಳಿಗೆಯ ಪತ್ರಕರ್ತರು ಸಂಕ ಸಮೂಹಕ್ಕೆ ಚೈತನ್ಯ ತಂದರು. ಆದರೆ ಪತ್ರಿಕೋದ್ಯಮದಲ್ಲಿನ ಅನುಭವದ ಕೊರತೆಯಿಂದ ಉದ್ಯಮಿ ಘೋರ್ಪಡೆ ಈ ವಹಿವಾಟಿನಲ್ಲಿ ಆಸಕ್ತಿ ಕಳೆದುಕೊಂಡರು. ಬದಲಾದ ಕರ್ನಾಟಕ ರಾಜ್ಯ ರಾಜಕಾರಣದಿಂದ ಪತ್ರಿಕೆಗಳನ್ನು ನಡೆಸುವುದು ಅವರಿಗೆ ಬೇಕಾಗಿರಲಿಲ್ಲ. ಮರು ಮಾರಾಟ ದೇವರಾಜ ಅರಸು ಅವರಿಗೆ ಹತ್ತಿರದವರಾಗಿದ್ದ ಅಬಕಾರಿ ಉದ್ಯಮಿ ಹಾಗೂ ಲೋಕಸಭಾ ಸದಸ್ಯರಾಗಿದ್ದ ಹೆಚ್.ಆರ್.ಬಸವರಾಜ್ ಅವರಿಗೆ ಘೋರ್ಪಡೆಯವರು ಪತ್ರಿಕಾ ಸಮೂಹವನ್ನು ಡಿಸೆಂಬರ್ 1977ರಲ್ಲಿ ಮಾರಾಟ ಮಾಡಿದರು. ನ್ಯಾಯಾಲಯದಲ್ಲಿ ಮತ್ತಷ್ಟು ದೂರುಗಳು ದಾಖಲಾದವು. ಜಯಕರ್ನಾಟಕ ನ್ಯೂಸ್ಪೇಪರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಹೆಸರಿನಲ್ಲಿ ಸಂಕದ ಆಡಳಿತ ಮುಂದುವರಿಯಿತು. ಕೆ.ಎಸ್.ರಾಮಕೃಷ್ಣಮೂರ್ತಿಯವರ ನಿಧನದಿಂದ ತೆರವಾದ ಕನ್ನಡಪ್ರಭ ಸಂಪಾದಕರ ಸ್ಥಾನಕ್ಕೆ ಖಾದ್ರಿ ಶಾಮಣ್ಣ ತೆರಳಿದರು. ಜಯಕರ್ನಾಟಕ ಸಂಸ್ಥೆಯ ವತಿಯಿಂದ ಪ್ರಕಟವಾಗುತ್ತಿದ್ದ ಪ್ರಜಾಪ್ರಭುತ್ವವೆಂಬ ಟ್ಯಾಬ್ಲಾಯ್ಡ್ ವಾರಪತ್ರಿಕೆಯ ಸಂಪಾದಕರಾಗಿದ್ದ ಸಾಹಿತಿ ಪ.ಸು.ಭಟ್ಟ ಸಂಕ ಸಮೂಹದ ಸಂಪಾದಕರಾದರು. ಚಿತ್ರದೀಪವೆಂಬ ಸಿನಿಮಾ ಪತ್ರಿಕೆಯನ್ನೂ ಆರ್.ನರಸಿಂಹ ಅವರ ನೇತೃತ್ವದಲ್ಲಿ ಆರಂಭಿಸಲಾಯಿತು. ಮುಚ್ಚಿದ ಬೆಂಗಳೂರು ಮುದ್ರಣ ಪ.ಸು.ಭಟ್ಟ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಕೆಲಕಾಲ ರಾವಬಹಾದ್ದೂರ ಅವರನ್ನು ನೇಮಕ ಮಾಡಲಾಯಿತು. ಅವರು ಬೆಂಗಳೂರು ಮುದ್ರಣಕ್ಕೆ ಮಾತ್ರ ಸಂಪಾದಕರಾಗಿದ್ದರು. ಕೆಲ ದಿನಗಳ ನಂತರ ಅವರೂ ರಾಜೀನಾಮೆ ನೀಡಿದರು. ಸಹ ಸಂಪಾದಕರಾಗಿದ್ದ ಎಸ್.ವಿ.ಜಯಶೀಲರಾವ್ ಬೆಂಗಳೂರು ಮುದ್ರಣವನ್ನು ನೋಡಿಕೊಂಡರು. ಅರಸು ಅಧಿಕಾರ ಕಳೆದುಕೊಂಡ ನಂತರ ಬಸವರಾಜ್ ಸಂಕದ ಬೆಂಗಳೂರು ಮುದ್ರಣವನ್ನು ಹಠಾತ್ ಆಗಿ ಮುಚ್ಚಿದರು (31011980). ಜನಾರ್ದನ ರಾಜಿನಾಮೆಯಿತ್ತರು. ಘೋರ್ಪಡೆಯವರ ಸಂಡೂರು ಮ್ಯಾಂಗನೀಸ್ ಅಂಡ್ ಐರನ್ ಓರ್ ಲಿಮಿಟೆಡ್ (ಸ್ಮಯೋರ್) ಕಂಪನಿಯ ಸಾರ್ವಜನಿಕ ಸಂಪರ್ಕಾಧಿಕಾರಿಯಾದರು. ಇತ್ತ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕರ ಹುದ್ದೆ ಮತ್ತೀಹಳ್ಳಿ ನಾಗರಾಜರಾವ್ ಅವರದಾಯಿತು. ನೌಕರರ ಹೋರಾಟಕ್ಕೆ ಸಿಕ್ಕ ಜಯ ಸರ್ಕಾರದ ಆಡಳಿತದಲ್ಲಿ ಪತ್ರಿಕೆ ಬಹು ಹಿಂದೆ ಆರಂಭಗೊಂಡಿದ್ದ ಸಂಯುಕ್ತ ಕರ್ನಾಟಕ ನೌಕರರ ಸಂಘ ಬೆಂಗಳೂರಿನಲ್ಲಿ ಮರುಚಾಲನೆಗೊಂಡಿತು. ನಾಗೇಶರಾವ್ ನೇತೃತ್ವದ ಸಂಘವು ಬೆಂಗಳೂರು ಆವೃತ್ತಿಯ ಪುನಾರಂಭಕ್ಕೆ ಒತ್ತಾಯಿಸಿ ಹೋರಾಟ ನಡೆಸಿತು. ಪತ್ರಕರ್ತರು ಸರದಿಯಲ್ಲಿ ವಿಧಾನಸೌಧದ ಮುಂದೆ ಉಪವಾಸ ಮುಷ್ಕರ ಹೂಡಿದರು. ಇತ್ತ ಅರ್ಜುನದೇವ, ಜಯಶೀಲರಾವ್, ಕೋಡಿಹೊಸಳ್ಳಿ ರಾಮಣ್ಣ ನೇತೃತ್ವದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವೂ ಹಕ್ಕೊತ್ತಾಯದ ಹೋರಾಟ ನಡೆಸಿತು. ಆರ್.ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದರು. ವೀರಪ್ಪ ಮೊಯ್ಲಿ ಸಂಪುಟ ಸಹೋದ್ಯೋಗಿಯಾಗಿದ್ದರು. ವಿಧಾನಸಭೆಯ ಅಧಿವೇಶನದಲ್ಲಿ ಸಂಕದ ಪುನಾರಂಭಕ್ಕೆ ಒತ್ತಾಯ ಹೆಚ್ಚಿತು. ಇತ್ತ ಧಾರವಾಡ ನ್ಯಾಯಾಲಯದಲ್ಲಿನ ವಾದಪ್ರತಿವಾದಗಳೂ ಜೋರಾಗಿದ್ದವು. ಸರ್ಕಾರದ ದಯಾದೃಷ್ಟಿ, ನ್ಯಾಯಾಲಯದಲ್ಲಿ ಮೊಕ್ಕದ್ದಮೆ ಹೂಡಿದ್ದವರ ಸಹಕಾರ, ನೌಕರರ ಅನಿರ್ದಿಷ್ಟ ಹೋರಾಟದ ಫಲವಾಗಿ ಧಾರವಾಡ ಜಿಲ್ಲಾ ನ್ಯಾಯಾಲಯವು ಒಂದು ಮಧ್ಯಂತರ ತೀರ್ಪು ನೀಡಿತು. ಲೋಕ ಶಿಕ್ಷಣ ಟ್ರಸ್ಟ್ ನ ಮಾಲಿಕತ್ವ ಇತ್ಯರ್ಥವಾಗುವವರೆಗೆ ದತ್ತಿ ಆಯುಕ್ತರು (ಚಾರಿಟಿ ಕಮೀಷನರ್) ಆಡಳಿತ ನಡೆಸಬೇಕು ಎಂಬ ಆದೇಶವನ್ನು ಸೆಪ್ಟೆಂಬರ್ 1980ರಲ್ಲಿ ಹೊರಡಿಸಿತು. ಚಾರಿಟಿ ಕಮೀಷನರ್ ಆಗಿದ್ದ ವಾಮದೇವ ಅವರು ಲೋಕ ಶಿಕ್ಷಣ ಟ್ರಸ್ಟ್ ನ ರಿಸೀವರ್ ಆಗಿ ಆಡಳಿತ ವಹಿಸಿಕೊಳ್ಳುವುದರ ಜತೆಗೆ ಸಂಕದ ಹುಬ್ಬಳ್ಳಿ ಆವೃತ್ತಿಯ ಸಂಪಾದಕರಾಗಿಯೂ ಘೋಷಿಸಿಕೊಂಡರು. ನ್ಯಾಯಾಲಯವು ಮತ್ತೊಂದು ಆದೇಶದ ಮೂಲಕ ಬಿ.ವಿ.ಜಿಗಜಿನ್ನಿಯವರನ್ನು ರಿಸೀವರ್ ಆಗಿ ನೇಮಕ ಮಾಡಿದಂತೆ, ಅವರೂ ಸಹಾ ಸಂಪಾದಕರೆಂದು ಘೋಷಿಸಿಕೊಂಡರು. ಏತನ್ಮಧ್ಯೆ ಸಂಕದ ಬೆಂಗಳೂರು ಆವೃತ್ತಿ 20121980ರಂದು ಪುನಾರಂಭಗೊಂಡಿತು. ಹನ್ನೊಂದು ತಿಂಗಳ ಸುದೀರ್ಘ ಹೋರಾಟಕ್ಕೆ ಜಯ ಸಿಕ್ಕಿತು. ಬೆಂಗಳೂರು ಆವೃತ್ತಿಗೆ ಕೊಡಗಿನ ಶಕ್ತಿ ದಿನಪತ್ರಿಕೆಯ ಸಂಪಾದಕರು ಹಾಗೂ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರ ಆಪ್ತರೂ ಆಗಿದ್ದ ಬಿ.ಎಸ್.ಗೋಪಾಲಕೃಷ್ಣ ಅವರ ನೇಮಕವಾಯಿತು. ಎಸ್.ವಿ.ಜಯಶೀಲರಾವ್ ಸಹ ಸಂಪಾದಕರಾಗಿ, ಹೆಚ್.ಆರ್.ನಾಗೇಶರಾವ್ ಸುದ್ದಿ ಸಂಪಾದಕರಾಗಿ ಮುಂದುವರಿದರು. ಜುಲೈ 1980ರಲ್ಲಿ ಹುಬ್ಬಳ್ಳಿಬೆಂಗಳೂರು ಎರಡೂ ಆವೃತ್ತಿಗಳ ಸಂಪಾದಕರಾಗಿ ಗೋಪಾಲಕೃಷ್ಣ ಅಧಿಕಾರ ವಹಿಸಿಕೊಂಡರು. ಸೆಪ್ಟಂಬರ್ 1, 1981ರಂದು ವಿಶೇಷ ಆಜ್ಞೆಯೊಂದಿಗೆ ಆಡಳಿತಾಧಿಕಾರಿಯೊಬ್ಬರ ಮೂಲಕ ಲೋಕ ಶಿಕ್ಷಣ ಟ್ರಸ್ಟ್ ನ ಆಡಳಿತವನ್ನು ರಾಜ್ಯ ಸರ್ಕಾರವು ವಹಿಸಿಕೊಂಡಿತು. ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗಳಾದವು. ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಮೊಕ್ಕದ್ದಮೆಗಳು ಮುಂದುವರಿದವು. ಗುಂಡೂರಾವ್ ಅಧಿಕಾರ ಕಳೆದುಕೊಂಡರು. ಗೋಪಾಲಕೃಷ್ಣ ನಿರ್ಗಮಿಸಿದರು. ಟೈಮ್ಸ್ ಆಫ್ ಡೆಕ್ಕನ್ ಸಮೂಹದ ಕನ್ನಡ ಪತ್ರಿಕೆ ಮುಂಜಾನೆಯ ಸಂಪಾದಕರಾಗಲು ಜಯಶೀಲರಾವ್ ಸಂಕ ತೊರೆದರು. ಹುಬ್ಬಳ್ಳಿ ಆವೃತ್ತಿಯಲ್ಲಿ ಮತ್ತೀಹಳ್ಳಿ ನಾಗರಾಜರಾವ್ ಅವರ ನಿವೃತ್ತಿಯ ನಂತರ ಸುರೇಂದ್ರ ದಾನಿ ಸಹಾಯಕ ಸಂಪಾದಕರಾಗಿದ್ದರು. ಸೆಪ್ಟಂಬರ್ 1, 1983ರಂದು ಬೆಂಗಳೂರು ಆವೃತ್ತಿಯ ಸಹಾಯಕ ಸಂಪಾದಕರಾಗಿ ಹೆಚ್.ಆರ್.ನಾಗೇಶರಾವ್ ಅವರ ನೇಮಕವಾಯಿತು. ಸುರೇಂದ್ರ ದಾನಿ ಅವರನ್ನು ಎರಡೂ ಆವೃತ್ತಿಗಳ ಸಂಪಾದಕರನ್ನಾಗಿ ನೇಮಕ ಮಾಡಲಾಯಿತು. ಅವರ ನಿವೃತ್ತಿಯ ನಂತರ ಆರ್.ಎ.ಉಪಾಧ್ಯ ಎರಡೂ ಆವೃತ್ತಿಗಳ ಸಂಪಾದಕತ್ವ ವಹಿಸಿಕೊಂಡರು. 1984ರಲ್ಲಿ ಹೆಚ್.ಆರ್.ನಾಗೇಶರಾವ್ ಅವರಿಗೆ ಸ್ಥಾನಿಕ ಸಂಪಾದಕರಾಗಿ ಬಡ್ತಿ ದೊರೆಯಿತು. 31101985ರಲ್ಲಿ ನಾಗೇಶರಾವ್ ನಿವೃತ್ತಿಯ ನಂತರ ಧ್ರುವರಾಜ ಮುತಾಲಿಕ ದೇಸಾಯಿ ಬೆಂಗಳೂರು ಆವೃತ್ತಿಯ ಸ್ಥಾನಿಕ ಸಂಪಾದಕರಾಗಿ ಅಧಿಕಾರ ವಹಿಸಿಕೊಂಡರು. ಮತ್ತೆ ಲೋಕ ಶಿಕ್ಷಣ ಟ್ರಸ್ಟ್ ಆಡಳಿತ ನ್ಯಾಯಾಲಯದ ಮೊಕ್ಕದ್ದಮೆಗಳು ಇತ್ಯರ್ಥವಾಗಿ ಲೋಕ ಶಿಕ್ಷಣ ಟ್ರಸ್ಟ್ ಗೆ ಆಡಳಿತ ಹಿಂದಿರುಗಿತು. ಮಾಜಿ ಮುಖ್ಯ ಮಂತ್ರಿ ಬಿ.ಡಿ.ಜತ್ತಿಯವರ ಅಧ್ಯಕ್ಷತೆಯಲ್ಲಿ ಟ್ರಸ್ಟ್ ಪುನಾರಚನೆಗೊಂಡಿತು. ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸರಾವ್ ಸದಸ್ಯರಾಗಿ ಸೇರ್ಪಡೆಗೊಂಡರು. ಕೆ.ಶಾಮರಾವ್ ಟ್ರಸ್ಟ್ ನ ಕಾರ್ಯದರ್ಶಿ ಹಾಗೂ ಪತ್ರಿಕಾ ಸಮೂಹದ ವ್ಯವಸ್ಥಾಪಕ ಸಂಪಾದಕರಾಗಿ ನೇಮಕಗೊಂಡರು. ಉಪಾಧ್ಯ, ಮುತಾಲಿಕ ದೇಸಾಯಿ ಅವರ ನಿವೃತ್ತಿಯ ನಂತರ ನರಸಿಂಹ ಜೋಶಿ ಸಂಪಾದಕರಾದರು. ಕಲ್ಬುರ್ಗಿ ಆವೃತ್ತಿ ಆರಂಭವಾಯಿತು. ಆಡಳಿತ ವರ್ಗದೊಂದಿಗೆ ಭಿನ್ನಾಭಿಪ್ರಾಯದಿಂದ ವೆಂಕಟನಾರಾಯಣ ನಿರ್ಗಮಿಸಿದರು. ಜೋಶಿ ನಿವೃತ್ತರಾದರು. ಕೆ.ಶ್ರೀಧರ ಆಚಾರ್ ಸಲಹೆಗಾರರಾಗಿ ಸೇರ್ಪಡೆಯಾದರು. ಸ್ಥಾನಿಕ ಸಂಪಾದಕರಾಗಿದ್ದ ಎ.ಗುಂಡಾಭಟ್ ನಿವೃತ್ತರಾದರು. ಶಾಮರಾವ್ ನಿರ್ಗಮಿಸಿದರು. ಹಾರನಹಳ್ಳಿ ರಾಮಸ್ವಾಮಿ ಟ್ರಸ್ಟ್ ನ ಅಧ್ಯಕ್ಷರಾದರು. ಹಿರಿಯ ಪತ್ರಕರ್ತ ವಿ.ಎನ್.ಸುಬ್ಬರಾವ್ ಸಂಕದ ಸಂಪಾದಕರಾದರು. ಅವರ ಅಧಿಕಾರಾವಧಿಯ ನಂತರ, ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಪತ್ರಿಕಾ ಕಾರ್ಯದರ್ಶಿಯಾಗಿ ದೆಹಲಿಗೆ ಹೋಗಿದ್ದ ಎಸ್.ವಿ.ಜಯಶೀಲರಾವ್ ಸಂಕಕ್ಕೆ ಸಂಪಾದಕರಾದರು. ಕನ್ನಡಪ್ರಭದಿಂದ ನಿವೃತ್ತರಾಗಿ ಪತ್ರಿಕಾ ಅಕ್ಯಾಡೆಮಿ ಅಧ್ಯಕ್ಷಗಿರಿಯಿಂದಲೂ ನಿವೃತ್ತರಾಗಿದ್ದ ಗರುಡನಗಿರಿ ನಾಗರಾಜ ಕರ್ಮವೀರ ಪತ್ರಿಕೆಯ ಸಂಪಾದಕರಾದರು. ಜಯಶೀಲರಾವ್ ಅವರ ನಿರ್ಗಮನದ ನಂತರ ಸಂಕದ ಸಂಪಾದಕರಾಗಿ ಮನೋಜ್ ಗೌಡ ಪಾಟೀಲ ನೇಮಕಗೊಂಡರು. ಹಾರನಹಳ್ಳಿ ರಾಮಸ್ವಾಮಿಯವರ ಆಡಳಿತದಲ್ಲಿ ಸಂಯುಕ್ತ ಕರ್ನಾಟಕದ ದಾವಣಗೆರೆ ಹಾಗೂ ಮಂಗಳೂರು ಆವೃತ್ತಿಗಳು ಆರಂಭವಾದವವು. ಅವರ ನಿಧನದ ನಂತರ ಟ್ರಸ್ಟ್ ಪುನಾರಚನೆಗೊಂಡಿತು. ಪಾಟೀಲ ನಿವೃತ್ತರಾದರು. ಇದೀಗ ಪ್ರಧಾನ ವರದಿಗಾರರಾಗಿದ್ದ ಹುಣಸವಾಡಿ ರಾಜನ್ ಸಂಕದ ಸಂಪಾದಕರಾಗಿದ್ದಾರೆ. ೮೫ ನೆಯ ವರ್ಷಕ್ಕೆ ಕಾಲಿಟ್ಟಿದೆ ಸಂಯುಕ್ತ ಕರ್ನಾಟಕ, ೮೫ ರ ಹುಟ್ಟುಹಬ್ಬದ ಸಂಭ್ರಮದಲ್ಲಿದೆ. ಉಲ್ಲೇಖಗಳು ಸಂಯುಕ್ತ ಕರ್ನಾಟಕ ಬೆಂಗಳೂರು ಆವೃತ್ತಿಯಲ್ಲಿ ತರಬೇತಿ ಪಡೆದು ಮುಂದೆ ವಿವಿಧ ಪತ್ರಿಕೆಗಳಲ್ಲಿ ಉನ್ನತ ಸ್ಥಾನ ಪಡೆದವರ ಪಟ್ಟಿ ಇಂತಿದೆ. ೧. ಪಿ.ರಾಮಣ್ಣ ಕಿಡಿ ಪಿ.ಶೇಷಪ್ಪನವರ ತಮ್ಮ, ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತ ೨. ಜಿ.ಎನ್.ರಂಗನಾಥರಾವ್ ಸಾಹಿತಿ, ಅನುವಾದಕ, ಪತ್ರಿಕೋದ್ಯಮ ವಿಷಯ ಬೋಧಕ, ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತ ೩. ಖಾದ್ರಿ ಎಸ್.ಅಚ್ಯುತನ್ ಖಾದ್ರಿ ಶಾಮಣ್ಣನವರ ತಮ್ಮ, ನಿವೃತ್ತ ಸುದ್ದಿ ಸಂಪಾದಕರು ದೂರದರ್ಶನ ಕೇಂದ್ರ, ಬೆಂಗಳೂರು ೪. ವಿ.ಆರ್.ಶ್ಯಾಮ್ ಇಂದಿರಾತನಯ ಕಾವ್ಯನಾಮದ ಕಾದಂಬರಿಕಾರ, ಪ್ರಜಾವಾಣಿ ಪತ್ರಿಕೆಯ ಪುರವಣಿ ಸಂಪಾದಕರಾಗಿ ನಿವೃತ್ತ ೫. ಸೂ.ರಮಾಕಾಂತ ಕನ್ನಡಪ್ರಭ ಹಾಗೂ ವಿಜಯ ಕರ್ನಾಟಕ ಪತ್ರಿಕೆಗಳನ್ನು ಆರಂಭದ ದಿನಗಳಲ್ಲಿ ರೂಪಿಸುವಲ್ಲಿ ಶ್ರಮಿಸಿದ ಹಿರಿಯ ಪತ್ರಕರ್ತರು ೬. ಕೆ.ಎಸ್.ನಾಗಭೂಷಣಂ ಪದಬಂಧಗಳನ್ನು ಕನ್ನಡ ದಿನಪತ್ರಿಕೆಗಳಲ್ಲಿ ಜನಪ್ರಿಯಗೊಳಿಸಿದವರು, ಪ್ರಜಾವಾಣಿಯ ನಿವೃತ್ತ ಸುದ್ದಿ ಸಂಪಾದಕ ೭. ಎಸ್.ದಿವಾಕರ್ ಸಣ್ಣ ಕತೆಗಳ ಸಾಹಿತಿ, ಅನುವಾದಕ, ಸುಧಾ ಮತ್ತು ಪ್ರಜಾವಾಣಿ ಪತ್ರಿಕೆಗಳ ಫೀಚರ್ಸ್ ಎಡಿಟರ್ ಆಗಿ ನಿವೃತ್ತ ೮. ಜಿ.ಎಸ್.ಸದಾಶಿವ ಕತೆಗಾರ, ಮಯೂರ ಮಾಸಪತ್ರಿಕೆಯ ಮಾಜಿ ಸಂಪಾದಕರು, ಕನ್ನಡಪ್ರಭ ಪತ್ರಿಕೆಯ ಮಾಜಿ ಕಾರ್ಯನಿರ್ವಾಹಕ ಸಂಪಾದಕ (ಫೀಚರ್ಸ್) ೯. ವೆಂಕಟನಾರಾಯಣ ಕನ್ನಡಪ್ರಭ, ಉಷಾಕಿರಣ, ಟೈಮ್ಸ್ ಆಫ್ ಇಂಡಿಯಾ ಕನ್ನಡ, ಮಂಗಳ ಪತ್ರಿಕೆಗಳ ಮಾಜಿ ಸಂಪಾದಕರು ೧೦. ಗಂಗಾಧರ ಮೊದಲಿಯಾರ್ ಪ್ರಜಾವಾಣಿ ಸಹಾಯಕ ಸಂಪಾದಕರು ೧೧. ವಿಶ್ವೇಶ್ವರ ಭಟ್ ವಿಜಯ ಕರ್ನಾಟಕ ಮಾಜಿ ಸಂಪಾದಕರು, ಕನ್ನಡಪ್ರಭ ಪತ್ರಿಕೆಯ ಪ್ರಧಾನ ಸಂಪಾದಕರು, ಸುವರ್ಣ ನ್ಯೂಸ್ ಕನ್ನಡ ಟೀವಿ ಚಾನೆಲ್ನ ಪ್ರಧಾನ ಸಂಪಾದಕರು ೧೨. ಎಸ್.ಕೆ.ಶಾಮಸುಂದರ ಕನ್ನಡಪ್ರಭ ಸಾಪ್ತಾಹಿಕ ಪ್ರಭದ ಮಾಜಿ ಸಂಪಾದಕರು, ದಟ್ಸ್ ಕನ್ನಡ ಡಾಟ್ ಕಾಮ್ ಇಂಟರ್ನೆಟ್ ಪತ್ರಿಕೆಯ ಸ್ಥಾಪಕ ಸಂಪಾದಕರು ೧೩. ರವಿ ಹೆಗಡೆ ಕನ್ನಡಪ್ರಭ ಪತ್ರಿಕೆಯ ಮಾಜಿ ಕಾರ್ಯನಿರ್ವಾಹಕ ಸಂಪಾದಕರು, ಸುವರ್ಣ ನ್ಯೂಸ್ ಕನ್ನಡ ಟೀವಿ ಚಾನೆಲ್ನ ಮಾಜಿ ಸುದ್ದಿ ಸಂಪಾದಕರು, ಉದಯವಾಣಿ ಪತ್ರಿಕೆಯ ಸಮೂಹ ಸಂಪಾದಕರು ೧೪.ಎ.ಆರ್.ಮಣಿಕಾಂತ್ ಹಾಯ್ ಬೆಂಗಳೂರ್ ಪತ್ರಿಕೆಯ ಮಾಜಿ ಉಪಸಂಪಾದಕರು, ವಿಜಯ ಕರ್ನಾಟಕ ಮಾಜಿ ಮುಖ್ಯ ಉಪಸಂಪಾದಕರು, ಕನ್ನಡಪ್ರಭ ಪತ್ರಿಕೆಯ ಮುಖ್ಯ ಉಪಸಂಪಾದಕರು ೧೫. ಜಯರಾಮ ಅಡಿಗ ಕನ್ನಡಪ್ರಭ ಪತ್ರಿಕೆಯ ಮಾಜಿ ಸುದ್ದಿ ಸಂಪಾದಕರು, ಉಷಾ ಕಿರಣ ಪತ್ರಿಕೆಯ ಮಾಜಿ ಸಹಾಯಕ ಸಂಪಾದಕರು ೧೬. ರಾಧಾಕೃಷ್ಣ ಭಡ್ತಿ ವಿಜಯ ಕರ್ನಾಟಕ ಪತ್ರಿಕೆಯ ಮಾಜಿ ಸಹಾಯಕ ಸಂಪಾದಕರು, ಕನ್ನಡಪ್ರಭ ಪತ್ರಿಕೆಯ ಪುರವಣಿ ಸಂಪಾದಕರು ೧೭. ರವಿ ಬೆಳಗೆರೆ ಲೇಖಕರು ಹಾಗೂ ಹಾಯ್ ಬೆಂಗಳೂರ್ ಪತ್ರಿಕೆಯ ಸ್ಥಾಪಕಸಂಪಾದಕರು ೧೮. ಜಯತೀರ್ಥ ಪ್ರಜಾವಾಣಿಯ ಪ್ರಧಾನ ವರದಿಗಾರರಾಗಿ ನಿವೃತ್ತ ಕೆಳಗಿನ ವಿಷಯಗಳನ್ನೂ ನೋಡಿ ಕಸ್ತೂರಿ ಹೆಚ್.ಆರ್.ನಾಗೇಶರಾವ್ ಜಿ.ಎಸ್.ಸದಾಶಿವ ಖಾದ್ರಿ ಶಾಮಣ್ಣ ರಂಗನಾಥ ದಿವಾಕರ ನಾರಾಯಣರಾವ್ ಕಲ್ಲೆ ಕನ್ನಡ ಪತ್ರಿಕೆಗಳು ಕನ್ನಡ ದಿನಪತ್ರಿಕೆಗಳು
ಸಂಜೆವಾಣಿ, ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲೊಂದು. ಬೆಂಗಳೂರಿನಿಂದ ಪ್ರತಿ ಮಧ್ಯಾಹ್ನ ಪ್ರಕಾಶಿತವಾಗುತ್ತಿದೆ. ಹೊರಗಿನ ಸಂಪರ್ಕಗಳು ಸಂಜೆವಾಣಿ ಅಧಿಕೃತ ಅಂತರ್ಜಾಲ ತಾಣ ಕನ್ನಡ ದಿನಪತ್ರಿಕೆಗಳು
ಪ್ರಪಂಚ, ಕನ್ನಡದ ಪ್ರಮುಖ ವಾರ ಪತ್ರಿಕೆಗಳಲ್ಲೊಂದು. ಹುಬ್ಬಳ್ಳಿಯ ಕನ್ನಡದ ಖ್ಯಾತ ಲೇಖಕರಾದ ಪಾಟೀಲ ಪುಟ್ಟಪ್ಪ ನವರು ಇದರ ಸ್ಥಾಪಕ ಸಂಪಾದಕರು.ಪ್ರಪಂಚ ವಾರಪತ್ರಿಕೆ ೧೯೫೪ರಲ್ಲಿ ಹುಬ್ಬಳ್ಳಿಯಲ್ಲಿ ಪ್ರಾರಂಭವಾಯಿತು.ಸ್ವಾತಂತ್ರ್ಯಾನಂತರ ಪ್ರಾರಂಭವಾದ ಮುಂಬಯಿಕರ್ನಾಟಕದ ವಾರಪತ್ರಿಕೆಗಳಲ್ಲಿ ಪ್ರಮುಖವಾದುದು.ಇದರ ಸ್ಥಾಪಕ ಸಂಪಾದಕರಾದ ಪಾಟೀಲ ಪುಟ್ಟಪ್ಪನವರು ಅಮೆರಿಕದಲ್ಲಿ ಪತ್ರಿಕೋದ್ಯಮದಲ್ಲಿ ಪ್ರೌಢ ವ್ಯಾಸಂಗ ಮಾಡಿ ,ಪತ್ರಿಕೋದ್ಯಮದಲ್ಲಿ ಎಂಎಸ್ಸಿ ಡಿಗ್ರಿ ಸಂಪಾದಿಸಿ,ಹಿಂದಿರುಗಿ ಬಂದು ಈ ಪತ್ರಿಕೆಯನ್ನು ಪ್ರಾರಂಭಿಸಿದರು. ಕನ್ನಡ ವಾರಪತ್ರಿಕೆಗಳು ಪತ್ರಿಕೋದ್ಯಮ
ತುಷಾರ, ಕನ್ನಡದ ಪ್ರಮುಖ ಮಾಸ ಪತ್ರಿಕೆಗಳಲ್ಲೊಂದು. ಉದಯವಾಣಿ ಬಳಗದಿಂದ ಪ್ರಕಾಶಿತವಾಗುತ್ತಿದೆ. ಕನ್ನಡ ಮಾಸಪತ್ರಿಕೆಗಳು
೧೯೭೫ರ ಕನ್ನಡ ಚಲನಚಿತ್ರ ಮಯೂರ ನೋಡಿ. <> ಮಯೂರ, ಕನ್ನಡದ ಪ್ರಮುಖ ಮಾಸಪತ್ರಿಕೆಗಳಲ್ಲೊಂದು. ಬೆಂಗಳೂರಿನ ಪ್ರಜಾವಾಣಿ ಬಳಗದಿಂದ ಪ್ರಕಾಶಿತವಾಗುತ್ತಿದೆ. ಹೊರಗಿನ ಸಂಪರ್ಕಗಳು ಮಯೂರ ಮಾಸಪತ್ರಿಕೆಯ ಅಂತರ್ಜಾಲ ತಾಣ ಕನ್ನಡ ಮಾಸಪತ್ರಿಕೆಗಳು ಪತ್ರಿಕೋದ್ಯಮ ಪತ್ರಿಕೆ ದ್ವಂದ್ವ ನಿವಾರಣೆ
ಎಂ ಚಿನ್ನಸ್ವಾಮಿ ಕ್ರೀಡಾಂಗಣ ಅಥವಾ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆ. ಎಸ್ ಸಿ. ಏ) ಕ್ರೀಡಾಂಗಣ ಬೆಂಗಳೂರು ಮತ್ತು ಕರ್ನಾಟಕ ರಾಜ್ಯದಲ್ಲಿರುವ ಅಂತರಾಷ್ಟ್ರೀಯ ಮಟ್ಟದ ಏಕೈಕ ಕ್ರಿಕೆಟ್ ಕ್ರೀಡಾಂಗಣ. ಮೂಲತಃ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಕ್ರೀಡಾಂಗಣ ಎಂದು ಕರೆಯಲಾಗುತಿದ್ದ ಈ ಕ್ರೀಡಾಂಗಣ, ತದನಂತರ ನಾಲ್ಕು ದಶಕಗಳ ಕಾಲ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಸೇವೆ ಮಾಡಿದ ಹಾಗು ೧೯೭೭ರಿಂದ ೧೯೮೦ರವರೆಗೆ ಭಾರತಿಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿದ್ದ ಎಮ್. ಚಿನ್ನಸ್ವಾಮಿಯವರ ಹೆಸರನ್ನು ಪಡೆಯಿತು. ಸುಮಾರು ೫೫,೦೦೦ ಆಸನ ಕ್ಷಮತೆ ಹೊಂದಿರುವ ಈ ಕ್ರೀಡಾಂಗಣ ಬೆಂಗಳೂರು ನಗರದ ಮಧ್ಯದಲ್ಲಿ ಕಬ್ಬನ್ ಪಾರ್ಕ್ ಹಾಗು ಮಹಾತ್ಮಗಾಂಧಿ ರಸ್ತೆಗೆ ಹೊಂದಿಕೊಂಡಿದೆ. ವಿವರ ಕರ್ನಾಟಕ ರಾಜ್ಯ ಸರ್ಕಾರದಿಂದ ನಿವೇಶನ ಪಡೆದ ನಂತರ ಈ ಕ್ರೀಡಾಂಗಣದ ಅಡಿಗಲ್ಲು ಮೇ ೧೯೬೯ರಲ್ಲಿ ಹಾಕಲಾಯಿತು ಮತ್ತು, ನಿರ್ಮಾಣ ಕಾರ್ಯ ೧೯೭೦ರಲ್ಲಿ ಪ್ರಾರಂಭಿಸಲಾಯಿತು. ೧೯೭೨೭೩ರಲ್ಲಿ ಕ್ರಿಕೆಟ್ ಋತುವಿನಲ್ಲಿ ಮೊದಲ ದರ್ಜೆಯ ಕ್ರಿಕೆಟ್ ಪಂದ್ಯ ಈ ಕ್ರೀಡಾಂಗಣದಲ್ಲಿ ಆಡಲ್ಪಟ್ಟಿತು. ಈ ಕ್ರೀಡಾಂಗಣ ೧೯೭೪೭೫ರಲ್ಲಿ ಭಾರತ ಹಾಗು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಕಾಲದಲ್ಲಿ ಟೆಸ್ಟ್ ಕೇಂದ್ರದ ಅರ್ಹತೆ ಪಡೆಯಿತು. ೧೯೭೪ರ ನವೆಂಬರ್ ೨೨೨೭ರ ನಡುವೆ ನಡೆದ ಈ ಟೆಸ್ಟಿನಲ್ಲಿ ಆಕಾಲಿಕ ಮಳೆಯಿಂದ ಮೊದಲೆರಡು ದಿನ ಆಟ ತಡವಾಗಿ ಪ್ರಾರಂಭವಾದರೂ, ಕ್ಲೈವ್ ಲಾಯ್ಡ್ ನೇತೃತ್ವದ ವೆಸ್ಟ್ ಇಂಡೀಸ್ ಟೈಗರ್ ಪಟೌಡಿ ನೇತೃತ್ವದ ಭಾರತವನ್ನು ೨೬೭ ರನ್ನುಗಳಿಂದ ಮಣಿಸಿತು. ಇದೆ ಪಂದ್ಯದಲ್ಲಿ ವೆಸ್ಟ್ ಇಂಡೀಸ್ನ ಹೆಸರಾಂತ ದಾಂಡಿಗರಾದ ವಿವಿಯನ್ ರಿಚರ್ಡ್ಸ್ ಹಾಗು ಗೊರ್ಡನ್ ಗ್ರೀನಿಡ್ಜ್ ಟೆಸ್ಟ್ ರಂಗಕ್ಕೆ ಪದಾರ್ಪಣೆ ಮಾಡಿದರು. ಈ ಕ್ರೀಡಾಂಗಣದಲ್ಲಿ ಭಾರತಕ್ಕೆ ಪ್ರಥಮ ವಿಜಯ ೧೯೭೬೭೭ರಲ್ಲಿ ಟೋನಿ ಗ್ರೆಗ್ ನೇತೃತ್ವದ ಇಂಗ್ಲೆಂಡ್ ತಂಡದ ವಿರುದ್ಧ ದೊರಕಿತು. ಈ ಕ್ರೀಡಾಂಗಣದಲ್ಲಿ ೧೯೮೨ರ ಸೆಪ್ಟಂಬರ್ ೨೬ರೊಂದು ಪ್ರಥಮ ಬಾರಿಗೆ ಎಕದಿನದ ಅಂತರಾಷ್ಟ್ರೀಯ ಪಂದ್ಯ. ಭಾರತ ಹಾಗು ಶ್ರೀಲಂಕಾ ನಡುವೆ ನೆಡೆಯಿತು. ಭಾರತ ಈ ಪಂದ್ಯದಲ್ಲಿ ೬ ವಿಕೆಟ್ ಜಯ ಸಾಧಿಸಿತು. ೧೯೯೬ ವಿಶ್ವ ಕಪ್ ಪಂದ್ಯಾವಳಿಯ ಸಮಯದಲ್ಲಿ ನೆಡೆದ ನವೀಕರಣದೊಂದಿಗೆ ಈ ಕ್ರೀಡಾಂಗಣದಲ್ಲಿ ಪ್ರಥಮ ಬಾರಿಗೆ ಹೊನಲು ಬೆಳಕಿನ ವ್ಯವಸ್ಥೆ ಮಾಡಲಾಯಿತು. ಈ ಕ್ರೀಡಾಂಗಣದಲ್ಲಿ ಪ್ರಥಮ ಬಾರಿಗೆ ಹಗಲುರಾತ್ರಿ ಎಕದಿನದ ಅಂತರಾಷ್ಟ್ರೀಯ ಪಂದ್ಯ ೧೯೯೬ರ ಮಾರ್ಚ್ ೯ರೊಂದು ಭಾರತ ಹಾಗು ಪಾಕಿಸ್ತಾನದ ನಡುವೆ ನೆಡೆಯಿತು. ಈ ವಿಶ್ವ ಕಪ್ ಕ್ವಾಟರ್ ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ೩೯ ರನ್ನುಗಳಿಂದ ಪರಾಭವಗೊಳಿಸಿತು. ಈ ಕ್ರೀಡಾಂಗಣದ ಎರಡು ಬೌಲಿಂಗ್ ತುದಿಗಳು ಪೆವಿಲಿಯನ್ ತುದಿ ಹಾಗು ಬೆಮೆಲ್(ಬಿ.ಇ.ಎಮ್.ಎಲ್) ತುದಿ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ೨೦೦೦ ಇಸವಿಯಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿತು ಇದರಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣ ಭಾರತದ ಮುಂದಿನ ಪೀಳಿಗೆಯ ಕ್ರಿಕೆಟ್ ಪಟುಗಳನ್ನು ತಯಾರಿಸುವ ತಾಣವಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಸದ್ಯದಲ್ಲಿಯೆ ಕ್ರೀಡಾಂಗಣದ ಆಸನ ಕ್ಷಮತೆಯನ್ನು ೭೦,೦೦೦ಕ್ಕೆ ಹೆಚ್ಚಿಸಲಿದೆ. ಭಾರತದ ಶ್ರೇಷ್ಟ ಕ್ರಿಕೆಟ್ ಕ್ರೀಡಾಂಗಣಗಳಲ್ಲೊಂದು ಎಂದು ಪರಿಗಣಿಸಲಾಗುವ ಈ ಕ್ರೀಡಾಂಗಣದಲ್ಲಿ ಹಲವಾರು ರೋಮಾಂಚಕಾರಿ ಪಂದ್ಯಗಳ ನೆಡೆದಿವೆ ಹಾಗು ಹಲವಾರು ದಾಖಲೆಗಳು ಮಾಡಲ್ಪಟ್ಟಿದೆ. ಕ್ರೀಡಾಂಗಣದ ಅಂಕಿಅಂಶಗಳು ದಾಖಲೆಗಳು ಟೆಸ್ಟ್ ಪಂದ್ಯ ದಾಖಲೆಗಳು ಇನಿಂಗ್ಸೊಂದರಲ್ಲಿ ಅತಿ ಹೆಚ್ಚಿನ ಮೊತ್ತ : ಪಾಕಿಸ್ತಾನದ ವಿರುದ್ಧ ಭಾರತ, ೬೨೬ ಆಲ್ ಔಟ್, ೮೧೨ ಡಿಸೆಂಬರ್ ೨೦೦೭ ಇನಿಂಗ್ಸೊಂದರಲ್ಲಿ ಅತಿ ಹೆಚ್ಚಿನ ವೈಯಕ್ತಿಕ ಮೊತ್ತ: ಭಾರತದ ವಿರುದ್ದ ಪಾಕಿಸ್ತಾನದ ಯುನಿಸ್ ಖಾನ್, ೨೬೭, ೨೪೨೮ ಮಾರ್ಚ್ ೨೦೦೫ ಇನಿಂಗ್ಸೊಂದರಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ: ಪಾಕಿಸ್ತಾನದ ವಿರುದ್ದ ಭಾರತದ ಮಣೀಂದರ್ ಸಿಂಗ್, ೧೮.೨೮೨೭೭, ೧೩೧೭ ಮಾರ್ಚ್ ೧೯೮೭ ಅತಿ ಹೆಚ್ಚಿನ ರನ್ನುಗಳು: ಭಾರತದ ಸಚಿನ್ ತೆಂಡೂಲ್ಕರ್, ೮೨೫ ರನ್ನುಗಳು, ೮ ಪಂದ್ಯಗಳು (೧೪ ಇನಿಂಗ್ಸ್), ಸರಾಸರಿ: ೬೮.೭೫, ಅತಿ ಹೆಚ್ಚಿನ ವೈಯಕ್ತಿಕ ಮೊತ್ತ: ೨೧೪ ಅತಿ ಹೆಚ್ಚಿನ ವಿಕೆಟುಗಳು: ಭಾರತದ ಅನಿಲ್ ಕುಂಬ್ಳೆ, ೪೧ ವಿಕೆಟ್ಟುಗಳು ೯ ಪಂದ್ಯಗಳು (೪೭೪.೪ ಓವರುಗಳು), ಕೊಟ್ಟ ರನ್ನುಗಳು: ೧೪೧೬, ಸರಾಸರಿ: ೩೫.೫೩ ಶ್ರೇಷ್ಠ ಬೌಲಿಂಗ್ ಪ್ರದರ್ಶನ: ೬೯೮ ಏಕ ದಿನ ಅಂತರಾಷ್ಟ್ರೀಯ ಪಂದ್ಯಗಳ ದಾಖಲೆಗಳು ಪಂದ್ಯವೊಂದರಲ್ಲಿ ಅತಿ ಹೆಚ್ಚಿನ ಮೊತ್ತ: ೩೪೭೨ ಭಾರತದ ವಿರುದ್ದ ಆಸ್ಟ್ರೇಲಿಯಾ, ೧೨ ನವೆಂಬರ್ ೨೦೦೩ ಪಂದ್ಯವೊಂದರಲ್ಲಿ ಅತಿ ಹೆಚ್ಚಿನ ವೈಯಕ್ತಿಕ ಮೊತ್ತ: ಭಾರತದ ವಿರುದ್ದ ಶ್ರೀಲಂಕಾದ ರಾಯ್ ಡಯಾಸ್, ೧೨೧, ೨೬ ಸೆಪ್ಟೆಂಬರ್ ೧೯೮೨ ಪಂದ್ಯವೊಂದರಲ್ಲಿ ಶ್ರೇಷ್ಟ ಬೌಲಿಂಗ್ ಪ್ರದರ್ಶನ: ಭಾರತದ ವಿರುದ್ದ ಇಂಗ್ಲ್ಯಾಂಡಿನ ಪೌಲ್ ಜಾರ್ವಿಸ್, ೮.೪೧೩೫೫, ೨೬ ಫೆಬ್ರುವರಿ ೧೯೯೩ ಅತಿ ಹೆಚ್ಚಿನ ರನ್ನುಗಳು: ಭಾರತದ ಸಚಿನ್ ತೆಂಡುಲ್ಕರ್, ೩೬೫ ರನ್ನುಗಳು, ೭ ಪಂದ್ಯಗಳು, ಸರಾಸರಿ: ೫೨.೧೪, ಅತಿ ಹೆಚ್ಚಿನ ವೈಯಕ್ತಿಕ ಮೊತ್ತ:೧೧೭ ಅತಿ ಹೆಚ್ಚಿನ ವಿಕೆಟುಗಳು: ಭಾರತದ ಜಾವಗಲ್ ಶ್ರೀನಾಥ್, ೧೦ ವಿಕೆಟುಗಳು, ೫ ಪಂದ್ಯಗಳು(೨೭೩ ಎಸತಗಳು), ಕೊಟ್ಟ ರನ್ನುಗಳು: ೨೫೧, ಸರಾಸರಿ: ೨೫.೧೦ ಶ್ರೇಷ್ಟ ಬೌಲಿಂಗ್ ಪ್ರದರ್ಶನ: ೫೪೧ ವೈಯಕ್ತಿಕ ದಾಖಲೆಗಳು ರಿಚರ್ಡ್ ಹ್ಯಾಡ್ಲಿ ಇಯಾನ್ ಬೊಥಮ್ರವರ ಅತಿ ಹೆಚ್ಚು ವಿಕೆಟ್ಗಳ ದಾಖಲೆ(೩೭೪) ಮೀರಿಸಿದರು (೧೨ ನವೆಂಬರ್ ೧೯೮೮) ಕಪಿಲ್ ದೇವ್ ರಿಚರ್ಡ್ ಹ್ಯಾಡ್ಲಿಯವರ ಅತಿ ಹೆಚ್ಚು ವಿಕೆಟ್ಗಳ ದಾಖಲೆ(೪೩೧) ಸರಿಗಟ್ಟಿದರು (೨೭ ಜನವರಿ ೧೯೯೪) ಅನಿಲ್ ಕುಂಬ್ಳೆ ತಮ್ಮ ಟೆಸ್ಟ್ ಜೀವನದ ೧೦೦(೧೯೯೫೯೬), ೩೦೦(೨೦೦೧೦೨) ಹಾಗು ೪೦೦ನೆ(೬ ಅಕ್ಟೊಬರ್ ೨೦೦೪) ವಿಕೆಟ್ ಈ ಕ್ರೀಡಾಂಗಣದಲ್ಲಿ ಪಡೆದರು. ಮೊಹಮ್ಮದ್ ಅಜರುದ್ದೀನ್ ತಮ್ಮ ಟೆಸ್ಟ್ ಜೀವನದ ೧೦೦ನೆ ಕ್ಯಾಚ್ ಈ ಕ್ರೀಡಾಂಗಣದಲ್ಲಿ ಹಿಡಿದರು. ವಿವಿಯನ್ ರಿಚರ್ಡ್ಸ್ ಹಾಗೂ ಗೊರ್ಡನ್ ಗ್ರೀನಿಡ್ಜ್ ಈ ಕ್ರೀಡಾಂಗಣದಲ್ಲಿ ಟೆಸ್ಟ್ರಂಗಕ್ಕೆ ಪದಾರ್ಪಣೆ ಮಾಡಿದರು (೨೨೨೭ ನವೆಂಬರ್ ೧೯೭೪) ಸಚಿನ್ ತೆಂಡೂಲ್ಕರ್ ತಮ್ಮ ೧೪೦೦೦ ರನ್ನುಗಳನ್ನು ಇಲ್ಲಿ ಪೂರೈಸಿದರು. ಉಲ್ಲೇಖಗಳು ಬಾಹ್ಯ ಸಂಪರ್ಕ ಕೊಂಡಿಗಳು ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಅಂತರ್ಜಾಲ ತಾಣ ಕ್ರಿಕ್ಇನ್ಫೊ ತಾಣದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ವಿವರ ಕ್ರಿಕೆಟ್ ಕರ್ನಾಟಕ ಕ್ರಿಕೆಟ್ ಕ್ರೀಡಾಂಗಣಗಳು ಭಾರತದ ಕ್ರಿಕೆಟ್ ಮೈದಾನಗಳು
ವಿಜಯ ಕರ್ನಾಟಕ ಕನ್ನಡದ ಒಂದು ದಿನಪತ್ರಿಕೆ. ಸಮಸ್ತ ಕನ್ನಡಿಗರ ಹೆಮ್ಮೆ ಎಂಬ ಧ್ಯೇಯ ವಾಕ್ಯದೊಂದಿಗೆ, ಹುಬ್ಬಳ್ಳಿಯ ವಿಜಯಾನಂದ ರೋಡ್ ಲೈನ್ಸ್ ಬಳಗದ ಪತ್ರಿಕೆಯಾಗಿದ್ದ ವಿಜಯ ಕರ್ನಾಟಕವನ್ನು 2006ರಲ್ಲಿ ಟೈಂಸ್ ಆಫ್ ಇಂಡಿಯಾ ಪತ್ರಿಕೆ ಸಮೂಹದ, ಬೆನ್ನೆಟ್,ಕೊಲ್ಮನ್ ಅಂಡ್ ಸನ್ಸ್ ಸಂಸ್ಥೆಯವರು, ತಮ್ಮ ಸ್ವಾಮ್ಯಕ್ಕೆ ಸೇರಿಸಿಕೊಂಡಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆ ನಡೆದು ಬಂದ ರೀತಿ 2000ರಲ್ಲಿ ವಿಜಯಾನಂದ ಪ್ರಿಂಟರ್ಸ್ ಮೂಲಕ ಆರಂಭಗೊಂಡ ವಿಜಯ ಕರ್ನಾಟಕ (ವಿಕ), ಒಮ್ಮೆ ನಂ.1 ಪಟ್ಟಕ್ಕೇರಿತ್ತು. ಬಳಿಕ 2006ರಲ್ಲಿ ಈ ಪತ್ರಿಕೆಯನ್ನು ಬೆನೆಟ್, ಕೋಲ್ಮನ್ ಆಂಡ್ ಕಂಪನಿ ಲಿ. (ಬಿಸಿಸಿಎಲ್) ಸ್ವಾಧೀನಕ್ಕೆ ಪಡೆದುಕೊಂಡಿತು. ವಿಜಯ ಕರ್ನಾಟಕದ ಸಂಪಾದಕರಾಗಿದ್ದವರು ಈಶ್ವರ ದೈತೋಟ, ಮಹಾದೇವಪ್ಪ , ವಿಶ್ವೇಶ್ವರ ಭಟ್, ಇ. ರಾಘವನ್, ಸುಗತ ಶ್ರೀನಿವಾಸ ರಾಜು,ತಿಮ್ಮಪ್ಪ ಭಟ್,ಹರಿಪ್ರಕಾಶ ಕೋಣೆಮನೆ. 2012ರ ಏಪ್ರಿಲ್ 1ರಂದು ವಿಜಯ ಕರ್ನಾಟಕದ ವೆಬ್ ಸೈಟ್ ಆವೃತ್ತಿ . ಆರಂಭವಾಯಿತು. ನಂತರ ಅದರ ಮೊಬೈಲ್ ಆವೃತ್ತಿ ಆರಂಭವಾಯಿತು. ಹೊರಗಿನ ಸಂಪರ್ಕಗಳು ವಿಜಯ ಕರ್ನಾಟಕ ವೆಬ್ಸೈಟ್ ವಿಜಯ ಕರ್ನಾಟಕ ಮೊಬೈಲ್ ಸೈಟ್ ವಿಜಯ ಕರ್ನಾಟಕ ಇಪೇಪರ್ ಆವೃತ್ತಿ ಕನ್ನಡ ದಿನಪತ್ರಿಕೆಗಳು ಕನ್ನಡ ಪತ್ರಿಕೆಗಳು
ವಂದೇ ಮಾತರಂ ಪಶ್ಚಿಮ ಬಂಗಾಳದ ಪ್ರಮುಖ ಲೇಖಕ ಮತ್ತು ಕವಿ ಬಂಕಿಮಚಂದ್ರ ಚಟರ್ಜಿ ರಚಿಸಿದ, ಬ್ರಿಟಿಷರ ಕಾಲದಲ್ಲಿ ರಾಷ್ಟ್ರದ ಜನತೆಗೆ ಸ್ವಾತಂತ್ರ್ಯದ ಜಾಗೃತಿಯನ್ನುಂಟು ಮಾಡಿದ ಕೃತಿ. ರಾಷ್ಟ್ರಗೀತೆಯಾಗುವ ಎಲ್ಲ ಅಂಶ, ಅರ್ಹತೆಗಳಿದ್ದರೂ, ರವೀಂದ್ರನಾಥ ಟಾಗೋರ್ ರ ಜನಗಣ ಮನ ಕೃತಿಗೆ ಆ ಪಟ್ಟ ದೊರಕಿತು. ವಂದೇ ಮಾತರಂ ಎಂದರೆ, ತಾಯಿಯನ್ನು ನಮಸ್ಕರಿಸುತ್ತೇನೆ ಎಂದರ್ಥ. ಇದನ್ನು ರಾಷ್ಟ್ರೀಯ ಗಾನ ಎಂದು ಕರೆಯಲಾಗುತ್ತದೆ. ಇದು ಬಂಗಾಲಿಮತ್ತು ಸಂಸ್ಕೃತ ಭಾಷೆಗಳಲ್ಲಿದೆ. ಬಂಕಿಮರು ೧೮೮೨ರಲ್ಲಿ ಬರೆದ ಆನಂದ ಮಠ ಎಂಬ ಕೃತಿಯ ಭಾಗವಾಗಿದ್ದ ಈ ಗೀತೆ ಅತ್ಯಂತ ಜನಪ್ರಿಯತೆ ಗಳಿಸಿತು. ಇದನ್ನು ೧೮೯೬ರಲ್ಲಿ ನಡೆದ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಅಧಿವೇಶನದಲ್ಲಿ ರವೀಂದ್ರನಾಥ ಟಾಗೋರ್ ಅವರು ಹಾಡಿದರು. ಭಾರತವು ಸ್ವತಂತ್ರವಾದ ನಂತರ ೧೯೫೦ರಲ್ಲಿ ಈ ಗೀತೆಯ ಮೊದಲ ಎರಡು ಪದ್ಯ ಭಾಗಗಳಿಗೆ ಭಾರತೀಯ ಗಣರಾಜ್ಯದ ರಾಷ್ಟ್ರೀಯ ಗಾನ ಎಂಬ ಅಧಿಕೃತ ಮನ್ನಣೆಯನ್ನು ನೀಡಲಾಯಿತು. ವಂದೇಮಾತರಂನ ಖ್ಯಾತ ಭಾಗ ವಂದೇ ಮಾತರಂ ವಂದೇ ಮಾತರಂ! ಸುಜಲಾಂ ಸುಫಲಾಂ ಮಲಯಜಶೀತಲಾಂ ಸಸ್ಯಶ್ಯಾಮಲಾಂ ಮಾತರಂ! ಶುಭ್ರಜ್ಯೋತ್ಸ್ನಾಪುಲಕಿತಯಾಮಿನೀಂ ಫುಲ್ಲಕುಸುಮಿತದ್ರುಮದಲಶೋಭಿನೀಂ ಸುಹಾಸಿನೀಂ ಸುಮಧುರಭಾಷಿಣೀಂ, ಸುಖದಾಂ ವರದಾಂ ಮಾತರಂ! ಕೋಟಿಕೋಟಿಕಂಠಕಲಕಲನಿನಾದಕರಾಲೇ ಕೋಟಿಕೋಟಿಭುಜೈರ್ದೃತಖರಕರವಾಲೇ ಅಬಲಾ ಕೇನ ಮಾ ಏತ ಬಲೇ ಬಹುಬಲಧಾರಿಣೀಂ ನಮಾಮಿ ತಾರಿಣೀಂ ರಿಪುದಲವಾರಿಣೀಂ ಮಾತರಂ! ಸಂಪೂರ್ಣ ಗೀತೆ ವಂದೇ ಮಾತರಂ ವಂದೇ ಮಾತರಂ! ಸುಜಲಾಂ ಸುಫಲಾಂ ಮಲಯಜಶೀತಲಾಂ ಸಸ್ಯಶ್ಯಾಮಲಾಂ ಮಾತರಂ! ಶುಭ್ರಜ್ಯೋತ್ಸ್ನಾಪುಲಕಿತಯಾಮಿನೀಂ ಫುಲ್ಲಕುಸುಮಿತದ್ರುಮದಲಶೋಭಿನೀಂ ಸುಹಾಸಿನೀಂ ಸುಮಧುರಭಾಷಿಣೀಂ, ಸುಖದಾಂ ವರದಾಂ ಮಾತರಂ! ಕೋಟಿಕೋಟಿಕಂಠಕಲಕಲನಿನಾದಕರಾಲೇ ಕೋಟಿಕೋಟಿಭುಜೈರ್ಧೃತಖರಕರವಾಲೇ ಅಬಲಾ ಕೇನ ಮಾ ಏತ ಬಲೇ ಬಹುಬಲಧಾರಿಣೀಂ ನಮಾಮಿ ತಾರಿಣೀಂ ರಿಪುದಲವಾರಿಣೀಂ ಮಾತರಂ! ತುಮಿ ವಿದ್ಯಾ, ತುಮಿ ಧರ್ಮ, ತುಮಿ ಹೃದಿ ತುಮಿ ಮರ್ಮ, ತ್ವಂ ಹಿ ಪ್ರಾಣಾಃ ಶರೀರೇ, ಬಾಹು ತೇ ತುಮಿ ಮಾ ಶಕ್ತಿ ಹೃದಯೇ ತುಮಿ ಮಾ ಭಕ್ತಿ, ತೋಮಾರಈ ಪ್ರತಿಮಾಗಡಿಮಂದಿರೇ, ಮಂದಿರೇ ತ್ವಂ ಹಿ ದುರ್ಗಾ ದಶಪ್ರಹರಣಧಾರಿಣೀ ಕಮಲಾ ಕಮಲಾದಲವಿಹಾರಿಣೀ ವಾಣೀ ವಿದ್ಯಾದಾಯಿನೀ ನಮಾಮಿ ತ್ವಾಂ ನಮಾಮಿ ಕಮಲಾಂ ಅಮಲಾಂ ಅತುಲಾಂ ಸುಜಲಾಂ ಸುಫಲಾಂ ಮಾತರಂ, ವಂದೇ ಮಾತರಂ! ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ ಧರಣೀಂ ಭರಣೀಂ ಮಾತರಂ! ವಂದೇ ಮಾತರಂ ಗೀತೆಯ ಭಾವಾರ್ಥ ಹೇ ಮಾತೆ, ನಾನು ನಿನಗೆ ವಂದಿಸುತ್ತೇನೆ.ಜಲ, ಧನಧಾನ್ಯಗಳಿಂದ ಸಮೃದ್ಧವಾಗಿರುವ, ದಕ್ಷಿಣದಲ್ಲಿನ ಮಲಯ ಪರ್ವತದಿಂದ ಬರುವ ವಾಯುಲಹರಿಗಳಿಂದ ಶೀತಲವಾಗುವ ಮತ್ತು ವಿಪುಲವಾದ ಕೃಷಿಯಿಂದ ಶ್ಯಾಮಲ ವರ್ಣವಾಗಿರುವ, ಹೇ ಮಾತೆ ! ಶ್ವೇತಶುಭ್ರ ಬೆಳದಿಂಗಳಿನಿಂದ ನಿನ್ನ ರಾತ್ರಿಗಳು ಪ್ರಫುಲ್ಲಿತವಾಗಿರುತ್ತವೆ, ಅದೇ ರೀತಿ ಅರಳಿದ ಹೂವುಗಳಿಂದ ನಿನ್ನ ಭೂಮಿಯು ವೃಕ್ಷಬಳ್ಳಿಗಳ ವಸ್ತ್ರಗಳನ್ನು ಧರಿಸಿದಂತೆ ಸುಶೋಭಿತವಾಗಿ ಕಾಣಿಸುತ್ತದೆ. ಸದಾ ಹಸನ್ಮುಖ ಮತ್ತು ಸದಾಕಾಲ ಮಧುರವಾಗಿ ಮಾತನಾಡುವ, ವರದಾಯಿನಿ, ಸುಖಪ್ರದಾಯಿನಿಯಾಗಿರುವ ಹೇ ಮಾತೆ ! ಮೂವತ್ತು ಕೋಟಿ ಕಂಠಗಳಿಂದ ಭಯಂಕರವಾದ ಗರ್ಜನೆಯು ಮೊಳಗುತ್ತಿರುವಾಗ ಮತ್ತು ಆರವತ್ತು ಕೋಟಿ ಕೈಗಳಲ್ಲಿ ಹಿಡಿದಿರುವ ಖಡ್ಗಗಳ ಮೊನೆಯು ಹೊಳೆಯುತ್ತಿರುವಾಗ ಹೇ ಮಾತೆಯೇ ನೀನು ಅಬಲೆಯಾಗಿದ್ದಿ ಎಂದು ಹೇಳಲು ಯಾರಿಗಾದರೂ ಧೈರ್ಯವಿದೆಯೇ? ವಾಸ್ತವದಲ್ಲಿ ಮಾತೆಯೇ ಅಪಾರ ಸಾಮರ್ಥ್ಯವು ನಿನ್ನಲ್ಲಿದೆ. ಶತ್ರುಸೈನ್ಯದ ಪಡೆಯನ್ನೇ ಹಿಂತಿರುಗಿಸಿ ನಿನ್ನ ಸಂತಾನವಾದ ನಮ್ಮನ್ನು ರಕ್ಷಿಸುತ್ತಿರುವ ಹೇ ಮಾತೆಯೇ ನಾನು ನಿನಗೆ ವಂದಿಸುತ್ತೇನೆ. ನೀನೇ ನಮ್ಮ ಜ್ಞಾನ, ನೀನೇ ನಮ್ಮ ಚಾರಿತ್ರ್ಯ, ನೀನೇ ನಮ್ಮ ಧರ್ಮವಾಗಿದ್ದಿ. ನೀನೇ ನಮ್ಮ ಹೃದಯ, ನೀನೇ ನಮ್ಮ ಚೈತನ್ಯವಾಗಿದ್ದಿ. ನಮ್ಮ ದೇಹದಲ್ಲಿನ ಪ್ರಾಣವು ಖಂಡಿತವಾಗಿಯೂ ನೀನೇ ಆಗಿದ್ದಿ. ನಮ್ಮ ಮಣಿಕಟ್ಟಿನಲ್ಲಿರುವ ಶಕ್ತಿ ನೀನೇ ಮತ್ತು ಅಂತಃಕರಣದಲ್ಲಿನ ಕಾಳಿಯೂ ನೀನೇ. ದೇವಸ್ಥಾನದಲ್ಲಿ ನಾವು ಯಾವ ಮೂರ್ತಿಯ ಪ್ರತಿಷ್ಠಾಪನೆ ಮಾಡುತ್ತೇವೆಯೋ ಅದೆಲ್ಲವೂ ನಿನ್ನದೇ ರೂಪಗಳು. ತನ್ನ ಹತ್ತೂ ಕೈಗಳಲ್ಲಿ ಹತ್ತು ಶಸ್ತ್ರಗಳನ್ನು ಧರಿಸಿದ ಶತ್ರುಸಂಹಾರಿಣಿ ದುರ್ಗೆಯೂ ನೀನೆ ಮತ್ತು ಕಮಲದ ಪುಷ್ಪಗಳಿಂದ ತುಂಬಿದ ಸರೋವರದಲ್ಲಿ ವಿಹರಿಸುವ ಕಮಲಕೋಮಲ ಲಕ್ಷ್ಮೀಯೂ ನೀನೆ. ನಿನಗೆ ನಮ್ಮ ನಮಸ್ಕಾರ. ಮಾತೆ, ನಾನು ನಿನಗೆ ವಂದಿಸುತ್ತೇನೆ. ಐಶ್ವರ್ಯದಾತ್ರಿ, ಪುಣ್ಯಪ್ರದಾಯಿನಿ ಮತ್ತು ಪಾವನ, ಪವಿತ್ರ ಜಲಪ್ರವಾಹಗಳಿಂದ ಮತ್ತು ಅಮೃತಮಯ ಫಲಗಳಿಂದ ಸಮೃದ್ಧಳಾಗಿರುವ ಮಾತೆಯೇ ನಿನ್ನ ಶ್ರೇಷ್ಠತನಕ್ಕೆ ಯಾವುದೇ ಹೋಲಿಕೆಯಿಲ್ಲ, ಯಾವುದೇ ಮಿತಿಯೂ ಇಲ್ಲ. ಹೇ ಮಾತೆ, ಹೇ ಜನನಿ ನಿನಗೆ ನನ್ನ ಪ್ರಣಾಮಗಳು.ವಂದೇ ಮಾತರಂ ಗೀತೆಯ ಭಾವಾರ್ಥ ಬಾಹ್ಯ ಸಂಪರ್ಕಗಳು , . ? 1937 ಉಲ್ಲೇಖಗಳು ಭಾರತ ಸಾಹಿತ್ಯ
ಬಾಲ್ಯ ತಿಲಕರು ಹುಟ್ಟಿದ್ದು ೧೮೫೬ರ ಜುಲೈ ೨೩ರಂದು ಮಹಾರಾಷ್ತ್ರದ ರತ್ನಗಿರಿಯ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ.ಚತುರ ವಿದ್ಯಾರ್ಥಿಯಾಗಿದ್ದ ತಿಲಕನಿಗೆ ಗಣಿತದಲ್ಲಿ ವಿಶೇಷ ಪ್ರತಿಭೆಯಿತ್ತು. ಆಧುನಿಕ, ಕಾಲೇಜು ಶಿಕ್ಷಣ ಪಡೆದುಕೊಂಡ ನವ ಪೀಳಿಗೆಯ ಯುವಕರಲ್ಲಿ ತಿಲಕರೂ ಒಬ್ಬರಾಗಿದ್ದರು. ಪದವಿ ಪಡೆದ ಬಳಿಕ ಪುಣೆಯ ಖಾಸಗೀ ಶಾಲೆಯೊಂದರಲ್ಲಿ ಗಣಿತ ಶಿಕ್ಷಕರಾಗಿ ಸೇರಿದ ತಿಲಕರು , ನಂತರ ಅದನ್ನು ಬಿಟ್ಟು ಪತ್ರಕರ್ತರಾದರು. ಪಾಶ್ಚಿಮಾತ್ಯ ಶಿಕ್ಷಣ ಪಧ್ಧತಿಯು ಭಾರತೀಯ ಪರಂಪರೆಯನ್ನು ಅವಹೇಳಿಸುವಂಥಾದ್ದೂ ಹಾಗೂ ಭಾರತದ ವಿದ್ಯಾರ್ಥಿಗಳನ್ನು ಕೀಳುಗಳೆಯುವಂಥಾದ್ದು ಎಂಬ ನಿರ್ಧಾರಕ್ಕೆ ಬಂದ ಅವರು, ಈ ಪಧ್ಧತಿಯ ತೀವ್ರ ಟೀಕಾಕಾರರಾದರು. ವಿದ್ಯಾರ್ಥಿಗಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಪುಣೆಯಲ್ಲಿ ಡೆಕ್ಕನ್ ಎಜುಕೇಶನ್ ಸೊಸೈಟಿಯನ್ನು ಸ್ಥಾಪಿಸಿದರು. ರಾಜಕೀಯ ಜೀವನ ತಿಲಕರು ಸ್ಥಾಪಿಸಿದ ಕೇಸರಿ ಮರಾಠಿ ಪತ್ರಿಕೆಯು ಬಹುಬೇಗ ಜನಸಾಮಾನ್ಯರ ಮನೆಮಾತಾಯಿತು. ಅಭಿಪ್ರಾಯ ಸ್ವಾತಂತ್ರ್ಯವನ್ನು, ಅದರಲ್ಲೂ ಮುಖ್ಯವಾಗಿ, ೧೯೦೫ರ ಬಂಗಾಳದ ವಿಭಜನೆಯ ವಿರೋಧವನ್ನು , ಹತ್ತಿಕ್ಕಿದ ಭಾರತದ ನಾಗರೀಕರನ್ನು, ಸಂಸೃತಿಯನ್ನು, ಪರಂಪರೆಯನ್ನು ಹೀಯಾಳಿಸುವ ಬ್ರಿಟಿಷ್ ಸತ್ತೆಯ ತೀವ್ರ ಟೀಕೆಯನ್ನು ಅವರು ಕೇಸರಿಯಲ್ಲಿ ಮಾಡುತ್ತಿದ್ದರು. ಭಾರತೀಯರಿಗೆ ಸ್ವರಾಜ್ಯದ ಹಕ್ಕನ್ನು ಬಿಟ್ಟುಕೊಡಬೇಕೆಂದು ಅವರು ಪ್ರತಿಪಾದಿಸಿದರು. ೧೮೯೦ರ ದಶಕದಲ್ಲಿ ತಿಲಕರು ಕಾಂಗ್ರೆಸ್ ಸೇರಿದರಾದರೂ , ಬಹುಬೇಗ ಸ್ವಾತಂತ್ರ್ಯ ಹೋರಾಟದಲ್ಲಿ ಅದರ ಉದಾರೀಸೌಮ್ಯವಾದೀ ಧೋರಣೆಯ ವಿರೋಧಕರಾದರು. ಗೋಪಾಲ ಕೃಷ್ಣ ಗೋಖಲೆಯವರ ಸೌಮ್ಯವಾದೀ ನೀತಿಯ ಕಟು ಟೀಕಾಕಾರರಾದರು. ಇದರಲ್ಲಿ ತಿಲಕರಿಗೆ ಬಂಗಾಳದ ಬಿಪಿನ ಚಂದ್ರ ಪಾಲ್ ಹಾಗೂ ಪಂಜಾಬಿನ ಲಾಲಾ ಲಜಪತ ರಾಯ್ ರ ಬೆಂಬಲವಿತ್ತು.೧೯೦೭ರಲ್ಲಿ ಸೂರತ್ ಅಧಿವೇಶನದಲ್ಲಿ ಕಾಂಗ್ರೆಸ್ ತಿಲಕ,ಪಾಲ್ ಹಾಗೂ ರಾಯ್ ನೇತ್ಳತ್ವದಲ್ಲಿ ಗರಂ ದಳ (ಬಿಸಿ ಗುಂಪು) ಹಾಗೂ ಗೋಖಲೆಯವರ ನೇತ್ಳತ್ವದಲ್ಲಿ ನರಂ ದಳ (ಮೆದು ಗುಂಪು) ಎಂದು ಇಭ್ಭಾಗವಾಯಿತು. ರಾಜದ್ರೋಹದ ಆರೋಪದ ಮೇಲೆ ೧೯೦೬ರಲ್ಲಿ ಬಂಧನಕ್ಕೊಳಗಾದ ತಿಲಕರು ತಮ್ಮ ಪರವಾಗಿ ವಕಾಲತ್ತು ವಹಿಸುವಂತೆ ಕೇಳಿಕೊಂಡದ್ದು ಯುವ ವಕೀಲ ಮಹಮದ್ ಆಲಿ ಜಿನ್ನಾರನ್ನು. ಆದರೂ, ಬ್ರಿಟಿಷ್ ನ್ಯಾಯಾಧೀಶರಿಂದ ಅಪರಾಧಿ ಎಂದು ಘೋಷಿಸಲ್ಪಟ್ಟು, ೧೯೦೮ ರಿಂದ ೧೯೧೪ರವರೆಗೆ ಬರ್ಮಾ ದೇಶದ ಮಂಡಾಲೆಯಲ್ಲಿ ಸೆರೆವಾಸ ಅನುಭವಿಸಿದರು. ಬಿಡುಗಡೆಯಾದ ನಂತರ ತಮ್ಮ ಸಹ ರಾಷ್ಟ್ರೀಯವಾದಿಗಳನ್ನು ಕೂಡಿಕೊಂಡ ತಿಲಕರು , ೧೯೧೬ರಲ್ಲಿ ಕಾಂಗ್ರೆಸ್ಸನ್ನು ಕೂಡಾ ಪುನಹ ಒಟ್ಟುಗೂಡಿಸಿದರು. ಅಖಿಲ ಭಾರತ ಹೋಂ ರೂಲ್ ಲೀಗನ್ನು ಸ್ಥಾಪಿಸುವಲ್ಲಿ ಆನಿ ಬೆಸೆಂಟ್ ಮತ್ತು ಮಹಮದ್ ಆಲಿ ಜಿನ್ನಾರಿಗೆ ಸಹಕಾರ ನೀಡಿದರು. ಅದರ ಮೂಲಕ ಸ್ವಾತಂತ್ರ ಹೋರಾಟ ಶುರು ಮಾಡಿದರು. ತಾತ್ವಿಕ ಮತ್ತು ಸಾಮಾಜಿಕ ಕೊಡುಗೆಗಳು ತಿಲಕರು ಮೂಲತಃ ಅದ್ವೈತ ವೇದಾಂತದ ಪ್ರತಿಪಾದಕರಾಗಿದ್ದರೂ, ಸಾಂಪ್ರದಾಯಿಕ ಅದ್ವೈತದ ಜ್ಙಾನವೊಂದರಿಂದಲೇ ಮುಕ್ತಿ ಎಂಬ ನಂಬುಗೆಯು ಅವರಿಗೆ ಒಪ್ಪಿಗೆಯಿರಲಿಲ್ಲ. ಅದಕ್ಕೆ ಸರಿಸಮನಾಗಿ ಹಾಗೂ ಪೂರಕವಾಗಿ ಅವರು ಕರ್ಮಯೋಗವನ್ನೂ ಸೇರಿಸಿದರು. ವಿವಾಹಕ್ಕೆ ಕನಿಷ್ಠ ವಯೋಮಿತಿಯೇ ಮೊದಲಾಗಿ ತಿಲಕರು ಅನೇಕ ಸಾಮಾಜಿಕ ಸುಧಾರಣೆಗಳನ್ನು ಮುಂದಿಟ್ಟರು. ಮದ್ಯಪಾನ ನಿಷೇಧದ ಪರವಾಗಿ ಅವರಿಗೆ ಅತ್ಯಂತ ಕಳಕಳಿಯಿತ್ತು. ಶಿಕ್ಷಣ ಹಾಗೂ ರಾಜಕೀಯ ಜೀವನದ ಬಗ್ಗೆ ಅವರ ವಿಚಾರಗಳು ಬಹಳ ಪ್ರಭಾವಶಾಲಿಯಾಗಿದ್ದವು ದೇವನಾಗರಿ ಲಿಪಿಯಲ್ಲಿ ಬರೆಯಲಾಗುವ ಹಿಂದಿ ಭಾಷೆಯು ಭಾರತದ ರಾಷ್ತ್ರಭಾಷೆಯಾಗಬೇಕು ಎಂದು ಮೊದಲು ಸೂಚಿಸಿದವರು ತಿಲಕರು. ಗಾಂಧೀಜಿ ಇದನ್ನು ಮುಂದೆ ಬಲವಾಗಿ ಅನುಮೋದಿಸಿದರು. ಆದರೆ, ತಿಲಕರು ಸಂಪೂರ್ಣವಾಗಿ ಭಾರತದಿಂದ ನಿರ್ಮೂಲನ ಮಾಡಬೇಕೆಂದು ಇಚ್ಛೆ ಪಟ್ಟಿದ್ದ ಇಂಗ್ಲೀಷು ಭಾಷೆ , ಇಂದಿಗೂ ಸಂವಹನದ ಒಂದು ಮುಖ್ಯ ಸಾಧನವಾಗಿ ಉಳಿದುಕೊಂಡು ಬಂದಿದೆ.ಆದರೂ ಹಿಂದಿ (ಮತ್ತು ಇತರ ಭಾರತೀಯ ಭಾಷೆಗಳ) ಜನಸಾಮಾನ್ಯರ ಮಟ್ಟದಲ್ಲಿ ಬಳಕೆ ಮತ್ತು ಬ್ರಿಟಿಷರ ಕಾಲದಿಂದ ಇಂದಿನವರೆಗೂ ನೀಡಲಾಗುತ್ತಿರುವ ಪ್ರೋತ್ಸಾಹಕ್ಕೆ ತಿಲಕರು ಅಂದು ಪ್ರಾರಂಭಿಸಿದ ಪುನರುಜ್ಜೀವನವೇ ಕಾರಣ ಎನ್ನಲಾಗುತ್ತದೆ. ತಿಲಕರ ಮತ್ತೊಂದು ದೊಡ್ಡ ಕಾಣಿಕೆಯೆಂದರೆ, ಸಾರ್ವಜನಿಕ ಗಣೇಶೋತ್ಸವ. ಭಾದ್ರಪದ ಶುಕ್ಲ ಚತುರ್ಥಿಯಿಂದ ಹಿಡಿದು ಅನಂತ ಚತುರ್ದಶಿಯವರೆಗಿನ ೧೧ ದಿನಗಳ ಈ ಉತ್ಸವ, ಖಾಸಗೀ ಧಾರ್ಮಿಕ ಆಚರಣೆಯನ್ನು ಜನಸಾಮಾನ್ಯರು ಒಟ್ಟುಗೂಡಿ ಆಚರಿಸುವ, ನಾಯಕರುಗಳಿಗೆ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವಾಗಿ ಬದಲಾಯಿಸಿತು. ತಿಲಕರು ಪ್ರಾರಂಭಿಸಿದ ಈ ಪರಂಪರೆ ದೇಶದ ಅನೇಕ ಕಡೆಗಳಲ್ಲಿ, ಅದರಲ್ಲೂ ಮುಖ್ಯವಾಗಿ ಮಹಾರಾಷ್ತ್ರದಲ್ಲಿ ಇಂದಿಗೂ ಮುಂದುವರಿಯುತ್ತಿದೆ.ಪರದೇಶೀ ವಸ್ತುಗಳನ್ನು ಬಹಿಷ್ಕರಿಸುವಂತೆ ಅವರು ನೀಡಿದ ಕರೆ ಬಹಳಷ್ಟು ಭಾರತೀಯರಲ್ಲಿ ದೇಶಭಕ್ತಿಯನ್ನು ಉಕ್ಕಿಸಿತು. ತಿಲಕರ ನಂತರದ ವರ್ಷಗಳು ಹಾಗೂ ಅವರ ಕೊಡುಗೆ ತಿಲಕರು ಮಹಾತ್ಮಾ ಗಾಂಧಿಯವರ ಅಹಿಂಸಾತ್ಮಕ , ಅಸಹಕಾರ ಚಳುವಳಿಯ ಟೀಕಾಕಾರರಾಗಿದ್ದರು. ಒಂದು ಕಾಲದಲ್ಲಿ ತೀವ್ರವಾದಿ ಕ್ರಾಂತಿಕಾರಿಯೆಂದು ಪರಿಗಣಿಸಲ್ಪಟ್ಟಿದ್ದರೂ, ನಂತರದ ವರ್ಷಗಳಲ್ಲಿ ಅವರು ಗಮನಾರ್ಹವಾಗಿ ಬದಲಾಗಿದ್ದರು. ಭಾರತದ ಸ್ವಾತಂತ್ರ ಗಳಿಸಲು, ಮಾತುಕತೆಗಳ ಮೂಲಕವೇ ಹೆಚ್ಚು ಪರಿಣಾಮಕಾರಿ ಎಂಬ ಬಗ್ಗೆಯೆ ಅವರಿಗೆ ಒಲವಿತ್ತು. ಅಷ್ಟೇ ಅಲ್ಲ ಬ್ರಿಟಿಷ್ ಸಾಮ್ರಾಜ್ಯದಿಂದ ಹೊರಬರುವುದಕ್ಕೆ ಅವರ ಬೆಂಬಲವಿರಲಿಲ್ಲ. ಆದರೂ, ಸ್ವರಾಜ್ಯ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕಾಗಿ ಹೋರಾಟವನ್ನು ಜನಸಾಮಾನ್ಯರವರೆಗೆ ಕೊಂಡೊಯ್ದ ತಿಲಕರನ್ನು ಸ್ವಾತಂತ್ರ್ಯ ಚಳುವಳಿಯ ಜನಕ ಎಂದು ಪರಿಗಣಿಸಲಾಗಿದೆ. ಭಾರತೀಯ ಸಂಸ್ಕೃತಿ, ಇತಿಹಾಸ ಹಾಗೂ ಧರ್ಮದ ಬಗ್ಗೆ ಲೇಖನಗಳಿಂದ ಲಕ್ಷಾಂತರ ಭಾರತೀಯರಿಗೆ ತಮ್ಮ ಭವ್ಯ ಪರಂಪರೆಯ ಹಾಗೂ ನಾಗರೀಕತೆಗಳ ಅರಿವು ಮಾಡಿಕೊಟ್ಟು, ಅವರ ಪ್ರಜ್ಙೆಯಲ್ಲಿ ತಮ್ಮ ನಾಡಿನ ಬಗ್ಗೆ ಅಭಿಮಾನವನ್ನು ಮೂಡಿಸಿದರು . ತಿಲಕರನ್ನು ಭಾರತದ ರಾಜಕೀಯ ಹಾಗೂ ಆಧ್ಯಾತ್ಮಿಕ ನಾಯಕರನ್ನಾಗಿಯೂ, ಮಹಾತ್ಮಾ ಗಾಂಧಿಯವರನ್ನು ಇವರ ಉತ್ತರಾಧಿಕಾರಿಯಾಗಿಯೂ ಅನೇಕರು ಪರಿಗಣಿಸುತ್ತಾರೆ. ೧೯೨೦ರಲ್ಲಿ ತಿಲಕರು ತೀರಿಕೊಂಡಾಗ, ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ೨೦೦,೦೦೦ ಜನರಲ್ಲಿ ಒಬ್ಬರಾದ ಮಹಾತ್ಮಾ ಗಾಂಧಿಯವರು ತಿಲಕರನ್ನು ಭಾರತದಲ್ಲಿ ಚಳುವಳಿಯ ಜನಕ ( ) ಎಂದು ಬಣ್ಣಿಸಿದರು. ಇಂದು ತಿಲಕರನ್ನು ಹಿಂದೂ ರಾಷ್ಟ್ರೀಯವಾದವನ್ನು ಹುಟ್ಟುಹಾಕಿದವರೆಂದು ನಂಬಲಾಗುತ್ತದೆ. ಹಿಂದುತ್ವದ ರಾಜಕೀಯ ಪ್ರಣಾಲಿಯನ್ನು ರಚಿಸಿದ ವಿನಾಯಕ ದಾಮೋದರ ಸಾವರಕರರಿಗೆ ತಿಲಕರು ಆರಾಧ್ಯ ದೈವವಾಗಿದ್ದರು. ಗ್ರಂಥಗಳು ೧೯೦೩ರಲ್ಲಿ ತಿಲಕರು ಎಂಬ ಗ್ರಂಥವನ್ನು ಬರೆದು, ಅದರಲ್ಲಿ , ಖಗೋಳಶಾಸ್ತ್ರದ ಆಧಾರದ ಮೇಲೆ, ವೇದಗಳನ್ನು ಧ್ರುವ ಪ್ರದೇಶಗಳಲ್ಲಿ ಮಾತ್ರವೇ ಸೃಷ್ಟಿಸಿರಲು ಸಾಧ್ಯ ಎಂದು ವಾದಿಸುತ್ತಾರೆ. ಕೊನೆಯ ಮಂಜಿನ ಯುಗ ಶುರುವಾದ ಮೇಲೆ ಅಲ್ಲಿಂದ ದಕ್ಷಿಣದ ಕಡೆ ಸಾಗಿದ ಆರ್ಯರ ಮೂಲಕ ಅದು ದಕ್ಷಿಣ ದೇಶಗಳನ್ನು ಮುಟ್ಟಿತು ಎಂದೂ ಅವರು ಪ್ರತಿಪಾದಿಸುತ್ತಾರೆ. , ಅಥವಾ ವೇದಗಳ ಪ್ರಾಚೀನತೆಯ ಸಂಶೋಧನೆಗಳು ಎಂಬ ಪುಸ್ತಕದಲ್ಲಿ ವೇದ ಕಾಲೀನ ಜನರು ಕ್ರಿ.ಪೂ. ೪ನೆಯ ಸಹಸ್ರಮಾನದಷ್ಟು ಹಿಂದೆಯೇ ಭಾರತದಲ್ಲಿ ನೆಲೆಸಿದ್ದರು ಎಂದು ಖಗೋಳಶಾಸ್ತ್ರದ ಆಧಾರದ ಮೇಲೆ ಪ್ರತಿಪಾದಿಸುತ್ತಾರೆ. ತಿಲಕರ ಗೀತಾರಹಸ್ಯ ಅಥವಾ ಜೀವನಧರ್ಮ ಯೋಗ ಎಂಬ ಭಗವದ್ಗೀತೆಯ ತಾತ್ಪರ್ಯವು ಬಹಳ ಪ್ರಸಿಧ್ಧವಾದ ಕೃತಿ. ಅವರ ಇತರ ಲೇಖನ ಸಂಗ್ರಹಗಳು ಇಂತಿವೆ: ಹಿಂದೂ ಜೀವನ ತತ್ವ, ನೀತಿ ಮತ್ತು ಧರ್ಮ ( , ) (೧೮೮೭ ರಲ್ಲಿ ಪ್ರಕಾಶಿತವಾಯಿತು) ವೇದಗಳ ಕಾಲಮಾನ ಮತ್ತು ವೇದಾಂಗ ಜ್ಯೋತಿಷ ( ). ತಿಲಕರ ಪತ್ರಗಳು ಎಂ. ಡಿ. ವಿದ್ವಾಂಸ್ ರವರಿಂದ ಸಂಪಾದಿಸಲ್ಪಟ್ಟಿದೆ. ಬಾಲ ಗಂಗಾಧರ ತಿಲಕರ ಆಯ್ದ ಕಡತಗಳು ೧೮೮೦ ೧೯೨೦ ಸಂಪಾದನೆ: ರವೀಂದ್ರ ಕುಮಾರ್ ತಿಲಕರ ವಿಚಾರಣೆಗಳು ಪೂರಕ ಮಾಹಿತಿ ಸ್ವಾತಂತ್ರ್ಯ ಹೋರಾಟದ ಮೊದಲ ರಾಷ್ಟ್ರಮಟ್ಟದ ಸಾಮೂಹಿಕ ನಾಯಕ ಲೋಕಮಾನ್ಯ ತಿಲಕ್ ಟಿ.ಎನ್. ರಾಮಕೃಷ್ಣ: 01 ಆಗಸ್ಟ್ 2020, ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದಲ್ಲಿನ ಮಾಹಿತಿಪುಟ ಪರಿವಿಡಿ ಸ್ವಾತಂತ್ರ್ಯ ಹೋರಾಟಗಾರರು ಭಾರತದ ಗಣ್ಯರು ಭಾರತೀಯ ಇತಿಹಾಸದ ಪ್ರಮುಖರು
ಸುಭಾಷ್ ಚಂದ್ರ ಬೋಸ್ [ಜನನ: ಜನವರಿ ೨೩, ೧೮೯೭ ಮರಣ (ಮಾಹಿತಿ ಇಲ್ಲ)] ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ಪಾತ್ರವಹಿಸಿದವರು. ಅವರು ಭಾರತದ ಮಹಾನ್ ವ್ಯಕ್ತಿಯಾಗಿದ್ದರು. ಅವರು ಭಾರತೀಯ ಸ್ವಾತಂತ್ರ್ಯದ ಕಾರಣಕ್ಕಾಗಿಯೇ ಹೋರಾಡಿದ್ದರು. ಭಾರತವು ಸ್ವಾತಂತ್ರ್ಯ ಪಡೆಯಲು ಭಾರತಕ್ಕೆ ಸಹಾಯ ಮಾಡಿದ ಜರ್ಮನಿ, ಜಪಾನ್, ರಷ್ಯಾಗಳಂತಹ ದೇಶಗಳು ಬ್ರಿಟಿಷ್ ವಿರುದ್ಧ ಹೋರಾಡಲು ಮತ್ತು ಸ್ವಾತಂತ್ರ್ಯ ಪಡೆಯಲು ಬೋಸರಿಗೆ ಸಹಾಯ ಮಾಡಲು ಸಿದ್ಧವಾಗಿದ್ದವು ಎಂದು ಭಾವಿಸಲಾಗಿವೆ. ಗಾಂಧಿಯವರು ಸ್ವಾತಂತ್ರ್ಯ ಪಡೆಯುವ ಬಗೆಗೆ ಒಂದೇ ಮಾರ್ಗದಲ್ಲಿದ್ದರು. ಆದರೆ ಬೋಸ್ ಸ್ವಾತಂತ್ರ್ಯಕ್ಕೆ ಸಶಸ್ತ್ರ ಹೋರಾಟವನ್ನೂ ಒಪ್ಪಿದ್ದರು. ಅವರ ಹೋರಾಟವು ವಿಫಲವಾದರೂ, ಭಾರತ ಸ್ವಾತಂತ್ರ ಪಡೆಯುವಲ್ಲಿ ಜನರನ್ನು ಉತ್ತೇಜಿಸಿ ತನ್ನದೇ ಆದ ಕೊಡಿಗೆ ನೀಡಿದೆ ಎಂದು ಭಾವಿಸಲಾಗಿದೆ. (ನೋಡಿ:ಸುಭಾಷ್ ಚಂದ್ರ ಬೋಸ್) ವಿದ್ಯಾಭ್ಯಾಸ ಪೂರಕ ಲೇಖನ:ಸುಭಾಷ್ ಚಂದ್ರ ಬೋಸ್ ಸುಭಾಷ್ ಚಂದ್ರ ಬೋಸ್ ಜನಿಸಿದ್ದು ೧೮೯೭ರ ಜನವರಿ ೨೩ರಂದು, ಒಡಿಶಾದ ಕಟಕ್ನಲ್ಲಿ. ತಂದೆ ಜಾನಕೀನಾಥ ಬೋಸ್, ತಾಯಿ ಪ್ರಭಾವತಿ. ಆ ದಂಪತಿಗಳ ೧೪ ಜನ ಮಕ್ಕಳಲ್ಲಿ ಸುಭಾಷ್ ೯ ನೇಯವರು.ಕಟಕ್ನಲ್ಲಿ ರಯಾವೆನ್ಶಾ ಕೊಲಿಜಿಯೇಟ್ ಶಾಲೆಯಲ್ಲಿ ಪ್ರಾಥಮಿಕ ವ್ಯಾಸಂಗ, ಅಲ್ಲಿ ಮುಖ್ಯೋಪಾಧ್ಯಾಯ ಬೇಣಿಮಾಧವದಾಸ್ರ ರಿಂದ ಪ್ರೇರಣೆ, ಮುಂದೆ ವಿವೇಕಾನಂದರ ಸಾಹಿತ್ಯಗಳು, ಪತ್ರಗಳು ಮತ್ತು ಕೊಲೊಂಬೋದಿಂದ ಆಲ್ಮೋರಾಕ್ಕೆ ಉಪನ್ಯಾಸಗಳಿಂದ ಪ್ರಭಾವಿತರಾದ ಬೋಸರು ಅರವಿಂದರ ಆರ್ಯ ಮಾಸಪತ್ರಿಕೆಯ ತಪ್ಪದ ಓದುಗ! ೧೯೧೯ರಲ್ಲಿ ತತ್ವಶಾಸ್ತ್ರ ವಿಭಾಗದಲ್ಲಿ ಬಿ.ಎ. ಪದವಿ, ನಂತರ ೧೯೧೯ರ ಸೆಪ್ಟೆಂಬರ್ ೧೫ರಂದು ಐ.ಸಿ.ಎಸ್ ಪರೀಕ್ಷೆಗಾಗಿ ಇಂಗ್ಲೆಂಡಿಗೆ ಪಯಣ. ೧೯೨೦ರ ಸೆಪ್ಟಂಬರ್ನಲ್ಲಿ ನಾಲ್ಕನೇ ಸ್ಥಾನಿಗರಾಗಿ ಐ.ಸಿ.ಎಸ್ ಪದವಿ ಪ್ರಾಪ್ತಿ.ವಿದೇಶೀ ನೌಕರಿ ಒಲ್ಲೆ ಎಂದು ಗಳಿಸಿದ್ದ ಐ.ಸಿ.ಎಸ್. ಪದವಿಯನ್ನು ೧೯೨೧ರ ಎಪ್ರಿಲ್ ೨೨ರಂದು ಬ್ರಿಟಿಷ್ ಸರ್ಕಾರದ ಭಾರತ ವ್ಯವಹಾರ ಸಚಿವ ಎಡ್ವಿನ್ ಮಾಂಟೆಗುಗೆ ಪತ್ರವೊಂದನ್ನು ಬರೆದು ಮರಳಿಸಿದ್ದರು ಬೋಸ್! ೨೦ ತಿಂಗಳ ಇಂಗ್ಲೆಂಡ್ ವಾಸದ ನಂತರ ೧೯೨೧ರ ಜುಲೈ ೧೬ರಂದು ಮುಂಬಯಿಗೆ ಮರಳಿದರು ಬೋಸ್. ಅಂದೇ ಗಾಂಧೀಜಿ ಜತೆ ಮೊದಲ ಭೇಟಿ. ೧೯೨೧ರ ಆಗಸ್ಟ್ನಿಂದ ಚಿತ್ತರಂಜನ್ದಾಸ್ರ ಮಾರ್ಗದರ್ಶನದಲ್ಲಿ ಯುವಕರ ಸಂಘಟನೆಗೆ ಆದ್ಯತೆ. ಚಳುವಳಿಯ ಸಂದರ್ಭವೊಂದರಲ್ಲಿ ಮ್ಯಾಜಿಸ್ಟ್ರೇಟರು ೬ ತಿಂಗಳ ಸಜೆ ಘೋಷಿಸಿದಾಗ ಬರಿಯ ೬ ತಿಂಗಳೇ? ನನ್ನದೇನು ಕೋಳಿಕದ್ದ ಅಪರಾಧವೇ? ಎಂದಿದ್ದರು ಬೋಸ್! ರಾಷ್ಟ್ರ ನಿರ್ಮಾಣದ ಜವಾಬ್ದಾರಿ ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲನೀತಿ ಹೊಂದಿರಬಾರದೆಂಬ ಸುಭಾಷ್ರ ದಿಟ್ಟನಿಲುವಿನ ಪ್ರತಿಧ್ವನಿಯಾಗಿತ್ತು ಆ ಮಾತು. ಕಾಂಗ್ರೆಸ್ನ ಬಲಹೀನ ನಾಯಕತ್ವ, ದುರ್ಬಲ ಒಪ್ಪಂದಗಳು, ಸ್ವಾಭಿಮಾನ ಶೂನ್ಯ ವರ್ತನೆಗೆ ಪ್ರತಿಯಾಗಿ ಆತ್ಮಾಭಿಮಾನದ ಸ್ವರಾಜ್ಯಹೋರಾಟಕ್ಕೆ ಬಲತುಂಬಿದವರು ಸುಭಾಷರು. ತಾನು ಕಷ್ಟಪಟ್ಟುಗಳಿಸಿದ್ದ ಐ.ಸಿ.ಎಸ್. ಪದವಿಯನ್ನೇ ತಿರಸ್ಕರಿಸಿ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದ ಬೋಸ್ರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲಮಾನದ ಯಾರೊಬ್ಬರಲ್ಲೂ ಇರಲಿಲ್ಲ. ಆಸ್ಟ್ರಿಯಾ, ಇಂಗ್ಲೆಂಡ್, ಜರ್ಮನಿ, ಜಪಾನ್ ಸೇರಿದಂತೆ ಹತ್ತಾರು ರಾಷ್ಟ್ರಗಳಲ್ಲಿ ಮಿಂಚಿನ ಓಡಾಟ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ದನಿಗೆ ತೀವ್ರತೆ ತಂದಿದ್ದ ಬೋಸರು, ತಾನು ನಂಬಿದ್ದ ಕ್ರಾಂತಿಪಥದಲ್ಲಿ ಎಂದೂ ರಾಜಿಮಾಡಿದವರಲ್ಲ. ಶೀಘ್ರ ಸ್ವಾತಂತ್ರ್ಯಪ್ರಾಪ್ತಿಗಾಗಿ ಅವರು ಮಂಡಿಸುತ್ತಿದ್ದ ವಾದಗಳು, ಅದಕ್ಕಾಗಿ ಶ್ರಮಿಸಬೇಕಾದ ತ್ವರಿತ ಸಿದ್ಧತೆಗಳ ಕುರಿತು ಬೋಸ್ರ ನಿಲುವುಗಳೆಲ್ಲ ಕಾಂಗ್ರೆಸ್ನ ಮಂದಗಾಮಿ ಗುಂಪಿಗೆ ಅಸಹನೀಯವಾಗಿತ್ತು. ಸ್ವತಃ ಗಾಂಧೀಯವರೇ ಹಲವು ಬಾರಿ ಬೋಸ್ರನ್ನು ಟೀಕಿಸಿದ್ದರು! ಅವರಿಗೆ ದೂರಗಾಮಿ ಚಿಂತನೆ ಇಲ್ಲ ಎಂಬ ಆರೋಪ. ಆದರೆ ೧೯೩೮ರಲ್ಲಿ ಭಾರತದ ವಿಭಜನೆಯ ಮುಸ್ಲಿಂಲೀಗ್ ಬ್ರಿಟಿಷರ ತಂತ್ರಗಾರಿಕೆಯ ಕುರಿತು ಮೊದಲಬಾರಿಗೆ ಬಹಿರಂಗವಾಗಿ ಎಚ್ಚರಿಸಿದರೂ ಮಂದಗಾಮಿಗಳಿಗೆ ಕೇಳಿಸಲಿಲ್ಲ. ಪರಿಣಾಮವಾಗಿ ೯ ವರ್ಷದಲ್ಲೇ ದೇಶ ಹೋಳಾಯಿತು! ಬೋಸ್ರ ದೂರಗಾಮಿ ಚಿಂತನೆಗಳಿಗೂ ಕವಡೆ ಕಿಮ್ಮತ್ತಿನ ಬೆಲೆ ಕೊಡದ ಕಾಂಗ್ರೆಸ್ನಿಂದ ಸ್ವತಃ ಹೊರಬಂದವರು ಬೋಸ್. ಸ್ವರಾಜ್ಯಪಕ್ಷ ಸ್ಥಾಪನೆ ಕಾಂಗ್ರೆಸ್ನ ಡೋಲಾಯಮಾನ ನೀತಿಗಳಿಗೆ ಬೇಸತ್ತು ಚಿತ್ತರಂಜನ್ದಾಸ್ರಿಂದ ಸ್ವರಾಜ್ಯಪಕ್ಷ ಸ್ಥಾಪನೆ. ಬೋಸ್ರು ದಾಸ್ರ ಜತೆಗೇ ಚಟುವಟಿಕೆಗಳಲ್ಲಿ ಭಾಗಿ. ೧೯೨೩ರ ಅಕ್ಟೋಬರ್ನಿಂದ ದಾಸ್ರು ಸ್ಥಾಪಿಸಿದ್ದ ಫಾರ್ವರ್ಡ್ ದಿನಪತ್ರಿಕೆಯ ನಿರ್ವಹಣೆಯ ಜವಾಬ್ದಾರಿ. ೧೯೨೫ರ ಜೂನ್ ೧೬, ದಾಸ್ರ ನಿಧನ, ಕ್ರಾಂತಿಕಾರಿ ಚಟುವಟಿಕೆಗಳಿಗಾಗಿ ಬೋಸ್ರ ಬಂಧನ, ಬಿಡುಗಡೆ. ೧೯೨೭ರ ನವೆಂಬರ್ನಲ್ಲಿ ಬಂಗಾಳಪ್ರದೇಶ ಕಾಂಗ್ರೆಸ್ನ ಅಧ್ಯಕ್ಷರಾಗಿ ಆಯ್ಕೆ, ಆದರೆ ಗಾಂಧಿ ಪ್ರಣೀತ ಮಂದ ಮಾರ್ಗಕ್ಕಿಂತ ಸುಭಾಷ್ರದು ತೀರಾ ಭಿನ್ನ ಎಂಬುದು ಕ್ರಮೇಣ ಗೊತ್ತಾಯಿತು. ಹತ್ತಾರು ಚಳುವಳಿಗೆ ನೇತೃತ್ವ, ಅಖಿಲಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ನ ಅಧ್ಯಕ್ಷರಾಗಿ ಆಯ್ಕೆ.೧೯೩೩, ಫೆಬ್ರವರಿ ೨೩ರಂದು ಯೂರೋಪಿನಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಪರ ಅಭಿಯಾನ. ಇಂಗ್ಲೆಂಡ್, ಆಸ್ಟ್ರಿಯಾ, ಇಟೆಲಿ ವಿಯೆನ್ನಾಗಳ ಭೇಟಿ, ತ್ವರಿತಗತಿಯ ಪ್ರವಾಸ, ಮಿಂಚಿನ ಓಡಾಟ. ಸ್ವಿಟ್ಜರ್ಲೆಂಡ್, ಚೆಕೋಸ್ಲೋವಾಕಿಯಾ, ಪೋಲೆಂಡ್, ಜರ್ಮನಿಗಳಲ್ಲಿ ಭಾರತದ ಪರ ಪ್ರಚಾರ. ಇಟೆಲಿ ಪ್ರಧಾನಿ ಬೆನಿತೋ ಮುಸ್ಸೋಲಿನಿ ಜತೆ ಚರ್ಚೆ. ೧೯೩೬ ಏಪ್ರಿಲ್ ೮ರಂದು ಮರಳಿ ಭಾರತಕ್ಕೆ, ಬಂದರಲ್ಲೇ ಬಂಧನ. ೧೯೩೭ರಲ್ಲಿ ಮತ್ತೆ ಆಸ್ಟ್ರಿಯಾ ಪಯಣ. ರಾಜಕೀಯ ಅನುಭವಒಳನೋಟ ಕಾಂಗ್ರೆಸ್ನ ಅಖಿಲಭಾರತ ಅಧಿವೇಶನದ ಅಧ್ಯಕ್ಷತೆ ೧೯೩೮ರ ಫೆಬ್ರವರಿ ೧೯ರಂದು, ಹರಿಪುರದಲ್ಲಿ. ವಿದೇಶೀ ನೆಲಗಳ ಓಡಾಟದಿಂದ ಪಡೆದ ರಾಜಕೀಯ ಅನುಭವಒಳನೋಟಗಳಿಂದ ಬ್ರಿಟಿಷರ ಒಡೆದು ಆಳುವನೀತಿ ಕುರಿತ ಕ್ಷಾತ್ರತೇಜದ ಐತಿಹಾಸಿಕ ಭಾಷಣ, ದೇಶ ವಿಭಜನೆಯ ಬ್ರಿಟಿಷರ ತಂತ್ರದ ಸೂಚನೆ. ಮುಂದಿನ ೯ ವರ್ಷದಲ್ಲೇ ಸತ್ಯವಾದ ಬೋಸ್ ಭವಿಷ್ಯವಾಣಿ! ಆರೆಸ್ಸೆಸ್ನ ಸಂಘ ಶಿಕ್ಷಾವರ್ಗ ಶಿಬಿರಕ್ಕೆ ೧೯೩೮ರಲ್ಲಿ ಭೇಟಿಗೆ ಒಪ್ಪಿಗೆ, ಕಾರಣಾಂತರಗಳಿಂದ ಭೇಟಿ ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಅಧ್ಯಕ್ಷಗಾದಿಗೆ ನಡೆದ ಮೊತ್ತಮೊದಲ ಚುನಾವಣೆಯಲ್ಲಿ ಡಾ ಪಟ್ಟಾಭಿ ಸೀತಾರಾಮಯ್ಯರ ವಿರುದ್ಧ ೨೧೫ ಮತಗಳ ಗೆಲುವು! ಸುಭಾಷ್ ವಿರುದ್ಧ ಹಲವಾರು ಟೀಕೆಗಳು, ಅನಗತ್ಯ ಋಣಾತ್ಮಕ ಮಾತುಗಳು ಗಾಂಧೀಜಿಯಿಂದ. ಸ್ವಾತಂತ್ರ್ಯದ ಮೋಡಗಳು ಸಮೀಪ ಇರುವಂತೆಯೇ ಬ್ರಿಟಿಷ್ ಸರ್ಕಾರದ ಜತೆ ದುರ್ಬಲ ಕಾಂಗ್ರೆಸ್ನ ತಾರ್ಕಿಕ ನಡೆಗಳಿಂದ ಬೇಸತ್ತು ಕಾಂಗ್ರೆಸ್ಗೆ ರಾಜೀನಾಮೆ. ಫಾರ್ವರ್ಡ್ ಬ್ಲಾಕ್ ಸ್ಥಾಪನೆ.೧೯೪೦, ಜೂನ್ ೧೮ರಂದು ಡಾ ಹೆಡಗೇವಾರ್ ಜತೆ ಭೇಟಿ ಆದರೆ ತೀವ್ರ ಜ್ವರದಿಂದ ಹಾಸಿಗೆ ಹಿಡಿದಿದ್ದ ಡಾ ಹೆಡಗೇವಾರ್ ಜತೆ ಸಾಧ್ಯವಾಗದ ಮಾತುಕತೆ. ಮೂರೇದಿನದಲ್ಲಿ ಡಾ ಹೆಡಗೇವಾರ್ ನಿಧನ. ಕೈ ತಪ್ಪಿದ ಮಹಾಮಿಲನ. ನಂತರ ವೀರ ಸಾವರ್ಕರ್ ಭೇಟಿ.ಬೋಸ್ ಕಾಣೆಯಾಗಿದ್ದಾರೆ ಎಂಬ ಸುದ್ದಿ ೧೯೪೧ ಜನವರಿ ೨೬ಕ್ಕೆ! ಕಾಬೂಲ್ ಮೂಲಕ ಬರ್ಲಿನ್ ಸೇರಿದ ಬೋಸ್ರಿಂದ ಸೈನಿಕ ಕಾರ್ಯಾಚರಣೆ. ಫ್ರೀ ಇಂಡಿಯಾ ಸೆಂಟರ್ ೧೯೪೧, ನವೆಂಬರ್ ೨ಕ್ಕೆ ಉದ್ಘಾಟನೆ, ಆಜಾದ್ ಹಿಂದ್ ಲಾಂಛನ, ಜೈಹಿಂದ್ ಘೋಷಣೆ, ಬೋಸರಿಗೆ ನೇತಾಜಿ ಬಿರುದು. ಜರ್ಮನ್ ಸೇನಾಕೇಂದ್ರಗಳಿಗೆ ಸೈನಿಕ ತರಬೇತಿ, ಬರ್ಲಿನ್ ರೇಡಿಯೋದಲ್ಲಿ ಆಗಾಗ ಭಾಷಣ, ಹಿಟ್ಲರ್ ಜತೆ ಭೇಟಿ. ಜಪಾನ್ಗೆ ತೆರಳಿ ಅಲ್ಲಿಂದ ಪೂರ್ವಾಂಚಲ ಭಾರತದ ಗಡಿಗಳಲ್ಲಿ ಸೈನ್ಯ ಸಜ್ಜು ಮಾಡಲು ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ಮೂಲಕ ಅವಿರತ ಚಟುವಟಿಗೆ. ಆಜಾದ್ ಹಿಂದ್ ಸೇನೆ ಬಲಿಷ್ಠಗೊಂಡ ಆಜಾದ್ ಹಿಂದ್ ಸೇನೆಗೆ ದೌಡಾಯಿಸುತ್ತಿದ್ದ ನಿವೃತ್ತಯುದ್ಧ ಕೈದಿಗಳು. ಮುಂದಿನ ದಿನಗಳಲ್ಲಿ ಪಕ್ವ ಸೈನ್ಯವಾಗಿ ರೂಪುಗೊಂಡ (ಐ.ಎನ್.ಎ). ಪಾದರಸದಂತೆ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಓಡಾಡಿ ಸ್ವರಾಜ್ಯ ಹೋರಾಟಕ್ಕೆ ಅಗಾಧ ಬೆಂಬಲ ಪಡೆದ ಬೋಸ್ರಿಂದ ಆರ್ಜೀಹುಕುಮಂತ್ಎಆಜಾದ್ ಹಿಂದ್ (ಸ್ವತಂತ್ರ ಭಾರತದ ಹಂಗಾಮಿ ಸರ್ಕಾರ) ಸ್ಥಾಪನೆ ಐಎನ್ಎಯ ಕಮಾಂಡರ್ ಇನ್ ಚೀಫ್ ಆಗಿ ಬೋಸ್. ೧೯೪೫ರ ಆಗಸ್ಟ್ ೧೮ರಂದು ದಕ್ಷಿಣ ವಿಯೆಟ್ನಾಂನ ಸೈಗಾನ್ನಿಂದ ವಿಮಾನಹತ್ತಿದ ಸುಭಾಷ್, ವಿಮಾನ ಸ್ಫೋಟದಿಂದಾಗಿ ನಿಧನರಾದರು. ಆ ಕುರಿತು ಸ್ಪಷ್ಟಗೊಳ್ಳದ ಅನೇಕ ವಿವಾದಗಳು ಇಂದಿಗೂ ಇದೆ. ಅನ್ವೇಷಣಾ ಸಮಿತಿ ನೇಮಿಸಿದರೂ, ಸಾವನ್ನೊಪ್ಪದ ಅನೇಕಮಂದಿ ಬಹಳವರ್ಷ ನೇತಾಜಿ ಬದುಕಿದ್ದಾರೆಂದೇ, ತಿಳಿದಿದ್ದರು. ಬೋಸರು ಆಗಾಗ ಹೇಳುತ್ತಿದ್ದರು ನೀವು ನಿಮ್ಮ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ. ಸ್ವಾತಂತ್ರ್ಯವೆಂಬುದು ಯಾರೂ ಕೊಡುವಂಥ ಸರಕಲ್ಲ ಅದು ನಾವು ಪಡೆದುಕೊಳ್ಳಬೇಕಾದದ್ದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷರಾಗಿ ಸತತ ಎರಡು ಬಾರಿ ಕಾರ್ಯ ನಿರ್ವಹಿಸಿದ ಇವರು, ಮಹಾತ್ಮ ಗಾಂಧಿಯವರ ಅಹಿಂಸಾತ್ಮಕ ತತ್ವಗಳನ್ನು ಒಪ್ಪದೆ ಪಕ್ಷದಿಂದ ಹೊರಬಂದರು. ಮುಂದೆ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ನೇತಾಜಿಯವರು ಭಾರತೀಯ ರಾಷ್ಟ್ರೀಯ ಸೇನೆಯನ್ನು ಸ್ಥಾಪಿಸಿದರು. ಇವರು ಟೈವಾನ್ನಲ್ಲಿ ೧೯೪೫ರ ಆಗಸ್ಟ್ ೧೮ರಂದು ವಿಮಾನ ಅಪಘಾತದಲ್ಲಿ ಮರಣ ಹೊಂದಿದರು ಎಂದು ಭಾವಿಸಲಾಗಿದೆ. ಆದರೆ ಈ ಘಟನೆ ವಿವಾದಿತವಾಗಿದೆ. ವಿಮಾನ ಅಪಘಾತದಲ್ಲೇ ಬೋಸ್ ಸಾವು 2 , 2016 ನೇತಾಜಿ ಸುಭಾಷ್ಚಂದ್ರ ಬೋಸ್ ಅವರು ೧೯೪೫ರ ಆಗಸ್ಟ್ ೧೮ರಂದು ತೈವಾನ್ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲೇ ಮೃತಪಟ್ಟಿದ್ದಾರೆ ಎಂದು ಜಪಾನ್ ಸರ್ಕಾರ ಬಿಡುಗಡೆ ಮಾಡಿರುವ ವರದಿ ತಿಳಿಸಿವೆ. ಬೋಸ್ ಅವರ ಸಾವಿನ ಕುರಿತ ೬೦ ವರ್ಷದ ಹಳೆಯ ವರ್ಗಿಕೃತ ದಾಖಲೆಗಳನ್ನು ಜಪಾನ್ ಸರ್ಕಾರ ಗುರುವಾರ ಸಾರ್ವಜನಿಕವಾಗಿ ಬಹಿರಂಗಪಡಿಸಿದೆ. ಸುಭಾಷ್ ಸಾವಿನ ಕುರಿತ ದಾಖಲೆಗಳಿಗಾಗಿಯೇ ರೂಪಿಸಲಾಗಿರುವ ಬೋಸ್ಫೈಲ್ಸ್.ಇನ್ಫೊ ವೆಬ್ಸೈಟ್ನಲ್ಲಿ ಮೊದಲ ಬಾರಿ ಈ ದಾಖಲೆಗಳನ್ನು ಉಲ್ಲೇಖಿಸಿ ವರದಿ ಪ್ರಕಟಿಸಲಾಗಿದೆ. ಸುಭಾಷ್ ಚಂದ್ರ ಬೋಸ್ ಅವರ ಸಾವಿಗೆ ಕಾರಣಗಳು ಮತ್ತು ಇತರ ವಿಷಯಗಳು ಶೀರ್ಷಿಕೆ ಅಡಿಯಲ್ಲಿ ಈ ಬಗ್ಗೆ ವರದಿಯನ್ನು ಪ್ರಕಟಿಸಲಾಗಿದೆ. ಬೋಸ್ ಅವರ ಸಾವಿನ ಕುರಿತು ೧೯೫೬ರಲ್ಲೇ ವರದಿಯನ್ನು ಸಿದ್ಧಪಡಿಸಿ ಟೊಕಿಯೊದಲ್ಲಿನ ಭಾರತೀಯ ಸಲ್ಲಿಸಲಾಗಿತ್ತು. ಆದರೆ, ವರ್ಗೀಕೃತ ದಾಖಲೆಗಳಾಗಿದ್ದರಿಂದ ಇಲ್ಲಿಯವರೆಗೂ ಭಾರತ ಅಥವಾ ಜಪಾನ್ ಈ ವರದಿಯನ್ನು ಬಹಿರಂಗಪಡಿಸಿರಲಿಲ್ಲ ಎಂದು ವೆಬ್ಸೈಟ್ ತಿಳಿಸಿದೆ. ಜಪಾನ್ ಭಾಷೆಯಲ್ಲಿನ ೭ ಪುಟಗಳು ಮತ್ತು ಇಂಗ್ಲಿಷ್ಗೆ ಭಾಷಾಂತರಿಸಿದ ೧೦ ಪುಟಗಳ ವರದಿ ಇದಾಗಿದೆ. ೧೯೪೫ರ ಆಗಸ್ಟ್ ೧೮ರಂದು ಬೋಸ್ ಅವರಿದ್ದ ವಿಮಾನ ಅಪಘಾತಕ್ಕೀಡಾಯಿತು. ಅದೇ ದಿನ ಸಂಜೆ ತೈಪೆ ಆಸ್ಪತ್ರೆಯಲ್ಲಿ ಅವರು ಮೃತಪಟ್ಟರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬೋಸ್ ಅವರು ಪ್ರಯಾಣಿಸುತ್ತಿದ್ದ ವಿಮಾನ, ಹಾರಾಟ ಆರಂಭಿಸಿದ ತಕ್ಷಣ ನೆಲಕ್ಕೆ ಅಪ್ಪಳಿಸಿತು. ಆಗ ಬೋಸ್ ಅವರು ತೀವ್ರ ಗಾಯಗೊಂಡರು. ಮಧ್ಯಾಹ್ನ ೩ ಗಂಟೆಗೆ ತೈಪೆಯ ಸೇನಾ ಆಸ್ಪತ್ರೆಗೆ ಬೋಸ್ ಅವರನ್ನು ದಾಖಲಿಸಲಾಯಿತು. ಬಳಿಕ ೭ ಗಂಟೆಗೆ ಅವರು ಮೃತಪಟ್ಟರು. ಆಗಸ್ಟ್ ೨೨ರಂದು ಬೋಸ್ ಅವರ ಅಂತ್ಯಕ್ರಿಯೆ ನಡೆಸಲಾಯಿತು ಎಂದು ವರದಿ ತಿಳಿಸಿದೆ. ವಿಮಾನ ಅಪಘಾತಕ್ಕೀಡಾದ ವಿವರಗಳನ್ನು ಸಹ ವರದಿಯಲ್ಲಿ ತಿಳಿಸಲಾಗಿದೆ. ವಿಮಾನ ಹಾರಾಟ ಆರಂಭಿಸಿ ೨೦ ಮೀಟರ್ ಎತ್ತರಕ್ಕೆ ಹೋದ ಬಳಿಕ ಎಡಬದಿಯ ರೆಕ್ಕೆಗೆ ಧಕ್ಕೆಯಾಯಿತು. ಬಳಿಕ ಎಂಜಿನ್ಗೂ ಧಕ್ಕೆಯಾಗಿ ಕೆಲವೇ ಕ್ಷಣಗಳಲ್ಲಿ ವಿಮಾನ ಬೆಂಕಿಗೆ ಆಹುತಿಯಾಯಿತು. ಈ ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ ಬೋಸ್ ಅವರು ಸಾಹಸಪಟ್ಟು ವಿಮಾನದಿಂದ ಕೆಳಗೆ ಇಳಿದರು (ಲಂಡನ್ ನಿಂದ ಬಂದ ವರದಿ). (ಜಪಾನ್ ಸರ್ಕಾರ ಬಿಡುಗಡೆ ಮಾಡಿರುವ ಈ ವರದಿಯು ಭಾರತ ಸರ್ಕಾರ ೧೯೫೬ರಲ್ಲಿ ರಚಿಸಿದ್ದ ಶಹ ನವಾಜ್ ಖಾನ್ ನೇತೃತ್ವದ ತನಿಖಾ ವರದಿಯನ್ನು ಅನುಮೋದಿಸುತ್ತದೆ ಎಂದು ವೆಬ್ಸೈಟ್ ತಿಳಿಸಿದೆ.) ವಿಮಾನ ಅಪಘಾತದಲ್ಲಿ ನೇತಾಜಿ ಸಾವು: ಆಶಿಶ್ ರೇ 5 , 2016 ನೇತಾಜಿ ಸುಭಾಷ್ಚಂದ್ರ ಬೋಸ್ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ ಕುರಿತು ತಮ್ಮ ಬಳಿ ಸಾಕ್ಷ್ಯ ಇದೆ ಎಂದು ನೇತಾಜಿ ಅವರ ಸೋದರ ಮೊಮ್ಮಗ ಹಾಗೂ ಸಂಶೋಧಕ ಆಶಿಶ್ ರೇ ದಿ.೪೧೨೨೦೧೬ ಭಾನುವಾರ ಹೇಳಿದ್ದಾರೆ. ೧೯೪೫ ಆಗಸ್ಟ್ ೧೮ರಂದು ತೈವಾನ್ನ ತೈಪೆಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಬೋಸ್ ಅವರು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಜಪಾನ್ನ ರೆಂಕೋಜಿ ದೇವಾಲಯದಲ್ಲಿರುವ ನೇತಾಜಿ ಅವರ ಚಿತಾಭಸ್ಮವನ್ನು ಭಾರತಕ್ಕೆ ತರಬೇಕು ಎಂದೂ ರೇ ಆಗ್ರಹಿಸಿದ್ದಾರೆ. ನೇತಾಜಿ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬುದನ್ನು ಮೂರು ವರದಿಗಳು ದೃಢಪಡಿಸಿವೆ. ಅವರು ಸೋವಿಯತ್ ಒಕ್ಕೂಟ ಪ್ರವೇಶಿಸಿರುವ ಸಾಧ್ಯತೆ ಇಲ್ಲ ಮತ್ತು ಅಲ್ಲಿ ಅವರು ಕೈದಿಯಾಗಿರಲಿಲ್ಲ ಎಂದೂ ಹೇಳಿದ್ದಾರೆ. ಭಾರತವನ್ನು ಬ್ರಿಟಿಷರಿಂದ ಮುಕ್ತಗೊಳಿಸಲು ಕಮ್ಯುನಿಷ್ಟ್ ರಾಷ್ಟ್ರವಾದ ರಷ್ಯಾ ಸಹಾಯ ಮಾಡಬಹುದು ಎಂದು ನೇತಾಜಿ ವಿಶ್ವಾಸ ಇರಿಸಿಕೊಂಡಿದ್ದರು. ಅದಕ್ಕಾಗಿ ಅವರು ರಷ್ಯಾಕ್ಕೆ ತೆರಳಲು ಬಯಸಿದ್ದರು ಎಂದು ತಿಳಿಸಿದ್ದಾರೆ. ತಮಗೆ ರಕ್ಷಣೆ ನಿಡಲು ಜಪಾನ್ಗೆ ಸಾಧ್ಯವಿಲ್ಲ ಎಂದು ನೇತಾಜಿ ಅರಿತಿದ್ದರು. ಯಾಕೆಂದರೆ ಅದು ಶರಣಾಗಿತ್ತು. ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವ ತಮ್ಮ ಧ್ಯೇಯಕ್ಕೆ ಸೋವಿಯತ್ ಒಕ್ಕೂಟ ಮಾತ್ರ ಸಹಾಯ ಮಾಡಬಲ್ಲುದು ಎಂದು ಅವರು ಬಲವಾಗಿ ನಂಬಿದ್ದರು ಎಂದು ರೇ ವಿವರಿಸಿದ್ದಾರೆ. ನೇತಾಜಿ ಸಾವಿನ ಕುರಿತು ಭಾರತದ ನಿಲುವು ಭಾವನಾತ್ಮಕವಾಗಿದೆ. ಆದರೆ ಸತ್ಯವನ್ನು ತಿಳಿಯಲು ಇದರಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಬೋಸರ ಅಂತಿಮದಿನದ ಕಡತಗಳು ಪ್ರಧಾನಿ ನರೇಂದ್ರ ಮೋದಿ ಅವರು 2016ರ ಜನವರಿಯಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಈ ಸ್ವಾತಂತ್ರ್ಯ ಹೋರಾಟಗಾರನಿಗೆ ಸಂಬಂಧಿಸಿದ, ಕೇಂದ್ರ ಸರ್ಕಾರದ ವಶದಲ್ಲಿದ್ದ ವರ್ಗೀಕೃತ ಕಡತಗಳನ್ನು ಬಹಿರಂಗಪಡಿಸುವ ಕೆಲಸಕ್ಕೆ ಚಾಲನೆ ನೀಡಿದರು. ಮೋದಿ ಅವರ ಪ್ರವೃತ್ತಿಗೆ ಅನುಗುಣವಾಗಿ ಈ ಕಾರ್ಯಕ್ರಮ ಭಾರಿ ಅಬ್ಬರದ ಪ್ರದರ್ಶನವಾಗಿಯೇ ನಡೆಯಿತು. ಭಾವುಕ ಸಂಶೋಧಕರ ಗುಂಪೊಂದು ಎನ್ಡಿಎ ಸರ್ಕಾರದ ಮನವೊಲಿಸಿತು. ಈ ಅಂಶಗಳೆಂದರೆ, 1. ಈಗ ಹೇಳಿರುವಂತೆ, 1945ರ ಆಗಸ್ಟ್ನಲ್ಲಿ ತೈವಾನ್ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಬೋಸ್ ಸತ್ತಿಲ್ಲ ಮತ್ತು 2. ಬೋಸ್ ಅವರ ಜೀವನ ಮತ್ತು ಸಾವಿನ ಬಗೆಗಿನ ನೆನಪುಗಳನ್ನು ಮುಚ್ಚಿಡುವ ಮೂಲಕ ಜವಾಹರಲಾಲ್ ನೆಹರೂ ನೇತೃತ್ವದ ಕಾಂಗ್ರೆಸ್ ಸರ್ಕಾರ ಅವರಿಗೆ ಅವಮಾನ ಮಾಡಿದೆ ಎಂದು ದೂರಿದರು. ಕಡತ ಬಹಿರಂಗಪಡಿಸುವ ಪ್ರಕ್ರಿಯೆ ಆರಂಭ ಆಗಿ ಒಂದು ವರ್ಷ ಆಗಿದೆ. ಈಗಾಗಲೇ 1200 ಕಡತಗಳನ್ನು ಬಹಿರಂಗ ಮಾಡಲಾಗಿದ್ದು ಯಾವ ಕಡತವೂ ಪಿತೂರಿ ಸಿದ್ಧಾಂತವನ್ನು ದೃಢಪಡಿಸಿಲ್ಲ. ಅಷ್ಟೇ ಅಲ್ಲ, ವಾಸ್ತವದಲ್ಲಿ, ಬೋಸ್ ಅವರ ಮಗಳು ಆಸ್ಟ್ರಿಯಾದಲ್ಲಿ ನೆಲೆಸಿದ್ದ ಅನಿತಾ ಅವರಿಗೆ ಸರ್ಕಾರದ ಬೊಕ್ಕಸದಿಂದ ಭತ್ಯೆ ಮಂಜೂರು ಮಾಡುವ ಮೂಲಕ ನೆಹರೂ ಅತ್ಯಂತ ಗೌರವಪೂರ್ವಕವಾಗಿ ನಡೆದುಕೊಂಡಿದ್ದಾರೆ. ಬೋಸ್ ಮತ್ತು ಗಾಂಧಿ ಬೋಸ್ ಮತ್ತು ಗಾಂಧಿ ನಡುವೆ ಒಂದು ಪ್ರಸಿದ್ಧ ಮತ್ತು ಮಹತ್ವದ ಭಿನ್ನಾಭಿಪ್ರಾಯ ಇತ್ತು ಎಂಬುದು ನಿಜ. 1939ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಬೋಸ್ ಅವರ ಪುನರಾಯ್ಕೆಯನ್ನು ಗಾಂಧಿ ವಿರೋಧಿಸಿದ ಸಂದರ್ಭದಲ್ಲಿ ಇದು ಉಂಟಾಯಿತು. ಆದರೆ ಬೋಸ್ ಅದಕ್ಕಿಂತ ಹಿಂದಿನ ಕನಿಷ್ಠ ಒಂದೂವರೆ ದಶಕಗಳ ಕಾಲ ಗಾಂಧಿಯ ಬಹುದೊಡ್ಡ ಅಭಿಮಾನಿಯಾಗಿದ್ದರು. ಗಾಂಧಿ ಸ್ವಾತಂತ್ರ್ಯ ಹೋರಾಟದ ಸರ್ವೋಚ್ಚ ನಾಯಕ ಎಂದು ಬೋಸ್ ಭಾವಿಸಿದ್ದರು. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೆ ಮೊದಲಿನ ಪತ್ರ ವ್ಯವಹಾರದಲ್ಲಿಯೂ ಬೋಸ್ ಇದನ್ನು ಸ್ಪಷ್ಟಪಡಿಸಿದ್ದಾರೆ ನಿಮ್ಮ ಬಗ್ಗೆ ನನಗಿರುವ ಗೌರವವನ್ನು ಕಡಿಮೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪತ್ರವೊಂದರಲ್ಲಿ ಗಾಂಧಿಗೆ ಬೋಸ್ ಹೇಳಿದ್ದರು. ಇತರರ ವಿಶ್ವಾಸ ಗೆಲ್ಲಲು ಸಾಧ್ಯವಾದರೂ ಭಾರತದ ಅತ್ಯಂತ ಶ್ರೇಷ್ಠ ವ್ಯಕ್ತಿಯ ವಿಶ್ವಾಸ ಸಿಗದಿರುವುದು ನನ್ನ ಮಟ್ಟಿಗೆ ದೊಡ್ಡ ದುರಂತ ಎಂದೂ ಬೋಸ್ ಬರೆದಿದ್ದರು. ಅಹಿಂಸೆಯಲ್ಲಿ ಸಂಪೂರ್ಣ ನಂಬಿಕೆ ಇಲ್ಲದ್ದರಿಂದಲೇ ಬೋಸ್ ಅವರು ಇಂಡಿಯನ್ ನ್ಯಾಷನಲ್ ಆರ್ಮಿಯನ್ನು (ಐಎನ್ಎ) ಸ್ಥಾಪಿಸಿದರು. ಹಾಗಿದ್ದರೂ, ಐಎನ್ಎಯ ನಾಲ್ಕು ದಳಗಳಲ್ಲಿ ಮೂರಕ್ಕೆ ಗಾಂಧಿ, ಜವಾಹರಲಾಲ್ ನೆಹರೂ ಮತ್ತು ಮೌಲಾನಾ ಆಜಾದ್ ಅವರ ಹೆಸರು ಇರಿಸಿದ್ದರು ಎಂಬುದು ಗಮನಾರ್ಹ! ಅವರಿಗೆ ಅತಿ ಹೆಚ್ಚು ಗೌರವ ಇದ್ದದ್ದು ಮಹಾತ್ಮ ಗಾಂಧಿಯ ಬಗ್ಗೆಯೇ ಆಗಿತ್ತು. 1943ರ ಅಕ್ಟೋಬರ್ 2ರಂದು ಬ್ಯಾಂಕಾಕ್ನಿಂದ ರೇಡಿಯೊದಲ್ಲಿ ಮಾತನಾಡಿದ್ದ ಬೋಸ್, ಅತ್ಯಂತ ಶ್ರೇಷ್ಠ ನಾಯಕ ಮಹಾತ್ಮ ಗಾಂಧಿಯ 75ನೇ ಹುಟ್ಟುಹಬ್ಬ ಇಂದು ಎಂಬುದನ್ನು ಭಾರತೀಯ ಕೇಳುಗರಿಗೆ ನೆನಪಿಸಿದ್ದರು. ಗಾಂಧಿಯ ಕೊಡುಗೆಗಳನ್ನು ವಿವರಿಸಿದ್ದರು. 1920ರಲ್ಲಿ ಅಸಹಕಾರ ಚಳವಳಿಯನ್ನು ಅವರು ಹೇಗೆ ಆರಂಭಿಸಿದ್ದರು ಎಂಬುದನ್ನು ಹೇಳಿದರು. ಸ್ವಾತಂತ್ರ್ಯದ ಮಾರ್ಗವನ್ನು ತೋರುವುದಕ್ಕಾಗಿ ದೇವರೇ ಈ ವ್ಯಕ್ತಿಯನ್ನು ಕಳುಹಿಸಿದಂತೆ ತೋರುತ್ತದೆ. ತಕ್ಷಣ ಮತ್ತು ಸ್ವಯಂಪ್ರೇರಣೆಯಿಂದ ಇಡೀ ದೇಶ ಅವರ ಹಿಂದೆ ನಿಂತಿತು ಎಂದು ಬೋಸ್ ಹೇಳಿದರು. ಗಾಂಧಿ ರಾಷ್ಟ್ರ ನಾಯಕರಾಗಿ ಬೆಳೆದ ನಂತರದ 20 ವರ್ಷಗಳ ಅವಧಿಯಲ್ಲಿ ಭಾರತೀಯರು ರಾಷ್ಟ್ರೀಯ ಆತ್ಮಗೌರವ ಮತ್ತು ಆತ್ಮವಿಶ್ವಾಸವನ್ನು ಕಲಿತರು. ಈಗ ಅವರಿಗೆ ಇಡೀ ದೇಶವನ್ನು ಪ್ರತಿನಿಧಿಸುವ ರಾಷ್ಟ್ರವ್ಯಾಪಿ ಸಂಘಟನೆಯೂ ಇದೆ. ಭಾರತಕ್ಕೆ ಮತ್ತು ಭಾರತದ ಸ್ವಾತಂತ್ರ್ಯಕ್ಕೆ ಗಾಂಧಿ ನೀಡಿದ ಕೊಡುಗೆ ವಿಶಿಷ್ಟ ಮತ್ತು ಪರ್ಯಾಯವಿಲ್ಲದ್ದಾಗಿದೆ. ನಮ್ಮ ರಾಷ್ಟ್ರೀಯ ಇತಿಹಾಸದಲ್ಲಿ ಎಲ್ಲ ಕಾಲದಲ್ಲಿಯೂ ಅವರ ಹೆಸರನ್ನು ಸ್ವರ್ಣಾಕ್ಷರದಲ್ಲಿಯೇ ಬರೆದಿಡಲಾಗುತ್ತದೆ ಎಂಬುದು ಬೋಸ್ ಅವರ ಮಾತಾಗಿತ್ತು. ಬೋಸ್ ಅವರ ಈ ಭಾಷಣದ ಸಂದರ್ಭದಲ್ಲಿ ಗಾಂಧೀಜಿ ಪುಣೆಯ ಜೈಲಿನಲ್ಲಿದ್ದರು. ರಾಷ್ಟ್ರಪಿತ ಮಹಾತ್ಮಗಾಂಧಿ ಮತ್ತು ಸುಭಾಷ್ಚಂದ್ರ ಬೋಸ್ ನಡುವ 1939ರಲ್ಲಿ ಇಬ್ಬರ ನಡುವೆ ಮೂಡಿದ್ದ ಒಡಕು ತಾತ್ಕಾಲಿಕ. ಅವರ ಒಟ್ಟು ಸಂಬಂಧವನ್ನು ಗಮನಿಸಿದರೆ ಪರಸ್ಪರರ ನಡುವೆ ಪ್ರೀತಿ, ಬಾಂಧವ್ಯ, ಗೌರವ ಕಾಣಬಹುದಾಗಿದೆ ಎಂದು ಬೋಸ್ ಅವರ ಸಂಬಂಧಿ, ಇತಿಹಾಸಕಾರ ಸುಗತ ಬೋಸ್ ಹೇಳಿದ್ದಾರೆ. ಗಾಂಧೀಜಿಯವರನ್ನು ರಾಷ್ಟ್ರಪಿತಾಮಹ ಎಂದು ಮೊದಲು ಹೇಳಿದವರು ಬೋಸ್:ಗಾಂಧೀಜಿಯವರು ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾಗ, ಕಸ್ತೂರಿ ಬಾ ಅವರು ಫೆಬ್ರವರಿ 22, 1944 ರಂದು ನಿಧನರಾದರು. ಗಾಂಧೀಜಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ನೇತಾಜಿ, 1944 ರ ಜೂನ್ 4 ರಂದು ರಂಗೂನ್ನ ಆಜಾದ್ ಹಿಂದ್ ರೇಡಿಯೊದಲ್ಲಿ ಮಹಾತ್ಮರಿಗೆ ಈ ಕೆಳಗಿನ ಸಂದೇಶವನ್ನು ಕಳುಹಿಸಿದರು. ........... ಸ್ವದೇಶದಲ್ಲಿರುವ ನಮ್ಮ ದೇಶವಾಸಿಗಳು ತಮ್ಮ ಸ್ವಂತ ಪ್ರಯತ್ನಗಳ ಮೂಲಕ ಅಥವಾ ಯಾವುದೇ ಆಕಸ್ಮಿಕವಾಗಿ ತಮ್ಮನ್ನು ಸ್ವತಂತ್ರಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾದರೆ ಯಾರೂ ನನಗಿಂತ ಹೆಚ್ಚು ಸಂತೋಷಪಡುದಿಲ್ಲ, ಬ್ರಿಟಿಷ್ ಸರ್ಕಾರವು ನಿಮ್ಮ ಕ್ವಿಟ್ ಇಂಡಿಯಾ ವನ್ನು ಸ್ವೀಕರಿಸುತ್ತದೆ, ರೆಸಲ್ಯೂಶನ್ ಮತ್ತು ಅದಕ್ಕೆ ಪರಿಣಾಮಕಾರಿ ಉತ್ತರ ನೀಡುತ್ತದೆ ಎಂದು ಆಶಿಸುತ್ತೇನೆ. ಆದರೆ, ಮೇಲಿನ ಯಾವುದೂ ಸಾಧ್ಯವಿಲ್ಲ ಮತ್ತು ಹೋರಾಟ ಅನಿವಾರ್ಯವಾಗಿದೆ ಎಂಬ ನಂಬುಗೆಯ ಮೇಲೆ ನಾವು ಮುಂದುವರಿಯುತ್ತಿದ್ದೇವೆ. ಭಾರತದ ವಿಮೋಚನೆಗಾಗಿ ಈ ಪವಿತ್ರ ಯುದ್ಧದಲ್ಲಿ ನಮ್ಮ ರಾಷ್ಟ್ರದ ಪಿತಾಮಹ, ನಾವು ನಿಮ್ಮ ಆಶೀರ್ವಾದ ಮತ್ತು ಶುಭಾಶಯಗಳನ್ನು ಕೇಳುತ್ತೇವೆ (ಬಯಸುತ್ತೇವೆ) . ಮೇಲಿನ ಸಂದೇಶವು ನಿಸ್ಸಂದೇಹವಾಗಿ ನೇತಾಜಿಯವರ ರಾಷ್ಟ್ರದ ಪಿತಾಮಹ ಎಂದು ಸಂಬೋಧಿಸಿದ ಗಾಂಧೀಜಿಯವರ ಗೌರವ ಮತ್ತು ಆತ್ಮೀಯ ಭಾವನೆಗಳನ್ನು ಸಾಬೀತುಪಡಿಸುತ್ತದೆ. ಗಾಂಧೀಜಿ ಬೋಸ್ ಬಗ್ಗೆ 1946ರ ಜನವರಿಯಲ್ಲಿ ಯುನೈಟೆಡ್ ಪ್ರೆಸ್ ಆಫ್ ಇಂಡಿಯಾ ಸುದ್ದಿ ಸಂಸ್ಥೆ ಜತೆ ಮಾತನಾಡುತ್ತಾ, ಐಎನ್ಎಯ ಜೈ ಹಿಂದ್ ಘೋಷಣೆಯನ್ನು ಕಾಂಗ್ರೆಸ್ಗೆ ಅಳವಡಿಸಿಕೊಳ್ಳಲಾಗುವುದು ಎಂದು ಹೇಳಿದರು. ಯುದ್ಧದಲ್ಲಿ ಬಳಕೆಯಾಗಿದೆ ಎಂಬ ಕಾರಣಕ್ಕೆ ಈ ಘೋಷಣೆ ಹಿಂಸೆಯ ರೂಪ ಎಂದು ಪರಿಗಣಿಸಬೇಕಾಗಿಲ್ಲ ಎಂದು ಗಾಂಧಿ ಹೇಳಿದರು. ಬೋಸ್ ಅವರ ಬಗ್ಗೆ ಗಾಂಧಿಯ ಅಭಿಪ್ರಾಯ ಹೀಗಿತ್ತು: ತಮ್ಮ ತ್ಯಾಗದ ಸಾಮರ್ಥ್ಯ ಅವರಿಗೆ ಸದಾ ತಿಳಿದಿತ್ತು. ಅವರ ವ್ಯವಹಾರ ಚಾತುರ್ಯ, ಸೇನೆಯನ್ನು ಮುನ್ನಡೆಸುವ ತಾಕತ್ತು ಮತ್ತು ಸಂಘಟನಾ ಸಾಮರ್ಥ್ಯ ಅವರು ದೇಶ ತೊರೆದು ಹೋದ ಮೇಲಷ್ಟೇ ನನಗೆ ತಿಳಿಯಿತು. ಮಾರ್ಗದ ಬಗ್ಗೆ ನನ್ನ ಮತ್ತು ಅವರ ನಡುವಣ ದೃಷ್ಟಿಕೋನದ ವ್ಯತ್ಯಾಸ ಬಹಳ ಪ್ರಸಿದ್ಧವೇ ಆಗಿದೆ. ಐಎನ್ಎಯಲ್ಲಿ ಮೇಜರ್ ಜನರಲ್ ಆಗಿದ್ದ ಷಾ ನವಾಜ್ ಖಾನ್ ಅವರನ್ನು ಬಿಹಾರಕ್ಕೆ (ಬಿಹಾರದಲ್ಲಿ ಮುಸ್ಲಿಮರು ಎದುರಿಸಿದ ಹಿಂಸೆ ಅಷ್ಟೇ ಘೋರವಾಗಿತ್ತು) ಕಳುಹಿಸಿದರು. ಖಾನ್ ಮತ್ತು ಐಎನ್ಎಯ ಇತರ ಆರು ಯೋಧರು ಮನೆಗಳು ಮತ್ತು ಗ್ರಾಮಗಳನ್ನು ಪುನರ್ ನಿರ್ಮಿಸಲು ನಿರಾಶ್ರಿತ ಮುಸ್ಲಿಮರಿಗೆ ನೆರವಾದರು.ಷಾ ನವಾಜ್ ಸಾಹೇಬ್ ಅವರು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಬಿಹಾರದ ಪ್ರಾರ್ಥನಾ ಸಭೆಯೊಂದರಲ್ಲಿ ಗಾಂಧಿ ಹೇಳಿದ್ದರು. ಷಾ ನವಾಜ್ ಮತ್ತು ಐಎನ್ಎಯ ಮಾಜಿ ಯೋಧರ ತಂಡ ಗಲಭೆ ಸಂತ್ರಸ್ತರಿಗೆ ಹೇಗೆ ಆಹಾರ ವಿತರಿಸಿತು ಎಂಬುದನ್ನೆಲ್ಲ ಗಾಂಧಿ ವಿವರಿಸಿದರು. ಚಿತ್ರಶಾಲೆ ಹೆಚ್ಚಿನ ಓದಿಗೆ ರಾಮಚಂದ್ರ ಗುಹಾಗಾಂಧಿಬೋಸ್ ನಡುವಣ ಸಾಮರಸ್ಯದ ಕತೆ20 , 2017 ಲಖನೌನೇತಾಜಿ ಕಾರು ಚಾಲಕ ಕರ್ನಲ್ನಿಜಾಮುದ್ದೀನ್ (117) ನಿಧನಪ್ರಜಾವಾಣಿ ವಾರ್ತೆ7 , 2017 ನೇತಾಜಿ ಹುಡುಕಾಟಕ್ಕೆ ನೆರವಾದ ಆರ್ಟಿಐ: ಸತ್ಯಶೋಧದ ಗುರುತುಗಳು...ಚೂಡಿ ಶಿವರಾಂ : 23 ಜನವರಿ 2020 ಗುಮ್ನಾಮಿ ಬಾಬಾ ಸುಭಾಷ್ಚಂದ್ರ ಅಲ್ಲಪ್ರಜಾವಾಣಿ ವಾರ್ತೆ : 23 ಜನವರಿ 2020 ಪೂರಕ ಮಾಹಿತಿ ಸುಭಾಷರ ಜೀವನ ಹೊಸವ್ಯಾಖ್ಯೆ ರಾಷ್ಟ್ರೀಯತಾವಾದಿ ನೇತಾಜಿಚೂಡಿ ಶಿವರಾಂ: 23 ಜನವರಿ 2020, ನೇತಾಜಿ ಪತ್ನಿಯ ಎಮಿಲಿಯ ತ್ಯಾಗದ ಬದುಕುಚೂಡಿ ಶಿವರಾಂ:23 ಜನವರಿ 2020(ಭಾವುಕತೆಯ ವರದಿಗಳು) ಉಲ್ಲೇಖ ಸ್ವಾತಂತ್ರ್ಯ ಹೋರಾಟಗಾರರು
ಗ್ರ್ಯಾಂಡ್ ಓಲ್ಡ್ ಮ್ಯಾನ್ ಆಫ್ ಇಂಡಿಯಾ ಮತ್ತು ಭಾರತದ ಅನಧಿಕೃತ ರಾಯಭಾರಿ ಎಂದೂ ಕರೆಯಲ್ಪಡುವ ಸರ್ ದಾದಾಭಾಯಿ ನವರೋಜಿ ದೋರ್ಡಿ (4 ಸೆಪ್ಟೆಂಬರ್ 1825 30 ಜೂನ್ 1917) ಬ್ರಿಟಿಷ್ ಪಾರ್ಸಿ ವಿದ್ವಾಂಸ, ವ್ಯಾಪಾರಿ ಮತ್ತು ರಾಜಕಾರಣಿಯಾಗಿದ್ದು, ಅವರು 1892 ಮತ್ತು 1895 ರ ನಡುವೆ ಯುನೈಟೆಡ್ ಕಿಂಗ್ಡಮ್ ಹೌಸ್ ಆಫ್ ಕಾಮನ್ಸ್ನಲ್ಲಿ,ಲಿಬರಲ್ ಪಕ್ಷದ ಸಂಸತ್ ಸದಸ್ಯರಾಗಿದ್ದರು(ಸಂಸದ ) ಮತ್ತು ಬ್ರಿಟಿಷ್ ಸಂಸದರಾದ ಮೊದಲ ಭಾರತೀಯ, ಆಂಗ್ಲೋಇಂಡಿಯನ್ ಸಂಸದ ಡೇವಿಡ್ ಆಕ್ಟರ್ಲೋನಿ ಡೈಸ್ ಸೊಂಬ್ರೆ ಅವರ ಹೊರತಾಗಿಯೂ, ಭ್ರಷ್ಟಾಚಾರಕ್ಕೆ ಹಕ್ಕು ನಿರಾಕರಿಸಿದರು. ನೌರೋಜಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ಅವರ ಪುಸ್ತಕ ಪಾವರ್ಟಿ ಅಂಡ್ ಅನ್ಬ್ರಿಟಿಷ್ ರೂಲ್ ಇನ್ ಇಂಡಿಯಾ ಭಾರತದ ಸಂಪತ್ತನ್ನು ಬ್ರಿಟನ್ಗೆ ಪರಿಚಯಿಸುವುದರ ಬಗ್ಗೆ ಗಮನ ಸೆಳೆಯಿತು. ಅದರಲ್ಲಿ ಅವರು ತಮ್ಮ ಸಂಪತ್ತು ಡ್ರೈನ್ ಸಿದ್ಧಾಂತವನ್ನು ವಿವರಿಸಿದರು. ಕೌಟ್ಸಿಕಿ ಮತ್ತು ಪ್ಲೆಖಾನೋವ್ ಅವರೊಂದಿಗೆ ಅವರು ಎರಡನೇ ಅಂತರರಾಷ್ಟ್ರೀಯ ಸದಸ್ಯರಾಗಿದ್ದರು. 2014 ರಲ್ಲಿ, ಯೂಕೆಭಾರತ ಸಂಬಂಧಗಳ ಸೇವೆಗಳಿಗಾಗಿ ಉಪಪ್ರಧಾನಿ ನಿಕ್ ಕ್ಲೆಗ್ ದಾದಾಭಾಯ್ ನೌರೋಜಿ ಪ್ರಶಸ್ತಿಗಳನ್ನು ಉದ್ಘಾಟಿಸಿದರು. 1963, 1997 ಮತ್ತು 2017 ರಲ್ಲಿ ನೌರೋಜಿ ಹೆಸರಲ್ಲಿ ಇಂಡಿಯಾ ಪೋಸ್ಟ್ ಅಂಚೆಚೀಟಿಗಳನ್ನು ಮೀಸಲಿಟ್ಟಿದೆ. ಆರಂಭಿಕ ಜೀವನ ನವರೋಜಿ ಗುಜರಾತಿ ಮಾತನಾಡುವ ಪಾರ್ಸಿನವಸಾರಿ ಕುಟುಂಬದಲ್ಲಿ ಜನಿಸಿದರು, ಮತ್ತು ಎಲ್ಫಿನ್ಸ್ಟೋನ್ ಇನ್ಸ್ಟಿಟ್ಯೂಟ್ ಸ್ಕೂಲ್ ವಿದ್ಯೆ ಪಡೆದರು. ಅವರು ಬರೋಡಾದ ಮಹಾರಾಜ, ಸಯಾಜಿರಾವ್ ಗೇಕ್ವಾಡ್ ನ್ನು ಪೋಷಿಸಿದರು ಮತ್ತು 1874 ರಲ್ಲಿ ಮಹಾರಾಜರಿಗೆ ದಿವಾನ್ (ಮಂತ್ರಿ) ಆಗಿ ತಮ್ಮ ಸಾರ್ವಜನಿಕ ಜೀವನವನ್ನು ಪ್ರಾರಂಭಿಸಿದರು. 1854 ರಲ್ಲಿ ವಾಯ್ಸ್ ಆಫ್ ಇಂಡಿಯಾ ಎಂಬ ಪತ್ರಿಕೆ ಪ್ರಕಟಿಸಿದರು. 1855 ರಲ್ಲಿ, ಬಾಂಬೆಯ ಎಲ್ಫಿನ್ಸ್ಟೋನ್ ಕಾಲೇಜಿನಲ್ಲಿ ಗಣಿತ ಮತ್ತು ನೈಸರ್ಗಿಕ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ನೇಮಕಗೊಂಡು ಅಂತಹ ಶೈಕ್ಷಣಿಕ ಸ್ಥಾನವನ್ನು ಪಡೆದ ಮೊದಲ ಭಾರತೀಯರಾದರು. ಅವರು 1855 ರಲ್ಲಿ ಲಂಡನ್ಗೆ ಪ್ರಯಾಣಿಸಿ ಕ್ಯಾಮಾ ಆಂಡ್ ಕೋನಲ್ಲಿ ಪಾಲುದಾರರಾದರು, ಬ್ರಿಟನ್ನಲ್ಲಿ ಸ್ಥಾಪನೆಯಾದ ಮೊದಲ ಭಾರತೀಯ ಕಂಪನಿಗೆ ಲಿವರ್ಪೂಲ್ ಸ್ಥಳವನ್ನು ತೆರೆಯಿತು. ಮೂರು ವರ್ಷಗಳಲ್ಲಿ ಅವರು ನೈತಿಕ ಆಧಾರದ ಮೇಲೆ ರಾಜೀನಾಮೆ ನೀಡಿದ್ದರು. 1859 ರಲ್ಲಿ, ಅವರು ತಮ್ಮದೇ ಹತ್ತಿ ವ್ಯಾಪಾರ ಕಂಪನಿಯಾದ ದಾದಾಭಾಯ್ ನೌರೋಜಿ ಆಂಡ್ ಕೋ ಅನ್ನು ಸ್ಥಾಪಿಸಿದರು. ನಂತರ, ಅವರು ಲಂಡನ್ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಗುಜರಾತಿ ಭಾಷೆ ಪ್ರಾಧ್ಯಾಪಕರಾದರು. ಉಲ್ಲೇಖ ಲೇಖಕರು ರಾಜಕಾರಣಿಗಳು ಕರಾವಳಿ ವಿಕಿಮೀಡಿಯನ್ಸ್
ಚಿತ್ತರಂಜನ ದಾಸ್(ನವೆಂಬರ್ ೨೫, ೧೮೭೦ ಜೂನ್ ೧೬, ೧೯೨೫) ಅವರನ್ನು ಭಾರತದ ಜನತೆ ಪ್ರೀತಿಯಿಂದ ದೇಶಬಂಧು ಎಂದು ಕರೆದರು. ಸ್ವಾತಂತ್ರ ಚಳುವಳಿಯ ಪ್ರಮುಖರಲ್ಲಿ ಪ್ರಮುಖರಾದ ಇವರು ವೃತ್ತಿಯಿಂದ ವಕೀಲರಾಗಿದ್ದರು. ಇಂಗ್ಲೆಂಡಿನಲ್ಲಿ ಕಾನೂನನ್ನು ಅಭ್ಯಾಸ ಮಾಡಿದ ಇವರು ೧೯೦೯ರಲ್ಲಿ ನೆಡೆದ ಆಲಿಪುರ ಸ್ಪೋಟದಲ್ಲಿ ಶ್ರೀ ಅರವಿಂದ ಘೋಷ್ ಅವರನ್ನು ನ್ಯಾಯಾಂಗದ ಆರೋಪದಿಂದ ಮುಕ್ತಗೊಳಿಸಿದರು. ಸ್ವಾತಂತ್ರ್ಯ ಹೋರಾಟಗಾರರು ಭಾರತದ ಗಣ್ಯರು ಭಾರತೀಯ ಇತಿಹಾಸದ ಪ್ರಮುಖರು
ಕರ್ನಾಟಕ ರತ್ನ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೯೨ರಲ್ಲಿ ಪ್ರಾರಂಭಿಸಲಾಯಿತು. . ಒಟ್ಟಾರೆ ಇದುವರೆಗೆ ಹತ್ತು ಗಣ್ಯ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.ಕೊನೆಯ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ೨೦೨೨ ನವೆಂಬರ್ ೦೧ ರಂದು ನೀಡಲಾಗಿದೆ ಪ್ರಶಸ್ತಿ ಪುರಸ್ಕೃತರು ಉಲ್ಲೇಖಗಳು ಭಾರತೀಯ ಪ್ರಶಸ್ತಿಗಳು ಕರ್ನಾಟಕದ ಸಾರ್ವಜನಿಕ ಪ್ರಶಸ್ತಿಗಳು ಮತ್ತು ಪುರಸ್ಕಾರಗಳು ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರು ಕರ್ನಾಟಕ
ಮಂಗಳ ಪಾಂಡೆ (ದಿ. 8 ಎಪ್ರಿಲ್ 1857) ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮ ಎಂದೇ ಪ್ರಖ್ಯಾತರು. ಈಸ್ಟ್ ಇಂಡಿಯಾ ಕಂಪನಿ ಯ ಬ್ರಿಟಿಷರ ಸೈನ್ಯದಲ್ಲಿ ಸಿಪಾಯಿಯಾಗಿದ್ದರು. 1857ರಲ್ಲಿ ಬ್ರಿಟಿಷರ ಮೇಲೆ ಮಾಡಿದ ಆಕ್ರಮಣವು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ರೂಪವನ್ನು ಪಡೆಯಿತು.ಅವರು ವ್ಯಾಪಕವಾಗಿ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರರು ಎಂದು ಕರೆಯಲಾಗುತ್ತದೆ. ಭಾರತ ಸರ್ಕಾರ ವಿಶಿಷ್ಠ ಸ್ವಾತಂತ್ರ್ಯ ಹೋರಾಟಗಾರ ಎಂದು ಸ್ಮರಣೆಗಾಗಿ ಭಾರತೀಯ ಅಂಚೆ ಚೀಟಿಯ ಜಾರಿ ಮಾಡಿದೆ. ಮೀರಿದ ಅವರ ಜೀವನ ಮತ್ತು ಕ್ರಿಯೆಗಳನ್ನು ಬೆಳ್ಳಿ ತೆರೆಗೆ ಮಾರ್ಪಡಿಸಲಾಗಿದೆ. ಆರಂಭಿಕ ವರ್ಷಗಳಲ್ಲಿ ಮಂಗಲ್ ಪಾಂಡೆ ಒಂದು ಭೂಮಿಹಾರ್ ಬ್ರಾಹ್ಮಣ ಕುಟುಂಬಕ್ಕೆ ಭಾರತದ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ, ನಾಗವ ಹಳ್ಳಿಯಲ್ಲಿ ಜುಲೈ ೧೮೨೭ ರಂದು ಜನಿಸಿದರು. ಅವರ ತಂದೆ, ದಿವಾಕರ್ ಪಾಂಡೆ, ವೃತ್ತಿಯ ಮೂಲಕ ರೈತ ಮತ್ತು ಮಧ್ಯಮ ವರ್ಗ ಸೇರಿದ್ದರು. )(ಮಂಗಲ್ ಪಾಂಡೆ, ನಂತರ ೧೮೩೦ ರಲ್ಲಿ ಬರಗಾಲದಿಂದ ಅವರ ತಂದೆ ಮಂಗಲ್ ಪಾಂಡೆ ಹಾಗೂ ಅವರ ಸಹೋದರಿಯನ್ನು ಬಿಟ್ಟು ಮೃತಪಟ್ಟರು.)( ಅವರು ೨೨ನೇ ವಯಸ್ಸಿನಲ್ಲಿ ೧೮೪೯ ರಲ್ಲಿ ಈಸ್ಟ್ ಇಂಡಿಯಾ ಕಂಪನಿಯನು ಸೇರಿದರು.) ಪಾಂಡೆ ೩೪ ನೇ [ಬಂಗಾಳ] ಸ್ಥಳೀಯ ಪದಾತಿದಳದ ೬ ನೇ ಕಂಪನಿ ಭಾಗವಾಗಿದ್ದರು , ಪ್ರಮುಖವಾಗಿ ರೆಜಿಮೆಂಟ್ ತಂದೆಯ ಅಧಿಕಾರಿಗಳ ಮೇಲೆ ದಾಳಿ ಪಾಲ್ಗೊಳ್ಳುವಿಕೆಗೆ ಹೆಸರುವಾಸಿಯಾಗಿದೆ. ಈ ಘಟನೆಯು ೧೮೫೭ ರ ಸಿಪಾಯಿಮ್ಯುಟಿನಿ ಅಥವಾ ಭಾರತೀಯ ಸ್ವಾತಂತ್ರ್ಯ ಮೊದಲನೇ ಹೋರಾಟಗಾರರು ಎಂದು ಕರೆಯಲಾಯಿತು. ೧೮೫೭ ಘಟನೆ ಮಾರ್ಚ್ ೨೯, ೧೮೫೭ ರ ಮಧ್ಯಾಹ್ನ ಸಮಯದಲ್ಲಿ ಬರಕ್ಪುರ್ನಲ್ಲಿ ಲೆಫ್ಟಿನೆಂಟ್ ಬಾಘ್, ೩೪ ನೇ ಬಂಗಾಳ ಸ್ಥಳೀಯ ಇನ್ಫೆಂಟ್ರಿನ ಸಹಾಯಕ ತನ್ನ ಸರ್ಕಾರದ ಹಲವಾರು ಜನರು ದಾಳಿ ನಡೆಸಲು ಮುಂದಾಗಿದ್ದಾರೆ ಎಂದು ತಿಳಿಸಲಾಯಿತು.ಇದಲ್ಲದೆ ಅವರಲ್ಲಿ, ಮಂಗಲ್ ಪಾಂಡೆ ಬಂಡೇಳುವ ಪುರುಷರನ್ನು ಕರೆದು ಒಂದು ಲೋಡೆಡ್ ಮಸ್ಕೆಟ್ ಜೊತೆ ರೆಜಿಮೆಂಟ್ ಸಿಬ್ಬಂದಿ ಕೊಠಡಿಯಿಂದ ಯಾರು ಹೊರಗೆ ಕಾಣಿಸಿಕೂಳ್ಳುತ್ತಾರೋ ಅವರ ಮೇಲೆ ದಾಳಿ ನಡೆಸಲು ಸಜ್ಜಾಗುತ್ತಾರೆ.ಬಾಘ್ ತಕ್ಷಣವೇ ತನ್ನ ಕತ್ತಿಯನ್ನು ಹಾಗು ಪಿಸ್ತೂಲುಗಳನ್ನು ಲೋಡ್ ಮಾಡಿ, ಅವನ ಕುದುರೆಯನ್ನು ಏರಿ ಮುಂದುವರೆದನು. ಪಾಂಡೆ, ೩೪ ನೇ ಆಫ್ ಕ್ವಾರ್ಟರ್ ಸಿಬ್ಬಂದಿ ಕೊಠಡಿ ಮುಂದೆ ನಿಂತು ಬಾಘ್ ಮೇಲೆ ಗುರಿಯಿಟ್ಟು ಗುಂಡನ್ನು ಹಾರಿಸಿದರು.ಆದರೆ ಗುಂಡು ಬಾಘ್ ಗೆ ತಗಲಲಿಲ್ಲ, ಕುದುರೆಗೆ ಹೊಡೆದು, ಮತ್ತು ಕುದುರೆ ಮತ್ತು ಸವಾರ ಕೆಳಗೆ ತರಲಾಯಿತು. ಬಾಘ್ ಬೇಗನೆ ಸ್ವತಃ ಅವನ ಪಿಸ್ತೂಲನ್ನು ಸ್ವಾಧೀನಪಡಿಸಿಕೊಡು ಪಾಂಡೆ ಕಡೆಗೆ ಗುಂಡು ಹಾರಿಸಿದರು. ಅವರು ತಪ್ಪಿಸಿಕೊಡರು.ನಂತರ ಪಾಂಡೆ ಒಂದು ತಲ್ವಾರ್ (ಭಾರೀ ಭಾರತೀಯ ಕತ್ತಿ) ಅವನಿಗೆ ಭುಜ ಮತ್ತು ಕುತ್ತಿಗೆ ಮೇಲೆ ದಾಳಿ ನಡೆಸಿದರು.ಆಗ ಸಿಪಾಯಿ, ಶೇಖ್ ಪಲ್ಟು ಮಧ್ಯಪ್ರವೇಶಿ ಪಾಂಡೆಯವರನ್ನು ಮಸ್ಕೆಟ್ನ್ನು ಲೋಡ್ ಮಾಡದಂತೆ ತಡೆದರು. ಇಂಗ್ಲೀಷ್ ಸಾರ್ಜೆಂಟ್ಮೇಜರ್ ಹ್ಯುಸನ್ ಸ್ಥಳೀಯ ಅಧಿಕಾರಿಗಳನ್ನು ಕರೆಯಿಸಿಕೊಂಡು,ಜೆಮದರ್ ಈಶ್ವರಿ ಪ್ರಸಾದ್, ಕ್ವಾರ್ಟರ್ ಸಿಬ್ಬಂದಿ ಕಮಾಂಡ್ ಭಾರತೀಯ ಅಧಿಕಾರಿ ಮಂಗಲ್ ಪಾಂಡೆಯನ್ನು ಬಂಧಿಸಲು ಆದೇಶಿಸಿದರು. ಜೆಮದರ್ ಅವರು ಒಬ್ಬರೆ ಪಾಂಡೆಯನ್ನು ಮಣಿಸಲು ಆಗಲಿಲ್ಲ ಎಂದರು. ಈ ಸಮಯದಲ್ಲಿ ಬಾಘ್ ಎಲ್ಲಿ ಅವನು? ಎಲ್ಲಿ ಅವನು? ಎಂದು ಕಿರಿಚುತ್ತಾ ಬಂದರು. ಆಗ ಹ್ಯುಸನ್ ನಿಮ್ಮ ಬದುಕನ್ನು ಉಳಿಸಿಕೂಳ್ಳಿ,ಸಿಪಾಯಿ ನಿಮ್ಮ ಮೇಲೆ ಗುಂಡು ಹಾರಿಸುತ್ತಾನೆ ಎಂದರು. ಆದೆ ಸಮಯದಲ್ಲಿ ಪಾಂಡೆ ಮತ್ತೆ ಗುಂಡು ಹಾರಿಸಿದರು. ಹ್ಯುಸನ್ ಪಾಂಡೆಯವರನ್ನು ನೆಲಕ್ಕೆ ತಂದರು.ಈ ಸಮಯದಲ್ಲಿ ಇತರೆ ಸೈನಿಕರು ಮೂಕ ಪ್ರೇಕ್ಷಕರಾಗಿ ನಿಂತಿದ್ದರು.ಆಗ ಶೇಖ್ ಪಲ್ಟು ಇಂಗ್ಲಿಷ್ ಸೈನಿಕರನ್ನು ಎದುರಿಸುವಾಗ ಇತರೆ ಭಾರತೀಯ ಸೈನಿಕರ ಸಹಾಯವನ್ನು ಕೋರಿದರು.ಹ್ಯುಸನ್ ಮೇಲೆ ಇತರೆ ಸೈನಿಕರು ಕಲ್ಲುಗಳನ್ನು ಎಸೆಯುತ್ತಿದ್ದರು,ಆಗ ಹ್ಯುಸನ್ ಪಾಂಡೆಯನ್ನು ಎದುರಿಸಲು ಸಹಾಯ ಕೋರಿದಾಗ ಅವರು ಪಾಂಡೆಯನ್ನು ಬಿಡದಿದ್ದರೆ ಹ್ಯುಸನ್ನ ಶೂಟ್ ಮಾಡುವುದಾಗಿ ಹೇಳಿದರು. ಕ್ವಾರ್ಟರ್ ಗಾರ್ಡ್ ಸೈನಿಕರು ಶೇಖ್ ಪಲ್ಟುವರನ್ನು ಪಾಂಡೆಯನ್ನು ಬಿಡಲು ಆದೇಶಿಸಿದರು.ಸ್ವತಃ ಅವನೇ ಗಾಯಗೂಂಡಿದ್ದರಿಂದ ಅವನು ಹಿಂದೆ ಸರಿದನು.ಈ ಮಧ್ಯೆ, ಘಟನೆಯ ವರದಿ ತಿಳಿದು ಕಮಾಂಡಿಂಗ್ ಅಧಿಕಾರಿ ಜನರಲ್ ಹರ್ಸೆ ಸ್ಥಳಕ್ಕೆ ಧಾವಿಸಿದರು.ಅವರು ಇತರೆ ಸಿಬ್ಬಂದಿಯವರಿಗೆ ಪಿಸ್ತೂಲನ್ನು ಹಿಡಿದು ಪಾಂಡೆಯನ್ನು ಬಂಧಿಸಲು ಆದೇಶಿಸದರು.ಪಾಂಡೆ ತೀವ೯ವಾಗಿ ಗಾಯಗೊಂಡಿದ್ದರು. ಪಾಂಡೆ ಚೇತರಿಸಿಕೊಂಡು ಒಂದು ವಾರದ ನಂತರ ವಿಚಾರಣೆಗೆ ಕರೆತರಲಾಯಿತು.ಸ್ವತಃ ರಕ್ಷಿಸಲು ಕೇಳಿದಾಗ,ನಾನು ಏನು ಮಾಡಿದೆ ಅಂತ ನನಗೆ ಗೊತ್ತಿಲ್ಲ.ಯಾರು ಗಾಯಗೊಂಡರು ಅಂತ ಗೊತ್ತಿಲ್ಲ.ನಾನು ಹೇಳಲು ಏನು ಉಳಿದಿಲ್ಲ.ಕ್ವಾರ್ಟರ್ ಸಿಬ್ಬಂದಿ ಮೂರು ಸಿಖ್ ಸದಸ್ಯರ ಜೊತೆಗೆ ಪಾಂಡೆಗೆ ನೇಣು ಶಿಕ್ಷೆ ವಿಧಿಸಲಾಯಿತು. ಮಂಗಲ್ ಪಾಂಡೆ ಮರಣದಂಡನೆ ಏಪ್ರಿಲ್ ೧೮ ನಿಗದಿಯಾಗಿದತ್ತು, ಆದರೆ ಆ ದಿನಾಂಕದ ಮೊದಲು ಹತ್ತು ದಿನಗಳ ಕರೆದೂಯ್ದುರು. ಜೆಮಾದರ್ ಈಶ್ವರಿ ಪ್ರಸಾದ್ ಏಪ್ರಿಲ್ ೨೧ ರಂದು ಗಲ್ಲಿಗೇರಿಸಲಾಯಿತು. ಪರಿಣಾಮ ಸರ್ಕಾರ ತನಿಖೆ ನಂತರ ೩೪ ನೇ ಬಿ.ಎನ್.ಐ ರೆಜಿಮೆಂಟ್ ಮೇ 6 ರಂದು ನಾಚಿಕೆಗೇಡು ಜೊತೆಗೆ ಸೈನಿಕರು ತಮ್ಮ ಕರ್ತವ್ಯನ್ನು ಸರಿಯಾಗಿ ನಿರ್ವಹಿಸದಿದ್ದಕ್ಕೆ ವಿಸರ್ಜಿಸಲಾಯಿತು.ಶೇಖ್ ಪಲ್ಟು ಅವರಿಗೆ ಹವಲ್ದಾರ್ (ಸ್ಥಳೀಯ ಸಾರ್ಜೆಂಟ್)ದರ್ಜೆಯನ್ನು ಜನರಲ್ ಹೆರ್ಸೆ ನೀಡಿದರು.ಭಾರತೀಯ ಇತಿಹಾಸಕಾರ ಸುರೇಂದ್ರ ನಾಥ್ ಸೇನ್ ಪ್ರಕಾರ ೩೪ ನೇ ಬಿ.ಎನ್.ಐ ರೆಜಿಮೆಂಟ್ ಉತ್ತಮ ಇತ್ತೀಚಿನ ದಾಖಲೆ ಹೊಂದಿತ್ತು ಮತ್ತು ವಿಚಾರಣೆ ನ್ಯಾಯಾಲಯ ೧೯ನೇ ಬಿ.ಎನ್.ಐ ಬೆರ್ಹಾಮ್ಪುರ್ ನಲ್ಲಿ ಮೊದಲು ನಾಲ್ಕು ವಾರ ಅಶಾಂತಿಗೆ ಯಾವುದೆ ಸಾಕ್ಷ್ಯ ಕಂಡುಬಂದಿಲ್ಲ ಎಂದು ಹೇಳಿತು.ಆದರೆ ಮಂಗಲ್ ಪಾಂಡೆ ಕ್ರಿಯೆಗಳು ಮತ್ತು ಕ್ರಮ ತೆಗೆದುಕೊಳ್ಳಲು ಕ್ವಾರ್ಟರ್ ಸಿಬ್ಬಂದಿ ಶಸ್ತ್ರಸಜ್ಜಿತ ಮತ್ತು ಸಹಿಷ್ಣು ಸೈನಿಕರಿಂದ ವೈಫಲ್ಯ ಇಡೀ ರೆಜಿಮೆಂಟ್ ವಿಶ್ವಾಸಾರ್ಹವಲ್ಲ ಎಂದು ಬ್ರಿಟಿಷ್ ಸೇನಾ ಅಧಿಕಾರಿಗಳು ಒಪ್ಪಿಸಿದರು.ಪಾಂಡೆ ತನ್ನ ವಿಶ್ವಾಸಾರ್ಹ ಇತರ ಸೈನಿಕರಿಂದ ತೆಗೆದುಕೊಳ್ಳದೆಯೇ ಅಭಿನಯಿಸಿದ್ದಾರೆ ಆದರೆ ರೆಜಿಮೆಂಟ್ ಒಳಗೆ ತಮ್ಮ ಬ್ರಿಟಿಷ್ ಅಧಿಕಾರಿಗಳ ಕಡೆಗೆ ಆ ಅನುಕಂಪವನ್ನು ಆದೇಶಗಳನ್ನು ಪಾಲಿಸಬೇಕೆಂದು ಬದಲಿಗೆ ಪ್ರೇಕ್ಷಕರ ಕೆಲಸ ಆ ಪ್ರಸ್ತುತ ಅತ್ಯಂತ ಕಾರಣವಾಯಿತು ಕಂಡುಬಂತು. ಪ್ರೇರಣೆ ಮಂಗಲ್ ಪಾಂಡೆ ವರ್ತನೆ ಹಿಂದೆ ಪ್ರಾಥಮಿಕ ಪ್ರೇರಣೆ ಆ ವರ್ಷದ ಬಂಗಾಳ ಸೈನ್ಯದಲ್ಲಿ ಪರಿಚಯಿಸಿದ ಎನ್ಫೀಲ್ಡ್ ಪಿ೫೩ ರೈಫಲ್ ಬಳಸಲಾಗುತ್ತಿದ್ದ ಹೊಸ ರೀತಿಯ ಬುಲೆಟ್ ಕಾರ್ಟ್ರಿಜ್ ಕಾರಣವಾಗಿದೆ. ಕಾರ್ಟ್ರಿಜ್ನ ಹಂದಿ ಮತ್ತು ಹಸುಗಳ ಕೊಬ್ಬಿನಿಂದ ಹರಡಲಾಗಿತ್ತು ಎಂದು ವದಂತಿಗಳು ಹರಡಿತ್ತು. ಇದು ಮುಸ್ಲಿಮರು ಮತ್ತು ಹಿಂದೂಗಳು ಸೇವಿಸಲು ಸಾಧ್ಯವಿಲ್ಲ(ಮುಸ್ಲಿಮರಿಗೆ ಹಂದಿ ಮತ್ತು ನಂತರದ ಹಿಂದೂಗಳಿಗೆ ಹಸು ಪವಿತ್ರ ಪ್ರಾಣಿ).ಕಾರ್ಟ್ರಿಜ್ಗಳು ಬಳಸುವ ಮೊದಲು ಒಂದು ತುದಿಯಲ್ಲಿ ಹಲ್ಲಿನಿಂದ ಕಚ್ಚಬೇಕಿತ್ತು. ಭಾರತೀಯ ಪಡೆಗಳು ಇದನ್ನು ತಮ್ಮ ಧರ್ಮಗಳ ವಿರುದ್ಧ ಬ್ರಿಟಿಷರ ದಬ್ಬಾಳಿಕೆ ಎಂದು ಅಭಿಪ್ರಾಯಕ್ಕೆ ಬಂದರು. ೫೬ ನೇ ಬಿ.ಎನ್.ಐ ಕ್ಯಾಪ್ಟನ್ ವಿಲಿಯಮ್ ಹ್ಯಾಲ್ಲಿಡೇ ಪತ್ನಿ ಬೈಬಲ್ನ್ ಉರ್ದು ಮತ್ತು ದೇವನಾಗರಿಯಲ್ಲಿ ಮುದ್ರಿಸಿ ಸೈನಿಕರಿಗೆ ಕೊಟ್ಟರು. ಹೀಗಾಗಿ ಬ್ರಿಟಿಷರು ಕ್ರಿಶ್ಚಿಯನ್ ಧರ್ಮಕ್ಕೆ ಭಾರತೀಯರನ್ನು ಪರಿವರ್ತಿಸುವುದು ಅವರ ಉದ್ದೇಶವಾಗಿತ್ತು ಎಂದು ಅನುಮಾನ ಹರಡಿತು. ಅಲ್ಲದೆ, ೧೯ ಮತ್ತು ೩೪ನೇ ಬಂಗಾಳ ಸ್ಥಳೀಯ ಕಾಲಾಳುಗಳು ೭ ಫೆಬ್ರವರಿ, ೧೮೫೬ರಂದು, ಔದ್ಧಿನ ನವಾಬ ಸ್ವಾಧೀನದಲ್ಲಿ ದುರಾಡಳಿತ ಕಾಲದಲ್ಲಿ ಲಕ್ನೋ ನಿಲ್ದಾಣದಲ್ಲಿ ಠಿಕಾಣಿ ಮಾಡಲಾಯಿತು.ಸ್ವಾಧೀನದ ಅವಧಿಯಲ್ಲಿ ಬಂಗಾಳ ಸೇನೆಯಲ್ಲಿ ಸೈನಿಕರು ಮತ್ತೊಂದು ಅಭಿಪ್ರಾಯ ಹೊಂದಿದ್ದರು . ಸ್ವಾಧೀನದ ಮೊದಲು ಸೈನಿಕರು ಸ್ಥಳೀಯ ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ಲಕ್ನೋ ಬ್ರಿಟಿಷ್ ನಿವಾಸ ಬೇಡಿಕೆಯ ಹಕ್ಕನ್ನು ಹೊಂದಿದ್ದರು. ರಾಜ್ಯ ಇನ್ನು ಮುಂದೆ ಅಸ್ತಿತ್ವದಲ್ಲಿದ್ದರಿಂದ ಸ್ವಾಧೀನದ ಪರಿಣಾಮವಾಗಿ, ಅವರು ಈ ಹಕ್ಕನ್ನು ಬಿಡಬೇಕಾಯಿತು. ರಾಜ್ಯದ ನಿವಾಸಿಗಳು ಇದು ಸ್ವಾಧೀನವು ಒಪ್ಪಂದದ ಉಲ್ಲಂಘನೆ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟರು. ಈ ಅಸಮಾಧನದ ಪರಿಣಾಮವಾಗಿ ಸೈನಿಕರು ಚಲಿಸುವಂತಿರಲಿಲ್ಲ. ಫೆಬ್ರವರಿ ೧೮೫೭ರಲ್ಲಿ, ಈ ಎರಡೂ ರೆಜಿಮೆಂಟಗಳು ಬರಾಕ್ಪೋರ್ನಲ್ಲಿ ನೆಲೆಗೊಂಡಿದ್ದವು. ಎನ್ಫೀಲ್ಡ್ ರೈಫಲ್ ಮತ್ತು ಕಾರ್ಟ್ರಿಜ್ ಪಿ53 ಅಧಿಕೃತವಾಗಿ ಸ್ವರೂಪ 1853 ಎನ್ಫೀಲ್ಡ್ಕರೆಯಲಾಗುತ್ತಿತ್ತು. ಇದು ಆರಂಭದಲ್ಲಿ 1857 ರಲ್ಲಿ ಈಸ್ಟ್ ಭಾರತ ಕಂಪನಿ ಬಂಗಾಳ ಸೇನೆಯಲ್ಲಿ ಪರಿಚಯಿಸಲಾಯಿತು. ತನ್ನ ರೈಫಲ್ ಲೋಡ್ ಮಾಡಲು, ಸಿಪಾಯಿ ಮೊದಲು ಬ್ಯಾರೆಲ್ ಕೆಳಗೆ ಪುಡಿ ಸುರಿಯುಲು ಕಾರ್ಟ್ರಿಜ್ನ ಹಿಂಭಾಗವನ್ನು ಕಚ್ಚಬೇಕಿತ್ತು. ನಂತರ ಟ್ಯೂಬ್ (ಕ್ಷಿಪಣಿ ಕಾರ್ಟ್ರಿಜ್ನ ಬೇಸ್ ಅಪ್ ಇರಿಸಲಾಗಿತ್ತು) ತಲೆಕೆಳಗಾಗಿ ಮಾಡಿ, ಕೊನೆಯಭಾಗವನ್ನು ಗುಂಡಿನಿಂದ ನುಗ್ಗಿಸಿ ಮತ್ತು ಉಳಿದ ಕಾಗದವನ್ನು ಹರಿದುಹಾಕಬೇಕಿತ್ತು. ಸಾಂಸ್ಕೃತಿಕ ಪರಿಗಣನೆಗಳು ಮತ್ತು ವದಂತಿಗಳು ಹಸುಗಳು ಹಿಂದುಗಳ ಪವಿತ್ರ ಪ್ರಾಣಿ ಮತ್ತು ಹಂದಿಗಳು ಕಟ್ಟುನಿಟ್ಟಾಗಿ ಮುಸ್ಲಿಮರಿಗೆ ನಿಷೇಧಿತ ಕಾರಣ, ಭಾರತೀಯ ಸೈನಿಕರಿಂದ ಕಾರ್ಟ್ರಿಜಗಳನ್ನು ಉಪಯೋಗಿಸಲು ಹಿಂಜರಿದರು. ಆದ್ದರಿಂದ ಪ್ರಾಣಿಗಳ ಕೊಬ್ಬು ಬಳಸಲಾಗುತ್ತದೆ ಎಂಬ ವದಂತಿಯು ಪ್ರಸಾರವಾಗಲು ಪ್ರಾರಂಭವಾಯಿತು, ಅದು ತುಂಬಾ ಹಾನಿಕಾರಕ ಪರಿಣಾಮ ಬೀರಿದವು. ಇತರೆ ಸ್ಥಿರವಲ್ಲದ ವದಂತಿಗಳು ಹರಡಲು ಆರಂಭವಾಯಿತು. ಉದಾಹರಣೆಗೆ, ಬ್ರಿಟಿಷ್ ಅವರನ್ನು ಕ್ರಿಶ್ಚಿಯನ್ ಧರ್ಮ ಮತಾಂತರಗೊಳ್ಳಲು ಒತ್ತಾಯ ಸಮಾಜದಲ್ಲಿ ತಮ್ಮ ಸೈನಿಕರಿಂದ ಜಾತಿಭ್ರಷ್ಟ ಮಾಡಲು ಯೋಚಿಸಿದ್ದಾರೆ ಎಂದು ಭಾವಿಸಲಾಗಿತ್ತು. ಬಾಹ್ಯ ಸಂಪರ್ಕಗಳು : (8 2005) ಸ್ವಾತಂತ್ರ್ಯ ಹೋರಾಟಗಾರರು ಭಾರತದ ಗಣ್ಯರು ಭಾರತೀಯ ಇತಿಹಾಸದ ಪ್ರಮುಖರು
ಸಿ. ರಾಜಗೋಪಾಲಚಾರಿ (ಡಿಸೆಂಬರ್ ೧೮೭೮ ಡಿಸೆಂಬರ ೨೫, ೧೯೭೨) ಅವರನ್ನು ಭಾರತದ ಜನತೆ ಪ್ರೀತಿಯಿಂದ ರಾಜಾಜಿ ಎಂದು ಕರೆದರು. ಸ್ವಾತಂತ್ರ ಚಳುವಳಿಯ ಪ್ರಮುಖರಲ್ಲಿ ಪ್ರಮುಖರಾದ ಇವರು ವೃತ್ತಿಯಿಂದ ವಕೀಲರಾಗಿದ್ದರು. ಅಲ್ಲದೆ ಗಾಂಧೀಜಿ ಯವರ ಆಪ್ತಮಿತ್ರರಾಗಿದ್ದರು. ಭಾರತದ ಎರಡನೆಯ ಗವರ್ನರ್ ಜನರಲ್ ಆಗಿ ಕಾರ್ಯನಿರ್ವಹಿಸಿದ ಇವರು ಸ್ಟೇಟ್ಸ್ ಮ್ಯಾನ್ ಮತ್ತು ಹಿಂದೂ ದಿನಪತ್ರಿಕೆಗಳಿಗೆ ಲೇಖಕರಾಗಿದ್ದರು. ಕಾಂಗ್ರೆಸ್ಸಿನಲ್ಲಿ ಜವಹರಲಾಲ್ ನೆಹರೂ, ಸರ್ದಾರ ವಲ್ಲಭಭಾಯ್ ಪಟೇಲ್, ರಾಜೇಂದ್ರ ಪ್ರಸಾದ್ ಹಾಗೂ ಮೌಲಾನಾ ಅಬುಲ್ ಕಲಮ್ ಆಜಾದ್ ರೊಂದಿಗೆ ಸ್ವಾತಂತ್ರ್ಯ ಪೂರ್ವ ಭಾರತದ ಕಾಂಗ್ರೆಸ್ಸಿನ ಅತ್ಯುಚ್ಚ ನಾಯಕಮಣಿಗಳ ಪಂಕ್ತಿಯಲ್ಲಿ ರಾಜಾಜಿಯವರ ಹೆಸರೂ ಕೇಳಿಬರುತ್ತಿತ್ತು. ಸೇಲಂ ನ ಈ ಪ್ರಚಂಡ ವಕೀಲರನ್ನು ಒಂದು ಕಾಲದಲ್ಲಿ ಮಹಾತ್ಮಾ ಗಾಂಧಿಯವರ ಉತ್ತರಾಧಿಕಾರಿ ಎಂದೂ ಪರಿಗಣಿಸಲಾಗುತ್ತಿತ್ತು. ರಾಜಾಜಿ ಮಹಾತ್ಮ ಗಾ೦ಧಿಯವರ ಬೀಗರೂ ಹೌದು ರಾಜಾಜಿಯವರ ಮಗಳನ್ನು ಗಾಂಧಿಯವರ ಮಗನಿಗೆ ಕೊಡಲಾಗಿತ್ತು. ಖ್ಯಾತ ಪತ್ರಕರ್ತ ರಾಜಮೋಹನ ಗಾಂಧಿ ಇವರಿಬ್ಬರ ಮೊಮ್ಮಗ. ಗಾಂಧಿಯವರ ಮರಣದವರೆಗೂ ಅವರ ನೆರಳಿನಲ್ಲೇ ಇದ್ದ ರಾಜಾಜಿ, ನೆಹರೂ ಮತ್ತು ಪಟೇಲರನ್ನು ಗಾಂಧಿಯವರ ತಲೆ, ಹೃದಯ ಮತ್ತು ಕೈಗಳು ಎಂದೇ ಭಾವಿಸಲಾಗಿತ್ತು. ಇವರು ಮೂವರ ಸಂಬಂಧ ಪರಸ್ಪರ ಸಿಹಿಕಹಿಯದಾಗಿದ್ದರೂ, ಗಾಂಧಿಯವರ ವ್ಯಕ್ತಿತ್ವ ಹಾಗೂ ಎದುರಿಗಿದ್ದ ಒಂದೇ ಗುರಿ ಇವರನ್ನು ಒಟ್ಟುಗೂಡಿಸಿತ್ತು. ಆದರೂ ಇವರಿಗೆ ಪರಸ್ಪರ ಬಗ್ಗೆ ಅಪಾರ ಗೌರವವಿತ್ತು. ನೆಹರೂ ತಮ್ಮ ಆತ್ಮಕಥೆಯಲ್ಲಿ ರಾಜಾಜಿಯವರ ಪ್ರಖರ ಬುಧ್ಧಿಮತ್ತೆ, ನಿಸ್ಸ್ವಾರ್ಥ ಮನೋಭಾವ ಹಾಗೂ ಅವರ ಪ್ರಚಂಡ ವಿಮರ್ಶಾಶಕ್ತಿ ಇವೆಲ್ಲವೂ ನಮ್ಮ ಗುರಿ ಸಾಧಿಸುವೆಡೆಯಲ್ಲಿ ದೊಡ್ಡ ಆಸ್ತಿಯಾಗಿತ್ತು ಎಂದು ಬರೆಯುತ್ತಾರೆ. 1940ರ ದಶಕದಲ್ಲಿಯೇ ಭಾರತ ವಿಭಜಿತವಾಗುವ ಸಂಭವವನ್ನು ಮುಂಗಂಡ ಕಾಂಗ್ರೆಸ್ ನಾಯಕರುಗಳಲ್ಲಿ ರಾಜಾಜಿ ಒಬ್ಬರಾಗಿದ್ದರು. ಅಷ್ಟೇ ಅಲ್ಲ, ಹಾಗೆ ಅಸ್ತಿತ್ವಕ್ಕೆ ತರಲ್ಪಟ್ಟ ಪಾಕಿಸ್ತಾನವು ಇಪ್ಪತ್ತೈದು ವರ್ಷಗಳಲ್ಲಿಯೇ ಮತ್ತೊಮ್ಮೆ ಹೋಳಾಗುತ್ತದೆ ಎಂದೂ ಭವಿಷ್ಯ ನುಡಿದಿದ್ದರು! ರಾಜಾಜಿ ತಮ್ಮ ರಾಜಕೀಯ ನೀತಿಗಳ ಉಗ್ರ ಸಮರ್ಥಕರಾಗಿದ್ದು, ಅವುಗಳ ಸಮರ್ಥನೆಯಲ್ಲಿ, ತಮ್ಮ ನಿಕಟವರ್ತಿಗಳೊಂದಿಗೂ ಸಾರ್ವಜನಿಕವಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಹಿಂಜರೆಯುತ್ತಿರಲಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಬ್ರಿಟಿಷ್ ಸೆರೆವಾಸದ ರುಚಿ ಉಂಡ ರಾಜಾಜಿ ನಂತರ 1946ರಲ್ಲಿ ರಾಜ್ಯಪಾಲರ ಮಂಡಳಿಯ ಸದಸ್ಯರಾದರು. ಸ್ವಾತಂತ್ರ್ಯ ಪಡೆದ ನಂತರ, 1948ರಲ್ಲಿ ಮೌಂಟ್ ಬ್ಯಾಟನ್ನ ರ ಜಾಗದಲ್ಲಿ ಗವರ್ನರ್ ಜನರಲ್ ಎಂದು ನೇಮಕ ವಾಗಿ (ಆ ಹುದ್ದೆಯನ್ನಲಂಕರಿಸಿದ ಏಕೈಕ ಭಾರತೀಯ). 1950, ಜನವರಿ 26ರಂದು ಭಾರತ ಗಣರಾಜ್ಯವಾಗುವವರೆಗೂ ಅದೇ ಹುದ್ದೆಯಲ್ಲಿ ಮುಂದುವರೆದರು. ಆ ನಂತರ ಗವರ್ನರ್ ಜನರಲ್ ಹುದ್ದೆಯ ಜಾಗದಲ್ಲಿ, ರಾಷ್ಟ್ರಪತಿಗಳ ಹುದ್ದೆ ಬಂದು ರಾಜೇಂದ್ರ ಪ್ರಸಾದರು ಮೊದಲನೇ ರಾಷ್ಟ್ರಪತಿಗಳಾಗಿ ನೇಮಕವಾದರು. ನೆಹರೂ ಮಂತ್ರಿಮಂಡಳದಲ್ಲಿ ಖಾತಾರಹಿತ ಮಂತ್ರಿಯಾಗಿ ನೇಮಕಗೊಂಡ ರಾಜಾಜಿ, ಪಟೇಲರ ನಿಧನದ ನಂತರ, ಗೃಹ ಮಂತ್ರಿಗಳಾದರು. 1952ರಿಂದ 1954ರವರೆಗೆ ಅವರು ಆಗಿನ ಮದ್ರಾಸ್ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಸರ್ಕಾರಿ ಪದವಿಗಳಿಂದ ಹೊರಬಂದ ಅವರು , ಭಾರತದ ಅತ್ಯುಚ್ಚ ಗೌರವ ಭಾರತ ರತ್ನ ವನ್ನು ಪಡೆದವರಲ್ಲಿ ಒಬ್ಬರಾದರು. ಸ್ವತಂತ್ರ ಪಕ್ಷ ಸ್ಥಾಪನೆ ಕಾಂಗ್ರೆಸ್ ಸಕ್ರಿಯ ರಾಜಕೀಯದಿಂದ ನಿವೃತ್ತರಾದ ಮೇಲೆ ರಾಜಾಜಿ, ನೆಹರೂ ಹಾಗೂ ಕಾಂಗ್ರೆಸ್ಸಿನ ಕಟು ಟೀಕಾಕಾರರಾದರು. 1950ರ ದಶಕದಲ್ಲಿ ಸ್ವತಂತ್ರ ಪಕ್ಷ ಸ್ಥಾಪಕರಲ್ಲಿ ಒಬ್ಬರಾದ ಅವರು, ನೆಹರೂರ ಸಮಾಜವಾದೀ ಧೋರಣೆಯು ಜನಪ್ರಿಯವಾಗಿದ್ದರೂ, ಲೈಸೆನ್ಸ್ ಪರ್ಮಿಟ್ ರಾಜ್ಯವನ್ನೂ ಹಾಗೂ ಅದರಿಂದ ಉಂಟಾಗುವ ಭ್ರಷ್ಟಾಚಾರ ಹಾಗೂ ದೇಶದ ಪ್ರಗತಿಯ ಧಕ್ಕೆಯನ್ನೂ ವಿರೋಧಿಸಿದರು. ತಮ್ಮ ಪತ್ರಿಕೆ ಸ್ವರಾಜ್ಯದಲ್ಲಿ ಅವರು ಹೀಗೆ ಬರೆಯುತ್ತಾರೆ: ಕೈಗಾರಿಕಾ ರಂಗದಲ್ಲಿ ಪೈಪೋಟಿಯನ್ನು ಪ್ರೋತ್ಸಾಹಿಸುವುದೂ, ಹೆಚ್ಚಿನ ಉತ್ಪತ್ತಿಗೆ ಕುಮ್ಮಕ್ಕು ಕೊಡುವುದೂ ಸರ್ಕಾರಿ ಹಾಗೂ ಖಾಸಗೀ ಹಿತಾಸಕ್ತಿಗಳೆರಡಕ್ಕೂ ಒಳ್ಳೆಯದು. ಸರ್ಕಾರಿ ಅಧಿಕಾರಿಗಳಿಗೂ, ಮಂತ್ರಿಗಳಿಗೂ ಪರವಾನಗಿಗಳಿಗಾಗಿ ಡೊಗ್ಗು ಸಲಾಮು ಹೊಡೆಯುವ ಅಗತ್ಯವಿರದ, ಪ್ರತಿಭೆ ಹಾಗೂ ಪರಿಶ್ರಮದಿಂದ ಕೆಲಸ ಮಾಡುವ, ಹಾಗೂ ಈ ಪ್ರಯತ್ನಗಳ ಫಲಾಫಲಗಳ ನಿಷ್ಕರ್ಷೆ ಭಾರತ ಹಾಗೂ ಭಾರತದ ಹೊರಗಿನ ಮುಕ್ತ ಮಾರುಕಟ್ಟೆಯಲ್ಲಿ ಆಗುವಂಥಾ ವಾತಾವರಣದ ಭಾರತ ನನಗೆ ಬೇಕಾಗಿದೆ. ಸರಕಾರಿ ಕಾರುಭಾರಿನ ಅದಕ್ಷತೆಗಳು ಹೋಗಿ ಖಾಸಗೀ ಒಡೆತನದ ಪೈಪೋಟಿಯ ಆರ್ಥಿಕ ಪಧ್ಧತಿ ನನಗೆ ಬೇಕು. ಭ್ರಷ್ಟ ಲೈಸೆನ್ಸ್ ಪರ್ಮಿಟ್ ರಾಜ್ಯ ನಿರ್ಮೂಲವಾಗಬೇಕು. ಸರಕಾರಿ ಕಾನೂನುಗಳು, ನೀತಿಗಳನ್ನು ಜಾರಿಗೆ ತರುವ ಹೊಣೆಹೊತ್ತ ಅಧಿಕಾರಿಗಳು ಆಡಳಿತ ಪಕ್ಷದ ನಾಯಕರ ಒತ್ತಡಗಳಿಂದ ಹೊರಬಂದು, ತಮ್ಮ ಮೊದಲಿನ ನಿರ್ಭೀತ ನಡವಳಿಕೆಗಳಿಗೆ ಮರಳಬೇಕಾಗಿದೆ. ಎಲ್ಲಾ ನಾಗರೀಕರಿಗೂ ಸಮಾನ ಅವಕಾಶಗಳು ಸಿಗಬೇಕಾಗಿದೆ. ಲೈಸೆನ್ಸ್ ಪರ್ಮಿಟ್ ರಾಜ್ಯ ಖಾಸಗೀ ಏಕಸ್ವಾಮ್ಯಗಳನ್ನು ಸೃಷ್ಟಿಸಕೂಡದು. ದೊಡ್ಡ ಕೈಗಾರಿಕೆಗಳ ಹಣಸಂಪತ್ತು ರಾಜಕೀಯಕ್ಕೆ ಪ್ರವೇಶ ಮಾಡಕೂಡದು. ಭಾರತದಲ್ಲಿ ಜನರ ನಡವಳಿಕೆಗಳು ಧರ್ಮದಿಂದ ಪ್ರಭಾವಿತವಾಗಬೇಕೇ ವಿನಹ ದುರಾಸೆಯಿಂದ ಅಲ್ಲ. ರಾಜಾಜಿ ಈ ಮಾತನ್ನು ಹೇಳಿದ ಅನೇಕ ದಶಕಗಳ ನಂತರ, 1950ರ ದಶಕದಲ್ಲಿ ಹಾಕಲಾಗಿದ್ದ ಆಡಳಿತಾತ್ಮಕ ಕಟ್ಟುಪಾಡುಗಳನ್ನು ಹಂತ ಹಂತವಾಗಿ ಸಡಿಲಗೊಳಿಸಲಾಗುತ್ತಿದೆ. ಭಾರತದ ಆರ್ಥಿಕ ಪರಿಸ್ಥಿತಿಯು ದಾಪುಗಾಲಿನಿಂದ ಸುಧಾರಣೆಯಾಗುತ್ತಿದ್ದು, ಬೆಳವಣಿಗೆಯ ಗತಿ ಪ್ರಪಂಚ ದಲ್ಲಿಯೇ ಅತಿ ಹೆಚ್ಚಿನ ಗತಿಗಳಲ್ಲೊಂದಾಗಿದೆ. ಈ ಎಲ್ಲ ವಿದ್ಯಮಾನಗಳ ದೆಸೆಯಿಂದ, ಅನೇಕರು ರಾಜಾಜಿ ಮತ್ತು ಸ್ವತಂತ್ರ ಪಕ್ಷದ ಆಗಿನ ನಿಲುವುಗಳನ್ನು ಪುನಃ ಪರಿಶೀಲನೆ ಮಾಡುತ್ತಿದ್ದಾರೆ. ಧರ್ಮ, ಸಾಹಿತ್ಯ ಮತ್ತು ಕಾವ್ಯ ರಾಜಾಜಿ ತನ್ನ ಸ್ವಂತ ಲೇಖನಗಳೊಂದಿಗೇ, ಅನೇಕ ಮುಖ್ಯ ಭಾರತೀಯ ಹಾಗೂ ಹಿಂದೂ ಧಾರ್ಮಿಕ ಕೃತಿಗಳ ಆಂಗ್ಲ ಭಾಷೆಯ ಭಾಷಾಂತರವನ್ನೂ ಮಾಡಿದ್ದಾರೆ. ರಾಮಾಯಣ, ಮಹಾಭಾರತ, ಭಗವದ್ಗೀತೆ, ಉಪನಿಷತ್ತುಗಳು ಹಾಗೂ ಶಂಕರಾಚಾರ್ಯರ ಭಜಗೋವಿಂದಂ ಇವುಗಳ ಭಾಷಾಂತರಗಳು ಇಂದಿಗೂ ಬಳಕೆಯಲ್ಲಿವೆ. ಅವರು ರಾಮಾಯಣವನ್ನು ತಮಿಳಿಗೂ ತರ್ಜುಮೆ ಮಾಡಿದರು. ಕರ್ನಾಟಕ ಸಂಗೀತದ ದೊಡ್ಡ ಪ್ರತಿಭೆ, ಎಂ.ಎಸ್ ಸುಬ್ಬುಲಕ್ಷ್ಮಿ ರಾಜಾಜಿಯವರ ಕೆಲವು ಕವಿತೆಗಳನ್ನು ಸಂಗೀತಕ್ಕೆ ಅಳವಡಿಸಿ ಅನೇಕ ಮುಖ್ಯ ಕಾರ್ಯಕ್ರಮಗಳಲ್ಲಿ, ಕುರೈ ಒನ್ರುಮ್ ಇಲ್ಲೈ (ಭಗವಂತಾ, ನನಗಿನ್ನೇನೂ ಅಪೇಕ್ಷೆ ಉಳಿದಿಲ್ಲ....) ಎಂಬ ಅರೆಶಾಸ್ತ್ರೀಯ ಮಟ್ಟಿನಲ್ಲಿ ರಾಜಾಜಿ ಬರೆದ ಹಾಡು ಬಹಳ ಜನಪ್ರಿಯವಾಗಿದೆ. ಇದರ ಒಂದು ಹೃದಯಸ್ಪರ್ಶಿ ಆವೃತ್ತಿಯನ್ನು ಎಂ.ಎಸ್ ಸುಬ್ಬುಲಕ್ಷ್ಮಿ ಹಾಡಿದ್ದಾರೆ. ರಾಜಾಜಿ ಬರೆದ ಸ್ತುತಿಯನ್ನು 1966ರಲ್ಲಿ ಎಂ.ಎಸ್ ಸುಬ್ಬುಲಕ್ಷ್ಮಿಸಂಯುಕ್ತ ರಾಷ್ಡ್ರ ಸಂಘದಲ್ಲಿ ಹಾಡಿದ್ದರು. ರಾಜಾಜಿಯವರನ್ನು ಬಹಳಷ್ಟು ಜನ ಧಾರ್ಮಿಕ ಹಾಗೂ ಆಧ್ಯಾತ್ಮಿಕ ರಂಗಗಳಲ್ಲಿ ಆಳವಾದ, ಸ್ವಂತಿಕೆಯ ಚಿಂತಕರೆಂದು ಪರಿಗಣಿಸುತ್ತಾರೆ. ರಾಜಾಜಿಯವರ ವಿದ್ಯಾರ್ಥಿ ಜೀವನದಲ್ಲಿ ನಡೆಯಿತೆನ್ನಲಾದ ಒಂದು ಘಟನೆ ಜನಪ್ರಿಯವಾಗಿದೆ. ಒಮ್ಮೆ ಸ್ವಾಮಿ ವಿವೇಕಾನಂದರು ಅವರ ವಿದ್ಯಾರ್ಥಿ ನಿಲಯಕ್ಕೆ ಬಂದಿದ್ದರಂತೆ. ಅಲ್ಲಿ ಗೋಡೆಯ ಮೇಲಿನ ವಿಷ್ಣುವಿನ ಚಿತ್ರ ನೋಡಿ, ವಿದ್ಯಾರ್ಥಿಗಳಿಗೆ ವಿಷ್ಣುವಿನ ಎಲ್ಲಾ ಚಿತ್ರಗಳಲ್ಲೂ ಮೈ ಬಣ್ಣ ನೀಲಿ ಏಕಿರುತ್ತದೆ? ಎಂದು ಕೇಳಿದರಂತೆ. ವಿಷ್ಣು ನೀಲಿ ಆಕಾಶದಂತೆ, ನೀಲ ಸಮುದ್ರದಂತೆ ಅನಂತ. ಆದ್ದರಿಂದಲೇ ಅವನ ಮೈ ಬಣ್ಣ ನೀಲಿ ಎಂದು ರಾಜಾಜಿ ಉತ್ತರ ಕೊಟ್ಟರಂತೆ. ವಿವೇಕಾನಂದರು ಈ ಉತ್ತರ ಕೇಳಿ ಬಹಳ ಸಂತೋಷ ಪಟ್ಟರಂತೆ. ಸುಮಾರು ಎಂಟು ದಶಕಗಳನ್ನು ಸಾರ್ವಜನಿಕ ಜೀವನದಲ್ಲಿ ಸವೆಸಿದ ರಾಜಾಜಿಯವರ ಕೊಡುಗೆಯನ್ನು ಅರಿಯಲು ಗಾಂಧೀಜಿ ಅವರನ್ನು ನನ್ನ ಅಂತಃಪ್ರಜ್ಞೆಯ ರಕ್ಷಕ ಎಂದು ಬಣ್ಣಿಸಿದ ರೀತಿ ಸಾಕು. ತೊಂಭತ್ತು ದಾಟಿದ್ದ ರಾಜಾಜಿ , ಲಘು ಅಸ್ವಸ್ಥತೆಯ ನಂತರ, ಡಿಸೆಂಬರ್ 25, 1972ರಂದು ತೀರಿಕೊಂಡರು. ನೋಡಿ ಸುಧೀಂದ್ರ ಬುಧ್ಯಬಡಗು ರಾಜಕಾರಣಕ್ಕೆ ಬೇಡವಾದ ತೆಂಕು ನಕ್ಷತ್ರ30 , 2016 ಸ್ವಾತಂತ್ರ್ಯ ಹೋರಾಟಗಾರರು ಭಾರತದ ಗಣ್ಯರು ಭಾರತೀಯ ಇತಿಹಾಸದ ಪ್ರಮುಖರು ಭಾರತ ರತ್ನ ಪುರಸ್ಕೃತರು
ಜಯಪ್ರಕಾಶ ನಾರಾಯಣ(ಅಕ್ಟೋಬರ್ ೧೧, ೧೯೦೨ ಅಕ್ಟೋಬರ್ ೦೮, ೧೯೭೯)ಭಾರತದ ಜನನಾಯಕ, ದೇಶಪ್ರೇಮಿ, ಅನ್ಯಾಯದ ವಿರುದ್ಧ ಸತತವಾಗಿ ಹೋರಾಟ ನಡೆಸಿದವರು. ಅವರನ್ನು ಭಾರತದ ಜನತೆ ಪ್ರೀತಿಯಿಂದ ಜೆ ಪಿ ಎಂದು ಕರೆದರು. ಸ್ವಾತಂತ್ರ ಚಳುವಳಿಯಲ್ಲಿ ಪಾತ್ರವಹಿಸಿದ ಇವರು ಮಹಾತ್ಮ ಗಾಂಧಿ ಮತ್ತು ಎಂ.ಎನ್.ರಾಯ್ ಅವರ ವಿಚಾರಗಳಿಂದ ಪ್ರಭಾವಿತರಾಗಿದ್ದರು. ಗಾಂಧಿಯವರ ಹಾದಿಯಲ್ಲಿ ಮುನ್ನಡೆದ ಮಹಾ ನಿಷ್ಠಾವಂತ. ಜನನ, ಬಾಲ್ಯ ಹಾಗೂ ವಿದ್ಯಾಬ್ಯಾಸ 1902 ರ ಅಕ್ಟೋಬರ್ 11 ರಂದು ಬಿಹಾರ್ ಪ್ರಾಂತ್ಯದ (ಈಗಿನ ಬಿಹಾರ್ ರಾಜ್ಯ) ಸರನ್ ಜಿಲ್ಲೆಯ ಸಿತಾಬ್ ದಿಯಾರಾದಲ್ಲಿ ಜಯಪ್ರಕಾಶರ ಜನನವಾಯಿತು. ರೆವೆನ್ಯೂ ಇಲಾಖೆಯಲ್ಲಿ ಚಿಕ್ಕ ಅಧಿಕಾರಿಯಾಗಿದ್ದ ಹರಸೂ ದಯಾಳ್ ಇವರ ತಂದೆ. ಧಾರ್ಮಿಕ ಪ್ರವೃತ್ತಿಯ ಸರಳ ಸ್ವಭಾವದ ಗೃಹಿಣಿ ಪೂಲ್ರಾಣಿ ಇವರ ತಾಯಿ. ಜಯಪ್ರಕಾಶರು ಆ ದಂಪತಿಗಳ ನಾಲ್ಕನೆಯ ಮಗು. ಅಣ್ಣನೂ ಒಬ್ಬ ಅಕ್ಕನೂ ಚಿಕ್ಕಂದಿನಲ್ಲೇ ತೀರಿಕೊಂಡರು. ಜಯಪ್ರಕಾಶರ ಅನಂತರ ಆ ದಂಪತಿಗಳಿಗೆ ಇನೊಬ್ಬ ಮಗ ಹುಟ್ಟಿದರು. ಜಯಪ್ರಕಾಶರ ತಂದೆಯ ತಂದೆ ದೇವಕಿನಂದನಲಾಲ್ ಪೋಲಿಸ್ ಅಧಿಕಾರಿ. ತಮ್ಮ ಬ್ರಿಟಿಷ್ ಮೇಲಧಿಕಾರಿಯನ್ನೇ ಹೊಡೆದ ಪ್ರಸಿದ್ದಿ ಅವರದು. ಜಯಪ್ರಕಾಶ್ ನಾರಾಯಣರದು ಬಿಹಾರದ ಮಧ್ಯಮ ವರ್ಗದ ಕಾಯಸ್ಥ ಕುಟುಂಬ. ಜಯಪ್ರಕಾಶರ ಬಾಲ್ಯವೆಲ್ಲಾ ಹಳ್ಳಿಯಲ್ಲಿ ಕಳೆಯಿತು. ಅವರು ಅಲ್ಲೇ ಆರಂಭದ ವಿದ್ಯಾಭ್ಯಾಸ ಪಡೆದರು. ಅನಂತರ ಪಟ್ನಾದ ಕೊಲಿಜಿಯೇಟ್ ಶಾಲೆ ಸೇರಿದರು. ಮೆಟ್ರಿಕ್ ಪರೀಕ್ಷೆ ಮುಗಿಸಿದ ನಂತರ ಪಟ್ನಾ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದಲ್ಲಿ ಇಂಟರ್ ತರಗತಿ ಸೇರಿದರು. ಆಗ ಇವರು ಅಸಹಕಾರ ಚಳುವಳಿಯಿಂದ ಪ್ರಭಾವಿತರಾಗಿ ಕಾಲೇಜನ್ನು ತೊರೆದು ಬಂದು ಬಿಹಾರ್ ವಿದ್ಯಾಪೀಠವನ್ನು ಸೇರಿ ವಿದ್ಯಾಭ್ಯಾಸ ಮುಂದುವರಿಸಿ ಆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಅಮೆರಿಕಾಕ್ಕೆ ತೆರಳಿ ಎಂಟು ವರ್ಷಗಳವರೆಗೆ ಅಲ್ಲಿ ಇದ್ದು ಕ್ಯಾಲಿಫೋರ್ನಿಯಾ, ಐಯೋವಾ, ವಿಸ್ಕಾನ್ಸಿನ್ ಹಾಗೂ ಒಹೈಯೋ ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನ ಸಮಾಜವಿಜ್ಞಾನಗಳ ಅಧ್ಯಯನ ಮಾಡಿ ಒಹೈಯೋ ವಿಶ್ವವಿದ್ಯಾಲಯದಿಂದ ಎಂ. ಎ ಪದವಿ ಪಡೆದರು. ಪ್ರತಿಭಾಶಾಲಿ ವಿದ್ಯಾರ್ಥಿಯಾಗಿದ್ದ ಜಯಪ್ರಕಾಶರು ಅಮೇರಿಕಾದಲ್ಲಿ ಕಾರ್ಖಾನೆಗಳಲ್ಲಿ, ಹೋಟೆಲುಗಳಲ್ಲಿ, ಹೊಲಗಳಲ್ಲಿ ದುಡಿದು ಹಣ ಗಳಿಸಿ ತಮ್ಮ ಜೀವನ ಮತ್ತು ಶಕ್ಷಣ ವೆಚ್ಚವನ್ನು ನಿರ್ವಹಿಸಿಕೊಂಡರು. ಅಮೆರಿಕವನ್ನು ಬಿಡುವ ಹೊತ್ತಿಗೆ ಜಯಪ್ರಕಾಶರು ಮಾರ್ಕ್ಸ್ವಾದಿಯಾಗಿದ್ದರು. ಎಂ. ಎನ್ ರಾಯರ ವಿಚಾರಧಾರೆ ಇವರ ರಾಜಕೀಯ ಪ್ರಜ್ಞೆಯ ಮೇಲೆ ಪ್ರಭಾವ ಬೀರಿತು. ಅಮೆರಿಕಾಕ್ಕೆ ತೆರಳುವ ಮುನ್ನ ಬ್ರಜ್ ಕಿಶೋರ್ ಪ್ರಸಾದರ ಮಗಳು ಪ್ರಭಾವತಿ ದೇವಿಯವರು ಗಾಂಧೀಯವರ ಆಶ್ರಮದಲ್ಲಿದ್ದು ಗಾಂಧೀ ಮಾರ್ಗದಲ್ಲಿ ನಿಷ್ಠೆ ಗಳಿಸಿದ್ದರು. ಬ್ರಹ್ಮಚರ್ಯೆ ದೀಕ್ಷೆ ತಳೆದಿದ್ದ ಪ್ರಭಾವತಿಯವರ ಭಾವನೆಗಳನ್ನು ಜಯಪ್ರಕಾಶರು ಪುರಸ್ಕರಿಸಿ ತಾವೂ ಅದನ್ನು ಪಾಲಿಸಿದರು. ಇಷ್ಟಾದರೂ ಇವರಿಗೆ ಗಾಂಧಿಯವರ ಅಹಿಂಸಾವಾದದಲ್ಲಿ ಆಗ ನಂಬಿಕೆ ಇರಲಿಲ್ಲ. ವೃತ್ತಿಜೀವನ ಅಮೆರಿಕದಿಂದ ಮರಳಿದ ಜಯಪ್ರಕಾಶರು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಸಮಾಜ ಶಾಸ್ತ್ರದ ಅಧ್ಯಾಪಕರಾಗಬೇಕೆಂದು ಯೋಚಿಸಿದ್ದರು. ಆದರೆ ನೆಹರೂ ಅವರೊಂದಿಗೆ ಇವರ ಪರಿಚಯ ಬೆಳೆಯಿತು. ನೆಹರೂ ಸೂಚಿಸಿದಂತೆ ಕಾಂಗ್ರೆಸ್ಸಿನ ಕಾರ್ಮಿಕ ಶಾಖೆಯ ನೇತೃತ್ವ ವಹಿಸಲು ಒಪ್ಪಿಕೊಂಡರು. ಆಗ ಗಾಂಧೀಜಿಯವರೊಂದಿಗೆ ಇವರ ಸಂಪರ್ಕ ಹೆಚ್ಚಾಯಿತು. ಸ್ವಾತಂತ್ರ್ಯ ಚಳುವಳಿಯಲ್ಲಿ ಇವರು ಭಾಗವಹಿಸಿ ದಸ್ತಗಿರಿಯಾದರು. ಸರ್ಕಾರ ಇವರನ್ನು ನಾಸಿಕದಲ್ಲಿ ಸೆರೆಯಿಟ್ಟಿತು. ಅಲ್ಲಿ ಅಚ್ಯುತ ಪಟವರ್ಧನ, ಮೀನು ಮಸಾನಿ ಮುಂತಾದವರ ಸಂಪರ್ಕ ಪಡೆದರು. ಮುಂದೆ ಆಚಾರ್ಯ ನರೇಂದ್ರದೇವರ ಸಹಕಾರ ಪಡೆದು ಜಯಪ್ರಕಾಶ್ ನಾರಾಯಣರು ಅಖಿಲ ಭಾರತೀಯ ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದರು. ತಮ್ಮ ಧೋರಣೆಯ ಸಮರ್ಥನೆಗೆಂದು 1936 ರಲ್ಲಿ ಸಮಾಜವಾದವೇ ಏಕೆ ? ಎಂಬ ಗ್ರಂಥವನ್ನು ಬರೆದರು. ಸ್ವಾತಂತ್ರ್ಯ ಹೋರಾಟ ಎರಡನೆಯ ಮಹಾಯುದ್ದ ಆರಂಭವಾದಾಗ ತಮಗೆ ಬೇಡದ ಯುದ್ದದಲ್ಲಿ ಬ್ರಿಟಿಷರೊಂದಿಗೆ ಭಾರತ ಸಹಕರಿಸಬಾರದೆಂಬುದು ಜಯಪ್ರಕಾಶರ ಅಭಿಪ್ರಾಯವಾಗಿತ್ತು. ಸಮಾಜವಾದಿ ಬಂಡಾಯ ಆಗಬೇಕೆಂದು ಪ್ರಚಾರ ಮಾಡುತ್ತಾ ಇವರು ದೇಶದ ಹಲವೆಡೆ ಸಂಚರಿಸಿದರು. ಸರ್ಕಾರ ಇವರನ್ನು 1940 ರಲ್ಲಿ ದಸ್ತಗಿರಿ ಮಾಡಿ 1941 ರಲ್ಲಿ ಬಿಡುಗಡೆ ಮಾಡಿತು. ಮತ್ತೆ 1941ರಲ್ಲಿ ಇವರು ದಸ್ತಗಿರಿಯಾದರು. ಇವರನ್ನು ಬಂದಿಗಳ ಶಿಬಿರದಲ್ಲಿ ಅತ್ಯಂತ ಕಟ್ಟುನಿಟ್ಟಾದ ಸೆರೆಯಲ್ಲಿಡಲಾಗಿತ್ತು. ಇವರ ಕ್ರಾಂತಿಕಾರಿ ಭಾವನೆಗಳಿಂದಾಗಿ ಬ್ರಿಟಿಷ್ ಸರ್ಕಾರ ತುಂಬಾ ಬೆದರಿತ್ತು. ಬ್ರಿಟಿಷರು ಭಾರತ ಬಿಟ್ಟು ತೊಲಗಬೇಕೆಂದು ಚಳುವಳಿ ಹೂಡಲು 1942ರಲ್ಲಿ ಕಾಂಗ್ರೆಸ್ಸು ನಿರ್ಣಯಮಾಡಿದಾಗ ಜಯಪ್ರಕಾಶರು ಬಂಧನದಲ್ಲೇ ಇದ್ದರು. ರಾಷ್ಟ್ರದ ಮುಖಂಡರನ್ನೆಲ್ಲಾ ಸರ್ಕಾರ ದಸ್ತಗಿರಿ ಮಾಡಿತು. ನಾಯಕರಿಲ್ಲದ ಆ ಸಮಯದಲ್ಲಿ ತಾವು ಹೇಗಾದರೂ ಮಾಡಿ ಸೆರೆಮನೆಯಿಂದ ಹೊರಬಿದ್ದು ಜನತೆಯ ಹೋರಾಟವನ್ನು ನಿರ್ದೇಶಿಸಬೇಕೆಂದು ಜಯಪ್ರಕಾಶ್ ನಾರಾಯಣರು ನಿರ್ಧಸಿದರು. ಗೆಳೆಯರೊಂದಿಗೆ ಕೂಡಿ ಯೋಜನೆ ಮಾಡಿಕೊಂಡು ಕಾರಾಗೃಹದ ಗೋಡೆಯನ್ನು ಹಾರಿ ಕಾಡಿನಲ್ಲಿ ನುಸುಳಿ ಅಗಾಧ ಕಷ್ಟ ಅನುಭವಿಸಿ ಪಾರಾದರು. ಬ್ರಿಟಿಷ್ ಆಡಳಿತಕ್ಕೆ ಕಿರುಕುಳ ಕೊಡುವ ನಾನಾ ಕಾರ್ಯಗಳಲ್ಲಿ ತೊಡಗಿದ್ದವರಿಗೆ ಸೂಚನೆ ನೀಡುವ ಹೊಣೆ ಹೊತ್ತರು. ತಂತಿ ಕತ್ತರಿಸುವುದು, ಬ್ರಿಟಿಷ್ ಸರ್ಕಾರದ ಆಡಳಿತ ವ್ಯವಸ್ಥೆಗಳನ್ನು ತುಂಡರಿಸುವುದು ಇಂಥ ಯಾವ ಕಾರ್ಯವೂ ತಪ್ಪಲ್ಲ ಎಂಬುದು ಇವರ ನಂಬಿಕೆಯಾಗಿತ್ತು. ಭೂಗತರಾದ ಜಯಪ್ರಕಾಶರನ್ನು ಹಿಡಿದುಕೊಟ್ಟವರಿಗೆ ಅಥವಾ ಇವರ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಸರ್ಕಾರ ಘೋಷಿಸಿತು. ಆದರೆ, ಜಯಪ್ರಕಾಶರು ಸರ್ಕಾರದ ಕಣ್ಣು ತಪ್ಪಿಸಿ ತಿರುಗುತ್ತ ಹೋರಾಟದಲ್ಲಿ ನಿರತರಾಗಿದ್ದರು. ಸರ್ಕಾರ ಇವರನ್ನು ಮತ್ತೆ ದಸ್ತಗಿರಿ ಮಾಡಿ ಸೆರೆಯಲ್ಲಿಟ್ಟಿತ್ತು. ಸ್ವಾತಂತ್ರ್ಯಾನಂತರ ಸ್ವಾತಂತ್ರ್ಯಾನಂತರ ಮತ್ತು ಗಾಂಧೀಜಿಯವರ ಮರಣದ ಅನಂತರ ಜಯಪ್ರಕಾಶರು ಕ್ರಮಕ್ರಮವಾಗಿ ಗಾಂಧಿ ವಿಚಾರದತ್ತ ಹೆಚ್ಚು ಹೆಚ್ಚು ಸರಿಯತೊಡಗಿದರು. ಹಳ್ಳಿ ನಗರಗಳ ನಡುವಿನ ಆರ್ಥಿಕ ಅಂತರ ಇನ್ನೂ ಉಳಿದ ಅಸ್ಪ್ರಷ್ಯತೆಯೇ ಮುಂತಾದ ಸಾಮಾಜಿಕ ಅನ್ಯಾಯಗಳು, ಸುತ್ತಲೂ ಬೆಳೆಯುತ್ತಿರುವ ರಾಜಕೀಯ ಭೃಷ್ಟಾಚಾರ, ವಂಚನೆ ಇವು ಜಯಪ್ರಕಾಶರ ಚಿತ್ತಸ್ವಾಸ್ಥ್ಯವನ್ನು ಕೆಡಿಸಿದವು. ಭಾರತದ ಬೃಹತ್ ಸಮಸ್ಯೆಗಳನ್ನು ಬಗೆಹರಿಸಲು ಕೆಲವು ಮುಖಂಡರು ಗ್ರಾಮಗಳಿಗೆ ತೆರಳಿ ಕೆಲಸ ಮಾಡುವುದು ಅಗತ್ಯವೆಂದು ನಂಬಿದ ಜಯಪ್ರಕಾಶರು ಅದಕ್ಕಾಗಿಯೇ ವಿನೋಬಾಜಿಯವರೊಂದಿಗೆ ಸೇರಿ ಸರ್ವೋದಯ ಕಾರ್ಯಕ್ರಮಗಳನ್ನು ರಾಷ್ಟ್ರವ್ಯಾಪಿ ಪ್ರಮಾಣದಲ್ಲಿ ಸಂಘಟಿಸಿದರು. ಭಾರತದ ಸ್ವಾತಂತ್ರ್ಯಾಂದೋಲನದಲ್ಲಿ ಆಂದೋಲನಕ್ಕೆ ಯಶಸ್ಸು ದೊರೆತಗಳಿಗೆಯಲ್ಲೂ ಜಯಪ್ರಕಾಶರು ಮಂಚೂಣಿಯ ನಾಯಕರಾಗಿ ಜನಪ್ರಿಯರಾಗಿ ಇದ್ದರಾದರೂ ಪ್ರಚಾರ, ಪ್ರಸಿದ್ದಿ ಹಾಗೂ ಉನ್ನತ ಅಧಿಕಾರ ಸ್ಥಾನಗಳನ್ನು ಅವರು ಎಂದೂ ಬಯಸಲಿಲ್ಲ. ಸ್ವ ಪ್ರೇರಣೆಯಿಂದ ಅವರು ಅವುಗಳಿಂದ ದೂರ ಸರಿದು ಗ್ರಾಮಮಟ್ಟದಲ್ಲಿ ಸಮಾಜಸೇವೆಗಾಗಿ ತಮ್ಮನ್ನು ಮುಡಿಪಾಗಿಟ್ಟುಕೊಂಡರು. ಸ್ವಾವಲಂಬಿ ಯೋಜನೆಗಳನ್ನು ರೂಪಿಸುತ್ತಾ, ಜಾತಿಮತಿಗಳ ಸಂಕೋಲೆಗಳ ವಿರುದ್ಧ ಧ್ವನಿಯೆತ್ತುತ್ತ ಭೃಷ್ಟಾಚಾರಗಳನ್ನು ಬಯಲಿಗೆಳೆಯುತ್ತ ಚುನಾವಣೆಗಳಲ್ಲಿ ಮತ ಸಿಗಲಾರದೆಂಬ ಭಯದಿಂದ ಇತರರು ಗಮನಿಸದಿದ್ದ ಅನೇಕ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳುತ್ತಾ ಇವರು ದೇಶದಲ್ಲೆಲ್ಲಾ ಸಂಚರಿಸಿದರು. ಚಳುವಳಿಗಳು ಜಯಪ್ರಕಾಶರಿಗೆ ಹಿಂಸಾತ್ಮಕ ಕ್ರಾಂತಿಯಲ್ಲಿ ನಂಬಿಕೆಯಿರಲಿಲ್ಲ. ಜೆ. ಪಿ.ಯವರ ಅಹಿಂಸಾತ್ಮಕವಾದ ಪ್ರಾಮಾಣಿಕ ಸರಣಿ ಅವರ ಸಮಾಜವಾದಿ ಕಾರ್ಯಕ್ರಮಗಳಿಗೆ ಯಶಸ್ಸನ್ನು ತಂದ ಅನೇಕ ನಿದರ್ಶನಗಳಿವೆ. ಭೂದಾನ ಚಳವಳಿ ಅಂತಹುಗಳಲ್ಲೊಂದು. 1967 ರಲ್ಲಿ ಬಿಹಾರದಲ್ಲಿ ಬರ ಬಂದಾಗ ಜೆ. ಪಿ. ಯವರ ಒಂದು ಬೇಡಿಕೆ ಅನೇಕ ದೇಶಗಳ ಸದ್ವಿವೇಕವನ್ನು ಜಾಗೃತಗೊಳಿಸಿ ನೆರವು ಪ್ರವಹಿಸುವಂತೆ ಮಾಡಿತು. ಹತ್ತು ವರ್ಷಗಳ ಕಾಲ ಕೂಟ ಯುದ್ದದಲ್ಲಿ ತೊಡಗಿದ್ದ ನಾಗಾಬಂಡಾಯಗಾರರನ್ನು ನಿರ್ಭಯವಾಗಿ ಸಂದರ್ಶಿಸಿದ ಜಯಪ್ರಕಾಶರು ತಮ್ಮ ಸೌಜನ್ಯಪೂರ್ಣ ವಿವರಣೆಯಿಂದ ನಾಗಾಗಳ ಮನವೊಲಿಸಿ ಅವರು ಯುದ್ದ ನಿಲ್ಲಿಸಿ ಮಾತುಕತೆಗೆ ಒಡಂಬಡುವಂತೆ ಅವರನ್ನು ಅಣಿಮಾಡಿದರು. ಕಾಶ್ಮೀರದ ವಿಚಾರದಲ್ಲಿ ಮತ್ತು ಪಾಕಿಸ್ತಾನದ ಜೊತೆಗಿನ ಸಂಬಂಧದ ವಿಚಾರದಲ್ಲಿ ಜೆ. ಪಿ. ಅನೇಕ ಸಲ ಸರ್ಕಾರಕ್ಕೆ ಮತ್ತು ಜನನಾಯಕರಿಗೆ ಅಷ್ಟೊಂದು ರುಚಿಸದ, ಆದರೆ, ಅರ್ಥಪೂರ್ಣವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಪ್ರಜಾಸತ್ತೆ ಅವಿಭಾಜ್ಯವಾದ ಮೌಲ್ಯ. ನಾವು, ಹೊರಗಿನವರಿಗೆ ಪ್ರಜಾತಂತ್ರವಾದಿಗಳಾಗಿ ಆಂತರಿಕವಾಗಿ ಪ್ರಜಾತಂತ್ರ ವಿರೋಧಿಗಳಾಗಲು ಶಕ್ಯವಿಲ್ಲ. ಇದು ಜೆ.ಪಿ. ಆವರ ಸ್ಪಷ್ಟ ಆಭಿಪ್ರಾಯ. ಭಾರತಪಾಕಿಸ್ತಾನಗಳ ನಡುವಣ ಯುದ್ಧದ ಸಂದರ್ಭದಲ್ಲಿ ಪೂರ್ವ ಪಾಕಿಸ್ತಾನದಿಂದ (ಈಗ ಬಾಂಗ್ಲಾದೇಶ) ಬಂದ ನಿರ್ವಾಸಿತರಿಗೆ ಜಯಪ್ರಕಾಶರ ಸರ್ವೋದಯ ಕಾರ್ಯಕರ್ತರ ಸೇವೆ ಸಿದ್ಧವಾಗಿತ್ತು. ಇವರು ಹದಿನಾರು ರಾಷ್ಟ್ರಗಳಿಗೆ ಸಂಚರಿಸಿ, ಭಾರತದ ಗಡಿಯಲ್ಲಿ ಏನು ನಡೆದಿದೆ ಎಂಬುದನ್ನು ಪ್ರಪಂಚಕ್ಕೆ ತಿಳಿಸಿ ಬಂದರು. ಆದರೂ ಬಾಂಗ್ಲಾದೇಶದ ವಿಮೋಚನೆ ಆದೊಡನೆಯೇ ಈ ಉಪಖಂಡದ ರಾಷ್ಟ್ರಗಳಿಗೆ ಶಾಂತಿಯುತ ಸಹಜೀವನದ ಮಹತ್ವವನ್ನು ಒತ್ತಿ ಹೇಳಿದವರಲ್ಲಿ ಇವರೇ ಮೊದಲಿಗರು. ತುರ್ತುಪರಿಸ್ಥಿತಿ 1973ರ ಏಪ್ರಿಲ್ನಲ್ಲಿ ಜಯಪ್ರಕಾಶರ ಪತ್ನಿ ಪ್ರಭಾವತಿ ತೀರಿಕೊಂಡರು. ಸ್ವತಃ ಅನಾರೋಗ್ಯಕ್ಕೆ ಒಳಗಾಗಿದ್ದ ಜಯಪ್ರಕಾಶರು ಆ ವೇಳೆಗೆ ಇನ್ನೊಂದು ಮಹಾಚಳುವಳಿಯ ನೇತಾರರಾಗುವುದು ಅನಿವಾರ್ಯವಾಯಿತು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಅಧಿಕಾರ ನಡೆಸುತ್ತಿದ್ದ ಕಾಂಗ್ರೆಸ್ ಸರ್ಕಾರದ ಏಕಾಧಿಕಾರದ ವಿರುದ್ದ ಇವರು ಹೋರಾಟ ಆರಂಭಿಸಿದರು. ರಾಜತಂತ್ರ ಪ್ರಬಲವಾಗಿ ಜನತಂತ್ರವನ್ನು ಕಡೆಗಣಿಸಿದುದನ್ನು ಇವರು ವಿರೋಧಿಸಿದರು. ಪ್ರಜಾಪ್ರಭುತ್ವದ ಅಂಗಗಳಾದ ಸಂಸತ್ತು, ನ್ಯಾಯಾಲಯ, ಆಡಳಿತ ಮೂರು ಸಂವಿಧಾನಬದ್ದವಾಗಿ ಕೆಲಸಮಾಡುವಂಥ ವಾತಾವರಣ ದೇಶದಲ್ಲಿ ಸೃಷ್ಟಿಯಾಗಬೇಕೆಂದು ಇವರು ಬಯಸಿದರು. ಭೃಷ್ಟಾಚಾರ, ಸರ್ವಾಧಿಕಾರ ಇವನ್ನು ಎದುರಿಸಲು ಮಹಾಚಳುವಳಿಯೊಂದು ದೇಶದಲ್ಲಿ ಆರಂಭವಾಯಿತು. ದೇಶದ ಈ ಪರ್ವಕಾಲದಲ್ಲಿ ಜಯಪ್ರಕಾಶರು ಅದರ ನಿರ್ದೇಶನದ ಹೊಣೆ ವಹಿಸಿಕೊಂಡರು. ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರ ಪ್ರತಿಸ್ಪರ್ಧಿ ಅಲಹಾಬಾದ್ ಉಚ್ಚನ್ಯಾಯಾಲಯದಲ್ಲಿ ಹೂಡಿದ್ದ ಮೊಕದ್ದಮೆಯಲ್ಲಿ ಇಂದಿರಾಗಾಂಧಿಯವರ ವಿರುದ್ದ ತೀರ್ಪು ಹೊರಬಿದ್ದಾಗ ಚಳುವಳಿ ತೀವ್ರವಾಯಿತು. ಇಂದಿರಾಗಾಂಧಿಯವರು ರಾಜೀನಾಮೆ ಕೊಡಬೇಕೆಂಬ ಕೂಗು ಎದ್ದಿತು. ಇಂದಿರಾಗಾಂಧಿಯವರು ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲರ್ಜಿ ಸಲ್ಲಿಸಿದರಲ್ಲದೆ ದೇಶದಲ್ಲಿ ತುರ್ತುಪರಿಸ್ಥಿಯನ್ನು ಘೋಷಿಸಿದರು. ಜಯಪ್ರಕಾಶರ ನಾರಾಯಣ್ ಮೊದಲುಗೊಂಡು ಅನೇಕ ನಾಯಕರು ದಸ್ತಗಿರಿಯಾದರು (1975). ಇವರನ್ನು ಸ್ಥಾನಬದ್ದತೆಯಲ್ಲಿಡಲಾಯಿತು. 1976ರ ಕೊನೆಯಲ್ಲಿ ಜಯಪ್ರಕಾಶರ ಬಿಡುಗಡೆಯಾಯಿತು. ಆದರೆ ಇವರ ಆರೋಗ್ಯ ಹದಗೆಟ್ಟಿತು. ಜನತಂತ್ರಬಾಹಿರವಾದ ಕೃತ್ಯವೆಸಗಿ ಸರ್ಕಾರ ಅನ್ಯಾಯ ಮಾಡುತ್ತಿದೆಯೆಂಬ ಜಯಪ್ರಕಾಶರ ನಿಲುವಿನಲ್ಲಿ ಬದಲಾವಣೆಯಾಗಿರಲಿಲ್ಲ. ಮುಂದಿನ ಹಲವು ವಾರಗಳ ಕಾಲ ಇವರು ಜಸ್ಲೋಕ್ ಆಸ್ಪತ್ರೆಯಲ್ಲಿ ಸಾವಿನ ಎದುರು ಹೋರಾಟ ನಡೆಸಿದರು. 1977ರ ಜನವರಿಯಲ್ಲಿ ಇಂದಿರಾಗಾಂಧಿಯವರು ತುರ್ತುಪರಿಸ್ಥಿಯನ್ನು ಸಡಿಲಿಸಿ ಲೋಕಸಭೆಗೆ ಚುನಾವಣೆ ಘೋಷಿಸಿದರು. ಹಲವು ವಿರೋಧ ಪಕ್ಷಗಳು ಒಂದಾಗಿ ಜನತಾಪಕ್ಷ ಸ್ಥಾಪಿತವಾಯಿತು. ಅದು ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿ ಸರ್ಕಾರ ರಚಿಸಿತು. ನಿಧನ ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತೆ ಸ್ಥಾಪಿತವಾಯಿತೆಂದು ಜಯಪ್ರಕಾಶರಿಗೆ ಸಮಾಧಾನವಾಯಿತಾದರೂ ಅವರಿಗೆ ಅಷ್ಟಕ್ಕೆ ತೃಪ್ತಿಯಿರಲಿಲ್ಲ. ದೇಶದಲ್ಲಿ ಸಂಪೂರ್ಣ ಕ್ರಾಂತಿಯಾಗಬೇಕು, ಭೃಷ್ಟಾಚಾರ ತೊಲಗಬೇಕು, ನಿಜವಾದ ಜನಶಕ್ತಿಯ ಆಳ್ವಿಕೆ ಆರಂಭವಾಗಬೇಕು. ಆಡಳಿತದ ವಿಕೇಂದ್ರಿಕರಣವಾಗಬೇಕು, ಹೊಸ ಶಿಕ್ಷಣ ರೂಪುಗೊಳ್ಳಬೇಕು. ಇದು ಇವರ ಬಯಕೆಯಾಗಿತ್ತು. ಅಮೆರಿಕಾದ ಸಿಯಾಟ್ನಲ್ಲಿ ಶಸ್ತ್ರಚಿಕಿತ್ಸೆ ಹೊಂದಿ ಮರಳಿದ ಮೇಲೆ ಜಯಪ್ರಕಾಶರು ಈ ಆದರ್ಶ ಸಮಾಜದ ಸ್ಥಾಪನೆಗಾಗಿ ತಮ್ಮ ಕೆಲಸ ಮುಂದುವರಿಸಿದರು. ಜಯಪ್ರಕಾಶ್ ನಾರಾಯಣರು 1979ರ ಅಕ್ಟೋಬರ್ 8 ರಂದು ನಿಧನ ಹೊಂದಿದರು. ಯಶಸ್ಸು ಯಾವ ತೊಡಕಿನ ಸಮಸ್ಯೆಯನ್ನೇ ಆಗಲಿ ಬಿಡಿಸುವಲ್ಲಿ ಜೆ.ಪಿ.ಯವರು ತೋರಿಸುತ್ತಿದ್ದ ಅಪೂರ್ವ ತಾಳ್ಮೆ, ವಿವಿಧ ಅಭಿಪ್ರಾಯಗಳನ್ನು ಕೇಳುವ ಕುತೂಹಲ, ಮನುಷ್ಯನ ಮೂಲಭೂತ ಒಳ್ಳೆಯತನದಲ್ಲಿ ನಂಬಿಕೆ, ಈ ಒಳ್ಳೆಯತನವನ್ನು ಮುಟ್ಟುವ ತಟ್ಟುವ ಅವರ ಪ್ರಾಮಾಣಿಕ ಪ್ರಯತ್ನ ಇವೇ ಅವರ ಯಶಸ್ಸಿನ ಗುಟ್ಟು. 200 ಜನ ಪೋಲಿಸರು ವರ್ಷಾನುವರ್ಷ ಇಡೀ ಚಂಬಲ್ ಕಣಿವೆಯನ್ನು ಜಾಲಾಡಿಸಿ ಹುಡುಕಾಡಿದರೂ ವ್ಯಮಾನಿಕರು ಆ ಭಾಗಗಳಲ್ಲಿ ಬಾಂಬು ಸುರಿಸಿದರೂ ಆಗದಂಥ ಕೆಲಸ ನೂರಾರೂ ಜನ ಕೊಲೆಗಡುಕರು, ಸುಲಿಗೆದಾರರು ತಮ್ಮ ಜೀವನವಿಧಾನವನ್ನೇ ಬದಲಿಸಿ ಬಂದು ಒಬ್ಬ ವ್ಯಕ್ತಿಗೆ ಶರಣಾಗತವಾದ್ದು ಸಾಮಾನ್ಯವಲ್ಲ. ಒಳ್ಳೆಯ ಶೀಲ, ಚಾರಿತ್ರ್ಯ, ಪ್ರಾಮಾಣಿಕತೆ, ತ್ಯಾಗಗಳಿಂದ ಒಬ್ಬ ವ್ಯಕ್ತಿ ಏನು ಸಾಧಿಸಬಹುದು ಎಂಬುದಕ್ಕೆ ಜಯಪ್ರಕಾಶ ನಾರಾಯಣರು ಉತ್ತಮ ನಿದರ್ಶನವಾಗಿದ್ದರು. ಬ್ರಿಟಿಷ್ ಕೂಲಿಗಾರ ಪಕ್ಷದ ಸಂಸತ್ ಸದಸ್ಯ ಲಾರ್ಡ್ ಬ್ರಾಕ್ವೇ ಹೇಳಿದಂತೆ, ಜಯಪ್ರಕಾಶ್ ನಾರಾಯಣರು ಸ್ವಾತಂತ್ರ್ಯಾಂದೋಲನದಲ್ಲಿ ಭಾರತದಲ್ಲಿ ಉತ್ತಮವಾದುದನ್ನೆಲ್ಲಾ ಪ್ರತಿನಿಧಿಸಿದರು. ಔದಾರ್ಯ, ರಚನಾತ್ಮಕ ದೃಷ್ಟಿ, ಕಟುತ್ವವಿಲ್ಲದ ವರ್ತನೆ ಇವು ಜಯಪ್ರಕಾಶರ ವೈಶಿಷ್ಟ್ಯ. ಗಾಂಧೀಜಿಯವರ ಅನಂತರ ಭಾರತದ ಪರಿಸ್ಥಿತಿಯ ಬಗ್ಗೆ ಸತ್ಯವಾದ ಮಾತುಗಳನ್ನು ಸ್ಪಷ್ಟವಾಗಿ ಹೇಳಿದ ಮತ್ತು ಹೇಳಬಲ್ಲವರಾಗಿದ್ದ ಏಕೈಕ ವ್ಯಕ್ತಿಯೆಂದರೆ ಜಯಪ್ರಕಾಶ್ ನಾರಾಯಣ್. ಪಟ್ನಾದಲ್ಲಿ ತನ್ನ ಮಗಳ ಮದುವೆಗೆ ಸಹಾಯ ಬೇಡಿ ಬರುತ್ತಿದ್ದ ಹಳ್ಳಿಯ ರೈತನಿಂದ ಹಿಡಿದು ರಾಜಕೀಯ ಸಮಸ್ಯೆಗಳಿಂದ ತಲೆಕಾಯಿಸಿಕೊಂಡು ಬರುತ್ತಿದ್ದ ಸರಕಾರಿ ಮಂತ್ರಿಗಳವರೆಗೆ ಎಲ್ಲರಿಗೂ ಜೆ. ಪಿ. ಯವರ ಮೃದುಮಧುರ ಸೌಮ್ಯ ಭಾವನೆ ಸಿದ್ದವಿರುತ್ತಿತ್ತು. ಬರಹಗಾರ,ಚಿಂತಕ ಜಯಪ್ರಕಾಶ್ ನಾರಾಯಣರು ಪ್ರಖ್ಯಾತ ಬರಹಗಾರರೂ, ಚಿಂತಕರೂ ಆಗಿದ್ದರು. ಸಮಾಜವಾದವೇ ಏಕೆ, ಸಂಘರ್ಷದೇಡೆಗೆ, ಲಾಹೋರ್ ಕೋಟೆಯಲ್ಲಿ, ಭಾರತೀಯ ರಾಜನೀತಿಯ ಪುನನಿರ್ಮಾಣಕ್ಕೊಂದು ಮನವಿ, ಸಮಾಜವಾದದಿಂದ ಸರ್ವೋದಯದ ಕಡೆಗೆ, ಜನತೆಗಾಗಿ ಸ್ವರಾಜ್ಯಇವನ್ನು ಕುರಿತು ಇವರು ಇಂಗ್ಲೀಷ್ನಲ್ಲಿ ಕೃತಿರಚನೆ ಮಾಡಿದ್ದಾರೆ. ಪ್ರಶಸ್ತಿಗಳು ಭಾರತ ಸರ್ಕಾರ ಇವರಿಗೆ 1999ರಲ್ಲಿ ಮರಣೊತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. 2002ರಲ್ಲಿ ದೇಶದ್ಯಾಂತ ಜಯಪ್ರಕಾಶ್ ನಾರಾಯಣ್ ಅವರ ಶತಮಾನೋತ್ಸವವನ್ನು ಆಚರಿಸಲಾಯಿತು. ೧೯೬೫ರಲ್ಲಿ ಇವರಿಗೆ ರೋಮನ್ ಮ್ಯಾಗ್ಸೇಸೆ ಪ್ರಶಸ್ತಿ ದೊರೆತಿದೆ. ಬಾಹ್ಯ ಸಂಪರ್ಕಗಳು , ಸ್ವಾತಂತ್ರ್ಯ ಹೋರಾಟಗಾರರು ಭಾರತದ ಗಣ್ಯರು ಭಾರತ ರತ್ನ ಪುರಸ್ಕೃತರು ಭಾರತೀಯ ಇತಿಹಾಸದ ಪ್ರಮುಖರು
ಖುದಿರಾಮ್ ಬೋಸ್ (ಡಿಸೆಂಬರ್ ೩, ೧೮೮೯ ಆಗಸ್ಟ್ ೧೧, ೧೯೦೮) ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರು. ೧೯೦೮ರ ದಿನದಂದು ಕೇವಲ ತನ್ನ ಹದಿನೆಂಟರ ಹರೆಯದಲ್ಲೇ ಯುವ ಕಿಡಿಯೊಂದು ದೇಶಕ್ಕಾಗಿ ತನ್ನ ತಲೆಯನ್ನು ನೇಣುಗಂಬಕ್ಕೆ ಒಡ್ಡಿಕೊಂಡಿತು. ಆ ಮಹಾನ್ ಚೇತನವೇ ಖುದಿರಾಮ್ ಬೋಸ್. ಜೀವನ ೧೮೮೯ನೇಯ ಡಿಸೆಂಬರಿನಲ್ಲಿ ಜನ್ಮತಾಳಿದ ಖುದಿರಾಮ್ ಬೋಸ್ ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡರು. ಅವರ ಅಕ್ಕ ಭಾವನ ಅಕ್ಕರೆಯಲ್ಲಿ ಬೆಳೆದ ಖುದಿರಾಮ್ ಬೋಸರು ಅತಿ ಚಿಕ್ಕ ವಯಸ್ಸಿನಲ್ಲಿಯೇ ಕ್ರಾಂತಿಕಾರಿಗಳೊಂದಿಗೆ ಗುರುತಿಸಿಕೊಂಡರು. ಬಂಕಿಮಚಂದ್ರರು ಬರೆದ ಆನಂದ ಮಠ ಮತ್ತು ಆನಂದದಾತ ಕಾದಂಬರಿಗಳೂ ಅವರ ಮೇಲೆ ಅತ್ಯಂತ ಪ್ರಭಾವ ಬೀರಿದ್ದವು. ವಂದೇ ಮಾತರಂ ಗೀತೆಯಂತೂ ಇವರ ನರನಾಡಿಗಳಲ್ಲಿ ದೇಶ ಭಕ್ತಿ ಉಕ್ಕಿ ಹರಿಯುವಂತೆ ಮಾಡಿತ್ತು. ಹೀಗಾಗಿ ಸುಮಾರು ಹದಿನೈದರ ಹರೆಯದಲ್ಲಿಯೇ ದೇಶಭಕ್ತಿಯನ್ನು ಮೈಗೂಡಿಸಿಕೊಂಡ ಬೋಸ್ ಕ್ರಾಂತಿಕಾರಿ ಸಂಘಟನೆಗಳ ಜೊತೆಗೆ ನಿಕಟ ಸಂಬಂಧವನ್ನಿಟ್ಟುಕೊಂಡುದೇ ಅಲ್ಲದೇ ಅದರ ಪ್ರಚಾರ ಕಾರ್ಯಕ್ಕೆ ತೊಡಗಿ ಕರಪತ್ರಗಳನ್ನು ಹಂಚುತ್ತಿದ್ದಾಗ ಸಿಕ್ಕಿಬಿದ್ದು ಪುನಃ ಬಿಡುಗಡೆಗೊಂಡರು. ಅಪ್ರತಿಮ ಹೋರಾಟ ಆಗ ತಾನೇ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಕಾಳ್ಗಿಚ್ಚಾಗಿ ಭುಗಿಲೆದ್ದಿತು. ಇದಕ್ಕೆ ಹಲವಾರು ಪತ್ರಿಕೆಗಳು ಕುಮ್ಮಕ್ಕು ನೀಡುತ್ತಿದ್ದವು. ಹೀಗಾಗಿ ಬ್ರಿಟಿಷರ ವಿರುದ್ಧವಾಗಿ ಬರೆದ ಪತ್ರಿಕೆಗಳ ಮೇಲೆ ಮೊಕದ್ದಮೆ ಹೂಡಲಾಗುತ್ತಿತ್ತು. ಅರವಿಂದ ಘೋಷರ ಪ್ರಕಾಶನದಲ್ಲಿ ಹೊರಬರುತ್ತಿದ್ದ ವಂದೇ ಮಾತರಂ ಪತ್ರಿಕೆಯೂ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಮೊಕದ್ದಮೆಯ ವಿಚಾರಣೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ನಿರಾಯುಧ ಗುಂಪಿನ ಮೇಲೆ ಬ್ರಿಟಿಷರು ಅನವಶ್ಯಕವಾಗಿ ಲಾಠಿ ಪ್ರಹಾರ ಮಾಡಿದರು. ಇದರಿಂದ ಕೆರಳಿದ ಹದಿನೈದು ವರ್ಷದ ಸುಶೀಲ್ ಸೇನ್ ಬ್ರಿಟಿಷ್ ಅಧಿಕಾರಿಗೆ ತಿರುಗಿಸಿ ಹೊಡೆದರು. ಇದರಿಂದ ರೊಚ್ಚಿಗೆದ್ದ ಬ್ರಿಟಿಷ್ ಅಧಿಕಾರಿ ಕಿಂಗ್ಸ್ ಫೋರ್ಡನು ಆ ಯುವಕನನ್ನು ಮ್ಯಾಜಿಸ್ಟ್ರೇಟ್ ಮುಂದೆ ನಿಲ್ಲಿಸಿ ಆತನ ವಯಸ್ಸನ್ನು ಲೆಕ್ಕಿಸದೆ 15 ಛಡಿ ಏಟಿನ ಶಿಕ್ಷೆ ವಿಧಿಸಿ ವಿಕೃತಿ ಮೆರೆದನು. ಸುಶೀಲ್ ಕುಮಾರರೇನೋ ಶಿಕ್ಷೆಯನ್ನು ಸಂತೋಷದಿಂದಲೇ ಸ್ವೀಕರಿಸಿದರು. ಆದರೆ ಈ ಅಪ್ರಾಪ್ತ ಬಾಲಕನ ಮೇಲೆ ಲಾಠಿ ಬೀಸಿದ್ದಲ್ಲದೆ, ಉಗ್ರಶಿಕ್ಷೆಗಳನ್ನು ನೀಡುತ್ತಿದ್ದ ಬ್ರಿಟಿಷರ ದಬ್ಬಾಳಿಕೆಯನ್ನು ಸಹಿಸದ ಕ್ರಾಂತಿಕಾರಿಗಳು ಕಿಂಗ್ಸ್ ಫೋರ್ಡನನ್ನು ಮುಗಿಸಲು ತೀರ್ಮಾನಿಸಿದರು. ಇದರ ಸುಳಿವು ಹತ್ತಿದ ಬ್ರಿಟಿಷ್ ಸರ್ಕಾರ ಕಿಂಗ್ಸ್ ಫೋರ್ಡನನ್ನು ಮುಜಾಫರಪುರಕ್ಕೆ ವರ್ಗ ಮಾಡಿತು. ಹೇಗಾದರಾಗಲಿ ಕಿಂಗ್ಸ್ ಫೋರ್ಡನನ್ನು ಕೊಲ್ಲಲೇಬೇಕು ಎನ್ನುವ ದೃಢ ನಿರ್ಧಾರ ಮಾಡಿದ್ದ ಕ್ರಾಂತಿಕಾರಿಗಳು, ಈ ಕಾರ್ಯವನ್ನು ಯುಗಾಂತರ ಗುಂಪಿನ ನಾಯಕರಾದ ಸತ್ಯೇಂದ್ರನಾಥ ಬೋಸ್, ಖುದಿರಾಮ್ ಬೋಸ್ ಮತ್ತು ಆತನ ಸಹ ಕ್ರಾಂತಿಕಾರಿ ಪ್ರಫುಲ್ಚಾಕಿಗೆ ವಹಿಸಿದರು. ಆಜ್ಞೆಯಂತೆ ತೆರಳಿದ ಈ ಕ್ರಾಂತಿಕಾರಿಗಳು ಕಿಂಗ್ಸ್ ಫೋರ್ಡನ ಚಲನವಲನಗಳನ್ನು ಗಮನಿಸತೊಡಗಿದರು. ಕಿಂಗ್ಸ್ ಫೋರ್ಡನು ಸಂಜೆ ಕ್ಲಬ್ಬಿನಿಂದ ಮನೆಗೆ ಬರುವ ದಾರಿಯಲ್ಲಿ ಕಾರಿನ ಮೇಲೆ ಬಾಂಬ್ ಹಾಕಲು ನಿರ್ಧರಿಸಲಾಗಿತ್ತು. ಎಂದಿನಂತೆ ಕಾರು ಹೊರಟು ಬಂದಿತು. ಅದರೊಳಗೆ ಯಾರಿದ್ದಾರೆಂದು ಗಮನಿಸದೆ ಬೋಸ್ ಮತ್ತು ಚಾಕಿ ಬಾಂಬ್ ಎಸೆದರು. ಕಿಂಗ್ಸ್ ಫೋರ್ಡ್ ಬದಲಾಗಿ ಅದರಲ್ಲಿದ್ದ ಇಬ್ಬರು ಮಹಿಳೆಯರು ಅಸುನೀಗಿದರು. ಇತ್ತ ಕಿಂಗ್ಸ್ ಫೋರ್ಡನನ್ನು ಕೊಂದೆವೆಂದುಕೊಂಡ ಈ ಹುಡುಗರು ಒಂದೊಂದು ದಿಕ್ಕಿಗೊಬ್ಬರು ಓಡಿದರು. ಈ ಘಟನೆ ನಡೆದದ್ದು ೧೯೦೮ನೆ ಏಪ್ರಿಲ್ ೩೦ರಂದು. ಕ್ರಾಂತಿಕಾರಿಗಳು ಎಸೆದ ಬಾಂಬು ಕಿಂಗ್ಸ್ ಫೋರ್ಡನನ್ನು ಕೊಲ್ಲಲಿಲ್ಲವಾದರೂ, ಇಡೀ ಬ್ರಿಟಿಷ್ ಸಾಮ್ರಾಜ್ಯಕ್ಕೇ ಮೊದಲ ನಡುಕ ಹುಟ್ಟಿಸಿಬಿಟ್ಟಿತ್ತು. ಈ ಹುಡುಗರು ಎಸೆದ ಬಾಂಬು ಕೇವಲ ಕಿಂಗ್ಸ್ ಫೋರ್ಡನ ವಾಹನ ಚೂರು ಚೂರು ಮಾಡಿದ್ದಲ್ಲದೆ ಬ್ರಿಟಿಷ್ ಸಾಮ್ರಾಜ್ಯದ ಅಹಂಕಾರ ಮತ್ತು ದರ್ಪವನ್ನು ನುಚ್ಚುನೂರು ಮಾಡಿ ಹಾಕಿತ್ತು. ಜಿವನ ಮುಜಾಫುರದಿಂದ ಸುಮಾರು, ೨೫ ಮೈಲುಗಳಾಚೆ ಯುವಕ ಖುದಿರಾಮ್ ಬೋಸರನ್ನು ಸೆರೆಹಿಡಿಯಲಾಯಿತು. ತಪ್ಪಿಸಿಕೊಳ್ಳಲು ಆತ ಮಾಡಿದ ಎಲ್ಲ ಸಾಹಸಗಳು ವ್ಯರ್ಥವಾಗಿ ಬಂಧನವಾಗಿ ಹೋಯಿತು. ಅವರ ಮೇಲೆ ವಿಚಾರಣೆ ಎಂಬ ನಾಟಕ ನಡೆದು ಕೊನೆಗೆ ಮರಣದಂಡನೆಯನ್ನು ವಿಧಿಸಲಾಯಿತು. ೧೯೦೮ರ ಆಗಸ್ಟ್ ೧೧ರಂದು ಗಲ್ಲಿಗೇರಿಸಲಾಯಿತು. ಇತ್ತ ಪ್ರಫುಲ್ಲ್ ಚಾಕಿ ಪೊಲೀಸರೊಂದಿಗೆ ಹೋರಾಡುತ್ತಿರುವಾಗ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂದು ಗೊತ್ತಾಗುತ್ತಿದ್ದಂತೆ ತಮ್ಮ ರಿವಾಲ್ವರ್ನಿಂದ ತಾವೇ ಸುಟ್ಟುಕೊಂಡು ಅಮರರಾದನು. ಉಲ್ಲೇಖಗಳು ಸ್ವಾತಂತ್ರ್ಯ ಹೋರಾಟಗಾರರು ಭಾರತದ ಗಣ್ಯರು ಭಾರತೀಯ ಇತಿಹಾಸದ ಪ್ರಮುಖರು
ಬಿಪಿನ್ ಚಂದ್ರ ಪಾಲ್ (ಜನನನವೆಂಬರ್ ೭, ೧೮೫೮) ಈಗಿನ ಬಾಂಗ್ಲಾದೇಶದ ಸಿಲ್ಹೆಟ್ ನ ಶ್ರೀಮಂತ ಕಾಯಸ್ಥ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ರಾಮ ಚಂದ್ರ ಪಾಲ್. ಇವರು ಉತ್ತಮ ಶಿಕ್ಷಕ, ಪತ್ರಕರ್ತ, ವಾಗ್ಮಿ, ಬರಹಗಾರ ಮತ್ತು ಗ್ರಂಥ ಪಾಲಕರಾಗಿದ್ದರು. ಇವರು ಪ್ರಾರಂಭ ಮಾಡಿದ ಪತ್ರಿಕೆ ವ೦ದೇ ಮಾತರಂ. ಇಪ್ಪತ್ತನೇ ಶತಮಾನದ ಪೂರ್ವಾರ್ದದಲ್ಲಿ ಅತ್ಯಂತ ದೇಶಪ್ರೇಮದಿಂದ ಹೋರಾಡಿ ಪ್ರಾಣತೆತ್ತ ಕೆಲವೇ ಉನ್ನತ ರಾಷ್ಟ್ರವಾದಿ ಕಾಂಗ್ರೆಸ್ ನಾಯಕತ್ರಯರಲ್ಲೊಬ್ಬರು. ಇನ್ನಿಬ್ಬರು ಸಹಚರರೆಂದರೆ ಬಾಲಗಂಗಾಧರ ತಿಲಕ ಮತ್ತು ಲಾಲಾ ಲಜಪತ ರಾಯ್ ಜನ ಈ ಮೂವರನ್ನು ಲಾಲ್ಬಾಲ್ಪಾಲ್ ಎಂದೇ ಕರೆಯುತ್ತಿದ್ದರು. ಸ್ವಾತಂತ್ರ್ಯ ಹೋರಾಟಗಾರರು ಭಾರತದ ಗಣ್ಯರು ಭಾರತೀಯ ಇತಿಹಾಸದ ಪ್ರಮುಖರು
ಸತ್ಯ ಹರಿಶ್ಚಂದ್ರ ಈ ಕೆಳಗಿನವನ್ನು ಸೂಚಿಸಬಹುದು: ಹಿಂದೂ ಪುರಾಣಗಳಲ್ಲಿ ಸೂಚಿತವಾಗಿರುವ ಹರಿಶ್ಚಂದ್ರ. ೧೯೪೩ರಲ್ಲಿ ಬಿಡುಗಡೆಯಾದ ಕನ್ನಡ ಚಿತ್ರರಂಗ ಸತ್ಯ ಹರಿಶ್ಚಂದ್ರ. ೧೯೬೫ರಲ್ಲಿ ಬಿಡುಗಡೆಯಾದ ರಾಜ್ಕುಮಾರ್ ಅಭಿನಯದ ಕನ್ನಡ ಚಿತ್ರರಂಗ ಸತ್ಯ ಹರಿಶ್ಚಂದ್ರ ಓದಿ. ರಾಜಕುಮಾರ್ಚಲನಚಿತ್ರಗಳು
ಸುಬ್ರಹ್ಮಣ್ಯ ಭಾರತಿ(ಡಿಸೆಂಬರ ೧೧, ೧೮೮೨ ಸೆಪ್ಟೆಂಬರ ೧೧, ೧೯೨೧) ಮಹಾಕವಿ ಎಂದೇ ಪ್ರಖ್ಯಾತರಾಗಿದ್ದರು. ದಕ್ಷಿಣ ಭಾರತದ ಸ್ವಾತಂತ್ರ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಇವರು ಇಪ್ಪತ್ತನೆಯ ಶತಮಾನ ಕಂಡ ಶ್ರೇಷ್ಠ ಮೇಧಾವಿ, ಕವಿ, ತತ್ವಜ್ಞಾನಿ ಮತ್ತು ಚಿಂತಕರಾಗಿದ್ದರು. ಬಾಹ್ಯ ಸಂಪರ್ಕಗಳು , . . ಸ್ವಾತಂತ್ರ್ಯ ಹೋರಾಟಗಾರರು ಭಾರತದ ಗಣ್ಯರು ಭಾರತೀಯ ಇತಿಹಾಸದ ಪ್ರಮುಖರು
ಲಾಲಾ ಲಜಪತ ರಾಯ್ (ಜನವರಿ ೨೮, ೧೮೬೫ 29 9 ನವೆಂಬರ್ ೧೭, ೧೯೨೮) ಭಾರತಕ್ಕಾಗಿ ತಮ್ಮ ಪ್ರಾಣವನ್ನು ಸಮರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರಾಗಿಯೂ, ಶ್ರೇಷ್ಠ ಬರಹಗಾರರಾಗಿಯೂ ಭಾರತೀಯ ಇತಿಹಾಸದಲ್ಲಿ ಪ್ರಸಿದ್ಧರಾಗಿದ್ದಾರೆ. ಲಾಲಾ ಲಜಪತ ರಾಯ್ ಅವರು ದೇಶದ ಪ್ರಖ್ಯಾತ ತ್ರಿಮೂರ್ತಿಗಳಾದ ಲಾಲ್ ಬಾಲ್ ಪಾಲ್ ಇವರಲ್ಲಿ ಒಬ್ಬರು. ಮತ್ತಿಬ್ಬರು ಬಾಲ ಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲರು. ಜೀವನ ಲಾಲಾ ಲಜಪತ ರಾಯ್ ಅವರು ಪಂಜಾಬಿನ ಮೋಗಾ ಜಿಲ್ಲೆಗೆ ಸೇರಿದ ಧುಡಿಕೆ ಎಂಬ ಗ್ರಾಮದಲ್ಲಿ ಜನವರಿ 28, 1865ರ ವರ್ಷದಲ್ಲಿ ಜನಿಸಿದರು. ಲಾಲಾ ಎಂಬುದು ಭಾರತೀಯ ಸಂಸ್ಕೃತಿಯಲ್ಲಿ ಹಿರಿಯ ಮನೆತನದಿಂದ ಬಂದವರಿಗೆ ಸಲ್ಲುತ್ತಿದ್ದ ಗೌರವಯುತ ಸಂಬೋಧನೆ. ರಾಯ್ ಅವರ ಪ್ರಾರಂಭಿಕ ಶಿಕ್ಷಣ ಪ್ರಸಕ್ತದಲ್ಲಿ ಹರ್ಯಾಣದಲ್ಲಿರುವ ರೆವಾರಿ ಎಂಬ ಊರಿನಲ್ಲಾಯಿತು. ಲಜಪತ ರಾಯ್ ಅವರ ತಂದೆ ರಾಧಾ ಕೃಷ್ಣನ್ ಅವರು ಅಂದಿನ ದಿನಗಳಲ್ಲಿ ಉರ್ದು ಶಿಕ್ಷಕರಾಗಿದ್ದರು ರಾಜಕೀಯ ಹೋರಾಟ ಮತ್ತು ಬರವಣಿಗೆಯಲ್ಲಿ ಒಲವು ಹಿಂದೂ ಧರ್ಮ ಮತ್ತು ಮನುಸ್ಮೃತಿಗಳಿಂದ ತೀವ್ರ ಪ್ರಭಾವಿತರಾದ ಲಾಲಾ ಲಜಪತ ರಾಯ್ ಅವರು ರಾಜಕೀಯ ಹೋರಾಟ ಮತ್ತು ಬರವಣಿಗೆಗಳ ಕಡೆಗೆ ಅಪಾರ ಒಲವು ಬೆಳೆಸಿಕೊಂಡರು. ಹಿಂದೂ ಮಹಾಸಭಾದ ಕಾರ್ಯಕರ್ತರಾಗಿದ್ದ ಅವರು, ಹಿಂದೂ ಧರ್ಮದಲ್ಲಿ ಶಾಂತಿಯುತ ಹೋರಾಟಕ್ಕೆ ಮಹತ್ವವಿದೆ ಎಂದು ನಂಬಿದ್ದರು. ಇದೇ ಆಧಾರದ ಮೇಲೆ ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ಶಾಂತಿಯುತ ಚಳುವಳಿಗಳನ್ನು ಆಯೋಜಿಸತೊಡಗಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಆರ್ಯ ಸಮಾಜದಲ್ಲಿ ನಿಷ್ಠೆ ಹೊಂದಿದ್ದ ಅವರು ತಾವು ವಿದ್ಯಾರ್ಥಿಯಾಗಿದ್ದ ಆರ್ಯ ಗೆಜೆಟ್ನ ಸಂಪಾದಕರಾಗಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದ ಮೇಲೆ ಅವರು ಪಂಜಾಬಿನಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸಿದರು. ಇದರಿಂದಾಗಿ ಬ್ರಿಟಿಷ್ ಆಡಳಿತ ಅವರನ್ನು ಬರ್ಮಾದ ಮಂಡಾಲೈ ಎಂಬಲ್ಲಿಗೆ ಗಡೀಪಾರು ಮಾಡಿತ್ತ. ಕೆಲವು ತಿಂಗಳ ನಂತರದಲ್ಲಿ ಲಾರ್ಡ್ ಮಿಂಟೋ ಅವರಿಗೆ ಲಾಲಾ ಲಜಪತ ರಾಯ್ ಅವರು ವಿರುದ್ಧ ಇರುವ ಆರೋಪಗಳಿಗೆ ಸರಿಯಾದ ಸಾಕ್ಷಾಧಾರಗಳಿಲ್ಲ ಎನಿಸಿ ಭಾರತಕ್ಕೆ ಹಿಂದಿರುಗಲು ಪರವಾನಗಿ ನೀಡಿದರು. 1907ರಲ್ಲಿ ಅಮೆರಿಕಕ್ಕೆ ತೆರಳಿದ್ದ ಲಾಲಾ ಲಜಪತ್ ರಾಯ್ ಅವರು 1919ರಲ್ಲಿ ಭಾರತಕ್ಕೆ ಹಿಂದಿರುಗಿದರು. ಅವರು ರಚಿಸಿರುವ ಪ್ರವಾಸಿ ಕಥನದಲ್ಲಿ ಪ್ರಸಿದ್ಧ ಬರಹಗಾರರಾದ ಡಬ್ಲ್ಯೂ. ಇ. ಬಿ. ಡುಬೋಯಿಸ್ ಮತ್ತು ಫ್ರೆಡ್ರಿಕ್ ಡೌಗ್ಲಾಸ್ ಮುಂತಾದವರ ಅನೇಕ ಉಕ್ತಿಗಳನ್ನು ಯಥೇಚ್ಛವಾಗಿ ಉಲ್ಲೇಖಿಸಿದ್ದಾರೆ. ಲಜಪತ ರಾಯ್ ಅವರು ಲಾಹೋರಿನಲ್ಲಿ ಬ್ರಿಟಿಷ್ ವಿದ್ಯಾಸಂಸ್ಥೆಗಳಿಗೆ ಪರ್ಯಾಯವಾಗಿ ನ್ಯಾಷನಲ್ ಕಾಲೇಜು ಪ್ರಾರಂಭಿಸಿದಾಗ ಅದರಲ್ಲಿ ಭಗತ್ ಸಿಂಗ್ ಅವರೂ ವಿದಾರ್ಥಿಯಾಗಿದ್ದರು. ೧೯೨೦ರ ವರ್ಷದಲ್ಲಿ ಕಲ್ಕತ್ತಾದಲ್ಲಿ ನಡೆದ ವಿಶೇಷ ಕಾಂಗ್ರೆಸ್ ಅಧಿವೇಶನದಲ್ಲಿ ಲಾಲಾ ಲಜಪತ ರಾಯ್ ಆ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಅಧಿವೇಶನದಲ್ಲಿ ಕೈಗೊಂಡ ನಿರ್ಣಯದ ಅನುಸಾರವಾಗಿ ಅಸಹಕಾರ ಚಳುವಳಿಯನ್ನು ಕೈಗೊಂಡಾಗ ೧೯೨೧ರಿಂದ ೧೯೨೩ರ ಅವಧಿಯವರೆಗೆ ಅವರು ಕಾರಾಗೃಹ ವಾಸವನ್ನು ಅನುಭವಿಸಿದರು. ಬಿಡುಗಡೆಯಾದ ಸಂದರ್ಭದಲ್ಲಿ ಅವರು ಲೆಜಿಸ್ಲೇಟಿವ್ ಅಸೆಂಬ್ಲಿಗೆ ಚುನಾಯಿತರಾದರು. ಪಂಜಾಬಿನ ವಿಭಜನೆಗೆ ಅವರು ಮಾತುಕತೆಗಳನ್ನು ಆಯೋಜಿಸಿದರು. ಈ ಕುರಿತು ಅವರು ೧೯೨೪ರ ವರ್ಷದಲ್ಲಿ ದಿ ಟ್ರಿಬ್ಯೂನ್ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ಸಿಖ್ ಮತ್ತು ಮುಸ್ಲಿಂ ಜನಸಂಖ್ಯೆಯನ್ನು ಆಧರಿಸಿ ಪಂಜಾಬನ್ನು ಪೂರ್ವ ಮತ್ತು ಪಶ್ಚಿಮ ಪಂಜಾಬುಗಳಾಗಿ ವಿಂಗಡಿಸಬೇಕೆಂಬ ವಾದವನ್ನು ಮಂಡಿಸಿದರು. ಅದೇ ರೀತಿಯಲ್ಲಿ ಅವರು ವಾಯವ್ಯ ಸೀಮಾ ಪ್ರದೇಶ, ಸಿಂದ್ ಮತ್ತು ಪೂರ್ವ ಬಂಗಾಳಗಳಲ್ಲಿ ಮುಸ್ಲಿಂ ರಾಜ್ಯಗಳನ್ನು ಪ್ರತ್ಯೇಕಿಸಬೇಕೆಂದು ಪ್ರತಿಪಾದಿಸಿದ್ದರು. ಸಮಾಜ ಸೇವೆ ಲಾಲಾ ಲಜಪತ ರಾಯ್ ಅವರು ತಮ್ಮ ತಾಯಿ ಅವರು ೧೯೨೭ರ ವರ್ಷದಲ್ಲಿ ನಿಧನರಾದಾಗ ಅವರ ಹೆಸರಿನಲ್ಲಿ ಗುಲಾಬಿ ದೇವಿ ಟ್ರಸ್ಟ್ ಸ್ಥಾಪಿಸಿ ಅನೇಕ ಸೇವಾ ಕಾರ್ಯಗಳಿಗೆ ಪ್ರಾರಂಭ ನೀಡಿದ್ದರು. ಮಾರಣಾಂತಿಕ ಲಾಠಿ ಪೆಟ್ಟು ೧೯೨೮ರ ವರ್ಷದಲ್ಲಿ ಭಾರತದಲ್ಲಿನ ಪರಿಸ್ಥಿತಿಯನ್ನು ವರದಿ ಮಾಡಲು ನಿಯಮಿತಗೊಂಡಿದ್ದ ಸರ್ ಜಾನ್ ಸೈಮನ್ ನೇತೃತ್ವದ ಆಯೋಗದಲ್ಲಿ ಒಬ್ಬರೇ ಒಬ್ಬರೂ ಭಾರತೀಯ ಪ್ರತಿನಿಧಿಗಳು ಇರಲಿಲ್ಲ ಎಂಬ ನಿಟ್ಟಿನಲ್ಲಿ ಭಾರತೀಯ ಸಂಘಟನೆಗಳು ಅದನ್ನು ಬಹಿಷ್ಕರಿಸಲು ತೀರ್ಮಾನ ಕೈಗೊಂಡು ದೇಶದಾದ್ಯಂತ ಚಳುವಳಿಯನ್ನು ನಡೆಸಿದವು. ಅಕ್ಟೋಬರ್ 30, 1928ರಂದು ಸೈಮನ್ ಆಯೋಗವು ಲಾಹೋರಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಲಾಲಾ ಲಜಪತರಾಯ್ ಅವರು ಶಾಂತಿಯುತ ಮೆರವಣಿಗೆಯ ನೇತೃತ್ವ ವಹಿಸಿದರು. ಆ ಸಂದರ್ಭದಲ್ಲಿ ಪೋಲಿಸ್ ಸೂಪರಿಂಟೆಂಡೆಂಟ್ ಜೇಮ್ಸ್ ಎ. ಸ್ಕಾಟ್ ಎಂಬ ದುರಹಂಕಾರಿಯು ಮೆರವಣಿಗೆಯಲ್ಲಿ ಹೋಗುತ್ತಿದ್ದವರ ಮೇಲೆ ಲಾಠಿ ಚಾರ್ಜ್ ಮಾಡುವ ಆದೇಶವಿತ್ತದ್ದೇ ಅಲ್ಲದೆ ಲಾಲಾ ಲಜಪತ ರಾಯ್ ಅವರ ಮೇಲೆ ಸ್ವಯಂ ಆಕ್ರಮಣ ನಡೆಸಿ ಅವರು ತೀವ್ರವಾಗಿ ಗಾಯಗೊಳ್ಳುವುದಕ್ಕೆ ಕಾರಣನಾದನು. ಈ ತೀವ್ರ ಪೆಟ್ಟುಗಳಿಂದ ಹೊರಬರಲಾಗದ ಲಾಲಾ ಲಜಪತ ರಾಯ್ ಅವರು ನವೆಂಬರ್ ೧೭, ೧೯೨೮ರಂದು ಹೃದಯಾಘಾತದಿಂದ ನಿಧನರಾದರು. ಸ್ಕಾಟನ ಈ ದುಷ್ಕೃತ್ಯ ಮಹಾನ್ ದೇಶಭಕ್ತ, ವಿದ್ವಾಂಸ, ಅಹಿಂಸಾ ಪ್ರವೃತ್ತಿಯ ಶಾಂತಿದೂತರೆನಿಸಿದ್ದ ಲಾಲಾ ಲಜಪತ ರಾಯ್ ಅವರ ಮರಣಕ್ಕೆ ಕಾರಣವಾಯಿತು. ಇದರಿಂದ ತೀವ್ರವಾಗಿ ನೊಂದ ಭಗತ್ ಸಿಂಗ್, ರಾಜ ಗುರು, ಸುಖದೇವ್ ಥಾಪರ್, ಚಂದ್ರಶೇಖರ್ ಆಜಾದ್ ಅಂತಹ ವೀರರು ತೀವ್ರ ಹೋರಾಟಕ್ಕಿಳಿದು ದೇಶಕ್ಕೆ ಲಾಲಾ ಲಜಪತರಾಯರ ಹೆಸರಿನಲ್ಲಿ ೧೯೫೯ರ ವರ್ಷದಲ್ಲಿ ಲಾಲಾ ಲಜಪತ ರಾಯ್ ಅವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಲಾಲಾ ಲಜಪತ ರಾಯ್ ಟ್ರಸ್ಟ್ ಆರಂಭಿಸಿ ಶಿಕ್ಷಣಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಇದನ್ನು ಪಂಜಾಬಿನ ಹಲವಾರು ಗಣ್ಯರಾದ ಆರ್. ಪಿ. ಗುಪ್ತಾ, ಬಿ. ಎಂ. ಗ್ರೋವರ್ ಮುಂತಾದವರು ಸಂಘಟಿಸಿದರು. ಇದರಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಲಾಲಾ ಲಜಪತ ರಾಯ್ ಅವರ ಹೆಸರಿನಲ್ಲಿ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು ಮೂಡಿಬಂದವು. ಮಾಹಿತಿ ಕೃಪೆ ಸ್ವಾತಂತ್ರ್ಯ ಹೋರಾಟಗಾರರು
ಸೇನಾಪತಿ ಬಾಪಟ್(ನವೆಂಬರ್ ೧೨, ೧೮೮೦ ನವೆಂಬರ್ ೨೮, ೧೯೬೭)ಭಾರತ ಸ್ವಾತಂತ್ರ ಸಂಗ್ರಾಮದ ಪ್ರಮುಖ ವ್ಯಕ್ತಿ. ಇಂಗ್ಲೆಂಡಿನ ಏಡಿನ್ ಬರೋ ದಲ್ಲಿ ವಿದ್ಯಾಬ್ಯಾಸ ಮಾಡಿದ ಇವರು ಬಾಂಬ್ ತಯಾರಿಕೆಯಲ್ಲಿ ಪರಿಣಿತರಾಗಿದ್ದರು. ಭಾರತಾದ್ಯಂತ ಪ್ರಯಾಣಿಸಿ ಜನರಿಗೆ ಸ್ವಾತಂತ್ರದ ಮಹತ್ವವನ್ನು ಸಾರಿದರು. ಆಗಸ್ಟ್ ೧೫, ೧೯೪೭ ರಂದು ಪುಣೆಯಲ್ಲಿ ಮೊದಲು ಭಾರತ ದ್ವಜ ಹಾರಿಸಲು ಇವರನ್ನು ಚುನಾಯಿಸಿ ಗೌರವಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರರು ಭಾರತದ ಗಣ್ಯರು ಭಾರತೀಯ ಇತಿಹಾಸದ ಪ್ರಮುಖರು
ಅಕ್ಟೋಬರ್ ೧೩ ಅಕ್ಟೋಬರ್ ತಿಂಗಳ ಹದಿಮೂರನೆಯ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೮೬ನೇ (ಅಧಿಕ ವರ್ಷದಲ್ಲಿ ೨೮೭ನೇ) ದಿನ. ಪ್ರಮುಖ ಘಟನೆಗಳು ೧೯೨೩ ಟರ್ಕಿ ದೇಶವು ಇಸ್ತಾಂಬುಲ್ ಬದಲಿಗೆ ಅಂಕಾರವನ್ನು ತನ್ನ ರಾಜಧಾನಿಯಾಗಿ ಮಾಡಿತು. ೧೯೯೦ ಲೆಬನೀಸ್ ಯುಧ್ಧದ ಅಂತ್ಯ. ಜನನ ನಿಧನ ರಜೆಗಳುಆಚರಣೆಗಳು ಮಧ್ವ ಜಯಂತಿ ಹೊರಗಿನ ಸಂಪರ್ಕಗಳು ಇತಿಹಾಸದಲ್ಲಿ ಈ ದಿನ ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್ದಿಸ್ಡೇ ತಾಣ ಅಕ್ಟೋಬರ್
ಜನನಬದುಕು ಅಲಹಾಬಾದ್ ನ ಪ್ರಯಾಗ್ ನಲ್ಲಿ ಡಿಸೆಂಬರ್ ೨೫ ೧೮೬೧ರಂದು ಜನಿಸಿದರು. ಓದು : ಅಲಹಾಬಾದ್ ವಿಶ್ವವಿದ್ಯಾಲಯ ಮತ್ತು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ, ಉದ್ಯೋಗ: ಶಿಕ್ಷಣ, ಪತ್ರಕರ್ತ ಮತ್ತು ಸ್ವಾತಂತ್ರ್ಯಚಳುವಳಿ ಕಾರ್ಯಕರ್ತ, ಉಪಕುಲಪತಿಗಳು:19191938 ರಿಂದ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ. ಪೀಠಿಕೆ ಮದನ ಮೋಹನ ಮಾಳವೀಯ(೧೮೬೧೧೯೪೬) ಭಾರತ ಸ್ವಾತಂತ್ರ ಚಳುವಳಿಯಲ್ಲಿ ರಾಷ್ಟ್ರೀಯ ನಾಯಕರಾಗಿದ್ದರು. ಇವರು ಬನಾರಸ್ ಹಿಂದೂ ವಿಶ್ವವಿದ್ಯಾಲಯವನ್ನು ಸಂಸ್ಥಾಪಿಸಿದರು. ಅದರ ಉಪಕುಲಪತಿಗಳಾಗಿದ್ದರು. ಮಾಲವೀಯ ಭಾರತದಲ್ಲಿ ಸ್ಕೌಟಿಂಗ್ ಸ್ಥಾಪಕರಲ್ಲಿ ಒಬ್ಬರು. ಇವರನ್ನು ಭಾರತದ ಜನತೆ ಮಹಾತ್ಮ ಎಂದು ಕರೆದರು. ಭಾರತರತ್ನ ಗೌರವ ಪ್ರದಾನ ದಿ.25122014 ರಂದು ಹಿಂದೂ ರಾಷ್ಟ್ರೀಯತೆಯ ಪ್ರತಿಪಾದಕರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಮದನ ಮೋಹನ ಮಾಳವೀಯರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಶಿಕ್ಷಣ ತಜ್ಞರೂ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸ್ಥಾಪನೆಮಾಡಿದವರೂ ಆದ ಶ್ರೀ ಮದನ ಮೋಹನ ಮಾಳವೀಯರ ೧೫೩ ನೇ ಜನ್ಮ ವರ್ಷ (1861ರ ಡಿ.25ರಂದು ಜನನ) ಅವರಿಗೆ ಮರಣೋತ್ತರವಾಗಿ ೨೦೧೫ ರ ಮಾರ್ಚ್,೩೧ ರಂದು ಪ್ರದಾನಮಾಡಲಾಯಿತು. ಜೀವನ ವಿವರ ಸ್ವಾತಂತ್ರ್ಯ ಹೋರಾಟಗಾರ, ಶಿಕ್ಷಣತಜ್ಞ, ಬಹುಮುಖ ವ್ಯಕ್ತಿತ್ವದ ಪ್ರತಿಭೆ ಮದನ ಮೋಹನ ಮಾಳವೀಯ. ಸ್ವಾತಂತ್ರ್ಯ ಹೋರಾಟದ ವೇಳೆ ಸೌಮ್ಯವಾದಿಗಳು ಮತ್ತು ತೀವ್ರವಾದಿಗಳ ನಡುವಿನ ಸೇತುವೆಯಂತೆ ಕಾರ್ಯನಿರ್ವಹಿಸಿದವರು. ಮಾಳವೀಯರ ಕಾರ್ಯ ಬಹುವಾಗಿ ನೆನಪಾಗುವುದು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪನೆಯ ಮೂಲಕ. ಹಿಂದೂ ರಾಷ್ಟ್ರೀಯವಾದದ ಅನುಯಾಯಿಯಾಗಿ, ಸ್ವತಃ ಹಿಂದೂ ಮಹಾಸಭಾವನ್ನು ಕಟ್ಟಿದ ಮಾಳವೀಯರು, ಸಮಾಜ ಸುಧಾರಣೆಗೂ ಅಪಾರವಾಗಿ ಶ್ರಮಿಸಿದವರು. ಹಿನ್ನೆಲೆ ಮಾಲವೀಯರು ೧೮೬೧ ನೇ ಡಿಸೆಂಬರ್ ೨೫ ರಂದು ಭಾರತ, ಅಲಹಾಬಾದ್, ಉತ್ತರಪಶ್ಚಿಮ ಪ್ರಾಂತ್ಯದಲ್ಲಿ ಶ್ರೀ ಗೌಡ್ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಅವರ ತಂದೆ, ಪಂಡಿತ್ ಬ್ರಿಜ್ ನಾಥ್, ಮತ್ತು ತಾಯಿ, ಮೂನಾ ದೇವಿ. ಮೂಲತಃ ಅವರು ಮಧ್ಯಪ್ರದೇಶದ ಮಾಲ್ವಾದವರು. ಅವರ ಪೂರ್ವಜರು ಸಂಸ್ಕೃತ ಪಾಂಡಿತ್ಯದಲ್ಲಿ ಹೆಸರುವಾಸಿಯಾದವರು. ಅವರ ಪೂರ್ವಜರು ಮಾಲ್ವದವರಾದ್ದರಿಂದ, ಮಾಲ್ವಿಯರು ಎಂದು ಹೆಸರಾಯಿತು. ಅವರ ನೈಜ ಉಪನಾಮ ವ್ಯಾಸ್ ಎಂದು ಇದ್ದಿತ್ತು. ಅದು ಮಾಲ್ವಿವ್ಯಾಸ ಎಂದಿತ್ತು. ಈ ಮಾಲ್ವಿವ್ಯಾಸ ಮನೆತನದವರು ಬನಾರಸ್ ಅಗರ್ವಾಲ್ ವ್ಯಾಪಾರಿಗಳಿಗೆ ಮನೆ ಪುರೋಹಿತರಾಗಿದ್ದರು. ಮಾಲವೀಯ ಅವರ ತಂದೆ ಸಹ ಸಂಸ್ಕೃತ ಗ್ರಂಥಗಳ ವಿದ್ವಾಂಸರು. ಜೀವನೋಪಾಯಕ್ಕೆ ಭಾಗವತ ಕಥಾ ಪಠಣ ಮಾಡುತ್ತಿದ್ದರು. ಶಿಕ್ಷಣ ಮಾಲವೀಯ ಸಾಂಪ್ರದಾಯಿಕವಾಗಿ ಎರಡು ಸಂಸ್ಕೃತ ಪಾಠಶಾಲೆಯಲ್ಲಿ ವ್ಯಾಸಂಗ ಮಾಡಿದರು. ನಂತರ ಒಂದು ಇಂಗ್ಲೀಷ್ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಿದರು. [11] ಮಾಲವೀಯ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹರದೇವ ಧರ್ಮ ಜ್ಞಾನೋಪದೇಶ ಪಾಠಶಾಲೆಯಲ್ಲಿ ಪ್ರಾಥಮಿಕ ವದ್ಯಾಭ್ಯಾಸ ಮುಗಿಸಿದರು. ನಂತರ ಮತ್ತೊಂದು ವಿದ್ಯಾವರ್ಧಿನಿ ಸಭಾ ಶಾಲೆಯಲ್ಲಿ ಓದು ಪೂರೈಸಿದರು. ಅನಂತರ ಅಲಹಾಬಾದ್ ಜಿಲ್ಲಾ ಶಾಲೆಗೆ ಸೇರಿದರು. ಅಲ್ಲಿದ್ದಾಗ. ಮಕರಂದ್ ಕಾವ್ಯನಾಮದ ಅಡಿಯಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದರು. ಅವು ನಂತರದಲ್ಲಿ ಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡವು. ಅಲಹಾಬಾದ್ ಜಿಲ್ಲಾ ಸ್ಕೂಲ್ (ಅಲಹಾಬಾದ್ ಜಿಲ್ಲಾ ಸ್ಕೂಲ್) ಸೇರಿದರು. ಮಾಲವೀಯರು ಅಲಹಾಬಾದ್ ವಿಶ್ವವಿದ್ಯಾಲಯದ, ಮುಯಿರ್ ಸೆಂಟ್ರಲ್ ಕಾಲೇಜ್ನಲ್ಲಿ, ೧೮೭೯ ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದರು. ಆಗ ಹ್ಯಾರಿಸನ್ ಕಾಲೇಜ್ನ ಪ್ರಾಂಶುಪಾಲರು, ಅವರ ಕುಟುಂಬದ ಆರ್ಥಿಕ ಕಷ್ಟಗಳನ್ನು ಎದುರಿಸುತ್ತಿರುವುದನ್ನು ನೋಡಿ, ಮಾಳವೀಯರಿಗೆ ಒಂದು ಮಾಸಿಕ ವಿದ್ಯಾರ್ಥಿವೇತನ ಒದಗಿಸಿದರು. ಅವರು ತಮ್ಮ ಬಿಎ ಪದವಿಯನ್ನು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು. ಅವರಿಗೆ ಸಂಸ್ಕೃತ ಎಂ.ಎ. ಮಾಡುವ ಆಸೆ ಇತ್ತು, ಆದಾಗ್ಯೂ, ತನ್ನ ಕುಟುಂಬ ಪರಿಸ್ಥಿತಿಗಳು ಮತ್ತು ತನ್ನ ತಂದೆ ಅವರ ಕುಟುಂಬ ನಿರ್ವಹಣೆಗೆ ಭಾಗವತ ಕಥಾ ನಿರೂಪಣೆಯ ವೃತ್ತಿ ಪಡೆಯಲು ಬಯಸಿದರು. ಅದರಿಂದ ೧೮೮೪ 1884 ರಲ್ಲಿ ಮದನ್ ಮೋಹನ್ ಮಾಲವೀಯ ಅವರು ಅಲಹಾಬಾದ್ನಲ್ಲಿ ಸರ್ಕಾರದ ಪ್ರೌಢಶಾಲೆಯಲ್ಲಿ ಓರ್ವ ಸಹಾಯಕ ಶಿಕ್ಷಕನಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು [11] ೧೮೬೧, ಡಿ.೨೫ ರಂದು ಅಲಹಾಬಾದ್ನ ಸಾಂಪ್ರದಾಯಿಕ ಹಿಂದೂ ಮನೆತನದಲ್ಲಿ ಜನಿಸಿದ ಮಾಳವೀಯರು, ೧೮೮೪ ರಲ್ಲಿ ಅಲಹಾಬಾದ್ ಜಿಲ್ಲಾ ಶಾಲೆಯಲ್ಲಿ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದ್ದರು ಆದರೆ ಬಳಿಕ ವಿದ್ಯಾಭ್ಯಾಸ ಮುಂದುವರಿಸುವ ದೃಷ್ಟಿಯಿಂದಾಗಿ ಅವರು ವೃತ್ತಿ ಯನ್ನು ತೊರೆದರು. ಬಳಿಕ ಕಾನೂನು ಕಲಿತ ಮಾಳವೀಯರು ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನೂ ನಡೆಸಿದರು. ಭಾರತೀಯ ಕಾಂಗ್ರೆಸ್ಸಿನಲ್ಲಿ ೫೦ ವರ್ಷಗಳ ಕಾಲ ಭಾರತೀಯ ಕಾಂಗ್ರೆಸ್ಸಿನ ಸದಸ್ಯರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ದಿಗ್ದರ್ಶಕರಾಗಿದ್ದವರು. 1909(ಲಾಹೋರ್),೧೯೧೮ (ದೆಹಲಿ), ೧೯೩೦ (ದೆಹಲಿ), ೧೯೩೨ (ಕೋಲ್ಕತಾ) ಕಾಂಗ್ರೆಸ್ ಅಧಿವೇಶನಗಳಲ್ಲಿ ಮಾಳವೀಯರು ಅಧ್ಯಕ್ಷರಾಗಿದ್ದರು. ಸ್ವಾತಂತ್ರ್ಯ ಹೋರಾಟ ಗಾರರಾದ ಗೋಪಾಲ ಕೃಷ್ಣ ಗೋಖಲೆ, ಮತ್ತು ಸಮಾಜ ಸುಧಾರಕರೂ ಆದ ಬಾಲಗಂಗಾಧರ ತಿಲಕರ ಅನುಯಾಯಿಯಾಗಿದ್ದವರು ಮಾಳವೀಯರು. ೧೯೩೦ ರಲ್ಲಿ ಮಹಾತ್ಮಾ ಗಾಂಧಿಯವರು ಉಪ್ಪಿನ ಸತ್ಯಾಗ್ರಹ ಮತ್ತು ಕಾನೂನು ಭಂಗ ಚಳವಳಿಗೆ ಕರೆ ನೀಡಿದ್ದು, ಮಾಳವೀಯರು ಸಕ್ರಿಯವಾಗಿ ಭಾಗಿಯಾಗಿದ್ದರು. ಪರಿಣಾಮ ಅವರನ್ನು ಬ್ರಿಟಿಷರು ಬಂಧಿಸಿ ಜೈಲಿಗಟ್ಟಿದರು. ಸ್ವಾತಂತ್ರ್ಯ ಹೋರಾಟಕ್ಕೆ ಮಾಳವೀಯರ ಕೊಡುಗೆಯನ್ನು ಗೋಖಲೆಯವರು ಒಂದೆಡೆ ಹೀಗೆ ನೆನೆಯುತ್ತಾರೆಮಾಳವೀಯರು ನಿಜವಾದ ತ್ಯಾಗ ಜೀವಿ. ಕೈತುಂಬ ಸಂಬಳ, ಐಷಾರಾಮದ ಜೀವನ ನಡೆಸಬಹುದಾಗಿದ್ದ ಅವರು ದೇಶದ ಕಷ್ಟನಿವಾರಣೆಗೆ ಜೀವನ ಮುಡುಪಿಟ್ಟವರು. ಆದರೆ ಹೋರಾಟದ ಜೀವನ ಅವರನ್ನು ಬಡತನಕ್ಕೆ ನೂಕಿತು. ಮಾಳವೀಯರು ಪತ್ರಕರ್ತರೂ ಆಗಿದ್ದರು. ೧೯೦೯ ರಲ್ಲಿ ಅಲಹಾಬಾದ್ನಲ್ಲಿ ಇಂಗ್ಲಿಷ್ ಪತ್ರಿಕೆ ದಿ ಲೀಡರ್ ಆರಂಭಿಸಿದರು. ಸಮಾಜಪರ, ಸ್ವಾತಂತ್ರ್ಯ ಹೋರಾಟಕ್ಕೆ ಪ್ರೋತ್ಸಾಹಕರವಾದ ವಿಚಾರಗಳನ್ನು ಈ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಮಾಳವೀಯರು ೧೯೦೩ ರಿಂದ ೧೯೧೮ ರವರೆಗೆ ಅಲಹಾಬಾದ್ ನಗರ ಪಾಲಿಕೆಯ ಸದಸ್ಯರಾಗಿ, ಪ್ರಾದೇಶಿಕ ಶಾಸಕಾಂಗ ಸಮಿತಿಯ ಸದಸ್ಯರಾಗಿ ಮಾಳವೀಯರು ಸೇವೆ ಸಲ್ಲಿಸಿದ್ದರು. ಕೇಂದ್ರೀಯ ಸಮಿತಿಯ ಸದಸ್ಯರಾಗಿ ೧೯೧೦ ರಿಂದ ೧೯೨೦ ರವರೆಗೆ, ಭಾರತೀಯ ಶಾಸನ ಸಭೆಯ ಸದಸ್ಯರಾಗಿ ೧೯೧೬ ರಿಂದ ೧೯೧೮ ರವರೆಗೆ ಸೇವೆ ಸಲ್ಲಿಸಿದ್ದರು. ೧೯೩೧ ರಲ್ಲಿ ದುಂಡು ಮೇಜಿನ ಸಭೆಗೂ ಹಾಜರಾಗಿದ್ದರು. ೧೯೩೭ ರಲ್ಲಿ ಸಕ್ರಿಯ ರಾಜಕೀಯವರನ್ನು ತೊರೆದ ಅವರು ಬಳಿಕ ಸಮಾಜ ಸುಧಾರಣೆಯತ್ತ ಗಮನ ಕೇಂದ್ರೀಕರಿಸಿದರು. ಮಹಿಳೆಯರ ಶಿಕ್ಷಣ, ವಿಧವಾ ವಿವಾಹ, ಬಾಲ್ಯವಿವಾಹ, ಡಾಂಭಿಕ ಆಚರಣೆಗಳ ವಿರುದ್ಧ ದನಿ ಎತ್ತಿದರು. ನಿಧನ ಮಾಳವೀಯರು ೧೯೪೬ ನ.೧೨ ರಂದು ನಿಧನ ಹೊಂದಿದರು. ಗಾಂಧೀಜಿ ಅಭಿಪ್ರಾಯ ಗಾಂಧೀಜಿಗೆ ಅಚ್ಚುಮೆಚ್ಚು ಮಹಾತ್ಮ ಗಾಂಧಿಯವರು ಅತಿ ಹೆಚ್ಚು ಗೌರವ ಹೊಂದಿದ್ದ ಮೂವರಲ್ಲಿ ಮಾಳವೀಯ ಒಬ್ಬರು. ತಿಲಕ್ ಮತ್ತು ಗೋಖಲೆ ಇತರ ಇಬ್ಬರು. ಲಂಡನ್ನಲ್ಲಿ ನಡೆದ ಎರಡನೇ ದುಂಡು ಮೇಜಿನ ಪರಿಷತ್ತಿನಲ್ಲಿ ಗಾಂಧೀಜಿ ಅವರೊಂದಿಗೆ ಭಾಗವಹಿಸಿದ್ದರು. ಖುದ್ದು ಸಂಸ್ಕೃತ ವಿದ್ವಾಂಸರು, ಆದರೆ, ಇಂಗ್ಲಿಷ್ ಮೇಲೆ ಅಷ್ಟೇ ಪ್ರಭುತ್ವ ಹೊಂದಿದವರು. ಅಲ್ಲಿ ನೀಡಿದ ಭಾಷಣದೊಂದಿಗೆ ಬ್ರಿಟಿಷರನ್ನು ಅಚ್ಚರಿಗೊಳಿಸಿದರು. ಆಕ್ಸ್ಫರ್ಡ್, ಕೇಂಬ್ರಿಜ್ನಲ್ಲಿ ಓದದಿದ್ದರೂ ಇಂಗ್ಲಿಷ್ ಮೇಲೆ ಹೊಂದಿರುವ ಹಿಡಿತದ ಬಗ್ಗೆ ಬಹಿರಂಗವಾಗಿ ಪ್ರಶಂಸೆ ವ್ಯಕ್ತಪಡಿಸಿದರಂತೆ ಬ್ರಿಟನ್ನ ರಾಜಕಾರಣಿ ಗಳು. ಭಾರತೀಯ ಶಾಸನಸಭೆಯ ಸದಸ್ಯರಾಗಿದ್ದ ಮಾಳವೀಯ ಅವರು ಜಲಿಯನ್ವಾಲಾಭಾಗ್ ಹತ್ಯಾಕಾಂಡವನ್ನು ಅತ್ಯುಗ್ರವಾಗಿ ಖಂಡಿಸಿದರು. ಅವರನ್ನು ಹಿಂದೂ ರಾಷ್ಟ್ರೀಯವಾದಿ ಎಂದು ಗುರುತಿಸಿದರೂ ಸಂಪ್ರದಾಯಸ್ಥ ಹಿಂದು ಎನಿಸಿಕೊಂಡರೂ ಬದಲಾವಣೆಗೆ ಸದಾ ತೆರೆದು ಕೊಂಡಿದ್ದರು. ಇದರಿಂದಾಗಿಯೇ ಮಹಾಮನ ಎಂದು ಕರೆಸಿಕೊಂಡಿದ್ದರು. ಅಸ್ಪೃಶ್ಯತೆ ನಿವಾರಣೆಗೂ ಶ್ರಮಿಸಿದರು. ಇತರ ಧರ್ಮೀಯರ ಜತೆಗೂಡಿ ಹೋರಾಡಿದರೆ ಮಾತ್ರ ಸ್ವಾತಂತ್ರ ಸಿದ್ಧಿಸಲಿದೆ ಎನ್ನುವ ನಂಬಿಕೆ ಹೊಂದಿದ್ದರು. ಪ್ರಶಸ್ತಿ ಪ್ರಶಸ್ತಿಗಳು: ಭಾರತ ರತ್ನ 2014 (ಮರಣೋತ್ತರ) ನೋಡಿ , , ಉಲ್ಲೇಖ ವಿಕ ವಿಶೇಷ ಸಹನಶೀಲ ನಾಯಕರಿಗೆ ರತ್ನ ಕಿರೀಟ ಮದನ ಮೋಹನ ಮಾಳವೀಯ , , .. ಸ್ವಾತಂತ್ರ್ಯ ಹೋರಾಟಗಾರರು ಭಾರತದ ಗಣ್ಯರು ಭಾರತೀಯ ಇತಿಹಾಸದ ಪ್ರಮುಖರು
ಬಾಬು ಜಗಜೀವನ ರಾಮ್ (೫ ಏಪ್ರಿಲ್ ೧೯೦೮ ೬ ಜುಲೈ ೧೯೮೬) ಬಾಬೂಜಿ ಎಂದು ಖ್ಯಾತರಾದ ಜಗಜೀವನ ರಾಮ್ ಸ್ವಾತಂತ್ರ ಹೋರಾಟಗಾರರಷ್ಟೆ ಅಲ್ಲದೇ, ಸಮಾಜ ಸೇವಕರೂ ಆಗಿದ್ದರು. ಬಿಹಾರದ ದಲಿತ ಕುಟುಂಬದಲ್ಲಿ ಜನಿಸಿದ ಇವರು ನೆಹರು ಅವರ ಮಂತ್ರಿಮಂಡಲದಲ್ಲಿ ಸಚಿವರಾಗಿದ್ದರು. ಮೊರಾರ್ಜಿ ದೇಸಾಯಿಯವರ ಕಾಲದಲ್ಲಿ ಭಾರತದ ಉಪ ಪ್ರಧಾನಿಯೂ ಆಗಿದ್ದರು. ಜಗಜೀವನ ರಾಮ್ ರವರು ಅಸ್ಪ್ರಶ್ಯತಾ ನಿವಾರಣೆಯ ಹೋರಾಟದ ಮಹಾನ್ ದಲಿತ ನಾಯಕರಾಗಿದ್ದರು. ಬಾಹ್ಯ ಸಂಪರ್ಕಗಳು , , , , , , ಸ್ವಾತಂತ್ರ್ಯ ಹೋರಾಟಗಾರರು ಭಾರತದ ಗಣ್ಯರು ಭಾರತೀಯ ಇತಿಹಾಸದ ಪ್ರಮುಖರು
ಈಶ್ವರ ಚಂದ್ರ ವಿದ್ಯಾಸಾಗರ (ಸೆಪ್ಟೆಂಬರ್ ೨೬ ೧೮೨೦ ಜುಲೈ ೨೯ ೧೮೯೦) ಮಹಾನ್ ವಿದ್ವಾಂಸರಾಗಿದ್ದ ಈಶ್ವರಚಂದ್ರರು ಅಷ್ಟೇ ಮಹಾನ್ ದೇಶಪ್ರೇಮಿಯಾಗಿದ್ದರು.ಬಂಗಾಳದ ಲೇಖಕ, ಸಮಾಜ ಸುಧಾರಕ. ಮಿಡ್ನಾಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಇವರ ಜನನ. ಒಂಬತ್ತನೆಯ ವಯಸ್ಸಿನಲ್ಲಿ ಇವರನ್ನು ಕಲ್ಕತ್ತೆಗೆ ಕರೆತಂದು ಅಲ್ಲಿನ ಸಂಸ್ಕತ ಮಹಾಪಾಠಶಾಲೆಗೆ ಸೇರಿಸಲಾಯಿತು. ಇವರು ಕಷ್ಟಗಳ ನಡುವೆಯೇ ವ್ಯಾಸಂಗ ಮುಂದುವರಿಸಿದರು. 19ನೆಯ ವಯಸ್ಸಿನಲ್ಲಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ವಿದ್ಯಾಸಾಗರರೆಂಬ ಪ್ರಶಸ್ತಿ ಗಳಿಸಿದರು. ಮೂವತ್ತನೆಯ ವಯಸ್ಸಿನಲ್ಲಿ ಫೋರ್ಟ್ ವಿಲಿಯಂ ಕಾಲೇಜಿನ ಮುಖ್ಯ ಪಂಡಿತರಾದರು. ಇವರು ಇಂಗ್ಲೀಷ್ ಭಾಷೆಯನ್ನೂ ಕಲಿತಿದ್ದರು. ಬಂಗಾಳದ ಮಿಡ್ನಾಪುರದಲ್ಲಿ ಜನಿಸಿದ ಇವರನ್ನು ಬಂಗಾಳದ ಮಹಾನ್ ಹೋರಾಟಗಾರರಲ್ಲಿ ಒಬ್ಬರೆಂದು ಗುರುತಿಸುತ್ತಾರೆ. ಶಿಕ್ಷಣ ತಜ್ಞ, ತತ್ವಜ್ಞಾನಿ, ವ್ಯಾಪಾರಿ, ಬರಹಗಾರ, ಸಮಾಜ ಸುಧಾರಕ ಮತ್ತು ದಾನಿಯೂ ಆಗಿದ್ದರು. 18201891. ಜನನ ಬೇತಾಳ ಪಂಚವಿಂಶತಿ ಎಂಬ ಇವರ ಬಂಗಾಳಿ ಗದ್ಯಕೃತಿ 1846ರಲ್ಲಿ ಪ್ರಕಟವಾಯಿತು. ಶಾಕುಂತಲ 1855ರಲ್ಲೂ ಸೀತಾಪರಿತ್ಯಾಗ 1862ರಲ್ಲೂ ಬೆಳಕಿಗೆ ಬಂದುವು. ಕೊನೆಯ ಪುಸ್ತಕ ಇವರ ಅತ್ಯುತ್ಕಷ್ಟ ಕೃತಿಯೆಂದು ಪರಿಗಣಿತವಾಗಿದೆ. ಈಶ್ವರಚಂದ್ರರು ಆ ಕಾಲಕ್ಕೆ ಕ್ರಾಂತಿಕಾರಿಯೆನಿಸಿದ್ದ ವಿಚಾರ ತಳೆದಿದ್ದರು. ಇವರು ಫೋರ್ಟ್ ವಿಲಿಯಮ್ ಕಾಲೇಜಿನ ಪ್ರಿನ್ಸಿಪಾಲರಾದಾಗ, ಅಲ್ಲಿ ಬ್ರಾಹ್ಮಣೇತರರಿಗೆ ಸಂಸ್ಕತ ವಿದ್ಯಾಭ್ಯಾಸದ ಅವಕಾಶವಿರಲಿಲ್ಲ. ಇಲ್ಲಿ ನೆಲೆಸಿದ್ದ ಕೆಲವು ಐರೋಪ್ಯರಿಗೆ ಸಂಸ್ಕತ ಪಂಡಿತರು ಖಾಸಗಿಯಾಗಿ ಸಂಸ್ಕತ ಪಾಠ ಹೇಳುವ ಪದ್ಧತಿ ಇತ್ತು ಮತ್ತು ಬಂಗಾಳದ ವೈದ್ಯ (ವೈಶ್ಯ) ಜಾತಿಯವರಿಗೂ ಸಂಸ್ಕತ ಕಲಿಯುವ ಅವಕಾಶವಿತ್ತು. ಸರ್ಕಾರ ಸ್ಥಾಪಿಸಿದ ಈ ಕಾಲೇಜಿನಲ್ಲಿ ಬ್ರಾಹ್ಮಣೇತರರಿಗೆ ಸಂಸ್ಕತ ಕಲಿಯಲು ಯಾವ ನಿಷೇಧವೂ ಇರಬಾರದೆಂದು ಈಶ್ವರಚಂದ್ರರು ತೀವ್ರವಾಗಿ ವಾದಿಸಿದರು. ತಮ್ಮ ನಿಲುವನ್ನು ಒಪ್ಪದಿದ್ದರೆ ತಮ್ಮ ಹುದ್ದೆ ಬಿಡುವುದಾಗಿಯೂ ಹೇಳಿದರು. ಹಳೆಯ ಕಾಲದ ಸಂಪ್ರದಾಯ ಶರಣರಿಂದ ಇದಕ್ಕೆ ವಿರೋಧವಿದ್ದರೂ ಈಶ್ವರಚಂದ್ರರ ದಿಟ್ಟ ನಿಲುವಿಗೆ ಜಯ ದೊರಕಿತು. ವ್ಯಾಸಂಗ ತಾವು ವ್ಯಾಸಂಗ ಮಾಡುತ್ತಿದ್ದ ಸಂಸ್ಕತ ಮಹಾಪಾಠಶಾಲೆಯಲ್ಲಿ ವ್ಯಾಕರಣ ಪ್ರಾಧ್ಯಾಪಕರ ಜಾಗ ತೆರವಾದಾಗ ಅದಕ್ಕೆ ಈಶ್ವರಚಂದ್ರರೇ ಅರ್ಹರೆಂದು ಕಾಲೇಜಿನ ತಮ್ಮ ವ್ಯವಸ್ಥಾಪಕರು ತೀರ್ಮಾನಿಸಿ ಅವರಿಗೆ ಆಮಂತ್ರಣವನ್ನಿತ್ತರು. ಇದರಿಂದ ಮಾಸಿಕ ವೇತನ ರೂ. 50 ರಿಂದ ರೂ. 90ಕ್ಕೆ ವೃದ್ಧಿಯಾಗುವ ಅವಕಾಶವಿತ್ತು. ಆದರೆ ಈಶ್ವರಚಂದ್ರರು ಈ ಹುದ್ದೆಗೆ ತಮಗಿಂತಲೂ ತಾರಾನಾಥ ತರ್ಕವಾಚಸ್ಪತಿಯವರೇ ಹೆಚ್ಚು ಅರ್ಹರೆಂದು ಬಗೆದರು. ತಮಗೆ ಬಂದ ಆಮಂತ್ರಣವನ್ನು ನಮ್ರತೆಯಿಂದ ನಿರಾಕರಿಸಿದ್ದು ಮಾತ್ರವಲ್ಲ ತಾರಾನಾಥರು ವಾಸಿಸುತ್ತಿದ್ದ, ನೂರು ಮೈಲಿ ದೂರದಲ್ಲಿದ್ದ ಸ್ಥಳಕ್ಕೆ ತಾವೇ ಕಾಲುನಡಿಗೆಯಿಂದ ಹೋಗಿ ಅವರನ್ನು ಈ ಹುದ್ದೆಗೆ ಒಪ್ಪಿಸಿದರು. ಈಶ್ವರಚಂದ್ರರ ನಿಸ್ಪಹತೆಗೂ ದೈಹಿಕ ಶ್ರಮಕ್ಕೆ ಹಿಂಜರಿಯದ ಸ್ವಭಾವಕ್ಕೂ ಇದೊಂದು ಉತ್ತಮ ನಿದರ್ಶನ. ತಾರಾನಾಥರೂ ಅವರ ತಂದೆಯವರೂ ಈಶ್ವರಚಂದ್ರರನ್ನು ಮಾನುಷರೂಪಿ ದೈವವೆಂದು ಹೊಗಳಿದರೆಂದು ಹೇಳಲಾಗಿದೆ. ಭಾರತೀಯ ಮಹಿಳೆಯರ ಉದ್ಧಾರಕ್ಕಾಗಿ ಈಶ್ವರಚಂದ್ರರು ಕೈಗೊಂಡ ಕಾರ್ಯಕ್ರಮಗಳು ಅವರನ್ನು ಚಿರಸ್ಮರಣೀಯರನ್ನಾಗಿ ಮಾಡಿವೆ. ಸ್ತ್ರೀ ವಿದ್ಯಾಭ್ಯಾಸಕ್ಕಾಗಿ ಚಳುವಳಿ ನಡೆಸುತ್ತಿದ್ದ ಡ್ರಿಂಕ್ ವಾಟರ್ ಬೆಥೂನ್ ಎಂಬುವರೊಂದಿಗೆ ವಿದ್ಯಾಸಾಗರರೂ ಸೇರಿದ್ದರು. ಬೆಥೂನರ ಹೆಸರಿನಲ್ಲಿ ನಡೆಯುತ್ತಿದ್ದ ಬಾಲಿಕಾಶಾಲೆಯ ವ್ಯವಸ್ಥೆಯ ಹೊಣೆ 1851ರಲ್ಲಿ ಇವರ ಮೇಲೆ ಬಿತ್ತು. ರೊಸೊಮೊಯ್ದತ್ತರು ಕಲ್ಕತ್ತೆಯ ಸಂಸ್ಕತ ಮಹಾಪಾಠಶಾಲೆಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆಯಿತ್ತಾಗ ಪ್ರಿನ್ಸಿಪಾಲರ ಹುದ್ದೆಯೊಂದು ನಿರ್ಮಿತವಾಗಿ, ಅದಕ್ಕೆ ವಿದ್ಯಾಸಾಗರರ ನೇಮಕವಾಯಿತು. 1854ರ ಕಾಯಿದೆಯನ್ವಯ ಇವರು ಬಂಗಾಳದಲ್ಲಿ ಖಾಸಗಿ ಶಾಲೆಗಳನ್ನು ಸ್ಥಾಪಿಸಿದರು. 1858ರಲ್ಲಿ ವಿದ್ಯಾಸಾಗರರು ಸರ್ಕಾರದಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಕಲ್ಕತ್ತೆಯ ಖಾಸಗಿ ಕಾಲೇಜೊಂದರ ವ್ಯವಸ್ಥಾಪಕರಾದರು. ಸಣ್ಣ ಪುಸ್ತಕಗಳ ಹೆಣ್ಣುಮಕ್ಕಳ ಮತ್ತೊಂದು ಸಮಸ್ಯೆ ಈಶ್ವರಚಂದ್ರರ ಮನಸ್ಸನ್ನು ಬಲವಾಗಿ ಬಾಧಿಸುತ್ತಿತ್ತು. ಬಾಲ್ಯವಿವಾಹ ಪದ್ಧತಿಯಿರುವ ಹಿಂದೂ ಜಾತಿಗಳಲ್ಲಿ ಅನೇಕರು ಎಳೆ ವಯಸ್ಸಿನಲ್ಲೇ ವಿಧವೆಯಾಗುವ ಸಂಭವವಿತ್ತು. ಬಾಲವಿಧವೆಯ ಬಾಳಿನ ನೋವನ್ನು ಈಶ್ವರಚಂದ್ರರು ಮನಗಂಡರು. ವಿಧವಾ ವಿವಾಹದ ಪರವಾಗಿ ಇವರು ತೀವ್ರವಾಗಿ ಪ್ರಚಾರ ಕೈಗೊಂಡರು. ಹಿಂದೂ ಧರ್ಮಶಾಸ್ತ್ರಗಳಲ್ಲಿ ಅಗಾಧ ಪಾಂಡಿತ್ಯ ಪಡೆದ ಈಶ್ವರಚಂದ್ರರು ಇಂಥ ಪುನರ್ವಿವಾಹಕ್ಕೆ ಧರ್ಮಶಾಸ್ತ್ರಗಳಿಂದ ಯಾವ ಅಡ್ಡಿಯೂ ಇಲ್ಲವೆಂದು ಸಾರಿದರು. ಈ ವಿಚಾರವನ್ನು ಪ್ರಚುರಪಡಿಸಲು ಬಂಗಾಳಿ ಭಾಷೆಯಲ್ಲಿ ಸಣ್ಣ ಪುಸ್ತಕಗಳನ್ನು ಬರೆದರು: ಉಪನ್ಯಾಸಗಳನ್ನು ಕೊಟ್ಟರು ಒಂದು ಆಂದೋಲನವನ್ನೇ ಪ್ರಾರಂಭಿಸಿದರು. ಪ್ರಾಯಶಃ ಈ ಸುಧಾರಣೆಯೇ ಈಶ್ವರಚಂದ್ರರಿಗೆ ಅಖಿಲ ಭಾರತ ಕೀರ್ತಿಯನ್ನು ಸಂಪಾದಿಸಿಕೊಟ್ಟಿತು. ಮಹರ್ಷಿ ದೇವೇಂದ್ರನಾಥ ಠಾಕೂರರು ಸ್ಥಾಪಿಸಿದ ತತ್ವ ಬೋಧಿನಿ ಪತ್ರಿಕೆಯಲ್ಲಿ ಈಶ್ವರಚಂದ್ರರು 1854ರಲ್ಲಿ ಈ ಸುಧಾರಣೆಯನ್ನು ಸಮರ್ಥಿಸಿ ಒಂದು ಲೇಖನ ಬರೆದರು. 1855ರ ಜನವರಿಯಲ್ಲಿ ಈ ವಿಷಯವಾಗಿ ಒಂದು ಸಣ್ಣ ಪುಸ್ತಕವನ್ನೇ ಪ್ರಕಟಿಸಿದರು. ಇದೊಂದು ವಾದಗ್ರಸ್ಥ ವಿಷಯವೇ ಆಯಿತು. ಅನೇಕ ಪಂಡಿತರು ಇದನ್ನು ವಿರೋಧಿಸಿ ಲೇಖನ ಬರೆದರು. 1855ರ ಅಕ್ಟೋಬರ್ ತಿಂಗಳಲ್ಲಿ ಈಶ್ವರಚಂದ್ರರು ಈ ಆಕ್ಷೇಪಣೆಗಳಿಗೆಲ್ಲ ಉತ್ತರ ಕೊಟ್ಟು ವಿದ್ವತ್ಪೂರ್ಣವೂ ಗಂಭೀರವೂ ಆದ ಮತ್ತೊಂದು ಸಣ್ಣ ಪುಸ್ತಕವನ್ನು ಪ್ರಕಟಪಡಿಸಿದರು. ಆ ತಿಂಗಳ 4ನೆಯ ದಿನಾಂಕದಂದು ಸುಮಾರು 1,000 ಜನರ ಸಹಿಯಿದ್ದ ಮನವಿಯೊಂದನ್ನು ಸರ್ಕಾರದ ಶಾಸನ ಸಭೆಯ ಕಾರ್ಯದರ್ಶಿಗಳಿಗೆ ಕಳುಹಿಸಿದರು. ಹಿಂದೂ ವಿಧವೆಯ ವಿವಾಹಕ್ಕೆ ಯಾವ ಅಡಚಣೆಯೂ ಇಲ್ಲದಂತೆ ಹಾಗೂ ವಿವಾಹಿತರ ಸಂತಾನದ ಹಕ್ಕುಬಾಧ್ಯತೆಗೆ ಧಕ್ಕೆ ಒದಗದಂತೆ ಸೂಕ್ತ ಕಾಯಿದೆ ರಚಿಸಬೇಕೆಂದು ಮನವಿಯಲ್ಲಿ ಪ್ರಾರ್ಥಿಸಲಾಗಿತ್ತು. 1855ರ ನವೆಂಬರ್ 17ನೆಯ ತಾರೀಖು ಕಲ್ಕತ್ತೆಯ ಶಾಸನಸಭೆಯಲ್ಲಿ ಈ ವಿಷಯವಾಗಿ ಜೆ.ಪಿ.ಗ್ರ್ಯಾಂಟ್ ಒಂದು ವಿಧೇಯಕ ಮಂಡಿಸಿದರು. ಇದು ಇತರ ಪ್ರಾಂತ್ಯಗಳ ಮುಖಂಡರ ಗಮನ ಸೆಳೆಯಿತು. ಪುಣೆ, ಸಿಕಂದರಾಬಾದ್, ಸತಾರಾ, ಧಾರವಾಡ, ಮುಂಬಯಿ, ಅಹಮದಾಬಾದ್, ಸೂರತ್ ಮತ್ತು ಬಂಗಾಳದ ಅನೇಕ ನಗರಗಳಿಂದ ಈ ಮಸೂದೆಯ ಪರವಾಗಿಯೂ ವಿರುದ್ಧವಾಗಿಯೂ ಸರ್ಕಾರಕ್ಕೆ ಪತ್ರಗಳು ಬಂದುವು. ವಿರುದ್ಧವಾದುವೇ ಹೆಚ್ಚು ಸಂಖ್ಯೆಯಲ್ಲಿದ್ದವೆನ್ನಬಹುದು. 1856ರ ಜುಲೈ 26ನೆಯ ತಾರೀಖು ಗೌರ್ನರ್ ಜನರಲನ ಅನುಮತಿ ಪಡೆದು ಇದು ಅಧಿನಿಯಮವಾಯಿತು. ಇದಕ್ಕನುಸಾರವಾಗಿ ಮೊದಲನೆಯ ಪುನರ್ವಿವಾಹ ಕಲ್ಕತ್ತೆಯಲ್ಲಿ ಅದೇ ಡಿಸೆಂಬರ್ 7ರಂದು ನೆರವೇರಿತು. ವಿದ್ಯಾಸಾಗರರೂ ಇತರ ಸುಧಾರಕರೂ ಈ ವಿವಾಹದಲ್ಲಿ ಬಹಳ ಆಸಕ್ತಿ ವಹಿಸಿದರು. ಅನಂತರವೂ ಒಂದೆರಡು ವಿವಾಹ ಜರುಗಿದುವು. ಈ ಸುಧಾರಣೆಯಲ್ಲಿ ನಿರ್ಭೀತರಾಗಿ ಮುಂದುವರಿದವರೆಂದರೆ ಬ್ರಹ್ಮ ಸಮಾಜದವರು. ಹಿಂದೂ ಸಮಾಜದಲ್ಲಿ ಈ ವಿವಾಹಗಳು ಕೋಲಾಹಲವನ್ನೇ ಎಬ್ಬಿಸಿದುವು. ಸುಧಾರಣಾವಾದಿಗಳೂ ವಿರೋಧಿಗಳೂ ಲೇಖನ ಬರೆದು ತೀವ್ರವಾದ ವಾದವಿವಾದಗಳಲ್ಲಿ ತೊಡಗಿದರು. ವಿರೋಧಿಗಳು ಸುಧಾರಕರನ್ನು ಹೆದರಿಸಿ, ಅವರ ಮೇಲೆ ಹಿಂಸಾಕೃತ್ಯ ನಡೆಸುವುದಕ್ಕೂ ಹಿಂಜರಿಯಲಿಲ್ಲ, ಈಶ್ವರಚಂದ್ರರು ಕಲ್ಕತ್ತೆಯಲ್ಲಿ ಸುರಕ್ಷಿತವಾಗಿ ಓಡಾಡುವುದೂ ಕಷ್ಟವಾಗಿತ್ತು. ಆದರೆ ಇದರಿಂದ ಅವರು ಭೀತರಾಗಲಿಲ್ಲ. ಸ್ಥೈರ್ಯದಿಂದ ಈ ಸುಧಾರಣಾ ಕಾರ್ಯವನ್ನು ಮುಂದುವರಿಸಿದರು. ತಮ್ಮ ಆಯುಷ್ಯದಲ್ಲಿ ತಾವು ನಡೆಸಿದ ಕಾರ್ಯಗಳಲ್ಲಿ ಇದೇ ಮಹತ್ತರವಾದದ್ದೆಂದು ಅವರ ಅಭಿಪ್ರಾಯವಾಗಿತ್ತು. ಈ ಸುಧಾರಣೆಯ ಪ್ರಭಾವ ಬಂಗಾಳದಾಚೆಗೂ ಹಬ್ಬಿತು. ಮಹಾರಾಷ್ಟ್ರದಲ್ಲಿ ರಾನಡೆ, ಮಲಬಾರಿ, ವಿಷ್ಣುಶಾಸ್ತ್ರಿ, ಕರ್ವೆ ಮುಂತಾದವರು ಇದಕ್ಕೆ ಬೆಂಬಲ ಕೊಟ್ಟರು. ವಿಧವಾ ವಿವಾಹದ ಪ್ರಚಾರಕ್ಕಾಗಿಯೇ 1861ರಲ್ಲಿ ಒಂದು ಸಂಸ್ಥೆ ಸ್ಥಾಪಿತವಾಯಿತು. 1899ರಲ್ಲಿ ಕರ್ವೆಯವರು ಹಿಂದೂ ವಿಧವೆಯರ ವಸತಿ ಗೃಹವೊಂದನ್ನು ಸ್ಥಾಪಿಸಿದರು. ಆಂಧ್ರದಲ್ಲಿ ಈ ಸುಧಾರಣೆಗಾಗಿ ಬಹಳ ಶ್ರಮಿಸಿದವರೆಂದರೆ ವೀರೇಶಲಿಂಗಂ ಪಂತುಲು. ಇವರೆಲ್ಲರಿಗೂ ಈಶ್ವರಚಂದ್ರರೇ ಸ್ಫೂರ್ತಿ ಕೇಂದ್ರ. ಇಂಥ ವಿವಾಹ ಏರ್ಪಡಿಸುವ ಸಲುವಾಗಿ ಈಶ್ವರಚಂದ್ರರು ಬಹಳ ಕಷ್ಟನಷ್ಟ ಅನುಭವಿಸಿದರು. ತಮ್ಮ ಸ್ವಂತ ಹಣವನ್ನು ಇವುಗಳಿಗಾಗಿ ಒದಗಿಸುತ್ತಿದ್ದು ಕೊನೆಗೆ ಸಾಲದ ಭಾರವನ್ನೂ ಹೊತ್ತರು. ಬಂಗಾಳದ ಕುಲೀನರೆನ್ನಿಸಿಕೊಂಡವರಲ್ಲಿದ್ದ ಬಹುಪತ್ನೀತ್ವವನ್ನು ತೊಡೆದುಹಾಕುವುದಕ್ಕ್ಕೂ ಈಶ್ವರಚಂದ್ರರು ಶ್ರಮಿಸಿದರು. ಸಾಮಾನ್ಯ ಬ್ರಾಹ್ಮಣ ಕುಲದಲ್ಲಿ ಹುಟ್ಟಿದವರು ತಮ್ಮ ಹೆಣ್ಣುಮಕ್ಕಳನ್ನು ಶ್ರೇಷ್ಠ ಕುಲದವರಿಗೆ ಕೊಡಬೇಕೆಂಬ ಹಂಬಲವೂ ಕನ್ಯಾವಿವಾಹ ನಿರ್ಬಂಧವೂ ಇದಕ್ಕೆ ಕಾರಣ. ಕುಲೀನರೆನಿಸಿಕೊಂಡ ಗಂಡಸರು ಎಷ್ಟು ಮದುವೆ ಮಾಡಿಕೊಳ್ಳುವುದಕ್ಕೂ ನಿರ್ಬಂಧವಿರಲಿಲ್ಲವಷ್ಟೇ ಅಲ್ಲ, ಅದೊಂದು ಲಾಭದಾಯಕ ವ್ಯಾಪಾರವೂ ಆಗಿತ್ತು. ಈ ವ್ಯಾಪಾರದಲ್ಲಿ ನಿರತರಾಗಿದ್ದ ದಳ್ಳಾಳಿಗಳಿಗೂ ಹೇರಳ ಲಾಭ ಸಿಗುತ್ತಿತ್ತು. ಈ ಕುಲೀನ ಗಂಡಸರು ಸತ್ತರೆ ಏಕಕಾಲಕ್ಕೆ ಅನೇಕರು ವಿಧವೆಯರಾಗುತ್ತಿದ್ದರು. ಇಂಥವರಲ್ಲಿ ಬಾಲವಿಧವೆಯರೂ ಅನೇಕ. ಆದ್ದರಿಂದ ವಿಧವಾ ವಿವಾಹದ ಸುಧಾರಣೆಗೂ ಈ ಬಹುಪತ್ನೀತ್ವ ವಿರೋಧಕ್ಕೂ ನಿಕಟ ಸಂಬಂಧವಿತ್ತು. ಸೇವೆಗಳು ಈಶ್ವರಚಂದ್ರರು 25,000 ಜನರ ಸಹಿಯಿದ್ದ ಮನವಿಯೊಂದನ್ನು 1855ರ ಡಿಸೆಂಬರ್ 27ರಂದು ಸರ್ಕಾರಕ್ಕೆ ಸಮರ್ಪಿಸಿದರು. ಇದರ ಬಗೆಗೆ ಸರ್ಕಾರದವರು ಸಹಾನುಭೂತಿಯುಳ್ಳವರಾಗಿದ್ದರು. ಆದರೆ 1857ರಲ್ಲಿ ದೇಶದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಸಂಭವಿಸಿದ್ದರಿಂದ ಸರ್ಕಾರ ಈ ವಿಚಾರದಲ್ಲಿ ಹೆಚ್ಚು ಆಸಕ್ತಿ ವಹಿಸಲಿಲ್ಲ. 1863ರಲ್ಲಿ 21,000 ಜನರ ಸಹಿಯಿದ್ದ ಇನ್ನೊಂದು ಮನವಿಯನ್ನು ಸರ್ಕಾರಕ್ಕೆ ಒಪ್ಪಿಸಲಾಯಿತು. 1866ರಲ್ಲಿ ವಿದ್ಯಾಸಾಗರರು ಮತ್ತೊಂದು ಮನವಿಯನ್ನು ಸಿದ್ಧಗೊಳಿಸಿ, ಅದಕ್ಕೆ 21,000 ಜನರ ಸಹಿ ಸಂಗ್ರಹಿಸಿ ಸರ್ಕಾರಕ್ಕೆ ಕೊಟ್ಟರು. ಆ ವರ್ಷದ ಮಾರ್ಚ್ 19ರಂದು ಈಶ್ವರಚಂದ್ರರು ಇನ್ನು ಕೆಲವು ಪ್ರಮುಖರೊಂದಿಗೆ ಸರ್ಕಾರಕ್ಕೆ ನಿಯೋಗ ಹೋದರು. ಆಗ ಸರ್ಕಾರ ಈ ಬಗ್ಗೆ ಅಭಿಪ್ರಾಯ ಸಂಗ್ರಹಣೆಗಾಗಿ ಒಂದು ಸಮಿತಿ ನೇಮಿಸಿತು. ಬಹುಪತ್ನೀ ವಿವಾಹವನ್ನು ಕಾಯಿದೆಯ ಮೂಲಕ ನಿಷೇಧಿಸುವ ಬಗ್ಗೆ ಭಿನ್ನಾಭಿಪ್ರಾಯವಿತ್ತು. ಈ ವಿಚಾರವಾಗಿ ಕಾಯಿದೆ ಮಾಡುವುದು ಉಚಿತವಲ್ಲವೆಂದು ಇಂಗ್ಲೆಂಡ್ ಸರ್ಕಾರದ ಇಂಡಿಯಾ ಕಾರ್ಯದರ್ಶಿಯ ಅಭಿಪ್ರಾಯವಾಗಿತ್ತು. ಜನರಲ್ಲಿ ವಿದ್ಯಾಪ್ರಸಾರವಾದಂತೆಲ್ಲ ಈ ದುಷ್ಟಪದ್ಧತಿ ತಾನಾಗಿಯೇ ಮಾಯವಾಗುವುದೆಂಬ ವಿಶ್ವಾಸ ಅನೇಕರಲ್ಲಿತ್ತು. ಅಂತೂ ಈ ವಿಷಯದಲ್ಲಿ ಯಾವ ಕಾಯಿದೆ ರಚಿಸಲೂ ಕಾಲ ಒದಗಿಬರಲಿಲ್ಲ. ಈಶ್ವರಚಂದ್ರರು ಮಾತ್ರ ಸುಮ್ಮನಿರಲಿಲ್ಲ. ಮುಂದೆಯೂ ಈ ಬಗ್ಗೆ ಪ್ರಚಾರ ಮಾಡುತ್ತಲೇ ಇದ್ದರು. 1891ರ ಜುಲೈ 29ರಂದು ಈಶ್ವರಚಂದ್ರ ವಿದ್ಯಾಸಾಗರರು ಕಾಲವಾದರು. ಉಲ್ಲೇಖಗಳು ಸ್ವಾತಂತ್ರ್ಯ ಹೋರಾಟಗಾರರು ಭಾರತದ ಗಣ್ಯರು ಭಾರತೀಯ ಇತಿಹಾಸದ ಪ್ರಮುಖರು
ಪೆರಿಯಾರ್ ರಾಮಸ್ವಾಮಿ (ಸೆಪ್ಟೆಂಬರ್ ೧೭, ೧೮೭೯ಡಿಸೆಂಬರ್ ೨೪, ೧೯೭೩) ಇ.ವಿ.ಆರ್, ಇ.ವಿ. ರಾಮಸ್ವಾಮಿ ನಾಯ್ಕರ್, ತಂತೈ ಪೆರಿಯಾರ್, ಅಥವಾ ಪೆರಿಯಾರ್ ಎಂದು ಹಲವಾರು ಹೆಸರುಗಳಿಂದ ಪ್ರಖ್ಯಾತರಾಗಿದ್ದ ಪೆರಿಯಾರ್ ರಾಮಸ್ವಾಮಿ ತಮಿಳುನಾಡಿನ ದ್ರಾವಿಡ ಮುನ್ನೇತ್ರ ಕಳಗಂನ ಸ್ಥಾಪಕ ಮತ್ತು ತಮಿಳು ಸ್ವಾಭಿಮಾನ ಚಳುವಳಿ ಯ ನಾಯಕರಾಗಿದ್ದರಲ್ಲದೇ, ಸ್ವಾತಂತ್ರ ಹೋರಾಟಗಾರರಾಗಿದ್ದರೂ ನಂತರ ಬ್ರಿಟಿಷರ ವಸಾಹತು ಆಡಳಿತವನ್ನು ಒಪ್ಪಿಕೊಂಡಿದ್ದರು. ತಮಿಳು ಭಾಷೆಯಲ್ಲಿ ಪೆರಿಯಾರ್ ಅಂದ್ರೆ ಗೌರವಾನ್ವಿತ, ಅಥವಾ ದೊಡ್ಡವರು ಎಂಬರ್ಥವಿದೆ. ಈ ಮಾತಿನ ಮೂರ್ತ ರೂಪವೇ ಆಗುವ ಮೂಲಕ ಲಕ್ಷಾಂತರ ಜನರಿಂದ ಪೆರಿಯಾರ್ ಎಂದು ಕರೆಸಿಕೊಳ್ಳುತ್ತಿದ್ದವರೇ ಪೆರಿಯಾರ್ ಅಥವಾ ಈರೋಡು ವೆಂಕಟ ರಾಮಸ್ವಾಮಿ ನಾಯ್ಕರ್. ಜೀವನ ಪೆರಿಯಾರ್ ಅಥವಾ ರಾಮಸ್ವಾಮಿ ಜನಿಸಿದ್ದು 1879ರ ಸೆಪ್ಟಂಬರ್ 17 ರಂದು. ಅಂದಿನ ಮದ್ರಾಸ್ ರಾಜ್ಯದ ಕೊಯಮತ್ತೂರು ಜಿಲ್ಲೆಯ ಈರೋಡಿನ ರಾಮಸ್ವಾಮಿಯವರ ಮನೆಯ ಭಾಷೆ ಕನ್ನಡವಾಗಿತ್ತು. ತಂದೆ ವೆಂಕಟಪ್ಪ ನಾಯಕರ್ , ತಾಯಿ ಚಿನ್ನತಾಯಮ್ಮ. ಕೇವಲ 5 ವರ್ಷಗಳ ಕಾಲ ವಿದ್ಯಾಭ್ಯಾಸ ನಡೆಸಿದ ರಾಮಸ್ವಾಮಿ ತನ್ನ 12ನೇ ವಯಸ್ಸಿನಲ್ಲೇ ತಂದೆ ನಡೆಸುತ್ತಿದ್ದ ವ್ಯಾಪಾರಕ್ಕೆ ನೆರವಾಗತೊಡಗಿದರು. ರಾಮಸ್ವಾಮಿ 19 ವರ್ಷದವರಾಗಿದ್ದಾಗ ಮದುವೆಯಾಯಿತು. ಪತ್ನಿ ನಾಗಮ್ಮಾಯಿ. ಈ ದಂಪತಿಗೆ ಜನಿಸಿದ ಒಬ್ಬಳೇ ಮಗಳು ಕೇವಲ 5 ತಿಂಗಳು ಮಾತ್ರ ಬದುಕಿದ್ದಳು. ಇದೇ ವೇಳೆ ತಮ್ಮ ಮನೆಯಲ್ಲಿ ತಂದೆಯವರು ಏರ್ಪಡಿಸುತ್ತಿದ್ದ ಪ್ರವಚನಗಳನ್ನು ಕೇಳುತ್ತಿದ್ದರು. ತಮ್ಮ ಮನೆಯ ಆತಿಥ್ಯ ಸ್ವೀಕರಿಸಿ ಪುರಾಣಗಳನ್ನು ಓದುತ್ತಿದ್ದ ಪಂಡಿತ ಮಹಾಶಯರನ್ನು ರಾಮಸ್ವಾಮಿ ಗಮನಿಸುತ್ತಿದ್ದರು. ಪಂಡಿತರ ಮಾತುಗಳಲ್ಲಿನ ವಿರೋಧಾಭಾಸಗಳನ್ನು ಕುರಿತು ಪ್ರಶ್ನಿಸುತ್ತಿದ್ದರು. ನಾಸ್ತಿಕರಾಗಿ ಬದಲಾದದ್ದಕ್ಕೆ ಕಾರಣ ಕೌಟುಂಬಿಕ ವಿಚಾರವಾಗಿ ತಂದೆಯವರು ಒಮ್ಮೆ ಕಟುವಾಗಿ ಬೈಯ್ದದ್ದರಿಂದ ರಾಮಸ್ವಾಮಿ ಮನೆ ಬಿಟ್ಟು ಹೊರಟರು. ಅಲ್ಲಿ ಇಲ್ಲಿ ತಿರುಗಾಡಿ, ವಾರಣಾಸಿ ತಲುಪಿದರು. ಕಾಶಿ ಅಥವಾ ವಾರಣಾಸಿ ಅನ್ನುವುದು ಹಿಂದೂಗಳ ಅತ್ಯಂತ ಪವಿತ್ರ ಕ್ಷೇತ್ರವಾಗಿತ್ತು. ಕಾಶಿಯಲ್ಲಿ ವಿಶ್ವನಾಥನ ದರ್ಶನ ಮಾಡಿದ ರಾಮಸ್ವಾಮಿಯವರಿಗೆ ಅಲ್ಲಿ ನಡೆಯುತ್ತಿದ್ದ ಚಟುವಟಿಕೆಗಳು ಬೇಸರ ತಂದವು. ಭಿಕ್ಷುಕರ ಕಾಟ, ಗಂಗಾ ನದಿಯಲ್ಲಿ ತೇಲುತ್ತಿದ್ದ ಹೆಣಗಳನ್ನು ಕಂಡು ಬೇಸರಗೊಂಡರು. ಇದೇ ವೇಳೆ 1904ರಲ್ಲಿ ರಾಮಸ್ವಾಮಿಯವರ ಬದುಕನ್ನು ಬದಲಿಸುವಂತ ಒಂದು ಘಟನೆ ನಡೆಯಿತು. ಕಾಶಿಯಲ್ಲಿನ ಛತ್ರಗಳಲ್ಲಿ ಕೇವಲ ಬ್ರಾಹ್ಮಣರಿಗೆ ಮಾತ್ರ ಉಚಿತವಾಗಿ ಊಟ ಹಾಕಲಾಗುತ್ತಿತ್ತು. ಹಸಿವೆಯಿಂದ ಕಂಗೆಟ್ಟಿದ್ದ ರಾಮಸ್ವಾಮಿ ಹೇಗಾದರೂ ಮಾಡಿ ಊಟಮಾಡಬೇಕೆಂದು ಜನಿವಾರ ಧರಿಸಿ, ಛತ್ರವೊಂದಕ್ಕೆ ಹೋದರು. ಆದರೆ ಮೀಸೆ ಬಿಟ್ಟಿದ್ದ ಇವರನ್ನು ಬ್ರಾಹ್ಮಣರಲ್ಲವೆಂದು ಗುರುತಿಸಿದ ಕಾವಲುಗಾರರು, ಅಪಮಾನಗೊಳಿಸಿ ಹೊರಗೆ ತಳ್ಳಿದರು. ಆದರೆ ಛತ್ರದಿಂದ ಹೊರಬಿದ್ದ ರಾಮಸ್ವಾಮಿಯ ಕಣ್ಣಿಗೆ, ಆ ಕಟ್ಟಡ ನಿರ್ಮಿಸಲು ಹಣ ನೀಡಿದ್ದ ವ್ಯಕ್ತಿ, ದಕ್ಷಿಣ ಭಾರತದ ದ್ರಾವಿಡ ಜನಾಂಗದ ಶ್ರೀಮಂತ ವರ್ತಕನೆಂಬುದು ಗೊತ್ತಾಯಿತು. ತಮ್ಮವನೇ ಆದ ಮನುಷ್ಯ ಕೊಟ್ಟ ಹಣದಿಂದ ನಿರ್ಮಿಸಲಾಗಿರುವ ಛತ್ರದಲ್ಲಿ ತಮಗೇ ಅನ್ನ ಹಾಕಲು ನಿರಾಕರಿಸಿದ್ದರ ಬಗ್ಗೆ ಚಿಂತಿಸಿದರು. ಇದು ವೈದಿಕರು ಮತ್ತು ಜಾತಿ ಪದ್ಧತಿ ಬಗ್ಗೆ ರಾಮಸ್ವಾಮಿಯವರಲ್ಲಿ ತಿರಸ್ಕಾರ ಹುಟ್ಟುವಂತೆ ಮಾಡಿತು. ಕಾಶಿಯಲ್ಲಿ ನಡೆದ ಘಟನೆ ಮನಸ್ಸಿಗೆ ದೊಡ್ಡ ಗಾಯವುಂಟುಮಾಡಿತ್ತು, ಹಿಂದೂ ಧರ್ಮದ ಬಗ್ಗೆ ಇದ್ದ ಒಳ್ಳೆಯ ಭಾವನೆಗಳನ್ನು ನಾಶಗೊಳಿಸಿತು. ಆವರೆಗೆ ಆಸ್ತಿಕನಾಗಿದ್ದ ರಾಮಸ್ವಾಮಿ ಅಲ್ಲಿನಿಂದ ಮುಂದಕ್ಕೆ ನಾಸ್ತಿಕರಾಗಿ ಬದಲಾದರು. ತಂದೆಯ ಮಾತಿನಿಂದ ಬೇಸರಗೊಂಡು ಮನೆ ಬಿಟ್ಟಿದ್ದ ರಾಮಸ್ವಾಮಿ ಮನೆಗೆ ಹಿಂತಿರುಗಿದರು. ವಾಣಿಜ್ಯೋದ್ಯಮಿಯಾಗಿ ಇವರು ವಾಪಸ್ ಮನೆಗೆ ಬಂದ ಮೇಲೆ ತಂದೆ, ಎಲ್ಲಾ ವ್ಯಾಪಾರ ವಹಿವಾಟನ್ನು ಇವರಿಗೆ ಒಪ್ಪಿಸಿದರು. ಮಂಡಿಯ ಹೆಸರನ್ನು ಈ.ವಿ.ರಾಮಸ್ವಾಮಿ ನಾಯ್ಕರ್ ಮಂಡಿ ಎಂದು ಬದಲಾಯಿಸಲಾಯಿತು. 1905ರ ನಂತರ ತಮ್ಮ ವಹಿವಾಟನ್ನು ಚೆನ್ನಾಗಿ ನಡೆಸಿದ ರಾಮಸ್ವಾಮಿ, ಈರೋಡಿನ ಪ್ರಸಿದ್ಧ ವಾಣಿಜ್ಯೋದ್ಯಮಿಯಾಗಿ ಬದಲಾದರು. ಸಾರ್ವಜನಿಕ ಜೀವನವನ್ನು ಪ್ರವೇಶಿಸಿ, ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಯಾದರು. ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು ಅದೇ ವೇಳೆ ಈರೋಡಿನಲ್ಲಿ ಪ್ಲೇಗ್ ರೋಗ ದಾಳಿ ಮಾಡಿತು. ನೂರಾರು ಜನರು ಪ್ರಾಣ ಕಳೆದುಕೊಂಡರು, ಜೀವ ಉಳಿಸಿಕೊಳ್ಳುವ ಸಲುವಾಗಿ ಸಾವಿರಾರು ಜನರು ಊರು ಬಿಟ್ಟರು. ಮೃತಪಟ್ಟವರ ಶವ ಸಂಸ್ಕಾರ ಮಾಡಲು ಅವರ ಹತ್ತಿರದ ಸಂಬಂಧಿಗಳೇ ನಿರಾಕರಿಸಿದಾಗ, ರಾಮಸ್ವಾಮಿಯವರು ಮುಂದೆ ನಿಂತ ಶವ ಸಂಸ್ಕಾರ ಮಾಡಿದರು. 1909ರಲ್ಲಿ ಸಂಪ್ರದಾಯವನ್ನು ಧಿಕ್ಕರಿಸಿ, ಕೇವಲ 9ನೇ ವಯಸ್ಸಿನಲ್ಲಿ ಬಾಲ ವಿಧವೆಯಾಗಿದ್ದ ತಮ್ಮ ತಂಗಿಯ ಮಗಳಿಗೆ ಮರುವಿವಾಹ ಮಾಡಿಸಿದರು. 1918ರಲ್ಲಿ ಈರೋಡ್ ಮುನ್ಸಿಪಾಲಿಟಿಯ ಅಧ್ಯಕ್ಷರಾದರು, ಜನರ ಕಲ್ಯಾಣಕ್ಕಾಗಿ ಹಲವು ಯೋಜನೆ ಕೈಗೊಂಡರು. ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಟ್ಟು ಮೆಚ್ಚುಗೆಗೆ ಪಾತ್ರರಾದರು. ಅಸಹಕಾರ ಚಳವಳಿಯಲ್ಲಿ ಇದೇ ವೇಳೆ ಕಾಂಗ್ರೆಸ್ ಮುಖಂಡ ಸಿ. ರಾಜಗೋಪಾಲಾಚಾರಿ ಮತ್ತು ರಾಮಸ್ವಾಮಿಯವರ ನಡುವೆ ಸ್ನೇಹ ಬೆಳೆಯಿತು. ರಾಜಗೋಪಾಲಾಚಾರಿಯವರು ಮಹಾತ್ಮಗಾಂಧಿ ನೇತೃತ್ವದ ಸ್ವಾತಂತ್ರ್ಯ ಚಳವಳಿ ಮತ್ತು ಕಾಂಗ್ರೆಸ್ ಪಕ್ಷವನ್ನು ಸೇರಲು ಒತ್ತಾಯಿಸಿದರು. ಈರೋಡು ಪುರಸಭಾಧ್ಯಕ್ಷ ಸ್ಥಾನ ತ್ಯಜಿಸಿದ ರಾಮಸ್ವಾಮಿ 1919ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು. ಗಾಂಧೀಜಿಯವರ ಪ್ರೇರಣೆಯಂತೆ 29 ವಿವಿಧ ಸಂಘ ಸಂಸ್ಥೆಗಳಲ್ಲಿ ತಾವು ಹೊಂದಿದ್ದ ಸ್ಥಾನಮಾನಗಳನ್ನು ತ್ಯಜಿಸಿದರು. ವಾರ್ಷಿಕವಾಗಿ 20 ಸಾವಿರ ರೂಪಾಯಿ ವರಮಾನ ತರುತ್ತಿದ್ದ ಕೌಟುಂಬಿಕ ವ್ಯವಹಾರವನ್ನು ಮುಚ್ಚಿದರು. ಮಹಾತ್ಮ ಗಾಂಧಿಯವರನ್ನು ತಮ್ಮ ನಾಯಕರೆಂದು ಪರಿಗಣಿಸಿದ ರಾಮಸ್ವಾಮಿ, ತತ್ವ ಆದರ್ಶಗಳಿಗೆ ಬದ್ಧರಾಗಿ ಜೀವನ ಆರಂಭಿಸಿದರು. ದುಬಾರಿ ಬೆಲೆಯ ವಸ್ತ್ರಗಳನ್ನು ತ್ಯಜಿಸಿ ಖಾದಿ ಬಟ್ಟೆ ಧರಿಸಿ, ಸರಳ ಜೀವನ ನಡೆಸಿದರು. ಬ್ರಿಟಿಷ್ ಆಡಳಿತದ ವಿರುದ್ಧ 1920ರಲ್ಲಿ ನಡೆದ ಅಸಹಕಾರ ಚಳವಳಿಯಲ್ಲಿ ಸಕ್ರಿಯ ಪಾತ್ರವಹಿಸಿದರು. ಈರೋಡಿನಲ್ಲಿ ಹೆಂಡ ಮಾರಾಟ ವಿರೋಧಿಸಿ ಬಂಧನಕ್ಕೊಳಗಾದರು. 1922ರಲ್ಲಿ ರಾಮಸ್ವಾಮಿಯವರನ್ನು ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಮಾಡಲಾಯಿತು. 1925ರಲ್ಲಿ ಕಂಚಿಯಲ್ಲಿ ನಡೆದ ಪ್ರಾದೇಶಿಕ ಕಾಂಗ್ರೆಸ್ ಸಮಾವೇಶದಲ್ಲಿ ದೇವಸ್ಥಾನಗಳನ್ನು ಪ್ರವೇಶಿಸಲು ಅಸ್ಪೃಶ್ಯರಿಗೆ ಅವಕಾಶ ನೀಡಬೇಕು ಮತ್ತು ಬ್ರಾಹ್ಮಣೇತರರಿಗೆ ಮೀಸಲಾತಿ ನೀಡಬೇಕು ಎಂಬ ನಿರ್ಣಯ ಮಂಡಿಸಿದರು. ಆದರೆ ಕಾಂಗ್ರೆಸ್ ಪಕ್ಷದ ಬ್ರಾಹ್ಮಣ ಸದಸ್ಯರು ಇದನ್ನು ವಿರೋಧಿಸಿದರು. ಬ್ರಾಹ್ಮಣ ಸದಸ್ಯರ ಜಾತಿವಾದವನ್ನು ಖಂಡಿಸಿ ಸಿಡಿದೆದ್ದ ರಾಮಸ್ವಾಮಿಯವರು ಕಾಂಗ್ರೆಸ್ ಪಕ್ಷ ತ್ಯಜಿಸಿದರು. ಕಾಂಗ್ರೆಸ್ ತ್ಯಜಿಸಿದ ನಂತರ ಕಾಂಗ್ರೆಸ್ನಿಂದ ಹೊರ ಬಂದ ರಾಮಸ್ವಾಮಿ, ದ್ರಾವಿಡ ಜನರ ಉದ್ಧಾರಕ್ಕಾಗಿ ಆತ್ಮಗೌರವ ಚಳವಳಿ ಹುಟ್ಟುಹಾಕಿದರು. ವೈದಿಕ ಧರ್ಮವನ್ನು ಕಟುವಾಗಿ ಟೀಕಿಸಿದರು, ಗೊಡ್ಡು ಸಂಪ್ರದಾಯಗಳನ್ನು ವಿರೋಧಿಸಬೇಕೆಂದು ಕರೆ ನೀಡಿದರು. 1926ರಿಂದಲೂ ತಮಿಳುನಾಡಿನ ಹಲವೆಡೆ ಸಮಾವೇಶಗಳನ್ನು ಏರ್ಪಡಿಸಿ ಅರಿವು ಮೂಡಿಸಿದರು. ಮನುಸ್ಮೃತಿ ಮತ್ತು ರಾಮಾಯಣವನ್ನು ಸುಡುವುದಾಗಿ ಘೋಷಿಸಿದರು. ಬ್ರಾಹ್ಮಣ ರಾಜ್ಯವನ್ನು ನಿರ್ಮೂಲನೆ ಮಾಡುವುದೇ ನನ್ನ ಗುರಿ ಎಂದು ಗುಡುಗಿದರು. 1928ರಲ್ಲಿ ಎಂಬ ಇಂಗ್ಲಿಷ್ ಮ್ಯಾಗಜಿನ್ ಪ್ರಕಟಿಸಿದರು. 1929ರಲ್ಲಿ ಯಾವುದೇ ರೀತಿಯ ಮಂತ್ರಗಳಿಲ್ಲದೆ, ಆಡಂಬರವಿಲ್ಲದೆ ಕೇವಲ ಹಾರ ಬದಲಾಯಿಸಿಕೊಂಡು, ಮಾತೃಭಾಷೆಯಲ್ಲಿ ವೈವಾಹಿಕ ಘೋಷಣೆ ಮಾಡುವ ಸ್ವಾಭಿಮಾನಿ ವಿವಾಹ ಪದ್ಧತಿ ಆರಂಭಿಸಿದರು. ಅಂತರ್ಜಾತಿಯ ವಿವಾಹ, ವಿಧವಾ ವಿವಾಹ ಗಳನ್ನು ಪ್ರೋತ್ಸಾಹಿಸಿದರು. 1929ರಿಂದ 1932ರ ವರೆಗೆ ವಿದೇಶಗಳ ಪ್ರವಾಸ ಮಾಡಿದ ಪೆರಿಯಾರ್, ಮಲೇಶಿಯಾ, ಈಜಿಪ್ಟ್, ಟರ್ಕಿ, ಗ್ರೀಸ್, ರಷ್ಯಾ, ಜರ್ಮನಿ, ಇಂಗ್ಲೆಂಡ್,ಸ್ಪೇನ್, ಫ್ರಾನ್ಸ್, ಪೋರ್ಚುಗಲ್ ಮತ್ತು ಶ್ರೀಲಂಕಾ ದೇಶಕ್ಕೂ ಭೇಟಿ ನೀಡಿದರು. ಆ ದೇಶಗಳಲ್ಲಿನ ಸಾಮಾಜಿಕ ಪರಿಸ್ಥಿತಿಯನ್ನು ಅಧ್ಯಯನ ಮಾಡಿದರು. ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳಲ್ಲಿ ಪೆರಿಯಾರ್ ಅವರು ಮಾರ್ಕ್ಸ್ವಾದವನ್ನು ಒಪ್ಪುತ್ತಿದ್ದರು, ಆದರೆ ಖಾಸಗಿ ಮಾಲೀಕತ್ವವನ್ನೇ ರದ್ದುಪಡಿಸುವುದು ಪೆರಿಯಾರ್ಗೆ ಒಪ್ಪಿಗೆಯಾಗಿರಲಿಲ್ಲ. 1937ರಲ್ಲಿ ಸಿ.ರಾಜಗೋಪಾಲಾಚಾರಿಯವರು ಅಂದಿನ ಮದ್ರಾಸ್ ಪ್ರೆಸಿಡೆನ್ಸಿಯ ಮುಖ್ಯಮಂತ್ರಿಯಾಗಿದ್ದರು, ಅವರು ಹಿಂದಿ ಭಾಷೆಯನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸಿದರು. ಈ ಧೋರಣೆ, ತಮಿಳು ಭಾಷೆ ಮತ್ತು ಸಂಸ್ಕೃತಿ ಮೇಲಿನ ದಾಳಿ ಎಂದು ಸಾರಿದ ಪೆರಿಯಾರ್ ತೀವ್ರ ಹೋರಾಟ ಆರಂಭಿಸಿದರು. ಸಾಮಾಜಿಕ ಕ್ರಾಂತಿ ಪೆರಿಯಾರ್ ತಮಿಳುನಾಡಿನಲ್ಲಿಯೆ ಬಹುದೊಡ್ಡ ಸಾಮಾಜಿಕ ಕ್ರಾಂತಿ ಯನ್ನೆ ಮಾಡಿದವರು. ಜಾತಿ ವಿಷವೃಕ್ಷವನ್ನು ಬುಡ ಮಟ್ಟ ಕಿತ್ತೊಗೆಯಲು ಕೊಡಲಿ ಹಿಡಿದು ನಿಂತವರು. ಹಿಂದೂ ಧರ್ಮದೊಳಗೆ ಇರುವ ಜಾತಿಯ ಒಳಜಗಳ, ಹತ್ಯೆಗಳ ಹಿಂದೆ ಸಾಮಾಜಿಕ ಅಸಮಾನತೆಗಳು ಸದಾ ಕೆಲಸ ಮಾಡುತ್ತಿದೆ. ಇದು ಕೋಮು ಗಲಭೆಗಿಂತ ಹೆಚ್ಚು ಅನಾಹುತವನ್ನು ಉಂಟುಮಾಡುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಹಿಂದೂಸ್ಥಾನದ ಚರಿತ್ರೆಯಲ್ಲಿ ಜಾತಿ ದ್ವೇಷದ ಬೀಜ ಬಿತ್ತಿದ ಸಂಪ್ರದಾಯವಾದಿಗಳ ವಿರುದ್ಧ ಪೆರಿಯಾರ್ ಸಾಮಾಜಿಕ ನ್ಯಾಯದ ಹೋರಾಟಗಾರನಾಗಿ ಬಹುಜನರಿಗೆ ದನಿಯದವರು. ತಮಿಳುನಾಡಿನಲ್ಲಿ ದ್ರಾವಿಡ ಚಳುವಳಿ ಹುಟ್ಟು ಹಾಕಿದ ಪೆರಿಯಾರ್ ದೇವರು, ಧರ್ಮಗ್ರಂಥಗಳನ್ನು ಚರಂಡಿಗೆ ಎಸೆದರು. ಜುಟ್ಟುಜನಿವಾರಗಳನ್ನು ಕಂಡ ಕಂಡಲ್ಲಿ ಕಿತ್ತೆಸೆಯುವಂತೆ ಕರೆ ನೀಡಿದರು. ದ್ರಾವಿಡನಾಡಿನ ಪ್ರತಿಪಾದಕರಾಗಿ 1939ರಲ್ಲಿ ದ್ರಾವಿಡನಾಡು ಸಮ್ಮೇಳನ ಸಂಘಟಿಸಿದ ಪೆರಿಯಾರ್, ತಮಿಳು, ತೆಲುಗು, ಕನ್ನಡ, ಮಲಯಾಳಿ ಭಾಷೆಗಳನ್ನಾಡುವ ಜನರನ್ನು ಸೇರಿಸಿ ದ್ರಾವಿಡ ರಾಜ್ಯ ನಿರ್ಮಾಣ ಮಾಡಬೇಕೆನ್ನುವ ಆಶಯ ಹೊಂದಿದ್ದರು. ಭಾರತ ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ಪಾಕಿಸ್ತಾನದ ರೀತಿಯಲ್ಲಿ, ಪ್ರತ್ಯೇಕ ದ್ರಾವಿಡನಾಡು ಅಸ್ತಿತ್ವಕ್ಕೆ ಬರಬೇಕೆಂದು ಪೆರಿಯಾರ್ ಒತ್ತಾಯಿಸಿದ್ದರು. 1916ರಲ್ಲಿ ಸ್ಥಾಪನೆಯಾಗಿದ್ದ ಸೌತ್ ಇಂಡಿಯನ್ ಲಿಬರೇಷನ್ ಪಕ್ಷ, ಜಸ್ಟಿಸ್ ಪಾರ್ಟಿ ಎಂದು ಹೆಸರಾಗಿತ್ತು. 1938ರಿಂದ 1944ರ ವರೆಗೆ ಪೆರಿಯಾರ್, ಜಸ್ಟಿಸ್ ಪಾರ್ಟಿ ಮುನ್ನಡೆಸಿದರು. ಇದೇ ಜಸ್ಟಿಸ್ ಪಾರ್ಟಿ, 1944ರಲ್ಲಿ ದ್ರಾವಿಡ ಕಳಗಂ ಎಂದು ಬದಲಾಯಿತು. ನಗರವಾಸಿಗಳು, ಹಳ್ಳಿಗರು ಮತ್ತು ವಿದ್ಯಾರ್ಥಿಗಳು ದ್ರಾವಿಡ ಕಳಗಂ ಪಕ್ಷದ ತತ್ವಗಳಿಂದ ಆಕರ್ಷಿತರಾದರು. ದ್ರಾವಿಡ ಕಳಗಂ ಪಕ್ಷ, ಸಾಮಾಜಿಕ ಸುಧಾರಣೆಯನ್ನು ತೀವ್ರಗೊಳಿಸಿತು. ಅಸ್ಪೃಶ್ಯತೆ ನಿವಾರಣೆಗೆ ತೀವ್ರ ತರವಾದ ಹೋರಾಟ ಆರಂಭವಾಯಿತು. 9ನೇ ಜುಲೈ 1948ರಲ್ಲಿ ಪೆರಿಯಾರ್ ಅವರು ಮಣಿಯಮ್ಮಾಯಿಯವರನ್ನು ಎರಡನೇ ಪತ್ನಿಯಾಗಿ ಸ್ವೀಕರಿಸಿದರು. ತಮಗಿಂತ 42 ವರ್ಷ ಚಿಕ್ಕ ವಯಸ್ಸಿನ ಹೆಣ್ಣುಮಗಳನ್ನು ವಿವಾಹವಾಗಿ, ಪೆರಿಯಾರ್ ತಪ್ಪು ಉದಾಹರಣೆ ಸೃಷ್ಟಿಸುತ್ತಿದ್ದಾರೆ, ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ಆರೋಪಗಳು ಕೇಳಿಬಂದವು. ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡುವ ವ್ಯಕ್ತಿಗಳು ಮತ್ತು ಚಳವಳಿಗಳು ತಮ್ಮ ದಾರಿಯಿಂದ ಹಿಂದೆ ಸರಿಯಬಾರದು ಮತ್ತು ಚುನಾವಣಾ ರಾಜಕಾರಣಕ್ಕೆ ಹೋಗಬಾರದು ಅನ್ನುವುದು ಪೆರಿಯಾರ್ ವಾದವಾಗಿತ್ತು. ಈ ಮಧ್ಯೆ, ದ್ರಾವಿಡನಾಡು ಪರಿಕಲ್ಪನೆಯು ನಂತರ ತಮಿಳುನಾಡು ಎಂಬ ಹೆಸರಿಗೆ ಬದಲಾಯಿತು. ಇದು ದಕ್ಷಿಣ ಭಾರತದ ಮಾತ್ರವಲ್ಲದೆ ಸಿಲೋನ್ನನ್ನೂ ಒಳಗೊಂಡಂತೆ ತಮಿಳು ಜನರ ಒಕ್ಕೂಟದ ಪ್ರಸ್ತಾಪಕ್ಕೆ ಕಾರಣವಾಯಿತು. 1953 ರಲ್ಲಿ, ಪೆರಿಯಾರ್ ಮದ್ರಾಸ್ ಅನ್ನು ತಮಿಳುನಾಡಿನ ರಾಜಧಾನಿಯಾಗಿ ಸಂರಕ್ಷಿಸಲು ಸಹಾಯ ಮಾಡಿದರು, ನಂತರ ಇದನ್ನು ಅವರು ಹೆಚ್ಚು ಸಾಮಾನ್ಯವಾದ ದ್ರಾವಿಡನಾಡಿಗೆ ಬದಲಿಸಿದರು. 1955 ರಲ್ಲಿ ಪೆರಿಯಾರ್ ರಾಷ್ಟ್ರಧ್ವಜವನ್ನು ಸುಡುವುದಾಗಿ ಬೆದರಿಕೆ ಹಾಕಿದರು. ಆದರೆ ಹಿಂದಿಯನ್ನು ಕಡ್ಡಾಯಗೊಳಿಸಬಾರದು ಎಂಬ ಮುಖ್ಯಮಂತ್ರಿ ಕಾಮರಾಜ್ ಅವರ ಪ್ರತಿಜ್ಞೆಯ ಮೇರೆಗೆ ಅವರು ಈ ಕ್ರಮವನ್ನು ಮುಂದೂಡಿದರು. ಅವರು ಭಾರತದ ಕೇಂದ್ರ ಸರ್ಕಾರವನ್ನು ಟೀಕಿಸಿದರು. ಭಾರತದ ಸಂವಿಧಾನವನ್ನು ಸುಡಲು ಸಾವಿರಾರು ತಮಿಳರನ್ನು ಪ್ರೇರೇಪಿಸಿದರು. ಈ ಕ್ರಮಕ್ಕೆ ಕಾರಣವೆಂದರೆ ಜಾತಿ ವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯನ್ನು ಪೆರಿಯಾರ್ ಸರ್ಕಾರಕ್ಕೆ ವಹಿಸಿದ್ದರು. ಪ್ರತ್ಯೇಕತೆಗೆ ಕಾರಣಗಳನ್ನು ತಿಳಿಸಿದ ನಂತರ ಮತ್ತು ಅದರ ವಿರುದ್ಧ ಅಭಿಪ್ರಾಯಗಳನ್ನು ತಿರಸ್ಕರಿಸಿದ ನಂತರ, ಅವರು ಜೂನ್ 5 ರಂದು ಭಾರತದ ನಕ್ಷೆಯನ್ನು ಸೇರಲು ಮತ್ತು ಸುಡಲು ಯುದ್ಧದ ಕೂಗು ಯೊಂದಿಗೆ ತಮ್ಮ ಭಾಷಣವನ್ನು ಮುಚ್ಚಿದರು. ಭಾರತೀಯ ಸಂವಿಧಾನವನ್ನು ಸುಟ್ಟುಹಾಕಿದ್ದಕ್ಕಾಗಿ ಪೆರಿಯಾರ್ಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಯಿತು. [86] ವೈಚಾರಿಕ ಮನೋಭಾವ ಹಿಂದೂ ಧರ್ಮದಲ್ಲಿನ ಜಾತಿ ಪದ್ಧತಿಯನ್ನು ಆಧಾರ ಸಹಿತ ವಿರೋಧಿಸಿದ ಅವರು ಜಾತಿಯಿಂದ ಮನುಷ್ಯ ಅವಮಾನಿತನಾಗುತ್ತಾನೆ ಹಾಗೂ ಧರ್ಮದಿಂದ ಜಾತಿ ಅವಮಾನಿತವಾಗುತ್ತದೆ. ನಾವು ಒಂದನ್ನು ಜೀವಂತ ಉಳಿಸಿಕೊಂಡು ಮತ್ತೊಂದನ್ನು ನಾಶಪಡಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ. ಆಧ್ಯಾತ್ಮ ಮತ್ತು ಭಾವನಾತ್ಮಕತೆಗಳ ಮೂಲಕ ಮುಕ್ತಿ ಪ್ರಾಪ್ತಿಗಾಗಿ ದೇವರನ್ನು ಸಾಕ್ಷಾತ್ಕರಿಸಿಕೊಳ್ಳಲು ಮಾಡಿದ ವಿಫಲ ಪ್ರಯತ್ನಗಳನ್ನು ಪಕ್ಕಕ್ಕಿಟ್ಟು ಇತಿಹಾಸದ ಉದ್ದಕ್ಕೂ ಮಾನವ ತನ್ನ ವಿಮರ್ಶಾತ್ಮಕ ಬುದ್ದಿಯನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡಿದ್ದರೆ, ಮಾನವ ಸಮಾಜದ ಪ್ರಗತಿ ಅನೇಕಪಟ್ಟು ಹೆಚ್ಚಾಗಿ, ವೇಗವಾಗಿ ಮತ್ತು ಉನ್ನತ ಮಟ್ಟದ್ದಾಗಿ ಇರುತ್ತಿತ್ತು ಎಂದು ಅಭಿಪ್ರಾಯಪಡುತ್ತಾರೆ. ಪೆರಿಯಾರರ ನಾಸ್ತಿಕವಾದ ಮೇಲ್ಮಟ್ಟದ ಬೌದ್ದಿಕ ಹಂತದಲ್ಲಿ ದೇವರ ಅಸ್ತಿತ್ವವನ್ನು ತಿರಸ್ಕರಿಸುವುದೇ ಆಗಿದೆ. 1949ರಲ್ಲಿ ಪೆರಿಯಾರರ ಮೆಚ್ಚಿನ ಶಿಷ್ಯ ಸಿ.ಎನ್.ಅಣ್ಣಾದುರೈ ಅವರು ಡಿಎಂಕೆ ಅಥವಾ ದ್ರಾವಿಡ ಮುನ್ನೇತ್ರ ಕಳಗಂ ಹೆಸರಿನಲ್ಲಿ ಪ್ರತ್ಯೇಕ ಪಕ್ಷ ಸ್ಥಾಪಿಸಿದರು. ಕೆಲವರ್ಷಗಳ ನಂತರ ಅಣ್ಣಾದುರೈ ತಮಿಳುನಾಡಿನ ಮುಖ್ಯಮಂತ್ರಿಯಾದರು. ತಮಿಳುನಾಡಿನ ಮಾಜಿ ಸಿಎಂಗಳಾದ ಕರುಣಾನಿಧಿ ಮತ್ತು ಎಂ.ಜಿ.ರಾಮಚಂದ್ರನ್ ಅಣ್ಣಾ ಶಿಷ್ಯರೇ. ತಮ್ಮಿಂದ ಯಾರೇ ದೂರವಾದರೂ ಧೃತಿಗೆಡದ ಪೆರಿಯಾರ್, ತಮ್ಮ ಹೋರಾಟ ಮುಂದುವರಿಸಿದರು. 1956ರಲ್ಲಿ ಅಂದಿನ ಮದ್ರಾಸಿನ ಮರಿನಾ ಬೀಚ್ನಲ್ಲಿ ಶ್ರೀರಾಮನ ಚಿತ್ರಗಳನ್ನು ಸುಟ್ಟರು, ಆ ವೇಳೆ ಪೆರಿಯಾರ್ರನ್ನು ಬಂಧಿಸಿ ಜೈಲಿನಲ್ಲಿ ಇರಿಸಲಾಗಿತ್ತು. ಮನುಷ್ಯರೆಲ್ಲರೂ ಸಮಾನರೇ, ಮುಗ್ಧ ಜನರನ್ನು ಶೋಷಣೆ ಮಾಡುವ ಸಲುವಾಗಿಯಷ್ಟೇ ಜಾತಿ ಮತ್ತು ವರ್ಗಗಳನ್ನು ಸೃಷ್ಟಿಸಲಾಗಿದೆ ಎಂದು ಪೆರಿಯಾರ್ ಸಾರುತ್ತಿದ್ದರು. ಭಾರತದಲ್ಲಿ ಜಾತಿ ದ್ವೇಷದ ಬೀಜ ಬಿತ್ತಿದ ಸಂಪ್ರದಾಯವಾದಿಗಳ ವಿರುದ್ಧ ಯುದ್ಧ ಸಾರಿದ ಪೆರಿಯಾರ್, ಧರ್ಮಗ್ರಂಥಗಳನ್ನು ಚರಂಡಿಗೆ ಎಸೆದರು. ಜುಟ್ಟು, ಜನಿವಾರಗಳನ್ನು ಕಿತ್ತೆಸೆಯುವಂತೆ ಕೂಗು ಹಾಕಿದರು. ತಮಿಳುನಾಡಿನಲ್ಲಿ ಬಹಳ ದೊಡ್ಡ ಸಾಮಾಜಿಕ ಕ್ರಾಂತಿ ಮಾಡಿದ ಪೆರಿಯಾರ್, ಜಾತಿಯ ವಿಷವೃಕ್ಷವನ್ನು ಬುಡಮಟ್ಟದಿಂದಲೇ ಕಿತ್ತೊಗೆಯಲು ಪ್ರಯತ್ನಿಸಿದರು, ಮೂಢನಂಬಿಕೆ ಮತ್ತು ಕಂದಾಚಾರಗಳ ವಿರುದ್ಧ ದೊಡ್ಡ ಹೋರಾಟವನ್ನೇ ನಡೆಸಿದರು. ಮೇಲ್ಜಾತಿಯಲ್ಲಿ ಜನಿಸಿದ್ದರೂ ಅಸ್ಪೃಶ್ಯತೆಯನ್ನು ಆಚರಿಸಿದ ಸಮಾಜದ ಇತರ ಜಾತಿಗಳ ವಿರುದ್ಧ ಹೋರಾಡಿದರು. ನಾಸ್ತಿಕ ಮತು ಬೌಧ್ಧ ಮತದ ಅನುಯಾಯಿಗಳಾಗಿದ್ದ ಪೆರಿಯಾರರು ಬ್ರಾಹ್ಮಣ ಜಾತಿ ಮತ್ತು ಇತರ ಮೇಲು ಜಾತಿಗಳ ಅಂದಿನ ಧೋರಣೆಗಳ ವಿರೋಧಿಗಳಾಗಿದ್ದರು. ಮಾರ್ಕ್ಸ್ ಮತ್ತು ಲೆನಿನ್ ಸಾಹಿತ್ಯ ಪ್ರಭಾವ ಪೆರಿಯಾರ್ ಅವರ ಮೇಲೆ 1917ರಲ್ಲಿ ರಷ್ಯಾದಲ್ಲಿ ನಡೆದ ಸಮಾಜವಾದಿ ಕ್ರಾಂತಿಯೂ ಪರಿಣಾಮ ಬೀರಿತ್ತು. ಮಾರ್ಕ್ಸ್ ಮತ್ತು ಲೆನಿನ್ ಸಾಹಿತ್ಯವನ್ನೂ ಪೆರಿಯಾರ್ ಓದಿದ್ದರು. ಒಂದು ಹಾವನ್ನು ಮತ್ತು ಒಬ್ಬ ಬ್ರಾಹ್ಮಣತ್ವ ಹೊಂದಿರುವ ವ್ಯಕ್ತಿಯನ್ನು ನೋಡಿದರೇ ಮೊದಲು ಬ್ರಾಹ್ಮಣತ್ವವನ್ನು ಕೊಲ್ಲು, ಆಮೇಲೆ ಹಾವನ್ನು ಕೊಲ್ಲು ಎನ್ನುತ್ತಿದ್ದರು ಪೆರಿಯಾರ್. ಈ ಮಾತಿನ ಅರ್ಥ, ಒಂದು ಹಾವು ಒಬ್ಬ ಮನುಷ್ಯನನ್ನು ಕಚ್ಚಬಹುದು, ಅದೂ ಕೂಡ, ಆತ ನನಗೆ ಕೇಡು ಮಾಡಬಹುದೆಂಬ ಭಯದಲ್ಲಿ ಅಷ್ಟೇ. ಆದರೆ ದುಷ್ಟ ಸ್ವಭಾವದ ವ್ಯಕ್ತಿ, ತನ್ನ ಸಿದ್ಧಾಂತದಿಂದ ಇಡೀ ದೇಶ ಅಥವಾ ರಾಜ್ಯವನ್ನೇ ನಾಶಮಾಡಬಲ್ಲ ಅನ್ನುವುದು. 94 ವರ್ಷಗಳ ಕಾಲ ಬದುಕಿದ್ದ ಪೆರಿಯಾರ್, ತಮ್ಮ ಬದುಕಿನ ಸುಮಾರು ಐವತ್ತಕ್ಕೂ ಹೆಚ್ಚು ವರ್ಷಗಳನ್ನು ಜನರಲ್ಲಿ ಅರಿವು ಮೂಡಿಸಲು ಮುಡಿಪಾಗಿಟ್ಟಿದ್ದರು. ವೈದಿಕ ಧರ್ಮದ ವಿರುದ್ಧ, ದ್ರಾವಿಡ ಚಳವಳಿ ಹುಟ್ಟುಹಾಕಿದ್ದರು. ಮೇಲ್ಜಾತಿಯಲ್ಲಿ ಜನಿಸಿದ್ದರೂಅಸ್ಪೃಶ್ಯತೆ ಯನ್ನು ಆಚರಿಸಿದ ಸಮಾಜದ ಇತರ ಜಾತಿಗಳ ವಿರುದ್ಧ ಹೋರಾಡಿದರು. ನಾಸ್ತಿಕ ಮತು ಬೌಧ್ಧ ಮತದ ಅನುಯಾಯಿಗಳಾಗಿದ್ದ ಪೆರಿಯಾರರು ಬ್ರಾಹ್ಮಣ ಜಾತಿ ಮತ್ತು ಇತರ ಮೇಲು ಜಾತಿಗಳ ಅಂದಿನ ಧೋರಣೆಗಳ ವಿರೋಧಿಗಳಾಗಿದ್ದರು.ದೇವರು ಮತ್ತು ದೆವ್ವದ ಕುರಿತು ಬಹಳ ಚೆನ್ನಾಗಿ ತಿಳಿದುಕೊಂಡು ಜನರಿಗೆ ತಿಳಿಸಿದರು. ನಿಧನ ರಾಮಸ್ವಾಮಿ ಪೆರಿಯಾರರು ಡಿಸೆಂಬರ್ 24, 1973ರಲ್ಲಿ ತಮ್ಮ 94ನೆಯ ವಯಸ್ಸಿನಲ್ಲಿ ನಿಧನರಾದರು. ಭಾರತೀಯ ಸಮಾಜದಲ್ಲಿ ಮೂಲಭೂತ ಬದಲಾವಣೆಗಳಿಗಾಗಿ ತಮ್ಮ ಸ್ವಾರ್ಥ ತ್ಯಜಿಸಿ ತಾವು ನಂಬಿದ್ದ ಧ್ಯೆಯ, ಮಾನವೀಯತೆ, ಸಮಾನತೆ, ಸ್ವಾಭಿಮಾನಗಳಿಗಾಗಿ ಶ್ರಮಿಸಿದ ರಾಮಸ್ವಾಮಿ ನಾಯ್ಕರ್ ಅವರು ಹಲವು ನಿಟ್ಟಿನಲ್ಲಿ ಸ್ಮರಣೀಯರಾಗಿದ್ದಾರೆ. ಬಾಹ್ಯ ಸಂಪರ್ಕಗಳು ( ) ( ) () ... () ಉಲ್ಲೇಖಗಳು ಸಾಮಾಜಿಕ ಕಾರ್ಯಕರ್ತರು ತಮಿಳುನಾಡಿನ ರಾಜಕಾರಣಿಗಳು ತಮಿಳುನಾಡು ಪ್ರಸಿದ್ಧ ವ್ಯಕ್ತಿಗಳು ೧೮೭೯ ಜನನ ೧೯೭೪ ನಿಧನ ಹೋರಾಟಗಾರರು
ಹಿಂದೂಸ್ತಾನಿ ಲಾಲ್ ಸೇನಾ (ಭಾರತದ ಕೆಂಪು ಸೇನೆ) ಸ್ವಾತಂತ್ರ ಚಳುವಳಿಯ ಕಾಲದಲ್ಲಿ ಭಾರತದಲ್ಲಿ ಬ್ರಿಟಿಷರ ವಸಾಹತುಷಾಹಿಯನ್ನು ವಿರೋಧಿಸುವುದಕ್ಕಾಗಿ ಹುಟ್ಟಿದ ಗೆರಿಲ್ಲಾ ಸಂಘಟನೆ. ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ನೆನಪಿನಲ್ಲಿ, ಅದರ ದಿನಾಚರಣೆ ದಿನವಾದ ಎಪ್ರಿಲ್ ೧೩, ೧೯೩೯ ರಂದು ಇದನ್ನು ಸ್ಥಾಪಿಸಲಾಯಿತು. ಸ್ವಾತಂತ್ರ್ಯ ಹೋರಾಟಗಾರರು ಭಾರತೀಯ ಇತಿಹಾಸದ ಪ್ರಮುಖರು
ದಿ ಇಂಡಿಯನ್ ನ್ಯಾಷನಲ್ ಆರ್ಮಿ ಅಥವಾ ಆಝಾದ್ ಹಿಂದ್ ಫೌಜ್ ಎರಡನೆಯ ಮಹಾಯುಧ್ಧದಲ್ಲಿ ಇಂಪೀರಿಯಲ್ ಜಪಾನ್ ಆರ್ಮಿ ಯೊಂದಿಗೆ ಮಿತ್ರಸೈನ್ಯದ ವಿರುದ್ಧ ಹೋರಾಡಿದ ಭಾರತೀಯ ಸಂಸ್ಥೆ. ಎರಡನೆಯ ಮಹಾಯುಧ್ಧದ ಸಮಯದಲ್ಲಿ ಜಪಾನಿಯರಿಂದ ಯುಧ್ಧ ಕೈದಿಗಳಾದ ಬ್ರಿಟಿಷ್ ಸೈನ್ಯದ ಭಾರತೀಯರನ್ನು ಸಂಘಟಿಸಿ ಈ ಸೈನ್ಯ ವನ್ನು ರಚಿಸಲಾಯಿತು. ಈ ಸೈನ್ಯವನ್ನು ಸಂಘಟಿಸುವದರಲ್ಲಿ ರಾಸಬಿಹಾರಿ ಘೋಷ ತುಂಬಾ ಶ್ರಮಪಟ್ಟವರು. ಸುಭಾಷಚಂದ್ರ ಬೋಸ್ ಈ ಸೈನ್ಯದ ಮುಖಂಡತ್ವ ವಹಿಸಿಕೊಂಡರು. ಕ್ಯಾಪ್ಟನ್ ಶಹಾನವಾಜ್, ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ಇವರು ಈ ಸೈನ್ಯದ ಪ್ರಮುಖರು. ಕರ್ನಾಟಕದವರೇ ಆದ ಐ.ಎನ್.ಎ. ರಾಮರಾವ ಈ ಸೈನ್ಯದಲ್ಲಿದ್ದರು. ಯುದ್ಧಸಮಯದಲ್ಲಿ ಬರ್ಮಾ (ಈಗಿನ ಮೈನ್ಮಾರ್) ದೇಶದಲ್ಲಿ ಮುನ್ನುಗ್ಗಿ, ಭಾರತದ ಗಡಿಯ ಹತ್ತಿರಕ್ಕೆ ಈ ಸೈನ್ಯ ತಲುಪಿತ್ತು. ಆದರೆ ಜಪಾನ್ನ ಮೇಲೆ ಅಣುಬಾಂಬ ದಾಳಿಯಿಂದಾಗಿ, ಜಪಾನ ಮಿತ್ರಸೈನ್ಯಕ್ಕೆ ಶರಣಾಗುವದರೊಂದಿಗೆ ಆಝಾದ ಹಿಂದ ಸೈನ್ಯಕ್ಕೆ ಹಿನ್ನಡೆಯಾಯಿತು. ಆಝಾದ ಹಿಂದ್ ಸೈನ್ಯದ ಮುಖ್ಯಸ್ಥ ಸುಭಾಷಚಂದ್ರ ಬೋಸ್ ಅವರ ವಿವಾದಾತ್ಮಕ ವಿಮಾನ ದುರಂತದೊಂದಿಗೆ ಈ ಸೈನ್ಯದ ಹೋರಾಟ ಸಂಪೂರ್ಣವಾಗಿ ಮುಕ್ತಾಯವಾಯಿತು. ಸಂದರ್ಭ ಇಂಡಿಯನ್ ನ್ಯಾಷನಲ್ ಆರ್ಮಿ ಈ ಹೆಸರಿನ ಪ್ರಸಿದ್ಧ ಸೈನ್ಯವನ್ನು ಕಟ್ಟಿದವರು ಸುಭಾಸ್ಚಂದ್ರ ಬೋಸ್. ಕಟ್ಟಿದ ಸಂದರ್ಭ ಗಮನಾರ್ಹವಾದುದು. ಮೊದಲ ಮಹಾಯುದ್ಧವಾದ ಮೇಲೆ ಭಾರತೀಯ ರಾಷ್ಟ್ರೀಯ ಚಳವಳಿಯನ್ನು ದೂರ ಪ್ರಾಚ್ಯದಲ್ಲೂ ಹರಡಲು ಮೊಟ್ಟಮೊದಲನೆಯದಾಗಿ ಪ್ರಯತ್ನ ಮಾಡಿದವರು ರಾಶ್ಬಿಹಾರಿ ಬೋಸ್. ಈ ಪ್ರಯತ್ನದ ಫಲವಾಗಿ ಜಪಾನಿನಲ್ಲಿ ಭಾರತೀಯ ಸ್ವಾತಂತ್ರ್ಯ ಮಂಡಲಿ ಸ್ಥಾಪಿತವಾಯಿತು. ಜಪಾನೀಯರ ಸಹಾಯ, ಸಹಕಾರದಿಂದ ಕೆಲಸವನ್ನು ಆರಂಭಿಸಿದ ರಾಶ್ಬಿಹಾರಿ ಬೋಸ್ ಎರಡನೆಯ ಮಹಾಯುದ್ಧ ಪ್ರಾರಂಭವಾಗುವವರೆಗೆ ಅಹೋರಾತ್ರಿ ದುಡಿದರು. ಎರಡನೆಯ ಮಹಾಯುದ್ಧ ಬ್ರಿಟನ್ ಮತ್ತು ಅಮೆರಿಕದ ವಿರುದ್ಧವಾಗಿ 1941ರಲ್ಲಿ ಜಪಾನ್ ಯುದ್ಧವನ್ನು ಘೋಷಿಸಿದಾಗ ಜಪಾನಿನ ಭಾರತೀಯ ಸ್ವಾತಂತ್ರ್ಯದ ಮಂಡಲಿಯ ಆಶ್ರಯದಲ್ಲಿ ಭಾರತವನ್ನು ಬ್ರಿಟನ್ನಿನ ಹಿಡಿತದಿಂದ ವಿಮುಕ್ತಿಗೊಳಿಸಲು ಶಸ್ತ್ರಾಸ್ತ್ರಗಳ ಚಳವಳಿಯನ್ನು ಆರಂಭಿಸಲು ತಮಗೆ ಎಲ್ಲ ನೆರವನ್ನು ನೀಡಬೇಕೆಂದು ಬೋಸರು ಮತ್ತು ಮಿತ್ರರು ಜಪಾನ್ ಸರ್ಕಾರವನ್ನು ಪ್ರಾರ್ಥಿಸಿದರು. ಬೋಸ್ನ ಯೋಜನೆಯನ್ನು ಜಪಾನಿನ ಪ್ರಧಾನಿ ಟೊಜೊ ಬಹುವಾಗಿ ಮೆಚ್ಚಿಕೊಂಡು, ಎಲ್ಲ ಸಹಾಯವನ್ನು ಒದಗಿಸಿಕೊಟ್ಟ. ದೂರಪ್ರಾಚ್ಯದಲ್ಲಿ ನೆಲೆಸಿದ್ದ ಎಲ್ಲ ಭಾರತೀಯರ ಅಭಿಪ್ರಾಯವನ್ನು ಪಡೆದು ಬ್ಯಾಂಗ್ಕಾಕ್ನಲ್ಲಿ ಭಾರತೀಯ ಸ್ವಾತಂತ್ರ್ಯ ಮಂಡಲಿಯ ಆಶ್ರಯದಲ್ಲಿ ಪೂರ್ವ ಏಷ್ಯದಲ್ಲಿ ನೆಲಸಿದ್ದ ಭಾರತೀಯರ ಪ್ರತಿನಿಧಿಗಳ ಸಭೆ ಕರೆದು, ಬೋಸರನ್ನು ಅದರ ನಾಯಕನನ್ನಾಗಿ ಆರಿಸಲಾಯಿತು. ಸಭೆ ಮುಕ್ತಾಯಗೊಂಡ ಮೇಲೆ ಮಂಡಲಿಯ ಶಾಖೆಗಳನ್ನು ಪ್ರಮುಖ ನಗರಗಳಲ್ಲಿ ಸ್ಥಾಪಿಸಲಾಯಿತು. ಸಿಂಗಪುರದಲ್ಲಿ ಶಸ್ತ್ರಸಜ್ಜಿತ ಸೇವಕರುಗಳಿಗೆ ತರಬೇತು ಕೊಡಲಾಯಿತು. ಯುದ್ಧ ಕೈದಿಗಳೇ ಅಧಿಕ ಸಂಖ್ಯೆಯಲ್ಲಿದ್ದ ಆ ಪಡೆಯಲ್ಲಿ ಒಗ್ಗಟ್ಟು, ಶಿಸ್ತು, ಸಂಯಮ ಮಾಯವಾದವು. ಭಾರತ ಸ್ವಾತಂತ್ರ್ಯ ಹೋರಾಟ ಸುಭಾಸ್ಚಂದ್ರಬೋಸರೇ ಸ್ವಾತಂತ್ರ್ಯ ಚಳವಳಿಯನ್ನು ಹರಡಲು ತಕ್ಕವರೆಂದು ಭಾವಿಸಿ, ರಾಶ್ ಬಿಹಾರಿ ಬೋಸ್ ಜಪಾನಿನ ಸರ್ಕಾರದ ಅನುಮತಿ ಪಡೆದು ಅವರನ್ನು ಪೂರ್ವ ಏಷ್ಯಕ್ಕೆ ಬರುವಂತೆ ಆಹ್ವಾನಿಸಿದರು. ಸುಭಾಸ್ಚಂದ್ರ ಬೋಸ್ 1943ರ ಜೂನ್ 13ರಂದು ಟೋಕಿಯೊಗೆ ಆಗಮಿಸಿದರು. ಭಾರತೀಯ ಸ್ವಾತಂತ್ರ್ಯದ ಮಂಡಲಿಯ ಅಧ್ಯಕ್ಷರಾಗಿ ಅವರು 1943ನೆಯ ಅಕ್ಟೋಬರ್ 21ರಂದು ಅಜಾದ್ ಹಿಂದ್ ತಾತ್ಕಾಲಿಕ ಸರ್ಕಾರವನ್ನು ಘೋಷಿಸಿದರು. ಚಳವಳಿಯನ್ನು ತೀವ್ರಗೊಳಿಸುವುದಕ್ಕಾಗಿ ಭಾರತ ರಾಷ್ಟ್ರೀಯ ಸೇನೆಯನ್ನು ಕಟ್ಟಿದರು. ಜಪಾನೀಯರ ಶಸ್ತ್ರಾಸ್ತ್ರಗಳನ್ನು ಒದಗಿಸಿಕೊಟ್ಟು ಬೋಸರು ಸೇನೆಗೆ ಹೊಸ ಚೇತನವನ್ನು ತುಂಬಿದರು. ಜೈಹಿಂದ್, ಚಲೋ ದಿಲ್ಲಿಎಂಬ ವೀರ ಘೋಷಣೆಗಳನ್ನು ಬಳಕೆಗೆ ತಂದರು. ಯುದ್ಧದಿಂದಲ್ಲದೆ ಬೇರಾವ ಸಾಧನದಿಂದಲೂ ಭಾರತದ ಸ್ವಾತಂತ್ರ್ಯ ಸಾಧ್ಯವಿಲ್ಲವೆಂದು ಘೋಷಿಸಿ, ಚಳವಳಿಯನ್ನು ಸಮರದ ತಳಹದಿಯ ಮೇಲೆ ರೂಪಿಸಿ, ತೀವ್ರಗೊಳಿಸಿದರು. ಮುಖ್ಯ ಸೇನಾಧಿಪತ್ಯವನ್ನು ತಾವೇ ವಹಿಸಿಕೊಂಡು, ದಂಡೆತ್ತಿ ಹೋಗಿ ಬ್ರಿಟಿಷ್ ಸೈನ್ಯದ ಮೇಲೆ ಬಿದ್ದು, ಅವರನ್ನೂ ಅವರ ನೆಲಗಳನ್ನೂ ಧ್ವಂಸ ಮಾಡತೊಡಗಿದರು. ಚಳವಳಿಯನ್ನು ಕ್ರಮಬದ್ಧವಾಗಿಯೂ ದಕ್ಷತೆಯಿಂದಲೂ ನಡೆಸುವ ಉದ್ದೇಶದಿಂದ ಅವರು ಆದ್ ಹಿಂದ್ ತಾತ್ಕಾಲಿಕ ಸರ್ಕಾರದ ಮೂಲ ಕೇಂದ್ರವನ್ನು ಸಿಂಗಪುರದಿಂದ ರಂಗೂನಿಗೆ ವರ್ಗಾಯಿಸಿದರು. ಹಿನ್ನಡೆ 1944ನೆಯ ಸೆಪ್ಟೆಂಬರ್ನಲ್ಲಿ ಇಟಲಿ ಸೋತು ಶರಣಾದುದು ಅಜಾದ್ ಹಿಂದ್ ಚಳವಳಿಗೆ ಭಾರಿ ಪೆಟ್ಟು ಬಿದ್ದಂತಾಯಿತು. ಅಮೆರಿಕ ಪೆಸಿಫಿಕ್ ಸಾಗರದಲ್ಲಿ ತನ್ನ ನೆಲೆಗಳನ್ನು ಮತ್ತೆ ಪಡೆದುಕೊಂಡದ್ದರಿಂದ ಜಪಾನ್ ಹೆಚ್ಚಿನ ಗಮನವನ್ನು ತನ್ನ ನಗರ ರಕ್ಷಣೆಯ ಕಡೆ ಹರಿಸಬೇಕಾಯಿತು. ತತ್ಪರಿಣಾಮವಾಗಿ ಅಜಾದ್ ಹಿಂದ್ ಸೈನ್ಯಕ್ಕೆ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ನೆರವನ್ನು ಜಪಾನ್ ಕೊಡಲಾರದೆ ಹೋಯಿತು. ಇಂಡೋಬರ್ಮ ಗಡಿಯಲ್ಲಿ ಅಜಾದ್ ಹಿಂದ್ ಸೈನ್ಯ ನಡೆಸಿದ ಹೋರಾಟ ಸಾರ್ಥಕವಾಗಲಿಲ್ಲ. ಸೈನ್ಯ ವೀರಾವೇಶದಿಂದ ಯುದ್ಧ ಮಾಡಿದರೂ ಇಂಫಾಲ್ ಮತ್ತು ಕೊಹಿಮ ಆಕ್ರಮಣಗಳಲ್ಲಿ ಸೋತುಹೋಯಿತು. ಮಣಿಪುರವನ್ನು ರಕ್ಷಿಸುವುದಕ್ಕಾಗಿ ಬ್ರಿಟನ್ ಶಕ್ತಿಮೀರಿ ಹೋರಾಡಿತು. ಅದರ ಶಸ್ತ್ರಾಸ್ತ್ರಗಳು ಉತ್ತಮ ದರ್ಜೆಯವಾಗಿದ್ದವು. ಸ್ವಲ್ಪಕಾಲದ ಮೇಲೆ ಗಡಿಯ ಸಮರಗಳಲ್ಲಿ ಬ್ರಿಟಿಷ್ ಯುದ್ಧ ಯಂತ್ರಗಳ ಬಳಕೆಯನ್ನು ಕಡಿಮೆ ಮಾಡಲು ಸಾಧ್ಯವಾಗಲೇ ಇಲ್ಲ. 1944ರ ಹೊತ್ತಿಗೆ ಅಜಾದ್ ಹಿಂದ್ ಸೈನ್ಯ ಯುದ್ಧವನ್ನು ಪೂರ್ಣವಾಗಿ ಕಳೆದುಕೊಂಡಿತೆಂದೇ ಹೇಳಬಹುದು. 1945ರ ಆದಿಭಾಗದಲ್ಲಿ ಬರ್ಮದ ಉತ್ತರ ಮತ್ತು ದಕ್ಷಿಣ ಭಾಗಗಳಿಗೆ ಬ್ರಿಟಿಷ್ ಸೈನ್ಯ ತಂಡೋಪತಂಡವಾಗಿ ಧಾವಿಸಲು ಪ್ರಾರಂಭಿಸಿತು. ಅವರು ಮಾಂಡಲೆಯನ್ನು ವಶಪಡಿಸಿಕೊಂಡು ಅನಂತರ ರಂಗೂನನ್ನು ತಮ್ಮ ಅಧೀನಪಡಿಸಿಕೊಂಡರು. 1945ರ ಆಗಸ್ಟ್ನಲ್ಲಿ ಜಪಾನ್ ಶರಣಾಗತವಾಯಿತು. ಇದರ ಜೊತೆಯಲ್ಲಿಯೇ ಅಜಾದ್ ಹಿಂದ್ ಚಳವಳಿ ನಿಂತಿತು. ಈ ಚಳವಳಿ ಜಪಾನೀಯರ ಯುದ್ಧದೊಂದಿಗೆ ಬೆರೆತುಹೋದದ್ದರಿಂದ ಜಪಾನ್ ಸೋತಾಗ ಚಳವಳಿಯೂ ಕೊನೆಗೊಂಡಿತು. ಮಹತ್ವ ಭಾರತ ರಾಷ್ಟ್ರೀಯ ಸೇನೆಯ ಅಧಿಕಾರಿಗಳನ್ನು ಭಾರತದಲ್ಲಿ ವಿಚಾರಣೆಗೆ ಗುರಿ ಪಡಿಸಿದಾಗ ಆ ಸೇನೆಯ ಮಹತ್ತ್ವವೇನೆಂಬುದು ಎಲ್ಲರಿಗೂ ಗೊತ್ತಾಯಿತು. ಭಾರತದ ರಾಜಕೀಯ ಪಕ್ಷಗಳೂ ಜನತೆಯೂ ಅವರನ್ನು ಸ್ವಾತಂತ್ರ್ಯ ಯೋಧರೆಂದು ಹೊಗಳಿದವು. ಅವರನ್ನು ಸೆರೆಮನೆಗಳಿಂದ ಬಿಡುಗಡೆ ಮಾಡಬೇಕೆಂದು ಭಾರತದಲ್ಲಿ ಗಲಭೆಗಳು, ಚಳವಳಿಗಳು ನಡೆದವು. ಭಾರತದ ಕೋಟಿ ಕೋಟಿ ಜನರ ಮನಸ್ಸಿನಲ್ಲಿ ಭಾರತ ರಾಷ್ಟ್ರೀಯ ಸೈನ್ಯ ಶಾಶ್ವತ ಸ್ಥಾನವನ್ನು ಪಡೆದಿದೆ. ಅದು ವಿಶ್ವದ ವಿವಿಧ ಭಾಗಗಳಲ್ಲಿ ಜರುಗಿದ ಸಮರಗಳಲ್ಲಿ ಭಾಗವಹಿಸಿ, ತನ್ನ ಧೈರ್ಯೋತ್ಸಾಹಗಳನ್ನು ಪ್ರದರ್ಶಿಸಿ ಭಾರತೀಯರಿಗೆ ಕೀರ್ತಿಯನ್ನು ತಂದು ಕೊಟ್ಟಿತು. ವಿಶ್ವದ ದೃಷ್ಟಿಯಲ್ಲಿ ಅದರ ಗೌರವ ಘನತೆಗಳು ಮೇಲೇರಿದವು. ಭಾರತದ ಸ್ವಾತಂತ್ರ್ಯ ಸಾಧನೆಗೆ ಭಾರತ ರಾಷ್ಟ್ರೀಯ ಸೇನೆಯ ಕೊಡುಗೆ ಗಮನಾರ್ಹವಾದದ್ದು. ಉಲ್ಲೇಖಗಳು ಸ್ವಾತಂತ್ರ್ಯ ಹೋರಾಟಗಾರರು ಭಾರತೀಯ ಇತಿಹಾಸದ ಪ್ರಮುಖರು
ಹಲವಷ್ಟು ನಿಗೂಢತೆಗಳನ್ನು ತನ್ನ ಒಡಲಾಳದಲ್ಲಿ ಅಡಗಿಸಿಕೊಂಡಿರುವ ಬರ್ಮುಡಾ ತ್ರಿಕೋನ (ಬರ್ಮುಡಾ ಟ್ರಯಾಂಗಲ್) ಸೈತಾನನ ತ್ರಿಕೋನ ಎಂದೇ ಪ್ರಸಿದ್ಧಿ ಪಡೆದಿದೆ. ಉತ್ತರ ಅಂಟ್ಲಾಂಟಿಕ ಸಾಗರದ ಪಶ್ಚಿಮ ಭಾಗದಲ್ಲಿ ಕಂಡುಬರುವ ಬರ್ಮುಡಾ ತ್ರಿಕೋನ ವೈಜ್ಞಾನಿಕತೆಗೆ ಸವಾಲಾಗಿದೆ. ಸೈತಾನನ ತ್ರಿಕೋನ ಎಂದು ಕುಖ್ಯಾತವಾಗಿರುವ ಈ ಬರ್ಮುಡಾ ತ್ರಿಕೋನ ದ ಮೇಲೆ ಹಾದು ಹೋಗುವ ವಿಮಾನಗಳು, ಹಡಗುಗಳು ನಿಗೂಢವಾಗಿ ಕಣ್ಮರೆಯಾಗುತ್ತದೆ. ಸುಸಜ್ಜಿತ ಯಂತ್ರಗಳು, ಪರಿಣಿತಿ ಪಡೆದ ಪೈಲೆಟ್ ಮತ್ತು ನಾವಿಕರಿದ್ದರೂ, ಯಾವುದೇ ನೈಸರ್ಗಿಕ ವಿಕೋಪಗಳಿಲ್ಲದೆ ವಿಮಾನಗಳು, ಹಡಗುಗಳು ನಿಗೂಢವಾಗಿ ಕಣ್ಮರೆಯಾಗುತ್ತಿರುವುದು ವೈಜ್ಞಾನಿಕ ಸಂಶೋಧನೆಗಳಿಗೆ ಸವಾಲಾಗಿ ಪರಿಣಮಿಸಿದೆ. ಯಾವುದೇ ಕ್ಲಿಷ್ಟಕರ ಪ್ರಶ್ನೆಗೂ ವೈಜ್ಞಾನಿಕವಾಗಿ ಉತ್ತರ ನೀಡುವ ಅದೆಷ್ಟೊ ವಿಜ್ಞಾನಿಗಳು ತಲೆಕೆಡಿಸಿಕೊಂಡರೂ ಈ ನಿಗೂಢ ಕಣ್ಮರೆಗೆ ಕಾರಣ ತಿಳಿಯುತ್ತಿಲ್ಲ. ಅಲ್ಲಿನ ಸ್ಥಳಿಯ ಪತ್ರಿಕೆಗಳು ಈ ಘಟನೆಯನ್ನು ಅಸ್ವಾಭಾವಿಕ ಮತ್ತು ಭೌತಶಾಸ್ತ್ರದ ನಿಯಮಗಳನ್ನು ಮೀರಿಸುವ ಶಕ್ತಿ ಈ ಬರ್ಮುಡಾ ತ್ರಿಕೋನದಲ್ಲಿದೆ ಎಂದು ಹೇಳಿವೆ. ಹಡಗು ಮತ್ತು ವಿಮಾನಗಳ ನಿಗೂಢ ಕಣ್ಮರೆ: 1962 ಏಪ್ರೀಲ್ನಲ್ಲಿ ಲಿಜಿಯಾನ್ ಮ್ಯಾಗ್ಜಿನ್ ಫೈಟ್ 19ರ ನಾಯಕ ನಾವು ಬಿಳಿಯಾದ ನೀರಿನೊಳಗೆ ಬೀಳುತ್ತಿದ್ದೇವೆ. ನಾವು ಎಲ್ಲಿದ್ದೇವೆಂದು ತಿಳಿಯುತ್ತಿಲ್ಲ, ನೀರೂ ಹಸಿರಾಗಿದೆ ಎಂದು ಹೇಳಿರುವುದಾಗಿ ವರದಿ ಮಾಡಿತ್ತು. ಇದೊಂದು ನಿಸರ್ಗಾತೀತ ಶಕ್ತಿ ಎಂದು ಹಲವರು ವ್ಯಾಖ್ಯಾನಿಸಿದ್ದರಾದರೂ ಇದರ ಸ್ಪಷ್ಟ ಕಾರಣಗಳು ಇನ್ನೂ ಕಂಡುಹಿಡಿಯಲು ಸಧ್ಯವಾಗಿಲ್ಲ. ಕೆಲವು ಸಂಶೋಧಕರು ಹೇಳುವ ಪ್ರಕಾರ ಬರ್ಮುಡಾ ತ್ರಿಕೋನದಲ್ಲಿ ಕಾಣೆಯಾದ ಹಡಗು ಮತ್ತು ವಿಮಾನಗಳು ಸಂಖ್ಯೆಯನ್ನು ಇತರ ಸಮುದ್ರ ಭಾಗಗಳಿಗೆ ಹೋಲಿಸಿದರೆ ಇದು ದೊಡ್ಡದೇನಲ್ಲ ಮತ್ತು ಕಾಣೆಯಾದ ಹಡಗು ಮತ್ತು ವಿಮಾನಗಳಲ್ಲಿ ಕೆಲವೊಂದು ಹಿಂದಿರುಗಿ ಬಂದಿವೆ ಎಂದು ಹೇಳಲಾಗುತಿದ್ದರೂ ಇದಕ್ಕೂ ಸ್ಪಷ್ಟವಾದ ವರದಿಗಳಿಲ್ಲ. ಯುದ್ಧದ ನೆಪದಲ್ಲಿ ಹಡಗು ಮತ್ತು ವಿಮಾನಗಳನ್ನು ನಾಶಗೊಳಿಸಿರಬಹುದು, ಕಡಲ್ಗಳ್ಳತನಕ್ಕೆ ಸಿಲುಕಿರಬಹುದು, ಸುಂಟರಗಾಳಿ ಅಪ್ಪಳಿಸಿರಬಹುದು, ರಾಕ್ಷಸ ಅಲೆಗಳ ಅಬ್ಬರಗಳು ಈ ನಿಗೂಢ ಕಣ್ಮರೆಗೆ ಕಾರಣವೆನ್ನಲಾಗುತ್ತಿದ್ದರೂ ಇದಕ್ಕೂ ಕೂಡ ಸ್ಪಷ್ಟವಾದ ಉತ್ತರ ಯಾರಿಂದಲೂ ದೊರಕುತ್ತಿಲ್ಲ. 1945 ಡಿಸೆಂಬರ್ 5ರಂದು ಫ್ಲೈಟ್ 19 ಟಿ.ಬಿ.ಎಮ್. ಎವೆಂಜರ್ ಬಾಂಬರ್ ವಿಮಾನಗಳು ತರಬೇತಿ ನಿರತವಾಗಿದ್ದ ಸಂದರ್ಭ ಧಿಡೀರ್ ಕಣ್ಮರೆಯಾಗಿತ್ತು.ಈ ವಿಮಾನಗಳನ್ನು ಹುಡುಕಲೆಂದು ಸಾಕಷ್ಟು ತರಬೇತಿ ಪಡೆದಿದ್ದ ಪೈಲೆಟ್ಗಳನ್ನು ಹೊಂದಿದ್ದ ವಾಯುಸೇನಾ ವಿಮಾನ ಫ್ಲೈಟ್ 19ನ್ನು ಕಳುಹಿಸಲಾಗಿತ್ತು. ಈ ವಿಮಾನವು ಹೊರಟು ಕೆಲ ಸಮಯಗಳಲ್ಲೆ ಅದೂ ಕೂಡ ನಾಪತ್ತೆಯಾಗಿತ್ತು. 282ಟನ್ ತೂಕದ ಮೇರಿ ಸೆಲೆಟ್ ಹಡಗು ಕೂಡ ಬರ್ಮುಡಾ ತ್ರಿಕೋನದಲ್ಲಿ ಕಣ್ಮರೆಯಾಗಿತ್ತು. 1881ರಲ್ಲಿ ನ್ಯೂಯಾರ್ಕ್ ಕಡೆ ತೆರಳುತ್ತಿದ್ದ ದಿ ಎಲೆನ್ ಆಸ್ಟಿನ್ ಹಡಗಿಗೆ ಬರ್ಮುಡಾ ತ್ರಿಕೋನದ ವ್ಯಾಪ್ತಿಯಲ್ಲಿ ಸಿಬ್ಬಂದಿಗಳಿಲ್ಲದೆ ಹಡಗೊಂದು ತೇಲಾಡುತ್ತಿರುವುದು ಕಾಣಿಸಿತ್ತು. ಮತ್ತೆ ಮರೆಯಾಗುತ್ತಿದ್ದ ಖಾಲಿ ಹಡಗು ಮತ್ತೆ ಪ್ರತ್ಯಕ್ಷಗೊಳ್ಳುತ್ತಿತ್ತು. ಕೂಡಲೆ ಪರಿಣಿತಿ ಹೊಂದಿದ ಸಿಬ್ಬಂದಿಗಳನ್ನು ಮತ್ತು ನಾವಿಕರನ್ನು ಆ ಹಡಗಿಗೆ ಕಳುಹಿಸಲಾಯಿತು. ಕೆಲ ಸಮಯಗಳಲ್ಲೆ ಸಿಬ್ಬಂದಿ ಮತ್ತು ನಾವಿಕರೊಂದಿಗೆ ಮತ್ತೆ ಕಣ್ಮರೆಯಾಗಿದ್ದ ಹಡಗು ಮತ್ತೆಂದು ಕಾಣಿಸಲೇ ಇಲ್ಲ. 1918ರಲ್ಲಿ 309 ಜನ ಪ್ರಯಾಣಿಕರನ್ನು ಕರೆದೊಯ್ಯತ್ತಿದ್ದ ವಿ.ಎಸ್.ಎಸ್. ಸೈಕ್ಲೋಪ್ಲ್ ಹಡಗು ಕೂಡ ಇದೇ ರೀತಿ ನಿಗೂಢವಾಗಿ ಪ್ರಯಾಣಿಕರೊಂದಿಗೆ ಕಣ್ಮರೆಯಾಗಿತ್ತು. ಅಮೇರಿಕಾ ಸಂಯುಕ್ತ ಸಂಸ್ಥಾನದ ಉಪರಾಷ್ಟ್ರಪತಿ ಅರಾನ್ ಬರ್ ಅವರ ಮಗಳು ಥಿಯೊಡೋಸಿಯ ಬರ್ ಅಟ್ಸ ಟನ್, ದಿ ಪೆಟ್ರಿಯಾಟ್ ಹಡಗಿನೊಂದಿಗೆ 1812 ಡಿಸೆಂಬರ್ 30ರಂದು ಬರ್ಮುಡಾ ತ್ರಿಕೋನದಲ್ಲಿ ನಿಗೂಢವಾಗಿಯೆ ಕಣ್ಮರೆಯಾಗಿದ್ದರು. 1902ರಲ್ಲಿ ಎಸ್.ವಿ.ಸ್ಟ್ರೇ ಮೀನುಗಾರಿಕ ಹಡಗಿನಲ್ಲಿ ಏಕವ್ಯಕ್ತಿಸಾಗರ ಪರ್ಯಟನೆಗೆಂದು ತೆರಳಿದವರು ಹಿಂದಿರುಗಲೇ ಇಲ್ಲ. 1948 ಡಿಸೆಂಬರ್ 28ರಂದು ಡೇಗ್ಲೆಸ್ ಡಿ.ಸಿ.3 ವಿಮಾನವು 32ಜನ ಪ್ರಯಾಣಿಕರೊಂದಿಗೆ ಬರ್ಮುಡಾ ತ್ರಿಕೋನದಲ್ಲಿ ಕಣ್ಮರೆಯಾಗಿದ್ದು ಇದುವರೆಗೂ ಪತ್ತೆಯಾಗಿಲ್ಲ. 1948 ಜನವರಿ 30ರಲ್ಲಿ ಸ್ಟಾರ್ ಟೈಗರ್ ಹಾಗೂ 1949 ಜನವರಿ 17ರಂದು ಸ್ಟಾರ್ ಏರಿಯಲ್$ ಕೂಡ ಹೀಗೆಯೆ ನಿಗೂಢವಾಗಿ ನಾಪತ್ತೆಯಾಗಿತ್ತು. 1963ಫೆಬ್ರವರಿ 4ರಂದು ಎಸ್.ಎಸ್. ಮೆರೈನ್ ಸಲ್ಫರ್ ಕ್ಲೀನ್ ಎಂಬ ಹಡಗು ಕೂಡ 39 ಜನರೊಂದಿಗೆ ಬರ್ಮುಡಾ ತ್ರಿಕೋನದಲ್ಲಿ ರಹಸ್ಯವಾಗಿಯೆ ಕಾಣೆಯಾಗಿತ್ತು. ಇದಷ್ಟೆ ಅಲ್ಲದೆ 1925 ಏಪ್ರಿಲ್ 21ರಂದು ರಾಯ್ ಪುಕು ಮಾರ್ ಜಪಾನ್ ಯುದ್ಧ ಹಡಗು ಎಲ್ಲ ಯೋಧರೊಂದಿಗೆ ಕಣ್ಮರೆಯಾದರೆ, 1964 ಜೂನ್ 7ರಂದು ಕ್ಯಾರೊಲಿನ್ ಕ್ಯಾಸ್ಕಿಯೋ ವಿಮಾನ ಒಬ್ಬ ಪ್ರಯಾಣಿಕನ ಜೊತೆ ಕಣ್ಮರೆಯಾಗಿತ್ತು. ಇದರೊಂದಿಗೆ ವಿಹಾರದ ಹಾಯಿದೊಣಿ ಕೂಡ ಬರ್ಮುಡಾ ತ್ರಿಕೋನದಲ್ಲಿ ಲೀನವಾಗಿತ್ತು. ಇಷ್ಟೆಲ್ಲ ಘಟನೆಗಳು ನಡೆದಿದರೂ ಬರ್ಮುಡಾ ತ್ರಿಕೋನ ಮಾತ್ರ ತನ್ನಲ್ಲಿನ ನಿಗೂಢತೆಯನ್ನು ತನ್ನೊಳಗೆ ಬಚ್ಚಿಟ್ಟುಕೊಂಡು ವಿಜ್ಞಾನಿಗಳಿಗೆ, ಸಂಶೋಧಕರಿಗೆ ತಲೆನೋವಾಗಿ ಕಾಡುತ್ತಿದೆ. ಬರ್ಮುಡಾ ತ್ರಿಕೋಣ , ಇದನ್ನು ಸೈತಾನನ ತ್ರಿಕೋಣ ಎಂತಲೂ ಕರೆಯಲಾಗುತ್ತದೆ, ಉತ್ತರ ಅಟ್ಲಾಂಟಿಕ್ ಮಹಾಸಾಗರದ ಪಶ್ಚಿಮ ಭಾಗದಲ್ಲಿ ಕಂಡು ಬರುತ್ತದೆ. ಈ ಭಾಗದಲ್ಲಿ ಹಲವು ವಿಮಾನಗಳು, ಹಡಗುಗಳು ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ನಿಗೂಢವಾಗಿ ಕಣ್ಮರೆಯಾಗಿವೆ ಎಂದು ಹೇಳಲಾಗುತ್ತದೆ. ಈ ಭಾಗದಲ್ಲಿ ಇವು ಕಣ್ಮರೆಯಾಗುವುದಕ್ಕೆ ಯಂತ್ರಗಳ ದೋಷ, ಕಡಲ್ಗಳ್ಳತನ, ಯಂತ್ರ ನಡೆಸುವವರ ತಪ್ಪುಗಳು ಅಥವಾ ನೈಸರ್ಗಿಕ ಪ್ರಕೋಪಗಳು ಕಾರಣ ಎಂದು ಹೇಳಲಾಗುವುದಿಲ್ಲ. ಜನಪ್ರಿಯ ಸಂಸ್ಕೃತಿಯೊಂದು ಈ ನಿಗೂಢ ಕಣ್ಮರೆಯನ್ನು ಅಸ್ವಾಭಾವಿಕ, ಭೌತಶಾಸ್ತ್ರದ ನಿಯಮಗಳನ್ನು ಮೀರಿಸುವ ಅಥವಾ ಹೊರಪ್ರಪಂಚದ ಶಕ್ತಿಗಳು ನಡೆಸುವ ಕಾರ್ಯ ಎಂದು ಹೇಳುತ್ತದೆ. ಒಂದು ಸತ್ವಶಾಲಿಯಾದ ದಾಖಲೆಗಳು ಇಲ್ಲಿ ನಡೆದ ನಿಗೂಢ ಘಟನೆಗಳನ್ನು ಈ ಹಿಂದೆ ಬರೆದಿರುವ ಲೇಖಕರು ಅತಾರ್ಕಿಕವಾಗಿ ಬರೆದಿದ್ದಾರೆ ಎಂದು ಆರೋಪಿಸುತ್ತವೆ. ಅಲ್ಲದೇ ಹಲವಾರು ಸಂಶೋಧಕರು ಹಾಗೂ ಅಧಿಕಾರಿಗಳು ಹೇಳುವ ಪ್ರಕಾರ ಇಲ್ಲಿ ನಡೆಯುತ್ತಿರುವ ಕಣ್ಮರೆಯ ರೀತಿ ಮತ್ತು ಘಟನೆಗಳು ಜಗತ್ತಿನ ಬೇರೆಯ ಸಾಗರ ಪ್ರದೇಶದಲ್ಲಿ ನಡೆಯುವ ಅವಘಡಗಳಿಗೆ ಹೋಲಿಸಿದರೆ ಸಮನಾಗಿವೆ ಎಂದು ಹೇಳುತ್ತಾರೆ. ತ್ರಿಕೋಣದ ಪ್ರದೇಶ ತ್ರಿಕೋಣದ ಸ್ಥಳವು ಲೇಖಕರಿಂದ ಲೇಖಕರಿಗೆ ಬದಲಾಗುತ್ತದೆ ಈ ತ್ರಿಕೋಣದ ಗಡಿ ಪ್ರದೇಶವು ಸ್ಟ್ರೇಟ್ಸ್ ಆಫ್ ಫ್ಲೋರಿಡಾ, ಬಹಾಮಾ ಮತ್ತು ಸಂಪೂರ್ಣ ಕೆರಿಬಿಯನ್ ದ್ವೀಪ ಮತ್ತು ಪೂರ್ವ ಅಟ್ಲಾಂಟಿಕ್ನಿಂದ ಅಜೋರ್ಸ್ ಮತ್ತು ಗಲ್ಫ್ ಆಫ್ ಮೆಕ್ಸಿಕೋದ ಇತರೆ ಪ್ರದೇಶಗಳು ಒಳಗೊಳ್ಳುತ್ತವೆ. ಅತಿ ಹೆಚ್ಚು ಕಡೆ ಉಲ್ಲೇಖಿತವಾಗಿರುವ ಹಾಗೂ ಹೆಚ್ಚು ಚಾಲ್ತಿಯಲ್ಲಿರುವಂತೆ ಅಟ್ಲಾಂಟಿಕ್ ತೀರದ ಮಿಯಾಮಿ, ಸಾನ್ಜುವಾನ್, ಪೊರ್ಟೊರಿಕೊ ಮತ್ತು ಮಧ್ಯ ಅಟ್ಲಾಂಟಿಕ್ ದ್ವೀಪವಾಗಿರುವ ಬರ್ಮುಡಾ ಪ್ರದೇಶಗಳಲ್ಲಿ ಈ ವಿಸ್ಮಯ ತ್ರಿಕೋಣದ ವ್ಯಾಪ್ತಿ ಇದ್ದು, ದಕ್ಷಿಣ ಗಡಿಯ ಸುತ್ತಮುತ್ತ ಹಾಗೂ ಬಹಾಮಾ, ಫ್ಲೋರಿಡಾ ಜಲಸಂಧಿಗಳಲ್ಲಿ ಹೆಚ್ಚು ಅವಘಡಗಳು ಸಭವಿಸಿವೆ ಎಂದು ಹೇಳಲಾಗಿದೆ. ಈ ಸ್ಥಳವು ಪ್ರತಿದಿನ ಅತಿಹೆಚ್ಚು ಹಡಗುಗಳು ಸಂಚರಿಸುವ ಮಾರ್ಗವಾಗಿದೆ. ಪ್ರತಿದಿನ ಅಮೇರಿಕಾ, ಯುರೋಪ್ ಮತ್ತು ಕೆರಿಬಿಯನ್ ದ್ವೀಪಗಳ ಬಂದರುಗಳಿಗೆ ಈ ಮಾರ್ಗವಾಗಿ ಹಡಗುಗಳು ಸಂಚರಿಸುತ್ತವೆ. ಅನೇಕ ಪ್ರಯಾಣಿಕ ಹಡಗುಗಳು ಹಾಗೂ ಪ್ರವಾಸಿ ಹಡಗುಗಳೂ ಕೂಡ ಇಲ್ಲಿ ಪ್ರತಿನಿತ್ಯ ಹೆಚ್ಚಿನ ಸಂಖ್ಹೆಯಲ್ಲಿ ಫ್ಲೋರಿಡಾ ಮತ್ತು ಇಲ್ಲಿಯ ಸುತ್ತಮುತ್ತಲಿನ ದ್ವೀಪಗಳ ನಡುವೆ ಒಂದೆಡೆಯಿಂದ ಇನ್ನೊಂದೆಡೆಗೆ ಸಂಚರಿಸುತ್ತವೆ. ಉತ್ತರದ ಕಡೆಯಿಂದ ಫ್ಲೊರಿಡಾ, ಕೆರಿಬಿಯನ್ ಮತ್ತು ದಕ್ಷಿಣ ಅಮೇರಿಕಾದ ಕಡೆಗೆ ಪ್ರತಿನಿತ್ಯ ವಾಣಿಜ್ಯ ಮತ್ತು ಖಾಸಗಿ ವಿಮಾನಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಥಳವನ್ನು ಹಾಯ್ದು ಹಾರಾಟ ನಡೆಸುತ್ತವೆ. ಇತಿಹಾಸ ಮೂಲಗಳು ಬರ್ಮುಡಾ ಪ್ರದೇಶದ ಅಪರೂಪದ ಆದೃಶ್ಯಗಳ ಬಗೆಗಿನ ಅತ್ಯಂತ ಆರಂಭದ ದೋಷಾರೋಪಣೆ 1950 ಸೆಪ್ಟೆಂಬರ್ 16 ರಲ್ಲಿ ಇ.ವಿ. ಡಬ್ಲೂ ಜೋನ್ಸ್ರವರ ಅಸೋಸಿಯೇಟೆಡ್ ಪ್ರೆಸ್ನಲ್ಲಿ ಬಂದ ಲೇಖನದ ಮೂಲಕ ಬೆಳಕಿಗೆ ಬಂದಿತು. ಎರಡು ವರ್ಷಗಳ ನಂತರ, ಫೇಟ್ ನಿಯತಕಾಲಿಕೆಯು, ತರಬೇತಿ ಉದ್ದಿಷ್ಟಕಾರ್ಯದ ಮೇಲೆ ಹೊರಟಿದ್ದ ಐದು ಯು.ಎಸ್ ನೌಕಾದಳ ಟಿಬಿಎಮ್ ಆಯ್ವೆಂಜರ್ ಬಾಂಬರ್ಗಳ ಸಮೂಹವಾದ ಫ್ಲೈಟ್ 19 ಒಳಗೊಂಡಂತೆ ಕಳೆದು ಹೋದ ಹಲವಾರು ವಿಮಾನಗಳು ಮತ್ತು ಹಡಗುಗಳ ವಿಷಯದ ಕುರಿತ ಜಾರ್ಜ್ ಎಕ್ಸ್. ಸ್ಯಾಂಡ್ ಅವರ ಚಿಕ್ಕ ಲೇಖನವಾದ ಸೀ ಮಿಸ್ಟರಿ ಅಟ್ ಅವರ್ ಬ್ಯಾಕ್ ಡೋರ್ ಅನ್ನು ಪ್ರಕಟಿಸಿತು. ಈಗ ಪರಿಚಯವಿರುವ ನಷ್ಟ ಸಂಭವಿಸಿದ್ದ ತ್ರಿಕೋಣ ಪ್ರದೇಶವನ್ನು ಮೊಟ್ಟ ಮೊದಲು ಮಂಡಿಸಿದ್ದು ಸ್ಯಾಂಡ್ ಅವರ ಲೇಖನ. ಫ್ಲೈಟ್ 19 ರ ಕುರಿತಾದ ಘಟನೆಯೊಂದೇ ಏಪ್ರಿಲ್ 1962ರ ಅಮೇರಿಕನ್ ಲಿಜಿಯಾನ್ ಮ್ಯಾಗ್ಜಿನ್ ಸಂಚಿಕೆಯಲ್ಲಿ ಪ್ರಕಟಿಸಲ್ಪಟ್ಟಿತು. ವಿಮಾನದ ನಾಯಕನು ನಾವು ಬಿಳಿಯಾದ ನೀರಿನೊಳಗೆ ಬೀಳುತ್ತಿದ್ದೇವೆ, ಏನೂ ಸರಿಯಿಲ್ಲ ಎಂದು ಎನಿಸುತ್ತಿದೆ. ನಾವು ಎಲ್ಲಿದ್ದೇವೆ ಎಂದು ನಮಗೆ ತಿಳಿಯುತ್ತಿಲ್ಲ, ನೀರು ಹಸಿರಾಗಿದೆ ಎಲ್ಲೂ ಬಿಳಿಯ ಛಾಯೆ ಕಾಣುತ್ತಿಲ್ಲ. ಎಂದು ಹೇಳಿದ್ದು ಮಾತ್ರ ಕೇಳಿಸಿತು ಎಂದು ತಿಳಿಸಲಾಯಿತು. ನೌಕಾನೆಲೆಯ ಅಧಿಕಾರಿಗಳು ವಿಮಾನಗಳು ಮಂಗಳ ಗ್ರಹಕ್ಕೆ ಹಾರಿಹೋದವು ಎಂದು ಹೇಳಿಕೆಯನ್ನು ನೀಡಿದರು. ಸ್ಯಾಂಡ್ಸ್ ಅವರ ಲೇಖನವೇ ಮೊದಲ ಬಾರಿಗೆ ಫ್ಲೈಟ್ 19ರ ಘಟನೆಯಲ್ಲಿ ಇರಬಹುದಾದ ನಿಸರ್ಗಾತೀತ ಸಂಗತಿಯ ಕುರಿತಾಗಿ ಸೂಚಿಸಿತು. ಅರ್ಗೋಸಿ ಮ್ಯಾಗ್ಜಿನ್ನ 1964ರ ಫೆಬ್ರುವರಿ ಸಂಚಿಕೆಯಲ್ಲಿ ಪ್ರಕಟವಾದ ವಿನ್ಸೆಂಟ್ ಗಡ್ಡೀಸ್ ಅವರ ದಿ ಡೆಡ್ಲಿ ಬರ್ಮುಡಾ ಟ್ರಿಯಾಂಗಲ್ ಲೇಖನದಲ್ಲಿ ಮೊಟ್ಟಮೊದಲನೇ ಬಾರಿಗೆ, ಈ ಪ್ರದೇಶದಲ್ಲಿ ನಡೆದ ಕಣ್ಮರೆಗಳು ಈ ಪ್ರದೇಶದಲ್ಲಿ ನಡೆಯುವ ವಿಚಿತ್ರ ಘಟನೆಗಳ ಭಾಗವೇ ಎಂದು ವಾದಿಸಿದರು. ಅದರ ಮುಂದಿನ ವರ್ಷ, ಗಡ್ಡೀಸ್ ಅವರು ಇನ್ವಿಸಿಬಲ್ ಹೊರೈಜನ್ಸ್ ಎಂಬ ಪುಸ್ತಕದಲ್ಲಿ ಈ ಕುರಿತು ವಿವರಿಸಿದರು. ಗಡ್ಡೀಸ್ ಅವರ ಈ ಯೋಚನೆಗಳನ್ನು ವಿಸ್ತರಿಸುತ್ತ, ಇನ್ನೂ ಹಲವಾರು ಜನ ಪುಸ್ತಕಗಳನ್ನು ರಚಿಸಿದರು. ಉದಾಹರಣೆಗೆ ಜಾನ್ ವಾಲ್ಲೆಸ್ ಸ್ಪೆನ್ಸರ್ ಲಿಂಬೊ ಆಫ್ ದಿ ಲಾಸ್ಟ್ ಎಂಬ ಪುಸ್ತಕವನ್ನು 1969ರಲ್ಲಿ (ಮರುಮುದ್ರಣ) ಪ್ರಕಟಿಸಿದರು.1973) ಚಾರ್ಲ್ಸ್ ಬರ್ಲಿಟ್ಜ್ (ದಿ ಬರ್ಮುಡಾ ಟ್ರಿಯಾಂಗಲ್ , 1974) ರಿಚರ್ಡ್ ವೈನರ್ (ದಿ ಡೆವಿಲ್ಸ್ ಟ್ರಿಯಾಂಗಲ್ , 1974), ಮತ್ತು ಇನ್ನು ಹಲವಾರು ಲೇಖಕರು ಎಕರ್ಟ್ರಿಂದ ಬರೆಯಲ್ಪಟ್ಟ ನಿಸರ್ಗಾತೀತ ಶಕ್ತಿಗಳ ಕುರಿತಾದ ಉಲ್ಲೇಖಗಳನ್ನೇ ಆಧಾರವಾಗಿರಿಸಿಕೊಂಡು ಪುಸ್ತಕಗಳನ್ನು ಬರೆದರು. ಲ್ಯಾರಿ ಕಶ್ಚೆ ಅರಿಜಾನ್ ಸ್ಟೇಟ್ ವಿಶ್ವವಿದ್ಯಾಲಯದ ಸಂಶೋಧಕ ಗ್ರಂಥಪಾಲಕ ಹಾಗೂ ದಿ ಬರ್ಮುಡಾ ಟ್ರಿಯಾಂಗಲ್ ಮಿಸ್ಟರಿ:ಸಾಲ್ವ್ಡ್ (1975) ಪುಸ್ತಕದ ಲೇಖಕರಾಗಿರುವ ಲಾರೆನ್ಸ್ ಡೇವಿಡ್ ಕಶ್ಚೆ ಅವರು ಗಡ್ಡೀಸ್ ಅವರು ಬರೆದ ಹೇಳಿಕೆಗಳು ಹಾಗೂ ಅವರ ಸಮಕಾಲೀನ ಲೇಖಕರ ಹೇಳಿಕೆಗಳು ಉತ್ಪ್ರೇಕ್ಷೆಯಿಂದ ಕೂಡಿದ್ದಾಗಿದ್ದು, ಸಂದೇಹಪೂರಿತವಾಗಿವೆ ಹಾಗೂ ಸರಿಯಾದ ಆಧಾರಗಳಿಲ್ಲದವುಗಳಾಗಿವೆ ಎಂದು ವಾದಿಸುತ್ತಾರೆ. ಮೊದಮೊದಲು ನಡೆದ ಘಟನೆಯಲ್ಲಿ ಭಾಗಿಯಾದವರು ಪ್ರತ್ಯಕ್ಷದರ್ಶಿಗಳು ಮತ್ತು ಬರ್ಲಿಟ್ಜ್ ಅವರ ಹೇಳಿಕೆಗಳ ನಡುವೆ ಇರುವ ಅತಾರ್ಕಿಕತೆ ಮತ್ತು ಅಸಮಂಜಸತೆಯನ್ನು ಕಶ್ಚೆ ಅವರ ಸಂಶೋಧನೆಯು ಹೊರಗೆಡಹುತ್ತದೆ. ಕಶ್ಚೆ ಅವರು ಪ್ರಸ್ತುತಪಡಿಸಿದ ಕೆಲವು ವಿಚಾರಗಳು, ಸಮಂಜಸವಾಗಿದ್ದ ಆದರೆ ಕೆಲವು ಘಟನೆಗಳ ಕುರಿತಾಗಿ ಸರಿಯಾಗಿ ವರದಿ ಮಾಡದೇ ಹೋದದ್ದನ್ನು ತಿಳಿಸುತ್ತವೆ. ಉದಾಹರಣೆಗೆ ವಿಶ್ವಪರ್ಯಟನೆ ಹೊರಟ ನೌಕಾಯಾತ್ರಿ ಡೊನಾಲ್ಡ್ ಕ್ರೊವ್ಹರ್ಸ್ಟ್ನ ಘಟನೆ. ಈ ಘಟನೆಗೆ ಬರ್ಲಿಟ್ಜ್ ಸರಿಯಾದ ಆಧಾರ ಇದ್ದರೂ ವಿಸ್ಮಯ ಎಂದು ಕರೆದಿದ್ದ. ಇನ್ನೊಂದು ಘಟನೆ ಹೀಗಿದೆ, ಬರ್ಲಿಟ್ಜ್ ಪ್ರಕಾರ ಅಟ್ಲಾಂಟಿಕ್ ಬಂದರಿನಿಂದ ಹೊರಟ ಅದಿರು ತುಂಬಿಕೊಂಡ ಹಡಗು ಮೂರು ದಿನಗಳ ನಂತರ ಕಾಣೆಯಾಯ್ತು ಎಂಬ ಹೇಳಿಕೆ ಇದೆ, ಆದರೆ ಇದು ಅಟ್ಲಾಂಟಿಕ್ ಬಂದರಿನಿಂದ ಹೊರಟ ಹಡಗಿನ ಕುರಿತಾಗಿರದೇ ಅದೇ ದಿನಗಳಲ್ಲಿ ಫೆಸಿಫಿಕ್ ಮಹಾಸಾಗರ ದಲ್ಲಿ ಕಾಣೆಯಾದ ಅದೇ ಹೆಸರಿನ ಹಡಗಿನ ಕುರಿತಾದುದಾಗಿದೆ. ಕಶ್ಚೆ ಹೇಳುವ ಪ್ರಕಾರ ತ್ರಿಕೋಣದ ಸುತ್ತಳತೆಯಲ್ಲೇ ನಡೆದಿದೆ ಎಂದು ಉಲ್ಲೇಖಿಸಲಾದ ಹಾಗೂ ಸುದ್ದಿಗೊಳಗಾದ ಬಹಳಷ್ಟು ಘಟನೆಗಳು ಈ ತ್ರಿಕೋಣದ ಹೊರಗೆ ನಡೆದಂತ ಘಟನೆಗಳಾಗಿವೆ. ಅವರ ಈ ಸಂಶೋಧನೆಯು ಬಹಳ ಸರಳವಾಗಿದೆ : ಅವರು ಈ ಘಟನೆ ನಡೆದ ಸಮಯದ ವರದಿಗಳಿರುವ ಪತ್ರಿಕೆಗಳನ್ನು ಕಲೆಹಾಕಿ, ಅದರಲ್ಲಿ ಬಂದಿರುವ ಉದಾಹರಣೆಗೆ ಅಸಾಮಾನ್ಯ ಹವಾಮಾನ, ಸುದ್ದಿಗೂ ಹಾಗೂ ಕಣ್ಮರೆಯ ಕಥೆಗಳಲ್ಲಿ ಅದನ್ನು ಲೇಖಕರು ತಿಳಿಸಿಲ್ಲದ್ದನ್ನು ಗುರುತಿಸಿದರು. ಕಶ್ಚೆ ವಿಶದಪಡಿಸಿದ್ದೇನೆಂದರೆ : ಈ ಪ್ರದೇಶದಲ್ಲಿ ಕಾಣೆಯಾದ ಹಾಗೂ ಅವಘಡಕ್ಕೆ ಒಳಗಾದ ಹಡಗು ಹಾಗೂ ವಿಮಾನಗಳ ಸಂಖ್ಯೆಯು ಸಮುದ್ರದ ಇತರ ಭಾಗಗಳಲ್ಲಿ ಕಣ್ಮರೆಯಾದವುಗಳಿಗೆ ಹೋಲಿಸಿದರೆ ದೊಡ್ಡದೇನು ಅಲ್ಲ. ಪದೆ ಪದೇ ಬಿರುಗಾಳಿ ಉತ್ಪತ್ತಿಯಾಗುವ ಕೆಲವು ಪ್ರದೇಶಗಳ ಕುರಿತಾಗಿ ಹಾಗೂ ಇಲ್ಲಿ ನಡೆದ ಘಟನೆಗೂ ಬಿರುಗಾಳಿ ಕೇಂದ್ರಿತ ಕೆಲವು ಪ್ರದೇಶದ ಕುರಿತು ತುಲನಾತ್ಮಕ ಅಧ್ಯಯನ ನಡೆಸಿ ಇದು ವಿಸ್ಮಯ ಎಂದು ಹೇಳಿಕೆ ನೀಡಿದರು. ಈ ಬಿರುಗಾಳಿಗಳ ಬಗ್ಗೆ ಬರ್ಲಿಟ್ಜ್ ಮತ್ತು ಇತರ ಬರಹಗಾರರು ಸೂಚಿಸುವಲ್ಲಿ ವಿಫಲರಾಗಿದ್ದಾರೆ. ಇಲ್ಲಿ ನಡೆದ ಘಟನೆಗಳ ಕುರಿತಾದ ಅಂಕಿ ಅಂಶಗಳನ್ನೇ ಜಾಳು ಜಾಳಾದ ಸಂಶೋಧನೆಯ ಮೂಲಕ ಉತ್ಪ್ರೇಕ್ಷೆ ಮಾಡಲಾಗಿದೆ. ದೋಣಿ ಅಥವಾ ಹಡಗು ಕಣ್ಮರೆಯಾದ ಕುರಿತು ಹೇಳಲಾಗಿದೆಯೇ ಹೊರತು ಕೆಲ ದಿನಗಳ ನಂತರ ಅದು ಮರಳಿ ಬಂದದ್ದರ ಕುರಿತಾಗಿ ಯಾವುದೇ ಉಲ್ಲೇಖವನ್ನು ಇವರುಗಳು ಮಾಡಲಿಲ್ಲ. ಕೆಲವೊಂದು ಕಣ್ಮರೆಗಳು ಇಲ್ಲಿ ಸಂಭವಿಸಲೇ ಇಲ್ಲ. ನೂರಾರು ಜನರ ಸಾಕ್ಷಿಗಳ ಎದುರು ಒಂದು ವಿಮಾನದ ಕಣ್ಮರೆಯು 1937ರಲ್ಲಿ ಡೆಟೊನಾ ಬೀಚ್, ಫ್ಲೋರಿಡಾದಲ್ಲಿ, ನಡೆಯಿತು ಎಂದು ನಮೂದಿಸಲಾದ ಬಗ್ಗೆ ಅಲ್ಲಿನ ಸ್ಥಳೀಯ ಪತ್ರಿಕೆಗಳು ಏನೊಂದೂ ವಿವರಣೆಯನ್ನು ನೀಡುವುದಿಲ್ಲ. ಬರ್ಮುಡಾ ತ್ರಿಕೋಣದ ಪುರಾಣವು ಕಲ್ಪಿಸಲ್ಪಟ್ಟ ವಿಸ್ಮಯ, ಉದ್ದೇಶಪೂರ್ವಕವಾಗಿ ಅಥವಾ ತಿಳಿಯದೆಯೋ ಕೆಲವು ತಪ್ಪು ಗ್ರಹಿಕೆ, ತಪ್ಪುತಿಳುವಳಿಕೆ ಹಾಗೂ ಪ್ರಚಾರಪ್ರೀಯತೆಯಿಂದಾಗಿ ಕೆಲವು ಲೇಖಕರು ಹುಟ್ಟುಹಾಕಿರುವುದಾಗಿದೆ. ಇತರ ಕಾರಣಗಳು ಜಿಯೋಫಿಲ್ಮ್ಸ್ ನ ಜಾನ್ ಸಿಮ್ಮೊನ್ಸ್ ಅವರು ಎಕ್ವಿನಿಕ್ಸ್ ಪ್ರೊಗ್ರಾಮ್ ಕಂಪೆನಿಗೆ ನಿರ್ಮಿಸಿಕೊಟ್ಟ ಯ ಚಾನೆಲ್ 4 ವಾಹಿನಿಯು ಪ್ರಸಾರ ಮಾಡಿದ ದಿ ಬರ್ಮುಡಾ ಟ್ರಿಯಾಂಗಲ್(.1992) ಕಾರ್ಯಕ್ರಮದಲ್ಲಿ ಕಡಲು ಸಂಬಂಧಿ ವಿಮಾ ಕಂಪೆನಿ ಲಾಯ್ಡ್ಸ್ ಆಫ್ ಲಂಡನ್ನನ್ನು ಬರ್ಮುಡಾ ತ್ರಿಕೋಣದ ಪ್ರದೇಶದಲ್ಲಿ ಹೆಚ್ಚಿನ ಹಡಗುಗಳು ಮುಳುಗುತ್ತವೆಯೇ ಎಂದು ಪ್ರಶ್ನಿಸಲಾಯ್ತು. ಲಾಯ್ಡ್ಸ್ ಆಫ್ ಲಂಡನ್ ಈ ಪ್ರಶ್ನೆಗೆ ಹೆಚ್ಚಿನ ಹಡಗುಗಳು ಅಲ್ಲಿ ಮುಳುಗಿಲ್ಲ ಎಂದು ಹೇಳಿಕೆ ನೀಡಿತು. ಸಂಯುಕ್ತ ಸಂಸ್ಥಾನದ ಕಡಲು ಕಾವಲು ಪಡೆಯ ಕಡತಗಳು ಇದನ್ನು ಸಮರ್ಥಿಸಿದವು. ಸತ್ಯಸಂಗತಿಯೆಂದರೆ, ಪ್ರತಿದಿನ ಇಲ್ಲಿ ಹಾಯ್ದು ಹೋಗುವ ವಿಮಾನ ಹಾಗೂ ಹಡಗುಗಳ ಸಂಖ್ಯೆಯನ್ನು ಗಮನಿಸಿದರೆ ಇಲ್ಲಿ ಸಂಭವಿಸಿದ ಕಣ್ಮರೆಗಳ ಸಂಖ್ಯೆ ಕಡಿಮೆಯೇ ಎನ್ನಬೇಕು. ಕಡಲು ಕಾವಲು ಪಡೆ ಕೂಡಾ ತ್ರಿಕೋಣದಲ್ಲಿ ನಡೆಯಿತು ಎನ್ನಲಾದ ಘಟನೆಗಳ ಕುರಿತು ಸಂದೇಹಗಳನ್ನು ಹೊಂದಿದೆ. ಕಾವಲು ಪಡೆಯವರು ಈವರೆಗೆ ಘಟನೆಗಳ ಕುರಿತಾಗಿ ಮಾಹಿತಿ ಕಲೆಹಾಕಿ ಬರೆದಿರುವುದು, ತ್ರಿಕೋಣದ ಕುರಿತು ಬರೆಯುವ ಲೇಖಕರ ವಾದಗಳನ್ನು ಅಲ್ಲಗಳೆಯುತ್ತವೆ. 1972ರಲ್ಲಿ ಎಸ್ಎಸ್ ವಿ.ಎ.ಫಾಗ್ ಎನ್ನುವ ಟ್ಯಾಂಕರ್ ಒಂದು ಸ್ಪೋಟಗೊಂಡು ಮೆಕ್ಸಿಕೊ ಕೊಲ್ಲಿಯಲ್ಲಿ ಮುಳುಗಿತು. ಕಡಲು ಕಾವಲು ಪಡೆ ಈ ಘಟನೆಯಲ್ಲಿ ಹಾಳಾದ ಹಡಗಿನ ಛಾಯಾಚಿತ್ರ ತೆಗೆಯಿತು ಹಾಗೂ ಸತ್ತವರ ಹಲವಾರು ದೇಹಗಳನ್ನು ಹೊರತೆಗೆಯಿತು. ಇದಕ್ಕೆ ವಿರುದ್ಧವಾಗಿ, ಈ ಘಟನೆಯನ್ನು ಒಬ್ಬ ತ್ರಿಕೋಣ ಘಟನೆಗಳ ಬರಹಗಾರ, ಘಟನೆಯಲ್ಲಿ ಎಲ್ಲ ದೇಹಗಳೂ ಕಣ್ಮರೆಯಾದವು, ಆದರೆ ಹಡಗಿನ ಕ್ಯಾಫ್ಟನ್ ಮಾತ್ರ ತನ್ನ ಕ್ಯಾಬಿನ್ನಲ್ಲಿ ತನ್ನ ಕೈಯಲ್ಲಿ ಕಾಫಿ ತಟ್ಟೆಯನ್ನು ಗಟ್ಟಿ ಹಿಡಿದು ಕುಳಿತ ರೀತಿಯಲ್ಲಿ ಕಂಡುಬಂದ ಎಂದು ವಿವರಿಸಿದ್ದ. ದಿ ನೊವಾ ಮತ್ತು ಹೊರೈಜನ್ ಕುರಿತಂತೆ ಬರೆದಿರುವ ದಿ ಕೇಸ್ ಆಫ್ ಬರ್ಮುಡಾ ಟ್ರಯಾಂಗಲ್ (19760627) ಇದು ಬಹಳ ವಿಮರ್ಶಾತ್ಮಕವಾಗಿ ಘಟನೆಯ ಕುರಿತು ತನಿಖೆ ನಡೆಸಿ ನಾವು ಘಟನೆಗೆ ಸಾಕ್ಷಿಯಾಗಿದ್ದ ಕೆಲವರನ್ನು, ಹಾಗೂ ಘಟನೆಯಲ್ಲಿ ಭಾಗಿಯಾಗಿದ್ದರು ಎನ್ನಲಾದ ಕೆಲವರನ್ನು ಭೇಟಿ ಮಾಡಿದಾಗ ಈವರೆಗೆ ಸುದ್ದಿಯಲ್ಲಿದ್ದ ವಿಸ್ಮಯ ಕಣ್ಮರೆಯಾಗಿತ್ತು.ವಿಜ್ಞಾನವು ಈ ಕುರಿತಂತೆ ಯಾವುದೇ ವ್ಯಾಖ್ಯಾನವನ್ನು ನೀಡಲು ಒಪ್ಪುವುದಿಲ್ಲ, ಏಕೆಂದರೆ ಅಲ್ಲಿಯ ಆ ಕುರಿತ ಪ್ರಶ್ನೆಗಳೇ ಅಸಮಂಜಸವಾದುದಾಗಿವೆ. ... ಹಡಗು ಮತ್ತು ವಿಮಾನಗಳು ಬೇರೆ ಕಡೆಗಳಲ್ಲಿ ವರ್ತಿಸುವಂತೆಯೆ ಈ ಸ್ಥಳದಲ್ಲಿಯೂ ಕೂಡಾ ವರ್ತಿಸುತ್ತವೆ. ಎಂದು ಹೇಳಿಕೆ ನೀಡುತ್ತದೆ. ಬರ್ಮುಡಾ ವಿಸ್ಮಯ ವಿರೋಧಿ ಸಂಶೋಧಕರಾದ ಅರ್ನೆಸ್ಟ್ ಟೇವ್ಸ್ ಮತ್ತು ಬ್ಯಾರಿ ಸಿಂಗರ್ ರಂತಹವರು ವಿಸ್ಮಯ ಮತ್ತು ಅಭೌತಿಕತೆ ಅನ್ನುವುದು ಹೇಗೆ ಜನಪ್ರಿಯ ಹಾಗೂ ಲಾಭದಾಯಕ ಎಂದು ಗುರುತಿಸಿದರು. ಈ ವಾದವನ್ನಿಟ್ಟುಕೊಂಡು ಹೇಗೆ ಬರ್ಮುಡಾ ತ್ರಿಕೋಣದಂತ ವಿಷಯದಲ್ಲಿ ಬಹಳಷ್ಟು ವ್ಯವಹಾರಗಳು ಹುಟ್ಟಿಕೊಂಡವು ಎಂಬುದನ್ನು ತಿಳಿಸಿದರು. ಹೇಗೆ ಕೆಲವು ಅಭೌತಿಕತೆಯ ಕುರಿತಾದ ವಸ್ತುಗಳು ಜನರನ್ನು ತಪ್ಪುದಾರಿಗೆಳೆಯುತ್ತಿವೆ ಅಥವಾ ಇವು ಸರಿಯಾಗಿಲ್ಲ, ಆದರೂ ಕೂಡ ಇವುಗಳನ್ನು ಮಾರುಕಟ್ಟೆಗೆ ಬಿಟ್ಟು ಹೇಗೆ ಲಾಭಗಳಿಸುತ್ತಿದ್ದಾರೆ ಎಂಬುದನ್ನು ತೋರ್ಪಡಿಸಿದರು. ಅವರು ಹೇಳುವ ಪ್ರಕಾರ, ಮಾರುಕಟ್ಟೆಯು ಪಕ್ಷಪಾತಿಯಾಗಿದ್ದು ತ್ರಿಕೋಣದ ವಿಸ್ಮಯ ಕುರಿತಾದಂತೆ ಬರುವ ಪುಸ್ತಕ ಹಾಗೂ ಕಿರುತೆರೆಯ ಕಾರ್ಯಕ್ರಮಗಳ ಕುರಿತಾಗಿ ಧನಾತ್ಮಕ ಪ್ರತಿಕ್ರಿಯೆಯನ್ನು ಹೊಂದಿದ್ದು, ತ್ರಿಕೋಣ ವಿಸ್ಮಯದ ಕುರಿತು ಬರುವ ಉತ್ತಮ ಸಂಶೋಧಿತ ಬರಹಗಳನ್ನು, ಪ್ರಕಟಣೆಗಳನ್ನು ತ್ರಿಕೋಣ ವಿಸ್ಮಯ ವಿರೋಧಿ ಎಂದು ತಿರಸ್ಕರಿಸುತ್ತದೆ ಎಂದು ಪ್ರತಿಪಾದಿಸಿದರು. ಒಂದುವೇಳೆ ತ್ರಿಕೋಣದ ಪರಿಧಿಯು ಅಲ್ಲಿಯ ಸುತ್ತಮುತ್ತಲಿನ ಭೂಮಿಗೂ ಸಂಬಂಧಿಸುತ್ತದೆ ಎಂದಾದರೆ ಪೊರ್ಟೋರಿಕೊ, ಬಹಾಮಾಸ್, ಅಥವಾ ಸ್ವತಹ: ಬರ್ಮುಡಾ ಪ್ರದೇಶದಲ್ಲಿಯೂ ಕೂಡ ಭೂಮಿಯ ಮೇಲೆ ಚಲಿಸುವ ಯಾವುದೇ ವಾಹನಗಳು ಅಥವಾ ಮನುಷ್ಯರು ಕಾಣೆಯಾದ ನಿದರ್ಶನಗಳಿಲ್ಲ. ತ್ರಿಕೋಣದ ಒಳಗಡೆಯೇ ಇರುವ ಫ್ರೀಫೋರ್ಟ್ ಎಂಬ ಪಟ್ಟಣವು ಒಂದು ಗುರುತರ ಬಂದರು ಪ್ರದೇಶ ಹಾಗೂ ವಿಮಾನ ನಿಲ್ದಾಣವಾಗಿದೆ ಇಲ್ಲಿಂದ ಪ್ರತಿವರ್ಷ ಸುಮಾರು 50.000 ವಿಮಾನಗಳು ಹಾರಾಟ ನಡೆಸುತ್ತವೆ ಹಾಗೂ ಮಿಲಿಯನ್ಗಳಷ್ಟು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ನಿಸರ್ಗಾತೀತ ವಿವರಣೆಗಳು ತ್ರಿಕೋಣದ ಬರಹಗಾರರು ಇಲ್ಲಿ ನಡೆದಿರುವ ಘಟನೆಯನ್ನು ವಿವರಿಸಲು ಹಲವಾರು ನಿಸರ್ಗಾತೀತ ವಿವರಣೆಗಳನ್ನು ನೀಡುತ್ತಾರೆ. ಇಲ್ಲಿ ನಡೆಯುವ ಘಟನೆಗಳಿಗೆ ಕಣ್ಮರೆಗೊಂಡ ಪೌರಾಣಿಕ ಅಟ್ಲಾಂಟಿಸ್ನಲ್ಲಿದ್ದು ಈಗ ಆ ಸಮುದ್ರ ಪ್ರದೇಶದಲ್ಲಿ ಮುಳುಗಡೆಯಾಗಿರುವ ತಂತ್ರಜ್ಞಾನ ಕಾರಣ ಎಂಬುದು ಕೆಲವರ ವಾದ. ಈ ಅಟ್ಲಾಂಟಿಸ್ ಕುರಿತಾದ ಕಥೆಗೆ ಸೇರ್ಪಡೆಯಾಗಿ ಇನ್ನೊಂದು ಕಥೆಯನ್ನು ಹೇಳಲಾಗುತ್ತದೆ. ಬಹಾಮಾಸ್ನ ಬಿಮಿನಿಯಲ್ಲಿರುವ ಕಲ್ಲುಗಳ ಒಂದು ರಚನೆ ಬಿಮಿನಿ ರೋಡ್. ಇದು ಬಿಮಿನಿ ದ್ವೀಪವನ್ನು ದಾಟಿ ತ್ರಿಕೋಣದ ಪ್ರದೇಶದಲ್ಲಿಯೂ ಕೂಡಾ ಇರಬಹುದೇನೋ ಎಂದು ಸ್ವಯಂಘೋಷಿತ ಅತೀಂದ್ರೀಯ ಶಕ್ತಿಯುಳ್ಳವನಾಗಿದ್ದ ಎಡ್ಗರ್ ಕೇಸಿಯು ಹೇಳುತ್ತಾನೆ. 1968ರಲ್ಲಿ ಬೆಳಕಿಗೆ ಬಂದ ಬಿಮಿನಿ ರೋಡ್ ಕುರಿತು ಹೇಳುತ್ತ, ಈ ರಚನೆಯ ಮುಂದುವರೆದ ಭಾಗ ತ್ರಿಕೋಣ ಪ್ರದೇಶದಲ್ಲಿ ಇರಬಹುದೇನೋ ಎಂದು ಹೇಳಿದ್ದನ್ನು ಅವನ ಹಿಂಬಾಲಕರು ಹೇಳುತ್ತಾರೆ. ರಸ್ತೆ, ಗೋಡೆ ಅಥವಾ ಉಳಿದ ರಚನೆಗಳು ಭೂಶಾಸ್ತ್ರಜ್ಞರ ಪ್ರಕಾರ ಸ್ವಾಭಾವಿಕ ಎಂದು ಗುರುತಿಸಲ್ಪಟ್ಟಿದ್ದರೂ ಕೂಡ ತ್ರಿಕೋಣದ ವಿಸ್ಮಯಗಳನ್ನು ನಂಬುವವರ ಪ್ರಕಾರ ಇದು ನಿಸರ್ಗಾತೀತ ಶಕ್ತಿಯ ಪ್ರಭಾವ. ಈ ಘಟನೆಗಳಿಗೆ ಗಳು ಕಾರಣವೆಂದು ಉಳಿದ ಲೇಖಕರು ಹೇಳುತ್ತಾರೆ. ಕ್ಲೋಸ್ ಎನ್ಕೌಂಟರ್ಸ್ ಆಫ್ ದಿ ಥರ್ಡ್ ಕೈಂಡ್ ಎಂಬ ವೈಜ್ಞಾನಿಕ ಕಥೆಯ ಸಿನೆಮಾದಲ್ಲಿ ಸ್ಟಿವನ್ ಸ್ಪಿಲ್ಬರ್ಗ್ ಈ ಪರಿಕಲ್ಪನೆಯನ್ನು ಬಳಸಿಕೊಂಡಿದ್ದಾನೆ. ಇದರಲ್ಲಿ ಫ್ಲೈಟ್ 19 ವಿಮಾನವನ್ನು ಅನ್ಯಲೋಕದ ಜೀವಿಗಳು ಅಪಹರಿಸುತ್ತಾರೆ. ಪ್ರಸಿದ್ಧ ಭಾಷಾ ಶಾಸ್ತ್ರಜ್ಞ ಮತ್ತು ಅಪೂರ್ವ ಘಟನೆಗಳ ಕುರಿತಾಗಿ ಅನೇಕ ಪುಸ್ತಕಗಳನ್ನು ರಚಿಸಿರುವ ಚಾರ್ಲ್ಸ್ ಬರ್ಲಿಟ್ಜ್ ತ್ರಿಕೋಣದಲ್ಲಿ ನಡೆಯುತ್ತಿರುವ ಈ ವಿಶಿಷ್ಠ ಘಟನೆಯನ್ನು ಅಸಾಧಾರಣ ಹಾಗೂ ವಿವರಿಸಲಾಗದ ಶಕ್ತಿಯಿಂದಾಗಿ ನಡೆದ ಘಟನೆ ಎಂದು ವಿವರಿಸಿದ್ದಾರೆ. ಸ್ವಾಭಾವಿಕ ವಿವರಣೆಗಳು ದಿಕ್ಸೂಚಿ ಏರಿಳಿತಗಳು ದಿಕ್ಸೂಚಿಯಲ್ಲಿ ಕಂಡುಬಂದ ಸಮಸ್ಯೆಗಳು ತ್ರಿಕೋಣಲ್ಲಿ ನಡೆದ ಕೆಲವು ಘಟನೆಗಳಿಗೆ ಕಾರಣವಾಗಿವೆ. ಕೆಲವರ ಪ್ರಕಾರ ಆ ಜಾಗದಲ್ಲಿ ಆಯಸ್ಕಾಂತೀಯ ಶಕ್ತಿಯ ಕೇಂದ್ರ ಇರಬಹುದು ಆದರೆ ಆ ರೀತಿಯ ಕೇಂದ್ರದ ಬಗ್ಗೆ ಯಾವುದೇ ಸುಳಿವು ಕಂಡುಬರುವುದಿಲ್ಲ. ದಿಕ್ಸೂಚಿಯು ಆಯಸ್ಕಾಂತೀಯ ಧೃವಗಳಿಗೆಗಳಿಗೆ ಸಂಬಂಧಿಸಿದಂತೆ ಸ್ವಾಭಾವಿಕ ಆಯಸ್ಕಾಂತೀಯ ಏರಿಳಿತಗಳನ್ನು ಹೊಂದಿರುತ್ತದೆ. ಉದಾಹರಣೆಗೆ, ಸಂಯುಕ್ತ ಸಂಸ್ಥಾನದಲ್ಲಿ, ವಿಸ್ಕೊಸಿನ್ನಿಂದ ಮೆಕ್ಸಿಕೊ ಕೊಲ್ಲಿಗೆ ಹೋಗುವಾಗ ಮಾತ್ರ ಆಯಸ್ಕಾಂತೀಯ (ದಿಕ್ಸೂಚಿಯ)ಉತ್ತರ ಮತ್ತು ಭೌತಿಕ (ನೈಜ) ಉತ್ತರ ನಿಖರವಾಗಿ ಒಂದೇ ಆಗಿರುತ್ತವೆ ಅಥವಾ ಒಂದೇ ನೇರದಲ್ಲಿರುತ್ತವೆ. ಇದು ಸಮುದ್ರಯಾನ ಮಾಡುವವರಿಗೆ ಶತಮಾನಗಳಿಂದ ತಿಳಿದ ವಿಷಯವಾಗಿದೆ. ಆದರೆ ಈ ವಿಷಯವನ್ನು ಜನಸಾಮಾನ್ಯರಿಗೆ ತಿಳಿಸಿಲ್ಲ, ಮತ್ತು ದಿಕ್ಸೂಚಿ ಬದಲಾವಣೆಯಾಗುವುದು ಅಸಾಮಾನ್ಯ ಸಂಗತಿ ಎಂದು ಅವರು ಯೋಚಿಸುತ್ತಾರೆ. ತ್ರಿಕೋಣದ ಆ ಸ್ಥಳದಲ್ಲಿ ದಿಕ್ಸೂಚಿ ಬದಲಾಗುವುದು ಸಾಮಾನ್ಯವಾದ ವಿಷಯವಾಗಿದೆ. ಉದ್ದೇಶಪೂರ್ವಕವಾಗಿ ಕೈಗೊಂಡ ವಿನಾಶ ಕ್ರಿಯೆಗಳು ಉದ್ದೇಶಪೂರ್ವಕವಾದ ವಿನಾಶ ಕ್ರಿಯೆಗಳನ್ನು ಎರಡು ವಿಧವಾಗಿ ವಿಂಗಡಿಸಬಹುದು: ಯುದ್ಧದಿಂದಾಗಿ ನಡೆಯುವ ಕ್ರಿಯೆಗಳು ಹಾಗೂ ಕಡಲ್ಗಳ್ಳತನದಿಂದ ನಡೆಯುವ ಕ್ರಿಯೆಗಳು. ಶತ್ರು ದೇಶಗಳ ಕಡತವನ್ನು ಪರಿಶೀಲಿಸಿದಾಗ ಹಲವಾರು ಘಟನೆಗಳ ಉಲ್ಲೇಖ ಕಂಡುಬರುತ್ತದೆ ಪ್ರಪಂಚ ಯುದ್ಧದ ಸಮಯದಲ್ಲಿ ಕೆಲವು ಹಡಗುಗಳ ಮುಳುಗುವಿಕೆಯು ಮೇಲ್ಮಟ್ಟದ ದಾಳಿಗಳಿಂದ ಹಡಗು ಮುಳುಗಿದ್ದರೆ ಇನ್ನು ಕೆಲವು ಸಬ್ಮರೀನ್ಗಳಿಂದ ಮಾಡಿದ ದಾಳಿಯಿಂದಾಗಿದೆ. ಅಲ್ಲದೆ ಇವುಗಳನ್ನು ಆಜ್ಞೆಯ ಪುಸ್ತಕಗಳಲ್ಲಿ ನೋಡಬಹುದಾಗಿದೆ. ಇನ್ನು ಕೆಲವು ಘಟನೆಗಳಿಗೆ ಇನ್ನುವರೆವಿಗೂ ಕಾರಣವನ್ನು ಪತ್ತೆ ಹಚ್ಚಲಾಗಿಲ್ಲ. 1918ರಲ್ಲಿ ಕಳೆದುಹೋದ ಯುಎಸ್ಎಸ್ನ ಸೈಕ್ಲೋಪ್ಸ್ ಮತ್ತು ಅದರ ಜೊತೆಯ ಎರಡು ಹಡಗುಗಳು ಪ್ರೋಟ್ಯೂಸ್ ಮತ್ತು ನೆರ್ಯೂಸ್ ಇವು ಎರಡನೇ ಪ್ರಪಂಚ ಯುದ್ದದಲ್ಲಿನ ಸಬ್ಮರೀನ್ಗಳಿಗೆ ಬಲಿಯಾಗಿವೆ ಎಂದು ಊಹಿಸಲಾಗಿದೆ. ಆದರೆ ಜರ್ಮನ್ನ ದಾಖಲೆಗಳಲ್ಲಿ ಇದರ ಉಲ್ಲೇಖ ಕಂಡುಬರುವುದಿಲ್ಲ. ಕಡಲ್ಗಳ್ಳತನದಲ್ಲಿ ಸಾಮಾನ್ಯವಾಗಿ ಒಂದು ಹಡಗನ್ನು ಅಥವಾ ದೋಣಿಯನ್ನು ಸಮುದ್ರದಲ್ಲಿ ಆಕ್ರಮಿಸಿ, ಲೂಟಿಮಾಡಿ ನಾಶಮಾಡಲಾಗುತ್ತದೆ. ಇದು ಈಗಲೂ ಮುಂದುವರೆದಿದೆ. ಪಶ್ಚಿಮ ಪೆಸಿಫಿಕ್ ಸಾಗರ ಮತ್ತು ಹಿಂದೂ ಮಹಾಸಾಗರಗಳಲ್ಲಿ ಸರಕು ಸಾಗಣೆಯ ಹಡಗುಗಳನ್ನು ಲೂಟಿ ಮಾಡುವುದು ಸಾಮಾನ್ಯವಾಗಿದೆ. ಮಾಧಕ ದ್ರವ್ಯಗಳನ್ನು ಕಳ್ಳಸಾಗಣೆ ಮಾಡುವವರು ಪ್ರವಾಸಿ ದೋಣಿಗಳನ್ನು ಅಪಹರಿಸಿ ತಮ್ಮ ಕೆಲಸಗಳಿಗೆ ಬಳಸಿಕೊಳ್ಳುವುದು ಕೂಡಾ ಹೆಚ್ಚುತ್ತಿದೆ. ಕೆರಿಬಿಯನ್ ಸಮುದ್ರಗಳಲ್ಲಿ ಹಾಯಿದೋಣಿ ಮತ್ತು ಸಿಬ್ಬಂದಿಗಳ ನಾಪತ್ತೆಗೆ ಇದೂ ಕೂಡ ಕಾರಣವಾಗಿರಬಹುದು. ಕೆರಿಬಿಯನ್ ಸಮುದ್ರಗಳಲ್ಲಿ ಕಡಲ್ಗಳ್ಳತನ 1560ರಿಂದ 1760ರವರೆಗೆ ಸಾಮಾನ್ಯವಾಗಿತ್ತು, ಮತ್ತು ಪ್ರಸಿದ್ಧ ಕಡಲ್ಗಳ್ಳರಲ್ಲಿ ಎಡ್ವರ್ಡ್ ಟೀಚ್, ಬ್ಲಾಕ್ಬಿಯರ್ಡ್ ಮತ್ತು ಜೀನ್ ಲಾಫಿಟ್ಟೆ ರವರು ಮುಖ್ಯರಾಗಿದ್ದರು. ಗಲ್ಫ್ ಸ್ಟ್ರೀಮ್ ಗಲ್ಫ್ ಸ್ಟ್ರೀಮ್ ಇದೊಂದು ಸಾಗರ ಪ್ರವಾಹವಾಗಿದ್ದು, ಇದು ಗಲ್ಫ್ ಆಫ್ ಮೆಕ್ಸಿಕೊದಲ್ಲಿ ಹುಟ್ಟುತ್ತದೆ ಮತ್ತು ಈ ಪ್ರವಾಹವು ಸ್ಟ್ರೇಟ್ಸ್ ಆಫ್ ಫ್ಲೋರಿಡಾ ಮೂಲಕ ಉತ್ತರ ಅಟ್ಲಾಂಟಿಕ್ಗೆ ಸಾಗುತ್ತದೆ. ಮೂಲತಃ, ಇದು ಸಮುದ್ರದೊಳಗಿನ ಒಂದು ನದಿ, ಮತ್ತು ಒಂದು ನದಿಯಾಗಿ ತೇಲುವ ವಸ್ತುಗಳನ್ನು ಸೆಳೆದೊಯ್ಯುತ್ತದೆ.ಇದರ ಮೇಲ್ಮುಖ ವೇಗದ ಪ್ರಮಾಣವು ಸಾಮಾನ್ಯವಾಗಿ ನೀರಿನ ಮೇಲೆ ಇಳಿಯುವಂತಹ ಸಣ್ಣ ವಿಮಾನವೊಂದನ್ನು ಸೆಳೆದುಕೊಳ್ಳುವಷ್ಟು ಅಥವಾ ಇಂಜಿನ್ನಲ್ಲಿ ಯಾಂತ್ರಿಕ ದೋಷವಿರುವ ದೋಣಿಯನ್ನು ಸಾಮಾನ್ಯವಾಗಿ ತನ್ನ ಹರಿವಿನ ದಿಕ್ಕಿನೆಡೆಗೆ ಸೆಳೆದೊಯ್ಯುವಷ್ಟು ಸಾಮರ್ಥ್ಯವನ್ನು ಹೊಂದಿರುತ್ತದೆ. ಮನುಷ್ಯನ ತಪ್ಪುಗಳು ಅದಿಕೃತ ಮೂಲಗಳು ತನಿಖೆ ನಡೆಸಿದಾಗ ಹೆಚ್ಚಾಗಿ ಹಡಗು ಮತ್ತು ಯಾವುದೇ ವಿಮಾನಗಳ ಕಣ್ಮರೆಗೆ ಕಂಡುಬಂದ ಕಾರಣವೆಂದರೆ ಮಾನವ ಸಹಜ ತಪ್ಪುಗಳು. ಉದ್ದೇಶ ಪೂರ್ವಕವಾಗಿಯೋ ಅಥವಾ ಆಕಸ್ಮಿಕವಾಗಿಯೋ ಮನುಷ್ಯರು ಮಾಡುವ ತಪ್ಪುಗಳು ದು:ಖದಾಯಕ ಫಲಿತಾಂಶ ನೀಡುತ್ತಿರುತ್ತವೆ. ಇದಕ್ಕೆ ಬರ್ಮುಡಾ ತ್ರಿಕೋಣಕ್ಕೆ ಸಂಬಂಧಿಸಿದ ಘಟನೆಗಳು ಹೊರತಲ್ಲ. ಉದಾಹರಣೆಗೆ, ಕಡಲು ಕಾವಲು ಪಡೆ ಕಂಡುಕೊಂಡಂತೆ ವಾತಾವರಣದ ಶಾಖಕ್ಕೆ ಆವಿಯಾಗುವ ಬೆಂಜಿನ್ ತುಂಬುವ ಟ್ಯಾಂಕರ್ ಅನ್ನು ಶುಚಿ ಮಾಡುವ ಕುರಿತಾಗಿ ಸರಿಯಾದ ತರಬೇತಿಯನ್ನು ಹಡಗಿನಲ್ಲಿನ ಪರಿಚಾರಕರಿಗೆ ನೀಡದ್ದರಿಂದ 1972ರ ಎಸ್ಎಸ್ ವಿ.ಎ.ಫಾಗ್ ಟ್ಯಾಂಕರ್ ಅವಘಡಕ್ಕೆ ಈಡಾಗಬೇಕಾಯ್ತು. ಮನುಷ್ಯನ ಮೊಂಡುತನ ಕೂಡಾ ಕೆಲವೊಮ್ಮೆ ಅವಘಡಕ್ಕೆ ಕಾರಣವಾಗುತ್ತದೆ. ವ್ಯಾಪಾರಸ್ಥ ಹಾರ್ವೆ ಕೊನೊವರ್ ತನ್ನ ಯಾನದ ಹಾಯಿದೋಣಿಯನ್ನು ಕಳೆದುಕೊಳ್ಳಲು ಇದು ಕಾರಣ ಎನ್ನಬಹುದು. ಅವರು ಜನವರಿ 1,1958ರಂದು ತಮ್ಮ ಹಾಯಿದೋಣಿ ರೆವೊನಾಕ್ ದೊಂದಿಗೆ ಫ್ಲೋರಿಡಾದ ದಕ್ಷಿಣಕ್ಕೆ ಪ್ರವಾಹದ ನೆಲೆಯ ದಾರಿಯಲ್ಲಿ ಪ್ರಯಾಣಕ್ಕೆ ತೆರಳಿದಾಗ ಕಳೆದುಕೊಂಡರು. ಸಮುದ್ರದ ಯಾವ ವಾತಾವರಣವು ಹಡಗಿಗೆ ಹಾನಿಯುಂಟು ಮಾಡುತ್ತದೆ ಎಂಬ ಪ್ರಾಥಮಿಕ ಮಾಹಿತಿಯ ಕೊರತೆಯಿಂದ ಹಲವಾರು ಅವಘಡಗಳು ಉಂಟಾದುದಾಗಿದೆ ಎಂಬುದನ್ನು ಅಧಿಕೃತ ಮೂಲಗಳು ತಮ್ಮ ವರದಿಯ ಸಂದರ್ಭದಲ್ಲಿ ಕಂಡುಕೊಂಡಿದ್ದಾರೆ. ಸುಂಟರಗಾಳಿಗಳು ಸುಂಟರಗಾಳಿ ಶಕ್ತಿಯುತ ಮಾರುತವಾಗಿದ್ದು ಭೂಮಧ್ಯ ರೇಖೆಯ ನೀರಿನಲ್ಲಿ ಹುಟ್ಟುತ್ತದೆ. ಈವರೆಗೆ ಸಾವಿರಾರು ಜನರ ಪ್ರಾಣಹಾನಿ ಹಾಗೂ ಬಿಲಿಯನ್ಗಟ್ಟಲೆ ಡಾಲರ್ ಹಣದ ಹಾನಿಗೆ ಕಾರಣವಾಗಿದೆ. ಫ್ರಾನ್ಸಿಸ್ಕೊ ಡೆ ಬೊಬಾಡಿಲ್ಲಾ ಎಂಬ ಸ್ಪಾನಿಷ್ ಹಡಗು 1502ರಲ್ಲಿ ಮುಳುಗಿದ್ದು ಅಪಾಯಕಾರಿ ಸುಂಟರಗಾಳಿಗೆ ಸಿಲುಕಿ ನಾಶವಾದ ಮೊದಲ ದಾಖಲಿತ ಘಟನೆಯಾಗಿದೆ. ತ್ರಿಕೋಣಕ್ಕೆ ಹೋಲಿಸಿದರೆ ಈ ಮಾರುತಗಳು ಹಿಂದೆ ಹೆಚ್ಚಿನ ಘಟನೆಗಳಿಗೆ ಕಾರಣವಾಗಿದೆ. ಮೀಥೇನ್ ಹೈಡ್ರೇಟ್ಸ್ ಕೆಲವು ಕಣ್ಮರೆಗಳಿಗೆ ಸಮುದ್ರದೊಳಗಿನ ಭೂ ಪದರಗಳಲ್ಲಿ ದೊಡ್ಡ ಮೀಥೇನ್ ಹೈಡ್ರೇಟ್ಸ್ (ಒಂದು ರೀತಿಯ ನೈಸರ್ಗಿಕ ಅನಿಲ) ನಿಕ್ಷೇಪವಿದ್ದು ಅದರಿಂದ ಉತ್ಪತ್ತಿಯಾಗುವ ಅನಿಲವು ಇಲ್ಲಿನ ಕೆಲವು ಘಟನೆಗಳಿಗೆ ಕಾರಣವಾಗಿದೆ ಎಂದು ಕೆಲವೊಮ್ಮೆ ವಿವರಿಸಲಾಗುತ್ತದೆ. ಆಸ್ಟ್ರೇಲಿಯಾದ ಪ್ರಯೋಗಾಲಯದಲ್ಲಿ ಮಾಡಿದ ಪ್ರಯೋಗಗಳು ನೀರಿನಿಂದೇಳುವ ಬಿಸಿನೀರ ಬುಗ್ಗೆಗಳು ನೀರಿನ ಸಾಂದ್ರತೆಯನ್ನು ಕಡಿಮೆ ಮಾಡುವುದರಿಂದ ನೀರ ಮೇಲೆ ತೇಲುವ ವಸ್ತುಗಳು ಮುಳುಗುವ ಸಾಧ್ಯತೆ ಇದೆ ಎಂದು ಕಂಡುಕೊಳ್ಳಲಾಯ್ತು. ಗಲ್ಫ್ ಸ್ಟ್ರೀಮ್ದಿಂದಾಗಿ ಸಮುದ್ರದ ಭೂತಳದಿಂದ ಮೇಲೇಳುವ ಚೂರುಗಳೂ ಕೂಡ ಈ ಅವಘಡಗಳಿಗೆ ಕಾರಣವಾಗಿರಬಹುದು. ಕೆಲವೊಮ್ಮೆ ಸಮುದ್ರದಲ್ಲಿನ ಮಿಥೇನ್ ನೀರಿನ ಮೆಲ್ಮೈಗೆ ಚಿಮ್ಮುವುದರಿಂದಾಗಿ (ಕೆಲವೊಮ್ಮೆ ಇದನ್ನು ಮಣ್ಣು ಚಿಮ್ಮುವ ಜ್ವಾಲಾಮುಖಿಎಂದು ಕರೆಯಲಾಗುತ್ತದೆ )ಬುರುಗಿನಿಂದ ಕೂಡಿದ ನೀರಿನ ಮೇಲ್ಮೈ ರಚಿತವಾಗುತ್ತದೆ. ಈ ಜಾಗದಲ್ಲಿ ಹಡಗು ತೇಲುವಷ್ಟು ಸಾಂದ್ರತೆ ನೀರಿಗೆ ಇರುವುದು ಸಾಧ್ಯವಿಲ್ಲ. ಆಗ ಕೂಡ ಹಡಗು ಮುಳುಗುವ ಸಾಧ್ಯತೆ ಇದೆ ಎಂಬುದನ್ನು ಕೆಲವು ವಾದಗಳು ಮಂಡಿಸುತ್ತವೆ. ಹಡಗಿನ ಸುತ್ತ ಈ ರೀತಿಯ ಸ್ಥಳಗಳಿದ್ದಲ್ಲಿ ಯಾವುದೇ ಮುನ್ಸೂಚನೆ ಕೂಡ ನೀಡದೆ ಅದು ಮುಳುಗುವ ಸಾಧ್ಯತೆ ಇದೆ. ಅಮೇರಿಕಾ ಸಂಯುಕ್ತ ಸಂಸ್ಥಾನದ ಆಗ್ನೆಯ ಭಾಗದ ಸಮುದ್ರ ಹಾಗೂ ಬ್ಲೇಕ್ ರಿಟ್ಜ್ ಪ್ರದೇಶಗಳನ್ನೊಳಗೊಂಡು ಯುಎಸ್ಜಿಎಸ್ ಪ್ರಕಟಿಸಿದ ಪುಸ್ತಕಗಳಲ್ಲಿ ಪ್ರಪಂಚದಾದ್ಯಂತ ಸಮುದ್ರದೊಳಗೆ ಆಗಾಧವಾದ ಹೈಡ್ರೇಟ್ಸ್ ನಿಕ್ಷೇಪವಿದೆ ಎಂದು ಹೇಳಲಾಗಿದೆ. ಅದೇನೆ ಇದ್ದರೂ ಕೂಡ ಅವರ ಇತರೆ ಕೆಲವು ಪ್ರಬಂಧಗಳ ಪ್ರಕಾರ, ಕಳೆದ 15,000 ವರ್ಷಗಳ ಸಮಯದಲ್ಲಿ ಬರ್ಮುಡಾ ತ್ರಿಕೋಣದ ಜಾಗದಲ್ಲಿ ಹೆಚ್ಚಿನ ಹೈಡ್ರೇಟ್ ಗ್ಯಾಸ್ ಬಿಡುಗಡೆಯಾದ ಬಗ್ಗೆ ಕುರುಹುಗಳಿಲ್ಲ. ಅದಲ್ಲದೆ ಸಮುದ್ರೊಳಗಿನ ಮೀಥೇನ್ ಹೈಡ್ರೇಟ್ಸ್ ಬರ್ಮುಡಾ ತ್ರಿಕೋಣದಲ್ಲಿ ನಡೆದ ಘಟನೆಗಳಿಗೆ ಕಾರಣವಾಗಿದೆ ಎಂದು ಊಹಿಸಿದಂತೆ ಇದು ಪ್ರಪಂಚದ ಇತರ ಭಾಗಗಳಲ್ಲಿ ಅವಘಡಗಳಿಗೆ ಕಾರಣವಾಗಿಲ್ಲ. ನೀರೊಳಗಿನಿಂದ ಉತ್ಪತ್ತಿಯಾಗುವ ಗ್ಯಾಸ್ನಿಂದ ಏಳುವ ಗುಳ್ಳೆಗಳು ವಿಮಾನ ಕಣ್ಮರೆಗೆ ಕಾರಣವಾಗುವುದು ಸಾಧ್ಯವಿಲ್ಲ. ರಾಕ್ಷಸ ಅಲೆಗಳು ಪ್ರಪಂಚದ ವಿವಿಧೆಡೆಯ ಸಮುದ್ರಗಳಲ್ಲಿ ರಾಕ್ಷಸ ಅಲೆಗಳಿಂದಾಗಿ ಹಲವಾರು ಹಡಗುಗಳು ಮುಳುಗಲು ಹಾಗೂ ತೈಲ ಸಾಗಿಸುತ್ತಿದ್ದ ಹಡಗುಗಳ ಉರುಳುವುದಕ್ಕೆ ಕಾರಣವಾಗಿದೆ. ಈ ಅಲೆಗಳನ್ನು ವಿಸ್ಮಯ ಎಂದು ನಂಬಲಾಗಿತ್ತು ಹಾಗೂ ಇತ್ತೀಚಿನವರೆಗೂ ಈ ರೀತಿಯ ಅಲೆಗಳು ಇರುವುದು ದಂತಕಥೆ ಎಂದು ನಂಬಲಾಗಿತ್ತು. ಅದೇನೇ ಇದ್ದರೂ ಈ ರಾಕ್ಷಸ ಅಲೆಗಳು ವಿಮಾನಗಳ ಕಣ್ಮರೆಗೆ ಕಾರಣವಾಗುವುದಂತೂ ಸಾಧ್ಯವಿಲ್ಲ. ಗುರುತರ ಘಟನೆಗಳು 19 ತರಬೇತಿ ನಿರತ ಫ್ಲೈಟ್ 19 ಟಿಬಿಎಮ್ ಎವೆಂಜರ್ ಬಾಂಬರ್ ಐದು ವಿಮಾನಗಳ ಗುಂಪೊಂದು ಡಿಸೆಂಬರ್ 5, 1945ರಂದು ಅಟ್ಲಾಂಟಿಕ್ ಮೇಲೆ ಹಾದು ಹೋಗುವಾಗ ಕಣ್ಮರೆಯಾಯಿತು. ವಾಯುದಳದ ಸೇನಾ ವಿಮಾನಗಳನ್ನು ಪೂರ್ವಕ್ಕೆ ೧೨೦ ಮೈಲು, ಉತ್ತರಕ್ಕೆ 73 ಮೈಲು ಮತ್ತು ಅಲ್ಲಿಂದ ಹಿಂದಿರುಗಿ 120 ಮೈಲುಗಳ ಹಾರಾಟ ನಡೆಸಿ ಹಿಂದಿರುಗಿ ನೌಕಾನೆಲೆಗೆ ಬರುವಂತೆ ನಿರ್ದೇಶಿಸಲಾಗಿತ್ತು. ಆದರೆ ವಾಯುಸೇನಾ ಪಡೆಯ ಫ್ಲೈಟ್ 19 ಕಣ್ಮರೆಯಾಯಿತು. ಉತ್ತಮ ವಾತಾವರಣ ಹಾಗೂ ಸಾಕಷ್ಟು ಪರಿಣಿತಿ ಹೊಂದಿದ್ದ ವಿಮಾನ ಚಾಲಕ ಲೆಫ್ಟಿನೆಂಟ್ ಚಾರ್ಲ್ಸ್ ಕ್ಯಾರೊಲ್ ಟೈಲರ್ ನೇತೃತ್ವದಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನಗಳು ಇದ್ದಕ್ಕಿದ್ದಂತೆ ಕಣ್ಮರೆಯಾಗಲು ಯಾವುದೋ ಅಸ್ವಾಭಾವಿಕ ಶಕ್ತಿ ಹಾಗೂ ಅತಾರ್ಕಿಕವಾದ ದಿಕ್ಕೂಚಿ ಓದುವಿಕೆ ಕಾರಣ ಎಂದು ಬಿಂಬಿಸಲಾಯ್ತು. ಈ ಗೊಂದಲಕ್ಕೆ ಇನ್ನಷ್ಟು ಸೇರಿಸುತ್ತಾ ನೌಕಾದಳವು ಈ ಅವಘಡ ನಡೆಯಲು ಕಾರಣ ಯಾವುದೋ ಗುರುತಿಸಲಾಗದ ವಿಷಯ ಎಂದು ಹೇಳಿಕೆ ನೀಡಿತು. ಲೆಫ್ಟಿನಂಟ್ ಟೈಲರ್ ಅವರ ತಾಯಿಯು ತನ್ನ ಮಗನ ಕೀರ್ತಿಗೆ ದಕ್ಕೆಯಾಗುವುದನ್ನು ತಡೆಯಲು ನೌಕಾದಳವು ಈ ಅವಘಡಕ್ಕೆ ಯಾವುದೋ ಗುರುತಿಸಲಾಗದ ವಿಷಯ ಎಂದು ಬರೆಯುವಂತೆ ಮಾಡಿದಳು ಎಂದು ನಂಬಲಾಗಿದೆ. ಈ ಅವಘಡ ನಡೆದ ಸಮಯದಲ್ಲಿ ಟೈಲರ್ ಎಲ್ಲಿ ಇದ್ದಿರಬಹುದು ಎಂದುಕೊಂಡಿದ್ದರೋ ಅಲ್ಲಿಗಿಂತ 50ಕಿಮಿ ದೂರ ವಾಯವ್ಯ ದಿಕ್ಕಿನಲ್ಲಿ ಇದ್ದರು. ಕಣ್ಮರೆಯಾದ ವಾಯುದಳ ವಿಮಾನದ ಕುರುಹನ್ನು ಹುಡುಕಲು ಹೊರಟ 13 ಜನರಿದ್ದ ರಕ್ಷಣಾ ಪಡೆಯ ಮಾರಿನರ್ ವಿಮಾನವು ತಿರುಗಿ ಬರದೇ ಕಣ್ಮರೆಯಾಗಿ ಈಗಾಗಲೇ ಆಗಿದ್ದ ಅವಘಡದ ವಿಸ್ಮಯಕ್ಕೆ ಇನ್ನೊಂದು ಸೇರ್ಪಡೆಯಾಯ್ತು. ಫ್ಲೋರಿಡಾದಿಂದ ಹೊರಟ ತೈಲಟ್ಯಾಂಕರ್ ನೌಕೆಯೊಂದು ಸ್ಪೋಟವೊಂದನ್ನು ಕಂಡದ್ದಾಗಿ ವರದಿ ಮಾಡಿತು. ಮಾರಿನರ್ ಗಸ್ತು ನಡೆಸುತ್ತಿದ್ದಾಗ ಸ್ಪೋಟಗೊಂಡಿರಬಹುದು ಎಂದು ತೀರ್ಮಾನಿಸಲಾಯಿತು. ಈ ವಿವರಣೆಗಳು ಸಾಮಾನ್ಯವಾಗಿ ನಿಖರ ಎಂದು ಎನಿಸಿದರೂ ಕೂಡ ಕೆಲವೂ ಮುಖ್ಯವಿಷಯಗಳು ಬಿಟ್ಟು ಹೋಗಿವೆ ಎಂದೆನಿಸುತ್ತದೆ. ಈ ಅವಘಡ ನಡೆದ ಕೊನೆ ಗಳಿಗೆಯಲ್ಲಿ ಅಲ್ಲಿಯ ಹವಾಮಾನ ವಿಪರೀತ ಗಾಳಿಯಿಂದ ಕೂಡಿದ್ದರಿಂದ ನೌಕಾ ಪಡೆಯು ಫ್ಲೈಟ್ 19ರ ಇತರೆ ವಿಮಾನ ಚಾಲಕರ ಜೊತೆಗೆ ಟೈಲರ್ ನಡೆಸಿದ ಸಂಭಾಷಣೆಯನ್ನು ಆಧಾರವಾಗಿರಿಸಿಕೊಂಡು ಇಲ್ಲಿ ನಡೆದ ಅವಘಡಕ್ಕೆ ಆಯಸ್ಕಾಂತಿಯ ಶಕ್ತಿ ಕಾರಣವಲ್ಲ ಎಂಬುದನ್ನು ಪಟ್ಟಿ ಮಾಡಿತು. ಮೇರಿ ಸೆಲೆಸ್ಟ್ 1872ರಲ್ಲಿ ಕಾಣೆಯಾದ 282 ಟನ್ ತೂಕದ ಮೇರಿ ಸೆಲೆಸ್ಟ್ ಹಡಗು ಪೊರ್ಚುಗಲ್ ಕಡಲು ತೀರವನ್ನು ಬಿಟ್ಟಾಗ ಮುಳುಗಿದ್ದು ಇದು ಅಷ್ಟು ನಿಖರವಾಗಿ ಅಲ್ಲದಿದ್ದರೂ ಕೂಡ ಇದನ್ನು ಈ ತ್ರಿಕೋಣದಲ್ಲೇ ಮುಳುಗಿದ್ದು ಎಂದು ನಮೂದಿಸಲಾಗುತ್ತದೆ. ಬಹುಶ: ಮುಳುಗಿದ 207ಟನ್ ತೂಕದ ಮೇರಿ ಸೆಲೆಸ್ಟ್ ಎಂಬ ಇನ್ನೊಂದು ಉಗಿಹಡಗು ಸೆಪ್ಟೆಂಬರ್ 13, 1864ರಲ್ಲಿ ಮಂಜುಗಡ್ಡೆಯೊಂದಕ್ಕೆ ಬಡಿದು ತಕ್ಷಣ ಮುಳುಗಿತು. ಇದನ್ನು ಮೇರಿ ಸೆಲೆಸ್ಟ್ ಹಡಗು ಎಂದು ನಮೂದಿಸಲಾಯಿತು ಎಂದುಕೊಳ್ಳಲಾಗಿದೆ. ಮೇರಿ ಸೆಲೆಸ್ಟೆ ಕುರಿತಾಗಿ ಕುಶ್ಚೆ ಗುರುತಿಸಿದ ಹಲವಾರು ವಿಷಯಗಳು ಅರ್ಥರ್ ಕಾನನ್ ಡಯಲ್ ಬರೆದ ಸಣ್ಣ ಕಥೆ ಜೆ.ಹಬಾಕುಕ್ ಜೊಸೆಫನ್ಸ್ ಸ್ಟೇಟ್ಮೆಂಟ್ (ನಿಜವಾದ ಮೇರಿ ಸೆಲೆಸ್ಟೆ ಘಟನೆಯ ಕುರಿತು ಬರೆದ ಕಾಲ್ಪನಿಕ ಕತೆ) ಕುರಿತಾದುದಾಗಿದೆ. ಎಲೆನ್ ಆಸ್ಟಿನ್ ದಿ ಎಲೆನ್ ಆಸ್ಟಿನ್ ಎಂಬ ಹಡಗು 1881ರಲ್ಲಿ ನ್ಯೂಯಾರ್ಕ್ ಕಡೆಗಿನ ತನ್ನ ಪ್ರಯಾಣದಲ್ಲಿ ಒಂದು ಬಿಟ್ಟುಹೋಗಲ್ಪಟ್ಟಿದ್ದ ಒಂದು ಹಡಗನ್ನು ಕಂಡರು. ಅದೊಂದು ಖಾಲಿ ತೇಲುತ್ತಿದ್ದ ಹಡಗಾಗಿತ್ತು. ಅದನ್ನು ಪ್ರಮುಖ ನೌಕಾ ಸಿಬ್ಬಂದಿಯವರಿಗೆ ಹಡಗಿನ ಜೊತೆಗೇ ತರಲು ಹೇಳಲಾಯಿತು. ಆದರೆ, ಚಾಲ್ತಿಯಲ್ಲಿರುವ ಕಥೆಗಳ ಪ್ರಕಾರ, ಆ ಹಡಗು ಒಮ್ಮೆ ಕಣ್ಮರೆಯಾಯ್ತು. ಕೆಲವರ ಪ್ರಕಾರ, ಅದು ಮತ್ತೊಮ್ಮೆ ಕಾಣಿಸಿಕೊಂಡಿತು, ಆದರೆ ಅದರಲ್ಲಿದ್ದ ಪ್ರಮುಖ ಸಿಬ್ಬಂದಿಯಿರಲಿಲ್ಲ. ನಂತರ ಮತ್ತೊಂದು ಸಿಬ್ಬಂದಿ ತಂಡವನ್ನು ಕಳುಹಿಸಿದರು. ಆದರೆ ಮತ್ತೆ ಅದು ಅವರನ್ನೂ ಸೇರಿ ಮರೆಯಾಗಿಹೋಯಿತು. ಲಾಯ್ಡ್ ಆಫ್ ಲಂಡನ್ನ ಕಡತಗಳ ಪ್ರಕಾರ ಮೆಟಾ ಎಂಬ ಹಾಯಿದೋಣಿಯನ್ನು 1854ರಲ್ಲಿ ನಿರ್ಮಿಸಲಾಗಿದ್ದು ಅದನ್ನು 1880ರಲ್ಲಿ ಅದನ್ನು ಮೆಟಾ ದ ಬದಲಿಗೆ ಎಲೆನ್ ಆಸ್ಟಿನ್ ಎಂದು ಮರುನಾಮಕರಣ ಮಾಡಲಾಯ್ತು. ಇದರ ಕುರಿತು ಯಾವುದೇ ರೀತಿಯ ಅಪಘಾತ ವರದಿಯಾಗಿಲ್ಲ. ಅಲ್ಲದೆ, ಇದರಿಂದ ಬಹಳಷ್ಟು ಜನ ಕಾಣೆಯಾದ ಬಗ್ಗೆಯೂ ಕೂಡ ಸುಳುವುಗಳು ದೊರೆಯುವುದಿಲ್ಲ. ಯುಎಸ್ಎಸ್ ಸೈಕ್ಲೋಪ್ಸ್ ಯುಎಸ್ಎಸ್ ಸೈಕ್ಲೋಪ್ಸ್ ಕಣ್ಮರೆಯಾದ ಘಟನೆಯ ಅಮೇರಿಕಾ ಸಂಯುಕ್ತ ಸಂಸ್ಥಾನದ ನೌಕಾಪಡೆಯ ಇತಿಹಾಸದಲ್ಲೇ ಭೀಕರವಾದ ಸಾವು ಸಂಭವಿಸಿದ ಘಟನೆಯಾಗಿದೆ. ಬಾರ್ಬಡೋಸ್ ದ್ವೀಪದಿಂದ ಹೊರಟ ಜಿ.ಡಬ್ಲ್ಯೂ.ವರ್ಲೇ ನೇತೃತ್ವದಲ್ಲಿದ್ದ ಸೈಕ್ಲೋಪ್ಸ್ ಅದರಲ್ಲಿದ್ದ ಸುಮಾರು 309 ಜನರೊಂದಿಗೆ ಮಾರ್ಚ್ 4, 1918ರ ಸುಮಾರಿನಲ್ಲಿ ಕಣ್ಮರೆಯಾಯಿತು. ಈ ಘಟನೆಯ ಕುರಿತಾದ ಯಾವುದೇ ಸೂಕ್ತ ಆಧಾರಗಳಿಲ್ಲದಿದ್ದರೂ ಕೂಡ ಬಹಳಷ್ಟು ಜನ ತಮ್ಮದೇ ವಾದವನ್ನು ಮಂಡಿಸಿದ್ದಾರೆ. ಕೆಲವರು ಬಿರುಗಾಳಿ ಇದಕ್ಕೆ ಕಾರಣ ಎಂದು ಇನ್ನು ಕೆಲವರು ಹಡಗು ಮಗುಚಿಕೊಂಡಿದ್ದರಿಂದ ಈ ಘಟನೆ ನಡೆದಿರಬಹು ಹಾಗೂ ಕೆಲವೊಬ್ಬರ ಪ್ರಕಾರ ಯುದ್ಧ ವೈರಿಗಳ ದಾಳಿಯಿಂದ ಇದು ಸಂಭವಿಸಿರಬಹುದು ಎಂದು ನಡೆದ ಘಟನೆಗೆ ವಿವಿಧ ವಿವರಣೆಗಳನ್ನು ನೀಡುತ್ತಾರೆ. ಥಿಯೊಡೋಸಿಯಾ ಬರ್ ಅಲ್ಸ್ಟನ್ ಥಿಯೊಡೋಸಿಯಾ ಬರ್ ಆಲ್ಸ್ಟಾನ್ ಇವರು ಅಮೇರಿಕಾ ಸಂಯುಕ್ತ ಸಂಸ್ಥಾನದ ಮಾಜಿ ಉಪರಾಷ್ಟ್ರಪತಿ ಅರಾನ್ ಬರ್ ಅವರ ಮಗಳಾಗಿದ್ದಳು. ಇವರ ಕಣ್ಮರೆಯನ್ನು ತ್ರಿಕೋಣದ ಕುರಿತಾದ ಹೇಳಿಕೆಗಳು ಬಂದಾಗೆಲ್ಲಾ ಒಮ್ಮೆಯಾದರೂ ಉದಾಹರಿಸಲಾಗುತ್ತದೆ. ಡಿಸೆಂಬರ್ 30, 1812ರಂದು ದಕ್ಷಿಣ ಕೆರೋಲಿನಾದ ಚಾರ್ಲ್ಸ್ಟನ್ನಿಂದ ನ್ಯೂಯಾರ್ಕ್ಗೆ ಪ್ರಯಾಣ ಹೊರಟ ದಿ ಪೆಟ್ರಿಯಾಟ್ ಹಡಗಿನಲ್ಲಿ ಥಿಯೊಡೋಸಿಯಾ ಪ್ರಯಾಣಿಕರಾಗಿದ್ದರು. ಈ ಪ್ರಯಾಣವನ್ನು ಆದಷ್ಟು ಬರ್ಮುಡಾ ತ್ರಿಕೋಣದ ಆಚೆಯಲ್ಲೇ ಸಾಗುವಂತೆ ನಿರ್ಧರಿಸಲಾಗಿದ್ದರೂ ಕೂಡ ಈ ಪ್ರಯಾಣದ ಸ್ಥಳವು ತ್ರಿಕೋಣದ ಕೊನೆಯ ಪರಿಧಿಯಲ್ಲೇ ಇತ್ತು ಎಂಬುದು ವಿಪರ್ಯಾಸ. ಕಡಲ್ಗಳ್ಳತನ ಹಾಗೂ 1812ರ ಯುದ್ದವನ್ನು ಈ ಕಣ್ಮರೆಯ ಕಾರಣ ಎಂದು ಹಲವಾರು ಜನ ವಾದ ಮಂಡಿಸಿದರು. ಹಾಗೂ ತ್ರಿಕೋಣದ ಹೊರಗೆ ಟೆಕ್ಸಾಸ್ ಮೂಲಕ ಕೂಡ ಇವರನ್ನು ಕಳುಹಿಸಬಹುದಾಗಿತ್ತು ಎಂಬ ವಾದಗಳು ಕೇಳಿಬಂದವು. ಸ್ಪ್ರೇ [[ಸ್ಪ್ರೇ (ಸೇಲಿಂಗ್ ವೆಸೆಲ್)ಎಸ್.ವಿ. ]][[ಸ್ಪ್ರೇ (ಸೇಲಿಂಗ್ ವೆಸೆಲ್)ಸ್ಪ್ರೇ]] ಇದೊಂದು ತೊರೆಯಲ್ಪಟ್ಟಿದ್ದ ಮೀನುಗಾರಿಕಾ ಹಡಗು ಆಗಿದ್ದು, ಇದನ್ನು ದೀರ್ಘ ಪ್ರಯಾಣದ ಹಡಗಾಗಿ ಮರುಜೋಡಿಸಿ ಜೊಷುವಾ ಸ್ಲೋಕಮ್ ಅವರು 1895ರಿಂದ 1898ರೊಳಗೆ ಏಕವ್ಯಕ್ತಿ ಸಾಗರ ಪರ್ಯಟನೆಯನ್ನು ಪೂರೈಸುವ ಉದ್ದೇಶಕ್ಕೆ ಬಳಸಿದರು. 1909 ರಲ್ಲಿ ಸ್ಲೋಕಮ್ ಅವರು ವೆನಿಜ್ಯುವೆಲಾಕ್ಕೆ ವೈನ್ ಯಾರ್ಡ್ ಹೆವನ್ನಿಂದ ಪ್ರಯಾಣವನ್ನು ಪ್ರಾರಂಬಿಸಿದರು. ಅವರಾಗಲಿ ಅಥವಾ ಸ್ಪ್ರೇ ಆಗಲಿ ಆ ನಂತರ ಕಾಣಿಸಿಕೊಳ್ಳಲಿಲ್ಲ. ಅವರ ಕಣ್ಮರೆಯ ಈ ಘಟನೆ ನಡೆದಾಗ ಅವರು ಬರ್ಮುಡಾ ತ್ರಿಕೋಣದ ಪ್ರದೇಶದಲ್ಲಿದ್ದದ್ದು ಅಥವಾ ಅತಿಶಯ ಶಕ್ತಿಯ ಪ್ರಭಾವದಿಂದ ಹೀಗಾಯಿತು ಎಂಬುದಕ್ಕೆ ಯಾವುದೇ ಸಾಕ್ಷ್ಯಾದಾರಗಳಿಲ್ಲ. ಈ ಹಡಗು ತುಂಬಾ ದುಸ್ಥಿಯಲ್ಲಿತ್ತು ಹಾಗೂ ಈ ಹಡಗನ್ನು ನಡೆಸುವಷ್ಟು ಪರಿಣಿತಿ ಸ್ಲೋಕಮ್ಗೆ ಇರಲಿಲ್ಲ ಎಂಬುದನ್ನು ಈ ಘಟನೆಯ ಕಾರಣ ಎಂದು ಪರಿಗಣಿಸಲಾಯ್ತು. ಕ್ಯಾರೊಲ್ ಎ.ಡೀರಿಂಗ್ 1919ರಲ್ಲಿ ನಿರ್ಮಿಸಲಾಗಿದ್ದ ಐದು ಜನರಿರಬಹುದಾದ ವೇಗದ ಹಡಗು ಕ್ಯಾರೊಲ್ ಎ.ಡೀರಿಂಗ್ ತೀರಾ ಹಾಳಾದ ಸ್ಥಿತಿಯಲ್ಲಿ ಉತ್ತರ ಕೆರೋಲಿನಾದ ಕೇಪ್ ಹ್ಯಾಟ್ಟರಾಸ್ ಸಮೀಪದ ಡೈಮಂಡ್ ಶೋಲ್ಸ್ನಲ್ಲಿ ಜನವರಿ 31,1921ರಂದು ಕಂಡುಬಂದಿತು. ಡೀರಿಂಗ್ ನ ಈ ಸ್ಥಿತಿಗೆ ಕಾರಣ ಕಡಲ್ಗಳ್ಳತನ. ನಿಷೇಧಿತ ಸಮಯದಲ್ಲಿ ಅಕ್ರಮವಾಗಿ ರಮ್ ಸಾಗಾಣಿಕೆ ಮಾಡುತ್ತಿದ್ದ ಗುಂಪಿಗೆ ಸೇರಿದ್ದ ಎಸ್.ಎಸ್.ಹೆವಿಟ್ ಎನ್ನುವ ಹಡಗು ಇದೇ ಸಮಯಕ್ಕೆ ಕಣ್ಮರೆಯಾಗಿದ್ದು ಅವರ ಜೊತೆ ಈ ಡೀರಿಂಗ್ ಕೂಡಾ ಸೇರಿರಬಹುದು ಎಂಬ ಗಾಳಿಸುದ್ದಿ ಹಾಗೂ ಆ ಘಟನೆಯ ಜೊತೆ ಇದನ್ನು ಗುರುತಿಸಲಾಯಿತು. ಡೀರಿಂಗ್ ಹೋದ ದಿಕ್ಕಿನಲ್ಲೇ ಅದರ ದಾರಿಗೇ ಸಮನಾಗಿ ಒಂದು ತಾಸುಗಳ ನಂತರ ಕಡಲಿನಲ್ಲಿ ಗಸ್ತಿನಲ್ಲಿದ್ದ ದೀಪದ ಹಡಗಿನ ಎಲ್ಲ ಸಂಜ್ಞೆಗಳನ್ನು ದಿಕ್ಕರಿಸಿ ಹಡಗೊಂದು ಹಾಯ್ದು ಹೋಯ್ತು.ಡಿರಿಂಗ್ ನಲ್ಲಿದ್ದ ಸಿಬ್ಬಂದಿಗಳು ಕಾಣೆಯಾಗುವುದಕ್ಕೆ ಈ ಹೆವಿಟ್ ಎನ್ನುವ ಈ ವಿಸ್ಮಯದ ಹಡಗೇ ಕಾರಣ ಎಂದು ಊಹಿಸಲಾಯಿತು. ಡೊಗ್ಲಸ್ 3 ಡಿಸೆಂಬರ್ 28, 1948ರಂದು ಡೌಗ್ಲಾಸ್ 3, 16002 ಸಂಖ್ಯೆಯ ವಿಮಾನವು ಸ್ಯಾನ್ಜ್ಯೂವಾನ್, ಪೊರ್ಟೊರಿಕೊದಿಂದ ಮಿಯಾಮಿಗೆ ಹೊರಟು ಕಣ್ಮರೆಯಾಯಿತು. ವಿಮಾನದ ಯಾವುದೇ ಕುರುಹುಗಳು ಹಾಗೂ ಅದರಲ್ಲಿದ್ದ 32 ಜನರ ಬಗ್ಗೆ ಸುಳಿವು ಕೂಡಾ ಪತ್ತೆಯಾಗಲಿಲ್ಲ. ಸಿವಿಲ್ ಏರೊನಾಟಿಕ್ಸ್ ಬೋರ್ಡ್ ತನಿಖೆಯಿಂದ ಈ ಘಟನೆಗೆ ಮುಖ್ಯ ಕಾರಣವು ತಿಳಿದು ಬಂತು. ಆದರೆ ತ್ರಿಕೋಣದ ಬರಹಗಾರರು ಇದನ್ನು ಒಪ್ಪದೇ ಈ ವಾದವನ್ನು ಮುಂದಿಟ್ಟರು:ಸ್ಯಾನ್ಜ್ಯೂವಾನ್ನಿಂದ ಹಾರಾಟಕ್ಕೆ ಮೊದಲು ವಿಮಾನದ ಬ್ಯಾಟರಿಯನ್ನು ಪರೀಕ್ಷಿಸಿದ್ದು, ಅದು ಕನಿಷ್ಠ ಶಕ್ತಿಯನ್ನು ಹೊಂದಿದ್ದು ತಿಳಿದು ಬಂದಿತು. ಆದರೆ ಅದನ್ನು ಮರುಪೂರಣ ಮಾಡದೇ ಹಾಗೆಯೇ ವಿಮಾನ ಚಾಲಕ ವಿಮಾನ ಹಾರಾಟವನ್ನು ಕೈಗೊಂಡಿದ್ದು ಈ ಘಟನೆಗೆ ಕಾರಣವಾಯ್ತು ಎಂದು ಹೇಳಲಾಗಿದೆ. ಇದು ಸಂಪೂರ್ಣವಾಗಿ ವಿದ್ಯುತ್ ಕೈಕೊಡಲು ಕಾರಣವಾಯ್ತೋ ಹೇಗೆ ಎಂದು ಹೇಳುವುದು ಗೊತ್ತಾಗುವುದಿಲ್ಲ. ಅದೇನೆ ಇದ್ದರೂ ಪಿಸ್ಟನ್ಎಂಜಿನ್ ಇರುವ ವಿಮಾನದಲ್ಲಿ ಇಂಜಿನ್ನಿಗೆ ಅಗತ್ಯವಾದ ಶಾಖದ ಕಿಡಿಯನ್ನು ಕೊಡಲು ಹೆಚ್ಚಾಗಿ ಆಯಸ್ಕಾಂತೀಯ ಶಕ್ತಿಯನ್ನು ಬಳಸಲಾಗುತ್ತದೆಯೇ ಹೊರತು ಬ್ಯಾಟರಿ ಶಕ್ತಿಯನ್ನು ಅವಲಂಭಿಸಿರುವ ಇಗ್ನಿಷನ್ ಕಾಯಿಲ್ ಬಳಸುವುದು ಕಡಿಮೆ. ಏರೋನಾಟಿಕ್ ಬೋರ್ಡ್ ತನಿಖೆಯ ಅಂಶ ಹುರುಳಿಲ್ಲದ್ದು. ಸ್ಟಾರ್ ಟೈಗರ್ ಮತ್ತು ಸ್ಟಾರ್ ಏರಿಯಲ್ ಅಜೋರ್ಸ್ನಿಂದ ಬರ್ಮುಡಾಗೆ ಹೊರಟ ಸ್ಟಾರ್ ಟೈಗರ್ ವಿಮಾನವು ಜನವರಿ 30,1948ರಂದು ನಾಪತ್ತೆಯಾಯಿತು ಬರ್ಮುಡಾದಿಂದ ಜಮೈಕಾದ ಕಿಂಗ್ಸ್ಟನ್ಗೆ ಹೊರಟ ಸ್ಟಾರ್ ಏರಿಯಲ್ ಜನವರಿ 17, 1949ರಂದು ಕಣ್ಮರೆಯಾಯಿತು. ಎರಡೂ ವಿಮಾನಗಳು ಕಂಪೆನಿಗಳ ಪ್ರಯಾಣಿಕ ವಿಮಾನಗಳಾಗಿದ್ದು ಬ್ರಿಟಿಷ್ ಸೌಥ್ ಅಮೇರಿಕನ್ ಏರ್ವೇಯ್ಸ್ನಿಂದ ನಡೆಸಲ್ಪಡುತ್ತಿದ್ದವು. ಎರಡೂ ವಿಮಾನಗಳೂ ತಮ್ಮ ಮಿತಿಯಲ್ಲೇ ಹಾರಾಟ ನಡೆಸಿದ್ದು ಸಣ್ಣದೊಂದು ತಪ್ಪು ಅಥವಾ ಯಾಂತ್ರಿಕ ದೋಷದಿಂದಾಗಿ ಇವುಗಳು ಆ ಸಣ್ಣ ದ್ವೀಪವನ್ನು ತಲುಪುವುದು ಸಾಧ್ಯವಾಗದೇ ಇದ್ದಿರಬಹುದು. ಒಂದು ವಿಮಾನವಂತೂ ತ್ರಿಕೋಣದ ಸ್ಥಳ ಸೇರುವ ಮೊದಲೇ ಕಣ್ಮರೆಯಾಗಿತ್ತು. 135 ಸ್ಟ್ರ್ಯಾಟೋ ಟ್ಯಾಂಕರ್ಸ್ ಆಗಸ್ಟ್ 28,1963 ಎರಡು ಯು.ಎಸ್.ಏರ್ಫೋರ್ಸ್ನ ಇಂದನ ತುಂಬುವ 135 ಸ್ಟ್ರ್ಯಾಟೊ ಟ್ಯಾಂಕರ್ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಅಟ್ಲಾಂಟಿಕ್ ಮಹಾಸಾಗರದಲ್ಲಿ ಬಿದ್ದವು. ತ್ರಿಕೋಣದ ಅವಘಡಕ್ಕೆ ಸಂಬಂಧಿಸಿದಂತೆ ಈ ಘಟನೆಯ ವಿವರಗಳನ್ನು ವಿನರ್, ಬರ್ಲಿಟ್ಜ್, ಗಡ್ಡಿಸ್ ಈ ರೀತಿ ಹೇಳುತ್ತಾರೆ, ಅವುಗಳು ಪರಸ್ಪರ ಡಿಕ್ಕಿ ಹೊಡೆದಿದ್ದರೂ ಕೂಡ ಸಮುದ್ರದಲ್ಲಿ ನೀರಿನಷ್ಟು ಬೇರ್ಪಟ್ಟ ಎರಡು ಜಾಗಗಳು ಈ ಅವಘಡಕ್ಕೆ ಸಂಬಂಧಿಸಿದಂತೆ ತೋರುತ್ತವೆ. ಕುಶ್ಚೆ ಅವರ ಸಂಶೋಧನೆಯ ಪ್ರಕಾರ ವಾಯುದಳದ ವರ್ಗೀಕರಿಸದ ವರದಿಯಲ್ಲಿ ಗುರುತಿಸಿರುವಂತೆ, ಎರಡನೇ ಅವಘಡದ ಸ್ಥಳದಲ್ಲಿ ತುಂಬಿಕೊಂಡಿದ್ದ ಕಸವನ್ನು ಹುಡುಕಾಟ ಮತ್ತು ಪಾರುಮಾಡುವ ಹಡಗುಗಳು ಕಂಡುಕೊಂಡಿದ್ದು, ಅದು ಸಮುದ್ರದ ಕಳೆ, ಒದ್ದೆಯಾದ ಕಟ್ಟಿಗೆ ತುಂಡುಗಳು ಒಂದು ಹಳೆಯ ದೋಣಿಗೆ ಸಿಲುಕಿಕೊಂಡಿದ್ದವು. ಮರೈನ್ ಸಲ್ಫರ್ ಕ್ವೀನ್ ತೈಲ ಸಾಗಣೆ ಮಾಡುತ್ತಿದ್ದ ಕೆಲವು ಸಮಯದ ನಂತರ ಸಲ್ಫರ್ ಸಾಗಣೆ ಮಾಡುವಂತೆ ಬದಲಾಯಿಸಲಾದ ಎಸ್ಎಸ್ ಮರೈನ್ ಸಲ್ಫರ್ ಕ್ವೀನ್ 2 ಟ್ಯಾಂಕರ್ ಫೆಬ್ರುವರಿ 4, 1963ರ ನಂತರ ಫ್ಲೋರಿಡಾ ಸರಣಿ ದ್ವೀಪದ ಸಮೀಪದಲ್ಲಿ ಅದರಲ್ಲಿದ್ದ 39 ಜನರೊಂದಿಗೆ ಕಣ್ಮರೆಯಾಯಿತು.ಮರೈನ್ ಸಲ್ಫರ್ ಕ್ವೀನ್ ಹಡಗು ವಿನ್ಸೆಂಟ್ ಗಡ್ಡೀಸ್ ಅವರು 1964 ಅರ್ಗೊಸಿ ಮ್ಯಾಗಜಿನ್ನಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಹೆಸರಿಸಿದ ಹಡಗಾಗಿದೆ. ಆದರೆ ಇವರು ಅದನ್ನು ಗುರುತಿಲ್ಲದ ಜಾಗಕ್ಕೆ ಪಯಣ ಬೆಳೆಸಿದ ಹಡಗು ಎಂದು ತಿಳಿಸಿದ್ದಾರೆ. ಆದರೆ ಕಡಲು ಕಣ್ಗಾವಲು ಪಡೆಯು ಈ ಹಡಗಿನ ಕುರಿತಾಗಿ ಇದು ಸರಿಯಾಗಿ ನಿರ್ವಹಣೆ ಇಲ್ಲದ ಅತ್ಯಂತ ಕೆಳಮಟ್ಟದ ನಿರ್ವಹಣೆ ಇರುವ ಈ ಹಡಗನ್ನು ಯಾನಕ್ಕೆ ಯೋಗ್ಯವಾದುದಲ್ಲ ಎಂದು ಪಟ್ಟಿ ಮಾಡಿತ್ತು. ರಾಯ್ಫುಕು ಮಾರು ತ್ರಿಕೋಣದದಲ್ಲಿ ಜರುಗಿದ ಪ್ರಸಿದ್ಧವಾದ ಒಂದು ಘಟನೆಯಾಗಿ ರಾಯ್ಫುಕು ಮಾರು ವನ್ನು ಹೆಸರಿಸಬಹುದಾಗಿದೆ. 1921ರಲ್ಲಿ (ಕೆಲವೊಬ್ಬರ ಪ್ರಕಾರ ಕೆಲವು ವರ್ಷಗಳ ನಂತರ )ಜಪಾನ್ನ ಯುದ್ಧ ಹಡಗು ರಾಯ್ಫುಕು ಮಾರು (ಕೆಲವು ಸಲ ರಾಯ್ಕುಕೆ ಮಾರು ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ) ಅದರಲ್ಲಿದ್ದ ಎಲ್ಲ ಯೋಧರ ಜೊತೆ ಕಣ್ಮರೆಯಾಯಿತು. ಅಪಾಯವಿರುವ ಖಡ್ಗದಂತೆ ಅಪಾಯ ಎದುರಿಗಿದೆ, ಬೇಗ ಬನ್ನಿ, ಅಥವಾ ಇದು ಖಡ್ಗದಂತಿದೆ, ಬೇಗ ಬನ್ನಿ !ಬರಹಗಾರರು ಖಡ್ಗ ಶಬ್ದವನ್ನು ಬೇರೆ ಬೇರೆ ರೀತಿಯಲ್ಲಿ ವಿವರಿಸುವಂತಾಯ್ತು. ಹೆಚ್ಚಾಗಿ ಇದನ್ನು ನೀರಿನ ಬುಗ್ಗೆ ಎಂದೇ ಎಲ್ಲರೂ ವ್ಯಾಖ್ಯಾನಿಸಿದರು (ವೈನರ್). ನೈಜವಾಗಿ ಹಡಗು ತ್ರಿಕೋಣದ ಹತ್ತಿರವೇ ಹೋಗಿಲ್ಲವಾಗಿತ್ತು. ಅಲ್ಲದೇ ಅವರು ಕಳುಹಿಸಿದ ಸಂದೇಶದಲ್ಲಿ ಖಡ್ಗ ಎನ್ನುವ ಶಬ್ಧವೇ ಇಲ್ಲವಾಗಿತ್ತು. ಅವರು ಕಳುಹಿಸಿದ್ದು (ಈಗ ಅಪಾಯವಿದೆ. ಬೇಗ ಬನ್ನಿ.) ಎಪ್ರಿಲ್ 21,1925ರಂದು ಜರ್ಮನಿಯ ಹ್ಯಾಮ್ಬರ್ಗ್ ಪ್ರಯಾಣಕ್ಕಾಗಿ ಬೋಸ್ಟನ್ ಬಿಟ್ಟಾಗ ರಾಯ್ಫುಕು ಮಾರಾ ಬಿರುಗಾಳಿಗೆ ಸಿಲುಕಿ ಉತ್ತರ ಅಟ್ಲಾಂಟಿಕ್ನಲ್ಲಿ ತನ್ನಲ್ಲಿದ್ದ ಎಲ್ಲರೊಡನೆ ಮುಳುಗಿತು. ಅದೇ ಸಮಯದಲ್ಲಿ ಬಿರುಗಾಳಿಗೆ ಸಿಲುಕಿದ ಇನ್ನೊಂದು ಹಡಗು ಹೊಮರಿಕ್ನ ರಕ್ಷಣಾ ಕಾರ್ಯ ಕೈಗೂಡಲಿಲ್ಲ. ಕನ್ನೆಮಾರಾ ವಿಹಾರಕ್ಕೆ ಬಳಸುತ್ತಿದ್ದ ಹಾಯಿದೋಣಿಯೊಂದು ಸೆಪ್ಟೆಂಬರ್ 26, 1955ರಂದು ದಕ್ಷಿಣ ಅಟ್ಲಾಂಟಿಕ್ನ ಬರ್ಮುಡಾ ಪ್ರದೇಶದ ತೀರದಲ್ಲಿ ದಿಕ್ಕು ತಪ್ಪಿ ಅನಾಥವಾಗಿ ಬಿದ್ದಿರುವುದು ಕಂಡುಬಂದಿತು. ಈ ಘಟನೆಗೆ ಕುರಿತಂತೆ ವಿವಿಧ ರೀತಿಯ ಹೇಳಿಕೆಗಳು ಕೇಳಿಬಂದವು. (ಬರ್ಲಿಟ್ಜ್, ವೈನರ್)ಮೂರು ಸುಂಟರಗಾಳಿಗೆ ಸಿಲುಕಿದ ಈ ಹಾಯಿದೋಣಿಯನ್ನು ರಕ್ಷಿಸಲಾಯಿತು ಆದರೆ ಅದರಲ್ಲಿದ್ದ ನಾವಿಕನನ್ನು ರಕ್ಷಿಸುವುದು ಸಾಧ್ಯವಾಗಲಿಲ್ಲ, ಎಂಬುದು ಅವುಗಳಲ್ಲಿ ಒಂದು ಹೇಳಿಕೆ. 1955ರ ಅಟ್ಲಾಂಟಿಕ್ನಲ್ಲಿ ಸುಂಟರಗಾಳಿ ಬೀಸುವ ಕಾಲದಲ್ಲಿ ಎಡಿತ್ ಎನ್ನುವ ಒಂದೇ ಒಂದು ಸುಂಟರಗಾಳಿಯು ಬರ್ಮುಡಾ ಸಮೀಪ ಆಗಸ್ಟ್ ಕೊನೆಯಲ್ಲಿ ಬೀಸಿದೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಇನ್ನುಳಿದಂತೆ ಫ್ಲೋರಾ ಪೂರ್ವದಲ್ಲಿ ತುಂಬಾ ದೂರದಲ್ಲಿ ಬೀಸಿತ್ತು ಮತ್ತು ಕೇಟಿ ಇದು ಹಾಯಿ ದೋಣಿ ಸಿಕ್ಕ ನಂತರದಲ್ಲಿ ಬೀಸಿದೆ. ಕನ್ನೆಮಾರಾ ಇದು ಖಾಲಿಯಿದ್ದು, ದಡದಲ್ಲಿಯೇ ಇತ್ತು. ಆದರೆ ಎಡಿತ್ಸುಂಟರಗಾಳಿಗೆ ಸಿಲುಕಿ, ಅದರ ಲಂಗರು ತಪ್ಪಿ ಸಮುದ್ರದಲ್ಲಿ ಬಿದ್ದಿರಬಹುದು ಎಂಬುದನ್ನು ಕೊನೆಗೆ ಕಂಡುಕೊಳ್ಳಲಾಯಿತು. ಕ್ಯಾರೊಲಿನ್ ಕ್ಯಾಸ್ಕಿಯೋ ಕ್ಯಾರೋಲಿನ್ ಕ್ಯಾಸ್ಕಿಯೋನಿಂದ ನಡೆಸಲ್ಪಡುತ್ತಿದ್ದ ಸೆಸ್ನಾ ಜೂನ್ 7,1964ರಂದು ಒಬ್ಬ ಪ್ರಯಾಣಿಕನ ಜೊತೆ ಬಹಾಮಾದ ನ್ಯಾಸಾವ್ನಿಂದ ಗ್ರ್ಯಾಂಡ್ ಟರ್ಕ್ ದ್ವೀಪದ ಕೋಕ್ಬರ್ನ್ಗೆ ಪ್ರಯಾಣಿಸುತ್ತಿತ್ತು. ಈ ವಿಮಾನವು 30 ನಿಮಿಷದವರೆಗೆ ದ್ವೀಪವನ್ನು ಸುತ್ತುಹಾಕುತ್ತಿದ್ದುದನ್ನು ಕೊಕ್ಬರ್ನ್ ವಿಮಾನ ನಿಲ್ದಾಣದಲ್ಲಿಯ ನಿಯಂತ್ರಕರು ಗಮನಿಸಿದರು. ನಂತರದಲ್ಲಿ ಇದು ಅಲ್ಲಿಂದ ಇನ್ನೊಂದು ದ್ವೀಪದೆಡೆಗೆ ಹಾರಿ ಹೋದದ್ದನ್ನು ಗುರುತಿಸಿದರು. ರೇಡಿಯೋದ ಸಂಜ್ಞೆಗೆ ಅದನ್ನು ಜೋಡಿಸುವುದು ನಿಲ್ದಾಣದಲ್ಲಿ ಕುಳಿತ ನಿಯಂತ್ರಕರಿಗೆ ಸಾಧ್ಯವಾಗಲಿಲ್ಲ. ತ್ರಿಕೋಣದ ಕುರಿತ ಬರಹಗಾರರು ಈ ಮೇಲೆ ಉದಾಹರಿಸಿದ ಪ್ರಸಿದ್ದ ತ್ರಿಕೋಣ ಸಂಬಂಧಿ ಘಟನೆಗಳು ಅಧಿಕೃತ ದಾಖಲೀಕರಣದಿಂದ ತೆಗೆಯಲ್ಪಟ್ಟದ್ದಲ್ಲದೇ ಈ ಕೆಳಗಿನ ಪುಸ್ತಕಗಳಿಂದ ಕೂಡ ತೆಗೆದುಕೊಂಡದ್ದಾಗಿದೆ. ತ್ರಿಕೋಣದ ಸುತ್ತಮುತ್ತ ನಡೆದ ಕೆಲವು ಘಟನೆಗಳ ಬಗ್ಗೆ ವಿವರಣೆಗಳು ಈ ಪುಸ್ತಕಗಳಲ್ಲಿ ಮಾತ್ರ ಲಭ್ಯವಿದೆ : ವಿವರಗಳಿಗಾಗಿ ನೋಡಿ ಬರ್ಮುಡಾ ತ್ರಿಕೋಣದ ಘಟನೆಗಳ ಪಟ್ಟಿ ಅಟ್ಲಾಂಟಿಸ್ ಚಕ್ ವೇಕ್ಲಿ ಘಟನೆ ಸೈತಾನನ ಸಮುದ್ರ (ಅಥವಾ ಡ್ರ್ಯಾಗನ್ ತ್ರಿಕೋಣ) ದಿ ಮಿಚಿಗನ್ ಟ್ರಿಯಾಂಗಲ್ ಸರ್ಗಾಸೋ ಸೀ ಕ್ಯೂಟೊಪಾಕ್ಷಿ ದಿ ಟ್ರಿಯಾಂಗಲ್ (ಕಿರುತೆರೆಯ ಸಣ್ಣ ಸಂಚಿಕೆಗಳು ) ವೈಲ್ ವೊರ್ಟಿಸಸ್ ಆಕರಗಳು ಇತರ ಮೂಲಗಳು ವೃತ್ತ ಪತ್ರಿಕೆ ಲೇಖನಗಳು ಪ್ರೊಕ್ವೆಸ್ಟ್ :.. ಇದರಲ್ಲಿ ವೃತ್ತ ಪತ್ರಿಕೆಯಲ್ಲಿ ಪ್ರಕಟವಾದ ಹಲವಾರು ಘಟನೆಗಳ ಕುರಿತಾದ ಲೇಖನಗಳ ಸಂಗ್ರಹವನ್ನು ಪಿಡಿಎಫ್ ಫಾರ್ಮಾಟ್ ನಲ್ಲಿ ಕೊಡಲಾಗಿದೆ. ಈ ಸಂಗ್ರಹದಲ್ಲಿ ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಮತ್ತು ಅಟ್ಲಾಂಟಾ ಕಾನ್ಟಿಟ್ಯೂಷನ್ ವೃತ್ತ ಪತ್ರಿಕೆಗಳ ಲೇಖನಗಳು ಲಭ್ಯವಿದೆ. ಈ ಅಂತರ್ಜಾಲ ತಾಣವನ್ನು ವೀಕ್ಷಿಸಲು ನೋಂದಣಿ ಅಗತ್ಯವಿದೆ. ಸಾಮಾನ್ಯವಾಗಿ ಕಾಲೇಜ್ ಅಥವಾ ವಿಶ್ವವಿದ್ಯಾಲಯದ ವಾಚಲನಾಲಯಗಳ ಮೂಲಕ ಇದರ ವೀಕ್ಷಣೆ ಮಾಡಬಹುದಾಗಿದೆ. ಫ್ಲೈಟ್ 19 ಗ್ರೇಟ್ ಹಂಟ್ ಆನ್ ಫಾರ್ 27 ನೇವಿ ಫ್ಲೈಯರ್ಸ್ ಮಿಸ್ಸಿಂಗ್ ಇನ್ ಫೈವ್ ಪ್ಲೇನ್ಸ್ ಆಫ್ಪ್ ಫ್ಲೋರಿಡಾ, ನ್ಯೂಯಾರ್ಕ್ ಟೈಮ್ಸ್, ಡಿಸೆಂಬರ್ 7, 1945 ವೈಡ್ ಹಂಟ್ ಫಾರ್ 27 ಮೆನ್ ಇನ್ ಸಿಕ್ಸ್ ನೇವಿ ಪ್ಲೇನ್ಸ್, ವಾಷಿಂಗ್ಟನ್ ಪೋಸ್ಟ್, ಡಿಸೆಂಬರ್ 7, 1945. ಫೈರ್ ಸಿಗ್ನಲ್ಸ್ ಸೀನ್ ಇನ್ ಏರಿಯಾ ಆಫ್ ಲೊಸ್ಟ್ ಮೆನ್, ವಾಷಿಂಗ್ಟನ್ ಪೊಸ್ಟ್, ಡಿಸೆಂಬರ್ 9, 1945. ರೈಫ್ಯೂಕು ಮ್ಯಾರು ಜಪನೀಸ್ ಶಿಪ್ಸ್ ಸಿಂಕ್ಸ್ ವಿತ್ ಎ ಕ್ರ್ಯೂ ಆಫ್ 38 ಲೈನ್ಸ್ ಅನೇಬಲ್ ಟು ಏಡ್, ನ್ಯೂಯಾರ್ಕ್ ಟೈಮ್ಸ್, ಏಪ್ರಿಲ್ 22, 1925. ಪ್ಯಾಸೆಂಜರ್ಸ್ ಡಿಫರ್ ಆನ್ ಹೋಮರಿಕ್ ಎಫರ್ಟ್ ಟು ಸೇವ್ ಸಿಂಕಿಂಗ್ ಶಿಫ್, ನ್ಯೂಯಾರ್ಕ್ ಟೈಮ್ಸ್, ಎಪ್ರಿಲ್ 23, 1925. ಹೊಮರಿಕ್ ಕ್ಯಾಪ್ಟನ್ ಅಪ್ಹೆಲ್ಡ್ ಬೈ ಸ್ಕಿಪ್ಪರ್ಸ್, ನ್ಯೂಯಾರ್ಕ್ ಟೈಮ್ಸ್, ಎಪ್ರಿಲ್ 24, 1925. ಲೈನರ್ ಇಸ್ ಬ್ಯಾಟ್ಟರ್ಡ್ ಇನ್ ರೆಸ್ಕ್ಯೂ ಅಟೆಂಪ್ಟ್, ನ್ಯೂಯಾರ್ಕ್ ಟೈಮ್ಸ್, ಎಪ್ರಿಲ್ 25, 1925. ಎಸ್ಎಸ್ ಕಟಾಪ್ಯಾಕ್ಸಿ ಲಾಯ್ಡ್ಸ್ ಪೋಸ್ಟ್ಸ್ ಕ್ಯೂಟೊಪಾಕ್ಷಿ ಆಸ್ ಮಿಸ್ಸಿಂಗ್, ನ್ಯೂಯಾರ್ಕ್ ಟೈಮ್ಸ್, ಜನವರಿ 7, 1926. ಎಫರ್ಟ್ ಟು ಲೊಕೇಟ್ ಮಿಸ್ಸಿಂಗ್ ಶಿಫ್ ಫೇಲ್, ವಾಷಿಂಗ್ಟನ್ ಪೋಸ್ಟ್, ಡಿಸೆಂಬರ್ 6, 1925. ಲೈಟ್ ಹೌಸ್ ಕೀಪರ್ಸ್ ಸೀಕ್ ಮಿಸ್ಸಿಂಗ್ ಶಿಫ್, ವಾಷಿಂಗ್ಟನ್ ಪೋಸ್ಟ್, ಡಿಸೆಂಬರ್ 7, 1925. 53 ಆನ್ ಮಿಸ್ಸಿಂಗ್ ಕ್ರಾಫ್ಟ್ ಆರ್ ರಿಪೋರ್ಟೆಡ್ ಸೇವ್ಡ್, ವಾಷಿಂಗ್ಟನ್ ಪೋಸ್ಟ್, ಡಿಸೆಂಬರ್ 13, 1925. ಸೈಕ್ಲೋಪ್ಸ್ (4) ಕೊಲ್ಡ್ ಹೈ ವಿಂಡ್ಸ್ ಡು $25,000 ಡ್ಯಾಮೆಜ್, ವಾಷಿಂಗ್ಟನ್ ಪೋಸ್ಟ್, ಮಾರ್ಚ್ 11, 1918. ಕೊಲ್ಲಿಯರ್ ಒವರ್ಡ್ಯೂ ಎ ಮಂತ್, ನ್ಯೂಯಾರ್ಕ್ ಟೈಮ್ಸ್, ಎಪ್ರಿಲ್ 15,1918. ಮೋರ್ ಶಿಪ್ಸ್ ಹಂಟ್ ಫಾರ್ ಮಿಸ್ಸಿಂಗ್ ಸೈಕ್ಲೋಪ್ಸ್, ನ್ಯೂಯಾರ್ಕ್ ಟೈಮ್ಸ್, ಎಪ್ರಿಲ್ 16,1918. ಹ್ಯಾವ್ನಾಟ್ ಗಿವನ್ ಅಪ್ ಹೋಪ್ ಫಾರ್ ಸೈಕ್ಲೋಪ್ಸ್, ನ್ಯೂಯಾರ್ಕ್ ಟೈಮ್ಸ್, ಎಪ್ರಿಲ್ 17, 1918. ಕೋಲಿಯರ್ ಸೈಕ್ಲೋಪ್ಸ್ ಈಸ್ ಲೊಸ್ಟ್ 293 ಪರ್ಸ್ನ್ಸ್ ಆನ್ ಬೋರ್ಡ್ ಎನಿಮಿ ಬ್ಲೋವ್ ಸಸ್ಪೆಕ್ಟೆಡ್, ವಾಷಿಂಗ್ಟನ್ ಪೋಸ್ಟ್, ಎಪ್ರಿಲ್ 15,1918. ಯು.ಎಸ್. ಕಾನ್ಸೋಲ್ ಗೊಟ್ಸ್ಚಾಲ್ಕ್ ಕಮಿಂಗ್ ಟು ಎಂಟರ್ ದಿ ವಾರ್, ವಾಷಿಂಗ್ಟನ್ ಪೋಸ್ಟ್, ಎಪ್ರಿಲ್ 15,1918. ಸೈಕ್ಲೋಪ್ಸ್ ಸ್ಕಿಪ್ಪರ್ ಟ್ಯೂಟೊನ್, ಟಿಸ್ ಸೆಡ್, ವಾಷಿಂಗ್ಟನ್ ಪೋಸ್ಟ್, ಎಪ್ರಿಲ್ 16,1918. ಫೇಟ್ ಆಫ್ ಶಿಫ್ ಬ್ಯಾಫ್ಲೆಸ್, ವಾಷಿಂಗ್ಟನ್ ಪೋಸ್ಟ್, ಎಪ್ರಿಲ್ 16, 1918. ಸ್ಟೀಮರ್ ಮೆಟ್ ಗೇಲ್ ಆನ್ ಸೈಕ್ಲೋಪ್ಸ್ ಕೋರ್ಸ್, ವಾಷಿಂಗ್ಟನ್ ಪೋಸ್ಟ್, ಎಪ್ರಿಲ್ 19, 1918. ಕ್ಯಾರೊಲ್ ಎ.ಡೀರಿಂಗ್ ಪೈರಸಿ ಸಸ್ಪೆಕ್ಟೆಡ್ ಇನ್ ಡಿಸ್ಅಪಿಯರೆನ್ಸ್ ಆಪ್ 3 ಅಮೇರಿಕನ್ ಶಿಪ್ಸ್, ನ್ಯೂ ಯಾರ್ಕ್ ಟೈಮ್ಸ್, ಜುಲೈ 21,1921. ಬಾಥ್ ಒನರ್ಸ್ ಸ್ಕೆಪ್ಟಿಕಲ್, ನ್ಯೂಯಾರ್ಕ್ ಟೈಮ್ಸ್, ಜೂನ್ 22, 1921. ಪಿಯೆರಾ ಅಂಟೊನೆಲ್ಲಾ. ಡೀರಿಂಗ್ ಸ್ಕಿಪ್ಪರ್ಸ್ ವೈಫ್ ಕಾಸ್ಡ್ ಇನ್ವೆಸ್ಟಿಗೇಷನ್, ನ್ಯೂಯಾರ್ಕ್ ಟೈಮ್ಸ್, ಜೂನ್ 22, 1921. ಮೋರ್ ಶಿಪ್ಸ್ ಆಯ್ಡೆಡ್ ಟು ಮಿಸ್ಟರಿ ಲಿಸ್ಟ್, ನ್ಯೂಯಾರ್ಕ್ ಟೈಮ್ಸ್, ಜೂನ್ 22, 1921 ಹಂಟ್ ಆನ್ ಫಾರ್ ಪೈರೇಟ್ಸ್, ವಾಷಿಂಗ್ಟನ್ ಪೋಸ್ಟ್, ಜೂನ್ 21, 1921 ಕಾಂಬ್ ಸೀಸ್ ಫಾರ್ ಶಿಪ್ಸ್, ವಾಷಿಂಗ್ಟನ್ ಪೋಸ್ಟ್ತ್, ಜೂನ್ 22, 1921. ಪೋರ್ಟ್ ಆಫ್ ಮಿಸ್ಸಿಂಗ್ ಶಿಪ್ಸ್ ಕ್ಲೇಮ್ಸ್ 3000 ಇಯರ್ಲಿ, ವಾಷಿಂಗ್ಟನ್ ಪೋಸ್ಟ್ ಜುಲೈ 10,1921. ವ್ರೆಕ್ಕರ್ಸ್ ವ್ರೆಕ್ರಿಯೇಷನ್ ವಾಸ್ ದಿ ನೇಮ್ ಆಪ್ ದಿ ಗೇಮ್ ದಟ್ ಫ್ಲರೀಷ್ಡ್ 100 ಇಯರ್ಸ್ ಎಗೊ, ನ್ಯೂಯಾರ್ಕ್ ಟೈಮ್ಸ್, ಮಾರ್ಚ್ 30, 1969. ಎಸ್.ಎಸ್.ಸುಡಫ್ಕೋ ಟು ಸರ್ಚ್ ಫಾರ್ ಮಿಸ್ಸಿಂಗ್ ಫ್ರೈಟರ್, ನ್ಯೂಯಾರ್ಕ್ ಟೈಮ್ಸ್, ಎಪ್ರಿಲ್ 11, 1926. ಅಬಾಂಡನ್ ಹೋಪ್ ಫಾರ್ ಶಿಪ್, ನ್ಯೂಯಾರ್ಕ್ ಟೈಮ್ಸ್, ಎಪ್ರಿಲ್ 28,1926. ಸ್ಟಾರ್ ಟೈಗರ್ ಆಯ್೦ಡ್ ಸ್ಟಾರ್ ಏರಿಯಲ್ ಹೋಪ್ ವೇನ್ಸ್ ಇನ್ ಸೀ ಸರ್ಚ್ ಫಾರ್ 28 ಅಬೋರ್ಡ್ ಲೊಸ್ಟ್ ಏರ್ಲೈನರ್, ನ್ಯೂಯಾರ್ಕ್ ಟೈಮ್ಸ್, ಜನವರಿ 31, 1948. 72 ಪ್ಲೇನ್ಸ್ ಸರ್ಚ್ ಸೀ ಫಾರ್ ಏರ್ಲೈನರ್, ನ್ಯೂಯಾರ್ಕ್ ಟೈಮ್ಸ್, ಜನವರಿ 19, 1949. 3 ಏರ್ಲೈನರ್ 16002 ಕಣ್ಮರೆ 30ಪ್ಯಾಸೆಂಜರ್ ಏರ್ಲೈನರ್ ಡಿಸಪಿಯರ್ಸ್ ಇನ್ ಫ್ಲೈಟ್ ಫ್ರಾಮ್ ಸ್ಯಾನ್ ಜುವಾನ್ ಟು ಮಿಯಾಮಿ, ನ್ಯೂಯಾರ್ಕ್ ಟೈಮ್ಸ್, ಡಿಸೆಂಬರ್ 29, 1948. ಚೆಕ್ ಕ್ಯೂಬಾ ರಿಫೋರ್ಟ್ ಆಫ್ ಮಿಸ್ಸಿಂಗ್ ಏರ್ಲೈನರ್, ನ್ಯೂಯಾರ್ಕ್ ಟೈಮ್ಸ್, ಡಿಸೆಂಬರ್ 30, 1948. ಏರ್ಲೈನರ್ ಹಂಟ್ ಎಕ್ಸ್ಟೆಂಡೆಡ್, ನ್ಯೂಯಾರ್ಕ್ ಟೈಮ್ಸ್, ಡಿಸೆಂಬರ್ 31, 1948. ಹಾರ್ವೆ ಕಾನೊವರ್ ಮತ್ತು ರೆವೊನೊಕ್ ಸರ್ಚ್ ಕಂಟಿನ್ಯೂಯಿಂಗ್ ಫಾರ್ ಕೊನೊವರ್ ಯಾವ್ಲ್, ನ್ಯೂಯಾರ್ಕ್ ಟೈಮ್ಸ್, ಜನವರಿ 8, 1958. ಯಾಚ್ ಸರ್ಚ್ ಗೋಸ್ ಆನ್, ನ್ಯೂಯಾರ್ಕ್ ಟೈಮ್ಸ್, ಜನವರಿ 9,1958. ಯಾಚ್ ಸರ್ಚ್ ಪ್ರೆಸ್ಸ್ಡ್, ನ್ಯೂಯಾರ್ಕ್ ಟೈಮ್ಸ್, ಜನವರಿ 10,1958. ಕೊನೊವರ್ ಸರ್ಚ್ ಕಾಲ್ಡ್ ಆಫ್, ನ್ಯೂಯಾರ್ಕ್ ಟೈಮ್ಸ್, ಜನವರಿ 15, 1958. 135 ಸ್ಟ್ರಾಟೊ ಟ್ಯಾಂಕರ್ಸ್ ಸೆಕಂಡ್ ಏರಿಯಾ ಆಫ್ ಡೆಬ್ರಿಸ್ ಫೌಂಡ್ ಇನ್ ಹಂಟ್ ಫಾರ್ ಜೆಟ್ಸ್, ನ್ಯೂಯಾರ್ಕ್ ಟೈಮ್ಸ್, ಆಗಸ್ಟ್ 31, 1963. ಹಂಟ್ ಫಾರ್ ಟ್ಯಾಂಕರ್ ಜೆಟ್ಸ್ ಹಾಲ್ಟೆಡ್, ನ್ಯೂಯಾರ್ಕ್ ಟೈಮ್ಸ್, ಸೆಪ್ಟೆಂಬರ್ 3, 1963. ಪ್ಲೇನ್ಸ್ ಡೆಬ್ರಿಸ್ ಫೌಂಡ್ ಇನ್ ಜೆಟ್ ಟ್ಯಾಂಕರ್ ಹಂಟ್, ವಾಷಿಂಗ್ಟನ್ ಪೋಸ್ಟ್, ಆಗಸ್ಟ್ 30, 1963. 52 ಬಾಂಬರ್ (ಪೊಗೊ 22 ) ಯು.ಎಸ್.ಕೆನಡಾ ಟೆಸ್ಟ್ ಆಫ್ ಏರ್ ಡಿಫೆನ್ಸ್ ಎ ಸಕ್ಸಸ್, ನ್ಯೂಯಾರ್ಕ್ ಟೈಮ್ಸ್, ಅಕ್ಟೋಬರ್ 16, 1961. ಹಂಟ್ ಫಾರ್ ಲೊಸ್ಟ್ 52 ಬಾಂಬರ್ ಪುಶ್ಡ್ ಇನ್ ನ್ಯೂಯಾರ್ಕ್ ಏರಿಯಾ, ನ್ಯೂಯಾರ್ಕ್ ಟೈಮ್ಸ್, ಅಕ್ಟೋಬರ್ 17,1961. ಬಾಂಬರ್ ಹಂಟ್ ಪ್ರೆಸ್ಸ್ಡ್, ನ್ಯೂಯಾರ್ಕ್ ಟೈಮ್ಸ್, ಅಕ್ಟೋಬರ್ 18. 1961. ಬಾಂಬರ್ ಸರ್ಚ್ ಕಂಟಿನ್ಯೂಯಿಂಗ್, ನ್ಯೂಯಾರ್ಕ್ ಟೈಮ್ಸ್, ಅಕ್ಟೋಬರ್ 19.1961. ಹಂಟ್ ಫಾರ್ ಬಾಂಬರ್ ಎಂಡ್ಸ್, ನ್ಯೂಯಾರ್ಕ್ ಟೈಮ್ಸ್, ಅಕ್ಟೋಬರ್ 20, 1961. ಚಾರ್ಟರ್ ವೆಸ್ಸೆಲ್ ಸ್ನೊ ಬಾಯ್ ಪ್ಲೇನ್ ಹಂಟಿಂಗ್ ಬೋಟ್ ಸೈಟ್ಸ್ ಬಾಡಿ ಇನ್ ಸೀ, ನ್ಯೂಯಾರ್ಕ್ ಟೈಮ್ಸ್, ಜುಲೈ 7, 1963. ಸರ್ಚ್ ಅಬಾಂಡನ್ಡ್ ಫಾರ್ 40 ಆನ್ ವೆಸ್ಸೆಲ್ ಲಾಸ್ಟ್ ಇನ್ ಕ್ಯಾರಿಬಿಯನ್, ನ್ಯೂಯಾರ್ಕ್ ಟೈಮ್ಸ್, ಜುಲೈ 11, 1963. ಸರ್ಚ್ ಕಂಟಿನ್ಯೂಸ್ ಫಾರ್ ವೆಸ್ಸೆಲ್ ವಿತ್ 55 ಅಬೋರ್ಡ್ ಇನ್ ಕ್ಯಾರಿಬಿಯನ್, ವಾಷಿಂಗ್ಟನ್ ಪೋಸ್ಟ್ತ್, ಜುಲೈ 6, 1963. ಬಾಡಿ ಫೌಂಡ್ ಇನ್ ಸರ್ಚ್ ಫಾರ್ ಫಿಶಿಂಗ್ ಬೋಟ್, ವಾಷಿಂಗ್ಟನ್ ಪೋಸ್ಟ್, ಜುಲೈ 7, 1963. ಮರೀನ್ ಸಲ್ಫರ್ ಕ್ವೀನ್ ಟ್ಯಾಂಕರ್ ಲೊಸ್ಟ್ ಇನ್ ಅಟ್ಲಾಂಟಿಕ್39 ಅಬೋರ್ಡ್, ವಾಷಿಂಗ್ಟನ್ ಪೋಸ್ಟ್, ಫೆಬ್ರುವರಿ 9, 1963. ಡೆಬ್ರಿಸ್ ಸೈಟೆಡ್ ಇನ್ ಪ್ಲೇನ್ ಸರ್ಚ್ ಫಾರ್ ಟ್ಯಾಂಕರ್ ಮಿಸ್ಸಿಂಗ್ ಆಫ್ ಫ್ಲೋರಿಡಾ, ನ್ಯೂಯಾರ್ಕ್ ಟೈಮ್ಸ್, ಫೆಬ್ರುವರಿ 11, 1963. 2.5 ಮಿಲಿಯನ್ ಈಸ್ ಆಸ್ಕ್ಡ್ ಇನ್ ಸೀ ಡಿಸಾಸ್ಟರ್, ವಾಷಿಂಗ್ಟನ್ ಪೋಸ್ಟ್, ಫೆಬ್ರುವರಿ 19, 1963. ವ್ಯಾನಿಷಿಂಗ್ ಆಫ್ ಶಿಫ್ ರೂಲ್ಡ್ ಎ ಮಿಸ್ಟರಿ, ನ್ಯೂಯಾರ್ಕ್ ಟೈಮ್ಸ್, ಎಪ್ರಿಲ್ 14, 1964. ಫ್ಯಾಮಿಲಿಸ್ ಆಫ್ 39 ಲೊಸ್ಟ್ ಅಟ್ ಸೀ ಬಿಗನ್ $20ಮಿಲಿಯನ್ ಸ್ಯೂಟ್ ಹಿಯರ್, ನ್ಯೂಯಾರ್ಕ್ ಟೈಮ್ಸ್, ಜೂನ್ 4, 1969. 10ಇಯರ್ ರಿಫ್ಟ್ ಒವರ್ ಲೊಸ್ಟ್ ಶಿಪ್ ನಿಯರ್ ಎಂಡ್, ನ್ಯೂಯಾರ್ಕ್ ಟೈಮ್ಸ್, ಫೆಬ್ರುವರಿ 4, 1973. ಸಿಲ್ವಿಯಾ ಎಲ್.ಒಸ್ಸಾ ಶಿಫ್ ಆಯ್೦ಡ್ 37 ವ್ಯಾನಿಶ್ ಇನ್ ಬರ್ಮುಡಾ ಟ್ರಿಯಾಂಗಲ್ ಆನ್ ವೊಯೋಜ್ ಟು ಯು.ಎಸ್., ನ್ಯೂಯಾರ್ಕ್ ಟೈಮ್ಸ್, ಅಕ್ಟೋಬರ್ 18, 1976. ಶಿಫ್ ಮಿಸ್ಸಿಂಗ್ ಇನ್ ಬರ್ಮುಡಾ ಟ್ರಿಯಾಂಗಲ್ ನೌ ಪ್ರೆಸ್ಯೂಮ್ಡ್ ಟು ಬಿ ಲೊಸ್ಟ್ ಅಟ್ ಸೀ, ನ್ಯೂಯಾರ್ಕ್ ಟೈಮ್ಸ್, ಅಕ್ಟೋಬರ್ 19,1976. ಡಿಸ್ಟ್ರೆಸ್ ಸಿಗ್ನಲ್ ಹರ್ಡ್ ಫ್ರಮ್ ಅಮೇರಿಕನ್ ಸೇಲರ್ ಮಿಸ್ಸಿಂಗ್ ಫಾರ್ 17 ಡೇಯ್ಸ್, ನ್ಯೂಯಾರ್ಕ್ ಟೈಮ್ಸ್, ಅಕ್ಟೋಬರ್ 31, 1976. ಜಾಲತಾಣದ ಕೊಂಡಿಗಳು ಈ ಕೆಳಗೆ ಕೊಟ್ಟಿರುವ ಜಾಲ ತಾಣಗಳಲ್ಲಿರುವ ವಿಷಯವು ಬರ್ಮುಡಾ ತ್ರಿಕೋಣದ ಕುರಿತಾದ ಜನಪ್ರಿಯ ವಿಷಯಗಳನ್ನು ಹಾಗೂ ಅಧಿಕೃತ ಮೂಲಗಳು ಕೈಗೊಂಡ ತನಿಖೆ ಹಾಗೂ ನ್ಯಾಯ ವಿಚಾರಣೆಯ ಸಂದರ್ಭದಲ್ಲಿ ಮಾಡಿದ ವರದಿಗಳು, ಉದಾಹರಣೆಗೆ ಸಂಯುಕ್ತ ಸಂಸ್ಥಾನ ನೌಕಾದಳ ಅಥವಾ ಸಂಯುಕ್ತ ಸಂಸ್ಥಾನದ ಕರಾವಳಿ ಕಾವಲು ಪಡೆಯವರು ನಡೆಸಲ್ಪಟ್ಟ ವಿಚಾರಣೆ ಹಾಗೂ ತನಿಖೆಯ ವರದಿಗಳನ್ನು ಒಳಗೊಂಡಿರುತ್ತವೆ. ಕೆಲವು ತನಿಖೆಯ ವರದಿಗಳು ಅಂತರ್ಜಾಲದಲ್ಲಿ ಲಭ್ಯವಿಲ್ಲವಾಗಿದ್ದು ನೇರವಾಗಿ ಸಂಬಂಧಪಟ್ಟ ಕಛೇರಿಯಿಂದ ಮಾಹಿತಿಯನ್ನು ಪಡೆಯಬೇಕಾಗುವುದು. ಉದಾಹರಣೆಗೆ ಫ್ಲೈಟ್ 19 ಕಣ್ಮರೆಯಾಗಿದ್ದು ಅಥವಾ ಯುಎಸ್ಎಸ್ ಸೈಕ್ಲೋಪ್ಸ್ ಬಗ್ಗೆ ಮಾಹಿತಿ ಬೇಕಾದರೆ ನೇರವಾಗಿ ಸಂಯುಕ್ತ ಸಂಸ್ಥಾನದ ಇತಿಹಾಸ ಕೇಂದ್ರದಿಂದ ತರಿಸಿಕೊಳ್ಳಬೇಕಾಗುತ್ತದೆ. ಅರ್ಗೋಸಿ ಮ್ಯಾಗಜಿನ್ನಲ್ಲಿ ಫೆಬ್ರುವರಿ 1964ರಲ್ಲಿ ಪ್ರಕಟವಾದ ವಿನ್ಸೆಂಟ್ ಗಡ್ಡೀಸ್ ಬರೆದ ಲೇಖನ ಸಂಯುಕ್ತ ಸಂಸ್ಠಾನದ ಕರಾವಳಿ ರಕ್ಷಣಾಪಡೆಯ ಆಯ್ದ ವರದಿ ಹಾಗೂ ತನಿಖೆಯ ದತ್ತಾಂಶ ಸಂಗ್ರಹಗಳು ಇತಿಹಾಸ ತಜ್ಞ ಮತ್ತು ಬರ್ಮುಡಾ ತ್ರಿಕೋಣದ ಸಂಶೋಧಕ ಜಾಯನ್ ಕ್ವೇಸಾರ್ ಅವರ ಜಾಲತಾಣ ಯು.ಎಸ್. ನೇವಿ ಹಿಸ್ಟೋರಿಕಲ್ ಸೆಂಟರ್ ಬರ್ಮುಡಾ ಟ್ರಿಯಾಂಗಲ್ ಯು.ಎಸ್.ನೇವಿ ಹಿಸ್ಟೊರಿಕಲ್ ಸಿ ದಿ ಬರ್ಮುಡಾ ಟ್ರಿಯಾಂಗಲ್:ಸ್ಟಾರ್ಟ್ಲಿಂಗ್ ನ್ಯೂ ಸೆಕ್ರೆಟ್ಸ್ , ಸ್ಕೈ ಫೈ ಚಾನೆಲ್ ಡೊಕ್ಯುಮೆಂಟರಿ (ನವೆಂಬರ್ 2005) ನೌಕಾ ಇತಿಹಾಸ ಕೇಂದ್ರ: ದಿ ಲಾಸ್ ಆಫ್ ಫ್ಲೈಟ್ 19 ಸಮುದ್ರದಲ್ಲಿ ದೊಡ್ಡ ಹಡಗುಗಳ ಕಣ್ಮರೆಯ ಬಗ್ಗೆ ಬರ್ಮುಡಾ ಶಿಫ್ವ್ರೆಕ್ಸ್ ಅಸೋಸಿಯೇಷನ್ ಆಫ್ ಅಂಡರ್ ವಾಟರ್ ಎಕ್ಸ್ಫ್ಲೋರರ್ಸ್ ಶಿಫ್ವ್ರೆಕ್ ಲಿಸ್ಟಿಂಗ್ಸ್ ಪೇಜ್ ಅಮೇರಿಕನ್ ನೇವಲ್ ಫೈಟಿಂಗ್ ಶಿಪ್ಸ್ ನ ಶಬ್ದಕೋಶ ಕಣ್ಮರೆಯಾದ ವಿಮಾನಗಳ ಪಟ್ಟಿ ಪುಸ್ತಕಗಳು ಇಲ್ಲಿ ನಮೂದಿಸಲಾದ ಹೆಚ್ಚಿನ ಪುಸ್ತಕಗಳ ಪ್ರತಿಗಳು ಲಭ್ಯವಿಲ್ಲ. ಪ್ರತಿಗಳನ್ನು ನಿಮ್ಮ ಸಮೀಪದ ಸಾರ್ವಜನಿಕ ವಾಚನಾಲಯಗಳಿಂದ ಪಡೆದುಕೊಳ್ಳಬಹುದು ಅಥವಾ ಬಳಸಿದ ಪುಸ್ತಕಗಳು ಸಿಗುವ ಪುಸ್ತಕದ ಅಂಗಡಿಯಿಂದ ಖರೀದಿಸಬಹುದು ಅಥವಾ ಅಥವಾ ..ನಲ್ಲಿ ಹುಡುಕಬಹುದು. ಬರ್ಮುಡಾ ತ್ರಿಕೋಣದ ಸುತ್ತಮುತ್ತ ನಡೆದ ಕೆಲವು ಘಟನೆಗಳಿಗೆ ಈ ಪುಸ್ತಕಗಳು ಮಾತ್ರ ಮಾಹಿತಿ ಒದಗಿಸುವ ಆಕರಗಳಾಗಿವೆ ಎಂಬುದನ್ನು ಗಮನಿಸಬೇಕಾಗುತ್ತದೆ. ಜಿಯಾನ್ ಜೆ.ಕ್ವಾಸಾರ್ ಅವರಿಂದ ಬರಯಲ್ಪಟ್ಟ ಇಂಟು ದಿ ಬರ್ಮುಡಾ ಟ್ರಿಯಾಂಗಲ್ : ಪರ್ಸ್ಯೂಯಿಂಗ್ ದಿ ಟ್ರುಥ್ ಬಿಹೈಂಡ್ ದಿ ವರ್ಲ್ಡ್ಸ್ ಗ್ರೇಟೆಸ್ಟ್ ಮಿಸ್ಟರಿ , ಇಂಟರ್ನ್ಯಾಷನಲ್ ಮರೀನ್ರಾಗ್ಡ್ ಮೌಂಟೇನ್ ಫ್ರೆಸ್ (2003)ಐಎಸ್ಬಿಎನ್ 007142640 ಕಣ್ಮರೆಯಾದ ವಿಮಾನಗಳ ಬಗ್ಗೆ ಅಧಿಕೃತ ಮೂಲಗಳಿಂದ ಮಾಡಲ್ಪಟ್ಟ ಸಂಶೋಧನೆಯ ವಿವರಗಳನ್ನು ಇದು ಒಳಗೊಂಡಿದೆ. ಪೇಪರ್ಬ್ಯಾಕ್ ಗುಣಮಟ್ಟದಲ್ಲಿ ಇದು ಮರುಮುದ್ರಣ (2005)ಗೊಂಡಿದೆ. 0071452176). ಚಾರ್ಲ್ಸ್ ಬರ್ಲಿಟ್ಜ್ (ಐಎಸ್ಬಿಎನ್ 0385041144)ಬರೆದ ದಿ ಬರ್ಮುಡಾ ಟ್ರಿಯಾಂಗಲ್ , ಈ ಪುಸ್ತಕದ ಪ್ರತಿಗಳು ಲಭ್ಯವಿಲ್ಲ ಆದರೆ ಈ ಪುಸ್ತಕದಲ್ಲಿ ಇರುವ ವಿಷಯಗಳನ್ನೇ ಇದರಲ್ಲಿರುವ ಘಟನೆಗಳನ್ನೇ ಆದರಿಸಿ ಬರೆದ ಹಲವಾರು ಪುಸ್ತಕಗಳು ಲಭ್ಯವಿದೆ. ದಿ ಬರ್ಮುಡಾ ಟ್ರಿಯಾಂಗಲ್ ಮಿಸ್ಟರಿ ಸೊಲ್ವ್ಡ್ (1975). ಲಾರೆನ್ಸ್ ಡೆವಿಡ್ ಕಾಸ್ಚ್ ( 0879759712) ಲಿಂಬೊ ಆಫ್ ದಿ ಲೊಸ್ಟ್, ಜಾನ್ ವಾಲೆಸ್ ಸ್ಪೆನ್ಸರ್ ( ೦68610658) ದಿ ಎವಿಡೆನ್ಸ್ ಫಾರ್ ದಿ ಬರ್ಮುಡಾ ಟ್ರಿಯಾಂಗಲ್ , (1984), ಡೆವಿಡ್ ಗ್ರೂಪ್ ( 085030413) ದಿ ಫೈನಲ್ ಫ್ಲೈಟ್ , (2006), ಟೋನಿ ಬ್ಲಾಕ್ಮನ್ ( 0955385601) ಈ ಪುಸ್ತಕವು ಕಾಲ್ಪನಿಕ ಕಥೆಯಾದಾರಿತ ಕೃತಿ ಎಂಬುದು ಗಮನದಲ್ಲಿರಲಿ. ಬರ್ಮುಡಾ ಶಿಪ್ವ್ರೆಕ್ಸ್ , (2000), ಡೇನಿಯಲ್ ಬರ್ಗ್ ( 0961616741) ದಿ ಡೆವಿಲ್ಸ್ ಟ್ರಿಯಾಂಗಲ್ , (1974), ರಿಚರ್ಡ್ ವೈನರ್ ( ೦553106880) ಈ ಪುಸ್ತಕವು ಮುದ್ರಣದ ಮೊದಲ ವರ್ಷ ಮಿಲಿಯನ್ ಪ್ರತಿಗಳಿಗಿಂತ ಹೆಚ್ಚಿಗೆ ಮಾರಾಟ ಕಂಡಿತು ಈವರೆಗೆ ಸುಮಾರು 17 ಬಾರಿ ಮರು ಮುದ್ರಣಗೊಂಡಿದೆ. ದಿ ಡೆವಿಲ್ಸ್ ಟ್ರಿಯಾಂಗಲ್ 2 (1975), ರಿಚರ್ಡ್ ವೈನರ್ ( 0553024647) ಫ್ರಮ್ ದಿ ಡೆವಿಲ್ಸ್ ಟ್ರಿಯಾಂಗಲ್ ಟು ದಿ ಡೆವಿಲ್ಸ್ ಜಾವ್ (1977), ರಿಚರ್ಡ್ ವೈನರ್ ( 0553108603) ಘೋಸ್ಟ್ ಶಿಫ್ಸ್: ಟ್ರ್ಯೂ ಸ್ಟೋರೀಸ್ ಆಫ್ ನಾಟಿಕಲ್ ನೈಟ್ಮೇರ್ಸ್, ಹೌಂಟಿಂಗ್ಸ್, ಆಯ್ಂಡ್ ಡಿಸಾಸ್ಟರ್ಸ್ (2000), ರಿಚರ್ಡ್ ವೈನರ್ ( 0425175480) ದಿ ಬರ್ಮುಡಾ ಟ್ರಿಯಾಂಗಲ್ (1975) ಬೈ ಆಡಿಕೆಂಟ್ ಥಾಮಸ್ ಜೆಫ್ರಿ ( 0446599611) ಹೊರಗಿನ ಕೊಂಡಿಗಳು ವಿಸ್ಮಯಕಾರಿ ಸಂಗತಿಗಳು ಬರ್ಮುಡಾ ತ್ರಿಕೋಣ ನಾಟಿಕಲ್ ಲೋರ್ ನಗರ ಪ್ರದೇಶದ ದಂತಕತೆಗಳು ಪ್ಯಾರಾನಾರ್ಮಲ್ ಪ್ಲೇಸಸ್ ಪ್ಯಾರಾನಾರ್ಮಲ್ ತ್ರಿಕೋಣಗಳು ಭೂಮಿಯ ವಿಸ್ಮಯಗಳು ವಿವರಿಸಲಾಗದ ಕಣ್ಮರೆಗಳು ಸಂಬಂಧಿಸಿದ ಸ್ಥಳಗಳು ಕಾಲ್ಪನಿಕ ಸಂಗತಿಗಳು
ಡಾ. ಬಿ.ಆರ್. ಅಂಬೇಡ್ಕರ್ (ಏಪ್ರಿಲ್ ೧೪, ೧೮೯೧ ಡಿಸೆಂಬರ್ ೬, ೧೯೫೬) ಭೀಮರಾವ್ ರಾಮ್ಜೀ ಅಂಬೇಡ್ಕರ್, ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಭಾರತದ ಸಂವಿಧಾನವನ್ನು ರಚಿಸಿದ ಇವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯುತ್ತಾರೆ. ಅಂಬೇಡ್ಕರ್ ಅವರ ಜೀವನ ಚರಿತ್ರೆ ಡಾ ಬಿ. ಆರ್ ಅಂಬೇಡ್ಕರ್ ರವರು 14ನೇ ಏಪ್ರಿಲ್, 1891 ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ ನಲ್ಲಿ ಹುಟ್ಟಿದರು. ಅಂಬೇಡ್ಕರ್ ರವರು ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಖೇಡಾ ತಾಲ್ಲೂಕಿನ ಅಂಬೆವಾಡ ಗ್ರಾಮದವರು. ಇವರು ಮಹಾರ ಜಾತಿಯಲ್ಲಿ ಹುಟ್ಟಿದರು. ಈ ಜಾತಿಯವರು ಹೆಚ್ಚಿನ ಜನ ಬ್ರಿಟಿಷ್ ಸರ್ಕಾರದ ಮಿಲಿಟರಿ ಸೇವೆಯಲ್ಲಿ ಉದ್ಯೋಗಕ್ಕಾಗಿ ಸೇರುತ್ತಿದ್ದರು. ಇವರ ಅಜ್ಜ ಮಾಲೋಜಿ ಸಕ್ಪಾಲ್ ಅವರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಬಾಂಬೆ ಸೇನೆಯಲ್ಲಿ ಸೇರಿ, ಹವಾಲ್ದಾರರಾಗಿ ನಿವೃತ್ತಿ ಹೊಂದಿದ್ದರು. ಇವರು ಆ ಕಾಲಕ್ಕೆ 19 ಮೆಡಲ್ ಗಳನ್ನು ಗಳಿಸಿದ್ದರು. ಇವರಿಗೆ ಇಬ್ಬರು ಮಕ್ಕಳು ರಾಮಜಿ ಸಕ್ಪಾಲ್, ಮೀರಾ ಸಕ್ಪಾಲ್. ರಾಮಜಿ ಸಕ್ಪಾಲ್ ಅವರ ಹೆಂಡತಿ ಭೀಮಬಾಯಿ. ಇವರು ಠಾಣೆ ಜಿಲ್ಲೆಯ ಮುರಬಾದಕರ್ ಎಂಬ ಅಸ್ಪೃಶ್ಯ ಕುಟುಂಬದವರು. ಇವರ ತಂದೆ ಹಾಗೂ ಆರು ಜನ ಚಿಕ್ಕಪ್ಪಂದಿರು, ಸೈನ್ಯದಲ್ಲಿ ಸುಬೇದಾರರಾಗಿದ್ದರು.ರಾಮಜಿ ಮತ್ತು ಭೀಮಬಾಯಿ ರವರು ಇಬ್ಬರು ಕಷ್ಟ ಸಹಿಷ್ಣುಗಳಾದ ಸತಿಪತಿಗಳಾಗಿದ್ದರು. ಇವರಿಗೆ 14 ಮಕ್ಕಳು ಹುಟ್ಟಿದರು. ಈ 14ನೇ ಮಗುವೇ ಅಂಬೇಡ್ಕರ್. ಅಂಬೇಡ್ಕರ್ ಅವರ ಮೊದಲ ಹೆಸರು ಭೀಮರಾವ್ ಆಗಿತ್ತು. ಡಾ. ಅಂಬೇಡ್ಕರರು ನಾನು ನನ್ನ ತಂದೆ ತಾಯಿಯರಿಗೆ 14 ನೇ ರತ್ನನಾಗಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ರಾಮಜಿ ಸಕ್ಪಾಲ್ ರವರಿಗೆ 14 ಮಕ್ಕಳಲ್ಲಿ ಬದುಕುಳಿದ್ದಿದ್ದು 5 ಜನ ಮಕ್ಕಳು , ಅವರು ಮಂಜುಳಾ, ತುಳಸಿ, ಬಲರಾಮ, ಆನಂದರಾವ್ ಮತ್ತು ಭೀಮರಾವ್. ಭೀಮರಾವ್ 2 ವರ್ಷದ ಬಾಲಕನಿದ್ದಾಗ ತಂದೆ ನೌಕರಿಯಿಂದ ನಿವೃತ್ತಿ ಹೊಂದಿದರು. ಇವರು 14 ವರ್ಷಗಳವರೆಗೆ ಮಿಲಿಟರಿ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸಿದ್ದರು. ಇವರು ಮರಾಠಿ, ಹಿಂದಿ ಭಾಷೆಯಲ್ಲಿ ಪ್ರಬುದ್ಧ ಜ್ಞಾನ ಹೊಂದಿದ್ದರು. ಜೊತೆಗೆ ಆಂಗ್ಲ ಭಾಷೆಯನ್ನು ಬಲ್ಲವರಾಗಿದ್ದರು. ಮಕ್ಕಳಲ್ಲಿ ದೇಶಭಕ್ತಿ, ಜ್ಞಾನ, ಹಾಗೂ ಧರ್ಮದ ಬಗ್ಗೆ ತಿಳಿಹೇಳಿಕೊಡುವಲ್ಲಿ ಸಫಲರಾದರು. ಮುಂದೆ ಭೀಮರಾವ್ ರವರು ಉತ್ತಮ ಸಂಸ್ಕೃತಿ ಹೊಂದಲು ತಂದೆಯವರು ಹೇಳಿಕೊಟ್ಟ ನೀತಿ ಪಾಠ ಸಹಾಯಕವಾಯಿತು. ಇವರು ಕಬೀರ ಪಂಥದವರು, ಕಬೀರರ ಧೋಹೆಗಳು, ರಾಮಾಯಣ, ಮಹಾಭಾರತದ ಕತೆಗಳನ್ನು ಮಕ್ಕಳಿಗೆ ಮುಂಜಾನೆ ಮತ್ತು ಸಾಯಂಕಾಲ ಹೇಳಿಕೊಡುತ್ತಿದ್ದರು. ರಾಮಜಿ ಸಕ್ಪಾಲ್ ರವರು ಮಿಲಿಟರಿ ಸೇವೆಯಿಂದ ನಿವೃತ್ತಿಯಾದ ನಂತರ ಡಾಪೋಲಿಗೆ ಬಂದರು. ಆದರೆ ಕೆಲವೇ ದಿನಗಳಲ್ಲಿ ಮಿಲಿಟರಿ ಕ್ವಾರ್ಟಸ್ನಲ್ಲಿ ಅವರಿಗೆ ಸೇವೆ ಸಿಕ್ಕ ಕಾರಣ ಸಾತಾರಕ್ಕೆ ಕುಟುಂಬ ವರ್ಗಾಯಿಸಿದರು. ಭೀಮರಾವ್ ಪ್ರಾಥಮಿಕ ಶಿಕ್ಷಣ ಸಾತಾರದಲ್ಲಿ ಪ್ರಾರಂಭವಾಯಿತು. ಭೀಮರಾವ್ ಆರು ವರ್ಷದ ಬಾಲಕನಿದ್ದಾಗ ಅವರ ತಾಯಿ ಮರಣ ಹೊಂದುತ್ತಾರೆ. ಈ ಕಾರಣಕ್ಕಾಗಿ ಭೀಮರಾವ್ ರು ತನ್ನ ತಾಯಿಯ ಮಮತೆ ತನ್ನ ಅತ್ತೆಯಾದ ಮೀರಾಳಲ್ಲಿ ಕಂಡುಕೊಳ್ಳುತ್ತಾರೆ. ಮೀರಾ ಕರುಣೆಯ ಮೂರ್ತಿಯಾಗಿದ್ದಳು, ಗೂನುಬೆನ್ನಿನಿಂದಾಗಿ ಮದುವೆ ಯಾಗದೆ ತನ್ನ ಅಣ್ಣನ ಮಕ್ಕಳ ಪಾಲನೆ ಪೋಷಣೆಯಲ್ಲಿಯೇ ಸರ್ವಸ್ವವನ್ನೂ ಕಂಡುಕೊಳ್ಳುವಳು. ಭೀಮರಾವ್ ರವರಿಗೆ ಪ್ರಾಥಮಿಕ ಶಾಲೆಯಲ್ಲಿಯೇ ಅಸ್ಪೃಶ್ಯತೆಯ ಅನುಭವವಾಗುತ್ತದೆ. ಶಿಕ್ಷಕರು ಮತ್ತು ಸಹಪಾಠಿಗಳು ಇವರು ದಲಿತ ಜಾತಿಗೆ ಸೇರಿದವರೆಂಬ ಕಾರಣಕ್ಕಾಗಿ ಸೇರುತ್ತಿರಲ್ಲಿಲ್ಲ. ಅದಕ್ಕಾಗಿ ತರಗತಿಯ ಹೊರಗಡೆ ಕುಳಿತುಕೊಂಡು ಕಲಿಯಬೇಕಾಯಿತು. ಪ್ರಾಥಮಿಕ ಶಾಲೆಯಲ್ಲಿ ಎಲ್ಲರ ಅಸಹ್ಯದಿಂದಾಗಿ ಶಿಕ್ಷಣದಲ್ಲಿ ಅವರಿಗೆ ಹೆಚ್ಚು ಒಲವೇ ಇರಲಿಲ್ಲ. ಧ್ಯಾನ ಮಾಡುವುದು, ಮೇಕೆಯೊಡನೆ ಆಟವಾಡುವುದು ಅವರ ಹವ್ಯಾಸಗಳಾಗಿದ್ದವು. ಈ ಮಧ್ಯ ರಾಮಜಿ ಸಕ್ಪಾಲ್ ರವರು ಸಂಸಾರದ ನಿರ್ವಹಣೆಗಾಗಿ ಇನ್ನೊಂದು ಮದುವೆಯಾದರು. ಮಲತಾಯಿ ತನ್ನ ತಾಯಿಯ ಬಟ್ಟೆ ಹಾಗೂ ಒಡವೆಗಳನ್ನು ಹಾಕಿಕೊಂಡಾಗ, ಅದಕ್ಕಾಗಿ ತಂದೆ, ಅತ್ತೆಯೊಂದಿಗೆ ಜಗಳವಾಡುತ್ತಿದ್ದರು. ಸೋದರತ್ತೆ ವಾತ್ಸಲ್ಯದಿಂದ ಮಲತಾಯಿಯ ಅನಿವಾರ್ಯತೆಯ ಬಗ್ಗೆ ತಿಳಿ ಹೇಳಿದರು ಆದ್ರೂ ಸಹ ಸೋದರತ್ತೆಯ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಈ ಮನೆಯಲ್ಲಿ ಬದುಕುವುದು ಬೇಡ ಎಂದು ನಿರ್ಧರಿಸಿ ತನ್ನ ರೊಟ್ಟಿಯನ್ನು ತಾನೇ ಸಂಪಾದಿಸಿಕೊಳ್ಳಬೇಕೆಂದು ನಿರ್ಧರಿಸಿದರು. ತನ್ನ ವಯಸ್ಸಿನವರು ಬಾಂಬೆಯ ಬಟ್ಟೆಯ ಮಿಲ್ಲಿನಲ್ಲಿ ಕಾರ್ಮಿಕರಾಗಿ ದುಡಿಯಬೇಕೆಂದು ನಿರ್ಧರಿಸಿ ಬಾಬ್ ಗೆಗೋಗಳು ಬೇಕಾಗುವ ಹಣವನ್ನು ತನ್ನ ಅತ್ತೆಯ ಪರ್ಸ್ ನ್ನು ಮುರು ದಿನ ರಾತ್ರಿ ಎದ್ದು ಹಣವನ್ನು ಕದಿಯಲು ಪ್ರಯತ್ನಿಸುತ್ತಾರೆ ಆದ್ರೆ ನಾಲ್ಕನೇ ದಿನ ರಾತ್ರಿ ಪರ್ಸ್ ಕದ್ದು ಅದ್ರಲ್ಲಿ ಕೇವಲ ಅರ್ಧ ಆಣೆ ಇದ್ದು, ಬಾಂಬೆಗೆ ರೈಲಿನ ಟಿಕೇಟು ಮೂರು ಆಣೆ ಇರುತ್ತದೆ ಕದ್ದ ಹಣದಿಂದ ಬಾಂಬೆಗೆ ಹೋಗಲು ಸರಿಹೋಗುವುದಿಲ್ಲ. ಇದರಿಂದ ನೊಂದು ತನ್ನ ನಿರ್ಧಾರ ಬದಲಿಸಿ ಹೆಚ್ಚಿಗೆ ಓದಬೇಕೆಂದು ನಿರ್ಧರಿಸಿ ಓದುವ ಆಸೆ ಹೆಚ್ಚಿಸಿಕೊಳ್ಳುತ್ತಾರೆ. ಸತಾರ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ತರಗತಿಯಲ್ಲಿ ಓದುತ್ತಿರುವಾಗ ಮಹಾರ ಎಂಬ ಅಸ್ಪೃಶ್ಯರದವರೆಂಬ ಕಾರಣಕ್ಕಾಗಿ ಹೆಚ್ಚು ಕಡಿಮೆ ಎಲ್ಲ ಶಿಕ್ಷಕರು ಇವರನ್ನು ಅಸಹ್ಯವಾಗಿ ನೋಡುತ್ತಿದ್ದರು. ಯಾರೂ ಇವರ ಪ್ರತಿಭೆ ಗುರುತಿಸಲಿಲ್ಲ. ಆದರೆ ಅಲ್ಲಿನ ಶಿಕ್ಷಕರಲ್ಲಿ ಒಬ್ಬರಾದ ಫೆಂಡೆಸೆ ಅಂಬೇಡ್ಕರ್ ಎಂಬ ಶಿಕ್ಷಕರು ಈ ಬಾಲಕನ ಪ್ರತಿಭೆ,ಕಲಿಯುವ ಹಂಬಲ,ಸೂಕ್ಷ್ಮಬುದ್ಧಿಶಕ್ತಿಯನ್ನು ಗುರುತಿಸಿ ಇವರಿಗೆ ಪ್ರೋತ್ಸಾಹಿಸಿದರು. ಜಾತಿಯಲ್ಲಿ ಆ ಶಿಕ್ಷಕರು ಬ್ರಾಹ್ಮಣರಾಗಿದ್ದರೂ ಕೂಡ ತಾವು ಊಟಕ್ಕೆ ತಂದಿದ್ದ ಬುತ್ತಿಯಲ್ಲಿ ಭೀಮರವರಿಗೆ ಒಂದಿಷ್ಟು ಕೊಟ್ಟು ಪ್ರೀತಿಯಿಂದ ಊಟ ಮಾಡಿಸುತ್ತಿದ್ದರು. ಇದೇ ಫೆಂಡೆಸೆ ಅಂಬೇಡ್ಕರ್ ಭೀಮರಾವರವರ ಹೆಸರನ್ನು ತಮ್ಮ ಅಡ್ಡ ಹೆಸರಾದ ಅಂಬೇಡ್ಕರ್ ಎಂಬ ಹೆಸರನ್ನು ಅವರ ಅಡ್ಡ ಹೆಸರಿಗೆ ಬದಲಿಸಿ ಕೊಟ್ಟರು ಅಂದರೆ ಹಾಜರಿಯಲ್ಲಿ ಅವರ ಹೆಸರು ಭೀಮರಾವ್ ರಾಮಜಿ ಅಂಬೆವಾಡ್ಕರ್ ಎಂದು ಇದ್ದು, ಶಿಕ್ಷಕರು ಅದನ್ನು ಭೀಮರಾವ್ ರಾಮಜಿ ಅಂಬೇಡ್ಕರ್ ಎಂದು ತಿದ್ದಿದರು ಅಂದಿನಿಂದ ಭೀಮರಾವ್ ಅಂಬೇಡ್ಕರ್ ಆದರು. ಪ್ರಾಥಮಿಕ ಶಿಕ್ಷಣ ಹಲವಾರು ನೋವು ಮತ್ತು ಅವಮಾನಗಳಿಂದ ಸಾತಾರದಲ್ಲಿ ಮುಗಿಸಿ, ಮಾಧ್ಯಮಿಕ ಶಿಕ್ಷಣಕ್ಕಾಗಿ ಬಾಂಬೆಯ ಸರಕಾರಿ ಪ್ರೌಢ ಶಾಲೆಯಾದ ಎಲಿಫಿನ್ ಸ್ಟನ್ ಹೈಸ್ಕೂಲಿಗೆ ಸೇರಲು ನಿರ್ಧರಿಸುತ್ತಾರೆ. ಸಾತರದಂತೆ, ಇವರಿಗೆ ಹೆಚ್ಚು ಶೋಷಣೆ ಅನ್ಯಾಯ ಚುಚ್ಚು ಮಾತು ಅಪಮರ್ಯಾದೆ ಇರಕ್ಕಿಲ್ಲ ಎಂಬ ಭಾವನೆಯೊಂದಿಗೆ ಬಾಂಬೆಗೆ ಹೋಗಿ ಕಾರ್ಮಿಕರ ಬಡಾವಣೆ ಪರೇಲ ಎಂಬಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ಹಿಡಿದು ಶಾಲೆಗೆ ಸೇರಿಸುತ್ತಾರೆ. ಆದರೆ ಶಾಲೆಗೆ ಸೇರುವ ಸಂಧರ್ಭದಲ್ಲಿಯೇ ಇವರಿಗೆ ಅಸ್ಪೃಶ್ಯತೆಯ ಅನುಭವವಾಗುತ್ತದೆ. ಶಾಲೆಯಲ್ಲಿ ಮೊದಲನೆಯ ಭಾಷೆ ಮರಾಠಿಯಾಗಿಯೂ,ಎರಡನೆಯ ಭಾಷೆ ಸಂಸ್ಕೃತ ಕಲಿಯಲು ಇಚ್ಛಿಸುತ್ತಾರೆ. ಆದರೆ ಸಂಸ್ಕೃತ ಶಿಕ್ಷಕರು ಇವರಿಗೆ ಸಂಸ್ಕೃತ ಕಲಿಸಲು ನಿರಾಕರಿಸುತ್ತಾರೆ.ಅದಕ್ಕಾಗಿಯೇ ಅನಿವಾರ್ಯವಾಗಿ ಪಾರ್ಸಿ ಭಾಷೆಯನ್ನು ಕಲಿಸಲು ನಿರ್ಧರಿಸುತ್ತಾರೆ. ಒಂಬತ್ತನೆಯ ತರಗತಿಯಲ್ಲಿಯೂ ಇವರಿಗೆ ಅಸ್ಪೃಶ್ಯತೆಯು ಸಿಗುತ್ತದೆ. ಶಿಕ್ಷಕರು ಬೋರ್ಡ್ ಮೇಲೆ ಹಾಕಲಾಗಿದ್ದ ಬೀಜಗಣಿತದ ಲೆಕ್ಕ ಶಾಲೆಯ ಯಾವ ವಿದ್ಯಾರ್ಥಿ ಕೂಡ ಬಿಡಿಸದಿದ್ದಾಗ ಭೀಮರಾವ್ ರು ಬಿಡಿಸಲು ಬರುತ್ತಾರೆ. ಶಾಲೆಯ ಶಿಕ್ಷಕರು ಅನುಮತಿ ನೀಡುತ್ತಾರೆ . ಆದರೆ ವಿದ್ಯಾರ್ಥಿಗಳು ತಮ್ಮ ಊಟದ ಬುತ್ತಿ ಬೋರ್ಡಿನ ಹಿಂದುಗಡೆ ಇಟ್ಟಿರುವುದರಿಂದ ಮಹಾರ ವಿದ್ಯಾರ್ಥಿ ಬೋರ್ಡ್ ಮುಟ್ಟಿದರೆ ಬುತ್ತಿ ಅಸ್ಪೃಶ್ಯವಾಗುತ್ತದೆ ಎಂದು ನಿರಾಕರಿಸಿದರು. ಇಂತಹ ಕಹಿ ಅನುಭವಗಳ ಮಧ್ಯಯೇ ಡಾ. ಅಂಬೇಡ್ಕರ್ 1907ರಲ್ಲಿ 10ನೆ ತರಗತಿಯಲ್ಲಿ ಪಾಸಾಗುತ್ತಾರೆ. ಒಟ್ಟು 750 ಅಂಕಗಳಿಗೆ 282 ಅಂಕ ಪಡೆದರು. ಅಸ್ಪೃಶ್ಯರಲ್ಲಿಯೇ ಇವರು ಇಷ್ಟು ಅಂಕಗಳನ್ನು ಪಡೆದು ಪಾಸಾದ ಮೊದಲನೇ ವಿದ್ಯಾರ್ಥಿ ಯಾಗುತ್ತಾರೆ. ಅಸ್ಪೃಶ್ಯರ ವರ್ಗದವರು ಈ ಬಾಲಕನಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲು ಆಗಿನ ಸಮಾಜ ಸುಧಾರಕರಾದ ಎಸ್ ಕೆ ಭೋಲೆಯವರು ನಿರ್ಧರಿಸುತ್ತಾರೆ. ಸರಕಾರಿ ಶಾಲೆಯ ನಿವೃತ್ತ ಶಿಕ್ಷಕರಾದ ಕೆ ಎ ಕೆಲಸ್ಕರ್ ರವರು ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಾರೆ. ಕೆ ಎ ಕೆಲಸ್ಕರ್ ರವರು ಅಂಬೇಡ್ಕರ್ ರವರನ್ನು ತುಂಬು ಹೃದಯದಿಂದ ಅಭಿನಂದಿಸಿ, ನೀವು ನಿಮ್ಮ ಸಮಾಜದ ಮತ್ತು ಭಾರತದ ಸುಧಾರಕರಾಗಬೇಕೆಂದು ಹರಸುತ್ತಾರೆ. ಮತ್ತು ಉನ್ನತ ವ್ಯಾಸಂಗಕ್ಕೆ ತಮ್ಮ ಕೈಲಾದ ಸಹಾಯ ಮಾಡುವೆವೆಂದು ಪ್ರೋತ್ಸಾಹಿಸುತ್ತಾರೆ. ತಾವೇ ಬರೆದ ಭಗವಾನ್ ಬುದ್ಧನ ಚರಿತ್ರೆಯ ಪುಸ್ತಕವನ್ನು ಭೀಮರಾವರವರಿಗೆ ಕಾಣಿಕೆ ನೀಡುತ್ತಾರೆ. ಡಾ.ಅಂಬೇಡ್ಕರ್ ರವರು ಬೌದ್ಧ ಧರ್ಮಕ್ಕೆ ಒಲಿಯಲು ಈ ಪುಸ್ತಕವೇ ಪ್ರೋತ್ಸಾಹ ಕೊಡುತ್ತದೆ. ಅಂಬೇಡ್ಕರ್ ಅವರು 10 ನೇ ತರಗತಿ ಪಾಸಾದ ನಂತರ ಇವರ ಮನೆಯವರು ಡಾಪೋಲಿಯ ಬಿಕ್ಕು ವಾಲಂಗಕರ್ರವ ಎರಡನೆಯ ಪುತ್ರಿ ರಮಾಬಾಯಿಯವರೊಂದಿಗೆ ಮದುವೆ ಮಾಡುತ್ತಾರೆ. ಆಗ ಅವರಿಗೆ 17 ವರ್ಷ ರಮಾಬಾಯಿಯವರಿಗೆ 9 ವರ್ಷ ವಯಸ್ಸಾಗಿತ್ತು. ಮುಂದಿನ ಅಭ್ಯಾಸಕ್ಕಾಗಿ ಎಲಿಫಿನ್ ಸ್ಟನ್ ಸೇರಿದ ಅಂಬೇಡ್ಕರ್ 1912 ರಲ್ಲಿ ಎಲಿಫಿನಸ್ಟನ್ ಕಾಲೇಜಿನಿಂದ ಬಿಎ ಮುಗಿಸುತ್ತಾರೆ. ಇವರಿಗೆ ಕೆ.ಎ ಕೆಲಸ್ಕರ್ರವರು ಪಿಯುಸಿ ಮತ್ತು ಬಿ ಎ ವ್ಯಾಸಂಗಕ್ಕಾಗಿ ಬರೊಡದ ಮಹಾರಾಜರಿಂದ ತಿಂಗಳಿಗೆ 25 ರೂಪಾಯಿಗಳ ಶಿಕ್ಷಣ ವೇತನವನ್ನು ಕೊಡಿಸುತ್ತಾರೆ. ಬಿ ಎ ಓದುವಾಗ ಪ್ರೊ ಮುಲ್ಲರ್ ಎಂಬುವರು ಹೆಚ್ಚು ಪ್ರೋತ್ಸಾಹವನ್ನು ಕೊಟ್ಟಿರುತ್ತಾರೆ. ಅದಕ್ಕಾಗಿ ಡಾ. ಅಂಬೇಡ್ಕರ್ ರವರಿಗೆ ಇವರು ಆದರ್ಶರಾಗಿರುತ್ತಾರೆ. ಮೊದಲೇ ಸಯ್ಯಾಜಿರಾವ್ ಗಾಯಕವಾಡರೊಂದಿಗೆ ಮಾಡಿಕೊಂಡ ಒಪ್ಪಂದಂತೆ ಬಿ ಎ ಮುಗಿದ ನಂತರ ಬರೋಡಾದ ಮಹಾರಾಜರ ಆಸ್ಥಾನದಲ್ಲಿ ಮಿಲಿಟರಿ ಲೆಫ್ಟಿನೆಂಟ್ ಆಗಿ ನೇಮಕವಾಗುತ್ತಾರೆ.ಆದರೆ ಅವರು ಅಲ್ಲಿ ಹೆಚ್ಚು ಕಾಲ ಕೆಲಸ ಮಾಡಲಿಲ್ಲ. ಕೇವಲ 15 ದಿನಗಳ ಕೆಲಸ ಮಾಡಿದರು,ತಂದೆ ಅನಾರೋಗ್ಯದಿಂದಿದ್ದಾರೆ ಎಂಬ ಟೆಲಿಗ್ರಾಮ್ ಬಂದಾಗ ಅವರು ಬರೋಡಾದಿಂದ ಬಾಂಬೆಗೆ ಬರುತ್ತಾರೆ.ತಂದೆ ಅಂತಿಮ ಕ್ಷಣ ಎಣಿಸುತ್ತಿದ್ದರು. ಬಂದ ಮಗನ ಮೈ ಮೇಲೆ ಕೈ ಎಳೆದು ಏನೋ ಹೇಳಲು ತಡವರಿಸಿ ಏನೂ ಹೇಳಲಾಗದೆ, ಫೆಬ್ರವರಿ 2 1913ಕ್ಕೆ ಪ್ರಾಣಬಿಟ್ಟರು. ತಂದೆ ಅಂತ್ಯಕ್ರಿಯೆಗಳನ್ನು ಮುಗಿಸಿದ ಡಾ. ಅಂಬೇಡ್ಕರರು ಮುಂದೆ ಏನು ಎಂಬ ಪ್ರಶ್ನೆಹಾಕಿಕೊಂಡು ಉನ್ನತ ವ್ಯಾಸಂಗ ಮಾಡಲು ನಿರ್ಧರಿಸುತ್ತಾರೆ. ಇದೇ ಸಂಧರ್ಭದಲ್ಲಿ ಬರೋಡಾದ ಮಹಾರಾಜರು ಯೋಗ್ಯ ವಿದ್ಯಾರ್ಥಿಗಳಿಗೆ ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯಗಳಲ್ಲಿ ಓದಲು ಶಿಷ್ಯವೇತನ ಘೋಷಣೆ ಮಾಡುತ್ತಾರೆ. ಶಿಕ್ಷಕರಾದ ಕೆ. ಎ ಕೆಲಸ್ಕರ್ ರವರ ಜೊತೆಗೆ ಬರೋಡದ ಮಹಾರಾಜರಲ್ಲಿ ಬಂದು ಅಮೆರಿಕಾದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಶಿಷ್ಯವೇತನ ಪಡೆದು ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಓದಲು 1913ಕ್ಕೆ ಹೋಗುತ್ತಾರೆ. ಅಲ್ಲಿ ಅರ್ಥಶಾಸ್ತ್ರ,ಸಮಾಜಶಾಸ್ತ್ರ,ಅತಿಹಾಸ,ತತ್ವಜ್ಞಾನ,ತರ್ಕಶಾಸ್ತ್ರ, ರಾಜ್ಯಶಾಸ್ತ್ರದಲ್ಲಿ ಅಧ್ಯಯನ ಮಾಡುತ್ತಾರೆ. 1915ರಲ್ಲಿ ಪ್ರಾಚೀನ ಭಾರತದ ವಾಣಿಜ್ಯ ಪ್ರಬಂದ ಮಂಡಿಸಿ ಎಂ ಎ ಪದವಿ ಪಡೆದರು. ಅದೇ ವರ್ಷ ಅಂತಾರಾಷ್ಟ್ರೀಯ ಸಮಾಜ ಶಾಸ್ತ್ರೀಯ ವಿಚಾರ ಸಂಕಿರಣದಲ್ಲಿ ಭಾರತೀಯ ಜಾತಿಗಳು ಎಂಬ ಪ್ರಬಂಧ ಮಂಡಿಸುತ್ತಾರೆ. 1916ರಲ್ಲಿ ಭಾರತದಲ್ಲಿ ರಾಷ್ಟ್ರೀಯ ಉತ್ಪನ್ನ ಎಂಬ ಪ್ರಬಂಧ ಮಾಫಿಸಿ ಅದೇ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪದವಿಯನ್ನು ಪಡೆದರು. 8 ವರ್ಷದ ನಂತರ ಇಂಗ್ಲೆಂಡಿನ ಪ್ರಕಾಶನ ಸಂಸ್ಥೆ ಎಸ್ ಪಿ ಅಂಡ್ ಸನ್ಸ್, ಭಾರತದಲ್ಲಿ ರಾಷ್ಟ್ರೀಯ ಹಣ ಕಾಸಿನ ವಿಕಾಸ ಎಂಬ ಶೀರ್ಷಿಕೆಯಲ್ಲಿ ಪುಸ್ತಕವೊಂದು ಪ್ರಕಟಿಸಿತು. ಅಮೆರಿಕಾದಲ್ಲಿ ಇವರ ಮೇಲೆ ಪ್ರಭಾವ ಬೀರಿದ ಶಿಕ್ಷಕರೆಂದರೆ ಎಡ್ವಿನ್ ಕ್ಯಾನಾನ್, ಆರ್ ಎ ಸಲಿಗಮ್,ಜಾನ್ ಡಿವೆ. ಅಮೆರಿಕಾದಲ್ಲಿ ಎಂ ಎ ,ಪಿಎಚ್ ಡಿ,ಪಡೆದ ನಂತರ ಉನ್ನತ ವ್ಯಾಸಂಗ ಇಂಗ್ಲೆಂಡಿನಲ್ಲಿ ಮುಂದುವರೆಸಲು ಅಂಬೇಡ್ಕರರು ಅಮೆರಿಕಾದಿಂದ ಇಂಗ್ಲೆಂಡಿಗೆ ಹೋಗುತ್ತಾರೆ. ಅಲ್ಲಿ ಲಂಡನ್ನಿನ ಅರ್ಥಶಾಸ್ತ್ರ ರಾಜಕೀಯಶಸ್ತ್ರ ವಿಶ್ವವಿದ್ಯಾಲಯದಲ್ಲಿ ಡಿ ಎಸ್ ಸಿ ಪದವಿಗಾಗಿ ನೋಂದಾಯಿಸಿಕೊಳ್ಳುತ್ತಾರೆ, ಅಲ್ಲದೆ ಗ್ರೇಸ್ ಇನ್ ಕಾಲೇಜಿನಲ್ಲಿ ಕಾನೂನು ಪದವಿಗೆ ಹೆಚ್ಚುವರಿಯಾಗಿ ಸೇರುತ್ತಾರೆ. ಆದರೆ 1916ರ ಹೊತ್ತಿಗೆ ಸಯ್ಯಾಜಿರಾವ್ ಗಾಯಕವಾಡ ರ ಶಿಷ್ಯವೇತನ ಅವಧಿ ಮುಗಿದಿದೆ ಹಿಂದಕ್ಕೆ ಮರಳಿ ಬರಲು ಹೇಳಿದಾಗ ಅಂಬೇಡ್ಕರ್ ರವರಿಗೆ ತೀರ ನೋವಾಗುತ್ತದೆ. ಆದರೂ ಅನಿವಾರ್ಯವಾಗಿ ತಮ್ಮ ವ್ಯಾಸಂಗ ಅರ್ಧಕ್ಕೆ ನಿಲ್ಲಿಸಿ ಬರುತ್ತಾರೆ ಬರುವಾಗ ಅಂಬೇಡ್ಕರರು ತಮ್ಮ ಗುರುಗಳಿಗೆ ವಿನಂತಿಸಿ ತಮ್ಮ ಅಡ್ಮಿಷನ್ ರದ್ದು ಮಾಡದಂತೆ ಕೋರಿ ನಾಲ್ಕು ವರ್ಶದ ನಂತರ ಮರಳಿ ಬರುವುದಾಗಿ ಕೋರಿರುತ್ತಾರೆ. ಪೂರ್ವ ನಿರ್ಧರಿತ ಒಪ್ಪಂದದಂತೆ,ಡಾ ಅಂಬೇಡ್ಕರ್ ರು ಬರೊಡದ ಮಹಾರಾಜರ ಆಸ್ಥಾನದಲ್ಲಿ ಸೈನ್ಯದ ಕಾರ್ಯದರ್ಶಿಗಳಾಗಿ ಕೆಲಸಕ್ಕೆ ಸೇರಿದರು. ಮಹಾರಾಜರಿಗೆ ತಿಳಿಯದಂತೆ ಅಲ್ಲಿಯೇ ಆಸ್ಥಾನಿಕ ಹಿರಿಯ ಮಂತ್ರಿಗಳು ಇವರೊಂದಿಗೆ ಅಸ್ಪೃಶ್ಯ ಆಚರಣೆ ಮಾಡುತ್ತಿದ್ದರು.ಸಮಾನ್ಯ ಸಿಪಾಯಿ ಕೂಡ ಇವರ ಫೈಲುಗಳನ್ನು ಮುಟ್ಟಿಸಿಕೊಳ್ಳುತ್ತಿರಲಿಲ್ಲ, ಉಳಿಯಲು ಆಸ್ಥಾನದಲ್ಲಿ ನಿವೇಶನ ನೀಡಲಿಲ್ಲ ಮತ್ತು ಉಳಿದಿದ್ದ ಪಾರ್ಸಿ ಹೊಟೇಲ್ ನಿಂದ ಇವರನ್ನು ದಬ್ಬಿ ಹೊರಹಾಕಿದರು. ಅನಿವಾರ್ಯವಾಗಿ ಅಲ್ಲಿ ಕೆಲಸ ಮಾಡಲಾಗದೆ ಬಾಂಬೆಗೆ ಬಂದರು. ಬಂದು ಕೆಲವು ದಿನಗಳಲ್ಲಿ ಅವರ ಮಲತಾಯಿ ಮರಣಹೊಂದುತ್ತಾರೆ. ಅಂಬೇಡ್ಕರರು ಸಿಡ್ಯಾಮ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರುತ್ತಾರೆ. ಈ ಸರಕಾರಿ ಕಾಲೇಜಿನಲ್ಲಿಯೂ ಕೂಡ ಇವರ ಜೊತೆಗೆ ಅಸ್ಪೃಶ್ಯರ ಆಚರಣೆ ಮಾಡುತ್ತಾರೆ. ಇವರ ಸಹಪಾಠಿಗಳು, ಪಾಠಮಾಡಿ ಉಪನ್ಯಾಸಕರಿಗಾಗಿ ಕುಡಿಯಲು ಇಟ್ಟ ನೀರಿನ ಪಾತ್ರೆಯಿಂದ ಅಂಬೇಡ್ಕರರು ನೀರನ್ನು ಕುಡಿದಾಗ ಗುಜರಾತ್ ನ ಉಪನ್ಯಾಸಕರೊಬ್ಬರು ಅಕ್ಷೇಪಿಸುತ್ತಾರೆ. ಮುಂದೆ 1920ರಲ್ಲಿ ಮುಖನಾಯಕ ಎಂಬ ಪತ್ರಿಕೆಯನ್ನು ಪ್ರಕಟಿಸಿದರು. ಈ ಅವಧಿಯಲ್ಲಿ ಅಂಬೇಡ್ಕರ್ ರವರಿಗೆ ಕೊಲ್ಲಾಪುರದ ಸಾಹೋ ಮಹಾರಾಜರು ಅಂಬೇಡ್ಕರವರ ಉನ್ನತ ವ್ಯಾಸಂಗಕ್ಕೆ ಶಿಷ್ಯವೇತನ ನೀಡಲು ಮುಂದಾಗುತ್ತಾರೆ. ಹೇಗೂ ಅಂಬೇಡ್ಕರ್ ರವರು ಕಾಲೇಜಿನಲ್ಲಿ ಉಪನ್ಯಾಸ ಮಾಡಿ ಕೂಡಿಟ್ಟ ಸ್ವಲ್ಪ ಹಣ, ಸಾಹು ಮಹಾರಾಜರಿಂದ ಶಿಷ್ಯವೇತನ ಹಾಗೂ ಆತ್ಮೀಯ ಪಾರ್ಸಿ ಗೆಳೆಯ ನವಲಭೆತನಿಂದ ಸ್ವಲ್ಪ ಹಣ ಸಾಲ ಪಡೆದು ಅಂಬೇಡ್ಕರರವರು ಉನ್ನತ ವ್ಯಾಸಂಗಕ್ಕೆ ಲಂಡನ್ನಿಗೆ ಹೋದರು. ಅಲ್ಲಿ 1920ರಲ್ಲಿ ಲಂಡನ್ ಸ್ಕೂಲ್ ಆಫ್ ಏಕನಿಮಿಕ್ಸ್ ಅಂಡ್ ಪೊಲಿಟಿಕಲ್ ಸೈನ್ಸ್ ವಿಶ್ವವಿದ್ಯಾಲಯದಲ್ಲಿ ಎಂ ಎಸ್ ಸಿ ಪದವಿಗಾಗಿ ನೊಂದಾಯಿಸಿಕೊಂಡು ಹಗಲು ರಾತ್ರಿ ಅಧ್ಯಯನ ಮಾಡುತ್ತಾರೆ. ಸ್ವಲ್ಪ ಹಣವಿರುವುದರಿಂದ ಅತ್ಯಧಿಕ ಕಷ್ಟ ಪಟ್ಟು ಅರ್ಧ ಬ್ರೆಡ್ ಒಂದು ದಿನಕ್ಕೆ ಊಟ ಮಾಡಿ ಲಂಡನ್ನಿನ ಮ್ಯೂಸಿಯಂ ಎಂಬ ಗ್ರಹಾಲಯದಲ್ಲಿ ದಿನದ 18 ಗಂಟೆಗಳ ಕಾಲ ಅದ್ಯಯನ ಮಾಡಿ ,1921 ರಲ್ಲಿ ಪ್ರೊ ಎಡ್ವಿನ್ ಕ್ಯಾನನ ರವರ ಮಾರ್ಗದರ್ಶನದಲ್ಲಿ ಬ್ರಿಟಿಷ ಭಾರತದಲ್ಲಿ ಸಾಮ್ರಾಜ್ಯಶಾಹಿಯ ಹಣಕಾಸಿನ ಪ್ರಾಂತೀಯ ವಿಕೇಂದ್ರೀಕರಣ. ಎಂಬ ಪ್ರಬಂಧ ಮಂಡಿಸಿ, ಎಂ ಎಸ್ ಸಿ ಪದವಿಪಡೆಯುತ್ತಾರೆ. ಇವರು ಇದೇ ರೀತಿ ವಿದ್ಯಾರ್ಜನೆ ಮಾಡಿ 1921ರಲ್ಲಿ ಡಿ.ಎಸ್ ಸಿ ಪದವಿಗಾಗಿ ನೊಂದಾಯಿಸಿಕೊಂಡು 1922 ರಲ್ಲಿ ಹಣದ ಸಮಸ್ಯೆ ಎಂಬ ಪ್ರಬಂಧ ಮಂಡಿಸಿ ಡಿ ಎಸ್ ಸಿ ಪದವಿ ಪಡೆಯುತ್ತಾರೆ . ಅದೇ ವರ್ಷ ಗ್ರೇಸ್ ಇನ್ ಕಾಲೇಜಿನಿಂದ ಎಲ್ ಎಲ್ ಡಿ ಪಡೆಯುತ್ತಾರೆ. 1923 ರಲ್ಲಿ ಜರ್ಮನಿಯ ಬಾನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಉನ್ನತ ಪದವಿಗಾಗಿ ನೊಂದಾಯಿಸಿಕೊಂಡು 6 ತಿಂಗಳವರೆಗೆ ಅಭ್ಯಾಸ ಮಾಡುತ್ತಾರೆ. ಆರ್ಥಿಕ ಕಡುಬಡತನದಿಂದ ವ್ಯಾಸಂಗವನ್ನು ಮಧ್ಯದಲ್ಲಿಯೇ ನಿಲ್ಲಿಸಿ ಭಾರತಕ್ಕೆ ಬಂದು ವಕೀಲ ವ್ರತ್ತಿಯನ್ನು ಪ್ರಾರಂಭಿಸುತ್ತಾರೆ. ಕೆಲವು ದಿನಗಳ ಕಾಲ ಟ್ಯಾಕ್ಸ್ ಪ್ರ್ಯಾಕ್ಟಿಶನರ್ ಆಗಿಯೂ ಕೆಲಸ ಮಾಡುತ್ತಾರೆ. ಸಾಮಾಜಿಕ ಸೇವೆಯಲ್ಲಿ ಕಾಲಜಿಯುಳ್ಳ ಇವರು ಸಾಮಾಜಿಕ ಸೇವೆಗಾಗಿ ತಮ್ಮ ಬದುಕನ್ನು ಗುರುತಿಸಿಕೊಳ್ಳುತ್ತಾರೆ. ದಲಿತ ವರ್ಗದವರನ್ನು ಜಾಗೃತರನ್ನಾಗಿ ಮಾಡಲು ಅವರಲ್ಲಿ ಶಿಕ್ಷಣದ ಪ್ರಸಾರ ಮಾಡಲು ಸಂಸ್ಕೃತಿಯ ಬಗ್ಗೆ ತಿಳಿಸಲು ಆರ್ಥಿಕ ಸೌಕರ್ಯ ಮಾಡಲು ಹಾಗೂ ಅವರ ಸಮಸ್ಯೆಗಳಿಗೆ ಸ್ಪಂದಿಸುವುದು ಇವರ ಉದ್ದೇಶವಾಗಿತ್ತು. ಅದೇ ರೀತಿ ಬಹಿಷ್ಕೃತ ಭಾರತ ಎಂಬ ಪತ್ರಿಕೆಯನ್ನು ಪ್ರಾರಂಭಿಸುತ್ತಾರೆ. ಸಾಮಾಜಿಕ ಹೋರಾಟದ ಜೀವನ ಪ್ರಾರಂಭಿಸಿದ ಇವರು 1927ರಲ್ಲಿ ಮಹಾಡದ ಚೌಡರ ಕೆರೆಯ ನೀರನ್ನು ಮುಟ್ಟುವ ಚಳುವಳಿಯನ್ನು ಹಮ್ಮಿಕೊಳ್ಳುತ್ತಾರೆ. ತನ್ನ 10 ಸಾವಿರ ಅನುಯಾಯಿಗಳೊಂದಿಗೆ ಚೌಡರ ಕೆರೆಯ ನೀರನ್ನು ಮುಟ್ಟಿಸಿ ಬಹುದಿನಗಳಿಂದ ನಿಷೇಧಿಸಿದ ಈ ಕೆರೆಯಿಂದ ನೀರು ಕುಡಿಯುವ ಹಕ್ಕು ಒತ್ತಾಯಿಸಿದರು. 1927 ರಲ್ಲಿ ಶ್ರೇಣಿ ಪದ್ದತಿಯ ವರ್ಣಾಶ್ರಮ ಹಾಗೂ ಸ್ತ್ರಿದಮನ ಮಸ್ಡಿದ ಮನಸ್ಮೃತಿಯನ್ನು ಸುತ್ತು ಹಾಕುತ್ತಾರೆ. 1930 ತನ್ನ 15 ಸಾವಿರ ಅನುಯಾಯಿಗಳೊಂದಿಗೆ ನಾಸಿಕದ ಕಾಳರಾಂ ದೇವಾಲಯದ ಪ್ರವೇಶ ಚಳುವಳಿಯನ್ನು ಮಾಡುತ್ತಾರೆ. 1927ರಲ್ಲಿ ಇವರಿಗೆ ಮುಂಬಯಿಯ ಶಾಸಕಾಂಗದ ಸದಸ್ಯರಾಗಿ ಬ್ರಿಟಿಷ್ ಸರ್ಕಾರ ನೇಮಿಸುತ್ತದೆ. 1930 ರಿಂದ 1932 ವರೆಗೆ ಲಂಡನ್ನಿನಲ್ಲಿ ನಡೆಯುವ ದುಂಡು ಮೇಜಿನ ಸಮ್ಮೇಳನದಲ್ಲಿ ದಲಿತರ ಪ್ರತಿನಿಧಿಯಾಗಿ ಭಾಗವಹಿಸಿ ದಲಿತರಿಗೆ ಪ್ರತ್ಯೇಕ ಮತದಾನದ ಸೌಲಭ್ಯ ಕಲ್ಪಿಸಿಕೊಟ್ಟು ಬಹುದಿನಗಳಿಂದ ಆಳ್ವಿಕೆ ಮಾಫಿಯಾ ಅಧಿಕಾರದಿಂದ ದೂರವಿದ್ದ ದಲಿತರಿಗೆ ಆಳ್ವಿಕೆ ಮಾಡುವ ಅಧಿಕಾರವನ್ನು ದೊರಕಿಸಿಕೊಡುತ್ತಾರೆ. ಇಂಗ್ಲೆಂಡಿನ ಪ್ರಧಾನಿಯಾದ ಮ್ಯಾಕ್ ಡೊನಾಲ್ಡ್ ಕೋಮುಆದೇಶದ ಮೂಲಕ ಈ ಅಧಿಕಾರವನ್ನು ದಲಿತರಿಗೆ ನೀಡುತ್ತಾರೆ. ಆದ್ರೆ ಗಾಂಧೀಜಿ ದಲಿತರಿಗೆ ಪ್ರತ್ಯೇಕ ಮತದಾನ ಬೇಡ ಹಿಂದೂ ಧರ್ಮ ಒಡೆದು ಹೋಗುತ್ತದೆಂದು ಪುಣೆಯ ಯರವಾಡ ಜೈಲಿನಲ್ಲಿ ಅಮರಣಾಂತರ ಉಪವಾಸ ಸತ್ಯಾಗ್ರಹ ಮಾಡುತ್ತಾರೆ. ಅಂತಿಮವಾಗಿ ಗಾಂದೀಜಿ ಮತ್ತು ಅಂಬೇಡ್ಕರ್ ರವರ ನಡುವೆ ಸಂಧಾನ ನಡೆಸಿ ಪ್ರತ್ಯೇಕ ಮತ ಕ್ಷೇತ್ರದ 71 ಸೀಟುಗಳ ಬದಲ್ಲಾಗಿ 148 ಸೀಟು ಗಳ ಜಂಟಿ ಮತದಾನ ಪದ್ದತಿ ನೀಡಿ ದಲಿತರಿಗೆ ಮೀಸಲಾತಿ ನೀಡಲಾಯಿತು. ಇದು ಸೆಪ್ಟೆಂಬರ್ 24 1932 ರಲ್ಲಿ ನಡೆದಿದ್ದು ಇದನ್ನು ಪುನಾ ಒಪ್ಪಂದ ಎಂದು ಕರೆಯಲಾಯಿತು. ಡಾ ಅಂಬೇಡ್ಕರ ರವರು ಅಸ್ಪೃಶ್ಯರಿಗಾಗಿ ಮತ್ತು ಅವರ ಸಾಮಾಜಿಕ ಆರ್ಥಿಕ ಪ್ರಗತಿಗಾಗಿ ನಿರಂತರವಾದ ಹೋರಾಟ ಬ್ರಿಟಿಷ್ ಮತ್ತು ವರ್ಣವ್ಯವಸ್ಥೆಯ ವಿರುದ್ಧ ನಡೆಸಿದರು. 1935ರಲ್ಲಿ ಯೌಲ್ಲ ಸಮ್ಮೇಳನದಲ್ಲಿ ಅಂಬೇಡ್ಕರರವರು ತಾನು ಹಿಂದೂ ಧರ್ಮದಲ್ಲಿ ಇರುವುದಿಲ್ಲ, ನಾನು ಹಿಂದುವಾಗಿ ಹುಟ್ಟಿದ್ದು ಅನಿಶ್ಚಿತವಾಗಿ ಆದರೆ ಹಿಂದುವಾಗಿ ಸಾಯುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾರೆ. ಅದೇ ವರ್ಷ 1935 ರಲ್ಲಿ ಅವರ ಪತ್ನಿ ರಮ್ಮ ಬಾಯಿಯವರು ತೀರಿಕೊಳ್ಳುತ್ತಾರೆ. ಡಾ ಅಂಬೇಡ್ಕರ್ ರವರಿಗೆ ಒಟ್ಟು 5 ಮಕ್ಕಳು ಹುಟ್ಟಿದ್ದು ಯಶ್ವಂತರಾವ್ ಅಂಬೇಡ್ಕರರನ್ನು ಬಿಟ್ಟರೆ ಉಳಿದವರೆಲ್ಲ ತೀರಿಕೊಳ್ಳುತ್ತಾರೆ. ಅಸ್ಪೃಶ್ಯರಿಗೆ ಅಧಿಕಾರ ಪಡೆದು 1936ರಲ್ಲಿ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ ಸ್ಥಾಪಿಸಿ, ಪ್ರಾಂತೀಯ ಶಾಸಕಾಂಗದಲ್ಲಿ ನಡೆದ ಚುನಾವಣೆಯಲ್ಲಿ 17 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಹಾಕುತ್ತಾರೆ. ಅದರಲ್ಲಿ 15 ಅಭ್ಯರ್ಥಿಗಳು ಗೆಲ್ಲುತ್ತಾರೆ. ದಲಿತರಿಗೆ ಶಿಕ್ಷಣದ ಅವಶ್ಯಕತೆಯನ್ನು ಗಮನಿಸಿ 1946ರಲ್ಲಿ ಪೀಪಲ್ಸ್ ಎಜುಕೇಶನ್ ಇನ್ಸ್ಟಿಟ್ಯೂಶನ್ ಸ್ಥಾಪಿಸಿದರು. 1946ರಲ್ಲಿ ಸಂವಿಧಾನ ರಚನಾ ಸಭೆಗೆ ಬಂಗಾಳ ಪ್ರಾಂತದಿಂದ ಆಯ್ಕೆಯಾಗಿ ಮುಂದೆ 1947ರಲ್ಲಿ ಕರಡು ಸಮಿತಿ ಅಧ್ಯಕ್ಷರಾಗಿ ನೇಮಕ ಹೊಂದಿ, ಸತತವಾಗಿ ಮೂರು ವರ್ಷಗಳವರೆಗೆ ಹಗಲು ರಾತ್ರಿ ಸಂವಿಧಾನ ಬರೆದು 1950ರಲ್ಲಿ ಮುಗಿಸುತ್ತಾರೆ. ಅದಕ್ಕಾಗಿ ಇವರನ್ನು ಸಂವಿಧಾನದ ಶಿಲ್ಪಿ ಎಂದು ಪರಿಗಣಿಸಲಾಗಿದೆ. 1947 ರಲ್ಲಿ ಕಾನೂನು ಮಂತ್ರಿಯಾಗಿ ಪಂಡಿತ ಜವಹಾರಲಾಲ್ ನೆಹರೂ ಮಂತ್ರಿ ಮಂಡಲದಲ್ಲಿ ಇವರು ಪ್ರಧಾನ್ ಮಂತ್ರಿಗೆ ಆತ್ಮೀಯರಾಗುತ್ತಾರೆ. ನೆಹರೂ ಕಲ್ಪಿಸಿದ ಸಮಾಜವಾದಿ ಪ್ರಜಾಸತ್ತಾತ್ಮಕ ರಾಜ್ಯವ್ಯವಸ್ಥೆ ಡಾ ಅಂಬೇಡ್ಕರ್ ರವರಿಂದಲೇ ಪ್ರಭಾವಿತರಾಗಿದ್ದರು. ನೆಹರುಜಿ ಹಾಕಿಕೊಂಡ ಪಂಚ ವಾರ್ಷಿಕ ಯೋಜನೆಗೆ ಅಂಬೇಡ್ಕರರವರು ಮಾರ್ಗದರ್ಶಿಗಳಾಗಿದ್ದರು. ಮತ್ತು ಭಾಕ್ರಾನಂಗಲ್ ಅಣೆಕಟ್ಟು ಕಟ್ಟಲು ಸಲಹೆ ನೀಡಿದವರೆ ಅಂಬೇಡ್ಕರರವರು. ಅಂಬೇಡ್ಕರವರು ಭಾರತದ ನೀರಾವರಿ ಯೋಜನೆಯ ಜನಕನಾಗಿದ್ದು.ಉತ್ತರ ಭಾರತ ಮತ್ತು ದಕ್ಷಿಣ ಭಾರತ ನದಿಗಳ ಜೋಡಣೆಗೆ 1952 ರಲ್ಲಿ ಸಲಹೆ ನೀಡಿದರು.ನೆಹರೂರವರು ವಿದೇಶಿ ಗಣ್ಯರಿಗೆ ಇವರನ್ನು ಪರಿಚಯಿಸುವಾಗ ಇವರು ಡಾ ಅಂಬೇಡ್ಕರ್, ನನ್ನ ಮಂತ್ರಿ ಮಂಡಲದ ವಜ್ರವಾಗಿದ್ದಾರೆ,ಎಂದು ಪರಿಚಯಿಸುತ್ತಿದ್ದರು. ನೆಹರು ರವರ ಸಹಕಾರ ಪಡೆದು ಅಂಬೇಡ್ಕರ್ ದೇಶದ ಮಹಿಳಾ ವಿಮೋಚನೆಯನ್ನು ಮನು ರವಾರ ಮನಸ್ಮೃತಿಯ ಮೂಲಕ ಶೋಷಿತ ಮಹಿಳೆಗೆ ಬಿಡುಗಡೆ ಗೊಳಿಸಲು ದ ಹಿಂದೂ ಕೋಡ್ ಬಿಲ್ ನ್ನು ರಚನೆ ಮಾಡಿ ಪಾರ್ಲಿಮೆಂಟಿನಲ್ಲಿ ಮಂಡಿಸಿದ್ದರು. ಸಂಪ್ರದಾಯವಾದಿಗಳಿಂದ ಕೂಡಿದ ಪಾರ್ಲಿಮೆಂಟ್ ನ ಸಭೆಯಲ್ಲಿ ಮಹಿಳೆಗೆ ಹಿಂದೂ ಕೋಡ್ ಬಿಲ್ ನಲ್ಲಿ ಕೇಳಲಾದ ಹಕ್ಕುಗಳನ್ನು ನಿರಾಕರಿಸಿತು. ಹಿಂದೂ ಕೋಡ್ ಬಿಲ್ ನಲ್ಲಿ ಪ್ರಮುಖ ನಾಲ್ಕು ಅಂಶಗಳು ಇದ್ದವು 1. ಮಹಿಳೆಯು ಕೂಡ ತನ್ನ ಪತಿಯನ್ನು ಆಯ್ಕೆಮಾಡುವ ಹಕ್ಕು 2. ಪುರುಷರ ಹಾಗೆ ವಿಚ್ಚೇಧಿಸುವ ಹಕ್ಕು 3. ತಂದೆಯ ಆಸ್ತಿಯಲ್ಲಿ ಗಂಡುಮಕ್ಕಳ ಸಮನಾಗಿ ಹೆಣ್ಣುಮಗಳಿಗೂ ಆಸ್ತಿ ಹಕ್ಕು 4.ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳ ಜೊತೆಯಲ್ಲಿ ಹೆಣ್ಣುಮಕ್ಕಳಿಗೂ ಮತ್ತು ವಿಧವೆ ಸೊಸೆಗೂ ಸಮ ಪಾಲು ಹಕ್ಕು. ಕೊನೆಗೆ ಹಿಂದೂ ಕೋಡ್ ಬಿಲ್ ಪಾಸಾಗದ ಕಾರಣ ಅಂಬೇಡ್ಕರ್ ರವರು ಕಾನೂನು ಮ್ಯಾಟ್ರಿ ಪದವಿಗೆ ರಾಜೀನಾಮೆ ನೀಡಿದರು. 1950 ರಲ್ಲಿ ಅಮೆರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ ಭಾರತ ಸಂವಿಧಾನ ರಚಿಸಿದ್ದಕ್ಕಾಗಿ ಇವರನ್ನು ಸಂವಿಧಾನ ಶಿಲ್ಪಿ ,ಆಧುನಿಕ ಭಾರದ ನಿರ್ಮಾಪಕ, ಸಮಾಜದ ಪ್ರವರ್ತಕ, ಎಂದು ಪರಿಗಣಿಸಿ, ಡಾಕ್ಟರ್ ಆಫ್ ಲಾ ಪದವಿ ನೀಡಿತು 1953ರಲ್ಲಿ ಆಂಧ್ರಪ್ರದೇಹದ ಉಸ್ಮಾನಿಯ ವಿಶ್ವವಿದ್ಯಾಲಯ ಸಂವಿಧಾನದ ಸೇವೆಯನ್ನು ಪರಿಗಣಿಸಿ ಡಾಕ್ಟರ್ ಆಫ್ ಲಿಟರೇಚರ ಎಂಬ ಗೌರವ ಪದವಿಯನ್ನು ನೀಡಿತು. 1951ರಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು ಸಕ್ರಿಯ ರಾಜಕೀಯದಿಂದ ದೂರ ಉಳಿದು ಡಾ ಅಂಬೇಡ್ಕರ್ ರವರು ಬೌದ್ಧ ಧರ್ಮದ ಆಚಾರ ಮತ್ತು ಪ್ರಚಾರಕ್ಕಾಗಿ ಜೀವನವನ್ನು ಅರ್ಪಿಸಿಕೊಂಡರು. 1951 ರಲ್ಲಿ ಜಾಗತಿಕ ಬೌದ್ಧ ಸಮ್ಮೇಳನ ರಂಗುನದಲ್ಲಿ ನಡೆಯಿತು, ಅದರಲ್ಲಿ ಭಾಗವಹಿಸಿದರು. 1954ರಲ್ಲಿ ಕಟ್ಮೊಂಡಾದಲ್ಲಿ ನಡೆದ ಜಾಗತಿಕ ಬೌದ್ಧ ಸಮ್ಮೇಳನದಲ್ಲಿ ಭಾಗವಹಿಸಿದರು. 1951ರಲ್ಲಿ ಭಾರತೀಯ ಬೌದ್ಧ ಸಂಘಟನೆಯಲ್ಲಿ ಬುದ್ಧ ಮತ್ತು ಮಾರ್ಕ್ಸ್ ಕುರಿತು ಪ್ರಬಂಧ ಮಂಡಿಸಿದರು. 1955ರಲ್ಲಿ ಭಾರತೀಯ ಬೌದ್ಧ ಮಹಾಸಭೆ ಸ್ಥಾಪಿಸಿದರು. ಬದುಕಿನ ಕೊನೆಯ ದಿನಗಳಲ್ಲಿ ಡಾ ಅಂಬೇಡ್ಕರ್ ರು ಬೌದ್ಧ ಧರ್ಮ ಸ್ವೀಕಾರದ ನಿರ್ಧಾರಮಾಡಿ ಅಕ್ಟೊಬರ್ 14 1956ರಲ್ಲಿ ತನ್ನ 5ಲಕ್ಷ ಅನುಯಾಯಿಗಳೊಂದಿಗೆ ಪತ್ನಿ ಸವಿತಾ ಅಂಬೇಡ್ಕರ್ ಜೊತೆಗೆ ನಾಗ ಜನತೆಯ ಮೂಲ ನಾಡಾದ ನಾಗಪುರದಲ್ಲಿ ಬೌದ್ಧ ಧರ್ಮ ಸ್ವೀಕಾರಮಾಡಿ, ಹಿಂದುವಾಗಿ ಸಾಯಲಾರೆ ಎಂಬ ಪ್ರತಿಜ್ಞೆ ಪೂರ್ಣಗೊಳಿಸಿದರು. ಇವರಿಗೆ ಬರ್ಮಾದ ಬೌದ್ಧ ಬಂತೆ, ವೀರ ಚಂದ್ರಮಣಿ ಬೌದ್ಧಧೀಕ್ಷೆ ನೀಡಿದರು. ಮುಂದೆ ಡಿಸೆಂಬರ್6 1956ರಲ್ಲಿ ದೆಹಲಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಡಿಸೆಂಬರ್7ಕ್ಕೆ ಮುಂಬಯಿಯ ದಾದರಿನಲ್ಲಿ ಬೌದ್ಧ ಧರ್ಮದ ನಿಯಮದ ಪ್ರಕಾರ ಮಹಾಪರಿನಿರ್ವಾಣದ ವಿಧಿಯನ್ನು ಅಂತ್ಯಕ್ರಿಯೆಯಲ್ಲಿ ಮಾಡಲಾಯಿತು. ವಿದ್ಯಾಭ್ಯಾಸ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯವರಾದ ಅಂಬೇಡ್ಕರರ ತಂದೆ ರಾಮ್ ಜೀ ಸಕ್ಪಾಲ್ ಅವರು ಮರಾಠಿ ಹಾಗೂ ಇಂಗ್ಲೀಷಿನಲ್ಲಿ ಕಲಿತರು. ಅವರು ಬ್ರಿಟಿಷ್ ಸೈನ್ಯದಲ್ಲಿ ಸುಬೇದಾರರಾಗಿ ಸೇವೆ ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಅವರು ತಮ್ಮ ಮಕ್ಕಳಿಗೆ, ಅದರಲ್ಲಿಯೂ ಮುಖ್ಯವಾಗಿ ಭೀಮರಾಯರಿಗೆ, ಸ್ವತಃ ಕಲಿಸಿ ಅವರ ಜ್ಞಾನಾರ್ಜನೆಯಲ್ಲಿ ಪ್ರೋತ್ಸಾಹಿಸಲು ಸಾಧ್ಯವಾಯಿತು. ೧೯೦೮ರಲ್ಲಿ ಅಂಬೇಡ್ಕರ್ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದಾಗ, ಆಗಿನ ಜಾತಿ ವ್ಯವಸ್ಥೆಯಲ್ಲಿ ಅಸ್ಪೃಶ್ಯ ಎಂದು ಕರೆಯಲ್ಪಡುತ್ತಿದ್ದ ತಮ್ಮ ಸಮಾಜಕ್ಕೆ ಮೊದಲನೆಯವರಾದರು. ನಾಲ್ಕು ವರ್ಷಗಳ ನಂತರ, ಅವರು ಮುಂಬಯಿ ವಿಶ್ವವಿದ್ಯಾನಿಲಯದಿಂದ ಅರ್ಥಶಾಸ್ತ್ರ ಮತ್ತು ರಾಜನೀತಿ ವಿಷಯಗಳಲ್ಲಿ ಬಿ.ಎ. ಪದವಿ ಗಳಿಸಿದರು. ವಾಪಾಸು ಬಂದ ಮೇಲೆ ಬರೋಡ ಸಂಸ್ಥಾನದಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಬೇಕು ಎಂಬ ಷರತ್ತಿನ ಮೇಲೆ ಅವರಿಗೆ ವಿದೇಶದಲ್ಲಿ ಓದು ಮುಂದುವರಿಸಲು ವಿದ್ಯಾರ್ಥಿವೇತನ ದೊರಕಿತು. ೧೯೧೩ರಿಂದ ೧೯೧೬ರವರೆಗೆ ನ್ಯೂಯಾರ್ಕಿನ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಅರ್ಥ ಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ತತ್ವ ಶಾಸ್ತ್ರ, ಮಾನವಶಾಸ್ತ್ರ ಮತ್ತು ರಾಜನೀತಿರಾಜ್ಯಶಾಸ್ತೃ ಅಭ್ಯಾಸ ಮಾಡಿದರು. ೧೯೧೫ರಲ್ಲಿ ಅರ್ಥ ಶಾಸ್ತ್ರದಲ್ಲಿ ಎಂ.ಎ, ಪದವಿ ಗಳಿಸಿದರು. ೧೯೧೬ರಲ್ಲಿ, ಅವರು ಮುಂದೆ ಪುಸ್ತಕರೂಪದಲ್ಲಿ ಪ್ರಕಟಿಸಿದ ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಹಣಕಾಸು ಪದ್ಧತಿಯ ವಿಕಾಸ ಎಂಬ ಮಹಾಪ್ರಬಂಧವನ್ನು ಮಂಡಿಸಿ, ಪಿ.ಹೆಚ್.ಡಿ. ಪದವಿಯನ್ನು ಪಡೆದು ಕೊಂಡರು. ಭಾರತದಲ್ಲಿ ಜಾತಿ ಪದ್ಧತಿ: ತಂತ್ರ, ಹುಟ್ಟು ಮತ್ತು ಬೆಳವಣಿಗೆ ಎಂಬ ಪ್ರಬಂಧ ಅವರ ಮೊಟ್ಟ ಮೊದಲ ಪ್ರಕಾಶಿತ ಕೃತಿ. ೧೯೧೬ ಜೂನ್ ನಲ್ಲಿ ಅಮೇರಿಕದಲ್ಲಿ ಓದು ಮುಗಿಸಿದ ಅಂಬೇಡ್ಕರ್ ಮುಂದೆ ಲಂಡನ್ನಿನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಎಂಡ್ ಪೊಲಟಿಕಲ್ ಸೈನ್ಸ್ ಸೇರಿ ನಂತರ ಗ್ರೇಸ್ ಇನ್ ಸಂಸ್ಥೆಯನ್ನು ಸೇರಿದರು. ಮತ್ತೊಂದು ವರ್ಷದ ಕಳೆಯುವ ವೇಳೆಗೆ ಅವರ ವಿದ್ಯಾರ್ಥಿವೇತನ ಕೊನೆಗೊಂಡಿತು. ೧೯೨೦ರವರೆಗೆ ಮುಂಬಯಿಯ ಕಾಲೇಜೊಂದರಲ್ಲಿ ಅಧ್ಯಾಪಕರಾಗಿ ವಿದ್ಯಾರ್ಥಿಗಳಿಗೆ ಕಲಿಸಿ, ಮೂಕನಾಯಕ ಎಂಬ ಮರಾಠಿ ಸಾಪ್ತಾಹಿಕವನ್ನು ಹೊರಡಿಸುತ್ತಿದ್ದ ಅಂಬೇಡ್ಕರ್ , ಮತ್ತೆ ಲಂಡನ್ನಿಗೆ ಮರಳಿ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಮುಂದಿನ ಮೂರು ವರ್ಷಗಳಲ್ಲಿ ಅವರು ರೂಪಾಯಿಯ ಬಿಕ್ಕಟ್ಟು (ದಿ ಪ್ರಾಬ್ಲಮ್ ಆಫ್ ರುಪಿ) ಎಂಬ ಮಹಾಪ್ರಬಂಧವನ್ನು ಬರೆದು, ಲಂಡನ್ ವಿಶ್ವವಿದ್ಯಾನಿಲಯದಿಂದ ಡಿ.ಎಸ್.ಸಿ. ಗೌರವವನ್ನು ಸಂಪಾದಿಸಿದರು. ಇದರೊಂದಿಗೇ, ಬಾರ್ಎಟ್ಲಾ ಪದವಿ ಓದಿ ಬ್ಯಾರಿಸ್ಟರ್ ಆಗಿ, ಬ್ರಿಟಿಷ್ ಬಾರಿಗೆ ಸದಸ್ಯತ್ವ ಪಡೆದರು. ಇಂಗ್ಲೆಂಡಿನಿಂದ ಶಾಶ್ವತವಾಗಿ ವಾಪಸು ಬರುವ ಮುನ್ನ, ಅಂಬೇಡ್ಕರ್ ಮೂರು ತಿಂಗಳು ಜರ್ಮನಿಯಲ್ಲಿ ಬಾನ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಹೆಚ್ಚಿನ ಅಭ್ಯಾಸ ಮಾಡಿದರು. ೧೯೫೨ ಜೂನ್ ೧೫ರಂದು ಕೊಲಂಬಿಯಾ ವಿಶ್ವವಿದ್ಯಾನಿಲಯವು ಅವರಿಗೆ ಕಾನೂನಿನ ಡಾಕ್ಟರೇಟ್(ಎಲ್ಎಲ್.ಡಿ) ಗೌರವ ಪದವಿ ಪ್ರದಾನ ಮಾಡಿತು. ೧೯೫೩, ಜನವರಿ ೧೨ರಂದು ಉಸ್ಮಾನಿಯಾ ವಿಶ್ವವಿದ್ಯಾನಿಲಯವು ಅವರಿಗೆ ಎಲ್ಎಲ್.ಡಿ ಗೌರವ ಪದವಿ ಕೊಟ್ಟು ಪುರಸ್ಕರಿಸಿತು. ವೃತ್ತಿ ಜೀವನ ಭಾರತಕ್ಕೆ ಮರಳಿ ಮುಂಬಯಿಯಲ್ಲಿ ನೆಲೆನಿಂತ ಅಂಬೇಡ್ಕರ್ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. ಅವರು ಕಾಲೇಜೊಂದರಲ್ಲಿ ಬೋಧಿಸುತ್ತಲೇ, ವಿವಿಧ ಸರಕಾರೀ ಸಂಸ್ಥೆಗಳಲ್ಲಿ ಸಾಕ್ಷ್ಯ ನೀಡುತ್ತಲೇ, ಹೊಸ ವೃತ್ತ ಪತ್ರಿಕೆಯನ್ನು ನಡೆಸುತ್ತಲೇ, ಮುಂಬಯಿ ಲೆಜಿಸ್ಲೇಟಿವ್ ಕೌನ್ಸಿಲ್ಲಿಗೆ ನಾಮಕರಣಗೊಂಡು ಅಲ್ಲಿನ ಆಗುಹೋಗುಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಲೇ, ಅದರೊಂದಿಗೇ ವಕೀಲಿ ವೃತ್ತಿಯನ್ನೂ ಆರಂಭಿಸಿದರು. ಭಾರತದ ವಿವಿಧ ಪಂಗಡಗಳ ಮುಖಂಡರುಗಳೂ, ಮೂರು ಬ್ರಿಟಿಷ್ ರಾಜಕೀಯ ಪಕ್ಷಗಳೂ ಕಲೆತು, ಭಾರತದ ಭವಿಷ್ಯದ ಸಂವಿಧಾನದ ರೂಪು ರೇಷೆಗಳ ಬಗ್ಗೆ ಚರ್ಚೆ ನಡೆಸಲು ಲಂಡನ್ನಿನಲ್ಲಿ ಏರ್ಪಡಿಸಲಾಗಿದ್ದ ಮೂರು ದುಂಡು ಮೇಜಿನ ಪರಿಷತ್ತುಗಳಲ್ಲಿ ಭಾಗವಹಿಸಿದರು. ಭಾರತಕ್ಕೆ ಹಿಂದಿರುಗಿದ ಮರುವರ್ಷವೇ ಬಹಿಷ್ಕೃತ ಹಿತಕಾರಿಣೀ ಸಭಾ ಎಂಬ ದಲಿತ ವರ್ಗದ ಕಲ್ಯಾಣ ಸಂಸ್ಥೆಯನ್ನು ಹುಟ್ಟು ಹಾಕಲು ಸಹಾಯ ಮಾಡಿದರು. ಅಸ್ಪೃಶ್ಯ ಹಾಗೂ ಇತರ ಕೆಳವರ್ಗಗಳಲ್ಲಿ ವಿದ್ಯೆ ಮತ್ತು ಸಂಸ್ಕೃತಿಯ ಅರಿವು ಮೂಡಿಸುವುದು, ಅವರ ಜೀವನ ಮಟ್ಟವನ್ನು ಸುಧಾರಿಸುವುದು ಹಾಗೂ ಈ ವರ್ಗವು ತಮ್ಮ ಕುಂದು ಕೊರತೆಗಳನ್ನು ಹೇಳಿಕೊಳ್ಳಲು ಧ್ವನಿ ಕೊಡುವುದು ಇವು ಈ ಸಂಸ್ಥೆಯ ಉದ್ದೇಶವಾಗಿತ್ತು. ಅಸ್ಪೃಶ್ಯತೆಯ ವಿರುದ್ದ ಹೋರಾಟ ೧೯೨೭ರಿಂದ ೧೯೩೨ರವರೆಗೆ, ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ, ಬಾವಿಗಳಿಂದ ನೀರು ಸೇದುವ ಹಕ್ಕು ಇತ್ಯಾದಿಗಳಿಗಾಗಿ ಹೋರಾಡಿದರು. ಇವುಗಳಲ್ಲಿ ನಾಸಿಕದಲ್ಲಿಯ ಕಾಳ ರಾಮನ ದೇವಸ್ಥಾನ ಮತ್ತು ಮಹಾಡದ ಚೌಡಾರ್ ಕೆರೆಯ ವಿಷಯವಾಗಿ ಅಸ್ಪೃಶ್ಯರನ್ನು ಹೊರಗಿಟ್ಟಿರುವರ ವಿರುದ್ಧ ಮಾಡಿದ ಆಂದೋಲನಗಳು ಗಮನಾರ್ಹವಾಗಿವೆ. ಸಹಸ್ರಾರು ಅಸ್ಪೃಶ್ಯ ಸತ್ಯಾಗ್ರಹಿಗಳು ಭಾಗವಹಿಸಿದ ಈ ಅಹಿಂಸಾತ್ಮಕ ಚಳುವಳಿಗಳಿಗೆ ಸವರ್ಣೀಯರು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದರು. ನ್ಯಾಯಾಲಯದ ಕಟ್ಟೆ ಹತ್ತಿದ ಚೌಡಾರ್ ಕೆರೆಯ ಚಳುವಳಿಯು, ಅನೇಕ ವರ್ಷಗಳ ನಂತರ, ಕೆಳವರ್ಗಗಳ ಪರವಾಗಿ ವಿಜಯ ಸಾಧಿಸು ವುದರೊಂದಿಗೆ ಪರ್ಯವಸಾನ ಹೊಂದಿತು. ಅಸ್ಪೃಶ್ಯರನ್ನು ಸಮಾಜ ನಡೆಸಿಕೊಳ್ಳುತ್ತಿದ್ದ ಕ್ರೂರ ರೀತಿಗೆ ಮೂಲ ಕಾರಣ ಮನುಸ್ಮೃತಿ ಎಂದು ಅಂಬೇಡ್ಕರ್ ನಂಬಿದ್ದರು. ಮನುಸ್ಮೃತಿಯನ್ನು ಇದೇ ಚಳುವಳಿಯಲ್ಲಿ ವಿಧ್ಯುಕ್ತವಾಗಿ ದಹನ ಮಾಡಲಾಯಿತು. ಈ ಕೃತಿಯನ್ನು ಹೀಗೆ ಸಾರ್ವಜನಿಕವಾಗಿ ಅವಮರ್ಯಾದೆ ಮಾಡುವುದರ ಮೂಲಕ ಅಂಬೇಡ್ಕರರ ಅನುಯಾಯಿಗಳು ಸಮಾನತೆಯ ಹಕ್ಕು ಪ್ರತಿಪಾದನೆ ಮಾಡಬಯಸಿದ್ದರು. ಆದರೆ, ಹಿಂದೂ ಧರ್ಮದ ಅನುಯಾಯಿಗಳಲ್ಲಿ ಮನುಸ್ಮೃತಿಯ ಮಹತ್ವವೇನು ಎಂಬುದೇ ಅಸ್ಪಷ್ಟ ಹಾಗೂ ವಿವಾದಿತ ವಿಷಯವಾದ್ದರಿಂದ, ಅದರಲ್ಲಿಯೂ ಮುಖ್ಯವಾಗಿ ಮನುಸ್ಮೃತಿಯನ್ನು ಹಿಂದೂ ಧರ್ಮಶಾಸ್ತ್ರಗಳಲ್ಲಿ ಒಂದಾಗಿ ಪರಿಗಣಿಸದೇ ಇದ್ದು, ಹಳ್ಳಿಗಾಡುಗಳಿಂದ ಹೊರಗೆ ಅದಕ್ಕೆ ಧಾರ್ಮಿಕ ಮಹತ್ವವೂ ಇಲ್ಲದಿದ್ದುದರಿಂದ, ಈ ಉದ್ದೇಶ ನೆರವೇರಿತೋ ಇಲ್ಲವೂ ಎಂಬುದು ಚರ್ಚಾಸ್ಪದ. ಮೊದಲೇ ತಮ್ಮ ಚಟುವಟಿಕೆಗಳಿಂದ ಸಂಪ್ರದಾಯಶೀಲ ಹಿಂದೂಗಳ ಅಸಮಾಧಾನವನ್ನು ಗಳಿಸಿದ್ದ ಅಂಬೇಡ್ಕರ್ , ೧೯೩೧೩೨ ರಲ್ಲಿ ಮತ್ತಷ್ಟು ಅಪ್ರಿಯರಾದರು. ಅವರೇ ಹೇಳಿಕೊಂಡಂತೆ, ಭಾರತದ ಹಿಂದುಗಳು ಅತ್ಯಂತ ದ್ವೇಷಿಸುವ ವ್ಯಕ್ತಿಯಾದರು. ಅಂಬೇಡ್ಕರ್ ದಲಿತರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರಕ್ಕಾಗಿ ಪಟ್ಟು ಹಿಡಿದದ್ದೇ ಈ ಅಸಮಾಧಾನಕ್ಕೆ ಕಾರಣವಾಗಿತ್ತು. ಮಹಾತ್ಮ ಗಾಂಧಿ ಹಾಗೂ ಕಾಂಗ್ರೇಸ್ ಪಕ್ಷದ ಧೋರಣೆ ಇದಕ್ಕೆ ವಿರೋಧವಾಗಿತ್ತು. ಗಾಂಧಿ ಹಾಗೂ ಅಂಬೇಡ್ಕರರಲ್ಲಿ ಈ ವಿಷಯದ ಮೇಲೆ ಎರಡನೆಯ ದುಂಡು ಮೇಜಿನ ಪರಿಷತ್ತಿನಲ್ಲಿ ಚಕಮಕಿಯೂ ನಡೆದಿತ್ತು. ಹಿಂದೂ ಸಮಾಜದಿಂದ ಜಾತಿಪದ್ಧತಿ ಹಾಗೂ ತಾರತಮ್ಯ ವನ್ನು ನಿರ್ಮೂಲನ ಮಾಡುವ ಪರವಾಗಿದ್ದ ಗಾಂಧಿ, ದಲಿತರ ಹಿತರಕ್ಷಣೆಗಾಗಿ ದನಿಯೆತ್ತಿದ ಮೊದಲಿಗರಲ್ಲಿ ಒಬ್ಬರಾಗಿದ್ದರೂ, ಬ್ರಿಟಿಷರಿಗೆ ಈ ವಿಷಯದಲ್ಲಿ ಹಿಂದೂಗಳನ್ನು ಜಾತಿಯ ಆಧಾರದ ಮೇಲೆ, ರಾಜಕೀಯವಾಗಿ ಒಡೆಯಲು ಅವಕಾಶ ಕೊಡಬಾರದೆಂಬುದು ಅವರ ನಿಲುವಾಗಿತ್ತು. ೧೯೩೨ರಲ್ಲಿ ಬ್ರಿಟಿಷರು ಜಾರಿಗೆ ತಂದ ಕೋಮುವಾರು ಕಾನೂನಿನಲ್ಲಿ ಅಸ್ಪೃಶ್ಯರಿಗೆ ಪ್ರತ್ಯೇಕ ಕ್ಷೇತ್ರವನ್ನು ಮಂಜೂರು ಮಾಡಲಾಯಿತು. ಇದಕ್ಕೆ ಪ್ರತಿಭಟನೆಯಾಗಿ ಗಾಂಧಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡ ಫಲವಾಗಿ, ಅಂಬೇಡ್ಕರ್, ಕಾಂಗ್ರೇಸ್ ಮತ್ತು ಸನಾತನ ಹಿಂದೂ ಮುಖಂಡರೊಂದಿಗೆ ಚರ್ಚಿಸಿ, ಕೊನೆಗೂ ಪ್ರತ್ಯೇಕ ಕ್ಷೇತ್ರ ಹಾಗೂ ಕೋಟಾ ಬೇಡಿಕೆಯನ್ನು ಕೈಬಿಟ್ಟರು.ಇದಕ್ಕೆ ಪ್ರತಿಯಾಗಿ, ಕಾಂಗ್ರೆಸ್ ಪಕ್ಷವು, ಅಸ್ಪೃಶ್ಯರಿಗೆ ಪ್ರಾತಿನಿಧ್ಯವನ್ನು ಹೆಚ್ಚುಮಾಡಲು ಒಪ್ಪಿಕೊಂಡಿತು. ಹಿಂದೂ ಧಾರ್ಮಿಕ ಮುಖಂಡರುಗಳು ಅಸ್ಪೃಶ್ಯತೆಯ ಹಾಗೂ ಜಾತ್ಯಾಧಾರಿತ ತಾರತಮ್ಯದ ವಿರುದ್ಧವಾಗಿ ಹೆಚ್ಚು ಹೆಚ್ಚಾಗಿ ದನಿಯೆತ್ತ ತೊಡಗಿದರು. ಇಂದು ಡಾ. ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನ ಶಿಲ್ಪಿ ಎಂದು ಮುಕ್ತ ಕಂಠದಿಂದ ಹೇಳಲಾಗುತ್ತಿದೆ.ಇದೇ ವೇಳೆಗೆ ಸ್ವತಂತ್ರವಾದ ಅನೇಕ ದೇಶಗಳು ಸಾರ್ವಜನಿಕರ ಹಕ್ಕುಗಳನ್ನು ಕಾಪಾಡಲು ಅಸಮರ್ಥರಾದ ಹಿನ್ನೆಲೆಯಲ್ಲಿ ಭಾರತದ ಈ ಸಂವಿಧಾನ ಎದ್ದು ಕಾಣುತ್ತದೆ ಹಾಗೂ ಇದಕ್ಕೆ ಡಾ. ಅಂಬೇಡ್ಕರ್ ಕೊಡುಗೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲಾಗಿದೆ. ಜಾತಿ ಪದ್ಧತಿಯ ಪುನರ್ವಿಮರ್ಶೆ ನಡೆಸಲು ಸನಾತನಿ ಹಿಂದೂಗಳ ಅನಾಸಕ್ತಿಯಿಂದ, ಭ್ರಮನಿರಸನವಾದಂತೆ ಅನ್ನಿಸಿದ್ದು ಹಾಗೂ ಮಹತ್ವದ ರಾಜಕೀಯ ವಿಷಯಗಳಲ್ಲಿ ಗಾಂಧಿಯವರ ಅಭಿಪ್ರಾಯಗಳಿಗೆ ಮಣಿಯಬೇಕಾಗಿ ಬಂದದ್ದು, ಅಂಬೇಡ್ಕರರನ್ನು ಅಸಮಾಧಾನಕ್ಕೀಡು ಮಾಡಿತು. ಪ್ರತ್ಯೇಕ ಚುನಾವಣಾ ಕ್ಷೇತ್ರದ ವಿಷಯದಲ್ಲಿ ಎದುರಿಸಿದ ಪ್ರತಿಭಟನೆ ಮತ್ತು, ಕೆಲವು ದೇವಸ್ಥಾನಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶ ಇನ್ನೂ ನಿಷಿದ್ಧವಾಗಿರುವುದು ಭಾಗಶಃ ಇವುಗಳ ಫಲವಾಗಿ, ಅಂಬೇಡ್ಕರ್ ತಮ್ಮ ಯೋಜನೆಯನ್ನು ಬದಲಾಯಿಸಿದರು. ತಮ್ಮ ಅನುಯಾಯಿಗಳ ಜೀವನಮಟ್ಟವನ್ನು ಹೆಚ್ಚಿಸಿ ಕೊಂಡು , ರಾಜಕೀಯ ಅಧಿಕಾರವನ್ನು ಗಳಿಸುವತ್ತ ಲಕ್ಷ್ಯವಿಡಬೇಕೆಂದು ಆದೇಶಿಸಿದರು.ಜೊತೆಗೆ, ಹಿಂದೂ ಧರ್ಮದಲ್ಲಿ ಅಸ್ಪೃಶ್ಯರ ಏಳಿಗೆ ಅಸಾಧ್ಯವಾದ್ದರಿಂದ ಅವರು ಬೇರೆಧರ್ಮಕ್ಕೆ ಮತಾಂತರಗೊಳ್ಳಬೇಕುಎಂಬ ಆಲೋಚನೆ ಮಾಡತೊಡಗಿದರು. ಇದಕ್ಕೆ ಹಿಂದೂ ಸಮಾಜ ದಿಂದ,ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆ ವರ್ಷದಲ್ಲಿ ಅಂಬೇಡ್ಕರ್ ಖಾಸಗಿ ಜೀವನದಲ್ಲಿ ಕೆಲವು ಮಹತ್ವದ ಘಟನೆಗಳು ಘಟಿಸಿದವು: ಅಂಬೇಡ್ಕರರನ್ನು ಮುಂಬಯಿಯ ಸರಕಾರೀ ಕಾನೂನು ಕಾಲೇಜಿನ ಪ್ರಾಂಶುಪಾಲರಾಗಿ ನೇಮಕ ಮಾಡಿಕೂಳ್ಳಲಾಯಿತು. ನಂತರ ಅಂಬೇಡ್ಕರರು ತಮ್ಮದೇ ಆದ ಸ್ವಂತ ಮನೆ ಮಾಡಿ, ೫೦,೦೦೦ಕ್ಕೂ ಹೆಚ್ಚಿನ ಪುಸ್ತಕಗಳ ಗ್ರಂಥಾಲಯವನ್ನು ಕಟ್ಟಿಕೊಂಡರು. ಇದೇ ವರ್ಷ ಅವರ ಪತ್ನಿ ರಮಾಬಾಯಿಯವರು ಮರಣ ಹೊಂದಿದರು. ೧೯೦೮ರಲ್ಲಿ ಅವರ ಮದುವೆಯಾದಾಗ ಅಂಬೇಡ್ಕರ್ ವಯಸ್ಸು ಹದಿನಾರಾದರೆ, ಅವರ ಹೆಂಡತಿ ಕೇವಲ ಒಂಭತ್ತು ವರ್ಷದವರಾಗಿದ್ದರು. ಅವರಿಗೆ ಹುಟ್ಟಿದ ಐದು ಮಕ್ಕಳಲ್ಲಿ ಉಳಿದದ್ದು ಒಬ್ಬರೇ. ಕೃತಿಗಳು ಸಂಶೋಧನಾ ಪ್ರಬಂಧಗಳು ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಹಣಕಾಸು ಪದ್ಧತಿಯ ವಿಕಾಸ ರೂಪಾಯಿಯ ಬಿಕ್ಕಟ್ಟು (ದಿ ಪ್ರಾಬ್ಲಮ್ ಆಫ್ ರುಪಿ) ಮೊಟ್ಟ ಮೊದಲ ಪ್ರಕಾಶಿತ ಕೃತಿ ಭಾರತದಲ್ಲಿ ಜಾತಿ ಪದ್ಧತಿ: ತಂತ್ರ, ಹುಟ್ಟು ಮತ್ತು ಬೆಳವಣಿಗೆ ಡಾ ಬಿ ಆರ್ ಅಂಬೇಡ್ಕರ್ ರವರ ಲೇಖನಗಳು ಅಂಬೇಡ್ಕರ್ ರವರ ಪ್ರಮುಖ ಕೃತಿಗಳು ಭಾರತದಲ್ಲಿ ಜಾತಿ ಪದ್ಧತಿ ಸ್ವತಂತ್ರ ಕಾರ್ಮಿಕ ವರ್ಗದ ಸಂವಿಧಾನಾತ್ಮಕ ನಿಯಮ ಕಾರ್ಮಿಕರು ಮತ್ತು ಸಂಸದೀಯ ಪ್ರಜಾಪ್ರಭುತ್ವ ಬುದ್ಧ ಮತ್ತು ಅವನ ದಮ್ಮ ಸಂಸದೀಯ ಪ್ರಜಾಪ್ರಭುತ್ವದ ಭವಿಷ್ಯ ಪ್ರಜಾಪ್ರಭುತ್ವದ ಯಶಸ್ವಿ ಅಂಶಗಳು ನನ್ನ ವೈಯಕ್ತಿಕ ತತ್ವಜ್ಞಾನ ಬುದ್ಧಿಸಂ ಅಂಡ್ ಕಮ್ಯುನಿಸಂ ಇತರ ಬರಹಗಳು ಭಾರತದಲ್ಲಿಯ ಸಂಪ್ರದಾಯ1917 ಭಾರತದಲ್ಲಿ ಸಣ್ಣಹಿದಾಬಾಲಿಗಳು ಮತ್ತು ಅದರ ಸಮಸ್ಯೆಗಳು1917 ಹಣದ ಸಮಸ್ಯೆ1923 ಬ್ರಿಟಿಷ್ ಭಾರತದಲ್ಲಿ ಪ್ರಾಂತೀಯ ಆರ್ಥಿಕ ವ್ಯವಸ್ಥೆಯ ಇತಿಹಾಸ1925 ಜಾತಿಯ ವಿನಾಶ1936 ಫೆಡರೇಷನ್ ಫ್ರಿಡಂ 1939 ಪಾಕಿಸ್ತಾನದ ಮೇಲಿನ ವಿಚಾರಗಳು1941 ಗಾಂಧಿ ಮತ್ತು ಅಸ್ಪೃಶ್ಯತೆ ನಿವಾರಣೆ 1943 ರಾನಡೆ ಗಾಂಧಿ ಮತ್ತು ಜಿನ್ನ 1943 ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗಾಗಿ ಏನು ಮಾಡಿದ್ದಾರೆ1945 ಕಮ್ಯುನಲ್ ಡೆಡ್ ಲಾಕ್ ಅಂಡ್ ಎ ವೇ ಟು ಸಾಲ್ವ್ ಇಟ್ 1945 ಪಾಕಿಸ್ತಾನ ಅಥವಾ ಭಾರತದ ವಿಭಜನೆ 1945 ಶೂದ್ರರು ಯಾರು1946 ಸ್ಟೇಟ್ ಅಂಡ್ ಮೈನರಿಟಿಸ್1947 ಭಾರತದ ಹಣ ಮತ್ತು ಬ್ಯಾಂಕ್ ಇತಿಹಾಸ ಭಾಗ 1947 ಅಸ್ಪೃಶ್ಯರು ಮಹಾರಾಷ್ಟ್ರದ ಒಂದು ಭಾಷವಾರು ರಾಜ್ಯ 1948 ಹಿಂದುಮಹಿಳೆಯ ಏಳಿಗ್ಗೆ ಮತ್ತು ಪತನ 1950 ಗೋಸಾಲ್ ಆಫ್ ಬುದ್ಧಿಜಂ 1952 ಭಾಷಾವಾರು ರಾಜ್ಯಗಳ ಮೇಲಿನ ಒಂದು ಸಿದ್ಧಾಂತ 1955 ಬುದ್ಧ ಮತ್ತು ಅವನ ದಮ್ಮ1957 ರಾಜಕೀಯ ಜೀವನ ಮುಂದಿನ ಕೆಲವರ್ಷಗಳಲ್ಲಿ, ಅಂಬೇಡ್ಕರ್ ಸ್ವತಂತ್ರ್ತ ಕಾರ್ಮಿಕ ಪಕ್ಷ ( ಇಂಡಿಪೆಂಡೆಂಟ್ ಲೇಬರ್ ಪಾರ್ಟಿ) ಸ್ಥಾಪಿಸಿ, ೧೯೩೫ರ ಭಾರತ ಸರಕಾರದ ಕಾಯಿದೆಯ ಪ್ರಕಾರ ನಡೆಸಲ್ಪಟ್ಟ ಪ್ರಾಂತೀಯ ಚುನಾವಣೆಗಳಲ್ಲಿ ಭಾಗವಹಿಸಿದರು. ಈ ಚುನಾವಣೆಯಲ್ಲಿ ವಿಜಯಶಾಲಿಯಾದ ಅವರು, ಮುಂಬಯಿ ವಿಧಾನ ಸಭೆಯಲ್ಲಿ (ಲೆಜಿಸ್ಲೇಟಿವ್ ಕೌನ್ಸಿಲ್) ದೊಡ್ಡ ಭೂ ಹಿಡುವಳಿದಾರಿಕೆಯ ನಿಷೇಧ, ಕೈಗಾರಿಕಾ ಕಾರ್ಮಿಕರಿಗೆ ಮುಷ್ಕರದ ಹಕ್ಕು, ಜನಸಂಖ್ಯಾ ನಿಯಂತ್ರಣ ಜಾರಿ ಇತ್ಯಾದಿ ವಿಷಯಗಳ ಬಗ್ಗೆ ಒತ್ತಾಯಿಸಿ, ಮುಂಬಯಿ ರಾಜ್ಯದ (ಪ್ರೆಸಿಡೆನ್ಸಿ) ವಿವಿಧ ಕಡೆಗಳಲ್ಲಿ ಸಭೆ, ಸಮ್ಮೇಳನಗಳಲ್ಲಿ ಭಾಗವಹಿಸಿದರು. ೧೯೩೯ರಲ್ಲಿ ಎರಡನೆಯ ಮಹಾಯುದ್ಧ ಆರಂಭವಾದಾಗ, ಅಂಬೇಡ್ಕರ್, ನಾಜಿ ತತ್ವಗಳು ಭಾರತೀಯರ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹವುಗಳು ಎಂಬ ನಿಲುವನ್ನು ತೆಗೆದುಕೊಂಡರು. ಬ್ರಿಟಿಷ್ ಸರಕಾರವನ್ನು ಈ ಯುದ್ಧದಲ್ಲಿ ಬೆಂಬಲಿಸಬೇಕೆಂದು ಸಾರ್ವಜನಿಕರಿಗೆ ಕರೆ ಕೊಟ್ಟ ಅವರು, ಅಸ್ಪೃಶ್ಯರನ್ನು ಭಾರತೀಯ ಸೇನೆಯಲ್ಲಿ ಭರ್ತಿಯಾಗುವಂತೆ ಪ್ರೋತ್ಸಾಹಿಸಿದರು. ೧೯೪೧ರಲ್ಲಿ ಅಂಬೇಡ್ಕರರನ್ನು ರಕ್ಷಣಾ ಸಲಹಾ ಸಮಿತಿಗೆ ( ಡಿಫೆನ್ಸ್ ಅಡ್ವೈಸರೀ ಕಮಿಟಿ) ನೇಮಕ ಮಾಡಲಾಯಿತು. ಮರು ವರ್ಷ ವೈಸರಾಯ್ ಎಕ್ಸಿಕ್ಯೂಟಿವ್ ಕೌನ್ಸಿಲ್ಲಿನ ಕಾರ್ಮಿಕ ಸದಸ್ಯ ಎಂದು ನೇಮಕವಾದ ಅವರು, ಈ ಹುದ್ದೆಯಲ್ಲಿ ಮುಂದಿನ ನಾಲ್ಕು ವರ್ಷ ಮುಂದುವರಿದರು. ಇದೇ ಅವಧಿಯಲ್ಲಿ ಅವರು ಸ್ವತಂತ್ರ ಕಾರ್ಮಿಕ ಪಕ್ಷವನ್ನು ಅಖಿಲ ಭಾರತ ಪರಿಶಿಷ್ಟ ಜಾತಿ ಒಕ್ಕೂಟವಾಗಿ ಬದಲಾಯಿಸಿದರು ಪ್ರಜಾ ಶಿಕ್ಷಣ ಸಮಾಜವನ್ನು(ಪೀಪಲ್ಸ್ ಎಜುಕೇಶನ್ ಸೊಸೈಟಿ) ಸ್ಥಾಪಿಸಿದರು. ಅತ್ಯಂತ ವಿವಾದವನ್ನು ಹುಟ್ಟು ಹಾಕಿದ ಅನೇಕ ಪುಸ್ತಕಗಳನ್ನೂ, ಬಿಡಿಹಾಳೆಗಳನ್ನೂ (ಪಾಂಪ್ಲೆಟ್ಸ್) ಪ್ರಕಾಶಿಸಿದರು. ಅವುಗಳಲ್ಲಿ ಕೆಲವು ಪಾಕಿಸ್ತಾನದ ಬಗ್ಗೆ ವಿಚಾರಗಳು (ಥಾಟ್ಸ್ ಆನ್ ಪಾಕಿಸ್ತಾನ್) , ಕಾಂಗ್ರೆಸ್ ಹಾಗೂ ಗಾಂಧಿ ಅಸ್ಪೃಶ್ಯರಿಗೆ ಮಾಡಿದ್ದೇನು ( ವಾಟ್ ಕಾಂಗ್ರೆಸ್ ಅಂಡ್ ಗಾಂಧಿ ಹ್ಯಾವ್ ಡನ್ ಟು ಅನ್ಟಚಬಲ್ಸ್) ಮತ್ತು ಶೂದ್ರರು ಯಾರಾಗಿದ್ದರು?( ಹೂ ವರ್ ದ ಶೂದ್ರಾಸ್?) ಮುಖ್ಯವಾದುವು. ಭಾರತದ ಸಂವಿಧಾನ ಶಿಲ್ಪಿ ೧೯೪೭ರಲ್ಲಿ ಭಾರತ ಸ್ವತಂತ್ರವಾದ ಮೇಲೆ, ಈಗಾಗಲೇ ಸಂಸತ್ತು (ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ) ಸದಸ್ಯರಾಗಿದ್ದ ಅಂಬೇಡ್ಕರರನ್ನು ಆಗಿನ ಪ್ರಧಾನಿ ಜವಹರಲಾಲ್ ನೆಹರೂ ತಮ್ಮ ಮಂತ್ರಿಮಂಡಲದಲ್ಲಿ ಕಾನೂನು ಸಚಿವರಾಗುವಂತೆ ಆಹ್ವಾನಿಸಿದರು. ಕೆಲ ವಾರಗಳ ನಂತರ ಸಂಸತ್ತು ಸಂವಿಧಾನವನ್ನು ತಯಾರು ಮಾಡುವ ಕಾರ್ಯವನ್ನು ಕರಡು ಸಮಿತಿಗೆ ಒಪ್ಪಿಸಿತು. ಈ ಸಮಿತಿಯು ಅಂಬೇಡ್ಕರರನ್ನು ತನ್ನ ಅಧ್ಯಕ್ಷರನ್ನಾಗಿ ಚುನಾಯಿಸಿತು. ಸಂವಿಧಾನದ ಕರಡನ್ನು ಸಿದ್ಧ ಮಾಡಲು, ಬಹುತೇಕ ಒಬ್ಬಂಟಿಯಾಗಿ, ಮುಂದಿನ ಎರಡು ವರ್ಷ ದುಡಿದ ಅಂಬೇಡ್ಕರ್, ಅನಾರೋಗ್ಯವಿದ್ದಾಗ್ಯೂ, ೧೯೪೮ರ ಮೊದಲಿನಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸಿ, ಅದೇ ವರ್ಷದ ಕೊನೆಯಲ್ಲಿ ಸಂಸತ್ತಿನಲ್ಲಿ ಮಂಡಿಸಿ, ಸಂವಿಧಾನದ ಹಸ್ತಪ್ರತಿ ಯನ್ನು ಬೆಳ್ಳಿತಟ್ಟೆಯಲ್ಲಿಟ್ಟು, ಆಗಿನ ಪ್ರಧಾನಿ ಜವಹರಲಾಲ್ ನೆಹರೂ ಅವರ ಸಮ್ಮುಖದಲ್ಲಿ ಇಡೀ ರಾಷ್ಟೃಕ್ಕೆ ಅದನ್ನು ಲೋಕಾರ್ಪಣೆ ಮಾಡಿದರು. ಸಂಸತ್ತಿನ ವ್ಯವಸ್ಥೆಯಲ್ಲಿ ಇದನ್ನು ಅವರು ಸಮರ್ಥವಾಗಿ ಮುಂದೊಯ್ದ ಪರಿಣಾಮವಾಗಿ, ಕೆಲವೇ ಕೆಲವು ತಿದ್ದುಪಡಿಗಳೊಂದಿಗೆ, ಇದು ಸಂಸತ್ತಿನ ಅಂಗೀಕಾರವನ್ನು ಪಡೆಯಿತು. ಅಂದಿನಿಂದ ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿಯೆಂದೇ ಹೆಸರಾದರು. ೧೯೫೧ರಲ್ಲಿ ಅಂಬೇಡ್ಕರ್ ಮಂತ್ರಿಮಂಡಲಕ್ಕೆ ರಾಜೀನಾಮೆ ನೀಡುವುದರೊಂದಿಗೆ ಅವರ ರಾಜಕೀಯ ಜೀವನಕ್ಕೆ ಬಹುತೇಕ ತೆರೆ ಬಿದ್ದಿತು. ೧೯೫೨ರ ಮಹಾಚುನಾವಣೆಯಲ್ಲೇ ಆಗಲೀ, ಅದರ ಮರುವರ್ಷ ನಡೆದ ಮರುಚುನಾವಣೆಯಲ್ಲೇ ಆಗಲಿ, ಲೋಕಸಭೆಗೆ ಗೆದ್ದು ಬರಲು ವಿಫಲರಾದರು. ಆದರೆ ಮಾರ್ಚ್ ೧೯೫೨ರಲ್ಲಿ ಆಗಿನ ಮುಂಬಯಿ ರಾಜ್ಯದ ಹದಿನೇಳು ಚುನಾಯಿತ ಪ್ರತಿನಿಧಿಗಳಲ್ಲಿ ಒಬ್ಬರಾಗಿ ರಾಜ್ಯಸಭೆಯನ್ನು ಪ್ರವೇಶಿಸಿದರು. ಸರಕಾರದ ಮೇಲೆ ನಿಯಂತ್ರಣವಿಡಲು ಅವರು ಈ ಅವಕಾಶವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡರು. ಡಾ.ಬಿ.ಆರ್.ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆ ಡಾ.ಬಿ.ಆರ್.ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆ ಹೇಗಿತ್ತು ಮತ್ತು ಅದರಿಂದ ಅವರು ಏನನ್ನು ನಿರೀಕ್ಷಿಸಿದ್ದರು ಅನ್ನುವುದರ ಬಗ್ಗೆ ಈ ಉಲ್ಲೇಖವು ಬಹಳಷ್ಟು ತಿಳಿಸುತ್ತದೆ. ಕ್ರಾಂತಿಕಾರಕ ಬದಲಾವಣೆಗಳನ್ನು ಕೇವಲ ಕ್ರಾಂತಿಯ ಮೂಲಕವೇ ತರಬಲ್ಲೆವು ಮತ್ತು ಕ್ರಾಂತಿ ಎಂದರೆ ರಕ್ತಪಾತ ಅನ್ನುವುದು ಸಾಮಾನ್ಯ ತಿಳಿವಳಿಕೆ. ಅಲ್ಲದೆ ಕ್ರಾಂತಿಗಳು ಮತ್ತು ಪ್ರಜಾಪ್ರಭುತ್ವಗಳು ಪರಸ್ಪರ ಹೊಂದಣಿಕೆಯಾಗಲಾರವು ಎಂಬ ಗುಪ್ತ ಗುಮಾನಿಯೊ ಇದೆ. ಕ್ರಾಂತಿಯ ಬಗ್ಗೆಯ ಈ ಸಾಮಾನ್ಯ ಭಾವನೆಗಳು ತಾತ್ವಿಕವಾಗಿ ತಪ್ಪು ಎಂದು ಎತ್ತಿ ತೋರಿಸಬಹುದು. ಆ ವಿಷಯ ಬೇರೆ ಹಾಗೆಯೇ, ಪ್ರಜಾಪ್ರಭುತ್ವದ ಬಗ್ಗೆಯೂ ಕೆಲವು ಸಾಮಾನ್ಯ ಭಾವನೆಗಳಿವೆ. ಕ್ರಮಬದ್ದ ಚುನಾವಣೆ ಗಳು, ಅನೇಕ ರಾಜಕೀಯ ಪಕ್ಷಗಳು ಮತ್ತು ಪ್ರತಿ ವ್ಯಕ್ತಿಗೂ ಸಮಾನ ರಾಜಕೀಯ ಮೌಲ್ಯವನ್ನು ನೀಡುವ ಒಂದು ಪ್ರಾತಿನಿಧಿಕ ಸರ್ಕಾರದ ರೂಪ ಅದು ಎಂದು ಪರಿಗಣಿಸಲ್ಪಟ್ಟಿದೆ. ಪ್ರಜಾಪ್ರಭುತ್ವದ ಎದ್ದು ಕಾಣುವ ಸ್ಥೂಲ ಸಂರಚನೆಯ ಮುಖ್ಯ ಶಿಲ್ಪಿ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಪರಿಗಣಿಸಲ್ಪಟ್ಟಿದ್ದರು. ಅಂಬೇಡ್ಕರ ಅವರ ಪ್ರಜಾಪ್ರಭುತ್ವದ ಕಲ್ಪನೆ ತೀರ ವಿಭಿನ್ನ ಸಮಾಜವನ್ನು ಆದರ್ಶ ಸಮಾಜವನ್ನಾಗಿ ತಮ್ಮ ಕಲ್ಪನೆಯ ಸುಖಿರಾಜ್ಯ ವನ್ನಾಗಿ ಬದಲಾಯಿಸಿ, ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವ ಗಳನ್ನು ಒಟ್ಟಿಗೆ ಸಾಧಿಸಬಲ್ಲದೆಂಬಂತೆ ಪ್ರಜಾಪ್ರಭುತ್ವವನ್ನು ಅವರು ಕಲ್ಪಿಸಿಕೊಂಡ್ಡಿದರು. ಪ್ರಜಾಪ್ರಭುತ್ವವೆಂದರೆ ಸರ್ಕಾರದ ಒಂದು ರೂಪವೆಂದು ಅದು ಹುಟ್ಟಿದ ಪ್ರಾಚೀನತೆಯಿಂದ ಇಂದಿನ ಆಧುನಿಕತೆಯವರೆಗೂ ಕಲ್ಪಿಸಿಕೊಳ್ಳಲಾಗಿದೆ. ಆದರೆ ಪ್ರಜಾಪ್ರಭುತ್ವವು ಕೇವಲ ಸರ್ಕಾರದ ಒಂದು ರೂಪವಲ್ಲ. ಅದು ಪ್ರಮುಖವಾಗಿ ಸಹಬಾಳ್ವೆಯ ಸೊಗಸು ಮತ್ತು ಅನುಭವವನ್ನು ಪರಸ್ಪರ ದಟೈಸುವ ಒಂದು ಜೋಡಣಿ. ಮೂಲಭೂತವಾಗಿ ಅದು ಸಹವರ್ತಿಗಳೆಡೆಗೆ ತೋರುವ ಗೌರವಾದರ ಭಾವನೆ ಎಂದು ಹೇಳಿದ್ದಾರೆ. ಅವರ ದೃಷ್ಟಿಯಲ್ಲಿ ಪ್ರಜಾಪ್ರಭುತ್ವ ಪ್ರಜಾಸತ್ತಾತ್ಮಕ ಸಮಾಜವನ್ನು ನಿರೀಕ್ಷಿಸುತ್ತದೆ. ರಾಜಕಾರಣಿಗಳು ಪ್ರಜಾಪ್ರಭುತ್ವವು ಮೂಲಭೂತವಾಗಿ ಸಮಾಜದ ಒಂದು ಸ್ವರೂಪ ಕೇವಲ ಸರ್ಕಾರದ ಮಾದರಿ ಅಲ್ಲ ಅನ್ನುವುದನ್ನು ಗ್ರಹಿಸಲಿಲ್ಲ. ಇದು ಎರಡು ಅಂಶಗಳನ್ನು ಒಳಗೊಂಡಿದೆ. ಮೊದಲನೆಯದು ಒಂದು ಮನೋಭಾವ, ಸಹವರ್ತಿಗಳಿಗೆ ಗೌರವ ಮತ್ತು ಸಮಾನತೆ. ಎರಡನೆಯದು ಪೆಡಸಾದ ಸಾಮಾಜಿಕ ಅಡೆತಡೆಗಳಿಂದ ಮುಕ್ತ ಸಮಾಜ.ಸಾಮಾಜಿಕ ಪ್ರಜಾಪ್ರಭುತ್ವ ಅನ್ನುವ ಪದ ಸಾಮಾನ್ಯವಾಗಿ ಆರ್ಥಿಕ ಸಂಸ್ಧೆಗಳು ಹಾಗೂ ಬಂಡವಾಳ ಕ್ರಮೇಣ ಸಮಾಜವಾದಕ್ಕೆ ಹೊರಳುತ್ತದೆಂಬ ಫೇಬಿಯನ್ ನಂಬಿಕೆ ಗಳನ್ನು ಒಳಗೊಂಡಿರುತ್ತದೆ. ಆದರೆ ಅಂಬೇಡ್ಕರ ಅವರ ಪ್ರ್ರಕಾರ ಅದು ಶ್ರೇಣೀಕೃತವಲ್ಲದ, ವಿಂಗಡಣೆ ಮತ್ತು ಪ್ರತ್ಯೇಕಗಳಿಲ್ಲದ ಸಮಾಜ. ಅದು ಭಾರತಿಯ ಸಮಾಜ ಮತ್ತು ಅದರ ಜಾತಿಗಳ ವ್ಯವಸ್ಥೆಗೆ ತೀಕ್ಷ್ಣವಾಗಿ ಅನ್ವಯಿಸುತ್ತದೆ. ಸಾಮಾಜಿಕ ಪ್ರಜಾಪ್ರಭುತ್ವ ಅದು ಮೇಲ್ನೋಟಕ್ಕೆ ಫೇಬಿಯನ್ ಕಲ್ಪನೆಯ ಸಾಮಾಜಿಕ ಪ್ರಜಾಪ್ರಭುತ್ವದೊಂದಿಗೆ ಅನೇಕ ಅಂಶಗಳನ್ನು ಹಂಚಿಕೊಂಡಿದೆ.ಸಹಕಾರ ಮತ್ತು ಸಮುದಾಯ (ಭ್ರಾತೃತ್ವವನ್ನು ಸೂಚಿಸುತ್ತದೆ). ಸಮಾನತೆ (ಅವಕಾಶ ಮತ್ತು ಗಳಿಕೆಗಳೆರಡರಲ್ಲೂ) ಮತ್ತು ಸ್ವಾತಂತ್ರ್ಯಹೀಗೆ. ಆದರ ಜೊತೆಗೆ ಅವರು ಸಂಪನ್ಮೂಲಗಳ ಹಂಚಿಕೆಯಲ್ಲಿ ವ್ಯಕ್ತಿಗಳ ಸಮಾನ ಮೌಲ್ಯವನ್ನು ವಿವರಿಸುವ ಆರ್ಥಿಕ ಪ್ರಜಾಪ್ರಭುತ್ವ ಅನ್ನುವ ಪದವನ್ನು ಬಳಸಿದ್ದಾರೆ. ಹೀಗೆ ಅಂಬೇಡ್ಕರ್ ಅವರ ಪ್ರಜಾಪ್ರಭುತ್ವವು ಮೂರು ಭಾಗಗಳನ್ನು ಹೊಂದಿದೆ: ಔಪಚಾರಿಕ ಪ್ರಜಾಪ್ರಭುತ್ವವಾಗಿ ರಾಜಕೀಯ ಪ್ರಜಾಪ್ರಭುತ್ವ, ಸಾಮಾಜಿಕ ಸಮಾನತೆಗೆ ಅನ್ವಯಿಸುವ ಸಾಮಾಜಿಕ ಪ್ರಜಾಪ್ರಭುತ್ವ, ಮತ್ತು ಸಮಾಜವಾದಿ ಆರ್ಥಿಕತೆಯುಳ್ಳ ಆರ್ಥಿಕ ಪ್ರಜಾಪ್ರಭುತ್ವ. ಇವು ಮೂರು ತಮ್ಮ ಆದರ್ಶ ಸಮಾಜದ ಸ್ವರೂಪವಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಗಳೊಂದಿಗೆ ಸಮೀಕೃತಗೊಳ್ಳುತ್ತವೆ. ಕರಡು ಸಮಿತಿಯ ಅಧ್ಯಕ್ಷರಾಗಿ ಬಿ.ಆರ್.ಅಂಬೇಡ್ಕರ್ ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರು 1946ರಲ್ಲಿ, ಬ್ರಿಟಿಷ್ ಸರಕಾರ ಭಾರತಕ್ಕೆ ಅಧಿಕಾರ ಹಸ್ತಾಂತರಿಸುವುದು ಬಹುತೇಕ ಖಚಿತವಾದ ಮೇಲೆ ನರಸಿಂಗ ರಾಯರನ್ನು ಭಾರತದ ಸಂವಿಧಾನ ಸಮಿತಿಯ ಸಲಹೆಗಾರರನ್ನಾಗಿ ನೇಮಿಸಲಾಯಿತು. ರಾಯರು (ಬಿ.ಎನ್.ರಾವ್) ಸರಕಾರ ಕೇಳಿ ಕೊಂಡಂತೆ ಸಂವಿಧಾನದ ಕರಡು ಸಿದ್ಧ ಪಡಿಸಿದರು. ಇದರಲ್ಲಿ ಒಟ್ಟು 243 ವಿಧಿಗಳೂ 13 ಅನುಚ್ಛೇದಗಳೂ ಇದ್ದವು. ಇದನ್ನು ಮುಂದಿಟ್ಟು ಕೊಂಡು ಸಂವಿಧಾನ ಕರಡು ರಚನಾ ಸಮಿತಿಯು ಸಂವಿಧಾನವನ್ನು ಬೆಳೆಸುವ, ತಿದ್ದುವ, ಪರಿಷ್ಕರಿಸುವ ಕೆಲಸವನ್ನು ಕೈಗೆತ್ತಿ ಕೊಂಡಿತು. ಬಿ.ಎನ್.ರಾವ್ ಬರೆದ ಮೂಲ ಸಂವಿಧಾನಕ್ಕೆ ನಂತರ ಹಲವು ವಿಧಿಗಳನ್ನು ಸೇರಿಸಲಾಯಿತು ಕೆಲವನ್ನು ಪರಿಷ್ಕಾರ ಮಾಡಲಾಯಿತು. ಮೊದಲ ಕರಡು ಪ್ರತಿಯನ್ನು ಅದು ಸಂಸತ್ತಿಗೆ ಸಲ್ಲಿಸಿದಾಗ ಅದರಲ್ಲಿ 315 ವಿಧಿಗಳೂ 8 ಅನುಚ್ಛೇದಗಳೂ ಇದ್ದವು. ಕೊನೆಗೆ ಸಂಸತ್ತಿನ ಒಪ್ಪಿಗೆ ಪಡೆಯುವ ಸಮಯಕ್ಕೆ ಅದರಲ್ಲಿ ಮತ್ತಷ್ಟು ವಿಧಿಗಳು ಸೇರ್ಪಡೆಯಾಗಿ ಅವುಗಳ ಸಂಖ್ಯೆ 395ಕ್ಕೇರಿತು. ತನ್ನ ಈ ಕರ್ತವ್ಯವನ್ನು ರಾಯರು ಒಂದೇ ಒಂದು ರುಪಾಯಿ ವೇತನ ಅಥವಾ ಸಂಭಾವನೆ ಪಡೆಯದೆ ಉಚಿತವಾಗಿ ನಡೆಸಿ ಕೊಟ್ಟರು ಎನ್ನುವುದು ಇನ್ನೊಂದು ಮಹತ್ವದ ಅಂಶ. ಕಾನೂನು ಸಚಿವರು ಸ್ವಾತಂತ್ರ್ಯದ ಸಂದರ್ಭದಲ್ಲಿ ನೆಹರೂ ಅವರಿಂದ ಕಾನೂನು ಸಚಿವರಾಗಲು ಆಹ್ವಾನ ಪಡೆದ ಅಂಬೇಡ್ಕರ್ ಅವರು, ಭಾರತದ ಸಂವಿಧಾನ ರೂಪಿಸುವ ಜವಾಬ್ಧಾರಿಯನ್ನು ಹೊತ್ತು ಅಪಾರವಾದ ಶ್ರಮವಹಿಸಿ ದೇಶಕ್ಕೆ ಸಂವಿಧಾನವನ್ನು ಕಟ್ಟಿಕೊಟ್ಟರು. ಇಂದು ಡಾ. ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನಶಿಲ್ಪಿ ಎಂದು ಮುಕ್ತ ಕಂಠದಿಂದ ಹೇಳಲಾಗುತ್ತಿದೆ. ಇಡೀ ವಿಶ್ವದಲ್ಲಿ ಸ್ವತಂತ್ರವಾದ ಅನೇಕ ದೇಶಗಳು ಸಾರ್ವಜನಿಕರ ಹಕ್ಕುಗಳನ್ನು ಕಾಪಾಡಲು ಅಸಮರ್ಥವಾಗಿವೆ ಎಂಬ ಹಿನ್ನೆಲೆಯಲ್ಲಿ ಭಾರತದ ಈ ಸಂವಿಧಾನ ಎದ್ದು ಕಾಣುತ್ತದೆ ಹಾಗೂ ಇದಕ್ಕೆ ಡಾ. ಅಂಬೇಡ್ಕರ್ ಕೊಡುಗೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲಾಗಿದೆ. ರಾಜಕೀಯ ಪ್ರಜಾಪ್ರಭುತ್ವವು ಬಹುಮತವನ್ನು ತಿರುಚಿ ಬದಲಾಯಿಸಲು ಸಾಧ್ಯವಿಲ್ಲದಂತೆ ಸಮಾಜದ ಆರ್ಥಿಕ ಚೌಕಟ್ಟನ್ನು ಸಂವಿಧಾನದೊಳಗೆ ಭದ್ರವಾಗಿ ಅಳವಡಿಸಬೇಕೆಂದು ಅವರು ಬಯಸಿದ್ದರು. ಲಿಬರಿಸಂನಲ್ಲಿ ಇಂತ ಹೊಳಹುಗಳು ಅಪರೂಪ. ಅಂಬೇಡ್ಕರ ಅವರು ಮೂಲಭೂತವಾಗಿ ಒಬ್ಬ ಲಿಬರಲ್ (ಉದಾರವಾದಿ) ಆಗಿದ್ದರೂ, ಲಿಬರಿಸಂನ ಚೌಕಟ್ಟನ್ನು ಎಂದಿನಂತೆ ಅನಾಯಾಸವಾಗಿ ಮೀರಿದ್ದರು. ಖಾಸಗಿ ಉದ್ದಿಮೆಯ ಮೇಲೆ ಆಧರಿಸಿದ ಆರ್ಥಿಕ ವ್ಯವಸ್ಥೆ ಪ್ರಜಾಪ್ರಭುತ್ವ ತತ್ವಗಳಿಗೆ ವಿರುದ್ದವಾದದ್ದು ಎಂದು ಅವರು ಸ್ಪಷ್ಟವಾಗಿ ತಿಳಿದಿದ್ದರು. ಖಾಸಗಿ ಉದ್ದಿಮೆಯು ಅದರ ಮೂಲದಲ್ಲಿ ಸಂಪತ್ತು ಮತ್ತು ತನ್ಮೂಲಕ ಅಧಿಕಾರವನ್ನು ಖಾಸಗಿ ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕರಿಸುತ್ತದೆ. ಇದು ಅನಿವಾರ್ಯವಾಗಿ ಬದುಕಿರಲು ದುಡಿಯಲೇಬೇಕಾದ ಜನರ ಹಕ್ಕುಗಳನ್ನು ಮೊಟಕುಗೊಳಿಸುತ್ತದೆ. ಮಾಲಿಕ ತಪ್ಪು ಮಾಡಿದ್ದರೂ ಕೆಲಸಗಾರ ಪ್ರಶ್ನಿಸಲಾಗದು. ಪ್ರಶ್ನಿಸಿದರೆ ಅವನು ತನ್ನ ಕೆಲಸ ಕಳೆದುಕೊಳ್ಳಬಹುದು!ಅವರು ಹೇಳುತ್ತಾರೆ: ಖಾಸಗಿ ಉದ್ದಿಮೆ ಮತ್ತು ವ್ಯೆಯಕ್ತಿಕ ಲಾಭಗಳಿಕೆಯನ್ನು ಆಧರಿಸುವ ಸಾಮಾಜಿಕ ಅರ್ಥವ್ಯವಸ್ಥೆಯನ್ನು ಅಭ್ಯಾಸ ಮಾಡುವ ಯಾರಾದರೂ ಇದು ಹೇಗೆ ಪ್ರಜಾಪ್ರಭುತ್ವದ ಮೂಲಾಧಾರವಾದ ವ್ಯಕ್ತಿಗಳ ಹಕ್ಕುಗಳನ್ನು ಕಿತ್ತುಕೊಳ್ಳದಿದ್ದರೂ ಬಹಳ ಮಟ್ಟಿಗೆ ಮೊಟಕು ಗೊಳಿಸುತ್ತದೆ ಅನ್ನುವುದನ್ನು ಮನಗಾಣುವರು. ಜೀವನೋಪಾಯಕ್ಕಾಗಿ ಎಷ್ಟ್ಟು ಜನ ತಮ್ಮ ಹಕ್ಕುಗಳನ್ನು ಬಿಟ್ಟುಕೊಡ ಬೇಕಾಗುವುದು? ಎಷ್ಟ್ಟು ಜನ ಖಾಸಗಿ ಮಾಲೀಕರಿಂದ ಆಳಿಸಿಕೊಳ್ಳಲು ಸಿದ್ದರಾಗಬೇಕು?ಆದ್ದರಿಂದ ಪ್ರಜಾಪ್ರಭುತ್ವವನ್ನು ಸಹಕಾರಗೊಳಿಸಲು ಉತ್ಪಾದನೆಯ ಸಾಧನಗಳು ಸಮಾಜದ ಒಡೆತನದಲ್ಲಿ ಇರಬೇಕೆಂದು ಅವರು ಬಯಸಿದರು. ಸಂವಿಧಾನ ರಚನಾಸಭೆ ಯಲ್ಲಿ ಜವಹರಲಾಲ್ ನೆಹರುರ ಅವರು ಮಂಡಿಸಿದ್ದರು. ಸಂವಿಧಾನದ ಉದ್ದೇಶನವನ್ನು ಕುರಿತು ಠರಾವಿನ ಬಗ್ಗೆ ಮಾತನಾಡುತ್ತ ೧೭ ಡಿಸೆಂಬರ್ ೧೯೪೬ರಲ್ಲಿ ಅವರು, ಠರಾವಿ ನಲ್ಲಿ ಪ್ರಸ್ತಾಪಿಸಿದ್ದಂತೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯವನ್ನು ಖಾತ್ರಿಗೊಳಿಸಲು ಆರ್ಥಿಕ ವ್ಯವಸ್ಥೆಯಾಗಿರಬೇಕು ಎಂದು ಹೇಳಿದ್ದರು.ಆರ್ಥಿಕ ವ್ಯವಸ್ಥೆ ಸಮಾಜವಾದಿ ಆರ್ಥಿಕ ವ್ಯವಸ್ಥೆಯಾಗದ ಹೊರತು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ ದೊರಕಿಸುವಲ್ಲಿ ನಂಬಿಕೆ ಇಟ್ಟ ಯಾವುದೇ ಮುಂದಿನ ಸರ್ಕಾರಕ್ಕೆ ಇದು ಹೇಗೆ ಸಾಧ್ಯ ಅನ್ನುವುದು ನನಗೆ ಅರ್ಥವಾಗದು. ವಾಸ್ತವವಾಗಿ ಸಂವಿಧಾನ ರಚನಾಸಭೆಯನ್ನು ತಾವು ರೂಪುಗೊಳಿಸಿದ್ದ ರಾಷ್ಟ್ರವೇ ನಿಯಂತ್ರಿಸುವ ಸಮಾಜವಾದ ವ್ಯವಸ್ಥೆಗೆ ಅವರು ದನಿ ಕೊಡುತ್ತಿದ್ದರು. ಸಮಾಜವಾದಿ ಚೌಕಟ್ಟು ಆಥಿಕ ವ್ಯವಸ್ಥೆಯು ಸಂವಿಧಾನದ ಒಂದು ಭಾಗವಾಗಿರಬೇಕೆಂದು ಅವರ ಪ್ರಸ್ತಾವನೆ ಇತ್ತು. ಮೂಲ ಮತ್ತು ಪ್ರಮುಖ ಉದ್ದಿಮೆಗಳ ಒಡೆತನ ಮತ್ತು ನಿರ್ವಹಣೆ ರಾಷ್ಟ್ರ್ದದ (ಸರ್ಕಾರದ )ಕೈಯಲ್ಲಿರಬೇಕು ವಿಮೆಯು ರಾಷ್ಟ್ರ್ದದ ಏಕಸ್ವಾಮ್ಯದಲ್ಲಿರಬೇಕು ಪ್ರತಿಯೊಬ್ಬ ವಯಸ್ಕನಿಗೂ ಅದು (ವಿಮಾಪಾಲಿಸಿ) ಕಡ್ಡಾಯವಾಗಿದ್ದು ಅವನ ವೇತನಕ್ಕೆ ಅನುಗುಣವಾಗಿ ಇರತಕ್ಕದ್ದು. ಕೃಷಿಯು ರಾಷ್ಟ್ರೀಕೃತ ಉದ್ದಿಮೆಯಾಗಿರಬೇಕು. ಖಾಸಗಿ ವ್ಯಕ್ತಿಗಳ ಕೈಯಲ್ಲಿರುವ ಇಂತಹ ಉದ್ದಿಮೆ ವಿಮೆ ಮತ್ತು ಕೃಷಿ ಭೂಮಿಯನ್ನು ರಾಷ್ಟ್ರ್ದ(ಸರ್ಕಾರ)ಅವುಗಳ ಮೌಲ್ಯಕ್ಕೆ ಅನುಗುಣವಾಗಿ ಡಿಬೆಂಚರುಗಳ ಮೂಲಕ ಪರಿಹಾರ ನೀಡಿ ರಾಷ್ಟ್ರ್ದ(ಸರ್ಕಾರ), ಅವುಗಳಲ್ಲಿ ನಿರ್ಣಾಯಕ ಹಕ್ಕುಗಳನ್ನು ಪಡೆದುಕೊಳ್ಳಬೇಕು. ಕೃಷಿಯನ್ನು ಸಾಮೂಹಿಕ ಉದ್ದಿಮೆಯಾಗಿ ಸಂಘಟಿಸಬೇಕು ಸರ್ಕಾರ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಒಂದೇ ಪ್ರಮಾಣದ ಫಾರ್ಮಗಳನ್ನಾಗಿ ವಿಂಗಡಿಸಿ ಜಾತಿ ಜನಾಂಗಗಳ ಭೇದವಿಲ್ಲದಂತೆ ಹಳ್ಳಿಗರಿಗೆ ಗುತ್ತಿಗೆ ಮೇಲೆ ಸಾಮೂಹಿಕ ಕೃಷಿಗಾಗಿ ಬಿಟ್ಟುಕೊಡಬೇಕು, ತಾನು ಒದಗಿಸುವ ಭೂಮಿಗೆ ಬಾಡಿಗೆ, ಕೃಷಿ ಸಲಕರಣೆಗಳು, ಒಳಸುರಿ ಮತ್ತು ಸಾಲಕ್ಕೆ ಪ್ರತಿಯಾಗಿ ಅವರು ಸರ್ಕಾರಕ್ಕೆ ಹಣ ಪಾವತಿ ಮಾಡತಕ್ಕದ್ದು ಹೀಗಿತ್ತು ಅವರ ಪ್ರಸ್ತಾವನೆ. ತಮ್ಮ ರಾಷ್ಟ್ರಗಳನ್ನು ಮತ್ತು ಅಲ್ಪಸಂಖಾತರು ಅನ್ನುವ ಪುಸ್ತಕದಲ್ಲಿ ಅವರು ಈ ಬಗ್ಗೆ ಈ ವ್ಯವಸ್ಥೆಯ ಬಗ್ಗೆ ಇನ್ನಷ್ಟು ವಿಷಾದವಾಗಿ ಹೇಳಿದ್ದಾರೆ. ಸಂವಿಧಾನದ ಕಾರ್ಯದ ನಿರ್ವಹಣೆಯ ೬೦ ವರ್ಷಗಳ ಲೆಕ್ಕ ತೆಗೆದರೆ ಈ ನಿರ್ದೆಶಕ ತತ್ವಗಳನ್ನು ನಿರ್ಭಯವಾಗಿ ತುಳಿದು ಆಡಳಿತದ ನೀತಿ ನಿರೂಪಣೆ ಮಾಡಿರುವುದನ್ನು ಕಾಣುತ್ತೇವೆ. ಉದಾಹರಣೆಗೆ: ಜಾಗತೀಕರಣಕ್ಕೆ ಸಂಬಂಧಿಸಿದ ಇಡೀ ನೀತಿ ನಿರೂಪಣೆಯು ಸಂಪೂರ್ಣವಾಗಿ ಈ ನಿರ್ದೇಶಕ ತತ್ವಗಳ ಉಲ್ಲಂಘನೆ ಎಂದು ಪರಿಗಣಿಸಬಹುದು. ಬೌದ್ಧ ಧರ್ಮಕ್ಕೆ ಮತಾಂತರ ಕೊನೆಯವರೆಗೂ ರಾಜ್ಯಸಭೆಯ ಕಲಾಪಗಳಲ್ಲಿ ಭಾಗವಹಿಸುತ್ತಿದ್ದರೂ , ಅಂಬೇಡ್ಕರರ ಶಕ್ತಿ ೧೯೫೨ರ ನಂತರ ಬೇರೆಯೇ ವಿಷಯಗಳಲ್ಲಿ ಹೆಚ್ಚು ಹೆಚ್ಚು ವ್ಯಯವಾಗತೊಡಗಿತು. ೧೯೩೫ರ ದಲಿತ ಸಮ್ಮೇಳನದಲ್ಲಿ (ಡಿಪ್ರೆಸ್ಡ್ ಕ್ಲಾಸಸ್ ಕಾನ್ಫರೆನ್ಸ್), ನಾನೊಬ್ಬ ಹಿಂದೂವಾಗಿ ಹುಟ್ಟಿದ್ದರೂ, ಹಿಂದೂವಾಗಿಯೇ ಸಾಯಲಾರೆ ಎಂದು ಘೋಷಿಸಿ, ಅಸ್ಪೃಶ್ಯರನ್ನು ಹಿಂದುವೆಂದು ಒಪ್ಪಿಕೊಂಡಿರದ ಹಿಂದೂಸಮಾಜಕ್ಕೆಹಿಂದೂಸ್ತಾನಕ್ಕೆ ಆಘಾತ ಉಂಟು ಮಾಡಿದರು. ಅಂಬೇಡ್ಕರ್, ಆಗಿನಿಂದಲೇ ಮತಾಂತರದ ಬಗ್ಗೆ ಗಂಭೀರ ಚಿಂತನೆ ನಡೆಸಿ, ಅಸ್ಪೃಶ್ಯರಿಗೆ ಹಿಂದೂಧರ್ಮ ದಲ್ಲಿ ಏಳಿಗೆಯಿಲ್ಲವಾದ್ದರಿಂದ ಮತಾಂತರ ಅನಿವಾರ್ಯ, ಹಾಗೂ ಬೌದ್ಧಧರ್ಮ ಮತಾಂತರಕ್ಕೆ ಅತ್ಯಂತ ಸೂಕ್ತವಾದದ್ದು ಎಂಬ ನಿರ್ಣಯಕ್ಕೆ ಬಂದರು.ಕೊಲಂಬೋದ ಯಂಗ್ ಮೆನ್ಸ್ ಬುದ್ಧಿಸ್ಟ್ ಅಸೋಸಿಯೇಷನ್ ಸಂಸ್ಥೆಯ ಆಹ್ವಾನದ ಮೇಲೆ ೧೯೫೦ರಲ್ಲಿ ಶ್ರೀಲಂಕಾ ಪ್ರಯಾಣ ಬೆಳೆಸಿದರು. ಅಲ್ಲಿನ ಕ್ಯಾಂಡಿಯಲ್ಲಿ ವಿಶ್ವ ಬೌದ್ಧ ಸಮಾವೇಶದಲ್ಲಿ (ವರ್ಲ್ಡ್ ಫೆಲೋಶಿಪ್ ಆಫ್ ಬುದ್ಧಿಸ್ಟ್ಸ್) ಭಾಷಣ ಮಾಡಿದ ಅಂಬೇಡ್ಕರ್, ಶ್ರೀಲಂಕಾದ ಅಸ್ಪೃಶ್ಯರಿಗೆ ಬೌದ್ಧಧರ್ಮವನ್ನು ಆಲಂಗಿಸಲು ಕರೆಕೊಟ್ಟರು. ಪುರಾತನ ಭಾರತದಲ್ಲಿ ಸ್ತ್ರೀಯರ ಸ್ಥಾನಮಾನಗಳು ಕಡಿಮೆಯಾಗಲು ಗೌತಮ ಬುದ್ಧನೇ ಕಾರಣ ಎಂಬ ಆರೋಪಕ್ಕೆ ಪ್ರತಿಯಾಗಿ, ಬುದ್ಧನನ್ನು ಸಮರ್ಥಿಸಿ ೧೯೫೧ರಲ್ಲಿ ಲೇಖನವನ್ನು ಬರೆದರು. ಅದೇ ವರ್ಷ, ಬೌದ್ಧ ಉಪಾಸನಾ ಪಥ ಎಂಬ ಹೆಸರಿನ ಬೌದ್ಧ ಧರ್ಮೀಯ ಗದ್ಯದ ಸಂಕಲನವನ್ನು ಹೊರತಂದರು. ೧೯೫೪ರಲ್ಲಿ ಅಂಬೇಡ್ಕರ್ ಬರ್ಮಾ ದೇಶವನ್ನು ಎರಡು ಬಾರಿ ಸಂದರ್ಶಿಸಿದರು. ವಿಶ್ವ ಬೌದ್ಧ ಸಮಾವೇಶದಲ್ಲಿ (ವರ್ಲ್ಡ್ ಫೆಲೋಶಿಪ್ ಆಫ್ ಬುದ್ಧಿಸ್ಟ್ಸ್) ಮೂರನೆಯ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕಾಗಿ ಎರಡನೆಯ ಬಾರಿ ಭೇಟಿ ಮಾಡಿದರು. ಭಾರತೀಯ ಬೌದ್ಧ ಮಹಾಸಭಾವನ್ನು (ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ) ಸ್ಥಾಪಿಸಿ, ಪುಣೆಯ ಸಮೀಪದ ದೇಹು ರೋಡ್ ನ ದೇವಾಲಯವೊಂದರಲ್ಲಿ ಗೌತಮ ಬುದ್ಧನ ಪ್ರತಿಮೆಯನ್ನು ೧೯೫೪ರ ಡಿಸೆಂಬರ್ ೨೫ರಂದು ಪ್ರತಿಷ್ಠಾಪಿಸಿದರು. ಆ ಸಂದರ್ಭದಲ್ಲಿ ನೆರೆದಿದ್ದ ಸಹಸ್ರಾರು ಅಸ್ಪೃಶ್ಯ ಜನಾಂಗದ ಸಭಿಕರೆದುರಿನಲ್ಲಿ ಬೌದ್ಧ ಧರ್ಮವನ್ನು ಭಾರತದ ಎಲ್ಲೆಡೆ ಹರಡುವುದಕ್ಕೆ ತನ್ನ ಉಳಿದ ಜೀವನವನ್ನು ಮೀಸಲಾಗಿಡುವುದಾಗಿ ಘೋಷಿಸಿದರು. ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಬೌದ್ಧ ಧರ್ಮದ ಸಾರಸಂಗ್ರಹವನ್ನು ಬರೆದು ಪ್ರಕಟಿಸುವುದಾಗಿಯೂ ಅವರು ಈ ಸಭೆಯಲ್ಲಿ ನಿರ್ಣಯಿಸಿದರು. ಅದರ ಪ್ರಕಾರವೇ ಬುದ್ಧ ಮತ್ತು ಅವರ ಧಮ್ಮ (ಬುದ್ಧ ಅಂಡ್ ಹಿಸ್ ಧಮ್ಮ ) ಎಂಬ ಕೃತಿಯನ್ನು ಫೆಬ್ರುವರಿ ೧೯೫೬ರಲ್ಲಿ ಪೂರ್ಣಗೊಳಿಸಿದರು. ಇದಾದ ಸ್ವಲ್ಪ ಕಾಲದಲ್ಲಿಯೇ, ತಾವು ಅದೇ ವರ್ಷದ ಅಕ್ಟೋಬರಿನಲ್ಲಿ ಮತಾಂತರ ಗೊಳ್ಳುವುದಾಗಿ ಪ್ರಕಟಿಸಿದರು. ನಾಗಪುರದಲ್ಲಿ ಈ ಕಾರ್ಯಕ್ರಮಕ್ಕೆ ವ್ಯವಸ್ಥೆಯಾಯಿತು. ೧೯೫೬ರ ಅಕ್ಟೋಬರ್ ೧೪ರಂದು, ಬುದ್ಧ ಭಿಕ್ಷುವಿನಿಂದ ಸಾಂಪ್ರದಾಯಿಕ ದೀಕ್ಷೆ ಸ್ವೀಕರಿಸಿದ ಅಂಬೇಡ್ಕರ್, ತಮ್ಮ ಕರೆಗೆ ಸ್ಪಂದಿಸಿ ನಾಗಪುರಕ್ಕೆ ಬಂದಿದ್ದ ಸ್ತ್ರೀ ಪುರುಷ ಹಾಗೂ ಮಕ್ಕಳ ನ್ನೊಳಗೊಂಡ ೩,೮೦,೦೦೦ ಜನಸಮೂಹಕ್ಕೆ ತಾವೇ ದೀಕ್ಷೆ ಕೊಟ್ಟರು. ನಾಗಪುರ ಹಾಗೂ ಚಂದಾದಲ್ಲಿ ಇನ್ನೂ ಕೆಲವು ಇಂಥಾ ಮತಾಂತರ ಸಮಾರಂಭಗಳನ್ನು ನೆರವೇರಿಸಿ ಅಂಬೇಡ್ಕರ್ ದಿಲ್ಲಿಗೆ ಮರಳಿದರು. ಕೆಲ ವಾರಗಳ ನಂತರ ನೇಪಾಳಕ್ಕೆ ತೆರಳಿ, ಅಲ್ಲಿ ವಿಶ್ವ ಬೌದ್ಧ ಸಮಾವೇಶದ ನಾಲ್ಕನೆಯ ಸಮ್ಮೇಳನದಲ್ಲಿ ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್ ಎಂಬ ವಿಷಯವಾಗಿ ಭಾಷಣ ಮಾಡಿದರು. ದಿಲ್ಲಿಗೆ ಮರಳುವಾಗ ದಾರಿಯಲ್ಲಿ ಬನಾರಸ್ ಹಾಗು ಬುದ್ಧ ಮೋಕ್ಷ ಪ್ರಾಪ್ತಿಹೊಂದಿದ ಕುಶೀನರ ಎಂಬಲ್ಲಿ ನಿಂತು ಭಾಷಣಗಳನ್ನು ಮಾಡಿದರು. ದಿಲ್ಲಿಗೆ ವಾಪಸಾದ ಮೇಲೆ ಅನೇಕ ಬೌದ್ಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ರಾಜ್ಯಸಭೆಯ ಕಲಾಪಗಳಲ್ಲಿ ಭಾಗವಹಿಸಿ, ತಮ್ಮ ಕೃತಿ ಬುದ್ಧ ಮತ್ತು ಕಾರ್ಲ್ ಮಾರ್ಕ್ಸ್ ಪುಸ್ತಕದ ಕೊನೆಯ ಅಧ್ಯಾಯವನ್ನು ಬರೆದು ಮುಗಿಸಿದರು.೧೯೫೬ರ ಡಿಸೆಂಬರ್ ೦೬ನೆಯ ತಾರೀಖು ಅಂಬೇಡ್ಕರ್ ಇಹಲೋಕ ವ್ಯಾಪಾರ ಮುಗಿಸಿದರು. ಅಂಬೇಡ್ಕರ್ ಬೌದ್ಧರಾದ ಮೇಲೆ, ಕೇವಲ ಏಳು ವಾರ ಮಾತ್ರ ಬದುಕಿದ್ದರು. ಆ ಅಲ್ಪ ಕಾಲಾವಧಿಯಲ್ಲಿ ಬೌದ್ಧಧರ್ಮದ ಪ್ರಚಾರಕ್ಕಾಗಿ ಅವರು ಮಾಡಿದಷ್ಟು ಕಾರ್ಯವನ್ನು, ಅಶೋಕನನ್ನು ಬಿಟ್ಟರೆ, ಬಹುಶ: ಬೇರ್ಯಾರೂ ಮಾಡಿಲ್ಲ.ಅವರ ಮರಣದ ಹೊತ್ತಿಗಾಗಲೇ ಏಳೂವರೆ ಲಕ್ಷಕ್ಕೂ ಹೆಚ್ಚು ಮಂದಿ ಮತಾಂತರಗೊಂಡಿದ್ದರಷ್ಟೇ ಅಲ್ಲ, ಈ ಮಹಾನ್ ನಾಯಕನ ಹಠಾತ್ ನಿಧನದಿಂದ ಅನುಯಾಯಿಗಳಲ್ಲಿ ಅನಿಶ್ಚಿತತೆ ಮತ್ತು ಗೊಂದಲ ಉಂಟಾದರೂ ಸಹ, ಅವರ ಮರಣದ ಕೆಲ ತಿಂಗಳುಗಳಲ್ಲಿ ಇನ್ನೂ ಅನೇಕ ಲಕ್ಷ ಜನ ಬೌದ್ಧಮತೀಯರಾದರು. ಅಂಬೇಡ್ಕರರ ಮಹಾಕೃತಿ ಎಂದು ಪರಿಗಣಿಸಲಾದ ಬುದ್ಧ ಅಂಡ್ ಹಿಸ್ ಧಮ್ಮ ವನ್ನು, ಅವರು ತೀರಿ ಕೊಂಡ ಸುಮಾರು ಒಂದು ವರ್ಷದ ನಂತರ , ೧೯೫೭ ನವೆಂಬರ್ ನಲ್ಲಿ ಜನ ಶಿಕ್ಷಣ ಸಮಾಜದ ವತಿಯಿಂದ ಪ್ರಕಟಿಸಲಾಯಿತು. ಬೌದ್ಧಧರ್ಮಕ್ಕೆ ಸೇರುವಾಗ ಮಾಡಿದ ಪ್ರತಿಜ್ಞೆ ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳು ಕೈಗೊಂಡ ಪ್ರಮಾಣ ಹೀಗಿತ್ತು: ನಾನು ಅಸ್ಪೃಶ್ಯತೆ ಆಚರಿಸುವುದಿಲ್ಲ ಮತ್ತು ಎಲ್ಲ ಮನುಷ್ಯರನ್ನು ಸಮಾನವಾಗಿ ಕಾಣುತ್ತೇನೆ. ಕೊಲ್ಲುವುದಿಲ್ಲ, ಕದಿಯುವುದಿಲ್ಲ, ತಪ್ಪಾದ ಲೈಂಗಿಕ ವರ್ತನೆ ತೋರುವುದಿಲ್ಲ, ಮದ್ಯ ಕುಡಿಯುವುದಿಲ್ಲ ಮತ್ತು ಸುಳ್ಳು ಹೇಳುವುದಿಲ್ಲ ಎಂಬ ಪಂಚಶೀಲ ತತ್ವಗಳನ್ನು ಅನುಸರಿಸುತ್ತೇನೆ. ಜ್ಞಾನ, ಸಹಾನುಭೂತಿ ಮತ್ತು ಕರ್ತವ್ಯದ ಮೂರು ಪ್ರಮುಖ ತತ್ವಗಳ ಆಧಾರದಲ್ಲಿ ನೆಲೆಯಾಗಿರುವ ಬೌದ್ಧ ಧರ್ಮ ಮಾತ್ರ ನಿಜವಾದ ಧರ್ಮ ಎಂದು ನಾನು ನಂಬಿದ್ದೇನೆ. ಹಾಗಾಗಿಯೇ ಹಿಂದೂ ಧರ್ಮವನ್ನು ತೊರೆದು ಬೌದ್ಧ ಧರ್ಮವನ್ನು ಅಪ್ಪಿಕೊಳ್ಳುವ ಮೂಲಕ ಹೊಸ ಹುಟ್ಟು ಪಡೆದುಕೊಂಡಿದ್ದೇನೆ. ಸ್ಮಾರಕ ಅಂಬೇಡ್ಕರ್ ದಿಲ್ಲಿಗೆ ವಸತಿ ಬದಲಾಯಿಸಿದ ಮೇಲೆ , ಬಹಳಷ್ಟು ಕಾಲ ಜೀವಿಸಿದ ಹಾಗೂ ಕೊನೆಯುಸಿರೆಳೆದ 26, ಆಲಿಪುರ ರಸ್ತೆಯ ಮನೆಯನ್ನು ಅಂಬೇಡ್ಕರ್ ಸ್ಮಾರಕವಾಗಿ ಕಾದಿಡಲಾಗಿದೆ ( ಪೂರ್ಣ ವಿಳಾಸ: 26,ಆಲಿಪುರ ರಸ್ತೆ, ಐಪಿ ಕಾಲೇಜಿನ ಹತ್ತಿರ, ಸಿವಿಲ್ ಲೈನ್ಸ್, ನವದೆಹಲಿ 110 054). ದಲಿತ ಸಂಘಟನೆಗಳು ಈ ಸ್ಮಾರಕಕ್ಕಾಗಿ ಸಾಕಷ್ಟು ಹೋರಾಟ ಮಾಡಿದ ಮೇಲೆ, ಸರಕಾರ ಈ ಮನೆಯನ್ನು ಅದರ ಮಾಲೀಕರಾದ ಜಿಂದಾಲ್ ಮನೆತನದವರಿಂದ ಪಡೆದುಕೊಂಡು ಸ್ಮಾರಕವನ್ನಾಗಿ ಪರಿವರ್ತಿಸಿತು.ಅವರ ಜನ್ಮದಿನವನ್ನು ಅಂಬೇಡ್ಕರ್ ಜಯಂತಿ ಎಂದು ರಾಷ್ಟ್ರೀಯ ರಜಾದಿನವಾಗಿ ಆಚರಿಸಲಾಗುತ್ತಿದೆ. ಅವರ ಅನೇಕ ಅಭಿಮಾನಿಗಳು ಆದರದಿಂದ ಅವರನ್ನು ಬಾಬಾಸಾಹೇಬ್ ಎಂದು ಸಂಬೋಧಿಸುತ್ತಾರೆ. ಅಂಬೇಡ್ಕರರ ಅನುಯಾಯಿಗಳು ಅವರ ಹೆಸರಿಂದ ಜಯಭೀಮ ಎಂದು ಪರಸ್ಪರ ಅಭಿವಾದಿಸುವುದುಂಟು. ಅಂಬೇಡ್ಕರ್ ಅವರಿಗೆ ಭಾರತದ ಪರಮೋಚ್ಛ ನಾಗರಿಕ ಪುರಸ್ಕಾರ ಭಾರತ ರತ್ನ ವನ್ನು ಮರಣೋತ್ತರವಾಗಿ ಪ್ರಧಾನ ಮಾಡಲಾಯಿತು. ಅಂಬೇಡ್ಕರ್ ಅವರ ಕೊನೆಯ ಸಂದೇಶ ಬಾಬಾಸಾಹೇಬರ ಕೊನೆಯ ಈ ಸಂದೇಶವನ್ನು ಓದುತ್ತಿದ್ದರೆ, ಮಗನೋರ್ವನಿಗೆ ತಂದೆಯು ತನ್ನ ಅಂತಿಮ ದಿನಗಳಲ್ಲಿ ಮಗ ನೋಡಪ್ಪ ನಾನು ಕಷ್ಟಪಟ್ಟು ಇಷ್ಟೆಲ್ಲಾ ಮಾಡಿದ್ದೇನೆ. ಇನ್ನು ಇದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ನಿನ್ನ ಜವಾಬ್ದಾರಿ ಎಂದು ಹೇಳುವಾಗ ಯಾವ ಪರಿಯ ದುಖಃ ಒತ್ತರಿಸಿಬರುತ್ತದೆಯೋ, ಆದ್ರ್ರ ಭಾವನೆ ಉಕ್ಕಿ ಹರಿಯುತ್ತದೆಯೋ ಅಂತಹ ಭಾವ ಉಂಟಾಗುತ್ತದೆ. ನಿಜ, ಕೋಟ್ಯಂತರ ದಲಿತರ ಆಯುಷ್ಯದ ಒಂದೊಂದು ಕ್ಷಣವನ್ನು ನೀಡಿ ಅಂಬೇಡ್ಕರರನ್ನು ಉಳಿಸಿಕೊಳ್ಳಬಹುದಿತ್ತು. ಆದರೆ ಅದು ಸಾದ್ಯವಿಲ್ಲವಲ್ಲ! ಈ ನಿಟ್ಟಿನಲ್ಲಿ ಉಳಿದಿರುವುದು ಅವರ ಆ ಅಮರ ಸಂದೇಶ ಮಾತ್ರ. ಅಂದಹಾಗೆ ಬಾಬಾಸಾಹೇಬರ ಆ ಸಂದೇಶ ವನ್ನು ಅವರ ಆಪ್ತ ಕಾರ್ಯದರ್ಶಿ ಸರ್ ನಾನಕ್ ಚಂದ್ ರತ್ತು ತಮ್ಮ . ಕೃತಿಯಲ್ಲಿ ತುಂಬಾ ಆಪ್ತವಾಗಿ ದಾಖಲಿಸಿದ್ದಾರೆ. ಬಹುಶಃ ಅಂತಹ ದಾಖಲೆ ಬರೀ ದಲಿತ ಸಮುದಾಯವೊಂದಕ್ಕೆ ಅಲ್ಲ ಈ ಪ್ರಪಂಚದ ಪ್ರತಿಯೊಂದು ಶೋಷಿತ ವರ್ಗಕ್ಕೆ ವಿಮೋಚಕನೊಬ್ಬನು ತೋರುವ ದಿವ್ಯ ಮಾರ್ಗದಂತೆ ಕಾಣುತ್ತದೆ. ಅದು 1956 ಜುಲೈ 31ರ ಮಂಗಳವಾರದ ಒಂದು ದಿನ. ಸಮಯ ಸಂಜೆ 530. ತಮ್ಮ ಆಪ್ತ ಕಾರ್ಯದರ್ಶಿ ರತ್ತುರವರಿಗೆ ಕೆಲವು ಪತ್ರಗಳನ್ನು ಮಾಡಿದ ಬಾಬಾಸಾಹೇಬರು ಇದ್ದಕಿದ್ದಂತೆ ಆದರು! ಕೆಲಹೊತ್ತು ಏನನ್ನು ಮಾತನಾಡದ ಅಂಬೇಡ್ಕರರ ಈ ವರ್ತನೆ ಕಾರ್ಯದರ್ಶಿ ರತ್ತುವರಿಗೆ ಗಾಭರಿಯುಂಟುಮಾಡಿತು. ತಕ್ಷಣ ಎಚ್ಚೆತ್ತುಕೊಂಡ ರತ್ತುರವರು ಅಂಬೇಡ್ಕರರ ತಲೆಯನ್ನು ನೇವರಿಸುತ್ತಾ ಕಾಲನ್ನು ಒತ್ತುತ್ತಾ ಅವರ ಹಾಸಿಗೆಯ ಒಂದು ಕಡೆ ಬಂದು ಸ್ಟೂಲ್ನ ಮೇಲೆ ಕುಳಿತುಕೊಂಡರು. ಹಾಗೆಯೇ ಭಯದಿಂದ ನಡುಗುತ್ತಾ ಅಂಬೇಡ್ಕರರನ್ನು ಸರ್, ಕ್ಷಮಿಸಿ ನನಗೆ ಸತ್ಯ ತಿಳಿಯಬೇಕು. ಈಚಿನ ದಿನಗಳಲ್ಲಿ ನೀವು ತುಂಬಾ ದುಖಿಃತರಾಗಿರುತ್ತೀರಿ, ಖಿನ್ನರಾಗಿರುತ್ತೀರಿ, ಅಳುತ್ತಿರುತ್ತೀರಿ. ಯಾಕೆ ಹೀಗೆ? ಎಂದು ಕೇಳಿಯೇ ಬಿಟ್ಟರು! ರತ್ತುರವರ ಈ ಗಾಭರಿ ಅಂಬೇಡ್ಕರರಿಗೆ ಅರ್ಥವಾಗಿತ್ತು. ಸಾವರಿಸಿಕೊಂಡ ಅವರು ಆ ದಿನ ತಮ್ಮ ಆ ದುಖಃಕ್ಕೆ ಕಾರಣ ಮತ್ತು ಆ ಕಣ್ಣಿರಿನ ಹಿಂದಿನ ಸತ್ಯವನ್ನು ಬಿಚ್ಚಿಟ್ಟರು. ಅಂಬೇಡ್ಕರರ ಆ ನೋವಿನ ನುಡಿಗಳನ್ನು ಗೌರವದಿಂದ ದಾಖಲಿಸುವು ದಾದರೆ ನನ್ನ ದುಖಃಕ್ಕೆ ಕಾರಣ, ನನ್ನ ನೋವಿನ ಮೂಲ ನಿಮಗೆ ಅರ್ಥವಾಗುವುದಿಲ್ಲ. ನನ್ನ ಮನಸ್ಸಿನಲ್ಲಿ ಕೊರೆಯುತ್ತಿರುವ ಮೊದಲ ಚಿಂತೆ ನನ್ನ ಜೀವಿತದಲ್ಲಿ ನನ್ನ ಜೀವನದ ಗುರಿಯನ್ನು ಮುಟ್ಟಲಾಗಲಿಲ್ಲವಲ್ಲ ಎಂಬುದು. ಏಕೆಂದರೆ ನನ್ನ ಜೀವಿತದ ಅವಧಿಯಲ್ಲೇ ನನ್ನ ಜನರು ಈ ದೇಶದ ಆಳುವ ವರ್ಗವಾಗುವುದನ್ನು ನಾನು ನೋಡಬಯಸಿದ್ದೆ. ರಾಜಕೀಯ ಅಧಿಕಾರವನ್ನು ಸಮಾನತೆಯ ಅಧಾರದ ಮೇಲೆ ಇತರರ ಜೊತೆ ಹಂಚಿಕೊಳ್ಳುವುದನ್ನು ನಾನು ಬಯಸಿದ್ದೆ. ಆದರೆ ಅಂತಹ ಸಾಧ್ಯತೆ ನನಗೀಗ ಕಾಣುತ್ತಿಲ್ಲ. ಅದೂ ಅಲ್ಲದೆ ಅಂತಹ ಪ್ರಯತ್ನವನ್ನು ನಾನೇ ಮಾಡೋಣವೆಂದರೆ ನಾನೂ ಕೂಡ ಈಗ ಅನಾರೋಗ್ಯದ ಕಾರಣದಿಂದಾಗಿ ನಿಶ್ಯಕ್ತ ಮತ್ತು ನಿರಾಶನಾಗಿದ್ದೇನೆ ಎನ್ನುತ್ತಾ ಅಂಬೇಡ್ಕರರು ತಮ್ಮ ದುಖಃದ ಮೊದಲ ಪುಟವನ್ನು ಬಿಚ್ಚಿಟ್ಟರು. ಮುಂದುವರಿದು ಅವರು ಹಾಗೆ ಹೇಳುವುದಾರೆ ನಾನು ಇದುವರೆವಿಗೆ ಏನನ್ನು ಸಾಧಿಸಿ ಪಡೆದಿರುವೆನೋ ಆ ಸಾಧನೆಯ ಫಲವನ್ನು ಶಿಕ್ಷಣ ಪಡೆದ ನನ್ನ ಸಮುದಾಯದ ಕೆಲವೇ ಕೆಲವು ಮಂದಿ ಅನುಭವಿಸಿ ಮಜಾ ಮಾಡುತಿದ್ದಾರೆ. ತಮ್ಮ ಇನ್ನಿತರ ಶೋಷಿತ ಸಹೋದರರ ಬಗ್ಗೆ ಅವರು ಯಾವುದೇ ಅನುಕಂಪ, ಕಾಳಜಿ ತೋರುತ್ತಿಲ್ಲ. ತಮ್ಮ ಈ ವಂಚನೆಯ ಕ್ರಿಯೆಯಿಂದಾಗಿ ಒಂದು ರೀತಿಯಲ್ಲಿ ಅವರು ಅಯೋಗ್ಯರಾಗಿದ್ದಾರೆ. ವೈಯಕ್ತಿಕ ಹಿತಾಸಕ್ತಿಯನ್ನಷ್ಟೆ ಸಾಧಿಸಿಕೊಂಡು ತಮ್ಮಷ್ಟಕ್ಕೆ ಬದುಕುವ ಅವರು ಒಂದರ್ಥದಲ್ಲಿ ನನ್ನ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ಅವರಲ್ಲಿ ಯಾರೂ ಕೂಡ ಸಮುದಾಯದ ಸೇವೆಯನ್ನು ಮಾಡಲು ಮುಂದೆ ಬರುತ್ತಿಲ್ಲ. ಒಟ್ಟಾರೆ ಅವರು ವಿನಾಶದ ಹಾದಿಯತ್ತ ಸಾಗುತ್ತಿದ್ದಾರೆ ಎಂದು ಮೀಸಲಾತಿಯ ಲಾಭ ಪಡೆದು ನೌಕರಿಗಿಟ್ಟಿಸಿ ಸ್ವಾರ್ಥಿಗಳಾಗಿರುವ ತನ್ನ ಸಮುದಾಯಾದ ಸರ್ಕಾರಿ ನೌಕರರ ಬಗ್ಗೆ ಅಂಬೇಡ್ಕರರು ಅಂದು ಹೇಳಿದರು. ಮುಂದುವರಿದು ಅವರುಆ ಕಾರಣಕ್ಕಾಗಿ ಇನ್ನು ಮುಂದೆ ನಾನು ಹಳ್ಳಿಗಳಲ್ಲಿನ ಶೋಷಣೆಯನ್ನು ಇನ್ನೂ ಅನುಭವಿಸುತ್ತಿರುವ, ಆರ್ಥಿಕ ದುಸ್ಥಿತಿಯಲ್ಲಿ ಇನ್ನು ಹಾಗೆಯೇ ಇರುವ ನನ್ನ ಅನಕ್ಷರಸ್ಥ ವಿಶಾಲ ಜನಸಮುದಾಯದತ್ತ ಗಮನ ಹರಿಸಬೇಕೆಂದಿದ್ದೇನೆ. ಆದರೆ? ನನಗಿರುವುದು? ಇನ್ನು ಕೆಲವೇ ದಿನಗಳು! ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಮುಂದುವರಿದು ಅವರು ನನ್ನ ಎಲ್ಲಾ ಕೃತಿಗಳನ್ನು ನನ್ನ ಜೀವಿತದ ಅವಧಿಯಲ್ಲೇ ಪ್ರಕಟಿಸಬೇಕೆಂದು ಬಯಸಿದ್ದೆ. ಬುದ್ಧ ಮತ್ತು ಕಾರ್ಲ್ಮಾಕ್ರ್ಸ, ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ ಮತ್ತು ಹಿಂದೂ ಧರ್ಮದ ಒಗಟುಗಳು ಎಂಬ ಆ ನನ್ನ ಮಹೋನ್ನತ ಕೃತಿಗಳನ್ನು ಇನ್ನೂ ಪ್ರಕಟಗೊಂಡಿಲ್ಲ. ಅಲ್ಲದೆ ಸದ್ಯಕ್ಕೆ ಅವುಗಳನ್ನು ಹೊರತರುವುದು ನನ್ನ ಕೈಯಲ್ಲಿ ಆಗುತ್ತಿಲ್ಲವಲ್ಲ ಎಂಬ ಅಸಹಾಯಕತೆ ಕೂಡ ನನ್ನನ್ನು ಕಾಡುತ್ತಿದೆ. ನನ್ನ ನಂತರವಾದರೂ ಅವುಗಳು ಪ್ರಕಟಗೊಳ್ಳಬಹುದೆಂದು ಕೊಂಡರೆ ಅಂತಹ ಸಾಧ್ಯತೆ ಕೂಡ ನನಗೆ ಕಾಣುತ್ತಿಲ್ಲ. ನನ್ನ ಚಿಂತೆಗೆ ಇದೂ ಕೂಡ ಪ್ರಮುಖ ಕಾರಣ ಎಂದು ತಮ್ಮ ಕೃತಿಗಳು ಪ್ರಕಟವಾಗದ್ದರ ಬಗ್ಗೆ ಬಾಬಾಸಾಹೇಬರು ನೋವು ತೋಡಿಕೊಳ್ಳುತ್ತಾರೆ. ನಿಜ, ನಂತರದ ಒಂದೆರಡು ದಶಕದ ನಂತರ ಅವರ ಕೃತಿಗಳು ಸರ್ಕಾರದ ವತಿಯಿಂದ ಪ್ರಕಟಗೊಂಡಿರಬಹುದು. ಆದರೆ ಅಂಬೇಡ್ಕರರು ಬದುಕಿದ್ದಾಗಲೇ ಅವು ಪ್ರಕಟಗೊಂಡಿದ್ದರೆ? ಅಂಬೇಡ್ಕರ್ ಎಂಬ ಅಪ್ರತಿಮ ಲೇಖಕನಿಗೆ ಅದರಿಂದ ಸಂಪೂರ್ಣ ಆನಂದ ಸಿಗುತ್ತಿತ್ತು. ಆದರೆ? ಮುಂದುವರಿದು ತಮ್ಮ ಚಳುವಳಿಯ ಭವಿಷ್ಯದ ಬಗ್ಗೆ ಗಂಭೀರವಾಗಿ ಪ್ರಸ್ತಾಪಿಸುವ ಅವರು ನನ್ನ ನಂತರ, ನನ್ನ ಜೀವತದ ಅವಧಿಯಲ್ಲೇ ಶೋಷಿತ ಸಮುದಾಯದ ಮಧ್ಯೆದಿಂದ ಬರುವವರೊಬ್ಬರು ನನ್ನ ಈ ಚಳುವಳಿಯನ್ನು ಮುನ್ನಡೆಸುವರೆಂದು ನಾನು ಬಯಸಿದ್ದೆ. ಆದರೆ ಈ ಸಂಧರ್ಭದಲ್ಲಿ ಅಂತಹವರಾರೂ ನನಗೆ ಕಾಣುತ್ತಿಲ್ಲ! ನನ್ನ ಸಹಪಾಠಿಗಳಲ್ಲಿ ಯಾರಲ್ಲಿ ನಾನು ಈ ಚಳುವಳಿಯನ್ನು ಮುನ್ನಡೆಸುವರೆಂದು ನಂಬಿಕೆ ಮತ್ತು ವಿಶ್ವಾಸವಿರಿಸಿದ್ದೆನೊ ಅವರು ತಮ್ಮ ಮೇಲೆ ಬೀಳಬಹುದಾದ ಈ ಅಗಾಧ ಜವಾಬ್ದಾರಿಯ ಬಗ್ಗೆ ಗಮನ ಹರಿಸುತ್ತಿಲ್ಲ. ಬದಲಿಗೆ ಅವರು ತಮ್ಮ ತಮ್ಮಲ್ಲೇ ನಾಯಕತ್ವ ಮತ್ತು ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ. ನಿಜ ಹೇಳಬೇಕೆಂದರೆ ಈ ದೇಶಕ್ಕೆ ಮತ್ತು ನನ್ನ ಜನತೆಗೆ ಸೇವೆ ಸಲ್ಲಿಸಬೇಕೆಂಬ ಅಧಮ್ಯ ಆಸೆ ನನಗೆ ಇನ್ನೂ ಇದೆ. ಆದರೆ? ಪೂರ್ವಾಗ್ರಹಪೀಡಿತ, ಜಾತಿ ಎಂಬ ರೋಗವನ್ನು ಹೊದ್ದುಕೊಂಡಿರುವ ಜನರೇ ತುಂಬಿರುವ ಈ ದೇಶದಲ್ಲಿ? ನನ್ನಂತಹವರು ಜನಿಸುವುದು ಮಹಾಪಾಪ. ಹಾಗೆಯೇ ಈಗಿರುವ ವ್ಯವಸ್ಥೆಯಲ್ಲಿ ದೇಶಕ್ಕೆ ಸಂಬಧಪಟ್ಟಂತೆ ಯಾರಾದರೊಬ್ಬರು ತಮ್ಮ ವಯಕ್ತಿಕ ಅಭಿಪ್ರಾಯಗಳನ್ನು ಮಂಡಿಸುವುದು ತುಂಬಾ ಕಷ್ಟ. ಏಕೆಂದರೆ ಇಲ್ಲಿಯ ಜನರು ಈ ದೇಶದ ಪ್ರಧಾನಿ(ನೆಹರು)ಗೆ ಒಗ್ಗದಂತಹ ಯಾವುದೇ ವಿಚಾರಗಳನ್ನು ಕೇಳುವ ತಾಳ್ಮೆಯನ್ನು ಹೊಂದಿಲ್ಲ. ಹೀಗೇ ಆದರೆ ಈ ದೇಶ ಇನ್ನೆಲ್ಲಿಗೆ ಹೋಗಿ ಮುಳುಗುತ್ತದೆಯೋ! ಎಂದು ಅಂಬೇಡ್ಕರರು ನಿಟ್ಟುಸಿರು ಬಿಡುತ್ತಾರೆ. ಹೌದು, ಕಾಶ್ಮೀರಕ್ಕೆ ಸಂಬಂಧಿಸಿದಂತೆ, ಹಿಂದೂ ಕಾನೂನು ಸಂಹಿತೆಗೆ ಸಂಬಂದಿಸಿದಂತೆ ಅಂದಿನ ಪ್ರದಾನಿ ನೆಹರುರವರ ನಿಲುವಿನ ಬಗ್ಗೆ ಅಂಬೇಡ್ಕರರಿಗೆ ಅಸಮಾಧಾನವಿತ್ತು. ಹಾಗೆಯೇ ತಮ್ಮ ದೂರದೃಷ್ಟಿಯ ನಿಲುವನ್ನು ಒಪ್ಪದ ಈ ದೇಶದ ಜಾತೀಯ ಮನಸ್ಸುಗಳ ಬಗ್ಗೆಯೂ ಅಂಬೇಡ್ಕರರಿಗೆ ಅಷ್ಟೇ ಅಕ್ರೋಶವಿತ್ತು. ಮುಂದುವರಿದು ಅವರು ಅದೇನೇ ಇರಲಿ ನನ್ನ ವಿರುದ್ಧ ಟೀಕೆಗಳ ಸುರಿಮಳೆಯೇ ಸುರಿದರೂ ನಾನು ಅನೇಕ ಉತ್ತಮ, ಮೆಚ್ಚುವಂತಹ ಕಾರ್ಯಗಳನ್ನು ಮಾಡಿದ್ದೇನೆ. ಹಾಗೆಯೇ ನಾನು ಸಾಯುವವರೆಗೂ ಅಂತಹ ಕಾರ್ಯಗಳನ್ನು ಮಾಡುತ್ತಲೇ ಇರುತ್ತೇನೆ ಎನ್ನುತ್ತಾ ಇದ್ದಕ್ಕಿದ್ದಂತೆ ಗದ್ಗದಿತರಾಗುತ್ತಾರೆ. ಕಣ್ಣಾಲಿಗಳು ನೀರು ತುಂಬಿಕೊಳ್ಳುತ್ತವೆ. ಆ ಕ್ಷಣ ಬಾಬಾಸಾಹೇಬರು ಅಕ್ಷರಶಃ ಗಳಗಳನೆ ಅಳುತ್ತಾರೆ. ಹಾಗೆ ಅಳುತ್ತಾ ಸಹಾಯಕ ನಾನಕ್ ಚಂದ್ ರತ್ತುರತ್ತ ಒಮ್ಮೆ ನೊಡುತ್ತಾರೆ. ಸಹಜವಾಗಿ ರತ್ತುರವರು ಕೂಡ ಆ ಕ್ಷಣದಲ್ಲಿ ಬಾಬಾಸಾಹೇಬರ ದುಖಃದಲ್ಲಿ ಸಹಪಾಠಿಯಾಗಿರುತ್ತಾರೆ! ಬಾಬಾಸಾಹೇಬರಿಗೆ ಏನನ್ನಿಸಿತೋ? ಆ ಕಡೆ ಒಮ್ಮೆ, ಈ ಕಡೆ ಒಮ್ಮೆ ನೋಡುತ್ತಾ ಸ್ವಲ್ಪ ಸಾವರಿಸಕೊಂಡು ರತ್ತುರವನ್ನು ಸಮಾಧಾನಿಸುತ್ತಾ ಮೆಲ್ಲಗೆ ಹೇಳುತ್ತಾರೆ ಧೈರ್ಯ ತಂದುಕೋ ರತ್ತು. ಎದೆಗುಂದಬೇಡ. ಎಂದಾದರೊಂದುದಿನ ಈ ಜೀವನ ಕೊನೆಗೊಳ್ಳಲೇಬೇಕು! ಜೀವನ.... ಕೊನೆ.... ಬಾಬಾಸಾಹೇಬರ ಈ ಮಾತುಕೇಳುತ್ತಲೆ ರತ್ತು ಅಘಾತಕ್ಕೊಳಗಾದರು. ಅವರ ಈ ಮಾತಿನ ಅರ್ಥವಾದರೂ ಏನು ಎಂದು ಗಾಭರಿಗೊಂಡರು. ಆ ಕ್ಷಣ ಏನು ಮಾಡಬೇಕೆಂದು ರತ್ತುರವರಿಗೆ ತೋಚದೆ ಇರುವಾಗ ಬಾಬಾಸಾಹೇಬರೇ ತಮ್ಮ ಕಣ್ಣ ನೀರು ವರೆಸಿಕೊಂಡು ಕೈಯನ್ನು ಸ್ವಲ್ಪ ಮೇಲೆ ಎತ್ತಿ ಹೀಗೆ ಹೇಳುತ್ತಾರೆ. ನಾನಕ್ ಚಂದ್, ನನ್ನ ಜನರಿಗೆ ಹೇಳು, ನಾನು ಇದುವರೆವಿಗೂ ಏನನ್ನು ಸಾಧಿಸಿರುವೆನೋ ಅದನ್ನು ನನ್ನ ಜೀವನಪರ್ಯಂತ ನನ್ನ ಶತ್ರುಗಳ ಜೊತೆ ಕಾದಾಡುತ್ತಾ, ಅನಿಯತ ಸಮಸ್ಯೆಗಳನ್ನು ಎದುರಿಸುತ್ತಾ, ನಿರಂತರ ನೋವನ್ನು ಅನುಭವಿಸುತ್ತಾ ಪಡೆದಿದ್ದೇನೆ. ತುಂಬಾ ಶ್ರಮವಹಿಸಿ ನಾನೀ ಹೋರಾಟದ ರಥವನ್ನು ಈಗ ಅದು ಎಲ್ಲಿದೆಯೋ ಅಲ್ಲಿಯವರೆಗೆ ತಂದಿದ್ದೇನೆ. ಏನೇ ಅಡೆತಡೆ ಬರಲಿ, ಅದರ ಮಾರ್ಗದಲ್ಲಿ ಎಂತಹದ್ದೇ ಏರುಪೇರುಗಳಾಗಲೀ, ತೊಂದರೆಗಳಾಗಲೀ ಆ ಹೋರಾಟದ ರಥ ಮುನ್ನಡೆಯಲೇ ಬೇಕು. ಅಕಸ್ಮಾತ್ ಈ ರಥವನ್ನು ನನ್ನ ಜನ ಮತ್ತು ನನ್ನ ಸಹಪಾಠಿಗಳು ಮುನ್ನಡೆಸಲು ಸಾಧ್ಯವಾಗದಿದ್ದರೆ ಈಗ ಅದು ಎಲ್ಲಿದೆಯೋ ಅದನ್ನು ಅಲ್ಲಿಯೇ ಇರಲು ಬಿಡಬೇಕು. ಯಾವುದೇ ಸಂದರ್ಭದಲ್ಲಿಯೂ, ಯಾವುದೇ ಕಾರಣಕ್ಕೂ ಅದನ್ನು ಹಿಂದೆ ಸರಿಯಲು ಬಿಡಬಾರದು. ನನ್ನ ಅನಾರೋಗ್ಯದ ಸಂದರ್ಭದಲ್ಲಿ ಇದು ನನ್ನ ಜನರಿಗೆ ನಾನು ನೀಡುತ್ತಿರುವ ಸಂದೇಶ. ಬಹುಶಃ ನನ್ನ ಕೊನೆಯ ಸಂದೇಶ. ಇದನ್ನು ನೀನು ಅವರಿಗೆ ಹೇಳು..., ಹೋಗು... ಅವರಿಗೆ ಹೇಳು..., ಹೋಗು... ಅವರಿಗೆ ಹೇಳು... ಎನ್ನುತ್ತಾ ಅಂಬೇಡ್ಕರರು ನಿದ್ರೆಗೆ ಹೊರಳುತ್ತಾರೆ. ಪ್ರಶಸ್ತಿ, ಗೌರವ ಕರಡು ಸಮಿತಿಯ ಅದ್ಯಕ್ಷರಾಗಿದ್ದ ಅಂಬೇಡ್ಕರ ಅವರು ಸಹಜವಾಗಿ ಸಂವಿಧಾನ ಶಿಲ್ಪಿ ಎನಿಸಿದರು. ಅಂಬೇಡ್ಕರ್ ಅವರಿಗೆ ಭಾರತದ ಪರಮೋಚ್ಛ ನಾಗರಿಕ ಪುರಸ್ಕಾರ ಭಾರತ ರತ್ನ ವನ್ನು ಮರಣೋತ್ತರವಾಗಿ ಪ್ರಧಾನ ಮಾಡಲಾಯಿತು. ಸಂಸತ್ತು (ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿಯ) ಸದಸ್ಯರಾಗಿ ಅಂಬೇಡ್ಕರರನ್ನು ಆಗಿನ ಪ್ರಧಾನಿ ಜವಹರಲಾಲ್ ನೆಹರೂ ತಮ್ಮ ಮಂತ್ರಿಮಂಡಲದಲ್ಲಿ ಕಾನೂನು ಸಚಿವರಾಗುವಂತೆ ಆಹ್ವಾನಿಸಿದರು. ೧೯೫೨ ಜೂನ್ ೧೫ರಂದು ಕೊಲಂಬಿಯಾ ವಿಶ್ವವಿದ್ಯಾನಿಲಯವು ಅವರಿಗೆ ಕಾನೂನಿನ ಡಾಕ್ಟರೇಟ್(ಎಲ್ಎಲ್.ಡಿ) ಗೌರವ ಪದವಿ ಪ್ರದಾನ ಮಾಡಿತು. ೧೯೫೩, ಜನವರಿ ೧೨ರಂದು ಉಸ್ಮಾನಿಯಾ ವಿಶ್ವವಿದ್ಯಾನಿಲಯವು ಅವರಿಗೆ ಎಲ್ಎಲ್.ಡಿ ಗೌರವ ಪದವಿ ಕೊಟ್ಟು ಪುರಸ್ಕರಿಸಿತು. ೨೦೧೫ ವಿಶ್ವರತ್ನ ಪ್ರಶಸ್ತಿಕೊಲಂಬಿಯ ವಿಶ್ವವಿದ್ಯಾನಿಲಯದಿಂದ (ಮರಣೋತ್ತರ) ಅಂಬೇಡ್ಕರ್ ಅವರ ಪತ್ನಿಯ ವಿಚಾರ ಹೃದಯ ಸೌಜನ್ಯ, ಪರಿಶುದ್ಧ ಶೀಲ ಮತ್ತು ನಮಗೆ ಯಾವುದೇ ಹಿತಚಿಂತಕರು ಇಲ್ಲದಿದ್ದ ಆ ದಿನಗಳಲ್ಲಿ ನಮ್ಮ ಪಾಲಿಗೆ ಬಂದಿದ್ದ ಬಡತನ ಮತ್ತು ಸಂಕಷ್ಟಗಳಲ್ಲಿ ಶಾಂತಚಿತ್ತದಿಂದ ಮನಃಪೂರ್ವಕವಾಗಿ ನನ್ನನ್ನು ಸಂತೈಸುತ್ತ ಸಹಕರಿಸಿದ ರಮಾಗೆ ಈ ಕೃತಿ ಅರ್ಪಿತಡಾ. ಬಿ.ಆರ್.ಅಂಬೇಡ್ಕರ್ ತಮ್ಮ ಪುಸ್ತಕವನ್ನು ಮಡದಿ ರಮಾಬಾಯಿ ಅವರಿಗೆ ಅರ್ಪಿಸಿ ಬರೆದ ಮಾತುಗಳಿವು. ಬಾಹ್ಯ ಸಂಪರ್ಕಗಳು ಡಾ.ಯು.ಆರ್. ಅನಂತಮೂರ್ತಿಯವರು ಗಾಂಧಿ ಮತ್ತು ಅಂಬೇಡ್ಕರ್ ವ್ಯಕ್ತಿತ್ವವನ್ನು ಹೋಲಿಸಿ ಬರೆದಿರುವ ಲೇಖನ ವಿಮೋಚಕ ಬೌದ್ಧನಾದ ದಿನ 14 , 2016 ರಾಮಚಂದ್ರ ಗುಹಾಅಂಬೇಡ್ಕರ್ ನೆನಪು: ಅಂದು ಮತ್ತು ಇಂದು14 , 2016 ಬಿ.ಎನ್.ರಾವ್: ಸಂವಿಧಾನ ಕರಡುಕರ್ತಬೆನಗಲ್ ನರಸಿಂಗ ರಾಯರ ಸ್ಮರಣೆ ಬಾರದೇ?ಸುಧೀಂದ್ರ ಬುಧ್ಯ4 , 2015 ಸಾಮಾಜಿಕ ಕಾರ್ಯಕರ್ತರು ಸ್ವಾತಂತ್ರ್ಯ ಹೋರಾಟಗಾರರು ಭಾರತದ ಗಣ್ಯರು ಭಾರತರತ್ನ ಪುರಸ್ಕೃತರು ವಿಶ್ವರತ್ನ ಪುರಸ್ಕೃತರು ೧೮೯೧ ಜನನ ೧೯೫೬ ನಿಧನ
ಕ್ರಿಕೆಟ್ ಎಂಬುದು ದಾಂಡು ಮತ್ತು ಚೆಂಡುಗಳ ಆಟ. ಬ್ಯಾಟ್ ಮತ್ತು ಚೆಂಡುಗಳಿಗೆ ಸಂಬಂಧಪಟ್ಟ ಪಂಗಡದ ಆಟವೆಂದೂ ಹಾಗೂ ೧೬ನೇ ಶತಮಾನದಲ್ಲಿ ದಕ್ಷಿಣ ಇಂಗ್ಲೆಂಡಿನಲ್ಲಿ ಆಡಲ್ಪಟ್ಟಿದ್ದು ಎಂಬ ಬಗ್ಗೆ ಆಧಾರವಿದೆ.೧೮ನೇಯ ಶತಮಾನದ ಅಂತ್ಯದ ಸಮಯದಲ್ಲಿ ಕ್ರಿಕೆಟ್ ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆಯಾಗಿ ಅಭಿವೃದ್ಧಿ ಹೊಂದಿತ್ತು. ಬ್ರಿಟೀಷ್ ಸಾಮ್ರಾಜ್ಯದ ವಿಸ್ತರಣೆಯು ಸಮುದ್ರದಾಚೆಗಿನ ದೇಶಗಳೊಡನೆ ಕ್ರಿಕೆಟ್ ಅಡಲು ಅನುವು ಮಾಡಿಕೊಟ್ಟಿತು ಮತ್ತು ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ನಡೆಸಲಾಗಿತ್ತು.ಇಂದು ಆಟಗಳ ಆಡಳಿತಾತ್ಮಕ ಅಂಗವಾದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ೧೦೪ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಆಟದ ನಿಯಮಾವಳಿಗಳು ಕ್ರಿಕೆಟ್ನ ಕಾನೂನುಗಳು ಎಂದು ಪರಿಚಿತವಾಗಿವೆ. ಇವೆಲ್ಲವುಗಳ ಉಸ್ತುವಾರಿಯನ್ನು ಗ್ರಂಥಸ್ವಾಮ್ಯ ಹೊಂದಿರುವ ಮತ್ತು ಮೆಲ್ಬೋರ್ನ್ ಕ್ರಿಕೆಟ್ ಕ್ಲಬ್ ನೋಡಿಕೊಳ್ಳುತ್ತಿದೆ.ಕ್ರಿಕೆಟ್ ಆಟವನ್ನು ಕ್ರಿಕೆಟ್ ಮೈದಾನದ ಮಧ್ಯಭಾಗದಲ್ಲಿರುವ ಪಿಚ್ ಮೇಲೆ ಆಡಿಸಲಾಗುತ್ತದೆ.ಪಂದ್ಯವನ್ನು ಒಂದೊಂದು ಪಂಗಡದಲ್ಲಿಯೂ ಹನ್ನೊಂದು ಜನ ಆಟಗಾರರು ಇರುವ ಎರಡು ಪಂಗಡಗಳ ನಡುವೆ ಆಡಿಸಲಾಗುತ್ತದೆ.ಬ್ಯಾಟಿಂಗ್ ಮಾಡುತ್ತಿರುವ ಪಂಗಡ ಔಟ್ ಆಗದೆ ಸಾಧ್ಯವಾದಷ್ಟು ರನ್ ಗಳಿಸಲು ಪ್ರಯತ್ನಿಸುತ್ತಿದ್ದರೆ ಬೌಲಿಂಗ್ ಮತ್ತು ಫೀಲ್ಡಿಂಗ್ ಮಾಡುತ್ತಿರುವ ಇನ್ನೊಂದು ಪಂಗಡ ಬ್ಯಾಟಿಂಗ್ ಮಾಡುತ್ತಿರುವ ಪಂಗಡದ ಬ್ಯಾಟ್ಸ್ಮನ್ಗಳನ್ನ ಚದುರಿಸಿ ಕಡಿಮೆ ಅಂಕಕ್ಕೆ ಮಿತಿಗೊಳಿಸಲು ಪ್ರಯತ್ನಿಸುತ್ತಿರುತ್ತದೆ. ಯಾವಾಗ, ಬ್ಯಾಟಿಂಗ್ ಮಾಡುತ್ತಿದ್ದ ಪಂಗಡ ತನಗೆ ಲಬ್ಯವಿದ್ದ ಎಲ್ಲಾ ಒವರ್ಗಳನ್ನೂ ಬಳಸಿಕೊಂಡಿದ್ದು ಅಥವಾ ಎಲ್ಲಾ ಬ್ಯಾಟ್ಸ್ಮನ್ಗಳು ಔಟ್ ಆದ ನಂತರ ವ್ಯತಿರಿಕ್ತವಾಗಿ ಈಗ ಪ್ರತಿಸ್ಪರ್ಧಿಯ ಅಂಕಗಳನ್ನ ದಾಟುವುದು ಫೀಲ್ಡಿಂಗ್ ಮಾಡುತ್ತಿದ್ದ ಪಂಗಡದ ಸರದಿಯಾಗುತ್ತದೆ. ಕ್ರಿಕೆಟ್ ಆಟದ ಪರಿಧಿಯಲ್ಲಿ ಹಲವಾರು ರೀತಿಯ ಬದಲಾವಣೆಗಳಿವೆ. ವೃತ್ತಿಪರ ಕ್ರಿಕೇಟಿನಲ್ಲಿ ಈ ವ್ಯಾಪ್ತಿಯನ್ನು ಪ್ರತಿ ಭಾಗಕ್ಕೂ ೨೦ ಒವರುಗಳಿಗೆ ಸೀಮಿತಗೊಳಿಸಿ ಸೀಮಿತ ಒವರುಗಳ ಕ್ರಿಕೆಟ್ ಎಂದು ೫ ದಿನಗಳವರೆಗಿನ ಟೆಸ್ಟ್ ಕ್ರಿಕೇಟ್ ಪ್ನ್ನಂದ್ಯವನ್ನು ಆಡಿಸಲಾಗುತ್ತದೆ.ಆಡಿಸಲ್ಪಟ್ಟ ಆಟದ ಸ್ವರೂಪಕ್ಕೆ ಅನುಗುಣವಾಗಿ ವಿವಿಧ ರೀತಿಯ ನಿಯಮಮಗಳ ಮೂಲಕ ಆಟ ಗೆದ್ದಿದೆಯೊ, ಸೋತಿದೆಯೊ, ಸಮನಾಗಿದೆಯೊ ಅಥವಾ ತಡೆಹಿಡಿಯಲಾಗಿದೆಯೊ ಎಂದು ನಿರ್ಣಯಿಸಲಾಗುತ್ತದೆ. ಉದ್ದೇಶಗಳು ಕ್ರಿಕೆಟ್ ಪಂದ್ಯವನ್ನು ಒಂದೊಂದು ಪಂಗಡದಲ್ಲೂ ಹನ್ನೊಂದು ಆಟಗಾರರಿರುವಂತೆ ಎರಡು ಪಂಗಡಗಳ (ಅಥವಾ ಬದಿಗಳ) ನಡುವೆ ವಿವಿಧ ರೀತಿಯ ಗಾತ್ರ ಮತ್ತು ಆಕಾರದ ಮೈದಾನದಲ್ಲಿ ಆಡಿಸಲಾಗುತ್ತದೆ.ಮೈದಾನವು ಹುಲ್ಲುಗಳಿಂದ ಆವೃತವಾಗಿರುತ್ತದೆ ಮತ್ತು ಇದು ಮೈದಾನದ ಫಲವತ್ತತೆಯನ್ನು ನೋಡಿಕೊಳ್ಳುವ, ಕಟಾವು ಮಾಡುವ, ರೋಲಿಂಗ್ ಮಾಡುವ ಮತ್ತು ಮೇಲ್ಪದರವನ್ನು ಸಮಾನಗೋಳಿಸುವ ಕೆಲಸಗಾರರಿಂದ ರಚಿಸಲ್ಪಟ್ಟಿರುತ್ತದೆ. ಇದರ ಮೈದಾನದ ಡಯಾಮೀಟರ್ಗಳು ಸಾಮಾನ್ಯವಾಗಿರುತ್ತವೆಮೈದಾನದ ಪರಿಧಿಯನ್ನು ಬೌಂಡರಿ ಎಂದು ಕರೆಯಲಾಗುತ್ತದೆ ಮತ್ತು ಮೈದಾನದ ಹೊರಗಿನ ಬದಿಯನ್ನು ಕೆಲವೊಮ್ಮೆ ಬಣ್ಣದ ಮೂಲಕವೂ ಮತ್ತು ಕೆಲವೊಮ್ಮೆ ಹಗ್ಗದ ಮೂಲಕವೂ ಸುತ್ತುವರಿಯಲಾಗುತ್ತದೆ. ಮೈದಾನವು ಗೋಲಾಕಾರದಲ್ಲೂ, ಚೌಕಾಕಾರದಲೂ ಅಥವಾ ಮೊಟ್ಟೆಯಾಕಾರದಲ್ಲು ಇರಬಹುದುದಿ ಒವೆಲ್ ಅನ್ನು ಕ್ರಿಕೇಟಿನ ಅತ್ಯಂತ ಪ್ರಸಿಧ್ದ ಸ್ಥಳವೆಂದು ಕರೆಯಲಾಗಿದೆ. ಪ್ರತಿಯೊಂದು ಪಂಗಡದ ಮೂಲ ಉದ್ದೇಶ ಹೆಚ್ಚು ರನ್ಗಳನ್ನು ಗಳಿಸುವುದಲ್ಲದೆ ಸಂಪೂರ್ಣವಾಗಿ ಇನ್ನೊಂದು ಪಂಗಡವನ್ನು ವಿಸರ್ಜಿಸುವುದಾಗಿದೆಕ್ರಿಕೆಟ್ನ ಒಂದು ಸ್ವರೂಪದಲ್ಲಿ, ಎದುರಾಳಿ ತಂಡವು ಸಂಪೂಣ೯ವಾಗಿ ಔಟ್ ಆಗದಿದ್ದರೂ ಕೂಡ ಹೆಚ್ಚಿಗೆ ರನ್ ಗಳಿಸುವುದರ ಮೂಲಕ ಆಟವನ್ನು ಗೆಲ್ಲಬಹುದಾಗಿದೆ.ಇನ್ನೊಂದು ಸ್ವರೂಪದಲ್ಲಿ, ಪಂದ್ಯವನ್ನು ಗೆಲ್ಲಲು ಕಡ್ಡಾಯವಾಗಿ ಅಧಿಕ ರನ್ ಗಳಿಸಲೇಬೇಕು ಮತ್ತು ಎದುರಾಳಿ ತಂಡವನ್ನು ಸಂಪೂರ್ಣವಾಗಿ ವಿಸರ್ಜಿಸಬೇಕು, ಇಲ್ಲವಾದಲ್ಲಿ ಪಂದ್ಯವನ್ನು ಸಮಾನಗೋಳಿಸಲಾಗುವುದು. ಆಟ ಪ್ರಾರಂಭವಾಗುವುದಕ್ಕೂ ಮೊದಲು, ಎರಡೂ ತಂಡದ ನಾಯಕರು ಕೂಡಿ ಯಾವ ತಂಡ ಮೊದಲು ಬ್ಯಾಟ್ ಅಥವಾ ಬೌಲ್ ಮಾಡಬೇಕು ಎಂಬುದನ್ನು ನಿರ್ಧರಿಸಲು ನಾಣ್ಯವನ್ನು ಟಾಸ್ ಮಾಡುವರು.ಟಾಸ್ ಗೆದ್ದ ನಾಯಕನು ಪ್ರಸ್ತುತ ಮತ್ತು ನಿರೀಕ್ಷಿತ ಮೈದಾನದ ವಿವರಗಳು ಮತ್ತು ಹವಾಮಾನ ಸ್ಥಿತಿಗಳನ್ನು ಒಳಗೊಂಡಂತೆ ಚತುರ ವಿವೇಚನೆಯ ಮೂಲಕ ತನ್ನ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಮುಖ್ಯ ಕಾರ್ಯ ಅರಂಭವಾಗುವುದು, ವಿಶೇಷವಾಗಿ ರಚಿಸಲ್ಪಟ್ಟ ಮೈದಾನದ (ಸಾಮಾನ್ಯವಾಗಿ ಮಧ್ಯದಲ್ಲಿ) ಮಧ್ಯಭಾಗವಾದ ಪಿಚ್ನಲ್ಲಿ. ಪಿಚ್ನ ಎರಡೂ ಕೊನೆಯಲ್ಲಿ ಅಂತರದಲ್ಲಿ ವಿಕೇಟ್ಗಳನ್ನು ನೆಡಲಾಗಿರುತ್ತದೆ.ಇವುಗಳು ಬೌಲಿಂಗ್ (ಫೀಲ್ಡಿಂಗ್ ಎಂದು ಕೂಡ ಕೆರೆಯಲಾಗುತ್ತದೆ) ಅಲಿಯಾಸ್ ಫೀಲ್ಡಿಂಗ್ ತಂಡದ ಗುರಿಸಾಧನೆಗೆ ಸಹಾಯಕಾರಿಯಾದರೆ ಬ್ಯಾಟಿಂಗ್ ತಂಡ ತನ್ನನ್ನು ರಕ್ಷಿಸಿಕೊಂಡು ಅಧಿಕ ರನ್ ಗಳಿಸಲು ಸಹಕರಿಸುತ್ತದೆ. ಬ್ಯಾಟ್ಸ್ಮನ್ ತನ್ನ ಬ್ಯಾಟ್ ಮೂಲಕ ಚೆಂಡನ್ನು ಹೊಡೆದ ನಂತರ ಪಿಚ್ನ ಉದ್ದಕ್ಕೆ ಓಡಿದಾಗ ಮಾತ್ರ ಅಧಿಕ ರನ್ಗಳನ್ನು ಗಳಿಸಲು ಸಾಧ್ಯ. ಆದಾಗ್ಯೂ ಅಧಿಕ ರನ್ ಗಳಿಸುವ ಹಲವಾರು ವಿಧಾನಗಳನ್ನು ಕೆಳಗೆ ವಿವರಿಸಲಾಗಿದೆ.ಬ್ಯಾಟ್ಸ್ಮನ್ ಹೆಚ್ಚಿನ ಯಾವುದೇ ರನ್ ಗಳಿಸಲು ಪ್ರಯತ್ನಿಸದಿದ್ದರೆ, ಚೆಂಡನ್ನು ಡೆಡ್ ಎಂದು ಭಾವಿಸಿ ಅದನ್ನು ಬೌಲರ್ಗೆ ಮತ್ತೆ ಬೌಲ್ ಮಾಡಲು ಹಿತಿರುಗಿಸಲಾಗುತ್ತದೆ. ಬ್ಯಾಟಿಂಗ್ ತಂಡ ಸಂಪೂರ್ಣ ಆಲ್ ಔಟ್ ಆಗುವವರೆಗೂ ಬೌಲಿಂಗ್ ತಂಡ ವಿವಿಧ ವಿಧಾನಗಳ ಮೂಲಕ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡಲು ಪ್ರಯತ್ನಿಸುತ್ತಿರುತ್ತದೆ, ಆನಂತರದಲ್ಲಿ ಮೊದಲು ಬೌಲಿಂಗ್ ಮಾಡುತ್ತಿದ್ದ ತಂಡ ಸರದಿಯಂತೆ ಬ್ಯಾಟಿಂಗ್ ಮತ್ತು ಮೊದಲು ಬ್ಯಾಟಿಂಗ್ ಮಾಡುತ್ತಿದ್ದ ತಂಡ ಫೀಲ್ಡಿಂಗ್ ಮಾಡಬೇಕಾಗುತ್ತದೆ. ವೃತ್ತಿಪರ ಕ್ರಿಕೆಟ್ ಪಂದ್ಯದಲ್ಲಿ, ಮೈದಾನದಲ್ಲಿ ಆಟ ನಡೆಯುತ್ತಿರುವಾಗ ೧೫ ಜನರು ಉಪಸ್ಥಿತರಿರುತ್ತಾರೆ ಅವರಲ್ಲಿ ಇಬ್ಬರು ಮೈದಾನದ ಎಲ್ಲಾ ಚಟುವಟಿಕೆಗಳನ್ನೂ ನಿಯಂತ್ರಿಸುವ ಅಂಪೈರ್ಗಳು, ಇಬ್ಬರು ಬ್ಯಾಟ್ಸ್ಮನ್ಗಳು, ಅವರಲ್ಲಿ ಒಬ್ಬನನ್ನು ಚೆಂಡನ್ನು ಎದುರಿಸುವ ಸ್ಟ್ರೈಕರ್ ಹಾಗೂ ಇನ್ನೊಬ್ಬನನ್ನು ನಾನ್ ಸ್ಟ್ರೈಕರ್ ಎನ್ನುವರು. ರನ್ಗಳನ್ನು ಗಳಿಸಿದ ನಂತರ ಮತ್ತು ಒವರ್ಗಳು ಮುಗಿದ ನಂತರ ಪರಸ್ಪರ ಬದಲಾಗುವುದು ಬ್ಯಾಟ್ಸ್ಮನ್ಗಳ ಕರ್ತವ್ಯವಾಗಿದೆ. ಫೀಲ್ಡಿಂಗ್ ಮಾಡುತ್ತಿರುವ ತಂಡದ ಎಲ್ಲಾ ೧೧ ಆಟಗಾರರೂ ಒಟ್ಟಿಗೇ ಮೈದಾನದಲ್ಲಿ ಉಪಸ್ಥಿತರಿರುತ್ತಾರೆ. ಅವರಲ್ಲಿ ಒಬ್ಬನನ್ನು ಬೌಲರ್, ಮತ್ತೊಬ್ಬನನ್ನು ವಿಕೇಟ್ ಕೀಪರ್ ಹಾಗು ಉಳಿದ ಒಂಬತ್ತು ಜನರನ್ನು ಫೀಲ್ಡರ್ಗಳು ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ವಿಕೇಟ್ ಕೀಪರ್ (ಅಥವಾ ಕೀಪರ್) ಯಾವಾಗಲೂ ನಿಷ್ಣಾತನಾಗಿರುತ್ತಾನೆ ಅದರೆ ಮೈದಾನದಲ್ಲಿರುವ ಫೀಲ್ಡರ್ಗಳಲ್ಲಿ ಯಾರನ್ನು ಬೇಕಾದರೂ ಬೌಲ್ ಮಾಡಲು ಕರೆಯಬಹುದು. ಪಿಚ್, ವಿಕೇಟ್ಸ್ ಮತ್ತು ಕ್ರೀಸ್ಗಳು ಪಿಚ್, ಎರಡೂ ವಿಕೇಟ್ಗಳ ನಡುವೆ ಒಂದು ಸಾಲಿನಂತೆ ೨೨ ಅಡಿಯಷ್ಟು (ಒಂದು ಸರಪಳಿಯಂತೆ) ಉದ್ದವಾಗಿರುತ್ತದೆ ಮತ್ತು ೧೦ ಅಡಿ ಅಗಲವಾಗಿರುತ್ತದೆ. ಇದು ಸಮತಟ್ಟಾದ ಮೇಲ್ಮೈಯ್ಯನ್ನು ಹೋದಿಂದೆ ಮತ್ತು ಇದರ ಮೇಲೆ ಅತ್ಯಂತ ಸಣ್ಣ ಪ್ರಮಾಣದ ಹುಲ್ಲುಗಳಿದ್ದು ಆಟ ಮುಂದುವರೆದಂತೆ ಅವು ನಶಿಸಿ ಹೋಗುತವೆ. ಪಿಚ್ನ ಸ್ಥಿತಿ ಪಂದ್ಯದ ಮೇಲೆ ಗಮನಾರ್ಹ ಪರಿಣಾಮವನ್ನುಂಟುಮಾಡುತ್ತದೆ ಮತ್ತು ತಂಡದ ಚಾತುರ್ಯಗಳನ್ನು ಯಾವಾಗಲೂ ಪಿಚ್ನ ಸ್ಥಿತಿಯೊಂದಿಗೆ ಪ್ರಚಲಿತ ಮತ್ತು ನಿರೀಕ್ಷಿತ ನಿರ್ಧಾರಕ ಅಂಶವಾಗಿ ನಿರ್ಧರಿಸಲಾಗುತ್ತದೆ. ಪ್ರತಿಯೊಂದು ವಿಕೇಟ್ ಮೂರು ಮರದ ಸ್ಟಂಪ್ನಿಂದ ರಚನೆಗೊಂಡಿದ್ದು ನೇರವಾಗಿ ಪಿಚ್ನಲ್ಲಿ ನೆಡಲಾಗುತ್ತದೆ, ಮೇಲೆ ಬೇಲ್ಸ್ ಎಂದು ಕರೆಯಿಸಿಕೊಳ್ಳುವ ಎರಡು ಮರದ ತುಂಡುಗಳು ಸುತ್ತುವರೆದಿರುತ್ತವೆ. ಬೇಲ್ಸ್ ಒಳಗೊಂಡಂತೆ ವಿಕೇಟ್ಗಳ ಸಂಪೂರ್ಣ ಉದ್ದ ಇದ್ದರೆ ಮೂರು ಸ್ಟಂಪ್ಗಳ ಅಗಲ ಇರುತ್ತದೆ. ಬ್ಯಾಟ್ಸ್ಮನ್ಗಳ ಸುರಕ್ಷಿತ ಪ್ರದೇಶವನ್ನು ಗುರುತಿಸಲು ಮತ್ತು ಬೌಲರ್ಗಳ ಪ್ರವೇಶವನ್ನು ಮಿತಿಗೊಳಿಸಲು ಪಿಚ್ ಮೇಲೆ ವಿಕೇಟ್ನ ಸುತ್ತಲು ಬಣ್ಣದಿಂದ ರಚಿಸಲ್ಪಟ್ಟಿರುವ ನಾಲ್ಕು ರೇಕೆಗಳನ್ನು ಕ್ರೀಸ್ ಎಂದು ಕರೆಯಲಾಗುತ್ತದೆ. ಇವುಗಳನ್ನು ಪಾಪಿಂಗ್ (ಅಥವಾ ಬ್ಯಾಟಿಂಗ್) ಕ್ರೀಸ್, ಬೌಲಿಂಗ್ ಕ್ರೀಸ್ ಮತ್ತು ಎರಡು ರಿಟರ್ನ್ ಕ್ರೀಸ್ ಎಂದು ಕರೆಯುವರು. ಬೌಲಿಂಗ್ ಕ್ರೀಸ್ನಲ್ಲಿ ವಿಕೇಟ್ಗಳನ್ನು ಸುಲಭವಾಗಿ ಬೇರೆಯಾಗಲು ಅನುಕೂಲವಾಗುವ ರೀತಿಯಲ್ಲಿ ರೇಖೆಯ ಮೇಲೆ ನೇಡಲಾಗಿರುತ್ತದೆ.ಮಧ್ಯದಲ್ಲಿ ನೇಡಲಾಗಿರುವ ಸ್ಟಂಪ್ನಿಂದ ಬೌಲಿಂಗ್ ಕ್ರೀಸ್ ರಷ್ಟು ದೂರದಲ್ಲಿರುತ್ತದೆ. ಪಾಪಿಂಗ್ ಕ್ರೀಸ್ ಕೂಡ ವಿಕೇಟುಗಳ ಮುಂದೆ ಅಷ್ಟೇ ಅಂತರದಲ್ಲಿದ್ದು ಬೌಲಿಂಗ್ ಕ್ರೀಸ್ಗೆ ಸಮಾನವಾಗಿರುತ್ತದೆ.ರಿಟ್ರ್ನ್ ಕ್ರೀಸ್ಗಳು ಉಳಿದೆರಡವುಗಳಿಗೆ ಲಂಬವಾಗಿರುತ್ತವೆ ಅವು ಪಾಪಿಂಗ್ ಕ್ರೀಸ್ನ ಅಂಚಿಗೆ ಪಾರ್ಶ್ವವಾಗಿದ್ದು ಬೌಲಿಂಗ್ ಕ್ರೀಸ್ನ ಕೊನೆಯ ತುದಿಯಿಂದ ಸರಿಸುಮಾರು ಉದ್ದಕ್ಕೆ ಎಳೆಯಲಾಗುತ್ತದೆ. ಬೌಲರ್ ಚೆಂಡನ್ನು ಎಸೆಯುವಾಗ ಆತನ ಹಿಂದಿನ ಕಾಲಿನ ಪಾದ ಡೆಲಿವರಿ ಸ್ಟ್ರೈಡ್ ಮೇಲೆ, ಎರಡೂ ರಿಟರ್ನ್ ಕ್ರೀಸ್ನ ಒಳಗಡೆ ಮತ್ತು ಆತನ ಮುಂದಿನ ಕಾಲಿನ ಪಾದ ಪಾಪಿಂಗ್ ಕ್ರೀಸ್ನ ಮೇಲೆ ಅಥವಾ ಹಿಂದೆ ಇರಲೇಬೇಕು. ಒಂದು ವೇಳೆ ಬೌಲರ್ ಈ ನಿಯಮವನ್ನು ಮುರಿದರೆ ತೀರ್ಪುಗಾರರು ಆ ಎಸೆತವನ್ನು ನೊ ಬಾಲ್ ಎಂದು ನಿರ್ಣಯಿಸುವರು. ಪಾಪಿಂಗ್ ಕ್ರೀಸ್ನಿಂದ ದಾಂಡಿಗನಿಗಾಗುವ ಪ್ರಯೋಜನವೆಂದರೆ, ಇದು ಸ್ಟಂಪ್ಡ್ ಅಥವಾ ರನ್ ಔಟ್ ( ಕೆಳಗೆ ನೋಡಿ) ಅಗಬಹುದಾದ ಆತನ ಅಪಾಯಕಾರಿ ಪರಿಧಿಯ ಮಿತಿಯನ್ನು ಸೂಚಿಸುತ್ತದೆ. ಒಂದು ವೇಳೆ ಆತನು ಪರಿಧಿಯ ಹೊರಗಡೆ ಇರುವನು ಎಂದಾದರೆ ತನ್ನ ವಿಕೇಟ್ ಕಳೆದುಕೊಳ್ಳುತ್ತಾನೆ. ಪಿಚ್ನ ಸಾಂದ್ರತೆಯಲ್ಲಿ ಬದಲಾವಣೆಗಳಿರುತ್ತವೆ, ಈ ಬದಲಾವಣೆ ಬೌಲರ್ಗೆ ಚೆಂಡನ್ನು ಪುಟಿದೇಳಿಸಲು, ತಿರುಗಿಸಲು ಮತ್ತು ಎರಡೂ ವಿಧಾನವನ್ನು ಒಮ್ಮೆಗೆ ಬಳಸಿ ಬೌಲ್ ಮಾಡಲು ಲಭ್ಯವಾಗುತ್ತದೆ.ಗಡುಸಾದ ಪಿಚ್ ಸಾಮಾನ್ಯಾಗಿ ಎತ್ತರದ ಆದರೆ ಸಮರೂಪದ ಪುಟಿಯುವಿಕೆಯ ಕಾರಣದಿಂದಾಗಿ ಬ್ಯಾಟ್ ಮಾಡಲು ಅನುಕೂಲಕರವಾಗಿರುತ್ತದೆ.ಬಹುವಾಗಿ ಏಳುವ ಬಿರುಕುಗಳಿಂದಾಗಿ ಒಣಗಿದ ಪಿಚ್ಗಳು ಬ್ಯಾಟಿಂಗ್ಗೆ ಅನಾನುಕೂಲಕರವಾಗುತ್ತವೆ, ಮತ್ತು ಈ ಸ್ಥಿತಿ ಸಂಭವಿಸಿದಾಗಲೆಲ್ಲ ಸ್ಪಿನ್ನ್ನರ್ಗಳು ಪ್ರಮುಖ ಪಾತ್ರವಹಿಸಬಹುದಾಗಿದೆ.ತೇವವಿರುವ ಪಿಚ್ಗಳು ಅಥವಾ ಹುಲ್ಲಿನಿಂದ ಆವೃತವಾಗಿರುವ ಪಿಚ್ಗಳು (ಹಸಿರು ಪಿಚ್ಗಳು ಎಂದು ಕರೆಯಲಾಗುವ) ಒಳ್ಳೆಯ ವೇಗದ ಬೌಲರ್ಗಳಿಗೆ ಹೆಚ್ಚಿನ ಪುಟಿತವನ್ನು ಹೊರತೆಗೆಯಲು ಅವಕಾಶಮಾಡಿಕೊಡುತ್ತವೆ. ಈ ತರಹದ ಪಿಚ್ಗಳು ಪಂದ್ಯದುದ್ದಕ್ಕೂ ವೇಗದ ಬೌಲರ್ಗಳಿಗೆ ಸಹಾಯವಕಾಶ ನೀಡುತ್ತವೆ, ಆದರೆ ಆಟ ಮುಂದುವರಿದಂತೆ ಬ್ಯಾಟಿಂಗ್ಗೆ ಉತ್ತಮ ಅನುಕೂಲಕರವಾಗುವ ರೀತಿಯಲ್ಲಿ ಬದಲಾಗುತ್ತದೆ. ಬ್ಯಾಟ್ ಮತ್ತು ಬಾಲ್ ಆಟದ ಸಾರಾಂಶ ಇರುವುದು ಬೌಲರ್ ಪಿಚ್ನ ಒಂದು ತುದಿಯಿಂದ ಬೌಲನ್ನು ಬೀಸಿ ಬ್ಯಾಟ್ಸಮನ್ ಎಡೆಗೆ ಎಸೆದಾಗ ಮತ್ತು ಬ್ಯಾಟ್ಸಮನ್ ತನ್ನ ತೋಳುಗಳಿಂದ ಬ್ಯಾಟನ್ನು ಹಿಡಿದು ಆನ್ ಸ್ಟ್ರೈಕ್ನಲ್ಲಿ ಇನ್ನೊಂದು ತುದಿಯಿಂದ ಅದನ್ನು ಹೊಡೆದಾಗ. ಮೇಲೆ ಸಿಲೀಂಡರಿನಾಕಾರದ ಹಿಡಿಕೆಯನ್ನು ಹೊಂದಿದ್ದು ಬ್ಲೇಡ್ನ ಆಕಾರದಲ್ಲಿರುವ ಬ್ಯಾಟನ್ನು ಬಿಳಿ ವಿಲ್ಲೋ ಮರದ ಕಟ್ಟಿಗೆಯಿಂದ ಮಾಡಲಾಗಿರುತ್ತದೆ. ಬ್ಲೇಡ್ ಅಳತೆಗಿಂತ ಹೆಚ್ಚು ಅಗಲವಾಗಿರಬಾರದು ಮತ್ತು ಬ್ಯಾಟ್ನ ಒಟ್ಟೂ ಉದ್ದ ಅಳತೆಗಿಂದ ಹೆಚ್ಚಿಗೆ ಇರಬಾರದು. ಬಾಲನ್ನು ಕಠಿಣವಾದ ಚರ್ಮವನ್ನು ಎರಡೂ ಬದಿಯಲ್ಲಿ ಗೋಳಾಕಾರವಾಗಿ ಹೊಲಿದು ನ ಸುತ್ತಳತೆಗೆ ರಚಿಸಿರುತ್ತಾರೆ. ಚೆಂಡಿನ ಕಾಠೀಣ್ಯತೆ ಮತ್ತು ಚೆಂಡನ್ನು ಕ್ಕೂ ಹೆಚ್ಚು ವೇಗದಲ್ಲಿ ಎಸೆಯುವ ಕಾರಣದಿಂದ, ಬ್ಯಾಟ್ಸ್ಮನ್ ತನ್ನ ಮೇಲಿನ ಕಾಳಜಿಯಿಂದಾಗಿ ಪ್ಯಾಡ್ಗಳು (ಮೋಣಕಾಲು ಮತ್ತು ಅದರ ಕೆಳಭಾಗವನ್ನು ರಕ್ಷಿಸುವುದಕ್ಕೋಸ್ಕರ ರಚನೆಗೊಂಡಿದೆ), ಕೈಗಳಿಗಾಗಿ ಬ್ಯಾಟಿಂಗ್ ಗವಸುಗಳು, ತಲೆಯ ರಕ್ಷಣೆಗೆ ಒಂದು ಹೆಲ್ಮೆಟ್ ಮತ್ತು ಕಾಲಂಗಿಯ ಒಳಗೆ ಒಂದು ಬಾಕ್ಸ್ (ಎರಡು ತೊಡೆಗಳು ಕೂಡುವ ಭಾಗವನ್ನು ರಕ್ಷಿಸಿಕೊಳ್ಳುವುದಕ್ಕೋಸ್ಕರ) ಓಳಗೊಂಡಂತೆ ಇತರ ರಕ್ಷಣಾತ್ಮಕ ಉಡುಪುಗಳನ್ನು ಧರಿಸುತ್ತಾನೆ. ಕೆಲವು ಬ್ಯಾಟ್ಸಮನ್ಗಳು ಹೆಚ್ಚುವರಿ ಪ್ಯಾಡುಗಳನ್ನು ಅಂದರೆ ಥಾಯ್ ಪ್ಯಾಡ್, ಆರ್ಮ್ ಪ್ಯಾಡ್, ರಿಬ್ ಪ್ರೊಟೆಕ್ಟರ್ಸ್ ಮತು ಶೊಲ್ಡರ್ ಪ್ಯಾಡುಗಳನ್ನು ತಮ್ಮ ಮೇಲುಡುಪು ಮತ್ತು ಪ್ಯಾಂಟ್ ಒಳಗೆ ಧರಿಸುತ್ತಾರೆ. ಅಂಪೈರ್ಗಳು ಮತ್ತು ಸ್ಕೋರರ್ಗಳು ಮೈದಾನದ ಆಟ ಇಬ್ಬರು ಅಂಪೈರ್ಗಳಿಂದ ನಿಯಂತ್ರಿಸಲ್ಪಡುತ್ತದೆ, ಅವರಲ್ಲಿ ಒಬ್ಬ ಬೌಲರ್ನ ತುದಿಯ ವಿಕೇಟ್ನ ಹಿಂಬಾಗದಲ್ಲಿ ನಿಂತಿದ್ದರೆ ಇನ್ನೊಬ್ಬ ಆನ್ ಸ್ಟ್ರೈಕ್ ಬ್ಯಾಟ್ಸ್ಮನ್ ಬದಿಯಿಂದ ಸ್ಕೇಯರ್ ಲೆಗ್ ಎಂದು ಕರೆಯಲಾಗುವ ಪ್ರದೇಶದಲ್ಲಿ ಸುಮಾರು ೧೦೧೨ ಮೀಟರುಗಳಷ್ಟು ದೂರದಲ್ಲಿ ನಿಂತಿರುತ್ತಾನೆಬೌಲರ್ ಬೋಲನ್ನು ಎಸೆಯುವ ಸಮಯದಲ್ಲಿ ಅಂಪೈರ್ ವಿಕೇಟ್ನ ಬದಿಯಲ್ಲಿ ಬೌಲರ್ ಮತ್ತು ನಾನ್ ಸ್ಟ್ರೈಕರ್ನ ನಡುವೆ ನಿಂತಿರುತ್ತಾನೆ.ಆಡುವ ಸ್ಥಿತಿಗಳಲ್ಲಿ ಏನಾದರೂ ಅನುಮಾನಗಳಿದ್ದಲ್ಲಿ ಅಂಪೈರ್ಗಳು ಅದರ ಕುರಿತು ಸಮಾಲೋಚಿಸುತ್ತಾರೆ ಮತ್ತು ಅವರು ಅಗತ್ಯವಿದ್ದ ಸಂದರ್ಭದಲ್ಲಿ ಆಟಗಾರರನ್ನು ಮೈದಾನದಿಂದ ಹೊರಹೋಗುವಂತೆ ಮಾಡಿ ಪಂದ್ಯವನ್ನು ಮುಂದೂಡಬಹುದಾಗಿದೆ, ಉದಾಹರಣೆಗೆ ಮಳೆ ಅಥವಾ ಬೆಳಕಿನ ಅಭಾವವಿರುವ ಸಂದರ್ಭದಲ್ಲಿ. ಮೈದಾನದ ಹೊರಗೆ ಮತ್ತು ದೂರದರ್ಶನ ಸೇವೆ ಇರುವ ಪಂದ್ಯಗಳಲ್ಲಿ, ಯಾವಾಗಲೂ ಕೆಲವು ಘಟನೆಗಳ ವೀಡಿಯೋ ಸಾಕ್ಷಿಗಳ ಮೂಲಕ ನಿರ್ಧಾರ ತೆಗೆದುಕೊಳ್ಳಬಹುದಾದ ಒಬ್ಬ ಥರ್ಡ್ ಅಂಪೈರ್ ಇರುತ್ತಾನೆ. ಎರಡು ಖಾಯಂ ಸದಸ್ಯ ರಾಷ್ಟ್ರಗಳ ನಡುವೆ ನಡೆಸಲ್ಪಟ್ಟ ಟೆಸ್ಟ್ ಪಂದ್ಯಗಳು ಮತ್ತು ಅಂತಾರಾಷ್ಟ್ರೀಯ ಸೀಮಿತ ಒವರುಗಳ ಪಂದ್ಯಗಳಲ್ಲಿ ಆಟದ ನಿಯಮಗಳ ಪ್ರಕಾರ ಥರ್ಡ್ ಅಂಪೈರ್ ಕಡ್ಡಾಯವಾಗಿ ಇರಲೇಬೇಕು.ಈ ಪಂದ್ಯಗಳು, ಆಟ ಕ್ರಿಕೆಟ್ನ ನಿಯಮಗಳ ಪರಿಧಿಯ ಒಳಗೆ ಇದೆಯೋ ಎಂಬುದನ್ನು ನಿರ್ಧರಿಸುವ ಮತ್ತು ಆಟದ ಹುರುಪಿನ ಬಗ್ಗೆ ಖಚಿತಪಡಿಸುವ ಕೆಲಸ ನಿರ್ವಹಿಸುವ ಒಬ್ಬ ಮ್ಯಾಚ್ ರೆಫರಿಯನ್ನೂ ಕೂಡ ಒಳಗೊಂಡಿರುತ್ತವೆ. ಮೈದಾನದ ಹೊರಗೆ, ಪ್ರತಿ ತಂಡವನ್ನು ಪ್ರತಿನಿಧಿಸುವ ಇಬ್ಬರು ಕಛೇರಿಯ ಸ್ಕೋರರ್ಗಳ ಮೂಲಕ ರನ್ಗಳು ಮತ್ತು ಔಟ್ ಆದ ಬ್ಯಾಟ್ಸ್ಮನ್ಗಳನ್ನೊಳಗೊಂಡಂತೆ ಪಂದ್ಯದ ವಿವರಗಳನ್ನ ದಾಖಲಿಸಲಾಗುತ್ತದೆ ಸ್ಕೋರರ್ಗಳು ಅಂಪೈರ್ಗಳ ಕೈ ಸಂಜ್ಞೆಯ ಮೂಲಕ ನಿರ್ಧೇಶನ ಪಡೆಯುತ್ತಾರೆ. ಉದಾಹರಣೆಗೆ, ಅಂಪೈರ್ ತನ್ನ ಕೈಯ ಮುಂಬೆರಳನ್ನು ಎತ್ತಿ ಸಂಜ್ಞ್ನೆಯ ಮೂಲಕ ಬ್ಯಾಟ್ಸ್ಮನ್ ಔಟ್ (ವಿಸರ್ಜನೆಗೊಂಡಾಗ)ಆಗಿದ್ದಾನೆ ಎಂಬುದನ್ನ ತೋರಿಸುತ್ತಾನೆ ಬ್ಯಾಟ್ಸ್ಮನ್ ಬಾಲನ್ನು ಸಿಕ್ಸ್ಗ್ ಹೊಡೆದಾಗ ಅಂಪೈರ್ ತನ್ನ ಎರಡೂ ಕೈಗಳನ್ನ್ಹುತಲೆಯ ಮೇಲಕ್ಕೆತ್ತಿ ಸಂಜ್ಞ್ನೆಯ ಸೂಚಿಸುತ್ತಾನೆ. ಕ್ರಿಕೆಟ್ನ ನಿಯಮಗಳ ಪ್ರಕಾರ, ಬೌಲ್ ಮಾಡಲಾದ ಒವರ್ಗಳನ್ನು, ತೆಗೆದುಕೊಂಡ ವಿಕೆಟ್ಗಳನ್ನು ಮತ್ತು ಗಳಿಸಿದ ರನ್ಗಳನ್ನು ದಾಖಲಿಸಬೇಕಾದರೆ ಸ್ಕೋರರ್ಗಳು ಅವಶ್ಯವಾಗಿ ಇರಲೇಬೇಕು.ಪ್ರ್ಯಾಯೋಗಿಕವಾಗಿ, ಅವರು ರನ್ ರೇಟ್ ಮತ್ತು ಬೌಲಿಂಗ್ನ ವಿಶ್ಲೇಷಣೆಯಂತಹ ಹೆಚ್ಚುವರಿ ದತ್ತಾಂಶಗಳನ್ನು ಕೂಡ ಸಂಗ್ರಹಿಸುತ್ತಾರೆ. ಇನ್ನಿಂಗ್ಸ್ ಇನ್ನಿಂಗ್ಸ್ (ಏಕವಚನ ಮತ್ತು ಬಹುವಚನ, ಎರಡು ರೂಪದಲ್ಲೂ ನಿಂದ ಕೊನೆಯಾಗುವ ಪದ) ಎನ್ನುವ ಪದವನ್ನ ಬ್ಯಾಟಿಂಗ್ ತಂಡದ ಸಾಮೂಹಿಕ ಸಾಮರ್ಥ್ಯವನ್ನು ಗುರುತಿಸಲು ಬಳಸುತ್ತಾರೆ. ಸೈದ್ಧಾಂತಿಕವಾಗಿ, ಬ್ಯಾಟಿಂಗ್ ತಂಡದ ಎಲ್ಲಾ ಹನ್ನೊಂದು ಸದಸ್ಯರು ಬ್ಯಾಟ್ ಮಾಡುವ ಅವಕಾಶ ತೆಗೆದುಕೊಳ್ಳಬಹುದು ಆದರೆ ವಿವಿಧ ಕಾರಣಗಳಿಂದಾಗಿ ಅವರೆಲ್ಲರು ಹಾಗೆ ಮಾಡುವುದಕ್ಕೂ ಮುನ್ನವೇ ಒಂದು ಇನ್ನಿಂಗ್ಸ್ ಕೊನೆಯಾಗಬಹುದು (ಕೆಳಗೆ ನೋಡಿ). ಪಂದ್ಯವನ್ನು ಆಡಿಸಲ್ಪಟ್ಟ ಪ್ರಕಾರಕ್ಕೆ ಅನುಗುಣವಾಗಿ, ಪ್ರತಿಯೊಂದು ತಂಡವೂ ಹೆಚ್ಚಾಗಿ ಒಂದು ಅಥವಾ ಎರಡು ಇನ್ನಿಂಗ್ಸ್ಗಳನ್ನು ಹೊಂದಿರುತ್ತವೆ. ಇನ್ನಿಂಗ್ಸ್ ಎನ್ನುವ ಪದವನ್ನು ಕೆಲವೊಮ್ಮೆ ಬ್ಯಾಟ್ಸ್ಮನ್ಗಳ ವಯಕ್ತಿಕ ಕೊಡುಗೆಯನ್ನು ವಿವರಿಸಲು ಕೂಡ ಬಳಸಿಕೊಳ್ಳಲಾಗುತ್ತದೆ (ಉದಾಹರಣೆಗೆ: ಅವನು ಒಂದು ಉತ್ತಮವಾದ ಇನ್ನಿಂಗ್ಸ್ ಆಡಿದ, ಮುಂತಾದವುಗಳು) ಬೌಲರ್ನ ಮುಖ್ಯ ಗುರಿಯೆಂದೆರೆ, ಕ್ಷೇತ್ರ ರಕ್ಷಕರ ಪ್ರೋತ್ಸಾಹದೊಂದಿಗೆ ಬ್ಯಾಟ್ಸ್ಮನ್ನನ್ನು ಔಟ್ ಮಾಡುವುದಾಗಿದೆ. ಒಬ್ಬ ಬ್ಯಾಟ್ಸ್ಮನ್ ವಜಾಗೊಂಡನೆಂದರೆ ಆತನನ್ನು ಔಟ್ ಎಂದು ಕರೆಯಲಾಗುತ್ತೆದೆ ಮತ್ತು ಇದರ ಅರ್ಥ ಆತನು ಆಟದ ಮೈದಾನವನ್ನು ಬಿಡಬೇಕು ಮತ್ತು ಆತನು ತಂಡದ ಮುಂದಿನ ಇತರ ಬ್ಯಾಟ್ಸ್ಮನ್ಗಳಿಂದ ಬದಲಾಯಿಸಲ್ಪಡಬೇಕು. ಯಾವಾಗ ಹತ್ತೂ ಬ್ಯಾಟ್ಸ್ಮನ್ಗಳು ಔಟ್ ಆಗುತ್ತಾರೊ (ಅಂದರೆ ಆಲ್ ಔಟ್), ಆಗ ಸಂಪೂರ್ಣ ತಂಡ ವಜಾಗೊಂಳ್ಳುತ್ತದೆ ಮತ್ತು ಅವರ ಇನ್ನಿಂಗ್ಸ್ ಮುಕ್ತಾಯಗೊಳ್ಳುತ್ತದೆ. ಇಬ್ಬರು ಬ್ಯಾಟ್ಸ್ಮನ್ಗಳು ಯಾವಾಗಲೂ ಪಿಚ್ನ ಒಳಗಡೆ ಇರಲೇಬೇಕಾಗಿರುವುದರಿಂದ ವಜಾಗೊಳ್ಲದೇ ಉಳಿಯುವ ಕೊನೆಯ ಬ್ಯಾಟ್ಸ್ಮನ್ಗೆ ಒಬ್ಬನೆ ಆಟ ಮುಂದುವರೆಸಲು ಅವಕಾಶವಿರುವುದಿಲ್ಲ.ಈ ಬ್ಯಾಟ್ಸ್ಮನ್ ನಾಟ್ ಔಟ್ ಎಂದು ಕರೆಸಿಕೊಳ್ಲುತ್ತಾನೆ. ಒಂದು ವೇಳೆ ಹತ್ತೂ ಬ್ಯಾಟ್ಸ್ಮನ್ಗಳು ಔಟ್ ಆಗುವುದಕ್ಕಿಂತ ಮುನ್ನವೆ ಒಂದು ಇನ್ನಿಂಗ್ಸ್ ಮುಕ್ತಾಯವಾದರೆ ಆಗ ಇಬ್ಬರು ನಾಟ್ ಔಟ್ ಬ್ಯಾಟ್ಸ್ಮನ್ಗಳು ಉಳಿಯುತ್ತಾರೆ. ಒಂದು ಇನ್ನಿಂಗ್ಸ್ ಮೂರು ಕಾರಣಗಳಿಂದಾಗಿ ಮುಂಚಿತವಾಗಿಯೇ ಕೊನೆಗೊಳ್ಳಬಹುದು: ಬ್ಯಾಟಿಂಗ್ ತಂಡದ ನಾಯಕ ಇನ್ನಿಂಗ್ಸ್ ಮುಕ್ತಾಯಗೊಂಡಿದೆ ಎಂದು ನಿರ್ಣಯಿಸಿದ್ದರೆ (ಒಂದು ಜಾಣ್ಮೆಯ ನಿರ್ಧಾರ), ಅಥವಾ ಬ್ಯಾಟಿಂಗ್ ತಂಡ ತನ್ನ ಗುರಿಯನ್ನು ಮುಟ್ಟಿ ಆಟವನ್ನು ಗೆದ್ದಿದ್ದರೆ, ಅಥವಾ ಆಟ ಹವಾಮಾನ ವೈಪರಿತ್ಯ ಅಥವಾ ಸಮಯದ ಅಭಾವದಿಂದ ಮುಂಚಿತವಾಗಿಯೆ ಕೊನೆಗೊಂಡಿದ್ದರೆ.ಸೀಮಿತ ಒವರುಗಳ ಕ್ರಿಕೆಟ್ನಲ್ಲಿ, ನೀಡಲ್ಪಟ್ಟ ಕೊನೆಯ ಒವರು ಬೌಲ್ ಮಾಡುವವರೆಗೂ ಇಬ್ಬರು ಬ್ಯಾಟ್ಸ್ಮನ್ಗಳು ಮೈದಾನದಲ್ಲ್ಲಿ ಇರಬಹುದಾಗುದೆ. ಒವರುಗಳು ಬೌಲರ್ ಆರು ಎಸೆತಗಳ ಒಂದು ಗುಂಪನ್ನು ಬೌಲ್ ಮಾಡುತ್ತಾನೆ. (ಅಥವಾ ಬಾಲ್ಗಳು)ಮತ್ತು ಆ ಆರು ಬಾಲುಗಳ ಪ್ರತೀ ಗುಂಪನ್ನು ಒಂದು ಒವರ್ ಎಂದು ಕರೆಯುವರು. ತೀರ್ಪುಗಾರ ಒವರ್ ಎಂದು ಹೇಳಿದಾಗ ಅದು ಕೊನೆಗೊಳ್ಳುತ್ತದೆ. ಯಾವಾಗ ಈ ಆರು ಬಾಲುಗಳನ್ನೂ ಬೌಲ್ ಮಾಡಲಾಗುತ್ತದೆಯೊ ಆಗ ಮತ್ತೊಬ್ಬ ಬೌಲರ್ ಇನ್ನೊಂದು ತುದಿಯಿಂದ ಬೌಲ್ ಮಾಡಲು ತಯಾರಾಗುತ್ತಾನೆ ಮತ್ತು ಕ್ಷೇತ್ರರಕ್ಷಣಾ ತಂಡ ಬೌಲಿಂಗ್ ತುದಿಯನ್ನು ಬದಲಾಯಿಸುತ್ತಿರುತ್ತದೆ.ಒಬ್ಬ ಬೌಲರ್ ಒಂದೇ ಬಾರಿಗೆ ಅನುಕ್ರಮವಾಗಿ ಎರಡು ಒವರುಗಳನ್ನು ಬೌಲ್ ಮಾಡುವಹಾಗಿಲ್ಲ, ಅದಾಗ್ಯೂ ಒಬ್ಬ ಬೌಲರ್ ಹಲವಾರು ಒವರುಗಳನ್ನು ಪಿಚ್ನ ಒಂದೇ ತುದಿಯಿಂದ ಎಸೆಯಬಹುದಾಗಿದೆ.ಬ್ಯಾಟ್ಸ್ಮನ್ಗಳು ತಮ್ಮ ಸ್ಥಳವನ್ನು ಬದಲಾಯಿಸುವುದಿಲ್ಲ ಮತ್ತು ಮೊದಲು ನಾನ್ ಸ್ಟ್ರೈಕರ್ನಲ್ಲಿದ್ದವರು ಈಗ ಕ್ರಮವಾಗಿ ಸ್ಟ್ರೈಕರ್ಗೆ ಬದಲಾಗುತ್ತಾರೆ. ತೀರ್ಪುಗಾರರೂ ಕೂಡ ತಮ್ಮ ಸ್ಥಾನವನ್ನು ಬದಲಿಸುತ್ತಿರುತ್ತಾರೆ, ಹಾಗಾಗಿ ಮೊದಲು ಸ್ಕ್ವೇಯರ್ ಲೆಗ್ನಲ್ಲಿ ನಿಂತಿರುವವರು ಪ್ರತಿಕ್ರಮವಾಗಿ ಈಗ ನಾನ್ ಸ್ಟ್ರೈಕರ್ ಕೊನೆಯ ವಿಕೇಟ್ನ ಹಿಂದೆ ನಿಲ್ಲಬೇಕಾಗುತ್ತದೆ. ತಂಡದ ರಚನೆ ಒಂದು ತಂಡ ಹನ್ನೊಂದು ಜನ ಆಟಗಾರರನ್ನು ಒಳಗೊಂಡಿರುತ್ತದೆ.ಆತನ ಅಥವಾ ಅವಳ ಪ್ರಾಥಮಿಕ ಕುಶಲತೆಗೆ ಅನುಗುಣವಾಗಿ ಆಟಗಾರರನ್ನು ಪರಿಣತ ಬ್ಯಾಟ್ಸ್ಮನ್ ಅಥವಾ ಬೌಲರ್ ಎಂದು ವರ್ಗೀಕರಿಸಲಾಗುತ್ತದೆ.ಒಂದು ಉತ್ತಮ ಸಮತೋಲನ ಇರುವ ತಂಡವು ಸಾಮಾನ್ಯವಾಗಿ ಐದು ಅಥವಾ ಆರು ಪರಿಣತ ಬ್ಯಾಟ್ಸ್ಮನ್ಗಳನ್ನು ಮತ್ತು ನಾಲ್ಕು ಅಥವಾ ಐದು ಪರಿಣತ ಬೌಲರ್ಗಳನ್ನು ಹೊಂದಿರುತ್ತದೆ. ಫೀಲ್ಡಿಂಗ್ ಸ್ಥಿತಿಯ ಪ್ರಾಮುಖ್ಯತೆಯ ಕಾರಣದಿಂದಾಗಿ ತಂಡ ಸಾಮಾನ್ಯವಾಗಿ ಒಬ್ಬ ಪರಿಣತ ವಿಕೇಟ್ ಕೀಪರ್ನನ್ನೂ ಕೂಡ ಒಳಗೊಂಡಿರುತ್ತದೆ. ಪ್ರತಿಯೊಂದು ತಂಡಕ್ಕೂ ಒಬ್ಬ ನಾಯಕನಿದ್ದು ಚತುರ ನಿರ್ಧಾರ ತೆಗೆದುಕೊಳ್ಳುವಲ್ಲಿ ಅಂದರೆ ಬ್ಯಾಟಿಂಗ್ ಸರತಿಯನ್ನು ನಿರ್ಧರಿಸುವ, ಫೀಲ್ಡರ್ಗಳನ್ನು ಸೀಮಿತ ಸ್ಥಳಕ್ಕೆ ನಿಯೋಗಿಸುವ ಮತ್ತು ಬೌಲರ್ಗಳ ಸರತಿಯನ್ನು ಬದಲಾಯಿಸುವ ಸಂಪೂರ್ಣ ಜವಾಬ್ಧಾರಿಯನ್ನು ಹೊಂದಿರುತ್ತಾನೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಪರಿಣತಿಯನ್ನು ಹೊಂದಿರುವ ಆಟಗಾರನನ್ನು ಆಲ್ ರೌಂಡರ್ ಎಂದು ಕರೆಯಲಾಗುತ್ತೆದೆ. ಬ್ಯಾಟಿಂಗ್ ಹಾಗೂ ವಿಕೇಟ್ ಕೀಪಿಂಗ್ ಎರಡರಲ್ಲೂ ಪರಿಣತಿಯನ್ನು ಹೊಂದಿರುವ ಆಟಗಾರನನ್ನು ವಿಕೇಟ್ ಕೀಪರ್ಬ್ಯಾಟ್ಸ್ಮನ್ ಅಥವಾ ಕೆಲವೊಮ್ಮೆ ಒಂದು ರೀತಿಯಲ್ಲಿ ಆಲ್ ರೌಂಡರ್ ಎಂದೂ ಕರೆಯಲಾಗುತ್ತದೆ. ನಿಜವಾದ ಆಲ್ ರೌಂಡರ್ಗಳು ಕಡಿಮೆ ಸಂಖ್ಯೆಯಲ್ಲಿದ್ದಾರೆ, ಕಾರಣ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯ ಆಟಗಾರರು ಬ್ಯಾಟಿಂಗ್ ಅಥವಾ ಬೌಲಿಂಗ್ ಒಂದರಲ್ಲಿಯೇ ಕೌಶಲ್ಯತೆಯನ್ನು ಹೊಂದಿರುತ್ತಾರೆ. ಬೌಲಿಂಗ್ ರನ್ಅಪ್ ವಿಧಾನದ ಮೂಲಕ ಬೌಲರ್ ತನ್ನ ಎಸೆತವನ್ನು ಪೂರ್ಣಗೊಳಿಸುತ್ತಾನೆ, ಆದಾಗ್ಯೂ ಕೆಲವು ನಿಧಾನಗತಿಯ ಬೌಲರ್ಗಳು ಎರಡು ಹೆಜ್ಜೆಗಿಂತ ಹೆಚ್ಚಿಗೆ ಇಲ್ಲದ ದೂರದಿಂದ ಬೌಲ್ ಮಾದುತ್ತಾರೆ. ವೇಗದ ಬೌಲರ್ಗೆ ವೇಗಮಾನ ಅವಶ್ಯಕ ಮತ್ತು ಆತನು ಸ್ವಲ್ಪ ದೀರ್ಘ ರನ್ ಅಪ್ನ ಮೂಲಕ ಅತ್ಯಂತ ವೇಗವಾಗಿ ಓಡಬೇಕು ಒತ್ತಡದ ಪರಿಸ್ಥಿತಿಯಲ್ಲಿ ಚುರುಕಾಗಿ ಪ್ರತಿಕ್ರಿಯಿಸುವ ವೇಗದ ಬೌಲರ್ಗಳು ಕ್ಕೂ ಹೆಚ್ಚಿನ ವೇಗದಲ್ಲಿ ಬಾಲನ್ನು ಎಸೆಯಬಹುದು ಮತ್ತು ಅವರು ಕೆಲವೊಮ್ಮೆ ಒಂದೇ ನೇರವಾದ ವೇಗದ ಎಸೆತಗಳ ಮೂಲಕ ಬ್ಯಾಟ್ಸ್ಮನ್ಗಳನ್ನು ಸೋಲಿಸಲು ಪ್ರಯತ್ನಿಸುತ್ತಾರೆ. ಇತರ ವೇಗದ ಬೌಲರ್ಗಳು ವೇಗ ಮತ್ತು ಮೋಸದ ಎಸೆತಗಳ ಮಿಶ್ರಣವನ್ನು ನೆಚ್ಚಿಕೊಂಡಿರುತ್ತಾರೆ. ಕೆಲವು ವೇಗದ ಬೌಲರ್ಗಳು ಬಾಲನ್ನು ತಿರುಗಿಸಲು ಅಥವಾ ಜೋಲಿ ಹೊಡೆಸಲು ಬಾಲ್ ಮೇಲಿನ ಹೊಲಿಗೆಯ ಪಟ್ಟಿಯನ್ನು ಬಳಸಿಕೊಳ್ಳುತ್ತಾರೆ. ಈ ಪ್ರಕಾರದ ಎಸೆತಗಳು ಬ್ಯಾಟ್ಸ್ಮನ್ನನ್ನು ಬ್ರಮೆಗೆ ಒಳಪಡಿಸಬಹುದು ಆ ಕಾರಣದಿಂದಾಗಿ ಬಾಲು ಬ್ಯಾಟ್ನ ಅಂಚನ್ನು ಸವರಿ ಆ ನಂತರದಲ್ಲಿ ವಿಕೇಟ್ ಕೀಪರ್ನಿಂದ ಅಥವಾ ಗಲ್ಲಿ ರಕ್ಷಕನ ಕೈಯಲ್ಲಿ ಕಾಟ್ ಬಿಹೈಂಡ್ ಆಗಬಹುದು ಬೌಲಿಂಗ್ನ ಮಾನದಂಡದ ಇನ್ನೊಂದು ತುದಿಯಲ್ಲಿರುವ ಸ್ಪಿನ್ನರ್ಗಳು ಸಾಪೇಕ್ಷವಾಗಿ ಬ್ಯಾಟ್ಸ್ಮನ್ಗಳ ದಾರಿ ತಪ್ಪಿಸಲು ಸಂಪೂರ್ಣವಾಗಿ ಮೋಸದಿಂದ ಕೂಡಿದ ನಿಧಾನ ವೇಗವನ್ನು ಬಳಸಿಕೊಳ್ಳುತ್ತಾರೆ. ಸ್ಪಿನ್ನರ್ ಯಾವಾಗಲೂ ಸ್ವಲ್ಪ ಮೇಲಕ್ಕೆ ಬಾಲನ್ನು ಎಸೆಯುವ ಮೂಲಕ (ಒಂದು ಲಾಕ್ಷಣಿಕ ಮಾರ್ಗ) ಬ್ಯಾಟ್ಸ್ಮನ್ನನ್ನು ಕೆಟ್ಟ ಹೊಡೆತಕ್ಕೆ ಆಕರ್ಷಿಸಿ ತನ್ನ ವಿಕೇಟನ್ನು ಪಡೆಯುತ್ತಾನೆ. ಬ್ಯಾಟ್ಸ್ಮನ್ ಇಂಥಹ ಎಸೆತಗಳ ಸಮಯದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕಾಗುತ್ತದೆ, ಏಕೆಂದರೆ ಅಂಥಹ ಎಸೆತಗಳು ಪದೇ ಪದೇ ಗಾಳಿಯಲ್ಲಿ ಹಾರಿಕೊಂಡು, ತಿರುಗುತ್ತ ಬ್ಯಾಟ್ಸ್ಮನ್ನ ನಿರೀಕ್ಷೆಗೆ ತಕ್ಕಂತೆ ವರ್ತಿಸದೆ ಅವನು ತನ್ನಷ್ಟಕ್ಕೆ ತಾನೆ ಔಟ್ ಆಗುವಂತ ಮೋಸದ ಬಲೆಯಲ್ಲಿ ಸಿಕ್ಕಿಸುತ್ತದೆ. ವೇಗದ ಬೌಲರ್ಗಳು ಮತ್ತು ಸ್ಪಿನ್ನರ್ಗಳ ನಡುವೆ ಮಧ್ಯಮ ವೇಗದ ಬೌಲರ್ಗಳು ಕಾರ್ಯನಿರ್ವಹಿಸುತ್ತಾರೆ, ಅವರು ನಿರಂತರವಾಗಿ ಖಚಿತವಾದ ಎಸೆತಗಳ ಮೂಲಕ ರನ್ ಗಳಿಕೆಯ ದರವನ್ನು ಕಡಿಮೆಗೊಳಿಸಲು ಮತ್ತು ಬ್ಯಾಟ್ಸ್ಮನ್ನ ಏಕಾಗ್ರತೆಯನ್ನು ಭಂಗ ಮಾಡಲು ಪ್ರಯತ್ನಿಸುತ್ತಾರೆ. ಎಲ್ಲಾ ಬೌಲರ್ಗಳನ್ನು ಅವರವರ ನೋಟ ಮತ್ತು ಶೈಲಿಗೆ ಅನುಗುಣವಾಗಿ ವಿಂಗಡಿಸಲಾಗುತ್ತದೆ. ಕ್ರಿಕೆಟ್ನ ಪರಿಭಾಷೆಯಲ್ಲಿನ ಈ ವಿಂಗಡನೆಗಳು ಬಹಳ ಗೊಂದಲಕ್ಕೀಡುಮಾಡಬಹುದು. ಆದ್ದಂರಿಂದ, ಒಬ್ಬ ಬೌಲರ್ನನ್ನು ಎಂದು, ಅಂದರೆ ಅರ್ಥದಲ್ಲಿ ಆತನು ಎಡಗೈ ವೇಗದ ಬೌಲರ್ ಅಥವಾ ಅಂದರೆ ಲೆಗ್ ಬ್ರೇಕ್ ಮತ್ತು ಗೂಗ್ಲಿ ಮೂಲಕ ಬೌಲ್ ಮಾಡುವ ಎಡಗೈ ಸ್ಪಿನ್ ಬೌಲರ್ ಎಂದೂ ವಿಂಗಡನೆ ಮಾಡಲಾಗುತ್ತದೆ. ಬೌಲಿಂಗ್ ಕ್ರಿಯೆಯಲ್ಲಿ ಮೊಳಕೈಯ್ಯನ್ನು ಯಾವುದೇ ಕೋನದಲ್ಲಿಯಾದರು ಹಿಡಿಯಬಹುದು ಮತ್ತು ಇನ್ನೂ ಸ್ವಲ್ಪ ಬಾಗಿಸಿ ಬೌಲ್ ಮಾಡಬಹುದು ಆದರೆ ಕೈ ನೇರವಾಗಿರಬೇಕು. ಒಂದು ವೇಳೆ ಮೊಳಕೈ ನೇರತೆ ನಿಯಮಕ್ಕೆ ವಿರುದ್ಧವಾಗಿದ್ದಲ್ಲಿ ಸ್ಕ್ವೆಯರ್ ಲೆಗ್ ಅಂಪೈರ್ ಅದನ್ನು ನೋ ಬಾಲ್ ಎಂದು ನಿರ್ಣಯಿಸಬಹುದು. ಪ್ರಸ್ತುತ ನಿಯಮಗಳು ಒಬ್ಬ ಬೌಲರ್ ತನ್ನ ಕೈ ನೇರವನ್ನು ೧೫ರಷ್ಟು ಅಥವಾ ಅದಕ್ಕಿಂತ ಕಡಿಮೆ ಕೋನದಲ್ಲಿ ಭಾಗಿಸಲು ಅನುವು ಮಾಡಿಕೊಟ್ಟಿದೆ. ಫೀಲ್ಡಿಂಗ್ ಫೀಲ್ಡಿಂಗ್ ಭಾಗದ ಎಲ್ಲಾ ಹನ್ನೊಂದು ಆಟಗಾರರೂ ಒಟ್ಟಾಗಿ ಕ್ಷೇತ್ರ ರಕ್ಷಣೆಯಲ್ಲಿ ತೊಡಗಿರುತ್ತಾರೆ. ಅವರಲ್ಲಿ ಒಬ್ಬ ವಿಕೇಟ್ ಕೀಪರ್ ಅಥವಾ ಕೀಪರ್ ಎಂದೂ ಗುರುತಿಸುವ , ಅತನು ವಿಕೇಟ್ನ ಹಿಂದೆ ನಿಂತು ಆನ್ ಸ್ಟ್ರೈಕ್ನಲ್ಲಿರುವ ಬ್ಯಾಟ್ಸ್ಮನ್ ಮುಂದುವರೆಯದಂತೆ ಕಾರ್ಯ ನಿರ್ವಹಿಸುತ್ತಾನೆ. ವಿಕೇಟ್ ಕೀಪಿಂಗ್ ಇದು ಸಾಮಾನ್ಯವಾಗಿ ಒಂದು ವಿಶೆಷವಾದ ಉದ್ಯೋಗ ಮತ್ತು ಈತನ ಪ್ರಾಥಮಿಕ ಕೆಲಸವೆಂದರೆ ಬ್ಯಾಟ್ಸ್ಮನ್ನಿಂದ ಹೊಡೆಯಲ್ಪಡದೆ ಇರುವ ಎಸೆತಗಳನ್ನು ಹಿಡಿಯುವುದು, ಈ ಕಾರಣದಿಂದಾಗಿ ಬ್ಯಾಟ್ಸ್ಮನ್ ರನ್ ಗಳಿಸಲು ಸಾದ್ಯವಾಗುವುದಿಲ್ಲ. ಈತನು ವಿಶೇಷವಾದ ಕೈ ಗವಸುಗಳನ್ನು ಧರಿಸುತ್ತಾನೆ (ಈ ರಿತಿಯ ಗವಸುಗಳನ್ನು ಧರಿಸಲು ಆತನಿಗೆ ಮಾತ್ರ ಅವಕಾಶ ನೀಡಲಾಗಿದೆ) ಮತ್ತು ಆತನ ಕಾಲನ್ನು ರಕ್ಷಿಸಿಕೊಳ್ಳಲು ಪ್ಯಾಡ್ಗಳನ್ನು ಧರಿಸುತ್ತಾನೆ. ಆತನ ಸ್ಥಾನಕ್ಕೆ ಉಪಕಾರಾರ್ಥವಾಗಿ ನೇರವಾಗಿ ವಿಕೇಟ್ನ ಹಿಂದೆ ನಿಂತು, ಬ್ಯಾಟ್ನ ಅಂಚಿನ್ನು ಸವರಿ ಬರುವ ಚೆಂಡನ್ನು ಹಿಡಿಯುವ ಮೂಲಕ ಬ್ಯಾಟ್ಸ್ಮನ್ನನ್ನು ಔಟ್ ಮಾಡುವ ಉತ್ತಮ ಅವ್ಕಾಶವನ್ನು ವಿಕೇಟ್ ಕೀಪರ್ ಹೊಂದಿದ್ದಾನೆ. ಬ್ಯಾಟ್ಸ್ಮನ್ನನ್ನು ಸ್ಟಂಪ್ಡ್ ಮಾಡಿ ಔಟ್ ಮಾಡುವುದು ಈ ಆಟಗಾರನೊಬ್ಬನಿಂದಲೇ ಸಾಧ್ಯ. ಪ್ರಸ್ತುತವಾಗಿ ಬೌಲ್ ಮಾಡುತ್ತಿರುವ ಒಬ್ಬನನ್ನು ಹೊರತುಪಡಿಸಿ, ಉಳಿದ ಒಂಬತ್ತು ಜನ ಫೀಲ್ಡರ್ಗಳು ತಂಡದ ನಾಯಕನಿಂದ ರಚಿಸಲ್ಪಟ್ಟ ಜಾಣ್ಮೆಯ ವ್ಯೂಹದಲ್ಲಿ ಆಯ್ದುಕೊಂಡ ಸ್ಥಾನದಲ್ಲಿ ಮೈದಾನದಲ್ಲಿ ಸುತ್ತುವರಿದಿರುತ್ತಾರೆ. ಸ್ಥಳಗಳು ಸ್ಥಿರವಾಗಿರುವುದಿಲ್ಲ ಆದರೆ ಅವನ್ನು ಖಚಿತವಾದ ಮತ್ತು ಕೆಲವೊಮ್ಮೆ ವಿಶಿಷ್ಟ ಹೆಸರಿನಿಂದ ಅಂದರೆ ಸ್ಲಿಪ್, ಥರ್ಡ್ ಮ್ಯಾನ್, ಸಿಲ್ಲಿ ಮಿಡ್ ಆನ್ ಮತ್ತು ಲಾಂಗ್ ಆನ್ ಎಂದು ಕರೆಯಲಾಗುತ್ತದೆ. ಅವುಗಳಲ್ಲಿ ಕೆಲವು ಯಾವಾಗಲು ಅರಕ್ಷಿತ ಪ್ರದೇಸಗಳು. ಫೀಲ್ಡಿಂಗ್ ವಿಭಾಗದಲ್ಲಿ ತಂಡದ ನಾಯಕ ಅತ್ಯಂತ ಪ್ರಮುಖ ಸದಸ್ಯನಾಗಿರುತ್ತಾನೆ, ಯಾರು ಬೌಲ್ ಮಾಡಬೇಕು (ಮತ್ತು ಹೇಗೆ) ಎಂಬುದನ್ನು ಒಳಗೊಂಡಂತೆ ಎಲ್ಲಾ ವಿಧದ ಕೌಶಲ್ಯವನ್ನು ಈತನೇ ನಿರ್ಧರಿಸುತ್ತಾನೆಮತ್ತು ಸಾಮಾನ್ಯವಾಗಿ ಬೌಲರ್ ಜೊತೆಗಿನ ಸಮಾಲೋಚನೆಯ ಮೂಲಕ ಫೀಲ್ಡ್ ಸಂಯೋಜನೆಯನ್ನು ಮಾಡುವ ಸಂಪೂರ್ಣ ಜವಾಬ್ಧಾರಿಯನ್ನು ಈತನೆ ಹೊಂದಿರುತ್ತಾನೆ. ಕ್ರಿಕೆಟ್ನ ಎಲ್ಲಾ ವಿಧಾನಗಳಲ್ಲಿ, ಒಂದು ವೇಳೆ ಪಂದ್ಯದ ಸಮಯದಲ್ಲಿ ಫೀಲ್ಡ್ರ್ ಗಾಯಕ್ಕೊಳಗಾದರೆ ಅಥವಾ ಅಸ್ವಸ್ಥನಾದರೆ ಆತನ ಬದಲಿಗೆ ಒಬ್ಬ ಸಬ್ಸ್ಟಿಟ್ಯೂಟ್ ಫೀಲ್ಡ್ ಮಾಡಲು ಅವಕಾಶ ನೀಡಲಾಗುವುದು. ಸಬ್ಸ್ಟಿಟ್ಯೂಟ್ ಫೀಲ್ಡ್ ಮಾಡುವಂತಿಲ್ಲ, ಈತನು ನಾಯಕನ ಹಾಗೆ ಕಾರ್ಯನಿರ್ವಹಿಸಬಹುದು ಅಥವಾ ವಿಕೇಟ್ ರಕ್ಷಣೆ ಮಾಡಿಕೊಳ್ಳಬಹುದಾಗಿದೆ. ಗಾಯಗೊಂಡ ಆಟಗಾರ ಸಂಪೂರ್ಣ ಗುಣಗೊಂಡು ಆಟಕ್ಕೆ ಮತ್ತೆ ಹಿಂತಿರುಗಿದಾಗ ಸಬ್ಸ್ಟಿಟ್ಯೂಟ್ ಮೈದಾನವನ್ನು ಬಿಟ್ಟು ಹೋಗಬೇಕಾಗುತ್ತದೆ. ಬೊವ್ಲರ್ ಬೊವ್ಲಿನ್ಗ್ ಕ್ರೀಸಿಗಿನ್ಥ ಹಿನ್ದಿನಿನ್ದ ಬೊವ್ಲಿನ್ಗ್ ಎಸೆದರೆ ಅದು ನೊ ಬಾಲ್ ಆಗುವಿದಿಲ್ಲ... ಬ್ಯಾಟಿಂಗ್ ಯಾವುದಾದರು ಒಂದು ಸಮಯದಲ್ಲಿ, ಆಟದ ಪ್ರದೇಶದಲ್ಲಿ ಇಬ್ಬರು ಬ್ಯಾಟ್ಸ್ಮನ್ಗಳು ಉಪಸ್ಥಿತರಿರುತ್ತಾರೆ. ಒಬ್ಬನು ಸ್ಟ್ರೈಕರ್ನ ಕೊನೆಯಲ್ಲಿ ನಿಂತು ತನ್ನ ವಿಕೇಟನ್ನು ರಕ್ಷಣೆ ಮಾಡಿಕೊಳ್ಳಲು ಮತ್ತು ಸಾಧ್ಯವಾದಲ್ಲಿ ರನ್ ಗಳಿಸಲು ಪ್ರಯತ್ನಿಸುತ್ತಾನೆ. ಈತನ ಸಹಆಟಗಾರ, ನಾನ್ಸ್ಟ್ರೈಕರ್ ಕೊನೆಯಲ್ಲಿ ಅಂದರೆ ಬೌಲರ್ ಬೌಲ್ ಮಾಡುವ ಪ್ರದೇಶದಲ್ಲಿ ನಿಂತಿರುತ್ತಾನೆ. ತಂಡದ ನಾಯಕನಿಂದ ನಿರ್ಧರಿಸಲ್ಪಟ್ತ, ಬ್ಯಾಟಿಂಗ್ ಸರತಿಯಂತೆ ಬ್ಯಾಟ್ಸ್ಮನ್ಗಳು ಬ್ಯಾಟ್ ಮಾಡಲು ಮೈದಾನಕ್ಕೆ ಇಳಿಯುತ್ತಾರೆ. ಮೊದಲ ಇಬ್ಬರು ಬ್ಯಾಟ್ಸ್ಮನ್ಗಳು ಆರಂಭಿಕ ಆಟಗಾರರು ಸಾಮಾನ್ಯವಾಗಿ ಹೊಸ ಬಾಲನ್ನು ಬಳಸುವ ಅತ್ಯಂತ ವೇಗದ ಬೌಲರ್ನಿಂದ ಹೆಚ್ಚು ಪ್ರತಿಕೂಲವಾದ ಎಸೆತವನ್ನು ಎದುರಿಸುತ್ತಾರೆ. ಬ್ಯಾಟಿಂಗ್ನ ಮೇಲಿನ ಸ್ಥಳವನ್ನು ಸಾಮಾನ್ಯವಾಗಿ ತಂಡದಲ್ಲಿನ ಅತ್ಯಂತ ಸಮರ್ಥ ಭ್ಯಾಟ್ಮನ್ಗಳಿಗೆ ನೀಡಲಾಗುತ್ತದೆ, ಮತ್ತು ಹೆಚ್ಚು ಪರಿಣತರಲ್ಲದ ಬ್ಯಾಟ್ಸ್ಮನ್ಗಳು ಲಾಕ್ಷಣಿಕವಾಗಿ ಕೊನೆಯಲ್ಲಿ ಬ್ಯಾಟ್ ಮಾಡುತ್ತಾರೆ. ಮೊದಲೇ ಘೋಷಿಸಲ್ಪಟ್ಟ ಬ್ಯಾಟಿಂಗ್ ಸರತಿ ಖಡ್ಡಾಯವಾಗಿರಬೇಕಿಲ್ಲ ಮತ್ತು ಯಾವಾಗ ತಂಡ ತನ್ನ ವಿಕೇಟ್ಗಳನ್ನು ಕಳೆದುಕೊಳ್ಳುವುದೊ ಆಗ ಇನ್ನೂ ಬ್ಯಾಟ್ ಮಾಡದೇ ಇರುವ ಯಾವ ಆಟಗಾರನನ್ನಾದರೂ ಬ್ಯಾಟ್ ಮಾಡಲು ಕಳುಹಿಸಬಹುದು. ಒಂದು ವೇಳೆ ಬ್ಯಾಟ್ಸ್ಮನ್ ನಿವೃತ್ತನಾದರೆ (ಸಾಮಾನ್ಯವಾಗಿ ಗಾಯಗೊಂಡಾಗ)ಮತ್ತು ಮತ್ತೆ ಹಿಂತಿರುಗದೇ ಇದ್ದಾಗ, ಈತನು ನಿಜವಾಗಿಯೂ ನಾಟ್ಔಟ್ ಆಗಿರುತ್ತಾನೆ ಮತ್ತು ಆತನ ಅನುಪಸ್ಥಿತಿಯನ್ನು ಔಟ್ ಎಂದು ತೀರ್ಮಾನಿಸಲಾಗುವುದಿಲ್ಲ, ಅದಾಗ್ಯೂ ಈತನ ಇನ್ನಿಂಗ್ಸ್ ಮುಗಿದಿರುವ ಕಾರಣದಿಂದ ಆತನೂ ಕೂಡ ವಿಸರ್ಜಿಸಲ್ಪಡುತ್ತಾನೆ. ಬದಲಿ ಆಟಗಾರರಿಗೆ ಅವಕಾಶವಿರುವುದಿಲ್ಲ ಒಬ್ಬ ನಿಪುಣ ಬ್ಯಾಟ್ಸಮನ್ ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಎರಡೂ ರೀತಿಯಲ್ಲಿ ತನ್ನ ಬಲವಾದ ಹೊಡೆತಗಳನ್ನ ಬಳಸಿಕೊಳ್ಳಬಹುದು. ಇದರ ಉದ್ದೇಶವೆಂದರೆ,ಬ್ಯಾಟ್ನ ಚಪ್ಪಟೆ ಬಾಗದಿಂದ ಬಾಲನ್ನು ಹೆಚ್ಚು ಪರಿಣಾಮಕಾರಿಯಾಗಿ ಮೈದಾನದ ಮೇಲ್ಮೈಗೆ ಸಮತಲವಾಗಿ ಹೋಗುವಂತೆ ಹೊಡೆಯುವುದು. ಒಂದು ವೇಳೆ ಬಾಲ್ ಬ್ಯಾಟಿನ ಅಂಚಗೆ ತಾಗಿದರೆ ಅದನ್ನು ಎಡ್ಜ್ ಎಂದು ಕರೆಯಲಾಗುವುದು. ಬ್ಯಾಟ್ಸ್ಮನ್ ಯಾವಾಗಲೂ ಬಾಲನ್ನು ಹೆಚ್ಚು ಬಲವಾಗಿ ಹೊಡೆಯಲು ಯತ್ನಿಸುವುದಿಲ್ಲ, ಮತ್ತು ಒಬ್ಬ ಒಳ್ಳೆಯ ಆಟಗಾರ ತನ್ನ ಮಣಿಕಟ್ಟನ್ನು ತಿರುಗಿಸಿ ಕೇವಲ ಚತುರ ಹೊಡೆತಗಳ ಮೂಲಕ, ಅಥವಾ ಸರಳವಾಗಿ ಬಾಲನ್ನು ತಡೆದು ಅದು ಫೀಲ್ಡರ್ನಿಂದ ದೂರ ಓಡುವತೆ ಮಾಡುವುದರ ರನ್ಗಳನ್ನು ತೆಗೆದುಕೊಳ್ಳಬಹುದು ಕ್ರಿಕೇಟಿನಲ್ಲಿ ಹಲವಾರು ವಿಧದ ಹೊಡೆತಗಳನ್ನು ಬಳಸಿಕೊಳ್ಳಲಾಗುತ್ತದೆ. ಬ್ಯಾಟ್ಸ್ಮನ್ನ ಬತ್ತಳಿಕೆಯು ಶೈಲಿ ಮತ್ತು ತಿರುಗುವಿಕೆಗೆ ಅನುಗುಣವಾಗಿ ಹೆಸರಿಸಲಾದ ಗುರಿ ನಿರ್ಧೇಶಿತವಾದ ಹೊಡೆತಗಳನ್ನು ಒಳಗೊಂಡಿರುತ್ತದೆ: ಉದಾಹರಣೆಗೆ., ಕಟ್, ಡ್ರೈವ್, ಹೂಕ್, ಪುಲ್. ಒಂದು ವೇಳೆ ಬಾಲ್ ಆತನ ವಿಕೇಟಿಗೆ ಹೊಡೆಯುವುದಿಲ್ಲ ಎಂದು ಯೋಚಿಸಿದ್ದರೆ, ಬ್ಯಾಟ್ಮನ್ ಯಾವುದೇ ಹೊಡೆತವನ್ನು ಹೊಡೆಯಲು ಮುಂದಾಗದೆ ಬಾಲನ್ನು ವಿಕೇಟ್ ಕೀಪರ್ನ ಕೈಗೆ ಹೋಗಲು ಬಿಡಬಹುದು. ಸಮಾನವಾಗಿ, ಬಾಲನ್ನು ಬ್ಯಾಟಿನಿಂದ ಹೊಡೆದ ನಂತರವೂ ಆತನು ರನ್ ಗಳಿಸಲು ಪ್ರಯತ್ನಿಸದೆ ಇರಬಹುದು. ಈತನು ಬಾಲನ್ನು ತಡೆಯಲು ತನ್ನ ಕಾಲನ್ನು ಬಳಸಿಕೊಳ್ಳಬಹುದು ಆದುದರಿಂದ ಪ್ಯಾಡ್ ಇಟ್ ಅವೇ, ಆದರೆ ಇದು ಲೆಗ್ ಬಿಪೋರ್ ವಿಕೇಟ್ನ ನಿಯಮ ಇರುವುದರಿಂದ ತುಂಬಾ ಅಪಾಯಕಾರಿ ಗಾಯಗೊಂಡ ಬ್ಯಾಟ್ಸ್ಮನ್ನ ಸಂದರ್ಭದಲ್ಲಿ, ಆತ ಬ್ಯಾಟ್ ಮಾಡಲು ಯೊಗ್ಯನಾಗಿದ್ದು ಆದರೆ ರನ್ ಮಾಡಲು ಸಾದ್ಯವಿಲ್ಲ ಎಂದಾದಲ್ಲಿ ಅಂಪೈರ್ಗಳು ಮತ್ತು ಫೀಲ್ಡಿಂಗ್ ತಂಡದ ನಾಯಕ ಬ್ಯಾಟಿಂಗ್ ವಿಭಾಗದ ಮತ್ತೊಬ್ಬ ಆಟಗಾರನನ್ನು ರನ್ನರ್ ಆಗಲು ಅವಕಾಶ ಮಾಡಿಕೊಡುತ್ತಾರೆ. ಸಾದ್ಯವಾದಲ್ಲಿ,ರನ್ನರ್ ಈ ಹಿಂದೆ ಬ್ಯಾಟ್ ಮಾಡಿರುವ ಆಟಗಾರನಾಗಿರಬೇಕು. ರನ್ನರ್ಗಳ ಒಂದೇ ಒಂದು ಕೆಲಸವೆಂದರೆ, ಗಾಯಗೊಂಡ ಆಟಗಾರನ ಬದಲಿಗೆ ಎರಡು ವಿಕೇಟ್ಗಳ ನಡುವೆ ರನ್ಗಾಗಿ ಓಡುವುದಾಗಿದೆ. ಬ್ಯಾಟಿಂಗ್ ಮಾಡುತ್ತಿರುವ ಆಟಗಾರರು ಬಳಸುವ ಮತ್ತು ಧರಿಸುವ ವಸ್ತುಗಳನ್ನೆ ಕರಾರುವಕ್ಕಾಗಿ ರನ್ನರ್ಗಳು ಬಳಸಬೇಕು ಎರಡೂ ಟ್ಸ್ಮನ್ಗಳಿಗೂ ರನ್ನರ್ಗಳನ್ನು ಹೊಂದುವುದು ಸಾದ್ಯವಿದೆ. ರನ್ಗಳು ಆನ್ ಸ್ಟ್ರೈಕ್ನಲ್ಲಿರುವ ಬ್ಯಾಟ್ಸ್ಮನ್ನ ಪ್ರಾಥಮಿಕ ಕಾರ್ಯವೆಂದರೆ (ಅಂದರೆ ಸ್ಟ್ರೈಕರ್) ಬಾಲ್ ವಿಕೇಟ್ಗೆ ಬಡಿಯುವದನ್ನು ತಪ್ಪಿಸುವುದು ಮತ್ತು ಎರಡನೆಯದಾಗಿ ರನ್ ಗಳಿಸುವುದಕ್ಕೋಸ್ಕರ ಬಾಲನ್ನು ತನ್ನ ಬ್ಯಾಟಿನಿಂದ ಹೊಡೆಯುವುದು್, ಆ ಕಾರಣದಿಂದಾಗಿ ಪೀಲ್ಡಿಂಗ್ ವಿಭಾಗದ ಆಟಗಾರರರು ಬಾಲನ್ನು ಹಿಂದಿರುಗಿಸುವುದಕ್ಕಿಂತ ಮುಂಚಿತವಾಗಿ ಆತನು ಮತ್ತು ಅವನ ಜೊತೆಗಾರನಿಗೆ ಪಿಚ್ನ ಒಂದು ತುದಿಯಿಂದ ಇನ್ನೊಂದು ತುದಿಗೆ ಓಡಿ ರನ್ ಗಳಿಸಲು ಸಮಯ ಸಿಗುತ್ತದೆ ರನ್ನನ್ನು ನೊಂದಣಿ ಮಾಡಲು, ಇಬ್ಬರು ರನ್ನರ್ಗಳೂ ತಮ್ಮ ಬ್ಯಾಟಿನಿಂದ ಅಥವಾ ತಮ್ಮ ದೇಹದಿಂದ ಮೈದಾನದ ಪಿಚ್ನಲ್ಲಿರುವ ಗಡಿ ರೇಖೆಯನ್ನು ಮುಟ್ಟಬೇಕಾಗುತ್ತದೆ. (ಬ್ಯಾಟ್ಸ್ಮನ್ ರನ್ ಮಾಡುವಾಗ ತನ್ನ ಬ್ಯಾಟನ್ನು ತೆಗೆದುಕೊಂಡು ಹೋಗಬೇಕು). ಪ್ರತಿಯೊಂದು ಪೂರ್ಣಗೊಂಡ ರನ್ ಅಂಕಗಳನ್ನು ಅಧಿಕಗೊಳಿಸುತ್ತದೆ. ಒಂದೇ ಹೊಡೆತದಿಂದ ಒಂದಕ್ಕಿಂತ ಹೆಚ್ಚು ರನ್ ತೆಗೆದುಕೊಳ್ಳಬಹುದು ಆದರೆ ಬಾಲನ್ನು ಹೊಡೆಯುವಾಗ ಯೋಗ್ಯವಾಗಿ ಒಂದರಿಂದ ಮೂರು ರನ್ಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ, ಮೈದಾನದ ವಿಸ್ತಾರದ ಕಾರಣದಿಂದ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸುವುದು ಕಷ್ಟವಾಗುತ್ತದೆ. ಇದಕ್ಕೆ ಪರಿಹಾರವಾಗಿ, ಹೊಡೆದ ಬಾಲ್ ಒಂದು ವೇಳೆ ಹಾದಿಯಲ್ಲಿ ಮೈದಾನದ ಗಡಿ ರೇಖೇಯನ್ನು ಮುಟ್ಟಿದರೆ ಅದನ್ನು ನಾಲ್ಕು ರನ್ಗಳು ಎಂದು ಘೋಷಿಸಲಾಗುತ್ತದೆ ಮತ್ತು ಮೇಲಿನಿಂದ ಗಡಿರೇಖೆಯನ್ನು ದಾಟಿದರೆ ಅದನ್ನು ಆರು ರನ್ಗಳು ಎಂದು ತೀರ್ಮಾನಿಸಲಾಗುತ್ತದೆ ಒಂದು ವೇಳೆ ಬಾಲ್ ಗಡಿರೇಖೆಯನ್ನು ಮುಟ್ಟಿದರೆ ಅಥವಾ ದಾಟಿದರೆ ಬ್ಯಾಟ್ಸ್ಮನ್ ರನ್ಗಾಗಿ ಓಡುವ ಅಗತ್ಯವಿಲ್ಲ. ಐದು ರನ್ಗಳಿಗಾಗಿ ಹೊಡೆಯುವುದು ಅಸಾಮಾನ್ಯ ಮತ್ತು ಇದು ಸಾಮಾನ್ಯವಾಗಿ ಪೀಲ್ಡರ್ಗಳು ಬಾಲನ್ನು ಹಿಂತಿರುಗಿಸುವಾಗ ಮಾಡುವ ಒವರ್ಥ್ರೋಗಳ ಸಹಾಯವನ್ನು ನೆಚ್ಚಿಕೊಂಡಿರುತ್ತದೆ ಒಂದು ವೇಳೆ ಸ್ಟ್ರೈಕರ್ ವಿಷಮ ಸಂಖ್ಯೆಯಲ್ಲಿ ರನ್ಗಳನ್ನು ಗಳಿಸಿದಾಗ, ಎರಡೂ ಬ್ಯಾಟ್ಸ್ಮನ್ಗಳು ತಮ್ಮ ಬ್ಯಾಟಿಂಗ್ ತುದಿಯನ್ನು ಬದಲಾಯಿಸಿಕೊಳ್ಳುತ್ತಾರೆ ಮತ್ತು ಮೊದಲು ನಾನ್ಸ್ಟ್ರೈಕರ್ನಲ್ಲಿದ್ದವನು ಈಗ ಸ್ಟ್ರೈಕರ್ಗೆ ಸ್ಥಳಾಂತರಗೊಳ್ಳುತ್ತಾನೆ. ಕೇವಲ್ ಸ್ಟ್ರೈಕರ್ ಮಾತ್ರ ವಯಕ್ತಿಕ ರನ್ ಗಳಿಸಲು ಸಾದ್ಯ ಆದರೆ ಎಲ್ಲಾ ರನ್ಗಳು ತಂಡದ ಮೊತ್ತಕ್ಕೆ ಸೇರಲ್ಪಡುತ್ತದೆ. ರನ್ ತೆಗೆದುಕೊಳ್ಳುವ ಪ್ರಯತ್ನದ ನಿರ್ಧಾರವನ್ನು ಬಾಲಿನ ಗತಿಯ ಉತ್ತಮ ದೃಷ್ಟಿಕೋನವನ್ನು ತಿಳಿದಿರುವ ಬ್ಯಾಟ್ಸ್ಮನ್ ಮಾಡುತ್ತಾನೆ, ಮತ್ತು ಈ ಸಂವಹನವು ಪದೇ ಪದೇ ಎಸ್, ನೋ ಮತ್ತು ವೇಯಿಟ್ ಎಂದು ಕರೆದುಕೊಳ್ಳುವ ಮೂಲಕ ನಡೆಯುತ್ತದೆ. ರನ್ ಗಳಿಸುವುದು ಅಪಾಯಕಾರಿ ಕಾರಣ ಒಂದು ವೇಳೆ ಬ್ಯಾಟ್ಸ್ಮನ್ ಮೈದಾನದ ಗಡಿರೇಖೆಯ ಹೊರಗೆ ಇರುವಾಗ (ಅಂದರೆ, ಬ್ಯಾಟ್ಸ್ಮನ್ನ ಬ್ಯಾಟ್ ಅಥವಾ ದೇಹಕ್ಕೂ ಮೈದಾನದ ಗಡಿರೇಖೆಗೂ ಯಾವುದೇ ಸಂಬಂಧವಿಲ್ಲದಿದ್ದಾಗ) ಫೀಲ್ಡರ್ ವಿಕೇಟ್ಗಳನ್ನು ಬಾಲಿನಿಂದ ಮುಟ್ಟಿದರೆ ಬ್ಯಾಟ್ಸ್ಮನ್ ರನ್ ಔಟ್ ಆಗುತ್ತಾನೆ. ಗಳಿಸಿದ ರನ್ಗಳ ಸಂಖ್ಯೆ ಮತ್ತು ಔಟ್ ಆದ ಆಟಗಾರರ ಸಂಖ್ಯೆಗಳ ಆಧಾರದ ಮೇಲೆ ತಂಡದ ಅಂಕಗಳನ್ನು ವರದಿ ಮದಲಾಗುತ್ತದೆ. ಉದಾಹರಣೆಗೆ, ಒಂದು ವೇಳೆ ಐದು ಬ್ಯಾಟ್ಸ್ಮನ್ಗಳು ಔಟ್ ಅಗಿದ್ದರೆ ಮತ್ತು ತಂಡ ೨೨೪ ರನ್ಗಳನ್ನು ಗಳಿಸಿದ್ದರೆ, ಅದನ್ನು ತಂಡ ೫ ವಿಕೇಟ್ಗಳ ನಷ್ಟಕ್ಕೆ ೨೨೪ರನ್ಗಳನ್ನು ಗಳಿಸಿದೆ ಎಂದು ಹೇಳಲಾಗುತ್ತದೆ (ಸಾಮಾನ್ಯವಾಗಿ ಚಿಕ್ಕದಾಗಿ ೨೨೪ಕ್ಕೆ ಐದು ಎಂದು ಕರೆದು, ಮತ್ತು ೨೨೪೫ ಎಂದು ಬರೆಯುತ್ತಾರೆ, ಆಸ್ಟ್ರೇಲಿಯಾದಲ್ಲಿ ಅದನ್ನು ಐದಕ್ಕೆ ೨೨೪ ಎಂದು ಕರೆದು ೫೨೨೪ ಎಂದು ಬರೆಯುತ್ತಾರೆ). ಹೆಚ್ಚುವರಿ ರನ್ಗಳು ಫೀಲ್ಡಿಂಗ್ ತಂಡದವರು ಮಾಡುವ ತಪ್ಪುಗಳಿಂದಾಗಿ ಬ್ಯಾಟಿಂಗ್ ತಂಡ ಅತಿರಿಕ್ತ ರನ್ಗಳು(ಆಸ್ಟ್ರೇಲಿಯಾದಲ್ಲಿ ಇದನು ಸಂಡ್ರೀಸ್ ಎಂದು ಕರೆಯುತ್ತಾರೆ) ಎಂದು ಕರೆಯುವ ಹೆಚ್ಚುವರಿ ರನ್ಗಳ ಲಾಭವನ್ನು ಪಡೆಯಬಹುದಾಗಿದೆ . ಈ ಅತಿರಿಕ್ತ ರನ್ಗಳನ್ನು ನಾಲ್ಕು ವಿಧದಲ್ಲಿ ಗಳಿಸಬಹುದಾಗಿದೆ: ನೋ ಬಾಲ್ () ಅಸಮಂಜಸವಾದ ಕೈ ಬದಲಿಕೆಯನ್ನು ಬಳಸಿಕೊಂಡು ()ಪಿಚ್ ಮೇಲಿನ ನಿಯಂತ್ರಣ ಗೆರೆಯನ್ನು ದಾಟಿ ()ಹಿಂದಿನ ಗೆರೆಯ ಹೊರಗೆ ಕಾಲನ್ನು ಇಟ್ಟು, ಬೌಲಿಂಗ್ನ ನಿಯಮವನ್ನು ಮುರಿದಿದ್ದರೆ ಅದನ್ನು ಬೌಲರ್ನಿಂದ ಕೊಡಲ್ಪಟ್ಟ ದಂಡ ರೂಪದ ಹೆಚ್ಚುವರಿ ರನ್ ಎಂದು ಪರಿಗಣಿಸಲಾಗುತ್ತದೆ. ನಂತರದಲ್ಲಿ, ಬೌಲರ್ ಮತ್ತೆ ಬೌಲ್ ಮಾಡಬೇಕಾಗುತ್ತದೆ. ಸೀಮಿತ ಒವರುಗಳ ಪಂದ್ಯದಲ್ಲಿ, ಒಂದು ವೇಳೆ ಬೌಲಿಂಗ್ ತಂಡ ಪರಿಮಿತಿಗನುಗುಣವಾಗಿ ಫೀಲ್ಡ್ ಸಂಯೋಜನೆಯಲ್ಲಿ ವಿಫಲವಾದಲ್ಲಿ ಅದನ್ನು ನೋ ಬಾಲ್ ಎಂದು ಕರೆಯಲಾಗುತ್ತದೆ. ಚುಟುಕು ವಿನ್ಯಾಸದ ಪಂದ್ಯದಲ್ಲಿ (೨೦೨೦, )ಪ್ರೀ ಹಿಟ್ ನಿಯಮವನ್ನು ಪರಿಚಯಿಸಲಾಗಿದೆ. ಮುಂಗಾಲಿನ ಕಾರಣದಿಂದಾಗಿ ನೋ ಬಾಲ್ ಆಗಿದ್ದರೆ ಅದು ಬ್ಯಾಟ್ಸ್ಮನ್ಗೆ ಪ್ರೀ ಹಿಟ್ ಅವಕಾಶವನ್ನು ಒದಗಿಸುತ್ತದೆ, ಈ ಕಾರಣದಿಂದಾಗಿ ರನ್ ಔಟ್ ಹೊರತುಪಡಿಸಿ ಔಟ್ ಆಗುಬಹುದಾದ ಇನ್ನಾವುದೇ ವಿಧಾನದ ವಿರುಧ್ಹ ರಕ್ಷಣೆಯನ್ನು ಪಡೆಯುತ್ತಾನೆ. ವೈಡ್ ಬ್ಯಾಟ್ಸಮನ್ನ ಪರಿಧಿಯ ಹೊರಗೆ ಹೋಗುವ ರೀತಿಯಲ್ಲಿ ಬೌಲರ್ ಬಾಲನ್ನು ಎಸೆದಿದ್ದರೆ ಅದನ್ನು ವೈಡ್ ಎಂದು ಪರಿಗಣಿಸಿ ಬೌಲರ್ನ ದಂಡದ ರೂಪದಲ್ಲಿ ಹೆಚ್ಚುವರಿ ರನ್ ನೀಡಲಾಗುತ್ತದೆ, ನೋ ಬಾಲ್ನಂತೆಯೆ ವೈಡ್ ಆಗಿರುವ ಎಸೆತವನ್ನೂ ಪುನಹ ಎಸೆಯಬೇಕು. ಬೈ ಬೈಯನ್ನು ಕೂಡ ಹೆಚ್ಚುವರಿ ರನ್ ಎಂದು ಪರಿಗಣಿಸಲಾಗುತ್ತದೆ, ಒಂದು ವೇಳೆ ಬ್ಯಾಟ್ಸ್ಮನ್ನ ಹೊಡೆತದ ಗುರಿ ತಪ್ಪಿದರೆ ಆ ಬಾಲ್ ನೇರವಾಗಿ ವಿಕೇಟ್ ಕೀಪರ್ನ ಕೈ ಸೇರುತ್ತದೆ ಆ ಮೂಲಕವಾಗಿ ಬ್ಯಾಟ್ಸ್ಮನ್ಗೆ ಸಾಂಪ್ರದಾಯಿಕವಾಗಿ ರನ್ ತೆಗೆದುಕೊಳ್ಳಲು ಸಮಯಾವಕಾಶ ಸಿಗುತ್ತದೆ.(ಗಮನಿಸತಕ್ಕ ವಿಶಯವೆಂದರೆ, ಒಬ್ಬ್ ಒಳ್ಳೆಯ ವಿಕೇಟ್ ಕೀಪರ್ ಬ್ಯಾಟ್ಸ್ಮನ್ನ ಈ ರೀತಿಯ ರನ್ ತೆಗೆದುಕೊಳ್ಳುವಿಕೆಯನ್ನು ಸೀಮಿತಗೊಳಿಸುತ್ತಾನೆ) ಲೆಗ್ ಬೈ ಒಂದು ವೇಳೆ ಬಾಲ್ ಬ್ಯಾಟ್ಸ್ಮನ್ನ ಬ್ಯಾಟ್ಗೆ ತಾಗದೆ ದೇಹಕ್ಕೆ ಬಡಿದು ಫೀಲ್ಡರ್ಗಳಿಗಿಂತ ದೂರ ಸಾಗಿದರೆ ಆಗ ಬ್ಯಾಟ್ಸ್ಮನ್ಗೆ ರನ್ ತೆಗೆದುಕೊಳ್ಳಲು ಸಮಯಾವಕಾಶ ಸಿಗುತ್ತದೆ, ಇದನ್ನು ಹೆಚ್ಚುವರಿ ರನ್ ಎಂದು ಪರಿಗಣಿಸಲಾಗುತ್ತದೆ. ಬೌಲರ್ಗಳು ನೋ ಬಾಲ್ ಅಥವಾ ವೈಡ್ ಮಾಡಿದಾಗ, ಆತನ ತಂಡ ಹೆಚ್ಚುವರಿ ದಂಡವನ್ನು ಅನುಭವಿಸಬೇಕಾಗುತ್ತದೆ ಏಕೆಂದರೆ ಆ ಎಸೆತವನ್ನು ಮತ್ತೆ ಹೊಸದಾಗಿ ಬೌಲ್ ಮಾಡಬೇಕಾಗುತ್ತದೆ ಅದರ ಪರಿಣಾಮ ಬ್ಯಾಟಿಂಗ್ ವಿಭಾಗಕ್ಕೆ ಈ ಹೆಚ್ಚುವರಿ ಬಾಲ್ನಿಂದ ಅಧಿಕ ರನ್ ಗಳಿಸುವ ಅವಕಾಶ ದೊರೆಯುತ್ತದೆ. ಬ್ಯಾಟ್ನ ಹೊರತಾಗಿ ಗಳಿಸುವ ಬೈ ಮತ್ತು ಲೆಗ್ ಬೈ ರನ್ ಗಳಿಸಲು ಬ್ಯಾಟ್ಸ್ಮನ್ ಪಿಚ್ನಲ್ಲಿ ಓಡಬೇಕಾಗುತ್ತದೆ (ಬಾಲ್ ನಾಲ್ಕು ರನ್ಗಾಗಿ ಗಡಿರೇಖೆಯನ್ನು ದಾಟುವವರೆಗೂ) ಅದರೆ ಇದನ್ನು ತಂಡದ ಮೊತ್ತದಲ್ಲಿ ಪರಿಗಣಿಸಲಾಗುತ್ತದೆಯೆ ಹೊರತು ಬ್ಯಾಟ್ಸ್ಮನ್ನ ವಯಕ್ತಿಕ ಮೊತ್ತದಲ್ಲಲ್ಲ ಕ್ರಿಕೇಟಿನಲ್ಲಿ ಬ್ಯಾಟ್ಸ್ಮನ್ ಔಟ್ ಆಗುವ ಹತ್ತು ಮಾರ್ಗಗಳಿವೆ ಮತ್ತು ಅವುಗಳಲ್ಲಿ ಕೆಲವು ಅಸಾಮಾನ್ಯವಾದವುಗಳು, ಅವುಗಳಲ್ಲಿ ಕೆಲವೇ ಕೆಲವು ಪ್ರಸಂಗಗಳು ಮಾತ್ರ ಇಡೀ ಕ್ರಿಕೆಟ್ ಇತಿಹಾಸದಲ್ಲಿ ಉಳಿದುಕೊಂಡಿವೆ. ಕೆಲವು ಸಾಮಾನ್ಯವಾದ ವಿಸರ್ಜನೆಯ ಸ್ವರೂಪಗಳೆಂದರೆ, ಬೌಲ್ಡ್, ಕಾಟ್, ಲೆಗ್ ಬಿಪೋರ್ ವಿಕೇಟ್(), ರನ್ ಔಟ್, ಸ್ಟಂಪ್ಡ್ ಮತ್ತು ಹಿಟ್ ವಿಕೇಟ್. ಅಸಾಮಾನ್ಯ ವಿಧಾನಗಳೆಂದರೆ, ಬಾಲನ್ನು ಎರಡು ಭಾರಿ ಬ್ಯಾಟ್ನಿಂದ ಹೊಡೆಯುವುದು, ಮೈದಾನವನ್ನು ದುರ್ಗಮಗೊಳಿಸುವುದು, ಬಾಲ್ಗೆ ಕೈ ತಾಗಿಸುವುದು, ಮತ್ತು ಟೈಮ್ಡ್ ಔಟ್ ಅಂಪೈರ್ ಬ್ಯಾಟ್ಸ್ಮನ್ನನ್ನು ಔಟ್ ಎಂದು ತೀರ್ಮಾನಿಸುವುದಕ್ಕೂ ಮೊದಲು ಫೀಲ್ಡಿಂಗ್ ತಂಡದ ಸದಸ್ಯರುಗಳು (ಸಾಮಾನ್ಯವಾಗಿ ಬೌಲರ್) ಅಂಪೈರ್ ಎದುರು ಮನವಿ ಮಾಡಿಕೊಳ್ಳಬೇಕು. ಈ ಮನವಿಗಳು ಹೌಜ್ಯಾಟ್ ಎಂದು ನಿರಂತರವಾಗಿ ಕೇಳುವುದರ ಮೂಲಕ (ಅಥವಾ ಜೋರಾಗಿ ಕೂಗುವುದರ ಮೂಲಕ)ನಡೆಯುತ್ತದೆ. ಅದರ ಅರ್ಥ, ಸರಳವಾಗಿ ಹೌ ಇಸ್ ದ್ಯಾಟ್? ಎಂಬುದಾಗಿದೆ. ಒಂದು ವೇಳೆ ಅಂಪೈರ್ ಈ ಮನವಿಗೆ ಒಪ್ಪಿಕೊಂಡರೆ, ಆತ ತನ್ನ ಮುಂಗೈ ತೋರು ಬೆರಳನ್ನು ಮೇಲಕ್ಕೆತ್ತಿ ಔಟ್ ಎಂದು ಹೇಳುತ್ತಾನೆ. ಇಲ್ಲವೆಂದರೆ ಈತ ತನ್ನ ತಲೆಯನ್ನು ಆಡಿಸುತ್ತ ನಾಟ್ ಔಟ್ ಎಂದು ಸೂಚಿಸುತ್ತಾನೆ.ಪರಿಸ್ತಿತಿಗನುಗುಣವಾಗಿ ಕೇಳಿಕೊಂಡ ವಿಸರ್ಜನೆಗಳು ಅಸ್ಪಷ್ಟವಾಗಿದ್ದಾಗ ಮಾಡುವ ಮನವಿಗಳು ಸಾಮಾನ್ಯವಾಗಿ ದೊಡ್ಡ ದ್ವನಿಯಲ್ಲಿರುತ್ತವೆ. ಬೌಲ್ಡ್ : ಬೌಲರ್ ಎಸೆದ ಬಾಲ್ ನೇರವಾಗಿ ವಿಕೆಟನ್ನು ಬಡಿದು ಒಂದು ಬೆಯಲ್ ನೆಲೆತಪ್ಪಿ ವಿಕೆಟ್ಗಳು ಬೇರ್ಪಡೆಗೊಂಡರೆ ಅದನ್ನು ಬೌಲ್ಡ್ ಎಂದು ಕರೆಯುಚರು (ಗಮನಿಸತಕ್ಕ ವಿಷಯವೆಂದೆರೆ, ಒಂದು ವೇಳೆ ಬಾಲ್ ವಿಕೆಟನ್ನು ತಾಗಿ ಮೇಲಿರುವ ಯಾವುದೇ ಬೆಯಿಲ್ಗಳು ನೆಲೆತಪ್ಪದಿದ್ದಲಿ ಅದನ್ನು ನಾಟ್ ಔಟ್ ಎಂದು ಕರೆಯಲಾಗುತ್ತದೆ) ಕಾಟ್ : ಬ್ಯಾಟ್ಸ್ಮನ್ ತನ್ನ ಬ್ಯಾಟ್ ಅಥವಾ ಕೈಯಿಂದ ಬಾಲನ್ನು ಹೊಡೆದಿದ್ದು ಮೇಲಕ್ಕೆ ಚಿಮ್ಮಿದ ಬಾಲ್ ನೆಲವನ್ನು ತಾಗುವುದಕ್ಕಿಂತ ಮುನ್ನ ಫೀಲ್ಡಿಂಗ್ ತಂಡದ ಯಾವುದಾದರು ಒಬ್ಬ ಸದಸ್ಯನಿಂದ ಹಿಡಿಯಲ್ಪಟ್ಟರೆ ಅದನ್ನು ಕಾಟ್ ಎಂದು ಕರೆಯಲಾಗುತ್ತದೆ. ಲೆಗ್ ಬಿಪೋರ್ ವಿಕೆಟ್ () : ಮೊದಲು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ಮೈದಾನದ ಹೊರಗಿನ ಅಂಪೈರ್ನ ಅಭಿಪ್ರಾಯದಲ್ಲಿ, ಒಂದು ವೇಳೆ ಚೆಂಡು ವಿಕೇಟ್ಗಳನ್ನು ಬಡಿಯುವದಕ್ಕಿಂತ ಮುನ್ನ ಬ್ಯಾಟ್ಸ್ಮನ್ನ ಪ್ಯಾಡನ್ನು ಬಡಿದಿದ್ದರೆ ಅದನ್ನು ಲೆಗ್ ಬಿಪೋರ್ ವಿಕೇಟ್ ಎಂದು ಕರೆಯುವರು. ಒಂದು ವೇಳೆ ಬ್ಯಾಟ್ಸ್ಮನ್, ಎಸೆಯಲ್ಪಟ್ಟ ಚೆಂಡನ್ನು ಹೊಡೆಯುವ ಪ್ರಯತ್ನದಲ್ಲಿ, ಗುರಿತಪ್ಪಿದ ಚೆಂಡು ನೇರವಾಗಿ ಹೋಗಿ ವಿಕೇಟನ್ನು ಬಡಿಯುವ ಬದಲು ಆತನ ಪ್ಯಾಡನ್ನು ಬಡಿಯಬಹುದು, ಆಗ ಬ್ಯಾಟ್ಸ್ಮನ್ ಔಟ್ ಎಂದು ನಿರ್ಣಯಿಸಲಾಗುತ್ತದೆ. ಒಂದು ವೇಳೆ ಬ್ಯಾಟ್ಸ್ಮನ್ ಚೆಂಡನ್ನು ಹೋಡೆಯುವ ಯಾವುದೇ ಪ್ರಯತ್ನವನ್ನು ಮಾಡದೆ ಇದ್ದರೂ, ಚೆಂಡು ವಿಕೇಟ್ನ ನೇರಕ್ಕಿರುವ ಆತನ ಪ್ಯಾಡನ್ನು ಬಡಿಯಬೇಕೆಂದೆನೂ ಇಲ್ಲ ಆದರೆ ಅದು ನೇರವಾಗಿ ವಿಕೇಟನ್ನು ಬಡಿಯುವಂತಿರಬೇಕು. ಒಂದು ವೇಳೆ ಚೆಂಡು ಲೆಗ್ ಸ್ಟಂಪಿನ ಹೊರಗೆ ಬಿದ್ದು ಪ್ಯಾಡ್ಗೆ ಬಡಿದಿದ್ದರೆ ಆಗ ಅಂಥಹ ಯಾವುದೇ ಪರಿಸ್ಥಿತಿಯಲ್ಲಿ ಬ್ಯಾಟ್ಸ್ಮನ್ನನ್ನು ಔಟ್ ಎಂದು ಪರಿಗಣಿಸಲಾಗುವುದಿಲ್ಲ. ರನ್ ಔಟ್ : ಬ್ಯಾಟ್ಸ್ಮನ್ ಮೈದಾನದಲ್ಲಿ ತನ್ನ ಗಡಿರೇಖೆಯಿಂದ ಹೊರಗಡೆ ಇರುವಾಗ ಫೀಲ್ಡಿಂಗ್ ತಂಡದ ಯಾವುದೇ ಸದಸ್ಯನಿಂದ ಚೆಂಡಿನಿಂದ ವಿಕೇಟ್ ಮುರಿಯಲ್ಪಟ್ಟರೆ ಅಥವಾ ವಿಕೇಟನ್ನು ನೆಲಕ್ಕೆ ಉರುಳಿಸಲ್ಪಟ್ಟರೆ ಅದನ್ನು ರನ್ ಔಟ್ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಬ್ಯಾಟ್ಸ್ಮನ್ ರನ್ ತೆಗೆದುಕೊಳ್ಳುವ ಪ್ರಯತ್ನದಲ್ಲಿರುವಾಗ ಫೀಲ್ಡಿಂಗ್ ತಂಡದ ಸದಸ್ಯನಿಂದ ಚೆಂಡನ್ನು ಕರಾರುವಕ್ಕಾಗಿ ವಿಕೇಟ್ಗೆ ಎಸೆಯಲ್ಪಟ್ಟರೆ ಮಾತ್ರ ಸಂಭವಿಸುತ್ತದೆ. ಸ್ಟಂಪ್ಡ್ ಬೌಲರ್ನಿಂದ ಎಸೆಯಲ್ಪಟ್ಟ ಚೆಂಡನ್ನು ಬ್ಯಾಟ್ಸ್ಮನ್ ತಪ್ಪಿಸಿಕೊಂಡು, ಆ ಚೆಂಡು ನೇರವಾಗಿ ವಿಕೇಟ್ ಕೀಪರ್ನ ಕೈ ಸೇರಿದರೆ ಮತ್ತು ಆ ಸಮಯದಲ್ಲಿ ಆತನ ಗಡಿರೇಕೆಗಿಂತ ಮುಂದೆ ಕಾಲನ್ನು ಇಟ್ಟಿದ್ದರೆ ಮತ್ತು ಆ ಸಮಯದಲ್ಲಿ ಬ್ಯಾಟ್ಸ್ಮನ್ ರನ್ಗಾಗಿ ಪ್ರಯತ್ನಿಸದಿದ್ದಲ್ಲಿ ವಿಕೇಟ್ ಕೀಪರ್ನಿಂದ ಸ್ಟಂಪ್ಡ್ ಆಗುತ್ತಾನೆ. ಹಿಟ್ ವಿಕೇಟ್ : ಒಬ್ಬ ಬ್ಯಾಟ್ಸ್ಮನ್ ಹಿಟ್ ವಿಕೇಟ್ ಮೂಲಕ ಔಟ್ ಆಗುತ್ತಾನೆ, ಒಂದು ವೇಳೆ ಒಂದು ಅಥವಾ ಎರಡೂ ಬೆಯಲ್ಗಳನ್ನು ತನ್ನ ಬ್ಯಾಟ್ನಿಂದ, ದೇಹದಿಂದ, ಬಟ್ಟೆಯಿಂದ ಅಥವಾ ಯಾವುದೇ ಪರಿಕರದಿಂದ ಚೆಂಡನ್ನು ಬಡಿಯುವ ಸಂದರ್ಭದಲ್ಲಿ ಅಥವಾ ರನ್ಗಳಿಸಲು ಪ್ರಯತ್ನಿಸುವ ಸಮಯದಲ್ಲಿ ಉರುಳಿಸಿದರೆ ಅದನ್ನು ಹಿಟ್ ವಿಕೇಟ್ ಎಂದು ಕರೆಯಲಾಗುತ್ತದೆ. ಬಾಲನ್ನು ಎರಡು ಬಾರಿ ಹೊಡೆಯುವುದು ಇದು ಒಂದು ಅಪರೂಪದ ವಿಧಾನ ಮತ್ತು ಇದನ್ನು ಆಕ್ರಮಣಕಾರಿ ಆಟವನ್ನು ತಡೆಯಲು ಮತ್ತು ಫಿಲ್ಡರ್ಗಳ ರಕ್ಷಣೆಯ ಕಾರಣದಿಂದಾದಾಗಿ ಪರಿಚಯಿಸಲಾಗಿದೆ. ಕಾನೂನು ಬದ್ಧವಾಗಿ ಬ್ಯಾಟ್ಸ್ಮನ್ ಚೆಂಡು ವಿಕೇಟ್ಗೆ ತಗುಲುವುದನ್ನು ತಪ್ಪಿಸುವ ಸಲುವಾಗಿ ಮಾತ್ರ ಒಮ್ಮೆ ಆಡಿದ ನಂತರವೂ ಮತ್ತೊಮ್ಮೆ ಬ್ಯಾಟ್ನಿಂದ ಹೊಡೆಯಬಹುದಾಗಿದೆ. ಮೈದಾನದಲ್ಲಿ ಅಡಚಣೆಯನ್ನು ತಂದೊಡ್ಡುವುದು : ಉದ್ದೇಶಪೂರ್ವಕವಾಗಿ ಫೀಲ್ಡರ್ನ ದಾರಿಗೆ ಅಡ್ಡಹಾಕುವುದರ ಮೂಲಕ ಔಟ್ ಆಗುವ ಒಂದು ಅಪರೂಪದ ಸನ್ನಿವೇಶ. ಚೆಂಡನ್ನು ಕೈಯಿಂದ ಮುಟ್ಟುವಿಕೆ : ಬ್ಯಾಟ್ಸ್ಮನ್ ಉದ್ದೇಶಪೂರ್ವಕವಾಗಿ ತನ್ನ ವಿಕೇಟನ್ನು ರಕ್ಷಿಸಿಕೊಳ್ಳುವದಕ್ಕಾಗಿ ಚೆಂಡನ್ನು ಕೈಯಿಂದ ಮುಟ್ಟುವಹಾಗಿಲ್ಲ (ಗಮನಿಸಬೇಕಾದ ವಿಶಯವೆಂದರೆ, ಎಸೆಯಲ್ಪಟ್ಟ ಚೆಂಡು ಸಾಮಾನ್ಯವಾಗಿ ಬ್ಯಾಟ್ಸ್ಮನ್ನ ಕೈಯನ್ನು ತಾಗುತ್ತದೆ ಆದರೆ ಇದು ಉದ್ದೇಶಪೂರ್ವಕವಾಗಿ ಮಾಡಿರದ ಕಾರಣ ಇದನ್ನು ನಾಟ್ ಔಟ್ ಎಂದು ಕರೆಯುವರು ಆದಾಗ್ಯೂ ಆತನ ಕೈ ತಾಗಿ ಪುಟಿದ ಚೆಂಡನ್ನು ಫೀಲ್ಡರ್ ಹಿಡಿದನೆಂದರೆ ಖಂಡಿತವಾಗಿಯೂ ಆತನು ಔಟ್ ಅಗುತ್ತಾನೆ). ಅವಧಿ ಮುಗಿಯುವಿಕೆ , ಇದರ ಅರ್ಥ ಒಬ್ಬ ಬ್ಯಾಟ್ಸ್ಮನ್ ಔಟ್ ಆದ ನಂತರ ಇನ್ನೊಬ್ಬ ಬ್ಯಾಟ್ಸ್ಮನ್ ಮೂರು ನಿಮಿಶದ ಅವಧಿಯೊಳಗೆ ಮೈದಾನಕ್ಕೆ ಆಗಮಿಸದಿದ್ದಲ್ಲಿ ಅದನ್ನು ಅವಧಿ ಮುಗಿದಿದೆ ಎಂದು ತೀರ್ಮಾನಿಸಿ ಆತನನ್ನು ಔಟ್ ಎಂದು ಘೋಷಿಸಲಾಗುತ್ತದೆ ಹೆಚ್ಚಿನ ಸಂದರ್ಭಗಳಲ್ಲಿ, ವಿರ್ಜನೆಯ ಸಮಯದಲ್ಲಿ ಸ್ಟ್ರೈಕರ್ನಲ್ಲಿದ್ದ ಆಟಗಾರನು ಔಟ್ ಆಗುವ ಸಂಬವ ಹೆಚ್ಚು ಒಂದು ವೇಳೆ ನಾನ್ಸ್ಟ್ರೈಕರ್ನಲ್ಲಿದ್ದ ಆಟಗಾರ ಔಟ್ ಆಗಿದ್ದಾನೆ ಎಂದರೆ ಸಾಮಾನ್ಯವಾಗಿ ಅದು ರನ್ ಔಟ್ ಅಗಿರುತ್ತದೆ, ಅಲ್ಲದೆ ಮೈದಾನದಲ್ಲಿ ಅಡ್ಡಿಯನ್ನುಂಟು ಮಾಡುವ, ಚೆಂಡನ್ನು ಕೈಯಿಂದ ಮುಟ್ಟುವ ಅಥವಾ ಅವಧಿ ಮುಗಿಯುವ ಕಾರಣದಿಂದಲೂ ಆತ ಔಟ್ ಆಗಬಹುದಾಗಿದೆ ಔಟ್ ಆಗದೆಯೂ ಕೂಡ ಬ್ಯಾಟ್ಸ್ಮನ್ ಮೈದಾನವನ್ನು ಬಿಟ್ಟು ಹೋಗಬಹುದು. ಒಂದು ವೇಳೆ ಗಾಯದ ಅಥವಾ ಅನಾರೋಗ್ಯದ ಕಾರಣದಿಂದಾಗಿ ತಾತ್ಕಾಲಿಕ ನಿವೃತ್ತಿಯನ್ನು ತೆಗೆದುಕೊಳ್ಳಬಹುದು, ಮತ್ತು ಆತನು ಇನ್ನೊಬ್ಬ ಬ್ಯಾಟ್ಸ್ಮನ್ನಿಂದ ಬದಲಾಯಿಸಲ್ಪಡುತ್ತಾನೆ. ಇಅದನ್ನಿ ರಿಟೈರ್ಡ್ ಹರ್ಟ್ ಅಥವಾ ರಿಟೈರ್ಡ್ ಇಲ್ ಎಂದು ವರದಿ ಮಾಡಲಾಗುತ್ತದೆ. ನಿವೃತ್ತಿ ಪಡೆದ ಬ್ಯಾಟ್ಸ್ಮನ್ ಔಟ್ ಆಗಿರುವುದಿಲ್ಲ, ಅಲ್ಲದೆ ಅವಧಿಯ ಕೊನೆಯಲ್ಲಿ ಈತ ಆಟವನ್ನು ಮತ್ತೆ ಮುಂದುವರಿಸಬಹುದಾಗಿದೆ. ಯಾವುದೇ ತೊಂದರೆಯನ್ನು ಮಾಡದ ಬ್ಯಾಟ್ಸ್ಮನ್ ಕೂಡ ನಿವೃತ್ತಿ ಪಡೆಯಬಹುದು, ಆದರೆ ಇದನ್ನು ರಿಟೈರ್ಡ್ ಹರ್ಟ್ ಎಂದು ನಿರ್ಧರಿಸಲಾಗುತ್ತದೆ ಇದುವರೆಗು ಈ ವಿಧಾನದ ಮೂಲಕ ಯಾವುದೇ ಆಟಗಾರನು ಔಟ್ ಅಗಿರುವ ದಾಖಲೆ ಇಲ್ಲ.ನೋಬಾಲ್ ಆದ ಸಮಯದಲ್ಲಿ ಬ್ಯಾಟ್ ಮಾಡುವವರನ್ನು ಬೋಲ್ಡ್ , ಕ್ಯಾಚ್ , ಲೆಗ್ ಬಿಫೋರ್ ವಿಕೇಟ್ , ಸ್ಟಂಪ್ಡ್ ಅಥವಾ ಹಿಟ್ ವಿಕೇಟ್ ಮಾಡುವಂತಿಲ್ಲ. ವೈಡ್ ಆದ ಸಂದರ್ಭದಲ್ಲಿ ಬೋಲ್ಡ್ , ಕ್ಯಾಚ್ , ಲೆಗ್ ಬಿಫೋರ್ ವಿಕೇಟ್ ಅಥವಾ ಎರಡು ಬಾರಿ ಬಾಲ್ ಅನ್ನು ಹೊಡೆದರೆ ಬ್ಯಾಟ್ ಮಾಡುವವರನ್ನು ಔಟ್ ಎಂದು ಘೋಷಿಸುವಂತಿಲ್ಲ. ಈ ಕೆಲವು ಔಟ್ ಎಂದು ಘೋಷಿಸುವ ಸಂದರ್ಭಗಳು ಕೆಲವೊಮ್ಮೆ ಬೌಲರ್ ಬಾಲ್ ಮಾಡದೆಯೂ ಸಂಭವಿಸಬಹುದು. ಬ್ಯಾಟ್ಸ್ಮನ್ ಸ್ಥಾನದಲ್ಲಿ ಇಲ್ಲದೆ ಇನ್ನೊಂದೆಡೆ ಇರುವ ವ್ಯಕ್ತಿಯು ತನ್ನ ಕ್ರೀಸ್ ಬಿಟ್ಟರೆ ಬಾಲರ್ನಿಂದ ರನ್ ಔಟ್ಗೆ ಒಳಗಾಗಬಹುದು ಹಾಗೆಯೇ ಫಿಲ್ಡಿಂಡ್ಗೆ ತಡೆಯೊಡ್ಡುವ ಬ್ಯಾಟ್ಸ್ಮನ್ನನ್ನು ರಿಟೈರ್ಡ್ ಔಟ್ ಎಂದು ಯಾವ ಸಮಯದಲ್ಲಾದರೂ ಘೋಷಿಸಬಹುದಾಗಿದೆ. ಟೈಮ್ಡ್ ಔಟ್ ಎಂಬುದು ಬಾಲ್ ಮಾಡದೆ ಇರುವಾಗಲೂ ಕೂಡ ಬ್ಯಾಟ್ಮನ್ನನ್ನು ಔಟ್ ಎಂದು ಘೋಷಿಸಬಹುದಾಗಿದೆ. ಈ ಎಲ್ಲ ರೀತಿಯ ಔಟ್ ಎಂದು ನಿರ್ಧರಿಸುವ ಪ್ರಕಾರಗಳಲ್ಲೂ ಒಂದು ಬಾಲ್ಗೆ ಒಬ್ಬ ವ್ಯಕ್ತಿಯನ್ನು ಮಾತ್ರ ಔಟ್ ಎಂದು ಘೋಷಿಸಬಹುದಾಗಿದೆ. ಇನ್ನಿಂಗ್ಸ್ ಮುಕ್ತಾಯ ಒಂದು ಇನ್ನಿಂಗ್ಸ್ ಮುಕ್ತಾಯಗೊಂಡಿದೆ ಎಂದು ಈ ಕೆಳಗಿನ ಸಂದರ್ಭದಲ್ಲಿ ನಿರ್ಧರಿಸಬಹುದಾಗಿದೆ: ಹನ್ನೊಂದು ಜನ ಆಟಗಾರರಲ್ಲಿ ಹತ್ತು ಜನ ಔಟ್ ಆಗಿದ್ದರೆ (ವಿಸರ್ಜನೆಗೊಂಡಿದ್ದರೆ) ಈ ಸನ್ನಿವೇಶದಲ್ಲಿ, ತಂಡವನ್ನು ಆಲ್ ಔಟ್ ಎಂದು ಕರೆಯಲಾಗುತ್ತದೆ. ತಂಡದಲ್ಲಿ ಆಟ ಆಡಬಹುದಾದ ಒಬ್ಬನೇ ಬ್ಯಾಟ್ಸ್ಮನ್ ಉಳಿದಿದ್ದು, ಒಂದು ಅಥವಾ ಒಂದಕ್ಕಿಂತ ಹೆಚ್ಚು ಆಟಗಾರರು ಗಾಯ, ಅನಾರೋಗ್ಯ ಅಥವಾ ಅನುಪಸ್ಥಿತಿಯ ಕಾರಣದಿಂದ ಆಡಲು ಲಭ್ಯವಾಗದಿದ್ದ ಸಮಯದಲ್ಲಿ ಕೂಡ ತಂಡವನ್ನು ಆಲ್ ಔಟ್ ಎಂದು ಕರೆಯಲಾಗುತ್ತದೆ. ಬ್ಯಾಟಿಂಗ್ ತಂಡ ಕೊನೆಯದಾಗಿ ಜಯಗಳಿಸಲು ಅಗತ್ಯವಾಗಿ ಗಳಿಸಲೇಬೇಕಾದ ಮೊತ್ತವನ್ನು ತಲುಪುತ್ತದೆ. ಮುಂಚಿತವಾಗಿಯೆ ನಿರ್ಧರಿಸಲ್ಪಟ್ಟ ಸಂಖ್ಯೆಯ ಒವರುಗಳನ್ನು ಬೌಲ್ ಮಾಡಲಾಗುತ್ತದೆ. (ಏಕದಿನ ಪಂದ್ಯಗಳಲ್ಲಿ ಮಾತ್ರ, ಸಾಮಾನ್ಯವಾಗಿ ೫೦ ಒವರುಗಳ ಪಂದ್ಯದಲ್ಲಿ ಅಥವಾ ಟ್ವೆಂಟಿ೨೦ ಪಂದ್ಯಗಳಲ್ಲಿ) ತಂಡದ ನಾಯಕ ಕೊನೆಯಲ್ಲಿ ಇಬ್ಬರು ಆಟಗಾರರು ಔಟ್ ಆಗದೇ ಉಳಿದಿರುವ ಸಮಯದಲ್ಲಿ ಆತನ ತಂಡದ ಆಟ ಮುಗಿಯಿತೆಂದು ಘೋಷಿಸುತ್ತಾನೆ. (ಇದು ಏಕದಿನ ಮತ್ತು ಸೀಮಿತ ಒವರುಗಳ ಪಂದ್ಯಗಳಿಗೆ ಅನ್ವಯಿಸುವುದಿಲ್ಲ) ಫಲಿತಾಂಶ ಒಂದು ವೇಳೆ ಕೊನೆಯದಾಗಿ ಬ್ಯಾಟ್ ಮಾಡುವ ತಂಡ ತನ್ನ ಪ್ರತಿಸ್ಪರ್ಧಿಗಿಂತ ಕಡಿಮೆ ರನ್ ಗಳಿಸಿ ಅಲ್ ಔಟ್ ಆದರೆ, ಆ ತಂಡವನ್ನು ರನ್ಗಳಿಂದ ಸೋಲನ್ನು ಅನುಭವಿಸಿತು ಎಂದು ಕರೆಯಲಾಗುತ್ತದೆ. ( ಇದು ತಂಡಗಳು ಗಳಿಸಿದ ಅಂಕಗಳ ನಡುವಿನ ವ್ಯತ್ಯಾಸವಾಗಿದೆ) ಒಂದು ವೇಳೆ ಕೊನೆಯಲ್ಲಿ ಬ್ಯಾಟ್ ಮಾಡುವ ತಂಡ ಜಯಗಳಿಸಲು ಬೇಕಾದ ಎಲ್ಲಾ ರನ್ಗಳನ್ನು ಗಳಿಸಿದರೆ, ಆ ತಂಡವನ್ನು ವಿಕೇಟುಗಳಿಂದ ಜಯಗಳಿಸಿತು ಎಂದು ಕರೆಯಲಾಗುತ್ತದೆ.ಇಲ್ಲಿ ಇನ್ನೂ ಉಳಿದ ವಿಕೇಟ್ಗಳ ಸಂಖ್ಯೆಯನ್ನು ತಿಳಿಸುತ್ತದೆ. ಉದಾಹರಣೆಗೆ, ಒಂದು ತಂಡ ತನ್ನ ಆರು ವಿಕೇಟ್ಗಳನ್ನು ಕಳೆದುಕೊಂಡು ಪ್ರತಿಸ್ಪರ್ಧಿಯ ಅಂಕಗಳನ್ನು ದಾಟಿದೆ ಎಂದರೆ ಅದು ನಾಲ್ಕು ವಿಕೇಟ್ಗಳಿಂದ ಜಯಗಳಿಸಿದೆ ಎಂದು ಅರ್ಥ. ಎರಡುಅವಧಿಯಒಂದು ಪಂದ್ಯದಲ್ಲಿ, ಒಂದು ತಂಡದ ಮೊದಲ ಮತ್ತು ಕೊನೆಯ ಅವಧಿಯ ಒಟ್ಟೂ ಅಂಕಗಳ ಮೊತ್ತವು ಇನ್ನೊಂದು ತಂಡದ ಮೊದಲ ಅವಧಿಯ ಅಂಕಗಳ ಮೊತ್ತಕ್ಕಿಂತ ಕಡಿಮೆ ಇರಬಹುದು.ಅತಿಹೆಚ್ಚು ಸ್ಕೋರ್ ಗಳಿಸಿದ ತಂಡವು ರನ್ ಗಳಿಂದ ಇನ್ನಿಂಗ್ಸ್ ವಿಜೇತ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಮತ್ತೆ ಬ್ಯಾಟ್ ಮಾಡುವ ಅಗತ್ಯ ಕೂಡ ಇರಲಾರದು: ಇದು ಎರಡು ತಂಡಗಳ ನಡುವಿನ ಸರಾಸರಿ ಮೊತ್ತ ಎಂದು ತಿಳಿಸಲಾಗುತ್ತದೆ. ಬ್ಯಾಟಿಂಗ್ ಮಾಡುತ್ತಿದ್ದ ಕೊನೆಯ ತಂಡದ ಎಲ್ಲ ವಿಕೇಟ್ಗಳನ್ನು ಕಳೆದುಕೊಂಡರೆ, ಹಾಗೂ ಎರಡು ಕಡೆಯ ತಂಡದವರ ಸ್ಕೋರ್ ಸಮಾನವಾಗಿದ್ದರೆ, ಅಂತಹ ಪಂದ್ಯವನ್ನು ಟೈ ಎಂದು ಘೋಷಿಸಲಾಗುತ್ತದೆ. ಈ ರೀತಿಯ ಸಂದರ್ಭವು ಎರಡು ಇನ್ನಿಂಗ್ಸ್ಗಳ ಪಂದ್ಯದಲ್ಲಿ ವಿರಳ. ಸಾಂಪ್ರದಾಯಿಕವಾದ ಆಟದಲ್ಲಿ ಎರಡು ತಂಡಗಳಿಗೆ ಆಡಲು ನೀಡಿದ ಅವಧಿಯು ಯಾವುದಾದರೊಂದು ತಂಡ ವಿಜೇತವಾಗುವ ಮೊದಲು ಪೂರ್ಣಗೊಂಡರೆ, ಆಟವನ್ನು ಡ್ರಾ ಎಂದು ಪರಿಗಣಿಸಲಾಗುತ್ತದೆ. ಪ್ರತಿ ತಂಡಕ್ಕೆ ಒಂದೇ ಒಂದು ಇನ್ನಿಂಗ್ಸ್ ಅವಕಾಶವಿದ್ದರೆ, ಸಾಧ್ಯವಿದ್ದಷ್ಟು ಎಸೆತವನ್ನು ಎಸೆಯುವ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ. ಈ ರೀತಿಯ ಪಂದ್ಯವನ್ನು ನಿರ್ಧಿಷ್ಟ ಓವರ್ಗಳ ಅಥವಾ ಒಂದು ದಿನದ ಪಂದ್ಯ ಎಂದು ಕರೆಯಲಾಗುತ್ತದೆ ಮತ್ತು ಹೆಚ್ಚು ರನ್ಗಳಿಸುವ ತಂಡ ಜಯಗಳಿಸುತ್ತದೆ ಇಲ್ಲಿ ತಂಡ ಎಷ್ಟು ವಿಕೇಟ್ ಕಳೆದುಕೊಂಡಿದೆ ಎಂಬುದನ್ನು ಗಮನಿಸಲಾಗುವುದಿಲ್ಲ, ಈ ಕಾರಣದಿಂದಾಗಿ ಪಂದ್ಯ ಡ್ರಾ ಆಗುವ ಸಾಧ್ಯತೆ ಇಲ್ಲ.ಒಂದು ವೇಳೆ ಈ ರೀತಿಯ ಪಂದ್ಯಗಳು ಹವಾಮಾನ ವೈಪರಿತ್ಯದ ಕಾರಣದಿಂದ ತಾತ್ಕಾಲಿಕವಾಗಿ ನಿಲುಗಡೆಯಾದರೆ, ಡಕ್ವರ್ಥ್ ಲೂವಿಸ್ ಎಂದು ಪ್ರಸಿದ್ಧಿಯಾದ ಸಂಕೀರ್ಣ ಗಣೀತಿಯ ಸಂಕೇತಗಳ ಮೂಲಕ ಹೊಸದಾದ ಅಂಕೆಗಳ ಸವಾಲನ್ನು ಒದಗಿಸಲಾಗುತ್ತದೆ.ಎರಡೂ ತಂಡಗಳು ನಿಗಧಿಪಡಿಸಿದ ಓವರ್ಗಳಿಗಿಂತ ಕಡಿಮೆ ಪ್ರಮಾಣದ ಓವರ್ ಅನ್ನು ಬೌಲ್ ಮಾಡಿದಾಗ ಒಂದು ದಿನದ ಪಂದ್ಯವನ್ನು ಕೂಡ ಫಲಿತಾಂಶ ರಹಿತ ಪಂದ್ಯವನ್ನಾಗಿ ಘೋಷಿಸಬಹುದಾಗಿದೆ. ಉದಾಹರಣೆಗೆ ತೇವಾಂಶ ವಾತಾವರಣದ ಕಾರಣ ನೀಡಿ. ಹವಾಮಾನ ಕ್ರಿಕೆಟ್ ಇದು ಹೆಚ್ಚಾಗಿ ಒಣವಾತಾವರಣವಿರುವ ದಿನಗಳಲ್ಲಿ ಆಡುವ ಕ್ರೀಡೆಯಾಗಿದೆ. ಆದರೂ ಕೂಡ ಹವಾಮಾನವು ಎಲ್ಲ ಕ್ರಿಕೆಟ್ ಪಂದ್ಯಗಳಲ್ಲಿ ಮುಖ್ಯಪಾತ್ರ ವಹಿಸುತ್ತದೆ. ನಿಗದಿಪಡಿಸಿದ ಕ್ರಿಕೆಟ್ ಪಂದ್ಯವನ್ನು ತೇವಾಂಶಪೂರಿತ ವಾತಾವರಣದಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಒದ್ದೆಯಾದ ಮೈದಾನವು ಚೆಂಡಿನ ಪುಟಿಯುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಚೆಂಡು ಸರಿಯಾದ ಗುರಿ ತಲುಪುವುದು ಸಾಧ್ಯವಾಗುವುದಿಲ್ಲ. ಇದು ಎಲ್ಲ ಆಟಗಾರರಿಗೂ ಸಮಸ್ಯೆಯನ್ನುಂಟುಮಾಡುತ್ತದೆ. ಕೆಲವು ಮೈದಾನಗಳಲ್ಲಿ ಮೈದಾನವನ್ನು ಮುಚ್ಚಿಡುವ ಅವಕಾಶ ಕೂಡ ಇರುತ್ತದೆ. (ಅಥವಾ ವಿಕೇಟ್)ಇಲ್ಲಿ ಉಪಯೋಗಿಸುವ ಮುಚ್ಚಳಿಕೆಯು ಒಂದು ರೀತಿಯ ಶೀಟ್ಸ್ ರೂಪದಲ್ಲಿ ಇರಬಹುದು ಇಲ್ಲವೆ ಕೇವಲ ವಿಕೇಟ್ಗಳನ್ನು ಮಾತ್ರ ಮುಚ್ಚುವ ಮುಚ್ಚಳಿಕೆಯಂತೆ ಇರಬಹುದಾಗಿದೆ (ಮಳೆಗಾಲದಲ್ಲಿ ಉಪಯೋಗಿಸುವ ಛತ್ರಿಯಂತೆ). ಅಥವಾ ಇದು ಒಂದು ರೀತಿಯಲ್ಲಿ ವಿಕೇಟ್ಗಳನ್ನು ಏರ್ಟೈಟ್ ಮುಚ್ಚಳದಂತೆ ಕಾಪಾಡುವಂತಿರುತ್ತದೆ. ಹೆಚ್ಚಾಗಿ ಎಲ್ಲ ಮೈದಾನಗಳಲ್ಲೂ ಪಿಚ್ ಬಿಟ್ಟು ಉಳಿದ ಮೈದಾನವನ್ನು ಮುಚ್ಚುವ ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ಹೆಚ್ಚಾಗಿ ಕೆಟ್ಟಹವಾಮಾನವಿರುವ ಸಮಯದಲ್ಲಿ ಪಂದ್ಯವನ್ನು ಉಳಿದ ಮೈದಾನವು ಸರಿಯಿರದ ಕಾರಣ ನೀಡಿ ರದ್ದುಗೊಳಿಸಲಾಗುತ್ತದೆ ಕ್ರಿಕೇಟ್ ಆಟದಲ್ಲಿ ಪಾತ್ರವಹಿಸುವ ಇನ್ನೊಂದು ಮುಖ್ಯ ಕಾರಣ ಸಾಕಷ್ಟು ಬೆಳಕು. ಫ್ಲಡ್ಲೈಟ್ ಇಲ್ಲದ ಮೈದಾನದಲ್ಲಿ (ಅಥವಾ ಫ್ಲಡ್ ಲೈಟ್ ಬಳಕೆ ಮಾಡಲಾಗದ ಸ್ಠಿತಿಯಲ್ಲಿ) ಅಂಪೈರ್ಗಳು ಕೆಟ್ಟ ಬೆಳಕಿನ ಕಾರಣ ನೀಡಿ ಪಂದ್ಯವನ್ನು ಬ್ಯಾಟ್ಸ್ಮನ್ಗಳಿಗೆ ತಮ್ಮತ್ತ ಬರುವ ಬಾಲ್ನ್ನು ಗುರುತಿಸಲಾಗುತ್ತಿಲ್ಲ ಎಂಬ ಕಾರಣ ನೀಡಿ ಅಥವಾ ಕೆಲವು ಬಾರಿ ಫಿಲ್ಡರ್ಗಳಿಗೆ ತಮ್ಮತ್ತ ಬರುವ ಬಾಲ್ ಗುರುತಿಸಲಾಗುತ್ತಿಲ್ಲ ಎಂಬ ಕಾರಣ ನೀಡಿ ಪಂದ್ಯವನ್ನು ರದ್ದುಗೊಳಿಸಬಹುದಾಗಿದೆ. ಇನ್ನು ಕೆಲವು ಸಮಯದಲ್ಲಿ ಉತ್ತಮ ಬೆಳಕು ಬೇಕಾಗುವ ಸಂದರ್ಭದಲ್ಲಿ ಬ್ಯಾಟ್ಸಮನ್ ಸೈಟ್ಸ್ಕ್ರೀನ್ ಉಪಯೋಗಿಸಿಕೊಂಡು ತನ್ನತ್ತ ಬರುವ ಕೆಂಪು ಬಣ್ಣದ ಚೆಂಡನ್ನು ಗುರುತಿಸಲು ಸಹಾಯವಾಗುವಂತೆ ಮಾಡಿಕೊಳ್ಲಬಹುದಾಗಿದೆ. ಹವಾಮಾನಕ್ಕೆ ಸಂಬಂಧಿಸಿದಂತೆ ಅಂಪೈರ್ಗಳು ಯಾವತ್ತೂ ಕೊನೆಯ ನಿರ್ಧಾರ ಕೈಗೊಳ್ಳುವವರಾಗಿರುತ್ತಾರೆ. ಪಂದ್ಯದ ವಿವಿಧ ರೀತಿಗಳು ಕ್ರಿಕೇಟ್ ಇದು ಬಹುಮುಖವುಳ್ಳ ಒಂದು ಕ್ರೀಡೆಯಾಗಿದ್ದು, ಸಾಧಾರಣವಾಗಿ ಇದನ್ನು ಮೇಜರ್ ಕ್ರಿಕೇಟ್ ಮತ್ತು ಮೈನರ್ಕ್ರಿಕೇಟ್ ಎಂದು ಆಟದ ರೀತಿಯನ್ನು ಪರಿಗಣಿಸಿ ಎರಡು ವಿಧವಾಗಿ ವಿಂಗಡಿಸಬಹುದಾಗಿದೆ. ಹೆಚ್ಚಾಗಿ ಈ ರೀತಿಯ ವಿಭಜನೆಯನ್ನು ಅದರಲ್ಲೂ ಹೆಚ್ಚಾಗಿ ಮೇಜರ್ ಕ್ರಿಕೇಟ್ಗೆ ಸಂಬಂಧಿಸಿದಂತೆ, ಇಲ್ಲಿ ಹೆಚ್ಚಾಗಿ ಪಂದ್ಯದಲ್ಲಿ ಎರಡು ಇನ್ನಿಂಗ್ಸ್ಗಳಿದ್ದು ಪ್ರತಿ ತಂಡಕ್ಕೆ ಒಂದು ಇನ್ನಿಂಗ್ಸ್ ಇರುತ್ತದೆ. ಮೊದಲ ಪ್ರಕಾರದ ಕ್ರಿಕೇಟ್ ಹೆಚ್ಚಾಗಿ ಫಸ್ಟ್ ಕ್ಲಾಸ್ ಕ್ರಿಕೇಟ್ ಎಂದು ಕರೆಯಲಾಗುತ್ತದೆ. ಇದು ಹೆಚ್ಚಾಗಿ ಮೂರರಿಂದ ಐದು ದಿನಗಳ ಅವಧಿಯನ್ನು ಹೊಂದಿರುವಂತದ್ದಾಗಿದೆ (ಇವುಗಳಲ್ಲಿ ಸಮಯಾವಕಾಶದ ಮಿತಿಯೇ ಇಲ್ಲದೆ ಪಂದ್ಯಗಳು ನಡೆದ ಉದಾಹರಣೆ ಕೂಡ ಇದೆ) ಇನ್ನೊಂದು ಪ್ರಕಾರವನ್ನು ನಿರ್ಧಿಷ್ಟ ಓವರ್ಗಳ ಪಂದ್ಯ ಎಂದು ಕರೆಯಲಾಗುತ್ತದೆ. ಏಕೆಂದರೆ ಇದರಲ್ಲಿ ಪ್ರತಿ ತಂಡಕ್ಕೆ ೫೦ ಓವರ್ಗಳ ಅವಕಾಶವನ್ನು ನೀಡಲಾಗುತ್ತದೆ. ಹಾಗೆಯೇ ಈ ಪಂದ್ಯಕ್ಕೆ ಒಂದು ದಿನದ ಕಾಲಾವಧಿಯನ್ನು ನೀಡಲಾಗುತ್ತದೆ (ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಅಥವಾ ಇತರೆ ಕಾರಣಗಳಿಂದಾಗಿ ಪಂದ್ಯವನ್ನು ಮುಂದಿನ ದಿನಕ್ಕೆ ಮುಂದೂಡಬಹುದಾಗಿದೆ.) ಸಾಧಾರಣವಾಗಿ, ಎರಡು ಇನ್ನಿಂಗ್ಸ್ಗಳ ಪಂದ್ಯಾವಳಿಯು ಪ್ರತಿದಿನ ಸುಮಾರು ಆರು ಗಂಟೆಗಳ ಆಟದ ಅವಧಿಯನ್ನು ಹೊಂದಿರುತ್ತದೆ. ನಿರ್ಧಿಷ್ಟ ಓವರ್ಗಳ ಪಂದ್ಯಾವಳಿಯು ಹೆಚ್ಚಾಗಿ ಆರು ಗಂಟೆಗಿಂತ ಹೆಚ್ಚಿನ ಅವಧಿಯನ್ನು ಹೊಂದಿರುತ್ತದೆ. ಪ್ರತಿ ಪಂದ್ಯಾವಳಿಯ ಸಮಯದಲ್ಲೂ ಸಾಮಾನ್ಯವಾಗಿ ಊಟಕ್ಕಾಗಿ, ಟೀ ವಿರಾಮಕ್ಕಾಗಿ ಹಾಗೂ ತಂಪುಪಾನೀಯ ಸೇವನೆಗಾಗಿ ವಿರಾಮ ನೀಡಲಾಗುತ್ತದೆ. ಹಾಗೆಯೇ ಪ್ರತೀ ಇನ್ನಿಂಗ್ಸ್ ನಡುವೆ ಸಣ್ಣ ವಿರಾಮವನ್ನು ಕೂಡ ನೀಡಲಾಗುತ್ತದೆ. ಐತಿಹಾಸಿಕವಾಗಿ, ಒಂದೇ ವಿಕೇಟ್ನ ಆಟವಾದ ಸಿಂಗಲ್ ವಿಕೇಟ್ ಆಟವನ್ನು ಕ್ರಿಕೇಟ್ ಎಂದು ಪರಿಗಣಿಸಲಾಗಿತ್ತು ಹಾಗೂ ಯಶಸ್ವಿ ಕೂಡಾ ಆಗಿತ್ತು. ೧೮ ಮತ್ತು ೧೯ನೇ ಶತಮಾನದ ಈ ಆಟದ ಕೆಲವು ಪಂದ್ಯಗಳು ಮೇಜರ್ ಕ್ರಿಕೇಟ್ ಪಂದ್ಯಕ್ಕೆ ಸಮನಾಗುವ ಗುಣಮಟ್ಟವನ್ನು ಹೊಂದಿದ್ದವು. ಈ ಆಟದಲ್ಲಿ ಪ್ರತೀ ತಂಡವು ಒಂದರಿಂದ ಆರು ಆಟಗಾರರನ್ನು ಹೊಂದಿರುತ್ತದೆ. ಆದರೆ ಒಮ್ಮೆ ಒಬ್ಬ ಆಟಗಾರ ಮಾತ್ರ ಪ್ರತೀ ಎಸೆತವನ್ನು ತನ್ನ ಇನ್ನಿಂಗ್ಸ್ ಮುಗಿಯುವವರೆಗೆ ಎದುರಿಸಬೇಕಾಗುತ್ತಿತ್ತು. ನಿರ್ಧಿಷ್ಟ ಓವರ್ಗಳ ಕ್ರಿಕೇಟ್ ಪ್ರಾರಂಭವಾದಂದಿನಿಂದ ಸಿಂಗಲ್ ವಿಕೇಟ್ ಕ್ರಿಕೇಟ್ ತೆರೆಮರೆಗೆ ಸರಿದಿದೆ. ಟೆಸ್ಟ್ ಕ್ರಿಕೆಟ್ ಟೆಸ್ಟ್ ಕ್ರಿಕೆಟ್ ಇದು ಅತ್ಯುನ್ನತ ಮಟ್ಟದ ಫಸ್ಟ್ಕ್ಲಾಸ್ ಕ್ರಿಕೇಟ್ ಆಗಿದೆ. ಐಸಿಸಿಯೊಂದಿಗೆ ಸಂಪೂರ್ಣ ಸದಸ್ಯತ್ವ ಹೊಂದಿರುವ ದೇಶಗಳ ತಂಡಗಳ ನಡುವೆ ಅಂತರಾಷ್ಟ್ರೀಯ ಒಪ್ಪಂದದ ಪ್ರಕಾರ ಟೆಸ್ಟ್ ಪಂದ್ಯವು ನಿರ್ದರಿಸಲ್ಪಡುತ್ತದೆ. ಟೆಸ್ಟ್ ಪಂದ್ಯ ಎಂಬ ಪದವನ್ನು ತೀರಾ ಹಿಂದೆ ಅಲ್ಲದಿದ್ದರೂ, ಟೆಸ್ತ್ ಪಂದ್ಯಗಳು ಆಸ್ಟ್ರೇಲಿಯಾ ಮತ್ತು ಇಂಗ್ಲಂಡ್ ನಡುವೆ 187677ರಲ್ಲಿ ನಡೆದ ಆಸ್ಟ್ರೇಲಿಯನ್ ಸಿಸನ್ನಲ್ಲಿ ನಡೆದ ಎರಡು ಪಂದ್ಯಗಳಿಂದ ಪ್ರಾರಂಭವಾಯಿತು. ಮುಂದೆ ಎಂಟು ರಾಷ್ಟ್ರೀಯ ತಂಡಗಳು ಟೆಸ್ಟ್ ಪಂದ್ಯವಾಡುವ ಅರ್ಹತೆಯನ್ನು ಪಡೆದುಕೊಂಡವು: ದಕ್ಷಿಣ ಆಫ್ರಿಕಾ (೧೮೮೯), ವೆಸ್ಟ್ಇಂಡಿಸ್ (೧೯೨೮), ನ್ಯೂಜಿಲ್ಯಾಂಡ್ (೧೯೨೯), ಭಾರತ (೧೯೩೨), ಪಾಕಿಸ್ತಾನ (೧೯೫೨), ಶ್ರೀಲಂಕಾ (೧೯೮೨), ಜಿಂಬಾಬ್ವೆ (೧೯೯೨), ಮತ್ತು ಬಾಂಗ್ಲಾದೇಶ (೨೦೦೦). ಹಾಗೆಯೇ ಜಿಂಬಾಬ್ವೆ ೨೦೦೬ರಲ್ಲಿ ಟೆಸ್ಟ್ ಕ್ರಿಕೇಟ್ನ ಅರ್ಹತೆಯನ್ನು ಪಡೆದ ಇತರ ತಂಡಗಳ ಜೊತೆಗೆ ಸ್ಪರ್ಧಿಸಲಾಗದ್ದರಿಂದ ತನ್ನ ಟೆಸ್ಟ್ ಕ್ರಿಕೇಟ್ ಅರ್ಹತೆಯನ್ನು ಕಳೆದುಕೊಂಡಿತು. ಈಗ ಹೊಸಾದಾಗಿ ಅದು ಟೆಸ್ಟ್ ಕ್ರಿಕೇಟ್ ಪಂದ್ಯವನ್ನಾಡುವ ಅರ್ಹತೆಯನ್ನು ಪಡೆಯಬೇಕಾಗಿದೆ. ವೆಲ್ಶ್ ಆಟಗಾರರು ಇಂಗ್ಲಂಡ್ ತಂಡಕ್ಕೆ ಆಡುವ ಅರ್ಹತೆಯನ್ನು ಹೊಂದಿದ್ದು ಇಂಗ್ಲಂಡ್ ಮತ್ತು ವೇಲ್ಸ್ ತಂಡಗಳ ನಡುವೆ ಹೊಂದಾಣಿಕೆಯಿಂದ ಇದು ಸಾಧ್ಯವಾಗಿದೆ. ವೆಸ್ಟ್ಇಂಡಿಸ್ ತಂಡವು ಆಟಗಾರರನ್ನು ಕೆರಿಬಿಯನ್, ಹೆಚ್ಚಾಗಿ ಬಾರ್ಬಡೋಸ್, ಗಯಾನ, ಜಮೈಕಾ, ಟ್ರಿನಿಡಾಡ್, ಟೊಬಾಗೊ ಹಾಗೂ ಲೀವಾರ್ಡ್ ದ್ವೀಪ ಮತ್ತು ವಿನ್ವಾರ್ಡ್ ದ್ವೀಪಗಳ ಬೇರೆ ಬೇರೆ ರಾಜ್ಯಗಳಿಂದ ಆಯ್ಕೆ ಮಾಡಿಕೊಳ್ಳುತ್ತದೆ. ಎರಡು ತಂಡಗಳ ನಡುವೆ ನಡೆಯುವ ಟೆಸ್ಟ್ಪಂದ್ಯಾವಳಿಯನ್ನು ಕೆಲವು ಪಂದ್ಯಗಳನ್ನು ಈ ತಂಡಗಳ ನಡುವೆ ಆಡಿಸುವ ಮೂಲಕ ನಡೆಸಲಾಗುತ್ತದೆ. ಇದನ್ನು ಸರಣಿ ಎಂದು ಕರೆಯಲಾಗುತ್ತದೆ. ಪಂದ್ಯವು ಐದುದಿನಗಳವರೆಗೆ ಮುಂದುವರೆಯಲಿದ್ದು ಸಾಮಾನ್ಯವಾಗಿ ಒಂದು ಸರಣಿಯಲ್ಲಿ ಮೂರರಿಂದ ಐದು ಪಂದ್ಯಗಳು ಇರುತ್ತವೆ. ನಿಗದಿತ ಸಮಯದೊಳಗೆ ಮುಗಿಯದ ಟೆಸ್ಟ್ಪಂದ್ಯಗಳನ್ನು ಡ್ರಾ ಎಂದು ಪರಿಗಣಿಸಲಾಗುತ್ತದೆ. ೧೮೮೨ರಿಂದ ಇಂಗ್ಲಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಆಯ್ಶಸ್ ಸರಣಿ ಟ್ರೋಫಿಗಾಗಿ ಅತಿಹೆಚ್ಚು ಟೆಸ್ಟ್ ಪಂದ್ಯಗಳು ನಡೆದಿವೆ. ಉಳಿದ ಕೆಲವು ಸರಣಿಗಳು ವೈಯುಕ್ತಿಕ ಟ್ರೋಫಿಯನ್ನು ಹೊಂದಿವೆ : ಉದಾಹರಣೆಗೆ, ದಿ ವಿಸ್ಡನ್ ಟ್ರೋಫಿ ಇದು ಇಂಗ್ಲಂಡ್ ಮತ್ತು ವೆಸ್ಟ್ಟ್ಇಂಡಿಸ್ ನಡುವೆ ನಡೆಯುತ್ತದೆ, ಫ್ರಾಂಕ್ವೊರೆಲ್ ಟ್ರೋಫಿ ಇದು ಆಸ್ಟ್ರೇಲಿಯಾ ಮತ್ತು ವೆಸ್ಟ್ಇಂಡಿಸ್ ನಡುವೆ ನಡೆಯುತ್ತದೆ. ನಿಗದಿತ ಓವರ್ಗಳು ಈಗ ನಡೆಯುತ್ತಿರುವ ನಿಗದಿತ ಓವರ್ಗಳ ಕ್ರಿಕೇಟ್ ಅನ್ನು ಇಂಗ್ಲಂಡ್ ೧೯೬೩ರ ಸೀಸನ್ನ ನಾಕ್ ಔಟ್ ಕಪ್ನಲ್ಲಿ ಭಾಗವಹಿಸಿದ್ದ ಮೊದಲ ದರ್ಜೆಯ ಕೌಂಟಿ ಕ್ಲಬ್ಗಳ ಜೊತೆಗೆ ಮೊದಲು ಪ್ರಾರಂಭಿಸಿತು. ೧೯೬೯ರಲ್ಲಿ ನ್ಯಾಷನಲ್ ಲೀಗ್ ಸ್ಪರ್ಧೆ ಸ್ಥಾಪಿಸಲ್ಪಟ್ಟಿತು. ಹಂತಹಂತವಾಗಿ ಈ ರೀತಿಯ ಪಂದ್ಯವನ್ನು ಇನ್ನುಳಿದ ಕ್ರಿಕೇಟ್ ಆಡುವ ರಾಷ್ಟ್ರಗಳಿಗೂ ವಿಸ್ತರಿಸಲಾಯ್ತು. ೧೯೭೧ರಲ್ಲಿ ಮೊದಲ ನಿಗಧಿತ ಓವರ್ಗಳ ಅಂತರಾಷ್ಟ್ರೀಯ ಮಟ್ಟದ ಪಂದ್ಯವನ್ನು ಆಡಲಾಯಿತು. ೧೯೭೫ರಲ್ಲಿ ಮೊದಲ ವಿಶ್ವಕಪ್ಕ್ರಿಕೇಟ್ ಪಂದ್ಯವು ಇಂಗ್ಲಂಡ್ನಲ್ಲಿ ನಡೆಯಿತು. ನಿಗಧಿತ ಓವರ್ಗಳ ಪಂದ್ಯಗಳು ಕ್ರಿಕೇಟ್ನಲ್ಲಿ ಹಲವು ಹೊಸತನದ ಆವಿಷ್ಕಾರಕ್ಕೆ ಕಾರಣವಾದವು. ಅವುಗಳಲ್ಲಿ ಬಹುವಿಧ ಬಣ್ಣಗಳ ಕಿಟ್ಬಳಕೆ, ಬಿಳಿ ಬಣ್ಣದ ಚೆಂಡು ಬಳಸಿ ಆಡುವ ಹೊನಲು ಬೆಳಕಿನ ಪಂದ್ಯಗಳನ್ನು ಹೆಸರಿಸಬಹುದು. ಪಂದ್ಯವೊಂದಕ್ಕೆ ದಿನದ ಅವದಿ ನೀಡುವುದರಿಂದ ಅಂತಹ ಪಂದ್ಯಗಳನ್ನು ಒಂದು ದಿನದ ಪಂದ್ಯಗಳ ಎಂದು ಕರೆಯಲಾಯಿತು. ಅಂತರಾಷ್ಟ್ರೀಯ ಮಟ್ಟದಲ್ಲಿ ಆಡಲಾಗುತ್ತಿರುವ ಹೆಚ್ಚು ಚಾಲ್ತಿಯಲ್ಲಿರುವ ನಿಗದಿತ ಓವರ್ಗಳ ಪಂದ್ಯಗಳಲ್ಲಿ ಇದು ಮುಖ್ಯವಾದುದಾಗಿದೆ. ಕೆಲವು ನಿರ್ಧಿಷ್ಟ ಅಂಶಗಳಿದ್ದಾಗ ಮಾತ್ರ ಅಂದರೆ ಕೆಟ್ಟ ಹವಾಮಾನದಿಂದಾಗಿ ಆಟಕ್ಕೆ ತೊಂದರೆ ಉಂಟಾದಲ್ಲಿ ಅಥವಾ ಇನ್ನುಳಿದ ಯಾವುದೋ ಕಾರಣದಿಂದಾಗಿ ತೊಂದರೆ ಉಂಟಾದಲ್ಲ್ಲಿ ಮಾತ್ರ ಪಂದ್ಯವನ್ನು ಮುಂದಿನ ದಿನಕ್ಕೆ ಮುಂದೂಡಲಾಗುತ್ತದೆ. ನಿಗಧಿತ ಓವರ್ಗಳ ಪಂದ್ಯಗಳ ಮುಖ್ಯ ಉದ್ದೇಶವೆಂದರೆ ನಿಖರವಾದ ಫಲಿತಾಂಶವನ್ನು ಹೊರಗೆಡಹುವುದು ಹಾಗೂ ಇದರಿಂದ ಪಂದ್ಯ ಡ್ರಾ ಆಗದೇ ಇರುವ ರೀತಿ ನೋಡಿಕೊಳ್ಳುವುದು. ಆದರೆ ಸ್ಕೋರ್ಗಳು ಸಮನಾದಾಗ ಅಥವಾ ಕೆಟ್ಟ ಹವಾಮಾನದಿಂದಾಗಿ ಪಂದ್ಯಗಳು ನಿಖರವಾದ ಫಲಿತಾಂಶದ ನಿರ್ಧಾರಕ್ಕೆ ಬರದೇ ಇರಬಹುದಾಗಿದೆ. ಪ್ರತಿ ತಂಡವು ಒಂದು ಇನ್ನಿಂಗ್ಸ್ ಆಟವಾಡವಾಡಬೇಕಾಗಿದ್ದು ನಿಗಧಿತ ಓವರ್ಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚಾಗಿ ಇದು ೫೦ ಓವರ್ಗಳ ಪಂದ್ಯವಾಗಿರುತ್ತದೆ. ವಿಶ್ವಕಪ್ ಕ್ರಿಕೇಟ್ ಪಂದ್ಯಾವಳಿಯನ್ನು ಒಂದು ದಿನದ ಪಂದ್ಯಾವಳಿಯ ರೀತಿಯಲ್ಲಿ ನಡೆಸಲಾಗುತ್ತದೆ. ಕಳೆದ ಬಾರಿಯ ವಿಶ್ವಕಪ್ ಕ್ರಿಕೇಟ್ ಪಂದ್ಯಾವಳಿಯು ೨೦೦೭ರಲ್ಲಿ ನಡೆದಿದ್ದು ಈ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿತು. ಮುಂದಿನ ವಿಶ್ವಕಪ್ ಪಂದ್ಯಾವಳಿಯು ೨೦೧೧ರಲ್ಲಿ ನಡೆಯಲಿದ್ದು ಭಾರತ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಸೇರಿ ಈ ಸರಣಿಯನ್ನು ಆಯೋಜಿಸುತ್ತಿವೆ. ಟ್ವೆಂಟಿ 20 ಇತ್ತೀಚ್ಚೆಗೆ ಪ್ರಾರಂಭವಾಗಿದ್ದು ಇದೂ ಕೂಡ ನಿಗಧಿತ ಓವರ್ಗಳ ಪಂದ್ಯದ ಪಟ್ಟಿಗೆ ಸೇರುತ್ತದೆ. ಪಂದ್ಯವನ್ನು ಮೂರು ತಾಸುಗಳ ಒಳಗೆ ಮುಗಿಸುವ ಉದ್ದೇಶವನ್ನು ಇದು ಹೊಂದಿರುತ್ತದೆ. ಹೆಚ್ಚಾಗಿ ಸಂಜೆಯ ಅವಧಿಯಲ್ಲಿ. ಮುಖ್ಯವಾಗಿ ೨೦೦೩ರಲ್ಲಿ ಕೆಲಸಗಾರರಿಗೆ ಸಂಜೆ ಸಮಯದ ಮನರಂಜನೆಯಾಗಿ ಈ ರೀತಿಯ ಪಂದ್ಯವನ್ನು ಇಂಗ್ಲಂಡ್ನಲ್ಲಿ ಪರಿಚಯಿಸಲಾಯಿತು. ಇದು ವಾಣಿಜ್ಯಿಕವಾಗಿ ಯಶಸ್ವಿಯಾಗಿದ್ದರಿಂದ ಇದನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಳವಡಿಸಿಕೊಳ್ಳಲಾಯ್ತು. ೨೦೦೭ರಲ್ಲಿ ನಡೆದ ಉದ್ಘಾಟನೆಯ ಟ್ವೆಂಟಿ20 ವಿಶ್ವ ಚಾಂಪಿಯನ್ಶಿಪ್ ಪಂದ್ಯಾವಳಿಯನ್ನು ಭಾರತ ಗೆದ್ದುಕೊಂಡಿತು. 2009ರ ವಿಶ್ವ ಟ್ವೆಂಟಿ20 ಚಾಂಪಿಯನ್ಶಿಪ್ ಪಂದ್ಯಾವಳಿಯನ್ನು ಇಂಗ್ಲಂಡನಲ್ಲಿ ಏರ್ಪಡಿಸಲಾಗಿತ್ತು ಹಾಗೂ ಈ ಸರಣಿಯನ್ನು ಪಾಕಿಸ್ತಾನ ತನ್ನದಾಗಿಸಿಕೊಂಡಿತು. ಮುಂದಿನ ಟ್ವೆಂಟಿ೨೦ ಪಂದ್ಯಾವಳಿ ಸರಣಿಯನ್ನು ವೆಸ್ಟ್ಇಂಡಿಸ್ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಐಸಿಸಿ ವರ್ಲ್ಡ್ ಟ್ವೆಂಟಿ20 ಉದ್ಗಾಟನೆಯ ನಂತರದಲ್ಲಿ ಬಹಳಷ್ಟು ಟ್ವೆಂಟಿ೨೦ ಲೀಗ್ಗಳು ಹುಟ್ಟಿಕೊಂಡವು. ಅವುಗಳಲ್ಲಿ ಮೊದಲನೆಯದು ಇಂಡಿಯನ್ ಕ್ರಿಕೇಟ್ ಲೀಗ್ ಇದನ್ನು ಬಂಡಾಯದ ಲೀಗ್ ಎಂದು ಕರೆಯಲಾಗುತ್ತದೆ. ಬಿಸಿಸಿಐನಿಂದ ಇದು ಅಂಗೀಕೃತವಾಗದ ಕಾರಣ ಬಿಸಿಸಿಐ ಇಂಡಿಯನ್ ಪ್ರಿಮಿಯರ್ ಲೀಗ್ ಎಂಬ ಅಧಿಕೃತ ಲೀಗ್ಅನ್ನು ಹುಟ್ಟು ಹಾಕಿತು. ಈ ಎರಡೂ ಲೀಗ್ಗಳು ಶ್ರೀಮಂತವಾಗಿದ್ದು ಪ್ರಪಂಚದಾದ್ಯಂತದಿಂದ ಇವುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಇತ್ತೀಚೆಗೆ ಟ್ವೆಂಟಿ20 ಚಾಂಪಿಯನ್ಸ್ ಲೀಗ್ ಅನ್ನು ಬೇರೆ ಬೇರೆ ದೇಶಗಳ ಸ್ಥಳೀಯ ಕ್ಲಬ್ಗಳ ಸಲುವಾಗಿ ಮಾಡಲಾಯಿತು. ರಾಷ್ಟ್ರೀಯ ಚಾಂಪಿಯನ್ಶಿಪ್ಸ್ ಪ್ರಥಮ ದರ್ಜೆಯ ಕ್ರಿಕೇಟ್, ಇದು ಟೆಸ್ಟ್ ಕ್ರಿಕೇಟ್ ಅನ್ನು ಒಳಗೊಂಡಿದ್ದರೂ ಕೂಡ ಸಾಮಾನ್ಯವಾಗಿ ಐಸಿಸಿ ಸದಸ್ಯತ್ವ ಹೊಂದಿರುವ ತಂಡಗಳು ಸ್ಥಳೀಯವಾಗಿ ಆಡುವ ಆಟವನ್ನು ಕೂಡಾ ಪ್ರಥಮ ದರ್ಜೆಯ ಕ್ರಿಕೇಟ್ಗೆ ಸೇರಿಸಲಾಗುತ್ತದೆ. ಇಂಗ್ಲಂಡ್ನಲ್ಲಿ ಪ್ರಥಮ ದರ್ಜೆಯ ಕ್ರಿಕೇಟ್ ಆಟವನ್ನು ಹೆಚ್ಚಾಗಿ ೧೮ಕೌಂಟಿ ಕ್ಲಬ್ನಿಂದ ಆಡಲಾಗುತ್ತಿದ್ದು ಇದನ್ನು ಕೌಂಟಿ ಚಾಂಪಿಯನ್ಶಿಪ್ ಎಂದು ಕರೆಯಲಾಗುತ್ತದೆ. ಚಾಂಪಿಯನ್ ಕೌಂಟಿಯ ಪರಿಕಲ್ಪನೆಯು ೧೮ನೇ ಶತಮಾನದಿಂದ ಇದ್ದು ಅದಿಕೃತವಾಗ್ಇ ೧೮೯೦ರವರೆಗೆ ಇದು ಚಾಲ್ತಿಗೆ ಬಂದಿರಲಿಲ್ಲ. ಈ ರೀತಿಯ ಕ್ಲಬ್ಗಳಲ್ಲಿ ಯಾರ್ಕ್ಶೈರ್ ಕೌಂಟಿ ಕ್ಲಬ್ ಪ್ರಸಿದ್ಧವಾದುದು. ಇದು ಸುಮಾರು ೩೦ ಅಧಿಕೃತ ಶಿರೋನಾಮೆಯನ್ನು ಹೊಂದಿದೆ. ಆಸ್ಟ್ರೇಲಿಯಾ ೧೮೯೨೯೩ರಲ್ಲಿ ಶೆಫಿಲ್ಡ್ ಶೀಲ್ಡ್ ಅನ್ನು ಪರಿಚಯಿಸುವ ಮೂಲಕ ರಾಷ್ಟ್ರೀಯ ಪ್ರಥಮ ದರ್ಜೆ ಚಾಂಪಿಯನ್ಶಿಪ್ ಪ್ರಾರಂಬಿಸಿತು. ಆಸ್ಟ್ರೇಲಿಯಾದಲ್ಲಿ ಪ್ರಥ್ಗಮ ದರ್ಜೆ ಕ್ರಿಕೇಟ್ನ ತಂಡವನ್ನು ಅಲ್ಲಿಯ ಬೇರೆ ಬೇರೆ ರಾಜ್ಯಗಳು ಪ್ರತಿನಿಧಿಸುತ್ತವೆ. ೨೦೦೮ರಲ್ಲಿ ನ್ಯೂ ಸೌಥ್ ವ್ಹೇಲ್ಸ್ ಇದು ೪೫ ಸರಣಿಗಳನ್ನು ಗೆಲ್ಲುವ ಮೂಲಕ ಅತಿಹೆಚ್ಚು ಜಯಗಳಿಸಿದ ತಂಡ ಎಂದು ಹೆಸರು ಪಡೆದುಕೊಂಡಿತು. ರಾಷ್ಟ್ರೀಯ ಚಾಂಪಿಯನ್ಶಿಪ್ ಟ್ರೋಪಿಗಳು ಎಲ್ಲೆಡೆ ಚಾಲ್ತಿಯಲ್ಲಿದ್ದು ಭಾರತದಲ್ಲಿ ರಣಜಿ ಟ್ರೋಪಿ, ನ್ಯೂಜಿಲ್ಯಾಂಡ್ನಲ್ಲಿ ಪ್ಲಂಕೆಟ್ ಶೀಲ್ಡ್, ದಕ್ಷಿಣ ಆಫ್ರಿಕಾದಲ್ಲಿ ಕರ್ರಿ ಕಪ್, ವೆಸ್ಟ್ಇಂಡಿಸ್ನಲ್ಲಿ ಶೆಲ್ಶಿಲ್ಡ್ ಎಂದು ಕರೆಯಲಾಗುತ್ತದೆ.ಇವುಗಳಲ್ಲಿ ಕೆಲವನ್ನು ಇತ್ತೀಚೆಗೆ ಹೆಸರು ಬದಲು ಮಾಡಲಾಗಿದೆ ಸ್ಥಳೀಯ ನಿಗದಿತ ಓವರ್ನ ಪಂದ್ಯಾವಳಿಗಳು ೧೯೬೩ರಲ್ಲಿ ಇಂಗ್ಲಂಡ್ನಲ್ಲಿ ನಾಕ್ಔಟ್ ರೀತಿಯ ಜಿಲೆಟ್ ಕಪ್ ಪ್ರಾರಂಭಿಸಿದಾಗ ಪ್ರಾರಂಭಗೊಂಡವು. ವಿವಿಧ ದೇಶಗಳು ಹೆಚ್ಚಾಗಿ ಆಗಾಗ ನಾಕ್ಔಟ್ ಹಾಗೂ ಲೀಗ್ ರೀತಿಯ ಪಂದ್ಯಗಳನ್ನು ಏರ್ಪಡಿಸುತ್ತಿರುತ್ತವೆ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಟ್ವೆಂಟಿ೨೦ ಸ್ಪರ್ಧೆಗಳನ್ನು ಪರಿಚಯಿಸಲಾಗಿದ್ದು ಇವು ಹೆಚ್ಚಾಗಿ ನಾಕ್ಔಟ್ ರೀತಿಯ ಪಂದ್ಯಗಳಾಗಿದ್ದು ಕೆಲವೊಮ್ಮೆ ಮಿನಿಲೀಗ್ ಪಂದ್ಯಗಳನ್ನು ಅಳವಡಿಸಲಾಗಿರುತ್ತದೆ. ಕ್ರಿಕೇಟ್ನ ಇನ್ನೀತರ ವಿಧಗಳು ಕ್ರಿಕೇಟ್ ಅಸಾಂಪ್ರದಾಯಿಕ ಬದಲಾವಣೆಗಳನ್ನು ಹೊಂದಿರುವ ಹಲವಾರು ಕ್ರೀಡೆಗಳು ಇಂದು ಚಾಲ್ತಿಯಲ್ಲಿವೆ. ಅವುಗಳಲ್ಲಿ ಒಳಾಂಗಣ ಕ್ರಿಕೇಟ್, ಬೀಚ್ ಕ್ರಿಕೇಟ್, ಕ್ವಿಕ್ ಕ್ರಿಕೇಟ್ ಮತ್ತು ಕೆಲವು ಕಾರ್ಡ್ ಆಟಗಳು ಹಾಗೂ ಬೋರ್ಡ್ ಆಟಗಳು ಕ್ರಿಕೇಟ್ನಿಂದ ಸ್ಪೂರ್ತಿ ಪಡೆದುಕೊಂಡಿವೆ. ಈ ಎಲ್ಲ ಆಟಗಳಲ್ಲಿ ನಿಯಮಗಳನ್ನು ಅಗತ್ಯಕ್ಕೆ ತಕ್ಕಂತೆ ಸ್ಪರ್ಧಿಗಳು ಆಟವನ್ನು ಆಸ್ವಾಧಿಸುವಂತೆ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. ಒಳಾಂಗಣ ಕ್ರಿಕೇಟ್ ಅನ್ನು ನೆಟ್ಗಳ ನಡುವೆ ಒಳಾಂಗಣ ಪ್ರದೇಶದಲ್ಲಿ ಆಡಲಾಗುತ್ತದೆ. ಇದು ಹೆಚ್ಚಾಗಿ ಸಾಂಪ್ರದಾಯಿಕವಾಗಿದ್ದು ಉಳಿದ ಹೊರಾಂಗಾಣ ಆಟಗಳು ಹೆಚ್ಚಾಗಿ ಅಸಾಂಪ್ರದಾಯಿಕವಾಗಿರುತ್ತವೆ. ಕುಟುಂಬದವರು ಹಾಗೂ ಯುವಕರು, ಅರೆಪಟ್ಟಣ ಪ್ರದೇಶದಲ್ಲಿ ಆಡುವ ಬ್ಯಾಕ್ಯಾರ್ಡ್ ಕ್ರಿಕೇಟ್ ಆಟವು ಎಲ್ಲೆಡೆ ಪ್ರಸಿದ್ಧವಾಗಿದೆ. ಭಾರತದ ತಂಡಕ್ಕೆ ಆಟಗಾರರನ್ನು ಒದಗಿಸುವ ಬಹುತೇಕ ಇಲ್ಲಿನ ಪಟ್ಟಣಗಳಲ್ಲಿ ಗಲ್ಲಿ ಕ್ರಿಕೇಟ್ ಪ್ರಸಿದ್ಧವಾಗಿದೆ. ಇಲ್ಲಿಯ ಹುಡುಗರು ಉದ್ದನೆಯ ರಸ್ತೆಗಳಲ್ಲಿ ಕ್ರಿಕೇಟ್ ಆಡುವ ದೃಶ್ಯ ಸರ್ವೇ ಸಾಮಾನ್ಯವಾಗಿ ಕಾಣುತ್ತದೆ. ಕೆಲ ಸಮಯಗಳಲ್ಲಿ ನಿಯಮಗಳನ್ನು ಉತ್ತಮಗೊಳಿಸಲಾಗಿದೆ : ಉದಾಹರಣೆಗೆ ಫೀಲ್ಡ್ ಮಾಡುತ್ತಿರುವವರು ತಮ್ಮತ್ತ ಬರುವ ಚೆಂಡನ್ನು ಒಮ್ಮೆ ನೆಲಕ್ಕೆ ಬಿದ್ದು ಪುಟಿದಾಗ ಹಿಡಿಯುವ ಅವಕಾಶ ಇದೆ ಹಾಗೂ ಇಂತಹ ಸಮಯದಲ್ಲಿ ಬ್ಯಾಟ್ ಮಾಡುತ್ತಿರುವವನು ಔಟ್ ಎಂದು ಘೊಷಿಸಬಹುದಾಗಿದೆ. ಟೆನ್ನಿಸ್ಬಾಲ್ ಹಾಗೂ ಮನೆಯಲ್ಲಿ ಮಾಡಿದ ಬ್ಯಾಟ್ನಿಂದ ಹೆಚ್ಚಾಗಿ ಆಟ ಆಡಲಾಗುತ್ತದೆ. ಬೇರೆ ಬೇರೆ ರೀತಿಯ ವಸ್ತುಗಳು ಇಲ್ಲಿ ಸ್ಟಂಪ್ ಆಗಿ ಕಾರ್ಯನಿರ್ವಹಿಸುತ್ತವೆ. ಫ್ರೆಂಚ್ ಕ್ರಿಕೇಟ್ನಲ್ಲಿ ಬ್ಯಾಟರ್ಸ್ಲೆಗ್ ಅನ್ನು ಬಳಸಲಾಗುತ್ತದೆ. ಆದರೆ ಅದು ಫ್ರಾನ್ಸ್ನಲ್ಲಿ ಹುಟ್ಟಿದ್ದು ಅಲ್ಲ, ಹೆಚ್ಚಾಗಿ ಸಣ್ಣ ಮಕ್ಕಳು ಇದನ್ನು ಬಳಸಿ ಆಟ ಆಡುತ್ತಾರೆ. ಕ್ವಿಕ್ ಕ್ರಿಕೇಟ್ನಲ್ಲಿ ಚೆಂಡು ಎಸೆಯುವವನು ಬ್ಯಾಟ್ಮಾಡುವವನು ಸನ್ನದ್ಧನಾಗುವವರೆಗೆ ಕಾಯುವ ಅಗತ್ಯವಿಲ್ಲ. ಇದು ಹೆಚ್ಚು ಚಟುವಟಿಕೆ ಬಯಸುವ ಆಟವಾಗಿದ್ದು ಮಕ್ಕಳಿಗಾಗಿ ರೂಪಿಸಲಾಗಿದೆ ಹೆಚ್ಚಾಗಿ ಇದನ್ನು ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ದೈಹಿಕ ಶಿಕ್ಷಣದಲ್ಲಿ ಬಳಸಲಾಗುತ್ತದೆ. ಇನ್ನೊಂದು ಬದಲಾವಣೆಯಾಗಿ ಆಟದಲ್ಲಿ ಟಿಪ್ ಅಂಡ್ ರನ್ ರೀತಿಯನ್ನು ಬಳಸಲಾಗುತ್ತದೆ. ಇದನ್ನು ಟಿಪಿಟಿ ರನ್, ಟಿಪ್ಸಿ ರನ್ ಅಥವಾ ಟಿಪ್ಪಿಗೊ ಎಂದು ಕರೆಯಲಾಗುತ್ತದೆ. ಇಲ್ಲಿ ಚೆಂಡು ಬ್ಯಾಟ್ಗೆ ಬಡಿದರೆ ಅಥವಾ ಚೂರು ತಾಕಿದರೂ ಬ್ಯಾಟ್ ಮಾಡುತ್ತಿದ್ದ ವ್ಯಕ್ತಿ ರನ್ ಓಡಬಹುದು. ಇಲ್ಲಿ ಚೆಂಡು ಪ್ರಜ್ಞಾ ಪೂರ್ವಕವಾಗಿಯೇ ತಾಕಬೇಕೆಂದೇನು ಇಲ್ಲ. ಈ ರೀತಿಯ ನಿಯಮ ಹೆಚ್ಚಾಗಿ ಪೂರ್ವ ಸಿದ್ಧತೆಯಿಲ್ಲದ ಆಟದಲ್ಲಿ ಕಂಡುಬರುತ್ತದೆ. ಬ್ಯಾಟ್ ಮಾಡುವವನು ಬಾಲ್ ತಡೆಯುವುದನ್ನು ತಪ್ಪಿಸುವಂತೆ ಬಾಲ್ ಮಾಡುವುದು ಮುಖ್ಯ ಉದ್ದೇಶವಾಗಿರುತ್ತದೆ. ಸಮೋವಾ ಪ್ರದೇಶಗಳಲ್ಲಿ ಆಡುವ ಕ್ರಿಕೆಟ್ಗೆ ಕಿಲಿಕಿಟಿ ಎಂದು ಕರೆಯಲಾಗುತ್ತದೆ ಇದನ್ನು ಹಾಕಿ ಬ್ಯಾಟ್ನ ರೀತಿಯಲ್ಲಿರುವ ಬ್ಯಾಟ್ನಲ್ಲಿ ಆಡಲಾಗುತ್ತದೆ. ಮೂಲ ಇಂಗ್ಲೀಷ್ ಕ್ರಿಕೇಟ್ನಲ್ಲಿ ೧೭೬೦ರ ನಂತರದಲ್ಲಿ ಬಾಲರ್ಗಳು ಬಾಲ್ ಅನ್ನು ನೇರವಾಗಿ ಎಸೆಯದೇ ಪುಟಿಸಿ ಹಾಕುವ ರೀತಿಯನ್ನು ಪ್ರಾರಂಭಿಸಿದ ನಂತರ ಹಾಕಿ ಸ್ಟಿಕ್ ರೀತಿಯ ಬ್ಯಾಟ್ ಬದಲಾಗಿ ಇವತ್ತಿನ ನೇರವಾದ ರೀತಿಯ ಬ್ಯಾಟ್ ಬಳಕೆ ಪ್ರಾರಂಭಿಸಲಾಯಿತು. ಈಸ್ಟೋನಿಯಾದಲ್ಲಿ ತಂಡಗಳು ಚಳಿಗಾಲದಲ್ಲಿ ವರ್ಷಕ್ಕೊಮ್ಮೆ ಐಸ್ ಕ್ರಿಕೇಟ್ ಟೂರ್ನಾಮೆಂಟ್ಗಾಗಿ ಒಟ್ಟು ಸೇರುತ್ತಾರೆ. ಈ ಆಟವು ಸಾಮಾನ್ಯವಾಗಿ ಬೇಸಿಗೆಯಲ್ಲಿ ನಡೆಯುವ ಆಟಕ್ಕೂ ಇಲ್ಲಿ ವಿಪರೀತ ಚಳಿಯಲ್ಲಿ ನಡೆಯುವ ಆಟಕ್ಕೂ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತದೆ. ನಿಯಮಗಳು ಹೆಚ್ಚಾಗಿ ಸಿಕ್ಸ್ಎಸೈಡ್ ಆಟಕ್ಕೆ ಸಮನಾಗಿರುತ್ತದೆ. ಇತಿಹಾಸ ಮೊದಲು ಕ್ರಿಕೇಟ್ ಆಟವನ್ನು ಚೆಂಡನ್ನು ಹೊಡೆಯುವ ಗುಂಪು ಆಟ, ಉದಾಹರಣೆಗೆ ಪುರಾತನ ಆಟಗಳಾದ ಕ್ಲಬ್ಬಾಲ್, ಸ್ಟೂಲ್ಬಾಲ್, ಟ್ರಾಪ್ಬಾಲ್, ಸ್ಟಾಬ್ಬಾಲ್ ಮುಂತಾದ ಆಟಗಳನ್ನು ಈ ಗುಂಪಿನ ಆಟಗಳಿಗೆ ಉದಾಹರಿಸಬಹುದಾಗಿದೆ. ೧೬ನೇ ಶತಮಾನದ ಟ್ಯೂಡೋರ್ ಅವಧಿಯಲ್ಲಿ ಕ್ರಿಕೇಟ್ ಆಟದ ಮೂಲವನ್ನು ಗುರುತಿಸಬಹುದಾಗಿದೆ. ಕ್ರಿಕೇಟ್ ಆಟದ ಕುರಿತು ಸಿಗುವ ಉಲ್ಲೇಖಿತ ಬರಹವೆಂದರೆ ಸುಮಾರು ೧೩೦೧ರ ಸಮಯದಲ್ಲಿ ಕೆಂಟ್ನ ನ್ಯೂಡನ್ನಲ್ಲಿಯ ಎಡ್ವರ್ಡ್ (ಲಾಂಗ್ಶಾಂಕ್ಸ್)ರ ಮಗ ಪ್ರಿನ್ಸ್ ಎಡ್ವರ್ಡ್ ಆಡುತ್ತಿದ್ದ ಕ್ರೀಗ್ ಎನ್ನುವ ಆಟದ ಕುರಿತು ಹೇಳಲಾಗಿದೆ. ಇದು ಕ್ರಿಕೇಟ್ ಆಟದ ರೀತಿಯದ್ದೇ ಆಟ ಎಂದು ಊಹಿಸಲಾಗಿದೆ. ಆದರೇ ಯಾವುದೇ ಸಮರ್ಥ ದಾಖಲೆಗಳು ಸಿಗುತ್ತಿಲ್ಲ. ಇನ್ನೂ ಹಲವಾರು ಶಬ್ಧಗಳನ್ನು ಕ್ರಿಕೇಟ್ಗೆ ಪರ್ಯಾಯವಾಗಿ ಬಳಸಲಾಗಿದೆ ಎಂದು ಹೇಳಲಾಗುತ್ತಿದೆ.ಸುಮಾರು ೧೫೯೮ರ ಆಸುಪಾಸಿನಲ್ಲಿ ಆಡಲಾಗುತ್ತಿದ್ದ ಆಟವನ್ನು ಕ್ರೆಕೆಟ್ () ಎಂದು ಕರೆಯಲಾಗುತ್ತಿದ್ದ ಸ್ಪಷ್ಟ ದಾಖಲೆ ಸಿಗುತ್ತದೆ. ಇದನ್ನು ಕ್ರಿಕೇಟ್ ಆಟದ ಕುರಿತು ದೊರೆತ ಮೊದಲ್ ಉಲ್ಲೇಖ ಎನ್ನಬಹುದಾಗಿದೆ. ಕ್ರಿಕೇಟ್ ಶಬ್ಧ ವ್ಯುತ್ಪತ್ತಿಯಲ್ಲಿ ಆಗ್ನೇಯ ಇಂಗ್ಲಂಡ್ ಮತ್ತು ಫ್ಲಾಂಡರ್ಸ್ನ ಕೌಂಟಿಗಳ ನಡುವೆ ಗಾಢವಾದ ಮಧ್ಯಕಾಲೀನ ವ್ಯಾಪಾರಿ ಬಂಧಗಳಿದ್ದು ಕಂಡುಬರುತ್ತದೆ. ಇದರಲ್ಲಿ ಆಗ್ನೆಯ ಇಂಗ್ಲಂಡ್ನಲ್ಲಿ ಬರ್ಗಂಡಿಯ ಡಚ್ಚಿಯು ಬರುತ್ತಿದ್ದು ಈ ಶಬ್ಧವು ಮಧ್ಯಡಚ್ನಿಂದ ಬಂದಿರಬಹುದಾಗಿದೆ. ( ) ಇದನ್ನು ಕೋಲು ಅಥವಾ ದಾಂಡು() ಅಥವಾ ಹಳೆ ಇಂಗ್ಲಿಷ್ನಲ್ಲಿ ಅಥವಾ ಅಂದರೆ ಊರುಗೋಲು ಅಥವಾ ಗುಂಪು ಎಂದು ಅರ್ಥೈಸಬಹುದಾಗಿದೆ. ಹಳೆ ಫ್ರೆಂಚ್ ಭಾಷೆಯಲ್ಲಿ ಎನ್ನುವ ಶಬ್ಧದ ಅರ್ಥವು ಗುಂಪು ಅಥವಾ ಕೋಲು ಎಂದಿತ್ತು ಎಂದುಕೊಳ್ಳಬಹುದಾಗಿದೆ. ಸ್ಯಾಮ್ಯುಯೆಲ್ ಜಾನ್ಸನ್ ಶಬ್ಧಕೋಶದಲ್ಲಿ ಕ್ರಿಕೇಟ್ ಶಬ್ಧವು , , ಎಂಬುದರಿಂದ ವ್ಯುತ್ಪತ್ತಿಯಾಗಿದೆ ಎಂದು ಹೇಳಲಾಗಿದೆ. ಇನ್ನೊಂದು ಸಾಧ್ಯತೆಯ ಸಾಕ್ಶಿಯು ಮಧ್ಯ ಡಚ್ನಲ್ಲಿ ಕಾಣಬಹುದು. ಎಂಬ ಶಬ್ಧವನ್ನು ಗಮನಿಸಬಹುದಾಗಿದೆ. ಈ ಶಬ್ಧದಕ್ಕೆ ಚರ್ಚ್ನಲ್ಲಿ ಪ್ರಾರ್ಥನೆಯ ಸಮಯದಲ್ಲಿ ಮಂಡಿಯೂರಿ ಪ್ರಾರ್ಥಿಸಲು ಬಳಸುವ ಒಂದು ವಿಧದ ಮಣೆ ಎಂದು ಅರ್ಥವಿದೆ. ಇದು ಹಿಂದೆ ಕ್ರಿಕೇಟ್ನಲ್ಲಿ ಬಳಸುತ್ತಿದ್ದ ಉದ್ದನೆಯ ಕೆಳಮುಖದ ಎರಡು ಸ್ಟಂಪ್ಗಳಿರುವ ವಿಕೇಟ್ನಂತೆ ಕಾಣುವುದರಿಂದ ಈ ಶಬ್ಧ ಉತ್ಪತ್ತಿಯಾಗಿರಬಹುದಾಗಿದೆ. ಬಾನ್ ವಿಶ್ವವಿದ್ಯಾಲಯದ ಯುರೋಪಿಯನ್ ಭಾಷಾ ತಜ್ಞರಾಗಿರುವ ಹೈನರ್ ಗಿಲ್ಮಿಸ್ಟರ್ ಅವರ ಪ್ರಕಾರ ಕ್ರಿಕೇಟ್ ಶಬ್ಧವು ಹಾಕಿ ಆಟಕ್ಕಿರುವ ಮಧ್ಯಡಚ್ ನುಡಿಗಟ್ಟು ( ) (ಅಂದರೆ ಕೋಲಿನಿಂದ ಬೆನ್ನಟ್ಟು ) ಎಂಬುದರಿಂದ ವ್ಯುತ್ಪತ್ತಿಯಾಗಿದೆ. ಡಾ.ಗಿಲ್ಮಿಸ್ಟರ್ ಅವರ ಪ್ರಕಾರ ಕೇವಲ ಈ ಆಟದ ಹೆಸರು ಮಾತ್ರವಲ್ಲ ಆಟ ಕೂಡ ಫ್ಲೆಮಿಶ್ ಮೂಲದ್ದು ಎನ್ನುತ್ತಾರೆ. ೧೫೯೮ರಲ್ಲಿ ಕೋರ್ಟ್ ಕೇಸ್ವೊಂದರಲ್ಲಿ ೧೫೫೦ರಲ್ಲಿ ಗಿಲ್ಡ್ಫೋರ್ಡ್ನ ರಾಯಲ್ ಗ್ರಾಮರ್ ಸ್ಕೂಲ್ನಲ್ಲಿ ಆಡಲಾಗುತ್ತಿದ್ದ ಎಂಬ ಆಟವೊಂದರ ಕುರಿತು ಉಲ್ಲೇಖ ಮಾಡಲಾಯಿತು. ಇದು ಈ ಆಟದ ಕುರಿತಾದ ಮೊಟ್ಟಮೊದಲ ನಿರ್ಧಿಷ್ಟವಾದ ಉಲ್ಲೇಖವೆಂದರೆ ಇದೇ ಆಗಿದೆ. ಇದು ಮೂಲತಹ: ಮಕ್ಕಳ ಆಟ ಎಂದು ನಂಬಲಾಗಿದೆ. ಆದರೆ ೧೬೧೦ರ ಆಸುಪಾಸಿನಲ್ಲಿ ಯುವಜನತೆ ಕೂಡಾ ಈ ಆಟವನ್ನು ಆಡಲು ಪ್ರಾರಂಭಿಸಿತು. ಈ ವರ್ಷದ ಸುಮಾರಿನಲ್ಲಿಯೇ ಹಳ್ಳಿಗಳ ನಡುವಣ ಪಂದ್ಯಾವಳಿಯು ನಡೆಯಿತು. ೧೬೨೪ರಲ್ಲಿ ಆಟಗಾರ ಜಾಸ್ಪರ್ ವಿನಾಲ್ ಎಂಬುವವನು ಸಸ್ಸೆಕ್ಸ್ನ ಎರಡು ಹಳ್ಳಿಗಳ ನಡುವೆ ಆಟ ನಡೆಯುವಾಗ ತಲೆಗೆ ಹೊಡೆತ ಬಿದ್ದಿದ್ದರಿಂದ ಸಾವನಪ್ಪುತ್ತಾನೆ. ೧೭ನೇ ಶತಮಾನದ ಆರಂಭದಲ್ಲಿ ಹಲವಾರು ಉಲ್ಲೇಖಗಳು ಇಂಗ್ಲೆಂಡ್ನ ಆಗ್ನೆಯ ಭಾಗದಲ್ಲಿ ಕ್ರಿಕೇಟ್ನಲ್ಲಾದ ಬೆಳವಣಿಗೆಯ ಬಗ್ಗೆ ಉಲ್ಲೇಖ ನೀಡುತ್ತವೆ. ಶತಮಾನದ ಕೊನೆಯಲ್ಲಿ ಇದು ಒಂದು ಸಂಘಟಿತ ಆಟವಾಗಿ ಗುರುತಿಸಲ್ಪಟ್ಟಿತು ಅಲ್ಲದೆ ಈ ಆಟವು ಗೌರವಾನ್ವಿತರಿಂದ ಆಡಲ್ಪಡುವ ಆಟ ಎಂದು ಪರಿಗಣಿಸಲಾಯಿತು. ಅಲ್ಲದೆ ಮೊದಲ ವೃತ್ತಿಪರ ಆಟಗಾರರ ತಂಡವು ೧೬೬೦ರ ಜೀರ್ಣೋದ್ದಾರದ () ಸಮಯದಲ್ಲಿ ಕಟ್ಟಲ್ಪಟ್ತಿತು ಎಂದುಕೊಳ್ಳಲಾಗಿದೆ. ವೃತ್ತ ಪತ್ರಿಕೆಯ ವರದಿಯೊಂದರ ಪ್ರಕಾರ ಹನ್ನೊಂದು ಆಟಗಾರರೊಂದಿಗಿನ ಗ್ರೇಟ್ ಕ್ರಿಕೇಟ್ ಮ್ಯಾಚ್ ಆಟವನ್ನು ೧೬೭೯ರಲ್ಲಿ ಸೆಸ್ಸೆಕ್ಸ್ನಲ್ಲಿ ಆಡಲಾಯಿತು ಹಾಗೂ ಇದು ಪರಿಪೂರ್ಣ ಕ್ರಿಕೇಟ್ ಆಟದ ಕುರಿತಾಗಿ ಇರುವ ಮೊಟ್ಟಮೊದಲ ಉಲ್ಲೇಖವಾಗಿದೆ. ಹದಿನೆಂಟನೇ ಶತಮಾನದಲ್ಲಿ ಈ ಆಟವು ಹೆಚ್ಚಿನ ಬೆಳವಣಿಗೆ ಹೊಂದಿದ್ದು ಇಂಗ್ಲಂಡ್ನ ರಾಷ್ಟ್ರೀಯ ಆಟ ಎಂದು ಪರಿಗಣಿಸಲ್ಪಟ್ಟಿತು. ಬೆಟ್ಟಿಂಗ್ ಈ ಆಟಗಳಲ್ಲಿ ಮುಖ್ಯಪಾತ್ರವಹಿಸುತ್ತಿದ್ದು ಹೆಚ್ಚು ಹಣವಿರುವ ವ್ಯಕ್ತಿಗಳು ತಮ್ಮದೇ ಸೆಲೆಕ್ಟ್ ತಂಡಗಳನ್ನು ಕಟ್ಟಿಕೊಳ್ಳಲು ಪ್ರಾರಂಭಿಸಿದರು. ೧೭೦೭ರ ಹೊತ್ತಿನಲ್ಲೇ ಲಂಡನ್ನಲ್ಲಿ ಕ್ರಿಕೇಟ್ ಅತ್ಯಂತ ಪ್ರಮುಖ ಆಟವಾಗಿದ್ದು, ಫಿನ್ಸ್ಬರಿಯ ಆರ್ಟಿಲರಿ ಮೈದಾನದಲ್ಲಿ ನಡೆಯುವ ಪಂದ್ಯಗಳಿಗೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಬರಲಾರಂಭಿಸಿದರು. ಒಂದು ವಿಕೇಟ್ನ ರೀತಿಯ ಆಟವು ಹೆಚ್ಚು ಜನರನ್ನು ಹಾಗೂ ಬಾಜಿ ಕಟ್ಟುವವರನ್ನು ಆಕರ್ಷಿಸುತ್ತಿತ್ತು. ೧೭೬೦ರ ಆಸುಪಾಸಿನಲ್ಲ್ಲಿ ಬಾಲರ್ಗಳು ನೇರವಾಗಿ ಚೆಂಡನ್ನು ಎಸೆಯದೆ ಪುಟಿಸಿ ಎಸೆಯುವುದನ್ನು ರೂಡಿಸಿಕೊಂಡಾಗ ಬಾಲಿಂಗ್ ವಿಧಾನದಲ್ಲಿಯೂ ಬದಲಾವಣೆ ಕಂಡುಬಂತು. ಪುಟಿಯುವ ಚೆಂಡನ್ನು ಸಮರ್ಥವಾಗಿ ಎದುರಿಸ ಬೇಕಾದ್ದರಿಂದ ಇದು ಬ್ಯಾಟ್ನ ವಿನ್ಯಾಸದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು ತಂದಿತು. ಈ ಹಿಂದೆ ಇದ್ದ ಹಾಕಿ ಬ್ಯಾಟ್ನ ರೀತಿಯ ಬದಲಾಗಿ ಆಧುನಿಕ ರೀತಿಯ ಅಗಲ ನಮೂನೆಯ ಬ್ಯಾಟ್ ಬಳಕೆಗೆ ಬಂದಿತು. ಹ್ಯಾಂಬಲ್ಡನ್ ಕ್ಲಬ್ ಅನ್ನು ೧೭೬೦ರಲ್ಲಿ ಕಟ್ಟಲಾಯಿತು. ಇಲ್ಲಿಂದ ಸುಮಾರು ೨೦ವರ್ಷಗಳವರೆಗೆ ಅಂದರೆ ಕಟ್ಟಲ್ಪಟ್ಟು ಲಾರ್ಡ್ಸ್ ಓಲ್ಡ್ಗ್ರೌಂಡ್ ೧೭೮೭ರಲ್ಲಿ ಉದ್ಘಾಟನೆಯಾಗುವವರೆಗೂ ಹ್ಯಾಮಲ್ಡನ್ ಕ್ರೀಕೇಟ್ ಆಟದ ಕಾರಸ್ಥಾನವಾಗಿತ್ತು ಮತ್ತು ಮುಖ್ಯ ಕೇಂದ್ರವಾಗಿತ್ತು. ಕ್ಷಿಪ್ರವಾಗಿ ಆಟದ ಮುಖ್ಯಕೇಂದ್ರವಾಯಿತಲ್ಲದೆ ಕ್ರಿಕೇಟ್ನ ನಿಯಮಗಳ ರೂಪಿಸುವಲ್ಲಿ ಮುಖ್ಯಪಾತ್ರ ವಹಿಸತೊಡಗಿತು. ೧೮ನೇ ಶತಮಾನದ ಕೊನೆಯ ಹಂತದಲ್ಲಿ ಅನೇಕ ಹೊಸ ನಿಯಮಗಳು ನಿರ್ಧರಿಸಲ್ಪಟ್ಟವು ಅವುಗಳಲ್ಲಿ ಮೂರು ಸ್ಟಂಪ್ನ ವಿಕೇಟ್, ಹಾಗೂ ಲೆಗ್ ಬಿಫೋರ್ ವಿಕೇಟ್ () ಮುಖ್ಯವಾದವುಗಳು. ] ೧೯ನೇ ಶತಮಾನದಲ್ಲಿಯೇ ಮೊದಲಿದ್ದ ರೌಂಡ್ ಆರ್ಮ್ ಬೌಲಿಂಗ್ ಹಾಗೂ ನಂತರದ ಓವರ್ಆರ್ಮ್ ಬೌಲಿಂಗ್ ರೀತಿಯು ಅವೆರಡರ ನಂತರ ಈಗಿನ ಅಂಡರ್ ಆರ್ಮ್ ಬೌಲಿಂಗ್ ಪ್ರಕಾರವು ಪ್ರಾರಂಭವಾಯಿತು. ಈ ಎರಡೂ ಬೆಳವಣಿಗೆಗಳೂ ವಿವಾದಾಸ್ಪದವಾದವುಗಳು. ಕೌಂಟಿ ಹಂತದಲ್ಲಿ ಆಟದ ಸಂಸ್ಥೆಗಳು ಹುಟ್ಟಿಕೊಂಡಿದ್ದರಿಂದ ಕೌಂಟಿ ಕ್ಲಬ್ಗಳು ಹುಟ್ಟಿಕೊಂಡವು. ೧೮೩೯ರ ಸಸ್ಸೆಕ್ಸ್ ರೀತಿಯ ಕೌಂಟಿ ಕ್ಲಬ್ ಪ್ರಾರಂಭವಾಯಿತು ಇದು ೧೮೯೦ರಲ್ಲಿ ಅಧೀಕೃತ ಕೌಂಟಿ ಚಾಂಪಿಯನ್ಶಿಪ್ ಹುಟ್ಟುಹಾಕಿತು. ಈ ನಡುವೆ ಬ್ರಿಟಿಷ್ ಸಾಮ್ರಾಜ್ಯವು ಈ ಆಟವನ್ನು ಸಮುದ್ರದಾಚೆಗೂ ವಿಸ್ತರಿಸುವ ಕಾರ್ಯ ಕೈಗೊಂಡಿತು. ೧೯ನೇ ಶತಮಾನದ ಮಧ್ಯದಲ್ಲಿ ಭಾರತ, ಉತ್ತರ ಅಮೇರಿಕಾ, ಕೆರಿಬಿಯನ್,ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ಗಳಲ್ಲಿ ಇದು ಉತ್ತಮ ನೆಲೆ ಕಂಡುಕೊಂಡಿತು. ೧೮೪೪ರಲ್ಲಿ ಮೊಟ್ಟಮೊದಲ ಅಂತರರಾಷ್ಟ್ರೀಯ ಕ್ರಿಕೇಟ್ ಪಂದ್ಯಾವಳಿಯು ಸಂಯುಕ್ತ ರಾಜ್ಯ ಹಾಗೂ ಕೆನಡಾದ ನಡುವೆ ನಡೆಯಿತು (ಆದಾಗ್ಯೂ ಇಲ್ಲಿಯವರೆಗೂ ಎರಡೂ ರಾಷ್ಟ್ರಗಳೂ ಟೆಸ್ಟ ಮಾನ್ಯತೆ ಪಡೆಯಲಿಲ್ಲ) ೧೮೫೯ರಲ್ಲಿ ಇಂಗ್ಲಂಡ್ ಆಟಗಾರರು ಮೊಟ್ಟಮೊದಲ ಸಮುದ್ರದಾಚೆಯ ಪ್ರವಾಸ ಕೈಗೊಂಡರು (ಉತ್ತರ ಅಮೇರಿಕಾ ದೇಶಕ್ಕೆ) ಮತ್ತು ೧೮೬೨ರಲ್ಲಿ ಇಂಗ್ಲಿಷ್ ತಂಡವು ಆಸ್ಟ್ರೇಲಿಯಾಕ್ಕೆ ಪ್ರಥಮ ಪ್ರವಾಸವನ್ನು ಕೈಗೊಂಡಿತು. ೧೮೭೬೭೭ರಲ್ಲಿ ಇಂಗ್ಲಂಡ್ ತಂಡವು ಆಸ್ಟ್ರೇಲಿಯಾ ಜೊತೆಗೆ ಮೆಲ್ಬೋರ್ನ್ ಕ್ರಿಕೇಟ್ ಗ್ರೌಂಡ್ನಲ್ಲಿ ನಡೆದ ಪ್ರಪ್ರಥಮ ಟೆಸ್ಟ್ ಪಂದ್ಯದಲ್ಲಿ ಪಾಲ್ಗೊಂಡಿತು. ೧೮೬೫ರಲ್ಲಿ ಡಬ್ಲ್ಯೂ ಜಿ ಗ್ರೇಸ್ ಕ್ರಿಕೇಟ್ನಲ್ಲಿ ತನ್ನ ಧೀರ್ಘ ವೃತ್ತಿಯನ್ನು ಪ್ರಾರಂಭಿಸಿದ ಇವನ ವೃತ್ತಿ ಜೀವನವು ಕ್ರಿಕೇಟ್ನಲ್ಲಿ ಕ್ರಾಂತಿಕಾರಕ ಬೆಳವಣಿಗೆಗಳು ಕಾಣಲು ಸಹಕಾರಿಯಾಯಿತು. ಇಂಗ್ಲಂಡ್ ಮತ್ತು ಆಸ್ಟ್ರೇಲಿಯಾ ನಡುವಣ ವೈಶಮ್ಯವು ೧೮೮೨ರಲ್ಲಿ ಆಯ್ಶಸ್ ಸರಣಿಯು ಹುಟ್ಟುವುದಕ್ಕೆ ಕಾರಣವಾಯಿತು ಮತ್ತು ಇದು ಟೆಸ್ಟ್ ಕ್ರಿಕೇಟ್ನಲ್ಲಿ ಅತ್ಯಂತ ಪ್ರಸಿದ್ಧ ಸ್ಪರ್ಧೆಯಾಗಿ ಗುರುತಿಸಲ್ಪಟ್ಟಿತು. ೧೮೮೮೮೯ರಲ್ಲಿ ಇಂಗ್ಲಂಡ್ ಜೊತೆಗೆ ದಕ್ಷಿಣ ಆಫ್ರಿಕಾ ಸ್ಪರ್ಧಿಸಿದಾಗ ಟೆಸ್ಟ್ ಕ್ರಿಕೇಟ್ ಉಜ್ಜೀವನಗೊಳ್ಳಲು ಪ್ರಾರಂಭವಾಯಿತು. ಮೊದಲ ಮಹಾಯುದ್ಧ ಪ್ರಾರಂಭಕ್ಕಿಂತ ಮೊದಲಿನ ಕೊನೆಯ ಎರಡು ದಶಕಗಳನ್ನು ಕ್ರಿಕೇಟ್ನ ಸುವರ್ಣ ಯುಗ ಎಂದು ಕರೆಯಲ್ಪಡುತ್ತದೆ. ಇದು ಯುದ್ಧದಿಂದಾದ ಕಹಿಘಟನೆಗಳನ್ನು ಮರೆಯಲು ಇಟ್ಟುಕೊಂಡ ನೆನಪಿನ ಹೆಸರಾಗಿದೆ. ಆದರೂ ಈ ಸಮಯವು ಉತ್ತಮ ಆಟಗಾರರನ್ನೂ ಹಾಗೂ ನೆನಪಿಡತಕ್ಕಂತಹ ಪಂದ್ಯಗಳನ್ನೂ ಕಂಡ ಸಮಯವಾಗಿದೆ. ಮುಖ್ಯವಾಗಿ ಕೌಂಟಿ ಮತ್ತು ಟೆಸ್ಟ್ಹಂತಗಳಲ್ಲಿ ಉತ್ತಮ ಸಂಘಟನಾತ್ಮಕ ಬೆಳವಣಿಗೆಯನ್ನು ಕಾಣಲಾಯಿತು. ಯುದ್ಧಕಾಲೀನ ವರ್ಷಗಳ ಕ್ರಿಕೇಟ್ ಮುಖ್ಯವಾಗಿ ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ನಂತಹ ಒಬ್ಬ ಆಟಗಾರನಿಂದ ಗುರುತಿಸಿಕೊಂಡಿತು. ಬ್ರಾಡ್ಮನ್ ಅಂಕಿಅಂಶಗಳಿಂದ ಸಾರ್ವಕಾಲಿಕ ಮಹಾನ್ ಆಟಗಾರನಾಗಿದ್ದಾನೆ. ಇಂಗ್ಲಂಡ ತಂಡವು ಬ್ರಾಡ್ಮನ್ ದಾಳಿಯಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕಾಗಿತ್ತು ಆದ್ದರಿಂದ ಇದು ಕುಖ್ಯಾತ ೧೯೩೨೩೩ ಬಾಡಿಲೈನ್ ಸಿರೀಸ್ ಅನ್ನು ಪರಿಚಯಿಸಿದರು. ಮುಖ್ಯವಾಗಿ ಹೆರಾಲ್ಡ್ ಲಾರ್ವುಡ್ನ ಶಾರ್ಟ್ಪಿಚ್ ಎಸೆತವು ಈ ಸಮಯದಲ್ಲಿ ಪರಿಚಯಿಸಲ್ಪಟ್ಟಿತು. ಟೆಸ್ಟ್ ಕ್ರಿಕೇಟ್ ೨೦ನೇ ಶತಮಾನದಲ್ಲಿ ಎರಡನೇ ಮಹಾಯುದ್ಧದ ಮೊದಲು ವೆಸ್ಟ್ ಇಂಡೀಸ್, ಭಾರತ, ನ್ಯೂಜಿಲ್ಯಾಂಡ್ ಮತ್ತು ಯುದ್ಧಾನಂತರದಲ್ಲ್ಲಿಪಾಕಿಸ್ಥಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳ ಸೇರ್ಪಡೆಯೊಂದಿಗೆ ತನ್ನ ಪರೀಧಿಯನ್ನು ವಿಸ್ತರಿಸಿಕೊಳ್ಳಲಾರಂಭಿಸಿತು. ೧೯೭೦ರಿಂದ೧೯೯೨ರ ವರೆಗೆ ದಕ್ಷಿಣ ಆಫ್ರಿಕಾವು ಅದರ ವರ್ಣಬೇಧ ನೀತಿಯ ಸಲುವಾಗಿ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯಾವಳಿಯಿಂದ ನಿಷೇಧಕ್ಕೆ ಒಳಗಾಯಿತು. ೧೯೬೩ರಲ್ಲಿ ಇಂಗ್ಲಂಡ್ ಕೌಂಟಿಗಳು ನಿಗಧಿತ ಓವರ್ನ ಪಂದ್ಯವನ್ನು ಪ್ರಾರಂಭಿಸಿದ್ದು ಕ್ರಿಕೇಟ್ನ ಹೊಸ ಯುಗ ಪ್ರಾರಂಭಕ್ಕೆ ಕಾರಣವಾಯಿತು. ಇದರಲ್ಲಿ ಸ್ಪಷ್ಟವಾದ ಫಲಿತಾಂಶಕ್ಕೆ ಅವಕಾಶವಿರುವುದರಿಂದ ನಿಗಧಿತ ಓವರ್ನ ಕ್ರಿಕೇಟ್ನಲ್ಲಿ ಹೆಚ್ಚಿನ ಹಣದ ಆಮಿಷ ಹಾಗೂ ಪಂದ್ಯಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಯಿತು. ೧೯೭೧ರಲ್ಲಿ ಮೊಟ್ಟಮೊದಲ ನಿಗಧಿತ ಓವರ್ನ ಅಂತರರಾಷ್ಟ್ರೀಯ ಪಂದ್ಯಾವಳಿಗಳು ನಡೆಯಿತು.ಕ್ರಿಕೇಟ್ ನಿಯಂತ್ರಣ ಮಂಡಳಿ ಅಂತರರಾಷ್ಟ್ರೀಯ ಕ್ರಿಕೇಟ್ ಕೌನ್ಸಿಲ್()ತನ್ನ ಪ್ರಾಮುಖ್ಯತೆಯನ್ನು ಗಳಿಸಿಕೊಂಡಿತಲ್ಲದೇ ೧೯೭೫ರಲ್ಲಿ ಮೊಟ್ಟಮೊದಲ ನಿಗಧಿತ ಓವರ್ಗಳ ವಿಶ್ವಕಫ್ ಕ್ರಿಕೇಟ್ ಆಯೋಜಿಸಿತು. ೨೧ನೇ ಶತಮಾನದಲ್ಲಿ ಹೊಸದಾಗಿ ನಿಗಧಿತ ಓವರ್ಗಳ ಟ್ಬೆಂಟಿ20 ಪ್ರಕಾರವು ತನ್ನ ಪ್ರಭಾವ ಬೀರಿತು. ಅಂತರರಾಷ್ಟ್ರೀಯ ರಚನೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (), ಇದರ ಮುಖ್ಯ ಕಛೇರಿ ದುಬೈನಲ್ಲಿದೆ, ಇದು ಅಂತರ್ರಾಷ್ಟ್ರೀಯ ಕ್ರಿಕೆಟ್ನ ಆಡಳಿತ ಕೇಂದ್ರವಾಗಿದೆ. ಇದು ೧೯೦೯ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಗಳ ಪ್ರತಿನಿಧಿಗಳನ್ನೊಳಗೊಂಡ ಒಂದು ಸಾರ್ವಬೌಮ ಕ್ರಿಕೆಟ್ ಅಧಿವೇಶನವಾಗಿ ಕಾರ್ಯಾರಂಭ ಮಾಡಿತು. ಇದನ್ನು ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ ಎಂದು ೧೯೬೫ರಲ್ಲಿ ಮರು ನಾಮಕರಣ ಮಾಡಲಾಯಿತು, ಮತ್ತು ಇದರ ನಿಜವಾದ ಹೆಸರು ಬೆಳಕಿಗೆ ಬಂದದ್ದು ೧೯೮೯ರಲ್ಲಿ. ೧೦೪ ಸದಸ್ಯರನ್ನು ಹೊಂದಿದೆ: ಅಧೀಕೃತ ಟೆಸ್ಟ್ ಪಂದ್ಯಗಳನ್ನಾಡುವ ೧೦ ಪೂರ್ಣ ಪ್ರಮಾಣದ ಸದಸ್ಯರುಗಳು, ಸಹಾಯಕ ೩೪ ಸದಸ್ಯರುಗಳು, ಮತ್ತು ೬೦ ಮಾನ್ಯತೆ ಪಡೆದ ಸದಸ್ಯರುಗಳು. ಕ್ರಿಕೆಟ್ನ ಪ್ರಮುಖ ಅಂತರ್ರಾಷ್ಟ್ರೀಯ ಪಂದ್ಯಾವಳಿಗಳನ್ನು ಸಂಘಟಿಸುವುದು ಮತ್ತು ಅಧಿಕಾರ ನಿರ್ವಹಿಸುವುದು ಯ ಜವಾಬ್ಧಾರಿಯಾಗಿದೆ, ಮುಖ್ಯವಾಗಿ ಗಮನಾರ್ಹವಾದ ವರ್ಲ್ಡ್ ಕಪ್ ಕ್ರಿಕೆಟ್. ಎಲ್ಲಾ ಮಂಜೂರಾದ ಟೆಸ್ಟ್ ಪಂದ್ಯಗಳು, ಅಂತರ್ರಾಷ್ಟ್ರೀಯ ಏಕದಿನ ಪಂದ್ಯಗಳು ಮತ್ತು ಅಂತರ್ರಾಷ್ಟ್ರೀಯ ಟ್ವೆಂಟಿ೨೦ ಪಂದ್ಯಗಳಿಗೆ ಅಂಪೈರ್ಗಳನ್ನು ಮತ್ತು ರೆಫರೀಘಳನ್ನು ನೇಮಿಸುವ ಕಾರ್ಯವನ್ನು ಕೂಡ ಇದು ಮಾಡುತ್ತದೆ. ಪ್ರತಿಯೊಂದು ರಾಷ್ಟ್ರವೂ ದೇಶದಲ್ಲಿ ಆಡಿಸಲ್ಪಡುವ ಎಲ್ಲಾ ಕ್ರಿಕೆಟ್ ಪಂದ್ಯಗಳನ್ನು ನಿಯಂತ್ರಿಸುವ ಒಂದು ರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ಹೊದಿರುತ್ತದೆ. ಕ್ರಿಕೆಟ್ ಮಂಡಳಿ ಚಿಕ್ಕ ರಾಷ್ಟ್ರೀಯ ತಂಡವನ್ನು ಕೂಡ ಆಯ್ಕೆಮಾಡುತ್ತದೆ ಮತ್ತು ರಾಷ್ಟ್ರೀಯ ತಂಡಕ್ಕೆ ದೇಶದಲ್ಲಿ ಮತ್ತು ದೂರದ ರಾಷ್ಟ್ರಗಳಲ್ಲಿ ಪಂದ್ಯಾವಳಿಗಳನ್ನು ಸಂಘಟಿಸುತ್ತದೆ. ವೇಸ್ಟ್ ಇಂಡೀಸ್ನಲ್ಲಿ ಈ ವಿಶಯಗಳು ನಾಲ್ಕು ರಾಷ್ಟ್ರೀಯ ಮಂಡಳಿಗಳು ಮತ್ತು ಎರಡು ಬಹುರಾಷ್ಟ್ರೀಯ ಮಂಡಳಿಗಳಿಂದ ನೇಮಿಸಲ್ಪಟ್ಟ ಸದಸ್ಯರುಗಳಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯಿಂದ ನಿರ್ಧರಿಸಲ್ಪಡುತ್ತದೆ. ವಿವರಗಳಿಗಾಗಿ ನೋಡಿ ಕ್ರಿಕೆಟ್ ಮತ್ತು ಬೇಸ್ ಬಾಲ್ ನಡುವಿನ ಹೋಲಿಕೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸದ್ಸ್ಯರುಗಳ ಪಟ್ಟೀ ಟ್ವೆಂಟಿ20 ವಿಶ್ವ ಕಪ್ ಕ್ರಿಕೆಟ್ ವರ್ಲ್ಡ್ ಟ್ವೆಂಟಿ20 ಇಂಡಿಯನ್ ಪ್ರೀಮಿಯರ್ ಲೀಗ್ ಒಳಾಂಗಣ ಕ್ರಿಕೆಟ್ ಕುರುಡು ಕ್ರಿಕೆಟ್ ಮಹಿಳೆಯರ ಕ್ರಿಕೆಟ್ ಉಲ್ಲೇಖಗಳು ಮತ್ತು ಪರಾಮರ್ಶೆಗಳು ಹೊರಗಿನ ಕೊಂಡಿಗಳು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ() ಕ್ರಿಕೆಟ್ನ ಔದ್ಯೋಗಿಕ ನಿಯಮಗಳು ಕ್ರಿಕೆಟ್ ಗುಂಪು ಆಟಗಳು ಚೆಂಡಿನ ಆಟಗಳು ಬ್ಯಾಟ್ ಮತ್ತು ಬೌಲ್ ಆಟ ಒಲಂಪಿಕ್ ಕ್ರೀಡೆಗಳು ಇಂಗ್ಲೆಂಡ್ನಲ್ಲಿ ಪ್ರಾರಂಭಗೊಂಡ ಕ್ರೀಡೆಗಳು
ಪಾಟೀಲ ಪುಟ್ಟಪ್ಪ (೧೯೨೧ ಜನವರಿ ೧೪ ಮಾರ್ಚ್ ೧೬, ೨೦೨೦) ಭಾರತೀಯ ಬರಹಗಾರ, ಅನುಭವಿ ಪತ್ರಕರ್ತ ಮತ್ತು ಹುಬ್ಬಳ್ಳಿ ಮೂಲದ ಕಾರ್ಯಕರ್ತರಾಗಿದ್ದರು. ಕನ್ನಡ ದಿನಪತ್ರಿಕೆ ವಿಶ್ವವಾಣಿ ಸ್ಥಾಪಕಸಂಪಾದಕರಾಗಿದ್ದರು.ಪುಟ್ಟಪ್ಪ, 1940 ಮತ್ತು 1950 ರ ದಶಕದ ಅಂತ್ಯದಲ್ಲಿ ಕನ್ನಡಿಗರು ಬಹುಸಂಖ್ಯಾತರಾಗಿದ್ದ ಪ್ರದೇಶಗಳನ್ನು ಏಕೀಕರಿಸುವಂತೆ ಒತ್ತಾಯಿಸಿ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದರು. ಅವರು ಧಾರವಾಡ ಮೂಲದ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿದ್ದರು. ಅವರು ರಾಜ್ಯಸಭೆಯಲ್ಲಿ ಎರಡು ಅವಧಿಗೆ ರಾಜ್ಯವನ್ನು ಪ್ರತಿನಿಧಿಸಿದರು (1962 ರಿಂದ 1974). ಅವರು ಕನ್ನಡ ಭಾಷಾ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿದ್ದರು, ನಂತರ ಇದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಎಂದು ಮರುನಾಮಕರಣ ಮಾಡಲಾಯಿತು.2003 ರಲ್ಲಿ ಬೆಳಗಾವಿಯಲ್ಲಿ ನಡೆದ 70 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.1949 ರಲ್ಲಿ ಕ್ಯಾಲಿಫೋರ್ನಿಯಾ ಸ್ಟೇಟ್ ಯೂನಿವರ್ಸಿಟಿಯಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಬಾಲ್ಯ ಮತ್ತು ಶಿಕ್ಷಣ ಹಾವೇರಿ ತಾಲೂಕಿನ ಕುರುಬಗೊಂಡದಲ್ಲಿ ಜನಿಸಿದರು. ಓದಿದ್ದು ಕುರುಬಗೊಂಡ,ಬ್ಯಾಡಗಿ, ಹಾವೇರಿ, ಧಾರವಾಡದಲ್ಲಿ. ಕರ್ನಾಟಕ ಕಾಲೇಜಿನಲ್ಲಿ ಪದವಿ. ಬೆಳಗಾವಿಯಲ್ಲಿ ಕಾನೂನು ಅಧ್ಯಯನ. ಮುಂಬಯಿಯಲ್ಲಿ, ಹುಬ್ಬಳ್ಳಿಯಲ್ಲಿ ಪತ್ರಿಕೆಗಳಲ್ಲಿ ಕೆಲಸ. ೧೯೪೫ರಲ್ಲಿ ವಕೀಲಿ ವೃತ್ತಿಗಾಗಿ ಮುಂಬಯಿಗೆ ತೆರಳಿದ್ದರು. ೧೯೪೯ರಲ್ಲಿ ಕೆಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಅಮೆರಿಕೆಯಿಂದ ಮರಳಿದ ನಂತರ ನವಯುಗ ಮಾಸಪತ್ರಿಕೆಯ ಸಂಪಾದಕತ್ವ. ೧೯೫೪ರಲ್ಲಿ ಪ್ರಪಂಚ ಪತ್ರಿಕೆಯ ಸ್ಥಾಪನೆ. ೧೯೬೨ರಿಂದ ೧೯೭೪ರವರೆಗೆ ಎರಡು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದರು. ಕನ್ನಡ ಕಾವಲು ಸಮಿತಿಯ ಅಧ್ಯಕ ಸಂಪಾದಕರಾಗಿ ೧೯೪೭ರಲ್ಲಿ ವಿಶಾಲ ಕರ್ನಾಟಕ, ೧೯೫೨ರಲ್ಲಿ ನವಯುಗ, ೧೯೫೪ರಲ್ಲಿ ಪ್ರಪಂಚ ಸಾಪ್ತಾಹಿಕ, ೧೯೫೬ರಲ್ಲಿ ಸಂಗಮ ಮಾಸಿಕ, ೧೯೫೯ರಲ್ಲಿ ವಿಶ್ವವಾಣಿ ದೈನಿಕ, ೧೯೬೧ರಲ್ಲಿ ಮನೋರಮ ಸಿನಿಮಾ ಪಾಕ್ಷಿಕ, ೧೯೬೪ರಲ್ಲಿ ಸ್ತ್ರೀ ಮಾಸಿಕ ಮುಂತಾದ ಹಲವಾರು ಪತ್ರಿಕೆಗಳ ಸಂಪಾದಕರಾಗಿ ಕೆಲಸ ಮಾಡಿದರು. ಪುಟ್ಟಪ್ಪನವರ ಕೃತಿಗಳು ನಮ್ಮ ದೇಶ ನಮ್ಮ ಜನ ನನ್ನದು ಈ ಕನ್ನಡ ನಾಡು ಕರ್ನಾಟಕದ ಕಥೆ ಪಾಪು ಪ್ರಪಂಚ ಶಿಲಾಬಾಲಿಕೆ ನುಡಿದಳು ಕಥಾಸಂಕಲನ ಗವಾಕ್ಷ ತೆರೆಯಿತು ಸಾವಿನ ಮೇಜವಾನಿ ಸರ್ ಸಿದ್ದಪ್ಪ ಕಂಬಳಿ, ಹೊಸಮನಿ ಸಿದ್ದಪ್ಪನವರು ಜೀವನ ಚರಿತ್ರೆ ನನ್ನೂರು ಈ ನಾಡು, ಹೊಸದನ್ನ ಕಟ್ಟೋಣ, ಬದುಕುವ ಮಾತುಪ್ರಬಂಧ ಸಂಕಲನಗಳು ಪ್ರಶಸ್ತಿಗಳು ನಾಡೋಜ ಪ್ರಶಸ್ತಿ ಕನ್ನಡ ವಿಶ್ವವಿದ್ಯಾಲಯ ನೃಪತುಂಗ ಪ್ರಶಸ್ತಿ 2008, ಸಾಹಿತ್ಯ ಪ್ರಶಸ್ತಿ ಕರ್ನಾಟಕ ಸಾಹಿತ್ಯ ಪರಿಷತ್ ವುಡೆ ಪ್ರಶಸ್ತಿ 2010 ನಿಧನ ಪಾಟೀಲ ಪುಟ್ಟಪ್ಪನವರು ೧೬ಮಾರ್ಚ್ ೨೦೨೦ರ ಸೋಮವಾರದಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ೧೦೧ ವರ್ಷ ವಯಸ್ಸಾಗಿತ್ತು., ಹೊಸಸಂಪರ್ಕಕೊಂಡಿಗಳು ಪಾಟೀಲ ಪುಟ್ಟಪ್ಪ ಕಣಜ ಅಂತರಜಾಲ ಮಾಹಿತಿಕೋಶ ಉಲ್ಲೇಖಗಳು ಪಾಟೀಲ ಪುಟ್ಟಪ್ಪ ಪತ್ರಕರ್ತರು ನೃಪತುಂಗ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು ನಾಡೋಜ ಪ್ರಶಸ್ತಿ ಪುರಸ್ಕೃತರು ೧೯೧೯ ಜನನ ೨೦೨೦ ನಿಧನ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು
ಗಾಂಧಿ ಜಯಂತಿ ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆ. ಪ್ರತಿವರ್ಷ ಅಕ್ಟೋಬರ್ ೦೨ ರಂದು ಗಾಂಧಿ ಜಯಂತಿ ಆಚರಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರಾದ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನೂ ಇದೇ ದಿನ ಆಚರಿಸಲಾಗುತ್ತದೆ. ಗಾಂಧಿ ಜಯಂತಿಯ ಮಹತ್ವ ಅಕ್ಟೋಬರ್ ೨ ನಮ್ಮ ದೇಶಾದ್ಯಂತ ಆಚರಿಸುವ ರಾಷ್ಟ್ರೀಯ ಹಬ್ಬ ಗಾಂಧಿ ಜಯಂತಿ. ಎಲ್ಲಾ ಶಾಲೆಗಳಲ್ಲಿ, ಸರ್ಕಾರಿ ಕಛೇರಿಗಳಲ್ಲಿ ಗಾಂಧಿಜಿಯವರ ಭಾವ ಚಿತ್ರವನ್ನು ಇಟ್ಟು ಪೂಜೆಯನ್ನು ಮಾಡುತ್ತಾರೆ. ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿ ಅಂದು ಗಾಂಧಿಜಿಯವರ ಬಗ್ಗೆ ಮತ್ತು ಅವರ ಸಾಧನೆಗಳ ಬಗ್ಗೆ ಜೊತೆಗೆ ಅವರ ಜೀವನ ಚರಿತ್ರೆಯನ್ನು ಮಕ್ಕಳಿಗೆ ಹೇಳುತ್ತಾರೆ. ಅದರ ಜೊತೆಗೆ ಅಂದು ವಿಶೇಷವಾಗಿ ಶ್ರಮದಾನವನ್ನು ಸಹ ಹಮ್ಮಿಕೊಂಡು ಆಯಾ ಗ್ರಾಮದಲ್ಲಿ ಶ್ರಮದಾನ ಮಾಡುತ್ತಾರೆ. ಶಾಲಾ ಮಕ್ಕಳು ಸಹ ಬೆಳಿಗ್ಗೆ ಬೇಗನೆ ಎದ್ದು ಜಳಕ್ಕೆ ಮಾಡಿ, ರಾಷ್ಟ್ರ ಪಿತನಿಗೆ ನಮಿಸಿ, ಅವರ ತತ್ವಗಳನ್ನು ಜೀವನದಲ್ಲಿ ತೊಡಗಿಸಿಕೊಳ್ಳಲು ಸಿದ್ದರಾಗಿ ಶಾಲೆಗೆ ಬರುತ್ತಾರೆ. ಇಂತಹ ಮಹಾನ ವ್ಯಕ್ತಿಯ ಜನ್ಮ ದಿನವಾದ ಅಕ್ಟೋಬರ್ ೨ ರಂದು ರಾಜ್ಯಾದ್ಯಂತ ಮದ್ಯಪಾನವನ್ನು ಸಹ ಸರ್ಕಾರ ನಿಷೇದಿಸಿರುವುದು ಹೆಮ್ಮೆಯ ಸಂಗತಿಯು ಹೌದು. ನಮಗೆ ತಿಳಿದ ಹಾಗೆ ಗಾಂಧೀಜಿ ಯವರ ಹುಟ್ಟಿದ ದಿನವನ್ನು ಗಾಂಧಿ ಜಯಂತಿ ಎಂದು ಆಚರಿಸಲಾಗುವುದು. ಗಾಂಧಿಯವರ ಜನನ, ಜೀವನ ಇವರ ಪೂರ್ಣ ಹೆಸರು ಮೋಹನದಾಸ್ ಕರಮಚಂದ್ ಗಾಂಧಿ ಅಕ್ಟೋಬರ್ 2, 1869 ರಲ್ಲಿ ಭಾರತದ ಗುಜರಾತ್ ರಾಜ್ಯದ ಪೋರಬಂದರ್ ನಲ್ಲಿ ಜನಿಸಿದರು. ಇವರ ತಂದೆ ಕರಮಚಂದ್ ಗಾಂಧಿ, ತಾಯಿ ಪುತಲೀಬಾಯಿ. 13 ನೆಯ ವಯಸ್ಸಿನಲ್ಲಿ ಗಾಂಧೀಜಿ ಕಸ್ತೂರಿ ಬಾ ಅವರನ್ನು ವಿವಾಹವಾದರು. ನಂತರ ಇವರಿಗೆ ನಾಲ್ಕು ಮಕ್ಕಳು ಜನಿಸಿದರು : ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ , ರಾಮದಾಸ್ ಗಾಂಧಿ ಮತ್ತು ದೇವದಾಸ್ ಗಾಂಧಿ. 4 ನೇ ವಯಸ್ಸಿನಲ್ಲಿ ಗಾಂಧೀಜಿ ಲಂಡನ್ ನಗರದ ಯೂನಿವರ್ಸಿಟಿ ಕಾಲೇಜಿನಲ್ಲಿ ವಕೀಲಿ ವೃತ್ತಿಗಾಗಿ ತರಬೇತಿ ಪಡೆಯಲು ತೆರಳಿ ತರಬೇತಿಯನ್ನು ಮುಗಿಸಿ ಬಂದು. ಮುಂಬಯಿ ನಗರದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಲು ಬಹಳ ಪ್ರಯತ್ನಿಸಿದರು. ಆದರೆ ಹೆಚ್ಚು ಯಶಸ್ಸು ಕಾಣದಿದ್ದರಿಂದ ಎರಡು ವರ್ಷಗಳ ನಂತರ ದಕ್ಷಿಣ ಆಫ್ರಿಕಾಕ್ಕೆ ಕೆಲಸದ ಮೇಲೆ ತೆರಳಿದರು. ಅಲ್ಲಿ ಭಾರತೀಯ ನಿವಾಸಿಗಳಿಗೆ ಸಮಾನ ಹಕ್ಕುಗಳನ್ನು ನೀಡದ ಬ್ರಿಟಿಷ್ ಸರ್ಕಾರದ ವರ್ಣಭೇದ ನೀತಿಯನ್ನು ನೋಡಿ ಬೇಸರಗೊಂಡರು. ಗಾಂಧೀಜಿ ಅಲ್ಲಿನ ವರ್ಣಭೇದ ನೀತಿಯನ್ನು ಅಳಿಸಲು ಚಳುವಳಿಯನ್ನು ಆರಂಭಿಸಿದರು. ಅಲ್ಲಿನ ಪೀಟರ್ ಮ್ಯಾರಿಟ್ಸ್ ಬರ್ಗ್ ಎಂಬ ನಗರದಲ್ಲಿ ರೈಲಿನಲ್ಲಿ ಮೊದಲ ದರ್ಜೆ ಟಿಕೆಟ್ ತೆಗೆದು ಕೊಂಡಿದ್ದರೂ ಅಲ್ಲಿ ಕೂರಲು ಬಿಡದೆ ರೈಲಿನಿಂದ ಹೊರ ಹಾಕಿದಾಗ, ಅವರ ವರ್ಣಭೇದ ನೀತಿಯ ವಿರುದ್ಧ ಹೋರಾಡುವ ನಿಶ್ವಯ ಸ್ಥಿರವಾಯಿತು. ನವೆಂಬರ್ 6, 1913 ರಲ್ಲಿ ಭಾರತೀಯ ಗಣಿಗಾರರ ಒಂದು ಮೆರವಣಿಗೆಯಲ್ಲಿ ಹೋಗುತ್ತಿದ್ದಾಗ ಗಾಂಧೀಜಿ ಬಂಧಿತರಾದರು. ಹೋರಾಟ, ಚಳುವಳಿ, ಸತ್ಯಾಗ್ರಹ, ಇತ್ಯಾದಿ ಗಾಂಧೀಜಿಯವರ ತತ್ವಗಳಿಗೆ ಮುಖ್ಯ ಸ್ಫೂರ್ತಿ ಭಗವದ್ಗೀತೆ, ಮತ್ತು ರಷ್ಯಾದ ಪ್ರಸಿದ್ಧ ಸಾಹಿತಿ ಲಿಯೋ ಟಾಲ್ಸ್ಟಾಯ್ ಅವರ ಬರಹಗಳು. ಗಾಂಧೀಜಿಯವರು ಅಮೆರಿಕದ ಸಾಹಿತಿ ಹೆನ್ರಿ ಡೇವಿಡ್ ಥೋರ್ಯೂ ನ ಪ್ರಬಂಧಗಳಿಂದಲೂ ಪ್ರಭಾವಿತರಾಗಿದ್ದರು. ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಗಾಂಧೀಜಿಯವರು ಭಾರತಕ್ಕೆ ಮರಳಿ ಭಾರತೀಯರು ಬ್ರಿಟಿಷರ ಪರವಾಗಿ ಯುದ್ಧದಲ್ಲಿ ಭಾಗವಹಿಸುವಂತೆ ಕೇಳಿಕೊಂಡು ಇದಕ್ಕಾಗಿ ಪ್ರಚಾರ ಮಾಡಿದರು. ಯುದ್ಧದ ನಂತರ ಗಾಂಧೀಜಿಯವರು ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಜೊತೆ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಉಪವಾಸ ಸತ್ಯಾಗ್ರಹ ಮತ್ತು ಅಸಹಕಾರ ಚಳುವಳಿಗಳ ಮೂಲಕ ಪ್ರಪಂಚದಾದ್ಯಂತ ಖ್ಯಾತಿ ಗಳಿಸಿದರು. ಹಲವಾರು ಬಾರಿ ಬ್ರಿಟಿಷ್ ಸರ್ಕಾರ ಇವರನ್ನು ಬಂಧನದಲ್ಲಿರಿಸಿತು. ಗಾಂಧೀಜಿಯವರ ಯಶಸ್ವಿ ಸತ್ಯಾಗ್ರಹಗಳಲ್ಲಿ ಇನ್ನೊಂದೆಂದರೆ ಸ್ವದೇಶಿ ಚಳುವಳಿ ಪರದೇಶಗಳಲ್ಲಿ ಉತ್ಪಾದಿತವಾದ ವಸ್ತುಗಳನ್ನು, ಅದರಲ್ಲಿ ಮುಖ್ಯವಾಗಿ ಬ್ರಿಟಿಷ್ ವಸ್ತುಗಳನ್ನು, ವರ್ಜಿಸಿ ಭಾರತದಲ್ಲಿ ಉತ್ಪಾದಿಸಲಾದ ವಸ್ತುಗಳನ್ನು ಮಾತ್ರ ಬಳಸುವಂತೆ ಕೇಳಿಕೊಂಡರು. ಈ ತತ್ವವೇ ಖಾದಿ ಉತ್ಪಾದಿಸಿ ಖಾದಿ ಬಟ್ಟೆಗಳನ್ನೇ ತೊಡುವ ಸಂಪ್ರದಾಯ ಜನಪ್ರಿಯವಾಯಿತು. ಭಾರತೀಯ ಮಹಿಳೆಯರಿಗೆ ಪ್ರತಿ ದಿನವೂ ಖಾದಿ ನೇಯುವಂತೆ ಕೇಳಿ ಗಾಂಧೀಜಿಯವರು ಮಹಿಳೆಯರಿಗೂ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವ ಅವಕಾಶ ಮಾಡಿಕೊಟ್ಟರು. 1920 ರಂದು ಅಮೃತಸರದಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ನಂತರ ಗಾಂಧೀಜಿಯವರ ಸ್ವಾತಂತ್ರ್ಯ ಚಳುವಳಿ ಇನ್ನೂ ಹೆಚ್ಚು ವೇಗದಲ್ಲಿ ಸಾಗಲಾರಂಭಿಸಿತು. ಗಾಂಧೀಜಿಯವರ ಜೀವನದ ಪ್ರಸಿದ್ಧ ಕಾರ್ಯಗಳಲ್ಲಿ ಒಂದು ದಂಡಿ ಯಾತ್ರೆ. ಉಪ್ಪಿನ ಉತ್ಪಾದನೆಗೆ ಬ್ರಿಟಿಷ್ ಸರ್ಕಾರಕ್ಕೆ ಕರ ಕೊಡುವ ಬದಲು ಜನರು ತಾವಾಗಿಯೇ ಉಪ್ಪನ್ನು ಉತ್ಪಾದಿಸಲಿಕ್ಕಾಗಿ ಗಾಂಧೀಜಿ ಮಾರ್ಚ್ 12, 1930 ರಂದು ಸಹಸ್ರಾರು ಜನರೊಡನೆ ಸಮುದ್ರತೀರಕ್ಕೆ ನಡೆದು ಉಪ್ಪನ್ನು ಉತ್ಪಾದಿಸಿದರು. ಮೇ 8, 1933 ರಂದು ಆರಂಭಗೊಂಡು 21 ದಿನಗಳ ಕಾಲಬ್ರಿಟಿಷ್ ಆಡಳಿತವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಿದರು. ಮಾರ್ಚ್ 3, 1939 ರಂದು ಆರಂಭಗೊಂಡು ಇನ್ನೊಂದು ಉಪವಾಸವನ್ನು ನಡೆಸಿದರು. ಗಾಂಧೀಜಿ 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷ ರಾಗಿದ್ದರು. ಭಾರತ ಬಿಟ್ಟು ತೊಲಗಿರಿ ಚಳುವಳಿ 1942 ರಲ್ಲಿ ಆರಂಭವಾಯಿತು. ಆಗಸ್ಟ್ 9, 1942 ರಂದು ಬ್ರಿಟಿಷರು ಗಾಂಧೀಜಿಯನ್ನು ಮತ್ತೆ ಬಂಧಿಸಿ ಎರಡು ವರ್ಷಗಳ ಕಾಲ ಬಂಧನದಲ್ಲಿರಿಸಿದರು. ತತ್ವ, ಸಿದ್ದಾಂತಗಳು ಅವರ ಮುಖ್ಯ ತತ್ವಗಳು ಸತ್ಯ ಮತ್ತು ಅಹಿಂಸೆ. ಅಹಿಂಸೆಯ ತತ್ವ ಭಾರತೀಯ ಧಾರ್ಮಿಕ ವಿಚಾರದಲ್ಲಿ ಅನೇಕ ಶತಮಾನಗಳಿಂದ ಅಸ್ತಿತ್ವದಲ್ಲಿರುವ ತತ್ವ. ಗಾಂಧೀಜಿಯವರು ಕಟ್ಟಾ ಸಸ್ಯಾಹಾರಿಗಳು. ಲಂಡನ್ ನಲ್ಲಿ ಓದುತ್ತಿದ್ದಾಗ ಅವರು ಸಸ್ಯಾಹಾರದ ಬಗೆಗೆ ಪುಸ್ತಕಗಳನ್ನೂ ಬರೆದಿದ್ದರು. ಹಿಂದೂ ಮತ್ತು ಜೈನ ಸಮಾಜಗಳಲ್ಲಿ ಸಸ್ಯಾಹಾರದ ತತ್ವ ಶತಮಾನಗಳಿಂದಲೂ ಆಳವಾಗಿ ಬೇರೂರಿರುವುದು. ವಿವಿಧ ರೀತಿಯ ಆಹಾರ ಕ್ರಮಗಳೊಂದಿಗೆ ಪ್ರಯೋಗಗಳನ್ನು ಕೈಗೊಂಡ ಗಾಂಧೀಜಿಯವರ ನಂಬಿಕೆ ನಮ್ಮ ಆಹಾರ ಕ್ರಮ ನಮ್ಮ ಮೂಲಭೂತ ಅಗತ್ಯಗಳನ್ನು ಪೂರೈಸಬೇಕೇ ಹೊರತು ಅದಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುವ ಅಗತ್ಯವಿಲ್ಲವೆಂಬುದು. ಕಾಲಕಾಲಕ್ಕೆ ಉಪವಾಸ ವ್ರತವನ್ನೂ ಕೈಗೊಳ್ಳುತ್ತಿದ್ದ ಗಾಂಧೀಜಿಯವರು ಉಪವಾಸ ಸತ್ಯಾಗ್ರಹವನ್ನು ಸ್ವಾತಂತ್ರ್ಯ ಚಳುವಳಿಯಲ್ಲೂ ಉಪಯೋಗಿಸಿದವರು. 36 ನೆಯ ವಯಸ್ಸಿನಲ್ಲಿ ಗಾಂಧೀಜಿಯವರು ಬ್ರಹ್ಮಚರ್ಯ ವ್ರತವನ್ನು ಸ್ವೀಕರಿಸಿದರು. ಹಾಗೆಯೇ ವಾರದಲ್ಲಿ ಒಂದು ದಿನ ಮೌನವ್ರತವನ್ನು ಆಚರಿಸುತ್ತಿದ್ದರು. ಇದರಿಂದ ಆತ್ಮಶಾಂತಿ ಸಿಕ್ಕುತ್ತದೆಂಬುದು ಗಾಂಧೀಜಿಯವರ ನಂಬಿಕೆ. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ ಮೇಲೆ ಶ್ರೀಮಂತ ಉಡುಪುಗಳನ್ನು ಗಾಂಧೀಜಿ ಎಂದಿಗೂ ಧರಿಸಲಿಲ್ಲ. ಭಾರತದ ಅತ್ಯಂತ ಬಡ ಮನುಷ್ಯ ಒಪ್ಪಿಕೊಳ್ಳಬಹುದಾದ ಉಡುಪುಗಳನ್ನು ಮಾತ್ರ ಅವರು ಧರಿಸುತ್ತಿದ್ದರು. ಮನೆಯಲ್ಲಿಯೇ ನೇಯ್ದ ಖಾದಿ ಬಟ್ಟೆಗಳನ್ನು ಧರಿಸುವುದನ್ನು ಗಾಂಧೀಜಿ ಪ್ರೋತ್ಸಾಹಿಸುತ್ತಿದ್ದರು. ಗಾಂಧೀಜಿಯವರ ಚರಕ ನಂತರ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಬಾವುಟದಲ್ಲಿಯೂ ಸೇರಿತು. ಸತ್ಯದೊಂದಿಗೆ ನನ್ನ ಪ್ರಯೋಗಗಳು ಮಹಾತ್ಮ ಗಾಂಧಿಯವರ ಆತ್ಮ ಚರಿತ್ರೆ. ಜನಪ್ರಿಯವಾಗಿ ಮಹಾತ್ಮ ಗಾಂಧಿ, ಆಧುನಿಕ ಭಾರತ ದೇಶದ ಪಿತಾಮಹರಲ್ಲಿ ಒಬ್ಬರು, ಮತ್ತು ಭಾರತೀಯ ಸ್ವಾತಂತ್ರ್ಯ ಚಳುವಳಿಯ ಪ್ರಭಾವಶಾಲಿ ನಾಯಕರು ಮತ್ತು ಸತ್ಯಾಗ್ರಹಿಗಳು. ಬ್ರಿಟಿಷ್ ಆಡಳಿತದಿಂದ ಭಾರತ ಸ್ವಾತಂತ್ರ್ಯ ಪಡೆಯುವುದರಲ್ಲಿ ಮುಖ್ಯ ಪಾತ್ರ ವಹಿಸಿದರಲ್ಲದೆ, ಪರದೇಶದ ಆಡಳಿತಕ್ಕೆ ಒಳಗಾಗಿದ್ದ ಇತರ ದೇಶಗಳಲ್ಲಿಯೂ ಸ್ವಾತಂತ್ರ್ಯ ಚಳುವಳಿಗೆ ಸ್ಫೂರ್ತಿ ತಂದರು. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಮೊದಲಾದ ಅಹಿಂಸಾವಾದಿ ಹೋರಾಟಗಾರರು ಗಾಂಧೀಜಿಯವರ ಸತ್ಯಾಗ್ರಹದ ತತ್ವದಿಂದ ಆಳವಾಗಿ ಪ್ರಭಾವಿತರಾದವರು. ಗಾಂಧೀಜಿಯವರ ಹೇಳಿಕೆಯಂತೆ, ಅವರ ಮೌಲ್ಯಗಳು ಸರಳ ಧಾರ್ಮಿಕ ನಂಬಿಕೆಗಳಿಂದ ಬಂದಂಥವು: ಸತ್ಯ ಮತ್ತು ಅಹಿಂಸೆ. ಅವರ ಹಾದಿಯಲ್ಲಿ ಸಾಗಲು ಜನ ಪ್ರಯತ್ನಿಸಲಿ. ನೋಡಿ ಮಹಾತ್ಮ ಗಾಂಧಿ ಉಲ್ಲೇಖ ಜನ್ಮದಿನ ಆಚರಣೆ ಜಯಂತಿ
ಗೀತಾ ನಾಗಭೂಷಣ ಕನ್ನಡ ಸಾಹಿತ್ಯದ ಪ್ರಸಿದ್ಧ ಬರಹಗಾರ್ತಿಯರಲ್ಲೊಬ್ಬರು. ಮೊಘಲಾಯಿ ಪರಿಸರದ ಪ್ರಮುಖ ಲೇಖಕಿ ಎಂದು ಪ್ರಖ್ಯಾತರಾಗಿರುವ ನಾಡೋಜ ಗೀತಾ ನಾಗಭೂಷಣ, ತಮಗಿದ್ದ ಕಿತ್ತು ತಿನ್ನುವ ಬಡತನ, ಅಸಹಕಾರಕ ಪರಿಸರ, ಹೆಣ್ಣು ಮಕ್ಕಳ ನ್ನು ಶಾಲೆಗೆ ಕಳುಹಿಸದ ಸಾಮಾಜಿಕ ವ್ಯವಸ್ಥೆ ಇತ್ಯಾದಿಗಳನ್ನೆಲ್ಲಾ ದೃಢಸಂಕಲ್ಪ ಮತ್ತು ಹೋರಾಟದ ಮನೋಭಾವಗಳಿಂದ ದಾಟಿ ತಮ್ಮ ಎಡೆಬಿಡದ ಪರಿಶ್ರಮದಿಂದ ಬಿ.ಎ, ಬಿ.ಎಡ್, ಎಂ.ಎ ಪದವಿಗಳನ್ನು ಗಳಿಸಿ ಬಹುಕಾಲ ಅಧ್ಯಾಪನ ವೃತ್ತಿಯನ್ನೂ ನಡೆಸಿದವರು. ಜೊತೆಗೆ ತಮ್ಮ ಶಿಕ್ಷಕ ವೃತ್ತಿ, ಬರಹ ಪ್ರವೃತ್ತಿ ಮತ್ತು ನಡೆಗಳಿಂದ ಸಮಾಜಕ್ಕೆ ಬೆಳಕು ಕಾಣಿಸುವಲ್ಲಿ ನಿರಂತರ ಪ್ರಯತ್ನಶೀಲರಾದವರು. ಜೀವನ ಗೀತಾ ನಾಗಭೂಷಣ, ಕಲ್ಬುರ್ಗಿ ಜಿಲ್ಲೆಯ ಹಿಂದುಳಿದ ಸಾವಳಗಿ ಎಂಬ ಪುಟ್ಟ ಹಳ್ಳಿಯಲ್ಲಿ ಮಾರ್ಚ್ ೨೫, ೧೯೪೨ರಲ್ಲಿ ಶಾಂತಪ್ಪ, ಶರಣಮ್ಮದಂಪತಿಗಳ ಪ್ರೀತಿಯ ಮಗಳಾಗಿ ಜನಿಸಿದರು. ಕಲ್ಬುರ್ಗಿಯ ಕನ್ಯಾ ಶಾಲೆಯ ವಿದ್ಯಾರ್ಥಿನಿಯಾಗಿದ್ದರು. ಪಾ ್ರಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರಿನಲ್ಲಿಯೇ ಮುಗಿಸಿದ ಗೀತಾ, ಗುಲ್ಬರ್ಗಾದ ಕಲೆಕ್ಟರ್ ಆಫೀಸಿನಲ್ಲಿ ಗುಮಾಸ್ತೆಯ ಕೆಲಸಕ್ಕೆ ಸೇರಿದರು. ಅಲ್ಲಿ ದುಡಿಯುತ್ತಲೇ, ಶರಣಬಸವೇಶ್ವರ ಕಲಾಕಾಲೇಜಿನಲ್ಲಿ ಪದವಿಗಳಿಸಿದರು. ಬಿ. ಎ. ಮುಗಿಸಿದ ನಂತರ, ಗುಮಾಸ್ತ ಹುದ್ದೆಯನ್ನು ತೊರೆದು, ಶರಣಬಸಪ್ಪ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಸೇರಿ, ಬಿ. ಎಡ್ ಮುಗಿಸಿದರು. ತದನಂತರ, ಸೊಲ್ಲಾಪುರದ ಕಾಲೇಜಿನಿಂದ ಸ್ನಾತಕೋತ್ತರ ಪದವಿಯನ್ನೂ ಗಳಿಸಿದರು. ಗುಲ್ಬರ್ಗಾದ ನಾಗೇಶ್ವರ ಸಂಯುಕ್ತ ಪದವೀಪೂರ್ವ ಕಾಲೇಜಿನಲ್ಲಿ ಅಧ್ಯಾಪಕಿಯಾಗಿ, ಅಲ್ಲಿಯೇ ಪ್ರಾಂಶುಪಾಲರೂ ಆಗಿ, ಒಟ್ಟು ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದರು. ಸಾಹಿತ್ಯ ಕೃತಿ ಡಾ. ಗೀತಾ ನಾಗಭೂಷಣ ಅವರು 1968ರ ವರ್ಷದಲ್ಲಿ ಪ್ರಕಟಗೊಂಡ ತಾವರೆಯ ಹೂವು ಕಾದಂಬರಿಯಿಂದ ಮೊದಲ್ಗೊಂಡು ಇತ್ತೀಚಿನ ಬದುಕು ಕಾದಂಬರಿಯವರೆಗೆ ಇಪ್ಪತ್ತೇಳು ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಅವರ ಬದುಕು ಕಾದಂಬರಿಗೆ 2004ರ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿದೆ. ಗೀತಾ ನಾಗಭೂಷಣರ ಹಸಿಮಾಂಸ ಮತ್ತು ಹದ್ದುಗಳು ಎನ್ನುವ ಕಾದಂಬರಿಯು ಹೆಣ್ಣಿನ ಕೂಗು ಎಂಬ ಹೆಸರಿನಲ್ಲಿ ಚಲನಚಿತ್ರವಾಗಿದೆ. ಒಟ್ಟು 27 ಸ್ವತಂತ್ರ ಕಾದಂಬರಿ, 50 ಸಣ್ಣ ಕಥೆಗಳು, ಎರಡು ಸಂಕಲನ, 12 ನಾಟಕಗಳು, ಒಂದು ಸಂಪಾದನಾ ಕೃತಿ, ಒಂದು ಸಂಶೋಧನಾ ಕೃತಿ ಹೀಗೆ ಅವರ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಹಲವಾರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷಣಿಯಾಗಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಲ್ಲಿ ಡಾ. ಗೀತಾ ನಾಗಭೂಷಣರು ಹೇಳಿದ ಮಾತುಗಳು ಮಾರ್ಮಿಕವಾಗಿವೆ. ವಚನಕಾರರು, ಹರಿದಾಸರು, ತತ್ವಪದಕಾರರು, ಜನಪದರು ಅಂದು ತಮ್ಮ ಸಾಹಿತ್ಯದಿಂದ ಸಾವಿರಾರು ವರ್ಷಗಳ ಉದ್ದಕ್ಕೂ ಮಾಡಿಕೊಂಡು ಬಂದ ಜನಜಾಗೃತಿ, ಶಾಂತಿ ಸೌಹಾರ್ದತೆ, ಪ್ರೀತಿ ವಾತ್ಸಲ್ಯ, ಕ್ರಾಂತಿ ಚಳುವಳಿಗಳ ಮೂಲಕ ಸುಧಾರಣೆ ಮತ್ತು ಜನಹಿತಕಾರ್ಯವನ್ನು ಇಂದಿನ ಸಾಹಿತಿಗಳೂ ಸಾಧಿಸಿ ತೋರಿಸಬೇಕಾಗಿದೆ. ಬರೀ ಶಬ್ದಾಡಂಬರದ ರಂಜನೀಯ ಸಾಹಿತ್ಯ ನಮಗೆ ಬೇಡ, ಸಾಹಿತ್ಯ ಒಂದು ಮಾನಸಿಕ ಸುಧಾರಣೆಯ ಸಾಧನ. ಅದು ಸಮಾಜದ ಅಭ್ಯುದಯಕ್ಕಾಗಿ ದುಡಿಯುವಂತಾಗಬೇಕು. ವಿಜ್ಞಾನಿಯ ತಲೆ, ಸಂತನ ಹೃದಯ ಈ ದೇಶಕ್ಕೆ ಬೇಕು. ಬುದ್ಧನ ಕರುಣೆ, ಬಸವನ ಛಲ, ಬಾಬಾ ಸಾಹೇಬ್ ಅಂಬೇಡ್ಕರ್ ರ ಸ್ವಾಭಿಮಾನ ಮತ್ತು ಗಾಂಧೀಜಿಯ ಅಹಿಂಸೆಯ ತುಡಿತ ಈ ಎಲ್ಲವನ್ನೂ ಹುರಿಗೊಳಿಸಿ ಹೊಸೆದ ಹಗ್ಗದಿಂದಲೇ ನಾವು ಸರ್ವರ ಅಭ್ಯುದಯ ಸಾಧಿಸಬಲ್ಲ ನಭೋಸ್ಪರ್ಶಿ ವ್ಯವಸ್ಥೆಗೆ ಏಣಿ ಕಟ್ಟಬೇಕಾಗಿದೆ. ಪ್ರಶಸ್ತಿ ಗೌರವಗಳು ಗುಲ್ಬರ್ಗಾ ವಿಶ್ವವಿದ್ಯಾಲಯದ ಡಾಕ್ಟರೇಟ್ ಅತ್ತಿಮಬ್ಬೆ ಪ್ರಶಸ್ತಿ, 7 ನಾಡೋಜ ಪ್ರಶಸ್ತಿ (ಮೊದಲ ಮಹಿಳಾ ಸಾಹಿತಿ) ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ೨೦೦೪ (ಬದುಕು ಕಾದಂಬರಿಗೆ ಮತ್ತು ಕರ್ನಾಟಕದ ಮೊದಲ ಮಹಿಳಾ ಸಾಹಿತಿ) ಮಾಣಿಕ ಬಾಯಿ ಪಾಟೀಲ್ ಪ್ರತಿಷ್ಠಾನದ ಪ್ರಶಸ್ತಿ (ಬದುಕು ಕಾದಂಬರಿಗೆ) ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ (ಬದುಕು ಕಾದಂಬರಿಗೆ) ಸರ್. ಎಂ. ವಿಶ್ವೇಶ್ವರಯ್ಯ ದಶಮಾನೋತ್ಸವ ಸಾಹಿತ್ಯ ಪ್ರಶಸ್ತಿ (ಬದುಕು ಕಾದಂಬರಿಗೆ) ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (ಸಮಗ್ರ ಕೃತಿಗಳಿಗಾಗಿ) ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮೊದಲ ಮಹಿಳಾ ಸಾಹಿತಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (ಸಮಗ್ರ ಕೃತಿಗಳಿಗಾಗಿ) ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿ ಬಸವರಾಜ ಕಟ್ಟೀಮನಿ ಕಾದಂಬರಿ ಪ್ರಶಸ್ತಿ ರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಕರ್ನಾಟಕ ಲೇಖಕಿಯರ ಬಳಗ ನೀಡಿದ ಅನುಪಮಾ ಪ್ರಶಸ್ತಿ ಆರ್ಯಭಟ ಪ್ರಶಸ್ತಿ ಆಳ್ವಾಸ್ ನುಡಿಸಿರಿ ಪ್ರಶಸ್ತಿ ರತ್ನಮ್ಮ ಸಾಹಿತ್ಯ ಪ್ರಶಸ್ತಿ ಗೊರೂರು ಪ್ರಶಸ್ತಿ ಧರ್ಮಸ್ಥಳದ ಸಾಹಿತ್ಯ ಪ್ರಶಸ್ತಿ ಪ್ರೊ. ಆಲಗುರ ಪ್ರಶಸ್ತಿ ಉತ್ತಮ ಉಪನ್ಯಾಸಕಿ ಪ್ರಶಸ್ತಿ, ಗುಲ್ಬರ್ಗಾದ ಎಸ್. ಆರ್. ಪಾಟೀಲ್ ಮಹಾಂತ ಜ್ಯೋತಿ ಪ್ರತಿಷ್ಠಾನದ ಕಾಯಕ ರತ್ನ ಪ್ರಶಸ್ತಿ ಕನ್ನಡಸಾಹಿತ್ಯ ಪರಿಷತ್ತಿನ ಮಲ್ಲಿಕಾ ಮತ್ತು ರಾಜಾರಾಮ್ ದತ್ತಿ ಪ್ರಶಸ್ತಿಗಳು (ಆಘಾತ ಮತ್ತು ದಂಗೆ ಕಾದಂಬರಿಗಳಿಗೆ ಅನುಕ್ರಮವಾಗಿ) ಮಾರ್ದನಿ ಪತ್ರಿಕೆಯ ಉತ್ತಮ ಕಾದಂಬರಿ ಬಹುಮಾನ (ನೋವು ಕಾದಂಬರಿಗೆ ) ಉಮಾಪತಿ ಚುಕ್ಕಿ ಪ್ರತಿಷ್ಠಾನ ಸಿರವಾರದ ಪ್ರಶಸ್ತಿ (ಧುಮ್ಮಸು ಕಾದಂಬರಿಗೆ) ಭಾರತೀಯ ಭಾಷಾ ಪರಿಷದ್ ಕೋಲ್ಕತ್ತಾದ ರಚನಾ ಸಮಗ್ರ ಪ್ರಶಸ್ತಿ ಡಾ. ಗೀತಾ ನಾಗಭೂಷಣರು ಗದಗದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ೨೦೧೨ರಲ್ಲಿ ಗೀತಾ ನಾಗಭೂಷಣರು ಕನ್ನಡಕ್ಕೆ ಮೊಟ್ಟಮೊದಲ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ ತಂದುಕೊಟ್ಟಿದ್ದಾರೆ (೧,೦೦,೦೦೦೦೦) ಮರಣ ಗೀತಾ ನಾಗಭೂಷಣ ಕಲಬುರಗಿಯಲ್ಲಿ, ಜೂನ್ ೨೮, ೨೦೨೦ರಂದು ತಮ್ಮ ೭೮ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಉಲ್ಲೇಖಗಳು ಬಾಹ್ಯ ಸಂಪರ್ಕಗಳು ಹೂಬಿಡದ ಮರ,ಪು.೭೬೮೬,ಮಯೂರ,ಜೂನ್,೨೦೧೬ ಗೀತಾ ನಾಗಭೂಷಣ ಗೀತಾ ನಾಗಭೂಷಣ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ನಾಡೋಜ ಪ್ರಶಸ್ತಿ ಪುರಸ್ಕೃತರು ೨೦೨೦ ನಿಧನ ೧೯೪೨ ಜನನ
ಎಸ್. ನಾರಾಯಣ ಶೆಟ್ಟಿಯವರು (೧೩೪೧೯೩೦ ೧೬ ಮೇ ೨೦೧೧) ಕನ್ನಡದ ಸಾಹಿತಿಯಾಗಿದ್ದರು. ಸುಜನಾ ಎಂಬುದು ಇವರ ಕಾವ್ಯ ನಾಮ. ಬಾಲ್ಯ ಮತ್ತು ಜಿವನ ೧೯೩೦ ಏಪ್ರಿಲ್ ೧೩ ರಂದು ಕರ್ನಾಟಕದ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ (ಕೆ.ಆರ್. ಪೇಟೆ) ತಾಲ್ಲೂಕಿನ ಹೊಸಹೊಳಲುವಿನಲ್ಲಿ ಜನಿಸಿದ ಇವರ ತಂದೆ ಸುಬ್ಬಶೆಟ್ಟಿಯವರು ಹಾಗೂ ತಾಯಿ ಗೌರಮ್ಮನವರು. ಪತ್ನಿ ಲಕ್ಷ್ಮಿ ಹೊಸಹೊಳಲಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದ ಸುಜನಾ ಹೊಳೆ ನರಸೀಪುರದಲ್ಲಿ ಪ್ರೌಢಶಿಕ್ಷಣ ಆನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದರು. ವಿದ್ಯಾರ್ಥಿ ದೆಸೆಯಲ್ಲೇ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಬಹಳವಾಗಿ ಆಕರ್ಷಿತರಾಗಿದ್ದ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ ಆನರ್ಸ್ ಪದವಿಯನ್ನು ಪಡೆದು ಸಾಹಿತ್ಯ ಕೃಷಿ ಮುಂದುವರಿಸಿದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಯುವರಾಜ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ ಅವರು ಆನಂತರ ಒಂದೂವರೆ ವರ್ಷ ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಸಚಿವರಾಗಿಯೂ ಕೆಲಸ ಮಾಡಿದ್ದರು. ೨೦೦೯ರಲ್ಲಿ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ್ದರು.ಸೇವೆಯಿಂದ ನಿವೃತ್ತಿಯಾದ ಬಳಿಕ ಮೈಸೂರಿನಲ್ಲಿ ಕುಟುಂಬದೊಂದಿಗೆ ವಾಸಿಸುತ್ತಿದ್ದರು.ಇವರು ೨೦೧೧ರ ಮೇ ೧೬ ರಂದು ಮೈಸೂರಿನಲ್ಲಿ ನಿಧನರಾದರು. ಕವಿ ಸುಜನಾ ವಿಜ್ಞಾನದ ಆಸಕ್ತಿಯ ಕವಿಯೂ ಆಗಿದ್ದರು. ನಾಣ್ಯ ಯಾತ್ರೆ ಒಂದೇ ಸೂರಿನಡಿಯಲ್ಲಿ ಅವರ ಜನಪ್ರಿಯ ಕವನ ಸಂಕಲನಗಳಾಗಿದ್ದವು. ಅಲ್ಲದೆ ಗ್ರೀಕ್ ಭಾಷೆಯ ಏಜಾಕ್ಸ್ ಎಂಬ ಪ್ರಖ್ಯಾತ ನಾಟಕವನ್ನು ಕನ್ನಡಕ್ಕೆ ಅನುವಾದ ಮಾಡುವ ಮೂಲಕ ಸುಜನಾ ಅನುವಾದ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಆ ಬಳಿಕ ಯುಗಸಂಧ್ಯಾ ಎಂಬ ಮಹಾಕಾವ್ಯವನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆ ಮಾಡುವ ಮೂಲಕ ಮಹಾಕಾವ್ಯ ಬರೆದ ಕೆಲವೇ ಕವಿಗಳ ಸಾಲಿಗೆ ಸೇರಿದ್ದರು. ಯುಗಸಂಧ್ಯಾ ಕೃತಿಗೆ ೨೦೦೨ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹೃದಯ ಸಂವಾದ (ವಿಮರ್ಶಾ ಕೃತಿ)ಗೆ ೧೯೬೩ರಲ್ಲಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಒಂದೇ ಸೂರಿನಡಿಯಲ್ಲಿ ಕವನ ಸಂಕಲನಕ್ಕೆ ವರ್ಧಮಾನ ಪ್ರಶಸ್ತಿ,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಭಾರತ ಕಥಾಮಂಜರಿ ಕುಮಾರವ್ಯಾಸ (ವಿಮರ್ಶಾ ಕಿರುಹೊತ್ತಿಗೆ) ಪರಂಪರೆ ಕುವೆಂಪು ಪು.ತಿ.ನ.ಸಾಹಿತ್ಯದ ಹೊಳಹುಗಳು ಚಿಲಿಪಿಲಿ ಮಕ್ಕಳ ಕವನ ಸಂಕಲನ ಇಬ್ಬನಿ ಆರತಿ ವಚನ ಕವನ ಸಂಕಲನ ಕಣಗಳು ಏಜಾಕ್ಸ್ (ಅನುವಾದಿತ ನಾಟಕ) ಬಾಲಕಾಂಡ ವಾಲ್ಮೀಕಿ ರಾಮಾಯಣ (ಸಿ.ಪಿ.ಕೆ.ಯೊಡನೆ) ಅನುವಾದಿತ ಕೃತಿಯನ್ನು ಇವರು ರಚಿಸಿದ್ದರು. ಹೃದಯ ಸಂವಾದ. ಉಲ್ಲೇಖಗಳು ಕನ್ನಡ ಸಾಹಿತ್ಯ ಸುಜನಾ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
ಎಲ್.ಎಸ್.ಶೇಷಗಿರಿರಾವ್ (೧೯೨೫ ಫೆಬ್ರುವರಿ ೧೬ ೨೦ ಡಿಸೆಂಬರ್ ೨೦೧೯) ಅವರು ಕನ್ನಡದ ಒಬ್ಬ ಹಿರಿಯ ಸಾಹಿತಿ, ವಿಮರ್ಶಕ ಮತ್ತು ನಿಘಂಟು ತಜ್ಞರು. ಜೀವನ ಎಲ್.ಎಸ್.ಶೇಷಗಿರಿರಾವ್ ಅವರು ೧೯೨೫ ಫೆಬ್ರುವರಿ ೧೬ರಂದು ಬೆಂಗಳೂರಿನಲ್ಲಿ ಜನಿಸಿದರು. ಮೂಲತಃ ದೇಶಪಾಂಡೆ ಮನೆತನದವರಾದ ಇವರ ತಂದೆ, ಲಕ್ಷ್ಮೇಶ್ವರ ಸ್ವಾಮಿರಾಯರು. ಶೇಷಗಿರಿರಾಯರು, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಏ.(ಗೌರವ) ಪದವಿ ಪರೀಕ್ಷೆಯಲ್ಲಿ ಪ್ರಥಮ ತರಗತಿಯಲ್ಲಿ ಉತ್ತೀರ್ಣರಾದರು. ಎಚ್.ವಿ. ನಂಜುಂಡಯ್ಯ ಚಿನ್ನದ ಪದಕ ಪಡೆದ ಮೊದಲ ವಿದ್ಯಾರ್ಥಿ ಇವರು.ತದನಂತರ ಬೆಂಗಳೂರು ಇಂಟರಮೀಡಿಯೆಟ್ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾದರು. ಸಾಹಿತ್ಯ ಸೇವೆ ೧೯೪೮ರಲ್ಲಿ ಶೇಷಗಿರಿರಾವ್ ಅವರ ಮೊದಲ ಕಥಾಸಂಕಲನ ಇದು ಜೀವನ ಪ್ರಕಟವಾಯಿತು. ಕನ್ನಡ ಸಾರಸ್ವತಲೋಕದಲ್ಲಿ ತಮ್ಮದೆ ಒಂದು ಛಾಪನ್ನು ಸ್ಥಾಪಿಸಿರುವ ಎಲ್. ಎಸ್. ಎಸ್, ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಮಾಡಿರುವ ಕಾರ್ಯಗಳು ನಿಜಕ್ಕೂ ಶ್ಲಾಘನೀಯ. ನೂರಾರು ಚಿಕ್ಕಪುಟ್ಟ ಹೊತ್ತಿಗೆಗಳನ್ನು ಅವರು ರಾಷ್ಶ್ಟೋತ್ಥಾನ ಪರಿಷತ್ ವತಿಯಿಂದ ಪ್ರಕಟಿಸಿದ್ದಾರೆ. ಇದು ಮಕ್ಕಳ ಜ್ಞಾನವರ್ಧನೆಗೆಂದು ಹಮ್ಮಿಕೊಂಡ ಕೆಲಸವಾಗಿತ್ತು. ಅದರ ಬೆಲೆ ಕೇವಲ, ೭೫ ಪೈಸೆಗಳು. ಈ ಪುಸ್ತಕಗಳು ಹಿರಿಯರಿಗೂ, ಅತ್ಯಂತ ಉಪಯುಕ್ತಮಾಹಿತಿಗಳನ್ನು ಕೊಟ್ಟಿವೆ. ತುಂಬಾ ಚೆನ್ನಾಗಿವೆ. ರಾಯರ ಸಂಪಾದನೆಯ ಚಟುವಟಿಕೆಯಲ್ಲಿ, ಬೆಂಗಳೂರು ದರ್ಶನ ಸಂಪುಟಗಳು, ಅತ್ಯಂತ ಉಪಯುಕ್ತಮಾಹಿತಿಗಳನ್ನು ಬೆಂಗಳೂರಿನ ಜನರಿಗೆ ಕೊಟ್ಟಿವೆ. ವಿಶ್ವಕೋಶದತರಹವೇ ಸಂಯೋಜಿಸಿರುವ ಈ ಬೃಹದ್ ಸಂಪುಟಗಳು, ಅತ್ಯಂತ ಶ್ರಮವಹಿಸಿ, ವಿದ್ವಾಂಸರಿಂದ ತಯಾರಿಸಲ್ಪಟ್ಟ ಮಾಹಿತಿಗಳು. ಪ್ರತಿಯೊಬ್ಬ ಬೆಂಗಳೂರಿನ ನಾಗರಿಕನ ಮನೆಯಲ್ಲೂ ಪಡಸಾಲೆಯ ಕಪಾಟಿನ ಶೋಭೆಯನ್ನು ವಿಜೃಂಭಿಸುವ ಕೃತಿಗಳಿವು. ಪ್ರಮುಖ ಕೃತಿಗಳು ಸಣ್ಣಕಥೆಗಳ ಸಂಕಲನಗಳು ಇದು ಜೀವನ ಜಂಗಮ ಜಾತ್ರೆಯಲ್ಲಿ ಮುಟ್ಟಿದ ಗುರಿ ಮತ್ತು ಇತರ ಕಥೆಗಳು ಮುಯ್ಯಿ ಸಾಹಿತ್ಯ ವಿಮರ್ಶೆ ಕಾದಂಬರಿಸಾಮಾನ್ಯಮನುಷ್ಯ ಆಲಿವರ್ ಗೋಲ್ಡ್ ಸ್ಮಿತ್ ಮಾಸ್ತಿ ವೆಂಕಟೇಶ ಐಯ್ಯಂಗಾರ್ ಇಂಗ್ಲೀಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ ವಿಮರ್ಶೆ ಪಾಶ್ಚಾತ್ಯಸಾಹಿತ್ಯ ವಿಹಾರ ಸಾಹಿತ್ಯ ವಿಶ್ಲೇಷಣೆ ಹೊಸಗನ್ನಡ ಸಾಹಿತ್ಯ ಚರಿತ್ರೆ ಫ್ರಾನ್ಸ್ ಕಾಫ್ಕಾ ಗ್ರೀಕ್ ರಂಗಭೂಮಿ ಮತ್ತು ನಾಟಕ ವಿಲಿಯಮ್ ಶೇಕ್ಸ್ ಪಿಯರ್ ಸಾಹಿತ್ಯಬದುಕು ಟಿ. ಪಿ. ಕೈಲಾಸಂ ಪಾಶ್ಚಾತ್ಯ ಮತ್ತು ಭಾರತೀಯಮಹಾಕಾವ್ಯ ಪರಂಪರೆಗಳ ಮನೋಧರ್ಮ ಮಾಸ್ತಿ : ಜೀವನ ಮತ್ತು ಸಾಹಿತ್ಯ ಇಂಗ್ಲೀಷ್ ಸಾಹಿತ್ಯ ಚರಿತ್ರೆ ಸಾಹಿತ್ಯದ ಕನ್ನಡಿಯಲ್ಲಿ ಪಾಶ್ಚಾತ್ಯಸಾಹಿತ್ಯಲೋಕದಲ್ಲಿ ಎಲ್. ಎಸ್. ಎಸ್. ಕಂಡ ತ. ರಾ. ಸು. ಮಹಾಭಾರತ (ನಾಲ್ಕು ಸಂಪುಟಗಳು) ನಾಟಕಗಳು ಆಕಾಂಕ್ಷೆ ಮತ್ತು ಆಸ್ತಿ ಜೀವನ ಚರಿತ್ರೆ ಸಾರ್ಥಕ ಸುಬೋಧ ಎಂ. ವಿಶ್ವೇಶ್ವರಯ್ಯ ನಿಘಂಟುಗಳು ಐ.ಬಿ.ಎಚ್. ಕನ್ನಡ ಕನ್ನಡಇಂಗ್ಲೀಷ್ ನಿಘಂಟು ಐ.ಬಿ.ಎಚ್ ಇಂಗ್ಲೀಷ್ಕನ್ನಡ ನಿಘಂಟು ಐ. ಬಿ. ಎಚ್ ಕನ್ನಡ ಕನ್ನಡ ನಿಘಂಟು ಸುಭಾಸ್ ಇಂಗ್ಲೀಷ್ಇಂಗ್ಲೀಷ್ಕನ್ನಡ ನಿಘಂಟು ಸುಭಾಶ್ ವಿದ್ಯಾರ್ಥಿ ಮಿತ್ರ ಇಂಗ್ಲೀಷ್ಕನ್ನಡ್ ನಿಘಂಟು ಸುಲಭ ಇಂಗ್ಲೀಷ್ (ಏನ್ಗ್ಲಿಶ್ ಮದೆ ಎಅಸ್ಯ್.) ಇತರೆ ಮಕ್ಕಳ ಸಾಹಿತ್ಯ ೯ ಕೃತಿಗಳು ಮಕ್ಕಳಿಗಾಗಿ ೪ ಕೃತಿಗಳು ಇತರ ೯ ಅನುವಾದಿತ ೪ ಸಂಪಾದಿತ ೯ ಕೃತಿಗಳು ಇಂಗ್ಲೀಷ್ ನಲ್ಲಿ ಮೂಲ ಅನುವಾದಿತಸಂಪಾದಿತ ೩೧ ಕೃತಿಗಳು. ಪ್ರಶಸ್ತಿ, ಪುರಸ್ಕಾರಗಳು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ಸಾಹಿತ್ಯಪರಿಷತ್ತಿನ ವಜ್ರಮಹೋತ್ಸವ ಪ್ರಶಸ್ತಿ. ವರ್ಧಮಾನ ಪ್ರಶಸ್ತಿ. ಡಾ. ಅ.ನ.ಕೃ. ಪ್ರಶಸ್ತಿ. ಬಿ.ಎಮ್.ಶ್ರೀ ಪ್ರಶಸ್ತಿ. ಬಿ.ಎಮ್.ಇನಾಮದಾರ ಪ್ರಶಸ್ತಿ. ಕಾವ್ಯಾನಂದ ಪ್ರಶಸ್ತಿ. ದೇವರಾಜ ಬಹಾದ್ದೂರ ಪ್ರಶಸ್ತಿ. ಮಾಸ್ತಿ ಪ್ರಶಸ್ತಿ. ೨೦೦೭ ರ ಕರ್ನಾಟಕ ಸಾಹಿತ್ಯ ಸಮ್ಮೆಲನದ ಅದ್ಯಕ್ಶರಾಗಿದ್ದರು (ಉಡುಪಿ) ನಿಧನ ೨೦ಡಿಸೆಂಬರ್೨೦೧೯ರಂದು ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು ಉಲ್ಲೇಖಗಳು ಹೊರಸಂಪರ್ಕಕೊಂಡಿಗಳು :.. :.?103283 :...?22 :.. ಶೇಷಗಿರಿರಾವ ಶೇಷಗಿರಿ ರಾವ್ ೧೯೨೫ ಜನನ ೨೦೧೯ ನಿಧನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
ಡಿ.ಆರ್. ನಾಗರಾಜ್19541998 ಕನ್ನಡದ ಖ್ಯಾತ ವಿಮರ್ಶಕ ಮತ್ತು ಸಾಹಿತಿ. ಇವರ ಸಾಹಿತ್ಯ ಕಥನ ಎಂಬ ಕೃತಿಗೆ ೧೯೯೯ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.ಅಮೃತ ಮತ್ತು ಗರುಡ ಇವರ ಇನ್ನೊಂದು ಪ್ರಸಿದ್ಧ ಕೃತಿಯಾಗಿದೆ. ಜನನ, ಅಧ್ಯಯನ ದೊಡ್ಡಬಳ್ಳಾಪುರ ರಾಮಯ್ಯ ನಾಗರಾಜ್ ಹುಟ್ಟಿದ್ದು 2021954 ದೊಡ್ಡಬಳ್ಳಾಪುರದಲ್ಲಿ. ತಂದೆ ರಾಮಯ್ಯ, ತಾಯಿ ಅಕ್ಕಯ್ಯಮ್ಮ. ಡಿ.ಆರ್.ನಾಗರಾಜ ಪ್ರೌಢ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಬಂದರು. ಅಂದಿನ ಸರ್ಕಾರಿ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ವಿದ್ಯಾರ್ಥಿಯಾದ ಅವರು ಆನರ್ಸ್ ಪದವಿಯನ್ನು ಅಲ್ಲಿಯೇ ಪಡೆದರು. ಮುಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ ಪದವಿ ಪ್ರಾಪ್ತವಾಯಿತು. ಸ್ವಲ್ಪ ಕಾಲ ಸಂಶೋಧಕ ವೃತ್ತಿಯಲ್ಲಿದ್ದು ಅವರು ಅಲ್ಲಿಯೇ ಕನ್ನಡ ಅಧ್ಯಾಪಕರಾದರು ಪ್ರವಾಚಕರಾದರು, ಕೈಲಾಸಂ ಪೀಠದ ಸಂದರ್ಶಕ ಪ್ರಾಧ್ಯಾಪಕರೂ ಆದರು. ಆಸಕ್ತಿ ವಿಷಯ ವಿದಾರ್ಥಿ ಜೀವನದಿಂದಲೂ ಅಧ್ಯಯನಶೀಲರೂ ಚಿಂತನಪರರೂ ಆದ ನಾಗರಾಜ್ ನಿರಂತರ ಅಧ್ಯಯನಶೀಲತೆಯನ್ನು ಕೊನೆಯವರೆಗೂ ಉಳಿಸಿಕೊಂಡು ಬಂದವರು. ಮಾರ್ಕ್ಸ್ ವಾದದಿಂದ ಪ್ರಭಾವಿತರಾದರೂ ಲೋಹಿಯಾವಾದ ಅವರ ಹೃದಯವನ್ನು ಗೆದ್ದರೂ ಗಾಂಧೀವಾದದಿಂದ ವಿಮುಖರಾಗಲಿಲ್ಲ. ಆದ್ದರಿಂದಲೇ ಅವರು ತಮ್ಮನ್ನು ಎಡಪಂಥೀಯ ಗಾಂಧೀವಾದಿ ಎಂದು ಕರೆದುಕೊಳ್ಳುತ್ತಿದುದುಂಟು. ಅಧ್ಯಯನ ಅವಧಿಯಲ್ಲಿ ಚರ್ಚಾಸ್ಪರ್ಧೆಗಳಲ್ಲಿ ವಿಶೇಷವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದ ನಾಗರಾಜರಿಗೆ ಅವು ತಮ್ಮ ವ್ಯಾಪಕವಾದ ಅಧ್ಯಯನವನ್ನು ಒರೆಹಚ್ಚುವ ಸಾಣೆಗಲ್ಲಾದದ್ದು ಒಂದು ವಿಶಿಷ್ಟ ಅಂಶವಾಗಿದೆ. ಕನ್ನಡ ಸಂಸ್ಕೃತ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಅವರು ಪಡೆದಿದ್ದ ಪ್ರಭುತ್ವ ಅವರನ್ನು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಉತ್ತಮ ವಾಗ್ಮಿಯಾಗಿಸಿತ್ತು. ಹೀಗಾಗಿ ಅವರು ಎರಡೂ ಭಾಷೆಗಳಲ್ಲಿ ವಿಮರ್ಶಿಸುವ ಸಾಮರ್ಥ್ಯವನ್ನು ಪಡೆದಿದ್ದರು. ವಿದೇಶ ಪ್ರವಾಸ ಮತ್ತು ಕಾರ್ಯನಿರ್ವಹಣೆ ಡಿ.ಆರ್. ನಾಗರಾಜ್ ಅಮೆರಿಕೆಯ ಶಿಕಾಗೋ ವಿಶ್ವವಿದ್ಯಾಲಯದ ದಕ್ಷಿಣ ಭಾರತೀಯ ವಿಭಾಗದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಆಹ್ವಾನಿತರಾಗಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಅನುವಾದ ವಿಭಾಗದ ನಿರ್ದೇಶಕರಾಗಿಯೂ ಹಾಗೆಯೇ ದೆಹಲಿಯ ವಿಕಾಸಶೀಲ ಸಮಾಜಗಳ ಅಧ್ಯಯನ ಕೇಂದ್ರದ ಸೀನಿಯರ್ ಫೆಲೋ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಅವರು ಕಾರ್ಯನಿರ್ವಹಿಸಿದ ಇತರ ಕೇಂದ್ರಗಳೆಂದರೆ ಸಿಮ್ಲಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ನ ಫೆಲೋ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ತೌಲನಿಕ ಸಾಹಿತ್ಯ ಕೇಂದ್ರದ ಸಂಶೋಧಕ ಸಹಾಯಕರಾಗಿ ಇಂಗ್ಲೆಂಡ್, ಅಮೆರಿಕೆಯ ಶಿಕಾಗೋ, ಜರ್ಮನಿ, ಇಟಲಿ, ಬ್ರೆಜಿಲ್, ರಷ್ಯ, ಚೀನಾ ದೇಶಗಳ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಲ್ಲದೆ ಭಾರತದ ವಿವಿಧ ಕ್ಷೇತ್ರಗಳಲ್ಲಿ ನಡೆದ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ಪ್ರಬಂಧ ಮಂಡಿಸಿದ ವ್ಯಾಪಕವಾದ ಹಾಗೂ ಆಳವಾದ ವಿದ್ವತ್ತಿನ ವ್ಯಕ್ತಿಯಾಗಿದ್ದರು ಡಾ.ಡಿ.ಆರ್.ನಾಗರಾಜ್. ಸ್ವೋಪಜ್ಞತೆಯ ಹಾದಿ ಡಾ.ಡಿ.ಆರ್.ನಾಗರಾಜರದು ಪ್ರಧಾನವಾಗಿ ಸ್ವೋಪಜ್ಞತೆಯ ಹಾದಿ. ಅವರು ಪ್ರಧಾನವಾಗಿ ಆಯ್ದುಕೊಂಡ ಕ್ಷೇತ್ರ ವಿಮರ್ಶೆಯೇ ಆದರೂ ಅಲ್ಲಿಯೇ ಅವರು ತಮ್ಮ ಸೃಜನಾತ್ಮಕತೆಯನ್ನೂ ತೋರಿದ್ದಾರೆ. ಕತ್ತಲೆ ದಾರಿ ದೂರ ಎಂಬ ನಾಟಕವನ್ನು ಅವರು ಬರೆದಿದ್ದು, ರಂಗದ ಮೇಲೂ ಅದು ಯಶಸ್ವಿಯಾಗಿದೆ. ಅನುಭಾವಿಯಾದ ರೂಮಿ ಕವಿಯನ್ನು ಉಪಯುಕ್ತ ವಿಮರ್ಶೆಯೊಂದಿಗೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾವ್ಯವೆನ್ನುವುದು ಅಮೃತಕ್ಕೆ ಹಾರುವ ಗರುಡ ಎಂಬ ದ.ರಾ.ಬೇಂದ್ರೆಯವರ ಚಿಂತನೆಯಿಂದ ಅಮೃತ ಮತ್ತು ಗರುಡ ಗ್ರಂಥ ಮೂಡಿದೆ. ಕುವೆಂಪು, ಕಾರಂತ ಮಾಸ್ತಿ ಇತ್ಯಾದಿ ರಂಗಭೂಮಿ, ಕಾವ್ಯ, ಪ್ರಾಯೋಗಿಕ ವಿಮರ್ಶೆ ಎಂಬ ನಾಲ್ಕು ವಿಭಾಗಗಳಲ್ಲಿ ಇಲ್ಲಿಯ ಲೇಖನಗಳು ವಿಂಗಡಣೆಗೊಂಡಿದ್ದರೂ ಅವುಗಳಲ್ಲಿ ಒಂದು ಒಳಸೂತ್ರವನ್ನು ಗಮನಿಸಬಹುದು. ಅದು ಬದುಕು ಮತ್ತು ಕಲೆಗಳಿಗಿರುವ ಸಂಬಂಧ ಮತ್ತು ಅದರ ಸಂಕೀರ್ಣತೆ. ಕನ್ನಡದ ಪ್ರಧಾನ ಪ್ರತಿಭೆಗಳಾದ ಕುವೆಂಪು, ಕಾರಂತ, ಮಾಸ್ತಿಯವರ ಪ್ರತಿಭೆಗಳನ್ನು ಸಾಹಿತ್ಯ ಮತ್ತು ತತ್ವಜ್ಞಾನ, ವರ್ಣವರ್ಗಸಂಘರ್ಷ, ಪರಂಪರೆಗಳೊಂದಿಗೆ ವಿಶ್ಲೇಷಿಸುವ ಯತ್ನವಿಲ್ಲಿದೆ. ಕಾವ್ಯ ಭಾಗದಲ್ಲಿ ಜಿ.ಎಸ್. ಶಿವರುದ್ರಪ್ಪನವರ ಕಾವ್ಯವನ್ನು ವಿಮರ್ಶಿಸುತ್ತಾರೆ. ಶಕ್ತಿ ಶಾರದೆಯ ಮೇಳ ಇದು ಪಿ.ಎಚ್.ಡಿ ಗಾಗಿ ಸಿದ್ಧಪಡಿಸಿದ ಸಂಪ್ರಬಂಧವಾಗಿದೆ. ಭೂಮಿ ಮತ್ತು ಮನುಷ್ಯ, ಕಾಲ ಮತ್ತು ಮನುಷ್ಯ, ಕಾಮ ಮತ್ತು ಮನುಷ್ಯ, ಸಮಾಜ ಮತ್ತು ಮನುಷ್ಯ ಈ ನಾಲ್ಕು ಮುಖಗಳಲ್ಲಿ ಕನ್ನಡದ ಪ್ರಾತಿನಿಧಿಕರಾದ ಕೆಲವರು ನವೋದಯ ಹಾಗೂ ನವ್ಯ ಕವಿಗಳ ಕಾವ್ಯವನ್ನು ಕುರಿತು 1957ರಿಂದ 1981ರವರೆಗೆ ನಡೆಸಿದ ಅಧ್ಯಯನ ಇಲ್ಲಿದೆ. ಕನ್ನಡ ನವೋದಯದ ಪ್ರಧಾನ ಕವಿಗಳಾದ ಕುವೆಂಪು, ಬೇಂದ್ರೆ, ಪು.ತಿ.ನ, ವಿನಾಯಕ ಹಾಗೂ ನವ್ಯ ಕವಿಗಳಾದ ಗೋಪಾಲಕೃಷ್ಣ ಅಡಿಗ, ಕೆ.ಎಸ್.ನ, ಗಂಗಾಧರ ಚಿತ್ತಾಲರ ಕಾವ್ಯಗಳಂತೆಯೇ ರಾಮಚಂದ್ರ ಶರ್ಮ, ಚಂದ್ರಶೇಖರ ಕಂಬಾರ, ಎಚ್. ಎಂ. ಚನ್ನಯ್ಯ ಇವರ ಕಾವ್ಯಗಳ ವಿಶ್ಲೇಷಣೆಯೂ ಇದೆ. ಪ್ರಮುಖ ಕೃತಿಗಳು ಅವರ ಪ್ರಮುಖ ಕೃತಿಗಳೆಂದರೆ ಅಮೃತ ಮತ್ತು ಗರುಡ (1983) ಅಮೃತಕ್ಕೆ ಹಾರುವ ಗರುಡ ಎಂಬ ದ.ರಾ.ಬೇಂದ್ರೆಯವರ ಚಿಂತನೆಯಿಂದ ಶಕ್ತಿ ಶಾರದೆಯ ಮೇಳ (1987) ಇದು ಪಿ.ಎಚ್.ಡಿಗಾಗಿ ಸಿದ್ಧಪಡಿಸಿದ ಸಂಪ್ರಬಂಧವಾಗಿದೆ ನಾಗಾರ್ಜುನ (1993), ಸಾಹಿತ್ಯ ಕಥನ (1995), ಅಲ್ಲಮಪ್ರಭು ಮತ್ತು ಶೈವಪ್ರತಿಭೆ (1998) (ಇದು ಮರಣೋತ್ತರ ಪ್ರಕಟಣೆ). ಡಿ. ಆರ್. ನಾಗರಾಜ್ ಅವರ ಮರಣೋತ್ತರ ಪ್ರಕಟಣೆಯಾಗಿ 1998ರಲ್ಲಿ ಪ್ರಕಟವಾದ ಅಲ್ಲಮಪ್ರಭು ಮತ್ತು ಶೈವಪ್ರತಿಭೆ ಅಪರೂಪದ ಗ್ರಂಥವಾಗಿದೆ. ಒಂಭತ್ತು ಅಧ್ಯಾಯಗಳಲ್ಲಿ ವ್ಯಾಪಿಸಿರುವ ಚಿಂತನೆ ಪ್ರಧಾನವಾಗಿ ಎರಡು ಮುಖವಾಗಿವೆ. ಮೊದಲ ಅಧ್ಯಾಯ ಶೈವದರ್ಶನಗಳ ಚಾರಿತ್ರಿಕ ಸಮೀಕ್ಷೆಯನ್ನೊಳಗೊಂಡಿದೆ. ಎರಡನೆಯ ಅಧ್ಯಾಯದಲ್ಲಿ ಬರುವ ಅಲ್ಲಮ ಲೋಕಕ್ಕೆ ಮತ್ತೆ ಅಲ್ಲಿ ಚರ್ಚಿತವಾಗುವ ಶೈವ ಸಾಹಿತ್ಯ ಮೀಮಾಂಸೆಗಳಿಗೆ ವೇದಿಕೆಯಾಗುತ್ತದೆ. ಮೂರನೆಯ ಅಧ್ಯಾಯ ಅಲ್ಲಮನದೇ ಎನ್ನುವಂತ ಕಾವ್ಯ ಮೀಮಾಂಸೆಯ ಕುರಿತು ಚರ್ಚಿಸುತ್ತದೆ. ನಾಲ್ಕನೆಯ ಅಧ್ಯಾಯದಲ್ಲಿ ಅಲ್ಲಮನ ಕಾಯ ಸಿದ್ಧಾಂತವಿದೆ. ಐದನೆಯ ಅಧ್ಯಾಯ ಅಲ್ಲಮನ ಜೀವನದ ಕಥಾನಕಗಳನ್ನು ಕುರಿತು ನಿರೂಪಣೆ ಮಾಡಿದರೆ, ಆರನೆಯ ಅಧ್ಯಾಯ ಅಲ್ಲಮನ ವಚನಗಳ ಪ್ರಾಯೋಗಿಕ ವಿಮರ್ಶೆಯಲ್ಲಿ ಮಗ್ನವಾಗುತ್ತದೆ. ಏಳನೆಯ ಅಧ್ಯಾಯ ಅಲ್ಲಮನ ಪ್ರತಿಭೆಯ ವಿವಿಧ ಆಯಮಗಳನ್ನು ಆಧುನಿಕ ಪೂರ್ವಕನ್ನಡ ಸಾಹಿತ್ಯದ ಹಿನ್ನೆಲೆಯಲ್ಲಿ ಚರ್ಚಿಸುತ್ತದೆ. ಸಾಹಿತ್ಯ ಕಥನ ದ ನಾಲ್ಕು ಭಾಗಗಲ್ಲಿ ಮೂವತ್ತೇಳು ಪ್ರಬಂಧಗಳಿವೆ. ಸ್ಕೂಲ್ ಮಾಸ್ಟರ್, ಚಂದವಳ್ಳಿಯ ತೋಟ, ಬಾಬ್ಬಿ, ಗೌರಿ ಗಣೇಶ, ನಾಂದಿ ಮೊದಲಾದ ಚಲನಚಿತ್ರಗಳ ಮೂಲಕ ಏಕಮುಖೀ ಭಾವನಾತ್ಮಕ ರೂಪ, ಬಹುಮುಖೀ ಭಾವನಾತ್ಮಕ ರೂಪಗಳನ್ನು ವಿಶ್ಲೇಷಿಸಿ ರಹಸ್ಯವನ್ನು ಭೇದಿಸುವ ಯತ್ನ ಕುತೂಹಲಕಾರಿಯಾದುದು. ಈ ಕೃತಿಯಲ್ಲಿ ಸಾಹಿತ್ಯಿಕ ಹಾಗೂ ಸೈದ್ಧಾಂತಿಕ ಚರ್ಚೆ ಸಂವಾದಗಳಿವೆ. ಪ್ರವಾಸ ಕಥನವಿದೆ, ಕೆಲವು ಪ್ರಮುಖ ಕೃತಿಗಳ ಪ್ರಶಂಸೆಯಿದೆ. ಎಲ್ಲಕ್ಕೂ ಮಿಗಿಲಾಗಿ ವಿವಿಧ ಆಕೃತಿಗಳ ಮೂಲಕ ಸಂಸ್ಕೃತಿಯ ಶೋಧವಿದೆ. ನಾಗಾರ್ಜುನ ಲೇಖನವಂತೂ ಬೌದ್ಧ ದರ್ಶನದ ಆಳವಾದ ಅಧ್ಯಯನಕ್ಕೇ ಮೀಸಲಾದುದು. ಸಂಪಾದನೆ ಅಕ್ಷರ ಚಿಂತನ ಮಾಲೆಗಾಗಿ ಅವರು ಹದಿನಾಲ್ಕು ಪುಸ್ತಕಗಳನ್ನು ಉಪಯುಕ್ತವೂ, ಅಧ್ಯಯನಶೀಲವೂ ಆದ ಮುನ್ನುಡಿಗಳೊಂದಿಗೆ ಸಂಪಾದಿಸಿಕೊಟ್ಟು ಸಂಪಾದನೆಯೂ ಒಂದು ಸೃಜನಕ್ರಿಯೆಯೇ ಎಂಬುದನ್ನು ಸೂಚಿಸಿದ್ದಾರೆ. ಉರ್ದು ಸಾಹಿತ್ಯ 1991ನ್ನು ಅವರು ಸ್ವತಂತ್ರವಾಗಿ ಸಂಪಾದಿಸಿದ್ದಾರೆ. ಪ್ರೊ. ಕೆ.ಆರ್. ನಾಗರಾಜರೊಂದಿಗೆ ಆಚಾರ್ಯ ನರೇಂದ್ರ ದೇವರ ಲೇಖನಗಳ ಸಂಕಲನವನ್ನೂ ಸಮಾಜವಾದಿ ಆಚಾರ್ಯ ಎಂಬ ಹೆಸರಿನಲ್ಲಿ ಸಂಪಾದಿಸಿದ್ದಾರೆ. ಸಂಸ್ಕೃತಿ ಮತ್ತು ವಿಕಾಸವನ್ನು ಕುರಿತ ಪ್ರಬಂಧಗಳನ್ನು ಶೀರ್ಷಿಕೆಯಲ್ಲಿ ಸಂಪಾದಿಸಿದ್ದಾರೆ. ಎಂಬುದು ಇತರರೊಡನೆ ಸಂಗ್ರಹಿಸಿದ ಲೇಖನಗಳ ಸಂಕಲನ. ಇಂಗ್ಲಿಷ್ ಕೃತಿಗಳು (ಉರಿ ಚಮ್ಮಾಳಿಗೆ) 1993, , 1987, ಇವು ಅವರ ಇಂಗ್ಲಿಷ್ ಕೃತಿಗಳು. ಪಾಶಾತ್ಯ ಸಾಹಿತ್ಯ ಪಾಶಾತ್ಯ ಸಾಹಿತ್ಯ ಮಾರ್ಗದರ್ಶನ ಭಾಗ ಸಂಪುಟ ೧ ಪ್ರಕಟವಾದದ್ದು 1981ರಲ್ಲಿ. ಗ್ರೀಕ್ ಸಾಹಿತ್ಯಕ್ಕೆ ಸಂಬಂಧಪಟ್ಟ ಕವಿಕೃತಿ, ಸಾಹಿತ್ಯಿಕ ಹಿನ್ನೆಲೆ ಮತ್ತು ಕೃತಿ ವಿಮರ್ಶೆ ಮೊದಲಾದ ವಿವರಣೆಗಳನ್ನೊಳಗೊಂಡ ಕೃತಿಯಾಗಿದ್ದು ಇದರಲ್ಲಿ ಗ್ರೀಕ್ ಸಾಹಿತ್ಯದ ಒಂದು ಅರ್ಥಪೂರ್ಣ ನೋಟ ಪ್ರಾಪ್ತವಾಗಲೆನ್ನುವುದು ಲೇಖಕರ ಆಶಯವಾಗಿದೆ. ನಾಟಕ ಕತ್ತಲೆ ದಾರಿ ಬಹು ದೂರ. ವಿಮರ್ಶಾ ಕ್ಷೇತ್ರದಲ್ಲಿ ವಿಮರ್ಶಾ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದ ಡಿ. ಆರ್. ನಾಗರಾಜ ಉತ್ತಮ ವಾಗ್ಮಿ. ಇಂಗ್ಲಿಷಿನಲ್ಲಾಗಲಿ, ಕನ್ನಡದಲ್ಲಾಗಲಿ, ಅತ್ಯಂತ ಸಮರ್ಥವಾಗಿ ತಮ್ಮ ವಿಚಾರಗಳನ್ನು ಮಾತಿನ ಮೂಲಕವೂ ಕೃತಿಗಳ ಮೂಲಕವೂ ಅಭಿವ್ಯಕ್ತ ಗೊಳಿಸುವ ಸಾಮರ್ಥ್ಯವಿದ್ದವರು. ಹೀಗಾಗಿಯೇ ದೇಶ ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದರು. ಅಕ್ಷರ ಮಾಲಿಕೆಗಾಗಿ ಸಂಪಾದಿಸಿದ 14 ಕೃತಿಗಳಿಗೆ ಬರೆದ ಮುನ್ನುಡಿಗಳು ಡಾ.ನಾಗರಾಜರ ವಿದ್ವತ್ತು, ಅಧ್ಯಯನ ಶೀಲತೆ ಹಾಗೂ ಸ್ವೋಪಜ್ಞತೆಗಳಿಂದ ಕೂಡಿವೆ. ಪ್ರವಾಸ, ಮುನ್ನುಡಿ, ಅನುವಾದ, ಸಂವಾದ, ಚಲನಚಿತ್ರ, ವಿಶ್ಲೇಷಣೆ, ಉಪನ್ಯಾಸ ಯಾವುದೇ ಆಕೃತಿಯನ್ನೇ ನಾಗರಾಜ್ ಬಳಸಿಕೊಳ್ಳಲಿ ಅಲ್ಲಿ ನಡೆಸುವುದು ಅದಮ್ಯವಾದ ಜೀವ ಚೈತನ್ಯವಾದ ಬದುಕಿನ ಬೇರುಗಳ ಅನ್ವೇಷಣೆಯನ್ನು. ಡಿ. ಆರ್. ನಾಗರಾಜ್ ಪ್ರಧಾನವಾಗಿ ಸಾಂಸ್ಕೃತಿಕ ಶೋಧ ಮಾಡುವ ವಿಮರ್ಶಕರು. ಕಾವ್ಯ ವಿಮರ್ಶೆಯ ಕೆಲಸ ಅಂತಿಮವಾಗಿ ಲೋಕ ವಿಮರ್ಶೆಯೂ ಹೌದು. ಅಥವಾ ನನ್ನ ಮಟ್ಟಿಗೆ ಲೋಕ ವಿಮರ್ಶೆಯ ಒಂದು ರೂಪವೇ ಕಾವ್ಯ ವಿಮರ್ಶೆ ಎನ್ನುವ ಡಿ.ಆರ್. ನಾಗರಾಜರ ಮಾತು ಅವರ ವಿಮರ್ಶಾ ವಿಧಾನದ ಮ್ಯಾನಿಫೆಸ್ಟೋ ಎನ್ನಬಹುದು. ಪ್ರಶಸ್ತಿ,ಗೌರವ ಆರ್ಯಭಟ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ವರ್ಧಮಾನ ಪ್ರಶಸ್ತಿಗಳೇ ಅಲ್ಲದೆ ಮರಣೋತ್ತರವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡಾ ಇವರಿಗೆ ಲಭ್ಯವಾಯಿತು. ನಿಧನ ಅವರು ನಮ್ಮನ್ನಗಲಿದ್ದು 1281998 ಬೆಂಗಳೂರಿನಲ್ಲಿ. ಬದುಕಿದ್ದ 44 ವರ್ಷಗಳಲ್ಲಿ ಸಂಸ್ಕೃತಿ ಚಿಂತನೆಗೆ ಅವರು ನೀಡಿದ ಕೊಡುಗೆ ಮಹತ್ವದ್ದು. ಆಧಾರ ಡಾ. ಜಿ. ಎಸ್. ಸಿದ್ಧಲಿಂಗಯ್ಯನವರು ಬರೆದ ಡಾ. ಡಿ. ಆರ್. ನಾಗರಾಜರ ಕುರಿತಾದ ಲೇಖನ ಉಲ್ಲೇಖಗಳು ಬಾಹ್ಯಸಂಪರ್ಕಗಳು : .. ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
ಬಿ.ಸಿ. ರಾಮಚಂದ್ರ ಶರ್ಮ (ನವೆಂಬರ್ ೨೮, ೧೯೨೫ ಏಪ್ರಿಲ್ ೧೮. [[೨೦೦೫}} ಆಧುನಿಕ ಕನ್ನಡ ಕಾವ್ಯಚರಿತ್ರೆಯಲ್ಲಿ ಪ್ರಮುಖ ಹೆಸರಾದವರು ಗೋಪಾಲಕೃಷ್ಣ ಅಡಿಗರು ಹೊಸ ಬಗೆಯಲ್ಲಿ ಬರೆಯಲು ಆರಂಭಿಸಿದ ಸರಿಸುಮಾರಿನಲ್ಲೇ ಅವರ ಸಮಕಾಲೀನರಾಗಿ ಬರೆಯಲು ತೊಡಗಿದ ಶರ್ಮರು ಅಡಿಗರಿಗಿಂತ ಭಿನ್ನವಾಗಿ ನವ್ಯಕಾವ್ಯ ಮಾರ್ಗವನ್ನು ರೂಪಿಸಲು ಪ್ರಯತ್ನಿಸಿದ ಕವಿ. ಸುಮಾರು ಆರು ದಶಕಗಳ ಕಾಲ ಕಾವ್ಯ ರಚನೆಯಲ್ಲಿ ತಮ್ಮನ್ನು ಇಡಿಯಾಗಿ ತೊಡಗಿಸಿಕೊಂಡ ಶರ್ಮರದು ಕಾವ್ಯದ ಬಗೆಗೆ ಶಬರಿಶ್ರದ್ಧೆಯ ಅತೀವ ನಿಷ್ಠೆ ಅನೇಕ ಆಕರ್ಷಣೆ, ಆಮಿಷಗಳ ನಡುವೆಯೂ ಅವರು ಕಾವ್ಯದ ಶುದ್ಧರೂಪಕ್ಕೆ ಒಲಿದಂಥವರು. ಮುಖಾಮುಖಿ ಕೂತರೂ ನೇರ ಹಾಯದ ದೃಷ್ಟಿಗಳ ಪದಕದ ತಳಕ್ಕೆ ನಾಚಿ ಕಪ್ಪು ಪುಕ್ಕಲೆದೆ ಹೊರಕ್ಕೆಳೆದು ತರುವಾತರ, ನಿಲ್ಲದೇ ನಡೆದ ಯುದ್ಧ ರಾಜಿಗೆ ನಿಲ್ಲದೇ ನಡೆದ ಮಾತುಕತೆ, ಪ್ರತಿರಾತ್ರಿ ಕನಸಿಗೆ ಬಂದು ಚಂದದಾಸೆ, ಮೋಹಿನಿಯಾಗಿ, ಗೆಲ್ಲದೇ ಹೋದ ಕೇಸಾಗಿ, ಮಾತಿಗೆಟುಕದೆ ನಿಂತೊಂದು ಕಲ್ಪನೆಯಾಗಿ, ಕಾಡುವಾಗಲೂ ಅನುಮಾನ ಸಮರಸದ ಸ್ಥಿತಿ ಮರಣ ಸಮರಸವೇ ಜೀವನ. ಈ ಸಮರ, ಈ ಮುಖಾಮುಖಿ ಶರ್ಮರ ಕಾವ್ಯಶಕ್ತಿ. ಜೀವನ ಬಿ.ಸಿ.ರಾಮಚಂದ್ರ ಶರ್ಮ ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ. ಇವರು ೧೯೨೫ ನವಂಬರ೨೮ರಂದು ಜನಿಸಿದರು. ಅವರ ಹುಟ್ಟೂರು ಮಂಡ್ಯಜಿಲ್ಲೆ ನಾಗಮಂಗಲದ ಬಳಿಯ ಬೋಗಾದಿ. ತಂದೆ ಬೋಗಾದಿ ಚಂದ್ರಶೇಖರಶರ್ಮ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ಶರ್ಮ ಕಡುಬಡತನದಲ್ಲಿ ಬಾಲ್ಯ ಕಳೆದರು. ಬಡತನ ತಾಳಲಾರದೆ ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ತೀವ್ರವಾಗಿ ಯೋಚಿಸಿದ್ದನ್ನು ಶರ್ಮ ನಂತರದ ದಿನಗಳಲ್ಲಿ ಒಮ್ಮೆ ಹೇಳಿಕೊಂಡಿದ್ದರು. ಆದರೆ ಶರ್ಮರದು ಹೋರಾಟದ ಮನಸ್ಸು ಯಾವುದನ್ನೂ ಸುಲಭವಾಗಿ ಸ್ವೀಕರಿಸದ, ತಾನು ನಂಬಿದ್ದನ್ನು ಸಾಧಿಸಿ ತೋರಿಸುವ ಛಲದ ಹಾದಿ ಅವರದು. ಚಿಕ್ಕಂದಿನಲ್ಲಿ ರಾಮಚಂದ್ರಶರ್ಮರಿಗೆ ಆಸರೆಯಾಗಿ ನಿಂತವರಲ್ಲಿ ಎಂ.ವಿ ಸೇತುರಾಮಯ್ಯನವರು ಒಬ್ಬರು. ಎಂ.ವಿ.ಸೇ ಅವರ ಒಡನಾಟದಿಂದಾಗಿ ಶರ್ಮರಿಗೆ ತಾರುಣ್ಯದಲ್ಲೇ ಕನ್ನಡದ ಪ್ರತಿಭಾವಂತ ಮನಸ್ಸುಗಳ ಸಹವಾಸ ಸಿಕ್ಕಿತು. ಬಿ.ಎಂ.ಶ್ರೀ ಆ ಕಾಲಕ್ಕೆ ಮಾಡುತ್ತಿದ್ದ ಪರಿಣಾಮಕಾರೀ ಭಾಷಣ, ಪರಿಷತ್ತಿನಲ್ಲಿ ನಿಘಂಟು ಕಛೇರಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾಗ ಒದಗಿ ಬಂದ ವಿ.ಸೀ, ಎಂ.ಆರ್.ಶ್ರೀ, ಕ.ವೆಂ. ರಾಘವಾಚಾರ್, ಎಲ್. ಗುಂಡಪ್ಪ ಮೊದಲಾದವರ ಸಂಪರ್ಕ ಶರ್ಮರಲ್ಲಿ ಸಾಹಿತ್ಯ ಪ್ರೀತಿ ಮೂಡಲು ಪ್ರೇರಣೆ ಒದಗಿಸಿದಂಥ ಸಂಗತಿಗಳು. ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ, ಬಿ.ಎಡ್ ಪದವಿಗಳನ್ನು ಪಡೆದ ಶರ್ಮರು ಕೆಲಕಾಲ ಬೆಂಗಳೂರಿನ ಹೈಸ್ಕೂಲೊಂದರಲ್ಲಿ ಅಧ್ಯಾಪಕರಾಗಿದ್ದರು. ನಂತರ ಶರ್ಮರ ವಿದೇಶ ಯಾತ್ರೆ ಆರಂಭವಾಯಿತು. ಕೆಲಕಾಲ ಇಥಿಯೋಪಿಯಾದಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದು ನಂತರ ಇಂಗ್ಲೆಂಡಿಗೆ ಬಂದರು. ಅಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದುಕೊಂಡೇ ಮನಃಶಾಸ್ತ್ರ ಅಧ್ಯಯನ ಮಾಡಿದರು. ವಲಸೆ ಹೋದ ಭಾರತದ ಮಕ್ಕಳ ಬುದ್ಧಿಶಕ್ತಿಯ ಬಗ್ಗೆ ಅಧ್ಯಯನ ನಡೆಸಿ ಬರೆದ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದರು. ಅಧ್ಯಾಪಕರಾಗಿದ್ದ ಶರ್ಮ ಮುಂದೆ ಮನಃಶಾಸ್ತ್ರದ ಸಲಹೆಗಾರರಾಗಿ ನೇಮಕರಾದರು. ಇಂಗ್ಲೆಂಡ್, ಜಾಂಬಿಯಾ ಹಾಗೂ ಯುನೆಸ್ಕೋ ಪರವಾಗಿ ಮಲಾವಿಗಳಲ್ಲಿ ಮನಃಶಾಸ್ತ್ರಜ್ಞರಾಗಿ ಕೆಲಸಮಾಡಿ ೧೯೮೨ರಲ್ಲಿ ತಾಯ್ನಾಡಿಗೆ ಹಿಂದಿರುಗಿದರು. ಸಾಹಿತ್ಯಲೋಕದಲ್ಲಿ ಶರ್ಮರು ತಮ್ಮ ಮೊದಲ ಕವನ ಸಂಕಲನ ಹೃದಯಗೀತೆ ಪ್ರಕಟಿಸಿದ್ದು ೧೯೫೨ರಲ್ಲಿ, ಅವರ ಇಪ್ಪತ್ತೇಳನೇ ವಯಸ್ಸಿನಲ್ಲಿ. ಶರ್ಮರು ತಾವು ಮೊದಲು ಕವಿತೆ ಬರೆದ ಸನ್ನಿವೇಶವನ್ನು ಹೀಗೆ ನೆನಪಿಸಿಕೊಳ್ಳುತ್ತಿದ್ದರು: ೧೯೪೬ರ ವೇಳೆಗೆ ಬೇಂದ್ರೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಬಂದಿದ್ದ ಸಂದರ್ಭ. ಉಪನ್ಯಾಸದ ನಡುವೆ ಅವರು ಅಲ್ಲಿದ್ದ ತರುಣರಿಗೆ ಆಶುಕವಿತೆಯೊಂದನ್ನು ಬರೆಯಲು ಸೂಚಿಸಿ ಹೂವಿನ ಬಗ್ಗೆ ಬರೆಯಿರಿ ಎಂದರು. ಸಭಿಕರಲ್ಲಿ ಶರ್ಮರೂ ಒಬ್ಬರು. ಕೆ. ನರಸಿಂಹಮೂರ್ತಿಯವರೂ ಜತೆಗಿದ್ದರಂತೆ. ಶರ್ಮ ರೋಜಸರೋಜ ಎಂಬ ಕವಿತೆ ಬರೆದರು. ಆ ಕವಿತೆಗೆ ಬಹುಮಾನ ಸಿಕ್ಕಿತು. ಬೇಂದ್ರೆಯವರ ಬಳಿ ಪುಟ್ಟ ಹೊಸ ಡೈರಿಯಿತ್ತು. ಅದನ್ನವರು ಈ ತರುಣ ಕವಿಗೆ ಕೊಡುಗೆಯಾಗಿ ನೀಡುತ್ತಾ ಭವಿಷ್ಯದ ಕವಿಗೆ ಆಶೀರ್ವಾದ ಪೂರಕ ಎಂದು ಬರೆದು ಕೊಟ್ಟಿದ್ದರಂತೆ. ಅಂದು ಶರ್ಮರಿಗೆ ತಾನು ಕವಿ ಅನ್ನಿಸಿತಂತೆ. ಶರ್ಮರು ಪ್ರೀತಿಸಿ ಮದುವೆಯಾದ ಅವರ ಪತ್ನಿ ಪದ್ಮ ಅವರು ಸಹಾ ಲೇಖಕಿಯಾಗಿದ್ದರು. ಶರ್ಮರಿಗೆ ಉತ್ತಮ ಸಂಗಾತಿ. ಪದ್ಮಶರ್ಮ ಜತೆಗೂಡಿ ಪೆಂಗ್ವಿನ್ ಪ್ರಕಾಶನಕ್ಕಾಗಿ ಮಾಸ್ತಿಯವರ ಚಿಕ್ಕವೀರರಾಜೇಂದ್ರ ಕಾದಂಬರಿಯನ್ನು, ಯಶವಂತ ಚಿತ್ತಾಲರ ಕತೆಗಳನ್ನು ಮತ್ತು ಕುವೆಂಪು ಅವರ ಕಾನೂರು ಹೆಗ್ಗಡತಿ ಕೃತಿಗಳನ್ನು ಇಂಗ್ಲೀಷಿಗೆ ಭಾಷಾಂತರಿಸಿದರು. ಈ ಮೂಲಕ ಕನ್ನಡದ ಮಹತ್ವದ ಲೇಖಕರನ್ನು ಹೊರಜಗತ್ತಿಗೆ ಪರಿಚಯ ಮಾಡಿಕೊಟ್ಟರು. ರಾಮಚಂದ್ರಶರ್ಮ ಅವರ ಪ್ರಮುಖ ಕವನ ಸಂಕಲನಗಳೆಂದರೆ ಹೃದಯಗೀತ, ಏಳುಸುತ್ತಿನ ಕೋಟೆ, ಬುವಿ ನೀಡಿದ ಸ್ಫೂರ್ತಿ, ಹೇಸರಗತ್ತೆ, ಬ್ರಾಹ್ಮಣ ಹುಡುಗ, ಮಾತುಮಾಟ, ದೆಹಲಿಗೆ ಬಂದ ಹೊಸ ವರ್ಷ, ಸಪ್ತಪದಿ. ಇಂಗ್ಲೀಷಿನಲ್ಲಿ ಎಂಬ ಕವನ ಸಂಕಲನ ಪ್ರಕಟವಾಗಿದೆ. ಕನ್ನಡ ಕಾವ್ಯಕ್ಷೇತ್ರಕ್ಕೆ ಶರ್ಮರ ಮತ್ತೊಂದು ಮಹತ್ವದ ಕೊಡುಗೆಯೆಂದರೆ ಈ ಶತಮಾನದ ನೂರು ಇಂಗ್ಲಿಷ್ ಕವನಗಳು (೧೯೮೨). ಮೂವತ್ತೊಂಬತ್ತು ಕವಿಗಳ ನೂರು ಕವನಗಳನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಅನುಸೃಷ್ಟಿ ಮಾಡಿಕೊಡುವುದರ ಮೂಲಕ ಶರ್ಮರು ಕನ್ನಡ ಮನಸ್ಸಿಗೆ ಹೊಸ ಸಂವೇದನೆಯ ಪರಿಚಯ ಮಾಡಿಕೊಟ್ಟಿದ್ದಾರೆ. ಕನ್ನಡ ಕಥಾ ಸಾಹಿತ್ಯದಲ್ಲಿ ನವ್ಯಸಂವೇದನೆ ತಂದ ಮೊದಲಿಗರಲ್ಲಿ ಶರ್ಮರು ಒಬ್ಬರು. ಶರ್ಮರು ಮಂದಾರ ಕುಸುಮ, ಏಳನೆಯ ಜೀವ, ಬೆಳಗಾಯಿತು ಮತ್ತು ಕತೆಗಾರನ ಕತೆ ಎಂಬ ನಾಲ್ಕು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ. ಶರ್ಮ ಅವರು ನಾಟಕಗಳನ್ನೂ ಬರೆದಿದ್ದಾರೆ. ಅವರ ಸೆರಗಿನ ಕೆಂಡ ರೇಡಿಯೋ ನಾಟಕ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿತು. ನೆರಳು ಕೃತಿಗೆ ರಾಜ್ಯ ಸರ್ಕಾರದ ಪ್ರಶಸ್ತಿ ಪ್ರಾಪ್ತವಾಯಿತು. ಈ ಎರಡು ನಾಟಕಗಳಲ್ಲದೆ ಬಾಳಸಂಜೆ, ನೀಲಿಕಾಗದ ಹಾಗೂ ವೈತರಣಿ ಎಂಬ ನಾಟಕಗಳನ್ನು ಶರ್ಮ ಬರೆದಿದ್ದಾರೆ. ಮಕ್ಕಳ ಬುದ್ಧಿಶಕ್ತಿ ಮತ್ತು ಪರಿಸರ, ಕಾರಂಜಿ, ಪ್ರತಿಭಾ ಸಂದರ್ಶನ ಅವರ ಇನ್ನಿತರ ಪ್ರಕಟಿತ ಕೃತಿಗಳು. ಪೆಂಗ್ವಿನ್ ಪ್ರಕಾಶನಕ್ಕಾಗಿ ಎಂಬ ಆಧುನಿಕ ಸಣ್ಣಕತೆಗಳ ಸಂಕಲನವನ್ನೂ, ದೆಹಲಿಯ ಕಥಾ ಸಂಸ್ಥೆಗಾಗಿ ಮಾಸ್ತಿ ಕೃತಿಯನ್ನೂ ಶರ್ಮ ಸಂಪಾದಿಸಿಕೊಟ್ಟಿದ್ದಾರೆ. : ಅವರ ಮತ್ತೊಂದು ಸಂಪಾದಿತ ಕೃತಿ. ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಅನೇಕ ವಿಚಾರ ಸಂಕೀರ್ಣಗಳಲ್ಲಿ ಭಾಗವಹಿಸಿರುವ ಶರ್ಮರು ಅತ್ಯುತ್ತಮ ವಾಗ್ಮಿಗಳಾಗಿದ್ದರು. ಅವರು ಕವಿತೆ ಓದುತಿದ್ದುದನ್ನು ಕೇಳುವುದೇ ಒಂದು ಅನುಭವ ಎಂಬತ್ತಿರುತ್ತಿತ್ತು. ಲವಲವಿಕೆಯಿಂದ ಸಾಹಿತ್ಯಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಶರ್ಮರು ಸಾಹಿತ್ಯ ಪರಿಸರ ಜಡವಾಗದಂತೆ, ಜೀವಂತವಾಗಿ ಚಲನಶೀಲವಾಗಿರಬೇಕೆಂಬ ತೀವ್ರ ಕಾಳಜಿಯುಳ್ಳವರಾಗಿದ್ದರು. ಗಾಢ ಕಾವ್ಯಶ್ರದ್ಧೆ ಹೊಂದಿದ್ದ ಶರ್ಮರು ಅನ್ಯದೇಶೀಯ ಅನುಭವಗಳನ್ನು ಕನ್ನಡದಲ್ಲಿ ಸಫಲ ಕಲೆಯಾಗಿಸಲು ಪ್ರಯತ್ನಿಸಿದ ವಿಶಿಷ್ಟ ಕವಿ. ಅವರ ಹಲವೊಂದು ಕವನಗಳ ಸಾಲು ಹೀಗಿವೆ: ಅವ್ಯಕ್ತದಲಿ ವ್ಯಕ್ತಿತ್ವ ಲಯವಾದರೇ ಬದುಕು ಸಾರ್ಥಕವೇನು? ಅನ್ವೇಷಕನ ಕೊನೆ ಬಟ್ಟಬಯಲೇ?.... ಗೊತ್ತು. ಬೇಡ ಕಾದಿದೆ ಬಲೆಯೊಳಗೆ, ಗೊತ್ತು. ಆದರೂ ನೂಲ ಜಗ್ಗಬೇಕು (ಪಾಂಡು ಮಾದ್ರಿ) ಅವಳೇ ಬೇರೆ, ನೀನೆ ಬೇರೆ, ತಾಯಿ ಬೇರು ನಿಮಗೆ ಊಡಿದಂತಸ್ಸಾರ ಒಂದಾದರೂ, ಬಿಟ್ಟನೆಂದರೆ ಬಿಡದೆ ಕನಸು ಬೆಂಬತ್ತಿರಲು ಬಟ್ಟೆಕಳಚಿ ಮನೆ ಬಿಟ್ಟು ಅಡವಿ ಹೊಕ್ಕವಳು ಅವಳು ಒಡಲ ಅಷ್ಟು ಅಷ್ಟೂ ಕಳವಳ ಹೊತ್ತು, ನನ್ನ ಈ ಗುಡಿಸಿಲಿನಲ್ಲಿ ಅನುಮಾನವುಟ್ಟು ಇವೊತ್ತಿಗೂ ಉಳಿದವಳು ನೀನು (ಅಕ್ಕತಂಗಿ) ಮಂಚದ ಬುಡದ ಕನ್ನಡಿಯ ನೆನಪಿಗೇ ನಡುಗಿ ಕಣ್ಣ ಮುಚ್ಚಿ ಮಲಗಿದ ಹೆಣ್ಣು ವಂದಿಸಿದ ಸ್ವಿಚ್ಚೊತ್ತಿ ಅವಳ ಮುಂಗೈಗಾಗಿ ತಡಕಿದ (ಅವಳ ಹುಟ್ಟುಹಬ್ಬದ ರಾತ್ರಿ ಅವನು) ದಿಕ್ಕು ತಪ್ಪಿಸುವಂಥ ಕರಿ ನೀರ ಕತ್ತಲು ಮೊಂಬತ್ತಿ ಹಿಡಿದು ಬಂದೆ, ನನ್ನೆದುರು ನಿಂತೆ ಒಡೆದ ಹಡಗಿಗೆ ನೀನೆ ದಡದ ದೀಪದ ಮನೆ ನಿನಗೇನು ತಾನೇ ಕೊಡಲಿ ಹೇಳಿಬಿಡು ಹೆಣ್ಣೆ (ನೀನೆ ದೀಪದ ಮನೆ) ಕೃತಿಗಳು ಕವನ ಸಂಕಲನಗಳು ಏಳು ಸುತ್ತಿನ ಕೋಟೆ ಹೇಸರಗತ್ತೆ ಬ್ರಾಹ್ಮಣ ಹುಡುಗ ಸಪ್ತಪದಿ ಹೃದಯಗೀತ ಮಾತು ಮಾಟ ನಾಟಕಗಳು ಬಾಳಸಂಜೆ ಮತ್ತು ನೀಲಿ ಕಾಗದ ನೆರಳು ವೈತರಣಿ ಸೆರಗಿನ ಕೆಂಡ (ರೇಡಿಯೊ ನಾಟಕ) ಕಥಾ ಸಂಕಲನ ಮಂದಾರ ಕುಸುಮ ಏಳನೆಯ ಜೀವ ಕತೆಗಾರನ ಕತೆ ಅನುವಾದ ಈ ಶತಮಾನದ ನೂರು ಇಂಗ್ಲಿಷ್ ಕವನಗಳು ಮನಃಶಾಸ್ತ್ರ ಮಕ್ಕಳ ಬುದ್ಧಿಶಕ್ತಿ ಮತ್ತು ಪರಿಸರ ಇತರ ಪ್ರತಿಭಾ ಸಂದರ್ಶನ ಪ್ರಶಸ್ತಿ, ಪುರಸ್ಕಾರಗಳು ಇವರ ಸಪ್ತಪದಿ ಎಂಬ ಕೃತಿಗೆ ೧೯೯೮ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ನೆರಳು ನಾಟಕಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ. ಸೆರಗಿನ ಕೆಂಡ ರೇಡಿಯೊ ನಾಟಕಕ್ಕೆ ಅಖಿಲ ಭಾರತ ಬಹುಮಾನ ಬಂದಿದೆ. ಇದಲ್ಲದೆ ಹಿಂದುಸ್ತಾನ್ ಟೈಮ್ಸ್ ಪ್ರಶಸ್ತಿ ಹಾಗು ಪ್ರಜಾವಾಣಿ ಪ್ರಶಸ್ತಿ, ಅನುವಾದಕ್ಕೆ ಕಥಾಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಗೋರೂರು ಪ್ರತಿಷ್ಠಾನ ಪ್ರಶಸ್ತಿ, ಕೈಲಾಸಂ ಪ್ರಶಸ್ತಿ ಹೀಗೆ ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ವಿದಾಯ ಶರ್ಮರು ೧೮ ಏಪ್ರಿಲ್ ೨೦೦೫ರಂದು ಈ ಲೋಕವನ್ನಗಲಿದರು. ಶರ್ಮ ಕಾವ್ಯ, ಕತೆ, ನಾಟಕ, ಚಿಂತನೆ ಹೀಗೆ ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಕೆಲಸ ಮಾಡಿದ್ದರೂ ಅವರ ಕಾವ್ಯಶ್ರದ್ಧೆ ಅನನ್ಯ. ಕನ್ನಡ ಭಾಷೆಗೆ ಜೀರ್ಣಾಗ್ನಿ ಶಕ್ತಿಯನ್ನು ತಂದುಕೊಟ್ಟ ವಿಶಿಷ್ಟ ಪ್ರತಿಭೆಗಳಲ್ಲಿ ಒಬ್ಬರು. ಆಕರಗಳು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಣೆಯಾದ ಸಾಲು ದೀಪಗಳು ಕೃತಿಯಲ್ಲಿ ಡಾ. ನರಹರಿ ಬಾಲಸುಬ್ರಮಣ್ಯ ಅವರ ಬರಹ ನಾನೇಕೆ ಬರೆಯುತ್ತೇನೆ: ಬಿ. ಸಿ. ರಾಮಚಂದ್ರ ಶರ್ಮ ವಾಲ್ಮೀಕಿಯ ನೆವದಲ್ಲಿ ಬಿ. ಸಿ. ರಾಮಚಂದ್ರ ಶರ್ಮ ಬಿ. ಸಿ. ರಾಮಚಂದ್ರ ಶರ್ಮರಿಗೆ ಕೈಲಾಸಂ ಪ್ರಶಸ್ತಿ ಬಿ. ಸಿ. ರಾಮಚಂದ್ರ ಶರ್ಮರು ನಿಧನ ಬಿ.ಸಿ.ರಾಮಚಂದ್ರಶರ್ಮ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಕನ್ನಡ ಸಾಹಿತ್ಯ
ಕೀರ್ತಿನಾಥ ಕುರ್ತಕೋಟಿ ಇವರು ಕವಿ, ನಾಟಕಕಾರ, ವಿಮರ್ಶಕ, ಅನುವಾದಕ, ಅಂಕಣಕಾರ. ಪ್ರಜಾವಾಣಿಯಲ್ಲಿ ವಾರವಾರವೂ ಪ್ರಕಟವಾಗುತ್ತಿದ್ದ ಉರಿಯ ನಾಲಗೆ ಎಂಬ ಅಂಕಣ ಬಹಳ ಜನಪ್ರಿಯವಾಗಿತ್ತು. ೧೯೫೯ರಲ್ಲಿ ಮನೋಹರ ಗ್ರಂಥಮಾಲೆ ಹೊರತಂದ ತನ್ನ ರಜತ ವರ್ಷದ ಹೊತ್ತಿಗೆ ನಡೆದು ಬಂದ ದಾರಿ ಯಲ್ಲಿ ಇವರು ಬರೆದ ಸಾಹಿತ್ಯವಿಮರ್ಶೆ ಕನ್ನಡ ವಿಮರ್ಶಾಲೋಕದಲ್ಲಿ ಒಂದು ಹೊಸ ಆಯಾಮವನ್ನು ಸೃಷ್ಟಿಸಿತು. ಆಬಳಿಕ ಹೊರತಂದ ವಿಮರ್ಶಾ ನಿಯತಕಾಲಿಕ ಮನ್ವಂತರಕ್ಕೆ ಇವರು ಸಂಪಾದಕರಾಗಿದ್ದರು. ಆದರೆ ಆ ಪತ್ರಿಕೆ ಬಹಳ ಕಾಲ ಬಾಳಲಿಲ್ಲ. ಪರಿಚಯ ಕೀರ್ತಿನಾಥ ಕುರ್ತಕೋಟಿ ಇವರು ೧೯೨೮ ಅಕ್ಟೋಬರ 13ರಂದು ಗದಗಿನಲ್ಲಿ ಜನಿಸಿದರು. ಇವರ ತಾಯಿ ಪದ್ಮಾವತಿಬಾಯಿ ತಂದೆ ಡಿ.ಕೆ. ಕುರ್ತಕೋಟಿ. ಕೆಲಕಾಲ ಗದಗಿನ ಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಕುರ್ತಕೋಟಿಯವರು, ಸ್ನಾತಕೋತ್ತರ ಪದವಿಯನ್ನು ಪಡೆದು, ಗುಜರಾತಿಗೆ ತೆರಳಿ ಅಲ್ಲಿ ಕಾಲೇಜು ಉಪನ್ಯಾಸಕರಾಗಿ ವೃತ್ತಿಯನ್ನು ಕೈಗೊಂಡರು. ಅಲ್ಲಿ ನಿವೃತ್ತಿಯನ್ನು ಪಡೆದ ನಂತರವೇ ಧಾರವಾಡಕ್ಕೆ ಮರಳಿದರು. ಕುರ್ತಕೋಟಿಯವರು ಜಿ.ಬಿ.ಜೋಶಿಯವರ ಮನೋಹರ ಗ್ರಂಥಮಾಲೆಗೆ ಮೊದಲಿನಿಂದಲೂ ಸಾಹಿತ್ಯ ಸಲಹಾಕಾರರು. ಕೃತಿಗಳು ಕವನ ಸಂಕಲನ ಗಾನಕೇಳಿ ( ಮೂವರು ಮಿತ್ರರ ಸಂಕಲನ) ನಾವು ಬರಿಗೈಯವರು (ನಿಧನದ ನಂತರ ಪ್ರಕಟಿತ) ನಾಟಕ ಆ ಮನಿ ಸ್ವಪ್ನದರ್ಶಿ ಮತ್ತು ಇತರ ಗೀತ ನಾಟಕಗಳು ಸ್ವಪ್ನ ವಾಸವದತ್ತೆ (ಭಾಸನ ಸಂಸ್ಕೃತ ನಾಟಕದ ಅನುವಾದ) ಚಂದ್ರಗುಪ್ತ ವಿಮರ್ಶೆ ನವ್ಯಕಾವ್ಯ ಪ್ರಯೋಗ ಯುಗಧರ್ಮ ಹಾಗು ಸಾಹಿತ್ಯದರ್ಶನ ಯಶೋಧರ ಚರಿತ್ರೆಯ ಕಾವ್ಯತಂತ್ರ ಉರಿಯ ನಾಲಿಗೆ ವಿಮರ್ಶೆಯ ವಿನಯ:ನಾಟಕ ವಿಮರ್ಶೆಯ ವಿನಯ:ಕಾದಂಬರಿ ಸಂಸ್ಕೃತಿ ಸ್ಪಂದನ ರಾಜಸ್ಪರ್ಶ ಬಾರೊ ಸಾಧನಕೇರಿಗೆ ನೂರು ಮರ ನೂರು ಸ್ವರ ಶ್ರಾವಣ ಪ್ರತಿಭೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇತ್ತೀಚೆಗೆ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರ ಸಂಪಾದಕತ್ವದಲ್ಲಿ ಕುರ್ತಕೋಟಿ ಅವರ ವಿಮರ್ಶಾಬರಹಗಳು ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗಿವೆ. ಅನುವಾದ ಜೀವಫಲ (ಇಂಗ್ಲಿಷಿಗೆ, ಕನ್ನಡ ಮೂಲ: ಜಿ.ಬಿ.ಜೋಶಿ) ಮರಾಠಿ ಸಂಸ್ಕೃತಿಕೆಲವು ಸಮಸ್ಯೆಗಳು ಅಂಕಣ ಬರಹ ಸಂಕಲನ ಪಂಡಿತರ ತಪ್ಪು ಪುರಸ್ಕಾರ ಕೀರ್ತಿನಾಥ ಕುರ್ತಕೋಟಿಯವರಿಗೆ ೧೯೯೫ರಲ್ಲಿ ಉರಿಯ ನಾಲಗೆ ವಿಮರ್ಶಾ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿತು. ನಿಧನ ಕೀರ್ತಿನಾಥ ಕುರ್ತಕೋಟಿಯವರು ೨೦೦೩ರಲ್ಲಿ ನಿಧನರಾದರು. ಅವರ ನಿಧನಾನಂತರ ಧಾರವಾಡದಲ್ಲಿ ಕುರ್ತಕೋಟಿ ಮೆಮೊರಿಯಲ್ ಟ್ರಸ್ಟ್ ಸ್ಥಾಪಿತವಾಗಿದೆ. ಉಲ್ಲೇಖಗಳು ಕನ್ನಡ ಸಾಹಿತ್ಯ ಕೀರ್ತಿನಾಥ ಕುರ್ತಕೋಟಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
ಸು.ರಂ. ಎಕ್ಕುಂಡಿ ಕನ್ನಡದ ಅತ್ಯಂತ ಶ್ರೇಷ್ಠ ಕಥನ ಕವನಗಳ ಕವಿ ಮತ್ತು ಸಾಹಿತಿ.ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ. ಇವರು ಹುಟ್ಟಿದ್ದು ೧೯೨೩ ಜನವರಿ ೨೦ರಂದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ. ೧೯೪೪ರಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದ ಎಕ್ಕುಂಡಿಯವರು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದಲ್ಲಿ ಪ್ರೌಢಶಾಲೆಯ ಅಧ್ಯಾಪಕರಾದರು. ೩೫ ವರ್ಷಗಳ ಸೇವೆಯ ನಂತರ ಅಲ್ಲಿಯೆ ಮುಖ್ಯಾಧ್ಯಾಪಕರಾದರು. ಇವರ ಕೃತಿಗಳು ಕವನ ಸಂಕಲನ: ಶ್ರೀ ಆನಂದ ತೀರ್ಥರು , ಸಂತಾನ, ಹಾವಾಡಿಗರ ಹುಡುಗ ನೆರಳು, ಮುಂತಾದವು. ಶ್ರೀಯುತರು ೧೯೯೫ ರಲ್ಲಿ ನಿಧನರಾದರು ೧೯೨೩೯೫ ಕನ್ನಡ ಪ್ರಸಿದ್ದ ಕವಿ ಇವರ ತಂದೆ ರಂಗಾಚಾರ್ಯ ಎಕ್ಕುಂಡಿಯವರು ರಾಣೆಬೆನ್ನೂರಿನಲ್ಲಿ ಶಿಕ್ಷಕರಗಿದ್ದರು ತಾಯಿ ರಾಜಕ್ಕ. ಇವರಿಗೆ ಐದು ವರ್ಷಗಳದ್ದಾಗ ತಂದೆ ನಿಧನರಾದರು.ಚಿಕ್ಕಂದಿನಲ್ಲಿಯೇ ಸಂಸಾರದ ಭಾರ ತಲೆಯ ಮೇಲೆಬಿದ್ದುದರಿಂದ ಸವಣೂರಿನಲ್ಲಿ ಶ್ರೀ ಸತ್ಯಬೋ ಸೇವಾಸಂಘ ನಡೆಸಿದ್ದು .ವಚನಾಲಯದ ಪುಸ್ತಕಗಳನ್ನು ಮನೆಗೆ ಮುಟ್ಟಿಸುವ ಕೆಲಸ ಮಾಡಿದರೂ ಪುಸ್ತಕಗಳನ್ನು ಪುಕ್ಕಟೆ ಓದಿವ . ಅವಕಾಶವದುದರಿಂದ ಬಲ್ಯದಲ್ಲಿ ಜ್ಞಾನಸಂಪಾದನೆ ಇವರ ಕಾಯಕವಾಯಿತು .ಇದ್ದರಿಂದ ಶಿಕ್ಷಣದತ್ತ ಒಲವುಬೆಳೆಯಿತು .ಇವರ ಪ್ರಾಥಮಿಕಶಿಕ್ಷಣ ಹುಬ್ಬಳ್ಳಿಯಲ್ಲಿ ನಡೆಯಿತು . ಕೃತಿಗಳು ಕಾವ್ಯ ಶ್ರೀ ಆನಂದತೀರ್ಥರು ಸಂತಾನ ಹಾವಾಡಿಗರ ಹುಡುಗ ಮತ್ಸ್ಯಗಂಧಿ ಬೆಳ್ಳಕ್ಕಿಗಳು ಬಕುಳದ ಹೂಗಳು ಪಾರಿವಾಳ ಕಥಾಸಂಕಲನ ನೆರಳು ಕಾದಂಬರಿ ಪ್ರತಿಬಿಂಬಗಳು ಪರಿಚಯ ಶ್ರೀ ಪು.ತಿ.ನರಸಿಂಹಾಚಾರ್ಯರು ಅನುವಾದ ಎರಡು ರಶಿಯನ್ ಕಾದಂಬರಿಗಳು. ಪುರಸ್ಕಾರ ಲೆನಿನ್ನರ ನೆನಪಿಗೆ ಎನ್ನುವ ಕೃತಿಗೆ ೧೯೭೦ರಲ್ಲಿ ಸೋವಿಯತ್ ಲ್ಯಾಂಡಿನ ನೆಹರು ಪುರಸ್ಕಾರ ದೊರೆತಿದೆ. ಮತ್ಸ್ಯಗಂಧಿ ಕವನ ಸಂಕಲನಕ್ಕೆ ೧೯೭೫ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆತಿದೆ. ಬೆಳ್ಳಕ್ಕಿಗಳು ಹಸ್ತಪ್ರತಿಗೆ ೧೯೮೨ರಲ್ಲಿ ಮುದ್ದಣ ಸ್ಮಾರಕ ಕಾವ್ಯ ಬಹುಮಾನ ದೊರೆತಿದೆ. ಬಳುಕದ ಹೂವುಗಳು ಎಂಬ ಕೃತಿಗೆ ೧೯೯೨ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಉಲ್ಲೇಖಗಳು ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ೧೯೨೩ ಜನನ ಕನ್ನಡ ಕವಿಗಳು
ಶಂಕರಮೊಕಾಶಿಪುಣೇಕರ ಈ ಲೇಖನದೊಂದಿಗೆ ವಿಲೀನ ಶಂಕರ ಮೊಕಾಶಿ ಪುಣೇಕರ್ ಕನ್ನಡದ ಖ್ಯಾತ ಕವಿ ಮತ್ತು ಸಾಹಿತಿ. ಆಂಗ್ಲ ಪ್ರಾಧ್ಯಾಪಕರೂ, ಸಂಸ್ಕೃತ ವಿಧ್ವಾಂಸರೂ , ಕನ್ನಡ ಲೇಖಕರೂ ಆದ ಪುಣೇಕರ್ ಅವರು ಇಂಗ್ಲಿಷ್ ನಲ್ಲಿ ೨೦ ಕೃತಿಗಳನ್ನು ಬರೆದಿರುವರು. ಕನ್ನಡದ ಮಟ್ಟಿಗೆ ಅವರು ಹೆಸರಾಗಿರುವುದು ವಿಮರ್ಶೆ ಮತ್ತು ಕಾದಂಬರಿಗಳಿಂದ. ಗಂಗವ್ವ ಗಂಗಾಮಾಯಿ (೧೯೫೬), ನಟನಾರಾಯಣಿ (೧೯೮೨), ಅವಧೇಶ್ವರಿ (೧೯೮೭)ಇವು ಇವರ ಕಾದಂಬರಿಗಳು. ಅವಧೇಶ್ವರಿ ಎಂಬ ಕೃತಿಗೆ ೧೯೮೮ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಆದರೆ ಅವರ ಪ್ರತಿಭೆಯ ನಿಜವಾದ ಗುರುತು ಗಂಗವ್ವ ಗಂಗಾಮಾಯಿಯಿಂದಲೇ. ಪುಣೇಕರರು ಸಂಸ್ಕೃತ ವಿದ್ವಾಂಸರಾದ ಕಾರಣ ಅವರ ಕೃತಿಗಳಲ್ಲಿ ಸಂಸ್ಕೃತ ಉಲ್ಲೇಖಗಳು ಬಹಳವಾಗಿ ಕಂಡುಬರುತ್ತದೆ.ಇವರ ಗಂಗವ್ವ ಗಂಗಾಮಾಯಿ ಚಲನಚಿತ್ರವಾಗಿ ರಾಜ್ಯ ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ. ವಿಸ್ತೃತ ಲೇಖನ:ಶಂಕರ ಮೊಕಾಶಿ ಪುಣೇಕರ ಈಪುಟಕ್ಕೆ ವರ್ಗಾಯಿಸಬೇಕು. ಹೊರಗಿನ ಸಂಪರ್ಕಗಳು ಕನ್ನಡಸಾಹಿತ್ಯ.ಕಾಮ್ನಲ್ಲಿ ಅವಧೇಶ್ವರಿ ಉಲ್ಲೇಖಗಳು ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
ವ್ಯಾಸರಾಯ ಬಲ್ಲಾಳ (ಡಿಸೆಂಬರ್ ೧, ೧೯೨೩ ಜನವರಿ ೩೦, ೨೦೦೮) ಕನ್ನಡ ಸಾಹಿತ್ಯ ಲೋಕದಲ್ಲಿ ಮಹಾನ್ ಹೆಸರು. ಬಂಡಾಯ, ಹೇಮಂತಗಾನ, ಅನುರಕ್ತೆ, ವಾತ್ಸಲ್ಯಪಥ, ಉತ್ತರಾಯಣ, ಆಕಾಶಕ್ಕೊಂದು ಕಂದೀಲು ಮುಂತಾದ ಕಾದಂಬರಿಗಳು ಮತ್ತು ನೂರಾರು ಸಣ್ಣಕಥೆಗಳಿಂದ ಕನ್ನಡ ಸಾಹಿತ್ಯಲೋಕವನ್ನು ಬೆಳಗಿದ ವ್ಯಾಸರಾಯ ಬಲ್ಲಾಳರು ಕನ್ನಡದ ಪ್ರೇಮಿಗಳಿಗೆ ಚಿರಪರಿಚಿತರು. ಜೀವನ ನಿಡಂಬೂರು ವ್ಯಾಸರಾಯ ಬಲ್ಲಾಳ ಅವರು ಉಡುಪಿಯ ಸಾಹಿತ್ಯ, ಸಂಗೀತಾಸಕ್ತ ಕುಟುಂಬವೊಂದರಲ್ಲಿ ಡಿಸೆಂಬರ್ ೧, ೧೯೨೩ರಂದು ಜನಿಸಿದರು. ಕಲಿತದ್ದು ಹಳೇ ಮೆಟ್ರಿಕ್ ವರೆಗೆ ಮಾತ್ರ. ಹೊಟ್ಟೆಯ ಹೊರೆ ಅವರನ್ನು ಮುಂಬಯಿಗೆ ಎಳೆಯಿತು. ಕಾಲ್ಟೆಕ್ಸ್ ಎಂಬ ವಿದೇಶಿ ಕಂಪನಿಯಲ್ಲಿ ಸ್ಟೆನೋ ಆ ಮುಂದೆ ಒಬ್ಬ ಹಿರಿಯ ಅಧಿಕಾರಿಯಾಗಿ ನಿವೃತ್ತಿಯವರೆಗೆ ಅಲ್ಲೇ ಕಾರ್ಯನಿರ್ವಹಿಸಿದರು. ನಿವೃತ್ತರಾದ ಮೇಲೂ ಬಹಳಷ್ಟು ವರ್ಷಗಳು ಅವರು ಮುಂಬಯಿಯಲ್ಲೇ ಇದ್ದರು. ತಮ್ಮ ಕೊನೆಯ ಕೆಲವು ವರ್ಷಗಳನ್ನು ಅವರು ಬೆಂಗಳೂರಿನಲ್ಲಿ ಕಳೆದರು. ಮುಂಚಿನಿಂದಲೂ ಬಿಡುವಿನ ವೇಳೆಯಲ್ಲಿ ಬಲ್ಲಾಳರದ್ದು ಅವ್ಯಾಹತ ವಾಚನ ಮತ್ತು ಅಧ್ಯಯನ. ಮುಂಬಯಿನ ಸಂಘ ಸಂಸ್ಥೆಗಳಲ್ಲಿ ವ್ಯಾಸರಾಯ ಬಲ್ಲಾಳರು ಮುಂಬಯಿಯ ಹಲವು ಸಂಸ್ಥೆಗಳಲ್ಲಿ ಆಗಾಗ ಸೇವೆ ಸಲ್ಲಿಸುತ್ತಿದ್ದುದೂ ಉಂಟು. ಮುಂಬಯಿಯ ಕರ್ನಾಟಕ ಸಂಘಕ್ಕೂ ಅವರಿಗೂ ಅಪ್ಯಾಯಮಾನವಾದ ನಂಟು. ಅವರು ಮುಂಬಯಿನ ಕನ್ನಡ ಇನ್ಫರ್ಮೇಷನ್ ಸೆಂಟರ್ನಲ್ಲೂ ಸಕ್ರಿಯರಾಗಿದ್ದರು. ಮುಂಬಯಿ ಪ್ರೇರಣೆ ವ್ಯಾಸರಾಯ ಬಲ್ಲಾಳರ ಕೃತಿಗಳಿಗೆ ಎಲ್ಲ ರೀತಿಯಿಂದ ಪ್ರೇರಣೆಯೊದಗಿಸಿದ್ದುದು ಮುಂಬಯಿ. ಮುಂಬಯಿ ನಗರದ ಸಂಕೀರ್ಣತೆಯನ್ನು, ವೈಲಕ್ಷಣಗಳನ್ನು ಬಲ್ಲಾಳರು ತುಂಬಾ ಆಳವಾಗಿ ಅರಿತಿದ್ದರು. ಮುಂಬಯಿಯಲ್ಲಿನ ಮಧ್ಯಮ ವರ್ಗದ್ದೇ ಒಂದು ವಿಶಿಷ್ಟ ರೀತಿಯ ಬದುಕು. ಬೇರಾವ ಜಿಲ್ಲೆ, ತಾಲ್ಲೂಕಿನ ಸ್ಥಳಗಳಲ್ಲಿ ಅದು ಕಾಣ ಸಿಗದು. ಈ ವರ್ಗದ ಕುಟುಂಬ ವ್ಯವಸ್ಥೆ, ಆರ್ಥಿಕ ವ್ಯವಹಾರ, ಸಾಮಾಜಿಕ ರೀತಿನೀತಿಗಳು ಯಾವುದೇ ಲೇಖಕನಿಗೆ ಚಾಲೆಂಜ್ ಸ್ವರೂಪದ್ದವಾಗಿವೆ. ಇಲ್ಲಿಯವರು ಜನನಿಬಿಡತೆಯಲ್ಲಿಯೂ ಅನುಭವಿಸುವ ಏಕಾಕಿತನ, ಕೂಡಿ ಬಾಳುವೆ ಸಾಗಿಸುತ್ತಿದ್ದರೂ ಬೇರೆಯಾದ ಮನಸ್ಸು ಗಂಡಹೆಂಡಿರಾಗಿದ್ದರೂ ಅವರ ವಿಶಿಷ್ಟವಾದ ಯೌವನ (ಸೆಕ್ಸ್) ನಲಿವಿನಲ್ಲಿಯೂ ಅನುಭವಿಸುವ ನೋವು ಇವೆಲ್ಲ ಬಲ್ಲಾಳರ ಕಥನಾತ್ಮಕ ವಿಶ್ಲೇಷಣೆಗೆ ಆಹಾರವಾಗಿ ಒದಗಿಬಂದಿದೆ. ಇತ್ತ ಶ್ರಮಜೀವಿಗಳ ಬದುಕಿನ ಬಗೆಯನ್ನೂ ಬಲ್ಲಾಳರು ಅರಿತಿದ್ದಾರೆ. ಒಟ್ಟಿನಲ್ಲಿ ಬಲ್ಲಾಳರ ಜೀವನದೃಷ್ಟಿಯನ್ನು ಮತ್ತು ಲೇಖನಿಯ ದಿಸೆಯನ್ನು ಮುಂಬಯಿಯೇ ರೂಪಿಸಿದೆ. ಅದಕ್ಕೆ ಪ್ರತಿಯಾಗಿ ಬಲ್ಲಾಳರು ಮುಂಬಯಿಯನ್ನೇ ತಮ್ಮ ಕೃತಿಗಳಲ್ಲಿ ಹೆಚ್ಚಾಗಿ ಚಿತ್ರಿಸಿ ಋಣ ತೀರಿಸಿದ್ದಾರೆ. ಅವರ ಐದಾರು ದಶಕಗಳ ಸುದೀರ್ಘ ಅವಧಿಯಲ್ಲಿ ಬರೆದ ನೂರಾರು ಕಥೆಗಳಲ್ಲಿ ಮುಂಬಯಿ ನಗರದ ಮಧ್ಯಮ ವರ್ಗೀಯರ ನೋವು ಮತ್ತು ನಲಿವು ಇವೆರಡನ್ನೂ ಸಮಾನವಾಗಿ ಬಿಂಬಿಸಿದ್ದಾರೆ. ಮತ್ತೊಂದು ವಿಚಾರವೆಂದರೆ ಮುಂಬಯಿ ನಗರದ ಪ್ರಮುಖ ಭಾಷಿಗರಾದ ಮರಾಠಿಗರ ಜೀವನವನ್ನು, ಮರಾಠಿ ಕಾದಂಬರಿಗಳಿಗಿಂತ ಬಲ್ಲಾಳರ ಕಥೆಗಳಲ್ಲೇ ಹೆಚ್ಚಾಗಿ ಕಾಣುತ್ತೇವೆ ಎಂದು ಶ್ರೀನಿವಾಸ ಹಾವನೂರು ಅವರು ಅಭಿಪ್ರಾಯ ಪಡುತ್ತಾರೆ. ಪತ್ರಿಕೋದ್ಯಮದಲ್ಲಿ ನುಡಿ ಪತ್ರಿಕೆಯಲ್ಲಿ ಸ್ವಾತಂತ್ರದ ಸಮಯದ ರಾಜಕೀಯ ಅಭಿಪ್ರಾಯಗಳು ಮತ್ತು ಕಾರ್ಮಿಕಶ್ರಮಿಕ ವರ್ಗದವರ ದ್ವನಿಯಾಗಿ ಬಲ್ಲಾಳರು ಮಾಡಿದ ಕೆಲಸ ಅಪಾರವಾದದ್ದು. ಆ ಪತ್ರಿಕೆ ನಡೆದದ್ದು ನಾಲ್ಕು ವರ್ಷಗಳು ಮಾತ್ರವೇ ಆದರೂ ಬಲ್ಲಾಳರಲ್ಲಿ ಅದು ಮೂಡಿಸಿದ ಚಿಂತನೆಗಳು ಬಲ್ಲಾಳರ ಕಾದಂಬರಿಗಳಲ್ಲಿ ಗಣನೀಯವಾಗಿ ಮುಂದುವರೆದಿದೆ. ವೈವಿಧ್ಯಮಯ ಬರಹ ಬಲ್ಲಾಳರು ಕಾದಂಬರಿಕಾರರು, ಕಥೆಗಾರರು ಮಾತ್ರವೇ ಅಲ್ಲ, ರಾಜಕೀಯ ವಿಡಂಬನೆ, ಮುಂಬಯಿ ಕನ್ನಡಿಗರ ಸಮಸ್ಯೆಗಳ ವಿವೇಚನೆ, ತಾತ್ವಿಕ ಚಿಂತನೆ, ಗ್ರಂಥ ವಿಮರ್ಶೆ, ರೇಡಿಯೋ ಭಾಷಣ, ನಾಟಕ, ಪ್ರವಾಸ ಕಥನ ಮುಂತಾದ ವಿವಿಧ ಬಗೆಯ ಬರಹಗಳೂ ಅವರ ಲೇಖನಿಯಿಂದ ಮೂಡಿಬಂದಿವೆ. ಹುಡುಕಾಟ ನಾನೊಬ್ಬ ಭಾರತೀಯ ಪ್ರವಾಸಿ ಎಂಬ ಅವರ ಪ್ರವಾಸ ಕಥನದಲ್ಲಿ ಭಾರತೀಯರ ಬದುಕಿನ ಬಗ್ಗೆ, ಅವರಲ್ಲಿಯ ಭಾರತೀಯತ್ವದ, ಅನನ್ಯತೆಯ ಹುಡುಕಾಟ ಇವನ್ನು ಬಲ್ಲಾಳರು ಆಳವಾಗಿ ವಿಶ್ಲೇಷಿಸಿದ್ದಾರೆ. ಹಾಗೆ ನೋಡಿದರೆ, ಭಾರತದಲ್ಲೇ ಹೊರನಾಡುಗಳಲ್ಲಿ ನೆಲಸಿರುವ ಕನ್ನಡಿಗರೂ ಕೂಡ ತಮ್ಮ ಅನನ್ಯತೆ ಎಲ್ಲಿದೆ ಎಂದು ಕೇಳಿಕೊಳ್ಳ ಹಚ್ಚುತ್ತದೆ ಈ ಪ್ರವಾಸ ಕೃತಿ. ಅಪ್ರಮಾಣಿಕತೆಗಳತ್ತ ನೋಟ ಬಲ್ಲಾಳರ ಸಾಹಿತ್ಯಸೃಷ್ಟಿಗೆ ಪ್ರಮುಖ ಪ್ರೇರಣೆ ಎಂದರೆ ನಮ್ಮ ಬದುಕಿನ ವಿವಿಧ ಸ್ತರಗಳಲ್ಲಿಯ ಅಪ್ರಾಮಾಣಿಕತೆ. ನಮ್ಮ ಜೀವನದ ಅವಿಭಾಜ್ಯ ಅಂಗವೆಂಬಂತೆ ಅಥವಾ ಅದರ ಅರಿವೇ ನಮಗಿಲ್ಲದಂತೆ ಈ ಅಪ್ರಾಮಾಣಿಕತೆಯು ಬೆಸೆದುಕೊಂಡು ಬಿಟ್ಟಿದೆ. ಅಪ್ರಾಮಾಣಿಕತೆ ಕಾಣಿಸಿಕೊಳ್ಳುವುದು ಹೇಗೆ? ಮನುಷ್ಯನ ಅಂತರಂಗಕ್ಕೂ ಬಹಿರಂಗಕ್ಕೂ ಸಾಂಗತ್ಯವಿಲ್ಲದಿದ್ದಾಗ ತಾನೇ. ನಮ್ಮ ಆಸೆಆಕಾಂಕ್ಷೆಗಳಿಗೆ ಬಾಹ್ಯಸ್ಥಿತಿ ಅನುಕೂಲಿಸದೆ ಹೋದಾಗಲೂ ಅಪ್ರಾಮಾಣಿಕತೆ ತಲೆದೋರುತ್ತದೆ. ಇಲ್ಲವೇ, ಯಾರೊಬ್ಬರ ಜನ್ಮಜಾತ ದುಷ್ಟವೃತ್ತಿಯೂ ಅದಕ್ಕೆ ಕಾರಣವಾಗಿರಬಹುದು. ಅಂಥ ಸ್ಥಿತಿಯಲ್ಲಿ ಸುಳ್ಳು, ವಂಚನೆ, ಶೋಷಣೆ, ನಿರಾತಂಕವಾಗಿ ನಡೆಯಬಹುದು. ಮುಂಬಯಿಯಂತಹ ನಗರದಲ್ಲಿ ಅದು ಇನ್ನೂ ಹೆಚ್ಚಾದ ಆಳ ಹರಹುಗಳನ್ನು ಪಡೆಯಬಲ್ಲದು. ಬಲ್ಲಾಳರಲ್ಲಿ ಈ ಕುರಿತು ತಳಮಳವು ಉಕ್ಕಿ ಹರಿದಿದೆ. ಸ್ತ್ರೀ ಅಸಹಾಯಕತೆ ಇಂಥದೇ ಇನ್ನೊಂದು ವೇದನಾಮಯ ಅಂಶವೆಂದರೆ ಸ್ತ್ರೀಯ ಅಸಹಾಯಕತೆ. ಅದೊಂದು ಬಗೆಯ ಸೂಕ್ಷ್ಮ ಶೋಷಣೆ. ಮಧ್ಯಮ ವರ್ಗದ ಮಹಿಳೆಗೆ ವೈಚಾರಿಕ ಸ್ವಾತಂತ್ರ್ಯ ಇಲ್ಲದಿರುವ ಅಸಹಾಯಕತೆ ಅದು. ಬಲ್ಲಾಳರ ಕೆಲವು ಸ್ತ್ರೀ ಪಾತ್ರಗಳು ಇಂಥ ಸ್ಥಿತಿಯನ್ನು ಎದುರಿಸಹೊರಟಿವೆ (ಅನುರಕ್ತೆಯ ಸುಮಿತ್ರೆ, ಹೇಮಂತಗಾನದ ಭಾರತಿ, ಬಂಡಾಯದ ನಯನಾ). ಆದರೆ ಇಂದಿನ ಸಮಾಜ ವ್ಯವಸ್ಥೆಯಲ್ಲಿ ಭದ್ರವಾಗಿ ನೆಲೆಗೊಂಡ ಅಪ್ರಮಾಣಿಕತೆಯನ್ನು ಎದುರಿಸುವ ಪ್ರಯತ್ನಗಳೆಲ್ಲ ವ್ಯರ್ಥವಾಗಬಹುದು. ಬಲ್ಲಾಳರ ಹೆಚ್ಚಿನ ಕಥನಗಳು ಟ್ರಾಜಿಡಿ ಆಗಿರುವ ಹಿನ್ನಲೆಯೇ ಇದು. ಕಾದಂಬರಿಗಳ ಒಳನೋಟ ಬಲ್ಲಾಳರ ಅನುರಕ್ತೆ ಶುದ್ಧಾಂಗವಾಗಿ ಸಾಂಸಾರಿಕ ಕಾದಂಬರಿ. ಪಾತ್ರಗಳು, ಸನ್ನಿವೇಶಗಳು ಉಡುಪಿಮುಂಬಯಿಗಳ ಪರಿಸರದಲ್ಲಿ ಸುತ್ತಾಡುತ್ತವೆ. ಅಕ್ಕನಿಗಿಂತ ತಂಗಿಯ ಮದುವೆ ಮೊದಲು ನಡೆಯಬೇಕಾದ ಸನ್ನಿವೇಶದಲ್ಲಿ ಕಥೆ ಸುರಳಿಯಾಗಿ ಬಿಚ್ಚಿಕೊಳ್ಳುತ್ತದೆ. ಶರಶ್ಚಂದ್ರರ ಸ್ತ್ರೀ ಪಾತ್ರಗಳನ್ನು ನೆನಪಿಗೆ ತರುವಂತಿದೆ. ಹೇಮಂತಗಾನವು ಸ್ವಾತಂತ್ರ್ಯ ಸಾಧನೆಯ ಹಿನ್ನೆಲೆಯಲ್ಲಿ ರಚಿತವಾದದ್ದು. ಇಲ್ಲಿಯೂ ಉಡುಪಿಯಿಂದ ಮುಂಬಯಿಗೆ ಬಂದು ನೆಲೆಸಿದ ಹಿನ್ನೆಲೆಯಲ್ಲಿ ಪಾತ್ರಸನ್ನಿವೇಶಗಳು ಮೈದಾಳಿವೆ. ಆದರೆ ಕೌಟುಂಬಿಕ ನೆಲೆಗಿಂತ ಇಲ್ಲಿ ಭಾವನಾಮಯವಾದ ಆದರ್ಶವು ವಾಸ್ತವ ಜಗತ್ತಿನ ಕಟುಸತ್ಯದೊಂದಿಗೆ ಹೋರಾಡಿ ಸೋತದ್ದರ ಚಿತ್ರಣವಿದೆ. ಜೊತೆಗೆ ವಾತ್ಸಲ್ಯ ಭಾವಕ್ಕೂ ಸಾಕಷ್ಟು ಇಂಬು ದೊರಕಿದೆ. ಕಾದಂಬರಿಯು ಓದುಗರ ಮನವನ್ನು, ಆಳವಾಗಿ ಕಲಕುತ್ತದೆ. ವಾತ್ಸಲ್ಯಪಥದಲ್ಲಿ ಬಲ್ಲಾಳರು ಮತ್ತೆ ಕೌಟುಂಬಿಕ ಪರಿಸರಕ್ಕೆ ಮಾರುಹೋಗಿದ್ದಾರೆ. ಇದು ಕೂಡ ತನ್ನ ಅಂತಿಮ ಪರಿಣಾಮದಲ್ಲಿ ಹೇಮಂತಗಾನದಷ್ಟೇ ಗಾಢವಾದುದು. ಅಲ್ಲದೆ ಪಾತ್ರ ಚಿತ್ರಣದಲ್ಲಿ ಬಲ್ಲಾಳರು ಹಿಂದಿನ ಎರಡೂ ಕಾದಂಬರಿಗಳನ್ನೂ ಮೀರಿಸಿದ್ದಾರೆನ್ನಬಹುದು. ಇನ್ನು ಉತ್ತರಾಯಣ ಕಾದಂಬರಿ. ಉತ್ತರಾಯಣಕಾಲದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ. ಸ್ವರ್ಗಕ್ಕೆ ಹೋಗುವ ಸೋಪಾನವೇ ಸಾವು! ಮನುಷ್ಯನಿಗೆ ನಿಶ್ಚಿತವಾದ ಧ್ಯೇಯ ಇಲ್ಲವಾದಾಗ, ಬದುಕಿನ ಉತ್ತರಾರ್ಧದಲ್ಲಿ ಸೋಲು ಅನಿವಾರ್ಯವಾಗುತ್ತದೆ. ಕಥಾನಾಯಕಿಯರಲ್ಲಿ ಒಬ್ಬಳಾದ ರುಕ್ಮಿಣಿಯು ಆತ್ಮಹತ್ಯೆ ಮಾಡಿಕೊಳ್ಳುವುದರ ಸಮರ್ಥನೆ ಇದೇ ಆಗಿದೆ. ಅವಳ ಆತ್ಮಹತ್ಯೆ ಅಘಟಿತ ಘಟನೆ ಎನಿಸದಂತೆಬಲ್ಲಾಳರು ಕಥೆಯನ್ನು ಬೆಳೆಸಿಕೊಂಡು ಹೋಗಿದ್ದಾರೆ. ಇಲ್ಲಿಯೂ ಅಕ್ಕತಂಗಿಯರೇ ಪ್ರಮುಖ ಪಾತ್ರಗಳು. ಆದರೆ ಅನುರಕ್ತೆಯ ಹೆಣ್ಣುಮಕ್ಕಳು ಎಳವಯದ, ಎಳೆಯ ಮನದ ಸೋದರಿಯರು. ಇಲ್ಲಿಯ ರುಕ್ಮಿಣಿ ಮತ್ತು ಹೇಮಾ ಬದುಕಿನ ಮೂಸೆಯಲ್ಲಿ ಹದಗೊಂಡವರು. ತಮ್ಮ ಅಪೇಕ್ಷೆಯಂತೆಯೇ ಬದುಕನ್ನು ರೂಪಿಸಿಕೊಳ್ಳಬೇಕೆಂಬ ಹಂಬಲವುಳ್ಳವರು. ಆದರೆ ಒಂದಿಲ್ಲೊಂದು ರೀತಿಯಲ್ಲಿ ಸೋಲುತ್ತಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಬಹುಮಾನಿತ ಬಂಡಾಯವನ್ನು ಹಿಂದಿನ ನಾಲ್ಕೂ ಕಾದಂಬರಿಗಳಿಗೆ ಹೋಲಿಸಿ ಹೇಳುವುದಾದರೆ, ಅವರ ತಾತ್ವಿಕ ಚಿಂತನೆ, ವಸ್ತುವಿನ ಹರಹು ಮತ್ತು ಪಾತ್ರಸೃಷ್ಟಿ ಇವು ಮೂರರಲ್ಲಿಯೂ ನಮ್ಮ ಅಂದಾಜನ್ನು ಮೀರಿಸುವಂತಹ ಪ್ರಗತಿಯನ್ನು ಅದರಲ್ಲಿ ಕಾಣುತ್ತೇವೆ. ಬಲ್ಲಾಳರು ಇಷ್ಟೊಂದು ಬೇರೆಯೇ ಆಗಿ ಬರೆಯಬಲ್ಲರೆ ಎಂದು ಒಂದು ಕ್ಷಣಕ್ಕೆ ಅನಿಸೀತು. ಇಲ್ಲಿ ಚಿತ್ರಿತವಾದ ಮುಂಬಯಿ ಜೀವನ, ಅವರ ಹಿಂದಿನ ಕಾದಂಬರಿಗಳಲ್ಲಿ ಕಾಣಿಸಿಕೊಂಡಿದ್ದಿಲ್ಲ. ಕಾರ್ಮಿಕ ಸಂಘರ್ಷ ಎಂದೊಡನೆ ಕೆಂಪು ಬಾವುಟ, ಮುಷ್ಕರ, ಲಾಕ್ ಔಟ್, ಸರ್ಕಾರದ ಮಧ್ಯಸ್ತಿಕೆಮುಂತಾದ ಉಪಕ್ರಮಗಳಿರುತ್ತವೆಂಬ ಸಾಮಾನ್ಯ ಗ್ರಹಿಕೆ ನಮ್ಮದು. ಆದರೆ ಕಾಲದಿಂದ ಕಾಲಕ್ಕೆ ಮುಂಬಯಿಯಲ್ಲಿ ಅದು ಹಿಂಸೆಯತ್ತ ಭರದಿಂದ ವಾಲುತ್ತಿದೆ. ಹಿಂಸೆಗೆ ಪ್ರತಿಹಿಂಸೆ, ಅದರ ಹಿಂದೆ ಶೀತಲವಾಗಿ ಕೊರೆಯುವ ಕ್ರೌರ್ಯ. ಅದರ ಹಿಂದಿನ ಆರ್ಥಿಕ ಶೋಷಣೆಯ ನಾನಾ ಸ್ತರಗಳು, ಇದೆಲ್ಲದರ ಅನ್ವೇಷಣೆಯೇ ಈ ಕಾದಂಬರಿಗೆ ಪ್ರಚೋದನೆ. ತಮ್ಮ ಅಭಿವ್ಯಕ್ತಿಯ ಅತ್ಯಂತ ಪರಿಣಾಮಕಾರಿಯಾಗುವ ದೃಷ್ಟಿಯಿಂದ ಬಲ್ಲಾಳರು ಇಲ್ಲಿ ಪ್ರಜ್ಞಾಪ್ರವಾಹ ತಂತ್ರವನ್ನು ಬಳಸಿದ್ದಾರೆ. ಕಥಾನಾಯಕ ರಾಜೀವನ ಮನಸ್ಸಾಕ್ಷಿ ಎಂಬಂತೆ ಬಂದ ಯಾಮಿನಿಯ ಚಿತ್ರಣ ಬಂಡುಗಾರ್ತಿ ನಯನಾ ಉರಿಹತ್ತಿಕೊಂಡು ಸತ್ತ ಆ ಕಲ್ಯಾಣಿ ನೇರವಾಗಿ ಬಾರದಿದ್ದರೂ ಭಯ ಹುಟ್ಟಿಸುವ ದೇಶಪಾಂಡೆ! ಈ ಪಾತ್ರ ವೈವಿಧ್ಯವಲ್ಲದೆ, ಭರದಿಂದ ಸಾಗುವ ಘಟನೆಗಳಿವೆ. ನಾವು ಎಷ್ಟೇ ನಿರ್ಲಿಪ್ತತೆಯಿಂದ, ಇಲವೇ ಬರೀ ಮನೋರಂಜನೆಯ ದೃಷ್ಟಿಯಿಂದ ಕಾದಂಬರಿಯನ್ನು ವಾಚಿಸಿದರೂ, ತನ್ನ ತಿರುಗಣಿ ಮಡುವಿನಲ್ಲಿ ಅದು ನಮ್ಮನ್ನು ಸಿಕ್ಕಿಸಿ ಹಾಕುತ್ತದೆ. ಬಂಡಾಯ ಅಪ್ಪಟ ರಾಜಕೀಯ ಕಾದಂಬರಿ ಮುಂಬಯಿಯ ಕಾರ್ಮಿಕ ಸಂಘರ್ಷವನ್ನು ಇದರಷ್ಟು ಸಾಂದ್ರವಾಗಿ ಚಿತ್ರಿಸಿದ ಕಾದಂಬರಿ, ಅಲ್ಲಿಯ ಸೋದರ ಭಾಷೆಗಳಲ್ಲಿ (ಮರಾಠಿ, ಗುಜರಾತಿ, ಹಿಂದಿ) ಕೂಡ ಇದುವರೆಗೂ ಬಂದಿಲ್ಲ. ರಾಜೀವನ ಪಾತ್ರವನ್ನು ಬಲ್ಲಾಳರು ಅತ್ಯಂತ ನಿಚ್ಚಳವಾದ ತಾತ್ವಿಕ ಪ್ರಣಾಲಿಯಲ್ಲಿ, ಆದರೆ ಜೀವಂತವಾಗಿ ರೂಪಿಸಿದ್ದಾರೆ. ಬಂಡಾಯವು ತನಗೆ ದೊರೆತ ಅಖಿಲ ಭಾರತ ಮನ್ನಣೆಯನ್ನು ಮುಂದಿನ ನೂರು ವರ್ಷಗಳಿಗೂ ಉಳಿಸಿಕೊಳ್ಳುವಷ್ಟು ಶಕ್ತಿಯುತವಾಗಿದೆ. ಮುಂದೆ ಬಲ್ಲಾಳರು ಆಕಾಶಕ್ಕೊಂದು ಕಂದೀಲು ಮತ್ತು ಹೆಜ್ಜೆ, ಹೆಜ್ಜೆ ಗುರುತು ಕಾದಂಬರಿಗಳನ್ನು ಬರೆದರು. ಕೃತಿಗಳು ಕಥಾಸಂಕಲನ ಸಂಪಿಗೆ ಮಂಜರಿ ಕಾಡು ಮಲ್ಲಿಗೆ ತ್ರಿಕಾಲ ಕಾದಂಬರಿ ಅನುರಕ್ತೆ ಇದೇ ಹೆಸರಿನಿಂದ ಚಲನಚಿತ್ರವಾಗಿದೆ. ಚಿತ್ರದ ಮುಖ್ಯಪಾತ್ರದಲ್ಲಿ ನಟಿ ಆರತಿ ಅಭಿನಯಿಸಿದ್ದರು. ವಾತ್ಸಲ್ಯಪಥ ಉತ್ತರಾಯಣ ಉದಯ ಟಿವಿಯಲ್ಲಿಯಲ್ಲಿ ಧಾರಾವಾಹಿಯಾಗಿ ಪ್ರಸಾರವಾಗುತ್ತಿದ್ದು, ಪೂರ್ಣವಾಗಿ ಪ್ರಸಾರವಾಗದೆ ಅರ್ಧದಲ್ಲಿಯೇ ನಿಂತುಹೋಯಿತು. ಹೇಮಂತಗಾನ ಬಂಡಾಯ ಆಕಾಶಕ್ಕೊಂದು ಕಂದೀಲು ಹೆಜ್ಜೆ ಹೆಜ್ಜೆ ಗುರುತು ನಾಟಕ ಗಿಳಿಯು ಪಂಜರದೊಳಿಲ್ಲ (ಮೂಲ:ಇಬ್ಸನ್) ಮುಳ್ಳೆಲ್ಲಿದೆ ಮಂದಾರ (ಮೂಲ:ಬರ್ನಾಡ್ ಶಾ) ಮಕ್ಕಳ ಸಾಹಿತ್ಯ ಖುರ್ಶಿದ್ ನರಮನ್ ಲೇಖನ ಸಂಗ್ರಹ ಮುಂಬಯಿ ಡೈರಿ ಮುಂಬಯಿಯ ನಂಟು ಮತ್ತು ಕನ್ನಡ ಪುರಸ್ಕಾರ ಇವರ ಬಂಡಾಯ ಕಾದಂಬರಿಗೆ ೧೯೮೬ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಕಾಡು ಮಲ್ಲಿಗೆ ಕಥಾಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ದೊರೆತಿದೆ. ಅನುರಕ್ತೆ ಕಾದಂಬರಿಗೆ ಕರ್ನಾಟಕ ಸರಕಾರದ ಬಹುಮಾನ ದೊರೆತಿದೆ. ರಾಜ್ಯ ಸಾಹಿತ್ಯ ಅಕಾಡೆಮಿ ಇವರನ್ನು ೧೯೮೩ರಲ್ಲಿ ಗೌರವಿಸಿದೆ ಅ.ನ.ಕೃ. ಪ್ರಶಸ್ತಿ, ನಿರಂಜನ ಪ್ರಶಸ್ತಿ ಮತ್ತು ಮಾಸ್ತಿ ಪ್ರಶಸ್ತಿಗಳೂ ಬಲ್ಲಾಳರಿಗೆ ಬಂದಿವೆ. ಮಹಾರಾಷ್ಟ್ರ ಸರ್ಕಾರದ ಗೌರವ ಪ್ರಶಸ್ತಿಯೂ ಅವರಿಗೆ ಲಭಿಸಿದೆ. ಅಭಿನಂದನಾ ಗ್ರಂಥ ಅಕ್ಕರೆ ಚಲನಚಿತ್ರಗಳಲ್ಲಿ ಅವರ ಅನುರಕ್ತೆ, ವಾತ್ಸಲ್ಯ ಪಥ ಕಾದಂಬರಿಗಳು ಚಲನಚಿತ್ರಗಳಾದವು. ಬಂಡಾಯ ಕಾದಂಬರಿ ಕಿರುತೆರೆಯಲ್ಲಿ ಮೂಡಿಬಂತು. ವಿದಾಯ ವ್ಯಾಸರಾಯ ಬಲ್ಲಾಳರು ಜನವರಿ ೩೦, ೨೦೦೮ ವರ್ಷದಲ್ಲಿ ಬೆಂಗಳೂರಿನಲ್ಲಿ ನಿಧನರಾದರು. ತಮ್ಮ ೮೫ ವರ್ಷಗಳ ಬದುಕಿನಲ್ಲಿ ನಿರಂತರವಾಗಿ ಕ್ರಿಯಾಶೀಲರಾಗಿದ್ದರು. ಆಕರಗಳು ಉತ್ತರಾಯಣದಲ್ಲಿ ಹೆಜ್ಜೆ ಗುರುತು ಉಳಿಸಿಹೋದ ವ್ಯಾಸರಾಯ ಬಲ್ಲಾಳ : , : ಡೆಕ್ಕನ್ ಹೆರಾಲ್ಡ್ ಪತ್ರಿಕೆ ನೇಸರು, ಮಾರ್ಚ್,೨೦೧೫,ವ್ಯಾಸರಾಯ ಬಲ್ಲಾಳರ ಜೀವನ ಸಾಧನೆ,ಪು.೮ಡಾ.ಜ್ಯೋತಿ ಸತೀಶ್ ಕನ್ನಡ ಸಾಹಿತ್ಯ ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ೧೯೨೩ ಜನನ ಮುಂಬಯಿ ಕನ್ನಡಿಗರು ಮುಂಬಯಿನ ಲೇಖಕರು
ತಳುಕಿನ ರಾಮಸ್ವಾಮಯ್ಯ ಸುಬ್ಬರಾವ್ (೧೯೨೦ ೧೯೮೪), ತರಾಸು ಎಂದೇ ಜನಪ್ರಿಯರಾದ ಕನ್ನಡದ ಖ್ಯಾತ ಕಾದಂಬರಿಕಾರರು. ಚಿತ್ರದುರ್ಗದ ಇತಿಹಾಸದ ಮೇಲೆ ಅವರು ರಚಿಸಿದ ಐತಿಹಾಸಿಕ ಕಾದಂಬರಿಗಳು ಸಾಮಾನ್ಯ ಜನಜೀವನ ಕುರಿತ ಅವರ ಸಾಮಾಜಿಕ ಕಾದಂಬರಿಗಳು ಓದುಗರ ಅಪಾರ ಮೆಚ್ಚುಗೆಗೆ ಪಾತ್ರವಾಗಿವೆ. ಹಲವು ಕಾದಂಬರಿಗಳು ಸಿನಿಮಾಗಳಾಗಿವೆ. ಅವರ ದುರ್ಗಾಸ್ತಮಾನ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಜನನ ಹಾಗೂ ಬಾಲ್ಯ ತಳುಕು ರಾಮಸ್ವಾಮಯ್ಯ ಸುಬ್ಬರಾಯ ಅವರು ಕನ್ನಡದ ಮೊದಲ ಪ್ರಾಧ್ಯಾಪಕರಾದ ತಳುಕಿನ ವೆಂಕಣ್ಣಯ್ಯನವರ ತಮ್ಮನವರ ಮಗ. ಇವರು ಹುಟ್ಟಿದ್ದು ೧೯೧೯ರಲ್ಲಿ. ಇವರ ಮನೆಮಾತು ತೆಲುಗು. ಇವರ ತಾತ ಸುಬ್ಬಣ್ಣನವರು ೮ ವರ್ಷದವರಾಗಿದ್ದಾಗ ಆಂಧ್ರ ಪ್ರದೇಶದ ಕಡೆಯಿಂದ ತಳುಕಿಗೆ ಬಂದು ನೆಲೆಸಿದವರು. ತಂದೆ ರಾಮಸ್ವಾಮಯ್ಯನವರು ಪ್ಲೀಡರ್ ಆಗಿ ಚಿತ್ರದುರ್ಗದಲ್ಲಿ ಕೆಲಸ ಮಾಡುತ್ತಿದ್ದರು. ಚಿಕ್ಕಂದಿನಿಂದ ಬಹಳ ತುಂಟರಾಗಿದ್ದ ಸುಬ್ಬರಾಯರು ಇಂಟರ್ ಮುಗಿದ ಕೂಡಲೇ ಓದಿಗೆ ಶರಣು ಎಂದು ಸ್ವಾತಂತ್ರ್ಯ ಸಂಗ್ರಾಮದ ಚಳುವಳಿಯಲ್ಲಿ ಭಾಗಿಯಾಗಿದ್ದರು. ಅವರು ಬರೆದ ನಾಗರಹಾವು ಕಾದಂಬರಿಯಲ್ಲಿನ ರಾಮಾಚಾರಿಯ ಪಾತ್ರದಂತೆಯೇ ಅವರು ಛಲದ ಮನುಷ್ಯರಾಗಿದ್ದವರು. ಬಹಳ ಕಷ್ಟದಲ್ಲಿ ಜೀವಿಸಿದವರು. ವಿವಾಹ ಸಂಬಂಧಿಗಳಲ್ಲೇ ಮದುವೆಯಾಗಿದ್ದ ಅವರ ಪತ್ನಿಯ ಹೆಸರು ಅಂಬುಜ. ಬಹಳ ಸಮಯದ ನಂತರ ಹುಟ್ಟಿದ ಮೂವರು ಮಕ್ಕಳು ನಾಗಪ್ರಸಾದ್, ಪೂರ್ಣಿಮಾ ಮತ್ತು ಪ್ರದೀಪ. ಪತ್ನಿ ಮತ್ತು ಮಕ್ಕಳು ಮೈಸೂರಿನಲ್ಲಿ ವಾಸವಾಗಿದ್ದಾರೆ. ಮೈಸೂರಿನ ಯಾದವಗಿರಿಯಲ್ಲಿ ಕಟ್ಟಿಸಿದ ಅವರ ಮನೆಯ ಹೆಸರು ಗಿರಿಕನ್ಯಕಾ. ಅ.ನ.ಕೃ ಗುರುಗಳ ಸಾನಿಧ್ಯದಲ್ಲಿ ಅವರಿಗೆ ಗುರುವಾಗಿದ್ದವರು ಅ.ನ. ಕೃಷ್ಣರಾಯರು. ಆ ಸಮಯಕ್ಕಾಗಲೇ ಸಾಮಾಜಿಕ ವಿಷಯಗಳ ಬಗ್ಗೆ ಕಾದಂಬರಿಗಳನ್ನು ಬರೆದಿದ್ದ ಅನಕೃ ಅವರು ಕನ್ನಡಿಗರ ಮನೆ ಮಾತಾಗಿದ್ದರು. ಬರಹ ಅವರ ರಕ್ತಕ್ಕೆ ಬಂದಂತಿತ್ತು. ಅವರು ಬರೆದಿದ್ದ ಒಂದು ಕಾದಂಬರಿಯ (ಹಂಸ ಗೀತೆ) ವಸ್ತು ಹಿಂದಿ ಭಾಷೆಯ ಚಲನಚಿತ್ರವಾದ ಬಸಂತ್ ಬಹಾರ್ ಆಯಿತು. ಅಲ್ಲಿಯವರೆವಿಗೆ ಅವರು ಕನ್ನಡದ ಹೋರಾಟದಲ್ಲಿ ಅನಕೃ ಮತ್ತಿತರ ಸಹೃದಯರರ ಜೊತೆ ಲೀನವಾಗಿದ್ದರು. ಕನ್ನಡದ ಹೋರಾಟದಲ್ಲಿ ಅನಕೃ ಅವರೊಂದಿಗೆ ಸರಿಸಾಟಿಯಾಗಿ ನಿಂತರು. ಅವರೊಂದಿಗೆ ಕೈ ಜೋಡಿಸಿದವರು ಮ.ರಾಮಮೂರ್ತಿಗಳು. ಆ ಸಮಯದಲ್ಲಿ ರಾಜ್ಯಾದ್ಯಂತ ಓಡಾಡಿ ಕನ್ನಡಿಗರಲ್ಲಿ ಜಾಗೃತಿಯನ್ನು ಉಂಟು ಮಾಡಲು ಶ್ರಮಿಸಿದರು. ಚಲನಚಿತ್ರವಾದ ಸುಬ್ಬರಾಯರ ಕಾದಂಬರಿಗಳು ಕಾದಂಬರಿಗಳನ್ನು ಬರೆದರೂ, ಹಣಗಳಿಕೆಯಲ್ಲಿ ವಿಫಲರಾಗಿದ್ದರು. ೧೯೬೦ರ ಸುಮಾರಿಗೆ ರಷ್ಯಾಗೆ ಸರ್ಕಾರದ ವತಿಯಿಂದ ಹೋದ ಮೇಲೆ ಅವರ ಅದೃಷ್ಟ ಬದಲಾಯಿತು. ಅವರ ಕಾದಂಬರಿಗಳ ಸುವಾಸನೆ ಬಹಳ ನಿಧಾನವಾಗಿ ಕನ್ನಡ ಚಲನಚಿತ್ರಲೋಕ ಮೂಲಕ ಪಸರಿಸಿ ಹಣಗಳಿಸಿಕೊಟ್ಟಿತು. ಚಂದವಳ್ಳಿಯ ತೋಟ ಹಂಸಗೀತೆ ನಾಗರಹಾವು ಬೆಂಕಿಯ ಬಲೆ ಗಾಳಿಮಾತು ಚಂದನದ ಗೊಂಬೆ ಬಿಡುಗಡೆಯ ಬೇಡಿ ಮಸಣದ ಹೂ ಇವರ ಹಂಸಗೀತೆ ಕಾದಂಬರಿಯನ್ನು ಆಧರಿಸಿ ೧೯೫೬ರಲ್ಲಿ ಬಸಂತ್ ಬಹಾರ್ ಎಂಬ ಹಿಂದಿ ಚಲನಚಿತ್ರ ಬಿಡುಗಡೆಯಾಯಿತು. ಮಹತ್ವದ ಕೃತಿಗಳು ಇವರ ಕೃತಿಗಳಾದ ಕಂಬನಿಯ ಕುಯಿಲು, ರಕ್ತರಾತ್ರಿ, ಮತ್ತು ತಿರುಗುಬಾಣ, ಚಿತ್ರದುರ್ಗದ ಇತಿಹಾಸವನ್ನು ಬಹಳ ರಸವತ್ತಾಗಿ ಚಿತ್ರಿಸಿವೆ ಎಂದು ವಿಮರ್ಶಕರ ಅಭಿಪ್ರಾಯ. ಅದರಲ್ಲಿ ವಿವರಿಸಿರುವ ಪಾಳೇಗಾರರ ವೈಭವ, ದರ್ಪ ಮತ್ತು ಕ್ರೌರ್ಯ ಮೈ ನವಿರೇಳುವಂತಿದೆ ಎನ್ನಲಾಗಿದೆ. ಇದು ತರಾಸು ಅವರ ಬರಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ.೧೯೭೦ರ ಸಮಯದಲ್ಲಿ ಶೃಂಗೇರಿ ಸ್ವಾಮಿಗಳ ಸಾನ್ನಿಧ್ಯದಲ್ಲಿದ್ದರು. ಆಗ ಆರೋಗ್ಯ ಸ್ವಲ್ಪ ಸುಧಾರಿಸಿತು. ಆ ಸಮಯದಲ್ಲಿ ಅವರು ಬರೆದ ಕಾದಂಬರಿ ೪ ೪ ೧. ಕೃತಿಗಳು ಸಾಮಾಜಿಕ ಕಾದಂಬರಿಗಳು ಮನೆಗೆ ಬಂದ ಮಹಾಲಕ್ಷ್ಮಿ ನಾಗರ ಹಾವು ರಕ್ತ ತರ್ಪಣ ಪುರುಷಾವತಾರ ಬೇಡದ ಮಗು ಮಸಣದ ಹೂವು ಬಿಡುಗಡೆಯ ಬೇಡಿ ಚಂದನದ ಗೊಂಬೆ ಚಕ್ರ ತೀರ್ಥ ಸಾಕು ಮಗಳು ಮಾರ್ಗ ದರ್ಶಿ ಭಾಗ್ಯಶಿಲ್ಪಿ ಬೆಳಕಿನ ಬೀದಿ ಬೆಂಕಿಯ ಬಲೆ ಚಂದವಳ್ಳಿಯ ತೋಟ ಎರಡು ಹೆಣ್ಣು ಒಂದು ಗಂಡು ಗಾಳಿ ಮಾತು ಕಾರ್ಕೋಟಕ ಪಂಜರದ ಪಕ್ಷಿ ಖೋಟಾ ನೋಟು ಮೊದಲ ನೋಟ ಪೌರಾಣಿಕ ಕಾದಂಬರಿಗಳು ಬೆಳಕು ತಂದ ಬಾಲಕ ನಾಲ್ಕು ನಾಲ್ಕು ಐತಿಹಾಸಿಕ ಕಾದಂಬರಿಗಳು ನೃಪತುಂಗ ಸಿಡಿಲ ಮೊಗ್ಗು ಹಂಸಗೀತೆ ಶಿಲ್ಪ ಶ್ರೀ ಕಸ್ತೂರಿ ಕಂಕಣ ಕಂಬನಿಯ ಕುಯಿಲು ರಕ್ತ ರಾತ್ರಿ ತಿರುಗು ಬಾಣ ದುರ್ಗಾಸ್ತಮಾನ ರಾಜ್ಯದಾಹ ಹೊಸಹಗಲು ವಿಜಯೋತ್ಸವ ಕೀರ್ತಿನಾರಾಯಣ ಕಥಾ ಸಂಕಲನಗಳು ರೂಪಸಿ ತೊಟ್ಟಿಲು ತೂಗಿತು ಮಲ್ಲಿಗೆಯ ನಂದನದಲ್ಲಿ ಇದೇ ನಿಜವಾದ ಸಂಪತ್ತು ನಾಟಕಗಳು ಜ್ವಾಲಾ. ಮೃತ್ಯು ಸಿಂಹಾಸನ. ಅನ್ನಾವತಾರ. ಮಹಾಶ್ವೇತೆ. ನಿಧನ ಏಪ್ರಿಲ್ ೧೦, ೧೯೮೪ರಲ್ಲಿ ಹೃದಯಾಘಾತವಾಗಿ ಬೆಂಗಳೂರಿನ ರಾಜಾಜಿನಗರದಲ್ಲಿರುವ ವರಲಕ್ಷ್ಮಿ ನರ್ಸಿಂಗ್ ಹೋಂ ಗೆ ಸೇರಿದ್ದವರು, ಅಲ್ಲಿಯೇ ನಿಧನ ಹೊಂದಿದರು. ಪ್ರಶಸ್ತಿಗಳು ಇವರ ದುರ್ಗಾಸ್ತಮಾನ ಕಾದಂಬರಿಗೆ ೧೯೮೫ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಬಾಹ್ಯ ಸಂಪರ್ಕಗಳು ತ.ರಾ. ಸುಬ್ಬರಾಯ (ತ ರಾ ಸು) ತ.ರಾ.ಸುಬ್ಬರಾಯ (19201984) ತ.ರಾ.ಸುಬ್ಬರಾಯ (19201984) ತ.ರಾ.ಸುಬ್ಬರಾಯ ಇಂದು ಜನುಮದಿನ: ತ.ರಾ.ಸು. ತ.ರಾ.ಸುಬ್ಬರಾಯ ಉಲ್ಲೇಖ ತ.ರಾ.ಸುಬ್ಬರಾಯ ಕನ್ನಡ ಸಾಹಿತ್ಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
ಡಾ. ಎ.ಎನ್.ಮೂರ್ತಿ ರಾವ್ (ಅಕ್ಕಿಹೆಬ್ಬಾಳು ನರಸಿಂಹಮೂರ್ತಿರಾಯರು) (ಜೂನ್ ೧೬, ೧೯೦೦ ೨೪ ಆಗಸ್ಟ್, ೨೦೦೩) ಕನ್ನಡದ ಖ್ಯಾತ ವಿಮರ್ಶಕ ಮತ್ತು ಸಾಹಿತಿ. ಶತಾಯುಷಿಯಾಗಿ ಮೂರು ಶತಮಾನಗಳಲ್ಲಿ ( ೧೯,೨೦,೨೧ನೆಯ ಶತಮಾನಗಳು) ಬದುಕಿದ ವ್ಯಕ್ತಿ. ಜನನ, ಕುಟುಂಬ ಮಂಡ್ಯ ಜಿಲ್ಲೆಯ ಅಕ್ಕಿಹೆಬ್ಬಾಳು ಅವರ ಜನ್ಮಸ್ಥಳ. ತಂದೆ ಎ.ಸುಬ್ಬರಾವ್ ತಾಯಿ ಪುಟ್ಟಮ್ಮ, ಹೆಂಡತಿ ಜಯಲಕ್ಷ್ಮಿ. ಮಕ್ಕಳು: ಎ.ಎನ್. ಸುಬ್ಬರಾಮಯ್ಯ, ಎ.ಎನ್. ನಾಗರಾಜ್ ಮತ್ತು ಎ.ಎನ್ ರಾಮಚಂದ್ರರಾವ್,. ವಿದ್ಯಾಭ್ಯಾಸ ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲು ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಎಂ.ಎ. (ಇಂಗ್ಲೀಷ್ ಸಾಹಿತ್ಯ) ವ್ಯಕ್ತಿತ್ವ ಪರಿಪಕ್ವತೆ ಎನ್ನುವ ಮಾತು ಲಕ್ಷ ಜನರಲ್ಲಿ ಒಬ್ಬರಿಗೆ ಸಾರ್ಥಕವಾಗಿ ಅನ್ವಯಿಸಬಹುದೇನೋ! ಅಂತಹ ಒಬ್ಬರು ಡಾಕ್ಟರ್ ಎ.ಎನ್.ಮೂರ್ತಿರಾಯರು. ಒಂದು ನೂರು ವರ್ಷಕ್ಕೆ ಕಾಲಿಟ್ಟಿರುವ ಅವರ ವಯಸ್ಸು ಕಾಣುವುದು ಅವರ ಬಿಳಿ ಕೂದಲಿನಲ್ಲಿ ಅವರ ವಿದ್ವತ್ತಿನಲ್ಲಿ, ಅವರ ಪರಿಪಕ್ವತೆ ಯಲ್ಲಿ. ಆದರೆ ನಡಿಗೆಯ ವೇಗದಲ್ಲಿ, ಜೀವನ ಶ್ರದ್ದೆಯಲ್ಲಿ, ಪುಸ್ತಕಗಳನ್ನು ಓದುವ ಉತ್ಸಾಹದಲ್ಲಿ ಅವರು ಇನ್ನು ಐವತ್ತು ವರ್ಷ ಚಿಕ್ಕವರು. ಇವತ್ತಿಗು ಬೆಳಗಾಗಿ ೫ ಗಂಟೆಗೆ ೫ ಮೈಲಿ ಸುತ್ತಾಟಕ್ಕೆ ಸಿದ್ಧರೆ. ಒಳ್ಲೆಯ ಸಂಗೀತ ಕಛೇರಿ ಇದೆ ಎಂದರೆ ಬೆಂಗಳೂರಿನಿಂದ ಮೈಸೂರಿಗೆ ಹೋಗುವವರೆ. ಒಂದು ಒಳ್ಳೆಯ ಪುಸ್ತಕ ಓದಿದೆ ಅದನ್ನು ಪಡೆದು ಓದುವವರೆ, ನದಿಯಲ್ಲಿ ಸಾದ್ಯವಾದಷ್ಟು ದೂರ ನಡೆದು ಹೋಗಿ ಸ್ನಾನ ಮಾಡುವವರೆ. ಇತರರನ್ನು ತಮನ್ನೂ ಹಾಸ್ಯ ಮಾಡಿಕೊಳ್ಳುತ್ತ ಗಂಟೆಗಟ್ಟಲೆ ಕಳೆಯುವವರು. ಆ ಹಾಸ್ಯದಲ್ಲಿ ಕುಚೇಷ್ಟೆ ಇಲ್ಲ, ಹಗುರ ಮಾತಿಲ್ಲ. ಅವರ ಪರಿಪಕ್ವತೆ ಅವರ ಸಾಹಿತ್ಯದಲ್ಲಿ, ನಿತ್ಯಜೀವನದಲ್ಲಿ, ಇತರೊಡನೆ ನಡೆದುಕೊಳ್ಳುವ ರೀತಿಯಲ್ಲಿ ಕಾಣುತ್ತದೆ. ಜೀವನದ ಗಂಭೀರ ಅನುಭವಗಳು, ಸಾಮಾನ್ಯ ಅನುಭವಗಳು ಇವುಗಳಿಗೆ ಅವರು ತೋರಿಸುವ ಪ್ರತಿಕ್ರಿಯೆಯಲ್ಲಿ ಕಾಣುತ್ತದೆ. ಅವರು ಮೊದಲು ಪ್ರಸಿದ್ದರಾದದ್ದು ಆಷಾಢಭೂತಿ ನಾಟಕದಿಂದ. ಹಗಲು ಕನಸುಗಳು, ಅಲೆಯುವ ಮನ ಪ್ರಬಂಧ ಸಂಗ್ರಹಗಳಿಂದ ಷೇಕ್ಸ್ ಪಿಯರ್ ಪುಸ್ತಕದಿಂದ. ಪ್ರಾಯಶಃ ಅವರು ಸರ್ಕಾರಿ ಕೆಲಸದಿಂದ ನಿವೃತ್ತರಾಗುವ ಮೊದಲು ಬರೆದದ್ದಕ್ಕಿಂತ ಅನಂತರ ಬರೆದದ್ದೆ ಹೆಚ್ಚು. ಹಗಲು ಕನಸುಗಳು ಪ್ರಕಟವಾದಾಗ ಅವರಿಗೆ ೩೭ ವರ್ಷ. ಅಲ್ಲಿಂದ ಪ್ರಾರಂಭವಾಗಿ ಅವರು ಇತ್ತೀಚೆಗೆ ಬರೆದ ದೇವರು ಪುಸ್ತಕದವರೆಗೆ ಕಾಣುವುದು ಹೃದಯ ಬುದ್ಧಿಗಳೆರಡರ ಸಮತೋಲನ ಸಾಧಿಸಿದ ಪ್ರಕಾಶ ಮಾನವ ಮನಸ್ಸು. ಕಠಿಣ ವಾಸ್ತವಿಕತೆ, ಕ್ರಿಯಾಶಕ್ತಿಗಳ ಅಗತ್ಯವನ್ನು ಗುರುತಿಸುತ್ತಲೆ ಕನಸುಗಳ ಅಗತ್ಯವನ್ನು ಅರಿಯಬಲ್ಲ, ಬಾಳಿನ ದುಃಖ, ಅನ್ಯಾಯ, ರಹಸ್ಯಗಳ ಅರಿವಿರುವ, ಸುತ್ತಲಿನ ಮನುಷ್ಯರ ದೌರ್ಬಲ್ಯ, ಸಣ್ಣತನ, ಮಿತಿಗಳನ್ನು ಕಾಣಬಲ್ಲ, ಈ ಮಣ್ಣಿನ ದೇಹದಲ್ಲಿ ಎಂತಹ ಹಿರಿಮೆ ಬೆಳಗುತ್ತದೆ ಎಂದು ಕೃತಜ್ಞತೆಯಿಂದ ಸಂತೋಷಪಡಬಲ್ಲ ಮನಸ್ಸು. ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಾಗ ನಡೆದ ಒಂದು ಘಟನೆಯನ್ನು ಅಂದು ಅವರ ಜೊತೆಗಿದ್ದವರು ಹೇಳುತ್ತಾರೆ. ಆವತ್ತು ಮೈಸೂರಿನಲ್ಲಿ ಹಿರಿಯ ವಿದ್ವಾಂಸರೊಬ್ಬರು ಡಾಕ್ಟರ್ ರಾಮನಾಥನ್ ಅವರದು ಎಂದು ಕಾಣುತ್ತದೆ. ಸಂಗೀತ ಕಛೇರಿ, ಮೂರ್ತಿರಾಯರು ಸಂಗೀತಕ್ಕೆ ಹೋಗಿದ್ದರು. ಅವರಿಗೆ ಪ್ರಶಸ್ತಿ ಬಂದ ಸುದ್ದಿ ಆಗ ತಾನೆ ಪ್ರಕಟವಾಯಿತು. ಅವರ ಅಭಿಮಾನಿಗಳೊಬ್ಬರು ಆ ವಿಷಯ ಪ್ರಸ್ತಾಪಿಸಿದಾಗ ಮೂರ್ತಿರಾಯರು ಹೇಳಿದರು, ಈ ದಿವ್ಯ ಸಂಗೀತ ಕಿವಿಯನ್ನು ತುಂಬಿರಬೇಕಾದರೆ ಆ ಮಾತು ಯಾಕೆ, ಬಿಡಿ. ಮೂರ್ತಿರಾಯರು ಡಾ.ರಾಧಕೃಷ್ಣನ್ ಅವರ ಶಿಷ್ಯರು. ಅವರನ್ನು ಕುರಿತು ಒಂದೆಡೆ ಬರೆಯುತ್ತಾರೆ. ಅವರ ಪಾಂಡಿತ್ಯ ಸದಾ ಅವರ ಹೆಕ್ಕತ್ತಿನ ಮೇಲೆ ಕುಳಿತಿರುವಂಥಾದಲ್ಲ, ಅದು ಅವರ ತೊತ್ತು, ಕರೆದಾಗ ಮಾತ್ರ ಬರುವಂಥದು. ಇದೇ ಮಾತನ್ನು ರಾಯರಿಗೂ ಅನ್ವಯಿಸಿ ಹೇಳಬಹುದು. ಇಂಗ್ಲಿಷ್, ಕನ್ನಡ, ಭಾಷೆಗಳನ್ನೂ ಸಾಹಿತ್ಯವನ್ನೂ ಅಂಗೈಯ ನೆಲ್ಲಿಕಾಯಿ ಮಾಡಿಕೊಂಡಿರುವವರು. ಫ್ರೆಂಚ್ ಭಾಷೆ ಬಲ್ಲವರು. ಕಾಲೇಜಿನಲ್ಲಿ ತತ್ವಶಾಸ್ತವನ್ನು ಅಭ್ಯಾಸ ಮಾಡಿ ಇಂದಿನವರೆಗೂ ಪಾಶ್ಚಾತ್ಯ ಭಾರತೀಯ ತತ್ವಶಾಸ್ತ್ರಗಳಲ್ಲಿ ಜೀವಂತ ಆಸಕ್ತಿ ಉಳಿಸಿಕೊಂಡಿರುವವರು. ಉಪನಿಷತ್ತು, ವೇದ, ರಾಮಾಯಣ, ಮಹಾಭಾರತ ಅವು ಧರ್ಮ ಗ್ರಂಥಗಳೆಂಬ ದೃಷ್ಠಿಯಿಂದಲ್ಲ, ಮನುಷ್ಯನ ಪ್ರತಿಭೆ ಸೃಷ್ಟಿಸಿರುವ ಮೇರುಕೃತಿಗಳೆಂದು ಅಭ್ಯಾಸ ಮಾಡಿದ್ದಾರೆ. ವಿಜ್ಞಾನ, ಅರ್ಥಶಾಸ್ತ್ರ, ಸಮಾಜ ವಿಜ್ಞಾನ ಮೊದಲಾದವುಗಳಲ್ಲಿ ಆಸಕ್ತಿಯನ್ನು ಉಳಿಸಿಕೊಂಡು ಪುಸ್ತಕಗಳನ್ನೂ ಇಂದೂ ಓದುತ್ತಾರೆ. ಅವರಿಂದು ಬಾಹ್ಯವಾಗಿ ನಮ್ಮೊಡನಿಲ್ಲವಾದರೂ, ಅವರ ಸಾಹಿತ್ಯ ವೈಚಾರಿಕ ವಿಮರ್ಶೆ, ತಾತ್ವ್ತಿಕದೃಷ್ಠಿಕೋನದ ಮೂಲಕ ಸದಾ ಜೀವಂತವಾಗಿರುತ್ತಾರೆ. ವೃತ್ತಿ ಮೈಸೂರಿನ ಮಹಾರಾಜಾ ಹೈಸ್ಕೂಲಿನಲ್ಲಿ ಉಪಾಧ್ಯಾಯರು, ೧೯೨೫೧೯೨೭ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರು, ೧೯೨೭೧೯೪೦ ಶಿವಮೊಗ್ಗದ ಇಂಟರ್ಮೀಡಿಯೆಟ್ ಕಾಲೇಜಿನಲ್ಲಿ ಉಪಪ್ರಾಧ್ಯಾಪಕರು, ೧೯೪೦೧೯೪೩ ಗೌರವ ಕೆಲಸಗಳು ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು ೧೯೫೪ ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು೧೯೫೪೫೬ ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹ ಸಮಿತಿಯ ಕನ್ವೀನರ್ ಛೇರ್ಮನ್ ದಕ್ಷಿಣ ಭಾಷಾ ಪುಸ್ತಕ ಟ್ರಸ್ಟ್ ನ ಕನ್ನಡ ಕನ್ವೀನರ್ ಛೇರ್ಮನ್ ಭಾರತೀಯ ಆಕಾಶವಾಣಿಯ ಕೇಂದ್ರೀಯ ಕಾರ್ಯಕ್ರಮಗಳ ಸಲಹಾ ಕಮಿಟಿಯ ಸದಸ್ಯರಾಗಿ ೪ ವರ್ಷಗಳ ಕಾಲ ಸೇವೆ. ಮೈಸೂರು ಸರ್ಕಾರದ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಕೃತಿಗಳು ಪ್ರಬಂಧಗಳ ಮೂಲಕ ಇವರು ಕನ್ನಡ ಸಾಹಿತ್ಯಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ೧೯೩೭ರಲ್ಲಿ ಇವರ ಮೊದಲ ಕೃತಿ ಹೂವುಗಳು(ಪ್ರಬಂಧ ಸಂಕಲನ) ಪ್ರಕಟವಾಯಿತು. ಎಂಟು ಪ್ರಬಂಧಗಳ ಬಿಡಿ ಲೇಖನಗಳನ್ನು ಈ ಸಂಕಲನವು ಒಳಗೊಂಡಿದೆ. ದೇವರು ಎಂಬ ವೈಚಾರಿಕ ಕೃತಿಗೆ ಪಂಪ ಪ್ರಶಸ್ತಿ ಲಭಿಸಿದೆ ಮತ್ತು ಆಂಗ್ಲ ಭಾಷೆಗೆ ತರ್ಜುಮೆಯಾಗಿ ಪ್ರಸಿದ್ಧವಾಗಿದೆ. ಅನುವಾದಗಳು ಸಾಕ್ರೆಟೀಸನ ಕೊನೆಯ ದಿನಗಳು (ಪ್ಲೇಟೋನ , , , ಸಂವಾದಗಳ ಅನುವಾದ) ಹವಳದ ದ್ವೀಪ (ಆರ.ಎಂ.ಬ್ಯಾಲಂಟಯಿನ್ ನ ನ ಸಂಗ್ರಹಾನುವಾದ) ಯೋಧನ ಪುನರಾಗಮನ(ಅನುವಾದಿತ ಕಥೆಗಳು) ಪಾಶ್ಚಾತ್ಯ ಸಣ್ಣ ಕಥೆಗಳು (ಅನುವಾದಿತ ಕಥೆಗಳು) ಅಮೆರಿಕನ್ ಸಾಹಿತ್ಯ ಚರಿತ್ರೆ ಇಂಡಿಯ, ಇಂದು ಮತ್ತು ನಾಳೆ (ಜವಹರಲಾಲ್ ನೆಹರೂರ ಪುಸ್ತಕದ ಅನುವಾದ) ಚಂಡಮಾರುತ (ಶೇಕ್ಸ್ ಪಿಯರ್ ನ ಅನುವಾದ) ಬೂರ್ಜಾ ಆಗಿದ್ದವನು ಮಹನೀಯನಾದದ್ದು(ಮೋಲಿಯರನ ನಾಟಕ ) ಲಲಿತ ಪ್ರಬಂಧಗಳು ಹಗಲುಗನಸುಗಳು ಮಿನುಗು ಮಿಂಚು ಅಲೆಯುವ ಮನ ಜನತಾ ಜನಾರ್ದನ ಸಮಗ್ರ ಲಲಿತ ಪ್ರಬಂಧಗಳು ಸಮಗ್ರ ಲಲಿತ ಪ್ರಬಂಧಗಳು (ವಿಸ್ತೃತ ಆವೃತ್ತಿ) ರೂಪಾಂತರಗಳು ಆಷಾಢಭೂತಿ (ಫ್ರೆಂಚ್ ನ ಮೋಲಿಯರನ ತಾರ್ತುಫ್ನಾಟಕದ ರೂಪಾಂತರ). ಆಷಾಡಭೂತಿಯನ್ನು ಆಧರಿಸಿ ಎಂ.ವಿ.ಕೃಷ್ಣಸ್ವಾಮಿಯವರು ಸುಬ್ಬಾಶಾಸ್ತ್ರಿ ಎಂಬ ಸಿನಿಮಾವನ್ನು ನಿರ್ಮಿಸಿದ್ದಾರೆ. ವಿಮರ್ಶೆ ಷೇಕ್ಸ್ ಪಿಯರ್ಪೂರ್ವಭಾಗ ಮಾಸ್ತಿಯವರ ಕಥೆಗಳು ಪೂರ್ವ ಸೂರಿಗಳೊಡನೆ ಸಾಹಿತ್ಯ ಮತ್ತು ಸತ್ಯ ವಿಮರ್ಶಾತ್ಮಕ ಪ್ರಬಂಧಗಳು, ಲೇಖನ ಗ್ರಂಥಗಳು ಜನತಾ ಜನಾರ್ದನ ಗಾನ ವಿಹಾರ ಇತರೆ ಚಿತ್ರಗಳು ಪತ್ರಗಳು (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕೃತಿ) ಬಿ.ಎಂ.ಶ್ರೀಕಂಠಯ್ಯ (ವಿಮರ್ಶಾತ್ಮಕ ಜೀವನ ಚರಿತ್ರೆ) ಅಪರವಯಸ್ಕನ ಅಮೆರಿಕಾ ಯಾತ್ರೆ (ಪ್ರವಾಸ ಕಥನ) ಸಂಜೆಗಣ್ಣಿನ ಹಿನ್ನೋಟ (ಆತ್ಮಚರಿತ್ರೆ) ದೇವರು (ವಿಚಾರ) ಮಹಾಭಾರತದಲ್ಲಿ ಕೇಡು ಎಂಬುದರ ಸಮಸ್ಯೆ ಪುರಸ್ಕಾರಗಳು ೧೯೭೪, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೭೭, ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್. ೧೯೭೮, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ (ಅಪರವಯಸ್ಕನ ಅಮೆರಿಕಾ ಯಾತ್ರೆ) ೧೯೭೯, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಚಿತ್ರಗಳು ಪತ್ರಗಳು) ೧೯೮೧, ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ (ಚಂಡಮಾರುತ) ೧೯೮೪, ಅಧ್ಯಕ್ಷ ಪದವಿಕೈವಾರದಲ್ಲಿ ನಡೆದ ಅಖಿಲ ಭಾರತ 56ನೆಯ ಕನ್ನಡ ಸಾಹಿತ್ಯ ಸಮ್ಮೇಳನ ೧೯೮೪, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ೧೯೯೪, ಪಂಪ ಪ್ರಶಸ್ತಿ ೧೯೯೯, ಮಾಸ್ತಿ ಪ್ರಶಸ್ತಿ ೧೯೯೯, ಭಾರತೀಯ ವಿದ್ಯಾ ಭವನದ ಫೆಲೋಶಿಪ್ ಅಪರವಯಸ್ಕನ ಅಮೆರಿಕಾ ಯಾತ್ರೆ, ಸಂಜೆಗಣ್ಣಿನ ಹಿನ್ನೋಟ ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಉಲ್ಲೇಖಗಳು ಎ.ಎನ್.ಮೂರ್ತಿರಾವ್ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಪಂಪ ಪ್ರಶಸ್ತಿ ಪುರಸ್ಕೃತರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು
ಯಶವಂತ ಚಿತ್ತಾಲ ಕನ್ನಡದ ಖ್ಯಾತ ಕತೆಗಾರ ಮತ್ತು ಕಾದಂಬರಿಕಾರ. ಐವತ್ತೊಂದು ಕಥೆಗಳನ್ನು ಬರೆದಿರುವ ಚಿತ್ತಾಲರರು, ಉತ್ತರ ಕನ್ನಡದ ಚಿಕ್ಕ ಗ್ರಾಮ ಹನೇಹಳ್ಳಿಯ ಕಡೆಯವರು. ಪಾಲಿಮರ್ ಟೆಕ್ನೊಲಜಿ ಓದಿ ಮುಂಬಯಿ ಹೋಗಿ ಅಲ್ಲೇ ನೆಲೆಸಿದರು. ಜೀವನ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹನೇಹಳ್ಳಿಯಲ್ಲಿ ಜನನ. ಈ ಪುಟ್ಟ ಹಳ್ಳಿ ಚಿತ್ತಾಲರ ಅಂತರಂಗದ ಒಂದು ಅವಿಭಾಜ್ಯ ಅಂಗವಾಗಿ ಇದೆ. ಅದು ಅವರ ಜೀವನ ಮೌಲ್ಯಗಳನ್ನು ಸಾಣೆಹಿಡಿಯುತ್ತಾ ಹೋಗುತ್ತದೆ. ಚಿತ್ತಾಲರ ತಂದೆ ವಿಠೋಬ. ತಾಯಿ, ರುಕ್ಮಿಣಿ, ದಂಪತಿಗಳ ೭ ಮಕ್ಕಳಲ್ಲಿ ಐದನೆಯವರು ಯಶವಂತರು. ಮನೆ ಭಾಷೆ ಕೊಂಕಣೀಮರಾಠಿ. ಪ್ರಾರಂಭಿಕ ಶಿಕ್ಷಣ, ಹನೇಹಳ್ಳಿ, ಕುಮಟ, ಧಾರವಾಡ, ಮುಂಬಯಿ ಮುಂತಾದ ಕಡೆಗಳಲ್ಲಿ. ಉಚ್ಚ ಶಿಕ್ಷಣ ಅಮೆರಿಕದ ನ್ಯೂಜರ್ಸಿಯಲ್ಲಿ ಪಡೆದಿದ್ದರು. ಕವಿ ಗಂಗಾಧರ ಚಿತ್ತಾಲರು ಇವರ ಅಣ್ಣ. ಶಾಂತಿನಾಥ ದೇಸಾಯಿಯವರು ಮತ್ತು ಗೌರೀಶ ಕಾಯ್ಕಿಣಿಯವರು ಚಿತ್ತಾಲರ ಮೇಲೆ ದಟ್ಟವಾದ ಪ್ರಭಾವ ಬೀರಿದ್ದರು. ಚಿತ್ರಕಲೆಯನ್ನು ಕಲಿಯುವ ಗೀಳು, ಬಾಲ್ಯದಲ್ಲೇ ಅಂತರಾಳದಲ್ಲಿ ಹುದುಗಿತ್ತು. ಆಸಕ್ತಿಗಳು ಅವರು ಮುಂಬಯಿಗೆ ಬಂದು, ಕಲಾನಿಕೇತನ ಎಂಬ ಶಾಲೆಗೆ ಸಂಜೆತರಗತಿಗೆ ಸೇರಿದರು. ಎಮ್. ಎನ್. ರಾಯ್ ಅವರ ವಿಚಾರಧಾರೆಗಳಿಗೆ ಸ್ಪಂದಿಸಿ, ರ್ಯಾಡಿಕಲ್ ಡೆಮೊಕ್ರಾಟಿಕ್ ಪಕ್ಷದ ಸದಸ್ಯರಾದರು. ನವಮಾನವತಾವಾದಿ ಮಾರ್ಕ್ಸ್, ಎರಿಕ್ ಪ್ರಾಂ, ಎಡಿಂಗ್ ಟನ್, ಹಕ್ಸ್ಲಿ, ಫ್ರಾಯ್ಡ್, ಎಡ್ಲರ್, ಮುಂತಾದ ಹಲವು ಧೀಮಂತರ ವಿಚಾರಧಾರೆಗಳಿಗೆ ತಮ್ಮ ಮನಸ್ಸನ್ನು ತೆರೆದಿಟ್ಟರು. ಪ್ಲಾಸ್ಟಿಕ್ತಂತ್ರಜ್ಞಾನದಲ್ಲಿ, ಶಿಕ್ಷಣ ಪ್ರಶಿಕ್ಷಣಗಳನ್ನು ಪಡೆದು, ಬೇಕ್ಲೈಟ್ ಹೈಲಂ ಎಂಬ ಸಂಸ್ಥೆಯಲ್ಲಿ ನೌಕರಿಗೆ ಸೇರಿಕೊಂಡರು. ೩೦ ವರ್ಷಕ್ಕೂ ಮೀರಿ ಸಲ್ಲಿಸಿದ ಸೇವೆಯಿಂದ, ಆಧುನಿಕ ಜಗತ್ತಿನ ಸ್ವರೂಪವನ್ನೆ ನಿಯಂತ್ರಿಸುವ, ಬಂಡವಾಳಶಾಹೀ, ಕೈಗಾರಿಕಾ ಜಗತ್ತಿನ ನಿಕಟಪರಿಚಯವನ್ನು ಮಾಡಿಕೊಂಡರು. ಉದ್ಯೋಗದ ಪರಿಸರದಲ್ಲೂ, ವೈಯಕ್ತಿಕ ಜೀವನದಲ್ಲೂ, ಆದ ದುರಂತಗಳೂ, ಬಿಕ್ಕಟ್ಟುಗಳೂ, ಅವರ ಬರವಣಿಗೆಯ ಗ್ರಾಸಗಳಾದವು. ಅವೆಲ್ಲವನ್ನೂ ಮೆಟ್ಟಿ, ತಮ್ಮ ಜೀವನಶ್ರದ್ಧೆಯ ಸೋಪಾನದ ಮೇಲೆ ನಿಂತು, ಆತ್ಮವಿಶ್ವಾಸದಿಂದ ಮುನ್ನುಗ್ಗಿದರು. ತಮ್ಮ ಸೃಜನಶೀಲ ವ್ಯಕ್ತಿತ್ವದಿಂದ, ತಮ್ಮ ಕಥೆಕಾದಂಬರಿಗಳಲ್ಲಿ ಅದರ ವಿಶಿಷ್ಟರೂಪಗಳ ಅನನ್ಯ ಬರವಣಿಗೆಯನ್ನು ನೀಡಿದ್ದಾರೆ. ಸಾಹಿತ್ಯ ಕೃಷಿ ಬೊಮ್ಮಿಯ ಹುಲ್ಲು ಹೊರೆ ೧೯೪೯ರಲ್ಲಿ ಬರೆದ ಅವರ ಮೊತ್ತ ಮೊದಲ ಕಥೆ. ೧೯೫೭ರಲ್ಲಿ ಮೈತಳೆದ, ಸಂದರ್ಶನ ಕಥಾಸಂಕಲನದಿಂದ ಹಿಡಿದು, ೧೯೯೦ರಲ್ಲಿ ಹೊರಬಂದ ಪುರುಷೋತ್ತಮದವರೆಗೆ, ಚಿತ್ತಾಲರು ಬರೆದ, ವಿವಿಧ ಕೃತಿಗಳನ್ನು ಪರಿಶೀಲಿಸಿದರೆ, ಆ ಬರವಣಿಗೆಯ ಹಿಂದಿರುವ ತುಡಿತಗಳನ್ನು ನಾವು ಗುರುತಿಸಬಹುದು. ಅವರ ಜನ್ಮಭೂಮಿ, ಹನೇಹಳ್ಳಿ, ಅವರ ಹಲವಾರು ಬರಹಗಳ ಕೇಂದ್ರಬಿಂದು. ಬಾಲ್ಯದ ಭೂತಕಾಲವನ್ನು, ವರ್ತಮಾನದ ಸಂಕೀರ್ಣ ಬದುಕಿನೊಂದಿಗೆ ಹೋಲಿಸಿ, ಅದನ್ನು ಇಡೀ ಮನುಕುಲದಲ್ಲಿ ಸಂಭವಿಸಿರುವ ಅಸ್ತಿತ್ವದ ಬಿಕ್ಕಟ್ಟಿಗೆ ಪ್ರತಿಮೆಯಾಗಿ, ಪರಿವರ್ತಿಸುತ್ತಾರೆ ಅವರ ಪ್ರಶಸ್ತಿ ವಿಜೇತ ಕಾದಂಬರಿ, ಪುರುಷೋತ್ತಮ ದಲ್ಲಿ, ನಾಯಕನ ಸಿದ್ಧಿಯ ಚರಮಕ್ಷಣಗಳೆಂದರೆ, ಅವನ ಹನೇಹಳ್ಳಿಗೆ ಮತ್ತೆ ಜೀವತುಂಬಿತುಳುಕಾಡುವುದೇ ಆಗಿದೆ. ಅವರು ಏಕೆ ಬರೆಯುತ್ತಾರೆ ಎನ್ನುವ ಬಗ್ಗೆ ಕೊಟ್ಟಿರುವ ನಿರೂಪಣೆ ಅನನ್ಯವಾಗಿದೆ. ಒಟ್ಟಿನಲ್ಲಿ ನಾನು ಬರೆಯುತ್ತಿದ್ದದ್ದು, ನಾನು ನಾನೇ ಆಗಲು. ನಾನು ನಾನಾಗಿಯೇ ಉಳಿದು, ಉಳಿದವರಿಂದ ಬರೆಯಲು ಪ್ರೀತಿಸುವುದನ್ನು ಕಲಿಯಲು, ಪ್ರೀತಿಸುವುದರ ಮೂಲಕ, ಜೀವಂತ ಸಂಬಂಧಗಳನ್ನು ಹುಟ್ಟಿಸಲು. ಉಳಿದವರನ್ನು ತಿದ್ದುವುದಕ್ಕಲ್ಲ ಆ ಯೋಗ್ಯತೆಯಾಗಲೀ ಅಧಿಕಾರವಾಗಲೀ ನನಗಿಲ್ಲ. ಕೃತಿಗಳು ಕಥಾಸಂಕಲನಗಳು ಸಂದರ್ಶನ (೧೯೫೬) ಆಬೋಲಿನ (೧೯೬೦) ಆಟ (೧೯೬೯) ಬೇನ್ಯಾ (೧೯೮೩) ಆಯ್ದ ಕತೆಗಳು (೧೯೭೬) ಕಥೆಯಾದಳು ಹುಡುಗಿ (೧೯೮೦) ಚಿತ್ತಾಲರ ಕತೆಗಳು (೧೯೮೩) ಕುಮಟೆಗೆ ಬಂದಾ ಕಿಂದರಿಜೋಗಿ (೧೯೯೭) ಓಡಿ ಹೇೂದಾ ಮುಟ್ಟಿ ಬಂದಾ (೨೦೦೧) ಸಿದ್ಧಾರ್ಥ (೧೯೮೮) ಐವತ್ತೊಂದು ಕತೆಗಳು (೨೦೦೦) ಪುಟ್ಟನ ಹೆಜ್ಜೆ ಕಾಣೋರಿಲ್ಲ (೨೦೦೬) ಕೇೂಳಿ ಕೂಗುವ ಮುನ್ನ (೨೦೧೨) ಸಮಗ್ರ ಕತೆಗಳು ( ಸಂಪುಟ ೧ ಮತ್ತು ೨ ) (೨೦೦೯) ಕಾದಂಬರಿಗಳು ಮೂರು ದಾರಿಗಳು (೧೯೬೪) ಶಿಕಾರಿ (೧೯೭೯) ಛೇದ (೧೯೮೫) ಪುರುಷೋತ್ತಮ (೧೯೯೦) ಕೇಂದ್ರ ವೃತ್ತಾಂತ (೧೯೯೭) ದಿಗಂಬರ (೨೦೨೨) ಪ್ರಬಂಧ ಸಂಗ್ರಹಗಳು ಸಾಹಿತ್ಯ, ಸೃಜನಶೀಲತೆ ಮತ್ತು ನಾನು (೧೯೮೧) ಸಾಹಿತ್ಯದ ಸಪ್ತಧಾತುಗಳು (೨೦೦೧) ಅಂತಃಕರಣ (೨೦೦೮) ಪ್ರಶಸ್ತಿಗಳು ಕಥೆಯಾದಳು ಹುಡುಗಿ ಎಂಬ ಕೃತಿಗೆ ೧೯೮೩ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಮಹಾರಾಷ್ಟ್ರ ಗೌರವ ಪುರಸ್ಕಾರ ದೊರಕಿದೆ. ಶಿಕಾರಿ ಕಾದಂಬರಿಗೆ ೧೯೭೯ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿಶೇಷ ಪ್ರಶಸ್ತಿ ಮತ್ತು ವರ್ಧಮಾನ ಪ್ರಶಸ್ತಿ ದೊರೆತಿದೆ. ಪುರುಷೋತ್ತಮ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಮತ್ತು ಭಾರತೀಯ ಭಾಷಾ ಸಂಸ್ಥಾನದ ಪ್ರಶಸ್ತಿ. ೨೦೦೨ನೇ ಸಾಲಿನ ನಿರಂಜನ ಪ್ರಶಸ್ತಿ ಪಂಪ ಪ್ರಶಸ್ತಿ ಮಾಸ್ತಿ ಪ್ರಶಸ್ತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಶಿವರಾಮ ಕಾರಂತ ಪ್ರಶಸ್ತಿ ಶ್ರೀ ಗುರುನಾರಾಯಣ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿ ನಿಧನ ಶ್ರೀ ಯಶವಂತ ಚಿತ್ತಾಲರು ೨೦೧೪ ರ ೨೨, ಶನಿವಾರ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರ ಅಂತ್ಯ ಸಂಸ್ಕಾರವು ೨೩, ಭಾನುವಾರದಂದು, ಮುಂಬೈನ ಶಿವಾಜಿ ಪಾರ್ಕ್ ನ, ವಿದ್ಯುತ್ ಚಿತಾಗಾರದಲ್ಲಿ ಅವರ ಹಿರಿಯ ಮಗ ರವೀಂದ್ರನಿಂದ ನೆರೆವೇರಿಸಲ್ಪಟ್ಟಿತು. ಉಲ್ಲೇಖಗಳು ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಪಂಪ ಪ್ರಶಸ್ತಿ ಪುರಸ್ಕೃತರು ಮುಂಬಯಿ ಕನ್ನಡಿಗರು ಲೇಖಕರು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಮುಂಬಯಿನ ಲೇಖಕರು
ಎಮ್. ಶಿವರಾಮ್ ಕನ್ನಡದ ಖ್ಯಾತ ಮನಃಶಾಸ್ತಜ್ಞ ಮತ್ತು ಸಾಹಿತಿ. ಇವರ ಮನಮಂಥನ ಎಂಬ ಕೃತಿಗೆ ೧೯೭೬ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
ಪ್ರೊ. ಸಂ. ಶಿ. ಭೂಸನೂರಮಠ (ನವೆಂಬರ್ ೭, ೧೯೧೦ ನವೆಂಬರ್ ೬, ೧೯೯೧) ಕನ್ನಡ ಸಾಹಿತ್ಯಲೋಕದ ಮಹಾನ್ ಸಾಹಿತಿಗಳಲ್ಲೊಬ್ಬರು. ಅವರ ಶೂನ್ಯ ಸಂಪಾದನೆಯ ಪರಾಮರ್ಶೆ ಮತ್ತು ಭವ್ಯ ಮಾನವ ಮುಂತಾದ ಕೃತಿಗಳು ಕನ್ನಡದ ಶ್ರೇಷ್ಠ ಸಾಹಿತ್ಯಕ ಕೊಡುಗೆಗಳೆನಿಸಿವೆ. ಜೀವನ ಪ್ರೊ. ಸಂ. ಶಿ. ಭೂಸನೂರಮಠರು ಹುಟ್ಟಿದ್ದು ನವಂಬರ್ ೭, ೧೯೧೦ರಂದು ಧಾರವಾಡ ಜಿಲ್ಲಾ ರೋಣ ತಾಲ್ಲೂಕಿನ ನಿಡಗುಂದಿಯಲ್ಲಿ ಜನಿಸಿದರು. ಪೂರ್ಣ ಹೆಸರು ಸಂಗಯ್ಯ ಶಿವಮೂರ್ತಯ್ಯ ಭೂಸನೂರಮಠ. ತಂದೆಯವರ ಅಲ್ಪ ಸ್ವಲ್ಪ ಕೃಷಿ ಮತ್ತು ವ್ಯಾಪಾರಗಳಿಂದ ಹೊಟ್ಟೆಪಾಡು ನಡೆಯುತ್ತಿತ್ತು. ಆದರೆ ಶಿಕ್ಷಣಕ್ಕೆ ಹಣದ ಅಭಾವ. ಬಾಲಕ ಸಂಗಯ್ಯ ಗದಗಿನಲ್ಲಿ ಪೆಟ್ರೋಲ್ ಬಂಕ್ ಒಂದರಲ್ಲಿ ಪಂಪ್ ಒತ್ತುವ ಕೆಲಸ ಗಿಟ್ಟಿಸಿಕೊಂಡ. ಅದರಿಂದ ತುತ್ತಿನ ಚೀಲಕ್ಕೆ ತಾತ್ಕಾಲಿಕ ತ್ತೃಪ್ತಿಯೇನೋ ಸಿಕ್ಕಿತು. ಆದರೆ ಮನಸ್ಸಿಗೆ, ಬುದ್ಧಿಗೆ ನೆಮ್ಮದಿ ದೊರೆಯಲಿಲ್ಲ. ಕಲಿಯಬೇಕೆಂಬ ಮಹದಾಸೆ ಇಟ್ಟುಕೊಂಡಿದ್ದ ಆ ಬಾಲಕನಿಗೆ ದೈವ, ಮಾನವ ರೂಪದಲ್ಲಿ ಬಂದು ನೆರವಾಯಿತು. ಗದಗಿನಲ್ಲಿ ಇಂಗ್ಲೀಷ್ ಶಾಲೆಯಲ್ಲಿ ಅಧ್ಯಯನ ಮತ್ತು ಮನೆಯಲ್ಲಿ ಸಂಗೀತ ಶಿಕ್ಷಣ ಎರಡೂ ಕ್ರಮವಾಗಿ ನಡೆದವು. ಓದುತ್ತಿರುವಾಗಲೇ ಮದುವೆಯೂ ಆಯಿತು. ೧೯೩೧ರಲ್ಲಿ ಮೆಟ್ರಿಕ್ ಮುಗಿಯುವ ವೇಳೆಗೆ ತಂದೆ ತೀರಿಕೊಂಡರು. ಕುಂಟುತ್ತಾ ನಡೆದಿದ್ದ ಶಿಕ್ಷಣಕ್ಕೆ ಸೊಂಟ ಮುರಿದಂತಾಯಿತು. ಆದರೂ ಪ್ರತಿಭಾವಂತ ವೇತನ ದೊರೆಯಿತು. ಎ. ಟಿ. ಸಾಸನೂರ, ಪತ್ರಾವಳಿ, ಸ.ಸ. ಮಾಳವಾಡ, ಕೆ.ಜಿ. ಕುಂದಣಕರ ಮೊದಲಾದ ಗುರುಗಳ ಕೃಪೆ ಮತ್ತು ಆಶೀರ್ವಾದಗಳ ಬೆಂಬಲದಿಂದ ಬಿ.ಎ ಮುಗಿಸಿ ಕೊಲ್ಲಾಪುರದ ಕಾಲೇಜಿಗೆ ಸೇರಿ, ಮುಂಬಯಿ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿಯನ್ನು ಪ್ರಪ್ರಥಮ ಶ್ರೇಣಿಯಲ್ಲಿ ಗಳಿಸಿದರು. ಬೆಳಗಾವಿಯ ಲಿಂಗರಾಜಾ ಕಾಲೇಜು, ಮತ್ತು ಧಾರವಾಡದ ಕರ್ನಾಟಕ ಕಾಲೇಜುಗಳಲ್ಲಿ ಅಧ್ಯಾಪಕ ವೃತ್ತಿ ಪ್ರಾರಂಭಿಸಿದ ಭೂಸನೂರಮಠರು.ಇಪ್ಪತ್ತು ಮೂರು ವರ್ಷಗಳವರೆಗೆ ಲಿಂಗರಾಜಾ ಕಾಲೇಜಿನಲ್ಲಿ ಸೇವೆಸಲ್ಲಿಸಿ ೧೯೬೬ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾದರು. ೧೯೭೬ರಲ್ಲಿ ನಿವೃತ್ತಿ ಹೊಂದಿದರು. ಸಾಹಿತ್ಯ ಕೃಷಿ ಪ್ರೊ. ಸಂ.ಶಿ. ಭೂಸನೂರಮಠರ ಕೃತಿಗಳು ಸಂಖ್ಯೆಯಲ್ಲಿ ಕಿರಿಯವು. ಸತ್ವದಲ್ಲಿ ಹಿರಿಯವು. ಇವರು ಕೃತಿಗಳು ಒಟ್ಟು ಹದಿಮೂರು. ಅವುಗಳಲ್ಲಿ ಶೂನ್ಯ ಸಂಪಾದನೆಯ ಪರಾಮರ್ಶೆ ಮತ್ತು ಭವ್ಯಮಾನವ ಸೃಜನಾತ್ಮಕ ಕೃತಿಗಳು ಉಳಿದವು ಭಕ್ತಿ ಸುಧಾರಸ, ಗುರುರಾಜ ಚಾರಿತ್ರ, ಮೋಳಿಗೆ ಮಾರಯ್ಯ, ಮತ್ತು ರಾಣಿ ಮಹಾದೆವಿಯರ ವಚನಗಳು (ರೆ. ಉತ್ತಂಗಿ ಚೆನ್ನಪ್ಪನವರೊಡನೆ). ಮೋಳಿಗಯ್ಯನ ಪುರಾಣ, ಲಿಂಗ ಲೀಲಾ ವಿಳಾಸ ಚಾರಿತ್ರ, ಪ್ರೌಡರಾಯನ ಕಾವ್ಯ, ಶೂನ್ಯಸಂಪಾದನೆ, ವಚನ ಸಾಹಿತ್ಯ ಸಂಗ್ರಹ, ಏಕೋತ್ತರ ಶತಸ್ಥಲ, ಶೂನ್ಯಸಂಪಾದನೆಯ ಪರಾಮರ್ಶೆಯ ಸಂಗ್ರಹ, ಶೂನ್ಯಸಂಪಾದನೆ (ಇಂಗ್ಲೀಷ್ ಅನುವಾದದ ನಾಲ್ಕು ಸಂಪುಟಗಳು) ಇವು ಸಂಪಾದಿತ ಕೃತಿಗಳು. ಪರಾಮರ್ಶೆ ಗೂಳೂರ ಸಿದ್ಧವೀರಣ್ಣ ಒಡೆಯನ ಶೂನ್ಯಸಂಪಾದನೆ ಗೆ ಬರೆದ ಒಂದು ವಿಶಿಷ್ಟ ವ್ಯಾಖ್ಯಾನ. ಭೂಸನೂರಮಠರಿಗೆ ಶೂನ್ಯಸಂಪಾದನೆ ಒಂದು ಕಮನೀಯ ಕಾವ್ಯವಾಗಲೀ ಅಥವಾ ಒಂದು ಧರ್ಮಧರ್ಶನಗಳನ್ನು ಎತ್ತಿ ಹಿಡಿಯುವ ಪಠ್ಯಪುಸ್ತಕವಾಗಿಯಾಗಲಿ ಗೋಚರಿಸಿಲ್ಲ. ಮಾನವನಲ್ಲಿ ವಿಶ್ವಮಾನವ ಪ್ರಜ್ನೆಯನ್ನು ಯುಗಯುಗಕ್ಕೂ ಜಾಗೃತಗಳಿಸಬಲ್ಲ ಸತ್ವಶಾಲೀ ರಚನೆಯಾಗಿ ಕಂಡಿದೆ. ಜೀವದೇವರ ಐಕ್ಯಾನು ಸಂಧಾನದ ಅನಿರ್ವಚನೀಯ ಪರಿಣಾಮದ ಪ್ರಾಪ್ತಿ ಅಲ್ಲಿ ಕಂಡಿದೆ. ಭುವಿಯಲ್ಲಿ ಆವಿರ್ಭವಿಸಿದ ಆತ್ಮವು ಸ್ವಯಂ ಸಾಹಸದಿಂದ ವಿಕಾಸಗೊಂಡು, ಕ್ರಮೇಣ ಅರಿವು ಮರೆವುಗಳೆರಡನ್ನೂ ನೀಗಿಕೊಂಡು ನಿರ್ಮಲ ನಿರಂಜನ ಜ್ಯೋತಿಯಾಗಿ, ಕಡೆಯಲ್ಲಿ ನಾದಬಿಂದು ಕಳಾತೀತವಾದ ಮಹೋನ್ನತಿಯ ಮಜಲಿನಲ್ಲಿ ಶಿವ ಅಥವ ಶೂನ್ಯ ಆಗುವ ಬೃಹದ್ದರ್ಶನ ಅಲ್ಲಿ ಬಿತ್ತರಗೊಂಡಿದೆ. ಅದು ಅನುಭಾವದ ಕೆನೆ, ಅಧ್ಯಾತ್ಮದ ತೆನೆ. ಶೂನ್ಯ ಸಂಪಾದನೆಯದು ಅಧ್ಯಾತ್ಮ ಸಾಹಿತ್ಯ. ಪರಾಮರ್ಶೆಯದು ದರ್ಶನ ವಿಮರ್ಶೆ ಅದು ಶಬ್ಧದೊಳಗಣ ನಿಶ್ಯಬ್ದ, ಇದು ನಿಷ್ಯಬ್ದಗರ್ಭಿತ ಶಬ್ದರೂಪ. ಪ್ರಭುದೇವರ ಶೂನ್ಯಸಂಪಾದನೆಯನ್ನು ಸೃಜನಾತ್ಮಕ ಕಾವ್ಯ ಎಂದು ಕರೆಯುವುದಾದರೆ, ಭೂಸನೂರಮಠರ ಪರಾಮರ್ಶೆಯನ್ನು ಒಂದು ಸೃಜನಾತ್ಮಕ ವಿಮರ್ಶೆ ಎಂದು ಘೋಷಿಸಬಹುದು. ಭೂಸನೂರಮಠರು ಭವ್ಯಮಾನವ ಕಥೆಯನ್ನು ಇತಿಹಾಸದಿಂದಲೇ ಆಯ್ದಿದ್ದಾರೆ. ಹನ್ನೆರಡನೆಯ ಶತಮಾನದಲ್ಲಿ ಬದುಕು ಮಾಡಿದ ಮಹಾಮಾನವರಲ್ಲಿ ಒಬ್ಬರಾದ ಅಕ್ಕನ ಆಧ್ಯಾತ್ಮ ಜೀವನವನ್ನು ಕೈಗೆತ್ತಿಕೊಂಡಿದ್ದಾರೆ. ಅಕ್ಕನವರ ಅತ್ಯಂತ ಜನಪ್ರಿಯ ಕಥೆಗೆ ಗುರುಚೆನ್ನಮಲ್ಲ ಮತ್ತು ಶಿಷ್ಯ ಗಿರಿಮಲ್ಲರ ಕಥೆಗಳನ್ನು ಜೋಡಿಸಿದ್ದಾರೆ. ಗುರುಮಲ್ಲರು ಲೋಕಲೋಕಗಳನ್ನು, ಕಲೆ ವಿಜ್ಞಾನಗಳನ್ನು ಬಲ್ಲ ಮೇಧಾವಿ ಪುರುಷರಾಗಿ ಇಲ್ಲಿ ಚಿತ್ರಿತರಾಗಿದ್ದಾರೆ. ಅವರ ಭೋಧೆಯಲ್ಲಿ ನಯವಿದೆ. ನೀತಿಯಿದೆ, ವಿಜ್ಞಾನವಿದೆ, ವೈಚಾರಿಕತೆ ಇದೆ. ಅವರು ವಿಚಾರವಾದಿಗಳು ಅಷ್ಟೇ ಮಟ್ಟದ ತ್ರಿಕಾಲ ಜ್ಞಾನಿಗಳು ಭವ್ಯ ಮಾನವ ಪ್ರಜ್ಞೆ ಉಳ್ಳವರು. ಸಮಷ್ಟಿಯ ವೃಷ್ಟಿ ರೂಪ ಅಥವಾ ವ್ಯಕ್ತರೂಪ, ಗುರುಮಲ್ಲರ ಅನುಭವ, ಅಕ್ಕನವರ ಅನುಭಾವ, ಗಿರಿಮಲ್ಲರ ಅನುಷ್ಠಾನ ಇವುಗಳಿಂದ ಮುಪ್ಪರಿಗೊಂಡಿದೆ ಈ ಮಹಾಕಾವ್ಯ. ತನ್ನರಿವು ತನಗಿಲ್ಲ, ತನ್ನಿರವು ತನಗಿಲ್ಲ ತನ್ನೊಳಗೆ ತಿರುಗಾಡಿ ಬಾಳುವೆಯ ನಡೆಸಿರುವ ವಿಶ್ವಬ್ರಹ್ಮಾಂಡಗಳ ತನ್ನ ಸಂಪದದರಿವು ತನಗಿಲ್ಲ ತನಗಿಲ್ಲ ಕೋಟಿ ನೇತ್ರದ ಕುರುಡು ಆಕಾಶ ಬ್ರಹ್ಮ ರಾತ್ರಿಯ ಮಹಾಕತ್ತಲೆಗೆ ಅಂತಹ ಕತ್ತಲೆಯ ಕಾಂಡದಿಂದ ಕಲ್ಯಾಣದೆಡೆಗೆ ಬರಬೇಕು. ಜಗದ್ದೇಶ್ಯ ನಿಜಃ ಕಾಯಃ ಸ್ವಯಂ ಬ್ರಹ್ಮೇತಿ ವೇದನಾತ್ (ಯಾವಾಗ ತಾನೇ ಬ್ರಹ್ಮ ಎಂಬ ಅರಿವು ಮೂಡಿತೋ ಆಗಲೇ ಜಗತ್ತು ತನ್ನ ಕಾಯ ಆಯಿತು). ಅಂದ ಬಳಿಕ ಜಗತ್ತಿನ ಯಾವುದೋ ಮೂಲೆಯಲ್ಲಿ ಏನೋ ನೋವು ನಲಿವಾಗಲಿ, ಅದು ತನ್ನಲ್ಲಾದ, ತನಗಾದ ನೋವು, ನಲಿವು ಎಂಬ ಭಾವನೆ ಬಲಿಯಬೇಕು. ಪ್ರಾಣಿಪ್ರಪಂಚಕ್ಕಷ್ಟೇ ಅಲ್ಲ, ವೃಕ್ಷ ಪ್ರಪಂಚಕ್ಕೆ ನೋವಾದರೂ ತನಗೆ ನೋವಾದಂತೆ ಎಂದು ಭಾವಿಸಿ ಸಕಲಕ್ಕೂ ಸ್ಪಂದಿಸುವ ಮನೋಧರ್ಮ ಮೂಲಭೂತವಾದದ್ದಾಗಿರಬೇಕು. ವಿಶ್ವ ವಿಸ್ತಾರವೂ ತಾನು, ಬ್ರಹ್ಮಮಯನೂ ತಾನು ಎಂಬ ಭವ್ಯಭಾವನೆ ಇಲ್ಲಿನ ಭವ್ಯಮಾನವನದು. ದೇಶ, ಭಾಷೆ, ಮತ, ಮತವನ್ನು ಬೆಂಬಲಿಸುವ ವಿಚಿತ್ರ ದೈವ ನಿರ್ಮಾಣ ಇವೆಲ್ಲವುಗಳಿಗೂ ಮಾನವ ಅತೀತನಾಗಬೇಕು. ಸಂಕುಚಿತತೆಯ, ಸಂಕೋಲೆಯಲ್ಲಿ ಸ್ಥಗಿತವಾಗಬಾರದು, ಅವನು ವಿಶ್ವಾತ್ಮನಾಗಬೇಕು, ವಿಶ್ವಮಾನವನೆನಿಸಬೇಕು. ಆದರೆ ವಾಸ್ತವಾತೆಯನ್ನು ಮರೆತು ಮೆರೆಯಬೇಕೆಂದು ಅರ್ಥವಲ್ಲ. ನೆಲ ಬಿಟ್ಟು ಸಾಧನೆ ಇಲ್ಲ, ಪಂಚಭೂತಗಳಾದ ಗಾಳಿ, ನೀರು, ನೆಲ, ಬೆಳಕು, ಆವರಣ ಇವುಗಳನ್ನು ಬಿಡಲು ಬರುವುದಿಲ್ಲ, ಅವುಗಳನ್ನೇ ಬಳಸಿಕೊಂಡು ಮಾನವ ಬೆಳೆಯಬೇಕು, ಬೆಳಗಬೇಕು. ಬಯಲು ಬೆಂಕಿಯನೋಡೆದು ನೀರು ಗಾಳಿಯ ಸೀಳಿ, ಮಣ್ಣ ಮುಚ್ಚಳ ತೆರೆದು ಮೂಡಿಹುದು ಮೂಡಿಹುದು, ಪ್ರಾಣವಿಲ್ಲದ ಪಂಚಭೂತ ಗರ್ಭವ ದಾಟಿ ಉದ್ಭವಿಸಿ ತೋರಿಹುದು ನವ್ಯ ನಿರ್ಮಾಣ ಎಂಬ ಪರಿಭಾವನೆಯೇ ಇಲ್ಲಿಯ ಭವ್ಯತೆಯಾಗಿದೆ. ಸಾಗರದ ತೆರೆ ಮಸಗಿ ಮುಖವನಪ್ಪಳಿಸಿದರು, ಮೀನು, ಮೊಸಳೆಗಳು ನುಂಗ ಬರಲಿ, ಬಿರುಗಾಳಿ ಬೀಸಲಿ ಆಕಾಶ ಗುಡುಗಲಿ, ಪ್ರಳಯ ಕಾಲದ ಮೋಡ ಒಡೆದು ಬೀಳಲಿ ಮೇಲೆ, ಕತ್ತಲೆಯ ಸಾಗರವನೀಸುತ್ತ ಮೇಲುಗಡೆ ನಿಜ ಬೆಳಗು ಮೆಲ್ಲಮೆಲ್ಲಗೆ ಕಂದೆರವ ಕಡೆ ಉರಿ ಬರಲಿ, ಸಿರಿ ಬರಲಿ, ದಿವ್ಯಭವ್ಯದ ಕಡೆ ಸರ್ವಾಂಗದೊಳು ತನ್ನ ಎಚ್ಚರದೊಳಿರ್ದು ಮೇಲೇರಿ ಈಸಿಹನು ನಿಜನಿರಾಲದ ಕಡೆ. ಆದರಿಂದ ಶಿವ ಸರ್ವೋತ್ತಮನಲ್ಲ, ವಿಷ್ಣು ಸರ್ವೋತ್ತಮನಲ್ಲ, ಯಾವ ಕಲ್ಪನೆಯ ಕುಸುಮವೂ ಸರ್ವೋತ್ತಮವಲ್ಲ. ಮಾನವ ಸರ್ವೋತ್ತಮ. ಸರ್ವ ಶ್ರೇಷ್ಠ! ಅವನು ಬಯಲುಬ್ರಹ್ಮ, ವಿಯನ್ ಪುರುಷ, ವಿರಾಟ್ ಪುರುಷ. ಶಿವನು ಆಡಿದ ಲೀಲೆ ಕೃಷ್ಣ ಮಾಡಿದ ಕ್ರೀಡೆ ಜೈನ ತೀರ್ಥಂಕರರು ಗೌತಮ ಮಹಾಬುದ್ಧ ಮನು ಮುನೀಶ್ವರ ತಪಸ್ವಿಗಳು ದೃಷ್ಟಾರರು ಕಣ್ಣ ಮುಂದಿರುವರೆ? ನಡೆ ನಡೆಯುತಿಹರೆಂತು? ವರ್ತಮಾನವು ಅಂತೆ ವರ್ಥಿಷ್ಯಮಾನವು ಹೀಗೆ ಮೂಡುತಹಲಿಹುದು ಬೆಳೆತಾಡುತಿಹುದೆಂತು? ಇಂತಹ ನಿತ್ಯ ಸಾಕ್ಷಿಯಾಗಿ ನಿಂತಿಹನು ಮಾನವ. ಈ ಬಗೆಯ ಮಾನವ ಪಾರಮ್ಮ ಪ್ರತಿಪಾದನೆಯೇ ಭವ್ಯ ಮಾನವ ದರ್ಶನ ಅಥವಾ ಕವಿ ಕಂಡು ಕಂಡರಿಸಿದ ಆಧುನಿಕತೆ. ಇದು ಇಂದು ಇದ್ದು, ನಾಳಿನ ಕಡೆಗೆ ಕೈಚಾಚುವಂತಹುದು. ಇದು ಹೊಸಗನ್ನಡದ ಹೊಸ ಕಾವ್ಯ. ಹೀಗೆ ವೈಜ್ಞಾನಿಕ ಸಂಪಾದನೆ, ತಲಸ್ಪರ್ಶಿ ಅಧ್ಯಯನ, ಪ್ರಾಮಾಣಿಕ ಅಭಿವ್ಯಕ್ತತೆ, ವಸ್ತು ನಿಷ್ಟತೆಗಳಿಂದಾಗಿ ಪ್ರೊ. ಭೂಸನೂರಮಠ ಅವರು ದಾರ್ಶನಿಕ ಕವಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ವಿಶಿಷ್ಟ ಸೇವೆಗಳು ಭೂಸನೂರಮಠ ಅವರು ಕರ್ನಾಟಕ, ಮುಂಬಯಿ, ಪುಣೆ, ಶಿವಾಜಿ, ಮೈಸೂರು, ಬೆಂಗಳೂರು, ಉಸ್ಮಾನಿಯ, ಮತ್ತು ಕೇರಳ ವಿಶ್ವವಿದ್ಯಾಲಯಗಳ ಬೋರ್ಡ್ ಆಫ್ ಸ್ಟಡೀಸ್ ಅಧ್ಯಕ್ಷರಾಗಿ, ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲೀಷ್ ಕನ್ನಡ ಪರಿಷ್ಕೃತ ನಿಘಂಟಿನ ಸಂಪಾದಕ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಪ್ರಶಸ್ತಿ ಗೌರವಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ಮತ್ತು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಂತಹ ಅನೇಕ ಗೌರವಗಳು ಪ್ರೊ.ಭೂಸನೂರಮಠ ಅವರಿಗೆ ಸಂದಿವೆ. ವಿದಾಯ ತಮ್ಮ ಸರಳತೆ, ಸಜ್ಜನಿಕೆ, ಸ್ನೇಹಪರತೆ ಮತ್ತು ಸಾತ್ವಿಕ ನಡೆನುಡಿಗಳಿಂದಾಗಿ ಶಿಷ್ಯರು, ಗೆಳೆಯರಿಗೆಲ್ಲ ಆತ್ಮೀಯರಾಗಿದ್ದು ಶ್ರೀಯುತರು ತುಂಬು ಸಾರ್ಥಕ ಜೀವನ ನಡೆಸಿ 6111991ರಂದು, ಧಾರವಾಡದ ಪ್ರಶಾಂತ ಪರಿಸರದಲ್ಲಿರುವ ತಮ್ಮ ಮನೆ ಪರಂಜ್ಯೋತಿಯಲ್ಲಿ ಶಿವೈಕ್ಯರಾದರು. ಮಾಹಿತಿ ಕೃಪೆ ಕನ್ನಡ ಸಾಹಿತ್ಯ ಅಕಾಡೆಮಿಯ ಪ್ರಕಟಣೆಯಾದ ಸಾಲು ದೀಪಗಳು ಕೃತಿಯಲ್ಲಿ ಡಾ. ಸಾ.ಶಿ. ಮರುಳಯ್ಯ ಅವರ ಬರಹ ಸಾಹಿತಿಗಳು
ಆದ್ಯ ರಂಗಾಚಾರ್ಯ ( ಶ್ರೀರಂಗ ) (೧೯೦೪ ೧೯೮೪) ಕನ್ನಡದ ಪ್ರಖ್ಯಾತ ವಿದ್ವಾಂಸ, ನಾಟಕಕಾರ ಮತ್ತು ಸಾಹಿತಿ. ಇವರ ಕಾಳಿದಾಸ ಎಂಬ ಕೃತಿಗೆ ೧೯೭೧ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಆದ್ಯ ರಂಗಾಚಾರ್ಯರ ಮೂಲ ಹೆಸರು ಆರ್.ವಿ.ಜಾಗೀರದಾರ. ಜನನ ಇವರು 26 ಸೆಪ್ಟಂಬರ 1904 ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡದಲ್ಲಿ ಜನಿಸಿದರು. ಶಿಕ್ಷಣ ಪ್ರಾರಂಭಿಕ ಶಿಕ್ಷಣ ಅಗರಖೇಡ ಮತ್ತು ವಿಜಯಪುರದಲ್ಲಿ ಮಾಧ್ಯಮಿಕ, ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಪದವಿ. ಲಂಡನ್ನಿನ ಸ್ಕೂಲ್ ಆಫ್ ಓರಿಯಂಟಲ್ ಸ್ಟಡೀಸ್ನಲ್ಲಿ ಭಾಷಾಶಾಸ್ತ್ರದಲ್ಲಿ ಪಡೆದ ಎಂ.ಎ. ಪದವಿ (೧೯೨೫೨೮) ಲಂಡನ್ನಿನಲ್ಲಿ ಎಮ್.ಎ. ಪದವಿಯನ್ನು ಪಡೆದ ಬಳಿಕ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೨೮ರಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಪ್ರಾರಂಭಿಸಿದರು ಹಾಗು 20 ವರ್ಷಗಳ ಕಾಲ ದುಡಿದರು. ಸಾಹಿತ್ಯ ಶ್ರೀರಂಗರ ಸಾಹಿತ್ಯ ಅಪಾರ ಹಾಗು ವೈವಿಧ್ಯಮಯ. ಇವರು ೩೪ ದೊಡ್ಡ ನಾಟಕಗಳನ್ನು, ೫೦ ಏಕಾಂಕಗಳನ್ನು, ೧೦ ಕಾದಂಬರಿಗಳನ್ನು, ೧೨೦ ಹಾಸ್ಯ ಪ್ರಬಂಧಗಳನ್ನು ಹಾಗು ೯ ಗಂಭೀರ ಗ್ರಂಥಗಳನ್ನು ರಚಿಸಿದ್ದಾರೆ. ಧಾರವಾಡದ ಪ್ರಸಿದ್ಧ ನಿಯತಕಾಲಿಕ ಜಯಂತಿಗೆ ಸತತ ೩ ವರ್ಷಗಳವರೆಗೆ ಅಂಕಣ ಬರೆದಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ೫೦ಕ್ಕೂ ಹೆಚ್ಚು ಬಿಡಿ ಲೇಖನಗಳನ್ನು ಬರೆದಿದ್ದಾರೆ. ಭರತನ ನಾಟ್ಯಶಾಸ್ತ್ರ ಇವರ ಪ್ರಸಿಧ್ಧ ಕೃತಿ. ವಿದ್ಯಾರ್ಥಿ ದೆಸೆಯಿಂದಲೇ ನಾಟಕ ರಚನೆಯ ಹುಚ್ಚು. ರಚಿಸಿದ ಮೊದಲ ಕೃತಿ ಉದರ ವೈರಾಗ್ಯ ೧೯೩೦ರಲ್ಲಿ ಪ್ರಕಟಿತ. ಕರ್ನಾಟಕ ಕಾಲೇಜಿನಲ್ಲಿ ಸಂಸ್ಕೃತ ಸಹಾಯಕ ಉಪನ್ಯಾಸಕರಾಗಿ ನೇಮಕ. ನಂತರ ೧೯೫೪ರಲ್ಲಿ ಕೇಂದ್ರ ಸಮಾಚಾರ ಮತ್ತು ಪ್ರಸಾರ ಇಲಾಖೆ. ೧೯೫೬ರಲ್ಲಿ ಬೆಂಗಳೂರು ಆಕಾಶವಾಣಿಯ ನಾಟಕ ವಿಭಾಗದ ನಿರ್ದೇಶಕರ ಹುದ್ದೆ. ಬಾಲ್ಯದಲ್ಲೇ ಗ್ರಾಮೀಣ ರಂಗಭೂಮಿ ಬೀರಿದ ಪ್ರಭಾವ. ಬಿಜಾಪುರ ಮತ್ತು ಪುಣೆಯ ಕಂಪನಿಯ ನಾಟಕಗಳು ಬಣ್ಣದ ಬದುಕಿನ ರುಚಿ ತೋರಿದವು. ಇಂಗ್ಲೆಂಡಿನಲ್ಲಿದ್ದಾಗ ೩ ವರ್ಷ ವಿವಿಧ ರಂಗಭೂಮಿಯ ಪರಿಚಯ. ರಚಿಸಿದ ನಾಟಕಗಳು ಹಲವಾರುದರಿದ್ರ ನಾರಾಯಣ, ಹರಿಜನ್ವಾರ, ಪ್ರಪಂಚ ಪಾಣಿಪತ್ತು, ಸಂಧ್ಯಾಕಾಲ, ಕರ್ತಾರನ ಕಮ್ಮಟ, ಶೋಕಚಕ್ರ, ಕತ್ತಲೆಬೆಳಕು, ಕೇಳು ಜನಮೇಜಯ, ಸಿರಿಪುರಂದರ, ಏನು ಬೇಡಲಿ ನಿನ್ನ ಬಳಿಗೆ ಬಂದು, ಗುಮ್ಮನೆಲ್ಲಿಹ ತೋರಮ್ಮ, ಸಂಸಾರಿಗ ಕಂಸ, ಜರಾಸಂ, ಜೀವನ ಜೋಕಾಲಿ ಮುಂತಾದ ೩೪ ದೊಡ್ಡ ನಾಟಕಗಳು, ಐವತ್ತು ಏಕಾಂಕ ನಾಟಕಗಳು, ಹತ್ತು ಕಾದಂಬರಿಗಳು, ನೂರಿಪ್ಪತ್ತು ಹಾಸ್ಯ ಪ್ರಬಂಧಗಳು, ಭಗವದ್ಗೀತೆ, ಸಂಸ್ಕೃತ ನಾಟಕ, ಭಾಷಾಶಾಸ್ತ್ರ, ನಾಟ್ಯಶಾಸ್ತ್ರ, ಹಾಸ್ಯರಸ ವಿವೇಚನೆ, ಕಾಳಿದಾಸ ಈ ವಿಷಯಗಳ ಮೇಲೆ ಬರೆದ ಒಂಬತ್ತು ಗ್ರಂಥಗಳೂ ಸೇರಿ ಒಟ್ಟು ೧೦೦ಕ್ಕೂ ಹೆಚ್ಚು ಕೃತಿ ರಚನೆ. ನಾಟಕಗಳು ಸ್ವಾರ್ಥತ್ಯಾಗ ಧರ್ಮವಿಜಯ ಉದರ ವೈರಾಗ್ಯ ಹರಿಜನ್ವಾರ ಸಂಸಾರಿಗ ಕಂಸ ಪ್ರಪಂಚ ಪಾಣಿಪತ್ತು ಜರಾಸಂಧಿ ವೈದ್ಯರಾಜ ದರಿದ್ರನಾರಾಯಣ ನರಕದಲ್ಲಿ ನರಸಿಂಹ ಗೆಳೆಯ ನೀನು ಹಳೆಯ ನಾನು ಶೋಕಚಕ್ರ ಪುರುಷಾರ್ಥ ಜೀವನ ಜೋಕಾಲಿ ಅಧಿಕ ಮಾಸ ಮುಕ್ಕಣ್ಣ ವಿರಾಟಪುರುಷ ಇದೇ ಸಂಸಾರ ಸಂಧ್ಯಾಕಾಲ ಕತ್ತಲೆ ಬೆಳಕು ನೀ ಮಾಯೆಯೊಳಗೋ? ನಿನ್ನೊಳು ಮಾಯೆಯೋ? ಗುಮ್ಮನೆಲ್ಲಿಹ ತೋರಮ್ಮ ಇವು ೧೯೫೯ನೆಯ ಇಸವಿಗಿಂತ ಮೊದಲು ಶ್ರೀರಂಗರು ಬರೆದ ನಾಟಕಗಳು. ಕತ್ತಲೆ ಬೆಳಕು ನಾಟಕದ ನಂತರ ಅವರ ಬರವಣಿಗೆಯಲ್ಲಿ ಹೊಸ ಬದಲಾವಣೆ ಬಂದಿತು. ಕೇಳು ಜನಮೇಜಯ ಹುಟ್ಟಿದ್ದು ಹೊಲೆಯೂರು ಸಿರಿಪುರಂದರ ಸಂಜೀವನಿ ಸಾವಿತ್ರಿ ತೇಲಿಸೊ ರಂಗ,ಇಲ್ಲ ಮುಳುಗಿಸೊ ದಾರಿ ಯಾವುದಯ್ಯಾ ವೈಕುಂಠಕೆ? ರಂಗಭಾರತ ಸ್ವರ್ಗಕ್ಕೆ ಮೂರೆ ಬಾಗಿಲು ಇವು ೧೯೫೯ರ ನಂತರದ ಅವರ ಶ್ರೇಷ್ಠ ನಾಟಕಗಳು. ಅವರ ನಾಟಕಗಳನ್ನು ಹೆಚ್ಚಾಗಿ ಕಲಾವಿಲಾಸಿ ನಾಟಕಕಾರರು ಆಡುತ್ತಲಿದ್ದಾರೆ. (ಅವರೇ ಸ್ವತಃ ೧೯೩೩ರಲ್ಲಿ ಕಲಾವಿಲಾಸಿ ನಾಟ್ಯಸಂಘ ಎನ್ನುವ ಸಂಸ್ಥೆಯನ್ನು ಧಾರವಾಡದಲ್ಲಿ ಸ್ಥಾಪಿಸಿದರು.) ದಾರಿ ಯಾವುದಯ್ಯಾ ವೈಕುಂಠಕೆ? ನಾಟಕವು ಬಿ.ವಿ. ಕಾರಂತರಿಂದ ರಂಗದ ಮೇಲೆ ತರಲ್ಪಟ್ಟಿದೆ. ನಾಟಕಗಳನ್ನಲ್ಲದೆ ಶ್ರೀರಂಗರು ಹರಟೆಗಳನ್ನು ಹಾಗು ಕಾದಂಬರಿಗಳನ್ನು ಸಹ ಬರೆದಿದ್ದಾರೆ. ಇವರ ಕಾದಂಬರಿಗಳಲ್ಲಿ ಬರುವ ಪ್ರಜ್ಞಾಪ್ರವಾಹ ತಂತ್ರವು ಕನ್ನಡ ಕಾದಂಬರಿಗಳಲ್ಲಿ ವಿಶಿಷ್ಟವಾದದ್ದಾಗಿದೆ. ಕಾದಂಬರಿಗಳು ಭರಮಪ್ಪನ ಭೂತ, ವಿಶ್ವಾಮಿತ್ರನ ಸೃಷ್ಟಿ, ಕುಮಾರ ಸಂಭವ, ಅನಾದಿ, ಪ್ರಕೃತಿ (ಪ್ರಕೃತಿ ಪುಸ್ತಕದ ವಿಮರ್ಶೆ). ಮೊದಲಾದವು ಶ್ರೀರಂಗರ ಕಾದಂಬರಿಗಳು. ಗೀತಾ ಗಾಂಭೀರ್ಯ, ಭಾರತೀಯ ರಂಗಭೂಮಿ, ಕಾಳಿದಾಸ ಮೊದಲಾದವು ಇವರ ಗಂಭೀರ ಗ್ರಂಥಗಳು. ಅಲ್ಲದೆ ಕಮಾಲ್ ಪಾಶಾ ಹಾಗು ಜವಾಹರಲಾಲ ನೆಹರೂರವರ ಚರಿತ್ರೆಯನ್ನು ಸಹ ಶ್ರೀರಂಗರು ಬರೆದಿದ್ದಾರೆ. ಇವರು ಆಹ್ವಾನ ಎನ್ನುವ ಕವನ ಸಂಕಲನವನ್ನೂ ಸಹ ರಚಿಸಿದ್ದಾರೆ. ರಾಜಕೀಯ ಜೀವನ ಶ್ರೀರಂಗರು ಪ್ರತ್ಯಕ್ಷವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲಿಲ್ಲ. ಆದರೆ ಸ್ವಾತಂತ್ರ್ಯ ಹೋರಾಟಗಾರರಿಗೆ ಇವರ ಅಪ್ರತ್ಯಕ್ಷ ನೆರವು ಸದಾ ಸಿದ್ಧವಿರುತ್ತಿತ್ತು. ಕೆಲವು ಭೂಗತ ಹೋರಾಟಗಾರರು ಇವರ ಮನೆಯಲ್ಲಿ ಆಶ್ರಯ ಹಾಗು ವೈದ್ಯಕೀಯ ನೆರವು ಪಡೆದಿದ್ದಾರೆ. ಚಳವಳಿ ಮುಂದುವರೆಸಲು ಧನಸಹಾಯ ಪಡೆದಿದ್ದಾರೆ. ಸ್ವತಃ ಶ್ರೀರಂಗರು ಕರ್ಮವೀರ ವಾರಪತ್ರಿಕೆಯಲ್ಲಿ ರಾಜಕೀಯ ಅಗ್ರಲೇಖನಗಳನ್ನು ಬರೆದಿದ್ದಾರೆ. ತಮ್ಮ ಮನೆಯಿಂದಲೇ ಬುಲೆಟಿನ್ ಸೈಕ್ಲೊಸ್ಟೈಲ್ ಮಾಡಿಸಿ ಕಳುಹಿಸಿ ಕೊಟ್ಟಿದ್ದಾರೆ. ಕರ್ನಾಟಕ ಏಕೀಕರಣ ಕರ್ನಾಟಕ ಏಕೀಕರಣದಲ್ಲಿ ಇವರು ಅತ್ಯಂತ ಮಹತ್ವದ ಪಾತ್ರವನ್ನು ಮಾಡಿದ್ದಾರೆ. ಕರ್ನಾಟಕ ವಿದ್ಯಾವರ್ಧಕ ಸಂಘವು ೧೯೦೬ರಲ್ಲಿಯೇ ಕರ್ನಾಟಕ ಏಕೀಕರಣದ ಗೊತ್ತುವಳಿಯನ್ನು ಸ್ವೀಕರಿಸಿತ್ತು. ೧೯೪೪ರಲ್ಲಿ ಕೆಲವು ಗೆಳೆಯರ ಜೊತೆಗೆ ಕೂಡಿಕೊಂಡು, ಶ್ರೀರಂಗರು ಅಖಿಲ ಕರ್ನಾಟಕ ಏಕೀಕರಣ ಸಮಿತಿಯೊಂದನ್ನು ಸ್ಥಾಪಿಸಿದರು. ಈ ಸಮಿತಿಗೆ ಕರ್ನಾಟಕದ ಎಲ್ಲ ಭಾಗಗಳಿಂದಲೂ ಪ್ರತಿನಿಧಿಗಳನ್ನು ಆಯೋಜಿಸಲಾಗಿತ್ತು. ೧೯೪೬ರ ಡಿಸೆಂಬರದಲ್ಲಿ ಶ್ರೀರಂಗರು ಪ್ರಧಾನ ಮಂತ್ರಿ ಜವಾಹರಲಾಲ ನೆಹರೂರನ್ನು ಭೇಟಿಯಾಗಿ ಭಾಷಾವಾರು ಪ್ರಾಂತಗಳ ರಚನೆಗಾಗಿ ಉಪಸಮಿತಿಯ ರಚನೆ ಹಾಗು ಅದರಲ್ಲಿ ಕರ್ನಾಟಕ ಏಕೀಕರಣದ ವಿಷಯವು ಒಳಗೊಳ್ಳುವ ನಿರ್ಣಯದಲ್ಲಿ ಮಹತ್ವದ ಪಾತ್ರವಹಿಸಿದರು. ಆದರೆ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ೧೯೪೭ ಸೆಪ್ಟೆಂಬರದಲ್ಲಿ ರಾಜಕೀಯ ವ್ಯಕ್ತಿಗಳ ಬೇರೊಂದು ಸಮಿತಿಯು ಅಸ್ತಿತ್ವಕ್ಕೆ ಬಂದಿತು. ಅಲ್ಲದೆ, ಶ್ರೀರಂಗರನ್ನು ಧಾರವಾಡದಿಂದಲೇ ಹೊರಗೋಡಿಸುವ ಪ್ರಯತ್ನಗಳು ನಡೆದವು. ಆತ್ಮಾಭಿಮಾನಿ ಶ್ರೀರಂಗರು ೧೯೪೮ರಲ್ಲಿ ನೌಕರಿಗೆ ರಾಜೀನಾಮೆ ನೀಡಿದರು. ಗೌರವ ೧೯೫೪ರಲ್ಲಿ ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶ್ರೀರಂಗರು ಅಧ್ಯಕ್ಷರಾಗಿದ್ದರು. ೧೯೬೩ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ೧೯೬೮ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಫೆಲೋಶಿಪ್ ೧೯೭೨ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ೧೯೭೨ರಲ್ಲಿ ರಾಜ್ಯ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ ೧೯೭೨ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ ಕರ್ನಾಟಕ ವಿಶ್ವವಿದ್ಯಾಲಯ ನೀಡಿದ ಗೌರವ ಡಿ.ಲಿಟ್ ಮೈಸೂರು ವಿಶ್ವವಿದ್ಯಾಲಯ ನೀಡಿದ ಗೌರವ ಡಿ.ಲಿಟ್ ಹೆಸರಾಂತ ಭಾರತೀಯ ಆಂಗ್ಲ ಲೇಖಕಿ ಶಶಿ ದೇಶಪಾಂಡೆ ಶ್ರೀರಂಗರ ಮಗಳು. ೧೯೮೪ರಲ್ಲಿ ಶ್ರೀರಂಗರು ಬೆಂಗಳೂರಿನಲ್ಲಿ ನಿಧನರಾದರು. ನಿಧನ ಶ್ರೀರಂಗರು 17ನೇ ಅಕ್ಟೋಬರ್ 1984ರಲ್ಲಿ ಧೈವಾಧಿನರಾದರು. ನೋಡಿ ಶಶಿ ದೇಶಪಾಂಡೆ (ಫೋಟೊ) :ಸ್ವತಂತ್ರ ಮನೋಭಾವ ರೂಪಿಸಿದ ಅಪ್ಪ:[] ಹೊರಗಿನ ಕೊಂಡಿಗಳು % 27&1 %27&1 .%20. %20& 1948%20& 1&93&5010010034600&2&1&1%20%20..%20&1&1&1,%20%20&1&1%20&1&1&100000000&1 &1 &1 &1&1&1%20&70199537 ಜರಾಸಂಧಿ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲಿ ಓದಲು ಲಭ್ಯ ಇರುವ , ಶ್ರೀರಂಗರ ನಾಟಕ ಉಲ್ಲೇಖಗಳು ಲೇಖಕರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
ಶಂ.ಬಾ. ಜೋಶಿ (ಜನವರಿ ೪, ೧೮೯೬ ಸೆಪ್ಟೆಂಬರ್ ೨೮, ೧೯೯೧) ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ. ಇವರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗುರ್ಲಹೊಸೂರು ಗ್ರಾಮದಲ್ಲಿ ೪೧೧೮೯೬ರಲ್ಲಿ ಜನಿಸಿದರು. ೧೯೧೪ರಲ್ಲಿ ಮಲಪ್ರಭಾ ನದಿಗೆ ಮಹಾಪೂರ ಬಂದಾಗ ಗುರ್ಲಹೊಸೂರು ಜಲಮಯವಾಯಿತು. ಜೊತೆಗೆ ತಂದೆಯ ಸಾವು. ಹೀಗಾಗಿ ಜೋಶಿಯವರು ಅಜ್ಜಿಯ ಮನೆಯಾದ ಪುಣೆಗೆ ಹೊದರು. ಅಲ್ಲಿ ಲೋಕಮಾನ್ಯ ತಿಲಕರ ಪ್ರಭಾವಕ್ಕೆ ಒಳಗಾದರು. ಅಲ್ಲಿಂದ ಧಾರವಾಡಕ್ಕೆ ಮರಳಿದ ಜೋಶಿಯವರು ೧೯೧೯ರಲ್ಲಿ ಕನ್ನಡ ಶಿಕ್ಷಕರ ತರಬೇತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ೧೯೨೦ರಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಶಿಕ್ಷಕರಾದರು. ೧೯೨೧ರಲ್ಲಿ ಜೋಶಿಯವರ ಮದುವೆ ಜಮಖಂಡಿಯ ಕರಂದೀಕರ ಮನೆತನದ ಸೌ. ಪಾರ್ವತಿಬಾಯಿಯವರೊಡನೆ ಜರುಗಿತು. ಚಿಕ್ಕೋಡಿಗೆ ಗಾಂಧೀಜಿ ಆಗಮಿಸಿದಾಗ ಶಂ.ಬಾ.ಜೋಶಿಯವರಿಂದ ಗಾಂಧೀಜಿಯ ಕೈಂಕರ್ಯಇದರಿಂದಾಗಿ ಸರಕಾರದ ಅವಕೃಪೆ. ಜೋಶಿಯವರಿಗೆ ಉಗರಗೋಳಕ್ಕೆ ವರ್ಗಾವಣೆ. ಜೋಶಿಯವರು ಕೆಲಕಾಲದ ನಂತರ ರಾಜೀನಾಮೆ ನೀಡಿ ಧಾರವಾಡಕ್ಕೆ ಬಂದರು. ಧಾರವಾಡದಲ್ಲಿ ೧೯೨೬೨೭ರಲ್ಲಿ ಕರ್ನಾಟಕ ಹಾಯ್ ಸ್ಕೂಲಿನಲ್ಲಿ ಹಾಗು ೧೯೨೮ರಿಂದ ೧೯೪೬ರವರೆಗೆ ಅದೇ ಸಂಸ್ಥೆಯ ವ್ಹಿಕ್ಟೋರಿಯಾ ಹಾಯ್ ಸ್ಕೂಲಿನಲ್ಲಿ( ಈಗಿನ ವಿದ್ಯಾರಣ್ಯ ಹಾಯ್ ಸ್ಕೂಲು) ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಶಂ.ಬಾ. ಜೋಶಿಯವರ ಕೃತಿಗಳನ್ನು ಸಾಂಸ್ಕೃತಿಕ ಸಂಶೋಧನಾ ಸಾಹಿತ್ಯವೆಂದು ಕರೆಯಬಹುದು. ಮಾನವಜನಾಂಗಗಳ ನಾಗರಿಕತೆಯ ಮಜಲುಗಳನ್ನು ಅವರವರ ಭಾಷಾಪ್ರಯೋಗಗಳಲ್ಲಿ ಕಾಣಬಹುದು ಎನ್ನುವದನ್ನು ಶಂ.ಬಾ.ಜೋಶಿಯವರು ತಮ್ಮ ಸಂಶೋಧನ ಲೇಖನಗಳಲ್ಲಿ ತೋರಿಸಿಕೊಟ್ಟರು. ಜೋಶಿಯವರು ಈ ಶಾಸ್ತ್ರವಿಭಾಗವನ್ನು ಪ್ರಾರಂಭಿಸಿದ ಭಾರತೀಯರಲ್ಲಿ ಮೊದಲಿಗರು. ಇದೇ ಸಮಯಕ್ಕೆ ಯುರೋಪಿನಲ್ಲಿ ಸಹ ಈ ತರಹದ ಶಾಸ್ತ್ರವಿಭಾಗ ಪ್ರಾರಂಭವಾಯಿತು. ಆದುದರಿಂದ ಜಗತ್ತಿನಲ್ಲಿ ಇವರನ್ನು ಸಹಪ್ರಥಮರು ಎಂದು ಹೇಳಲು ಅಡ್ಡಿಯಿಲ್ಲ. ಶ್ರೀ ಶಂಕರ ಬಾಳದೀಕ್ಷಿತ ಜೋಶಿಯವರು ಸೆಪ್ಟೆಂಬರ್ ೨೮, ೧೯೯೧ರಂದು ನಿಧನರಾದರು. ಮಾರನೆಯ ದಿನ, ಸೆಪ್ಟೆಂಬರ್ ೨೯, ೧೯೯೧ರಂದು ೧೫ ದಿನಗಳಿಗೂ ಹೆಚ್ಚು ಕೋಮಾದಲ್ಲಿದ್ದ ಜೋಶಿಯವರ ಪತ್ನಿ ಶ್ರೀಮತಿ ಪಾರ್ವತಿಬಾಯಿ ಕೂಡ ಇಹಲೋಕ ತ್ಯಜಿಸಿದರು. ಪುರಸ್ಕಾರಗಳು ಇವರ ಕರ್ನಾಟಕ ಸಂಸೃತಿಯ ಪೂರ್ವ ಪೀಠಿಕೆ ಎಂಬ ಕೃತಿಗೆ ೧೯೭೦ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ೧೯೭೧ರಲ್ಲಿ ಶಂ.ಬಾ.ಜೋಶಿಯವರಿಗೆ ಮೈಸೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತು. ೧೯೮೧ರಲ್ಲಿ ಮಡಿಕೇರಿಯಲ್ಲಿ ನಡೆದ ಅಖಿಲ ಕರ್ನಾಟಕ ಸಾಹಿತ್ಯಸಮ್ಮೇಳನದ ಅಧ್ಯಕ್ಷರಾಗಿದ್ದರು. ದಿ.2891991ರ ನೆನಪಿನಲ್ಲಿ ಗ್ರಂಥಗಳು : ಅರವಿಂದ ಘೋಷರ ಚರಿತ್ರವು(೧೯೨೧) ಕಂನುಡಿಯ ಹುಟ್ಟು(೧೯೨೨) ಕಣ್ಮರೆಯಾದ ಕನ್ನಡ(೧೯೩೩) ಮಹಾರಾಷ್ಟ್ರದ ಮೂಲ(೧೯೩೪) ಕರ್ನಾಟಕ ಸಂಸ್ಕೃತಿಯ ಪೂರ್ವಪೀಠಿಕೆಭಾಗ ೧(೧೯೩೭) ಕನ್ನಡದ ನೆಲೆ(೧೯೩೯) ಶಿವರಹಸ್ಯ(೧೯೩೯) ರೂಢಿ ಹಾಗು ಭಾವಿಕಲ್ಪನೆಗಳು(೧೯೪೦) ಅಗ್ನಿವಿದ್ಯೆ(೧೯೪೬) ಸೌಂದರ್ಯವಿಚಾರ(೧೯೪೬) ಕರ್ಣನ ಮೂರು ಚಿತ್ರಗಳು(೧೯೪೭) ಎಡೆಗಳು ಹೇಳುವ ಕಂನಾಡ ಕಥೆ(೧೯೪೭) ಯಕ್ಷಪ್ರಶ್ನೆ(೧೯೪೮) ಸಮಾಜದರ್ಶನ(೧೯೪೯) ಹಾಲುಮತ ದರ್ಶನ(೧೯೬೦) ಕರ್ನಾಟಕ ಸಂಸ್ಕೃತಿಯ ಪೂರ್ವಪೀಠಿಕೆಭಾಗ ೨(೧೯೬೬) ಮಕ್ಕಳ ಒಡಪುಗಳು(೧೯೬೬) ದಾರಿಯ ಬುತ್ತಿ(೧೯೬೯) ಋಗ್ವೇದಸಾರನಾಗಪ್ರತಿಮಾವಿಚಾರ(೧೯೭೧) ಕನ್ನಡ ನುಡಿಯ ಜೀವಾಳ(೧೯೭೩) ಸಾತತ್ಯ ಮತ್ತು ಸತ್ಯ(೧೯೭೫) ಭಾಷೆ ಮತ್ತು ಸಂಸ್ಕೃತಿ(೧೯೭೫) ಕನ್ನಡ ಸಾಹಿತ್ಯ ಅಭಿವೃದ್ಧಿ(೧೯೭೬) ಪ್ರವಾಹ ಪತಿತರ ಕರ್ಮ ಹಿಂದೂ ಎಂಬ ಧರ್ಮ (೧೯೭೬) ಶ್ರೀಮತ್ ಭಗವದ್ಗೀತೆಯಲ್ಲಿ ಹುದುಗಿರುವ ರಾಜಯೋಗದ ಸ್ವರೂಪ(೧೯೭೭) ಮಾನವಧರ್ಮದ ಆಕೃತಿ(೧೯೭೯) ಬುಧನ ಜಾತಕ(೧೯೮೨) ಬಿತ್ತಿದ್ದನ್ನು ಬೆಳೆದುಕೊ(೧೯೮೪) ಅನುವಾದ ಗ್ರಂಥಗಳು: ಉಪನಿಷತ ರಹಸ್ಯ(ಮೂಲ: ರಾನಡೆ ಬೇಂದ್ರೆ ಹಾಗು ದಿವಾಕರರವರ ಜೊತೆಗೆ ಸಹ ಅನುವಾದ ೧೯೨೮) ಶ್ರೀಮತ್ ಭಗವದ್ಗೀತಾ ಭಾಗ೧ (ಮೂಲ :ಸಾತವಳೇಕರ೧೯೪೪) ಉಲ್ಲೇಖ ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಪ್ರಾಚ್ಯ ಸಂಶೋಧಕರು
ಹೊನ್ನಾಳಿ ತಿಪ್ಪೇರುದ್ರಸ್ವಾಮಿ ಇವರು ಫೆಬ್ರುವರಿ ೩ ೧೯೨೮ರಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಜನಿಸಿದರು. ತಂದೆ ಚೆನ್ನಮಲ್ಲಯ್ಯ, ತಾಯಿ ಬಸಮ್ಮ. ಹೊನ್ನಾಳಿ, ಶಿರಾಳಕೊಪ್ಪ, ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿದರು. ಬಿ.ಎ ಹಾಗು ಎಂ.ಎ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದರು.ಹಾಸನದ ಕಾಲೇಜಿನಲ್ಲಿ ಕನ್ನಡದ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು. ೧೯೬೨ರಲ್ಲಿ ಶರಣರ ಅನುಭಾವ ಸಾಹಿತ್ಯ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದರು. ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಢೆಯಲ್ಲಿ ಅಧ್ಯಾಪಕರಾಗಿ. ನಿರ್ದೇಶಕರಾಗಿ ಬಿ. ಆರ್. ಪ್ರಾಜೆಕ್ಟ್ನ ಸ್ನಾತಕೋತ್ತರ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಾಚೀನ ಕನ್ನಡ ಕಾವ್ಯ ಹಾಗೂ ಶಾಸ್ತ್ರಗಳನ್ನು ಅಧ್ಯಯನ ಮಾಡಿದ್ದಾರೆ. ಕೃತಿಗಳು ಐತಿಹಾಸಿಕ ಕಾದಂಬರಿಗಳು ಪರಿಪೂರ್ಣದೆಡೆಗೆ (ಅಲ್ಲಮ ಪ್ರಭುವಿನ ಚರಿತ್ರೆ) ಕದಳಿಯ ಕರ್ಪೂರ (ಅಕ್ಕಮಹಾದೇವಿಯ ಚರಿತ್ರೆ) ಜ್ಯೋತಿ ಬೆಳಗಿತು (ನಿಜಗುಣ ಶಿವಯೋಗಿಗಳ ಚರಿತ್ರೆ) ನೆರಳಾಚೆಯ ಬದುಕು (ಸಿದ್ಧರಾಮನ ಚರಿತ್ರೆ) ಜಡದಲ್ಲಿ ಜಂಗಮ (ಷಣ್ಮುಖ ಶಿವಯೋಗಿಯ ಚರಿತ್ರೆ) ಕವನ ಸಂಕಲನ ತಪೋರಂಗ ಕಥಾಸಂಕಲನ ಸಾಹಿತ್ಯ ಚಿತ್ರಗಳು ನಾಟಕ ವಿಧಿಪಂಜರ ವಿಮರ್ಶೆವೈಚಾರಿಕ ತೌಲನಿಕ ಕಾವ್ಯ ಮೀಮಾಂಸೆ ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ ಸಾಹಿತ್ಯ ವಿಮರ್ಶೆಯ ಮೂಲ ತತ್ವಗಳು ಕರ್ನಾಟಕ ಸಂಸ್ಕೃತಿ ಸಮೀಕ್ಷೆ ಸಾಹಿತ್ಯ ಮತ್ತು ಸಮಕಾಲೀನ ವಾಸ್ತವಿಕತೆ ಪುರಸ್ಕಾರ ಇವರ ಕರ್ನಾಟಕ ಸಂಸ್ಕೃತಿ ಸಮೀಕ್ಷೆ ಕೃತಿಗೆ ೧೯೬೯ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ನಿಧನ ಎಚ್.ತಿಪ್ಪೇರುದ್ರಸ್ವಾಮಿಯವರು ೨೮ ಅಕ್ಟೋಬರ ೧೯೯೪ ರಲ್ಲಿ ನಿಧರಾದರು. ಉಲ್ಲೇಖಗಳು ಕನ್ನಡ ಸಾಹಿತ್ಯ ಎಚ್.ತಿಪ್ಪೇರುದ್ರಸ್ವಾಮಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
ಪು.ತಿ. ನರಸಿಂಹಾಚಾರ್ : ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ,ಗೀತನಾಟಕಕಾರರು, ಜಿಜ್ಞಾಸೆಯ ಕವಿ .ಪು.ತಿ.ನರಸಿಂಹಾಚಾರ್ ಅವರದು ಕನ್ನಡ ಸಾಹಿತ್ಯದಲ್ಲಿ ಬಲು ದೊಡ್ಡ ಹೆಸರು. ಜೀವನ ಹಾಗೂ ಸಾಹಿತ್ಯದಲ್ಲಿ ತುಂಬೊಲವನ್ನು ಹರಿಸಿದ, ಬದುಕು ಭಗವಂತನ ಕೃಪೆಯಿಂದ ಆದುದು ಎಂದು ಭಾವಿಸಿದ ಕವಿ. ನವೋದಯ ಸಾಹಿತ್ಯದ ಮೊದಲ ತಲೆಮಾರು ಕಂಡ ಹಲವು ಹಿರಿಯ ಕವಿಗಳ ಸಾಲಿಗೆ ಸೇರಿದ ಹಿರಿದಾದ ಚೇತನ. ಬಿ.ಎಂ.ಶ್ರೀ, ಬೇಂದ್ರೆ, ಕುವೆಂಪು, ಕೆ.ಎಸ್. ನರಸಿಂಹಸ್ವಾಮಿಯಂತಹ ಹಿರಿಯ ಕವಿಗಳ ಗುಂಪಿನಲ್ಲಿ ಇದ್ದವರು. ಜೀವನ ಪು.ತಿ.ನ. ಎಂಬುದು ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಎಂಬ ಹೆಸರಿನ ಸಂಕ್ಷಿಪ್ತ ರೂಪ [ಹೆಸರು]. ಇವರ ತಂದೆ ವೃತ್ತಿಯಿಂದ ವೈದಿಕರಾಗಿದ್ದವರು. ಮೇಲುಕೋಟೆಯಲ್ಲಿ ೧೯೦೫ ಮಾರ್ಚ್ ೧೭ರಂದು ಜನಿಸಿದ ಇವರ ಮೇಲೆ ಅಲ್ಲಿನ ಆಧ್ಯಾತ್ಮಿಕ ಪರಿಸರ ವೈಯಕ್ತಿಕವಾಗಿ ಹಾಗೂ ಸಾಹಿತ್ಯ ಬದುಕಿನಲ್ಲಿ ಸಾಕಷ್ಟು ಪರಿಣಾಮ ಬೀರಿದೆ. ಪ್ರಕೃತಿ ಮತ್ತು ಪ್ರಕೃತಿಯಲ್ಲಿ ದೈವತ್ವದ ಹುಡುಕಾಟ ಅವರ ಕಾವ್ಯದ ಮೂಲಭೂತ ಅಂಶವಾಗಿದೆ. ಪು.ತಿ.ನ. ಅವರ ಬಾಲ್ಯ ಅರಳಿದ್ದು ತಂದೆಯ ಊರಾದ ಮೇಲುಕೋಟೆ ಹಾಗೂ ತಾಯಿಯ ಊರಾದ ಗೊರೂರು ನಡುವೆ. ಮುಂದೆ ವಯಸ್ಕರಾದಾಗ ಹೆಂಡತಿಯ ಊರಾದ ಹೆಮ್ಮಿಗೆ, ಓದಿನ ಊರಾದ ಮೈಸೂರು, ವೃತ್ತಿನಗರವಾದ ಬೆಂಗಳೂರು, ಮಲ್ಲೇಶ್ವರಗಳ ನಡುವೆ ಅವರ ಮನಸ್ಸು ಸುಳಿದಾಡಿದೆ. ತಂದೆಯವರು ವೃತ್ತಿಯಿಂದ ವೈದಿಕರಾದರೂ ಜೀವನ ನಿರ್ವಹಣೆ ದುರ್ಬರವೆನಿಸಿದ ಕಾರಣ ಹಾಗೂ ಪು.ತಿ.ನ. ಅವರ ಪ್ರಕೃತಿಗೆ ಒಗ್ಗದಿದ್ದ ಕಾರಣದಿಂದ ಮೈಸೂರನ್ನು ಸೇರಿ ವಿದ್ಯಾಭ್ಯಾಸಕ್ಕೆ ತೊಡಗಿದರು. ಮೂಲತಃ ಗ್ರಾಮ್ಯ ತಮಿಳನ್ನು ಆಡುತ್ತಿದ್ದು ಮೈಸೂರಲ್ಲಿ ಆಂಗ್ಲಭಾಷೆ ಮತ್ತು ಕನ್ನಡ ಭಾಷೆಯಲ್ಲಿ ಪ್ರಾವೀಣ್ಯತೆ ಪಡೆದರು. ಅಲ್ಲಿ ಗುರು ಹಿರಿಯಣ್ಣ, ಆತ್ಮೀಯ ಮಿತ್ರರಾದ ಶಿವರಾಮ ಶಾಸ್ತ್ರಿ ಹಾಗೂ ತೀ.ನಂ. ಶ್ರೀಕಂಠಯ್ಯನವರ ಸಂಪರ್ಕ ಒದಗಿ ಬಂತು. ಆನಂತರ ಬೆಂಗಳೂರಿನಲ್ಲಿ ಸೈನ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಫಿರಂಗಿಯವರ (ಇಂಗ್ಲೀಷರ) ನೇರ ಕೈಕೆಳಗೆ ಕೆಲಸ ಮಾಡುವ ಸಂದರ್ಭ ಒದಗಿತು. ಸೈನ್ಯದ ಮುಖಂಡರು ಚೆನ್ನಾಗಿ ನಡೆಸಿಕೊಂಡ ಕಾರಣ ಪು.ತಿ.ನ.ರವರ ರೀತಿನೀತಿಗಳು ಬದಲಾಗದೆ ನೆಮ್ಮದಿಯಾಗಿ ಕೃತಿರಚನೆ ಮಾಡಲು ಸಾಧ್ಯವಾಯಿತು. ಕೃತಿಗಳು ಪು.ತಿ.ನ. ಅವರು ಒಟ್ಟು 13 ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವುಗಳು ಕ್ರಮವಾಗಿ ಕವನ ಸಂಕಲನಗಳು ಹಣತೆ, ಮಾಂದಳಿರು, ಅಹಲ್ಯೆ, ಶಬರಿ, ವಿಕಟಕವಿವಿಜಯ, ಹಂಸದಮಯ೦ತಿ, ಗೋಕುಲ , ಶಾರದ ಯಾಮಿನಿ, ಗಣೇಶ ದರ್ಶನ, ರಸ ಸರಸ್ವತಿ, ಮಲೆ ದೇಗುಲ, ಹೃದಯ ವಿಹಾರಿ, ಇರುಳು ಮೆರುಗು, ಹಳೆಯ ಬೇರು ಹೊಸ ಚಿಗುರು, ಎಂಬತ್ತರ ನಲುಗು. ರಥಸಪ್ತಮಿ. ನಿರೀಕ್ಷೆ. ಹಣತೆಯ ಹಾಡು. ಹಣತೆಯಿಂದ ಆರಂಭವಾದ ಅವರ ಕಾವ್ಯ ಜೀವನ ಹಣತೆಯ ಹಾಡು ಕವನ ಸಂಕಲನದೊಂದಿಗೇ ಕೊನೆಗೊಂಡಿದ್ದು ವಿಪರ್ಯಾಸದ ಸಂಗತಿಯಾಗಿದೆ. ಮಹಾಕಾವ್ಯ ಶ್ರೀಹರಿ ಚರಿತೆ ನಾಟಕ ಜಾಹ್ನವಿಗೆ ಜೋಡಿ ದೀವಿಗೆ ಮತ್ತು ಇತರ ನಾಟಕಗಳು ಗೀತನಾಟಕಗಳು ಪು.ತಿ.ನ. ಅವರು ಕವಿ ಮಾತ್ರವಲ್ಲದೆ ಉತ್ತಮ ಗೀತನಾಟಕಕಾರರೂ ಆಗಿದ್ದಾರೆ. ಅವರ ಒಂಬತ್ತು ಗೀತನಾಟಕಗಳಲ್ಲಿ ಗೀತರೂಪಕಗಳೂ ಸೇರಿವೆ. ಅವುಗಳು ಕ್ರಮವಾಗಿ ಗೋಕುಲ ನಿರ್ಗಮನ, ಕವಿ ಅಹಲ್ಯೆ, ಸತ್ಯಾಯನ ಹರಿಶ್ಚಂದ್ರ, ವಿಕಟಕವಿ ವಿಜಯ, ಶಬರಿ, ಹಂಸದಮಯಂತಿ, ಹರಿಣಾಭಿಸರಣ, ದೀಪಲಕ್ಷ್ಮಿ . ಕುಚೇಲ ಕೃಷ್ಣ ದೋಣಿಯ ಬಿನದ ಶ್ರೀ ರಮಣ ಪ್ರಭ ಶ್ರೀರಾಮ ಪಟ್ಟಾಭಿಷೇಕ ಈ ನಾಟಕಗಳಲ್ಲಿ ಗೋಕುಲ ನಿರ್ಗಮನ, ಅಹಲ್ಯೆ, ಬಿ.ವಿ. ಕಾರಂತರ ಪ್ರಯತ್ನದಿಂದ ರಂಗಪ್ರಯೋಗ ಕಂಡಿವೆ. ಉದ್ಯಾವರ ಮಾಧವ ಆಚಾರ್ಯ ಅವರು ತಮ್ಮ ಸಮೂಹ ಕಲಾವಿದರುಉಡುಪಿ ಎಂಬ ತಂಡದ ಮೂಲಕ ಅಹಲ್ಯೆ, ಸತ್ಯಾಯನ ಹರಿಶ್ಚಂದ್ರ, ಹರಿಣಾಭಿಸರಣ, ಕುಚೇಲ ಕೃಷ್ಣ ಗೀತರೂಪಕಗಳನ್ನು ಹಾಗೂ ಶ್ರೀ ಹರಿಚರಿತೆ ಮಹಾಕಾವ್ಯದ ಆಯ್ದ ಭಾಗಗಳನ್ನು ಸಂಕಲಿಸಿ ವಿವಿಧ ಸಂದರ್ಭಗಳಲ್ಲಿ ರಂಗ ಪ್ರಯೋಗವಾಗಿಸಿದ್ದಾರೆ. ಗೋಕುಲ ನಿರ್ಗಮನ ಅವರ ಹೆಸರಾಂತ ನಾಟಕವಾಗಿದ್ದು ಪ್ರಣಯಿಯೂ, ಸಂಗೀತಗಾರನೂ ಆಗಿರುವ ಕೃಷ್ಣ ಮುಂದೆ ಕೊಳಲನ್ನು ಬಿಸುಟು ಬೇರೆಯದೇ ಹಾದಿ ಹಿಡಿಯುವ ಸೂಚನೆ ಸಿಗುತ್ತದೆ. ಮುಂದೆ ಮಹಾಭಾರತ, ಮಧುರೆ, ದ್ವಾರಕೆಯಲ್ಲೆಲ್ಲೂ ಕೃಷ್ಣ ಕೊಳಲನ್ನು ಹಿಡಿಯುವುದಿಲ್ಲ. ಶ್ರೀಹರಿಚರಿತೆ ಆಧುನಿಕ ಯುಗದಲ್ಲಿ ಕೃಷ್ಣನ ಕಲ್ಪನೆಯನ್ನು ಸಾಕ್ಷಾತ್ಕರಿಸುವ ಪ್ರಯತ್ನವಾಗಿದೆ. ಇಂತಹ ಪೌರಾಣಿಕ ಸಂಗೀತಮಯ ನಾಟಕಗಳ ರಚನೆಗೆ ಪ್ರೇರಣೆ ಸಿಕ್ಕಿದ್ದು ಹರಿಕಥೆಗಳು, ಅರಮನೆ ನಾಟಕ ಕಂಪೆನಿಗಳಲ್ಲಿದ್ದ ಒಳ್ಳೆಯ ಸಂಗೀತಗಾರರು ಮತ್ತು ಅವರ ಪಾತ್ರ ನಿರ್ವಹಣೆ, ಮಾರ್ಷ್ ಶಿವಿಲಿಯರ್ನ ಎಂಬ ಆಧುನಿಕ ಅಪೆರಾ, ತಮಿಳಿನಲ್ಲಿ ವಲ್ಲಿ ಪರಿಣಯ ಎನ್ನುವ ಹಾಡುಗಳಿಂದಲೇ ನಿರ್ವಹಿಸಲ್ಪಟ್ಟ ನಾಟಕ ಹಾಗೂ ಕಂಪೆನಿ ನಾಟಕಗಳಿಂದ. ಅವರೊಬ್ಬ ಗೀತರೂಪಕ ನಾಟಕಕಾರರಾಗುವುದಕ್ಕೆ ಕಾರಣ ಕಾವ್ಯ ಮತ್ತು ಸಂಗೀತ ಮೇಳೈಸಿಕೊಂಡ ಕನ್ನಡದ ಏಕೈಕ ರಚನಕಾರರಾಗಿದ್ದುದು. ಸಂಗೀತಕ್ಕೆ ಪು.ತಿ.ನ.ರವರು ಹಲವು ಹೊಸ ರಾಗಗಳನ್ನು ಕಂಡುಹಿಡಿಯುವುದರ ಮೂಲಕ ಕೊಡುಗೆ ಸಲ್ಲಿಸಿದ್ದಾರೆ ಎಂದು ಡಾ ದೊರೆಸ್ವಾಮಿ ಅಯ್ಯಂಗಾರರು ಮೆಚ್ಚಿಗೆ ಮಾತನ್ನಾಡಿದ್ದಾರೆ. ಅವುಗಳಲ್ಲಿ ಮುಖ್ಯವಾದವು ವಾಸಂತಿ, ಸಂಜೀವಿನಿ, ಹರಿಣಿ, ಋತುವಿಲಾಸ, ಗಾಂಧಾರದೋಲ, ಋಷಭ ವಿಲಾಸ ಮತ್ತು ಇನ್ನೂ ನಾಮಕರಣವಾಗದ ಹಲವಾರು ರಾಗಗಳು ಸಾಕಷ್ಟಿವೆ. ಪು.ತಿ.ನ.ರವರು ಒಳ್ಳೆಯ ಗದ್ಯ ಬರಹಗಾರರೂ ಆಗಿದ್ದರು ಎಂಬುದಕ್ಕೆ ಅವರ ಐದು ಪ್ರಬಂಧ ಸಂಕಲನಗಳು ಸಾಕ್ಷಿಯಾಗಿವೆ. ಸಣ್ಣಕತೆ ಧ್ವಜರಕ್ಷಣೆ ಮತ್ತು ಇತರ ಕಥೆಗಳು ರಥಸಪ್ತಮಿ ಮತ್ತು ಇತರ ಕಥೆಗಳು ಗದ್ಯಚಿತ್ರಗಳು ರಾಮಾಚಾರಿಯ ನೆನಪು, ಈಚಲು ಮರದ ಕೆಳಗೆ, ಗೋಕುಲಾಷ್ಟಮಿ, ಭೀತಿ ಮೀಮಾಂಸೆ, ಧೇನುಕೋಪಾಖ್ಯಾನ, ಮಸಾಲೆದೋಸೆ, ಯದುಗಿರಿಯ ಗೆಳೆಯರು ಪ್ರಬಂಧಗಳು ಅವರ ಹಾಸ್ಯ ಪ್ರಸನ್ನತೆ, ಮಾತುಗಾರಿಕೆಯಿಂದ ಕೂಡಿವೆ. ಅನುವಾದಗಳು ಬದಲಿಸಿದ ತಲೆಗಳು, ಮಹಾಪ್ರಸ್ಥಾನ, ಕನ್ನಡ ಭಗವದ್ಗೀತೆ, ಗಯಟೆಯ ಫೌಸ್ಟ್ ಭಾಗ೧ ನಮ್ಮಾಳ್ವರ್ ಸಿರಿಬಾಯಿನುಡಿ ಸಮಕಾಲೀನ ಭಾರತೀಯ ಸಾಹಿತ್ಯ ಕಾವ್ಯಮೀಮಾಂಸೆವಿಮರ್ಶೆ ಕಾವ್ಯ ಕುತೂಹಲ ರಸಪ್ರಜ್ಞೆ (೧೯೮೦) ದೀಪರೇಖೆ ಆಯ್ದ ಸಂಗ್ರಹ ಅತಿಥಿ ನವಿಲುಗರಿ ಋತುಗೀತ ಲಹರಿ ಆಯ್ದ ಪ್ರಬಂಧಗಳು ಸಂಪಾದನೆ ಸುವರ್ಣ ಸಂಪುಟ (೧೯೮೦ಇತರರೊಡನೆ) ಪ್ರಶಸ್ತಿ ಮತ್ತು ಪುರಸ್ಕಾರಗಳು ಕವಿತೆಯ ಹಾಗೆ ಸರಳ, ಪ್ರಾಮಾಣಿಕ ಮನಸ್ಥಿತಿಯುಳ್ಳ ಹಿರಿಯ ಕವಿ ಪು.ತಿ.ನ.ರವರಿಗೆ ಸಂದ ಪ್ರಶಸ್ತಿಗಳು ಹಲವಾರು. ಇವರ ಹಂಸ ದಮಯಂತಿ ಮತ್ತು ಇತರ ರೂಪಕಗಳು ಎಂಬ ಕೃತಿಗೆ ೧೯೬೬ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಹಾಗೆಯೇ ಇವರ ಗೋಕುಲ ನಿರ್ಗಮನ ಎಂಬ ಸಂಗೀತ ಪ್ರಧಾನ ನಾಟಕ ಕನ್ನಡದ ಮೇರು ಕೃತಿಗಳ ಸಾಲಿಗೆ ಸೇರುತ್ತದೆ. ಈ ಕಾವ್ಯಮಯ ನಾಟಕದಲ್ಲಿ, ಕೃಷ್ಣನಿಗೆ ಕಂಸನಿಂದ ಆಹ್ವಾನ ಬಂದು ಗೋಕುಲದಿಂದ ದ್ವಾರಕೆಗೆ ಹೋಗಬೇಕಾಗಿ ಬಂದಾಗ, ಗೋಕುಲದ ಜನರ ಅನುರಾಗ, ರಾಧೆಯ ವ್ಯಾಕುಲತೆ ಮುಂತಾದವುಗಳನ್ನು ದಿವ್ಯವಾಗಿ ನಿರೂಪಿಸಿದ್ದಾರೆ. ಪದ್ಮಶ್ರೀ, ಪಂಪಪ್ರಶಸ್ತಿ, ನಾಡೋಜ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಡಿ.ಲಿಟ್, ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಜೊತೆಗೆ ಚಿಕ್ಕಮಗಳೂರಿನಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೂ ಆಗಿದ್ದರು. ಅವರಿಗೆ ದೊರೆಯದಿದ್ದ ಪ್ರಶಸ್ತಿ ಎಂದರೆ ಭಾರತೀಯ ಜ್ಞಾನಪೀಠ ಪ್ರಶಸ್ತಿ ಮಾತ್ರ! ಇದಕ್ಕಿಂತ ಮಿಗಿಲಾಗಿ ಒಳ್ಳೆಯ ಹಿರಿಯ ಸ್ನೇಹಿತರೂ, ಅಭಿಮಾನಿ ಕಿರಿಯ ಸ್ನೇಹಿತರನ್ನೂ ಹಾಗೂ ಸಹೃದಯಿಗಳ ಮೆಚ್ಚಿಗೆಯನ್ನು ಪಡೆದವರಾಗಿದ್ದಾರೆ. ಅವರು ಗತಿಸಿದಾಗ ಅವರಿಗೆ ತೊಂಬತ್ಮೂರರ ವಯಸ್ಸು. ಕವಿ ಪುತಿನ ಅವರ ಶತಮಾನದ ಮನೆ ಪುತಿನ ಮನೆ ಸ್ಮಾರಕವಾಗಿದ್ದು ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ. ಅಂದರೆ, ಪುತಿನ ಬದುಕಿದ್ದ ಕಾಲದಲ್ಲೇ. ಕವಿಯ ಆಶಯವೂ ಅದೇ ಆಗಿತ್ತು ನಾನು ಬದುಕಿರುವಾಗಲೇ ಬಾಳಿ, ಬದುಕಿದ ನನ್ನ ಮನೆ ಸ್ಮಾರಕವಾಗಬೇಕು. ನಾನು ಬರೆದ ಸಾಹಿತ್ಯ ನಿಂತ ನೀರಾ ಗದೆ, ನನ್ನ ಸಾವಿನಾಚೆಯೂ ಮುಂದಿನ ಪೀಳಿಗೆಯನ್ನು ತಲುಪುವಂತಾಗಬೇಕು. 1996ರಲ್ಲಿ ಈ ಮನೆ ಸ್ಮಾರಕವಾಗಿ, ಸರ್ಕಾರದ ತೆಕ್ಕೆ ಸೇರಿತು. 1998ರಲ್ಲಿ ಕವಿ ವಿಧಿವಶರಾದ ನಂತರ ಟ್ರಸ್ಟ್ನವರು ಕವಿಯ ಬಯಕೆಯಂತೆ ಮನೆಯ ಮೂಲ ರೂಪವನ್ನು ಬದಲಿಸದೇ 2000ನೇ ಇಸ್ವಿಯಲ್ಲಿ ಪ್ರಾಚ್ಯವಸ್ತು ಇಲಾಖೆಗೆ ಗುತ್ತಿಗೆ ನೀಡಿ (10 ಲಕ್ಷ ರು.), ಹೊಸ ರೂಪ ಕೊಡಲು ಮುಂದಾದರು. ಶತಮಾನದ ಅಂಚಿನಲ್ಲಿದ್ದ ಮನೆಯ ಹಳೇ ಕಂಬಗಳು, ಮಹಡಿಯ ಮೆಟ್ಟಿಲುಗಳು, ಹೆಂಚುಗಳನ್ನು ಬಳಸಿಕೊಂಡೇ ಮೂಲ ಮನೆಯ ಅಂದ, ಚಂದಕ್ಕೆ ಯಾವುದೇ ಧಕ್ಕೆ ಬಾರದಂತೆ ಕವಿ ಮನೆಯನ್ನು ಸುಂದರ ಸ್ಮಾರಕವಾಗಿಸಲಾಯಿತು. ಈ ಮನೆಯಲ್ಲಿ ಕವಿ ಪುತಿನ ಅವರ ಊರುಗೋಲು, ಬರೆಯಲು ಬಳಸುತ್ತಿದ್ದ ಮಣೆ, ಟೋಪಿ ಸೇರಿದಂತೆ ಮಹಡಿಯಲ್ಲಿ ಕುಳಿತು ಬರೆಯುತ್ತಿದ್ದ ಜಾಗವನ್ನೂ ಸಂರಕ್ಷಿಸಲಾಗಿದೆ. ಅಲ್ಲದೆ, ಕವಿಯ ಮನೆ ದೇಗುಲ, ರಥ ಸಪ್ತಮಿ, ಹರಿ ಚರಿತೆ, ಮಾಂದಳಿರು, ಜಾನ್ಹವಿಗೆ ಜೋಡಿ ದೀವಿಗೆ, ಗೋಕುಲ ನಿರ್ಗಮನ ಸೇರಿದಂತೆ ಅನೇಕ ಕೃತಿಗಳ ಪ್ರಥಮ ಮುದ್ರಣವೂ ಇಲ್ಲಿ ನೋಡಲು ಸಿಗುತ್ತದೆ. ಹೊರಗಿನ ಕೊಂಡಿಗಳು [:.೫೬ಪುತಿನಅವರಕಾವ್ಯಮೀಮಾಂಸ ಜಿ ಎಸ್ ಶಿವರುದ್ರಪ್ಪ ಅವರ ಪು.ತಿ.ನ. ಕಾವ್ಯಮೀಮಾಂಸೆ ಜಿ ಎಸ್ ಶಿವರುದ್ರಪ್ಪ ಅವರ ಪು.ತಿ.ನ. ವಿಶಿಷ್ಟತೆ ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ೧೯೦೫ ಜನನ ೧೯೯೮ ನಿಧನ ಪಂಪ ಪ್ರಶಸ್ತಿ ಪುರಸ್ಕೃತರು
ಬಿ.ಪುಟ್ಟಸ್ವಾಮಯ್ಯನವರು (ಮೇ ೨೪, ೧೮೯೭ ಜನವರಿ ೨೫, ೧೯೮೪ ಕನ್ನಡ ನಾಡಿನ ಬಹುಮುಖ ಪ್ರತಿಭೆ. ಪತ್ರಿಕೋದ್ಯಮಿಯಾಗಿ, ನಾಟಕಕಾರರಾಗಿ ಹಾಗೂ ಕಾದಂಬರಿಕಾರರಾಗಿ ಅವರು ನೀಡಿದ ಕೊಡುಗೆ ಮಹತ್ವಪೂರ್ಣವೆನಿಸಿವೆ. ಜೀವನ ಬಿ. ಪುಟ್ಟಸ್ವಾಮಯ್ಯನವರು ಕನ್ನಡ ನಾಡಿನಲ್ಲಿ ಪತ್ರಿಕೋದ್ಯಮದ ಪಾಂಚಜನ್ಯರಾಗಿ, ಶ್ರೇಷ್ಠ ಕಾದಂಬರಿಕಾರರಾಗಿ, ಪ್ರಖ್ಯಾತ ನಾಟಕಕಾರರಾಗಿ ವಿಖ್ಯಾತ ಚಲನಚಿತ್ರ ಕಲಾವಿದರಾಗಿ ಹಲವಾರು ರೀತಿಯಿಂದ ಉತ್ತಮತೆಯನ್ನು ಪಡೆದ ನಾಡವರ್ಗಳ್ ಎನಿಸಿಕೊಂಡವರು. ಅವರು ೧೮೯೭ನೆಯ ಮೇ ೨೪ರಂದು ಜನ್ಮ ತಾಳಿದರು. ಪುಟ್ಟಸ್ವಾಮಯ್ಯನವರು ೯ನೆ ತರಗತಿಯಲ್ಲಿ ಓದುತ್ತಿದ್ದಾಗಲೇ ಅವರ ತಂದೆ ಬಸಪ್ಪನವರು ಕಾಲಾಧೀನರಾದರು. ತಾಯಿ ಮಲ್ಲಮ್ಮನವರಿಗೆ ದಿಕ್ಕು ತೋರದಾಯಿತು. ಬಾಲಕ ಪುಟ್ಟಸ್ವಾಮಯ್ಯನಿಗೆ ಓದುವುದನ್ನು ಬಿಟ್ಟು ದುಡಿಯುವ ಪರಿಸ್ಥಿತಿ ಏರ್ಪಟ್ಟಿತು. ಪತ್ರಕರ್ತರಾಗಿ ಹಲವು ಖಾಸಗಿ ಸಂಸ್ಥೆಗಳಲ್ಲಿ ದುಡಿದ ನಂತರ ಮೈಸೂರಿನಿಂದ ಪ್ರಕಟವಾಗುತ್ತಿದ್ದ ಮೈಸೂರು ಸ್ಟಾರ್ ವಾರಪತ್ರಿಕೆಯ ವರದಿಗಾರರಾಗಿ ಬೆಂಗಳೂರಿನಲ್ಲಿ ಕೆಲಸಕ್ಕೆ ತೊಡಗಿದರು. ೧೯೨೫ರಲ್ಲಿ ನಾರಾಯಣ ಶೆಟ್ಟಿಯವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ನ್ಯೂ ಮೈಸೂರು ಎನ್ನುವ ವಾರಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಐದಾರು ವರ್ಷ ಅಲ್ಲಿ ಜನಪ್ರಿಯ ಸೇವೆ ಸಲ್ಲಿಸಿದ ನಂತರದಲ್ಲಿ ಆಗ ತಾನೇ ಜನ್ಮ ತಾಳಿದ್ದ ಒಕ್ಕಲಿಗ ಪತ್ರಿಕೆಯ ಸಂಪಾದಕರಾಗಿ ನೇಮಕಗೊಂಡರು. ಆಮೇಲೆ ಜನವಾಣಿ ಸಂಪಾದಕತ್ವವನ್ನು ವಹಿಸಿ ಜನವಾಣಿ ಜನರಲ್ಲಿ ಅನ್ವರ್ಥಕವಾಗುವಂತೆ ಮಾಡಿದರು. ಮುಂದೆ ಮಾತೃಭೂಮಿ ಪತ್ರಿಕೆಯಲ್ಲಿ ಕೂಡಾ ದುಡಿದರು. ಕೆಲವು ಕಾಲ ತಮ್ಮದೇ ಪ್ರತಿಭಾ ಎಂಬ ಪತ್ರಿಕೆ ಕೂಡಾ ನಡೆಸಿದ್ದರು. ಪತ್ರಿಕಾ ಸಂಪಾದಕರಾಗಿ ಹೀಗೆ ಹಲವು ಪ್ರಮುಖ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಪುಟ್ಟಸ್ವಾಮಯ್ಯನವರು ಪ್ರಜಾವಾಣಿಯ ಪ್ರಥಮ ಸಂಪಾದಕರಾದರು. ಪ್ರಜಾವಾಣಿ ಪತ್ರಿಕೆ ಜನಪ್ರಿಯತೆಯನ್ನು ಪಡೆಯಲು ಪುಟ್ಟಸ್ವಾಮಯ್ಯನವರ ದೂರದೃಷ್ಟಿಯೇ ಕಾರಣ. ಅವರು ಪ್ರಾರಂಭಿಸಿದ ಶೀರ್ಷಿಕೆಗಳು, ವಿಭಾಗಗಳು, ಸಂಪಾದಕೀಯ ಲೇಖನಗಳು ಪತ್ರಿಕೆಯ ಅಭ್ಯುದಯಕ್ಕೆ ಕಾರಣವಾದವು. ಆಮೇಲೆ ಜನ್ಮಭೂಮಿ ಪತ್ರಿಕೆಯ ಸಂಪಾದಕರಾದರು. ಜನ್ಮಭೂಮಿ ನಿಂತ ಮೇಲೆ ಪತ್ರಿಕೋದ್ಯಮಕ್ಕೆ ಶರಣು ಹೊಡೆದು ನಾಟ, ಕಾದಂಬರಿಯತ್ತ ಹೊರಳಿದರು. ಪುಟ್ಟಸ್ವಾಮಯ್ಯನವರು ಬೆಳೆಸಿದ ಕಿಡಿಯ ಶೇಷಪ್ಪ, ಛೂಬಾಣದ ಟೀಎಸ್ಸಾರ್, ವರದಿಯ ಜಯಶೀಲರಾವ್ ಮತ್ತು ನೂರಾರು ಯುವಜನಾಂಗದ ಶಕ್ತಿಗಳನ್ನೇ ನಾಡು ಕಂಡಿತು. ಆತ್ಮೀಯ ಒಡನಾಟ ಓದು ಮತ್ತು ಓಡಾಟ ಪುಟ್ಟಸ್ವಾಮಯ್ಯನವರಿಗೆ ಬಲು ಪ್ರಿಯ. ರೀಡಿಂಗ್ ಮತ್ತು ವಾಕಿಂಗ್ ಇವೆರಡನ್ನೂ ಎಂದೂ ಯಾವ ಕಾರಣಕ್ಕೂ ತಪ್ಪಿಸುತ್ತಿರಲಿಲ್ಲ. ಅವರ ಸತತ ಅಭ್ಯಾಸದ ಪ್ರಯತ್ನವೇ ಅವರು ಮೇರುಕೃತಿಗಳ ರಚನೆಗೆ ಹಿನ್ನೆಲೆಯಾಯಿತು. ಪುಟ್ಟಸ್ವಾಮಯ್ಯನವರಿಗೆ ಡಾ. ಎಂ. ಶಿವರಾಂ (ರಾ.ಶಿ) ಅಚ್ಚುಮೆಚ್ಚಿನ ಗೆಳೆಯರು. ಅಸ್ತವ್ಯಸ್ತದ ಅವರ ಜೀವನದಲ್ಲಿ ಅವರು ಅಷ್ಟು ದೀರ್ಘಕಾಲ ಬಾಳಲು ಡಾಕ್ಟರ್ ರಾ.ಶಿ ಅವರೇ ಕಾರಣ. ಕೈಲಾಸಂ ಮತ್ತು ಕೆ.ವಿ ಅಯ್ಯರ್ ಅವರುಗಳೂ ಕೂಡ ಅವರನ್ನು ಆಗಾಗ ಸಂಧಿಸುತ್ತಿದ್ದ ಗೆಳೆಯರು. ನಾಟಕಕರ್ತರಾಗಿ ಬಿ. ಪುಟ್ಟಸ್ವಾಮಯ್ಯನವರಿಗೆ ವಿಫುಲವಾದ ಕೀರ್ತಿಯನ್ನು ತಂದುಕೊಟ್ಟ ಕ್ಷೇತ್ರವೆಂದರೆ ನಾಟಕ ವಿಭಾಗ. ಕನ್ನಡ ನಾಟಕದ ಇತಿಹಾಸದಲ್ಲಿ ಪುಟ್ಟಸ್ವಾಮಯ್ಯನವರು ಕ್ರಾಂತಿ ಪುರುಷರು. ರಾಮಾಯಣ, ಮಹಾಭಾರತಗಳ ವಸ್ತುಗಳನ್ನು ಆರಿಸಿಕೊಂಡು ವಿನೂತನವಾದ ನಾಟಕಗಳನ್ನು ರಚಿಸಿಕೊಟ್ಟರು. ಅವರ ನಾಟಕಗಳ ಸಹಸ್ರಾರು ಪ್ರದರ್ಶನಗಳು ಒಂದೇ ಸಮನೆ ಜಯಭೇರಿ ಹೊಡೆದು ಜನರಲ್ಲಿ ಕ್ರಾಂತಿಯನ್ನೆಬ್ಬಿಸಿದುವು. ಪುಟ್ಟಸ್ವಾಮಯ್ಯನವರ ಕುರುಕ್ಷೇತ್ರ, ದಶಾವತಾರ ಮತ್ತು ಸಂಪೂರ್ಣ ರಾಮಾಯಣ ನಾಟಕಗಳು ಕನ್ನಡನಾಡಿನಲ್ಲಿ ಮನೆಮಾತು. ಈ ನಾಟಕಗಳು ಹಲವಾರು ಬಾರಿ ಅಚ್ಚಾಗಿರುವುದೇ ಅಲ್ಲದೆ ನೂರಾರು ಬಾರಿ ರಂಗದ ಮೇಲೆ ಪ್ರದರ್ಶಿತವಾಗಿರುವುದು ಆ ನಾಟಕಗಳ ಜನಪ್ರಿಯತೆಗೆ ಸಾಕ್ಷಿಯಾಗಿವೆ. ಅವರು ಕುರುಕ್ಷೇತ್ರ, ದಶಾವತಾರ, ಸಂಪೂರ್ಣ ರಾಮಾಯಣ, ಅಕ್ಕಮಹಾದೇವಿ, ಷಾಜಹಾನ್, ಗೌತಮಬುದ್ಧ, ಚಿರಕುಮಾರಸಭಾ, ಯಜ್ಞಸೇನಿ, ಸತೀತುಳಸಿ, ಪ್ರಚಂಡ ಚಾಣಕ್ಯ, ಜಯದೇವ, ಅಭಿನೇತ್ರಿ, ಚಂಗಲೆಯ ಬಲಿದಾನ, ಶ್ರೀದುರ್ಗ, ಬಭ್ರುವಾಹನ, ಬಿಡುಗಡೆಯ ಬಿಚ್ಚುಗತ್ತಿ, ರಾಣಿ, ತಾರಕವಧೆ ಮತ್ತು ಇವನಲ್ಲ ಹೀಗೆ ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ನಾಟಕಗಳೂ ಸೇರಿದಂತೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನಪ್ರಿಯ ನಾಟಕಗಳನ್ನು ರಚಿಸಿದ್ದಾರೆ. ಪದ್ಯಂ ವಧ್ಯಂ ಗದ್ಯಂ ಹೃದ್ಯಂ ಎಂಬ ಕವಿ ವಾಣಿಗೆ ಅನುಸಾರವಾಗಿ ನಾಟಕಗಳನ್ನು ಹೆಚ್ಚಾಗಿ ಗದ್ಯರೂಪದಲ್ಲಿ ಅಲ್ಲಲ್ಲಿ ಸಂಗೀತ ಸೇರಿಸಿ ಮುತ್ತು ಹವಳದಂತೆ ಒಗ್ಗೂಡಿ ಬರುವಂತೆ ಬರೆದವರಲ್ಲಿ ಬಿ. ಪುಟ್ಟಸ್ವಾಮಯ್ಯನವರು ಪ್ರಥಮರು, ಅಗ್ರಗಣ್ಯರು. ಈ ದೃಷ್ಟಿಯಿಂದ ಅವರು ನಾಟಕರಂಗಕ್ಕೆ ಸಲ್ಲಿಸಿದ ಸೇವೆ ಅದ್ವಿತೀಯವಾದುದು. ಅವರ ಕುರುಕ್ಷೇತ್ರ ನಾಟಕ ಪ್ರದರ್ಶನದ ದಾಖಲೆಯನ್ನು ಸ್ಥಾಪಿಸಿತು. ಒಬ್ಬನೇ ನಾಟಕಕಾರನ ಹಲವು ನಾಟಕಗಳು ಈ ರೀತಿಯಲ್ಲಿ ಪ್ರಚಂಡ ಯಶಸ್ಸು ಗಳಿಸಿರುವುದು ಇಡೀ ನಾಡಿನಲ್ಲಿಯೇ ಅಪರೂಪ. ಕಾದಂಬರಿ ಕ್ಷೇತ್ರದಲ್ಲಿ ಬಿ. ಪುಟ್ಟಸ್ವಾಮಯ್ಯನವರು ಪತ್ರಿಕೋದ್ಯಮದಲ್ಲಿ ಸಾಕಷ್ಟು ಅನುಭವ ಗಳಿಸಿ ನಾಟಕರಂಗದಲ್ಲಿ ಕೈಯಾಡಿಸಿ ಕಾದಂಬರಿ ಕ್ಷೇತ್ರಕ್ಕೆ ಧುಮುಕಿದರು. 1953ರಲ್ಲಿ ಅವರ ಪ್ರಥಮ ಕಾದಂಬರಿ ರೂಪಲೇಖಾ ಪ್ರಕಟವಾಯಿತು. ಅಭಿಸಾರಿಕೆ, ಸುಧಾಮಯೀ, ಮಲ್ಲಮ್ಮನ ಪವಾಡ, ರತ್ನಹಾರ, ಚಾಲುಕ್ಯ ತೈಲಪ, ತೇಜಸ್ವಿನಿ, ನಾಟ್ಯ ಮೋಹಿನಿ, ಪ್ರಭುದೇವ, ಉದಯರವಿ, ರಾಜ್ಯಪಾಲ, ಕಲ್ಯಾಣೇಶ್ವರ, ನಾಗಬಂಧ, ಮುಗಿಯದ ಕನಸು, ಕ್ರಾಂತಿ ಕಲ್ಯಾಣ, ಹೂವು ಕಾವು ಕಾದಂಬರಿಗಳನ್ನು ರಚಿಸಿದರು. ಪ್ರಶಸ್ತಿ ಗೌರವಗಳು 1965ರಲ್ಲಿ ಅವರ ಕ್ರಾಂತಿ ಕಲ್ಯಾಣಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಯ ಪ್ರಶಸ್ತಿ ಲಭಿಸಿತು. ಅದೇ ವರ್ಷ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ದೊರಕಿತು. ಅರಮನೆ, ಗುರುಅಮೇನೆ ಮತ್ತು ಜನಮನೆಗಳಿಂದ ನೂರಾರು ಪದವಿ ಪ್ರಶಸ್ತಿಗಳನ್ನುಪಡೆದರು. ಸ್ತೋತ್ರ ಪದ್ಯಗಳು ಪುಟ್ಟಸ್ವಾಮಯ್ಯನವರು ಸಂಸ್ಕೃತ ಅಧ್ಯಯನವನ್ನೂ ನಡೆಸಿದ್ದರಿಂದ ಕೆಲವು ಸ್ತೋತ್ರ ಪಧ್ಯಗಳನ್ನೂ ಕನ್ನಡದಲ್ಲಿ ರಚಿಸಿದ್ದಾರೆ. ವಿದಾಯ ಹೆಸರು ಪುಟ್ಟಸ್ವಾಮಿಯಾದರೂ ಪುಟ್ಟಸ್ವಾಮಯ್ಯನವರು ಪಡೆದುದು ದೊಡ್ಡ ಕೀರ್ತಿ. ಪತ್ರಿಕೋದ್ಯಮಿ, ಚಲನಚಿತ್ರ ಸಾಹಿತಿ, ನಿರ್ದೇಶಕ, ಕಾದಂಬರಿಕಾರ, ಕಥೆಗಾರ, ನಾಟಕಕಾರ ಹಾಗೂ ಸಮಾಜ ಸೇವಕ ಹೀಗೆ ಎಲ್ಲಾ ಒಬ್ಬರೇ ಆಗಿರುವುದು ಅಪರೂಪ. ಬಿ. ಪುಟ್ಟಸ್ವಾಮಯ್ಯನವರು ಜನವರಿ ೨೫, ೧೯೮೪ರಂದು ವಿಧಿವಶರಾದರು. ಅವರ ನೆನಪು ಅಮರ. ಮಾಹಿತಿ ಆಧಾರ ಸಾಲುದೀಪಗಳು ಕೃತಿಯಲ್ಲಿ ಹೀ. ಚಿ. ಶಾಂತವೀರಯ್ಯ ಅವರ ಬಿ. ಪುಟ್ಟಸ್ವಾಮಯ್ಯ ಅವರ ಕುರಿತ ಲೇಖನ ನಾಟಕ ಗುಬ್ಬಿ ಕಂಪನಿಗಾಗಿ ಹಲವು ನಾಟಕಗಳನ್ನು ರಚಿಸಿ ಕೊಟ್ಟರು. ಷಹಾಜಹಾನ್ ಇವರ ಪ್ರಥಮ ನಾಟಕ. ಷಹಾ ಜಹಾನ್ ದಶಾವತಾರ ಸಂಪೂರ್ಣ ರಾಮಾಯಣ. ಕುರುಕ್ಷೇತ್ರ ರಾಣಿ ಅಕ್ಕ ಮಹಾದೇವಿ ಗೌತಮ ಬುದ್ಧ ಸತಿ ತುಲಸಿ ಬಭ್ರುವಾಹನ ತಾರಕ ವಧೆ ಪ್ರಚಂಡ ಚಾಣಕ್ಯ ಬಿಡುಗಡೆಯ ಬಿಚ್ಚುಗತ್ತಿ ಶಾಂತಿದೂತ ಬಾಹುಬಲಿ ಹಿಟ್ಟಿನ ಕೋಳಿ ತಾರಕ ವಧೆ ಅಭಿನೇತ್ರಿ ಮೋಹಮುಕ್ತಿ ಕಾದಂಬರಿ ಕ್ರಾಂತಿ ಕಲ್ಯಾಣ ಹೂವು ಕಾವು ರೂಪರೇಖಾ ಸುಧಾಮುಖಿ ಮಲ್ಲಮ್ಮನ ಪವಾಡ ಅಭಿಸಾರಿಕೆ ರತ್ನಹಾರ ಉದಯರವಿ ರಾಜ್ಯಪಾಲ ಕಲ್ಯಾಣೇಶ್ವರ ನಾಗಬಂಧ ಮುಗಿಯದ ಕನಸು ಕನ್ನಡ ಸಾಹಿತ್ಯ ಸಾಹಿತಿಗಳು ನಾಟಕಕಾರರು ಬಿ.ಪುಟ್ಟಸ್ವಾಮಯ್ಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು :.
ಪ್ರೊ. ಎ. ಆರ್. ಕೃಷ್ಣಶಾಸ್ತ್ರಿ (ಫೆಬ್ರುವರಿ ೧೨, ೧೮೯೦ ಫೆಬ್ರುವರಿ ೧, ೧೯೬೮) ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿಗಳೊಲ್ಲಬ್ಬರು. ಇವರ ಬಂಗಾಳಿ ಕಾದಂಬರೀಕಾರ ಬಂಕಿಮ ಚಂದ್ರ ಎಂಬ ಕೃತಿಗೆ ೧೯೬೧ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಬಾಲ್ಯ ತಂದೆ, ಪ್ರಖ್ಯಾತ ವಯ್ಯಾಕರಣಿ ಅಂಬಳೆ ರಾಮಕೃಷ್ಣಶಾಸ್ತ್ರಿಗಳು. ಇವರು ಶೃಂಗೇರಿ ಸ್ವಾಮಿಗಳ ಬಳಿ ಪದಕ, ಶಾಲು ಜೋಡಿ, ಚಿನ್ನದ ಕಾಪು, ತೋಡಗಳನ್ನು ಪಡೆದವರು. ಮೈಸೂರಿನ ಸಂಸ್ಕೃತ ವಿದ್ಯಾಶಾಲೆಯಲ್ಲಿ ಉಪಾಧ್ಯಾಯರಾಗಿದ್ದರು. ತಾಯಿ ಶಂಕರಮ್ಮನವರು. ಫೆ.೧೨, ೧೮೯೦ ರಲ್ಲಿ ಜನಿಸಿದರು. ಮೈಸೂರಿನ ದೇವೀರಮ್ಮಣ್ಣಿ ಅಗ್ರಹಾರದಲ್ಲಿ ವಾಸ್ತವ್ಯಹೂಡಿದ್ದ ಅವರ ಮನೆಯನ್ನು ಮಹಾರಾಜರೇ ಕೊಟ್ಟಿದ್ದರು. ಶಾಸ್ತ್ರಿಗಳಿಗೆ ಮನೆಯೇ ಪಾಠಶಾಲೆ, ಮತ್ತು ತಂದೆಯವರೇ ಶಿಕ್ಷಕರು. ಅವರ ಮೊದಲ ಪಾಠ, ಓಂ ನಮಃ ಶಿವಾಯ. ತಮ್ಮ ೮ನೆ ವರ್ಷದಲ್ಲೇ ತಾಯಿಯವರ ಅಕಾಲನಿಧನದಿಂದ ತಂದೆಯವರ ಸಾನ್ನಿಧ್ಯ ಹೆಚ್ಚಾಯಿತು. ಅವರು ತಂದೆಯವರ ಜೊತೆಗೇ ಪಾಠಶಾಲೆಗೆ ಹೋಗುತ್ತಿದ್ದರು. ಕೃಷ್ಣಶಾಸ್ತ್ರಿಗಳ ವೇಶಭೂಷಣಗಳು : ಪಂಚೆ, ಶರ್ಟ್, ತಲೆಯಮೇಲೆ ಒಂದು ಟೋಪಿ, ಮತ್ತು ತಲೆಯಲ್ಲಿ ಜುಟ್ಟು ಇತ್ತು. ಹಣೆಯಲ್ಲಿ ತಿದ್ದಿದ ಗಂಧಾಕ್ಷತೆ. ಎಲ್ಲಿ ಹೋಗಬೇಕಾದರೂ ಬರಿಕಾಲಿನಲ್ಲಿಹೋಗುತ್ತಿದ್ದರು. ಶಾಲೆಯಲ್ಲಿ ಎಲ್ಲರಿಗಿಂತ ತಾವೇ ಮೊದಲಿಗರು. ಅವರಿಗೆ ವಿದ್ಯಾರ್ಥಿವೇತನ ಸಿಕ್ಕ ಮೊದಲ ತಿಂಗಳಲ್ಲೇ, ಒಂದು ಪುಸ್ತಕ ಖರೀದಿಸಿದರು. ಅದರ ಹೆಸರು, ಆನಂದ ಮಠ. ವೃತ್ತಿಜೀವನ : (ಜಿಲ್ಲಾ ಕಛೇರಿ ಗುಮಾಸ್ತರಿಂದ ಕನ್ನಡ ಪ್ರಾಧ್ಯಾಪಕರವರೆಗೆ) ಗವರ್ನಮೆಂಟ್ ಕಾಲೇಜಿನಲ್ಲಿ ತಮ್ಮ ಬಿ.ಎ. ಪರೀಕ್ಷೆ ಪಾಸ್ ಮಾಡಿದರು. ಇಂಗ್ಲೀಷ್ ನಲ್ಲಿ ಕೇವಲ ಒಂದು ಅಂಕದಿಂದ ನಪಾಸ್ ಆಗಿದ್ದರು. ೧೯೧೩ ರಲ್ಲಿ ಅದೊಂದು ವಿಷಯಕ್ಕೆ ಪರೀಕ್ಷೆಗೆ ಕುಳಿತುಕೊಂಡು ತೇರ್ಗಡೆಯಾದರು. ಅದೇವರ್ಷದಲ್ಲಿ ಅವರಿಗೆ ಮೈಸೂರು ಜಿಲ್ಲಾ ಕಛೇರಿಯಲ್ಲಿ ಗುಮಾಸ್ತರ ಕೆಲಸ ಸಿಕ್ಕಿತು. ವೇತನ ತಿಂಗಳಿಗೆ ೩೫ರೂಪಾಯಿಗಳು. ಅಲ್ಲಿ ೬ ತಿಂಗಳು ಕೆಲಸಮಾಡಿ, ಬೆಂಗಳೂರಿನ ಸೆಂಟ್ರೆಲ್ ಕಾಲೇಜ್ ನ ಕನ್ನಡವಿಭಾಗದಲ್ಲಿ, ಅಸಿಸ್ಟೆಂಟ್ ಮಾಸ್ಟರ್ ಆಗಿ ಸೇರಿ ಕೆಲಸಮಾಡಿದರು. ಮುಂದಿನ ವರ್ಷ ಅವರ ಸ್ಥಾನದ ಹೆಸರು, ಟ್ಯೂಟರ್ ಎಂದಾಯಿತು. ಸೆಂಟ್ರಲ್ ಕಾಲೇಜಿನಲ್ಲಿ ಎಲ್ಲಾಭಾಷೆಗಳ ಒಂದೊಂದು ಸಂಘವಿದ್ದ ಕಾಲ ಅದು. ದುರದೃಷ್ಟವಶಾತ್ ಕನ್ನಡ ಭಾಷೆಯ ಸಂಘವಿರಲಿಲ್ಲ. ಸೆಂಟ್ರೆಲ್ ಕಾಲೇಜಿನಲ್ಲಿ, ಪ್ರಬುದ್ಧಕರ್ನಾಟಕ ಪತ್ರಿಕೆಯ ಆರಂಭ: ಎ. ಆರ್. ಕೃಷ್ಣಶಾಸ್ತ್ರಿಗಳು ಕನ್ನಡಸಂಘವೆಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಮುಂದಿನ ವರ್ಷ ಪ್ರಬುದ್ಧ ಕರ್ನಾಟಕ ತ್ರೈಮಾಸಿಕ ಪತ್ರಿಕೆಪತ್ರಿಕೆಯನ್ನು ಆರಂಭಿಸಿದರು. ಆಗಿನಕಾಲದಲ್ಲಿ ಕನ್ನಡ ಓದುವವರು, ಅದರಲ್ಲಿ ಬರೆಯುವವರು ಇರಲೇ ಇಲ್ಲವೆನ್ನಬಹುದು. ಶಾಸ್ತ್ರಿಯವರಿಗೋ ಕನ್ನಡ ಸಂಘ ಮತ್ತು ಪ್ರಬುದ್ಧ ಕರ್ನಾಟಕಗಳು ಎರಡು ಕಣ್ಣಿನಷ್ಟು ಪ್ರಮುಖವಾದವುಗಳು. ಮನೆ ಮನೆಗಳಿಗೂ ಹೋಗಿ ಕನ್ನಡಲ್ಲಿ ಹೆಚ್ಚು ಹೆಚ್ಚು ಬರೆಯಲು ಯುವಜನರನ್ನು ಪ್ರೋತ್ಸಾಹಿಸಿದರು. ತಪ್ಪುಗಳನ್ನು ತಾವೇ ತಿದ್ದಿ ಪ್ರಕಟಪಡಿಸುತ್ತಿದ್ದರು. ಅಲ್ಲಿ ಟ್ಯೂಟರ್ ಆಗಿದ್ದಾಗಲೇ ತಾವೇ ಸ್ವತಃ ಓದಿಕೊಂಡು ಎಮ್. ಎ. ಪರೀಕ್ಷೆ ಪಾಸುಮಾಡಿದರು. ೧೯೧೯ ರಲ್ಲಿ ಅವರಿಗೆ ಓರಿಯೆಂಟಲ್ ಲೈಬ್ರರಿಯಲ್ಲಿ ಸಂಶೋಧಕ ವಿಜ್ಞಾನಿಯ ಕೆಲಸ ಸಿಕ್ಕಿತು. ಅವರು ಅಲ್ಲಿನ ಲೆಕ್ಕಪತ್ರ, ಪುಸ್ತಕಗಳ ಮಾರಾಟದ ವ್ಯವಸ್ಥೆಗಳನ್ನೂ ನೋಡಿಕೊಳ್ಳಬೇಕಾಗಿತ್ತು. ಆದ್ದರಿಂದ ಹೆಚ್ಚು ಸಂಶೋಧನೆಗಳನ್ನು ಮಾಡಲಾಗಲಿಲ್ಲ. ಇವರಿಗೆ ಪ್ರೊ. ಟಿ. ಎಸ್. ವೆಂಕಣ್ಣಯ್ಯನವರು ಹತ್ತಿರದ ಗೆಳೆಯರು. ಎ. ಆರ್. ಕೃಷ್ಣಶಾಸ್ತ್ರಿಗಳು ಒಬ್ಬ ಘನ ವಿದ್ವಾಂಸರು. ೧೯೩೯ ರಲ್ಲಿ ಪ್ರೊ. ವೆಂಕಣ್ಣಯ್ಯನವರು ಮರಣಹೊಂದಿದರು. ಈ ಅಕಾಲ ಮರಣದಿಂದ ಶಾಸ್ತ್ರಿಗಳು ತುಂಬಾ ನೊಂದಿದ್ದರು. ಆದರೆ ಶಾಸ್ತ್ರಿಗಳನ್ನು ವೆಂಕಣ್ಣಯನವರ ಸ್ಥಾನವನ್ನು ತುಂಬಲು ವಿಶ್ವವಿದ್ಯಾಲಯದವರು ಮನವಿಮಾಡಿಕೊಂಡಿದ್ದರಿಂದ ಒಪ್ಪಿಕೊಳ್ಳಲೇಬೇಕಾಯಿತು. ಟಿ. ಎಸ್.ವೆಂಕಣ್ಣಯ್ಯ ಮತ್ತು ಎ. ಆರ್. ಕೃಷ್ಣಶಾಸ್ತ್ರಿಗಳ ಜೋಡಿಯನ್ನು ಮಿತ್ರರು, ಅಶ್ವಿನಿದೇವತೆಗಳು, ಎಂದು ಕರೆಯುತ್ತಿದ್ದರು. ಪ್ರೊ. ಎ. ಆರ್. ಕೃಷ್ಣ ಶಾಸ್ತ್ರಿಗಳ ಮತ್ತೊಂದು ಅಮೂಲ್ಯವಾದ ಕೊಡುಗೆ ಎಂದರೆ ವಚನಭಾರತವೆಂಬ ಗ್ರಂಥದ ರಚನೆ. ಸಂಸ್ಕೃತದಲ್ಲಿದ್ದ ಮಹಾಭಾರತವನ್ನು ಕನ್ನಡಕ್ಕೆ ತಂದ ಕೀರ್ತಿ ಅವರಿಗೆ ಸಲ್ಲಬೇಕು. ವಚನಭಾರತ, ೫೦೦ ಪುಟಗಳ ಸರಳ, ಸ್ಪಷ್ಟ ಲೇಖನ. ವಚನಭಾರತವನ್ನು ಏಕೆ ಓದಬೇಕು ಎನ್ನುವುದರ ಬಗ್ಗೆ ಬಹಳ ಸುಂದರವಾಗಿ ತಮ್ಮ ಪೀಠಿಕೆಯಲ್ಲಿ ಬರೆದಿದ್ದಾರೆ. ಸ್ವತಃ ದೈವಭಕ್ತರಾದರೂ, ಅವರು ತಮ್ಮ ೬೦ ನೆಯ ವರ್ಷದ ಷಷ್ಟಿಪೂರ್ತಿಯನ್ನು ನೆರೆವೇರಿಸಿಕೊಳ್ಳಲಿಲ್ಲ. ಅದರ ಬದಲಾಗಿ, ಪ್ರತಿವರ್ಷವೂ ಮಾಘ ಶುದ್ಧ ಪೂರ್ಣಿಮೆಯ ದಿನದಂದು, ಭಾರತದ ಪ್ರತಿಯನ್ನು ದೇವರಮುಂದೆ ಇಟ್ಟು, ಪೂಜಿಸಿ, ಅದರ ಪ್ರತಿಗಳನ್ನು ಎಲ್ಲರಿಗೂ ಹಂಚಿ ತೃಪ್ತಿಪಡುತ್ತಿದ್ದರು. ಅವರಿಗೆ ಸಂಸ್ಕೃತ, ಬಂಗಾಳಿ, ತಮಿಳು, ತೆಲುಗು, ಹಿಂದಿ, ಭಾಷೆಗಳಲ್ಲಿ ಪ್ರಾವೀಣ್ಯತೆ ಇತ್ತು. ಫ್ರೆಂಚ್, ಜರ್ಮನ್, ಉರ್ದುಭಾಷೆಗಳನ್ನೂ ಅವರು ಕಲಿತುಕೊಂಡರು. ವಚನಭಾರತ ಬರೆದ ಸ್ವಲ್ಪದಿನದಲ್ಲೇ, ಅವರಿಗೆ ಬೆಂಗಳೂರಿಗೆ ವರ್ಗವಾಯಿತು. ಬಸವನಗುಡಿಯ ೨ ನೆಯ ರಸ್ತೆಯಲ್ಲಿದ್ದ ಅವರಮನೆಯ ರಸ್ತೆಯನ್ನು, ಎ. ಆರ್. ಕೃಷ್ಣ ಶಾಸ್ತ್ರಿ ರೋಡ್, ಎಂದು ನಾಮಕರಣಮಾಡಲಾಯಿತು. ನಿವೃತ್ತಿಯ ನಂತರವೂ ಕೆಲಸಕ್ಕೆ ಆಹ್ವಾನ : ಅವರು ನಿವೃತ್ತರಾದಮೇಲೂ ಕನ್ನಡದಲ್ಲಿ ಪಾಠಹೇಳಲು ಕರೆ ಬಂದದ್ದು, ನ್ಯಾಷನಲ್ ಕಾಲೇಜ್ ನಲ್ಲಿ. ಅವರು ಒಪ್ಪಿಕೊಂಡರು. ವರ್ಷಗಳಕಾಲ ಸೇವೆಮಾಡಿಯೂ ಒಂದು ಪೈಸ ಮುಟ್ಟಲಿಲ್ಲ. ಆಗ ಪಾಠಹೇಳುವಾಗಲೂ ಕಟ್ಟುನಿಟ್ಟಾಗಿ ಸಮಯ ಪಾಲನೆ ಮಾಡುತ್ತಿದ್ದರು. ಪ್ರತಿ ದಿನ ಮಾರನೆಯ ದಿನದ ಪಾಠಕ್ಕೆ ಸಿದ್ಧತೆ ನಡೆಯುತ್ತಿತು. ಸ್ಪಷ್ಟವಾಗಿ ಕೊನೆಯ ಬೆಂಚಿನ ವಿದ್ಯಾರ್ಥಿಗೂ ಚೆನ್ನಾಗಿ ಕೇಳಿಸುವಷ್ಟು ಜೋರಾಗಿ ಪಾಠ ಮಾಡುತ್ತಿದ್ದರು. ಅವರು ಬಂಗಾಳಿ ಭಾಷೆಯನ್ನು ಕಲಿತರು. ಭಾರತ ಸಾಹಿತ್ಯ ಅಕ್ಯಾಡಮಿಯವರು,ಬಂಕಿಮ ಚಂದ್ರ ಪುಸ್ತಕಕ್ಕೆ, ೧,೦೦೦ ರೂಪಾಯಿ ಬಹುಮಾನ, ತಾಮ್ರಪತ್ರಕೊಟ್ಟು ಗೌರವಿಸಿದರು. ಆಗ ೭೦ ವರ್ಷ. ಆರೋಗ್ಯ ಚೆನ್ನಾಗಿಲ್ಲದಿದ್ದರಿಂದ ಆ ಪ್ರಶಸ್ತಿಯನ್ನು ಅವರ ಮನೆಯಲ್ಲೇ ಮಿತ್ರರಮುಂದೆ ಕೊಡಲಾಯಿತು. ನಿರಾಡಂಬರ ವ್ಯಕ್ತಿ, ಹೊಗಳಿಕೆ, ಸಭೆ, ಭಾಷಣಗಳನ್ನು ಅವರು ಹೆಚ್ಚಿಗೆ ಇಷ್ಟಪಡುತ್ತಿರಲಿಲ್ಲ. ಅವರ ಮೊಮ್ಮಕ್ಕಳಾದ, ನಿರ್ಮಲ ಮತ್ತು ಭಾರತಿಯವರಿಗೆ ಅರ್ಥವಾಗುವುದು ಕಷ್ಟ ಎಂದು ತೋರಿದಾಗ, ಅವರು ನಿರ್ಮಲಭಾರತಿ ಎಂಬ ಪುಸ್ತಕವನ್ನು ಕೇವಲ ಮಕ್ಕಳಿಗಾಗಿಯೇ ಬರೆದರು. ಅವರ ಅಭಿಮಾನಿಗಳು, ಗೆಳೆಯರು ತಮ್ಮ ಗೌರವವನ್ನು ಸಲ್ಲಿಸಲು ಅವರಿಗೆ ಅಭಿವಂದನ ಎಂಬ ಗ್ರಂಥವನ್ನು ಹೊರತಂದರು. ಈಗ ಶಾಸ್ತ್ರಿಗಳು ಅದಕ್ಕೆ ವಿರೋಧಿಸಲಿಲ್ಲ. ಪ್ರಶಸ್ತಿಯನ್ನು ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲ್ ನಲ್ಲಿ ದಯಪಾಲಿಸಲಾಯಿತು. ಅವರ ೭೩ ನೆಯ ವಯಸ್ಸಿನಲ್ಲಿ, ತಮ್ಮ ಕೊನೆಯ ಕೃತಿ ನಿಬಂಧಮಾಲ ಬರೆಯಲು ಪ್ರಾರಂಭಿಸಿದರು. ಆದರೆ, ೧, ಫೆ, ೧೯೬೮ ರಲ್ಲಿ ನಿಧನರಾದರು. ಅವರು ಹೊರಗೆ ವಜ್ರದಷ್ಟು ಕಠೋರವಾಗಿ ಕಂಡರೂ ಅವರ ಮನಸ್ಸು ಹೂವಿನಷ್ಟು ಮೃದುವಾಗಿತ್ತು. ಕನ್ನಡಭಾಷೆಗೆ ಅವರು ಕೊಟ್ಟ ಕೊಡುಗೆಯನ್ನು ಗಮನಿಸಿ, ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಿ.ಲಿಟ್ , ಪದವಿಯನ್ನು ಕೊಟ್ಟು ಪುರಸ್ಕರಿಸಿದರು. ಅದೇ ವರ್ಷದಲ್ಲಿ, ಸಾಹಿತ್ಯ ಅಕ್ಯಾಡಮಿ ಪ್ರಶಸ್ತಿಯೂ ಬಂತು. ೧೯೪೧ರಲ್ಲಿ ಹೈದರಾಬಾದಿನಲ್ಲಿ ಜರುಗಿದ ೨೬ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷರಾಗಿದ್ದರು. ಬಿರುದು ಮತ್ತು ಪ್ರಶಸ್ತಿಗಳು: ಕನ್ನಡಕುಲಸಾರಥಿ, ಕನ್ನಡ ಕುಲಗುರು, ಎಂದು ಅವರ ಶಿಷ್ಯರುಗಳು ಮತ್ತು ಅಭಿಮಾನಿಗಳು ಕರೆಯುತ್ತಿದ್ದರು. ವಿಶ್ವವಿದ್ಯಾಲಯದ ಪದವಿದಾನ ಸಮಾರಂಭಗಳಲ್ಲಿ, ಶಾಸ್ತ್ರಿಗಳು ಕಂಚಿನಕಂಠದಲ್ಲಿ ಕನ್ನಡದಲ್ಲೇ ಮಾತನಾಡುತ್ತಿದ್ದದ್ದು, ದಾಖಲೆಗೆ ಪಾತ್ರವಾದ ಸಂಗತಿ. ಅವರ ಕೃತಿಗಳು : ೧. ೧೨ ನೆಯ ಶತಮಾನದ ಜೈನರ ಗ್ರಂಥಗಳು. ೨. ಧರ್ಮಾಮೃತ. ೩. ಕೆಳದೀ ನೃಪವಿಜಯ. ೪. ಸಂಸ್ಕೃತನಾಟಕ ೫. ಭಾಸಕವಿ ೬. ರಾಮಕೃಷ್ಣಪರಮಹಂಸರು. ೭. ನಾಗಮಹಾಶಯ. ೮. ಸರ್ವಜ್ಞ ಕವಿ. ೯. ಕನ್ನಡ ಸಂಸ್ಕೃತ ನಾಟಕಗಳು. ೧೦. ಭಾಸ, ಶೂದ್ರಕ, ಕಾಳಿದಾಸ. ೧೧. ವಚನಭಾರತ. ೧೨. ಶ್ರೀಪತಿಯ ಕಥೆಗಳು. ೧೩. ಕಥಾಮೃತ. ೧೪. ಬೃಹತ್ ಕಥಾಮಂಜರಿ. ೧೫. ಕಥಾಸರಿತ್ಸಾಗರ. ೧೬. ದಡ್ಡರಕಥೆ. ೧೭. ಭೇತಾಳ ವರ. ೧೮. ರಾಜಾರಾಣಿಯರ, ಋಷಿಗಳಮತ್ತು ಗಂಧರ್ವರ ಕಥೆಗಳು. ೧೯. ಬಂಕಿಮ ಚಂದ್ರ. ೨೦. ನಿರ್ಮಲಭಾರತಿ. ೨೧. ನಿಬಂಧಮಾಲ. ೨೨. ಭಾಷಣಗಳುಲೇಖನಗಳು. ೨೩. ಕವಿಜಿಹ್ವಾಬಂಧನ. ಕೆ. ಶಾಂತಾ, ೧೯೭೩. ಪ್ರೊ. ಎಲ್. ಎಸ್. ಎಸ್. ರವರು ಸಂಪಾದಿಸಿದ ಕಿರುಹೊತ್ತಿಗೆಗಳು. ನೋಡಿ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶಕೃಷ್ಣಶಾಸ್ತ್ರೀ, ಎ ಆರ್ ಉಲ್ಲೇಖಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಸಾಹಿತಿಗಳು
ದೇವುಡು(೧೮೮೬ ಡಿಸೆಂಬರ್ ೨೯ ೧೯೬೨ ಅಕ್ಟೋಬರ್ ೨೭) ಎಂದೇ ಖ್ಯಾತರಾದ ದೇವುಡು ನರಸಿಂಹಶಾಸ್ತ್ರಿಯವರು ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿಗಳಲ್ಲೊಬ್ಬರು. ಅವರು ಅನೇಕ ಐತಿಹಾಸಿಕ, ಪೌರಾಣಿಕ ಮತ್ತು ಸಾಮಾಜಿಕ ಕಾದಂಬರಿಗಳನ್ನು ಬರೆದಿದ್ದಾರೆ. ಅವರ ಮಹಾಕ್ಷತ್ರಿಯ ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಬಾಲ್ಯ ಮತ್ತು ಶಿಕ್ಷಣ ದೇವುಡು ಅವರು ೧೮೮೬ ಡಿಸೆಂಬರ ೨೯ರಂದು ವೇದ ಶಾಸ್ತ್ರಪಾರಂಗತ ಕುಟುಂಬದಲ್ಲಿ ಜನಿಸಿದರು. ತಾಯಿ ಸುಬ್ಬಮ್ಮ ತಂದೆ ಕೃಷ್ಣಶಾಸ್ತ್ರೀ. ದೇವುಡು ೫ ವರ್ಷದ ಬಾಲಕರಿದ್ದಾಗ ಇವರ ತಂದೆ ತೀರಿಕೊಂಡರು. ತಮ್ಮ ೫ನೆಯ ವಯಸ್ಸಿಗಾಗಲೆ ಸಂಸ್ಕೃತದ ಅಮರಕೋಶ, ಶಬ್ದ ಮತ್ತು ರಘುವಂಶಗಳನ್ನು ಕಲಿತುಕೊಂಡ ದೇವುಡು ಅವರ ಪ್ರಾಥಮಿಕ, ಮಾಧ್ಯಮಿಕ ಹಾಗು ಕಾಲೇಜು ಶಿಕ್ಷಣವೆಲ್ಲ ಮೈಸೂರಿನಲ್ಲಿಯೆ ನಡೆಯಿತು. ೧೯೧೭ರಿಂದ ೧೯೨೨ರವರೆಗೆ ಇವರು ಮೈಸೂರಿನ ಮಹಾರಾಜಾ ಕಾಲೇಜು ಹಾಗು ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದರು. ಎಮ್.ಎ.ದಲ್ಲಿ ಸಂಸ್ಕೃತ ಮತ್ತು ದರ್ಶನಶಾಸ್ತ್ರವನ್ನು ಅಧ್ಯಯನದ ವಿಷಯವನ್ನಾಗಿ ಆರಿಸಿಕೊಂಡಿದ್ದರು. ಕೌಟಂಬಿಕ ಜೀವನ ೧೯೧೨ರಲ್ಲಿ ಅಂದರೆ ದೇವುಡು ೧೬ ವರ್ಷದವರಿದ್ದಾಗಲೆ ಅವರ ಮದುವೆಯಾಯಿತುಹೆಂಡತಿ ಗೌರಮ್ಮ. ಇವರಿಗೆ ಮೂವರು ಗಂಡುಮಕ್ಕಳು ಹಾಗು ಆರು ಜನ ಹೆಣ್ಣುಮಕ್ಕಳು. ಮೊದಲನೆಯ ಮಗ ಅಕಾಲಿಕವಾಗಿ ತರುಣ ವಯಸ್ಸಿನಲ್ಲಿಯೆ ತೀರಿಕೊಂಡರು. ವೃತ್ತಿ ಜೀವನ ೧೯೨೩೧೯೨೪ ಈ ಅವಧಿಯಲ್ಲಿ ದೇವುಡುರವರು ಮೈಸೂರಿನ ಸದ್ವಿದ್ಯಾ ಪಾಠಶಾಲೆಯಲ್ಲಿ ಮುಖ್ಯೋಪಾಧ್ಯಾಯರಾದರು. ೧೯೨೪ರಲ್ಲಿ ಕೆಲಕಾಲ ಶೃಂಗೇರಿಯ ಶಂಕರಾಚಾರ್ಯ ಮಠದಲ್ಲಿ ಪೇಶ್ಕಾರ್ ಎಂದು ಕಾರ್ಯ ನಿರ್ವಹಿಸಿದರು. ಆಬಳಿಕ ಬೆಂಗಳೂರಿಗೆ ಬಂದು ೧೯೨೪ರಿಂದ ೧೯೨೯ರವರೆಗೆ ಆರ್ಯವಿದ್ಯಾಶಾಲೆಗೆ ಮುಖ್ಯೋಪಾಧ್ಯಾಯರಾದರು. ಈ ಸಂಸ್ಥೆಯನ್ನು ಕಾರಣಾಂತರಗಳಿಂದ ಬಿಟ್ಟು ಗಾಂಧಿನಗರ ಪ್ರೌಢಶಾಲೆಯನ್ನು ಸ್ಥಾಪಿಸಿ ಐದು ವರ್ಷಗಳವರೆಗೆ ನಡೆಯಿಸಿದರು. ಪತ್ರಿಕೋದ್ಯಮ ೧೯೨೭ರಲ್ಲಿ ನವಜೀವನ ಪತ್ರಿಕಾ ಸಂಪಾದಕರಾಗಿ ಪತ್ರಿಕೋದ್ಯಮ ಪ್ರವೇಶಿಸಿದ ದೇವುಡು, ೧೯೩೬ ಹಾಗು ೧೯೩೮ರಲ್ಲಿ ರಂಗಭೂಮಿ ಪತ್ರಿಕೆಯ ಸಂಪಾದಕರಾಗಿದ್ದರು. ೧೯೩೬ರಿಂದ ೧೯೫೭ರವರೆಗೆ ೨೧ ವರ್ಷಗಳ ದೀರ್ಘ ಕಾಲ ನಮ್ಮ ಪುಸ್ತಕ ಎಂಬ ಸ್ವತಂತ್ರ ಮಕ್ಕಳ ಪತ್ರಿಕೆಯನ್ನು ನಡೆಯಿಸಿಕೊಂಡು ಬಂದರು. ಈ ನಡುವೆ ೧೯೩೫೧೯೩೬ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪತ್ರಿಕೆಯ ಸಂಪಾದನೆಯನ್ನೂ ಮಾಡಿದರು. ಪ್ರವೃತ್ತಿ ನಾಟಕ ಹಾಗು ಸಾಹಿತ್ಯ ಇವು ದೇವುಡುರವರ ಇನ್ನೆರಡು ಹವ್ಯಾಸಗಳು. ೧೯೨೧ರಲ್ಲಿಯೆ ಇವರು ಚಾಮುಂಡೇಶ್ವರಿ ಕಂಪನಿಯಲ್ಲಿ ನಟರಾಗಿ ಅನೇಕ ನಾಟಕಗಳಲ್ಲಿ ಪಾತ್ರ ಮಾಡಿದ್ದರು. ೧೯೨೬ರಲ್ಲಿ ಅಮೆಚೂರ್ ಕಂಪನಿಯ ಸದಸ್ಯರಾಗಿದ್ದರು. ೧೯೨೮ರಲ್ಲಿ ಕರ್ನಾಟಕ ಫಿಲ್ಮ್ ಕಾರ್ಪೋರೇಶನ್ ಸ್ಥಾಪಿಸಿದರು. ೧೯೩೪ರಲ್ಲಿ ಭಕ್ತ ಧ್ರುವ ಚಲನಚಿತ್ರಕ್ಕೆ ಸಾಹಿತ್ಯರಚನೆ ಮಾಡಿದರು. ೧೯೩೬ರಲ್ಲಿ ಚಿರಂಜೀವಿ ಎನ್ನುವ ಚಲನಚಿತ್ರಕ್ಕೆ ಸಾಹಿತ್ಯರಚನೆ ಮಾಡಿದ್ದಲ್ಲದೆ, ಆ ಚಿತ್ರದಲ್ಲಿ ಮೃಕಂಡು ಋಷಿಯ ಪಾತ್ರ ವಹಿಸಿದ್ದರು. ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯ ದೇವುಡು ೧೯೩೦ರಲ್ಲಿ ಮೈಸೂರು ಹಿಂದಿ ಪ್ರಚಾರಕ ಸಭೆಯ ಸ್ಥಾಪಕರಲ್ಲಿ ಒಬ್ಬರಾಗಿದ್ದರು. ೧೯೩೭ರಲ್ಲಿ ಕನ್ನಡಸಾಹಿತ್ಯ ಸಮಾಜವನ್ನು ಸ್ಥಾಪಿಸಿದರು. ೧೯೩೯ರಿಂದ ೧೯೪೨ರವರೆಗೆ ಮೈಸೂರು ಸಂಸ್ಥಾನದಲ್ಲಿ ನಡೆದ ಅಕ್ಷರಪ್ರಚಾರ ಯೋಜನೆ ಹಾಗು ವಯಸ್ಕರ ಅಕ್ಷರಪ್ರಚಾರ ಯೋಜನೆಗಳಲ್ಲಿ ಭಾಗಿಯಾಗಿದ್ದರು. ೧೯೪೩೧೯೪೫ರಲ್ಲಿ ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ನೇಮಕವಾಗಿದ್ದರು. ೧೯೪೬ರಲ್ಲಿ ಬೆಂಗಳೂರು ಸಿಟಿ ಕೋಆಪರೇಟಿವ್ ಬ್ಯಾಂಕಿನ ಡೈರೆಕ್ಟರ ಹಾಗು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿದ್ದರು. ೧೯೪೮ರಲ್ಲಿ ಬೆಂಗಳೂರು ಸಿಟಿ ಕಾರ್ಪೋರೇಶನ್ ಸದಸ್ಯರಾಗಿ ಚುನಾಯಿತರಾದರು. ಕರ್ನಾಟಕ ಏಕೀಕರಣ ಹೋರಾಟದಲ್ಲಿ ಭಾಗಿಯಾದರು. ೧೯೫೦ರಲ್ಲಿ ಶಂಕರಪುರದಲ್ಲಿ ಗೀರ್ವಾಣವಿದ್ಯಾಪೀಠವನ್ನು ಸ್ಥಾಪಿಸಿದರು. ೧೯೫೬೧೯೫೯ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ಸಾಹಿತ್ಯ ದೇವುಡು ಕನ್ನಡದ ದೊಡ್ಡ ಸಾಹಿತಿಗಳು. ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಅವರು ಬರೆದಿದ್ದಾರೆ. ಅವರ ಸಾಹಿತ್ಯದಲ್ಲಿ ಕಾಣುವ ಕಲ್ಪನಾ ಪ್ರತಿಭೆ, ವ್ಯುತ್ಪತ್ತಿ, ಸಾಕ್ಷಾತ್ಕಾರ ಇವು ಅವರ ಹಿರಿಮೆಯನ್ನು ತೋರಿಸುತ್ತವೆ. ಅವರ ಪ್ರಥಮ ಕೃತಿ ಸಾಹಸವರ್ಮ ಎನ್ನುವ ಪತ್ತೇದಾರಿ ಕಾದಂಬರಿ. ಇದನ್ನು ಬರೆದಾಗ (೧೯೧೨) ಅವರಿಗೆ ೧೬ ವರ್ಷ. ೧೯೨೦ರಲ್ಲಿ ಪೂರ್ವಮೇಘಕ್ಕೆ ಅವರು ವಿಸ್ತೃತ ವ್ಯಾಖ್ಯಾನ ಬರೆದರು. ವ್ಯಕ್ತಿತ್ವ ಪ್ರಾಥಮಿಕ ಶಾಲೆಯಿಂದ ಮಾಧ್ಯಮಿಕ ಶಾಲೆಗೆ ಬರುವಾಗಲೆ ದೇವುಡು ರಾಮಾಯಣ, ಮಹಾಭಾರತ, ಭಾಗವತ, ಬ್ರಹ್ಮಾಂಡಪುರಾಣ ಮೊದಲಾದವುಗಳನ್ನು ಓದಿದ್ದರು. ಕೃಷ್ಣ ಕೊಳಲನ್ನೂದಿದಾಗ ಗಿಡ, ಮರಗಳೆಲ್ಲ ಚಿಗುರಿದರೆ, ಅವನ ಕೈಯಲ್ಲಿಯ ಕೊಳಲೇಕೆ ಚಿಗುರಲಿಲ್ಲ? ಎನ್ನುವ ಪಾದ್ರಿಯೊಬ್ಬನ ಪ್ರಶ್ನೆಯನ್ನು ಮಹಿಳೆಯರು ಚರ್ಚಿಸುತ್ತಿದ್ದಾಗ, ಚಿಗುರಿದರೆ ತನ್ನನ್ನೂ ಕೃಷ್ಣ ಎಲ್ಲಿ ಎಸೆದುಬಿಡುವನೊ ಎಂದು ಹೆದರಿ ಚಿಗುರಲಿಲ್ಲ ಎನ್ನುವ ಸಮಾಧಾನ ನೀಡಿದ ನಿಶಿತಮತಿಯ ಬಾಲಕ ಈ ದೇವುಡು. ಅದೇ ಸಮಯದಲ್ಲಿ ಎಲ್ಲ ತರಹದ ಆಟಗಳಲ್ಲಿ ಭಾಗವಹಿಸುತ್ತ ದೇಹದಾರ್ಢ್ಯಕ್ಕೂ ಗಮನಕೊಟ್ಟಿದ್ದರು. ದೇವುಡು ಅವರ ಸೂಚನೆಯಂತೆ ಕೆಂಗಲ್ ಹನುಮಂತಯ್ಯನವರು೧೯೫೩ರ ಸುಮಾರಿಗೆ ಕನ್ನಡ ಸಂಸ್ಕೃತಿ ಅಭಿವೃದ್ಧಿ ಇಲಾಖೆಯನ್ನು ತೆರೆದು, ನಿರ್ದೇಶಕರಾಗಲು ಕೇಳಿಕೊಂಡರು. ಆದರೆ ದೇವುಡು ಅದಕ್ಕೆ ಒಪ್ಪದೆ ಶ್ರೀ ಸಿ.ಕೆ.ವೆಂಕಟರಾಮಯ್ಯನವರನ್ನು ಆ ಕಾರ್ಯಕ್ಕೆ ಸೂಚಿಸಿದರು. ಸಂಸ್ಕೃತಿಪ್ರಚಾರಕ್ಕಾಗಿ, ಭಗವದ್ಗೀತೆ ಸಂದೇಶ ಪ್ರಚಾರಕ್ಕಾಗಿ ತಮ್ಮ ಜೀವಿತಾವಧಿಯ ನಾಲ್ವತ್ತು ವರ್ಷಕ್ಕೂ ಮಿಕ್ಕಿ ದೇವುಡು ನೂರಾರು ಲೇಖನ ಬರೆದರು ಹಾಗು ಭಾಷಣಗಳನ್ನು ಮಾಡಿದರು. ೧೯೫೨ರಲ್ಲಿ ದೇವುಡುರವರು ಉಡುಪಿಯಲ್ಲಿ ಗೀತೆಯ ಬಗೆಗೆ ಉಪನ್ಯಾಸ ಪ್ರಾರಂಭಿಸುತ್ತಿದ್ದಾಗಲೆ ಇವರ ಹಿರಿಯ ಮಗ ರಾಮು ತೀರಿಕೊಂಡ ಸುದ್ದಿ ತಿಳಿಯಿತು. ಸ್ವಲ್ಪವೂ ಅಳುಕದ ದೇವುಡು ಭಾಷಣ ಮುಗಿಯಿಸಿದ ನಂತರವೇ ವೇದಿಕೆಯಿಂದ ನಿರ್ಗಮಿಸಿದಾಗ ಗೀತೆಯ ಸ್ಥಿತಪ್ರಜ್ಞ ಮನೋಭಾವನೆಯನ್ನು ಇವರು ಜೀವನದಲ್ಲಿ ಸಾಧಿಸಿದ ಬಗೆ ಸ್ನೇಹಿತರ ತಿಳಿವಿಗೆ ಬಂದಿತು. ಪುರಸ್ಕಾರ ೧೯೩೮ರಲ್ಲಿ ಮೀಮಾಂಸಾ ದರ್ಪಣಕ್ಕೆ ಶ್ರೀಮನ್ಮಹಾರಾಜರಿಂದ ವಿಶೇಷ ಪ್ರಶಸ್ತಿ ೧೯೫೨ರಲ್ಲಿ ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದರಿಂದ ಕಾಶಿಯಲ್ಲಿ ಗೌರವ ಕನ್ನಡ ಕಾದಂಬರಿಕಾರರ ಸಮ್ಮೇಳನದ ಅಧ್ಯಕ್ಷತೆ ೧೯೬೩ರಲ್ಲಿ ಮಹಾಕ್ಷತ್ರಿಯ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯು ಮರಣೋತ್ತರವಾಗಿ ದೊರಕಿತು. ಕೊನೆ ಸಾಂಸ್ಕೃತಿಕವಾಗಿ ಎಷ್ಟೆ ಸಂಪನ್ನರಾಗಿದ್ದರೂ, ದೇವುಡು ಬಡತನದಲ್ಲೆ ಬಾಳಿದರು. ಇವರು ಬರಿಗಾಲಿನಲ್ಲಿ ನಡೆದಾಡುತ್ತಾರೆಂದು ನೊಂದುಕೊಂಡ ಇವರ ಶಿಷ್ಯನೊಬ್ಬ ಇವರಿಗೆ ಕೊಡಿಸಿದ ಮೆಟ್ಟುಗಳಿಂದ ಇವರ ಕಾಲಿಗೆ ಗಾಯವಾಯಿತು. ಮಧುಮೇಹಿಗಳಾದದ್ದರಿಂದ ಗಾಯ ಬಲಿತು ೧೯೫೯ರಲ್ಲಿ ಒಂದು ಕಾಲನ್ನೆ ತೆಗೆಯಬೇಕಾಯಿತು. ಇದು ಅವರ ಸಾರ್ವಜನಿಕ ಜೀವನದ ಕೊನೆಗೆ ಕಾರಣವಾಯಿತು. ನಿಧನ ೧೯೬೨ ಅಕ್ಟೋಬರ ೨೭ರಂದು ದೇವುಡು ನಿಧನ ಹೊಂದಿದರು. ಕೃತಿಗಳು ಕಾದಂಬರಿ ಸಾಹಸವರ್ಮ ಕಳ್ಳರ ಕೂಟ ಅಂತರಂಗ ಮಯೂರ ಮಯೂರ ಚಲನಚಿತ್ರ ಕ್ಕೆ ಆಧಾರವಾದ ದೇವುಡು ಅವರ ಈ ಕಾದಂಬರಿ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ ಇಲ್ಲಿದೆ ಒಡೆದ ಮುತ್ತು ಚಿನ್ನಾ(ಅವಳ ಕತೆ) ಮಹಾಬ್ರಾಹ್ಮಣ ಮಲ್ಲಿ. (ಪುಸ್ತಕ ವಿಮರ್ಶೆಗೆ ಇಲ್ಲಿ ಕ್ಲಿಕ್ ಮಾಡಿ) ಮುಂದೇನು ಗೆದ್ದವರು ಯಾರು ಎರಡನೇ ಜನ್ಮ ಡಾ. ವೀಣಾ ಮಹಾಕ್ಷತ್ರಿಯ ಮಹಾದರ್ಶನ ಮಯೂರ (ಸಂಕ್ಷೇಪಿತ ಪುನರ್ನಿರೂಪಣೆ) ಕಥೆ ಸೋಲೋ ಗೆಲುವೋ ಘಾಟಿ ಮುದುಕ ಮತ್ತು ಇತರ ಕಥೆಗಳು ಮೂರು ಕನಸು ದೇವುಡು ಅವರ ಆಯ್ದ ಕಥೆಗಳು ನಾಟಕ ಸಾವಿತ್ರಿ ವಿಚಾರಣೆ (ಮೂಲ : ಜಾನ್ ಮೇಸ್ಫೀಲ್ಡ್) ವಿಚಿತ್ರ ಶಿಕ್ಷೆ ದುರ್ಮಂತ್ರಿ ಮಯೂರ ಯಾಜ್ಞವಲ್ಕ್ಯ ಪ್ರಾಚೀನ ಕಾವ್ಯ ಸಂಗ್ರಹಅನುವಾದ ಸುರಭಿ ವಿಕ್ರಮೋರ್ವಶೀಯ ರಾಮಾಯಣದ ಮಹಾಪುರುಷರು ಕಾಳಿದಾಸನ ಕೃತಿಗಳು ಪುರುಷೋತ್ತಮ ಭಾರತದ ಮಹಾಪುರುಷರು ಸಂಗ್ರಹ ರಾಮಾಯಣ ಸಂಗ್ರಹ ಭಾಗವತ ಮಹಾಭಾರತ ಸಂಗ್ರಹ (೧,೨,೩) ಇತರ ಮೀಮಾಂಸಾ ದರ್ಪಣ ದಿವ್ಯವಾಣಿ ಅಂತರ್ಮುಖಿ ಯೋಗವಾಸಿಷ್ಠ (೧,೨,೩,೪ ,೧೦,೧೪,೧೫,೧೬,೧೭,೧೮,೧೯,೨೦,೨೧) ಕನ್ನಡ ಭಗವದ್ಗೀತೆ ಅಮೆರಿಕದ ಕಥೆ ಕರ್ನಾಟಕ ಸಂಸ್ಕೃತಿ ಮೂಲ ಸಂಸ್ಕೃತ ಮೈಸೂರು ಟ್ರಾನ್ಸಲೇಶನ್ ಸೀರೀಸ್ (೧,೨,೩) ರಾಮಾಯಣವೂ ಭಗವದ್ಗೀತೆಯೂ ಭೇರುಂಡೇಶ್ವರ ಮೈಸೂರು ಅಕ್ಷರ ಪ್ರಚಾರ ಪದ್ಧತಿ ಹೊಸಗನ್ನಡ ಪಂಚತಂತ್ರ ವಾಲ್ಡನ್ ಉಪನಿಷತ್ತು ಕಥಾಸರಿತ್ಸಾಗರ ವೇದಾಂತ (ಉಪನಿಷತ್ತಿನ ಕಥೆಗಳು) ಹೊಸಗನ್ನಡ ಪಂಚತಂತ್ರ ಮಕ್ಕಳ ಸಾಹಿತ್ಯ ಕಂದನ ಕಥೆಗಳು ಗಣೇಶನ ಕಥೆ ಬುದ್ಧಿಯ ಕಥೆಗಳು ದೇಶಾಂತರದ ಕಥೆಗಳು ತಂತ್ರಗಾರ ನರಿ ಮತ್ತು ಇತರ ಕಥೆಗಳು ಪಂಚಾಮೃತ ಮತ್ತು ಇತರ ಕಥೆಗಳು ಬಂಜೆಯ ಮಗ ಮತ್ತು ಇತರ ಕಥೆಗಳು ಒಂದು ಕನಸು ಮತ್ತು ಇತರ ಕಥೆಗಳು ಅವಸರ ಮತ್ತು ಇತರ ಕಥೆಗಳು ಬರಿಯ ಆಸೆ ಮತ್ತು ಇತರ ಕಥೆಗಳು ಸ್ನೆಹಿತರು ಮತ್ತು ಇತರ ಕಥೆಗಳು ಅಲ್ಲಿ ಇಲ್ಲಿ ಕಥೆಗಳು ಯವನ ಪುರಾಣ ದೇವುಡು ಅವರ ನಾಲ್ಕು ಮಕ್ಕಳ ಕಥೆಗಳು ದೇವುಡು ವಿಚಾರಧಾರಾ ಶತಕ ನೋಡಿ ಫೋಟೊ: ಫೋಟೊ: , ಹೊರ ಸಂಪರ್ಕ ದೇವುಡು ನರಸಿಂಹಶಾಸ್ತ್ರಿ ಕಣಜ ಸೃಜನ ಶೀಲ ಸಾಹಿತ್ಯರಚನೆ, ಸಂಪಾದನೆ, ಸಂಶೋಧನೆ, ಶಿಶು ಸಾಹಿತ್ಯ, ವಯಸ್ಕರ ಶಿಕ್ಷಣ, ರಂಗಭೂಮಿ ಮತ್ತು ಚಲನಚಿತ್ರ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ದೇವುಡುರವರು ಹುಟ್ಟಿದ್ದು ಮೈಸೂರಿನಲ್ಲಿ ೧೮೯೬ರ ಡಿಸೆಂಬರ್ ೨೯ ರಂದು (೨೯.೧೨.೧೮೯೬ ೨೭.೧೦.೧೯೬೨). ಉಲ್ಲೇಖ ಕನ್ನಡ ಸಾಹಿತ್ಯ ದೇವುಡು ನರಸಿಂಹಶಾಸ್ತ್ರಿ ದೇವುಡು ನರಸಿಂಹಶಾಸ್ತ್ರಿ ದೇವುಡು ನರಸಿಂಹಶಾಸ್ತ್ರಿ
ರಂ. ಶ್ರೀ. ಮುಗಳಿ ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ. ಕವಿ, ಕಾದಂಬರಿಕಾರ, ಕಥಾಗಾರ, ನಾಟಕಕಾರ, ಪ್ರಬಂಧಕಾರ ಹಾಗೂ ವಿಮರ್ಶಕ. ಹೀಗೆ ಇವರು ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ಬರೆದಿದ್ದಾರೆ. ಇವರ ಕನ್ನಡ ಸಾಹಿತ್ಯ ಚರಿತ್ರೆ ಸಾಹಿತ್ಯಲೋಕದ ಮೈಲುಗಲ್ಲು. ಜನನಜೀವನ ರಂ.ಶ್ರೀ. ಮುಗಳಿಯವರು ೧೯೦೬ ಜುಲೈ ೧೫ ರಂದು ರೋಣ ತಾಲೂಕಿನ ಹೊಳೆಆಲೂರಿನಲ್ಲಿ ಜನಿಸಿದರು. ೧೯೩೩ರಲ್ಲಿ ಸಾಂಗಲಿಯ ವಿಲಿಂಗ್ಡನ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರಿಕೊಂಡು ೧೯೬೧ರಲ್ಲಿ ಅದೇ ಕಾಲೇಜಿನ ಪ್ರಾಂಶುಪಾಲರಾಗಿ ೧೯೬೬ರಲ್ಲಿ ನಿವೃತ್ತರಾದರು. ೧೯೬೭ರಿಂದ ೧೯೭೦ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿದ್ದರು. ರಸಿಕ ರಂಗ ಇದು ಮುಗಳಿಯವರ ಕಾವ್ಯನಾಮ. ಕವನ ಸಂಕಲನಗಳು ಬಾಸಿಗ. ಅಪಾರ ಕರುಣೆ. ಓಂ ಅಶಾಂತಿ. ನವಮಾನವ., ಕಾದಂಬರಿಗಳು ಅನ್ನ. ಬಾಳುರಿ. ಕಾರಣಪುರುಷ. ಸಣ್ಣ ಕತೆಗಳ ಸಂಕಲನ ಕನಸಿನ ಕೆಳದಿ ನಾಟಕಗಳು ಎತ್ತಿದ ಕೈ. ಸೇನಾಪ್ರದೀಪ. ನಾಮಧಾರಿ. ಮನೋರಾಜ್ಯ. ಧನಂಜಯ. ವಿಮರ್ಶಾ ಕೃತಿಗಳು ಕನ್ನಡ ಸಾಹಿತ್ಯ ಚರಿತ್ರೆ ಕನ್ನಡ ಸಾಹಿತ್ಯದ ಇತಿಹಾಸ. ಸಾಹಿತ್ಯೋಪಾಸನೆ. ರನ್ನನ ಕೃತಿರತ್ನ. ತವನಿಧಿ. ಸಾಹಿತ್ಯವಿಮರ್ಶೆಯ ಮಾರ್ಗದರ್ಶಕ ಸೂತ್ರಗಳು. ಕನ್ನಡ ಸಾಹಿತ್ಯದಲ್ಲಿ ಸರಸ್ವತಿಯ ದರ್ಶನ. ವಿಮರ್ಶೆಯ ವ್ರತ. ಪ್ರಬಂಧ ಕೃತಿಗಳು ಕನ್ನಡನುಡಿ ತನ್ನ ಕಾಲಮೇಲೆ ತಾನಿಲ್ಲಬಹುದೇ? ನವೀನ ಪ್ರಜ್ಞೆಯ ಸೂತ್ರಗಳು. ಕನ್ನಡದವೆಂಬಾ ಮಂತ್ರ. ಕನ್ನಡದ ಕರೆ. ಆತ್ಮ ಕಥನ ಜೀವನ ರಸಿಕ. ಪ್ರಶಸ್ತಿಗೌರವಗಳು ಕನ್ನಡ ಸಾಹಿತ್ಯ ಚರಿತ್ರೆ ಎಂಬ ಕೃತಿಗೆ ೧೯೫೬ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ೧೯೬೩ರಲ್ಲಿ ತುಮಕೂರು ಜಿಲ್ಲೆಯ ಸಿದ್ಧಗಂಗಾದಲ್ಲಿ ಜರುಗಿದ ೪೪ನೆಯ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷರಾಗಿದ್ದರು. ೧೯೬೪ರಲ್ಲಿ ಇಂಕ್ಲಾ ಸಂಸ್ಥೆಯ ಪರವಾಗಿ ಫ್ರಿಬುವಿನಲ್ಲಿ ನಡೆದ ಜಾಗತಿಕ ಸಾಹಿತ್ಯಸಮ್ಮೇಳನದಲ್ಲಿ ಕನ್ನಡದ ಪ್ರತಿನಿಧಿಯಾಗಿದ್ದರು. ಪಿಇ ಎನ್ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು. ೧೯೯೩ ಫೆಬ್ರುವರಿ ೨೦ರಂದು ಬೆಂಗಳೂರಿನಲ್ಲಿ ನಿಧನರಾದರು. ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
ಶಾಂತಿನಾಥದೇಸಾಯಿ ಕನ್ನಡ ಕಾದಂಬರಿ ಲೋಕಕ್ಕೆ ನವ್ಯಮಾರ್ಗವನ್ನು ತಂದವರು ಎಂದು ಪ್ರಖ್ಯಾತರಾದವರು. ಅವರು ಪ್ರಯೋಗಶೀಲತೆಯನ್ನು ಕನ್ನಡದ ಸಣ್ಣಕತೆ, ಪ್ರಬಂಧಗಳು, ವಿಮರ್ಶೆ ಮುಂತಾದ ಕ್ಷೇತ್ರಗಳಲ್ಲಿಯೂ ತೋರಿಸಿ ಸುಮಾರು ನಾಲ್ಕು ದಶಕಗಳಷ್ಟು ಕಾಲ ಕನ್ನಡದ ಮೇಲ್ಪಂಕ್ತಿಯ ಬರಹಗಾರರೆಂದು ಮಾನ್ಯತೆಯನ್ನು ಪಡೆದವರು. ಜೀವನ ಶಾಂತಿನಾಥ ಕುಬೇರಪ್ಪ ದೇಸಾಯಿ ಅವರ ಜನ್ಮ, ಹಳಿಯಾಳದಲ್ಲಿ ೨೨ ಜುಲೈ ೧೯೨೯ರಂದಾಯಿತು. ಹಳಿಯಾಳ ಉತ್ತರ ಕನ್ನಡ ಜಿಲ್ಲೆಯಲ್ಲಿಯ ಕಾಡು ಪ್ರದೇಶ, ಅವರ ಪ್ರಾಥಮಿಕ ಶಿಕ್ಷಣ ಅಲ್ಲಿಯೇ ಆದರೂ ಉತ್ತಮ ವಿದ್ಯಾರ್ಥಿಯಾಗಿ ಗಮನ ಸೆಳೆದ ಶಾಂತಿನಾಥರನ್ನು ಮೆಟ್ರಿಕ್ ಪರೀಕ್ಷೆಯಲ್ಲಿ ವಿಶೇಷ ಸ್ಥಾನಗಳಿಸುವ ಉದ್ದೇಶದಿಂದ ಒಳ್ಳೆಯ ಶಾಲೆಯೊಂದರಲ್ಲಿ ಸೇರಿಸುವುದಕ್ಕೆ ಧಾರವಾಡಕ್ಕೆ ತರಲಾಯಿತು. ಹಳಿಯಾಳದಿಂದ ಹೊರಬಂದ ಶಾಂತಿನಾಥರ ಮೇಲೆ ಆಗ ಅಪ್ರತಿಮ ವಿದ್ಯಾರ್ಥಿಯೆಂದು ಗಮನ ಸೆಳೆದ ಗಂಗಾಧರ ಚಿತ್ತಾಲರ ಪ್ರಭಾವದ ಕಾರಣ ಚಿತ್ತಾಲ ಮನೆತನದಲ್ಲಿಯ ಚಿಂತನಶೀಲತೆಯ ಜತೆ ವಿದ್ಯಾರ್ಜನೆಯ ತೀವ್ರ ಆಸ್ಥೆ ಹುಟ್ಟಿಕೊಂಡಿತು. ಆಗ ಧಾರವಾಡದಲ್ಲಿ ಬಂದಿಳಿದ ಚಿಂತನಕಾರ ಮಾನವೇಂದ್ರರಾಯ ಅವರ ಮಾನವತಾವಾದದ ಆಕರ್ಷಣೆಯೂ ತಪ್ಪಲಿಲ್ಲ. ಉತ್ತಮ ವಿದ್ಯಾರ್ಥಿಯಾದ್ದರಿಂದ ಇಂಗ್ಲಿಷ್ ಪ್ರಾಧ್ಯಾಪಕರ ಮನ ಸೆಳೆದುಕೊಂಡು ಇಂಗ್ಲಿಷ್ ಭಾಷೆಯಲ್ಲಿ ವಿಶೇಷ ಅಧ್ಯಯನಕ್ಕೆಂದು ಮುಂಬಯಿಯ ಖ್ಯಾತ ವಿಲ್ಸನ್ ಕಾಲೇಜಿಗೆ ಸೇರಿದರು. ಮುಂದೆ ಪಿ.ಎಚ್.ಡಿ ಗೌರವ ಕೂಡಾ ಬಂತು. ಬ್ರಿಟಿಶ್ ಕೌನ್ಸಿಲ್ ಪ್ರಣೀತ ಶಿಷ್ಯವೃತ್ತಿಯ ಮೇಲೆ ಇಂಗ್ಲೆಂಡಿಗೆ ತೆರಳುವ ಸುಯೋಗ ಲಭಿಸಿತು. ಹಡಗಿನಲ್ಲಿಯ ಪ್ರವಾಸ ಅನೇಕ ಲೇಖಕರನ್ನು ಸ್ಫುರಿಸಿದಂತೆ, ಶಾಂತಿನಾಥರಿಗೂ ಒಂದು ಉತ್ತಮ ಕತೆಯನ್ನು ಬರೆಯುವುದಕ್ಕೆ ಉಪಯುಕ್ತವಾಯಿತು. ಅವರನ್ನು ಸಣ್ಣಕತೆಯಲ್ಲಿ ಜನಪ್ರಿಯರನ್ನಾಗಿ ಮಾಡಿದ ಕ್ಷಿತಿಜ ಹಡಗಿನಿಂದ ಇಂಗ್ಲೆಂಡಿಗೆ ಹೋಗುವ ಒಬ್ಬ ಮಹಿಳೆಯನ್ನು ಕೇಂದ್ರದಲ್ಲಿರಿಸಿದ ಕತೆ. ವಿದೇಶದಲ್ಲಿ ಎರಡು ವರ್ಷಗಳಷ್ಟು ವಾಸ್ತವ್ಯಮಾಡಿ ಬಂದ ಶಾಂತಿನಾಥರಿಗೆ ಕೊಲ್ಹಾಪುರದ ರಾಜಾರಾಮ ಕಾಲೇಜಿನಲ್ಲಿ ಪ್ರಾಧ್ಯಾಪಕ ವೃತ್ತಿ ದೊರಕಿತು. ಕೆಲವು ವರ್ಷಗಳಿಗಾಗಿ ದೇಸಾಯಿಯವರಿಗೆ ಮರಾಠವಾಡಾದಲ್ಲಿಯ ಔರಂಗಾಬಾದದಲ್ಲಿ ಪ್ರಾಧ್ಯಾಪಕನಾಗಿ ಇರಬೇಕಾಯಿತು. ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹಲವಾರು ವರ್ಷ ರೀಡರ್ ಮತ್ತು ಇನ್ನೊಮ್ಮೆ ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ವಿಭಾಗದ ಪ್ರಮುಖರೆಂದು ಸೇವೆ ಸಲ್ಲಿಸಿ, ೧೯೮೮ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಪ್ರಥಮ ಕುಲಪತಿ ಪದವನ್ನೂ ಕರ್ತವ್ಯ ದಕ್ಷತೆಯಿಂದ ನಿರ್ವಹಿಸಿದರು. ನವ್ಯ ಮಾರ್ಗ ಶಾಂತಿನಾಥ ದೇಸಾಯಿಯವರ ತಾರುಣ್ಯದ ವರ್ಷಗಳು ನವ್ಯಮಾರ್ಗ ಬಲಿತುಕೊಳ್ಳುತ್ತಿದ್ದ ಕಾಲ. ಗೋಪಾಲಕೃಷ್ಣ ಅಡಿಗರ ನಡೆದು ಬಂದ ದಾರಿ ಕಡೆಗೆ ತಿರುಗಿಸಬೇಡ ಕಣ್ಣ, ಹೊರಳಿಸಬೇಡ ಎಂದು ಆವೇಶದಿಂದ ಆಹ್ವಾನ ಮಾಡಿದ ಕಾಲ. ಅನಂತಮೂರ್ತಿ, ಲಂಕೇಶ, ಕೃಷ್ಣಮೂರ್ತಿ ಮತ್ತು ಇನ್ನೂ ಇತರರು ಅಡಿಗರ ವಿಚಾರಗಳಿಂದ ಪ್ರಭಾವಿತರಾಗಿ ಬರೆಯತೊಡಗಿದ್ದರು. ಗೋಕಾಕರು ನವ್ಯಕಾವ್ಯದ ಸಮನ್ವಯದ ಮಾರ್ಗವನ್ನು ಕ್ಷೀಣವಾಗಿ ಸೂಚಿಸುತ್ತಿದ್ದರು. ೧೯೫೯ರಲ್ಲಿ ದೇಸಾಯಿಯವರ ಮೊದಲಿನ ಸಾಹಿತ್ಯ ಕೃತಿ ಸಣ್ಣಕತೆಗಳ ಸಂಗ್ರಹ ಪ್ರಕಟವಾಯಿತು. ಮನುಷ್ಯನನ್ನು ನೋಡುವ ದೃಷ್ಟಿಕೋನದಲ್ಲಾದ ಪಾಶ್ಚಾತ್ಯರಲ್ಲಿಯ ಬದಲನ್ನು ಕನ್ನಡದಲ್ಲಿಯೂ ಇಳಿಸುವ ಪ್ರಯತ್ನವನ್ನು ಶಾಂತಿನಾಥರು ಗಂಭೀರವಾಗಿ ಎತ್ತಿಕೊಂಡರು. ಕಾದಂಬರಿ ಶಾಂತಿನಾಥರಿಗೆ ಮೇಲ್ಪಂಕ್ತಿಯ ಬರಹಗಾರನೆನ್ನುವ ಮಾನ್ಯತೆಯನ್ನು ಒದಗಿಸಿತು. ೧೯೬೧ರಲ್ಲಿ ಮುಕ್ತಿ ಕೃತಿಯ ಮೂಲಕ ನವ್ಯಪ್ರಕಾರವನ್ನು ಕನ್ನಡ ಕಾದಂಬರಿಲೋಕಕ್ಕೆ ತಂದವರು ಶಾಂತಿನಾಥ ದೇಸಾಯಿ. ಸಣ್ಣಕತೆಯಲ್ಲಿನ ಅವರ ಸಾಧನೆ ಅಷ್ಟೇ ಗಮನಾರ್ಹ. ಮೊದಮೊದಲು ಮನೋವಿಶ್ಲೇಷಣಾ ತಂತ್ರದಿಂದ ಒಳಮನದ ಹಾವಳಿಯ ಬಗ್ಗೆ ಅವರ ಲಕ್ಷ್ಯ ಕೇಂದ್ರಿತತವಾದಂತೆ ತೋರಿದರೂ ಕ್ರಮೇಣ ಅವರ ವಿಷಯಗಳ ಅನನ್ಯತೆ ಮನಸ್ಸನ್ನು ಸೆಳೆದುಕೊಳ್ಳುತ್ತದೆ. ಮಂಜುಗಡ್ಡೆ, ಕ್ಷಿತಿಜ, ಅವರ ಬಹುಚರ್ಚಿತ ಕತೆಗಳು. ಆದರೆ ಅವರ ಲಕ್ಷ್ಯ ಒಂದು ಸಾಮಾನ್ಯ ಹಗುರಾದ ವಿಷಯದ ಮೇಲೆ. ಆ ಸಮಸ್ಯೆಯ ಸಮಾಪ್ತಿಗಿಂತ ವ್ಯಕ್ತಿಯಲ್ಲಾಗುವ ಹಲವು ಪ್ರಕ್ರಿಯೆಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ. ಕೂರ್ಮಾವತಾರ, ವಾಸನೆ, ಭರಮ್ಯಾ ಹೋಗಿ ನಿಖಿಲನಾದದ್ದು ಈ ಕತೆಗಳಲ್ಲಿ ಬದಿಗೊಗೆಯಲ್ಪಟ್ಟವರು, ಅವರ ಮನೋವಿಕಾಸ ಪ್ರಕ್ರಿಯೆ ನಾವು ಸಾಮಾನ್ಯವಾಗಿ ದುರ್ಲಕ್ಷಿಸುವ ವಿಷಯಗಳು. ಆದರೆ ನಮ್ಮ ಸುತ್ತೆಲ್ಲ ಇಂತಹ ಹಲವು ವೈಯಕ್ತಿಕ, ಸಾಮಾಜಿಕ ದುರ್ಲಕ್ಷಿತ ಘಟನೆಗಳೇ ಹರಡಿಕೊಂಡಿರುವಾಗ ಅವು ಸಾಹಿತ್ಯಕ ವಿಷಯಗಳೇಕಾಗಬಾರದು ಎನ್ನುವುದು ದೇಸಾಯಿಯವರ ಆಗ್ರಹ. ನಾನಾನ ತೀರ್ಥಯಾತ್ರೆ ಒಬ್ಬ ಕುಡುಕನ ಕತೆ. ಆದರೆ ವಿಲಕ್ಷಣ ಪರಿಣಾಮಕಾರಿ. ನಾನಾ ಕುಡುಕನೆಂದಲ್ಲ. ಅವನದೂ ವಿಶ್ವವಿದೆ. ಅಲ್ಲಿಯ ಅಂತರ್ಯುದ್ಧದಲ್ಲಿ ರಾಮನನ್ನು ಗೆಲ್ಲುವ ರಾವಣನೇ ಹೀರೋ. ಜೀವನದ ಬಗೆಗಿನ ಕಹಿ, ಹತಾಶೆಯ ಕಿಂಚಿತ್ ಬಣ್ಣ ಬಳಸಿ ನಾನಾನ ಚಿತ್ರ ಎದ್ದು ನಿಲ್ಲುತ್ತದೆ. ಅವನ ತೀರ್ಥಯಾತ್ರೆಯ ಉದಾರಕತೆ ಉಳಿದ ಮಹತ್ವದ ದುರಂತಗಳಷ್ಟೇ ಮಹತ್ವದ್ದು. ...ನಿಖಿಲನಾದದ್ದು ಕತೆಯಲ್ಲಿಯ ಮನೆಯಾಳು ತನ್ನ ಮಾಲಿಕರ ಸರ್ಟಿಫಿಕೇಟುಗಳನ್ನು ಕದ್ದು ಶಹರಿಗೆ ಹೋಗಿ ನಿಖಿಳವಾಗುವ ಪ್ರಕರಣ ವ್ಯಂಗ್ಯದಿಂದ ತುಂಬಿದರೂ, ಸಿಟ್ಟು, ಬೆಲೆಯಿಲ್ಲದ ಮೌಲ್ಯಗಳನ್ನು ತುಳಿದು ಹೊರದಾಟುವ ಹೊಂಚು ರಹಸ್ಯಮಯತೆಯನ್ನು ತರುತ್ತದೆ. ಸಾಮಾಜಿಕ ಸ್ಥಿತ್ಯಂತರಗಳ ಬಗ್ಗೆ ಅತ್ಯಂತ ಸೂಚಕವಾಗಿ ಮೆಲುದನಿಯಲ್ಲಿಯೇ ಎಷ್ಟೆಲ್ಲಾ ಹೇಳಿಹೋಗುತ್ತದೆ. ಹೀಗೆ ಒಂದೊಂದು ಕತೆಗೂ ಒಳದನಿಯಿದೆ. ನದಿಯ ನೀರು ಕತೆಯಲ್ಲಿಯ ವ್ಯಕ್ತಿ ಸುಳ್ಳನ್ನು ಸಮರ್ಥವಾಗಿ ಹೇಳಿದ್ದಾನೆ. ತನ್ನ ಗೆಳೆಯನನ್ನು ನದಿಯಲ್ಲಿ ಮುಳುಗಿ ಸಾಯುವುದಕ್ಕೆ ತಾನೇ ಕಾರಣನಾಗಿರುವಾಗಲೂ ಅದಕ್ಕೂ ತನಗೂ ಏನೇನೂ ಸಂಬಂಧವಿಲ್ಲವೆಂದು ಚಿಕ್ಕಂದಿನಿಂದ ಬದುಕುತ್ತಾನೆ. ಆದರೆ ಹೀಗೆ ಬಾಹ್ಯರೂಪದಲ್ಲಿ ಅರಗಿಸಿಕೊಂಡ ಒಂದು ಅನುಭವ ಅವನನ್ನು ಹಿಂಸೆ ಮಾಡದೆ ಉಳಿಯುವಷ್ಟು ನಿಷ್ಠುರನಾಗಿ ಬಾಳಲು ಬಿಟ್ಟಿದೆಯೇ ಎನ್ನುವುದನ್ನು ಸಹ್ಯವಾಗಿ ಇಟ್ಟಿದ್ದಾರೆ, ನಮ್ಮ ಸುತ್ತಲಿನ ಮುಠ್ಠಾಳರೆಲ್ಲಾ ಹೃದಯ ಹೀನರೆ ಎಂದು ಶಂಕೆ ಪಡುವಂತೆ. ಒಟ್ಟು ೪೯ ಕತೆಗಳನ್ನು ಬರೆದ ದೇಸಾಯಿ ಕಥಾ ಪ್ರಕಾರಗಳಲ್ಲಿ ಪ್ರಯೋಗಶೀಲತೆಯನ್ನು ಬಿಟ್ಟುಬಿಡುವುದಿಲ್ಲ. ಕತೆಯ ವಿಷಯದಲ್ಲಿ ಅವರು ತಂದ ಮಹತ್ವ ಅತ್ಯಂತ ಮಿತವಾದ ರೇಖೆಗಳನ್ನು ಉಪಯೋಗಿಸಿ ವ್ಯಕ್ತಿ, ಮನೋವ್ಯಾಪಾರ ಮತ್ತು ಒಂದು ಸಾಮಾಜಿಕ ಸಂಬಂಧವನ್ನು ನಿರ್ಮಿಸುವಲ್ಲಿ ಅವರು ಯಶಸ್ಸು ಗಳಿಸಿದರು. ಕಾರ್ಟೂನ್ ಚಿತ್ರಗಳಂತೆ ತುಂಬಾ ಅರ್ಥಗರ್ಭಿತವಾದ ಈ ಕತೆಗಳು ಮೋಹಕವಾಗಿವೆ. ಸೃಷ್ಟಿ ಕಾದಂಬರಿಯಿಂದ ಹಿಡಿದು ಶಾಂತಿನಾಥ ದೇಸಾಯಿ ಅವರ ಮುಂದಿನ ಎಲ್ಲ ಕಾದಂಬರಿಗಳಲ್ಲಿ ಸಾಮಾಜಿಕ ಧೋರಣೆಗಳ ಬಗ್ಗೆ ಚಿಂತನೆಯಿದೆ. ಸಮಾಜ, ರಾಜಕಾರಣ, ಸಂಸ್ಕೃತಿ ಇವೆಲ್ಲವುಗಳ ಸ್ಖಲನವನ್ನು ಎಚ್ಚರದಿಂದ ನೋಡುವ ಸೃಷ್ಟಿ ನವ್ಯೋತ್ತರ ಕಾಲದ ಮಹತ್ವದ ಕೃತಿ. ಬೀಜ ಕಾದಂಬರಿ ಕೂಡ ಗ್ರಾಮಾಂತರದಲ್ಲಿ ಭರಭರನೆ ನಡೆಯುತ್ತಿರುವ ಜಾರುಗುಂಡಿಯ ಕಡೆ ಉರುಳು ಚಿತ್ರಿಸುತ್ತದೆ. ಅಂತರಾಳ ಇನ್ನೊಂದು ಮಹತ್ವಾಕಾಂಕ್ಷೆಯ ಕಾದಂಬರಿ. ಶಾಂತಿನಾಥರ ಜೀವನ ದೃಷ್ಟಿಯಲ್ಲಿ ಮಾನವೀ ವಿಕಾಸದ ಸಂಕಲ್ಪನೆಯನ್ನು ಕುರಿತು ಇಲ್ಲಿ ಚಿಂತನವಾಗಿದೆ. ತಾನು ಹುಟ್ಟಿಬಂದ ಧರ್ಮದ ಬಗ್ಗೆ ನಿರ್ದುಷ್ಟವಾಗಿ ಬರೆಯಬೇಕೆನ್ನುವ ಅಥೆಂಟಿಸಿಟಿಯ ಹಂಬಲದಿಂದ ಓಂಣಮೋ ಕಾದಂಬರಿಯನ್ನು ಬರೆದರು. ಹುಟ್ಟಿನಿಂದ ಬಂದ ಅರಿವು, ಇರುವಿನ ಕೊನೆಯ ಈ ಅಂತರಾಳದಲ್ಲಿ ಬರೆದ ಕೃತಿಯಿದು. ಆದರೂ ಧಿಟ್ಟತನದಿಂದ ತನ್ನ ಸ್ವಾತಂತ್ರ್ಯದ ಅಭೀಪ್ಸೆಯನ್ನು ಪೂರೈಸಲು ಹಾತೊರೆದರು. ಓಂಣಮೋದ ಪ್ರಪಂಚದ ಎರಡು ಧ್ರುವಗಳು ಭಾರತ ಮತ್ತು ಪಶ್ಚಿಮ, ಜೈನ ಮತ್ತು ಕ್ರಿಶ್ಚಿಯನ್ ಧರ್ಮಗಳು, ಧರ್ಮವಾದ ಮತ್ತು ಮಾರ್ಕ್ಸ್ ವಾದಗಳ ವಿಚಾರ ಪ್ರಣಾಲಿಗಳು. ತಂತ್ರದಲ್ಲಿ ಕೂಡ ಸೃಷ್ಟಿಯಂತೆ ಇಲ್ಲಿಯೂ ಓದುಗರೊಡನೆ ಸಂವಾದ ಸಾಧಿಸುವ, ಡಾಯೆಲಿಕ್ಟಿಕ್ ತಂತ್ರವನ್ನು ಹೂಡಿದ್ದಾರೆ. ಈ ತಂತ್ರದಲ್ಲಿ ಬರುವ ಕಥನದ ಪ್ರತಿಫಲನ ರೀತಿ ಗಮನಾರ್ಹವಾಗಿದೆ. ವಿಮರ್ಶೆ ಸೃಜನಶೀಲ ಸಾಹಿತ್ಯಕ ಚಟುವಟಿಕೆಗಳಷ್ಟೇ ವಿಚಾರಶೀಲ ಲೇಖನದ ಕಡೆಗೂ ಗಮನಕೊಟ್ಟ ಶಾಂತಿನಾಥ ದೇಸಾಯಿ ಕನ್ನಡದ ಅತ್ಯುತ್ತಮ ವಿಮರ್ಶಕರು. ಸಾಹಿತ್ಯ ಮತ್ತು ಭಾಷೆ, ಗಂಗಾಧರ ಚಿತ್ತಾಲರ ಕಾವ್ಯಸೃಷ್ಟಿ, ಕನ್ನಡ ಕಾದಂಬರಿ ನಡೆದು ಬಂದ ದಾರಿ, ನವ್ಯಸಾಹಿತ್ಯದರ್ಶನ ಅವರು ವಿಚಾರ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ. ಅವರು ಬೇಂದ್ರೆ ಅವರ ಮೇಲೆ ತಯಾರಿಸಿದ ನಿರ್ಬಂಧ ಸಭಿಕರನ್ನು ಮುಗ್ಧಗೊಳಿಸಿತ್ತು. ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು ಕಾದಂಬರಿಯನ್ನು ಅದರ ಅಂತಃಸತ್ವವನ್ನು ದಾರ್ಶನಿಕ ಹಿನ್ನೋಟವನ್ನು, ಆಳದಲ್ಲಿ ಹುದುಗಿದ ಮಾನವೀ ಸಭ್ಯತೆಯನ್ನು ಜ್ಞಾನಪೀಠದ ಸಮಿತಿಗೆ ಮಾನ್ಯವಾಗುವಂತೆ ದಿಗ್ಭ್ರಮೆಯಾಗುವಂತಹ ಪ್ರಭಾವದಿಂದ ಮಂಡಿಸಿದ್ದರು. ಗೋಕಾಕರ ಒಂದು ಜೀವನ ಚಿತ್ರಣದ ಚಿತ್ರೀಕರಣಕ್ಕೆ ಅವರ ವಿವಿಧ ಅಂಗಗಳ ವಿಶಿಷ್ಟತೆ ಹೊರಬರುವಂತೆ ಸಂದರ್ಶನ ಮಾಡಿದ್ದರು. ಕನ್ನಡದ ಕಾದಂಬರಿ ನಡೆದು ಬಂದ ರೀತಿ ಒಂದು ವ್ಯಾಸಂಗಪೂರ್ಣ ಗ್ರಂಥ. ಮಹತ್ವದ್ದೆಂದರೆ, ಕೃತಿಪರೀಕ್ಷೆಯ ಸಮಯ ಅವರ ಮೌಲ್ಯಮಾಪನ ವಸ್ತುನಿಷ್ಠವಾಗುವಂತೆ ಕಾಳಜಿ ವಹಿಸಿದ್ದರು. ಎಲ್ಲೂ ಕಹಿ ಮತನಿಷ್ಠೆ ಇಟ್ಟುಕೊಳ್ಳದೆ ಸಾಹಿತ್ಯಕ ಮಾನದಂಡಗಳನ್ನು ಯೋಜಿಸಿ ಸೋದಾಹರಣ ಚಿಕಿತ್ಸೆ ಮಾಡಿದ ರೀತಿ ವಿಮರ್ಶಾ ಪದ್ಧತಿಗೆ ಮಾರ್ಗದರ್ಶಕವಾಗಿದೆ. ತಮ್ಮ ಮುಕ್ತಿ ಕಾದಂಬರಿಯ ಗುಣ ದೋಷಗಳನ್ನೂ ಬಿಡದೆ ನಮೂದಿಸಿದ್ದು ಅವರ ನಿರ್ದಾಕ್ಷಿಣ್ಯಕ್ಕೆ, ಆತ್ಮಪರಾಙ್ಮುಖತೆಗೆ ಕನ್ನಡಿ ಹಿಡಿಯುತ್ತದೆ. ನವ್ಯ ಸಾಹಿತ್ಯ ದರ್ಶನ ಕೃತಿ ಒಂದು ಸಂದರ್ಭಗ್ರಂಥವೆನ್ನುವಷ್ಟು ಮಹತ್ವದ್ದು. ಹೊರಭಾಷೆಯಲ್ಲಿ ಕನ್ನಡ ಗಂಭೀರ ಲೇಖನಗಳಂತೆ ಅವರು ಕನ್ನಡದ ತಮ್ಮ ಪ್ರೇಮವನ್ನು ಗಂಭೀರವಾಗಿಯೇ ಕಂಡರು. ಕನ್ನಡದ ಉತ್ತಮ ಕೃತಿಗಳು ಸಾಧ್ಯವಾದಷ್ಟು ಹೊರಭಾಷೆಯ ಓದುಗರಿಗೂ ತಲುಪಬೇಕು ಎನ್ನುವ ಕಳಕಳಿಯನ್ನು ಅವರು ಬಿಟ್ಟುಕೊಡಲಿಲ್ಲ. ಪಿ. ಲಂಕೇಶರ ಕ್ರಾಂತಿ ಬಂತು ಕ್ರಾಂತಿ ಎಂಬ ನಾಟಕದ ಇಂಗ್ಲಿಷ್ ಅನುವಾದ. ಹಾಗೆಯೇ ಯು. ಆರ್. ಅನಂತಮೂರ್ತಿ ಅವರ ಕನ್ನಡ ಕಾದಂಬರಿ ಅವಸ್ಥೆಯ ಇಂಗ್ಲಿಷ್ ಅನುವಾದ. ಮರಾಠಿಯ ಆದ್ಯ ಕಾದಂಬರಿಕಾರರಾದ ಹರಿನಾರಾಯಣ ಆಪ್ಟೆ ಕುರಿತಾದ ಮಿ.ಹರಿನಾರಾಯಣ ಆಪ್ಟೆ ಎನ್ನುವ ಮರಾಠಿ ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿದರು. ವಿವಿಧ ಸೇವೆಗಳು ಭಾಷಾ ವಿಕಾಸದ ಸಾಂಸ್ಕೃತಿಕ ಪರಿಕರಗಳಾದ, ಸಾಹಿತ್ಯ ಅಕಾಡೆಮಿ, ಜ್ಞಾನಪೀಠ ಮುಂತಾದ ವ್ಯವಸ್ಥೆಗಳಲ್ಲಿ ಯೋಗ್ಯ ಸಲಹೆಗಳಿಂದ ಉತ್ತಮ ಸಂಸ್ಕೃತಿ ರಕ್ಷಕರಾಗಿ ವ್ಯವಹರಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಅಕಾಡೆಮಿಗಳ ಸಲಹೆಗಾರರೆಂದು ಹಲವು ವರ್ಷಗಳ ಕಾಲ ಕೆಲಸ ಮಾಡಿದರು. ವಿದಾಯ ಲೇಖಕ, ವಾಚಕ, ವಿಮರ್ಶಕರನ್ನು ಒಟ್ಟುಗೂಡಿಸಿ ಒಂದು ಹೊಸ ಕ್ಷಿತಿಜವನ್ನು ತೋರಿಸುತ್ತಾ, ಆ ದಿಶೆಯಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟ ಕೃತಿ ಅವರ ಅಂತಿಮ ಕೃತಿ. ಸ್ವಾತಂತ್ರ್ಯಕ್ಕಾಗಿ, ಮುಕ್ತಿಗಾಗಿ ಕೊನೆ ಉಸಿರಿನವರೆಗೊ ಚಡಪಡಿಸಿದರು. ಓಂಣಮೋ ಬರೆದು ಮುಗಿಸುವ ಕಾಲದಲ್ಲಿ ಅವರಿಗೆ ಉಸಿರುಗಟ್ಟಿದ ವ್ಯಾಧಿ. ಆ ನಿರ್ಬಂಧದ ಸಮಯದಲ್ಲಿಯೂ ಅನಿರ್ಬಂಧತೆಯ ಅತ್ಯುಚ್ಚ ಧರ್ಮಕ್ಕೆ ಹಾತೊರೆದು ಕೊನೆಯುಸಿರೆಳೆದರು (ಮಾರ್ಚ್ ೨೬, ೧೯೯೮) ಕಾದಂಬರಿ ಮುಗಿಸಿದ್ದು ವಾರವೊಂದರಷ್ಟೇ ಮುಂಚೆ ಸಾಹಿತ್ಯಕ್ಕೂ ಅವರ ಜೀವನಕ್ಕೂ ಅಂತಿದ ನಂಟಿನ ಅವರ ಕತೆ ಹೇಳುತ್ತ. ಶಾಂತಿನಾಥ ದೇಸಾಯಿ ಒಂದು ವಿಶಾಲ ಪರಿಪ್ರೇಕ್ಷ್ಯವನ್ನು ತೆರೆದಿಟ್ಟು ತೆರಳಿಬಿಟ್ಟಿದ್ದಾರೆ. ಮಾಹಿತಿ ಆಧಾರ ಮಾರುತಿ ಶಾನಭಾಗ್ ಅವರ ಶಾಂತಿನಾಥ ದೇಸಾಯಿ ಅವರ ಕುರಿತ ಬರಹ, ಸಾಲು ದೀಪಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಣೆ. ಕೃತಿಗಳು ಸಣ್ಣ ಕಥಾ ಸಂಕಲನ ಮಂಜುಗಡ್ಡೆ ಕ್ಷಿತಿಜ ದಂಡೆ ರಾಕ್ಷಸ ಪರಿವರ್ತನೆ ಕೂರ್ಮಾವತಾರ ಕಾದಂಬರಿಗಳು ಮುಕ್ತಿ ವಿಕ್ಷೇಪ ಸೃಷ್ಟಿ ಸಂಬಂಧ ಬೀಜ ಅಂತರಾಳ ಓಂ ಣಮೋ ಅನುವಾದ ಯು.ಆರ್.ಅನಂತಮೂರ್ತಿಯವರ ಕಾದಂಬರಿ ಅವಸ್ಥೆ ಆಂಗ್ಲಭಾಷೆಗೆ ಪಿ.ಲಂಕೇಶ್ ಅವರ ಸಂಕ್ರಾಂತಿ ಆಂಗ್ಲಭಾಷೆಗೆ ಶ್ರೀಕೃಷ್ಣ ಆಲನಹಳ್ಳಿ ಅವರ ಕಾಡು ಕಾದಂಬರಿ ಆಂಗ್ಲಭಾಷೆಗೆ. ಪ್ರಶಸ್ತಿಗಳು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ರಾಕ್ಷಸ ಕಥಾಸಂಕಲನ (1977) ವರ್ಧಮಾನ ಪ್ರಶಸ್ತಿ ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ (1984)ಓಂ ಣಮೋ ಎಂಬ ಕೃತಿಗೆ ೨೦೦೦ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸುಧಾ ವಾರಪತ್ರಿಕೆ ಕಾದಂಬರಿ ಪ್ರಶಸ್ತಿ ಸಂಬಂಧ ಕಾದಂಬರಿ (1982) ಉಲ್ಲೇಖಗಳು ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು
ಕರ್ನಾಟಕ ಸಂಗೀತದಲ್ಲಿ ಎರಡು ಬಗೆಯ ಮೇಳಕರ್ತ ಪದ್ಧತಿಗಳು ರೂಢಿಯಲ್ಲಿವೆ. ಈಗ ಹೆಚ್ಚಿಗೆ ಪ್ರಚಾರದಲ್ಲಿರುವುದು ಸಂಪೂರ್ಣಮೇಳಗಳ ಪದ್ಧತಿ. ಈ ಪದ್ಧತಿಯಲ್ಲಿ, ಎಲ್ಲ ಮೇಳಕರ್ತ ರಾಗಗಳೂ ಕ್ರಮ ಸಂಪೂರ್ಣ ಆರೋಹಣಅವರೋಹಣ ಸಂಚಾರಗಳನ್ನು (ಅಂದರೆ ಸರಿಗಮಪದನಿಸ ಸನಿದಪಮಗರಿಸ) ಹೊಂದಿರುತ್ತವೆ, ಈ ಕೆಳಗಿನ ಪಟಿಯಲ್ಲಿ ಈ ಪದ್ಧತಿಗೆ ಸೇರಿದ ಮೇಳಕರ್ತರಾಗಗಳನ್ನು ಸೂಚಿಸಲಾಗಿದೆ, ಇವುಗಳನ್ನು ಸಂಸ್ಕೃತದ ಕಟಪಯಾದಿ ನಿಯಮಕ್ಕೆ ಅನುಗುಣವಾಗಿ ಹೆಸರಿಸಲಾಗಿದೆ. ರಾಗದ ಹೆಸರಿನ ಮೊದಲೆರಡು ಅಕ್ಷರಗಳು ಆ ರಾಗದ ಮೇಳ ಸಂಖ್ಯೆಯನ್ಮು ಸೂಚಿಸುತ್ತದೆ. ಕಟಪಯಾದಿ ನಿಯಮದ ಸಂಖ್ಯಾನಾ ವಾಮತೋಗತಿಃ (ಎಂದರೆ ಬಲದಿಂದ ಎಡಕ್ಕೆ ) ಸೂತ್ರಕ್ಕೆ ಅನುಗುಣವಾಗಿ ಈ ಹೆಸರುಗಳಿವೆ. ಕಟಪಯಾದಿ ಎಂದರೆ ಕಾದಿ ನವ, ಟಾದಿ ನವ, ಪಾದಿ ಪಂಚ, ಯಾದ್ಯಷ್ಟ ( ವ್ಯಂಜನಗಳಾದ ಕ ದಿಂದ ಝ ದ ವರೆಗಿನ ಒಂಭತ್ತು ವ್ಯಂಜನಗಳು ಕ್ರಮವಾಗಿ ೧ ರಿಂದ ೯, ನಂತರದ ಟ ದಿಂದ ಧ ವರೆಗಿನ ವ್ಯಂಜನಗಳಿಗೂ ಹೀಗೆಯೇ ೧ ರಿಂದ ೯, ಪ ದಿಂದ ಮ ವರೆವಿಗೆ ೧ ರಿಂದ ೫ ಹಾಗು ಯ ದಿಂದ ಹ ವರೆಗಿನ ವ್ಯಂಜನಗಳಿಗೆ ೧ ರಿಂದ ೮ ಹೀಗೆ ಸಂಖ್ಯೆಗಳಿವೆ. ಕನಕಾಂಗಿ ಎಂಬ ಮೇಳಕರ್ತ ರಾಗದ ಮೊದಲೆರಡು ಅಕ್ಷರಗಳಾದ ಕ ಮತ್ತು ನ ಗಳು ಕ್ರಮವಾಗಿ ೧ ಹಾಗು ೦ ಯನ್ನು ಸೂಚಿಸುತ್ತವೆ. ಇವನ್ನು ಬಲದಿಂದ ಎಡಕ್ಕೆ (ಸಂಖ್ಯಾನಾ ಸೂತ್ರದಂತೆ) ಓದುವಾಗ ೦೧ ಎಂದಾಗುತ್ತದೆ, ಎಂದರೆ ಒಂದನೇ ಮೇಳಕರ್ತ ರಾಗ ಎಂಬುದು ಅರಿವಾಗುತ್ತದೆ. ಎಲ್ಲಾ ಎಪ್ಪತ್ತೆರಡು ಮೇಳಕರ್ತ ರಾಗಗಳಿಗೂ ಇದೇ ಸೂತ್ರಕ್ಕನುಗುಣವಾಗಿ ಹೆಸರನ್ನಿಡಲಾಗಿದೆ. ಮೇಳಕರ್ತ ರಾಗದ ಮೊದಲೆರಡು ಅಕ್ಷರಗಳ ಸಂಖ್ಯೆಯನ್ನು ಕಟಪಯಾದಿ ನಿಯಮದಲ್ಲಿ ಕಂಡುಕೊಂಡು ಬಲದಿಂದ ಎಡಕ್ಕೆ ಓದಿಕೊಂಡಲ್ಲಿ (ಸಂಖ್ಯೆಯನ್ನು) ಅದು ಎಷ್ಟನೇಯ ಮೇಳಕರ್ತವೆಂಬುದನ್ನು ಅರಿತುಕೊಳ್ಳಬಹುದಾಗಿದೆ. ಕರ್ನಾಟಕ ಸಂಗೀತ ತ್ರಿಮೂರ್ತಿಗಳಲ್ಲೊಬ್ಬರಾದ ಮುತ್ತುಸ್ವಾಮಿ ದೀಕ್ಷಿತರು ಅಸಂಪೂರ್ಣ ಮೇಳ ಪದ್ಧತಿಯನ್ನು ಅನುಸರಿಸಿ ಕೃತಿರಚನೆ ಮಾಡಿದ್ದಾರೆ. ಅದರಲ್ಲಿಯ ಮೇಳ ರಾಗಗಳ ಲಕ್ಷಣವೂ, ಹೆಸರುಗಳೂ ಬೇರೆಯಾಗಿವೆ. ಸಂಗೀತ ಕರ್ನಾಟಕ ಸಂಗೀತ ಕರ್ನಾಟಕ ಸಂಗೀತ ರಾಗಗಳು
೨೦೦೬ ಕನ್ನಡ ವಿಕಿಪೀಡಿಯ ಚರ್ಚೆ ಮತ್ತು ಪತ್ರಿಕಾ ಸಂಪರ್ಕ ಕಾರ್ಯಕ್ರಮ ಏಪ್ರಿಲ್ ೨, ೨೦೦೬ ಭಾನುವಾರ ಸಂಜೆ ೪ ರಿಂದ ೮ ಗಂಟೆಯವರೆಗೆ. ವಿಕಿಪೀಡಿಯ ಪುಟಗಳು
ಸೂರ್ಯ ಗ್ರಹಣವು ಸೌರಮಂಡಲದಲ್ಲಿ ನಡೆಯುವ ಭೂಮಿ, ಸೂರ್ಯ ಮತ್ತು ಚಂದ್ರರನ್ನೊಳಗೊಂಡ ಒಂದು ಖಗೋಳ ಪ್ರಕ್ರಿಯೆ. ಅಮಾವಾಸ್ಯೆಯ ದಿನ ಮಾತ್ರ ಸೂರ್ಯ ಗ್ರಹಣ ಸಂಭವಿಸಲು ಸಾಧ್ಯ. ಸೂರ್ಯ ಮತ್ತು ಭೂಮಿಯ ನದುವೆ ಚಂದ್ರ ಬ೦ದಾಗ ಸೂರ್ಯ ಗ್ರಹಣ ಸ೦ಭವಿಸುತ್ತದೆ. 2016ರ ಸೂರ್ಯ ಗ್ರಹಣ ದಿ.932016 ರ ಸೂರ್ಯ ಗ್ರಹಣ ಕಾಣುವ ಪ್ರದೇಶ:ನೀಲಿಗೆರೆಯಲ್ಲಿ ತೋರಿಸಿದೆ. ನೋಡಿ ಡಿಸೆಂಬರ್ 26, 2019 ರ ಸೂರ್ಯಗ್ರಹಣ ನಮ್ಮ ಸೌರಮಂಡಲ ಖಗೋಳಶಾಸ್ತ್ರ ವಿಸ್ಮಯಕಾರಿ ಸಂಗತಿಗಳು ಗ್ರಹಣಗಳು
ಮಾಸ್ಟರ್ ಹಿರಣ್ಣಯ್ಯ (ಫೆಬ್ರುವರಿ ೧೫, ೧೯೩೪ ೦೨ ಮೇ ೨೦೧೯) ಕನ್ನಡ ರಂಗಭೂಮಿಯ ಹಿರಿಯ, ಪ್ರಸಿದ್ಧ ಕಲಾವಿದರು. ತಮ್ಮ ವಿಡಂಭನಾತ್ಮಕ ವಾಗ್ವೈಕರಿ, ಅಭಿನಯ, ನಿರೂಪಣೆಗಳಿಂದ ಕನ್ನಡ ನಾಡಿನಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಜೀವನ ನಾಟಕ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು ಫೆಬ್ರವರಿ ೧೫, ೧೯೩೪ರಂದು ಮೈಸೂರಿನಲ್ಲಿ ಜನಿಸಿದರು. ಅವರ ಮೂಲ ಹೆಸರು ನರಸಿಂಹಮೂರ್ತಿ. ಕಲ್ಚರ್ಡ್ ಕಮೆಡಿಯನ್ ಎಂದು ಪ್ರಖ್ಯಾತರಾಗಿದ್ದ ಕೆ. ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಗಳ ಒಬ್ಬನೇ ಮಗ. ಓದಿದ್ದು ಇಂಟರ್ ಮೀಡಿಯೆಟ್ ವರೆಗೆ. ೧೯೫೨ರಲ್ಲಿ ತಂದೆಯೊಂದಿಗೆ ಕೂಡಿಕೊಂಡು ಅವರಿಂದಲೇ ರಂಗಶಿಕ್ಷಣ ಪಡೆದರು. ಮಾಸ್ಟರ್ ಹಿರಣ್ಣಯ್ಯನವರು ಬಾಲ್ಯದಲ್ಲಿರುವಾಗ ಅವರ ತಂದೆ ಮದರಾಸಿನಲ್ಲಿ ಬದುಕನ್ನರಸಿ ತಮ್ಮ ಕುಟುಂಬವನ್ನು ಅಲ್ಲಿಗೆ ಕೊಂಡೊಯ್ದರು. ಹೀಗಾಗಿ ಅಲ್ಲಿ ಅವರಿಗೆ ತಮಿಳು, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳ ಅಭ್ಯಾಸವಾಯಿತು. ಜೊತೆ ಜೊತೆಗೆ ಮನೆಯಲ್ಲಿ ಕನ್ನಡದ ಬಾಯಿಪಾಠ ಮತ್ತು ಸಂಸ್ಕೃತದ ಸ್ತೋತ್ರ ಪಾಠ ಕೂಡಾ ನಡೆಯಿತು. ನಂತರದಲ್ಲಿ ಮೈಸೂರಿಗೆ ಬಂದು ಸೇರಿದ್ದು ಬನುಮಯ್ಯ ಮಾಧ್ಯಮಿಕ ಶಾಲೆ. ಸಾಧ್ವಿ, ಮೈಸೂರು ಪತ್ರಿಕೆಯನ್ನು ಮನೆ ಮನೆಗೆ ಹಂಚಿ ಆ ಸಂಪಾದನೆಯಿಂದ ಶಾಲಾ ಪರೀಕ್ಷೆಗಳ ಶುಲ್ಕಕ್ಕೆ ದಾರಿ ಮಾಡಿಕೊಂಡರು. ಮುಂದೆ ಇಂಟರ್ ಮೀಡಿಯೆಟ್ ಓದಿಗಾಗಿ ಶಾರದಾವಿಲಾಸ ಕಾಲೇಜು ಸೇರಿದರು. ಓದು ಅಲ್ಲಿಗೆ ಮುಕ್ತಾಯಗೊಂಡಿತು. ಅಭಿನಯ ರಂಗಕ್ಕೆ ಪಾದಾರ್ಪಣೆ ತಂದೆ ಕೆ. ಹಿರಣ್ಣಯ್ಯನವರು ೧೯೪೦ರಲ್ಲಿ ರಚಿಸಿ, ನಿರ್ದೇಶಿಸಿದ ಚಲನಚಿತ್ರ ವಾಣಿಯಲ್ಲಿ ಹಿರಣ್ಣಯ್ಯನವರು ಪಾದಾರ್ಪಣ ಮಾಡಿದರು. 1948ರಲ್ಲಿ ರಂಗಭೂಮಿಯಲ್ಲಿ ಚಿಕ್ಕ ಪಾತ್ರಮಾಡಲು ಹೋಗಿ ಸೋತರೂ ಛಲದಿಂದ ಕಾಲೇಜಿನಲ್ಲಿ ಸಂಘ ಕಟ್ಟಿ ಆಗ್ರಹ ಎಂಬ ನಾಟಕವನ್ನು ಪ್ರದರ್ಶಿಸಿದರು. ಅದ್ಭುತ ಅಭಿನಯದಿಂದ ನಾಟಕವೇನೋ ಗೆದ್ದಿತು. ನಾಟಕದಲ್ಲಿ ಅಭಿನಯಿಸಿದವರೆಲ್ಲರೂ ಪರೀಕ್ಷೆಯಲ್ಲಿ ಡುಮ್ಕಿ ಆದ್ರೂ ಅಭಿನಯ ಚತುರರಾಗಿ ವಿಜೃಂಭಿಸಿದರು. ಕೆ. ಹಿರಣ್ಣಯ್ಯ ಮಿತ್ರಮಂಡಲಿಯಲ್ಲಿ ೧೯೫೩ರಲ್ಲಿ ತಂದೆಯವರು ನಿಧನರಾದಾಗ, ಕೆ. ಹಿರಣ್ಣಯ್ಯ ಮಿತ್ರ ಮಂಡಲಿಯನ್ನು ತಾವೇ ವಹಿಸಿಕೊಂಡು ನಿರಂತರವಾಗಿ ಮುನ್ನಡೆಸಿದರು. ತಂದೆಯ ಮರಣದ ನಂತರ ಅ.ನ.ಕೃ. ಮತ್ತು ಮಿತ್ರರ ಸಹಾಯದಿಂದ ನಾಟಕ ಕಂಪನಿ ಕಟ್ಟಿದರು. ಆದರೆ ಅನುಭವಿಸಿದ್ದು ನಷ್ಟ ಮಾತ್ರ. ತಂದೆಯವರು ನಡೆಸುತ್ತಿದ್ದ ಹಿರಣ್ಣಯ್ಯ ಮಿತ್ರ ಮಂಡಲಿಯನ್ನು ಪುನಃ ಆರಂಭಿಸಿ ಲಂಚಾವತಾರ ನಾಟಕವನ್ನು ರಚಿಸಿ ರಂಗ ಪ್ರಯೋಗ ಮಾಡಿದರು. ಜನಪ್ರಿಯತೆಯ ಜೊತೆಗೆ ಮಹಾರಾಜರಿಂದ ಸನ್ಮಾನ ಮತ್ತು ನಟರತ್ನಾಕರ ಬಿರುದು ಬಂತು. ನಂತರ ನಡುಬೀದಿ ನಾರಾಯಣದಲ್ಲಿ ತೀರ್ಥರೂಪುವಾಗಿ, ಭ್ರಷ್ಟಾಚಾರದಲ್ಲಿ ಧಫೇದಾರ್ ಮುರಾರಿಯಾಗಿ, ಸದಾರಮೆಯಲ್ಲಿ ಕಳ್ಳನಾಗಿ, ಆದಿಮೂರ್ತಿಯಾಗಿ, ಕಪಿಮುಷ್ಠಿಯಲ್ಲಿ ಜಾರ್ಜ್ ಆಗಿ, ಕಸ್ತೂರಿಯಾಗಿ, ಮಕ್ಮಲ್ ಟೋಪಿಯಲ್ಲಿ ನಾಣಿಯಾಗಿ ಹಿರಣ್ಣಯ್ಯನವರು ಜನರನ್ನು ಅಪಾರವಾಗಿ ಆಕರ್ಷಿಸಿದರು. ಈ ನಾಟಕಗಳೇ ಅಲ್ಲದೆ ದೇವದಾಸಿ, ಅನಾಚಾರ, ಅತ್ಯಾಚಾರ, ಕಲ್ಕ್ಯಾವತಾರ, ಅಮ್ಮಾವ್ರ ಅವಾಂತರ, ಪುರುಷಾಮೃಗ ಹೀಗೆ ಇಪ್ಪತ್ತೈದಕ್ಕೂ ಹೆಚ್ಚು ನಾಟಕಗಳನ್ನು ರಂಗಕ್ಕೆ ತಂದು ಅವರು ಗಳಿಸಿದ ಕೀರ್ತಿ ಅಪಾರವಾದುದು. ಅವರ ಲಂಚಾವತಾರ ನಾಟಕವೊಂದೇ 10,000ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡ ದಾಖಲೆಯನ್ನು ನಿರ್ಮಿಸಿದೆ. ನಾಟಕಗಳ ಮುಖೇನ ವೈಚಾರಿಕ ಕ್ರಾಂತಿ ಮಾಸ್ಟರ್ ಹಿರಣ್ಣಯ್ಯನವರು ನಾಟಕಗಳಲ್ಲಿ ಪ್ರಖ್ಯಾತರಾಗಿ, ತಮ್ಮ ನಾಟಕಗಳ ಮೂಲಕ ಸಾರ್ವಜನಿಕ ವಲಯದಲ್ಲಿ, ಸಮಾಜದ ರಾಜಕೀಯದ ಅಂಕು ಡೊಂಕುಗಳ ಬಗ್ಗೆ ವಿಚಾರ ಕ್ರಾಂತಿ ಮೂಡಿಸಿದವರು. ಅದಕ್ಕೂ ಮಿಗಿಲಾಗಿ ಅವರ ವಿರುದ್ಧ ಕಿರುಕುಳ ನೀಡಲು ನಿಂತವರ ಮುಂದೆ ಸೊಪ್ಪು ಹಾಕದೆ ತಮ್ಮ ಕೆಲಸವನ್ನು ನಿರಂತರವಾಗಿ ಮುಂದುವರೆಸಿದವರು. ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ, ಪ್ರಧಾನಿ ಇಂದಿರಾ ಗಾಂಧೀ ಜೊತೆಗೆ ಅನೇಕ ರಾಜಕೀಯ ನಾಯಕರು, ವಿವಿಧ ಹಂತಗಳ ಪುಡಾರಿಗಳು ಇವರ ಟೀಕಾ ಪ್ರಹಾರವನ್ನು ತಡೆದುಕೊಳ್ಳಲಾರದೆ ಅವರ ಚಟುವಟಿಕೆಗಳನ್ನು ಮಟ್ಟ ಹಾಕಲು ನಡೆಸಿದ ಪ್ರಯತ್ನಗಳನ್ನೆಲ್ಲಾ ಧೈರ್ಯವಾಗಿ ಮೆಟ್ಟು ನಿಂತ ಧೀರರಾಗಿ ಅವರು ತಮ್ಮ ಕಲೆಯನ್ನು ಬೆಳಗಿದ ರೀತಿ ಅನನ್ಯ. ಅದೆಷ್ಟು ಬಾರಿ ಕೋರ್ಟ್ ಹತ್ತಿದರೋ ಈ ಪುಣ್ಯಾತ್ಮ. ಸುಪ್ರೀಂ ಕೋರ್ಟಿಗೆ ಹೋಗಿ ನ್ಯಾಯ ಪಡೆದರು. ಆದರೆ ಅನ್ಯಾಯವಂತರೆದುರು ಎಂದೂ ತಲೆತಗ್ಗಿಸಲಿಲ್ಲ. ಅವರ ಸಾಮಾಜಿಕ ಕಾಳಜಿ, ಅನ್ಯಾಯದ ವಿರುದ್ಧ ನಿರ್ದಾಕ್ಷಿಣ್ಯ ಮಾತು, ಅಂತೆಯೇ ಕನ್ನಡದ ಬಗ್ಗೆ, ಕನ್ನಡದ ಸಾಮಾನ್ಯ ಜನತೆಗೆ ಅವರು ತೋರುತ್ತ ಬಂದಿರುವ ಪ್ರೀತಿ, ಸರಳ ಸಜ್ಜನಿಕೆ, ಇವೆಲ್ಲಾ ಅನುಪಮವಾದದ್ದು. ವಿಡಂಭನಾತ್ಮಕ ಶ್ರೇಷ್ಠತೆ ಅವರ ವಿಡಂಭನೆಯ ಸೊಬಗೇ ಸೊಬಗು. ಕೆಲವೇ ವರ್ಷಗಳ ಹಿಂದೆ ಅವರ ಒಂದು ನಾಟಕದ ತುಣುಕನ್ನು ವೀಕ್ಷಿಸುತ್ತಿದ್ದೆ. ಅವರ ಒಂದು ವಿಡಂಭನೆಯ ತುಣುಕು ಹೀಗಿದೆ: ಈ ಅಮೇರಿಕಾದವರಿಗೆ ಒಂದು ಚೂರು ಕೂಡಾ ಹಣ ಉಳಿಸೋದ್ರ ಬಗ್ಗೆ ಕಾಳಜಿ ಇಲ್ಲ. ದುಡ್ಡಿದೆ ಅಂತ ಅವರು ಮಾಡೋ ಕೆಲಸ ನೋಡಿದ್ಯಾ. ಕುಡಿಯೋ ನೀರ್ಗೇ ಬೇರೆ ಪೈಪಂತೆ. ಕೊಳಚೆ ನೀರು ಹೋಗೋಕ್ಕೆ ಮತ್ತೊಂದು ಪೈಪಂತೆ. ಮಾತಿಗೆ ಹೇಳ್ತೀನಿ. ಆ ಮುಂಡೆ ಮಕ್ಳಿಗೆ ಕಿಂಚಿತ್ತೂ ಬುದ್ಧಿ ಇಲ್ಲ, ದುಡ್ಡು ಹೇಗೆ ಉಳಿಸ್ಬೇಕು ಅಂತ ಗೊತ್ತಿಲ್ಲ. ಅದೇ ನಮ್ಮ ಬೆಂಗಳೂರಲ್ಲಿ ನೋಡು, ಎರಡೂ ಒಂದೇ ಪೈಪಲ್ಲಿ ಬರುತ್ತೆ. ನಮ್ಮ ಬುದ್ಧಿವಂತಿಕೆ ಆ ಅಮೆರಿಕಾದವರಿಗೆ ಎಲ್ಲಿಂದ ಬರಬೇಕು! ಇದನ್ನೆಲ್ಲಾ ಅವರು ನಮ್ಮ ಜನರ ಬಗ್ಗೆ ಅವಹೇಳನ ಮಾಡಿ ಮಾತನಾಡಬೇಕು ಎಂಬುದಕ್ಕಿಂತ ನಮ್ಮ ಸಮಾಜದಲ್ಲಿನ ಕಾಳಜಿಯಾಗಿ ಕಾಣುತ್ತಾರೆ. ಹೀಗೆ ಮಾತನಾಡಿ ಅದರ ರಾಜಕೀಯ ದುರ್ಲಾಭ ಪಡೆದ ಯಾವುದೇ ಘಟನೆಯೂ ಅವರ ಇಷ್ಟು ವರ್ಷದ ಕಾಯಕದಲ್ಲಿ ನಡೆಯದಿಲ್ಲ ಎಂಬುದು ಕೂಡಾ ನೆನಪಿನಲ್ಲಿಡಬೇಕಾದ ಅಂಶ. ತಾವು ಅಷ್ಟು ದೊಡ್ಡವರಾದರೂ, ದೊಡ್ಡವರು ಸಾಮಾನ್ಯರೂ ಎಂಬ ಭೇದವಿಲ್ಲದೆ ಅವರು ತೋರುವ ಆಪ್ತಗುಣ ಅನುಪಮವಾದದ್ದು. ಈ ಹಿರಿಯ ವಯಸ್ಸಿನಲ್ಲಿಯೂ ಅವರ ಧ್ವನಿ ಮಾಧುರ್ಯ, ಮೊನಚು, ಹಾಸ್ಯಪ್ರಜ್ಞೆ, ಸಾಮಾನ್ಯರಲ್ಲಿ ಪ್ರೇಮಭಾವ, ಕನ್ನಡ ನಾಡು ನುಡಿಗಳ ಬಗೆಗೆ ಅವರಿಗಿರುವ ಗೌರವ, ತಾನು ಏನು ಮಾತನಾಡುತ್ತಿದ್ದೇನೆ ಎಂಬುದರ ಕುರಿತಾದ ಜಾಗೃತಿ ಇವೆಲ್ಲಾ ಅಚ್ಚರಿಮೂಡಿಸುವಂತದ್ದಾಗಿದೆ. ದಿಟ್ಟತನ ಪತ್ರಿಕೆಗಳು ಸರ್ಕಾರದ ವಿರುದ್ಧ ಧ್ವನಿ ಎತ್ತಲು ಹೆದರುತ್ತಿದ್ದ ದಿನಗಳಲ್ಲಿ ಇನ್ನೂ ಲಂಕೇಶ್, ರವಿ ಬೆಳಗೆರೆ ಅಂಥವರು ಪತ್ರಿಕೆ ತಂದು ಜನರಲ್ಲಿ ದಿಟ್ಟತನ ಕಾಣಿಸುವುದಕ್ಕೂ ಮುಂಚಿನ ದಿನಗಳಲ್ಲಿಯೇ ಏಕ ವ್ಯಕ್ತಿಯಾಗಿ ಇಡೀ ವ್ಯವಸ್ಥೆಯ ದುರ್ನಡತೆಗಳನ್ನು ಪ್ರಬಲವಾಗಿ ತೋರಿಸುತ್ತಾ ಧೈರ್ಯವಹಿಸಿ ಮುನ್ನಡೆದ ಹಿರಣ್ಣಯ್ಯನಂತಹವರ ಕೆಲಸ ಅಸಾಮಾನ್ಯವಾದುದು. ಮಾಧ್ಯಮಗಳು ಅಂದು ಇಷ್ಟೊಂದು ವ್ಯಾಪ್ತಿಯಲ್ಲಿಲ್ಲದ ದಿನಗಳಲ್ಲಿ ತಾನೇ ಒಂದು ಮಾಧ್ಯಮವಾಗಿ ಮೂಡಿ ಹಿರಣ್ಣಯ್ಯನವರು ತೋರಿದ ಇಚ್ಚಾಶಕ್ತಿ ಮರೆಯಲಾಗದಂತದ್ದು. ಹಿರಣ್ಣಯ್ಯನವರ ಪರಂಪರೆ ಅವರಿಗೆ ಅವರ ತಂದೆಯವರಿಂದ ಬಂದು ಮುಂದುವರೆದಿತ್ತು. ಪ್ರಮುಖ ನಾಟಕಗಳು ಮಕ್ಮಲ್ ಟೋಪಿ ಕಪಿಮುಷ್ಟಿ ದೇವದಾಸಿ ನಡುಬೀದಿ ನಾರಾಯಣ ಲಂಚಾವತಾರ ಪಶ್ಚಾತ್ತಾಪ ಭ್ರಷ್ಟಾಚಾರ ಚಪಲಾವತಾರ ಡಬ್ಬಲ್ ತಾಳಿ ಲಾಟರಿ ಸರ್ಕಾರ ಸನ್ಯಾಸಿ ಸಂಸಾರ ಸದಾರಮೆ ಎಚ್ಚಮ ನಾಯಕ ಕಿರುತೆರೆ, ಬೆಳ್ಳಿತೆರೆಗಳಲ್ಲಿ ಹಿರಣ್ಣಯ್ಯ ಹಿರಣ್ಣಯ್ಯ ಮಿತ್ರ ಮಂಡಲಿ ಪ್ರಮುಖ ನಾಟಕಗಳಲ್ಲೊಂದಾದ ದೇವದಾಸಿ ಚಲನಚಿತ್ರವಾಗಿದ್ದು, ಅದರಲ್ಲಿ ಹಿರಣ್ಣಯ್ಯನವರು ಪಾತ್ರ ವಹಿಸಿದ್ದರು. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪುಣ್ಯಕೋಟಿ, ಅಮೃತ ವಾಹಿನಿ ಧಾರಾವಾಹಿಗಳಲ್ಲಿಯೂ ಮಾಸ್ಟರ್ ಹಿರಣ್ಣಯ್ಯನವರು ಅಭಿನಯಿಸಿದ್ದರು. ಸಂಪ್ರದಾಯ, ಆನಂದ ಸಾಗರ, ...ರೆ (೨೦೧೬), ಕೇರ್ ಆಫ್ ಫುಟ್ ಪಾತ್ ೨, ನಂ ೭೩ ಶಾಂತಿನಿವಾಸ (೨೦೦೭), ಯಕ್ಷ, ನಿರಂತರ, ಈ ಸಂಭಾಷಣೆ, ಲಂಚ ಸಾಮ್ರಾಜ್ಯ, ಬೊಂಬುಗಳು ಸಾರ್ ಬೊಂಬುಗಳು, ಗಜ, ಹುಡ್ಗೀರು ಸಾರ್ ಹುಡ್ಗೀರು, ಆಪರೇಷನ್ ಅಂತ ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಶಸ್ತಿ ಗೌರವಗಳು ಮಾಸ್ಟರ್ ಹಿರಣ್ಣಯ್ಯನವರಿಗೆ ಹಲವಾರು ಬಿರುದುಗಳೂ ಅತ್ಯುನ್ನತ ರಂಗ ಪ್ರಶಸ್ತಿಯಾದ ಡಾ. ಗುಬ್ಬೀ ವೀರಣ್ಣ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭ್ಯವಾಗಿವೆ. ದೇಶ ವಿದೇಶಗಳಲ್ಲಿರುವ ಕನ್ನಡಿಗರು ಅವರ ನಾಟಕಗಳನ್ನೂ ಅವರನ್ನೂ ನಿರಂತರವಾಗಿ ಗೌರವಿಸಿದ್ದಾರೆ. ಕಲಾಗಜ ಸಿಂಹ, ನಟ ರತ್ನಾಕರ ಎಂಬ ಬಿರುದುಗಳು ಅವರಿಗೆ ಸಂದಿವೆ. ಪ್ರಶಸ್ತಿ ಪುರಸ್ಕಾರಗಳ ಪಟ್ಟಿ ಕರ್ನಾಟಕ ರಾಜ್ಯ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿ ನಾಟಕ ಅಕಾಡೆಮಿ ಪ್ರಶಸ್ತಿ ರಂಗಭೂಮಿ ಪ್ರಶಸ್ತಿ ಗುಬ್ಬಿ ವೀರಣ್ಣ ಪ್ರಶಸ್ತಿ (೧೯೮೮) ನವರತ್ನ ರಾಂ ಪ್ರಶಸ್ತಿ ಆಳ್ವಾಸ್ ನುಡಿಸಿರು ಪ್ರಶಸ್ತಿ (೨೦೦೫) ಸಂದೇಶ ಕಲಾ ಪ್ರಶಸ್ತಿ (೨೦೦೯) ಮಹಾಅದ್ವೈತಿ ಪ್ರಶಸ್ತಿ (೨೦೧೭) ೧೮ನೇ ಅನಕೃ ನಿರ್ಮಾಣ ಸ್ವರ್ಣ ಪ್ರಶಸ್ತಿ (೨೦೧೩) ನಿಧನ ಹಿರಣ್ಣಯ್ಯನವರು ೦೨ಮೇ೨೦೧೯ರಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ೮೫ ವರ್ಷ ವಯಸ್ಸಾಗಿತ್ತು. ಹೆಚ್ಚಿನ ಓದಿಗೆ ಮಾಸ್ಟರ್ ಹಿರಣ್ಣಯ್ಯ ನರಸಿಂಹ ನರ್ತಿಗುಡಿಹಳ್ಳಿ ನಾಗರಾಜ: 02 ಮೇ 2019 ಉಲ್ಲೇಖಗಳು ರಂಗಭೂಮಿ ಕಲಾವಿದರು ೧೯೩೪ ಜನನ ೨೦೧೯ ನಿಧನ ಕನ್ನಡ ನಾಟಕಕಾರರು ಕನ್ನಡ ಚಲನಚಿತ್ರ ನಟರು
ಮಣಿರತ್ನಂ (೧೯೫೬) ದಕ್ಷಿಣ ಭಾರತದ ಸಿನಿಮಾ ದಿಗ್ಗಜರಲ್ಲಿ ಮಣಿರತ್ನಂ ಪ್ರಮುಖರು. ತಮಿಳು ಸಿನಿಮಾ ರಂಗದಲ್ಲಿ ಕ್ರಾಂತಿ ಮಾಡಿ, ಅದರ ಛಾಪನ್ನು ಭಾರತದಾದ್ಯಂತ ಹರಡಿದರು. ತಮ್ಮ ಚಿತ್ರಗಳಲ್ಲಿ ಛಾಯಾಚಿತ್ರಣಕ್ಕೆ ಮತ್ತು ಬೆಳಕಿಗೆ ಮಹತ್ವ ನೀಡಿ ಅದರಿಂದ ವಿಶಿಷ್ಟ ಶೈಲಿಯನ್ನು ಸೃಷ್ಟಿಸಿರುವ ಇವರು ಹುಟ್ಟಿದ್ದು ತಮಿಳುನಾಡಿನ ಮದರಾಸಿನಲ್ಲಿ. ೧೯೮೩ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ತಮ್ಮ ಮೊದಲ ಚಿತ್ರವನ್ನು ಕನ್ನಡದಲ್ಲಿ ಪಲ್ಲವಿ ಅನು ಪಲ್ಲವಿ ಎಂಬ ಹೆಸರಿನಲ್ಲಿ ಚಿತ್ರಿಸಿದರು. ಮೌನರಾಗಂ, ನಾಯಗನ್, ಅಗ್ನಿ ನಕ್ಷತ್ರಂ, ಗೀತಾಂಜಲಿ, ಅಂಜಲಿ, ರೋಜಾ, ತಿರುಡಾ ತಿರುಡಾ, ಮುಂಬಯಿ, ಇರುವರ್, ದಿಲ್ ಸೇ, ಅಲೈ ಪಾಯುದೆ, ಕಣ್ಣತ್ತಿಲ್ ಮುತ್ತಮಿಟ್ಟಾಳ್ ಮತ್ತು ಯುವಾ ಇವರು ನಿರ್ದೇಶಿಸಿದ ಚಿತ್ರಗಳು. ಭಾರತ ಸಿನಿಮಾ ತಮಿಳು ಸಿನಿಮಾ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು
ಅಮಿತಾಭ್ ಬಚ್ಚನ್ (, , ಅಕ್ಟೋಬರ್ 11, 1942ರಂದು ಅಮಿತಾಭ್ ಹರಿವಂಶ್ ಬಚ್ಚನ್ ಜನನ), ಭಾರತದ ಒಬ್ಬ ಚಲನಚಿತ್ರ ನಟ. ಅವರನ್ನು ಬಿಗ್ ಮತ್ತು ಷಹೇನ್ಷಾ ಎಂದೂ ಕರೆಯಲಾಗುತ್ತಿದೆ. 1970ರ ದಶಕದಲ್ಲಿ ಆರಂಭದಲ್ಲಿ ಆಂಗ್ರಿ ಯಂಗ್ ಮ್ಯಾನ್ ಇಮೇಜ್ನೊಂದಿಗೆ ಅಮಿತಾಭ್ ಬಚ್ಚನ್ ಬಾಲಿವುಡ್ ಚಲನಚಿತ್ರದಲ್ಲಿ ಮೊದಲು ಜನಪ್ರಿಯತೆಗೆ ಬಂದರು, ಆ ಬಳಿಕ ಅವರು ಭಾರತೀಯ ಚಲನಚಿತ್ರ ಇತಿಹಾಸದ ಅತ್ಯಂತ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾದರು. ಬಚ್ಚನ್ ತಮ್ಮ ಚಲನಚಿತ್ರ ವೃತ್ತಿ ಜೀವನದಲ್ಲಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಹನ್ನೆರಡು ಫಿಲ್ಮ್ಫೇರ್ ಪ್ರಶಸ್ತಿಗಳು ಸೇರಿದಂತೆ ಅನೇಕ ಪ್ರಮುಖ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅತಿ ಹೆಚ್ಚು ಬಾರಿ ಫಿಲ್ಮ್ಫೇರ್ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮಕರಣಗೊಂಡ ದಾಖಲೆ ಕೂಡ ಅವರ ಹೆಸರಲ್ಲಿದೆ. ಬಚ್ಚನ್ ಅವರು ನಟನೆ ಮಾತ್ರವಲ್ಲದೆ, ಹಿನ್ನೆಲೆ ಗಾಯಕರಾಗಿ, ಚಿತ್ರ ನಿರ್ಮಾಪಕರಾಗಿ ಮತ್ತು ಟಿವಿ ನಿರೂಪಕರಾಗಿಯೂ ಕೆಲಸ ಮಾಡಿದ್ದಾರೆ, ಮತ್ತು 1984ರಿಂದ 1987ರವರೆಗಿನ ಅವಧಿಗೆ ಭಾರತದ ಸಂಸತ್ ಸದಸ್ಯರಾಗಿ ಬಚ್ಚನ್ ಆಯ್ಕೆಯಾಗಿದ್ದರು. ನಟಿ ಜಯಾ ಭಾದುರಿ ಅವರನ್ನು ಬಚ್ಚನ್ ವಿವಾಹವಾಗಿದ್ದಾರೆ. ಬಚ್ಚನ್ ದಂಪತಿಗಳಿಗೆ ಶ್ವೇತಾ ನಂದಾ ಮತ್ತು ಅಭಿಷೇಕ್ ಬಚ್ಚನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಅಭಿಷೇಕ್ ನಟನಾಗಿದ್ದು, ನಟಿ ಐಶ್ವರ್ಯಾ ರೈಯನ್ನು ವಿವಾಹವಾಗಿದ್ದಾರೆ. ಆರಂಭಿಕ ಜೀವನ ಉತ್ತರ ಪ್ರದೇಶದ ಅಲಹಾಬಾದ್ನಲ್ಲಿ ಜನಿಸಿದ ಅಮಿತಾಭ್ ಬಚ್ಚನ್, ಮೂಲತಃ ಹಿಂದೂಸಿಖ್ ಮನೆತನಕ್ಕೆ ಸೇರಿದವರು. ಅವರ ತಂದೆ, .ಹರಿವಂಶ್ ರಾಯ್ ಬಚ್ಚನ್ ಹಿಂದಿಯ ಪ್ರಖ್ಯಾತ ಕವಿಯಾದರೆ, ತಾಯಿ ತೇಜಿ ಬಚ್ಚನ್ ಫೈಸಲಾಬಾದ್ನ(ಈಗ ಪಾಕಿಸ್ತಾನದಲ್ಲಿದೆ) ಸಿಖ್ಪಂಜಾಬಿ ಕುಟುಂಬಕ್ಕೆ ಸೇರಿದವರು. ಭಾರತದ ಸ್ವಾತಂತ್ರ್ಯ ಹೋರಾಟದ ವೇಳೆ ಪ್ರಸಿದ್ಧವಾಗಿದ್ದ ಇನ್ಖಿಲಾಬ್ ಜಿಂದಾಬಾದ್ ಎಂಬ ಘೋಷಣೆಯಿಂದ ಸ್ಫೂರ್ತಿಗೊಂಡು ಬಚ್ಚನ್ಗೆ ಆರಂಭದಲ್ಲಿ ಇನ್ಖಿಲಾಬ್ ಎಂದು ಹೆಸರಿಡಲಾಗಿತ್ತು, ಆ ನಂತರ ಅಮಿತಾಭ್ ಎಂದು ಮರು ನಾಮಕರಣ ಮಾಡಲಾಯಿತು, ಅಂದರೆ ನಂದಾದೀಪ ಎಂಬರ್ಥ. ಬಚ್ಚನ್ ಮನೆತನದ ಹೆಸರು ಶ್ರೀವಾಸ್ತವ ಎಂದಿದ್ದರೂ, ಅವರ ತಂದೆ ಬಚ್ಚನ್ ಹೆಸರನ್ನು ಆರಿಸಿಕೊಂಡು, ಆ ಹೆಸರಿನಲ್ಲೇ ತಮ್ಮ ಎಲ್ಲ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅಮಿತಾಭ್ ತಮ್ಮ ಕೊನೆಯ ಹೆಸರಿನ ಮೂಲಕ ಚಿತ್ರರಂಗ ಪ್ರವೇಶಿಸಿದರು, ಅಲ್ಲದೆ ಸಾರ್ವಜನಿಕ ಉದ್ದೇಶಗಳಿಗಾಗಿ ಅವರ ಕುಟುಂಬದ ಎಲ್ಲ ಸದಸ್ಯರು ಬಚ್ಚನ್ ಎಂದೇ ಕರೆಸಿಕೊಂಡಿದ್ದಾರೆ. ಹರಿವಂಶ್ ರಾಯ್ ಬಚ್ಚನ್ರವರ ಇಬ್ಬರು ಪುತ್ರರ ಪೈಕಿ ಅಮಿತಾಭ್ ಹಿರಿಯರು, ಅಜಿತಾಭ್ ಎರಡನೆಯವರು. ಬಚ್ಚನ್ ತಾಯಿಗೆ ರಂಗಭೂಮಿಯಲ್ಲಿ ಅತೀವ ಆಸಕ್ತಿಯಿತ್ತು, ಮತ್ತು ಚಲನಚಿತ್ರದಲ್ಲಿ ನಟಿಸಲು ಅವಕಾಶ ಕೂಡ ದೊರೆತಿತ್ತು, ಆದರೆ ಚಲನಚಿತ್ರಕ್ಕೆ ಸೇರದೆ ಅವರು ಗೃಹಿಣಿಯಾಗಿಯೇ ಉಳಿದರು. ಅಮಿತಾಭ್ ಚಿತ್ರ ವೃತ್ತಿ ಜೀವನವನ್ನು ಆರಿಸಿಕೊಳ್ಳುವಲ್ಲಿ ಅವರ ತಾಯಿಯ ಪ್ರಭಾವವೂ ಇತ್ತು, ಏಕೆಂದರೆ ತಮ್ಮ ಪುತ್ರ ಕೇಂದ್ರ ಬಿಂದುವಾಗಬೇಕೆಂದು ಅವರು ಆಶಿಸಿದ್ದರು. ತಮ್ಮ ಆರಂಭದ ಶಿಕ್ಷಣವನ್ನು ಅಲಹಾಬಾದ್ನ ಜ್ಞಾನ ಪ್ರಬೋಧಿನಿ ಮತ್ತು ಬಾಲಕ ಪ್ರೌಢ ಶಾಲೆ () ಮುಗಿಸಿದ ಅಮಿತಾಭ್, ಕಲೆಯನ್ನು ಪ್ರಮುಖ ವಿಷಯವನ್ನಾಗಿ ತೆಗೆದುಕೊಂಡು ನೈನಿತಾಲ್ನ ಶೇರ್ವುಡ್ ಕಾಲೇಜಿನಲ್ಲಿ ಓದಿದರು. ಬಳಿಕ ಪದವಿ ಶಿಕ್ಷಣಕ್ಕಾಗಿ ದೆಹಲಿ ವಿಶ್ವವಿದ್ಯಾಲಯದ ಕಿರೊರಿ ಮಾಲ್ ಕಾಲೇಜ್ಗೆ ತೆರಳಿ, ಬ್ಯಾಚಲರ್ ಆಫ್ ಸೈನ್ಸ್ ಪದವಿ ಪಡೆದರು. ಕಲ್ಕತ್ತಾ(ಈಗ ಕೊಲ್ಕತಾ) ಮೂಲದ ಬರ್ಡ್ ಅಂಡ್ ಕೊ. ಸಂಸ್ಥೆಗೆ ಸೇರಿದ ವಾಣಿಜ್ಯ ಹಡಗಿನ ಸರಕುಸಾಗಾಣೆ ದಲ್ಲಾಳಿಯಾಗಿದ್ದ ಬಚ್ಚನ್, ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಅಭಿನಯ ವೃತ್ತಿಯನ್ನು ಮುಂದುವರಿಸುವ ಸಲುವಾಗಿ ಉದ್ಯೋಗಕ್ಕೆ ತಿಲಾಂಜಲಿಯಿತ್ತರು. ಬದುಕು ಆರಂಭಿಕ ಕೆಲಸಕಾರ್ಯಗಳು 19691972 ಸಾತ್ ಹಿಂದೂಸ್ತಾನಿ ಚಿತ್ರದ ಏಳು ಮಂದಿ ನಾಯಕರ ಪೈಕಿ ಒಬ್ಬರಾಗಿ ಬಚ್ಚನ್ 1969ರಲ್ಲಿ ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರವನ್ನು ಖ್ವಾಜಾ ಅಹ್ಮದ್ ಅಬ್ಬಾಸ್ ನಿರ್ದೇಶಿಸಿದ್ದಾರೆ, ಮತ್ತು ಉತ್ಪಲ್ ದತ್, ಮಧು ಮತ್ತು ಜಲಾಲ್ ಆಘಾ ಮುಂತಾದವರ ತಾರಾಗಣವಿದೆ. ಆರ್ಥಿಕವಾಗಿ ಈ ಚಿತ್ರ ಯಶಸ್ಸು ಕಾಣದಿದ್ದರೂ, ಬಚ್ಚನ್ ಅವರು ಈ ಚಿತ್ರದಲ್ಲಿನ ನಟನೆಗಾಗಿ ಮೊದಲ ಬಾರಿ ಅತ್ಯುತ್ತಮ ಹೊಸ ನಟ ರಾಷ್ಟ್ರೀಯ ಪ್ರಶಸ್ತಿ ಪಡೆದರು. ಆ ನಂತರ ರಾಜೇಶ್ ಖನ್ನಾ ಜೊತೆ ಬಚ್ಚನ್ ನಟಿಸಿದ ಆನಂದ್ (1971) ಚಿತ್ರ ವಾಣಿಜ್ಯವಾಗಿ ಯಶಸ್ಸು ಕಂಡಿತು ಮತ್ತು ವಿಮರ್ಶಕರ ಮೆಚ್ಚುಗೆಯನ್ನೂ ಪಡೆಯಿತು. ಈ ಚಿತ್ರದಲ್ಲಿ ಬಚ್ಚನ್ ನಿರ್ವಹಿಸಿದ ಜೀವನದ ಬಗ್ಗೆ ಸಿನಿಕ ದೃಷ್ಟಿಕೋನವುಳ್ಳ ವೈದ್ಯನ ಪಾತ್ರ ಅವರಿಗೆ ಫಿಲ್ಮ್ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ತಂದುಕೊಟ್ಟಿತು. ನಂತರ ಅಮಿತಾಭ್ ಪರ್ವಾನ (1971) ಚಿತ್ರದಲ್ಲಿ ನವೀನ್ ನಿಸ್ಕೋಲ್, ಯೋಗಿತಾ ಬಾಲಿ ಮತ್ತು ಓಂ ಪ್ರಕಾಶ್ ತಾರಾಗಣದಲ್ಲಿ ಅವಿವೇಕಿ ಪ್ರೇಮಿಯ ಪಾತ್ರದಲ್ಲಿ ನಟಿಸಿದರು, ಅಲ್ಲದೆ ಖಳ ಪಾತ್ರದಲ್ಲಿ ಅಮಿತಾಭ್ ನಟಿಸಿದ್ದಕ್ಕೆ ಇದು ಅಪರೂಪದ ಉದಾಹರಣೆ ಕೂಡ ಹೌದು. ರೇಶ್ಮಾ ಔರ್ ಷೇರಾ (1971)ಸೇರಿದಂತೆ ಆ ನಂತರ ಬಿಡುಗಡೆಯಾದ ಬಚ್ಚನ್ ಅಭಿನಯದ ಅನೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ವಿಶೇಷ ಯಶಸ್ಸು ಪಡೆಯಲಿಲ್ಲ. ಇದೇ ಸಮಯದಲ್ಲಿ, ನಟ ಧರ್ಮೇಂದ್ರ ಮತ್ತು ತಮ್ಮ ಭಾವಿ ಪತ್ನಿ ಜಯಾ ಬಾಧುರಿ ನಟಿಸಿದ ಗುಡ್ಡಿ ಚಿತ್ರದಲ್ಲಿ ಅತಿಥಿ ನಟನಾಗಿ ಬಚ್ಚನ್ ಕಾಣಿಸಿಕೊಂಡರು. ಆರಂಭಿಕ ವೃತ್ತಿ ಜೀವನದಲ್ಲಿ ತಮ್ಮ ಅಪೂರ್ವ ಧ್ವನಿಯಿಂದ ಎಲ್ಲರ ಗಮನ ಸೆಳೆದಿದ್ದ ಅವರು, ಬಾವರ್ಚಿ ಚಿತ್ರದ ಭಾಗವೊಂದನ್ನು ನಿರೂಪಿಸಿದ್ದಾರೆ. 1972ರಲ್ಲಿ, ಎಸ್. ರಾಮನಾಥನ್ ನಿರ್ದೇಶಿಸಿದ ಪ್ರಯಾಣದ ಸನ್ನಿವೇಶಗಳಿರುವ ಸಾಹಸ ಮತ್ತು ಹಾಸ್ಯಮಯ ಬಾಂಬೆ ಟು ಗೋವಾ ಚಿತ್ರದಲ್ಲಿ ಬಚ್ಚನ್ ಅಭಿನಯಿಸಿದರು. ಈ ಚಿತ್ರದಲ್ಲಿ ಅರುಣಾ ಇರಾನಿ, ಮೆಹ್ಮೂದ್, ಅನ್ವರ್ ಆಲಿ ಮತ್ತು ನಾಸಿರ್ ಹುಸೇನ್ ಮುಂತಾದವರ ಜೊತೆಗೆ ಬಚ್ಚನ್ ನಟಿಸಿದ್ದಾರೆ. ಲಂಡನ್ನಲ್ಲಿ ಅಮಿತಾಭ್ ಬಚ್ಚನ್ರವರ ಜೇನುಮೇಣದ ಪ್ರತಿಮೆ ಲಂಡನ್ನಲ್ಲಿ ಬಾಲಿವುಡ್ ಚಲನಚಿತ್ರ ನಟ ಅಮಿತಾಭ್ ಬಚ್ಚನ್ ಅವರ ಜೇನುಮೇಣದ ಪ್ರತಿಮೆಯಿದೆ. ತಾರಾಪಟ್ಟಕ್ಕೆ ಏರಿದ ಬಗೆ 19731983 ೧973ರಲ್ಲಿ ಪ್ರಕಾಶ್ ಮೆಹ್ರಾ ನಿರ್ದೇಶನದ ಜಂಜೀರ್ ಚಿತ್ರದಲ್ಲಿ ಇನ್ಸ್ಪೆಕ್ಟರ್ ವಿಜಯ್ ಖನ್ನಾ ಪಾತ್ರ ಅಮಿತಾಭ್ ವೃತ್ತಿ ಜೀವನಕ್ಕೆ ಮಹತ್ವದ ತಿರುವು ನೀಡಿತು ರೊಮ್ಯಾಂಟಿಕ್ ಕಥಾವಸ್ತು ಹೊಂದಿದ್ದ ಅವರ ಈ ಹಿಂದಿನ ಚಿತ್ರಗಳಿಗೆ ಜಂಜೀರ್ ತದ್ವಿರುದ್ಧವಾಗಿತ್ತು ಮತ್ತು ಇದರ ಬೆನ್ನಿಗೆ ತೆರೆ ಕಂಡ ಇದೇ ತೆರನಾದ ಚಿತ್ರಗಳು ಅಮಿತಾಭ್ಗೆ ಬಾಲಿವುಡ್ ಚಲನಚಿತ್ರದ ಆಂಗ್ರಿ ಯಂಗ್ ಮ್ಯಾನ್ ಪಟ್ಟ ನೀಡಿದವು. ಇಷ್ಟು ಮಾತ್ರವಲ್ಲದೆ ಮುಂಚೂಣಿ ನಾಯಕನ ಪಾತ್ರದಲ್ಲಿ ಅಮಿತಾಭ್ಗೆ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ತಂದುಕೊಟ್ಟ ಮೊದಲ ಚಿತ್ರ ಕೂಡ ಇದಾಗಿದೆ, ಮತ್ತು ಅತ್ಯುತ್ತಮ ನಟ ವಿಭಾಗದಲ್ಲಿ ಫಿಲ್ಮ್ಫೇರ್ ಪ್ರಶಸ್ತಿಗೆ ನಾಮಕರಣವನ್ನೂ ಗಳಿಸಿಕೊಟ್ಟಿತು. ಇದೇ ವರ್ಷ ಅಂದರೆ 1973ರಲ್ಲಿ ಜಯಾರನ್ನು ಅಮಿತಾಭ್ ವಿವಾಹವಾದರು.ಇದೇ ಹೊತ್ತಿಗೆ ಮತ್ತು ಸರಿಸುಮಾರು ವಿವಾಹವಾದ ಒಂದು ತಿಂಗಳ ನಂತರ ತೆರೆ ಕಂಡ ಚಿತ್ರಗಳ ಜಂಜೀರ್ ಮತ್ತು ಅಭಿಮಾನ್ ಸೇರಿದಂತೆ ಹಲವು ಚಿತ್ರಗಳಲ್ಲಿ ಅಮಿತಾಭ್ಜಯಾ ಜೊತೆಯಾಗಿ ನಟಿಸಿದರು. ನಂತರ, ಹೃಷಿಕೇಷ್ ಮುಖರ್ಜಿ ನಿರ್ದೇಶಿಸಿದ ಮತ್ತು ಸ್ನೇಹದ ಕಥಾವಸ್ತುವುಳ್ಳ ಸಾಮಾಜಿಕ ಚಿತ್ರ ನಮಕ್ ಹರಾಮ್ ಚಿತ್ರದಲ್ಲಿ ವಿಕ್ರಂ ಪಾತ್ರದಲ್ಲಿ ಬಚ್ಚನ್ ನಟಿಸಿದರು. ಬೀರೇಶ್ ಚಟರ್ಜಿ ಈ ಚಿತ್ರದ ಕಥಾವಸ್ತು ಬರೆದಿದ್ದಾರೆ. ರಾಜೇಶ್ ಖನ್ನಾ ಮತ್ತು ರೇಖಾ ತಾರಾಗಣವಿದ್ದ ಈ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಅಮಿತಾಭ್ ಅಭಿನಯ ಮೆಚ್ಚುಗೆ ಪಡೆಯಿತಲ್ಲದೆ, ಫಿಲ್ಮ್ಫೇರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಗೆದ್ದುಕೊಟ್ಟಿತು. 1974ರಲ್ಲಿ, ಕುಂವಾರಾ ಬಾಪ್ ಮತ್ತು ದೋಸ್ತ್ ಮುಂತಾದ ಚಿತ್ರಗಳಲ್ಲಿ ಅನೇಕ ಬಾರಿ ಅತಿಥಿ ನಟನಾಗಿ ಬಚ್ಚನ್ ಕಾಣಿಸಿಕೊಂಡರು, ಇದಕ್ಕಿಂತ ಮೊದಲು ಆ ವರ್ಷದ ಅತಿ ಹೆಚ್ಚು ಗಳಿಕೆಯ ಚಿತ್ರ ರೋಟಿ ಕಪ್ಡಾ ಔರ್ ಮಕಾನ್ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದರು. ಈ ಚಿತ್ರಕ್ಕೆ ಮನೋಜ್ ಕುಮಾರ್ ಕಥೆ ಬರೆದು, ನಿರ್ದೇಶಿಸಿದ್ದಾರೆ. ಶೋಷಣೆ, ಆರ್ಥಿಕ ಮತ್ತು ಭಾವನಾತ್ಮಕ ಒದ್ದಾಟಗಳ ನಡುವೆ ಪ್ರಾಮಾಣಿಕತೆಯ ಮುಖವಾಡದ ಕಥಾವಸ್ತು ಹೊಂದಿರುವ ಈ ಚಿತ್ರ ವಿಮರ್ಶಕರ ಮೆಚ್ಚುಗೆ ಪಡೆಯಿತು ಮತ್ತು ವಾಣಿಜ್ಯವಾಗಿ ಯಶಸ್ಸು ಕಂಡಿತು, ಮಾತ್ರವಲ್ಲದೆ ಸ್ವತಃ ಕುಮಾರ್, ಶಶಿ ಕಪೂರ್ ಮತ್ತು ಜೀನತ್ ಅಮಾನ್ ಅವರ ಸಾಲಿನಲ್ಲಿ ಬಚ್ಚನ್ರನ್ನು ಸೇರಿಸಿತು. ಬಚ್ಚನ್ ನಂತರ ನಾಯಕ ಪಾತ್ರದಲ್ಲಿ ನಟಿಸಿದ ಮಜ್ಬೂರ್ ಚಿತ್ರ ಡಿಸೆಂಬರ್ 6, 1974ರಲ್ಲಿ ತೆರೆ ಕಂಡಿತು, ಇದು ಜಾರ್ಜ್ ಕೆನೆಡಿ ನಟನೆಯ ಹಾಲಿವುಡ್ ಚಿತ್ರ ಜಿಗ್ಜ್ಯಾಗ್ ನ ರಿಮೇಕ್. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ತಕ್ಕ ಮಟ್ಟಿನ ಯಶಸ್ಸು ಕಂಡಿತು. 1975ರ ಹಾಸ್ಯಮಯ ಚುಪ್ಕೆ ಚುಪ್ಕೆ , ಅಪರಾಧ ಕಥಾವಸ್ತುವುಳ್ಳ ಫರಾರ್ ಚಿತ್ರದಿಂದ ಹಿಡಿದು ರೊಮ್ಯಾಂಟಿಕ್ ಚಿತ್ರ ಮಿಲಿ ವರೆಗೆ ವೈವಿಧ್ಯಮಯ ಪ್ರಕಾರಗಳ ಚಿತ್ರಗಳಲ್ಲಿ ಬಚ್ಚನ್ ನಟಿಸಿದರು. ಆದಾಗ್ಯೂ 1975ರಲ್ಲಿ ಅವರು ಕೇವಲ ಎರಡು ಚಿತ್ರಗಳಲ್ಲಿ ಮಾತ್ರ ಕಾಣಿಸಿಕೊಂಡರು, ಆದರೂ ಈ ಚಿತ್ರಗಳಿಗೆ ಹಿಂದಿ ಚಿತ್ರರಂಗದಲ್ಲಿ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಯಶ್ ಚೋಪ್ರಾ ನಿರ್ದೇಶನದ ದೀವಾರ್ ಚಿತ್ರದಲ್ಲಿ ಶಶಿ ಕಪೂರ್, ನಿರೂಪ ರಾಯ್, ಮತ್ತು ನೀತು ಸಿಂಗ್ ಜೊತೆ ಬಚ್ಚನ್ ನಟಿಸಿದರು, ಮತ್ತು ಇದರಲ್ಲಿನ ಅಭಿನಯ ಅವರಿಗೆ ಅತ್ಯುತ್ತಮ ನಟ ವಿಭಾಗದಲ್ಲಿ ಫಿಲ್ಮ್ಫೇರ್ ಪ್ರಶಸ್ತಿಗೆ ನಾಮಕರಣ ಗಳಿಸಿಕೊಟ್ಟಿತು. ಈ ಚಿತ್ರ 1975ರಲ್ಲಿ ಭಾರಿ ಯಶಸ್ಸು ಪಡೆದು, ಗಲ್ಲಾಪೆಟ್ಟಿಗೆಯಲ್ಲಿ 4ನೆ ಸ್ಥಾನ ಪಡೆಯಿತು.ಬಾಲಿವುಡ್ನ ನೋಡಲೇಬೇಕಾದ ಉನ್ನತ 25 ಚಿತ್ರಗಳ ಪೈಕಿ ದೀವಾರ್ ಕೂಡ ಎಂದು ಇಂಡಿಯಾಟೈಮ್ಸ್ ಮೂವೀಸ್ ಎಂದು ಹೇಳಿದೆ. 1975, ಅಗಸ್ಟ್ 15ರಂದು ತೆರೆ ಕಂಡ ಶೋಲೆ (ಜ್ವಾಲೆ ಎಂಬರ್ಥ) ಚಿತ್ರ ಅತಿ ಹೆಚ್ಚು .2,36,45,00,000 ಅಂದರೆ $ 60 ದಶಲಕ್ಷಕ್ಕೆ ಸಮನಾಗಿ ಗಳಿಸಿ ಭಾರತದಲ್ಲಿ ಸರ್ವಕಾಲೀಕ ದಾಖಲೆಯನ್ನು ಸ್ಥಾಪಿಸಿದೆ, ಇಲ್ಲಿ ಗಳಿಕೆಯನ್ನು ಹಣದುಬ್ಬರಕ್ಕೆ ಹೊಂದಾಣಿಸಲಾಗಿದೆ. ಬಚ್ಚನ್ ಈ ಚಿತ್ರದಲ್ಲಿ ಜೈದೇವ್ ಪಾತ್ರ ನಿರ್ವಹಿಸಿದ್ದಾರೆ, ಹಿಂದಿ ಚಿತ್ರರಂಗದ ಖ್ಯಾತ ನಟರಾದ ಧರ್ಮೇಂದ್ರ, ಹೇಮ ಮಾಲಿನಿ, ಸಂಜೀವ್ ಕುಮಾರ್, ಜಯಾ ಭಾದುರಿ ಮತ್ತು ಅಮ್ಜದ್ ಖಾನ್ ಮುಂತಾದವರು ಇದರಲ್ಲಿ ನಟಿಸಿದ್ದಾರೆ. 1999ರಲ್ಲಿ, ಭಾರತದ ವಿಭಾಗವು ಇದನ್ನು ಶತಮಾನದ ಚಿತ್ರವೆಂದು ಘೋಷಿಸಿದೆ, ಮತ್ತು ದೀವಾರ್ ಚಿತ್ರದಂತೆ ಶೋಲೆಯನ್ನೂ ಬಾಲಿವುಡ್ನ ನೋಡಲೇಬೇಕಾದ ಉನ್ನತ 25 ಚಿತ್ರಗಳ ಸಾಲಿನಲ್ಲಿ ಇಂಡಿಯಾಟೈಮ್ಸ್ ಮೂವೀಸ್ ಸೇರಿಸಿತು. ಅದೇ ವರ್ಷ ಶೋಲೆ ಚಿತ್ರಕ್ಕೆ 50ನೆ ವಾರ್ಷಿಕ ಫಿಲ್ಮ್ಫೇರ್ ಪ್ರಶಸ್ತಿಗಳ ತೀರ್ಪುಗಾರರು 50 ವರ್ಷಗಳಲ್ಲೇ ಅತ್ಯುತ್ತಮ ಚಿತ್ರ ಫಿಲ್ಮ್ಫೇರ್ ವಿಶೇಷ ಪ್ರಶಸ್ತಿ ನೀಡಿದರು. ಗಲ್ಲಾಪೆಟ್ಟಿಗೆಯಲ್ಲಿ ಶೋಲೆ ಚಿತ್ರದ ಭಾರಿ ಯಶಸ್ಸಿನ ಬಳಿಕ, ಬಚ್ಚನ್ ಅವರು ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು ಮತ್ತು 1976ರಿಂದ 1984ರ ಅವಧಿಯಲ್ಲಿ ಬಚ್ಚನ್ ಅವರಿಗೆ ಫಿಲ್ಮ್ಫೇರ್ ಅತ್ಯುತ್ತಮ ನಟ ಪ್ರಶಸ್ತಿಗಳು ಮತ್ತು ನಾಮಕರಣಗಳು ಹರಿದು ಬಂದವು. ಬಾಲಿವುಡ್ನಲ್ಲಿ ಬಚ್ಚನ್ರಿಗಿದ್ದ ಸರ್ವೋತ್ಕೃಷ್ಟ ಸಾಹಸ ನಾಯಕ ಸ್ಥಾನವನ್ನು ಶೋಲೆಯಂತಹ ಚಿತ್ರಗಳು ಭದ್ರಪಡಿಸಿದ್ದಾಗ್ಯೂ, ಕಭೀ ಕಭೀ (1976)ಯಂತಹ ಚಿತ್ರಗಳಲ್ಲಿ ಪ್ರೇಮಿಯಾಗಿ, ಅಮರ್ ಅಕ್ಬರ್ ಅಂತೋನಿ (1977) ಮತ್ತು ಇದಕ್ಕೂ ಹಿಂದಿನ ಚುಪ್ಕೆ ಚುಪ್ಕೆ (1975)ಯಂತಹ ಹಾಸ್ಯಮಯ ಚಿತ್ರಗಳಲ್ಲೂ ನಟಿಸಿ ತಾವು ಇತರೆ ಪಾತ್ರಗಳಲ್ಲೂ ಸೈ ಎಂಬುದನ್ನು ಬಚ್ಚನ್ ಸಾಬೀತುಪಡಿಸಿದರು. 1976ರಲ್ಲಿ, ನಿರ್ದೇಶಕ ಯಶ್ ಚೋಪ್ರಾರ ಎರಡನೆ ಚಿತ್ರ ಕಭೀ ಕಭೀ ಯಲ್ಲಿ ಬಚ್ಚನ್ ನಟಿಸಿದರು, ರೊಮ್ಯಾಂಟಿಕ್ ಕಥಾ ಹಂದರವಿರುವ ಈ ಚಿತ್ರದಲ್ಲಿ ಪೂಜಾ ಎಂಬ ಚೆಲುವೆಯನ್ನು ಪ್ರೀತಿಸುವ ಯುವ ಕವಿ ಅಮಿತ್ ಮಲ್ಹೋತ್ರಾನ ಪಾತ್ರದಲ್ಲಿ ಬಚ್ಚನ್ ಅಭಿನಯಿಸಿದ್ದಾರೆ. ಪೂಜಾ ಪಾತ್ರದಲ್ಲಿ ರಾಖೀ ಗುಲ್ಜಾರ್ ಕಾಣಿಸಿಕೊಂಡಿದ್ದಾರೆ. ಮೃದುತ್ವ ಮತ್ತು ವಿಶಾಲದೃಷ್ಟಿಯುಳ್ಳ ಭಾವನಾತ್ಮಕ ಸಂಭಾಷಣೆ ಹೊಂದಿರುವ ಈ ಚಿತ್ರಕಥೆ ಅಮಿತಾಭ್ರ ಈ ಹಿಂದಿನ ಸಾಹಸಮಯ ಚಿತ್ರಗಳು ಮತ್ತು ಮುಂದೆ ನಟಿಸಲಿರುವ ಚಿತ್ರಗಳ ಕಥೆಗಳಿಗೆ ನೇರವಾಗಿ ವಿರುದ್ಧವಾಗಿತ್ತು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡಿತಲ್ಲದೆ, ಫಿಲ್ಮ್ಫೇರ್ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮಕರಣ ಗಳಿಸಿಕೊಟ್ಟಿತು. 1977ರಲ್ಲಿ ಅಮರ್ ಅಕ್ಬರ್ ಅಂತೋಣಿ ಚಿತ್ರದಲ್ಲಿನ ಅಭಿನಯಕ್ಕೆ ಅಮಿತಾಭ್ ಫಿಲ್ಮ್ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದರು, ಈ ಚಿತ್ರದಲ್ಲಿ ವಿನೋದ್ ಖನ್ನಾ ಮತ್ತು ರಿಷಿ ಕಪೂರ್ ಜೊತೆಗೆ ಮೂರನೇ ನಾಯಕ ಅಂತೋನಿ ಗೊನ್ಸಾಲ್ವಿಸ್ ಪಾತ್ರದಲ್ಲಿ ಅಮಿತಾಭ್ ನಟಿಸಿದ್ದಾರೆ. 1978ನೆ ಇಸವಿ ಅವರ ವೃತ್ತಿಯಲ್ಲೇ ಕಿರೀಟ ಪ್ರಾಯವಾದ್ದು ಎಂದರೆ ತಪ್ಪಾಗಲಾರದು, ಏಕೆಂದರೆ ಆ ವರ್ಷ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದ ಎಲ್ಲ ನಾಲ್ಕು ಚಿತ್ರಗಳಲ್ಲಿ ಅಮಿತಾಭ್ ನಟಿಸಿದ್ದಾರೆ.ಕಸ್ಮೆ ವಾದೆ ಚಿತ್ರದಲ್ಲಿ ಅಮಿತ್ ಹಾಗೂ ಶಂಕರ್ ಮತ್ತು ಡಾನ್ ಚಿತ್ರದಲ್ಲಿ ಭೂಗತ ದೊರೆಯಾಗಿ ಮತ್ತು ಅವನಂತೆ ಕಾಣುವ ವಿಜಯ್ ಪಾತ್ರದಲ್ಲಿ ನಟಿಸುವುದರೊಂದಿಗೆ ದ್ವಿಪಾತ್ರ ನಟನೆಗೆ ಬಚ್ಚನ್ ಮರಳಿದರು. ತ್ರಿಶೂಲ್ ಮತ್ತು ಮುಖದ್ದರ್ ಕಾ ಸಿಕಂದರ್ ಚಿತ್ರಗಳಲ್ಲಿನ ಅಭಿನಯ ವಿಮರ್ಶಕರಿಂದ ಗಮನಾರ್ಹವಾಗಿ ಮೆಚ್ಚುಗೆ ಪಡೆಯಿತಲ್ಲದೆ ಫಿಲ್ಮ್ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದುಕೊಟ್ಟಿತು ಮತ್ತು ಫಿಲ್ಮ್ಫೇರ್ ಅತ್ಯುತ್ತಮ ನಟ ಪ್ರಶಸ್ತಿಗೆ ಅನೇಕ ನಾಮಕರಣಗಳನ್ನು ಗಳಿಸಿಕೊಟ್ಟಿತು. ಈ ಹಂತದಲ್ಲಿ ವೃತ್ತಿ ಜೀವನದಲ್ಲಿ ಅಮಿತಾಭ್ ಪಡೆದ ಅಭೂತಪೂರ್ವ ಯಶಸ್ಸಿನಿದಾಗಿ, ಅವರನ್ನು ಫ್ರೆಂಚ್ ನಿರ್ದೇಶಕ ಫ್ರಾಮ್ಕೋಯಿಸ್ ಟ್ರಫೌಟ್ ವನ್ಮ್ಯಾನ್ ಇಂಡಸ್ಟ್ರಿ ಎಂದು ಸಾರಿದರು. 1979ರಲ್ಲಿ, ಮೊದಲ ಬಾರಿಗೆ ಅಮಿತಾಭ್ .ನಟ್ವರ್ಲಾಲ್ ಚಿತ್ರಕ್ಕಾಗಿ ತಮ್ಮ ಸಂಗೀತ ಧ್ವನಿಯನ್ನು ಬಳಸಬೇಕಾದ ಅವಶ್ಯಕತೆ ಬಂದಿತ್ತು, ಈ ಚಿತ್ರದಲ್ಲಿ ರೇಖಾ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿನ ನಿರ್ವಹಣೆ ಅವರಿಗೆ ಫಿಲ್ಮ್ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಮತ್ತು ಫಿಲ್ಮ್ಫೇರ್ ಅತ್ಯುತ್ತಮ ಪುರುಷ ಹಿನ್ನೆಲೆ ಗಾಯನ ಪ್ರಶಸ್ತಿಗಳಿಗೆ ನಾಮಕರಣಗಳನ್ನು ಗಳಿಸಿಕೊಟ್ಟಿತು. 1979ರಲ್ಲಿ, ಕಾಲ ಪತ್ತರ್ ಚಿತ್ರದಲ್ಲಿನ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮಕರಣಗೊಂಡರು ಮತ್ತು 1980ರಲ್ಲಿ ರಾಜ್ ಖೋಸ್ಲಾ ನಿರ್ದೇಶನದ ದೋಸ್ತಾನ ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕೆ ಮತ್ತೆ ಪುನಃ ನಾಮಕರಣಗೊಂಡರು, ಈ ಚಿತ್ರದಲ್ಲಿ ಶತ್ರುಘ್ನ ಸಿನ್ಹಾ ಮತ್ತು ಜೀನತ್ ಅಮಾನ್ ಜೊತೆ ಬಚ್ಚನ್ ನಟಿಸಿದ್ದಾರೆ. ದೋಸ್ತಾನ 1980ರಲ್ಲಿ ವಾಣಿಜ್ಯವಾಗಿ ಅತ್ಯಂತ ಹೆಚ್ಚು ಯಶಸ್ಸು ಪಡೆದ ಚಿತ್ರವಾಗಿದೆ. 1981ರಲ್ಲಿ, ಯಶ್ ಚೋಪ್ರಾರ ಪ್ರೇಮಕಥಾನಕ ಸಿಲ್ಸಿಲಾ ದಲ್ಲಿ ಪತ್ನಿ ಜಯಾ ಜೊತೆ ನಟಿಸಿದರು ಮತ್ತು ಈ ನಡುವೆ ನಟಿ ರೇಖಾರನ್ನು ಅಮಿತಾಭ್ ಪ್ರೀತಿಸುತ್ತಿದ್ದಾರೆಂಬ ಊಹಾಪೋಹಗಳೂ ಹಬ್ಬಿದವು. ಆ ಅವಧಿಯಲ್ಲಿ ತೆರೆ ಕಂಡ ಇತರೆ ಚಿತ್ರಗಳಾದರಾಮ್ ಬಲರಾಮ್ (1980), ಶಾನ್ (1980), ಲಾವಾರಿಸ್ (1981), ಮತ್ತು ಶಕ್ತಿ (1982)ಯಲ್ಲಿ ನಟಿಸುವುದರೊಂದಿಗೆ ಅಮಿತಾಭ್ ಅವರು ಬಾಲಿವುಡ್ ದಂತಕಥೆ ದಿಲೀಪ್ ಕುಮಾರ್ ಜೊತೆ ಹೋಲಿಸಲ್ಪಟ್ಟರು. ಅಮಿತಾಭ್ ಆ ಕಾಲದ ಮಹಾನ್ ನಟ, ಮಾತ್ರವಲ್ಲದೆ ಮೌಲ್ಯಯುತ ನಟ ಎಂದುದರಲ್ಲಿ ಯಾವುದೇ ಸಂದೇಹವಿಲ್ಲ. 1982 ಕೂಲೀ ಚಿತ್ರೀಕರಣದ ವೇಳೆ ಗಾಯ 1982ರಲ್ಲಿ ಕೂಲೀ ಚಿತ್ರೀಕರಣದ ವೇಳೆ, ಸಹ ನಟ ಪುನೀತ್ ಇಸ್ಸಾರ್ ಜೊತೆ ಅಮಿತಾಭ್ ಹೊಡೆದಾಡುವ ದೃಶ್ಯವೊಂದರಲ್ಲಿ ಪಾಲ್ಗೊಂಡಿದ್ದಾಗ ಅವರ ಕರುಳಿಗೆ ಮಾರಣಾಂತಿಕ ಗಾಯಗಳಾಯಿತು. ನೈಜ ಸಂಗತಿಯೆಂದರೆ, ಈ ಚಿತ್ರದಲ್ಲಿ ತಾವಾಗಿಯೇ ಸಾಹಸಗಳನ್ನು ಪ್ರದರ್ಶಿಸುವ ಸಾಹಸಕ್ಕೆ ಬಚ್ಚನ್ ಕೈ ಹಾಕಿದ್ದರು ಮತ್ತು ಚಿತ್ರದ ಒಂದು ಸನ್ನಿವೇಶದಲ್ಲಿ ಅವರು ಮೇಜಿನ ಮೇಲೆ ಬಿದ್ದು, ನಂತರ ನೆಲಕ್ಕೆ ಉರುಳಬೇಕಿತ್ತು. ಆದರೆ ದುರದೃಷ್ಟವಶಾತ್ ಅವರು ಮೇಜಿನ ಮೇಲೆ ಬಿದ್ದಾಗ, ಮೇಜಿನ ಒಂದು ತುದಿ ಹೊಟ್ಟೆಗೆ ಬಡಿದ ಪರಿಣಾಮ ಗುಲ್ಮ ಛಿದ್ರ(ಹರ್ನಿಯಾ)ವಾಗಿ ಸಾಕಷ್ಟು ರಕ್ತವನ್ನು ಕಳೆದುಕೊಂಡರು. ನಂತರ ಅವರು ತುರ್ತಾಗಿ ಸ್ಪ್ಲಿನೆಕ್ಟಮಿ(ಗುಲ್ಮದ ಶಸ್ತ್ರ ಚಿಕಿತ್ಸೆ)ಗೊಳಗಾದರು ಮತ್ತು ಆಸ್ಪತ್ರೆಯಲ್ಲಿ ಹಲವು ತಿಂಗಳುಗಳ ಕಾಲ ಚಿಂತಾಜನಕ ಸ್ಥಿತಿಯಲ್ಲಿದ್ದರು, ಕೆಲವೊಮ್ಮೆ ಸಾವಿಗೆ ಸನಿಹದಲ್ಲಿದ್ದರು. ಅಮಿತಾಭ್ರನ್ನು ಉಳಿಸಿಕೊಳ್ಳಲು ಅಭಿಮಾನಿಗಳು ದೇವಾಲಯಗಳಲ್ಲಿ ಪ್ರಾರ್ಥಿಸಿದರು ಮತ್ತು ಇನ್ನು ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಅಂಗಗಳನ್ನೇ ಸಮರ್ಪಿಸಿದರು. ಅಮಿತಾಭ್ ಚೇತರಿಸಿಕೊಳ್ಳುತ್ತಿದ್ದ ಆಸ್ಪತ್ರೆಯ ಹೊರಗಡೆ ಅಭಿಮಾನಿಗಳು ಉದ್ದದ ಸರತಿ ಸಾಲಲ್ಲಿ ನಿಂತಿದ್ದರು. ಆದಾಗ್ಯೂ, ಅವರು ಚೇತರಿಸಿಕೊಳ್ಳಲು ಹಲವು ತಿಂಗಳುಗಳೇ ಬೇಕಾಯಿತು ಮತ್ತು ದೀರ್ಘಕಾಲದ ಚೇತರಿಕೆ ನಂತರ ವರ್ಷದ ಕೊನೆಗೆ ಚಿತ್ರೀಕರಣದಲ್ಲಿ ಅಮಿತಾಭ್ ಪಾಲ್ಗೊಂಡರು. 1983ರಲ್ಲಿ ಕೂಲೀ ಚಿತ್ರ ಬಿಡುಗಡೆಯಾಯಿತು, ಮತ್ತು ಬಚ್ಚನ್ ಗಾಯಗೊಂಡಿದ್ದಾಗ ದೊರೆತ ಪ್ರಚಾರದಿಂದಾಗಿ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡಿತು. ಬಚ್ಚನ್ ಗಾಯಗೊಂಡ ಬಳಿಕ ನಿರ್ದೇಶಕ ಮನಮೋಹನ್ ದೇಸಾಯಿ ಕೂಲೀ ಚಿತ್ರದ ಅಂತ್ಯದಲ್ಲಿ ಬದಲಾವಣೆಗಳನ್ನು ಮಾಡಿದರು. ಮೂಲಕಥೆ ಪ್ರಕಾರ ಬಚ್ಚನ್ ನಿರ್ವಹಿಸಿದ ಪಾತ್ರವನ್ನು ಚಿತ್ರದ ಅಂತ್ಯದಲ್ಲಿ ಸಾಯಿಸಲು ಉದ್ದೇಶಿಸಲಾಗಿತ್ತು. ಆದರೆ ಘಟನೆಯ ನಂತರ ಕಥಾವಸ್ತುವಿನಲ್ಲಿ ಬದಲಾವಣೆ ತಂದು, ಬಚ್ಚನ್ ಪಾತ್ರ ಬದುಕುಳಿಯುವಂತೆ ಮಾಡಲಾಯಿತು. ನೈಜ ಜೀವನದಲ್ಲಿ ಈಗಷ್ಟೇ ಸಾವನ್ನು ಹಿಮ್ಮೆಟ್ಟಿಸಿ ಬಂದ ವ್ಯಕ್ತಿಯನ್ನು ತೆರೆಯ ಮೇಲೆ ಕೊಲ್ಲುವುದು ಉಚಿತವಾಗದು ಎಂದು ನಿರ್ದೇಶಕ ದೇಸಾಯಿ ಅಭಿಪ್ರಾಯಪಟ್ಟಿದ್ದಾರೆ. ಬಿಡುಗಡೆಯಾಗಿರುವ ಚಿತ್ರದಲ್ಲೂ ನಿರ್ಣಾಯಕ ಕ್ಷಣದ ಹೊಡೆದಾಟದ ದೃಶ್ಯವನ್ನು ತೋರಿಸಿಲ್ಲ, ಬದಲಾಗಿ ಚಿತ್ರೀಕರಣದ ಸಮಯದಲ್ಲಿ ನಡೆದ ಘಟನೆ ಮತ್ತು ಅದರಲ್ಲಿ ಅಮಿತಾಭ್ ಗಾಯಗೊಂಡ ಕುರಿತು ವಿವರಣೆ ತೆರೆ ಮೇಲೆ ಕಾಣಿಸಿಕೊಳ್ಳುತ್ತದೆ. ನಂತರ, ಸ್ನಾಯು ದೌರ್ಬಲ್ಯದಿಂದ ಅಮಿತಾಭ್ ಬಳಲುತ್ತಿರುವುದು ಆರೋಗ್ಯ ತಪಾಸಣೆ ವೇಳೆ ಪತ್ತೆಯಾಯಿತು. ಅನಾರೋಗ್ಯ ಅವರನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲಹೀನನ್ನಾಗಿ ಮಾಡಿತಲ್ಲದೆ, ಚಿತ್ರರಂಗದಿಂದ ಹೊರಬಂದು ರಾಜಕೀಯ ಪ್ರವೇಶಿಸಲು ಅಮಿತಾಭ್ ನಿರ್ಧರಿಸಿದರು. ಆ ಹೊತ್ತಿಗೆ ನಿರಾಶವಾದಿಯಾಗಿ ಪರಿವರ್ತನೆಗೊಂಡಿದ್ದ ಅವರು, ತಾವು ಹೊಸ ಚಿತ್ರದಲ್ಲಿ ನಟಿಸಿದರೆ ಜನ ತಮ್ಮನ್ನು ಹೇಗೆ ಸ್ವೀಕರಿಸಿಯಾರು ಎಂಬ ವಿಚಾರದಲ್ಲಿ ತೀವ್ರ ಕಳವಳಕ್ಕೀಡಾಗಿದ್ದರು. ಎಷ್ಟರ ಮಟ್ಟಿಗೆ ನಿರಾಶಾವಾದಿಯಾಗಿದ್ದರೆಂದರೆ, ಪ್ರತಿ ಚಿತ್ರದ ಬಿಡುಗಡೆಗೆ ಮೊದಲು ಯೆ ಫಿಲ್ಮ್ ತೊ ಫ್ಲಾಪ್ ಹೋಗಿ ಎಂಬ ಋಣಾತ್ಮಕ ಹೇಳಿಕೆಯನ್ನು ಕೊಡುತ್ತಿದ್ದರು. (ಈ ಚಿತ್ರ ಸೋಲಲಿದೆ). ರಾಜಕೀಯ: 19841987 1984ರಲ್ಲಿ, ನಟನೆಯಿಂದ ತಾತ್ಕಾಲಿಕ ವಿಶ್ರಾಂತಿ ಪಡೆದ ಅಮಿತಾಭ್, ದೀರ್ಘಕಾಲದ ತಮ್ಮ ಕುಟುಂಬ ಸ್ನೇಹಿತ ರಾಜೀವ್ ಗಾಂಧಿ ಅವರ ನೆರವಿನೊಂದಿಗೆ ರಾಜಕೀಯ ಪ್ರವೇಶಿಸಿ ಸ್ವಲ್ಪಕಾಲ ಸಕ್ರಿಯರಾಗಿದ್ದರು. ಅಲಹಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎಚ್.ಎನ್.ಬಹುಗುಣ ವಿರುದ್ಧ ಸ್ಪರ್ಧಿಸಿ, ಸಾರ್ವತ್ರಿಕ ಚುನಾವಣಾ ಇತಿಹಾಸದಲ್ಲೇ(ಒಟ್ಟು ಮತದಾನದ 68.2%) ದಾಖಲೆ ಅಂತರದಿಂದ ಗೆದ್ದು ಇತಿಹಾಸ ನಿರ್ಮಿಸಿದರು. ಆದರೆ ಅವರ ರಾಜಕೀಯ ವೃತ್ತಿ ಜೀವನ, ಅಲ್ಪಕಾಲ ಮಾತ್ರ ಬಾಳಿತು: ಮೂರು ವರ್ಷಗಳ ನಂತರ ಒಟ್ಟಾರೆ ರಾಜಕೀಯವನ್ನು ರೊಚ್ಚುಗುಂಡಿಎಂದು ಟೀಕಿಸಿ ಅದರಿಂದ ನಿವೃತ್ತಿ ಹೊಂದಿದರು. ಬೋಫೋರ್ಸ್ ಹಗರಣದಲ್ಲಿ ಬಚ್ಚನ್ ಮತ್ತು ಅವರ ಸಹೋದರ ಸಿಕ್ಕಿ ಹಾಕಿಕೊಂಡಿರುವ ಬಗ್ಗೆ ಪತ್ರಿಕೆಯೊಂದು ವರದಿ ಪ್ರಕಟಿಸಿದ ಬೆನ್ನಲ್ಲೇ ಅಮಿತಾಭ್ ರಾಜಕೀಯದಿಂದ ನಿವೃತ್ತಿ ಹೊಂದಿದರು, ಮಾತ್ರವಲ್ಲದೆ ಪತ್ರಿಕೆ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದರು. ಆದರೆ ಕ್ರಮೇಣವಾಗಿ ವಿಚಾರಣೆ ವೇಳೆ ಬೋಫೋರ್ಸ್ ಹಗರಣದಲ್ಲಿ ಬಚ್ಚನ್ ಭಾಗಿಯಲ್ಲ ಎಂಬುದು ಕಂಡು ಬಂತು. ಈ ನಡುವೆ, ಅಮಿತಾಭ್ರ ಸಂಸ್ಥೆ ದಿವಾಳಿಯೆದ್ದ ಪರಿಣಾಮ ಉಂಟಾದ ಹಣಕಾಸಿನ ಬಿಕ್ಕಟ್ಟನ್ನು ಸರಿಪಡಿಸಲು ಅವರ ಹಳೆ ಸ್ನೇಹಿತ ಅಮರ್ ಸಿಂಗ್ ನೆರವು ನೀಡಿದರು. ಈ ಹಿನ್ನೆಲೆಯಲ್ಲಿ ಅಮರ್ ಸಿಂಗ್ರ ಸಮಾಜವಾದಿ ಪಕ್ಷವನ್ನು ಬೆಂಬಲಿಸಲು ಬಚ್ಚನ್ ಶುರು ಮಾಡಿದರು. ಜಯಾ ಬಚ್ಚನ್ ಅವರು ಸಮಾಜವಾದಿ ಪಕ್ಷವನ್ನು ಸೇರಿದ್ದೇ ಅಲ್ಲದೆ, ರಾಜ್ಯಸಭಾ ಸದಸ್ಯತ್ವವನ್ನೂ ಪಡೆದರು. ರಾಜಕೀಯ ಪ್ರಚಾರ ಮತ್ತು ಜಾಹೀರಾತು ಸೇರಿದಂತೆ ಇತರೇ ರಾಜಕೀಯ ವಿಚಾರಗಳಲ್ಲಿ ಸಮಾಜವಾದಿ ಪಕ್ಷದ ಪರವಾಗಿ ಕಾರ್ಯ ನಿರ್ವಹಿಸುವುದನ್ನು ಬಚ್ಚನ್ ಮುಂದುವರಿಸಿದರು. ಈ ಚಟುವಟಿಕೆಗಳು ಅವರನ್ನು ಇತ್ತೀಚೆಗೆ ಮತ್ತೆ ಸಂಕಷ್ಟಕ್ಕೆ ದೂಡಿದ್ದವು, ತಾನು ರೈತನೆಂದು ಹೇಳಿಕೆ ನೀಡಿ ನ್ಯಾಯಾಲಯಕ್ಕೆ ಸುಳ್ಳು ಕಾನೂನು ಪತ್ರಗಳನ್ನು ಸಲ್ಲಿಸಿದ ಆರೋಪದ ಮೇಲೆ ಅವರು ಮತ್ತೆ ನ್ಯಾಯಾಲಯದ ಕಟಕಟೆ ಹತ್ತಬೇಕಾಯಿತು. ಈ ಮಧ್ಯೆ, ಅಮಿತಾಭ್ ನಟನಾ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ ಸ್ಟಾರ್ಡಸ್ಟ್ ಮತ್ತು ಇತರ ಕೆಲವು ಚಲನಚಿತ್ರದ ಮ್ಯಾಗಜೀನ್ಗಳಿಂದ 15 ವರ್ಷಗಳ ಪತ್ರಿಕಾ ನಿಷೇಧಕ್ಕೆ ಒಳಗಾದರು. ಇದಕ್ಕೆ ಪ್ರತಿಯಾಗಿ, ತಾವು ನಟಿಸುವ ಚಿತ್ರಗಳ ಸೆಟ್ಗೆ ಪತ್ರಿಕಾ ಪ್ರತಿನಿಧಿಗಳು ಪ್ರವೇಶಿಸುವುದನ್ನು ಅಮಿತಾಭ್ ನಿಷೇಧಿಸಿದ್ದರೆಂದು ಹೇಳಲಾಗಿದ್ದು, ಅದು 1989ರವರೆಗೂ ಜಾರಿಯಲ್ಲಿತ್ತು ಎನ್ನಲಾಗಿದೆ. ಹಿನ್ನಡೆ ಮತ್ತು ನಿವೃತ್ತಿ: 19881992 1988ರಲ್ಲಿ, ಷಹೇನ್ಷಾ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ನಟಿಸುವುದರೊಂದಿಗೆ ಬಚ್ಚನ್ ಚಿತ್ರರಂಗಕ್ಕೆ ಮರಳಿದರು, ಬಚ್ಚನ್ ವಾಪಸಾತಿಗೆ ದೊರೆತ ಪ್ರಚಾರದಿಂದಾಗಿ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಪಡೆಯಿತು. ಆದರೆ ಈ ಯಶಸ್ಸಿನ ನಂತರ ಬಿಡುಗಡೆಯಾದ ಎಲ್ಲ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸಾಲು ಸಾಲಾಗಿ ಸೋತ ಕಾರಣ ಅವರ ತಾರಾ ವರ್ಚಸ್ಸು ಕುಂದಿತು. 1991ರ ಯಶಸ್ವಿ ಚಿತ್ರ, ಹಮ್ ಸೋಲುವ ಪ್ರವೃತ್ತಿಯನ್ನು ಬದಲಾಯಿಸುವಂತೆ ಕಂಡು ಬಂದರೂ, ಅವರ ಇತರ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತದ್ದರಿಂದಾಗಿ ಯಶಸ್ಸಿನ ಕ್ಷಣಗಳು ಅಲ್ಪಕಾಲ ಮಾತ್ರ ಬಾಳಿತು. ಎಲ್ಲ ಚಿತ್ರಗಳು ಸೋತಾಗ್ಯೂ, ಅಮಿತಾಭ್ ಈ ಅವಧಿಯಲ್ಲಿ ತೆರೆ ಕಂಡ 1990ರ ಅಗ್ನಿಪಥ್ ಚಿತ್ರದಲ್ಲಿ ಮಾಫಿಯಾ ದೊರೆ ಪಾತ್ರದ ನಿರ್ವಹಣೆಗಾಗಿ ಎರಡನೆ ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದದ್ದು ಇಲ್ಲಿ ಗಮನಾರ್ಹ. ಕೆಲವು ವರ್ಷಗಳ ಮಟ್ಟಿಗಾದರೂ ಅವರು ತೆರೆ ಮೇಲೆ ಕಾಣಿಸಿಕೊಳ್ಳುವುದು, ಈ ವರ್ಷಗಳಲ್ಲೇ ಕೊನೆಯಾದೀತೆಂದು ಭಾವಿಸಲಾಯಿತು. 1992ರಲ್ಲಿ ಖುದಾ ಗವಾಹ್ ತೆರೆ ಕಂಡ ನಂತರ, ಐದು ವರ್ಷಗಳ ಕಾಲ ಬಚ್ಚನ್ ತೆರೆ ಮೇಲೆ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ತಡವಾಗಿ ತೆಗೆದ ಚಿತ್ರ ಇನ್ಸಾನಿಯತ್ 1994ರಲ್ಲಿ ಬಿಡುಗಡೆಯಾದರೂ, ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಗಳಿಸಲು ವಿಫಲವಾಯಿತು. ನಿರ್ಮಾಪಕ ಮತ್ತು ನಟನೆಗೆ ಪುನರಾಗಮನ 19961999 ಬಚ್ಚನ್ ತಮ್ಮ ತಾತ್ಕಾಲಿಕ ವಿರಾಮದ ಅವಧಿಯಲ್ಲಿ ಚಿತ್ರ ನಿರ್ಮಾಣದತ್ತ ಹೊರಳಿದರು, ಅಲ್ಲದೆ 1996ರಲ್ಲಿ ಕಾರ್ಪೊರೇಷನ್ ಲಿಮಿಟೆಡ್. (....) ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದರು, 2000ದ ವೇಳೆ ೧೦ ಶತಕೋಟಿ ರೂಪಾಯಿ (ಅಂದಾಜು 250 ದಶಲಕ್ಷ $)ಆದಾಯವಿರುವ ಪ್ರಮುಖ ಮನರಂಜನೆ ಸಂಸ್ಥೆಯನ್ನಾಗಿ ಮಾಡುವ ಗುರಿ ಹೊಂದಲಾಗಿತ್ತು. ಭಾರತದ ಎಲ್ಲ ಮನರಂಜನೆ ಉದ್ಯಮಕ್ಕೆ ಅವಶ್ಯವಿರುವ ಉತ್ಪನ್ನಗಳು ಮತ್ತು ಸೇವೆಗಳನ್ನು ಪರಿಚಯಿಸುವುದು ನ ಯೋಜನೆಯಾಗಿತ್ತು. ಮುಖ್ಯವಾಹಿನಿಯಲ್ಲಿರುವ ವಾಣಿಜ್ಯ ಚಿತ್ರ ನಿರ್ಮಾಣ ಮತ್ತು ವಿತರಣೆ, ಆಡಿಯೋ ಕ್ಯಾಸೆಟ್ಗಳು ಮತ್ತು ವಿಡಿಯೋ ಡಿಸ್ಕ್ಗಳು, ಟಿವಿಗಾಗಿ ತಂತ್ರಾಂಶ ನಿರ್ಮಾಣ ಮತ್ತು ಮಾರುಕಟ್ಟೆ ನಿರ್ವಹಣೆ, ಖ್ಯಾತನಾಮರ ನಿರ್ವಹಣೆ ಮತ್ತು ಕಾರ್ಯಕ್ರಮದ ವ್ಯವಸ್ಥಾಪನೆಗಳು ಸಂಸ್ಥೆಯ ಕಾರ್ಯಕ್ಷೇತ್ರವಾಗಿತ್ತು. 1996ರಲ್ಲಿ ಸಂಸ್ಥೆ ಆರಂಭವಾದ ಕೆಲವೇ ದಿನಗಳಲ್ಲಿ, ಮೊದಲ ಚಿತ್ರವನ್ನು ನಿರ್ಮಿಸಿತು.ತೇರೆ ಮೇರೆ ಸಪ್ನೆ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋತರೂ, ನಟ ಅರ್ಷದ್ ವಾರ್ಸಿ ಮತ್ತು ದಕ್ಷಿಣ ಭಾರತದ ಚಿತ್ರನಟಿ ಸಿಮ್ರಾನ್ ಅವರ ಚಿತ್ರ ವೃತ್ತಿ ಜೀವನ ಇದರಿಂದ ಆರಂಭವಾಯಿತು. ಇನ್ನೂ ಕೆಲವು ಚಿತ್ರಗಳನ್ನು ನಿರ್ಮಿಸಿತಾದರೂ, ಅವುಗಳ ಪೈಕಿ ಯಾವುದೂ ಗೆಲ್ಲಲಿಲ್ಲ. 1997ರಲ್ಲಿ, ನಿರ್ಮಾಣದ ಮೃತ್ಯುದಾತ ಚಿತ್ರದಲ್ಲಿ ನಟಿಸುವ ಮೂಲಕ ಬಚ್ಚನ್ ನಟನಾ ವೃತ್ತಿಗೆ ಮರಳಲು ಪ್ರಯತ್ನಿಸಿದರು. ಬಚ್ಚನ್ರಿಗೆ ಹಿಂದೆಯಿದ್ದ ಸಾಹಸ ನಾಯಕನ ಪಟ್ಟವನ್ನು ವಾಪಸ್ ಗಳಿಸಿಕೊಡಲು ಮೃತ್ಯುದಾತ ಯತ್ನಿಸಿದ್ದಾಗ್ಯೂ, ಚಿತ್ರ ಆರ್ಥಿಕವಾಗಿ ಸೋತಿತು, ಮಾತ್ರವಲ್ಲದೆ ವಿಮರ್ಶಕರ ಮೆಚ್ಚುಗೆ ಪಡೆಯುವಲ್ಲೂ ವಿಫಲವಾಯಿತು. 1996ರ ಮಿಸ್ ವರ್ಲ್ಡ್ ಬ್ಯೂಟಿ ಪೆಜೆಂಟ್ 0} ಸ್ಪರ್ಧೆಯನ್ನು ಬೆಂಗಳೂರಿ ನಲ್ಲಿ ಪ್ರಾಯೋಜಿಸಿತು, ಆದರೆ ದಶಲಕ್ಷ ರೂಪಾಯಿಗಳನ್ನು ಕಳೆದುಕೊಂಡಿತು. ನ ಅಧ್ವಾನಗಳು ಮತ್ತು ಇದರಿಂದಾಗಿ ಉಂಟಾದ ಕಾನೂನು ಸಮರಗಳು, ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಇಟ್ಟುಕೊಂಡ ವಿವಿಧ ಹೆಸರುಗಳು, ನ ಉನ್ನತ ಹಂತದಲಿದ್ದ ಹೆಚ್ಚಿನ ವ್ಯವಸ್ಥಾಪಕರುಗಳಿಗೆ ಮಿತಿ ಮೀರಿ ವೇತನ ನೀಡಿದ್ದು.. ಇತ್ಯಾದಿಗಳು ಸೇರಿಕೊಂಡು ಕ್ರಮೇಣವಾಗಿ ಸಂಸ್ಥೆ 1997ರಲ್ಲಿ ಆರ್ಥಿಕವಾಗಿ ಮತ್ತು ಕಾರ್ಯಕಾರಿಯಾಗಿ ಪತನಗೊಂಡಿತು. ಆಡಳಿತಾತ್ಮಕವಾಗಿ ಸಂಸ್ಥೆಯ ಅಸ್ತಿತ್ವ ಮುಂದುವರಿದರೂ, ನಂತರ ದಿನಗಳಲ್ಲಿ ಭಾರತದ ಕೈಗಾರಿಕಾ ಮಂಡಳಿ ಬಚ್ಚನ್ರದ್ದು ವಿಫಲ ಸಂಸ್ಥೆ ಎಂದು ಘೋಷಿಸಿತು. ಏಪ್ರಿಲ್ 1999ರಲ್ಲಿ, ಬಚ್ಚನ್ ಅವರು ಬಾಂಬೆಯಲ್ಲಿರುವ ತಮ್ಮ ಬಂಗಲೆ ಪ್ರತೀಕ್ಷಾ ಮತ್ತು ಎರಡು ವಸತಿಗೃಹಗಳನ್ನು ಮಾರಾಟ ಮಾಡಲು ನಿರ್ಧರಿಸಿದಾಗ ಅದನ್ನು ತಡೆ ಹಿಡಿದ ಬಾಂಬೆ ಉಚ್ಚ ನ್ಯಾಯಾಲಯ, ಕೆನರಾ ಬ್ಯಾಂಕ್ನ ಸಾಲಕ್ಕೆ ಸಂಬಂಧಿಸಿ ಬಾಕಿಯಿದ್ದ ಕೇಸುಗಳು ಇತ್ಯರ್ಥಗೊಳ್ಳುವವರೆಗೆ ಬಂಗಲೆ ಮತ್ತು ವಸತಿಗೃಹಗಳನ್ನು ಮಾರುವಂತಿಲ್ಲ ಎಂದು ತಿಳಿಸಿತು. ತಮ್ಮ ಸಂಸ್ಥೆಗೆ ಹಣಕಾಸಿನ ಅಗತ್ಯವಿರುವುದರಿಂದ ಸಹರಾ ಇಂಡಿಯಾ ಫೈನಾನ್ಸ್ಗೆ ಬಂಗಲೆಯನ್ನು ಅಡವಿಟ್ಟಿರುವುದಾಗಿ ಬಚ್ಚನ್ ನ್ಯಾಯಾಲಯದಲ್ಲಿ ವಾದಿಸಿದರು. ಈ ನಡುವೆ, ಬಚ್ಚನ್ ತಮ್ಮ ನಟನಾ ವೃತ್ತಿಗೂ ಮತ್ತೆ ಜೀವ ತುಂಬಲು ಪ್ರಯತ್ನಿಸಿದರು, ಮತ್ತು ಅವರು ನಟಿಸಿದ ಬಡೇ ಮಿಯಾ ಛೋಟೆ ಮಿಯಾ (1998) ಚಿತ್ರ ಸಾಧಾರಣ ಯಶಸ್ಸು ಕಂಡಿತು, ಮತ್ತು ಸೂರ್ಯವಂಶಂ (1999) ಚಿತ್ರ ಧನಾತ್ಮಕ ವಿಮರ್ಶೆಗಳನ್ನು ಪಡೆಯಿತು. ಆದರೆ ಲಾಲ್ ಬಾದ್ಷಾ (1999) ಮತ್ತು ಹಿಂದೂಸ್ತಾನ್ ಕಿ ಕಸಂ (1999) ನಂತಹ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತವು. ಟಿವಿ ಬದುಕು 2000ದಲ್ಲಿ, ಬ್ರಿಟೀಷ್ ಟಿವಿ ಗೇಮ್ ಶೋಹೂ ವಾಂಟ್ಸ್ ಟು ಬಿ ಮಿಲಿಯನೇರ್? ನ ಭಾರತೀಯ ರೂಪಾಂತರವನ್ನು ಅಮಿತಾಭ್ ನಡೆಸಿಕೊಟ್ಟರು. ಇದಕ್ಕೆ ಕೌನ್ ಬನೇಗಾ ಕ್ರೋರ್ಪತಿ ಎಂದು ಹೆಸರಿಡಲಾಗಿತ್ತು. ಈ ಕಾರ್ಯಕ್ರಮವನ್ನು ರೂಪಾಂತರಗೊಳಿಸಿದ್ದ ಇತರ ದೇಶಗಳು ಇದೇ ರೀತಿಯ ಹೆಸರಿನ್ನಿರಿಸಿಕೊಂಡಿದ್ದವು, ಅಲ್ಲದೆ ಇದು ಕೆಲವೇ ದಿನಗಳಲ್ಲಿ ಅಭೂತಪೂರ್ವ ಯಶಸ್ಸು ಕಂಡಿತು. ನವೆಂಬರ್ 2000ರಲ್ಲಿ ಕೆನರಾ ಬ್ಯಾಂಕ್ ಬಚ್ಚನ್ ವಿರುದ್ಧ ಹೂಡಿದ್ದ ಕಾನೂನು ಮೊಕದ್ದಮೆಯನ್ನು ವಾಪಸ್ ಪಡೆಯಿತು. ಬಚ್ಚನ್ ಕಾರ್ಯಕ್ರಮವನ್ನು ನವೆಂಬರ್ 2005ರವರೆಗೂ ನಿರೂಪಿಸಿದರು, ಈ ಯಶಸ್ಸು ಅವರಿಗೆ ಮತ್ತೆ ಜನಪ್ರಿಯತೆ ತಂದುಕೊಟ್ಟಿತಲ್ಲದೆ ಚಿತ್ರರಂಗಕ್ಕೆ ಮರಳಲು ವೇದಿಕೆ ನಿರ್ಮಿಸಿಕೊಟ್ಟಿತು. 2009ರ ಆಸ್ಕರ್ ಪ್ರಶಸ್ತಿ ವಿಜೇತ ಸ್ಲಂಡಾಗ್ ಮಿಲಿಯನೇರ್ ಚಿತ್ರದಲ್ಲಿ ಬರುವ ಹೂ ವಾಂಟ್ಸ್ ಟು ಬಿ ಮಿಲಿಯನೇರ್? ಸ್ಪರ್ಧೆಯಲ್ಲಿ ಜಂಜೀರ್ ಚಿತ್ರದ ನಾಯಕ ಯಾರು? ಎಂಬ ಮೊದಲ ಪ್ರಶ್ನೆಗೆ ಅಮಿತಾಭ್ ಬಚ್ಚನ್ ಸರಿಯಾದ ಉತ್ತರವಾಗಿತ್ತು. ಚಿತ್ರದಲ್ಲಿ ಫೆರೋಜ್ ಅಬ್ಬಾಸ್ ಖಾನ್ ಅಮಿತಾಭ್ ಬಚ್ಚನ್ ಪಾತ್ರವನ್ನು ನಿರ್ವಹಿಸಿದ್ದರೆ, ಅನಿಲ್ ಕಪೂರ್ ಸ್ಪರ್ಧೆಯ ನಿರೂಪಕರಾಗಿ ನಟಿಸಿದ್ದರು. ಮರೆಯಿಂದ ತೆರೆಗೆ: 2000ಇದುವರೆಗೂ 2000ರಲ್ಲಿ ಯಶ್ ಚೋಪ್ರಾ ನಿರ್ಮಾಣದ ಆದಿತ್ಯ ಚೋಪ್ರಾ ನಿರ್ದೇಶಿಸಿದ ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆದ ಚಿತ್ರ ಮೊಹಬತೇನ್ ನಲ್ಲಿ ಅಮಿತಾಭ್ ಬಚ್ಚನ್ ಕಾಣಿಸಿಕೊಂಡರು. ಶಾರುಖ್ ಖಾನ್ ನಟಿಸಿದ ಪಾತ್ರಕ್ಕೆ ಸರಿಸಮನಾಗಿ ನಿಲ್ಲುವ ತೀರಾ ಕಟ್ಟುನಿಟ್ಟಿನ, ಹಿರಿಯ ವ್ಯಕ್ತಿಯ ಪಾತ್ರದಲ್ಲಿ ಅಮಿತಾಭ್ ಅಭಿನಯಿಸಿದರು. ಇದರ ಹಿಂದೆಯೇ ತೆರೆ ಕಂಡ ಏಕ್ ರಿಶ್ತಾ: ದಿ ಬಾಂಡ್ ಆಫ್ ಲವ್ (2001), ಕಭೀ ಖುಷಿ ಕಭೀ ಗಮ್ (2001) ಮತ್ತು ಬಾಗ್ಬನ್ (2003) ಚಿತ್ರಗಳಲ್ಲಿ ಕುಟುಂಬದ ಹಿರಿಯವನಾಗಿ ಅಮಿತಾಭ್ ನಟಿಸಿದರು, ಮತ್ತು ಈ ಚಿತ್ರಗಳು ಯಶಸ್ವಿಯಾದವು. ಅಮಿತಾಭ್ ಒಬ್ಬ ನಟನಾಗಿ ವಿವಿಧ ಬಗೆಯ ಪಾತ್ರಗಳಲ್ಲಿ ನಟಿಸುವುದನ್ನು ಮುಂದುವರಿಸಿದರು, ಅವರು ನಟಿಸಿದ ಅಕ್ಸ್ (2001), ಆಂಖೇ (2002), ಖಾಕೀ (2004), ದೇವ್ (2004) ಮತ್ತು ಬ್ಲ್ಯಾಕ್ (2005) ಚಿತ್ರಗಳು ವಿಮರ್ಶಕರ ಪ್ರಶಂಸೆಗೆ ಪಾತ್ರವಾದವು. ಚಿತ್ರರಂಗದಲ್ಲಿ ಪುನರುಜ್ಜೀವನದ ಲಾಭ ಪಡೆದ ಅವರು, ಹಲವು ಉತ್ಪನ್ನಗಳು ಮತ್ತು ಸೇವೆಗಳನ್ನು ಅನುಮೋದಿಸಲು ಶುರು ಮಾಡಿದರಲ್ಲದೆ ಟಿವಿಯಲ್ಲಿ ಮತ್ತು ದೊಡ್ಡ ಜಾಹೀರಾತು ಫಲಕಗಳಲ್ಲಿ ಕಾಣಿಸಿಕೊಳ್ಳತೊಡಗಿದರು. 2005 ಮತ್ತು 2006ರಲ್ಲಿ, ಬಂಟಿ ಔರ್ ಬಬ್ಲಿ (2005), ದಿ ಗಾಡ್ಫಾದರ್ , ಗೌರವಾರ್ಥಸರ್ಕಾರ್ (2005), ಮತ್ತು ಕಭೀ ಅಲ್ವಿದ ನಾ ಕೆಹ್ನಾ (2006) ಚಿತ್ರಗಳಲ್ಲಿ ಪುತ್ರ ಅಭಿಷೇಕ್ ಜೊತೆ ನಟಿಸಿದರು. ಈ ಎಲ್ಲಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡಿವೆ. 2006ರ ಕೊನೆಗೆ ಮತ್ತು 2007ರ ಆರಂಭದಲ್ಲಿ ಬಿಡುಗಡೆಯಾದ ಅಮಿತಾಭ್ ನಟನೆಯ ಚಿತ್ರಗಳಾದ ಬಬೂಲ್ (2006), ಏಕಲವ್ಯ ಮತ್ತು ನಿಶ್ಯಬ್ದ್ (2007) ಗಲ್ಲಾಪೆಟ್ಟಿಗೆಯಲ್ಲಿ ಸೋತರೂ, ಅಮಿತಾಭ್ ಅಭಿನಯ ವಿಮರ್ಶಕರ ಮೆಚ್ಚುಗೆ ಪಡೆಯಿತು. ಕನ್ನಡಕ್ಕೂ ಕಾಲಿಟ್ಟ ಅಮಿತಾಭ್ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೃತಧಾರೆ ಚಿತ್ರದಲ್ಲಿ ಅತಿಥಿ ನಟನಾಗಿ ಕಾಣಿಸಿಕೊಂಡರು. 2007ರಲ್ಲಿ, ಅವರು ನಟಿಸಿದ ಚೀನೀ ಕಮ್ ಮತ್ತು ಬಹುತಾರಾಗಣವಿರುವ ಶೂಟೌಟ್ ಅಟ್ ಲೋಕಂಡ್ವಾಲಾ ಚಿತ್ರಗಳು ಬಿಡುಗಡೆಯಾದವು.ಶೂಟೌಟ್ ಆಟ್ ಲೋಕಂಡ್ವಾಲಾ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ಕಂಡಿದ್ದೇ ಅಲ್ಲದೆ, ಯಶಸ್ವಿ ಚಿತ್ರ ಎಂದು ಭಾರತದಲ್ಲಿ ಘೋಷಿಸಲಾಯಿತು. ಚೀನೀ ಕಮ್ ನಿಧಾನಗತಿಯಲ್ಲಿ ಆರಂಭವಾಗಿ ಕ್ರಮೇಣ ಉತ್ತಮ ಪ್ರದರ್ಶನ ಕಂಡಿತು ಮತ್ತು ಒಟ್ಟಾರೆ ಸರಾಸರಿ ಯಶಸ್ವಿ ಚಿತ್ರವೆಂದು ಘೋಷಿಸಲಾಯಿತು. 2007ರಲ್ಲಿ ತೆರೆ ಕಂಡ, ಸರ್ವಕಾಲೀಕ ದಾಖಲೆ ಸ್ಥಾಪಿಸಿದ ಶೋಲೆ (1975) ಚಿತ್ರದ ರಿಮೇಕ್ ರಾಮ್ ಗೋಪಾಲ್ ವರ್ಮಾ ಕಿ ಆಗ್ ಗಲ್ಲಾಪೆಟ್ಟಿಗೆಯಲ್ಲಿ ಸಂಪೂರ್ಣ ಸೋಲನುಭವಿಸಿತು ಮತ್ತು ವಿಮರ್ಶಕರು ಕೂಡ ಇದನ್ನು ಹುರುಪಿನಿಂದ ಸ್ವೀಕರಿಸಲಿಲ್ಲ. ಅಮಿತಾಭ್ ನಟಿಸಿದ ಆಂಗ್ಲ ಭಾಷೆಯ ಮೊದಲ ಚಿತ್ರ, ರಿತುಪರ್ಣೋ ಘೋಷ್ರವರ ದಿ ಲಾಸ್ಟ್ ಲೀರ್ , ಸೆಪ್ಟೆಂಬರ್ 9, 2007ರಂದು ಟೊರಾಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 2007 ದಲ್ಲಿ ಪ್ರದರ್ಶಿಸಲ್ಪಟ್ಟಿತು. ಈ ಚಿತ್ರದಲ್ಲಿನ ಅಭಿನಯಕ್ಕೆ ಬಚ್ಚನ್ ಧನಾತ್ಮಕ ವಿಮರ್ಶೆಗಳನ್ನು ಪಡೆದರು, ಅಲ್ಲದೆ ಬ್ಲ್ಯಾಕ್ ನಂತರದ ಅತ್ಯುತ್ತಮ ನಟನೆ ಎಂಬ ಪ್ರಶಂಸೆಗೆ ಪಾತ್ರರಾದರು. ಮೀರಾ ನಾಯರ್ ನಿರ್ದೇಶನದ, ಹಾಲಿವುಡ್ ನಟ ಜಾನಿ ಡೆನ್ ನಾಯಕನಾಗಿ ನಟಿಸಿರುವ ಶಾಂತಾರಾಮ್ ಚಿತ್ರದಲ್ಲಿ ಬಚ್ಚನ್ ಪೋಷಕ ಪಾತ್ರದಲ್ಲಿ ನಟಿಸಲಿದ್ದಾರೆ. ಬಚ್ಚನ್ ಅವರಿಗೆ ಇದು ಮೊದಲನೇ ಅಂತರರಾಷ್ಟ್ರೀಯ ಚಿತ್ರವೂ ಹೌದು. ಈ ಚಿತ್ರದ ಚಿತ್ರೀಕರಣ ಫೆಬ್ರವರಿ 2008ರಲ್ಲೇ ಆರಂಭಗೊಳ್ಳಬೇಕಿತ್ತು, ಆದರೆ ಲೇಖಕರ ಮುಷ್ಕರದಿಂದಾಗಿ ಚಿತ್ರೀಕರಣವನ್ನು ಸೆಪ್ಟೆಂಬರ್ 2008ಕ್ಕೆ ಮುಂದೂಡಲಾಗಿತ್ತು. ಭೂತದ ಪಾತ್ರದಲ್ಲಿ ಅಮಿತಾಭ್ ನಟಿಸಿದ ಭೂತ್ನಾಥ್ ಚಿತ್ರ 2008, ಮೇ 9ರಂದು ಬಿಡುಗಡೆಯಾಯಿತು. ಸರ್ಕಾರ್ ರಾಜ್ ಜೂನ್ 2008ರಲ್ಲಿ ತೆರೆ ಕಂಡಿತು, ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದು ಯಶಸ್ಸಿ ಚಿತ್ರವಾಯಿತು. ಆರೋಗ್ಯ 2005ರಲ್ಲಿ ಆಸ್ಪತ್ರೆಗೆ ದಾಖಲು ನವೆಂಬರ್ 2005ರಲ್ಲಿ, ಚಿಕ್ಕ ಕರುಳಿನ ಉರಿಯೂತದ ಶಸ್ತ್ರ ಚಿಕಿತ್ಸೆಗಾಗಿ ಅಮಿತಾಭ್ ಬಚ್ಚನ್ ಅವರು ಲೀಲಾವತಿ ಆಸ್ಪತ್ರೆಯ ಗೆ ಮತ್ತೊಮ್ಮೆ ದಾಖಲಾದರು. ಕೆಲವು ದಿನಗಳ ಮೊದಲೇ ಬಚ್ಚನ್ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಅವಧಿ ಮತ್ತು ಚೇತರಿಸಿಕೊಳ್ಳುತ್ತಿದ್ದ ವೇಳೆ ಟಿವಿ ಗೇಮ್ ಶೋಕೌನ್ ಬನೇಗಾ ಕ್ರೋರ್ಪತಿ ಸೇರಿದಂತೆ ಅಮಿತಾಭ್ ಪಾಲ್ಗೊಂಡಿದ್ದ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಯಿತು. 2006 ಮಾರ್ಚ್ನಲ್ಲಿ ಅಮಿತಾಭ್ ಕೆಲಸಕ್ಕೆ ಮರಳಿದರು. ಧ್ವನಿ ಬಚ್ಚನ್ ಅವರು ಆಳವಾದ, ಮಧ್ಯಮ ಸ್ಥಾಯಿ (ಸಂಗೀತ) ಧ್ವನಿಗೆ ಹೆಸರಾಗಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ವಿವರಣೆಕಾರರಾಗಿ, ಹಿನ್ನೆಲೆ ಗಾಯಕರಾಗಿ ಮತ್ತು ನಿರೂಪಕರಾಗಿ ಅವರು ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಪ್ರಖ್ಯಾತ ಚಿತ್ರ ನಿರ್ದೇಶಕ ಸತ್ಯಜಿತ್ ರೇ ಅವರು ಬಚ್ಚನ್ರ ಧ್ವನಿಗೆ ಮಾರುಹೋಗಿದ್ದರು, ಅಲ್ಲದೆ ತಮ್ಮ ಚಿತ್ರ ಷತ್ರಂಜ್ ಕೆ ಖಿಲಾಡಿ ಯಲ್ಲಿ ಬಚ್ಚನ್ಗೆ ಸರಿ ಹೊಂದುವ ಪಾತ್ರಗಳಿಲ್ಲದ ಕಾರಣ ಅವರ ಧ್ವನಿಯನ್ನು ಬಳಸಿಕೊಳ್ಳಲು ನಿರ್ಧರಿಸಿದ್ದರು. ಅಚ್ಚರಿಯ ವಿಷಯವೆಂದರೆ, ಚಿತ್ರರಂಗ ಪ್ರವೇಶಿಸುವ ಮೊದಲು ಅಮಿತಾಭ್ ಆಕಾಶವಾಣಿಯಲ್ಲಿ ಉದ್ಘೋಷಕರ ಹುದ್ದೆಗೆ ಅರ್ಜಿ ಹಾಕಿದ್ದರು, ಆದರೆ ಅರ್ಜಿ ತಿರಸ್ಕೃತಗೊಂಡಿದ್ದು ಬೇರೆ ಸಂಗತಿ. ವಿವಾದಗಳು ಮತ್ತು ಟೀಕೆ ಬಾರಬಂಕಿ ಭೂಮಿ ಪ್ರಕರಣ 2007ರ ಉತ್ತರ ಪ್ರದೇಶ ರಾಜ್ಯದ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವಾಗಲೇ, ಮುಲಾಯಂ ಸಿಂಗ್ ಸರ್ಕಾರದ ಸಾಧನೆಗಳನ್ನು ಕೊಂಡಾಡುವ ಚಿತ್ರವೊಂದನ್ನು ಅಮಿತಾಭ್ ನಿರ್ಮಿಸಿದರು. ಆದರೆ ಬಚ್ಚನ್ ಬೆಂಬಲವಾಗಿ ನಿಂತಿದ್ದ ಸಮಾಜವಾದಿ ಪಕ್ಷ ಹೀನಾಯ ಸೋಲನುಭವಿಸಿತು, ಮತ್ತು ಮಾಯಾವತಿ ಅಧಿಕಾರಕ್ಕೆ ಬಂದರು. 2007, ಜೂನ್ 2ರಂದು, ಜಮೀನಿಲ್ಲದ ದಲಿತ ರೈತರಿಗೆಂದೇ ನಿರ್ದಿಷ್ಟವಾಗಿ ಮೀಸಲಿರಿಸಿದ್ದ ಕೃಷಿ ಭೂಮಿಯನ್ನು ಕಾನೂನು ಬಾಹಿರವಾಗಿ ಅಮಿತಾಭ್ ಸಂಪಾದಿಸಿದ್ದಾರೆ ಎಂದು ಫೈಜಾಬಾದ್ ನ್ಯಾಯಾಲಯ ಆರೋಪಿಸಿತು. ತಾವು ಕೂಡ ರೈತನೆಂದು ಅಮಿತಾಭ್ ಹೇಳಿಕೊಂಡಿದ್ದಾರೆಂಬ ಹಿನ್ನೆಲೆಯಲ್ಲಿ ಸುಳ್ಳುಪತ್ರ ಸಂಬಂಧಿತ ಆರೋಪಗಳ ಮೇಲೆ ಅವರನ್ನು ತನಿಖೆಗೊಳಪಡಿಸಬಹುದಾದ ಸಾಧ್ಯತೆಗಳಿವೆ ಎಂದು ಆಗ ಊಹಿಸಲಾಗಿತ್ತು. ಆದರೆ 2007, ಜುಲೈ 19ರಂದು ಹಗರಣ ಬಹಿರಂಗಗೊಂಡ ನಂತರ, ಬಚ್ಚನ್ ಉತ್ತರ ಪ್ರದೇಶದ ಬಾರಬಂಕಿ ಮತ್ತು ಪುಣೆಯಲ್ಲಿ ಸಂಪಾದಿಸಿದ ಭೂಮಿಯನ್ನು ಸರ್ಕಾರಕ್ಕೆ ಒಪ್ಪಿಸಿದರು. ಪುಣೆಯಲ್ಲಿ ಕಾನೂನು ಬಾಹಿರವಾಗಿ ಸಂಪಾದಿಸಿದ್ದೆನ್ನಲಾದ ಭೂಮಿಯನ್ನು ದಾನ ಮಾಡುವಂತೆ ಕೋರಿ ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್ರಾವ್ ದೇಶ್ಮುಖ್ ಅವರಿಗೆ ಪತ್ರ ಬರೆದರು. ಆದರೆ, ಭೂದಾನವನ್ನು ತಡೆ ಹಿಡಿದ ಲಖನೌ ನ್ಯಾಯಾಲಯ, ವಿವಾದಿತ ಭೂಮಿಯಲ್ಲಿ ಯಥಾಸ್ಥಿತಿ ಕಾಪಾಡುವಂತೆ ನಿರ್ದೇಶಿಸಿತು. 2007, ಅಕ್ಟೋಬರ್ 12ರಂದು, ಬಾರಬಂಕಿ ಜಿಲ್ಲೆಯ ದೌಲತ್ಪುರ ಗ್ರಾಮದಲ್ಲಿನ ಭೂಮಿ ಕುರಿತು ನೀಡಿದ್ದೆನ್ನಲಾದ ಹೇಳಿಕೆಯಿಂದ ಬಚ್ಚನ್ ಹಿಂದೆ ಸರಿದರು. ಈ ನಡುವೆ 2007, ಡಿಸೆಂಬರ್ 11ರಂದು, ಬಾರಬಂಕಿ ಜಿಲ್ಲೆಯಲ್ಲಿ ದಲಿತರಿಗೆ ಸೇರಬೇಕಾಗಿದ್ದ ಸರ್ಕಾರಿ ಭೂಮಿಯನ್ನು ಮೋಸದಿಂದ ಬಚ್ಚನ್ಗೆ ನೀಡಿದ ಪ್ರಕರಣದಲ್ಲಿ ಬಚ್ಚನ್ ನಿರ್ದೋಷಿಯೆಂದು ಅಲಹಾಬಾದ್ ಉಚ್ಚ ನ್ಯಾಯಾಲಯದ ಲಖನೌ ಪೀಠ ತೀರ್ಪು ನೀಡಿತು. ಯಾವುದೇ ವಂಚನೆಯಲ್ಲಿ ಸ್ವತಃ ಅಮಿತಾಭ್ ಪಾಲ್ಗೊಂಡಿರುವುದಕ್ಕೆ ಅಥವಾ ಆದಾಯದ ದಾಖಲೆಗಳಲ್ಲಿ ಅವರು ರಹಸ್ಯವಾಗಿ ಕೈಚಳಕ ಪ್ರದರ್ಶಿಸಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಲಖನೌ ಏಕಪೀಠದ ನ್ಯಾಯಮೂರ್ತಿಗಳು ತಿಳಿಸಿದರು.ಅಮಿತಾಭ್ ಬಚ್ಚನ್ ಗೆಟ್ಸ್ ಕ್ಲೀನ್ ಚಿಟ್ ಇನ್ ಭೂ ಹಗರಣ. ಆಲ್ಬಾಲಿವುಡ್.ಕಾಂಡಿಸೆಂಬರ್ 11, 2007. ಬಾರಬಂಕಿ ಪ್ರಕರಣದಲ್ಲಿ ಧನಾತ್ಮಕ ತೀರ್ಪು ಬಂದ ನಂತರ, ಪುಣೆ ಜಿಲ್ಲೆಯ ಮಾವಲ್ ತಾಲ್ಲೂಕಿನಲ್ಲಿರುವ ಭೂಮಿಯನ್ನು ಸರ್ಕಾರಕ್ಕೆ ಕೊಡಲು ತಾವು ಇಚ್ಚಿಸುವುದಿಲ್ಲವೆಂದು ಅಮಿತಾಭ್ ಬಚ್ಚನ್ ಮಹಾರಾಷ್ಟ್ರ ಸರ್ಕಾರಕ್ಕೆ ತಿಳಿಸಿದರು. ರಾಜ್ ಠಾಕ್ರೆಯವರ ಟೀಕೆ ಜನವರಿ 2008ರಲ್ಲಿ ನಡೆದ ರಾಜಕೀಯ ರ್ಯಾಲಿಗಳಲ್ಲಿ ಅಮಿತಾಭ್ ಬಚ್ಚನ್ರನ್ನು ತಮ್ಮ ಟೀಕೆಯ ಗುರಿಯಾಗಿಸಿಕೊಂಡ ಮಹಾರಾಷ್ಟ್ರ ನವ್ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ, ಅಮಿತಾಭ್ ತನಗೆಲ್ಲಾ ನೀಡಿದ ಮಹಾರಾಷ್ಟ್ರದ ಬದಲು ತಾವು ಜನಿಸಿದ ರಾಜ್ಯದತ್ತ ಹೆಚ್ಚು ಒಲವು ಹೊಂದಿದ್ದಾರೆ ಎಂದು ಹರಿಹಾಯ್ದಿದ್ದರು. ಉತ್ತರ ಪ್ರದೇಶದ ಬಾರಬಂಕಿಯಲ್ಲಿ ಅಮಿತಾಭ್ ತಮ್ಮ ಸೊಸೆ ಐಶ್ವರ್ಯಾ ರೈ ಬಚ್ಚನ್ ಹೆಸರಿನಲ್ಲಿ ಬಾಲಕಿಯರ ಶಾಲೆ ತೆರೆದದ್ದಕ್ಕೆ ಅಸಮ್ಮತಿ ವ್ಯಕ್ತಪಡಿಸಿದ್ದ ರಾಜ್ ಠಾಕ್ರೆ, ಆ ಕೆಲಸವನ್ನು ಅಮಿತಾಭ್ ಮಹಾರಾಷ್ಟ್ರದಲ್ಲಿ ಮಾಡಬೇಕಿತ್ತು ಎಂದು ಟೀಕಿಸಿದ್ದರು. ಮಾಧ್ಯಮಗಳ ಪ್ರಕಾರ, ಅಭಿಷೇಕ್ಐಶ್ವರ್ಯಾ ವಿವಾಹಕ್ಕೆ ತಮ್ಮಿಂದ ದೂರವಾದ ಚಿಕ್ಕಪ್ಪ ಬಾಳ್ ಠಾಕ್ರೆ ಮತ್ತು ಸೋದರ ಉದ್ಧವ್ ಠಾಕ್ರೆ ಅವರನ್ನು ಆಮಂತ್ರಿಸಿ, ತಮ್ಮನ್ನು ಆಹ್ವಾನಿಸದೆ ಇದ್ದುದು ಅಮಿತಾಭ್ ಅಭಿಮಾನಿಯಾಗಿದ್ದ ರಾಜ್ ಠಾಕ್ರೆ ತಿರುಗಿ ಬೀಳಲು ಕಾರಣ ಎನ್ನಲಾಗಿದೆ. ರಾಜ್ ಠಾಕ್ರೆಯ ಆರೋಪಗಳಿಗೆ ಪ್ರತಿಕ್ರಿಯಿಸಿದ ಬಚ್ಚನ್ರ ಪತ್ನಿ ಹಾಗೂ ಜಯಾ ಬಚ್ಚನ್, ನಾಯಕರು ಮುಂಬಯಿಯಲ್ಲಿ ಸ್ಥಳಾವಕಾಶ ಒದಗಿಸಿದರೆ ಬಚ್ಚನ್ ಕುಟುಂಬ ಶಾಲೆ ಕಟ್ಟಲು ಸಿದ್ಧವಿದೆ ಎಂದರು. ರಾಜ್ ಠಾಕ್ರೆಯವರು ಮಹಾರಾಷ್ಟ್ರದ ಮುಂಬಯಿಕೊಹಿನೂರ್ ಮಿಲ್ಸ್ನಲ್ಲಿ ಭಾರಿ ಪ್ರಮಾಣದಲ್ಲಿ ಆಸ್ತಿ ಹೊಂದಿರುವ ಬಗ್ಗೆ ಕೇಳಿದ್ದೇನೆ. ಅವರು ಭೂಮಿ ನೀಡಲು ಸಿದ್ಧರಿದ್ದಲ್ಲಿ, ನಾವು ಐಶ್ವರ್ಯಾ ಹೆಸರಲ್ಲಿ ಶಾಲೆಯೊಂದನ್ನು ಆರಂಭಿಸಬಹುದು. ಎಂದು ಜಯಾ ಬಚ್ಚನ್ ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಅಮಿತಾಭ್ ಈ ಕುರಿತು ಹೇಳಿಕೆ ನೀಡಲು ನಿರಾಕರಿಸಿದ್ದರು. ಬಚ್ಚನ್ ವಿರುದ್ಧದ ಆರೋಪಗಳನ್ನು ಖಂಡಿಸಿದ್ದ ಬಾಳ್ ಠಾಕ್ರೆ, ಅಮಿತಾಭ್ ಬಚ್ಚನ್ ಅವರು ಒಬ್ಬ ಮುಕ್ತ ಮನಸ್ಸಿನ ವ್ಯಕ್ತಿಯಾಗಿದ್ದು ಅವರಿಗೆ ಮಹಾರಾಷ್ಟ್ರ ಬಗ್ಗೆ ಅಪಾರ ಪ್ರೀತಿಯಿದೆ, ಮತ್ತು ಇದು ಹಲವು ಸಂದರ್ಭಗಳಲ್ಲಿ ವ್ಯಕ್ತವಾಗಿದೆ. ಮಹಾರಾಷ್ಟ್ರ ಅದರಲ್ಲೂ ನಿರ್ದಿಷ್ಟವಾಗಿ ಮುಂಬಯಿ ತಮಗೆ ಖ್ಯಾತಿ ಮತ್ತು ಪ್ರೀತಿಯನ್ನು ಕೊಟ್ಟಿದೆ ಎಂದು ಅಮಿತಾಭ್ ಆಗಿಂದಾಗ್ಗೆ ಹೇಳುತ್ತಾ ಬಂದಿದ್ದಾರೆ. ತಾನು ಇಂದು ಏನಾಗಿದ್ದೇನೋ ಅದಕ್ಕೆ ಜನರು ನೀಡಿದ ಪ್ರೀತಿಯೇ ಕಾರಣ ಎಂದೂ ಅವರು ಹೇಳಿದ್ದಾರೆ. ಅಲ್ಲದೆ ಮುಂಬಯಿ ಮಂದಿ ಅಮಿತಾಭ್ರನ್ನು ಯಾವತ್ತೂ ಕಲಾವಿದನೆಂದು ಒಪ್ಪಿಕೊಂಡಿದ್ದಾರೆ. ಹೀಗಿರುವಾದ ಅವರ ವಿರುದ್ಧ ಸಂಕುಚಿತ ಆರೋಪಗಳನ್ನು ಮಾಡುವುದು ತೀರಾ ಮೂರ್ಖತನವೆನ್ನಬಹುದು. ಅಮಿತಾಭ್ ಜಾಗತಿಕವಾಗಿ ಸೂಪರ್ಸ್ಟಾರ್. ಜಗತ್ತಿನಾದ್ಯಂತ ಎಲ್ಲ ಜನರು ಅವರನ್ನು ಗೌರವಿಸುತ್ತಾರೆ. ಇದನ್ನು ಯಾರೂ ಮರೆಯುವಂತಿಲ್ಲ. ಅಮಿತಾಭ್ ಅವರು ಈ ತಿಳಿಗೇಡಿ ಆರೋಪಗಳನ್ನು ನಿರ್ಲಕ್ಷಿಸಿ, ನಟನೆಯತ್ತ ಗಮನ ಕೇಂದ್ರೀಕರಿಸಬೇಕು. ಎಂದಿದ್ದರು. 2008 ಮಾರ್ಚ್ 23ರಂದು, ಅಂದರೆ ರಾಜ್ ಟೀಕೆಗಳು ಪ್ರಕಟಗೊಂಡು ಸುಮಾರು ಒಂದೂವರೆ ತಿಂಗಳ ನಂತರ, ಕೊನೆಗೂ ಮೌನ ಮುರಿದು ಸ್ಥಳೀಯ ಟ್ಯಾಬ್ಲಾಯ್ಡ್ ಒಂದಕ್ಕೆ ಸಂದರ್ಶನ ನೀಡಿದ ಅಮಿತಾಭ್, ಮನಬಂದಂತೆ ಮಾಡಿದ ಆರೋಪಗಳ ಮನೋಧರ್ಮ ಕೂಡ ಅಂತೆಯೇ ಇರುತ್ತದೆ, ಆದ್ದರಿಂದ ನೀವುಗಳು ನನಗೆ ಕೊಡಬೇಕಾದಷ್ಟು ಮಹತ್ವವನ್ನು ಆ ಆರೋಪಗಳಿಗೆ ಕೊಡಬೇಕಾದ್ದಿಲ್ಲ ಎಂದರು. ನಂತರ, ಮಾರ್ಚ್ 28ರಂದು ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಅಕಾಡೆಮಿಗಾಗಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ವಲಸೆವಿರೋಧಿ ಸಮಸ್ಯೆಗೆ ಕುರಿತು ಅಮಿತಾಭ್ರಲ್ಲಿ ಕೇಳಿದ್ದಕ್ಕೆ, ದೇಶದ ಯಾವುದೇ ಸ್ಥಳದಲ್ಲಿ ವಾಸಿಸುವುದು ವ್ಯಕ್ತಿಯ ಮೂಲಭೂತ ಹಕ್ಕು ಮತ್ತು ಸಂವಿಧಾನ ಕೂಡ ಇದನ್ನು ಸಮ್ಮತಿಸಿದೆ ಎಂದಿದ್ದರು. ರಾಜ್ ಹೇಳಿಕೆಗಳು ತಮ್ಮ ಮೇಲೆ ಪರಿಣಾಮ ಬೀರಿಲ್ಲ ಎಂದೂ ಅವರು ಹೇಳಿದ್ದರು. ಪ್ರಶಸ್ತಿಗಳು, ಗೌರವಗಳು ಮತ್ತು ಮನ್ನಣೆಗಳು , ಚಲನಚಿತ್ರಗಳ ಪಟ್ಟಿ ಇತ್ತೀಚಿನ ಚಲನಚಿತ್ರಗಳು ನಿರ್ಮಾಪಕ ಹಿನ್ನೆಲೆ ಗಾಯಕ ಹೆಚ್ಚಿನ ಓದಿಗಾಗಿ ಡ್ವೆಯರ್, ರಾಚೆಲ್ಅಮಿತಾಭ್ ಬಚ್ಚನ್: ದಿ ಆಂಗ್ರಿ ಯಂಗ್ ಮ್ಯಾನ್ . ಬ್ರಿಟೀಷ್ ಅಕಾಡೆಮಿ ಆಫ್ ಫಿಲ್ಮ್ ಆಂಡ್ ಟೆಲಿವಿಷನ್ ಆರ್ಟ್ಸ್, ನವೆಂಬರ್16, 2007. ಮಝುಮ್ದಾರ್ ರಂಜಾನಿ. ಬಾಂಬೆ ಸಿನಿಮಾ: ಆನ್ ಆರ್ಕೈವ್ ಆಫ್ ಸಿಟಿ . ಮಿನೀಪೊಲೀಸ್: ಯುನಿವರ್ಸಿಟಿ ಆಫ್ ಮಿನೆಸೋಟಾ ಪ್ರೆಸ್, 2007. ಆಕರಗಳು ಹೊರಗಿನ ಕೊಂಡಿಗಳು ಬಿಗ್ ಬಾಸ್ 3ನಲ್ಲಿ ಅಮಿತಾಭ್ ಬಚ್ಚನ್ ಅಮಿತಾಭ್ ಬಚ್ಚನ್ರ ಅಧಿಕೃತ ಬ್ಲಾಗ್ ಲೀಜನ್ ಡಿಹಾನರ್ ಗೌರವ ಪಡೆದವರು ಚಿತ್ರರಂಗ ಬಾಲಿವುಡ್ ಸಿನಿಮಾ ತಾರೆಗಳು 1942 ಜನನಗಳು ಜೀವಿಸುತ್ತಿರುವ ಜನರು ಭಾರತೀಯ ಚಲನಚಿತ್ರ ನಟರು ಹಿಂದಿ ಚಲನಚಿತ್ರ ನಟರು ಭಾರತೀಯ ನಟರು ಭಾರತೀಯ ಚಲನಚಿತ್ರ ನಿರ್ಮಾಪಕರು ಭಾರತೀಯ ಟಿವಿ ನಿರೂಪಕರು ಕಿರೊರಿ ಮಾಲ್ ಕಾಲೇಜಿನ ಹಳೆವಿದ್ಯಾರ್ಥಿಗಳು ಲೋಕಸಭಾ ಸದಸ್ಯರು ಉತ್ತರ ಪ್ರದೇಶದ ಜನರು ಅಲಹಾಬಾದಿನ ಜನರು ಫಿಲ್ಮ್ಫೇರ್ ಪ್ರಶಸ್ತಿಗಳ ವಿಜೇತರು ಭಾರತೀಯ ಹಿಂದೂಗಳು ಭಾರತೀಯ ಗಾಯಕರು ಭಾರತೀಯ ಅಮೆಚೂರ್ ರೇಡಿಯೋ ನಿರ್ವಾಹಕರು ರಾಜಕಾರಣಿಗಳಾದ ಭಾರತೀಯ ನಟರು ಹೂ ವಾಂಟ್ಸ್ ಟು ಬಿ ಎ ಮಿಲಿಯನೇರ್? ಭಾರತೀಯ ಸಸ್ಯಾಹಾರಿಗಳು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರು ಚಲನಚಿತ್ರ ನಟರು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು
ಭಾರತದ ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಹೈದರಾಬಾದ್ ನ ನಿಜಾಮರ ಕಾಲದಲ್ಲಿ ಹೈದರಾಬಾದ್ ಪ್ರಾಂತ್ಯದಲ್ಲಿದ್ದ ಅಜಂತಾ ಈಗ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿದೆ. ಇಲ್ಲಿಯ ಬೌಧ್ಧ ಚೈತ್ಯಗಳಿಗೆ ಮತ್ತು ಇಲ್ಲಿನ ಗೋಡೆಗಳಲ್ಲಿನ ಭಿತ್ತಿಚಿತ್ರಗಳಿಗಾಗಿ ಇದು ಅತ್ಯಂತ ಪ್ರಸಿಧ್ಧಿಯಾಗಿದೆ. ಇದು ಮಲೆಸೀಮೆ, ಚಂದರ್, ಶತಮಾಲ, ವಿಂಧ್ಯಾದ್ರಿ, ಸಹ್ಯಾದ್ರಿ ಎಂದು ಕರೆಯಲ್ಪಡುವ ಪಶ್ಚಿಮಘಟ್ಟಗಳ ಬೆಟ್ಟಗಳು ಸುತ್ತಲೂ ಇವೆ. ಇವುಗಳ ಸರಾಸರಿ ಎತ್ತರ 4,000. ಇವು ಮನಮಾಡದಿಂದ ಬೀರಾರಿನವರೆಗೆ ವಿಸ್ತರಿಸಿವೆ. ಅಲ್ಲಲ್ಲಿ ವ್ಯಾಪಾರಿಗಳ, ಸೈನ್ಯದ ಓಡಾಟ ಸಾಗಣೆಗಳಿಗನುಕೂಲವಾದ ಕಣಿವೆ ದಾರಿಗಳಿವೆ. ದಕ್ಷಿಣ ಪ್ರಸ್ಥಭೂಮಿಯ ಉತ್ತರಗಡಿಯಾದ ಈ ಶ್ರೇಣಿ ಬೀರಾರಿನಲ್ಲಿ 2,000 ಎತ್ತರವಾಗಿದೆ. ಮಾರ್ಕಿಂಡ (4,384), ಸಪ್ತಶೃಂಗ (4,659), ಧೊಡಕ್ (4,741), ತುದ್ರೆ (4,526) ಇವು ಇಲ್ಲಿನ ಮುಖ್ಯ ಶಿಖರಗಳು. ಅಜಂತ ಕಣಿವೆ ಔರಂಗಾಬಾದ್ ಮತ್ತು ಎಲ್ಲೋರಗಳಿಂದ 95 ಮೈ. ದೂರದಲ್ಲಿದೆ. ಊರಿಗೆ 312 ಮೈ. ದೂರದಲ್ಲಿ ಜಗತ್ಪ್ರಸಿದ್ಧವಾದ ಅಜಂತ ಗುಹಾಂತರ್ದೇವಾಲಯಗಳು ವಾಫ್ ಕಣಿವೆಯ ಮನೋಹರವಾದ ನೈಸರ್ಗಿಕ ಸನ್ನಿವೇಶದಲ್ಲಿವೆ. ಕಲೆಯ ಪ್ರಭೇದಗಳಾದ ಶಿಲ್ಪ, ಕೆತ್ತನೆ ಹಾಗೂ ವರ್ಣಲೇಪನ ಇವುಗಳ ಕೇಂದ್ರವೆನಿಸಿರುವ ಅಜಂತ ಭಾರತೀಯ ಪರಮೋತ್ಕ್ರಷ್ಟ ಕಲಾನೈಪುಣ್ಯದ ಚಿರಂತನಸಾಕ್ಷಿಯಾಗಿದೆ. ಇಲ್ಲಿ ಬೆಟ್ಟವನ್ನು ಕೊರೆದು ಗುಹಾಲಯಗಳನ್ನು ನಿರ್ಮಿಸಿ ಚಿತ್ರಗಳನ್ನು ಬಿಡಿಸುವ ಕಾರ್ಯ ಕ್ರಿ.ಪೂ. 2ನೆಯ ಶತಮಾನದಲ್ಲಿ ಪ್ರಾರಂಭವಾಗಿ ಅವಿಚ್ಛಿನ್ನವಾಗಿ ಕ್ರಿ.ಶ. 7ನೆಯ ಶತಮಾನದವರೆಗೂ ಮುಂದುವರಿಯಿತು. ಶಾತವಾಹನ, ವಾಕಾಟಕ ಮತ್ತು ಬಾದಾಮಿ ಚಾಳುಕ್ಯ ಸಂತತಿಗಳ ಅರಸರು ಬೌದ್ಧಭಿಕ್ಷುಗಳಿಗಾಗಿ ಗುಹಾಂತರ್ದೇವಾಲಯಗಳನ್ನು ನಿರ್ಮಿಸಿದರು, ಶಿಲ್ಪಿಗಳು ಗುಹಾಲಯಗಳ ನಿರ್ಮಾಣ ಹಾಗೂ ಕಲಾವಿನ್ಯಾಸದಲ್ಲಿ ತಮ್ಮ ಚಾತುರ್ಯವನ್ನು ತೋರಿಸಿರುವರು. ಮತನಿಷ್ಠೆ ಹಾಗೂ ಪರಂಪರಾನುಗತವಾಗಿ ಬೆಳೆಸಿಕೊಂಡು ಬಂದ ಕಲಾಪರಿಪೂರ್ಣತೆಯನ್ನು ವರ್ಣಲೇಪನದಲ್ಲಿ ಬೌದ್ಧಭಿಕ್ಷುಗಳು ಅತ್ಯುನ್ನತವಾಗಿ ಪ್ರದರ್ಶಿಸಿರುವರು. ಕ್ರಿ.ಶ.7ನೆಯ ಶತಮಾನದಲ್ಲಿ ಅಜಂತಕ್ಕೆ ಭೇಟಿಯಿತ್ತಿದ್ದ ಹುಯೆನ್ತ್ಸಾಂಗನ ಬರೆವಣಿಗೆಗಳಿಂದ, ಇಲ್ಲಿ ಬಹು ಸಂಖ್ಯೆಯಲ್ಲಿ ಬೌದ್ಧಭಿಕ್ಷುಗಳು ವಾಸಿಸುತ್ತಿದ್ದರೆಂದೂ ಅವರು ಹತ್ತಿರದಲ್ಲಿದ್ದ ಇಂದ್ರಕಾಂತವೆಂಬ ಪಟ್ಟಣಕ್ಕೆ ಆಗಾಗ ಭಿಕ್ಷಾಟನೆಗಾಗಿ ಹೋಗುತ್ತಿದ್ದರೆಂದೂ ತಿಳಿದುಬರುತ್ತದೆ. ಇವನು ಅಜಂತ ಕಲಾಕೇಂದ್ರದ ಪ್ರಕೃತಿ ಸೌಂದರ್ಯವನ್ನೂ ಗುಹಾಂತರ್ದೇವಾಲಯಗಳ ಸೌಂದರ್ಯವನ್ನು ವಿಶೇಷವಾಗಿ ಪ್ರಶಂಸಿಸಿರುವನು. ಬೌದ್ಧಮತ ಕ್ಷೀಣಿಸಿದ ಮೇಲೆ ಈ ಸ್ಥಳ ನಿರ್ಲಕ್ಷಿಸಲ್ಪಟ್ಟು ಪೊದೆಗಳು ಬೆಳೆದು ಮೃಗಪಕ್ಷಿಗಳ ಆವಾಸಸ್ಥಾನವಾಗಿ ಮಾನವ ಸ್ಮತಿಗೋಚರದಿಂದ ಮರೆಯಾಯಿತು. ಇವು ಕ್ರಿ.ಶ. 19ನೆಯ ಶತಮಾನದ ಪೂರ್ವಾರ್ಧದಲ್ಲಿ ಆಂಗ್ಲ ವಿದ್ವಾಂಸರ ಗಮನಕ್ಕೆ ಬಂದು ಅವರಲ್ಲಿ ವಿಸ್ಮಯವನ್ನೂ ಕುತೂಹಲವನ್ನೂ ಕೆರಳಿಸಿ ನಮ್ಮ ನಾಡಿನ ಹಾಗೂ ಪ್ರಪಂಚದ ಕಲಾತಜ್ಞರ ಗಮನವನ್ನು ಅತ್ತ ಸೆಳೆದುವು. ಅಜಂತದಲ್ಲಿ ಒಟ್ಟು 30 ಗುಹಾಂತರ್ದೇವಾಲಯಗಳಿವೆ. ಅನೇಕ ಗುಹಾಲಯಗಳಲ್ಲಿ ಕಾಲ ಮತ್ತು ಪ್ರಕೃತಿಯ ಹೊಡೆತದಿಂದ ಚಿತ್ರಗಳು ನಾಶವಾಗಿದೆ. ಆದಾಗ್ಗ್ಯೂ ಅವುಗಳ ಭವ್ಯಕಲ್ಪನೆಯನ್ನು ಚಿತ್ರಿಸಿಕೊಳ್ಳಲು ಎಡೆಯಿದೆ. ಪಳೆಯುಳಿಕೆಗಳನ್ನು ಇತ್ತೀಚೆಗೆ ಉದ್ಧಾರಮಾಡಿ ಕಾಪಾಡಿಕೊಂಡು ಬರುವ ಏರ್ಪಾಡು ಮಾಡಲಾಗಿದೆ. ಹಾಳಾಗಿರುವ ಭಾಗಗಳ ಪಡಿಯಚ್ಚು ಮಾಡಿಕೊಳ್ಳಲಾಗಿದೆ. ಇವುಗಳಲ್ಲಿ 16ನೆಯ ಗುಹಾಲಯ ಕಲೆಯ ದೃಷ್ಟಿಯಿಂದ ಅತ್ಯಂತ ಮುಖ್ಯವಾದುದು. ಇದನ್ನು ಬೆಟ್ಟದೊಳಕ್ಕೆ 65 ಕೊರೆದು ನಿರ್ಮಿಸಲಾಗಿದೆ. 20 ಕಂಬಗಳನ್ನು ಅಂದವಾಗಿ ಕೊರೆದಿದ್ದಾರೆ. ಮುಖಮಂಟಪದಲ್ಲಿ 5 ಕಂಬಗಳಿವೆ. ರಂಗಮಂಟಪದಲ್ಲಿ ಪ್ರತಿಯೊಂದು ಕಡೆಯೂ 7 ಚಿಕ್ಕ ಚಿಕ್ಕ ಕೋಣೆಗಳಿವೆ. ಗರ್ಭಗೃಹದಲ್ಲಿ ಪ್ರಲಂಬಪಾದಾಸನನಾಗಿರುವ ಬುದ್ಧದೇವನ ಮೂರ್ತಿ ಇದೆ. 14ನೆಯ ಗುಹಾಲಯ ಸರಿಸುಮಾರಾಗಿ ಇದೇ ಮಾದರಿಯನ್ನು ಹೋಲುವುದು. ಇಲ್ಲಿ 75 ವಿಸ್ತಾರವಾದ ಹಜಾರವಿದೆ. 20 ಸುಂದರವಾದ ಕಂಬಗಳನ್ನು ಕೊರೆದು ಬಿಡಿಸಲಾಗಿದೆ. ಈ ಗುಹಾಲಯವನ್ನು ಅತ್ಯಂತ ಸುಂದರವಾದ ಮಂದಿ ರವನ್ನಾಗಿಸಬೇಕೆಂಬ ಇಚ್ಛೆಯಿಂದ ಕೊರೆದಂತಿದೆ. ಆದರೆ ಕೊರೆಯುವ ಕೆಲಸ ಪೂರ್ಣವಾಗಿಲ್ಲ. ಜೊತೆಗೆ ಗುಹಾಲಯ ಬಹುವಾಗಿ ಶಿಥಿಲವಾಗಿದೆ. 1, 2 4 ಮತ್ತು 24 ನೆಯ ಗುಹಾಲಯಗಳು ಕಲಾದೃಷ್ಟಿಯಿಂದ ಉನ್ನತವಾದ ಕಟ್ಟಡ ವಿನ್ಯಾಸವನ್ನು ಪ್ರದರ್ಶಿಸುತ್ತವೆ. 1 ಮತ್ತು 2ನೆಯ ಗುಹಾಲಯಗಳು ಮನೋಜ್ಞವಾದ ಶಿಲ್ಪ ಹಾಗೂ ಕೆತ್ತನೆಯ ಕೆಲಸಗಳಿಗೆ ಉದಾಹರಣೆಯಾಗಿವೆ. ಕಂಬಗಳು ಅಂದವಾದ ಕೆತ್ತನೆಯ ಕೆಲಸ ಹಾಗೂ ಸುಂದರವಾಗಿ ಕಡೆದ ಬೋದಿಗೆಗಳನ್ನು ಹೊಂದಿವೆ. 19 ಮತ್ತು 26ನೆಯ ಗುಹಾಲಯಗಳಲ್ಲಿಯೂ ಉತ್ತಮ ಕೆತ್ತನೆಯ ಕೆಲಸಗಳನ್ನು ನೋಡಬಹುದು. ಈ ಕೆಲಸಗಳು ಮುಂಬರಲಿದ್ದ ದಕ್ಷಿಣ ಭಾರತದ ಶಿಲ್ಪ ಕಲಾಸಂಪನ್ನತೆಯ ಮುಂಬೆಳಗಿನ ಪ್ರಜ್ಞೆಯಂತಿದೆ ಎಂಬುದಾಗಿ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಅಜಂತದ ಚಿತ್ರಗಳ ಮುಖ್ಯಗುರಿ ಮತಬೋಧನೆ. ಬೌದ್ಧ ಭಿಕ್ಷುಗಳು, ಕೆಂಪು, ಹಸಿರು, ಹಳದಿ, ಊದ, ಧೂಮ್ರ ಮತ್ತು ನೀಲವರ್ಣಗಳಿಂದ ಬಿಡಿಸಿರುವ ಭಿತ್ತಿಚಿತ್ರಗಳು ವರ್ಣನಾತೀತವಾದ ಸೌಂದರ್ಯವನ್ನೂ ಕೌಶಲವನ್ನೂ ಪ್ರದರ್ಶಿಸುತ್ತವೆ. ಚಿತ್ರಕಾರರು ಸಾಂಪ್ರದಾಯಿಕ ನೀತಿಯನ್ನನುಸರಿಸದಾಗ್ಗ್ಯೂ ತಮ್ಮ ಪ್ರತಿಭೆ ಮತ್ತು ಸ್ವಾತಂತ್ರ್ಯವನ್ನು ತೋರ್ಪಡಿಸಿದ್ದಾರೆ. ಬೋಧಿಸತ್ವ ಬುದ್ಧದೇವನ ಜೀವನದ ಪ್ರಮುಖ ಘಟನೆಗಳು ಸಜೀವವಾಗಿ ಪಡಿಮೂಡಿವೆ. ಹೂಬಳ್ಳಿಗಳ, ಗೂಳಿ, ಕಪಿ, ನವಿಲು ಮುಂತಾದ ಪ್ರಾಣಿ ಪಕ್ಷಿಗಳ ಚಿತ್ರಗಳು ನೈಜ ಜೀವಿಗಳಂತಿವೆ. ಸ್ತ್ರೀ ಚಿತ್ರಗಳು ಭಾರತೀಯ ಸ್ತ್ರೀಯರ ಸಹಜವಾದ ಶರೀರಭಂಗಿ, ಪ್ರಮಾಣ, ಅಲಂಕಾರ, ಮಾರ್ದವ, ಲಾವಣ್ಯಗಳನ್ನು ನಿದರ್ಶಿಸುತ್ತವೆ. ದೇವಾನುದೇವತೆಗಳ, ಅಪ್ಸರೆಯರ, ಕಿನ್ನರರ, ಪ್ರಭು, ಪ್ರಭೃತಿಗಳ, ಗಣ್ಯರ, ವೀರರ, ಹಳ್ಳಿ, ನಗರಗಳ, ಸಂತರ ಮತ್ತು ಮಹರ್ಷಿಗಳ ಚಿತ್ರಗಳು ಸಹಜವಾಗಿ, ಸುಂದರವಾಗಿ, ಮನೋಜ್ಞವಾಗಿ ಒಡಮೂಡಿವೆ. ಒಂದು ಮತ್ತು ಎರಡನೆಯ ಗುಹಾಲಯಗಳಲ್ಲಿ ಪುಲಿಕೇಶಿಯ ಆಸ್ಥಾನವನ್ನೂ ಪರ್ಷಿಯಾ ರಾಯಭಾರಿಗಳ ಆಗಮನವನ್ನೂ ಜೀವಂತವಾಗಿ ಚಿತ್ರಿಸಿದ್ದಾರೆ. ಈ ಗುಹೆಗಳಲ್ಲಿರುವ ಜಿಂಕೆಗಳ ಹಾಗೂ ಶಿವಪಾರ್ವತಿಯರ ಭಿತ್ತಿಚಿತ್ರಗಳು ಅತ್ಯಂತ ಸುಂದರವಾಗಿವೆ. 17ನೆಯ ಗುಹೆಯಲ್ಲಿ ಬೌದ್ಧಮತದ ನಿಯಮನಿಷ್ಠೆಯಲ್ಲಿದ್ದ ನಿರಂತರ ಶ್ರದ್ಧೆ ಹಾಗೂ ಪರಂಪರಾನುಗುತವಾಗಿ ಬೆಳೆಸಿಕೊಂಡು ಬಂದ ಚಿತ್ರಕಲಾಭ್ಯಾಸ ಇವುಗಳ ಅನುಭವದ ಆನಂದ ಪರವಶತೆಯನ್ನೂ ಕೌಶಲವನ್ನೂ ಅನಾಮಧೇಯ ಬೌದ್ಧಭಿಕ್ಷುಗಳು ಪರಮೋತ್ಕಷ್ಟವಾಗಿ ಅಜಂತ ಗುಹಾಂತರ್ದೇವಾಲಯಗಳಲ್ಲಿ ಪ್ರದರ್ಶಿಸಿದ್ದಾರೆ. ಸೌಮ್ಯತೆ, ಅಸದೃಶವಾದ ಕುಂಚಕೌಶಲ, ಎಣೆಯಿಲ್ಲದ ವರ್ಣವಿನ್ಯಾಸದ ವೈಖರಿ, ಅಸಾಧಾರಣ ಪ್ರೌಢಿಮೆಇವುಗಳಿಗೆ ಅಜಂತ ಭಿತ್ತಿಚಿತ್ರಗಳು ಅದ್ವಿತೀಯ ನಿದರ್ಶನಗಳಾಗಿವೆಯೆಂದು ಕಲಾವಿಮರ್ಶಕರು ಪ್ರಶಂಸಿಸಿದ್ದಾರೆ. ಅಜಂತದ ವಾಸ್ತುಶಿಲ್ಪ ಅಜಂತದ ಗುಹಾಂತರ್ದೇವಾಲಯಗಳು ಜಗತ್ಪ್ರಸಿದ್ಧವಾಗಿವೆ. ಇದಕ್ಕೆ ಕಾರಣ ಅಲ್ಲಿನ ನೈಸರ್ಗಿಕ ಸೌಂದರ್ಯ, ಶಿಲ್ಪಕಲೆ, ಚಿತ್ರಕಲೆ, ಎದುರಿಗೆ ಸಮೀಪದಲ್ಲಿಯೇ ಜುಳು ಜುಳು ಎಂದು ಮಂಜುಳ ಧ್ವನಿಗೈಯುತ್ತ ಹರಿಯುವ ವಾಘೋರಾ ನದಿ ಚಿಕ್ಕ ಏಳು ಜಲಪಾತಗಳಿಂದ ಕೂಡಿಕೊಂಡು ರಮ್ಯವಾಗಿದೆ. ನದಿಯ ಕೊಳ್ಳ ಗಂಭೀರ ಶಾಂತತೆಯಿಂದ ಮೆರೆಯುತ್ತಿದೆ. ಸುಮಾರು 200 ಬೌದ್ಧ ಭಿಕ್ಷುಗಳು ಇಲ್ಲಿನ ಗುಹೆಗಳಲ್ಲಿ ವಾಸಮಾಡಿಕೊಂಡಿದ್ದಿರಬೇಕು. ಅವರು ಸುತ್ತಮುತ್ತಲಿನ ನಿಸರ್ಗ ರಮಣೀಯತೆಯಲ್ಲಿ ತಮ್ಮ ಆಧ್ಯಾತ್ಮ ಸಾಧನೆಯನ್ನು ಮಾಡುತ್ತಿದ್ದರು. ಅವರ ದರ್ಶನ ಪಡೆದು ಅವರಿಗೆ ಅನ್ನ, ಬಟ್ಟೆಗಳನ್ನೊದಗಿಸಿ ಅವರಿಂದ ಆಶೀರ್ವಾದ ಪಡೆಯಲು ಜನರು ಇಲ್ಲಿಗೆ ಮೇಲಿಂದ ಮೇಲೆ ಬರುತ್ತಿದ್ದರು. ಸುಮಾರು 34 ಮೈ. ಉದ್ದವಾದ ಕುದುರೆಲಾಳದ ಆಕಾರದ ಬೆಟ್ಟದ ನಿಡಿದಾದ ಓರೆಯಲ್ಲಿ ಈ ಗುಹಾಂತರ್ದೇವಾಲಯಗಳನ್ನು ಕೊರೆದಿದ್ದಾರೆ. ಇವು ಹೆಚ್ಚಾಗಿ ಬೌದ್ಧಮತಕ್ಕೆ ಸಂಬಂಧಿಸಿದುವು. ಸ್ಥೂಲವಾಗಿ ಹೀನಯಾನ ಮತ್ತು ಮಹಾಯಾನ ಎಂಬ ಎರಡು ಬೌದ್ಧಪಂಥಗಳಿಗೆ ಸಂಬಂಧಪಟ್ಟುವೆಂದು ಅವುಗಳಲ್ಲಿ ಕೆತ್ತಿದ ಬೌದ್ಧ ಮೂರ್ತಿಗಳು. ಬಣ್ಣದ ಚಿತ್ರಗಳು ಮತ್ತು ಕಂಬಗಳ ರಚನೆಯಿಂದ ವಿಂಗಡಿಸಬಹುದು. ಇವುಗಳ ರಚನೆ ಕ್ರಿ.ಪೂ. 2ನೆಯ ಶತಮಾನದಿಂದ ಆರಂಭವಾಗಿ ಕ್ರಿ.ಶ. 7ನೆಯ ಶತಮಾನದವರೆಗೂ ನಡೆಯಿತು. ಅಜಂತದ ವಾಸ್ತುಶಿಲ್ಪ, ಮೂರ್ತಿಶಿಲ್ಪಗಳಲ್ಲಿನ ಕಲೆ ಸಾಕಷ್ಟು ಉತ್ತಮಮಟ್ಟದ್ದಾಗಿದ್ದು ವೈವಿಧ್ಯಮಯವಾಗಿದೆ. ಕಂಬಗಳ ಮಾಟ, ಅಲಂಕಾರ ಪದ್ಧತಿ, ಮೂರ್ತಿಗಳ ಮೈಕಟ್ಟು, ಪ್ರಮಾಣ, ಅಲಂಕಾರ ಕಲೆ ಮನ ಮೆಚ್ಚುವಂತಿವೆ. ನಿರ್ಮಾತೃಗಳಾದ ಸ್ಥಪತಿಗಳು ಒಳ್ಳೆ ದಕ್ಷತೆಯಿಂದ ಕೆಲಸ ಮಾಡಿ ಮೂರ್ತಿಗಳಲ್ಲಿ, ವರ್ಣಚಿತ್ರಗಳಲ್ಲಿ ಜೀವಕಳೆ ತುಂಬಿದ್ದಾರೆ. ಅಜಂತದ ಚೈತ್ಯಗಳಿಗೆ ಕಂಬಗಳುಳ್ಳ ಮುಖಮಂಟಪ, ಹಿಂಬದಿಯಲ್ಲಿ ಅರ್ಧವರ್ತುಲಾಕಾರದ ನಡು ಅಂಕಣ, ಅದರ ಪಕ್ಕಗಳಲಲಿ ಕಂಬಗಳ ಸಾಲಿನಿಂದ ಬೇರ್ಪಡಿಸಿದ ಬದಿಯ ಅಂಕಣಗಳು, ಸ್ತೂಪ, ಗುಮ್ಮಟ, ಚಾವಣಿಯ ಕೋಣೆ ಇತ್ಯಾದಿ ಇರುತ್ತವೆ. ಹೀನಯಾನ ಪಂಥದ ವಿಹಾರಗಳಲ್ಲಿ ಬಾಗಿಲು ದಾಟಿದ ಕೂಡಲೆ ಒಂದು ವಿಶಾಲವಾದ ನಡುಸಾಲೆ ಕಾಣುತ್ತದೆ. ಅದರ ಮೂರು ಗೋಡೆಗಳಲ್ಲಿ ಕಲ್ಲಿನ ಹಾಸಿಗೆಯುಳ್ಳ ಸಣ್ಣ ಕೋಣೆಗಳಿವೆ. ಇವುಗಳ ಕಾಲ ಸುಮಾರು ಕ್ರಿ.ಶ. 3ನೆಯ ಶತಮಾನದವರೆಗೆ. ಮಹಾಯಾನ ತಲೆದೋರಿದಂದಿನಿಂದ ವಿಹಾರಗಳ ರಚನೆಯಲ್ಲಿ ಮಾರ್ಪಾಡಾಯಿತು. ಮಧ್ಯದ ಮಂಟಪದ ಸುತ್ತ ನಾಲ್ಕು ಕಡೆಗೂ ಹೋಗಲು ಬರುವಂತೆ ಮೊಗಸಾಲೆಗಳಾದುವು. ಎದುರಿನ ಗೋಡೆಯ ಮಧ್ಯದಲ್ಲಿ ಗರ್ಭಗುಡಿ ಬಂದಿತು. ಅದರಲ್ಲಿ ಬುದ್ಧನ ಮೂರ್ತಿಯನ್ನು ಕಡೆದು ಪೂಜಿಸಹತ್ತಿದ್ದರು. ಮಹಾಯಾನದಲ್ಲಿ ಚಿತ್ರ ಮತ್ತು ಮೂರ್ತಿಗಳಿಗೆ ಅವಕಾಶ ದೊರೆತದ್ದರಿಂದ ಬದಿಯ ಅಂಕಣಗಳಲ್ಲಿ ಮಾಡಗಳನ್ನು ಕೊರೆಯುವ ಮತ್ತು ಹೆಚ್ಚು ಹರವಾದ ಒಳಗೋಡೆಗಳನ್ನು ನಿರ್ಮಿಸುವ ಅವಶ್ಯಕತೆ ಉಂಟಾಯಿತು. ಇದಕ್ಕೆ ಕಂಬಗಳು ನೆರವಾದುವು. 11, 7 ಮತ್ತು 6ನೆಯ ವಿಹಾರಗಳು ಮಧ್ಯಂತರದ ಅವಸ್ಥೆಯನ್ನು ಸೂಚಿಸುತ್ತವೆ. ಅವುಗಳ ರಚನೆ ಹೀನಯಾನ ವಿಹಾರಗಳ ರಚನೆಯಿಂದ ಬೇರೆಯಾಗಿದ್ದರೂ ಮಂಟಪದಲ್ಲಿಯ ಕಂಬಗಳ ರಚನೆಯಲ್ಲಿ ಕಟ್ಟಡಗಳಲ್ಲಿ ಹಿಂದೆ ಬಳಸಲಾದ ನಮೂನೆಯಿದೆ. ಈ ಮೂರು ವಿಹಾರಗಳಲ್ಲಿ 11ನೆಯದು ಎಲ್ಲಕ್ಕೂ ಮೊದಲು ಹುಟ್ಟಿದೆ. ಇದರಲ್ಲಿಯ ನಾಲ್ಕು ಕಂಬಗಳು ಪ್ರಾಕಾರದ ಮಧ್ಯದಲ್ಲಿ ತಯಾರಿಸಿದ ಒಂದು ಚಪ್ಪರವನ್ನು ನಿರ್ದೇಶಿಸುತ್ತವೆ. 7ನೆಯದರಲ್ಲಿ ಇಂಥ ಎರಡು ಚಪ್ಪರಗಳನ್ನು ಕಾಣುತ್ತೇವೆ. ಮುಂದೆ ಅನೇಕ ಕಂಬಗಳು ಕೂಡಿಕೊಂಡು ದೊಡ್ಡ ಮಂಟಪದ ರಚನೆಗೆ ಕಾರಣವಾದುವು. 1, 4, 16, 17, 21, ಮತ್ತು 23ನೆಯ ಗುಹಾಂತರ್ದೇವಾಲಯಗಳಲ್ಲಿ ಶಿಲ್ಪಕಲಾ ಕುಶಲತೆಯ ಉತ್ತಮ ವೈವಿಧ್ಯ ಕಾಣಬರುತ್ತದೆ. ಕ್ರಿ.ಶ. 6ನೆಯ ಶತಮಾನದಲ್ಲಿ ನಿರ್ಮಾಣವಾದ 16ನೆಯ ಇವುಗಳಲ್ಲಿ ಅತ್ಯುತ್ತಮವಾದುದು. ಇದು ಮತ್ತು 1ನೆಯ ಗುಹಾಂತರ್ದೇವಾಲಯಗಳು ಸಾಮಾನ್ಯವಾಗಿ ಒಂದೇ ರೀತಿಯವು. ಇವೆರಡಕ್ಕೂ 65 ಉದ್ದವಾದ ಮೊಗಸಾಲೆ, 65 ಉದ್ದವಾದ ಮೊಗಸಾಲೆ, 65 ಚೌಕಟ್ಟಿನ 20 ಕಂಬಗಳ ಸಾಲಿನಿಂದೊಡಗೂಡಿದ ನಡುಸಾಲೆಗಳಿರುವುವು. 16ನೆಯದರ ನಡುಸಾಲೆ, ಮೊಗಸಾಲೆಗಳ ಗೋಡೆಗಳಲ್ಲಿ 16 ಚಚ್ಚೌಕದ ಸಣ್ಣ ಕೋಣೆಗಳಿವೆ. ಮತ್ತು ಹಿಂಬದಿಯ ಗೋಡೆಯಲ್ಲಿ ಒಂದು ಅಗಲವಾದ ಗರ್ಭಗುಡಿಯನ್ನು ನಿರ್ಮಿಸಿದ್ದಾರೆ. ಅದರಲ್ಲಿ ಬುದ್ಧನ ದೊಡ್ಡ ವಿಗ್ರಹ ವಿರಾಜಮಾನವಾಗಿದೆ. ಈ ಗುಹೆಯಲ್ಲಿ ವಾಕಾಟಕ ಹರಿಷೇಣನ ಶಿಲಾಶಾಸನವಿದೆ. 2ನೆಯ ಗುಹಾಂತರ್ದೇವಾಲಯದಲ್ಲಿ ಬ್ರಾಹ್ಮೀಲಿಪಿ ಮತ್ತು ಸಂಸ್ಕತ ಭಾಷೆಯಲ್ಲಿರುವ ಕ್ಷಾಂತಿವಾದಿ (ತಾಳ್ಮೆಯ ಬೋದಕ), ಸುರಸುತಿ (ಸರಸ್ವತಿ) ಮೈತ್ರೀ, ಬಲಜಾತಕ ಕ್ಷಾಂತಿಜಾತಕದ ಒಂದೆರಡು ಶ್ಲೋಕಗಳನ್ನು ಬಣ್ಣದಲ್ಲಿ ಬರೆಯಲಾಗಿದೆ. 19ನೆಯದು ಉತ್ತಮರೀತಿಯಲ್ಲಿ ರಚಿತವಾದ ಚೈತ್ಯಾಲಯ. ಇದೇನೂ ಅಷ್ಟು ದೊಡ್ಡದಲ್ಲ. ಹೊರಗೆ 38 ಉದ್ದ 32 ಅಗಲವಾಗಿದೆ. ಒಳಭಾಗದ ಉದ್ದ 46, ಅಗಲ 24. ಹಿಂದೆ ಒಂದು ಹೊರಪ್ರಾಕಾರವೂ ಎರಡೂ ಬದಿಗಳಲ್ಲಿ ಕಿರುದೇವಾಲಯಗಳೂ ಇದ್ದಿರಬೇಕು. ಮುಂದಿನ ಗೋಡೆಗೆ ಮೂರು ಪ್ರವೇಶದ್ವಾರಗಳ ಬದಲಾಗಿ ಒಂದೇ ಇದೆ. ಮುಂದುಗಡೆ ಹೊರಮಂಟಪ ಇದ್ದು ಚೈತ್ಯಾಲಯಕ್ಕೆ ಕಲೆ ತಂದುಕೊಟ್ಟಿದೆ. 26ನೆಯದೂ ಒಂದು ಚೈತ್ಯಾಲಯ. 68 ಉದ್ದ, 36 ಅಗಲ ಮತ್ತು 31 ಎತ್ತರವಿದೆ. ಪ್ರವೇಶದ್ವಾರದಲ್ಲಿಯ ಎರಡು ಕಂಬಗಳಲ್ಲದೆ ಇದಕ್ಕೆ 12 ಎತ್ತರವಾದ 26 ಕಂಬಗಳಿವೆ. ಅಲಂಕಾರ ಹೆಚ್ಚು. ಸ್ತೂಪದ ಮೇಲೆ ಹಲವು ಕೆತ್ತನೆಗಳಿವೆ. ಆದರೆ, ಮೊದಲಿನ ಚೈತ್ಯಗಳಲ್ಲಿದ್ದ ನಯ ಮತ್ತು ಲಯ ಇಲ್ಲಿ ತಪ್ಪಿದೆ. ಚೈತ್ಯ ಕಿಂಡಿಯ ಹತ್ತಿರ ಸುಂದರವಾದ ಅನೇಕ ಆಕೃತಿಗಳನ್ನು ಕೆತ್ತಿದ್ದಾರೆ. ಇಲ್ಲಿಯ ಮೂರ್ತಿಗಳು ವಿಶೇಷ ಪ್ರಮಾಣದಲ್ಲಿದ್ದರೂ ವೈವಿಧ್ಯವಿಲ್ಲದ್ದರಿಂದ ಮನಸ್ಸನ್ನು ಸೆಳೆಯುವುದಿಲ್ಲ. 1ನೆಯ ಗುಹಾಂತರ್ದೇವಾಲಯದಲ್ಲಿಯ ಶಿಲಾಮೂರ್ತಿಗಳು ಬಹು ಸುಂದರವಾಗಿವೆ. ಮುಂಭಾಗದಲ್ಲಿ ಉತ್ತಮ ರೀತಿಯ ಕೆತ್ತನೆ ಕೆಲಸ ಮಾಡಿದ್ದಾರೆ. 26ನೆಯ ಗುಹಾಂತರ್ದೇವಾಲಯದಲ್ಲಿ ಬುದ್ಧ ನಿರ್ಯಾಣದ ಬೃಹತ್ ಚಿತ್ರವನ್ನು ಕೆತ್ತಿದ್ದಾರೆ. ಆನಂದನೇ ಮೊದಲಾದ ಅವನ ಅನುಯಾಯಿಗಳು ದೇಹದ ಹತ್ತಿರ ಕುಳಿತು ಶೋಕಿಸುತ್ತಿದ್ದಾರೆ. ಚಿತ್ರಸಂಯೋಜನೆ ಸುಂದರವಾಗಿದೆ. 1ನೆಯ ಗುಹಾಂತರ್ದೇವಾಲಯದ ಒಂದು ಕಂಬದ ಬೋಧಿಗೆಯ ಮೇಲೆ ನಾಲ್ಕು ದೇಹ, ಒಂದೇ ಮುಖವುಳ್ಳ ನಾಲ್ಕು ಚಿಗರೆಗಳನ್ನು ಬಹು ಸುಂದರವಾಗಿ, ಜೀವಂತವೋ ಎನ್ನುವಂತೆ ಕೆತ್ತಿದ್ದಾರೆ. ಚೌಕಟ್ಟಿನ ಮೆಲಿರುವ ಕೆತ್ತನೆ ಮನಮೋಹಕವಾಗಿದೆ. ಅಜಂತದ ಒಂದು ವಿಹಾರದಲ್ಲಿ ಗರ್ಭಗುಡಿಯಲ್ಲಿಯ ಬುದ್ಧನ ಮೂರ್ತಿ, ಎದುರಿನಿಂದ ನೋಡಿದರೆ ಗಂಭೀರ ಮೌನದಲ್ಲಿದ್ದಂತೆ ತೋರುತ್ತದೆ. ಅದನ್ನೇ 45 ಕೋನದಲ್ಲಿ ನಿಂತು ನೋಡಿದರೆ ನಗುವಂತೆ ತೋರುತ್ತದೆ. ಅಜಂತದ ಭಿತ್ತಿ ಚಿತ್ರಗಳು ಅಜಂತದ ಗುಹೆಗಳ ಉತ್ಕೃಷ್ಟವಾದ ಶಿಲ್ಪ, ಚಿತ್ರ ರಚನೆಗಳು ಗುಪ್ತರ ಕಾಲದ ಕಲಾ ಔನ್ನತ್ಯವನ್ನೂ ಗಾಂಧರ, ಪಾರಸಿಕ, ಚೀನಾ ಸಂಪರ್ಕದ ಸಂಕೀರ್ಣತೆಯನ್ನೂ ಸೂಚಿಸುತ್ತವೆ. ಆದರೆ ಹೈಂದವ ಕಲಾ ಸಂಸ್ಕತಿ ಬೌದ್ಧರ ಯುಗಕ್ಕಿಂತ ಅತಿ ಪ್ರಾಚೀನವಾದದ್ದು. ಈ ಸಂಸ್ಕತಿಯಿಂದ ಸಂಗ್ರಹಿಸಲಾದ ಚಿತ್ರ ಲಕ್ಷಣಗಳನ್ನು ವಾತ್ಸಾಯನ ತನ್ನ ಕಾಮಸೂತ್ರಗಳಲ್ಲಿ ಹೀಗೆ ವರ್ಣಿಸಿರುತ್ತಾನೆ: ರೂಪಭೇದ ಪ್ರಮಾಣಾನಿ ಭಾವಲಾವನ್ಯ ಯೋಜನಂ ಸಾದೃಶ್ಯಂ ವರ್ಣಿಕಾ ಬಂಗಮಿತಿ ಚಿತ್ರಂ ಷಡಂಗಕಂ. ಅಜಂತದ ಚಿತ್ರಕಾರರು ಈ ಷಡಂಗಗಳನ್ನು ನಿಷ್ಠೆಯಿಂದ ತಮ್ಮ ಕೃತಿಗಳಲ್ಲಿ ಅನುಸರಿಸಿದ್ದಾರೆ. ಸರ್ವಾನುಮತವಾಗಿ ಅಜಂತದ 30 ಗುಹೆಗಳನ್ನು ಕಾಲಾನುಕ್ರಮವಾಗಿ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ 1ನೆಯ ಗುಂಪು 8 ರಿಂದ 13 ಗುಹೆಗಳು (ಕ್ರಿ.ಪೂ. 3ನೆಯ ಶತಮಾನದಿಂದ ಕ್ರಿ.ಪೂ. 1ನೆಯ ಶತಮಾನದವರೆಗೆ ಶಾತವಾಹನರ ಪೋಷಣೆ). 2ನೆಯ ಗುಂಪು 14 ರಿಂದ 19 ಗುಹೆಗಳು. (ಕ್ರಿ.ಪೂ. ಮೊದಲನೆಯ ಶತಮಾನದಿಂದ ಕ್ರಿ.ಶ. 6ನೆಯ ಶತಮಾನದವರೆಗೆ ವಾಕಾಟಕ ರಾಜರ ಪೋಷಣೆ.) 3ನೆಯ ಗುಂಪು 1 ರಿಂದ 6 ಗುಹೆಗಳು. (ಕ್ರಿ.ಶ. 3ನೆಯ ಶತಮಾನದಿಂದ ಕ್ರಿ.ಶ. 6ನೆಯ ಶತಮಾನದವರೆಗೆ). 4ನೆಯ ಗುಂಪು 20 30ರವರೆಗೆ (ಕ್ರಿ.ಶ. ನಾಲ್ಕನೆಯ ಶತಮಾನದಿಂದ ಕ್ರಿ.ಶ. 7ನೆಯ ಶತಮಾನದವರೆಗೆ). 7ನೆಯ ಗುಹೆಯ ನಿರ್ಮಾಣದ ಕಾಲ ನಿರ್ಣಯವಾಗಿಲ್ಲ. ಸಿಸ್ಟರ್ ನಿವೇದಿತಾ ಕ್ರಿ.ಶ. 3ನೆಯ ಶತಮಾನವೆಂದೂ ಮುಕುಳ್ ಡೇ ಕ್ರಿ.ಶ. ಮೊದಲನೆಯ ಶತಮಾನವೆಂದೂ ನಿರ್ಣಯಿಸುತ್ತಾರೆ. ಆದರೆ 9, 10ನೆಯ ಗುಹೆಗಳು ಅತಿ ಪ್ರಾಚೀನವಾದುವೆನ್ನುವುದರಲ್ಲಿ ಭಿನ್ನಾಭಿಪ್ರಾಯವೇನೂ ಇಲ್ಲ (ಕ್ರಿ.ಪೂ. 350 ಕ್ರಿ.ಪೂ. 200). ನೀಹಾರ್ ರಂಜನ್ರಾಯ್ ಅವರ ಅಭಿಪ್ರಾಯದಂತೆ ಇವು ಕ್ರಿ.ಶ. ಮೊದಲನೆಯ ಶತಮಾನದ ಮಧ್ಯಕಾಲಕ್ಕೆ ಸೇರುತ್ತವೆ. 2, 3, 4, 5, 23, 24, 27ನೆಯ ಗುಹೆಗಳು ಮತ್ತು 21ನೆಯ ಗುಹೆಯ ಮುಂಭಾಗ ಅಸಂಪೂರ್ಣವಾದವು. ಮಿಕ್ಕವೆಲ್ಲವು ಸಂಪೂರ್ಣವಾದವು. 7, 8, 11ನೆಯ ಗುಹೆಗಳು ಪ್ರಾಕೃತಿಕ ಗವಿಗಳಾಗಿದ್ದು ಕೆಲವು ಮಾರ್ಪಾಡುಗಳಿಂದ ದೇವಾಲಯಗಳಾಗಿವೆ. ಈ 30 ಗುಹೆಗಳ ಪೈಕಿ 2, 9, 10, 15, 16, 19, 26, 29. ಪೂಜಾರ್ಹವಾದ ಚೈತ್ಯಗಳು. ಮಿಕ್ಕವು ಭಿಕ್ಕುಗಳ ವಾಸಕ್ಕೆ ಕೊರೆದ ವಿಹಾರ, ಅಥವಾ ಸಂಗ್ರಾಮಗಳು. ಆದರೆ, 15, 25ರ ಗುಹೆಗಳು ಎರಡೂ ಉದ್ದೇಶಗಳಿಗೆ ಅನುಕೂಲವಾದವು. 8ನೆಯ ಗುಹೆ ಬೆಟ್ಟದ ಬುಡದಲ್ಲಿಯೂ 29ನೆಯದು ಬೆಟ್ಟದ ಶಿಖರದಲ್ಲೂ ನಿರ್ಮಿತವಾಗಿವೆ. 8, 9, 10, 12, 13ನೆಯ ಗುಹೆಗಳು ಬೌದ್ಧರ ಹೀನಯಾನ ಪಂಗಡಕ್ಕೂ ಮಿಕ್ಕವು ಮಹಾಯಾನ ಪಂಗಡಕ್ಕೂ ಸೇರಿವೆ. ಹೀನಯಾನ ಗುಹೆಗಳಲ್ಲಿ ಶಿಲ್ಪಚಿತ್ರಗಳು ಕಡಿಮೆ ಮಹಾಯಾನದವುಗಳಲ್ಲಿ ಹೆಚ್ಚು. ಏಕೆಂದರೆ ಹೀನಯಾನ ಮತದಲ್ಲಿ ಬುದ್ಧನ ಸಂಕೇತಗಳಾದ ಪಾದಗಳು, ಧರ್ಮಚಕ್ರ, ದಂತಗಳು, ಸಂಪುಟಗಳಲ್ಲಿಟ್ಟು ಜೋಪಾನ ಮಾಡಿದ ಬೂದಿ ಇವಕ್ಕೆ ಮಾತ್ರ ಸಲ್ಲತಕ್ಕದ್ದು. ದೈಹಿಕರೂಪವನ್ನು ಶಿಲ್ಪ ಚಿತ್ರಾದಿಗಳಲ್ಲಿ ಕೂಡ ನಿಷೇಧಿಸಲಾಗಿತ್ತು. (ದಶಧಮ್ಮಿಕಸುತ್ತ ವಿಶುದ್ಧಿಮಗ್ಗ) ಹೀನ ಯಾನ ಯುಗದಲ್ಲಿ ಬುದ್ಧನ ಜನನ, ತ್ಯಾಗ, ಜ್ಞಾನಸಂಪಾದನೆ, ಮಹಾಪರಿ ನಿರ್ವಾಣ ಇವು ಮಾತ್ರ ಶಿಲ್ಪದಲ್ಲಿ ಪ್ರದರ್ಶಿತವಾದವು. ಏಕೆಂದರೆ ಧರ್ಮಸೂತ್ರದ ಪ್ರಕಾರ ದೀಕ್ಷೆ ಪಡೆದವರು ಬಣ್ಣಗಳಿಂದ ಚಿತ್ರಿತವಾದುವನ್ನು, ಒಡವೆ ನವರತ್ನಗಳು ಮುಂತಾದ ಅಲಂಕಾರ ವಸ್ತುಗಳನ್ನು ನೋಡಲು ಕೂಡ ಪ್ರಯತ್ನಿಸಬಾರದು. ಪಂಚೇಂದ್ರಿಯಗಳಿಗೆ ಹಿತವಾದ ಸಂಗೀತ, ಸಾಹಿತ್ಯ, ಮೃಷ್ಟಾನ್ನ ಮುಂತಾದುವೆಲ್ಲವೂ ಅವರಿಗೆ ನಿಷಿದ್ಧ. ಮಹಾಯಾನ ಸಮಾರಂಭದಲ್ಲಿ (ನಾಗಾರ್ಜುನ ಕ್ರಿ.ಶ. 200) ಬುದ್ಧನ ದೈಹಿಕ ನಿರೂಪಣೆ ಮತ್ತು ಅವನ ಪೂರ್ವಜನದ ಕಥನ ರೂಢಿಗೆ ಬಂತು. ಅಜಂತದ ಗುಹೆಗಳಲ್ಲಿ ಕೆಲವು (1, 2) ಚಿತ್ರರಚನೆಯಲ್ಲೂ ಕೆಲವು (19, 26) ವಾಸ್ತುಶಿಲ್ಪದಲ್ಲೂ ಮತ್ತೆ ಕೆಲವು (16, 17) ವಾಸ್ತುಶಿಲ್ಪ, ಮೂರ್ತಿ ಶಿಲ್ಪ, ಚಿತ್ರಾಲಂಕಾರಗಳಲ್ಲೂ ಅಗ್ರಸ್ಥಾನ ಪಡೆದಿವೆ. ಹೀನಯಾನ ಕ್ಷೀಣಿಸಿದ ಅನಂತರ ಅಂದರೆ ಅಶೋಕನ ತರುವಾಯ ಮಹಾಯಾನ ವೃದ್ಧಿ ಹೊಂದಿದ ಮೇಲೆ, ಪಾರಸಿಕ, ಚೀನ, ಗಾಂಧಾರ, ಕಲಾಸಂಪ್ರದಾಯಗಳು ಹೈಂದವ ಸಂಸ್ಕತಿಯ ಮೇಲೆ ಪರಿಣಾಮ ಬೀರಿದ ಅನಂತರ, ಚಿತ್ರದ ವಸ್ತು ವಿಸ್ತತವಾಯಿತು. ಬುದ್ಧನ ಜೀವಿತಕ್ಕೆ ಹೊಂದಿದ ಜಾತಕ ಕಥಾನಕ, ಆರ್ಯದೇವನ ಜಾತಕಮಾಲೆ, ಅಶ್ವಷೋಷನ ಬುದ್ಧ ಚರಿತ್ರೆ, ಸೌಂದರಾನಂದ, ಸಾರಿಪುತ್ರ ಪ್ರಕರಣ, ಪ್ರಾಮುಖ್ಯ ಪಡೆದ ಭಿಕ್ಕುಗಳ ಜೀವಿತಗಳು, ಚರಿತ್ರಾತ್ಮಕ ಘಟನೆಗಳು, ಸಾಧಾರಣ ಜೀವಿತಗಳು, ಸಾಧಾರಣ ಜೀವಿತದಲ್ಲಿನ ಸನ್ನಿವೇಶಗಳು, ಪ್ರಕೃತಿ ಸೌಂದರ್ಯವನ್ನು ಸಾರುವ ಮೃಗ, ಪಕ್ಷಿ, ವೃಕ್ಷ, ಪುಷ್ಪಸಂಪತ್ತುಗಳು ಮುಂತಾದುವು ವರ್ಣಚಿತ್ರಗಳಲ್ಲಿಯೂ ಶಿಲ್ಪದಲ್ಲಿಯೂ ಅತ್ಯಂತ ಸೊಬಗಿನಿಂದ ರೂಪುಗೊಂಡವು. ಈ ಸಂದರ್ಭದಲ್ಲಿ ಅಜಂತ ಚಿತ್ರಕಾರನ ಮೇಲ್ಮಟ್ಟದ ಕಲಾದೃಷ್ಟಿಗಣನೀಯವಾದುದು. ಅವನ ಯೋಗದೃಷ್ಟಿಯಲ್ಲಿ, ಜೀವಿಗಳೆಲ್ಲ ಸಮಾನತೆ ಪಡೆದು ಅವರವರ ಸೊಬಗನ್ನು ಸ್ವೇಚ್ಛೆಯಿಂದ ಪ್ರಪಂಚಕ್ಕೆ ಬೀರುತ್ತ ಮಾನವ ಜಾತಿಯನ್ನು ಶಾಂತಿಯುತವಾದ ಉನ್ನತಮಟ್ಟಕ್ಕೆ ಎತ್ತುವುದಲ್ಲದೆ, ಎಲ್ಲರ ಜನಸ್ಥಾನವಾದ ಪರಮಾತ್ಮನಲ್ಲಿ ಐಕ್ಯತೆ ಪಡೆಯಲು ಸಹಕಾರಿಯಾಗುತ್ತಿದ್ದವು. ಅವನ ದೇವತಾರಾಧನೆಯಲ್ಲಿ ಪ್ರಕೃತಿಸೌಂದರ್ಯಾರಾಧನೆ ಮೊದಲ ಮೆಟ್ಟಿಲಾಗಿತ್ತು. ಅವನ ಕಾಂಕ್ಷೆ. ಜೀವನ ಸಮನ್ವಯ ಗುರಿ, ಪರಮಾತ್ಮನನ್ನು ಸೇರುವಿಕೆ ಅವನ ವ್ರತ್ತಿ ಬ್ರಹ್ಮಚರ್ಯ, ಅವನ ಮನೋಭಾವ ಬುದ್ಧನ ಮನೋಭಾವದಂತೆ ಅತಿ ಮೃದು. ಸೂರ್ಯಚಂದ್ರಾದಿಗಳ ಬೆಳಕಿನಂತೆ ಅವನ ಕರುಣೆ ವಿಶ್ವದಾದ್ಯಂತ ಹರಡುತ್ತ ಪ್ರಾಣಿಗಳಿಗೆ ಕಲ್ಯಾಣವನ್ನುಂಟುಮಾಡುವ ಚೇತನವನ್ನು ಹೊಂದಿತ್ತು. ಚಿತ್ರದ ಹಿನ್ನೆಲೆಯಾದ ಪಶು ಪಕ್ಷಿ ಪ್ರಾಣಿಗಳ ಸಮುದಾಯದ ಚಟುವಟಿಕೆಗಳಿಗೂ ಮುನ್ನೆಲೆಯಾದ ಮಾನವ ಪ್ರವೃತ್ತಿಗಳಿಗೂ (ಜಾತಕ ಕಥನ ದೃಶ್ಯಗಳು) ಇರುವ ಅನುಪಮ ಸಮ್ಮೇಳನ ಪ್ರತಿಯೊಂದು ವರ್ಣಚಿತ್ರದಲ್ಲೂ ಮನೋಜ್ಞವಾಗಿ ರೂಪಿತವಾಗಿದೆ. ಇಂಥ ಸಮ್ಮೇಳನ ಅವನ ಕಲ್ಪನಾಶಕ್ತಿಯಲ್ಲಿ, ರಚನಾವಿಧಾನದಲ್ಲಿ ನಿರ್ದಿಷ್ಟವಾಗಿ ಕಂಡುಬರುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಆಧ್ಯಾತ್ಮಿಕ ಒಕ್ಕಟ್ಟನ್ನು ಇವನು ತನ್ನ ಹಲವಾರು ವರ್ಣಚಿತ್ರಗಳಲ್ಲಿ ಸಾಧಿಸಿರುತ್ತಾನೆ. ಅವನ ದಯೆ, ಸರ್ವಾಂತರ್ಯಾಮಿಯಾದ ದೇವತಾ ಸ್ವರೂಪವನ್ನು ತಾಳಿ, ಕುಂಚರೇಖೆಗಳಲ್ಲಿ ತುಂಬಿ ತುಳುಕಾಡುತ್ತಿದೆ. ಅವನ ಚಿತ್ರ ಕೇವಲ ಬಣ್ಣಗಳ ಸಮ್ಮಿಲನ ಮಾತ್ರವಲ್ಲ ತನ್ನ ಮನೋವೃತ್ತಿಯಲ್ಲಿ ಸಾಧಿಸಿದ ಮಾಧುರ್ಯವನ್ನು ತನ್ನ ಕೃತಿಗಳಲ್ಲಿ ಅವಿಚ್ಛಿನ್ನವಾಗಿ ಇಳಿಸಿದ್ದಾನೆ. ಪ್ರಾಚೀನ ಹೈಂದವ ಕಲಾಸಂಸ್ಕೃತಿಯಲ್ಲಿ ಬುದ್ಧನ ಮಹಾನಿರ್ಯಾಣದ (ಕ್ರಿ.ಪೂ. 480) ಹಿಂದೆ ಚಿತ್ರರಚನೆಯಲ್ಲಿ 3 ಶೈಲಿಗಳಿದ್ದವೆಂದೂ ಅವುಗಳ ಮೊದಲನೆಯದಾದ ದೇವಶೈಲಿ ದೇವತೆಗಳಿಗೆ ಸಂಬಂಧಿಸಿದ್ದು, ಆ ರೀತಿಯಲ್ಲಿ ಅಜಂತದ ಅತಿ ಪ್ರಾಚೀನವಾದ ಚಿತ್ರಗಳು ರಚಿತವಾದುವೆಂದೂ ಎರಡನೆಯದು ಯಕ್ಷರ ಶೈಲಿ ಪುಣ್ಯಯಾನರಿಗೆ (ಒಳ್ಳೆಜನ, ಶೀಲವಂತರು) ಸಂಬಂಧಿಸಿದ್ದು. ಅಶೋಕನ ಕಾಲದ ಚಿತ್ರಕಾರರು (ಕ್ರಿ.ಪೂ. 250) ಅದನ್ನು ಅನುಸರಿಸಿದರೆಂದೂ ಮೂರನೆಯ ನಾಗಾಶೈಲಿ ನಾಗಾರ್ಜುನರಿಂದ (ಕ್ರಿ.ಶ. 200) ಪೋಷಿತವಾಯಿತೆಂದೂ ಟಿಬೆಟ್ಟಿನ ಚರಿತ್ರಕಾರನಾದ ತಾರನಾಥ (ಕ್ರಿ.ಶ. 17 ಶ.) ತಿಳಿಸಿರುತ್ತಾನೆ. ದೇವಶೈಲಿಯನ್ನು ಮಗಧರಾಜನಾದ ಬುದ್ಧಪಕ್ಷನ ಕಾಲದಲ್ಲಿ (ಕ್ರಿ.ಶ. 56 ಶ.) ಶಿಲ್ಪಿ ಮತ್ತು ಚಿತ್ರಕಾರನಾದ ಬಿಂಬಸಾರ ಜೀರ್ಣೋದ್ಧಾರ ಮಾಡಿದನೆಂದೂ ಯಕ್ಷಶೈಲಿಯನ್ನು ಉದಯಪುರದ ರಾಜನಾದ ಶಿಲಾದಿತ್ಯಗಹಿಳನ ಕಾಲದಲ್ಲಿ (ಕ್ರಿ.ಶ. 7 ಶ.) ಶೃಂಗಧಾರನೆಂಬ ಚಿತ್ರಕಾರ ಜೀರ್ಣೋದ್ಧಾರ ಮಾಡಿದನೆಂದೂ ಮೂರನೆಯ ನಾಗಾಶೈಲಿಯನ್ನು ವಂಗದೇಶದ ರಾಜನಾದ ಧರ್ಮಪಾಲ, ಮಗ ದೇವಪಾಲರ ಕಾಲದಲ್ಲಿ (ಕ್ರಿ.ಶ. 9 ಶ.) ಚಿತ್ರಕಾರನಾದ ಧೀಮನ್, ಮಗ ಬಿತ್ತ್ಫಲೋ ಜೀರ್ಣೋದ್ಧಾರ ಮಾಡಿದರೆಂದೂ ತಾರನಾಥನ ಬರಹದಿಂದ ಗೊತ್ತಾಗುತ್ತದೆ. ಅಜಂತದ ಭಿತ್ತಿಚಿತ್ರಗಳಲ್ಲಿ ಈ ಮೂರು ಶೈಲಿಗಳು ಅಲ್ಲಲ್ಲಿ ಕಂಡುಬರುತ್ತವೆ. ಅಜಂತ ಚಿತ್ರಗಳನ್ನು ಸ್ಥೂಲವಾಗಿ 3 ಪಂಗಡಗಳಾಗಿ ವಿಂಗಡಿಸಬಹುದು: 1. ಅಶುದ್ಧಾಲಂಕಾರದವು 2 ಶುದ್ಧರೂಪಾತ್ಮಕವಾದವು 3 ಕಥನಾತ್ಮಕವಾದವು. 3ನೆಯ ಪಂಗಡದಲ್ಲಿ ಮತ್ತೂ 3 ಭಾಗಗಳಿವೆ. ಸಮಕಾಲೀನ ಚರಿತ್ರಾತ್ಮಕ ಕಥನ ಗೌತಮನ ಸಂಸಾರತ್ಯಾಗ, ಬುದ್ಧತ್ವ ಸಂಪಾದನೆ ಮತ್ತು ಮಹಾನಿರ್ಣಯಗಳ ಕಥನ ಆರ್ಯದೇವ (ಆರ್ಯಸೂರ್ಯ ಕ್ರಿ.ಶ. 3 ಶ.) ಜಾತಕಮಾಲೆಯಲ್ಲಿ ಅಶ್ವಘೋಷ, ಬುದ್ಧಚರಿತ್ರ, ಸೌಂದರಾನಂದ, ಸಾರಿಪುತ್ರ ಪ್ರಕರಣಗಳಲ್ಲಿ ಬೌದ್ಧರ ದಿವ್ಯಾವಧಾನ ಮುಂತಾದುವುಗಳಲ್ಲಿ ವರ್ಣಿಸಿದ ಚರಿತ್ರೆ ಇವೆಲ್ಲವೂ ಸೇರಿರುತ್ತವೆ. ಶುದ್ಧಾಲಂಕಾರಕ್ಕೆ, ಅತಿ ಸಹಜವಾಗಿ, ಚಿತ್ರವಿಚಿತ್ರವಾಗಿ, ಅಸಂಖ್ಯಾತವಾಗಿ, ಮನೋಹರವಾಗಿ, ಆಕರ್ಷಕವಾಗಿ ರಚಿತವಾದ ಕಿನ್ನರ ಕಿಂಪುರುಷ ಮಾನವ ಪಶುಪಕ್ಷಿ ಪರ್ಣ ಲತಾಸಮುದಾಯಗಳನ್ನೊಳಗೊಂಡ ನಕ್ಷೆಗಳ ಸುರುಳಿಗಳು ಸೇರಿರುತ್ತವೆ. ಇವುಗಳಲ್ಲಿ ಗಮನಿಸಬೇಕಾದ್ದು ಚಿತ್ರಕಾರನ ದಯಾದ್ರ್ರಹೃದಯ ಮತ್ತು ಜೀವಕೋಟೆಯಲ್ಲಿನ ಸೂಕ್ಷ್ಮಪರಿಚಯ (1, 2ನೆಯ ಗುಹೆಗಳ ಒಳಮಾಳಿಗೆಯ ಮತ್ತು 17ನೆಯದಲ್ಲಿರುವ ವಿಜಯನ ಸಿಂಹಳವಿಜಯದ ಅಂಚುಗಳ ಶೃಂಗಾರ) ಇವುಗಳಲ್ಲಿ ಅತಿ ಉತ್ಕಷ್ಟವಾದದ್ದು ಈ ಅಂಚುಗಳು (ಗುಹೆ 17). ಖಗವರ್ಗಕ್ಕೆ ಸೇರಿದ ಹಂಸ, ಕೊಕ್ಕರೆ, ಬಾತು, ಕಲಹಂಸಇವುಗಳ ಜಲಕ್ರೀಡೆಯ ದೃಶ್ಯಗಳು ಅಸಂಖ್ಯಾತ ಮಾದರಿಗಳಲ್ಲಿವೆ. ಶುದ್ಧರೂಪಾತ್ಮಕ ಪಂಗಡಕ್ಕೆ ಸೇರಿದವು ಅತ್ಯುತ್ತಮವಾದ ಪ್ರಣಯದಂಪತಿಗಳು (ಗುಹೆ 17) ಬೆನ್ನು ತಿರುಗಿಸಿ ಕುಳಿತ ಬಾಲೆ (ಗುಹೆ 17). ಕಮಲಪುಷ್ಪ ಹಿಡಿದ ಆಪ್ತಸಖಿಯೊಡನಿರುವ ಕಪ್ಪು ಛಾಯದ ಯುವರಾಣಿ (ಗುಹೆ 17). ನಾಟ್ಯದ ಅನಂತರ ವಿಶ್ರಾಂತಿಗಾಗಿ ಕಂಬಕ್ಕೆ ಒರಗಿದ ಅಪ್ಸರೆ (ಗುಹೆ 2). ಅಲಂಕರಣ (ಗುಹೆ 17). ಗಾಂಧರ್ವ ದಂಪತಿಗಳ ಪ್ರಣಯ (ಗುಹೆ 1). 4 ದೇಹಗಳಿಗೆ ಒಂದೇ ಶಿರಸ್ಸುಳ್ಳ ಜಿಂಕೆಗಳು (ಗುಹೆ 1). ಹೋರಿಗಳ ಗುದ್ದಾಟ (ಗುಹೆ 1). ಅಂತರಿಕ್ಷದಲ್ಲಿ ಸಂಚರಿಸುವ ಸ್ವರ್ಗೀಯರು (ಗುಹೆ 17). ಒಂಟಿಯಾಗೋ ಒಟ್ಟಾರಿಯೋ ಇರುವ ಜಾತಕ ಕಥೆಗಳನ್ನು ವರ್ಣಿಸುವ ಮಾನುಷ ರೂಪಗಳು ಮುಂತಾದವು ಸೇರಿರುತ್ತವೆ. ಬುದ್ಧ ಜೀವನದ ದೃಶ್ಯಗಳ ಪೈಕಿ ಬೋಧಿಸತ್ವ ಪದ್ಮಪಾಣಿ (ಗುಹೆ 1). ಗೌತಮನ ಜನನ (ಗುಹೆ 2). ಮಹಾಜನಕ ಜಾತಕಕ್ಕೆ ಸೇರಿದ ಅಂತಃಪುರ ಪ್ರವೇಶದಲ್ಲಿನ ಭಿಕ್ಕು (ಗುಹೆ 1), ಕಂಬದ ಮೇಲಿನ ಬುದ್ಧ(ಗುಹೆ 10), ಛಾದಂತ ಜಾತಕ (ಗುಹೆ 10, 17), ಅಂತಃಪುರ ದೃಶ್ಯ, ನರ್ತಕಿಯರು (ಗುಹೆ 1), ವೃತ್ತಾಕಾರವಾದ ರಂಗಮಂಟಪ (ಗುಹೆ 16), ಮಹಾಸರ್ಪಜಾತಕ (ಗುಹೆ 1)ಇವು ಅತ್ಯುತ್ಕಷ್ಟವಾದವು. ಇವು ವಿಶ್ವವಿಖ್ಯಾತವಾದ ಲಿಯೊನಾರ್ಡೋದವಿನ್ಜಿಯ ಮೋನಲಿಸ, ಕಡೆಯ ಔತಣ (ಲಾಸ್ಟ್ ಸಪ್ಪರ್) ಎಂಬ ಎರಡು ಚಿತ್ರಗಳನ್ನು ಮೀರಿಸುವಂತಿವೆ. ಈ ಬೋಧಿಸತ್ವ ಪದ್ಮಪಾಣಿ (ಗುಹೆ 1), ಭಿಕ್ಷಾಟನಕ್ಕೆ ಹೊರಟ ಬುದ್ಧ, ಅವನ ಹೆಂಡತಿ, ಮಗು (ಗುಹೆ 17), 9, 10ನೆಯ ಗುಹೆಗಳ ಚಿತ್ರಗಳುಇವು ವಾಕಾಟಕ ರಾಜರ ಪೋಷಣೆಯಲ್ಲೂ 16, 17ನೆಯ ಗುಹೆಗಳ ಚಿತ್ರಗಳು ಕ್ರಿ.ಶ. 626628 ರಲ್ಲೂ ಚಿತ್ರಿಸಲಾದವೆಂದು ಪಾರಸಿಕ ಖುಸ್ರು ಕಳುಹಿಸಿದ ರಾಯಭಾರದ ದೃಶ್ಯ ಸೂಚಿಸುತ್ತದೆ (ಗುಹೆ 1). ಈಗ ಉಳಿದಿರುವ ಚಿತ್ರಗಳಿಂದ ಛಾದಂತ ಜಾತಕ 10,17ನೆಯ ಗುಹೆಗಳಲ್ಲೂ ಬ್ರಾಹ್ಮಣ, ವಿದುರ, ಸಿಬಿ, ಶಂಖಪಾಲಿ, ಕ್ಷಾಂತಿವಾದ ಜಾತಕಗಳು 2ನೆಯ ಗುಹೆಯಲ್ಲೂ ಹಸ್ತಿ, ಛಾದಂತದ ಉತ್ತರಭಾಗ, ಉನ್ಮಗ್ಗ ಮುಂತಾದ ಜಾತಕಗಳು, ಅಶ್ವಘೋಷನ, ಸೌಂದರಾನಂದದ ಜೊತೆಯಲ್ಲಿ 16ನೆಯ ಗುಹೆಯಲ್ಲೂ ರೂರೂ, ಮಹಾಕಪಿ, ಶಶಕ, ಮಾತೃಪೋಷಕ, ಸಿಬಿ, ವಿಶ್ವಂತರ, ನಾಲಗಿರಿ, ಹಂಸ, ಯುವರಾಜ, ಮಹಾನಾಗ ಮುಂತಾದವು 17ನೆಯ ಗುಹೆಯಲ್ಲೂ ಮಾರನ ಪರೀಕ್ಷೆ, ಮಹಾಜಿನಕ, ಛಾಂಪೇಯ, ಸಿಬಿ, ಮಹಾನಾಗ ಪಂಚಿಕ ಮುಂತಾದವು 1ನೆಯ ಗುಹೆಯಲ್ಲೂ ಮತ್ಸ್ಯ, ಮಹೇಶ, ಸಿಬಿ, ನಿಕ್ರೋಧ, ಶರಭಂಗ, ವೆಸ್ಸಾಂತರ, ಸೂತಸೋಮ ಮಾತೃಪೋಷಕ, ಮೈತ್ರಿಬಲ, ವಲಹಸ್ಸಾ ಮುಂತಾದವು 2ನೆಯ ಗುಹೆಯಲ್ಲೂ ಕೆಟ್ಟಿರುವ ಗುಹೆಗಳಲ್ಲೂ ಅತ್ಯಂತ ಭಕ್ತಿ, ಶ್ರದ್ಧೆಗಳಿಂದ ಚಿತ್ರಿತವಾಗಿದೆ. ಕೆಲವು ಜಾತಕ ಚಿತ್ರಗಳ ರಚನೆ ಆರ್ಯದೇವನ ಜಾತಕಮಾಲೆಯ ವಿವರಗಳನ್ನು ಅನುಸರಿಸಿವೆ. ಅಲ್ಲದೆ ಕೆಲವು ಚಿತ್ರಗಳ ಮೇಲೆ ಜಾತಕಮಾಲೆಯ ನುಡಿಗಳು ಬರೆಯಲ್ಪಟ್ಟಿವೆ. ಉದಾಹರಣೆಗೆಹೆಣ್ಣು ಹುಲಿಗೆ ಬೋಧಿಸತ್ವ ಗೌತಮನ ದೇಹಾರ್ಪಣದ ಚಿತ್ರ. ಸಮಕಾಲೀನ ಚರಿತ್ರಾತ್ಮಕ ದೃಶ್ಯಗಳಲ್ಲಿ ಮುಖ್ಯವಾದವು: ಇಮ್ಮಡಿ ಪುಲಿಕೇಶಿ ರಾಜನು ತನ್ನ ದರ್ಬಾರಿನಲ್ಲಿ ಪಾರಸಿಕ ರಾಜ ಖಸ್ರುವಿನ ರಾಯಭಾರಿಯನ್ನು ಸ್ವಾಗತಿಸುವುದು (ಗುಹೆ 1). ಇದರಲ್ಲಿ ಖುಸ್ರು, ಅವನ ರಾಣಿಯರ ಚಿತ್ರಗಳಿವೆ. ಅಶೋಕನ ಮಗನಾದ ವಿಜಯನ ಸಿಂಹಳವಿಜಯ (ಗುಹೆ 17) ವೆಂಬುದರಲ್ಲಿ ನರ್ತಕಿಯರ ಬೃಂದ ಅತಿ ಮನೋಹರವಾಗಿದೆ. ಕಣ್ಣು ಕೋರೈಸುವಂಥ ಬಣ್ಣಗಳು, ನೈಜವಲ್ಲದ ಭಂಗಿಗಳು, ಪ್ರವೃತ್ತಿಗಳು, ಅಜಂತದ ಚಿತ್ರರಚನೆಗೆ ಅತಿ ದೂರವಾದವು. ಆತ್ಮಸಂತೋಷ ಸಂಘಸುಧಾರಣೆ ಜ್ಞಾನಾಭಿವೃದ್ಧಿಇವೇ ಆ ಎಲ್ಲ ಚಿತ್ರಗಳ ಪರಮೋದ್ದೇಶ. ಆಧ್ಯಾತ್ಮಿಕ ಶಾಂತಿಯಲ್ಲದೆ ಮನೋವಿಕಾರಗಳ ಚಿತ್ರಣ ಅಲ್ಲೆಲ್ಲೂ ಕಂಡುಬರುವುದಿಲ್ಲ. ಪ್ರಕೃತಿಯಲ್ಲಿನ ಖಗ, ಮೃಗ, ಜಲ, ತರು, ಪತ್ರ, ಪುಷ್ಪಾದಿಗಳನ್ನು ಅನುಕರಿಸಿರುವುದರಿಂದ ಕೃತಿಗಳು ಶೋಭಾಯಮಾನವಾಗಿವೆ. ಅತ್ಯುತ್ತಮವಾದ ಮಾನುಷಸೌಂದರ್ಯಕ್ಕೆ ಅವು ಸಂಕೇತಗಳಾಗಿವೆ. ಉದಾಹರಣೆಗೆ ಭೋಧಿಸತ್ತ್ವ ಪದ್ಮಪಾಣಿ (ಗುಹೆ 1), ಹಸ್ತದಲ್ಲಿ ದಳದಳವಾಗಿ ವಿಕಸಿಸುತ್ತಿರುವ ಕಮಲ ಪ್ರಪಂಚದ ಸೃಷ್ಟಿಗೆ ಸಂಕೇತವಾಗಿದೆ. ಸುಂದರ ಯುವತಿಯ ಪಾದ, ಕಣ್ಣು, ಬೆರಳು ಮುಖಲಾಲಿತ್ಯ ಅಂಗಚ್ಛಾಯೆಮುಂತಾದವು ಅವಳ ಸೌಂದರ್ಯಕ್ಕೆ ಸಂಕೇತಗಳಾಗಿವೆ. ಭಗವದ್ಗೀತೆಯ ಪದ್ಮಪತ್ರ ಮಿವಾಂಭಸ ಎಂಬ ನುಡಿಗಳು ಕಮಲದ ನಿರ್ಲಿಪ್ತತೆಯನ್ನೂ, ಅಶ್ಲೇಷಿತ ಜೀವನವನ್ನೂ ಸೂಚಿಸುತ್ತವೆ. ಕೊಳಲನ್ನೂದುವ ಬೆರಳುಗಳ ವಿನ್ಯಾಸ, ಕೊಳಲಿನ ಸ್ವರದಂತೆ ಅತಿಮಧುರವಾಗಿದೆ. (ಗುಹೆ 1, 17). ಸಾಂಸಾರಿಕ ವಿಷಯಗಳಿಂದ ಮಲಿನವಾಗದಂಥ ಜೀವಿತವನ್ನು ಕಮಲಪುಷ್ಪ ಸೂಚಿಸಿದರೆ, ಮಾಲಿನ್ಯರಹಿತವಾಗಿ ಮನೋಹರವಾದ ಭಂಗಿಗಳಲ್ಲಿ ಕ್ರೀಡಿಸುವ, ಹಂಸ ಮುಂತಾದ ಜಲಪಕ್ಷಿಗಳು (ಗುಹೆ 2, 17) ಮಾನವನ ಜೀವನ್ಮುಕ್ತಿಯ ಆನಂದವನ್ನು ಸಾರುತ್ತವೆ. ಇಂಥ ದೃಶ್ಯಗಳೆಲ್ಲ ಮಾನವನ ದೈವಿಕ ಪ್ರವೃತ್ತಿಯನ್ನು ಮುದ್ರಿಸಿಟ್ಟಂತೆ ತೋರುತ್ತವೆ. ಅಜಂತದ ಶಿಲ್ಪ, ಚಿತ್ರರಚನೆಗಳು ದಕ್ಷಿಣ ಹಿಂದೂಸ್ಥಾನದ್ದೆಂದು ನಿಸ್ಸಂಶಯವಾಗಿ ಹೇಳಬಹುದು. ಇಂಥ ವಿಶಾಲದೃಷ್ಟಿ, ಆಧ್ಯಾತ್ಮಿಕ ವಿಜ್ಞಾನ, ಲಲಿತಕಲೆಗಳಲ್ಲಿನ ಕೌಶಲ, ಹಿಂದೂದೇಶದ ಮತ್ತಾವ ಭಾಗದಲ್ಲೂ ಕಂಡುಬರುವುದಿಲ್ಲ. ಕಲೆಗಾರರ ದೃಷ್ಟಿಯಲ್ಲಿ ಚಿಕ್ಕದು. ದೊಡ್ಡದು ಅನ್ನುವ ಭಾವನೆ ಇರಲಿಲ್ಲ. ಕ್ರಿಮಿಕೀಟಗಳಿಂದ ಹಿಡಿದು ಘನದೇವತೆಗಳವರೆಗೆ ಎಲ್ಲವೂ ಸಮಾನತೆಯನ್ನು ಹೊಂದಿದ್ದವು. ಅವರ ಕಣ್ಣಿಗೆ ಆನಂದದಾಯಕವಾದ ಪರಮೇಶ್ವರನ ಮಾಧುರ್ಯ ಸೃಷ್ಟ್ಯಾದ್ಯಂತ ಸುತ್ತುವರಿದು ಸಕಲ ಚರಾಚರವಸ್ತುಗಳಲ್ಲಿ ತುಂಬಿ ತುಳುಕಿ ತಾಂಡವವಾಡುತಲಿತ್ತು. ಬುದ್ಧನಿಗೆ ಮತ್ತು ಬೌದ್ಧಮತಕ್ಕೆ ಸಂಬಂಧಿಸಿದವಾದರೂ ಆ ಶಿಲ್ಪದಲ್ಲಿ ಚಿತ್ರಗಳಲ್ಲಿ ಸಾರ್ವಕಾಲಿಕ ಮೌಲ್ಯವನ್ನುಳ್ಳ ಧರ್ಮ ಮತ್ತು ಕಲೆ ಪ್ರತಿಬಿಂಬಿತವಾಗಿವೆ. ಚಿತ್ರಗಳಲ್ಲಿನ ಸ್ತ್ರೀಯರೆಲ್ಲ ಯುವತಿಯರು. ಆನಂದದಿಂದ ಪ್ರಪುಲ್ಲಿತವಾದ ನೇತ್ರ, ವದನಗಳನ್ನು ಪಡೆದಿದ್ದರೂ ಭಂಗಿಗಳ ನಿರೂಪಣೆ ಅತ್ಯಂತ ರಸಯುತವಾಗಿದ್ದರೂ ನೋಡುವವರಿಗೆ ಕಾಮುಕ ಭಾವನೆಗಳನ್ನು, ಮನೋವಿಕಾರಗಳನ್ನು ಅವು ಉಂಟು ಮಾಡುವುದಿಲ್ಲ. ಅವರೆಲ್ಲರೂ ಸ್ತ್ರೀ ಜಾತಿಗೆ ಸೇರಿದ ಪರಮ ಪತಿವ್ರತೆಯರು. ಚಲನವಲನಗಳಲ್ಲಿ ಮಾತೃಭಾವನೆ ವಿನಾ ಇತರ ಭಾವನೆಗಳನ್ನು ಅವರು ಪ್ರಕಟಿಸುವುದಿಲ್ಲ. (ನರ್ತಕಿ, ಗುಹೆ 2 ನರ್ತಕಿಯರು, ಗುಹೆ 1, 17: ಅಲಂಕರಣೆ, ಗುಹೆ 17 ಕಪ್ಪು ಛಾಯದ ಯುವರಾಣಿ, ಗುಹೆ 1 ದಂಪತಿಗಳು, ಗುಹೆ 17). ತಮ್ಮ ನೃತ್ಯಭಂಗಿಗಳೆಲ್ಲ ಅವರು ಆತ್ಮಸಂಯಮವನ್ನು, ದೈವಿಕ ಕ್ರಮದ ಜೀವಾಳವನ್ನು ಪ್ರಚುರಮಾಡುತ್ತಲಿದ್ದಾರೆ. ಅಜಂತದ ಕಲೆಗಾರನ ಸ್ಪೂರ್ತಿ ಅವನ ಹೃದಯ ಸೌಂದರ್ಯದಿಂದ ಜನಿಸಿರುವುದೇ ಹೊರತು ಬಾಹ್ಯ ಪ್ರಪಂಚದಲ್ಲಿನ ಸೌಂದರ್ಯದಿಂದ ಅಲ್ಲ. ವಿನಯ, ಗಾಂಭೀರ್ಯ ಮತ್ತು ಸಮತೋಲನ ಅವನ ಕೃತಿಗಳಲ್ಲಿ ಶಾಂತಿಯುತವಾಗಿ ತಾಂಡವವಾಡುತ್ತಲಿವೆ. ವಿವಿಧ ಬಣ್ಣದ ತಂತುಗಳಿಂದ ನೇಯ್ದ ವಸ್ತ್ರದಂತೆ ಕಾಣುವ ದೇವತಾಂಶ ಸಂಭೂತ ಚಿತ್ರಗಳು ಮಾತ್ರವೇ ಅಲ್ಲ ಸಾಮಾನ್ಯ ಜೀವನದ ದೃಶ್ಯಗಳು ಕೂಡ ಅಲ್ಲಿವೆ. ಎಲ್ಲ ಕಾಲಕ್ಕೂ ಎಲ್ಲರ ಜೀವನಾವಸ್ಥೆಗಳಿಗೂ ಸಂಬಂಧಿಸಿದಂತೆ ಚೈತನ್ಯವನ್ನು ನೀಡುವ ರೂಪಲಕ್ಷಣಗಳನ್ನು ಅವು ಒದಗಿಸುತ್ತವೆ. ರೂಪಗಳ ರೇಖಾವಿಲಾಸ ನಿರ್ಮಲ ಶಾಂತತ್ವದಿಂದ ವಿರಾಜಿಸುತ್ತಿದೆ. ಆನಂದಮಯವಾದ ರೇಖೆಗಳ ಹಿನ್ನೆಲೆಯಲ್ಲಿ ಪರವಸ್ತುವಿನ ಛಾಯೆ ಕಂಡುಬರುತ್ತದೆ. ಚಿತ್ರಗಳಲ್ಲಿ ಅಪಾರವಾದ ಹುಮ್ಮಸ್ಸು, ಅನಂತವಾದ ಕರುಣೆ ಹೊಮ್ಮುತ್ತಿವೆ. ಇಂಥ ಗಂಭೀರತೆ ಇತರೆಡೆಗಳಲ್ಲಿ ಅಪರೂಪ. ಚಿತ್ರಗಳಲ್ಲಿ ಎಲ್ಲೆಲ್ಲಿಯೂ ಯೌವನದ ಉತ್ಸಾಹ, ಸಂತೋಷ ಗೋಚರವಾಗಿ ಆಶಾಭಾವದ ಪ್ರವೃತ್ತಿ ಇರುವುದಾದರೂ ಪ್ರಾಪಂಚಿಕ ಜೀವನ ಸರ್ವಾವಸ್ಥೆಗಳಲ್ಲೂ ಕ್ಷಣಿಕವಾದದ್ದೆಂಬ ಸೂಚನೆ, ಶಾಶ್ವತ ಜೀವನವನ್ನೂ ಬಯಸುವ ಇಚ್ಛೆ ಎಲ್ಲೆಡೆಯೂ ಪ್ರಕಟಿತವಾಗಿದೆ. ಅಜಂತದಲ್ಲಿನ ಚಿತ್ರಗಳನ್ನು ಕೊರೆದಿರುವ ಗೋಡೆಗಳ ರಚನಾತ್ಮಕ ಕುತೂಹಲಕಾರಿಯಾಗಿದೆ. ಕಲ್ಲಿನ ಗೋಡೆಯನ್ನು ಸಂತ್ರಾಸು ಕೆಲಸದಿಂದ ಸಮಪಡಿಸಲಾಗಿದೆ. ಮರಳು, ಧಾತುಮಿಶ್ರಿತ ಮಣ್ಣು, ಬತ್ತದ ಹುಲ್ಲು ಹೊಟ್ಟು ಅಥವಾ ತೌಡು, ಪಾಚಿ, ಕಪ್ಪೆಚಿಪ್ಪು ಮುಂತಾದುವನ್ನು ಬೆಲ್ಲದ ನೀರಿನಲ್ಲಿ ಆರು ತಿಂಗಳು ಕೊಳೆಸಿ ನುಣ್ಣಗೆ ಮಾಡಿದ ಗಾರೆಯನ್ನು ಗೋಡೆಗೆ ಗಿಲಾವು ಮಾಡಲಾಗಿದೆ. ಅದರ ಹಸಿ ಆರುವುದರೊಳಗೆ ಧಾತುರಾಗದ ಕಡ್ಡಿಗಳಿಂದ ಸ್ಥೂಲ ಚಿತ್ರಗಳನ್ನು ಗುರುತು ಮಾಡಿಕೊಂಡು ಅನಂತರ ಬಣ್ಣ ಹಾಕಲಾಗಿದೆ. ಈ ಕ್ರಮವನ್ನು ಫ್ರೆಸ್ಕೊ ಬುವಾನೊ ಎಂದು ಕರೆಯುತ್ತಾರೆ. ಹಿನ್ನೆಲೆ ಒಣಗಿದ ಮೇಲೆ ಚಿತ್ರ ಬರೆದರೆ, ಕೆತ್ತಿದರೆ ಅವು ಹೆಚ್ಚು ಕಾಲ ನಿಲ್ಲವು. ಈ ವಿಧಾನವನ್ನು ಫ್ರೆಸ್ಕೊ ಸೆಕ್ಕೊ ಎನ್ನುತ್ತಾರೆ. ಫ್ರೆಸ್ಕೊ ಬುವಾನೊ ವಿಧಾನದಲ್ಲಿ ರಚಿತವಾದ ಅಜಂತ ಚಿತ್ರಗಳು 2,000 ವರ್ಷಗಳಾದರೂ ಇನ್ನೂ ಉಳಿದು ಬಂದಿವೆ. ಆದರೆ ಎರಡನೆಯ ವಿಧಾನದಂತೆ ಬರೆಯಲ್ಪಟ್ಟ ಲೇಪಾಕ್ಷಿ ಚಿತ್ರಗಳು ಈ 400 ವರ್ಷಗಳಲ್ಲಿ ಕೆಟ್ಟಿವೆ. ಫ್ರೆಸ್ಕೊ ಬುವಾನೊ ವಿಧಾನವನ್ನು ಇಟಲಿ ದೇಶ ಭಾರತೀಯರಿಂದ ಕಲಿತು ಬಳಸಿಕೊಂಡು ಪಾಂಪೇಯ ಮ್ಯೂರಲ್ಗಳನ್ನು ನಿರ್ಮಿಸಿದೆ. ಭಾರತೀಯರಿಗೆ ಯಥಾ ದೃಷ್ಟಿ ನಿರೂಪಣೆ, ಬೆಳಕು ನೆರಳುಗಳ ವಿನ್ಯಾಸ ಗೊತ್ತಿರಲಿಲ್ಲವೆನ್ನುವುದು ಸುಳ್ಳು. ಬೋಧಿಸತ್ವ ಪದ್ಮಪಾಣಿ, ಅಭಿಷೇಕ ದೃಶ್ಯ, ಕಪ್ಪುಛಾಯದ ಯುವರಾಣಿ (ಗುಹೆ 1), ಅಪ್ಸರೆ (ಗುಹೆ 2) ಗುಂಡಾದ ರಂಗಮಂಟಪ (ಗುಹೆ 16) ಬುದ್ಧ, ಅವನ ಹೆಂಡತಿ ಮತ್ತು ಮಗ, ಅಂತಃಪುರದ ಪ್ರವೇಶದಲ್ಲಿನ ಭಿಕ್ಕು (ಗುಹೆ 17) ಮುಂತಾದವು ಈ ಅಭಿಪ್ರಾಯವನ್ನು ಪುಷ್ಟೀಕರಿಸುತ್ತವೆ. ಇತಿಹಾಸ ಐತಿಹಾಸಿಕ ಸ್ಥಳಗಳು ಪ್ರವಾಸೋದ್ಯಮ ವಿಶ್ವ ಪರಂಪರೆಯ ತಾಣಗಳು ಪ್ರವಾಸಿ ತಾಣಗಳು
ಛತ್ರಪತಿ ಶಿವಾಜಿ ಟೆರ್ಮಿನಸ್ (ವಿಕ್ಟೊರಿಯಾ ಟೆರ್ಮಿನಸ್ ಅಥವಾ ಸಿ.ಎಸ್.ಟಿ)ಯು ೧೮೮೮ರಲ್ಲಿ ನಿರ್ಮಿಸಲ್ಪಟ್ಟ ಗೋಥಿಕ್ ಮತ್ತು ವಿಕ್ಟೋರಿಯನ್ ಇಟಾಲಿಯನೇಟ್ ರಿವೈವಲ್ ಮತ್ತು ಭಾರತೀಯ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿತವಾದ ಸುಂದರ ಕಟ್ಟಡ. ಇದು ಈಗ ಮುಂಬಯಿಯ ಐತಿಹಾಸಿಕ ನಗರ ಸಂಚಾರಿ ರೈಲು ನಿಲ್ದಾಣ ಮತ್ತು ಮಧ್ಯ ರೈಲ್ವೆಯ ಮುಖ್ಯ ಕಚೇರಿಯಾಗಿಯೂ ಉಪಯೋಗಿಸಲ್ಪಡುತ್ತಿದೆ. ಅಲ್ಲದೇ ಭಾರತದಲ್ಲೇ ಅತ್ಯಂತ ಜನನಿಬಿಡ ರೈಲ್ವೆ ನಿಲ್ದಾಣಗಳಲ್ಲೊಂದಾಗಿದೆ. ಜುಲ್ಯ್ ೦೨ ೨೦೦೪ರಲ್ಲಿ ಈ ಸ್ಥಳವನ್ನು ಯುನೆಸ್ಕೋ ಸಂಸ್ಥೆಯು ಪ್ರಪಂಚದ ಸಾಂಸ್ಕೃತಿಕ ಪ್ರದೇಶವಾಗಿ ಗುರುತಿಸಿದೆ. ಫ್ರೆಡೆರಿಕ್ ವಿಲಿಯಂ ಸ್ಟೀವನ್ಸ್ ಎಂಬ ವಾಸ್ತುಶಿಲ್ಪಿಯು ೧೮೮೭೧೮೮೮ ರಲ್ಲಿ ೧೬.೧೪ ಲಕ್ಷ ರೂಪಾಯೆಗಳ (ಆ ಕಾಲದಲ್ಲಿ ದುಬಾರಿಯೆನಿಸಿದ)ವೆಚ್ಚದಲ್ಲಿ ಇದನ್ನು ನಿರ್ಮಿಸಿದರು. ನಿರ್ಮಾಣದ ಮೊದಲುಅಲೆಕ್ಸ್ ಹೆರ್ಮನ್ ಎಂಬ ಕಲಾವಿದರು ಇದರ ಕರಡು ನಕ್ಷೆಯನ್ನು ಪ್ರಥಮವಾಗಿ ಜಲವರ್ಣದಲ್ಲಿ ರಚಿಸಿದ ನಂತರ, ಫ್ರೆಡೆರಿಕ್ ವಿಲಿಯಂ ಸ್ಟೀವನ್ಸ್ ರವರು ಈ ಕರಡು ನಕ್ಷೆಯ ಜೊತೆಯಲ್ಲಿ ೧೦ ತಿಂಗಳ್ ಯುರೋಪ್ ಪ್ರವಾಸ ಕೈಗೊಂಡು, ಅಲ್ಲಿನ ಎಲ್ಲಾ ಪ್ರಮುಖ ನಿಲ್ದಾಣಗಳನ್ನು ಅಭ್ಯಸಿಸಿದರು. ಲಂಡನ್ನಿನ ಸೇಂಟ್ ಪಾಂಕ್ರಾಸ್ ರೈಲ್ವೆ ನಿಲ್ದಾಣವು ವಿಕ್ಟೋರಿಯಾ ಟೆರ್ಮಿನಸ್ಗೆ ಅತ್ಯಂತ ಸಮೀಪವಾಗಿರುವ ವಿನ್ಯಾಸಹೊಂದಿದೆ. ಇದನ್ನು ಸಂಪೂರ್ಣವಾಗಿ ನಿರ್ಮಿಸಲು ೧೦ ವರ್ಷಗಳೇ ಹಿಡಿದವು. ೧೯೯೬ರಲ್ಲಿ ಈ ನಿಲ್ದಾಣದ ಹೆಸರನ್ನು ವಿಕ್ಟೊರಿಯಾ ಟೆರ್ಮಿನಸ್ ನಿಂದ ಛತ್ರಪತಿ ಶಿವಾಜಿ ಟೆರ್ಮಿನಸ್ ಎಂದು ಬದಲಾಯಿಸಲಾಯಿತು. ಕಾಲ ಕಾಲಕ್ಕೆ ಕಟ್ಟಡವನ್ನು ಸುವ್ಯವಸ್ಥಿತಗೊಳಿಸಲಾಗುತ್ತಿದೆ ೨೦೧೫ ರ, ಇತ್ತೀಚಿನ ದುರಸ್ತಿಯ ಪ್ರಕರಣ. ಉಲ್ಲೇಖಗಳು ಬಾಹ್ಯ ಸಂಪರ್ಕಗಳು ವಿಶ್ವ ಪರಂಪರೆಯ ತಾಣಗಳು ಮುಂಬಯಿಯ ಪ್ರಸಿದ್ಧ ತಾಣಗಳು
ಉತ್ತರ ಕರ್ನಾಟಕದಲ್ಲಿರುವ ವಿಜಯನಗರ ಎ೦ಬುದು ಈಗ ನಿರ್ನಾಮವಾಗಿರುವ ಚಾರಿತ್ರಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಮತ್ತು ಈಗಿನ ಹಂಪೆ. ಈ ನಗರದ ಬಹುಭಾಗ ತು೦ಗಭದ್ರಾ ನದಿಯ ದಕ್ಷಿಣ ದ೦ಡೆಯ ಮೇಲಿದೆ. ಈ ನಗರ ಹ೦ಪೆಯ ವಿರೂಪಾಕ್ಷ ದೇವಸ್ಥಾನದ ಪವಿತ್ರ ಮಧ್ಯಭಾಗದ ಸುತ್ತ ಕಟ್ಟಲಾದ ನಗರ. ಅದರ ವ್ಯಾಪ್ತಿಯಲ್ಲಿ ಇತರ ಪವಿತ್ರ ಸ್ಥಳಗಳು ಸಹ ಇವೆ ಇವು ಸುಗ್ರೀವನ ಹುಟ್ಟೂರಾದ ಕಿಷ್ಕಿ೦ಧೆ ಇದ್ದ ಸ್ಥಳವೆ೦ದು ಹೇಳಲಾದ ಕ್ಷೇತ್ರವನ್ನು ಒಳಗೊ೦ಡಿವೆ. ಈಗ ರಾಜಕೇ೦ದ್ರ ಮತ್ತು ಪವಿತ್ರಕೇ೦ದ್ರ ಎಂದು ಕರೆಯಲ್ಪಡುವ ಸ್ಥಳಗಳನ್ನು ಒಳಗೊ೦ಡ ನಗರದ ಮಧ್ಯಭಾಗ ೪೦ ಚ.ಕಿಮೀ ಗಿ೦ತ ಹೆಚ್ಚು ವಿಸ್ತೀರ್ಣದಲ್ಲಿ ಹಬ್ಬಿದೆ. ಇದು ಈಗಿನ ಹ೦ಪೆ ಗ್ರಾಮವನ್ನು ಸಹ ಕೂಡಿದೆ. ಕಮಲಾಪುರಮ್ ಎ೦ಬ ಗ್ರಾಮ ಹಳೆಯ ನಗರದ ಸ್ವಲ್ಪ ದೂರದಲ್ಲೇ ಇದ್ದು ಅನೇಕ ಸ್ಮಾರಕಗಳನ್ನು ಹೊಂದಿದೆ. ಇಲ್ಲಿಗೆ ಅತಿ ಹತ್ತಿರದ ನಗರ ಮತ್ತು ರೈಲ್ವೇ ನಿಲ್ದಾಣ ಎ೦ದರೆ ಹೊಸಪೇಟೆ, ೧೩ ಕಿಮೀ ದೂರದಲ್ಲಿದೆ. ಪ್ರಾಕೃತಿಕವಾಗಿ, ಈ ನಗರ ಎಲ್ಲ ಗಾತ್ರದ ಜಲ್ಲಿಯ ಬ೦ಡೆಗಳಿ೦ದ ಕೂಡಿದ ಗುಡ್ಡಗಾಡು ಪ್ರದೇಶದಲ್ಲಿ ಇದೆ. ಇಲ್ಲಿರುವ ಒಂದು ಕೊರಕಲಿನ ಮೂಲಕ ತು೦ಗಭದ್ರಾ ನದಿ ಹರಿಯುತ್ತದೆ ಮತ್ತು ಉತ್ತರ ದಿಕ್ಕಿನಲ್ಲಿ ರಕ್ಷಣೆಯನ್ನು ಒದಗಿಸುತ್ತಿತ್ತು. ದೊಡ್ಡ ಜಲ್ಲಿಕಲ್ಲಿನ ಕೋಟೆಗಳು ನಗರದ ಮಧ್ಯಭಾಗವನ್ನು ರಕ್ಷಿಸುತ್ತಿದ್ದವು. ನಾಶವಾದ ಈ ನಗರ ಯುನೆಸ್ಕೋ ಪ್ರಪ೦ಚ ಸ೦ಸ್ಕೃತಿ ಕ್ಷೇತ್ರವಾಗಿ ಮಾನ್ಯತೆ ಪಡೆದಿದೆ. ಚರಿತ್ರೆ ಹಿ೦ದೂ ವಿಜಯನಗರ ಸಾಮ್ರಾಜ್ಯ ೧೩೩೬ ರಲ್ಲಿ ಹಕ್ಕ (ನಂತರ ಹರಿಹರ) ಮತ್ತು ಬುಕ್ಕ (ನಂತರ ಬುಕ್ಕ ರಾಯ) ಎ೦ಬ ಅಣ್ಣತಮ್ಮ೦ದಿರಿ೦ದ ಸ್ಥಾಪಿಸಲ್ಪಟ್ಟಿತ್ತು. ಅವರ ಮೂಲ ಸ್ಥಾನ ಇದೇ ಕ್ಷೇತ್ರದಲ್ಲೇ ಇತ್ತೆ೦ದು ತಿಳಿದುಬ೦ದಿದೆ. ರಾಜಧಾನಿ ಮೊದಲು ಪ್ರಾಯಶಃ ತು೦ಗಭದ್ರಾ ನದಿಯ ಉತ್ತರದಲ್ಲಿ ವಿಠ್ಠಲ ದೇವಸ್ಥಾನದ ಬಳಿ ಇರುವ ಆನೆಗೊ೦ಡಿ ಎ೦ಬ ಗ್ರಾಮದಲ್ಲಿತ್ತು. ಸಾಮ್ರಾಜ್ಯ ಬೆಳೆಯುತ್ತಾ ಸಮೃದ್ಧವಾದ೦ತೆ ರಾಜಧಾನಿಯನ್ನು ತು೦ಗಭದ್ರೆಯ ದಕ್ಷಿಣದಲ್ಲಿರುವ ಹೆಚ್ಚು ಸುರಕ್ಷಿತ ವಿಜಯನಗರಕ್ಕೆ ವರ್ಗಾಯಿಸಲಾಯಿತು. ನಗರ ೧೪ನೇ ಶತಮಾನದಿ೦ದ ೧೬ ನೇ ಶತಮಾನದ ವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು, ವಿಜಯನಗರ ಸಾಮ್ರಾಜ್ಯದ ಶಕ್ತಿಯ ತುಟ್ಟತುದಿಯಲ್ಲಿ. ಇದೇ ಸಮಯದಲ್ಲಿ ಅದು ಕಾಲಕಾಲಕ್ಕೆ ಉತ್ತರ ದಖನ್ ಪ್ರದೇಶದಲ್ಲಿ ಇದ್ದು ಒಟ್ಟಾಗಿ ದಖನ್ ಸುಲ್ತಾನೇಟ್ ಎಂದು ಕರೆಯಲ್ಪಟ್ಟ ಮುಸ್ಲಿಮ್ ರಾಜ್ಯಗಳೊ೦ದಿಗೆ ಘಟ್ಟಿಸುತ್ತಿತ್ತು. ೧೫೬೫ ರಲ್ಲಿ ನಗರ ಅ೦ತಿಮವಾಗಿ ಈ ಸುಲ್ತಾನೇಟ್ಗಳ ಮೈತ್ರಿತ್ವಕ್ಕೆ ಸೋತಿತು ಮತ್ತು ರಾಜಧಾನಿಯನ್ನು ವಶಪಡಿಸಿಕೊಳ್ಳಲಾಯಿತು. ಜಯ ಪಡೆದ ಸೈನಿಕರು ಅನೇಕ ತಿ೦ಗಳುಗಳ ಕಾಲ ವಿಜಯನಗರದಲ್ಲಿ ಕೊಲೆ, ಲೂಟಿ ನಡೆಸಿದರು. ಇದರ ನಂತರವೂ ವಿಜಯನಗರ ಸಾಮ್ರಾಜ್ಯ ಉಳಿದರೂ ಸಹ ಅದು ನಿಧಾನವಾಗಿ ಕೆಳಮುಖವಾಯಿತು. ರಾಜಧಾನಿಯಾಗಿದ್ದ ವಿಜಯನಗರವನ್ನು ಪುನರ್ನಿರ್ಮಾಣ ಮಾಡಲಾಗಲಿಲ್ಲ. ಇ೦ದಿನ ವರೆಗೂ ಅಲ್ಲಿ ಜನವಸತಿಯಿಲ್ಲ. ಅ೦ದಿನ ಮುಸ್ಲಿಮ್ ರಾಜ್ಯಗಳ ಸ೦ಪರ್ಕದ ಪರಿಣಾಮವಾಗಿ ವಿಜಯನಗರದ ಕಟ್ಟಡಗಳಲ್ಲಿ ಮುಸ್ಲಿಮ್ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಕಾಣಬಹುದು. ಪವಿತ್ರ ಕೇ೦ದ್ರ ಹ೦ಪೆ ಗ್ರಾಮದಿ೦ದ ಪೂರ್ವಕ್ಕೆ ಮಾತ೦ಗ ಪರ್ವತದ ವರೆಗೆ ಹಬ್ಬಿರುವ ಪ್ರದೇಶಕ್ಕೆ ಈ ಹೆಸರು. ಕೆಲವರ ಅಭಿಪ್ರಾಯದ೦ತೆ ವಿಠ್ಠಲ ದೇವಸ್ಥಾನದ ಪ್ರದೇಶವೂ ಇದಕ್ಕೆ ಸೇರುತ್ತದೆ. ವಿರೂಪಾಕ್ಷ ದೇವಾಲಯ ಉಳಿದಿರುವ ಈ ದೇವಾಲಯ ಮತ್ತು ಅದರ ಆವರಣ ಹ೦ಪೆ ಗ್ರಾಮದ ಮುಖ್ಯ ಭಾಗ. ಇದಕ್ಕೆ ಪ೦ಪಾಪತಿ ದೇವಸ್ಥಾನ ಎ೦ದೂ ಹೆಸರು. ೧೩ನೇ ಶತಮಾನದಿ೦ದ ೧೭ನೇ ಶತಮಾನದ ನಡುವೆ ಇದನ್ನು ಕಟ್ಟಿ ಬೆಳೆಸಲಾಯಿತು. ಈ ದೇವಸ್ಥಾನದಲ್ಲಿ ಎರಡು ಆವರಣಗಳು ಮತ್ತಿ ಗೋಪುರಗಳು ಇವೆ. ಇದರ ಎದುರು ಇರುವ ರಸ್ತೆ ಪೂರ್ವಕ್ಕೆ ಅರ್ಧ ಮೈಲು ಸಾಗುತ್ತದೆ, ನ೦ದಿಯ ಒಂದು ಶಿಲ್ಪದತ್ತ. ಈ ದೇವಸ್ಥಾನ ಇ೦ದೂ ಸಹ ಉಪಯೋಗದಲ್ಲಿದೆ. ಶಿವನ ಒಂದು ರೂಪವಾದ ವಿರೂಪಾಕ್ಷ ಮತ್ತು ಪ೦ಪಾ ಎ೦ಬ ಸ್ಥಳೀಯ ದೇವತೆಯ ದೇವಾಲಯ ಇದು. ಕೃಷ್ಣ ದೇವಾಲಯ ಇದು ಹ೦ಪೆಯ ದಕ್ಷಿಣದಲ್ಲಿ ಈಗ ಪಾಳು ಬಿದ್ದಿರುವ ದೇವಸ್ಥಾನ. ಒರಿಸ್ಸಾದಲ್ಲಿ ದ೦ಡಯಾತ್ರೆಯ ನಂತರ ಕೃಷ್ಣದೇವರಾಯ ಕಟ್ಟಿಸಿದ ದೇವಾಲಯ. ಇದರ ಕೆಲವು ಭಾಗಗಳು ಮತ್ತು ಆವರಣ ಈಗ ಕುಸಿದಿವೆ. ಉಗ್ರ ನರಸಿ೦ಹ ಹ೦ಪೆಯ ದಕ್ಷಿಣದಲ್ಲೇ ಸುಮಾರು ೨೦ ಅಡಿ ಎತ್ತರದ ಬೃಹತ್ ಗಾತ್ರದ ಕಲ್ಲಿನಲ್ಲಿ ಕೆತ್ತಿದ ವಿಷ್ಣುವಿನ ಉಗ್ರರೂಪವಾದ ಉಗ್ರ ನರಸಿ೦ಹನ ಮೂರ್ತಿ ಇದೆ. ಇದನ್ನು ಇತ್ತೀಚೆಗೆ ಪುನಶ್ಚೇತನಗೊಳಿಸಲಾಗಿದೆ ಮೂರ್ತಿಯ ಮ೦ಡಿಯ ಬಳಿ ಇರುವ ಜಲ್ಲಿಕಲ್ಲಿನ ಪಟ್ಟಿ ಅದಕ್ಕೆ ಭದ್ರತೆಯನ್ನು ಒದಗಿಸುತ್ತದೆ. ಈ ಮೂರ್ತಿಯ ಕೆತ್ತನೆ ಕೃಷ್ಣದೇವರಾಯನಿ೦ದ ಅಥವಾ ಅದೇ ಕಾಲದ ಓರ್ವ ಶ್ರೀಮ೦ತ ವರ್ತಕರಿ೦ದ ಸ೦ದ ಧನಸಹಾಯದಿ೦ದ ಆದದ್ದೆ೦ದು ನ೦ಬಲಾಗಿದೆ. ಕಟ್ಟಿದಾಗ ಮೂರ್ತಿಯ ಮ೦ಡಿಯ ಮೇಲೆ ಒಂದು ಸಣ್ಣ ಲಕ್ಷ್ಮಿಯ ಮೂರ್ತಿ ಸಹ ಇತ್ತು ಇದು ಪ್ರಾಯಶಃ ಲೂಟಿಯ ಪರಿಣಾಮವಾಗಿ ಬಿದ್ದು ಹೋಗಿದೆ. ಈ ಮೂರ್ತಿ ಈಗ ಕಮಲಾಪುರದ ವಸ್ತು ಸ೦ಗ್ರಹಾಲಯದಲ್ಲಿ ಇದೆ. ಸುಗ್ರೀವನ ಗುಹೆ ಇದು ಒಂದು ಪ್ರಾಕೃತಿಕ ಗುಹೆ, ಇಲ್ಲಿಯೇ ಶ್ರೀರಾಮ ಹನುಮ೦ತನನ್ನು ಮತ್ತು ಸುಗ್ರೀವನನ್ನು ಭೇಟಿಯಾದ ಎ೦ಬ ನ೦ಬಿಕೆ ಪ್ರಚಲಿತವಾಗಿದೆ. ಗುಹೆಯಲ್ಲಿ ಬಣ್ಣದ ಗುರುತುಗಳು ಮತ್ತು ತೀರ್ಥಯಾತ್ರಿಗಳ ಗುರುತುಗಳು ಕಾಣಬರುತ್ತವೆ. ಕೋದ೦ಡರಾಮ ದೇವಸ್ಥಾನ ಹ೦ಪೆಯ ಪೂರ್ವಕ್ಕೆ ಇದ್ದು, ಪವಿತ್ರ ಕೇ೦ದ್ರದ ನಡುವೆ ತು೦ಗಭದ್ರೆಯ ಒಂದು ತಟದಲ್ಲಿ ಇರುವ ದೇವಸ್ಥಾನ. ಈ ದೇವಸ್ಥಾನ ಶ್ರೀರಾಮ ಸುಗ್ರೀವನಿಗೆ ಪಟ್ಟ ಕಟ್ಟಿದ ಸ್ಥಳವೆ೦ಬ ಪ್ರತೀತಿ ಇದೆ. ಈ ದೇವಸ್ಥಾನ ಸಹ ಇನ್ನೂ ಉಪಯೋಗದಲ್ಲಿದೆ. ವಿಠ್ಠಲ ದೇವಸ್ಥಾನ ಹಂಪೆಯ ಉತ್ತರ ಪೂರ್ವಕ್ಕೆ, ಆನೆಗೊಂಡಿಯ ಎದುರು ವಿಜಯನಗರದ ಪ್ರಮುಖ ಸ್ಮಾರಕಗಳಲ್ಲೊದಾದ ವಿಜಯವಿಠ್ಠಲ ದೇಗುಲವಿದೆ. ವಿಠ್ಠಲ ಮಹಾರಾಷ್ಟ್ರದಲ್ಲಿ ಪ್ರಚಲಿತವಾಗಿರುವ ವಿಷ್ಣುವಿನ ಒಂದು ರೂಪ. ಇದನ್ನು ೧೬ನೇ ಶತಮಾನದಲ್ಲಿ ಕಟ್ಟಲಾಯಿತೆ೦ದು ನ೦ಬಲಾಗಿದೆ. ಈ ದೇವಸ್ಥಾನದ ಎದುರು ಪ್ರಸಿದ್ಧ ಕಲ್ಲಿನ ರಥವಿದೆ. ಇದೇ ಒಂದು ಪುಟ್ಟ ದೇವಸ್ಥಾನವೂ ಹೌದು, ಒ೦ದೇ ಕಲ್ಲಿನಲ್ಲಿ ಕಡೆಯಲಾಗಿದೆ, ಮತ್ತು ಬೀದಿಗಳಲ್ಲಿ ರಥಯಾತ್ರೆ ಹೊರಡುವ ದೇವಸ್ಥಾನಗಳ ರಥಗಳನ್ನು ಹೋಲುತ್ತದೆ. ಹಿಂದೆ ಇದರ ಮೇಲೆ ಸುಂದರವಾದ ಗೋಪುರ ಇತ್ತು, ಆದರೆ ಇಂದು ಅದು ಇಲ್ಲದಂತಾಗಿ ಈ ಕಲ್ಲಿನ ರಥದ ಕಳೆಗುಂದಿದೆ. ರಾಜ ಕೇ೦ದ್ರ ಈ ವಿಶಾಲ ಪ್ರದೇಶ ಹ೦ಪೆಯ ದಕ್ಷಿಣಪೂರ್ವದಲ್ಲಿ ೨ ಕಿಮೀ ದೂರದಲ್ಲಿ ಆರ೦ಭವಾಗಿ ಸುಮಾರು ಕಮಲಾಪುರಮ್ ಗ್ರಾಮದ ವರೆಗೆ ಹಬ್ಬಿದೆ. ಈ ಪ್ರದೇಶದಲ್ಲಿ ಅರಮನೆಗಳ ಅವಶೇಷಗಳು, ಆಡಳಿತ ಕಟ್ಟಡಗಳು ಮತ್ತು ರಾಜಮನೆತನಕ್ಕೆ ನೇರವಾಗಿ ಸ೦ಬ೦ಧಪಟ್ಟ ಕೆಲವು ದೇವಸ್ಥಾನಗಳಿವೆ. ಅಡಿಪಾಯಗಳನ್ನು ಬಿಟ್ಟರೆ ಅರಮನೆಗಳ ಹೆಚ್ಚು ಅವಶೇಷಗಳು ಉಳಿದಿಲ್ಲ ಮುಖ್ಯವಾಗಿ ಅರಮನೆಗಳು ಮರದ ದಿಮ್ಮಿಗಳಿ೦ದ ಕಟ್ಟಲ್ಪಟ್ಟಿದ್ದರಿ೦ದ. ದೇಗುಲಗಳು ಮತ್ತಿತರ ಕಲ್ಲಿನ ಕಟ್ಟಡಗಳು ಉಳಿದಿವೆ, ಸುತ್ತಲ ಕೋಟೆ ಗೋಡೆಗಳೊ೦ದಿಗೆ. ರಾಮಚ೦ದ್ರ ದೇವಸ್ಥಾನ ರಾಮನ ಅನೇಕ ಪ್ರತಿಮೆಗಳು ಕ೦ಡುಬರುವುದರಿ೦ದ ಇದಕ್ಕೆ ಹಜಾರರಾಮ ದೇವಸ್ಥಾನ ಎ೦ದೂ ಹೆಸರು (ಸಾವಿರ ರಾಮರ ದೇವಸ್ಥಾನ).ಇದು ಹ೦ಪೆಯ ದಕ್ಷಿಣಪೂರ್ವದಲ್ಲಿ ರಾಜಕೇ೦ದ್ರದಲ್ಲಿ ಇದೆ. ಭೂಗತ ದೇವಸ್ಥಾನ ಇದಕ್ಕೆ ಸಹ ವಿರೂಪಾಕ್ಷ ದೇವಾಲಯ ಎಂದು ಹೆಸರು. ಈ ವಿಶಾಲ ದೇಗುಲ ಉತ್ಖನನ ನಡೆಸಿದ ಪ್ರದೇಶದಲ್ಲಿ ನಿ೦ತಿದೆ, ಮಣ್ಣಿನ ಗೋಡೆಗಳಿ೦ದ ಸುತ್ತುವರಿದು. ಲೋಟಸ್ ಮಹಲ್ ಇದು ಮಹಾರಾಣಿಯವರ ಅರಮನೆಯಾಗಿತ್ತು. ಇದರಲ್ಲಿ ಹರಿಯುವ ನೀರಿನ ಸೌಕರ್ಯವನ್ನೊಳಗೊ೦ಡ೦ತೆ ಅನೇಕ ವಿಶೇಷ ಪರಿಸರ ನಿಯ೦ತ್ರಣ ಉಪಕರಣಗಳಿವೆ. ಪುಷ್ಕರಿಣಿ ಇದು ಒಂದು ಮೆಟ್ಟಲುಗಳುಳ್ಳ ವಿಶಾಲವಾದ ಬಾವಿ, ಸ್ನಾನ ಮಾಡುವುದಕ್ಕೆ ರಚಿಸಲಾದದ್ದು. ಹಗಲಿನ ಬಿಸಿಲಿನ ಬೇಗೆಯಿ೦ದ ಈ ರೀತಿಯ ಬಾವಿಗಳು ಆರಾಮವನ್ನು ತರುತ್ತಿದ್ದವು. ನಗರದಲ್ಲಿ ಜನವಸತಿಯಿದ್ದಾಗ ಪ್ರಾಯಶಃ ಈ ಬಾವಿ ಶಾಮಿಯಾನಗಳಿ೦ದ ಆವೃತವಾಗಿರುತ್ತಿತ್ತು. ಆನೆ ಲಾಯಗಳು ವಿಶಾಲವಾದ ಆನೆಲಾಯಗಳ ಗು೦ಪು ರಾಜಮನೆತನದ ಆನೆಗಳನ್ನು ಸಾಕುವುದಕ್ಕೆ ಮೀಸಲಾಗಿತ್ತು. ಈ ಲಾಯಗಳ ಎದುರು ಇದ್ದ ಪ್ರದೇಶ ಆನೆಗಳ ಮತ್ತು ಸೈನಿಕರ ಪ್ರಭಾತಭೇರಿಗಾಗಿ ಉಪಯೋಗಿಸಲ್ಪಡುತ್ತಿತ್ತು. ಇತಿಹಾಸ ಐತಿಹಾಸಿಕ ಸ್ಥಳಗಳು ಸಂಸ್ಕೃತಿ ಪ್ರವಾಸೋದ್ಯಮ ವಿಶ್ವ ಪರಂಪರೆಯ ತಾಣಗಳು
ಎನ್.ಆರ್.ನಾರಾಯಣ ಮೂರ್ತಿ (ನಾಗವಾರ ರಾಮರಾವ್ ನಾರಾಯಣಮೂರ್ತಿ) ಭಾರತದ ಉದ್ಯಮಿ ಹಾಗು ಹೆಸರಾಂತ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಇನ್ಫೋಸಿಸ್ ನ ಸಹ ಸಂಸ್ಥಾಪಕರು. ಸುಮಾರು ಇಪ್ಪತ್ತು ವರ್ಷಗಳ ಕಾಲ ಆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ನಿರ್ವಹಿಸಿದ ಇವರು, ಈಗ ಇನ್ಫೋಸಿಸ್ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ, ಹಾಗು ಹಿತಚಿಂತಕ ಅಧಿಕಾರಿಯಾಗಿದ್ದಾರೆ. ಭಾರತವು ವಿಶ್ವ ಮಾಹಿತಿ ತಂತ್ರಜ್ಞಾನ ಭೂಪಟದಲ್ಲಿ ಪ್ರಕಟವಾಗುವಂತೆ ಮಾಡಿದವರಲ್ಲಿ ಅಗ್ರಜರು ಎಂದು ಕರೆಯಲ್ಪಡುವ ಇವರು, ಹಲವಾರು ಉದ್ಯಮ ಸಂಸ್ಥೆಗಳು ಸರ್ಕಾರಿ ಸಂಸ್ಥೆಗಳು ಮತ್ತು ಉನ್ನತ ವಿದ್ಯಾಸಂಸ್ಥೆಗಳ ನಿರ್ವಾಹಕ ಮಂಡಳಿಗಳ ಸದಸ್ಯರಾಗಿದ್ದಾರೆ. ಜೀವನ ಮತ್ತು ವೃತ್ತಿ ೨೦ನೇ ಆಗಸ್ಟ್ ೧೯೪೬ರಲ್ಲಿ ಮೈಸೂರಿನಲ್ಲಿ ಜನಿಸಿದರು. ೧೯೬೭ರಲ್ಲಿ ಮೈಸೂರಿನ ರಾಷ್ಟ್ರೀಯ ತಂತ್ರಜ್ಞಾನ ವಿದ್ಯಾಸಂಸ್ಥೆ(ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)ಯಿಂದ ಎಲಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದ ಅವರು ತದನಂತರ ೧೯೬೯ರಲ್ಲಿ ಕಾನ್ಪುರದ ಭಾರತೀಯ ತಂತ್ರಜ್ಞಾನ ವಿದ್ಯಾಸಂಸ್ಥೆ(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ)ಯಿಂದ ಸ್ನಾತಕೋತ್ತರ ಪದವಿ ಪಡೆದರು. ಶ್ರೀಯುತರು ತಮ್ಮ ಸೇವಾಕೆಲಸವನ್ನು ಪುಣೆಯ ಪಾಟ್ನಿ ಕಂಪ್ಯುಟರ್ ಸಿಸ್ಟಮ್ಸ್ನಲ್ಲಿ ಪ್ರಾರಂಭಿಸಿದರು. ಪುಣೆಯಲ್ಲಿರುವಾಗಲೆ ಇವರ ಸಂಪರ್ಕ ತಮ್ಮ ಭಾವಿ ಪತ್ನಿ ಸುಧಾರೊಂದಿಗೆ(ಖ್ಯಾತ ಬರಹಗಾರ್ತಿ ಹಾಗು ಸಮಾಜ ಸೇವಕಿ) ಬೆಳೆಯಿತು. ೨ನೇ ಜುಲೈ ೧೯೮೧ರಲ್ಲಿ ನಾರಾಯಣಮೂರ್ತಿ ಅವರು ಇತರ ಐವರೊಡನೆ (ನಂದನ್ ನಿಲೇಕಣೆ , ಕ್ರಿಸ್ ಗೋಪಾಲಕೃಷ್ಣನ್, ಶಿಬುಲಾಲ್, ದಿನೇಶ್, ಮೋಹನದಾಸ್ ಪೈ) ಸೇರಿ ಕೇವಲ ೧೦,೦೦೦ ರುಪಾಯಿ ಬಂಡವಾಳದೊಂದಿಗೆ ಇನ್ಫೋಸಿಸ್ ಸ್ಥಾಪಿಸಿದರು. ಇಂದು ಇನ್ಫೋಸಿಸ್ ೧,೦೦,೦೦೦ಕ್ಕೂ ಮೇಲ್ಪಟ್ಟು ಉದ್ಯೊಗಿಗಳು ಮತ್ತು ಹಲವು ರಾಷ್ಟ್ರಗಳಲ್ಲಿ ಕಛೇರಿಗಳು ಹೊಂದಿ, ವಿಶ್ವಾದಾದ್ಯಂತ ಮಾಹಿತಿ ತಂತ್ರಜ್ಞಾನ ಮತ್ತು ಸಂಬಂಧಿತ ಸೇವೆಗಳನ್ನು ಒದಗಿಸುತ್ತಿದೆ. ನಾರಾಯಣಮೂರ್ತಿಯವರ ದೂರದೃಷ್ಟಿ, ಉತ್ತಮ ನಿರ್ವಾಹಣಾ ನೈಪುಣ್ಯ ಮತ್ತು ದಿಟ್ಟ ನಾಯಕತ್ವ ಇನ್ಫೋಸಿಸ್ ಈ ಮಟ್ಟಕ್ಕೆ ಬೆಳೆಯಲು ಕಾರಣ ಅಂದರೆ ತಪ್ಪಾಗಲಾರದು. ಮಾರ್ಚ್ ೨೦೦೨ರವರೆಗೂ ಇನ್ಫೋಸಿಸ್ ಸಂಸ್ಥೆಯ ಕಾರ್ಯಾಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಗಿದ್ದ ನಾರಾಯಣಮೂರ್ತಿ ತದನಂತರ ಅಧಿಕಾರವನ್ನು ನಂದನ್ ನಿಲೇಕಣಿಯವರಿಗೆ ಹಸ್ತಾಂತರಿಸಿ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಮತ್ತು ಹಿತಚಿಂತಕ ಅಧಿಕಾರಿಯ ಹುದ್ದೆ ಅಲಂಕರಿಸಿದ್ದರು. ಆಗಸ್ಟ್ ೧೯ ೨೦೧೧ ರಂದು ತಮ್ಮ ೬೫ನೆ ವರ್ಷದಂದು ಅದ್ಯಕ್ಷ ಸ್ಥಾನದಿಂದ ನಿವೃತ್ತಿ ಹೊಂದಿದರು. ವಿದ್ಯಾರ್ಹತೆ ಮತ್ತು ಹುದ್ದೆಗಳು ನಾರಾಯಣಮೂರ್ತಿ ಅಹ್ಮದಾಬಾದಿನ ಭಾರತೀಯ ವ್ಯವಸ್ಥಾಪನ ವಿದ್ಯಾಸಂಸ್ಥೆ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್) ಮತ್ತು ಬೆಂಗಳೂರಿನ ಭಾರತೀಯ ಮಾಹಿತಿ ತಂತ್ರಜ್ಞಾನ ವಿದ್ಯಾಸಂಸ್ಥೆ(ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ)ಗಳ ನಿರ್ವಾಹಕ ಮಂಡಳಿಯ ಅಧ್ಯಕ್ಷರು ಕೂಡ. ಇವಲ್ಲದೆ ಶ್ರೀಯುತರು ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದ ವಾರ್ಟನ್ ಶಾಲೆಯ ಉಸ್ತುವಾರಿ ಮಂಡಳಿಯ ಸದಸ್ಯರಾಗಿ, ಕಾರ್ನೆಲ್ ವಿಶ್ವವಿದ್ಯಾಲಯದ ವಿಶ್ವಸ್ತ ಮಂಡಳಿಯ ಸದಸ್ಯರಾಗಿ, ಸಿಂಗಪುರದ ಸಿಂಗಾಪುರ ವ್ಯವಸ್ಥಾಪನ ವಿಶ್ವವಿದ್ಯಾಲಯದ ವಿಶ್ವಸ್ಥ ಮಂಡಳಿಯ ಸದಸ್ಯರಾಗಿ, ಟಕ್ ಸ್ಕೂಲ್ ಆಫ್ ಬಿಜಿನೆಸ್ಸ್ನ ವಿಲಿಯಂ ಎಫ್. ಆಕ್ಟ್ಮೇಯರ್ ಜಾಗತಿಕ ನಾಯಕತ್ವ ಕೇಂದ್ರದ ಸಲಹೆಗಾರರ ಮಂಡಳಿಯ ಸದಸ್ಯರಾಗಿ, ಸ್ಟಾನ್ಫೊರ್ಡ್ ಗ್ರ್ಯಾಜುಯೆಟ್ ಸ್ಕೂಲ್ ಆಪ್ ಬಿಜಿನೆಸ್ಸ್ನ ಸಲಹೆಗಾರರ ಮಂಡಳಿಯ ಸದಸ್ಯರಾಗಿ ಮತ್ತು ಯಾಲೆ ವಿಶ್ವವಿದ್ಯಾಲಯದ ಅಧ್ಯಕ್ಷರ ಅಂತರಾಷ್ಟ್ರೀಯ ಚಟುವಟಿಕೆಗಳ ಮಂಡಳಿಯ ಸದಸ್ಯರಾಗಿಯೂ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತೀಯ ಪ್ರತಿಭೂತಿ ಮತ್ತು ವಿನಿಮಯ ಮಂಡಳಿ(ಸೇಬಿ) ನಿಯೋಜಿಸಿದ ನಿಗಮ ಆಡಳಿತ ಆಯೋಗದ ಅಧ್ಯಕ್ಷತೆಯನ್ನು ಒಮ್ಮೆ ಶ್ರೀಯುತರು ವಹಿಸಿದ್ದರು. ನಾರಾಯಣಮೂರ್ತಿಯವರು ಸಿಂಗಾಪುರದ ಡಿಬಿಎಸ್ ಬ್ಯಾಂಕಿನ ಸ್ವತಂತ್ರ ನಿರ್ದೇಶಕರು, ಭಾರತೀಯ ರಿಸರ್ವ್ ಬ್ಯಾಂಕಿನ ಕೇಂದ್ರ ಮಂಡಳಿಯಲ್ಲಿ ನಿರ್ದೇಶಕರಾಗಿ, ಭಾರತೀಯಬ್ರಿಟೀಷ್ ಮೈತ್ರಿಕೂಟದ ಜಂಟಿ ಅಧ್ಯಕ್ಷರಾಗಿ, ಭಾರತದ ಪ್ರಧಾನ ಮಂತ್ರಿಗಳ ವಾಣಿಜ್ಯ ಮತ್ತು ಉದ್ಯಮ ಮಂಡಳಿಯ ಸದಸ್ಯರಾಗಿ, ಪ್ರಸಿದ್ದ ಟಿವಿ ಸಮಾಚಾರ ಬಿತ್ತರಿಸುವ ಸಂಸ್ಥೆಯಾದ ನ್ಯೂ ಡೆಲ್ಲಿ ಟೆಲಿವಿಜನ್ ನಿಯಮಿತ ಸಂಸ್ಥೆಯ ನಿರ್ದೇಶಕರಾಗಿ ಮತ್ತು ಅನೇಕ ಏಶಿಯಾದ ರಾಷ್ಟ್ರಗಳಿಗೆ ಮಾಹಿತಿ ತಂತ್ರಜ್ಞಾನ ಸಲಹೆಗಾರರಾಗಿಯೂ ಕೂಡ ಕಾರ್ಯ ನಿರ್ವಹಿಸುತ್ತಿದ್ದಾರೆ. ಪರಿವಾರ ನಾರಾಯಣ ಮೂರ್ತಿಯವರ ಪತ್ನಿ, ಸುಧಾಮೂರ್ತಿ, ಹುಬ್ಬಳ್ಳಿಯ ಬಿ.ವಿ.ಭೂಮರೆಡ್ಡಿ ಕಾಲೇಜ್ ಆಫ್ ಇಂಜಿನಿಯರಿಂಗ್ ನಿಂದ ಬಿ.ಇ. (ಎಲೆಕ್ಟ್ರಿಕಲ್ ಇಂಜಿನಿಯರಿಂಗ್) ಪದವೀಧರೆ. ಆ ಕಾಲೇಜಿನಿಂದ ಅವರು ಪ್ರಥಮರಾಗಿ ಉತ್ತೀರ್ಣಹೊಂದಿ, ಕರ್ನಾಟಕದ ಮುಖ್ಯಮಂತ್ರಿಗಳಿಂದ ಚಿನ್ನದ ಪದಕಗಳಿಸಿದರು. ಮುಂದೆ, ಬೆಂಗಳೂರಿನ ಪ್ರತಿಷ್ಠಿತ, ಇಂಡಿಯನ್ ಇನ್ ಸ್ಟಿ ಟ್ಯೂಟ್ ಆಫ್ ಸೈನ್ಸ್ ನಿಂದ ಎಮ್.ಇ.(ಕಂಪ್ಯೂಟರ್ ಸೈನ್ಸ್ ನಲ್ಲಿ) ಗಳಿಸಿದರು. ಅಲ್ಲೂ ತಮ್ಮ ಕಕ್ಷದಲ್ಲೇ ಪ್ರಥಮರಾಗಿ ಉತ್ತೀರ್ಣರಾದದ್ದಲ್ಲದೆ, ಇಂಡಿಯನ್ ಇನ್ ಸ್ಟಿ ಟ್ಯೂಟ್ ಆಫ್ ಇಂಜಿನಿಯರ್ಸ್ ಸಂಸ್ಥೆಯಿಂದ ಚಿನ್ನದ ಪದಕ ಗಳಿಸಿದರು. ನಂತರ, ಇನ್ಫೋಸಿಸ್ ಫಂಡೇಶನ್ ವತಿಯಿಂದ ಸಾಮಾಜಿಕ ಕಾರ್ಯಕರ್ತೆಯಾಗಿ ದುಡಿಯುತ್ತಿದ್ದಾರೆ. ಸುಧಾ ಮೂರ್ತಿಯವರು, ಹಲವಾರು ಪುಸ್ತಕಗಳ ಲೇಖಕಿ. ಮೂರ್ತಿ ದಂಪತಿಗಳಿಗೆ ಇಬ್ಬರು ಮಕ್ಕಳು. ಡಾ. ರೋಹನ್ ಮೂರ್ತಿ, ಮಗ, ಅಕ್ಷತಾ ಮೂರ್ತಿ, ಮಗಳು, ರೋಹನ್, ಹಾರ್ವರ್ಡ್ ವಿಶ್ವವಿದ್ಯಾಲಯದ ಸೊಸೈಟಿ ಆಫ್ ಫೆಲೋಸ್, ಜೂನಿಯರ್ ಫೆಲೊ ಆಗಿದ್ದಾರೆ. ೧ ಜೂನ್,೨೦೧೩, ರಲ್ಲಿ ಅವರು ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಗೆ, ತಂದೆಯವರಿಗೆ ಸಹಾಯಕ ಎಕ್ಸಿ ಕ್ಯುಟೀವ್ ಆಗಿ ಪಾದಾರ್ಪಣೆ ಮಾಡಿದರು. ೧೪, ಜೂನ್ ೨೦೧೪, ನಲ್ಲಿ ಕಂಪೆನಿಗೆ ರಾಜೀನಾಮೆ ನೀಡಿದರು. ಅಕ್ಷತಾ, ಅಮೆರಿಕದ, ಸ್ಟಾನ್ಫರ್ಡ್ ಬಿಸಿನೆಸ್ ಸ್ಕೂಲ್ ನಿಂದ, ಎಮ್.ಬಿ.ಎ. ಮುಗಿಸಿದ್ದಾಳೆ. ಲಂಡನ್ ನಗರದಲ್ಲಿ ಸ್ಥಾಪಿಸಲಾಗುವ ಮಹಾತ್ಮಗಾಂಧಿಯವರ ಪ್ರತಿಮೆ ಲಂಡನ್ ನಲ್ಲಿ ಸಂಸತ್ ಚೌಕದಲ್ಲಿ ಸ್ಥಾಪಿಸಲಾಗುವ ಮಹಾತ್ಮಗಾಂಧಿ ಪ್ರತಿಮೆಗೆ ಎನ್.ಆರ್.ನಾರಾಯಣಮೂರ್ತಿ ಪರಿವಾರದವರು, ೧.೮೫ ಕೋಟಿ ರೂಪಾಯಿಗಳ ದೇಣಿಗೆ ಕೊಟ್ಟಿದ್ದಾರೆ.ಒಟ್ಟಾರೆ ೭.೫ ಲಕ್ಷ ಪೌಂಡ್ ಖರ್ಚಿನಲ್ಲಿ ಸಿದ್ಧಪಡಿಸಲಾಗುವ ಪ್ರತಿಮೆಯ ಸ್ಥಾಪನೆಯ ಜವಾಬ್ದಾರಿಯನ್ನು ಟ್ರಸ್ಟ್ ನ ಧರ್ಮದರ್ಶಿ, ಅರ್ಥ ಶಾಸ್ತ್ರಜ್ಞ, ಲಾರ್ಡ್ ಮೇಘನಾದ್ ದೇಸಾಯಿ ವಹಿಸಿಕೊಂಡಿದ್ದಾರೆ. ಇನ್ಫೊಸಿಸ್ ಕಂಪೆನಿಯ ಹೊಸ ಸಿ.ಇ.ಒ. ಆಗಿ, ಸಲೀಲ್ ಪರೇಖ್ ೨,ಜನವರಿ,೨೦೧೮ ರಂದು ನಿಯುಕ್ತರಾದರು. ಪ್ರಶಸ್ತಿಗಳು ಪದ್ಮಶ್ರೀ ೨೦೦೦ ಟೈಮ್ ಪತ್ರಿಕೆಯ ಗ್ಲೋಬಲ್ ಟೆಕ್ ಇನ್ಫ್ಲೂಯನ್ಶಿಯಲ್ ಪಟ್ಟಿಯಲ್ಲಿ (ಆಗಸ್ಟ್ ೨೦೦೪)ಸೇರ್ಪಡೆ. ಭಾರತಫ್ರಾಂಸ್ ಫೋರಮ್ ಪದಕ (ಇಸವಿ ೨೦೦೩) ಅರ್ನ್ಸ್ಟ್ ಆಂಡ್ ಯಂಗ್ ಸಂಸ್ಥೆಯಿಂದ ೨೦೦೩ನೆ ಇಸವಿಯ ವಿಶ್ವದ ಶ್ರೇಷ್ಟ ಉದ್ಯಮಿ (ವರ್ಲ್ಡ್ ಆಂಟರ್ಪರ್ನರ್ ಆಫ್ ದ ಇಯರ್)ಪ್ರಶಸ್ತಿ. ಫಾರ್ಚ್ಯೂನ್ ಪತ್ರಿಕೆಯಿಂದ ೨೦೦೩ನೆ ಇಸವಿಯ ಏಷಿಯಾದ ಶ್ರೇಷ್ಟ ಉದ್ಯಮಿ ಪ್ರಶಸ್ತಿ. ೨೦೦೧ರಲ್ಲಿ ಟೈಮ್ಸಿ ಎನ್ ಎನ್ ೨೫ ಅತಿ ಪ್ರಭಾವಶಾಲಿ ಜಾಗತಿಕ ಕಾರ್ಯನಿರ್ವಹಣಾಧಿಕಾರಿಗಳ ಪಟ್ಟಿಯಲ್ಲಿ ಸೇರ್ಪಡೆ. ಮ್ಯಾಕ್ಸ್ ಶ್ಮಿಡೇನಿ ಲಿಬರ್ಟಿ ೨೦೦೧ ಪ್ರಶಸ್ತಿ. (ಸ್ವಿಟ್ಜರ್ಲ್ಯಾಂಡ್). ಬಿಜಿನೆಸ್ಸ್ ವೀಕ್ ಪತ್ರಿಕೆಯ ಸ್ಟಾರ್ ಆಫ್ ಏಷಿಯಾ ಪ್ರಶಸ್ತಿ (ಸತತ ಮೂರು ವರ್ಷ ೧೯೯೮, ೧೯೯೯ ಮತ್ತು ೨೦೦೦) ಭಾರತದ ೯ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ೧೯೯೬೯೭ರ ಜೆ ಆರ್ ಡಿ ಟಾಟ ಕಾರ್ಪೊರೇಟ್ ಲೀಡರ್ ಶಿಪ್ ಪ್ರಶಸ್ತಿ ಪದ್ಮ ವಿಭೂಷಣ ೨೦೦೮ ೨೦೧೪ ರ ಬಸವಪ್ರಶಸ್ತಿ ವಿಜೇತರು. ಕಾನ್ಪುರ್ ಐಐಟಿಯಿಂದ ಪ್ರತಿಷ್ಠಿತ ವಿದ್ಯಾರ್ಥಿಯ ಗೌರವ ಪ್ರಶಸ್ತಿ. ಉಲ್ಲೇಖಗಳು ಬಾಹ್ಯ ಸಂಪರ್ಕಗಳು ಮೂರ್ತಿಯವರ ಪತ್ರಅವರ ಕಂಪೆನಿ ಕೆಲಸಗಾರರಿಗೆ ನಿವೃತ್ತಿಯ ನಂತರ ಮತ್ತೆ ವಾಪಸ್ ಮೂರ್ತಿ ನಾರಾಯಣ ಮೂರ್ತಿ ಪರಿಚಯಮೂರ್ತಿ ಮೂರ್ತಿಪರಿಚಯ ಸಿ.ಎನ್.ಬಿ.ಸಿ.ಮೂರ್ತಿ ಹಾರ್ಮೊನಿ ಇಂಡಿಯ ನಾರಾಯಣ ಮೂರ್ತಿ ಪದ್ಮ ವಿಭೂಷಣ ಶ್ರೀ.ನಾರಾಯಣ ಮೂರ್ತಿ 2014 , 2015 : , 15, 2017, , 4, , 2017, : .18. ಉದ್ಯಮಿಗಳು ಭಾರತೀಯ ಉದ್ಯಮಿಗಳು ಮಾಹಿತಿ ತಂತ್ರಜ್ಞಾನ ಉದ್ಯಮಿಗಳು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
ಹುಬ್ಬಳ್ಳಿಗೆ ೧೨ ಮೈಲಿದೂರದಲ್ಲಿರುವ,ಕುಂದಗೋಳ,ಜಮಖಂಡಿ ಸಂಸ್ಥಾನಕ್ಕೆ ಸೇರಿತ್ತು. ಅಲ್ಲಿನ ಆಡಳಿತ ಭಾಷೆ ಮರಾಠಿ. ಇಂತಹ ಪರಿಸರದಲ್ಲಿ ಹಿಂದೂಸ್ತಾನೀ ಸಂಗೀತದಲ್ಲಿ ದೇಶದ ಮನೆಮಾತಾಗಿ ಪ್ರಸಿದ್ಧರಾಗಿದ್ದ, ಸವಾಯಿ ಗಂಧರ್ವರು,ಜನಿಸಿದರು. ಅವರ ಬಾಲ್ಯದ ಹೆಸರು, ರಾಮಚಂದ್ರ ಗಣೇಶ ಕುಂದಗೋಳಕರ್, ಎಂದು. ಅವರ ತಂದೆ, ಗಣೇಶರಾವ್ ಹತ್ತಿರದ ಸಂಶಿಊರಿನಲ್ಲಿ ಜನಿಸಿದವರು. ತಾಯಿ, ಧಾರವಾಡದ ಹತ್ತಿರದ ಅಮ್ಮಿನಹಾಳ್ನವರು. ಜನವರಿ, ೧೯, ೧೮೮೬ ರಲ್ಲಿ ಜನಿಸಿದರು. ಗಣೇಶರಾವ್, ಬೆನಕನ ಹಳ್ಳಿಯ ನಾಡಿಗೇರ ರಂಗನಗೌಡರ ಬಳಿ ಕಾರಕೂನಿಕೆ ಮಾಡುತ್ತಿದ್ದರು. ಅವರಿಗೂ ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿ. ಬಾಲ್ಯದ ದಿನಗಳಲ್ಲಿ ರಾಮಚಂದ್ರ ಗಣೇಶರು, ಸ್ವಾಗತ ಗೀತೆ, ಪಲ್ಲಕ್ಕಿ ಸೇವೆಯ ಸಮಯದಲ್ಲಿ ಭಜನೆ ಹಾಡು, ಮುಂತಾದವುಗಳನ್ನು ಹಾಡುತ್ತಿದ್ದರು. ಬಾಲ್ಯ,ಶಿಕ್ಷಣ ಪ್ರಾಥಮಿಕ ಶಿಕ್ಷಣ ಹಳ್ಳಿಯಲ್ಲೇ ನಡೆಯಿತು. ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಹೈಸ್ಕೂಲ್ ನಲ್ಲಿ. ಪ್ರತಿದಿನವೂ ರೈಲಿನಲ್ಲಿ ಹೋಗಿಬರಬೇಕು. ಆದರೆ ಇದು ಹೆಚ್ಚುದಿನ ಸಾಗಲಿಲ್ಲ. ತಾಯಿಯ ಮರಣದಿಂದಾಗಿ, ಚಿಕ್ಕಮ್ಮನ ಆಸರೆಯಲ್ಲಿ, ನಾಡಿಗೇರವಾಡಿಯಲ್ಲೇ ಬೆಳೆದರು. ಕಿರಾಣೆಘರಾನದ ಗಾಯಕ, ಅಬ್ದುಲ್ ಕರೀಂ ಖಾನರ ಭೈರವಿ ರಾಗದಲ್ಲಿ ಹಾಡಿದ, ಜಮುನಾಕೆ ತೀರ್ ಎಂಬ ಗೀತೆ ಅವರ ಹೃದಯದಲ್ಲಿ ಅಚ್ಚೊತ್ತಿತು.ಕಿರಾಣಾ ಘರಾಣೆಯ ಆದ್ಯ ಪ್ರವರ್ತಕರಾದ ಉಸ್ತಾದ ಅಬ್ದುಲ್ ಕರೀಮ್ ಖಾನ್. . ಖಾನಸಾಹೇಬರು ಕುಂದಗೋಳಕ್ಕೆ, ತಮ್ಮ ಶಿಷ್ಯರಾದ ನಾನಾಸಾಹೇಬ ನಾಡಗೇರರಲ್ಲಿ ಆಗಾಗ್ಗೆ ಬರುತ್ತಿದ್ದರು. ಅಲ್ಲಿಯೆ ಅವರಿಗೆ ರಾಮಭಾವುರವರ ಪರಿಚಯವಾಗಿ ಅವರಿಗೆ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ದೀಕ್ಷೆ ಕೊಟ್ಟರು ಅಕ್ಕಪಕ್ಕದಲ್ಲಿ ಓಡಾಡುತ್ತಿದ್ದ ಬಾಲಕನ ಸಂಗೀತಾಸಕ್ತಿಯನ್ನು ಕಂಡು,ಖಾನ್ ಸಾಹೇಬರು ಅವನನ್ನು ತಮ್ಮ ಜೊತೆಯಲ್ಲಿ ಮಿರಜ್ ಗೆ ಕರೆದುಕೊಂಡು ಹೋದರು. ಅಂದಿನ ದಿನಗಳಲ್ಲಿ ಕೆಲವು ಸಂಗೀತ ಪರಂಪರೆಗಳು ಪ್ರಖ್ಯಾತವಾಗಿದ್ದವು.(ಘರಾಣೆಗಳು) ಆಗ್ರಾ, ಕಿರಾಣೆ, ಜೈಪುರ, ಗ್ವಾಲಿಯರ್, ಪಾಟಿಯಾಲಾ, ಇಂದೋರ್ ಮುಂತಾದವುಗಳು ಕಿರಾಣೆ ಘರಾನ, ಸ್ವರ ಪ್ರಧಾನವಾದ ಘರಾನ. ಆಗ್ರಘರಾನ, ಲಯಕ್ಕೆ ಪ್ರಾಮುಖ್ಯತೆ ಕೊಡುತ್ತಿತ್ತು. ಇತರೆ ಘರಾನಗಳು,ಎರಡೂ ಅಂಶಗಳನ್ನು ಸಾಮರಸ್ಯ ಮಧ್ಯದಲ್ಲಿವೆ. ಅಬ್ದುಲ್ ಕರೀಂ ಖಾನ್ ಕರೀಂ ಖಾನ್, ದಿಲ್ಲಿಯ ಹತ್ತಿರದ ಕಿರಾನಾ ಹಳ್ಳಿಯಲ್ಲಿ ಜನಿಸಿದ್ದರು. ಕಾಲಾಂತರದಲ್ಲಿ ಮಿರಜ್ ನಲ್ಲಿ ಬಂದು ನೆಲೆಸಿದರು. ಖಾನರು ಸಂಗೀತ ಪ್ರಸಾರಕ್ಕಾಗಿ ಮಿರಜ್, ಪುಣೆ, ಮೈಸೂರ್, ಬೆಳಗಾವಿ ಆರ್ಯ ಸಂಗೀತ ವಿದ್ಯಾಲಯವೆಂಬ ಹೆಸರಿನ ಶಾಲೆಯನ್ನು ನಡೆಸುತ್ತಿದ್ದರು. ಅವರ ಶಿಷ್ಯೆ, ನಂತರ ಹೆಂಡತಿಯಾದ, ತಾರಾಬಾಯಿ ಪ್ರಾಚೀನ ಪರಂಪರೆಯ ಶೈಲಿಯ ಗುರುಕುಲ, ಪ್ರಶಿಷ್ಯರೂ ೮ ವರ್ಷ ಖಡ್ಡಾಯವಾಗಿ ಅಲ್ಲಿ ಶಿಕ್ಷಣವನ್ನು ಹೊಂದಲೇಬೇಕೆಂಬ ಕರಾರಿಗೆ ಸಹಿಹಾಕಬೇಕಾಗಿತ್ತು. ಗುರುಗಳಿಗೆ ಶೃತಿ ತಂಬೂರಿ ಮೀಟುತ್ತಾ ಗಂಟೆಗಟ್ಟಲೆ ಸಂಗೀತವನ್ನು ಅವಲೋಕಿಸುವ ಅವಕಾಶವನ್ನು ಸದುಪಯೋಗಗೊಳಿಸಿದರು. ನಿಧಾನವಾಗಿ ಸ್ವರಬೆರೆಸುವ ಆರಂಭವಾಯಿತು.ಸಂಗೀತ ಶಿಕ್ಷಣದ ಪದ್ಧತಿ ವಿಶಿಷ್ಟವಾಗಿತ್ತು. ಪ್ರಾತಃ, ಅಪರಾನ್ಹ, ಸಾಯಂಕಾಲ ೩ ಮುಖ್ಯ ರಾಗಗಳ, ತೋಡಿ, ಮುಲ್ತಾನಿ, ಪೂರಿಯಾ ಮಾತ್ರ ಪೂರಿಯ ರಾಗದ ಪಾಠ ಒಂದು ವರ್ಷ ಪರಿಶ್ರಮ , ನಿಷ್ಠೆ, ಶ್ರದ್ಧೆ ಮತ್ತು ಗುರುದಕ್ಷ್ಣಿಣೆ, ಈ ಮೂರು ರಾಗಗಳ ಬುನಾದಿಯಮೇಲೆ ಕಲ್ಪನಾಶಕ್ತಿ ನೂರಾರು ರಾಗರಾಗಿಣಿಗಳ ತಮ್ಮದಾಗಿರಿಸಿಲೊಂಡರು.ಸಂಗೀತ ಶಿಕ್ಷಣದ ನಂತರ ರಾಮಭಾವು ಹೊಟ್ಟೆಪಾಡಿಗಾಗಿ ಮರಾಠಿ ನಾಟಕ ಕಂಪನಿ ಸೇರಿಕೊಂಡರು. ಆ ಸಮಯದಲ್ಲಿ ಮಹಾರಾಷ್ಟ್ರದಲ್ಲಿ ಸಂಗೀತ ಹಾಗು ನಾಟಕರಂಗದಲ್ಲಿ ಪ್ರಸಿದ್ಧರಾದ ಬಾಲಗಂಧರ್ವರಿಗಿಂತಲೂ ಸಂಗೀತ ಹಾಗು ಅಭಿನಯದಲ್ಲಿ ಇವರು ಒಂದೂಕಾಲು ಮಡಿ ಹೆಚ್ಚು ಎನ್ನುವ ಅರ್ಥದಲ್ಲಿ ರಾಮಭಾವು ಕುಂದಗೋಳಕರ ಅವರನ್ನು ಸವಾಯಿ ಗಂಧರ್ವ ಎಂದು ಕರೆಯಲಾಯಿತು ಮೈಸೂರು, ಮಹಾರಾಷ್ಟ್ರ, ಉತ್ತರ ಕರ್ನಾಟಕ ೧೯೦೦ ೧೯೦೭ ಅವ್ಯಾಹತವಾಗಿ ಸಂಗೀತ ತಪಶ್ಚರ್ಯ ನಡೆಯಿತು. ಸ್ವರ ಹತ್ತಿತಲ್ಲದೆ ಹಲವಾರು ತಾಸು ಸಂಗೀತ ಕಾರ್ಯಕ್ರಮ ಕೊಟ್ಟರು. ಮಂಜೀಖಾನ್ ಇಷ್ಟಪಟ್ಟರು. ಓಂಕಾರನಾಥ ಠಾಕೂರ ಕಲ್ಕತ್ತಾ ಪರಿಷತ್ತಿನಲ್ಲಿ ಆನಂದಶೃಗಳಿಂದ ಫಿಯಾಜ್ ಖಾನ್ ಮೆಚ್ಚಿದರು. ೧೯೩೨, ರಿಂದ ಸುಮಾರು ೯ ವರ್ಷ ಕುಂದಗೋಳ ದತ್ತಾತ್ರೆಯ ಭಜನೆ ದತ್ತ, ಗುರುಶಕ್ತಿ ಎಂದು ಹಾಡಿದರು. ಪಾರ್ಶ್ವವಾಯುವಿನಿಂದ ತೊಂದರೆ ಪಟ್ಟರು. ಪುಣೆಯಿಂದ ಹೆಂಡತಿ ಜೊತೆ, ಹುಬ್ಬಳ್ಳಿಯಲ್ಲಿ ಗಂಗೂಬಾಯಿ ಹಾನಗಲ್ ಅವರ ಮನೆಯಲ್ಲಿ ವಾಸ್ತವ್ಯ. ಆ ಸಮಯದಲ್ಲಿ ಗಂಗೂಬಾಯಿಯವರಿಗೆ ಉನ್ನತ ಸ್ತರದ ಪಾಠ ನೀಡಲಾಗುತ್ತಿತ್ತು.ಸನ್. ೧೯೪೬ ರಲ್ಲಿ ಸವಾಯಿ ಗಂಧರ್ವರಿಗೆ ೬೦ ವರ್ಷ. ಅವರ ಪ್ರಿಯ ಶಿಷ್ಯರು.ಪುಣೆ,ಮುಂತಾದನಗರಗಳಲ್ಲಿ ಅವರ ಗೌರವಾರ್ಥವಾಗಿ, ಸಂಗೀತೋತ್ಸವವನ್ನು ಆಯೋಜಿಸುತ್ತಿದ್ದರು. ಆ ಸಮಯದಲ್ಲಿ ಬೇರೆಬೇರೆ ಘರಾಣೆಗಳ ಮೂಲದ ಹಿರಿಯ ಸಂಗೀತಗಾರರಾದ,ರಾಮಕೃಷ್ಣ ಬುವ, ವಝೆ, ಭಾಸ್ಕರಬುವ ಬಖಲೆ, ರಹಿಮತ್ ಖಾ ಸಾಹೇಬ, ಮಂಜೀಖಾನ್ ಸಾಹೇಬ, ಮುಂತಾದ ಹಿರಿಯ ಉಚ್ಚಮಟ್ಟದ ಸಂಗೀತಕಾರರು ಭಾಗವಹಿಸುತ್ತಿದ್ದರು. ಗ್ರಾಮಾಫೋನ್ ಕಂಪನಿ, ಅಬ್ದುಲ್ ಖಾನ್ ಸಾಹೇಬರ ಗೀತೆಗಳ ಮುಂಚೆಯೇ ರಾಮಭಾವು ರವರ ಧ್ವನಿಮುದ್ರಿಕೆಗಳು ಮಾರುಕಟ್ಟೆಗೆ ಬಂದವು. ಮದುವೆ ತಂದೆ ಗದುಗಿನ ವೈದ್ಯ ಮನೆತನದ ಸೀತಾಬಾಯಿ ಯೆಂಬ ಕನ್ಯೆಯೊಂದಿಗೆ ಲಗ್ನಕ್ಕೆ ಏರ್ಪಾಡುಮಾಡಿದರು.ಕೇವಲ ಸಂಗೀತದಿಂದ ಹೊಟ್ಟೆತುಂಬುವುದು ಕಷ್ಟವಾದಾಗ ಅವರು ನಾಟಕ ಕಂಪೆನಿಗಳಲ್ಲಿ ಅಭಿನಯಿಸಲು ಪ್ರಾರಂಭಿಸಿದರು. ಬಾಲಗಂಧರ್ವರೆಂದು ಹೆಸರಾಂತ, ನಾರಾಯಣರಾವ್ ೧೯೦೮ ರಲ್ಲಿ, ಅಮರಾವತಿ ನಗರದಲ್ಲಿ, ನೂತನ ಸಂಗೀತ ನಾಟಕ ಮಂಡಳಿಯ ಬಳಿಯಲ್ಲೇ ಬೀಡು ಬಿಟ್ಟಿದ್ದರು. ಹೀರಾಬಾಯಿ ಬಡೋದೆಕರ್, ನೂತನ ನಾಟ್ಯ ಶಾಖೆಯಲ್ಲಿ ಕೆಲಸಕಾಗಿ ೧೯೩೨ ರಲ್ಲಿ ರಂಗಭೂಮಿತ್ತು. ಸುಭದ್ರೆ ಪಾತ್ರದಲ್ಲಿ, ಕಿತಿ ಕಿತಿ ಸಾಂಗತಿ ತುವಾ ರಂಗ ಪ್ರೆವೇಶ ಮಾಡಿದೊಡನೆಯೇ ಮುಂದಿನ ಸಾಲಿನಲ್ಲಿ ಕುಳಿತು ಅವಲೋಕಿಸುತ್ತಿದ್ದ ಗುರು,ಕರೀಂಖಾನ್ ರನ್ನು ಕಂಡು ಸ್ತಬ್ಧರಾದರು. ಅಕಸ್ಮತ್ತಾಗಿ ಗುರುಗಳನ್ನು ಕಂಡಾಗ ಮಾನಸಿಕ ಆಘಾತವಾಯಿತು.ಸವಾಯಿ ಗಂಧರ್ವರು, ಹುಬ್ಬಳ್ಳಿಯಲ್ಲಿ ಬೀಡುಬಿಟ್ಟಾಗ ಖಾನ್ ಸಾಹೇರು ಅಲ್ಲಿಗೆ ಬಂದು, ಹಾಡುಗಳನ್ನು ಆಲಿಸಿ ಆಶೀರ್ವಾದಮಾಡಿದರು. ಮುಖ್ಯತೊಡಕೆಂದರೆ, ಸ್ವರಹತ್ತುವ ತನಕ ತೊಂದರೆ,ಇತ್ತು. ಇಪ್ಪತ್ತೈದು ವರ್ಷಗಳ ಶಿಷ್ಯಪರಂಪರೆ ೧೯೧೬೧೯೪೧ ರ ವಾರೆಗಿನ ೨೫ ವರ್ಷಗಳ ಕಾಲುಶತಮಾನ ಶಿಷ್ಯ ಪರಂಪರೆ ಸೃಷ್ಟಿ. ವಿ. ಏ. ಕಾಗಲ್ ಕರ್, ನೀಲ ಕಂಠ ಬುವಾ, ಗಡಗೋಳಿ ವೆಂಕಟರಾವ್, ರಾಮದುರ್ಗ ಕೃಷ್ಣಾ ಬಾಯಿ, ಗಂಗಾಬಾಯಿ ಹಾನಗಲ್, ಫಿರೋಜ್ ದಸ್ತಾರ್, ಭೀಮಸೇನ್ ಜೋಷಿ,ಬಸವರಾಜ ರಾಜ ಗುರು, ಕನ್ನಡಿಗರು. ಸನ್, ೧೯೩೫ ರಲ್ಲಿ, ಗಾಂಧಿಜಯಂತಿ ನಿಮಿತ್ತ ನಡೆದ ಸಂಗೀತ ಅಧ್ಯಕ್ಷತೆಯನ್ನು ವೀರ ನಾರಿಮನ್ ವಹಿಸಿದ್ದರು. ಹೈದರಾಬಾದ್ ಕರ್ನಾಟಕ ಮಂಡಳಿ, ಮಾನಪತ್ರ, ಧರಪುರದ ಮಹಾರಾಜ್ ಚಿನ್ನದ ಪದಕ, ಪೂರಿಯಾರಾಗ ಪಿಯಾ ಗುನಾಂತ, ಪೂರಿಯ ಧನಾಶ್ರೀ ರಾಗದ ಅಪಾರಕರ್ ಅರಜ ಸುನೋ, ಭೈರವಿರಾಗದ ಬಿನ್ ದೇಖೆ ಪರೆನಾಹೀ ಚೈನ್ ೩ ಧ್ವನಿಮುದ್ರಿಕೆಗಳು. ೧೯೩೮ ರಲ್ಲಿ, ಹುಬ್ಬಳ್ಳಿ ಮ್ಯೂಜಿಕ್ ಸರ್ಕಲ್ ವಾರ್ಷಿಕ ಉತ್ಸವದ ಅಧ್ಯಕ್ಷ. ೧೯೩೯ ರಲ್ಲಿ ಕಲ್ಕತ್ತಾ ಬೆಂಗಾಲ್ ಮ್ಯೂಸಿಕ್ ಕಾನ್ಫರೆನ್ಸ್ ವಿಶೇಷವಾಗಿ ಗೌರವಿಸಿ ಸುವರ್ಣಪದಕ ಆಕಾಶವಾಣಿಗಳಲ್ಲಿ ಬಿತ್ತರವಾಯಿತು. ೧೯೨೦ ಮಹಾನ್ ಸಂ ಅಬಾಸಾಹೇಬ್ ಮುಜುಮ್ ದಾರ್ ಮನೆ ಸಂ ೧ ದಿನ ಏರ್ಪಡಿಸಲಾಗಿತ್ತು ಹೊಟ್ಟೆನೋವಿನಿಂದ ಬರಲಗಾಲಿಲ್ಲ ಬಲವಂತ .ಹುಬ್ಬಳ್ಳಿ ನಾಟ್ಯಶಾಲೆ. ಕುಂದಗೋಳ , ಪುಣೆ, ಮೊಕ್ಕಂ ಬಾಲಗಂ ದ್ರಪದಿ ನಾಟಕ ಪ್ರಯೋಗ ಆತ್ಮ ತೋಚ ಇದೇ ಕಥಾವಸ್ತುವನ್ನು ನಾಟಕ ನೂ ಸಂ. ಮ ಪ್ರಯೋಗ ದರುಪದಿ ಪಾತ್ರ ಬಾಲ ಗಂಧರ್ವ ಮಾಡಿದರೆ ರಾಮಭಾವೂ ಮಾಡಿದ್ದರು. ನಾಗಪುರದಲ್ಲಿ ಪ್ರಚಂಡ ಜನಮನ್ನಣೆ ಸವಾಯಿ ಗಂಧರ್ವರು ಕಚೇರಿಮಾಡಲು ಮೊದಲು ಬಂದಾಗ, ಅಲ್ಲಿನ ಸಭಿಕರು, ಮಹಾ ತುಚ್ಚರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು. ಮುಂದೆ ಅವರೇ ಸವಾಯ್ ಎಂದರೆ, ಹೆಚ್ಚು ನಿಷ್ಣಾತರೆಂದು ಮನಸಾರೆ ಮೆಚ್ಚಿದರು.ನಾಗಪುರದಲ್ಲಿ ಸಾರ್ವಜನಿಕ ಸಭೆಯಲ್ಲಿ ಅವರ ಪ್ರಿಯ ಶ್ರೋತೃಗಳು ಸವಾಯ್ ಯೆಂಬ, ಬಿರುದನ್ನು ನೀಡಿ ತಮ್ಮ ಗೌರವವನ್ನು ವ್ಯಕ್ತಪಡಿಸಿದರು. ಮರಾಠಿಯಲ್ಲಿ ಸವಾಯ್ ಎಂದರೆ ಎಲ್ಲೆ ಇಲ್ಲದ ಸಾಮರ್ಥ್ಯ, ಕಲಾವಂತಿಕೆ, ಅತಿಹೆಚ್ಚು ಪ್ರತಿಭೆ ಎಂದರ್ಥ. ನಂತರದ ದಿನಗಳಲ್ಲಿ ಸವಾಯಿ ಗಂಧರ್ವರ ಆರೋಗ್ಯ ಹದಗೆಟ್ಟಿತು. ಮೇಲಾಗಿ ರಂಗಭೂಮಿಯ ಮಾಲಿಕತ್ವವನ್ನು ನಿಭಾಯಿಸಬೇಕಾಯಿತು. ವ್ಯವಹಾರ ಚತುರರಲ್ಲದ ಗಂಧರ್ವರು ಕೊನೆಗೆ,ತಮ್ಮ ಮನೆ, ಜಮೀನು, ಆಸ್ತಿಪಾಸ್ತಿಗಳನ್ನು ಅಡವಿಟ್ಟು ಸಾಲ ತೀರಿಸಬೇಕಾಗಿಬಂತು. ೧೯೪೧ ರಲ್ಲಿ ಕೆಲವು ನಾಟಕಗಳನ್ನು ಆಡಿ ಅದರಲ್ಲಿ ಹಂದ ಹಣವನ್ನು ಸಾಲಗಾರರಿಗೆ ಕೊಟ್ಟು, ಕೈತೊಳೆದುಕೊಂಡರು. ೩೦ ನೇ ವಯಸ್ಸಿನಲ್ಲಿ ತಂದೆಯವರ ಮರಣ.ಆ ಸಮಯದಲ್ಲಿ ಅವರ ಗುರುಬಂಧು, ಶಂಕರವ್ ಸರ್ ನಾಯಕ್ ನೆರವಾದರು.ಶಂಕರ್ ರಾವ್ ಸ್ತ್ರೀಪಾತ್ರ ಧರಿಸಿದರೆ, ಸವಾಯಿ ಗಂಧರ್ವರು ಪುರುಷಪಾತ್ರ ಧರಿಸುತ್ತಿದ್ದರು. ಇಬ್ಬರ ಪರಿಶ್ರಮದಿಂದ ನಾಟಕಗಳು ಹೆಚ್ಚು ಯಶಸ್ವಿಯಾದವು. ಚಂದ್ರಿಕಾ ಹೀ ಜಣುಠೇವುಯಾ ಸಂತ್ ತುಳಸೀದಾದ್ ಹೊಸನಾಟಕ ನಾಟಕ ಪ್ರಾರಂಭಿಸುವ ಸನ್ನಾಹದಲ್ಲಿರುವಾಗಲೇ ನಾಟಕ ಕಂಪೆನಿ ದಿವಾಳಿಯಾಗಿ ಮುಚ್ಚಬೇಕಾಯಿತು. ಸವಾಯ್ ಗಂಧರ್ವರ ಪರಿವಾರ ಸವಾಯಿ ಗಂಧರ್ವರಿಗೆ ಇಬ್ಬರು ಮಕ್ಕಳು. ಮಗ,ಮಾನಸಿಕವಾಗಿ ಅಪ್ರಬುದ್ಧ. ಮಗಳು ಪ್ರಮೀಳ. ಡಾ. ದೇಶಪಾಂಡೆಯವರನ್ನು ಲಗ್ನವಾದರು. ಸವಾಯಿಗಂಧರ್ವರು ತಮ್ಮ ಕೊನೆಯ ದಿನಗಳನ್ನು ಪುಣೆಯಲ್ಲಿ ಅವರ ಮಗಳ ಮನೆಯಲ್ಲಿ ಕಳೆದರು.೧೯೪೨ರಲ್ಲಿ ಸವಾಯಿ ಗಂಧರ್ವರಿಗೆ ಪಾರ್ಶ್ವವಾಯುವಿನಿಂದ ತೊಂದರೆಯಾಯಿತು. ೧೯೪೬ರಿಂದ ೧೯೪೯ರವರೆಗೆ ಅವರು ತಮ್ಮ ಶಿಷ್ಯೆಯಾದ ಗಂಗೂಬಾಯಿ ಹಾನಗಲ್ ಇವರ ಮನೆಯಲ್ಲಿಯೆ ಉಳಿದುಕೊಂಡು ಚಿಕಿತ್ಸೆ ಪಡೆದರು. ೨೦ನೆಯ ಶತಮಾನದಲ್ಲಿ ಅವಿಭಜಿತ ಧಾರವಾಡ ಜಿಲ್ಲೆ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ರತ್ನಪ್ರಾಯ ಸಂಗೀತಗಾರರಿಗೆ ಜನ್ಮ ನೀಡಿದ ಜಿಲ್ಲೆಯಾಗಿದೆ. ಇವರಲ್ಲಿ ಆರು ಸಂಗೀತಗಾರರಂತೂ ಅಖಿಲ ಭಾರತದಲ್ಲಿ ಸುಪ್ರಸಿದ್ಧರಾದವರು: ೧. ಸವಾಯಿ ಗಂಧರ್ವ (೧೮೮೬೧೯೫೨) ೨. ಮಲ್ಲಿಕಾರ್ಜುನ ಮನಸೂರ (೧೯೦೧೧೯೯೨) ೩. ಗಂಗೂಬಾಯಿ ಹಾನಗಲ್ (೧೯೧೩) ೪. ಬಸವರಾಜ ರಾಜಗುರು (೧೯೧೭೧೯೯೧) ೫. ಭೀಮಸೇನ ಜೋಷಿ (೧೯೨೨) ೬. ಕುಮಾರ ಗಂಧರ್ವ (೧೯೨೪೧೯೯೨) ಸ್ವರ ಹತ್ತುವುದು ಸ್ವಲ್ಪ ಕಠಿಣವಾಗಿತ್ತು ಸ್ವರಹತ್ತಿತಲ್ಲದೆ ಹಲವಾರು ತಾಸು ಸಂ ಕಾರ್ಯಕ್ರಮ ಕೊಟ್ಟರು.ಮಂಜೀಖಾನ್ ಇಷ್ಟಪಟ್ಟರು. ಓಂಕಾರನಾಥ ಠಾಕೂರ ಕಲ್ಕತ್ತಾ ಪರಿಷತ್ತಿನಲ್ಲಿ ಆನಂದಶೃಗಳಿಂದ ಸ್ವಾಗತಿಸಿದರು.ಫಿಯಾಜ್ ಖಾನ್ ಮೆಚ್ಚಿದರು. ೧೯೩೨, ೯ ವರ್ಷ ಕುಂದಗೋಳ ದತ್ತಾತ್ರೆಯ ಭಜನೆ ದತ್ತ, ಗುರುಶಕ್ತಿ ಎಂದು ಹಾಡಿದರು. ೧೯೪೧ ರಲ್ಲಿ ಹೊಲಮಾರಿದರು. ಪಾರ್ಶ್ವವಾಯು. ಪುಣೆಯಿಂದ ಹೆಂಡತಿ ಜೊತೆ, ಹುಬ್ಬಳ್ಳಿಯಲ್ಲಿ ಗಂಗೂಬಾಯಿ ಹಾನಗಲ್ ಅವರ ಮನೆಯಲ್ಲಿ ವಾಸ್ತವ್ಯ. ಪಾಠ. ೧೯೪೬ ರಲ್ಲಿ ೬೦ ವರ್ಷ. ಬುಬ್ಬಳ್ಳಿ ಶಿಷ್ಯರು. ಪುಣೆ, ಬೇರೆಬೇರೆ ಘರಾಣೆಗಳ ಮೂಲದ ರಮಕೃಷ್ಣ ಬುವ,ವಝೆ, ಭಾಸ್ಕರಬುವ ಬಖಲೆ, ರಹಿಮತ್ ಖಾ ಸಾಹೇಬ, ಮಂಜೀಖಾನ್ ಸಾಹೇಬ ಹಿರಿಯ ಉಚ್ಚಮಟ್ಟದ ಸಂಗೀತಕಾರರು ಆಚರಿಸಿದರು. ಧ್ವನಿಮುದ್ರಿಕೆ ಗ್ರಾಮಾಫೋನ್ ಕಂ ಅಬ್ದುಲ್ ಖಾನ್ ರಾಮಭಾವು ಧ್ವನಿಮುದ್ರಿಕೆ, ತಂದೆ ಮಿರಜ್ ಕುಂದಗೋಳ ಮದುವೆ, ಗದುಗಿನ ವೈದ್ಯ ಮನೆತನದ ಸೀತಾಬಾಯಿ ಕನ್ಯೆ. ನಾಟಕ ಕಂ. ಹಣ ಸಾಲದ್ದಕ್ಕೆ ಕನ್ನಡ ಮಾತೃಭಾಷೆ ಮರಾಠಿ ಕಂ. ರಂಗಭೂಮಿ ಹಿಂದೆ ಬಾಲಗಂಧರ್ವರು ಹೆಸರಾಂತ ನಾರಾಯಣರಾವ್ ೧೯೦೮ ಅಮರಾವತಿ ನೂತನ ಸಂ ನಾ. ಮಂ ಬೀಡು ಬಿಟ್ಟಿದ್ದರು. ಬಾಲಗಂಧರ್ವ ಅಲ್ಲಿತ್ತು. ಹೀರಾಬಾಯಿ ಬಡೋದೆಕರ್, ನೂತನ ನಾಟ್ಯ ಶಾಖೆಯಲ್ಲಿ ಕೆಲಸಕಾಗಿ ೧೯೩೨ ರಲ್ಲಿ ರಂಗಭೂಮಿತ್ತು. ಸುಭದ್ರೆ ಪಾತ್ರದಲ್ಲಿ, ಕಿತಿ ಕಿತಿ ಸಾಂಗತಿ ತುವಾ ರಂಗ ಪ್ರೆವೇಶ ಮಾಡಿದೊಡನೆಯೇ ಮುಂದಿನ ಸಾಲಿನಲ್ಲಿ ಕುಳಿತು ಅವಲೋಕಿಸುತ್ತಿದ್ದ ಗುರುಗಳನ್ನು ಕಂಡು ಸ್ತಬ್ಧರಾದರು. ಕರೀಂಖಾ ಮಾನಸಿಕ ಆಘಾತ. ಸವಾಯ್ ಹುಬ್ಬಳ್ಳಿಯಲ್ಲಿ ಬೀಡು ಖಾನ್ ಸಾಹೇರು ಹಾಡುಗಳು ಆಶೀರ್ವಾದ. ಸ್ವರಹತ್ತುವ ತೊಂದರೆ, ಇತ್ತು. ೧೯೧೬೧೯೪೧ ೨೫ ವರ್ಷಗಳ ಕಾಲುಶತಮಾನ ಶಿಷ್ಯ ಪರಂಪರೆ ಸೃಷ್ಟಿ. ವಿ. ಏ. ಕಾಗಲ್ ಕರ್ ನೀಲ ಕಂಠ ಬುವಾ ಗಡಗೋಳಿ ವೆಂಕಟರಾವ್ ರಾಮದುರ್ಗ ಕೃಷ್ಣಾ ಬಾಯಿ ಗಂಗೂಬಾಯಿ ಹಾನಗಲ್ ಫಿರೋಜ್ ದಸ್ತಾರ್ ಭೀಮಸೇನ ಜೋಷಿ, ಬಸವರಾಜ ರಾಜಗುರು ಎಲ್ಲರು ಕನ್ನಡಿಗರು. ೧೯೩೫ ರಲ್ಲಿ ಗಾಂಧಿಜಯಂತಿ ನಿಮಿತ್ತ ನಡೆದ ಸಂಗೀತ ಅಧ್ಯಕ್ಷತೆಯನ್ನು ವೀರ ನಾರಿಮನ್ ವಹಿಸಿದ್ದರು. ಪೂರಿಯಾರಾಗದಲ್ಲಿ. ಪಿಯಾ ಗುನಾಂತ, ಪೂರಿಯ ಧನಾಶ್ರೀ ರಾಗದ ಅಪಾರಕರ್ ಅರಜ ಸುನೋ ಭೈರವಿರಾಗದ ಬಿನ್ ದೇಖೆ ಪರೆನಾಹೀ ಚೈನ್ ಮೊದಲಾದ, ೩ ಧ್ವನಿಮುದ್ರಿಕೆಗಳು ಹೊರಬಂದವು. ಹೈದರಬಾದ್ ಕರ್ನಾಟಕ ಮಂಡಳಿಯ ಮಾನಪತ್ರ, ಧರಪುರದ ಮಹಾರಾಜ್ ಚಿನ್ನದ ಪದಕ, ೧೯೩೮ ಹುಬ್ಬಳ್ಳಿ ಮ್ಯೂಜಿಕ್ ಸರ್ಕಲ್ ವಾರ್ಷಿಕ ಉತ್ಸವದ ಅಧ್ಯಕ್ಷ ಪದವಿ. ೧೯೩೯ ರಲ್ಲಿ ಕಲ್ಕತ್ತಾ ಬೆಂಗಾಲ್ ಮ್ಯೂಸಿಕ್ ಕಾನ್ಫರೆನ್ಸ್ ವಿಶೇಷವಾಗಿ ಗೌರವಿಸಿ ಸುವರ್ಣಪದಕ ದೇಶದ ವಿವಿಧ ಆಕಾಶವಾಣಿಗಳಲ್ಲಿ ಅವರ ಸಂಗೀತ ಕಾರ್ಯಕ್ರಮ ಬಿತ್ತರವಾಯಿತು. ೧೯೨೦ ರಲ್ಲಿ, ಮಹಾನ್ ಸಂಗೀತಕಾರ, ಅಬಾಸಾಹೇಬ್ ಮುಜುಮ್ ದಾರ್ ಮನೆಯಲ್ಲಿ ಒಂದುದಿನದ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಹೊಟ್ಟೆನೋವಿನಿಂದ ಬಳಲುತ್ತಿದ್ದ ಸವಾಯಿ ಗಂಧರ್ವರು, ಬರಲು ಸಾಧ್ಯವಿಲ್ಲವೆಂದು ಸುದ್ದಿ ಕಳಿಸಿದರು. ಆದರೆ ಸಂಗೀತ ರಸಿಕರು ಹೇಗಾದರು ಬರಲೇ ಬೇಕೆಂದು ಬಲವಂತ ಮಾಡುತ್ತಿದ್ದರು. ಆದರೆ ಹೇಗೋ ಯೋಗಾಯೋಗದಿಂದ ಸ್ವರಹತ್ತಿ, ಸುಮಾರು ೩೪ ಗಂಟೆಗಳ ಕಾಲ ಹಾಡಿದ ಅವರಿಗೇ ಹೊಟ್ಟೆನೋವಿನ ವಿಷಯ ಮರೆತೇ ಹೋಗಿತ್ತು. ಬಾಲಗಂಧರ್ವ, ಮತ್ತು ಸವಾಯ್ ಗಂಧರ್ವರ ನಾಟಕ ಪ್ರಯೋಗಗಳು ಕೆಲವೊಮ್ಮೆ, ಸವಾಯಿಗಂಧರ್ವರು, ಮೊಕ್ಕಂಮಾಡಿದ ಸ್ಥಳದಲ್ಲಿಯೇ ಬಾಲಗಂಧರ್ವರ ನಾಟಕ ಕಂಪೆನಿಯೂ ಡೇರ ಹಾಕುತ್ತಿತ್ತು. ಆಗ, ದ್ರಪದಿ ನಾಟಕದ ಪ್ರಯೋಗವನ್ನು ಬಾಲಗಂಧರ್ವರು ಮಾಡಿದಾಗ, ಅದೇ ಕಥಾವಸ್ತುವನ್ನು ಬಳಸಿ, ಆತ್ಮ ತೋಚ ವೆಂಬ ಹೆಸರಿನಲ್ಲಿ ನಾಟಕವನ್ನು ನೂತನ ಸಂಗೀತ ಮಂಡಳಿ ಪ್ರಯೋಗ ಮಾಡಿತು.ದ್ರೌಪದಿಯ ಪಾತ್ರ ಬಾಲ ಗಂಧರ್ವ ಮಾಡಿದರೆ ರಾಮಭಾವೂ ಮಾಡಿದ್ದರು. ಅಭಿನಯದಲ್ಲಿ ಹೆಚ್ಚು ಸಾಮರ್ಥ್ಯವಿಲ್ಲದಿದ್ದರೂ, ಕಿರಾನಾ ಘರಾನದ ಶಾಸ್ತ್ರೀಯ ಸಂಗೀತದ ತರಬೇತಿಯ ಭದ್ರ ತಳಹದಿ ಅವರ ಅಭಿನಯಕ್ಕೆ ಬೇರೊಂದು ಕಳೆ ಕೊಟ್ಟಿತು. ಸವಾಯಿ ಗಂಧರ್ವರ ಹಾಡುಗಾರಿಕೆಯನ್ನು ಕೇಳಿದ ಬಾಲ ಗಂಧರ್ವರು ಮನಸೋತರು. ತಮ್ಮ ಪಾತ್ರಮುಗಿದ ಬಳಿಕ ಬಣ್ಣವನ್ನು ಅಳಿಸಿಕೊಂಡು, ಸವಾಯಿಯವರ ಪಾತ್ರ, ಮತ್ತು ಅವರ ಸಂಗೀತವನ್ನು ಕೇಳಲು ಬರುತ್ತಿದ್ದರು. ಹೀಗೆ ಅವರ ಮಧ್ಯೆ ಬೆಳೆದ ಮೈತ್ರಿ, ಗೌರವ, ಕೀರ್ತಿ, ಧನಲಾಭ, ಹಾಗೂ ಅಪಾರ ಯಶಸ್ಸನ್ನು ದೊರಕಿಸಿಕೊಟ್ಟಿತು. ಮಾಧವ ಎನ್. ಮಹಿಷೆ, ಭಾರತಭಾರತಿ ಪುಸ್ತಕ ಸಂಪದ, ರಾಷ್ಟ್ರೋತ್ಥಾನ ಸಾಹಿತ್ಯ. ಬೆಂಗಳೂರು. ೧೯ ಪುಟಗಳ ಪುಟ್ಟ ಪುಸ್ತಕ,(ಜನವರಿ, ೧೯೮೦ ರಲ್ಲಿ ಪ್ರಕಟಿತ) ಸಂಗೀತ ಭಾರತದ ಸಂಗೀತಗಾರರು ಹಿಂದುಸ್ತಾನಿ ಸಂಗೀತ ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳು ಸಂಗೀತಗಾರರು
ಜೂನ್ ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಆರನೇ ತಿಂಗಳು. ಈ ತಿಂಗಳಿನಲ್ಲಿ ಮೂವತ್ತು ದಿನಗಳಿರುತ್ತವೆ. ಜೂನ್ ಕ್ರಿಸ್ತವರ್ಷದ ಆರನೆಯ ತಿಂಗಳು. ಇದರಲ್ಲಿ 30 ದಿವಸಗಳಿವೆ. ರೋಮನ್ ಮತ್ತು ಲ್ಯಾಟಿನ್ ಪುರಾಣಸಾಹಿತ್ಯಗಳಲ್ಲಿ ಕಂಡುಬರುವ ಪ್ರಧಾನ ದೇವತೆಯಾದ ಜೂನೋಳ ಗೌರವಾರ್ಥವಾಗಿ ಈ ತಿಂಗಳಿಗೆ ಜೂನ್ ಎಂಬ ಹೆಸರು ಬಂತೆಂದು ರೋಮ್ ದೇಶದ ಸಾಹಿತ್ಯಯುಗದ ಕೊನೆಯ ಕವಿಯಾದ ಓವಿಡ್ (ಕ್ರಿ.ಪೂ. 43ಕ್ರಿ.ಶ. 18) ತಿಳಿಸಿದ್ದಾನೆ. ಮಯೊರೀಸ್ ಪದದಿಂದ ಮೇ (ನೋಡಿ ಮೇ) ಪದ ನಿಷ್ಪನ್ನವಾದಂತೆ ಯೂನಿಯೊರೀಸ್ ಪದದಿಂದ ಜೂನ್ ಪದ ನಿಷ್ಪನ್ನವಾಗಿರಬಹುದೆಂದು ಓವಿಡ್ನ ಅಭಿಪ್ರಾಯ. ಮಯೊರೀಸ್ ಮತ್ತು ಯೂನಿಯೊರೀಸ್ ಎಂಬುವು ಅನುಕ್ರಮವಾಗಿ ಯೌವನ ಮತ್ತು ಪ್ರೌಢಾವಸ್ಥೆಯನ್ನು ಸೂಚಿಸುತ್ತವೆ. ಜೂನ್ ಎಂಬ ಹೆಸರು ಯೆಹೂದ್ಯೇತರ ವ್ಯಕ್ತಿಯಾದ ಜೂನಿಯಸನನ್ನು ಅಥವಾ ಜೂನಿಯಸ್ ಬ್ರೂಟಸನ ರಾಯಭಾರಿಯನ್ನು ಕುರಿತದ್ದು ಎಂದು ಕೆಲವರ ಅಭಿಮತ. ಲ್ಯಾಟಿನಿನ ಹಳೆಯ ತಾರೀಖು ಪಟ್ಟಿಗಳಲ್ಲಿ ಈ ತಿಂಗಳನ್ನು ನಾಲ್ಕನೆಯ ತಿಂಗಳಾಗಿ ಪರಿಗಣಿಸಿದ್ದುಂಟು. ಆಗ 30 ದಿವಸಗಳನ್ನು ಈ ತಿಂಗಳಲ್ಲಿ ಕಾಣಿಸಿತ್ತೆಂದು ಹೇಳಲಾಗಿದೆ. ತಾರೀಖು ಪಟ್ಟಿಯ ಪರಿಷ್ಕರಣ ಸಮಯದಲ್ಲಿ ಜೂಲಿಯನ್ 29 ದಿವಸಗಳನ್ನು ಈ ತಿಂಗಳಿಗೆ ವಿಧಾಯಕ ಮಾಡಿದ್ದು ಅನಂತರ 30ನೆಯ ದಿವಸವನ್ನು ಜೂಲಿಯಸ್ ಸೀಸರ್ ಸೇರಿಸಿದ. ಜೂನ್ ತಿಂಗಳನ್ನು ಆಂಗ್ಲ್ಯೋಸ್ಯಾಕ್ಸನರು ಶುಷ್ಕ ತಿಂಗಳೆಂದೂ ನಡುಬೇಸಗೆಯ ತಿಂಗಳೆಂದೂ ಕರೆದಿದ್ದರು. ಭಾರತೀಯ ಪಂಚಾಂಗದ ರೀತ್ಯ ವೈಶಾಖ ಜ್ಯೇಷ್ಠಮಾಸಗಳು ಸಾಧಾರಣವಾಗಿ ಈ ತಿಂಗಳಲ್ಲಿ ಸೇರಿಕೊಂಡಿರುತ್ತವೆ. ಕರ್ಕಾಟಕ ಸಂಕ್ರಮಣ (ಸಮ್ಮರ್ ಸಾಲ್ಸ್ಟೀಸ್) ಸಂಭವಿಸುವುದು ಈ ತಿಂಗಳಲ್ಲಿಯೇ. ರಜೆಗಳು ಆಚರಣೆಗಳು ಮೂರನೇ ಭಾನುವಾರ ವಿಶ್ವದಾದ್ಯಂತ ತಂದೆ ದಿನ ( ) ವಾಗಿ ಆಚರಿಸಲ್ಪಡುತ್ತದೆ. ಜೂಲಿಯನ್ ಮತ್ತು ಗ್ರೆಗೋರಿಯನ್ ಕ್ಯಾಲೆಂಡರ್ನಲ್ಲಿ ಜೂನ್ಜೂ ೫ ರಂದು ಕುರುಡರದಿನವೆಂಡೂ, ಫ್ರಾನ್ಸನಲ್ಲಿ ತಾಯಂದಿರ ದಿನವೆಂದು ಮತ್ತು ಹಂಗೇರಿ ಎಂಬ ದೇಶದಲ್ಲಿ ಶಿಕ್ಷಕದಿನವೆಂದು ಮತ್ತು ಐಸ್ಲ್ಯಾಂಡನಲ್ಲಿ ಸಮುದ್ರ ಕೆಲಸಗಾರದಿನವೆಂದು ಆಚರಿಸಲಾಗುತ್ತದೆ.ಚೀನಾದಲ್ಲಿ ಜೂನ್ ೧೧ ರಂದು ಚೀನಾದ ಸಾಂಸ್ಕೃತಿಕ ಪರಂಪರೆಯ ದಿನವೆಂದು ಆಚರಿಸಲಾಗುತ್ತದೆ.ಜೂನ್ ೧೨ ರಂದು ಆಸ್ಟ್ರಿಯಾ ಮತ್ತು ಬೆಲ್ಜಿಯಂ ದೇಶಗಳಲ್ಲಿ ತಂದೆಯ ದಿನವೆಂದು ಮತ್ತು ಲಕ್ಸೆಂಬರ್ಗ್ನಲ್ಲಿ ತಾಯಂದಿರ ದಿನವೆಂದು ಆಚರಿಸುತ್ತಾರೆ.ಜೂನ್ ೩೦ ರಂದು ಅಮೆರಿಕಾದಲ್ಲಿ ರಾಷ್ಟ್ರೀಯಾ ಬಾಂಬ್ ಸಿಡಿಸಿದ ದಿನವೆಂದು ಆಚರಿಸಲಾಗುತ್ತದೆ.ಜೂನ್ ೨೬ ರಂದು ಹೈಟಿಯಲ್ಲಿ ತಂದೆಯ ದಿನವೆಂದು ,ಕೀನ್ಯಾದಲ್ಲಿ ತಾಯಂದಿರ ದಿನವೆಂದು ಆಚರಿಸಲಾಗುತ್ತದೆ.ಜೂನ್ ೨೫ ರಂದು ಅಮೆರಿಕಾದಲ್ಲಿ ಸಶಸ್ತ್ರ ಪಡೆದ ದಿನವೆಂದು ಮತ್ತು ರಷ್ಯಾದಲ್ಲಿ ಹೂಡಿಕೆದಾರರ ದಿನವೆಂದು ಹಾಗು ನೆದರ್ಲ್ಯಾಂಡನಲ್ಲಿ ಯೋಧ್ರ ದಿನವೆಂದು ಆಚರಿಸಲಾಗುತ್ತದೆ. ಫಿಲಿಪೈನಲ್ಲಿ ಜೂನ್ ೧೨ ರಂದು ಸ್ವಾತಂತ್ರ್ಯದಿನವೆಂದು ಆಚರಿಸುತ್ತಾರೆ. ಗ್ರೆಗೋರಿಯನ್ ಕ್ಯಾಲೆಂಡರ್ ನಲ್ಲಿ ಇಲ್ಲದ ಆಚರಣೆಗಳು ಇವಾಗಿವೆ ಎಪ್ರಿಲ್ ೨೩ ರಿಂದ ಜೂನ್ ೧೧ ರ ವರೆಗು ಇರುವ ಜುಡಾಯಿಸಂನ ಒಮರ್ ಎಣಿಕೆ ಮತ್ತು ಜೂನ್ ೧೫ ರಂದು ಇರುವ ಹಿಂದೂ ಧರ್ಮದ ಏಕಾದಶಿ ಹಾಗು ಜೂನ್ ೧೦ ರಂದು ಇರುವ ಕೊರಿಯನ್ ಹಬ್ಬ ಇವೆಲ್ಲವು ಗ್ರೆಗೋರಿಯನ್ ಕ್ಯಾಲೆಂಡರ್ ನಲ್ಲಿ ಇಲ್ಲದಿರುವ ಆಚರಣೆಗಳು. ತಿಂಗಳುಗಳು ಜೂನ್
ಚಲನಚಿತ್ರೋತ್ಸವ, ಹೆಸರೆ ಹೇಳುವಂತೆ ಚಲನಚಿತ್ರಗಳ ಉತ್ಸವ. ಸಾಧಾರಣವಾಗಿ ವರ್ಷಕ್ಕೊಮ್ಮೆ ನೆಡೆಯುವ ಈ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಯವುದಾದರು ವಿಶಿಷ್ಟ ವಸ್ತು(ಉದಾ. ಮಕ್ಕಳ ಚಿತ್ರಗಳು, ಏಶಿಯಾದ ಚಿತ್ರಗಳು, ಇತ್ಯಾದಿ) ಅಥವಾ ಪ್ರಭೇದವನ್ನು(ಉದಾ. ಸಣ್ಣ ಚಿತ್ರಗಳು, ಡಾಕ್ಯುಮೆಂಟರಿ ಚಿತ್ರಗಳು, ಇತ್ಯಾದಿ) ಆಧರಿಸಿರುತ್ತದ್ದೆ. ಸಾಮಾನ್ಯವಾಗಿ ಚಲನಚಿತ್ರೋತ್ಸವಗಳಲ್ಲಿ ಚಲನಚಿತ್ರಗಳ ಪ್ರದರ್ಶನ, ಚಲನಚಿತ್ರ ಕಲಾವಿದರು ಮತ್ತು ತಂತ್ರಜ್ಞರಿಂದ ವಿಚಾರ ವಿಮರ್ಶೆ, ಪತ್ರಿಕಾ ಗೊಷ್ಟಿ, ಇತ್ಯಾದಿ ಇರುತ್ತವೆ. ಸಾಧಾರಣವಾಗಿ ಈ ಚಲನಚಿತ್ರೋತ್ಸವಗಳಲ್ಲಿ ನೂತನ ಚಿತ್ರಗಳು ಮಾತ್ರ ಪ್ರದರ್ಶನಗೊಳ್ಳುತ್ತವೆ. ೧೯೩೨ರಲ್ಲಿ ಮೊದಲಬಾರಿ ಇಟಲಿಯ ವೇನೀಸ್ ನಗರದಲ್ಲಿ ಪ್ರಮುಖ ಚಲನಚಿತ್ರೋತ್ಸವ ನೆಡಯಿತು ತದನಂತರ ಅನೇಕ ಚಲನಚಿತ್ರೋತ್ಸವಗಳು ವಿಶ್ವದ ಅನೇಕ ಭಾಗಗಳಲ್ಲಿ ನೆಡೆಯತೊಡಗಿದವು. ಕೆಲವು ಚಲನಚಿತ್ರೋತ್ಸವಗಳೂ ಅಸ್ಪರ್ಧಾತ್ಮಕ ಸ್ವರೂಪದವಾಗಿದ್ದರೆ (ಉದಾ. ಲಂಡನ್ ಚಲನಚಿತ್ರೋತ್ಸವ) ಇನ್ನು ಕೆಲವು ಸ್ಪರ್ಧಾತ್ಮಕ ಸ್ವರೂಪದವಗಿರುತ್ತವೆ(ಉದಾ. ಟೊರೊಂಟೊ ಚಲನಚಿತ್ರೋತ್ಸವ) ಇನ್ನು ಕೆಲವುಗಳಲ್ಲಿ ಸ್ಪರ್ಧೆಯಲ್ಲಿರುವ ಮತ್ತು ಸ್ಪರ್ಧೆಯಲ್ಲಿರದ ಚಿತ್ರಗಳ ಪ್ರತ್ಯೇಕ ವಿಭಾಗಗಳಿರುತ್ತವೆ(ಉದಾ. ಕ್ಯಾನ್ ಚಲನಚಿತ್ರೋತ್ಸವ, ಬರ್ಲಿನ್ ಚಲನಚಿತ್ರೋತ್ಸವ). ಕ್ಯಾನ್, ವೇನೀಸ್, ಬರ್ಲಿನ್, ಲೊಕಾರ್ನೊ, ಟೊರೊಂಟೊ, ಮಾಸ್ಕೊ, ಸನ್ಡಾನ್ಸ್ ಮತ್ತು ಕಾರ್ಲವಿ ವಾರಿ ಚಲನಚಿತ್ರೋತ್ಸವಗಳನ್ನು ಎ ದರ್ಜೆಯ ಚಲನಚಿತ್ರೋತ್ಸವಗಳೆಂದು ಪರಿಗಣಿಸಲಾಗುತ್ತದೆ ಮತ್ತು ನಿಯಮದಂತೆ ಹೊಸ ಚಿತ್ರಗಳು ಇವುಗಳಲ್ಲಿ ಯಾವುದಾದರು ಒಂದು ಚಲನಚಿತ್ರೋತ್ಸವದಲ್ಲಿ ಮಾತ್ರ ಪ್ರದರ್ಶಿತಗೊಳ್ಳಬಹುದು. ಪ್ರಪಂಚದ ಕೆಲವು ಪ್ರತಿಷ್ಠಿತ ಚಲನಚಿತ್ರೋತ್ಸವಗಳು ಹೀಗಿವೆ ಕ್ಯಾನ್ ಚಲನಚಿತ್ರೋತ್ಸವ ವೇನೀಸ್ ಚಲನಚಿತ್ರೋತ್ಸವ ಬರ್ಲಿನ್ ಚಲನಚಿತ್ರೋತ್ಸವ ಲೊಕಾರ್ನೊ ಚಲನಚಿತ್ರೋತ್ಸವ ಲಂಡನ್ ಚಲನಚಿತ್ರೋತ್ಸವ ಟೊರೊಂಟೊ ಚಲನಚಿತ್ರೋತ್ಸವ ಮಾಸ್ಕೊ ಚಲನಚಿತ್ರೋತ್ಸವ ಸನ್ಡಾನ್ಸ್ ಚಲನಚಿತ್ರೋತ್ಸವ ಕಾರ್ಲವಿ ವಾರಿ ಚಲನಚಿತ್ರೋತ್ಸವ ಭಾರತದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಎಡಿನ್ಬರೊ ಚಲನಚಿತ್ರೋತ್ಸವ ಚಲನಚಿತ್ರೋತ್ಸವಗಳು
ಲಾಹೋರ್ ಪಾಕಿಸ್ತಾನದ ಒಂದು ಪ್ರಮುಖ ಮಹಾನಗರ. ಇದನ್ನು ರಾಮಾಯಣದ ರಾಮನ ಮಗ ಲವ ನಿರ್ಮಿಸಿದ ಎಂದು ಪ್ರತೀತಿ. ಅದು ವಿಶ್ವದಲ್ಲಿನ ಅತ್ಯಂತ ದೊಡ್ಡ ಸ್ಥಳೀಯ ಪಂಜಾಬಿ ಜನಭರಿತವಾದ ನಗರ ಮತ್ತು ದಕ್ಷಿಣ ಏಷ್ಯಾದಲ್ಲಿನ ಒಂದು ಪ್ರಮುಖ ಐತಿಹಾಸಿಕ ಕೇಂದ್ರ. ಉಲ್ಲೇಖಗಳು ಬಾಹ್ಯ ಸಂಪರ್ಕಗಳು & & ಪಾಕಿಸ್ತಾನ
ಸಿನಿಮಾ ಕ್ಷೇತ್ರಕ್ಕೆ ಕೊಡುಗೆಯಾದ ಆಸ್ಕರ್ ಪುರಸ್ಕಾರ ಆಸ್ಕರ್ ಪ್ರಶಸ್ತಿಯ ಇತಿಹಾಸ ನೋಡಿದಾಗ ೧೯೨೭ ರಲ್ಲಿ ಸ್ಥಾಪನೆಯಾದ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆಟ್ಸ್ ಆ್ಯಡ್ ಸೈನ್ಸ್() ಸಂಸ್ಥೆ ಮೆಟ್ರೋ ಗೋಲ್ಡ್ವಿನ್ಮೇಯರ್ ಸ್ಟುಡಿಯೋದ ಮಾಲೀಕ ಲೂಯಿ, ಬಿ. ಮೇಯರನ ಚಿಂತನೆಯ ಫಲವಾಗಿದೆ. ಈ ಸಂಸ್ಥೆಯಿಂದಲೇ ಆಸ್ಕರ್ ಪುರಸ್ಕಾರವನ್ನು ಕೋಡಲಾರಂಭಿಸಿತು. ಚಲನಚಿತ್ರರಂಗದ ಪ್ರತಿಭಾನ್ವಿತ ವ್ಯಕ್ತಿಗಳಿಗೆ ಗೌರವ ಸಮರ್ಪಿಸುವುದು ಈ ಪ್ರಶಸ್ತಿಯ ಪ್ರಮುಖ ಧ್ಯೇಯವಾಗಿದೆ. ಆಸ್ಕರ್ ಪುರಸ್ಕಾರದ ಮೂದಲ ಸಮಾರಂಭವು ಮೇ೧೬ ೧೯೨೯ರಂದು ಹಾಲಿವುಡ್ ರೂಸ್ವೆಲ್ಟ್ ಹೋಟಲಿನಲ್ಲಿ ೨೭೦ ಪ್ರೇಕ್ಷಕರ ಎದುರು ಜರುಗಿತು. ಆಸ್ಕರ್ ಸಮಯ ಕಳೆದಂತೆ ತನ್ನ ಚಾಪನ್ನು ವಿಶ್ವದೆಲ್ಲಡೆ ಪಸರಿಸುತ್ತಾ, ಅದರೂಟ್ಟಿಗೆ ಪ್ರಶಸ್ತಿಯ ವರ್ಗಗಳನ್ನು ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಪೋಷಕ ನಟ ಮತ್ತು ನಟಿ, ಅತ್ಯತ್ತಮ ಚಿತ್ರಕಥೆ, ಅತ್ಯುತ್ತಮ ಆನಿಮೇಟಿಡ್ ವೈಶಿಷ್ಟ, ಅತ್ಯುತ್ತಮ ಕಿರುಚಿತ್ರ, ಹೀಗೆ ಪ್ರಸ್ತುತ ೨೪ ವಿಭಾಗಗಳಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಆಸ್ಕರ್ ಸಂಕ್ಷೀಪ್ತ ಮಾಹಿತಿ ಇದು ಒಂಬತ್ತು ಅಕಾಡೆಮಿ ಪುರಸ್ಕಾರಗಳಲ್ಲಿ ಒಂದಾಗಿದೆ.ಆಸ್ಕರ್ ಕಿರುಪ್ರತಿಮೆಯನ್ನು ಅಕ್ಯಾಡೆಮಿ ಅವಾರ್ಡ್ ಆಫ ಮೆರಿಟ್ ಎಂದು ಕರೆಯಲಾಗಿದೆ.ಪ್ರಪಂಚದಲ್ಲೇ ಅತ್ಯಂತ ಪ್ರತಿಷ್ಠಿತ ಪುರಸ್ಕಾರಗಳಲ್ಲೊಂದಾದ ಆಸ್ಕರ್ ಪುರಸ್ಕಾರ ಪ್ರಧಾನ ಸಮಾರಂಭವನ್ನು ಪ್ರತಿವರ್ಷ ಒಂದು ನೂರು ದೇಶಗಳಲ್ಲಿ ದೂರದರ್ಶನದ ಮೂಲಕ ನೇರಪ್ರಸಾರ ಮಾಡಲಾಗುತ್ತಿದ.ಇದರ ಸಂವಾದಿ ಪುರಸ್ಕಾರಗಳೆಂದರೆ (ಸಂಗೀತಕ್ಕೆ) ಗ್ರ್ಯಾಮಿ ಪುರಸ್ಕಾರ, ಟೆಲಿವಿಷನ್ಗೆ ಎಮ್ಮಿ ಪುರಸ್ಕಾರ ಮತ್ತು (ರಂಗಕ್ಷೇತ್ರಕ್ಕೆ) ಟೋನಿ ಪುರಸ್ಕಾರ.ಈ ಸಂಸ್ಥೆ ಸಿನಿಮಾ ಉದ್ಯಮದ ಬಗ್ಗೆ ಜನಾಭಿಪ್ರಾಯ ಸುಧಾರಿಸುವಂತೆ ಮಾಡುತ್ತದೆ.ಚಲನಚಿತ್ರ ಕ್ಷೇತ್ರದಲ್ಲಿ ಮಹತ್ತ್ವಪುರ್ಣ ಕೊಡುಗೆ ನೀಡಿದ ಗಣ್ಯರು ಇದರ ಸದಸ್ಯರಾಗಿರುತ್ತಾರೆ. ಇವರು ನ ಆಡಳಿತ ಮಂಡಳಿಯ ಸದಸ್ಯರು.ಅನೇಕ ವರ್ಷಗಳ ಕಾಲ ಸೋಮವಾರ ರಾತ್ರಿ ೯ ಗಂಟೆಗೆ (ಪೂರ್ವ ಪೆಸಿಫಿಕ್ ಕಾಲಮಾನ) ನಡೆಯುತ್ತಿದ್ದ ಸಮಾರಂಭವು ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸಲು, ೧೯೯೯ ರಿಂದ ಈಚೆಗೆ ಭಾನುವಾರದಂದು ರಾತ್ರಿ 8.30 ಗಂಟೆಗೆ ನಡೆಯುತ್ತಿದೆ. ೯೦ನೇ ಆವೃತ್ತಿಯ ಆಸ್ಕರ್ ಪುರಸ್ಕಾರ ಸಮಾರಂಭ ೯೦ನೇ ಆವೃತ್ತಿಯ ಆಸ್ಕರ್ ಪುರಸ್ಕಾರವನ್ನು ದೀ ಶೇಪ್ ಆಫ್ ವಾಟರ್ ಅತ್ಯುತ್ತಮ ಚಲನಚಿತ್ರವಾಗಿ ಹಾಗೂ ಒಟ್ಟು 4 ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ಚಿತ್ರಕ್ಕಾಗಿ ದುಡಿದ ಗಿಲ್ಲೆರ್ಮೊ ಡೆಲ್ ಟೊರೊ ಅತ್ಯುತ್ತಮ ನಿರ್ದೇಶಕನಾಗಿ, ಅಲೆಕ್ಸಾಂಡ್ರೆ ಡೆಸ್ವ್ಲಾಟ್ ಶ್ರೇಷ್ಠ ಹಿನ್ನೆಲೆ ಸಂಗೀತ ನಿರ್ದೇಶಕನಾಗಿ ಮತ್ತು ಪಾಲ್ ಬೆರ್ರಿ ಆಸ್ಟೆರ್ ಶ್ರೇಷ್ಠ ನಿರ್ಮಾಣ ವಿನ್ಯಾಸಗಾರನಾಗಿ ಪುರಸ್ಕಾರವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಅತ್ಯುತ್ತಮ ನಟನಾಗಿ ಗಾರಿ ಓಲ್ಟ್ಮನ್, ಅತ್ಯುತ್ತಮ ನಟಿಯಾಗಿ ಫ್ರಾನ್ಸೆಸ್ ಮೆಕ್ ಡಾರ್ಮಾಂಡ್, ಅತ್ಯುತ್ತಮ ಪೋಷಕ ನಟಿಯಾಗಿ ಅಲಿಸನ್ ಜನ್ನೆ, ಅತ್ಯುತ್ತಮ ಪೋಷಕ ನಟನಾಗಿ ಸ್ಯಾಮ್ ರಾಕವೆಲ್, ಅತ್ಯುತ್ತಮ ವಿದೇಶಿ ಚಿತ್ರವಾಗಿ ಎ ಫೆಂಟಾಸ್ಟಿಕ್ ವುಮೆನ್, ಅತ್ಯುತ್ತಮ ಆನಿಮೆಟೆಡ್ ಚಿತ್ರವಾಗಿ ಕೊಕೊ, ಅತ್ಯುತ್ತಮ ಡಾಕಿಮೆಂಟ್ರಿಯಾಗಿ ಇಕಾರ್ಸ್, ಅತ್ಯುತ್ತಮ ಗೀತೆಯಾಗಿ ರಿಮೆಂಬರ್ ಮೀ, ಅತ್ಯುತ್ತಮ ಸಂಕಲನ ಮತ್ತು ಅತ್ಯುತ್ತಮ ಸೌಂಡ್ ಮಿಕ್ಸಿಂಗ್ ಡೆನ್ಕಿರ್ಕ್, ಹಾಗೂ ಅತ್ಯುತ್ತಮ ಛಾಯಾಗ್ರಹಣಕ್ಕೆ ರೋಜರ್ ಡೀಕೆನ್ಸ ಪ್ರಶಸ್ತಿಗಳನ್ನು ತೆಗೆದುಕೊಂಡರು. ಅದರ ಜೊತೆಗೆ ಆಸ್ಕರ್ ಪುರಸ್ಕಾರ ಸಮಾರಂಭದಲ್ಲಿ ನಿಧನರಾದ ಬಾಲಿವುಡ್ ನಟ ಶಶಿಕಪೂರ್ ಮತ್ತು ನಟಿ ಶ್ರೀದೇವಿನ್ನು ಸ್ಮರಿಸಲಾಯಿತು. ಭಾರತದಲ್ಲಿ ಆಸ್ಕರ ಸಾಧಕರು ಆಸ್ಕರ್ ಕುರಿತು ಭಾರತದತ್ತ ನೋಡಿದಾಗ ಇದುವರೆಗೂ ೫ ಸಾಧಕರಿಗೆ ಮಾತ್ರ ಈ ಪ್ರಶಸ್ತಿ ಲಭಿಸಿದೆ. ಅದರಲ್ಲಿ ೧೯೮೨ ರಲ್ಲಿ ಅತ್ಯುತ್ತಮ ವಸ್ತ್ರವಿನ್ಯಾಸದಲ್ಲಿ ಭಾನು ಅಥೈಯಾ ಆಸ್ಕರ್ ಪುರಸ್ಕಾರವನ್ನು ಪಡೆದ ಭಾರತದ ಮೊದಲಿಗಳು. ೧೯೯೨ ರಲ್ಲಿ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಸತ್ಯಜಿತ್ ರೇ ಪಡೆದುಕೊಂಡರು. ಎ.ಆರ್ ರೆಹಮಾನ್ ಮತ್ತು ಗುಲ್ಜಾರ್ ಅತ್ಯುತ್ತಮ ಮೂಲ ಗೀತೆಯಾದ ಜೈ ಹೋ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಹಾಗೆ ಅತ್ಯತ್ತಮ ಮೂಲ ಅಂಕ ಸಂಗೀತಕ್ಕೆ ಎ.ಆರ್ ರೆಹಮಾನ್ ಮತ್ತೂಮ್ಮೆ ಪ್ರಶಸ್ತಿಯನ್ನು ಪಡೆದುಕೊಂಡರು. ಅತ್ಯುತ್ತಮ ಧ್ವನಿ ಮಿಶ್ರಣಕ್ಕೆ ರಿಸುಲ್ ಪೂಕುಟ್ಟಿಯವರು ಆಸ್ಕರ್ ತೆಗೆದುಕೊಂಡರು. ಇತರೆ ಮಾಹಿತಿ ೮೪ ನೇ ಆವೃತ್ತಿಯ ಆಸ್ಕರ್ ಪುರಸ್ಕಾರ ಸಮಾರಂಭವು ೨೦೧೧ ರಲ್ಲಿ ನಡೆಯಿತು. ೨೦೧೨ ರ ಫೆಬ್ರವರಿ ೨೬ ರಂದು ಹಾಲಿವುಡ್ ಆಯಂಡ್ ಹೈಲ್ಯಾಂಡ್ ಸೆಂಟರ್ನಲ್ಲಿ ಆಸ್ಕರ್ ಪುರಸ್ಕಾರ ಸಮಾರಂಭವು ನಡೆಯಿತು. ೨೦೧೨ ರಲ್ಲಿ ಸಂಸ್ಥೆಯಲ್ಲಿ ೫೭೮೩ ಜನ ಮತ ಚಲಾಯಿಸುವ ಹಕ್ಕುಗಳ ಸದಸ್ಯರಿದ್ದರು. ರಿಚರ್ಡ್ ಅಟೆನ್ಬರೊ ನಿರ್ಮಾಪಕತ್ವದ ಗಾಂಧಿ (೧೯೮೨) ಕ್ರಿಶ್ಚಿಯನ್ ಕಾಲ್ಸನ್ ನಿರ್ಮಾಪಕತ್ವದ ಸ್ಲಮ್ಡಾಗ್ ಮಿಲಿಯನೇರ್]] ಚಿತ್ರಗಳೂ ಆಸ್ಕರ್ ಪುರಸ್ಕೃತ ಚಿತ್ರಗಳಾಗಿವೆ.ಜಗದ್ವಿಖ್ಯಾತಿ ಘನತೆ ಪಡೆದಿರುವ ಈ ಪ್ರಶಸ್ತಿಯನ್ನು ಜಗತ್ತಿನಾದ್ಯಂತ ವಿಮರ್ಶಕರು ಅತಿ ಗೌರವದಿಂದ ನೋಡುತ್ತಾರೆ ಬಾಹ್ಯ ಸಂಪರ್ಕಗಳು . . () . . ಉಲ್ಲೇಖಗಳು ಚಿತ್ರರಂಗ ಪ್ರಶಸ್ತಿಗಳು
ಫ್ರಾನ್ಸ್ ಪಶ್ಚಿಮ ಯೂರೋಪಿನಲ್ಲಿರುವ ದೇಶ. ಇದು ಯುರೋಪ್ ಖಂಡದ ಮೂರನೆಯ ಅತ್ಯಂತ ದೊಡ್ಡ ದೇಶ. ಇದು ಯುರೋಪಿನ ಒಂದು ಬಲಾಡ್ಯ ದೇಶವಾಗಿದೆ. ಇದು ಪ್ರಪಂಚದ ಹಲವೆಡೆ ತನ್ನ ವಸಾಹತುಗಳನ್ನು ಸ್ಥಾಪಿಸಿ ಹತ್ತೊಂಭತ್ತನೆಯ ಶತಮಾನ ಮತ್ತು ೨೦ನೆಯ ಶತಮಾನದ ಮೊದಲ ಭಾಗದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿತ್ತು. ಸಾಂಸ್ಕೃತಿಕವಾಗಿ ಹಲವಾರು ಚಿಂತಕರು, ಕಲಾವಿದರು, ವಿಜ್ಞಾನಿಗಳನ್ನು ಹೊಂದಿ ಈಗಲೂ ಪ್ರಪಂಚದ ಗಮನಸೆಳೆಯುತ್ತಿದೆ. ಪ್ರಪಂಚದಲ್ಲಿ ನಾಲ್ಕನೆಯದಾಗಿ ಅತೀ ಹೆಚ್ಚು ಪಾರಂಪರಿಕ ತಾಣಗಳಿದ್ದು, ವರ್ಷಕ್ಕೆ ೮ ಕೊಟಿಗಿಂತಲೂ ಹೆಚ್ಚು ಪ್ರವಾಸಿಗಳನ್ನು ಸೆಳೆಯುತ್ತಿದೆ. ಫ್ರಾನ್ಸ್ ಅಧಿಕೃತವಾಗಿ ರಿಪಬ್ಲಿಕ್ ಫ್ರಾನ್ಸೇಸ್, ಪಶ್ಚಿಮ ಯುರೋಪಿನ ಗಣರಾಜ್ಯ. ಇದು ಪಶ್ಚಿಮ ಯುರೋಪಿನಲ್ಲಿ ಅಟ್ಲಾಂಟಿಕ್ ಮತ್ತು ಮೆಡಿಟರೇನಿಯನ್ ಸಮುದ್ರಗಳ ನಡುವೆ ಹಬ್ಬಿದೆ. ಹೆಚ್ಚು ಕಡಿಮೆ ಷಟ್ಕೋನಾಕೃತಿಯಲ್ಲಿರುವ ಈ ದೇಶದ ಉತ್ತರದಲ್ಲಿ ಇಂಗ್ಲಿಷ್ ಕಡಲ್ಗಾಲುವೆ, ಬೆಲ್ಜಿಯಮ್ ಮತ್ತು ಲಕ್ಸೆಂಬರ್ಗ್, ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ ಮತ್ತು ಬಿಸ್ಕೇಕೊಲ್ಲಿ, ದಕ್ಷಿಣದಲ್ಲಿ ಸ್ಪೇನ್ ಮತ್ತು ಮೆಡಿಟರೇನಿಯನ್ ಸಮುದ್ರ, ಪೂರ್ವದಲ್ಲಿ ಪಶ್ಚಿಮ ಜರ್ಮನಿ, ಸ್ವಿಟ್ಜರ್ಲ್ಯಾಂಡ್ ಮತ್ತು ಇಟಲಿ ಇವೆ. ಫ್ರಾನ್ಸ್ ಉತ್ತರ ದಕ್ಷಿಣವಾಗಿ ೯೫೦ ಕಿ.ಮೀ. ಪೂರ್ವ ಪಶ್ವಿಮವಾಗಿ ೯೭೪ ಕಿ.ಮೀ ಇದ್ದು ಒಟ್ಟು ವಿಸ್ತೀರ್ಣ ೫೫೧,೫೦೦ ಚ.ಕಿ.ಮೀ ಇದೆ. ೩೭೦೦ ಕಿ.ಮೀ ಉದ್ದ ಸಮುದ್ರ ತೀರ ಹೊಂದಿದೆ. ೧೯೯೦ ರಲ್ಲಿ ಇಲ್ಲಿನ ಜನಸಂಖ್ಯೆ ೫೬,೬೩೪,೨೯೯ ಇದ್ದು ೨೦೦೦ ದ ಗಣತಿಯಂತೆ ೫೯೦೨೪,೦೦೦ ಆಗಿದೆ. ಇದರ ರಾಜಧಾನಿ ಪ್ಯಾರಿಸ್. ಭೌತಿಕ ಭೂವಿವರಣೆ ಮೇಲ್ಮೈಲಕ್ಷಣ ಫ್ರಾನ್ಸ್ ಯುರೋಪಿನಲ್ಲಿ ಅತ್ಯಂತ ವೈವಿಧ್ಯಮಯವಾದ ಮೇಲ್ಮೈ ಇರುವ ದೇಶ. ಸಮುದ್ರ ಪಾತಳಿಯಿಂದ ಹಿಡಿದು ಯೂರೊಪಿನ ಅತ್ಯುನ್ನತ ಶಿಖರವಾದ ಮೌಂಟ್ ಬ್ಲ್ಯಾಂಕಿನ (೪,೮೦೭ ಮೀ) ವರೆಗೆ ಫ್ರಾನ್ಸಿನ ನೆಲದ ಎತ್ತರದಲ್ಲಿ ವ್ಯತ್ಯಾಸಗಳಿವೆ. ದೇಶದ ಬಹುಭಾಗವನ್ನು ಪರ್ವತಗಳು ಸುತ್ತುವರಿದಿವೆ. ಉತ್ತರ ಮತ್ತು ಪಶ್ಚಿಮಗಳಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ಸೇನ್, ಲವಾರ್ ಮತ್ತು ಗರಾನ್ ನದಿಗಳ ಬಯಲು ಫ್ರಾನ್ಸಿನ ಅರ್ಧಕ್ಕೂ ಹೆಚ್ಚು ಪ್ರದೇಶವನ್ನು ಆವರಿಸಿದೆ. ವಾಯುವ್ಯದಲ್ಲಿರುವ ಬ್ರಿಟನಿ ಮತ್ತು ನಾರ್ಮಂಡಿಯಲ್ಲಿ ತಗ್ಗಾದ ಬೆಟ್ಟಗಳಿವೆ. ಈಶಾನ್ಯದಲ್ಲಿರುವ ಆರ್ಡೆನ್, ನೆರೆಯ ಬೆಲ್ಜಿಯಮ್ ಮತ್ತು ಲಕ್ಸೆಂಬರ್ಗ್ಗಳಿಗೆ ಹಬ್ಬಿದೆ. ಪೂರ್ವದಲ್ಲಿರುವ ಪರ್ವತಗಳು ವೋಷ್, ಆಲ್ಪ್ಸ್ ಮತ್ತು ಜುರಾ. ಸ್ಪೇನ್ ದೇಶದ ಕಡೆಯಲ್ಲಿರುವ ಎಲ್ಲೆಯಲ್ಲಿ ಪಿರನೀಸ್ ಪರ್ವತಶ್ರೇಣಿಗಳಿವೆ. ಆಲ್ಪ್ಸ್ನಂತೆ ಪಿರನೀಸ್ ಶ್ರೇಣಿಯು ಉನ್ನತವೂ ದುರ್ಗಮವೂ ಆಗಿದೆ. ಇಲ್ಲಿಯ ನದಿಗಳ ಪೈಕಿ ಲವಾರ್, ಗರಾನ್, ಡಾರ್ಡೋನ್, ಅಡುರ್ ಇವು ಬಿಸ್ಕೇ ಕೊಲ್ಲಿಯನ್ನೂ ಹಾಗೂ ಸೇನ್, ಸಾಮ್ ಇಂಗ್ಲಿಷ್ ಕಡಲ್ಗಾಲುವೆಯನ್ನೂ ಹಾಗೂ ರೋನ್ ಮೆಡಿಟರೇನಿಯನ್ ಸಮುದ್ರವನ್ನೂ ಸೇರುತ್ತವೆ. ವಾಯುಗುಣ ಫ್ರಾನ್ಸಿನಲ್ಲಿ ಮೂರು ಬಗೆಯ ವಾಯುಗುಣಗಳಿವೆ. ದೇಶದ ಪಶ್ಚಿಮ ಭಾಗದ ವಾಯುಗುಣ ಸಾಗರಿಕ. ಅದರಲ್ಲಿ ಹೆಚ್ಚಿನ ವ್ಯತ್ಯಾಸ ಆಗುವುದಿಲ್ಲ. ಬೇಸಗೆ ತಂಪಾಗಿರುತ್ತದೆ. ಚಳಿಗಾಲದಲ್ಲಿ ಹೆಚ್ಚಿನ ಚಳಿ ಇರುವುದಿಲ್ಲ. ಇಲ್ಲಿ ಯಥೇಚ್ಛ ಮಳೆ ಬೀಳುತ್ತದೆ. ಪೂರ್ವ ಮತ್ತು ಮಧ್ಯ ಫ್ರಾನ್ಸಿನ ಹೆಚ್ಚು ಭಾಗದ ವಾಯುಗುಣ ಖಂಡೀಯ. ಇಲ್ಲಿಯ ಬೇಸಗೆ ಪಶ್ಚಿಮದಲ್ಲಿರುವುದಕ್ಕಿಂತ ಹೆಚ್ಚು ಉಷ್ಣವಾಗಿರುತ್ತದೆ. ಚಳಿಗಾಲದಲ್ಲಿ ಚಳಿಯೂ ಹೆಚ್ಚು. ಮಳೆ ಸಾಕಷ್ಟು ಬೀಳುತ್ತದೆ. ಉನ್ನತ ಪ್ರದೇಶಗಳಲ್ಲಿ ಚಳಿಗಾಲದಲ್ಲಿ ಹಿಮ ಬೀಳುತ್ತದೆ. ನೈಋತ್ಯದ ಪರ್ವತ ಪ್ರದೇಶವನ್ನುಳಿದು ದಕ್ಷಿಣ ಫ್ರಾನ್ಸಿನಲ್ಲೆಲ್ಲ ಮೆಡಿಟರೇನಿಯನ್ ವಾಯುಗುಣವಿರುತ್ತದೆ. ಇಲ್ಲಿ ಬೇಸಗೆಗಳು ಉಷ್ಣವಾಗಿಯೂ ಚಳಿಗಾಲಗಳು ತಂಪಾಗಿಯೂ ಇರುತ್ತವೆ. ಸೀಮಿತವಾಗಿ ಮಳೆಯಾಗುತ್ತದೆ. ಮಧ್ಯ ಉಷ್ಣತೆ ಪ್ಯಾರಿಸಿನಲ್ಲಿ ೧೦ ಡಿಗ್ರಿ, ನೀಸ್ನಲ್ಲಿ ೧೪ ಡಿಗ್ರಿ, ದೇಶದ ಮಧ್ಯ ಮತ್ತು ದಕ್ಷಿಣ ಪ್ರದೇಶಗಳಲ್ಲಿ ಮಳೆ ಸಾಧಾರಣ. ಪ್ಯಾರಿಸ್ ಮತ್ತು ಮಾರ್ಸೇಲ್ಗಳಲ್ಲಿ ೫೫೮ ಮಿ.ಮೀ. ನಿಂದ ಬಾರ್ಡೋ ಮತ್ತು ಲ್ಯೇಯನ್ಸ್ನಲ್ಲಿ ೭೮೭ ಮಿ.ಮೀ ವರೆಗೆ ವ್ಯತ್ಯಾಸವಾಗುತ್ತದೆ. ಬ್ರಿಟನಿ, ಉತ್ತರ ಕರಾವಳಿ ಮತ್ತು ಪರ್ವತ ಪ್ರದೇಶಗಳಲ್ಲಿ ಬಹಳ ಹೆಚ್ಚು ಮಳೆಯಾಗುತ್ತದೆ. ಅಲ್ಲಿ ೧೩೯೭ ಮಿ.ಮೀ ಗಿಂತ ಅಧಿಕ ಮಳೆ ಆಗುತ್ತದೆ. ಸಸ್ಯ ಪ್ರಾಣಿ ಜೀವನ ಫ್ರಾನ್ಸಿನ ಸಸ್ಯ ಪ್ರಾಣಿ ಜೀವನ ವೈವಿದ್ಯಮಯವಾದ್ದು. ಉತ್ತರ ಮತ್ತು ಮಧ್ಯ ಭಾಗಗಳಲ್ಲಿ ಓಕ್, ಬೀಟ್, ಪೈನ್, ಬರ್ಚ್ ಪಾಪ್ಲರ್ ಮತ್ತು ವಿಲೋ ವೃಕ್ಷಗಳ ಕಾಡುಗಳಿವೆ. ಮಧ್ಯದ ಪರ್ವತ ಸಮುದಾಯ ಪ್ರದೇಶದಲ್ಲಿ ಚೆಸ್ನಟ್ ಮತ್ತು ಬೀಚ್ ಮರಗಳು ಹೆಚ್ಚು. ಆಲ್ಪ್ಸ್ ಪರ್ವತಗಳ ಎಲ್ಲೆಯಲ್ಲಿ ಜ್ಯೂನಿಪರ್ ಮತ್ತು ಡ್ವಾರ್ಫ್ ಪೈನ್ ಮರಗಳೂ ದಕ್ಷಿಣದಲ್ಲಿ ಪೈನ್ ಹಾಗೂ ವಿವಿಧ ಓಕ್ ಮರಗಳೂ ಇವೆ. ಪ್ರಾವೆನ್ಸ್ನಲ್ಲಿ ನೀಲಗಿರಿ ಮತ್ತು ಡ್ವಾರ್ಫ್ ಪೈನ್ ಮರಗಳು ಹೇರಳವಾಗಿವೆ. ಮೆಡಿಟರೇನಿಯನ್ ಸಮುದ್ರತೀರದ ಹತ್ತಿರದ ಪ್ರದೇಶದಲ್ಲಿ ದ್ರಾಕ್ಷಿಬಳ್ಳಿ, ಆಲಿವ್, ಹಿಪ್ಪನೇರಳೆ ಮತ್ತು ಅಂಜೂರ ವೃಕ್ಷಗಳು ಹಾಗೂ ಲಾರೆಲ್ ಗುಲ್ಮ ಮತ್ತು ಮಾಕ್ವಿಸ್ ಕುರುಚಲು ಬೆಳೆಯುತ್ತವೆ. ಮುಳ್ಳುಹಂದಿ, ಉದ್ದಮೂತಿಯ ಸಣ್ಣ ಇಲಿ, ನರಿ, ಬ್ಯಾಡ್ಜರ್, ಮೊಲ, ಆಟ್ಟರ್, ವೀಸೆಲ್, ತೊಗಲುಬಾವಲಿ, ಅಳಿಲು ಮತ್ತು ಬೇವರ್ ಸಾಮಾನ್ಯ. ಪಿರನೀಸ್ ಮತ್ತು ಆಲ್ಪ್ಸ್ ಪರ್ವತ ಪ್ರದೇಶಗಳಲ್ಲಿ ಕಂದುಕರಡಿ, ಷಾಮಾಯ್ ಮಾರ್ಮಟ್ ಮತ್ತು ಆಲ್ಪೈನ್ ಮೊಲಗಳಿವೆ. ಅರಣ್ಯಗಳಲ್ಲಿ ಪೋಲ್ಕ್ಯಾಟ್, ಮಾರ್ಟಿನ್, ಕಾಡುಹಂದಿ, ಮತ್ತು ವಿವಿಧ ಜಾತಿಗಳ ಜಿಂಕೆಗಳಿವೆ. ಫ್ರಾನ್ಸಿನ ಪಕ್ಷಿಗಳು ಹೆಚ್ಚಾಗಿ ವಲಸೆ ಹೋಗುವಂಥವು. ಕಾಡುಹಕ್ಕಿ, ತ್ರಷ್, ಮ್ಯಾಗ್ಪೈ, ಗೂಗೆ, ಬಸರ್ಡ್ ಮತ್ತು ಸಾಮಾನ್ಯ ಅಲ್ಸೇಸ್ ಮತ್ತು ಇನ್ನೂ ಕೆಲವು ಕಡೆಗಳಲ್ಲಿ ಕೊಕ್ಕರೆ, ಪರ್ವತಗಳಲ್ಲಿ ಹದ್ದು ಮತ್ತು ಡೇಗೆ ಹಾಗೂ ದಕ್ಷಿಣ ಫ್ರಾನ್ಸಿನಲ್ಲಿ ಫೆಸಂಟ್ ಮತ್ತು ಕವುಜುಗ ಕಂಡುಬರುತ್ತವೆ. ಮೆಡಿಟರೇನಿಯನ್ ವಲಯದಲ್ಲಿ ಫ್ಲೆಮಿಂಗೊ, ಟರ್ನ್, ಬಂಟಿಂಗ್, ಹೆರಾನ್ ಮತ್ತು ಈಗ್ರೆಟ್ಗಳನ್ನು ಕಾಣಬಹುದು. ನದಿಗಳಲ್ಲಿ ಈಲ್, ಪೈಕ್ ಪರ್ಚ, ಕಾರ್ಪ್, ರೋಜ್, ಸ್ಯಾಲ್ಮನ್ ಮತ್ತು ಟ್ರೌಟ್ ಮೀನುಗಳಿವೆ. ಭೂ ಮಧ್ಯ ಸಮುದ್ರದಲ್ಲಿ ಲಾಬ್ಸ್ಟರ್ ಮತ್ತು ಕ್ರೇಫಿಷ್ ಹೇರಳವಾಗಿವೆ. ಜನ ಫ್ರಾನ್ಸಿನ ಜನಸಂಖೈ ೫,೨೦,೨೦,೦೦೦ (೧೯೭೬). ೧೯೭೨ ರಲ್ಲಿ ಅದು ೫೧,೦೦೦,೦೦೦ ಕ್ಕೂ ಹೆಚ್ಚಿತ್ತು. ಆಗ ಪ್ರತಿ ೧,೦೪೭ ಹೆಂಗಸರಿಗೆ ೧೦೦೦ ಗಂಡಸರಿದ್ದರು. ಗಂಡಸರ ಮತ್ತು ಹೆಂಗಸರ ಆಯುಷ್ಯ ನಿರೀಕ್ಷಣೆಯಲ್ಲಿ ನೈಸರ್ಗಿಕ ಸಮತೆ ಮತ್ತು ಯುದ್ಧದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಗಂಡಸರು ಸತ್ತಿದ್ದು ಇವು ಪುರುಷರ ಸಂಖ್ಯೆ ಸ್ತ್ರೀಯರದಕ್ಕಿಂತ ಕಡಿಮೆಯಾಗಿರುವುದಕ್ಕೆ ಕಾರಣವೆನ್ನಲಾಗಿದೆ. ೧೯೬೯ ಅಂದಾಜಿನ ಪ್ರಕಾರ ಶೇ. ೬ ರಷ್ಟು ಜನರು ಹೊರರಾಷ್ಟ್ರಗಳಲ್ಲಿ ಜನಿಸಿದವರಾಗಿದ್ದರು. ಅವರಲ್ಲಿ ಇಟಾಲಿಯನ್ನರು, ಸ್ವ್ಯಾನಿಷರು, ಪೋರ್ಚ್ಗೀಸರು ಮತ್ತು ಅಲ್ಜೀರಿಯನ್ನರು ಗಮನಾರ್ಹ ಸಂಖ್ಯೆಯಲ್ಲಿದ್ದರು. ೧೯೬೯ ರ ಜನಸಂಖ್ಯೆಯಲ್ಲಿ ಸುಮಾರು ಮುಕ್ಕಾಲುಪಾಲು ಜನರು ನಗರವಾಸಿಗಳೂ ಉಳಿದವರು ಗ್ರಾಮವಾಸಿಗಳೂ ಆಗಿದ್ದರು. ೨೦೦೦ ದ ಅಂದಾಜಿನಂತೆ ಫ್ರಾನ್ಸ್ ಜನಸಂಖ್ಯೆ ೫೯೦೨೪,೦೦೦ ಇದರಲ್ಲಿ ಶೇ. ೭೪ ಮಂದಿ ಪಟ್ಟಣ ವಾಸಿಗಳು, ಶೇ. ೨೬ ಮಂದಿ ಗ್ರಾಮವಾಸಿಗಳಿದ್ದಾರೆ. ಧರ್ಮ ಫ್ರಾನ್ಸಿನ ನಿವಾಸಿಗಳಲ್ಲಿ ಶೇ. ೯೦ ರಷ್ಟು ಮಂದಿ ರೋಮನ್ ಕ್ಯಾಥೊಲಿಕರು ಶೇ. ೧ ಪ್ರಾಟೆಸ್ಟಂಟರು ಶೇ. ೧ ಯಹೂದ್ಯರು ಶೇ ೧ ಮುಸ್ಲಿಮರು ಸ್ವತಂತ್ರ ವಿಚಾರಿಗಳ ಅನೇಕ ಸಂಸ್ಥೆಗಳು ಇಲ್ಲಿವೆ. ಯಾವ ಧರ್ಮದಲ್ಲೂ ನಂಬಿಕೆಯಿಲ್ಲದವರ ಮತ್ತು ನಾಸ್ತಿಕವಾದಿ ಯುವಕರ ಸಂಖ್ಯೆಯೂ ಗಮನಾರ್ಹವಾಗಿದೆ. ಭಾಷೆ ರಾಷ್ಟ್ರಭಾಷೆಯಾದ ಫ್ರೆಂಚಿನ ಬಳಕೆ ಸಾಮಾನ್ಯವಾಗಿದೆ. ಅದನ್ನು ಎಲ್ಲೆಲ್ಲೂ ಕಲಿಸಲಾಗುತ್ತದೆ. ಗ್ರಾಮ ಪ್ರದೇಶಗಳಲ್ಲಿ ಉಪಭಾಷೆಗಳು ಬಳಕೆಯಲ್ಲಿವೆ. ದೇಶದ ಉತ್ತರ ಮತ್ತು ಪೂರ್ವ ಪ್ರದೇಶಗಳಲ್ಲಿ ಫ್ಲೆಮಿಷ್ ಮತ್ತು ಅಲ್ಸೇಷನ್ ದಕ್ಷಿಣ ಪ್ರಾವೆನ್ನ್ನಲ್ಲಿ ಕಾರ್ಸ್ ಮತ್ತು ಕ್ಯಾಟರಾನ್ ಭಾಷೆಗಳು ಕೇಳುಬರುತ್ತವೆ. ಬ್ರಿಟನಿಯಲ್ಲಿ ಬಳಕೆಯಲ್ಲಿರುವ ಬ್ರಿಟನ್ ಮತ್ತು ನೈಋತ್ಯದಲ್ಲಿ ಬಳಕೆಯಲ್ಲಿರುವ ಬಾಸ್ಕ್ ಮೊದಲಿನಿಂದಲೂ ಇರುವ ಭಾಷೆಗಳು. ಅವುಗಳಲ್ಲಿ ಶಿಕ್ಷಣ ದೊರೆಯುವಂತಾಗಬೇಕು, ಫ್ರೆಂಚಿಗಿರುವ ಸ್ಥಾನ ಅವಕ್ಕೂ ದೊರಕಬೇಕು ಎನ್ನುವ ಬೇಡಿಕೆಗಳಿವೆ. ಆರ್ಥಿಕತೆ ಸಮತೋಲ ಸಂಪನ್ಮೂಲಗಳ ದೃಷ್ಟಿಯಿಂದ ಫ್ರಾನ್ಸ್ ಯುರೋಪಿನ ಅದೃಷ್ಟ ಶಾಲಿ ದೇಶಗಳಲ್ಲೊಂದು. ಅನಕೂಲಕರ ವಾಯುಗುಣ, ಫಲವತ್ತಾದ ವಿಶಾಲ ಮೈದಾನಗಳು, ಪರಂಪರೆಯಿಂದ ಬಂದ ವ್ಯವಸಾಯ ಕೌಶಲ್ಯ ಇವು ಕೃಷಿಯ ಅಭ್ಯುದಯಕ್ಕೆ ಕಾರಣವಾಗಿವೆ. ಕಬ್ಬಿಣದ ಅದುರಿನ ವ್ಯಾಪಕ ನಿಕ್ಷೇಪಗಳು, ಜಲ ಮತ್ತು ಶಾಖ ವಿದ್ಯುತ್ ಉತ್ಪಾದನ ಕೇಂದ್ರಗಳ ಜಾಲ, ಉತ್ತಮ ಸಾರಿಗೆ ವ್ಯವಸ್ಥೆ, ಉನ್ನತ ಮಟ್ಟದ ಸಾಂಪ್ರದಾಯಿಕ ಕೈಗಾರಿಕಾ ಕೌಶಲ ಇವು ಫ್ರಾನ್ಸಿನ ಸಂಕೀರ್ಣ ಕೈಗಾರಿಕೆಗಳು ಆಧುನಿಕ ರೀತಿಯಲ್ಲಿ ತೀವ್ರಗತಿಯಿಂದ ಬೆಳೆಯಲು ನೆರವಾಗಿವೆ. ಕೃಷಿ ದೇಶದ ಆರ್ಥಿಕತೆಯಲ್ಲಿ ಕೃಷಿಯ ಪಾತ್ರ ಪ್ರಧಾನವಾದ್ದು. ಯುರೋಪಿನಲ್ಲಿ ಮೂಲ ಆಹಾರೋತ್ಪಾದನೆಯಲ್ಲಿ ಪೂರ್ಣವಾಗಿ ಬೆಳೆಯಲಾಗುವ ಗೋಧಿ ಮುಖ್ಯ ಆಹಾರಧಾನ್ಯ, ಬಾರ್ಲಿ ಮತ್ತು ಓಟ್ಸ್ ಅನಂತರ ಬರುತ್ತವೆ. ರೋನ್ ನದೀಮುಖದ, ನೀರಾವರಿ ಸೌಲಭ್ಯವಿರುವ, ನೆರೆಮಣ್ಣಿನ ಪ್ರದೇಶದಲ್ಲಿ ಭತ್ತ ಬೆಳೆಯುತ್ತದೆ. ಮೊದಲು ನೈಋತ್ಯಕ್ಕೆ ಸೀಮಿತವಾಗಿದ್ದ ಮುಸುಕಿನ ಜೋಳದ ಬೆಳೆ ಈಗ ಎಲ್ಲ ಕಡೆಗೂ ಹಬ್ಬಿದೆ. ದಕ್ಷಿಣಾರ್ಧದಲ್ಲಿ ಮತ್ತು ವಿಶೇಷವಾಗಿ ಮೆಡೆಟರೇನಿಯನ್ ಸಮುದ್ರತೀರದ ಪ್ರದೇಶಗಳಲ್ಲಿ ದ್ರಾಕ್ಷಿ ಬೆಳೆಯುತ್ತದೆ. ಮದ್ಯ ತಯಾರಿಕೆಯಾಗುತ್ತಿದೆ. ರೇಷ್ಮೆಯ ವ್ಯವಸಾಯ ಗಮನಾರ್ಹವಾಗಿದೆ, ಹಣ್ಣು ಮತ್ತು ತರಕಾರಿ ಬೆಳೆಗಳು ಪ್ರಾಮುಖ್ಯಗಳಿಸುತ್ತಿವೆ. ಹಣ್ಣುಗಳಲ್ಲಿ ಸೇಬು, ಏಪ್ರಿಕಾಟ್, ಪೀಚ್, ಪ್ಲಮ್, ಪೇರು ಮತ್ತು ಚೆರಿ ಮುಖ್ಯವಾದವು. ಟೊಮೇಟೊ, ಈರುಳ್ಳಿ, ಕೋಸು, ಕಾಲಿಫ್ಲವರ್, ಬಟಾಣಿ, ಫ್ರೆಂಚ್ ಬೀನ್ಸ್ ಮುಂತಾದ ತರಕಾರಿಗಳು ಬೆಳೆಯುತ್ತವೆ. ಸಕ್ಕರೆಬೀಟು, ಬಟಾಟೆ, ಮೇವಿನಬೀಟು ಮತ್ತು ಮೇವಿನ ಟರ್ನಿಪ್ ಮುಖ್ಯ ಗಡ್ಡೆಗಳು. ನ್ಯೆಋತ್ಯ ಪ್ರದೇಶ ಮತ್ತು ಅಲ್ಸೇಸ್ನಲ್ಲಿ ಹೊಗೆಸೊಪ್ಪು ಬೆಳೆಯುತ್ತದೆ. ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಫ್ರಾನ್ಸ್ ಬಹಳ ಮುಂದಿದೆ. ಅವುಗಳ ಮತ್ತು ಔಷಧಿಗಳ ತಯಾರಿಕೆಗೆ ಅಗತ್ಯವಾದ ಗಿಡಗಳನ್ನು ಬೆಳೆಸಲಾಗುತ್ತದೆ. ಪಶುಪಾಲನೆ ದೇಶದ ಅನೇಕ ಕಡೆಗಳಲ್ಲಿ ಕೃಷಿಗಿಂತ ಪಶುಪಾಲನೆಗೆ ಹೆಚ್ಚಿನ ಪ್ರಾಧಾನ್ಯ ನೀಡಲಾಗಿದೆ. ಜಾನುವಾರುಗಳಲ್ಲಿ ಅರ್ಧಕ್ಕೂ ಹೆಚ್ಚು ಸಂಖ್ಯೆ ದನಕರುಗಳದ್ದಾಗಿದೆ, ಕುರಿ ಮತ್ತು ಹಂದಿ ಅನಂತರ ಬರುವ ಜಾನುವಾರುಗಳು. ಮೆಡಿಟರೇನಿಯನ್ ಸಮುದ್ರ ತೀರ ಪ್ರದೇಶದ ಹೊರತಾಗಿ ಉಳಿದ ಎಲ್ಲ ಕಡೆಯಲ್ಲೂ ದನಕರು ಸಾಕಣೆ ನಡೆಯುತ್ತದೆ. ಮಧ್ಯದ ಮತ್ತು ದಕ್ಷಿಣದ ಪರ್ವತ ಪ್ರದೇಶಗಳಲ್ಲಿ ಕುರಿಸಾಕಣೆ ಪ್ರಧಾನ. ಮಾಂಸ ಮತ್ತು ಉಣ್ಣೆಗಾಗಿ ಕುರಿ ಸಾಕಲಾಗುತ್ತಿದೆ. ಪಶ್ಚಿಮ, ಮಧ್ಯ ಮತ್ತು ಆಗ್ನೇಯ ಪ್ರದೇಶಗಳಲ್ಲಿ ಗಿಣ್ಣು ತಯಾರಿಕೆಯಾಗಿ ಆಡುಗಳನ್ನು ಸಾಕುತ್ತಾರೆ, ಕೋಳಿ ಮತ್ತು ಮೊಲಗಳನ್ನೂ ಸಾಕಲಾಗುತ್ತಿದೆ. ಉತ್ತರದಲ್ಲಿ ಕುದುರೆಗಳನ್ನು ಸಾಕುತ್ತಾರೆ. ಹಾಲು ಬೆಣ್ಣೆಗಳ ಉತ್ಪಾದನೆ ಮತ್ತು ವಿಶೇಷ ಗಿಣ್ಣಿನ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಫ್ರಾನ್ಸ್ ದ್ವಿತೀಯ ಸ್ಥಾನದಲ್ಲಿದೆ. ಮೀನುಗಾರಿಕೆ ಅನೇಕ ಸಣ್ಣ ಬಂದರುಗಳಿಂದ ಕೂಡಿರುವ ಫ್ರಾನ್ಸಿನ ಕರಾವಳಿ ಮತ್ತು ಸಮುದ್ರ ಇವು ಮೀನುಗಾರಿಕೆಗೆ ಸಹಾಯಕವಾಗಿವೆ. ಅರಣ್ಯಗಾರಿಕೆ ದೇಶದ ಸುಮಾರು ಕಾಲು ಭಾಗವನ್ನು ಅರಣ್ಯಗಳು ಆವರಿಸಿವೆ. ಅವು ಆರ್ಥಿಕತೆಯ ಅವಶ್ಯಕ ಆಂಗವಾಗಿವೆ. ಆರ್ಡೆನ್, ಕೊಂಪ್ಯೇನ್, ಫೌಂಟನ್ ಬ್ಲ್ಯೂ ಮತ್ತು ಆರ್ಲೇಯಾನ್ ಅರಣ್ಯಗಳು ಮುಖ್ಯವಾದವು. ಅರಣ್ಯಗಳ ಸುಮಾರು ೭೦% ಪ್ರದೇಶದಲ್ಲಿ ಓಕ್, ಬೀಟ್ ಮತ್ತು ಪಾಪ್ಲರ್ ಮರಗಳೂ ಉಳಿದ ಪ್ರದೇಶಗಳಲ್ಲಿ ರಾಳ ವೃಕ್ಷಗಳು ಇವೆ. ಆಲ್ಫ್ಸ್, ಜುರಾ, ವೋಷ್ ಮತ್ತು ಪಿರನೀಸ್ ಪರ್ವತ ಪ್ರದೇಶಗಳಲ್ಲಿ ಶಂಕುಧಾರಿ ವೃಕ್ಷಗಳು ವಿಶೇಷವಾಗಿವೆ. ಲಾಂಡ್ ಪ್ರದೇಶ ರಾಳ ಮತ್ತು ಚೌಬೀನೆಗಳ ದೃಷ್ಟಿಯಿಂದ ಮಹತ್ತ್ವದ್ದಾಗಿದೆ. ಗಣಿಗಾರಿಕೆ ಕಲ್ಲಿದ್ದಲು, ಕಬ್ಬಿಣದ ಅದಿರು ಮತ್ತು ಬಾಕ್ಸೈಟ್ ಮುಖ್ಯ ಖನಿಜಗಳು. ಉತ್ತರದಲ್ಲಿ ಮತ್ತು ಲೊರೇನ್ನಲ್ಲಿ ಕಲ್ಲಿದ್ದಲು ದೊರಕುತ್ತದೆ. ಕಬ್ಬಿಣದ ಅದುರಿನ ಉತ್ಪಾದನೆಯಲ್ಲಿ ಫ್ರಾನ್ಸಿನ ಸ್ಥಾನ ಪ್ರಪಂಚದಲ್ಲಿ ಮೂರನೆಯದು ಸೋವಿಯತ್ ಮತ್ತು ಅಮೆರಿಕಗಳ ಅನಂತರ ಇದು ಬರುತ್ತದೆ. ಲೊರೇನ್, ನಾರ್ಮಂಡಿ, ಅಂಜೂ ಬೋಗುಣಿ, ಪಿರನೀಸ್ ಇಲ್ಲಿ ಕಬ್ಬಿಣದ ಅದುರು ದೊರಕುತ್ತದೆ. ಬಾಕ್ಸೈಟಿನ ಉತ್ಪಾದನೆಯಲ್ಲಿ ಫ್ರಾನ್ಸ್ ಪ್ರಪಂಚದ ಪ್ರಮುಖ ದೇಶಗಳಲ್ಲಿ ಒಂದಾಗಿದೆ. ಸತು, ಸೀಸ, ತಾಮ್ರ, ತವರ, ಚಿನ್ನ, ಕಲ್ಲರಗು, ಕಲ್ಲುಪ್ಪು, ಪೊಟ್ಯಾಷ್ ಇವು ಇತರ ಖನಿಜಗಳು. ಮಧ್ಯದ ತಪ್ಪಲು ಮತ್ತು ವಾಂಡೇ ಪ್ರದೇಶಗಳಲ್ಲಿ ಯುರೇನಿಯಮ್ ದೊರಕುತ್ತದೆ. ಲಾಂಡ್ ಪ್ರದೇಶದಲ್ಲಿ ಪೆಟ್ರೋಲಿಯಮ್ ದೊರಕುತ್ತದೆಯಾದರೂ ಅವಶ್ಯಕತೆಯ ಹೆಚ್ಚುಭಾಗವನ್ನು ದೇಶ ಆಮದು ಮಾಡುತ್ತದೆ. ನೈಋತ್ಯ ಪ್ರದೇಶದಲ್ಲಿ ನೈಸರ್ಗಿಕ ಅನಿಲ ದೊರಕುತ್ತದೆ. ಚಿನ್ನದ ಉತ್ಪಾದನೆಯಲ್ಲಿ ಫ್ರಾನ್ಸಿನ ಸ್ಥಾನ ಮೂರನೆಯದು. ವಿದ್ಯುಚ್ಛಕ್ತಿ ಫ್ರಾನ್ಸ್ ವಿಶ್ವದ ಹತ್ತನೇ ಅತಿದೊಡ್ಡ ವಿದ್ಯುತ್ ಉತ್ಪಾದಕವಾಗಿದೆ. ದೇಶದಲ್ಲಿ ಜಲಸಂಪತ್ತು ಗಮನಾರ್ಹವಾಗಿರುವುದರಿಂದ ವಿದ್ಯುತ್ತಿನ ಉತ್ಪಾದನೆಗೆ ಸಹಾಯವಾಗಿದೆ. ೧೯೬೯ ರಲ್ಲಿ ೧೬೪೦ ಜಲವಿದ್ಯುತ್ತಿನ ಉತ್ಪಾದನ ಕೇಂದ್ರಗಳಿದ್ದುವು. ಬ್ರಿಟನಿ ತೀರದಲ್ಲಿ ರ್ಯಾನ್ಸ್ ನದಿಯ ಮೇಲೆ ಉಬ್ಬರವಿಳಿತದಿಂದ ವಿದ್ಯುತ್ತನ್ನು ಉತ್ಪಾದಿಸುವ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದು ಪ್ರಪಂಚದಲ್ಲೇ ಮೊದಲನೆಯದು. ಪರಮಾಣುಶಕ್ತಿ ಉತ್ಪಾದನ ಕೇಂದ್ರಗಳೂ ಇವೆ. ಕೈಗಾರಿಕೆ ಎರಡನೆಯ ಮಹಾ ಯುದ್ಧದಿಂದ ಈಚೆಗೆ ಆಗಿರುವ ಕೈಗಾರಿಕಾ ವಿಸ್ತರಣೆ ಗರ್ಮನಾರ್ಹ. ಎಲೆಕ್ಟ್ರಾನಿಕ್ಸ್, ಸಾರಿಗೆ, ಸಂಸ್ಕರಣ ಮತ್ತು ವೈಜ್ಞಾನಿಕ ಉಪಕರಣ ಕ್ಷೇತ್ರಗಳಲ್ಲಿ ವಿಶೇಷವಾದ ಅಭಿವೃದ್ಧಿಯಾಗಿದೆ. ಉಕ್ಕು, ರಸಾಯನಿಕ, ಬಟ್ಟೆ, ಮದ್ಯ ಸುಗಂಧದ್ರವ್ಯ, ವಿಮಾನ, ಹಡಗು, ವಿಜ್ಞಾನೋಪಕರಣ, ಉಡುಪು, ರಬ್ಬರ್ ಸರಕು, ಮರದ ಸರಕು, ಸಕ್ಕರೆ, ಕಾಗದ ಪಿಂಗಾಣಿ, ಆಹಾರ, ಪ್ಲಾಸ್ಟಿಕ್, ಮೋಟಾರುವಾಹನ ಇವು ಮುಖ್ಯ ಕೈಗಾರಿಕೆಗಳು. ಉಕ್ಕನ್ನು ರಫ್ತುಮಾಡುವ ಪ್ರಪಂಚದ ಪ್ರಮುಖ ದೇಶಗಳಲ್ಲಿ ಫ್ರಾನ್ಸ್ ಒಂದು. ಫ್ರಾನ್ಸ್ ಅಲ್ಯೂಮಿನಿಯಮನ್ನೂ ಉತ್ಪಾದಿಸುತ್ತಿದೆ. ಕ್ಯಾರವಿಲ್, ಮಿರಾಜ್ ಮೊದಲಾದ ಫ್ರೆಂಚ್ ವಿಮಾನಗಳನ್ನು ಪ್ರಪಂಚದ ಅನೇಕ ದೇಶಗಳು ಬಳಸುತ್ತಿವೆ. ಗಂಧಕ ಇನ್ನೊಂದು ಪ್ರಮುಖ ಉತ್ಪನ್ನ. ದೂರದರ್ಶನ, ರೇಡಿಯೋ ಇಲ್ಲಿ ತಯಾರಾಗುತ್ತವೆ. ಗಡಿಯಾರ, ಚರ್ಮ ಸರಕು ಇವೂ ತಯಾರಾಗುತ್ತವೆ. ಪ್ಯಾರಿಸಿನ ಸುತ್ತುಮುತ್ತಲಿನ ಪ್ರದೇಶ, ಉತ್ತರ ಫ್ರಾನ್ಸಿನ ಕಲ್ಲಿದ್ದಲು ಬೋಗುಣಿ ಆಲ್ಸೇಸ್ ಮತ್ತು ಲೊರೈನ್, ಕ್ಲೆರ್ಮಾನ್ ಮತ್ತು ಫೆರಾಂಡ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗಾರಿಕೆಗಳು ವಿಶೇಷವಾಗಿ ಕೇಂದ್ರೀಕೃತವಾಗಿವೆ. ಜಮಖಾನೆ ಮತ್ತು ಚಿತ್ರನೇಯ್ಗೆ ಬಟ್ಟೆಗಳೂ ಪ್ರಸಿದ್ಧವಾಗಿವೆ. ಕಲಾಬತು ಮತ್ತು ಕೈಚೀಲಗಳ ತಯಾರಿಕೆಯಲ್ಲೂ ಫ್ರಾನ್ಸ್ ಮುಂದಿದೆ. ಫ್ರಾನ್ಸಿನಲ್ಲಿ ರೇಷ್ಮೆ ಕೈಗಾರಿಕೆಯೂ ಬೆಳೆದಿದೆ. ಬಣ್ಣ ಹಾಕುವ ಮತ್ತು ಕ್ಯಾಲಿಕೊ ಮುದ್ರಣದ ಉದ್ಯಮಗಳು ಅಭಿವೃದ್ಧಿಹೊಂದಿವೆ. ಸಾರಿಗೆ ಸಂಪರ್ಕ ಯುರೋಪಿನಲ್ಲಿ ಅಭಿವೃದ್ಧಿ ಹೊಂದಿದ ಸಾರಿಗೆ ವ್ಯವಸ್ಥೆಗಳಲ್ಲಿ ಫ್ರಾನ್ಸಿನದೂ ಒಂದು. ದೀರ್ಘಕಾಲದಿಂದಲೂ ಇದು ಫ್ಯಾರಿಸಿನಲ್ಲಿ ಕೇಂದ್ರೀಕೃತವಾಗಿದೆ. ದೇಶದ ವಿಭಿನ್ನ ಭಾಗಗಳಿಗೆ ಅಲ್ಲಿಂದ ಸಾರಿಗೆ ಮಾರ್ಗಗಳು ಹೋಗುತ್ತವೆ. ಫ್ರಾನ್ಸಿನಲ್ಲಿ ರಸ್ತೆಗಳ ಒಟ್ಟು ಉದ್ದ ೭,೮೯,೦೦೦ ಕಿ.ಮೀ. ಇವುಗಳಲ್ಲಿ ಪ್ರಥಮ ದರ್ಜೆಯ ಹೆದ್ದಾರಿಗಳು, ದ್ವಿತೀಯ ದರ್ಜೆಯ ಮಾರ್ಗಗಳು, ಗ್ರಾಮೀಣ ರಸ್ತೆಗಳು ಮತ್ತು ವೇಗದ ಪ್ರಯಾಣದ ಮಾರ್ಗಗಳು ಸೇರಿವೆ. ರೈಲು ಮಾರ್ಗಗಳ ಉದ್ದ ೩೭,೦೦೦ ಕಿ.ಮೀ. ಜಲ ಮಾರ್ಗಗಳ ಉದ್ದ ಸುಮಾರು ೧೦,೩೦೦ ಕಿ.ಮೀ. ಅವುಗಳಲ್ಲಿ ಕಾಲುವೆ ಮಾರ್ಗಗಳೂ ನದೀಮಾರ್ಗಗಳೂ ಸೇರುತ್ತವೆ, ವಾಣಿಜ್ಯ ನೌಕೆಗಳ ಕ್ಷೇತ್ರದಲ್ಲಿ ಫ್ರಾನ್ಸಿನದು ಸ್ಥೂಲವಾಗಿ ೧೦ ನೆಯ ಸ್ಥಾನ. ಮಾರ್ಸೇಲ್, ಲ ಹಾವ್ರೆ ಡಂಕರ್ಕ್, ರೂವೆನ್ಬೋರ್ಡೋ ಮತ್ತು ಚೆರ್ಬಗ್ ಮುಖ್ಯ ಬಂದರುಗಳು. ಫ್ರಾನ್ಸಿನ ರಾಷ್ಟ್ರೀಯ ವಿಮಾನ ಸಂಸ್ಥೆ ಏರ್ ಫ್ರಾನ್ಸ್ ಸರ್ಕಾರದಿಂದ ಸಹಾಯಧನ ಪಡೆಯುತ್ತದೆ. ಇದರ ವಿಮಾನಗಳು ಎಲ್ಲ ಕಡೆಗಳಿಗೂ ಹೋಗುತ್ತವೆ. ಇದಲ್ಲದೆ ಎರಡು ಪ್ರಮುಖ ಖಾಸಗಿ ವಿಮಾನ ಸಂಸ್ಥೆಗಳಿವೆ. ಫ್ರಾನ್ಸಿನ ಸುಮಾರು ೭೧ ಪಟ್ಟಣಗಳಿಗೆ ವಿಮಾನ ನಿಲ್ದಾಣಗಳಿವೆ. ಆಡಳಿತ ಮತ್ತು ಸಾಮಾಜಿಕ ಸ್ಥಿತಿ ಆಡಳಿತ ಫ್ರಾನ್ಸ್ ಒಂದು ಗಣರಾಜ್ಯವಾಗಿದೆ. ರಾಪ್ಟ್ರಪತಿ ೫ ವರ್ಷದ ಅವಧಿಗೆ ಚುನಾಯಿತನಾಗುತ್ತಾನೆ. ಅವನು ಸರ್ಕಾರದ ಮುಖ್ಯಸ್ಥನಾದ ಪ್ರಧಾನಿಯನ್ನೂ ಅವನ ಶಿಫಾರಸಿನ ಮೇರೆಗೆ ಮಂತ್ರಿಮಂಡಲದ ಇತರ ಸದಸ್ಯರನ್ನೂ ನೇಮಿಸುತ್ತಾನೆ. ಕಾನೂನುಗಳನ್ನು ಹೊರಡಿಸುವವನು ರಾಪ್ಟ್ರಾಧ್ಯಕ್ಷ. ಅವನಿಗೆ ರಾಷ್ಟ್ರೀಯ ಸಭೆಯನ್ನು ರದ್ದು ಮಾಡುವ ಅಧಿಕಾರವಿರುತ್ತದೆ. ಅವನು ಎಲ್ಲ ಸಶಸ್ತ್ರ ಪಡೆಗಳ ಅಧಿಪತಿ. ಪ್ರಧಾನ ಮಂತ್ರಿ ಸಾರ್ವಜನಿಕ ನೀತಿಯನ್ನು ನಿರ್ಧರಿಸುತ್ತಾನೆ ಮತ್ತು ನಾಗರಿಕ ಸೇವೆಯನ್ನು ಮೇಲ್ವಿಚಾರಣೆ ಮಾಡುತ್ತಾನೆ, ದೇಶೀಯ ವಿಷಯಗಳಿಗೆ ಒತ್ತು ನೀಡುತ್ತಾನೆ. ಸಂಸತ್ತಿನಲ್ಲಿ ರಾಷ್ಟ್ರೀಯ ಸಭೆ (ನ್ಯಾಷನಲ್ ಅಸೆಂಬ್ಲಿ), ಸೆನೆಟ್ ಎಂಬ ಎರಡು ಸದನಗಳಿರುತ್ತವೆ. ರಾಷ್ಟ್ರೀಯ ಸಭೆಯ ೪೮೫ ಸದಸ್ಯರು (ಡೆಪ್ಯುಟಿಗಳು) ೫ ವರ್ಷಗಳ ಅವಧಿಗೆ ಚುನಾಯಿತರಾಗುತ್ತಾರೆ. ಸೆನೆಟ್ನ ೨೮೩ ಸದಸ್ಯರ ಅವಧಿ ೬ ವರ್ಷ. ಅವರಲ್ಲಿ ಮೂರನೆಯ ಒಂದರಷ್ಟು ಸಂಖ್ಯೆಯ ಸದಸ್ಯರನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಆಯ್ಕೆ ಮಾಡಲಾಗುತ್ತದೆ. ಸಂಸತ್ತಿನ ವಿಧಾನಾಧಿಕಾರ ಕೆಲವು ವಿಶೇಷ ಅನುಸೂಚಿತ ವಿಷಯಗಳಿಗೆ ಸೀಮಿತವಾಗಿರುತ್ತದೆ. ಉಳಿದೆಲ್ಲ ವಿಷಯಗಳನ್ನು ಸರ್ಕಾರಿ ವಿಧಿಗಳ ಮೂಲಕ ನೋಡಿಕೊಳ್ಳಲಾಗುತ್ತದೆ. ವರ್ಷದಲ್ಲಿ ಎರಡು ಸಲ ಸಂಸತ್ತಿನ ಅಧಿವೇಶನಗಳು ನಡೆಯುತ್ತವೆ. ೯ ಮಂದಿ ಸದಸ್ಯರು ಮತ್ತು ಗಣರಾಜ್ಯದ ನಿವೃತ್ತ ಅಧ್ಯಕ್ಷರಿಂದ ಕೂಡಿರುವ ಸಂವಿಧಾನ ಮಂಡಳಿ ಚುನಾವಣೆ ಮತ್ತು ಜನಾಭಿಪ್ರಾಯ ಸಂಗ್ರಹಣೆಯ ವಿಧಿಬದ್ಧತೆಯ ಮೇಲ್ವಿಚಾರಣೆ ಮಾಡುವುದಲ್ಲದೆ ಕಾನೂನು ಮತ್ತು ಸರ್ಕಾರಿ ವಿಧಿಗಳ ಸಂವಿಧಾನ ಬದ್ಧತೆಯನ್ನು ಪರಿಶೀಲಿಸುತ್ತದೆ. ರಾಪ್ಟ್ರೀಯ ಆಡಳಿತ ನೀತಿಯನ್ನು ರಚಿಸುವ ಮತ್ತು ಕಾನೂನುಗಳನ್ನು ಜಾರಿಯಲ್ಲಿ ತರುವ ಕೆಲಸ ಪ್ರಧಾನಿ ಮತ್ತು ಅವನ ಸರ್ಕಾರದ್ದು. ಯಾರು ಏಕ ಕಾಲದಲ್ಲಿ ಸಂಸತ್ತಿನ ಮತ್ತು ಸರ್ಕಾರದ ಸದಸ್ಯರಾಗುವಂತಿಲ್ಲ. ನ್ಯಾಯಾಂಗ ಸಿವಿಲ್ ಮೊಕದ್ದಮೆಗಳ ವಿಚಾರಣೆಗೆ ದೇಶದಲ್ಲಿ ೪೫೫ ಕೆಳದರ್ಜೆಯ ಹಾಗೂ ೧೭೨ ಮೇಲುದರ್ಜೆಯ ನ್ಯಾಯಾಲಯಗಳಿವೆ. ಕ್ರಿಮಿನಲ್ ಮೊಕದ್ದಮೆಗಳ ವಿಚಾರಣೆಗೆ ಶಿಕ್ಷಾ ನ್ಯಾಯಾಲಯಗಳು ಮತ್ತು ಸಣ್ಣ ಅಪರಾಧಗಳ ವಿಚಾರಣೆಗೆ ಪೊಲೀಸ್ ನ್ಯಾಯಾಲಯಗಳು ಇವೆ. ಈ ನ್ಯಾಯಾಲಯಗಳ ತೀರ್ಪುಗಳ ವಿರುದ್ಧ ಅಪೀಲುಗಳನ್ನು ನಿರ್ಧರಿಸುವುದಕ್ಕೆ ೨೮ ಅಪೀಲು ನ್ಯಾಯಾಲಯಗಳಿವೆ. ಘೋರ ಅಪರಾಧಗಳ ವಿಚಾರಣೆ ಅಸೈ ನ್ಯಾಯಾಲಯಗಳಿಂದ ನಡೆಯುತ್ತದೆ. ಈ ಎಲ್ಲ ನ್ಯಾಯಾಲಯಗಳು ಮತ್ತು ಕೈಗಾರಿಕಾ ಸಮನ್ವಯ ನ್ಯಾಯಲಯಗಳಂಥ ವಿಶಿಷ್ಟ ವೃತ್ತಿ ನ್ಯಾಯಾಲಯಗಳು ಕೋರ್ಟ್ ಡ ಕ್ಯಾಸೇಷನ್ ಎಂಬ ನ್ಯಾಯಾಲಯದ ನಿಯಂತ್ರಣಕ್ಕೆ ಒಳಪಟ್ಟಿವೆ. ಈ ನ್ಯಾಯಾಲಯ ಕಾನೂನುಗಳ ನಿರ್ವಚನ ಮಾಡುತ್ತದೆಯೇ ಹೊರತು ಮೊಕದ್ದಮೆಗಳನ್ನು ನಿರ್ಣಯಿಸುವುದಿಲ್ಲ. ಆದರೆ ಅದು ಒಂದು ಮೊಕದ್ದಮೆಯನ್ನು ಕೆಳಗಿನ ನ್ಯಾಯಾಲಯಕ್ಕೆ ಒಪ್ಪಿಸಬಹುದು. ಆಡಳಿತಾತ್ಮಕ ನ್ಯಾಯಾಲಯಗಳು ಅಧಿಕಾರ ಚಲಾವಣೆಯಲ್ಲಿ ಸಿವಿಲ್ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಏಳುವ ಮೊಕದ್ದಮೆಗಳನ್ನು ನಿರ್ಣಯಿಸುತ್ತದೆ. ಯಾವುದೇ ಮೊಕದ್ದಮೆಯ ವಿಚಾರಣೆ ಒಂದು ಸಾಮಾನ್ಯ ಆಡಳಿತಾತ್ಮಕ ನ್ಯಾಯಾಲಯದಿಂದ ಆಗಬೇಕು ಎನ್ನುವುದನ್ನು ವಿವಾದಗಳ ನ್ಯಾಯಾಲಯ ನಿರ್ಧರಿಸುತ್ತದೆ. ಲೆಕ್ಕಗಳ ನ್ಯಾಯಾಲಯ ಸರ್ಕಾರಿ ಲೆಕ್ಕಗಳನ್ನು ಪರೀಕ್ಷಿಸುತ್ತದೆ ಮತ್ತು ಕೆಲವು ಆಡಳಿತಾತ್ಮಕ ನಿರ್ಣಯಗಳ ವಿರುದ್ಧ ಅಪೀಲುಗಳ ವಿಚಾರಣೆ ನಡೆಸುತ್ತದೆ. ಆಡಳಿತ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯ ಮಂತ್ರಾಲೋಚನೆ ಸಭೆ ಅತ್ಯುಚ್ಚ ಅಪೀಲು ನ್ಯಾಯಾಲಯ, ರಾಷ್ಟ್ರ ಭದ್ರತಾ ನ್ಯಾಯಾಲಯ ರಾಷ್ಟ್ರದ ಭದ್ರತೆಯ ಧಕ್ಕೆಗೆ ಸಂಬಂಧಿಸಿದ ಮೊಕದ್ದಮೆಗಳ ವಿಚಾರಣೆ ನಡೆಸುತ್ತದೆ. ಆರೋಗ್ಯ ಫ್ರಾನ್ಸಿನಲ್ಲಿ, ೧,೮೦೦ ಕ್ಕೂ ಹೆಚ್ಚು ಸಾರ್ವಜನಿಕ ಆಸ್ಪತ್ರೆಗಳು ೩೦೦೦ ಕ್ಕೂ ಹೆಚ್ಚು ಖಾಸಗಿ ಚಿಕಿತ್ಸಾ ಸಂಸ್ಥೆಗಳು ಇವೆ. ಆಸ್ಪತ್ರೆಗಳಲ್ಲಿಯ ಹಾಸಿಗೆಗಳ ಸಂಖ್ಯೆ ೪,೫೦,೦೦೦ ಕ್ಕೂ ಅಧಿಕ. ಅಲ್ಲದೆ ಸುಮಾರು ೧೦೦ ಮಾನಸಿಕ ರೋಗಿಗಳ ಆಸ್ಪತ್ರೆಗಳು, ೬೦೦ ಕ್ಷಯರೋಗ ನಿವಾರಣ ಸಂಸ್ಥೆಗಳು ಮತ್ತು ಸ್ಯಾನಿಟೇರಿಯಮ್ಗಳು, ೬೫೦ ಶಿಶು ಮತ್ತು ಮಕ್ಕಳ ಗೃಹಗಳು ಮತ್ತು ೧೦ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳು ಇವೆ. ಕಡಿಮೆ ವರಮಾನವುಳ್ಳವರ ೧೦ ವರ್ಷಕ್ಕೂ ಕೆಳಗಿನ ವಯಸ್ಸಿನ ಮಕ್ಕಳ ಹಾಗೂ ನಿರುದ್ಯೋಗಿಗಳ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ಪೂರ್ಣವಾಗಿ ಸರ್ಕಾರ ವಹಿಸುತ್ತದೆ. ಉಳಿದವರ ವೈದ್ಯಕೀಯ ಔಷಧ ಮತ್ತು ಆಸ್ಪತ್ರೆಯ ಚಿಕಿತ್ಸೆಯ ಖರ್ಚನ್ನು ಆರೋಗ್ಯವಿಮೆ ಭಾಗಶಃ ಮರುಪಾವತಿ ಮಾಡುತ್ತದೆ. ವಸತಿ ಫ್ರಾನ್ಸಿನಲ್ಲಿ ೧೯೪೫ ರಿಂದಲೂ ವಸತಿ ಪ್ರಶ್ನೆ ಗಂಭೀರವಾಗಿಯೇ ಇದೆ. ನಗರೀಕರಣ, ಜನಸಂಖ್ಯೆಯ ಹೆಚ್ಚಳ, ಸುಮಾರು ೧೦,೦೦,೦೦೦ ಫ್ರೆಂಚ್ ಪ್ರಜೆಗಳು ಆಲ್ಜೀರಿಯದಿಂದ ವಾಪಸಾದದ್ದು, ಕಟ್ಟಡಗಳ ಜೀರ್ಣಾವಸ್ಥೆ ಇವುಗಳಿಂದಾಗಿ ವಸತಿಗಳ ಕೊರತೆ ತೀವ್ರವಾಗಿದೆ. ೧೯೭೦ ರಲ್ಲಿ ೪,೫೬,೦೦೦ ಹೊಸ ವಸತಿಗಳು ನಿರ್ಮಾಣವಾದುವು. ಈ ದಶಕದ ಮುಂದಿನ ವರ್ಷಗಳಲ್ಲಿ ೫,೦೦,೦೦೦ ವಸತಿಗಳು ನಿರ್ಮಾಣಗೊಳ್ಳುವ ನಿರೀಕ್ಷೆಯಿತ್ತು. ಸರ್ಕಾರ ಸ್ವತಃ ವಸತಿಗಳನ್ನು ನಿರ್ಮಿಸುತ್ತಿಲ್ಲವಾದರೂ ವಸತಿ ನಿರ್ಮಾಣಕ್ಕೆ ನಾನಾ ಬಗೆಯ ಪ್ರೋತ್ಸಾಹ ನೀಡುತ್ತಿದೆ. ಸಮಾಜ ಕಲ್ಯಾಣ ಸಾಮಾಜಿಕ ವಿಮೆ, ಕೌಟುಂಬಿಕ ಭತ್ಯೆ, ಮತ್ತು ಕಾರ್ಮಿಕರಿಗೆ ಪರಿಹಾರಗಳ ಕಾರ್ಯಕ್ರಮಗಳನ್ನು ಸಾಮಾಜಿಕ ಭಧ್ರತಾ ಆಡಳಿತ ನಿಯಂತ್ರಿಸುತ್ತಿದೆ. ಉದ್ಯೋಗಪತಿಗಳು ಕಾನೂನಿಗೆ ಅನುಸಾರವಾಗಿ ಸಂಬಳದಿಂದ ಹಿಡಿದುಕೊಳ್ಳುವ ಹಣದಿಂದ ಅದಕ್ಕೆ ಹಣವೊದಗುತ್ತದೆ. ೧೯೬೬ ರ ಒಂದು ಕಾನೂನು ಸ್ವಯಂ ಉದ್ಯೋಗಿಗಳಿಗೆ ಸಾಮಾಜಿಕ ವಿಮೆಯನ್ನು ಕಡ್ಡಾಯವಾಗಿ ವಿಧಿಸಿತು. ದೇಶದಲ್ಲಿ ಆರೋಗ್ಯ ವಿಮೆ, ಹೆರಿಗೆ ವಿಮೆ, ದೌರ್ಬಲ್ಯ ವಿಮೆ, ವೃದ್ಧಾಪ್ಯ ವಿಮೆ, ಮೃತ್ಯು ವಿಮೆ, ಕುಟುಂಬ ಭತ್ಯ, ಹೆರಿಗೆ ಭತ್ಯೆ, ವಸತಿ ಭತ್ಯೆ ಮೊದಲಾದವುಗಳಿಗೆ ವ್ಯವಸ್ಥೆಯಿದೆ. ಗ್ರಂಥಾಲಯಗಳು, ವಸ್ತುಸಂಗ್ರಹಾಲಯಗಳು ಎಲ್ಲ ಬೌದ್ಧಿಕ ಹವ್ಯಾಸಗಳಲ್ಲಿ ಮುಂದಾಗಿರುವ ರಾಜಧಾನಿ ಪ್ಯಾರಿಸಿನಲ್ಲಿ ಗ್ರಂಥಾಲಯಗಳು ಮತ್ತು ವಸ್ತುಸಂಗ್ರಹಾಲಯಗಳು ಅಧಿಕ ಸಂಖ್ಯೆಯಲ್ಲಿ ಕೇಂದ್ರೀಕೃತವಾಗಿವೆ. ೧೪೮೦ ರಲ್ಲಿ ಸ್ಥಾಪಿತವಾದ ಪ್ಯಾರಿಸಿನ ರಾಷ್ಟ್ರೀಯ ಗ್ರಂಥಾಲಯ ಪ್ರಪಂಚದ ಅತ್ಯಂತ ದೊಡ್ಡ ಸಂಶೋಧನ ಗ್ರಂಥಾಲಯಗಳಲ್ಲೊಂದಾಗಿದೆ. ೧.೨ ಕೋಟಿಗೂ ಹೆಚ್ಚು ಸಂಖ್ಯೆಯಲ್ಲಿ ಗ್ರಂಥಗಳು, ಹಸ್ತಪ್ರತಿಗಳು, ಮುದ್ರಣಗಳು, ನಕಾಶೆಗಳು ಮತ್ತು ನಿಯತ ಕಾಲಿಕೆಗಳಿವೆ. ೪೦ ಲಕ್ಷಕ್ಕಿಂತ ಹೆಚ್ಚು ಗ್ರಂಥಗಳಿರುವ ಪ್ಯಾರಿಸ್ ವಿಶ್ವವಿದ್ಯಾಲಯ ಗ್ರಂಥಾಲಯ ಅತ್ಯಂತ ದೊಡ್ಡ ವಿದ್ಯಾಸಂಸ್ಥಾ ಗ್ರಂಥಾಲಯವಾಗಿದೆ. ಪ್ರತಿಯೊಂದು ದೊಡ್ಡ ಉಚ್ಚ ಶಿಕ್ಷಣ ಸಂಸ್ಥೆಯಲ್ಲೂ ಅದರದೇ ಗ್ರಂಥಾಲಯವಿದೆ. ದೇಶದ ೬೫೨ ಸಾರ್ವಜನಿಕ ಗ್ರಂಥಾಲಯಗಳ ಪೈಕಿ ೭೬ ಪ್ಯಾರಿಸಿನಲ್ಲಿವೆ. ರಾಷ್ಟ್ರೀಯ ಪತ್ರಾಗಾರಗಳು ಪ್ಯಾರಿಸಿನಲ್ಲಿವೆ. ಎಲ್ಲ ಕಾಲ ಮತ್ತು ಪ್ರದೇಶಗಳ ಲಲಿತಕಲೆಗಳ ಎಲ್ಲ ಪ್ರಕಾರಗಳನ್ನೂ ಒಳಗೊಂಡ ಲಾವ್ರೆಯ ಕಲಾಸಂಗ್ರಹ ಪ್ರಪಂಚದ ಅತ್ಯಂತ ದೊಡ್ಡ ಸಂಗ್ರಹಗಳಲ್ಲಿ ಒಂದು. ಲಕ್ಸೆಂಬರ್ಗ್ ವಸ್ತುಸಂಗ್ರಹಾಲಯ ೧೯ ಮತ್ತು ೨೦ ನೆಯ ಶತಮಾನಗಳ ವರ್ಣಚಿತ್ರಗಳಿಗೂ ಕ್ಲೂನಿ ವಸ್ತು ಸಂಗ್ರಹಾಲಯ ಕಲಾಕೌಶಲಗಳಿಗೂ ಹೆಸರಾಗಿವೆ. ಮಾನವಶಾಸ್ತ್ರ ವಸ್ತುಸಂಗ್ರಹಾಲಯ ದೊಡ್ಡ ಸಂಶೋಧನ ಕೇಂದ್ರವೂ ಆಗಿದೆ. ನಗರಗಳು ಫ್ರಾನ್ಸಿನ ಪ್ರಮುಖ ನಗರಗಳು ಪ್ಯಾರಿಸ್ (ರಾಜಧಾನಿ) (೯೦೬೦೨೫೭), ಮಾರ್ಸೇಲ್ಸ್ (೧೦೮೭೩೭೬), ಲೀಯಾನ್ (೧೦೮೭೩೬೭), ಟ್ಯುಲೂಸ್ (೬೦೮೪೩೦), ನೀಸ್ (೩೪೫೬೭೪), ಬಾರ್ಡೋ (೨೧೩೨೭೪,) ನ್ಯಾನ್ಟ್ಸ್ (೨೫೨೦೨೯), ಸ್ಟ್ರಾಸ್ಬುರ್ಗ್ (೨೫೫೯೩೭), ಸಾನ್ಟೇಟೈನ್ (೨,೧೬,೦೨೦) ಮತ್ತು ಲ ಹಾವ್ರೆ (೧೯೭೨೧೯) ಆಗಿವೆ. ನಾಣ್ಯ ಫ್ರಾನ್ಸಿನ ನಾಣ್ಯ ಫ್ರ್ಯಾಂಕ್. ಇದನ್ನು ೧೦೦ ಸೆಂಟೈಮ್ಗಳಾಗಿ ವಿಂಗಡಿಸಲಾಗಿದೆ. ಕ್ರೀಡೆಗಳು ಫುಟ್ಬಾಲ್, ರಗ್ಬಿ ಇವು ಫ್ರಾನ್ಸಿನ ಅತ್ಯಂತ ಜನಪ್ರಿಯ ಕ್ರೀಡೆಗಳು. ಪ್ರಾಕ್ತನ ಪುರಾತನ ಶಿಲಾಯುಗದ ಸಂಸ್ಕೃತಿಗಳ ಅಧ್ಯಯನ ಕ್ಷೇತ್ರದಲ್ಲಿ ಫ್ರಾನ್ಸಿಗೆ ಅಗ್ರಪ್ರಾಶಸ್ತ್ಯ ದೊರಕಿದೆ. ಫ್ರಾನ್ಸಿನ ಸೋಮ್ ನದಿ ದಂಡೆಯಲ್ಲಿ ಫ್ರೆಂಚ್ ಪುರಾತತಜ್ಞ ಬೂಷರ್ ಡಿ ಪೆರ್ತೆ ಗುರುತಿಸಿದ ಅವಶೇಷಗಳು ಪುರಾತತ್ವ ಶಾಸ್ತ್ರದ ವೈಜ್ಞಾನಿಕತೆಯನ್ನು ವಿದ್ವಾಂಸರು ಒಪ್ಪಿಕೊಳ್ಳಲು ತಳಹದಿಯಾದುವು. ಮತ್ತೆ ಮೊದಲ ಸಂಶೋಧನೆಗಳು ಫ್ರಾನ್ಸಿನ ನೆಲೆಗಳಲ್ಲಿ ಆದುದರಿಂದ ಶಿಲಾಯುಗದ ಅನೇಕ ಸಂಸ್ಕೃತಿಗಳಿಗೆ ಫ್ರೆಂಚ್ ಹೆಸರುಗಳನ್ನು ನೀಡಲಾಗಿದೆ. ಚಿಲಿಯನ್, ಅಬ್ಬೆ ವಿಲಿಯನ್ ಅಷ್ಯೂಲಿಯನ್, ಲೆವಲ್ವಾಸಿಯನ್, ಮೌಸ್ಟೀರಿಯನ್, ಆರಿಗ್ನೇಸಿಯನ್, ಸಲೂಟ್ರಿಯನ್, ಮ್ಯಾಗ್ಡಲೀನಿಯನ್ ಮುಂತಾದ ಸಂಸ್ಕೃತಿಗಳು ಆಯಾ ಹೆಸರಿನ ಫ್ರೆಂಚ್ ನೆಲೆಗಳಲ್ಲಿ ಮೊದಲಿಗೆ ಗುರುತಿಸಲಾದವು. ಮಾನವನ ಪ್ರಾಚೀನ ಸಂಸ್ಕೃತಿಯ ಹಂತಕ್ಕೆ ಸೇರಿದ ಅಬ್ಬೆ ವಿಲಿಯನ್ ಕೈಕೊಡಲಿ ಸಂಸ್ಕೃತಿ ಫ್ರಾನ್ಸಿನ ಅಬ್ಬೆವಿಲೆ ಎಂಬಲ್ಲಿ ಕಂಡುಬಂತು. ಕಲ್ಲುಸುತ್ತಿಗೆಯ ಸಹಾಯದಿಂದ ತಯಾರಿಸಿದ ಒರಟಾದ ಕೈ ಕೊಡಲಿಗಳನ್ನು ಆ ಹಂತದಲ್ಲಿ ಬಳಸಲಾಗುತ್ತಿತ್ತು. ಕ್ರಮೇಣ ಶಿಲಾಯುಧ ತಯಾರಿಕಾ ತಂತ್ರಗಳಲ್ಲಿ ಸುಧಾರಣೆಗಳಾದವು. ಕೊಳವೆಯ ಆಕಾರದ ಸುತ್ತಿಗೆಯಿಂದ ಒರಟು ಆಯುಧಗಳ ಅಂಚುಗಳಿಂದ ಸಣ್ಣ ಚಕ್ಕೆಗಳನ್ನು ತೆಗೆದು ನೇರ ಮತ್ತು ಫಲಕಾರಿಯಾದ ಅಷ್ಯೂಲಿಯನ್ ಹಂತದ ಕೈಕೊಡಲಿಗಳನ್ನು ತಯಾರಿಸಿ ಬಳಸಲಾರಂಭಿಸಿದರು. ಆ ಹಂತದಲ್ಲಿ ಇಂಗ್ಲೆಂಡಿನಲ್ಲಿ ಮೊದಲಿಗೆ ತಲೆದೋರಿದ ಕ್ಲಾಕ್ಟೋನಿಯನ್ ಚಕ್ಕೆ ಕಲ್ಲಿನ ಆಯುಧಗಳು ಪ್ರತ್ಯೇಕವಾಗಿ ರೂಢಿಗೆ ಬಂದುವು. ಈ ದ್ವಿವಿಧ ಸಂಸ್ಕೃತಿಗಳೂ ಸಮನಾಗಿ ಫ್ರಾನ್ಸಿನಲ್ಲಿ ಬಳಕೆಯಲ್ಲಿದ್ದುವು ಅಷ್ಯೂಲಿಯನ್ ಸಂಸ್ಕೃತಿಯಲ್ಲಿ ಪ್ರಗತಿಪರ ಹಂತಗಳನ್ನು ಗುರುತಿಸಲಾಗಿದೆ ಮಧ್ಯ ಪ್ಲೀಸ್ಟೋಸೀನ್ ಯುಗದ ಅಂತ್ಯಭಾಗದಲ್ಲಿ ಕೈಕೊಡಲಿ ಸಂಸ್ಕೃತಿಯಲ್ಲಿ, ಕ್ಲೀವರ್ ಅಥವಾ ಸೀಳು ಕೊಡಲಿ ಬೆಳಕಿಗೆ ಬಂತು. ಚಕ್ಕೆ ಕಲ್ಲಿನ ಆಯುಧಗಳ ರೀತಿಯಲ್ಲೂ ಸುಧಾರಣೆಗಳು ಆದುವು. ಇದರಿಂದ ಕ್ಲಾಕ್ಟೋನಿಯನ್ ಸಂಸ್ಕೃತಿಯಿಂದ ಹುಟ್ಟಿದ ಮೌಸ್ಟೀರಿಯನ್ ಸಂಸ್ಕೃತಿ ಅಂತ್ಯ ಪ್ಲೀಸ್ಟೋಸೀನ್ ಯುಗದ ಮೊದಲಲ್ಲಿ ಅಸ್ತಿತ್ವದಲ್ಲಿದ್ದ ಮಧ್ಯಪೂರ್ವ ಶಿಲಾಯುಗದಲ್ಲಿ ಪ್ರಬಲವಾಯಿತು. ಆ ಕಾಲದಲ್ಲಿ ತಲೆದೋರಿದ ಮತ್ತೊಂದು ಚಕ್ಕೆಕಲ್ಲಿನ ಆಯುಧಗಳ ಸಂಸ್ಕೃತಿ ಲೆವಾಲ್ವಾಸಿಯನ್, ಈ ಸಂಸ್ಕೃತಿಯಲ್ಲಿ ಪೂರ್ವಯೋಜಿತ ತಿರುಳ್ಗಲ್ಲಿನಿಂದ ತಯಾರಿಸಿದ ಹಲವು ಬಗೆಯ ಹೆರೆಯುವ ಆಯುಧಗಳು, ಕೊರೆಯುಳಿಗಳು ಮೊನೆಗಳು ಗಮನಾರ್ಹವಾಗಿದ್ದುವು. ಕ್ರಮೇಣ ಕೈಕೊಡಲಿ ಮತ್ತು ಚಕ್ಕೆ ಕಲ್ಲಿನ ಆಯುಧಗಳ ವಿಧಾನಗಳು ಪರಸ್ಪರ ಪ್ರಭಾವಕ್ಕೊಳಗಾದುವು. ಮೌಸ್ಟೀರಿಯನ್ ಸಂಸ್ಕೃತಿಯಲ್ಲಿ ಸಣ್ಣ ಹೃದಯಾಕಾರದ ಕೈಕೊಡಲಿಗಳು ರೂಢಿಗೆ ಬಂದುವು. ಚಕ್ಕೆಕಲ್ಲಿನ ಆಯುಧಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದ್ದ ತಂತ್ರಗಳು ಅಷ್ಯೂಲಿಯನ್ ಆಯುಧಗಳ ತಯಾರಿಕೆಯಲ್ಲಿ ಕಂಡುಬರುತ್ತವೆ. ಪ್ಲೀಸ್ಟೋಸೀನ್ ಯುಗದ ಕೊನೆಗಾಲದಲ್ಲಿ ನೈಋತ್ಯ ಯುರೋಪಿನಲ್ಲಿ ಪ್ರಮುಖ ಬದಲಾವಣೆಗಳು ಆದವು. ಪಶ್ಚಿಮ ಏಷ್ಯದಲ್ಲಿ ಹುಟ್ಟಿ ಕ್ರಮೇಣ ಅಭಿವೃದ್ಧಿಗೊಂಡ ಕೂರಲಗು ಫಲಕ ಕೆತ್ತುಮೊಳೆ (ಬ್ಯೂರಿನ್) ಆಯುಧರೀತಿಗಳನ್ನು ಬಳಸುತ್ತಿದ್ದ ಆಧುನಿಕ ಮಾನವ ನಿರ್ಮಿತವೆಂದು ಪರಿಗಣಿಸಲಾದ ಅಂತ್ಯಶಿಲಾಯುಗ ಸಂಸ್ಕೃತಿ ಕಾಣಿಸಿಕೊಂಡಿತು. ಬೇಟೆ, ಮೀನುಗಾರಿಕೆ ಮತ್ತು ಸಂಗ್ರಹಣೆಯಿಂದ ಮಾನವ ಜೀವಿಸುವ ವಿಧಾನವನ್ನು ಮುಂದುವರಿಸಿದರೂ ಅಮೋಘವಾದ ಕಲೆಯನ್ನು ನಿರ್ಮಿಸತೊಡಗಿದ್ದು ಈ ಸಂಸ್ಕೃತಿಯ ವೈಶಿಷ್ಟ್ಯ. ಬಂಡೆಗಳ ಮೇಲಿನ ರೇಖಾ ಚಿತ್ರಗಳು, ಜೇಡಿ ಮಣ್ಣಿನಲ್ಲಿ ರೂಪಿಸಿದ ಗೊಂಬೆಗಳು, ಕಡೆದ ಶಿಲ್ಪಗಳು ಮತ್ತು ಮೂಳೆ ಕೊಂಬು ದಂತಗಳ ಮೇಲಿನ ಗೀಚಿದ ವಿನ್ಯಾಸಗಳು ಮೊದಲಿಗೆ ಕಂಡುಬರುತ್ತವೆ. ಆದರೆ ಕಡೆಗಾಲದಲ್ಲಿ ನೈಋತ್ಯ ಫ್ರಾನ್ಸ್ ಮತ್ತು ಈಶಾನ್ಯ ಸ್ಟೇನಿನ ಪ್ರದೇಶಗಳಲ್ಲಿ ಬೆಟ್ಟಗುಡ್ಡಗಳಲ್ಲಿರುವ ಪ್ರಾಕೃತಿಕ ಗುಹೆಗಳ ಒಳ ಚಾವಣಿ ಮತ್ತು ಗೋಡೆಗಳ ಮೇಲೆ ರೂಪಿಸಿರುವ ಚಿತ್ರಕಲೆ ನಿಜಕ್ಕೂ ಅಪೂರ್ವವಾದದ್ದು. ಸುಮಾರು ೩೧೦ ಸಾವಿರ ವರ್ಷಗಳ ಹಿಂದಿನ ಈ ಚಿತ್ರಕಲೆ ಇಂದಿಗೂ ಅಚ್ಚಳಿಯದಂತೆ ಉಳಿದುಬಂದಿವೆ. ಇವು ಆಗಿನ ಚಿತ್ರಕಾರರ ಅಸಾಧಾರಣ ತಾಂತ್ರಿಕ ನೈಪುಣ್ಯಕ್ಕೆ ಸಾಕ್ಷಿ. ಈ ಕಲೆಯ ಅಧ್ಯಯನದಿಂದ ಸ್ವಲ್ಪಮಟ್ಟಿಗೆ ಆಗಿನ ಜನಜೀವನ, ಧರ್ಮ ಮತ್ತು ನಂಬಿಕೆಗಳನ್ನು ತಿಳಿದುಕೊಳ್ಳಬಹುದು. ಪೂರ್ವಶಿಲಾಯುಗದ ಕಲೆಯ ಪ್ರಮುಖ ನೆಲೆಗಳು ಫ್ರಾನ್ಸಿನಲ್ಲಿವೆ. ಇವುಗಳ ಅತ್ಯುತ್ತಮ ಅಧ್ಯಯನವೂ ಆಗಿವೆ. ಲಿಐಜೀಸ್, ಲಾಸ್ಕೊಡಾರ್ಡಾನ್, ಟಕ್ ಡಿ ಅಡೋಬರ್ಟ್ ಮುಂತಾದ ಕಲಾ ಕೇಂದ್ರಗಳು ಪೂರ್ವ ಶಿಲಾಯುಗದ ಕಲೆಯ ಅಧ್ಯಯನ ದೃಷ್ಟಿಯಿಂದ ಮುಖ್ಯವಾದವು. ಹಿಮಯುಗದ ಅಥವಾ ಪ್ಲೀಸ್ಟೋಸೀನ್ ಯುಗದ ಅನಂತರ ವಾಯುಗುಣ ಪರಿಸ್ಥಿತಿ ಮೂಲಭೂತವಾಗಿ ಬದಲಾಯಿಸಿ ಹೊಸರೀತಿಯ ಪರಿಸರ ಅಸ್ತಿತ್ವಕ್ಕೆ ಬಂದಾಗ ಸೂಕ್ಷ್ಮ ಶಿಲಾಯುಧಗಳನ್ನು ಬಳಸುತ್ತಿದ್ದ ಬೇಟೆ ಮೀನುಗಾರಿಕೆ ಸಸ್ಯಮೂಲ ಆಹಾರ ಸಂಗ್ರಹಣೆಗಳಿಂದ ಜೀವನ ನಿರ್ವಹಣೆ ಮಾಡುತ್ತಿದ್ದ ಪಂಗಡಗಳು ದಟ್ಟವಾದ ಅರಣ್ಯಪ್ರದೇಶಗಳಲ್ಲಿ ವಾಸಿಸುತ್ತಿದ್ದುವು. ಈ ಪಂಗಡದ ಜನರು ಕೊಂಬು ಮೂಳೆಗಳ ಆಯುಧೋಪಕರಣಗಳನ್ನು ಉಪಯೋಗಿಸುತ್ತಿದ್ದರು. ಬಿಲ್ಲು ಬಾಣಗಳ ಬಳಕೆ ಸಾಮಾನ್ಯವಾಗಿತ್ತು. ಕೊಂಬಿನ ಹಿಡಿಕೆಗಳಲ್ಲಿ ಸೇರಿಸಿದ ಕಲ್ಲಿನ ಸಣ್ಣಕೊಡಲಿಗಳಿಂದ ಮರಗಳನ್ನು ಕಡಿದು ಗುಡಿಸಿಲುಗಳನ್ನು ನಿರ್ಮಿಸುತ್ತಿದ್ದರು. ಇವರು ಅಂತ್ಯ ಪೂರ್ವಶಿಲಾಯುಗದ ಕಲೆಯ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋದರಾದರೂ ಆಗಿನ ಸತ್ತ್ವ ಕಾಣಬರುವುದಿಲ್ಲ. ಡೆನ್ಮಾರ್ಕಿನಲ್ಲಿ ಹುಟ್ಟಿ ಯೂರೊಪಿನಾದ್ಯಂತ ಪ್ರಸರಿಸಿದ ಮ್ಯಾಗೆಮೋಸಿಯಸ್ ಮತ್ತು ಪಶ್ಚಿಮ ಯುರೋಪಿನಲ್ಲಿ ತಲೆದೋರಿದ ಅಜಿಲಿಯನ್ ಟಾರ್ಡೆನಾಯಿಸಿನ್, ಸವೆಟೆರ್ರಿಯನ್ ಮಧ್ಯಶಿಲಾಯುಗ ಸಂಸ್ಕೃತಿಗಳ ಪೈಕಿ ಇವು ಪ್ರಮುಖವಾದವು. ಆ ಕಾಲದಲ್ಲಿ ಮಾನವ ಪ್ರಗತಿ ರಂಗದಲ್ಲಿ ಫ್ರಾನ್ಸ್ ಹಿಂದೆ ಬಿತ್ತು. ಹೊಸ ಸಂಸ್ಕೃತಿಗಳು ಪಶ್ಚಿಮ ಏಷ್ಯ ಪ್ರದೇಶಗಳಲ್ಲಿ ಉಗಮಿಸಿ ಕ್ರಮೇಣ ಪಶ್ಚಿಮ ಯೂರೋಪಿನತ್ತ ಹರಡುತ್ತಿದ್ದುವು. ಬೇಟೆಗಾಗಿ ಪಳಗಿದ ನಾಯಿಗಳ ಬಳಕೆ ಮತ್ತು ಕ್ರಮೇಣ ಆಹಾರೋತ್ಪಾದನೆಯತ್ತ ಪ್ರಗತಿ, ಇವು ಪಶ್ಚಿಮ ಏಷ್ಯದಿಂದ ಫ್ರಾನ್ಸಿಗೆ ಬರಲಾರಂಭಿಸಿದ್ದು ಈ ಕಾರಣದಿಂದಲೇ. ನವಶಿಲಾಯುಗ ಕಾಲದಲ್ಲಿ ಇರಾಕ್, ಸಿರಿಯ ಮತ್ತು ಪ್ಯಾಲಸ್ತೀನ್ ಪ್ರದೇಶಗಳಿಂದ ಬಂದ ಸಾಂಸ್ಕೃತಿಕ ಲಕ್ಷಣಗಳು ಫ್ರಾನ್ಸಿನ ಲ್ಯಾಂಗ್ವೆಡಾಕ್ ಮತ್ತು ಪ್ರಾವೆನ್ಸ್ ಪ್ರದೇಶಗಳಲ್ಲಿ ಕಾಣಿಸಿಕೊಂಡವು. ಆ ಕಾಲದಲ್ಲಿ ಸಾಮಾನ್ಯವಾಗಿ ಗುಹೆ ಮತ್ತು ಗುಹಾಮುಖಗಳಲ್ಲಿ ವಾಸಿಸುತ್ತಿದ್ದ ಜನರು ಬೇಟೆ ಮತ್ತು ಆಹಾರಸಂಗ್ರಹಣೆಯಿಂದ ವಾಸಿಸುತ್ತಿದ್ದರಾದರೂ ಆಹಾರೋತ್ಪಾದನೆ ಅದರಲ್ಲೂ ವ್ಯವಸಾಯ ಕಾರ್ಯ ಪ್ರಾರಂಭಾವಸ್ಥೆಯಲ್ಲಿ ಕಾಣಿಸಿಕೊಳ್ಳಲಾರಂಭಿಸಿತು. ಮೆಡಿಟೆರೇನಿಯನ್ ಸಮುದ್ರ ಪ್ರದೇಶದಿಂದ ಆಮದಾದ ಚಿಪ್ಪುಗಳಿಂದ ಆಭರಣಗಳನ್ನು ತಯಾರಿಸಿ ಬಳಸುತ್ತಿದ್ದರು. ಮೊದಲ ಮಡಕೆಕುಡಿಕೆಗಳ ಬಳಕೆ ಪ್ರಾರಂಭವಾಯಿತು. ನಯಗೊಳಿಸಿದ ಕಲ್ಲಿನ ಕೊಡಲಿಗಳು ಕಾಣಿಸಿಕೊಂಡವು. ಫ್ರಾನ್ಸಿನ ಸವೊನ್ಎಟ್ಲೊಯರ್ ಪ್ರಾಂತ್ಯದಲ್ಲಿ ಅಂಥ ಅವಶೇಷಗಳನ್ನು ಕಾಣಬಹುದು. ಅದಕ್ಕೆ ಚಾಸ್ಸಿ ಸಂಸ್ಕೃತಿಯೆಂದು ಹೆಸರು. ಬಹುಶಃ ಆ ಕಾಲದಲ್ಲೇ ಲೆನಿನ್ ಬಟ್ಟೆಗಳ ಉಪಯೋಗ ಪ್ರಾರಂಭವಾಯಿತು. ನವಶಿಲಾಯುಗದ ಅಂತ್ಯಕಾಲದಲ್ಲಿ ಬೃಹಚ್ಛಿಲಾ ಸಮಾಧಿಗಳು ಬಳಕೆಗೆ ಬಂದುವು ಫ್ರಾನ್ಸಿನ ಉದ್ದವಾದ ಮಣ್ಣಿನ ದಿಬ್ಬಗಳ ಕೆಳಗಿನ ಸಮಾಧಿಗಳೂ ಭೂಗತವಾದ ಕೋಣೆಗೋರಿಗಳೂ ಪ್ರಸಿದ್ಧವಾಗಿವೆ. ಈ ವೇಳೆಗೆ ಪಶ್ಚಿಮ ಏಷ್ಯದಲ್ಲಿ ಬಳಕೆಗೆ ಬಂದಿದ್ದ ತಾಮ್ರ ಯುಗ ಸಂಸ್ಕೃತಿಯ ಪ್ರತಿಧ್ವನಿ ಫ್ರಾನ್ಸಿನಲ್ಲೂ ಕೇಳಿಬರಲಾರಂಭಿಸಿತು. ತಾಮ್ರದ ಅದುರಿನ ಶೋಧನೆಗಾಗಿ ಅನ್ವೇಷಣೆ ಮಾಡುತ್ತಿದ್ದ ಲೋಹಗಾರರು ಪಶ್ಚಿಮ ಮತ್ತು ಮಧ್ಯ ಯೂರೋಪಿನ ಅನೇಕ ಪ್ರದೇಶಗಳಲ್ಲಿ ಆ ಸಂಸ್ಕೃತಿಯ ಲಕ್ಷಣಗಳನ್ನು ರೂಢಿಗೆ ತಂದರು. ಅನತಿ ಕಾಲದಲ್ಲಿ ಕಬ್ಬಿಣದ ಬಳಕೆಯೂ ಪ್ರಾರಂಭವಾಯಿತು. ಆಗಿನ ಲಾಟೆನ್ ಸಂಸ್ಕೃತಿ ಪ್ರಮುಖವಾದುದು. ಆ ಸುಮಾರಿಗೆ ಕೆಲ್ಟರು ಫ್ರಾನ್ಸನ್ನು ಪ್ರವೇಶಿಸಿದರು. ಎಟ್ರಸ್ಕನ್ ಸಂಸ್ಕೃತಿಯೊಂದಿಗೆ ಇತಿಹಾಸಯುಗ ಪ್ರಾರಂಭವಾಯಿತು. ಇತಿಹಾಸ ಈಗಿನ ಫ್ರಾನ್ಸಿನ ಪ್ರದೇಶಕ್ಕೆ ಹಿಂದೆ ಗಾಲ್ ಎಂಬ ಹೆಸರಿತ್ತು. ಕ್ರಿ. ಪೂ. ಒಂದನೆಯ ಶತಮಾನದಲ್ಲಿ ರೋಮನ್ ಆಕ್ರಮಣಕ್ಕೆ ಗುರಿಯಾಗುವವರೆಗೂ ಈ ಪ್ರದೇಶದ ಇತಿಹಾಸ ಸ್ಪಷ್ಟವಾಗಿಲ್ಲ. ಜರ್ಮನ್ ಬುಡಕಟ್ಟಿಗೆ ಸೇರಿದ ಅನೇಕ ಗಾಲಿಕ್ ತಂಡಗಳ ನಾಯಕರು ಗಾಲ್ ಪ್ರದೇಶದ ವಿವಿಧ ಭಾಗಗಳನ್ನು ಆಳುತ್ತಿದ್ದರು. ಫ್ರಾನ್ಸಿನ ದಕ್ಷಿಣಭಾಗ ಕ್ರಿ. ಪೂ. ೧೨೧ ರಿಂದ ರೋಮಿನ ಪ್ರಾಂತ್ಯವಾಗಿತ್ತು. ಜೂಲಿಯಸ್ ಸೀಸರ್ ಉತ್ತರ ಮತ್ತು ಮಧ್ಯ ಭಾಗಗಳ ಮೇಲೆ ಕ್ರಿ. ಪೂ. ೫೧ ರಿಂದ ೫೮ ರ ವರೆಗೆ ದಂಡಯಾತ್ರೆಗಳನ್ನು ನಡೆಸಿ ಆ ಪ್ರದೇಶವನ್ನು ಗೆದ್ದ. ರೋಮನ್ ಆಳ್ವಿಕೆಗೆ ಒಳಪಟ್ಟ ಗಾಲ್ ಕ್ರಮೇಣ ರೋಮನ್ ನಾಗರಿಕತೆಯ ಪ್ರಭಾವಕ್ಕೊಳಗಾಯಿತು. ಪ್ರಾಚೀನ ರೋಮನ್ ಸಾಮ್ರಾಜ್ಯದ ಪ್ರಾಬಲ್ಯ ಕ್ಷೀಣಿಸತೊಡಗಿದಾಗ, ಜರ್ಮನ್ ಬುಡಕಟ್ಟಿಗೆ ಸೇರಿದ ಬರ್ಗಂಡಿಯನರು, ವಿಸಿಗಾತರು, ಫ್ರಾಂಕರು ಮುಂತಾದವರು ಕ್ರಿ. ಶ. ೫ ನೆಯ ಶತಮಾನದಲ್ಲಿ ಈ ಪ್ರದೇಶದ ಮೇಲೆ ದಾಳಿ ನಡೆಸಿದರು. ಈ ದಾಳಿಕಾರದಲ್ಲಿ ಪ್ರಬಲರಾಗಿದ್ದ ಫ್ರಾಂಕರು ಕ್ಲೊವಿಸನ ನಾಯಕತ್ವದಲ್ಲಿ ಗಾಲ್ನ ಕೊನೆಯ ರೋಮನ್ ಗವರ್ನರನನ್ನು ೪೮೬ ರಲ್ಲಿ ಸೋಲಿಸಿದರು. ಫ್ರಾಂಕರೆಲ್ಲರನ್ನು ಅವನು ಒಂದುಗೂಡಿಸಿ ಅವರ ರಾಜನಾದನಲ್ಲದೆ, ವಿಸಿಗಾತರಿಂದ ದಕ್ಷಿಣ ಗಾಲನ್ನು ವಶಪಡಿಸಿಕೊಂಡು ಮೆರೊವಿಂಜಿಯನ್ ರಾಜಸಂತತಿಯನ್ನು ಸ್ಥಾಪಿಸಿದ. ಫ್ರಾಂಕರು ಗಾಲಿನ ಹೆಸರನ್ನು ಸಹ ಬದಲಾಯಿಸಿ ರೋಮನ್ ಸಂಸ್ಕೃತಿಯ ಉಪಯುಕ್ತತೆಯನ್ನು ಕಡೆಗಣಿಸಿದರು. ಫ್ರಾಂಕರ ನಾಡು ಫ್ರಾನ್ಸ್ ಆಯಿತು. ಫ್ರಾಂಕರು ಗಾಲ್ ಪ್ರದೇಶವನ್ನು ಸಂಘಟಿಸಿ ಆಧುನಿಕ ಫ್ರಾನ್ಸಿನ ಬೆಳೆವಣಿಗೆಗೆ ಆಸ್ತಿಭಾರ ಹಾಕಿದರು. ಮೆರೊವಿಂಜಿಯನ್ ರಾಜರು ಫ್ರಾನ್ಸನ್ನು ೪೮೧ ರಿಂದ ೭೫೧ ರ ವರೆಗೆ ಆಳಿದರು. ಇವರುಗಳಲ್ಲಿ ಪ್ರಮುಖನಾದವನೆಂದರೆ ಕ್ಲೊವಿಸ್. ತನ್ನ ಶತ್ರುಗಳ ವಿರುದ್ಧಗಳಿಸಿದ ವಿಜಯದಿಂದಾಗಿ ಕ್ಲೊವಿಸ್ ಕ್ರಮೇಣ ಕೀರ್ತಿಗಳಿಸಿದ. ಪ್ಯಾರಿಸ್ ನಗರವನ್ನು ರಾಜಧಾನಿಯನ್ನಾಗಿ ಆರಿಸಿಕೊಂಡ. ತನ್ನ ಪ್ರಭುತ್ವವನ್ನು ಪಿರನೀಸ್ ಪರ್ವತ ಶ್ರೇಣಿಯವರೆಗೆ ವಿಸ್ತರಿಸಿದ. ಇವನು ಕ್ರೈಸ್ತಮತವನ್ನು ಸ್ವೀಕರಿಸಿದ. ಕ್ಲೊವಿಸನ ಅನಂತರ ಆಳಿದ ಮೆರೊವಿಂಜಿಯನ್ ರಾಜರು ಅಸಮರ್ಥರಾಗಿದ್ದರು. ಕರ್ತವ್ಯಭ್ರಷ್ಟರೂ ಅಶಕ್ತರೂ ಆಗಿದ್ದ ಅವರು ರಾಜ್ಯದ ವ್ಯವಹಾರಗಳನ್ನು ಅಧಿಕಾರಿಗಳಿಗೆ ವಹಿಸಿ, ಸುಖಜೀವನದಲ್ಲಿ ನಿರತರಾದರು. ಅರಮನೆಯ ಮೇಯರ್ಗಳಾಗಿದ್ದ ಅಧಿಕಾರಿಗಳು ಮೆರೊವಿಂಜಿಯನ್ ರಾಜರನ್ನು ಮೂಲೆಗೊತ್ತಿ ತಮ್ಮ ಪ್ರಭುತ್ವವನ್ನು ಸ್ಥಾಪಿಸಿದರು. ಇವರಲ್ಲಿ ಹೆಚ್ಚು ಪ್ರಭಾವಶಾಲಿಯಾಗಿದ್ದ ಚಾಲ್ರ್ಸ್ ಮಾರ್ಟೆಲ್ ಕ್ಯಾರೊಲಿಂಜಿಯನ್ ರಾಜಮನೆತನವನ್ನು ಸ್ಥಾಪಿಸಿದ. ಕ್ಯಾರೊಲಿಂಜಿಯನ್ ರಾಜರು ಸುಮಾರು ಒಂದೂವರೆ ಶತಮಾನಗಳ ಕಾಲ ಫ್ರಾನ್ಸನ್ನು ಆಳಿದರು. ಚಾಲ್ರ್ಸ್ ಮಾರ್ಟೆಲ್, ಷಾರ್ಲ್ಮೇನ್, ಲೂಯಿ ಪಯಸ್ ಇವರು ಪ್ರಮುಖರು. ಚಾಲ್ರ್ಸ್ ಮಾರ್ಟೆಲ್ ಫ್ರೆಂಚ್ ಶ್ರೀಮಂತರನ್ನು ಸಂಘಟಿಸಿ, ಫ್ರಾನ್ಸಿನ ಮೇಲೆ ದಾಳಿ ನಡೆಸುತ್ತಿದ್ದ ಮುಸ್ಲಿಮರನ್ನು ೭೩೨ ರಲ್ಲಿ ನಡೆದ ಟೂರ್ಸ್ ಕದನದಲ್ಲಿ ಸೋಲಿಸಿ, ರಾಷ್ಟ್ರದ ಏಕತೆಯನ್ನು ಸಾಧಿಸಿದ. ಅವನ ಮಗ ಪೆಪಿನ್ ೭೪೧ ರಿಂದ ೭೬೮ ರ ವರೆಗೆ ಆಳಿ ರಾಷ್ಟ್ರವನ್ನು ಮತ್ತಷ್ಟು ಭದ್ರಗೊಳಿಸಿ, ಫ್ರಾಂಕರ ಅಧಿಕಾರವನ್ನು ಕ್ರೋಢೀಕರಿಸಿದ. ಅಲ್ಲದೆ ಕ್ಯಾಥೊಲಿಕ್ ಚರ್ಚಿನ ಮತ್ತು ಪೋಪಿನ ಅಧಿಕಾರದ ಪ್ರಾಬಲ್ಯಕ್ಕೆ ಉತ್ತೇಜನ ನೀಡಿದ. ಪೆಪಿನ್ನನ ಮಗ ಹಾಗೂ ಉತ್ತರಾಧಿಕಾರಿ ಷಾರ್ಲ್ಮೇನ್. ಇವನು ಮಧ್ಯಯುಗದ ಇತಿಹಾಸದಲ್ಲಿ ಅತ್ಯಂತ ಪ್ರಸಿದ್ಧ ವ್ಯಕ್ತಿ. ಈತ ಪವಿತ್ರ ರೋಮನ್ ಚಕ್ರವರ್ತಿಯಾದ. ಷಾರ್ಲ್ಮೇನ್ ಅತ್ಯಂತ ಯಶಸ್ವಿ ಮತ್ತು ಪ್ರಭಾವಶಾಲಿ ದೊರೆಯಾಗಿದ್ದು, ಸಮರ್ಥವಾಗಿ ಆಡಳಿತ ನಡೆಸಿದನಲ್ಲದೆ, ಶ್ಲಾಘನೀಯ ನ್ಯಾಯ ಪದ್ಧತಿಯನ್ನು ರೂಪಿಸಿ, ಕಲೆ, ಸಾಹಿತ್ಯ ಮತ್ತು ಜ್ಞಾನಾಭಿವೃದ್ಧಿಗೆ ಹೆಚ್ಚು ಪ್ರೋತ್ಸಾಹ ನೀಡಿದ. ಈತ ಲಂಬಾರ್ಡಿಯನ್ನರು, ಬವೇರಿಯನ್ನರು, ಸ್ಯಾಕ್ಸನರು ಮುಂತಾದವರನ್ನು ಸೋಲಿಸಿ ವಿಶಾಲವಾದ ಪವಿತ್ರ ರೋಮನ್ ಸಾಮ್ರಾಜ್ಯವನ್ನು ನಿರ್ಮಿಸಿದ. ಅನಂತರ ಅಧಿಕಾರಕ್ಕೆ ಬಂದ ಲೂಯಿ ಪಯಸ್ ಅಷ್ಟೇನೂ ಸಮರ್ಥನಾಗಿರಲಿಲ್ಲ. ಇವನ ಉತ್ತರಾಧಿಕಾರಿಗಳ ಕಾಲದಲ್ಲಿ ಉಂಟಾದ ಒಳ ಜಗಳ ಮತ್ತು ರಾಜ್ಯವಿಭಜನೆಯಿಂದಾಗಿ ಕ್ಯಾರೊಲೀಜಿಯನ್ ಆಡಳಿತ ಕ್ಷೀಣಿಸತೊಡಗಿತು. ಊಳಿಗಮಾನ್ಯ ಪ್ರಭುಗಳು ರಾಜರಿಗಿಂತ ಹೆಚ್ಚು ಅಧಿಕಾರ ಪಡೆದರು. ಅನೇಕ ಪ್ರಾಂತ್ಯಗಳ ಡ್ಯೂಕರೂ ಕೌಂಟ್ಗಳೂ ಪ್ರಬಲರಾದರು. ಈ ಪರಿಸ್ಥಿತಿಯಿಂದಾಗಿ ೯೮೭ ರ ವೇಳೆಗೆ ಕ್ಯಾರೊಲಿಂಜಿಯನ್ ಮನೆತನ ಕೊನೆಗೊಂಡಿತು. ಅನಂತರ ಫ್ರಾನ್ಸನ್ನು ಆಳಿದವರು ಕೆಫೀಷಿಯನ್ ಮನೆತನದವರು (೯೮೭೧೩೨೮). ಹೂ ಕ್ಯಾಪೆಟ್ ಈ ವಂಶದ ಮೂಲಪುರುಷ, ಸಮರ್ಥ ರಾಜರ ಆಳ್ವಿಕೆ, ಪ್ರಬಲ ಹಾಗೂ ಆಯಕಟ್ಟಿನ ಪ್ರದೇಶಗಳ ಮೇಲೆ ಇವರ ಒಡೆತನ, ದೊರೆಗೂ ಚರ್ಚಿಗೂ ನಡುವೆ ಬೆಳೆದ ಮಧುರ ಬಾಂಧವ್ಯಇವುಗಳಿಂದ ಈ ವಂಶದ ಹಿರಿಮೆ ಬೆಳೆಯಿತು. ಈ ವಂಶದ ದೊರೆಗಳ ಕಾಲದಲ್ಲಿ ಕೇಂದ್ರದ ಆಡಳಿತ ಬಿಗಿಯಾಗಿತ್ತು. ಇದನ್ನು ನಡಸಿಕೊಂಡು ಹೋಗಲು ಸಮರ್ಥ ಅಧಿಕಾರಿಗಳು ನೇಮಕ ಗೊಂಡಿದ್ದರು. ಈ ವಂಶದ ಪ್ರಮುಖ ಅರಸರಲ್ಲೊಬ್ಬನಾದ 6ನೆಯ ಲೂಯಿಯ ಕಾಲದಲ್ಲಿ ಪ್ರಭಾವಶಾಲಿ ಮಧ್ಯಮವರ್ಗದ ಜನರ ಬೆಂಬಲ ಸಹಕಾರಗಳು ದೊರಕಿದುವು. ಇದರಿಂದ ಕೆಫೀಷಿಯನ್ ದೊರೆಗಳು ಪ್ರಭುತ್ವ ಬಲಗೊಂಡಿತು. ಇವರು ಪ್ರಬಲ ಡ್ಯೂಕರೊಂದಿಗೆ ಒಳ್ಳೆಯ ಬಾಂಧವ್ಯ ಬೆಳೆಸಿಕೊಂಡರು. ಫ್ರಾನ್ಸಿನ ಅರ್ಧಭಾಗದಷ್ಟು ಪ್ರದೇಶಕ್ಕೆ ಒಡೆಯರಾಗಿದ್ದು ಫ್ರೆಂಚ್ ದೊರೆಗಳು ಸಾಮಂತರಾಗಿದ್ದ ಇಂಗ್ಲೆಂಡಿನ ರಾಜರಿಂದ ಫ್ರಾನ್ಸಿನ ಏಕತೆ ಮತ್ತು ಸ್ವಾತಂತ್ರ್ಯಕ್ಕೆ ಒದಗಬಹುದಾಗಿದ್ದ ಅಪಾಯವನ್ನು ತೊಡೆದು ಹಾಕಿದ್ದು ಕೆಫೀಷಿಯನ್ ದೊರೆಗಳ ಇನ್ನೊಂದು ಪ್ರಮುಖ ಸಾಧನೆ. ಇವನ್ನು ಸಾಧಿಸಿದ ಪ್ರಮುಖ ದೊರೆ ೨ ನೆಯ ಫಿಲಿಪ್ ಅಥವಾ ಫಿಲಿಪ್ ಆಗಸ್ಟಸ್. ಕುಶಾಗ್ರಮತಿಯಾದ ಈತ ಇಂಗ್ಲೆಂಡಿನ ರಾಜಕೀಯ ಪರಿಸ್ಥಿತಿ ಮತ್ತು ಇಂಗ್ಲಿಷ್ ದೊರೆಗಳ ಅಸಹಾಯಕತೆಯ ಲಾಭ ಪಡೆದು ತನ್ನ ರಾಜ್ಯವನ್ನು ವಿಸ್ತರಿಸಿದನಲ್ಲದೆ, ವಿಶಾಲ ರಾಜ್ಯಕ್ಕೆ ಅಗತ್ಯವಾಗಿದ್ದ ವ್ಯವಸ್ಥಿತ ಆಡಳಿತ ಪದ್ಧತಿಯನ್ನು ರೂಪಿಸಿದ. ಫಿಲಿಪ್ ಆಗಸ್ಟಸನ ಮಗ ೯ ನೆಯ ಲೂಯಿ. ಈತ ಸಂತ ಲೂಯಿ ಎಂದು ಖ್ಯಾತಿ ಪಡೆದ. ಧಾರ್ಮಿಕ ಪ್ರವೃತ್ತಿ ಮತ್ತು ಸಾಹಸ ಪ್ರವೃತ್ತಿಯ ಮಿಶ್ರಣವಾಗಿದ್ದ ಇವನು ಸಮರ್ಥ ಹಾಗೂ ನಿಷ್ಟಕ್ಷಪಾತವಾದ ಸಾರ್ವಜನಿಕ ಆಡಳಿತ ಪದ್ಧತಿ ಮತ್ತು ನ್ಯಾಯಾಂಗ ಪದ್ಧತಿಯನ್ನು ಜಾರಿಗೆ ತಂದು ಜನರ ಮೆಚ್ಚುಗೆ ಪಡೆದು ೧೩ ನೆಯ ಶತಮಾನದ ಅಸಾಧಾರಣ ದೊರೆ ಎನಿಸಿಕೊಂಡ. ಇವನ ಮೊಮ್ಮಗ ೪ ನೆಯ ಫಿಲಿಪ್ಪನ ಕಾಲದಲ್ಲಿ ಫ್ರೆಂಚ್ ರಾಜಪ್ರಭುತ್ವ ಮತ್ತಷ್ಟು ಪ್ರಬಲಗೊಂಡಿತು. ಇವನಿಗೆ ನಿರಂಕುಶ ಪ್ರಭುತ್ವದ ಬಗ್ಗೆ ಹೆಚ್ಚು ಒಲವಿತ್ತಾದರೂ ಪಾದ್ರಿ, ಶ್ರೀಮಂತ ಮತ್ತು ಜನಸಾಮಾನ್ಯ ವರ್ಗದವರ ಪ್ರತಿ ನಿಧಿಗಳನ್ನೊಳಗೊಂಡ ಫ್ರಾನ್ಸಿನ ಶಾಸನ ಸಭೆಯನ್ನು ಕರೆದು. ತನ್ನ ಕಾರ್ಯ ವಿಧಾನದ ಬಗ್ಗೆ ಅದಕ್ಕೆ ವರದಿ ಸಲ್ಲಿಸುತ್ತಿದ್ದ. ಇವನ ಕಾಲದಲ್ಲಿ ಚರ್ಚಿಗೂ ಪ್ರಭುತ್ವಕ್ಕೂ ಘರ್ಷಣೆ ಪ್ರಾರಂಭವಾಗಿ, ಚರ್ಚನ್ನು ಸರ್ಕಾರದ ಅಧೀನಕ್ಕೊಳಪಡಿಸುವ ಪ್ರಯತ್ನಗಳು ನಡೆದುವು. ಒಟ್ಟಿನಲ್ಲಿ ಕೆಫೀಷಿಯನ್ ರಾಜರು ಅನುಸರಿಸಿದ ಸಮರ್ಥ ನೀತಿಯಿಂದಾಗಿ ಫ್ರಾನ್ಸ್ ೧೩ ನೆಯ ಶತಮಾನದ ವೇಳೆಗೆ ರಾಷ್ಟ್ರೀಯ ರಾಜ್ಯವಾಗಿ ಬೆಳೆಯಲು ಸಾಧ್ಯವಾಯಿತು. ಕೆಫೀಷಿಯನ್ ದೊರೆಗಳ ಆಳ್ವಿಕೆಯ ಅನಂತರ, ಫ್ರಾನ್ಸನ್ನು ವ್ಯಾಲ್ವಾಯ್ ವಂಶದ ದೊರೆಗಳು ೧೩೨೮ ರಿಂದ ೧೫೮೯ ರವರೆಗೆ ಆಳಿದರು. ಇವರ ಆಳ್ವಿಕೆಯ ಕಾಲದಲ್ಲಿ ಫ್ರಾನ್ಸಿನಲ್ಲಿ ಅನೇಕ ಮಹತ್ತರ ಘಟನೆಗಳ ಸಂಭವಿಸಿದುವು, ಬದಲಾವಣೆಗಳಾದುವು. ೧೩೪೦ ರಿಂದ ೧೪೫೩ ರವರೆಗೆ ನಡೆದ ನೂರು ವರ್ಷಗಳ ಯುದ್ಧ ಅತ್ಯಂತ ಮಹತ್ತ್ವಪೂರ್ಣ ಘಟನೆ. ನಾಲ್ಕು ಹಂತಗಳಲ್ಲಿ ನಡೆದ ಈ ಯುದ್ಧ ಇಂಗ್ಲೆಂಡ್ ಮತ್ತು ಫ್ರಾನ್ಸ್ಗಳ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಕೇಂದ್ರಿಕೃತ ಫ್ರೆಂಚ್ ಪ್ರಭುತ್ವಕ್ಕೆ ಇಂಗ್ಲೆಂಡಿನ ರಾಜರು ಅಡ್ಡಿಯಾಗಿದ್ದುದು ಮತ್ತು ಇಂಗ್ಲೆಂಡಿನ ದೊರೆ ೩ ನೆಯ ಎಡ್ವರ್ಡ್ ಫ್ರೆಂಚ್ ಸಿಂಹಾಸನದ ಮೇಲೆ ತನ್ನ ಹಕ್ಕನ್ನು ಮುಂದೊಡ್ಡಿದ್ದು ನೂರು ವರ್ಷಗಳ ಯುದ್ಧಕ್ಕೆ ಪ್ರಮುಖ ಕಾರಣಗಳಾಗಿದ್ದುವು. ಮೊದಲ ಫ್ರಾನ್ಸ್ ಸೋಲಿನ ಮೇಲೆ ಸೋಲನ್ನು ಅನುಭವಿಸಿತಲ್ಲದೆ ಇಂಗ್ಲೆಂಡಿನ ರಾಜರು ಫ್ರಾನ್ಸಿನ ಮೇಲೆ ತಮ್ಮ ಪ್ರಭುತ್ವ ಸಾಧಿಸಲು ಹೆಚ್ಚು ಕಡಿಮೆ ಸಾಧ್ಯವಾಯಿತು. ಈ ಮಧ್ಯೆ ಫ್ರಾನ್ಸಿನ ಶ್ರೀಮಂತರೂ ಸೇನಾಧಿಪತಿಗಳೂ ಕಲಹದಲ್ಲಿ ನಿರತರಾಗಿದ್ದರಿಂದ ರಾಷ್ಟ್ರ ವಿಷಮ ಸ್ಥಿತಿಯಲ್ಲಿತ್ತು. ಇಂಥ ಗಂಡಾಂತರದ ಸಮಯದಲ್ಲಿ ರೈತನೊಬ್ಬನ ಮಗಳಾದ ಜೋನ್ ಆಫ್ ಆರ್ಕ್ ಫ್ರಾನ್ಸಿನ ಯೋಧರನ್ನು ಹುರಿದುಂಬಿಸಿದಳಲ್ಲದೆ, ಜನತೆಯಲ್ಲಿ ಉತ್ಕಟ ರಾಷ್ಟ್ರಾಭಿಮಾನ ಬೆಳೆಯುವಂತೆ ಮಾಡಿದಳು. ಜೋನ್ ಆಫ್ ಆರ್ಕ್ಳಿಂದ ಸ್ಫೂರ್ತಿಗೊಂಡ ಸೈನಿಕರು ಇಂಗ್ಲಿಷರನ್ನು ಸೋಲಿಸಲು ವೀರಾವೇಶದಿಂದ ಹೋರಾಡಿದರು. ಅವಳ ಸಾವಿನ ಅನಂತರವೂ ಫ್ರೆಂಚ್ ಸೈನಿಕರು ಉತ್ಸಾಹ ಶೌರ್ಯಗಳಿಂದ ಹೋರಾಡಿ ರಾಷ್ಟ್ರದ ಸ್ವಾತಂತ್ರ್ಯವನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ೧೪೫೩ ರಲ್ಲಿ ಕ್ಯಾಸ್ಟಿಲಾನ್ ಕದನದಲ್ಲಿ ಇಂಗ್ಲೆಂಡ್ ಅಪಜಯ ಹೊಂದಿತು. ನೂರು ವರ್ಷಗಳ ಯುದ್ಧ ಅಂತ್ಯಗೊಂಡಿತು, ಫ್ರಾನ್ಸ್ ಮತ್ತು ಇಂಗ್ಲೆಂಡ್ಗಳನ್ನು ಬೇರ್ಪಡಿಸಿ ಎರಡೂ ದೇಶಗಳಲ್ಲಿ ರಾಷ್ಟ್ರಾಭಿಮಾನ ಮೂಡಿಸಿದ್ದು ನೂರುವರ್ಷಗಳ ಯುದ್ಧದ ಪ್ರಮುಖ ಸಾಧನೆ, ಈ ಯುದ್ಧ ಫ್ರಾನ್ಸಿನ ಪ್ರಾದೇಶಿಕ ಭದ್ರತೆಯನ್ನು ಊರ್ಜಿತಗೊಳಿಸಿತಲ್ಲದೆ, ವ್ಯಾಲ್ವಾಯ್ ರಾಜಮನೆತನದ ಪ್ರಭುತ್ವವನ್ನು ಭದ್ರಗೊಳಿಸಿತು. ನೂರು ವರ್ಷಗಳ ಯುದ್ಧದಿಂದಾಗಿ ಫ್ರಾನ್ಸಿನ ಆರ್ಥಿಕ ಸ್ಥಿತಿ ಅಸ್ತವ್ಯಸ್ತಗೊಂಡಿತು. ದೇಶ ಅಂತಃಕಲಹಕ್ಕೆ ಗುರಿಯಾಯಿತು. ಆ ಸಂದಿಗ್ಧ ಸಮಯದಲ್ಲಿ ಫ್ರಾನ್ಸಿಗೆ ಅಗತ್ಯವಾಗಿದ್ದ ಸಮರ್ಥ ನಾಯಕತ್ವ ಮತ್ತು ಆಂತರಿಕ ಶಾಂತಿಯನ್ನು ೧೧ ನೆಯ ಲೂಯಿ (೧೪೬೧,೧೪೮೩) ನೀಡಿದ, ಇವನು ಮಹತ್ತ್ವಾಕಾಂಕ್ಷಿ, ಕುಶಲ ರಾಜಕಾರಣಿ. ಈತ ಅನೇಕ ಪ್ರಮುಖ ಕ್ರಮಗಳನ್ನು ಕೈಗೊಂಡು ಸಾಮಂತರ ಪ್ರಭಾವವನ್ನು ಅಳಿಸಿಹಾಕಿ, ಸಮರ್ಥ ಮತ್ತು ಕೇಂದ್ರೀಕೃತ ಆಡಳಿತ ಪದ್ಧತಿಯನ್ನು ಜಾರಿಗೆ ತಂದು, ರಾಷ್ಟ್ರದ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಿದ. ಅಲ್ಲದೆ ಬರ್ಗಂಡಿ, ಪಿಕಾರ್ಡಿ, ಫ್ರೆಂಚ್ ಕಾಮ್ಟೆ ಮತ್ತು ಆರ್ಟಾಯ್ ಪ್ರಾಂತ್ಯಗಳನ್ನು ಫ್ರೆಂಚ್ ಪ್ರಭುತ್ವಕ್ಕೆ ಒಳಪಡಿಸಿದ. ಇವನ ಅನಂತರ ೮ ನೆಯ ಚಾರ್ಲ್ಸ್ (೧೪೮೩೧೪೯೮) ಮತ್ತು ೧೨ ನೆಯ ಲೂಯಿ (೧೪೯೮೧೫೧೫) ಅನುಕ್ರಮವಾಗಿ ಫ್ರಾನ್ಸನ್ನು ಆಳಿದರು. ಫ್ರಾನ್ಸ್ ಆ ವೇಳೆಗೆ ಆಂತರಿಕ ಹಾಗೂ ಹೊರಗಿನ ತೊಂದರೆಗಳಿಂದ ಮುಕ್ತವಾಗಿತ್ತು. ಆದ್ದರಿಂದ ಇವರಿಬ್ಬರೂ ರಾಜ್ಯವಿಸ್ತರಣೆಯ ಹೆಬ್ಬಯಕೆಯಿಂದ ಇಟಲಿಯಲ್ಲಿ ಫ್ರೆಂಚ್ ಪ್ರಾಬಲ್ಯ ಬೆಳೆಸಲು ಪ್ರಯತ್ನಿಸಿ ವಿಫಲರಾದರು. ಒಂದನೆಯ ಫ್ರಾನ್ಸಿಸ್ (೧೫೧೫೧೫೪೭) ೧೬ ನೆಯ ಶತಮಾನದ ಫ್ರೆಂಚ್ ದೊರೆಗಳಲ್ಲಿ ಪ್ರಸಿದ್ಧನಾದವನು. ಇವನು ಶೂರನೂ ಸಾಹಸಪ್ರಿಯನೂ ಆಗಿದ್ದ. ಕಲೆ ಸಾಹಿತ್ಯಗಳಿಗೆ ಪ್ರೋತ್ಸಾಹ ನೀಡಿದ. ಇಟಲಿಯಲ್ಲಿ ಫ್ರೆಂಚ್ ಪ್ರಭುತ್ವವನ್ನು ಸ್ಥಾಪಿಸಲು ಚಕ್ರವರ್ತಿ ೫ ನೆಯ ಚಾಲ್ರ್ಸ್ನೊಡನೆ ನಡೆಸಿದ ದೀರ್ಘ ಕಾಲದ ಹೋರಾಟ ಇವನ ಕಾಲದ ಪ್ರಮುಖ ರಾಜಕೀಯ ಘಟನೆ. ತನ್ನ ಗುರಿಯನ್ನು ಸಾಧಿಸಲು ಈತ ಜರ್ಮನಿಯ ಪ್ರಾಟೆಸ್ಟಂಟ್ ರಾಜನೊಡನೆ ಮತ್ತು ಆಟೊಮನ್ ತುರ್ಕರೊಡನೆ ಒಪ್ಪಂದ ಮಾಡಿಕೊಳ್ಳಲು ಹಿಂಜರಿಯಲಿಲ್ಲ. ಇವನು ೧೫೨೫ ರಲ್ಲಿ ನಡೆದ ಪೇವಿಯಾ ಕದನದಲ್ಲಿ ಸೋತು ಚಕ್ರವರ್ತಿ ೫ ನೆಯ ಚಾಲ್ರ್ಸ್ನ ಸೆರೆಯಾಳಾದ. ಒಪ್ಪಂದಕ್ಕೆ ಸಹಿ ಹಾಕಿ ಬಂಧನದಿಂದ ಮುಕ್ತನಾದ. ಅನಂತರ ಇವನು ಮತ್ತೆ ಯುದ್ಧ ಆರಂಭಿಸಿದ. ಆಗಾಗ್ಗೆ ನಡೆಯುತ್ತಿದ್ದ ಕದನಗಳಿಂದಾಗಿ ಇಬ್ಬರೂ ಇಕ್ಕಟ್ಟಿನ ಪರಿಸ್ಥಿತಿಗೆ ಸಿಕ್ಕಿಹಾಕಿಕೊಂಡಿದ್ದರಿಂದ ಯಾರೊಬ್ಬರೂ ಜಯಗಳಿಸಲಾರದೆ ನಿತ್ರಾಣಗೊಂಡರು. ಅಂತಿಮವಾಗಿ ೧೫೪೪ ರಲ್ಲಿ ಒಪ್ಪಂದ ಮಾಡಿಕೊಂಡು ಇವರಿಬ್ಬರೂ ಹೋರಾಟವನ್ನು ಅಂತ್ಯಗೊಳಿಸಿದರು. ಇದರ ಪ್ರಮುಖ ಪರಿಣಾಮವೆಂದರೆ ಇಟಲಿಯಲ್ಲಿ ೫ ನೆಯ ಚಾಲ್ರ್ಸ್ನ ಅಧಿಕಾರ ಪ್ರಬಲಗೊಂಡದ್ದು. ಒಂದನೆಯ ಫ್ರಾನ್ಸಿಸನ ಉತ್ತರಾಧಿಕಾರಿ ೨ ನೆಯ ಹೆನ್ರಿ ಇಟಲಿಯನ್ನು ಕಬಳಿಸಲು ಮತ್ತೆ ಸ್ಪೇನಿನೊಡನೆ ಯುದ್ಧ ಮುಂದುವರಿಸಿದ, ಆದರೆ ಮತ್ತೆ ಸ್ಪೇನ್ ವಿಜಯ ಪಡೆಯಿತು. ಎರಡೂ ರಾಷ್ಟ್ರಗಳಿಗೂ ನಡೆಯುತ್ತಿದ್ದ ಹೋರಾಟ ಒಪ್ಪಂದದಿಂದ ಕೊನೆಗೊಂಡಿತು. ಎರಡನೆಯ ಹೆನ್ರಿಯ ಅನಂತರ ಅವನ ಮಕ್ಕಳು ೨ ನೆಯ ಫ್ರಾನ್ಸಿಸ್ (೧೫೫೯೬೦) ೯ ನೆಯ ಚಾಲ್ರ್ಸ್ (೧೫೬೦೧೫೭೪) ಮತ್ತು ೩ ನೆಯ ಹೆನ್ರಿ (೧೫೭೪೧೫೮೯) ಅನುಕ್ರಮವಾಗಿ ಫ್ರಾನ್ಸನ್ನು ಆಳಿದರು. ಇವರು ಅಸಮರ್ಥ ದೊರೆಗಳಾಗಿದ್ದುದರಿಂದ, ರಾಜಮಾತೆ ಕ್ಯಾತರಿನ್ ಡಿ ಮೆಡಿಸಿ ಸರ್ಕಾರ ನಡೆಸುತ್ತಿದ್ದಳು. ಇವರ ಆಳ್ವಿಕೆಯ ಕಾಲದಲ್ಲಿ ಕ್ಯಾಥೊಲಿಕರಿಗೂ ಅಲ್ಟಸಂಖ್ಯಾತ ಹ್ಯೂಜಿನಾಟರಿಗೂ ನಡೆದ ಧಾರ್ಮಿಕ ಕಲಹಗಳಿಂದಾಗಿ ಫ್ರಾನ್ಸಿನಲ್ಲಿ ವಿಷಮ ಪರಿಸ್ಥಿತಿ ತಲೆದೋರಿತು. ಮೂರನೆಯ ಹೆನ್ರಿಯ ಕಾಲದಲ್ಲಿ ಪರಿಸ್ಥಿತಿ ತುಂಬ ಹದಗೆಟ್ಟಿದ್ದರಿಂದ, ಫ್ರಾನ್ಸಿನ ಏಕತೆ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಒದಗಿತು. ಬೂರ್ಬನ್ ವಂಶ ಫ್ರಾನ್ಸಿನ ರಾಜಕೀಯ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದ ಸಮಯದಲ್ಲಿ ಇತಿಹಾಸ ಪ್ರಸಿದ್ಧ ಬೂರ್ಬನ್ ಮನೆತನದ ರಾಜರು ಅಧಿಕಾರಕ್ಕೆ ಬಂದರು. ೧೫೮೯ ರಲ್ಲಿ ಫ್ರಾನ್ಸಿನ ಸಿಂಹಾಸನವೇರಿದ ೪ ನೆಯ ಹೆನ್ರಿ ಈ ರಾಜವಂಶದ ಪ್ರಥಮ ದೊರೆ. ಬೂರ್ಬನ್ ಮನೆತನ ಅಧಿಕಾರಕ್ಕೆ ಬಂದದ್ದರಿಂದ ಫ್ರಾನ್ಸ್ ಮತ್ತು ಯೂರೋಪಿನ ಇತಿಹಾಸದಲ್ಲಿ ಉಜ್ಜಲ ಅಧ್ಯಾಯವೊಂದು ಆರಂಭವಾಯಿತು. ಫ್ರಾನ್ಸಿನ ಅತ್ಯಂತ ಹೆಸರಾಂತ ದೊರೆಗಳಲ್ಲಿ ಒಬ್ಬನಾದ ೪ ನೆಯ ಹೆನ್ರಿ ರಾಜಕೀಯ ನಿಪುಣ, ಕುಶಾಗ್ರ ಮತಿ, ಸಮರ್ಥ ವ್ಯಕ್ತಿ, ದಕ್ಷ ಆಡಳಿತಗಾರ ಹಾಗೂ ಉದಾರ ಮತ್ತು ಉಪಕಾರ ಬುದ್ಧಿಯವನು ಆಗಿದ್ದ. ರಾಷ್ಟ್ರವನ್ನು ಬಿಕ್ಕಟ್ಟಿನ ಪರಿಸ್ಥಿತಿಯಿಂದ ಬಿಡುಗಡೆ ಮಾಡಲು ತನ್ನ ಹಿಂದಿನ ಫ್ರಾಟೆಸ್ಟಂಟ್ ಧರ್ಮವನ್ನು ತ್ಯಜಿಸಿ ಕ್ಯಾತೊಲಿಕ್ ಮತಾವಲಂಬಿಯಾದ. ೧೫೯೮ ರಲ್ಲಿ ಚರಿತ್ರಾರ್ಹ ನ್ಯಾನ್ಟೀಸ್ ಶಾಸನವನ್ನು ಘೋಷಿಸಿ, ಹ್ಯೂಜಿನಾಟರಿಗೆ ಧಾರ್ಮಿಕ ಸ್ವಾತಂತ್ರ್ಯ ಮತ್ತು ರಾಜಕೀಯ ಸೌಲಭ್ಯಗಳನ್ನು ದೊರಕಿಸಿಕೊಟ್ಟ. ಆತನ ಈ ದೂರದೃಷ್ಟಿಯ ಕ್ರಮದಿಂದಾಗಿ ಫ್ರಾನ್ಸ್ ಧಾರ್ಮಿಕ ದ್ವೇಷಾಸೂಯೆಗಳಿಂದ ಮುಕ್ತಗೊಂಡು ಅಲ್ಲಿ ಆಂತರಿಕ ಶಾಂತಿ ನೆಮ್ಮದಿಗಳು ನೆಲಸಲು ಸಾಧ್ಯವಾಯಿತು. ಅವನು ಸ್ಪೇನಿನ ಎರಡನೆಯ ಫಿಲಿಪನನ್ನು ಸೋಲಿಸಿ, ರಾಷ್ಟ್ರದ ಸ್ವಾತಂತ್ರ್ಯ ಘನತೆ ಗೌರವಗಳನ್ನು ರಕ್ಷಿಸಿದ. ಪ್ರಾಮಾಣಿಕ ನಿಷ್ಠಾವಂತ ಮಂತ್ರಿಗಳ ಸಹಕಾರದಿಂದ ಸಮರ್ಥ ಹಾಗೂ ಸದೃಢ ಸರ್ಕಾರವನ್ನು ರಚಿಸಿ ಏಕರೀತಿಯ ಆಡಳಿತ ಕ್ರಮಗಳನ್ನು ರೂಪಿಸಿ, ಅನೇಕ ಪ್ರಚೋಪಕಾರಿ ಕೆಲಸಗಳನ್ನು ಮಾಡಿ ಪ್ರಜೆಗಳ ಹಿತವನ್ನು ಸಾಧಿಸಿದ. ಅವನು ಫ್ರಾನ್ಸಿನ ರಾಜಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದ. ಅವನು ರಾಷ್ಟ್ರಕ್ಕೆ ಸಲ್ಲಿಸಿದ ಅಮೋಘ ಸೇವೆಯಿಂದಾಗಿ ಹೆನ್ರಿ ಮಹಾಶಯ ಎಂಬ ಗೌರವಕ್ಕೆ ಪಾತ್ರನಾದ. ಅವನ ಮಗ ೧೩ ನೆಯ ಲೂಯಿ ೧೬೧೦ ರಲ್ಲಿ ಪಟ್ಟಕ್ಕೆ ಬಂದಾಗ ಒಂಬತ್ತು ವರ್ಷದ ಬಾಲಕನಾಗಿದ್ದ. ಇದರಿಂದ ಫ್ರಾನ್ಸ್ ಮತ್ತೆ ವಿಪತ್ತಿಗೆ ಗುರಿಯಾಯಿತು. ರಾಜಮಾತೆ ಮೇರಿ ಡಿ ಮೆಡಿಸಿ ರಾಷ್ಟ್ರದ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಳು. ಅವಳು ಅನುಸರಿಸಿದ ಅಸಮರ್ಥ ಮತ್ತು ತಪ್ಪು ನೀತಿಗಳಿಂದಾಗಿ ರಾಷ್ಟ್ರದಲ್ಲಿ ವಿಚ್ಛಿದ್ರಕಾರದ ಶಕ್ತಿಗಳು ತಲೆ ಎತ್ತದುವು. ಅದೃಷ್ಟವಶಾತ್ ೧೬೨೪ ರಲ್ಲಿ ೧೩ ನೆಯ ಲೂಯಿಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕಾರ್ಡಿನಲ್ ರಿಚೆಲ್ಯೂ ರಾಷ್ಟ್ರವನ್ನು ವಿಪತ್ತಿನಿಂದ ಪಾರುಮಾಡಿದ. ಕಾರ್ಡಿನಲ್ ರಿಚೆಲ್ಯೂ ರಕ್ಷಣ ಮಂತ್ರಿಯಾಗಿದ್ದು, ಸಮರ್ಥ ನೀತಿಯನ್ನು ಅನುಸರಿಸಿದ. ಪ್ರಭುತ್ವದ ವಿರೋಧಿಗಳನ್ನು ಹತ್ತಿಕ್ಕಿ, ಪ್ರಾಟೆಸ್ಟೆಂಟರ ದಂಗೆಯನ್ನು ಅಡಗಿಸಿ, ದೇಶದಲ್ಲಿ ಉಂಟಾಗಿದ್ದ ಅರಾಜಕತೆಯನ್ನು ನಿರ್ಮೂಲಿಸಿದ. ಹದಿಮೂರನೆಯ ಲೂಯಿಯ ಮಗ ೧೪ ನೆಯ ಲೂಯಿ (೧೬೪೩೧೭೧೫) ಐದು ವರ್ಷಗಳ ಬಾಲಕನಾಗಿದ್ದಾಗ ಪಟ್ಟಕ್ಕೆ ಬಂದ. ರಾಜಮಾತೆ ಆಸ್ಟ್ರಿಯದ ಆನಿ ರಾಜಪ್ರತಿನಿಧಿಯಾಗಿ ಕೆಲಸ ನಿರ್ವಹಿಸುತ್ತಿದ್ದಳು. ಕಾರ್ಡಿನಲ್ ಮ್ಯಾಜರೀನ್ ಪ್ರಧಾನಿಯಾಗಿದ್ದ. ಅವನು ದೇಶದಲ್ಲಿ ಎದ್ದ ದಂಗೆಗಳನ್ನು ಅಡಗಿಸಿ, ಪರಿಸ್ಥಿತಿಯನ್ನು ಹತೋಟಿಗೆ ತಂದನಲ್ಲದೆ ಪ್ರಭುತ್ವಕ್ಕೆ ಅಪತ್ತನ್ನು ನಿವಾರಿಸಿದ. ಪ್ರಾಪ್ತ ವಯಸ್ಸಿಗೆ ಬಂದ ೧೪ ನೆಯ ಲೂಯಿ ೧೬೬೧ ರಲ್ಲಿ ಸರ್ಕಾರಕ ವ್ಯವಹಾರಗಳನ್ನು ತಾನೇ ವಹಿಸಿಕೊಂಡ. ೧೬೬೧ ರಿಂದ ೧೭೧೫ ರ ವರೆಗಿನ ಅವನ ವ್ಯಕ್ತಿಗತ ಆಳ್ವಿಕೆ ಮಹತ್ವಪೂರ್ಣ ಘಟನೆಗಳಿಂದ ಕೂಡಿತ್ತು. ಅವನು ಮಹಾಪ್ರಭು ಮತ್ತು ಸೂಯಪ್ರಭು ಎಂದು ಪ್ರಸಿದ್ಧಿ ಪಡೆದ. ಇವನ ಕಾಲದಲ್ಲಿ ಫ್ರಾನ್ಸ್ ಇಡೀ ಯುರೋಪಿಗೆ ಮಾದರಿಯಾಯಿತು. ಫ್ರೆಂಚ್ ಸಾಹಿತ್ಯ ಸಂಗೀತ, ಭಾಷೆ, ಉಡುಗೆ ತೊಡಿಗೆಗಳು ಯುರೋಪಿನ ಮನೆಮಾತಾಗಿದ್ದುವು. ಯೂರೋಪಿನ ಮೇಲೆ ಫ್ರಾನ್ಸ್ ಬೀರಿದ ಪರಿಣಾಮದಿಂದಾಗಿ ಇವನ ಆಳ್ವಿಕೆಯ ಕಾಲವನ್ನು ೧೪ ನೆಯ ಲೂಯಿಯ ಯುಗ ಎಂದು ಬಣ್ಣಿಸಲಾಗಿದೆ. ನಾನೇ ರಾಜ್ಯ ಎಂದು ಹೇಳಿಕೊಂಡ ೧೪ ನೆಯ ಲೂಯಿ ಅತ್ಯಂತ ವೈಭವದಿಂದ ಆಳಿದ. ಫ್ರಾನ್ಸನ್ನು ಯೂರೋಪಿನ ಮಹಾನ್ ರಾಷ್ಟ್ರವಾಗಿ ಮಾಡಬೇಕೆಂದು ಅವನ ಹೆಬ್ಬಯಕೆಯಾಗಿತ್ತು. ಅವನು ಸದೃಢ ಸರ್ಕಾರ ರಚಿಸಿ ಪರಿಣಾಮಕಾರಿ ಆಡಳಿತ ಪದ್ಧತಿಯನ್ನು ಜಾರಿಗೆ ತಂದ. ಫ್ರಾನ್ಸ್ ಸಂಪದ್ಭರಿತ ರಾಷ್ಟ್ರವಾಗಿ ಬೆಳೆಯಿತು. ದಕ್ಷ ಮಂತ್ರಿಗಳು ಸಾಧಿಸಿದ ಆರ್ಥಿಕ ದೃಢತೆಯನ್ನು ೧೪ ನೆಯ ಲೂಯಿ ತನ್ನ ಅವಿವೇಕದ, ಸಂಕುಚಿತ ನೀತಿಯಿಂದಾಗಿ ಹಾಳುಮಾಡಿದ. ಪ್ರಾಟೆಸ್ಟೆಂಟರನ್ನು ಚಿತ್ರಹಿಂಸೆಗೆ ಗುರಿಪಡಿಸಿ, ಪ್ರಸಿದ್ಧ ನ್ಯಾಸ್ಟೀಸ್ ಶಾಸನವನ್ನು ರದ್ದುಗೊಳಿಸಿದ. ಇದರಿಂದ ಸಹಸ್ರಾರು ಪ್ರಾಟೆಸ್ಟೆಂಟರು ಫ್ರಾನ್ಸನ್ನು ತ್ಯಜಿಸಿದರು. ಲೂಯಿಯ ಈ ಕ್ರಮ ರಾಷ್ಟ್ರದ ಆರ್ಥಿಕ ಪ್ರಗತಿಯನ್ನು ಕುಂಠಿತಗೊಳಿಸಿತು. ಫ್ರಾನ್ಸಿನ ಗಡಿ ಪ್ರದೇಶಗಳನ್ನು ವಿಸ್ತರಿಸಿ ವಿಶಾಲ ಸಾಮ್ರಾಜ್ಯ ನಿರ್ಮಿಸಿದ ಗುರಿಯಿಂದ ಅವನು ನಾಲ್ಕು ಯುದ್ಧಗಳನ್ನು ಮಾಡಿದ. ಇವು ಅತ್ಯಂತ ದುಬಾರಿ ಯುದ್ಧಗಳಾದ್ದು, ರಾಷ್ಟ್ರದ ಆರ್ಥಿಕ ಮತ್ತು ಸೈನಿಕ ಶಕ್ತಿಗಳನ್ನು ನಾಶಗೊಳಿಸಿದುವು ಫ್ರಾನ್ಸಿನ ಪ್ರತಿಷ್ಟೆ ಗೌರವಗಳನ್ನು ಹೆಚ್ಚಿಸುವ ಬದಲು ರಾಷ್ಟ್ರದ ಸರ್ವನಾಶಕ್ಕೆ ಮೂಲವಾದವು. ೧೭೧೫ ರಿಂದ ೧೭೭೪ ರ ವರೆಗೆ ಫ್ರಾನ್ಸಿನ ದೊರೆಯಾಗಿದ್ದ ೧೫ ನೆಯ ಲೂಯಿ ಅಸಮರ್ಥನೂ ಅವಿವೇಕಿಯೂ ಆಗಿದ್ದ. ದೇಶದ ವ್ಯವಹಾರಗಳನ್ನು ಕಡೆಗಣಿಸಿ ನೃತ್ಯ, ಬೇಟೆ, ಸುಂದರ ಸ್ತ್ರೀಯರ ಸಹವಾಸ ಇವುಗಳಲ್ಲಿ ಮಗ್ನನಾಗಿದ್ದ. ತನ್ನ ಇಬ್ಬರು ರಾಣಿಯ ಕೆಟ್ಟ ಪ್ರಭಾವಕ್ಕೊಳಗಾಗಿ ರಾಷ್ಟ್ರ ಮತ್ತು ಪ್ರಜೆಗಳ ಹಿತಾಸಕ್ತಿಗಳನ್ನು ಗಾಳಿಗೆ ತೂರಿದ. ಇವನ ಕಾಲದಲ್ಲಿ ಪೊಲೀಸ್ ಉತ್ತರಾಧಿಕಾರ ಯುದ್ಧ ಆಸ್ಟ್ರಿಯನ್ ಉತ್ತರಾಧಿಕಾರ ಯುದ್ಧ ಮತ್ತು ಸಪ್ತವಾರ್ಷಿಕ ಯುದ್ಧದಲ್ಲಿ ಫ್ರಾನ್ಸ್ ಪಾಲ್ಗೊಂಡದ್ದರಿಂದ ದೇಶದ ಬೊಕ್ಕಸ ಬರಿದಾಗಿ ಫ್ರಾನ್ಸ್ ತೀವ್ರ ರೀತಿಯ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಯಿತು. ಹದಿನೈದನೆಯ ಲೂಯಿಯ ಮೊಮ್ಮಗ ೧೬ ನೆಯ ಲೂಯಿ ೧೭೭೪ ರಲ್ಲಿ ಫ್ರಾನ್ಸಿನ ಗದ್ದುಗೆ ಏರಿದ. ಉತ್ಸಾಹಶಾಲಿಯಾಗಿದ್ದ. ಅವನು ಅನೇಕ ಸುಧಾರಣೆಗಳನ್ನು ಜಾರಿಗೆ ತರುವ ಸದುದ್ದೇಶ ಹೊಂದಿದ್ದ. ಆದರೆ ಸಮರ್ಥ ನಾಯಕತ್ವ ಮತ್ತು ದೃಢಸಂಕಲ್ಪದ ಕೊರತೆಗಳು ಅವನಲ್ಲಿದ್ದುದರಿಂದ, ೧೬ ನೆಯ ಲೂಯಿ ತನ್ನ ರಾಣಿ ಮೇರಿ ಆಂಟಾಯ್ನೆಟ್ಟಳ ಕೆಟ್ಟ ಪ್ರಭಾವಕ್ಕೆ ಗುರಿಯಾಗಿದ್ದ. ಇವನ ಕಾಲದ ಮಹತ್ವಪೂರ್ಣ ಘಟನೆಯೆಂದರೆ, ೧೭೮೯ ರಲ್ಲಿ ಸಂಬಂಧಿಸಿದ ಫ್ರೆಂಚ್ ಕ್ರಾಂತಿ. ಇದು ಮಾನವ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಇದು ಸಾಮಾಜಿಕ ವಿಪ್ಲವವೂ ಹೌದು, ಮಹಾ ರಾಜಕೀಯ ಕ್ರಾಂತಿಯೂ ಹೌದು. ರಾಷ್ಟ್ರದ ಆರ್ಥಿಕ. ರಾಜಕೀಯ ಸಾಮಾಜಿಕ ಜೀವನದಲ್ಲಿ ಬೇರು ಬಿಟ್ಟಿದ್ದ ಲೋಪದೋಷಗಳಿಂದಾಗಿ ಕ್ರಾಂತಿ ಸಂಭವಿಸಿತು. ಜನತೆಯ ಅತೃಪ್ತಿ ಅಸಮಾಧಾನಗಳೇ ಕ್ರಾಂತಿಯ ಮೂಲ. ಈ ಕ್ರಾಂತಿ ಎರಡು ಘಟ್ಟಗಳಲ್ಲಿ ನಡೆಯಿತು. ೧೭೮೯ ರ ಮೊದಲ ಕ್ರಾಂತಿಯಿಂದಾದ ನಿರಂಕುಶ ಪ್ರಭುತ್ವ ಅಸಮಾನತೆ, ಅಸಹಿಷ್ಣುತೆ ಮುಂತಾದ ಕೆಟ್ಟ ಪದ್ಧತಿಗಳನ್ನು ಕಿತ್ತೊಗೆಯಲಾಯಿತಾದರೂ ಫ್ರಾನ್ಸಿನ ಜನತೆ ರಾಜಪ್ರಭುತ್ವವನ್ನು ಉಳಿಸಿಕೊಂಡರು. ೧೭೯೩ ರಲ್ಲಿ ಸಂಭವಿಸಿದ ಎರಡನೆಯ ಘಟ್ಟ ಹೆಚ್ಚು ಮಹತ್ತ್ವದ್ದು. ಇದರಿಂದ ಫ್ರಾನ್ಸಿನಲ್ಲಿ ರಾಜಪ್ರಭುತ್ವವನ್ನು ಕೈಬಿಟ್ಟು ಪ್ರಜಾಸತ್ತಾತ್ಮಕ ಸರ್ಕಾರವನ್ನು ಸ್ಥಾಪಿಸಲಾಯಿತು. ಫ್ರಾನ್ಸಿನ ಕ್ರಾಂತಿಯ ಧ್ಯೇಯಗಳಾದ ಸ್ವಾತಂತ್ರ್ಯ, ಸಮಾನತೆ, ಸೌಭ್ರಾತೃತ್ವಗಳು ಪ್ರಪಂಚಾದ್ಯಂತ ಪ್ರತಿಧ್ವನಿಸಿದುವು. ಸಮಾನತೆಯ ಆಧಾರದ ಮೇಲೆ ನೂತನ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ನಿರ್ಮಿಸುವುದು ಕ್ರಾಂತಿಕಾರರ ಗುರಿಯಾಗಿತ್ತು. ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನಗಳಲ್ಲಿ ಪ್ರಪಂಚಾದ್ಯಂತ ನಡೆದ ರಾಷ್ಟ್ರೀಯ ಚಳವಳಿಗಳಿಗೆ ಸ್ಫೂರ್ತಿ ನೀಡಿದ ಈ ಕ್ರಾಂತಿ ರಾಷ್ಟ್ರೀಯತೆ, ಪ್ರಜಾಪ್ರಭುತ್ವ ತತ್ತ್ವಗಳು ಮತ್ತು ಉದಾರಭಾವನೆಗಳಿಗೆ ಅವಕಾಶ ಮಾಡಿಕೊಟ್ಟು ಪ್ರಪಂಚದ ಜನರಲ್ಲಿ ಹೊಸ ಶಕ್ತಿ ಚೈತನ್ಯಗಳನ್ನು ಮೂಡಿಸಿತು. ನೆಪೋಲಿಯನ್ ಕ್ರಾಂತಿಯ ಶಿಶು ಎನಿಸುಕೊಂಡ ನೆಪೋಲಿಯನ್ ಬೋನ ಪಾರ್ಟ್ ೧೭೯೦ ರಲ್ಲಿ ಕ್ಷಿಪ್ರ ಕ್ರಾಂತಿ ನಡೆಸಿ ಮುಂದೆ ಫ್ರಾನ್ಸಿನ ಸರ್ವಾಧಿಕಾರಿಯಾದ. ೧೭೯೯ ರಿಂದ ೧೮೧೮ ರ ವರೆಗಿನ ಕಾಲವನ್ನು ಫ್ರಾನ್ಸಿನ ಇತಿಹಾಸದಲ್ಲಿ ನೆಪೋಲಿಯನ್ನನ ಯುಗವೆಂದೇ ಪರಿಗಣಿಸಲಾಗಿದೆ. ೧೮೦೪ ರಲ್ಲಿ ಇವನು ಫ್ರಾನ್ಸಿನ ಚಕ್ರವರ್ತಿಯಾದ. ಇತಿಹಾಸದಲ್ಲಿ ಇವನು ೧ ನೆಯ ನೆಪೋಲಿಯನ್ ಎಂದು ಪ್ರಸಿದ್ಧನಾಗಿದ್ದಾನೆ. ಒಂದನೆಯ ನೆಪೋಲಿಯನ್ನನ ಆಳ್ವಿಕೆ ಫ್ರಾನ್ಸಿನ ಇತಿಹಾಸದಲ್ಲಿ ಮತ್ತು ಯುರೋಪಿನ ಇತಿಹಾಸದಲ್ಲಿ ಉಜ್ವಲ ಅಧ್ಯಾಯವೊಂದನ್ನು ಆರಂಭಿಸಿತು. ಇವನು ಪ್ರಚಂಡ ಸೈನಿಕ ಶಕ್ತಿಯ ಪ್ರತೀಕವಾಗಿದ್ದನಲ್ಲದೆ, ದಕ್ಷ ಆಡಳಿತಗಾರನೂ ಅಸಾಧಾರಣ ಪ್ರತಿಭಾಶಾಲಿಯೂ ಆಗಿದ್ದ. ಮಹಾಯೋಧನಾಗಿದ್ದ ಇವನು ತನ್ನ ಸೈನಿಕ ಶಕ್ತಿಯಿಂದ ಫ್ರಾನ್ಸಿನ ಅಂತರರಾಷ್ಟ್ರೀಯ ಘನತೆ ಗೌರವಗಳನ್ನು ಹೆಚ್ಚಿಸಿ ಅದನ್ನು ಯುರೋಪಿನ ಪ್ರಬಲ ರಾಜಕೀಯ ಮತ್ತು ಸೈನಿಕ ಶಕ್ತಿಯನ್ನಾಗಿ ಮಾಡುವ ಗುರಿ ಹೊಂದಿದ್ದ. ಇವನು ಯುರೋಪಿನ ಪ್ರಮುಖ ರಾಷ್ಟ್ರಗಳಾದ ಆಸ್ಟ್ರಿಯ, ಪ್ರಷ್ಯ, ರಷ್ಯಗಳನ್ನು ಸೋಲಿಸಿದ್ದ. ಇಂಗ್ಲೆಂಡನ್ನು ಉಳಿದ ಇಡೀ ಯುರೋಪು ನೆಪೋಲಿಯನ್ನನಿಗೆ ಮಣಿದಿತ್ತು. ಇವನು ಇಂಗ್ಲೆಂಡನ್ನು ಸೋಲಿಸಲು ಸರ್ವ ಪ್ರಯತ್ನ ನಡೆಸಿದಾಗ್ಯೂ ಸಫಲನಾಗಲಿಲ್ಲ. ಅಂತಿಮವಾಗಿ ೧೮೧೫ ರಲ್ಲಿ ವಾಟರ್ಲೂ ಕದನದಲ್ಲಿ ಗ್ರೇಟ್ಬ್ರಿಟನ್, ರಷ್ಯ, ಆಸ್ಟ್ರಿಯ ಮತ್ತು ಪ್ರಷ್ಯಗಳ ನೆಪೋಲಿಯನ್ನನನ್ನು ಪರಾಭವಗೊಳಿಸಿ, ಸೇಂಟ್ ಹೆಲೀನ ದ್ವೇಪಕ್ಕೆ ಗಡಿಪಾರು ಮಾಡಿದುವು. ಒಂದನೆಯ ನೆಪೋಲಿಯನ್ ಬರೀ ಯೋಧನಾಗಿರದೆ ಪ್ರತಿಭಾವಂತ ಆಡಳಿತಗಾರನಾಗಿದ್ದ. ಹತ್ತು ವರ್ಷಗಳ ಕ್ರಾಂತಿಯ ಕ್ಷೋಭೆಯಿಂದ ಕಂಗೆಟ್ಟಿದ್ದ ಫ್ರಾನ್ಸಿಗೆ ಆಂತರಿಕ ಶಾಂತಿ ನೆಮ್ಮದಿಗಳನ್ನು ನೀಡಿದ. ಫ್ರಾನ್ಸಿನಲ್ಲಿ ಸದೃಡ ಸರ್ಕಾರ ರಚಿಸಿ, ಅನೇಕ ಸುಧಾರಣೆಗಳ ಮೂಲಕ ರಾಷ್ಟ್ರೀಯ ಜೀವನಕ್ಕೆ ಹೊಸ ರೂಪು ನೀಡಿದ. ರಾಷ್ಟ್ರದ ಆರ್ಥಿಕ ಸಮಸ್ಯೆಗಳನ್ನು ಸ್ಥಾಪಿಸಿ, ಶೈಕ್ಷಣಿಕ ಪ್ರಗತಿ ಸಾಧಿಸಿದ. ನೆಪೋಲಿಯನ್ನನ ಕೋಡ್ ನೆಪೋಲಿಯನ್ ಅವನ ಪ್ರತಿಭೆ ಮತ್ತು ರಚನಾತ್ಮಕ ಶಕ್ತಿಗೆ ಪ್ರಮುಖ ನಿದರ್ಶನವಾಗಿದೆ. ಇವನು ಅನೇಕ ಪ್ರಜೋಪಕಾರಿ ಕ್ರಮಗಳನ್ನು ಕೈಗೊಂಡ. ಇವನು ಪ್ಯಾರಿಸನ್ನು ಅತ್ಯಂತ ಸುಂದರ ನಗರವಾಗಿ ಪರಿವರ್ತಿಸಿದ. ಇವನ ಕಾಲದಲ್ಲಿ ಫ್ರಾನ್ಸ್ ಔನ್ನತ್ಯದ ತುದಿ ಮುಟ್ಟಿತು. ಇವನು ನಿರ್ಮಿಸಿದ ಫ್ರೆಂಚ್ ಸಾಮ್ರಾಜ್ಯ ಅತ್ಯಲ್ಪ ಕಾಲದಲ್ಲೇ ಅಂತ್ಯಗೊಂಡರೂ ಆಡಳಿತಗಾರನಾಗಿ ಇವನ ಸಾಧನೆಗಳೂ ಈತ ಸ್ಧಾಪಿಸಿದ ಆಡಳಿತ ಸಂಸ್ಧೆಗಳೂ ಆಧುನಿಕ ಫ್ರಾನ್ಸಿನ ಜನಜೀವನದ ಅವಿಭಾಜ್ಯ ಅಂಗಗಳಾಗಿವೆ. ಒಂದನೆಯ ನೆಪೋಲಿಯನ್ನನ ಆಳ್ವಿಕೆಯ ಅನಂತರ ವಿಯೆನ್ನಾ ಸಮ್ಮೇಳನದ ತೀರ್ಮಾನದಂತೆ ಬೂರ್ಬನ್ ಮನೆತನದ ೧೮ ನೆಯ ಲೂಯಿಯನ್ನು ಫ್ರಾನ್ಸಿನ ರಾಜನೆಂದು ಘೋಷಿಸಲಾಯಿತು. ಹದಿನೆಂಟನೆಯ ಲೂಯಿ ಸಂವಿಧಾನ ಬದ್ಧವಾಗಿ ಆಳ್ವಿಕೆ ನಡೆಸಲು ಸಿದ್ಧನಿದ್ದರೂ ಇವನ ಕಾಲದಲ್ಲಿ ಪ್ರತಿಗಾಮಿಗಳಿಗೂ ಉದಾರ ವಾದಿಗಳಿಗೂ ಫ್ರಾನ್ಸಿನಲ್ಲಿ ಹೋರಾಟ ಆರಂಭವಾಯಿತು. ಪ್ರತಿಗಾಮಿಗಳು ವಿಶೇಷ ಸೌಲಭ್ಯಗಳನ್ನು ಪಡೆಯಲು ಮತ್ತು ಅಧಿಕಾರ ಕಸಿದುಕೊಳ್ಳಲು ಹವಣಿಸುತ್ತಿದ್ದರು. ರಾಷ್ಟ್ರದಲ್ಲಿ ಗೊಂದಲಕ್ಕೆ ಕಾರಣರಾದ ಪ್ರತಿಗಾಮಿಗಳನ್ನು ಹತ್ತಿಕ್ಕಲು ಅಸಮರ್ಥನಾಗಿದ್ದ ೧೮ ನೆಯ ಲೂಯಿ ೧೮೨೪ ರಲ್ಲಿ ಕಾಲವಾದ. ಅನಂತರ ಅವನ ಸೋದರ ೧೮ ನೆಯ ಚಾಲ್ರ್ಸ್ ಫ್ರಾನ್ಸಿನ ಸಿಂಹಾಸನವೇರಿದ. ಅವನ ಆಳ್ವಿಕೆ ಪ್ರತಿಗಾಮಿಗಳಿಗೆ ಅನುಕೂಲಕರವಾಗಿತ್ತು. ಅವನು ಪ್ರತಿಗಾಮಿ ಮತ್ತು ದಮನಕಾರಿ ನೀತಿಯನ್ನು ಅನುಸರಿಸಿ ನಿರಂಕುಶ ಪ್ರಭುವಿನಂತೆ ಆಳಲು ಯತ್ನಿಸಿದ. ಆದರೆ ಫ್ರಾನ್ಸಿನ ಜನರು ೧೮೩೦ ರ ಜುಲೈನಲ್ಲಿ ಅವನ ವಿರುದ್ಧ ದಂಗೆ ಎದ್ದರು. ಜುಲೈ ಕ್ರಾಂತಿ ಎಂದು ಹೆಸರು ಪಡೆದ ಇದರ ಉದ್ದೇಶ ಪ್ರಾನ್ಸಿನಲ್ಲಿ ಬೂರ್ಬನ್ ರಾಜವಂಶದ ಆಡಳಿತವನ್ನು ಕೊನೆಗೊಳಿಸಿ ಪ್ರಗತಿಪರ ಆಸಳಿತ ಸುಧಾರಣೆಗಳನ್ನು ಜಾರಿಗೆ ತರುವುದಾಗಿತ್ತು. ಚಾರ್ಲ್ಸ್ ಸಿಂಹಾಸನ ತ್ಯಾಗ ಮಾಡಿದ ಅನಂತರ ಆರ್ಲಿಯನಿಸ್ಟ್ ಮನೆತನದ ಲೂಯಿ ಫಿಲಿಪ್ ಅಧಿಕಾರಕ್ಕೆ ಬಂದ (೧೮೩೦೧೮೪೮). ಅವನೂ ದಮನಕಾರಿ ನೀತಿಯನ್ನೇ ಅನುಸರಿಸಿ ಪ್ರಜೆಗಳ ಹಿತಾಸಕ್ತಿಗಳನ್ನು ಗಾಳಿಗೆ ತೂರಿದ್ದ. ಫ್ರಾನ್ಸಿನ ಜನ ಮತ್ತೆ ೧೮೪೮ ರ ಫೆಬ್ರವರಿಯಲ್ಲಿ ಕ್ರಾಂತಿ ನಡೆಸಿದರು. ಈ ಕ್ರಾಂತಿಯಿಂದಾಗಿ ಲೂಯಿ ಫಿಲಿಪ್ ಸಿಂಹಾಸನ ಕಳೆದುಕೊಂಡು ಇಂಗ್ಲೆಂಡಿಗೆ ಓಡಿಹೋದ. ಈ ಕ್ರಾಂತಿಯ ಫಲವಾಗಿ ಫ್ರಾನ್ಸಿನಲ್ಲಿ ಎರಡನೆಯ ಗಣರಾಜ್ಯ ಅಸ್ತಿತ್ವಕ್ಕೆ ಬಂತು. ಫ್ರಾನ್ಸಿನ ೧೮೩೦ ರ ಜುಲೈ ಮತ್ತು ೧೮೪೮ ರ ಫೆಬ್ರವರಿ ಕ್ರಾಂತಿಗಳು ಮತ್ತೆ ಯುರೋಪಿನಲ್ಲಿ ಪ್ರತಿಗಾಮಿ ಶಕ್ತಿಗಳ ವಿರುದ್ಧ ರಾಷ್ಟ್ರೀಯ ಚಳವಳಿಗೆ ಅವಕಾಶ ಕಲ್ಪಿಸಿದವು. ಎರಡನೆಯ ಫ್ರೆಂಚ್ ಸಾಮ್ರಾಜ್ಯ ಮತ್ತು ೩ ನೆಯ ನೆಪೋಲಿಯನ್ ೧೮೪೮ ರ ಫೆಬ್ರವರಿ ಕ್ರಾಂತಿಯ ಫಲವಾಗಿ ಅಸ್ತಿತ್ವಕ್ಕೆ ಬಂದ ಎರಡನೆಯ ಗಣರಾಜ್ಯದ ಅಧ್ಯಕ್ಷನಾಗಿ ೧ ನೆಯ ನೆಪೋಲಿಯನ್ನನ ಸಂಬಂಧಿ ಲೂಯಿ ನೆಪೋಲಿಯನ್ ಬೋನಪಾರ್ಟನನ್ನು ಆರಿಸಲಾಯಿತು. ತನ್ನ ಚಿಕ್ಕಪ್ಪ ೧ ನೆಯ ನೆಪೋಲಿಯನ್ನನ ಹೆಸರು ಮತ್ತು ಸಾಧನೆಗಳ ಬಲದಿಂದ ಅಧಿಕಾರಕ್ಕೆ ಬಂದ ಲೂಯಿ ನೆಪೋಲಿಯನ್ ಬೋನಪಾರ್ಟ್ ಫ್ರೆಂಚ್ ಪ್ರಗತಿ ಮತ್ತು ರಾಷ್ಟ್ರೀಯ ಏಕತೆಯನ್ನು ಸಾಧಿಸಲು ಹೋರಾಡುವುದಾಗಿ ಜನತೆಗೆ ಆಶ್ವಾಸನೆ ನೀಡಿದ. ಆದರೆ ಸರ್ವಾಧಿಕಾರಿಯಾಗಿ ಆಳುವ ಆಕಾಂಕ್ಷೆ ಹೊಂದಿದ್ದ ಅವನು ೧೮೫೧ ರ ಡಿಸೆಂಬರ್ ೨ ರಂದು ಕ್ಷಿಪ್ರ ಕ್ರಾಂತಿ ನಡೆಸಿ ನಿರಂಕುಶ ಪ್ರಭುವಾದ. ೧೮೫೨ ರಲ್ಲಿ ಗಣರಾಜ್ಯ ವ್ಯವಸ್ಥೆಯನ್ನು ರದ್ದುಗೊಳಿಸಿ, ಎರಡನೆಯ ಚಕ್ರಾಧಿಪತ್ಯವನ್ನು ಘೋಷಿಸಿ, ೩ ನೆಯ ನೆಪೋಲಿಯನ್ ಎಂಬ ಹೆಸರಿನಿಂದ ಫ್ರಾನ್ಸಿನ ಚಕ್ರವರ್ತಿಯಾದ. ಅವನು ಅನೇಕ ಪ್ರಗತಿಪರ ಸುಧಾರಣೆಗಳನ್ನು ಜಾರಿಗೆ ತಂದದ್ದರಿಂದ ಫ್ರಾನ್ಸ್ ಮತ್ತೊಮ್ಮೆ ಪ್ರಗತಿಯ ಹಾದಿ ಹಿಡಿಯಿತು. ಆದರೂ ೩ ನೆಯ ನೆಪೋಲಿಯನ್ನನ ಆಂತರಿಕ ನೀತಿ ಜನಾನುರಾಗಿಯಾಗಿರಲಿಲ್ಲ. ಗಣರಾಜ್ಯವಾದಿಗಳೂ ಸಮಾಜವಾದಿಗಳೂ ೩ ನೆಯ ನೆಪೋಲಿಯನ್ನನ ನಿರಂಕುಶ ಪ್ರಭುತ್ವವನ್ನು ನಾಶಗೊಳಿಸಲು ಸಮಯ ಕಾಯುತ್ತಿದ್ದರು. ಅವನ ಆಳ್ವಿಕೆಯ ದುರ್ಬಲ ಅಂಶವೆಂದರೆ ಅವನ ಅಸಮರ್ಥ ವಿದೇಶಾಂಗ ನೀತಿ. ಮಹತ್ವಾಕಾಂಕ್ಷಿಯಾಗಿದ್ದ ೩ ನೆಯ ನೆಪೋಲಿಯನ್ ಫ್ರಾನ್ಸಿನ ಹಾಗೂ ತನ್ನ ವೈಯಕ್ತಿಕ ಪ್ರತಿಷ್ಠೆ ಗೌರವಗಳನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಅನೇಕ ರಾಜ್ಯಗಳ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸಲು ಪ್ರಯತ್ನಿಸಿ ವಿಫಲನಾದ. ಇಂಗ್ಲೆಂಡ್ ತುರ್ಕಿಗಳೊಡನೆ ಸೇರಿಕೊಂಡು ರಷ್ಯದ ವಿರುದ್ಧ ನಡೆದ ಕ್ರಿಮಿಯ ಯುದ್ಧದಲ್ಲಿ (೧೮೫೪೧೮೫೬) ಪಾಲ್ಗೊಂಡ. ಯುದ್ಧದಲ್ಲಿ ಮಿತ್ರ ರಾಷ್ಟ್ರಗಳಿಗೆ ಜಯ ದೊರಕಿ ಪ್ಯಾರಿಸ್ ನಗರದಲ್ಲಿ ಶಾಂತಿ ಸಮ್ಮೇಳನ ಸಮಾವೇಶಗೊಂಡಿದ್ದರಿಂದ ಫ್ರಾನ್ಸಿನ ಗೌರವ ಸ್ವಲ್ಪ ಮಟ್ಟಗೆ ಹೆಚ್ಚಿತು. ಅವನು ಇಟಲಿಯ ಏಕೀಕರಣ ಚಳವಳಿಗೆ ಪ್ರೋತ್ಸಾಹ ನೀಡಿ ಸೈನಿಕ ನೆರವನ್ನು ಸಹ ನೀಡಿದ. ಆದರೆ ಇಟಾಲಿಯನ್ನರು ಆಸ್ಟ್ರಿಯದ ವಿರುದ್ಧ ಸಂಪೂರ್ಣ ಜಯ ಗಳಿಸುವ ಸ್ಥಿತಿಯಲ್ಲಿದ್ದಾಗ ಹಠಾತ್ತನೆ ಅವರಿಗೆ ಸೈನಿಕ ನೆರವು ನಿಲ್ಲಿಸಿ ಅವರ ದ್ವೇಷ ಕಟ್ಟಿಕೊಂಡ. ಅನಂತರ ಮೆಕ್ಸಿಕೋದಲ್ಲಿ ಫ್ರೆಂಚ್ ಕ್ಯಾತೊಲಿಕ್ ಸಾಮ್ರಾಜ್ಯವೊಂದನ್ನು ನಿರ್ಮಿಸಲು ಪ್ರಯತ್ನಿಸಿ ವಿಫಲಗೊಂಡ. ೧೮೭೦೭೧ ರ ಫ್ರಾಂಕೋಪ್ರಷ್ಯನ್ ಯುದ್ಧ ೩ ನೆಯ ನೆಪೋಲಿಯನ್ನನಿಗೆ ಮತ್ತೊಂದು ದುರಂತದ ಸಂಗತಿಯಾಗಿ ಪರಿಣಮಿಸಿತು. ಪ್ರಷ್ಯದ ಪ್ರಧಾನಿ ಬಿಸ್ಮಾರ್ಕನ ರಾಜತಾಂತ್ರಿಕ ಯುಕ್ತಿ ಮತ್ತು ಸೈನಿಕ ಶಕ್ತಿಯ ಮುಂದೆ 3ನೆಯ ನೆಪೋಲಿಯನ್ನನ ಆಟ ಸಾಗದಾಯಿತು. ಫ್ರಾಂಕೊಪ್ರಷ್ಯನ್ ಯುದ್ಧದ ಪ್ರಮುಖ ಕದನದಲ್ಲಿ ೩ ನೆಯ ನೆಪೋಲಿಯನ್ ಅತ್ಯಂತ ಅವಮಾನಕರ ರೀತಿಯಲ್ಲಿ ಸೋತು ಶತ್ರುವಿಗೆ ಶರಣಾದ. ಅವನು ಸಿಂಹಾಸನ ಕಳೆದುಕೊಂಡ. ಎರಡನೆಯ ಫ್ರೆಂಚ್ ಸಾಮ್ರಾಜ್ಯ ಕೊನೆಗೊಂಡಿತು. ಮೂರನೆಯ ಗಣರಾಜ್ಯ ಫ್ರಾಂಕೊಪ್ರಷ್ಯನ್ ಯುದ್ಧದ ಅನಂತರ ಫ್ರಾನ್ಸಿನಲ್ಲಿ ತಾತ್ಕಾಲಿಕ ಗಣರಾಜ್ಯ ವ್ಯವಸ್ಥೆ ಜಾರಿಗೆ ಬಂತು. ೧೮೭೧ ರಲ್ಲಿ ಜಾರಿಗೆ ಬಂದ ಮೂರನೆಯ ಗಣರಾಜ್ಯ ೧೯೪೦ ರವರೆಗೂ ಮುಂದುವರಿಯಿತು. ಆಡಾಲ್ಫ್ ಟ್ಯೇರ್ ಫ್ರಾನ್ಸಿನ ಮೂರನೆಯ ಗಣರಾಜ್ಯದ ಅಧ್ಯಕ್ಷನಾದ. ೧೮೭೧ ರ ಮೇ ೧೦ ರಂದು ಜರ್ಮನಿಯೊಡನೆ ಫ್ರಾಂಕ್ಫರ್ರ್ಟ್ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರ ಪ್ರಕಾರ ಆಲ್ಸೇಸ್ಲೊರೇನಿನ ಒಂದು ಭಾಗವನ್ನು ಫ್ರಾನ್ಸ್ ಜರ್ಮನಿಗೆ ಬಿಟ್ಟು ಕೊಡಬೇಕಾಯಿತಲ್ಲದೆ, ೫೦೦ ಕೋಟಿ ಫ್ರಾಂಕ್ಗಳನ್ನು ಯುದ್ಧ ಪರಿಹಾರ ಹಣವಾಗಿ ಜರ್ಮನಿಗೆ ಕೊಡಬೇಕಾಯಿತು. ಈ ಅವಮಾನಕರ ಒಪ್ಪಂದದ ವಿರುದ್ಧ ಪ್ಯಾರಿಸ್ ನಗರದಲ್ಲಿ ಉಗ್ರ ಪ್ರತಿಭಟನೆಗಳು ನಡೆದುವು. ಫ್ರಾನ್ಸಿನಾದ್ಯಂತ ಅಲ್ಲಲ್ಲಿ ದಂಗೆಗಳಾದವು. ಆದರೆ ಟ್ಯೇರ್ ಪರಿಸ್ಥಿತಿಯನ್ನು ಹತೋಟಿಗೆ ತಂದ. ಅನೇಕ ಪ್ರಗತಿಪರ ಸುಧಾರಣೆಗಳನ್ನು ಜಾರಿಗೆ ತಂದು ಫ್ರಾನ್ಸನ್ನು ಶತ್ರುಸೇನೆಯಿಂದ ವಿಮೋಚನೆಗೊಳಿಸಿದ. ರಾಷ್ಟ್ರದ ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ರಕ್ಷಿಸುವುದಕ್ಕಾಗಿ ಟ್ಯೇರ್ ಸಲ್ಲಿಸಿದ ಸೇವೆಯಿಂದಾಗಿ ಅವನನ್ನು ಫ್ರಾನ್ಸಿನ ವಿಮೋಚಕನೆಂದು ಕರೆಯಲಾಗಿದೆ. ೧೮೭೩ ರಲ್ಲಿ ಟ್ಯೇರ್ ಅಧ್ಯಕ್ಷ ಪದವಿಯನ್ನು ತ್ಯಜಿಸಿದ. ಮಾರ್ಷಲ್ ಮ್ಯಾಕ್ಮಾವಾನ್ ಮೂರನೆಯ ಗಣರಾಜ್ಯದ ಅಧ್ಯಕ್ಷನಾಗಿ ಏಳು ವರ್ಷಗಳ ಅವಧಿಗೆ ಚುನಾಯಿತನಾದ. ೧೮೭೫ ರಲ್ಲಿ ಫ್ರಾನ್ಸ್ ಹೊಸ ಸಂವಿಧಾನವೊಂದನ್ನು ಪಡೆಯಿತು. ಫ್ರಾನ್ಸಿನ ಮೂರನೆಯ ಗಣರಾಜ್ಯ ಅನೇಕ ಗಂಡಾಂತರಗಳನ್ನು ಮೆಟ್ಟಿ ನಿಲ್ಲ ಬೇಕಾಯಿತು. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಅನೇಕ ಚಳವಳಿಗಳು ನಡೆದುವು. ಘಟನೆಗಳು ಸಂಭವಿಸಿದುವು. ಆದರೆ ಇವುಗಳಿಂದ ಫ್ರಾನ್ಸಿನ ಗಣರಾಜ್ಯ ವ್ಯವಸ್ಧೆ ಮತ್ತಷ್ಟು ಭದ್ರವಾಯಿತು. ಸಂದಿಗ್ಧ ಪರಿಸ್ಥಿತಿಯಿಂದ ಪಾರಾದ ಮೂರನೆಯ ಗಣರಾಜ್ಯ ಅಡ್ಡಿ ಆತಂಕಗಳಿಲ್ಲದೆ ಪ್ರಗತಿಪರ ನೀತಿಯನ್ನು ಮುಂದುವರಿಸಿಕೊಂಡು ಬರಲು ಸಾಧ್ಯವಾಯಿತು. ಜರ್ಮನಿಯ ಚಾನ್ಸಲರ್ ಬಿಸ್ಮಾರ್ಕ್ ಅನುಸರಿಸಿದ ರಾಜತಾಂತ್ರಿಕ ನೀತಿ ಮತ್ತು ಅವನು ಫ್ರಾನ್ಸಿನ ವಿರುದ್ಧ ರಚಿಸಿದ ತ್ರಿರಾಷ್ಟ್ರ ಕೂಟದಿಂದ ಫ್ರಾನ್ಸ್ ಯೂರೋಪಿನಲ್ಲಿ ಒಂಟಿಯಾಗಿ ಉಳಿಯಬೇಕಾಯಿತು. ಆದ್ದರಿಂದ ಅಂತರರಾಷ್ಟ್ರೀಯ ಕ್ಷೇತ್ರದಲ್ಲಿ ಮೂರನೆಯ ಗಣರಾಜ್ಯ ಸರ್ಕಾರಕ್ಕೆ ಮಾನ್ಯತೆ ದೊರಕಿಸಿಕೊಳ್ಳಲು ಮತ್ತು ಮಿತ್ರರಾಷ್ಟ್ರಗಳನ್ನು ಪಡೆದುಕೊಳ್ಳಲು, ಫ್ರಾನ್ಸಿನ ಗಣರಾಜ್ಯ ಸರ್ಕಾರ ಹೆಚ್ಚು ಶ್ರಮಿಸಬೇಕಾಯಿತು. ಗ್ರೇಟ್ ಬ್ರಿಟನ್, ಇಟಲಿ, ರಷ್ಯಗಳೊಡನೆ ಇದ್ದ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಅವುಗಳೊಡನೆ ಬಾಂಧವ್ಯವನ್ನು ಉತ್ತಮಪಡಿಸಿಕೊಳ್ಳಲು ಅದು ಸರ್ವಪ್ರಯತ್ನ ನಡೆಸಿತು. ೧೮೯೪ ರಲ್ಲಿ ರಷ್ಯದೊಡನೆ ಸೈನಿಕ ಹಾಗೂ ರಾಜಕೀಯ ಒಪ್ಪಂದವೊಂದನ್ನು ಮಾಡಿಕೊಂಡು ತನ್ನ ಭದ್ರತೆಯನ್ನು ಹೆಚ್ಚಿಸಿಕೊಂಡಿತು. ಬ್ರಿಟನ್ನಿನೊಡನಿದ್ದ ವಸಾಹತು ಮತ್ತು ವಾಣಿಜ್ಯ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು, ೧೯೦೪ ರಲ್ಲಿ ಆ ರಾಷ್ಟ್ರದೊಡನೆ ಐತಿಹಾಸಿಕ ಒಪ್ಪಂದವೊಂದನ್ನು ಮಾಡಿಕೊಂಡಿತು. ಹೀಗೆ ರಾಜಕೀಯ ಒಂಟಿತನದಿಂದ ಪಾರಾಗಿ, ಮಿತ್ರರಾಷ್ಟ್ರಗಳ ಸ್ನೇಹ ಸಂಪಾದಿಸಿ, ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಫ್ರಾನ್ಸ್ ತನ್ನ ಸ್ಥಾನಮಾನಗಳನ್ನು ಹೆಚ್ಚಿಸಿಕೊಂಡಿತು. ಇಷ್ಟೆಲ್ಲ ಪ್ರಗತಿ ಸಾಧಿಸಿದರೂ ಒಂದನೆಯ ಮಹಾಯುದ್ಧಕ್ಕೆ ಮುಂಚೆ ಫ್ರಾನ್ಸ್ ರಾಜಕೀಯ ಅಸ್ಥಿರತೆಯ ಸುಳಿಗೆ ಸಿಕ್ಕಿತ್ತು. ಮಂತ್ರಿ ಮಂಡಲಗಳ ಅಸ್ಥಿರತೆಯಿಂದಾಗಿ ಫ್ರಾನ್ಸಿನ ಆಂತರಿಕ ಪರಿಸ್ಥಿತಿ ಹದಗೆಟ್ಟಿತು. ೧೯೦೯ ರಿಂದ ೧೯೧೪ ರ ವರೆಗೆ ಸುಮಾರು ಹತ್ತು ಮಂತ್ರಿಮಂಡಲಗಳು ಅಸ್ತಿತ್ವಕ್ಕೆ ಬಂದಿದ್ದುವು. ಆದರೂ ಒಂದನೆಯ ಮಹಾಯುದ್ಧ ೧೯೧೪ ರಲ್ಲಿ ಆರಂಭವಾದಾಗ ಪ್ರತಿಯೊಬ್ಬ ಫ್ರೆಂಚ್ ಪ್ರಜೆಯು ಉತ್ಕಟ ರಾಷ್ಟ್ರಾಭಿಮಾನದಿಂದ ಪ್ರಭಾವಿತನಾಗಿ ಜರ್ಮನಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಯುದ್ಧವನ್ನು ಸ್ವಾಗತಿಸಿದ. ೧೯೧೩ ರಲ್ಲಿ ರೇಮಾನ್ಪ್ವಾನ್ಕ್ಯಾರೇ ಫ್ರಾನ್ಸಿನ ಅಧ್ಯಕ್ಷನಾಗಿ ಚುನಾಯಿತನಾಗಿದ್ದ. ಯುದ್ಧದ ಆರಂಭದಲ್ಲಿ ಜರ್ಮನಿಯ ಸೇನೆಗಳನ್ನು ಹಿಮ್ಮೆಟ್ಟಿಸಲಾಯಿತಾದರೂ ಯುದ್ಧದಿಂದಾಗಿ ಫ್ರಾನ್ಸ್ ಅಪಾರ ಕಷ್ಟನಷ್ಟಗಳನ್ನು ಅನುಭವಿಸಬೇಕಾಯಿತು. ೧೯೧೭ ರ ನವೆಂಬರ್ನಲ್ಲಿ ಜಾರ್ ಕ್ಲೇಮಾನ್ಸೋ ಫ್ರಾನ್ಸಿನ ಪ್ರಧಾನಿ ಆದ. ೧೯೧೮ ರಲ್ಲಿ ಜರ್ಮನಿ ಸೋತು ಮಿತ್ರರಾಷ್ಟ್ರಗಳಿಗೆ ಶರಣಾಗತವಾಯಿತು. ಯುದ್ಧಗಳನ್ನು ತಡೆಗಟ್ಟಿ ವಿಶ್ವಶಾಂತಿಯನ್ನು ಸ್ಥಾಪಿಸುವ ಮಾರ್ಗವನ್ನು ಕಂಡುಹಿಡಿಯಲು ಮತ್ತು ಸೋತ ರಾಷ್ಟ್ರಗಳೊಡನೆ ಕೌಲುಗಳನ್ನು ಮಾಡಿಕೊಳ್ಳಲು ೧೯೧೯ ರಲ್ಲಿ ಪ್ಯಾರಿಸ್ ನಗರದಲ್ಲಿ ಅಂತರರಾಷ್ಟ್ರೀಯ ಶಾಂತಿ ಸಮ್ಮೇಳನವೊಂದು ಸಮಾವೇಶಗೊಂಡಿತು. ಫ್ರಾನ್ಸಿನ ಪ್ರಧಾನಿ ಕ್ಲೇಮಾನ್ಸೋ ಇದರ ಅಧ್ಯಕ್ಷನಾಗಿದ್ದ. ಜರ್ಮನಿಯ ವಿರುದ್ಧ ಸೇಡಿನ ಮನೋಭಾವ ಹೊಂದಿದ್ದ ಕ್ಲೇಮಾನ್ಸೋ ಆ ರಾಷ್ಟ್ರಕ್ಕೆ ತಕ್ಕ ಶಿಕ್ಷೆಯಾಗಬೇಕೆಂದು ಶಾಂತಿ ಸಮ್ಮೇಳನದಲ್ಲಿ ವಾದಿಸಿದ. ಜರ್ಮನಿಯನ್ನು ಸಂಪೂರ್ಣವಾಗಿ ನಿತ್ರಾಣಗೊಳಿಸುವುದು ಅವನ ಗುರಿಯಾಗಿತ್ತು. ಜರ್ಮನಿಯೊಡನೆ ಮಿತ್ರರಾಷ್ಟ್ರಗಳು ಮಾಡಿಕೊಂಡ ವರ್ಸೇಲ್ಸ್ ಒಪ್ಪಂದದ ಪ್ರಕಾರ ಫ್ರಾನ್ಸ್ ತಾನು ಕಳೆದುಕೊಂಡಿದ್ದ ಅಲ್ಸೇಲ್ಸ್ಲೊರೇನ್ ಪ್ರಾಂತ್ಯ ಪ್ರದೇಶವನ್ನು ಮರಳಿ ಪಡೆಯಿತು. ಜರ್ಮನಿಯ ಸಂಪನ್ಮೂಲಗಳನ್ನು ನಾಶಗೊಳಿಸಿ ಅದು ಘನತೆ ಗೌರವಗಳನ್ನು ಕಳೆದುಕೊಳ್ಳುವಂತೆ ಮಾಡುವ ಕಾರ್ಯದಲ್ಲಿ ಫ್ರಾನ್ಸ್ ಪ್ರಮುಖ ಪಾತ್ರ ವಹಿಸಿತ್ತು. ರಾಷ್ಟ್ರಗಳ ಕೂಟದ (ಲೀಗ್ ಆಫ್ ನೇಷನ್ಸ್) ಸ್ಥಾಪನೆಯಾದ ಅನಂತರ ಫ್ರಾನ್ಸ್ ಅದರ ಸದಸ್ಯ ರಾಷ್ಟ್ರವಾಯಿತಲ್ಲದೆ, ಅದರ ಸಮಿತಿಯ ಖಾಯಮ್ ಸದಸ್ಯತ್ವವನ್ನೂ ಪಡೆಯಿತು. ಒಂದನೆಯ ಮಹಾಯುದ್ಧದಲ್ಲಿ ಜಯ ಪಡೆದಿದ್ದರೂ ಫ್ರಾನ್ಸ್ ಅನುಭವಿಸಿದ್ದ ಕಷ್ಟನಷ್ಟಗಳಿಂದಾಗಿ ನಿತ್ರಾಣಗೊಂಡಿತ್ತು. ಯುದ್ಧದ ಅನಂತರದ ಸಮಸ್ಯೆಗಳನ್ನು ಬಗೆಹರಿಸಿ, ರಾಷ್ಟ್ರದ ಪ್ರಗತಿ ಸಾಧಿಸಲು ಫ್ರೆಂಚ್ ಜನತೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕಾಗಿತ್ತು. ದುರದೃಷ್ಟವಶಾತ್ ರಾಷ್ಟ್ರದ ರಾಜಕೀಯ ವಲಯಗಳಲ್ಲಿಯ ದೋಷಗಳಿಂದಾಗಿ ಫ್ರೆಂಚ್ ಜನತೆ ಕಷ್ಟಕಾರ್ಪಣ್ಯಗಳನ್ನು ಅನುಭವಿಸಬೇಕಾಯಿತು. ಅನೇಕ ರಾಜಕೀಯ ಪಕ್ಷಗಳು, ಪಂಗಡಗಳು ಇದ್ದುದರಿಂದ ಯಾವ ಮಂತ್ರಿಮಂಡಲವೂ ಹೆಚ್ಚು ಕಾಲ ಉಳಿಯುವಂತಿರಲಿಲ್ಲ. ರಾಜಕೀಯ ಪಕ್ಷಗಳ ನಾಯಕರು ಪರಸ್ಪರ ಕಚ್ಚಾಡುತ್ತಿದ್ದು ಫ್ರಾನ್ಸಿನ ಪರಿಸ್ಥಿತಿ ಹದಗೆಡಲು ಕಾರಣರಾಗಿದ್ದರು. ೧೯೨೦ ರಲ್ಲಿ ಕ್ಲೇಮಾನ್ಸೋ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ. ಮುಂದಿನ ಹತ್ತುವರ್ಷಗಳಲ್ಲಿ ಅನೇಕ ಮಂತ್ರಿ ಮಂಡಲಗಳು ಅಧಿಕಾರಕ್ಕೆ ಬಂದುವು. ಈ ಹಿಂದೆ ಫ್ರಾನ್ಸಿನ ಅಧ್ಯಕ್ಷನಾಗಿದ್ದ ಪ್ವಾನ್ಕ್ಯಾರೇ ೧೯೨೨ ರಲ್ಲಿ ಪ್ರಧಾನಿಯಾದ. ಜರ್ಮನಿಯ ವಿರುದ್ಧ ಗಡಸು ನೀತಿಯನ್ನು ಅನುಸರಿಸುವುದು ಇವನ ಗುರಿಯಾಗಿತ್ತು. ಇವನ ಕಾಲದಲ್ಲಿ ಫ್ರಾನ್ಸ್ರಹಿೂರ್ ಕಣಿವೆ ಪ್ರದೇಶವನ್ನು ಆಕ್ರಮೆಸಿಕೊಂಡದ್ದರಿಂದ, ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಬದಲು ಮತ್ತಷ್ಟು ಕೆಟ್ಟಿತು. ೧೯೨೬ ರಿಂದ ೧೯೨೯ ರವರೆಗೆ ಮತ್ತೆ ಪ್ವಾನ್ಕ್ಯಾರೇ ಫ್ರಾನ್ಸಿನ ಪ್ರಧಾನಿಯಾಗಿದ್ದ. ೧೯೨೫ ರ ಏಪ್ರಿಲ್ ನಿಂದ ೧೯೩೨ ರ ಜನವರಿ ವರೆಗೆ ಫ್ರಾನ್ಸಿಗೆ ವಿದೇಶಾಂಗ ಮಂತ್ರಿಯಾಗಿದ್ದ ಆರಿಸ್ಟೀಡ್ ಬ್ರೀಯಾನ್ ಅನುಸರಿಸಿದ ಎಚ್ಚರಿಕೆಯ ನೀತಿಯಿಂದ ಫ್ರಾನ್ಸಿಗೆ ಹೆಚ್ಚು ಲಾಭವಾಯಿತು. ಅವನ ಸೇಡಿನ ಮನೋಭಾವವನ್ನು ಬಿಟ್ಟು ಜರ್ಮನಿಯೊಡನೆ ಸ್ನೇಹಭಾವದಿಂದಿರಲು ನಿರ್ಧರಿಸಿದ. ಬ್ರೀಯಾನ್ ವಿದೇಶಾಂಗ ಮಂತ್ರಿಯಾಗಿದ್ದ ಕಾಲದಲ್ಲಿ ಅನೇಕ ರಾಷ್ಟ್ರಗಳೊಡನೆ ಒಪ್ಪಂದ ಮಾಡಿಕೊಂಡು ಅಂತರರಾಷ್ಟ್ರೀಯ ಕ್ಷೇತ್ರದಲ್ಲಿ ಫ್ರಾನ್ಸ್ ಸ್ಥಾನಮಾನಗಳನ್ನು ಉತ್ತಮಪಡಿಸಿಕೊಂಡಿತು. ೧೯೨೦ ರಲ್ಲಿ ಬೆಲ್ಜಿಯಂನೊಡನೆ, ೧೯೨೧ ರಲ್ಲಿ ಪೋಲೆಂಡಿನೊಡನೆ, ೧೯೨೬ರಲ್ಲಿ ಜೆಕೊಸ್ಲವಾಕಿಯ, ಮತ್ತು ರುಮೇನಿಯಗಳೊಡನೆ, ೧೯೨೭ ರಲ್ಲಿ ಯೂಗೊಸ್ಲಾವಿಯದೊಂದಿಗೆ ರಾಜತಾಂತ್ರಿಕ ಒಪ್ಪಂದಗಳನ್ನು ಮಾಡಿಕೊಂಡಿತು. ಆದರೆ ೧೯೨೫ ರಲ್ಲಿ ಫ್ರಾನ್ಸ್, ಬ್ರಿಟನ್, ಬೆಲ್ಜಿಯಮ್, ಇಟಲಿ ಮತ್ತು ಜರ್ಮನಿಗಳಿಗೆ ಆದ ಲೊಕಾರ್ನೋ ಒಪ್ಪಂದ ಅತ್ಯಂತ ಮುಖ್ಯವಾದ್ದು. ಅನಾರೋಗ್ಯದ ನಿಮಿತ್ತ ೧೯೨೯ ರಲ್ಲಿ ಪ್ರಧಾನಿ ಪ್ವಾನ್ ಕ್ಯಾರೇ ಪ್ರಧಾನಿ ಪದವಿಯನ್ನು ಬಿಡಬೇಕಾಯಿತು. ಅವನ ಅಂತರ ಬಂದ ಪ್ರಧಾನಿಗಳಲ್ಲಿ ಪ್ಯೇರ್ಲ್ಯಾವ್ಯಾಲ್ ಪ್ರಮುಖ. ೧೯೨೯ ರಿಂದ ೧೯೩೨ ರವರೆಗೆ ಪ್ರಪಂಚಾದ್ಯಂತ ಸಂಭವಿಸಿದ ಆರ್ಥಿಕ ಬಿಕ್ಕಟ್ಟಿನಿಂದಾಗಿ ಫ್ರಾನ್ಸಿನಲ್ಲೂ ಕೆಟ್ಟಪರಿಣಾಮಗಳಾದುವು. ನಿರುದ್ಯೋಗ ಸಮಸ್ಯೆ, ಏರುತ್ತಿದ್ದ ಬೆಲೆಗಳು, ಭ್ರಷ್ಟಾಚಾರ, ಲಂಚಗುಳಿತನ, ಫ್ರಾಂಕ್ ನಾಣ್ಯದ ಮೌಲ್ಯದ ಕುಸಿತ ಇವುಗಳಿಂದಾಗಿ ರಾಷ್ಟ್ರದಲ್ಲಿ ನಿರಾಶಾದಾಯಕ ಪರಿಸ್ಥಿತಿ ತಲೆದೋರಿತು. ಪ್ರಧಾನಿ ಲ್ಯಾವ್ಯಾಲ್ ಫ್ರಾನ್ಸಿನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸಿದ. ಆದರೆ ಮಂತ್ರಿಮಂಡಲಗಳ ಅಸ್ಥಿರತೆಯಿಂದಾಗಿ ಫ್ರಾನ್ಸ್ ಸಂದಿಗ್ಧ ಪರಿಸ್ಥಿತಿಯಲ್ಲಿತ್ತು. ಈ ಮಧ್ಯೆ ೧೯೩೩ ರಲ್ಲಿ ಜರ್ಮನಿಯ ಸರ್ವಧಿಕಾರಿಯಾದ ಆಡಾಲ್ಛ್ ಹಿಟ್ಲರನ ಅಕ್ರಮಣಕಾರಿ ಮತ್ತು ವಿಸ್ತರಣ ನೀತಿಯಿಂದ ಯುರೋಪಿನ ಸಮಸ್ಯೆಗಳು ತೀವ್ರವಾದುವು. ಅವನು ವರ್ಸೇಲ್ಸ್ ಲೊಕಾರ್ನೋ ಒಪ್ಪಂದಗಳನ್ನು ಕಡೆಗಣಿಸಿ, ೧೯೩೬ರಲ್ಲಿ ನಿಸ್ಸೇನಿಕೃತ ವಲಯವಾಗಿದ್ದ, ರೈನ್ ಪ್ರದೇಶಗಳತ್ತ ಸೇನೆಗಳನ್ನು ಕಳುಹಿಸಿದ್ದರಿಂದ ಫ್ರಾನ್ಸಿಗೆ ಹೆಚ್ಚು ಕಳವಳ ಉಂಟಾಯಿತು. ಫ್ರಾನ್ಸ್ ಇಂಥ ವಿಷಮ ಸ್ಥಿತಿಯಲ್ಲಿದ್ದಾಗ, ಸಮಾಜವಾದ ನಾಯಕ ಲೇಯಾನ್ ಬ್ಲೂಮ್ ೧೯೩೬ ರಲ್ಲಿ ಸಂಮ್ಮಿಶ್ರ ಸರ್ಕಾರ ರಚಿಸಿದ. ಆದರೆ ಇವನ ಸರ್ಕಾರ ೧೯೩೭ ರಲ್ಲಿ ಪತನಹೊಂದಿತು. ೧೯೩೮ ರ ಏಪ್ರಿಲ್ನಲ್ಲಿ ಡ್ಯಾಲ್ಯಾಡ್ಯೇ ತೀವ್ರಗಾಮಿ ಮಂತ್ರಿಮಂಡಲ ರಚಿಸಿ ೧೯೪೦ ರ ಮಾರ್ಚ್ವರೆಗೂ ಪ್ರಧಾನಿಯಾಗಿದ್ದ. ಇವನು ದೇಶದಲ್ಲಿ ನಡೆಯುತ್ತಿದ್ದ ಚಳುವಳಿಗಳನ್ನು ನಿಲ್ಲಿಸಿ, ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸಿ, ಆಯವ್ಯಯವನ್ನು ಸರಿದೂಗಿಸಿ, ರಾಷ್ಟ್ರದ ಆರ್ಥಿಕ ವ್ಯವಸ್ಥೆಯ ಬಗ್ಗೆ ಜನತೆಯಲ್ಲಿ ವಿಶ್ವಾಸ ಮೂಡಿಸಿದ. ಬ್ರಿಟನ್ನಿನ ಪ್ರಧಾನಿ ನೆವಿಲ್ ಚೇಂಬರ್ಲಿನ್ನ ನೊಡನೆ ಸಹಕರಿಸಿ ಪ್ರಸಿದ್ಧ ಮ್ಯೂನಿಕ್ ಸಮ್ಮೇಳನದಲ್ಲಿ ಭಾಗವಹಿಸಿದ. ಫ್ರಾನ್ಸ್ ಈ ಒಪ್ಪಂದಕ್ಕೆ ಒಪ್ಪಿಗೆ ನೀಡಿತು. ಎರಡನೆಯ ಮಹಾಯುದ್ಧ ೧೯೩೯ ರ ಸೆಪ್ಟೆಂಬರ್ ೩ ರಂದು ಬ್ರಿಟನ್ ಮತ್ತು ಫ್ರಾನ್ಸ್ಗಳು ಜರ್ಮನಿಯ ವಿರುದ್ಧ ಯುದ್ಧ ಘೋಷಿಸಿದ ಅನಂತರ ಡ್ಯಾಲ್ಯಾಡ್ಯೇ ಫ್ರೆಂಚ್ ಜನತೆಯಲ್ಲಿ ವಿಶ್ವಾಸ ಮೂಡಿಸಲು ಪ್ರಯತ್ನಿಸಿ ವಿಫಲನಾದ. ೧೯೪೦ ರಲ್ಲಿ ಅವನು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ. ಪಾಲ್ ರೇನೋ ಪ್ರಧಾನಿಯಾದ, ಜರ್ಮನ್ ಪಡೆಗಳು ೧೯೪೦ ರ ಜೂನ್ನಲ್ಲಿ ಪ್ಯಾರಿಸ್ ನಗರವನ್ನು ವಶಪಡಿಸಿಕೊಂಡವು. ರೇನೋ ಸರ್ಕಾರ ಉರುಳಿತು. ಫ್ರಾನ್ಸಿನ ಬಹುಭಾಗ ಜರ್ಮನಿಯ ನಾಟ್ಸಿಗಳ ವಶದಲ್ಲಿತ್ತು. ರೇನೋನ ಅನಂತರ ಪ್ರಧಾನಿಯಾದ ಮಾರ್ಷಲ್ ಪೇಟ್ಯಾನ್ ೧೯೪೦ ರ ಜೂನ್ ೨೨ ರಂದು ನಾಟ್ಸಿ ಜರ್ಮನಿಯೊಂದಿಗೆ ಯುದ್ಧವಿರಾಮ ಒಪ್ಪಂದ ಮಾಡಿಕೊಂಡು, ವಿಷಯಲ್ಲಿ ಸರಕಾರ ಸ್ಥಾಪಿಸಿ ಫ್ರಾನ್ಸಿನ ಸ್ವಲ್ಪ ಭಾಗಕ್ಕೆ ಪ್ರಧಾನಿಯಾಗಿ ಮುಂದುವರಿದ. ಇದಕ್ಕೆ ಮುಂಚೆಯೇ ಜನರಲ್ ಡಿ ಗಾಲ್ ಇಂಗ್ಲೆಂಡಿನಲ್ಲಿ ಫ್ರೆಂಚ್ ವಿಮೋಚನಾ ಚಳುವಳಿಯನ್ನು ಆರಂಭಿಸಿದ. ೧೯೪೪ ರ ಆಗಸ್ಟ್ನಲ್ಲಿ ಮಿತ್ರ ರಾಷ್ಟ್ರಗಳು ಪ್ಯಾರಿಸ್ ನಗರವನ್ನು ಶತ್ರುಸೇನೆಗಳಿಂದ ವಿಮೋಚನೆಗೊಳಿಸಿದುವು. ಫ್ರಾನ್ಸಿನಲ್ಲಿ ಜನರಲ್ ಡಿ ಗಾಲನ ನಾಯಕತ್ವದಲ್ಲಿ ತಾತ್ಕಾಲಿಕ ಸರ್ಕಾರದ (೧೯೪೪೧೯೪೬) ರಚನೆಯಾಯಿತು. ಅಧ್ಯಕ್ಷ ಡಿ ಗಾಲ್ ಅನೇಕ ಸುಧಾರಣೆಗಳನ್ನು ಜಾರಿಗೆ ತಂದು ರಾಷ್ಟ್ರದ ಪ್ರಗತಿ ಮತ್ತು ರಾಜಕೀಯ ಏಕತೆಯನ್ನು ಸಾಧಿಸಲು ಪ್ರಯತ್ನಿಸಿದನಾದರೂ, ವಿವಿಧ ರಾಜಕೀಯ ಪಕ್ಷಗಳ ಅಸಹಾಯಕ ನೀತಿಯಿಂದಾಗಿ ಅದು ಸಾಧ್ಯವಾಗಲಿಲ್ಲ. ೧೯೪೬ ಜನವರಿಯಲ್ಲಿ ಡಿ ಗಲ್ ರಾಜೀನಾಮೆ ನೀಡಬೇಕಾಯಿತು. ೧೯೪೬ ರ ಅಕ್ಟೋಬರ್ನಲ್ಲಿ ನಾಲ್ಕನೆಯ ಗಣರಾಜ್ಯ ಅಸ್ತಿತ್ವಕ್ಕೆ ಬಂತು. ೧೯೪೬ ರಿಂದ ೧೯೫೧ ರ ವರೆಗೆ ಇದು ಅನೇಕ ಜಟಿಲ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಈ ಅವಧಿಯಲ್ಲಿ ಅಧಿಕಾರಕ್ಕೆ ಬಂದ ಸಂಮಿಶ್ರ ಸರ್ಕಾರಗಳು ಅಸಮರ್ಥವೆನಿಸಿಕೊಂಡುವು. ಅಸ್ತವ್ಯಸ್ತಗೊಂಡಿದ್ದ ಆರ್ಥಿಕ ಪರಿಸ್ಥಿತಿ, ಹಣದುಬ್ಬರ, ಕಾರ್ಮಿಕರ ಸಮಸ್ಯೆಗಳು ಇವು ನಾಲ್ಕನೆಯ ಗಣರಾಜ್ಯ ಸರ್ಕಾರಕ್ಕೆ ಸವಾಲೆನಿಸಿದವು. ೧೯೪೮ ರಲ್ಲಿ ಮಾರ್ಷಲ್ ಯೋಜನೆಯಂತೆ ಅಮೆರಿಕ ನೀಡಿದ ಸಹಾಯ ದ್ರ್ರವ್ಯದಿಂದಾಗಿ ಸ್ವಲ್ಪಮಟ್ಟಿಗೆ ಫ್ರಾನ್ಸಿನ ವಿರುದ್ಧ ನಡೆದ ಸ್ವಾತಂತ್ರ್ಯ ಹೋರಾಟದಿಂದ ರಾಷ್ಟ್ರದ ಆರ್ಥಿಕ ಮತ್ತು ನೈತಿಕ ಸ್ಥೈರ್ಯ ಅಲುಗಿತು.. ೧೯೫೪ ರ ಜಿನೀವ ಒಪ್ಪಂದದಂತೆ ಉತ್ತರ ವಿಯೆಟ್ನಾಮಿನಲ್ಲಿ ಕಮ್ಯೂನಿಸ್ಟ್ ನಾಯಕ ಹೋ ಚೀಮಿನ್ ಹೊಸ ಸರ್ಕಾರ ರಚಿಸಿದ. ದಕ್ಷಿಣ ವಿಯಿಟ್ನಾಮಿನಲ್ಲಿ ಕಮ್ಯೂನಿಸ್ಟೇತರ ರಾಷ್ಟ್ರೀಯ ಸರ್ಕಾರ ಅಧಿಕಾರಕ್ಕೆ ಬಂತು. ಮೊರಾಕೊ, ಟ್ಯುನೀಷಿಯ, ಆಲ್ಜೀರಿಯಗಳಲ್ಲೂ ಫ್ರಾನ್ಸಿನ ವಿರುದ್ಧವಾಗಿ ಸ್ವಾತಂತ್ರ್ಯ ಹೋರಾಟಗಳು ಆರಂಭವಾದುವು. ಇಂಥ ಸಂಧಿಗ್ಧ ಪರಿಸ್ಥಿತಿಯಲ್ಲಿ ರಾಷ್ಟ್ರದ ಅನೇಕ ರಾಜಕೀಯ ನಾಯಕರು, ಜನರಲ್ ಡಿ ಗಾಲನನ್ನು ಅಧಿಕಾರ ವಹಿಸಿಕೊಳ್ಳುವಂತೆ ಒತ್ತಾಯಿಸಿದರು. ರಾಷ್ಟ್ರ ರಕ್ಷಣೆಯ ದೃಷ್ಟಿಯಿಂದ ಮತ್ತೆ ಜನರಲ್ ಡಿ ಗಾಲ್ ೧೯೫೮ ರಲ್ಲಿ ಅಧಿಕಾರ ವಹಿಸಿಕೊಂಡ. ಕಮ್ಯೂನಿಸ್ಟರನ್ನುಳಿದು ಇತರ ರಾಜಕೀಯ ಪಕ್ಷಗಳ ಸಂಮಿಶ್ರ ಮಂತ್ರಿಮಂಡಲ ರಚನೆಯಾಯಿತು. ೧೯೫೮ ರ ಸೆಪ್ಟೆಂಬರ್ನಲ್ಲಿ ಐದನೆಯ ಗಣರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂತು. ೧೯೫೯ ಜನವರಿಯಲ್ಲಿ ಜನರಲ್ ಡಿ ಗಾಲ್ ಏಳು ವರ್ಷಗಳ ಅವಧಿಗೆ, ಐದನೆಯ ಗಣರಾಜ್ಯ ಸರ್ಕಾರದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ. ವೈಭವ ಮತ್ತು ಕೀರ್ತಿಯ ನೀತಿಯನ್ನು ಅನುಸರಿಸಲು ಡಿ ಗಾಲ್ ನಿರ್ಧರಿಸಿದ. ಆಡಳಿತ ವ್ಯವಸ್ಥೆಯನ್ನು ಸುಧಾರಿಸಿ, ರಾಷ್ಟ್ರಕ್ಕೆ ದೃಢತೆ, ಪ್ರಗತಿ ಮತ್ತು ಸುಧಾರಣೆಗಳ ಹೊಸ ಯುಗವೊಂದನ್ನು ನೀಡಲು ನಿರ್ಧರಿಸಿದ. ಆಲ್ಜೀರಿಯನ್ನರ ರಾಷ್ಟ್ರೀಯ ಭಾವನೆಗಳನ್ನು ಗೌರವಿಸಿ, ೧೯೫೯ ರಲ್ಲಿ ಆಲ್ಜೀರಿಯನ್ನರಿಗೆ ಸ್ವಯಂ ನಿರ್ಣಯದ ಹಕ್ಕುಂಟೆಂದು ಘೋಷಿಸಿದ. ಆಲ್ಜೀರಿಯದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಡಿ ಗಾಲ್ ತಾಳಿದ ನಿಲುವಿಗೆ ಯುರೋಪಿಯನ್ನರು ಉಗ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರೂ ದೃಢನಿರ್ಧಾರದಿಂದ ೧೯೬೨ ರ ಜುಲೈನಲ್ಲಿ ಫ್ರಾನ್ಸ್ ಆಲ್ಜೀರಿಯಕ್ಕೆ ಸ್ವಾತಂತ್ರ್ಯ ನೀಡಿತು. ೧೯೬೨ ರಲ್ಲಿ ರಾಷ್ಟ್ರೀಯ ಸಭೆಗೆ ನಡೆದ ಚುನಾವಣೆಯಲ್ಲಿ ಡಿ ಗಾಲ್ ಪಕ್ಷಕ್ಕೆ ಜಯ ಲಭಿಸಿತು. ಆಂತರಿಕ ರಾಜಕೀಯ ಸಂಸ್ಥೆಗಳನ್ನು ಬಲಪಡಿಸಿ, ಆರ್ಥಿಕ ದೃಢತೆಯನ್ನು ಸಾಧಿಸಿ, ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಫ್ರಾನ್ಸಿನ ಪ್ರಮುಖ ಸ್ಥಾನ ದೊರಕಿಸಿಕೊಡುವುದು ಡಿ ಗಾಲ್ ಯೋಜನೆಯಾಗಿತ್ತು. ಐರೋಪ್ಯ ಸಾಮಾನ್ಯ ಮಾರುಕಟ್ಟೆಯನ್ನು ಸೇರಿದ್ದರಿಂದ ಫ್ರಾನ್ಸಿನ ಹೆಚ್ಚು ಲಾಭವಾಯಿತು. ಆದರೂ ದೇಶದ ಎಲ್ಲ ವರ್ಗದ ಜನತೆಯಲ್ಲಿ ಅತೃಪ್ತಿ ಅಸಮಾಧಾನ ಇದ್ದುವು. ಕಾರ್ಮಿಕರು ರೈತರು, ಸರ್ಕಾರಿ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಂಪುಟ ನಡೆಸುತ್ತಿದ್ದರು. ವಿದ್ಯಾರ್ಥಿಗಳು ಹೆಚ್ಚು ಶಿಕ್ಷಣ ಸೌಲಭ್ಯಗಳಿಗಾಗಿ ಪ್ರದರ್ಶನ ನಡೆಸುತ್ತಿದ್ದರು. ಆದರೂ ರಾಷ್ಟ್ರದ ಸಾಮಾನ್ಯ ಆರ್ಥಿಕ ಪ್ರಗತಿಗೆ ಧಕ್ಕೆ ಉಂಟಾಗಲಿಲ್ಲ. ವಿದೇಶಾಂಗ ವ್ಯವಹಾರಗಳಲ್ಲಿ ಡಿ ಗಾಲ್ ತನ್ನ ವೈಯಕ್ತಿಕ ಪ್ರಭಾವವನ್ನು ಹೆಚ್ಚು ಹೆಚ್ಚಾಗಿ ಬೀರಿದ. ರಷ್ಯ ಮತ್ತು ಅಮೆರಿಕಗಳು ಪ್ರಪಂಚದ ವ್ಯವಹಾರಗಳಲ್ಲಿ ಗಳಿಸಿದ್ದ ಪ್ರತಿಷ್ಠಿತ ಸ್ಥಾನಮಾನಗಳು ಫ್ರಾನ್ಸಿಗೂ ದೊರಕಬೇಕೆಂಬುದು ಅವನ ಬಯಕೆಯಾಗಿತ್ತು. ಉತ್ತರ ಅಟ್ಲಾಂಟಿಕ್ ಕೌಲು ಕೂಟದಲ್ಲಿ ಬ್ರಿಟನ್ ಮತ್ತು ಅಮೆರಿಕಗಳು ಹೊಂದಿದ್ದ ಅಧಿಕಾರ ಪ್ರಭಾವಗಳು ಫ್ರಾನ್ಸಿಗೂ ಇರಬೇಕೆಂಬ ಆಶಯ ವ್ಯಕ್ತಪಡಿಸಿದ. ಫ್ರಾನ್ಸ್ ಪರಮಾಣು ರಾಷ್ಟ್ರವಾಗಬೇಕೆಂದು ದೃಢನಿಲುವು ಡಿ ಗಾಲ್ದು. ೧೯೬೦ ರಲ್ಲಿ ಫ್ರಾನ್ಸ್ ಮೊಟ್ಟಮೊದಲನೆಯ ಪರಮಾಣು ಪರೀಕ್ಷೆಯನ್ನು ಸಹಾರದಲ್ಲಿ ನಡೆಸಿತು. ೧೯೬೪ ರಲ್ಲಿ ಅದು ಕಮ್ಯೂನಿಸ್ಟ್ ಚೀನಕ್ಕೆ ಮನ್ನಣೆ ನೀಡಿತಲ್ಲದೆ, ಸೋವಿಯತ್ ಒಕ್ಕೂಟ ಮತ್ತು ಪೂರ್ವ ಯುರೋಪಿಯನ್ ರಾಪ್ಟ್ರಗಳೊಡನೆ ನಿಕಟ ರಾಜತಾಂತ್ರಿಕ ಮತ್ತು ವ್ಯಾಪಾರ ಸಂಬಂಧ ಇಟ್ಟುಕೊಳ್ಳಲು ಪ್ರಯತ್ನಿಸಿತು. ಪಶ್ಚಿಮ ಜರ್ಮನಿಯೊಂದಿಗೂ ಉತ್ತಮ ಬಾಂಧವ್ಯ ಹೊಂದಿತ್ತು. ೧೯೬೫ ರ ಅಧ್ಯಕ್ಷ ಚುನಾವಣೆಯಲ್ಲಿ ಡಿ ಗಾಲ್ ಮತ್ತೆ ಜಯಗಳಿಸಿದನಾದರೂ ಆ ವೇಳೆಗಾಗಲೆ ಅವನ ಪ್ರಭಾವ ಕಡಿಮೆಯಾಗುತ್ತಿತ್ತು. ೧೯೬೭ ರಲ್ಲಿ ಪಾರ್ಲಿಮೆಂಟಿಗೆ ನಡೆದ ಚುನಾವಣೆಯಲ್ಲಿ ಡಿ ಗಾಲ್ ಪಕ್ಷ ಅತ್ಯಲ್ಪ ಬಹುಮತದಿಂದ ಗೆದ್ದಿತು. ಫ್ರಾನ್ಸಿನಿಂದ ಉತ್ತರ ಅಟ್ಲಾಂಟಿಕ್ ಕೌಲು ಕೂಟದ ಸೇನೆಗಳು ಕಾಲ್ತೆಗೆಯುವಲ್ಲಿ ಡಿ ಗಾಲ್ ವಹಿಸಿದ ಪಾತ್ರ ಪ್ರಮುಖವಾದ್ದು ಐರೋಪ್ಯ ಸಾಮಾನ್ಯ ಮಾರುಕಟ್ಟೆಯನ್ನು ಬ್ರಿಟನ್ ಪ್ರವೇಶಿಸುವುದಕ್ಕೆ ಫ್ರಾನ್ಸ್ ವಿರೋಧ ವ್ಯಕ್ತಪಡಿಸಿತು. ಅರಬ್ ಇಸ್ರೇಲಿ ಹೋರಾಟದಲ್ಲಿ ಅರಬರಿಗೆ ಫ್ರಾನ್ಸ್ ಬಂಬಲ ವ್ಯಕ್ತಪಡಿಸಿತು. ಕ್ರಮೇಣ ಫ್ರಾನ್ಸ್ ಪ್ರಗತಿಯ ಹಾದಿ ಹಿಡಿಯಿತಲ್ಲದೆ ಪ್ಯಾರಿಸ್ನಗರ ವಿಯೆಟ್ನಾಮಿನ ಶಾಂತಿ ಸಂಧಾನದ ಕೇಂದ್ರವಾಯಿತು. ೧೯೬೮ ರಲ್ಲಿ ಡಿ ಗಾಲನ್ ಸರ್ವಾಧಿಕಾರಿ ಪ್ರವೃತ್ತಿಯ ಆಡಳಿತ ವಿರುದ್ಧ ಫ್ರಾನ್ಸಿನಲ್ಲಿ ವ್ಯಾಪಕ ಪ್ರದರ್ಶನಗಳು ನಡೆದವು. ಉತ್ತಮ ಶಿಕ್ಷಣ ಸೌಲಭ್ಯಗಳಿಗಾಗಿ ಪ್ಯಾರಿಸ್ ವಿಶ್ವವಿದ್ಯಾಲಯದ ಸಹಸ್ರಾರು ವಿದ್ಯಾರ್ಥಿಗಳು ಬೃಹತ್ ಪ್ರದರ್ಶನ ನಡೆಸಿದರು. ಹೆಚ್ಚು ವೇತನ, ಕಡಿಮೆ ಅವಧಿಯ ಕೆಲಸ, ಕೈಗಾರಿಕೆಗಳ ಆಡಳಿತ ಮಂಡಲಿಗಳಲ್ಲಿ ಪ್ರಾತಿನಿಧ್ಯಕ್ಕಾಗಿ ಕಾರ್ಮಿಕರು ಪ್ರದರ್ಶನ ನಡೆಸಿದರು. ಮುಷ್ಕರಗಳಿಂದಾಗಿ ರಾಷ್ಟ್ರದ ಆರ್ಥಿಕ ವ್ಯವಸ್ಥೆ ಕುಸಿಯತೊಡಗಿತು. ಡಿ ಗಾಲ್ ದೃಢ ನಿರ್ಧಾರದಿಂದ ಪರಿಸ್ಥಿತಿಯನ್ನು ಎದುರಿಸಿ, ಮಧ್ಯಮ ವರ್ಗದ ಬೆಂಬಲದಿಂದ ತನ್ನ ಸ್ಥಾನಮಾನವನ್ನು ಭದ್ರಪಡಿಸಿಕೊಂಡ. ಡಿ ಗಾಲ್ ಸರ್ಕಾರದ ದಿಟ್ಟತನದ ಸ್ವತಂತ್ರ ನೀತಿ ಮುಂದುವರಿಯಿತು. ಪ್ರಾಥಮಿಕ ಮತ್ತು ವಿಶ್ವವಿದ್ಯಾಲಯ ಶಿಕ್ಷಣ ಅತ್ಯಾಧುನಿಕಗೊಂಡಿತು. ಜಲಜನಕ ಬಾಂಬಿನ ಪ್ರಯೋಗ ಪರೀಕ್ಷೆ ನಡೆಯಿತು. ಆದರೆ ಸಂವಿಧಾನದಲ್ಲಿ ಸುಧಾರಣೆಗಳ ಬಗ್ಗೆ ದೇಶದಲ್ಲಿ ನಡೆಸಲಾದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಡಿ ಗಾಲ್ಗೆ ಸೋಲಾಯಿತು. ಆದ್ದರಿಂದ ೧೯೬೮ ಏಪ್ರಿಲ್ನಲ್ಲಿ ಡಿ ಗಾಲ್ ರಾಜೀನಾಮೆ ನೀಡಿ ರಾಜಕೀಯದಿಂದ ನಿವೃತ್ತಿ ಹೊಂದಿದ. ಹಿಂದೆ ಫ್ರಾನ್ಸಿನ ಪ್ರಧಾನಿಯಾಗಿದ್ದ ಪಾಂಪೆಡೂ ೧೯೬೯ ರ ಜೂನ್ನಲ್ಲಿ ಅಧ್ಯಕ್ಷನಾಗಿ ಅಧಿಕಾರಕ್ಕೆ ಬಂದ. ಡಿ ಎಸ್ಟೇಂಗ್ ಫ್ರಾನ್ಸಿನ ಅಧ್ಯಕ್ಷ. ೧೯೯೫ ರಲ್ಲಿ ಜಾಕ್ಯೂಸ್ ಚಿರಾಕ್ ಅಧ್ಯಕ್ಷರಾದರು. ಶಿಕ್ಷಣ ಪದ್ಧತಿ ಆಧುನಿಕ ವಿಜ್ಞಾನ ರಂಗದಲ್ಲಿ ಯೂರೋಪ್ ಖಂಡ ಮುಂಚೂಣಿಯಲ್ಲಿರುವಂತೆ ಮಾಡಿದ ಮಹಾಕ್ರಾಂತಿಗಳಿಗೆ ಅಂಕುರಾರ್ಪಣವೆಸಗಿದ ಫ್ರಾನ್ಸ್, ಮೊದಲಿಂದಲೂ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯವಿತ್ತಿದೆ. ಅಲ್ಲಿಯ ೫ ಕೋಟಿ ಜನಸಂಖ್ಯೆಯಲ್ಲಿ ಸುಮಾರು ಒಂದೂಕಾಲು ಕೋಟಿಯಷ್ಟು ವಿದ್ಯಾರ್ಥಿಗಳೆ ಆಗಿದ್ದಾರೆ. ನೆಪೋಲಿಯನ್ನನ ಕಾಲದಿಂದಲೂ ಶಿಕ್ಷಣದಿಂದ ಮಕ್ಕಳು ತಮ್ಮ ವ್ಯಕ್ತಿತ್ವವನ್ನೂ ಆತ್ಮಶಕ್ತಿಯನ್ನೂ ಬೆಳೆಸಿಕೊಂಡು ರಾಷ್ಟ್ರೀಯ ಐಕ್ಯದ ಮನೋಭಾವವನ್ನು ರೂಢಿಸಿಕೊಂಡು ಬಂದಿದ್ದಾರೆ. ಹದಿನೆಂಟನೆಯ ಶತಮಾನದ ಫ್ರೆಂಚ್ ತತ್ತ್ವಚಿಂತಕರು ಎತ್ತಿ ಹಿಡಿದ ರಾಷ್ಟ್ರೀಯ ಮೌಲ್ಯಗಳನ್ನು ಉಳಿಸಿಕೊಳ್ಳಬೇಕೆಂಬ ಆಕಾಂಕ್ಷ ಅಲ್ಲಿನವರಲ್ಲಿ ಬಲವಾಗಿ ಬೇರೂರಿದೆ. ಹಿಂದಿನಿಂದಲೂ ಸಂಸ್ಕೃತಿ ಸಾಹಿತ್ಯಗಳ ಸಂವರ್ಧನಕ್ಕೆ ಪ್ರಾಧಾನ್ಯವಿತ್ತಿದ್ದ ಫ್ರೆಂಚ್ ಶಿಕ್ಷಣಕ್ಷೇತ್ರ ಎರಡನೆಯ ಮಹಾಯುದ್ಧದ ಅನಂತರ ಹೊಸ ಆಯಾಮವನ್ನು ರೂಢಿಸಿಕೊಂಡಿತು. ರಾಷ್ಟ್ರದ ಆರ್ಥಿಕಾಭಿವೃದ್ಧಿಗೂ ರಕ್ಷಣಾ ಕಾರ್ಯಕ್ಕೂ ನೆರವಾಗಬಲ್ಲ ತಾಂತ್ರಿಕ ಜನಬಲವನ್ನು ರೂಢಿಸುವ ಕಾರ್ಯ ಶಿಕ್ಷಣದ ಪಾಲಿಗೆ ಬಂತು. ಅಂತೆಯೆ ಸ್ವತಂತ್ರವಾಗಿ ಆಲೋಚಿಸಿ ಜ್ಞಾನವಿಜ್ಞಾನಗಳ ಪ್ರಗತಿಗೆ ನೆರವಾಗುವ ಹಾಗೂ ಕಲ್ಟನಾ ಪ್ರಜ್ಞೆಯನ್ನು ಹೊಂದಿರುವ ಜನತೆಯ ಮೂಲಕ ಪ್ರಪಂಚದ ಕಲ್ಯಾಣಕ್ಕೆ ಸಹಾಯವಾಗತಕ್ಕ ಯುವಜನರ ನಿರ್ಮಾಣವೂ ಅದರ ಪಾಲಿಗೆ ಬಂತು. ಫ್ರಾನ್ಸಿನ ಶಿಕ್ಷಣದ ಇತಿಹಾಸ ಐರೋಪ್ಯ ಜನಾಂಗದ ಧರ್ಮ ಸಂಸ್ಕೃತಿ ನಾಗರಿಕತೆಗಳ ಇತಿಹಾಸದೊಡನೆ ಬೆಳೆದು ಬಂದಿದೆ. ಮಹಾಕ್ರಾಂತಿಯವರೆಗೂ ಅಲ್ಲಿನ ಶಿಕ್ಷಣ ಚರ್ಚಿನ ನೇತೃತ್ವದಲ್ಲಿತ್ತು. ಶಾಲೆಗಳಲ್ಲಿ ಜೇಸೂಯಿಟ್ ಪಾದ್ರಿಗಳು ಅಧ್ಯಾಪಕರಾಗಿದ್ದುಕೊಂಡು ಕ್ರೈಸ್ತ ಧರ್ಮದಲ್ಲಿ ಅನೂಚಾನವಾಗಿ ಬಂದ ಸಿದ್ಧಾಂತಗಳನ್ನು ಕಟ್ಟುನಿಟ್ಟಾದ ಶಿಸ್ತಿನ ಸನ್ನಿವೇಶದಲ್ಲಿ ಕಟುಬಲುಮೆಯಿಂದ ಮಕ್ಕಳ ಮನಸ್ಸಿಗೆ ತುರುಕುತ್ತಿದ್ದರು. ೧೮ ನೆಯ ಶತಮಾನದ ಫ್ರೆಂಚ್ ತತ್ತ್ವಜ್ಞಾನಿಗಳು ಶಿಕ್ಷಣ ಕಾರ್ಯಕ್ಕೆ ನೂತನ ಆಯಾಮವನ್ನು ಒದಗಿಸಿದರು. ಶಿಕ್ಷಣ ಸ್ವತಂತ್ರವಾಗಿ, ಕಾರ್ಯಕಾರಣ ದೃಷ್ಟಿಯಲ್ಲಿ ಚಿಂತನೆ ನಡೆಸುವ ಸ್ವಾತಂತ್ರ್ಯವನ್ನು ದೊರಕಿಸಬೇಕೆಂಬುದೇ ಆ ಹೊಸ ಆಯಾಮ. ಶಿಕ್ಷಣವೇತ್ತರು ಪ್ರತಿಯೊಬ್ಬನಿಗೂ ಶಿಕ್ಷಣ ಸೌಲಭ್ಯವೊದಗಿಸಬೇಕಾಗಿ ಒತ್ತಾಯ ಹಾಕಿದರು. ೧೮೩೦ ರಲ್ಲಿ ರಾಷ್ಟ್ರೀಯ ಸರ್ಕಾರದ ಪ್ರತಿಜಿಲ್ಲೆಯಲ್ಲೂ ಸರ್ಕಾರಿ ಶಾಲೆಗಳನ್ನು ಸ್ಥಾಪಿಸಿ ಕಟ್ಟಡ ಉಪಕರಣ ಮುಂತಾದವನ್ನು ಒದಗಿಸುವ ಕಡೆ ಗಮನ ಕೊಟ್ಟಿತು. ಅಧ್ಯಾಪಕರ ಸಂಬಳ ಸಾರಿಗೆಗಳನ್ನು ಗೊತ್ತುಮಾಡಿ ಅವರ ತರಬೇತಿಗಾಗಿ ಪ್ರತಿಜಿಲ್ಲೆಯಲ್ಲೂ ನಾರ್ಮಲ್ ಸ್ಕೂಲುಗಳ ಸ್ಥಾಪನೆಗೆ ಅಗತ್ಯವಾದದ್ದನ್ನೆಲ್ಲ ಮಾಡುತ್ತ ಬಂತು. ಆದರೆ ಸರ್ಕಾರ ಶಿಕ್ಷಣದ ಹೊಣೆಯನ್ನು ಹೊರಲು ಮುಂದೆ ಬಂದುದಕ್ಕೆ ಕ್ಯಾತೊಲಿಕ್ ಪಂಥದ ಪಾದ್ರಿಗಳು ತೀವ್ರವಾಗಿ ಪ್ರತಿಭಟಿಸ ಹತ್ತಿದರು. ಇಡೀ ಹತ್ತೊಂಬತ್ತನೆಯ ಶತಮಾನವೆಲ್ಲ ಈ ತಿಕ್ಕಾಟದಲ್ಲೇ ಕಳೆಯಿತು. ಕಡೆಗೆ ಆ ಶತಮಾನದ ಕೊನೆಯಲ್ಲಿ ಎಂದರೆ ೧೮೮೦ ರ ಸುಮಾರಿಗೆ ಆಗ ಶಿಕ್ಷಣ ಸಚಿವರಾಗಿದ್ದ ಜೂಲಿಷ್ಫೆರಿ ಧೈರ್ಯದಿಂದ ಟೀಕೆಗಳನ್ನು ಎದುರಿಸಿ ದೇಶದ ಎಲ್ಲ ಕಡೆಯೂ ಸರ್ಕಾರದ ಶಾಲೆಗಳನ್ನು ಆರಂಭಿಸಿ ರಾಷ್ಟ್ರೀಯ ಶಿಕ್ಷಣಕ್ಕೆ ತಳಹದಿ ಹಾಕಿದರು. ಶಾಲೆಗಳಲ್ಲಿ ಧಾರ್ಮಿಕ ಪಂಥ ಪಂಗಡಗಳ ಶಿಕ್ಷಣವನ್ನು ತೆಗೆದುಹಾಕಿ ಪ್ರಾಥಮಿಕ ಶಾಲೆಯಲ್ಲಿ ಶುಲ್ಕ ವಿನಾಯಿತಿ ನೀಡಿದರು. ಅನಂತರ ಅದರಿಂದ ಹದಿಮೂರು ವರ್ಷದ ಮಕ್ಕಳಿಗೆಲ್ಲ ಶಿಕ್ಷಣವನ್ನು ಕಡ್ಡಾಯ ಮಾಡಲಾಯಿತು. ಶಿಕ್ಷಣದ ಮೇಲಿನ ಪೂರ್ಣ ಒಡೆತನವನ್ನು ಸರ್ಕಾರ ಸ್ಥಾಪಿಸಿಕೊಂಡರೂ ಹಿಂದಿನ ಚರ್ಚಿನ ಪಾಠಶಾಲೆಗಳ ಶ್ರೀಮಂತಿಕೆಯನ್ನು ಕೆಲವು ಶಾಲೆಗಳಲ್ಲಿ ಉಳಿಸಿಕೊಳ್ಳಲಾಯಿತು. ಅಲ್ಲಿ ಶ್ರೀಮಂತರ ಹಾಗೂ ಮಧ್ಯಮ ವರ್ಗದವರ ಮಕ್ಕಳು ಶೀಘ್ರಾಭಿವೃದ್ಧಿ ಸಾಧಿಸುವಂಥ ಸನ್ನಿವೇಶ ಪಠ್ಯಕ್ರಮಾದಿಗಳನ್ನು ಉಳಿಸಿಕೊಂಡಿತು. ಕೆಳವರ್ಗದ ಮಕ್ಕಳಿಗೆ ಬೇರೆ ರೀತಿಯ ಶಾಲೆಗಳು ರೂಪುಗೊಂಡುವು. ಸಮತಾವಾದವನ್ನು ಪ್ರತಿಪಾದಿಸುತ್ತಿದ್ದ ರಾಜಕಾರಣಿಗಳು ಈ ವ್ಯವಸ್ಥೆಯನ್ನು ಬಲವಾಗಿ ಟೀಕಿಸಿದರು. ರೂಸೋನ ತತ್ತ್ವ ದೃಷ್ಟಿಯಂತೆ ಮಕ್ಕಳು ತಮ್ಮ ಶಕ್ತಿ ಸಾಮಥ್ರ್ಯಕ್ಕೆ ಒಪ್ಪುವ ವೇಗದಲ್ಲಿ ಶಿಕ್ಷಣ ಪಡೆಯುವ ಸ್ವಾತಂತ್ರ್ಯವಿರಬೇಕೆಂದು ಶಿಕ್ಷಣವೇತ್ತರು ಪ್ರತಿಪಾದಿಸಿದರು. ಆದರೂ ಶ್ರೀಮಂತರ ಶಾಲೆಗಳು ಮುಂದುವರಿದುಕೊಂಡೇ ಬಂದುವು. ರೂಸೋಪೆಸ್ಟಲಾಟ್ಸಿ ಮುಂತಾದವರ ತತ್ತ್ವಗಳು ಅನ್ಯದೇಶಗಳಲ್ಲಿ ಹೆಚ್ಚಿನ ಪ್ರಚಾರ ಪಡೆದು ಕಾರ್ಯ ಕ್ಷೇತ್ರದಲ್ಲಿ ಅನುಷ್ಠಾನಕ್ಕೆ ಬಂದಿದ್ದುವು. ಫ್ರಾನ್ಸಿನ ಪ್ರಾಥಮಿಕ ಪೂರ್ವದ ಶಿಕ್ಷಣದಲ್ಲಿ ರೂಸೋ ಪ್ರತಿಪಾದಿಸಿದ್ದ ಸ್ವಾತಂತ್ರ್ಯ ಚಟುವಟಿಕೆ, ಸ್ವಪ್ರಕಾಶನ ಈ ಅಂಶಗಳಿಗೆ ಪ್ರಾಶಸ್ತ್ಯ ಬಂದಿತು. ಫ್ರಾನ್ಸಿನಲ್ಲಿ ೨ ರಿಂದ ೪ ವರ್ಷದ ಮಕ್ಕಳಲ್ಲಿ ಸುಮಾರು ೮೨% ರಷ್ಟು ಮಂದಿ ಶಿಶುವಿಹಾರಗಳಲ್ಲಿದ್ದಾರೆ. ಈ ಶಿಶುವಿಹಾರಗಳು ಮುಖ್ಯವಾಗಿ ನಗರಗಳಲ್ಲಿವೆ. ಗ್ರಾಮಾಂತರ ಪ್ರದೇಶದಲ್ಲಿ ತಾಯಂದಿರೂ ಸಾಮಾನ್ಯವಾಗಿ ಮನೆಯಲ್ಲಿ ಇರುವುದರಿಂದ ಅಲ್ಲಿ ಅವು ಅಷ್ಟಾಗಿ ಆರಂಭವಾಗಿಲ್ಲ. ಪಟ್ಟಣಗಳಲ್ಲಿ ತಾಯಂದಿರೂ ಕೆಲಸಕ್ಕೆ ಸೇರುವುದರಿಂದ ಅವುಗಳ ಆವಶ್ಯಕತೆ ಹೆಚ್ಚಾಗಿ ಕಂಡುಬರುತ್ತದೆ. ಕೆಲವು ಕಡೆ ಅವು ದಿವಸದ ಹತ್ತು ಗಂಟೆಗಳ ಕಾಲ ತೆರೆದಿದ್ದು ಮಕ್ಕಳ ಶಿಕ್ಷಣದ ಜೊತೆಗೆ ಅವರ ಆಹಾರಾದಿ ಆವಶ್ಯಕತೆಗಳ ಕಡೆಯೂ ಗಮನ ಕೊಡುತ್ತಿವೆ. ಗ್ರಾಮಾಂತರ ಪ್ರದೇಶದ ಬಾಲಿಕಾ ಪ್ರಾಥಮಿಕ ಶಾಲೆಗಳ ಅಂಗವಾಗಿ ಕೆಲವು ಶಿಶುವಿಹಾರಗಳು ನಡೆಯುತ್ತವೆ. ಅಲ್ಲಿ ೪ ವರ್ಷದ ಮಕ್ಕಳನ್ನು ಸೇರಿಸಿಕೊಳ್ಳುವುದುಂಟು. ಇಲ್ಲೆಲ್ಲ ಉಚಿತಶಿಕ್ಷಣ ದೊರೆಯುತ್ತದೆ. ಇಂಗ್ಲೆಂಡಿನ ಮಾರ್ಗರೆಟ್ ಮ್ಯಾಕ್ಮಿಲ್ಲನ್ನರ ನರ್ಸರಿ ಶಿಕ್ಷಣ ಪದ್ಧತಿಯೊಡನೆ ಜರ್ಮನಿಯ ಫೊಬೆಲ್ಲನ ಕಿಂಡರ್ಗಾರ್ಟನ್ ಪದ್ಧತಿಯನ್ನು ಸಮನ್ವಯಗೊಳಿಸಿಕೊಂಡು ಶಿಕ್ಷಣ ವ್ಯವಸ್ಥೆಯೊಂದನ್ನು ಇಲ್ಲೆಲ್ಲ ಅನುಸರಿಸುತ್ತಿರುವರು. ಫ್ರಾನ್ಸಿನ ಪ್ರತಿ ಹಳ್ಳಿಯಲ್ಲೂ ಪ್ರಾಥಮಿಕ ಶಾಲೆಯಿದೆ. ದೇಶದಲ್ಲಿ ಒಟ್ಟು ಎಂಬತ್ತು ಸಾವಿರ ಪ್ರಾಥಮಿಕ ಶಾಲೆಗಳಿವೆ. ೬ ರಿಂದ ೧೬ ವರ್ಷದವರೆಗೆ ಶಿಕ್ಷಣವನ್ನು ಕಡ್ಡಾಯ ಮಾಡಲಾಗಿದೆ. ೧೯೬೭ ರ ತನಕ ಮಕ್ಕಳು ತಮ್ಮ ಹದಿನಾಲ್ಕನೆಯ ವಯಸ್ಸಿಗೇ ಶಾಲೆಯನ್ನು ಬಿಡುತ್ತಿದ್ದರು. ಈಚೆಗೆ ಪ್ರಾಥಮಿಕ ಶಾಲೆಗೆ ಆ ಶಾಲೆಯ ೮ ತರಗತಿಗಳ ಜೊತೆಗೆ, ೯ ಮತ್ತು ೧೦ ನೆಯ ತರಗತಿಗಳನ್ನು ಸೇರಿಸಲಾಗಿದೆ. ಉನ್ನತ ಶಿಕ್ಷಣದಲ್ಲಿ ಅಭಿರುಚಿಯುಳ್ಳ ಪ್ರತಿಭಾವಂತ ವಿದ್ಯಾರ್ಥಿಗಳು 5ನೆಯ ತರಗತಿಯಿಂದ ಎಂದರೆ ತಮ್ಮ ೧೧ ನೆಯ ವಯಸ್ಸಿನಲ್ಲಿ ೭ ವರ್ಷದ ಲೈಸಿಯಮ್ ಎಂಬ ಪ್ರೌಢಶಾಲೆಗೆ ಸೇರುತ್ತಾರೆ. ಎರಡನೆಯ ಮಹಾಯುದ್ಧಕ್ಕೆ ಮುಂಚೆ ೧೨೧೭ ರ ವಯೋಮಾನದ ಮಕ್ಕಳಲ್ಲಿ ೧೫% ಲೈಸಿಯಮ್ಮಿಗೆ ಸೇರಲು ಅವಕಾಶವೀಯಲಾಗುತ್ತಿತ್ತು. ಈಚೆಗೆ ಅದರ ಪ್ರಮಾಣ ೨೫% ಕ್ಕೆ ಏರಿದೆ. ಇದಕ್ಕೆ ಮುಖ್ಯವಾಗಿ ಕೆಳವರ್ಗದ ಹಾಗೂ ಕಾರ್ಮಿಕರ ಮಕ್ಕಳು ಉನ್ನತ ಶಿಕ್ಷಣಕ್ಕೆ ಹೋಗುವ ಹಂಬಲ ಹೆಚ್ಚಿದ್ದೇ ಕಾರಣವೆನ್ನಬಹುದು. ಇದರ ಫಲವಾಗಿ ಲೈಸಿಯಮ್ಗಳು ಸಂಖ್ಯೆಯಲ್ಲಿ ಹೆಚ್ಚುತ್ತಿವೆ. ವಿಶ್ವವಿದ್ಯಾಲಯಕ್ಕೆ ಹೋಗತಕ್ಕವರಿಗೆ ಇದೊಂದೇ ಸಿದ್ಧತೆ ನೀಡುವ ಶಾಲೆಯಾದ್ದರಿಂದ ಇಂಗ್ಲೆಂಡಿನ ಗ್ರ್ಯಾಮ್ ಪ್ರೌಢಶಾಲೆಗಳಂತೆ ಇದಕ್ಕೆ ವಿಶೇಷ ಪ್ರತಿಷ್ಠೆಯುಂಟು. ಪ್ರೌಢಶಾಲಾ ವಯೋಮಾನದ ಮಕ್ಕಳಲ್ಲಿ ಇನ್ನುಳಿದ ೨೫% ರಷ್ಟು ಜನ ೫ ನೆಯ ತರಗತಿಯನ್ನು ಮುಗಿಸಿದ ಅನಂತರ ಲೋಯರ್ ಸೆಕೆಂಡರಿ ಶಾಲೆಗೆ ಸೇರುವರು. ಅವರು ಇಲ್ಲಿ ಕಡ್ಡಾಯ ಶಿಕ್ಷಣದ ಕಾಲದವರೆಗಿದ್ದು ಶಾಲೆಯನ್ನು ಬಿಟ್ಟು ಯಾವುದಾದರೂ ಉದ್ಯೋಗಕ್ಕೊ ಉದ್ಯೋಗ ತರಬೇತಿಶಾಲೆಗೂ ಸೇರಿಕೊಳ್ಳುವರು. ಪ್ರಾಥಮಿಕ ಶಾಲೆಯ ಅಧ್ಯಾಪಕರಾಗ ಬಯಸುವ ಕೆಲವರು ಅಪ್ಪರ್ ಸೆಕೆಂಡರಿ ತರಬೇತಿ ಶಾಲೆಗೆ ಸೇರಿಕೊಳ್ಳುವರು. ಹನ್ನೊಂದನೆಯ ವಯಸ್ಸಿನ ಅನಂತರ ಮಕ್ಕಳನ್ನು ಪ್ರೌಢಶಾಲೆಗೆ ಆರಿಸಿ ಕಳುಹಿಸುವ ವಿಷಯದಲ್ಲಿ ತೀವ್ರವಾದ ಚರ್ಚೆ ನಡೆಯುತ್ತಿದೆ. ೪೫ ನೆಯ ತರಗತಿಯ ಅನಂತರ ಲೈಸಿಯಮ್ಮಿಗೆ ಹೋಗದ ಮಕ್ಕಳು ಮುಂದೆ ದೇಶದಲ್ಲಿ ನಾಯಕ ಸ್ಥಾನಗಳಿಗೆ ಬರಲಾರದೆ ಹಿಂದುಳಿಯುವಂತಾಗುತ್ತದೆಂದು ವಾದಿಸಲಾಗುತ್ತಿದೆ. ಸಮತಾವಾದಿಗಳ ಈ ಟೀಕೆಯ ಫಲವಾಗಿ ಈಚೆಗೆ ಕಾಂಪ್ರಿಹೆನ್ಸಿವ್ ಪ್ರೌಢಶಾಲೆಗಳನ್ನು ಆರಂಭಿಸಿ ಅಲ್ಲಿ ಎಲ್ಲ ವರ್ಗದ ಮಕ್ಕಳಿಗೂ ಅವಕಾಶ ಕಲ್ಪಿಸಿದೆ ಲ್ಯಾಟಿನ್ ಅಭ್ಯಾಸ ಮಾಡಲೂ ಏರ್ಪಾಡು ಮಾಡಿದೆ. ಆದರೂ ಇದರಿಂದ ತೃಪ್ತಿಗೊಳ್ಳದ ಜನತೆ ಅಕ್ಕಪಕ್ಕದ ಶಾಲಾ ಪದ್ಧತಿಯನ್ನು (ನೈಬರ್ಹುಡ್ ಸ್ಕೂಲ್ ಸಿಸ್ಟಂ) ಆಚರಣೆಗೆ ತರಬೇಕೆಂದು ಒತ್ತಾಯ ಹಾಕುತ್ತಿದೆ. ಆದರೆ ಇದರಿಂದ ಲೈಸಿಯಮ್ಮಗಳ ಶಿಕ್ಷಣದ ಮಟ್ಟಕ್ಕೆ ಹಾನಿಯುಂಟಾಗುವುದೆಂಬ ಕಳವಳ ಶಿಕ್ಷಣವೇತ್ತರಲ್ಲಿ ತಲೆದೋರುತ್ತಿದೆ. ೧೯೬೭ ವರೆಗೂ ೧೪ ನೆಯ ವಯಸ್ಸಿನಲ್ಲಿ ಯಾವ ಉದ್ಯೋಗ ಶಿಕ್ಷಣವೂ ಇಲ್ಲದೆ ವಿದ್ಯಾರ್ಥಿಗಳು ಶಾಲೆ ಬಿಡುತ್ತಿದ್ದರು. ಈಚೆಗೆ ಉದ್ಯೋಗ ಕಲಿಯುವವರಿಗಾಗಿ ಅಲ್ಲಿ ೯ ಮತ್ತು ೧೦ ನೆಯ ತರಗತಿಗಳನ್ನು ಸೇರಿಸಿದೆ. ಅಲ್ಲಿ ಅವರಿಗೆ ಅಂತಿಮ ರೂಪದ ಉದ್ಯೋಗಪರ ಶಿಕ್ಷಣ ಕೊಡಲಾಗುವುದು. ಜೊತೆಗೆ ತಾಂತ್ರಿಕ ಪ್ರೌಢಶಾಲೆಗಳೂ ಇವೆ. ಅಲ್ಲಿ ನಲ್ಲಿ ಮತ್ತು ಸ್ಯಾನಿಟರಿ ಕೆಲಸ ಮೆಕ್ಯಾನಿಕ್ ಕೆಲಸ ಕ್ಷೌರದ ಕೆಲಸ ಹೋಟೆಲ್ ಕೆಲಸ ಬೆರಳಚ್ಚು ಧರ್ಮ ಹದ ಮಾಡುವುದು ಪಾದರಕ್ಷೆ ತಯಾರಿಕೆ ಮಾರಾಟಗಾರಿಕೆ ಮುಂತಾದವುಗಳಲ್ಲಿ ಶಿಕ್ಷಣವೀಯಲಾಗುವುದು. ಈ ಪ್ರೌಢಶಾಲೆಗಳಲ್ಲಿ ೧೦, ೧೧, ಮತ್ತು ೧೨ ನೆಯ ತರಗತಿಗಳಿರುತ್ತವೆ. ಇವುಗಳಂತೆ ಉಮೇದುವಾರಿ ಕೇಂದ್ರಗಳೆಂಬ ಕೈಗಾರಿಕಾ ಶಾಲೆಗಳೂ ಇವೆ. ಅಲ್ಲಿ ವ್ಯಾಸಂಗದ ಜೊತೆಗೆ ಕೈಗಾರಿಕೆಯಲ್ಲೂ ತರಬೇತು ನೀಡಲಾಗುವುದು. ಟೆಕ್ನಿಕಲ್ ಪ್ರೌಢಶಾಲೆಯಲ್ಲಿ ಉತ್ತಮೋತ್ತಮವಾಗಿ ತೇರ್ಗಡೆಯಾಗುವ ಕೆಲವರಿಗೆ ಉನ್ನತ ವೃತ್ತಿ ಶಿಕ್ಷಣಕ್ಕೆ ಹೋಗುವ ಅವಕಾಶವುಂಟು. ೧೯೬೦ ರಲ್ಲಿ ಪ್ರೌಢಶಾಲೆಯ ವಯೋಮಾನದ ಕೇವಲ ೧೧% ಜನ ಮಾತ್ರ ಉನ್ನತ ಶಿಕ್ಷಣಕ್ಕೆ ಹೋಗುತ್ತಿದ್ದರು. ಈಗ ಅವರ ಸಂಖ್ಯೆ ಸುಮಾರು ೨೫% ರಷ್ಟಕ್ಕೆ ಏರಿದೆ. ಲೈಸಿಯಮ್ ಮತ್ತು ಉನ್ನತ ಶಿಕ್ಷಣದ ಕಾಲೇಜುಗಳನ್ನು ಹೆಚ್ಚಾಗಿ ಸ್ಥಾಪಿಸುತ್ತಿರುವುದೆ ಇದಕ್ಕೆ ಕಾರಣ. ಆದರೆ ವಿಶ್ವವಿದ್ಯಾಲಯ ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗೆ ಸೇರಿದವರಲ್ಲಿ ಅನುತ್ತೀರ್ಣರಾಗುವವರ ಸಂಖ್ಯೆ ಹೆಚ್ಚುತ್ತ ಬಂದಿದೆ. ೧೦೦ ಕ್ಕೂ ಕೇವಲ ೪೦ ಮಂದಿ ಮಾತ್ರ ಪದವಿಗಳಿಸುವರು. ಪ್ರೌಢಶಾಲೆಯ ವಯೋಮಾನದ ಮಕ್ಕಳಲ್ಲಿ ಕೇವಲ ೮% ಮಾತ್ರ ಪದವಿ ಪಡೆಯುತ್ತಾರೆ. ೨೩ ಸರ್ಕಾರೀ ವಿಶ್ವವಿದ್ಯಾಲಯಗಳು ೫ ಕ್ಯಾಥೊಲಿಕ್ ವಿಶ್ವವಿದ್ಯಾಲಯಗಳು ಸುಮಾರು ೧೦೦ ಉನ್ನತ ವಿದ್ಯಾಲಯಗಳು ಇವು ಫ್ರಾನ್ಸಿನಲ್ಲಿ ಉನ್ನತ ಶಿಕ್ಷಣವೀಯುವ ಸಂಸ್ಥೆಗಳು. ಕ್ಯಾಥೊಲಿಕ್ ವಿಶ್ವವಿದ್ಯಾಲಯಗಳಲ್ಲಿ ೨% ವಿದ್ಯಾರ್ಥಿಗಳೂ ಉನ್ನತ ವಿದ್ಯಾಲಯಗಳಲ್ಲಿ ೧೦% ವಿದ್ಯಾರ್ಥಿಗಳೂ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಉಳಿದ ೮೮% ವಿದ್ಯಾರ್ಥಿಗಳೂ ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರದ ಸೇವಾಶಾಖೆಗಳು ನಡೆಸುತ್ತಿರುವ ಗ್ರಾಂಡಿಸ್ ಇಕೋಲೆ ಎಂದು ಕರೆಯಲ್ಪಡುವ ಈ ವಿದ್ಯಾಲಯಗಳಲ್ಲಿ ಪದವಿಗಳಿಸುವುದು ತುಂಬ ಕಷ್ಟ. ಹಾಗೂ ಅಲ್ಲಿ ಪದವಿ ಪಡೆದವರಿಗೆ ಸರ್ಕಾರದಲ್ಲಿ ಉನ್ನತ ಹುದ್ದೆ ಕಾದಿರುತ್ತದೆ. ಜೊತೆಗೆ ಅಲ್ಲಿಗೆ ಸೇರುವಾಗ ಕಠಿಣ ರೀತಿಯ ಪ್ರವೇಶ ಪರೀಕ್ಷೆ ನಡೆಸಲಾಗುತ್ತದೆ. ಆದ್ದರಿಂದ ಪ್ರತಿ ವಿದ್ಯಾಲಯದಲ್ಲಿ ೫೦೦ಕ್ಕೂ ಕಡಿಮೆ ವಿದ್ಯಾರ್ಥಿಗಳೂ ಮಾತ್ರ ಇರುವರು. ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ದೊಡ್ಡ ಸಂಸ್ಥೆಯಲ್ಲಿ ೧ ಲಕ್ಷ ಮಂದಿಯೂ ಮಿಕ್ಕ ವಿಶ್ವವಿದ್ಯಾಲಯಗಳಲ್ಲಿ ಹತ್ತರಿಂದ ಇಪ್ಪತ್ತು ಸಾವಿರ ವಿದ್ಯಾರ್ಥಿಗಳೂ ವ್ಯಾಸಂಗ ಮಾಡುತ್ತಿರುವರು. ೧೯೬೦ ರಿಂದೀಚೆಗೆ ವಿಶ್ವವಿದ್ಯಾಲಯಗಳಿಲ್ಲದ ನಗರಗಳಲ್ಲಿ ಸರ್ಕಾರ ವಿಶ್ವವಿದ್ಯಾಲಯದ ಕಾಲೇಜುಗಳನ್ನು ಆರಂಭಿಸಿದೆ. ಅಲ್ಲಿ ವಿಶ್ವವಿದ್ಯಾಲಯದ ಮೊದಲ ವರ್ಷದ ತರಗತಿಗಳನ್ನು ಮಾತ್ರ ನಡೆಸಲಾಗುತ್ತಿದೆ. ಕಾಲಕ್ರಮದಲ್ಲಿ ಈ ಕಾಲೇಜುಗಳು ವಿಶ್ವವಿದ್ಯಾಲಯಗಳಾಗಿ ಮಾರ್ಪಡಬಹುದು. ಫ್ರಾನ್ಸಿನ ಶಿಕ್ಷಣ ಬಹುಮಟ್ಟಿಗೆ ಕೇಂದ್ರ ಸರ್ಕಾರದ ನೇರ ಆಡಳಿತಕ್ಕೆ ಸೇರಿದೆ. ಸ್ಥಳೀಯ ಸರ್ಕಾರದ ಘಟಕಗಳು ಕೇವಲ ಕಟ್ಟಡದ ರಿಪೇರಿ ವಾತಾಯನ, ಶಾಖಾಯನ, ನಿರ್ಮಲೀಕರಣ ಮುಂತಾದ ಗೌಣ ಅಂಶಗಳನ್ನು ನೋಡಿಕೊಳ್ಳುವುವು. ಶಿಕ್ಷಣ ವೆಚ್ಚದ ೮೮% ಕೇಂದ್ರ ಸರ್ಕಾರದ ಬೊಕ್ಕಸದಿಂದ ಸಂದಾಯವಾಗುತ್ತದೆ. ಅದು ತನ್ನ ಒಟ್ಟು ಆದಾಯದ ೪% ನ್ನೂ ಒಟ್ಟು ವೆಚ್ಚದ ೧೭% ನ್ನೂ ಶಿಕ್ಷಣಕ್ಕೆ ವಿನಿಯೋಗ ಮಾಡುತ್ತಿದೆ. ಶಿಕ್ಷಣ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿರುವ ಖಾಸಗಿ ಸಂಸ್ಥೆಗಳು ಕೇಂದ್ರ ಸರ್ಕಾರದಿಂದ ಮೂರು ವಿಧವಾದ ಸಹಾಯಧನವನ್ನು ಪಡೆಯ ಬಹುದು. ಮೊದಲನೆಯದಾಗಿ ಸರ್ಕಾರದ ತನಿಖಾಧಿಕಾರಿಗಳ ಪರೀಕ್ಷೆಗೂ ಆಯವ್ಯಯಗಳ ತನಿಖೆಗೂ ಒಳಪಟ್ಟರೆ ಅವಕ್ಕೆ ಅಧ್ಯಾಪಕರ ಸಂಬಳ ಸಹಾಯಧನವಾಗಿ ದೊರೆಯುವುದು ಸರ್ಕಾರದ ಶಾಲೆಗಳಲ್ಲಿರುವ ಪಠ್ಯಕ್ರಮವನ್ನು ಅನುಸರಿಸಿದರೆ ಅದಕ್ಕೆ ಅಧ್ಯಾಪಕರ ಸಂಬಳದ ಜೊತೆಗೆ ಕಾರ್ಯಾಚರಣೆಯ ವೆಚ್ಚವನ್ನೂ ಕೇಂದ್ರ ಸರ್ಕಾರದಿಂದ ಪಡೆದುಕೊಳ್ಳಬಹುದು. ಯಾವ ಖಾಸಗಿ ಸಂಸ್ಥೆಯಾಗಲಿ ಪೂರ್ಣವಾಗಿ ಸರ್ಕಾರಕ್ಕೆ ವರ್ಗಾವಣೆಯಾದರೆ ಅದರ ಪೂರ್ಣ ವೆಚ್ಚವನ್ನೂ ಕೇಂದ್ರ ಸರ್ಕಾರವೇ ವಹಿಸಿಕೊಳ್ಳುವುದು. ಸರ್ಕಾರದ ಶಾಲಾಕಾಲೇಜುಗಳ ಆಡಳಿತ ಕ್ಯಾಬಿನೆಟ್ ದರ್ಜೆಯ ಮಂತ್ರಿಯೊಬ್ಬರಿಗೆ ಸೇರುತ್ತದೆ. ಅವರು ಅಧ್ಯಾಪಕರನ್ನು ನೇಮಕ ಮಾಡುವರು ಪಾಠಕ್ರಮವನ್ನು ನಿರ್ಧರಿಸುವರು ಪಠ್ಯಪುಸ್ತಕಗಳನ್ನು ನಿಷ್ಕರ್ಷಿಸುವರು ಬೋಧನ ಕ್ರಮವನ್ನೂ ಗೊತ್ತುಮಾಡುವರು. ಅಲ್ಲದೆ ವಿಷಯವನ್ನು ಬೋಧಿಸಿ ಮುಗಿಸಬೇಕಾದ ಕಾಲಾವಧಿಯನ್ನೂ ಆ ಕಾರ್ಯದಲ್ಲಿ ಅನುಸರಿಸಬೇಕಾದ ವೇಗವನ್ನೂ ಗೊತ್ತು ಮಾಡುವರು. ಕೇಂದ್ರ ಸರ್ಕಾರ ಶಿಕ್ಷಣದ ಮೇಲೆ ಫ್ರಾನ್ಸಿನ ಕೇಂದ್ರದ ಶಿಕ್ಷಣ ಸಚಿವ ತನ್ನ ಕೊಠಡಿಯಲ್ಲೇ ಕುಳಿತು ದೇಶದ ಯಾವ ಶಾಲಾ ಕಾಲೇಜುಗಳಲ್ಲಿ ಯಾವ ದಿನ ಯಾವ ಪಾಠ ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಬಹುದು ಎಂದು ವ್ಯಂಗ್ಯವಾಗಿ ಫ್ರಾನ್ಸಿನ ಇಷ್ಟು ಕಟ್ಟುನಿಟ್ಟಾದ, ನಿಯಮಗಳನ್ನು ಕೆಲವು ಐರೋಪ್ಯ ದೇಶಗಳು ಟೀಕಿಸಿದ್ದುಂಟು. ಕೇಂದ್ರ ಸರ್ಕಾರದ ತನಿಖಾಧಿಕಾರಿಗಳು ಪ್ರತಿಶಾಲೆಯನ್ನೂ ಪ್ರತಿ ಅಧ್ಯಾಪಕರ ಬೋಧನೆಯನ್ನೂ ಪರೀಕ್ಷಿಸಿ ವರದಿ ಸಲ್ಲಿಸುತ್ತಾರೆ. ಕೇಂದ್ರ ಶಿಕ್ಷಣ ಸಚಿವಾಲಯ ದೇಶದಲ್ಲಿರುವ ತನ್ನ ೨೩ ಪ್ರಾಂತೀಯ ಉಪ ಕಚೇರಿ ಅಕಾಡೆಮಿಗಳ ಮೂಲಕ ಅಧ್ಯಾಪಕರ ವರ್ಗಾವಣೆ, ಬಡ್ತಿ, ರಜಾ ಮಂಜೂರಿ ಮುಂತಾದ ಆಡಳಿತ ಅಂಶಗಳನ್ನು ನಿರ್ವಹಿಸುತ್ತದೆ. ಪ್ರಾಥಮಿಕ ಶಾಲೆಯ ಅಧ್ಯಾಪಕರ ಶಿಕ್ಷಣ ೪ ವರ್ಷಗಳ ಕಾಲಾವಧಿಯ ನಾರ್ಮಲ್ ಸ್ಕೂಲುಗಳಲ್ಲಿ ಏರ್ಪಟ್ಟಿದೆ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಮ್ಮ 18ನೆಯ ವಯಸ್ಸಿನಲ್ಲಿ ಇಲ್ಲಿಗೆ ಸೇರಿ ಪ್ರೌಢ ಶಿಕ್ಷಣದ ಜೊತೆಗೆ ಒಂದು ವರ್ಷದ ವೃತ್ತಿಶಿಕ್ಷಣವನ್ನು ಪಡೆದು ಪ್ರಾಥಮಿಕ ಶಾಲೆಯ ಅಧ್ಯಾಪಕರಾಗುವರು ಲೋಯರ್ ಸೆಕೆಂಡರಿ ಶಾಲೆಗೆ ಅಧ್ಯಾಪಕರನ್ನು ನೇಮಿಸುವಾಗ ಪ್ರಾಥಮಿಕ ಶಾಲೆಯ ದಕ್ಷ ಅಧ್ಯಾಪಕರನ್ನು ಆರಿಸಿಕೊಳ್ಳುವರು ಅಥವಾ ವಿಶ್ವವಿದ್ಯಾಲಯದಲ್ಲಿ ಎರಡು ವರ್ಷ ಶಿಕ್ಷಣ ಪಡೆದವರನ್ನು ನೇಮಿಸಿ ಕೊಳ್ಳುವರು. ಲೈಸಿಯಮ್ಗಳಲ್ಲಿ (ಅಕಾಡೆಮಿ) ಅಧ್ಯಾಪಕರಾಗ ಬಯಸುವವರು ವಿಶ್ವವಿದ್ಯಾಲಯದಲ್ಲಿ ಮೂರುವರ್ಷ ವ್ಯಾಸಂಗಮಾಡಿ ಪದವಿ ಪಡೆದ ಅನಂತರ ಒಂದು ವರ್ಷ ಪ್ರಾದೇಶಿಕಶಿಕ್ಷಣ ಕೇಂದ್ರದಲ್ಲಿ ಅಭ್ಯಾಸಾರ್ಥ ಪಾಠ ಬೋಧನೆಯನ್ನು ಒಳಗೊಂಡಂತೆ ವೃತ್ತಿ ಶಿಕ್ಷಣ ಪಡೆಯುವರು. ಪ್ರಶಿಕ್ಷಣಾರ್ಥಿಗಳು ಅಲ್ಲಿನ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಬೋಧನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕುರಿತು ಚರ್ಚಿಸುವರು. ಬೋಧನ ಕ್ರಮ ಮನಶ್ಯಾಸ್ತ್ರ ಮುಂತಾದ ಶೈಕ್ಷಣಿಕ ವಿಷಯಗಳನ್ನು ವ್ಯಾಸಂಗ ಮಾಡುವರು. ಅವರಲ್ಲಿ ಸುಮಾರು 20% ರಷ್ಟು ಮತ್ತೊಂದು ವರ್ಷದ ಪ್ರಶಿಕ್ಷಣ ಪಡೆದು ಪರೀಕ್ಷೆಯೊಂದಕ್ಕೆ ಕೂಡುವರು. ಅದರಲ್ಲಿ ಉತ್ತೀರ್ಣರಾದವರಿಗೆ ವೃತ್ತಿಯಲ್ಲಿ ಹೆಚ್ಚಿನವೇತನ, ಸ್ಥಾನಮಾನ ದೊರಕುವುವು. ಫ್ರೆಂಚ್ ಶಿಕ್ಷಣ ಪದ್ಧತಿಯಲ್ಲಿ ಅನುಸರಿಸಬೇಕಾದ ಬೋಧನಕ್ರಮದ ಬಗ್ಗೆ ಶಿಶು ವಿಹಾರಗಳಲ್ಲಿ ಮಾತ್ರ ಸ್ವಾತಂತ್ರ್ಯವುಂಟು. ಕೇಂದ್ರ ಸಚಿವಾಲಯ ಅಧ್ಯಾಪಕರಿಗೆ ಸ್ಥೂಲವಾದ ಕೆಲವು ನೀತಿನಿರ್ದೇಶನಗಳನ್ನು ಮಾತ್ರ ನೀಡುತ್ತದೆ. ಮಕ್ಕಳ ವ್ಯಕ್ತಿತ್ವಕ್ಕೆ ಗೌರವ, ಚಟುವಟಿಕೆಯ ಕಾರ್ಯ ವಿಧಾನ, ಕ್ರಿಯಾತ್ಮಕ ಇಂದ್ರಿಯ ಚಟುವಟಿಕೆಗಳ ಮೂಲಕ ಬೌದ್ಧಿಕ ಬೆಳೆವಣಿಗೆ, ಅಭಿವ್ಯಕ್ತಿಗೆ ವ್ಯಾಪಕ ಅವಕಾಶ, ಸಾಮಾಜಿಕ ಸನ್ನಿವೇಶದಲ್ಲಿ ಸಾಮಾಜಿಕ ಗುಣಶೀಲಗಳ ಬೆಳವಣಿಗೆ, ಆಟದ ಮೂಲಕ ದೈಹಿಕ ಶಿಕ್ಷಣ, ಸ್ವತಂತ್ರ ಮತ್ತು ನಿಯಂತ್ರಿತ ಪರಿಶೀಲನೆಗೆ ಅವಕಾಶ, ಸ್ವಾತಂತ್ರ್ಯದ ಸನ್ನಿವೇಶದಲ್ಲಿ ಶಿಸ್ತಿನ ಬೆಳವಣಿಗೆಇವು ಆ ನೀತಿ ನಿರೂಪಣೆಯ ಮುಖ್ಯಾಂಶಗಳು. ಪ್ರಾಥಮಿಕ ಶಾಲಾ ಬೋಧನ ಕ್ರಮ ಕೇಂದ್ರ ಸಚಿವಾಲಯ ನಿರ್ದೇಶಿಸುವ ರೀತಿಯಲ್ಲಿರುತ್ತದೆ. ತನಿಖಾಧಿಕಾರಿಗಳು ಅವರು ಅದನ್ನು ಅನುಸರಿಸುವ ಬಗ್ಗೆ ಪರೀಕ್ಷಿಸಿ ವರದಿ ಮಾಡುತ್ತಾರೆ. ಅಧ್ಯಾಪಕರು ಟಿಪ್ಪಣಿ ಬರೆಯಿಸಿ ವಿದ್ಯಾರ್ಥಿಗಳು ಹೃದ್ಗತ ಮಾಡಲು ಪ್ರೋತ್ಸಾಹಿಸುತ್ತಾರೆ. ತರಗತಿಯಲ್ಲಿ ಪ್ರಶ್ನೆ ಕೇಳಿ ಉತ್ತರ ಹೇಳಿಸುತ್ತಾರೆ. ಕೆಲವು ಪ್ರಗತಿಪರ ಶಾಲೆಗಳಲ್ಲಿ ವಿದ್ಯಾರ್ಥಿ ಚಟುವಟಿಕೆಗಳಿಗೂ ಸ್ವತಂತ್ರ ವ್ಯಾಸಂಗಕ್ಕೂ ಅವಕಾಶ ಕಲ್ಪಿಸಿರುವರು. ಪ್ರವಾಸ ನಾಟಕ ಚರ್ಚೆ ಉದ್ಯಮ ಕಾರ್ಯಾಚರಣೆಇವುಗಳಲ್ಲಿ ವಿದ್ಯಾರ್ಥಿಗಳು ಪಾತ್ರ ವಹಿಸುವರು. ಪ್ರೌಢಶಾಲೆಗಳಲ್ಲಿ ಬೋಧನಕ್ರಮ ಬಹುಮಟ್ಟಿಗೆ ಉಪನ್ಯಾಸದ ಸ್ವರೂಪದಲ್ಲಿರುತ್ತದೆ. ಅಧ್ಯಾಪಕರು ಸೂಚಿಸಿದ ಪಠ್ಯಭಾಗಗಳನ್ನು ವಿದ್ಯಾರ್ಥಿಗಳು ಹೃದ್ಗತ ಮಾಡಿಕೊಳ್ಳುತ್ತಾರೆ. ಈಚೆಗೆ ದೇಶದ ಕೆಲವೆಡೆ ಪ್ರಾಯೋಗಿಕ ಪ್ರೌಢಶಾಲೆಗಳನ್ನು ಆರಂಭಿಸಿ ಅಲ್ಲಿ ಪ್ರಚಾರಕ್ಕೆ ಬರುತ್ತಿರುವ ಕೆಲವು ನೂತನ ವಿಧಾನಗಳನ್ನು ಅನುಸರಿಸುವ ಯತ್ನ ನಡೆಯುತ್ತಿದೆ. ಆದರೆ ಅಂಥ ಪ್ರಾಯೋಗಿಕ ಶಾಲೆಗಳ ಸಂಖ್ಯೆ ತೀರ ಕಡಿಮೆ. ಜೊತೆಗೆ ಸಾಂಪ್ರದಾಯಿಕ ಬೋಧನ ಕ್ರಮಕ್ಕೆ ಅಧ್ಯಾಪಕರು ಅಂಟಿಕೊಂಡಿರುವುದು ಕಂಡುಬರುತ್ತದೆ. ಪ್ರಾಥಮಿಕ ಶಾಲಾ ಪಠ್ಯಕ್ರಮ ಯೂರೋಪಿನ ಇತರ ದೇಶಗಳಲ್ಲಿರುವಂತೆಯೇ ಇದೆ. ಆದರೆ ಫ್ರೆಂಚ್ ಭಾಷೆಯ ವ್ಯಾಸಂಗಕ್ಕೆ ಹೆಚ್ಚು ಕಾಲವನ್ನು ಕೊಡಲಾಗಿದೆ. ಈಚೆಗೆ 10ನೆಯ ವಯಸ್ಸಿನಲ್ಲಿ ಇಂಗ್ಲಿಷ್ ಭಾಷೆಯ ವ್ಯಾಸಂಗಕ್ಕೂ ಅವಕಾಶ ಕಲ್ಪಿಸಲಾಗಿದೆ. ಚರಿತ್ರೆ ಭೂವಿವರಣೆಗಳಿಗೆ ತೀರ ಕಡಿಮೆ ಕಾಲ ಒದಗಿಸಿದೆ. ಗಣಿತ ಬರವಣಿಗೆ ವಿಜ್ಞಾನ ನೀತಿಪಾಠ ಸಂಗೀತ ದೈಹಿಕಶಿಕ್ಷಣ ಚಿತ್ರ ಲೇಖನಇವು ಇತರ ವ್ಯಾಸಂಗ ವಿಷಯಗಳು. ಖಾಸಗಿ ಶಿಕ್ಷಣಶಾಲೆಗಳಲ್ಲೂ ಪಠ್ಯ ಕ್ರಮ ಇದೇ ಮಾದರಿಯಲ್ಲಿದ್ದರೂ ರೋಮನ್ ಕ್ಯಾತೊಲಿಕ್ ವಿಚಾರಗಳಿಗೆ ಸಾಧ್ಯವಾದೆಡೆಗಳಲ್ಲೆಲ್ಲ ಸಂಬಂಧ ಕಲ್ಪಿಸಲಾಗಿದೆ. ಪ್ರೌಢಶಾಲೆಗಳಲ್ಲಿ ಅಕಾಡೆಮಿಕ್ ಮತ್ತು ಮಾಡರ್ನ್ ವರ್ಗಗಳ ವ್ಯಾಸಂಗ ವಿಷಯದಲ್ಲಿ ವ್ಯತ್ಯಾಸ ಕಲ್ಪಿಸಲಾಗಿದೆ. ಅಕಾಡೆಮಿಕ್ ವರ್ಗದವರು ಒಂದು ವಿಶಾಲ ಗುಂಪಿನ ವಿಷಯಗಳನ್ನು ಆರಿಸಿಕೊಂಡು ಒಂದು ವಿಷಯವನ್ನು ಆಳವಾಗಿ ವ್ಯಾಸಂಗ ಮಾಡುವರು. ಲ್ಯಾಟಿನ್ ಹಿಂದೆ ಕಡ್ಡಾಯವಾಗಿತ್ತು. ಈಗ ಐಚ್ಛಿಕ ವಿಷಯವಾಗಿದೆ. ಚರಿತ್ರೆ ಭೂವಿವರಣೆ ವಿಜ್ಞಾನ ಗಣಿತ ಕಲೆ ಸಂಗೀತ ದೈಹಿಕ ಶಿಕ್ಷಣ ಫ್ರೆಂಚ್ ಇಂಗ್ಲಿಷ್ಇವು ಸರ್ವಸಾಮಾನ್ಯ ವ್ಯಾಸಂಗ ವಿಷಯಗಳು. ಮಾಡರ್ನ್ ವರ್ಗದ ವಿದ್ಯಾರ್ಥಿಗಳು 15ನೆಯ ವಯಸ್ಸಿನ ಅನಂತರ ಶಾಲೆ ಬಿಡುವುದರಿಂದ ಮೇಲಿನ ಸಾಮಾನ್ಯ ವಿಷಯಗಳ ವ್ಯಾಸಂಗ ಇದ್ದರೂ ಅವರು ಯಾವ ವಿಷಯವನ್ನೂ ಆಳವಾಗಿ ವ್ಯಾಸಂಗ ಮಾಡುವ ನಿಯಮವಿಲ್ಲ. ಫ್ರಾನ್ಸಿನ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನಶಾಸ್ತ್ರಗಳು ಮಾನವಿಕ ಶಾಸ್ತ್ರಗಳು ನ್ಯಾಯಶಾಸ್ತ್ರ ಅರ್ಥಶಾಸ್ತ್ರ ವೈದ್ಯಶಾಸ್ತ್ರ ಔಷಧಿ ನಿರ್ಮಾಣಶಾಸ್ತ್ರ ಮುಂತಾದ ಜ್ಞಾನ ಶಾಖಾವಿಭಾಗಗಳಿವೆ. ವಿದ್ಯಾರ್ಥಿಗಳು ಇವುಗಳಲ್ಲಿ ಯಾವುದಾದರೂ ವಿಭಾಗಕ್ಕೆ ಸೇರಿಕೊಂಡು ಒಂದು ವಿಷಯವನ್ನು ವ್ಯಾಸಂಗಕ್ಕೆ ಆರಿಸಿಕೊಳ್ಳುವರು. ಮೂರು ವರ್ಷದ ವ್ಯಾಸಂಗದ ಅನಂತರ ಪ್ರಥಮ ಪದವಿ ಪಡೆಯುವರು. ಮತ್ತೊಂದು ವರ್ಷದ ವ್ಯಾಸಂಗದ ಅನಂತರ ಮಾಸ್ಟರ್ ಪದವಿಯನ್ನೂ ಆ ಮೇಲೆ ಡಾಕ್ಟರ್ ಪದವಿ ಪಡೆಯವರು. ಎರಡು ಮೂರು ವರ್ಷಗಳ ವ್ಯಾಸಂಗಾನಂತರ ಸರ್ಕಾರದ ಸೇವಾಶಾಖೆಗಳು ನಡೆಸುವ ಮಹಾವಿದ್ಯಾಲಯಗಳಲ್ಲಿ ಎರಡು ವರ್ಷದ ವ್ಯಾಸಂಗದ ಅನಂತರ ಬ್ಯಾಚುಲರ್ ಪದವಿಗೆ ಸಮನಾದ ಪದವಿಯನ್ನು ನೀಡಲಾಗುವುದು. ಹಿಂದಿನಿಂದಲೂ ಫ್ರೆಂಚರು ಜ್ಞಾನ, ಸಾಹಿತ್ಯ, ಸಂಸ್ಕೃತಿಗಳ ಪ್ರೇಮಿಗಳು. ಆದರೂ ಬಹುಪಾಲು ಜನತೆ ಕೇವಲ ೮೧೦ ವರ್ಷಗಳ ಶಿಕ್ಷಣವನ್ನು ಮಾತ್ರ ಪಡೆದವರು. ಅವರ ಶಿಕ್ಷಣದ ಮಟ್ಟವನ್ನು ಹೆಚ್ಚಿಸಲು ತಕ್ಕಷ್ಟು ಸಂಜೆಯ ತರಗತಿ, ಅಲ್ಪ ಕಾಲದ ತರಗತಿ ಉಪನ್ಯಾಸಮಾಲೆ ಅಂಚೆ ಶಿಕ್ಷಣ ಪ್ರಸಾರಶಿಕ್ಷಣ ಮುಂತಾದವನ್ನು ಹೆಚ್ಚಿಸುವ ಯತ್ನ ನಡೆದಿದ್ದರೂ ತಕ್ಕಷ್ಟು ಯಶಸ್ಸು ಕಂಡಿಲ್ಲ. ಆದ್ದರಿಂದ ಜನಜೀವನದಲ್ಲಿ ಸಂಸ್ಕೃತ ಅಸಂಸ್ಕೃತ ಎಂಬ ವರ್ಗಭೇದ ಹೆಚ್ಚಿಕೊಳ್ಳುತ್ತಿದೆ. ವೃತ್ತಿಶಿಕ್ಷಣದಲ್ಲಿ ಜನತೆಗೆ ಅಷ್ಟಾಗಿ ಆಸಕ್ತಿಯಿಲ್ಲ. ಸಾಂಸ್ಕೃತಿಕ ಶಿಕ್ಷಣಕ್ಕೆ ನೀಡಿರುವ ಹೆಚ್ಚಿನ ಸ್ಥಾನಮಾನಗಳೇ ಇದಕ್ಕೆ ಕಾರಣ. ೧೯೫೦ ರಿಂದೀಚೆಗೆ ಜನತೆಯಲ್ಲಿ ವೃತ್ತಿ ಶಿಕ್ಷಣದ ಒಲವನ್ನು ಬೆಳೆಸಲು ಅದರ ಸ್ಥಾನವನ್ನು ಸಾಂಸ್ಕೃತಿಕ ಶಿಕ್ಷಣದೊಡನೆ ಸಮೀಕರಿಸಲಾಗಿದೆ. ಆದರೂ ಜನತೆಯಲ್ಲಿ ಉದ್ಯೋಗ ಶಿಕ್ಷಣದ ಬಗ್ಗೆ ತಕ್ಕಷ್ಟು ಒಲವು ಮೂಡಿಲ್ಲ. ಜೊತೆಗೆ ದೇಶದಲ್ಲಿ ಉದ್ಯೋಗ ಮತ್ತು ವೃತ್ತಿಶಿಕ್ಷಣದ ಸೌಲಭ್ಯವೂ ಸಾಕಷ್ಟು ವಿಸ್ತರಿಸಿಲ್ಲ. ಫ್ರಾನ್ಸಿನ ಪ್ರೌಢಶಿಕ್ಷಣ ಬಹುಮಟ್ಟಿಗೆ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳನ್ನು ಉತ್ತೀರ್ಣಮಾಡಿಸುವ ಗುರಿಯನ್ನು ಪ್ರಧಾನವಾಗಿ ಹೊಂದಿದ್ದು ಸಾಂಪ್ರದಾಯಕ ವಿಧಾನವನ್ನು ಅನುಸರಿಸುತ್ತಿವೆಯೇ ಹೊರತು ನಿಜವಾಗಿ ಕಲಿವಿಗೆ ಯುಕ್ತವೆನಿಸುವ ವಿಧಾನಗಳನ್ನು ಅನುಸರಿಸುತ್ತಿಲ್ಲ. ಈಚೆಗೆ ಪರೀಕ್ಷೆಯ ಪ್ರಾಬಲ್ಯವನ್ನು ಕಡಿಮೆ ಮಾಡಿ ಅಲ್ಲಿನ ಶಿಕ್ಷಣದ ಸ್ವರೂಪವನ್ನು ಮಾರ್ಪಡಿಸುವ ಯತ್ನ ನಡೆಯುತ್ತಿದೆ. ಹಾಗೂ ಪ್ರೌಢಶಾಲೆಯ ಕೊನೆಯ ತರಗತಿಗಳಲ್ಲಿ ಆಧುನಿಕ ತಾಂತ್ರಿಕ ವಿಜ್ಞಾನ ವಿಷಯಗಳನ್ನು ವ್ಯಾಸಂಗ ವಿಷಯಗಳನ್ನಾಗಿ ಅಳವಡಿಸಲಾಗುತ್ತಿದೆ. ಉನ್ನತಶಿಕ್ಷಣಕ್ಕೆ ಹೋಗತಕ್ಕವರ ಸಂಖ್ಯೆ ಕಡಿಮೆಯಿದ್ದು ಅದು ಕೆಲವು ಶ್ರೀಮಂತ ಕುಟುಂಬಗಳಿಗೆ ಮಾತ್ರ ಮೀಸಲಾಗಿದ್ದು ಜನತೆಯಲ್ಲಿ ಸಾಮಾಜಿಕ ಆರ್ಥಿಕ ಭೇದ ಹೆಚ್ಚುತ್ತಿದೆ. ಇದನ್ನು ತಪ್ಪಿಸಲು ಮಧ್ಯಮ ಮತ್ತು ಕೆಳವರ್ಗದ ಕುಟುಂಬಗಳಿಂದಲೂ ವಿದ್ಯಾರ್ಥಿಗಳನ್ನು ಆಕರ್ಷಿಸಲು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹೆಚ್ಚಿಸಲಾಗಿದೆ. ಇದರ ಫಲವಾಗಿ ಶಿಕ್ಷಣದ ಮಟ್ಟ ಇಳಿಮುಖವಾಗಿದೆ. ಅಲ್ಲಿಗೆ ಬರತಕ್ಕ ಪ್ರೌಢಶಾಲಾ ವಿದ್ಯಾರ್ಥಿಗಳ ಶಿಕ್ಷಣದ ಮಟ್ಟ ಹೆಚ್ಚಬೇಕೆಂಬ ಕೂಗು ಕೇಳಿಬರುತ್ತಿದೆ. ಜೊತೆಗೆ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಸ್ವಾಯತ್ತತೆಬೇಕೆಂದೂ ಅದರ ಆಡಳಿತ ಮಂಡಲಿಗಳಲ್ಲಿ ವಿದ್ಯಾರ್ಥಿಗಳಿಗೆ ಸದಸ್ಯತ್ವವಿರಬೇಕೆಂದೂ ಚಳವಳಿ ನಡೆದಿದೆ. ಆದರೆ ಸುಧಾರಣೆಗಳನ್ನು ಆಚರಣೆಗೆ ತರುವುದು ಕಷ್ಟವಾಗುತ್ತಿದೆ. ಇಂದಿಗೂ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿರುವ ಹಿಂದಿನ ಫ್ರೆಂಚ್ ವಸಾಹತುಗಳು ಸ್ವತಂತ್ರವಾಗಿದ್ದರೂ ಫ್ರೆಂಚ್ ಶಿಕ್ಷಣ ಪದ್ಧತಿಯನ್ನೇ ಅನುಸರಿಸುತ್ತಿವೆ. ಆ ದೇಶಗಳೂ ಫ್ರಾನ್ಸಿನ ಶಿಕ್ಷಣದಲ್ಲಾಗಬಹುದಾದ ಸುಧಾರಣೆಗಳನ್ನು ಕಾದು ನೋಡುತ್ತಿವೆ. ಉಲ್ಲೇಖಗಳು ಬಾಹ್ಯ ಸಂಪರ್ಕಗಳು ಯುರೋಪ್ ಖಂಡದ ದೇಶಗಳು
ಕರ್ಫ್ಯೂ, ಕೆಲವು ಅಥವಾ ಎಲ್ಲಾ ಜನರು ನಿರ್ದಿಷ್ಟ ಸಮಯದ ನಡುವೆ ರಸ್ತೆಯನ್ನು ತೊರೆದು ಮನೆ ಸೇರಬೇಕೆಂಬ ನಿಬಂಧನೆ. ಸಾಮಾನ್ಯವಾಗಿ ಕಾನೂನು ವ್ಯವಸ್ಥೆಯನ್ನು ಕಾಪಾಡಲು ಆರಕ್ಷಕ ಪಡೆ,ಸೈನ್ಯೆ ಅಥವಾ ಇನ್ನಿತರ ಆಡಳಿತ ಪ್ರಸಾಶನಗಳು ಸಮನ್ಯವಾಗಿ ಗಲಭೆ, ಘರ್ಷಣೆ,ಯುದ್ಧ ಮತ್ತು ದುರಂತಕಾಲದಲ್ಲಿ ಕರ್ಫ್ಯೂ ಜಾರಿಗೊಳಿಸುವವು. ಕರ್ಫ್ಯೂ ಮುರಿಯುವುದು ಸಾಮನ್ಯವಾಗಿ ಕಾನೂನಿನ ದೃಷ್ಟಿಯಲ್ಲಿ ಅಪರಾಧವೆಂದು ಪರಿಗಣಿಸಲಾಗುತ್ತದೆ. ಮೂಲತಃ ಫ್ರೆಂಚ್ ಪದವಾದ ಕರ್ಫ್ಯೂ ಮಧ್ಯ ಕಾಲದಲ್ಲಿಯೆ ಆಂಗ್ಲ ಭಾಷೆಯ ಭಾಗವಾಯಿತು. ಈ ಪದವನ್ನು ಹಿಂದೆ ಮರದ ಮನೆಗಳಲ್ಲಿಂದ ಆವೃತ್ತವಾದ ಯುರೋಪಿನ ನಗರಗಳಲ್ಲಿ ಮಲಗುವ ಮುನ್ನ ಬೆಂಕಿ ಮತ್ತು ದೀಪಗಳನ್ನು ಆರಿಸಲು ನೀಡುತ್ತಿದ್ದ ಮುಂಜಾಗ್ರತ ಸೂಚನೆಗಳಲ್ಲಿ ಬಳಸುತ್ತಿದ್ದರು. ಆಂಗ್ಲರ ಮೂಲಕ ಈ ಪದ ಕನ್ನಡವೂ ಸೇರಿದಂತೆ ಇತರ ಭಾರತೀಯ ಭಾಷೆಗಳಲ್ಲಿ ಬಳಕೆಗೆ ಬಂತು. ಸಮಾಜ
ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಸಾಧಾರಣವಾಗಿ ಎರಡು ದೇಶಗಳ ಅಥವಾ ಸೈನ್ಯಾಡಳಿತ ಪ್ರದೇಶಗಳ ನಡುವಿರುವ ವಿಭಜನಾ ಗಡಿ. ಆದರೆ ಸಾಮನ್ಯವಾಗಿ ಕಾಶ್ಮೀರ ಪ್ರದೇಶದಲ್ಲಿರುವ ಭಾರತ ಮತ್ತು ಪಾಕಿಸ್ತಾನದ ನಡುವಿರುವ ಸೈನ್ಯ ನಿಯಂತ್ರಣ ಗಡಿಯನ್ನು ಗಡಿ ನಿಯಂತ್ರಣ ರೇಖೆಯೆಂದು ಕರೆಯಲಾಗುತ್ತಿದೆ. ಯುದ್ಧವಿರಾಮ ಗಡಿಯೆಂದು ಕರೆಯಲಾಗುತ್ತಿದ್ದ ಈ ಪ್ರದೇಶವು ಡಿಸೆಂಬರ್ ೧೯೭೨ರ ಶಿಮ್ಲಾ ಒಪ್ಪಂದದ ನಂತರ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಎಂದು ನಾಮಾಂಕಿತವಾಯಿತು. ಭಾರತವು ತನ್ನ ಆಡಳಿತದಲ್ಲಿರುವ ಕಾಶ್ಮೀರ ಪ್ರದೇಶವನ್ನು ಜಮ್ಮು ಮತ್ತು ಕಾಶ್ಮೀರ ಎಂದು ಹಾಗು ಪಾಕಿಸ್ತಾನ ಆಡಳಿತದಲ್ಲಿರುವ ಕಾಶ್ಮೀರ ಪ್ರದೇಶವನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಎಂದು ಕರೆಯುತ್ತದೆ. ಪಾಕಿಸ್ತಾನವು ತನ್ನ ಆಡಳಿತದಲ್ಲಿರುವ ಕಾಶ್ಮೀರ ಪ್ರದೇಶವನ್ನು ಸ್ವಾತಂತ್ರ ಕಾಶ್ಮೀರ (ಆಜಾದ್ ಕಶ್ಮೀರ್) ಎಂದು ಹಾಗು ಭಾರತದ ಆಡಳಿತದಲ್ಲಿರುವ ಕಾಶ್ಮೀರ ಪ್ರದೇಶವನ್ನು ಭಾರತ ಆಕ್ರಮಿತ ಕಾಶ್ಮೀರ (ಐಒಕೆ) ಎಂದು ಕರೆಯುತ್ತದೆ. ಗಡಿ ನಿಯಂತ್ರಣ ರೇಖೆಯನ್ನು ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಅಂತರಾಷ್ಟ್ರೀಯ ಗಡಿಯನ್ನಾಗಿ ಪರಿವರ್ತಿಸಬೇಕೆಂಬ ಪ್ರಸ್ತಾಪವಿದೆ ಆದರೆ ಇದನ್ನು ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳು ವಿರೋಧಿಸಿವೆ. ಗಡಿ ನಿಯಂತ್ರಣ ರೇಖೆಯ ಕೆಲವು ಭಾಗಗಳಲ್ಲಿ ಮುಳ್ಳಿನ ತಂತಿ ಬೇಲಿ ಹಾಕಲಾಗಿದೆ. ಭಾರತ ಮತ್ತು ಪಾಕಿಸ್ತಾನಗಳ ನಡುವೆ ಹಲವಾರು ಯುದ್ಧಗಳು ಗಡಿ ನಿಯಂತ್ರಣ ರೇಖಾ ಭಾಗದಲ್ಲಾಗಿದೆ. ಇತ್ತೀಚೆಗೆ ನೆಡೆದ ಯದ್ಧವೆಂದರೆ ೧೯೯೯ರ ಕಾರ್ಗಿಲ್ ಯುದ್ಧ. ಯಾವಾಗಲೂ ಈ ಪ್ರದೇಶದಲ್ಲಿ ಭಾರತ ಹಾಗು ಪಾಕಿಸ್ತಾನ ಸೈನ್ಯೆಗಳ ನಡುವೆ ಗುಂಡಿನ ಚಕಮಕಿಗಳು ನೆಡಯುತ್ತಿರುತ್ತವೆ. ಆಕ್ಟೋಬರ್ ೮ ೨೦೦೫ರೊಂದು ಈ ಪ್ರದೇಶದಲ್ಲಿ ಘಟಿಸಿದ ಭೂಕಂಪದ ನಂತರ ಸಂತ್ರಸ್ತರಿಗೆ ನೆರವು ಕಲ್ಪಿಸಲು, ಮಾನವೀಯತೆಯ ದೃಷ್ಟಿಯಿಂದ ಭಾರತ ಹಾಗು ಪಾಕಿಸ್ತಾನ ಸರ್ಕಾರಗಳು ಸುಮಾರು ೬೦ ವರ್ಷಗಳ ನಂತರ ಗಡಿಯನ್ನು ತೆರವುಗೊಳಸಿವೆ. ಗಡಿಯನ್ನು ಐದು ಕಡೆ ಮಾತ್ರ ತೆರವುಗೊಳಿಸುವ ವಿಚಾರವಿದ್ದು, ಇದರಿಂದ ಸಂತ್ರಸ್ತರಿಗೆ ಪರಿಹಾರ ಒದಗಿಸುವ ಕಾರ್ಯ ಸುಲಭವಾಗಲಿದೆ. ಭಾರತ ಪಾಕಿಸ್ತಾನ ಭೂಗೋಳ
ಶಂಕರ ದಯಾಳ ಶರ್ಮ((19 ಆಗಸ್ಟ್ 1918 26 ಡಿಸೆಂಬರ್ 1999))(ಆಗಸ್ಟ್ ೧೯, ೧೯೧೮ ಡಿಸೆಂಬರ್ ೨೬, ೧೯೯೯) ೧೯೯೨ರಿಂದ ೧೯೯೭ರವರಗೆ ಭಾರತದ ರಾಷ್ಟ್ರಪತಿಯಾಗಿದ್ದರು. ಶಂಕರ್ ದಯಾಳ್ ಶರ್ಮಾ ಭಾರತದ ಒಂಬತ್ತನೇ ಅಧ್ಯಕ್ಷರಾಗಿದ್ದರು, 1992 ರಿಂದ 1997 ರವರೆಗೆ ಸೇವೆ ಸಲ್ಲಿಸಿದರು. ಅಧ್ಯಕ್ಷ ಸ್ಥಾನಕ್ಕೆ ಮುಂಚಿತವಾಗಿ, ಶರ್ಮಾ ಭಾರತದ ಎಂಟನೇ ಉಪಾಧ್ಯಕ್ಷರಾಗಿದ್ದರು, ಆರ್.ವೆಂಕಟರಮಣ. ಮತ್ತು ಶಿಕ್ಷಣ, ಕಾನೂನು, ಲೋಕೋಪಯೋಗಿ, ಕೈಗಾರಿಕೆ ಮತ್ತು ವಾಣಿಜ್ಯ, ರಾಷ್ಟ್ರೀಯ ಸಂಪನ್ಮೂಲಗಳು ಮತ್ತು ಪ್ರತ್ಯೇಕ ಕಂದಾಯದ ಖಾತೆಗಳನ್ನು ಹೊಂದಿರುವ ಕ್ಯಾಬಿನೆಟ್ ಮಂತ್ರಿಯಾಗಿದ್ದರು (19561967). ಅವರು 19721974ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು ಮತ್ತು 1974 ರಿಂದ 1977 ರವರೆಗೆ ಕೇಂದ್ರ ಸಂವಹನ ಸಚಿವರಾಗಿ ಸರ್ಕಾರಕ್ಕೆ ಮರಳಿದರು. ಅಂತರರಾಷ್ಟ್ರೀಯ ಬಾರ್ ಅಸೋಸಿಯೇಷನ್ ಶರ್ಮಾ ಅವರಿಗೆ ಲಿವಿಂಗ್ ಲೆಜೆಂಡ್ಸ್ ಆಫ್ ಲಾ ಅವಾರ್ಡ್ ಆಫ್ ರೆಕಗ್ನಿಷನ್ ಅನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾನೂನು ವೃತ್ತಿಯಲ್ಲಿ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಮತ್ತು ಕಾನೂನಿನ ನಿಯಮ ಬದ್ಧತೆಗಾಗಿ ನೀಡಿತು. ಆರಂಭಿಕ ಜೀವನ ಶರ್ಮಾ ಜನಿಸಿದ್ದು ಮಧ್ಯಪ್ರದೇಶದ ಭೋಪಾಲ್ ನಗರದಲ್ಲಿ. ಶರ್ಮಾ ಅವರು ಓಮನ್ನ ಪ್ರಸ್ತುತ ಆಡಳಿತಗಾರ ಹಿಸ್ ಮೆಜೆಸ್ಟಿ ಸುಲ್ತಾನ್ ಕಬೂಸ್ ಬಿನ್ ಸೈಡ್ ಅವರಿಗೆ ಕಲಿಸಿ ಪ್ರಸಿದ್ಧವಾದರು, ಆದರೆ ಶರ್ಮಾ ಮುಖ್ಯಮಂತ್ರಿಯಾದರೆ ಅವರ ಮೆಜೆಸ್ಟಿ 12 ವರ್ಷ. ಪ್ರಾಧ್ಯಾಪಕರಾಗಿ, ಲಕ್ನೋ ವಿಶ್ವವಿದ್ಯಾಲಯದಲ್ಲಿ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಾನೂನು. ಗಾಜಿಯಾಬಾದ್ನ ಅಲಹಾಬಾದ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದಿಂದ 42 ಸದಸ್ಯರ ಪಟ್ಟಿಯಲ್ಲಿ ಅವರನ್ನು ಪ್ರೌಡ್ ಪಾಸ್ಟ್ ಅಲುಮ್ನಸ್ ಎಂದು ಗೌರವಿಸಲಾಯಿತು. ಲಿಂಕನ್ಸ್ ಇನ್ ನಿಂದ ಬಾರ್ಗೆ ಕರೆಸಿಕೊಂಡ ಅವರು ನಂತರ ಹಾರ್ವರ್ಡ್ ಕಾನೂನು ಶಾಲೆಯಲ್ಲಿ ಫೆಲೋ ಆಗಿದ್ದರು. ಅವರು ಗೌರವ ಬೆಂಚರ್ ಮತ್ತು ಮಾಸ್ಟರ್ ಆಫ್ ಲಿಂಕನ್ಸ್ ಇನ್ ಮತ್ತು ಗೌರವ ಫೆಲೋ,ಆಗಿ ಕೇಂಬ್ರಿಡ್ಜ್ನ ಫಿಟ್ಜ್ವಿಲಿಯಂ ಕಾಲೇಜಿನಲ್ಲಿ ಆಯ್ಕೆಯಾದರು. ಅವರಿಗೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಪ್ರಶಸ್ತಿ ಎಲ್.ಎಲ್.ಡಿ (ಹೊನೊರಿಸ್ ಕೌಸಾ) ಪದವಿ ನೀಡಿತು. ಅವರು ತಮ್ಮ ಕಾಲದ ಆ ಸಮಯದ ಅತ್ಯಂತ ವಿದ್ಯಾವಂತ ರಾಜಕಾರಣಿ ಎಂದು ತಿಳಿದು ಬಂದಿದೆ. ಆಗ್ರಾ, ಸೇಂಟ್ ಜಾನ್ಸ್ ಕಾಲೇಜು, ಆಗ್ರಾ ಕಾಲೇಜು, ಅಲಹಾಬಾದ್ ವಿಶ್ವವಿದ್ಯಾಲಯ, ಲಕ್ನೋ ವಿಶ್ವವಿದ್ಯಾಲಯ, ಫಿಟ್ಜ್ವಿಲಿಯಂ ಕಾಲೇಜು, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ, ಲಿಂಕನ್ ಇನ್ ಮತ್ತು ಹಾರ್ವರ್ಡ್ ಕಾನೂನು ಶಾಲೆಯಿಂದ ಡಾ. ಶರ್ಮಾ ಶಿಕ್ಷಣ ಪಡೆದರು. ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ಎಂ.ಎ. ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ಸ್ಥಾನದೊಂದಿಗೆ ಪಡೆದ ಪದವಿಯ ಪದವಿ, ನೀವು ಎಲ್.ಎಲ್.ಎಂ. ಪಿಎಚ್ಡಿ ಯಲ್ಲಿ ಲಕ್ನೋ ವಿಶ್ವವಿದ್ಯಾಲಯದಿಂದ ಪ್ರಥಮ ಸ್ಥಾನದೊಂದಿಗೆ ಪದವಿ ಪಡೆಯಲಾಗಿದೆ. ಕೇಂಬ್ರಿಡ್ಜ್ನಿಂದ ಪದವಿ ಪಡೆದ ನೀವು ಲಕ್ನೋ ವಿಶ್ವವಿದ್ಯಾಲಯದಿಂದ ಸಾಮಾಜಿಕ ಸೇವೆಯಲ್ಲಿ ಚಕ್ರವರ್ತಿ ಚಿನ್ನದ ಪದಕವನ್ನು ಸಹ ಪಡೆದಿದರು. ಅವರು ಲಕ್ನೋ ವಿಶ್ವವಿದ್ಯಾಲಯ ಮತ್ತು ಕೇಂಬ್ರಿಡ್ಜ್ನಲ್ಲಿ ಕಾನೂನು ಕಲಿತರು, ಕೇಂಬ್ರಿಡ್ಜ್ನಲ್ಲಿ ಉಳಿದುಕೊಂಡಾಗ, ಅವರು ಟ್ಯಾಗೋರ್ ಸೊಸೈಟಿಯ ಖಜಾಂಚಿ ಮತ್ತು ಕೇಂಬ್ರಿಡ್ಜ್ ಮಜ್ಲಿಸ್, ಅವರು ಲಿಂಕನ್ ಇನ್ ನಿಂದ ಲಾದಲ್ಲಿ ಬ್ಯಾರಿಸ್ಟರ್ ಪದವಿ ಪಡೆದರು, ಅವರನ್ನು ಗೌರವ ಬ್ಯಾನ್ಸೆಟರ್ ಮತ್ತು ಮಾಸ್ಟರ್ ಆಗಿ ಆಯ್ಕೆ ಮಾಡಲಾಯಿತು, ಫಿಟ್ಜ್ವಿಲಿಯಂ ಕಾಲೇಜಿನ ಗೌರವ ಫೆಲೋ. ಕೇಂಬ್ರಿಡ್ಜ್ ವರ್ಲ್ಡ್ ಸ್ಕೂಲ್ ಅವರಿಗೆ ಗೌರವ ಡಾಕ್ಟರ್ ಆಫ್ ಲಾ ನೀಡಿ ಗೌರವಿಸಿದೆ. ಅವರು ವಿಮಲಾ ಶರ್ಮಾ ಅವರೊಂದಿಗೆ ಮದುವೆಯಾದರು. ರಾಜಕೀಯ ಜೀವನ 1960 ರ ದಶಕದಲ್ಲಿ ಶರ್ಮಾ ಅವರು ಕಾಂಗ್ರೆಸ್ ಪಕ್ಷದ ನಾಯಕತ್ವಕ್ಕಾಗಿ ಇಂದಿರಾ ಗಾಂಧಿಯವರ ಉದ್ದೇಶವನ್ನು ಬೆಂಬಲಿಸಿದರು. ಅವರು 1972 ರಲ್ಲಿ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದರು ಮತ್ತು ಕಲ್ಕತ್ತಾದಲ್ಲಿ ನಡೆದ ಎಐಸಿಸಿ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು. 1974 ರಿಂದ ಅವರು ಕೇಂದ್ರ ಸಚಿವ ಸಂಪುಟದಲ್ಲಿ 197477ರವರೆಗೆ ಸಂವಹನ ಸಚಿವರಾಗಿ ಸೇವೆ ಸಲ್ಲಿಸಿದರು. 1971 ಮತ್ತು 1980 ರಲ್ಲಿ ಅವರು ಭೋಪಾಲ್ನಿಂದ ಲೋಕಸಭಾ ಸ್ಥಾನವನ್ನು ಗೆದ್ದರು. ನಂತರ, ಅವರಿಗೆ ವಿವಿಧ ವಿಧ್ಯುಕ್ತ ಹುದ್ದೆಗಳನ್ನು ನೀಡಲಾಯಿತು. 1984 ರಲ್ಲಿ ಅವರು ಭಾರತೀಯ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದರು, ಮೊದಲು ಆಂಧ್ರಪ್ರದೇಶದಲ್ಲಿ. ಈ ಸಮಯದಲ್ಲಿ, ಅವರ ಮಗಳು ಗೀತಾಂಜಲಿ ಮಾಕೆನ್ ಮತ್ತು ಅಳಿಯ ಲಲಿತ್ ಮಾಕೆನ್, ಸಂಸತ್ತಿನ ಯುವ ಸದಸ್ಯ ಮತ್ತು ಭರವಸೆಯ ರಾಜಕೀಯ ನಾಯಕರಾಗಿದ್ದು, ಸಿಖ್ ಉಗ್ರರಿಂದ ಕೊಲ್ಲಲ್ಪಟ್ಟರು. 1985 ರಲ್ಲಿ, ಅವರು ಭಾರತ ಸರ್ಕಾರ ಮತ್ತು ಸಿಖ್ ಉಗ್ರರ ನಡುವಿನ ಹಿಂಸಾಚಾರದ ಸಮಯದಲ್ಲಿ ಆಂಧ್ರಪ್ರದೇಶವನ್ನು ತೊರೆದು ಪಂಜಾಬ್ ರಾಜ್ಯಪಾಲರಾದರು, ಉಗ್ರರಲ್ಲಿ ಹಲವರು ಪಂಜಾಬಿನಲ್ಲಿ ವಾಸಿಸುತ್ತಿದ್ದರು. ಅವರು 1986 ರಲ್ಲಿ ಪಂಜಾಬ್ ತೊರೆದು ಮಹಾರಾಷ್ಟ್ರದಲ್ಲಿ ಅಂತಿಮ ರಾಜ್ಯಪಾಲರಾದರು. ಅವರು 1987 ರವರೆಗೆ ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದರು. 5 ವರ್ಷಗಳ ಅವಧಿಗೆ ಭಾರತದ ಎಂಟನೇ ಉಪಾಧ್ಯಕ್ಷರಾಗಿ ಮತ್ತು ರಾಜ್ಯಸಭೆಯ ಅಧ್ಯಕ್ಷರಾಗಿ ಆಯ್ಕೆಯಾದರು. ಶರ್ಮಾ ಸಂಸತ್ತಿನ ಮಾನದಂಡಗಳಿಗೆ ಅಂಟಿಕೊಳ್ಳುವವರು ಎಂದು ಪ್ರಸಿದ್ಧಿ ಪಡೆದಿದ್ದರು. ಅವರು ರಾಜ್ಯಸಭೆಯಲ್ಲಿ, ಸದಸ್ಯರು ರಾಜಕೀಯ ವಿಷಯದ ಬಗ್ಗೆ ಗದ್ದಲ ಮಾಡಿದಾಗ ಮನನೊಂದು ಕಣ್ಣೀರು ಹಾಕಿದರು ಎಂದು ತಿಳಿದುಬಂದಿದೆ. ಅವರ ದುಃಖವು ಮತ್ತು ಕಣ್ಣೀರು ಸಭೆಯನ್ನು ಹತೋಟಿಗೆ ತಂದಿತು, ಸಭೆಯ ನೆಡವಳಿಕೆಗೆ ಹಿಂತಿರುಗಿಸಿತು. ಕಾರ್ಯನಿರ್ವಹಿಸಿದ ಹುದ್ದೆಗಳು ೧೯೪೦ರಲ್ಲಿ ರಾಜಕೀಯ ಪ್ರವೇಶ . ಭಾರತ ರಾಷ್ಟ್ರೀಯ ಕಾಂಗ್ರೆಸ್ನ ಸದಸ್ಯ. ೧೯೫೨ರಿಂದ ೧೯೫೬ರವರೆಗೆ ಮಧ್ಯಪ್ರದೇಶ ರಾಜ್ಯದಲ್ಲಿ ಮುಖ್ಯಮಂತ್ರಿ. ೧೯೭೨ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರು. ೧೯೭೪ರಿಂದ ೧೯೭೭ರವರೆಗೆ ಕೇಂದ್ರಸರ್ಕಾರದಲ್ಲಿ ವಾರ್ತಾಮಂತ್ರಿ. ೧೯೮೪ರಲ್ಲಿ ಆಂಧ್ರಪ್ರದೇಶ ರಾಜ್ಯದ ರಾಜ್ಯಪಾಲ. ೧೯೮೫ರಲ್ಲಿ ಪಂಜಾಬ್ ರಾಜ್ಯದ ರಾಜ್ಯಪಾಲ. ೧೯೮೬ರಲ್ಲಿ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ. ೧೯೮೭ರಲ್ಲಿ ಭಾರತದ ೮ನೇ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾದರು. ೧೯೯೨ರಲ್ಲಿ ೯ನೇ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಅಧ್ಯಕ್ಷರಾಗಿ ಚುನಾವಣೆ ಶರ್ಮಾ ಅವರು 1992 ರವರೆಗೆ ರಾಷ್ಟ್ರದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ನಂತರ ಜಾರ್ಜ್ ಗಿಲ್ಬರ್ಟ್ ಸ್ವೆಲ್ ಅವರನ್ನು ಸೋಲಿಸಿ ಅವರು ರಾಷ್ಟ್ರದ ಅಧ್ಯಕ್ಷರಾಗಿ ಆಯ್ಕೆಯಾದರು. ಅವರು ಆದ್ಯಕ್ಷೀಯ ಚುನಾವಣಾ ಕಾಲೇಜಿನಲ್ಲಿ 66% ಮತಗಳನ್ನು ಪಡೆದರು. ಅವರು ಅಧ್ಯಕ್ಷರಾಗಿ ಕಳೆದ ವರ್ಷಗಳಲ್ಲಿ, ಮೂವರು ಪ್ರಧಾನ ಮಂತ್ರಿಗಳ ಪ್ರಮಾಣ ವಚನ ಸ್ವೀಕರಿಸುವ ಜವಾಬ್ದಾರಿಯನ್ನು ಅವರು ವಹಿಸಿದರು. ಶಂಕರ್ ದಯಾಳ್ ಶರ್ಮಾ (19181999) 9 ನೇ ಅಧ್ಯಕ್ಷರು: ಪಕ್ಷ:ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ) 1992 25 ಜುಲೈ ರಿಂದ 1992, 25 ಜುಲೈ 1997 ವರೆಗೆ 60 ತಿಂಗಳು.ಅವರು ಎರಡನೇ ಬಾರಿಗೆ ರಾಷ್ಟ್ರಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಲಿಲ್ಲ. ಡಾ.ಶಂಕರ್ ದಯಾಳ್ ಶರ್ಮಾ ಚಿನ್ನದ ಪದಕ ಡಾ. ಶಂಕರ್ ದಯಾಳ್ ಶರ್ಮಾ ಚಿನ್ನದ ಪದಕವನ್ನು ಎಲ್ಲಾ ಪ್ರತಿಷ್ಠಿತ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು 1994 ರಲ್ಲಿ ಶಂಕರ್ ದಯಾಳ್ ಶರ್ಮಾ ಅವರಿಂದ ಪಡೆದ ದತ್ತಿಗಳಿಂದ ರಚಿಸಲಾಯಿತು. ಪಾತ್ರ, ನಡವಳಿಕೆ ಮತ್ತು ಶೈಕ್ಷಣಿಕ ಸಾಧನೆ, ಪಠ್ಯೇತರ ಚಟುವಟಿಕೆಗಳು ಮತ್ತು ಸಾಮಾಜಿಕ ಸೇವೆ ಸೇರಿದಂತೆ ಸಾಮಾನ್ಯ ಪ್ರಾವೀಣ್ಯತೆಯ ದೃಷ್ಟಿಯಿಂದ ಪದವಿ ಪಡೆದ ವಿದ್ಯಾರ್ಥಿಗೆ ಈ ಪದಕವನ್ನು ನೀಡಲಾಗುತ್ತದೆ. ಮರಣ ತಮ್ಮ ಜೀವನದ ಕೊನೆಯ ಐದು ವರ್ಷಗಳಲ್ಲಿ ಶರ್ಮಾ ಅನಾರೋಗ್ಯದಿಂದ ಬಳಲುತ್ತಿದ್ದರು. 26 ಡಿಸೆಂಬರ್ 1999 ರಂದು, ಅವರು ಭಾರೀ ಹೃದಯಾಘಾತದಿಂದ ಬಳಲುತ್ತಿದ್ದರು ಮತ್ತು ಅವರನ್ನು ನವದೆಹಲಿಯ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರು ನಿಧನರಾದರು. ಅವರನ್ನು ಕರ್ಮ ಭೂಮಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಶರ್ಮಾ ಅವರ ಮೊದಲ ಹೆಂಡತಿಯಿಂದ ಅವರ ಮಗ ಸತೀಶ್ ದಯಾಳ್ ಶರ್ಮಾ ಮತ್ತು ಅವರ ಎರಡನೇ ಪತ್ನಿ ಶ್ರೀಮತಿ ಅವರಿಂದ ಮಗ ಅಶುತೋಷ್ ದಯಾಳ್ ಶರ್ಮಾ ಇದ್ದಾರೆ. ವಿಮಲಾ ಶರ್ಮಾ. ಜುಲೈ 31, 1985 ರಂದು ಪಶ್ಚಿಮ ದೆಹಲಿಯ ಮಾಕೆನ್ ಅವರ ಕೀರ್ತಿ ನಗರ ನಿವಾಸದ ಹೊರಗೆ ಖಲಿಸ್ತಾನಿ ಉಗ್ರಗಾಮಿಗಳಾದ ಹರ್ಜಿಂದರ್ ಸಿಂಗ್ ಜಿಂದಾ, ಸುಖದೇವ್ ಸಿಂಗ್ ಸುಖಾ ಮತ್ತು ರಂಜಿತ್ ಸಿಂಗ್ ಗಿಲ್ ಅಲಿಯಾಸ್ ಕುಕ್ಕಿ ಅವರ ಪತಿ ಕಾಂಗ್ರೆಸ್ ಸಂಸದ ಲಲಿತ್ ಮಾಕೆನ್ ಅವರ ಪುತ್ರಿ ಗೀತಾಂಜಲಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು. ಸಾಹಿತ್ಯಿಕ ಕೊಡುಗೆಗಳು 1970 ರ ದಶಕದಲ್ಲಿ ಶರ್ಮಾ ಕುರಾನ್ ಬಗ್ಗೆ ಒಂದು ಕವಿತೆಯನ್ನು ಬರೆದಿದ್ದರು, ಇದು ಭಾರತ ಮತ್ತು ಪಾಕಿಸ್ತಾನದ ಹಿಂದಿ ಉರ್ದು ಮಾತನಾಡುವ ಮುಸ್ಲಿಮರಲ್ಲಿ ಹೆಚ್ಚು ಗೌರವಿಸಲ್ಪಟ್ಟಿದೆ. ಕವಿತೆಯ ಪಠ್ಯ ಇತರ ಸಾಹಿತ್ಯದ ಕೊಡುಗೆಗಳು ಕಾಂಗ್ರೆಸ್ ಅಪ್ರೋಚ್ ಟು ಇಂಟರ್ನ್ಯಾಷನಲ್ ಅಫೇರ್ಸ್ ಕ್ರಾಂತಿ ದೃಷ್ಟ ರೂಲ್ ಆಫ್ ಲಾ ಮತ್ತು ಪೋಲಿಸ್ ಪಾತ್ರ ಜವಾಹರಲಾಲ್ ನೆಹರು ಆಯ್ದ ಭಾಷಣಗಳು ಸೆಕ್ಯುಲರಿಸಂ ಇನ್ ದಿ ಇಂಡಿಯನ್ ಎಥೋಸ್ ಪ್ರಖ್ಯಾತ ಭಾರತೀಯರು ಹೊರೈಸನ್ಸ್ ಆಫ್ ಇಂಡಿಯನ್ ಎಜುಕೇಶನ್ ಉತ್ತಮ ಭವಿಷ್ಯಕ್ಕಾಗಿ ಡೆಮಾಕ್ರಟಿಕ್ ಪ್ರಕ್ರಿಯೆ ಆಸ್ಪೆಕ್ಟ್ಸ್ ಆಫ್ ಇಂಡಿಯನ್ ಥಾಟ್ ಟುವರ್ಡ್ಸ್ ಎ ನ್ಯೂ ಇಂಡಿಯಾ ಐಡಿಯಾಸ್, ಥಾಟ್ಸ್ ಮತ್ತು ಇಮೇಜಸ್ ಆಯ್ದ ಭಾಷಣಗಳು ಅಭಿವೃದ್ಧಿಯ ಹೊಸ ನಿರ್ದೇಶನಗಳು ಅವರ್ ಹೆರಿಟೇಜ್ ಆಫ್ ಹ್ಯೂಮನಿಸಂ ಹಮಾರೆ ಪಾತ್ ಪ್ರದರ್ಶಕ್ (ಹಿಂದಿ) ದೇಶಮಣಿ (ಹಿಂದಿ) ಹಮಾರೆ ಚಿಂತನ್ ಕಿ ಮೂಲ್ ಧಾರಾ (ಹಿಂದಿ) ಹಮಾರಿ ಸಂಸ್ಕೃತ ಧಾರೋಹರ್ (ಹಿಂದಿ) ಚೇತನಾ ಕೆ ಸ್ರೋಟ್ (ಹಿಂದಿ) ಹಮಾರೆ ಪ್ರೇರಣಾ ಪಂಜ್ (ಹಿಂದಿ) ಪ್ರಗತಿ ಕೆ ಪರಿಧೃಶ್ಯ (ಹಿಂದಿ) ಶಿಕ್ಷ ಕೆ ಆಯಮ್ (ಹಿಂದಿ) ಬೆಹೆತಾರ್ ಭವಿಶ್ಯ ಕೆ ಲಿಯೆ (ಹಿಂದಿ) ಭಾರತೀಯ ಚಿಂತನ್ (ಹಿಂದಿ) ಲೋಕಂತ್ರ ಕಿ ಪ್ರಕ್ರಿಯಾ (ಹಿಂದಿ) ಏಕತ್ವಾ ಕೆ ಮೂಲ್ (ಹಿಂದಿ) ಪಂಡಿತ್ ಜವಾಹರಲಾಲ್ ನೆಹರು (ಹಿಂದಿ) ಮಂಜುಷಾ (ಹಿಂದಿ) ಸಂಪಾದಕೀಯ ನಿಯೋಜನೆಗಳು: ಲಕ್ನೋ ಲಾ ಜರ್ನಲ್ (19411943) ಲೈಟ್ ಅಂಡ್ ಲರ್ನಿಂಗ್ (19421943) ಇಲ್ಮ್ಒನೂರ್ (ಉರ್ದು) ಜ್ಯೋತಿ (ಹಿಂದಿ) ಸಮಾಜವಾದಿ ಭಾರತ (19711974) ಪರಿವಿಡಿ ಉಲ್ಲೇಖ ಭಾರತದ ರಾಷ್ಟ್ರಪತಿಗಳು
ಫಕ್ರುದ್ದೀನ್ ಅಲಿ ಅಹ್ಮದ್ (೧೩ ಮೇ ೧೯೦೫ ೧೧ ಫ಼ೆಬ್ರುವರಿ ೧೯೭೭) ೧೯೭೪ ೧೯೭೭ ಅವಧಿಯಲ್ಲಿ ಭಾರತದ ೫ನೆಯ ರಾಷ್ಟ್ರಪತಿಗಳಾಗಿದ್ದರು. ಭಾರತದ ರಾಷ್ಟ್ರಪತಿಗಳು ೧೯೦೫ ಜನನ ೧೯೭೭ ನಿಧನ
ಡಾ. ಮುರಿಗೆಪ್ಪ ಚನ್ನವೀರಪ್ಪ ಮೋದಿ (ಡಾ. ಎಂ ಸಿ ಮೋದಿ ) (ಅಕ್ಟೋಬರ್ ೦೪, ೧೯೧೬ನವೆಂಬರ್ ೧೧, ೨೦೦೫) ಭಾರತದ ಪ್ರಖ್ಯಾತ ನೇತ್ರತಜ್ಞರಲ್ಲೊಬ್ಬರು. ನೇತ್ರಚಿಕಿತ್ಸೆಯಲ್ಲಿ ಅವರ ಸಾದನೆ ಅನನ್ಯವಾಗಿದೆ. ತಮ್ಮ ಅರವತ್ತು ವರ್ಷಕ್ಕಿಂತ ಮೇಲ್ಪಟ್ಟ ವೃತ್ತಿ ಜೀವನದಲ್ಲಿ ಇವರು ಸುಮಾರು ೭ ಲಕ್ಷಕ್ಕಿಂತ ಹೆಚ್ಚು ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆ ಮಾಡಿ ಗಿನ್ನಿಸ್ ದಾಖಲೆ ಸ್ಥಾಪಿಸಿದ್ದಾರೆ. ಭಾರತ ಸರ್ಕಾರವು ಡಾ. ಮೋದಿಯವರನ್ನು ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳಿಂದ ಸನ್ಮಾನಿಸಿದೆ. ಜನನ, ವಿದ್ಯಾಭ್ಯಾಸ, ವೃತ್ತಿ ಜೀವನ ಮುರಿಗೆಪ್ಪ ಚನ್ನವೀರಪ್ಪ ಮೋದಿಯವರ ಜನ್ಮ ಅಕ್ಟೋಬರ್ ೪ ೧೯೧೬ರಲ್ಲಿ ಬಾಗಲಕೋಟೆಯ ಬೀಳಗಿ ಗ್ರಾಮದಲ್ಲಾಯಿತು. ಮೋದಿಯವರು ಜಮಖಂಡಿಯ ಪಿ ಬಿ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ನಂತರ ಬೆಳಗಾವಿ ಆಯುರ್ವೇದ ಕಾಲೇಜಿನಲ್ಲಿ ಓದಿ ಕೆಬಿಎಚ್ಬಿ ಕಣ್ಣಿನ ಆಸ್ಪತ್ರೆ ಹಾಗೂ ರಾಮವಾಡಿ ಕಣ್ಣಿನ ಆಸ್ಪತ್ರೆಯಲ್ಲಿ ವೈದ್ಯ ಶಿಕ್ಷಣ ಪಡೆದರು. ಬಡತನದ ನಡುವೆಯೂ ವಿದ್ಯಾರ್ಜನೆ ಮುಂದುವರೆಸಿದ ಮೋದಿಯವರು ಕೊಲಂಬಿಯಾ ಮತ್ತು ನ್ಯೂಯಾರ್ಕ್ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿಗಳಿಸಿದರು. ಬೆಳಗಾವಿಯಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿ ನಂತರ ದಾವಣಗೆರೆಯಲ್ಲಿ ನೆಲೆಸಿದರು. ೧೯೪೨ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಮಹಾತ್ಮ ಗಾಂಧಿಯವರ ಭಾಷಣದಿಂದ ಪ್ರೇರಿತರಾಗಿ ಕೆಲವೇ ಸ್ವಯಂಸೇವಕರ ಜತೆ ಹಳ್ಳಿಗಳಿಗೆ ಹೋಗಿ ರೋಗಿಗಳಿಂದ ಹಣ ಪಡೆಯದೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುತ್ತಿದ್ದರು. ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಮತ್ತು ಇತರ ಹಲವಾರು ರಾಜ್ಯಗಳಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಿ ಉಚಿತ ತಪಾಸಣೆ ಮತ್ತು ಚಿಕಿತ್ಸೆ ಮಾಡುತ್ತಿದ್ದರು. ಕಣ್ಣಿನ ಪೊರೆ (ಕ್ಯಟರಾಕ್ಟ್) ತೆಗೆಯುವ ಶಸ್ತ್ರ ಚಿಕಿತ್ಸೆಯಲ್ಲಿ ಪರಿಣಿತಿ ಹೊಂದಿದ್ದ ಡಾ.ಮೋದಿಯವರು ಪ್ರತಿ ಗ್ರಾಮದಲ್ಲೂ ಶಾಲೆ, ಕಾಲೇಜುಗಳನ್ನು ತೆಗೆದುಕೊಂಡು ಅದನ್ನೇ ಚಿಕಿತ್ಸಾ ಕೇಂದ್ರವಾಗಿ ಪರಿವರ್ತಿಸಿ ಸತತವಾಗಿ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರು. ರಷ್ಯಾ ಮತ್ತು ಅಮೇರಿಕ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲೂ ಸಹ ತಮ್ಮ ಸೇವೆ ಸಲ್ಲಿಸಿ ಗೌರವಗಳಿಗೆ ಪಾತ್ರರಾಗಿದ್ದರು. ದಾವಣಗೆರೆ, ಬೆಂಗಳೂರು ಮತ್ತು ಬೆಳಗಾವಿಗಳಲ್ಲಿ ಕಣ್ಣು ಚಿಕಿತ್ಸಾಲಯಗಳನ್ನು ಸ್ಥಾಪಿಸಿದ ಶ್ರೀಯುತರು ತಮ್ಮ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಸೇವೆ ಒದಗಿಸುತ್ತಿದ್ದರು. ಸಾಮೂಹಿಕ ನೇತ್ರ ಚಿಕಿತ್ಸೆ ಹಾಗೂ ಸಂಚಾರಿ ಘಟಕವನ್ನು ತೆರೆದ ಮೊದಲ ವೈದ್ಯ ಎಂಬ ಖ್ಯಾತಿಯನ್ನು ಗಳಿಸಿದ್ದ ಮೋದಿಯವರು ತಮ್ಮ ಸ್ವಂತ ಹಣವನ್ನು ವ್ಯಯಿಸಿ ಬಡಜನರ ಸೇವೆ ಮಾಡುತ್ತಿದ್ದರು. ಕಣ್ಣಿನ ಆರೋಗ್ಯದ ಕುರಿತು ಅವರ ಮನಸ್ಸು ಎಷ್ಟು ತುಡಿಯುತ್ತಿತ್ತೆಂದರೆ, ರೈಲಿನಲ್ಲಿ ಪ್ರಯಾಣ ಮಾಡುವಾಗಲೂ ಅಲ್ಲಿನ ಪ್ರಯಾಣಿಕರ ಕಣ್ಣುಗಳನ್ನು ಉಚಿತವಾಗಿ ಪರೀಕ್ಷಿಸಿ ಸಲಹೆ ನೀಡುತ್ತಿದ್ದರು. ಡಾ. ಮೋದಿಯವರೇ ಹೇಳುತ್ತಿದ್ದ ಹಾಗೆ ಮೊದ ಮೊದಲು ರೋಗಿಗಳು ಇವರ ಶಿಬಿರಕ್ಕೆ ಬರಲು ಹಿಂಜರಿಯುತ್ತಿದ್ದರು. ಆಪರೇಷನ್ ಪದ ಕೇಳಿ ಶಿಬಿರಕ್ಕೆ ಬಂದವರಲ್ಲಿ ಕೆಲವರು ಓಡಿ ಹೋಗುತ್ತಿದ್ದರು. ಆದರೆ ಕ್ರಮೇಣ ಶಸ್ತ್ರ ಚಿಕಿತ್ಸೆಗೊಳಗಾಗಿ ದೃಷ್ಟಿಯನ್ನು ಮತ್ತೆ ಪಡೆದವರನ್ನು ಕಂಡು ಶಿಬಿರಕ್ಕೆ ಬರುವವರು ಹೆಚ್ಚಾದರು. ಅವರ ಸೇವೆಯನ್ನು ಗುರುತಿಸಿದ ಅಂದಿನ ಕರ್ನಾಟಕ ಸರ್ಕಾರ, ಏಕವ್ಯಕ್ತಿಯ ಯುದ್ಧ ( ) ಎಂಬ ಒಂದು ಕಿರು ದೃಶ್ಯ ದಾಖಲೆಯನ್ನು ಎಂ.ಎನ್. ಸತ್ಯು ಅವರ ನಿರ್ದೇಶನದಲ್ಲಿ ತಯಾರಿಸಿತ್ತು, ಹೀಗೆ ಲಕ್ಷಗಟ್ಟಲೆ ಕುರುಡರಿಗೆ ದೃಷ್ಟಿ ನೀಡಿದ ಆ ಮಹಾನ್ ವ್ಯಕ್ತಿಯ ಜ್ಞಾಪಕಾರ್ಥ ದಾವಣಗೆರೆಯಲ್ಲಿ ಮತ್ತು ಬೆಂಗಳೂರಿನಲ್ಲಿ ಮೋದಿ ಕಣ್ಣಿನ ಆಸ್ಪತ್ರೆಗಳಿವೆ. ಗಿನ್ನಿಸ್ ದಾಖಲೆ ಮೋದಿಯವರು ತಿರುಪತಿಯಲ್ಲಿ ಒಂದೆ ದಿನದಲ್ಲಿ ೮೩೩ ಶಸ್ತ್ರ ಚಿಕಿತ್ಸೆ ಮಾಡಿ ವಿಶ್ವ ದಾಖಲೆ ಸ್ಥಾಪಿಸಿದರು. ಒಟ್ಟಾರೆ ೭ ಲಕ್ಷಕ್ಕೂ ಹೆಚ್ಚು ಕಣ್ಣಿನ ಶಸ್ತ್ರ ಚಿಕಿತ್ಸೆ ಕೂಡ ಒಂದು ವಿಶ್ವ ದಾಖಲೆ. ಇವುಗಳನ್ನು ಗಿನ್ನಿಸ್ ದಾಖಲೆಗಳ ಪುಸ್ತಕದಲ್ಲಿ ಸೇರಿಸಲಾಗಿದೆ. ಮೋದಿಯವರು ಎಲ್ಲಾ ಪ್ರಶಸ್ತಿ ಪುರಸ್ಕಾರಗಳಿಂದ ಬಂದ ಹಣವನ್ನು ಬಡವರಿಗಾಗಿ ವ್ಯಯಿಸಿದ್ದಾರೆ. ಮೋದಿಯವರು ಕೆಲಕಾಲ ಕರ್ನಾಟಕ ವಿಧಾನ ಮಂಡಲದ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು. ಮೋದಿಯವರು ನವೆಂಬರ್ ೧೧ ೨೦೦೫ರಲ್ಲಿ, ತಮ್ಮ ೯೦ನೆ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ತಮ್ಮ ಕಣ್ಣುಗಳನ್ನು ಮರಣೋತ್ತರವಾಗಿ ದಾನಮಾಡಿದ್ದಾರೆ. ಅವರ ಪುತ್ರ ಡಾ. ಅಮರನಾಥ ಮೋದಿ ಸಹ ನೇತ್ರ ತಜ್ಞರಾಗಿದ್ದಾರೆ. ಪ್ರಶಸ್ತಿಗಳು, ಸನ್ಮಾನಗಳು ೧೯೫೬ ರಲ್ಲಿ ಪದ್ಮಶ್ರೀ ಕೇಂದ್ರ ಸರಕಾರ, ಇವರ ಸೇವೆ ಮತ್ತು ಸಾಧನೆಗಳನ್ನು ಶ್ಲಾಘಿಸಿ ನೀಡಿದ ಪ್ರಶಸ್ತಿ. ೧೯೬೮ ರಲ್ಲಿ ಪದ್ಮಭೂಷಣ ಪ್ರಶಸ್ತಿ. ಮೈಸೂರು, ಕರ್ನಾಟಕ ಮತ್ತು ಪುಣೆ ವಿಶ್ವವಿದ್ಯಾಲಯಗಳು ಶ್ರೀಯುತರಿಗೆ ಗೌರವ ಡಾಕ್ಟರೇಟ್ ನೀಡಿವೆ. ನೈಟ್ ಆಫ್ ಬ್ಲೈಂಡ್, ಅಂಬಾಸೆಡರ್ ಆಫ್ ಗುಡ್ ವಿಲ್ ಮತ್ತು ಇತರ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿ, ಪುರಸ್ಕಾರಗಳು ಅವರಿಗೆ ಸಂದಿವೆ. ಕರ್ನಾಟಕ ಸರ್ಕಾರ ಡಾ. ಎಂ ಸಿ ಮೋದಿಯವರನ್ನು ರಾಜ್ಯೋತ್ಸವ ಪ್ರಶಸ್ತಿಯಿಂದ ಗೌರವಿಸಿದೆ. ನಿಧನ ಡಾ.ಎಂ.ಸಿ.ಮೋದಿಯವರು ೨೦೦೫ ನವೆಂಬರ್ ೧೧ರಂದು ನಿಧನರಾದರು. ಹೆಚ್ಚಿನ ಓದಿಗೆ ಬೆಳಕಿನ ಹರಿಕಾರ ಉಲ್ಲೇಖಗಳು ಎಂ.ಸಿ.ಮೋದಿ ವೈದ್ಯರು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ೧೯೧೬ ಜನನ ೨೦೦೫ ನಿಧನ
ಗಿನ್ನಿಸ್ ದಾಖಲೆಗಳ ಪುಸ್ತಕ (ಗಿನ್ನಿಸ್ ದಾಖಲೆಗಳು ಅಥವಾ ಗಿನ್ನಿಸ್ ವಿಶ್ವ ದಾಖಲೆಗಳ ಪುಸ್ತಕ) ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ವಿಶ್ವ ದಾಖಲೆಗಳ ಸಂಗ್ರಹವಿರುವ ಪುಸ್ತಕ. ಪ್ರತಿ ವರ್ಷ ಪ್ರಕಟವಾಗುವ ಈ ಪುಸ್ತಕದಲ್ಲಿ ಮನುಷ್ಯ ಸಾಧನೆಗಳಲ್ಲದೆ (ಉದಾ. ಅತ್ಯಂತ ಹೆಚ್ಚು ಕಾಲ ಜೀವಿತ ವ್ಯಕ್ತಿ), ಪ್ರಾಕೃತಿಕ ವಿಸ್ಮಯಗಳೂ, ಅತಿರೇಕಗಳೂ (ಉದಾ. ಅತ್ಯಂತ ಎತ್ತರದ ಜಲಪಾತ) ಕೂಡ ದಾಖಲಾಗತ್ತದೆ. ಇತಿಹಾಸ ಗಿನ್ನಿಸ್ ಬ್ರೂವರಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹ್ಯು ಬೀವರ್ ಮತ್ತು ಅವರ ಬೇಟೆಯಾಟದ ಸಹಚರಿಗಳಲ್ಲಿ ಅತ್ಯಂತ ವೇಗವಾಗಿ ಹಾರುವ ಬೇಟೆಯ ಪಕ್ಷಿ ಯಾವುದೆಂದು ಚರ್ಚೆ ನೆಡೆಯಿತು. ಯಾವ ಪುಸ್ತಕದಲ್ಲಿಯೂ ಇದರ ಬಗ್ಗೆ ವಿವರಗಳು ಮತ್ತು ದಾಖಲೆಗಳು ಸಿಗದ ಕಾರಣ, ಗಿನ್ನಿಸ್ ಬ್ರೂವರಿಯು ೧೯೫೫ರಲ್ಲಿ ಈ ತರಹದ ದಾಖಲೆಗಳ ಸಂಗ್ರಹವಿರುವ ಈ ಪುಸ್ತಕ ಹೊರತಂದಿತು. ರಾಸ್ಸ್ ಮತ್ತು ನೊರಿಸ್ಸ್ ಮೆಕ್ವಿರ್ಟರ್ ಅವಳಿಗಳು ಮತ್ತು ಆಗಿನ ಕಾಲದ ಕೆಲವು ಬ್ರಿಟೀಷ್ ಪತ್ರಕರ್ತರನ್ನೊಳಗೊಂಡ ಒಂದು ಸತ್ಯಶೋಧನಾ ಸಂಸ್ಥೆ ಈ ಪುಸ್ತಕಕ್ಕಾಗಿ ಸಂಶೋಧನೆ ನೆಡಸಿತು. ಪುಸ್ತಕ ಅನಿರೀಕ್ಷಿತವಾಗಿ ಜನಪ್ರಿಯವಾಗಿ, ತನ್ನ ಹೊಸ ಆವೃತ್ತಿಗಳು ಮತ್ತು ಮರು ಮುದ್ರಣಗಳಿಗೆ ನಾಂದಿ ಹಾಡಿತು. ಸ್ವಲ್ಪಕಾಲದ ನಂತರ ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ಕ್ರಿಸ್ಮಸ್ ಹಬ್ಬದ ಮಾರಟಕ್ಕೆ ಸರಿಹೊಂದುವಂತೆ ಹೊಸ ಆವೃತ್ತಿಗಳು ಬಿಡುಗಡೆಯಾಗ ತೊಡಗಿದವು. ಗಿನ್ನಿಸ್ ದಾಖಲೆಗಳ ಪುಸ್ತಕ ಜಗತ್ತಿನ ಅತಿ ಹೆಚ್ಚು ಮಾರಟವಾದ ಕೃತಿಸಾಮ್ಯತೆ ಪಡೆದ ಪುಸ್ತಕವೆಂದು ತನ್ನ ಪುಟಗಳಲ್ಲಿ ತನ್ನ ಹೆಸರನ್ನು ಸೇರಿಸಿಕೊಂದಿದೆ. ಗಿನ್ನಿಸ್ ದಾಖಲೆಗಳ ಪುಸ್ತಕವನ್ನಾಧಾರಿಸಿ ಹಲವಾರು ಪುಸ್ತಕಗಳು ಹಾಗು ದೂರದರ್ಶನ (ಟಿವಿ) ಕಾರ್ಯಕ್ರಮಗಳು ಹೊಮ್ಮಿವೆ. ಪ್ರಸ್ತುತವಾಗಿ ಈ ಪುಸ್ತಕದ ಮಾಲಿಕತ್ವವನ್ನು ಎಚ್ಐಟಿ ಎಂಟರ್ಟೈನಮೆಂಟ್ ಸಂಸ್ಥೆ ಹೊಂದಿದೆ. ದಾಖಲೆಗಳ ವಿಂಗಡನೆ ದಾಖಲೆಗಳ ಸಂಗ್ರಹಗಳನ್ನು ಹಲವು ವರ್ಗಗಳಲ್ಲಿ ವಿಂಗಡಿಸಲಾಗಿದೆ ಮತ್ತು ಪ್ರತಿ ವರ್ಷ ಹೊಸ ವರ್ಗಗಳ ಮತ್ತು ಉಪವರ್ಗಗಳ ಸೇರ್ಪಡೆಯಾಗುತ್ತಿವೆ. ಕೆಲವು ಮುಖ್ಯ ವರ್ಗಗಳು ಹೀಗಿವೆ. ಮನುಷ್ಯನ ದೇಹ (ಉದಾ. ಜಗತ್ತಿನ ಅತ್ಯಂತ ಕುಳ್ಳ ಮನುಷ್ಯ: ೫೭ ಸೆಂಟಿಮೀಟರ್ ಎತ್ತರದ ಭಾರತದ ಗುಲ್ ಮೊಹಮ್ಮದ್) ಅದ್ಭುತ ಸಾಧನೆಗಳು (ಉದಾ. ಅತಿ ಶೀಘ್ರ ಮೌಂಟ್ ಎವರೆಸ್ಟ್ ಆರೋಹಣ: ೮ ಗಂಟೆ ೧೦ನ ನಿಮಿಷದಲ್ಲಿ ಹತ್ತಿದ ನೇಪಾಳದ ಪೆಂಬ ದೊರ್ಜೀ ಶೇರ್ಪಾ) ಪ್ರಾಕೃತಿಕ ಅದ್ಭುತಗಳು (ಉದಾ. ಪ್ರಪಂಚದ ಅತಿ ದೊಡ್ಡ ಪರ್ವತ ಶ್ರೇಣಿ: ಹಿಮಾಲಯ ಪರ್ವತ ಶ್ರೇಣಿ) ವಿಜ್ಞಾನ ಮತ್ತು ತಂತ್ರಜ್ಞಾನ (ಉದಾ. ಚಂದ್ರನ ಮೇಲೆ ಮೊದಲು ಕಾಲಿಟ್ಟ ಮನುಷ್ಯ: ನೀಲ್ ಆರ್ಮ್ಸ್ಟ್ರಾಂಗ್) ಕಲೆ ಮತ್ತು ಮಾಧ್ಯಮಗಳು ಉದಾ. ಅತಿ ಹೆಚ್ಚು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ ಅಭಿನೇತ್ರಿ: ೪ ಪ್ರಶಸ್ತಿಗಳನ್ನು ಗೆದ್ದ ಕ್ಯಾಥರೀನ್ ಹೆಪ್ಬರ್ನ್) ಆಧುನಿಕ ಪ್ರಪಂಚ (ಉದಾ. ಪ್ರಪಂಚದ ಅತಿ ದೊಡ್ಡ ಮೊಬೈಲ್ ಫೋನ್ ಸಂಸ್ಥೆ: ವೊಡಾಫೋನ್) ಪ್ರವಾಸ ಮತ್ತು ಸಾಗಣೆ (ಉದಾ. ಅತಿ ಹೆಚ್ಚು ಮಾರಾಟವಾಗಿರುವ ವಾಹನ: ಟಯೋಟ ಸಂಸ್ಥೆಯ ಕರೋಲ ಕಾರು) ಕ್ರೀಡೆ ಮತ್ತು ಆಟೋಟಗಳು (ಉದಾ. ಕ್ರಿಕೆಟ್ ಟೆಸ್ಟ್ ಇನಿಂಗ್ಸ್ ನಲ್ಲಿ ಅತಿ ಹೆಚ್ಚು ವಯ್ಯಕ್ತಿಕ ಮೊತ್ತ: ಇಂಗ್ಲಾಂಡ್ ವಿರುದ್ಧ ವೆಸ್ಟ್ ಇಂಡೀಸ್ನ ಬ್ರಯಾನ್ ಲಾರ ಅವರ ಅಜೇಯ ೪೦೦) ನಿಖರತೆ ಮತ್ತು ವಿವಾದಗಳು ಈ ಪುಸ್ತಕದಲ್ಲಿ ಪ್ರಕಟಗೊಂಡಿರುವ ಸುಮಾರು ದಾಖಲೆಗಳು ನಿಖರವಾದ್ದದು, ಆದರೂ ಈ ಪುಸ್ತಕ ವಿವಾದಗಳಿಂದ ಹೊರತಾಗಿಲ್ಲ. ಕೆಲವು ದಾಖಲೆಗಳು ಸತ್ಯಕ್ಕೆ ದೂರವಾದವು ಎಂಬ ಆಪಾದನೆಗಳಿವೆ. ಜಪಾನಿನ ಶಿಗೆಚಿಯೊ ಇಜುಮಿ ಅತಿ ಹೆಚ್ಚು ವರ್ಷಗಳು ಜೀವಿಸಿದ ಪುರುಷ ಎಂದು ಗಿನ್ನಿಸ್ ದಾಖಲೆಗಳ ಪುಸ್ತಕ ಹೇಳುತ್ತದ ಆದರೆ ಕೆಲವರು ಇದು ಸುಳ್ಳು ದಾಖಲೆಗಳು ಸೃಷ್ಟಿಸಿ ಸಿದ್ಧಪಡಿಸಿರುವುದೆಂದು ವಾದಿಸುತ್ತಾರೆ. ಇತರ ಕೆಲವು ವಿವಾದಾತ್ಮಕ ದಾಖಲೆಗಳು ಹೀಗಿವೆ ಅಯ್ಪಲ್ ಸಂಸ್ಥೆಯ ಐಮ್ಯಾಕ್ ಗಣಕಯಂತ್ರ ಗ್ರಾಹಕ ಕೈಪಿಡಿ ಪ್ರಪಂಚದ ಅತಿ ಸಣ್ಣ ಗಣಕಯಂತ್ರ ಗ್ರಾಹಕ ಕೈಪಿಡಿ ಭಾರತದ ಲಡಾಖ್ನಲ್ಲಿರುವ ಖರದುಂಗ್ಲ ದಾರಿ ಪ್ರಪಂಚದ ಅತಿ ಎತ್ತರದ ವಾಹನ ಚಲಿಸಬಲ್ಲ ರಸ್ತೆ ನೈತಿಕ ವಿಷಯಗಳು ಮೊದಲು ಪ್ರಕಟವಾಗಿದ್ದ ಕೆಲವು ದಾಖಲೆಗಳನ್ನು ನಂತರ ನೈತಿಕ ಕಾರಣಗಳಿಂದ ಕೈ ಬಿಡಲಾಗಿವೆ. ತಮ್ಮ ಮತ್ತು ಇತರರ ಆರೋಗ್ಯ ಮತ್ತು ಸುರಕ್ಷತೆಯನ್ನು ಲೆಕ್ಕಿಸದೆ ಜನರು ಪುಸ್ತಕದಲ್ಲಿ ಪ್ರಸ್ತಾಪವಾಗಿರುವ ಅಪಾಯಕಾರಿ ದಾಖಲೆಗಳನ್ನು ಮುರಿಯುವ ಪ್ರಯತ್ನ ಮಾಡಬಹುದೆಂಬ ಕಾರಣದಿಂದ ಕೆಲವು ದಾಖಲೆಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ. ಉದಾ. ಅತಿ ಹೆಚ್ಚು ಭಾರವಾದ ಬೆಕ್ಕಿನ ದಾಖಲೆ ಮುರಿಯಲು ಜನರು ತಮ್ಮ ಬೆಕ್ಕುಗಳಿಗೆ ಅತಿಯಾಗಿ ತಿನ್ನಿಸಿ ಅದರ ಆರೋಗ್ಯ ಹಾಳು ಮಾಡಬಹುದು. ಅತ್ತಿ ಉದ್ದದ ಕತ್ತಿಯನ್ನು ಬಾಯಲ್ಲಿ ಇಳಿಸುವ ದಾಖಲೆ ಮುರಿಯಲು ಹೋಗಿ ಮಾರಣಾಂತಿಕ ಗಾಯ ಮಾಡಿಕೊಳ್ಳಬಹುದು. ಇತ್ತೀಚೆಗೆ ಜೀವಕ್ಕೆ ಹಾನಿಕರವಾಗಬಲ್ಲ ಕುಡಿತಕ್ಕೆ ಸಂಬಂಧಪಟ್ಟ ದಾಖಲೆಗಳ ಮತ್ತು ಮುಳ್ಳಿನ ಹಾಸಿನ ಮೇಲೆ ಮಲಗಿ ಭಾರ ಹೊರುವ ದಾಖಲೆಗಳನ್ನು ಕೈಬಿಡಲಾಗಿದೆ. ಬಾಹ್ಯ ಸಂಪರ್ಕ ಕೊಂಡಿಗಳು ಗಿನ್ನಿಸ್ ದಾಖಲೆಗಳ ಪುಸ್ತಕದ ಅಧಿಕೃತ ಅಂತರ್ಜಾಲ ತಾಣ ಮನೋರಂಜನೆ ಕಂಪನಿಗಳು ಬ್ರಿಟಿಷ್ ಕಂಪನಿಗಳು
ಗಾಯತ್ರಿ ಮೂಲತಃ ಸಂಸ್ಕೃತ ಪದವಾದ ಗಾಯತ್ರ ಪದದ ಸ್ತ್ರೀಲಿಂಗ ರೂಪ. ಈ ಪದವನ್ನು ಸಂಸ್ಕೃತದಲ್ಲಿ ಗಾಯಂತಮ್ ತ್ರಾಯತೇ ಯಸ್ಮಾತ್ ಇತಿ ಗಾಯತ್ರಾ ಎಂದು ಬಿಡಿಸುತ್ತಾರೆ. ಭಾಷಾಂತರಿಸಿದರೆ ಯಾವುದರ ಉಚ್ಚಾರದಿಂದ ಸಂಕಷ್ಟ ತೀರುವುದೊ ಅದೆ ಗಾಯತ್ರ ಎಂಬ ಅರ್ಥ ಮೂಡಿ ಬರುತ್ತದೆ. ಹಿಂದೂ ಧರ್ಮಾನುಯಾಯಿಗಳ ವಚನ ಲೇಖನಗಳಲ್ಲಿ ಮತ್ತು ಧರ್ಮ ಗ್ರಂಥಗಳಲ್ಲಿ ಈ ಪದವನ್ನು ಮೂರು ಸ್ವರೂಪದಲ್ಲಿ ಕಾಣಬಹುದು. ಗಾಯತ್ರೀ ಛಂದಸ್ಸು ೨೪ ಅಕ್ಷರಗಳ ತ್ರಿಪದಿ ಗಾಯತ್ರೀ ಮಂತ್ರ ಋಗ್ವೇದದಲ್ಲಿ ಮೊದಲು ಕಾಣಿಸಿಕೊಂಡು, ನಂತರ ಇತರ ವೇದೋಪನಿಷತ್ಗಳಲ್ಲಿ ಪ್ರಸ್ತಾಪವಿರುವ ಹಿಂದೂ ಧರ್ಮದ ಒಂದು ಪ್ರಮುಖ ಮಂತ್ರ. ಗಾಯತ್ರೀ ಛಂದಸ್ಸಿನಲ್ಲಿ ಬರೆದ ಯಾವುದೆ ಮಂತ್ರವನ್ನು ಗಾಯತ್ರೀ ಮಂತ್ರ ಎಂದು ಕರೆಯುವ ಪ್ರತೀತಿ ಕೂಡ ಇದೆ. ಗಾಯತ್ರೀ ದೇವಿ ವೇದಮಾತೆ ಮತ್ತು ದೇವಿ ಸರಸ್ವತಿಯ ಸ್ವರೂಪ. ವೇದದ ಪ್ರಖಾರ ದೇವಿ ಸನ್ಯಾರ ಅವತಾರ. ವಟುಗಳನ್ನು ಸಲಹುವಳು. ಗಾಯತ್ರೀ ಛಂದಸ್ಸು ಗಾಯತ್ರೀ ಛಂದಸ್ಸು ಸಾಲಿಗೆ ೮ ಅಕ್ಷರದಂತೆ ಒಟ್ಟು ೨೪ ಅಕ್ಷರಗಳಿರುವ ತ್ರಿಪದಿ. ಗಾಯತ್ರಿ ಮಂತ್ರ ಕೂಡ ಇದೇ ಛಂದಸ್ಸಿನಲ್ಲಿದೆ. ಋಗ್ವೇದದ ಶ್ಲೋಕಗಳಲ್ಲಿ ಸುಮಾರು ೧೪ ಭಾಗದಷ್ಟು ಈ ಛಂದಸ್ಸಿನಲ್ಲಿವೆ ಎಂದು ಅಂದಾಜು ಮಾಡಲಾಗಿದೆ. ಇತರ ವೈದಿಕ ಛಂದಸ್ಸುಗಳಂತೆ ಗಾಯತ್ರಿಯೂ ಉದಾತ್ತಾನುದಾತ್ತಸ್ವರಿತಳೆಂಬ ಸ್ವರಗಳೊಡನೆ ಹೇಳಲ್ಪಡುತ್ತದೆ. ಇದರ ಸಾಮಾನ್ಯ ಲಕ್ಷಣ ಹೀಗೆ: ೩ ಪಾದಗಳು: ಪಾದಕ್ಕೆ ೮ ಅಕ್ಷರಗಳು: ಪ್ರತಿಯೊಂದು ಪಾದವನ್ನು ೪ ಅಕ್ಷರಗಳ ೨ ಗಣಗಳನ್ನಾಗಿ ವಿಭಜಿಸಬಹುದು. ಹೀಗೆ ವಿಭಜಿಸಿದಾಗ 2ನೆಯ ಗಣದಲ್ಲಿ ೨ ಬಾರಿ ಹ್ರಸ್ವದೀರ್ಘಾಕ್ಷರಗಳ ಅನುಕ್ರಮವಾದ ವಿನ್ಯಾಸ (ೃ,ೃ) ಸಾಮಾನ್ಯವಾಗಿ ಕಂಡಬರುತ್ತದೆ. ಗಾಯತ್ರಿ ಸಂಬಂಧವಾದ ಇನ್ನೊಂದು ವೈಲಕ್ಷಣ್ಯವೆಂದರೆ, ಗಾಯತ್ರಿಯ ಒಂದು ಅಥವಾ ಒಂದಕ್ಕಿಂತ ಹೆಚ್ಚು ಪಾದಗಳನ್ನು ತ್ರಿಷ್ಟುಪ್, ಜಗತಿ ಮುಂತಾದವುಗಳ ಪಾದಗಳೊಡನೆ ಕೂಡಿಸಿರುವುದು. ಉದಾಹರಣೆಗೆ ಕಕುಭೋಷ್ಣಿಕ್ಗಾಯತ್ರಿ, ಜಗತಿ, ಗಾಯತ್ರಿ: ಪುರೋಷ್ಣಿಕ್ಜಗತಿ, ಗಾಯತ್ರಿ, ಗಾಯತ್ರಿ ಪರೋಷ್ಣಿಕ್ಗಾಯತ್ರಿ, ಗಾಯತ್ರಿ, ಜಗತಿ ೪ ಪಾದಗಳ ಬೃಹತಿ೧ ಜಗತಿ ೩ ಗಾಯತ್ರಿ, ೪ ಪಾದಗಳ ಪಂಕ್ತಿ೨ ಜಗತಿ ೨ ಗಾಯತ್ರಿ, ಇದೇ ರೀತಿಯಲ್ಲಿ ತ್ರಿಷ್ಟುಪ್ ಮತ್ತು ಗಾಯತ್ರಿಯ ಪಾದಗಳನ್ನೂ ಕೂಡಿಸಿ ಪುರಸ್ತಾಜ್ಜ್ಯೋತಿ (೧ ತ್ರಿ ೪ ಗಾ), ಮಧ್ಯೇಜ್ಜ್ಯೋತಿ (೨ ಗಾ ೧ ತ್ರಿ ೨ ಗಾ). ಉಪರಿಷ್ಟಾಜ್ಜ್ಯೋತಿ (೪ ಗಾ ೧ ತ್ರಿ) ಎಂಬುದಾಗಿ ಭೇದಗಳನ್ನು ಕಲ್ಪಿಸಿರುವುದೂ ಉಂಟು. ಗಾಯತ್ರೀ ಮಂತ್ರ ಗಾಯತ್ರೀ ಮಂತ್ರ (ಸಾವಿತ್ರ ಮಂತ್ರ ಎಂದೂ ಕರೆಯುವುದುಂಟು) ಹಿಂದೂ ಧರ್ಮದ ಅತಿ ಶ್ರೇಷ್ಠ ಮಂತ್ರಗಳಲ್ಲೊಂದು. ಈ ಮಂತ್ರದಲ್ಲಿ ಸವಿತೃ ದೇವನನ್ನು ಆವಾಹನೆ ಮಾಡಿರುವ ಕಾರಣದಿಂದ, ಈ ಮಂತ್ರವನ್ನು ಸಾವಿತ್ರ ಮಂತ್ರ ಎಂದು ಕೂಡ ಕರೆಯುತ್ತಾರೆ. ಗಾಯತ್ರೀ ಮಂತ್ರ ಬ್ರಹ್ಮರ್ಷಿ ವಿಶ್ವಾಮಿತ್ರನಿಂದ ದರ್ಶಿಸಲ್ಪಟ್ಟಿದೆ ಎಂದು ಕೆಲವರು ನಂಬುತ್ತಾರೆ. ಆದರೆ ಗಾಯತ್ರೀ ಮಂತ್ರ ಇರುವ ಋಗ್ವೇದವೂ ಸೇರಿದಂತೆ, ವೇದಗಳೆಲ್ಲ ಬ್ರಹ್ಮನ ಮುಖಾಂತರ ಹೊಮ್ಮಿದವು ಎಂಬುದು ಪ್ರಚಲಿತದಲ್ಲಿರುವ ಪುರಾಣ ಕಥೆ. ಉಪನಯನ ಸಂಸ್ಕಾರದಲ್ಲಿ ಉಪನೀತನಿಗೆ ಈ ಮಂತ್ರವನ್ನು ಉಪದೇಶಿಸುತ್ತಾರೆ. ಬ್ರಹ್ಮೋಪದೇಶ ರೂಪವಾದ ಈ ಮಂತ್ರದಿಂದ ಉಪನೀತ ವಿಪ್ರನಾಗುತ್ತಾನೆ. ಮನುಸ್ಮೃತಿಯಲ್ಲಿ ತಿಳಿಸಿರುವಂತೆ ಗಾಯತ್ರಿ ಸಕಲ ವೇದಗಳ ಸಾರವಾದುದು, ಪರಬ್ರಹ್ಮ ಸ್ವರೂಪವುಳ್ಳದ್ದು. ಓಂಕಾರಪೂರ್ವಕ ಸಂಧ್ಯಾಕಾಲಗಳಲ್ಲಿ ವೇದಮಾತೃವಾದ ಈ ಮಂತ್ರವನ್ನು ಜಪಿಸುವುದರಿಂದ ವೇದಪಠನ ಪುಣ್ಯ ಲಭಿಸುತ್ತದೆ, ಮಹಾಪಾತಕಗಳು ನಶಿಸುತ್ತವೆ. ವೈದಿಕ ಕಾಲದಿಂದಲೂ ಗಾಯತ್ರಿ ಮಂತ್ರ ಯಾವುದೆ ವರ್ಗ, ಜಾತಿ ಅಥವಾ ಲಿಂಗಕ್ಕೆ ಸೀಮಿತಪಟ್ಟಿಲ್ಲ ಯಾರು ಬೇಕಾದರು ಇದನ್ನು ಉಚ್ಚರಿಸಬಹುದು ಎಂಬುವುದು ಅನೇಕ ಧರ್ಮಶಾಸ್ತ್ರಜ್ಞರ ಅಭಿಪ್ರಾಯ. ಋಗ್ವೇದದದ ೩.೬೨.೧೦ನೆ (೩ನೆ ಮಂಡಲ, ೬೨ನೆ ಸೂಕ್ತ, ೧೦ನೆ ರಿಚ) ಮಂತ್ರವಾಗಿರುವ ಇದು, ಓಂ ಭೂರ್ಭುವಃ ಸ್ವಃ ಎಂಬ ಪೀಠಿಕೆ (ಯಜುರ್ವೇದದ ಸೂತ್ರದಂತೆ) ಸೇರಿ ಹೀಗೆ ಬಳಕೆಯಲ್ಲಿದೆ. ಮಂತ್ರ ದೇವ ನಾಗರಿಯಲ್ಲಿ : () (ಪೀಠಿಕೆ) ಓಂ ಭೂರ್ಭುವಃ ಸ್ವಃ (ಋಗ್ವೇದದದ ೩.೬೨.೧೦ ರಲ್ಲಿರುವ ಮೂಲ ಮಂತ್ರ) ತತ್ ಸವಿತುರ್ ವರೇಣ್ಯಂ(ತತ್ಸವಿತುರ್ :೪ ಅಕ್ಷರ ವರೇಣ್ಯಂ :೩ ಅಕ್ಷರ?ವರೇಣಿಯಂ:೪೮) ಭರ್ಗೋ ದೇವಸ್ಯ ಧೀಮಹಿ(೨೩೩೮) ಧಿಯೊ ಯೊ ನಃ ಪ್ರಚೋದಯಾತ್(೨೧೧೪೮ :ತ್ ಹಿಂದಿನಯಾಕ್ಕೆ ಸೇರಿ ೧ ಅಕ್ಷರ:ತಿದ್ದುಪಡಿ:ಧೀಯೋ ಧಿಯೋ) (ಒಟ್ಟು ೮೮೮೨೪ ಅಕ್ಷರ) ಕನ್ನಡ ಭಾಷಾಂತರ ಹಲವರು ಹಲವು ರೀತಿಯಲ್ಲಿ ಭಾಷಾಂತರಿಸಿದ್ದಾರೆ. ಆದರೆ ಮೂಲ ಅರ್ಥ ಹೀಗೆ ಹೊಮ್ಮುತ್ತದೆ. ಭೂಮಿ ಆಕಾಶ ಮತ್ತು ಅಂತರಿಕ್ಷವನ್ನಾವರಿಸಿದ ತೇಜೋಮಯನಾದ, ದಿವ್ಯ ಸ್ವರೂಪನಾದ, ಪೂಜಿಪನಾದ ಆ ಪರಬ್ರಹ್ಮ(ಸವಿತೃ ಅಥವ ಸೂರ್ಯ)ನಮ್ಮ ಬುದ್ಧಿ ವಿವೇಕಗಳನ್ನು ಬೆಳಕಿನೆಡೆ(ಜ್ಞಾನದ ಬೆಳಕಿನೆಡೆ)ಗೆ ಪ್ರೇರಿಸಲಿ ಪದಗಳ ಆರ್ಥ ಓಂ ಓಂ ಭೂಃ ಭೂಮಿ ಭುವಃ ಅಂತರಿಕ್ಷ ಸ್ವಃ ಆಕಾಶ ತತ್ ಆ ಸವಿತುಃ ಸವಿತೃವಿನ (ಪರಮಾತ್ಮ, ಪರಬ್ರಹ್ಮ ಮತ್ತು ಸೂರ್ಯ ಎಂದು ಸಹ ಅರ್ಥೈಸಲಾಗುತ್ತದೆ) ವರೇಣ್ಯಂ ಪೂಜಾರ್ಹವಾದ ಭರ್ಗೋ ತೇಜಸ್ಸನ್ನು ದೇವಸ್ಯ ದೇವನ ಧೀಮಹಿ ಧ್ಯಾನಿಸುತ್ತೇವೆ ಧಿಯೋ ಬುದ್ಧಿ, ವಿವೇಕಗಳನ್ನು ಯೋ ಅವನು ನಃ ನಮ್ಮೆಲ್ಲರ ಪ್ರಚೋದಯಾತ್ ಪ್ರಚೋದಿಸಲಿ ಉಲ್ಲೇಖ ಮೊದಲನೆ ವೇದವಾದ ಋಗ್ವೇದದ ಅಂಶಗಳು ಉಳಿದ ಮೂರು ವೇದಗಳಲ್ಲಿ ಸೇರಿರುವ ಕಾರಣ, ಗಾಯತ್ರೀ ಮಂತ್ರದ ಉಲ್ಲೇಖ ಎಲ್ಲಾ ವೇದಗಳಲ್ಲಿದೆ. ಭಗವದ್ಗೀತೆಯಲ್ಲಿ, ಹಲವಾರು ಉಪನಿಷತ್ತುಗಳಲ್ಲಿ, ಶಂಕರಾಚಾರ್ಯರ ಕೃತಿಗಳಲ್ಲಿ ಮತ್ತು ಶ್ರೀಮದ್ ಭಾಗವತದಲ್ಲಿ ಕೂಡ ಗಾಯತ್ರೀ ಮಂತ್ರದ ಪ್ರಸ್ತಾಪವಿದೆ. ಇನ್ನಷ್ಟು ಮಾಹಿತಿ ಗಾಯತ್ರೀಮಂತ್ರದೊಡನೆ ಒಂದು ಲಕ್ಷ ತಿಲಹೋಮ ಮಾಡಿದರೆ ಸರ್ವಪಾತಕಗಳೂ ನಶಿಸುತ್ತವೆ. ತುಪ್ಪದಿಂದ ಹೋಮ ಮಾಡಿದರೆ ಆಯಸ್ಸು ಹೆಚ್ಚುತ್ತದೆ. ದಧಿಯಿಂದ ಹೋಮ ಮಾಡಿದರೆ ಮಕ್ಕಳಾಗುತ್ತಾರೆ. ಸಮಿತ್ತಿನಿಂದ ಹೋಮ ಮಾಡಿದರೆ ಗ್ರಹಪೀಡೆ ನಿವಾರಣೆಯಾಗುತ್ತದೆ. ಇದು ಸರ್ವಾಭೀಷ್ಟ ಸಿದ್ಧಿಕರ ಮಂತ್ರ. ಇದನ್ನು ಜಪಿಸಿದವರಿಗೆ ಯಾವ ವಿಧವಾದ ಭಯವೂ ಇರುವುದಿಲ್ಲ. ಪ್ರತಿ ವರ್ಷ ಶ್ರಾವಣ ಮಾಸ ಕೃಷ್ಣ ಪಕ್ಷ ಪಾಡ್ಯದ ದಿವಸ ಮಿಥ್ಯಾಧೀತ (ದೋಷ) ಪ್ರಾಯಶ್ಚಿತ್ತಕ್ಕಾಗಿ ಒಂದು ಸಾವಿರ ಸಂಖ್ಯೆಯಲ್ಲಿ ಗಾಯತ್ರೀ ಜಪ ಅಥವಾ ಹೋಮವನ್ನು ಮಾಡುವುದು ರೂಢಿಯಲ್ಲಿದೆ. ಗಾಯತ್ರೀ ದೇವಿ ಗಾಯತ್ರೀ ದೇವಿ (ಸಾವಿತ್ರಿ) ಬ್ರಹ್ಮನ ಪತ್ನಿಯಾದ ಸರಸ್ವತಿಯ ಸ್ವರೂಪ ಎಂಬ ಪ್ರತೀತಿ ಇದೆ. ವೇದ ಮಾತೆ ಎಂದು ಕರೆಯಲ್ಪಡುವ ಗಾಯತ್ರಿ ದೇವಿಯನ್ನು ಐದು ಮುಖ ಮತ್ತು ಹತ್ತು ಬಾಹುಗಳುಳ್ಳವಳು, ಕಮಲಾಸೀನಳು ಮತ್ತು ಹಂಸವಾಹಿನಿಯೆಂದು ವರ್ಣಿಸುತ್ತಾರೆ. ಕೆಲವರು ವೈದಿಕ ಕಾಲದಲ್ಲಿ ಈ ದೇವತೆಯ ಉಲ್ಲೇಖವಿರಲಿಲ್ಲ ಎಂದು ವಾದಿಸುತ್ತಾ, ಗಾಯತ್ರೀ ದೇವಿಯ ಅರ್ಚನೆ ಅವೈದಿಕ ಎಂದು ಪರಿಗಣಿಸುತ್ತಾರೆ. ಆದರೆ ಸಾಮಾನ್ಯವಾಗಿ ಗಾಯತ್ರೀ ದೇವಿಯಯನ್ನು ಎಲ್ಲರು ಸ್ವೀಕರಿಸಿದ್ದಾರೆ. ಯಾಗದೀಕ್ಷಾಕಾಲದಲ್ಲಿ ಬ್ರಹ್ಮ ತನ್ನ ಪತ್ನಿಯನ್ನು ಯಜ್ಞವಾಟಿಕೆಗೆ ಬರುವಂತೆ ಹೇಳಿಕಳುಹಿಸುತ್ತಾನೆ. ತನ್ನ ಒಡನಾಡಿಯರಿಗಾಗಿ ಕಾಯುತ್ತಿದ್ದ ಆಕೆ ಸಕಾಲಕ್ಕೆ ಬರದೆ ಮುಹೂರ್ತ ಮಿಂಚುತ್ತ ಬರಲು ಕುಪಿತನಾದ ಬ್ರಹ್ಮ ಬೇರೆ ಪತ್ನಿಯನ್ನು ಕರೆತರುವಂತೆ ಇಂದ್ರನಿಗೆ ಆಜ್ಞಾಪಿಸುತ್ತಾನೆ. ಇಂದ್ರ ಕೂಡಲೇ ಭೂಲೋಕಕ್ಕೆ ಹೋಗಿ ಒಬ್ಬ ಸುಂದರಿಯನ್ನು ಕರೆತರಲು ಆಕೆಗೆ ಗಾಯತ್ರೀ ಎಂದು ಹೆಸರಿಟ್ಟು ಗಾಂಧರ್ವ ವಿಧಿಯಿಂದ ಬ್ರಹ್ಮ ವಿವಾಹವಾಗುತ್ತಾನೆ. ಹೀಗೆಂದು ಒಂದು ಪೌರಾಣಿಕ ಕತೆ ಇದೆ. ಕೆಂಪು ಬಿಳುಪು ಹಳದಿ ನೀಲ ಬಣ್ಣಗಳ ಕಾಂತಿಯಿಂದ ಕೂಡಿರುವವಳೂ ಉಜ್ವಲವಾದ ಮೂರು ಕಣ್ಣುಳ್ಳವಳೂ ಕೆಂಪು ವಸ್ತ್ರವನ್ನು ಧರಿಸಿರುವವಳೂ ವರದಾಭಯ ಹಸ್ತಗಳನ್ನುಳ್ಳವಳೂ ಶಂಖಚಕ್ರಧಾರಣಿಯೂ ಕೈಯಲ್ಲಿ ಕಪಾಲ ಅಂಕುಶ ಜಪಮಾಲೆ ಕಮಲಗಳನ್ನು ಹಿಡಿದಿರುವವಳೂ ಕುಮಾರಿಯೂ ಆಗಿರುವಂತೆ ಗಾಯತ್ರಿ ಸ್ವರೂಪವನ್ನು ಧ್ಯಾನಿಸಬೇಕು. ವೀರಶೈವ ಪಂಥದ ಕೆರೆಯ ಪದ್ಮರಸನ ದೀಕ್ಷಾಬೋಧೆ ಎಂಬ ಗ್ರಂಥದ ದ್ವಿತೀಯ ಸ್ಥಲದಲ್ಲಿ ಇನ್ನು ಕೇಳು ಗಾಯತ್ರಿಯ ನಿಜಮಂ ಸನ್ನುತ ಭೂತಿರುದ್ರಾಕ್ಷಿಗಳಿರಮಂ ನಿಟಿಲ ತ್ರಿಪುಂಡ್ರಾಂಕಿತಯುಕ್ತಾಂಗಿಯ ಜಟೆರುದ್ರಾಕ್ಷಭಸಿತ ಸರ್ವಾಂಗಿಯ ಅಕ್ಷಮಾಲೆ ಜಪಕರದ ಕಮಂಡಲ ನಿಕ್ಷೇಪಿನಿಸಿದಾಗಮಹೃನ್ಮಂಡಲ ಋಗ್ಯಜುಸ್ಸಾಮಂ ನಿಜಮೂರುತಿಯ ಭರ್ಗಭಕ್ತಿಯ ನಿಷ್ಠೆಯ ಮನದರ್ಥಿಯ ಇದು ಗಾಯತ್ರಿಯ ನಿಜದಾಕಾರಂ ಎಂದು ಗಾಯತ್ರಿಯ ಸ್ವರೂಪದ ವಿವರಣೆ ಇದೆ. ಗಾಯತ್ರೀಯ ಅಕ್ಷರಗಳಲ್ಲಿ ಒಂದೊಂದು ಅಕ್ಷರವೂ ಒಂದೊಂದು ಶ್ಲೋಕದಲ್ಲಿ ರುವುದನ್ನು ಶ್ರೀಮದ್ವಾಲ್ಮೀಕಿ ರಾಮಾಯಣದಿಂದ ಉದ್ಧರಿಸಿ 24 ಶ್ಲೋಕಗಳುಳ್ಳ ಈ ಗ್ರಂಥ ಭಾಗಕ್ಕೆ ಗಾಯತ್ರೀರಾಮಾಯಣ ಎಂದು ಅಂಕಿತ ಮಾಡಿದ್ದಾರೆ. ಇದನ್ನು ಪ್ರತಿದಿನ ಪಠಿಸುವುದರಿಂದ ಸರ್ವಪಾಪಗಳೂ ನಶಿಸುತ್ತವೆ ಎಂದು ಫಲಶ್ರುತಿ. ಇನ್ನೂ ಹೆಚ್ಚಿನ ಅರ್ಥಕ್ಕೆ> ಗಾಯತ್ರೀ ಪುಟ೨< ಕ್ಲಿಕ್ ಮಾಡಿ ಸಂಧ್ಯಾವಂದನೆ ಮಂತ್ರ ದಲ್ಲಿ ಈ ಮಂತ್ರ ಪ್ರಧಾನವಾದುದು. ಬಾಹ್ಯ ಸಂಪರ್ಕ ಕೊಂಡಿಗಳು ರುದ್ರಾಕ್ಷರತ್ನ.ಕಾಂ ಸಂಸ್ಕೃತ ಆರ್ಕೈವ್ ನಲ್ಲಿ ವಹಿಯುದ್ದೀನ್.ನೆಟ್ ಉಲ್ಲೇಖ ಹಿಂದೂ ದೇವತೆಗಳು ಮಂತ್ರಗಳು
ಗೃಹಭಂಗ ಕನ್ನಡದ ಪ್ರಮುಖ ಕಾದಂಬರಿಕಾರರಲ್ಲಿ ಒಬ್ಬರಾದ ಎಸ್.ಎಲ್.ಭೈರಪ್ಪನವರ ಒಂದು ಪ್ರಸಿದ್ಧ ಕಾದಂಬರಿ. ೧೯೨೦ರ ನಂತರ ಪ್ರಾರಂಭವಾಗುವ ಇದರ ಕಥಾವಸ್ತು, ೧೯೪೦೪೫ರ ಸುಮಾರಿಗೆ ಮುಗಿಯುತ್ತದೆ. ತಿಪಟೂರು, ಚೆನ್ನರಾಯಪಟ್ಟಣ ತಾಲ್ಲೂಕುಗಳನ್ನೊಳಗೊಂಡ ಭಾಗದ ಪ್ರಾದೇಶಿಕ ಹಿನ್ನೆಲೆಯನ್ನು ಈ ಕಾದಂಬರಿ ಹೊಂದಿದೆ. ಪರಿಚಯ ಯಾವುದೇ ಬೌದ್ಧಿಕ ಜಿಜ್ಞಾಸೆಯ, ತಾತ್ತ್ವಿಕ, ವೈಚಾರಿಕ ವಿಶ್ಲೇಷಣೆಗಳ ಹಂಗಿಲ್ಲದೆ, ಬದುಕನ್ನು ಕೇವಲ ಬದುಕಾಗಿ ನೋಡುವ ಸಾಕ್ಷಿಪ್ರಜ್ಞೆಯ ಸೃಜನಾತ್ಮಕ ಕೃತಿ ಗೃಹಭಂಗ. ಯಾವುದೇ ಸಿದ್ಧಾಂತದ ವ್ಯಾಖ್ಯೆಗೂ ನಿಲುಕದ ಬದುಕಿನ ಒಳನೋಟಗಳ ಸಂಕೀರ್ಣ ವಿನ್ಯಾಸಗಳ ದರ್ಶನ ಮಾಡಿಸುವ ಈ ಕಾದಂಬರಿ, ಬದುಕಿಗೆ ಬದುಕೇ ಬರೆದ ಭಾಷ್ಯ. ಗೃಹಭಂಗ ಭಾರತದ ಎಲ್ಲ ಭಾಷೆಗಳಿಗೂ ಅನುವಾದವಾಗಿ ಎಲ್ಲ ಭಾಷೆಗಳ ಓದುಗರನ್ನು ಸೆರೆಹಿಡಿದು, ಸಮಕಾಲೀನ ಭಾರತೀಯ ಕಾದಂಬರಿಗಳಲ್ಲಿ ಅಗ್ರಮಾನ್ಯತೆ ಪಡೆದಿದೆ. ಕಾದಂಬರಿಕಾರರು ತಮ್ಮ ಕಾದಂಬರಿಯ ಬಗ್ಗೆ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗೃಹಭಂಗ ಎಂಬುದು ಈ ಕೃತಿಯ ಕೇಂದ್ರಕಲ್ಪನೆ ಯಲ್ಲ. ಮೇಲೆ ಹೇಳಿದ ಅವಧಿಯಲ್ಲಿ ನಡೆಯಬಹುದಾದ ಜೀವನ ಚಿತ್ರಣದ ಪ್ರಯತ್ನವೇ ಇದರ ದೃಷ್ಟಿ. ಇಲ್ಲಿ ಮನೆ ಒಡೆಯುವುದು, ಮುರಿಯುವುದು ಮಾತ್ರವಲ್ಲ ಪ್ಲೇಗು, ಕಜ್ಜಿ, ಬರ, ಮೊದಲಾಗಿ ಇನ್ನೂ ಎಷ್ಟೋ ಸಂಗತಿಗಳು, ವಿವಿಧ ರೀತಿಯ ಪಾತ್ರಗಳು ಬರುತ್ತವೆ. ಇವು ಮೂಡಿ ನಡೆದಂತೆ ಒಂದು ಜೀವನ ದೃಷ್ಟಿಯ ಹಿನ್ನೆಲೆಯಲ್ಲಿ ಮಸುಕು ಮಸುಕಾಗಿ ಕಾಣಬಹುದು.ಗೃಹಭಂಗ ಈ ಹೆಸರು ಹೇಗೆ ಬಂತು?(ಕಾದಂಬರಿಕಾರರ ಅಭಿಪ್ರಾಯ) ಕಾದಂಬರಿಗೆ ಇಟ್ಟಿರುವ ಗೃಹಭಂಗ ಎಂಬ ಹೆಸರು ಹೇಗೆ ಬಂದಿತೆನ್ನುವ ಬಗ್ಗೆಯೂ ಭೈರಪ್ಪನವರು ತಮ್ಮ ಕಾದಂಬರಿಯ ಮುನ್ನುಡಿಯಲ್ಲಿ ವಿವರಿಸಿದ್ದಾರೆ ಕೆಲವು ಬಾರಿ ಕೃತಿ ರಚನೆಯಾಗುವಾಗ, ಅಥವಾ ಅದಕ್ಕಿಂತ ಮೊದಲೇ, ಹೆಸರು ಹೊಳೆದು ಬಿಡುತ್ತದೆ. ಮತ್ತೆ ಕೆಲವು ಬಾರಿ ಬರೆದು ಎರಡು ವರ್ಷ ಸಂದು, ತಲೆಗೂದಲ ಮಧ್ಯೆ ಬೆರಳು ತೂರಿಸಿ ಯೋಚಿಸಿದರೂ ಹೊಳೆಯುವುದಿಲ್ಲ. ಯೋಚಿಸಿ ಯೋಚಿಸಿ ಕೊನೆಗೆ ಯಾವುದಾದರೇನು? ಹೆಸರೇ ಬೇಡ. ಎಸ್.ಎಲ್. ಭೈರಪ್ಪ: ಕಾದಂಬರಿ ಸಂಖ್ಯೆ: ೮ ಎಂದು ಯಾಕೆ ಇಡಬಾರದು? ಎಂಬ ವಿಚಾರ ಹುಟ್ಟಿತ್ತು. ವಸ್ತುವು ಹಲವು ಪಾರ್ಶ್ವಗಳುಳ್ಳದ್ದಾಗಿರುವಾಗ ಹೆಸರು ವಾಚಕರ ಗಮನವನ್ನೆಲ್ಲ ಒಂದೇ ಪಾರ್ಶ್ವದಲ್ಲಿ ಎಳೆದು ನಿಲ್ಲಿಸಿ, ಉಳಿದ ಭಾಗಗಳನ್ನು ಮಬ್ಬುಮಾಡುವ ಅಪಾಯವಿರುತ್ತದೆ. ಆದುದರಿಂದ ಯಾವ ಸಾಹಿತ್ಯ ಕೃತಿಯನ್ನು ಓದಿ ಗ್ರಹಿಸಬೇಕಾದರೂ ಲೇಖಕನು ಇಟ್ಟಿರುವ ಹೆಸರನ್ನು ಆರಂಭದಲ್ಲಿಯೇ ಪ್ರತ್ಯೇಕಿಸುವುದು ಕ್ಷೇಮ. ಇವೆಲ್ಲವನ್ನೂ ಸಮಗ್ರವಾಗಿ ಧ್ವನಿಸುವ ಹೆಸರು ನನಗೆ ತಿಳಿಯಲಿಲ್ಲ. ಹಸ್ತಪ್ರತಿಯನ್ನು ಓದಿ ವಿವರವಾಗಿ ಟೀಕೆ ಟಿಪ್ಪಣಿ ಮಾಡಿ, ತಿದ್ದಲು ಸಹಾಯಕರಾದ ದಿಲ್ಲಿ ಆಕಾಶವಾಣಿಯ ಎಂ.ಶಂಕರ್, ಬೆಂಗಳೂರಿನ ಎಂ.ಎಸ್.ಕೆ. ಪ್ರಭು ಇವರಿಗೂ ಹೊಳೆಯಲಿಲ್ಲ. ಹೆಸರಿಡದೆ ಪ್ರಕಟವಾಗುವುದು ಸಾಧ್ಯವಿಲ್ಲ. ಪ್ರಕಟಣೆಯ ಘಟ್ಟದಲ್ಲಿ ಯಾವುದೋ ಒಂದನ್ನು ಇಡಲೇಬೇಕೆಂದು ಹಟಹಿಡಿದಾಗ, ಗೃಹಭಂಗ ಎಂದು ಮನಸ್ಸಿಗೆ ಬಂತು, ಇಟ್ಟಿದ್ದೇನೆ. ಕಥಾವಸ್ತು ಸರಳವಾದ ಆಡುನುಡಿಯಲ್ಲಿ ಲೇಖಕರ ವಿವರಣೆ ಮೂಡಿಬಂದಿರುವುದರಿಂದ ಇಲ್ಲಿನ ಚಿತ್ರಣ ನಮ್ಮ ಸುತ್ತಮುತ್ತವೇ ನಡೆದ ಘಟನೆಗಳು ಎನಿಸುತ್ತವೆ. ಬ್ರೀಟಿಷರ ಕಾಲದ ಹಳ್ಳಿಗಳು ಹಾಗು ಹಳ್ಳಿಯ ಸೊಗಡು ಕಾದಂಬರಿಯಲ್ಲಿ ನೈಜವಾಗಿ ಮೂಡಿ ಬಂದಿದೆ. ಅನೇಕ ಪಾತ್ರಗಳಲ್ಲಿ ಕಥೆಗೆ ಆಧಾರ ಪಾತ್ರ ಎಂದು ಹೇಳಬಹುದಾದ ನಂಜಮ್ಮ ಬದುಕನ್ನು ಸ್ವೀಕರಿಸುವ ರೀತಿ, ಆಕೆ ಅನುಸರಿಸಿದ ನೈತಿಕ ಪದ್ದತಿಗಳು, ಅನ್ಯಾಯದ ವಿರುದ್ದ ಸಿಡಿದು ಬೀಳುವ ಪರಿ ಎಲ್ಲವೂ ಸುಂದರವಾಗಿ ಮೂಡಿದೆ. ಅತ್ತೆ, ಸೊಸೆ ಹಾಗು ಮಗಳ ಮೂಲಕ ಮೂರು ತಲೆಮಾರುಗಳ ಹೆಣ್ಣಿನ ಸಂವೇದನೆಗಳನ್ನು, ಕಾದಂಬರಿಯಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ. ಜೊತೆಗೆ ಮಾದೇವಯ್ಯನವರ ಪಾತ್ರ, ಅಲೆಮಾರಿ ಬದುಕಿನಲ್ಲೂ ಸಂಸ್ಕೃತಿ ಹೇಗೆ ಕಾಪಾಡಿಕೊಂಡರು ಎಂದು ಬಿಂಬಿತವಾಗುತ್ತದೆ. ಅದಲ್ಲದೆ ಒಬ್ಬ ತಾಯಿ (ಗಂಗಮ್ಮ) ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೆ, ಸರ್ವಾಧಿಕಾರಿ ಧೋರಣೆಯಿಂದ ಬದುಕಿದರೆ, ಮಕ್ಕಳು ಹೇಗೆ ಹದಗೆಡುತ್ತಾರೆ ಎನ್ನುವುದೂ ಕೂಡ ಬದುಕಿನ ಪಾಠವಾಗಿ ಸಾಬೀತಾಗುತ್ತದೆ. ಆದರೆ ಪೇಟೆಯಲ್ಲಿ ಬೆಳೆದು, ಮದುವೆ ಆಗಿ ಹಳ್ಳಿಗೆ ಬಂದು, ಹಳ್ಳಿಯ ಸಂಸ್ಕೃತಿಗೆ ಒಗ್ಗದೆ, ಪೇಟೆಯ ಧ್ಯಾನದಲ್ಲೇ ದಿನಕಳೆಯುವ ಹೆಣ್ಣಿನ ಇನ್ನೊಂದು ಮುಖ ಚಿತ್ರಿತವಾಗಿದೆ. ಇದರಿಂದ ಕುಟುಂಬದ ಮೇಲಾಗುವ ಪರಿಣಾಮವೂ ಚಿತ್ರಿತವಾಗಿದೆ. ಸಾವಿನ ದವಡೆಯಲ್ಲಿ, ಸಿಕ್ಕಿದ ಮಕ್ಕಳನ್ನು ಕಂಡು ನಂಜಮ್ಮ ಕೊರಗುವ ಸ್ಥಿತಿ, ಹಾಗು ಸಾವು ಸಾರ್ವಕಾಲಿಕ ಸತ್ಯ ಎಂದು ನಂಬಿ ಮತ್ತೆ ಬದುಕಿಗೆ ಮುಖ ಮಾಡುವ ರೀತಿ, ಬದುಕಿನ ನೈಜತೆಯನ್ನು ಬಿಂಬಿಸುತ್ತದೆ. ನಂಜಮ್ಮನ ಕುಟುಂಬ ನಾಶವಾಗಿ, ನಂಜಮ್ಮನ ಕೊನೆ ಮಗ ವಿಶ್ವ ನನ್ನು ಮಾದೇವಯ್ಯನವರು ಕರೆದುಕೊಂಡು ಊರು ಬಿಟ್ಟು ಹೋಗುವಾಗ, ವಿಶ್ವನ ಅಪ್ಪನ ನಿರ್ಲಿಪ್ತತೆ, ಅವನ ಉದಾಸೀನತೆಯನ್ನು ತೋರಿಸುತ್ತದೆ. ಗೃಹಭಂಗ ಕಿರುತೆರೆ ಧಾರಾವಾಹಿಯಾಗಿಈ ಕೃತಿಯ ಟಿವಿ ರೂಪಾಂತರ ೨೦೦೪೨೦೦೫ ರಲ್ಲಿ ಈಟಿವಿ ವಾಹಿನಿಯಲ್ಲಿ ಪ್ರಸಾರವಾಯಿತು. ಜೀವನದ ಏರಿಳಿತಗಳಿಂದ ಧೃತಿಗೆಡದೆ ಜೀವನವನ್ನು ಕೇವಲ ಜೀವನವಾಗಿಯೆ ಕಾಣುವಂತ ಓರ್ವ ಅತಿ ಸಾಧಾರಣ ಗೃಹಿಣಿಯ ಕಥೆ. ಈ ಧಾರಾವಾಹಿಯ ನಿರ್ದೇಶಕರು ಗಿರೀಶ್ ಕಾಸರವಳ್ಳಿ ಹಾಗೂ ಮುಖ್ಯ ಪಾತ್ರದಲ್ಲಿ ಮಾಳವಿಕಾ ಅವಿನಾಶ್ ನಟಿಸಿದ್ದಾರೆ. ಇದರ ಶೀರ್ಷಿಕೆ ಗೀತೆಯನ್ನು ರತ್ನಮಾಲಾ ಪ್ರಕಾಶ್ ಹಾಡಿದ್ದಾರೆ. ಗೀತೆಯ ಒಂದು ಸಾಲು ಎಲ್ಲ ಸಹಿಸಿ ಮುಂದೆ ಪಯಣ ಬದುಕೇ ವಿಸ್ಮಯರಂಗ... ಈ ಕೃತಿಯ ಸಮಸ್ತ ಭಾವವನ್ನು ಪ್ರತಿಬಿಂಬಿಸುತ್ತಿದೆ ಎಂಬುದು ಧಾರಾವಾಹಿ ವೀಕ್ಷಿಸಿದವರ ಅಭಿಪ್ರಾಯವಾಗಿದೆ. ಗೃಹಭಂಗ ಭೈರಪ್ಪನವರ ಜೀವನವನ್ನೇ ಬಿಂಬಿಸುತ್ತದೆ ಎಂಬುದು ವಿಮರ್ಶಕರ ಅಭಿಪ್ರಾಯವಾಗಿದೆ. ಹೊರಗಿನ ಸಂಪರ್ಕಗಳು ಗೃಹಭಂಗ ಕೃತಿ ಅಂತರಜಾಲದಲ್ಲಿ ಕನ್ನಡ ಕಾದಂಬರಿಗಳು ಎಸ್. ಎಲ್. ಭೈರಪ್ಪನವರ ಕೃತಿಗಳು
ಮಹಾಭಾರತದ ಕಥೆ:ವಾಸ್ತವಿಕ ದೃಷ್ಟಿಕೋನದಲ್ಲಿ ಪರ್ವ ಎಸ್. ಎಲ್. ಭೈರಪ್ಪನವರು ರಚಿಸಿದ ಕಾದಂಬರಿಗಳಲ್ಲೇ ಭಾರೀ ಚರ್ಚೆಗೆ ಒಳಗಾದದ್ದು. ಮಹಾಭಾರತದ ಕಥೆಯನ್ನು ವೈಚಾರಿಕ ದೃಷ್ಟಿಕೋನದಿಂದ ಪರ್ವದಲ್ಲಿ ಹೇಳಲಾಗಿದೆ. ಮಹಾಭಾರತ ಕಾಲದ ಭಾರತೀಯ ಸಮಾಜದ ರೀತಿನೀತಿಗಳನ್ನೂ, ಆ ಕಾಲದ ಜೀವನ ಮೌಲ್ಯಗಳನ್ನು, ಮೃತ್ಯುವಿನ ರಹಸ್ಯಾತ್ಮಕತೆಯನ್ನು ಕಾದಂಬರಿಯಲ್ಲಿ ಅರ್ಥಪೂರ್ಣವಾಗಿ ಮೈಗೂಡಿಸಲಾಗಿದೆ. ಲೈಂಗಿಕತೆ ಮತ್ತು ಸಾವುಗಳ ನೆಲೆಯಲ್ಲಿ ದ್ರೌಪದಿ, ಕುಂತಿ, ಮಾದ್ರಿ, ಗಾಂಧಾರಿ ಪಾತ್ರಗಳನ್ನು ಮೂಡಿಸಿದ್ದಾರೆ. ವಿಮರ್ಶೆ & ಅಭಿಪ್ರಾಯಗಳು ಪೃಥ್ವಿ ದತ್ತ ಚಂದ್ರ ಶೋಭಿ ಆಧುನಿಕಪೂರ್ವ ಸಾಂಪ್ರದಾಯಿಕ ಕಾವ್ಯಮಾದರಿಗಳನ್ನು ಅನುಸರಿಸಲು ಅವಕಾಶವಿದ್ದ ಮಹಾಕಾವ್ಯದಂತಹ ಯಾವ ಸಾಹಿತ್ಯ ಪ್ರಕಾರವನ್ನೂ ಅವರು ಆರಿಸಲಿಲ್ಲ. ಅವರ ಆಯ್ಕೆಯು ಆಧುನಿಕ ಪಶ್ಚಿಮವು ತನ್ನ ಸಾಮಾಜಿಕ ವಾಸ್ತವವನ್ನು ಅರಿಯಲು ಕಟ್ಟಿಕೊಂಡ ಬಹುಮುಖ್ಯ ಸಾಹಿತ್ಯಪ್ರಕಾರವಾದ ಕಾದಂಬರಿಯೇ ಆಗಿತ್ತು. ಅದರೊಳಗೆ ಅವರು ಬಳಸುವ ಸಾಹಿತ್ಯಕ ಸತ್ಯದ ಪರಿಕಲ್ಪನೆಯೂ ವಾಸ್ತವವಾದಿ ಸತ್ಯದ ಪರಿಕಲ್ಪನೆಯೇ ಆಗಿದೆ. ಈ ಎಲ್ಲ ಅಂಶಗಳು ಭೈರಪ್ಪನವರು ಆಯ್ಕೆ ಮಾಡಿಕೊಳ್ಳುವ ವಸ್ತುವು ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ನಗರದ ಸಮಾಜ ಇಲ್ಲವೆ ಗ್ರಾಮೀಣ ಸಮಾಜ ಏನೇ ಇದ್ದರೂ ಸಾಮಾನ್ಯವಾಗಿ ಇರುತ್ತವೆ. ಆದುದರಿಂದಲೇ ಭೈರಪ್ಪನವರನ್ನು ವಿವಾದಾತ್ಮಕ ಹೇಳಿಕೆಗಳನ್ನು ಮಾಡುವ ಉತ್ತರ ಭಾರತದ ಸಾಧು ಮಹಂತನೊಬ್ಬನಂತೆ ನೋಡಲು ಸಾಧ್ಯವಿಲ್ಲ. ವಾಸ್ತವವಾದಿ ಕಾದಂಬರಿಯ ಬಹುಮುಖ್ಯ ಲಕ್ಷಣವೆಂದರೆ ಸಂಭವನೀಯತೆ (ಪ್ರಾಬಬಲಿಟಿ). ಭೈರಪ್ಪನವರ ಕಾದಂಬರಿಗಳಲ್ಲಿ (ಅದರಲ್ಲೂ ಐತಿಹಾಸಿಕ ಮತ್ತು ಪೌರಾಣಿಕ ಕೃತಿಗಳಲ್ಲಿ) ಓದುಗನನ್ನು ಆಕರ್ಷಿಸುವ ಬಹುದೊಡ್ಡ ಗುಣವಿದು. ಉದಾಹರಣೆಗೆ ಪರ್ವ ಕಾದಂಬರಿಯಲ್ಲಿ ಭೈರಪ್ಪನವರು ಮಹಾಭಾರತದ ಮಾನವಶಾಸ್ತ್ರೀಯ ಅನ್ವೇಷಣೆಯ ಮೂಲಕ ಓದುಗನಿಗೆ ಕೇವಲ ಹೊಸ ಕಥನವನ್ನು ನೀಡುತ್ತಿಲ್ಲ. ಅದಕ್ಕಿಂತ ಮಿಗಿಲಾಗಿ ಆಧುನಿಕ ಓದುಗ ತನ್ನ ನಿಜ ಬದುಕಿನ ಅನುಭವಗಳ ಮೂಲಕ ಕಲ್ಪಿಸಿಕೊಳ್ಳಬಹುದಾದ ಮಹಾಭಾರತದ ಸಂಭವನೀಯ ಆವೃತ್ತಿಯನ್ನು ಕೊಡುತ್ತಾರೆ. ಮೂರು ಸಾವಿರ ವರ್ಷಗಳ ಹಿಂದಿನ ಭೌತಿಕ ಬದುಕು, ಸಾಮಾಜಿಕಸಾಂಸ್ಕೃತಿಕ ಆಚರಣೆಗಳು ಹೇಗಿದ್ದಿರಬಹುದು ಎನ್ನುವ ಮಾನವಶಾಸ್ತ್ರಜ್ಞನ ಪ್ರಶ್ನೆಯನ್ನು ಕೇಳಿಕೊಳ್ಳುತ್ತಾರೆ. ಭೈರಪ್ಪನವರ ಸಾಹಿತ್ಯಕ ಕಲ್ಪನೆಯಲ್ಲಿ (ಇಮ್ಯಾಜಿನೇಶನ್) ಕಲ್ಪಿತ ಅದ್ಭುತಗಳಿಗೆ ಇರುವ ಸ್ಥಳ ಬಹಳ ಕಡಿಮೆ. ಇಂತಹ ಕಲ್ಪಿತ ಅದ್ಭುತಗಳನ್ನು ಕಿತ್ತುಹಾಕಿ, ವಾಸ್ತವಕ್ಕೆ ಎಷ್ಟು ಹತ್ತಿರಕ್ಕೆ ಬರಲು ಸಾಧ್ಯ ಎನ್ನುವುದು ಅವರ ಪ್ರಯತ್ನ. ಹಾಗಾಗಿಯೆ ಪೌರಾಣಿಕ ಪಾತ್ರಗಳು ಮನುಷ್ಯ ಸಹಜವಾದ ಮಿತಿಗಳಿಂದ ಬಳಲುತ್ತವೆ. ಪರ್ವದ ಭೀಷ್ಮ ಮತ್ತು ದ್ರೋಣರು, ಕೌರವ ಸೇನಾಪತಿಯಾದರೂ, ರೊಟ್ಟಿ ತಿನ್ನಲಾಗದ, ನಡೆಯಲು ಕಷ್ಟಪಡುವ ಮುದುಕರು. ಓದುಗನಿಗೆ ವಿನೂತನವೆನಿಸುವ ಇಂತಹ ವಾಸ್ತವವಾದಿ ಕಲ್ಪನೆ ಭೈರಪ್ಪನವರ ಸಾಹಿತ್ಯಿಕ ಕಲ್ಪನೆಯ ಆಕರ್ಷಣೆ ಮತ್ತು ಅತ್ಯಂತ ದೊಡ್ಡಮಿತಿ ಸಹ. ನೋಡಿ ಎಸ್.ಎಲ್. ಭೈರಪ್ಪ ಉತ್ತರಕಾಂಡ ಆವರಣ (ಕಾದಂಬರಿ) ಉಲ್ಲೇಖ ಎಸ್. ಎಲ್. ಭೈರಪ್ಪನವರ ಕೃತಿಗಳು ಸಾಹಿತ್ಯ ಕನ್ನಡ ಕಾದಂಬರಿಗಳು
ಇದು ಪೂರ್ಣಚಂದ್ರ ತೇಜಸ್ವಿಯವರ ಕೃತಿ. ಇದೊಂದು ನೀಳ್ಗತೆ. ಪರಿಚಯ ಪೂರ್ಣಚಂದ್ರ ತೇಜಸ್ವಿಯವರ ಕಿರಗೂರಿನ ಗಯ್ಯಾಳಿಗಳು ಎಂಬ ನೀಳ್ಗತೆ ಅದೇ ಹೆಸರಿನ ಅವರ ಕಥಾಸಂಕಲನದಲ್ಲಿ ಸೇರ್ಪಡೆಗೊಂಡಿದ್ದು, ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿನ ಕುಗ್ರಾಮವೊಂದರ ವನಿತೆಯರ ಚಿತ್ರಣವನ್ನು ತೆರೆದಿಡುತ್ತದೆ. ಲೇಖಕರನ್ನು ಕುರಿತು ಕಿರಗೂರಿನ ಗಯ್ಯಾಳಿಗಳು ಕತೆಯ ಲೇಖಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಕನ್ನಡದ ಕತೆಗಾರ ಹಾಗೂ ಕಾದಂಬರಿಕಾರ. ಅವರು ಮಹಾಕವಿ ಕುವೆಂಪು ಅವರ ಮಗ. ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಪಂಪ ಪ್ರಶಸ್ತಿ ಪುರಸ್ಕೃತರು. ಸಾರಾಂಶ ಕಥೆಯ ಪ್ರಾರಂಭವೇ ಹೆಂಗಸರ ನೆಪದಿಂದ ಕಿರಗೂರು ಪ್ರಸಿದ್ದವಾಗಿರುವುದನ್ನು ಹೇಳುತ್ತದೆ. ಗಂಡಸರು ಎಷ್ಟು ಸೌಮ್ಯರೋ ಹೆಂಗಸರು ಅಷ್ಟೇ ಬಜಾರಿಯರು ಎಂಬುದು ಕಥೆಯ ಉದ್ದಕ್ಕೂ ಸ್ಥಿರವಾಗುತ್ತಾ ಹೋಗುವುದೇ ಇದರ ವೈಶಿಷ್ಟ್ಯ. ಮೂರು ದಿನಗಳು ಸತತವಾಗಿ ಬೀಸಿದ ಗಾಳಿ ಕಥೆಯ ಹಂದರಕ್ಕೆ ಮುಖ್ಯ ನೆಲೆ ಒದಗಿಸಿದ್ದರೂ ನಂತರದ ಸಾಮಾಜಿಕ ಬದಲಾವಣೆಗೆ ವನಿತಾಕ್ರಾಂತಿಗೆ ದಾನಮ್ಮನೇ ಮೂಲ ಕಾರಣವಾಗಿ ನಿಲ್ಲುತ್ತಾಳೆ. ಒಂದು ರೀತಿಯಲ್ಲಿ ದಾನಮ್ಮನೇ ಕಥಾನಾಯಕಿ ಎಂದರೂ ತಪ್ಪಾಗದು. ದಾನಮ್ಮನ ಸಿಟ್ಟು ಭಯಂಕರ, ಅವಳಿಗೆ ಸಿಟ್ಟು ಬಂದಾಗ ದೆವ್ವ ಬಂದವರನ್ನು ಮಾತಾಡಿಸುವಂತೆ ಅವಳ ಗಂಡನೂ ಮಾವನೂ ಆಕೆಯನ್ನು ಗೌರವದಿಂದ ಮಾತಾಡಿಸುತ್ತಿದ್ದರು.(ಪುಟ ೬) ಹೇಗೆ ಹೇಗೋ ಎಲ್ಲರನ್ನೂ ಕಲಾತ್ಮಕವಾಗಿ ಸಂಯೋಜಿಸಿ ಭಾವಗೀತೆಯಂತೆ ಝಾಡಿಸಿ ಉಗಿದಿದ್ದರಿಂದ ಪುಟ(೭) ಕಾಕತಾಳೀಯವೋ ಎಂಬಂತೆ ಬಿರುಗಾಳಿ ಕಡಿಮೆಯಾಗಿ. ಆ ಗಯ್ಯಾಳಿ ಬಾಯಿಗೆ ಮಳೆಗಾಳಿ ಸುತ ಹೆದರ್ತದೆ ಅಂತಾಯ್ತು ಎಂಬಂತೆ ಊರಿನವರಿಂದ ಅನ್ನಿಸಿಕೊಳ್ಳುತ್ತಾಳೆ. ದಾನಮ್ಮ ಮಾತ್ರವಲ್ಲ ಊರಿನ ಇತರ ಹೆಂಗಸರು ಸಹ ಇದೇ ರೀತಿ ಗಯ್ಯಾಳಿಗಳೇ. ಅವರ ಗಯ್ಯಾಳಿತನ ಕೇವಲ ಮಾತುಗಾರಿಕೆಯಲ್ಲಿ ಮಾತ್ರವಲ್ಲದೆ ದೈಹಿಕ ಕಸುವಿನಲ್ಲೂ ವ್ಯಕ್ತವಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಊರಿನ ಗಂಡಸರ ದೌರ್ಬಲ್ಯ ಶಾರೀರಿಕವಾಗಿಯಲ್ಲದೆ ಆಲೋಚನಾ ಶಕ್ತಿಯಲ್ಲೂ ಕಾಣುತ್ತದೆ. ಹೆಬ್ಬಲಸಿನ ಮರ ಕೊಯ್ಯುವುದು, ಅವರ ಬಲಹೀನತೆಗೆ ಸಾಕ್ಷಿ. ಮಾತ್ರವಲ್ಲದೆ ಅವರ ಮೌಢ್ಯವನ್ನು ಕಾರ್ಯತಂತ್ರ ಗೊತ್ತಿಲ್ಲದ ಮುಗ್ಥತೆಯನ್ನು ಸಾರಿ ಹೇಳುತ್ತದೆ. ಗಂಡಸರ ದೌರ್ಬಲ್ಯವನ್ನು ಒಂದೇ ಘಟನೆ ಸಂಪೂರ್ಣವಾಗಿ ತೆರೆದಿಡುತ್ತದೆ. ಅದ್ಯಾವು ದೆಂದರೆ ಮಾರ ಮತ್ತು ಸಿದ್ಧ ಇಬ್ಬರು ಮರವನ್ನು ಅರೆಬರೆ ಕತ್ತರಿಸಿ ರಂಬೆ ಎಳೆಯಲಾಗದೆ ಸೋತು ಕುಳಿತಿದ್ಧಾಗ ಗದ್ದೆ ಕೆಲಸ ಮುಗಿಸಿ ಬಂದ ಹೆಂಗಸರ ನಡುವೆ ಇದ್ದ ಮಾರನ ಹೆಂಡತಿ ಗಂಡನನ್ನು ತರಾಟೆಗೆ ತೆಗೆದುಕೊಳ್ಳುವ ಪರಿ ಪ್ರಾತಿನಿಧಿಕವಾಗಿದೆ. ಅವರನ್ನು ಸಾಗಹಾಕಿದ ಮೇಲೆ ಮಾರ ಹೇಳುವ ಊರು ಉಳಿಸುವ ವಿಧಾನವೂ ಅದಕ್ಕೆ ಸಿದ್ಧನ ನೀರಸ ಪ್ರತಿಕ್ರಿಯೆಯೂ ಆ ಊರಿನ ಗಂಡಸರ ಬದುಕಿಗೆ ಹಿಡಿದ ಕನ್ನಡಿಯಾಗಿದೆ. ಅದೂ ಅಲ್ಲದೆ ಪೊಲೀಸರಿಂದ ಲಾತ ತಿಂದ ಸವರ್ಣೀಯ ಗಂಡಸರು ಹೊಲೆಯರ ಮೇಲಿನ ದ್ವೇಷದಿಂದ ಅವರನ್ನು ದೂರವಿಟ್ಟರೂ ಸ್ವತಃ ಏಗಲಾಗದೇ ನಿಟ್ಟುಸಿರು ಬಿಡುವುದೂ ಅಸಹನೀಯ. ಅಜಾಗರೂಕತೆಯಿಂದ ಹೆಬ್ಬಲಸಿನ ಮರದ ದಿಮ್ಮಿ ಊರೊಳಗೆ ನುಗ್ಗಿದ್ದರಿಂದ ಊರ ಗಂಡಸರಿಗಿಂತಲೂ ಹೆಚ್ಚು ಆತಂಕಕ್ಕೆ ಒಳಗಾದವಳೆಂದರೆ ದಾನಮ್ಮನೇ. ಈ ಘಟನೆಯಿಂದಂತೂ ಆಕೆ ಊರ ಕಾಯುವ ವೀರ ನಾರಿ ಎನಿಸಿಕೊಳ್ಳುತ್ತಾಳೆ. ಊರ ವನಿತೆಯರಿಗಂತೂ ಆಕೆ ಅಪ್ರತಿಮ ಆದರ್ಶ ವ್ಯಕ್ತಿಯಾಗಿ ಕಂಡು ಬರುತ್ತಾಳೆ. ಸೂಕ್ಷ್ಮವಾಗಿ ನೋಡಿದಾಗ ಈ ಘಟನೆ ದಾನಮ್ಮ ನಾದಿಯಾಗಿ ಊರ ಹೆಂಗಸರಿಗೆಲ್ಲ ಗಂಡಸರ ಮೇಲಿನ ಒಳಗುದಿಯನ್ನು ಮತ್ತಷ್ಟು ಕುಮುಲುವಂತೆ ಮಾಡಿ ಯಾವುದೇ ಸಮಯದಲ್ಲಿ ಸ್ಫೋಟಿಸಬಹುದಾದ ಜ್ವಾಲಾಮುಖಿಗಳಾಗುವಂತೆ ಮಾಡುತ್ತದೆ. ಗಂಡಸರು ಮಾಡುವ ಜಾತಿಗಳು, ಆಚಾರಗಳು, ಮದುವೆಗಳು ಪಂಚಾಯ್ತಿಗಳು ಪ್ರತಿಯೊಂದೂ ಹೆಂಗಸರಿಗೆ ಹಿಂದೆ ಕೊಡುವ ನೀಚತಂತ್ರ ಎಂಬುದನ್ನು ದಾನಮ್ಮ ಕಂಡುಕೊಳ್ಳುತ್ತಾಳೆ. ಶಂಕರಪ್ಪನ ಹೆಂಡದ ಬಗ್ಗೆಯೂ ಆಕೆ ಕಿಡಿಕಾರುತ್ತಾಳೆ. ಹೀಗೆ ಅಲ್ಲಿದ್ದ ಹಣ್ಣು ಮಕ್ಕಳಿಗೆಲ್ಲಾ ನಿಧಾನವಾಗಿ ಅರಿವು ಮೂಡತೊಡಗುತ್ತದೆ. ಹೆಂಗಳೆಯರ ಪ್ರತಿನಿದಿಯಂತಿದ್ದ ದಾನಮ್ಮನ ಸಂತೇಲಿ ಸೀರೆ ಬಿಚ್ಚಿ ಹೋಗಿ ಬರೋರಿಗೆ ಬಸುರಾಗುವಂತಹ ನಿರ್ಧಾರದ ನುಡಿ ಕೇಳಿದ್ದಲ್ಲದೆ, ದೇವಗಣಗಿಲೆ ಮರಕ್ಕೆ ವಾಲಿ ಕುಳಿತಿದ್ದ ಸೀಗೇಗೌಡರು ತಮ್ಮ ಸೊಸೆಯ ಮುಂದಾಳತ್ವದಲ್ಲಿ ಊರಿನ ಹೆಂಗಸೆಲ್ಲಾ ರೌಡಿ ಹೆಬ್ಬುಲಿಗಳಂತೆ ಹಾರಿದ್ದು ನೋಡಿ, ಆ ಬಿದ್ದ ಹೆಬ್ಬಲಸಿನ ಮರದಲ್ಲಿದ್ದ ಅಷ್ಟೂ ದೆವ್ವಗಳು ಇವರಿಗೆ ಅಮರಿಕೊಂಡಿವೆ ಎಂದೇ ತೀರ್ಮಾನಿಸಿದರು.(ಪುಟ ೬೧) ಹೆಂಗಳೆಯರ ಕೋಪ ಅಲ್ಲಿಗೇ ತಣಿಯದೆ ಶಂಕ್ರಪ್ಪನ ಶೇಂದಿ ಅಂಗಡಿ ನಾಶ ಮಾಡಿದ ಸುದ್ದಿ ರೈತ ಚಳುವಳಿಗೆ ಸ್ಫೂರ್ತಿ ನೀಡುತ್ತದೆ. ಮಹಿಳಾ ವಿಮೋಚನೆಗೂ ದಾರಿ ಮಾಡುತ್ತದೆ. ಎಲ್ಲ ಊರುಗಳ ಸಾರಾಯಿ ಅಂಗಡಿಗಳ ಎದರೂ ಗಲಭೆ ಚಳುವಳಿಗಳು ಪ್ರಾರಂಭವಾಗುತ್ತದೆ. ಒಂದು ರೀತಿಯಲ್ಲಿ ತೇಜಸ್ವಿಯವರು ಕಿರಗೂರಿನ ಮಹಿಳೆಯರ ಬಗ್ಗೆ ಸದ್ಭಾವನೆ ಉಂಟಾಗದ ಘಟನೆಗಳೊಂದಿಗೆ ಕಥೆ ಪ್ರಾರಂಬಿಸಿರುವರಾದರೂ ಅಂತ್ಯದ ವೇಳೆಗೆ ಓದುಗ ಆ ಮಹಿಳೆಯರ ಬಗ್ಗೆ ಗೌರವ ತಳೆಯುವುದು ಅನಿವಾರ್ಯವಾಗುತ್ತದೆ. ನಿರೂಪಣೆ ಕಥಾ ನಿರೂಪಣೆಯಲ್ಲಂತೂ ಯಾವುದೇ ಉತ್ಪ್ರೇಕ್ಷೆಯ ವಾಕ್ಯಗಳು ಕಂಡು ಬರುವುದಿಲ್ಲ. ಲೇಖಕರು ಪರಕಾಯ ಪ್ರವೇಶ ಮಾಡಿ ಪಾತ್ರಗಳ ಭಾವನೆಗಳನ್ನು ಅರಿತುಕೊಂಡರೋ ಎಂಬಂತೆ ಮಾತುಗಳು, ವರ್ತನೆಗಳು ಹರಿದುಬಂದಿವೆ. ಒಟ್ಟಾರೆ ಇಡೀ ಘಟನೆಯು ನಮ್ಮ ಕಣ್ಣ ಮುಂದೆಯೇ ನಡೆದಿರುವಂತೆ ಓದುಗನೂ ಒಂದು ಪಾತ್ರವಾಗಿರುವಂತೆ ಕಥೆ ನಿರೂಪಿತವಾಗಿರುವುದು ಅದ್ಭುತ ಕೌಶಲ್ಯವೆನ್ನಬಹುದು. ಚಲನಚಿತ್ರ ಮಾಧ್ಯಮದಲ್ಲಿ ಈ ಕೃತಿಯು ಸುಮನಾ ಕಿತ್ತೂರು ಅವರ ನಿರ್ದೇಶನದಲ್ಲಿ ಸಿನಿಮಾ ಆಗಿದೆ. ಅಗ್ನಿ ಶ್ರೀಧರ್ ಅವರು ಸಂಭಾಷಣೆ ಬರೆದಿದ್ದಾರೆ. ಶ್ವೇತಾ ಶ್ರೀವಾತ್ಸವ್ ದಾನಮ್ಮನ ಪಾತ್ರ ನಿರ್ವಹಿಸಿದ್ದಾರೆ. ಬಿ. ಜಯಶ್ರೀ, ಮಂಢ್ಯ ರಮೇಶ್, ಪ್ರಕಾಶ್ ಬೆಳವಾಡಿ, ಶರತ್ ಲೋಹಿತಾಶ್ವ, ಯೋಗೀಶ್ ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳು
ಬೆರಳ್ಗೆ ಕೊರಳ್ ಕಥೆ ಕುವೆಂಪು ಅವರು ಏಕಲವ್ಯನನ್ನು ನಾಯಕನನ್ನಾಗಿ ಮಾಡಿಕೊಂಡು ಈ ನಾಟಕ ರಚಿಸಿದ್ದಾರೆ. ಮೂರು ದೃಶ್ಯಗಳಿಗೂ ಗುರು, ಕರ್ಮ, ಯಜ್ಞ ಎಂದು ಹೆಸರಿಸಿದ್ದಾರೆ. ಅರ್ಜುನನ ಶ್ರೇಷ್ಟ ಬಿಲ್ವಿದ್ಯಾ ನಿಪುಣನಾಗಬೇಕೆಂಬ ಅತಿಯಾಸೆ ಹಾಗೂ ಅಸಹನೆಯ ಫಲವಾಗಿ ಗುರು ದ್ರೋಣನಿಗೆ ದುಂಬಾಲು ಬಿದ್ದು ಏಕಲವ್ಯನ ಬೆರಳನ್ನು ಗುರುಕಾಣಿಕೆಯಾಗಿ ಪಡೆಯುವ ವಸ್ತು ಈ ಕೃತಿಯಲ್ಲಿದೆ. ತನ್ನಲ್ಲಿಗೆ ವಿದ್ಯೆ ಕಲಿಯಲು ಬಂದ ಏಕಲವ್ಯನಿಗೆ ಅರ್ಜುನನ ಮಾತ್ಸರ್ಯದ ಕಾರಣದಿಂದ ವಿದ್ಯೆಯನ್ನು ಕಲಿಸಲಾಗದೆ ಅಸಹಾಯಕರಾದ ಕಾಡಾದೊಡಂ ನೂರು ಮಡಿ ಲೇಸು, ಕರುಬು ಕಿಚ್ಚುರಿವ ಆ ನಮ್ಮ ನಾಡಿಗಿಂ ಎಂದುಕೊಂಡ ದ್ರೋಣ ತನ್ನ ವಿಗ್ರಹವನ್ನು ಇರಿಸಿಕೊಂಡು ವಿದ್ಯೆ ಕಲಿತ ಕಾಡಿನ ಹುಡುಗನ ಹೆಬ್ಬೆರಳನ್ನು ಬಲಿಯಾಗಿ ಕೇಳಿದ. ಅದಕ್ಕೆ ಪಡೆವುದೆಲ್ಲಂ ಕೊಡುವುದಕ್ಕಲ್ತೆ ಆರ್ಯ? ಮೇಣ್ ಪೂರ್ಣಮಂ ಕೊಡದೆ ಪಡೆದೆವೆಂತು ಪೂರ್ಣಮಂ ಎನ್ನುತ್ತಾ ಕೊಳ್ ದಕ್ಷಿಣೆಯನ್ ಇದನ್! ಗೆಲ್ಗೆ ಧರ್ಮಂ!ಗೆಲ್ಗೆ ದೈವೇಚ್ಛೆ! ನಿಮ್ಮ ವಚನಂ ನಿಲ್ಗೆ! ಮೇಣ್ ಅರ್ಜುನನ ಪೆರ್ ಬಯಕೆಯುಂ ಸಲ್ಗೆ ಎಂದು ಏಕಲವ್ಯ್ ಕತ್ತರಿಸಿಕೊಡುತ್ತಾನೆ. ಆ ಬೆರಳ ರಕ್ತವನ್ನು ನೋಡುತ್ತಲೇ ಅದರಲ್ಲಿ ತನ್ನ ಬಿಂಬವನ್ನು ಭೀಮಹಸ್ತವೊಂದು ಕತ್ತರಿಸಿದ ಮುನ್ಸೂಚನೆ ಗಮನಿಸಿದ ದ್ರೋಣ ಬೆರಳ್ಗೆ ಕೊರಳ್ ವತ್ಸಾ, ನಿನ್ನ ಬೆರಳ್ಗೆ ನನ್ನ ಕೊರಳ್ ಎಂದು ಹೇಳುತ್ತಾನೆ. ಕರ್ಮದ ಪರಿಯನ್ನು ಕುರಿತು ಮರಿಗೆ ಮರಿ, ಮರಿಗೆ ಮರಿ, ಬೆರಳ್ಗೆ ಕೊರಳ್ ಎಂಬ ದರ್ಶನ ದೃಷ್ಟಿಕೋನದಿಂದ ಕುವೆಂಪು ಈ ನಾಟಕವನ್ನು ರಚಿಸಿದ್ದಾರೆ. ನಾಟಕ ಪ್ರದರ್ಶನ ಈ ನಾಟಕವನ್ನು ಕಲಾವಿದ ಶ್ರೀಹರ್ಷ ಹಳಗನ್ನಡದ ಭಾಷಾಸ್ವರೂಪದಲ್ಲಿಯೇ ಕನ್ನಡದಲ್ಲಿ ಚಲನಚಿತ್ರ ತಯಾರಿಸಿ ತಾವೇ ಪ್ರಧಾನ ಪಾತ್ರ ಮಾಡಿದ್ದರು. ಹಿರಿಯನಟಿ ಫಂಡರಿಬಾಯಿ ಅಬ್ಬೆಯ ಪಾತ್ರದಲ್ಲಿ ನಟಿಸಿದ್ದರು. ಅಮೇರಿಕಾದ ಕನ್ನಡಿಗರಿಂದ ಹಿಡಿದು ಸಾಣೆಹಳ್ಳಿಯ ಶಿವಸಂಚಾರ ತಂಡವೂ ಸೇರಿದಂತೆ ಅನೇಕ ತಂಡಗಳು ರಂಗಪ್ರಯೋಗ ನಡೆಸಿವೆ. ಬೆಂಗಳೂರಿನ ಸೂರ್ಯ ಕಲಾವಿದರು ನೃತ್ಯರೂಪದಲ್ಲಿಯೂ ಪ್ರಯೋಗಿಸಿದ್ದಾರೆ. ಈ ಕೃತಿಯನ್ನು ಕುವೆಂಪು ಅವರು ಬಿ.ಎಂ.ಶ್ರೀಕಂಠಯ್ಯನವರಿಗೆ ಅರ್ಪಿಸಿದ್ದಾರೆ. ಅರ್ಪಣೆಯ ಭಾಗ ಕೆಳಗಿನಂತಿದೆ. ಶ್ರೀಯವರಿಗೆ ಅಂದು ನಿಮ್ಮಳ್ಕರೆಯ ಪರಸಿತೆನ್ನಂ ಮೊದಲ್: ಇಂದು ರಾಮಾಯಣಕೆ ತಿರುಗಿ ಆ ಕೊಳಲಿನ ತೊದಲ್ ಕಾವ್ಯಗೈದಿದೆ ಬೃಹದ್ ಗಾನಮಂ. ನನ್ನೊಡನೆ ಬಾ ಕನ್ನಡದ ನಾಡನೆಳ್ಚರಿಸುವಾವೇಶಮಂ ತಾ. ವಾಙ್ಮಯ ತಪೋಬಲದಿ ಜಿಹ್ವಾತಟಿಚ್ಛಕ್ತಿ ತಾಂ ಹೃದಯ ಗಹ್ವರದಲ್ಲಿ ಚಿಜ್ಚ್ಯೋತಿಃಪ್ರದೀಪಮಂ. ಪೊತ್ತಿಪೋಲ್ ಮಾಳ್ಪಂ, ತವಿಸಿ ತಮಶ್ಯಾಪಮಂ. ಇಂತೆನಿತ್ತೆನಿತೊ ನೀಂ ಪೆಳ್ದೆನ್ನ ಕರೆದೊಡಂ ನಾಂ ಪೊರಮಟ್ಟೆನಿಲ್ಲೆನ್ನ ಪೊಕ್ಕ ವಲ್ಮೀಕದಿಂ: ನಿಮ್ಮ ಧರ್ಮ ನಿಮಗೆ ನನ್ನ ಧರ್ಮಂ ನನಗೆ. ಪಲವು ಬಟ್ಟೆಗಳಲ್ತೆ ಭಗವದಿಚ್ಛೆಯ ಮನೆಗೆ? ಕೈಕೊಂಡ ರಸತಪಸ್ ಸಿದ್ಧಿಯ ಅನಂತರಮೆ ನೋಳ್ಪೆನ್ ಅದಕಿಂ ಮುನ್ನ ಏಳ್ವುದೇಂ ತರಮೆ? ಎಂದೆನ್. ಅರಿತವರಲ್ತೆ ಸೊಗಸುತೆಂದಿರಿ ನಲ್! ಆ ಋದ್ಧಿಯ ಸಮುದ್ರದ ತರಂಗಮೊಂದೆನಲ್ ನಿಮಗಿದು ನಿವೇದನಂ ಈ ಬೆರಳ್ ಗೆ ಕೊರಳ್! ಕುವೆಂಪುರವರ ಕೃತಿಗಳು ವರ್ಗ : ಕನ್ನಡ ಸಾಹಿತ್ಯ
ಶೂದ್ರ ತಪಸ್ವಿ ಕುವೆಂಪುರವರ ಪ್ರಸಿದ್ಧ ನಾಟಕ ಕೃತಿ. ಮೂಲ ರಾಮಾಯಣದ ಕಥೆ ಆಧರಿಸಿ ಅಲ್ಪ, ಸ್ವಲ್ಪ ಬದಲಾವಣೆಗಳೊಂದಿಗೆ ಈ ನಾಟಕವನ್ನು ಸಿದ್ದಪಡಿಸಲಾಗಿದೆ. ಗುಣಕ್ಕೆ ಮಾತ್ಸರ್ಯ ಇರಬಾರದು. ಒಳ್ಳೆಯದು ಎಲ್ಲಿದ್ದರೂ ಅದನ್ನು ಗೌರವಿಸ ಬೇಕೆಂಬ ತತ್ವ್ತದ ಅಡಿಯಲ್ಲಿ ನಾಟಕ ರೂಪುಗೊಂಡಿರುವುದನ್ನು ಕಾಣಬಹುದಾಗಿದೆ. ಶೂದ್ರ ತಪಸ್ವಿ, ವಸ್ತು ವಿಷಯ ರಾಮಾಯಾಣದ ಉತ್ತರಾಕಾಂಡದಲ್ಲಿ ಬರುವ ಪ್ರಕ್ಷಿಪ್ತ ಭಾಗದಲ್ಲಿ ಬರುವ ಕಥೆ. ಶಂಬೂಕ ವಧಾ ಪ್ರಸಂಗ. ರಾಮನು ರಾಜ್ಯಭಾರ ಮಾಡುವ ಸಂದರ್ಭದಲ್ಲಿ ಒಮ್ಮೆ ಬ್ರಾಹ್ಮಣನ ಮಗನು ಸತ್ತು ಹೋಗುತ್ತಾನೆ. ಇದಕ್ಕೆ ಕಾರಣ ಶೂದ್ರನೊಬ್ಬ ತಪಸ್ಸು ಮಾಡುವುದು ಎಂದು ಬ್ರಾಹ್ಮಣ ರಾಮನ ಬಳಿ ಬಂದು ಆರೋಪಿಸಿ ರಾಮರಾಜ್ಯದಲ್ಲಿ ತನ್ನ ಮಗು ಅಕಾಲಿಕ ಮರಣಕ್ಕೆ ತುತ್ತಾಗಿರುವುದರಿಂದ ನ್ಯಾಯ ಕೊಡಬೇಕೆಂದು ಪರಿಪರಿಯಾಗಿ ಬೇಡುತ್ತಾನೆ. ರಾಮ ಬ್ರಾಹ್ಮಣನ ಮನವೊಲಿಸಲು ಪ್ರಯತ್ನಿಸಿ ಸೋಲುತ್ತಾನೆ. ಕಡೆಗೆ ಶೂದ್ರ ತಪಸ್ವಿ ತಪಸ್ಸು ಮಾಡುವ ಜಾಗಕ್ಕೆ ಬ್ರಾಹ್ಮಣನೊಂದಿಗೆ ರಾಮನೂ ಬಂದು, ಅವನ ಮನಸ್ಸಿನ ಸಮಾಧಾನಕ್ಕೋಸ್ಕರ ಶೂದ್ರ ತಪಸ್ವಿಯನ್ನು ಸಂಹರಿಸಲು ಮುಂದಾಗಿ ಬಾಣವನ್ನು ಹೂಡುತ್ತಾನೆ. ಆದರೆ ಆ ಭಾಣ ಶೂದ್ರ ತಪಸ್ವಿಯನ್ನು ಪ್ರದಕ್ಷಿಣೆ ಹಾಕಿ, ಬ್ರಾಹ್ಮಣನನ್ನು ಕೊಲ್ಲಲು ಧಾವಿಸಿದಾಗ, ಬ್ರಾಹ್ಮಣ ಕಂಗಾಲಾಗುತ್ತಾನೆ. ನಂತರ ರಾಮನ ಅನುಜ್ಞೆಯಂತೆ ಶೂದ್ರ ತಪಸ್ವಿಗೆ ವಂದಿಸುತ್ತಾನೆ. ತನ್ನ ಪ್ರಾಣ ಮತ್ತು ಮಗುವಿನ ಪ್ರಾಣ ಎರಡನ್ನು ಕಾಪಾಡಿಕೊಳ್ಳುತ್ತಾನೆ. ಶೂದ್ರ ತಪಸ್ವಿ ೧೯೪೪ರಲ್ಲಿ ಕುವೆಂಪು ರಚಿಸಿದ ಶೂದ್ರ ತಪಸ್ವಿ ನಾಟಕಕ್ಕೆ ರಾಮಾಯಣದ ಒಂದು ತುಣುಕನ್ನು ಕಥೆಯಾಗಿ ಆಯ್ದುಕೊಂಡಿದ್ದಾರೆ. ಶೂದ್ರ ತಪಸ್ವಿ ನಾಟಕ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಬಹುಮುಖ್ಯವಾಗಿದ್ದು ಶೋಷಿತರ ಗಟ್ಟಿದನಿಯಾಗಿ ಹೊರಹೊಮ್ಮುತ್ತಲೇ ಅಂದಿನ ಮೇಲ್ವರ್ಗದ ಘಟಾನುಘಟಿ ಸಾಹಿತಿ, ಟೀಕಾಕಾರರ ವಾಗ್ಧಾಳಿ ಮತ್ತು ಅಸಡ್ಡೆಗಳನ್ನು ಧೂಳಿಪಟ ಮಾಡಿ ಒಂದು ಅದ್ಭುತ ಕೃತಿಯಾಗಿ, ಕೆಳವರ್ಗದ ಜನತೆಯ ಆತ್ಮಸ್ಥೈರ್ಯವಾಗಿ ನಿಂತಿದೆ. ಶೂದ್ರ ಶಂಬೂಕನ ತಲೆ ಉರುಳಿಸುವ ಮೂಲ ರಾಮಾಯಣ: ಮೂಲ ರಾಮಾಯಣ ಕಾವ್ಯದಲ್ಲಿ ಶ್ರೀರಾಮ ಸೀತೆಯನ್ನು ಕಾಡಿಗಟ್ಟಿದ ನಂತರ ವೃದ್ದ ಬ್ರಾಹ್ಮಣನೊಬ್ಬ ತನ್ನ ಮೃತ ಬಾಲಕನನ್ನು ಹೊತ್ತು ತಂದು ರಾಮನ ಅರಮನೆಯ ಮುಂದೆ ಗೋಳಿಡುತ್ತಾನೆ. ರಾಮ ರಾಜ್ಯದಲ್ಲಿ ಶೂದ್ರ ಶಂಬೂಕನು ತಪಸ್ಸು ಮಾಡುತ್ತಿರುವುದರಿಂದಲೇ ತನ್ನ ಮಗನಿಗೆ ಸಾವುಂಟಾಗಿದೆ ಎನ್ನುತ್ತಾನೆ. ರಾಮ ಶೂದ್ರ ಶಂಬೂಕನನ್ನು ಹುಡುಕಿ ತನ್ನ ಖಡ್ಗದಿಂದ ಶಂಬೂಕನ ತಲೆ ಕಡಿಯುತ್ತಾನೆ. ಈ ಕಾರ್ಯವನ್ನು ಗಮನಿಸಿ ಇಂದ್ರಾದಿಗಳೆಲ್ಲಾ ರಾಮನ ಧರ್ಮಪಾಲನೆಗಾಗಿ ಮನಮೆಚ್ಚಿ, ರಾಮನಿಗೆ ವರ ನೀಡುತ್ತಾರೆ. ರಾಮ ಆ ವರದಿಂದ ಸತ್ತಿರುವ ಬ್ರಾಹ್ಮಣ ಬಾಲಕನನ್ನು ಬದುಕಿಸಿಕೊಳ್ಳುತ್ತಾನೆ. ಶೂದ್ರ ತಪಸ್ವಿಯ ಹಿಂದಿರುವ ಸೃಜನಶೀಲ ಪ್ರತಿಭೆ: ಕುವೆಂಪು ಮೂಲ ರಾಮಾಯಣದಲ್ಲಿರುವ ರಾಮನನ್ನು ಜೀವವಿರೋಧಿ ಮನೋಗುಣದಿಂದ ಶೂದ್ರ ತಪಸ್ವಿಯಲ್ಲಿ ಬಿಡುಗಡೆಗೊಳಿಸಿ ರಾಮ ಮತ್ತು ಬ್ರಾಹ್ಮಣನ ಮನ:ಪರಿವರ್ತನೆಗೊಳಿಸುತ್ತಾರೆ. ಮೃತ್ಯುವನ್ನು ಅಥವಾ ಮನುಷ್ಯವಿರೋಧಿ ಧರ್ಮವನ್ನು ಮನುಷ್ಯ ಧರ್ಮ ಗೆಲ್ಲಬೇಕು ಎಂಬ ನಾಟಕ ಆಶಯ ಭಿತ್ತಿಗೊಳ್ಳುತ್ತದೆ. ಕುವೆಂಪು ಜಾತಿಯ ವಿಷ ಬೀಜ ಬಿತ್ತುವ ಮೂಲ ರಾಮಾಯಣಕ್ಕೆ ವಿಶ್ವಪಥದ ಉಸಿರು ತುಂಬುತ್ತಾರೆ. ನಾಟಕದ ಪ್ರಮುಖ ಮೂರು ದೃಶ್ಯಗಳಲ್ಲಿ ಮೊದಲಿಗೆ, ಮೃತ್ಯುವು ಕೂಡ ಒಂದು ಪಾತ್ರವಾಗಿ ಬರುವ, ಅರಣ್ಯ ಕಾಯುವ ವೃಕ್ಷ ಭೈರವನೊಂದಿಗೆ ಸಂಘರ್ಷಿಸುವ ದೃಶ್ಯ ರೋಚಕವಾಗಿ ಮೂಡಿಬಂದಿದೆ. ಶೂದ್ರ ಶಂಬೂಕ ಋಷಿಯು ತಪಸ್ಸು ಮಾಡುತ್ತಿರುವ ಅರಣ್ಯದೊಳಕ್ಕೆ ಪ್ರವೇಶಿಸುವ ಮೃತ್ಯುವನ್ನು ಅರಣ್ಯ ರಕ್ಷಕ ತಾನೆಂದು ಅಪ್ಪಣೆಯಿಲ್ಲದೆ ಪ್ರವೇಶಿಸಕೂಡದೆಂದು ವೃಕ್ಷ ಭೈರವ ತಡೆಯುತ್ತಾನೆ. ಶೂದ್ರ ತಪಗೈಯುತ್ತಿರುವುದು ಅಧರ್ಮವೆಂಬಂತೆ ಬ್ರಾಹ್ಮಣ ಬಾಲಕ ಅದನ್ನು ನೋಡಿರುವುದರಿಂದ ಮೃತ್ಯುವು ಒಳಹೋಗುವುದು ಅನಿವಾರ್ಯವೆನ್ನುತ್ತಾ ಮೆಲ್ಲ ಮೆಲ್ಲನೆ ಕರಿಮಂಜಾಗಿ ಆಶ್ರಮದ ಕಡೆ ಚಲಿಸುತ್ತದೆ. ಭೈರವನಿಗೆ ರೋಷವುಕ್ಕಿ ಶಿವ ಶಿವಾ! ಏನ್ ಭಯಂಕರಂ ಪಾಪಂ, ಶ್ರೀರಾಮನಾಳು ತಿರ್ಪ್ಪೀ ಧರ್ಮರಾಜ್ಯದೊಳ್! ಎಂದು ಹಲುಬುತ್ತಾನೆ. ಎರಡನೆಯ ದೃಶ್ಯದಲ್ಲಿ ಬ್ರಾಹ್ಮಣನೊಬ್ಬ ರೋದಿಸುತ್ತಾ ಶ್ರೀ ರಾಮಚಂದ್ರನ ಅಯೋಧ್ಯೆಯ ಬಳಿಯ ಉದ್ಯಾನವನದಲ್ಲಿ, ಮಗನ ದುರ್ಮರಣ ರಾಮರಾಜ್ಯದಲ್ಲಿ ಅಧರ್ಮವನ್ನು ಹುಟ್ಟು ಹಾಕುತ್ತಿದೆ ಎಂದು ಬೊಬ್ಬಿಡುತ್ತಾನೆ. ಅಲ್ಲಿಗೆ ಬರುವ ರಾಮ ಬ್ರಾಹ್ಮಣನನ್ನುದ್ದೇಶಿಸಿ ನೀಂ ಏನಾದೊಡಂ ಅಪೂಜ್ಯಗೆಯ್ದಿರೇನ್ ಎಂದಾಗ ಬ್ರಾಹ್ಮಣ ಹೆದರಿ ತೊದಲುತ್ತಾ, ಈ ಅಪರಾಧಕ್ಕೆ ಮೂಲ ರಾಮನೇ ಎನ್ನುತ್ತಾನೆ. ಶೂದ್ರ ತಪಸ್ವಿಯ ದರ್ಶನದ ಫಲವಾಗಿ ನನ್ನ ಮಗನಿಗೆ ಮರಣ ಉಂಟಾಗಿದೆ ಎನ್ನುತ್ತಾನೆ. ರಾಮರಾಜ್ಯದಲ್ಲಿ ತಪಸ್ಸು, ವೇದಾಧ್ಯಯನ, ದರ್ಶನ ಎಲ್ಲವೂ ತನ್ನ ವರ್ಗಕ್ಕೆ ಮಾತ್ರ ಮೀಸಲು, ಶೂದ್ರ ತಪಸ್ಸು ಒಂದು ಅಧರ್ಮ ಎನ್ನುವುದು ಬ್ರಾಹ್ಮಣನ ಅಭಿಪ್ರಾಯ. ಕುವೆಂಪುರವರ ರಾಮ ಬ್ರಾಹ್ಮಣನ ಮಾತಿಗೆ ಪ್ರತ್ಯುತ್ತರವನ್ನು ಮನಸ್ಸಿನಲ್ಲಿ ಯೋಚಿಸುತ್ತಾನೆ: ವರ್ಣಗರ್ವಾಂಧಂಗೆ ಈ ಶಾಸ್ತ್ರ ಮೂರ್ಖಂಗೆಂತು ಬುದ್ದಿಗಲಿಪೆನ್!. ಅವನ ಒಡಗೂಡಿ ಪುಷ್ಪಕ ವಿಮಾನವೇರಿ ಹೊರಡುತ್ತಾನೆ. ಮೂರನೆಯ ದೃಶ್ಯದಲ್ಲಿ, ಮಹಾತಪ್ಪಸ್ಸಿನಲ್ಲಿರುವ ಶಂಬೂಕ ಮಹರ್ಷಿ ಆಶ್ರಮಕ್ಕೆ ಶ್ರೀರಾಮ, ಬ್ರಾಹ್ಮಣನ ಪ್ರವೇಶವಾಗುತ್ತದೆ. ತಪೋಗುಣ, ಶಾಂತಿನೆಲೆಸಿರುವ ವಾತಾವರಣ ಕಂಡು ಶ್ರೀರಾಮ ಭಾವಪರವಶನಾಗಿ ಶಂಬೂಕ ಋಷಿಗೆ ಶ್ರೀರಾಮ ಕೈಮುಗಿಯುತ್ತಿದ್ದರೆ, ರೋಷವುಕ್ಕಿದ ಬ್ರಾಹ್ಮಣ ರೋದಿಸುವ ನಾಟಕವಾಡುತ್ತಾ ಶಂಬೂಕನ ಶಿರಚ್ಛೇದ ಮಾಡಬೇಕೆಂದು ಅಲವತ್ತು ಮಾಡುತ್ತಾನೆ. ರಾಮ ಬ್ರಾಹ್ಮಣನಿಗೆ ಕೆಲ ಪ್ರಶ್ನೆ ಹಾಕುತ್ತಾನೆ: ತಪಸ್ಸುಗೈಯುವವನು ಪೂಜ್ಯನಲ್ಲವೇ? ಈ ತಪಸ್ವಿಯಂ ಕೊಲ್ವುದುಂ ಪಾಪಮಾಗದೆ? ಅದಕ್ಕೆ ಬ್ರಾಹ್ಮಣ ನಾಯಿಯ ಹಾಲಿಗೆ ಈ ಶೂದ್ರನ ತಪಸ್ಸು ಸಮ ಎಂದಾಗ ರಾಮ ವ್ಯಂಗ್ಯದಿಂದ ಸಾರ್ಥಕವಾಯ್ತು ನೀ ಕಲಿತ ವಿದ್ಯೆ ಆಚಾರ್ಯ ಎನ್ನುತ್ತಾನೆ. ಬ್ರಾಹ್ಮಣನನ್ನು ಸಂತೈಸಲು ರಾಮ ಶಸ್ತ್ರ ಹೂಡಲು ನಿರ್ಧರಿಸಿದಾಗಲೂ, ತೊಡುವುದಿದ್ದರೆ ಬ್ರಹ್ಮಾಸ್ತ್ರವನ್ನೇ ತೊಡಬೇಕು ಎಂದು ಬ್ರಾಹ್ಮಣ ಪಟ್ಟು ಹಾಕುತ್ತಾನೆ. ಕುವೆಂಪು ರಾಮನ ಜಿಜ್ಞಾಸೆಯನ್ನು ಇಲ್ಲಿ ಪರಿಹರಿಸುವ ಪರಿಯೇ ವಿಶಿಷ್ಟ. ತಾನು ಹೂಡುವ ಬ್ರಹ್ಮಾಸ್ತ್ರ ಅಧರ್ಮದ ವಿರುದ್ದ ಹೋರಾಡಲಿ ಎನ್ನುತ್ತಾ ರಾಮ ಶಸ್ತ್ರ ಹೂಡುತ್ತಾನೆ. ಬ್ರಹ್ಮಾಸ್ತ್ರವು ಶಂಬೂಕ ತಪಸ್ವಿಯ ಬಳಿ ತೆರಳಿ ತಪೋಮಹಿಮೆಗೆ ನಮಿಸುತ್ತದೆ. ನಂತರ ಬ್ರಾಹ್ಮಣನೆಡೆಗೆ ತಿರುಗಿ ಧಾವಿಸತೊಡಗಿದಾಗ ಅಧರ್ಮಿ ಯಾರು ಎಂಬುದು ಬ್ರಾಹ್ಮಣನಿಗೆ ಅರಿವಾಗಿ ರಕ್ಷಣೆಗಾಗಿ ಬೊಬ್ಬಿಡುತ್ತಾನೆ. ಅಂತಿಮವಾಗಿ ಬ್ರಹ್ಮಾಸ್ತ್ರವನ್ನು ಹಿಂಪಡೆಯುವ ವೇಳೆಗೆ ಬಾಲಕ ಬ್ರಾಹ್ಮಣನನ್ನು ಹುಡುಕುತ್ತಾ ಬರುತ್ತಾನೆ. ತನ್ನ ತಾತನೊಂದಿಗೆ ಹೂವು ತರಲು ಕಾಡಿಗೆ ಬಂದ ತಾನು ಮೂರ್ಛೆ ಹೋಗಿ ಪ್ರಜ್ಞೆ ಬರುವಷ್ಟರಲ್ಲಿ ದಾರಿ ತಪ್ಪಿದೆ ಎನ್ನುತ್ತಾನೆ ಬಾಲಕ. ಬಾಲಕ ಮತ್ತು ಬ್ರಾಹ್ಮಣರಿಬ್ಬರು ಶೂದ್ರ ಶಂಬೂಕ ತಪಸ್ವಿಗೆ ನಮಿಸುವ ದೃಶ್ಯದೊಂದಿಗೆ ನಾಟಕ ಮುಕ್ತಾಯಗೊಳ್ಳುತ್ತದೆ. ಮೂಲ ರಾಮಾಯಣದಲ್ಲಿ ಶೂದ್ರ ಶಂಬೂಕನ ಮೇಲೆ ಧಾಳಿ ಮಾಡಿ ಜೀವವಿರೋಧಿಯಂತೆ ರಾಮ ಅವನನ್ನು ಕೊಂದಿದ್ದರೆ, ಇಲ್ಲಿ ಕುವೆಂಪುರವರ ರಾಮ ಜೀವಪರನಂತೆ, ಸತ್ಯದ ಅಸ್ತ್ರವಿಡಿದು ಮನ:ಪರಿವರ್ತನೆಗೆ ಸಾಕ್ಷಿಯಾಗುತ್ತಾನೆ. ಶೂದ್ರತಪಸ್ವಿಯಲ್ಲಿ ಬರುವ ಧಾರ್ಮಿಕ ವಿಚಾರಶೀಲತೆ. ಇಲ್ಲಿ ಬ್ರಾಹ್ಮಣ ಶೂದ್ರ ಪ್ರಜ್ಞೆಗಳು ಧರ್ಮಾಧರ್ಮದ ಪ್ರಶ್ನೆಯಾಗಿ ರಾಮನಿಗೆ ಉಧ್ಭವಿಸುತ್ತವೆ. ಇದನ್ನು ಅರಿತ ರಾಮ, ಬ್ರಾಹ್ಮಣನಿಗೆ ತಮ್ಮ ಮೇಲು ಕೀಳುಗಳ ಅಹಮಿಕೆಯ ಅರಿವೆಯನ್ನು ಮನವರಿಕೆಯಾಗುವಂತೆ ಮಾಡುತ್ತಾನೆ. ಇಲ್ಲಿ ಬ್ರಾಹ್ಮಣ ಮತ್ತು ಶಂಬೂಕ ಇಬ್ಬರ ಘನತೆ, ಧರ್ಮದ ಔನತ್ಯ ಮಾತು ಶ್ರೀ ರಾಮನ ಮಹೋನ್ನತ ವ್ಯಕ್ತಿತ್ವ ಏಕಕಾಲಕ್ಕೆ ಅನಾವರಣವಾಗುವಂತೆ ಕುವೆಂಪುರವರು ವ್ಯಾಖ್ಯಾನಿಸುವ ರೀತಿಯಲ್ಲಿ ಅವರ ವೈಚಾರಿಕತೆ ಹೊಮ್ಮುತ್ತದೆ. ಕನ್ನಡ ಸಾಹಿತ್ಯ ಕುವೆಂಪುರವರ ಕೃತಿಗಳು
ಮಲೆನಾಡಿನ ಚಿತ್ರಗಳು ಕುವೆಂಪುರವರ ಒಂದು ಚಿತ್ರ ಪ್ರಬಂಧ ಕೃತಿ. ಹೊರಗಿನ ಕೊಂಡಿಗಳು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಲ್ಲಿ ಆನ್ ಲೈನ್ ಆಗಿ ಓದಲು ಲಭ್ಯವಿರುವ ಪುಸ್ತಕ ಪುಸ್ತಕ ಪರಿಚಯ ಕುವೆಂಪುರವರ ಕೃತಿಗಳು
ಇದು ಕುವೆಂಪುರವರ ಕೃತಿ. ಈ ಹೆಸರಿನ ಕವಿತೆಯೂ ಈ ಸಂಕಲನದಲ್ಲಿದೆ. ಕುವೆಂಪುರವರ ಕೃತಿಗಳು
ವಿಚಾರ ಕ್ರಾಂತಿಗೆ ಆಹ್ವಾನ ಕುವೆಂಪುರವರ ಒಂದು ವೈಚಾರಿಕ ಕೃತಿ. ಇದರ ಮುಖ್ಯ ಭಾಗ ಕುವೆಂಪು ಮಾಡಿದ ಭಾಷಣಗಳು. ೧) ಡಿಸೆಂಬರ್ ೮ ೧೯೭೪ರಂದು ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವದಂದು ಮಾಡಿದ ಭಾಷಣ. ೨) ಅ ನೇ ಉಪಾಧ್ಯೆಯವರ ಸನ್ಮಾನ ಭಾಷಣ ೩) ೧೯೭೫ರ ಕರ್ನಾಟಕ ವಿಚಾರವಂತ ಲೇಖಕರ ಸಂಘದಲ್ಲಿ ಮಾಡಿದ ಭಾಷಣ. ಮೂಢನಂಬಿಕೆ, ಮಡಿವಂತಿಕೆ, ಪ್ರಶ್ನಿಸದೆಯೇ ಒಪ್ಪಿನಡೆಯುವುದು, ಇವುಗಳನ್ನು ಖಂಡಿಸುವ ವಿಚಾರಗಳು ಈ ಪುಸ್ತಕದಲ್ಲಿವೆ. ವಿಚಾರಮಂಟಪದಲ್ಲಿ ಮೊದಲ ಭಾಷಣ. ಕುವೆಂಪುರವರ ಕೃತಿಗಳು